#Article 1: ಶಿವಮೊಗ್ಗ (259 words)


ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ.  ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. 

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ.
ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.

ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು.

ಜಲಪಾತಗಳು ಮತ್ತು ಅಣೆಕಟ್ಟುಗಳು

ಕಾಗೋಡು ಸತ್ಯಾಗ್ರಹ, ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲುದಾರರ ಜೊತೆ ಅಭಿಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು. ಈಗ ಮತ್ತೆ 2020 ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿದ್ದಾರೆ

ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ  (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.




#Article 2: ಭಾರತ (595 words)


ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ  ಪ್ರಪಂಚದ ಅತಿ ದೊಡ್ಡ  ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು  ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ, ಭೂತಾನ, ಪೂರ್ವದಲ್ಲಿ ಮ್ಯಾನ್ಮಾರ್, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.

ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು  ಪ್ರಮುಖ ಧರ್ಮಗಳಾದ ಹಿಂದೂಧರ್ಮ, ಬೌದ್ಧ, ಜೈನ್ ಧರ್ಮ ಮತ್ತು ಸಿಖ್ ಧರ್ಮಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ  ಕ್ರಿ.ಶ ೭ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ  ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.

ಭಾರತ ಎಂಬ ಹೆಸರು  ಭರತವರ್ಷ ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಋಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ  ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. ಇಂಡಿಯಾ ಎಂಬ ಹೆಸರು ಸಿಂಧೂ ನದಿಯ ಇದರ ಪರ್ಷಿಯನ್ ರೂಪಾಂತರ ಇಂಡಸ್ ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದುಸ್ತಾನ ಕೂಡ ಒಂದು.

ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ಕಣಿವೆ ನಾಗರೀಕತೆ ಅಸ್ತಿತ್ವದಲ್ಲಿತ್ತು.
ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. ಮೌರ್ಯ ಸಾಮ್ರಾಜ್ಯ ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ ಸುವರ್ಣ ಯುಗದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು.
ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ).
೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು.
ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ  ಪಡೆಯಿತು. ಸ್ವಾತಂತ್ರ್ಯಾ  ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭ ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ.

ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:

ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ  ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ.

ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ:

ರಾಜ್ಯಗಳು

ಕೇಂದ್ರಾಡಳಿತ ಪ್ರದೇಶಗಳು:

ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ.
ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ  ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯಾ, ಯುರೋಪಿಯನ್ ಒಕ್ಕೂಟ, ಚೀನಾ  ಮತ್ತು ಜಪಾನ್.

ಭಾರತ  ಪ್ರಪಂಚದಲ್ಲಿ  ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ ಮುಂಬಯಿ, ದೆಹಲಿ, ಬೆಂಗಳೂರು, ಕೋಲ್ಕತ್ತ ಮತ್ತು ಚೆನೈ
ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮.
ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ.
ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ.

ದಪ್ಪಗಿನ ಅಕ್ಷರ




#Article 3: ಜೋಗ (158 words)


ಜೋಗ ಅಥವಾ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು  ಭಾರತದ ಎರಡನೆಯ ಅತಿ ಎತ್ತರದ ಜಲಪಾತ.

ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ. ನೋಡುಗರ ಎಡದಿಂದ ಬಲಕ್ಕೆ ಹಸರುಗಳು ಈ ಕೆಳಗಿನಂತಿವೆ:

ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ ಎಂತಹ ವ್ಯರ್ಥ ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. 
೧೯೩೦ರ ದಶಕದ  ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ ೧೯೩೯ರಲ್ಲಿ ಜೋಗ ಜಲಪಾತದಿಂದ ೨೪ ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. 
ಫೆಬ್ರುವರಿ ೨೧ ೧೯೪೯ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ ೧೨೦ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು. ೬೦ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೆ ಈ ಯೋಜನೆಗೆ ನೀರಿನ ಮೂಲ.

ಎಡದಲ್ಲಿ ನೇರವಾಗಿ ಬೀಳುತ್ತಿರುವುದು 'ರಾಜ' ;ಅದರ ಪಕ್ಕದಲ್ಲಿ ಸಂದಿಯಿಂದ ಧುಮುಕುತ್ತಿರುವುದು 'ರೋರರ್'-ಆರ್ಭಟ ಅದರದ್ದೇ ;ನಂತರದಲ್ಲಿ ಕೆಳಭಾಗಲ್ಲಿ ಮೂರು ಸೀಳು ಮೇಲೆ ಒಂದೇಇರುವ-ರಾಕೆಟ್ ಹಾರಿದಾಗ ಉಗುಳುವ ಹೊಗೆಯಂತಿರುವುದು 'ರಾಕೆಟ್'; ನಂತರ ಕೊನೆಯ ಬಲಭಾಗದಲ್ಲಿರುವುದು 'ಲೇಡಿ', ಮೆಲ್ಲಗೆ ಇಳಿಜಾರಿನಲ್ಲಿ ಜಾರುತ್ತಿದೆ.




#Article 4: ಕುವೆಂಪು (794 words)


ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪),  ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ  ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು. 

ಕುವೆಂಪು ಅವರು ತಮ್ಮ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಎಂಬಲ್ಲಿ ಡಿಸೆಂಬರ್ ೨೯, ೧೯೦೪ ರಲ್ಲಿ ಜನಿಸಿದರು. ತಂದೆ ವೆಂಕಟಪ್ಪಗೌಡ; ತಾಯಿ ಸೀತಮ್ಮ. ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.

ಕುವೆಂಪು ಅವರ ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು. ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು.

ಕುವೆಂಪು ಅವರು ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ,  ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದ ತರಗತಿಗಳನ್ನು ಆರಂಭಿಸಿದರು.

ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಅಗ್ರಮಾನ್ಯ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕೋಕಿಲೋದಯ ಚೈತ್ರ ಅವರು ಇಂಜಿನಿಯರ್ ಆಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಚಿದಾನಂದಗೌಡ ಅವರು ಕುವೆಂಪು ಅವರ ಅಳಿಯ.

ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.

ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.

ಜ್ಞಾನಪೀಠ ಪ್ರಶಸ್ತಿ ಉಲ್ಲೇಖ
ಕುವೆಂಪು ಅವರು ಸಾಹಿತ್ಯ  ಬೃಹನ್ಮೂರ್ತಿ; ಕಾವ್ಯಮೀಮಾಂಸೆಯ ಯಾವೂಂದು ಸರಳ ಸೂತ್ರವೂ ಅವರನ್ನು ಸಂಪೂರ್ಣವಾಗಿ ವಿವರಿಸಲಾರದು - ಏಕೆಂದರೆ, ಅವರ ಕೃತಿಗಳು ನಗ್ನ ಸತ್ಯವನೆಂತೊ ಅಂತೇ ಅತೀತ ಸತ್ಯವನ್ನೂ ಅನಾವರಣಗೊಳಿಸುತ್ತವೆ. ಸೃಜನಾತ್ಮಕ ಜೀವನಚರಿತ್ರೆ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆ, ನಾಟಕ ಮತ್ತು ಕತೆ ಕಾದಂಬರಿಯ ಕ್ಷೇತ್ರಗಳಿಗೆ ಪುಟ್ಟಪ್ಪನವರ ಕೊಡುಗೆ ಸ್ಮರಣೀಯವಾದುದು. ಅವರದು ವ್ಯಷ್ಠಿ ವಾಣಿಯಲ್ಲ; ಯುಗಧರ್ಮ, ಜನಾಂಗ ಧರ್ಮಗಳ ವಾಣಿ. ಅವರು ಬಹುಕಾಲ ತಮ್ಮ ಸಾಹಿತ್ಯದ ಮೂಲಕ  ಚಿರಂಜೀವಿಯಾಗಿ ಇರುತ್ತಾರೆ.

ಬಿ.ಎಂ.ಶ್ರೀ.
ನೂರು ದೋಷಗಳಿದ್ದರೂ ಕಾವ್ಯವು ಕಾವ್ಯವೇ, ಒಂದು ತಪ್ಪಿಲ್ಲದಿದ್ದರೂ ಜೀವವಿಲ್ಲದ ಕಾವ್ಯ ಕಾವ್ಯವೇ ಅಲ್ಲ, ಪುಟ್ಟಪ್ಪನವರ ಉತ್ತಮ ಕವನಗಳಲ್ಲಿ ಈ ಜೀವವಿದೆ; ಇರುವುದರಿಂದಲೇ ಅವುಗಳಲ್ಲಿ ಅಮೃತತ್ವದ ಸಾರವಿದೆ.

ದ.ರಾ.ಬೇಂದ್ರೆ

ಸ.ಸ.ಮಾಳವಾಡ
ಹೊಸಗನ್ನಡ ಸಾಹಿತ್ಯವನ್ನು ಹಲವಂದದಲಿ ಸಿರಿವಂತಗೊಳಿಸಿದ ಧೀಮಂತ ಸಾಹಿತಿ ಕುವೆಂಪು. ಅವರು ಸಾಹಿತ್ಯ  ಸೃಷ್ಟಿಯಲ್ಲಿ ಲೌಕಿಕ ಬಾಳಿನಲ್ಲಿ ಉನ್ನತ ಸ್ಥಾನ ಪಡೆದವರಾಗಿದ್ದಾರೆ. ಅವರು ಏಕಾಂತ ಜೀವಿ, ಧ್ಯಾನಶೀಲರು, ಭಾವಸಮಾಧಿಯಲ್ಲಿ ವಿರಮಿಸುವವರು. ಆದರೆ ಕನ್ನಡ ನಾಡು ನುಡಿಗಳ ಹಿತರಕ್ಷಣೆಗಾಗಿ ಸತತವೂ ಹೋರಾಟದಲ್ಲಿ ತೊಡಗಿದವರು. ಜನಸಂಪರ್ಕದಿಂದ ದೂರವುಳಿದರೂ ಜನ ಹಿತಕಾರ್ಯದಿಂದ ವಿಮುಖರಾಗಿಲ್ಲ. ಸನಿಹದಲ್ಲಿ ಅವರನ್ನು ಕಂಡಾಗ ಅವರು ಸ್ನೇಹಪರರು, ಕುಟುಂಬವತ್ಸಲರು ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ಡಿ.ಎಲ್.ನರಸಿಂಹಾಚಾರ್
ಪುಟ್ಟಪ್ಪನವರಂತೆ ಕಾವ್ಯವನ್ನು ಯಾರು ಬರೆಯಬಲ್ಲರು? ಅವರ ಕಾವ್ಯದಲ್ಲಿ ಕಾಣುವ ಮೃದು ಮಧುರ ಪದಬಂಧ, ಬಗೆಯ ಭಾವದ ಐಸಿರಿ, ಭಾವದ ರಸಪ್ರವಾಹ, ಕಾವ್ಯಾಲಂಕಾರ, ಉಕ್ತಿ ಚಮತ್ಕಾರಗಳ ವೈಭವವು ಸಹೃದಯರನ್ನು ರೋಮಾಂಚನಗೊಳಿಸಿ ಸಂತೋಷದ ಕಣ್ಣೀರನ್ನು ಕೋಡಿವರಿಸುತ್ತದೆ. ಪಾಶ್ಚಿಮಾತ್ಯ ಕಾವ್ಯ ವಿಮರ್ಶಕ ಮಾನದಂಡದಿಂದ ಅಳೆದು ನೋಡಿದರೂ ಪುಟ್ಟಪ್ಪನವರು ಮಹಾಕವಿಗಳಾಗಿ ತೇರ್ಗಡೆ ಹೊಂದುತ್ತಾರೆ.

ಹಾ.ಮಾ.ನಾಯಕ
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು ಅವರ ಮಾಂತ್ರಿಕ ಲೇಖನಿ ಅಲಂಕರಿಸದ ಸಾಹಿತ್ಯ  ಪ್ರಕಾರವಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಹೆಚ್ಚು ಕಡಿಮೆ ಒಂದೇ ಬಗೆಯಾದ ಯಶಸ್ಸನ್ನು ಗಳಿಸಿದ ಲೇಖಕರು ಯಾವುದೇ ಭಾಷೆಯಲ್ಲಾದರೂ ಹೆಚ್ಚಾಗಿ ಸಿಕ್ಕುವುದಿಲ್ಲ. ಆ ಬಗೆಯ ವಿರಳರ ಪಂಕ್ತಿಯಲ್ಲಿ ಕನ್ನಡದ ಕುವೆಂಪು ಒಬ್ಬರೆನ್ನುವುದು ಅಭಿಮಾನದ ಸಂಗತಿ.

ಸುಜನಾ
ಶ್ರೀ ಕುವೆಂಪು ದರ್ಶನದ ವೈಶಿಷ್ಟ್ಯ  ಪರಂಪರೆ-ಯುಗ ಪ್ರಜ್ಞೆಗಳೆರಡರ ಸಮನ್ವಯದಿಂದ ಬಂದದ್ದು. ಈ ಅತಿಶಯ ಸಿದ್ಧಿ ಸಾಹಿತ್ಯಲೋಕದಲ್ಲಿ ವಿರಳ.

ಜಿ.ಎಸ್.ಶಿವರುದ್ರಪ್ಪ
ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ  ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.

ದೇ.ಜ.ಗೌ
ಐದು ದಶಕಗಳಿಂದ ಶ್ರೀ ಕುವೆಂಪು ಸಾಹಿತ್ಯ ಕನ್ನಡ ನಾಡಿನ ಜನಮನವನ್ನು ತಣಿಸುತ್ತಾ, ಹುರಿದುಂಬಿಸುತ್ತಾ, ಹಸನುಗೊಳಿಸುತ್ತಿದೆ, ಅವರ ವಿಚಾರಶಕ್ತಿಯನ್ನು ಕೆರಳಿಸುತ್ತಾ, ನಿರಂಕುಶ ಮತಿತ್ವದ ಅವಶ್ಯಕತೆ, ಅನಿವಾರ್ಯತೆಯನ್ನು ನೆನಪಿಗೆ ತಂದುಕೊಡುತ್ತಿದೆ, ಅವರ ಬದುಕಿಗೊಂದು ತಾರಕಮಂತ್ರವಾಗಿ ಧ್ರುವತಾರೆಯಾಗಿ ಸಂಜೀವನಶಕ್ತಿಯಾಗಿ ಅದನ್ನು ತಿದ್ದುತ್ತಿದೆ, ಉನ್ನತಗೊಳಿಸುತ್ತಿದೆ, ಸಚೇತನಗೊಳಿಸುತ್ತಿದೆ, ಪುಷ್ಟಿಗೊಳಿಸುತ್ತಿದೆ. ಸಾವಿರಾರು ವರ್ಷಗಳಿಂದ ಭಾರತೀಯ ಧರ್ಮದ ಸುತ್ತ ಬೆಳೆದುಕೊಂಡು, ಅದರ ಮೂಲ ಸ್ವರೂಪವನ್ನು ಮರೆಸಿರುವ ಮೌಢ್ಯಗಳಿಗೆ ಶುಷ್ಕ ಚಾರಗಳಿಗೆ ಕಂದಾಚಾರದ ಸಂಪ್ರದಾಯಗಳಿಗೆ ಅಗ್ನಿ ಸಂಸ್ಕಾರ ಮಾಡುವಲ್ಲಿ, ಜಾತೀಯತೆಯನ್ನು  ಸಾಧ್ಯವಾದಷ್ಟು ತೊಡೆಯುವಲ್ಲಿ, ಪುರೋಹಿತ ಹಾಗೂ ಸಾಮ್ರಾಜ್ಯಶಾಹಿಯನ್ನು ಅಂತ್ಯಗೊಳಿಸುವಲ್ಲಿ ಅದು ಯಶಸ್ವಿಯಾಗಿದೆ. ಭಾರತೀಯರ ಸುಖ ದುಃಖ, ಆಶೆ ಆಕಾಂಕ್ಷೆ, ಕನಸು ನನಸು ಗಳನ್ನು ಪ್ರತಿಬಿಂಬಿಸುವ ಮೂಲಕ ಅವರ ನಾಡಿಯನ್ನು ಮಿಡಿದಿದೆ.

ಕೀರ್ತಿನಾಥ ಕುರ್ತಕೋಟಿ
ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ 'ರೊಮ್ಯಾಂಟಿಕ್' ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪು ರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ. ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಆಧ್ಯಾತ್ಮಿಕತೆ ವೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ  ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ.

ಕೋ.ಚೆನ್ನಬಸಪ್ಪ
ಮೊದಲಿನಿಂದಲೂ ಪುಟ್ಟಪ್ಪನವರ ಪ್ರಮುಖ ಪ್ರವೃತ್ತಿ, ಪ್ರಥಮ ಆಸಕ್ತಿ ಅಧ್ಯಾತ್ಮ. ಅವರು ಜನ್ಮ ತಾಳಿದ್ದು ಇತರ ಕೋಟ್ಯಂತರ ಜನರಂತೆ ಸುಮ್ಮನೆ ಬದುಕಿ, ಬಾಳಿ  ಹೋಗಲಿಕ್ಕಲ್ಲ ಎಂಬ ಆತ್ಮ ಪ್ರತ್ಯಯ - ಆತ್ಮಜ್ಞಾನ  - ಪುಟ್ಟಪ್ಪನವರಿಗೆ ಚಿಕ್ಕಂದಿನಿಂದಲೇ ಉಂಟಾಗಿತ್ತು. ಆದ್ದರಿಂದ ಮಾನವ ಜನ್ಮೋದ್ದೇಶವಾದ ಆತ್ಮಸಾಕ್ಷಾತ್ಕಾರವೇ ಅವರ ಬಾಳ ಗುರಿ; ಜೀವನೋದ್ದೇಶದ ಆದಿ ಅಂತ್ಯ. ಅವರಿಗೆ ಜೀವನದಲ್ಲಿ ಮತ್ತಾವ ಉಪಾಧಿಗಳೂ ಇರಲಿಲ್ಲ. ಇಂಥ ಅವರ ಜೀವನೋದ್ದೇಶಕ್ಕೆ ನೆರವಾದುದು ಅವರ ಕಾವ್ಯಶಕ್ತಿ. ಅದನ್ನವರು ಎಂದೂ ಮರೆಮಾಚಿಲ್ಲ. ಆದರೂ ಕನ್ನಡ, ಕರ್ನಾಟಕ ಅವರ ಜೀವದ ಎರಡು ಶ್ವಾಸಕೋಶಗಳು. ಆ ಶ್ವಾಸಕೋಶಗಳ ಚಲನೆ ನಿಂತರೆ ಅವರ ಬಾಳುಸಿರೇ ನಿಂತಂತೆ.

ಕೆ. ಸಚ್ಚಿದಾನಂದನ್
ಕುವೆಂಪು ಕೇವಲ ಕರ್ನಾಟಕದವರಲ್ಲ, ಭಾರತದ ಮಹಾ ಲೇಖಕ. ಅವರ 'ರಾಮಾಯಣ ದರ್ಶನಂ' ಆಧುನಿಕ ಭಾರತೀಯ ಸಾಹಿತ್ಯದ ಶ್ರೇಷ್ಠ ಕೃತಿ. ಇಲ್ಲಿ ಬರುವ ರಾಮ, ಸೀತೆ ಯೊಂದಿಗೆ ಅಗ್ನಿ ಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ. ಅವರ ಶೂದ್ರ ತಪಸ್ವಿ ನಾಟಕ, ಶೋಷಣೆ ಮತ್ತು ತಾರತಮ್ಯದ ವರ್ಣ ನೀತಿಗೆ ಮುಖಾಮುಖಿಯಾದ ನಾಟಕ. ಸಾರ್ವಕಾಲಿಕ ಕಾವ್ಯ ಮೀಮಾಂಸೆಯ ಅಧ್ವರ್ಯುಗಳಲ್ಲಿ ಕುವೆಂಪು ಒಬ್ಬರು. ತಾವು ನಂಬಿದ ಕಾವ್ಯ ತತ್ವವನ್ನು ತಮ್ಮ 'ರಸೋ ವೈ ಸಃ'ದಲ್ಲಿ ಹೇಳಿದ್ದಾರೆ. ಕನ್ನಡಕ್ಕೆ ಹೊಸ ನುಡಿಗಟ್ಟು ಮತ್ತು ಹೊಸ ಕಲ್ಪನೆಗಳನ್ನು ನೀಡಿದವರು. ಕಲ್ಪನಾಶಕ್ತಿಯೊಂದಿಗೆ, ಬೌದ್ಧಿಕ ಸಾಮರ್ಥ್ಯವನ್ನು ಮೇಳೈಸಿ, ನೈತಿಕ ಮತ್ತು ಸೌಂದರ್ಯ ಮೀಮಾಂಸೆಯನ್ನು ಉನ್ನತ ಸ್ಥಾನಕ್ಕೆ ಒಯ್ದವರು.

ಕರ್ನಾಟಕ ಸರ್ಕಾರವು ೨೦೧೫ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್‌ ೨೯ ಅನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಈ ಮೂಲಕ ವಿಶ್ವಮಾನವ ಸಂದೇಶ ಸಾರಿದ ಕವಿಗೆ ಮತ್ತೊಂದು ಗೌರವ ಸಂದಾಯವಾದಂತಾಯ್ತು.




#Article 5: ಟಿ.ಪಿ.ಕೈಲಾಸಂ (349 words)


ಕೈಲಾಸಂರವರು (೨೯.೦೭.೧೮೮೪-೧೯೪೬) ಮೈಸೂರು ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿದ್ದ ತಮಿಳು ಮೂಲದ  ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್,  ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ  ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಓದಿ ಬಿ.ಎ. ಪದವಿ. ಎಂ.ಎ.ಪದವಿಗಳನ್ನು ಪಡೆದು ಸರಕಾರದ ವಿದ್ಯಾರ್ಥಿವೇತನದೊಂದಿಗೆ ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಮೊದಲ ದರ್ಜೆಯಲ್ಲದೆ ಪ್ರಶಸ್ತಿಗೂ ಭಾಜನರಾದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಷಿಪ್ ಪಡೆದರು. ಜ್ಞಾನಾರ್ಜನೆಯಂತೆ ಕ್ರೀಡೆಯಲ್ಲೂ ಆಸಕ್ತಿ. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್. ಯೂಜಿನ್ ಸ್ಯಾಂಡೋರ ನೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟುವಾಗಿದ್ದರು.

ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಅದೇ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದರು. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು.

ಅವರು ಇಂಗ್ಲೆಂಡಿನಲ್ಲಿದ್ದಾಗ 'ಕಾನ್ಸ್ಟಂಟಿನೊಪಲ್' ಕವನವನ್ನು ಒಬ್ಬ ಇಂಗ್ಲಿಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡಿ, ಇದೇ ರಾಗದಲ್ಲಿ ಬೇರೆ ಹಾಡು ಹಾಡಿದರ ಅವರಿಗ ಬಹುಮಾನ ಕೊಡುವುದಾಗಿ ಸವಾಲು ಹಾಕುತ್ತಾನೆ. ಆಗ ಕೈಲಾಸಂ ಅದೇರಾಗದಲ್ಲಿ 'ಕೋಳಿಕೆ ರಂಗಾ' ಹಾಡು ಹೇಳಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ ಎಂದು ಕಥೆ ಇದೆ(ಪ್ರತಿ ೬ಗ್ರಾಂ ಗಳ ೧೦ ಪೌಂಡು). ಆ ಹಾಡು ಹೀಗಿದೆ (ಸುಮಾರು ೧೯೨೦ ರಲ್ಲಿ ರಚನೆ.)

 
ನಾನು ಕೋಳಿಕೆ ರಂಗ

ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ನಾನು ಕೋಳಿಕೆ ರಂಗ

ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ

ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ. 

ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!

ನಾನು ಕೋಳಿಕೆ ರಂಗ

ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.

ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ!
ಹಃ ನಾನು..

ನಾನು ಕೋಳಿಕೆ ರಂಗ

ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ. 

 

ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ
ಕಲ್ಲಲ್ಲದೊಂದಿಲ್ಲ ! ಬಲ್ಲೆ--
ಕಲ್ಲೇ ಇದ್ದಿಲೆಂದನಲ್ಪಜ್ಞ .

ಕವಿ  ಬಯಸನಿಂಥದೇ ಪ್ರತಿಫಲವೆ ಬೇಕು !
ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು
ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು !.(ಕಣ್ಣ ಹನಿಯಿತ್ತರೆ+ ಎನಗದು ಅನಿತೆ ಸಾಕು)

ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ನಿಜಜೀವನದ ರಂಗದಿಂದ ಮರೆಯಾದದ್ದು ೨೩.೧೧.೧೯೪೬ರಲ್ಲಿ.




#Article 6: ಡಿ.ವಿ.ಗುಂಡಪ್ಪ (405 words)


ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭ ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.

ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.

ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.

ಪತ್ರಿಕೋದ್ಯಮ
ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು ಸೂರ್ಯೋದಯ ಪ್ರಕಾಶಿಕ ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ. ಪುನಃ ಮತ್ತೊಂದಕ್ಕೆ ಗುಂಡಪ್ಪನವರ ಹೆಜ್ಜೆ, ಖರ್ಚಿಗಾಗಿ ಏನಾದರೂ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆ ಬೇಕಿತ್ತು. ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. ವೀರಕೇಸರಿ ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ ಹಿಂದೂ ಪತ್ರಿಕೆಗೆ ಬರೆದರು. ನಂತರ ಮೈಸೂರು ಟೈಮ್ಸ್ ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.

ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.

ಕನ್ನಡ ಕಾವ್ಯಕ್ಷೇತ್ರದಲ್ಲಿ ಮಂಕುತಿಮ್ಮನ ಕಗ್ಗ ಹಾಗೂ ಮರುಳ ಮುನಿಯನ ಕಗ್ಗ ದ ಮೂಲಕ ಡಿ ವಿ ಜಿ ಮನೆಮಾತಾದವರು:

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಗು
ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ ||

ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಸತ್ಯಮೂರ್ತಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರುಗಳೂ ಅಂದಿನ ಕಾಲಘಟ್ಟದ ನಮ್ಮ ದೇಶದ ಪ್ರಮುಖ ಪತ್ರಿಕೆಗಳಾಗಿದ್ದ ‘ಸರ್ವೆಂಟ್ ಆಫ್ ಇಂಡಿಯ’ ಹಾಗೂ ‘ಬಾಂಬೆ ಕ್ರಾನಿಕಲ್’ ಪತ್ರಿಕೆಗಳು ಮನಸೋಕ್ತವಾಗಿ ಮೆಚ್ಚಿಕೊಂಡಿವೆ.

ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರ ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ:
ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ|
 ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ|
 ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಂಬ್ರಿತೊವ್ವೀ|
 ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ||
ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ,ಪಳದ್ಯ, ಕೋಸಂಬರಿ, ತೊವ್ವೆ,ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.

೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು.




#Article 7: ಕೂಡ್ಲಿ (122 words)


ಕೂಡ್ಲಿ (ಕೂಡಲಿ) ಶಿವಮೊಗ್ಗ  ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ.

ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ.

ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ ರಂಗನಾಥ ಸ್ವಾಮಿ ದೇವಾಲಯವೂ ಜನಪ್ರಿಯ. 
ಸಂಗಮ ಸ್ಥಳದಲ್ಲಿ ಸಂಗಮೇಶ್ವರನ ಗುಡಿ  ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ. 
ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು.

ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು.
ಕೂಡಲಿಯಲ್ಲಿ ಶಾರದ ಪೀಠವಾದ ಕೂಡಲಿ ಶೃಂಗೇರಿ ಮಠ.

ಕೂಡ್ಲಿಯಲ್ಲಿ ಆರ್ಯ ಅಕ್ಷೋಭ್ಯ ತೀರ್ಥರ ಮಠವಿದೆ.




#Article 8: ಬೆಂಗಳೂರು (545 words)


ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ನಗರ.

ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ)ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ.

ಬೆಂಗಳೂರು ಸಮುದ್ರ ಮಟ್ಟ ದಿಂದ ೯೦೦ ಮೀ ಎತ್ತರದಲ್ಲಿದೆ ೧೮೫೯ ರಲ್ಲಿ ಪಂಜಾಬ್ ಕೇಸರಿ ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತ್ತು ಮತ್ತು ೧೮೬೦ ರಲ್ಲಿ ಮೈಸೂರು ವ್ರಿತ್ತಂತ ಬೋಧಿನಿ ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತ್ತು. ಈಗ ವಿಜಯ ಕರ್ನಾಟಕ ಮತ್ತು ದಿ ಟೈಂಸ್ ಆಫ್ ಇಂಡಿಯಾ ತುಂಬಾ ಜನಪ್ರಿಯವಾಗಿದೆ ಹಾಗೂ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ.

ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು ದೂರದರ್ಶನ ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು  ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ ಡಿಡಿ ಚಂದನ ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕೆ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಮುಂತಾದವು.

ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಓಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ.

'ನಮ್ಮ ಮೆಟ್ರೋ'ವಿನ ಮೊದಲನೆಯ ಹಂತ ಪೂರ್ಣವಾಗಿ ಚಾಲನೆಯಲ್ಲಿದೆ. ೪೨ ಕಿಲೋಮೀಟರ್ ಗಳ ಎರಡು ಮಾರ್ಗಗಳು (ಉತ್ತರ ದಕ್ಷಿಣ ದಿಕ್ಕಿನಲ್ಲಿ ಹಸಿರು ಮಾರ್ಗ - ನಾಗಸಂದ್ರದಿಂದ ಯೆಲಚೇನಹಳ್ಳಿವರೆಗೆ, ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇರಳೆ ಮಾರ್ಗ - ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ) ಚಾಲನೆಯಲ್ಲಿದೆ. ಎರಡನೆ ಹಂತದ ಕಾಮಗಾರಿ ನಡೆಯುತ್ತಿದೆ

ಭಾರತದ ನೈಋತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ ೪೦ ಕಿ.ಮೀ. ದೂರದಲ್ಲಿದೆ.

ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು.

ಮುತ್ಯಾಲಮಡುವು(ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ.

ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ.

ಫೀನಿಕ್ಸ್ ಮಾಲ್, ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್,  ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ.





#Article 9: ಕನ್ನಡ ಅಕ್ಷರಮಾಲೆ (190 words)


ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು.

ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು.  ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ.

ಈ ರೀತಿ ಕನ್ನಡದಲ್ಲಿ ೫೪ ಅಕ್ಷರಗಳಿವೆ (ಫ಼, ಜ಼ ಸೇರಿ).

ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ.

ಉದಾಹರಣೆಗೆ:
ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ
ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು. 
ಉದಾ:

ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 
'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು.
ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ:

ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ.

ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ;
 
ಸ೦ಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ.

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ.




#Article 10: ಪ್ರೊ.ಜಿ.ವೆಂಕಟಸುಬ್ಬಯ್ಯ (173 words)


ಪ್ರೊ|| ಜಿ ವೆಂಕಟಸುಬ್ಬಯ್ಯ ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ 'ಇಗೋ ಕನ್ನಡ' ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ಭಾಷಾ ಸಾಹಿತ್ಯ ಸಾಧನೆಗೆ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇವರು ಬೆಂಗಳೂರಿನಲ್ಲಿ  ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. (ಫೆಬ್ರವರಿ ೪- ಫೆಬ್ರವರಿ ೬).

೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು, ಮೈಸೂರಿನಲ್ಲಿಯೆ ಬೆಳೆದವರು. ಇವರ ತಂದೆ ಗಂಜಾಂ ತಿಮ್ಮಣ್ಣಯ್ಯನವರು  ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಸುವರ್ಣಪದಕವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. ೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.

'ಇಗೋ ಕನ್ನಡ' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ  ಪ್ರಜಾವಾಣಿಯಲ್ಲಿ ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು ಇಗೋ ಕನ್ನಡ ಎಂಬ ಹೆಸರಲ್ಲೇ ಒಂದು ಸಾಮಾಜಿಕ ನಿಘಂಟನ್ನು ಹೊರತಂದದ್ದುಂಟು.

  

ಸಿರಿಭೂವಲಯಸಾಗರರತ್ನಮಂಜೂಷ‎—ಪ್ರೊ.ಜಿ.ವೆಂಕಟಸುಬ್ಬಯ್ಯನವರ ಪತ್ರ




#Article 11: ಕನ್ನಡ ವಿಕಿಪೀಡಿಯ. (911 words)


ಕನ್ನಡ ವಿಶ್ವಕೋಶವು  ಬಳಸಿ ಕಟ್ಟಿರುವ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ಜೂನ್ ೨೦೦೩ ರಲ್ಲಿ ಪ್ರಾರಂಭವಾಯಿತು. ಅನುವಾದಿಸಲು ಉತ್ಸಾಹವಿರುವವರು ಈ  ಓದಿಕೊಳ್ಳುವುದಾಗಿ ವಿನಂತಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಬಳಸಿಕೊಳ್ಳಬಹುದು.

ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಅವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ -ವಿಕಿಪೀಡಿಯಾ. ಹವಾಮಿ ಭಾಷೆಯಲ್ಲಿ ವಿಕಿ(wiki) ಎಂದರೆ ಶೀಘ್ರ ಅಥವಾ ತ್ವರಿತಗತಿ ಎಂದರ್ಥ. ಇಂಗ್ಲೀಷಿನಲ್ಲಿ ಎನ್ ಸೈಕ್ಲೊಪೀಡಿಯಾ (Encyclopedia) ಎಂದರೆ ವಿಶ್ವಕೋಶ ಎಂದರ್ಥ. ಇವೆರಡೂ ಶಬ್ದಗಳನ್ನು ಸಂಯೋಜಿಸಿ ವಿಕಿಪೀಡಿಯಾ (wikipedia) ಎಂಬ ಗಣಕೀಕೃತ ವಿಶ್ವಕೋಶದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ. ಕನ್ನಡದಲ್ಲಿ ಇದನ್ನು 'ತ್ವರಿತ ವಿಶ್ವಕೋಶ' ಎಂದು ಹೆಸರಿಸ ಬಹುದು. ಇದೊಂದು ಬಹುಭಾಷೀಯ ಹಾಗೂ ಅಂತರಜಾಲ ಆಧಾರಿತ ವಿಶ್ವಕೋಶವಾಗಿದ್ದು,ನಿರಂತರವಾಗಿ ಪರಿಷ್ಕರಣಗೂಳ್ಳಬಲ್ಲ ಮಾಹಿತಿ ವಿತರಣ ಸಾಧನವಾಗಿದೆ.

ಕ್ರಿ.ಶ್ ೨೦೦೧ರಲ್ಲಿ ಆಯೋಜಿಸಲ್ಪಟ್ಟ ಈ ವಿಶ್ವಕೋಶವು ಅತ್ಯಂತ ಶೀಘ್ರವಾಗಿ ಬೆಳವಣಿಗೆಯನ್ನು ಹೊಂದಿ ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿಗೊಂಡಿದೆ. ಈ ತಾಣವನ್ನು ವಿಶ್ವದಾದ್ಯಂತ ಪ್ರತಿ ತಿಂಗಳು ಸುಮಾರು ೪೦೦ ದಶಲಕ್ಷ ಮಂದಿ ಸಂದರ್ಶಿಸುತ್ತಾರೆಂದು ಹೇಳಲಾಗಿದೆ. ಅನೇಕ ವೈವಿಧ್ಯಮಯ ಕ್ಷೇತ್ರಗಳಲ್ಲಿನ ಸುಮಾರು ೮೨೦೦೦ ಮಂದಿ ೧೭ ದಶಲಕ್ಷ ಲೇಖನಗಳನ್ನು ಈ ತಾಣಕ್ಕೆ ಕಳುಹಿಸುತ್ತಾರೆ. ಯಾವುದೇ ರೀತಿಯ ಸಾಮಾಜಿಕ, ಸಾಂಸ್ಕೃತಿಕ, ಅಥವಾ ಜನಾಂಗೀಯ ನಿರ್ಬಂಧಗಳಿಲ್ಲದೆ ಯಾರು ಬೇಕಾದರೂ ವಿವಿಧ ರೀತಿಯ ಲೇಖನಗಳು, ಆಕರಗಳು, ಚಿತ್ರಗಳು ಮತ್ತಿತರ ಮಾಧ್ಯಮ ಪ್ರಕಾರಗಳ ಬಗೆಗಿನ ಮಾಹಿತಿಗಳನ್ನು ಈ ತಾಣಕ್ಕೆ ಕಳುಹಿಸಬಹುದು.

ಕೊಡುಗೆದಾರರ ಪರಿಣತಿಯಾಗಲೀ ವಿದ್ಯಾರ್ಹತೆಯಾಗಲೀ ಅಥವಾ ಮತ್ತಾವುದೇ ಅಂಶವಾಗಲೀ ಇಲ್ಲಿ ಗಣನೆಗೆ ಬರುವುದಿಲ್ಲ. ಆದರೆ ಹಾಗೆ ನೀಡಲ್ಪಟ್ಟ ಮಾಹಿತಿಗಳು ನಂಬಲರ್ಹವಾದ ಮೂಲಗಳ ಮೂಲಕ ಖಚಿತಗೊಳ್ಳಲ್ಪಡಲು ಸಮರ್ಥವಾಗಿರಬೇಕು.

ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರೇ ಆದರೂ ಇಲ್ಲಿ ಲಭ್ಯವಿರುವ ಮಾಹಿತಿಗಳನ್ನು ಪರಿಷ್ಕರಿಸಬಹುದು ಅಥವಾ ವೃದ್ಧಿಗೊಳಿಸಬಹುದು. ಈ ರೀತಿಯ ಬಹಿರಂಗ ವ್ಯವಸ್ಥೆಯ ಕಾರಣದಿಂದಾಗಿ ಈ ತಾಣದಲ್ಲಿ ಬೃಹತ್ ಪ್ರಮಾಣದ ಮಾಹಿತಿಗಳು ಲಭ್ಯವಾಗಲು ಸಾಧ್ಯವಾಗಿದೆ. ವಿಕಿಪೀಡಿಯಾ ತಾಣವನ್ನು ಸಂದರ್ಶಿಸುವ ಮಂದಿಯಲ್ಲಿ ಅನೇಕರು ತಮಗೆ ಆಸಕ್ತಿ ಇರುವ ಮಾಹಿತಿಗಳನ್ನು ಪಡೆದುಕೂಳ್ಳಲು ಬಯಸಿದರೆ ಮತ್ತೆ ಕೆಲವರು ತಮ್ಮಲ್ಲಿಯ ಮಾಹಿತಿಗಳನ್ನು ಇತರರೊಂದಿಗೆ ವಿನಿಮಯ ಮಾಡಿಕೂಳ್ಳಲು ಉತ್ಸುಕರಾಗಿರುತ್ತಾರೆ.

ಈ ತಾಣದಲ್ಲಿ ಲಭ್ಯವಿರುವ ಮಾಹಿತಿಗಳನ್ನು ನಿರಂತರವಾಗಿ ಸುಧಾರಣೆಗೆ ಮತ್ತು ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ . ಮಾಹಿತಿಗಳನ್ನು ಹಲವಾರು ಶೀರ್ಷಿಕೆಗಳಿಗೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಈ ವಿಕಿಪೀಡಿಯ ತಾಣವು ಹಲವಾರು ಪ್ರವೇಶದ್ವಾರ (Portal)ಗಳನ್ನು ಹೊಂದಿದೆ. ಈ ದ್ವಾರಗಳ ಸುತ್ತ ಒಂದು ನಿರ್ದಿಷ್ಟ ವಿಷಯದ ಬಗೆಗಿನ ಪಠ್ಯಗಳನ್ನು ಅಳವಡಿಸಲಾಗಿರುತ್ತದೆ. ಗಣಕಯಂತ್ರದ ಪರದೆಯ ಬಲ ಮೇಲುಭಾಗದಲ್ಲಿನ ಶೋಧ ಸಂಪುಟ (Search Box)ವನ್ನು ಬಳಸಿ ನಮೆಗೆ ಬೇಕಾದ ಲೇಖನಗಳು ಅಥವಾ ಮಾಹಿತಿಯನ್ನು ಪಡೆಯಬಹುದು. ವಿಕಿಪೀಡಿಯಾ ಸುಮಾರು ಇನ್ನೂರು ಭಾಷಾವಿಭಾಗಗಳಲ್ಲಿ ಲಭ್ಯವಿದೆ. ಸರಳ ಇಂಗ್ಲೀಷ ಅವತರಣೆಕೆಗಳಲ್ಲದೆ. ಶಬ್ದಕೋಶ (Dictionary) ನುಡಿಮುತ್ತುಗಳು (Quotations), ಗ್ರಂಥಗಳು (Books), ಕೈಪಿಡಿಗಳು (Manuals) ವೈಜ್ಞಾನಿಕ ಆಕರಗಳು (Scientific References) ಹಾಗೂ ಮಾಧ್ಯಮ ಸೇವೆಗಳು (News Services) ಹಾಗೂ ಇತರ ಸಂಬಂಧಿತ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು. ಈ ಎಲ್ಲ ಮಾಹಿತಿ ಪ್ರಾಕಾರಗಳನ್ನು ಪ್ರತ್ಯೇಕ ತಜ್ಞ ಸಮುದಾಯಗಳು ನಿರ್ವಹಿಸಿ ಸುಧಾರಿಸುತ್ತಿರುತ್ತವೆ. ಇತರ ಮೂಲಗಳಿಂದ ಪಡೆಯಲು ದುರ್ಲಭವಾಗಿರುವಂತಹ ಅನೇಕ ಮಾಹಿತಿಪ್ರಾಕಾರಗಳು ಮತ್ತು ಲೇಖನಗಳನ್ನು ಇಲ್ಲಿ ಕಾಣಲು ಸಾಧ್ಯವಿದೆ.

ವಿಕಿಪೀಡಿಯಾದಲ್ಲಿನ ಲೇಖನಗಳು ಮತ್ತು ಮಾಹಿತಿಗಳು ಒಂದಕ್ಕೊಂದು ಬೆಸುಗೆಗೊಂಡಿದ್ದು ಅವು ಪಾರಸ್ಪರಿಕ- ಆಕರಗಳನ್ನು ಹೊಂದಿರುತ್ತವೆ. ಗಣಕಯಂತ್ರದ ಮೂಷಿಕವನ್ನು ಯಾವುದಾದರೂ ಬೆಸುಗೆ (Link)ಯ ಮೇಲೆ ಇರಿಸಿದಾಗ ಆ ಬೆಸುಗೆಯು ಯಾವ ಲೇಖನದ ಬಗ್ಗೆ ಮಾಹಿತಿಗಳನ್ನು ನೀಡಬಲ್ಲದೆಂದು ಸೂಚಿಸುತ್ತದೆ. ಪ್ರತಿಯೊಂದು ಲೇಖನದ ಅಂತ್ಯದಲ್ಲಿಯೂ ಹಲವಾರು ಪ್ರತ್ಯೇಕ ಬೆಸುಗೆಗಳಿದ್ದು ಅವು ಇತರ ಕುತೂಹಲಕಾರಿ ಲೇಖನಗಳು ಅಥವಾ ಪ್ರಸ್ತುತ ಬಾಹ್ಯ ಜಾಲತಾಣಗಳು (Relevant External Websites) ಮತ್ತು ಪುಟಗಳು, ಆಕರ ವಿಷಯಗಳು ಆಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಇತರ ಕೆಲವು ಲೇಖನಗಳು, ಶಬ್ದಕೋಶದಲ್ಲಿನ ಖಚಿತ ವಿವರಣೆಗಳು, ಶ್ರಾವ್ಯ ಗ್ರಂಥಗಳ ಆಲಿಕೆ ಮತ್ತು ವಾಚನ, ಉದ್ಧೃತ ವಾಕ್ಯಗಳು ಇತರ ಭಾಷೆಗಳಲ್ಲಿರಬಹುದಾದ ಅದೇ ಲೇಖನ ಅಥವಾ ವಿಕಿಪೀಡಿಯಾದ ಸಹ-ಪ್ರಕಟನೆಗಳಲ್ಲಿ ದೂರೆಯಬಹುದಾದ ಇನ್ನಷ್ಟು ವಿವರಗಳು, ಇವೇ ಮುಂತಾದುವುಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲೂ ಸಹ ಅವಕಾಶವಿದೆ. ಇದು ಆಸಕ್ತರು ವಿಕಿಪೀಡಿಯಾಗೆ ನೀಡಬಹುದಾದ ಮತ್ತೊಂದು ಕೊಡುಗೆ.

ವಿಕಿಪೀಡಿಯಾದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳನ್ನು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು. ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಮತ್ತು ಅನ್ವೇಷಣೆಗಳು ನಿರಂತರವಾಗಿ ಜರುಗುತ್ತಿರುವುದರಿಂದ, ಹೀಗೆ ದೊರೆತ ತಧ್ಯಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ. ಇದರಿಂದ ಕ್ರಮೇಣ ಅವುಗಳ ದರ್ಜೆ, ಕೆಲವುಸಮಯದಲ್ಲಿ ಹಳೆಯದನ್ನು ಒತ್ತಟ್ಟಿಗಿಟ್ಟು ಹೊಸದನ್ನು ಪ್ರತಿಪಾದಿಸುವ ಒಂದು ದೃಷ್ಟಿಕೋನ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯವಾಗುತ್ತದೆ. ಇಲ್ಲಿನ ಎಲ್ಲ ಮಾಹಿತಿಗಳೂ ಪ್ರಾರಂಭದಲ್ಲಿಯೇ ವಿಶ್ವಕೋಶೀಯ ದರ್ಜೆಯವೆಂದು ಬಳಕೆದಾರರು ಭಾವಿಸಬಾರದು. ಇಲ್ಲಿ ದೊರೆಯುವ ಹಲವಾರು ಮಾಹಿತಿಗಳು ಸತ್ಯದೂರ ಅಥವಾ ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಅನೇಕ ಮಾಹಿತಿಗಳು ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು. ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು. ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗ್ಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯಾ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೂಳಿಸಿದೆ.

ವಿಕಿಪೀಡಿಯಾದಲ್ಲಿನ ಲೇಖನಗಳು ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ವಿಶ್ವಕೋಶೀಯ ದರ್ಜೆಯ ಮಾಹಿತಿಗಳನ್ನು ಹೊಂದಿರುತ್ತವಲ್ಲದೆ ಅವು ವ್ಯಾಪಕ ಹಾಗೂ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ.

ವಿಕಿಪೀಡಿಯಾದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ ಏಕೆಂದರೆ ಇಲ್ಲಿನ ಹಲವಾರು ಲೇಖನಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು. ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾಪುಟಗಳನ್ನು ವ್ಯವಸ್ಥೆಗೂಳಿಸಲಾಗಿದೆ.

ಸಾಂಪ್ರದಾಯಿಕವಾದ ಮುದ್ರಿತ ವಿಶ್ವಕೋಶಗಳಿಗಿಂತ ವಿಕಿಪೀಡಿಯಾ ಕೆಲವು ಹೆಚ್ಚಿನ ಸೌಲಭ್ಯಗಳನ್ನು ಹೂಂದಿದೆ. ವಿಕಿಪೀಡಿಯಾದಲ್ಲಿನ ಮಾಹಿತಿ ಸಂಗ್ರಹಣೆ ತುಂಬಾ ಅಗ್ಗ. ಈ ಮಾಹಿತಿಗಳನ್ನು ಮುದ್ರಿಸಬೇಕಾದ ಅಗತ್ಯವಿಲ್ಲದೆ ಇರುವುದರಿಂದ ಪರಿಸರ ಹಾನಿ ಗಣನೀಯವಾಗಿ ತಗ್ಗುವುದು . ವಿಕಿಪೀಡಿಯಾದ ಪ್ರತಿಯೊಂದು ಮಾಹಿತಿಯೂ ಬೆಸುಗೆಗಳನ್ನು (Links) ಹೊಂದಿರುವುದರಿಂದ ಮುದ್ರಿತ ಗ್ರಂಥಗಳಲ್ಲಿರುವಂತೆ ಸಾಲು ಸಾಲಿಗೂ ಸೂಕ್ತ ವಿವರಣೆಗಳನ್ನು ನೀಡಬೇಕಾದ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ವಿಕಿಪೀಡಿಯಾದ ಸಂಪಾದಕೀಯ ಚಕ್ರ ಅಲ್ಪಪ್ರಮಾಣದ್ದು. ಮುದ್ರಿತ ವಿಶ್ವಕೋಶಗಳು ಮುಂದಿನ ಪರಿಷ್ಕೃತ ಆವೃತ್ತಿ ಪ್ರಕಟಗೊಳ್ಳುವವರೆಗೂ ಬದಲಾವಣೆ ಹೊಂದದೆ ಇರಬೇಕಾಗುತ್ತದೆ. ಅಲ್ಲದೆ ಬಳಕೆದಾರರು ಪ್ರತಿ ಪರಿಷ್ಕೃತ ಆವೃತ್ತಿಗೂ ಹೆಚ್ಚಿನ ಹಣವನ್ನು ವೆಚ್ಚಮಾಡಬೇಕಾಗುತ್ತದೆ. ಆದರೆ ವಿಕಿಪೀಡಿಯಾದಲ್ಲಿ ಪರಿಷ್ಕರಣಕಾರರು ಯಾವುದೇ ಕ್ಷಣದಲ್ಲಿ ಮಾಹಿತಿಗಳನ್ನು ಪರಿಷ್ಕರಿಸಿ ಅವುಗಳ ಉತ್ಕೃ಼ಷ್ಟತೆಯನ್ನು ಹೆಚ್ಚಿಸಬಹುದು. ಇದರಿಂದಾಗಿ ಇತ್ತೀಚಿನ ವಿದ್ಯಮಾನಗಳು ಮತ್ತು ವಿದ್ವತ್ ಪ್ರಗತಿಗಳನ್ನು ಸಹ ತಕ್ಷಣವೇ ದಾಖಲಿಸಿ ಮಾಹಿತಿಗಳು ಪ್ರಸ್ತುತತೆಯನ್ನು ವೃದ್ಧಿಗೊಳಿಸಬಹುದು.

ವಿಕಿಪೀಡಿಯಾ ಎಂಬ ಬೌದ್ಧಿಕ ಆಯಾಮದಲ್ಲಿ ಪಾತ್ರ ವಹಿಸಲು ಎಲ್ಲರಿಗೂ ಮುಕ್ತ ಅವಕಾಶವುಂಟು. ಅದರಲ್ಲಿನ ಮಾಹಿತಿ ಸಂಗ್ರಹಕಾರರ ವ್ಯಾಪ್ತಿ ತುಂಬಾ ವಿಸ್ತಾರವಾದುದು. ಅಲ್ಲದೆ, ವಿಕಿಪೀಡಿಯಾದ ಸಂಪಾದಕೀಯ ಮಾರ್ಗಸೂಚಿ ಹಾಗೂ ಧೋರಣೆಗಳಿಗೆ ಒಳಪಟ್ಟು ಮತ್ತು ಬಹುಮತದ ಒಪ್ಪಿಗೆಯಿಂದ ಅಲ್ಲಿನ ಲೇಖನಗಳು ಬರೆಯಲ್ಪಡುತ್ತವೆ. ಇದು ವಿಕಿಪೀಡಿಯಾದ ಅಗಾಧ ಸಾಮರ್ಥ್ಯವೂ ಹೌದು ಮತ್ತು ಕೆಲವೊಮ್ಮೆ ಇದರ ದೌರ್ಬಲ್ಯ ಮತ್ತು ವೈವಿಧ್ಯತೆಗಳೂ ಹೌದು.

ವಿಕಿಪೀಡಿಯಾದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಅವು ಬೌದ್ಧಿಕ ರೂಕ್ಷತೆಗೆ ಗುರಿಯಾಗುವ ಸಂಭವವುಂಟು. ಇಂತಹ ಅನಪೇಕ್ಷಿತ ಮಾಹಿತಿಗಳು ಸೇರ್ಪಡೆಯಾಗುವ ಸಾಧ್ಯತೆಗಳೂ ಉಂಟು. ಇಂತಹ ಅನಪೇಕ್ಷಿತ ಮಾಹಿತಿಗಳನ್ನು ವಿಸರ್ಜಿಸಬೇಕಾದ ಅಗತ್ಯತೆಗಳೂ ಉಂಟಾಗುತ್ತವೆ. ಸಾಂಪ್ರದಾಯಿಕ ಆಕರಗಳಲ್ಲಿ ಪೂರ್ವಾಗ್ರಹದಿಂದ ಕೂಡಿದ ಅಥವಾ ಏಕಪಕ್ಷೀಯವಾದ ಮಾಹಿತಿಗಳ ಬಗ್ಗೆ ಆಕ್ಷೇಪಗಳನ್ನೆತ್ತುವುದು ಸುಲಭವಲ್ಲ. ಆದರೆ ವಿಕಿಪೀಡಿಯಾದಲ್ಲಿ ಇಂತಹ ಆಕ್ಷೇಪಣೆಗಳನ್ನು ಕೂಡಲೇ ಪ್ರಸ್ತಾಪಿಸಿ ಮಾಹಿತಿ ಸಂಗ್ರಹಕಾರರಿಗೆ ತಕರಾರುಗಳನ್ನು ನೀಡಬಹುದು. ಅನೇಕ ಮಾಹಿತಿದಾರರು ವಿಕಿಪೀಡಿಯಾದ ಸಂಪಾದಕೀಯ ಧೋರಣೆಗಳನ್ನು ಸಂಪೂರ್ಣವಾಗಿ ಪರಿಪಾಲಿಸದೆ ಇರಬಹುದು ಅಥವಾ ಉಲ್ಲೇಖಾರ್ಹ ಮೂಲಗಳಿಲ್ಲದೆ ಮಾಹಿತಿಗಳನ್ನು ಒದಗಿಸಬಹುದು. ವಿಕಿಪೀಡಿಯಾದ ಬಿಚ್ಚು ಧೋರಣೆಯಿಂದಾಗಿ ಯಾವುದೇ ಸತ್ಯಬಾಹಿರವಾದ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಗಳನ್ನು ತಕ್ಷಣವೇ ಸರಿಪಡಿಸುವ ಸಾಧ್ಯತೆಗಳು ಅಧಿಕಗೊಂಡಿವೆ.

ವಿಕಿಪೀಡಿಯಾಗೆ ಮಾಹಿತಿಗಳನ್ನು ನೀಡುವ ವ್ಯಕ್ತಿಗಳು ಸೌಜನ್ಯಶೀಲರೂ, ತಟಸ್ಥರೂ ಆಗಿರಬೇಕೆಂಬುದನ್ನು ನಿರೀಕ್ಷಿಸಲಾಗುತ್ತದೆ. ಅವರು ಮಾಹಿತಿಗಳನ್ನು ಕಳುಹಿಸಿವ ಮುನ್ನ ವಿಕಿಪೀಡಿಯಾದ ಸ್ವಾಗತ ಪುಟಗಳನ್ನು ಮತ್ತು ಇತರ ಸಹಾಯಕ ಉಪಕರಣಗಳನ್ನೂ ನೋಡಿ ಮನದಟ್ಟುಮಾಡಿಕೊಳ್ಳುವುದು ಒಳ್ಳೆಯದು.

ವಿಕಿಪೀಡಿಯಾ ಸಮುದಾಯವು ಬಹುಪಾಲು ಒಂದು ಸ್ವ-ವ್ಯವಸ್ಥೆಗೂಂಡ ಸಂಘಟನೆ. ಈ ಕಾರಣದಿಂದ ಯಾವುದೇ ವ್ಯಕ್ತಿಯಾದರೂ ಒಬ್ಬ ಸಮರ್ಥ ಪರಿಷ್ಕರಣಕಾರನೆಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳುವುದು ಸಾಧ್ಯವಾಗಿದೆ. ಯಾವುದೇ ವ್ಯಕ್ತಿಯು ತಾನು ಬಯಸಿದ ಯಾವುದೇ ಪಾತ್ರದಲ್ಲಿ ತೂಡಗಿಸಿಕೊಳ್ಳಲು ಸಾಧ್ಯ. ಬಹುತೇಕ ವ್ಯಕ್ತಿಗಳು ಕೆಲವು ಪರಿಣತ ಕೆಲಸಗಳಲ್ಲಿ ಪ್ರವೃತ್ತರಾಗಲು ಬಯಸುತ್ತಾರೆ. ಇತರರ ಪ್ರಾರ್ಥನೆಯ ಮೇರೆಗೆ ಲೇಖನಗಳ ವಿಮರ್ಶೆ, ಬೌದ್ಧಿಕ ರೂಕ್ಷತೆಗಾಗಿ ಪ್ರಸ್ತುತ ಲೇಖನಗಳ ಮೇಲೆ ಕಣ್ಣಿಡುವುದು. ಗುಣನಿಯಂತ್ರಣದ ಉದ್ದೇಶಕ್ಕಾಗಿ ನೂತನವಾಗಿ ಸೇರ್ಪಡೆಗೊಂಡ ಲೇಖನಗಳ ಬಗ್ಗೆ ಜಾಗರೂಕರಾಗಿರುವುದು ಮತ್ತಿತರ ಅಂತಹ ಕಾರ್ಯಗಳಲ್ಲಿ ಅವರು ಪ್ರವೃತ್ತರಾಗ ಬಯಸುತ್ತಾರೆ.

ಆಗಾಗ್ಗೆ ತಲೆದೋರಬಹುದಾದ ದುರ್ಬಳಿಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯಾ ಸಮೃದ್ಧವಾದ ವಿಧಾನಗಳನ್ನು ಹೂಂದಿದೆ. ಈ ವಿದಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತ ಮಟ್ಟದ್ದಾಗಿದೆ.

ಕ್ರಿ.ಶ. ೨೦೦೧ರಲ್ಲಿ ಪ್ರಾರಂಭವಾದ ಇಂಗ್ಲೀಷ ವಿಕಿಪೀಡಿಯಾದಲ್ಲಿ ಇಂದು ಸುಮಾರು ೪೬ ಲಕ್ಷ ಲೇಖನಗಳು ಲಭ್ಯವಿದೆ. ಇಂಗ್ಲೀಷ್ ವಿಕಿಪೀಡಿಯಾ ಅಲ್ಲದೆ ಜಗತ್ತಿನ ಸುಮಾರು ೨೮೬ ಭಾಷೆಗಳಲ್ಲಿ ವಿಕಿಪೀಡಿಯಾ ಲಭ್ಯವಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಿಂದ ನೂರಾರು ಸಾವಿರ ಮಂದಿ ಹತ್ತಾರು ಸಾವಿರ ಮಾಹಿತಿಗಳನ್ನು ಒದಗಿಸುತ್ತಾರಲ್ಲದೆ ಸಾವಿರಾರು ಲೇಖನಗಳನ್ನು ಸಿದ್ಧಪಡಿಸಿ ವಿಕಿಪೀಡಿಯಾದ ಜ್ಞಾನ ಭಂಡಾರವನ್ನು ಮತ್ತಷ್ಟು ಸಮೃದ್ಧಗೂಳಿಸಲು ನೆರವಾಗುತ್ತಲಿದ್ದಾರೆ.

ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಹೆಚ್ಚಿಸಲು ಅಲ್ಲಲ್ಲಿ ಆಗಾಗ ಸಂಪಾದನೋತ್ಸವಗಳನ್ನು (edit-a-thon) ಆಚರಿಸಲಾಗುತ್ತದೆ. ಅವುಗಳ ಬಗೆಗಿನ ವಿವರಣಾತ್ಮಕ ಪುಟಗಳನ್ನು ಇಲ್ಲಿವೆ.




#Article 12: ಯುನಿಕೋಡ್ (858 words)


ಗಣಕೀಕರಣದಲ್ಲಿ ಯುನಿಕೋಡ್ ಎಂದರೆ ಒಂದು ಅಂತರರಾಷ್ಟ್ರೀಯ ನಿರ್ದಿಷ್ಟಮಾನ. ಇದರ ಧ್ಯೇಯ - ಎಲ್ಲಾ ಮಾನವ ಭಾಷೆಗಳಲ್ಲಿ ಬೇಕಾಗುವ ಪ್ರತಿಯೊಂದು ಅಕ್ಷರಕ್ಕೂ ಆಕರದಲ್ಲಿ ಒಂದು ಅಪೂರ್ವ (Unique) ಇಂಟಿಜರ್ ಸಂಖ್ಯೆಯನ್ನು ಕೊಡುವುದು. ಈ ಕೋಡ್ ಸಂಖ್ಯೆಯನ್ನು ಕೋಡ್ ಪಾಯಿಂಟ್ ಎನ್ನುತ್ತಾರೆ.

ಕೆಲವು ಟೀಕೆ, ಸಂಧಿಗ್ಧತೆ ಹಾಗೂ ತಾಂತ್ರಿಕ ತೊಂದರೆಗಳಿದ್ದರೂ ಸಹ ತಂತ್ರಾಂಶಗಳ ಅಂತರರಾಷ್ಟ್ರೀಯತೆಯಲ್ಲಿ (internationalization) ಪ್ರಬಲ ಎನ್ಕೋಡಿಂಗ್ ವಿಧಾನವಾಗಿ ಹೊರಹೊಮ್ಮಿದೆ. ಯುನಿಕ್ಸ್ ಮತ್ತು ಸಮಾನವಾದ   ಗ್ನು/ಲಿನಕ್ಸ್, ಬಿ ಎಸ್ ಡಿ, ಹಾಗೂ ಮ್ಯಾಕ್ ಓಎಸ್ ಎಕ್ಸ್ ಇವೇ ಮೊದಲಾದ ಆಪರೇಟಿಂಗ್ ಸಿಸ್ಟಮ್ ಗಳು ಯುನಿಕೋಡನ್ನು (ಯು ಟಿ ಎಫ್ -೮ ರ ರೂಪದಲ್ಲಿ)  ಅಂಗೀಕರಿಸಿವೆ. ಮೈಕ್ರೊಸಾಫ್ಟ್ನ ವಿಂಡೋಸ್ ಶ್ರೇಣಿಯ ಆಪರೇಟಿಂಗ್ ಸಿಸ್ಟಮ್ ಗಳು ಯು ಟಿ ಎಫ್ -೧೬ನ್ನು ಬಹಳವಾಗಿ ಉಪಯೋಗಿಸುತ್ತವೆ.

ಅಂಗಡಿಗೆ ಹೋಗಿ ಒಂದು ಬಲ್ಬ್ ಬೇಕೆಂದು ಕೇಳಿ ನೋಡಿ. ಅಂಗಡಿಯಾತ ನಿಮ್ಮ ಮನೆಯಲ್ಲಿ ಯಾವ ಕಂಪೆನಿಯ ಹೋಲ್ಡರ್ ಇದೆ ಎಂದು ಕೇಳುವುದಿಲ್ಲ. ಯಾಕೆಂದರೆ ಯಾವ ಕಂಪೆನಿಯ ಹೋಲ್ಡರ್ ಆದರೇನು, ಎಲ್ಲ ಬಲ್ಬ್‌ಗಳು ಎಲ್ಲ ಹೋಲ್ಡರ್‌ಗಳಲ್ಲಿ ಕೆಲಸ ಮಾಡುತ್ತವೆ. ಈಗ ಕನ್ನಡ ಮತ್ತು ಗಣಕ ಕ್ಷೇತ್ರಕ್ಕೆ ಬನ್ನಿ. ನಿಮ್ಮ ಮನೆಯ ಗಣಕದಲ್ಲಿ ಕಡತವೊಂದನ್ನು ತಯಾರಿಸಿ ಫ್ಲಾಪಿಯಲ್ಲಿ ತುಂಬಿಸಿ ಅದರ ಲೇಸರ್ ಮುದ್ರಣಕ್ಕೆ ಯಾವುದಾದರು ಡಿ.ಟಿ.ಪಿ. ಕೇಂದ್ರಕ್ಕೆ ತೆಗೆದುಕೊಂದು ಹೋಗಿ. ಆತ ನಿಮ್ಮನ್ನು ಖಂಡಿತವಾಗಿ ಕೇಳುವ ಪ್ರಶ್ನೆಯೆಂದರೆ ನೀವು ಯಾವ ತಂತ್ರಾಂಶ ತಯಾರಿಸಿ ಕಡತವನ್ನು ತಯಾರು ಮಾಡಿದ್ದೀರಾ?. ನೀವು ಬಳಸಿದ ತಂತ್ರಾಂಶ ಆತನ ಗಣಕದಲ್ಲಿ ಇಲ್ಲದಿರುವ ಸಂಭವವೇ ಹೆಚ್ಚು. ಕನ್ನಡದ ಯಾವುದೇ ತಂತ್ರಾಂಶವನ್ನು ಬಳಸಿ ತಯಾರಿಸಿದ ಕಡತವನ್ನು ಕನ್ನಡದ ಯಾವುದೇ ತಂತ್ರಾಂಶದಲ್ಲಿ ಓದಲು ಸಾಧ್ಯವಿರಬೇಕಲ್ಲವೇ, ಎಂದು ನಿಮಗೆ ಅನ್ನಿಸಿರಬೇಕಲ್ಲವೇ? ಅದನ್ನು ಸಾಧ್ಯಮಾಡಿಕೊಡುವುದೇ ಈ ಯುನಿಕೋಡ್. ಕನ್ನಡದಲ್ಲಿ ಕಡತವೊಂದನ್ನು ತಯಾರಿಸಿ ಜಪಾನಿಗೆ ಕಳುಹಿಸಿದರೆ ಅವರಿಗೆ ಇದು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ವಿಧಾನ ಇದ್ದರೆ ಒಳ್ಳೆಯದಲ್ಲವೇ? ಇದುವೇ ಯುನಿಕೋಡ್. 

ನಾವು ಇಂಗ್ಲೀಷ್ನಲ್ಲಿ ಮಾತನಾಡುವಾಗ ಕನ್ನಡದಲ್ಲಿ ಆಲೋಚಿಸಿ ಇಂಗ್ಲೀಷ್ ಗೆ ಅನುವಾದಿಸಿ ಮಾತನಾಡುತ್ತೇವಲ್ಲವೇ? ಗಣಕಗಳು ಕನ್ನಡದಲ್ಲಿ ವ್ಯವಹರಿಸುವುದು ಸುಮಾರಾಗಿ ಹಾಗೆಯೇ. ಮಾಹಿತಿಯ ಸಂಗ್ರಹಣೆಗೆ ಒಂದು ಸಂಕೇತ, ತೋರಿಸಲು ಇನ್ನೊಂದು ಸಂಕೇತ. ಮಾಹಿತಿಯ ಸಂಗ್ರಹಣೆಗೆ ಭಾರತೀಯ ಭಾಷೆಗಳಿಗೆ ಬಳಸುತ್ತಿರುವುದು ಇಸ್ಕಿಯನ್ನು (ISCII = ). ಇಸ್ಕಿಯು ಆಸ್ಕಿಯನ್ನು (ASCII = ) ಆಧರಿಸಿದೆ. 

ಆಸ್ಕಿ ೮ ಬಿಟ್‌ಗಳನ್ನು ಹೊಂದಿದೆ. ಗಣಕದಲ್ಲಿ ಮಾಹಿತಿಯ ಒಂದು ತುಣಕೇ ಬಿಟ್ (bit = binary digit). ವಿದ್ಯುತ್ತಿಗೆ ಎರಡೇ ಸಾಧ್ಯತೆಗಳಿರುವುದು -ಇದೆ ಅಥವಾ ಇಲ್ಲ. ವಿದ್ಯುತ್ ಇದೆ ಎಂದರೆ ಒಂದು, ಇಲ್ಲ ಎಂದರೆ ಸೊನ್ನೆ ಎಂದು ತೆಗೆದುಕೊಂಡರೆ ಒಂದು ಬಿಟ್‌ನಲ್ಲಿ ೦ ಅಥವಾ ೧ ಅನ್ನು ಸೂಚಿಸಬಹದು. ಒಂದು ಅಕ್ಷರವನ್ನು ಶೇಖರಿಸಲು ಎರಡು ಬಿಟ್‌ಗಳನ್ನು ತೆಗೆದುಕೊಂಡರೆ ಒಟ್ಟು ನಾಲ್ಕು ಸಾಧ್ಯತೆಗಳಿವೆ -೦೦, ೦೧, ೧೦ ಮತ್ತು ೧೧ (ದ್ವಿಮಾನ). ಇವು ದಶಮಾನ ಪದ್ಧತಿಯಲ್ಲಿ ೦, ೧, ೨, ೩ ಆಗುತ್ತವೆ. ಆಸ್ಕಿ ಮತ್ತು ಇಸ್ಕಿಗಳು ೮ ಬಿಟ್‌ಗಳನ್ನು ಬಳಸುತ್ತವೆ. ೮ ಬಿಟ್‌ಗಳನ್ನು ಬಳಸುವ ಯಾವುದೇ ಸಂಕೇತೀಕರಣ ವಿಧಾನವು ೨೫೬ (೨೮ = ೨೫೬) ಅಕ್ಷರಗಳನ್ನು ಮಾತ್ರವೇ ಹೊಂದಿರಬಲ್ಲುದು. ಕನ್ನಡ ಭಾಷೆಯಲ್ಲಿ ೪೯ ಅಕ್ಷರಗಳಿವೆ. ಜೊತೆಗೆ ಸ್ವರ ಚಿಹ್ನೆಗಳಿವೆ. ಇಂಗ್ಲೀಷ್ ಭಾಷೆಯಲ್ಲಿ ೨೬ (ಮತ್ತು ೨೬) ಅಕ್ಷರಗಳಿವೆ. ಬರೆವಣಿಗೆಯ ಚಿಹ್ನೆ, ಅಂಕೆ, ಇತ್ಯಾದಿಗಳೆಲ್ಲ ಒಟ್ಟು ಸೇರಿದರೂ ೨೫೬ಕ್ಕಿಂತ ಕಡಿಮೆಯೇ. ಹಾಗಿದ್ದಲ್ಲಿ ೨೫೬ ಸಂಕೇತಗಳು ಸಾಕಲ್ಲವೇ? ಇಸ್ಕಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ ಇಂಗ್ಲೀಷ್ ಮತ್ತು ಒಂದು ಭಾರತೀಯ ಭಾಷೆಯನ್ನು ಬಳಸಬಹುದು. ಅಂದರೆ ಕನ್ನಡ, ಹಿಂದಿ, ತಮಿಳು, ತೆಲುಗು, ಹೀಗೆ ಹಲವು ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸುವುದು ಅಸಾಧ್ಯ. 

ಇಸ್ಕಿಯಲ್ಲಿ ಭಾರತದ ಎಲ್ಲ ಭಾಷೆಗಳಿಗೆ ಒಂದೇ ಸಂಕೇತ ನೀಡಲಾಗಿದೆ. ಅಂದರೆ ಕನ್ನಡದ ಕ ಮತ್ತು ಹಿಂದಿಯ क ಎರಡಕ್ಕೂ ಒಂದೇ ಸಂಕೇತ ಇದೆ. ಇದರಿಂದ ಕೆಲವೊಮ್ಮೆ ಲಾಭವೂ ಇದೆ. ಒಂದು ಟೆಲಿಫೋನ್ ಡೈರೆಕ್ಟರಿಯನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಿಸಬೇಕಾದರೆ, ಕನ್ನಡದಲ್ಲಿ ಬೆರಳಚ್ಚು ಮಾಡಿ, ಇಸ್ಕಿಯಲ್ಲಿ ಶೇಖರಿಸಿ, ಅದನ್ನು ಹಿಂದಿಯ ಫಾಂಟ್‌ನ ಸಂಕೇತಗಳಿಗೆ ಪರಿವರ್ತಿಸಿದರೆ ಸಾಕು. ಆದರೆ ಸಮಸ್ಯೆ ಇರುವುದು ಅಕಾರಾದಿ ವಿಂಗಡಣೆಯಲ್ಲಿ. ಕನ್ನಡ, ತೆಲುಗು, ಮರಾಠಿ, ಹಿಂದಿ, ಹೀಗೆ ಎಲ್ಲ ಭಾಷೆಗಳಿಗೂ ಒಂದೆ ಅಕಾರಾದಿ ವಿಂಗಡಣೆಯ ಸೂತ್ರ ಕಲ್ಪಿಸಲಾಗಿದೆ. ಕನ್ನಡ ಮತ್ತು ಹಿಂದಿಯ ಸೂತ್ರ ಒಂದೇ ಆಗಿರಬೇಕಾಗಿಲ್ಲ. ಉದಾಹರಣೆಗೆ ಇಸ್ಕಿಯಲ್ಲಿರುವ ಅಕಾರಾದಿ ವಿಂಗಡಣೆ -ಯ, ರ ಲ, ಳ, ವ, ಶ, ಷ, ಸ, ಹ. ಕನ್ನಡದಲ್ಲಿ ಇದು ಯ, ರ, ಲ, ವ, ಶ, ಷ, ಸ, ಹ, ಳ ಆಗಬೇಕು.

ಪ್ರಪಂಚದ ಮಟ್ಟಿಗೆ ಹೇಳುವುದಾದರೆ ಭಾರತೀಯ ಭಾಷೆಗಳ ಜೊತೆ, ಚೀನಾ, ಜಪಾನ್, ಅರೇಬಿ, ಯುರೋಪಿನ ಭಾಷೆಗಳು, ಹೀಗೆ ನೂರಾರು ಭಾಷೆಗಳಿಗೆ ಸ್ಥಾನ ಕಲ್ಪಿಸಿ ಕೊಡಬೇಕಾಗುತ್ತದೆ. ಇದಕ್ಕೆಲ್ಲ ಮದ್ದೆಂದರೆ ೮ ಬಿಟ್‌ಗಳ ಸಂಕೇತೀಕರಣದ ಬದಲಿಗೆ ೧೬ ಬಿಟ್‌ಗಳನ್ನು ಬಳಸುವುದು. ೧೬ ಬಿಟ್‌ಗಳನ್ನು ಬಳಸುವುದರಿಂದ ಸುಮಾರು ೬೫,೦೦೦ (೨೧೬ = ೬೫೫೩೬)ಮೂಲಾಕ್ಷರಗಳಿಗೆ ಜಾಗ ಮಾಡಿಕೊಟ್ಟಂತಾಗುತ್ತದೆ. ಇದು ಪ್ರಪಂಚದ ಬಹುತೇಕ ಭಾಷೆಗಳಿಗೆ ಸಾಕು. ಇದುವೇ ಯುನಿಕೋಡ್ (Unicode). ಯುನಿಕೋಡ್ ಎಂಬುದು uniform, universal, unique ಮತ್ತು code (ಸಂಕೇತ) ಎಂಬ ಪದಗಳನ್ನು ಸೂಚಿಸುತ್ತದೆ. ಪ್ರಪಂಚಕ್ಕೆಲ್ಲಾ ಒಂದೇ ಸಂಕೇತ ವಿಧಾನ ಇರತಕ್ಕದ್ದು. ಪ್ರಪಂಚದ ಪ್ರತಿ ಭಾಷೆಯ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಪ್ರತ್ಯೇಕ ಸಂಕೇತ ಇರಬೇಕು. ಈ ಎಲ್ಲ ಬೇಕುಗಳಿಗೆ ಉತ್ತರವೇ ಯುನಿಕೋಡ್. ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಶ್ರೇಣಿ ಇದೆ. ಇದು ಭಾರತೀಯ ಭಾಷೆಗಳಿಗೂ ಅನ್ವಯಿಸುತ್ತದೆ. ಯುನಿಕೋಡ್ ವಿಧಾನದಲ್ಲಿ ಮಾಹಿತಿ ಸಂಗ್ರಹಣೆ ಮಾಡಿದರೆ ಒಂದೇ ಕಡತದಲ್ಲಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಮಾಹಿತಿಯನ್ನು ಶೇಖರಣೆ ಮಾಡಲು ಸಾಧ್ಯ. ಗ್ರಂಥಾಲಯವೊಂದರಲ್ಲಿ ಭಾರತದ ಎಲ್ಲ ಭಾಷೆಯ ಪುಸ್ತಕಗಳಿದ್ದಲ್ಲಿ ಅವುಗಳ ವಿವರಗಳ ದತ್ತಸಂಚಯ (database) ತಯಾರಿಸಬೇಕಾದರೆ ಯುನಿಕೋಡ್ ವಿಧಾನದಿಂದ ಮಾತ್ರ ಸಾಧ್ಯ.

ಯುನಿಕೋಡ್ ಆಧಾರಿತ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಮಾಹಿತಿ ಶೇಖರಣೆಯ ಸಂಕೇತವಾದ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ. ಅಂದರೆ ನುಡಿ, ಬರಹ, ಆಕೃತಿ, ಶ್ರೀಲಿಪಿ, ಸಿಡಾಕ್, ಇತ್ಯಾದಿ ತಂತ್ರಾಂಶಗಳಂತೆ ಅಕ್ಷರಶೈಲಿ (ಫಾಂಟ್)ಗಳ ಸಂಕೇತಗಳಲ್ಲಿ ಮಾಹಿತಿ ಸಂಗ್ರಹಣೆ ಅಲ್ಲ. ನಿಮ್ಮಲ್ಲಿ ಯುನಿಕೋಡ್ ಆಧಾರಿತ ಕನ್ನಡದ ಓಪನ್‌ಟೈಪ್ ಫಾಂಟ್ ಇರತಕ್ಕದ್ದು. ಯುನಿಕೋಡ್‌ನಲ್ಲಿ ತಯಾರಿಸಿದ ಕಡತವನ್ನು ಬೇರೊಬ್ಬರಿಗೆ ಕಳುಹಿಸುವಾಗ ಕಡತದ ಜೊತೆ ನಿಮ್ಮ ಅಕ್ಷರಶೈಲಿಯನ್ನೂ ಕಳುಹಿಸುವ ಅಗತ್ಯವಿಲ್ಲ. ನಿಮ್ಮಲ್ಲಿರುವ ಓಪನ್‌ಟೈಪ್ ಫಾಂಟ್ ಮತ್ತು ನಿಮ್ಮ ಸ್ನೇಹಿತರಲ್ಲಿರುವ ಓಪನ್‌ಟೈಪ್ ಫಾಂಟ್ ಬೇರೆ ಬೇರೆ ಇರಬಹುದು. ಮಾಹಿತಿಯನ್ನು ಅಕ್ಷರಶೈಲಿಯ ಸಂಕೇತಗಳ ಬದಲಿಗೆ ಮೂಲ ಮಾಹಿತಿಯಾಗಿಯೇ ಕಳುಹಿಸುವುದರಿಂದ ಮಾಹಿತಿ ಸಂವಹನೆಯಲ್ಲಿ ಯಾವ ತೊಡಕೂ ಇಲ್ಲ.

ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಗಳಿರುವುದು ಮಾತ್ರವಲ್ಲ, ಪ್ರತಿ ಭಾಷೆಗೂ ತನ್ನದೇ ಆದ ಅಕಾರಾದಿ ವಿಂಗಡಣೆಯ ಸೂತ್ರವೂ ಯುನಿಕೋಡ್‌ನಲ್ಲಿದೆ. ಇಸ್ಕಿಯಲ್ಲಿರುವ ಅಕಾರಾದಿ ವಿಂಗಡಣೆಯ ಸಮಸ್ಯೆಗೆ ಯುನಿಕೋಡ್‌ನಲ್ಲಿ ಪರಿಹಾರಹವಿದೆ. ಯುನಿಕೋಡ್‌ನ ಹಳೆಯ ಆವೃತ್ತಿಯಲ್ಲಿ ಕನ್ನಡದ ಅಕಾರಾದಿ ವಿಂಗಡಣೆಗೆ ಇಸ್ಕಿಯಲ್ಲಿನ ಸೂತ್ರವನ್ನೇ ಬಳಸಲಾಗಿತ್ತು. ಆದರೆ ಯುನಿಕೋಡ್‌ನ ೪.೦ ಆವೃತ್ತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. 

ಪ್ರಪಂಚದ ಖ್ಯಾತ ಗಣಕ ಕಂಪೆನಿಗಳು, ತಂತ್ರಾಂಶ ತಯಾರಕರು, ದೇಶಗಳು ಸೇರಿ ಆಗಿರುವ ಒಂದು ಸಂಸ್ಥೆ ಯುನಿಕೋಡ್ ಕನ್‌ಸೋರ್ಟಿಯಂ. ಭಾರತ ದೇಶವೂ ಇದರ ಸದಸ್ಯತ್ವ ಹೊಂದಿದೆ. ಯುನಿಕೋಡ್ ಒಂದು ಕಂಪೆನಿಯ ಸ್ವತ್ತಲ್ಲ. 

ಮೈಕ್ರೋಸಾಫ್ಟ್‌ನವರ ವಿಂಡೋಸ್ 7, 8, ‍XP ಮತ್ತು ಸರ್ವರ್ ೨೦೦೩ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating system) ಕನ್ನಡದ ಯುನಿಕೋಡ್ ಸವಲತ್ತನ್ನು ನೀಡಲಾಗಿದೆ. ವಿಂಡೋಸ್ ಎಂಇ, ೯೮, ೯೫, ಇತ್ಯಾದಿಗಳಲ್ಲಿ ಯುನಿಕೋಡ್‌ನ ಸೌಲಭ್ಯ (ಸರಿಯಾಗಿ) ಇಲ್ಲವೆಂದೇ ಹೇಳಬಹುದು. ಕನ್ನಡ ಲಿನಕ್ಸ್‌ನಲ್ಲಿ ನೇರವಾಗಿ ಯುನಿಕೋಡ್‌ನ್ನೇ ಬಳಸಲಾಗಿದೆ. ಅಂದರೆ ವಿಂಡೋಸ್‌ನಲ್ಲಿ ಯುನಿಕೋಡ್ ವಿಧಾನದಲ್ಲಿ ಕಡತವೊಂದನ್ನು ತಯಾರಿಸಿದರೆ ಅದನ್ನು ಲಿನಕ್ಸ್‌ನಲ್ಲಿ ಯಾವ ತೊಂದರೆಯೂ ಇಲ್ಲದೆ ಓದಬಹುದು.

ಕ್ಯಾಲಿಫೊರ್ನಿಯ ಸ್ಥಿತ ಯುನಿಕೋಡ್ ಸಹಯೋಗ ಸಮಿತಿ () ಮೊಟ್ಟಮೊದಲಾಗಿ ೧೯೯೧ರಲ್ಲಿ ದ ಯುನಿಕೋಡ್ ಸ್ಟ್ಯಾಂಡರ್ಡ್ (ISBN ೦-೩೨೧-೧೮೫೭೮-೧) ಎಂಬ ಸ್ಟ್ಯಾಂಡರ್ಡ್ ಹೊರತಂದಿತು. ಈಗಲೂ ಕೂಡ ಆ ಮೂಲ ಕೆಲಸವನ್ನುಪಯೋಗಿಸಿಕೊಂಡು ಹಲವು ನಿರ್ದಿಷ್ಟಮಾನಗಳನ್ನು ಹೊರತರಲಾಗುತ್ತಿದೆ. 'ಇಂಟರ್ನ್ಯಾಷನಲ್ ಆರ್ಗನೈಝೇಶನ್ ಫಾರ್ ಸ್ಟ್ಯಾಂಡರ್ಡೈಝೇಶನ್' ಜೊತೆಜೊತೆಗೆ ವಿಕಸಿತಗೊಂಡ ಯುನಿಕೋಡ್, ತನ್ನ ಅಕ್ಷರಗಳ ಸಮೃದ್ಧ ಕಣಜವನ್ನು ISO/IEC ೧೦೬೪೬ ಜೊತೆ ಹಂಚಿಕೊಳ್ಳುತ್ತಿದೆ. ಯುನಿಕೋಡ್ ಹಾಗೂ ISO/IEC ೧೦೬೪೬ ಸಮನಾದ ಅಕ್ಷರ ಎನ್ಕೋಡಿಂಗ್ ಗಳಾಗಿದ್ದರೂ, ಯುನಿಕೋಡ್ ನಿರ್ದಿಷ್ಟಮಾನ ಇಂಪ್ಲಿಮೆಂಟರ್‍ಗಳು, ಬಿಟ್ ವೈಸ್ ಎನ್ಕೋಡಿಂಗ್, ಕೊಲ್ಲೇಶನ್, ರೆಂಡರಿಂಗ್ ಹಾಗೂ ಮತ್ತಷ್ಟು ಹಲವು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದೆ. ಅದಲ್ಲದೆ, ಇವೆರಡೂ ನಿರ್ದಿಷ್ಟಮಾನಗಳು ಕೆಲವು ಅಸಮಾನ ಶಬ್ದ ಪ್ರಯೋಗಗಳನ್ನು (Terminology) ಹೊಂದಿವೆ.

ಈ  ನೋಡಿ. (ಆಂಗ್ಲ ಭಾಷೆಯಲ್ಲಿದೆ)

ಹೊಸ ಅಕ್ಷರಗಳನ್ನು ಈಗಾಗಲೇ ಕೂಡಿಸಲ್ಪಟ್ಟ ಯುನಿಕೋಡ್ ನಿರ್ಧಿಷ್ಟಮಾನಕ್ಕೆ ಮತ್ತು ISO/IEC 10646ಗೆ ಸ್ವೀಕರಿಸಲು ಬಹಳ ದೂರದ ಹಾದಿ ತುಳಿಯಬೇಕಾಗಬಹುದು. ಆದ್ದರಿಂದ ಇದರ ಬಳಕೆದಾರರಿಗೆ ಹಾಗು ಪ್ರಬಂಧಕರಿಗೆ ಮುಂದೆ ಬರುವ ಸೇರ್ಪಡೆಗಳೆಡೆಗೆ ಗಮನವಿರಿಸುವುದಕ್ಕೆ ಸಹಾಯ ಮಾಡಲು ಯುನಿಕೋಡ್ ಪೈಪ್ ಲೈನ್ ಟೇಬಲ್ ಇದುವರೆಗೆ ಪ್ರಸ್ತಾಪಿಸಿದ ಕೋಡ್ ಪಾಯಿಂಟ್ಗಳನ್ನು ಹಾಗು ಹೊಸ ಅಕ್ಷರಗಳ ಈಗಿನ ಸ್ಥಿತಿಯನ್ನು ತಿಳಿಸುತ್ತದೆ.
ಹೊಸ ಸ್ಕ್ರಿಪ್ಟ್ ಗಳು ಅಥವಾ ಅಕ್ಷರಗಳು ಯುನಿಕೋಡ್ ಪೈಪ್ಲೈನ್ ಸೇರುವ ಮುನ್ನ 'Characters and Scripts Under Investigation' ಅಥವಾ 'Proposed new scripts' ವರ್ಗಗಳ ಕೆಳಗೆ ನಾವು ಅವನ್ನು ಕಾಣಬಹುದು. ಪ್ರಸ್ತಾವನೆಗಳು ಮುಕ್ತವಾಗಿ ನಡೆಯುವುದಲ್ಲದೆ ಎಲ್ಲೆಡೆಯಿಂದಲೂ ಪ್ರತಿಕ್ರಿಯೆಗಳನ್ನು ಆಮಂತ್ರಿಸಲಾಗುತ್ತದೆ.




#Article 13: ಮೈಸೂರು (766 words)


ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.

ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು 'ಮಹಿಷಪುರಿ', 'ಮಹಿಷೂರು'. ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. 'ಮಹಿಷ' ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಈತ ಮಾನವ ಮತ್ತು ಎಮ್ಮೆ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ, ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿ‍‌ಷೂರುಮಹಿಸೂರುಮಸೂರು ಆಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ ೨೦೦೫ ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಇಂಗ್ಲೀಷ್ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು. ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ. ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ.

ಕೃಷ್ಣರಾಜ ನಗರವು  ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರವಾಗಿದ್ದು ಕಾವೇರಿ ನದಿಯ ದಡದಲ್ಲಿದೆ ಈ ನಗರವು ಇಂದೆ ಎಡ ತೊರೆ ಎಂದು ಕರೆಯಲಾಗುತ್ತಿತು ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನ ಇದೆ 

ಜಿಲ್ಲೆಯ ಒಂದು ಪ್ರಮುಖ  ತಾಲೂಕು ಕೇಂದ್ರ ವಾಗಿದ್ದು. ಕಾವೇರಿ  ನದಿಯ ದಡದಲ್ಲಿದೆ. ಈ ನಗರವು ಹಿಂದೆ ಯಡತೊರೆ ಎಂದು ಕರೆಯಲ್ಪಟ್ಟಿತು. ಈ  ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನವಿದೆ.

ಇದು ಜಗತ್ತಿನಲ್ಲೇ ಕಂಡು ಬರುವ ಎರಡನೇ ಸೂರ್ಯ ದೇವಾಲತವಾಗಿದೆ. ಈ ದೇವಾಲಯದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ  ಮರುದಿನ  ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತದೆ.

ಚನ್ನ  ಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. 1258 CE ಯಲ್ಲಿ ಹೊಯ್ಸಳ ರಾಜ ನರಸಿಂಹ111 ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ 38 ಕಿಲೋ ಮೀಟರ್ ದೂರದಲ್ಲಿದೆ..
ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ.

ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ  ಆಕಾರದ ವೇದಿಕೆಯಾಗಿದೆ.

images.jpg|

ಮೈಸೂರು ನಗರದ ಅರಮನೆಗಳ ನಗರ  ಎಂದು ಕರೆಯಲಾಗುತ್ತದೆ. ಆದ್ದರಿಂದ ಅರಮನೆಗಳು ಪ್ರವಾಸಿ ಆಕರ್ಷಣೆಯಾಗಿದೆ. ಇದಲ್ಲದೆ ಸಹ ಅಂಬಾವಿಲಾಸ ಅರಮನೆ ಎಂಬ ಪ್ರಸಿದ್ಧ ಮೈಸೂರು ಅರಮನೆ. ಇದಲ್ಲದೆ ಜಗನ್ ಮೋಹನ ಅರಮನೆ, ಜಯಲಕ್ಮೀ ವಿಲಾಸ ಮತ್ತು ಲಲಿತಮಹಲ್ ಗಳನ್ನು ಹೊಂದಿದೆ. ಜೊತೆಗೆ ಇಂದು ವಿವಿಧ ಉದ್ದೇಶಗಳನ್ನು ಮೂರು ಪ್ರಸಿದ್ಧ ಮಹಲುಗಳನ್ನು ಕಾರಂಜಿ ಮ್ಯಾನ್ಷನ್ ,ಜಯಲಕ್ಷ್ಮೀ ಮ್ಯಾನ್ಷನ್ ಮತ್ತು ಚೆಲುವಾಂಬ ಮ್ಯಾನ್ಷನ್ ಇವೆ. ಎಲ್ಲಾ ಮಹಲುಗಳು, ಮೈಸೂರು ಅರಮನೆ ಕಾರಂಜಿಗಳನ್ನು ಸುಂದರ ವಿಸ್ತಾರವಾದ ತೋಟಗಳು ಸುತ್ತುವರಿದಿದೆ. ಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ ಅರಮನೆಗಳ ನಗರ ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು: ಮುಖ್ಯ ಮೈಸೂರು ಅರಮನೆ: ಮುಖ್ಯ ಮೈಸೂರು ಅರಮನೆ ಅಥವಾ ಅಂಬಾ ವಿಲಾಸ, ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ  ನೀಡುವ ಅರಮನೆ. 

ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ.

ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. ರಾಜಾ ರವಿ ವರ್ಮ ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಚಿತ್ರಕೃತಿಗಳನ್ನು ಇಲ್ಲಿ ಕಾಣಬಹುದು. 

ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ. 

ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.

ಕೃಷ್ಣ ರಾಜ ಸಾಗರ ಅಣೆಕಟ್ಟು : ಮೂರು ನದಿಗಳು ಕಾವೇರಿ , ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಒಂದೆಡೆ ಹತ್ತಿರ ನಿರ್ಮಿಸಲಾಗಿದೆ ಎಸ್ ಅಣೆಕಟ್ಟೆಯಿಂದ , ಭಾರತದ ದಕ್ಷಿಣ ಭಾಗದಲ್ಲಿ ಪ್ರಮುಖ ಜಲಾಶಯ. ಇದು ಮಹಾನ್ ಇಂಜಿನಿಯರ್ ಸರ್ ಎಂ Visvesraya ವಿನ್ಯಾಸಗೊಳಿಸಿದ ಮತ್ತು ಅದರ ಅದ್ಭುತ ಕಾಲುವೆಗಳ ಮೂಲಕ 1932 ರಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಂತ ನೀರು ಒದಗಿಸುವ ಅಣೆಕಟ್ಟು ನಿರ್ಮಿಸಲಾಗಿತ್ತು ನೀರಿನ ಹೊರಬಂದರು ಮಾಡಿದಾಗ ನೋಡು ಒಂದು ಸುಂದರ ದೃಶ್ಯ.
ಸೇಂಟ್ ಫಿಲೋಮಿನಾ ಚರ್ಚ್ : ನವ್ಯ-ಗೋಥಿಕ್ ಶೈಲಿಯಲ್ಲಿ ಬೃಹತ್ ಚರ್ಚ್ ಭಾರತದ ಅತಿ ಭವ್ಯ ಚರ್ಚುಗಳು ಒಂದಾಗಿದೆ . ಚರ್ಚ್ ಅದ್ಭುತ ನೆಲಮಹಡಿಯು ಕ್ರಾಸ್ ಹೋಲುತ್ತದೆ . ಚರ್ಚ್ 175 ಅಡಿ ಎತ್ತರದ ಅವಳಿ ಗೋಪುರಗಳು ಹಲವಾರು ಮೈಲಿಗಳ ದೂರದಿಂದ ಗೋಚರಿಸುತ್ತವೆ . ಈ ಚರ್ಚ್ ಗಾಜಿನ ಚಿತ್ರಿಸಿದ ಕಿಟಕಿಗಳಿವೆ ಅವರ ಹುಟ್ಟು, ಲಾಸ್ಟ್ ಸಪ್ಪರ್ , ಶಿಲುಬೆಗೇರಿಸಿದ ಮತ್ತು ಪುನರುತ್ಥಾನದ ರೀತಿಯ ಯೇಸುಕ್ರಿಸ್ತನ ಜೀವನದಲ್ಲಿ ಘಟನೆಗಳ ದೃಶ್ಯಗಳನ್ನು ಚಿತ್ರಿಸಲು .
 ರೈಲು ಮ್ಯೂಸಿಯಂ : ಈ ಇತರ ದೆಹಲಿಯಲ್ಲಿ ಜೊತೆಗೆ ಭಾರತದಲ್ಲಿ ಸ್ಥಾಪನೆ ಎರಡು ರೈಲು ವಸ್ತು ಒಂದಾಗಿದೆ . ಇದು ಛಾಯಾಚಿತ್ರಗಳು , ಪುಸ್ತಕ ಮತ್ತು ಇಂಜಿನ್ ಎಂಜಿನ್ ಮತ್ತು ರೈಲು ಗಾಡಿಗಳು ಪ್ರದರ್ಶನ ಮೂಲಕ ಭಾರತೀಯ ರೈಲ್ವೆ ಹಿಂದೆ ಮೂಲಕ ಹೊಂದಿದೆ ಪ್ರಗತಿಯ ಪ್ರಯಾಣ ದಾಖಲಿಸಿದೆ.

ತಿಂಡಿ ತಿನಿಸುಗಳ ವಿಷಯದಲ್ಲಿ ಮೈಸೂರಿನ - ಮೈಲಾರಿ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದ ಎಲೆ, ಮೈಸೂರು ರೇಷ್ಮೆ ಮತ್ತು ಗಂಧದ ಎಣ್ಣೆ, ಸೋಪು ಪ್ರಸಿದ್ಧಿ.

ಮೈಸೂರು ನಗರದ ಕೆಲವು ಪ್ರಮುಖ ಪ್ರದೇಶಗಳು- ಸಂತೇಪೇಟೆ, ಕೃಷ್ಣರಾಜ ಮೋಹಲ್ಲ, ನಜರ್ ಬಾದ್, ಕ್ಯಾತಮಾರನಹಳ್ಳಿ (ಕಂಠೀರವ ನರಸಿಂಹರಾಜಪುರ), ಕನ್ನೇಗೌಡನ ಕೊಪ್ಪಲು, ಇಟ್ಟಿಗೆಗೂಡು, ಅಶೋಕಪುರಂ, ಶ್ರೀರಾಮಪುರ, ಜಯನಗರ, ಕುವೆಂಪುನಗರ, ಸರಸ್ವತಿ ಪುರಂ, ವಿದ್ಯಾರಣ್ಯಪುರಂ, ಸಿದ್ದಾರ್ಥನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಶಾರದದೇವಿನಗರ, ತೊಣಚಿಕೊಪ್ಪಲು, ಮಾನಸಗಂಗೋತ್ರಿ, ಜಯಲಕ್ಷ್ಮಿಪುರಂ, ಒಂಟಿಕೊಪ್ಪಲು (ವಾಣಿ ವಿಲಾಸ ಮೊಹಲ್ಲ), ಗೋಕುಲಂ, ಯಾದವಗಿರಿ, ಬೃಂದಾವನ ಬಡಾವಣೆ, ಹೆಬ್ಬಾಳು ಬಡಾವಣೆ, ವಿಜಯನಗರ, ಜೆ.ಪಿ.ನಗರ, ಶಿವರಾಮಪೇಟೆ, ವೀರನಗೆರೆ (ಗಾಂಧಿನಗರ), ಕನಕದಾಸನಗರ, ರೂಪನಗರ, ದೀಪನಗರ, ದಟ್ಟಗಳ್ಳಿ ಮುಂತಾದುವು.

ಮೈಸೂರು ಜಿಲ್ಲೆಯ ಉತ್ತರ ಪೂರ್ವಕ್ಕೆ  ಜಿಲ್ಲೆ, ದಕ್ಷಿಣ ಪೂರ್ವಕ್ಕೆ ಚಾಮರಾಜನಗರ ಜಿಲ್ಲೆ, ದಕ್ಷಿಣಕ್ಕೆ ತಮಿಳುನಾಡು ರಾಜ್ಯ, ದಕ್ಷಿಣ ಪಶ್ಚಿಮಕ್ಕೆ ಕೇರಳ ರಾಜ್ಯ, ಪಶ್ಚಿಮಕ್ಕೆ ಕೊಡಗು ಜಿಲ್ಲೆ ಮತ್ತು ಉತ್ತರಕ್ಕೆ ಹಾಸನ ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯ ವಿಸ್ತೀರ್ಣ ೬,೨೬೮ ಚದರ ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೨೬,೨೪,೯೧೧ - ೧೯೯೧ ರಿಂದ ಶೇಕಡ ೧೫.೦೪ ರ ಹೆಚ್ಚಳ. ಮೈಸೂರು ಜಿಲ್ಲೆ ದಖ್ಖನ ಪ್ರಸ್ತಭೂಮಿಯ ಮೇಲಿದೆ. 

ಮೈಸೂರು ನಗರ ಸುತ್ತಲ ಸ್ಥಳಗಳಿಗೆ ರೈಲ್ವೆ ಜಂಕ್ಷನ್. ರೈಲ್ವೇ ಮಾರ್ಗಗಳು ಮೈಸೂರನ್ನು ಮಂಡ್ಯದ ಮೂಲಕ ಬೆಂಗಳೂರಿಗೆ (ಈಶಾನ್ಯ ದಿಕ್ಕಿನಲ್ಲಿ), ವಾಯುವ್ಯ ದಿಕ್ಕಿನಲ್ಲಿ ಹಾಸನಕ್ಕೆ ಮತ್ತು ಆಗ್ನೇಯ ದಿಕ್ಕಿನಲ್ಲಿ ಚಾಮರಾಜನಗರಕ್ಕೆ ಸಂಪರ್ಕಿಸುತ್ತವೆ. ರಸ್ತೆ ಸಂಪರ್ಕ ಮೈಸೂರಿನಿಂದ ಕರ್ನಾಟಕದ ಹಾಗೂ ನೆರೆಯ ರಾಜ್ಯಗಳ ವಿವಿಧೆಡೆಗಳಿಗೆ ಇದೆ. ಕೆಲವು ವರ್ಷಗಳ ಹಿಂದೆ ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಇತ್ತು. ಈಗ ಈ ವಿಮಾನ ನಿಲ್ದಾಣವನ್ನು ಉಪಯೋಗಿಸಲಾಗುತ್ತಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ (ಡಿಸೆಂಬರ್ ೨೦೦೫)ಕಾರ್ಯಾರಂಭ ಮಾಡಿವೆ. ಈಗ ಮ೦ಡಕಳ್ಳಿ ವಿಮಾನ ನಿಲ್ದಾಣವು ಶುರುವಾಗಿದ್ದು, ಬೆ೦ಗಳೂರಿಗೆ ಕಿ೦ಗ್ಫಫಿಶರ್ ನಿ೦ದ ವಿಮಾನ ವ್ಯವಸ್ಥೆ ಇಲ್ಲ.ಕೆವಲ ದಸರಾ ಸಮಯಕ್ಕೆ ಮಾತ್ರ.




#Article 14: ವಿಜಯನಗರ (656 words)


ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಪ್ರಾಚೀನ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ.  ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಹಂಪೆ ಎಂದು ಕರೆಯಲ್ಪಡುವ ಈ ನಗರದ ಮಧ್ಯಭಾಗದಲ್ಲಿ ಪವಿತ್ರ ವಿರೂಪಾಕ್ಷ ದೇವಾಲಯವಿದೆ . ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ -  ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ. ಪ್ರಸ್ತುತ ಇದು ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಬಂಡೆ ಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು. ಮೊಗಲರಿಂದ ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.

ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದು ಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟ ತುದಿಯಲ್ಲಿತ್ತು. ಇದೇ ಸಮಯದಲ್ಲಿ ಅದು ಕಾಲ ಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್  ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಯುದ್ಧದಲ್ಲಿ ತೊಡಗುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಅವನತಿಯೆಡೆಗೆ ಮುಖಮಾಡಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು. 

ಹಂಪೆ ಗ್ರಾಮದಿಂದ ಪೂರ್ವಕ್ಕೆ ಮಾತಂಗ ಪರ್ವತದ ವರೆಗೆ ಹಬ್ಬಿರುವ ಪ್ರದೇಶಕ್ಕೆ ಈ ಹೆಸರು. ಕೆಲವರ ಅಭಿಪ್ರಾಯದಂತೆ ವಿಠ್ಠಲ ದೇವಸ್ಥಾನದ ಪ್ರದೇಶವೂ ಇದಕ್ಕೆ ಸೇರುತ್ತದೆ. 

ಈ ದೇವಾಲಯ ಮತ್ತು ಅದರ ಆವರಣ ಹಂಪೆ ಗ್ರಾಮದ ಮುಖ್ಯ ಭಾಗ. ಇದಕ್ಕೆ ಪಂಪಾಪತಿ ದೇವಸ್ಥಾನ ಎಂದೂ ಹೆಸರು. ೧೩ನೇ ಶತಮಾನದಿಂದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತು ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ, ನಂದಿಯ ಒಂದು ಶಿಲ್ಪದತ್ತ. ಈ ದೇವಸ್ಥಾನ ಇಂದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪಂಪಾ ಎಂಬ ಸ್ಥಳೀಯ ದೇವತೆಯ ದೇವಾಲಯ ಇದಾಗಿದೆ.

ಇದು ಹಂಪೆಯ ದಕ್ಷಿಣದಲ್ಲಿ ಈಗ ಪಾಳು ಬಿದ್ದಿರುವ ದೇವಸ್ಥಾನ. ಒರಿಸ್ಸಾದ ದಂಡಯಾತ್ರೆಯ ನಂತರ ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ. ಇದರ ಕೆಲವು ಭಾಗಗಳು ಮತ್ತು ಆವರಣ ಈಗ ಕುಸಿದಿವೆ. 

ಹಂಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿಂಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ  ಪುನಶ್ಚೇತನಗೊಳಿಸಲಾಗಿದೆ; ಮೂರ್ತಿಯ ಮಂಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿಂದ ಅಥವಾ ಅದೇ ಕಾಲದ ಓರ್ವ ಶ್ರೀಮಂತ ವರ್ತಕರಿಂದ ಸಂದ ಧನಸಹಾಯದಿಂದ ಆದದ್ದೆಂದು ನಂಬಲಾಗಿದೆ. ಕಟ್ಟಿದಾಗ ಮೂರ್ತಿಯ ಮಂಡಿಯ ಮೇಲೆ ಒಂದು ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು; ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ  ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇದೆ. 

ಇದು ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮಂತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎಂಬ ನಂಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳನ್ನು ಕಾಣುತ್ತೇವೆ.

ಹಂಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇಂದ್ರದ ನಡುವೆ ತುಂಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆಂಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ. ಇಲ್ಲಿರುವ ಶ್ರೀರಾಮನ ವಿಗ್ರಹ ಸುಮಾರು ೧೮ ಅಡಿ ಎತ್ತರವಿದೆ,ಜೊತೆಗೆ ಸೀತಾ,ಲಕ್ಶ್ಮಣ ಮತ್ತು ಹನುಮಂತನ ವಿಗ್ರಹಗಳಿವೆ.

ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂದಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊಂದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆಂದು ನಂಬಲಾಗಿದೆ. ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ.  ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ.

ಈ ವಿಶಾಲ ಪ್ರದೇಶ ಹಂಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರಂಭವಾಗಿ ಸುಮಾರು ಕಮಲಾಪುರ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ  ಅವಶೇಷಗಳು ಉಳಿದಿಲ್ಲ - ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿಂದ ಕಟ್ಟಲ್ಪಟ್ಟಿದ್ದರಿಂದ. ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಉಳಿದಿವೆ, ಸುತ್ತಲ ಕೋಟೆ ಗೋಡೆಗಳೊಂದಿಗೆ. 

ರಾಮನ ಅನೇಕ ಪ್ರತಿಮೆಗಳು ಕಂಡುಬರುವುದರಿಂದ ಇದಕ್ಕೆ ಹಜಾರರಾಮ ದೇವಸ್ಥಾನ ಎಂದೂ ಹೆಸರು (ಸಾವಿರ ರಾಮರ ದೇವಸ್ಥಾನ).ಇದು ಹಂಪೆಯ ದಕ್ಷಿಣಪೂರ್ವದಲ್ಲಿ ರಾಜಕೇಂದ್ರದಲ್ಲಿ ಇದೆ.

ಇದಕ್ಕೆ ಸಹ ವಿರೂಪಾಕ್ಷ ದೇವಾಲಯ ಎಂದು ಹೆಸರು. ಈ ವಿಶಾಲ ದೇಗುಲ ಉತ್ಖನನ ನಡೆಸಿದ ಪ್ರದೇಶದಲ್ಲಿ ನಿಂತಿದೆ, ಮಣ್ಣಿನ ಗೋಡೆಗಳಿಂದ ಸುತ್ತುವರಿದು..... 

ಇದು ಮಹಾರಾಣಿಯವರ ಅರಮನೆಯಾಗಿತ್ತು. ಇದರಲ್ಲಿ ಹರಿಯುವ ನೀರಿನ ಸೌಕರ್ಯವನ್ನೊಳಗೊಂಡಂತೆ ಅನೇಕ ವಿಶೇಷ ಪರಿಸರ ನಿಯಂತ್ರಣ ಉಪಕರಣಗಳಿವೆ.ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಕಾಣಬಹುದು. 

ಇದು ಒಂದು ಮೆಟ್ಟಲುಗಳುಳ್ಳ ವಿಶಾಲವಾದ ಬಾವಿ, ಸ್ನಾನ ಮಾಡುವುದಕ್ಕೆ ರಚಿಸಲಾದದ್ದು. ಹಗಲಿನ ಬಿಸಿಲಿನ ಬೇಗೆಯಿಂದ ಈ ರೀತಿಯ ಬಾವಿಗಳು ಆರಾಮವನ್ನು ತರುತ್ತಿದ್ದವು. ನಗರದಲ್ಲಿ ಜನವಸತಿಯಿದ್ದಾಗ ಪ್ರಾಯಶಃ ಈ ಬಾವಿ ಶಾಮಿಯಾನಗಳಿಂದ ಆವೃತವಾಗಿರುತ್ತಿತ್ತು. ಇದನ್ನು ನಕ್ಶತ್ರ ಬಾವಿ ಎಂದೂ ಕರೆಯತ್ತಾರೆ

ಇತಿಹಾಸಕಾರರಿಗೆ ದೊರೆತ ಆಧಾರ ಯಾವುದೆಂದು ತಿಳಿಯಲು ಊಹಪೊಹವೇ ಹೊರತು ನಿಜವಾದ ಮಾಹಿತಿ ಯಾರಿಂದಲೂ ಲಭ್ಯವಿಲ್ಲ.

ವಿಶಾಲವಾದ ಆನೆಲಾಯಗಳ ಗುಂಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು. ಇದನ್ನು 'ಆನೆಸಾಲು' ಎಂದೂ ಕರೆಯುತ್ತಾರೆ

 

 




#Article 15: ಕನ್ನಡ (709 words)


ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ  ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ  ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ.
ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ  ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.

ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ.  ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ  ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು;  

ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ. 

ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ.

ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.  ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ.

 ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು.

ತ್ರಿಪದಿ ಛಂಧಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ಕಪ್ಪೆ ಅರಭಟ್ಟನ ಶಾಸನದಲ್ಲಿ ಕಂಡುಬರುತ್ತದೆ. ರಾಜಾ ನೃಪತುಂಗ ಅಮೋಘ ವರ್ಷ‍ ರಚಿಸಿದ ಕವಿರಾಜಮಾರ್ಗ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರುವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ೬ನೆಯ ಶತಮಾನದ ರಾಜ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ. ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ. ಕ್ರಿ.ಶ. ೯೦೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳು ಲಭ್ಯವಾಗುತ್ತವೆ. ಪಂಪನ ಕವಿಯು ಬರೆದ ವಿಕ್ರಮಾರ್ಜುನ ವಿಜಯಂ ಹಾಗೂ ಇನ್ನಿತರ ಕೃತಿಗಳು ಇವೆ.

ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವೊಂದನ್ನೂ ರಚಿಸಿದ್ದಾರೆ.

ಹೊಸಗನ್ನಡ ಕಾಲಘಟ್ಟದಲ್ಲಿ ಮೊದಲ ಕನ್ನಡ-ಕನ್ನಡ ನಿಘಂಟು ರಚಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೯,೦೦೦ಕ್ಕೂ ಅಧಿಕ ಪುಟಗಳನ್ನೊಳಗೊಂಡ ಈ ನಿಘಂಟು ಒಂಬತ್ತು ಸಂಪುಟಗಳಲ್ಲಿ ಬಿಡುಗಡೆಗೊಂಡಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ-ಇಂಗ್ಲೀಷ್ ನಿಘಂಟನ್ನೂ ಕ್ಲಿಷ್ಟ ಪದಕೋಶ ಎಂಬ ಕನ್ನಡದ  ಕ್ಲಿಷ್ಟ ಪದಗಳನ್ನೊಳಗೊಂಡ ನಿಘಂಟನ್ನೂ ರಚಿಸಿದ್ದಾರೆ.

ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿ ಸುಮಾರು ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿಗೆ ಕನ್ನಡ ಲಿಪಿಯೊಂದಿಗೆ ನಿಕಟವಾದ ಹೋಲಿಕೆಯಿದೆ ಮತ್ತು ಈ ಎರಡು ಲಿಪಿಗಳ ಮೂಲ ಒಂದೇ ಆಗಿದೆ. ಕನ್ನಡ ಮತ್ತು ತೆಲುಗು ಲಿಪಿಗಳೆರಡೂ ಕದಂಬ ಲಿಪಿಯಿಂದ ರೂಪುಗೊಂಡಂಥವು. ಕನ್ನಡ ಲಿಪಿ ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು  ಪ್ರತಿನಿಧಿಸುತ್ತದೆ. ಇಂಗ್ಲೀಷಿನಂಥ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರ ಲಿಪಿಯಿಂದ ಹಿಡಿದು ಇಂದಿನ ಮುದ್ರಣ ಮತ್ತು ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಬ್ರಾಹ್ಮಿ ಲಿಪಿಯೇ ಮೂಲ. ಕನ್ನಡದ ಅಕ್ಷರ ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಬಗೆಯನ್ನು ವಿಸ್ತೃತ ಅಧ್ಯಯನಗಳು ನಡೆದಿವೆ. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇಂಥ ಅಧ್ಯಯನಗಳ ಸಹಾಯದೊಂದಿಗೆ ಅಕ್ಷರಗಳು ಮಾರ್ಪಟ್ಟ ಬಗೆಯನ್ನು ಕಂಡರಿಯಲು ಸಾಧ್ಯವಿದೆ. ಮುದ್ರಣದ ಆರಂಭದೊಂದಿಗೆ ಕನ್ನಡ ಲಿಪಿಗೆ ಈಗಿನ ರೂಪ ನೆಲೆನಿಂತಿರುವುದು ಗಮನಾರ್ಹ. ಪ್ರಪಂಚದಲ್ಲಿರುವ ೧೮ ಬಗೆಯ ಲಿಪಿಗಳಲ್ಲಿ ೮ ಅಕ್ಷರ ಲಿಪಿಗಳು. ಉಳಿದಂತೆ ಚಿತ್ರಲಿಪಿಯೇ ಮುಂತಾದುವುಗಳನ್ನು ಕಾಣಬಹುದು. ಭಾರತದಲ್ಲಿ ಅನೇಕ ಭಾಷೆಗಳವು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಲಿಪಿಗಳಾಗಿವೆ. ಪಾರ್ಸೋ-ಅರಬ್ಬಿ ಲಿಪಿಗಳೂ ಭಾರತದಲ್ಲಿ ರೂಢಿಯಲ್ಲಿವೆ. ಉದಾ: ಉರ್ದು, ಕಾಶ್ಮೀರಿ ಮತ್ತು ಪುಷ್ತು.

ಕನ್ನಡ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:

ಹೀಗೆ ಒಟ್ಟು ೪೯ ವರ್ಣಗಳು ಕನ್ನಡದಲ್ಲಿರುವಂಥವು.

ವಿಭಜಿಸಲು ಸಾಧ್ಯವಿಲ್ಲದ ಧ್ವನಿಯನ್ನು ವರ್ಣವೆನ್ನಲಾಗುತ್ತದೆ ಮತ್ತು ಭಾಷೆಯ ಅತ್ಯಂತ ಕಿರಿಯ ಅಂಶವನ್ನು ಸ್ವರವೆಂದು ಕರೆಯಲಾಗುತ್ತದೆ. (ಉದಾಃ ವಸ್ತ್ರ = ವ್+ಅ+ಸ್+ತ್+ರ್+ಅ) ಸ್ವತಂತ್ರವಾಗಿ ಉಚ್ಚರಿಸಬಹುದಾದ ವರ್ಣಗಳನ್ನು ಸ್ವರಗಳೆಂದೂ ಇತರ ವರ್ಣಗಳ ಸಹಾಯದಿಂದ ಉಚ್ಚರಿಸಬಹುದಾದ ವರ್ಣಗಳನ್ನೂ ವ್ಯಂಜನಗಳೆಂದೂ ಕರೆಯಲಾಗುತ್ತದೆ.

ಮೇಲಿನ ವರ್ಣಗಳು ಎರಡು ವಿಭಿನ್ನ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಯಲ್ಲಿ ಐಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ ಔಕಾರವು ಜನಿಸಿದೆ. ಈ ಎರಡು ಸ್ವರಗಳು ವಿಜಾತೀಯ ಸ್ವರಗಳ ಸಂಧಿಯಿಂದ ಆಗಿದ್ದು, ತಮ್ಮ ದೀರ್ಘ ಸ್ವರೂಪದಿಂದಲಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರುತ್ತವೆ.

ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ ಕ್ನಿಂದ ಮ್ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ.

ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ  ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS,   ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ . INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.ಇದನ್ನು ಸಿದ್ಧಪಡಿಸಿಕೊಟ್ಟವರು ಕೆ. ಪಿ. ರಾವ್ರವರು.

ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ. 




#Article 16: ಕನ್ನಡ ಸಾಹಿತ್ಯ (226 words)


ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು . ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ (ಮತ್ತು ಅದರ ಉಪಭಾಷೆಗಳಾದ ಪ್ರಾಕೃತ ಇತ್ಯಾದಿ).

ಕುಮಾರವ್ಯಾಸನು ಹಾಡಿದನೆಂದರೆ 
ಕಲಿಯುಗ ದ್ವಾಪರವಾಗುವುದು 
ಭಾರತ  ಕಣ್ಣಲಿ ಕುಣಿಯುವುದು .
ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು... ಎಂದಿದ್ದಾರೆ.

ಪಂಪ ಕಲಿತವರ ಪಾಲಿನ ಕಲ್ಪವೃಕ್ಷ ವಾದರೆ, ಕುಮಾರವ್ಯಾಸ ಕಲಿಯದವರ ಪಾಲಿನ ಕಾಮಧೇನು.

೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾ ವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.

ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ. ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ. ಸಣ್ಣ ಕಥೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು ರಾಜ್ಯದ ಹಲವರು ತಮ್ಮನ್ನು ಸ್ಥಳೀಯ ಬಾಷೆಯಲ್ಲಿ ಕಥೆ ಕಾದಂಬರಿ ಬರೆಯುವಲ್ಲಿ ಗುರುತಿಸಿಕೊಂಡರು. ಅದರಲ್ಲಿ ಬಾಳಾಸಾಹೇಬ ಲೋಕಾಪುರ ಅಮರೇಶ ನುಗಡೋಣಿ ಶಂಕರ ಬೈಚಬಾಳ ಲೋಕೆಶ ಅಗಸನಕಟ್ಟೆ ಮುಂತಾದ ಹಲವರನ್ನು ಇಲ್ಲಿ ಹೆಸರಿಸಬಹುದಾಗಿದೆ.

ಕನ್ನಡ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇದು ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು. ಆಗಸ್ಟ್ ೨೦೦೪ ರ ವರೆಗೆ ಒಟ್ಟು ೪೬ ಕನ್ನಡ  ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ.




#Article 17: ಪಟ್ಟದಕಲ್ಲು (353 words)


ಪಟ್ಟದಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗುoಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ - ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ - ಎರಡನ್ನೂ ಇಲ್ಲಿ ಕಾಣಬಹುದು. 

ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವoಶದ ರಾಜಧಾನಿಯಾಗಿದ್ದಿತು. ಚಾಲುಕ್ಯ ವoಶದ ಅರಸರು ಏಳನೇ ಮತ್ತು ಎoಟನೇ ಶತಮಾನಗಳಲ್ಲಿ  ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒoಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿoತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು. ಇದು ಕಂಚಿಯ ಕೈಲಾಸನಾಥರ್ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ. 

ಈ ಸ್ಥಳ ಚಾಳುಕ್ಯರ ಮಟ್ಟಿಗೆ ಅತ್ಯಂತ ಪ್ರಮುಖ ಸ್ಥಳ. ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ 'ಪಟ್ಟದಕಲ್ಲು' ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ. ಪ್ರಸಿದ್ಧ ಇತಿಹಾಸಕಾರ ಟಾಲೆಮಿ ಉಲ್ಲೇಖದಲ್ಲಿ ಇದು 'ಪೇತಗಲ್' ಎಂದು ಅನೇಕ ಶಾಸನಗಳ್ಲಿ 'ಪಟ್ಟದ ಕಿಸುವೊಳಲ್' ಎಂದೂ ಉಲ್ಲೇಖಿತವಾಗಿದೆ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಹತ್ತು ದೇವಾಲಯಗಳು  ಶೈವ ಸಂಪ್ರದಾದವುಗಳಾಗಿದ್ದರೆ ಉಳಿದವು ಜೈನ ಹಾಗು ಇತರ ಮತಗಳ ದೇವಾಲಯಗಳಾಗಿವೆ. ಇಲ್ಲಿನ ದೇವಾಲಯಗಳಲ್ಲಿ  ವಾಸ್ತುವಿನ್ಯಾಸ ಉತ್ತುಂಗವನ್ನು ತಲುಪಿದ್ದನ್ನು ಕಾಣುತ್ತೇವೆ.ಆ ಕಾರಣಕ್ಕಾಗೇ  ಇಂದಿಗೂ ಅಸಂಖ್ಯ ಪ್ರವಾಸಿಗರನ್ನು  ಸೆಳೆಯುತ್ತಿದೆ. 

ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು  ೨ನೇ ವಿಕ್ರಮಾದಿತ್ಯನು ತಮ್ಮ  ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ  ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್ ನಾಥರ್  ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿರುವುದು ಎದ್ದು ಕಾಣುತ್ತದೆ.

ಅದರಲ್ಲೂ ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ  ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ  ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಇವು ವಿಕ್ರಮಾದಿತ್ಯ ಹಾಗು ರಾಣಿ ಲೋಕಮಹಾದೇವಿಯನ್ನು ಬಿಂಬಿಸುತ್ತವೆ(?). ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ ಎಂಬುವವನು.ಇವನಿಗೆ ವಿಕ್ರಮಾದಿತ್ಯನು 'ಪೆರ್ಜೆರಿಪು' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿರುವ ಬಗ್ಗೆ ಶಾಸನ ಬರೆಸಲಾಗಿದೆ.  ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು.

ಇದರ ಪಕ್ಕದಲ್ಲಿರುವುದೇ ಮಲ್ಲಿಕಾರ್ಜುನ ದೇವಾಲಯ. ಇದನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ 743ರಲ್ಲಿ ನಿರ್ಮಿಸಿದಳು. ಈಗ ಇದು ಬಹುತೇಕ ಹಾಳಾಗಿದ್ದು ನೋಡುಗರಿಗೆ ಹಿಂದೊಮ್ಮೆ ಇದ್ದಿರಬಹುದಾದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಇದು ಕೂಡ ವಾಸ್ತು ವಿನ್ನ್ಯಾಸದಲ್ಲಿ ವಿರುಪಾಕ್ಷ ದೇವಾಲಯವನ್ನು ಹೋಲುತ್ತದೆ. ಇದನ್ನೂ ಅದೇ ಶಿಲ್ಪಿಗಳು ನಿರ್ಮಿಸಿರುವ ಸಾಧ್ಯತೆ ಇದೆ.

ಇವೆರಡು ದೇವಾಲಯಗಳ ಹೊರತಾಗಿ ಇಲ್ಲಿನ ಸಮುಚ್ಚಯದಲ್ಲಿ ಕಾಶಿ ವಿಶ್ವನಾಥ, ಪಾಪನಾಥ ಹಾಗು ಜಿನಾಲಯಗಳೂ ಇವೆ. ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ.

ಇಲ್ಲಿರುವ ಸ್ಮಾರಕಗಳ ಗುoಪನ್ನು ಯುನೆಸ್ಕೋ ೧೯೮೭ ರಲ್ಲಿ  ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.




#Article 18: ವಿಜಯ ದಶಮಿ (170 words)


ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' - ದಶಹರ - ದಶರಾ - ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರ ಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ.

ಮಹಾಭಾರತದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ:

ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ | 
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ ||
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ |
ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ ||

ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ ಪಾಜಕ ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ.




#Article 19: ಹಂಪೆ (891 words)


ಹಂಪೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು  ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ. ನಾಯಿ

ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ.  ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಚಟುವಟಿಕೆ.  ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು (ಹಂಪಿ ಉತ್ಸವ) ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಇಲ್ಲಿರುವ ದೇವಸ್ಥಾನಗಳನ್ನು ನೋಡಲು ಸುಲಭವಾಗುವಂತೆ ಹಲವು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ-

೯ ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ. ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಆ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆಯ ಪ್ರಕಾರ,ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎಂದು.

ಹೇಮಕೂಟ ಬೆಟ್ಟದ ಕೆಳಗಿರುವ ಸಾಸಿವೆಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರಿಯ ಗಣಪತಿ ವಿಗ್ರಹವು ೮ ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ ಪ್ರಕಾರ, ಒಮ್ಮೆ ಭಗವಂತ ಗಣೇಶನು, ಮಿತಿ ಮೀರಿ ತಿಂದಿದ್ದರ ಪರಿಣಾಮ ಹೊಟ್ಟೆ ಒಡೆಯುವಂತಾಗಿ, ಅದನ್ನು ತಡೆಯಲು ಸರ್ಪವನ್ನು ಹೊಟ್ಟೆಗೆ ಅಡ್ಡಲಾಗಿ ಸುತ್ತಿಕೊಂಡನೆಂಬುದು ಪ್ರತೀತಿ. ವಿಗ್ರಹವು ಒಂದೆ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು.ಮೊದಲನೆ ಎಡಗೈ ವಂಕಿಯಾಕಾರದ ಪಾಶವನ್ನು ಹೊಂದಿದ್ದು, ಎರಡನೆ ಎಡಗೈಯ ಮತ್ತು ಸೊಂಡಿಲು ಕಲ್ಲಿನಿಂದ ಬೇರ್ಪಡಿಸಿ ಕೆತ್ತಲಾಗಿದೆ. ಸಾಸಿವೆ ಕಾಳು ಗಣೇಶ ಗುಡಿಯನ್ನು ತಲುಪಿದಾಗ, ವಿಗ್ರಹವು ವಿಶಾಲವಾದ ಆವರಣವನ್ನು ಹೊಂದಿರುವದು ಕಾಣಬಹುದು. ಅಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು ಚಂದ್ರಗಿರಿಯ ವ್ಯಾಪರಿಯೊಬ್ಬನು ಕ್ರಿ.ಶ.೧೫೦೬ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಎರಡನೇ ನರಸಿಂಹನಿಗೋಸ್ಕರ ಕಟ್ಟಿದನೆಂಬದು ತಿಳಿದು ಬರುತ್ತದೆ.

ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ ವಿಸ್ತಾರವಾದ ವಿವರಗಳನ್ನು ನೀಡುತ್ತದೆ.ಈ ಸಂಗ್ರಹಾಲಯವು ಪ್ರಧಾನವಾಗಿ ನಾಲ್ಕು ಭಾಗಗಳನ್ನು ಹೊಂದಿದೆ. ಮೇಲೆ ವಿವರಿಸಿದ ಹಂಪಿಯ ಮಾದರಿಗಳು ಒಂದನೆ ಭಾಗದಲ್ಲಿದ್ದು, ಎರಡನೆ ಭಾಗವು ಹಂಪಿಯ ಅವಶೇಷಗಳಿಗೆ ಸಂಬಂಧಿಸಿದ ಮೂರ್ತಿಗಳು ಹಾಗು ಶಿಲ್ಪಾಕೄತಿಗಳನ್ನು ಹೊಂದಿದೆ. ಮೂರನೆ ಭಾಗವು ಆಗಿನ ಕಾಲದಲ್ಲಿ ಉಪಯೋಗಿಸಲ್ಪಡುತ್ತಿದ್ದ ಯುದ್ಧ ಸಲಕರಣೆಗಳು,ನಗನಾಣ್ಯಗಳು ಮತ್ತು ಇತರೆ ಸಾಮಗ್ರಿಗಳನ್ನು ಹೊಂದಿದೆ. ನಾಲ್ಕನೆ ಭಾಗವು ಇತಿಹಾಸದ ಪೂರ್ವ ಹಾಗು ನಂತರದ ವಸ್ತುಗಳನ್ನು ಹೊಂದಿದೆ. ಹಿರೊ ಕಲ್ಲುಗಳು, ಸತಿ ಕಲ್ಲುಗಳು,ಚಿಕ್ಕದಾದ ರಾಯಲ್ ಸೆಂಟರ್ ಪ್ರತಿರೂಪ, ಪಿಂಗಾಣಿ ವಸ್ತುಗಳು ಮತ್ತು ಗೋಡೆಯ ಅಲಂಕಾರಿಕ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ. ಉಳಿದ ದಿನಗಳಲ್ಲಿ ಇದರ ಸಮಯ ಬೆಳಿಗ್ಗೆ ೧೦ ರಿಂದ ಸಂಜೆ ೫ ರ ವರೆಗೆ. ನೀವು ಹಂಪಿಗೆ ಹೋಗುತ್ತಿರಾದರೆ, ಖಂಡಿತವಾಗಿಯೂ ಇದಕ್ಕೆ ಭೇಟಿ ನೀಡಿ.

ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, ೬.೭ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು, ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೄಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ತಿಳಿದು ಬರುತ್ತದೆ.ಮೂಲ ವಿಗ್ರಹವು ಲಕ್ಷ್ಮಿ ದೇವತೆಯು ವಿಷ್ಣುವಿನ ತೊಡೆಯಲ್ಲಿ ಕುಳಿತಿರುವ ಭಂಗಿಯಲ್ಲಿದೆ.ಆದರೆ, ಕ್ರಿ.ಶ.೧೫೬೫ರಲ್ಲಿ, ಲಕ್ಷ್ಮಿ ದೇವತೆಯ ವಿಗ್ರಹವು ನಾಶ ಹೊಂದಿದ್ದು, ಪ್ರಸ್ತುತ ಅದನ್ನು ಕಮಲಾಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೂ ಉಬ್ಬಿರುವ ಕಣ್ಣುಗಳನ್ನು ಚಿತ್ರಿಸಲಾಗಿರುವ ನರಸಿಂಹನ ವಿಗ್ರಹವು ಇಂದಿಗೂ ಕೂಡ ಬಹುಪಾಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನರಸಿಂಹ ಹಾಗು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು ಉಪಯೋಗಿಸುವ ಸಾಮಗ್ರಿಗಳ ವಿರುದ್ಧವಾಗಿ,ಸಂಗಮರು ಗ್ರಾನೈಟ್ ಕಲ್ಲುಗಳಿಂದ ಲಕ್ಷ್ಮಿನರಸಿಂಹ ದೇವಾಲಯವನ್ನು ಕಟ್ಟಿದ್ದಾರೆ. ಆದರೆ ಕೆಲವು ಸೂಕ್ಶ್ಮವಾದ ಕೆಲಸಗಳನ್ನು ಸ್ಚಿಸ್ಟ(ಒಂದು ಮೃದುವಾದ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಗ್ರಾನೈಟ್ ಬಳಕೆ ಮಾಡಲಾಗಿಲ್ಲ. ಜಟಿಲವಾದ ವಿನ್ಯಾಸಗಳ ಅಭಾವವನ್ನು ಸರಿದೂಗಿಸಲು, ವಾಸ್ತುಶಿಲ್ಪಗಾರರು ವಿಶಾಲವಾದ ಕಟ್ಟಡವನ್ನು ನಿರ್ಮಿಸಲು ನಿಶ್ಚಯಿಸಿದ್ದಾರೆ.

ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಮಾದರಿಯ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗು ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ. ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು 7ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು, ದೀಪಸ್ಥಂಬಗಳು, ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ ಆಕರ್ಷಣೆ.

ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುವರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ ಅರಮನೆ(ಕ್ವೀನ್ಸ್ ಪ್ಯಾಲೇಸ್), ಎರಡು ನಿರೀಕ್ಷಣಾ ಗೋಪುರಗಳು ಹಾಗು ಜನಪ್ರೀಯವಾದ ಲೊಟಸ್ ಮಹಲ್. ಈ ಕಟ್ಟಡಕ್ಕೆ ಅನೇಕ ಕಿಂಡಿಗಳಿದ್ದು, ರಾಣಿಯರ ಬೇಸಿಗೆ ಅರಮನೆಯಾಗಿತ್ತು. ಕ್ವೀನ್ಸ ಪ್ಯಾಲೇಸ್ ೪೬*೨೯ ಮೀ. ಅಳತೆ ಹೊಂದಿದ್ದು ಕಟ್ಟಿಗೆ ಹಾಗು ಇತರೆ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.ಇತಿಹಾಸಕಾರರ ಪ್ರಕಾರ, ಈ ಸ್ಥಳವು ಕೇವಲ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದ್ದುದರಿಂದ, ಇದರ ರಕ್ಷಣೆಯು ನಪುಂಸಕ ಸೈನಿಕರಿಂದ ಮಾಡಲ್ಪಡುತ್ತಿತ್ತು. ಉತ್ತರ ಹಾಗು ಆಗ್ನೇಯ ದಿಕ್ಕಿನಲ್ಲಿ ಕಟ್ಟಲಾದ ಎರಡು ಕಟ್ಟಡಗಳು ನಿರೀಕ್ಷಣಾ ಗೋಪುರಗಳಾಗಿ ನಿರ್ವಹಿಸಲ್ಪಡುತ್ತಿದ್ದವು. ಈ ಕಟ್ಟಡಗಳಿಂದ ಮಹಾರಾಣಿ ಹಾಗು ಆಕೆಯ ಕುಟುಂಬದ ಸದಸ್ಯರು ಹೊರಗೆ ನಡೆಯುತ್ತಿದ್ದ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು. ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವುಳ್ಳ ಲೊಟಸ್ ಪ್ಯಾಲೇಸ್ ರಾಜ ಮಹಿಳೆಯರು ಸಂಧಿಸಿ ದಿನಕಳೆಯುವ ಸ್ಥಳವಾಗಿತ್ತು. ರಾಜಮನೆತನದ ಆನೆಗಳು ವಿರಮಿಸುತ್ತಿದ್ದ ಸ್ಥಳವಾದ ಎಲಿಫಂಟ್ ಸ್ಟೇಬಲ್ಸ್ ಇದರ ಹಿಂಬದಿಯಲ್ಲಿದ್ದು, ಪ್ರವಾಸಿಗರು ಭೇಟಿ ನೀಡಬಹುದು.

ಆನೆಗೊಂದಿ (ಆನೆಗುಂಡಿ)

ಆನೆಗುಂಡಿ ಹಳ್ಳಿಯು ಹಂಪಿಯಿಂದ ೧೦ ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕಿಂಧೆ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹನುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತಿಥ್ಯವು ಮನಸೂರೆಗೊಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತಿತ್ತು , ಆದರೆ ಅದು ಮುರಿದು ಬಿದ್ದಿದ್ದು ಇನ್ನೊಂದು ಕಡೆ ಸೇತುವೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ.




#Article 20: ಭಾರತದ ರಾಷ್ಟ್ರಗೀತೆ (207 words)


ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ
ಬರೆದ ದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು  ವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಭಾರತದ ರಾಷ್ಟ್ರೀಯ ಗಾನ, ವಂದೇ ಮಾತರಮ್.

ಭಾರತದ ರಾಷ್ಟ್ರಗೀತೆ ಜನ ಗಣ ಮನ ಕನ್ನಡದಲ್ಲಿ ಈ ಮುಂದಿನಂತಿದೆ:

ಭಾರತದ ರಾಷ್ಟ್ರಗೀತೆ - ಜನಗಣಮನ ಅಧಿನಾಯಕ ಜಯಹೇ ಭಾರತದ ರಾಷ್ಟ್ರಗೀತೆ. ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದ ಸಾಲುಗಳನ್ನು ಮಾತ್ರ ಆಯ್ದಕೊಂಡು ಈ ರಾಷ್ಟ್ರಗೀತೆಯನ್ನು ರೂಪಿಸಲಾಯಿತು. ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆ 1950 ಜನವರಿ 24ರಂದು ಇದನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು 1912ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಪ್ರಕಟಣೆಗೆ ಮೊದಲು ಈ ಗೀತೆಯನ್ನು 27 ಡಿಸೆಂಬರ್ 1911ರಂದು ಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಠಾಕೂರ್ ಅವರು ಇದನ್ನು 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ 1919ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದು ಭಾರತ ಇಬ್ಬಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂ ಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿಲ್ಲ; ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆ. ಹಾಗಾಗಿ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿ ಉಳಿಸಿಕೊಳ್ಳಲಾಯಿತು. ರಾಷ್ಟ್ರಗೀತೆಗೆ ಗೌರವಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ. ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯ ಎಂಬುದಕ್ಕೆ ಈ ಗೀತೆ ಸಂಕೇತವಾಗಿದೆ. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 52 ಸೆಕೆಂಡುಗಳು.




#Article 21: ಪ್ರಜಾವಾಣಿ (179 words)


ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು.  ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ನೊಂದಿಗೆ ಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.೧೯೪೮ರಲ್ಲಿ ಶ್ರೀ ಕೆ.ಎನ್. ಗುರುಸ್ವಾಮಿಯವರ ದಿ ಪ್ರಿಂಟರ್ಸ್ ಲಿ. ಇದನ್ನು ಪ್ರಾರಂಭಿಸಿತು.
ಸಂಪಾದಕರು ಕೆ.ಎನ್. ತಿಲಕ್ ಕುಮಾರ್. ಪತ್ರಿಕೆಯ ಹಾಲಿ ಸಂಪಾದಕರು ಕೆ.ಎನ್. ಶಾಂತ ಕುಮಾರ್

ಪ್ರಜಾವಾಣಿಯ ಪ್ರಥಮ ಸಂಪಾದಕರು ಬಿ.ಪುಟ್ಟಸ್ವಾಮಯ್ಯನವರು.ನಂತರ ಖಾದ್ರಿ ಶಾಮಣ್ಣ,ಟಿಯೆಸ್ಸಾರ್ ಸಂಪಾದಕರಾಗಿದ್ದರು.೧೯೪೮ ರ ಅಕ್ಫೋಬರ್ ೧೦ ರಂದು ಪ್ರಜಾವಾಣಿ ಆರಂಭವಾಯಿತು. ಇದುವರೆಗೆ ಆಗಿರುವ ಸಂಪಾದಕರು: ವೈಎನ್.ಕೃಷ್ಣಮೂರ್ತಿ, ಎಂ.ಬಿ.ಸಿಂಗ್, ಕೆ.ಎನ್. ಹರಿಕುಮಾರ್, ಕೆ.ಎನ್. ಶಾಂತ ಕುಮಾರ್, ಕೆ.ಎನ್.ತಿಲಕ್ ಕುಮಾರ್.ಕೆ.ಎನ್.ಶಾಂತ ಕುಮಾರ್ 
ಸಹ ಸಂಪಾದಕರು: ಪಿ.ರಾಮಣ್ಣ, ಬಿ.ಎಂ.ಕೃಷ್ಣಸ್ವಾಮಿ, ಜಿ.ಎನ್.ರಂಗನಾಥರಾವ್,ಕೆ. ಶ್ರೀಧರ ಆಚಾರ್, ರಾಜಾ ಶೈಲೇಶ್ಚಂದ್ರ ಗುಪ್ತ, ಆರ್. ಪಿ. ಜಗದೀಶ. ಪದ್ಮರಾಜ ದಂಡಾವತಿ.
ಸಹಾಯಕ ಸಂಪಾದಕರು: ಮಾಗಡಿ ಗೋಪಾಲಕಣ್ಣನ್, ಶ್ರೀಧರ ಕೃಷ್ಣಮುರ್ತಿ, ಜಿ.ಎಸ್. ಸದಾಶಿವ, ಡಿ.ವಿ. ರಾಜಶೇಖರ, ಲಕ್ಷ್ಮಣ ಕೊಡಸೆ, ಶಿವಾಜಿ ಗಣೇಷನ್, ಇ.ವಿ.ಸತ್ಯನಾರಾಯಣ ಮೊದಲಾದವರು.
ಸಾಪ್ತಾಹಿಕ ಪುರವಣಿ ಉಸ್ತುವಾರಿ: ಬಿ.ವಿ.ವೈಕುಂಠರಾಜು, ಜಿ.ಎನ್.ರಂಗನಾಥ ರಾವ್, ಡಿ.ವಿ. ರಾಜಶೇಖರ, ಗಂಗಾಧರ ಮೊದಲಿಯಾರ್, ಪಿ.ಕೆ.ಹರಿಯಬ್ಬೆ, ಲಕ್ಷ್ಮಣ ಕೊಡಸೆ, ರಘುನಾಥ ಚ.ಹ

ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.




#Article 22: ವೀರಪ್ಪನ್ (125 words)


ಕೂಸೆ ಮುನಿಸ್ವಾಮಿ ವೀರಪ್ಪನ್ (ಜನವರಿ ೧೮, ೧೯೫೨ - ಅಕ್ಟೋಬರ್ ೧೮, ೨೦೦೪) -  ಭಾರತದ ಕುಖ್ಯಾತ ದಂತಚೋರ, ನರಹಂತಕ. ತಮಿಳುನಾಡು ಹಾಗೂ  ಕರ್ನಾಟಕದ ಮಧ್ಯೆ ಇರುವ ಸುಮಾರು ೬,೦೦೦ ಚದುರ ಕಿ.ಮೀ. ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ಇವನು, ಅಲ್ಲಿಯೇ ತನ್ನ ಕಾರುಬಾರು ನೆಡೆಸುತ್ತಿದ್ದ. ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡಿನಲ್ಲಿದ್ದ ಆನೆಗಳ ಹತ್ಯೆ ಮಾಡುತ್ತಾ, ದಂತವನ್ನು, ಹಾಗೂ  ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದನು. ಇವನ ತಲೆಯ ಮೇಲೆ ಸುಮಾರು ೫ ಕೋಟಿ ಬಹುಮಾನವಿದ್ದರೂ ೨೦ ವರ್ಷಗಳವರೆಗೂ ಪೋಲೀಸರ ಕೈಗೆ ಸಿಕ್ಕದೆ ಹೋದನು. ಕೊನೆಗೆ ಅಕ್ಟೋಬರ್ ೧೮, ೨೦೦೪ ರಂದು ಪೋಲೀಸರ ಗುಂಡಿಗೆ ಬಲಿ ಯಾದನು.

ಕರ್ನಾಟಕದ ಗೋಪಿನಾಥಂನಲ್ಲಿ ವೀರಪ್ಪನ್ ಹುಟ್ಟಿದವನು. ೧೮ನೇ ವಯಸ್ಸಿಗೇ ಅಕ್ರಮ ಶಿಕಾರಿಗೆ, ಪ್ರಾಣಿ ಹತ್ಯೆಗೆ ತೊಡಗಿದನು. ತನ್ನ ವಿರೋಧಿ ಪಂಗಡಗಳನ್ನು ನಾಶ ಮಾಡಿದ ಇವನು ವರ್ಷಗಳು ಉರುಳಿದಂತೆ ಇಡೀ ಕಾಡಿನ ನಿಯಂತ್ರಣವನ್ನು ತನ್ನ ತೆಕ್ಕೆಗೆ ಪಡೆದುಕೊಂಡನು. ದಂತ ಹಾಗೂ ಶ್ರೀಗಂಧದ ಕಳ್ಳಸಾಗಾಣಿಕೆಯಿಂದ ದುಡ್ಡು ಮಾಡಿದನು. ೨,೦೦೦ಕ್ಕೂ ಹೆಚ್ಚು ಆನೆಗಳನ್ನು ಕೊಂದನೆಂದು ಹೇಳಲಾಗುತ್ತದೆಯಾದರೂ, ವೀರಪ್ಪನ್ ಬಗ್ಗೆ ಜೀವನ ಚರಿತ್ರೆಯನ್ನು ಬರೆದ ಸುನಾದ ರಘುರಾಮ್‌ರವರ ಪ್ರಕಾರ ೨೦೦ಕ್ಕೂ ಹೆಚ್ಚು ಆನೆಗಳನ್ನು ಕೊಂದಿರಲಾರ.

ವರ್ಗ:೨೦೦೪ ನಿಧನ]




#Article 23: ಚಾಲುಕ್ಯ (1199 words)


ಚಾಲುಕ್ಯ ವಂಶ  ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. 

ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು.ಕೆಲವು jಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ (ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ) ನಗರವನ್ನು  ರಾಜಧಾನಿಯಾಗಿ ಮಾಡಿದ. ಆತನ ಮಕ್ಕಳು ಚಾಲುಕ್ಯ ಸಾಮ್ರಾಜ್ಯವನ್ನು ಈಗಿನ ಕರ್ನಾಟಕ, ಮಹಾರಾಷ್ಟ್ರ  , ಗೋವಾ, ಆಂಧ್ರಪ್ರದೇಶ, ತೆಲಂಗಾಣ ಅಲ್ಲದೆ ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಕೇರಳದ ಕೆಲಭಾಗಗಳಿಗು ವಿಸ್ತರಿಸಿದರು. 

ಚಾಲುಕ್ಯ ಸಾಮ್ರಾಜ್ಯ ಮತ್ತೆ ಕ್ರಿ.ಶ. ೬೫೫ ರಲ್ಲಿ ಮೊದಲನೆಯ  ವಿಕ್ರಮಾದಿತ್ಯನ ಮೂಲಕ ಮೇಲೆದ್ದಿತು. ಪಲ್ಲವರೊಂದಿಗಿನ ಸರಣಿ ಯುದ್ಧಗಳು ಕ್ರಿ.ಶ. ೭೪೦ ರಲ್ಲಿ ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯನ ವಿಜಯದೊಂದಿಗೆ ಕೊನೆಗೊಂಡವು. ಆದರೆ ಮತ್ತೆ ೭೫೦ ರಲ್ಲಿ  ರಾಷ್ಟ್ರಕೂಟರ ಮೇಲೆ ಯುದ್ಧದಲ್ಲಿ ಸೋತ ನಂತರ ಆ ಕಾಲಕ್ಕೆ ಚಾಲುಕ್ಯ ಸಾಮ್ರಾಜ್ಯ ಪತನವಾಯಿತು. 

೯೭೦ ರ ದಶಕದಲ್ಲಿ ಚಾಲುಕ್ಯರ ವಂಶಜರಲ್ಲಿ ಒಬ್ಬನಾದ ಎರಡನೇ ತೈಲಪ ರಾಷ್ಟ್ರಕೂಟರನ್ನು ಸೋಲಿಸಿ ಗುಜರಾತ್ ಪ್ರದೇಶವನ್ನು ಬಿಟ್ಟು ಚಾಲುಕ್ಯ ಸಾಮ್ರಾಜ್ಯದ ಉಳಿದ ಭಾಗಗಳನ್ನೆಲ್ಲ ಹಿಂದಕ್ಕೆ ಪಡೆದನು. ಈತನ ರಾಜಧಾನಿ ಕಲ್ಯಾಣಿ, ಮತ್ತು ಈ ಕಾಲದ ಚಾಲುಕ್ಯ ವಂಶಕ್ಕೆ ಕಲ್ಯಾಣಿ ಚಾಲುಕ್ಯರು ಎಂದೂ ಸಹ ಹೆಸರು. ಈ ಬಾರಿ ಚಾಲುಕ್ಯರು ನಡುನಡುವೆ ಚೋಳ ಸಾಮ್ರಾಜ್ಯದ ವಿರುದ್ಧ ಯುದ್ಧಗಳನ್ನು ನಡೆಸುತ್ತಿದ್ದರು. ಮೊದಲನೆಯ ಸೋಮೇಶ್ವರ ಎಂಬ ಚಾಲುಕ್ಯ ಅರಸು (ಈತನಿಗೆ ಆಹವಮಲ್ಲ ಎಂದೂ ಹೆಸರು) ರಾಜಾಧಿರಾಜ ಚೋಳ ನನ್ನು ಕ್ರಿ.ಶ. ೧೦೫೨ ರಲ್ಲಿ ಸೋಲಿಸಿದನು. ಚಾಲುಕ್ಯ ವಂಶದ ಮುಂದಿನ ಪ್ರಸಿದ್ಧ ಅರಸು ಆರನೇ ವಿಕ್ರಮಾದಿತ್ಯ (ಕ್ರಿ.ಶ ೧೦೭೬-೧೧೨೬, ವಿಕ್ರಮಾಂಕ ಎಂದೂ ಹೆಸರು).

ವಿಕ್ರಮಾಂಕನ ಮರಣದ ನಂತರ ಚಾಲುಕ್ಯ ಸಾಮ್ರಾಜ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ೧೧೯೦ ರಲ್ಲಿ ದ್ವಾರಸಮುದ್ರದ  ಹೊಯ್ಸಳರು ಮತ್ತು ಯದುಗಿರಿಯ ಯಾದವರು ಚಾಲುಕ್ಯ ವಂಶವನ್ನು ಸೋಲಿಸಿದರು.

ಕಲ್ಯಾಣದ ಚಾಲುಕ್ಯರ ರಾಜ ನಾಲ್ಕನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ವಿದ್ಯಾಪತಿ ಬಿಲ್ಹಣ, ತನ್ನ ಕೃತಿ ವಿಕ್ರಮಾಂಕದೇವ ಚರಿತದಲ್ಲಿ, ಈ ಕಥೆಯನ್ನು ಹೇಳುತ್ತಾನೆ. 
ಇಂದ್ರ ಜಗತ್ತಿನಲ್ಲೆಲ್ಲಾ ಹೆಚ್ಚುತ್ತಿದ್ದ ಅಧರ್ಮವನ್ನು ಹತ್ತಿಕ್ಕಿ ,ದುರುಳರನ್ನು ಸದೆಬಡಿಯಲು ಸಮರ್ಥನಾದ ವೀರನೊಬ್ಬನ್ನು ಸೃಷ್ಟಿಸುವಂತೆ ಬ್ರಹ್ಮನನ್ನು ಬೇಡಿಕೊಂಡ. ಇದಕ್ಕೊಪ್ಪಿದ ಬ್ರಹ್ಮ ಸಂಧ್ಯಾವಂದನೆ ಮಾಡುವಾಗ ಅವನ ಬೊಗಸೆಯಿಂದ (ಚುಲುಕ??) ವೀರನೊಬ್ಬ ಹೊರಬಂದ. ಅವನೇ ಚಾಲುಕ್ಯವಂಶದ ಮೂಲಪುರುಷ. ಇದೇ ವಂಶದಲ್ಲಿ ಮುಂದೆ ಆಗಿಹೋದ ಹರಿತ ಮತ್ತು ಮಾನವ್ಯ ಎಂಬ ಮಹಾವೀರರು  ವಂಶದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದರು.ವೆಂಗಿಯ ಚಾಲುಕ್ಯರ ವಿಮಲಾದಿತ್ಯನ ಉಂಬಳಿ ರಾಮಸ್ತಿಪುಂಡಿಯಲ್ಲಿಯೂ ಇದೇ ಐತಿಹ್ಯವನ್ನು ಪ್ರಸ್ತಾಪಿಸಿ, ವಿವರಿಸಲಾಗಿದೆ. 

ಇದೇ ಕಥೆಯ ಇನ್ನೊಂದು ಆವೃತ್ತಿ , ಆರನೆಯ ವಿಕ್ರಮಾದಿತ್ಯನ ಕಾಲದ ನಿಲಗುಂದ ದಾಖಲೆಯಲ್ಲಿದ್ದು, ಬಿಲ್ಹಣ ಇದನ್ನು ಪುನಃ ವಿವರಿಸುತ್ತಾನೆ. ಈ ಐತಿಹ್ಯದ ಪ್ರಕಾರ ಚಾಲುಕ್ಯರ ಪೂರ್ವಜರು ಅಯೋಧ್ಯೆಯವರೆಂದೂ, ಅಲ್ಲಿ ಐವತ್ತೊಂಭತ್ತು ತಲೆಮಾರು ರಾಜ್ಯವಾಳಿ, ನಂತರ ದಕ್ಷಿಣಾಪಥಕ್ಕೆ ಬಂದು ನೆಲೆಸಿ ಅಲ್ಲಿ ಹದಿನಾರು ತಲೆಮಾರು ರಾಜ್ಯಭಾರ ಮಾಡಿದರಂತೆ. ಅದರ ನಂತರ ಮರೆಯಾದ ಈ ಮನೆತನವನ್ನು ಪುನಃ ಮುಂದೆ ತಂದವನು ಜಯಸಿಂಹ.  ಆರನೆಯ ವಿಕ್ರಮಾದಿತ್ಯನ ಹಂಡರಿಕೆ ಶಾಸನದ ಪ್ರಕಾರ , ಹರಿತಿಪಂಚಶಿಖಿ ಎಂಬ ಋಷಿಯು ಅರ್ಘ್ಯಪ್ರದಾನ ಮಾಡುತ್ತಿರುವಾಗ, ಅವನ ಬೊಗಸೆಯಿಂದ ಉತ್ಪತ್ತಿಯಾದವರು ಚಾಲುಕ್ಯರು.  ಅಷ್ಟೇ ಅಲ್ಲ, ಚಾಲುಕ್ಯರು ತಮ್ಮನ್ನು ಸಪ್ತಮಾತೃಕೆಯರು ಸಲಹಿದರು ಎಂದೂ ಹೇಳಿಕೊಳ್ಳುತ್ತಾರೆ.

ಚಾಲುಕ್ಯರು ದಕ್ಷಿಣ ಪ್ರಸ್ಥಭೂಮಿಯ ಪ್ರದೇಶವನ್ನು ೬೦೦  ವರ್ಷಗಳಷ್ಟು ದೀರ್ಘ ಕಾಲ ಆಳಿದರು. ಈ ಅವಧಿಯಲ್ಲಿ  ಮೂರು, ಸ್ವತಂತ್ರ ಆದರೆ ನಿಕಟ ಸಂಬಂಧದ, ರಾಜ್ಯಗಳಾಗಿ  ಮೆರೆದಿದ್ದವು. ಇವು ಬಾದಾಮಿಯ ಚಾಲುಕ್ಯರು, (ಕ್ರಿ.ಶ. ೬ - ೮ನೆಯ ಶತಮಾನ)  ಮತ್ತು ಅವರದೇ ಸೋದರ ಸಾಮ್ರಾಜ್ಯಗಳಾದ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರು ಮತ್ತು ವೆಂಗಿಯ (ಪೂರ್ವ) ಚಾಲುಕ್ಯರು

ಚಾಲುಕ್ಯ ಸಾಮ್ರಾಜ್ಯವನ್ನು ಕಟ್ಟಿದವನು ಒಂದನೆಯ ಪುಲಿಕೇಶಿ (ಕ್ರಿ.ಶ. ೫೫೦). ವಾತಾಪಿ ( ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಈಗಿನ ಬಾದಾಮಿ) ಯನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಈ ಚಾಲುಕ್ಯರು ಮುಂದೆ ಬಾದಾಮಿಯ ಚಾಲುಕ್ಯರು ಎಂದು ಪ್ರಸಿದ್ಧರಾದರು. 
ಪುಲಿಕೇಶಿ ಹಾಗೂ ಆತನ ವಂಶಸ್ಥರು ಆಳಿದ ರಾಜ್ಯ  ಇಂದಿನ ಸಂಪೂರ್ಣ ಕರ್ನಾಟಕ ರಾಜ್ಯ,ಮಹಾರಾಷ್ಟ್ರ,ಗೋವಾ ,ಮಧ್ಯಪ್ರದೇಶ ,ಗುಜರಾತ್ ಮತ್ತು ಆಂಧ್ರ ಪ್ರದೇಶದ ಬಹುತೇಕ ಭಾಗಗಳನ್ನೊಳಗೊಂಡಿತ್ತು. ಇಮ್ಮಡಿ ಪುಲಿಕೇಶಿ ಬಾದಾಮಿ ಚಾಲುಕ್ಯರ ಅತಿ ದೊಡ್ಡ ಚಕ್ರವರ್ತಿ ಎನ್ನಲು ಅಡ್ಡಿಯಿಲ್ಲ.

ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು.

ರಾಷ್ಟ್ರಕೂಟರ ಕಾಲದಲ್ಲಿ ಹಿಮ್ಮೆಟ್ಟಿದ ಚಾಲುಕ್ಯ ಸಾಮ್ರಾಜ್ಯ ,ಎರಡನೆಯ ತೈಲಪನು ರಾಷ್ಟ್ರಕೂಟರ ಮೂರನೆಯ ಕೃಷ್ಣನನ್ನು ಪದಚ್ಯುತಮಾಡಿ , ಚಾಲುಕ್ಯ ರಾಜ್ಯದ ಬಹುತೇಕ ಪ್ರದೇಶಗಳನ್ನು ಮತ್ತೆ  ಕೈವಶಮಾಡಿಕೊಳ್ಳುವುದರೊಂದಿಗೆ, ತನ್ನ ವೈಭವವನ್ನು ಮರಳಿ ಪಡೆಯಿತು.  ಚಾಲುಕ್ಯರ ಈ ಶಾಖೆ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರೆಂದು ಹೆಸರಾಯಿತು. 
ಮುಂದೆ ಸುಮಾರು ೨೫೦ ವರ್ಷ ಆಳಿದ ಈ ರಾಜವಂಶವು , ಚೋಳರೊಂದಿಗೂ , ವೆಂಗಿಯ ಚಾಲುಕ್ಯರೊಂದಿಗೂ ನಿರಂತರ ಹೋರಾಟದಲ್ಲಿ ತೊಡಗಿತ್ತು. ಸತ್ಯಾಶ್ರಯ (ಕ್ರಿ.ಶ. ೯ ೯ ೭-೧೦೦೮), ಒಂದನೆಯ ಸೋಮೇಶ್ವರ (ಕ್ರಿ.ಶ. ೧೦೪೨-೧೦೬ ೮) ಮತ್ತು ಆರನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೭೬  – ೧೧೨೬ ) ಈ ವಂಶದ ಕೆಲವು ಪ್ರಸಿದ್ಧ ರಾಜರುಗಳು. 

ಹೊಯ್ಸಳರು, ಕಾಕತೀಯರು ಮತ್ತು ಯಾದವರು ಈ  ರಾಜಮನೆತನಗಳ ಉತ್ಕರ್ಷದೊಂದಿಗೆ ,೧೧೮೦ರಲ್ಲಿ, ಕಲ್ಯಾಣಿಯ ಚಾಲುಕ್ಯರ ಸಾಮ್ರಾಜ್ಯವು ಅಸ್ತಂಗತವಾಯಿತು.

ಇಂದಿನ ಆಂಧ್ರ ಪ್ರದೇಶದ ಕರಾವಳಿಯ ಭಾಗವಾಗಿದ್ದ , ವಿಷ್ಣುಕುಂಡಿನ ಸಾಮ್ರಾಜ್ಯದ ಅಳಿದುಳಿದ ಭಾಗಗಳನ್ನು ಸೋಲಿಸಿ, ಇಮ್ಮಡಿ ಪುಲಿಕೇಶಿಯು , ಅಲ್ಲಿಗೆ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯಾಗಿ ನೇಮಿಸಿದನು. ಪುಲಿಕೇಶಿಯ ಮರಣದ ನಂತರ , ಈ ಶಾಖೆಯು ಸ್ವತಂತ್ರವಾಗಿ, ಮುಖ್ಯ ವಾತಾಪಿ ಸಾಮ್ರಾಜ್ಯಕ್ಕಿಂತ ಮುಂದೆ ,ಅನೇಕ ಪೀಳಿಗೆಗಳವರೆಗೆ ಸ್ವತಂತ್ರ ರಾಜ್ಯಭಾರ ಮಾಡಿತು. 
ಈ ರಾಜರು ೯ ನೆಯ ಶತಮಾನದ ಮಧ್ಯದವರೆಗೂ , ವೆಂಗಿ ಪ್ರಾಂತ್ಯದಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟರು. ಅಲ್ಲಿಂದ ಮುಂದಿನ ಶಾಸನಗಳಲ್ಲಿ ಕ್ರಮೇಣ ಕನ್ನಡಲಿಪಿಯಲ್ಲಿ ಬರೆದ ತೆಲುಗು ಭಾಷೆ ಕಾಣಬರುತ್ತದೆ. 

ಚಾಲುಕ್ಯರ ಮೂಲದ ಬಗ್ಯೆ ಅನೇಕ ಅಭಿಪ್ರಾಯಗಳಿದ್ದರೂ ಅವರು ಕರ್ನಾಟಕದವರು  ಎಂಬ ಬಗ್ಯೆ ಸಾಕಷ್ಟು ಒಮ್ಮತವಿದೆ. ಚಾಲುಕ್ಯರ ಶಾಸನಗಳ ಭಾಷೆ ಕನ್ನಡ ಮತ್ತು ಸಂಸ್ಕೃತ.  ಕೆಲವು ಚಾಲುಕ್ಯ ದೊರೆಗಳ ಹೆಸರು ಅಂತ್ಯವಾಗುವುದು ‘ಅರಸ’ ಎಂಬ ಕನ್ನಡ ಶಬ್ದದಿಂದ. ರಾಷ್ಟ್ರಕೂಟರ ಶಾಸನಗಳಲ್ಲಿ ಬಾದಾಮಿಯ ಚಾಲುಕ್ಯರನ್ನು ‘ಕರ್ನಾಟಕ ಬಲ’ ಎಂದು ಸಂಭೋದಿಸಲಾಗಿದೆ. ಅವರ ಪ್ರಕಾರ, ಚಾಲುಕ್ಯರು, ಬನವಾಸಿಯ ಕದಂಬರ ಪೀಳಿಗೆಯವರೋ ಅಥವಾ ಸಂಬಂಧಿಕರೋ ಆಗಿದ್ದರು. ಬನವಾಸಿಯ ಕದಂಬರ ಅಧೀನದಲ್ಲಿದ್ದ ಪ್ರದೇಶಗಳು ಮುಂದೆ ಚಾಲುಕ್ಯರ  ವಶವಾದವು. ಮಂಗಳೇಶನ ಪ್ರಸಿದ್ಧ  ಬಾದಾಮಿ ಗುಹಾ ಶಾಸನಗಳು ( ಕ್ರಿ.ಶ ೫೭೮) , ಅವನದೇ ಆದ ಮಹಾಕೂಟದ ಕಂಬದ ಮೇಲಿನ ಬರವಣಿಗೆ (ಕ್ರಿ.ಶ ೬೦೨) ಮತ್ತು ಕ್ರಿ.ಶ ೭೦೦ರ ಕಪ್ಪೆ ಅರಭಟ್ಟನ ಕನ್ನಡದಲ್ಲಿಯ ದಾಖಲೆಗಳು ಚಾಲುಕ್ಯರ ಭಾಷೆಯ ಬಗ್ಗೆ ಬೆಳಕು ಚೆಲ್ಲುತ್ತವೆ.   ಬಾದಾಮಿ ಕೋಡಿನ ಒಂದನೆಯ ಪುಲಿಕೇಶಿಯ  ಕ್ರಿ.ಶ ೫೪೩ರ ಮೊಟ್ಟಮೊದಲ ಶಾಸನ  ಮತ್ತು ಎರಡನೆಯ ಪುಲಿಕೇಶಿಯ ಐಹೊಳೆಯ ಶಾಸನ (ಕ್ರಿ.ಶ  ೬೩೪) ಕನ್ನಡಲಿಪಿಯಲ್ಲಿರುವ ಸಂಸ್ಕೃತ ಶಾಸನಗಳ ಉದಾಹರಣೆಗಳಾಗಿವೆ. 

ಐಹೊಳೆಯ ಶಾಸನ ಪುಲಿಕೇಶಿಯನ್ನು ೯೯,೦೦೦ ಗ್ರಾಮಗಳ ಮೂರು ಮಹಾರಾಷ್ಟ್ರಗಳ ಅಧಿಪತಿ ಎಂದು ವರ್ಣಿಸುತ್ತದೆ. ಇಂದು ಮಹಾರಾಷ್ಟ್ರದಲ್ಲಿರುವ ೯೬ ಮರಾಠೀ ಕುಲಗಳಲ್ಲಿ ಒಂದಾದ ಸೋಲಂಕಿ ಎಂಬ ಕುಲದವರು,  ಚಾಲುಕ್ಯರ ವಂಶಜರಾಗಿದ್ದು , ಅವರ, ಈಗ ತಿಳಿದ ಮಟ್ಟಿಗೆ, ಮೂಲ ಇಂದಿನ ಕರ್ನಾಟಕದಲ್ಲಿತ್ತು.

ವಾಸ್ತುಶಿಲ್ಪ ಮತ್ತು ಕಲೆ ಚಾಲುಕ್ಯ ಸಾಮ್ರಾಜ್ಯದ ಶಾಶ್ವತ ಕೊಡುಗೆಗಳು. ಪಟ್ಟದಕಲ್ಲು (), ಬಾದಾಮಿ,ಐಹೊಳೆಗಳಲ್ಲಿನ ಬಂಡೆಗಳಲ್ಲಿ ಕಡೆದ ದೇವಾಲಯಗಳು, ಅಜಂತಾ, ಎಲ್ಲೋರಾಗಳಲ್ಲಿನ ಸುಪ್ರಸಿದ್ಧ ಶಿಲ್ಪಕೃತಿಗಳು ಮತ್ತು ಭಿತ್ತಿಚಿತ್ರಗಳು ಚಾಲುಕ್ಯರ ಕಲಾಭಿರುಚಿಗೆ ಸಾಕ್ಷಿಯಾಗಿವೆ. ಈ ಕಾಲವನ್ನು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಆರಂಭಕಾಲವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಶ. ೪೫೦ - ೭೫೦ ರ ನಡುವೆ ಬರಿಯ ಐಹೊಳೆ ಒಂದರಲ್ಲಿಯೇ ನೂರೈವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಬಾದಾಮಿ ಚಾಲುಕ್ಯರು ಕಟ್ಟಿಸಿದರು. ಈ ಆರಂಭ ಕಾಲದ ಕಲೆಯ ಉದಾಹರಣೆಯಾಗಿ ಐಹೊಳೆಯ ದುರ್ಗಾ (ಕ್ರಿ.ಶ.೬ ನೆಯ ಶತಮಾನ),ಲಾಡ್ ಖಾನ್ (ಕ್ರಿ.ಶ. ೪೫೦),ಮೇಗುತಿ (ಕ್ರಿ.ಶ.೬೩೪),ಹುಚ್ಚಿಮಲ್ಲಿ ಮತ್ತು ಹುಚ್ಚಪ್ಪಯ್ಯ (ಕ್ರಿ.ಶ. ೫ನೆಯ ಶತಮಾನ) ದೇವಾಲಯಗಳು, ಬಾದಾಮಿಯ ಗುಹಾ ದೇವಾಲಯಗಳನ್ನು ನೋಡಬಹುದು.ಪಟ್ಟದಕಲ್ಲಿನ ಅದ್ಭುತ ದೇವಾಲಯಗಳನ್ನು ಕಟ್ಟಿಸಿದವನು ಎರಡನೆಯ ವಿಕ್ರಮಾದಿತ್ಯ. (ಕ್ರಿ.ಶ.೭೪೦) ಇಲ್ಲಿನ ವಿರೂಪಾಕ್ಷ,ಮಲ್ಲಿಕಾರ್ಜುನ,ಸಂಗಮೇಶ್ವರ ಮತ್ತು ಒಂದು ಜೈನ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದರೆ, ಜಂಬುಲಿಂಗ,ಕಾಶಿವಿಶ್ವೇಶ್ವರ ಮತ್ತು ಗಳಗನಾಥ ದೇವಾಲಯಗಳು ಉತ್ತರ ಭಾರತೀಯ ನಾಗರ ಶೈಲಿಯಲ್ಲಿವೆ.ಪಾಪನಾಥ ದೇವಾಲಯದಲ್ಲಿ ದಕ್ಷಿಣ ಮತ್ತು ಉತ್ತರದ ಶೈಲಿಗಳ ಸಮ್ಮಿಶ್ರಣದ ಪ್ರಯತ್ನ ಕಾಣುತ್ತದೆ.

ಕನ್ನಡ ಸಾಹಿತ್ಯ 

ರನ್ನನಂತಹ ಶ್ರೇಷ್ಠ ಕನ್ನಡ ಕವಿಗಳಿಗೆ  ಕಲ್ಯಾಣಿಯ ಚಾಲುಕ್ಯರು ಆಶ್ರಯ ಮತ್ತು ಪ್ರೋತ್ಸಾಹ ಕೊಟ್ಟರು.  ರನ್ನನು ಎರಡನೆಯ ತೈಲಪನ ಮತ್ತು ಸತ್ಯಾಶ್ರಯನ ಆಸ್ಥಾನಕವಿಯಾಗಿದ್ದು, ಕಲ್ಯಾಣಿಯ ಚಾಲುಕ್ಯರ ಕಾಲದ ಮೊದಲ ಕವಿ. ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ, ಪರಶುರಾಮಚರಿತ ಮತ್ತು ರನ್ನಕಂದ ಇವನ ಪ್ರಸಿದ್ಧ ಕೃತಿಗಳು.. ಆ ಕಾಲದಲ್ಲಿ ಇನ್ನೂ ಅನೇಕ ಕನ್ನಡ ವಿದ್ವಾಂಸರು ಆಗಿಹೋದರು. ಅವರಲ್ಲಿ ಕೆಲವರು, ಶೃಂಗಾರಶಾಸ್ತ್ರದ ಬಗೆಗಿನ ಮದನತಿಲಕ ಎಂಬ ಕೃತಿ ರಚಿಸಿದ ಚಂದ್ರರಾಜ, ಜಾತಕತಿಲಕ ( ಜ್ಯೋತಿಶ್ಶಾಸ್ತ್ರ) ಬರೆದ ಶ್ರೀಧರಾಚಾರ್ಯ, ಗೋವೈದ್ಯ ( ಪಶುವೈದ್ಯ ಶಾಸ್ತ್ರ) ಬರೆದ ಕೀರ್ತಿವರ್ಮ, ನಯಸೇನ (ಧರ್ಮಾಮೃತ), ನಾಗವರ್ಮ(ಕಾವ್ಯಾವಲೋಕನ) , ಬ್ರಹ್ಮಶಿವ (ಸಮಯಪರೀಕ್ಷೆ) , ರಾಜಾದಿತ್ಯ (ಕ್ಷೇತ್ರ ಗಣಿತ,ವ್ಯವಹಾರ ಗಣಿತ, ಲೀಲಾವತಿ) , ಜಗದ್ದಾಲ ಸೋಮನಾಥ (ಕರ್ನಾಟಕ ಕಲ್ಯಾಣಕಾರಕ - ಔಷಧಗಳ ಬಗ್ಯೆ).  ವಚನಗಳನ್ನು ಬರೆದು ಪ್ರಸಿದ್ಧನಾದ ದೇವರ ದಾಸಿಮಯ್ಯನೂ ಈ ಕಾಲದವನೇ. ಅಷ್ಟೇ ಏಕೆ, ಮಂತ್ರಿಯಾಗಿದ್ದ ದುರ್ಗಸಿಂಹ (ಪಂಚತಂತ್ರ) ಹಾಗೂ ದಂಡನಾಯಕ ಎರಡನೆಯ ಚಾವುಂಡರಾಯ (ಲೋಕೋಪಕಾರ) ಸಹ ಸಾಹಿತ್ಯ ಕೃತಿಗಳನ್ನು ರಚಿಸಿದರು. ಇದು ಕನ್ನಡ ಸಾಹಿತ್ಯದ ಸುವರ್ಣ ಕಾಲವಾಗಿತ್ತು.

ಸಂಸ್ಕೃತ ಸಾಹಿತ್ಯ 

ಕಲ್ಯಾಣಿಯ ಚಾಲುಕ್ಯರು  ವಾದಿರಾಜ ( ಯಶೋಧರ ಚರಿತಮ್, ಪಾರ್ಶ್ವನಾಥ ಚರಿತಮ್)ರಂತಹ  ಸಂಸ್ಕೃತ  ವಿದ್ವಾಂಸರಿಗೆ ಪ್ರೋತ್ಸಾಹ ಕೊಟ್ಟರು. ತನಗೆ ಆಶ್ರಯ ಕೊಟ್ಟ ಆರನೆಯ ವಿಕ್ರಮಾದಿತ್ಯನನ್ನು ಬಿಲ್ಹಣನು ವಿಕ್ರಮಾಂಕದೇವ ಚರಿತೆಯ ಮೂಲಕ ಅಜರಾಮರವಾಗಿಸಿದ್ದಾನೆ. ಸುಪ್ರಸಿದ್ಧ  ಮಿತಾಕ್ಷರ ಸಂಹಿತೆ ಬರೆದವನು ವಿಜ್ಞಾನೇಶ್ವರ(ಮರತೂರು). ಸ್ವತಃ ಮೂರನೆಯ ಸೋಮೇಶ್ವರನೇ ಕಲೆ ಮತ್ತು ವಿಜ್ಞಾನದ ಬಗೆಗೆ ವಿಶ್ವಕೋಶವನ್ನು ರಚಿಸಿದನು. ಜಗದೇಕಮಲ್ಲನು ಸಂಗೀತಚೂಡಾಮಣಿಯನ್ನು ರಚಿಸಿದನು.

ಬಳ್ಳಾರಿ, ಧಾರವಾಡ ಮತ್ತು ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಕಂಡುಬರುವ  ಉತ್ತರಾರ್ಧ ಚಾಲುಕ್ಯ ಶೈಲಿಯ ಕಟ್ಟಡಗಳು ಚಾಲುಕ್ಯರ ಪೂರ್ವಾರ್ಧದ ಶೈಲಿಗೂ, ಹೊಯ್ಸಳರ ಶೈಲಿಗೂ ಮಧ್ಯದ ಕೊಂಡಿಯಾಗಿವೆ. ದಕ್ಷಿಣದಲ್ಲಿ ನೂರಾರು, ಅದರಲ್ಲಿ ಅರ್ಧಕ್ಕೂ ಹೆಚ್ಚು ಕರ್ನಾಟಕದಲ್ಲಿ, ಕಟ್ಟಲ್ಪಟ್ಟ ದೇವಾಲಯಗಳೊಂದಿಗೆ ೧೨ನೆಯ ಶತಮಾನದಲ್ಲಿ ಕಲ್ಯಾಣಿ ಶೈಲಿಯ ವಾಸ್ತುಶಿಲ್ಪ ತನ್ನ ಉತ್ತುಂಗ ಸ್ಥಿತಿಯನ್ನು ಮುಟ್ಟಿತು. ಕಲ್ಯಾಣಿಯ ಚಾಲುಕ್ಯರ ವಾಸ್ತುಶಿಲ್ಪದ ಮತ್ತೊಂದು ವೈಶಿಷ್ಟ್ಯವೆಂದರೆ , ಬಹು ಮಜಲಿನ ಸೋಪಾನಗಳ ಪುಷ್ಕರಣಿಗಳು. ಗದಗ ಜಿಲ್ಲೆಯ ಲಕ್ಕುಂಡಿಯ ಕಾಶಿವಿಶ್ವೇಶ್ವರ, ದಾವಣಗೆರೆ ಜಿಲ್ಲೆಯ ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಕೊಪ್ಪಳ ಜಿಲ್ಲೆಯ ಮಹಾದೇವ ದೇವಾಲಯಗಳು ಚಾಲುಕ್ಯರ ಉತ್ತರಾರ್ಧ ವಾಸ್ತುಶಿಲ್ಪ ಶೈಲಿಯ ಉತ್ಕೃಷ್ಟ ಉದಾಹರಣೆಗಳಾಗಿವೆ. ಅದರಲ್ಲಿಯೂ ಮಹಾದೇವ ದೇವಾಲಯವು , ತನ್ನ ಬೃಹದಾಕಾರ ಮತ್ತು ಸೂಕ್ಷ್ಮ ವಿವರಗಳಿಂದ , ಭಾರತದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಹೇಳಲಾಗಿದೆ.ಗೋಡೆಯ, ಕಂಬದ ಹಾಗೂ ಗೋಪುರಗಳ ಮೇಲಿನ ಕೆತ್ತನೆಗಳು ಚಾಲುಕ್ಯರ  ಅತ್ಯುನ್ನತ ಮಟ್ಟದ ಕಲಾಭಿರುಚಿ ಹಾಗೂ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಅಲ್ಲಿಯ ಕ್ರಿ.ಶ. ೧೧೧೨ರ ಶಾಸನವೊಂದು ಆ ದೇವಾಲಯವನ್ನು ಆರನೆಯ ವಿಕ್ರಮಾದಿತ್ಯನ ದಂಡನಾಯಕ ಮಹದೇವನು ಕಟ್ಟಿಸುತ್ತಿದ್ದಾನೆಂದು ವಿವರಿಸಿ, ಅದು ದೇವಾಲಯಗಳಲ್ಲೇ ಚಕ್ರವರ್ತಿ ಎಂದು ಬಣ್ಣಿಸುತ್ತದೆ. ಹೊಯ್ಸಳರ ರಾಜರು ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿಗೆ  ಬೇಲೂರಿನಲ್ಲಿನ ಸುಪ್ರಸಿದ್ಧ  ದೇವಾಲಯ ಕಟ್ಟಲು ಹೇಳಿದಾಗ, ಆತ ಮಹಾದೇವ ದೇವಾಲಯಕ್ಕೆ ದರ್ಶನವಿತ್ತು ಪ್ರೇರಣೆ ಪಡೆದುಕೊಂಡ ಎಂದು ಒಂದು ಐತಿಹ್ಯವಿದೆ.  ಕಲ್ಯಾಣಿಯ ಚಾಲುಕ್ಯರ ವಾಸ್ತುಶಿಲ್ಪವು ಸೂಕ್ಷ್ಮ ಕುಸುರಿ ಕೆಲಸದ ಕಂಬಗಳು , ಮತ್ತು  ಪುಷ್ಕರಣಿ (ಕಲ್ಯಾಣಿ)ಗೆ ಒತ್ತು ಕೊಟ್ಟಿದೆ.  

ಕಲ್ಯಾಣಿಯ ಚಾಲುಕ್ಯರು ಕರ್ನಾಟಕದ ಧಾರವಾಡ, ಗದಗ ಮತ್ತು ಹಾವೇರಿ ಪ್ರದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿದರು. ಬಾದಾಮಿ, ಐಹೊಳೆಗಳಲ್ಲಿಯೂ, ದೇವಾಲಯ ನಿರ್ಮಾಣದ ಎರಡನೆಯ ಹಂತದ ಕಾರ್ಯದಲ್ಲಿ , ಮಲ್ಲಿಕಾರ್ಜುನ ಮತ್ತು ಯಲ್ಲಮ್ಮ ಮೊದಲಾದ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಗದಗ ವಾಸ್ತುಶಿಲ್ಪ ಶೈಲಿ ಎಂದೇ ಹೆಸರಾದ ಹೊಸ ಶೈಲಿಯೊಂದು ಈ ಕಾಲದಲ್ಲಿ ಅಭಿವೃದ್ಧಿಯಾಯಿತು. ಇದು ದಕ್ಷಿಣ ( ದ್ರಾವಿಡ) ಮತ್ತು ಉತ್ತರ ( ನಾಗರ) ಶೈಲಿಯ ಸಮ್ಮಿಶ್ರಣವಾಗಿದ್ದು ವೇಸರ ಶೈಲಿಯದಾಗಿದೆ ಎನ್ನಲಾಗುತ್ತದೆ. 

ಡಾ. ಜ್ಯೋತ್ಸ್ನಾ ಕಾಮತರು ಹೇಳುತ್ತಾರೆ “ ಕರ್ನಾಟಕದ ಇತಿಹಾಸದಲ್ಲಿ , ಚಾಲುಕ್ಯರ ಕಾಲವನ್ನು ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ರಾಜ್ಯವಿಸ್ತಾರ ಅಷ್ಟೇ ಅಲ್ಲದೆ, ಈ ಕಾಲವು ದಕ್ಷ ಆಡಳಿತ ಕ್ರಮ, ಸಾಮಾಜಿಕ ಸುರಕ್ಷತೆ, ವಿದ್ಯಾಪ್ರಸಾರ , ಇತರ ಸಾಂಸ್ಕೃತಿಕ ಚಟುವಟಿಕೆಗಳು, ವ್ಯಾಪಾರ , ವಾಣಿಜ್ಯಗಳಲ್ಲಿ ವಿಕಾಸ , ಸಾಹಿತ್ಯ, ಕಲೆಮತ್ತು ವಾಸ್ತುಶಿಲ್ಪಗಳಲ್ಲಿ ಅಭಿವೃದ್ಧಿ ಇವುಗಳನ್ನೂ ಪ್ರತಿನಿಧಿಸುತ್ತದೆ. ಈ ಕಾಲವು ಸಾಮಾಜಿಕ ಸುಧಾರಣೆಗಳಿಗೂ ಇಂಬು ಕೊಟ್ಟು ಬಸವೇಶ್ವರರಂತಹ  ವಿಶಿಷ್ಟ ಸುಧಾರಕರಿಂದ ವೀರಶೈವಪಂಥದ ಹುಟ್ಟಿಗೂ ಕಾರಣವಾಯಿತು  
 
ಪ್ರತಿ ವರ್ಷ ಕರ್ನಾಟಕ ಸರ್ಕಾರವು ಪಟ್ಟದಕಲ್ಲು , ಬಾದಾಮಿ,ಐಹೊಳೆಗಳಲ್ಲಿ ಮೂರು ದಿನಗಳ ಚಾಲುಕ್ಯ ಉತ್ಸವ ಎಂಬ ಸಂಗೀತ, ನೃತ್ಯ ಕಾರ್ಯಕ್ರಮವನ್ನು ನಡೆಸುತ್ತದೆ. ಅರವತ್ತರ ದಶಕದಲ್ಲಿ ತಯಾರಾದ ಇಮ್ಮಡಿ ಪುಲಿಕೇಶಿ ಚಲನಚಿತ್ರವು  ಆ ಮಹಾನ್ ರಾಜನ ಜೀವನ ,ಸಾಧನೆಗಳನ್ನು ಕೊಂಡಾಡುತ್ತದೆ.

 




#Article 24: ಕುಮಾರವ್ಯಾಸ (494 words)


 

ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. ಗದುಗಿನ ನಾರಾಯಣಪ್ಪ ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ.  ಈತನ ಕಾವ್ಯ ನಾಮ ಕುಮಾರವ್ಯಾಸ.  ವ್ಯಾಸ ಮಹಾಕವಿಯ ಸಂಸ್ಕೃತ  ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಹುಟ್ಟೂರು  ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ.  
ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು  ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್ ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚಿನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.
ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ.

ಈ ವಂಶಾವಳಿಯಂತೆ, ವೀರನಾರಾಯಣರೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ  ಗಾಮುಂಡ  ಗೌಡ ಎಂದು ನಿರ್ಣಯಿಸಿದ್ದಾರೆ. ಆನಂತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ.  ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. (ತಿದ್ದುಪಡಿ:೧೫೨ ಸಂಧಿಗಳು, 8244ಪದ್ಯಗಳು) 'ಕುಮಾರವ್ಯಾಸ ಭಾರತ'ದ ಭಾಷೆ ನಡುಗನ್ನಡ. (ಕುಮಾರವ್ಯಾಸ ಭಾರತ-ಆದಿಪರ್ವ)

ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ  ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:

ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. 
ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ  ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (ತಿಳಿಯ ಹೇಳುವೆ ಕೃ‍ಷ್ಣ ಕಥೆಯನು) ಅವನ ಮಹಾಭಾರತ ಕಥೆ ಕೃಷ್ಣನ  ಸುತ್ತಲೂ ಸುತ್ತುತ್ತದೆ.  ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ,  ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;

ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!

ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆಬಳಸಿ ಬರೆಯಲು ಕಂಠಪತ್ರದವುಲುಹುಗೆಡದಗ್ಗಳಿಕೆಯೆಂಬೀಬಲುಹು ವೀರನಾರಾಯಣನ ಕಿಂಕರಗೆವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ ಕೇಳುವಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರುಚಾರು ಕವಿತೆಯ ಬಳಕೆಯಲ್ಲ ವಿಚಾರಿಸುವಡಳವಲ್ಲ ಚಿತ್ತವಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ




#Article 25: ರಾಹುಲ್ ದ್ರಾವಿಡ್ (635 words)


ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) - ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ. ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿದ ವಿಶ್ವದಲ್ಲಿ ೬ನೇ ಆಟಗಾರ, ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಮೂರನೇ ಭಾರತೀಯ. ಇವರು ಅಕ್ಟೋಬರ್ ೨೦೦೫ರಲ್ಲಿ  ಭಾರತ ಕ್ರಿಕೆಟ್ ತಂಡದ ನಾಯಕನಾಗಿ, ಸೆಪ್ಟೆಂಬರ್ ೨೦೦೭ ರಲ್ಲಿ  ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಹುಲ್ ಡ್ರಾವಿಡ್ ಭಾರತೀಯ ಪ್ರಿಮಿಯರ್ ಲೀಗ್ ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ೨ ವರ್ಷ್ 'ಐಕಾನ್ ಆಟಗಾರ'ನಾಗಿ ಆಡಿ, ಈಗ ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಹುಲ್ ದ್ರಾವಿಡ್‌ಗೆ, ೨೦೦೦ರಲ್ಲಿ, ವಿಜಡನ್ ಕ್ರಿಕೆಟರ್ ಅಂತ ಗೌರವಿಸಲಾಗಿದೆ. . ದ್ರಾವಿಡ್‌ಗೆ, ೨೦೦೪ರಲ್ಲಿ, ವರ್ಷದ ಐಸಿಸಿ ಪ್ಲೆಯರ್ ಹಾಗೂ ವರ್ಷದ ಟೆಸ್ಟ್ ಆಟಗಾರನೆಂದೂ ಸನ್ಮಾನಿಸಲಾಗಿದೆ. . ರಾಹುಲ್ ದ್ರಾವಿಡ್, ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ (೨೧೦) ಹಿಡಿದ ಆಟಗಾರರಾಗಿರುತ್ತಾರೆ.

೭ ಅಗಸ್ಟ್ ೨೦೧೧ ರಂದು, ಒಂದು ದಿನದ ಹಾಗೂ ಟಿ ೨೦ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ೨೦೧೨ ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು. ೨೦೧೩ ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಯನ್ನು ಇವರಿಗೆ ನೀಡಲಾಗಿದೆ.

ದಿನಾಂಕ ನವೆಂಬರ್ ೧ ೨೦೧೨ರಂದು ಸಿಡ್ನಿಯಲ್ಲಿ ನಡೆದ ಏಳನೆಯ  ವಾರ್ಷಿಕ ಪುರಸ್ಕಾರ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಹಾಗು  ಅವರುಗಳನ್ನು ಸನ್ಮಾನಿಸಲಾಯಿತು. ಭಾರತದ ಮೂರನೇ ಹಾಗು ನಾಲ್ಕನೆಯ ಅತ್ಯುಚ್ಚ ನಾಗರಿಕ ಸನ್ಮಾನವಾದ ಪದ್ಮ ಭೂಷಣ ಹಾಗು ಪದ್ಮ ಶ್ರೀ ಪುರಸ್ಕಾರಗಳಿಗೂ ಸಹ ರಾಹುಲ್ ದ್ರಾವಿಡ್ ಭಾಜನರಾಗಿದ್ದಾರೆ.

೨೦೧೪ರಲ್ಲಿ ಬೆಂಗಳೂರಿನ ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಲಹಾ ಮಂಡಳಿಯ ಸದಸ್ಯರಾಗಿ ರಾಹುಲ್ ದ್ರಾವಿಡ್ ಅವರು ಸೇರ್ಪಡೆಯಾದರು. ಗೋ ಸ್ಪೋರ್ಟ್ಸ್ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಭಾರತದ ಭವಿಷ್ಯ ಒಲಿಂಪಿಕ್ ಸ್ಪರ್ಧಾಳುಗಳನ್ನು ರೂಪಿಸುವ ಯೋಜನೆಯಲ್ಲಿ ರಾಹುಲ್ ದ್ರಾವಿಡ್ ತೊಡಗಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ರವರ ನೇತೃತ್ವದ ಮೇಲಿನ ಯೋಜನೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಪ್ರನ್ನೊಯ್ ಕುಮಾರ್,  ಈಜುಗಾರಾದ ಶರತ್ ಗಾಯಕ್ವಾಡ್ ಹಾಗು ಯುವ ಗೋಲ್ಫೆರ್ ಚಿಕ್ಕರಂಗಪ್ಪ ರವರು ಸ್ಪರ್ಧಾಳುಗಳನ್ನು ರೂಪಿಸುವ ಪ್ರಥಮ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದರು.

ದ್ರಾವಿಡ ಅವರು ತಮ್ಮ ೧೨ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಕರ್ನಾಟಕ ರಾಜ್ಯದ ಪರವಾಗಿ ಅಂಡರ್-೧೫, ಅಂಡರ್-೧೭, ಅಂಡರ್-೧೯ ಮಟ್ಟದ ತಂಡಗಳಲ್ಲಿ ಆಡಿದ್ದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ ಕೆಕಿ ತಾರಾಪೊರ್‌ರವರು. ತಮ್ಮ ಶಾಲೆಗೆ ಆಡಿದ ಮೊದಲನೆಯ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್, ಬ್ಯಾಟ್ಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಆದರೆ ಇವರು ಮಾಜಿ ಟೆಸ್ಟ್ ಆಟಗಾರರಾದ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಮತ್ತು ತಾರಾಪೊರ್ ರವರ ಸಲಹೆಯಂತೆ ವಿಕೆಟ್ ಕೀಪಿಂಗ್ ಮಾಡುವುದನ್ನು ನಿಲ್ಲಿಸಿದರು.

೧೯೯೬ರಿಂದ  ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್. ಕೆಕಿ ತಾರಾಪೊರ್‌ರವರ ಬಳಿ ಅಭ್ಯಾಸ ಮಾಡಿದ ಇವರು ಬ್ಯಾಟಿಂಗ್‌ನ ಅತ್ಯುತ್ತಮ ತಾಂತ್ರಿಕತೆಗೆ ಹೆಸರುವಾಸಿ. ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ ದ ವಾಲ್ (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ಇವರ ಖಾತೆಯಲ್ಲಿ ಈಗಾಗಲೆ ಟೆಸ್ಟ್ ಕ್ರಿಕೆಟ್‌ನ ೩೬ ಶತಕಗಳು (ಸರಾಸರಿ ೫೪ರಲ್ಲಿ) ಇವೆ. ಒಂದು ದಿನದ ಅಂತರ ರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಸರಾಸರಿ ೩೯ (ಸ್ಟ್ರೈಕ್ ರೇಟ್ - ೬೯). ಇವರು ಆಗಿಂದಾಗ್ಗೆ ತಂಡಕ್ಕೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು.

ಭಾರತ ಹಾಗೂ  ಕರ್ನಾಟಕಕ್ಕೆ ಆಡುವುದಲ್ಲದೆ ದ್ರಾವಿಡ್ ಕೆಂಟ್ ಹಾಗೂ ಸ್ಕಾಟ್ಲ್ಯಾಂಡ್‌ಗೆ ಕೂಡ ಆಡಿದ್ದಾರೆ. ಇವರ ಚೊಚ್ಚಲ ಟೆಸ್ಟ್  ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ  ಭಾರತದ ೧೯೯೬ರ ಇಂಗ್ಲೆಂಡ್‌ ಪ್ರವಾಸದ ಎರಡನೆ ಯ ಟೆಸ್ಟ್ ಪಂದ್ಯ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ ಸಿಂಗಪೂರಿನಲ್ಲಿ ನಡೆದ ಸಿಂಗರ್ ಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. ವಿಸ್ಡನ್ ಸಂಸ್ಥೆಯು ಇವರನ್ನು ೨೦೦೦ನೆ ವರ್ಷದಲ್ಲಿ, ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.

೨೦೦೪ ರಲ್ಲಿ ಇವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ೨೦೦೪, ಸೆಪ್ಟೆಂಬರ್ ೭ರಂದು ಇವರಿಗೆ ಐಸಿಸಿಯು ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರ ನೆಂದೂ ಗೌರವಿಸಿತು. ೨೦೦೪ರಲ್ಲಿ ಇವರು ಭಾರತ ತಂಡದ ಉಪನಾಯಕರಾಗಿದ್ದರು. ಕೆಲವೊಮ್ಮೆ ಸೌರವ್ ಗಂಗೂಲಿ ಇಲ್ಲದಿರುವಾಗ ಭಾರತ ತಂಡದ ನಾಯಕತ್ವ ವಹಿಸಿದ್ದರು.

೨೦೦೫ರಲ್ಲಿ ಭಾರತದ ನಾಯಕತ್ವ ವಹಿಸಿಕೊಂಡ ಇವರು, ಶ್ರೀಲಂಕಾ ವಿರುದ್ಧ ಸರಣಿ ಜಯ ಪಡೆದು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತದಲ್ಲಿ ನಡೆದ ಸರಣಿಯನ್ನು ೨-೨ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್  ಬಳಿಕ ವಿಶ್ವದ ಆಗ್ರಮಾನ್ಯ ಆಟಗಾರ ಎಂದು ಕರೆಸಿಕೊಳ್ಳುವ ರಾಹುಲ್ ಹದಿನಾರು ವರ್ಷದ ಅಂತರ್ ರಾಷ್ಟ್ರೀಯ ಕ್ರಿಕೆಟ್ ನ  ಸಾಧನೆಗಳು ಮತ್ತು ಧಾಖಲೆಗಳು ಒಂದೆರಡಲ್ಲ. ಸಚಿನ್ ಬಳಿಕ ಭಾರತದ ಪರ ಅತ್ಯಂತ ಹೆಚ್ಹು ಟೆಸ್ಟ್ ರನ್ (೧೩,೨೮೮) ಗಳಿಸಿದಾತ. ಮೂರನೇ ಕ್ರಮಾಂಕದಲ್ಲಿ ಬಂದು ಒಟ್ಟು ಹತ್ತು ಸಾವಿರ ರನ್ ಹೊಡೆದ ವಿಶ್ವದ ಏಕೈಕ ಕ್ರಿಕೆಟಿಗ. ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯದಿಕ (88) ಶತಕದ ಜೊತೆಯಾಟ ನೀಡಿದಾತ. ಟೆಸ್ಟ್ ಆಡುವ ಎಲ್ಲ ಹತ್ತು ದೇಶಗಳ ವಿರುದ್ದ ಶತಕ ಬಾರಿಸಿರುವ ವಿಶ್ವದ ಏಕೈಕ ಆಟಗಾರ. ಟೆಸ್ಟ್ನಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಹು ಚೆಂಡುಗಳನ್ನು (೩೧೨೫೮)ಎದುರಿಸಿರುವ  ಆಟಗಾರ. ಸೊನ್ನೆ ಹೊಡೆಯದೆ ಅತ್ಯದಿಕ (೧೭೩) ಇನ್ನಿಂಗ್ಸ್ ಗಳನ್ನು ಸತತವಾಗಿ ಆಡಿರುವ ವಿಶ್ವದ ಏಕೈಕ ಆಟಗಾರ. ಡಾನ್ ಬ್ರಾಡ್ಮನ್ ನಂತರ ಸತತ ಮೂರು ಸರಣಿಗಳಲ್ಲಿ ಡಬಲ್ ಸೆಂಚುರಿ ಹೊಡೆದ ಏಕೈಕ ಕ್ರಿಕೆಟಿಗ.

ಆಗಸ್ಟ್ ೨೦೧೧ರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ೧೦,೦೦೦ ರನ್ ಗಳಿಸಿರುವ ರಾಹುಲ್ ದ್ರಾವಿಡ್ ಸಾಧನೆಯನ್ನು ನೆನಪಿಸುವ ಗೋಡೆಯೊಂದನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದಾರೆ. ಗೋಡೆಯ ಮೇಲೆ ದ್ರಾವಿಡ್ ಆಟದ ಮೂರು ಗುಣಗಳಾದ ಬದ್ಧತೆ, ದೃಢತೆ ಹಾಗೂ ಉತ್ಕೃಷ್ಟತೆಯನ್ನು ಬಿಂಬಿಸಲಾಗಿದೆ. ಕೆಎಸ್ ಸಿಎ ಹಾಗೂ ಸ್ಕೈಲೈನ್ ಬಿಲ್ಡರ್ಸ್ ಈ ಗೋಡೆಗೆ 'ದಿ ವಾಲ್' ಎಂದೇ ಹೆಸರಿಸಿವೆ. ಮಾಸ್ಟರ್ ಬ್ಲಾಸ್ಟರ್ ಸಚಿನ್  ತೆಂಡೂಲ್ಕರ್ 'ದಿ ವಾಲ್' ಅನ್ನು ಅನಾವರಣಗೊಳಿಸಿದ್ದರು. ಈ ಗೋಡೆಯು ೧೫ ಅಡಿ ಎತ್ತರ ಹಾಗೂ ೨೭ ಅಡಿ ಅಗಲವಿದ್ದು ಇದರ ನಿರ್ಮಾಣಕ್ಕಾಗಿ ೧೦,೦೦೦ ಇಟ್ಟಿಗೆಗಳನ್ನು ಬಳಸಲಾಗಿದೆ. ಕವರ್ ಡ್ರೈವ್ ಭಂಗಿಯ ಶಿಲ್ಪ ಹೊಂದಿದ್ದು, ಗೋಡೆಗೆ ವಿದ್ಯುನ್ಮಾನ  ಪರದೆಯನ್ನು ಅಳವಡಿಸಲಾಗಿದ್ದು, ದ್ರಾವಿಡ್ ಪ್ರತಿ ರನ್ ಗಳಿಸುತ್ತಿದ್ದಾಗ ಒಟ್ಟು ರನ್ ಇಲ್ಲಿನ ವಿದ್ಯುನ್ಮಾನ  ಪರದೆಯಲ್ಲಿ ಮೂಡುತಿತ್ತು.

೨೦೧೨ ಮಾರ್ಚಿ ೯ ರಂದು ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದರು.

ಮೈದಾನದಲ್ಲಿನ ಮರೆಯಲಾಗದ ಕ್ಷಣಗಳು.




#Article 26: ಅನಿಲ್ ಕುಂಬ್ಳೆ (316 words)


ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦  ಬೆಂಗಳೂರಿನಲ್ಲಿ) -  ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ತಂಡದ  ಮುಖ್ಯ ತರಬೇತುದಾರ. ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಭಾರತ ೧೯೯೨ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್‌ನಲ್ಲಿ ೮ ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್‌ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್‌ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್‌ ಆಗಿ ಉಳಿದಿದ್ದಾರೆ.
 ಎರಪಳ್ಳಿ ಪ್ರಸನ್ನರವರಾದ ಮೇಲೆ ೧೦೦ ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್‌ಗಳಿಗೆ ೬ ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ.
ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್‌ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ ಎಕಾನಮಿ ರೇಟ್ ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ ವಿಶ್ವ ಕಪ್ ನಡೆದದ್ದು.

ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ ೪-ಫೆಬ್ರವರಿ ೮ ೧೯೯೯ನಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ(Anil Kumble Circle) ಎಂದು ನಾಮಕರಣ ಮಾಡಲಾಗಿದೆ.

ಅನಿಲ್ ಕುಂಬ್ಳೆ ಜುಂಬೋ(Jumbo) ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.!!




#Article 27: ಚೆನ್ನೈ (3255 words)


ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರಿಂದ ಬಂದ ಈ ಹೆಸರನ್ನು ತಮಿಳುನಾಡು ಸರ್ಕಾರ ಚೆನ್ನೈ ಎಂದು ಬದಲಾಯಿಸಿತು. ಚೆನೈ ಉಚ್ಚಾರಣೆ (· ಬಗ್ಗೆ?) (), ಹಿಂದೆ ಮದ್ರಾಸ್ ಉಚ್ಚಾರಣೆ ಎಂದು ತಮಿಳುನಾಡು ರಾಜ್ಯದ ರಾಜಧಾನಿ ಮತ್ತು ಭಾರತದ ದೊಡ್ಡ ನಾಲ್ಕನೇ ಮೆಟ್ರೋಪಾಲಿಟನ್ ನಗರ (· ಬಗ್ಗೆ?). ಬಂಗಾಳ ಕೊಲ್ಲಿಯ ಕೋರಮಂಡಲ್ ತೀರದಲ್ಲಿ ಇದೆ. ಇ ನಗರದ ಅಂದಾಜು ಜನಸಂಋಯ 7.60 ರಂತೆ ಮಿಲಿಯನ್ (2006), ಸುಮಾರು 368 ವರ್ಷಗಳ ಇತಿಹಾಸವಿರುವ ಈ ನಗರ ಜಗತ್ತಿನ ಆತಿ ದೊಡ್ಡ ನಗರಳ ಪಟ್ಟಿಯಲ್ಲಿ 36 ನೆ ಸ್ಥಾನದಲ್ಲಿದೆ.
ಈ ನಗರವು ಒಂದು ದೊಡ್ಡ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ದೇಗುಲ ಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ (ಪುಣೆ ಮೊದಲನೆಯದು) ವಾಹನ ರಾಜಧಾನಿಯಾಗಿದ್ದು, ವಾಹನೋದ್ಯಮದ ಹೆಚ್ಚುಭಾಗ ಅಲ್ಲಿ ನೆಲೆಸಿ, ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು ದಕ್ಷಿಣ ಏಶಿಯಾದ ಡೆಟ್ರಾಯಿಟ್ ಎಂದು ಕರೆಸಿಕೊಳ್ಳುತ್ತದೆ. ಅದು ಪಾಶ್ಚಿಮಾತ್ಯ ಜಗತ್ತಿನಿಂದ ಹೊರಗುತ್ತಿಗೆಯಾದ ನೌಕರಿಗಳ ಪ್ರಮುಖ ಕೇಂದ್ರವೂ ಆಗಿದೆ. ಹನ್ನೆರಡು ಕಿಲೋಮೀಟರ್ ಉದ್ದದ ಮರೀನಾ ಬೀಚ್ ನಗರದ ಪೂರ್ವ ತೀರವಾಗಿದ್ದು, ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ. ಈ ನಗರವು ತನ್ನ ಕ್ರೀಡಾ ತಾಣಗಳಿಗಾಗಿ ಹೆಸರುವಾಸಿಯಾಗಿದ್ದು ಭಾರತದ ಏಕೈಕ ATP ಟೆನ್ನಿಸ್ ಮುಕ್ತ ಚೆನ್ನೈ ಸ್ಪರ್ಧಾಕೂಟವನ್ನು ಏರ್ಪಡಿಸುತ್ತದೆ.
ಪರಿವಿಡಿ [ಅಡಗಿಸು]

[ಬದಲಾಯಿಸಿ] ಹೆಸರು

'ಮದ್ರಾಸು' ಎಂಬ ಹೆಸರು 'ಮದ್ರಾಸುಪಟ್ನಂ' ಪದದಿಂದ ಬಂದಿದೆ, ಈ ಜಾಗವನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಖಾಯಂ ನೆಲೆಗಾಗಿ 1639 ರಲ್ಲಿ ಆಯ್ಕೆ ಮಾಡಿಕೊಂಡಿತು.ಮದ್ರಾಸು ನಗರದ ದಕ್ಷಿಣ ಭಾಗದಲ್ಲಿ 'ಚೆನ್ನಪಟ್ಟಣಂ' ಎಂಬ ಚಿಕ್ಕ ಪೇಟೆಯಿದೆ. ಕಾಲಾಂತರದಲ್ಲಿ ಎರಡೂ ಪಟ್ಟಣಗಳೂ ಸೇರಿ 'ಮದರಾಸು' ಬ್ರಿಟೀಷರ ಕೃಪೆಗೆ ಪಾತ್ರವಾಯಿತು. ಆದರೆ ಅಲ್ಲಿನ ಜನ ಅದನ್ನು 'ಚೆನ್ನಪಟ್ಟಣ' ಅಥವಾ 'ಚೆನ್ನಪುರಿ' ಎಂದೇ ಗುರುತಿಸುತ್ತಿದ್ದರು. 'ಚೆನ್ನು' ಎಂಬ ಪದ ತೆಲುಗು ಮೂಲದ ದಕ್ಷಿಣ ಮಧ್ಯ ದ್ರಾವಿಡ ಭಾಷೆಯ ಪದ ಇದರ ಅರ್ಥ ಸುಂದರ ಎಂದು ಹಾಗಾಗಿ 'ಚೆನ್ನಪುರಿ' ಅಥವಾ 'ಚೆನ್ನಪಟ್ಟಣಂ' ಎಂದರೆ ಸುಂದರ ನಗರ ಎಂದರ್ಥ. ಈ ನಗರವನ್ನು 1996 ಆಗಸ್ಟ್ ತಿಂಗಳಲ್ಲಿ 'ಚೆನ್ನೈ' ಎಂದು ಮರುಹೆಸರಿಸಲಾಯಿತು. 'ಮದ್ರಾಸು' ಎಂಬ ಪದ ಪೋರ್ಚುಗೀಸ್ ಮೂಲದ್ದು. (ಭಾರತದ ಅನೇಕ ಇತರ ನಗರಗಳು ಕೂಡ ಅಂಥದೇ ಹೆಸರು ಬದಲಾವಣೆಗಳನ್ನು ಮಾಡಿವೆ.) ಮೂಲ ಪೋರ್ತುಗೀಸ್ ಹೆಸರು ಮಾದ್ರ ದೆ ಸಾಯ್ಸ್ -1500 ರ ಅರಂಭಿಕ ವಸತಿಗಾರರಲ್ಲೊಬ್ಬ ಉನ್ನತ ಅಧಿಕಾರಿಯ ಹೆಸರು ಎಂದು ನಂಬಲಾಗಿದೆ. ಚೆನ್ನೈ ತಮಿಳು ಹೆಸರಾಗಿರಲಿಕ್ಕಿಲ್ಲ ಎಂದೂ ಮದ್ರಾಸ್ ಎಂಬುದು ತಮಿಳುಮೂಲದ್ದಾಗಿರಬಹುದೆಂದೂ ಕೆಲವರು ಹೇಳಿದ್ದಾರೆ.
[ಬದಲಾಯಿಸಿ] ಇತಿಹಾಸ

.
ಮುಖ್ಯ ಲೇಖನ: ಚೆನೈ ಇತಿಹಾಸ
ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ, ಸೈನ್ಯ ಮತ್ತು ಆರ್ಥಿಕ ಕೇಂದವಾಗಿದೆ. ಅದನ್ನು ದಕ್ಷಿಣ ಭಾರತದ ಸಾಮ್ರಾಜ್ಯಗಳು, ಪ್ರಮುಖವಾಗಿ ಪಲ್ಲವ, ಚೋಳ, ಪಾಂಡ್ಯ, ಮತ್ತು ವಿಜಯನಗರ ಸಾಮ್ರಾಜ್ಯಗಳು ಆಳಿವೆ. ಇಂದಿನ ಮಹಾನಗರದ ಭಾಗವಾಗಿರುವ ಮೈಲಾಪುರ ಪಟ್ಟಣವು ಒಂದು ಕಾಲಕ್ಕೆ, ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಾಶ್ವತ ವಸಾಹತು ನಿರ್ಮಾಣಕಾಗಿ, ವಂದವಾಸಿಯ ನಾಯಕರಾಗಿದ್ದ ದಮೆರ್ಲ ವೆಂಕಟಾದ್ರಿಯವರು 22 ನೇ ಆಗಸ್ಟ್ 1639 ರಂದು ಈ ಪ್ರದೇಶವನ್ನು ನೀಡಿದರು. ಬ್ರಿಟಿಷರು ಈ ಪ್ರದೇಶವನ್ನು ಮದ್ರಾಸೆಮನ್ ಎಂದು ಕರೆದರು. ಇದಾದ ಒಂದು ವರ್ಷದಲ್ಲಿ ಸಂತ ಜಾರ್ಜ್ ಕೋಟೆಯನ್ನು ಕಟ್ಟಲಾಯಿತು ಮತ್ತು ಈ ನಗರವು ಎಲ್ಲಾ ಚಟುವಟಿಕೆಗಳ ಹಾಗೂ ವಾಣಿಜ್ಯಕೇಂದ್ರವಾಗಿ ಬೆಳೆಯಿತು. ಇದು ಇಂದಿಗೂ ತಮಿಳುನಾಡಿನ ವಿಧಾನ ಸಭೆ ಹಾಗೂ ಆಡಳಿತದ ಕೇಂದ್ರವಾಗಿದೆ.
ಈ ಕೋಟೆಯನ್ನೂ ಹಾಗೂ ಸುತ್ತಲಿನ ಅನೇಕ ಹಳ್ಳಿಗಳನ್ನು ಫ್ರೆಂಚರ ಮಾಲ್ಡೀವ್ಸ್ ನ ಪ್ರಾಂತ್ಯಾಧಿಪತಿಯಾಗಿದ್ದ ಲಾ ಬೋರ್ದೊನ್ನೇಸ್ 1746 ರಲ್ಲಿ ವಶಪಡಿಸಿಕೊಂಡನು.
ಏಕ್ಸ್-la-ಚಾಪೆಲೆ ಒಡಂಬಡಿಕೆಯ ಮೂಲಕ ಮತ್ತು ಅನಂತರ ಫ್ರೆಂಚ್ ಮತ್ತು ಹೈದರ್ ಅಲಿ, ಮೈಸೂರು ಸುಲ್ತಾನ್ ಇನ್ನಷ್ಟು ದಾಳಿ ತಡೆದುಕೊಳ್ಳುವ ಬೇಸ್ ಬಲಗೊಳ್ಳುತ್ತದೆ 1749 ರಲ್ಲಿ ಪಟ್ಟಣದ ಬ್ರಿಟಿಷ್ ನಿಯಂತ್ರಣವನ್ನು ಮರಳಿ ಪಡೆದರು. 18 ನೇ ಶತಮಾನದ ಕೊನೆಯಲ್ಲಿ, ಬ್ರಿಟಿಷ್ ಅದರ ರಾಜಧಾನಿ ಮದ್ರಾಸ್ ಎಂದು ಮದ್ರಾಸ್ ಪ್ರೆಸಿಡೆನ್ಸಿ, ಸ್ಥಾಪಿಸಲು ತಮಿಳುನಾಡು ಮತ್ತು ಆಂಧ್ರ ಪ್ರದೇಶ ಮತ್ತು ಕರ್ನಾಟಕ ಉತ್ತರ ಆಧುನಿಕ ರಾಜ್ಯಗಳ ಸುತ್ತಮುತ್ತಲಿನ ಪ್ರದೇಶದ ಅತ್ಯಂತ ವಶಪಡಿಸಿಕೊಂಡ.
ಬ್ರಿಟಿಶರ ಆಳ್ವಿಕೆಯ ಅವಧಿಯಲ್ಲಿ ಪಟ್ಟಣವು ಒಂದು ಪ್ರಮುಖ ನಾಗರಿಕ ಕೇಂದ್ರವಾಗಿಯೂ ನೌಕಾನೆಲೆಯಾಗಿಯೂ ಬೆಳೆಯಿತು. 19 ನೇ ಶತಮಾನದ ಕೊನೆಗೆ ಭಾರತದಲ್ಲಿ ರೈಲು ಆಗಮನದೊಂದಿಗೆ, ಅದು ಮೊದಲು ಬಾಂಬೇ ಎಂಬ ಹೆಸರಿನಲ್ಲಿ ಪ್ರಖ್ಯಾತವಾದ ಮುಂಬಯಿ ಮತ್ತು ಕೊಲ್ಕತ್ತ (ಹಿಂದಿನ ಕಲ್ಕತ್ತಾ) ದಂತಹ, ಇತರ ಪ್ರಮುಖ ಪಟ್ಟಣಗಳೊಂದಿಗೆ ಸಂಪರ್ಕ ಪಡೆಯಿತು. ಒಳನಾಡಿನ ಸಂವಹನ ಮತ್ತು ವ್ಯಾಪಾರಕ್ಕೆ. ಇದು ತೈಲ DEPOT ಜರ್ಮನ್ ಹಗುರ ವಾಹನ SMS Emden ಅದಕ್ಕೆ ಚಿಪ್ಪುಳ್ಳ ನಂತರ ವಿಶ್ವ ಸಮರ I ರ ಸಮಯದಲ್ಲಿ ಕೇಂದ್ರ ಶಕ್ತಿಗಳು ದಾಳಿ ಏಕೈಕ ಭಾರತೀಯ ನಗರವಾಗಿದೆ. 1947 ರ ಸ್ವಾತಂತ್ರ್ಯದ ನಂತರ, ನಗರವು 1969 ರಲ್ಲಿ ತಮಿಳುನಾಡು ಎಂಬುದಾಗಿ ಮರುನಾಮಕರಣಗೊಂಡಿತು ಮದ್ರಾಸ್ ರಾಜ್ಯದ ರಾಜಧಾನಿಯಾಯಿತು.

[ಬದಲಾಯಿಸಿ] ಭೂಗೋಳ

ಚೆನೈ ಈ ಲ್ಯಾಂಡ್ಸ್ಯಾಟ್ 7 ನಕ್ಷೆಯಲ್ಲಿ ಕಾಣಬಹುದು, ಒಂದು ಫ್ಲಾಟ್ ಕರಾವಳಿ ಮೈದಾನದ ಮೇಲೆ ನೆಲೆಗೊಂಡಿದೆ.

ಚೆನೈ ಮತ್ತು ಸುತ್ತಮುತ್ತಲಿನ ಪಟ್ಟಣಗಳು
ಚೆನೈ ಭಾರತದ ಆಗ್ನೇಯ ಕರಾವಳಿ ಮತ್ತು ತಮಿಳುನಾಡು ಈಶಾನ್ಯ ಮೂಲೆಯಲ್ಲಿ 13,04 ° ಎನ್ 80,17 ° ಇ ನಲ್ಲಿ ಇದೆ.ಇದು ಪೂರ್ವ ಕರಾವಳಿ ಬಯಲು ಎಂಬ ಫ್ಲಾಟ್ ಕರಾವಳಿ ಮೈದಾನದ ಮೇಲೆ ಇದೆ. ನಗರದ 6 ಮೀಟರ್ (20 ಅಡಿ), 60 ಮೀ (200 ಅಡಿ) ಅದರ ಅತ್ಯುನ್ನತ ಬಿಂದುವಿನ ಸರಾಸರಿ ಎತ್ತರದಲ್ಲಿದೆ. ಚೆನೈ, ಕೇಂದ್ರ ಪ್ರದೇಶದಲ್ಲಿ Cooum (ಅಥವಾ Koovam) ಮತ್ತು ದಕ್ಷಿಣ ಪ್ರದೇಶದಲ್ಲಿ ಅದ್ಯಾರ್ ಮೂಲಕ ಎರಡು ನದಿಗಳು ಸುತ್ತಾಡು. ಎರಡೂ ನದಿಗಳು ದೇಶೀಯ ಮತ್ತು ವಾಣಿಜ್ಯ ಮೂಲಗಳಿಂದ ಎಫ್ಲುಯೆಂಟ್ಸ್ ಮತ್ತು ಕಸವು ಅತೀವವಾಗಿ ಕಲುಷಿತ ಇವೆ. Cooum ಕಡಿಮೆ ಕಲುಷಿತ ಇದು ಅದ್ಯಾರ್, ಡಿ-silted ಮತ್ತು ರಾಜ್ಯ ಸರ್ಕಾರದಿಂದ ನಿಯತಕಾಲಿಕವಾಗಿ ಸ್ವಚ್ಛಗೊಳಿಸಲಾಗುತ್ತದೆ. ಅದ್ಯಾರ್ ಒಂದು ಸಂರಕ್ಷಿತ ನದೀಮುಖ ಪಕ್ಷಿಗಳು ಮತ್ತು ಪ್ರಾಣಿಗಳ ಹಲವಾರು ಜಾತಿಗಳ ನೈಸರ್ಗಿಕ ವಾಸಸ್ಥಾನ ರೂಪಿಸುತ್ತದೆ. ಬಕಿಂಗ್ಹ್ಯಾಮ್ ಕಾಲುವೆ, ಒಳನಾಡಿನ 4 ಕಿಮೀ (3 ಮೈಲಿ), ಎರಡು ನದಿಗಳ ಲಿಂಕ್ ತೀರಕ್ಕೆ ಸಮಾನಾಂತರವಾಗಿ ಸಾಗುತ್ತದೆ. Otteri ತೊರೆ, ಒಂದು ಈಶಾನ್ಯ ಸ್ಟ್ರೀಮ್ ಉತ್ತರ ಚೆನೈ ಹಾದು ಮತ್ತು ಬೇಸಿನ್ ಬ್ರಿಡ್ಜ್ ಬಕಿಂಗ್ಹ್ಯಾಮ್ ಕಾಲುವೆ ಭೇಟಿಯಾಗುತ್ತದೆ.
ಗಾತ್ರ ಬದಲಾಗುವ ಅನೇಕ ಸರೋವರಗಳು ನಗರದ ಪಶ್ಚಿಮ ಭಾಗದ ಅಂಚಿನ ಮೇಲೆ ಇವೆ. ರೆಡ್ ಹಿಲ್ಸ್, Sholavaram ಮತ್ತು ಕುಡಿಯುವ ನೀರು Chembarambakkam ಲೇಕ್ ಪೂರೈಕೆ ಚೆನೈ. ಅಂತರ್ಜಲ ಮೂಲಗಳು ಹೆಚ್ಚಾಗಿ ಚೌಳಾದ ಇವೆ. ನಗರದ ನೀರು ಸರಬರಾಜು ಅದರ ಜನಸಂಖ್ಯೆಯು ಅಸಮರ್ಪಕ ಸಾಬೀತಾಗಿದೆ, ಮತ್ತು ನೀರಿನ ಜಲಾಶಯಗಳು ಮತ್ತೆ ವಾರ್ಷಿಕ ಮಾನ್ಸೂನ್ ಮೇಲೆ ಹೆಚ್ಚು ಅವಲಂಬನೆ ಸಮಸ್ಯೆಗಳನ್ನು ಜಟಿಲಗೊಳಿಸಿತು. ಉದಾಹರಣೆಗೆ Veeranam ಇತರ ಮೂಲಗಳು, ತಮಿಳುನಾಡಿನ ನೀರಿನ ಭರಿತ ಸ್ಥಳದಿಂದ ಅಥವಾ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯ ನೀರನ್ನು ಕೆಲವು ಪ್ರಯತ್ನಗಳು ಪೈಪ್ ಗೆ ಇರಲಿಲ್ಲ. ವಾಟರ್ ಚೆನೈ ಒಂದು ಅಮೂಲ್ಯ ಸರಕು ಮತ್ತು ಈ ಹಲವಾರು ಪ್ರದೇಶಗಳು ಸರಬರಾಜು ಖಾಸಗಿ ನೀರಿನ ಟ್ಯಾಂಕರ್ ಹೆಚ್ಚಾಗಿದೆ. ಉದಾಹರಣೆಗೆ ಹಿಮ್ಮೊಗ ಆಸ್ಮೋಸಿಸ್ ಮತ್ತು ಮಳೆನೀರು ಕೊಯ್ಲು ಪರ್ಯಾಯ ಕ್ರಮಗಳನ್ನು ಅಪ್ ನಡೆಸಲಾಯಿತು. ಚೆನೈ Metrowater ಪ್ರಸ್ತುತ ದಿನಕ್ಕೆ 100 ದಶಲಕ್ಷ ಲೀಟರ್ (ಪ್ರತಿ ವ್ಯಕ್ತಿಗೆ ಪ್ರತಿ ದಿನ ಸುಮಾರು 15 ಲೀಟರ್) ಸಾಮರ್ಥ್ಯದ ಒಂದು ಹಿಮ್ಮೊಗ ಆಸ್ಮೋಸಿಸ್ ಸಸ್ಯ ನಿರ್ಮಿಸಲು ಬಿಡ್ ಅಂತಿಮಗೊಳಿಸಿತು.
ಚೆನೈ ಭೂವಿಜ್ಞಾನ ಹೆಚ್ಚಾಗಿ ಮಣ್ಣಿನ, ಜೇಡಿ ಮತ್ತು ಮರಳುಗಲ್ಲಿನಿಂದ ಒಳಗೊಂಡಿದೆ. ನಗರದ ಭೂವಿಜ್ಞಾನ, ಮರಳು ಪ್ರದೇಶಗಳಲ್ಲಿ, clayey ಪ್ರದೇಶಗಳಲ್ಲಿ ಮತ್ತು ಹಾರ್ಡ್ ರಾಕ್ ಪ್ರದೇಶಗಳ ಆಧಾರದ ಮೇಲೆ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಸ್ಯಾಂಡಿ ಪ್ರದೇಶಗಳು ನದಿಯ ಮತ್ತು ತೀರಪ್ರದೇಶಗಳ ಉದ್ದಕ್ಕೂ ಕಂಡುಬರುತ್ತದೆ. Clayey ಪ್ರದೇಶಗಳಲ್ಲಿ ನಗರದ ಅತ್ಯಂತ ರಕ್ಷಣೆ. ಹಾರ್ಡ್ ರಾಕ್ ಪ್ರದೇಶಗಳಲ್ಲಿ ಗಿಂಡಿ, ವೇಲಾಚೇರಿ, ಆಡಮ್ ಬಕ್ಕಾಮ್ ಮತ್ತು ಸೈದಾಪೇಟ್ ಒಂದು ಭಾಗವಾಗಿದೆ. ಉದಾಹರಣೆಗೆ Tiruvanmiyur, ಅದ್ಯಾರ್, Kottivakkam, Santhome, ಜಾರ್ಜ್ ಟೌನ್ ಮತ್ತು ಕರಾವಳಿ ಚೆನೈ, ಮಳೆನೀರು ರನ್ ಆಫ್ ಉಳಿದ ಮರಳು ಪ್ರದೇಶಗಳಲ್ಲಿ ಬೇಗನೆ ಬಸಿದಂತೆ. Clayey ಮತ್ತು ಹಾರ್ಡ್ ರಾಕ್ ಪ್ರದೇಶಗಳಲ್ಲಿ, ಮಳೆನೀರು ನಿಧಾನವಾಗಿ ಬಸಿದಂತೆ, ಆದರೆ ಮುಂದೆ ಕಾಲ ಮಣ್ಣು ನಡೆಯುತ್ತದೆ. ನಗರದ clayey ಪ್ರದೇಶಗಳಲ್ಲಿ T.Nagar, ವೆಸ್ಟ್ Mambalam, ಅಣ್ಣಾ ನಗರ, Kolathur ಮತ್ತು Virugambakkam ಸೇರಿವೆ.
ಇವನ್ನೂ ನೋಡಿ: ಫ್ಲೋರಾ ಮತ್ತು ಚೆನೈ ಪ್ರಾಣಿಗಳು
[ಬದಲಾಯಿಸಿ] ಹವಾಗುಣ
ಚೆನೈ ಉಷ್ಣ ಭೂಮಧ್ಯ ಮೇಲಿದೆ, ಮತ್ತು ಆದ್ದರಿಂದ ಋತುಮಾನದ ಉಷ್ಣಾಂಶದಲ್ಲಿ ವ್ಯತ್ಯಾಸ ಕಡಿಮೆಯಿರುತ್ತದೆ ನೋಡುತ್ತಾನೆ. ಸಮುದ್ರ ಸಾಮೀಪ್ಯ ಇದು ವರ್ಷದ ಅತ್ಯಂತ ಒಂದು ಬಿಸಿ ಮತ್ತು ಆರ್ದ್ರತೆಯ ಹವಾಮಾನವು ನೀಡುತ್ತದೆ. ಅತ್ಯಧಿಕ ತಾಪಮಾನ ಕೊನೆಯಲ್ಲಿ ಮೇ ಮತ್ತು ಜೂನ್ ಮೊದಲ ಅನುಭವ ಮತ್ತು ಸಾಮಾನ್ಯವಾಗಿ 38 ನಡುವೆ ವ್ಯತ್ಯಾಸ °C (100.4 °F) ಮತ್ತು 42 °C (107.6 °F) ಕೆಲವೊಮ್ಮೆ ಸುಮಾರು 45 ಮುಟ್ಟಿದರೆ ಆದರೂ °C ಕೆಲವು ದಿನಗಳ ಕಾಲ (113 °F). ಜನವರಿ ಸಮಯದಲ್ಲಿ ಚೆನೈ ಸರಾಸರಿ ದೈನಂದಿನ ತಾಪಮಾನ ಸುಮಾರು 24 °C (75 °F) ತಾಪಮಾನದಲ್ಲಿ ವಿರಳವಾಗಿ 18 ಕಳಗೆ ಆದರೂ °C (64 °F). ದಾಖಲಾದ ಅತಿ ಕಡಿಮೆ ತಾಪಮಾನ 15.8 °C (60.4 °F) ಮತ್ತು ಅತಿ ಹೆಚ್ಚು 44.1 °C (111.4 °F).
ಸರಾಸರಿ ವಾರ್ಷಿಕ ಮಳೆ 1,300 mm (47.2 ಇಂಚುಗಳು) ಇರುತ್ತದೆ. ನಗರದ ಮಧ್ಯ ಅಕ್ಟೋಬರ್ ನಿಂದ ಮಿಡ್ ಡಿಸೆಂಬರ್, ಈಶಾನ್ಯ ಮಾನ್ಸೂನ್ ಮಾರುತಗಳು ತನ್ನ ಋತುವಾರು ಮಳೆ ಪಡೆಯುತ್ತದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ಕೆಲವೊಮ್ಮೆ ಸಿಟಿ ಹಿಟ್.
[ಬದಲಾಯಿಸಿ] ರೂಪುರೇಷೆ (ಲೇಔಟ್)

ಚೆನೈ ನಗರದ ವಿಭಾಗಗಳು.

ಇವನ್ನೂ ನೋಡಿ: ಚೆನೈ ವಾಸ್ತುಶಿಲ್ಪ
ಆಡಳಿತಾತ್ಮಕ ಉದ್ದೇಶಗಳಿಗಾಗಿ ಚೆನೈ ಐದು ತಾಲ್ಲೂಕುಗಳು ವಿಂಗಡಿಸಲಾಗಿದೆ. 1. ಎಗ್ಮೋರ್-Nungambakam, 2. ಫೋರ್ಟ್ Tondiarpet 3. Mambalam-ಗಿಂಡಿ 4. ಮೈಲಾಪೊರೆ-ಟ್ರಿಪ್ಲಿಕೇನ್ 5. Perambur-Purasawalkkam.
ಚೆನೈ ಮಹಾನಗರ ಪ್ರದೇಶದ ಮೂರು ಜಿಲ್ಲೆಗಳು ಚೆನೈ ನಗರದಲ್ಲಿ ಮತ್ತು ಕಾಂಚೀಪುರಂ ಮತ್ತು ಭೂಮಿ ಜಿಲ್ಲೆಗಳನ್ನು ಒಳಗೊಂಡಿದೆ. ನಗರ ಪ್ರದೇಶದಲ್ಲಿ 174 km ² (67 ಮೈಲು ²) ಪ್ರದೇಶವನ್ನು ಒಳಗೊಂಡಿದೆ. ಮೆಟ್ರೋಪಾಲಿಟನ್ ಪ್ರದೇಶದ 1.177 km ² (455 mi ²) ವಿಸ್ತಾರವಾಗಿದೆ. ಉತ್ತರ, ಮಧ್ಯ, ದಕ್ಷಿಣ ಮತ್ತು ಪಶ್ಚಿಮ: ನಗರದ ನಾಲ್ಕು ಪ್ರಮುಖ ಭಾಗಗಳಾಗಿ ಸಂಯೋಜನೆಯ ಆಧಾರದ ಮೇಲೆ ವಿಂಗಡಿಸಲಾಗಿದೆ.
ಉತ್ತರ ಚೆನೈ ಮುಖ್ಯವಾಗಿ ಕೈಗಾರಿಕಾ ಪ್ರದೇಶವಾಗಿದೆ. ಕೇಂದ್ರ ಚೆನೈ ನಗರದ ವಾಣಿಜ್ಯ ಹೃದಯ ಮತ್ತು ಡೌನ್ಟೌನ್ ಪ್ರದೇಶ. ದಕ್ಷಿಣ ಚೆನೈ ಮತ್ತು ವೆಸ್ಟ್ ಚೆನೈ, ಹಿಂದೆ ಪ್ರಧಾನವಾಗಿ ವಸತಿ ಪ್ರದೇಶಗಳಲ್ಲಿ ತ್ವರಿತ ಐಟಿ ಮತ್ತು ಹಣಕಾಸು ಸಂಸ್ಥೆಗಳು ಒಂದು ದೊಡ್ಡ ಸಂಖ್ಯೆಯ ಹೋಸ್ಟಿಂಗ್, ವಾಣಿಜ್ಯ ಪ್ರದೇಶಗಳಲ್ಲಿ ಮಾಡುತ್ತಿರುವಿರಿ.
ಸಮೀಪದ ಉಪಗ್ರಹ ಪಟ್ಟಣಗಳು ​​ದಕ್ಷಿಣಕ್ಕೆ ಮಹಾಬಲಿಪುರಂನ, ನೈಋತ್ಯ, ಕಾಂಚೀಪುರಂ ಪಟ್ಟಣ ಶ್ರೀಪೆರಂಬದೂರಿನ, ತಿರುವಳ್ಳೂರು ಮತ್ತು ಪಶ್ಚಿಮಕ್ಕೆ ಅರಕ್ಕೋಣಮ್ ಗೆ Chengalpattu ಸೇರಿವೆ.
Guduvancheri ಚೆನೈ ಒಂದು ಉಪನಗರವಾಗಿದೆ.
[ಬದಲಾಯಿಸಿ] ಆಡಳಿತ

ಚೆನೈ ಕಾರ್ಪೊರೇಷನ್ ಕೊಠಡಿಗಳನ್ನಾಗಿ ರಿಪನ್ ಬಿಲ್ಡಿಂಗ್, 1913 ಪೂರ್ಣಗೊಂಡಿತು. ಇದು ಮಾಜಿ ವೈಸ್ರಾಯ್ ಲಾರ್ಡ್ ರಿಪ್ಪನ್ ಹೆಸರಿಡಲಾಗಿದೆ.
ಚೆನೈ ನಗರವು ಮೇಯರ್ ಮತ್ತು ಮೇಯರ್ ಮತ್ತು ಡೆಪ್ಯುಟಿ ಮೇಯರ್ ಇತರ ಸಮಿತಿ ಆಯ್ಕೆಯಾದ ಒಂದು ಇವರಲ್ಲಿ 155 ವಾರ್ಡ್ಸನ (ಎಲ್ಲಾ ನೇರವಾಗಿ ನಗರದ ನಿವಾಸಿಗಳು ಚುನಾಯಿತ), ಪ್ರತಿನಿಧಿಸುವ 155 ಸಮಿತಿ ಹೊಂದಿರುತ್ತದೆ ಚೆನೈ, ಸಂಸ್ಥೆಯು ನಿರ್ವಹಿಸುತ್ತದೆ. ಮೇಯರ್ ಮತ್ತು ಡೆಪ್ಯುಟಿ ಮೇಯರ್ 10 ಸ್ಥಾಯಿ ಸಮಿತಿಗಳ ಅಧ್ಯಕ್ಷತೆ. ಕಾರ್ಪೊರೇಷನ್ ರಾಜಧಾನಿಯ ನಾಗರಿಕ ಕಾರ್ಯಗಳು ನೋಡಿಕೊಳ್ಳುತ್ತಾರೆ.
ಚೆನೈ ಮಹಾನಗರ ಪ್ರದೇಶದ ಕಾಂಚೀಪುರಂ ಮತ್ತು ಭೂಮಿ ಜಿಲ್ಲೆಗಳು ಭಾಗವಾಗಿದೆ ಅನೇಕ ಉಪನಗರಗಳು ಆವರಿಸುತ್ತದೆ. ಸಣ್ಣದಾಗಿ ಪಂಚಾಯತ್ ಎಂಬ ಪಟ್ಟಣದ ಮಂಡಳಿಗಳನ್ನು ಆಡಳಿತ ಸಂದರ್ಭದಲ್ಲಿ ದೊಡ್ಡ ಉಪನಗರಗಳಿಗೆ ಪಟ್ಟಣದ ಪುರಸಭೆಗಳನ್ನು goverened ಮಾಡಲಾಗುತ್ತದೆ.
ಚೆನೈ ತಮಿಳುನಾಡು ರಾಜಧಾನಿ ಎಂದು ತಮಿಳುನಾಡು ಸರ್ಕಾರದ ಕಾರ್ಯಾಂಗ ಮತ್ತು ಶಾಸಕಾಂಗ ಪ್ರಧಾನ ನೆಲೆಯಾಗಿದೆ. ಮುಖ್ಯವಾಗಿ ಸಚಿವಾಲಯದ ಕಟ್ಟಡಗಳು, ಫೋರ್ಟ್ ಸೇಂಟ್ ಜಾರ್ಜ್ ಕ್ಯಾಂಪಸ್ ಭಾಗವಾಗಿ ಹಾಗೂ ನಗರದ ಸುತ್ತ ಅಲ್ಲಲ್ಲಿ ಅನೇಕ ಕಟ್ಟಡಗಳಲ್ಲಿ ಇರಿಸಲಾಗಿದೆ. ಇದರ ವ್ಯಾಪ್ತಿಗೆ ತಮಿಳುನಾಡು ಮತ್ತು ಪಾಂಡಿಚೇರಿ ಉದ್ದಗಲಕ್ಕೂ ಹರಡಿದೆ ಮದ್ರಾಸ್ ಹೈಕೋರ್ಟ್, ರಾಜ್ಯದ ಅತ್ಯುನ್ನತ ನ್ಯಾಯಾಂಗ ಅಧಿಕಾರವನ್ನು ಹೊಂದಿದೆ ಮತ್ತು ನಗರದಲ್ಲಿ ಇದೆ.
ಚೆನೈ ಉತ್ತರ, ಮಧ್ಯ ಮತ್ತು ಚೆನೈ ಚೆನೈ ದಕ್ಷಿಣ - ಚೆನೈ ಮೂರು ಸಂಸದೀಯ ಕ್ಷೇತ್ರಗಳನ್ನು ಹೊಂದಿದೆ. ಪ್ರಸ್ತುತ ಸಂಸದರು ಕ್ರಮವಾಗಿ ಸಿ Kuppusami, ದಯಾನಿಧಿ ಮಾರನ್ ಮತ್ತು ಟಿಆರ್ Baalu ​​ಇವೆ. ಚೆನೈ ರಾಜ್ಯದ ಶಾಸನ 18 ಶಾಸಕರು ಆಯ್ಕೆ.
ಗ್ರೇಟರ್ ಚೆನೈ ಪೊಲೀಸ್ ಇಲಾಖೆ, ತಮಿಳುನಾಡು ಪೊಲೀಸ್ ವಿಭಾಗದ ನಗರದಲ್ಲಿ ಕಾನೂನು ಜಾರಿ ಸಂಸ್ಥೆ ಹೊಂದಿದೆ. ನಗರ ಪೊಲೀಸ್ ಪಡೆಯ ಪೊಲೀಸ್ ಮತ್ತು ತಮಿಳುನಾಡು ಮುಖಪುಟ ಮಂತ್ರಿಮಂಡಲದ ಆಡಳಿತಾತ್ಮಕ ನಿಯಂತ್ರಣ ನಡುವಂಗಿಗಳನ್ನು ಧರಿಸುತ್ತಿದ್ದರು ಒಂದು ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ. ಗ್ರೇಟರ್ ಚೆನೈ ಪೊಲೀಸ್ ಮೂವತ್ತಾರು ಉಪವಿಭಾಗಗಳಲ್ಲಿ, ಮತ್ತು 121 ಪೊಲೀಸ್ ನಿಲ್ದಾಣಗಳಿವೆ. ಈ ಪೊಲೀಸ್ ಕೇಂದ್ರಗಳ ಹದಿನೈದು ಈಗ ಐಎಸ್ಒ 9001:2000 ಪ್ರಮಾಣಿತ ಇವೆ. ನಗರದ ಸಂಚಾರ ಚೆನೈ ಸಿಟಿ ಸಂಚಾರ ಪೊಲೀಸ್ (CCTP) ನಿರ್ವಹಿಸುತ್ತದೆ. ಮೆಟ್ರೋಪಾಲಿಟನ್ ಉಪನಗರಗಳಲ್ಲಿ ಕಾಂಚೀಪುರಂ ಮತ್ತು ಭೂಮಿ ಪೊಲೀಸ್ ಇಲಾಖೆಗಳು ಆಟಗಳ ನಿಯಮಗಳು.
[ಬದಲಾಯಿಸಿ] ಅರ್ಥವ್ಯವಸ್ಥೆ (ಆರ್ಥಿಕತೆ)

Tidel ಪಾರ್ಕ್, ಚೆನೈ ಅತಿದೊಡ್ಡ ಸಾಫ್ಟ್ವೇರ್ ಪಾರ್ಕ್
ಚೆನೈ ವಿವಿಧ ಆರ್ಥಿಕ ಮೂಲವನ್ನು ಹೊಂದಿದೆ. ಮುಖ್ಯ ಕೈಗಾರಿಕೆಗಳು ವಾಹನ, ತಂತ್ರಾಂಶ ಸೇವೆಗಳು, ಹಾರ್ಡ್ವೇರ್ ಉತ್ಪಾದನಾ ಮತ್ತು ಹಣಕಾಸು ಸೇವೆಗಳು. ಇತರ ಪ್ರಮುಖ ಉದ್ಯಮಗಳು ಪೆಟ್ರೋಕೆಮಿಕಲ್ಸ್, ಜವಳಿ ಮತ್ತು apparels ಸೇರಿವೆ. ಚೆನೈ ಪೋರ್ಟ್ ಮತ್ತು ಎನ್ನೋರ್ ಪೋರ್ಟ್ ಇದರ ಪ್ರಾಮುಖ್ಯತೆಯ ಸೂಕ್ತ ಕೊಡುಗೆ. ನಗರದ ಮದ್ರಾಸ್ ಸ್ಟಾಕ್ ಎಕ್ಸ್ಚೇಂಜ್ ಎಂಬ ಸಂಪೂರ್ಣ ಗಣಕೀಕೃತ ಸ್ಟಾಕ್ ವಿನಿಮಯ ಹೊಂದಿದೆ.

ಚೆನೈ ಭಾರತದ ಆಟೋ ಘಟಕಗಳನ್ನು ಉದ್ಯಮದ 45 ರಷ್ಟು ಹಾಗೂ ವಾಹನ ಉದ್ಯಮದ 27 ರಷ್ಟು ಮೂಲ ಹೊಂದಿದೆ. ಭಾರತದಲ್ಲಿ ವಾಹನ ಕಂಪನಿಗಳ ಒಂದು ದೊಡ್ಡ ಸಂಖ್ಯೆಯ ಚೆನೈ ನೆಲೆಗೊಂಡಿದೆ. BMW, ಮಹೀಂದ್ರಾ  ಮಹೀಂದ್ರಾ, ಮತ್ತು ಅಪೊಲೊ ಟೈರುಗಳು ಅಡಿಯಲ್ಲಿ ಸಸ್ಯಗಳು ಹೊಂದಿರುತ್ತವೆ ಹಾಗೆಯೇ ಹ್ಯುಂಡೈ, ಫೋರ್ಡ್, ಮಿತ್ಸುಬಿಷಿ, ಟಿವಿಎಸ್, ಅಶೋಕ್ ಲೇಲ್ಯಾಂಡ್, ಕ್ಯಾಟರ್ಪಿಲ್ಲರ್, ರಾಯಲ್ ಎನ್ಫೀಲ್ಡ್, TI ಚಕ್ರಗಳಿಗೆ TAFE, ಡನ್ಲಪ್, ಕಂಪನಿಯು ಹಲವು ಜಾಗತಿಕ ವಾಹನ ಕಂಪನಿಗಳು ಚೆನೈ ಮತ್ತು ಸುಮಾರು ಸಸ್ಯಗಳು ಉತ್ಪಾದಕ ಎಂದು ಚೆನೈ ಮತ್ತು ಸುತ್ತ ನಿರ್ಮಾಣ. ನಗರದ ಸ್ವಯಂ ಸಹಾಯಕ ಉದ್ಯಮದ ಒಂದು ಪ್ರಮುಖ ಕೇಂದ್ರವಾಗಿದೆ.
ಚಿತ್ರ: Chennaihyundai.jpg
ಚೆನೈ ನಗರದಲ್ಲಿ ಹ್ಯುಂಡೈ ಕಾರು ಕಾರ್ಖಾನೆಯಿಂದ ಸಾಲಿನಲ್ಲಿ ಕಾರುಗಳು
ಅರ್ಜುನ್: ಹೆವಿ ವಾಹನ ಫ್ಯಾಕ್ಟರಿ, Avadi ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಸೇರಿದಂತೆ ಮಿಲಿಟರಿ ವಾಹನಗಳು, ಉತ್ಪಾದಿಸುತ್ತದೆ. ಭಾರತೀಯ ರೈಲ್ವೆಯ ರೈಲ್ವೆ ಕೋಚ್ ನಿರ್ಮಾಣ ಫ್ಯಾಕ್ಟರಿ, ಇಂಟೆಗ್ರಲ್ ಕೋಚ್ ಫ್ಯಾಕ್ಟರಿ [1] ರೈಲ್ವೆ ತರಬೇತುದಾರರು ಮತ್ತು ಇಂಜಿನ್ಗಳನ್ನು ತಯಾರಿಸುತ್ತದೆ.
ಚೆನೈ ಬ್ಯಾಂಕಿಂಗ್ ಮತ್ತು ಹಣಕಾಸು ಪ್ರಮುಖ ಕೇಂದ್ರವಾಗಿದೆ. ಪ್ರಸ್ತುತ ಮೂರು ದೊಡ್ಡ ರಾಷ್ಟ್ರೀಯ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳ ಮತ್ತು ಅನೇಕ ರಾಜ್ಯ ಮಟ್ಟದ ಸಹಕಾರ ಬ್ಯಾಂಕ್ಗಳು ​​ನೆಲೆಯಾಗಿದೆ. ಅನೇಕ ಹಣಕಾಸು ಸಂಸ್ಥೆಗಳು ಮತ್ತು ವಿಮಾ ಕಂಪನಿಗಳು ಚೆನೈ ಕೇಂದ್ರಕಾರ್ಯಾಲಯ ಹೊಂದಿವೆ. ಅನೇಕ ಭಾರತೀಯ ಬ್ಯಾಂಕ್, ಬಹುರಾಷ್ಟ್ರೀಯ ಬ್ಯಾಂಕುಗಳು ಹಾಗೂ ವಿಶ್ವ ಬ್ಯಾಂಕ್ ನಗರದಲ್ಲಿ ತಮ್ಮ ಬ್ಯಾಕ್ ಆಫೀಸ್ ಕಾರ್ಯಾಚರಣೆಗಳು ನೆಲೆಗೊಂಡಿದೆ. ನಗರದ ಭಾರತದಲ್ಲಿ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳನ್ನು ಕಾರ್ಯಾಚರಣೆಗಳಿಗೆ ಕೇಂದ್ರವನ್ನು ಪ್ರಮುಖ ಮರಳಿ ಕಾರ್ಯನಿರ್ವಹಿಸುತ್ತದೆ.
ಇತರ ಪ್ರಮುಖ ತಯಾರಿಕಾ ಸೌಲಭ್ಯಗಳನ್ನು ಸಣ್ಣ ಪ್ರಮಾಣದ ಉತ್ಪಾದನಾ ದೊಡ್ಡ ಪ್ರಮಾಣದ ಭಾರೀ ಕೈಗಾರಿಕಾ ಉತ್ಪಾದನಾ, pertochemicals ಮತ್ತು ಸ್ವಯಂ ಸಹಾಯಕ ಸಸ್ಯಗಳು ಹಿಡಿದು. ಚೆನೈ ನಗರದ ಉತ್ತರದ ಉಪನಗರಗಳಲ್ಲಿ Ambattur-ಪಾಡಿ ಕೈಗಾರಿಕಾ ವಲಯದಲ್ಲಿ ಇದೆ ಉಡುಪು ಕೈಗಾರಿಕೆಗಳ ಒಂದು ದೊಡ್ಡ ಸಂಖ್ಯೆಯ ಒಂದು ಜವಳಿ ಉದ್ಯಮ ಕೇಂದ್ರವಾಗಿದೆ. ನಗರವು ಒಂದು ದೊಡ್ಡ ಚರ್ಮದ ಉಡುಪು ಮತ್ತು ಪರಿಕರಗಳ ಉದ್ಯಮ ಹೊಂದಿದೆ. SEZ ನ ಉಡುಪು ತಯಾರಿಕೆ ಮತ್ತು ಪಾದರಕ್ಷೆಗಳ ನಗರವು ದಕ್ಷಿಣ ಉಪನಗರಗಳಲ್ಲಿ ನಿರ್ಮಾಣ ಹಂತದಲ್ಲಿದೆ.
ನಗರದ ತಮಿಳು ಎಂಟರ್ಟೈನ್ಮೆಂಟ್ (ಚಲನಚಿತ್ರಗಳು, ದೂರದರ್ಶನ ಮತ್ತು ಮುದ್ರಿತ ಸಂಗೀತ), ಭಾರತೀಯ ಮನರಂಜನಾ ಉದ್ಯಮಗಳಲ್ಲಿ ಎರಡನೇ ಅತಿದೊಡ್ಡ ಇದು ಉದ್ಯಮ ನೆಲೆಯಾಗಿದೆ.
[ಬದಲಾಯಿಸಿ] ಜನಸಂಖ್ಯೆ (ಜನಸಂಖ್ಯಾಶಾಸ್ತ್ರ)

ಚೆನೈ ನಿವಾಸಿಗಳು Chennaiites ಕರೆಯಲಾಗುತ್ತದೆ. ಒಟ್ಟು ಮೆಟ್ರೊಪಾಲಿಟನ್ ಜನಸಂಖ್ಯೆಯು 6.7 ಮಿಲಿಯನ್ ಆದರೆ 2000 ರ, ಚೆನೈ ಸಿಟಿ, 4.2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿತ್ತು. 2006 ರಲ್ಲಿ ಅಂದಾಜು ಮೆಟ್ರೊಪಾಲಿಟನ್ ಜನಸಂಖ್ಯೆಯು 7.60 ರಂತೆ ಮಿಲಿಯನ್ ಆಗಿದೆ.
ಚಿತ್ರ: Chennai.ranganathanst.jpg
T.Nagar ರಲ್ಲಿ ರಂಗನಾಥನ್ ಸ್ಟ್ರೀಟ್ ಸಾಮಾನ್ಯವಾಗಿ ಪಾದಚಾರಿ ವ್ಯಾಪಾರಿಗಳು ತುಂಬಿಹೋಗಿದ್ದು.
ನಗರದಲ್ಲಿ ಜನಸಂಖ್ಯೆ ಸಾಂದ್ರತೆ ಪ್ರತಿ km ² ನಷ್ಟು ವಿಸ್ತೀರ್ಣ 24.418 ಒಟ್ಟಾರೆ ಜನಸಂಖ್ಯೆಯ ಸಾಂದ್ರತೆ ಪ್ರತಿ km 5.847 ಹಾಗೆಯೇ ². ಲಿಂಗ ಅನುಪಾತ 934 ರಾಷ್ಟ್ರೀಯ ಸರಾಸರಿ ಕೊಂಚ ಹೆಚ್ಚಿನ ಪ್ರತಿ 1000 ಪುರುಷರಿಗೆ ಸಂಬಂಧಿಸಿದಂತೆ 948 ಮಹಿಳೆಯರಂತೆ. ಸರಾಸರಿ ಸಾಕ್ಷರತೆಯ ಪ್ರಮಾಣವು 59.5%, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ 80,14% ಆಗಿದೆ. ನಗರದ ಜನಸಂಖ್ಯೆಯಲ್ಲಿ 18% ರಷ್ಟು ಕೊಳಚೆ ಪರಿಸ್ಥಿತಿಗಳು ವಾಸಿಸುವ ಎಂದು ವರ್ಗೀಕರಿಸಲಾಗಿದೆ.
ಚೆನೈ ಎದುರಿಸುತ್ತಿದೆ ಮುಖ್ಯ ಸಮಸ್ಯೆ ಜನಸಂಖ್ಯಾ ಮತ್ತು ಪರಿಣಾಮವಾಗಿ ನೀರಿನ ಕೊರತೆ ಇದೆ. ವಸತಿ ಗಗನಚುಂಬಿ ಸಾಮಾನ್ಯವಾಗಿ ಸಮಯ ಮತ್ತು ಖಾಸಗಿ ವಾಹನಗಳು ಮಾಲೀಕತ್ವವನ್ನು ವಾಹನದಟ್ಟಣೆ ರಲ್ಲಿ ನಂತರದ ಹೆಚ್ಚಳ, ನಗರದ ಅವ್ಯವಸ್ಥಿತ ಬೆಳವಣಿಗೆ ಕಾರಣವಾಗುತ್ತದೆ ಒಲವು ಇಲ್ಲ. ಹೆಚ್ಚಿನ ಜಮೀನು ಬೆಲೆಗಳು ಮತ್ತು ಸ್ಥಳಾವಕಾಶದ ಕೊರತೆ ಕಳಪೆ ನಿರ್ಮಲೀಕರಣ ಮತ್ತು ಶುದ್ಧ ನೀರಿನ ಪ್ರವೇಶವನ್ನು ಕೊರತೆ ಹೊಂದಿವೆ ಇದು ಕೊಳೆಗೇರಿಗಳ, ವಾಸಿಸುತ್ತಿದ್ದವು ಆಗಿ ಸಮಾಜದ ಕೆಳ ಸ್ತರದ ಹಲವು ಸದಸ್ಯರು ಮೇಲೇರಲು ಕಾರಣವಾಗಿದೆ.
ಚೆನೈ ನಗರದಲ್ಲಿ ನಿವಾಸಿಗಳು ಬಹುತೇಕ ಸ್ಥಳೀಯ ತಮಿಳರ ಮತ್ತು ತಮಿಳು ಮಾತನಾಡುತ್ತಾರೆ. ಇಂಗ್ಲೀಷ್ ವ್ಯಾಪಕವಾಗಿ ಮಾತನಾಡುತ್ತಾರೆ, ಮತ್ತು ವ್ಯಾಪಾರ, ಶಿಕ್ಷಣ ಮತ್ತು ಇತರ ಬಿಳಿ ಕಾಲರ್ ವೃತ್ತಿಗಳನ್ನು ಮಾತ್ರ ಪ್ರತ್ಯೇಕವಾಗಿ ಬಳಸಲಾಗುತ್ತದೆ. ಚೆನೈ ಮಾತನಾಡುವ ತಮಿಳು ಇದನ್ನು ಮದ್ರಾಸ್ bhashai (ಮದ್ರಾಸ್ ಭಾಷೆ ತಮಿಳು) ಎಂದು ಕರೆಯಲ್ಪಡುವ ಎಷ್ಟರಮಟ್ಟಿಗೆಂದರೆ, ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುತ್ತದೆ. ಗಮನಾರ್ಹ ತೆಲುಗು, ಮಲೆಯಾಳಿ, ಕನ್ನಡ ಮತ್ತು ಉರ್ದು ಭಾಷಿಕ ಸಮುದಾಯಗಳು ಇವೆ. ಬ್ರಿಟಿಷ್ ಕಾಲದಿಂದಲೂ ಒಂದು ಪ್ರಾದೇಶಿಕ ಕೇಂದ್ರವಾಗಿದೆ, ಇತರ ಪ್ರಮುಖ ಸಮುದಾಯಗಳು ಮಾರ್ವಾಡಿ, ಆಂಗ್ಲೋ ಇಂಡಿಯನ್, ಬಂಗಾಳಿ, ಪಂಜಾಬಿ, ಉತ್ತರ ಪ್ರದೇಶ ಮತ್ತು ಬಿಹಾರ ರಿಂದ ಗುಜರಾತಿ ಸಮುದಾಯಗಳು ಮತ್ತು ಜನರು ಸೇರಿವೆ. ಚೆನೈ ಸಹ ಕೈಗಾರಿಕೆಗಳಲ್ಲಿ ಕೆಲಸ ಮತ್ತು ಐಟಿ ಕೇಂದ್ರಗಳನ್ನು ಒಬ್ಬ ಬೆಳೆಯುವ ವಿದೇಶವಾಸಿ ಜನರನ್ನೂ ಹೊಂದಿದೆ.
[ಬದಲಾಯಿಸಿ] ಸಂಸ್ಕೃತಿ

ಮುಖ್ಯ ಲೇಖನ: ಚೆನೈ ಸಂಸ್ಕೃತಿ
ಚೆನೈ ಸಂಸ್ಕೃತಿ ತನ್ನ ವೈವಿಧ್ಯಮಯ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ನಗರವು ತನ್ನ ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ಮತ್ತು ಹಿಂದೂ ದೇವಾಲಯಗಳಿಗೆ ಪ್ರಖ್ಯಾತವಾಗಿದೆ. ಡಿಸೆಂಬರ್ ಪ್ರತಿ, ಚೆನೈ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಘಟನೆಗಳ ಒಂದು ಎಂದು ವಿವರಿಸಲಾಗಿದೆ ಐದು ವಾರದ ಸಂಗೀತ ಸೀಸನ್, ಹೊಂದಿದೆ. ಸಂಗೀತ ಸೀಸನ್ ನಗರದಲ್ಲಿ ಮತ್ತು ಸುತ್ತಮುತ್ತಲಿನ ಕಲಾವಿದರು ನೂರಾರು ಸಾಂಪ್ರದಾಯಿಕ ಕರ್ನಾಟಕ ಸಂಗೀತದ ಪ್ರದರ್ಶನಗಳನ್ನು (kutcheries) ಒಳಗೊಳ್ಳುತ್ತದೆ.
ಚೆನೈ ಸಹ ತಮಿಳುನಾಡಿನ ಅಧಿಕೃತ ನೃತ್ಯ ಇದು ಶಾಸ್ತ್ರೀಯ ಭಾರತೀಯ ನೃತ್ಯ, ಭರತನಾಟ್ಯ, ಹೆಸರುವಾಸಿಯಾಗಿದೆ. ಭರತನಾಟ್ಯ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ ನಗರದ ದಕ್ಷಿಣದಲ್ಲಿ ಸಮುದ್ರತೀರದಲ್ಲಿ ಇದೆ ಕಲಾಕ್ಷೇತ್ರ (ಕಲೆಗಳ ಸ್ಥಳ ಸಂಸ್ಕೃತ), ಆಗಿದೆ.
ಚಿತ್ರ: Bharatanatyam1.jpg
ಸಾಂಪ್ರದಾಯಿಕ ಭರತನಾಟ್ಯ ಪ್ರದರ್ಶನ
ಚೆನೈ ತಮಿಳು ದೊಡ್ಡ ಸಂಖ್ಯೆಯ ನಿರ್ವಹಿಸುತ್ತದೆ ಪಾತ್ರದಲ್ಲಿ, ಒಂದು ರೋಮಾಂಚಕ ನಾಟಕ ದೃಶ್ಯ ಹೊಂದಿದೆ. ಸಾಮಾನ್ಯವಾಗಿ, ತಮಿಳು ನಾಟಕ ಕೋಡಂಗಿ ಹಾಸ್ಯ ಮತ್ತು ಗಂಭೀರ ನಾಟಕಗಳನ್ನು ಮತ್ತು ಐತಿಹಾಸಿಕ ನಾಟಕಗಳು ಸೇರಿದಂತೆ ಅಲ್ಲದ ಸಭ ಆಧಾರಿತ ನಾಟಕ ಬೆಂಬಲ ರಾಜಕೀಯ ಸಮಸ್ಯೆಗಳು ಅಥವಾ ಶೈಲಿಗಳನ್ನು ಅಣಕು ಅವು ಸಭ ಆಧಾರಿತ ನಾಟಕ ವಿಂಗಡಿಸಲಾಗಿದೆ. ಇಂಗ್ಲೀಷ್ ರಂಗಭೂಮಿ ಕೂಡ ಜನಪ್ರಿಯವಾಗಿದೆ. ಶಾಲೆ ಮತ್ತು ಕಾಲೇಜು ಸಾಂಸ್ಕೃತಿಕ ಉತ್ಸವಗಳು (ಸ್ಥಳೀಯವಾಗಿ ಕರೆಯಲ್ಪಡುವ culfests) ಕಲೆ ಮತ್ತು ಸಂಸ್ಕೃತಿಯಲ್ಲಿ ಆಸೆಗಳನ್ನು ನಗರದ ಯುವಕರ ವೇದಿಕೆಗಳು ಒದಗಿಸುವ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಹ ಪ್ರಸ್ತುತ ಪಶ್ಚಿಮ ಮತ್ತು ಇತರ ಶೈಲಿಗಳಲ್ಲಿ ತಂಡಗಳಲ್ಲಿ ಸ್ಥಾಪಿತ ಮತ್ತು ಬೆಳೆಯುತ್ತಿರುವ ಸಂಸ್ಕೃತಿ.
ಚೆನೈ ಅತ್ಯಂತ ಸ್ಟುಡಿಯೋಗಳು ಇವೆ ಅಲ್ಲಿ ಕೋಡಂಬಾಕ್ಕಂ ಪ್ರದೇಶದಲ್ಲಿ ನಂತರ ಕಾಲಿವುಡ್ ಡಬ್ ದೊಡ್ಡ ತಮಿಳು ಚಲನಚಿತ್ರ ಉದ್ಯಮ, ಮೂಲ ಹೊಂದಿದೆ. ಉದ್ಯಮ ಸುಮಾರು 300 ತಮಿಳು ಸಿನೆಮಾ ಒಂದು ವರ್ಷದ ಮಾಡುತ್ತದೆ, ಮತ್ತು ಅದರ ಚಿತ್ರ ನಗರದಲ್ಲಿ ಸಂಗೀತ ಕ್ಷೇತ್ರದಲ್ಲಿ ಪ್ರಾಬಲ್ಯ ಧ್ವನಿಮುದ್ರಿಕೆಗಳು.
ಚೆನೈ ಉತ್ಸವಗಳು ಅನೇಕ ಆಚರಿಸುತ್ತದೆ. ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ ಪೊಂಗಲ್, ಪ್ರಮುಖ ಉತ್ಸವ ಮತ್ತು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ತಮಿಳು ಹೊಸ ವರ್ಷದ ದಿನ ತಮಿಳು ಕ್ಯಾಲೆಂಡರ್ ಆರಂಭದಲ್ಲಿ ಸಾಮಾನ್ಯವಾಗಿ ಏಪ್ರಿಲ್ 14 ರಂದು ಬರುತ್ತದೆ ಮತ್ತು ವ್ಯಾಪಕವಾಗಿ ಆಚರಿಸಲಾಗುತ್ತದೆ ಸೂಚಿಸುತ್ತದೆ. ಕಾಸ್ಮೊಪೊಲಿಟನ್ ನಗರ, ದೀಪಾವಳಿ, ಈದ್ ಮತ್ತು ಕ್ರಿಸ್ಮಸ್ ನಂತಹ ಎಲ್ಲಾ ಪ್ರಮುಖ ಧಾರ್ಮಿಕ ಹಬ್ಬಗಳು ಇಲ್ಲಿ ಆಚರಿಸಲಾಗುತ್ತದೆ.
ಚೆನೈ ಸಾಮಾನ್ಯವಾಗಿ ಅಕ್ಕಿ ಆಧಾರಿತ ಆವಿಯಲ್ಲಿ ಬಿಸಿ ಫಿಲ್ಟರ್ ಕಾಫಿ ಬಡಿಸಲಾಗುತ್ತದೆ ಪೊಂಗಲ್, ದೋಸೆ, ಇಡ್ಲಿ ಅಥವಾ ವಡಾ ರೀತಿಯ ಭಕ್ಷ್ಯಗಳು, ಚೆನೈ ಸೇವಿಸಲ್ಪಡುವ ಒಂದು ಅತ್ಯಂತ ಜನಪ್ರಿಯ ಪಾನೀಯ ಸೇರಿದಂತೆ ಬೆಳಕಿನ ಊಟ ಅಥವಾ TIFFIN ನೀಡುವ ಅಸಂಖ್ಯಾತ ರೆಸ್ಟಾರಂಟ್ ಪ್ರಸಿದ್ಧವಾಗಿದೆ. ಈ ಅನನ್ಯ ಪಾಕಪದ್ಧತಿ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಅನೇಕ ಒಂದು ಮದ್ರಾಸ್ ಕೆಫೆ ಮರುರೂಪಗೊಳ್ಳುತ್ತದೆ.
ಇವನ್ನೂ ನೋಡಿ: ಚೆನೈ ಪ್ರವಾಸೋದ್ಯಮ ಮತ್ತು ಚೆನೈ ತಿನಿಸು
[ಬದಲಾಯಿಸಿ] ಸಾರಿಗೆ ಸಂಪರ್ಕ (ಸಾರಿಗೆ)

ಮುಖ್ಯ ಲೇಖನ: ಚೆನೈ ಸಾರಿಗೆ

ಚೆನೈ ಮಹಾನಗರ ಪ್ರದೇಶದಲ್ಲಿ ರಸ್ತೆ ಮತ್ತು ರೈಲು ಜಾಲದ ನಕ್ಷೆ
ಜನಪ್ರಿಯವಾಗಿ ದಕ್ಷಿಣ ಭಾರತಕ್ಕೆ ಗೇಟ್ವೇ ಎಂದು ಕರೆಯಲಾಗುತ್ತದೆ, ಚೆನೈ ಮತ್ತು ಅಂತರರಾಷ್ಟ್ರೀಯವಾಗಿ ಮತ್ತು ಭಾರತದ ಇತರ ಭಾಗಗಳೊಂದಿಗೆ ಜೋಡಿಸುತ್ತವೆ. ಐದು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಪಸರಿಸುವ ಕೋಲ್ಕತಾ (ಕಲ್ಕತ್ತಾ), ಬೆಂಗಳೂರು, ತ್ರಿಚಿ, ತಿರುವಳ್ಳೂರು, ಮತ್ತು ಪಾಂಡಿಚೇರಿ ಕಡೆಗೆ ಹೊರಕ್ಕೆ. ಚೆನೈ ಎಲ್ಲಾ ಅಂತರ ಬಸ್ಸುಗಳ ಟರ್ಮಿನಸ್ ಸೇವೆಸಲ್ಲಿಸುತ್ತದೆ ಚೆನೈ Mofussil ಬಸ್ ಟರ್ಮಿನಸ್ (CMBT), ದಕ್ಷಿಣ ಏಷ್ಯಾದಲ್ಲಿ ದೊಡ್ಡ ಬಸ್ ನಿಲ್ದಾಣ. ಏಳು ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳು ಅಂತರ ನಗರ ಮತ್ತು ಅಂತರ ರಾಜ್ಯ ಬಸ್ ಸೇವೆಗಳನ್ನು ನಿರ್ವಹಿಸುತ್ತವೆ. ಅನೇಕ ಖಾಸಗಿ ಅಂತರ ನಗರ ಹಾಗೂ ಚೆನೈ ನಿಂದ ಕಾರ್ಯನಿರ್ವಹಿಸುವ ಅಂತರ ರಾಜ್ಯ ಬಸ್ ಕಂಪನಿಗಳು ಇವೆ.
ಚೆನೈ ಇಂಟರ್ನ್ಯಾಷನಲ್ ಏರ್ಪೋರ್ಟ್ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಎರಡೂ ನಗರದ ವಿಮಾನ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದ ಮೂರನೇ ಅವಿಶ್ರಾಂತ ಮತ್ತು ದಕ್ಷಿಣ ಭಾರತದ ಪ್ರಮುಖ ಅಂತಾರಾಷ್ಟ್ರೀಯ ಹೆಬ್ಬಾಗಿಲಾಗಿದೆ. ನಗರದ ಸುಮಾರು ಮೂವತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೌಕೆಗಳ ಮೂಲಕ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಪ್ರಮುಖ ಕೇಂದ್ರಗಳಲ್ಲಿ ಸಂಪರ್ಕ ಇದೆ. ವಿಮಾನನಿಲ್ದಾಣವು ದೇಶದಲ್ಲಿ ಎರಡನೇ ಜನನಿಬಿಡ ಸರಕು ಟರ್ಮಿನಸ್.
ನಗರದ ಎರಡು ಪ್ರಮುಖ ಅವುಗಳೆಂದರೆ ಪೋರ್ಟುಗಳನ್ನು ದೊಡ್ಡ ಕೃತಕ ಬಂದರುಗಳು ಮತ್ತು ಎನ್ನೋರ್ ಪೋರ್ಟ್ ಒಂದಾಗಿದೆ ಚೆನೈ ಪೋರ್ಟ್ ಸೇವೆಯನ್ನು ಇದೆ. ಚೆನೈ ಪೋರ್ಟ್ ಸಾಮಾನ್ಯ ಕೈಗಾರಿಕಾ ಸರಕು, ಇತ್ಯಾದಿ ಎನ್ನೋರ್ ಪೋರ್ಟ್ ಕಲ್ಲಿದ್ದಲು, ಅದಿರು ಮತ್ತು ಇತರ ದೊಡ್ಡ ಪ್ರಮಾಣದ ಉತ್ಪನ್ನಗಳ ಸರಕನ್ನು ನಿರ್ವಹಿಸುತ್ತದೆ ವಾಹನಗಳು ನಿಭಾಯಿಸಲು ಭಾರತದ ಎರಡನೇ ಅತ್ಯಂತ ಅವಿಶ್ರಾಂತ ಧಾರಕ ಕೇಂದ್ರವಾಗಿದೆ. Royapuram ಒಂದು ಸಣ್ಣ ಬಂದರು ಸ್ಥಳೀಯ ಮೀನುಗಾರಿಕೆ ದೋಣಿಗಳು ಮತ್ತು trawlers ಬಳಸಲ್ಪಡುತ್ತದೆ.

ಒಳಗೆ ಸ್ಥಳಗಳಿಗೆ ರೈಲುಗಳು ಮುಂಬಯಿ, ಬೆಂಗಳೂರು, ದೆಹಲಿ, ಹೈದರಾಬಾದ್, ಕೊಯಿಮತ್ತೂರು ಮತ್ತು ಪಟ್ಟಣಗಳು ​​ಭಾರತದಲ್ಲಿ, ಮತ್ತು ಚೆನೈ ಎಗ್ಮೋರ್ ಎಲ್ಲಾ ಪ್ರಮುಖ ನಗರಗಳಿಗೆ ರೈಲುಗಳು ನಗರದ ಅತಿದೊಡ್ಡ ರೈಲ್ವೆ ನಿಲ್ದಾಣ ಎರಡು ಪ್ರಮುಖ ರೈಲ್ವೆ ನಿಲ್ದಾಣಗಳಿವೆ, ಚೆನೈ ಸೆಂಟ್ರಲ್ ಸ್ಟೇಷನ್, ಇವೆ ತಮಿಳುನಾಡು.
ಬಸ್ ಮತ್ತು ರೈಲುಗಳು ಸಾರ್ವಜನಿಕ ಸಾರಿಗೆ ಜನಪ್ರಿಯ ರೂಪ. ಚೆನೈ ಸಬ್ ಅರ್ಬನ್ ರೈಲ್ವೇ ನೆಟ್ವರ್ಕ್ ಅವುಗಳೆಂದರೆ ನಾಲ್ಕು ರೈಲ್ವೆ ವಲಯಗಳು, ಚೆನೈ ಸೆಂಟ್ರಲ್ ಅರಕ್ಕೋಣಮ್, ಚೆನೈ ಸೆಂಟ್ರಲ್ ಪೇಟ, ಮತ್ತು ಚೆನೈ ಬೀಚ್-Chengalpattu ಒಳಗೊಂಡಿದೆ. ನಾಲ್ಕನೇ ಸೆಕ್ಟರ್ ಉಳಿದ ರೈಲು ಜಾಲದ ಮೂಲಕ ಒಂದಕ್ಕೊಂದನ್ನು ಸೇರಿಸಿದಾಗ ಅದು ಎತ್ತರದ MRTS ಉಪನಗರದ ರೈಲು ವ್ಯವಸ್ಥೆಯನ್ನು ಹೊಂದಿದೆ. ರೈಲು ಜಾಲ ಬ್ರಾಡ್ಗೇಜ್ ಹೊಂದಿದೆ. ಸಿಟಿ ಒಂದು ಭೂಗತ ಮೆಟ್ರೋ ನಿರ್ಮಿಸಲು ಯೋಜನೆಯನ್ನು ಹೊಂದಿದೆ.
ಮಹಾನಗರ ಸಾರಿಗೆ ಸಂಸ್ಥೆ (ಎಂಟಿಸಿ) ಒಂದು ವ್ಯಾಪಕವಾದ ನಗರ ಬಸ್ ವಿಧಾನವನ್ನು ನಡೆಸುತ್ತದೆ. ಬಸ್ ಸೇವೆ 375 ಮಾರ್ಗಗಳಲ್ಲಿ 2.773 ಬಸ್ಗಳನ್ನು ಒಳಗೊಂಡಿದೆ, ಮತ್ತು ದೈನಂದಿನ ಅಂದಾಜು 4.2 ದಶಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ. ಎಂಟಿಸಿ ಸೇವೆಗಳ ಹೊರತಾಗಿ, ಮಿನಿ ಬಸ್ ಚೆನೈ ಮಹಾನಗರದ ಉಪನಗರಗಳಲ್ಲಿ ಕಂಡುಬರುತ್ತವೆ. ಬಸ್ ಸೇವೆಗಳು ರೀತಿಯಲ್ಲಿ ರನ್ ಮತ್ತು ಜನಪ್ರಿಯವಾಗಿ ಮಾಕ್ಸಿ ಕ್ಯಾಬ್ಸ್ ನಗರದಲ್ಲಿ ಹಲವಾರು ಮಾರ್ಗಗಳಲ್ಲಿ ಸಂಚರಿಸುತ್ತವೆ ಕೂಡ ಕರೆಯುತ್ತಾರೆ ಇದು ವ್ಯಾನ್ಸ್. ನೇಮಕ ಸಾರಿಗೆ ಸೌಲಭ್ಯಗಳನ್ನು ಅದುಮು ಕರೆ ಟ್ಯಾಕ್ಸಿಗಳು, ಸ್ಥಿರ ದರ ಪ್ರವಾಸಿ ಟ್ಯಾಕ್ಸಿಗಳು ಹಾಗು ಆಟೋ ರಿಕ್ಷಾಗಳು ಸೇರಿವೆ.
[ಬದಲಾಯಿಸಿ] ಮಾಧ್ಯಮ (ಮಾಧ್ಯಮ)

ಚೆನೈ ಎಂಟು ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಬಗ್ಗೆ ಪ್ರಕಟಿಸಲು ಆರು ಪ್ರಮುಖ ಪತ್ರಿಕೆಗಳ ಗುಂಪುಗಳನ್ನು ಹೊಂದಿದೆ. ಪ್ರಮುಖ ಇಂಗ್ಲೀಷ್ ದಿನಪತ್ರಿಕೆಗಳು ಹಿಂದೂ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಡೆಕ್ಕನ್ ಕ್ರಾನಿಕಲ್ ಮತ್ತು ಸಂಜೆ ದೈನಿಕಗಳು, ಟ್ರಿನಿಟಿ ಮಿರರ್ ಮತ್ತು ನ್ಯೂಸ್ ಇಂದು. ನಗರದಿಂದ ಪ್ರಕಟವಾದ ಪ್ರಮುಖ ವ್ಯಾಪಾರ ದಿನಪತ್ರಿಕೆಗಳು ಇಕನಾಮಿಕ್ ಟೈಮ್ಸ್, ಹಿಂದೂ ಬಿಸಿನೆಸ್ ಲೈನ್, ಬ್ಯುಸಿನೆಸ್ ಸ್ಟ್ಯಾಂಡರ್ಡ್, ಮತ್ತು ಫೈನಾನ್ಷಿಯಲ್ ಎಕ್ಸ್ಪ್ರೆಸ್ ಇವೆ. ಪ್ರಮುಖ ತಮಿಳು ದಿನಪತ್ರಿಕೆಗಳು ದಿನತಂತಿ, ದಿನಕರನ್, ದಿನಮಣಿ, ದಿನಮಲಾರ್, ತಮಿಳು ಮುರಸು ಮಕ್ಕಳ್ ಕುರಾಲ್ ಮತ್ತು ಮಲೈ ಮಲಾರ್ ಸೇರಿವೆ. ತೆಲುಗು ದೈನಂದಿನ ಈನಾಡು ಮತ್ತು ಹಿಂದಿ ದಿನಪತ್ರಿಕೆ ರಾಜಸ್ಥಾನ ಪತ್ರಿಕಾ ಸಹ ಪ್ರಕಟವಾಗುತ್ತವೆ. ಪ್ರಮುಖ ಪತ್ರಿಕೆಗಳು ಜೊತೆಗೆ, ಕೆಲವು ಪ್ರದೇಶಗಳಲ್ಲಿ ಗೆ ಅನುಕೂಲವಾಗುವ ಅದ್ಯಾರ್ ಟೈಮ್ಸ್ ಸ್ಥಳೀಯ ನೆರೆಹೊರೆಯ ಪತ್ರಿಕೆಗಳು ಅನೇಕ ಇವೆ. ಚೆನೈ ಪ್ರಕಟವಾಗುತ್ತವೆ ನಿಯತಕಾಲಿಕೆಗಳು ಆನಂದ Vikatan, ಕುಮುದಂನಲ್ಲಿ, ಕಲ್ಕಿ, Kungumam, ಫ್ರಂಟ್ಲೈನ್ ಮತ್ತು ಸ್ಪೋರ್ಟ್ ಸೇರಿವೆ. ದೂರದರ್ಶನವು ಎರಡು ಪ್ರಾದೇಶಿಕ ಚಾನಲ್ ಮತ್ತು ಅದರ ಚೆನೈ ಕೇಂದ್ರದಿಂದ ಎರಡು ಉಪಗ್ರಹ ದೂರದರ್ಶನ ವಾಹಿನಿಗಳು ಸಾಗುತ್ತದೆ. ಸನ್ ಟಿವಿ, ರಾಜ್ TV, ಸ್ಟಾರ್ ವಿಜಯ್ ನಂತಹ ಖಾಸಗಿ ತಮಿಳು ಉಪಗ್ರಹ ದೂರದರ್ಶನ ಜಾಲಗಳು, ಜಯಾ ಟಿವಿ ಚೆನೈ ಹೊರಗೆ ಪ್ರಸಾರ. ನಗರದ ಅಖಿಲ ಭಾರತ ರೇಡಿಯೋ ಮತ್ತು ಖಾಸಗಿ ಪ್ರಸಾರಕರು ನಿರ್ವಹಿಸುವ ಎರಡು AM ಮತ್ತು ಐದು ವಾಣಿಜ್ಯ FM ರೇಡಿಯೋ ಕೇಂದ್ರಗಳನ್ನು ಹೊಂದಿದೆ. FM ರೇಡಿಯೋ ಕೇಂದ್ರಗಳು Suryan ಎಫ್ಎಂ, ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಮತ್ತು FM ರೈನ್ಬೋ ಇವೆ.
[ಬದಲಾಯಿಸಿ] ಉಪಯುಕ್ತ ಸೇವೆಗಳು (ಯುಟಿಲಿಟಿ ಸರ್ವೀಸಸ್)

ಚೆನೈ ಮತ್ತು ಉಪನಗರಗಳ ವಿವಿಧ ಪುರಸಭೆಗಳ ಕಾರ್ಪೊರೇಷನ್ ನಾಗರಿಕ ಸೇವೆಗಳು ನೋಡಿಕೊಳ್ಳಲು. ಕಸ ನಿರ್ವಹಣೆ ಓನಿಕ್ಸ್, ಒಂದು ಖಾಸಗಿ ಕಂಪನಿಯ ನಿರ್ವಹಿಸುತ್ತವೆ. ನೀರು ಸರಬರಾಜು ಮತ್ತು ಒಳಚರಂಡಿ ಚಿಕಿತ್ಸೆ ಜನಪ್ರಿಯವಾಗಿ ಮೆಟ್ರೋ ವಾಟರ್ ಎಂದು ಮೆಟ್ರೋಪಾಲಿಟನ್ ವಾಟರ್ ಸಪ್ಲೈ ಮತ್ತು ಕೊಳಚೆನೀರು ಬೋರ್ಡ್ ನಿರ್ವಹಿಸುತ್ತವೆ. ವಿದ್ಯುತ್ ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪೂರೈಕೆ. ಬಿಎಸ್ಎನ್ಎಲ್, ಟಾಟಾ ಇಂಡಿಕಾಮ್, ರಿಲಯನ್ಸ್ ಇನ್ಫೋಕಾಂ ಮತ್ತು ಏರ್ಟೆಲ್: ನಗರದ ದೂರವಾಣಿ ಸೇವೆಯನ್ನು ನಾಲ್ಕು ಸ್ಥಿರ ದೂರವಾಣಿ ಕಂಪನಿಗಳು ಸೇವೆ ಒದಗಿಸುತ್ತಿವೆ. ಬಿಎಸ್ಎನ್ಎಲ್, ಹಚ್, ಏರ್ಟೆಲ್ ಮತ್ತು ಏರ್ಸೆಲ್ ಸಿಡಿಎಂಎ ಸೇವೆಗಳನ್ನು ಇದು GSM ಸೇವೆಗಳನ್ನು ಮತ್ತು ಟಾಟಾ ಇಂಡಿಕಾಮ್ ಮತ್ತು ರಿಲಯನ್ಸ್ ಇನ್ಫೋಕಾಂ ನೀಡುವ: ಆರು ಮೊಬೈಲ್ ಫೋನ್ ಕಂಪನಿಗಳು. ಫೋನ್ ಕಂಪನಿಗಳು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತವೆ. SCV ಮತ್ತು Hathway ಪ್ರಮುಖ ಕೇಬಲ್ ಟಿವಿ ಸೇವೆ ಹೋಮ್ಗೆ providers.Direct ಮಾಡಲಾಗುತ್ತದೆ (DTH) ಡಿಡಿ ಡೈರೆಕ್ಟ್ ಪ್ಲಸ್ ಮತ್ತು ಡಿಶ್ ಟಿವಿ ಮೂಲಕ ಲಭ್ಯವಿದೆ. ಚೆನೈ ಕೇಬಲ್ ದೂರದರ್ಶನ ಷರತ್ತು ಪ್ರವೇಶ ಒದಗಿಸಲಾಗುತ್ತಿದೆ ಎಂದು ಭಾರತದ ಏಕೈಕ ನಗರವಾಗಿದೆ.
[ಬದಲಾಯಿಸಿ] ಶಿಕ್ಷಣ

ಚೆನೈ ಶಾಲೆಗಳಲ್ಲಿ ಎರಡೂ ತಮಿಳುನಾಡು ಸರ್ಕಾರ ಸಾರ್ವಜನಿಕವಾಗಿ ರನ್, ಅಥವಾ ಕೆಲವು ಸರ್ಕಾರದ ಹಣಕಾಸಿನ ನೆರವಿನೊಂದಿಗೆ, ಖಾಸಗಿಯಾಗಿ ನಡೆಸುತ್ತದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ಇಂಗ್ಲೀಷ್ ಆಗಿದೆ. ಸರಕಾರೀ ಶಾಲೆಗಳಲ್ಲಿ ಇಂಗ್ಲೀಷ್ ಮತ್ತು ತಮಿಳು ಮಾಧ್ಯಮ ಶಿಕ್ಷಣ, ಇಂಗ್ಲೀಷ್ ಬಹುತೇಕ ಆದ್ಯತೆ ಹೀಗೆ ಎರಡೂ ನೀಡುತ್ತವೆ. ಖಾಸಗಿ ಶಾಲೆಗಳು ಸಾಮಾನ್ಯವಾಗಿ ರಾಷ್ಟ್ರೀಯ CBSE ಮಂಡಳಿಗೆ ಅಥವಾ ತಮಿಳುನಾಡು ರಾಜ್ಯ ಬೋರ್ಡ್ ಗುರುತಿಸಲ್ಪಟ್ಟಿವೆ. ಕೆಲವು ಶಾಲೆಗಳು ICSE ಮಂಡಳಿ ಮತ್ತು ಮಾಂಟೆಸ್ಸರಿ ವ್ಯವಸ್ಥೆಗೆ ಸೇರಿವೆ. ಕೆಲವು ಶಾಲೆಗಳು ಇಂಟರ್ನ್ಯಾಷನಲ್ ಬ್ಯಕೆಲೌರಿಯೇಟ್ ಮತ್ತು ಅಮೆರಿಕನ್ ವ್ಯವಸ್ಥೆಗಳು ನೀಡುತ್ತವೆ. ಶಾಲಾ ಮೂರು ವಯಸ್ಸಿನಲ್ಲಿ ಆರಂಭವಾಗುತ್ತದೆ. ಶಿಶುವಿಹಾರ ಮತ್ತು ಶಾಲಾ ಹನ್ನೆರಡು ವರ್ಷಗಳ ಎರಡು ವರ್ಷಗಳ ನಂತರ, ವಿದ್ಯಾರ್ಥಿಗಳು ಅಲ್ಲದ ವೃತ್ತಿಪರ ಅಥವಾ ವೃತ್ತಿಪರ ವಿಶ್ವವಿದ್ಯಾಲಯ ಶಿಕ್ಷಣ ತೆಗೆದುಕೊಳ್ಳಬಹುದು.

ಅಣ್ಣಾ ವಿಶ್ವವಿದ್ಯಾಲಯದ ಮುಖ್ಯ ಪ್ರವೇಶದ್ವಾರ.
ನಗರದಲ್ಲಿ ಮೂರು ಕ್ಯಾಂಪಸ್ ಹೊಂದಿರುವ ಮದ್ರಾಸ್ (1857), ದಿ ಯೂನಿವರ್ಸಿಟಿ ಉದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾರ್ಯಕ್ರಮಗಳನ್ನು ಒಂದು ಶ್ರೇಣಿಯನ್ನು ಒದಗಿಸುತ್ತದೆ. ನಗರದ ಕಾಲೇಜುಗಳು ಹೆಚ್ಚಿನ ವೈದ್ಯಕೀಯ, ಕಾನೂನು, ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಶ್ವವಿದ್ಯಾನಿಲಯ ಮತ್ತು ಕೊಡುಗೆ ಕಾರ್ಯಕ್ರಮಗಳು ಗುರುತಿಸಲ್ಪಟ್ಟಿವೆ. ಕೆಲವು ಹಳೆಯ ಸಂಸ್ಥೆಗಳ ಸಂಬಂಧ ಎಲ್ಲಾ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ (1837), ಪ್ರೆಸಿಡೆನ್ಸಿ ಕಾಲೇಜ್ (1840), ಪಚಿಯಪ್ಪ ಕಾಲೇಜಿನಲ್ಲಿ (1842), ಮದ್ರಾಸ್ ವೈದ್ಯಕೀಯ ಕಾಲೇಜ್ (1835), ಸ್ಟಾನ್ಲಿ ಮೆಡಿಕಲ್ ಕಾಲೇಜ್ (1938) ಮತ್ತು ವಿವೇಕಾನಂದ ಕಾಲೇಜು (1948), ಗಳು ಅದರ ರಚನೆಯ ಮೇಲೆ ಮದ್ರಾಸ್ ವಿಶ್ವವಿದ್ಯಾಲಯ ತಮ್ಮನ್ನು. ಇತರೆ ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಮಹಿಳಾ ಕ್ರಿಶ್ಚಿಯನ್ ಕಾಲೇಜು (1915), ಲೊಯೋಲಾ ಕಾಲೇಜ್, ಚೆನೈ (1925), ಫ್ಯಾಷನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (1995), ಪತ್ರಿಕೋದ್ಯಮ ನ ಏಷ್ಯನ್ ಕಾಲೇಜ್ (2000) ಮತ್ತು ಸಮಾಜ ವರ್ಕ್ ಮದ್ರಾಸ್ ಸ್ಕೂಲ್ (1952) ಸೇರಿವೆ.
ಟೆಕ್ನಾಲಜಿ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ (ಐಐಟಿ), ಮದ್ರಾಸ್ (1959), ನಗರದ ದಕ್ಷಿಣದಲ್ಲಿ ಇದೆ ಮತ್ತು ಇದರ ಇಂಜಿನಿಯರಿಂಗ್ ಅಂತಾರಾಷ್ಟ್ರೀಯವಾಗಿ ಖ್ಯಾತಿ ಇದೆ. ಹತ್ತಿರದ ಇದೆ, ಎಂಜಿನಿಯರಿಂಗ್, ಗಿಂಡಿ (1794), ಟೆಕ್ನಾಲಜಿ ಮದ್ರಾಸ್ ಇನ್ಸ್ಟಿಟ್ಯೂಟ್ (1949), ತಂತ್ರಜ್ಞಾನ (1944) ಆಫ್ ಅಲಗಪ್ಪ ಕಾಲೇಜ್ ಕಾಲೇಜ್ ಒಂದು ವಿಲೀನದಿಂದ ರೂಪುಗೊಂಡ ಅಣ್ಣಾ ವಿಶ್ವವಿದ್ಯಾನಿಲಯ (1978), ಪ್ರಮುಖ ಕ್ಯಾಂಪಸ್ ಹೊಂದಿದೆ, ಮತ್ತು ಆರ್ಕಿಟೆಕ್ಚರ್ ಮತ್ತು ಯೋಜನಾ (1957) ಆಫ್ ಸ್ಕೂಲ್. ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ವಾಸ್ತುಶಿಲ್ಪ ಕಾರ್ಯಕ್ರಮಗಳನ್ನು ನೀಡುವ ತಮಿಳುನಾಡಿನ ಬಹುತೇಕ ಎಲ್ಲಾ ಕಾಲೇಜುಗಳು ಅಣ್ಣಾ ವಿಶ್ವವಿದ್ಯಾಲಯ ಗುರುತಿಸಲ್ಪಟ್ಟಿವೆ. ಉಳಿದ ಕಾಲೇಜುಗಳು ಸ್ವಾಯತ್ತ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ.
ಚಿತ್ರ: Iitm.maingate.logo.jpg
ಅದರ ಲೋಗೋ ಮತ್ತು ಅದರ ಗುರಿ ತೋರಿಸುವ ಐಐಟಿ ಮದ್ರಾಸ್ನ ಮುಖ್ಯ ಪ್ರವೇಶದ್ವಾರವು,.
ಡಾ ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜ್, ಚೆನೈ, ತಮಿಳುನಾಡು ಪ್ರಮುಖ ಕಾನೂನು ಕಾಲೇಜು 1891 ರಲ್ಲಿ ಸ್ಥಾಪಿಸಲಾಯಿತು. ಮದ್ರಾಸ್ ವೈದ್ಯಕೀಯ ಕಾಲೇಜ್, 1835 ರಲ್ಲಿ ಸ್ಥಾಪನೆಯಾದ [2], ಭಾರತೀಯ ಉಪಖಂಡದ ವೈದ್ಯಕೀಯ ಶಿಕ್ಷಣವನ್ನು ಒದಗಿಸುವ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಟಾನ್ಲಿ ಮೆಡಿಕಲ್ ಕಾಲೇಜ್, Kilpauk ವೈದ್ಯಕೀಯ ಕಾಲೇಜು ಮತ್ತು ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಗರದ ಇತರೆ ಗಮನೀಯ ವೈದ್ಯಕೀಯ ಕಾಲೇಜುಗಳು. 1903 ರಲ್ಲಿ ಸ್ಥಾಪನೆಯಾದ ಮದ್ರಾಸ್ ಪಶುವೈದ್ಯಕೀಯ ಕಾಲೇಜ್ ಭಾರತದಲ್ಲೇ ಮೊದಲ ಪದ್ಧತಿಯಾಗಿತ್ತು.

[ಬದಲಾಯಿಸಿ] ಕ್ರೀಡೆಗಳು

ಕ್ರಿಕೆಟ್ ಚೆನೈ ಅತ್ಯಂತ ಜನಪ್ರಿಯ ಕ್ರೀಡೆ. MAC ಎಂದು ಜನಪ್ರಿಯವಾಗಿ MA ಚಿದಂಬರಂ ಚೆಪಾಕ್ ಕ್ರೀಡಾಂಗಣ (ಹಿಂದೆ ಮದ್ರಾಸ್ ಕ್ರಿಕೆಟ್ ಕ್ಲಬ್ ಮೈದಾನ ಅಥವಾ ಚೆಪಾಕ್ ಕ್ರೀಡಾಂಗಣ ಎಂದು ಕರೆಯುತ್ತಾರೆ) ಮತ್ತು, 1916 ರಲ್ಲಿ ನಿರ್ಮಿಸಲಾಯಿತು ಭಾರತದಲ್ಲಿ ಹಳೆಯ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಹೆಚ್ಚು 50,000 ಆಸನಗಳು ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ನೆಲೆಯಾಗಿದೆ. ಐಐಟಿ ಮದ್ರಾಸ್ ಆವರಣದಲ್ಲಿ ಕೆಂಪ್ಲಾಸ್ಟ್ ಕ್ರಿಕೆಟ್ ಗ್ರೌಂಡ್ ಮತ್ತೊಂದು ಪ್ರಮುಖ ಕ್ರಿಕೆಟ್ ಸ್ಥಳವಾಗಿದೆ.
ಚಿತ್ರ: Chennai.ATP.jpg
ಎಟಿಪಿ ಚೆನೈ ಓಪನ್ - Nungambakkam ರಲ್ಲಿ SDAT ಟೆನಿಸ್ ಕ್ರೀಡಾಂಗಣ ಸಂಕೀರ್ಣದಲ್ಲಿ ಸೆಂಟರ್ ಕೋರ್ಟ್
ಟೆನಿಸ್ ಚೆನೈ ಇನ್ನೊಂದು ಜನಪ್ರಿಯ ಆಟ. ಮತ್ತು 6,000 ಪ್ರೇಕ್ಷಕರ ಬಗ್ಗೆ Nungambakkam ಸ್ಥಾನಗಳಲ್ಲಿ SDAT ಟೆನಿಸ್ ಕ್ರೀಡಾಂಗಣ ಐದು ಸಂಶ್ಲೇಷಿತ ಮೇಲ್ಮೈ ಅಂಕಣಗಳನ್ನು ಹೊಂದಿದೆ. ಸ್ಟೇಡಿಯಂನಲ್ಲಿ ಭಾರತದ ಏಕೈಕ ಎಟಿಪಿ, ಚೆನೈ ಓಪನ್ ಆಯೋಜಿಸುತ್ತದೆ. ಪಂದ್ಯಾವಳಿಯ ಟೆನಿಸ್ ವೃತ್ತಿಪರರ ಸಂಘದ ಮೂಲಕ ತನ್ನ ಎರಡನೇ ವರ್ಷದ ಅತ್ಯುತ್ತಮ ಹೊಸ ಈವೆಂಟ್ ಶೀರ್ಷಿಕೆ ನೀಡಲಾಯಿತು. ಉದಾಹರಣೆಗೆ ವಿಜಯ್ ಅಮೃತ್ರಾಜ್, ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್ ಮತ್ತು ಚೆನೈ ನಿಂದ ಮಹೇಶ್ ಭೂಪತಿ ಆಲಿಕಲ್ಲು ಭಾರತೀಯ ಟೆನಿಸ್ ವೃತ್ತಿಪರರ. ಲಿಯಾಂಡರ್ ಪೇಸ್ ತನ್ನ ಶಾಲಾಶಿಕ್ಷಣವನ್ನು ಮತ್ತು ಚೆನೈ ಬಗ್ಗೆ ತರಬೇತಿ ಪಡೆದ.
ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂ ಹಾಕಿ ಪಂದ್ಯಗಳನ್ನು ಸ್ಥಾನಗಳನ್ನು 4,000 ನಿಶ್ಚಿತ ಸ್ಥಳವಾಗಿದೆ. ಚೆನೈ Veerans, ಒಂದು ಪ್ರೀಮಿಯರ್ ಹಾಕಿ ಲೀಗ್ ತಂಡ ಚೆನೈ ನೆಲೆಗೊಂಡಿದೆ. ಕ್ರೀಡಾಂಗಣದಲ್ಲಿ 2005 ರಲ್ಲಿ ಇತ್ತೀಚೆಗೆ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ (ವಿಶ್ವದ 6 ಅತ್ಯುತ್ತಮ ತಂಡಗಳನ್ನೊಳಗೊಂಡ) ಆಯೋಜಿಸಿದೆ.
ಜವಾಹರಲಾಲ್ ನೆಹರು ಸ್ಟೇಡಿಯಂ ಸ್ಥಾನಗಳನ್ನು 40,000 ಮತ್ತು ಅತಿಥೇಯಗಳ ಫುಟ್ಬಾಲ್ (ಸಾಕರ್), ಮತ್ತು ಅಥ್ಲೆಟಿಕ್ ಸ್ಪರ್ಧೆಗಳು. ಸಂಕೀರ್ಣ ಕೂಡ ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಟೇಬಲ್ ಟೆನಿಸ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತದೆ ಇದು 8,000 ಒಂದು ಆಸನ ಸಾಮರ್ಥ್ಯವನ್ನು ಹೊಂದಿರುವ ಬಹು ಉದ್ದೇಶದ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯಿದೆ. ವೇಲಾಚೇರಿ ಅಕ್ವಾಟಿಕ್ ಕಾಂಪ್ಲೆಕ್ಸ್ ಸ್ಥಾನಗಳನ್ನು 4,000 ಮತ್ತು ಜಲ ಕ್ರೀಡೆಗಳು ವಿವಿಧ ರೀತಿಯ ಆಯೋಜಿಸುತ್ತದೆ. ಚೆನೈ ದಕ್ಷಿಣ ಏಷ್ಯನ್ ಫೆಡರೇಷನ್ (ಎಸ್ಎಎಫ್) ಗೇಮ್ಸ್ 1995 ಆಯೋಜಿಸಿದೆ.
ಕುದುರೆ ರೇಸಿಂಗ್ ಗಿಂಡಿ ರೇಸ್ ಕೋರ್ಸ್ 1777 ರಲ್ಲಿ ಸ್ಥಾಪಿಸಲಾಯಿತು. ಮೋಟಾರ್ ರೇಸಿಂಗ್ ಘಟನೆಗಳು ಕಾರುಗಳು ಶ್ರೀಪೆರುಂಬುದೂರ್ (Thirupperumbudur) ಟ್ರ್ಯಾಕ್, ಮತ್ತು ಸೈಕಲ್ಗಳಲ್ಲಿ Sholavaram ಟ್ರ್ಯಾಕ್ ಆಯೋಜಿಸಲಾಗುತ್ತದೆ. ಮದ್ರಾಸ್ ಬೋಟ್ ಕ್ಲಬ್ ಬೇಸಿನ್ ಬ್ರಿಡ್ಜ್ ಮತ್ತು ಅತಿಥೇಯಗಳ ರೊವಿಂಗ್ ಓಟಗಳು ನಲ್ಲಿ 1867 ಸ್ಥಾಪಿಸಲಾಯಿತು. 19 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಇವೆರಡೂ ಕಾಸ್ಮೊಪೊಲಿಟನ್ ಕ್ಲಬ್, ಮತ್ತು ಆಟದ ಮೈದಾನ ಕ್ಲಬ್ ಗಾಲ್ಫ್,: ನಗರದ ಎರಡು 18 ಹೋಲ್ ಗಾಲ್ಫ್ ಕೋರ್ಸ್ಗಳನ್ನು ಹೊಂದಿದ್ದು.
ಚೆನೈ ಮೊದಲ ಕಾಮನ್ವೆಲ್ತ್ ಜೂನಿಯರ್ ಫೆನ್ಸಿಂಗ್ ಚಾಂಪಿಯನ್ಶಿಪ್ಗಳಿಗೆ 2006 ರಲ್ಲಿ ಸ್ಥಳವಾಗಿತ್ತು.
[ಬದಲಾಯಿಸಿ] ಉಲ್ಲೇಖಗಳು




#Article 28: ಕನ್ನಡ ಸಾಹಿತ್ಯ ಸಮ್ಮೇಳನ (101 words)


ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ  ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.

೧೯೧೪ರ  ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ  ಕನ್ನಡ ಭಾಷೆಯ ಅಭಿವೃದ್ಧಿಗೆ  ಪೂರಕವಾದ ಪರಿಷತ್ತನ್ನು  ಸ್ಥಾಪಿಸುವ  ವಿಚಾರದಲ್ಲಿ   ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ  ಉಪಸಮಿತಿಯನ್ನು ರಚಿಸಲಾಯಿತು.  ಈ  ಉಪಸಮಿತಿಯು  ಅಂದಿನ  ವಿವಿಧ  ಕನ್ನಡ  ನಾಡುಗಳ  ಪ್ರಾಜ್ಞರೊಡನೆ  ಸಮಾಲೋಚಿಸಿ  ಸಾಹಿತ್ಯ  ಸಮ್ಮೇಳನಗಳನ್ನು  ಆಯೋಜಿಸಿ,  ಆ ಸಮ್ಮೇಳನಗಳಲ್ಲಿ  ಕೆಲವು ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ  ಮಾರ್ಗದರ್ಶನ  ಸೂತ್ರಗಳನ್ನು  ರೂಪಿಸಿತು.




#Article 29: ದಾವಣಗೆರೆ (485 words)


ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ  ಜನಪ್ರಿಯವಾಗಿದ್ದ ಹೆಸರು. ಈಗ ಈ ಊರು ಶರವೇಗದಿಂದ ಬೆಳೆಯುತ್ತಿದೆ.
ದಾವಣಗೆರೆಯ ಮೊದಲಿನ ಹೆಸರು ದೇವನಗರಿ ಅದು ಕಾಲ ಕ್ರಮೇಣ ದಾವಣಗೆರೆ ಆಯಿತು.

ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಅಕ್ಕಿ/ಭತ್ತ, ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ.

ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ , ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ.

ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಚಿಕ್ಕಮಗಳೂರುಮತ್ತು  ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. ಬೆಂಗಳೂರಿನಿಂದ ಮುಂಬೈಗೆ ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು. ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ 14° 28’ ರೇಖಾಂಶ ಮತ್ತು  75° 59’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ 602.5 ಮೀ ಎತ್ತರದಲ್ಲಿದೆ.

ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ ೧೫, ೧೯೯೭ರಂದು ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. ೨೦೧೯ರಲ್ಲಿ ಹರಪನಹಳ್ಳಿ ತಾಲೂಕನ್ನು, ತಾಲೂಕಿನ ಜನರ ಆಶಯದ ಮೇರೆಗೆ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು.

 
ದಾವಣಗೆರೆ ಮಧ್ಯ ಕರ್ನಾಟಕದ ನಗರವಾಗಿರುವುದರಿಂದ ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರ ವೈಶಿಷ್ಟ್ಯಗಳ ಅನನ್ಯ ಸಂಗಮವಾಗಿದೆ. ದಾವಣಗೆರೆಯಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ,ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ,ಕುರಶನಿ(ಗುರೆಳ್ಳು, ಹುಚ್ಚೆಳ್ಲು)ಪುಡಿ ಹೊಂದಿರುವ ಆಹಾರ ತಿನಿಸುಗಳೂ ದೊರೆಯುತ್ತವೆ.ಮತ್ತು ಬಳಸಲಾಗುತ್ತದೆ  ಮತ್ತು ದಕ್ಷಿಣ ಕರ್ನಾಟಕದ(ಮೈಸೂರು ಪ್ರಾಂತ್ಯದ) ರಾಗಿ ಮುದ್ದೆಗಳೂ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ರೊಟ್ಟಿಯೊಂದಿಗೆ ಅನ್ನವೂ ಬಳಸಲ್ಪಡುತ್ತದೆ. ದೋಸೆ(ಹಲವು ಪ್ರಕಾರಗಳನ್ನು ಕೆಳಗೆ ವರ್ಗೀಕರಿಸಲಾಗಿದೆ) ಒಂದು ವಿಶಿಷ್ಟ ತಿನಿಸಾಗಿದೆ.
ದಾವಣಗೆರೆ ಬೆಣ್ಣೆ ದೋಸೆ ವಿಶ್ವದಲ್ಲೇ ಪ್ರಸಿದ್ಧಿ  ಹೊಂದಿದೆ ಮತ್ತು ಇಲ್ಲಿನ ವಿಶಿಷ್ಟ. ಮಿರ್ಚಿ ಮಂಡಕ್ಕಿ ತವರೂರಾಗಿದೆ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ ಮತ್ತು ಇಲ್ಲಿ ಮಾತ್ರ ದೊರೆಯುತ್ತದೆ...

ದಾವಣಗೆರೆ ಪಟ್ಟಣ ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇದು ಅನೇಕ ಹತ್ತಿ ಗಿರಣಿಗಳು ಮತ್ತು ಬಟ್ಟೆ ವ್ಯಾಪಾರ ಸಂಸ್ಥೆಗಳು ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಶ್ಲಾಘಿಸಿದರು. ಇದು ರಾಜ್ಯ ಕೇಂದ್ರದಲ್ಲಿ ಭೌಗೋಳಿಕ ಸ್ಥಳ ಮತ್ತು ಉತ್ತಮ ರೈಲು, ರಸ್ತೆ ಸಂಪರ್ಕ ವಹಿವಾಟಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. . ದಾವಣಗೆರೆ ಜಿಲ್ಲಾ ಅರ್ಧದಷ್ಟು ಭದ್ರ ಜಲಾಶಯ ನೀರಾವರಿ. ಅಕ್ಕಿ, ಅಡಿಕೆ, ಮೆಕ್ಕೆಜೋಳ ಮತ್ತು ಹತ್ತಿ ಅನೇಕ ಶ್ರೀಮಂತ ನಗದು ಮತ್ತು ಆಹಾರ ಬೆಳೆಗಳನ್ನು. ಇಲ್ಲಿ ವ್ಯಾಪಾರ [8] ಪ್ರಸ್ತುತ ದಾವಣಗೆರೆ ಸುಮಾರು ಪ್ರಮುಖ ಕೃಷಿ ಕೈಗಾರಿಕಾ ಚಟುವಟಿಕೆ ಮತ್ತು ಈ ಪ್ರದೇಶದಲ್ಲಿ ಸುಮಾರು ಸಕ್ಕರೆ ಮಿಲ್ಲುಗಳು ಜೊತೆಗೆ, ಅಕ್ಕಿ ಮತ್ತು ಕಬ್ಬು ಬೆಳೆಸಬಹುದು. ದಾವಣಗೆರೆ ಬಳಿ ದುಗ್ಗಾವತಿ ಗ್ರಾಮದಲ್ಲಿದೆ. ಶುಗರ್ ಮಿಲ್ಸ್ ಅಸ್ತಿತ್ವದಲ್ಲಿವೆ ಮತ್ತು ದಾವಣಗೆರೆಯ ಪ್ರಮುಖ ಉದ್ಯಮವಾಗಿದೆ. ಅಕ್ಕಿ ಗಿರಣಿಗಳು ಅನೇಕ ಬೈಪಾಸ್ ರಸ್ತೆಯ ಬಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಮತ್ತು ಈ ಪಟ್ಟಣದ ಸುತ್ತ ಮಂಡಕ್ಕಿ ಸುತ್ತಿಸಿ ಅಕ್ಕಿ ಮಾಡುವ ಅನೇಕ ಅಕ್ಕಿ ಗಿರಣಿಗಳು ಇವೆ. ದಾವಣಗೆರೆ ಬಟ್ಟೆ ಗಿರಣ ಪ್ರಸಿದ್ಧವಾಗಿದೆ. ಶಂಕರ್ ಟೆಕ್ಸ್ಟೈಲ್ಸ್ ಮಿಲ್ಸ್, ಹತ್ತಿ ವುಲನ್ ಮತ್ತು ಸಿಲ್ಕ್ ಮಿಲ್ಸ್ ಲಿ, ಎಲ್ಲಾ ನಗರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ. ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಹತ್ತಿ ಗಿರಣಿಗಳು: ಆಂಜನೇಯ ಕಾಟನ್ ಮಿಲ್, ಗಣೇಶ್ ಮಿಲ್, ಮತ್ತು ಸಿದ್ದೇಶ್ವರ ಕಾಟನ್ ಮಿಲ್. ದಾವಣಗೆರೆ 1980 ರವರೆಗೆ 1960 ರ ಪ್ರಮುಖ ಹತ್ತಿ ಬಟ್ಟೆಯ ರಫ್ತು. ಆದರೆ ಗಿರಣಿಗಳ 1990 ರ ಮುಚ್ಚಲಾಯಿತು. ದಾವಣಗೆರೆ ದೊಡ್ಡ ವಸ್ತ್ರ ಅಥವಾ ಬಟ್ಟೆ ಅಂಗಡಿ, ಅಂದರೆ ಬಿ.ಎಸ್ ಚನ್ನಬಸಪ್ಪ ಮತ್ತು ಸನ್ಸ್. ತನ್ನ ಶಾಖೆಗಳನ್ನು ನಗರದಲ್ಲಿ ಹರಡಿದೆ ಇದು ಮಧ್ಯ ಕರ್ನಾಟಕದ ದೊಡ್ಡ ಬಟ್ಟೆಯ ಅಂಗಡಿಯಲ್ಲಿ ಒಂದು.ಹರಿಹರ ನಲ್ಲಿ ವಿಸ್ಕೋಸ್ ಸ್ಟೇಪಲ್ ಫೈಬರ್ಸ್ (ಎಂಬ ಹರಿಹರ ಪಾಲಿ ಫೈಬರ್ಸ್  Grasilene ವಿಭಾಗ) ವಿಶ್ವದ ಎರಡನೇ ದೊಡ್ಡ ತಯಾರಕ ಇದು ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆ ಗ್ರಾಸಿಮ್ ಇಂಡಸ್ಟ್ರೀಸ್ ತಯಾರಿಕಾ ಘಟಕವನ್ನು ಹೊಂದಿದೆ ಹಾಗೆಯೆ ಹರಿಹರ ಹತ್ತಿರ ಇರುವ ಬೆಳ್ಳೂಡಿ ಕೈಗಾರಿಕಾ ಪ್ರದೇಶದ ಹತ್ತಿರ ಕಾರ್ಗಿಲ್ ಇಂಡಿಯಾ ಸಂಸ್ಥೆಯು ಗ್ಲೂಕೋಸ್ ಮತ್ತು ಕೃಷಿ ಸಂಭಂದಿಸಿದ ವಸ್ತುಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದೆ ಶೀಗ್ರದಲ್ಲೆ ಘಟಕವು ಕಾರ್ಯನಿರ್ವಹಿಸುವುದು.

ನ್ಯಾಮತಿ ಯಲ್ಲಿ ಅತಿ ಹೆಚ್ಚು ತರಕಾರಿ ಬೆಳೆಗಳನ್ನು ಬೆಳೆದು ಉಡುಪಿ ಮಂಗಳೂರು ಮಣಿಪಾಲ್ ಚಿಕ್ಕಮಂಗಳೂರು ಬಾಳೆಹೊನ್ನೂರು ಕಳಸ ಮುಂತಾದ ಸ್ಥಳಗಳಿಗೆ ರಫ್ತುು ಮಾಡಲಾಗುತ್ತದೆ.

ಬೆಣ್ಣೆದೋಸೆ, ಖಾರ ಮಂಡಕ್ಕಿ, ಓಪನ್ನ್ ಬೆಣ್ಣೆದೋಸೆ, ಮಸಾಲೆ ಬೆಣ್ಣೆದೋಸೆ, ಗುಳ್ಳಡಕಿ ಉಂಡೆ, ಅತ್ತಿಕಾಯಿ, ಹಿಟ್ಟು ಹಚ್ಚಿದ ಮೇಣಸಿನಕಾಯೆ, ನರ್ಗೀಸ್ ಮಂಡಕ್ಕಿ, ಮಸಾಲೆ ಮಂಡಕ್ಕಿ, ಮಸಾಲೆ ಅವಲಕ್ಕಿ ತಾಳಿಪೇಟ್ಟು.........




#Article 30: ಮಧ್ವಾಚಾರ್ಯ (280 words)


ಶ್ರೀ ಮಧ್ವಾಚಾರ್ಯರು (೧೨೩೮-೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಙಾನಿಗಳು.

ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಅವರ ಅನುಯಾಯಿ ಭಕ್ತರು, ಸರ್ವೊತ್ತಮನಾದ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು ಎಂದು ಭಾವಿಸುತ್ತಾರೆ. ಶ್ರೀಮದಾಚಾರ್ಯರಿಗೆ ಗುರುಗಳು ವೈದಿಕ ಕ್ರಮದಲ್ಲಿ ಪಟ್ಟಾಭಿಶೇಕ ನೆರವೆರಿಸಿ ಇಟ್ಟ ನಾಮ ಆನಂದತೀರ್ಥ.

ಮಧ್ವರು ಉಡುಪಿಯ  ಹತ್ತಿರ ಪಾಜಕದಲ್ಲಿ ವಿಜಯ ದಶಮಿಯಂದು ಕ್ರಿ.ಶ.೧೨೩೮ ರಲ್ಲಿ ಒಂದು ಚಿಕ್ಕ ಕುಟೀರದಲ್ಲಿ  ಜನಿಸಿದರು. ಅವರ ತಂದೆ ನಡ್ಡಿಲ್ಲಾಯ ನಾರಾಯಣ ಭಟ್ಟ.(ಇಂಗ್ಲಿಷ್ ವಿಕಿಪೀಡಿಯಾ), ತಾಯಿ ವೇದಾವತಿ. ಅವರು ಆ ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ನಂತರ ಮಧ್ವರು ಪೂರ್ಣಪ್ರಜ್ಞ, ಪೂರ್ಣ ಬೋಧ, ಆನಂದ ತೀರ್ಥ, ಅನುಮಾನ ತೀರ್ಥ,ಮಧ್ವಾಚಾರ್ಯ ಎಂಬ ಹೆಸರುಗಳಿಂದ ಪ್ರಸಿದ್ಧರಾದರು.  ಅವರ ಜನನಕ್ಕೆ ಮುಂಚೆ ಅವರ ತಾಯಿ ತಂದೆ ಉಡುಪಿ ಪೇಟೆಗೆ ಹೋಗಿದ್ದಾಗ ಒಬ್ಬ ಭಿಕ್ಷುಕ ಶ್ರೀ ಅನಂತೇಶ್ವರ ದೇವಸ್ಥಾನದ ಸ್ಥಂಬ ವನ್ನು ಏರಿ, 'ಈ ಊರಿನಲ್ಲಿ ವಾಯು ದೇವನು ಅವತರಿಸುವನು' ಎಂದು ಕೂಗಿ ಹೇಳಿದನೆಂದು ಪ್ರತೀತಿ.

ಅವರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು.  ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥ ರೆಂಬ ಬಿರುದನ್ನು ಕೊಟ್ಟರು.

ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು. 

ಮಧ್ವರ ಪ್ರಸಿದ್ಧ ಶಿಷ್ಯರು - ೯. ಪದ್ಮನಾಭ ತೀರ್ಥ; ೧೦. ಮಾಧವ ತೀರ್ಥ;
ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.

ತಮ್ಮ ೭೯ನೇ ವಯಸ್ಸಿನಲ್ಲಿ ಕಲಿ ೪೪೧೮ [ಕ್ರಿ.ಶ.೧೩೧೭]ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳಸಿದರು . ಈ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುತ್ತಾರೆ.

ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಎರಡು ಬಾರಿ ಬದರಿ ಯಾತ್ರೆ ಮಾಡಿ ವೇದವ್ಯಾಸ ರೂಪಿಯಾದ ಪರಮಾತ್ಮನನ್ನು ಕಂಡು,ಪರಮಾತ್ಮನಿಂದ ವೇದಗಳನ್ನು ಕಲಿತು ಉಡುಪಿಗೆ ಹಿಂದಿರುಗಿದರು. ಮಧ್ವಾಚಾರ್ಯರು ಒಂಬತ್ತು ಜನರಿಗೆ ಸನ್ಯಾಸಿ ದೀಕ್ಷೆಯನ್ನು ನೀಡಿದರು,  ವೃಷ್ಣ ಮಠದಲ್ಲಿ ಶ್ರೀ ವೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ಶ್ರೀ ವೃಷ್ಣನು ತನ್ನ ಮಾವನ ಮನೆಯಾದ ಸಮುದ್ರ ದಿಂದ ಅಚಾರ್ಯರಿಗಾಗಿ ಗೊಪಿಯ ಉಂಡೇಯೊಳಗೆ ಕೂತು  ದೊರಕಿದನು

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ:

ಶ್ರೀ ಮಧ್ವಾಚಾರ್ಯರ ಶಿಷ್ಯವರ್ಗ ಅಪಾರವಾದುದಾಗಿತ್ತು. ಅವರಲ್ಲಿ ಪ್ರಮುಖರಾದ ಕೆಲವರನ್ನು ಹೀಗೆ ಗುರುತಿಸಬಹುದು




#Article 31: ಜ್ಞಾನಪೀಠ ಪ್ರಶಸ್ತಿ (134 words)


ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.

೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.




#Article 32: ವಲ್ಲಭ್‌ಭಾಯಿ ಪಟೇಲ್ (556 words)


ವಲ್ಲಭಭಾಯ್ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಎಂದೇ ಕರೆಯಲ್ಪಡುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು. ಭಾರತ ಮತ್ತು ಇತರೆ ಕಡೆಗಳಲ್ಲಿ, ಅವರನ್ನು ಹೆಚ್ಚಾಗಿ ಸರ್ದಾರ್ ಎಂದು ಕರೆಯಲಾಗುತ್ತಿತ್ತು, ಇದರರ್ಥ ಹಿಂದಿ, ಉರ್ದು, ಮತ್ತು ಪರ್ಷಿಯನ್ ಭಾಷೆಗಳಲ್ಲಿ ಮುಖ್ಯವಾದ ವ್ಯಕ್ತಿ. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಪ್ರಜಾಮಾನಸದಲ್ಲಿ ದೊರೆತಿತ್ತು.  

ಗುಜರಾತ್‌ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲ್, ಯಶಸ್ವಿ ವಕೀಲರಾಗಿದ್ದರು. ಅವರು ತರುವಾಯ ಗುಜರಾತ್‌ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು  ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು. ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು. 

ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಪಟೇಲ್ ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು. ಅವರು ಭಾರತಕ್ಕೆ ಹಂಚಿಕೆಯಾದ ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಲಾಯಿತು. ಸೇನಾಪಡೆಗಳ ಬೆದರಿಕೆಯನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಮತ್ತು ತುಸುವೂ ರಾಜಿಯಾಗದ್ದಾಗಿತ್ತು. 

ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು ಭಾರತದ ನಾಗರಿಕ ಸೇವಕರ ಪೋಷಕ ಸಂತ (patron saint of India's civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು ಭಾರತದ ಏಕೀಕರಣ ನೇತಾರ ಎಂದೂ ಕರೆಯಲಾಗುತ್ತದೆ.  ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ. 

ವಲ್ಲಭಭಾಯ್ ಝವೇರಿಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾದ್ ಎಂಬಲ್ಲಿನ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ. ಅವರು ಮಧ್ಯ ಗುಜರಾತ್‍‌ನ ಲೇವಾ ಪಟೇಲ್ ಪಾಟಿದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಆದಾಗ್ಯೂ ಲೇವಾ ಪಟೇಲ್‌ ಮತ್ತು ಕಡವ ಪಟೇಲ್‌ರ ಗುಂಪುಗಳು ಸರ್ದಾರ್ ಪಟೇಲ್‌ರನ್ನು ತಮ್ಮವರೆಂದು ಗುರುತಿಸುತ್ತಾರೆ.

ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲ್‌ರು ನಡಿಯಾದ್, ಪೆಟ್ಲಾಡ್, ಮತ್ತು ಬೋರಸಾಡ್‌ನಲ್ಲಿ ಶಾಲೆಗಳಿಗೆ ಹಾಜರಾಗಲು, ಇತರ ಹುಡುಗರೊಂದಿಗೆ ಪ್ರಯಾಣಿಸುತ್ತಾ ಸ್ವಯಂ ಜೀವಿಸುತ್ತಿದ್ದರು. ಅವರು ಅಚಲ ಸಂಯಮ ಸ್ವಭಾವವನ್ನು ಬೆಳೆಸಿಕೊಂಡರು. ಒಂದು ಜನಪ್ರಿಯ ದಂತಕಥೆಯಂತೆ, ಒಮ್ಮೆ ಕ್ಷೌರಿಕನು ಒಂದು ಗುಳ್ಳೆಯ ಕಾರಣ ಅಳುಕುತಿದ್ದಾಗ, ತಾವೇ ಚಾಕುವನ್ನು ತೆಗೆದುಕೊಂಡು, ಕೆತ್ತಿಕೊಂಡರು.  

ಪಟೇಲರು ೨೨ ವರ್ಷದವರಿದ್ದಾಗ, ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದರು. ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಪಟೇಲ್ ಸ್ವತಃ ವಕೀಲರಾಗಿ ಕೆಲಸ ಮಾಡಲು ಮತ್ತು ಹಣವನ್ನು ಉಳಿಸಲು, ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಮತ್ತು ನ್ಯಾಯವಾದಿಯಾಗಲು ಅಧ್ಯಯನ ಮಾಡಲು ಯೋಜನೆಯನ್ನು  ರೂಪಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಿದ್ದು,  ಇತರ ವಕೀಲರಿಂದ ಎರವಲು ಪಡೆದ ಪುಸ್ತಕಗಳೊಂದಿಗೆ ತನ್ನದೇ ಆದ ಅಧ್ಯಯನವನ್ನು ನಡೆಸಿ, ಎರಡು ವರ್ಷಗಳಲ್ಲಿ  ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು. 

ಆನಂತರ, ತನ್ನ ಪತ್ನಿಯಾದ ಜಾವೇರ್‌ಬಾರನ್ನು ತವರು ಮನೆಯಿಂದ ಕರೆಯಿಸಿ, ಗೋಧ್ರಾದಲ್ಲಿ ಮನೆ ಮಾಡಿದರು. ಈ ಜೋಡಿಗೆ, 1904 ರಲ್ಲಿ ಮಣಿಬೆನ್ (ಮಗಳು) ಮತ್ತು 1906 ರಲ್ಲಿ ದಹ್ಯಾಭಾಯಿ (ಮಗ) ಜನಿಸಿದರು. ಅಲ್ಲಿಯೇ ಅವರಿಗೆ ವಕೀಲಿ ವೃತ್ತಿಯ    ಸಹ ದೊರೆಯಿತು. ಹಣ ಉಳಿಸಲು ಹಲವು ವರ್ಷಗಳನ್ನು ತೆಗೆದುಕೊಂಡ ಪಟೇಲ್, ತೀವ್ರ ಮತ್ತು ನುರಿತ ವಕೀಲರಾಗಿ ಖ್ಯಾತಿಯನ್ನು ಗಳಿಸಿದರು.  ಗುಜರಾತ್‌ನಾದ್ಯಂತ ಬಬೊನಿಕ್ ಪ್ಲೇಗ್ ಹರಡುತ್ತಿದ್ದಾಗ, ಸ್ನೇಹಿತರ ಆರೈಕೆ ಮಾಡಿದ್ದರು. ಪಟೇಲ್‌ರಿಗೇ ಈ ಮಾರಿ ಅಪ್ಪಳಿಸಿದಾಗ, ತನ್ನ ಕುಟುಂಬವನ್ನು ಸುರಕ್ಷತಾ ಜಾಗಕ್ಕೆ ಕಳುಹಿಸಿ, ತಾನೂ ಮನೆ ಬಿಟ್ಟು,ನಡಿಯಾದ್‌ನಲ್ಲಿ ಪ್ರತ್ಯೇಕವಾದ ಮನೆ ಮಾಡಿ ಉಳಿಯಲಾರಂಭಿಸಿದರು.  (ಕೆಲವು ದಾಖಲೆಗಳ ಪ್ರಕಾರ, ಪಟೇಲ್ ಈ ಸಮಯವನ್ನು ಒಂದು ಶಿಥಿಲವಾದ ದೇವಾಲಯದಲ್ಲಿ ಕಳೆದರು); ಅಲ್ಲಿ ಅವರು ನಿಧಾನವಾಗಿ ಚೇತರಿಸಿಕೊಂಡರು.

ಅದಕ್ಕಾಗಿ ಹಣ ಒಟ್ಟುಮಾಡಿ, ಮುಂದೆ ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ ವಿಠ್ಠಲಭಾಯಿ ವಕೀಲರಾಗಿ ಹೆಸರಾಗುತ್ತಿದ್ದರು.

ಭಾರತಕ್ಕೆ ಹಿಂದಿರುಗಿದ ಪಟೇಲ್ ಅಹಮದಾಬಾದ್‌ನಲ್ಲಿ ನೆಲೆಸಿದರು ಮತ್ತು ನಗರದ ಅತ್ಯಂತ ಯಶಸ್ವಿ ನ್ಯಾಯವಾದಿಗಳ ಪೈಕಿ ಒಬ್ಬರಾದರು.  ಯುರೋಪಿಯನ್-ಶೈಲಿಯ ಬಟ್ಟೆಗಳನ್ನು ಧರಿಸುವುದು ಮತ್ತು ಶಿಷ್ಟ (ನಗರೀಕರಣದ) ವರ್ತನೆಗಳನ್ನು ತೋರ್ಪಡಿಸುತ್ತ , ಅವರು ನುರಿತ  ಆಟಗಾರರಾದರು. ಪಟೇಲ್ ತಮ್ಮ ವೃತ್ತಿಯಿಂದ, ಬಹಳಷ್ಟು ಹಣಗಳಿಸಿ, ತಮ್ಮ ಮಕ್ಕಳಿಗೆ ಅಧುನಿಕ ಶಿಕ್ಷಣವನ್ನು  ಒದಗಿಸುವ ಉದ್ದೇಶವನ್ನು ಹೊಂದಿದ್ದರು.  ಬೊಂಬೆ ಪ್ರೆಸಿಡೆನ್ಸಿಯಿಂದ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದ ಅಣ್ಣ ವಿಠಲ್‌ಭಾಯ್‌ರವರೊಂದಿಗಿನ ಒಪ್ಪಂದದಂತೆ, ಅಹಮದಾಬಾದ್‌ನಲ್ಲಿಯೇ ಮನೆ ಜವಾಬ್ದಾರಿಯನ್ನು ವಹಿಸಿಕೊಂಡರು.





#Article 34: ಹಾಸನ ಜಿಲ್ಲೆ (1452 words)


ಹಾಸನವು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಕಾರ್ಯಸ್ಥಾನ. ದಕ್ಷಿಣ ಭಾರತದ ವಿಸ್ತಾರದ ಆಳ್ವಿಕೆಯನ್ನೊಳಗೊಂಡ ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳರು ತಮ್ಮ ಆಳ್ವಿಕೆಯ ಉತ್ತುಂಗದಲ್ಲಿ ಹಾಸನ ಜಿಲ್ಲೆಯನ್ನು ತಮ್ಮ ಆಡಳಿತದ ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದರು.  ಹಾಸನ ಜಿಲ್ಲೆಯ ಬೇಲೂರು ಅವರ ರಾಜಧಾನಿಯಾಗಿತ್ತು.  ಮುಂದೆ ಅವರು  ೧೦೦೦ - ೧೩೩೪ರ ಕಾಲದಲ್ಲಿ ತಮ್ಮ ರಾಜಧಾನಿಯನ್ನು ಹಳೇಬೀಡಿಗೆ ವರ್ಗಾಯಿಸಿಕೊಂಡರು. ಇಂದು ಹಾಸನ ಜಿಲ್ಲೆಯು ತನ್ನ ಹೊಯ್ಸಳ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಗುರುತಿಸಿಕೊಂಡಿದೆ.  ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸುಮಾರು ೫೦ಕ್ಕೂ ಹೆಚ್ಚು ಶಿಲ್ಪಕಲೆಗಳ ಆಗರಗಳು ಗುರುತಿಸಲ್ಪಟ್ಟಿವೆ. 

ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯನ್ನು ನಿಯಂತ್ರಿಸುವ   ನ ಮಾಸ್ಟರ್ ಕಂಟ್ರೋಲ್ ಕೇಂದ್ರ ಹಾಸನದಲ್ಲಿದೆ.

ಹಾಸನವು ಕರ್ನಾಟಕ ರಾಜ್ಯದ ಜಿಲ್ಲಾ ಕೇಂದ್ರ ಕಾರ್ಯಸ್ತಾನ. ದಕ್ಷಿಣ ಭಾರತದ ವಿಸ್ತಾರವಾದ ಆಳ್ವಿಕೆಯನೊಳಗೊಂಡು ಮತ್ತು ಬಲಿಷ್ಠ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳ ರು ಆಳ್ವಿಕೆಯ ಉತ್ತುಂಗದಲ್ಲಿ ಹಾಸನ ಜಿಲ್ಲೆಯನ್ನು ತಮ್ಮ ಆಡಳಿತದ ಕೇಂದ್ರ ಸ್ಥಾನವಾಗಿರಿಸಿಕೊಂಡಿದ್ದರು. ಇಂದು ಹಾಸನ ಜಿಲ್ಲೆಯು ಹೊಯ್ಸಳ ವಾಸ್ತುಶಿಲ್ಪಕ್ಕಾಗಿ ಪ್ರಖ್ಯಾತವಾಗಿದೆ.

ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆಯ ನಿಯಂತ್ರಿಸುವ ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗ ನೈಸೇ ಶನ್ ನ ಮಾಸ್ಟರ್ ಕಂಟ್ರೋಲ್ ಪೆಸಿಲಿಟಿ ಕೂಡ ಎಲ್ಲೇ ಇರುವುದು.

ಕ್ರಿಸ್ತ ಶಕ ೩೦೦ ರಲ್ಲಿ ಹಾಸನವು ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು.. ಜೈನ ಮುನಿ ಭದ್ರಬಾಹುವು ಕ್ರಿಸ್ತ ಶಕ ೩ನೇ ಶತಮಾನದಲ್ಲಿ ಉತ್ತರ ಭಾರತದಿಂದ ಆಗಮಿಸಿದನು. ಕೆಲವು ಇತಿಹಾಸಕಾರರು ಚಕ್ರವರ್ತಿ ಅಶೋಕನ ಅಜ್ಜ ಚಂದ್ರಗುಪ್ತ ಮೌರ್ಯನು ಯತಿ ಭದ್ರಬಾಹು ಮತ್ತು ಆವರ ಶಿಷ್ಯರೊಂದಿಗೆ ಶ್ರವಣಬೆಳಗೊಳಕ್ಕೆ ಬಂದು ಗತಿಸಿದರು ಎಂಬುದಾಗಿ ಹೇಳುತ್ತಾರೆ.   ಕೆಲ ಇತಿಹಾಸಕಾರರು ರಾಜ ಅಶೋಕನ ಮೊಮ್ಮಗನು ಆಗಮಿಸಿದ್ದನು ಎಂದೂ ಹೇಳುತ್ತಾರೆ. ಚಂದ್ರಗುಪ್ತ ಬಸದಿ  ಎಂಬ ಹೆಸರಿನ ಒಂದು ಬಸದಿ  ಅಥವಾ ಸ್ಮಾರಕವು ಇಂದಿಗೂ ಅಸ್ತಿತ್ವದಲ್ಲಿದೆ. ಚಂದ್ರಗುಪ್ತ ಮೌರ್ಯನ ವಂಶಾವಳಿಯ ಬಗ್ಗೆ ಸತ್ಯ ವಿಷಯಗಳು ಏನೇ ಇದ್ದರೂ  ಇದು ಶ್ರವಣಬೆಳಗೊಳವು  ಹದಿನೇಳು ಶತಮಾನಗಳಿಂದ ಜೈನರ ಶ್ರದ್ಧಾ ಕೇಂದ್ರವಾಗಿದೆ ಎಂಬುದನ್ನು ತಿಳಿಸುತ್ತದೆ.

ನಂತರ ಹಾಸನವು ತಲಕಾಡು ಗಂಗ ರಾಜವಂಶದ ಆಳ್ವಿಕೆಗೆ ಒಳಪಟ್ಟಿತು. ಆರಂಭದಲ್ಲಿ ಗಂಗರು ೩೫೦-೫೫೦ ನೆ ಶತಮಾನದವರೆಗೆ ಆಳಿದರು.  ನಂತರ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಸಾಮಂತರು ಈ ಪ್ರದೇಶದ ಆಳ್ವಿಕೆ ಮುಂದುವರೆಸಿದರು. ೧೦ ನೇ ಶತಮಾನದ ಕೊನೆಯ ಭಾಗದಲ್ಲಿ, ಶ್ರವಣಬೆಳಗೊಳದಲ್ಲಿ ಅನೇಕ ಜೈನ ಸ್ಮಾರಕಗಳನ್ನು ನಿರ್ಮಿಸಲಾಯಿತು. ಗೋಮಟೇಶ್ವರ  ವಿಗ್ರಹವು ಐವತ್ತೇಳು ಅಡಿ ಎತ್ತರದ ಏಕಶಿಲೆಯ ವಿಗ್ರಹವು ಸೇರಿದಂತೆ ಹಲವು ಸ್ಮಾರಕಗಳನ್ನು ಗಂಗರ ದಂಡ ನಾಯಕ ಚಾಮುಂಡರಾಯನು ನಿರ್ಮಿಸಿದನು.

ಗಂಗರ ಆಳ್ವಿಕೆಯ ಸಮಯದಲ್ಲಿ, ಶ್ರವಣಬೆಳಗೊಳ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಇಂದು ಇದು ದೊಡ್ಡ ಪುರಾತತ್ವ ಪ್ರಾಮುಖ್ಯತೆಯ ಒಂದು ಸ್ಥಳವಾಗಿದೆ. ಪಟ್ಟಣದ ಹೆಸರು ಶ್ರವಣ ಅಥವಾ ಶ್ರಮಣ ಎಂಬ ಪದದಿಂದ ಪಡೆಯಲಾಗಿದೆ.  ಶ್ರವಣ ಅಥವಾ ಶ್ರಮಣ ಎಂದರೆ ಜೈನ ಸಂನ್ಯಾಸಿ ಎಂದರ್ಥ ಮತ್ತು ಬೆಳಗೊಳ  ಅಥವಾ  ಬಿಳಿಯ ಕೊಳ ಎಂದರೆ ಕನ್ನಡದಲ್ಲಿ ಶುಭ್ರ ಬಿಳಿಯ ಬಣ್ಣದ ಕೊಳ ಎಂದರ್ಥ. ಶ್ರವಣಬೆಳಗೊಳದ ಸುತ್ತುಮುತ್ತಲೂ ಸುಮಾರು ೮೦೦ ಶಾಸನಗಳನ್ನು ಪತ್ತೆಹಚ್ಚಲಾಗಿದೆ.  ಇದರಲ್ಲಿ ೮೦ ಶಾಸನಗಳು ಹೊಯ್ಸಳರ ಆಳ್ವಿಕೆಯ ಕಾಲ ೬೦೦ - ೧೮೩೦ ಸಿಇ ಗೆ ಸಂಬಂಧ ಪಟ್ಟಿವೆ.   ಈ ಶಾಸನಗಳು ಇತಿಹಾಸವನ್ನು ತಿಳಿಯಲು ಬಹಳ ಸಹಾಯಕವಾಗಿದೆ.  ಇದರಿಂದ ಬರಿಯ ಹಾಸನ ಜಿಲ್ಲೆಯ ಇತಿಹಾಸ ಮಾತ್ರವಲ್ಲದೇ ನಮ್ಮ ಕರ್ನಾಟಕವನ್ನು ಆಳಿದ ಎಲ್ಲಾ ಸಾಮ್ರಾಜ್ಯಗಳ ಇತಿಹಾಸವನ್ನೂ  ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗಿದೆ. ಶಿಲಾಶಾಸನಗಳು ಕನ್ನಡ, ಸಂಸ್ಕೃತ, ತಮಿಳು, ಮರಾಠಿ, ಮಾರ್ವಾಡಿ ಮತ್ತು ಮಹಾಜನಿ ಭಾಷೆಗಳಲ್ಲಿವೆ ಮತ್ತು ಕರ್ನಾಟಕವನ್ನು ಆಳಿದ ಎಲ್ಲ ಪ್ರಮುಖ ಸಾಮ್ರಾಜ್ಯಗಳ ವಿಶೇಷತೆಯನ್ನು ತಿಳಿಸುತ್ತಾ ಜೈನ ಧರ್ಮದ ಆಶ್ರಯವು ಮಧ್ಯಯುಗದ ಇತಿಹಾಸದಲ್ಲಿ ಸಂಪೂರ್ಣ ಸಕ್ರಿಯವಾಗಿತ್ತು ಎಂಬ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ.

೧೦೦೦ ಸಿಇ. ಸುತ್ತ, ಚೋಳರ ಕೈಯಲ್ಲಿ ತಮ್ಮ ಸಂಪೂರ್ಣ ಸೋಲು ಅನುಭವಿಸಿದ ಗಂಗಾ ವಂಶಾವಳಿಯ ಗಂಗಾವತಿ (ಕರ್ನಾಟಕ ದಕ್ಷಿಣ ಜಿಲ್ಲೆಗಳು) ಶಾಶ್ವತವಾಗಿ ಕಣ್ಮರೆಯಾದವು. ಅಲ್ಲಿಂದ ಮುಂದೆ ೧೩೩೪ ರವರೆಗೆ ಸಿಇ, ಹೊಯ್ಸಳರು ಈ ಪ್ರದೇಶದಲ್ಲಿ ಆಳ್ವಿಕೆಯನ್ನು ಸ್ಥಾಪಿಸಿದರು ಮತ್ತು ಅವರ ಅವಸಾನದ  ನಂತರ, ವಿಜಯನಗರ ಸಾಮ್ರಾಜ್ಯವು ನಿಯಂತ್ರಣವನ್ನು ತೆಗೆದುಕೊಂಡಿತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ, ಈ ಪ್ರದೇಶವು ಮೈಸೂರು ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತು.

ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ಮಲ್ನಾಡು ಪ್ರದೇಶದ ಜಿಕ್ಕಮಗಳೂರು ಜಿಲ್ಲೆಯ ಅಂಗಡಿ ಎಂಬ ಸ್ಥಳದ ಮೂಲದ ಒಂದು ಗುಡ್ಡಗಾಡು ಜನಾಂಗವು ಪ್ರಬಲ ಸಾಮ್ರಾಜ್ಯವನ್ನು ನಿರ್ಮಿಸಿತ್ತು.  ಈ ಗುಡ್ಡಗಾಡು ಜನರ ಆಳ್ವಿಕೆಯ ಕಾಲದಲ್ಲಿಯೇ ಹಾಸನ ತನ್ನ ಖ್ಯಾತಿಯ ಉತ್ತುಂಗ ತಲುಪಿತ್ತು.  ಈಗಲೂ ಸುಮಾರು ಐವತ್ತು ಅಥವಾ ಹೆಚ್ಚು ಹೊಯ್ಸಳ ದೇವಾಲಯಗಳು ಉದ್ದಗ್ಗಲಕ್ಕೂ ಹರಡಿರುವುದನ್ನು ಕಾಣಬಹುದಾಗಿದೆ. ಈ ದೇವಾಲಯಗಳಲ್ಲಿರುವ ಅನೇಕ ಶಾಸನಗಳು ಕಳೆದುಹೋದ ಕಾಲದ ಒಂದು ವೈಭವದ ವಿವರಣೆಯನ್ನು ಸಂಪುಟಗಳಷ್ಟು ತಿಳಿಸುತ್ತವೆ.  ಹೊಯ್ಸಳರ ಆಡಳಿತದ ವಿವರಣೆ, ಭೂ ಸುಧಾರಣೆ, ತೆರಿಗೆ, ಸಂಸ್ಕೃತಿ  ಎಂದು ಅನೇಕ ವಿಷಯಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತವೆ.

ಕುರುಬ / ಯಾದವ ಜನಾಂಗಕ್ಕೆ ಸೇರಿದವರೆಂದು ಗುರುತಿಸಲ್ಪಡುವ ಹೊಯ್ಸಳರು, ತಮ್ಮ ಪೂರ್ವಜರಾದ ಗಂಗರ ಜೊತೆ ಸೇರಿದರು.  ಇವರು ಈ ಮೊದಲು  ಸುಮಾರು ೧೦೦೦ - ೧೧೫೦ ಸಿಇ ಕಾಲದಲ್ಲಿ ಕಲ್ಯಾಣಿಯ ಚಾಲುಕ್ಯರ ಅಧೀನರಾಗಿದ್ದರು.  ಕಲ್ಯಾಣಿಯ ಚಾಲುಕ್ಯರ ಅವನತಿಯ ನಂತರ ಹಾಗೂ ಹೊಯ್ಸಳರಿಗೆ ಅಧೀನರಾಗಿದ್ದ ಸಾಮಂತರ ಬಿಡುಗಡೆಗಾಗಿ ವಿಷ್ಣುವರ್ಧನನ ನಿರಂತರ ಹೋರಾಟದ ಫಲವಾಗಿ ಹೊಯ್ಸಳರು ಸ್ವತಂತ್ರ ಆಳ್ವಿಕೆಯನ್ನು ೧೨ನೆಯ ಶತಮಾನದಲ್ಲಿ ಪಡೆದರು. ಬಿಟ್ಟಿದೇವನೆಂದು ಕರೆಯಲ್ಪಡುತ್ತಿದ್ದ ವಿಷ್ಣುವರ್ಧನ ಮೂಲತಃ ಜೈನ ಧರ್ಮ ಪಾಲಿಸುತ್ತಿದ್ದವನು.  ಆದರೆ ಮುಂದೆ ಹಿಂದೂ ಧರ್ಮದ ಒಂದು ಪಂಥವಾದ ವೈಷ್ಣವ ಸಿದ್ಧಾಂತವನ್ನು ಸ್ವೀಕರಿಸಿದ್ದರಿಂದ ತನ್ನ ಹೆಸರನ್ನು ವಿಷ್ಣುವರ್ಧನ ಎಂದ ಬದಲಾಯಿಸಿಕೊಂಡನು.

ಅನೇಕ ಇತಿಹಾಸಕಾರರು ವಿಷ್ಣುವರ್ಧನ ಹೊಯ್ಸಳ ಸಾಮ್ರಾಜ್ಯದ ನಿಜವಾದ ಸ್ಥಾಪಕ ಎಂದು ಭಾವಿಸುತ್ತಾರೆ. ಹೊಯ್ಸಳರು ತಮ್ಮ ಪರಮಾಧಿಕಾರದ ಹೊರಹೊಮ್ಮುವಿಕೆ ಎರಡು ನಿರ್ಣಾಯಕ ವಿಜಯಗಳ ಮೂಲಕ ಸಾಧಿಸಿದರು.  ಇದರಲ್ಲಿ ಒಂದು  ೧೧೧೪ CE ರಲ್ಲಿ ತಲಕಾಡಿನಲ್ಲಿ ಚೋಳರ ವಿರುದ್ಧ ಗಳಿಸಿದ ಜಯ. ಈ ವಿಜಯದ ನಂತರ ವಿಷ್ಣುವರ್ಧನ ವೀರ ಗಂಗಾ ಮತ್ತು ತಲಕಾಡು ಗೊಂಡಾ ಎಂಬ ಬಿರುದುಗಳನ್ನು ಪಡೆದುಕೊಂಡ.   ವಿಜಯದ ಸ್ಮರಣಾರ್ಥವಾಗಿ ನಾಣ್ಯಗಳನ್ನು ಬಿಡುಗಡೆ ಮಾಡಿದ, ತಲಕಾಡಿನಲ್ಲಿ ಕೀರ್ತಿ ನಾರಾಯಣ ದೇವಾಲಯ ಮತ್ತು ಬೇಲೂರಿನಲ್ಲಿ ಪ್ರಸಿದ್ಧ ಚನ್ನಕೇಶವ ದೇವಾಲಯಗಳನ್ನು ನಿರ್ಮಿಸಿದ ಮತ್ತು ಗಂಗಾವತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡನು. ಎರಡನೆಯ ವಿಜಯ ೧೧೧೮ ಸಿಇ ಕನ್ನೇಗಾಲದಲ್ಲಿ ಬಲಿಷ್ಠರಾದ ಚಾಲುಕ್ಯ ರಾಜ ಆರನೇ ವಿಕ್ರಮಾದಿತ್ಯನ ವಿರುದ್ಧ ಪಡೆದ ರೋಚಕ ಗೆಲುವು. ಆದರೆ ವಿಷ್ಣುವರ್ಧನ ಇಂದಿನ ಹಾನಗಲ್ ಕರ್ನಾಟಕ, ಉಚ್ಛಂಗಿ, ಬನವಾಸಿ ಮತ್ತು ಬರ್ಕಾಪುರ ಕೇಂದ್ರ ಪ್ರದೇಶಗಳ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾದದ್ದು ಮಾತ್ರ ಆರನೇ ವಿಕ್ರಮಾದಿತ್ಯನ ನಿಧನದ ನಂತರವೇ.

ಹೊಯ್ಸಳರು  ಮೊಮ್ಮಗ, ಎರಡನೇ ವೀರ ಬಲ್ಲಾಳನ ಆಳ್ವಿಕೆಯ ಕಾಲ ೧೧೭೩-೧೨೨೦ CE ದಲ್ಲಿ ಚೋಳರಾಜ್ಯ ಪ್ರತಿಷ್ಠಾಚಾರ್ಯ ಅಥವಾ ಚೋಳ ಸಾಮ್ರಾಜ್ಯದ ರಕ್ಷಕ ಎಂಬ ಶೀರ್ಷಿಕೆಯನ್ನು ಗಳಿಸಿದರು ಮತ್ತು  ದಕ್ಷಿಣ ಭಾರತದಲ್ಲಿ ಸಮರ್ಥರಾದ ಒಂದು ನಿಜವಾದ ಪಡೆ ಎನಿಸಿಕೊಂಡರು. ಇದೇ ಕಾಲಘಟ್ಟದಲ್ಲಿ, ಹಾಸನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅಧಿಕೇಂದ್ರ ಆಯಿತು.

ಹಾಸನ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ:

ಹೊಯ್ಸಳರ ಅಮರತ್ವ ಕನ್ನಡ ಸಂಸ್ಕೃತಿ, ಕನ್ನಡ ಸಾಹಿತ್ಯ ಮತ್ತು vesara ವಾಸ್ತುಶಿಲ್ಪದ ತಮ್ಮದೇ ಆದ ಅನನ್ಯ ಶೈಲಿಯನ್ನು ತಮ್ಮ ಕೊಡುಗೆ ಕಾಣಿಸಿಕೊಳ್ಳುವ ಹೇಳಿಕೊಳ್ಳುತ್ತಾರೆ. ಉದಾಹರಣೆಗೆ ಹೆನ್ರಿ Cousens ಮತ್ತು ಜೇಮ್ಸ್ Furgusson ಎಂದು ಇತಿಹಾಸಕಾರರು ವಾಸ್ತುಶಿಲ್ಪದ ಹೊಯ್ಸಳ ಶೈಲಿಯ ಮೂಲಭೂತವಾಗಿ ಕಲ್ಯಾಣಿ ಚಾಲುಕ್ಯರು ಅಧಿಕವಾಗುವುದು ಬಾದಾಮಿ ಚಾಲುಕ್ಯರು ಮತ್ತು ಮತ್ತಷ್ಟು ಆರಂಭಿಸಿತು vesara ಶೈಲಿಯ ವಿಸ್ತರಣೆ ಮತ್ತು ಪರಾಕಾಷ್ಠೆ ಗಮನಿಸಿದ್ದಾರೆ. ವಾಸ್ತವವಾಗಿ, ಕೆತ್ತಿದ ಬಾಗಿಲು, ಲೇಥ್ ಕಂಬಗಳು ತಿರುಗಿ ಹೊಯ್ಸಳರ ಆಗಾಗ್ಗೆ ಬಳಸಲಾಗುತ್ತದೆ ಚುಚ್ಚಿದ ಕಿಟಕಿ ಪರದೆಗಳು ಸಾಮಾನ್ಯವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದ ಹಿಂದಿನ ಕಲ್ಯಾಣಿ ಚಾಲುಕ್ಯರ ದೇವಾಲಯಗಳಲ್ಲಿ ಕಾಣಬಹುದು. ಅನೇಕ ಹೊಯ್ಸಳ ದೇವಾಲಯಗಳು ನಿರ್ಮಿಸಲಾಯಿತು ಮೇಲೆ ಸ್ಟಾರ್ ಆಕಾರದ ವೇದಿಕೆ, Jagati, ಗೋಡೆಗಳ ZIG-ಅಂಕುಡೊಂಕು ಅಕ್ಷರ ಮತ್ತು ಬೂದು ಸೋಪ್ ಸ್ಟೋನ್ (chloritic ಪದರ) ಮೇಲೆ ಶಿಲ್ಪ ಸಾಂದ್ರತೆಯು ಆದರೆ ಹೊಯ್ಸಳ ವಾಸ್ತುಶಿಲ್ಪದ ಒಂದು ಅನನ್ಯ ಲಕ್ಷಣಗಳನ್ನು ಹೊಂದಿದೆ. ಯಳೇಶಪುರದಲ್ಲಿ ೫ ಶಾಸನಗಳು ಇದೆ.

ಹಾಸನ ಜಿಲ್ಲೆಯುಹಲ್ಮಿಡಿ ಕನ್ನಡ ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ
ಬೇಲೂರು ತಾಲ್ಲೂಕಿನ ಒಂದು ಸಣ್ಣ ಗ್ರಾಮ ೪೫೦ CE ರ ಕನ್ನಡ ಲಿಪಿಯಲ್ಲಿ ಹಳೆಯ ಕನ್ನಡ ಭಾಷೆ ಶಾಸನ ನೆಲೆಯಾಗಿದೆ. ಇದರ ದಿನಾಂಕ ಶಾಸನ ಕೆಲವೊಮ್ಮೆ ೪೨೫ ಸಿಇ ಇರಬಹುದೆಂದು ಚರ್ಚೆಯಲ್ಲಿದೆ. ರಾಜ ಕಾಕುತ್ಸ ವರ್ಮನು,  ಕದಂಬ ರಾಜಮನೆತನದ ಸಂಸ್ಥಾಪಕ ರಾಜ ಮಯಾರಶರ್ಮನ ಮೊಮ್ಮಗ ಎನ್ನಲಾಗಿದೆ.

ಹಾಸನ ಜಿಲ್ಲೆಯನ್ನು ಎ೦ಟು ತಾಲೂಕುಗಳಾಗಿ ವಿಂಗಡಿಸಲಾಗಿದೆ:

೧೨ ° ೧೩ 'ಮತ್ತು ೧೩ ° ೩೩' ಉತ್ತರ ಅಕ್ಷಾಂಶ ಮತ್ತು ೭೫ ° ೩೩ ನಡುವೆ ಇರುವ 'ಮತ್ತು ೭೬ ° ೩೮' ಪೂರ್ವ ರೇಖಾಂಶದ, ಹಾಸನ ಜಿಲ್ಲೆಯ ೬೮೨೬,೧೫ km ² ನಷ್ಟು ವಿಸ್ತೀರ್ಣ. ಇದು ೮ ತಾಲ್ಲೂಕುಗಳಲ್ಲಿ, ೩೮ hoblies ಮತ್ತು ೨೩೬೯ ಹಳ್ಳಿಗಳನ್ನು ವಿಂಗಡಿಸಲಾಗಿದೆ.
ಭೌಗೋಳಿಕ Bisle ಘಾಟ್  ಮತ್ತು ಉತ್ತರ, ದಕ್ಷಿಣ ಮತ್ತು ಪೂರ್ವದ ಮೈದಾನ್  ಅಥವಾ planis ಪ್ರದೇಶಗಳು ಎಂದು ಪಶ್ಚಿಮ ಮತ್ತು ದಕ್ಷಿಣ ಪಶ್ಚಿಮ malnad  ಅಥವಾ ಪರ್ವತ ಪ್ರದೇಶದ ಬೆರೆಸಲಾಗುತ್ತದೆ. ಜಿಲ್ಲೆಯ ಕೇಂದ್ರ ಭಾಗದಲ್ಲಿ ಕೆಳದರ್ಜೆಗೆ ಅರಣ್ಯ ವ್ಯಾಪ್ತಿಯ ಕೆಲವು ಅಂಶಗಳಿವೆ.

ಹಾಸನ ಜಿಲ್ಲೆಯ ಮಟ್ಟಕ್ಕೆ ಇದು ಆಗ್ನೇಯ Hampapura ಹತ್ತಿರ ಕಾವೇರಿ ನದಿಯ ಹಾಸಿಗೆ ಕಡೆಗೆ ಪಶ್ಚಿಮ ಘಟ್ಟ ವ್ಯಾಪ್ತಿಯ ನಿಂದ ಹೇಮಾವತಿ ನದಿಯ ಕೋರ್ಸ್ ಇಳಿಜಾರುಗಳು ಹೊಂದಿದೆ. ಅದರ ಮುಖ್ಯ ಉಪನದಿ ಗೊರೂರು ಬಳಿ ಇದು ಸೇರುತ್ತದೆ ಇದು ಬೇಲೂರು taluq ರಿಂದ Yagachi ಹೊಂದಿದೆ. ಹೇಮಾವತಿ ಒಂದು ದಕ್ಷಿಣದ Holenarsipur taluq ಹಾದುಹೋಗುತ್ತದೆ ಮತ್ತು ಹಾಸನ ಜಿಲ್ಲೆಯ ಗಡಿಗೆ Hampapura ನಿಕಟ ಬಳಿ ಕಾವೇರಿ ನದಿ ಸೇರುತ್ತದೆ. ಹಾಸನ ಮತ್ತು ಬೇಲೂರು ೩.೦೮೪ ಮತ್ತು ಸುಮಾರು ನಿಂತಿದೆ  ಸಮುದ್ರ ಮಟ್ಟಕ್ಕಿಂತ ಕ್ರಮವಾಗಿ.

ಜಿಲ್ಲೆಯ ಉತ್ತರ ಪಶ್ಚಿಮಕ್ಕೆ ಚಿಕ್ಕಮಗಳೂರು ಜಿಲ್ಲೆ, ಉತ್ತರದಲ್ಲಿ ಚಿತ್ರದುರ್ಗ ಜಿಲ್ಲೆ, ಪೂರ್ವಕ್ಕೆ ತುಮಕೂರು ಜಿಲ್ಲೆ, ದಕ್ಷಿಣಕ್ಕೆ ದಕ್ಷಿಣ ಪೂರ್ವಕ್ಕೆ ಮಂಡ್ಯ ಜಿಲ್ಲೆ, ಮೈಸೂರು, ನೈಋತ್ಯ ಮತ್ತು ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಕೊಡಗು ಜಿಲ್ಲಾ ಸುತ್ತುವರೆದಿದೆ.

೨೦೧೧ ಜನಗಣತಿಯ ಹಾಸನ ಜಿಲ್ಲೆಯ ಪ್ರಕಾರ ೧.೭೭೬.೨೨೧ ಜನಸಂಖ್ಯೆಯನ್ನು ಹೊಂದಿದೆ, ಗ್ಯಾಂಬಿಯಾ ರಾಷ್ಟ್ರದ ಸ್ಥೂಲವಾಗಿ ಸಮಾನ  ನೆಬ್ರಸ್ಕಾ ಅಥವಾ ಅಮೇರಿಕಾದ ರಾಜ್ಯ. ಇದು ಭಾರತದಲ್ಲಿ ೨೭೦th ಒಂದು ಶ್ರೇಯಾಂಕವನ್ನು (ಔಟ್ ೬೪೦ ಒಟ್ಟು ಆಫ್) ನೀಡುತ್ತದೆ. ಜಿಲ್ಲೆಯ ಜನಸಂಖ್ಯೆ ಸಾಂದ್ರತೆ ಹೊಂದಿದೆ  . ದಶಕದ ೨೦೦೧-೨೦೧೧ ಮೇಲೆ ಇಲ್ಲಿನ ಜನಸಂಖ್ಯಾ ಬೆಳವಣಿಗೆ ದರವು ೩.೧೭% ಆಗಿತ್ತು. ಹಾಸನ ಪ್ರತಿ ೧೦೦೦ ಪುರುಷರಿಗೆ ೧೦೦೫ ಮಹಿಳೆಯರು ಲೈಂಗಿಕ ಅನುಪಾತವನ್ನು ಹೊಂದಿದೆ, ಮತ್ತು ೭೫,೮೯% ಸಾಕ್ಷರತಾ ಪ್ರಮಾಣ.

ಕನ್ನಡ ಜಿಲ್ಲೆಯ ಜನರ ಬಹುಪಾಲು ಮಾತನಾಡುತ್ತಾರೆ.

ಹಾಸನದಲ್ಲಿನ  ವಿಮಾನ ನಿಲ್ದಾಣವು  ೨೦೨೨ ರಿಂದ ಕಾರ್ಯಾಚರಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ವ್ಯವಸ್ಥೆಯಿಂದ ವಾರ್ಷಿಕವಾಗಿ  ೩ ದಶಲಕ್ಷ ಪ್ರಯಾಣಿಕರ ಪ್ರಯಾಣ ಸಾಮರ್ಥ್ಯ ಮತ್ತು ೧೦೦,೦೦೦ ಟನ್ ಸರಕು ಸಾಗಣೆ ಸಾಮರ್ಥ್ಯ ಹೊಂದುವ ನಿರೀಕ್ಷೆಯಿದೆ. ಈ ನಿಲ್ದಾಣವು ವಿಮಾನ ನಿರ್ವಹಣೆ ಮತ್ತು ಪರಿವರ್ತನೆ (AMM) ಹಬ್ ಹೊಂದಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನವನ್ನು ರಾಜ್ಯದ ಇತರ ಭಾಗಳ ಜೊತೆಗೆ ದೇಶದ ಇತರೆ ಭಾಗಗಳಿಗೂ ಸಂಪರ್ಕಕಲ್ಪಿಸುತ್ತದೆ. ಹಾಸನವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ನಂ ೪೮ ದೇಶದ ಇತರೆ ಸ್ಥಳಗಳ ಜೊತೆ ಸಂಪರ್ಕ ಹೊಂದಿದೆ. 
ಹಾಸನದ ಕೆ ಎಸ ಆರ್ ಟಿ ಸಿ ಬಸ್ಸು ನಿಲ್ದಾಣವು ದೇಶದ ಎರಡನೆಯ ಅತಿ ದೊಡ್ಡ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ.

ಹಾಸನದ ರೈಲ್ವೆ ವ್ಯವಸ್ಥೆಯು  ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಲಯದ ಅಡಿಯಲ್ಲಿ ಬರುತ್ತದೆ. ಹಾಸನ ಸಿಟಿ ರೈಲು ನಿಲ್ದಾಣವು  ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಹಾಸನವು ರೇಲ್ವೆಯ ಮೂಲಕ ಕರ್ನಾಟಕದ ಬಹುತೇಕ ಸ್ಥಳಗಳು  ಹಾಗು   ಮೂಲಕ ದೇಶದ ಉಳಿದ ಭಾಗಗಳ ಜೊತೆ ಸಂಪರ್ಕ ಹೊಂದಿದೆ. ಹಾಸನವು ರೇಲ್ವೆಯ ಮೂಲಕ ಕರ್ನಾಟಕದ ಬಹುತೇಕ ಸ್ಥಳಗಳು  ಹಾಗು  ಮುಂಬಯಿ ನಂಥ ಇತರ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಹೊಂದಿದೆ.

ಹಾಸನ ಜಿಲ್ಲೆಯ ಸಂಸ್ಕೃತಿಯು ಈ ಪ್ರದೇಶವನ್ನು ಆಳಿದ ಹೊಯ್ಸಳ ಮತ್ತು ಗಂಗ ಸಾಮ್ರಾಜ್ಯದ ದೊರೆಗಳ ಪ್ರಭಾವದೊಂದಿಗೆ ಬೆಸೆದುಕೊಂಡಿದೆ. ಆರಂಭದಲ್ಲಿ ಗಂಗರು ಹಿಂದೂಗಳಾಗಿದ್ದರು. ಆದರೆ ೭೮೫ ರ ವೇಳೆಗೆ ರಾಜನಾಗಿದ್ದ  ಎರಡನೆಯ ಶಿವಮಾರ ಜೈನ ಧರ್ಮವನ್ನು ಸ್ವೀಕರಿಸಿದನು.  ಹೊಯ್ಸಳರು ಜೈನರಾಗಿದ್ದರು. ಹೊಯ್ಸಳ ವಂಶದ ಸ್ಥಾಪಕ ಸಳ   ಎಂಬ ಪೌರಾಣಿಕ ವ್ಯಕ್ತಿ ಕೂಡ ಜೈನ ಸನ್ಯಾಸಿ ಸುದತ್ತ ಮುನಿಯ ಆಶೀರ್ವಾದ ಹೊಂದಿದ್ದನು  ಎಂದು ಹೇಳಲಾಗುತ್ತದೆ. ಇಲ್ಲಿನ ಅನೇಕ ಯಶಸ್ವಿ ಆಡಳಿತಗಾರರಲ್ಲಿ ಕೆಲವರು ಜೈನರು ಇದ್ದರು. ೧೨ನೆಯ ಶತಮಾನದ ಆರಂಭದಲ್ಲಿ ರಾಮಾನುಜಾಚಾರ್ಯರು ಚೋಳರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಈ ಪ್ರದೇಶಕ್ಕೆ ಬಂದರು. ಈ ಸಮಯದಲ್ಲಿ ಪ್ರಖ್ಯಾತ ದೊರೆ ವಿಷ್ಣುವರ್ಧನನು ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ ಹಿಂದು ಧರ್ಮಕ್ಕೆ ಮರಳಿದನು. ಆದರೆ ಆತನ ಪತ್ನಿ ಶಾಂತಲ ದೇವಿಯು ಜೈನ ಧರ್ಮದಲ್ಲಿಯೇ ಮುಂದುವರೆದಳು. ಇದು ಧಾರ್ಮಿಕ ಸೌರ್ಹದಕ್ಕೊಂದು ಉತ್ತಮ ಉದಾಹರಣೆಯಾಗಿದೆ.   . ಪತ್ನಿ ಶಾಂತಲಾದೇವಿ ಧಾರ್ಮಿಕ ಸಹಿಷ್ಣುತೆಯನ್ನು ಉದಾಹರಣೆ ಹೊಂದಿಸುವ, ಜೈನ್ ಧರ್ಮ ಅನುಸರಿಸಿ ಮುಂದುವರೆಸತೊಡಗಿದರು ಈ ಸಮಯದಲ್ಲಿ ವಿಷ್ಣುವರ್ಧನ, ರಾಮಾನುಜಾಚಾರ್ಯರು ಮತ್ತು ಪೂರ್ವನಿರ್ಧಾರಿತ ಹಿಂದೂ ಧರ್ಮ ಪ್ರಭಾವಿತರಾಗಿದ್ದರು. ಬೇಲೂರಿನಲ್ಲಿ ಪ್ರಸಿದ್ಧ ಚನ್ನಕೇಶವ ದೇವಸ್ಥಾನದ ಹತ್ತಿರದ ಚನ್ನಿಗರಾಯ   ದೇವಾಲಯವನ್ನು ಕಟ್ಟಬೇಕೆಂದು ನಿರ್ಧರಿಸಿದವಳು ಶಾಂತಲಾದೇವಿ.   ಈ ಸೌಹಾರ್ದವು ಇಂದಿಗೂ ಜೀವಂತವಾಗಿದೆ. ಜಿಲ್ಲಾ ಆಡಳಿತ ಮತ್ತು ಸಾಮಾನ್ಯ ಜನತೆಯ ಈ ಸೌಹಾರ್ದವನ್ನು , ಮಹಾಮಸ್ತಿಕಾಭಿಷೇಕ   ಸಂದರ್ಭಗಳಲ್ಲಿ ಕಾಣಬಹುದು.ಬಹುತೇಕ ಹೊಯ್ಸಳ ಸ್ಮಾರಕಗಳು ೧೧ ರಿಂದ ೧೩ ನೆಯ ಶತಮಾನದಲ್ಲಿ ನಿರ್ಮಾಣವಾದವು. ಶ್ರವಣಬೆಳಗೊಳದಲ್ಲಿನ ಜೈನ ಸ್ಮಾರಕಗಳು ಗಂಗರ ಸಾಮ್ರಾಜ್ಯದ ಸಂದರ್ಭದಲ್ಲಿ ೩೫೦ ರಿಂದ ೯೯೯ ರ ನಡುವೆ ನಿರ್ಮಾಣವಾದುವು.   ಇದು ಭಾರತದ ಪ್ರಮುಖ ಜೈನ ತೀರ್ಥಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಇಂದು, ಹಾಸನ ಮೈಸೂರು ಅರಮನೆ ಮತ್ತು ವಸಾಹತು ಕಟ್ಟಡಗಳನ್ನು ಹೊರತುಪಡಿಸಿ ಹೊಯ್ಸಳರ ನಿರ್ಮಿಸಿದ ಅಂದವಾದ vesara  ಸ್ಮಾರಕಗಳು ಬದಲಾಯಿಸಲಾಗಿದೆ, ಮೈಸೂರು ಜಿಲ್ಲೆಯ ಎಂದು ಹೋಲುವಂತಿತ್ತು ಒಂದು ಚಾರ್ಮ್ ಬಹುಮಟ್ಟಿಗೆ ಕೃಷಿಕ ಸಮುದಾಯ. ಒಂದು ಪಟ್ಟಿಯಲ್ಲಿ ಮುಂದಿನ ಸ್ಮಾರಕ ಭೇಟಿ ಕೆಲವು ಕಿಲೋಮೀಟರ್ ಹೆಚ್ಚು ಪ್ರಯಾಣ ಹೊಂದಿಲ್ಲ.
ಅದರ ತಿನಿಸು ಮಿಡಿಗಾಯಿ  (ಸಣ್ಣ ಕಚ್ಚಾ ಮಾವು) ಸಂಡಿಗೆ,' ' ಅವಲಕ್ಕಿ  (ಸಿಪ್ಪೆ ಸುಲಿಸಲ್ಪಟ್ಟ ಅಕ್ಕಿ), ಕಡಬು  (ಕಡಬು ವಿವಿಧ ಅಕ್ಕಿ ಮತ್ತು ಧಾನ್ಯಗಳಿಂದ ತಯಾರಿಸಲಾಗುತ್ತದೆ) ಮತ್ತು ಥಾಲಿಪಿಟ್ಟು' ' ಅಕ್ಕಿರೊಟ್ಟಿ' (ಅಕ್ಕಿ ಹಿಟ್ಟಿನಿಂದ ಮಾಡಿದ) ಉಪ್ಪಿನಕಾಯಿ ಮುಂತಾದ ರುಚಿಕರ ವೈವಿಧ್ಯತೆಗಳ ಪರಿಣಾಮವಾಗಿ ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಒಂದು ಮಿಶ್ರಣವಾಗಿದೆ. 
ಒಟ್ಟು ಜನಸಂಖ್ಯೆಯ ೫% ರಷ್ಟು ಮುಸ್ಲಿಮರು. ಹೆಬ್ಬಾರ್ ಒಂದು ಸಮುದಾಯ ಹೆಚ್ಚಿನ ಒಂದು ಸಾವಿರ ವರ್ಷಗಳ ಕಾಲ ಈ ಪ್ರದೇಶದಲ್ಲಿ ನೆಲೆಗೊಂಡಿದ್ದ ಒಂದು ಪ್ರಾಚೀನ ಬ್ರಾಹ್ಮಣ ಸಮುದಾಯ ಅಯ್ಯಂಗಾರಿಗಳು. Shantigrama ಶಾಸನಗಳ ಸಂಸ್ಥಾಪಕ ಕಾಶಿ ಒಂದು ಬ್ರಾಹ್ಮಣ ಎಂದು ಸೂಚಿಸುತ್ತದೆ. ಹಾಸನ ಅಯ್ಯಂಗಾರಿಗಳು, ಬೇರೆ ಬ್ರಾಹ್ಮಣ ಸಮುದಾಯ ಇತ್ಯಾದಿ ಅಯ್ಯಂಗಾರ್ ಬೇಕರಿಗಳಲ್ಲಿ ಕರ್ನಾಟಕ ಹೆಚ್ಚಿನ ಪಟ್ಟಣಗಳು ​​ಮತ್ತು ನಗರಗಳ ಸಾಮಾನ್ಯ ಲಕ್ಷಣವಾಗಿದೆ ಕೇಕ್, ಹಲ್ಲೆಗಳು, ಬಿಸ್ಕೆಟ್ ಮತ್ತು ಬ್ರೆಡ್ ತನ್ನ ಟೇಸ್ಟಿ ವ್ಯಂಜನವಾಗಿ ಸಿದ್ಧತೆಗಳನ್ನು ಎಲ್ಲಾ ದಕ್ಷಿಣ ಕರ್ನಾಟಕ ಮೇಲೆ ಕರೆಯಲಾಗುತ್ತದೆ. ಹಾಸನ್ ಕೂಡ ಬಡವರ ಊಟಿ  ಎಂದು ಕರೆಯಲಾಗುತ್ತದೆ. ಅದರ Bisle ಘಾಟ್ ಪ್ರದೇಶದಲ್ಲಿ ಕ್ಷಿಪ್ರ ಮತ್ತು ವ್ಯಾಪಕ ವ್ಯಾಪಾರೀಕರಣ ಇಲ್ಲದೆ ತಮಿಳುನಾಡಿನ ನೀಲಗಿರಿ  ಜಿಲ್ಲೆಯ ಅದೇ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಹಾಸನ ಕನ್ನಡ ಸಾಹಿತ್ಯ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದ ಪ್ರಸಿದ್ಧ ವ್ಯಕ್ತಿಗಳನ್ನು ಕಂಡುಕೊಳ್ಳುತ್ತದೆ ಒಂದು ಸ್ಥಳವಾಗಿದೆ.

ಪ್ರಮುಖ ಕಾಲೇಜುಗಳು:




#Article 35: ಕರ್ನಾಟಕದ ಜಿಲ್ಲೆಗಳು (224 words)


ನಮ್ಮ ರಾಜ್ಯ ಕರ್ನಾಟಕ. ನಮ್ಮ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ. ಅವು ಈ ಕೆಳಗಿನಂತೆ ಇವೆ:

ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ.

ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ.

ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ, ಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ.

ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಹೊಸದಾಗಿ ಉದಯವಾದ ವಿಜಯನಗರ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ.




#Article 36: ಕೋಲಾರ (182 words)


ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ  ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.

ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ನಾಡು’ ಎಂದೇ ಹೆಸರಾಗಿದ್ದ  ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ ಜನಪರ ಹೋರಾಟಗಳು ಮತ್ತು ಜನಪರ ಸಂಸ್ಕೃತಿಯನ್ನು ಮೆರೆದಿದೆ . ಆಗಸ್ಟ್ ೨೦೦೭ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿದೆ.ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆಂದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ.

ಐತಿಹಾಸಿಕವಾಗಿ ಕೋಲಾರವು ೨ ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.

೨೦೧೧ ರ ಜನಗಣತಿ ಪ್ರಕಾರ, ಕೋಲಾರ ಜಿಲ್ಲೆಯ ಜನಸಂಖ್ಯೆಯು 1,536,401 ಆಗಿದೆ ಹಾಗೂ ಇದರಲ್ಲಿ ಪುರುಷರ ಸಂಖ್ಯೆ 776,396 ಹಾಗು ಸ್ತೀಯರ ಸಂಖ್ಯೆ 760,005 ಇದೆ .

ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿರುವ ಈ ಜಿಲ್ಲೆಯು ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆ




#Article 37: ಕೊಡಗು (349 words)


ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.


ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. .

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ.'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.

ಕೊಡವರು ಇಲ್ಲಿಯ ಮುಖ್ಯ (ಮೂಲ) ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು.ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

೨೦೧೧ರ ಜನಗಣತಿಯ    ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨.ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ. ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೊಮೀಟರಿಗೆ ೧೩೫ ಮಂದಿ. ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨% ) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%). ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ:

ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.

ಕೊಡಗಿನಲ್ಲಿ ಮೂರು ತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರಗಳಿವೆ.

 

ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲೂಕಿನಲ್ಲಿ 

ವಿರಾಜಪೇಟೆ ತಾಲೂಕಿನಲ್ಲಿ-

ಸೋಮವಾರಪೇಟೆ ತಾಲೂಕಿನಲ್ಲಿ-

ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.

ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ ಅಥವ ಅರೆಭಾಷೆ , ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.




#Article 38: ಧಾರವಾಡ (326 words)


Website of district provides little info on origin of name. 

ಧಾರವಾಡ ಕರ್ನಾಟಕ ರಾಜ್ಯದ  ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು.ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ.

ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ.

ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ

ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ.

ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ:

ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.

ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.

ರಂಗಭೂಮಿ ಕಲಾವಿದರು

ಚಿತ್ರ ಕಲಾವಿದರಲ್ಲಿ ಪ್ರಮುಖರು-

೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ  ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು  ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ.

ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ:

ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ.

ವಿಧಾನ ಪರಿಷತ್ತ ಸದಸ್ಯರು.

ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ.




#Article 39: ಚಾಮರಾಜನಗರ (1358 words)


ಚಾಮರಾಜನಗರ ದಕ್ಷಿಣ ಕರ್ನಾಟಕದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರ ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ಮೊದಲಾದ ಇತರ ಕೆಲವು ತಾಲೂಕುಗಳು ಈ ಜಿಲ್ಲೆಯಲ್ಲಿ ಸೃಷ್ಟಿಯಾಗಿವೆ.

ಗಡಿಗಳಲ್ಲಿ ತಮಿಳು, ಮಲೆಯಾಳಂ ಮಾತನಾಡುವ ಜನರಿದ್ದು ಅತಿ ಹೆಚ್ಚು ಕನ್ನಡಿಗರಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ಸಮನ್ವಯವನ್ನು ಕಾಣಬಹುದು. ಪ್ರಪಂಚದಲ್ಲಿಯೆ ವಿಶಿಷ್ಟವೆನಿಸಿದ ಕಪ್ಪುಶಿಲೆ ಅಥವ ಕರಿಕಲ್ಲು(ಗ್ರಾನೈಟ್) ಇಲ್ಲಿ ಕಂಡು ಬರುತ್ತದೆ. ಜತೆಗೆ ಸುಣ್ಣದ ಕಲ್ಲಿನ ನಿಕ್ಷೇಪವು ಹೇರಳವಾಗಿದೆ. ಶೇ ೪೮ ದಟ್ಟಾರಣ್ಯದಿಂದ ಸುತ್ತುವರಿದಿರುವ ಈ ಜಿಲ್ಲೆ ರಾಜ್ಯದಲ್ಲಿ ೨೫ನೇ ಸ್ಥಾನದಲ್ಲಿದೆ. ೨೦೦ ಯಿಂದ ೩೫೦ ಉಷ್ಣಾಂಶವನ್ನು ಹೊಂದಿದ್ದು ೭೦ ರಿಂದ ೧೦೦ ಸೆಂ.ಮೀ. ಮಳೆಯನ್ನು ಪಡೆಯುತ್ತದೆ. 

೨೦೧೧ರ ಜನಗಣತಿಯ ಪ್ರಕಾರ ೧೦,೨೦,೭೯೧ ಜನಸಂಖ್ಯೆ ಹೊಂದಿದ್ದು ಪ್ರತಿ ಚ.ಕಿ.ಮೀ. ಪ್ರದೇಶದಲ್ಲಿ ೧೮೯ ಜನರು ವಾಸಿಸುತ್ತಿದ್ದಾರೆ. ೫೧.೨೬% ಸಾಕ್ಷರ ಪ್ರಮಾಣವಿದ್ದು  ಲಿಂಗಾನುಪಾತ  ೯೯೩ ಆಗಿದೆ. 

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ. ಚಾಮರಾಜನಗರ ತಾಲೂಕಿನ ಜೀವನಾಡಿ ಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ. 

 

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೪ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯದಲ್ಲಿರುವ ಗಂಗರ ಇತಿಹಾಸ ಬಿಂಬಿಸುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು ೬ ಅಡಿ ಎತ್ತರ ೧೨ ಅಡಿಗಳನ್ನು ಸುತ್ತಳತೆ ಹೊಂದಿದೆ. 

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ. ಚಾಮರಾಜನಗರ ಪಶ್ಚಿಮದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ ಮತ್ತು ಗುಹೆಗಳಿವೆ. ೧೦ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು.

 

 

 

 

ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ.
 

 

ಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. ೧೬೫೪ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲ್ಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ ೨೭ ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು  ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ. 

 

 

 

ಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ.
 

ಕೊಳ್ಳೇಗಾಲ
ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ  = ೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ  = ೪೦ ಕಿ.ಮೀ. ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಈರ್ವರು ಮಹರ್ಷಿಗಳು ನೆಲೆಸಿದ್ದರಿಂದ ಕೌಹಳಗಾಲವ ನಗರವಾಗಿ ಮುಂದೆ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು. ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ.
ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ  ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ.
ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು  ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ.

ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ. ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ.

 

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ  = ೧೨ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ  = ೫೨ ಕಿ.ಮೀ.  ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ. ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ.

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ  = ೧೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ  = ೫೦ ಕಿ.ಮೀ.  ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲೆರೆವ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ. ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ.

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ  = ೩ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ  = ೪೩ ಕಿ.ಮೀ. ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು. ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ  ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ಕೆಲವು ಸಂರ್ದಬ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ.
 

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ  = ೮ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ  = ೫೮ ಕಿ.ಮೀ. ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ  ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ.
  

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ  = ೯ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ  = ೫೯ ಕಿ.ಮೀ. ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ  ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ.

ತಾಲ್ಲೂಕು ಕೇಂದ್ರದಿಂದ  = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೬೭ ಕಿ.ಮೀ. ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
 

ತಾಲ್ಲೂಕು ಕೇಂದ್ರದಿಂದ  = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೬೭ ಕಿ.ಮೀ. ಶ್ರೀ ಚಕ್ಕಲ್ಲೂರು  ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇತ್ರವಿದೆ.

ತಾಲ್ಲೂಕು ಕೇಂದ್ರದಿಂದ  = ೧೨ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೫೨ ಕಿ.ಮೀ. ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ  ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ  ಸುಂದರ ಹಾಗೂ ಆಕರ್ಷಣೀಯವಾಗಿದೆ.
 

ತಾಲ್ಲೂಕು ಕೇಂದ್ರದಿಂದ  = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೫೮ ಕಿ.ಮೀ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ.
ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು  ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ.

ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ ೩ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
 

ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೫೮ ಕಿ.ಮೀ. ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.

ತಾಲ್ಲೂಕು ಕೇಂದ್ರದಿಂದ  = ೨೦ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೬೦ ಕಿ.ಮೀ. ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರಿಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ.
 

ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ. ಇಲ್ಲಿ ಸುಮಾರು ೧ ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು ೭೫ ರಿಂದ ೧೦೦ ಅಡಿಯವರೆಗೆ ಭೂಮಿಯಿಂದ ಭೂಮಿಗೆ ಧುಮ್ಮಿಕ್ಕುವಳು. ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ ೮೩ನೇ ಸ್ಥಾನವನ್ನು ಪಡೆದಿದೆ.
 

ತಾಲ್ಲೂಕು ಕೇಂದ್ರದಿಂದ  = ೧೪ ಕಿ.ಮೀ. ಜಿಲ್ಲಾ ಕೇಂದ್ರದಿಂದ  = ೫೪ ಕಿ.ಮೀ. ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು.

ಬಂಡಿಪುರ
ಬಿಳಿಗಿರಿ ಬೆಟ್ಟ
ಮಹದೇಶ್ವರ ಬೆಟ್ಟ
ಗೋಪಾಲಸ್ವಾಮಿ ಬೆಟ್ಟ
ಇವುಗಳು ಚಾಮರಾಜನಗರದಲ್ಲಿರುವ ಪ್ರಸಿದ್ದ ಚಾರಣ ಸ್ಥಳವಾಗಿವೆ.




#Article 40: ಗದಗ (636 words)


ಗದಗ (Gadag) (गदग) ಉತ್ತರ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ. marked by Ornate pillars with intricate

ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ  ಸನ್ 1905 ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಸಹಕಾರ ಸಂಘವಿದೆ. ಗದಗನ ಮೂಲ ಹೆಸರುಗಳು  ಕೃತುಕ, ಕೃತುಪುರ, ಕರಡುಗು ನಂತರ ಗಲದುಗು , ಗದುಗು ಮತ್ತು ಈಗ  ಗದಗ ಎಂದು ಕರೆಯಲಾಗುತ್ತದೆ. ಕಪ್ಪತ ಗುಡ್ಡ ಸಹ ಇದರ ಸುತ್ತಮುತ್ತಲಲ್ಲೇ ಇವೆ.

ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ. ಗದಗ ಕರ್ನಾಟಕದ ೨೯ ನೇ ಜಿಲ್ಲೆ ಆಗಿರುತ್ತದೆ.

ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು

ಗದಗಿನ ಬಹಳ ಮುಖ್ಯವಾದ ಕೈಗಾರಿಕೆ ಗದಗ ಪ್ರಿಂಟಿಂಗ್ ಪ್ರೆಸ್ ಹಾಗು ಸುಮಾರು ೧೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ.  ಸಂಕೇಶ್ವರ, ಶಾಬಾದಿಮಠ , ಹೊಂಬಾಳಿ,  ವಿದ್ಯಾವಿಕಾಸ, ವಿದ್ಯಾನಿಧಿ, ಪಾರು ಪ್ರಕಾಶನ ಮುಂತಾದ ಪ್ರಸಿದ್ಧ  ಪ್ರಿಂಟಿಂಗ್ ಪ್ರೆಸ್ ಗಳು ಇವೆ. ಕೈಮಗ್ಗ ಹಾಗೂ ಬಣ್ಣ ಬಣ್ಣದ ಆಕರ್ಷಕ ಸೀರೆಗಳನ್ನು ನೇಯುವ ಹತ್ತಾರು ಮಂದಿ ನೇಕಾರರು ಇಲ್ಲಿದ್ದಾರೆ  ಇದು ಗದಗ ಮತ್ತು ಬೆಟಗೇರಿಯ ಇನ್ನೊಂದು ಆಕರ್ಷಣೆ.

ಗದಗ ಜಿಲ್ಲೆಯ ೪೦೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್ ಇ.ಡಿ.ಎಲ್) ಗುರುತಿಸಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಮಾಜಿ ಸಚಿವ ಎಸ್ . ಎಸ್. ಪಾಟೀಲ್ ಇವರ ನೇತೃತ್ವದಲ್ಲಿ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಎಂದು ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ್ದು ಇರುತ್ತದೆ. ನಂತರ ಕೆಲವು ಆಡಳಿತಾತ್ಮಕ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಸದರಿ ಕಾರ್ಖಾನೆಯನ್ನು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಒಡತನದ ಸಂಸ್ಥೆಗೆ ೩೦ ವರ್ಷಗಳ ಗುತ್ತಿಗೆ ಆಧಾರದಲ್ಲಿ ಕೊಟ್ಟಿದ್ದು ಇಂದು ಅದು ವಿಜಯ ನಗರ ಸಕ್ಕರೆ ಕಾರ್ಖಾನೆ ನಿಗಮ ನಿಯಮಿತ, ಗಂಗಾಪೂರ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಇದು ಗದಗ ಜಿಲ್ಲೆಯಲ್ಲಿಯೇ ಬೃಹತ್ ಕೈಗಾರಿಕ ಪ್ರದೇಶವಾಗಿದ್ದು ಸಾವಿರಾರು ಉದ್ಯೋಗವನ್ನು ಒದಗಿಸಿದೆ. ಸಕ್ಕರೆ ತಯಾರಿಕೆ ಜೊತೆಗೆ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಸ್ಪಿರಿಟ್ ಮತ್ತು ಗೊಬ್ಬರ ತಯಾರಿಕ ಘಟಕಗಳನ್ನು ಸ್ಥಾಪಿಸಲಾಗಿದೆ.

ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ.

ಗದಗ ಪಟ್ಟಣ ಅನೇಕ  ವಿದ್ಯಾಲಯ, ಮಹಾವಿದ್ಯಾಲಯಗಳಿವೆ. ಒಂದು ಆಯುರ್ವೇದ ಮತ್ತು ತಾಂತ್ರಿಕ ವಿದ್ಯಾಲಯಗಳಿವೆ.

ಕೆ ಎಲ್ ಇ ಕಾಲೇಜು.ಗದಗ

ಗದಗ ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯ ಪ್ರಸಿದ್ಧಿ ಪಡೆದಿವೆ.  ಕ್ರಿ.ಪೂ.  950 ರಲ್ಲಿ ಪದ್ಮಬ್ಬರಸಿ ಕಟ್ಟಿಸಿದ ನರೇಗಲ್ಲದ ನಾರಾಯಣ ದೇವಾಲಯ, ರಾಷ್ಟ್ರಕೂಟರು ಕಟ್ಟಿಸಿದ ಜೈನ ದೇವಾಲಯ ಗಳಲ್ಲಿಯೇ ಅತಿ ದೊಡ್ಡದು ಆಗಿದೆ. ಶ್ರೀ ಅನ್ನದಾನೇಶ್ವ್ಹರ  ಮಠ ಪ್ರಸಿದ್ಢವಾಗಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಶಾಸನಗಳಿವೆ.

 

ವಾಯಲಿನ್: 

ವೊಕಲ್ :

ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ).  ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.

ಹೂವಿನ ಕಣಜ : ಜಮೀನಿನಲ್ಲಿ ಸೇವಂತಿಗೆ, ಮಲ್ಲಿಗೆ, ಸುಗಂಧರಾಜ, ಗುಲಾಬಿ, ಚೆಂಡು ಹೂ ಬೆಳೆದಿದ್ದಾರೆ. ವಿಶೇಷವಾಗಿ ಸೇವಂತಿಗೆ ಹೂವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. (ವಿಶೇಷವಾಗಿ ದಸರಾ, ದೀಪಾವಳಿಗೆ ಹೂವಿಗೆ ಬೇಡಿಕೆ)

 ಪ್ರಮುಖ ರಾಜಕಾರಣಿಗಳು 
ಕೆ. ಹೆಚ್. ಪಾಟೀಲ , ಡಿ. ಆರ್. ಪಾಟೀಲ, ಹೆಚ್.ಕೆ.ಪಾಟೀಲ-ಮಾಜಿ ಸಚಿವರು, ಶ್ರೀಶೈಲಪ್ಪ ವಿ. ಬಿದರೂರ

ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ ,ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಣಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೯೫ ಕಿ.ಮೀಗಳು.

ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ , ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ , ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮ(ಗದುಗಿನ ಪಕ್ಷಿಕಾಶಿ), ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೬೫ ಕಿ.ಮೀಗಳು.

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ. ಗದಗ ಪಟ್ಟಣ ಸಾರಿಗೆ ಮತ್ತು ರೈಲು ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ಗದಗದಿಂದ ಮುಂಬಯಿ, ಪೂನಾ, ಹೈದರಾಬಾದ, ತಿರುಪತಿ,ಬೆಂಗಳೂರು, ಮೈಸೂರಗಳಿಗೆ ಐಷಾರಾಮಿ ಬಸ್ಸುಗಳಿವೆ, ಹಾಗು ಹೈದರಾಬಾದ, ತಿರುಪತಿ,ಬೆಂಗಳೂರ , ಮುಂಬಯಿ ರೈಲುಗಳು ಓಡುತ್ತವೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಕಾರವಾರ ಬಂದರು ಗದಗ ಹತ್ತಿರದಲ್ಲಿವೆ.ಹುಬ್ಬಳ್ಳಿ ವಿಮಾನ ನಿಲ್ದಾಣ ಗದಗ ಪಟ್ಟಣದಿಂದ ೫೮ ಕಿ.ಮೀ ಮತ್ತು ಕಾರವಾರ ಬಂದರು ೨೩೫  ಕಿ.ಮೀ ದೂರದಲ್ಲಿವೆ.

ರಾಷ್ಟ್ರೀಯ ಹೆದ್ದಾರಿ ೬೩: ನಗರದ ಹೃದಯ ಭಾಗದಲ್ಲಿ ಹಾಯ್ದು ಹೋಗುವ ರಸ್ತೆಗೆ ಇನ್ನೂ ಹೆಸರಿಡಲಾಗಿಲ್ಲ.

ಜಿಲ್ಲಾ ಕ್ರೀಡಾಂಗಣ :  ಕೆ. ಹೆಚ್. ಪಾಟೀಲ‍‍‍ ಕ್ರೀಡಾಂಗಣ

ವಾರ್ಡ್ ಗಳು 
ನಗರದಲ್ಲಿ ಒಟ್ಟು ೩೫ ವಾರ್ಡ್ ಗಳು ಇರುತ್ತವೆ.

ಗದಗನ ಪ್ರಮುಖ ಬಡಾವಣೆಗಳು
ಹೊಸ ಬಡಾವಣೆಗಳು, ಮಸಾರಿ ,ಸಿದ್ದಲಿಂಗ ನಗರ , ವಿರೇಶ್ವರ ನಗರ ಊರಿನ ಸರ್ವತೋಮುಖ ಬೆಳವಣಿಗೆಯಾಗಿದೆ.

 ಸಿನಿಮಾ ಚಿತ್ರ ಮಂದಿರಗಳು 
ನಗರದಲ್ಲಿ ೬ ಸುಂದರ  ಚಿತ್ರ  ಮಂದಿರಗಳು ಇರುತ್ತವೆ, ಅವುಗಳು ಮಹಾಲಕ್ಷ್ಮಿ, ಶ್ರೀ ಕೃಷ್ಣ, ಚಿತ್ರಾ, ಕರ್ನಾಟಕ, ವೆಂಕಟೇಶ, ಮತ್ತು ಶಾಂತಿ ಚಿತ್ರ ಮಂದಿರಗಳು.

ಖಾದ್ಯ
ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ(ಮಿರ್ಚಿ ಭಜಿ) ತುಂಬ ಪ್ರಸಿದ್ಧ.




#Article 41: ಮಂಡ್ಯ (540 words)


ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. 

ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಜನಸಂಖ್ಯೆ ೧೭,೬೧,೭೧೮(೮೮೭೩೦೭ ಪುರುಷರು, ೮೭೪೪೧೧ ಮಹಿಳೆಯರು). ಇಲ್ಲಿಯ ಜನರ ಪ್ರಮುಖ ಕಸುಬು ಕೃಷಿ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ವಿಸ್ತರಿಸಿದೆ.

ಮಂಡ್ಯ ಜಿಲ್ಲೆಯು 1939ರಲ್ಲಿ ರೂಪುಗೊಂಡಿತು. ಪ್ರಸ್ತುತ ಉತ್ತರಕ್ಕೆ ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದ, ಪೂರ್ವಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಮತ್ತು ಪಶ್ಚಿಮದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಸುತ್ತುವರಿದಿದೆ. ಮಂಡ್ಯ ಜಿಲ್ಲೆ 7 ತಾಲ್ಲೂಕುಗಳನ್ನು ಒಳಗೊಂಡಿದೆ. 

ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು 4,98,244 ಹೆಕ್ಟೇರ್ ಆಗಿದೆ. ಅದರಲ್ಲಿ 2,53,067 ಹೆಕ್ಟೇರ್ಗಳು ಬಿತ್ತನೆಯ ಪ್ರದೇಶವನ್ನು ರೂಪಿಸುತ್ತವೆ. ಜಿಲ್ಲೆಯ ಒಟ್ಟು ಭೂ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚು ಕೃಷಿಗೆ ಬಳಕೆಯಾಗುತ್ತಿದೆ. 94,779 ಹೆಕ್ಟೇರ್ ಭೂಮಿ ನೀರಾವರಿಗೊಳಪಟ್ಟಿದೆ. 19.25 ಲಕ್ಷದ ಒಟ್ಟು ಜನಸಂಖ್ಯೆಯೊಂದಿಗೆ ಸುಮಾರು 5 ಲಕ್ಷ ಜನರನ್ನು ಕೃಷಿ ವಲಯದಲ್ಲಿ ಕೆಲಸಕ್ಕೆ ತೊಡಗಿದ್ದಾರೆ.

ಚಿಕ್ಕಮಂಡ್ಯ, ಬಿದರಕೋಟೆ, ಮಾರಗೌಡನಹಳ್ಳಿ, ಈಚಗೆರೆ, ಚೋಕನಹಳ್ಳಿ, ಕೊಮ್ಮೇರಹಳ್ಳಿ, ಕೀಲಾರ, ಎಚ್.ಮಲ್ಲಿಗೆರೆ, ಹುಲಿವಾನ, ಹನಕೆರೆ, ಹೊನಗಳ್ಳಿಮಠ, ಕಚ್ಚಿಗೆರೆ, ಚನ್ನಕ್ಕೇಗೌಡನ ದೊಡ್ಡಿ, ಬಿ.ಗೌಡಗೆರೆ, ಗೆಜ್ಜಲಗೆರೆ, ಶ್ರೀನಿವಾಸಪುರ, ಸಂತೆಕಸಲಗೆರೆ, ಕೊತ್ತತ್ತಿ, ಭೂತನಹೊಸೂರು, ತಗ್ಗಹಳ್ಳಿ, ಶಿವಳ್ಳಿ, ವಿ. ಸಿ. ಫಾರ್ಮ್, ಹುಳ್ಳೇನಹಳ್ಳಿ, ಗಾಣದಾಳು, ಹೊಳಲು, ಕನ್ನಲಿ, ಗೋಪಾಲಪುರ, ಸಾತನೂರು, ಉಮ್ಮಡಹಳ್ಳಿ, ಬೂದನೂರು, ಚಂದಗಾಲು, ದುದ್ದ, ತೂಬಿನಕೆರೆ, ಯಲಿಯೂರು, ಇಂಡವಾಳು, ಸೂನಗಹಳ್ಳಿ, ಮಂಗಲ, ಶಿವಪುರ, ಬಸರಾಳು, ಜಿ.ಮಲ್ಲಿಗೆರೆ, ಮುತ್ತೇಗೆರೆ, ಎಮ್.ಹ‍‍ಟ್ಣ, ಹಲ್ಲೇಗೆರೆ, ದೊಡ್ಡಗರುಡನಹಳ್ಳಿ, ಕೆರಗೋಡು, ಆಲಕೆರೆ, ಡಣಾಯಕನಪುರ , ಉಪ್ಪುರುಕನಹಳ್ಳಿ, ಮುದಗಂದೂರು, ಬೇವುಕಲ್ಲು, ಬಿ.ಹೊಸೂರು, ಹೊಡಾಘಟ್ಟ,, ಪಣಕನಹಳ್ಳಿ, ಕಬ್ಬನಹಳ್ಳಿ, ಹೆಮ್ಮಿಗೆ, ಹಳೆಬೂದನೂರು, ಬೇಲೂರು, ಎರಹಳ್ಳಿ, ಕಾಗೇಹಳ್ಳದ ದೊಡ್ಡಿ, ಗುತ್ತಲು, ಯತ್ತಗದಹಳ್ಳಿ, ಕುರುಬರದೊಡ್ಡಿ, ಮುದಗೆರೆ, ಬೇವುಕಲ್, ಹ‍‍ಟ್ಣ, ಎಂ.ಮಲ್ಲೇನಹಳ್ಳಿ, ಹುಲಿಕೆರೆ, ಹನಗನಹಳ್ಳಿ, ಮೊತ್ತಹಳ್ಳಿ.

ಹೊಸಹೊಳಲು, ಬೂಕನಕೆರೆ (ಬಿ ಎಸ್ ಯಡಿಯೂರಪ್ಪ ಅವರು ಹುಟ್ಟೂರು), ಬಿ ಬಳ್ಳೇಕೆರೆ ,ಕಿಕ್ಕೇರಿ, ಹರಿಹರಪುರ, ರಾಜೇನಹಳ್ಳಿ, ಬಲ್ಲೇನಹಳ್ಳಿ, ದೊಡ್ಡಗಾಡಿಗನಹಳ್ಳಿ,(ಮಂಜುಮಂಡ್ಯ ಊರು) ಜಿಗೆರೆ, ಮುದುಗೆರೆ, ಮಾವಿನಕೆರೆ, ಸೋಮನಹಳ್ಳಿ, ಸಿಂಧಘಟ್ಟ, ವಿಠಲಾಪುರ, ಐಚನಹಳ್ಳಿ, ಮುರುಕನಹಳ್ಳಿ, ಗೋವಿಂದನ ಹಳ್ಳಿ, ಭೂವರಹನಾಥ ಕಲ್ಲಹಳ್ಳಿ, ಬೆಟ್ಟದ ಹೊಸೂರು,

ಮಾರಸಿ೦ಗನಹಳ್ಳಿ , ಬೆಸಗರಹಳ್ಳಿ, ಬೆಸಗರಹಳ್ಳಿ ಅಡ್ಡರಸ್ತೆ , ಮಾದರಹಳ್ಳಿ,ವಳಗೆರೆಹಳ್ಳಿ,ಚನ್ನೆಗೌಡನದೋಡ್ಡಿ(ಹೆಚ್.ಕೆ.ವಿ.ನಗರ)' ಎಸ್.ಐ.ಹೊನ್ನಲಗೆರೆ,ವಳಗೆರೆಹಳ್ಳಿ, ಕೊಕ್ಕರೆಬೆಳ್ಳೂರು, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮೆಣಸಗೆರೆ, ಕೆ.ಎಂ.ದೊಡ್ಡಿ, ಆತಗೂರು, ನಿಢಗಟ್ಟ, ಹೆಮ್ಮನಹಳ್ಳಿ , ಕೊಪ್ಪ,  ರಾ೦ಪುರ , ಹೊ೦ಬಾಳೆಗೌಡನ ದೊಡ್ಡಿ , ಮುಡೀನಹಳ್ಳಿ,ವಳಗೆರೆಹಳ್ಳಿ, ಗೊರವನಹಳ್ಳಿ, ವೈದ್ಯನಾಥಪುರ, ನೀಲಕಂಠನ ಹಳ್ಳಿ, ಆಲೂರು, ಕೆ.ಹೊನ್ನಲಗೆರೆ,ಚುಂಚಗಹಳ್ಳಿ,  ಕಬ್ಬಾರೆ,ಕೊಕ್ಕರೆ ಬೆಳ್ಳೂರು, ಹುಲಿಕೆರೆ,ಹಳ್ಳಿಕೆರೆ, ನಂಬಿನಾಯಕನಹಳ್ಳಿ , ಸಾದೊಳಲು, ನಗರಕೆರೆ, ಅರಳಕುಪ್ಪೆ, ಕೂಳಗೆರೆ, ತೊರೆ ಬೊಮ್ಮನಹಳ್ಳಿ, ಅಣ್ಣೂರು, ಕೌಡ್ಲೆ, ಬೆಕ್ಕಳಲೆ, ಕಿರಂಗೂರು, ಹೊಸಗಾವಿ, ಧರಮನ ಕಟ್ಟೆ, ಕಾಡುಕೊತ್ತನಹಳ್ಳಿ, ಆಬಲವಾಡಿ, ದೇಶಹಳ್ಳಿ, ಶ೦ಕರಪುರ , ಚಾಪುರದೊಡ್ಡಿ , ಚಾಮನಹಳ್ಳಿ, ಮರಳಿಗ, ಗೆಜ್ಜಲಗೆರೆ, ಕದಲೂರು, ಸೋಮನಹಳ್ಳಿ, ಅರುವನಹಳ್ಳಿ,
ಹುಳಗನಹಳ್ಳಿ,ಹೊನ್ನಾಯಕ್ಕನಹಳ್ಳಿ, ಅಂಬರಹಳ್ಳಿ ,ಕೆ.ಕೊಡಿಹಳ್ಳಿ , ಶಿವಪುರ. ತೋರೆಶೆಟ್ಟಹಳ್ಳಿ, ಮಲ್ಲನಕುಪ್ಪೆ, ಹನುಮಂತನಗರ, ನಾಗನದೊಡ್ಡಿ ,ಕಣಿಕೆಂಪನ ದೊಡ್ಡಿ, ಮುಳ್ಳಹಳ್ಳಿ ,ನಿಲುವಾಗಿಲು ,ಕೋಡಿಹಳ್ಳಿ 
,ದೇವೇಗೌಡನದೊಡ್ಡಿ,ಬನ್ನಹಳ್ಳಿ ಕೂಳಗೆರೆ

ಮೇಲುಕೋಟೆ (ಚಲುವನಾರಯಣಸ್ವಾಮಿ ಸನ್ನಿಧಿ),ಹಿರಿಮರಳಿ, ಹರವು(ಶ್ರೀ ರಾಮ ದೇವರ ಪ್ರಾಚೀನ ಸ್ಮಾರಕ, ಕ್ರಿ.ಶ ೧೩೬೯ ರಲ್ಲಿ, ವಿಜಯನಗರದ ಮೊದಲನೆ ದೊರೆ, ವೀರ ಬುಕ್ಕಣ್ಣ ಒಡೆಯರ್​ ನಿರ್ಮಿಸಿದರು) , ನರಹಳ್ಳಿ, ಡಿಂಕಾ, ಬೇಬಿಗ್ರಾಮ, ಕಟ್ಟೇರಿ, ಅರಳಕುಪ್ಪೆ, ಮಾಣಿಕ್ಯನಹಳ್ಳಿ, ನಾರಾಯಣಪುರ, ಹೊನಗಾನಹಳ್ಳಿ, ಗುಮ್ಮನಹಳ್ಳಿ, ಕೆನ್ನಾಳು,  ಬೊಳೆನಹಳ್ಳಿ, ಮೆನಾಗ್ರ, ಮೂಡಲಕೊಪ್ಪಲು, ಶಂಬೂನಹಳ್ಳಿ, ಕೆ.ಬೆಟ್ಟಹಳ್ಳಿ, ಚಿನಕುರುಳಿ (ಸಿ.ಎಸ್. ಪುಟ್ಟರಾಜು) , ಜಕ್ಕನಹಳ್ಳಿ, ಕ್ಯಾತನಹಳ್ಳಿ (ಕೆ.ಎಸ್. ಪುಟ್ಟಣ್ಣಯ್ಯ), ಚೀಕನಹಳ್ಳಿ, ಸುಂಕಾತೊಣ್ಣೂರು, ಚಿಕ್ಕಾಡೆ, ಹಳೇಬೀಡು, ಟಿ.ಎಸ್.ಛತ್ರ, ಇಂಗಲಗುಪ್ಪೆ(ಇ.ಎಸ್. ವೆಂಕಟರಾಮಯ್ಯ), ಕನಗನಮರಡಿ, ಲಕ್ಷ್ಮೀಸಾಗರ(ಸೋಬಾನೆ ಕೃಷ್ಣೇಗೌಡರು - ಕಲಾವಿದ ಪ್ರತಾಪ್.ಲವೆಂಪ್ರ), ಹೊಸಕನ್ನಂಬಾಡಿ, ಬಸ್ತಿಹಳ್ಳಿ , ಬನ್ನಂಗಾಡಿ, ಬೇವಿನಕುಪ್ಪೆ, ಬಳ್ಳೆಹತ್ತಿಗುಪೆ, ಬಳಘಟ್ಟ, ಹೆಗ್ಗಡಹಳ್ಳಿ, ರಾಗಿಮುದ್ದನನಹಳ್ಳಿ, ಪಟ್ಟಸೋಮನಹಳ್ಳಿ, ನರಹಳ್ಳಿ, ಮಹದೇಶ್ವರಪುರ, ತೊಣ್ಣೂರು ಕೆರೆ (ನಂಬಿ ನಾರಾಯಣ ಸ್ವಾಮಿ ಐತಿಹಾಸಿಕ ದೇವಾಲಯ).ಅರಕನಕೆರೆ ದೊಡ್ಡಬ್ಯಾಡರಹಳ್ಳಿ.

ಮಳವಳ್ಳಿ ತಾಲ್ಲೂಕಿನ  ಪ್ರಮುಖ ಗ್ರಾಮಗಳು
ಬೆಂಡರವಾಡಿ,ಕರಲಕಟ್ಟೆ,ಹೊಸಹಳ್ಳಿ,ಮುತ್ತತ್ತಿ, ಕಿರುಗಾವಲು,ಶಿವನಸಮುದ್ರ,ತೊರೆಕಾಡನಹಳ್ಳಿ,ಸಾವ೦ದಿಪುರ,ಹಾಡ್ಲಿ,ಹುಸ್ಕೂರು,ತಲಗವಾದಿ,ಹೊನ್ನಲಗೆರೆ,ಅಂಚೆದೊಡ್ಡಿ,ಮಿಕ್ಕೇರೆ,ಮಂಚನಹಳ್ಳಿ,ಅಂತರವಳ್ಳಿ,ಯತ್ತಂಬಾಡಿ,ಅಂಕನಹಳ್ಳಿ,ಬುಯ್ಯನದೊಡ್ಡಿ,ಬಸಪುರ,ನಿಟ್ಟೂರು,ಕೋಡಿಹಳ್ಳಿ,ಸಾಗ್ಯ,ಪಂಡಿತಹಳ್ಳಿ.ಕುಲುಮೆದೊಡ್ಡಿ,ಸಿದ್ದಾಪುರ,ಕುಂತೂರು,ದೊಡ್ಡಚನ್ನೀಪುರ,ಪುರುದೊಡ್ಡಿ,ಬಸವನಹಳ್ಳಿ,ಕುಂದುರು,ಹುಲ್ಲೆಗಾಲ,ಹುಲ್ಲಹಳ್ಳಿ,ಅಗಸನಪುರ,ಕೋಡಿಪುರ,ನಿಡಘಟ್ಟ,ಸುಣ್ಣದದೊಡ್ಡಿ,ಹೊಸುರು,ಹೊಸಪುರ,ಬ್ಯಾಡರಹಳ್ಳಿ,ಹಲಗೂರು,ರಾಮಂದೂರ,ಮೇಗಳಪುರ,ಕಂಸಾಗರ.

ಅಗ್ರಹಾರಬಾಚಹಳ್ಳಿ, ಆನೆಗೊಳೆ,ಅಘಲಯ, ಬಳ್ಳೇಕೆರೆ,  ಅಣ್ಣೇಚಾಕನಹಳ್ಳಿ, ತೆರ್ನೇನಹಳ್ಳಿ, ಕಾಮನಹಳ್ಳಿ,ತೆಂಡೇಕೆರೆ, ಅಕ್ಕಿಹೆಬ್ಬಾಳು, ಬೂಕನಕೆರೆ, ಕಿಕ್ಕೇರಿ, ಸಂತೇಬಾಚಹಳ್ಳಿ, ಶೀಳನೆರೆ, ವಸಂತಪುರ, ರಾಯಸಮುದ್ರ,ಬಲ್ಲೇನಹಳ್ಳಿ, ಬಳ್ಳೇಕೆರೆ, ಬೀರುವಳ್ಳಿ, ಬೂಕನಕೆರೆ, ಬಂಡಿಹೊಳೆ, ಭಾರತಿಪುರ, ಚೌಡೇನಹಳ್ಳಿ, ದಬ್ಬೇಘಟ್ಟ, ಗಂಜಿಗೆರೆ, ಹರಳಹಳ್ಳಿ, ಹರಿಹರಪುರ, ಹಿರಿಕಳಲೆ, ಐಕನಹಳ್ಳಿ, ಐಚನಹಳ್ಳಿ, ಲಕ್ಷ್ಮಿಪುರ, ಮಡುವಿನಕೋಡಿ, ಮಾಕವಳ್ಳಿ, ಮಾದಾಪುರ, ಮುರುಕನಹಳ್ಳಿ, ಮಂದಗೆರೆ,  ರಂಗನಾಥಪುರ, ಸಾರಂಗಿ, ಸಿಂಧಘಟ್ಟ, ವಿಠಲಾಪುರ,ಮುದುಗೆರೆ, ಗದ್ದೆಹೊಸೂರು,ಆಲಂಬಾಡಿ,ಇತರೆ

ಮಸಗೋನಹಳ್ಳಿ, ತುಪ್ಪದಮಡು, ಕಾಡುಅಂಕನಹಳ್ಳಿ,ಚುಂಚನಗಿರಿ, ನೆಲ್ಲಿಗೆರೆ, ಬೆಳ್ಳೂರು, ಮುತ್ತಲಮ್ಮನ ಶೆಟ್ಟಹಳ್ಳಿ, ಬಸರಾಳು, ದೇವಲಾಪುರ, ಆರಣಿ, ಕರಡಹಳ್ಳಿ, ಮಾಯಿಗೋನಹಳ್ಳಿ, ಹರದನಹಳ್ಳಿ, ಬ್ರಹ್ಮದೇವರಹಳ್ಳಿ, ಲಾಳನಕೆರೆ, ಭೀಮನಹಳ್ಳಿ, ಕದಬಹಳ್ಳಿ, ದೇವಲಾಪುರ, ದೇವರ ಮಲ್ಲನಾಯಕನಹಳ್ಳಿ, ಚುಂಚನಹಳ್ಳಿ, ಚೀಣ್ಯ, ಗುಡೇನಹಳ್ಳಿ, ಕಾಂತಾಪುರ, ಜವರನಹಳ್ಳಿ, ಅಂಚೆಚಿಟ್ಟನಹಳ್ಳಿ, ಹೊನಕೆರೆ, ಬೋಗಾದಿ, ನೆಲ್ಲಿಗೆರೆ, ಹೊನ್ನಾವರ ಗುಡೆಹೊಸಹಳ್ಳಿ, ಚೌಡಗೋನಹಳ್ಳಿ, ಖರಡ್ಯ ಮಾಚಲಘಟ್ಟ, ಕವಡಳ್ಳೀ

ಕೊಡಿಯಾಲ, ಹುಣಸನಹಳ್ಳಿ, ರಸಗುಪ್ಪೆ , ಬಲ್ಲೇನಹಳ್ಳಿ, ಮಹದೇವಪುರ, ಸಬ್ಬನಕುಪ್ಪೆ, ಮ೦ಡ್ಯ ಕೊಪ್ಪಲು, ಅರಕೆರೆ, ನೆರಾಲಕೆರೆ, ಗಾಮನಹಳ್ಳಿ, ಪಾಲಹಳ್ಳಿ, ಬೆಳಗೊಳ, ಹುಲಿಕೆರೆ, ಕಪರನಕೊಪ್ಪಲು ಕಿರಂಗೂರು ಬಿ.ಅರ್ ಕೊಪ್ಪಲ್. ಅಚ್ಚಪ್ಪನಕೊಪ್ಪಲು ರಾಂಪುರ, ನಗುವನಹಳ್ಳಿ, ಟಿ.ಎಂ.ಹೊಸೂರು, ಕೃಷ್ಣರಾಜಸಾಗರ, ತಡಗವಾಡಿ, ಅಲಾಗುಡು, ನೀಲನ ಕೊಪ್ಪಲು.

ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು, ಬತ್ತ, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು, ವಾಣಿಜ್ಯ ಬೆಳೆ ರೇಷ್ಮೆ, ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ ಸಕ್ಕರೆಯ ಜಿಲ್ಲೆ , ಮಧುರ ಮಂಡ್ಯ ಎನಿಸಿಕೊಂಡಿದೆ.




#Article 42: ರಾಯಚೂರು ಜಿಲ್ಲೆ (149 words)


ರಾಯಚೂರು ಕರ್ನಾಟಕ ರಾಜ್ಯದ  ಉತ್ತರ ಭಾಗದಲ್ಲಿರುವ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ. ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೦೧ ರ ಜನಗಣತಿಯಂತೆ ೧೬,೪೮,೨೧೨. ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ,,  ಲಿಂಗಸುಗೂರು, ಮಸ್ಕಿ , ಸಿರಿವಾರ  ಮತ್ತು   ಅರಕೇರಾ. ಜಿಲ್ಲಾಕೇಂದ್ರ ರಾಯಚೂರು ನಗರ. ಇದು ಬೆಂಗಳೂರಿನಿಂದ ೪೦೯ ಕಿ. ಮೀ. ದೂರದಲ್ಲಿದೆ.

ಸಾಮ್ರಾಟ್ ಅಶೋಕನ ಕುರಿತ ದೇಶದ ಅತಿಮುಖ್ಯ ಶಿಲಾಶಾಸನಗಳಲ್ಲಿ ಒಂದೆನಿಸಿದ ಮಸ್ಕಿ ಶಾಸನವು, ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ದೊರೆತಿರುವುದು ರಾಯಚೂರಿನ ಶ್ರೀಮಂತ ಇತಿಹಾಸಕ್ಕೆ ಒಂದು ಐತಿಹಾಸಿಕ ಸಾಕ್ಷಿ. 

ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ  ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು.  ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ನೆಲವಾಗಿತ್ತು.

ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ನದಿ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ.

ಮಳೆಯ ಕೊರತೆ, ನೀರಿನ ಅಭಾವ ಜಿಲ್ಲೆಯ ಸಾಮಾನ್ಯ ಸಮಸ್ಯೆಗಳಾದರೆ, ಅತಿಯಾದ ಬಿಸಿಲು ಜಿಲ್ಲೆಯ ಮತ್ತೊಂದು ಲಕ್ಷಣ.

ಜಿಲ್ಲೆಯ ಹವಾಗುಣವು ಬಹುತೇಕ  ಒಣ  ಹವೆ ಇರುತ್ತದೆ. ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೪೫ ಡಿಗ್ರಿವರೆಗೆ ಉಷ್ಣತೆ ಇರುತ್ತದೆ.




#Article 43: ಬಳ್ಳಾರಿ (317 words)


ಬಳ್ಳಾರಿ ಕರ್ನಾಟಕ ರಾಜ್ಯದ ಒಂದು ಪ್ರಮುಖ ಜಿಲ್ಲೆ; ಇದೇ ಹೆಸರಿನ ನಗರ ಜಿಲ್ಲೆಯ ರಾಜಧಾನಿ.

ಬಳ್ಳಾರಿ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ. 

ಚರಿತ್ರೆ
ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.

ಭೌಗೋಳಿಕತೆ
ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.

ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಸಿಂಧಿಗೇರಿ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ.
ಓರೆ ಅಕ್ಷರಗಳು

ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.

ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.

ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ.




#Article 44: ಚಂದ್ರಶೇಖರ ವೆಂಕಟರಾಮನ್ (288 words)


ಸರ್ ಸಿ.ವಿ.ರಾಮನ್, ಎಂದೇ ತಮ್ಮ ಆಪ್ತಗೆಳೆಯರು ಹಾಗೂ ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು, ನೋಬೆಲ್ ಪ್ರಶಸ್ತಿ ಗಳಿಸಿದ, ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ ರಾಮನ್ ಎಫೆಕ್ಟ್ ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು.

ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್  ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ  ಹೆಸರು, ಪಾರ್ವತಿ ಅಮ್ಮಾಳ್. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.

ಡಾ. ರಾಮನ್, ೬, ಮೇ, ೧೯೦೭ ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬ ಹುಡುಗಿಯೊಂದಿಗೆ ವಿವಾಹವಾದರು.(೧೮೯೨–೧೯೮೦ [೨೧]). 'ರಾಮನ್,' 'ಲೋಕಸುಂದರಿ ಅಮ್ಮಾಳ್' ದಂಪತಿಗಳಿಗೆ ಚಂದ್ರಶೇಖರ್, ಮತ್ತು ರಾಧಾಕೃಷ್ಣನ್, ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.

ಈ  ತತ್ತ್ವವು ವಿಜ್ಞಾನಕ್ಕೆ ಸರ್ ಸಿ.ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ  ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು.  ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ  ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯ ಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷ್ಯದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.

೧೯೩೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ರಾಮನ್, ತದನಂತರ ೧೯೪೩ರಲ್ಲಿ ರಾಮನ್ ಸಂಶೋಧನಾ ಕೆಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು.  ಪ್ರೊ. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು  “ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ” ಎಂಬ ವಿಜ್ಞಾನ ಸಂಶೋಧನಾ ಸಂಸ್ಥೆಯನ್ನು ಅವರ ಜೀವಿತ ಕಾಲದಲ್ಲೇ ಸ್ಥಾಪಿಸಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಭಾವಿ ಸಂಶೋಧಕರಿಗೆ ಬಿಟ್ಟುಹೋಗಿರುವ ಈ ಸಂಸ್ಥೆ  ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನ ಸಂಸ್ಥೆಯಾಗಿದೆ.

ನವೆಂಬರ್ ೨೧ ೧೯೭೦ ರಲ್ಲಿ, 'ಪ್ರೊ.ರಾಮನ್' ರವರು, ದೇಮಹಳ್ಳಿಯಲ್ಲಿ ನಿಧನರಾದರು.

 ನಿಮ್ಮನ್ನು ಪಡೆದ ನಾವೇ ಧನ್ಯರು




#Article 45: ಜಗದೀಶ್ಚಂದ್ರ ಬೋಸ್ (302 words)


ಸರ್ ಜಗದೀಶ್‌ಚಂದ್ರ ಬೋಸ್, ಸಿಎಸ್‌ಐ , ಸಿಐಈ, ಎಫ್‌ಆರ್‌ಎಸ್ (ನವೆಂಬರ್ ೩೦, ೧೮೫೮ – ನವೆಂಬರ್ ೨೩, ೧೯೩೭) ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಟ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು. ಭಾರತ ಉಪಖಂಡದಲ್ಲಿ ಪ್ರಯೋಗವಿಜ್ಞಾನಕ್ಕೆ ಅಡಿಪಾಯ ಹಾಕಿದವರು ಇವರು. ರೇಡಿಯೋ ವಿಜ್ಞಾನದ ತಂದೆ ಎಂದೂ , ಬೆಂಗಾಲಿ ವಿಜ್ಞಾನಸಾಹಿತ್ಯದ ತಂದೆ ಎಂದೂ ಇವರನ್ನು ಪರಿಗಣಿಸಲಾಗುತ್ತದೆ. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಅಮೇರಿಕದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಇದು ಆದದ್ದು ೧೯೦೪ರಲ್ಲಿ.

ಭೋಸ್ ಅವರು ನವೆಂಬರ್ ೩೦, ೧೮೫೮ರ ವರ್ಷದಲ್ಲಿ ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು.   ಕಲಕತ್ತೆಯ ಸೇಂಟ್ ಝೇವಿಯರ್ ಶಾಲೆ ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಓದಿ, ಲಂಡನ್ನಿಗೆ ವೈದ್ಯಕೀಯವನ್ನು ಕಲಿಯಲು ತೆರಳಿದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಅವರು ಹೆಚ್ಚು ಕಾಲ ಅಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಲಾಗಲಿಲ್ಲ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿ ೧೮೮೪ರಲ್ಲಿ ಕಲ್ಕತ್ತೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಜನಾಂಗಭೇದವಿದ್ದಾಗ್ಯೂ ಮತ್ತು ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣದ ಸಹಾಯ ಇಲ್ಲದೇ ಇದ್ದಾಗ್ಯೂ ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ರೇಡಿಯೋ ಮತ್ತು ವೈರ್ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಅವರು ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಅವರು ತಮ್ಮ ಸಂಶೋಧನೆಗಳಿಂದ  ವಾಣಿಜ್ಯಿಕ ಲಾಭ ಮಾಡಿಕೊಳ್ಳುವುದರ ಬದಲು ತಾವು ಕಂಡುಹಿಡಿದುದನ್ನು ಉಳಿದವರು ಅಭಿವೃದ್ಧಿಪಡಿಸಲಿ ಎಂಬ ಮಹಾನ್ ಮನೋಧರ್ಮದಲ್ಲಿ  ಬಹಿರಂಗಪಡಿಸಿದರು. ನಂತರದಲ್ಲಿ, ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿತೋರಿಸಿದರು.

ಹಿತೈಷಿಗಳ ಒತ್ತಡಕ್ಕೆ ಮಣಿದು ತಮ್ಮ ಸಂಶೋಧನೆಗಳಲ್ಲಿ ಒಂದಕ್ಕೆ ಅವರು ಪೇಟೇಂಟ್ ಗಾಗಿ ಅರ್ಜಿ ಸಲ್ಲಿಸಿದರಾದರೂ ಯಾವುದೇ ಬಗೆಯ ಪೇಟೆಂಟ್ ಪಡೆಯುವುದರಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ ಎಂಬುದನ್ನು ವಿಶ್ವವೇ ಬಲ್ಲಂತ  ಸಂಗತಿಯಾಗಿದೆ. “ನಾನೇನೂ ಸೃಷ್ಟಿಕರ್ತನಲ್ಲ.  ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು  ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು” ಎಂಬುದು ಅವರ ಹೃದಯ ವೈಶಾಲ್ಯ ವಿಚಾರಧಾರೆಯಾಗಿತ್ತು.

ಅವರು ತೀರಿಕೊಂಡ ಹಲವಾರು  ವರುಷಗಳ ನಂತರ ಅವರು ಆಧುನಿಕ ವಿಜ್ಙಾನಕ್ಕೆ ಸಲ್ಲಿಸಿದ ಅನೇಕ ಕೊಡುಗೆಗಳಿಗಾಗಿ ಅವರನ್ನು ಗುರುತಿಸಲಾಗುತ್ತಿದೆ.

ಬೋಸ್ ಅವರು ಕೆಲವೊಂದು ಪ್ರಮುಖ ಕೃತಿಗಳು ಇಂತಿವೆ 

ಬೋಸ್ ಅವರಿಗೆ ರವೀಂದ್ರನಾಥ್ ಠಾಗೂರ್ ಅವರೊಂದಿಗೆ ಆಪ್ತ ಸ್ನೇಹವಿತ್ತು. ಐನ್ ಸ್ಟೀನ್ ಅವರೊಂದಿಗೂ  ಸಂಪರ್ಕವಿತ್ತು.  ಜಗದೀಶ್ ಚಂದ್ರ ಬೋಸರಲ್ಲಿ ಆಧ್ಯಾತ್ಮಿಕ - ವೈಜ್ಞಾನಿಕ ಚಿಂತನೆಗಳೆರಡೂ ಒಂದಾಗಿ ಮೇಳೈಸಿದ್ದವು ಎಂಬುದು ಪ್ರಾಜ್ಞರ ಅಭಿಮತ.

ನವೆಂಬರ್ ೨೩, ೧೯೩೭ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.

ಭಾರತದ ವಿಜ್ಞಾನಿಗಳು




#Article 46: ಚಿತ್ರದುರ್ಗ (330 words)


ಚಿತ್ರದುರ್ಗ ನಗರ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ನಗರ. ಈ ನಗರವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೦೦ಕಿಮೀ ದೂರದಲ್ಲಿದೆ.

ಚಿತ್ರದುರ್ಗ ನಗರವು  ಪುರಾಣದ ಪ್ರಕಾರ ಶ್ರೀಕೃಷ್ಣ  ಜಾಂಬವತಿಯ ಪುತ್ರನಾದ  ಚಿತ್ರಕೇತು  ಆಳ್ವಿಕೆ ಮಾಡಿದ  ಪ್ರದೇಶ. ಆ ಕಾರಣದಿಂದಲೇ ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು.

೨೦೧೧ರ ಜನಗಣತಿಯ ಪ್ರಕಾರ, ಚಿತ್ರದುರ್ಗ ನಗರದ ಜನಸಂಖ್ಯೆ ೧,೨೫,೧೭೦. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಚಿತ್ರದುರ್ಗದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯.೫%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೦% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೨%. ಚಿತ್ರದುರ್ಗದಲ್ಲಿ ಸುಮಾರು ೧೧% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಚಿತ್ರದುರ್ಗ ನಗರದ ಆಡಳಿತವನ್ನು ಚಿತ್ರದುರ್ಗ ನಗರ ಮುನ್ಸಿಪಲ್ ಕೌನ್ಸಿಲ್ ನೆಡೆಸುತ್ತದೆ.

ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ಸೇರಿದ ಹಲವು ರಾಜರು ಚಿತ್ರದುರ್ಗ ಕೋಟೆಯನ್ನು ಸುಮಾರು ೧೦ರಿಂದ ೧೮ನೇ ಶತಮಾನದವರೆಗೆ ಕಟ್ಟಿದರು.

ಚತ್ರದುರ್ಗ, ಚೋಲಗುಡ್ಡ ಮತ್ತು ಕಿರುಬನಕಲ್ಲು ಗುಡ್ಡಗಳ ನಡುವೆ ಚಂದ್ರವಳ್ಳಿ ಗುಹೆಗಳಿವೆ.
ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಾಲಯ.

ಅಶೋಕ ಸಿದ್ದಾಪುರ :

ಅಶೋಕ ಸಿದ್ದಾಪುರ ಚಿತ್ರದುರ್ಗ ಜಿಲ್ಲೆಯ ಒಂದು ಪ್ರಮುಖ ಪುರಾತತ್ವ ಸ್ಥಳವಾಗಿದ್ದು, ಅಲ್ಲಿಂದ ಅಶೋಕ ಚಕ್ರವರ್ತಿಯ ಶಾಸನಗಳನ್ನು ಉತ್ಖನನ ಮಾಡಲಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ರಾಮಗಿರಿ ಎಂಬ ಗುಡ್ಡಗಾಡು ಹತ್ತಿರದಲ್ಲಿದೆ. ರಾವಣನು ಸೀತೆಯನ್ನು ಅಪಹರಿಸಿ ಮತ್ತೆ ಲಂಕಾಕ್ಕೆ ಪ್ರಯಾಣಿಸುತ್ತಿದ್ದಾಗ, ಪೌರಾಣಿಕ ಹದ್ದು ಜಟಾಯು ಇಲ್ಲಿ ಅವನೊಂದಿಗೆ ಹೋರಾಡಿದನೆಂದು ನಂಬಲಾಗಿದೆ. ಜಟಾಯು ಯುದ್ಧದಲ್ಲಿ ಪ್ರಾಣ ಕಳೆದುಕೊಂಡರು ಮತ್ತು ನಂತರ, ಜಟಾಯುವಿನ ಕೊನೆಯ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ, ರಾಮನು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು. ರಾಮೇಶ್ವಾ ಎಂದು ಕರೆಯಲ್ಪಡುವ ದೇವಾಲಯ

ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ (ಹೆಸರು ಗೊತ್ತಿಲ್ಲ) ನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ




#Article 47: ಉಡುಪಿ ಜಿಲ್ಲೆ (165 words)


ದಪ್ಪಗಿನ ಅಕ್ಷರ

ಉಡುಪಿ (ತುಳು:ಒಡಿಪು) ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ಥಿತ್ವಕ್ಕೆ ಬಂದಿತು. ಉತ್ತರದ ನಾಲ್ಕು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಬ್ರಹ್ಮಾವರ ತಾಲೂಕನ್ನು ೨೦೧೮ರಲ್ಲಿ ರೂಪಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರು ಇದ್ದಾರೆ.

 

ಮೋಗವೀರ ಆರಾಧ್ಯ ದೈವ ನಂಬಿ ಮೀನುಗಾರಿಕೆ ನಡೆಸುತ್ತಾರೆ

ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಕಬ್ಬಿಣದ ಅದಿರು ಹೇರಳವಾಗಿದೆ. ಕೊಡಚಾದ್ರಿಯ ಬಳಿ ಈ ಅದಿರನ್ನು ತೆಗೆಯಲಾಗುತ್ತದೆ. ಕುಂದಾಪುರ ತಾಲ್ಲೂಕಿನಲ್ಲಿ ಉತ್ತಮ ದರ್ಜೆಯ ಬಾಕ್ಸೈಟ್ ಇದೆ. ಸುಣ್ಣದ ಚಿಪ್ಪು, ಸಿಲಿಕ ಮರಳು, ಸಿಲಿಮನೈಟ್, ಸೋಪುಕಲ್ಲು, ಹಂಚಿನ ತಯಾರಿಕೆಯ ಮಣ್ಣು-ಇವು ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರೆಯುತ್ತವೆ. ಕಾಪು, ಪಡುಬಿದರೆ, ಉದ್ಯಾವರ ಮೊದಲಾದೆಡೆಗಳಲ್ಲಿ ಅಭ್ರಕದಿಂದ ಕೂಡಿದ ಬೆಣಚುಕಲ್ಲಿನ ಶಿಲೆಗಳಿವೆ. ಮಲ್ಪೆ ಬಳಿ ಹೆಂಚು ತಯಾರಿಕೆಗೆ ಉಪಯುಕ್ತವಾದ ಮಣ್ಣು ದೊರೆಯುತ್ತದೆ.

ಉಡುಪಿಯ ಕೇಂದ್ರಬಿಂದುವಾದ ಕೃಷ್ಣ ಮಠವನ್ನು ಅಷ್ಟ ಮಠಗಳು ನಡೆಸುತ್ತವೆ. ಅಷ್ಟ ಮಠಗಳು ಕೆಳಕಂಡಂತಿವೆ:

ಶ್ರೀ ಗುಡ್ಡೆ ಗಣಪತಿ ದೇವಾಲಯ) ಗಳೂ, ಎರಡು ಪ್ರೌಢಶಾಲೆಗಳೂ ಇವೆ.

ಸಾಲಿಗ್ರಾಮ ನರಸಿಂಹ ಮತ್ತು ಹನುಮಾನ್ ದೇವಸ್ಥಾನ
ಕೋಟ ಅಮೃತೇಶ್ವರಿ ದೇವಸ್ಥಾನ
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
ಕೋಟ ಶನೇಶ್ವರ ದೇವಸ್ಥಾನ
ಕುಂಭಾಸಿ ಅಮ್ಮನವರ ದೇವಸ್ಥಾನ
ಕೋಟಿ ಲಿಂಗೇಶ್ವರ ಕೋಟೇಶ್ವರ ದೇವಸ್ಥಾನ 
ಮೋಗವೀರ ಕುಲಮಹಸ್ರೀ ದೇವಸ್ಥಾನ

ಚಿತ್ರ:1-Turtle bay resort, Trasi, Mangalore 155.jpg|250px|'ಉಡುಪಿ ದೇವಸ್ಥಾನದ ಹತ್ತಿರವಿರುವ ಸ್ವಾಗತ ಗೋಪುರ'
ಚಿತ್ರ:UK.jpg|250px|' ಕನಕನ ಕಿಂಡಿಯನ್ನು ಇಲ್ಲಿಂದ ನೋಡಬಹುದು'
ಚಿತ್ರ:MM.jpg|250px|'ದೇವರ ದರ್ಶನಕ್ಕೆ ಸಾಲು'
File:Malpe.jpg|




#Article 48: ತುಮಕೂರು (503 words)


ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.

ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ.

ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಮಧುಗಿರಿ ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ.  ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ.

ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ,
ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ  ಪುಣ್ಯಕ್ಷೇತ್ರ
ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ , ಕರ್ನಾಟಕ 

ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ.

ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು.

ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು.

ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ 

ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ
ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.

ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು  ಮತ್ತು ಸಂಸ್ಕ್ರುತ  ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.  ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ.




#Article 49: ಬೆಳಗಾವಿ (842 words)


ಬೆಳಗಾವಿ ಉತ್ತರ ಕರ್ನಾಟಕದಲ್ಲಿ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ರಾಜ್ಯದ ಎರಡನೇ ರಾಜಧಾನಿ ಎಂದು ನೇಮಿಸಲ್ಪಟ್ಟ ಮಹಾನಗರ (ಅಂಗೀಕಾರವಾಗಿಲ್ಲ). ಇಂಡಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.

ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ. ಆದರೆ ಈಗಿರುವ ಹೆಸರು ಬಂದದ್ದು ಬೆಳ್ಳಗೆ+ಆವಿ ಎಂದರೆ ಇಲ್ಲಿನ ವಾತಾವರಣದಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ ಬೆಳ್ಳಗಾವಿ ಹೆಸರು ಬಂದಿದೆ.  ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ ಹಲಸಿ - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು ಕದಂಬ ವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದು, ನಂತರ ರಾಷ್ಟ್ರಕೂಟರ ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ ಯಾದವರು ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. ಆದರೆ ಕೆಲವೇ ವರ್ಷಗಳ ನಂತರ ವಿಜಯನಗರ ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ ಹೈದರ್ ಅಲಿ ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ ಪೇಶ್ವೆಗಳು ಈ ಪ್ರದೇಶವನ್ನು ಗೆದ್ದರು. ೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾಂತಂತ್ರ್ಯಪಡೆದ ನಂತರ ಬೆಳಗಾವಿ ಮುಂಬಯಿ ರಾಜ್ಯದ ಭಾಗವಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿಂಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನ ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನಂತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನಂತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮುಂದುವರಿಯಿತು.

ಬೆಳಗಾವಿ ಜಿಲ್ಲೆಯಲ್ಲಿರುವ ಕಿತ್ತೂರು ಚಾರಿತ್ರಿಕವಾಗಿ ಪ್ರಸಿದ್ಧ. ಕಿತ್ತೂರು ರಾಣಿ ಚೆನ್ನಮ್ಮ ಚರಿತ್ರೆಯಲ್ಲಿ ಸಾಹಸ ಮತ್ತು ಧೈರ್ಯದ ಪ್ರತೀಕವಾಗಿದ್ದಾಳೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಬೆಳಗಾವಿಯ ಇನ್ನೊಬ್ಬ ಪ್ರಸಿದ್ಧ ವ್ಯಕ್ತಿಯೆಂದರೆ ಸಂಗೊಳ್ಳಿ ರಾಯಣ್ಣ.

ಸ್ವಾಂತಂತ್ರ್ಯ ಪೂರ್ವ ಭಾರತದ ಇತಿಹಾಸದಲ್ಲು ಬೆಳಗಾವಿ ತನ್ನದೇ ಆದ ಪಾತ್ರವನ್ನ ಹೊಂದಿತ್ತು. ಡಿಸೆಂಬರ್ ೧೯೨೪ ರಲ್ಲಿ  ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ೩೯ ನೇ ಭಾರತೀಯ ಕಾಂಗ್ರೆಸ್ ಅಧಿವೇಶನ  ಬೆಳಗಾವಿಯಲ್ಲಿ ನಡೆದಿತ್ತು.

ಬೆಳಗಾವಿ ನಗರ ಸಮುದ್ರ ಮಟ್ಟದಿಂದ ೨೫೦೦ ಅಡಿ (೭೬೨ ಮೀ)ಎತ್ತರದಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ೫೦೨ ಕಿಮೀ ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿ ನೆಲೆಸಿದ್ದು ಇತರ ನೆರೆ ರಾಜಧಾನಿಗಳಾದ ಮುಂಬಯಿನಿಂದ ದಕ್ಷಿಣಕ್ಕೆ ಸುಮಾರು ೫೦೦ ಕಿಮೀ ಹೈದರಾಬಾದನಿಂದ ಪಶ್ಚಿಮಕ್ಕೆ ೫೧೫ ಕಿಮೀ ಹಾಗು ಗೋವಾ ರಾಜಧಾನಿ ಪಣಜಿಯಿಂದ ೧೫೯ ಕಿಮೀ ದೂರದಲ್ಲಿದೆ. ಸಹ್ಯಾದ್ರಿಯ ಮಡಿಲಲ್ಲಿ ಹಾಗು ಸಮೀಪದ ಅರಬ್ಬೀ ಸಮುದ್ರದಿಂದ ಕೇವಲ ೧೦೦ ಕಿಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಒಂದು ಸುಂದರ ನಗರ.

ಪ್ರತಿಕೂಲ ಹವಾಮಾನ, ಉತ್ತಮ ಮಳೆ, ಸಮೀಪದ ದಟ್ಟವಾದ ಅರಣ್ಯ ಜಿಲ್ಲೆಯ ಪ್ರಮುಖ ಲಕ್ಷಣಗಳು. ಕ್ಕೃಷ್ಣ, ಘಟ್ಟಪ್ರಭೆ, ಮಲಪ್ರಭ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೇದಗಂಗೆ ಜಿಲ್ಲೆಯ ಪ್ರಮುಖ ನದಿಗಳು.
ರಾಕಸಕೊಪ್ಪ ಜಲಾಶಯ,ಹಿಡಕಲ್ ಜಲಾಶಯ ಹಾಗು ನವಿಲುತೀರ್ಥ ಜಲಾಶಯಗಳು ಜಿಲ್ಲೆಗೆ ಒಳಪಟ್ಟಿವೆ.

ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಬೆಳಗಾವಿ ಕೂಡ ಹಲವು ಭಾಷಿಕರ ಹಾಗೂ ಹಲವು ಧರ್ಮೀಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ(ಕೇವಲ ನಗರದಲ್ಲಿ), ಮರಾಠಿ(ಕೇವಲ ನಗರದಲ್ಲಿ) ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಶೇಷತೆ.ಇಲ್ಲಿನ ಇನ್ನೊಂದು ವಿ‍‍ಶೇಷವೆಂದರೆ ಜಾನಪದ ಕಲೆ. ಇಲ್ಲಿನ ಜನರು ವಿವಿಧ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜಾನಪದ ಕಲೆಗಳಾದ ಲಾವಣಿ ಪದ, ರಿವಾಯಿತ ಜಾನಪದ, ಬೀಸುಕಲ್ಲಿನ ಪದ, ಹಂತಿ ಪದ, ಇತ್ಯಾದಿ. ಈ ರೀತಿಯಾಗಿ ವಿವಿಧತೆಯಲ್ಲಿ ಏಕತೆಯನ್ನು ಜನರು ಹೊಂದಿದ್ದಾರೆ.

ಬೆಳಗಾವಿ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ. ತರಕಾರಿ, ಮೀನು, ಪೀಠೊಪಕರಣಗಳು, ಮರದ ದಿಮ್ಮೆಗಳು ಹಾಗು ಖನಿಜ ಅದಿರುಗಳಿಗೆ ಉತ್ತಮ ಮಾರುಕಟ್ಟೆ. ಬಾಕ್ಸೈಟ ಅದಿರು ಹೇರಳವಾಗಿ ದೊರುಕುವುದರಿಂದ ಬೆಳಗಾವಿಯಲ್ಲಿ ಅಲ್ಯುಮಿನಿಯಂ ಉತ್ಪಾದನಾ ಕೈಗಾರಿಕೆಯೊಂದು (Hindalco Industries)ಭಾರಿ ಪ್ರಮಾಣದ ಅಲ್ಯುಮಿನಿಯಂ ಉತ್ಪಾದಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಮೀಪದ ದೇಶನೂರ ಎಂಬಲ್ಲಿ ಯುರೇನಿಯಂ ಅದಿರು ಕೂಡ ದೊರೆತಿದೆ. ರಾಜಧಾನಿ ಬೆಂಗಳೂರಿನಂತೆ ಇಲ್ಲಿಯೂ ಐಟಿ ಉದ್ಯಮ (I T Industry) ಬೆಳೆಯುತ್ತಿದೆ. ಮೂಲತಹ ಬೆಳಗಾವಿಯಲ್ಲೆ ಆರಂಭಗೊಂಡು ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ಹಲವಾರು ಕಂಪನಿಗಳು ಇಲ್ಲಿವೆ ಹಾಗೂ ಬೆಳಗಾವಿಯಿಂದ ೬೦ ಕಿ.ಮಿ. ದೂರವಿರುವ ಗೋಕಾಕ್ ಫಾಲ್ಸ್ ದಲ್ಲಿ ಸುಮಾರು ೧೪೦ ವರುಶಗಳ ಹಳೆಯದಾದ್ದ ಜವಳಿ ಗಿರಣಿ ಇದೆ ಹಾಗೂ ಇಲ್ಲಿ ಪಾಂಡವರು ಕಟ್ಟಿದ್ದಾರೆ ಎಂದು ನಂಬಲಪಡುವ ಶ್ರೀ ತಡಸಲ ಮಹಾಲಿಂಗೇಶ್ವರ ದೇವಸ್ಥಾನ ಇದೆ.

೧೯೭೦ ರಿಂದ ಈಚೆ ಬೆಳಗಾವಿಯಲ್ಲಿ ಉದ್ಯಮಗಳ ಬೆಳವಣಿಗೆಯಾಯಿತು. ಮಶಿನ್ ಟೂಲ್ಸ (machine tools), ಹೈಡ್ರೊಲಿಕ್ hydrolic)ಉತ್ಪನ್ನಗಳು , ಕಾಸ್ಟಿಂಗ (casting)  ಫೊರ್ಜಿಂಗನಂತಹ (forging) ನೂರಾರು ಉದ್ಯಮಗಳು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಾಹನ ಉದ್ಯಮದ ಬಿಡಿಭಾಗಗಳು(Automotive Manufacturing), ಮುಖ್ಯವಾಗಿ ಕ್ರ್ಯಾಂಕ್ ಶಾಪ್ಟ (Crank-shaft)ನಂತಹ ವಸ್ತುಗಳ ತಯಾರಿಕಾ ಉದ್ಯಮಗಳು ಇಲ್ಲಿ ಕೇಂದ್ರೀಕೃತವಾಗಿವೆ . ಇತ್ತೀಚಿಗಷ್ಟೆ ಬೆಳಗಾವಿಯಲ್ಲಿ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ಉದ್ಯಮವೊಂದು (Quest engineering) 
 ಕಾರ್ಯಾರಂಭ ಮಾಡಿದೆ. ಈ ಉದ್ಯಮ ವೈಮಾಣಿಕ ತಂತ್ರಜ್ನಾನಕ್ಕೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲೆ ಮೊದಲು ಸ್ಥಾಪನೆಯಾದ ಉದ್ಯಮ ಎನ್ನಲಾಗಿದೆ. ಇದಲ್ಲದೆ ರವಿವಾರ ಪೇಟೆಯಂತಹ ಇತರ ಮಾರುಕಟ್ಟೆಗಳು  ಗ್ರಹೋಪಯೊಗಿ ವಸ್ತುಗಳಿಗೆ ಉತ್ತಮ ವ್ಯಾಪಾರ ಕಲ್ಪಿಸಿವೆ.

ಬೆಳಗಾವಿ ಕರ್ನಾಟಕದ ಒಂದು ಪ್ರಮುಖ ವಿದ್ಯಾ ಕೇಂದ್ರ. ೮ ಅಭಿಯಾಂತ್ರಿಕ ಕಾಲೇಜುಗಳು(engineering colleges),೫ ವೈದ್ಯಕೀಯ ಮಹಾವಿದ್ಯಾಲಯಗಳು , ಕೆಲವು ದಂತ ವಿದ್ಯಾಲಯಗಳು ಸೇರಿದಂತೆ ಹಲವಾರು ವಿದ್ಯಾಸಂಸ್ಥೆಗಳು ಇಲ್ಲಿವೆ. ಇಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕರ್ನಾಟಕದ ಅತೀ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ, ಸುಮಾರು ೧೪೦ ಕ್ಕೂ ಅಧಿಕ ತಾಂತ್ರಿಕ ವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ಅಧೀನದೊಳಗೆ ಕಾರ್ಯನಿರ್ವಹಿಸುತ್ತವೆ ಅಲ್ಲದೇ ಸ್ನಾತಕೋತ್ತರ ವಿಭಾಗದಲ್ಲಿ M-Tech,MCA ನಂತಹ ಪದವಿಗಳು ಕೂಡ ವಿ.ತಾ.ವಿ ಅಧೀನದಲ್ಲಿವೆ. ಇದಲ್ಲದೆ ಅದೇ ರೀತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದೆ. ಇದರ ಬೆಳಗಾವಿ ಬಾಗಲಕೋಟೆ , ವಿಜಾಪುರ ಪದವಿ ಕಾಲೇಜುಗಳು ಇದರ ಅಧೀನದಲ್ಲಿವೆ . ಇತರೆ ಪದವಿ ಕಾಲೇಜುಗಳು,ಪಾಲಿಟೆಕ್ನಿಕ್ ವಿದ್ಯಾಲಯಗಳು, ಕಾನೂನು ಮಹಾವಿದ್ಯಾಲಯಗಳು ಕೂಡ ಇಲ್ಲಿವೆ.  ಕೆ ಎಲ್ ಇ , ಕೆ ಎಲ್ ಎಸ್, ಗೋಮಟೇಶ , ಭರತೇಶ  ಹಾಗು ಮರಾಠ ಮಂಡಳದಂತಹ ಹಲವಾರು ವಿದ್ಯಾಸಂಸ್ಥೆಗಳು ಸಾಕಷ್ಟು ಶೈಕ್ಷಣಿಕ ವಿದ್ಯಲಯಗಳನ್ನು ನಡೆಸುತ್ತಿವೆ. ಈ ಜಿಲ್ಲೆಯಲ್ಲಿ ಒಟ್ಟಾರೆ ತಾಂತ್ರಿಕ ಕ್ಷೇತ್ರಕ್ಕೆ ಸಂಭಂಧಿಸಿದಂತೆ ೯ ಪಾಲಿಟೆಕ್ನಿಕ್, ೫ ಇಂಜಿನೀಯರಿಂಗ್ ಮಹಾವಿದ್ಯಾಲ್ಯಗಳನ್ನು ಹೊಂದಿದೆ. ಹಾಗೂ ಅನೇಕ ವೈದ್ಯಕೀಯ, ದಂತವೈದ್ಯಕೀಯ, ಅನೇಕ ತಾಂತ್ರಿಕ ಮಹಾವಿದ್ಯಾಲಗಳನ್ನು ಹೊಂದಿದೆ.

ಇಸ್ವಿ ೧೯೧೬ ರಲ್ಲಿ ಏಳು ಜನ ಸಪ್ತರ್ಷಿಗಳಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ವಿಶ್ವದಾದ್ಯಂತ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ.ನವಂಬರ ೧೩,೧೯೧೬ ರಲ್ಲಿ ಕೆ ಎಲ್ ಇ  ಸಂಸ್ಥೆ ಇಂದಿನ ಗಿಲಗಂಚಿ ಅರಟಾಳ ಪ್ರೌಢಶಾಲೆ ಹಾಗು ಪದವಿಪೂರ್ವ ಕಾಲೇಜ (G A High school) ನ್ನು ಆರಂಭಿಸಿತು.ಇದೇರೀತಿ ೧೯೩೩ ರ ಜೂನ್ ನಲ್ಲಿ ಲಿಂಗರಾಜ ಕಾಲೇಜ್ ,  ೧೯೪೭ರಲ್ಲಿ  ಹುಬ್ಬಳ್ಳಿಯ ಬಿ,ವಿ ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ,೧೯೬೩ ರಲ್ಲಿ ಬೆಳಗಾವಿಯ ಜವಾಹರ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಹಾಗು ಹಾವೇರಿಯ ಜಿ,ಎಚ್ ಕಾಲೇಜ್ ಆರಂಭವಾದವು. ೧೯೮೪ ರಿಂದ ಈಚೆಗೆ ವೈದ್ಯಕೀಯ,ದಂತ ವೈದ್ಯಕೀಯ,ಮಾಹಿತಿ ತಂತ್ರಜ್ಞಾನ,ಕಂಪ್ಯೂಟರ ತಂತ್ರಜ್ಞಾನ,ಹೊಟೆಲ್ ಮ್ಯಾನೇಜಮೆಂಟ,ಬ್ಯುಸಿನೆಸ್ ಮ್ಯಾನೇಜಮೆಂಟ,ಪ್ಯಾಶನ್ ಡಿಸೈನಿಂಗ,ಕೃಷಿ ವಿದ್ಯಾಲಯಗಳು ಹಾಗೂ ಇತರ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಿಗೂ ವಿಸ್ತಾರವಾಗಿ ಇಂದು ಶ್ರೀ ಪ್ರಭಾಕರ ಕೋರೆಯವರ ನೇತೃತ್ವದಲ್ಲಿ  ೨೦೦ ಕ್ಕಿಂತಲೂ ಹೆಚ್ಚಿನ ಶೈಕ್ಷಣಿಕ ವಿದ್ಯಾಲಯಗಳನ್ನು ಒಳಗೊಂಡಿದೆ.

ಇದು ಕರ್ನಾಟಕ ಸರಕಾರದಿಂದ ನಡೆಸಲ್ಪಡುತ್ತಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇಲ್ಲಿ ಅನೇಕ ತಾಂತ್ರಿಕ ಕಲೆಗಳನ್ನು ಹೇಳಿಕೊಡಲಾಗುತ್ತದೆ. ಕಮರ್ಷಿಯಲ್ ಪ್ರಾಕ್ಟೀಸ್, ಸಿವ್ಹಿಲ್, ಆಟೋಮೋಬೈಲ್, ಮೆಕ್ಯಾನಿಕಲ್, ವಿದ್ಯುತ್ ಮತ್ತು ವಿದ್ಯುನ್ಮಾನ್, ವಿದ್ಯುನ್ಮಾನ್ ಮತ್ತು ಸಂವಹಣೆ ವಿಭಾಗಗಳನ್ನು ಹೊಂದಿದೆ. ಇದು ಅತ್ಯುತ್ತಮ ಸಿಬ್ಬಂದಿಯನ್ನು ಹೊಂದಿರುವುದರಿಂದ ಸಹಜವಾಗಿಯೇ ಹೆಸರುವಾಸಿಯಾಗಿದೆ. ಬಿ.ಇ. ಲ್ಯಾಟರಲ್ ಎಂಟ್ರಿಗೆ ನಡೆಯುವ ಸಿ.ಇ.ಟಿ. ಯಲ್ಲಿ ಪ್ರತಿ ವರ್ಷವು ರಾಜ್ಯಕ್ಕೆ ಪ್ರಥಮ ಸ್ಥಾನ ಹೊಂದಿರುವುದು ಇದರ ಹೆಗ್ಗಳಿಕೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಮುಖ್ಯ ಭಾಷೆಗಳು ಕನ್ನಡ, ಮತ್ತು ಮಹಾರಾಷ್ಟ್ರದ ಸಾಮೀಪ್ಯದಿಂದಾಗಿ ಮರಾಠಿ, ಈ ಎರಡು ಭಾಷೆಗಳಲ್ಲದೆ ಸಾಮಾನ್ಯವಾಗಿ ಹಿಂದಿ ಹಾಗು ಕೊಂಕಣಿ ಭಾಷೆಗಳು ಕೂಡ ಇಲ್ಲಿ ಮಾತನಾಡಲ್ಪಡುತ್ತವೆ .




#Article 50: ಬಾಗಲಕೋಟೆ (359 words)


ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.

ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18*  75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ 533 ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ  ಮೂಧೋಳ ಈ 6 ತಾಲ್ಲೂಕುಗಳನ್ನು ಹೊಂದಿದೆ. 2018 ರಲ್ಲಿ ಗುಳೇದಗುಡ್ಡ, ಇಲಕಲ್ಲ  ರಬಕವಿ-ಬನಹಟ್ಟಿ ಇವು 3 ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ.

ಒಂದು ಕಾಲದಲ್ಲಿ ಕನ್ನಡದ ವೈಭವಯುತ ರಾಜಮನೆತನವಾದ ಚಾಲುಕ್ಯರು ಬಾಗಲಕೋಟ ಜಿಲ್ಲೆಯನ್ನು ಆಳಿದರು. ಕರ್ನಾಟಕದ ಉತ್ತರ ಭಾಗದಲ್ಲಿರುವ ಈ ಜಿಲ್ಲೆಯ 6593 ಚದರ ಮೀಟರ ವ್ಯಾಪ್ತಿಯನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಉತ್ತರಕ್ಕೆ ವಿಜಾಪುರ ಜಿಲ್ಲೆ, ದಕ್ಷಿಣಕ್ಕೆ ಗದಗ ಜಿಲ್ಲೆ, ಪೂರ್ವಕ್ಕೆ ರಾಯಚೂರು ಜಿಲ್ಲೆ  ಆಗ್ನೆಯ ಬಾಗದಲ್ಲಿ ಕೊಪ್ಪಳ ಜಿಲ್ಲೆ, ಪಶ್ಶಿಮ ಗಡಿಯಲ್ಲಿ ಬೆಳಗಾವಿ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ.

ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು ಬಾಗಡಿಕೋಟೆಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ,  ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ  ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಏಕೀಕರಣ ಚಳುವಳಿಗಳಿಗೆ ಕೇಂದ್ರವಾಗಿತ್ತು.

ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ. ಬಾಗಲಕೋಟ್ ನವನಗರದ ಪ್ರಧಾನ ವಾಸ್ತುಶಿಲ್ಪಿ ಛಾರ್ಲ್ಸ್ ಕೋರಿಯಾ.

ಇಲ್ಲಿ ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ.

ಬಾಗಲಕೋಟೆ ನಗರ ಭಾಗದಲ್ಲಿ ಸಿ.ಎಸ್.ಐ. ಸಂತ ಪೌಲನ ದೇವಾಲಯವಿದೆ. ಈ ದೇವಾಲಯದ ಕಟ್ಟಡವು ನೂತನ ವಾದರೂ ಇಲ್ಲಿ ಶತಮಾನಕ್ಕಿಂತ ಮೊದಲೆ ಕ್ರೈಸ್ತ ಸಭೆ ಬಾಸೆಲ್ ಮಿಶನರಿಗಳಿಂದ ಪ್ರಾರಂಭವಾಗಿತ್ತು. ಇಲ್ಲಿ ಕುಷ್ಟ ರೋಗಿಗಳಿಗಾಗಿ ೧೯೦೧ರಲ್ಲಿ ಕೃಪಾಲಯವೆಂಬ ಆಸ್ಪತ್ರೆ ಕಾರ್ಯವೆಸಗುತಿದ್ದು ಪ್ರಸ್ತುತ ಮುಚ್ಚಲಾಗಿದೆ. ಈ ದೇವಾಲಯದಲ್ಲಿ ಪ್ರಸ್ತುತ ರೆವೆ. ಸುರೇಶ್ ನಾಯ್ಕರ್ ಧರ್ಮಗುರುಗಳಾಗಿದ್ದಾರೆ.ಅರಾದನೆ ಬೆಳಿಗಿನ್ ಸಮಯ ಇರುತ್ತದೆ.ಇಳಕಲ್ ತಾಲ್ಲೂಕಿನ ಕರಡಿಯಲ್ಲಿ ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ.




#Article 51: ಬೀದರ್ (219 words)


ಬೀದರ್  (ಕನ್ನಡ: ಬೀದರ,   بیدار) ಒಂದು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ, ಬೆಟ್ಟದ ತುದಿಯಲ್ಲಿರುವ ನಗರ. ಇದು ಭಾರತದ ಕರ್ನಾಟಕ ರಾಜ್ಯದ ಪೂರ್ವಭಾಗದಲ್ಲಿದೆ. ಇದು ಬೀದರ್ ಜಿಲ್ಲೆಯ ಜಿಲ್ಲಾಕೇಂದ್ರ. ಬೀದರ್ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಮತ್ತು ಇದು ಬೀದರ್ ಮಹಾನಗರ ವಲಯಕ್ಕೆ ಸೇರುತ್ತದೆ. ಈ ನಗರವು ಅನೇಕ ವಾಸ್ತುಶಿಲ್ಪ, ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ.

ಬೀದರ್ ಎಂಬ ಹೆಸರು ಬಿದಿರುನಿಂದ ಬಂದಿದೆ ಎಂದು ನಂಬಲಾಗಿದೆ. ಹಿಂದೆ ಇದು ಇಲ್ಲಿ ಇದ್ದ ಬಿದಿರಿನ ಗೊಂಚಲುಗಳಿಗೆ ಪ್ರಖ್ಯಾತವಾಗಿತ್ತು, ಆದ್ದರಿಂದ ಇದನ್ನು ಬಿದಿರೂರು ಎಂದು ಕರೆಯಲಾಗುತಿತ್ತು ಮತ್ತು ಆಮೇಲೆ ಬಿದರೆ, ಬೀದರ್ ಎಂದು ಹೆಸರು ಬದಲಾಗಿದೆ. ಆದರೂ ಬಿದಿರು ಅಥಾವ ಬಿದಿರಿನ ಉತ್ಪನ್ನಗಳು, ಬೀದರ್ ನಗರದಲ್ಲಾಗಲಿ ಅದರ ಸುತ್ತಲಿನ ಪರಿಸರದಲ್ಲಾಗಲಿ ಇಲ್ಲ.

ದಂತಕಥೆಗಳ ಪ್ರಕಾರ ಬೀದರ್ ಗೆ ಪ್ರಾಚೀನ ಸಾಮ್ರಾಜ್ಯ ವಿದರ್ಭ ಜೊತೆ ಸಂಭಂದವಿದೆ ಎಂದು ಹೇಳುತ್ತಾರೆ. ವಿದರ್ಭ ಬಗ್ಗೆ ಪ್ರಾಚೀನ ಹಿಂದು ಗ್ರಂಥಗಳಾದ ಮಾಳವಿಕಾಗ್ನಿಮಿತ್ರ , ಮಹಾಭಾರತ, ಹರಿವಂಶ , ಭಾಗವತ ಮತ್ತು ಕೆಲವು ಇತರೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.ಈ ಎರಡು ನಗರಗಳ ಸಂಬಂಧವನ್ನು ಬೀದರ್ ಮತ್ತು ವಿದರ್ಭ ಹೆಸರಿನಲ್ಲಿ ಇರುವ ಹೋಲಿಕೆಗಳಿಂದ ಸ್ಪಷ್ಟವಾಗಿ ಕಾಣಬಹುದು. ಇದನ್ನು ಫರಿಶ್ತಾ ಬರಹದಲ್ಲಿ ಪ್ರಸ್ತಾಪಿಸಲಾಗಿದೆ.

ಇಲ್ಲಿನ ಸಾಂಪ್ರದಾಯಿಕ ಕಥೆಗಳು, ಇಲ್ಲಿ ವಿದುರ ವಾಸವಾಗಿದ್ದನೆಂದು ಹೇಳುತ್ತದೆ. ಅದ್ದರಿಂದ ಇದನ್ನು ಹಿಂದೆ ವಿದುರನಗರ ಎಂದು ಕರೆಯಲಾಗುತ್ತಿತ್ತು ಮತ್ತು ಇದು ನಳ ಮತ್ತು ದಮಯಂತಿ (ರಾಜ ಭೀಮನ ಮಗಳು ಮತ್ತು ವಿದರ್ಭದ ರಾಜ) ಭೇಟಿಯಾಗುವ ಸ್ಥಳವೂ ಆಗಿತ್ತು.

ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ್ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ.

ಬೀದರ ತಾಲೂಕಿನ ಸಾಹಿತಿಗಳು.

ಡಾ.ಜಗನ್ನಾಥ ಹೆಬ್ಬಾಳೆ.

ಬುದ್ದದೇವಿ ಅಶೋಕ ಸಂಗಮ್ 

ಕೃಪೆ:- ಬೀದರ ಜಿಲ್ಲೆಯ ಸಾಹಿತ್ಯ ಕೋಶ

ಲೇಖಕರು- ಮಚ್ಚೇಂದ್ರ ಪಿ ಅಣಕಲ್




#Article 52: ಚಿಕ್ಕಮಗಳೂರು (2251 words)


ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು  ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ.  ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ.  ಈ ಜಿಲ್ಲೆಯು ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡಿದೆ, ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು'. ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ. ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ.

ಚಿಕ್ಕಮಗಳೂರು ಜಿಲ್ಲೆಯು ಅದರ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಎಂದರೆ “ಚಿಕ್ಕ ಮಗಳ ಊರು” ಎಂದರ್ಥ. ಈ ಪಟ್ಟಣವನ್ನು ಪ್ರಸಿದ್ಧ ಸಖರಾಯ ಪಟ್ಟಣ ಮುಖ್ಯಸ್ಥನಾದ ರುಕ್ಮಾಂಗದ, ಚಿಕ್ಕ ಮಗಳಿಗಾಗಿ ವರದಕ್ಷಿಣೆಯಾಗಿ ನೀಡಿದ ಎಂದು ಹೇಳಲಾಗಿದೆ. ಅದ್ದರಿಂದ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ. ಹಾಗೆಯೇ “ಹಿರಿಯ ಮಗಳ ಊರು”  ಹಿರೇಮಗಳೂರು ಎಂಬ ಊರು ಚಿಕ್ಕಮಗಳೂರಿನಿಂದ ೫ ಕೀ.ಮೀ.ದೂರದಲ್ಲಿದೆ. ಅದಾಗ್ಯೂ ಬಹುತೇಕರು ಚಿಕ್ಕಮಗಳೂರುನ್ನ ಚಿಕ್ಕಮಂಗಳೂರು ಎಂದು ತಪ್ಪಾಗಿ ಉಚ್ಛರಿಸುತ್ತಾರೆ.ಚಿಕ್ಕಮಗಳೂರು ಜಿಲ್ಲೆ ೧೯೪೭ ರ ತನಕ ಕಡೂರು ಎಂದು ಕರೆಯಲ್ಪಡುತ್ತಿತ್ತು. ಕೆಲವು ಹಳೆಯ ಶಾಸನಗಳ ಪ್ರಕಾರ ಚಿಕ್ಕಮಗಳೂರು ಮತ್ತು ಹಿರೇಮಗಳೂರುಗಳನ್ನು ಕ್ರಮವಾಗಿ ಕಿರಿಯ ಮುಗುಲಿ ಮತ್ತು ಪಿರಿಯ ಮುಗುಲಿ ಎಂದು ಕರೆಯಲಾಗುತ್ತಿತ್ತು.

ಚಿಕ್ಕಮಗಳೂರಿನಲ್ಲಿ ಅತಿಹೆಚ್ಚು ಬೆಳೆಯುವ ಬೆಳೆ ಕಾಫಿ. ಇಲ್ಲಿನ ರೈತರು ಕಾಫಿ ಬೆಳೆಯಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಅತಿಹೆಚ್ಚು ಮಳೆಯಾಗುತ್ತದೆ.ಕಾಫೀಯ ತವರುರು ಬಾಬಾಬುಡನ್ ಎ಼಼ಂಬ ಅರೇಬಿಯನ್ ಫಕೀರ್ ಕರ್ನಾಟಕದಲ್ಲಿ ಕಾಫಿಯನ್ನು ಪರಿಚಯಿಸಿದರು. ಇಲ್ಲಿ ಬೆಳೆಯುವ ಕಾಫಿಯ ತಳಿಗಳೆಂದರೆ ಅರೇಬಿಕ್ ಮತ್ತು ರೋಬಸ್ಟ ಅರೇಬಿಕ್ ತಳಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ.

ಹೊಯ್ಸಳರ ಸಾಮ್ರಾಜ್ಯ ಉಗಮವಾದ ಮತ್ತು ಹೊಯ್ಸಳರು ಸಾಮ್ರಾಜ್ಯದ ತಮ್ಮ ಆರಂಭದಲ್ಲಿ ದಿನಗಳನ್ನು ಕಳೆದ ಸೊಸೆಯೂರು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಸೊಸೆಯೂರು  ಕಾಲನಂತರ  ಹೊಯ್ಸಳರ ಪ್ರಥಮ ರಾಜಧಾನಿ ಶಶಕಪುರವಾಗಿ ನಿರ್ಮಾಣವಾಯಿತು. ಸೊಸೆಯೂರು ಈಗ ಅಂಗಾಡಿ ಗ್ರಾಮವೆಂದು ಗುರುತಿಸಲ್ಪಡುತ್ತದೆ.ಇದು ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹಿಂದೊಮ್ಮೆ  ದಟ್ಟವಾದ  ಗೊಂಡಾರಣ್ಯದಲ್ಲಿ ಜೈನ ಮುನಿಗಳ ಜ್ಞಾನ ತಪಸ್ಸಿಗೆ ಯೋಗ್ಯವಾದ ಸ್ಥಳ ಇದಾಗಿತ್ತೆಂದು, ಚಾಳುಕ್ಯ ನಾಡಿನಿಂದ  ಮಲ್ಲಚಂದ್ರದೇವ ಇಲ್ಲಿಗೆ ಬಂದನೆಂಬ ವಿಷಯ ೧೦ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಒಂದು ದಂತಕಥೆಯ ಪ್ರಕಾರ,  ಒಂದೊಮ್ಮೆ  ಈಗಿನ ಅಂಗಡಿ ಗ್ರಾಮದ ವಾಸಂತಿಕಾದೇವಿಯ ಗುಡಿ ಮುಂದೆ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ-ಪ್ರವಚನ ಕಲಿಸುತ್ತಿದ್ದ ಸಂದರ್ಭದಲ್ಲಿ, ಹುಲಿಯೊಂದು ದಿಢೀರನೆ ಗುಡಿಯ ಬಳಿ ಇದ್ದ ಶಿಷ್ಯಾರ್ಥಿಗಳ ಮೇಲೆ ಎರಗಲು ಬಂದಾಗ ಸುದತ್ತಾಚಾರ್ಯರು ಕೂಡಲೇ ಅದನ್ನು ಹೊಡೆಯಲು, ತನ್ನ ಶಿಷ್ಯ  ಸಳನಿಗೆ ಹೊಯ್ ಸಳ ಎಂದು ಆಜ್ಞಾಪಿಸಿದರು. ಇದೇ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಕೂಡಲೇ ಸ್ಥಳದಲ್ಲಿದ್ದ ಸಳನು ತನ್ನ ಗುರುಗಳ ಆಜ್ಞೆಯಂತೆ ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಹುಲಿಯನ್ನು ಕೊಂದನಂತೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಶಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ .ಕ್ರಿ.ಶ ೧೦೬೨ ರಲ್ಲಿ ವಿನಯಾದಿತ್ಯ ತನ್ನ ರಾಜಧಾನಿಯನ್ನು ಸೊಸೆಯೂರಿನಿಂದ (ಶಶಕಪುರ-ಅಂಗಡಿ) ಬೇಲೂರಿಗೆ ವರ್ಗಾಯಿಸಿದನಂತೆ. ಅಂಗಡಿ ಗ್ರಾಮದ ಹೊಯ್ಸಳರ ಕಾಲದ ವಾಸಂತಿಕ ದೇವಾಲಯ ಹಾಗೂ ಮಕರ ಜಿನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಹಾಗೂ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತವೆ. ತರೀಕೆರೆ ತಾಲ್ಲೂಕಿನ  ಅಮೃತಪುರದಲ್ಲಿ ಹೊಯ್ಸಳ ಸಾಮ್ರಾಜ್ಯದ ದೊರೆ ಎರಡನೇ ವೀರ ಬಲ್ಲಾಳ (೧೧೭೩-೧೨೨೦ ಸಿ.ಇ.) ನಿರ್ಮಿಸಿದ ಅಮೃತೇಶ್ವರ ದೇವಸ್ಥಾನವಿದೆ.  ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಬಾಬಾ ಬುಡನ್ ಅವರು ಮೆಕ್ಕಾ ತೀರ್ಥಯಾತ್ರೆ ಮಾಡುತ್ತಿರುವಾಗ ಯೆಮೆನ್ನ ಮೋಕಾ ಬಂದರಿನಲ್ಲಿ ಕಾಫಿ ಬಗ್ಗೆ ಅವರಿಗೆ ತಿಳಿಯಿತು. ಅವರು ಏಳು ಕಾಫಿಯ ಬೀಜವನ್ನು ಹೊಕ್ಕಳಿನ ಸುತ್ತ ಆಡಗಿಸಿಟ್ಟುಕೊಂಡು ಅರೇಬಿಯಾದಿಂದ ಹೊರಗೆ ತಂದರು. ಅವರು ಮನೆಗೆ ಮರಳುತ್ತಿರುವಾಗ ಬಾಬಾ ಬುಡನಗಿರಿ/ದತ್ತ ಪೀಠ ಬೆಟ್ಟದಲ್ಲಿ ಕೆಲವು ಬೀಜಗಳನ್ನು ನೆಟ್ಟರು ಎಂದು ಹೇಳುತ್ತಾರೆ. ಈ ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆಯು ಇದ್ದು. ಇದನ್ನು ಹಿಂದೆ ೧೯೨೫ ರಲ್ಲಿ ಲೇ. ಡಾ. ಲೆಸ್ಲಿ. ಸಿ. ಕೊಲ್‌ಮನ್ ನೇತೃತ್ವದಲ್ಲಿ ಆರಂಭವಾದ ಕಾಫಿ ಎಕ್ಸ್‌ಪೆರಿಮೆಂಟಲ್  ಸ್ಟೇಷನ್ ಎಂದು ಕರೆಯಲಾಗಿತ್ತು. ಈ ಸಂಸ್ಥೆ  ೧೧೯.೮೬ ಎಕರೆಗಳಷ್ಟು   ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಸಂಸ್ಥೆಯು ಕಾಫಿ ಗುಣಮಟ್ಟ ಸುಧಾರಿಸಲು ಸಂಶೋಧನೆಯನ್ನು ನಡೆಸುತ್ತದೆ.

ಚಿಕ್ಕಮಗಳೂರು ಕರ್ನಾಟಕದ ಮಧ್ಯಭಾಗದಲ್ಲಿ ಇದೆ, ಇದು ರಾಜ್ಯದ ರಾಜಧಾನಿಯಿಂದ ೨೫೧ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ೧೨° ೫೪' ೪೨“-೧೩° ೫೩' ೫೩“ ಉತ್ತರ ಅಕ್ಷಾಂಶ ಹಾಗೂ ೭೫° ೦೪' ೪೫“'-೭೬° ೨೧' ೫೦'” ಪೂರ್ವ ರೇಖಾಂಶದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಪೂರ್ವದಿಂದ ಪಶ್ಚಿಮಕ್ಕೆ ೧೩೮.೪ ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ ೮೮.೫ ಕಿ.ಮೀ. ಉದ್ದವಿದೆ. ಜಿಲ್ಲೆಯಲ್ಲಿ ಸಮಾನ್ಯವಾಗಿ ವರ್ಷಕ್ಕೆ  ಸರಾಸರಿ ೧೯೨೫ ಮಿ.ಮೀ. ಮಳೆಯಾಗುತ್ತದೆ. ಜಿಲ್ಲೆಯ ಅತ್ಯಂತ ಎತ್ತರವಾದ ಸ್ಥಳ ಮುಳ್ಳಯ್ಯನ ಗಿರಿ, ಸಮುದ್ರ ಮಟ್ಟಕ್ಕಿಂತ ೧೯೫೫ ಮೀಟರ್ ಎತ್ತರದಲ್ಲಿ ಇದೆ, ಇದು ಕರ್ನಾಟಕದ ಅತ್ಯಂತ ಎತ್ತರವಾದ ಸ್ಥಳ ಕೂಡ. ಜಿಲ್ಲೆಯ ಒಟ್ಟು ವಿಸ್ತೀರ್ಣ ೨೧೦೮.೬೨ ಕಿ.ಮೀ೨ . ಅದರಲ್ಲಿ ಶೇಕಡ ೩೦ರಷ್ಟು ಕಾಡುಗಳಿಂದ ಆವರಿಸಲ್ಪಟ್ಟದೆ. ಚಿಕ್ಕಮಗಳೂರು ಜಿಲ್ಲೆಯ ಪೂರ್ವಕ್ಕೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆ, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಚಿಕ್ಕಮಗಳೂರನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಬೇರ್ಪಡಿಸುತ್ತವೆ ಮತ್ತು ಉತ್ತರದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಚಿಕ್ಕಮಗಳೂರು ಭಾರತದ ಎತಿ ದೊಡ್ಡ ಪ್ರದೇಶವಾಗಿದೆ. 
ಕರ್ನಾಟಕದ ಎತ್ತರದ  ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ
ಬೆಟ್ಟವಾಗಿದೆ.(ಎತ್ತರ ೧೯೨೯ ಮೀ. ೬೩೨೯ ಅಡಿಗಳು ) ಕರ್ನಾಟಕದಲ್ಲಿವೆ. ಇದು 
ನೋಡಲು ಸುಂದರವಾಗಿದ್ದು . ಹಲವಾರು ಕಡೆಗಳಿಂದ ಬರುತ್ತಾರೆ. ಇಲ್ಲಿ ಎತ್ತರವಾದ
ಗಿರಿಗಳನ್ನು ಹೊಂದಿದ್ದೆ.  ಇಲ್ಲಿ ಅದಿಕ ಮಳೆಯ ಪ್ರಮಣ ಹೆಚ್ಚಾಗಿದೆ.   ಅತಿಯಾಗಿ ಮಳೆ
ಆಗುವುದರಿಂದ ಇಲ್ಲಿನ ಗಿಡ ಮರಗಳು ಅಚ್ಚ ಹಸಿರಿನಿಂದ  ಕೂಡಿದೆ.

ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ಇಲ್ಲಿರುವ ಹೆಸರುವಾಸಿಯಾದ ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಬಾಬಾ ಬುಡನ್ ಗಿರಿ ಶ್ರೇಣಿಯನ್ನು  ಭೇಟಿ ಮಾಡಬೇಕು. ಇದು 1895 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಪಟ್ಟಣದಿಂದ 28 ಕಿಮೀ ದೂರದಲ್ಲಿದೆ. ಮುಸ್ಲಿಮರು ಮತ್ತು ಹಿಂದೂಗಳಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಈ ಕಾರಣದಿಂದಾಗಿ, ಸ್ಥಳವನ್ನು  ಹಿಂದೂ ದೇವರು ಗುರು ದತ್ತಾತ್ರೇಯ ಮತ್ತು ಮುಸ್ಲಿಂ ಸಂತ ಬಾಬಾಬುಡನ್ ರ ಹೆಸರಿನಿಂದ ಗುರುತಿಸಲಾಗುತ್ತದೆ. ಬಾಬಾ ಬುಡನ್ ಗಿರಿಯಲ್ಲಿ ಪ್ರವಾಸಿಗರು ಮೂರು ಸಿದ್ಧರಿಂದ ಪವಿತ್ರವಾಗಿರುವವೆಂದು ನಂಬಲಾದ ಮೂರು ಗುಹೆಗಳನ್ನು ನೋಡಬಹುದು .  ಶೀಥಲ -ಮಲ್ಲಿಕಾರ್ಜುನನ ಗುಡಿ ಮತ್ತು ಮಠಗಳೆರಡನ್ನೂ  ಒಳಗೊಂಡಿರುವ ಶೀಥಲ ದೇವಾಲಯ ಹತ್ತಿರದಲ್ಲೇ ಇರುವ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ ಅನುಕೂಲವಾದರೆ ಪ್ರಯಾಣಿಕರು ಈ ಸ್ಥಳದಿಂದ ಕೇವಲ 1 ಕಿಮೀ ದೂರವಿರುವ ಮಾಣಿಕ್ಯಧಾರಾ ಜಲಪಾತವನ್ನು ನೋಡಬಹುದು. ಬಾಬಾ ಬುಡನ್ ಗಿರಿ ಹೈಕಿಂಗ್ ಮತ್ತು ಚಾರಣಗಳ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಪರಿಪೂರ್ಣವಾದ ಜಾಗ. ಈ ಪ್ರದೇಶದ ವ್ಯಾಪ್ತಿಯ ಎರಡು ಜನಪ್ರಿಯ ಪರ್ವತಗಳೆಂದರೆ ಮುಳ್ಳಯ್ಯನಗಿರಿ (1930 ಮೀಟರ್ ಎತ್ತರದಲ್ಲಿ ಜೊತೆ ಸೈಟ್ ಶಿಖರ) ಮತ್ತು ದತ್ತಗಿರಿ. ಅದೃಷ್ಟವಿದ್ದರೆ  ಜನರು 'ಕುರುಂಜಿ' ವೀಕ್ಷಿಸಲು ಅವಕಾಶ ಪಡೆಯುವರು. ಇದು ಒಂದು ಪರ್ವತದ ಹೂವಾಗಿದ್ದು ಪ್ರತಿ 12 ವರ್ಷಗಳಲ್ಲಿ ಒಮ್ಮೆ ಮಾತ್ರ  ಅರಳುತ್ತದೆ. ಈ ಪ್ರದೇಶ ಹಕ್ಕಿಗಳ ವೀಕ್ಷಣೆ ಕೈಗೊಳ್ಳಲು ಬಯಸುವ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

೨೦೧೧ ರ ಜನಗಣತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಜನಸಂಖ್ಯೆ ೧೧,೩೭,೯೬೧ ಸರಿಸುಮಾರಾಗಿ ಸೈಪ್ರಸ್ ರಾಷ್ಟ್ರಕ್ಕೆ ಸಮನಾಗಿದೆ ಅಥವಾ ಸಂಯುಕ್ತ ಅಮೆರಿಕದ ರೋಡ್ ಐಲೆಂಡ್ ರಾಜ್ಯಕ್ಕೆ ಸಮನಾಗಿದೆ. ಚಿಕ್ಕಮಗಳೂರು ಜನಸಂಖ್ಯೆಯಲ್ಲಿ ಭಾರತದಲ್ಲಿ ೪೦೮ನೇ ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಪ್ರತಿ ಚದರ ಕಿಲೋ ಮೀಟರ್ ಗೆ(೪೧೦/ಚದರ ಮೈಲಿ) ೧೫೮.೧೯ ನಿವಾಸಿಗಳ ಸಾಂದ್ರತೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯಾ ಬೆಳವಣಿಗೆ ದರವು ೨೦೦೧-೨೦೧೧ ದಶಕದಲ್ಲಿ  ಶೇಕಡ ೦.೨೮ ಆಗಿತ್ತು. ಚಿಕ್ಕಮಗಳೂರು ಪ್ರತಿ ೧೦೦೦ ಪುರುಷರಿಗೆ ೧೦೦೮ ಸ್ತ್ರೀ ಯ ಲಿಂಗ ಅನುಪಾತವನ್ನು ಹೊಂದಿದೆ ಮತ್ತು ಶೇಕಡ ೭೯.೨೪ ಸಾಕ್ಷರತಾ ದರವನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಶೇಕಡ ೮೧ ಜನರು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇಕಡ ೧೯ ಜನರು ನಗರದಲ್ಲಿ ವಾಸಿಸುತ್ತಾರೆ. ಶೃಂಗೇರಿ ತಾಲ್ಲೂಕು ಅತಿ ಕಡಿಮೆ ಜನಸಂಖ್ಯೆಯನ್ನು ಮತ್ತು ಚಿಕ್ಕಮಗಳೂರು ತಾಲ್ಲೂಕು ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.ಬಹುತೇಕರು ಕನ್ನಡ ಭಾಷೆ ಮಾತನಾಡುತ್ತಾರೆ. ಜತೆಗೆ ತುಳು ,ಕೊಂಕಣಿ , ಬ್ಯಾರಿ ಭಾಷೆ     ಮಾತನಾಡುವವರನ್ನೂ ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಚಿಕ್ಕಮಗಳೂರು ಜಿಲ್ಲೆಯೂ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ಚಿಕ್ಕಮಗಳೂರು ಉಪ ವಿಭಾಗ ಮತ್ತು ತರೀಕೆರೆ ಉಪ ವಿಭಾಗ. ತರೀಕೆರೆ ಉಪ ವಿಭಾಗ, ತರೀಕೆರೆ  ಕಡೂರು ಮತ್ತು ನರಸಿಂಹರಾಜಪುರ ತಾಲ್ಲೂಕುಗಳನ್ನು ಒಳಗೊಂಡಿದೆ ಮತ್ತು ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರತಿ ಉಪ ವಿಭಾಗವು ಸಹಾಯಕ ಆಯುಕ್ತರನ್ನುಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ.

ಕೃಷಿಯು ಚಿಕ್ಕಮಗಳೂರಿನ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಮತ್ತು ಕಾಫಿ ಬೆಳೆಯು ಕೃಷಿಯ ಮುಖ್ಯ ಭಾಗವಾಗಿದೆ. ಜಿಲ್ಲೆಯ ಕೃಷಿ ಉತ್ಪಾದನೆಯು ಮೂರು ಋತುಗಳಲ್ಲಿ ಹರಡಿಗೊಂಡಿದೆ. ಅವುಗಳೆಂದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆ. ಇಲ್ಲಿನ ಪ್ರಮುಖ ಬೆಳೆಗಳು ಏಕದಳ ಧಾನ್ಯಗಳಾದ ಅಕ್ಕಿ, ರಾಗಿ , ಜೋಳ , ಮೆಕ್ಕೆಜೋಳ ಮತ್ತು ಚಿಕ್ಕ ಕಾಳುಗಳು, ದ್ವಿದಳ ಧಾನ್ಯಗಳಾದ, ತೊಗರಿ, ಹುರುಳಿಕಾಳು, ಹೆಸರು ಕಾಳು, ಅವರೆಕಾಯಿ (ಹಯಸಿಂತ್ ಬೀನ್ಸ್) ಮತ್ತು ಕಡಲೆ ಕಾಳು ಮತ್ತು ಕಡಲೆ. ತೈಲ ಬೀಜಗಳಾದ ಶೇಂಗಾ, ಎಳ್ಳು,, ಸೂರ್ಯಕಾಂತಿ ಮತ್ತು ಕ್ಯಾಸ್ಟರ್ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮತ್ತು ತಂಬಾಕು ಇಲ್ಲಿ ಬೆಳೆಯಲಾಗುತ್ತದೆ. ಚಿಕ್ಕಮಗಳೂರು ಪಟ್ಟಣದಲ್ಲಿ ಸರ್ಕಾರದ ಅಧೀನದಲ್ಲಿರುವ ಕಾಫಿ ಬೋರ್ಡ್, ಜಿಲ್ಲೆಯ ಕಾಫಿ ಉತ್ಪಾದನೆ ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಚಿಕ್ಕಮಗಳೂರಿನಲ್ಲಿ ಕಾಫಿಯನ್ನು ಸುಮಾರು ೮೫.೪೬೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಅರೇಬಿಕಾ ಎಂಬ ತಳಿಯನ್ನು ಬೆಟ್ಟೆದ ಮೇಲ್ಭಾಗದಲ್ಲಿ ಮತ್ತು ರೊಬಸ್ಟಾ ಎಂಬ ತಳಿಯನ್ನು ಬೆಟ್ಟೆದ ತಳ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಸುಮಾರು ೧೫೦೦೦ ಕಾಫಿ ಬೆಳೆಗಾರರಿದ್ದು, ಅದರಲ್ಲಿ ಶೇಕಡ ೯೬ ಬೆಳೆಗಾರರು ೪ ಚದರ ಹೆಕ್ಟೇರ್ ಅಥವ  ಅದಕ್ಕಿಂತಲು ಕಡಿಮೆ ಪ್ರಮಾಣದ ಉಳುಮೆ ಪ್ರದೇಶವನ್ನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಜಿಲ್ಲೆಯ ಸರಾಸರಿ ಕಾಫಿ ಉತ್ಪಾದನೆ ಅರೇಬಿಕಾ ೫೫,೦೦೦:೩೫,೦೦೦ ಮೆಟ್ರಿಕ್ ಟನ್ ಮತ್ತು ರೊಬಸ್ಟಾ ೨೦,೦೦೦ ಮೆಟ್ರಿಕ್ ಟನ್ ಆಗಿದೆ. ಹೆಕ್ಟೇರಿಗೆ ಸರಾಸರಿ ಉತ್ಪಾದಕತೆ ಅರೇಬಿಕಾ ೮೧೦ ಕೆ.ಜಿ. ಮತ್ತು ರೊಬಸ್ಟಾ ಆಫ್ ೧೧೧೦ ಕೆ.ಜಿ. ಆಗಿದೆ, ಇದು ನಮ್ಮ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು.

ಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ  ಹೊಂದಿಲ್ಲ, ಮೂಲಭೂತ ಸೌಲಭ್ಯಗಳು ಕೊರತೆ, ಕಳಪೆ ರಸ್ತೆಗಳು, ಕಳಪೆ ರೈಲು ಸಂಪರ್ಕಜಾಲ ಮತ್ತು ಕೈಗಾರಿಕೆಗಳಿಗೆ ವಿರೋದ, ಜಿಲ್ಲೆಯ ಕೈಗಾರಿಕಾ ಅಭಿವೃಧ್ಧಿ ಕುಂಟಿತಕ್ಕೆ ಕಾರಣಗಳು ಜಿಲ್ಲೆಯಲ್ಲಿ ಕೇವಲ ಒಂದು ಭಾರಿ ಕೈಗಾರಿಕಾ ಉದ್ಯಮವಿದೆ. ಅದೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ, ಇದು ಮೂಡಿಗೆರೆ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಇದೆ. ಕೆ.ಐ.ಒ.ಸಿ.ಎಲ್  ೧೯೭೬ ರಲ್ಲಿ ಕುದುರೆಮುಖ ಗಣಿ ಅಭಿವೃದ್ಧಿಪಡಿಸಲು ಮತ್ತು ವರ್ಷಕ್ಕೆ ಸಾರೀಕೃತ ೭.೫ ಮಿಲಿಯನ್ ಟನ್ ಉತ್ಪಾದಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಘಟಕವನ್ನು  ೧೯೮೦ರಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಸಾರೀಕೃತ ಉತ್ಪನ್ನದ ಮೊದಲ ಸಾಗಣೆಗೆ ಅಕ್ಟೋಬರ್ ೧೯೮೧ ರಲ್ಲಿ ಮಾಡಲಾಯಿತು, ಉನ್ನದ ಗುಣಮಟ್ಟದ ಬ್ಲಾಸ್ಟ್ ಫರ್ನೇಸ್ ಮತ್ತು ನೇರ ಕಡಿಮೆಗೊಳಿಸುವ ಗ್ರೇಡ್  ಅದಿರು ಉಂಡೆಗಳ ಉತ್ಪಾದನೆಗೆ ಮೂರು ಮಿಲಿಯನ್ ಟನ್ ಸಾಮರ್ಥ್ಯದ ಅದಿರು ಉಂಡೆಗಳ ಘಟಕವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತು. ಕೆ.ಐ.ಒ.ಸಿ.ಎಲ್ ನ ಗಣಿಗಾರಿಕೆ ಪರವಾನಗಿ ಅವಧಿ ಮುಗಿದ ಮೇಲೆ ಅದರ ಕಾರ್ಯಾಚರಣೆಗಳನ್ನು ಸುಪ್ರೀಂ ಕೋರ್ಟ್ ೩೧ ಡಿಸೇಂಬರ್ ೨೦೦೫ ರಿಂದ ನಿಲ್ಲಿಸಿತ್ತು, ಇದರಿಂದ ಕೆ.ಐ.ಒ.ಸಿ.ಎಲ್ ಭಾರಿ ಹಿನ್ನಡೆ ಉಂಟಾಯಿತು. ಇದರಿಂದ ಅನೇಕ ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಈ ಪ್ರದೇಶದಲ್ಲಿ ಸಮಾಜಿಕ ಹಿಂಬಡಿತ ಆಗಬಾರದೆಂಬ ಕಾರಣಕ್ಕೆ , ಈ ಕಾರ್ಮಿಕರಿಗೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸವ ಪ್ರಯತ್ನ ಮಾಡಲಾಯಿತು.

ಜಿಲ್ಲೆಯಲ್ಲಿ ಕೇವಲ ಒಂದೆ ಒಂದು ಮಧ್ಯಮ ಕೈಗಾರಿಕಾ ಉದ್ಯಮವಿದ್ದು ಇದು ತರೀಕೆರೆ ಪಟ್ಟಣದಲ್ಲಿ ಇದೆ. ತರೀಕೆರೆಯಲ್ಲಿರುವ ಬಿಇಎಂಎಲ್ ಅಂಗಸಂಸ್ಥೆಯಾದ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಉಕ್ಕಿನ ಅಚ್ಚುಗಳಲ್ಲಿ ಉತ್ಪಾದಿಸುತ್ತದೆ.
ಜಿಲ್ಲೆಯಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿವೆ, ಒಂದು ಚಿಕ್ಕಮಗಳೂರು ನಗರದ ಹತ್ತಿರವಿದೆ, ಇನ್ನೊಂದು ಕಡೂರು ತಾಲ್ಲೂಕಿನ ಬೀರೂರು ನಗರದ ಬಳಿಯಿದೆ. ಚಿಕ್ಕಮಗಳೂರು ನಗರದ ಬಳಿಯಿರುವ ಕೈಗಾರಿಕಾ ಪ್ರದೇಶ ೧೩.೨೦ ಎಕರೆಯಲ್ಲಿ (೫೩.೪೦೦ ಮೀ.೨) ಮತ್ತು  ಬೀರೂರು ಹತ್ತಿರವಿರುವ ಕೈಗಾರಿಕಾ ಪ್ರದೇಶ ೧೧.೧ ಎಕರೆಯಲ್ಲಿ (೪೫೦೦ ಮೀ೨) ಹರಡಿಕೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಚಿಕ್ಕಮಗಳೂರು ತಾಲ್ಲೂಕಿನ ಅಬ್ಳೆ ಹಳ್ಳಿಯ ಬಳಿ ೧೪೫ ಎಕರೆ (೦.೫೯ ಕಿ. ಮೀ೨) ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದೆ.

೨೦೧೧ರ ಜನಗಣತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಶೇಕಡಾವಾರು ಸಾಕ್ಷರತೆಯು ಶೇಕಡ ೭೯.೨೫ ರಷ್ಟು ಆಗಿದೆ, ಇದರಲ್ಲಿ ಶೇಕಡ ೮೪.೪೧ಪುರಷರು ಮತ್ತು ಶೇಕಡ ೭೩.೧೬ ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಚಿಕ್ಕಮಗಳೂರು ಸಾಕ್ಷರತೆ ಪ್ರಮಾಣ ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೭೫.೩೬ ಕ್ಕಿಂತ ಹೆಚ್ಚಾಗಿದೆ. ಶೃಂಗೇರಿ ತಾಲ್ಲೂಕು ಶೇಕಡ ೯೨.೬೮ ರೊಂದಿಗೆ ಅತಿ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿರು ತಾಲ್ಲೂಕು ಆಗಿದೆ ಮತ್ತು ಕಡೂರು ತಾಲ್ಲೂಕು ಶೇಕಡ ೭೪.೩೩ ರೊಂದಿಗೆ ಕನಿಷ್ಟ ಸಾಕ್ಷರತೆಯನ್ನು ಹೊಂದಿದರು ತಾಲ್ಲೂಕು ಆಗಿದೆ.

೨೦೦೧ರಂತೆ, ಚಿಕ್ಕಮಗಳೂರು ಜಿಲ್ಲೆಯು ೧೬೨೦ ಪ್ರಾಥಮಿಕ ಶಾಲೆಗಳನ್ನು(೧೫೧೯೨೩ ವಿದ್ಯಾರ್ಥಿಗಳೊಂದಿಗೆ) ಮತ್ತು ೨೩೫ ಮಾಧ್ಯಮಿಕ ಶಾಲೆಗಳನ್ನು(೩೪೬೦೭ ವಿದ್ಯಾರ್ಥಿಗಳೊಂದಿಗೆ) ಹೊಂದಿದೆ. ಚಿಕ್ಕಮಗಳೂರು ತಾಲ್ಲೂಕು ೪೧೪ ಪ್ರಾಥಮಿಕ ಶಾಲೆಗಳೊಂದಿಗೆ(೪೨೭೭೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೮೦ ಪ್ರಾಥಮಿಕ ಶಾಲೆಗಳೊಂದಿಗೆ (೫೮೨೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ೭೪ ಮಾಧ್ಯಮಿಕ ಶಾಲೆಗಳೊಂದಿಗೆ(೯೯೯೦ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೯ ಮಾಧ್ಯಮಿಕ ಶಾಲೆಗಳೊಂದಿಗೆ(೧೪೯೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ.

೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪೬ ಪ್ರೌಢ ಶಾಲೆಗಳು (೪೭೧೧ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಿಣವನ್ನು ನೀಡುತ್ತೀವೆ. ಕಡೂರು ತಾಲ್ಲೂಕು ೧೨ ಪ್ರೌಢ ಶಾಲೆಗಳೊಂದಿಗೆ (೧೩೨೪ ವಿದ್ಯಾರ್ಥಿಗಳೊಂದಿಗೆ)  ಅತಿ ಹೆಚ್ಚು ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೨ ಪ್ರೌಢ  ಶಾಲೆಗಳೊಂದಿಗೆ(೧೬೦ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ

೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪದವಿ ಕಾಲೇಜುಗಳು (೪೬೧೫ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಿಣವನ್ನು ನೀಡುತ್ತೀವೆ. ಈ ಕಾಲೇಜುಗಳು ಕುವೆಂಪು ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ೪ ಪದವಿ ಕಾಲೇಜುಗಳೊಂದಿಗೆ (೧೬೪೮ ವಿದ್ಯಾರ್ಥಿಗಳೊಂದಿಗೆ)  ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ತಾಲ್ಲೂಕು ೨ ಮತ್ತು ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳು ತಲ ೧ ಪದವಿ ಕಾಲೇಜುಗಳನ್ನು ಹೊಂದಿವೆ.

ಹೊಸ ವೈದ್ಯಕೀಯ ಕಾಲೇಜು ಚಿಕ್ಕಮಗಳೂರು ನಗರಕ್ಕೆ ಮಂಜೂರು ಮಾಡಿಲಾಗಿದೆ ಆದರೆ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಮೂಲ ಕೊಪ್ಪದ ಅರೋರ್ ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜು. ಈ ಕಾಲೇಜು ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿ ಏ ಎಮ್ ಎಸ್) ಪದವಿ ನೀಡುತ್ತದೆ.

ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳು ಸರಿಯಾಗಿ ನಿರ್ವಹಿಸಲ್ಪಡುವ ರಸ್ತೆಗಳ ಪಟ್ಟಿಯಲ್ಲಿ ಬರುವುದಿಲ್ಲ. ದುಸ್ಥಿತಿಯಲ್ಲಿ ಇರುವ ರಸ್ತೆಗಳು ಸ್ವಲ್ಪ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿಗ ಅಡ್ಡಿಯಾಗಿವೆ. ಜಿಲ್ಲೆಯು ಉತ್ತಮವಾದ ರೈಲು ಸಂರ್ಪಕ ಜಾಲವನ್ನು ಹೊಂದಿಲ್ಲ. ಜಿಲ್ಲೆಯು ಒಟ್ಟು ೭೨೬೪ ಕೀ. ಮೀ ರಸ್ತೆಯನ್ನು ಹೊಂದಿದೆ. ಜಿಲ್ಲೆಯ ಮೇಲೆ ಕೇವಲ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತದೆ. ರಾಷ್ಟೀಯ ಹೆದ್ದಾರಿ ಎನ್.ಎಚ್.-೧೩(ಶೋಲಾಪೌರದಿಂದ ಮಂಗಳೂರಿಗೆ) ಕೊಪ್ಪ ಮತ್ತು ಶೃಂಗೇರಿ ಮೂಲಕ ಹಾದು ಹೋಗುತ್ತದೆ ಮತ್ತು ರಾಷ್ಟೀಯ ಹೆದ್ದಾರಿ ಎನ್.ಎಚ್.-೨೦೬(ಬೆಂಗಳೂರಿಂದ ಹೋನ್ನವರಗೆ) ಕಡೂರು.ತರೀಕೆರೆ ಮೂಲಕ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಈಗಿರುವ ರಾಜ್ಯ ಹೆದ್ದಾರಿಗಳಾದ ತರೀಕೆರೆ-ಬೇಲೂರು, ಶೃಂಗೇರಿ-ಹಾಸನ್ ಮತ್ತು ಕಡೂರು-ಮಂಗಳೂರು ಹೆದ್ದಾರಿಗಳನ್ನು ನವೀಕರಿಸುವ ಪ್ರಸ್ತಾಪವಿದೆ.

ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲುಕುಗಳು ರೈಲ್ವೆ ಮಾರ್ಗಗಳನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಲಕ ಒಟ್ಟು  ೧೩೬ ಕೀ.ಮೀ ರೈಲ್ವೆ ಮಾರ್ಗ ಹಾದು ಹೋಗುತ್ತದೆ. ಬೀರೂರು ಜಿಲ್ಲೆಯ ಅತಿದೊಡ್ಡ ಜಂಕ್ಷನ್ ಆಗಿದೆ. ಹೊಸ ರೈಲು ಮಾರ್ಗ ಚಿಕ್ಕಮಗಳೂರನ್ನು ಹುಬ್ಬಳ್ಳಿ-ಬೆಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುತ್ತದೆ, ಚಿಕ್ಕಮಗಳೂರನ್ನು ಬೆಂಗಳೂರು-ಮಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುವ ಹೊಸ ಮಾರ್ಗದ ಕಾರ್ಯ ಆರಂಭವಾಗಿದೆ.

ಚಿಕ್ಕಮಗಳೂರಿನಿಂದ ೧೦ ಕೀ.ಮೀ ದೂರದಲ್ಲಿ ಇರುವ ಗೌಡನಹಳ್ಳಿಯಲ್ಲಿ ಸಣ್ಣ ವಿಮಾನ ನಿಲ್ದಾಣ ಇದೆ. ಇದು ಸಣ್ಣ ಗಾತ್ರದ ವಿಮಾನಗಳ ಉಡವಣೆಯ ಸಮಾರ್ಥ್ಯವನ್ನು ಹೊಂದಿದೆ.  ಮಂಗಳೂರು , ಹುಬ್ಬಳ್ಳಿ ಮತ್ತು ಬೆಂಗಳೂರು, ಚಿಕ್ಕಮಗಳೂರಿಗೆ ಹತ್ತಿರದ ವಿಮಾನ ನಿಲ್ದಾಣಗಳು.

ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು 
ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ.
ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಚಿಕ್ಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ   ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಪಿsಯ ತವರಿನ ವಿಶೇಷಗಳಲ್ಲಿ ಒಂದು. 
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ.
ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ.
ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. 
ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.
ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. 
ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ.

ಕರ್ತಿಕೆರೆ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಚಿಕ್ಕಮಗಳೂರಿನಿಂದ  4 k m  ದೂರದಲ್ಲಿದೆ ಕರ್ತಿಕೆರೆ ಗ್ರಾಮದಲ್ಲಿ ಪ್ರಸಿದ್ದವಾದ ದಿ ಬಿ ಹೈವ್ ರೆಸ್ಟೊರೆಂಟಿದೆ ಈ ರೆಸ್ಟೋರೆಂಟೀಗೆ ಬೇರೇ ಬೇರೇ ಊರಿನಿಂದ ಬಂದು ಪ್ರವಾಸಿಗರು ವಾಸಿಸುತ್ತಾರೆ ಈ  ರೆಸ್ಟೊರೆಂಟ್ ನೋಡಲು ತುಂಬಾ ತುಂಬಾ ಸುಂದರವಾಗಿದೆ. ಒಮ್ಮೆ ನೋಡಿದರೆ ಇನ್ನೋಮ್ಮೆನೋಡಬೇಕು ಎಂದೆನಿಸುತ್ತದೆ. ಪ್ರತಿ ದಿನ ಪ್ರವಾಸಿಗರು ಬಂದು ನೆಲೆಸುತ್ತಾರೆ                                 ಈ ಗ್ರಾಮದಲ್ಲಿ 4 ಕಲ್ಯಾಣ ಮಂಟಪಗಳಿವೆ. ಈ ಕಲ್ಯಾಣ ಮಂಟಪದಲ್ಲಿ ಸಾಕಷ್ಟು ಮದುವೆಗಳು  ನೆಡೆಯುತ್ತವೆ                                        ಈ ಗ್ರಾಮದಲ್ಲಿ  ಅತ್ಯಂತ ವಿಜ್ರುಂಭಣೆಯಿಂದ ಶ್ರೀ ರಂಗನಾಥಸ್ವಾಮಿ ಮತ್ತು  ದುರ್ಗಮ್ಮ ನವರ ಜಾತ್ರಾ ಮಹೋತ್ಸವ ನೆಡೆಯುತ್ತದೆ ಈ ಜಾತ್ರೆಗೆ   ಅಪಾರ  ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಆಗಮಿಸಿ ದೇವರ  ದರ್ಶನ  ಪಡೆದು ಧನ್ಯ ರಾಗುತ್ತಾರೆ.                                             ಈ ಜಾತ್ರೆಯಲ್ಲಿ ಭಕ್ತಾದಿಗಳು ದೇವರಿಗೆ ಹರಕೆಯನ್ನು ಸಲ್ಲಿಸಿ ದೇವರ ಕೃಪೇಗೆ ಪಾತ್ರರಾಗುತ್ತಾರೆ.  ಜಾತ್ರೆಯಲ್ಲಿ  ದೇವರನ್ನು ನೋಡುವುದೇ ಒಂದು ಆನಂದ.ದೇವರನ್ನು ನೋಡಲು ಭಕ್ತಾದಿಗಳು  ಕಾದುಕುಳಿತಿ ರುತ್ತಾರೆ. ಈ ಜಾತ್ರೆಗೆ ಬೇರೆ ಬೇರೆ ಊರಿನಿಂದ  ಭಕ್ತಾದಿಗಳು  ಆಗಮಿಸಿ  ದೇವರ ದರ್ಶನ ಪಡಯತ್ತಾರೆ.                                     ಈ ಜಾತ್ರೆಯು ಪ್ರಸ್ಸಿದ್ದವಾದ ಒಂದು ಜಾತ್ರೆಯಾಗಿದೆ.        .ಈ ಜಾತ್ರೆಯಲ್ಲಿ ಬೆಳ್ಳಿಯ ರಥೋತ್ಸವ ನೆಡೆಯುತ್ತದೆ  ಬೆಳ್ಳಿಯ ರಥದಲ್ಲಿ ರಂಗನಾಥ ಸ್ವಾಮಿಯನ್ನು ಕೂರಿಸಿ ರಥವನ್ನು ಎಳೆಯುತ್ತಾರೆ.ಸಂಜೆ ಈ ಜಾತ್ರೆ ಪ್ರಯುಕ್ತ ಶನಿ ದೇವರ  ನಾಟಕ  ಕಾರ್ಯಕ್ರಮ  ನೆಡೆಯುತ್ತದೆ.

ರಾ ಎಗುತ್ತಾರೆ.ವ ನೆಲೆಸುತ್ತಾರೆ. ಕರ್ತಿಕೆರೆ ಯಲ್ಲಿ ಾಸಿಗರು ಈ ರೆಸ್ಟೊರೆಂಟಿಗೆ ಬಂದು ವಾಸಿಸುತ್ತಾರೆ.ಪ್ರವಾಸಿಗ ಪ್ರವಾಸಿಗರು ಈ ರೆಸ್ಟೊರದೆ

ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ.ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲುು ಚಿಕ್ಕಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ.

ಸಿರಿಮನೆ ಫಾಲ್ಸ್
ಸಿರಿಮನೆ  ಫಾಲ್ಸ್ 

ಸಿರಿಮಾನೆ ಫಾಲ್ಸ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಬೆಂಗಳೂರಿನಿಂದ 300 ಕಿ.ಮೀ ಮತ್ತು ಕಿಗ್ಗಾ ಚಿಕ್ಕಮಗಳೂರಿನಿಂದ 5 ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಹಲವಾರು ಜಲಪಾತಗಳಲ್ಲಿ ಒಂದಾಗಿದೆ. ಇದು ಸುಂದರ ನೋಟದಿಂದ ಅದ್ಭುತವಾಗಿದೆ. ನೀರು ಕಾಫಿ ಎಸ್ಟೇಟುಗಳು ಕೆಳಗಿಳಿಯುತ್ತಿದೆ. ಒಂದು ದಿನದಲ್ಲಿ ಇದನ್ನು ಸುಲಭವಾಗಿ ತಲುಪಬಹುದು ಮತ್ತು ಭೇಟಿ ಮಾಡಬಹುದು, ಆದ್ದರಿಂದ, ಶೃಂಗೇರಿ ದೇವಸ್ಥಾನ, ಆಗುಂಬೆ ಮತ್ತು ಇತರ ಸ್ಥಳಗಳೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ.

ಇದು 40 ಅಡಿ ಎತ್ತರದಲ್ಲಿದೆ ಮತ್ತು ಜಲಪಾತದ ರಸ್ತೆ ಇದೆ, ಅದು ಜಲಪಾತಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಮಳೆಗಾಲದ ಸಮಯದಲ್ಲಿ ಭಾರೀ ಯಲ್ಲಿ ಹತ್ತಿರಕ್ಕೆ  ಹೋಗಲುಸಾಧ್ಯವಿರದಿದ್ದರೂ ಸಹ, ಕೆಳಗಡೆ ಹೋಗಬಹುದು ಮತ್ತು ಜಲಪಾತವನ್ನು ಆನಂದಿಸಬಹುದು. 

ಕಿಗ್ಗಾ: ಇದು ಒಂದು ಸಣ್ಣ ಪಟ್ಟಣವಾಗಿದ್ದು, ಜಲಪಾತದಿಂದ ಸುಲಭವಾಗಿ ತಲುಪಬಹುದು. ಈ ಪಟ್ಟಣವು ಟ್ರೆಕ್ಕಿಂಗ್ ಗೆ ಹೆಸರುವಾಸಿಯಾಗಿದೆ.

ಹರಿ ದೇವಾಲಯ: ಈ ಶಿವ ದೇವಾಲಯವು ಹರಿಹರಪುರದಲ್ಲಿದೆ. ಸುಮಾರು 400 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ಶರದಾ ದೇವಸ್ಥಾನ: ಇದು 14 ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯವಾಗಿದ್ದು, ಶರದಾಂಬ ದೇವತೆಗೆ ಅರ್ಪಿತವಾಗಿದೆ. ಈ ದೇವಸ್ಥಾನವು ಹಲವು ಭವ್ಯವಾದ ಕಂಬಗಳು ಮತ್ತು ಮಹಾ ಮಂಟಪವನ್ನು ಹೊಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೆಲ ಇತರ ಮುಖ್ಯ ಪಟ್ಟಣಗಳೆಂದರೆ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ.

ಕರ್ನಾಟಕ




#Article 53: ಹಾವೇರಿ (451 words)


ಹವೇರಿ ಭಾರತದ ಕರ್ನಾಟಕದ ಒಂದು ಪಟ್ಟಣ, ಇದು ಹವೇರಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ.  ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ, ಇದರರ್ಥ ಹಾವುಗಳ ಸ್ಥಳ . ಏಲಕ್ಕಿ ಹೂಮಾಲೆಗಳಿಗೆ ಹವೇರಿ ಪ್ರಸಿದ್ಧವಾಗಿದೆ. ಪ್ರಾಚೀನ ದಿನಗಳಲ್ಲಿ ಹವೇರಿಯಲ್ಲಿ ಸುಮಾರು 1000 ಮಠಗಳು (ಪವಿತ್ರ ಧಾರ್ಮಿಕ ಸ್ಥಳಗಳು; ಕನ್ನಡ - ಥಾಥ್) ಇದ್ದವು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಮಠಗಳಲ್ಲಿ ಒಂದು ಹುಕ್ಕೇರಿ ಮಠ . ಹಾವೇರಿ ಬೈಡಗಿ ಕೆಂಪು ಮೆಣಸಿನಕಾಯಿಗಳನ್ನು ಮಾರಾಟ ಮಾಡಲು ಸಹ ಪ್ರಸಿದ್ಧವಾಗಿದೆ, ಇದು ಭಾರತದಾದ್ಯಂತ ಪ್ರಸಿದ್ಧವಾಗಿದೆ. ಸುಮಾರು 25   ಕಿಮೀ ದೂರದಲ್ಲಿ, ಕವಿ ಕನಕಡಾಸನ ಜನ್ಮಸ್ಥಳವಾದ ಬಡಾ ಎಂಬ ಸ್ಥಳವಿದೆ. 

ಹವೇರಿ ಬೆಂಗಳೂರಿನಿಂದ ರೈಲಿನಲ್ಲಿ 7 ಗಂಟೆಗಳ ದೂರದಲ್ಲಿದೆ. ಇದು ಹುಬ್ಲಿ ಮತ್ತು ದಾವಣಗೆರೆ ನಡುವಿನ ಮಧ್ಯದ ನಿಲ್ದಾಣವಾಗಿದೆ. ಇದು ಸ್ಟಾಪ್ 76.5 ಆಗಿದೆ   ಮೊದಲು ಕಿಮೀ ಹುಬ್ಬಳ್ಳಿ ಮತ್ತು 72   ದಾವಣಗೆರೆ ನಂತರ ಕಿ.ಮೀ. ರಸ್ತೆ ಮೂಲಕ, ಇದು ಸುಮಾರು 340 ಆಗಿದೆ   ಎನ್ಎಚ್ -4 ರಲ್ಲಿ ಬೆಂಗಳೂರಿನಿಂದ ಮುಂಬೈ ಕಡೆಗೆ ಕಿ.ಮೀ. ಇದು 307 ರಲ್ಲಿದೆ   ಬಂದರು ನಗರ ಮಂಗಳೂರಿನ ಉತ್ತರಕ್ಕೆ ಕಿ.ಮೀ. 

ಹವೇರಿ ಶಿಕ್ಷಣದಲ್ಲಿ ಮಧ್ಯಮ ಹಂತವನ್ನು ಹೊಂದಿದ್ದಾರೆ. ಹವೇರಿ ದೇವಗಿರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು 2007 ರಲ್ಲಿ ಪ್ರಾರಂಭಿಸಿದರು. 

ಪ್ರಮುಖ ಪ್ರದೇಶವಾಗಿದೆ ಪಶ್ಚಿಮ ಚಾಲುಕ್ಯ ಸ್ಮಾರಕಗಳ ಸ್ಥಳಗಳಲ್ಲಿ ಒಳಗೊಂಡಿದೆ ಬಾದಾಮಿ, ಹಲಸಿ, Annigeri, ಮಹದೇವ ದೇವಾಲಯ (ಇಟಗಿ), ಗದಗ, ಲಕ್ಕುಂಡಿ, ಲಕ್ಷ್ಮೇಶ್ವರ, ಡಂಬಳ, ಹಾವೇರಿ, ಬಂಕಾಪುರ, Rattahalli, Kuruvatti, Bagali, Balligavi, Chaudayyadanapura, Galaganatha, ಹಾನಗಲ್ . ಈ ಪ್ರದೇಶಗಳಲ್ಲಿ ಸೋಪ್ ಸ್ಟೋನ್ ಹೇರಳವಾಗಿ ಕಂಡುಬರುವುದರಿಂದ ಅದು ಸಾಧ್ಯವಾಯಿತು. ಪಾಶ್ಚಿಮಾತ್ಯ ಚಾಲುಕ್ಯ ವಾಸ್ತುಶಿಲ್ಪ ಚಟುವಟಿಕೆಯ ಕೋರ್ ಪ್ರದೇಶದ ಅಡಿಯಲ್ಲಿ ಹವೇರಿ ಬರುತ್ತದೆ. 

ಹವೇರಿ ಜಿಲ್ಲೆಯ ಇತಿಹಾಸವು ಪೂರ್ವ-ಐತಿಹಾಸಿಕ ಅವಧಿಗೆ ಸೇರಿದೆ. ವಿವಿಧ ಆಡಳಿತಗಾರರ ಸುಮಾರು 1300 ಶಿಲಾ ಬರಹಗಳು ಚಾಲುಕ್ಯರು, ರಾಸ್ತಕುಟರು ಜಿಲ್ಲೆಯಲ್ಲಿ ಕಂಡುಬರುತ್ತವೆ. ಬಂಕಪುರ ಚಲ್ಲಕೇತುರು, ಗುಟ್ಟಾವುಲ ಗುಟ್ಟಾರು, ಹಂಗಲ್‌ನ ಕದಂಬಸ್ ಮತ್ತು ನೂರುಂಬಾಡ್ ಪ್ರಸಿದ್ಧ ಸಮಂತಾ ಆಡಳಿತಗಾರರು. ಕನ್ನಡ ಆದಿಕವಿ ಪಂಪಾ ಅವರ ಶಿಕ್ಷಕ ದೇವೇಂದ್ರಮುನಿಗಲು ಮತ್ತು ರನ್ನ ಶಿಕ್ಷಕ ಅಜಿತಾಸೇನಾಚಾರ್ಯ     ಚಾವುಂಡರಾಯನ ವಾಸಿಸುತ್ತಿದ್ದರು ಬಂಕಾಪುರ . ಇದು ಹೊಯ್ಸಳ ವಿಷ್ಣುವರ್ಧನ ಎರಡನೇ ರಾಜಧಾನಿಯೂ ಆಗಿತ್ತು. Guttaru 12 ನೇ ಶತಮಾನದ ನಂತರದ ಭಾಗದಲ್ಲಿ ಸಮಯದಲ್ಲಿ ಮತ್ತು ಆಫ್ Mandaliks ಮಾಹಿತಿ Guttavol (Guttal) ಹಳ್ಳಿಯಿಂದ 13 ನೇ ಶತಮಾನದ ಅಂತ್ಯದಲ್ಲಿ ರವರೆಗೆ ಆಳ್ವಿಕೆ ಚಾಲುಕ್ಯ ಸ್ವತಂತ್ರವಾಗಿ ಕೆಲವು ಬಾರಿ, ಮತ್ತು Mandaliks ಮಾಹಿತಿ Seunas ದೇವಗಿರಿಯ. Shasanas ಕಂಡುಬರುವ Chaudayyadanapura (Choudapur), Guttal ಹತ್ತಿರದ ಹಳ್ಳಿಯ, Mallideva ಚಾಲುಕ್ಯರ 6 ನೇ ವಿಕ್ರಮಾದಿತ್ಯನ Mandalika ಎಂದು ತಿಳಿದುಬರುತ್ತದೆ. Jatacholina, Mallideva ನಾಯಕತ್ವದಲ್ಲಿ ನಲ್ಲಿ Mukteshwara ಕಟ್ಟಿಸಿದರು Chaudayyadanapura (Choudapur). 

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೂರುಂಬಾದ್‌ನ ಕಡಂಬರು ಸುಮಾರು 100 ಗ್ರಾಮಗಳನ್ನು ಆಳಿದರು, ರಟ್ಟಿಹಳ್ಳಿಯನ್ನು ತಮ್ಮ ರಾಜಧಾನಿಯಾಗಿರಿಸಿಕೊಂಡರು. 

ಜಿಲ್ಲೆಯ ಸಾಂಟಾ ಶಿಶುನಾಳ ಶರೀಫ್, ಮಹಾನ್ ಸಂತ Kanakadasaru, Sarvajnya, ಹಾನಗಲ್ಲ ಕುಮಾರ Shivayogigalu, Wagish Panditaru, ಬರಹಗಾರ Galaganatharu, Ganayogi ಪಂಚಾಕ್ಷರಿ Gavayigalu, Gnyana ಪೀಠಗಳಲ್ಲಿ ಪ್ರಶಸ್ತಿ Dr.VKGokak ಮತ್ತು ಅನೇಕ ಹೆಚ್ಚು ಜನ್ಮಸ್ಥಾನ ಎಂದು ಹೆಮ್ಮೆಯಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹಾದೇವಪ್ಪ ಮತ್ತು ಗುಡ್ಲೆಪ್ಪ ಹಲ್ಲಿಕೆರೆ. 

ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪದ ಬೆಳವಣಿಗೆಗಳ ಕೇಂದ್ರವು ಇಂದಿನ ಬಾಗಲ್ಕೋಟ್, ಗಡಾಗ್, ಕೊಪ್ಪಲ್, ಹವೇರಿ ಮತ್ತು ಧಾರವಾಡ ಜಿಲ್ಲೆಗಳು ಸೇರಿದಂತೆ ಪ್ರದೇಶವಾಗಿತ್ತು; 

ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನವು 11 ನೇ ಶತಮಾನದ ದ್ರಾವಿಡ ಅಭಿವ್ಯಕ್ತಿ ಮತ್ತು ಸೂಪರ್‌ಸ್ಟ್ರಕ್ಚರ್‌ನೊಂದಿಗೆ ದಿಗ್ಭ್ರಮೆಗೊಂಡ ಚದರ ಯೋಜನೆ. ಹವೇರಿಯ ಸಿದ್ಧೇಶ್ವರ ದೇವಸ್ಥಾನದಲ್ಲಿ ಚಿಕಣಿ ಅಲಂಕಾರಿಕ ದ್ರಾವಿಡ ಮತ್ತು ನಗರಾ ಶೈಲಿಯ ಗೋಪುರಗಳು 

ಇತ್ತೀಚೆಗೆ ದೇವಗಿರಿ ಬೆಟ್ಟದಲ್ಲಿ ಮಿನಿ ವಿಧಾನ ಸೌಧವನ್ನು ನಿರ್ಮಿಸಲಾಯಿತು. ಮಿನಿ ವಿಧಾನ ಸೌಧ ಪ್ರಮುಖ ಸರ್ಕಾರಿ ಕಚೇರಿಗಳನ್ನು ಆಯೋಜಿಸುತ್ತದೆ. ಇವುಗಳಲ್ಲಿ ಮುಖ್ಯ ಕಚೇರಿ ಜಿಲ್ಲಾ ಆಯುಕ್ತರ ಕಚೇರಿ. 

ಹಾವೇರಿ ನಲ್ಲಿ ಇದೆ  .  ಇದು ಸರಾಸರಿ 572 ಎತ್ತರವನ್ನು ಹೊಂದಿದೆ   ಮೀಟರ್ (1876   ಅಡಿಗಳು). 

ಸ್ನಾತಕೋತ್ತರ ಶ್ರೀ ರಾಜೀವ್ ಗಾಂಧಿ ಕರ್ನಾಟಕ ವಿಶ್ವವಿದ್ಯಾಲಯ ಪಿಜಿ ಸೆಂಟರ್, ಕೆರಿಮಟ್ಟಿಹಳ್ಳಿ, ಹವೇರಿ ಅಭಿವೃದ್ಧಿ ಹೊಂದುತ್ತಿರುವ ಶಿಕ್ಷಣ ಸಂಸ್ಥೆ. ಹವೇರಿಯಲ್ಲಿ ಮೂರು ಪ್ರಮುಖ ಕಾಲೇಜುಗಳಿವೆ. ಒಂದು ಸರ್ಕಾರ. ಪ್ರಥಮ ದರ್ಜೆ ಕಾಲೇಜು, ಗುಡ್ಲೆಪ್ಪ ಹಲ್ಲಿಕೇರಿ ಕಾಲೇಜು, ಮತ್ತು ಸಿ.ಬಿ.ಕೊಲ್ಲಿ ಪಾಲಿಟೆಕ್ನಿಕ್. ಇತರ ಕಾಲೇಜುಗಳಲ್ಲಿ ಎಸ್‌ಎಸ್ ಮಹಿಳಾ ಪದವಿ ಕಾಲೇಜು, ಎಸ್‌ಜೆಎಂ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಮತ್ತು ಎಸ್‌ಎಂಎಸ್ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಸೇರಿವೆ. ಇತ್ತೀಚೆಗೆ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಪ್ರಾರಂಭವಾಯಿತು. ಸಿಬಿಸಿಪೊಲಿಟೆಕ್ನಿಕ್ 

ಸಿಬಿಎಸ್‌ಇ ಶಾಲೆಗಳು 

ಕಾನ್ವೆಂಟ್ ಶಾಲೆಗಳು 

ಪ್ರೌ schools ಶಾಲೆಗಳು 

ಕಾಲೇಜುಗಳು ಮತ್ತು ಸ್ಥಳಗಳು




#Article 54: ಕೊಪ್ಪಳ (3467 words)


ಕೊಪ್ಪಳ ಜಿಲ್ಲೆ ೧-೪-೧೯೯೮ ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು  ೨೦೧೧ ರ ಜನಗಣತಿಯ ಪ್ರಕಾರ ೧೩.೮೯ ಲಕ್ಷ ಜನಸಂಖ್ಯೆ ಕೊಪ್ಪಳ ಜಿಲ್ಲೆ ಹೊಂದಿರುತ್ತದೆ. ಗಂಗಾವತಿ, ಕೊಪ್ಪಳ,ಯಲಬುರ್ಗಾ, ಕುಷ್ಟಗಿ ಮತ್ತು  ೨೦೧೭ರಲ್ಲಿ ಹೊಸದಾಗಿ ಘೋಷಣೆಯಾದ ಕುಕನೂರು, ಕನಕಗಿರಿ ಹಾಗು ಕಾರಟಗಿ ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ.

ಕೊಪ್ಪಳವು  ಕರ್ನಾಟಕ  ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿದೆ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ 1997ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು ರಚಿಸಲಾಯಿತು. ಜಿಲ್ಲೆಯಲ್ಲಿ ೨೦ ಹೋಬಳಿಗಳು, ೬೧೮ ಗ್ರಾಮಗಳಿವೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ, ದಕ್ಷಿಣದಲ್ಲಿ ಬಳ್ಳಾರಿ ಹಾಗೂ ಪಶ್ಚಿಮದಲ್ಲಿ ಗದಗ ಜಿಲ್ಲೆಗಳು ಸುತ್ತುವರಿದಿವೆ. ವಿಸ್ತೀರ್ಣ, ೫೫೭೦ ಚ ಕಿಮೀ.

ಈ ಜಿಲ್ಲೆ ದಖನ್ನಿನ ಕಣಿವೆ ಭಾಗದ್ದಲ್ಲಿದ್ದು ಸಮುದ್ರ ಮಟ್ಟಕ್ಕೆ ಹೆಚ್ಚು ಎತ್ತರವಲ್ಲದ ಭೂಪ್ರದೇಶದಿಂದ ಕೂಡಿದೆ. ಇದರಿಂದಾಗಿ ಇಲ್ಲಿ ಯಾವ ಪ್ರಮುಖ ಬೆಟ್ಟಸಾಲುಗಳೂ ಕಂಡುಬರುವುದಿಲ್ಲ. ಅಲ್ಲಲ್ಲಿ ಪಶ್ಚಿಮ ಅಥವಾ ಪೂರ್ವ ಘಟ್ಟಸಾಲಿಗೆ ಸೇರದ ಹೆಚ್ಚು ಎತ್ತರವಲ್ಲದ ಗುಡ್ಡಗಳಿವೆ. ಕುಷ್ಟಗಿ ತಾಲ್ಲೂಕಿನಲ್ಲಿ ಕಂಡುಬರುವ ಬಾದಾಮಿ ಬೆಟ್ಟಗಳ  ಶ್ರೇಣಿಗೆ ಸೇರಿದ ಸಾಲೊಂದು ಗಂಗಾವತಿ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಕುಷ್ಟಗಿಯಿಂದ 32ಕಿಮೀ ದೂರದಲ್ಲಿರುವ ಜಗದ ಗುಡ್ಡ (736ಮೀ.), ಗಂಗಾವತಿ ತಾಲ್ಲೂಕಿನ ಎಮ್ಮೆಗುಡ್ಡ (821ಮೀ.), ಕನಕಗಿರಿಗೆ ಈಶಾನ್ಯದಲ್ಲಿರುವ ನಿಶಾನಿಗುಡ್ಡ (580ಮೀ.), ಮಾರಿಗುಡ್ಡ (597ಮೀ.), ಇವು ಈ ಜಿಲ್ಲೆಯ ಎತ್ತರದ ಬೆಟ್ಟಗಳು. ಈ ಜಿಲ್ಲೆಯಲ್ಲಿ ಮಳೆ ಕಡಿಮೆ. ಹಾಗಾಗಿ ಸಸ್ಯ ಸಂಪತ್ತೂ ಕಡಿಮೆ. ಕಡಿದಾದ ಮತ್ತು ವಿವಿಧ ಆಕಾರದ ಬಂಡೆಗಳಿಂದ ಆವೃತವಾದ ಪರಿಸರವನ್ನು, ಬಯಲು ಭೂದೃಶ್ಯಗಳನ್ನು ಕಾಣುತ್ತೇವೆ.

 	
ಇಲ್ಲಿನ ಬೆಟ್ಟಗಳು ಪ್ರಾಕೃತಿಕವಾಗಿ ರೂಪಾಂತರ ಹೊಂದಿದ ಪ್ರಾಚೀನ ಶಿಲಾಯುಗಕ್ಕೆ ಸೇರಿದವು. ಅಲ್ಲಲ್ಲಿ ಗ್ರಾನೈಟ್ ಕಲ್ಲಿನ ಬೆಟ್ಟಗಳು ಕಾಣುತ್ತವೆ; ಉಳಿದಂತೆ ಸಮತಟ್ಟಾದ ಬಯಲು ಪ್ರದೇಶ. ಈ ಶಿಲಾ ಪದರದಲ್ಲಿ ನೈಸ್ ಶಿಲೆಗಳು, ಪದರಗಲ್ಲು ಶಿಲೆಗಳು, ಬೆಣಚುಕಲ್ಲುಗಳು ಇವೆ. ಮುಖ್ಯವಾಗಿ ಕೇಂಬ್ರಿಯನ್ ಯುಗಪೂರ್ವದ ರೂಪ ಪರಿವರ್ತನಾ ಪದರಗಲ್ಲುಗಳು ಮತ್ತು ಗ್ರಾನೈಟ್ ಬೆಣಚುಗಲ್ಲು ಬಹುಪಾಲು ಶಿಲೆಗಳು ಧಾರವಾಡ ಶಿಲಾವರ್ಗಕ್ಕೆ ಸೇರಿದವು. ಪರ್ಯಾಯ ದ್ವೀಪ ಸಂಬಂಧವಾದ ಡೈಕ್ ಮಾದರಿಯ ಶಿಲೆಗಳೂ ಕಂಡುಬರುತ್ತವೆ. ಕಲಾದಗಿ ಶ್ರೇಣಿಗೆ ಸೇರಿದ ಕೆಲವು ಶಿಲೆಗಳು ಕುಷ್ಟಗಿ ಸಮೀಪ ಇವೆ. ಇಲ್ಲಿ ಪೆಂಟೆ ಶಿಲೆ ಮತ್ತು ಪುರಳು ಶಿಲೆಯ ಪದರಗಳನ್ನು ಕಾಣಬಹುದು. ಕಣಶಿಲೆಯ ಗುಡ್ಡಗಳು, ಟ್ರ್ಯಾಪ್ ಶಿಲೆಯ ಉಬ್ಬುಗಳು ಗಂಗಾವತಿ ತಾಲ್ಲೂಕಿನಲ್ಲಿವೆ.

	ಜಿಲ್ಲೆಯಲ್ಲಿ ಕಬ್ಬಿಣ, ತಾಮ್ರ, ಸೀಸದ ಅದುರು, ಅಭ್ರಕ, ಸ್ಫಟಿಕ ಶಿಲೆ ಮುಂತಾದ ಖನಿಜಗಳಿವೆ. ಸಮೀಪದ ರಾಯಚೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಗಳಿವೆ. ಜಂಬುಮಣ್ಣು ಮತ್ತು ಕಾವಿಮಣ್ಣಿನ ಭೂಮಿ ಉಪಯುಕ್ತವಾಗಿದೆ. ಕೊಪ್ಪಳ ತಾಲ್ಲೂಕಿನ ಬಹುಭಾಗ ಕಪ್ಪುಮೆಕ್ಕಲು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಕಪ್ಪುಮಿಶ್ರಿತ ಕೆಂಪುಮಣ್ಣು ಅಲ್ಲಲ್ಲಿ ಕಂಡುಬರುತ್ತದೆ. ಮರಳು ಮಿಶ್ರಿತ ಕಪ್ಪುಮಣ್ಣು ಅನೇಕ ಕಡೆಗಳಲ್ಲಿ ಹರಡಿದೆ.ಈ ಜಿಲ್ಲೆಯಲ್ಲಿ ಮಳೆ ಕಡಿಮೆ ಬಿದ್ದರೂ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಎರಡೂ ಪಾಶ್ರ್ವಗಳಲ್ಲಿ ಹರಿಯುವುದರಿಂದ ಜಲ ಸಂಪನ್ಮೂಲ ಉತ್ತಮವಾಗಿದೆ. ತುಂಗಭದ್ರಾ ನದಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸರಹದ್ದಾಗಿ ಕ್ರಮಿಸುತ್ತದೆ. ಜಿಲ್ಲೆಯ ಸರಾಸರಿ ಮಳೆ 595ಮಿಮೀ. ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ. ಯಲಬುರ್ಗ ತಾಲ್ಲೂಕಿನಲ್ಲಿ ಹುಟ್ಟುವ ಒಂದು ತೊರೆ ಕೊಪ್ಪಳದ ಸಮೀಪ ಹರಿದು ತುಂಗಭದ್ರಾ ಜಲಾಶಯದ ಹಿನ್ನೀರನ್ನು ಸೇರುತ್ತದೆ. ಕುಷ್ಟಗಿ ತಾಲ್ಲೂಕಿನ ಉಪ್ಪಲದೊಡ್ಡಿ ಬಳಿ ಹುಟ್ಟುವ ಕನಕಗಿರಿ ನಾಲಾ ಗಂಗಾವತಿ ತಾಲ್ಲೂಕನ್ನು ಪ್ರವೇಶಿಸಿ ತುಂಗಭದ್ರಾ ನದಿಯನ್ನು ಸೇರುತ್ತದೆ. ತಾವರಗೆರೆ ಬಳಿ ಹುಟ್ಟುವ ಸಿದ್ಧಾಪುರ ನಾಲೆ ಕುಂಟೋಜಿ ಬಳಿ ತುಂಗಭದ್ರಾ ನದಿಯನ್ನು ಸೇರುತ್ತದೆ. ಇನ್ನು ಅನೇಕ ಚಿಕ್ಕ ಪುಟ್ಟ ತೊರೆಗಳು ಆಗ್ನೇಯಾಬಿsಮುಖವಾಗಿ ಹರಿದು ತುಂಗಭದ್ರಾ ನದಿ ಸೇರುತ್ತವೆ. ತೊರೆ ಮತ್ತು ನಾಲಾಗಳ ಮೂಲಕ ಮಳೆಗಾಲದಲ್ಲಿ ನೀರು ಹರಿದರೂ ಬೇಸಗೆಯಲ್ಲಿ ಹೆಚ್ಚಿನವು ಬತ್ತಿಹೋಗುತ್ತವೆ

	ಜಿಲ್ಲೆಯ ಅತಿ ಉಷ್ಣ ಹವಾಮಾನ ಹಾಗೂ ವಾತಾವರಣದಲ್ಲಿನ ಕಡಿಮೆ ತೇವಾಂಶ ಸಸ್ಯಗಳ ಬೆಳೆವಣಿಗೆಗೆ ಸಹಾಯಕವಾಗಿಲ್ಲ. ಅಲ್ಲಲ್ಲಿ ಗುಡ್ಡಗಳ ಇಳಿಜಾರಿನಲ್ಲಿ ಪೆÇದೆ ಕಾಡುಗಳು ಕಂಡುಬರುತ್ತವೆ. ಕುಷ್ಟಗಿ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಇತರೆಡೆಗಿಂತ ಹೆಚ್ಚಿದೆ. ಜಿಲ್ಲೆಯ ಅರಣ್ಯ ಪ್ರದೇಶದ ವಿಸ್ತೀರ್ಣ 29451 ಹೆಕ್ಟೇರುಗಳು. ಇಲ್ಲಿನ ಕಾಡುಗಳಲ್ಲಿ ಜಾಲ, ಹುಣಿಸೆ, ಹೊಂಗೆ, ಹಾಲೆ, ಮುತ್ತುಗ, ದಿಂಡಿಗ, ಚುಜ್ಜಲು, ಹುರಗಲು, ಹೊನ್ನೆ, ಕಮ್ಮಾರ, ನಲ್ಲಮಡ್ಡಿ, ಬಿಲ್ವ, ಬಾಗೆ, ಕಕ್ಕೆ, ಸೀತಾಫಲ ಮುಂತಾದ ಗಿಡಮರಗಳಿವೆ. ಅಲ್ಲಲ್ಲಿ ಮುಳ್ಳುಗಿಡಗಳ ಕುರುಚಲು ಕಾಡುಗಳಿವೆ. ಭೂಸವಕಳಿಯನ್ನು ತಡೆಯಲು ನೆಡುತೋಪುಗಳನ್ನು ಬೆಳೆಸಲಾಗಿದೆ.

	ಕಾಡುಗಳ ಕೊರತೆಯಿಂದ ಪ್ರಾಣಿಪಕ್ಷಿಗಳ ಸಂಖ್ಯೆಯೂ ಕಡಿಮೆ. ಚಿರತೆ, ತೋಳ, ಕತ್ತೆಕಿರುಬ, ನರಿ, ಕಪಿ ಮತ್ತು ಜಿಂಕೆಗಳು ಅಲ್ಲಲ್ಲಿ ಕಂಡುಬರುತ್ತವೆ. ಹಾವುಗಳ ಸಂತತಿ ಹೆಚ್ಚು. ಚೇಳು, ಹಲ್ಲಿ, ನೀರಹಾವು, ಮಣ್ಣುಮುಕ್ಕ, ನಾಗರಹಾವು ಎಲ್ಲೆಡೆಯೂ ಇವೆ. ಬಾತು, ನೀರಕೋಳಿ, ಕಾಗೆ, ಗಾಜುಗ ಮುಖ್ಯವಾದ ಪಕ್ಷಿಗಳು. ಹಸು, ಎಮ್ಮೆ, ಕುರಿ, ಮೇಕೆ, ಕುದುರೆ ಮತ್ತು ಕೋಳಿ ಮುಖ್ಯ ಸಾಕುಪ್ರಾಣಿಗಳು

	ವರ್ಷದ ಬಹುಭಾಗ ಉಷ್ಣಾಂಶದಿಂದ ಕೂಡಿರುತ್ತದೆ.ಮಳೆ ಕೆಲವು ವರ್ಷಗಳಲ್ಲಿ ಕಡಿಮೆ ಇದ್ದು ಕೆಲವೊಮ್ಮೆ ಹೆಚ್ಚು ಮಳೆ ಆಗುವುದುಂಟು. 2000 ಇಸವಿಯ ಮಳೆಗಾಲದಲ್ಲಿ 701ಮಿಮೀ. ಮಳೆಯಾಗಿತ್ತು. ವರ್ಷದಲ್ಲಿ 41 ಮಳೆ ದಿನಗಳೆಂದು ಗುರುತಿಸಲಾಗಿದೆ. ಮುಂಗಾರಿನಲ್ಲಿ ವರ್ಷದ ಹೆಚ್ಚಿನ ಭಾಗ ಮಳೆಯಾದರೂ ಹಿಂಗಾರಿನಲ್ಲಿ ಚಂಡಮಾರುತದ ಮಳೆ ಬಿರುಸಿನಿಂದ ದೊಡ್ಡ ಪ್ರಮಾಣದಲ್ಲಿ ಬೀಳುತ್ತದೆ. ಉಷ್ಣಾಂಶ ಅದಿsಕವಿರುವ ಭಾಗದಲ್ಲಿರುವ ಈ ಜಿಲ್ಲೆಯ ಕೆಲವೆಡೆ ಗರಿಷವಿ ಉಷ್ಣಾಂಶ 400ಸೆ.ಇರುವುದೂ ಉಂಟು. ಹಿಂದಿನ ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ 450ಸೆ.ವರೆಗೂ ಉಷ್ಣಾಂಶ ಏರುವುದನ್ನು ಸ್ಮರಿಸಬಹುದು. ರಾತ್ರಿವೇಳೆ ಉಷ್ಣಾಂಶ ಬೇಗ ಕಡಿಮೆ ಆಗುತ್ತದೆ. ಡಿಸೆಂಬರ್‍ನಲ್ಲಿ ಗರಿಷವಿ ಉಷ್ಣಾಂಶ 29.30ಸೆ. ಇದ್ದರೆ ಕನಿಷವಿ ಉಷ್ಣಾಂಶ 17.70 ಸೆ.ಗೆ ಇಳಿಯುತ್ತದೆ. ನವೆಂಬರ್‍ನಿಂದ ಮೇವರೆಗೆ ಒಣ ಹವೆ ಇರುವುದು.
ವ್ಯವಸಾಯ: ಕೊಪ್ಪಳ ಜಿಲ್ಲೆ ವ್ಯವಸಾಯ ಪ್ರಧಾನವಾದುದು. ಜಿಲ್ಲೆಯ ಸೇ.75 ರಷ್ಟು ಜನರು ವ್ಯವಸಾಯ ಮತ್ತು ಆ ಸಂಬಂಧವಾದ ಕಸಬುಗಳನ್ನು ಅವಲಂಬಿಸಿದ್ದಾರೆ. ಮಳೆ ಕಡಿಮೆ ಪ್ರಮಾಣದಲ್ಲಿ ಬೀಳುವುದರಿಂದ ಸಾಗುವಳಿಗಾರರ ಬದುಕು ಅನಿಶ್ಚಿತ ಆದಾಯವನ್ನು ಆಧರಿಸಿದೆ. ಹಿಂದಿನ ವಿಜಯನಗರ ಕಾಲದ ನಾಲೆಗಳು ಸ್ಥಳೀಯವಾಗಿ ಸೀಮಿತ ಪ್ರದೇಶಗಳಿಗೆ ನೀರೊದಗಿಸುತ್ತಿದ್ದವು. ಸುದೈವವಶಾತ್ ಈ ಜಿಲ್ಲೆಯು ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ದೋಆಬ್ ಪ್ರದೇಶದಲ್ಲಿ ಬರುವುದರಿಂದ ನೀರಾವರಿ ಯೋಜನೆಗಳಿಂದ ಜಿಲ್ಲೆ ಹೆಚ್ಚು ಪ್ರಯೋಜನ ಪಡೆದಿದೆ.

	ಹೈದರಬಾದ್ ಸಂಸ್ಥಾನದ ಆಡಳಿತದಲ್ಲಿದ್ದಾಗ ತುಂಗಭದ್ರಾ ನದಿಯ ಅಣೆಕಟ್ಟು ಯೋಜನೆಗಳನ್ನು ಕಾರ್ಯಗತಗೊಳಿಸಲು ವಿವಿಧ ಪ್ರಯತ್ನಗಳು ನಡೆದವು. ಆಗಿನ ಮೈಸೂರು ಸಂಸ್ಥಾನ ಮತ್ತು ಮದರಾಸು ಪ್ರಾಂತಗಳು ಈ ಸರಹದ್ದಿನಲ್ಲಿ ಬರುತ್ತಿದ್ದುದರಿಂದ ಅವುಗಳೊಂದಿಗೆ ಸಮಾಲೋಚನೆ ಮತ್ತು ಒಪ್ಪಂದಗಳ ಅಂಗೀಕಾರದಲ್ಲೇ ಸಾಕಷ್ಟು ಕಾಲ ಕಳೆಯಿತು. ಸ್ವಾತಂತ್ರ್ಯ ಬಂದ ಮೇಲೆ 1950ರ ದಶಕದಲ್ಲಿ ತುಂಗಭದ್ರಾ ನದಿಗೆ ಹೊಸಪೇಟೆ ಬಳಿ ಬೃಹತ್ ಜಲಾಶಯ ನಿರ್ಮಿಸುವ ಕಾರ್ಯಯೋಜನೆ ತ್ವರಿತಗೊಂಡಿತು. ಇದು 1968ರ ಹೊತ್ತಿಗೆ ಪೂರ್ಣಗೊಂಡು ಕೊಪ್ಪಳವನ್ನು ಒಳಗೊಂಡಂತೆ ಹಿಂದಿನ ರಾಯಚೂರು ಜಿಲ್ಲೆಯ - ಈ ಜಲಾಶಯದ ಎಡದಂಡೆ ಕಾಲುವೆ ಮೂಲಕ ಹೆಚ್ಚು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯಿತು. ಈಗಿನ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶ ಹೆಚ್ಚಿತು. ಇದಲ್ಲದೆ ಹಳೆಯ ನಾಲಾಗಳು, ಸಣ್ಣ ಪ್ರಮಾಣದ ಅಣೆಕಟ್ಟುಗಳು ಅಥವಾ ಬ್ಯಾರೇಜ್‍ಗಳು ನಿರ್ಮಾಣವಾಗಿದ್ದು ಇವು ಬೇಸಗೆಯ ಬೆಳೆಗಳಿಗೆ ಆಶ್ರಯವಾಗಿವೆ. ಹಾಲಿ ಜಿಲ್ಲೆಯಲ್ಲಿ ಕಾಲುವೆಗಳಿಂದ 63,411 ಹೆಕ್ಟೇರ್, ಕೆರೆಗಳಿಂದ 1763 ಹೆಕ್ಟೇರ್ ಬಾವಿಗಳಿಂದ, 20,262 ಹೆಕ್ಟೇರ್ ಮತ್ತು ಕೊಳವೆ ಬಾವಿಗಳಿಂದ 6363 ಹೆಕ್ಟೆರ್ ಜಮೀನಿಗೆ ನೀರೊದಗುತ್ತಿದೆ.
ಬತ್ತ, ಜೋಳ, ಸಜ್ಜೆ, ಹುರುಳಿ, ಹೆಸರು, ಮುಸುಕಿನ ಜೋಳ, ಕಡಲೆ, ಎಳ್ಳು, ದ್ವಿದಳ ಧಾನ್ಯಗಳು, ಸೂರ್ಯಕಾಂತಿ, ಸೋಯಾಬೀನ್, ಹತ್ತಿ, ತೊಗರಿ, ಹರಳುಬೀಜ, ನೆಲಗಡಲೆ, ಅಗಸೆ ಇವು ಮುಖ್ಯ ಬೆಳೆಗಳಾಗಿವೆ. ತೋಟಗಾರಿಕೆ ಬೆಳೆಗಳಲ್ಲಿ ಮಾವು, ಸಪೋಟ, ಸೀಬೆ, ಬಾಳೆ, ನಿಂಬೆ, ದಾಳಿಂಬೆ, ಅಂಜೂರ ಮೊದಲಾದವು ಪ್ರಮುಖವಾದವು.

	ಪಶುಸಂಗೋಪನೆ ಕೃಷಿಯೊಂದಿಗೆ ಜಿಲ್ಲೆಯ ಮುಖ್ಯ ಉಪಕಸಬುಗಳಲ್ಲಿ ಒಂದಾಗಿದೆ. ಇಲ್ಲಿ ಖಿಲಾರ್ ತಳಿಯ ಜಾನುವಾರುಗಳು ಹೆಚ್ಚು. ಅದಿsಕ ಹಾಲು ಉತ್ಪಾದನೆಯ ದೃಷ್ಟಿಯಿಂದ ಮಿಶ್ರತಳಿಗಳನ್ನು ಅಬಿsವೃದ್ಧಿಪಡಿಸಲಾಗಿದೆ. ಜಾನುವಾರು ಮತ್ತು ಕುರಿಗಳ ತಳಿ ಅಬಿsವೃದ್ಧಿಗಾಗಿ ವಿವಿಧ ಫಾರಂಗಳನ್ನು ಸ್ಥಾಪಿಸಿದೆ. 1953ರಲ್ಲಿ ಕೊಪ್ಪಳ ತಾಲ್ಲೂಕಿನ ಮುನಿರಾಬಾದಿನಲ್ಲಿ ಸ್ಥಾಪಿಸಲಾದ ಫಾರಂ ಅವುಗಳಲ್ಲಿ ಪ್ರಮುಖವಾದುದು. ಇಲ್ಲಿ ಆಂಧ್ರ ಮತ್ತು ವಿದೇಶಗಳಿಂದ ತಂದ ತಳಿಗಳೊಂದಿಗೆ ಸ್ಥಳೀಯ ತಳಿಗಳ ಸಂಕರ ಮಾಡುವ ಮೂಲಕ ಹೊಸ ತಳಿಗಳನ್ನು ಬೆಳೆಸಲಾಗುತ್ತಿದೆ. ಕೋಳಿಗಳ ತಳಿ ಅಬಿsವೃದ್ಧಿಗೆ ಸಹ ಇಲ್ಲಿ ಒಂದು ಕೇಂದ್ರವಿದೆ. ಗಂಗಾವತಿಯಲ್ಲಿ ಪ್ರಾದೇಶಿಕ ಕೋಳಿ ಸಾಕಣೆ ಫಾರಂ ಇದೆ. ಆಗಾಗ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಗೋಶಾಲೆಗಳಿವೆ. ಮೇವು ಬೆಳೆಸುವ ಫಾರಂಗಳಿವೆ. 1998-99ರ ಅಂಕಿಅಂಶಗಳ ಮೇರೆಗೆ 249,976 ಸ್ಥಳೀಯ ಜಾನುವಾರುಗಳು; 2,165 ವಿದೇಶಿ ತಳಿಯ ಹಸುಗಳು, 8037 ಮಿಶ್ರತಳಿ ಹಸುಗಳು, 90078, ಎಮ್ಮೆಗಳೂ 191912 ಕುರಿಗಳು, 136671 ಮೇಕೆಗಳು ಜಿಲ್ಲೆಯಲ್ಲಿದ್ದವು. ಸಾಕು ಪ್ರಾಣಿಗಳ ಕ್ಷೇಮಾಬಿsವೃದ್ಧಿಗೆ ಪಶುಸಂಗೋಪನ ಇಲಾಖೆಯ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಇವೆ. ಜಿಲ್ಲೆಯಲ್ಲಿ 9 ಪಶುವೈದ್ಯ ಆಸ್ಪತ್ರೆಗಳು, 11 ಚಿಕಿತ್ಸಾಲಯಗಳು, 59 ಪ್ರಾಥಮಿಕ ಪಶುವೈದ್ಯಕೇಂದ್ರಗಳು, 5 ಸಂಚಾರಿ ಚಿಕಿತ್ಸಾಲಯಗಳು, 12 ಕೃತಕ ಗರ್ಭಧಾರಣಾ ಕೇಂದ್ರಗಳಿವೆ.

	ಸಾಕಷ್ಟು ಜಲಾಶಯಗಳು ಮತ್ತು ಕೆರೆಕಟ್ಟೆಗಳಿಂದ ಕೂಡಿರುವ ಈ ಜಿಲ್ಲೆಯಲ್ಲಿ ಮೀನುಗಾರಿಕೆ ಸಹ ಬೆಳೆದಿದೆ. 2000-01ರಲ್ಲಿ 3,324 ಮೆಟ್ರಿಕ್‍ಟನ್ ಮೀನನ್ನು ಹಿಡಿಯಲಾಗಿತ್ತು. ಮುನಿರಾಬಾದಿನಲ್ಲಿ ಮೀನು ಸಾಕಣೆ ಅಬಿsವೃದ್ಧಿ ಫಾರಂ ಇದೆ.

	ಕೃಷಿ ಪ್ರದೇಶದ ಸರ್ವತೋಬಿsಮುಖ ಅಬಿsವೃದ್ಧಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಮುಖ್ಯವಾಗಿ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ವಹಿಸಲಾಗಿದೆ. ಗಂಗಾವತಿಯ ಗ್ರಾಮಸೇವಕರ ತರಬೇತಿ ಕೇಂದ್ರ, ಸಾಮಾನ್ಯ ಕೃಷಿ ಸಂಶೋಧನ ಕೇಂದ್ರ, ತುಂಗಭದ್ರಾ ಕೃಷಿ ಅಬಿsವೃದ್ಧಿ ಕೇಂದ್ರ, ವ್ಯವಸಾಯ ಮತ್ತು ತೋಟಗಾರಿಕೆ ಇಲಾಖೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ.

ಜಿಲ್ಲೆಯ ಕುಷ್ಟಗಿ ಮತ್ತು ಬಸಾಪುರದಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿದ್ದು, ಇವುಗಳಲ್ಲಿ 47 ಖನಿಜ ಹಾಗೂ ಲೋಹದ ಕೈಗಾರಿಕೆಗಳಿವೆ. ಇಲ್ಲಿಂದ ಅಕ್ಕಿ ಮತ್ತು ಗ್ರಾನೈಟ್‌ಗಳ ರಫ್ತು ಆಗುತ್ತದೆ. ಗಂಗಾವತಿಯನ್ನು 'ಭತ್ತದ ಕಣಜ' ಎಂದು ಕರೆಯಲಾಗುತ್ತದೆ. ಕೊಪ್ಪಳ ತಾಲೂಕು ವಾಹನ, ಸೀರೆ ಮತ್ತು ಕೂದಲಿನ ಸಣ್ಣ ಕೈಗಾರಿಕೆಗೆ ಹೆಸರಾಗಿದೆ.

	ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳು ಅದಿsಕವಾಗಿ ಬೆಳೆಯುವುದರಿಂದ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳೊಂದಿಗೆ ವ್ಯಾಪಾರ ವಹಿವಾಟು ಹೆಚ್ಚು. ಎಣ್ಣೆ ಬೀಜಗಳು, ಸೇಂಗಾ ಎಣ್ಣೆ, ದ್ವಿದಳ ಧಾನ್ಯಗಳು ಮತ್ತು ಹತ್ತಿ ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಮಹಾರಾಷ್ಟ್ರದ ಸೋಲಾಪುರ, ಪುಣೆ, ಮುಂಬಯಿ ಹಾಗೂ ತಮಿಳುನಾಡಿನ ಕೊಯಮತ್ತೂರುಗಳಿಗೆ ಇಲ್ಲಿಂದ ಸರಕುಗಳು ಹೋಗುತ್ತವೆ. ಹದಮಾಡಿದ ಚರ್ಮಕ್ಕೆ ಹೊಸಪೇಟೆ, ಗದಗಗಳಲ್ಲಿ ಮಾರುಕಟ್ಟೆಗಳಿವೆ. ತೆಂಗಿನಕಾಯಿ, ಬೆಲ್ಲ, ಮರ, ವನಸ್ಪತಿ, ಹೊಗೆಸೊಪ್ಪು, ಕೃತಕ ರೇಷ್ಮೆ ಮೊದಲಾದ ವಸ್ತುಗಳನ್ನು ಜಿಲ್ಲೆಗೆ ಆಮದು ಮಾಡಿಕೊಳ್ಳಲಾಗುವುದು. ಹತ್ತಿ, ಸೇಂಗಾ, ಹುಣಿಸೆಹಣ್ಣು, ಮೆಣಸಿನಕಾಯಿ ಮತ್ತು ಕೈಮಗ್ಗದ ಬಟ್ಟೆಗಳಿಗೆ ಕೊಪ್ಪಳ ದೊಡ್ಡ ವ್ಯಾಪಾರ ಕೇಂದ್ರ. ಬತ್ತ, ಜೋಳ, ಸೇಂಗಾ, ಬೆಲ್ಲ, ಹರಳು, ಸಜ್ಜೆ ಇವುಗಳಿಗೆ ಗಂಗಾವತಿ ಮುಖ್ಯ ವ್ಯಾಪಾರ ಸ್ಥಳ. ಕುಷ್ಟಗಿ, ಯಲಬುರ್ಗ, ಕುಕನೂರು ಇತರ ಮುಖ್ಯ ವ್ಯಾಪಾರ ಕೇಂದ್ರಗಳು. 93 ಕೃಷಿ ಮಾರಾಟ ಸಹಕಾರ ಸಂಘಗಳಿವೆ. 4 ನಿಯಂತ್ರಿತ ಮಾರುಕಟ್ಟೆಗಳು, 12ಉಪ ಮಾರುಕಟ್ಟೆಗಳಿವೆ.

	ಸಹಕಾರಿ ರಂಗ ಆರ್ಥಿಕ ಚಟುವಟಿಕೆಗಳ ಎಲ್ಲ ಕ್ಷೇತ್ರಗಳಲ್ಲೂ ಕೈ ಹಾಕಿದೆ. ಜಿಲ್ಲಾ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಕೃಷಿ ಸಾಲಗಳನ್ನು ನೀಡುತ್ತ ಬಂದಿದೆ. 172 ಕೃಷಿ ಸಾಲ ನೀಡಿಕೆ ಸಹಕಾರ ಸಂಘಗಳು ಕಾರ್ಯನಿರತವಾಗಿವೆ. ವ್ಯವಸಾಯೇತರ ಸಾಲನೀಡಿಕೆ ಸಹಕಾರ ಸಂಘಗಳ ಸಂಖ್ಯೆ 55. ಸಾಲೇತರ ಸಹಕಾರ ಸಂಘಗಳ ಸಂಖ್ಯೆ 465 (1998). ಹಾಲು ಉತ್ಪಾದನೆ, ಕೋಳಿ ಸಾಕಣೆ, ಮೀನು ಮಾರಾಟ, ಕಂಬಳಿ ಮಾರಾಟ, ತೋಟಗಾರಿಕೆ ಉತ್ಪನ್ನಗಳ ಮಾರಾಟ ಈ ಎಲ್ಲ ವ್ಯವಹಾರಗಳಲ್ಲೂ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ.

	ಜಿಲ್ಲೆಯ ಸಾಕ್ಷರತಾ ಪ್ರಮಾಣ ಸೇ.55.02. ಅದರಲ್ಲಿ   ಸೇ.169.15 ಪುರುಷರು, ಸೇ.40.76 ಮಹಿಳೆಯರು ಸಾಕ್ಷರರಾಗಿದ್ದಾರೆ.  ಸಾಕ್ಷರತಾ ಆಂದೋಲನ ಯೋಜನೆ ಜಿಲ್ಲೆಯಲ್ಲಿ ಕಾರ್ಯನಿರತ ವಾಗಿರುವುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಾಗಿ ಶಾಲೆಗಳನ್ನು ತೆರೆದು ಶಿಕ್ಷಣ ಒದಗಿಸಲಾಗುತ್ತಿದೆ. ಮಕ್ಕಳನ್ನು ಶಾಲೆಗೆ  ಸೇರಿಸಲು ಒಡಂಬಡಿಸಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವೂ ನಡೆದಿದೆ. ಆದರೆ ಅಜ್ನಾನ, ಬಡತನ, ಕುಟುಂಬದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣ ನೀಡುವ 9 ಕಾಲೇಜುಗಳು, ತಾಂತ್ರಿಕ ಶಿಕ್ಷಣ ನೀಡುವ 3 ಪಾಲಿಟೆಕ್ನಿಕ್‍ಗಳು ಇವೆ. ಆರೋಗ್ಯ ಸುಧಾರಣೆಗಾಗಿ 5 ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾಲಯಗಳು ಮತ್ತು ಅನೇಕ ಸರ್ಕಾರಿ ಆರೋಗ್ಯ ಕೇಂದ್ರಗಳು ಇವೆ.

	ಸಮಗ್ರ ಗ್ರಾಮ ಸ್ವಸಹಾಯ ಯೋಜನೆ, ಗ್ರಾಮೀಣ ಇಂಧನ ಕಾರ್ಯಕ್ರಮ, ಮಾನವ ದಿನಗಳ ಕೆಲಸಗಳ ಸೃಷ್ಟಿ, ನಿರ್ಮಲ ಗ್ರಾಮ ಯೋಜನೆ, ಇಂದಿರಾ ಆವಾಸ್ ಯೋಜನೆ, ಪ್ರಧಾನ ಮಂತ್ರಿಗಳ ರಸ್ತೆ ನಿರ್ಮಾಣ ಯೋಜನೆ, ಕೊಳವೆ ನೀರು ಸರಬರಾಜು ಯೋಜನೆ ಮೊದಲಾದವು ಗ್ರಾಮಗಳ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಲು  ಉದ್ದೇಶಿತವಾಗಿವೆ. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಮಿತಿಗಳು ಗ್ರಾಮೀಣ ಪ್ರದೇಶದ ಪ್ರತಿನಿದಿsಗಳಿಂದ ಕೂಡಿದ್ದು ಈ ಪ್ರದೇಶದ ಅಬಿsವೃದ್ಧಿ ಕಾರ್ಯಗಳ ಮುಖ್ಯ ಜವಾಬ್ದಾರಿ ಹೊತ್ತಿವೆ.

ಕೊಪ್ಪಳ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಗಳಿವೆ. ರಾಷ್ತ್ರೀಯ ಹೆದ್ದಾರಿ ೧೩ (NH-13) ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಜಯಪುರ, ಚಿತ್ರದುರ್ಗ ಮಾರ್ಗವಾಗಿ ಮಂಗಳೂರಿಗೆ ತಲುಪುತ್ತದೆ. ಇದು ಜಿಲ್ಲೆಯ ಮುಖ್ಯ ಪಟ್ಟಣವಾದ ಕುಷ್ಟಗಿಯ ಮೂಲಕ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೬೩ (NH-63) ಆಂಧ್ರ ಪ್ರದೇಶದ ಗುತ್ತಿಯಿಂದ ಬಳ್ಳಾರಿ, ಹುಬ್ಬಳ್ಳಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಲುಪುತ್ತದೆ. ಜಿಲ್ಲೆಯ ಒಳಗೆ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕುಗಳನ್ನು ಕೂಡಿಸುವ ರಾಜ್ಯ ಹೆದ್ದಾರಿಗಳಿವೆ. ಕೊಪ್ಪಳದಿಂದ ರಾಯಚೂರು, ಗದಗ, ಶೋರಾಪುರ, ಬಳ್ಳಾರಿ,  ಮೊದಲಾದ ಜಿಲ್ಲೆಯ ಹೊರ ಸ್ಥಳಗಳಿಗೆ ರಸ್ತೆ ಸಂಪರ್ಕವಿದೆ. ಹುಬ್ಬಳ್ಳಿ-ಗುಂತಕಲ್ ರೈಲುಮಾರ್ಗವು ಕೊಪ್ಪಳ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಬೆಂಗಳೂರು, ಕೊಲ್ಹಾಪುರ, ಹೈದರಾಬಾದ್, ವಿಜಯವಾಡ ನಗರಗಳಿಗೆ ರೈಲುಸಂಪರ್ಕವಿದೆ. ಕೊಪ್ಪಳ ಹಾಗು ಮುನಿರಾಬಾದಿನ ರೈಲು ನಿಲ್ದಾಣಗಳು ನೈರುತ್ಯ ರೇಲ್ವೆಯ ಹುಬ್ಬಳ್ಳಿ ವಿಭಾಗಕ್ಕೆ ಸೇರುತ್ತವೆ. ಕೊಪ್ಪಳದಿಂದ ೮ ಕಿ.ಮೀ. ದೂರದಲ್ಲಿರುವ ಗಿಣಿಗೇರಾ ಸಮೀಪ ಮೆಸರ್ಸ್. ಎಂ.ಎಸ್.ಪಿ.ಎಲ್ ಲಿಮಿಟೆಡ್ ರವರ ವಿಮಾನ ನಿಲ್ದಾಣ ಬಳಕೆಯಲ್ಲಿದೆ.

ಕೊಪ್ಪಳ ಜಿಲ್ಲೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ  ಆಸುಪಾಸಿನಲ್ಲಿದ್ದು ಪ್ರಾಚೀನ ಕಾಲದಿಂದಲೂ ಜನವಸತಿ ಹೊಂದಿದ ಪ್ರದೇಶವಾಗಿದೆ. ಗಂಗಾವತಿ ತಾಲ್ಲೂಕಿನ ಬೆಂಕಲ್ ಮತ್ತು ಕೆರೆಹಾಳ್ ನೆರೆಯ ರಾಯಚೂರು ಜಿಲ್ಲೆಯ ಮಸ್ಕಿ, ಹಾಳಾಪುರ, ಕಲ್ಲೂರು ಮೊದಲಾದ ಕಡೆಗಳಲ್ಲಿ ಇತಿಹಾಸ ಪೂರ್ವ ಕಾಲದ ನಿವೇಶನಗಳಿದ್ದುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕೊಪ್ಪಳ ಮತ್ತಿತರ ಕಡೆಗಳಲ್ಲಿ ಬೃಹತ್ ಶಿಲಾ ಸಮಾದಿsಗಳು ದೊರೆತಿವೆ. ಶಿಲಾಯುಗದ ಉಪಕರಣಗಳು, ಮಣ್ಣಿನ ಮಡಿಕೆಗಳು, ಟೆರಕೋಟ ಮೂರ್ತಿಗಳು ಇಲ್ಲಿ ದೊರೆತಿವೆ. ಈ ಆಧಾರಗಳ ಮೇಲೆ ಈ ಪ್ರದೇಶ ದಕ್ಷಿಣ ಭಾರತದ ಅತಿ ಪುರಾತನ ಮಾನವ ನೆಲೆಗಳನ್ನು ಹೊಂದಿದ್ದ ವಲಯಗಳಲ್ಲೊಂದೆಂದು ಹೇಳಬಹುದು.

	ಕೊಪ್ಪಳದ ಬಳಿಯ ಮಲಿಮಲ್ಲಪ್ಪ ಬೆಟ್ಟದ ತುದಿಯ ಮೇಲೆ ಅನೇಕ ಹಾಸುಗಲ್ಲಿನ ಕಟ್ಟಡಗಳು ಕಂಡುಬಂದಿವೆ. ಅವನ್ನು ಸ್ಥಳೀಯವಾಗಿ 'ಮೊರಿಯರ ಅಂಗಡಿ' ಎಂದು ಕರೆಯುತ್ತಾರೆ. ಇದು ಮೌರ್ಯರ ಕಾಲದ ವಸತಿಯ ಬಗ್ಗೆ ಮತ್ತು ಆಗ ಉತ್ತರ ಭಾರತದ ಜನ ಇಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದ ಬಗ್ಗೆ ಸುಳಿವು ನೀಡುತ್ತದೆ. ಪೌರಾಣಿಕ ಐತಿಹ್ಯಗಳು ಈ ಪ್ರದೇಶದಲ್ಲೂ ಇತರೆಡೆಗಳಂತೆಯೆ ಅಸ್ತಿತ್ವದಲ್ಲಿವೆ. ಪಾಲ್ಕಿಗುಂಡು ಬೆಟ್ಟ ಮತ್ತು ಮಲಿ ಮಲ್ಲಪ್ಪನ ಬೆಟ್ಟದ ನಡುವಿನ ಬಯಲನ್ನು ಪಾಂಡವರ ವಠಾರ ಎಂದು ಕರೆಯಲಾಗಿದೆ. ಇಲ್ಲೂ ಹಾಸುಗಲ್ಲು ಕಟ್ಟಡಗಳಿವೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ  ರಾಮಾಯಣ ಕಾಲದ ಕಿಷ್ಕಿಂದೆಯ ಭಾಗವಾಗಿತ್ತೆಂದು ನಂಬಿಕೆಯಿದೆ. ಗವಿಮಠ ಬೆಟ್ಟ ಮತ್ತು ಪಾಲ್ಕಿಗುಂಡು ಬೆಟ್ಟದಲ್ಲಿ ಒಂದೊಂದು ಅಶೋಕನ ಶಾಸನಗಳು ದೊರೆತಿವೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ನಡೆಯುತ್ತಿದ್ದ ವಾಣಿಜ್ಯ ಹಾಗೂ ಆಗಿನ ವ್ಯಾಪಾರ ಸರಕುಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಮೌರ್ಯ ಸಾಮ್ರಾಜ್ಯದ ಹೊರಗಿನ ದಕ್ಷಿಣ ರಾಜ್ಯಗಳನ್ನು ಚೋಳ, ಪಾಂಡ್ಯ, ಸಾತಿಯಪುತ, ಕೇರಲಪುತ ಮತ್ತು ತಂಬಪನ್ನಿ (ಶ್ರೀಲಂಕಾ) ಎಂದು ಅಶೋಕನ ಶಾಸನಗಳಲ್ಲಿ ಹೆಸರಿಸಲಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಪೂರ್ವೋಕ್ತ ದೇಶಗಳು ದಖನ್ನಿನ ಹೊರಗಿದ್ದು ಆಂದಿನ ದಖನ್ನಿನ ಪ್ರದೇಶ ಮೌರ್ಯ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿದ್ದದ್ದು ತಿಳಿದುಬರುತ್ತದೆ. ಮೌರ್ಯರ ಶಾಸನಗಳಲ್ಲಿ ಬರುವ ಸುವರ್ಣಗಿರಿಯನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ಕೆಲವು ವಿದ್ವಾಂಸರು ಗುರುತಿಸಿದ್ದರೆ, ಇನ್ನು ಕೆಲವರು ಇದನ್ನು ಮಸ್ಕಿ ಇರಬಹುದೆಂದು ಅಬಿsಪ್ರಾಯಪಟ್ಚಿದ್ದಾರೆ. ಅದೇನೇ ಇದ್ದರೂ ಈ ಪ್ರದೇಶ ಬಹು ಪುರಾತನ ನಾಗರಿಕತೆ ಮತ್ತು ಸಂಸ್ಕøತಿಗಳ ನೆಲೆಬೀಡೆಂಬುದು ಸ್ಪಷ್ಟವಾಗಿದೆ.

	ಮೌರ್ಯ ಸಾಮ್ರಾಜ್ಯದ ಪತನಾನಂತರ ದಖನ್‍ನಲ್ಲಿ ಸ್ಥಾಪಿತವಾದ ಪ್ರಥಮ ಸ್ವತಂತ್ರ ಸಾಮ್ರಾಜ್ಯವೆಂದರೆ ಶಾತವಾಹನರದು. ಇಂದಿನ ಮಹಾರಾಷ್ಟ್ರ ರಾಜ್ಯದ ಪ್ರತಿಷಾವಿನ ಅಥವಾ ಪೈಠಣ್ ಅನ್ನು ರಾಜಧಾನಿಯಾಗಿ ಹೊಂದಿದ್ದ ಈ ಸಾಮ್ರಾಜ್ಯದ ಭಾಗವಾಗಿ ಕೊಪ್ಪಳ ಉನ್ನತ ಸ್ಥಿತಿಗೆ ಬಂದಿತು. ಕ್ರಿ.ಪೂ.3ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗೂ ಆಳಿದ ಈ ವಂಶದ ಸಾಮ್ರಾಟರು ಉತ್ತರ ಭಾರತದವರೆಗೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದರು. ಕೊನೆಗೆ ದಕ್ಷಿಣ ಪಥಕ್ಕೆ ಸೀಮಿತವಾದ ಇವರು ತುಂಗಭದ್ರಾ ದಕ್ಷಿಣಕ್ಕೂ ತಮ್ಮ ಆಳಿಕೆಯನ್ನು ಚಾಚಿದ್ದರು. ಶಾತವಾಹನರ ಕಾಲದಿಂದ ಕೊಪ್ಪಳ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಸುತ್ತಮುತ್ತಲ ಬೆಟ್ಟಗುಡ್ಡಗಳಿಗೆ ಕೊಪಣ್ರಾದಿ ಮತ್ತು ಕುಪಣಾಚಲ ಎಂಬ ಹೆಸರುಗಳಿವೆ. ಕೊಪ್ಪಳಕ್ಕೆ ಕೊಪಣ ಅಥವಾ ಕೋಪಣ ನಗರವೆಂಬ ಹೆಸರಿದ್ದಿತು. ಈ ಜಿಲ್ಲೆಯ ಕವಲೂರು, ಆಳವಂಡಿ, ಮಾದಿನೂರು, ಕುಕ್ಕನೂರು, ಪುರ, ಆನೆಗೊಂದಿ, ಇಟಗಿ ಮತ್ತು ಮುಧುವೊಳಲು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ.

	ಸಾತವಾಹನರ ಅನಂತರ ಕರ್ನಾಟಕದ ಉತ್ತರ ಭಾಗದಲ್ಲಿ ಮತ್ತು ಕರಾವಳಿಯಲ್ಲಿ ಕದಂಬರು ಪ್ರಬಲ ರಾಜ್ಯಸ್ಥಾಪಿಸಿ ಆಳಿದರು. ಆದರೆ ದಕ್ಷಿಣದಲ್ಲಿ ತಲಕಾಡಿನ ಗಂಗರು, ಪೂರ್ವದಲ್ಲಿ ವಾಕಾಟಕರು ಕದಂಬರ ಸಮಕಾಲೀನರಾಗಿ ಆಳಿದರು. ಕದಂಬರು ಈ ಜಿಲ್ಲೆಯ ಮೇಲೆ ಎಷ್ಟು ನಿಯಂತ್ರಣ ಹೊಂದಿದ್ದರು ಎಂದು ಹೇಳಲು ಸ್ಪಷ್ಟ ಆಧಾರಗಳು ಲಭ್ಯವಿಲ್ಲ. ಆದರೆ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಕದಂಬರ ಶಾಸನ ದೊರೆತಿರುವುದರಿಂದ ಈ ಜಿಲ್ಲೆಯ ಮೇಲೆ ಒಂದಲ್ಲ ಒಂದು ಕಾಲದಲ್ಲಿ ಭಾಗಶಃವಾಗಿ ಅಥವಾ ಪೂರ್ಣವಾಗಿ ಅವರು ನಿಯಂತ್ರಣ ಹೊಂದಿದ್ದರು ಎಂದು ಹೇಳಬಹುದು. ಇದೇ ವೇಳೆಗೆ ಮಧ್ಯ ಭಾರತದಲ್ಲಿ ಪ್ರಬಲ ರಾಜ್ಯ ಸ್ಥಾಪಿಸಿದ ವಾಕಾಟಕರು ಕುಂತಳ ದೇಶದವರೆಗೂ ತಮ್ಮ ರಾಜ್ಯ ವಿಸ್ತರಿಸಿದ್ದರೆಂದು ತಿಳಿದುಬರುತ್ತದೆ. ಅವರು ಈ ಪ್ರದೇಶವನ್ನು ಸಾಕಷ್ಟು ಕಾಲ ಆಳಿರಬೇಕು.

	ಕೊಪ್ಪಳ ಜಿಲ್ಲೆಗೆ ಸಮೀಪದಲ್ಲಿ ಈಗಿನ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ 6ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಚಳುಕ್ಯ ಮನೆತನ ಪರ್ಯಾಯ ದ್ವೀಪದಲ್ಲಿ ಒಂದು ಪ್ರಬಲ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಸಫಲವಾಯಿತು. ಕದಂಬ ರಾಜ್ಯ ಬಹುಮಟ್ಟಿಗೆ ಚಳುಕ್ಯ ಸಾಮ್ರಾಜ್ಯದಲ್ಲಿ ವಿಲೀನವಾಗಿ ಕೆಲವು ಶಾಖೆಗಳ ಆಳಿಕೆ ಮಾತ್ರ ಮುಂದುವರಿಯಿತು. ಬಾದಾಮಿ ಚಳುಕ್ಯರ ಶಾಸನಗಳು ಕೊಪ್ಪಳ ಜಿಲ್ಲೆಯ ಕೊಪ್ಪಳ, ಹಲಗೇರಿ, ಇಟಗಿ ಮತ್ತು ಕುಕನೂರು ಮೊದಲಾದೆಡೆಗಳಲ್ಲಿ ದೊರೆತಿವೆ. ಇವರು 757ರಲ್ಲಿ ರಾಷ್ಟ್ರಕೂಟರಿಂದ ಪರಾಜಯ ಹೊಂದುವವರೆಗೂ ಸಮಗ್ರವಾಗಿ ಆಳಿದರು. ಇವರ ಕಾಲದಲ್ಲಿ ಕೊಪ್ಪಳ ಒಂದು ಪಟ್ಟಣವಾಗಿ ಬೆಳೆಯಿತು. ಚೀನಿ ಪ್ರವಾಸಿ ಯುವಾನ್‍ಚಾಂಗನು ದಾಖಲಿಸಿರುವ ಕೊಂಕಿನಪುಲೋ ಎಂಬುದು ಕೊಪ್ಪಳವೆಂದು ಗುರುತಿಸಲಾಗಿದೆ.

	ರಾಷ್ಟ್ರಕೂಟರು, ಬಾದಾಮಿ ಚಳುಕ್ಯರನ್ನು ಸೋಲಿಸಿ ಅವರ ಉತ್ತರಾದಿsಕಾರಿಗಳಾಗಿ ಮಾನ್ಯಖೇಟದಿಂದ ಆಳತೊಡಗಿದ್ದು ಕೊಪ್ಪಳ ಜಿಲ್ಲೆಯ ಇತಿಹಾಸಕ್ಕೆ ಹೊಸ ತಿರುವನ್ನು ನೀಡಿತು. ಆಗ ಕೋಪ್ಪಳ ಅಥವಾ ಕೋಪಣ ನಗರ ಜೈನರ ಪುಣ್ಯಸ್ಥಳವಾಗಿ ಪ್ರಸಿದ್ಧವಾಗಿತ್ತು. ದಕ್ಷಿಣ ಭಾರತದ ಜೈನ ರಾಜಮನೆತನದವರು ವಿಶೇಷವಾಗಿ ಇಲ್ಲಿಗೆ ಯಾತ್ರೆ ಬರುತ್ತಿದ್ದರು. ಕೊಪ್ಪಳ, ಇಟಗಿ, ಅರಕೇರಿ, ಸಂಕನೂರು, ಅಳವಂಡಿ, ಬೆಣಗೇರಿಗಳಲ್ಲಿ ರಾಷ್ಟ್ರಕೂಟರಿಗೆ ಸಂಬಂದಿsಸಿದ ಶಾಸನಗಳು ದೊರೆತಿವೆ. ಕೊಪ್ಪಳದಲ್ಲಿ ರಾಷ್ಟ್ರಕೂಟರ ದಂಡನಾಯಕರಲ್ಲೊಬ್ಬನಾದ ಮಾಮರಸನೆಂಬಾತನಿದ್ದನೆಂದು ತಿಳಿದುಬರುತ್ತದೆ. ರಾಷ್ಟ್ರಕೂಟರ ಸಾಮಂತರೂ ನಿಕಟ ಬಂಧುಗಳೂ ಆಗಿದ್ದ ತಲಕಾಡಿನ ಗಂಗರು ಈ ಪ್ರದೇಶದೊಂದಿಗೆ ಹೆಚ್ಚಿನ ಸಂಪರ್ಕ ಮತ್ತು ಅದಿsಕಾರ ಹೊಂದಿದ್ದರು. ಗಂಗ ಇಮ್ಮಡಿ ಬೂತುಗನ (936-61) ಶಾಸನ ಸಮೀಪದ ಇಟಗಿಯಲ್ಲಿ ದೊರೆತಿದೆ. ಈತ ರಾಷ್ಟ್ರಕೂಟ ಮುಮ್ಮಡಿ ಅಮೋಘವರ್ಷನ ಮಗಳು ರೇವಕನಿಮ್ಮಡಿಯನ್ನು ಮದುವೆಯಾಗಿದ್ದ. ಈ ಸಂದರ್ಭದಲ್ಲಿ ಚಕ್ರವರ್ತಿಯು ಬೂತುಗನಿಗೆ ಪುರಿಗೆರೆ 300, ಬೆಳ್ವೊಲ 300, ಕಿಸುಕಾಡು 70 ಮತ್ತು ಬಾಗೆನಾಡು 70 ಇವುಗಳನ್ನು ನೀಡಿದ್ದ. ಕುಕನೂರಿನ ತಾಮ್ರಶಾಸನ ಇಮ್ಮಡಿ ಮಾರಸಿಂಹನಿಗೆ ಸೇರಿದ್ದು ಅದರಲ್ಲಿ ಗಂಗರ ವಂಶಾವಳಿಯನ್ನು ನೀಡಲಾಗಿದೆ. ಗಂಗಾವತಿ ತಾಲ್ಲೂಕಿನ ಹೆಬ್ಬಾಳದ ಶಾಸನ ಈ ಭಾಗದಲ್ಲಿ ಗಂಗರು ಆಳಿದ್ದಕ್ಕೆ ಸಾಕ್ಷಿಯಾಗಿದೆ.

	ಗಂಗ ಮನೆತನಕ್ಕೆ ಕೊಪ್ಪಳ ಪುಣ್ಯಕ್ಷೇತ್ರವಾಗಿದ್ದುದಲ್ಲದೆ ಅಲ್ಲಿ ರಾಜಮನೆತನದ ಅನೇಕ ಸದಸ್ಯರು ಸ್ವಯಂಪ್ರೇರಣೆಯಿಂದ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ ವಿವರಗಳು ತಿಳಿದುಬರುತ್ತವೆ. ಇವರಲ್ಲಿ ಇಮ್ಮಡಿ ಬೂತುಗನ ಪತ್ನಿ ಪದ್ಮಬ್ಬರಸಿ, ಮಾರಸಿಂಹನ ಅಕ್ಕ ಹಾಗೂ ಚಾಳುಕ್ಯ ಹರಿಗನ ಪತ್ನಿ ಬಿಜ್ಜಬ್ಬರಸಿ ಮೊದಲಾದವರು ಸೇರಿದ್ದಾರೆ. ಕೊಪ್ಪಳದಲ್ಲಿ ಹಲವಾರು ಜೈನ ಮುನಿಗಳು ಮೋಕ್ಷ ಪಡೆದ ವಿವರಗಳು ಅಲ್ಲಿನ ಶಾಸನಗಳಲ್ಲಿ ದೊರೆಯುತ್ತವೆ.

	ರಾಷ್ಟ್ರಕೂಟರ ಆಳಿಕೆಯನ್ನು ಕೊನೆಗಾಣಿಸಿ ಚಾಳುಕ್ಯರ ಅದಿsಕಾರವನ್ನು ಮತ್ತೆ ಸ್ಥಾಪಿಸಿದ ಚಾಳುಕ್ಯ ತೈಲಪನ ಮೊದಲ ವರ್ಷದ ಆಳಿಕೆಯ (973) ಶಾಸನ ಮಾದಿನೂರಿನಲ್ಲಿದೆ. ಅದರಲ್ಲಿ ರಾಜನು ಬ್ರಹ್ಮಾಂಡಕ್ರತು ಎಂಬ ಯಾಗವನ್ನು ಮಾಡಿದನೆಂದು ಹೇಳಿದೆ. ಕಲ್ಯಾಣದ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶದವರ ಆಳಿಕೆಯು 12ನೆಯ ಶತಮಾನದ ಉತ್ತರಾರ್ಧದವರೆಗೂ ಮುಂದುವರಿಯಿತು. ಈ ಯುಗದಲ್ಲಿ ಹೇಮಾವತಿ, ಹೆಂಜೇರು ಮತ್ತು ಕಂಪಿಲಿಯಿಂದ ಆಳಿದ ನೊಳಂಬರು ಈ ಜಿಲ್ಲೆಯ ಕೆಲವು ಭಾಗಗಳನ್ನು ಆಳಿರುವ ಸಂಭವ ಹೆಚ್ಚಿದೆ. ಕಳಚುರಿಗಳು ಅಲ್ಪಾವದಿsಯ ಕಾಲ ಆಳಿದರೂ ಅವರ ಕೆಲ ಶಾಸನಗಳು ಜಿಲ್ಲೆಯಲ್ಲಿ ದೊರೆತಿವೆ. ಆ ಕಾಲದಲ್ಲಿ ಕುಕನೂರು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿತ್ತು. ಅಲ್ಲಿನ ಜೇಷಾವಿದೇವಿಗೆ ರಾಜರು ಮತ್ತು ದಂಡನಾಯಕರು ನಡೆದುಕೊಳ್ಳುತ್ತಿದ್ದರು.

	ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಈ ಪ್ರಾಂತ್ಯ ಅವರಿಬ್ಬರ ನಡುವಿನ ವಿವಾದಾತ್ಮಕ ಪ್ರದೇಶವಾಗಿತ್ತು. ಈ ಎರಡು ರಾಜ್ಯಗಳ ನಡುವೆ ಮಧ್ಯಗಾಮಿ ರಾಜ್ಯದಂತಿದ್ದ ಕಂಪಿಲಿ ರಾಜ್ಯದ ಪ್ರಬಲ ನೆಲೆಗಳಲ್ಲೊಂದಾದ ಕುಮ್ಮಟದುರ್ಗ ಕೊಪ್ಪಳ ತಾಲ್ಲೂಕಿನಲ್ಲಿದೆ. ಮೊದಲು ಕಂಪಿಲಿಯಿಂದ ಬಳ್ಳಾರಿ ಜಿಲ್ಲೆ ಆಳುತ್ತಿದ್ದ ಇಲ್ಲಿನ ಅರಸರು 1315ರಲ್ಲಿ ಕುಮ್ಮಟದುರ್ಗದಿಂದ ಆಳುತ್ತಿದ್ದುದು ಶಾಸನಗಳಿಂದ ಕಂಡುಬರುತ್ತದೆ. ದೇವಗಿರಿಯಲ್ಲಿ ನೆಲೆಸಿದ್ದ ದೆಹಲಿ ಸುಲ್ತಾನರ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಹುತಾತ್ಮರಾದ ಕಂಪಿಲಿರಾಯ ಮತ್ತು ಕುಮಾರರಾಮ ಈ ಮನೆತನದವರು.

	ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ಚಟುವಟಿಕೆಗಳು ಪ್ರಾರಂಭವಾದದ್ದು ಈ ಜಿಲ್ಲೆಯ ಆನೆಗೊಂದಿಯಲ್ಲಿ ಎಂದು ತಿಳಿದುಬರುತ್ತದೆ. ವಿಜಯನಗರ ಅರಸರ 1342ರ ಶಾಸನ ಆನೆಗೊಂದಿಯಲ್ಲಿ ದೊರೆತಿದೆ. ಕೊಪ್ಪಳದ 1346ರ ಶಾಸನದಲ್ಲಿ ಹರಿಹರನ ಉಲ್ಲೇಖವಿದೆ. ಆನೆಗೊಂದಿ, ಕನ್ನೇರುಮಡು, ಕೆಸರಟ್ಟಿ, ಕಲ್ಲೂರು, ಬಂಡಿಹಾಳಗಳಲ್ಲಿ ವಿಜಯನಗರದ ಅರಸರ ಮತ್ತು ಮಾಂಡಲಿಕರ ಶಾಸನಗಳು ಲಭ್ಯವಾಗಿವೆ. ವಿಜಯನಗರದ ಆಯಕಟ್ಟಿನ ಪ್ರದೇಶವಾಗಿದ್ದ ಈ ಜಿಲ್ಲೆಯ ಒಡೆತನಕ್ಕಾಗಿ ವಿಜಯನಗರ ಅರಸರು ಮತ್ತು ಬಹಮನೀ ಸುಲ್ತಾನರುಗಳ ನಡುವೆ ಆಗಾಗ ಯುದ್ಧಗಳಾಗುತ್ತಿದ್ದವು. ಕಲ್ಲೂರು ಮತ್ತು ಬಂಡಿಹಾಳದ ಶಾಸನಗಳು ಅಚ್ಯುತರಾಯನ ಕಾಲದಲ್ಲಿ ಅವನ ಮಾಂಡಲಿಕರಾಗಿದ್ದ ಗುಜ್ಜಲವಂಶದ ಅರಸರ ಬಗ್ಗೆ ತಿಳಿಸುತ್ತದೆ.

	ತಾಳಿಕೋಟೆಯ ಯುದ್ಧದ ತರುವಾಯವೂ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸ್ವಲ್ಪ ಕಾಲ ಐತಿಹಾಸಿಕ ಮಹತ್ತº ಪಡೆದಿತ್ತು. ಆನೆಗೊಂದಿಯಲ್ಲಿ ಆಶ್ರಯ ಪಡೆದ ವಿಜಯನಗರದ ಅರಸು ಮನೆತನದವರು ಅಲ್ಲಿ ತಮ್ಮ ಅಧಿಕಾರವನ್ನು ಮುಂದುವರಿಸಿದರು. ಶ್ರೀರಂಗಪಟ್ಟಣದ ಪ್ರಾಂತ್ಯಾದಿsಕಾರಿಯಾಗಿದ್ದ ಶ್ರೀರಂಗರಾಯ ಆನೆಗೊಂದಿಯ ಮೂಲದವನೆಂದು ತಿಳಿದುಬರುತ್ತದೆ. 1657ರಲ್ಲಿ ಶಿವಾಜಿಯು ಆನೆಗೊಂದಿ ಮೊದಲಾದ ಒಂಬತ್ತು ಸಮತಗಳನ್ನು ಶ್ರೀರಂಗರಾಯನ ಕುಟುಂಬದ ಪೋಷಣೆಗಾಗಿ ನೀಡಿದ್ದನೆಂದು ಹೇಳಲಾಗಿದೆ. ಈ ಕಾಲದಲ್ಲಿ ಕೊಪ್ಪಳವು ಕೊಪಣನಾಡು ಅಥವಾ ಕೋಪಣವೇಂಟೆಯ ಕೇಂದ್ರ ಸ್ಥಳವಾಗಿದ್ದಿತು.

	ಕಂಪಿಲಿ ರಾಜ್ಯ ಪತನಗೊಂಡು ದಖನ್ನಿನ ದೆಹಲಿ ಪ್ರಾಂತ್ಯಾದಿsಕಾರಿಯ ವಶಕ್ಕೆ ಬಂದ ದೋಆಬ್ ಪ್ರಾಂತ್ಯವು ಅಂದರೆ ಕೊಪ್ಪಳ ಜಿಲ್ಲೆ ಮತ್ತು ಈಗಿನ ರಾಯಚೂರು ಜಿಲ್ಲೆಗಳ ಪ್ರದೇಶವು ಮುಂದೆ ಸದಾ ವಿಜಯನಗರ ಮತ್ತು ಬಹಮನೀ ರಾಜ್ಯದ ನಡುವೆ ವಿವಾದಿತ ಪ್ರದೇಶವಾಗಿ ಪರಿಣಮಿಸಿತು. ರಾಯಚೂರಿನೊಂದಿಗೆ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳೂ ಆಗಾಗ ಈ ಎರಡು ರಾಜ್ಯ- ಸಾಮ್ರಾಜ್ಯಗಳ ನಡುವೆ ಕೈ ಬದಲಾಯಿಸುತ್ತಿದ್ದುದನ್ನು ಕಾಣಬಹುದು. ರಾಯಚೂರು ಮತ್ತು ಮುದುಗಲ್ಲು ದೀರ್ಘಕಾಲ ಬಿಜಾಪುರ - ಗುಲ್ಬರ್ಗ ಮತ್ತು ಬೀದರ್‍ನಿಂದ ಆಳಿದ ಬಹಮನೀ ರಾಜ್ಯದ ವಶದಲ್ಲಿರುತ್ತಿದ್ದುದ್ದರಿಂದ ಕೊಪ್ಪಳದ ಅನೇಕ ಸ್ಥಳಗಳೂ ಅದರ ಆಳಿಕೆಗೊಳಪಟ್ಟಿದ್ದವು. ಪದೇ ಪದೇ ಬಹಮನೀ ಸೈನ್ಯಗಳು ವಿಜಯನಗರದ ಪ್ರದೇಶಗಳಿಗೆ ನುಗ್ಗಿ ಕೊಲೆ, ಲೂಟಿ ಮತ್ತು ದಬ್ಬಾಳಿಕೆಗಳಲ್ಲಿ ತೊಡಗುತ್ತಿದ್ದವು. ಎರಡನೆಯ ದೇವರಾಯ ಮತ್ತು ಕೃಷ್ಣದೇವರಾಯ ಈ ದಾಳಿಗಳನ್ನು ಯಶಸ್ವಿಯಾಗಿ ಎದುರಿಸಿ ಸುಲ್ತಾನರ ಆಳಿಕೆಯಿಂದ ಈ ಪ್ರದೇಶವನ್ನು ಮುಕ್ತಗೊಳಿಸಿದ್ದರು. 1565ರಲ್ಲಿ ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಸೈನ್ಯ ಸೋತ ಮೇಲೆ ಈ ಜಿಲ್ಲೆ ಬಹುಮಟ್ಟಿಗೆ ಬಿಜಾಪುರದ ಸುಲ್ತಾನ್‍ಶಾಹಿಯ ಅಧೀನಕ್ಕೊಳಗಾಯಿತು. ಶಿವಾಜಿ 1677ರಲ್ಲಿ ಕೊಪ್ಪಳವನ್ನು ಮುತ್ತಿ ವಶಪಡಿಸಿಕೊಂಡ. ಸ್ವಲ್ಪ ಕಾಲದಲ್ಲೇ ಬಿಜಾಪುರ ರಾಜ್ಯ ಔರಂಗಜೇಬನ ಮಹಾ ದಕ್ಷಿಣ ದಂಡಯಾತ್ರೆಗೆ ಬಲಿಯಾದ ಮೇಲೆ ಅನೇಕ ವರ್ಷಗಳ ಅರಾಜಕತೆಯ ಅನಂತರ ಈ ಜಿಲ್ಲೆ ಹೈದರಾಬಾದಿನ ನಿಜಾಮರ ಆಡಳಿತದಡಿ ಬಂದಿತು.

	ಹೈದರ್‍ಅಲಿ ಮತ್ತು ಟಿಪ್ಪುಸುಲ್ತಾನರ ದಂಡಯಾತ್ರೆಗಳಿಂದಾಗಿ ಈ ಪ್ರದೇಶ ಸ್ವಲ್ಪ ಅವದಿsಗೆ ಮೈಸೂರು ರಾಜ್ಯದ ಭಾಗವಾಗಿತ್ತು. ಆದರೆ 1799ರಲ್ಲಿ ಟಿಪ್ಪು ಬ್ರಿಟಿಷರಿಗೆ ಸಂಪೂರ್ಣವಾಗಿ ಸೋತ ಅನಂತರ ಆದ ರಾಜಕೀಯ ಒಡಂಬಡಿಕೆಯ ಮೇರೆಗೆ ಕೊಪ್ಪಳ ಜಿಲ್ಲೆ ಅಂದಿನ ರಾಯಚೂರು ಜಿಲ್ಲೆಯ ಭಾಗವಾಗಿ ಹೈದರಾಬಾದ್ ಸಂಸ್ಥಾನಕ್ಕೆ ಸೇರಿತು. ಹೈದರಾಬಾದ್ ನಿಜಾಮರ ಸರ್ಕಾರವು ಸಂಸ್ಥಾನವನ್ನು ಜಹಗೀರಿಗಳು, ಪೈಗಗಳು ಮತ್ತು ನಿಜಾಮರ ಖಾಸಾ ಜಮೀನುಗಳೆಂದು ವಿಂಗಡಿಸಿದ್ದಿತು. ಜಹಗೀರಿಗಳನ್ನು ರಾಜ್ಯಕ್ಕೆ ಸೈನ್ಯ ಮೊದಲಾದವನ್ನು ಒದಗಿಸಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿತ್ತು. ಪೈಗಗಳನ್ನು ಅರಮನೆಗೆ ಬೇಕಾದ ಶ್ರೀಮಂತರು ಮತ್ತು ಕುಲೀನರಿಗೆ ಕೊಡಲಾಗುತ್ತಿತ್ತು. ಈ ನಿಜಾಮರ ಖಾಸಾ ಜಮೀನುಗಳನ್ನು ರೈತರು ಗುತ್ತಿಗೆಗೆ ಸಾಗುವಳಿ ಮಾಡುತ್ತಿದ್ದರು. ಕೊಪ್ಪಳ ಮತ್ತು ಯಲಬುರ್ಗ ತಾಲ್ಲೂಕುಗಳು ನವಾಬ್ ಸಾಲರ್‍ಜಂಗ ಎಂಬ ಜಹಗೀರುದಾರನಿಗೆ ಸೇರಿದ್ದವು. ಕುಷ್ಟಗಿ ತಾಲ್ಲೂಕು ಒಬ್ಬ ದೇಸಾಯಿಯ ಜಹಗೀರಾಗಿದ್ದಿತು. ಆನೆಗೊಂದಿಯೂ ಒಂದು ಪುಟ್ಟ ಜಹಗೀರಾಗಿತ್ತು. ಈ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಶ್ರೀಮಂತ ಮತ್ತು ಪ್ರಭಾವಿ ವರ್ಗದ ಅಲ್ಪಸಂಖ್ಯಾತರ ಕೈಯಲ್ಲಿ ರೈತರೂ ಕಾರ್ಮಿಕರು ಹೀನ ಸ್ಥಿತಿಯಲ್ಲಿ ಬದುಕಬೇಕಾಯಿತು. ಗ್ರಾಮದಲ್ಲಿ ಸರ್ಕಾರದ ಪರವಾಗಿ ಪಟೇಲ ಮತ್ತು ಗ್ರಾಮ ಮುಖ್ಯರಿರುತ್ತಿದ್ದರು. ಈ ಜಹಗೀರುದಾರರುಗಳು ನಿಜಾಮನಿಗೆ ವಾರ್ಷಿಕ ಪೆÇಗದಿ ಕೊಡುತ್ತಿದ್ದರು. ಅವರಿಗೆ ಪೆÇಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳನ್ನು ಹೊಂದುವ ಅದಿsಕಾರವಿದ್ದಿತು.

	ಈ ಬಗೆಯ ಆಳಿಕೆಯಲ್ಲಿ ಜನಸಾಮಾನ್ಯರ ಹಕ್ಕುಬಾಧ್ಯತೆಗಳು ಕುಂಠಿತಗೊಂಡಿದ್ದುವು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಭಾರತಾದ್ಯಂತ ಬಲಗೊಳ್ಳುತ್ತಿದ್ದ ಸ್ವಾತಂತ್ರ್ಯಚಳವಳಿಯ ಪ್ರಭಾವ ಹೈದರಾಬಾದ್ ಸಂಸ್ಥಾನವನ್ನೂ ತಟ್ಟದಿರಲಿಲ್ಲ. 1911ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಕರ್ನಾಟಕ ರಾಜಕೀಯ ಸಮ್ಮೇಳನದಲ್ಲಿ ಈ ಜಿಲ್ಲೆಯ ಹಲವರು ಬಂದು ಭಾಗವಹಿಸಿದರು. ಬೆಳಗಾಂವಿಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಸಮ್ಮೇಳನ (1924) ಸ್ವಾತಂತ್ರ್ಯ ಹೋರಾಟದ ಬಗ್ಗೆ ಈ ಪ್ರಾಂತದ ಜನರ ಗಮನ ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿತು. 1916-17 ರಿಂದಲೇ ಕೊಪ್ಪಳದಲ್ಲಿ ಒಂದು ಖಾದಿ ಪ್ರಚಾರ ಕೇಂದ್ರ ಪ್ರಾರಂಭಗೊಂಡಿತ್ತು. 1922ರಲ್ಲಿ ಆರ್.ಬಿ.ದೇಸಾಯಿಯವರು ಕುಕನೂರಿನಲ್ಲಿ ವಿದ್ಯಾನಂದ ಗುರುಕುಲವನ್ನು ಸ್ಥಾಪಿಸಿದರು. ಇದು ಜನರಲ್ಲಿ ರಾಷ್ಟ್ರೀಯ ಭಾವನೆ ಬೆಳೆಸಲು ಸಹಕಾರಿಯಾಯಿತು. 1920-21ರಲ್ಲಿ ರಾಯಚೂರಿನಲ್ಲಿ ಪಂಡಿತ ತಾರಾನಾಥರು ಸ್ಥಾಪಿಸಿದ ಹಮ್‍ದರ್ದ್ ರಾಷ್ಟ್ರೀಯ ಶಾಲೆಯು ಸ್ವಾತಂತ್ರ್ಯ ಚಳವಳಿಯ ಗುರಿಗಳನ್ನು ಪ್ರಚಾರಗೊಳಿಸಿತು. ರಾಯಚೂರಿನ ಅಡವಿರಾವ್ ಫಡ್ನಾವಿಸ್, ಆರ್.ಜಿ.ಜೋಷಿ, ಗಾಣದಾಳ್ ನಾರಾಯಣಪ್ಪ, ವೀರಣ್ಣಮಾಸ್ತರ ಮೊದಲಾದವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಹರಡಿತು. 1928ರಲ್ಲಿ ರಾಯಚೂರಿನಲ್ಲಿ ಸ್ಥಾಪನೆಗೊಂಡ ಕರ್ನಾಟಕ ಸಂಘ ಇನ್ನೊಂದು ಮುಖ್ಯ ಘಟ್ಟವಾಯಿತು. 1930ರಲ್ಲಿ ಗಾಂದಿsೀಜಿಯವರು ಕೊಪ್ಪಳ ತಾಲ್ಲೂಕಿನ ಮೂಲಕ ರೈಲಿನಲ್ಲಿ ಹಾದುಹೋದಾಗ ಅವರನ್ನು ಅನೇಕರು ಭೇಟಿಯಾದರು. 1934ರಲ್ಲಿ ರಾಯಚೂರಿನಲ್ಲಿ 20ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1938ರಲ್ಲಿ ಹೈದರಾಬಾದ್ ಸಂಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂತು. ಈ ಭಾಗದ ಜನರು ಮೂರು ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಬೇಕಾಗಿತ್ತು. ಒಂದು ಕಡೆ ಬ್ರಿಟಿಷರಿಂದ ವಿಮೊಚನೆ; ಇನ್ನೊಂದು ಕಡೆ ಜಹಗೀರ್‍ದಾರಿ ವ್ಯವಸ್ಥೆ ನಿಜಾಮ್‍ಶಾಹಿಯಿಂದ ಬಿಡುಗಡೆ; ಮೂರನೆಯದಾಗಿ ಕನ್ನಡೇತರ ರಾಜ್ಯದಿಂದ ಹೊರಬಂದು ಕನ್ನಡನಾಡಿನ ಏಕೀಕರಣ ಸಾದಿsಸುವುದು.

	ಸಿರೂರು ವೀರಭದ್ರಪ್ಪ ಅಳವಂಡಿ ಶಿವಮೂರ್ತಿಸ್ವಾಮಿ, ಎಲ್.ಕೆ.ಷರಾಫ್, ಡಿ.ಜಿ.ಬಿಂದು, ಜನಾರ್ಧನರಾವ್‍ದೇಸಾಯಿ, ಬುರ್ಲಿಬಿಂದು ಮಾಧವರಾವ್, ಜಿ.ಕೆ.ಪ್ರಾಣೇಶಾಚಾರ್ಯ ಮತ್ತಿತರರು ಜನಜಾಗೃತಿ ಮತ್ತು ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳು ನಿಧಾನವಾಗಿಯಾದರೂ ದೃಢವಾಗಿ ಪ್ರಗತಿಯಲ್ಲಿದ್ದಾಗಲೇ ಇಲ್ಲಿ ಜನತೆ ಹೊಸ ಸಮಸ್ಯೆಯನ್ನು ಎದುರಿಸಬೇಕಾಯಿತು. 1945ರ ಅನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ನಿಚ್ಚಳವಾಗುತ್ತಿದ್ದಂತೆಲ್ಲ ಹೈದರಾಬಾದ್ ಸಂಸ್ಥಾನದ ನಿಜಾಮರು ಭಾರತ ಒಕ್ಕೂಟದಿಂದ ಪ್ರತ್ಯೇಕವಾಗುಳಿಯುವ ಪ್ರಯತ್ನದಲ್ಲಿ ತೊಡಗಿದರು. 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾಯಿತು. ಅದೇ ತಿಂಗಳ 27ರಂದು ಹೈದರಾಬಾದ್ ರಾಜ್ಯ ಭಾರತ ಒಕ್ಕೂಟದಿಂದ ಪ್ರತ್ಯೇಕವಾಗುಳಿಯಲು ನಿರ್ಧರಿಸಿ ಸ್ವಾತಂತ್ರ್ಯ ಘೂೀಷಿಸಿಕೊಂಡಿತು. ಜೊತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿರುವವರನ್ನು ದಮನ ಮಾಡುವುದಕ್ಕಾಗಿ ಜನರಲ್ಲಿ ಭಯ ಹುಟ್ಟಿಸಲು ರಜಾಕಾರರೆಂದು ಕರೆದುಕೊಂಡ ಮುಸ್ಲಿಮ್ ಉಗ್ರವಾದಿಗಳ ಗುಂಪು ಹಿಂಸಾಚಾರಕ್ಕಿಳಿಯಿತು. ಇದರಿಂದ ಅನೇಕಕಡೆ ಬಿsೀಕರ ಲೂಟಿ, ದರೋಡೆ, ಕೊಲೆ ಸುಲಿಗೆ, ಅತ್ಯಾಚಾರಗಳು ನಡೆದವು. ಆಗ ಈ ರಾಜ್ಯದ ಜನರ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿ 1948ರ ಸೆಪ್ಟೆಂಬರ್ 13ರಂದು ಪೆÇಲೀಸ್ ಕಾರ್ಯಾಚರಣೆ ಪ್ರಾರಂಬಿsಸಿತು. ಅದೇ ತಿಂಗಳ 18ರಂದು ಹೈದರಾಬಾದ್ ಸಂಸ್ಥಾನವನ್ನು ವಶಪಡಿಸಿಕೊಂಡು ಭಾರತ ಒಕ್ಕೂಟದಲ್ಲಿ ಸೇರಿಸಲಾಯಿತು. 1956 ನವೆಂಬರ್ 1ರಂದು ಭಾಷಾವಾರು ರಾಜ್ಯಗಳ ರಚನೆಯಾದಾಗ ಕೊಪ್ಪಳವೂ ಸೇರಿದಂತೆ ಅಂದಿನ ರಾಯಚೂರು ಜಿಲ್ಲೆ ಮತ್ತು ಹೈದರಾಬಾದ್ ಕರ್ನಾಟಕ ಭಾಗ ವಿಶಾಲ ಮೈಸೂರು ರಾಜ್ಯದಲ್ಲಿ ಒಂದಾಯಿತು.

	ಈ ಜಿಲ್ಲೆ ಸಾಂಸ್ಕøತಿಕವಾಗಿ ಮತ್ತು ಧಾರ್ಮಿಕವಾಗಿ ಉತ್ತಮ ಪರಂಪರೆ ಹೊಂದಿದೆ. ಶೈವ ಮಠಗಳು, ಅಗ್ರಹಾರಗಳು, ಜೈನ ಕೇಂದ್ರಗಳಿಂದ ಕೂಡಿರುವುದಲ್ಲದೆ ಜನಪದ ಸಾಹಿತ್ಯ ಸಂಪತ್ತಿನಿಂದಲೂ ಕೂಡಿದೆ. ವೀರಶೈವಧರ್ಮ ಹೊಸ ಸಾಂಸ್ಕøತಿಕ ಪರಿಸರವನ್ನು ಸೃಷ್ಟಿಸಿತು. ಯಲಬುರ್ಗ ತಾಲ್ಲೂಕಿನ ಕುಕನೂರಿನ ಕಲ್ಲೇಶ್ವರ ದೇವಾಲಯ ಮತ್ತು ಅದೇ ತಾಲ್ಲೂಕಿನ ಇಟಗಿಯ ಮಹಾದೇವ ದೇವಾಲಯ ಚಾಳುಕ್ಯ ಪರಂಪರೆಯ ಶಿಲ್ಪ ಮತ್ತು ವಾಸ್ತುಗಳನ್ನು ಹೊಂದಿವೆ. ಕೊಪ್ಪಳದ ಕೋಟೆ ನೆಲಮಟ್ಟದಿಂದ 400' ಎತ್ತರದ ಗುಡ್ಡದ ಮೇಲಿದ್ದು ಅದನ್ನು ವಿನ್ಯಾಸ ಮತ್ತು ಭದ್ರತೆಯ ದೃಷ್ಟಿಯಿಂದ ಐರೋಪ್ಯ ದಂಡನಾಯಕರೂ ಮೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೌರೂರು, ಬಳಂಗೆರೆ, ಆಳವಂಡಿ, ತಳಕಲ್ಲು, ಆನೆಗೊಂದಿ, ಮುನಿರಾಬಾದ್ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಸ್ತ್ರೀ ದೇವತೆಗಳ ಆರಾಧನೆ ಅತ್ಯಂತ ಪೂರ್ವಕಾಲದಿಂದಲೂ ಬಂದ ಬಳುವಳಿ. ಕುಕನೂರಿನ ಮಹಾಮಾಯ, ಜೇಷಾವಿದೇವಿ, ಸಂಕನೂರಿನ ಸಂಕಲಾದೇವಿ, ಹೊಸೂರಿನ ಮಹಾಮಾಯಾ, ಹುಲಿಗಿಯ ಹುಲೆಗೆಮ್ಮ ಇವು ಪ್ರಸಿದ್ಧ ಶಕ್ತಿ ದೇವತೆಗಳು. ಕುಷ್ಟಗಿಯ ಅಡವಿರಾಯನ ಜಾತ್ರೆ, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ, ಕನಕಗಿರಿ ಜಾತ್ರೆ, ಯಲಬುರ್ಗ ತಾಲ್ಲೂಕಿನ ಮಂಗಳೂರಿನ ಮಂಗಳೇಶ್ವರ ಜಾತ್ರೆಗಳು ಭಕ್ತಾದಿಗಳನ್ನು ಆಕರ್ಷಿಸುತ್ತವೆ.

	ಶಾಸ್ತ್ರೀಯ ಸಂಗೀತ ಇಲ್ಲಿ ಹೆಚ್ಚು ಜನಪ್ರಿಯ; ದಾಸ ಪರಂಪರೆಯೂ ಉಂಟು. ಪ್ರಾಚೀನ ಕಾಲದಿಂದಲೂ ಸಾಹಿತ್ಯ ರಚನೆಗೆ, ಕವಿಪಂಡಿತರಿಗೆ ಹೆಸರುವಾಸಿ. ಇತ್ತೀಚಿನ ಸಾರಸ್ವತ ಲೋಕದ ಹಲವಾರು ಸಾಧಕರು ಇಲ್ಲಿನವರು. ಇವರಲ್ಲಿ ಸಿದ್ದಯ್ಯ ಪುರಾಣಿಕ, ಪಾಂಡುರಂಗರಾವ್  ದೇಸಾಯಿ, ಜಯತೀರ್ಥ ರಾಜಪುರೋಹಿತ, ಇಟಗಿ ರಾಘವೇಂದ್ರ, ಕುಷ್ಟಗಿ ರಾಘವೇಂದ್ರರಾವ್, ದೇವೇಂದ್ರ ಕುಮಾರ ಹಕಾರಿ, ಎಚ್.ಎಸ್.ಪಾಟೀಲ, ಬಿ.ಆರ್.ತುಬಾಕಿ, ಗವಿಸಿದ್ದ ಬಳ್ಳಾರಿ, ನಾ.ಭ.ಶಾಸ್ತ್ರಿ,ಕೀರ್ತನಕೇಸರಿ ಜಯರಾಮಾಚಾರ್ಯ, ಮಾಧವರಾವ್ ಮುಧೋಳ (ಉರ್ದು ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪರಿಣಿತಿ ಪಡೆದಿದ್ದರು. ಉರ್ದು-ಕನ್ನಡ ನಿಘಂಟಿನಲ್ಲಿ ಇವರು ಕೆಲಸಮಾಡಿದ್ದರು) ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.    

ಕೊಪ್ಪಳ ತಾಲ್ಲೂಕು ಹಾಗೂ ಅದರ ಮುಖ್ಯ ಪಟ್ಟಣ. ದಕ್ಷಿಣಕ್ಕೆ ತುಂಗಭದ್ರಾ ಜಲಾಶಯ, ಪಶ್ಚಿಮಕ್ಕೆ ಗದಗ ಜಿಲ್ಲೆ, ಉತ್ತರಕ್ಕೆ ಯಲಬುರ್ಗ ತಾಲ್ಲೂಕು ಮತ್ತು ಪೂರ್ವಕ್ಕೆ ಗಂಗಾವತಿ ತಾಲ್ಲೂಕು ಇವೆ. ಕೊಪ್ಪಳ, ಇರಕಲ್ಲಗಡ, ಹಿಟ್ನಾಳ ಮತ್ತು ಅಳವಂಡಿ ಈ ನಾಲ್ಕು ಹೋಬಳಿಗಳಿವೆ. 156 ಹಳ್ಳಿಗಳಿವೆ. ತಾಲ್ಲೂಕಿನ ಒಟ್ಟು ವಿಸ್ತೀರ್ಣ 1,378.6ಚ.ಕಿಮೀ. 

	ತಾಲ್ಲೂಕಿನ ಬಹುಭಾಗ ಕಪುಮೆಕ್ಕಲು ಮಣ್ಣಿನ ಮಟ್ಟಸ ಪ್ರಸ್ಥಭೂಮಿ. ತಾಲ್ಲೂಕಿನ ಈಶಾನ್ಯ ಮತ್ತು ಕೊಪ್ಪಳ ಪಟ್ಟಣದ ಸಮೀಪದಲ್ಲಿ ಗುಡ್ಡಗಳಿವೆ. ತುಂಗಭದ್ರಾನದಿ ತಾಲ್ಲೂಕಿನ ದಕ್ಷಿಣದ ಗಡಿಯಾಗಿತ್ತು. ಈಗ ತುಂಗಭದ್ರಾ ಜಲಾಶಯದ ಹರವಿನಲ್ಲಿ ಆ ಅಂಚಿನ ಭಾಗಗಳು ಮುಳುಗಿವೆ. ತುಂಗಭದ್ರಾ ಅಣೆಕಟ್ಟಿರುವುದು ತಾಲ್ಲೂಕಿನ ಆಗ್ನೇಯದಲ್ಲಿ ಮುನಿರಾಬಾದ್ ಬಳಿ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 594.65ಮಿಮೀ. ಕೃಷಿ ತಾಲ್ಲೂಕಿನ ಮುಖ್ಯ ಜೀವನೋಪಾಯ. ಸಾಗುವಳಿಯಾಗುತ್ತಿರುವ ಒಟ್ಟು 3,40,592 ಎಕರೆಗಳಲ್ಲಿ 5,285ಕ್ಕೂ ಹೆಚ್ಚು ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ (ಕಾಲುವೆಯಿಂದ 4,702 ಎಕರೆಗಳು, ಬಾವಿಗಳಿಂದ 285 ಎಕರೆಗಳು, ಇತರ ಮೂಲಗಳಿಂದ 150 ಎಕರೆಗಳು). ಜೋಳ (51,940), ನೆಲಗಡಲೆ (37,005), ಹತ್ತಿ (27,835), ಗೋದಿ (7,200), ತೊಗರಿ (5,562), ಬಾಜ್ರ (4,593), ಬತ್ತ (2,942), ಕಬ್ಬು (2,583), ಹುರುಳಿ (1,320), ಹರಳು (260) ಮುಖ್ಯ ಬೆಳೆಗಳು.

	ಕೊಪ್ಪಳದಿಂದ 13ಕಿಮೀ ದೂರದಲ್ಲಿರುವ ಕಿನ್ನಾಳ ಗ್ರಾಮ ಮರದ ಕುಶಲ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ಚಿತ್ರಗಾರ ಮನೆತನದವರು ಉತ್ತಮವಾಗಿ ರಚಿಸಿ ಬಣ್ಣಹಾಕಿದ ದೇವವಿಗ್ರಹಗಳು, ಪ್ರಾಣಿಗಳ ಬೊಂಬೆಗಳು, ಹಣ್ಣು ತರಕಾರಿಗಳ ತದ್ರೂಪ ಬೊಂಬೆಗಳು, ನಾಟಕಗಳಲ್ಲಿ ಬಳಸುವ ಕಿರೀಟ, ಮುಖವಾಡ, ತೊಟ್ಟಿಲು, ಪೀಠಗಳನ್ನು ತಯಾರಿಸುತ್ತಾರೆ. ನೇಯ್ಗೆ, ಕೊಂಬಿನಿಂದ ಬಾಚಣಿಗೆಯ ತಯಾರಿಕೆ ಈ ಮೊದಲಾದ ಉದ್ಯಮಗಳೂ ಇಲ್ಲಿವೆ.

	ತುಂಗಭದ್ರಾ ನದಿಯ ಉಪನದಿಯಾದ ಹಿರೇಹಳ್ಳದ ಎಡದಂಡೆಯ ಮೇಲಿರುವ ಕೊಪ್ಪಳ ಈ ತಾಲ್ಲೂಕಿನ ಮುಖ್ಯ ಪಟ್ಟಣ. ಜನಸಂಖ್ಯೆ 56,145. ಇದು ತಾಲ್ಲೂಕಿನ ವಾಣಿಜ್ಯ, ಕೈಗಾರಿಕೆ ಮತ್ತು ವಿದ್ಯಾಕೇಂದ್ರ ಹಾಗೂ ಹುಬ್ಬಳ್ಳಿ ಗುಂತಕಲ್ಲು ರೈಲುಮಾರ್ಗದ ಒಂದು ನಿಲ್ದಾಣ. ಬಳ್ಳಾರಿ, ಕುಷ್ಪಗಿ, ಹುಬ್ಬಳ್ಳಿ, ಯಲಬುರ್ಗ, ಗಂಗಾವತಿಗಳಿಗೆ ರಸ್ತೆ ಸಂಪರ್ಕವಿದೆ. ಕೈಮಗ್ಗದ ಬಟ್ಟೆಗಳಿಗೆ ಇದು ಪ್ರಸಿದ್ಧ. ವಾರ್ಷಿಕವಾಗಿ ಜನವರಿಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಈ ಪಟ್ಟಣದ ಪಶ್ಚಿಮಕ್ಕೆ ಬೆಟ್ಟಗಳ ಸಾಲು ಹಬ್ಬಿದೆ. ಇವುಗಳಲ್ಲಿ ಪಾಲ್ಕಿ ಗುಂಡು ಅತ್ಯಂತ ಎತ್ತರವಾದ್ದು (2339'). ಪೂರ್ವಕ್ಕಿರುವ ಬೆಟ್ಟಗಳ ಸಾಲಿನಲ್ಲಿ ಗವಿಮಠವಿದೆ. ದಕ್ಷಿಣಕ್ಕೆ ಮತ್ತೊಂದು ಬೆಟ್ಟದ ಸಾಲು ಇದೆ. ಅದನ್ನು ಬಹದ್ದೂರ್ ಬಂಡೆ (1980') ಎನ್ನುತ್ತಾರೆ.

	ಗವಿಮಠ ಬೆಟ್ಟದಲ್ಲಿ ನಾಲ್ಕು ಗವಿಗಳಿವೆ. ಅಲ್ಲದೆ ಪುರಾತನವಾದ ವೀರಶೈವ ಮಠ ಮತ್ತು ಜೈನಸಮಾದಿsಗಳೂ ಇವೆ. ಪಾಲ್ಕಿಗುಂಡಿನ ಪಶ್ಚಿಮಕ್ಕಿರುವ ಮಲಿಮಲ್ಲಪ್ಪನ ಬೆಟ್ಟದಲ್ಲಿ ಮೋರಿಯರ ಅಂಗಡಿ ಎಂದು ಕರೆಯುವ ಬೃಹತ್ ಶಿಲಾಯುಗೀನ ಕಲ್ಮನೆ ಸಮಾದಿsಗಳಿವೆ. ಅಶೋಕನ ಎರಡು ಲಘುಪ್ರಸ್ತರ ಧರ್ಮಶಾಸನಗಳು ಸಿಕ್ಕಿದ್ದು ಗವಿಮಠ ಮತ್ತು ಪಾಲ್ಕಿಗುಂಡು ಬೆಟ್ಟಗಳಲ್ಲಿ. ಇವುಗಳಿಂದ ಕೊಪ್ಪಳ ಕ್ರಿ.ಪೂ.3ನೆಯ ಶತಮಾನದಷ್ಟು ಪ್ರಾಚೀನವಾದ್ದೆಂದು ಊಹಿಸಬಹುದು. ಕ್ರಿ.ಶ.9ನೆಯ ಶತಮಾನದಿಂದ 13ನೆಯ ಶತಮಾನದವರೆಗಿನ ಹಲವು ಶಿಲಾಶಾಸನಗಳೂ ಅನಂತರದ ಮುಸ್ಲಿಂ ದಾಖಲೆಗಳೂ ದೊರಕಿವೆ. ಕೊಪಣಪುರವರಾದಿsೀಶ್ವರರಾದ ಶಿಲಾಹಾರರ ಒಂದು ಶಾಖೆಗೆ ಇದು ರಾಜಧಾನಿಯಾಗಿದ್ದಿರಬಹುದು. ಗಂಗ ಮತ್ತು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಕೊಪ್ಪಳ ಮುಖ್ಯ ಕೇಂದ್ರವಾಗಿದ್ದಿರಲೂಬಹುದು. ಇದನ್ನು ಶಾಸನ ಮತ್ತು ಸಾಹಿತ್ಯಗಳಲ್ಲಿ ಕೊಪಣ, ಕುಪಣ, ಕುಪಿನ ಎಂದು ಕರೆದಿರುವುದಲ್ಲದೆ, ಆದಿತೀರ್ಥ, ಮಹಾತೀರ್ಥ,ವಿದಿತ ಮಹಾ ಕೊಪಣನಗರಮುಂತಾಗಿ ಬಣ್ಣಿಸಲಾಗಿದೆ. ಒಂದು ಕಾಲದಲ್ಲಿ ಪ್ರಸಿದ್ಧ ಜೈನಕ್ಷೇತ್ರವಾಗಿತ್ತು. ಇಲ್ಲಿ 722 ಬಸದಿಗಳೂ 24 ಜೈನಸಂಘಗಳೂ ಇದ್ದುವೆಂದು ಹೇಳಲಾಗಿದೆ.ಇಲ್ಲಿ ಅನೇಕ ಜೈನಶಾಸನಗಳೂ ದೊರೆತಿವೆ.

	ಇತಿಹಾಸಪ್ರಸಿದ್ಧವಾದ ಕೊಪ್ಪಳದ ಕೋಟೆಯನ್ನು ಕಟ್ಟಿದವರು ಯಾರೆಂಬುದು ತಿಳಿದಿಲ್ಲ. ಟಿಪ್ಪುಸುಲ್ತಾನ 1786ರಲ್ಲಿ ಇದನ್ನು ವಶಪಡಿಸಿಕೊಂಡು, ಫ್ರೆಂಚ್ ಶಿಲ್ಪಿಗಳ ನೆರವಿನಿಂದ ಇನ್ನೂ ಭದ್ರ ಪಡಿಸಿದನೆಂದು ತಿಳಿದುಬರುತ್ತದೆ. ಕಡಿದಾದ ಮೆಟ್ಟಿಲುಗಳನ್ನೊಳ ಗೊಂಡಿದೆ. ದಕ್ಷಿಣ ಭಾರತದ ದುರ್ಗಮ ಕೋಟೆಗಳಲ್ಲಿ ಕೊಪ್ಪಳ ಕೋಟೆಯೂ ಒಂದು. ಈ ಕೋಟೆಯನ್ನು 1790ರಲ್ಲಿ ಇಂಗ್ಲಿಷ್ ಮತ್ತು ನಿಜಾಮಿ ಪಡೆಗಳು ಸತತವಾಗಿ ಮುತ್ತಿಗೆ ಹಾಕಿದ್ದುಂಟು. 1858ರಲ್ಲಿ ಈ ದುರ್ಗ ಮುಂಡರಗಿ ಬಿsೀಮರಾಯನ ವಶದಲ್ಲಿತ್ತು. 1949ರ ವರೆಗೆ ಕೊಪ್ಪಳ ನವಾಬ್ ಸಾಲಾರ್‍ಜಂಗನ ಜಹಗೀರಿಯಾಗಿತ್ತು.     (ಜೆ.ಆರ್.ಪಿ.;ಎಚ್.ಆರ್.ಆರ್.ಬಿ.)

	ಕೊಪ್ಪಳ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿತ್ತು. ಸಂಗ್ರಾಮದ ಜ್ವಾಲೆ 1858ರಲ್ಲಿ ಮುಂಡರಗಿ ಭೀಮರಾಯ ಹಾಗೂ ಹಮ್ಮಿಗೆ ಕೆಂಚನಗೌಡ ಇವರ ಹೋರಾಟದಿಂದಲೇ ಪ್ರಾರಂಭವಾಯಿತೆನ್ನಬಹುದು. ಹೈದರಾಬಾದು ಕರ್ನಾಟಕದಲ್ಲಿ ಕೊಪ್ಪಳ ಭಾಗದಲ್ಲಿಯೇ ಮೊದಲಿಗೆ ರಾಜಕೀಯ ಚಟುವಟಿಕೆಗಳು ಕಂಡುಬಂದವು. ಬಹಳ ಮೊದಲೇ ಕೀರ್ತನಕೇಸರಿ ಜಯರಾಮಾಚಾರ್ಯರು ಪುರಾಣದ ಕಥೆಗಳಿಗೆ ರಾಜಕೀಯ ರಂಗು ಕೊಟ್ಟು ಸ್ಫೂರ್ತಿ ಹುಟ್ಟುವಂತೆ ಸ್ವಚ್ಫಂದ ಶೈಲಿಯಲ್ಲಿ ಕೀರ್ತನಗಳನ್ನು ಹೇಳತೊಡಗಿ ಕರ್ನಾಟಕದಲ್ಲೆಲ್ಲ ಅಸಹಕಾರ, ಕಾಯಿದೆ ಭಂಗ, ಖಾದಿ ಪ್ರಚಾರ, ನಿದಿsಸಂಗ್ರಹಗಳಿಗಾಗಿ ಅದನ್ನು ಬಳಸಿಕೊಡರು. ಪುಟ್ಟಾಭಟ್ಟ ಜಹಗೀರದಾರ ಮತ್ತು ಹೊಸಪೇಟೆಯ ಚಕ್ರಪಾಣಿ ಆಚಾರ್ಯರು ಈ ಭಾಗದಲ್ಲಿ ಖಾದಿ ಪ್ರಚಾರ ಮಾಡಿದರು. ಇಲ್ಲಿಯವರಾದ ಬಸವಂತರಾವ್ ಕಾಟರಹಳ್ಳಿ ಮತ್ತು ಹಿರೇಮಠ ಅವರು ಹೈದರಾಬಾದಿನಲ್ಲಿ ಪೆÇೀಲಿಸರ ಕಣ್ಣುತಪ್ಪಿಸಿ ರಾಷ್ಟ್ರಧ್ವಜ ಹಾರಿಸಿದರು. 1928ರಷ್ಟು ಮಂಚೆಯೇ ಕಾಂಗ್ರೆಸ್ಸನ್ನು ಸೇರಿದವರಲ್ಲಿ ಪ್ರಮುಖರೆಂದರೆ ಕೊಪ್ಪಳದವರಾದ ಎಚ್.ಕೊಟ್ರಪ್ಪ, ಹಂಪಿ ನರಸಿಂಗರಾವ್ ಮತ್ತು ಸಿರೂರು ವೀರಭದ್ರಪ್ಪನವರು. ನಿಜಾಮ್ ಮತ್ತು ಬ್ರಿಟಿಷ್ ಸರ್ಕಾರ ಇವರಿಗೆ ಬಹಳ ತೊಂದರೆ ಕೊಟ್ಟಿತ್ತು. 1938ರಲ್ಲಿ ಹೈದರಾಬಾದಿನಲ್ಲಿ ನಡೆದ ವಂದೇ ಮಾತರಂ ವಿದ್ಯಾರ್ಥಿ ಆಂದೋಲನದಲ್ಲಿ ಮತ್ತು 1941ರಲ್ಲಿ ನಡೆದ ವೈಯಕ್ತಿಕ ಸತ್ಯಾಗ್ರಹದಲ್ಲಿ ಕೊಪ್ಪಳದ ವಿದ್ಯಾರ್ಥಿ ಮುಖಂಡ ಇಟಗಿ ವಿರೂಪಾಕ್ಷಯ್ಯನವರ ನೇತೃತ್ವದಲ್ಲಿ ಅನೇಕರು ಸೆರೆಮನೆ ಸೇರಿದರು. ಈ ಭಾಗದಲ್ಲಿದ್ದ ಕುಕನೂರಿನ ವಿದ್ಯಾವಂತ ಗುರುಕುಲ ಅದರ ಸಂಸ್ಥಾಪಕರಾದ ರಾಘವೇಂದ್ರರಾವ್ ದೇಸಾಯಿ ಅವರ ಮುಂಧೋರಣೆಯಿಂದ ರಾಜಕೀಯ ಜಾಗೃತಿಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿತು. ಈ ಹೊತ್ತಿಗೆ ನಗರದ ಪ್ರಮುಖ ವಕೀಲರನೇಕರು ರಾಜಕೀಯದಲ್ಲಿ ದುಮುಕಿದರು. ಹಳ್ಳಿಹಳ್ಳಿಗಳಲ್ಲಿ ವಾಚನಾಲಯಗಳು ಸ್ಥಾಪನೆಯಾದವು. ಚಲೇಜಾವ್ ಚಳವಳಿಯಿಂದಾರಂಬಿsಸಿ ಸ್ವಾತಂತ್ರ್ಯದವರೆಗೆ ಈ ಭಾಗದಲ್ಲಿ ಆದ ಹೆಚ್ಚಿನ ಜಾಗೃತಿ ಮುಖಂಡರಾದ ಜನಾರ್ದನರಾವ್ ದೇಸಾಯಿ (ವಕೀಲರು), ಪ್ರಾಣೇಶಾಚಾರ್ ಮುಂತಾದವರ ಲಕ್ಷ್ಯವನ್ನು ಸೆಳೆಯಿತು. ತಂಡತಂಡವಾಗಿ ಸತ್ಯಾಗ್ರಹಿಗಳು ಕೊಪ್ಪಳಕ್ಕೆ ಬಂದು ಸೆರೆಯಾದರು. ಭಾರತ ಸ್ವತಂತ್ರವಾದರೂ ಇನ್ನೂ ಜಾಗೀರಾಗಿ ಉಳಿದಿದ್ದ ಕೊಪ್ಪಳ ಭಾಗದಲ್ಲಿ ಅನೇಕ ಕಡೆ ಜನರು ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ಘೂೀಷಿಸಿ ಮತ್ತೆ ಸೆರೆಮನೆಗೆ ಹೋದರು. ಈ ಚಳವಳಿಯೇ ಪ್ರಬಲವಾಗಿ ಹೈದರಾಬಾದ್ ಸ್ವಾತಂತ್ರ್ಯಾಂದೋಳನದ ಸ್ವರೂಪ ತಳೆಯಿತು. ಚಳವಳಿ ಹೆಚ್ಚಿದಂತೆ ನಿಜಾಮರ ದಬ್ಬಾಳಿಕೆ ಹೆಚ್ಚಾದಾಗ ಕೊಪ್ಪಳ ಭಾಗದಿಂದ ಜೇಲು ಸೇರಿದ ಬೆಣಕಲ್ ಬಿsೀಮಸೇನರಾವ್ ಎಂಬ ತರುಣ ಸತ್ಯಾಗ್ರಹಿ ಗುಲ್ಬರ್ಗ ಜೈಲಿನಲ್ಲಿ ನಡೆದ ಲಾಠಿ ಪ್ರಹಾರದಲ್ಲಿ ಮೃತನಾದ. ಜನ ರೊಚ್ಚಿಗೆದ್ದರು. ಗದಗಿನಲ್ಲಿ ಪ್ರಾದೇಶಿಕ ಸ್ಟೇಟ್ ಕಾಂಗ್ರೆಸ್ ಕೇಂದ್ರವನ್ನು ತೆರೆದರು. ನಿರಾಶ್ರಿತರಾಗಿ ಹೊರಬರುವ ಕುಟುಂಬಗಳ ವ್ಯವಸ್ಥೆ ಮಾಡಬೇಕಾಯಿತು. ಕೊಪ್ಪಳದ ಗಡಿಯ ಸುತ್ತ ಕಾಂಗ್ರೆಸಿನ ಕಾರ್ಯಕರ್ತರ ಸಶಸ್ತ್ರ ಶಿಬಿರಗಳು ಏರ್ಪಟ್ಟವು. ನಿಜಾಮರ ಪೆÇಲೀಸು, ಸೈನ್ಯ ಮತ್ತು ರಜಾಕಾರರ ವಿರುದ್ಧ ದಾಳಿ, ಕಚೇರಿಗಳ ನಾಶ ಮೊದಲಾದವು ನಡೆದವು. ಗಡಿಭಾಗದ ಅನೇಕ ಹಳ್ಳಿಗಳು ಸಂಪೂರ್ಣವಾಗಿ ಈ ಕಾರ್ಯಕರ್ತರ ಅದಿsೀನವಾದವು. ಹೀಗೆ ನಿಜಾಮರ ಸತ್ತೆಯನ್ನು ನಿಷ್ಕ್ರಿಯೆಗೊಳಿಸುವ ಆಂದೋಲನ ತೀವ್ರಗೊಂಡಾಗ ಭಾರತ ಸರ್ಕಾರದಿಂದ ಪೆÇಲೀಸ್ ಕಾರ್ಯಾಚರಣೆ ನಡೆದು ಹೈದರಾಬಾದಿನೊಂದಿಗೆ ಕೊಪ್ಪಳವೂ ಸ್ವತಂತ್ರವಾಯಿತು.

ಕವಿರಾಜ ಮಾರ್ಗದಲ್ಲಿ  ವಿದಿತ ಮಹಾ ಕೋಪಣ ನಗರ ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿದೆ.

ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು, ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗುಂದಿ, ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ ನಿರ್ಮಿಸಿದ ಕೊಪ್ಪಳಕೋಟೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮರ್ದಾನ ದರ್ಗಾ, ಹಲವು ನೂರು ವರ್ಷಗಳಿಂದ ಕೋಮು ಸಾಮರಸ್ಯ, ಶಿಕ್ಷಣ ಮತ್ತು ಧರ್ಮ ಪ್ರಚಾರಕ್ಕಾಗಿ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಸುಪ್ರಸಿದ್ಧ ಕಿನ್ನಾಳ ಆಟಿಕೆ, ಇಟಗಿಯ ಮಹದೇವ ದೇವಸ್ಥಾನ ಹೀಗೆ ಹಲವಾರು ಕಾರಣಗಳಿಗಾಗಿ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ.

ಇಂದಿನ ಆನೆಗೊಂದಿ, ಗಂಗಾವತಿ ತಾಲ್ಲೂಕಿನಲ್ಲಿದೆ. ಆನೆಗೊಂದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ,ಮರದ ಮೇಲೆ ಮಾಡಿರುವ ಸೂಕ್ಷ್ಮ ಕೆತ್ತೆನೆಯಂತೆ, ಕಲ್ಲಿನ ಮೇಲೆ ಕೆತ್ತನೆ ಮಾಡಿರುವ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ ಸಂಪೂರ್ಣ ರಾಮಾಯಣ ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ ಮತ್ತು ಚಿಂತಾಮಣಿ ಶಿವನ ದೇವಸ್ಥಾನ.




#Article 55: ಉತ್ತರ ಕನ್ನಡ (2351 words)


ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ ಯಕ್ಷಗಾನ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಕರೆಸಿಕೊಳ್ಳೂವ ಅಂಕೋಲಾ ಕೂಡ ಈ ಜಿಲ್ಲೆಗೇ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩).. ಸರ್ ಥಾಮಸ್ ಮುನ್ರೋ  ಕೆನರಾ ಜಿಲ್ಲೆಯ ಮೊಟ್ಟಮೊದಲ ಕಲೆಕ್ಟರ್ ಆದರು. ಅಲ್ಲಿಂದ 1957ರವರೆಗೆ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಮುಂದುವರೆಯಿತು. ೧೮೫೭ರ ಸಿಫಾಯಿ ದಂಗೆ ಕೆನರಾ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿದ್ದರಿಂದ, ಬ್ರಿಟಿಷ್ ನೇರ ಆಳ್ವಿಕೆಗೆ ಒಳಪಟ್ಟಿತು. ಅದೇ ಕಾರಣಕ್ಕಾಗಿ, ಕೆನರಾ ಜಿಲ್ಲೆಯನ್ನು ನಾರ್ತ್ ಕೆನರಾ ಮತ್ತು ಸೌತ್ ಕೆನರಾ ಎಂಬ ೨ ಜಿಲ್ಲೆಗಳನ್ನಾಗಿ ವಿಭಜಿಸಿ, ನಾರ್ತ್ ಕೆನರಾವನ್ನು ಮುಂಬೈ ಪ್ರಾಂತ್ಯಕ್ಕೂ, ಸೌತ್ ಕೆನರಾವನ್ನು ಮದ್ರಾಸ್ ಪ್ರಾಂತ್ಯಕ್ಕೂ ಸೇರಿಸಲಾಯಿತು. ಮುಂಬೈ ಮೂಲಕ ನಡೆಯುವ ಅಂತರರಾಷ್ಟ್ರೀಯ ಹತ್ತಿ ಉದ್ಯಮಕ್ಕೊಸ್ಕರ, ಉತ್ತರ ಕನ್ನಡವನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿಸಲಾಗಿದೆ ಎಂದು ಬ್ರಿಟಿಷರು ಸಮಜಾಯಿಶಿ ನೀಡಿದರು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತ್ಯ ರಚನೆಯ ಅನಂತರ (1956) ಕರ್ನಾಟಕ (ಅಂದಿನ ಮೈಸೂರು) ರಾಜ್ಯಕ್ಕೆ ಸೇರಿತು.

ಮೂಲತಃ ಲೋಕಮಾನ್ಯ ತಿಲಕರ ಕೇಸರಿಯ ಅಗ್ರಲೇಖನದಿಂದ ಇಲ್ಲಿಯ ಜನ ಸ್ಫೂರ್ತಿ ಪಡೆದರು. ಕನ್ನಡ ಸುವಾರ್ತೆ (1882), ಹವ್ಯಕ ಸುಬೋಧ (1895), ಸಂಯುಕ್ತ ಕರ್ನಾಟಕ, ಕಾನಡಾವೃತ್ತ (1916), ಕಾನಡಾ ಧುರೀಣ, ಬಾಂಬೆಕ್ರಾನಿಕಲ್ ಪತ್ರಿಕೆಗಳಿಂದ ಜನರು ದೇಶವಿದೇಶದ ಸುದ್ದಿಗಳನ್ನು ತಿಳಿದುಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದರು. ಮೊದಲು ಟಿಳಕರ ವಿಚಾರಗಳನ್ನು ಬೆಂಬಲಿಸಿದ ಉತ್ತರ ಕನ್ನಡದ ಜನ ತಿಲಕರ ಮರಣಾನಂತರ (1920) ಗಾಂಧೀಜಿಯವರು ನೇತೃತ್ತ್ವವಹಿಸಿದಾಗ ಅವರ ನಾಯಕತ್ವದಲ್ಲಿ ಹೋರಾಟ ಮುಂದುವರಿಸಿದರು. ಸ್ವದೇಶಿ ಚಳವಳಿ (1906), ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹ ಇವುಗಳಲ್ಲೆಲ್ಲಾ ಜಾತಿಮತಗಳನ್ನೆಣಿಸದೆ ಸಾವಿರಾರು ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಿರತರಾದರು. ಅನೇಕರು ಶಾಲೆ ಕಾಲೇಜು ಕಚೇರಿಗಳನ್ನು ಬಿಟ್ಟು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜೈಲು ಸೇರಿದರು, ಕಠಿಣ ಶಿಕ್ಷೆ ಅನುಭವಿಸಿದರು. ಶಿರಸಿ, ಸಿದ್ದಾಪುರ, ಅಂಕೋಲ ಹೋರಾಟದ ಕೇಂದ್ರಗಳಾಗಿದ್ದವು. ನಾರಾಯಣ ಚಂದಾವರಕರ, ತಿಪ್ಪಯ್ಯ ಮಾಸ್ತರ, ಕಡವೆ ರಾಮಕೃಷ್ಣ ಹೆಗಡೆ, ವಾಮನ ಹೊರಿಕೆ, ಶಂಕರರಾವ್ ಗುಲ್ವಾಡಿ, ತಿಮ್ಮಪ್ಪ ನಾಯಕ, ನಾರಾಯಣ ಮರಾಠೆ, ಶಿರಳಗಿ ಸುಬ್ರಾಯಭಟ್ಟ, ಶೇಷಗಿರಿ ನಾರಾಯಣರಾವ್‌ ಕೇಶವೈನ್‌ (ಮೋಟಿನಸರ), ತಿಮ್ಮಪ್ಪ ಹೆಗಡೆ, ದೊಡ್ಮನೆ ನಾಗೇಶ ಹೆಗಡೆ, ಭವಾನಿಬಾಯಿ ಕಾನಗೋಡು, ಸೀತಾಬಾಯಿ ಮಡಗಾಂವಕರ, ಜೋಗಿ ಬೀರಣ್ಣ ನಾಯಕ, ಎನ್.ಜಿ.ಪೈ., ನಾರಾಯಣ ಪಿ ಭಟ್ಟ ಮೊದಲಾದವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಈ ಜಿಲ್ಲೆಯ ಜನ ಮಾಡಿದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ ಇವು ಹೊಸ ಇತಿಹಾಸ ನಿರ್ಮಿಸಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೂ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿಯಿತು. 1954ರಲ್ಲಿ ದಿನಕರ ದೇಸಾಯಿ ಮತ್ತು ಪಿ.ಎಸ್.ಕಾಮತರು ಮನವಿಯೊಂದನ್ನು ತಯಾರಿಸಿ ರಾಜ್ಯ ಮರುವಿಂಗಡಣೆ ಆಯೋಗಕ್ಕೆ ಒಪ್ಪಿಸಿದ್ದರು.

ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ ಕರಾವಳಿ ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, ಗೇರುಸೊಪ್ಪೆಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ.

ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿವೆ. ಘಟ್ಟದ ಮೇಲೆ ಶಿರಸಿ, ಯಲ್ಲಾಪುರ, ಸಿದ್ಧಾಪುರ, ಹಳಿಯಾಳ, ಜೊಯ್ಡ (ಸುಪ), ಮುಂಡಗೋಡ ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ ನಲ್ಲಿ ಆರಂಭಗೊಂಡು ಅಕ್ಟೋಬರ್‌ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2,836 ಮಿಮೀ. ಕರಾವಳಿಯಲ್ಲಿ 3,500mm ಸಹ್ಯಾದ್ರಿಯ ಅಂಚಿನಲ್ಲಿ  5,000mm ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10,325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗುವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲೂ, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ.

ಜಿಲ್ಲೆಯಲ್ಲಿ ಕೃಷಿ ವೃತ್ತಿ ಮುಖ್ಯ. ಒಟ್ಟು 118996 ಹೆ. ನಿವ್ವಳ ಬಿತ್ತನೆ ಪ್ರದೇಶವಿದೆ. ಇದರಲ್ಲಿ 22,421 ಹೆ. ಗಳಿಗೆ ನೀರಾವರಿ ಸೌಲಭ್ಯವಿದೆ. ಭತ್ತ, ತೆಂಗು, ಕಬ್ಬು, ಅಡಕೆ, ಮೆಣಸು, ಏಲಕ್ಕಿ, ಬಾಳೆ ಮುಖ್ಯವಾದ ಬೆಳೆಗಳು. ಇವಲ್ಲದೆ ಜಿಲ್ಲೆಯಲ್ಲಿ ಗೋಡಂಬಿ, ಮಾವು, ಹುಣಸೆ, ನಿಂಬೆ, ಅನಾನಸು, ಹಲಸು, ಪಪ್ಪಾಯಿ, ಬಟಾಟೆ, ಬದನೆ, ಕಲ್ಲಂಗಡಿ, ಹೈಬ್ರಿಡ್ ಜೋಳ, ಶೇಂಗಾ ಇತ್ಯಾದಿಗಳನ್ನು ಬೆಳೆಯುತ್ತಾರೆ. ಭತ್ತ 82197 ಹೆ, ಜೋಳ 290 ಹೆ, ಕಬ್ಬು 872 ಹೆ, ಅಡಕೆ 11160 ಹೆ, ತೆಂಗು 5907 ಹೆ, ಗೋಡಂಬಿ 1827 ಹೆ, ಮೆಣಸು 135 ಹೆ, ಮಾವು 1140 ಹೆ, ಬಾಳೆ 7245 ಹೆ, ಏಲಕ್ಕಿ 369ಹೆ, ಅನಾನಸ್ 315 ಹೆ, ಹಲಸು 206 ಹೆ, ಪರಂಗಿ 114.9 ಹೆ, ಹತ್ತಿ 7245 ಹೆನಲ್ಲಿ ಬೆಳೆಸುತ್ತಾರೆ. ಅಡಕೆಯ ತೋಟದಲ್ಲಿ ಏಲಕ್ಕಿ, ಕಾಳುಮೆಣಸು, ಬಾಳೆ ಬೆಳೆಸುತ್ತಾರೆ. ಗದ್ದೆಯಲ್ಲಿ ಕಡಲೆ, ತೊಗರಿ ಮೊದಲಾದ ಧಾನ್ಯಗಳನ್ನೂ ಬೆಳೆಯುತ್ತಾರೆ.ಪಶುಪಾಲನೆಯೂ ರೂಢಿಯಲ್ಲಿದೆ.
  
ಭಟ್ಕಳವು ಮಲ್ಲಿಗೆಗೆ ಹೆಸರುವಾಸಿಯಾಗಿದೆ.ಇಲ್ಲಿ ಮಲ್ಲಿಗೆ ಬೆಳೆಗೆ ಅನುಕೂಲ ವಾತಾವರಣವಿದೆ.ಭಟ್ಕಳ ಮಲ್ಲಿಗೆಯು ದೇಶ ವಿದೇಶಗಳಿಗೂ ರಫ್ತಾಗುತ್ತದೆ.

ಈ ಜಿಲ್ಲೆಯಲ್ಲಿ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಒಂದು ಕಾಲದಲ್ಲಿ ಹರಿಕಾಂತ, ತಾಂಡೇಲ, ಖಾರ್ವಿ, ಗಾಬಿತ, ಅಂಬಿಗ, ಮೊಗೇರ, ಆಗೇರ, ಕ್ರಿಶ್ಚಿಯನ್ ದಾಲಜಿಗಳಷ್ಟೇ ಈ ವೃತ್ತಿಯನ್ನವಲಂಬಿಸಿದ್ದರೆ ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ಜಾತಿಯವರೂ ಮೀನು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇವರು ಕರಾವಳಿ ಪ್ರದೇಶದ 118 ಹಳ್ಳಿಗಳಲ್ಲಿದ್ದಾರೆ. ಸಮುದ್ರದಿಂದ ಮೀನು ಹಿಡಿಯುವ ಕೇಂದ್ರಗಳೆಂದರೆ ಅರ್ಗಾ, ಭಟ್ಕಳ, ಬಿಣಗಾ, ಚೆಂಡಿಯೆ, ಗಂಗಾವಳಿ, ಕಾರವಾರ, ಹೊನ್ನಾವರ, ಖಾರವಿ, ಕೇಣಿ, ಕೋಡಾರ್, ಕುಮಟ, ಹೊಲನಗದ್ದೆ, ಮಾಜಾಳಿ, ಮಂಕಿ, ಮುರ್ಡೇಶ್ವರ, ಶಿರಾಲಿ,ಮತ್ತು ತದಡಿ. ಸಾಗರ ಮೀನುಗಾರಿಕೆಯಲ್ಲಿ 30094 ಟನ್ ಹಿಡಿದರೆ, ಸಿಹಿನೀರಿನಲ್ಲಿ 249ಟನ್ ಮೀನು ಹಿಡಿಯಲಾಗಿದೆ (2001).

ಮರ ಕೊಯ್ಯುವ ಗಿರಣಿ, ಹಂಚಿನ ಕಾರ್ಖಾನೆ, ನೇಯ್ಗೆ, ಮೇಣದಬತ್ತಿಯ ಉತ್ಪಾದನೆ, ಸಾಬೂನು ತಯಾರಿಕೆ, ವಾಹನ ದುರಸ್ತಿ, ಮುದ್ರಣ, ಕೆತ್ತನೆಯ ಕೆಲಸ, ಚಿನ್ನ ಬೆಳ್ಳಿಯ ಕೆಲಸ, ಬುಟ್ಟಿ, ಚಾಪೆ ಹೆಣೆಯುವಿಕೆ, ಬೆತ್ತದ ಹೆಣಿಗೆ, ಜೇನು ಸಾಕಣೆ, ಕೋಳಿ ಕುರಿ ಸಾಕಣೆ, ರೇಷ್ಮೆ, ಚರ್ಮದ ಉದ್ಯೋಗ, ವ್ಯಾಪಾರ, ಏಜೆನ್ಸಿಗಳಲ್ಲಿ ಜನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಂಜುಗೆಡ್ಡೆ ತಯಾರಿಕಾ ಕಾರ್ಖಾನೆಗಳು 52 ಇವೆ. ದಾಂಡೇಲಿಯಲ್ಲಿಯೂ ಕಾಗದದ ಕಾರ್ಖಾನೆ ದೊಡ್ಡ ಉದ್ದಿಮೆ. ಅಲ್ಲದೆ ಪ್ಲೈವುಡ್, ಫೆರೋಮ್ಯಾಂಗನೀಸ್ ಉದ್ದಿಮೆಗಳೂ ಇವೆ. ಕಾರವಾರ, ಬೆಲೆಕೇರಿ, ತದಡಿ, ಕುಮಟ, ಹೊನ್ನಾವರ, ಭಟ್ಕಳ-ಇವು ಮುಖ್ಯ ಬಂದರುಗಳು. ಕಾರವಾರದಲ್ಲಿ ಸರ್ವಋತು ಬಂದರನ್ನು ಬೃಹತ್ತಾಗಿ ಕಟ್ಟಲಾಗಿದೆ. ಬಳ್ಳಾರಿ ಪ್ರದೇಶದ ಕಬ್ಬಿಣದ ಅದಿರನ್ನು ಸಾಗಿಸಲು ಕಾರವಾರ ಬಂದರು ಉಪಯುಕ್ತವಾಗುತ್ತದೆ.

ಎಂಜಿನಿಯರಿಂಗ್ ಉದ್ಯಮ 15, ರಾಸಾಯನಿಕ ಕಾರ್ಖಾನೆಗಳು 3, ಬಟ್ಟೆ ಕಾರ್ಖಾನೆ 2, ಇತರ ಸಣ್ಣ ಪ್ರಮಾಣದ ಕಾರ್ಖಾನೆಗಳು 66, ಈ ಕಾರ್ಖಾನೆಗಳಲ್ಲಿ ಉದ್ಯೋಗಿಗಳು 13,243. ಜಿಲ್ಲೆಯಲ್ಲಿ ಕೆಲವು ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್ಸ್‌, ದಾಂಡೇಲಿಯ ಇಂಡಿಯನ್ ಪ್ಲೈವುಡ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ, ಜೈಹಿಂದ್ ಸಾಮಿಲ್, ಬಳ್ಳಾಪುರ ಇಂಡಸ್ಟ್ರಿಸ್ ಲಿ., ಬಿಣಗಾದ, ದಾಂಡೇಲಿ ಫೆರೊ ಅಲಾಯ್ಸ್‌ ಪ್ರೈ.ಲಿ. ಇವು ಮುಖ್ಯ ಉದ್ದಿಮೆಗಳು. ಇವಲ್ಲದೆ ಸಣ್ಣ ಕೈಗಾರಿಕಾ ಘಟಕಗಳು, ಖಾದಿ ಗ್ರಾಮೋದ್ಯೋಗ ಕರಕುಶಲ ಘಟಕಗಳು ಹಾಗೂ ಕೈಮಗ್ಗದ ಘಟಕಗಳು ಜಿಲ್ಲೆಯಲ್ಲಿವೆ, ಹೆಂಚು ಕಾರ್ಖಾನೆಗಳಿವೆ. ಮೀನುಗಾರಿಕೆ ಘಟಕಗಳು, ದೋಣಿ ಕಟ್ಟುವ ಘಟಕಗಳು, ಆಹಾರ ಸಂಸ್ಕರಣ ಘಟಕಗಳು, ರಾಸಾಯನಿಕ ಘಟಕಗಳು ಚರ್ಮ ಮತ್ತು ರಬ್ಬರ್ ಘಟಕಗಳು, ಗಂಧ ಚಂದನ ಕೆತ್ತನೆಯ ಘಟಕಗಳು, ಮುದ್ರಣ ಘಟಕಗಳು, ನೂಲುವ ನೇಯುವ ಘಟಕಗಳು, ಜೇನು ಸಾಕಣೆ, ಬೆತ್ತ ಬಿದಿರುಗಳಿಂದ ವಸ್ತುಗಳನ್ನು ತಯಾರಿಸುವ ಘಟಕಗಳು, ಎಣ್ಣೆ ತಯಾರಿಕಾ ಘಟಕಗಳು, ಕುಂಬಾರಿಕೆ ಮುಂತಾದ ಅನೇಕ ಉದ್ಯಮಗಳಿವೆ. ಇವುಗಳಲ್ಲಿ ಕೆಲವು ಗುಡಿ ಕೈಗಾರಿಕೆಗಳು.

ಜಿಲ್ಲೆಯಲ್ಲಿ 329 ಕಿ.ಮೀ ಗಳ ರಾಷ್ಟ್ರೀಯ ಹೆದ್ದಾರಿ, 863 ಕಿ.ಮೀ ಗಳ ರಾಜ್ಯ ಹೆದ್ದಾರಿ ಮಾರ್ಗಗಳಿವೆ. ಜಿಲ್ಲಾ ಮುಖ್ಯ ರಸ್ತೆಗಳು 1039 ಕಿ.ಮೀ. 24 ಭಾರೀ ಸೇತುವೆಗಳಿವೆ. ಪಶ್ಚಿಮ ಕರಾವಳಿಯ ಹೆದ್ದಾರಿ ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ, ಉತ್ತರಕ್ಕೆ ಕಾಶ್ಮೀರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕಾರವಾರದಿಂದ ಹುಬ್ಬಳ್ಳಿಯ ಕಡೆಗೆ ಹೋಗುವ ಹೆದ್ದಾರಿ ಅನೇಕ ನಗರಗಳ ಸಂಪರ್ಕ ಕಲ್ಪಿಸುತ್ತದೆ. ನಗರಗಳೊಂದಿಗೆ ಹಳ್ಳಿಗಳ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳೂ ಇವೆ. ಘಟ್ಟದ ಮೇಲೆ ಸಿದ್ದಾಪುರದಿಂದ ಹುಬ್ಬಳ್ಳಿಗೆ, ಕಾರವಾರಕ್ಕೆ, ದಾಂಡೆಲಿಗೆ, ಯಲ್ಲಾಪುರಕ್ಕೆ ಸಂಪರ್ಕ ದೊರಕಿಸುವ ರಸ್ತೆಗಳಿವೆ. ಕೊಚ್ಚಿ ಮುಂಬೈಗಳಿಗೆ ಹೋಗುವ ಕೊಂಕಣ ರೈಲ್ವೆ ಈ ಜಿಲ್ಲೆಯ ಮೂಲಕ ಹೋಗುತ್ತದೆ. ಜಿಲ್ಲೆಯಲ್ಲಿ 179ಕಿಮೀ ಉದ್ದದ ರೈಲು ಮಾರ್ಗವಿದೆ. 16 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಮುಖ್ಯವಾದವು-ಭಟ್ಕಳ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ, ಕಾರವಾರ. ಜಿಲ್ಲೆಯಲ್ಲಿ 497 ಅಂಚೆ ಕಚೇರಿಗಳು 152 ದೂರವಾಣಿ ವಿನಿಮಯ ಕೇಂದ್ರಗಳು ಮತ್ತು 90,234 (2006) ದೂರವಾಣಿ ಸಂಪರ್ಕಗಳಿವೆ. ಇದಲ್ಲದೆ ಜಲಮಾರ್ಗದ ಸಂಪರ್ಕವೂ ಇದೆ.

ಜಿಲ್ಲೆಯ ಒಟ್ಟು ಜನಸಂಖ್ಯೆ 13,53,644 ಇದರಲ್ಲಿ 9,65,731 ಜನ ಹಳ್ಳಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ 4,89,908 ಗಂಡಸರು, 4,75,823 ಹೆಂಗಸರು. ಜನಸಾಂದ್ರತೆ ಪ್ರತಿ ಚ.ಕಿಮೀ.ಗೆ 132 ಜನರು, ಲಿಂಗಾನುಪಾತ ಸಾವಿರ ಪುರುಷರಿಗೆ 970 ಮಹಿಳೆಯರು ಈ ಜಿಲ್ಲೆಯಲ್ಲಿ ಹಿಂದುಗಳೂ (ಶೇ. 83.6) ಮುಸಲ್ಮಾನರೂ (ಶೇ.11.9) ಕ್ರೈಸ್ತರೂ (ಶೇ.3.3) ಇದ್ದಾರೆ. ಬಹುಸಂಖ್ಯಾತರು ಹಿಂದುಗಳು. ಈ ಜಿಲ್ಲೆಯಲ್ಲಿ ಬೌದ್ಧ, ಜೈನ ಧರ್ಮಗಳೂ ಪ್ರಚಾರವಾದವು. 10-12ನೆಯ ಶತಮಾನಗಳಲ್ಲಿ ನಾಥಪಂಥವೂ 16-18ನೆಯ ಶತಮಾನಗಳಲ್ಲಿ ವೀರಶೈವ ಪಂಥದ ಪ್ರಚಾರವೂ ನಡೆದವು. ಜಿಲ್ಲೆಯಲ್ಲಿ ಕ್ರೈಸ್ತ ಮಂದಿರಗಳೂ ಮಸೀದಿಗಳೂ ಸ್ಮಾರ್ತ, ಜೈನ, ವೀರಶೈವ, ವೈಷ್ಣವ ಮಠಗಳೂ ಇವೆ. ಹಿಂದುಧರ್ಮದ ಹಲವು ಪಂಗಡಗಳಿಗೆ ಸೇರಿದ ನೂರಾರು ದೇವಾಲಯಗಳು ಇವೆ. ನಾಥಪಂಥದ ಅವಶೇಷಗಳು ಅಂಕೋಲ, ಬೆಳಂಬರ್, ಹೊನ್ನೆಬೈಲ, ಅಘನಾಶಿನಿ, ಲಿಂಗೆ, ಮಾಜಾಳಿ, ಯಾಣ, ಕವಳೆಯಲ್ಲಿವೆ.

ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 84.64: ಪುರುಷರು ಶೇ. 89.63, ಮಹಿಳೆಯರು ಶೇ. 78.39. ಜಿಲ್ಲೆಯಲ್ಲಿ ಮೊದಲು ಜೈನ, ವೀರಶೈವ, ಬ್ರಾಹ್ಮಣ ಸಂಪ್ರದಾಯದ ಪಾಠಶಾಲೆಗಳು ನಡೆಯುತ್ತಿದ್ದವು. ಅದಕ್ಕೆ ಅನೇಕ ಅಗ್ರಹಾರಗಳು ಪ್ರಚಲಿತವಿದ್ದವು. ಅವುಗಳೆಲ್ಲ ಬ್ರಿಟಿಷರ ಆಳಿಕೆಯಲ್ಲಿ ಕೊನೆಗೊಳ್ಳುತ್ತ ಬಂದು 1866 ಸುಮಾರಿಗೆ ಸರ್ಕಾರಿ ಶಾಲೆಗಳು ಆರಂಭವಾದವು. ಹಳಿಯಾಳ, ಕುಮಟ, ಶಿರಸಿಗಳಲ್ಲಿ ಆಂಗ್ಲೊವರ್ನಾಕ್ಯುಲರ್ ಶಾಲೆಗಳಿದ್ದವು. 1866ರಲ್ಲಿ ಒಂದು ಉರ್ದು ಶಾಲೆ ಹಳಿಯಾಳದಲ್ಲಿ ಆರಂಭವಾಯಿತು. 

ಸಿದ್ದಾಪುರ :￼ 

ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, ಉರ್ದು, ಮರಾಠಿ ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, ತುಳು, ರಾಜಸ್ತಾನಿ, ಕೊಡವ, ಹಿಂದಿ, ಗುಜರಾತಿ, ಸಿಂಧಿ, ನೇಪಾಳಿ, ಬಂಗಾಳಿ, ಪಂಜಾಬಿ, ಒರಿಯ, ಪರ್ಷಿಯನ್ ಭಾಷೆ ಮಾತನಾಡುವವರನ್ನೂ ಕಾಣಬಹುದು. ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, ಜಿ.ಆರ್.ಹೆಗಡೆ, ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, ವಿ.ಗ.ನಾಯಕ ಮೊದಲಾದವರು ಪ್ರಮುಖರು.
ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಶಿ, ಕೆರೆಮನೆ ಗಜಾನನ ಹೆಗಡೆ, ಪಿ.ವಿ.ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (2004). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ.

ಸಾಹಿತ್ಯ ಕ್ಷೇತ್ರವನ್ನು ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ, ಜಿ.ಆರ್.ಪಾಂಡೇಶ್ವರ, ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ಬಿ.ಎಚ್. ಶ್ರೀಧರ,ಶಾಂತಿನಾಥ ದೇಸಾಯಿ, ಸು.ರಂ.ಎಕ್ಕುಂಡಿ, ಅರವಿಂದ ನಾಡಕರ್ಣಿ, ಸ.ಪ.ಗಾಂವಕರ್, ಕೃಷ್ಣಾನಂದ ಕಾಮತ್, ಪ.ಸು.ಭಟ್ಟ, ಸುಂದರ ನಾಡಕರ್ಣಿ, ವಿ.ಜಿ.ಭಟ್ಟ, ದಿನಕರ ದೇಸಾಯಿ, ವಿ.ಜಿ.ಶಾನಭಾಗ, ಶಾ.ಮಂ.ಕೃಷ್ಣರಾಯ, ಗಂಗಾಧರ ಚಿತ್ತಾಲ, ಜಿ.ಜಿ.ಹೆಗಡೆ, ಜಿ.ಎಸ್.ಭಟ್ಟ, ಜಯಂತ ಕಾಯ್ಕಿಣಿ, ನಿರಂಜನ ವಾನಳ್ಳಿ, ರಾಜೀವ ಅಜ್ಜಿಬಳ, ವಿಷ್ಣು ನಾಯ್ಕ,ಶಾಂತಾರಾಮ ನಾಯಕ ಹಿಚಕಡ , ರಾಮಕೃಷ್ಣ ಗುಂದಿ ಸಮೃದ್ಧಗೊಳಿಸಿದ್ದಾರೆ. ಹೊಸ ತಲೆಮಾರಿನ ಅನೇಕ ಕವಿಗಳೂ ಲೇಖಕರೂ ಭರವಸೆ ಮೂಡಿಸುತ್ತಿದ್ದಾರೆ. ಈ ಜಿಲ್ಲೆಯ ಪತ್ರಿಕೆಗಳಲ್ಲಿ ಹವ್ಯಕ ಸುಬೋಧ (1885), ಕಾರವಾರ ಚಂದ್ರಿಕೆ (1885), ಮಕ್ಕಳ ಪತ್ರಿಕೆ ಹಿತೋಪದೇಶ (1888), ಸರಸ್ವತಿ (1900), ವಿನೋದಿನಿ (1904)- ಇವು ಮಾಸಪತ್ರಿಕೆಗಳು. 1919ರಲ್ಲಿ ಕುಮಟದಿಂದ ಕಾನಡಾ ಧುರೀಣ (1922), ನಂದಿನಿ (1925) ಮಾಸ ಪತ್ರಿಕೆ ಮೊದಲು ಗೋಕರ್ಣದಿಂದ ಪ್ರಕಟಿಸಲಾಗುತ್ತಿದ್ದು ಕೆಲಕಾಲ ನಿಂತು 1937 ರಿಂದ ಶಿರಸಿಯಿಂದ ಪ್ರಕಟವಾಗತೊಡಗಿತು. ಶರಣ ಸಂದೇಶ (1931), ನವಚೇತನ (1941), ಸಾಧನ (1949) ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ಮಲಯವಾಣಿ (1955) ವಾರ್ಷಿಕ ಪತ್ರಿಕೆ. 1956ರಲ್ಲಿ ಭಾಮಾ ಮಾಸ ಪತ್ರಿಕೆ ಶಿರಸಿಯಿಂದ ಪ್ರಕಟವಾಗ ತೊಡಗಿತು. 1957ರಲ್ಲಿ ಶಿರಸಿಯಿಂದ ಪ್ರಕಟವಾಗುತ್ತಿದ್ದ ನಗರವಾಣಿ ಅಲ್ಪಾಯುವಾಯಿತು. ಸಹಕಾರಿ ಸಮಾಜ (1979), ಯಕ್ಷಗಾನ (1959), ಗೋಕರ್ಣ ಗೋಷ್ಟಿ (1959), ಸ್ವತಂತ್ರವಾಣಿ (1960), ಮಧುವನ (1960), ಗ್ರಾಮಜೀವನ, ಸಮಾಜ (1965), ಸಂಘಟನೆ, ರಮಣ ಸಂದೇಶ, (1971), ಶಿರಸಿ ಸಮಾಚಾರ, ಸಹಚರ, ಸಮನ್ವಯ (1975) ಇವಲ್ಲದೆ ಕಡಲಧ್ವನಿ (1983), ಆಚಾರ (1980), ಕರಾವಳಿ ಗ್ರಾಮ ವಿಕಾಸ (1987), ಗ್ರಾಮ ಭಾರತಿ ಅಭಯ (1965), ನುಡಿಜೇನು (1968), ಗಿರಿಘರ್ಜನೆ, ಯುಗವಾಣಿ (1964), ಸಮಾಜವಾಣಿ (1965), ಚುನಾವಣೆ, ಆಧ್ಯಾತ್ಮಿಕ ಪತ್ರಿಕೆ ಜೀವೋತ್ತಮ ಉಲ್ಲೇಖನೀಯ. ಮುನ್ನಡೆ (1988) ದಿನಪತ್ರಿಕೆಯಾಗಿ 2000ದಲ್ಲಿ ನಿಂತುಹೊಯಿತು. ಜಿಲ್ಲೆಯ ಮೊದಲ ದೈನಿಕ ಲೋಕಧ್ವನಿ (1983), ಜನಮಾಧ್ಯಮ (1988), ಧ್ಯೇಯನಿಷ್ಠ ಪತ್ರಕರ್ತ (1991), ಕರಾವಳಿಯ ಮುಂಜಾವು (1994) - ಇವು ಇಂದಿನ ಪ್ರಮುಖ ಪತ್ರಿಕೆಗಳು.

ದೀರ್ಘಕಾಲ ನಡೆದ ಪತ್ರಿಕೆಗಳಲ್ಲಿ ಕಾನಡಾವೃತ್ತದ ಸ್ಥಾನ ಅದ್ವಿತೀಯ. ಇದು 1916ರಲ್ಲಿ ಪ್ರಾರಂಭವಾಗಿ ಈಗಲೂ ನಡೆಯುತ್ತಿದೆ. 1946ರಲ್ಲಿ ಆರಂಭವಾದ ನಾಗರಿಕ ಈಗಲೂ ಪ್ರಕಟವಾಗುತ್ತಿದೆ. 1960ರಲ್ಲಿ ಜನತಾ, 1955ರಲ್ಲಿ ದಿನಕರ ದೇಸಾಯಿ ಪ್ರಾರಂಭಿಸಿದ ಜನಸೇವಕ 1972ರ ವರೆಗೆ ನಡೆದು ಅನಂತರ ನಿಂತಿತು. ಶೃಂಗಾರ ಹೊನ್ನಾವರದಿಂದ ಪ್ರಕಟವಾಗುತ್ತಿತ್ತು.

ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ.
ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ. ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ. ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ. ಪ್ರೇಕ್ಷಣೀಯ ಮಧುಕೇಶ್ವರ ದೇವಾಲಯಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.
ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ವರ್ಷದ ಕಾಲಕ್ಕೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.
 
ಕದಂಬೋತ್ಸವಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಶಿರಸಿ ವಿಭಾಗ, ಲೋಕೋಪಯೋಗಿ ಇಲಾಖೆ, ಶಿರಸಿ ಇವರ ಮುಖಾಂತರ ವಸತಿ ಕಾಯ್ದಿರಿಸಬಹುದು. ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ. 

 
ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ. ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ. ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ.ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ.ನಮನ

ಪುರಾಣದ ಕತೆ : ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು. ಅಂತೆಯೆ ಇಂದಿಗೂ ಅಲ್ಲ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಕರನ್ನು ಸ್ವಾಗತಿಸುವವು. ಸಮುದ್ರದಲ್ಲಿ ಒಳಸೇರಿದ ಕಂದುಗಿರಿ ಎಂಬ ಗುಡ್ಡದ ಮೇಲೆ ಮುರುಡೇಶ್ವರನ ದೇವಾಲಯವನ್ನು ಹೊಸದಾಗಿ ದಾಕ್ಷಿಣಾತ್ಯ ಶಿಲ್ಪದಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ವಿಸ್ತಾರವಾದ ಚಂದ್ರಶಾಲೆಯಿದ್ದು ಗಣಪತಿ, ಸುಬ್ರಹ್ಮಣ್ಯ, ಹನುಮಂತ, ಪಾರ್ವತಿಯರ ಪೀಠಗಳಿವೆ. ಮುರ್ಡೇಶ್ವರ ದೇವಾಲಯದ ಗೋಪುರ ಹಾಗು ಸುತ್ತಲಿನ ಕಟ್ಟಡಗಳ ಶಿಲ್ಪಗಳು ಉತ್ತಮ ಮಟ್ಟದ್ದಾಗಿದ್ದು ಆಕರ್ಷಕವಾಗಿದೆ. ಸುತ್ತಲಿನ ಸಮುದ್ರ ನಾಡಿನ ಪ್ರವಾಸಿಗಳನ್ನು ತನ್ನಡೆಗೆ ಸೆಳೆಯುತ್ತದೆ. ನೇತ್ರಾಣಿ ದ್ವೀಪ ಹತ್ತಿರವೆ ಇದೆ. ಇಲ್ಲಿಯ ಕಡಲ ಸಂಜೆಯ ಸೊಗಸನ್ನು ಅನುಭವಿಸಿಯೇ ತಿಳಿಯಬೇಕು. ಪ್ರವಾಸಿಗಳಿಗಾಗಿ ಸಮುದ್ರಮಧ್ಯದಲ್ಲಿ ಕಟ್ಟಲಾದ ನವೀನ ಉಪಹಾರ ಗೃಹ, ಗುಡ್ಡದ ಮೇಲಿರುವ ವಸತಿಗೃಹಗಳು, ರಮ್ಯವಾಗಿದೆ. ಪ್ರತಿನಿತ್ಯ ಉಚಿತ ಅನ್ನದಾನಸೇವೆ ದೇವಾಲಯ ನಡೆಸುತ್ತಿದೆ. ತಿರುಪತಿಯನ್ನು ಬಿಟ್ಟರೆ ಇನ್ನೆಲ್ಲೂ ಈ ವರೆಗೆ ಇಲ್ಲದ ೩೫ ಅಡಿ ಎತ್ತರದ ಚಿನ್ನದ ವರ್ಣದ ಭವ್ಯ ಧ್ವಜಸ್ಥಂಬ ಈ ಮಾದರಿಯದ್ದು ಕರ್ನಾಟಕದಲ್ಲಿಯೆ ಅತಿ ಎತ್ತರವಾಗಿದ್ದು ಮನಸೆಳೆಯುತ್ತದೆ. ಇಂದು ರಾಷ್ಟ್ರಖ್ಯಾತಿಯ ಸ್ಥಳವಾಗಿ ಪರಿಗಣಿಸಲ್ಪಟ್ಟ ಮುರ್ಡೇಶ್ವರದ ನಿಸರ್ಗದ ಹಾಗು ಕಲೆಯ ವೈಭವವನ್ನು ಕಂಡೇ ಆನಂದಿಸಬೇಕು,.ನಮನ

ಮಹಾಗಣಪತಿ ದೇವಾಲಯ, ಶಿವ ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರಗಳಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ. ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ.

ಜನ ಜೀವನ ಮತ್ತು ಭಾಷೆದಾಂಡೇಲಿಯು ಜನಜೀವನದ ದೃಷ್ಟಿಯಿಂದ ಒಂದು ಮಿಶ್ರ ಸಂಸ್ಕೃತಿಯ ದ್ವೀಪದಂತೆ ಎನ್ನಬಹುದು. ಉತ್ತರ ಭಾರತದ ಹಲವು ಕೆಲಸಗಾರರು ಇರುವುದರಿಂದಾಗಿ, ಹಿಂದಿಯೂ ಇಲ್ಲಿ ಒಂದು ಸಂಪರ್ಕಭಾಷೆ. ಇಲ್ಲಿ ಕನ್ನಡ,ಕೊಂಕಣಿ,ಹಿಂದಿ ಭಾಷೆಗಳು ಪ್ರಚಲಿತದಲ್ಲಿವೆ.

ಸಂಪರ್ಕ- ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ.

ಪ್ರವಾಸಿ ತಾಣಗಳು- ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ನೋಡಲು, ದಾಂಡೇಲಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳೆಂದರೆ, ಉಳವಿ ಸಿಂಥೇರಿ ರಾಕ್ಸ್ ಅಣಶಿ ಅರಣ್ಯಧಾಮ ಸೂಪಾ ಅಣೆಕಟ್ಟು

ವಸತಿ - ಈ ಊರಿನಲ್ಲಿ ಹಲವು ಖಾಸಗಿ ಹೋಟೆಲುಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದೆ.

ಸೊಂದಾ ಸಿರಸಿಯಿಂದ ೧೫ ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ ಪ್ರಸಿದ್ಧ ವಾದಿರಾಜ ಮಠವಿದೆ.

ಜನಸಂಖ್ಯೆ೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ ೭೯ ಶೇಕಡಾ ಜನರು ವಿದ್ಯಾವಂತರು. ಇವರು ಕನ್ನಡ (ಹವ್ಯಕ ಕನ್ನಡ), ಕೊಂಕಣಿ, ಉರ್ದು, ಮರಾಠಿ ಮಾತಾಡುತ್ತಾರೆ. ಇಲ್ಲಿಯ ಜನ ಬಹಳ ಸೌಹಾರ್ದಶೀಲರು.ಇಲ್ಲಿಯ ಜನರ ಮುಖ್ಯ ವ್ಯಾವಹಾರಿಕ ಭಾಷೇ ಕೊ೦ಕಣಿ ಮತ್ತು ಕನ್ನಡ.

ಭೂತರಾಜರ ಗುಡಿಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂಬ ಪ್ರತೀತಿ ಇದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ರೋಗಗಳಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ,ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ.
ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ. ತಪೋವನದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ.
ಹತ್ತಿರದ ಪ್ರೇಕ್ಷಣೀಯ ಸ್ಥಳಗಳು ಶಿರಸಿಯ ಮಾರಿಕಾಂಬಾ ದೇವಸ್ಥಾನ, ಸಹಸ್ರಲಿಂಗ ಮತ್ತು ಯಾಣ ಇಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು.

ಪ್ರವಾಸಿ ತಾಣಗಳು - ಟಿಬೆಟಿಯನ್ ವಸಾಹತು
ಬಚನಾಕಿ ಅಣೆಕಟ್ಟು
ಅತ್ತಿವೇರಿ ಪಕ್ಷಿಧಾಮ




#Article 56: ಯಾಸಿರ್ ಅರಾಫತ್ (469 words)


ಯಾಸಿರ್ ಅರಾಫತ್ (ಅರಬಿಕ್: : محمد عبد الرؤوف القدوة الحسيني) (ಜನನ: ಆಗಸ್ಟ್ ೧೯೨೯)ಪ್ಯಾಲಿಸ್ಟೈನ್ ಪ್ರಾಧಿಕಾರದ ಅಧ್ಯಕ್ಷರು(೧೯೯೩ ರಿಂದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು). ಫತಾ ದ ನಾಯಕರು ಮತ್ತು ೧೯೬೯ ರಿಂದ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆಯ (ಪಿಎಲ್‍ಒ) ಅಧ್ಯಕ್ಷರು. ೧೯೯೪ ರ ಶಾ೦ತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು.

ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ ಭಯೋತ್ಪಾದಕರಾದರೆ ಇನ್ನು ಕೆಲವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ನ ಸ್ವಾತ೦ತ್ರ್ಯ ಹೋರಾಟಗಾರರು.

ಇತ್ತೀಚಿನ ಸುದ್ದಿಯೆ೦ದರೆ ನವ೦ಬರ್ ೧೧, ೨೦೦೪ ರಂದು ಪ್ಯಾರಿಸ್ ನಲ್ಲಿ ಇವರು ನಿಧನರಾದರು.

ಅರಾಫತ್ ಅವರ ಹೇಳಿಕೆಯ ಪ್ರಕಾರ ಅವರು ಜನಿಸಿದ್ದು ಜೆರುಸಲೆ೦ ನಲ್ಲಿ; ಆದರೆ ಅನೇಕರ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು ಈಜಿಪ್ಟ್ ದೇಶದ ಕೈರೋ ನಗರದಲ್ಲಿ. ಕೈರೋ ವಿಶ್ವವಿದ್ಯಾಲಯದಲ್ಲಿ ಓದಿದ ಅರಾಫತ್ ೧೯೪೮ ರ ಅರಬ್-ಇಸ್ರೇಲಿ ಯುದ್ಧದಲ್ಲಿ ಪಾಲ್ಗೊಳ್ಳಲು ವಿಫಲ ಯತ್ನ ನಡೆಸಿದರು. ೧೯೫೨ ರಲ್ಲಿ ಪ್ಯಾಲೆಸ್ಟಿನಿಯನ್ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದರು. ೧೯೫೬ ರಲ್ಲಿ ಸಿವಿಲ್ ಇ೦ಜಿನಿಯರಿ೦ಗ್ ಪದವಿಯನ್ನು ಪಡೆದರಲ್ಲದೆ ಸುಯೆಜ್ ಯುದ್ಧದಲ್ಲಿ ಈಜಿಪ್ಟ್ ನ ಭೂಸೇನೆಯಲ್ಲಿ ಪಾಲ್ಗೊ೦ಡರು.

ನಂತರ ಕುವೈತ್ ದೇಶಕ್ಕೆ ತೆರಳಿದ ಅರಾಫತ್ ಸ್ವತ೦ತ್ರ ಪ್ಯಾಲೆಸ್ಟೈನ್ ದೇಶವನ್ನು ಸೃಷ್ಟಿಸುವ ಉದ್ದೇಶವುಳ್ಳ ಫತಾಎ೦ಬ ಸಂಸ್ಥೆಯನ್ನು ಆರ೦ಭಿಸಿದರು. ೧೯೬೪ ರಲ್ಲಿ ಒಂದು ಇಸ್ರೇಲಿ ನೀರಿನ ಪ೦ಪನ್ನು ಸ್ಫೋಟಿಸುವ ಫತಾ ದ ಉದ್ದೇಶ ವಿಫಲವಾಯಿತು. ೧೯೬೮ ರಲ್ಲಿ ಜೋರ್ಡನ್ ದೇಶದ ಅಲ್-ಕರಮೇಹ್ ಗ್ರಾಮದಲ್ಲಿ ಇಸ್ರೇಲಿ ಸೇನೆಯೊ೦ದಿಗೆ ನಡೆದ ತಿಣುಕಾಟದಲ್ಲಿ ಅನೇಕ ಫತಾ ದ ಸೈನಿಕರು ಸತ್ತರೂ ಇಸ್ರೇಲಿ ಸೈನ್ಯವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಯಿತು. 

೧೯೭೦ ರಲ್ಲಿ ಜೋರ್ಡನ್ ದೇಶ ಮತ್ತು ಪ್ಯಾಲೆಸ್ಟೈನಿಯನ್ ಉಗ್ರವಾದಿಗಳ ನಡುವೆ ಸಾಕಷ್ತು ಭಿನ್ನಾಭಿಪ್ರಾಯಗಳು ತಲೆದೋರಿದವು. ಜೂನ್ ೧೯೭೦ ರಲ್ಲಿ ನೇರ ಯುದ್ಧ ಆರ೦ಭವಾಯಿತು. ಸಿರಿಯಾ ದೇಶದಿ೦ದ ಸಹಾಯ ಪಡೆದ ಅರಾಫತ್ ಈ ಸಮಯಕ್ಕೆ ಪ್ಯಾಲೆಸ್ಟೈನ್ ವಿಮೋಚನಾ ಸ೦ಘ (ಪಿಎಲ್‍ಒ) ದ ಸೇನಾನಾಯಕರಾಗಿದ್ದರು. ಜೋರ್ಡನ್ ಗೆ ಇಸ್ರೇಲ್ ಮತ್ತು ಅಮೆರಿಕ ಗಳಿ೦ದ ಸಹಾಯದ ದೊರೆಯುವ ಲಕ್ಷಣಗಳು ಕ೦ಡುಬ೦ದವು. ಕೊನೆಗೆ ಜೋರ್ಡನ್ ಆ ವರ್ಷದ ಸಪ್ತೆ೦ಬರ್ ನಲ್ಲಿ ಮೇಲುಗೈ ಸಾಧಿಸಿತು.

೧೯೭೩ ರಲ್ಲಿ ಅಮೆರಿಕದ ರಾಷ್ಟ್ರೀಯ ಸುರಕ್ಷಾ ಪ್ರಾಧಿಕಾರದವರು ಪಡೆದ ಮಾಹಿತಿಯ ಮೇರೆಗೆ ಸುಡನ್ ದೇಶದ ಸೌದಿ ರಾಯಭಾರಿ ಕಛೇರಿಯ ಮೇಲೆ ನಡೆದ ದಾಳಿ, ಹಾಗೂ ನಂತರ ಅಮೆರಿಕನ್ ರಾಯಭಾರಿ ಮತ್ತು ಇನ್ನಿತರರ ಕೊಲೆಗೆ ಅರಾಫತ್ ಅವರು ಆದೇಶ ನೀಡಿದರು ಎನ್ನಲಾಯಿತು. ಅರಾಫತ್ ಅವರು ಇದನ್ನು ಅಲ್ಲಗಳೆದರು.

ಜೋರ್ಡನ್ ನಿ೦ದ ಹೊರತಳ್ಳಲ್ಪಟ್ಟ ಮೇಲೆ ಅರಾಫತ್ ರ ಪಿಎಲ್‍ಒ ಲೆಬನಾನ್ ದೇಶದಲ್ಲಿ ನೆಲೆ ಸ್ಥಾಪಿಸಿತು. ಈ ನೆಲೆಗಳಿ೦ದ ಆಗಾಗ್ಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲಾರ೦ಭಿಸಿತು. ಈ ದಾಳಿಗಳು ನಡೆದಾಗಲೆಲ್ಲ ಇಸ್ರೇಲ್ ಲೆಬನಾನ್ ನಲ್ಲಿದ್ದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾರ೦ಭಿಸಿತು.

೧೯೭೨ ರ ಮ್ಯೂನಿಚ್ ಒಲಿ೦ಪಿಕ್ಸ್ ಸ್ಪರ್ಧೆಯಲ್ಲಿ ೧೧ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಕೊಲ್ಲಲಾಯಿತು. ಸಾಮಾನ್ಯವಾಗಿ ಅರಾಫತ್ ರ ಫತಾ ದ ಭಯೋತ್ಪಾದಕ ಅ೦ಗವೆ೦ದು ಹೇಳಲಾದಕಪ್ಪು ಸಪ್ಟ೦ಬರ್ ಇದನ್ನು ನಡೆಸಿತು ಎಂದು ಆಪಾದಿಸಲಾಯಿತು. ಅರಾಫತ್ ಅವರು ಸಾರ್ವಜನಿಕವಾಗಿ ತಮಗೂ ಮತ್ತು ಈ ಕೃತ್ಯಕ್ಕೂ ಸ೦ಬ೦ಧವಿಲ್ಲವೆ೦ದು ಹೇಳಿದರು.

೧೯೭೪ ರಲ್ಲಿ ಪಿಎಲ್‍ಒ ಗೆ ಪ್ಯಾಲೆಸ್ಟೈನ್ ನ ಜನರ ಪ್ರಾತಿನಿಧಿಕ ಸಂಸ್ಥೆ ಎ೦ಬ ಮನ್ನಣೆಯನ್ನು ಅರಬ್ ದೇಶಗಳ ನಾಯಕರು ನೀಡಿದರು.

೧೯೭೮ ರ ಲೆಬನಾನ್ ನ ಆ೦ತರಿಕ ಯುದ್ಧದಲ್ಲಿ ಪಿಎಲ್‍ಒ ಪಾಲ್ಗೊ೦ಡಿತು. ಲೆಬನಾನ್ ದೇಶದ ಕ್ರೈಸ್ತ ಸಮುದಾಯದ ಆಪಾದನೆಯ೦ತೆ ಅನೇಕರ ಸಾವಿಗೆ ಅರಾಫತ್ ಅವರೇ ಕಾರಣರು. ಇಸ್ರೇಲ್ ಲೆಬನಾನ್ ನ ಕ್ರೈಸ್ತ ಸಮುದಾಯದ ಪರ ವಹಿಸಿತು ಮತ್ತು ಎರಡು ಮುಖ್ಯ ದಾಳಿಗಳನ್ನು ನಡೆಸಿತು. ಅನೇಕ ಜನ ಪ್ಯಾಲೆಸ್ಟೈನ್ ನ ಪೌರರು ಈ ದಾಳಿಗಳಲ್ಲಿ ಮೃತಪಟ್ಟರು.

೧೯೮೨ ರಲ್ಲಿ ಲೆಬನಾನ್ ನ ಮೇಲೆ ಇಸ್ರೇಲ್ ನ ದಾಳಿಯ ಸಮಯದಲ್ಲಿ ಅರಾಫತ್ ಮತ್ತು ಪಿಎಲ್‍ಒ ಅನ್ನು ಲೆಬನಾನ್ ನಿ೦ದ ಹೊರಹೋಗಲು ಬಿಡಲಾಯಿತು. ಅರಾಫತ್ ಅವರು ಇ ಬಾರಿ ಟುನೀಸಿಯಾ ದೇಶಕ್ಕೆ ತೆರಳಿ ಅಲ್ಲಿ ತಮ್ಮ ನೆಲೆಯನ್ನು ೧೯೯೩ ರ ವರೆಗೆ ಸ್ಥಾಪಿಸಿದರು.

೧೯೯೩ ರಲ್ಲಿ, ಅಮೆರಿಕದ ಒತ್ತಡದ ಮೇರೆಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಓಸ್ಲೋ ಒಪ್ಪ೦ದವನ್ನು ಸ್ಥಾಪಿಸಿದರು. ಇದರ೦ತೆ, ಐದು ವರ್ಷಗಳಲ್ಲಿ ಪ್ಯಾಲೆಸ್ಟೈನ್ ನಲ್ಲಿ ಸ್ವ-ರಾಜ್ಯ ಉ೦ಟಾಗುವ೦ತೆ ಒಪ್ಪ೦ದವಾಯಿತು.

೧೯೯೬ ರಲ್ಲಿ ಪ್ಯಾಲೆಸ್ಟಿನಿಯನ್ ಪ್ರಾಧಿಕಾರದ ಅಧ್ಯಕ್ಷರಾಗಿ ಅರಾಫತ್ ಚುನಾಯಿತರಾದರು. ೧೯೯೮ ರ ಸಮಯಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನ ನಡುವಿನ ಸ೦ಬ೦ಧ ಮತ್ತಷ್ಟು ಬಿಗಡಾಯಿಸಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿ೦ಟನ್ ಅವರು ಹೊ೦ದಿಸಿದ ಮಾತುಕತೆಗಳ ನಂತರ ಇಸ್ರೇಲ್ ನ ಪ್ರಧಾನಿ ಎಹುಡ್ ಬರಾಕ್ ಪಶ್ಚಿಮ ದ೦ಡೆ ಮತ್ತು ಗಾಜಾ ಪಟ್ಟಿಗಳ ಕೆಲ ಭಾಗಗಳನ್ನು ಪ್ಯಾಲೆಸ್ಟೈನ್ ಗೆ ಬಿಟ್ಟುಕೊಡುತ್ತೇನೆ೦ದು ತಿಳಿಸಿದರು. ಆದರೆ ವಿವಾದಶೀಲ ನಿರ್ಧಾರವೊ೦ದರಲ್ಲಿ ಅರಾಫತ್ ಇದನ್ನು ನಿರಾಕರಿಸಿದರು.

ಅಕ್ಟೋಬರ್ ೨೮, ೨೦೦೪ ರಲ್ಲಿ ಅರಾಫತ್ ತೀವ್ರವಾಗಿ ಅಸ್ವಸ್ಥರಾದರು. ಅವರನ್ನು ಪ್ಯಾರಿಸ್ ನಗರದ ಆಸ್ಪತ್ರೆಯೊ೦ದಕ್ಕೆ ಸಾಗಿಸಲಾಯಿತು. ಇತ್ತೀಚಿನ ಬೆಳವಣಿಗೆಯಲ್ಲಿ ಅರಾಫತ್ ಅವರು ನವ೦ಬರ್ ೧೧ ರಂದು ಮರಣ ಹೊ೦ದಿದರೆ೦ಬ ಘೋಷಣೆ ಬ೦ದಿದೆ.




#Article 57: ಪೂರ್ಣಚಂದ್ರ ತೇಜಸ್ವಿ (287 words)


ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು. 

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಅವರ ತಾಯಿ ಹೇಮಾವತಿ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಜನಿಸಿದರು.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.

ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಓರಗೆಯ ಇತರೆ ಬರಹಗಾರರಂತೆ ಅದ್ಯಾಪಕ  ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇವರ ಪತ್ನಿ ರಾಜೇಶ್ವರಿ. ಇವರೀಗ ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯೆ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು. 

ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.

ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ,  ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ.  ಕರ್ವಾಲೋ ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು  ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.

ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ.

 




#Article 58: ವಿನಾಯಕ ಕೃಷ್ಣ ಗೋಕಾಕ (240 words)


ಕನ್ನಡಕ್ಕೆ  ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ  ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.

ಭಾರತ ಸಿಂಧು ರಶ್ಮಿ - ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ.(ಈ ಕಾವ್ಯಕ್ಕೆ ವಿನಾಯಕ ಕೃಷ್ಣ ಗೋಕಾಕ ರವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.)

ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ ಗೋಕಾಕ್ ಚಳವಳಿ ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ. ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ ಗೋಕಾಕ್ ವರದಿಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.

 




#Article 59: ಗೋಕಾಕ (454 words)


ಗೋಕಾಕ್ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಿಲ್ಲೆಯಲ್ಲಿ ಸುಪ್ರಸಿದ್ಧ ಗೋಕಾಕ ಜಲಪಾತವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ , ಗೋವಿನ ಜೊಳ ಮತ್ತು  ಹತ್ತಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇತ್ತಿಚಿಗೆ  ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಮುಖ್ಯವಾಗಿ ಜವಳಿ, ಸಕ್ಕರೆ, ಮತ್ತು ಗೊವಿನ ಜೊಳ ಸಂಸ್ಕರಣೆ, ಮತ್ತು ಸಿಮೆಂಟ್ ಕೈಗಾರಿಕೆಗಳು ನೆಲೆಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ನಗರವನ್ನು ಹೊರತುಪಡಿಸಿ ಇದೆ ಅತ್ಯಂತ ಜನನಿಬಿಡ ಹಾಗೂ ದೊಡ್ಡ ನಗರವಾಗಿದೆ.

ಗೋಕಾಕ್ ನಗರವು ಐತಿಹಾಸಿಕವಾಗಿಯೂ ಪ್ರಾಮುಖ್ಯತೆ ಪಡೆದ ಸ್ಥಳವಾಗಿದೆ. ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ತದನಂತರ ಮೊಘಲರ್ ಆಡಳಿತದಲ್ಲಿ ಬಿಜಾಪುರ ಸುಲ್ತಾನರು ಗೋಕಾಕ್ ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ ಸವಣೂರಿನ ನವಾಬರು ಇದನ್ನು ಜಹಗೀರಾಗಿ ಪಡೆದುಕೊಂಡರು. ಇದಲ್ಲದೆ ಆಯಕಟ್ಟಿನ ಸ್ಥಳವಾಗಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಕೆಲಕಾಲ ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠಾ ಪೆಶ್ವೆಗಳ ಆಡಳಿತಕ್ಕೂ ಒಳಪಟ್ಟಿತ್ತು. ನಂತರದ ಬ್ರಿಟಿಷ್ ಆಡಳಿತಾವಧಿಯಲ್ಲಿ ಬೆಳಗಾವಿ ಜಿಲ್ಲೆಯ ಉಪವಿಭಾಗದ ಕೇಂದ್ರವಾಗಿತ್ತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬಯಿ ಸರ್ಕಾರದಿಂದ ಬೇರ್ಪಟ್ಟು  ಕರ್ನಾಟಕದೊಂದಿಗೆ ಸೇರಿಸಲ್ಪಟ್ಟಿತು.ಮತ್ತು ಸಮಿಪದ ಕಲ್ಲೋಳಿ ಗ್ರಾಮವು 1000 ಸಾವಿರ ಶತಮಾನದ ಇತಿಹಾಸ ಹೊಂದಿದೆ ಇಲ್ಲಿ 10ಕ್ಕು ಹೆಚ್ಚಿನ 1000 ಸಾವಿರ ಶತಮಾನದ ಜೈನರ ಶಾಸನಗಳು ದೊರೆತಿವೆ 100ಕ್ಕೂ ಹೆಚ್ಚು ಜೈನ ಬಸೀದಿಗಳನ್ನು  ಹೊಂದಿದೆ ಎನ್ನುವ ಖ್ಯಾತಿಯನ್ನು ಈ ಗ್ರಾಮ ಪಡೆದಿದೆ. ಅದೆ ರಿತಿಯಾಗಿ ಯಾದವಾಡ ಗ್ರಾಮವು ಸುಮಾರು ೫ ಶತಮಾನಗಳ ಇತಿಹಾಸ ಹೊಂದಿದೆ.....

ಗೋಕಾಕ್ ನಗರಸಭೆಯು ೧೮೫೩ ರಲ್ಲಿ ಸ್ಥಾಪನೆಗೊಂಡಿದೆ. ಆಗಿನ ಮುಂಬಯಿ ಸರ್ಕಾರ ( ಸದರ್ನ ಪಾಟ್  ಅಫ್ ಮಹಾರಾಷ್ಟ್ರ)ದಲ್ಲಿ ಪುಣೆ ಹಾಗು ಗೋಕಾಕ್ ದಲ್ಲಿ ಎಕಕಾಲಕ್ಕೆ ಈ ಮುನ್ಸಿಪಾಲ್ಟಿಗಳು ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಇದು ಕರ್ನಾಟಕದ ಹಳೆಯ ಮುನ್ಸಿಪಾಲ್ಟಿಗಳ ಪೈಕಿ ಒಂದೆನಿಸಿದೆ. ಈ ಹಿಂದೆ ಪುರಸಭೆ ಸ್ಥಾನ ಹೊಂದಿದ್ದ ಈ ಸ್ಥಳೀಯಾಡಳಿತವನ್ನು  ಕರ್ನಾಟಕ ರಾಜ್ಯ ಸರ್ಕಾರ ೧೯೯೫ ರಲ್ಲಿ ನಗರಸಭೆಯಾಗಿ ಪರಿವರ್ತಿಸಿದೆ. ಒಟ್ಟು ೩೧ ಸದಸ್ಯರು ನಗರದ ವಿವಿಧ ವಾರ್ಡಗಳನ್ನು  ಪ್ರತಿನಿಧಿಸುತ್ತಾರೆ.

ಗೋಕಾಕ್ ಪಟ್ಟಣವು ಹಲವಾರು ವೈವಿದ್ಯಮಯ ವಿಷಯಗಳಿಗಾಗಿ ನಾಡಿನಲ್ಲಿ ಹೆಸರು ಮಾಡಿದೆ. ಕಟ್ಟಿಗೆಯ ಹಣ್ಣಿನ ಫಲಕ, ಗೊಂಬೆ ಮುಂತಾದ ಕರಕುಶಲ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಇನ್ನು ಪ್ರಸಿದ್ದ ಸಿಹಿ ತಿನಿಸು  'ಕರದಂಟು' ಸಹ ಇಲ್ಲಿಯೇ ತಯಾರಾಗುತ್ತದೆ. ಜೊತೆಗೆ ಇತ್ತಿಚಿಗೆ ಲಡಗಿ ಲಾಡು (ಉಂಡಿ) ಸಹ ತಯಾರಿಸಲಾಗುತ್ತಿದ್ದು ಈ ಎರಡು ಸಿಹಿ ತಿನಿಸುಗಳು ಲೋಕ ಪ್ರಸಿದ್ದವಾಗಿವೆ. ಸಾಗರದಾಚೆಗೂ ಇವು ತಮ್ಮ ಕಂಪನ್ನು ಬೀರಿವೆ. ಇನ್ನು ಪಟ್ಟಣ ಜಿಲ್ಲಾ ಕೇಂದ್ರವಾಗುವತ್ತ ದಾಪುಗಾಲಿಟ್ಟಿದೆ. ಈ ಹಿಂದೆ ಸರ್ಕಾರ ನೇಮಿಸಿದ್ದ ಹುಂಡೇಕಾರ್ ಸಮಿತಿ , ಗದ್ದಿಗೌಡರ ಸಮಿತಿಗಳು ನಗರವನ್ನು ಜಿಲ್ಲಾ ಕೇಂದ್ರಕ್ಕೆ  ಶಿಫಾರಸ್ಸು ಮಾಡಿವೆ. ಆದ್ರೆ ಬೆಳಗಾವಿ ಗಡಿ ವಿವಾದ ಇದಕ್ಕೆ ಅಡ್ಡಿಯಾಗಿದೆ. ವಿಚಿತ್ರ ಅಂದ್ರೆ ಗೋಕಾಕ್ ನಗರ ಆಯಕಟ್ಟಿನ ಸ್ಥಾನದಲ್ಲಿದ್ದರೂ ಸರ್ಕಾರ ಜಿಲ್ಲಾ ವಿಂಗಡನೆಗೆ ಮೀನಮೇಷ ಎಣಿಸುತ್ತಿದೆ. ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಇಲ್ಲಿಯ ಕೊಡುಗೆ ಅಪಾರ. ಕನ್ನಡದ ಖ್ಯಾತ ಸಾಹಿತಿಗಳಾದ, ಕೃಷ್ಣಮೂರ್ತಿ ಪುರಾಣಿಕ, ಬೇಟಗೇರಿ ಕೃಷ್ಣಶರ್ಮ, ಬಸವರಾಜ್‌ ಕಟ್ಟಿಮನಿ, ಪ್ರೊ.ಕೆ.ಜಿ.ಕುಂದಣಗಾರ್,  ಮುಂತಾದ ಹಿರಿಕರು ಈ ಗೋಕಾವಿ ನಾಡಿಗೆ ಸೇರಿದವರಾಗಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಪರೀಷತ್

ತಾಲ್ಲೂಕು ಘಟಕ ಗೋಕಾಕ

ಗೌರವಾಧ್ಯಕ್ಷರು ಪ್ರೊ. ಚಂದ್ರಶೇಖರ ಅಕ್ಕಿ, ಅಧ್ಯಕ್ಷರು ಶ್ರೀ ಮಹಾಂತೇಶ ತಾಂವಶಿ, ನಿಕಟಪೂರ್ವ ಅಧ್ಯಕ್ಷರು ಶ್ರೀ ಬಾಲಶೇಖರ ಬಂದಿ, ಕಾರ್ಯದರ್ಶಿಗಳು ಸಿದ್ರಾಮ ದ್ಯಾಗಾನಟ್ಟಿ ಮತ್ತು ಶ್ರೀಮತಿ ರಜನಿ ಜಿರಗ್ಯಾಳ, ಕೋಶಾಧ್ಯಕ್ಷರು ಆನಂದ ಗೋಟಡಕಿ.

ಸದಸ್ಯರು

ಈಶ್ವರ ಬೆಟಗೇರಿ, ಪ್ರೊ. ಶಂಕರ ನಿಂಗನೂರ, ಬಸವರಾಜ ಮುರಗೋಡ, ಎಸ್.ಆರ್.ಮುದ್ದಾರ,ಸಚಿನ್ ಕಡಬಡಿ, ಡಾ. ಎಸ್.ಬಿ.ಹೊಸಮನಿ, ಬಿ.ಬಿ.ಇಟ್ಟನ್ನವರ, ಬಸವರಾಜ ಹಣಮಂತಗೋಳ, ಶೈಲಾ ಕೊಕರಿ, ಮಹಾದೇವ ಮಲಗೌಡ, ಎಸ್.ಎಸ್.ಪಾಟೀಲ,ಎಸ್.ಕೆ.ಮಠದ, ಶ್ರೀಮತಿ ರಾಜೇಶ್ವರಿ ವಡೆಯರ.

ಗೊಕಾಕ್ ರೈಲು ನಿಲ್ದಾಣವು ಪಟ್ಟಣ ದಿಂದ ೧೦ ಕಿ.ಮಿ ಅಂತರದಲ್ಲಿ ಇದೆ...ಇದು ಬೆಳಗಾವಿ ಜಿಲ್ಲೆಯ ೫ನೇ ದೊಡ್ಡ ನಿಲ್ದ್ದಾಣ. ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಲ್ಲಿ ಈ ರೈಲು ನಿಲ್ದಾಣವು ಬರುತ್ತದೆ. ಈ ನಿಲ್ದಾಣದ ಪಕ್ಕದಲ್ಲಿ ಕೊಣ್ಣೂರು ಎಂಬ ಉಪ ನಗರವು ಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತದೆ.ನಿಲ್ದಾಣದ ಉತ್ತರಕ್ಕೆ ಘಟಪ್ರಭಾ ಮತ್ತು ದಕ್ಶಿಣಕ್ಕೆ ಪಾಶ್ಚಪೂರ ರೈಲು ನಿಲ್ದಾಣಗಳು ಬರುತ್ತವೆ.ಇದನ್ನು ಗೋಕಾಕ್ ರೋಡ್ ನಿಲ್ದಾಣವೆಂದು ಕರೆಯುತ್ತಾರೆ.ಪ್ರೆಕ್ಶಣಿಯ ಸ್ಥಳಗಳಾದ ಗೊಕಾಕ್ ಜಲಪಾತ, ಗೊಡಚನಮಲ್ಕಿ ಜಲಪಾತ, ಘಟಪ್ರಭಾ ಪಕ್ಶಿದಾಮ, ದುಪದಾಳ ಹಾಗು ಹಿಡಕಲ್ ಜಲಾಶಯ, ಯೊಗಿಕೊಳ್ಳ ನಿಸರ್ಗದಾಮ ( ಗೊಕಾಕ್ ನವಿಲುದಾಮ) ಕಲ್ಲೋಳಿಯ ಹನುಮಂತ ದೇವರ ದೇವಸ್ಥಾನ ಮತ್ತು ಕಲ್ಲೋಳಿಯ ಪಾರ್ಶ್ವಾನಾಥ ಜೈನ್ ಬಸಿದಿ ಹಾಗೂ 1000 ಶತಮಾನದ ಶಾಸನಗಳು ಇಲ್ಲಿ ಸಿಗುತ್ತವೆ,  ಮುಂತಾದ ಸ್ಥಳಗಳಿಗೆ ಹೋಗುವವರು ಇಲ್ಲಿ ಇಳಿಯಬಹುದಾಗಿದೆ.

ರಮೇಶ ಜಾರಕಿಹೊಳಿ,ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಲ್ಲಿನ ರಾಜಕಾರಣಿಗಳು.

 




#Article 60: ಯು.ಆರ್.ಅನಂತಮೂರ್ತಿ (119 words)


ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ  ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.  ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು

'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು.ಋಜುವಾತು ಪತ್ರಿಕೆಯನು ಪ್ರಾರಂಭಿಸಿದರು.

ಅನಂತಮೂರ್ತಿ ೧೯೭೦ ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕ ಮತ್ತು ಬೋಧಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೧೯೮೭ ರಿಂದ ೧೯೯೧ ರವರೆಗೆ ಕೇರಳದ ಕೊಟ್ಟಾಯಂನಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.




#Article 61: ಗಿರೀಶ್ ಕಾರ್ನಾಡ್ (104 words)


ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. 

ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜು ಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ.

ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್‍ಗಾಗಿ ಭಾರತದ ಸ್ವಾತಂತ್ರೋತ್ಸವದ ೫೦ ವರ್ಷದ ನೆನಪಿನ ಕಾರ್ಯಕ್ರಮಕ್ಕಾಗಿ  ಬರೆದುಕೊಟ್ಟ ನಾಟಕ-ಟಿಪ್ಪುವಿನ ಕನಸುಗಳು.

ಆಡಾಡತ ಆಯುಷ್ಯ (೨೦೧೧)

ಗಿರೀಶ್ ಕಾರ್ನಾಡ್ ಅವರು ದಿನಾಂಕ ೧೦-೬-೨೦೧೯ರಂದು ಬೆಂಗಳೂರಿನಲ್ಲಿ ಮರಣ ಹೊಂದಿದರು.




#Article 62: ಗೋಪಾಲಕೃಷ್ಣ ಅಡಿಗ (1306 words)


ಎಂ. ಗೋಪಾಲಕೃಷ್ಣ ಅಡಿಗ : - (೧೮ ಫೆಬ್ರುವರಿ ೧೯೧೮ - ೧೪ ನವೆಂಬರ ೧೯೯೨) ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ ಎಂದು ಅವರೇ ಹೇಳಿದ್ದಾರೆ.

ಬೈಂದೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಹದಿಮೂರರ ಹರೆಯದಲ್ಲೇ ಪದ್ಯ ಬರೆಯಲಾರಂಭಿಸಿದ ಅವರಿಗೆ ಕುಂದಾಪುರದ ವಾತಾವರಣ ಇನ್ನಷ್ಟು ಬರೆಯಲು ಪ್ರೇರಣೆ ನೀಡಿತು.ಮೊದಲೇ ಇದ್ದ ಓದುವ ಹುಚ್ಚು ಇನ್ನಷ್ಟು ಬಲವಾಯಿತು. ಆ ಸಂದರ್ಭದಲ್ಲಿ ಶಿವರಾಮ ಕಾರಂತರ ಅಣ್ಣ ಕೋಲ ಕಾರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಆಗ ಇಡೀ ದೇಶವೇ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ, ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದ ಕಾಲ. ಅಡಿಗರೂ ಹುಮ್ಮಸ್ಸಿನಿಂದ ಹೋರಾಟದಲ್ಲಿ  ಭಾಗಿಯಾದರು. ಹೆಂಡದಂಗಡಿಯ ಮುಂದೆ `ಪಿಕೆಟಿಂಗ್' ಮಾಡಿದರು. ದೇಶ ಭಕ್ತಿಯ ಉತ್ಸಾಹ, ಉದ್ರೇಕಗಳು ಅವರ ಕಾವ್ಯ ರಚನೆಗೆ ಪೂರಕವಾದವು. ಅವರ ಕೆಲವು ಕವನಗಳು ಬೆಂಗಳೂರಿನ `ಸುಬೋಧ', ಮಂಗಳೂರಿನ `ಬಡವರ ಬಂಧು', ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ತರಗತಿಗೆ ಸೇರಿ ಕೊಂಡರು. ಅಲ್ಲಿ ಕಳೆದ ಐದಾರು ವರ್ಷ ಅವರ ಬದುಕಿನ ಒಂದು ಮಹತ್ವದ ಅವಧಿಯಾಗಿತ್ತು. ಈ ಅವಧಿಯಲ್ಲಿ ಅವರಿಗೆ ಬಿ.ಎಚ್. ಶ್ರೀಧರ್, ಹೆಚ್ ವೈ.ಶಾರದಾಪ್ರಸಾದ್, ಚದುರಂಗ, ಟಿ.ಎಸ್.ಸಂಜೀವ ರಾವ್. ಎಂ.ಶಂಕರ್, ಕೆ.ನರಸಿಂಹಮೂರ್ತಿ ಮುಂತಾದವರ ಒಡನಾಟ, ಸ್ನೇಹ ಅವರಿಗೆ ಲಭ್ಯವಾಯಿತು. `ಭಾವತರಂಗ' ಸಂಕಲನದ ಹೆಚ್ಚಿನ ಕವನಗಳು ಈ ಅವಧಿಯಲ್ಲಿ ರಚಿತವಾದವು. ಅವುಗಳಲ್ಲೊಂದಾದ `ಒಳತೋಟಿ' ಎಂಬ ಕವನ ಬಿ.ಎಂ.ಶ್ರೀ ರಜತ ಮಹೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಸುವರ್ಣ ಪದಕವನ್ನು ಪಡೆಯಿತು. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಕ್ಷಿ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಫರ್ಧಿಸಿದ್ದರು. ಅಡಿಗರು ಸಾಗರದಲ್ಲಿದ್ದಾಗ ಕೇವಲ ಸಾಹಿತಿಗಳನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿಗಳಿಗೂ ವಿವಿಧ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಿದ್ದರು. ಅವರು ಕಾಲೇಜಿನ ಉಪನ್ಯಾಸಕರನ್ನು ತಮ್ಮ ಗೆಳೆಯರಂತೆಯೇ ಸ್ವೀಕರಿಸಿದ್ದರು. ಅವರು ಒಬ್ಬರೇ ಕಾಲೇಜಿನ 'ಕ್ಯಾಂಟೀನ್' ಹೋಗಿದ್ದು ತೀರಾ ಅಪರೂಪವೇ ಸರಿ. ಕೆಲವು ಬಾರಿ ಅವರು ತಮ್ಮ ವಿದ್ಯಾರ್ಥಿಗಳಿಗೂ ಶುಲ್ಕ ತುಂಬಲು, ಪುಸ್ತಕ ಕೊಳ್ಳಲು ತಮ್ಮ ಸಂಬಳದಿಂದಲೇ ಸಹಾಯ ಮಾಡುತ್ತಿದ್ದರು. ಮನೆಯಲ್ಲಿಯೂ ಒಬ್ಬಿಬ್ಬ ವಿದ್ಯಾರ್ಥಿಗಳು ಇದ್ದೇ ಇರುತ್ತಿದ್ದರು.

ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತಕರು. ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ  ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ನವ್ಯ ಕಾವ್ಯದ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಅಡಿಗರು ಕನ್ನಡ ವಿಮರ್ಶೆಯಲ್ಲೂ ಪ್ರಬುದ್ಧತೆಯನ್ನು ತಂದರು. `ಸಾಕ್ಷಿ' ಎಂಬ ಉನ್ನತಮಟ್ಟದ ಸಾಹಿತ್ಯಪತ್ರಿಕೆಯನ್ನು ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಧನೆ ಅನನ್ಯವಾದುದು.ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ- ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಎಲ್ಲಾ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’(ಸಾಕ್ಷಿಪ್ರಕಾಶನ, 1977) ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲದಲ್ಲಿದ್ದ ನಾವಿನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬೀ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ದಾರಿಯನ್ನು ಬಿಟ್ಟ ಹೊಸದಾರುಯನ್ನು ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯ ರಚನೆಯಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆ ಎಂದು ತೋರುತ್ತದೆ. ಅಡಿಗರ ಕವನದ ಸಾಲುಗಳು
 
ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು

ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು

ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ

ಪನ್ನತಿಕೆ ಬರುವನಕ ನನ್ನ ಬಾಳಿದು ನರಕ

ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ

ಕೆಚ್ಚೆದೆತನದ ಬಲ್ಮೆಯನ್ನು ಬಿತ್ತರಿಪೆನು

ಪದವನಿಡುತೆನ್ನೆದೆಯ ಮೇಲೆ ತಾಮಡವವೆಸಗು

ಬೆದರುವೆನೆ ಬೆಚ್ಚುವೆನೆ ನಿನಗೆ ನಾನು(ವಿಧಿಗೆ)
					
ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ. ದ್ವಿತೀಯ ಪ್ರಾಸ, ಮಾರಾಂತು, ಬಿತ್ತರಿ ಪೆನು, ಎಸಗು ಮೊದಲಾದ ಪದಪ್ರಯೋಗಗಳ ನಡೆದಿದೆ.

ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ

ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ

ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ
 
ಮಂಜುತರ ಸೃಷ್ಟಿಗಾನದಲಿ ಮೈಮರೆಯೆ
 
ಎಂಜಲಾಗದ ಮಧುರ ಮಧುರಸವ ಸವಿಯೆ

ರಂಜಿಸುವ ಕಾಡುಮೇಡುಗಳನಂಡಲೆಯೆ(ಹೊಸ ಹಾದಿ)
					
ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ

ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ

ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ

ಸರದೊಳಾವುದೋ ಕಲ್ಲು ಬಿದ್ದ ಹಾಗೆ

ಹಲವು ತಾನಗಳ ಸಂತಾನವಾದುದು ಮಧುರ

ನೊಳಬಾಳು; ಹರಯದೊಡ್ಡೋಲಗದಲಿ

ತನಗೆಲ್ಲಿ ನೆಲೆ? ಬಾಲಹಾಡಿಗೆಲ್ಲಿಹುದು ಬೆಲೆ?

ಎಂದು ಮುರುಟಿದನು ತನುಮನಗಳಲ್ಲಿ(ಒಳತೋಟಿ)
			
ಕಂಡು ಮಾತಾಡಿ ಮೈ

ದಡವಿ ನಗಿಸಿ ನಲಿವರಿಲ್ಲ

ಬೆಂದ ಬಗೆಗೆ ಸೊದೆಯನೆರೆದು

ಕಂಬನಿಯ ತೊಡೆವರಿಲ್ಲ
			
ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ.

ಕಲ್ಲಾಗು ಕಲ್ಲಾಗು ಬಾಳ ಬಿರುಗಾಳಿಯಲಿ

ಅಲ್ಲಾಡದೆಯೆ ನಿಲ್ಲು ಜೀವ( ಕಲ್ಲಾಗು ಕಲ್ಲಾಗು )

ಬಿ.ಎ ಆನರ್ಸ್  ಮುಗಿಸಿದ ಬಳಿಕ ಅಡಿಗರು ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ ದುಡಿದರು. ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿಯೂ ಗುಮಾಸ್ತರಾಗಿ ದುಡಿದರು. ಅನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದರು. (೧೯೪೮-೫೨) ಬಳಿಕ ಎರಡು ವರ್ಷ ಕುಮಟಾದ ಕೆನರಾ ಕಾಲೇಜಿನಲ್ಲೂ, ಅನಂತರ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿಯೂ, ಇಂಗ್ಲಿಷ್ ಉಪನ್ಯಾಸಕರಾಗಿ (೧೯೫೪-೫೨) ಹತ್ತು ವರ್ಷ ದುಡಿದರು.೧೯೬೪ರಿಂದ ೬೮ರವರೆಗೆ  ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಆ ಹೊಸ ಕಾಲೇಜನ್ನು ಕಟ್ಟಿದರು. ೧೯೬೮ರಲ್ಲಿ ಆ ಹುದ್ದೆಯನ್ನು ತ್ಯಜಿಸಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲರಾದರು. ೧೯೭೧ರಲ್ಲಿ ಅವರ ಬದುಕಿನಲ್ಲಿ ಒಂದು ಅನಿರೀಕ್ಷಿತ ತಿರುವು ಬಂತು. ಲೋಕಸಭಾ ಚುನಾವಣೆಯಲ್ಲಿ ೯ ಪಕ್ಷಗಳ ಒಕ್ಕೂಟದ ಪರವಾಗಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬ ಸ್ನೇಹಿತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದರು. ಆಗ ವಿಜೃಂಭಿಸುತ್ತಿದ್ದ `ಇಂದಿರಾ ಅಲೆ'ಯ ಅಬ್ಬರದಲ್ಲಿ ಅವರಿಗೆ ಸೋಲಾಯಿತು. ತತ್ಪರಿಣಾಮವಾಗಿ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಗೆ ರಾಜಿನಾಮೆ ಕೊಡಬೇಕಾಯಿತು. ಅನಂತರ ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ನಲ್ಲಿ ಉಪನಿರ್ದೇಶಕರಾಗಿ ಸ್ವಲ್ಪ ಕಾಲ ದುಡಿದ ಬಳಿಕ ಶಿಮ್ಲಾದ `ಇಂಡಿಯನ್ ಇನ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್' ಸಂಸ್ಥೆಯಲ್ಲಿ ಮೂರು ವರ್ಷ ವಿಸಿತ್ಟಿಂಗ್ ಫೆಲೊ ಆಗಿ ಕೆಲಸ ಮಾಡಿದರು. 
ನವ್ಯದ ನಾಯಕತ್ವ ೧೯೫೫ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಹೊಸ ಪೀಳಿಗೆಯ ಯು.ಆರ್.ಅನಂತಮೂರ್ತಿ, ಎ.ಕೆ. ರಾಮಾನುಜನ್, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಲಂಕೇಶ್, ತೇಜಸ್ವಿ, ಲಕ್ಶ್ಮಿ ನಾರಾಯಣ ಭಟ್ಟ, ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಚಂದ್ರಶೇಖರ ಪಾಟೀಲ ಎಂ.ಎನ್. ವ್ಯಾಸರಾವ್, ಜಯಂತ ಕಾಯ್ಕಿಣಿ, ಕ.ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ.ಎಚ್. ನಾಯಕ್, ಶ್ರೀಕೃಷ್ಣ ಆಲನಹಳ್ಳಿ ನಾ.ಮೊಗಸಾಲೆ ಮುಂತಾದ ಅನೇಕ ಲೇಖಕರು ತಮ್ಮದೇ ಆದ ರೀತಿಯಲ್ಲಿ ನವ್ಯಪ್ರಜ್ಞೆಯ ಸಾಹಿತ್ಯವನ್ನು ರಚಿಸಿದರು. ಇವರಲ್ಲಿ ಚಂಪಾ ಮತ್ತು ತೇಜಸ್ವಿ ಮುಂತಾದ ಕೆಲವರು ಕೆಲಕಾಲದ ನಂತರ ನವ್ಯ ಮಾರ್ಗದಿಂದ ಕೊಂಚ ಭಿನ್ನವಾದ ಮಾರ್ಗವನ್ನು ಹಿಡಿದರೂ ಆರಂಭದಲ್ಲಿ ಅಡಿಗರು ಪ್ರವರ್ತಿಸಿದ ನವ್ಯತೆಯ ಪ್ರಭಾವಾದಲ್ಲೇ ತಮ್ಮ ಸೃಜನಶೀಲತೆಯನ್ನು ರೂಪಿಸಿಕೊಂಡುದುದನ್ನು ಮರೆಯುವಂತಿಲ್ಲ.

ಅಡಿಗರ ಮನೆಯಲ್ಲಿ ಸಾಹಿತ್ಯಕ್ಕೆ ಪ್ರೇರಕವಾದ ವಾತಾವರಣ ಇತ್ತು. ಅಡಿಗರ ತಂದೆ, ಅಜ್ಜ, ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ-ಎಲ್ಲರಿಗೂ ಪದ್ಯ ರಚನೆ ಮಾಡುವ ಅಭ್ಯಾಸವಿತ್ತು. ತಂದೆ ರಾಮಪ್ಪ ಅಡಿಗರು ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚಿಸುತ್ತಿದ್ದರು. ಯಕ್ಶಗಾನದ ತಾಳಮದ್ದಲೆಗಳಲ್ಲಿ ಅರ್ಥ ಹೇಳುತ್ತಿದ್ದರು. ಸೋದರತ್ತೆ ಪ್ರತಿ ರಾತ್ರಿಯೂ ಗದುಗಿನ ಭಾರತ, ಜೈಮಿನಿ ಭಾರತಗಳನ್ನು ರಾಗವಾಗಿ ಹಾಡುತ್ತಿದ್ದರು. ಇವರಲ್ಲೊಬ್ಬರಾದ ಮೂಕಾಂಬು(ಮೂಕಜ್ಜಿ) ಎಂಬವರು ಸ್ವತಃ ಪದ್ಯಗಳನ್ನು ರಚಿಸುತ್ತಿದ್ದರು. ಅಜ್ಜಿಯ ತಮ್ಮ  ಬವಳಾಡಿ ಹಿರಿಯಣ್ಣ ಹೆಬ್ಬಾರ ಎಂಬವರು ಹೆಸರಾಂತ ಯಕ್ಷಗಾನದ ಅರ್ಥಧಾರಿಯಾಗಿದ್ದರು. ಇವರ ವಂಶಜರಾದ  ಪ್ರೊ.ಬಿ.ಎಚ್. ಶ್ರೀಧರ್ ಅವರು ಮುಂದೆ ಕನ್ನಡದಲ್ಲಿ ಓರ್ವ ಗಣ್ಯ ಕವಿಯಾಗಿ ಪ್ರಸಿದ್ಧರಾದರು. ಕರಾವಳಿಯ ಮಹಾನ್ ಕಲೆ ಯಕ್ಷಗಾನವೇ ಅಡಿಗರ ಮೇಲೆ ಗಾಢ ಪ್ರಭಾವ ಬೀರಿತ್ತು. ಅವರ ಪ್ರಸಿದ್ಧ ಕವನ `ಗೊಂದಲಒಉರ'ದಲ್ಲಿ ಗೊಂದಲಾಸುರನ ಪ್ರವೇಶದ ಸಂದರ್ಭ - ಯಕ್ಷಗಾನದಲ್ಲಿ ರಂಗಸ್ಥಳ ಪ್ರವೇಶ ಮಾಡುವ ರಾಕ್ಷಸನ ಪ್ರವೇಶ ಶೈಲಿಯಲ್ಲಿದೆ. `ಅಜ್ಞಾತ ವೇಷ' ಎಂಬ ಕವನದಲ್ಲಿ ವೇಷಭೂಷಣಗಳ ಪೆಟ್ಟಿಗೆಯನ್ನು ಹೊರುವ ಬಡ ಕೂಲಿಗಳ ಪ್ರತಿಮೆಯನ್ನು ಪ್ರಜಾಸತ್ತೆಯಲ್ಲಿ ಪುಢಾರಿಗಳ ಚಾಕರಿ ಮಾಡುವ ಜನಸಾಮಾನ್ಯರ  ಪ್ರತೀಕವಾಗಿ ಬಳಸಿದ್ದಾರೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು

ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ಆಧುನಿಕ ಮಹಾಕಾವ್ಯವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ , ಸಾಂಸ್ಕೃತಿಕ ವಾಸ್ತವ ಇವರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅಡಿಗರ ಕಾವ್ಯನಾಯಕನ ಕೆಲವು ಲಕ್ಷಣಗಳನ್ನು ಹೀಗೆ ಗುರ್ತಿಸಬಹುದು. 

ಅಡಿಗರ ಶೋಧನೆ -ಮರ್ತ್ಯದಲ್ಲಿಯೇ ಅಮರತೆಯ ಫಲ ಸಾಧಿಸುವ ಶೋಧನೆ -ಉದ್ದಕ್ಕೂ ಆತ್ಮಶೋಧನೆಯಾಗಿಯೇ ಬೆಳೆಯುತ್ತ ಹೋಗುತ್ತದೆ. ಈ ನೆಲದಲ್ಲಿಯೇ ಹುಟ್ಟಿದ ರಾಮಕೃಷ್ಣ, ಬುದ್ಧ, ಗಾಂಧಿ ದೊಡ್ಡವರಾದರು. ಮಹಾತ್ಮರಾದರು. ನಾನು ಮಾತ್ರ ಹಾಗೆಯೇ ಉಳಿದೆನೇಕೆ?
ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸವಾಗಬೇಕು. ಈ ನೆಲದಲ್ಲಿಯೇ, ನೆಲದ ಪ್ರಜ್ಞೆ ಹೀರಿಯೇ ಬೆಳೆದು ದೊಡ್ಡವನಾಗಬೇಕು, ಉನ್ನತ ಚೇತನವಾಗಿ ರೂಪುಗೊಳ್ಳಬೇಕು -ಇದೇ ಅಡಿಗರ ದರ್ಶನ. ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗು ವುದಿದ್ದರೂ ಅದು ವ್ಯಕ್ತಿಯಲ್ಲಿ. ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ಸಾಮಾಜಿಕವಾದ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು. ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ ವ್ಯಕ್ತಿತ್ವ ವಿಕಾಸದ ಹೋರಾಟವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ. ನವೋದಯ ಕಾವ್ಯದಲ್ಲಿ ಅನುಕರಣೆಯೇ ಹೆಚ್ಚಾಗುತ್ತಿದ್ದ ಕಾಲದಲ್ಲಿ, ಹೊಸ ಕಾಲದ ಹೊಸ ಅನುಭವಗಳಿಗೆ ಸ್ಪಂದಿಸುವ ಕಾವ್ಯವನ್ನು ರಚಿಸಿ ಹೊಸದೊಂದು ಮಾರ್ಗವನ್ನೇ ತೆರೆದ ಕವಿ ಅಡಿಗರು.

೧೯೬೮ರಲ್ಲಿ ಅಡಿಗರಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರೊ. ಕು.ಶಿ.ಹರಿದಾಸ ಭಟ್ಟ ಮತ್ತು ವಿಜಯನಾಥ ಶೇಣೈ  ಮುಂತಾದ ಸಾಹಿತ್ಯಾಭಿಮಾನಿಗಳು ಒಂದು ಅಪೂರ್ವ ಸಮಾರಂಭವನ್ನು ಏರ್ಪಡಿಸಿದರು. ಅದರಲ್ಲಿ ಹೊಸ ಪೀಳಿಗೆಯ ಮಹತ್ವದ ಕವಿ, ಸಾಹಿತಿ, ವಿಮರ್ಶಕರುಗಳಾದ ಲಂಕೇಶ್, ಚಂದ್ರಶೇಖರ ಕಂಬಾರ,ಎಂ.ಜಿ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಜಿ. ಎಚ್. ನಾಯಕ, ಕಿ ರಂ. ನಾಗರಾಜ. ಗಿರಡ್ಡಿ ಗೋವಿಂದರಾಜ, ಬನ್ನಂಜೆ ಗೋವಿಂದಾಚರ್ಯ, ಡಿ. ಎಸ್. ರಾಯಕರ್ ಮುಂತಾದವರು ಭಾಗವಹಿಸಿದ್ದರು. ವಿಮರ್ಶಕ ನಿಸ್ಸಿಂ ಇಝೆಕಿಲ್ ಅವರು` ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ' ಎಂದು ಕೊಂಡಾಡಿದರು. ೧೯೭೪ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು.  ೧೯೭೫ರಲ್ಲಿ ಅಡಿಗರಿಗೆ `ವರ್ಧಮಾನ'ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೯ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್' ಪ್ರಶಸ್ತಿ ಲಭ್ಯವಾಯಿತು. ೧೯೮೦ರಲ್ಲಿ `ಸಮಗ್ರ ಕಾವ್ಯಕ್ಕೆ ಮೂಡಬಿದ್ರೆಯ `ವರ್ಧಮಾನ' ಪ್ರಶಸ್ತಿ ದೊರೆಯಿತು. ೧೯೮೨ರಲ್ಲಿ ಪ್ಯಾರಿಸ್, ಯುಗೋಸ್ಲಾವಿಯಗಳಲ್ಲಿ ನಡೆದ ವಿಶ್ವಕವಿ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಭಾಗವಹಿಸಿದರು. ೧೯೮೬ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ `ಕಬೀರ್ ಸನ್ಮಾನ್' ಅಡಿಗರ ಮಡಿಲಿಗೆ ಬಂತು. ೧೯೮೮ರಲ್ಲಿ ಥ್ಯಾಲಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕಕವಿ ಸಮ್ಮೇಳನದಲ್ಲಿ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಎಂಡ್ ಕಲ್ಚರ್' ಸಂಸ್ಥೆ ಅವರಿಗೆ ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ ನೀಡಿತು.




#Article 63: ದೀಪಾವಳಿ (266 words)


ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.

ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ  ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ. 

ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ. 

ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. 

ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. 
 
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.

ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.

ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ. ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ. ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ ೧೬ ಗಣ-ಚಕ್ರವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.




#Article 64: ಕಡೆಂಗೋಡ್ಲು ಶಂಕರಭಟ್ಟ (249 words)


ಆಂಗ್ಲರ ಆಳ್ವಿಕೆಯ ಸಂದರ್ಭ ಕನ್ನಡಕ್ಕೆ ಸಿಕ್ಕುತ್ತಿದ್ದ ಅಷ್ಟಿಷ್ಟು ಗೌರವದ ಜೊತೆಗೆ ಸಾಹಿತ್ಯ ದಿಗ್ಗಜರು ಭಾಷಾ ಪ್ರೇಮ, ಸಾಹಿತ್ಯ ಸಂಸ್ಕೃತಿ ಬಗ್ಗೆ ಆಳವಾದ ಚಿಂತನೆಗೆ ತೊಡಗಿದ್ದರು. ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹಲವು ಸಾಹಿತಿಗಳು ಸ್ವಾತಂತ್ರ  ಹೋರಾಟದಲ್ಲಿ ನೇರಭಾಗವಹಿಸಿದ್ದರು. ಕಾವ್ಯ, ಕತೆ, ಲೇಖನಗಳ ಮೂಲಕ ಜನಜಾಗೃತಿಗೆ ತೊಡಗಿದರು. ಆದರ್ಶದ ಬೆನ್ನು ಹತ್ತಿ ನಾಡು-ನುಡಿಗೆ ಚಿಂತನೆ ನಡೆಸಿದರು. ಅಂಥವರಲ್ಲಿ ಕವಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು.

೧೯೦೪  ಆಗಸ್ಟ ೯ರಂದು  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲ ಸಮೀಪದ ಪೆರುವಾಯಿಯಲ್ಲಿ ಶಂಕರಭಟ್ಟರು ಜನಿಸಿದರು. ತಂದೆ ಕೃಷಿಕರು. ಶಂಕರಭಟ್ಟರ ಬಂಧು, ಹಿರಿಯ ಸಂಶೋಧಕ ಮುಳಿಯ ತಿಮ್ಮಪ್ಪಯ್ಯನವರು ಇವರ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟರು.  ಮಂಗಳೂರಿನಲ್ಲಿ ಮುಳಿಯ ಅವರ ಮನೆಯಲ್ಲಿದ್ದುಕೊಂಡು ಓದುತ್ತಲೆ, ಸಾಹಿತ್ಯ ಪರಿಸರದಲ್ಲಿ ಬೆರೆತರು.

೧೯೨೦ರಲ್ಲಿ ಗಾಂಧೀಜಿಯವರು  ಮಂಗಳೂರಿಗೆ ಬಂದು ಸಾರ್ವಜನಿಕ ಸಭೆ ಉದ್ದೇಶಿಸಿ ಸ್ವಾತಂತ್ರ  ಸಂಗ್ರಾಮಕ್ಕೆ ಭಾಗವಹಿಸಲು ಕರೆಕೊಟ್ಟರು. ಶಂಕರಭಟ್ಟರು ವಿದ್ಯಾಭ್ಯಾಸ ಕುಂಠಿತಗೊಳಿಸಿ  ಗಾಂಧೀಜಿಯವರುನೀಡಿದ ಕರೆಗೆ ಓಗೊಟ್ಟು ಸ್ವಾತಂತ್ರ  ಸಂಗ್ರಾಮಕ್ಕೆ ಧುಮುಕಿದರು.

ಹೋರಾಟದ ಸಂದರ್ಭದಲ್ಲೇ ಪ್ರೌಢಶಿಕ್ಷಣ ಸಹಾ ಮುಗಿಸಿದರು. ನಂತರ ಧಾರವಾಡದ ಶಿಕ್ಷಣ ಸಮಿತಿಯ `ಸ್ನಾತಕ ಪರೀಕ್ಷೆಯಲ್ಲಿ ಉಚ್ಚ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಲು ವಿದ್ಯಾಭ್ಯಾಸವನ್ನು ತ್ಯಜಿಸಿದವರಿಗಾಗಿ ಕಾರ್ನಾಡ ಸದಾಶಿವರಾಯರು  ಮಂಗಳೂರಿನಲ್ಲಿ ಸ್ಥಾಪಿಸಿದ್ದ ತಿಲಕ ವಿದ್ಯಾಲಯವೆಂಬ ರಾಷ್ಟ್ರೀಯ ಪಾಠಶಾಲೆಯಲ್ಲಿ ಶಂಕರಭಟ್ಟರು ಕೆಲಕಾಲ ಅಧ್ಯಾಪಕರಾದರು.

ಆಬಳಿಕ  ಪಂಜೆ ಮಂಗೇಶರಾಯರಪ್ರೋತ್ಸಾಹದಿಂದ ೧೯೨೯ರಿಂದ ೧೯೬೪ರ ವರೆಗೆ (೩೫ ವರ್ಷಗಳ ದೀರ್ಘಕಾಲ) ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ಒಲವು ಮೂಡಿಸಲು ಶ್ರಮಿಸಿದರು.

ಅಧ್ಯಾಪಕರಾಗುವ ಮೊದಲು ಪತ್ರಿಕೋದ್ಯಮದ ಅನುಭವ ಪಡೆದರು. ನವಯುಗದಲ್ಲಿ ಪತ್ರಕರ್ತರಾಗಿ ಸೇರಿಕೊಂಡು, ೧೯೨೮ರಲ್ಲಿ ರಾಷ್ಟ್ರಬಂಧು ಪತ್ರಿಕೆಯ ಸಂಪಾದಕರಾದರು. ಅಲ್ಲಿಂದ ಅಧ್ಯಾಪಕ ವೃತ್ತಿ ಹಾಗೂ ಪತ್ರಿಕೋದ್ಯಮ ಎರಡರಲ್ಲೂ ಸೇವೆ ಸಲ್ಲಿಸಿದರು.

೧೯೬೪ರಲ್ಲಿ ಕನ್ನಡ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ಮರುವರ್ಷ,ಕಡೆಂಗೋಡ್ಲು ಶಂಕರಭಟ್ಟರು ಕಾರವಾರದಲ್ಲಿ ನಡೆದ ೪೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ಪಡೆದರು. 

೧೯೬೮ರ ಮೇ ೧೭ರಂದು ತಮ್ಮ ಮನೆ ಕಡೆಂಗೋಡ್ಲುವಿನಿಂದ ಮಂಗಳೂರಿಗೆ ಪ್ರಯಾಣ ಹೊರಟಿದ್ದ ಶಂಕರಭಟ್ಟರು, ಬಸ್ಸು ಸುಮಾರು ಒಂದೆರೆಡು ಕಿ. ಮೀ. ದೂರ ಕ್ರಮಿಸಿದಾಗ ಹೃದಯಸ್ತಂಭನವಾಗಿ ಬಸ್ಸಿನಲ್ಲಿಯೇ ನಿಧನರಾದರು. ಅರವತ್ತ ನಾಲ್ಕು ವರ್ಷದ ಶಂಕರಭಟ್ಟರ ಬಹುಮುಖ ಸಾಧನೆಯ ಬದುಕು ಕೊನೆಗೊಂಡಿತು.

ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು (ಎಂಜಿಎಂ), ಗೋವಿಂದ ಪೈ ಸ್ಮಾರಕ ಸಂಶೋಧನಾಕೇಂದ್ರದಿಂದ ಪ್ರತಿವರ್ಷ ಹಸ್ತಪ್ರತಿಯ ಕಾವ್ಯಕ್ಕೆ ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ ಕೊಡುತ್ತಾ ಬಂದಿದೆ.

ಕಡೆಂಗೋಡ್ಲು ಅವರ ಅಧ್ಯಾಪಕ ವೃತ್ತಿ, ಪತ್ರಿಕಾ ವೃತ್ತಿ, ಸಾಹಿತ್ಯ ಸೇವೆ, ಸ್ವಾತಂತ್ರ ಹೋರಾಟಗಳೆಲ್ಲವನ್ನೂ ಇಂಥ ಪ್ರಶಸ್ತಿ ಕೊಡುವ ಮೂಲಕ ನೆನಪಿಸುತ್ತಿರುವುದು ನಿಜಕ್ಕೂ ಅಭಿನಂದನೀಯ.

 

೧. ಸಾಹಿತ್ಯ ಯೋಗಿ.




#Article 65: ಪುರಂದರದಾಸರು (599 words)


ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು

ಜನನ
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಿಂದಲೇ ಅವರು ಮಗನಿಗೆ ಶ್ರೀನಿವಾಸ  ನಾಯಕ ಎಂದು ಹೆಸರಿಟ್ಟರಂತೆ.

ಆರಗ, ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ||

ಈ ಮೊದಲು ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮ ಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ ಎ.ವಿ. ನಾವಡ, ವೀರಣ್ಣ ರಾಜೂರ ಮತ್ತು ಅರಳುಮಲ್ಲಿಗೆ ಪಾರ್ಥಸಾರಥಿ ಅವರನ್ನು ಒಳಗೊಂಡ ತಂಡ ರಚಿಸಿ ಪುರಂದರದಾಸರ ಜನ್ಮಸ್ಥಳದ ಬಗ್ಗೆ ವರದಿ ನೀಡುವಂತೆ ಕೋರಿತ್ತು. ಈ ತಂಡಕ್ಕೆ ಶಿವಾನಂದ ವಿರಕ್ತಮಠರವರು ಸಂಚಾಲಕರಾಗಿದ್ದರು. 

ಈ ತಜ್ಞರ ವರದಿಯ ಪ್ರಕಾರ ಪುರಂದರಗಢವು ಪುರಂದರ ಎಂಬ ಹೆಸರನ್ನು ಊರಿನ ಹೆಸರಿನಲ್ಲಿ ಮಾತ್ರ ಹೊಂದಿದ್ದು ಪುರಂದರ ದಾಸರ ಕುರಿತು ಯಾವುದೇ ಐತಿಹಾಸಿಕ-ಸಾಂಸ್ಕೃತಿಕ ದಾಖಲೆ ಹೊಂದಿಲ್ಲ. ತೀರ್ಥಹಳ್ಳಿ ತಾಲೂಕಿನ ಆರಗ ಊರು ಪುರಂದರ ದಾಸರ ಕುರಿತು ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು ಆರಗವೇ ಪುರಂದರ ದಾಸರ ಜನ್ಮಸ್ಥಳವೆಂದು ಕರ್ನಟಕ ಸರ್ಕಾರಕ್ಕೆ ೨೦೧೮ರಲ್ಲಿ ವರದಿ ಸಲ್ಲಿಸಿದೆ. 

ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ.

ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ.  ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ  ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. 
ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. 
ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು.

ಆದದ್ದೆಲ್ಲ ಒಳಿತೆ ಆಯಿತು ನಮ್ಮ
ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು;

ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯೊದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನೀ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಪುರಂದರ ವಿಠ್ಠಲ
ತುಳಸಿ ಮಾಲೆ ಹಾಕಿಸಿದನಯ್ಯ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:

ಪಾದಚಾರಿ ಆಗೋದು ಹರಿ ಚಿತ್ತವಯ್ಯ

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ ಪಿಳ್ಳಾರಿ ಗೀತೆಗಳು (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ)
ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ ಪ್ರಹ್ಲಾದ ಭಕ್ತಿ ವಿಜಯಮ್ ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ವನ್ನು ಶ್ರೀಮಂತವಾಗಿಸಿವೆ. 
ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. 
ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ. 

೧. ಮಾನವ ಜನ್ಮ ದೊಡ್ಡದು,ಇದ          ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ|ಪ|  




#Article 66: ಹೆಚ್.ಡಿ.ದೇವೇಗೌಡ (227 words)


ಎಚ್.ಡಿ. ದೇವೇಗೌಡ (ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ) ಅವರು ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು.  . 'ಮಣ್ಣಿನ ಮಗ' ಎಂದೇ ಖ್ಯಾತರಾಗಿರುವ ದೇವೇಗೌಡರು ರೈತಪರ ಕಾಳಜಿ ಉಳ್ಳವರು.

ದೇವೇಗೌಡರು ಮೇ ೧೮, ೧೯೩೩ ರಂದು ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪಡೆದ ಬಳಿಕ, ದೇವೇಗೌಡ ಅವರು ಹಾಸನ ತಾಲ್ಲೂಕಿನ ಮುತ್ತಿಗೆ ಹಿರೇಹಳ್ಳಿಯ ದೇವೇಗೌಡ ಅವರ ಮಗಳು ಚೆನ್ನಮ್ಮ ಅವರನ್ನು 1954ರಲ್ಲಿ ವಿವಾಹವಾದರು. ಅವರಿಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳೂ, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ. ರೇವಣ್ಣ ಅವರು ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿದ್ದರು. ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರು ದೇವೇಗೌಡರ ಅಳಿಯ . ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಯವರನ್ನು ಮಿತ್ರರನ್ನಾಗಿಸಿ ಕೊಂಡರು.

೧೯೫೩ರಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೨ ರವರೆಗೆ ಕಾಂಗ್ರೆಸ್ ಪಕ್ಷದಲ್ಲಿದ್ದು ನಂತರ, ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ವಿಧಾನ ಸಭೆಗೆ ಚುನಾಯಿತರಾದರು.

ಮುಂದಿನ ಮೂರು ಚುನಾವಣೆಗಳಲ್ಲಿ ಸತತವಾಗಿ ಹೊಳೆನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾದರು. ೧೯೭೨ ರಿಂದ ೧೯೭೬ ರವರೆಗೆ ಮತ್ತು ನವೆಂಬರ್ ೧೯೭೬ ರಿಂದ ೧೯೭೭ ರ ವರೆಗೆ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕರಾಗಿದ್ದರು.
೧೯೭೫-೭೬ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ದೇವೇಗೌಡರು ನಂತರ ಕರ್ನಾಟಕ ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ನೀರಾವರಿ ಖಾತೆಗಳ ಸಚಿವರಾದರು. ೧೯೮೭ರಲ್ಲಿ ನೀರಾವರಿ ಖಾತೆಗೆ ಸಾಕಷ್ಟು ಹಣ ಮಂಜೂರು ಮಾಡದೆ ಇದ್ದುದರ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. 
೧೯೯೧ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದರು. 

ಇದರ ನಂತರ ಜನತಾ ದಳಕ್ಕೆ ರಾಜ್ಯ ಮಟ್ಟದಲ್ಲಿ ಅಧ್ಯಕ್ಷರಾದ ದೇವೇಗೌಡರು ೧೯೯೪ ರಲ್ಲಿ ಕರ್ನಾಟಕ ರಾಜ್ಯದ ೧೪ ನೆ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

೧೯೯೬ ರಲ್ಲಿ ಯಾವ ಒಂದು ರಾಜಕೀಯ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ ಅನೇಕ ರಾಜಕೀಯ ಪಕ್ಷಗಳ ಮೈತ್ರಿತ್ವವಾದ ತೃತೀಯ ರಂಗ ದೇವೇಗೌಡರನ್ನು ತಮ್ಮ ನಾಯಕರಾಗಿ ಚುನಾಯಿಸಿತು. ದೇವೇಗೌಡರು ಮೇ ೩೦, ೧೯೯೬ ರಂದು ಭಾರತದ ೧೧ ನೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ೧೯೯೭ರವರೆಗೆ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದ ದೇವೇಗೌಡರು, ನಂತರದ ವರ್ಷಗಳಲ್ಲಿ ಜಾತ್ಯತೀತ ಜನತಾ ದಳದ ಅಧ್ಯಕ್ಷರಾಗಿದ್ದಾರೆ.




#Article 67: ಕರ್ನಾಟಕ ಸಂಗೀತ (706 words)


 
 

ಕರ್ನಾಟಕ ಸಂಗೀತ  (ಸಂಸ್ಕೃತ: कर्णाटक संगीतम्)  ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು. 
ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು ತಾಳ(ಸಂಗೀತ) (ಲಯಕ್ಕೆ ಸಂಬಂಧಪಟ್ಟದ್ದು).

ಕರ್ನಾಟಕ ಸಂಗೀತದಲ್ಲಿ ಏಳು ಮೂಲ ಸ್ವರಗಳಿವೆ: ಸ-ರಿ-ಗ-ಮ-ಪ-ದ-ನಿ. ಈ ಏಳು ಸ್ವರಗಳ ದೀರ್ಘ ಹೆಸರುಗಳು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ. ಸ ಮತ್ತು ಪ ಸ್ವರಗಳನ್ನು ಬಿಟ್ಟರೆ ಉಳಿದವು ಮೂರು ಬೇರೆ ಬೇರೆ ರೂಪಗಳಲ್ಲಿ ಉಂಟಾಗಬಹುದು. ಬದಲಾಗದ ಸ ಮತ್ತು ಪ ಸ್ವರಗಳನ್ನು ಪ್ರಕೃತಿ ಸ್ವರಗಳೆಂದು ಹಾಗೂ ರಿ, ಗ, ಮ, ದ ಮತ್ತು ನಿ ಸ್ವರಗಳನ್ನು ವಿಕೃತಿ ಸ್ವರಗಳೆಂದು ಕರೆಯಲಾಗುತ್ತದೆ. ಸ್ವರ ಸ್ಥಾನಗಳ ಪಟ್ಟಿ ಹೀಗಿದೆ.
ಷಟ್ಶ್ರುತಿ ಋಷಭ ಮತ್ತು ಸಾಧರಣ ಗಾಂಧಾರ ಎರಡು ಸಮನಾದ ಸ್ವರಗಳು ಹಾಗೆಯೆ ಚತುಶ್ರುತಿ ಧೈವತ ಮತ್ತು ಶುದ್ಧ ನಿಷಾದ ಸಮನಾದ ಸ್ವರಗಳು. 

ಯಾವುದೇ ಒಂದು ರಾಗದಲ್ಲಿ ಒಂದು ಸ್ವರದ ಒಂದು ರೂಪ ಮಾತ್ರ ಉಂಟಾಗಬಹುದು. ಕೆಲವು ಹಗುರ ರಾಗಗಳಲ್ಲಿ (ಉದಾ: ಬೇಹಾಗ್)ಕೆಲವು ಸ್ವರಗಳು ಎರಡು ರೂಪಗಳಲ್ಲಿ ಕಾಣಿಸಿಕೊಳ್ಳಬಹುದು (ಆರೋಹಣದಲ್ಲಿ ಒಂದು ಮತ್ತು ಅವರೋಹಣದಲ್ಲಿ ಒಂದು). ಒಂದು ರಾಗದ ಆರೋಹಣ ಮತ್ತು ಅವರೋಹಣದಲ್ಲಿ ಐದು, ಆರು ಇಲ್ಲವೇ ಏಳು ಸ್ವರಗಳು ಇರಬಹುದು.

ರಾಗ ಎಂಬುದು ಶ್ರುತಿಬದ್ಧವಾದ ರಚನೆಯನ್ನು ಸೃಷ್ಟಿಸಲು ಇರುವ ನಿಯಮಗಳ ವ್ಯವಸ್ಥೆ. ಪ್ರತಿ ರಾಗವೂ ಈ ಕೆಳಗಿನ ಅಂಶಗಳನ್ನು ಹೊಂದಿರುತ್ತದೆ.

..ಇತ್ಯಾದಿ.

ಮೇಳಕರ್ತ ರಾಗಗಳ ಪಟ್ಟಿ ಇಲ್ಲಿದೆ

ತಾಳ ಎಂಬುದು ಸಂಗೀತ ರಚನೆಗಳ ಲಯವಿನ್ಯಾಸವನ್ನು ನಿರ್ದೇಶಿಸುತ್ತದೆ. ಸಂಗೀತದಲ್ಲಿ ಸಮಯದ ಮೂಲಮಾನಕ್ಕೆ ಮಾತ್ರೆ ಎಂದು ಹೆಸರು. ಸಂಗೀತಗಾರರು ತಮ್ಮ ಕೈಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ತಟ್ಟುವುದರ ಮೂಲಕ (ತಾಳ ಹಾಕುವುದು) ಈ ಲಯದ ಲೆಕ್ಕವಿಟ್ಟು ಕೊಳ್ಳುತ್ತಾರೆ. ತಾಳ ಸಮಯದ ಲೆಕ್ಕವನ್ನೂ ಇಟ್ಟುಕೊಳ್ಳಲು ಉಪಯೋಗವಾಗುತ್ತದೆ. ತಾಳಗಳನ್ನು ಏಳು ಗುಂಪುಗಳಾಗಿ ವರ್ಗೀಕರಿಸಲಾಗಿದೆ: ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ. ಕರ್ನಾಟಕ ಸಂಗೀತದಲ್ಲಿ ತಾಳವನ್ನು ತೋರಿಸಲು ಸಾಮಾನ್ಯವಾಗಿ ಉಪಯೋಗಿಸುವ ವಾದ್ಯ ಮೃದಂಗ.

ಕರ್ನಾಟಕ ಸಂಗೀತದ ಬಹುಪಾಲು ಕೃತಿಗಳು ಕನ್ನಡ ಅಥವಾ ಸಂಸ್ಕೃತ ಭಾಷೆಯಲ್ಲಿವೆ. ತೆಲುಗು ಮತ್ತು ತಮಿಳು ಸಹ  ಕೃತಿಗಳ ರಚನೆಯಲ್ಲಿ ಉಪಯೋಗಿಸಲ್ಪಟ್ಟ ಭಾಷೆಗಳು. ಕರ್ನಾಟಕ ಸಂಗೀತದ ಕೃತಿಗಳಲ್ಲಿ ಪ್ರಸಿದ್ಧವಾದ ಕೆಲವೆಂದರೆ-

ಕೀರ್ತನೆಗಳು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತವೆ:

ಕೆಲವು ಕೀರ್ತನೆಗಳಲ್ಲಿ ಅನುಪಲ್ಲವಿ ಮತ್ತು ಚರಣದ ನಡುವೆ ಚಿಟ್ಟೆಸ್ವರ ಎಂಬ ಭಾಗವಿರುತ್ತದೆ (ಉದಾ: ಸಾರಸಮುಖಿ ಸಕಲ ಭಾಗ್ಯದೆ...). ಚಿಟ್ಟೆಸ್ವರದಲ್ಲಿ ಪದಗಳಿಲ್ಲದೆ ಕೇವಲ ಸ್ವರಗಳು ಮಾತ್ರ ಇರುತ್ತವೆ. ಕೆಲವು ಬಾರಿ ಕೃತಿಯನ್ನು ರಚಿಸಿರುವ ವಾಗ್ಗೇಯಕಾರರೇ ಚಿಟ್ಟೆ ಸ್ವರವನ್ನೂ ರಚಿಸಿದ್ದರೆ, ಇನ್ನು ಕೆಲವೆಡೆ ನಂತರ ಬಂದ ಇತರ ಸಂಗೀತ ವಿದ್ವಾಂಸರು ಚಿಟ್ಟೆಸ್ವರವನ್ನು ಸೇರಿಸಿರುವುದೂ ಉಂಟು. ಇನ್ನು ಕೆಲವು ಕೀರ್ತನೆಗಳಲ್ಲಿ ಚರಣದ ನಂತರ ಮಧ್ಯಮ ಕಾಲ ಎಂಬ ಭಾಗವಿರುತ್ತದೆ. ಮಧ್ಯಮ ಕಾಲವನ್ನು ಸಾಮಾನ್ಯವಾಗಿ ದ್ವಿಗುಣ ವೇಗದಲ್ಲಿ ಹಾಡಲಾಗುತ್ತದೆ.

ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ಪೂರ್ವ ತಯಾರಿಯಿಲ್ಲದೆ ಸಂಗೀತಗಾರರ ಮನೋಧರ್ಮಕ್ಕನುಗುಣವಾಗಿ ಪರಿಚಯಿಸಲ್ಪಡುವ ಅಂಶಗಳಿರುತ್ತವೆ. ಸರಾಸರಿ ಒಂದು ಕಛೇರಿಯ ಶೇ.೮೦ ಭಾಗ ಈ ರೀತಿಯ ಮನೋಧರ್ಮ ಸಂಗೀತವನ್ನು ಒಳಗೊಂಡಿರುತ್ತದೆ. ನಾಲ್ಕು ಪ್ರಮುಖ ರೀತಿಯ ಮನೋಧರ್ಮ ಸಂಗೀತವನ್ನು ಗುರುತಿಸಲಾಗಿದೆ:

ಇದು ಸಾಮಾನ್ಯವಾಗಿ ಒಂದು ಕೃತಿಯ ಆರಂಭದಲ್ಲಿ ಹಾಡಲಾಗುತ್ತದೆ (ವಾದ್ಯಗಳ ಸಂದರ್ಭದಲ್ಲಿ ನುಡಿಸಲಾಗುತ್ತದೆ). ಇದು ಕೇಳುಗರಲ್ಲಿ ಆ ಕೃತಿಯನ್ನು ಹಾಡಲ್ಪಡುವ ರಾಗದ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುತ್ತದೆ. ನಿಧಾನವಾಗಿ ಮುಂದೆ ಸಾಗುವ ಈ ಹಂತ, ತಾಳದ ಬದ್ಧತೆಯಿಲ್ಲದೆ ರಾಗದ ವಿವಿಧ ಗುಣಗಳನ್ನು ಪ್ರದರ್ಶಿಸುತ್ತದೆ. ಆ ರಾಗದ ಜೀವ ಸ್ವರಗಳನ್ನು ಆಧಾರವಾಗಿಟ್ಟುಕೊಂಡು, ವಿವಿಧ ಹಂತಗಳಲ್ಲಿ ವಿಸ್ತರಿಸಲ್ಪಡುತ್ತದೆ. ಸಾಮಾನ್ಯವಾಗಿ ಮಂದ್ರಸ್ಥಾಯಿಯಿಂದ ಆರಂಭವಾಗುವ ಈ ರಾಗ ಪರಿಚಯದ ಪದ್ಧತಿ ಕೆಲಕಾಲ ಅಲ್ಲಿಯೇ ನೆಲೆಸಿ ಅಲ್ಲಿಂದ ಮಧ್ಯಮಸ್ಥಾಯಿಗೆ ಬಂದು ಅಲ್ಲಿ ಪ್ರಕೃತಿ ಸ್ವರವಿದ್ದರೆ ಅದರ ಆಧಾರದ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೆ ತಾರಸ್ಥಾಯಿಗೆ ಯಾವ ಅಡಚಣೆಯೂ ಇಲ್ಲದೆ ಸುಲಭವಾಗಿ ತೇಲಿದಂತೆ ಮೇಲೇರುತ್ತದೆ. ತಾರಸ್ಥಾಯಿಯಲ್ಲಿ ರಾಗದ ಎಲ್ಲಾ ಗುಣಗಳನ್ನೂ, ರೂಪಗಳನ್ನೂ ಅನಾವರಣಗೊಳಿಸಿ ನಂತರ ಮತ್ತೆ ಮಧ್ಯಮಸ್ಥಾಯಿಗೆ ಬಂದು ಅಲ್ಲಿಂದ ಜಾರಿದಂತೆ ಮಂದ್ರಕ್ಕೆ ಇಳಿಸು ಒಂದು ದೀರ್ಘ ನಿಲುಗಡೆಯೊಡನೆ ನಿಲ್ಲುತ್ತದೆ.  

ಈ ಹಂತವನ್ನು ಹೆಚ್ಚು ಅನುಭವವುಳ್ಳ ಸಂಗೀತಗಾರರು ಮಾತ್ರ ಉಪಯೋಗಿಸುತ್ತಾರೆ. ಕೃತಿಯ ಯಾವುದಾದರೂ ಒಂದೆರಡು ಸಾಲುಗಳನ್ನು ವಿಧ ವಿಧವಾಗಿ ಪುನಃ ಪುನಃ ಆವರ್ತಿಸಿ ರಾಗ ಮತ್ತು ತಾಳದ ಗುಣಗಳನ್ನು ಮತ್ತು ವಿವಿಧ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಪೂರ್ಣ ವಾಗಿ ಸಂಗೀತಗಾರನ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

ಎಲ್ಲಕ್ಕಿಂತ ಸರಳ ರೀತಿಯ ಮನೋಧರ್ಮ ಸಂಗೀತ; ಈ ಹಂತದಲ್ಲಿ ಅನೇಕ ಕಲ್ಪನಾ ಸ್ವರಗಳ ಪುಂಜಗಳನ್ನು ಹಾಡಲಾಗುತ್ತದೆ. ಈ ಪುಂಜಗಳಲ್ಲಿ ಸ್ವರಗಳು ಜೋಡಣೆಗೊಳ್ಳುವ ಕ್ರಮ ಆ ರಾಗದ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ರಾಗಕ್ಕೂ ಅದರದೇ ಆದ ಒಂದು ಓಟ ಮತ್ತು ವಿಧ ಇದೆ.  ಯಾವುದೇ ರಾಗದ ವಿಸ್ತರಣೆಯಾದರೂ ಸರಿ, ಕಲ್ಪನಾ ಸ್ವರರಚನೆಯಾದರೂ ಸರಿ ಅದು ನಿರ್ಬಂಧಿಸಿದ ಆ ಚೌಕಟ್ಟಿನ ಒಳಗೇ ಇರಬೇಕು. 

ಈ ಹಂತವನ್ನು ಮೊಟ್ಟ ಮೊದಲು ವೀಣೆಯ ಮೇಲೆ ನುಡಿಸಲಿಕ್ಕಾಗಿ ಬೆಳೆಸಲಾಯಿತು. ಅನಂತಮ್ ಎಂಬ ಪದವನ್ನು ಪುನಃ ಪುನಃ ವಿಶೇಷ ಅಲಂಕಾರಗಳೊಂದಿಗೆ ಆವರ್ತಿಸಲಾಗುತ್ತದೆ. ಅನಂತಮಾನಂತಮಾನಂತ.... ಎಂಬುದು ತಾನಮ್ತಾನಮ್ತಾನಮ್... ಎಂದು ಪದಾಂತರವಾಗಿದೆ. 

ಇದು ರಾಗ ಆಲಾಪನೆ, ತಾನ ಮತ್ತು ನೆರವಲ್ ಗಳನ್ನು ಒಳಗೊಂಡ ಸಂಯುಕ್ತ ಹಂತ. ನೆರವಲ್ ಹಂತದ ನಂತರ ಪಲ್ಲವಿಯನ್ನು ಎರಡು ಬಾರಿ ಪುನರಾವರ್ತಿಸಿ, ನಂತರ ಅರ್ಧ ವೇಗದಲ್ಲಿ ಆವರ್ತಿಸಿ, ಮತ್ತೆ ದ್ವಿಗುಣ ವೇಗದಲ್ಲಿ ಮತ್ತು ನಾಲ್ಕರಷ್ಟು ವೇಗದಲ್ಲಿ ಪುನರಾವರ್ತಿಸಲಾಗುತ್ತದೆ.

ಬಹುಪಾಲು ಕರ್ನಾಟಕ ಸಂಗೀತದ ಕಛೇರಿಗಳು ಈ ಕೆಳಗಿನ ವ್ಯವಸ್ಥೆಯನ್ನು ಅನುಸರಿಸುತ್ತವೆ. 

ಶ್ರೀ ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರು. ಮುಂದೆ ತ್ಯಾಗರಾಜರಂಥ ಸಂಗೀತಗಾರರಿಗೆ ಸ್ಫೂರ್ತಿ ತಂದ ಪುರಂದರದಾಸರು ತಾಳ ವ್ಯವಸ್ಥೆಯ ಮೂಲಭೂತ ಸಿದ್ಧಾಂತವನ್ನೂ ಪ್ರತಿಪಾದಿಸಿದರು. 

ಶ್ರೀ ತ್ಯಾಗರಾಜರು (೧೭೫೯-೧೮೪೭), ಮುತ್ತುಸ್ವಾಮಿ ದೀಕ್ಷಿತರು (೧೭೭೬-೧೮೨೭) ಮತ್ತು ಶ್ಯಾಮಾ ಶಾಸ್ತ್ರಿಗಳು(೧೭೬೨-೧೮೨೭) - ಈ ಮೂವರು ವಾಗ್ಗೇಯಕಾರರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದು ಪರಿಗಣಿಸಲಾಗುತ್ತದೆ.

ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದ ಕೆಲವರೆಂದರೆ ಎಂ.ಎಸ್.ಸುಬ್ಬುಲಕ್ಷ್ಮಿ, ಡಾ.ಬಾಲಮುರಳಿಕೃಷ್ಣ, ಡಿ.ಕೆ ಪಟ್ಟಮ್ಮಾಳ್, ಕೆ.ಜೆ.ಯೇಸುದಾಸ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮೊದಲಾದವರು. ಇನ್ನೂ ಇತ್ತೀಚಿನ ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದವರು ಅರುಣಾ ಸಾಯಿರಾಮ್,ಸುಧಾ ರಘುನಾಥನ್,ಬಾಂಬೆ ಜಯಶ್ರೀ, ಸಂಜಯ್ ಮೊದಲಾದವರು.

ವಾದ್ಯಗಳಲ್ಲಿ ಪರಿಣತಿ ಪಡೆದ ಆಧುನಿಕ ಸಂಗೀತಗಾರರಲ್ಲಿ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ (ವೀಣೆ), ಟಿ. ಚೌಡಯ್ಯ, ಲಾಲ್‍ಗುಡಿ ಜಯರಾಮನ್, ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ (ವಯೊಲಿನ್), ಕದ್ರಿ ಗೋಪಾಲನಾಥ್ (ಸ್ಯಾಕ್ಸೊಫೋನ್) ಮೊದಲಾದವರು ಪ್ರಸಿದ್ಧರು. ಇನ್ನೂ ಇತ್ತೀಚೆಗೆ ರವಿಕಿರಣ್ (ಚಿತ್ರವೀಣೆ), ಯು ಶ್ರೀನಿವಾಸ್ (ಮ್ಯಾಂಡೊಲಿನ್) ಮೊದಲಾದವರು ಹೆಸರು ಪಡೆದಿದ್ದಾರೆ.




#Article 68: ಕದ್ರಿ ಗೋಪಾಲನಾಥ್ (248 words)


ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರು.  ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ.

ಗೋಪಾಲನಾಥರು ೧೯೪೯ ಡಿಸೆಂಬರ್ ೬ ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡ ಊರಿನಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು.  ತಾಯಿ ನಾಗಮ್ಮ. ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ  ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು.  ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು  ಇಪ್ಪತ್ತು ವರ್ಷಗಳದ್ದು. ಮಂಗಳೂರಿನ ಕಲಾನಿಕೇತನದ  ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸಂಗೀತ ಕಲಿತರು. ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ. ಎನ್. ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ  ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಟಿ. ಎನ್. ಗೋಪಾಲಕೃಷ್ಣ ಅವರಲ್ಲಿ ಸ್ಯಾಕ್ಸಫೋನ್ ವಾದನ ಕಲಿರು ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು.  ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.  

ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ;  ಸುನಾದದ ಅಲೆ! ಚೇತೋಹಾರಿ ವಿನಿಕೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಕಚೇರಿಗಳಲ್ಲಷ್ಟೇ ಆಲ್ಲದೆ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ  ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ.  ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೊಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್.  ಭಾರತದಲ್ಲಿ ಮತ್ತು ಹೊರಗೆ ಅನೇಕ 'ಸಂಗೀತ-ಕಛೇರಿ'ಗಳನ್ನು ನಡೆಸುತ್ತಾ ಬಂದಿರುವ 'ಕದ್ರಿ ಗೋಪಾಲನಾಥ್' ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ. 

ಚೆನ್ನೈನ ನಾರದ ಗಾನಸಭಾದಲ್ಲಿ ೪00 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದವರು.

 

ಅಕ್ಟೋಬರ್ ೧೧ ೨೦೧೯ ರಂದು ಬೆಳಗಿನ ಜಾವ ೬೯ ನೆಯ ವಯಸ್ಸಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.




#Article 69: ಗಿರೀಶ್ ಕಾಸರವಳ್ಳಿ (229 words)


ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ  ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ  ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೪ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ  ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ. 

ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು, ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು ಸತ್ಯಜಿತ್ ರೇ( ೬ ಸ್ವರ್ಣ ಕಮಲಗಳು)(ಮೃಣಾಲ್ ಸೇನ್ ಮತ್ತು ಕಾಸರವಳ್ಳಿ) ನಂತರ ನಾಲ್ಕು ಸ್ವರ್ಣ ಕಮಲಗಳನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ.
ಇವರು ಘಟಶ್ರಾದ್ಧ ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ ೨೭.ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂದು ಹೆಸರು ಪಡೆದರು.ಘಟಶ್ರಾದ್ಧಕತೆಯನ್ನು ಆಧರಿಸಿ ಅರುಣ್ ಕೌಲ್  ನಿರ್ದೇಶನದಲ್ಲಿ ದೀಕ್ಷಾ  ಎಂಬ ಹೆಸರಿನಲ್ಲಿ  ಹಿಂದಿ ಚಿತ್ರವೊಂದು ತಯಾರಾಗಿದೆ.

ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿ ಕನ್ನಡ ಚಲನಚಿತ್ರ ನಟಿ ಹಾಗು ದೂರದರ್ಶನ ಧಾರಾವಾಹಿಗಳ ನಿರ್ದೇಶಕಿ. 'ನೀನಾಸಂ-ರಂಗಶಾಲೆ'ಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ.

ಇವರ ಕನಸೆಂಬ ಕುದುರೆಯನೇರಿ ಚಿತ್ರ ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ ಚಿತ್ರ.೨೦೧೦ರ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ.  2010ನೇ ಸಾಲಿನ ರೋಮ್ ನ ಏಷ್ಯಾಲಿಕಾ ಚಿತ್ರೋತ್ಸವ, ಶ್ರೇಷ್ಠ ಏಷ್ಯನ್ ಚಿತ್ರ NETPAC ಅವಾರ್ಡ್ ಈ ಚಿತ್ರಕ್ಕೆ ಸಂದಿದೆ.
ಇವರ ನಿರ್ದೇಶನದ ಕೂರ್ಮಾವತಾರ ಸಿನಿಮಾ ೨೦೧೨ರ ಸಾಲಿನ  ಅತ್ಯುತ್ತಮ ಪ್ರಾದೇಶಿಕ ಚಿತ್ರ  ಪ್ರಶಸ್ತಿ ಜತೆಗೆ ರಜತ ಕಮಲ ಪ್ರಶಸ್ತಿ ಪಡೆದುಕೊಂಡಿದೆ.




#Article 70: ಭೀಮಸೇನ ಜೋಷಿ (624 words)


ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ(ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು.

ಭೀಮಸೇನ ಜೋಷಿಯವರು, ೪, ಫೆಬ್ರವರಿ ,೧೯೨೨ ರಲ್ಲಿ, 'ರಥಸಪ್ತಮಿಯ ತಿಥಿ'ಯಂದು,(ಹಿಂದೆ ಧಾರವಾಡ ಜಿಲ್ಲೆ) ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು. ಭೀಮಸೇನರ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ ಗುರುರಾಜ ಜೋಶಿ ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ’ಬಸವೇಶ್ವರ ಹೈಸ್ಕೂಲ್’ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆಸಲ್ಲಿಸಿದ್ದರು. ಗುರುರಾಜರ  ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ ರಮಾಬಾಯಿಯವರಿಗೆ ೭ ಜನ ಮಕ್ಕಳು, ಹಾಗೂ ಎರಡನೆಯ ಪತ್ನಿ, ಗೋದುಬಾಯಿಯವರಿಗೆ ೯ ಜನ ಮಕ್ಕಳು. ಇಬ್ಬರನ್ನೂ 'ಗೋದುಬಾಯಿ'ಯೆಂದೇಸಂಬೋಧಿಸುತ್ತಿದ್ದರು. ಹಿರಿಯಮಗ,ಭೀಮಸೇನರ ನಂತರ, ಜನಿಸಿದವರು, ’ವನಮಾಲ’, ’ನಾರಾಯಣ’, ’ವೆಂಕಣ್ಣ’, ’ಹೇಮಕ್ಕ’, ’ಮದ್ದು’, ’ಮಾಧು’, ’ದಾಮೋದರ’, ’ಪರಿಮಳ’, ’ವಿಶಾಲ ’ಪ್ರಕಾಶ’,ಜಯತೀರ್ಥ, ಸುಶೀಲೇಂದ್ರ, ಪ್ರಾಣೇಶ, ವಾದಿರಾಜ, ಮತ್ತು ’ಜ್ಯೋತಿ.’ ’ಸುಶೀಲೆಂದ್ರ’, ಗದುಗಿನಲಿ ಅಭಿನಯ ರಂಗವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ರಂಗಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ’ಜಯತೀರ್ಥ’ ಸಹಿತ, ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡು ಅದರಲ್ಲಿ ಕೃಷಿಮಾಡಿದರು.

ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೀ ಅತಿಯಾದ ಸಂಗೀತದ ಗೀಳಿದ್ದ ಜೋಷಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ಮುಂಬಯಿಗೆ ಹೋದರು.ಮುಂಬಯಿತಲುಪಿದ ಬಾಲಕ ಜೋಷಿಯವರಲ್ಲಿ ಹಣಕಾಸು ಇರಲಿಲ್ಲ. ಪುಟ್ಟ ಭೀಮಸೇನರು ಕೂಲಿ ನಾಲಿ  ಮಾಡಿ, ಪುಟ್ಪಾತ್ ನಲ್ಲಿ ಮಲಗಿ ದಿನ ಕಳೆದಿದ್ದರು.ಹಸಿವು ನೀರಡಿಕೆ ಅವರನ್ನು ಮತ್ತೆ ತನ್ನ ಹುಟ್ಟೂರಿಗೆ ಬರುವಂತೆ ಮಾಡಿತು.ಸಂಗೀತ ಕಲಿಯಲೇಬೇಕೆಂಬ  ಆಸೆ ಮತ್ತು ಹಠ  ಅವರನ್ನು  ಎರಡನೆ ಬಾರಿಗೆ ಮನೆ ಬಿಡುವಂತೆ ಮಾಡಿ ಗ್ವಾಲಿಯರ್ ಗೆ ಬರುವಂತೆ ಮಾಡಿತು.ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ ಸವಾಯಿ ಗಂಧರ್ವರಲ್ಲಿ ಸಂಗೀತ ಸಾಧನೆಗೆ ಮರಳಿ ಬಂದರು ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ.

ಪಂ.'ಭೀಮ್ ಸೆನ್ ಜೋಶಿ'ಯವರ ತಮ್ಮನ ಮಕ್ಕಳಲ್ಲೊಬ್ಬರು, 'ಭಾರತೀಯ ಕ್ರಿಕೆಟ್ ತಂಡದ ಸದಸ್ಯ'ರಲ್ಲೊಬ್ಬರಾದ ’ಸುನಿಲ್ ಜೊಶಿ’, ಮತ್ತು ’ಅನಿರುದ್ಧ ಜೋಶಿ, ಕಿರಿಯರ ಕ್ರಿಕೆಟ್ ತಂಡದ ಆಟಗಾರರು, ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’ಜಡಭರತ’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ  ಲೇಖಕರು ಮತ್ತು ನಾಟಕಕಾರರು, ’ಮನೋಹರ ಗ್ರಂಥಮಾಲೆ’ಯೆಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಜೋಶಿಮನೆತನ ಸಂಗೀತ, ಸಾಹಿತ್ಯ, ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಅಜ್ಜ ಕೀರ್ತನಕಾರರು. ಮೊಮ್ಮಗ, 'ಭೀಮಸೇನ', ಭಜನಾಮೇಳದವರೊಡನೆ ಸೇರಿಕೊಂಡು ದಾಸರ ಪದಗಳನ್ನು ಕೇಳುತ್ತಾ, ಹಾಡುತ್ತಾ ಮೈಮರೆಯುತ್ತಿದ್ದರು. ಹೀಗೆ ಮುಂದುವರೆದು 'ದಾಸವಾಣಿ-ಶಾಸ್ತ್ರೀಯ ಸಂಗೀತವಲಯ'ದಲ್ಲಿ ಅಪ್ರತಿಮ ಸಾಧನೆಮಾಡಿದರು; ಸಂಗೀತವನ್ನೂ ಬೆಳೆಸಿದರು.

ಸನ್,೧೯೪೪ ರಲ್ಲಿ, ಪಂಡಿತ್‌ಜೀಯವರ ಪ್ರಥಮ ಪತ್ನಿ, ಸುನಂದಾರವರ ಜೊತೆ ವಿವಾಹದಿಂದ  ನಾಲ್ಕು ಮಕ್ಕಳು ಜನಿಸಿದರು. ಅವರೇ, ರಾಘವೇಂದ್ರ, ಉಷಾ, ಸುಮಂಗಲ, ಹಾಗೂ ಕಿರಿಯ ಮಗ ಆನಂದ. ಸುನಂದಾರವರ ನಿಧನಬಳಿಕ, ೨ನೇ ವಿವಾಹ,ವತ್ಸಲಾ ರವರೊಡನೆ ನಡೆದು, ಅವರಿಗೆ ಮೂರು ಮಕ್ಕಳು ಜನಿಸಿದರು; ಅವರೇ, ಜಯಂತ, ಶುಭದಾ ಹಾಗೂ ಶ್ರೀನಿವಾಸ. ತಂದೆಯ ಪರಮ ಶಿಷ್ಯನಾದ 'ಶ್ರೀನಿವಾಸ', ಈಗ ಪ್ರಬುದ್ಧ ಗಾಯಕರಾಗಿದ್ದಾರೆ.

ಗದುಗಿನ ’ಖಡಕ್ ರೊಟ್ಟಿ’ ಮತ್ತು ಝುಣಕ ಬಲುಪ್ರೀತಿ. ತಮ್ಮ ಊರಿನ ಜನತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ರಸದೌತಣನೀಡಿದ್ದರು. ೧೯೮೩ ರಲ್ಲಿ, ’ವೆಂಕಟೇಶ ಚಿತ್ರಮಂದಿರ’ದಲ್ಲಿ, ’ಹತ್ತಿಕಾಳ್ ಕೂಟ’ದಲ್ಲಿ, ೧೯೮೫-೮೬ ರಲ್ಲಿ ’ಕಾಟನ್ ಮಾರ್ಕೆಟ್’ ನಲ್ಲಿ, ೧೯೯೨ ರಲ್ಲಿ, ’ಅಭಿನಯರಂಗ ವಿದ್ಯಾದಾನ ಸಮಿತಿ ಹೈಸ್ಕೂಲ್’ ಅವರಣದಲ್ಲಿ, ’ಕರ್ನಾಟಕ ಚಿತ್ರಮಂದಿರ’ದಲ್ಲಿ. ಅದರಲ್ಲಿ ಶೇಖರವಾದ ಹಣದಲ್ಲಿ ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ಮತ್ತು ದೇವಾಲಯಕ್ಕೆ ದೇಣಿಗೆ ನೀಡಿದ್ದರು.

ಕೊಲ್ಕತ್ತಾಕ್ಕೆ ಅವರು ವರ್ಷದಲ್ಲಿ  ಸುಮಾರು ೨೦ ಬಾರಿಯಾದರೂ ಹೋಗಿಬರುತ್ತಿದ್ದರು. ಕೊಲ್ಕತ್ತಾದಲ್ಲಿನ ಹಲವಾರು ಹಿಂದೂಸ್ತಾನೀ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಭೀಮಸೇನರಿಗೆ ಅಲ್ಲಿಂದ ತಪ್ಪದೆ ಆಮಂತ್ರಣ ಬರುತ್ತಿತ್ತು. ಹಾಗೆಯೇ ಆ  ನಗರದಲ್ಲಿ ಹಲವಾರು ಸಂಗೀತ ಸಮ್ಮೇಳನಗಳು ವರ್ಷಪೂರ್ತಿ ಆಯೋಜಿತಗೊಳ್ಳುತ್ತಿದ್ದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಜೋಷಿಯವರು ಪ್ರಸಿದ್ಧರು.ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ.

ಭೀಮಸೇನರು,ಸ್ವಭಾವತಃ ಮಹಾಮೌನಿಗಳು. ಅವರಿಂದ ಯಾವ ಪ್ರಶ್ನೆಗಳಿಗೂ ಉತ್ತರಗಳನ್ನು ನಿರೀಕ್ಷಿಸುವುದು ದುಸ್ಸಾಧ್ಯವಾಗಿತ್ತು. ಆದರೆ ಅವರ ವಾಚಾಳಿತನವನ್ನು ಶ್ರೋತೃಗಳು ಅವರು ಪ್ರಸ್ತುತಪಡಿಸುತ್ತಿದ್ದ,'ಬೃಂದಾವನ ಸಾರಂಗದಲ್ಲೋ,' ಭೀಮ ಪಲಾಸಿನಲ್ಲೋ',ಅಥವಾ ಮತ್ಯಾವುದೋ ಮುದಕೊಡುವ ರಾಗಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅಸ್ಮಿತೆ ಅವರಲ್ಲಿ ನಿರಂತರವಾಗಿ ಹರಿಯುವ ತೊರೆಯಾಗಿತ್ತು. ಅವರ ಮೈಮನಗಳಲ್ಲಿ ಸಂಗೀತ ಉಕ್ಕಿಹರಿಯುತ್ತಿತ್ತು. ಯವತ್ತೂ ಅವರ ಮನೋಲೋಕದಲ್ಲೆಲ್ಲಾ ಆವರಿಸಿದ್ದು,'ಸಂಗೀತ'; 'ಕೇವಲ ಸಂಗೀತ,' ಹಾಗೂ ಅಪಾರ ಗುರುಭಕ್ತಿ,ಮಾತ್ರ.

ಭೀಮಸೇನರಬಗ್ಗೆ ಅವರ ತಂದೆ, ಗುರುರಾಜರು ಬರೆದ ಅಪರೂಪದ ಪುಸ್ತಕ, ಭೀಮಸೇನ ಜೋಷಿಯವರ ಬಾಲ್ಯದ, ಮತ್ತು ಅವರ ಸಂಗೀತದ ಹುಚ್ಚಿನ ಹತ್ತು-ಹಲವು ಮುಖಗಳನ್ನು ಪರಿಚಯಿಸುವ ಒಂದು ಸುಂದರ ಪುಸ್ತಕ. ಭೀಮಸೇನರ ಸಂಗೀತ-ಕಲೋಪಾಸನೆಗೆ ತಾವೇ ಅಡ್ಡಿಬಂದ ಸಂದರ್ಭದಲ್ಲಿ ವಿಧಿ, ಹೇಗೆ ಅವರ ನಿರ್ಧಾರಗಳನ್ನು ಬದಲಾಯಿಸಿ, ಅವರ ಮಗನನ್ನು 'ಭಾರತದ ಮಹಾನ್ ಗಾಯಕ'ನಾಗುವ ಅವಕಾಶವನ್ನು ತಂದೊಡ್ಡಿತು, ಎನ್ನುವ ವಿಚಾರ, ಅವರನ್ನು ದಿಗ್ಭ್ರಮೆಗೊಳಿಸುತ್ತದೆ.

ಭೀಮಸೇನ ಜೋಶಿಯವರ ಸಂಗೀತದ, ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ’ಕಲಾಶ್ರೀ' ರಾಗವನ್ನು ರಚಿಸಿದ  ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ 'ಸಂತವಾಣಿ ಕಾರ್ಯಕ್ರಮ' ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ.

ಪುಣೆಯಲ್ಲಿ ವಾಸಿಸುವ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ ೧೯೫೨ರಿಂದ ಪ್ರತಿ ವರ್ಷವೂ ಅಲ್ಲಿ ಸವಾಯಿ ಗಂಧರ್ವ ಸಂಗೀತ ಮಹೋತ್ಸವವನ್ನು ನಡೆಸುತ್ತಾ ಬ೦ದಿದ್ದಾರೆ.  ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಸಂಸ್ಥೆ, ೧೨, ಅಕ್ಟೋಬರ್, ೨೦೦೭ ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, ಸಂಗೀತಕಲಾನಿಧಿಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. . ಕಾರನ್ನು ವೇಗವಾಗಿ ಓಡಿಸುವ ಖಯಾಲಿ ಇವರಿಗಿತ್ತು.

ಪಂಡಿತ್‌ಜೀಯವರ ಶಿಷ್ಯತ್ವ ಪಡೆದವರಲ್ಲಿ, ಮಾಧವ ಗುಡಿ, ಶ್ರೀಕಾಂತ್ ದೇಶಪಾಂಡೆ, ವಿನಾಯಕ ತೊರವಿ' ಉಪೇಂದ್ರ ಭಟ್' 'ಶ್ರೀನಿವಾಸ ಜೋಶಿ,  ಸ೦ಜೀವ ಜಹಗೀರದಾರ,  ರಾಜೇಂದ್ರ ಕಂದಲ್ಗಾವ್ಕರ್,ಆನಂದ ಭಾಟೆ, ವಿನಾಯಕ್.ಪಿ.ಪ್ರಭು, ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು ಮುಖ್ಯರು..

ದಿನಾಂಕ ೨೪-೧-೨೦೧೧ 'ಪೂನಾದ ಆಸ್ಪತ್ರೆ'ಯಲ್ಲಿ ೮೯ರ ಇಳಿವಸ್ಸಿನ  'ಭೀಮಸೇನ್ ಜೋಶಿ' ಕೊನೆಯುಸಿರೆಳೆದರ




#Article 71: ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ (389 words)


ಹಿಂದುಸ್ತಾನಿ ಸಂಗೀತ ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು; ಉತ್ತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ  ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿದೆ. 

ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩-೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ಪ್ರಾರಂಭವಾದ ನಂತರ ಅನೇಕ ಸಂಗೀತಗಾರರು ಈ ರಾಜರ ಬಳಿ ಆಶ್ರಯ ಪಡೆದರು. ಮುಸ್ಲಿಮ್ ರಾಜರ ಆಸ್ಥಾನಗಳಲ್ಲಿ ಭಾರತೀಯ ಸಂಗೀತ ಪರ್ಷಿಯದ ಸಾಕಷ್ಟು ಸಂಗೀತ ತತ್ವಗಳನ್ನು ತನ್ನದಾಗಿಸಿಕೊಂಡಿತು. ಈ ಸಂಯುಕ್ತ ಸಂಪ್ರದಾಯ ಹಿಂದುಸ್ತಾನಿ ಸಂಗೀತವಾಗಿ ಬೆಳವಣಿಗೆ ಹೊಂದಿದೆ. 

ಮೊಘಲ್ ಕಾಲದ ಪ್ರಸಿದ್ಧ ಸಂಗೀತಗಾರ ಅಮೀರ್ ಖುಸ್ರೋ - ವೈದಿಕ ಸಂಪ್ರದಾಯದ ಸಂಗೀತ ಮತ್ತು ಪರ್ಷಿಯನ್ ಸಂಗೀತಗಳನ್ನು ಸಮಾಗಮಗೊಳಿಸಲು ಸಾಧ್ಯವಾಗುವ ಅನೇಕೆ ವಿಧಾನಗಳ ಪಿತಾಮಹ ಅಮೀರ್ ಖುಸ್ರೋ ಎಂದು ಪರಿಗಣಿಸಲಾಗಿದೆ. ಮೊಘಲ್ ಸಾಮ್ರಾಜ್ಯದ ಉನ್ನತಿಯಲ್ಲಿ ಅಕ್ಬರ್‍ನ ಆಡಳಿತದ ಕಾಲದ ಇನ್ನೊಬ್ಬ ಪ್ರಸಿದ್ಧ ಸಂಗೀತಗಾರ ತಾನ್ ಸೇನ್. 

 
ಈ ಸಂಗೀತ ಪದ್ಧತಿಯ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಗುರುರಾವ್ ದೇಶಪಾಂಡೆ, ಪಂಡಿತ್ ಭೀಮಸೇನ್ ಜೋಷಿ,ಪಂಡಿತ್ ಜಸ್ ರಾಜ್, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು,  ನಸ್ರತ್ ಫತೇ ಅಲಿ ಖಾನ್ (ಪಾಕಿಸ್ತಾನ) ಮೊದಲಾದವರನ್ನು ಹೆಸರಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದವರಲ್ಲಿ ವಿನಾಯಕ ತೊರವಿ , ರಷೀದ್ ಖಾನ್, ಸಂಜೀವ್ ಅಭ್ಯಂಕರ್ ಮೊದಲಾದವರು ಸೇರಿದ್ದಾರೆ. 

ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋದ್, ತಬಲಾ, ಸಾರಂಗಿ, ಸಂತೂರ್ ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸಂಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ), ಪಂಡಿತ್ ರವಿ ಶಂಕರ್ (ಸಿತಾರ್), ಶಿವಕುಮಾರ್ ಶರ್ಮಾ (ಸಂತೂರ್), ಹರಿಪ್ರಸಾದ್ ಚೌರಾಸಿಯಾ (ಕೊಳಲು), ಅಲ್ಲಾ ರಖಾ ಮತ್ತುಜಾಕಿರ್ ಹುಸೇನ್ (ಸಂಗೀತಗಾರ) (ತಬಲಾ), ಅಲಿ ಅಕ್ಬರ್ ಖಾನ್  ಮತ್ತು ಅಮ್ಜದ್ ಅಲಿ ಖಾನ್ (ಸರೋದ್).

ಹಿಂದುಸ್ತಾನಿ ಹಾಡುಗಾರಿಕೆಗೆ ಸಂಬಂಧಪಟ್ಟಂತೆ ಹೆಚ್ಚಾಗಿ ಬಳಕೆಯಲ್ಲಿರುವ ಪ್ರಕಾರಗಳೆಂದರೆ ಖಯಾಲ್, ಗಜಲ್ ಮತ್ತು ಠುಮ್ರಿ. ಬಳಕೆಯಲ್ಲಿರುವ ಇತರ ಪ್ರಕಾರಗಳಲ್ಲಿ ಧ್ರುಪದ್, ಧಮಾರ್ ಮತ್ತು ತರಾನಾ ಗಳು ಸೇರಿವೆ. 

ಧ್ರುಪದ್ ಕೃತಿಗಳು ಮುಖ್ಯವಾಗಿ ಭಕ್ತಿಪ್ರಧಾನವಾದ ಕೃತಿಗಳು. ಕೆಲವೊಮ್ಮೆ ವೀರರಸ ಪ್ರಧಾನವಾಗಿರಬಹುದು. ಬಹುಪಾಲು ಧ್ರುಪದ್ ಕೃತಿಗಳು ಮಧ್ಯಕಾಲೀನ ಹಿಂದಿ ಭಾಷೆಯಲ್ಲಿವೆ. ಪಕ್ಕವಾದ್ಯಗಳಾಗಿ ಸಾಮಾನ್ಯವಾಗಿ ತಂಬೂರಿ ಮತ್ತು ಪಖಾವಾಜ್ ಗಳು ಉಪಯೋಗಗೊಳ್ಳುತ್ತವೆ.

ಭಜನೆ ಹಿಂದೂ ಧರ್ಮದ ಧಾರ್ಮಿಕ ಸಂಗೀತ ಪ್ರಕಾರಗಳಲ್ಲಿ ಮುಖ್ಯವಾದುದು. ಭಜನೆಗಳ ಪ್ರಸಿದ್ಧ ಕವಿಗಳೆಂದರೆ ಕಬೀರ್, ತುಲಸಿದಾಸ್ ಮತ್ತು ಮೀರಾ ಬಾಯಿ. ಭಜನೆಗಳ ಉಗಮ ೯-೧೦ ನೆಯ ಶತಮಾನದ ಆಳ್ವಾರ್ ಭಕ್ತಿ ಪಂಥದ ಕಾಲದಲ್ಲಿ ಆಯಿತೆಂದು ಊಹಿಸಲಾಗಿದೆ.

ಗಜಲ್ ಮೂಲತಃ ಪರ್ಷಿಯಾದ ಸಂಗೀತ ಪ್ರಕಾರ. ಈಗಲೂ ಸಹ ಭಾರತದ ಹೊರಗೆ ಇರಾನ್, ಮಧ್ಯ ಏಷ್ಯಾ, ಟರ್ಕಿ ಮೊದಲಾದ ದೇಶಗಳಲ್ಲಿ ಈ ಸಂಗಿತ ಪ್ರಕಾರ ಪ್ರಚಲಿತವಾಗಿದೆ. ಭಾರತದಲ್ಲಿ ಗಜಲ್ ಗಳ ಜಾನಪದ ಹಾಗೂ ಜನಪ್ರಿಯ ರೂಪಾಂತರಗಳುಂಟು. ಭಾರತದ ಪ್ರಸಿದ್ಧ ಗಜಲ್ ಗಾಯಕರು ಜಗಜೀತ್ ಸಿಂಗ್, ಪಂಕಜ್ ಉಧಾಸ್ ಮೊದಲಾದವರು. ಪಾಕಿಸ್ತಾನದ ಮೆಹದಿ ಹಸನ್ ಮತ್ತು ಗುಲಾಂ ಅಲಿ ಈ ಶೈಲಿಯ ಪ್ರಸಿದ್ದ ಗಾಯಕರು. ಈ ಹಾಡುಗಳ ವಸ್ತು ಶೃಂಗಾರದಿಂದ ಭಕ್ತಿಯವರೆಗೆ ವ್ಯತ್ಯಾಸಗೊಳ್ಳುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದುಸ್ತಾನಿ ಸಂಗೀತದ ಅತ್ಯಂತ ಜನಪ್ರಿಯ ಪ್ರಕಾರ ಖಯಾಲ್. ಈ ಪ್ರಕಾರದಲ್ಲಿ ಮನೋಧರ್ಮ ಸಂಗೀತದ ಪ್ರಾಮುಖ್ಯತೆ ಇತರ ಪ್ರಕಾರಗಳದ್ದಕ್ಕಿಂತ ಹೆಚ್ಚು. ೧೮ ನೆಯ ಶತಮಾನದಿಂದ ಇತ್ತೀಚೆಗೆ ಜನಪ್ರಿಯವಾದ ಈ ಪ್ರಕಾರದ ಇತ್ತೀಚಿನ ಹಾಡುಗಾರರಲ್ಲಿ ಪ್ರಸಿದ್ಧರಾದವರು ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಮತ್ತಿತರರು. 

ತರಾನಾಗಳು ಕರ್ನಾಟಕ ಸಂಗೀತ ಪದ್ಧತಿಯ ತಿಲ್ಲಾನಾ ಗಳನ್ನು ಹೋಲುವಂತಹ ಕೃತಿಗಳು. ಸಂತೋಷ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕೃತಿಗಳನ್ನು ಸಾಮಾನ್ಯವಾಗಿ ಕಛೇರಿಗಳ ಕೊನೆಯಲ್ಲಿ ಹಾಡಲಾಗುತ್ತದೆ. ಲಯಬದ್ಧವಾದ ಶಬ್ದಪುಂಜಗಳು ಹೆಚ್ಚಿದ್ದು ಪದಗಳ ಬಳಕೆ ಈ ಪ್ರಕಾರದಲ್ಲಿ ಕಡಿಮೆ. 

೧೯ ನೆಯ ಶತಮಾನದಲ್ಲಿ ಬಳಕೆಗೆ ಬಂದ ಶೃಂಗಾರ ರಸ ಪ್ರಧಾನವಾದ ಕೃತಿಗಳು. ಈ ಕೃತಿಗಳ ಭಾಷೆ ಸಾಮಾನ್ಯವಾಗಿ ಹಿಂದಿಯ ಪೂರ್ವರೂಪವಾದ ಬ್ರಜಭಾಷೆ. ಈ ಪ್ರಕಾರದ ಪ್ರಸಿದ್ಧ ಹಾಡುಗಾರರಲ್ಲಿ ಕೆಲವರೆಂದರೆ ಶೋಭಾ ಗುರ್ಟು, ಬಡೆ ಗುಲಾಮ್ ಅಲಿ ಖಾನ್ ಮತ್ತು ಗಿರಿಜಾ ದೇವಿ.




#Article 72: ಜವಾಹರ‌ಲಾಲ್ ನೆಹರು (353 words)


ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 - 27 ಮೇ 1964)((ನವೆಂಬರ್ ೧೪, ೧೮೮೯ - ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ.  ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ  ಸ್ಥಾಪನೆಯಾದಂದಿನಿಂದ  1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ,  ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ  ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ    . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು (ಅಂಕಲ್ ನೆಹರು) ಎಂದು ಪ್ರಸಿದ್ಧರಾಗಿದ್ದರು. (ಇಂಗ್ಲಿಷ್ ವಿಬಾಗದ ಅನುವಾದ) 

ಉಪ್ಪಿನ ಸತ್ಯಾಗ್ರಹವು ಪ್ರಪಂಚದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇಂಡಿಯನ್, ಬ್ರಿಟಿಷ್, ಮತ್ತು ಪ್ರಪಂಚದ ಅಭಿಪ್ರಾಯಗಳು ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹಕ್ಕುಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ನೆಹರು ಅವರು ಉಪ್ಪಿನ ಸತ್ಯಾಗ್ರಹವನ್ನು ಗಾಂಧಿಯವರೊಂದಿಗಿನ ಅವರ ಸಂಬಂಧದ ಉನ್ನತ-ಚಿನ್ಹೆಯ ಗುರುತು ಎಂದು ಪರಿಗಣಿಸಿದರು, [60] ಮತ್ತು ಭಾರತೀಯರ ವರ್ತನೆಗಳನ್ನು ಬದಲಿಸುವಲ್ಲಿ ಇದು ಶಾಶ್ವತವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಭಾವಿಸಿದರು:

(ಕಾರಣ :-ಅಖಂಡ ಭಾರತವನ್ನು ಗಾಂಧಿ ಹಾಗೂ ನಹರು ಸೇರಿದ ಪ್ರಮುಖರಿಂದ ವಿಭಜನೆ ಮಾಡಿ, ಪಾಕಿಸ್ತಾನ ಮಾಡಿದ್ದಕ್ಕಾಗಿ.. ಅಲ್ಲದೇ ಗಾಂಧಿಯವರು ಬಂಗಾಳವನ್ನು, ಹೈದರಾಬಾದ್ ಪ್ರಾಂತವನ್ನು ಸಹ ಪಾಕಿಸ್ತಾನಕ್ಕೆ ವಹಿಸಲು ಮುಂದಾಗುತ್ತಿದ್ದರು.)
 ಭಾರತ ವಿಭಜನೆಯ ಸಮಯದಲ್ಲಿ ಆದ ಒಪ್ಪಂದದಂತೆ ಪಾಕಿಸ್ತಾನಕ್ಕೆ ಕೊಡಬೇಕಾದ ಹಣವನ್ನು ಭಾರತವು ಪಾವತಿಸುವಂತೆ ಗಾಂಧಿಯವರು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಲು ಜವಾಬ್ದಾರಿಯೆಂದು ಭಾವಿಸಿದ್ದನು.  ಗಾಂಧೀಜಿಯ ಹತ್ಯೆಯ ನಂತರ ನೆಹರು ರೇಡಿಯೊದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು:

ರಿಪಬ್ಲಿಕ್ ಚೀನಾವಿಶ್ವ ಸಂಸ್ತೆಯ ಭದ್ರತಾಮಿತಿಯ ವಿಟೋ ಪಡೆದ ರಾಷ್ಟ್ರವಾಗಿತ್ತು. ಅದರೆ ಅದು ಕಮ್ಯೂನಿಸ್ಟ್ ಚೀನಾಕ್ಕೆ ಸಂಪೂರ್ಣ ಭೂಭಾಗವನ್ನು ಸೋತು ಒಂದು ಸಣ್ಣ ದ್ವೀಪದಲ್ಲಿ ಯು.ಎಸ್.ಎ.ಯ (ಅಮೇರಿಕದ)ಬೆಂಬಲದೊಂದಿಗೆ ಅಸ್ಥಿತ್ವ ಹೊಂದಿತ್ತು. ಚೀನಾವನ್ನು ಅದರ ವಿಶ್ವಸಂಸ್ತೆಯ ಭದ್ರತಾ ಸಮಿತಿಯ ಖಾಯಂ ಸ್ಥಾನದಿಂದ ತಪ್ಪಿಸಿ ಅಮೇರಿಕಾ ಸಲಹೆಯಂತೆ ಭಾರತವು ಅದನ್ನು ಪಡೆಯಲು ಪ್ರಯತ್ನಿಸಿದರೆ ಚೀನಾದ ಸತತ ವಿರೋಧವನ್ನು ಕಟ್ಟಿ ಕೊಳ್ಳಬೇಕಾಗಿತ್ತು. ಮತ್ತು ಭದ್ರತಾ ಸಮಿತಿಯ ಎಲ್ಲಾ ಸದಸ್ಯರಾಷ್ಟ್ರಗಳು ಒಪ್ಪಬೇಕಾಗಿತ್ತು; ರಷ್ಯಾವು ಅದನ್ನು ತನ್ನ ವಿಟೋ ಮೂಲಕ ತಡೆಯುವ ಸಾಧ್ಯತೆ ಇತ್ತು. ಅದಲ್ಲದೆ ವಿಶ್ವಸಂಸ್ತೆಯ ಜನರಲ್ ಅಸೆಂಬ್ಲಿಯಲ್ಲಿ ಒಟ್ಟು ಸದಸ್ಯರ ಮೂರನೇ ಎರಡು ಬಹುಮತವನ್ನು ಭಾರತ ಪಡೆಯಬೇಕಿತ್ತು. ಅದು ರಷ್ಯಾ ಚೀನಾ ಬಣಗಳು ಒಪ್ಪದೆ ಅಸಾದ್ಯವಾಗಿತ್ತು, ಕಾರಣ ರಷ್ಯಾ, ಚೀನಾ ಮತ್ತು ಅದರ ಪರ ರಾಷ್ಟ್ರಗಳು ಬೆಂಬಲಿಸುತ್ತಿರಲಿಲ್ಲ. ಹಾಗಾಗಿ ನೆಹರೂ ಅಮೇರಿಕದ ಕಿಸಿಂಜರ್ ಸಲಹೆಯನ್ನು ಕಾರ್ಯಸಾದ್ಯವಲ್ಲ ಮತ್ತು ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರ ಇಡುವ ಅಮೆರಿಕಾ ತಂತ್ರ ಎಂದು ತಳ್ಳಿಹಾಕಿದರು.

ನೆಹರು ಇಂಗ್ಲಿಷ್’ನ  ಒಬ್ಬ ಸಮೃದ್ಧ ಬರಹಗಾರರಾಗಿದ್ದರು. ಅವರ ಬರಹಗಳು ಇಂದಿಗೂ ಜಗತ್‍ಪ್ರಸಿದ್ಧವಾಗಿವೆ. ಅವರ ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಮತ್ತು ಅವರ ‘ಆತ್ಮಚರಿತ್ರೆ’, ‘ಟುವರ್ಡ್ ಫ್ರೀಡಮ್’ ಮೊದಲಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮ ಮಗಳು ಇಂದಿರಾ ಗಾಂಧಿಯವರಿಗೆ 30 ಪತ್ರಗಳನ್ನು ಬರೆದಿದ್ದರು. ಇಂದಿರಾ ಹತ್ತು ವರ್ಷ ವಯಸ್ಸಿನವರಾಗಿದ್ದರು ಮತ್ತು ಮಸ್ಸೂರಿಯ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದರು. ಅವರು ಆ ಪತ್ರಗಳಲ್ಲಿ ನೈಸರ್ಗಿಕ ಇತಿಹಾಸ ಮತ್ತು ನಾಗರೀಕತೆಗಳ ಕಥೆ ಬಗ್ಗೆ ಬೋಧಿಸಿದರು. ಈ ಪತ್ರಗಳ ಸಂಗ್ರಹವನ್ನು ‘ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್ ‘ಎಂಬ ಪುಸ್ತಕವಾಗಿ ಪ್ರಕಟಿಸಲಾಯಿತು.

(ಆಧಾರ:ಲೇಖಕಿ: ಪತ್ರಕರ್ತೆ ಹಾಗೂ ಮಾಧ್ಯಮ ಶಿಕ್ಷಣ ತಜ್ಞೆ) ಆರ್‌. ಅಖಿಲೇಶ್ವರಿ 03/08/2014/ ಪ್ರಜಾವಾಣಿ)




#Article 73: ದ್ರಾವಿಡ ಭಾಷೆಗಳು (1739 words)


ದ್ರಾವಿಡ ಭಾಷೆಗಳು ಭಾರತೀಯ ಉಪಖಂಡದ ಒಂದು ಭಾಷಾ ಕುಟುಂಬವಾಗಿದೆ. ದ್ರಾವಿಡ ಭಾಷೆಗಳು ದಕ್ಷಿಣ ಭಾರತ, ಮಧ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಯಾವುದೇ ಬೇರೆಯ ಭಾಷಾಕುಟುಂಬಕ್ಕೆ ಸೇರಿದೆಯೇ ಎಂದು ತಿಳಿದುಕೊಳ್ಳಲು ಬಹಳ ಸಂಶೋಧನೆಗಳು ನಡೆದಿವೆಯಾದರೂ, ಖಚಿತವಾದ ಸಂಬಂಧವು ಈವರೆಗೂ ದೊರೆತಿಲ್ಲ. ಹೀಗಾಗಿ ಇದನ್ನು ಒಂದು ಸ್ವತಂತ್ರ ಭಾಷಾ ಕುಟುಂಬವೆಂದೇ ಪರಿಗಣಿಸಲಾಗಿದೆ.

ದ್ರಾವಿಡ ಭಾಷೆಗಳ ಮೂಲ ಭಾಷೆಯಾದ ಪೂರ್ವ ದ್ರಾವಿಡಭಾಷೆಯು ಇತಿಹಾಸ ಪೂರ್ವಕಾಲದಲ್ಲಿ, ಅನೇಕ ಸಹಸ್ರ ವರ್ಷಗಳ ಹಿಂದೆ ಹೊರಗಿನಿಂದ ಭಾರತಕ್ಕೆ ಬಂತೆಂದು ಭಾವಿಸಲಾಗಿದೆ.ದ್ರಾವಿಡಭಾಷೆಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳಿದ್ದು ಜಗತ್ತಿನ ಬೇರೆ ಯಾವುದೇ ಭಾಷಾವಂಶದ ಜೊತೆ ಸಂಬಂಧವಿರುವಂತೆ ತೋರುವುದಿಲ್ಲ.

ದ್ರಾವಿಡ ಭಾ‌ಷಾ ವರ್ಗವು ಸುಮಾರು ೮೫ ಭಾಷೆಗಳನ್ನು ಒಳಗೊಂಡಿದ್ದು  ಸುಮಾರು ೨೧೭ ದಶಲಕ್ಷ ಜನರು ಮಾತನಾಡುತ್ತಾರೆ. ಇವು ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮತ್ತು ಈಶಾನ್ಯ ಶ್ರೀಲಂಕ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಆಫ಼ಘಾನಿಸ್ತಾನ, ಇರಾನ್, ಮಲೇಷಿಯಾ, ಸಿಂಗಪುರಗಳಲ್ಲಿ ಬಳಕೆಯಲ್ಲಿವೆ.

ದ್ರಾವಿಡ ಜನಾಂಗದ ಭಾಷೆ ದ್ರಾವಿಡ ಭಾಷೆ. ಭಾರತಕ್ಕೆ ಹೊರಗಿನಿಂದ ಬಂದ ಈ ದ್ರಾವಿಡ ಜನಾಂಗ ಭಾರತವನ್ನು ಹೊಕ್ಕ ಮೇಲೆ ಅನುಕೂಲ ಸಿಕ್ಕ ಕಡೆಗಳಲ್ಲಿ ನೆಲಸಿದರು. ಅವರಲ್ಲೇ ಗುಂಪುಗಳುಂಟಾದವು. ಭೌಗೋಳಿಕ ಸಾಮಾಜಿಕ ಭಾಷಿಕ ಕಾರಣಗಳಿಂದಾಗಿ ಅವರು ಆಡುತ್ತಿದ್ದ ಭಾಷೆಯಲ್ಲಿ ಪ್ರಭೇದಗಳುಂಟಾದುವು. ಮೊದಲು ಬಂದ ದ್ರಾವಿಡ ಜನಾಂಗದವರು ಆಡುತ್ತಿದ್ದ ದ್ರಾವಿಡ ಭಾಷೆಯನ್ನು ಮೂಲ ದ್ರಾವಿಡ ಭಾಷೆಯೆಂದು ನಿರ್ದೇಶಿಸುವುದು ವಾಡಿಕೆ. ಮೂಲಜನಾಂಗ ಪಂಗಡ ಪಂಗಡಗಳಾಗಿ ವಿಂಗಡವಾದಂತೆ ಮೂಲಭಾಷೆಯೂ ಭಿನ್ನಭಿನ್ನ ಭಾಷೆ-ಉಪಭಾಷೆಗಳಾಗಿ ಒಡೆದುಕೊಂಡವು. ಮೂಲಬೇರಿನಿಂದ ಹೀಗೆ ಬೇರೆಯಾಗಿ ಕವಲಾದ ಭಾಷೆಗಳೇ ದ್ರಾವಿಡ ಭಾಷೆಗಳು. ದ್ರಾವಿಡ ಗುಂಪುಗಳಲ್ಲಿ ಸಂಪರ್ಕ ತಗ್ಗಿದಂತೆ, ತಪ್ಪಿದಂತೆ ವ್ಯತ್ಯಾಸಗಳೂ ಹೆಚ್ಚತೊಡಗಿದುವು.

ಈಗಿನ ಭಾಷಾ ಸಮೀಕ್ಷೆಯ ಲೆಕ್ಕದಂತೆ ಇಂಥ ಇಪ್ಪತ್ತೈದು ದ್ರಾವಿಡ ಭಾಷೆಗಳು ಇಂದು ಪ್ರಚಾರದಲ್ಲಿವೆ. ಇವಿಷ್ಟೇ ದ್ರಾವಿಡಭಾಷೆಗಳೆಂದು ಕಡೆಯ ಮಾತಾಗಿ ಹೇಳುವುದು ಸಾಧ್ಯವಿಲ್ಲ. ಕನ್ನಡ ನಾಡಿನ ಆಗುಂಬೆ, ಬಾಳೆಬರೆ ಬೆಟ್ಟಗಳಲ್ಲಿ ಬಾಳುತ್ತಿರುವ ಬಾಳೇರರ ಸ್ವರೂಪ ಮತ್ತು ಮಧ್ಯಭಾರತದ ಬಸ್ತಾರ ಪ್ರದೇಶದ ದೊರ್ಲಿ ಮತ್ತು ಕೊರಾಪುತ್ ಪ್ರದೇಶದ ಸವರ್ ಭಾಷೆಗಳ ಸ್ವರೂಪ ಇನ್ನೂ ನಿರ್ಧಾರವಾಗಿಲ್ಲ. ದ್ರಾವಿಡ ಭಾಷಾ ಪರಿವಾರದಲ್ಲಿ ಅವುಗಳ ಸ್ಥಾನವೇನೆಂಬುದನ್ನು ಈಗ ಹೇಳಲು ಸಾಧ್ಯವಾಗಿಲ್ಲವಾದರೂ ಅವು ದ್ರಾವಿಡ ಪಂಗಡಕ್ಕೆ ಅಳವಡುತ್ತವೆಂದು ಸ್ಥೂಲವಾಗಿ ಅವಕಾಶವಿದೆ.

ಈಗ ಖಚಿತವಾಗಿ ತಿಳಿದುಬಂದಿರುವ 25 ದ್ರಾವಿಡ ಭಾಷೆಗಳಲ್ಲಿ ಒಂದೊಂದು ಭಾಷೆಗೆ ಸೇರಿದ ಉಪಭಾಷೆಗಳೂ ಇವೆ. ಸುಮಾರು ಹದಿಮೂರುವರೆ ಕೋಟಿ ಜನ ದ್ರಾವಿಡ ಭಾಷೆಗಳನ್ನಾಡುತ್ತಾರೆ. ಪ್ರಪಂಚದಲ್ಲಿನ ಹಿರಿಯ ಭಾಷಾ ಪರಿವಾರಗಳ ಶ್ರೇಣಿಯಲ್ಲಿ ಇದಕ್ಕೆ 5ನೆಯ ಸ್ಥಾನವಿದೆ. ಈ ದ್ರಾವಿಡ ಭಾಷೆಗಳು ಒಂದು ಸ್ವತಂತ್ರ ಭಾಷಾ ಪರಿವಾರದವೆಂದು ಪರಿಗಣಿತವಾಗಿದೆ. ಭಾರತದ ಅಥವಾ ಪ್ರಪಂಚದ ಬೇರೆ ಯಾವುದೇ ಭಾಷಾ ಪರಿವಾರದೊಡನೆ ಈ ದ್ರಾವಿಡ ಭಾಷಾ ಪರಿವಾರವನ್ನು ಸಮೀಕರಿಸುವ ಪ್ರಯತ್ನಗಳನ್ನು ಭಾಷಾವಿಜ್ಞಾನಿಗಳು ಸಂಪೂರ್ಣವಾಗಿ ಮಾನ್ಯಮಾಡಿಲ್ಲ. ದ್ರಾವಿಡ ಭಾಷೆಗಳು ಪ್ರಮುಖವಾಗಿ ಒಟ್ಟಿಗೆ ಒತ್ತಾಗಿ ಕಾಣಿಸುವುದು ದಕ್ಷಿಣ ಭಾರತದಲ್ಲಿ. ಮಧ್ಯ ಮತ್ತು ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲೂ ಕೆಲವು ದ್ರಾವಿಡ ಭಾಷೆಗಳು ವ್ಯವಹಾರದಲ್ಲಿವೆ.

ಈಗ ಗೊತ್ತಾಗಿರುವ 25 ದ್ರಾವಿಡ ಭಾಷೆಗಳು ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು,ಕೊಡಗು, ಮಾಲ್ತೊ, ಬ್ರಾಹುಇ, ಕುರುಖ್, ಒಲ್ಲಾರಿ, ಗದಬ, ಪೆಂಗೂ, ಕೊಯ, ಬಡಗ, ಗೋಂಡಿ, ಕೊಂಡ, ಕುಯಿ, ಕುವಿ, ಪಾರ್ಜಿ, ಕೋಲಾಮಿ, ಕೊರಗ, ನಾಯ್ಕಿ, ತೊದ, ಕೋತ, ಮಂಡ, ಇವುಗಳಲ್ಲಿ ಮೊದಲ ನಾಲ್ಕು ಭಾಷೆಗಳು ಸಾಹಿತ್ಯಿಕ ಭಾಷೆಗಳು. ಈ ಭಾಷೆಗಳಿಗೆ ಸಾಕಷ್ಟು ಪ್ರಾಚೀನವಾದ ಲಿಖಿತ ಸಾಹಿತ್ಯವಿದೆ. ಇವುಗಳಿಗೆ ಮೊದಲಿಂದಲೂ ತಮ್ಮದೇ ಆದ ಲಿಪಿ ಕೂಡ ಇದೆ. ತುಳು ಮತ್ತು ಕೊಡಗು ಭಾಷೆಗಳು ಅಲಿಪಿ ಭಾಷೆಗಳಾದರು ಶ್ರುರೂಪಿಯಾದ ಶ್ರವ್ಯ ಸಾಹಿತ್ಯ ಉಳಿದುಬಂದಿರುವುದರಿಂದ ಇವನ್ನು ಸಾಹಿತ್ಯಿಕ ದ್ರಾವಿಡ ಭಾಷೆಗಳ ಜೊತೆಗೆ ಸೇರಿಸುವುದು ರೂಢಿ.ಇನ್ನುಳಿದ ಹತ್ತೊಂಬತ್ತು ಭಾಷೆಗಳನ್ನು ಶ್ರವಣ ಭಾಷೆಗಳೆಂದು ನಿರ್ದೇಶಿಸಿದ್ದಾರೆ. ಇವನ್ನು ಅಸಂಸ್ಕತ ಅಥವಾ ಅಲಿಪಿ ಭಾಷೆಗಳೆಂದೂ ಕರೆಯುತ್ತಾರೆ.

ಮೂಲದ್ರಾವಿಡದಿಂದ ಈ 25 ದ್ರಾವಿಡ ಭಾಷೆಗಳು ಯಾವಾಗ ಬೇರೆಯಾದುವೆಂಬುದು ಖಚಿತವಾಗಿ ತಿಳಿಯದು. ಸ್ಥೂಲವಾಗಿ ಅದನ್ನು ಗುರುತಿಸುವ ಪ್ರಯತ್ನಗಳು ನಡೆದಿವೆ, ಭಾಷಾಕಾಲಕ್ರಮವಿಜ್ಞಾನ ಪದ್ಧತಿ ಆಧಾರದಿಂದ ಬಹುಮಟ್ಟಿಗೆ ದ್ರಾವಿಡ ಭಾಷೆಗಳು ಮೂಲದ್ರಾವಿಡದಿಂದ ಕ್ರಿಸ್ತಶಕದ ಅರಂಭದ ವೇಳೆಗೆ ಬೇರ್ಪಟ್ಟಿದ್ದವು.ಮೂಲದ್ರಾವಿಡದಿಂದ ಮೊದಲು ತೆಲಗು ಬೇರೆಯಾಯಿತೆಂದು ಕೆಲವರೂ ತುಳು ಬೇರೆಯಾಯಿತೆಂದು ಕೆಲವರು ಕುಯಿ ಬೇರೆಯಾಯಿತೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ್ರಾವಿಡ ಭಾಷೆಗಳನ್ನು ಅವು ಭಾರತದ ಯಾವ ಯಾವ ಭಾಗದಲ್ಲಿ ಬಳಕೆಯಲ್ಲಿವೆ ಎಂಬ ಭೌಗೋಳಿಕ ಆಧಾರದಿಂದ ಉತ್ತರ, ಮಧ್ಯ ಮತ್ತು ದಕ್ಷಿಣದವೆಂದು ವರ್ಗೀಕರಿಸಿದ್ದಾರೆ. ಭಾಷಿಕ ಆಧಾರದಿಂದ ಮಾಡಿದ ದ್ರಾವಿಡ ಭಾಷೆಗಳ ವರ್ಗೀಕರಣವನ್ನು ಭಾಷಾವಿಜ್ಞಾನಿಗಳು ಮಾನ್ಯ ಮಾಡಿದ್ದಾರೆ. ಅದರ ಪ್ರಕಾರ ಕೂಡ ಉತ್ತರ, ಮಧ್ಯ ಮತ್ತು ದಕ್ಷಿಣ ಎಂಬ ತ್ರಿಭಜನೆಯಿದೆಯಾದರೂ ಇಲ್ಲಿ ಭೌಗೋಳಿಕ ಆಧಾರ ಗೌಣ. ಭೌಗೋಳಿಕವಾಗಿ ದಕ್ಷಿಣದಲ್ಲಿರುವ ಭಾಷೆಗಳು ಭಾಷಾಸಾಮ್ಯ ಅಥವಾ ವೈಷಮ್ಯದಿಂದಾಗಿ ಮಧ್ಯ ಅಥವಾ ಉತ್ತರದ ಶಾಖೆಗೆ ಸೇರಬಹುದು. ಉದಾಹರಣೆಗೆ ತೆಲಗು ಭೌಗೋಳಿಕವಾಗಿ ದಕ್ಷಿಣದಲ್ಲಿದ್ದರೂ ಭಾಷಿಕವಾಗಿ ಮಧ್ಯ ದ್ರಾವಿಡ ಶಾಖೆಗೆ ಅಳವಡುತ್ತದೆ. ಕೊರಗ ಭಾಷೆಯೂ ಇದೇ ರೀತಿ ದಕ್ಷಿಣದಲ್ಲಿ ಪ್ರಚಾರದಲ್ಲಿದ್ದರೂ ಉತ್ತರ ದ್ರಾವಿಡ ಶಾಖೆಗೆ ಹೊಂದಿಕೊಳ್ಳುತ್ತದೆ.

ಈ ವರ್ಗೀಕರಣ, ಬಹುಶಃ ಭಾರತವನ್ನು ಪ್ರವೇಶಿಸಿದ ಮೇಲೆ ದ್ರಾವಿಡ ಜನಾಂಗ ಪಂಗಡಗಳಾಗಿ ವಿಂಗಡವಾದ ಮೂರು ಮುಖ್ಯ ಶಾಖೆಗಳನ್ನು ತೋರಿಸುತ್ತದೆ. ಈ ಬಗೆಯಾದ ವರ್ಗೀಕರಣದ ಹಿಂದಿರುವ ಉದ್ದೇಶ ಭಾಷಿಕ ವ್ಯಾಸಂಗಕ್ಕೆ ಸಿಗುವ ಸೌಕರ್ಯ. ಭಾಷೆಗಳು ಅವುಗಳಲ್ಲಿನ ಧ್ವನಿ ಹಾಗೂ ಆಕೃತಿಕ ರಚನೆಯ ದೃಷ್ಟಿಯಿಂದ ಕೆಲವು ಸಮಾನ ಲಕ್ಷಣಗಳನ್ನು ಹಂಚಿಕೊಂಡಿರುತ್ತವೆ. ಒಂದೊಂದು ದ್ರಾವಿಡ ಭಾಷೆಗಳಲ್ಲೂ ಧ್ವನಿಗಳಲ್ಲಿ, ಶಬ್ದಗಳಲ್ಲಿ ವ್ಯತ್ಯಾಸಗಳು ಸ್ವತಂತ್ರವಾಗಿ ಪ್ರತ್ಯೇಕವಾಗಿ ನಡೆದಿವೆಯಾದರೂ 25 ದ್ರಾವಿಡ ಭಾಷೆಗಳಲ್ಲೂ ಸ್ಥೂಲವಾಗಿ ರಾಚನಿಕ ಸಮಾನತೆಯಿದೆ. ಹಾಗೆ ಇರುವುದರಿಂದಲೇ ಅವೆಲ್ಲಾ ಒಂದು ಮೂಲಕ್ಕೆ ಸೇರಿದ ಭಾಪೆಗಳೆಂದು ಹೇಳುತ್ತಿರುವುದು. ದ್ರಾವಿಡ ಭಾಷಾ ಪರಿವಾರದ ಉತ್ತರ, ಮಧ್ಯ ಮತ್ತು ದಕ್ಷಿಣ ಎಂಬ ಮೂರು ಶಾಖೆಗಳಲ್ಲಿ ಮತ್ತೆ ಕೆಲಕೆಲವು ಭಾಷೆಗಳು ತಮ್ಮ ತಮ್ಮಲ್ಲೇ ತೋರುವ ಹೆಚ್ಚಿನ ಇಲ್ಲವೆ ಕಡಿಮೆ ಹೊಂದಾಣಿಕೆ ಇಲ್ಲವೇ ವ್ಯತ್ಯಾಸದ ದೃಷ್ಟಿಯಿಂದ ಉಪಶಾಖೆಗಳಾಗಿ ವಿಂಗಡವಾಗುತ್ತವೆ.

ದ್ರಾವಿಡ ಭಾಷಾ ಶಾಸ್ತ್ರಜ್ಞರು ಮಾನ್ಯ ಮಾಡಿರುವ ದ್ರಾವಿಡ ಭಾಷೆಗಳ ವರ್ಗೀಕರಣ ಈ ರೀತಿ ಇದೆ : ಮೊದಲು ಒಂದೇ ಆಗಿದ್ದ ಮೂಲ ದ್ರಾವಿಡ ಭಾಷೆಯಿಂದ ಮೂಲ ಕುಯಿ ಭಾಷೆ ಬೇರ್ಪಟ್ಟಿತು. ಅನಂತರ ಕಾಲಾನುಕಾಲಕ್ಕೆ ಈತರ ದ್ರಾವಿಡ ಭಾಷೆಗಳು ಬೇರ್ಪಟ್ಟವು.

ಇಂದಿನ ದ್ರಾವಿಡ ಭಾಷೆಗಳ ಧ್ವನಿವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಸಾಕಷ್ಟಿವೆ. ಅವನ್ನು ಮೂಲ ದ್ರಾವಿಡ ಧ್ವನಿವ್ಯವಸ್ಥೆಯೊಡನೆ ಹೋಲಿಸಿ ನೋಡಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. ಮೂಲ ದ್ರಾವಿಡ ಧ್ವನಿ ವ್ಯವಸ್ಥೆಯಲ್ಲಿ, ಅದರಲ್ಲೂ ಸ್ವರ ವ್ಯವಸ್ಥೆಯಲ್ಲಿ ಹೆಚ್ಚು ಭಿನ್ನಾಭಿಪ್ರಾಯಗಳಿಲ್ಲ. ಮೂಲ ದ್ರಾವಿಡ ಸ್ವರ ವ್ಯವಸ್ಥೆ ಹೀಗಿದೆ :
      ದೀರ್ಘತ್ವ :-
ಈ ಸ್ವರವ್ಯವಸ್ಥೆ ಸರಳವಾಗಿತ್ತು. ಇದರಲ್ಲಿ ಸಂಧ್ಯಕ್ಷರಗಳು ಇರಲಿಲ್ಲ. ಮೂಲ ದ್ರಾವಿಡದಲ್ಲಿ ಇದ್ದ ಸ್ವರಗಳು ಹತ್ತು. ಐದು ಹ್ರಸ್ವ, ಐದು ದೀರ್ಘ, ಈ ಹತ್ತು ಸ್ವರಗಳು ಮೂಲದ್ರಾವಿಡಕ್ಕೆ ಆರೋಪಿಸಿ ವಿವರಿಸುವಾಗ 5 ಸ್ವರಗಳು ಮತ್ತು ದೀರ್ಘತ್ವವೆಂಬ ಒಂದು ಯೋಗವಾಹ-ಹೀಗೆ ಆರು ಸ್ವರಗಳೆಂದು ಹೇಳಬಹುದು. ಈ ಸ್ವರವ್ಯವಸ್ಥೆಗೆ ಅಯ್ ಅವ್ ಎಂಬ ಸ್ವರವ್ಯಂಜನ ವರ್ಣಗುಚ್ಛವನ್ನು ಪುನರ್‍ರಚಿಸಿಕೊಳ್ಳುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ. ದ್ರಾವಿಡ ಭಾಷೆಗಳ ಸ್ವರಗಳಲ್ಲಿ ಅ-ಆ ನಿಮ್ನ ಸ್ವರಗಳು, ಇ-ಈ ಪೂವೋಚ್ಚ ಸ್ವರಗಳು, ಎ-ಏ ಪೂರ್ವ ಮಧ್ಯಸ್ವರಗಳು, ಉ-ಊ ಪಶ್ಚೋಚ್ಚ ಸ್ವರಗಳು, ಒ-ಓ ಪಶ್ಚ ಮಧ್ಯ ಸ್ವರಗಳು. ಹೀಗೆ ಒಟ್ಟು ಸ್ವರಗಳು ಹತ್ತು. ಧ್ವನಿಗಳು ಬರಬಹುದಾದ ಪರಿಸರದ ದೃಷ್ಟಿಯಿಂದ ಈ ಹತ್ತೂ ಸ್ವರಗಳು ಶಬ್ದದ ಆದಿಯಲ್ಲಿ ಬರಬಹುದು. ಈ ಹತ್ತು ಸ್ವರಗಳು ಸ್ವರ ಸ್ಥಾನದಲ್ಲಿ ಬಂದಾಗಲೂ ಅವಕ್ಕೆ ಆದಿ ಇಲ್ಲವೇ ಅಂತ್ಯದ ಸ್ಥಾನದಲ್ಲಿ ಅಥವಾ ಪರವಾಗಿ ಬರುವ ವ್ಯಂಜನ ವರ್ಣಗಳನ್ನು ಆಧರಿಸಿ ಕೆಲವು ನಿರ್ಬಂಧಗಳು ಏರ್ಪಡುತ್ತವೆ. (ವ1) ಸ1 ವ2 ಸ2 .... ಈ ಮಾದರಿಯಲ್ಲಿ ಸ2 ಮೂಲದ್ರಾವಿಡ ಶಬ್ದರಚನೆಯಲ್ಲಿ ಅ ಇ ಉ ಸ್ವರಗಳು ಮಾತ್ರ ಬರಬಹುದೆಂಬ ಒಂದು ಅಭಿಪ್ರಾಯವಿದೆ. ಇದಕ್ಕೆ ಅಪವಾದಗಳನ್ನು ಗುರುತಿಸಿರುವುದರಿಂದ ಈ ಅಭಿಪ್ರಾಯದಲ್ಲಿ ಚರ್ಚೆಗೆ ಅವಕಾಶವಿದೆ. ದ್ರಾವಿಡ ಭಾಷೆಗಳ ಶಬ್ದಗಳಲ್ಲಿ ಎರಡು ಸ್ವರಗಳು ಅಕ್ಕಪಕ್ಕದಲ್ಲಿ ಬರುವುದಿಲ್ಲವೆಂಬುದನ್ನು ಗಮನಿಸಬಹುದು.

ಇಂದಿನ ದ್ರಾವಿಡ ಭಾಷೆಗಳಲ್ಲಿ ಪರಿಸರಬದ್ಧವಾಗಿ ಈ ಸ್ವರಗಳು ವ್ಯತ್ಯಾಸಗಳನ್ನು ಪಡೆದಿವೆ. ಕನ್ನಡ ಪಾರ್ಜಿ ತೊದ ಬ್ರಾಹುಇ ಮೊದಲಾದ ಭಾಷೆಗಳಲ್ಲಿ ಇಂಥ ವ್ಯತ್ಯಾಸಗಳನ್ನು ಕಾಣಬಹುದು. ಆದ್ಯಕ್ಷರದಲ್ಲಿ ದೀರ್ಘಸ್ವರವಿದ್ದು ಪರವಾಗಿ ಸ್ವರಾದಿಯಾದ ಪ್ರಕೃತಿಸಾಧಕ ಪ್ರತ್ಯಯ ಬಂದರೆ ಆದಿಸ್ವರ (ವ) ಸ ಹ್ರಸ್ವವಾಗುತ್ತದೆ. ಪರಿಣಾಮವಾಗಿ ದೀರ್ಘಸ್ವರಯುಕ್ತಧಾತುಗಳಿಗೆ ಎರಡೆರಡು ರೂಪಗಳು ಸಿದ್ಧಿಸುವುದುಂಟು. ಈ ದೀರ್ಘಸ್ವರಗಳು ಕನ್ನಡ ಮೊದಲಾದ ಕೆಲವು ಭಾಷೆಗಳಲ್ಲಿ ವ್ಯಂಜನಗುಚ್ಚಗಳೆದುರೂ ಹ್ರಸ್ವವಾಗುವುದುಂಟು, ಇಲ್ಲವೆ ಪರವಾದ ವ್ಯಂಜನಗಳಲ್ಲೊಂದು ಲೋಪವಾಗುವುದೂ ಉಂಟು. ದ್ರಾವಿಡ ಭಾಷೆಗಳಲ್ಲಿ ಶಬ್ದದ ನಡುವಣ ಸ್ವರ ದುರ್ಬಲವಾದುದು. ಅದರಿಂದ ಸ್ವರವ್ಯತ್ಯಾಸಗಳು ಸಹಜ. ಮೂಲ ದ್ರಾವಿಡ ವ್ಯಂಜನ ವ್ಯವಸ್ಥೆ :

     
ಈ ಧ್ವನಿಮಾಗಳ ಜೊತೆಗೆ ಆಯ್ದಂ ಎಂಬುದು ಮೂಲದ್ರಾವಿಡ ಭಾಷೆಯಲ್ಲಿದ್ದಿರಬಹುದೆಂಬ ಅಭಿಪ್ರಾಯವೂ ಇದೆ. ಇದನ್ನು ಒಪ್ಪಿಕೊಂಡರೆ ಕೆಲವು ಶಬ್ದಯುಗ್ಮಗಳಲ್ಲಿ ವ್ಯಕ್ತವಾಗುವ ಹ್ರಸ್ವದೀರ್ಘ ಸ್ವರಪಲ್ಲಟದ ವಿವರಣೆ ಸುಲಭವಾಗುತ್ತದೆ. ಮುಖ್ಯವಾಗಿ ಭಾಷಾಸ್ವೀಕರಣ ಕಾರಣದಿಂದ ಮೂಲದ್ರಾವಿಡ ಈ ವ್ಯಂಜನ ವ್ಯವಸ್ಥೆ ಸ್ವರವ್ಯವಸ್ಥೆಗಿಂತ ಅಧಿಕವಾಗಿ ಆಧುನಿಕ ದ್ರಾವಿಡ ಭಾಷೆಗಳಲ್ಲಿ ವ್ಯತ್ಯಾಸಗಳನ್ನು ಪಡೆದಿದೆ. ಇವುಗಳಲ್ಲಿ ಬಹು ಮುಖ್ಯವಾದ ಕೆಲವು ಮಾರ್ಪಾಟುಗಳನ್ನು ಮಾತ್ರ ಇಲ್ಲಿ ನಿರೂಪಿಸಿದೆ. ಕನ್ನಡ ತೆಲಗು ಮೊದಲಾದ ಕೆಲವು ದ್ರಾವಿಡ ಭಾಷೆಗಳು ಮೂಲ ದ್ರಾವಿಡದಲ್ಲಿ ಇದ್ದುದಕ್ಕಿಂತ ಹೆಚ್ಚು ವ್ಯಂಜನಗಳನ್ನು ಅಳವಡಿಸಿಕೊಂಡಿವೆ-ಮಹಾಪ್ರಾಣ ವರ್ಣಗಳು, ಊಷ್ಮ ವರ್ಣಗಳು ಇತ್ಯಾದಿ. ಈ ಹೆಚ್ಚಿನ ವರ್ಣಗಳನ್ನು ಸಂಸ್ಕøತ, ಪ್ರಾಕೃತ ಮೊದಲಾದ ಆರ್ಯ ಭಾಷೆಗಳಿಂದ ಸ್ವೀಕರಿಸಿರುವ ಸಾಧ್ಯತೆಯಿದೆ. ಮೂಲದ್ರಾವಿಡದಲ್ಲಿ ಸ್ವರ್ಶ ವ್ಯಂಜನ ವರ್ಣಗಳು ಘೋಷಾಘೋಷ ಭೇದವನ್ನು ಪಡೆದಿದ್ದುವಾದರೂ ಆ ಭೇದ ಸನ್ನಿವೇಶ ಬದ್ಧವಾಗಿತ್ತು. ಘೋಷ-ಅಘೋಷಗಳು ಪ್ರತ್ಯೇಕ ಸ್ವತಂತ್ರ ಧ್ವನಿಮಾಗಳಾಗಿರಲಿಲ್ಲ. ಒಂದೇ ಧ್ವನಿಯ ಉಪಧ್ವನಿಗಳಾಗಿದ್ದವು. ಶಬ್ದಾದಿಯಲ್ಲಿ ಅಘೋಷ ಧ್ವನಿಗಳು ಮಾತ್ರ ಬರುತ್ತಿದ್ದುವು. ಶಬ್ದದ ನಡುವೆ ಬಿಡಿಯಾದ ಘೋಷಧ್ವನಿಗಳು ದ್ವಿತ್ವ ಸ್ಪರ್ಶಗಳೂ ಬರುತ್ತಿದ್ದುವು. ಇದನ್ನು ಕ್-, ಗ್-, -ಕ್- ಎಂಬಂತೆ ತೋರಿಸಬಹುದು. ಇವನ್ನು ಬರೆಯಲು ಒಂದೊಂದೇ ಲಿಪಿಸಂಕೇತ ಸಾಕಿತ್ತು. ಸ್ವರ್ಶ ವರ್ಣಗಳ ಸಂಖ್ಯೆ ಕ್ ಚ್ ಟ್ ತ್ ಪ್ ಎಂದು ಐದು ಮಾತ್ರ. ಇಂದಿಗೂ ತಮಿಳು ಮುಂತಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಈ ವ್ಯತ್ಯಾಸಯಿದೆ. ಇದರ ಜೊತೆಗೆ ಮೂಲ ದ್ರಾವಿಡದಲ್ಲಿ ವತ್ಸ್ರ್ಯ ಸ್ಪರ್ಶಧ್ವನಿಯೊಂದು | ¿õï| ಇತ್ತು. ಮತ್ತು ಉಳಿದ ಸ್ವರ್ಶ ಧ್ವನಿಗಳಿರುವಂತೆ ಇದಕ್ಕೂ ಘೋಷ-ಅಘೋಷ ಪ್ರಭೇದಗಳನ್ನು ಕಲ್ಪಿಸಬಹುದು. ಕನ್ನಡವೇ ಮೊದಲಾದ ಹಲವು ಆಧುನಿಕ ದ್ರಾವಿಡ ಭಾಷೆಗಳಲ್ಲಿ ಈ ಆರು ಸ್ವರ್ಶ ವರ್ಣಗಳು ಕೆಲವು ವ್ಯತ್ಯಾಸಗಳನ್ನು ಪಡೆದಿವೆ. ಕನ್ನಡ, ತೆಲಗು, ತುಳು ಮೊದಲಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಘೋಷ-ಅಘೋಷ ವ್ಯತ್ಯಾಸ ಅರ್ಥಾಭಿವ್ಯಕ್ತಿಯಲ್ಲಿ ಉಪಯುಕ್ತ ವ್ಯತ್ಯಾಸವಾಗಿ ಪರಿಣಮಿಸಿದುದರಿಂದ ಕ್, ಗ್, ಚ್, ಜ್, ತ್, ದ್, ಪ್, ಬ್, ಎಂಬ ಸ್ವತಂತ್ರ ಧ್ವನಿಮಾಗಳು ಏರ್ಪಟ್ಟಿವೆ. ಇವುಗಳಿಗೆ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಪ್ರತ್ಯೇಕ ಲಿಪಿಗಳಿವೆ. ಇಂಥದೊಂದು ಧ್ವನಿ ಮಾರ್ಪಾಟಿಗೂ ದ್ರಾವಿಡೇತರ ಆರ್ಯ ಭಾಷೆಗಳ ಪ್ರಭಾವ ಕಾರಣವಿರಬಹುದು.

ಕೆಲವು ದ್ರಾವಿಡ ಭಾಷೆಗಳಲ್ಲಿ ಚ್-ಸ್ಪರ್ಶವರ್ಣ ಸ್-ಧ್ವನಿಯಾಗಿ ಪರಿವರ್ತಿತವಾಗಿದೆ. ಚ್ ( ಸ್- ಧ್ವನಿವ್ಯತ್ಯಾಸ ಯಾವ ಪರಿಸರದಲ್ಲಿ ನಡೆದಿದೆಯೆಂಬುದರ ನಿಯಮ ಇನ್ನೂ ಸ್ಪಷ್ಟವಾಗಿಲ್ಲ. ಕನ್ನಡ ಮೊದಲಾದ ಕೆಲವು ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಶಬ್ದಾದಿಯ ಸ್ಪರ್ಶವರ್ಣ ಚ್-ಹಲವು ಶಬ್ದಗಳಲ್ಲಿ ಲೋಪವಾಗಿದೆ ; ಇಲ್ಲಿಯೂ ಯಾವ ಪರಿಸರದಲ್ಲಿ ಚ್-ಧ್ವನಿಲೋಪ ಘಟಿಸಿದೆಯೆಂಬ ನಿಯಮವೂ ಸರಿಯಾಗಿ ತಿಳಿಯದು.

ಕನ್ನಡ ತೆಲಗು ಮೊದಲಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಮಾತ್ರ ಶಬ್ದಾದಿಯ ವ್-ಧ್ವನಿ ಹಲವು ಶಬ್ದಗಳಲ್ಲಿ ಉಭಯೋಷ್ಠ್ಯ ಘೋಷ ಸ್ವರ್ಶ ವರ್ಣ ಬ್-ಆಗಿ ಪರಿವರ್ತಿತವಾಗಿದೆ. ಮೂಲ ದ್ರಾವಿಡದಲ್ಲಿ ಮ್ ನ್ ಣ್ ಞï ಎಂಬ ನಾಲ್ಕು ಅನುನಾಸಿಕ ವರ್ಣಗಳಿದ್ದುವು. ಕೆಲವು ಪ್ರಕೃತಿ ಸಾಧಕ ಪ್ರತ್ಯಯಗಳು ಪರವಾಗಿ ಬಂದಾಗ ಅನುನಾಸಿಕ ಹಾಗೂ ಸಮಾನ ಸ್ಥಾನೀಯ ಸ್ಪರ್ಶವರ್ಣಗಳಿರುವ ವ್ಯಂಜನ ಗುಚ್ಛಗಳು ಸ್ಪರ್ಶಗಳಿಗೆ ಸಮವಾದ ದ್ವಿವ್ಯಂಜನಗಳನ್ನು ಪಡೆಯುತ್ತದೆ. ಮೂಲ ದ್ರಾವಿಡಕ್ಕೆ ಕಲ್ಪಿತವಾಗಿರುವ ಅಘೋಷ ಓಷ್ಕ್ಯ ಸ್ವರ್ಶ ಪ್-ಶಿಷ್ಯ ಕನ್ನಡದಲ್ಲಿ ಹ್-ಆಗಿದೆ. ಮತ್ತು ಶಿಷ್ಟೇತರ ಕನ್ನಡದಲ್ಲಿ ಅದೂ ಲೋಪವಾಗಿದೆ : ಪ್( ಹ್--(. ಮೂಲ ದ್ರಾವಿಡದಲ್ಲಿದ್ದ ಧ್ವನಿ ಕನ್ನಡದಲ್ಲಿ ಪರಿಸರಬದ್ಧವಾಗಿ ಳ್ ಇಲ್ಲವೇ ರ್ ಆಗೂ ¿õï ಧ್ವನಿ ರ್ ಆಗೂ ಪರಿವರ್ತನೆ ಪಡೆದಿದೆ. ಕನ್ನಡೇತರ ಉಳಿದ ದ್ರಾವಿಡ ಭಾಷೆಗಳಲ್ಲೂ ಹಲವು ಬಗೆಯ ಧ್ವನಿವ್ಯತ್ಯಾಸಗಳು ಮೂಲ ದ್ರಾವಿಡದಿಂದ ಪ್ರತ್ಯೇಕವಾದ ಮೇಲೆ ಸಂಭವಿಸಿವೆ. ಪ್ರತಿವೇಷ್ಟಿತ ಧ್ವನಿಗಳು ದ್ರಾವಿಡ ಭಾಷೆಗಳಲ್ಲಿ ಶಬ್ದದ ಪ್ರಾರಂಭದಲ್ಲಿ ಬರುವುದಿಲ್ಲವೆಂಬುದು ಮತ್ತೊಂದು ದ್ರಾವಿಡ ಧ್ವನಿನಿಯಮ.

ಆಧುನಿಕ ದ್ರಾವಿಡ ಭಾಷೆಗಳಲ್ಲಿ ಏಕಾಕ್ಷರಿಗಳೂ ಬಹ್ವಕ್ಷರಿಗಳೂ ಆದ ಕ್ರಿಯಾ ಧಾತುಗಳಿವೆ. ಆದರೆ ಮೂಲ ದ್ರಾವಿಡ ಭಾಷೆಯ ಧಾತುಗಳು ಏಕಾಕ್ಷರಿಗಳಾಗಿದ್ದುವು. ಇಂದಿನ ದ್ವ್ಯಕ್ಷರಿ ಹಾಗೂ ತ್ರ್ಯಕ್ಷರಿ ಕ್ರಿಯಾಧಾತುಗಳಲ್ಲಿ ಕೆಲವು ಪ್ರಕೃತಿ ಸಾಧಕ ಪ್ರತ್ಯಯಗಳಿಂದ ಘಟಕವಾಗಿರುವುದನ್ನು ಚಾರಿತ್ರಿಕ ಹಾಗೂ ವರ್ಣನಾತ್ಮಕ ಅಧ್ಯಯನದಿಂದ ಶ್ರುತಪಡಿಸಬಹುದು. ವ್ಯಂಜನಾಂತ ಶಬ್ದಗಳು ಸ್ವರಾಂತಗಳಾಗಿ ಮಾರ್ಪಾಟು ಪಡೆದಾಗ ಕೆಲವು ಏಕಾಕ್ಷರಿ ಕ್ರಿಯಾಧಾತುಗಳು ದ್ವ್ಯಕ್ಷರಿಗಳಾಗಿವೆ.

ದ್ರಾವಿಡ ಭಾಷೆಗಳು ಅಂಟು ಭಾಷೆಗಳು. ಇಲ್ಲಿ ಪ್ರಕೃತಿ ಪ್ರತ್ಯಯಗಳು ಅಂಟಿಕೊಂಡಿದ್ದರೂ ಸುಲಭವಾಗಿ ಗುರುತಿಸಿ ಬಿಡಿಸಿ ತೋರಿಸಬಹುದು. ಮೂಲ ದ್ರಾವಿಡದಲ್ಲಿ ಸಕರ್ಮಕ ಅಕರ್ಮಕ ಪ್ರಕೃತಿಗಳಿದ್ದವು. ಆಧುನಿಕ ದ್ರಾವಿಡ ಭಾಷೆಗಳಲ್ಲೂ ಇದು ಬಹುಮಟ್ಟಿಗೆ ಉಳಿದುಬಂದಿದೆ. ಮೂಲದ್ರಾವಿಡ ಕ್ರಿಯಾ ಪದಗಳಿಗೆ ಎರಡಕ್ಕಿಂತ ಹೆಚ್ಚು ಕಾಲವಾಚಕ ಪ್ರತ್ಯಯಗಳಿವೆ. ಉತ್ತಮ, ಮಧ್ಯಮ, ಮತ್ತು ಪ್ರಥಮ ಎಂಬ ಮೂರು ಪುರುಷಗಳಿವೆ. ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳಿವೆ. ಉತ್ತಮ ಪುರುಷ ಬಹುವಚನದಲ್ಲಿ ವ್ಯಾವರ್ತಕ ಮತ್ತು ಅಭಿವ್ಯಾಪಕ ರೂಪಗಳು ಹೆಚ್ಚಿನ ದ್ರಾವಿಡ ಭಾಷೆಗಳಲ್ಲಿವೆ. ಪ್ರಥಮ ಪುರುಷದಲ್ಲಿ ಮಾನವರು ಹಾಗೂ ಇತರರು ಎಂಬಂತೆಯೂ ಲಿಂಗಭೇದ ಮೂಲ ದ್ರಾವಿಡದಲ್ಲಿದ್ದಿರಬೇಕೆಂಬ ಅಭಿಪ್ರಾಯವಿದೆ. ಕನ್ನಡದಂಥ ಕೆಲವು ದ್ರಾವಿಡ ಭಾಷೆಗಳಲ್ಲಿ ಈ ವ್ಯವಸ್ಥೆ ಕಂಡುಬರುತ್ತದೆ. ಆದರೆ ಈ ಹೇಳಿಕೆಗೆ ಪ್ರತಿಕೂಲವಾದ ಆಧಾರಗಳು ಕುಯಿ, ಗೋಂಡಿ ಮುಂತಾದ ಭಾಷೆಗಳಲ್ಲಿವೆ. ಕುರುಖ್ ನಂಥ ಕೆಲವು ಭಾಷೆಗಳಲ್ಲಿ ಮಾತ್ರ ಮಧ್ಯಮ ಮತ್ತು ಉತ್ತಮ ಪುರುಷಗಳಲ್ಲೂ ಕರ್ತೃವಿನ ಲಿಂಗವಿಕ್ಷೆಯಿದೆ. ಮೂಲದ್ರಾವಿಡದಲ್ಲಿ ಎರಡೇ ಲಿಂಗಗಳಿದ್ದಿರಬಹುದು. ತೊದ, ಬ್ರಾಹೂಇ ಭಾಷೆಗಳಲ್ಲಿ ಲಿಂಗವಿಕ್ಷೆಯೇ ಇಲ್ಲ. ದ್ರಾವಿಡ ಭಾಷೆಗಳಲ್ಲಿ ಶಬ್ದರೂಪವನ್ನು ಅನುಸರಿಸಿ ಲಿಂಗಭೇಧವಿಲ್ಲ. ಆದರೆ ಸಂಸ್ಕøತದಲ್ಲಿದೆ. ಇಲ್ಲಿ ಲಿಂಗ ಅರ್ಥಾನುಸಾರಿ.

ಮೂಲದ್ರಾವಿಡದಲ್ಲಿ ಬಾಂಧವ್ಯ ವಾಚಕ ಶಬ್ದಗಳು ಆ ಸಂಬಂಧ ಯಾರೊಂದಿಗೆ ಎಂಬುದನ್ನೂ ಸೂಚಿಸುತ್ತಿದ್ದವು. ಇಂದು ಕುರುಖ್, ಕೋಲಾಮಿಯಂಥ ಕೆಲವೇ ದ್ರಾವಿಡ ಭಾಷೆಗಳಲ್ಲಿ ಈ ವಿಧಾನವಿದೆ. ಸರ್ವನಾಮ ರೂಪಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ವಿಭಕ್ತಿಗಳ ಮತ್ತು ಇತರ ಪ್ರತ್ಯಯಗಳಲ್ಲಿ ಕೆಲವು ವ್ಯತ್ಯಾಸಗಳಾಗಿವೆ. ಕೆಲವು ಮುಕ್ತ ಆಕೃತಿಮಾಗಳು ಬದ್ಧ ಆಕೃತಿಮಾಗಳಾಗಿವೆ. ದ್ರಾವಿಡ ಭಾಷೆಗಳಲ್ಲಿ ಕರ್ಮಣಿ ಪ್ರಯೋಗಕ್ಕೆ ಅವಕಾಶ ಕಡಿಮೆ. ಒಂದರಿಂದ ಹತ್ತು ಮತ್ತು ನೂರು ಎಂಬ ಸಂಖ್ಯಾವಾಚಕಗಳಿವೆ. ಈ ರೂಪಗಳಿಂದ 999 ರ ವರೆಗೂ ಸಂಖ್ಯೆಯನ್ನು ಹೇಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾವಿರ, ಲಕ್ಷ, ಕೋಟಿ ಮೊದಲಾದ ಸಂಖ್ಯಾವಾಚಕಗಳು ಸಂಸ್ಕøತದಿಂದ ಬಂದ ಶಬ್ದಗಳು. ಕೆಲವು ದ್ರಾವಿಡ ಭಾಷೆಗಳಲ್ಲಿ ಹತ್ತಕ್ಕಿಂತ ಕಡಿಮೆ ಸಂಖ್ಯೆ ಹೇಳುವ ಶಬ್ದಗಳಲ್ಲಿ ಕೆಲವು ಲೋಪವಾಗಿದೆ. ಗೋಂಡಿ, ಕುಯಿ, ಪಾರ್ಜಿಯಂಥ ಕೆಲವು ಭಾಷೆಗಳಷ್ಟೇ ಐದು ಮತ್ತು ಆರು ಎಂಬ ಸಂಖ್ಯಾವಾಚಕಗಳಲ್ಲಿ ಅವುಗಳ ಮೂಲರೂಪಗಳಲ್ಲಿದ್ದ ಶಬ್ದಾದಿಯ ಚ್-ಧ್ವನಿಯನ್ನುಳಿಸಿಕೊಂಡಿದೆ.

ಮನೋಭಾವವಿರಲಿಲ್ಲವಲ್ಲದೆ ಅವು ಮಿಶ್ರಿತವಾದ ಗುಂಪುಗಳೇ ಆಗಿದ್ದವು. ಆದ್ದರಿಂದ ಭಾರತದ ಇತಿಹಾಸದ ಪ್ರಾರಂಭದಿಂದಲೂ ಇಂಥ ಜನಾಂಗದ ಮಿಶ್ರಣವನ್ನು ಕಾಣಬಹುದಾಗಿದೆ. ಭಾಷೆಯೇ, ಜನಾಂಗದ ಜೀವಾಳವಾದುದರಿಂದ, ಆದರಿಂದಲೇ ಒಂದು ಜನಾಂಗದ ಸಂಸ್ಕøತಿಯನ್ನು ಅಳೆಯಬೇಕೇ ಹೊರತು, ಬುಡಕಟ್ಟಿನ ಆಧಾರದ ಮೇಲಲ್ಲ.

ಮೇಲೆ ಪಟ್ಟಿ ಮಾಡಿದ ಆರು ಗುಂಪುಗಳು ಒಂದು ಜನಾಂಗವಾಯಿತಲ್ಲದೆ ಅದು ನಾಲ್ಕು ಭಾಷೆಗಳನ್ನು ಹೊಂದಿತ್ತು. ಅದರಲ್ಲಿ ದ್ರಾವಿಡ ಮತ್ತು ಇಂಡೊ -ಯೂರೋಪಿಯನ್ (ಆರ್ಯ) ಭಾಷೆಗಳು ಸೇರಿವೆ. ದ್ರಾವಿಡ ಭಾಷೆಗಳು ವಿಶೇಷವಾಗಿ ದಕ್ಷಿಣದಲ್ಲಿ ಕೇಂದ್ರೀಕೃತವಾದರೂ ಉತ್ತರ ಭಾರತದ ಛೋಟನಾಗಪುರದಲ್ಲಿ, ದ್ರಾವಿಡ ಭಾಷೆಯನ್ನು ಬಳಸುವ ಓರಾಯನರಲ್ಲಿ ಮತ್ತು ಕೋಲ್ ಭಾಷೆಯನ್ನು ಬಳಸುವ ಮುಂಡರಲ್ಲಿ ಬಲೂಚಿಸ್ಥಾನದ ಬ್ರಾಹುಇ ಭಾಷೆಯಲ್ಲಿ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದಾಗಿದೆ. ಮುಖ್ಯವಾಗಿ ಭಾರತಕ್ಕೆ ಬಂದು ನೆಲಸಿದ ವಿವಿಧ ಜನಾಂಗಗಳು ತಮ್ಮ ಸಂಸ್ಕøತಿಯನ್ನು ಬೆಳಸಿ, ಅವೆಲ್ಲವನ್ನೂ ಒಂದುಗೂಡಿಸಿ, ಭಾರತೀಯ ಸಂಸ್ಕøತಿಯನ್ನು ರೂಪಿಸಿಕೊಂಡಿದ್ದು ಇತಿಹಾಸದ ಮುಖ್ಯ ಘಟನೆಯಾಗಿದೆ. ಈ ಸಂಸ್ಕøತಿಯ ಸಾಗರದಲ್ಲಿ ಗುಂಪುಗಳ ಕೊಡುಗೆಯನ್ನು ಬೇರ್ಪಡಿಸುವುದು ಸುಲಭದ ಕೆಲಸವಾಗದಿದ್ದರೂ ಅವುಗಳ ಮುಖ್ಯ ಲಕ್ಷಣಗಳು ತೋರಿಸುವುದು ಕಷ್ಟದ ಕೆಲಸವಾಗದು.

ದ್ರಾವಿಡರು ನಾಗರಿಕರಾಗಿದ್ದು ಭಾರತದಲ್ಲಿ ಪಟ್ಟಣಗಳನ್ನು ಕಟ್ಟಿ ನಗರ ನಾಗರಿಕತೆಯನ್ನು ರೂಪಿಸಿದರು. ವ್ಯಾಪಾರ ಮತ್ತು ವಾಣಜ್ಯ ಸಂಬಂಧಗಳನ್ನು ಬೆಳೆಸಿದರು. ಭಾರತದ ಎಲ್ಲ ಕಡೆಗಳಲ್ಲೂ ನೆಲೆಸಿದರು. ಬಲೂಚಿಸ್ತಾನದಲ್ಲಿ ಬಳಕೆಯಲ್ಲಿರುವ ಬ್ರಾಹುಇ ಭಾಷೆ ದ್ರಾವಿಡ ಭಾಷೆಯ ಛಾಯೆಯನ್ನು ಹೊಂದಿರುವುದರಿಂದ, ದ್ರಾವಿಡರು ಸಿಂಧ್, ರಜಪುಟಾಣ ಮತ್ತು ಮಾಳವದ ಮೂಲಕ ಈಗಿನ ಮಹಾರಾಷ್ಟ್ರ ಪ್ರದೇಶ ಮತ್ತು ದಕ್ಷಿಣ ಭಾರತದ ಇತರ ಪ್ರದೇಶಗಳಿಗು ಪ್ರಸರಿಸಿದರೆಂದು ಹೇಳಬಹುದಾಗಿದೆ. ಅಲ್ಲದೆ ಸುಪ್ರಸಿದ್ಧವಾದ ಸಿಂಧೂಕಣಿವೆ ನಾಗರಿಕತೆ ಪಟ್ಟಣದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿನ ಭಾಷೆ ದ್ರಾವಿಡ ಭಾಷೆಯನ್ನು ಹೋಲುವುದರಿಂದ ಸಿಂಧೂಕಣಿವೆಯ ಜನ ದ್ರಾವಿಡ ಗುಂಪಿಗೆ ಸೇರಿದವರೆಂದು ಹೇಳವುದು ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹೀರಾಸ್ ಮತ್ತು ಎಸ್.ಆರ್.ರಾವ್ ಅವರು ಇದೇ ತೀರ್ಮಾನಕ್ಕೆ ಬಂದಿದ್ದಾರೆ.

ಆರ್ಯರು ಭಾರತಕ್ಕೆ ಬಂದಾಗ ಇಲ್ಲಿ ಎರಡು ಗುಂಪುಗಳನ್ನು ಕಂಡರು. ಅವರನ್ನು ದಾಸ ಅಥವಾ ದಸ್ಯು ಮತ್ತು ನಿಷಾದರೆಂದು ಕರೆದರು. ಶತ್ರುಗಳಾದ ಅವರು ಆರ್ಯರಿಗೆ ದಾಸರೆನಿಸಿಕೊಂಡರು, ಕಳ್ಳರೆನಿಸಿಕೊಂಡರು. ಆದರೆ ದಾಸ ಅಥವಾ ದಸ್ಯು ಎಂಬ ಪದಗಳು ಪ್ರಾಚೀನ ಇರಾನಿನಲ್ಲೇ ಬಳಕೆಯಲ್ಲಿದ್ದುವು. ಅದು ಗುಂಪಿನ ನಾಮವಾಗಿತ್ತೇ ಹೊರತು ಸೇವಕನೆಂಬ ಅರ್ಥದಲ್ಲಿರಲಿಲ್ಲ. ಅಲ್ಲದೆ ಭಾರತದ ತತ್ತ್ವಶಾಸ್ತ್ರ, ಸಾಹಿತ್ಯ, ಧರ್ಮ ಮತ್ತು ಸಂಸ್ಕತಿಯಲ್ಲಿಯ ಉದಾತ್ತ ಮತ್ತು ಒಳ್ಳೆಯ ಭಾವನೆಗಳೆಲ್ಲ ಆರ್ಯರಿಂದಲೇ ರೂಪಿತವಾಯಿತೆಂದೂ ಇಲ್ಲಿನ ಕಂದಾಚಾರ ಪದ್ಧತಿ ಮತ್ತು ಹಿಂದೂ ಧರ್ಮದಲ್ಲಿ ಕಂಡು ಬರುವ ಮೂಢನಂಬಿಕೆಗಳು, ಕೆಟ್ಟ ಲಕ್ಷಣಗಳು ದ್ರಾವಿಡರಿಂದ ಬಂತೆಂದೂ ಹೇಳುವುದು ವಾಡಿಕೆ. ಆದರೆ ಈ ಅಭಿಪ್ರಾಯ ಈಗ ತಿರಸ್ಕರಿಸಲ್ಪಟ್ಟಿದೆ.

ಆರ್ಯ ಮತ್ತು ದ್ರಾವಿಡ ಲಕ್ಷಣಗಳನ್ನು ಅಳವಾಗಿ ಪಾಂಡಿತ್ಯಪೂರ್ಣವಾಗಿ ವಿವೇಚಿಸಿರುವ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಭಾರತದ ನಾಗರಿಕತೆ ಮತ್ತು ಸಂಸ್ಕತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರ ಹಿರಿದಾದುದೆಂದೂ ಸಿಂಧೂ ಕಣಿವೆಯ ಸಂಸ್ಕತಿ ಆರ್ಯರಿಗಿಂತ ಉತ್ತಮವಾದುದೆಂದೂ ತಿಳಿದು ಬಂದಿದೆ. ಹಿಂದೂಧರ್ಮದ ಅನೇಕ ದೇವತೆಗಳು ದ್ರಾವಿಡರ ಕೊಡುಗೆಯೇ ಶಿವಾರಾಧನೆ, ಮಾತೃದೇವತೆಯ ಪೂಜೆ, ನಂದಿ, ಶಿವ ಉಮೆಯರ ಪೂಜೆ, ಯೋಗ - ಇವು ದ್ರಾವಿಡ ಲಕ್ಷಣಗಳು. ದೇವರನ್ನು ಪೂಜಿಸುವ ಪದ್ಧತಿ ದ್ರಾವಿಡರದೇ ಆಗಿದೆ. ಹಿಂದೂಧರ್ಮದಲ್ಲಿ ಶ್ರೇಷ್ಠಸ್ಥಾನ ಪಡೆದ ಶಿವ, ಉಮೆ, ವಿಷ್ಣು, ಹನುಮಂತ ಮತ್ತು ಗಣೇಶ ದ್ರಾವಿಡ ದೇವರುಗಳು ಹಿಂದೂ ಧರ್ಮದಲ್ಲಿ ಸೇರಿಹೋಗಿವೆ.

ದ್ರಾವಿಡರ ಪ್ರಭಾವವನ್ನು ಭಾರತೀಯರ ಸಂಸ್ಕತಿಯ ನಾನಾ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ಊರುಗಳ ಹೆಸರಿನಲ್ಲಿ, ವೇದ ಮತ್ತು ಭಾರತದ ಸಾಹಿತ್ಯದಲ್ಲಿ, ಆರ್ಯರ ಭಾಷೆಗಳಲ್ಲಿ. ಮತಪದ್ಧತಿಯಲ್ಲಿ ಸಂಪ್ರದಾಯದಲ್ಲಿ ಪುರಾಣ ಇತಿಹಾಸದಲ್ಲಿ, ದ್ರಾವಿಡ ಲಕ್ಷಣಗಳನ್ನು ಗುರುತಿಸಲಾಗಿದೆ. ಆರ್ಯ ಸಂಸ್ಕøತಿಯ ಬಹುಭಾಗ ದ್ರಾವಿಡರದೇ ಆಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆ, ಭಾರತೀಯ ಭಾಷೆಗಳು, ಸಮಾಜಿಕ ಸಂಸ್ಥೆಗಳು ಮತ್ತು ಸಂಪ್ರದಾಯ ಮದುವೆ ಮುಂತಾದ ಪದ್ಧತಿಗಳು - ಇವುಗಳಲ್ಲಿ ದ್ರಾವಿಡರ ಪ್ರಭಾವವಿದೆ. ನಡೆ ನುಡಿಗಳಲ್ಲಿ ದ್ರಾವಿಡ ಛಾಯೆಯಿದೆ.ಮೈಸೂರು 




#Article 74: ಬಸವೇಶ್ವರ (639 words)


ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ  ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು.
ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ (ಅಥವಾ, ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ  ಪುರುಷ  ಮತ್ತು ಮಹಿಳೆಯರು  ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.  

ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ  ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ  ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ.ಕನ್ನಡ ಕವಿ ಹರಿಹರರಿಂದ ರಚಿತ  (c.1180) ಬಸವರಾಜದೇವರ  ರಗಳೆ  (ಸಿ.ಎಸ್ .8080 ರಲ್ಲಿ 25 ವಿಭಾಗಗಳು ಲಭ್ಯವಿದೆ) ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ.ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ  ಪಾಲ್ಕುರಿಕಿ ಸೋಮನಾಥರ  ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. 
ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ.ಅವರನ್ನು  ಭಕ್ತಿಭಂಡಾರಿ  ಎಂದೂ ಕರೆಯುತ್ತಾರೆ (ಅಕ್ಷರಶಃ, ಭಕ್ತಿಯ ಖಜಾಂಚಿ),ಬಸವಣ್ಣ (ಹಿರಿಯ ಸಹೋದರ ಬಸವ) ಅಥವಾ ಬಸವೇಶ್ವರ .

ಬಸವಣ್ಣನವರು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾರೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.

ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕುಂಡಲಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು.ನಂತರ ಲಕುಲಿಶಾ-ಪಶುಪಾಟ ಸಂಪ್ರದಾಯದ ಒಂದು ಶೈವ  ಕಲಿಕೆಯ ಕಲಿಕೆಯಲ್ಲಿ ಸಂಗಮೇಶ್ವರದಲ್ಲಿ ಮುಗಿಸಿದರು ಬಸವ ತನ್ನ ತಾಯಿಯ ಕಡೆಯಿಂದ ಸೋದರ ಸಂಬಂಧಿಯನ್ನು ಮದುವೆಯಾದ. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ  ಬಿಜ್ಜಳ  ಪ್ರಧಾನ ಮಂತ್ರಿಯ ಮಗಳು,

 

 

ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ.

ಕಾಯಕವಾವುದೆಂದು ಬೆಸಗೊಂಡಡೆ
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ.

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.

ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.
ಕೂಡಲಸಂಗನ ಶರಣರು ಸ್ವತಂತ್ರ ಧೀರರು.
ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧ ರೂ ಸ್ವತಂತ್ರ ಧೀರರೂ ಆಗಿದ್ದಾರೆ.

ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ
ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ.

ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು 
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.

ಗುರುದರ್ಶನವಾದರೂ ಮರೆಯಬೇಕು
ಲಿಂಗಪೂಜೆಯಾದರೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು.
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ. 

ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮಾ.
ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ  ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಅಪಾರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು.

ಸತ್ಯಶುದ್ಧವಿಲ್ಲದುದು ಕಾಯಕವಲ್ಲ
ಆಸೆಯೆಂಬುದು ಭವದ ಬೀಜ
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ. ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.
ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವ ರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ.

 

ಗುರು ಬಸವಣ್ಣವರ ೮೦೦ನೇಯ ಲಿಂಗೈಕ್ಯ  ದಿನಾಚರಣೆ ನಿಮಿತ್ತ ಭಾರತ ಸರಕಾರದ ಅಂಚೆ ಇಲಾಖೆಯು ೧೧ನೇ ಮೇ ೧೯೬೭ರಲ್ಲಿ ೧೫ ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿ ಯನ್ನು ಮುದ್ರಿಸಿತು. ಮತ್ತೊಮ್ಮೆ ೧೯೯೭ರಲ್ಲಿ ೨ ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು. ಗುರು ಬಸವಣ್ಣವರ ಭಾವಚಿತ್ರವುಳ್ಳ  ೫ ರೂಪಾಯಿ ಮತ್ತು ೧೦೦ ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ  ಪ್ರಥಮ ಕನ್ನಡಿಗ ರಾಗಿದ್ದಾರೆ. ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು.




#Article 75: ಬಿ. ಜಿ. ಎಲ್. ಸ್ವಾಮಿ (592 words)


ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ)  ಕರ್ನಾಟಕದ ಹಿರಿಯ ವಿಜ್ಞಾನಿ ಮತ್ತು ಸಾಹಿತಿ.  ಕನ್ನಡದ ಹಿರಿಯ ವಿದ್ವಾಂಸ, ಚಿಂತನಶೀಲ ಬರಹಗಾರ.

'ಬಿ.ಜಿ.ಎಲ್.ಸ್ವಾಮಿ'ಯವರು, ಕನ್ನಡದ ಪ್ರಸಿದ್ಧ ಸಾಹಿತಿ ಡಿ. ವಿ. ಗುಂಡಪ್ಪನವರ  ಏಕಮಾತ್ರ ಪುತ್ರರು. ಮನೆಯಲ್ಲಿ ಸಾಹಿತ್ಯ, ಸಂಗೀತ, ಚಿಂತನಶೀಲತೆ ಗಾಳಿಯಲ್ಲೇ ಬೆರೆತುಹೋಗಿದ್ದವು. ಆದರೆ ಹಣಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಸ್ವಾಮಿಗೆ ಐದು ವರ್ಷವಾಗಿದ್ದಾಗ ಅವರ ತಾಯಿ ತೀರಿಕೊಂಡರು. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಸ್ವಾಮಿ  ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೩೯ರಲ್ಲಿ  ಸಸ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ ಬಿಎಸ್‌ಸಿ (ಆನರ್ಸ್) ಪರೀಕ್ಷೆಯಲ್ಲಿ ಮೊದಲ ತರಗತಿ ಪಡೆದರು. ಮನೆಯನ್ನೇ ಸಂಶೋಧನಾಲಯವನ್ನಾಗಿ  ಮಾಡಿಕೊಂಡು  ಸಾಧಾರಣವಾದ ಉಪಕರಣಗಳನ್ನು ಬಳಸಿಕೊಂಡು,  ಸಂಶೋಧನಾ ಲೇಖನಗಳನ್ನು ಬರೆದರು. ಇವು ಹೊರದೇಶಗಳಲ್ಲೂ  ಪ್ರಕಟವಾದವು.  ೧೯೪೭ ರಲ್ಲಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಡಿ.ಎಸ್ಸಿ ಪದವಿ  ಬಂದಿತು. ಅದೇವರ್ಷ  ಅಮೆರಿಕದಲ್ಲಿ ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜಗತ್ಪ್ರಸಿದ್ಧ ಸಸ್ಯ ವಿಜ್ಞಾನಿ  ಪ್ರೊಫೆಸರ್ ಇರ್ವಿಂಗ್ ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನಕ್ಕೆ ಹೋಗಲು  ಭಾರತ ಸರ್ಕಾರದ ನೆರವು ದೊರೆಯಿತು. ಹತ್ತು ತಿಂಗಳ ಅಧ್ಯಯನದ ನಂತರ ಅವರು ಭಾರತಕ್ಕೆ ಹಿಂದಿರುಗಿದಾಗ ಬೈಲಿ, `ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ಪೂರ್ವದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಮರ್ಥರು ಡಾ. ಸ್ವಾಮಿ' ಎಂದು ಬರೆದರು. ಆವರೆಗೆ ಆತ ಯಾರ ಹೆಸರನ್ನೂ ತನ್ನ ಸಂಶೋಧನೆಗಳೊಂದಿಗೆ ಸೇರಿಸಿರಲಿಲ್ಲ, ಆದರೆ ಸ್ವಾಮಿಯ ಹೆಸರನ್ನು ಸೇರಿಸಿದರು. ಮುಂದೆ ಇವರು ಮದ್ರಾಸಿನ (ಈಗಿನ ಚೆನ್ನೈ) ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು.

ಸಸ್ಯದ ಬೇರಿಗೂ ಕಾಂಡಕ್ಕೂ ಜೋಡಣೆಯ ಭಾಗವನ್ನು ಕುರಿತು ಒಂದು ನೂರು ವರ್ಷ ಎಲ್ಲ ಸಸ್ಯ ವಿಜ್ಞಾನಿಗಳೂ ಒಪ್ಪಿಕೊಂಡಿದ್ದ ಸಿದ್ಧಾಂತವೂ ಸ್ವಾಮಿಯವರ ಸಂಶೋಧನೆಯಿಂದ ತಲೆಕೆಳಗಾಯಿತು. ಇಂತಹ  ಹಲವುಗ್ಗ ಎಂದು  ಮಾತ್ರ ಕಾಣಸಿಗುವ ಅಪೂರ್ವ ಸಸ್ಯ ಇದು. ಹಾರ್ವರ್ಡ್  ವಿಶ್ವವಿದ್ಯಾಲಯದಲ್ಲಿ ಗುರು ಸ್ಥಾನದಲ್ಲಿಯೂ ಪಿತೃಸ್ಥಾನದಲ್ಲಿಯೂ ಇದ್ದ  ಪ್ರೊ. ಇರವಿಂಗ್ ಡಬ್ಲ್ಯೂ ಬೈಲಿ ಯವರ ಗೌರವಾರ್ಥ ಈ ಗಿಡದ ಹೆಸರಿನಲ್ಲಿ ಅವರ ಹೆಸರು ಅಡಕಗೊಳಿಸಿದ್ದಾರೆ. ೧೯೫೦ರಲ್ಲಿ ಸ್ವಾಮಿ ಭಾರತಕ್ಕೆ ಹಿಂದಿರುಗಿದರು. ೧೯೫೩ರಲ್ಲಿ ಮದರಾಸಿನ ಪ್ರೆಸಿಡೆಸ್ಸಿ ಕಾಲೇಜಿನಲ್ಲಿ ಪ್ರಾಧಾಪಕರಾಗಿ ಇಪ್ಪತ್ತೈದು ವರ್ಷ ಕಾಲ ಅಲ್ಲಿ ಕೆಲಸ ಮಾಡಿದರು. ಸಸ್ಯ ಶಾಸ್ತ್ರದಲ್ಲಿ ಸಂಶೋಧನೆಯನ್ನು ಮುಂದುವರೆಸಿ ಅಮೆರಿಕ, ರಷ್ಯ ಮೊದಲಾದ ದೇಶಗಳಲ್ಲೂ ಕೀರ್ತಿ ಪಡೆದರು. ಮೂರು ವರ್ಷ ಪ್ರಿನ್ಸಿಪಾಲರಾಗಿದ್ದರು. ನೂರಾರು ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಆದರ್ಶ ಪ್ರಾಧ್ಯಾಪಕ, ಸಂಶೋಧಕ ಎನ್ನಿಸಿಕೊಂಡರು. ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿದ ಮೇಲೂ ಬಿಡುವು ಇಲ್ಲದೆ ಸಂಶೋಧನೆಯನ್ನು ಕೈಗೊಂಡರು. ೧೯೭೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋದರು. ಸ್ವಾಮಿ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಕುರಿತು ಅತ್ಯಂತ ಪ್ರೌಢವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವೆಲ್ಲಾ ಹಲವಾರು ಪ್ರಸಿದ್ಧ ನಿಯತಕಾಲಿಕೆ ಹಾಗೂ ಪತ್ರಿಕೆಗಳಲ್ಲಿ ದಾಖಲಾಗಿವೆ.

'ಸ್ವಾಮಿಯವರು,' ಆಗಿನ ಕಾಲದ, ಭಾರತದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು.

ಅವರ ಆಸಕ್ತಿ ವಿಜ್ಞಾನಕ್ಕೇ ಸೀಮಿತವಾಗಿರಲಿಲ್ಲ. ಸಂಗೀತ, ಚಿತ್ರಕಲೆಗಳಲ್ಲಿ ಆಳವಾದ ಪರಿಶ್ರಮ. ಸ್ವತಃ ಚಿತ್ರಗಳನ್ನು ಬರೆಯುತ್ತಿದ್ದರು. ಅವರ `ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಈ ಪುಸ್ತಕದ ವಿನೋದ ಚಿತ್ರಗಳನ್ನು ಅವರೇ ಬರೆದರು. ಕನ್ನಡ ಸಾಹಿತ್ಯ ಪರಿಷತ್ತಿನ ವಾರಪತ್ರಿಕೆ, ಕನ್ನಡನುಡಿ, ಯಲ್ಲಿ ವಿಜ್ಞಾನಲೇಖನ. ವಿಜ್ಞಾನ ವಿಹಾರ, ಶೀರ್ಷಿಕೆಯಡಿಯಲ್ಲಿ, ದಾಖಲಾಗಿರುವ, ೪ ಲೇಖನಗಳು ಇಲ್ಲಿ ಉದ್ಧರಿಸಲು ಯೋಗ್ಯವಾಗಿವೆ.

ವಿಜ್ಞಾನಿಯಾಗಿ ಅವರ ಸಂಶೋಧನೆಯ ಸಾಕಷ್ಟು ಭಾಗ ಸಾಹಿತ್ಯ, ಸಂಸ್ಕೃತಗಳೊಂದಿಗೆ ಸಂಬಂಧವಿದ್ದದ್ದು, ಉದಾಹರಣೆಗೆ, ಉಪನಿಷತ್ತುಗಳಲ್ಲಿ ಪ್ರಸ್ತಾಪವಾದ ಸಸ್ಯಗಳು, ಕನ್ನಡ ಕವಿಗಳು ವರ್ಣಿಸಿರುವ ಸಸ್ಯಗಳು ಇವನ್ನು ಅಧ್ಯಯನ ಮಾಡುತ್ತಿದ್ದರು. `[ಹಸುರು ಹೊನ್ನು]' ಪುಸ್ತಕದುದ್ದಕ್ಕೂ ಅವರು ಪ್ರಸ್ತಾಪಿಸಿದ ಮರಗಿಡಗಳು ಹಣ್ಣು ಹೂಗಳನ್ನು ಬೇರೆ ಬೇರೆ ಭಾಷೆಗಳ ಸಾಹಿತ್ಯಗಳಲ್ಲಿ ಕವಿಗಳು ಹೇಗೆ ವರ್ಣಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಟ್ಟರು. `ಹಸುರು ಹೊನ್ನು' ಇಂಥ ಪುಸ್ತಕ. ಇದಲ್ಲದೆ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ'ದಲ್ಲಿ ತುಂಬ ಸ್ವಾರಸ್ಯವಾಗಿ ಆ ದೇಶದಿಂದ ಬಂದ ಸಸ್ಯಗಳನ್ನು ಕುರಿತು ಬರೆದಿದ್ದಾರೆ. `ಸಾಕ್ಷಾತ್ಕಾರದ ದಾರಿಯಲ್ಲಿ' ವೀಳ್ಯದೆಲೆ,ಅಡಿಕೆ, ಆಫೀಮು ಮೊದಲಾದವುಗಳ ಬಳಕೆಯನ್ನು ಕುರಿತ ಸ್ವಾರಸ್ಯವಾದ ಪುಸ್ತಕ. `ಕಾಲೇಜು ರಂಗ', `ಪ್ರಾಧ್ಯಾಪಕನ ಪೀಠದಲ್ಲಿ', `ತಮಿಳು ತಲೆಗಳ ನಡುವೆ' ಮೊದಲಾದ ಪುಸ್ತಕಗಳಲ್ಲಿ ಪ್ರಾಧ್ಯಾಪಕರಾಗಿ ಅವರ ಅನುಭವಗಳನ್ನು ನಿರೂಪಿಸಿದ್ದಾರೆ. ವಸ್ತು ದೃಷ್ಟಿಯೆರಡೂ ಗಂಭೀರ, ಅದರಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. `ಕಾಲೇಜು ರಂಗ' ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಲನಚಿತ್ರವೂ ಆಯಿತು. ಸ್ವಾಮಿಯವರ ತಂದೆ ಡಿ. ವಿ. ಗುಂಡಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಸ್ವಾಮಿಗೂ ಇದು ಸಂದಿತು; ತಂದೆ ಮಕ್ಕಳಿಬ್ಬರೂ ಪ್ರಶಸ್ತಿಯನ್ನು ಪಡೆದ೦ತಾದದ್ದು ಅದೇ ಭಾರತದಲ್ಲಿ ಪ್ರಥಮ ಬಾರಿ. 

ಅಸಾಧಾರಣ ಜ್ಞಾನದ ಹಸಿವು, ಅಸಾಧಾರಣ ಪ್ರತಿಭೆ, ಶಿಷ್ಯರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಅಸಾಧಾರಣ ಶ್ರದ್ಧೆ, ಆಸಕ್ತಿಗಳ ವ್ಯಾಪ್ತಿಯೂ ಅಸಾಧಾರಣ. ಹಲವು ರೀತಿಗಳಲ್ಲಿ ಬಿ. ಜಿ. ಎಲ್. ಸ್ವಾಮಿ ಅಸಾಧಾರಣ ವ್ಯಕ್ತಿ. ಡಾ| ಬಿ. ಜಿ. ಎಲ್. ಸ್ವಾಮಿ ಅವರ ಬಗ್ಗೆ ಡಾ|  ಹಾ. ಮಾ. ನಾಯಕರ ಅನಿಸಿಕೆ: ಬಿ. ಜಿ. ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ನಿಜವಾದ ಕವಿಯಿದ್ದ  ಎಂಬುದನ್ನು ಅವರನ್ನು ಓದುವ ಯಾರೇ ಆದರೂ ಕಂಡುಕೊಳ್ಳಬಹುದು. ಅವರೊಡನೆ ಮಾತನಾಡುತ್ತಿರುವಾಗಂತೂ ಇದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ಅವರ ವರ್ಣನೆಗಳು, ಅವರ ವ್ಯಕ್ತಿ ಚಿತ್ರಗಳು, ಅವರ ನಿರೂಪಣೆ, ಶೈಲಿ - ಇವೆಲ್ಲ ಇದನ್ನು ದೃಢಪಡಿಸುತ್ತವೆ. ಒಟ್ಟಿನಲ್ಲಿ ಅವರ ಯಾವುದೇ ಬರಹವಾದರೂ ಓದುಗರಿಗೆ ಸಾಹಿತ್ಯದ ಅನುಭವವನ್ನು ಕೊಡುತ್ತದೆ ಎಂಬುದು ಮುಖ್ಯವಾದ ಮಾತು. ತಮ್ಮ ಪ್ರಸಿದ್ಧವಾದ 'ಹಸುರು ಹೊನ್ನು' ಪುಸ್ತಕದಲ್ಲಿ ಸ್ವಾಮಿಯವರು ಮಾಡಿಕೊಡುವ ಗಿಡಮರಗಳ ಪರಿಚಯ ಅನ್ಯಾದೃಶವಾದ ರೀತಿಯಿಂದಲೇ ಸಸ್ಯಶಾಸ್ತ್ರ ಸಾಹಿತ್ಯವಾಗಿ ಮಾರ್ಪಟ್ಟಿದೆ. ವ್ಯಂಗ್ಯ, ವಿಡಂಬನೆ ಹಾಗೂ ತಿಳಿಯಾದ ಹಾಸ್ಯ ಇವುಗಳ ಚೌಕಟ್ಟಿನಲ್ಲಿ ಲೇಖಕರು ಒಂದು ವಾತಾವರಣವನ್ನು ಸೃಷ್ಟಿಸುತ್ತಾರೆ. ಈ ಸೃಷ್ಟಿಯಲ್ಲಿ ಕವಿ, ಕಥೆಗಾರ, ವ್ಯಕ್ತಿ ಚಿತ್ರಕಾರ ಮತ್ತು ಪ್ರಬಂಧಕಾರ ಇವರೆಲ್ಲ ಸೇರಿಕೊಳ್ಳುತ್ತಾರೆ. ಫಲವಾಗಿ ಸಸ್ಯಶಾಸ್ತ್ರ ಬುದ್ಧಿಯ ಬಲವನ್ನು ಅವಲಂಬಿಸದೆ ಹೃದಯದ ಮಾಧುರ್ಯಕ್ಕೆ ಒಲಿಯುತ್ತದೆ. ಅವರ  ಸಂಶೋದನೆಗಳೆಲ್ಲಾ  ಕ್ಲಾಸಿಕಲ್ ರಿಸರ್ಚ್ ಆದ ಅಂಗರಚನಾಶಾಸ್ತ್ರ', 'ಹೊರರಚನಾಶಾಸ್ತ್ರ','ವರ್ಗೀಕರಣಶಾಸ್ತ್ರ', 'ಭ್ರೂಣವಿಜ್ಞಾನಕ್ಕೆ ಸೀಮಿತವಾಗಿವೆ. ಆಧುನಿಕ ವಿಭಾಗಗಳಾದ,'Cytology', 'Genetics', 'Plant Phisiology',ಶಾಸ್ತ್ರಗಳಲ್ಲಿ ಅವರು ಹೆಚ್ಚಿನ ಆಸಕ್ತಿತೋರಿಸಲು ಸಾಧ್ಯವಾಗಲಿಲ್ಲ. ಕಾರಣವಿಷ್ಟೆ. ತಮಗೆ ಮನೆಯಲ್ಲಿ ಸಿಕ್ಕ ಅನುಕೂಲತೆಗಳು ಕಷ್ಟಸಾಧ್ಯವಾದ್ದರಿಂದ, ಸಾಧ್ಯವಾದ್ದಷ್ಟರಲ್ಲೇ, ಸಿಕ್ಕಿದ್ದಷ್ಟರಲ್ಲೇ,  ಉನ್ನತ ಸಂಶೋಧನೆಮಾಡಿದರು.

ಬಿ. ಜಿ. ಎಲ್. ಸ್ವಾಮಿ ೧೯೮೦ರ ನವೆಂಬರ್ ೨ರಂದು ಇಹ ಜಗತ್ತನ್ನು ತ್ಯಜಿಸಿದರು.




#Article 76: ಬಿ.ಎಂ.ಶ್ರೀಕಂಠಯ್ಯ (454 words)


ಬೆಳ್ಳೂರು ಮೈಲಾರಯ್ಯ  ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. 
ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಧಾರವಾಡದಲ್ಲಿ ೧೯೧೧ ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ ಬಗ್ಗೆ ಎಂಬ ಯುಗ ಪ್ರವರ್ತಕ ಕನ್ನಡ ಭಾಷಣವನ್ನು ಮಾಡಿದರು. ಜನವಾಣಿ ಬೇರು ಕವಿವಾಣಿ ಹೂವು  ಎಂದು ಗರತಿಯ ಹಾಡುಗಳು ಕೃತಿಯ ಮುನ್ನುಡಿಯಲ್ಲಿ ಪ್ರಸಿದ್ಧಿ ಹೇಳಿಕೆ ಇದೆ.

ಬಿ.ಎಂ.ಶ್ರೀಯವರು  ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ೧೮೮೪ರ ಜನವರಿ ೩ ರಲ್ಲಿ  ಜನಿಸಿದರು. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ೧೯೦೬ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ, ೧೯೦೭ರಲ್ಲಿ ಮದರಾಸು ವಿವಿಯಲ್ಲಿ ಬಿ.ಎಲ್. ಪದವಿ, ೧೯೦೯ರಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ೧೯೩೦ರಲ್ಲಿ ಪ್ರಾಧ್ಯಾಪಕರಾಗಿದ್ದ  ಅವರು, ೧೯೨೬-೧೯೩೦ ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು. ೧೯೩೮-೧೯೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

 
 
ಆಗಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗವಾದರು.ಅನಂತರ ಅವರು ೧೯೪೨ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ 'ಧಾರವಾಡದ ಕೆ.ಇ.ಬೋರ್ಡ್‌'ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ 'ಆರ್ಟ್ಸ್ ಕಾಲೇಜ್' ಗೆ 'ಪ್ರಾಂಶುಪಾಲಕ'ರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು. 'ಬಿ.ಎಂ.ಶ್ರೀಕಂಠಯ್ಯನವರು' ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ 'ಮಾಸ್ತಿ', 'ಕುವೆಂಪು', 'ಎಸ್.ವಿ.ರಂಗಣ್ಣ', 'ತೀ.ನಂ. ಶ್ರೀಕಂಠಯ್ಯ', 'ಜಿ.ಪಿ.ರಾಜರತ್ನಂ', 'ಡಿ.ಎಲ್. 'ನರಸಿಂಹಚಾರ್' ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಕೆಲವು ಉತ್ತಮ ನಾಟಕಗಳನ್ನು ಬರೆದರು.                

ಅಶ್ವತ್ಥಾಮನ್:-
ನಮ್ಮ ದೇಶದಲ್ಲಿ ಪುರಾಣ ಪ್ರಸಿದ್ಧವಾದ ಅನೇಕ ಕಥೆಗಳಿವೆಯಲ್ಲವೇ? ಹಾಗೆಯೇ ಗ್ರೀಸ್ ದೇಶದಲ್ಲೂ ಪುರಾಣ ಪ್ರಸಿದ್ಧ ಕಥೆಗಳಿವೆ. ಗ್ರೀಸ್ ದೇಶದ ಅನೇಕ ನಾಟಕಗಳ ಕಥೆ ಪುರಾಣ ಪುರುಷರನ್ನು ಕುರಿತದ್ದು. ಅಂಥ ನಾಟಕಗಳಲ್ಲಿ ’ಏಜಾಕ್ಸ್’ ಎಂಬುದು ಒಂದು ಪ್ರಸಿದ್ಧ ನಾಟಕ. ಆ ನಾಟಕವನ್ನು ಬರೆದವನು ಸಾಫೋಕ್ಲೀಸ್; ಗ್ರೀಸ್ ದೇಶದ ಮಹಾ ನಾಟಕಕಾರರಲ್ಲಿ ಒಬ್ಬ. ಸುಮಾರು ೨,೪೦೦ ವರ್ಷಗಳ ಹಿಂದೆ ಇದ್ದ. ನಮ್ಮ ಮಹಾಭಾರತದಲ್ಲಿ ಬರುವ ಅನೇಕ ಸಂದರ್ಭಗಳು, ಘಟನೆಗಳು ಆ ನಾಟಕದಲ್ಲೂ ಬರುತ್ತವೆ. ಆ ನಾಟಕವನ್ನು ಓದಿ ಮೆಚ್ಚಿಕೊಂಡಿದ್ದ ’ಶ್ರೀ’ ಅವರು, ಅದನ್ನು ಆಧರಿಸಿಕೊಂಡು ’ಅಶ್ವತ್ಥಾಮನ್’ ನಾಟಕವನ್ನು ರಚಿಸಿದರು. ಮಹಾಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಶ್ವತ್ಥಾಮ ಒಬ್ಬ. ಈತನನ್ನು ಕುರಿತದ್ದು ಈ ನಾಟಕದ ಕಥೆ. ಅಶ್ವತ್ಥಾಮ ಪರಾಕ್ರಮಿ ಮತ್ತು ಪ್ರಾಮಾಣಿಕ. ಮಹಾಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಪಾಂಡವರ ಮೇಲೆ ಈತನಿಗೆ ಬಹಳ ಕೋಪವುಂಟಾಗುತ್ತದೆ. ಆ ಕೋಪದಲ್ಲಿಯೇ ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ, ನಿದ್ರೆಯಲ್ಲಿದ್ದ ಅನೇಕ ಪಶುಗಳು, ಮಕ್ಕಳು ಮತ್ತು ಹೆಂಗಸರನ್ನೂ ಕೊಂದು, ತನ್ನ ಮನೆಗೆ ಹೋಗುತ್ತಾನೆ. ಅನಂತರ ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸುತ್ತದೆ. ಇದೊಂದು ಪಾಪದ ಕೆಲಸ ಎಂದೂ ತಿಳಿಯುತ್ತಾನೆ. ಇದರಿಂದ ಅಶ್ವತ್ಥಾಮ ಬಹಳ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ’ಅಶ್ವತ್ಥಾಮನ್’ ನಾಟಕವೂ ಒಂದು ರುದ್ರನಾಟಕವೇ.

'ಪ್ರೊ. ಬಿ.ಎಂ.ಶ್ರೀ.ರವರು', 'ಹೊಂಗನಸು', 'ಇಂಗ್ಲಿಷ್ ಗೀತೆಗಳು' ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಅವರು ನ್ಯೂಮನ್ ಕವಿ ಬರೆದ 'Lead Kindly Light'  ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು.

'ಬಿ.ಎಂ.ಶ್ರೀ'ಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ 'ಗುಲಬರ್ಗಾ'ದಲ್ಲಿ ನಡೆದ '೧೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.

೧೯೪೬ರಲ್ಲಿ 'ಪ್ರೊ.ಬಿ.ಎಂ.ಶ್ರೀ'ರವರು, 'ಧಾರವಾಡ'ದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ನಿಧನರಾದರು.

ಕನ್ನಡ ಸಾಹಿತ್ಯಕ್ಕೆ ಬಿ.ಎಂ.ಶ್ರೀಯವರ ಕೊಡುಗೆ ಎಷ್ಟು ದೊಡ್ಡದು ಎಂಬ ಬಗ್ಗೆ ತಿಳಿಯಲು 'ಡಾ. ಎ.ಎನ್.ಮೂರ್ತಿರಾಯರ' 'ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಲ್ಲಿ  'ಬಿ.ಎಂ.ಶ್ರೀ ' ಅಧ್ಯಾಯವನ್ನು ಓದಿ.




#Article 77: ಜಿ.ಪಿ.ರಾಜರತ್ನಂ (302 words)


'

'ಜಿ. ಪಿ. ರಾಜರತ್ನಂ'(೧೯೦೪-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ ನಾಗಪಟ್ಟಣಕ್ಕೆ ಸೇರಿದ ತಿರುಕ್ಕಣ್ಣಾಪುರ  ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೪ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶುಗೀತೆ ಸಂಕಲನ '. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'.

ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು.  ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ,  ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು.

ನಾಯಿಮರಿ ನಾಯಿಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು..

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು?
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು.

ಯೆಂಡ ಯೆಡ್ತಿ ಕನ್ನಡ್ ಪದಗೊಳ್ 
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ
ತಕ್ಕೊ! ಪದಗೊಳ್ ಬಾಣ!

ಬಗವಂತ ಏನ್ರ ಬೂಮೀಗ್ ಇಳಿದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು
ಬಕ್ತನ್ ಮೇಲ್ ಔನ್ ಕಣ್ಣು!

ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು 
ಮಲಗಾಕೆ ಭೂಮ್ತಾಯಿ ಮಂಚ
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ

ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ.ಪಿ.ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು.




#Article 78: ಮುಕ್ತ ತಂತ್ರಾಂಶ (195 words)


ಮುಕ್ತ ತಂತ್ರಾಂಶ ಅಥವಾ ಮುಕ್ತ ಆಕರ ತಂತ್ರಾಂಶ ಎಂಬುದು ಕಂಪ್ಯೂಟರ್ ತಂತ್ರಾಂಶಗಳು ಲಭ್ಯವಾಗಬಹುದಾದ ಒಂದು ರೀತಿಯ ಪರವಾನಗಿ. ಈ ರೀತಿಯ ಪರವಾನಿಗೆಯ ಅಡಿ ಲಭ್ಯವಾಗಿರುವ ತಂತ್ರಾಂಶಗಳಲ್ಲಿನ ಸಾಮಾನ್ಯ ಗುಣಗಳೆಂದರೆ

ಯಾವುದೇ ಮುಕ್ತ ತಂತ್ರಾಂಶ ಉಚಿತವಾಗಿ ಲಭ್ಯವಾಗಬೇಕೆಂಬ ನಿಯಮವೇನಿಲ್ಲ; ಆದರೂ ಬಹುಪಾಲು ಮುಕ್ತ ತಂತ್ರಾಂಶಗಳು ಉಚಿತವಾಗಿ ಲಭ್ಯವಾಗಿವೆ.

ಅನೇಕ ಬಾರಿ ಆಕರ ಲಭ್ಯವಾಗಿರುವ ತಂತ್ರಾಂಶಗಳೆಲ್ಲಕ್ಕೂ ಮುಕ್ತ ತಂತ್ರಾಂಶ ಎಂದು ಕರೆಯಲಾಗುತ್ತದೆ - ನಿಜವಾಗಿ ಈ ತಂತ್ರಾಂಶಗಳು ಪ್ರಕಟಿತ ಆಕರ ತಂತ್ರಾಂಶಗಳು (disclosed source software). ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಗ್ರಾಹಕರಿಗೆ ನೀಡಿದಲ್ಲಿ ಮಾತ್ರ ಅದು ಮುಕ್ತ ತಂತ್ರಾಂಶವಾಗುತ್ತದೆ. 

ಮುಕ್ತ ತಂತ್ರಾಂಶ ಪರವಾನಗಿಗಳಲ್ಲಿ ಅತ್ಯಂತ ಜನಪ್ರಿಯ ಪರವಾನಗಿಗಳಲ್ಲಿ ಒಂದು ಜಿಎನ್‍ಯು ಸಾಮಾನ್ಯ ಸಾರ್ವಜನಿಕ ಪರವಾನಗಿ (GNU General Public License).

ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಗ್ರಾಹಕರು ಅನೇಕರು ಮುಕ್ತ ತಂತ್ರಾಂಶಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಪಂಥದ ಮುಖ್ಯ ನಂಬಿಕೆಗಳೆಂದರೆ:

ಮುಕ್ತ ತಂತ್ರಾಂಶ ತತ್ವದ ವಿರೋಧಿಗಳ ಮುಖ್ಯ ವಾದ ಬೌದ್ಧಿಕ ಆಸ್ತಿ ಹಕ್ಕುಗಳನ್ನು (intellectual property rights) ಕುರಿತದ್ದು. ಅನೇಕ ಸಂಸ್ಥೆಗಳ ತಂತ್ರಾಂಶ ಆ ಸಂಸ್ಥೆಯ ಹೆಸರಿನಲ್ಲಿ ಕೃತಿಸ್ವಾಮ್ಯವನ್ನು ಹೊಂದಿರುತ್ತದೆ. ಈ ತಂತ್ರಾಂಶದ ಕೃತಿಸ್ವಾಮ್ಯದ ಮೂಲಕ ಬರುವ ಆದಾಯವೇ ಅನೇಕ ಸಂಸ್ಥೆಗಳ ಮುಖ್ಯ ಆದಾಯ. ಮೂಲ ಆಕರವನ್ನು ಪ್ರಕಟಗೊಳಿಸಿ ಬದಲಾಯಿಸುವ ಹಕ್ಕು ನೀಡಿದಲ್ಲಿ ಇಂಥ ಸಂಸ್ಥೆಗಳ ಮುಖ್ಯ ಆದಾಯವೇ ಇಲ್ಲವಾದಂತಾಗುತ್ತದೆ ಎಂಬ ವಾದವಿದೆ. 

ಮುಕ್ತ ತಂತ್ರಾಂಶದ ವಿರುದ್ಧ ಇರುವ ಇನ್ನೊಂದು ವಾದವೆಂದರೆ ಸಂಸ್ಥೆಗಳಲ್ಲಿ ವೃದ್ಧಿಗೊಳಿಸಲ್ಪಟ್ಟ ತಂತ್ರಾಂಶಗಳಲ್ಲಿ ಅಂತಿಮ ಉತ್ಪಾದನೆಯ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಇದರ ಹಿಂದಿನ ವಿಚಾರವೆಂದರೆ ಮುಕ್ತ ತಂತ್ರಾಂಶಗಳು ಹೆಚ್ಚಾಗಿ ಸ್ವಯಂಸೇವಾ ಮನೋಭಾವದಿ೦ದ ಕೆಲಸ ಮಾಡುವವರಿ೦ದ ವೃದ್ಧಿಯಾಗಿರುತ್ತವೆಯೇ ಹೊರತು ಅವುಗಳಿಗಾಗಿಯೇ ಕೆಲಸ ಮಾಡುವ ಸಂಬಳದಾರಿ ಕೆಲಸಗಾರರಿಂದಲ್ಲ. ಸಂಸ್ಥೆಗಳಲ್ಲಿ ತಂತ್ರಾಂಶದ ವೃದ್ಧಿಗೆ ಹಣದ ಅವಕಾಶ ಮತ್ತು ಸಮಯ ಹೆಚ್ಚಿರುತ್ತದೆ ಎಂಬುದು ಈ ವಾದದ ಮುಖ್ಯ ಆಲೋಚನೆ. 

ಮುಕ್ತ ತಂತ್ರಾಂಶಗಳಲ್ಲಿ ಅತಿ ಪ್ರಸಿದ್ಧವಾಗಿರುವುದೆಂದರೆ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ. ಹಾಗೆಯೇ ವಿಕಿಪೀಡಿಯ ಸಹ ಮುಕ್ತ ತಂತ್ರಾಂಶ ಪರವಾನಗಿಯ ಅಡಿಯಲಿಯೇ ಅಸ್ತಿತ್ವದಲ್ಲಿದೆ.




#Article 79: ಹೊಯ್ಸಳ (1563 words)


ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). 

ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. 

ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ. 

ವೀರ ಬಲ್ಲಾಳನ (ಆಡಳಿತ: ೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠವಾದುದೆಂದು ಹೆಸರಾಯಿತು. ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನೇಟ್‍ಗಳೊಂದಿಗೆ ಪೈಪೋಟಿಗೆ ಸಿಲುಕಿತು. ಅಂತಿಮವಾಗಿ ಹೊಯ್ಸಳ ವಂಶದ ಆಡಳಿತ ಕ್ರಿ.ಶ. ೧೩೪೬ ರಲ್ಲಿ ಕೊನೆಗೊಂಡಿತು. 

ದಂತಕತೆಯ ಪ್ರಕಾರ ಜೈನ ಗುರು ಸುದತ್ತನು , ಸೊಸೆವೂರಿನ ವಾಸಂತಿಕಾ ದೇವಿಯ ಮಂದಿರದಲ್ಲಿ  ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ  ಸಳನಿಗೆ ಹೊಯ್ ಸಳ ಎಂದು ಆಙಾಪಿಸಿದನು. ಇದು ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ  ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು  ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ.

೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಸಂಬೋಧಿಸಿವೆ. ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲ.

ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ ಗಳಿಸಿಕೊಳ್ಳುತ್ತಿದ್ದರು. ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ , ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ  ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು, ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ ಖರ್ಚಿನಲ್ಲಿ ಕಟ್ಟಿಸಲಾಗಿತ್ತು. 

ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ , ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು. ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು. ಚೀನಾದಲ್ಲಿ ದೊರೆತ ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ ಚೀನಾದಲ್ಲಿ ಭಾರತದ ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ( ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಗೆ ಹೋಗಲು ಪ್ರವೇಶಬಂದರು)ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು (ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು.

ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ ಎಂದು ಕರೆಯಲಾಗುತ್ತಿದ್ದ  ನೆಲಗಂದಾಯದಲ್ಲಿ  ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ, ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ ಹೇರಲಾಗಿತ್ತು. ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು, ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ  ಕರಿಮೆಣಸು, ವೀಳ್ಯದೆಲೆ, ತುಪ್ಪ, ಭತ್ತ,ಸಾಂಬಾರ ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ  ಸುಂಕ  ವಿಧಿಸುವ ಹಕ್ಕಿತ್ತು.

ಇವನ್ನೂ ನೋಡಿ : ರಾಮಾನುಜಾಚಾರ್ಯ, ಬಸವಣ್ಣ, ಮಧ್ವಾಚಾರ್ಯ

೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ ವೀರಶೈವ ಮತ್ತು  ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ  ಇಳಿಮುಖವಾಯಿತು.  ಕಂಬದಹಳ್ಳಿ ಮತ್ತು ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ ಬೌದ್ಧಧರ್ಮದ ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ  ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು.  ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು.

ವೀರಶೈವ ಮತದ ಉಗಮ ಚರ್ಚಾಸ್ಪದವಾಗಿದ್ದರೂ, ೧೨ನೆಯ ಶತಮಾನದಲ್ಲಿ ಬಸವಣ್ಣನವರ  ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು. ಬಸವಣ್ಣಮತ್ತು ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು. ಕಾಯಕವೇ ಕೈಲಾಸ ಎಂದು ಬೋಧಿಸಿದ ಬಸವಣ್ಣನವರು  ಸರಳರೀತಿಯಲ್ಲಿ  ವಚನಗಳನ್ನು   ಜನಸಾಮಾನ್ಯರಿಗಾಗಿ ಬರೆದರು.  ಆದಿ ಶಂಕರರ  ಬೋಧನೆಗಳನ್ನು ಒಪ್ಪದ ಮಧ್ವಾಚಾರ್ಯರು  ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ಬೋಧಿಸಿ, ಆದಿ ಶಂಕರರ ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು. 

ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ  ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ  ರಾಮಾನುಜಾಚಾರ್ಯರ  ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು ರಾಮಾನುಜಾಚಾರ್ಯರ  ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. ಜೈನಧರ್ಮದಿಂದ ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು ಮಧ್ವಾಚಾರ್ಯರ ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ ಗುಜರಾತಿನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು. 

 
ಆ ಕಾಲದಲ್ಲಿ ಕುಡಿಯೊಡೆಯುತ್ತಿದ್ದ ಧಾರ್ಮಿಕ , ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಹೊಯ್ಸಳ ಸಮಾಜ ಪ್ರತಿಬಿಂಬಿಸುತ್ತಿತ್ತು. ಈ ಕಾಲದಲ್ಲಿ ಸಮಾಜ ಹೆಚ್ಚು ಹೆಚ್ಚು ಸುಸಂಸ್ಕೃತವಾಗುತ್ತಾ ಹೋಯಿತು.ಸ್ತ್ರೀಯರ ಸ್ಥಾನಮಾನದಲ್ಲಿ ವ್ಯತ್ಯಾಸಗಳಿತ್ತು.  ರಾಜಮನೆತನದ ಕೆಲವು ಸ್ತ್ರೀಯರು ರಾಜ್ಯಾಡಳಿತದಲ್ಲಿ ಪಾಲುಗೊಳ್ಳುತ್ತಿದ್ದರು. ಎರಡನೆಯ ವೀರಬಲ್ಲಾಳನ ದೀರ್ಘ ಕಾಲ ನಡೆದ ಉತ್ತರದ ಪ್ರದೇಶಗಳ ಮೇಲಿನ ಧಾಳಿಯ ಕಾಲದಲ್ಲಿ , ಅವನ ರಾಣಿ ಉಮಾದೇವಿಯು ಹಳೇಬೀಡಿನ ಆಡಳಿತವ್ಯವಸ್ಥೆಯನ್ನು ನೋಡಿಕೊಂಡಿದ್ದರ ಬಗ್ಯೆ ತತ್ಕಾಲೀನ ದಾಖಲೆಗಳು ಸಿಕ್ಕಿವೆ.  ಆಕೆ ಕೆಲವು ವಿರೋಧೀ ಸಾಮಂತರರೊಡನೆ ಹೋರಾಡಿ ಅವರನ್ನು ಮಟ್ಟಹಾಕಿದ್ದೂ ಇದೆ.ಲಲಿತಕಲೆಗಳಲ್ಲಿ ಸ್ತ್ರೀಯರ ಭಾಗವವಹಿಸುವಿಕೆಯ ಬಗ್ಯೆ ದಾಖಲೆಗಳಿವೆ. ಸ್ವತಃ ರಾಣಿ ಶಾಂತಲಾದೇವಿಯು ನೃತ್ಯ ಮತ್ತು ಸಂಗೀತದಲ್ಲಿ ಬಲ್ಲಿದಳಾಗಿದ್ದಳು. 12ನೆಯ ಶತಮಾನದ ಅಕ್ಕಮಹಾದೇವಿಯ ವಚನಗಳು ಒಂದಿಗೂ ಮನೆಮಾತಾಗಿವೆ. ದೇವಾಲಯ ನರ್ತಕಿಯರು (ದೇವದಾಸಿಗಳು) ಸಾಮಾನ್ಯವಾಗಿದ್ದು,  ಅವರಲ್ಲನೇಕರು ಸುಶಿಕ್ಷಿತರೂ ಕಲಾಪಾರಂಗತರೂ ಆಗಿದ್ದರು. ಈ ಕಾರಣದಿಂದಲೇ ಅವರಿಗೆ, ದೈನಂದಿನ ಗೃಹಕೃತ್ಯಕ್ಕೆ ಸೀಮಿತವಾದ ಪಾತ್ರದ ಇತರೆ ಹಳ್ಳಿ ಮತ್ತು ಪಟ್ಟಣಗಳ ಹೆಣ್ಣುಮಕ್ಕಳಿಗಿಂತ , ಹೆಚ್ಚು ಸ್ವಾತಂತ್ರ್ಯವಿತ್ತು. ಸತಿ ಪದ್ಧತಿ ಜಾರಿಯಲ್ಲಿತ್ತು. ವೇಶ್ಯಾವೃತ್ತಿ ಗೆ ಸಮಾಜದ ಅನುಮತಿಯಿತ್ತು. ಭಾರತದ ಇತರೆಡೆಗಳಲ್ಲಿಯಂತೆ, ಇಲ್ಲಿಯೂ ಜಾತಿಪದ್ಧತಿ ಪ್ರಮುಖವಾಗಿ ಕಾಣಬರುತ್ತಿತ್ತು. 

ಪಶ್ಚಿಮ ಕಡಲ ತೀರದ ಮೂಲಕ ನಡೆಯುತ್ತಿದ್ದ ವ್ಯಾಪಾರೋದ್ಯಮದ ಕಾರಣ ಅರಬರು, ಯಹೂದಿಗಳು, ಪರ್ಷಿಯನ್ನರು, ಚೀನಾದವರು ಮತ್ತು ಮಲಯಾ ದ್ವೀಪಗಳಿಂದ ಪರದೇಶಿಗರು ಭಾರತಕ್ಕೆ ಬಂದರು. ಹೊಯ್ಸಳ ರಾಜ್ಯ ವಿಸ್ತರಿಸಿದಂತೆ, ದಕ್ಷಿಣ ಭಾರತದ ಇತರೆಡೆಗಳಿಂದ ವಲಸೆ ಬಂದ ಜನಸಮುದಾಯದಿಂದ ಹೊಸ ಕುಶಲಕಲೆಗಳೂ, ಸಂಸ್ಕೃತಿಯೂ ತಲೆಎತ್ತಿದವು. ದೊಡ್ಡ ಊರುಗಳಿಗೆ ಪಟ್ಟಣ ಎಂದೂ, ಊರಿನ ಕೇಂದ್ರಸ್ಥಾನವಾಗಿದ್ದ ಮಾರುಕಟ್ಟೆಗೆ ನಗರ ಅಥವಾ ನಗರಮ್ ಎಂದು ಕರೆಯಲಾಗುತ್ತಿತ್ತು. ಶ್ರವಣಬೆಳಗೊಳದಂಥಾ ಕೆಲವು ಪಟ್ಟಣಗಳು ಏಳನೆಯ ಶತಮಾನದಲ್ಲಿ ಧಾರ್ಮಿಕ ಕೇಂದ್ರವಾಗಿ  ಪ್ರಸಿದ್ಧವಾದರೂ, ಹೊರಗಿನಿಂದ ಬಂದ ಶ್ರೀಮಂತ ವ್ಯಾಪಾರಿಗಳ ದೆಸೆಯಿಂದ , 12ನೆಯ ಶತಮಾನದ ವೇಳೆಗೆ , ಪ್ರಮುಖ ವ್ಯಾಪಾರ ಕೇಂದ್ರವಾಗಿಯೂ ಬೆಳೆದವು. ವಿಷ್ಣುವರ್ಧನ ಚನ್ನಕೇಶವ ದೇವಾಲಯವನ್ನು ಕಟ್ಟಿಸಿದಾಗಿನಿಂದ , ಬೇಲೂರು ರಾಜವರ್ಚಸ್ಸನ್ನು ಗಳಿಸಿಕೊಂಡಿತು. ಬೃಹತ್ ದೇವಾಲಯಗಳ ನಿರ್ಮಾಣ ಮತ್ತು  ನಿರ್ವಹಣೆಗೆ ರಾಜಾಶ್ರಯ ಇವು ಧಾರ್ಮಿಕ , ಸಾಮಾಜಿಕ ಮತ್ತು ನ್ಯಾಯಿಕ ಮಹತ್ವವನ್ನೂ ಹೊಂದಿದ್ದು , ರಾಜಾ ಪ್ರತ್ಯಕ್ಷ ದೇವತಾ ಎಂಬ ನಾಣ್ಣುಡಿಯನ್ನು ಜನ ನಂಬುವಂತಾಯಿತು.   

ದೇವಾಲಯ ನಿರ್ಮಾಣ ಬರಿ ಧಾರ್ಮಿಕವಷ್ಟೇ ಅಲ್ಲದೆ, ವಾಣಿಜ್ಯ  ಚಟುವಟುಕೆಯೂ ಆಗಿದ್ದು , ಇದು ಸಮಾಜದ ಯಾವುದೇ ವಿಶಿಷ್ಟವಾದ ಬಣಕ್ಕೆ ಸೀಮಿತವಾಗಿರಲಿಲ್ಲ.  ಬೇಲೂರಿನ ವೈಷ್ಣವ ಪಂಥದ ಚೆನ್ನಕೇಶವ ದೇವಾಲಯಕ್ಕೆ  ಪ್ರತಿಯಾಗಿ ಹಳೇಬೀಡಿನ ಶೈವ ವ್ಯಾಪಾರಿಗಳು ಹೊಯ್ಸಳೇಶ್ವರ ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿ ,  ಹಳೇಬೀಡಿನ ಅಂತಸ್ಥನ್ನು ಏರಿಸುವುದಕ್ಕೆ ಕಾರಣರಾದರು.   ಆದರೆ  ಹೊಯ್ಸಳ ದೇವಾಲಯಗಳು ಜಾತ್ಯಾತೀತವಾಗಿದ್ದು ಎಲ್ಲಾ ಹಿಂದೂ ಉಪಶಾಖೆಗಳ ಅನುಯಾಯಿಗಳಿಗೂ ಇವುಗಳಲ್ಲಿ ಪ್ರೋತ್ಸಾಹವಿತ್ತು. ಕೇವಲ ವೈಷ್ಣವ ಪಂಥಕ್ಕೆ ಸಂಬಂಧಿಸಿದ ಶಿಲ್ಪಕಲೆಯಿರುವ ಸೋಮನಾಥಪುರ ದೇವಾಲಯ ಮಾತ್ರ ಇದಕ್ಕೆ ಅಪವಾದ. ಧನಾಡ್ಯ ಜಮೀನುದಾರರುಗಳು ಕಟ್ಟಿಸಿದ ದೇವಾಲಯಗಳು ಅಂದಿನ ಕೃಷಿ ಪ್ರಧಾನ ಸಮಾಜದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ  ಅಗತ್ಯಗಳನ್ನು ಪೂರೈಸುತ್ತಿತ್ತು. ಪ್ರೋತ್ಸಾಹದ ಹೊರತಾಗಿಯೂ, ಬೃಹತ್ ದೇವಾಲಯಗಳು ವಿವಿಧ ರೀತಿಯ ಕಸಬಿನ  ನೂರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದ್ದವು. ಈ ಮೂಲಕ ಹಿಂದಿನ ಶ್ರೀಮಂತ ಬೌದ್ಧ ವಿಹಾರಗಳಂತೆ , ಈ ದೇವಾಲಯಗಳು ಸ್ಥಳೀಯ ಸಮಾಜದ ಆಧಾರ ಸ್ಥಂಭಗಳಾಗಿದ್ದವು.

 
ಹೊಯ್ಸಳ ಆಡಳಿತದ ಕಾಲದಲ್ಲಿ ಸಂಸ್ಕೃತ ಸಾಹಿತ್ಯ  ಜನಪ್ರಿಯವಾಗಿದ್ದರೂ, ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ೧೨ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು. ಸಾಂಗತ್ಯ, ಷಟ್ಪದಿ, ತ್ರಿಪದಿ  ಮತ್ತು ರಗಳೆ ಶೈಲಿಗಳು ಆಧುನಿಕವೆನಿಸಿದ್ದವು. ತೀರ್ಥಂಕರರ (ಜೈನ ಮುನಿಗಳು)ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು. 

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ,ರುದ್ರಭಟ್ಟ,ನಾಗಚಂದ್ರ,ಹರಿಹರ ಮತ್ತು  ,ಅವನ ಸೋದರಸಂಬಂಧಿ, ರಾಘವಾಂಕ   ಇವರೆಲ್ಲರಿಗೂ ಹೊಯ್ಸಳ ರಾಜಾಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು. ೧೨೦೯ರಲ್ಲಿ ಜೈನ ಕವಿ ಜನ್ನನು ಯಶೋಧರಚರಿತೆ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ಊರ ದೇವರು ಮಾರಿಗೆ  ಇಬ್ಬರು ಬಾಲಕರನ್ನು ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು. ಆ ಬಾಲಕರ ಮೇಲೆ ಕನಿಕರ ಬಂದು , ರಾಜನು ಅವರಿಬ್ಬರನ್ನೂ ಬಿಡುಗಡೆ ಮಾಡಿ , ನರಬಲಿಯ  ಪದ್ಧತಿಗೆ ವಿದಾಯ ಹೇಳುತ್ತಾನೆ. ಈ ಕೃತಿಗಾಗಿ ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿಚಕ್ರವರ್ತಿ  ಎಂಬ ಬಿರುದು ಪ್ರಾಪ್ತವಾಯಿತು. 

ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ  ಚಂದ್ರಮೌಳಿಯ ಆಶ್ರಯದಲ್ಲಿದ್ದ ಸ್ಮಾರ್ಥ ಬ್ರಾಹ್ಮಣ ರುದ್ರಭಟ್ಟನು  ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು.  ಆತನ ಪ್ರಸಿದ್ಧ  ಚಂಪೂ ಶೈಲಿಯ ಜಗನ್ನಾಥ ವಿಜಯ ಕೃತಿಯು ವಿಷ್ಣು ಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು  ಶ್ರೀಕ್ರಷ್ಣನಿಂದ  ಬಾಣಾಸುರನ ಸಂಹಾರ.

ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ವೀರಶೈವ ಕವಿ  ಹರಿಹರ , (ಹರೀಶ್ವರ ಎಂದೂ ಕರೆಯುವುದುಂಟು ) ಹಳೆಯ ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ಹತ್ತು ಭಾಗಗಳಿರುವ ಇದರ ಕಥಾವಸ್ತು ಶಿವ ಪಾರ್ವತಿಯರ ಪರಿಣಯ. ವಚನ ಸಾಹಿತ್ಯ ಪರಂಪರೆಯ ಭಾಗವಾಗಿರದಿದ್ದ ಮೊದಮೊದಲ ವೀರಶೈವ ಕವಿಗಳಲ್ಲಿ ಇವನೂ  ಒಬ್ಬ. ಹಳೇಬೀಡಿನ ಕರಣಿಕರ ಕುಟುಂಬದಿಂದ ಬಂದ ಹರಿಹರನು  ಹಂಪೆಯಲ್ಲಿ ಅನೇಕ ವರ್ಷಗಳನ್ನು ಕಳೆದು , ನೂರಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದನು. ಇವು ವಿರೂಪಾಕ್ಷ ದೇವರ ಗುಣಗಾನ ಮಾಡುವ ರಗಳೆಗಳಾಗಿವೆ.  ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಪದಿಯ ಬಳಕೆಯನ್ನು ಮೊಟ್ಟಮೊದಲ ಬಾರಿಗೆ ಮಾಡಿದ. ಕನ್ನಡ ವ್ಯಾಕರಣದ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘಿಸಿದ್ದರೂ, ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು  ಪರಿಗಣಿಸಲ್ಪಡುತ್ತದೆ. 

ಇನ್ನು ಸಂಸ್ಕೃತದಲ್ಲಿ , ಮಧ್ವಾಚಾರ್ಯರು , ಬ್ರಹ್ಮಸೂತ್ರಗಳಿಗೆ ಋಗ್ಭಾಷ್ಯವನ್ನು ಬರೆದರು. ಇದಲ್ಲದೇ, ಇತರ ವೈದಿಕ ಶಾಖೆಗಳನ್ನು ಟೀಕಿಸುವ ವಿಮರ್ಶೆಗಳನ್ನೂ  ಅವರು ಬರೆದರು. ತಮ್ಮ ತತ್ವಗಳಿಗೆ ಪ್ರಮಾಣಗ್ರಂಥಗಳಾಗಿ , ವೇದಗಳ ಬದಲಾಗಿ , ಪುರಾಣಗಳನ್ನು ಆರಿಸಿಕೊಂಡರು. ವಿದ್ಯಾತೀರ್ಥ ಬರೆದ ರುದ್ರಪ್ರಶ್ಣಾಭಾಷ್ಯವು ಆ ಕಾಲದ ಮತ್ತೊಂದು ಪ್ರಸಿದ್ಧ ಗ್ರಂಥ.

 
ಹೊಯ್ಸಳರ ಸಾಮ್ರಾಜ್ಯ ವಿಸ್ತರಣೆಗಿಂತಲೂ , ಕಲೆ ಮತ್ತು ಶಿಲ್ಪಕೆಲಗಳಿಗೆ ಅವರಿತ್ತ ಪ್ರೋತ್ಸಾಹಕ್ಕಾಗಿ  ಈ ಸಾಮ್ರಾಜ್ಯದ ಬಗ್ಯೆ ಆಧುನಿಕ ಸಂಶೋಧನೆ ಬಹು ಮುಖ್ಯವಾಗುತ್ತದೆ. ದಕ್ಷಿಣದಿಂದ ಪಾಂಡ್ಯರು ಮತ್ತು ಉತ್ತರದ ಸೇವುಣರಿಂದ ಸದಾ ದಾಳಿಯ ಅಪಾಯವಿದ್ದರೂ, ಹೊಯ್ಸಳ ರಾಜ್ಯದಾದ್ಯಂತ ದೇವಾಲಯನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಪಷ್ಚಿಮ ಚಾಲುಕ್ಯರ ಶಿಲ್ಪಕಲಾಶೈಲಿಯ ಶಾಖೆಯಾಗಿ ಬೆಳೆದ ಈ ಕಾಲದ ಶೈಲಿಯಲ್ಲಿ ದ್ರಾವಿಡ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಈ ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. 

ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಮೃದುವಾದ ಕಲ್ಲಾಗಿದ್ದ ಬಳಪದ ಕಲ್ಲನ್ನು (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು. ಬೇಲೂರಿನ ಚೆನ್ನಕೇಶವ ದೇವಸ್ಥಾನ (೧೧೧೭), ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ (೧೧೨೧), ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ (೧೨೭೯), ಅರಸೀಕೆರೆ (೧೨೨೦), ಅಮೃತಪುರ (೧೧೯೬), ಬೆಳವಾಡಿ (೧೨೦೦) ಮತ್ತು ನುಗ್ಗೇಹಳ್ಳಿ (೧೨೪೬) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ ಗೋಡೆಗಳಲ್ಲಿ ಹಿಂದೂ ಪುರಾಣಗಳ ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ.

ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಪಾಠಶಾಲೆಗಳಾಗಿಯೂ ಉಪಯೋಗಿಸಲಾಗುತ್ತಿದ್ದ ದೇವಾಲಯಗಳಲ್ಲಿ ಬ್ರಾಹ್ಮಣ ಪಂಡಿತರು ಸಂಸ್ಕೃತದಲ್ಲಿ ಕಲಿಸಿದರೆ, ಜೈನ ಮತ್ತು ಬೌದ್ಡ ವಿಹಾರಗಳಲ್ಲಿ, ಮುನಿಗಳು ಶಿಷ್ಯರಿಗೆ ವಿದ್ಯೆ ಕಲಿಸುತ್ತಿದ್ದರು.  ಉಚ್ಚ ವಿದ್ಯಾಕೇಂದ್ರಗಳಿಗೆ ಘಟಿಕಾ ಎಂದು ಹೆಸರಿತ್ತು. ಪ್ರವರ್ಧಮಾನಕ್ಕೆ ಬರುತ್ತಿದ್ದ ಭಕ್ತಿ ಪಂಥವು ವಚನಗಳು ಮತ್ತು ದೇವರನಾಮಗಳಿಗೆ ಕನ್ನಡ ಭಾಷೆಯನ್ನು ಬಳಸಿತು. ಸಾಹಿತ್ಯ ಕೃತಿಗಳನ್ನು ತಾಳೆಗರಿಯ ಮೇಲೆ ರಚಿಸಲಾಗುತ್ತಿತ್ತು. ಹಿಂದಿನ ಶತಮಾನಗಳಲ್ಲಿ ಜೈನ ಸಾಹಿತ್ಯ ಕೃತಿಗಳು ಪ್ರಧಾನವಾಗಿದ್ದರೂ, ಹೊಯ್ಸಳರ ಕಾಲದಲ್ಲಿ ಶೈವ ಮತ್ತು ಬ್ರಾಹ್ಮಣ ಕೃತಿಗಳು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದವು. ಸಂಸ್ಕೃತ ಸಾಹಿತ್ಯದಲ್ಲಿ ಕಾವ್ಯ, ವ್ಯಾಕರಣ , ವಿಶ್ವಕೋಶ , ಕೈಪಿಡಿಗಳು , ಹಿಂದಿನ ಕೃತಿಗಳ ಮೇಲೆ ಭಾಷ್ಯಗಳು, ನಾಟಕಗಳು, ಗದ್ಯ ಕಥೆಗಳು ಇತ್ಯಾದಿಗಳು ರಚನೆಯಾದವು. ತಾಮ್ರ ಮತ್ತು ಶಿಲಾಶಾಸನಗಳು ಕನ್ನಡ, ಸಂಸ್ಕೃತ ಅಥವಾ ಇವೆರಡೂ ಭಾಷೆಯಲ್ಲಿರುತ್ತಿದ್ದವು. ಹಿನ್ನೆಲೆ , ರಾಜರ ಬಿರುದು ಬಾವಲಿಗಳು ಇತ್ಯಾದಿಗಳು ಸಂಸ್ಕೃತದಲ್ಲಿದ್ದರೆ, ಉಂಬಳಿಯ ವಿವರಗಳು, ಭೂಮಿಯ ತಪಶೀಲು, ಸರಹದ್ದು, ಸ್ಥಳೀಯ ಆಡಳಿತಾಧಿಕಾರಿಗಳು, ಕಂದಾಯ , ಉಂಬಳಿ ಪಡೆದವನ ಹಕ್ಕು ಮತ್ತು ಕರ್ತವ್ಯಗಳು, ಸಾಕ್ಷಿಗಳು ಈ ವಿವರಗಳು ಕನ್ನಡದಲ್ಲಿರುತ್ತಿದ್ದವು.ಈ ಮೂಲಕ ಶಾಸನದ ವಿವರಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೋಡಿಕೊಳ್ಳಲಾಗುತ್ತಿತ್ತು.
 




#Article 80: ಸ್ವಾಮಿ ವಿವೇಕಾನಂದ (170 words)


ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ ಯುವದಿನವೆಂದು ಆಚರಿಸಲಾಗುತ್ತದೆ.

ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು.

ರಾಮಕೃಷ್ಣರ ಒಡನಾಟ :

೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ ದಿ ಇಮಿಟೆಶ್ನ್ ಆಫ್ ಕ್ರೈಸ್ತ್ ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. 

೧೮೮೮ ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು ಇಂತಹ  ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು.

 




#Article 81: ಮೋಕ್ಷಗುಂಡಂ ವಿಶ್ವೇಶ್ವರಯ್ಯ (347 words)


ಸರ್ ಎಂ.ವಿ (ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ.

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ವಿಶ್ವೇಶ್ವರಯ್ಯನವರು ನಂತರ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ೧೮೮೪ರಲ್ಲಿ. ಇದಾದ ಮೇಲೆ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು.
ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್.

೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು

೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ  ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.

೧೯೨೭ - ೧೯೫೫ : ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ .




#Article 82: ವೀರೇಂದ್ರ ಹೆಗ್ಗಡೆ (247 words)


ಡಾ. ವೀರೇಂದ್ರ ಹೆಗ್ಗಡೆ ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ಸಮಾಜ ಸೇವೆಗೆ ಇವರು ಪ್ರಸಿದ್ಧರಾಗಿದ್ದಾರೆ. 

ವೀರೇಂದ್ರ ಹೆಗ್ಗಡೆಯವರು ನವೆಂಬರ್ ೨೫, ೧೯೪೮ ರಂದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ.ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದಲ್ಲಿ ಪ್ರತಿ ದಿನ ಆಗಮಿಸುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆಯುಂಟು. ಪ್ರತಿ ದಿನವೂ ಸುಮಾರು ೩೦೦೦ ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ೧೯೮೨ ರಲ್ಲಿ ಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬೆಳ್ತಂಗಡಿಯ ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿಂದ ಆರಂಭಗೊಂಡು ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹಗಳನ್ನು ಆರಂಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದಂಪತಿಗಳು ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ. ಈಗ 28 ಜಿಲ್ಲೆಗಳಲ್ಲಿ ಯೋಜನೆ ಇದೆ. ನಮ್ಮ ರಾಜ್ಯ ಅಲ್ಲದೇ ಪಕ್ಕದ ಕೇರಳ ರಾಜ್ಯಕ್ಕೂ ಯೋಜನೆ ವಿಸ್ತಾರಣೆ ಯಾಗಿದೆ. ಈಗಿನ ಧರ್ಮಸ್ಥಳ ಮೊದಲಿಗೆ ಕುಡುಮ ಎಂದು ಕರೆಯುತ್ತಿದ್ದರು ಕುಡುಮ ಗ್ರಾಮದಲ್ಲಿ ದಾನ ಧಮ

ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸಂಚಾರಿ ಆಸ್ಪತ್ರೆಗಳು, ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಸಂಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮಂಗಳೂರು), ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸಂಸ್ಥೆ-ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ - ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ....

ಕರ್ನಾಟಕದ ವಿಶಿಷ್ಟ ನೃತ್ಯ ಪದ್ಧತಿಯಾದ ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಂಡನ್‌ನ ಪ್ರತಿಷ್ಠಿತ ‘ಆಶ್ಡೆನ್ ಸಂಸ್ಥೆಯು ನೀಡುವ  ಜಾಗತಿಕ ಹಸಿರು ಆಸ್ಕರ್ ಎಂದೇ ಪರಿಗಣಿಸಲಾದ  ೨೦೧೨ರ ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’ಗೆ ಪಾತ್ರವಾಗಿದೆ.

(ಪೂರಕ ಮಾಹಿತಿ : ಜೀ ಕನ್ನಡ ವಾಹಿನಿ )




#Article 83: ಕೃಷ್ಣದೇವರಾಯ (329 words)


Caste Balija
 

ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ ಮೂರುರಾಯರಗಂಡ, ಕನ್ನಡರಾಜ್ಯ ರಮಾರಮಣ ಎಂದೂ, ಆಂಧ್ರದಲ್ಲಿ ಆಂಧ್ರಭೋಜ ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಮಕಾಲೀನ ಕವಿಗಳಿಂದ ಉರುಕಳ್ ವೈಭವ ನಿವಾಹ ನಿಧಾನ ಎಂದೂ  ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.

ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು , ತನ್ನ ರಾಜ್ಯವನ್ನು ಕೃಷ್ಣಾ ನದಿಯವರೆಗೂ ವಿಸ್ತರಿಸಿದನು. ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ  ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ  ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು.

ಕೃಷ್ಣದೇವರಾಯನ ಆಡಳಿತವು ಅನೇಕ ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ  ಕನ್ನಡ, ತೆಲುಗು ಅಥವಾ ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ.
ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.

 
ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು ಕೃಷ್ಣದೇವರಾಯನ ರಾಜಗುರುವಾಗಿದ್ದರು. ಕೃಷ್ಣದೇವರಾಯನ ದಿನಚರಿ ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ.

ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು ಮತ್ತು ತಮಿಳು ಸಾಹಿತ್ಯ ಬೇಗ ವರ್ಷ ಜಾರಿಗೆ ಅಭಿವೃದ್ದಿ ಆರಂಭಿಸಿತು.

ಸಂಸ್ಕೃತದಲ್ಲಿ, ಶ್ರೀವ್ಯಾಸತೀರ್ಥರು ತಾತ್ಪಾರ್ಯ-ಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ. ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು  ರಚಿಸಿದ್ದಾರೆ.

తెలుఁగు వల్లభుండఁ దెలుఁ గొకండ
యెల్ల నృపులగొలువ నెరుఁగ వే బాసాడి
దేశభాషలందుఁ తెలుఁగు లెస్స 

ತೆಲುಗು vallaBhunDa telugokanDa
yella nRpulu golva nerugavE ಬಸದಿ
dESa BhAShalandu ತೆಲುಗು lessa 
ಏಕೆ ಅಮುಕ್ತಮಾಲ್ಯದ ಆನ್ ಶ್ರೀ ಆಂಧ್ರ ವಿಷ್ಣುವಿನ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯ ಮೂಲಕ ತೆಲುಗು ಬರೆದ ಮಾಡಬೇಕು
ಉದ್ಧರಣ ಅರ್ಥ: ತೆಲುಗು ಒಂದು ಕೆಲಸವನ್ನು ಏಕೆ ನೀವು ಕೇಳಲು ವೇಳೆ; ನಾನು ತೆಲುಗು (ಅಂದರೆ, Teluguland ಸೇರಿರುವ) ಮತ್ತು Telugus ರಾಜ ತೆಲುಗು ಸ್ಟಫ್ (TelugO ಕಂದ) ಅಭಿನಯಿಸುವುದರೊಂದಿಗೆ ಭಾಷೆ ಆದ್ದರಿಂದ, ನೀವು ಅಡಿಯಲ್ಲಿ ಸೇವೆ ಎಲ್ಲಾ ರಾಜರು, ಅದಕ್ಕೆ.. ನೀವು ಎಲ್ಲಾ ರಾಷ್ಟ್ರೀಯ ಭಾಷೆಗಳಲ್ಲಿ ತೆಲುಗು ಉತ್ತಮ ಎಂದು ತಿಳಿಯುವುದಿಲ್ಲ ಮಾತನಾಡುವುದು. 




#Article 84: ಕೃಷ್ಣರಾಜಸಾಗರ (229 words)


ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ.

ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಕಣ್ಣಂಬಾಡಿ, ಕನ್ನಂಬಾಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಪಾಳೇಗಾರ ಆಳುತ್ತಿದ್ದನು. ಕ್ರಿ.ಶ.೧೬೦೦ ರಲ್ಲಿ ಮೈಸೂರು ದೊರೆ ರಾಜ ಒಡೆಯರ್ ಅವರು ಇದನ್ನು ಗೆದ್ದುಕೊಂಡರು. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣವಾಗಿದ್ದು  ಕಾವೇರಿ ನದಿಗೆ. ಚೋಳ ಸಾಮ್ರಾಜ್ಯದ ಕರಿಕಾಲ ಚೋಳ ಎಂಬ ಅರಸು ಪ್ರಥಮ ಬಾರಿಗೆ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿದ. ಕ್ರಿ.ಶ. ೧೦೬೮ ರಲ್ಲಿ ತಮಿಳುನಾಡಿನ ಕಲ್ಲಣೈ ಎಂಬಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ.

ಕೃಷ್ಣರಾಜ ಸಾಗರ ಜಲಾಶಯ ಕಟ್ಟಿದ್ದರಿಂದ 13,923 ಎಕರೆ ಖುಷ್ಕಿ ಭೂಮಿ, 9,520 ಎಕರೆ ತರೀ ಭೂಮಿ ಹಾಗೂ 8,500 ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಯಿತು. 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು. ಇದರಿಂದ 15 ಸಾವಿರ ಮಂದಿ ನಿರ್ವಸತಿಗರಾದರು. ಸಂತ್ರಸ್ತರಿಗೆ ಮೈಸೂರು ಸರ್ಕಾರವು ಮನೆ ನಿರ್ಮಿಸಿಕೊಳ್ಳಲು ಮುಫತ್ತಾಗಿ ನಿವೇಶನ ಒದಗಿಸಿತಲ್ಲದೆ ರಸ್ತೆ, ಬಾವಿ, ಪಾಠಶಾಲೆ, ಮಂದಿರಗಳನ್ನು ಕಟ್ಟಿಸಿಕೊಡಲಾಯಿತು.

ಉತ್ತರ ದಡದ ಮೇಲ್ಮಟ್ಟದ ನಾಲೆಗೆ ಜಲಾಶಯದಿಂದ ನೀರು ಹರಿಯಬಿಡಲು ನದಿ ಮಟ್ಟದಿಂದ 60 ಅಡಿ ಎತ್ತರದಲ್ಲಿ 6 ಅಡಿ ಅಗಲ, 12 ಅಡಿ ಎತ್ತರವುಳ್ಳ ಮೂರು ತೂಬುಗಳನ್ನು ಅಳವಡಿಸಲಾಗಿದ್ದು, 1.20ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವಂತೆ ಯೋಜಿಸಲಾಗಿದ್ದು, ಈಗ ಅದರ ವಿಸ್ತಾರ ಹೆಚ್ಚಿದೆ. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲೇ ದೊಡ್ಡದಾದ, ಆರಂಭದಲ್ಲಿ ‘ಆರ್ವಿನ್‌ ನಾಲೆ’ ಎಂದು ಕರೆಯಲಾಗುತ್ತಿದ್ದ ಈ ನಾಲೆಗೆ ನಂತರ ‘ವಿಶ್ವೇಶ್ವರಯ್ಯ ನಾಲೆ’ ಎಂದು ನಾಮಕರಣ ಮಾಡಲಾಗಿದೆ. ದಿವಾನ್‌ ಬಹದ್ದೂರ್‌ ಕೆ.ಆರ್‌. ಶೇಷಾಚಾರ್ಯ ಈ ನಾಲೆಯ ಯೋಜನೆ ರೂಪಿಸಿದ್ದು, ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷಿ ಭೂಮಿಗೆ ನೀರುಣಿಸುತ್ತದೆ. ಎಡದಂಡೆ ನಾಲೆ 1,500 ಹಾಗೂ ಬಲದಂಡೆ ನಾಲೆ 3,500 ಎಕರೆಗೆ ನೀರು ಒದಗಿಸುತ್ತವೆ. ಅಣೆಕಟ್ಟೆ ನಿರ್ಮಾಣಕ್ಕೆ ರೂ. 2.5 ಕೋಟಿ ಹಾಗೂ ಬಲದಂಡೆ (ಸರ್‌.ಎಂ. ವಿಶ್ವೇಶ್ವರಯ್ಯ) ಮತ್ತು ಎಡದಂಡೆ ನಾಲಾ ಕಾಮಗಾರಿಗಳಿಗೆ ಒಟ್ಟು ರೂ. 1.6 ಕೋಟಿ ಹಣವನ್ನು ಮೈಸೂರು ಸರ್ಕಾರ ಖರ್ಚು ಮಾಡಿದೆ.[೨]




#Article 85: ಒಡೆಯರ್ (173 words)


ಒಡೆಯರ್ ವಂಶ ೧೩೯೯ ರಿಂದ ೧೯೪೭ ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯಕ್ಕೆ ಮೈಸೂರು ಸಂಸ್ಥಾನ ಸೇರಿದ ನಂತರ ಒಡೆಯರ್ ವಂಶದ ಆಡಳಿತ ಕೊನೆಗೊಂಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ. ಒಡೆಯರ್ ದೊರೆಗಳು ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದವರು.

ಒಡೆಯರ್ ವಂಶದ ಸ್ಥಾಪಕ ವಿಜಯ, ದ್ವಾರಕೆಯಿಂದ ಮೈಸೂರಿಗೆ ಬಂದನೆಂದು ಹೇಳಲಾಗುತ್ತದೆ. ವಿಜಯ ನಂತರ ದೇವರಾಯ ಎಂಬ ಹೆಸರನ್ನು ಪಡೆದು ೧೩೯೯ ರಿಂದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಮುಂದಿನ ಎರಡು ಶತಮಾನಗಳ ಕಾಲ ಮೈಸೂರು ಸಂಸ್ಥಾನ ಒಡೆಯರ್ ವಂಶದ ಅನೇಕ ಅರಸರಿಂದ ಆಳಲ್ಪಟ್ಟಿತು. ಆದರೆ ಆಗಿನ ಕಾಲದಲ್ಲಿ ಮೈಸೂರು ಸಂಸ್ಥಾನ ಸ್ವತಂತ್ರ ರಾಜ್ಯವಾಗಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮಂತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ಮೂಲದ ಗಜಪಡೆಯ ಸೇನಾಧಿಪತಿ ಹೂವಾಡಿಗ ಮಲ್ಲಣ್ಣ ನವರು ದೇವರಾಯ ಒಡೆಯರ್ ಅವರಿಗೆ  ಸೈನ್ಯ ಬಲವನ್ನು ತುಂಬುವ ಮೂಲಕ ಸಹಾಯಕರಾದರು.ಅದರ ಜೊತೆಗೆ ಅಲಅಮೇಲಮ್ಮನ ಶಾಪವಿತ್ತು.

ಒಡೆಯರ್ ವಂಶ ೧೮ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊಂಡಿತು. ಹೈದರ್ ಅಲಿ ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರಂಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನಂತರ, ಮೈಸೂರಿ ನ ಅರಸರ ಪ್ರಭಾವ ಇಳಿದು ಸರ್ವಾಧಿಕಾರಿಯಾದ. ಹೈದರ್ ಅಲಿ ಸ್ವತಃ ಸಿಂಹಾಸನವನ್ನೇರದಿದ್ದರೂ ರಾಜ್ಯಭಾರದ ಸಂಪೂರ್ಣ ಅಧಿಕಾರ ಆತನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರನ ನಂತರ ಅವನ ಮಗ ಟಿಪ್ಪು ಸುಲ್ತಾನ್ ಸ್ವತಃ ಸಿಂಹಾಸನವನ್ನೇರಿ ೧೭೮೨ ರಿಂದ ೧೭೯೯ ರಲ್ಲಿ ಅವನ ಮರಣದವರೆಗೆ ಮೈಸೂರನ್ನು ಆಳಿದ.

ಒಡೆಯರ್ ರಾಜಮನೆತನವು ಹಲವು ಬಾರಿ ದತ್ತು ಮಕ್ಕಳನ್ನು ಸ್ವೀಕರಿಸಿದೆ. ಅದರಲ್ಲಿ ನಾಲ್ಕು ಮಂದಿ ಯದುವಂಶದವರೇ ಆಗಿದ್ದು ಮೂರು ಬಾರಿ ಹೊರಗಿನವರಾಗಿದ್ದಾರೆ.




#Article 86: ರಾಮಕೃಷ್ಣ ಮಿಷನ್ (1246 words)


ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸ
ರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು.
ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ   ನಡೆಯುತ್ತಿರುವ  ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ.

ರಾಮಕೃಷ್ಣ ಮಿಷನ್ ಮೇ 1, 1897 ರಂದು ಶ್ರೀ ರಾಮಕೃಷ್ಣರ  ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಲೋಕೋಪಯೋಗಿ, ಸ್ವಯಂಸೇವಕ ಸಂಸ್ಥೆ. 

ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ   ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ.
ಇದರ  ಪ್ರಧಾನ ಕಛೇರಿಯ ಅಸ್ತಿತ್ವ  ಹೌರಾ ದ ಬೇಲೂರು ಮಠ,  ಕೋಲ್ಕತಾ, ಭಾರತದಲ್ಲಿದೆ.   ಭಾರತದ ಸನಾತನ ಹಿಂದೂ ಧರ್ಮ ಮತ್ತು ವೇದಾಂತ ಆಧಾರ ಸ್ತಂಭಗಳು. 

ರಾಮಕೃಷ್ಣ   ಮಹಾಸಂಘದ ಕಾರ್ಯಕ್ರಮಗಳನ್ನು ರಾಮಕೃಷ್ಣ  ಮಠ ಮತ್ತು ರಾಮಕೃಷ್ಣ ಮಿಷನ್  ತನ್ನ ಕಾರ್ಯಭಾರದಲ್ಲಿ ನಿರ್ವಹಿಸುತ್ತದೆ, 19 ನೇ ಶತಮಾನದ ಸಂತರಾದ  ಶ್ರೀರಾಮಕೃಷ್ಣ  ಪರಮಹಂಸ ರ  ಪ್ರಭಾವ ಮತ್ತು ಅವರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ರೂಪಿಸಿದ ಒಂದು ಸಾಮಾಜಿಕ -ಧಾರ್ಮಿಕ ಕ್ಷೇತ್ರದ ಎರಡು ಪ್ರಮುಖ ಸಂಸ್ಥೆಗಳು. [3]

ಕರ್ನಾಟಕದಲ್ಲಿ ರಾಮಕೃಷ್ಣ ಮಠದ ಶಾಖೆಗಳು ಕೆಳಕಂಡಲ್ಲಿವೆ:

ಆಶ್ರಮವು ಮುಖ್ಯವಾಗಿ ಪುಸ್ತಕ ಪ್ರಕಟಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ೭೫ ವರ್ಷಗಳಿಗೂ ದೀರ್ಘವಾದ ಇತಿಹಾಸವಿರುವ ಈ ಸಂಸ್ಥೆಯು ಕನ್ನಡ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ.
ಮಠವು ಬಾಲಕರಿಗಾಗಿ 'ಶ್ರೀರಾಮಕೃಷ್ಣ ವಿದ್ಯಾಶಾಲೆ' ಎಂಬ ಆವಾಸಿಕ ಪದವೀಪೂರ್ವ ಮಧ್ಯಮಿಕ ಶಾಲೆಯನ್ನು ನಡೆಸುತ್ತಿದೆ. 'ವೇದಾಂತ ಕಾಲೇಜು' ಎಂಬ ಪುರುಷರ ಬಿ.ಎಡ್. ಕಾಲೇಜನ್ನೂ ಇದು ನಡೆಸುತ್ತದೆ. ಸುತ್ತಮುತ್ತಲ ಹಳ್ಳಿಗಳಲ್ಲಿ, ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟ, ಹೆಗ್ಗಡದೇವನ ಕೋಟೆ ಮೊದಲಾದ ಸ್ಥಳಗಳಲ್ಲಿ ಗಿರಿಜನ ಕಲ್ಯಾಣಕೇಂದ್ರಗಳನ್ನು ನಡೆಸುತ್ತಿದೆ.
'ವಿವೇಕ ಪ್ರಭ' ಆಶ್ರಮದಿಂದ ಪ್ರಕಟಗೊಳ್ಳುವ ಸಾಂಸ್ಕೃತಿಕ ಮಾಸಪತ್ರಿಕೆ.
ಸ್ವಾಮಿ ನಿತ್ಯಸ್ಥಾನಂದರು ಆಶ್ರಮದ ಈಗಿನ ಅಧ್ಯಕ್ಷರು.

ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ.ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ.

ಇದು ಬೆಂಗಳೂರಿನಲ್ಲಿರುವ ಇನ್ನೊಂದು ಆಶ್ರಮ. ಹಲವಾರು ಕಾರ್ಯಾಗಾರಗಳನ್ನು, ಶೀಲಸಂವರ್ಧನಾ ಶಿಬಿರಗಳನ್ನು ಇದು ನಡೆಸುತ್ತಿದೆ. ಬಡಜನರಿಗಾಗಿ ಸಂಚಾರಿ ಅಸ್ಪತ್ರೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ಸ್ವಾಮಿ ವೀತಭಯಾನಂದರು ಆಶ್ರಮದ ಈಗಿನ ಅಧ್ಯಕ್ಷರು.

ಕೊಡಗಿನ ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರವಾದ ಆಶ್ರಮ, 'ರಾಮಕೃಷ್ಣ ಸೇವಾಶ್ರಮ' ಎಂಬ ಸುಸಜ್ಜಿತ ಆಧುನಿಕ ಆಸ್ಪತ್ರೆಯ ಮೂಲಕ ಆರೋಗ್ಯಸೇವೆಯನ್ನು ಒದಗಿಸುತ್ತಿದೆ.
'ಬದುಕಲು ಕಲೆಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಅಧ್ಯಕ್ಷರು.

ಅನಾಥಾಶ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ತನ್ನ ಹಾಸ್ಟೆಲ್ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ಪೂರ್ಣಕಾಮಾನಂದರು ಆಶ್ರಮದ ಈಗಿನ ಅಧ್ಯಕ್ಷರು.

ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ.

ರಾಮಕೃಷ್ಣ ಮಠವು ಪಕ್ಕಾ ಸಂನ್ಯಾಸ ಸಂಸ್ಥೆಯಾದರೆ, ರಾಮಕೃಷ್ಣ ಮಿಷನ್ ಸನ್ಯಾಸಿಗಳಿಗೂ, ಗೃಹಸ್ಥರಿಗೂ ಮುಕ್ತವಾಗಿ ತೆರೆದುಕೊಂಡ ಸಾರ್ವಜನಿಕ ಸಂಸ್ಥೆಯಾಗಿದೆ .  ಶ್ರೀರಾಮಕೃಷ್ಣರಲ್ಲಿ ಮತ್ತು ಸಂದೇಶದಲ್ಲಿ  ಶ್ರದ್ಧೆಯುಳ್ಳ  ಮತ್ತು  ರಾಮಕೃಷ್ಣ ಮಿಷನ್ನಿನ ಅದರ್ಶ ಹಾಗೂ ಚಟುವಟಿಕೆಗಳಲ್ಲಿ ಒಲವು ಉಳ್ಳ ಯಾರು ಬೇಕಾದರೂ ಇದಕ್ಕೆ ಸದಸ್ಯರಾಗಬಹುದು. ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರ ರೀತಿಯ ಸಂಸ್ಥೆಗಳನ್ನು 

ನಡೆಸುವುದರಲ್ಲಿ ಸಂನ್ಯಾಸೇತರ ಜನರು ಸಂನ್ಯಾಸಿಗಳಿಗೆ ನೆರವಾಗುತ್ತಾರೆ. ರಾಮಕೃಷ್ಣ ಮಿಷನ್ 1901ರ ಮೇ 4ರಂದು ಒಂದು ಸಂಘವಾಗಿ ನೊಂದಾವಣೆಗೊಂಡಿದ್ದು , ಭಾರತದಾದ್ಯಂತ ಮತ್ತು ಇತರೆ ಕೆಲವು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ.

ಆಡಳಿತ

ರಾಮಕೃಷ್ಣ ಮಠವು ಆಡಳಿತವನ್ನು ಒಂದು ವಿಶ್ವಸ್ತ ಮಂಡಳಿಯು ನೋಡಿಕೊಳ್ಳುತ್ತದ್ದೆ. ಈ ಮಂಡಳಿಗೆ ಚುನಾಯಿತರಾದ ಅಧ್ಯಕ್ಷರು, ಒಬ್ಬರು ಅಥವಾ ಹೆಚ್ಚು ಮಂದಿ ಉಪಾಧ್ಯಕ್ಷರು, ಒಬ್ಬರು ಮಹಾಕಾರ್ಯದರ್ಶಿಗಳು, ಒಬ್ಬರು ಅಥವಾ ಹೆಚ್ಚು  ಮಂದಿ ಸಹಾಯಕ ಕಾರ್ಯದರ್ಶಿಗಳು ಮತ್ತು  ಒಬ್ಬರು ಖಜಾಂಚಿ ಇರುತ್ತಾರೆ.
ರಾಮಕೃಷ್ಣ ಮಿಷನ್ನಿನ ಆಡಳಿತವನ್ನು ಒಂದು ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ. ಅದರಲ್ಲಿ ರಾಮಕೃಷ್ಣ ಮಠದ ಧರ್ಮದರ್ಶಿಗಳೂ ಇರುತ್ತಾರೆ. ಬೇಲೂರಿನಲ್ಲಿ-ಜನಪ್ರಿಯವಾದ ಹೆಸರು ಬೇಲೂರು ಮಠ-ಇರುವ ರಾಮಕೃಷ್ಣ ಮಠದ ಮುಖ್ಯಸ್ತಾನವೇ ರಾಮಕೃಷ್ಣ ಮಿಷನ್ನಿನ ಮುಖ್ಯಸ್ತಾನವೂ ಹೌದು.
ಮಠದ ಅಥವಾ  ಮಿಷನ್ನಿನ  ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಪತ್ರಗಳನ್ನೂ ಅವುಗಳ  ಮುಖ್ಯ ಕಾರ್ಯನಿರ್ವಾಹಕರಾಗಿ  ಕೆಲಸ ಮಾಡುವ ಮಹಾಕಾರ್ಯದರ್ಶಿಗಳಿಗೆ ಸಂಭೋಧಿಸಿ ಬರೆಯಬೇಕು.
ರಾಮಕೃಷ್ಣ ಮಠದ ಶಾಖಾಕೇಂದ್ರದ ಮುಖ್ಯಸ್ಥರನ್ನು ಅಧ್ಯಕ್ಷರೆಂದು ಕರೆಯುತ್ತಾರೆ; ವಿಶ್ವಸ್ತ ಮಂಡಳಿಯು ಅವರನ್ನು ನೇಮಕ ಮಾಡುತ್ತದೆ.  ರಾಮಕೃಷ್ಣ ಮಿಷನ್ನಿನ ಆಡಳಿತ ಸಂಸ್ಥೆಯು ನೇಮಿಸುವ ನಿರ್ವಹಣಾ ಸಮಿತಿಯೊಂದು ರಾಮಕೃಷ್ಣ ಮಿಷನ್ನಿನ ಶಾಖಾ ಕೇಂದ್ರವನ್ನು ನೋಡಿಕೊಳ್ಳುತ್ತದೆ. ಈ ಸಮಿತಿಯು ಕಾರ್ಯದರ್ಶಿಗಳು ಆ ಶಾಖೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ.

ರಾಮಕೃಷ್ನ್ಣ ಮಠದ ಮತ್ತು ಮಿಷನ್ನಿನ ವಿಚಾರಪ್ರಣಾಳಿಯು, ಶ್ರೀರಾಮಕೃಷ್ಣರು ಬದುಕಿ ಬಾಳಿದ ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವೇದಾಂತದ ಶಾಶ್ವತ ತತ್ತ್ವಗಳನ್ನೊಳಗೊಂಡಿದೆ. ಈ ವಿಚಾರಪ್ರಣಾಳಿಗೆ ಮೂರು ಲಕ್ಷಣಗಳಿವೆ:  ವೇದಾಂತದ ಪ್ರಾಚೀನ ತತ್ವಗಳು ಆಧುನಿಕ ಪರಿಭಾಷೆಯಲ್ಲಿ  ಅಭಿವ್ಯಕ್ತವಾಗಿವೆ ಎ೦ಬ ಅರ್ಥದಲ್ಲಿ ಅದು ಆಧುನಿಕ; ಅದು ವಿಶ್ವಸಾರ್ವತ್ರಿಕ-ಎಂದರೆ, ಇಡೀ ಮನುಕುಲಕ್ಕೇ ಅದು 

ಉದ್ದಿಷ್ಟವಾದುದು; ಅದು ವ್ಯಾವಹರಿಕ-ಬದುಕಿನ ಸಮಸ್ಯೆಗಳನ್ನು ಪರಿಹರಿಸಲು  ಅದರ ತತ್ತ್ವಗಳನ್ನು ದೈನಂದಿನ ಜೀವನಕ್ಕೆ ಅನ್ವಯಿಸುವುದು ಸಾಧ್ಯ ಎಂಬ ಅರ್ಥದಲ್ಲಿ . ಈ ವಿಚಾರಪ್ರಣಾಳಿಯ ಮೂಲಭೂತ ತತ್ವಗಳನ್ನು ಕೆಳಗೆ ಕೊಟ್ಟಿದೆ:

ಅ . ಹಿಂದೂಧರ್ಮದೊಳಗಿನ ಸಾಮರಸ್ಯ :  ಶ್ರೀರಾಮಕೃಷ್ಣರು ಹಿಂದೂಧರ್ಮದ ಯಾವುದೇ ನಿರ್ದಿಷ್ಟ ಪಂಥದೊಡನೆ  ತಮ್ಮನ್ನು  ಗುರುತಿಸಿಕೊಳ್ಳಲಿಲ್ಲ; ಆದರೆ ಹಿಂದೂಧರ್ಮವನ್ನು ಇಡಿಯಾಗಿ ಒಪ್ಪಿಕೊಂಡರು. ಹಿಂದು ತತ್ವಶಾಸ್ತ್ರದ ದ್ವೈತ, ಅದ್ವೈತ ಮತ್ತಿತರ ತತ್ವಗಳು ಒಂದೇ ಸತ್ಯದ ಸಮಗ್ರ ಅನುಭವದ ವಿಭಿನ್ನ ಘಟ್ಟಗಳನ್ನು ಪ್ರತಿನಿಧಿಸುತ್ತವೆಯೆಂದೂ, ಎಲ್ಲ  ದೇವತೆಗಳೂ ಒಂದೇ ಪರಬ್ರಹ್ಮದ ವಿವಿಧ ಮುಖಗಳೆಂದು ಅವರು ತೋರಿಸಿಕೊಟ್ಟರು. ಅವರ ಸಂದೇಶ ಹಿಂದೂ ಪಂಥಗಳ ನಡುವೆ ಸಾಕಷ್ಟು  ಸಾಮರಸ್ಯವನ್ನು ಉಂಟುಮಾಡಿದೆ; ಸ್ವತಃ ಶ್ರೀರಾಮಕೃಷ್ಣರು ಹಿಂದೂಧರ್ಮದ ಐಕ್ಯದ   ಸಂಕೇತವಾಗಿದ್ದಾರೆ.
          
ಆ. ಜಾಗತಿಕ ಧರ್ಮಗಳ  ನಡುವಣ ಸಾಮರಸ್ಯ:  ಶ್ರೀರಾಮಕೃಷ್ಣರು ಧರ್ಮಗಳ ನಡುವಣ ಭಿನ್ನತೆಗಳನ್ನು    ಗುರುತಿಸಿದರು, ಆದರೆ ಈ ಭಿನ್ನತೆಗಳಿದ್ದೂ  ಕೂಡ ಅವು ಒಂದೇ ಅಂತಿಮ ಗುರಿಗೆ ನಮ್ಮನ್ನು ಕರೆದೊಯ್ಯುತ್ತವೆಯೆಂದು ಹೇಳಿದ್ದು ಅತ್ಯಂತ ಗಮನಾರ್ಹ. ಯತೋ ಮತ್, ತತೋ ಪಥ್ (ಎಷ್ಟು ಮತಗಳೋ ಅಷ್ಟು ಪಥಗಳು) ಎಂಬ ಪ್ರಸಿದ್ಧ ಸೂತ್ರದ ಅರ್ಥ ಇದೇ.
ಇದಲ್ಲದೆ, ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲ ಧರ್ಮಗಳೂ ಏಕೈಕ ಶಾಶ್ವತ ವಿಶ್ವಧರ್ಮದ ಅಭಿವ್ಯಕ್ತಿಗಳೆಂದು   ಪ್ರತಿಪಾದಿಸಿದರು, ಆಧ್ಯಾತ್ಮಿಕ ಜಗತ್ತಿನ ಎಲ್ಲ ಮೂಲಭೂತ ತತ್ವಗಳೂ,  ನಿಯಮಗಳೂ ವೇದಾಂತದಲ್ಲಿ ಕಂಡುಬರುವುದರಿಂದ ವೇದಾಂತವನ್ನು ಶಾಶ್ವತ ವಿಶ್ವಸಾರ್ವತ್ರಿಕ ಧರ್ಮವೆಂದು ಸ್ವಾಮೀಜಿ ಪರಿಗಣಿಸಿದರು. ಬೇರೆ           ಮಾತುಗಳಲ್ಲಿ ಹೇಳುವುದಾದರೆ, ವೇದಾಂತವು ಎಲ್ಲ ಧರ್ಮಗಳಿಗೂ ಸಮಾನವಾದ ತಳಹದಿಯಾಗಬಲ್ಲುದು.

ಅ . ಎಲ್ಲ ಕೆಲಸವೂ ಪವಿತ್ರ : ವೇದಾಂತದ ಪ್ರಕಾರ ಭೌತಿಕ ವಿಶ್ವ ಎಂಬುದು ಎನಿಸಿದ ಭಗವಂತನ ವಿರಾಟ್ ರೂಪದ ಅಭಿವ್ಯಕ್ತಿ. ಆದ್ದರಿಂದ, ಸೋದರಿ ನಿವೇದಿತಾ ಹೇಳಿದ್ದಂತೆ, “ಅಧ್ಯಾತ್ಮಿಕತೆಗೂ ಲೌಕಿಕತೆಗೂ ಏನೂ ಭೇದವಿಲ್ಲ” ಈ ಹೇಳಿಕೆಯ ಅರ್ಥವೇನೆಂದರೆ, ಎಲ್ಲ ದುಡಿಮೆಯೂ ಪವಿತ್ರವೇ ಆಗಿದೆ. ನೆಲ ಗುಡಿಸುವ ಅಥವಾ ಚಪ್ಪಲಿ ಹೊಲಿಯುವ ಸೇವಾ ಕಾರ್ಯವನ್ನು ಕೂಡ ದೇವರ ಕೆಲಸಗಳಂತೆಯೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು.

ಆ. ಕೈಂಕರ್ಯ ಭಾವದಿಂದ ದುಡಿಮೆ : ಭಗವದ್ಗೀತೆಯು ಸರ್ವವ್ಯಾಪಿಯಾದ ಭಗವಂತನೇ ಎಲ್ಲ ದುಡಿಮೆಯ ಅಂತಿಮ ಆಕರ ಮತ್ತು ಎಲ್ಲ ಯಜ್ಞಗಳ ಫಲಾನುಭವಿ ಎನ್ನುತ್ತದೆ . (9.24, 18.46). ಆದ್ದರಿಂದ, ಎಲ್ಲ ದುಡಿಮೆಯನ್ನು ಕೈಂಕರ್ಯವನ್ನಾಗಿ ಕೈಗೊಳ್ಳಬೇಕು ಮತ್ತು ಕರ್ಮಫಲಗಳನ್ನು ಭಗವಂತನಿಗೆ ಸಮರ್ಪಿಸಬೇಕು.
   
ಇ . ಮಾನವ ಸೇವೆಯೇ ದೇವರ ಸೇವೆ : ಸ್ವಾಮಿ ವಿವೇಕಾನಂದರು ತಮ್ಮ ಗುರುವಿನಿಂದ ಕಲಿತ ಮುಖ್ಯ  	ತತ್ವಗಳಲ್ಲೊಂದೆಂದರೆ: ಶಿವಜ್ಞಾನೇ ಜಿವಸೇವಾ (ಶಿವನೆಂದು ಭಾವಿಸಿ ಜೀವನಿಗೆ ಸೇವೆ ಸಲ್ಲಿಸುವುದು). ಮನುಷ್ಯನಲ್ಲಿ ದೈವಿಕತೆ ಅಂತರ್ನಿಹಿತವಾಗಿ ಇರುವುದರಿಂದ, ನಾವು ಮಾಡುವ ಮಾನವಸೇವೆ ವಾಸ್ತವವಾಗಿ ದೇವರ ಸೇವೆಯೇ ಆಗುತ್ತದೆ. ಸೇವೆಯ ಅಗತ್ಯವಿರುವ ವ್ಯಕ್ತಿಯನ್ನು ಕನಿಕರದ ವಸ್ತುವನ್ನಾಗಿ ಕಾಣುವುದರ ಬದಲು ಪೂಜೆಯ ವಸ್ತುವನ್ನಾಗಿ ಕಾಣಬೇಕು. ಇಂತಹ ದೃಷ್ಟಿಯು ಕೊಡುವವನು, ಪಡೆಯುವವನು ಇಬ್ಬರನ್ನೂ ದೊಡ್ಡವರನ್ನಾಗಿ ಮಾಡುತ್ತದೆ.

ಈ. ದೀನದಲಿತರ ಸೇವೆಯ ಮೇಲೆ ಒತ್ತು: ಭಾರತದಲ್ಲಿ ಬಡವರ ಮತ್ತು ದಲಿತರ ಪರವಾಗಿ ದನಿಯೆತ್ತಿ ಹೀಗೆ ಧೈರ್ಯವಾಗಿ ಮತನಾಡಿದ ಮೊತ್ತಮೊದಲನೆಯ ಧಾರ್ಮಿಕ ನಾಯಕರು ಸ್ವಾಮಿ ವಿವೇಕಾನಂದರು: “ಬಡವರಲ್ಲಿ, ದುರ್ಬಲರಲ್ಲಿ ಮತ್ತು ರೋಗಿಗಳಲ್ಲಿ ಶಿವನನ್ನು ಕಾಣುವವನು ನಿಜವಾದ ಅರ್ಥದಲ್ಲಿ ಶಿವನನ್ನು ಪೂಜಿಸುತ್ತಾನೆ ... ದೇಗುಲಗಳಲ್ಲಿ ಮಾತ್ರ ಶಿವನನ್ನು ಕಾಣುವವನಿಗಿಂತ ಇಂಥ ಮನೋಭಾವದ ವ್ಯಕ್ತಿಯನ್ನು  ಶಿವ ಮೆಚ್ಚಿಕೊಳ್ಳುತ್ತಾನೆ. ಬಡವರಿಗೆ ಅನ್ವಯಿಸುವಂತೆ ದರಿದ್ರನಾರಾಯಣ ಎಂಬ ಶಬ್ಧವನ್ನು ಟಂಕಿಸಿದವರು ಸ್ವಾಮೀಜಿ. ಬಡವರ ಬಗೆಗಿನ ಸ್ವಾಮಿಜಿಯ ಪ್ರೀತಿ ಮತ್ತು ಕಳಕಳಿ ರಾಮಕೃಷ್ಣ ಮಿಷನ್ನಿನ ಸೇವಾಕಾರ್ಯಾಕ್ರಮಗಳಲ್ಲಿ ಒಂದು ನಿರ್ದೇಶಕ ತತ್ತ್ವವಾಗಿ ಮುಂದುವರಿದುಕೊಂಡು ಬಂದಿದೆ.
   
ಉ . ದುಡಿಮೆಯೊಂದು ಅಧ್ಯಾತ್ಮಿಕ ಸಾಧನೆ : ಮೇಲಿನ ನಿಬಂದನೆಗಳನ್ನು  ಪೂರೈಸುತ್ತ ಮಾಡುವ ಯಾವುದೇ ಕೆಲಸ ಆಧ್ಯಾತ್ಮಿಕ ಸಾಧನೆಯಾಗಿ ಪರಿಣಮಿಸುತ್ತದೆ, ಅದರಿಂದ ಮನಸ್ಸು ಶುದ್ಧಿಗೊಳ್ಳುತ್ತದೆ ಮತ್ತು ಜೀವನದಲ್ಲಿ ಸುಪ್ತವಾಗಿರುವ ದೈವಿಕತೆ ಹೆಚ್ಚು ಹೆಚ್ಚಾಗಿ ಪ್ರಕಟವಾಗುತ್ತದೆ. ಹೀಗಾಗಿ, ಪೂಜಾತ್ಮಕ ಸೇವೆಯೆಂದು ಭಾವಿಸಿ ಮಾಡಿದ ಇಂಥ ಕೆಲಸದಿಂದ ಮಾಡಿದವನಿಗೇ ಅಧ್ಯಾತ್ಮಿಕವಾಗಿ ಲಾಭ ದೊರೆಯುತ್ತದೆ; ಅದೊಂದು ಆಧ್ಯಾತ್ಮಿಕ ಶಿಸ್ತು ಅಥವಾ ಯೋಗವಾಗುತ್ತದೆ. ಬಡವರಿಗೆ ಅನ್ನ, ಬಟ್ಟೆಗಳನ್ನು ಕೊಡುವುದು, ರೋಗಿಗಳ ಆರೈಕೆ ಮಾಡುವುದು ಮುಂತಾದ ರಾಮಕೃಷ್ಣ ಮಿಷನ್ನಿನ ಸೇವಾ ಚಟುವಟಿಕೆಗಳೆಲ್ಲ ನಡೆಯುವುದು  ಕಾಯಕವನ್ನು ಅಧ್ಯಾತ್ಮಿಕ ಶಿಸ್ತಾಗಿ ಕಾಣುವ (ಕರ್ಮಯೋಗದ) ಈ ಗ್ರಹಿಕೆಯಿಂದಲೇ . ಹೀಗಾಗಿ, ಮನುಷ್ಯನಲ್ಲಿರುವ ಭಗವಂತನ ಪೂಜೆಯಾಗಿ ಕೈ ಕೊಳ್ಳುವ ಸೇವೆ ಇಬ್ಬಗೆಯಲ್ಲಿ ಫಲ ನೀಡುತ್ತದೆ : ಸೇವೆ ಪಡೆಯುವ ವ್ಯಕ್ತಿಗೆ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅನುಕೂಲವಾಗುತ್ತದೆ ಮತ್ತು ಸೇವೆ ಮಾಡುವ ವ್ಯಕ್ತಿಗೆ ಅಧ್ಯಾತ್ಮಿಕವಾಗಿ ಅನುಕೂಲವಾಗುತ್ತದೆ.

ಸೇವಾಚಟುವಟಿಕೆಗಳ ಈ ದ್ವಿಮುಖ ಉದ್ದೇಶವನ್ನು, ವಾಸ್ತವವಾಗಿ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಇಡೀ ವಿಚಾರಪ್ರಣಾಳಿಯನ್ನು ಸ್ವಾಮಿ ವಿವೇಕಾನಂದರು ರೂಪಿಸಿದ ಅತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ-ಸ್ವಂತ ಮುಕ್ತಿಗಾಗಿ ಮತ್ತು ಲೋಕಹಿತಕ್ಕಾಗಿ-ಎಂಬ ಧ್ಯೇಯವಾಕ್ಯದಲ್ಲಿ ಅಡಕಗೊಳಿಸಲಾಗಿದೆ.

ಬದುಕಿನ ಒಂದು ವಿಧಾನವಾಗಿ ಸೇವೆ

ಹಿಂದೆ ವಿವರಿಸಿರುವ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಚಾರ ಪ್ರಣಾಳಿಗಳು ಅವುಗಳ ಬಹುಮಖ ಚಟುವಟಿಕೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಈ ಚಟುವಟಿಕೆಗಳು ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ,  ಸ್ವ-ಉದ್ಯೋಗ, ಮಹಿಳಾ ಯೋಗಕ್ಷೇಮ, ಅಂತರ್-ಧರ್ಮೀಯ ಅರಿವು, ನೈತಿಕ ಜೀವನ, ಅಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾದವರಿಗೆ ಪರಿಹಾರ ನೀಡುವ ಮಾನವೀಯ ಅಗತ್ಯ ಹಾಗೂ ಸಾಮಾಜಿಕ ಹಿತದಂತಹ ವಿಭಿನ್ನ ಕ್ಷೇತ್ರಗಳಲ್ಲಿ ಹರಡಿರುತ್ತವೆ. ಈ ಎಲ್ಲ ಚಟುವಟಿಕೆಗಳೂ ಸೇವೆಯಾಗಿ, ಮನುಷ್ಯನಲ್ಲಿ ಅಂತರ್ಗತನಾಗಿರುವ ದೇವರ ಸೇವೆಯಾಗಿ ನಡೆಯುತ್ತವೆ.

ಸೇವೆ ಎಂಬುದು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ನಿರ್ದಿಷ್ಟ ಚಟುವಟಿಕೆಯ ಪ್ರಕಾರಕ್ಕೆ ಸೀಮಿತವಾದುದಲ್ಲ; ಅದು ಒಂದು ಜೀವನವಿಧಾನ.  ಸಂನ್ಯಾಸಿಗಳು ಹೊರಗಿನ ಸಮಾಜದಲ್ಲಿ  ಯಾವುದೇ ಸೇವೆ ಸಲ್ಲಿಸದಿರುವ ಸಂದರ್ಭಗಳಲ್ಲಿ ಸಂನ್ಯಾಸಿವರ್ಗದೊಳಗೇ ಸೇವೆ ಸಲ್ಲಿಸುತ್ತಿರುತ್ತಾರೆ. ಇದಕ್ಕೆ ಯಾವುದೇ ಕಾಲದ, ವಯಸ್ಸಿನ ಮಿತಿ ಇರುವುದಿಲ್ಲ. ಅತೀವ ಅನಾರೋಗ್ಯ  ಇಲ್ಲವೆ ವೃದ್ಧಾಪ್ಯದಿಂದ ಅಸಮರ್ಥರಾಗುವವರೆಗೂ ಸಂನ್ಯಾಸಿಗಳು ವಿವಿಧ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.   ರಾಮಕೃಷ್ಣ ಮಠ ಮತ್ತು ಮಿಷನ್ನಿನ ಹಿಂದಿನ ಮಹಾಧ್ಯಕ್ಷರಾದ ಸ್ವಾಮಿ ರಂಗನಾಥಾನಂದಜಿಯವರು 98ರ ಇಳಿವಯಸ್ಸಿನಲ್ಲೂ ವಿವಿಧ ಬಗೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

ರಾಮಕೃಷ್ನ್ಣ ಮಠದಲ್ಲಿ ಪಾಲಿಸುವ ಜೀವನವಿಧಾನವಾಗಿ ಸೇವೆಯಲ್ಲಿ ಕೆಲವು ವಿಶಿಷ್ಟ ಲಕ್ಷಣಗಳಿವೆ; ಅವುಗಳಲ್ಲಿ ಕೆಲವನ್ನು ಮುಂದೆ ಉಲ್ಲೇಖಿಸಲಾಗಿದೆ :
 

ಮೊದಲೇ ಹೇಳಿದಂತೆ, ಶ್ರೀರಾಮಕೃಷ್ಣ ಆಂದೋಲನದಲ್ಲಿ ಅನುಸರಿಸುತ್ತಿರುವ ಸೇವಾದರ್ಶ, “ಶಿವಜ್ಞಾನೇ 	ಜೀವಸೇವಾ, ಎಂದರೆ, ಮನುಷ್ಯನೇ ಭಗವದ್ರೂಪವೆಂದು ತಿಳಿದು ಅವನಿಗೆ ಸೇವೆ ಸಲ್ಲಿಸುವುದು. ಆದರೂ 	ಎಲ್ಲರಿಗೂ-ಅದರಲ್ಲೂ ದರಿದ್ರರು ಮತ್ತು ರೋಗಿಗಳಗೆ-ಪೂಜಾ ಮನೋಭಾವದಿಂದ ಸೇವೆ ಸಲ್ಲಿಸುವುದು ಹೇಳಿದಷ್ಟು ಸುಲಭವಲ್ಲ. ಕಾಲ, ಶಕ್ತಿ, ಸುಖ ಇತ್ಯಾದಿ ಬಹಳಷ್ಟು ವಿಷಯಗಳ ತ್ಯಾಗವನ್ನು ಅಪೇಕ್ಷಿಸುತ್ತದೆ, ಈ ಸೇವಾದರ್ಶ, ಪ್ರತಿಫಲ, ಮನ್ನಣೆ ಅಥವಾ ಕೀರ್ತಿಯಾ  ಯಾವುದೇ ನಿರೀಕ್ಷೆಯಿಲ್ಲದೆ ರಾಮಕೃಷ್ಣ  ಆಂದೋಲನದ  ಸದಸ್ಯರು ಕೈಗೊಳ್ಳುವ  ಈ ತ್ಯಾಗಗಳೆ ಅವರ ಸೇವಾದರ್ಶನವನ್ನು  ಯಥಾರ್ಥಗೊಳಿಸುವಂಥವು.

ಸೇವೆ ಮತ್ತು ತ್ಯಾಗಗಳ ಹಿಂದಿನ ಪ್ರೇರಕಶಕ್ತಿಯೇ, ‘ಪ್ರೇಮ’.ರಾಮಕೃಷ್ಣ ಮಠ ಮತ್ತು ಮಿಷನ್ನಿನ ಮೂಲಕ ಪ್ರವಹಿಸುವ  ಪ್ರೇಮ ದೈವಿಕ ಪ್ರೇಮ-ಮನುಕುಲಕ್ಕೆ  ಶ್ರೀರಾಮಕೃಷ್ಣ, ಶ್ರೀಮಾತೆ  ಹಾಗೂ ಸ್ವಾಮಿ ವಿವೇಕಾನಂದರು ತೋರಿದ  ಪರಿಶುದ್ಧವೂ, ಅವಿನಾಶಿಯೂ ಆದ ಪ್ರೇಮ. ಈ ದೈವಿಕ  ಪ್ರೇಮವೇ  ಸನ್ಯಾಸಿ ಸೋದರರನ್ನೂ,  ಸಾಮಾನ್ಯ  ಭಕ್ತರನ್ನೂ ಒಗ್ಗೂಡಿಸಿ, ಸಂಘವನ್ನು ಒಟ್ಟಾಗಿ ಹಿಡಿದಿಟ್ಟಿದೆ.

ಯಾವುದೇ ಭೇದಗಳಿಲ್ಲದೆ ಸೃಷ್ಟಿಯ ಯೋಗಕ್ಷೇಮವನ್ನು ಗುರಿಯಾಗಿಟ್ಟುಕೊಂಡಿವೆ. ಬಡವ – ಬಲ್ಲಿದ, ಬ್ರಾಹ್ಮಣ – ಹರಿಜನ, ಹಿಂದುಗಳು, ಮುಸ್ಲಿಮರ, ಕ್ರೈಸ್ತರು - ಎಲ್ಲರೂ ಇಲ್ಲಿ ಒಬ್ಬರೆ ದೈವೀ ತಂದೆತಾಯಿಯರ ಮಕ್ಕಳಾಗಿ ಪರಿಗಣಿಸಲ್ಪಡುತ್ತಾರೆ. ಸಾಮಾಜಿಕ ಸಮಾನತೆಯನ್ನು ಉಂಟುಮಾಡುವುದು ಕೆಳಮಟ್ಟಕ್ಕೆ ಇಳಿಸುವ ಪ್ರಕ್ರಿಯೆಯಿಂದಲ್ಲ, “ಮೇಲ್ಮಟ್ಟಕ್ಕೆ ಏರಿಸುವ ಪ್ರಕ್ರಿಯೆಯಿಂದ, ಎಂದರೆ ಈಗಾಗಲೇ ಮೇಲಿರುವವರನ್ನು ಕೆಳಕ್ಕೆಳೆಯುವುದರಿಂದಲ್ಲ, ಕೆಳಗಿರುವವರನ್ನು ಮೇಲಕ್ಕೆತ್ತುವುದರಿಂದ ಎಂಬ ವಿವೇಕಾನಂದರ ನಿಲುವನ್ನು ಈ ಸಂಸ್ಥೆಗಳು ಅನುಸರಿಸುತ್ತವೆ.

 




#Article 87: ಚಂದ್ರಶೇಖರ ಕಂಬಾರ (158 words)


ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು.

ಡಾ. ಚಂದ್ರಶೇಖರ ಕಂಬಾರ (ಜನನ -  ಜನವರಿ ೨, ೧೯೩೭)  ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. VINAYRAJ SAJJANSHETTY
ದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು. ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ  ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು.  

 

ಕಂಬಾರು ಬರೆದ ಪುಸ್ತಕಗಳು ತುಂಬ.  ಅವರ ೧೦ಕಾವ್ಯ ಪುಸ್ತಕ, ೨೫ ನಾಟಕ ಪುಸ್ತಕ, ೧ ಮಹಾಕಾವ್ಯ,  ೫ ಕಾದಂಬರಿ ಅಲ್ಲದೆ ೧೭ ಬೇರೆಬೇರೆ ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನ ಪುಸ್ತಕಗಳು ಬಂದಿವೆ.ಅಭಿನಂನ ಗ್ರಂಥ:-ಸಿರಿಸಂಪಿಗೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ)




#Article 88: ಕೆ.ಎಸ್.ನರಸಿಂಹಸ್ವಾಮಿ (291 words)


ಕೆ. ಎಸ್. ನರಸಿಂಹಸ್ವಾಮಿ, ಕನ್ನಡಿಗರ ಪ್ರೇಮಕವಿ,ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, ಮೈಸೂರು ಮಲ್ಲಿಗೆಯ ಕರ್ತೃ.(ಜನವರಿ ೨೬ ೧೯೧೫-ಡಿಸೆಂಬರ್ ೨೮ ೨೦೦೩)
'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ  ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ  ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ  ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರ್ತಿಸಿದ್ದಾರೆ.

ಕೆಎಸ್‌ನ,{ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ}, ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು.
ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ  ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. ಮಲ್ಲಿಗೆಯ ಮಾಲೆ ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ  ಹೊರಬಂದಿದೆ.

ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ  ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು.

ಚೆಲುವು

ಮಾತು ಮುತ್ತು

ನಿಲ್ಲಿಸದಿರೆನ್ನ ಪಯಣವನು

ಅಂಥಿಂಥ ಹೆಣ್ಣು ನೀನಲ್ಲ!!

ದೀಪದ ಮಲ್ಲಿ

ಅಕ್ಕಿ ಆರಿಸುವಾಗ ...

ನಿನ್ನೊಲುಮೆಯಿಂದಲೆ

ಬಾರೆ ನನ್ನ ಶಾರದೆ

ನಿನ್ನ ಹೆಸರು

ರಾಯರು ಬಂದರು

ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು

ನಮ್ಮುರು ಚೆಂದವೋ ನಿಮ್ಮೂರು ಚೆಂದವೋ

ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ

ನಿನ್ನ ಪ್ರೇಮದ ಪರಿಯೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ




#Article 89: ಚದುರಂಗ (373 words)


ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು.

೧೯೧೬ರ ಜನವರಿ ೧ರಂದು ಹುಣಸೂರು ತಾಲೂಕು, ಕಲ್ಲಹಳ್ಳಿಯಲ್ಲಿ ಜನಿಸಿದ ಚದುರಂಗರು ಮೈಸೂರು ರಾಜಮನೆತನದ ಸಂಬಂಧಿ. ಇತರ ವಂಶದ ಪೂರ್ವಿಕರಲ್ಲಿ ಒಬ್ಬನಾದ ಮಂಗರಸ ಕವಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿತನಾಗಿದ್ದಾನೆ. ಮೈಸೂರಿನ ಮಹಾರಾಜ ಜಯ ಚಾಮರಾಜ ಒಡೆಯರ ಓರಗೆಯವರಾಗಿದ್ದ ಚದುರಂಗ ಮೈಸೂರಿನ ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಬೆಂಗಳೂರಿನ ಮೀಡಿಯಟ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು ಹೋಗಿ ಕಾರಣಾಂತರಗಳಿಂದ ಓದು ನಿಲ್ಲಿಸಿದರು.

ಬಾಲ್ಯದಲ್ಲೇ ಕತೆ ಕೇಳುವ ಹಾಗೂ ಆ ನಿಟ್ಟಿನಲ್ಲಿ ಯೋಚಿಸಿ ಬರೆಯುವ ಆಸಕ್ತಿ ಇದ್ದುದರಿಂದ ತಮ್ಮ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಪುರಾಣ ಕತೆಗಳನ್ನು ರಾಜ ಮನೆತನದ ಹುಡುಗರಿಗೆ ಹೇಳುತ್ತಿದ್ದರು. ಗಾಂಧೀ ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಎಡಪಂಥೀಯ ವಿಚಾರಧಾರೆಗೆ ಮನಸೋತಿದ್ದ ಚದುರಂಗ ಎಂ. ಎನ್. ರಾಯ್ ಅವರ ವಿಚಾರಗಳನ್ನು ತಲೆ ತುಂಬಿಸಿಕೊಂಡಿದ್ದರು. ರಾಜ ಮನೆತನದ ಸಿರಿ ಸಂಪತ್ತು, ಅಲ್ಲಿನ ಆಡಂಬರ ಚದುರಂಗರಿಗೆ ಇಷ್ಟವಾಗಲಿಲ್ಲವಾದ್ದರಿಂದ ಶ್ರೀಮಂತ ಹೆಣ್ಣು ತಂದು ಮದುವೆ ಮಾಡಬೇಕೆಂಬ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ತಮ್ಮಿಷ್ಟವಾದವರನ್ನು ಮದುವೆಯಾದರು. ಸಂಪ್ರದಾಯ ಹಾಗೂ ಸಾಮಾಜಿಕ ಕಟ್ಟು ಪಾಡುಗಳನ್ನು ಮುರಿದು ಸಂಗಾತಿ ಆಯ್ಕೆ ಮಾಡಿಕೊಂಡ ಚದುರಂಗ ಬದುಕನ್ನು ಹೋರಾಟವಾಗಿ ಸ್ವೀಕರಿಸಿ ನೋವುಂಡರು. ಮೈಸೂರು ತೊರೆದು ಹುಟ್ಟೂರು ಕಲ್ಲಹಳ್ಳಿಯಲ್ಲಿ ಬೇಸಾಯಕ್ಕೆ ತೊಡಗಿದರು. ಅಲ್ಲಿನ ಅನುಭವಗಳೇ ಮುಂದೆ ಕತೆ, ಕಾದಂಬರಿಗಳಲ್ಲಿ ಮೈತಾಳಿದವು. ಹಳ್ಳಿಯಲ್ಲೇ ಬರಹ ಆರಂಭಿಸಿ ಸಾಹಿತ್ಯದ ಒಡನಾಟವಿಟ್ಟುಕೊಂಡ ಚದುರಂಗರಿಗೆ ಕುವೆಂಪು, ಮಾಸ್ತಿ, ಗೊರೂರು ಪ್ರಭಾವ ಬೀರಿದರು. ಅನಕೃ, ತರಾಸು ಅವರ ಒಡನಾಟದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿಗೂ ಪಾಲ್ಗೊಂಡರು.

ಪದವಿ ಅಧ್ಯಯನಕ್ಕೆಂದು ಹೋದ ಚದುರಂಗರಿಗೆ ಚಿತ್ರರಂಗದ ಸಂಪರ್ಕವಾಯಿತು. ಆಗಿನ ಪ್ರಖ್ಯಾತ ಸಿನಿಮಾ ಪತ್ರಿಕೆ Motion pictures magazineಯಲ್ಲಿ Random shots ಎಂಬ ಅಂಕಣವನ್ನು ಬರೆಯಲು ಪ್ರಾರಂಭಿಸಿದರು. ಮಾಯಾ ಎಂಬ ಇಂಗ್ಲಿಷ್ ಚಿತ್ರಕ್ಕೆ  ಸಹನಿರ್ದೇಶನ ಮಾಡಿದರು. 

೧೯೪೮ ರಲ್ಲಿ ಸೋದರ ಸಂಬಂಧಿ ಕೆಂಪರಾಜ್ ಅರಸ್ ಅವರಿಗಾಗಿ ಭಕ್ತ ರಾಮದಾಸ ಎಂಬ ಚಿತ್ರವನ್ನು ನಿರ್ದೇಶಿದರು.  ಈ ಚಿತ್ರಕ್ಕೆ ಚಿತ್ರಕಥೆ , ಸಂಭಾಷಣೆಗಳಲ್ಲದೆ ಎರಡು ಗೀತೆಗಳನ್ನು ರಚಿಸಿದರು. ೧೯೬೮ರಲ್ಲಿ ತಮ್ಮ ಕಾದಂಬರಿಯನ್ನು ಆಧರಿಸಿದ ಸರ್ವಮಂಗಳ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಚದುರಂಗರ ಕಾದಂಬರಿ  ಉಯ್ಯಾಲೆ ಅದೇ ಹೆಸರಿನಿಂದ ಚಲನಚಿತ್ರವಾಯಿತು. ಉಯ್ಯಾಲೆ ಚಲನಚಿತ್ರವನ್ನು ಲಕ್ಷ್ಮೀ ನಾರಾಯಣ್ ನಿರ್ದೇಶಿಸಿದರು. ಇದಕ್ಕೆ ಚದುರಂಗರು ಸಂಭಾಷಣೆ ಬರೆದಿದ್ದರು. ಅದರಲ್ಲಿ ರಾಜಕುಮಾರ್, ಕಲ್ಪನಾ ಪ್ರಮುಖ ಪಾತ್ರವಹಿಸಿದ್ದರು. ಇದು ರಾಜ್ಯ ಪ್ರಶಸ್ತಿ ಪಡೆಯಿತು.  ಇದು ಹೊಸ ಅಲೆಯ ಚಿತ್ರಗಳ ಗುಂಪಿಗೆ ಸೇರಿ ಕಲಾತ್ಮಕ ಚಿತ್ರವೆನಿಸಿತು.

ಇದಲ್ಲದೆ, ಕುವೆಂಪು ಮತ್ತು  ನೃತ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರ ಕುರಿತಾಗಿ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ :

`ನಾಲ್ಕುಮೊಳಭೂಮಿ' ಕನ್ನಡದ ಉತ್ತಮ ಕತೆಗಳಲ್ಲಿ ಒಂದು. ಕಥೆಯೊಳಗೊಂದು ಕಥಾ ತಂತ್ರದ ಬಳಕೆಯಿಂದ ಗ್ರಾಮ ಹಾಗೂ ನಗರ ಬದುಕಿನ ಅನ್ಯಾಯಗಳನ್ನು ಸಾಂಕೇತಿಸುವ ಈ ಕತೆ ಭೂವಿವಾದಕ್ಕೆ ಪರಿಹಾರ ಸೂಚಿಸುತ್ತದೆ.

ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ಇವರ 'ವೈಶಾಖ' ಕಾದಂಬರಿಗೆ ೧೯೮೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ,(೧೯೭೮ ಮತ್ತು ೧೯೯೪ರಲ್ಲಿ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್(೧೯೯೩) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಭಾಗ್ಯ ಇವರದಾಗಿತ್ತು.




#Article 90: ಪ್ರಕಾಶ್ ಪಡುಕೋಣೆ (308 words)


ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು. ಇವರು ಕರ್ನಾಟಕದವರು.  ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಶ್ಟಿತ ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು.  ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ.  ಪ್ರತಿಶ್ಟಿತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಠಿ ಜೊತೆಗೆ ಸೇರಿ ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ಇದನ್ನು ಭಾರತದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ.  ಇವರಿಗೆ ೧೯೮೨ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.  ದೇವ್ ಎಸ್. ಕುಮಾರ್ ರವರು ಪ್ರಕಾಶ್ ಪಡುಕೋಣೆಯವರ ಜೀವನ ಚರಿತ್ರೆ ಟಚ್ ಪ್ಲೇ ಯನ್ನು ರಚಿಸಿದ್ದಾರೆ.  ಇದು ಬ್ಯಾಡ್ ಮಿಂಟನ್ ಆಟಗಾರರ ಎರಡನೇ ಜೀವನ ಚರಿತ್ರೆ.

ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಮೈಸೂರು ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು. 

೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಹಾಗು ಡ್ಯಾನಿಶ್ ಓಪನ್ ಅನ್ನು ಗೆದ್ದರು. ಅವರು ತಮ್ಮ ವೃತ್ತಿ ಜೀವನದ ಬಹಳ ಕಾಲವನ್ನು ಡೆನ್ಮಾರ್ಕ್ನಲ್ಲಿ ತರಬೇತಿ ಪಡೆಯುವಲ್ಲಿ ಕಳೆದರು. ಈ ಸಮಯದಲ್ಲಿ ಅವರು ಅನೇಕ ಯುರೋಪಿನ ಆಟಗಾರರ ಜೊತೆ ನಿಕಟ ಸಂಬಂದ ಹೊಂದಿದ್ದರು.  ಇವರಲ್ಲಿ ಡೆನ್ಮಾರ್ಕ್ ನ ಖ್ಯಾತ ಆಟಗಾರ ಮಾರ್ಟಿನ್ ಫ್ರಾಸ್ಟ್ ಒಬ್ಬರು.

೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ನಡೆಸುತ್ತಾ ಬಂದಿದ್ದಾರೆ.

ಪ್ರಕಾಶ್ ರವರು ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವಥ ಬ್ರಾಹಣ ಕುಟುಂಬದಲ್ಲಿ ಜನಿಸಿದರು.

ಪ್ರಸ್ಥ್ಹುತ ಬೆಂಗಳೂರಿನಲ್ಲಿ ಪತ್ನಿ ಉಜ್ವಲರ ಜೊತೆ ಜೀವಿಸುತ್ತಿದ್ದಾರೆ.  ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ.  ಇವರಿಗೆ ಇಬ್ಬರು ಪುತ್ರಿಯರು.  ಮೊದಲ ಪುತ್ರಿ ದೀಪಿಕಾ ಪಡುಕೋಣೆ ಖ್ಯಾತ ನಟಿ ಹಾಗು ರೂಪದರ್ಶಿ.  ಇವರ ಎರಡನೇ ಪುತ್ರಿ ಗೋಲ್ಫ್  ಆಟಗಾರ್ತಿ.

೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್‌ಪ್ಲೇ' ಬಿಡುಗಡೆ ಹೊಂದಿತು.




#Article 91: ರಾಜ್‌ಕುಮಾರ್ (162 words)


ಡಾ. ರಾಜ್‌ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ..

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ೧೯೨೯ರ ಏಪ್ರಿಲ್ ೨೪ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ). ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‌ಕುಮಾರ್. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, ಶಿವರಾಜ್‌ಕುಮಾರ್ ಪುತ್ರಿಯಾದ ನಿವೇದಿತಾ, ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ.




#Article 92: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (281 words)


'ಬನ್ನೇರುಘಟ್ಟದ ಅರಣ್ಯ ಪ್ರದೇಶದ ಮುಖ್ಯ ಆಕರ್ಷಣೆಯೇ ಅಲ್ಲಿರುವ ಹುಲಿ ಮತ್ತು ಸಿಂಹಗಳು. ಪ್ರಕೃತಿಯ ಮಡಿಲಲ್ಲಿ ಸಿಂಹಗಳನ್ನು ನೋಡಬಹುದಾದ ಭಾರತದ ಕೆಲವೇ ಪ್ರದೇಶಗಳಲ್ಲಿ ಇದೂ ಒಂದಾಗಿದೆ. ಅರಣ್ಯ ಇಲಾಖೆಯು ಸಿಂಹ ಮತ್ತು ಹುಲಿಗಳ ವೀಕ್ಷಣೆಗಾಗಿ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಸಿಂಹಗಳ ಘರ್ಜನೆ ಕೇಳುವುದರೊಂದಿಗೆ ಇತರ ಪ್ರಾಣಿಗಳನ್ನೂ ನೋಡುವ ಸೌಭಾಗ್ಯ ಸಫಾರಿ ಮಾಡುವ ಪ್ರವಾಸಿಗರಿಗೆ ಇಲ್ಲಿ ಸಿಗುವುದು.

ಇಲ್ಲಿರುವ ಪ್ರಾಣಿಗಳು ಸರ್ಕಸ್ ಗಳಿಂದ ರಕ್ಷಿಸಲ್ಪಟ್ಟಿರುವ ಕೆಲವಾದರೆ ದೇಶದ ಇತರೆಡೆಗಳಿಂದಲೂ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ.

ಈ ಉದ್ಯಾನವನದ ಮುಖ್ಯ ಆಕರ್ಷಣೆ ಎಂದರೆ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನ. 7.5 ಎಕರೆ ವಿಸ್ತೀರ್ಣದಲ್ಲಿ ವಿಶೇಷವೆನ್ನಿಸುವ ಈ ಚಿಟ್ಟೆ ಉದ್ಯಾನವನವನ್ನು ಕೇಂದ್ರ ಸಚಿವ ಕಪಿಲ ಸಿಬಲ್ 2006 ರಲ್ಲಿ ಉದ್ಘಾಟಿಸಿದ್ದಾರೆ. ಚಿಟ್ಟೆಗಳ ಆಕರ್ಷಣೆಗೆಂದೇ ಈ ಪ್ರದೇಶದಲ್ಲಿ ವಿಶಿಷ್ಟ ಉಷ್ಣವಲಯದ ಪರಿಸರ ರೂಪುಗೊಳ್ಳಲೆಂದು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಸುಮಾರು 20 ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಇಲ್ಲಿ ನಾವು ಕಾಣಬಹುದು.

ಬನ್ನೇರುಘಟ್ಟ ಹುಲಿ ಮತ್ತು ಸಿಂಹಧಾಮ ಹುಲಿ, ಸಿಂಹ ಮತ್ತು ಇತರ ವನ್ಯಜೀವಿಗಳ ಅಭಯಾರಣ್ಯ. ಇಲ್ಲಿನ ಮಿನಿ-ಸಫಾರಿ ಅಭಯಾರಣ್ಯದ ವ್ಯವಸ್ಥೆಗೆ ಹಣವನ್ನೊದಗಿಸುತ್ತದೆ. ಭಾರತೀಯ ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಬನ್ನೇರ್ಘಟ್ಟದ ಹುಲಿ ಮತ್ತು ಸಿಂಹಧಾಮ ಉತ್ತಮವಾದ ವ್ಯವಸ್ಥೆಯುಳ್ಳದ್ದೆಂದು ಹೆಸರಾಗಿದೆ. ನಿರ್ಲಕ್ಷ್ಯತೆಯ ಕೆಲ ಆಪಾದನೆಗಳಿದ್ದು ಕೆಲವು ದಾರುಣ ಘಟನೆಗಳು ನಡೆದಿವೆಯಾದರೂ ಒಟ್ಟಾರೆ ಒಳ್ಳೆಯ ಹೆಸರನ್ನು ಪಡೆದಿರುವ ವನ್ಯಧಾಮವಾಗಿದೆ.

ಬನ್ನೇರುಘಟ್ಟ ಮೃಗಾಲಯ ಇಲ್ಲಿನ ಮುಖ್ಯ ಪ್ರವಾಸಿ ಆಕರ್ಷಣೆ. ಸರೀಸೃಪ ಉದ್ಯಾನ ಮತ್ತು ಒಂದು ಸಣ್ಣ ರ೦ಗಮ೦ದಿರವನ್ನೂ ಇದು ಹೊಂದಿದೆ. ಮೃಗಾಲಯಕ್ಕೆ ಹೊ೦ದಿಕೊ೦ಡ೦ತೆಯೇ ಪ್ರಾಣಿಶಾಸ್ತ್ರಕ್ಕೆ ಸ೦ಬ೦ಧಪಟ್ಟ ಒಂದು ವಸ್ತುಸ೦ಗ್ರಹಾಲಯವೂ ಇಲ್ಲಿದೆ.

೧೯೯೨ ರಲ್ಲಿ ವನ್ಯಧಾಮದ ಒಂದು ಹುಲಿ ಮಗುವನ್ನು ಅಪಹರಿಸಿದಾಗ ಅರಣ್ಯ ಇಲಾಖೆಯ ನಿರ್ಲಕ್ಷ್ಯತೆ ಆಪಾದನೆಗೆ ಒಳಗಾಗಿತ್ತು. ಈ ದಾರುಣ ಘಟನೆಯಿಂದ ಮಿನಿ-ಸಫಾರಿಯ ಸುರಕ್ಷತೆ ಮತ್ತು ವ್ಯವಸ್ಥೆಯ ಬಗ್ಗೆ ವಿವಾದ ಸೃಷ್ಟಿಯಾದದ್ದುಂಟು.

ಪ್ರವಾಸಿಗರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುತ್ತ ಕಾಡಾನೆಗಳು, ಕಾಡುಹಂದಿ, ಮಚ್ಚೆಯುಳ್ಳ ಜಿಂಕೆ ಸೇರಿದಂತೆ ವಿವಿಧ ಜಾತಿ ಜಿಂಕೆ, ಸಾಂಬಾರ್, ಗುಳ್ಳೆನರಿ, ಕರಡಿ, ಕಾಡು ಹಂದಿ, ಲಂಗೂರ್  ಗಳು ಮತ್ತು ಕೋತಿಗಳನ್ನು ನೋಡಬಹುದು. ಜಂಗಲ್ ಸಫಾರಿಯೊಂದಿಗೆ ಆನೆ ಸವಾರಿ ಕೂಡ ಇಲ್ಲಿ ಪ್ರವಾಸಿಗರು ಮಾಡಿ ಆನಂದಿಸಬಹುದು.

ಬನ್ನೇರಘಟ್ಟ ಅರಣ್ಯ ಪ್ರದೇಶದಲ್ಲಿಯೇ ಹುಟ್ಟಿದ ಸ್ವರ್ಣಮುಖಿ ಹೊಳೆಯು ಅರಣ್ಯದುದ್ದಕ್ಕೂ ಪ್ರಶಾಂತವಾಗಿ ಹರಿಯುತ್ತದೆ. ಅರಣ್ಯದಲ್ಲಿನ ಹಲವಾರು ದೊಡ್ಡ ದೊಡ್ಡ ಮರಗಳಿಂದ ಉದುರುವ ಎಲೆಗಳ ಸುಂದರ ಶಬ್ದದ ನಿನಾದ ಹೊಳೆಯುದ್ದಕ್ಕೂ ಪ್ರವಾಸಿಗರು ಕೇಳಿ ಆನಂದಿಸಬಹುದು. ಇಲ್ಲಿ ಚಂಪಕ ಧಾಮ ಸ್ವಾಮಿಯ ಸುಂದರ ದೇವಸ್ಥಾನ ಇದ್ದು, ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ, ಶ್ರೀ ದೇವಿ ಮತ್ತು ಭೂದೇವಿಯರಮೂರ್ತಿಗಳಿವೆ.

ಬೆಂಗಳೂರು ವಾಸಿಗಳಿಗಂತೂ ಪಿಕ್ನಿಕ್ ಸ್ಪಾಟ್ ಆಗಿರುವ ಬನ್ನೇರಘಟ್ಟ ಝೂ (ಪ್ರಾಣಿ ಸಂಗ್ರಹಾಲಯ) ನೋಡುವ ಮಜದೊಂದಿಗೆ ಮಕ್ಕಳೊಂದಿಗೆ ಸಫಾರಿ ಕೂಡ ಮಾಡಬಹುದು. ಬೇರೆಡೆ ಇರುವವರು ಬೆಂಗಳೂರಿಗೆ ಬಂದರೆ ನೆನಪಿಟ್ಟುಕೊಂಡು ಬನ್ನೇರಘಟ್ಟಕ್ಕೆ ಹೋಗಲೇಬೇಕು.




#Article 93: ಜಾವಗಲ್ ಶ್ರೀನಾಥ್ (125 words)


ಜಾವಗಲ್ ಶ್ರೀನಾಥ್ (ಜನನ: ಆಗಸ್ಟ್ ೩೧, ೧೯೬೯) ಭಾರತದ ನಿವೃತ್ತ  ಕ್ರಿಕೆಟ್ ಆಟಗಾರರು. ೨೦೦೩ರಲ್ಲಿ ಅಂತಾರಾಷ್ಟ್ರೀಯ  ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು. ಕ್ರೀಡಾಭಿಮಾನಿಗಳ ಪಾಲಿಗೆ 'ಮೈಸೂರು ಎಕ್ಸ್‌ಪ್ರೆಸ್' ಎಂದೇ ಖ್ಯಾತರಾದವರು. 

ಮೈಸೂರಿನಲ್ಲಿ ಜನಿಸಿದ ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಇವರು, ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ೧೯೯೧ ರಲ್ಲಿ ಆಡಿದರು. ತಮ್ಮ ಮೊದಲ ಏಕದಿನ ಪಂದ್ಯವನ್ನೂ ಅದೇ ವರ್ಷದಲ್ಲಿ ಆಡಿದರು. ಭಾರತದ ಪಿಚ್‍ಗಳು ಮುಖ್ಯವಾಗಿ ಸ್ಪಿನ್‍ಗೆ ಸಹಾಯ ಮಾಡುವುದರ ಕಾರಣ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆಯಾಗಿದೆ. ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್  ಪಂದ್ಯಗಳಲ್ಲಿ ೨೩೬ ಮತ್ತು ಏಕದಿನ ಪಂದ್ಯಗಳಲ್ಲಿ ೩೧೫ ವಿಕೆಟ್‍ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದಿದ್ದಾರೆ. 

ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡ್ನ ಕೌಂಟಿ  ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ  ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ ಪಿಂಚ್ ಹಿಟರ್ ಕೆಲಸವನ್ನು ನಿರ್ವಹಿಸಿರುವುದೂ ಉಂಟು!




#Article 94: ಪ್ರಸನ್ನ (363 words)


ಪ್ರಸನ್ನ ( ಮಾರ್ಚ್ ೨೩, ೧೯೫೧)  ಕನ್ನಡ ರಂಗಭೂಮಿ ನಿರ್ದೇಶಕರು ಮತ್ತು ಕ್ರಿಯಾಶೀಲ ರಂಗ ಕಾರ್ಯಕರ್ತರು.  

ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ. ಈ ಸಂದರ್ಭದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖರ ಸಾಲಿಗೆ ಸೇರುವ ಪ್ರಸನ್ನ ಅವರು ಹುಟ್ಟಿದ್ದು ಮಾರ್ಚ್ 23, 1951ರಂದು  ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದರೂ ಅವರಿಗೆ ರಂಗಭೂಮಿಯಲ್ಲಿ ಅಪಾರವಾದ ಆಸಕ್ತಿ ತುಂಬಿಕೊಂಡಿತ್ತು.

ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಂಪಾದಿಸಿದ ಕೀರ್ತಿ ಅವರದು. ಪ್ರಸನ್ನರು ದೆಹಲಿಯ  ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು.  ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು.

ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ  ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿದ ಪ್ರಸನ್ನರಿಂದ  ಮೂಡಿಬಂದದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಅದರ ಶಾಖೆಗಳು ಮೂಡಿದವು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಅವರು ಜನಾಂದೋಲನವನ್ನು ಕೈಗೊಂಡರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು  ವೇದಿಕೆ ಸ್ಥಾಪಿಸಿದ್ದೇ ಅಲ್ಲದೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ  ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. 

ಪ್ರಸನ್ನರು ನಿರ್ದೇಶಿಸಿದ ನಾಟಕಗಳಲ್ಲಿ  ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್,ಮಹಿಮಾಪುರ  ಮುಂತಾದವು ಪ್ರಮುಖವೆನಿಸಿವೆ. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕಾಗಿ ಅವರು ವ್ಯಾಪಕವಾಗಿ ಪ್ರವಾಸ ಕೈಗೊಂಡಿದ್ದರು.

ಪ್ರಸನ್ನರು ಸೈದ್ಧಾಂತಿಕ ತಿಳುವಳಿಕೆಗಾಗಿ 'ಸಮುದಾಯ ವಾರ್ತಾಪತ್ರ'ವನ್ನು ಸ್ಥಾಪಿಸಿದರು.  

ಪ್ರಸನ್ನರು ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ದೂರದರ್ಶನಕ್ಕೆ ಅಳವಡಿಸಿದರಲ್ಲದೆ,

ಮೈಸೂರಿನ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನೂ ಹೊತ್ತಿದ್ದ ಪ್ರಸನ್ನರು ಅಲ್ಲಿ  ಹಲವಾರು ನಾಟಕಗಳ ನಿರ್ದೇಶನ ಮಾಡಿದರು.  ರಂಗಾಯಣದಲ್ಲಿ ಅವರು ನಿರ್ವಹಿಸಿದ ಕಾರ್ಯಗಳು ರಂಗಭೂಮಿಗೆ ಹೊಸ ಆಯಾಮವನ್ನು ಸೃಷ್ಟಿಸಿಕೊಟ್ಟವು.  ಪ್ರಸನ್ನರು ಸ್ವಯಂ ರಚಿಸಿದ  ನಾಟಕಗಳು ಉಳಿ, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು.  

ಸಂಘಟನಾ ಚತುರತೆ, ಹೊಸ ಚಿಂತನೆ ಮತ್ತು ಸೃಜನಶೀಲತೆಗಳಿಗಾಗಿ ಪ್ರಸನ್ನರು ಹೆಸರಾಗಿದ್ದಾರೆ.  ಪ್ರಸನ್ನರ ಚತುರತೆಯಲ್ಲಿ ‘ಭೂಮಿಗೀತ’ವು ರಂಗ ಪರೀಕ್ಷೆಗಳ ನೂತನ ಅಪೇಕ್ಷೆಗಳಿಗನುಗುಣವಾಗಿ ಹೊಸವಿನ್ಯಾಸವನ್ನು ಗಳಿಸಿತು; ‘ವನರಂಗ’ ಹೊಸ ರೂಪ ಪಡೆಯಿತು; ಶ್ರೀರಂಗ ಸ್ಟುಡಿಯೋ ನಿರ್ಮಾಣಗೊಂಡಿತು; ಲಂಕೇಶ್ ಆರ್ಟ್ ಗ್ಯಾಲರಿ ಕಲಾ ಪ್ರದರ್ಶನಗಳಿಗಾಗಿ ತೆರೆದುಕೊಂಡಿತು; ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ ಚಾಲನೆಗೊಂಡಿತು;  ವಾರಾಂತ್ಯದ ರಂಗಪ್ರದರ್ಶನಗಳು ಪ್ರಾರಂಭಗೊಂಡವು;  ಹವ್ಯಾಸಿ ರಂಗತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರೀಷ್ಮ ರಂಗೋತ್ಸವ ಹುಟ್ಟಿಕೊಂಡಿತು; ರಂಗಶಿಕ್ಷಣಕ್ಕಾಗಿ  ಭಾರತೀಯ ರಂಗ ಶಿಕ್ಷಣ ಕೇಂದ್ರದ ಚಿಂತನೆಗೊಂದು ರೂಪ ಸಿಕ್ಕಿತು.  ರಂಗಭೂಮಿಯ ಕುರಿತಾದ ಮಾಹಿತಿ ಸಂಶೋಧನಾ ಚಟುವಟಿಕೆಗಳ ಸಲುವಾಗಿ ಶ್ರೀರಂಗ ಮಾಹಿತಿ ಕೇಂದ್ರದ ನಕಾಶೆ ರೂಪುಗೊಂಡಿತು.   

ಪ್ರಸನ್ನ ಅವರು ಹೆಗ್ಗೋಡಿನಲ್ಲಿ  ನೆಲೆಸಿ ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು  ಕಾರ್ಯಕ್ರಮಗಳನ್ನು ನಡೆಸಿದರಲ್ಲದೆ. ಋಜುವಾತು ಪತ್ರಿಕೆಗೆ ಹೊಸರೂಪ ನೀಡಿದರು. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು  ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ ‘ದೇಸಿ’ ಅಂಗಡಿ ಪ್ರಾರಂಭಿಸಿದರಲ್ಲದೆ,  ಗ್ರಾಮೀಣ ಕುಶಲ ಕರ್ಮಿಗಳಿಗೆ ಕಲ್ಯಾಣನಿಧಿಯನ್ನು ಸ್ಥಾಪಿಸಿದರು.

ಈ ಬಹುರೂಪಿ ಪ್ರಸನ್ನರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು.

 




#Article 95: ಇ ಎ ಎಸ್ ಪ್ರಸನ್ನ (440 words)


ಎರಾಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ (ಜನನ: ಮೇ ೨೨, ೧೯೪೦) ವಿಶ್ವದ ಶ್ರೇಷ್ಠ ಆಫ್ ಸ್ಪಿನ್ ಬೌಲರ್‍ಗಳಲ್ಲಿ ಒಬ್ಬರು. 

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿರುವ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅವರು ಮೇ ೨೨, ೧೯೪೦ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು.  

ಪ್ರಸನ್ನರು ೧೯೬೧ರ ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ ಎಂದು ನಿರ್ಧರಿಸಿ ಇಂಜಿನಿಯರಿಂಗ್ ಮುಗಿಸಿ ಪುನಃ ೧೯೬೭ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು.

ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುಧ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು. ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ ಕಷ್ಟಕರವಾದ ಮೈದಾನಗಳಲ್ಲಿ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟು ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ. ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ.

ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್, ಬಿಲ್ ಓ ರ್ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ ಎ ಎಸ್ ಪ್ರಸನ್ನ.  ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ವೈಖರಿ,  ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ ಶಾರ್ಟ್ ಪಿಚ್ ಡೆಲಿವರಿಗಳು ಇವೆಲ್ಲವುಗಳ ಜೊತೆಗೆ ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು ಕುಶಲತೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು. 
ಪ್ರಸನ್ನರು ಆಡಿದ್ದು ಕೇವಲ ೪೯ ಟೆಸ್ಟ್ ಪಂದ್ಯಗಳು ಮಾತ್ರ. ಅವರು ಗಳಿಸಿದ್ದು ೧೮೯ ವಿಕೆಟ್. ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ,  ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ.   ಅವರು ಆಡಿದ ೨೩೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೪೭೬ರನ್ನುಗಳನ್ನೂ, ೯೫೭ವಿಕೆಟ್ಟುಗಳನ್ನೂ ಸಂಪಾದಿಸಿದ್ದರು.

ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ. ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬಯಿ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು. ಭಾರತ ತಂಡದ ನಾಯಕರಾಗುವುದಕ್ಕೆ ಸಹಾ ಅವರು ತುಂಬಾ ಸಮೀಪದಲ್ಲಿದ್ದರು.
ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್, ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ ರೂಪುಗೊಂಡಿದ್ದರು.  ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ ಪ್ರಸನ್ನ ಆಗಿದ್ದರು.

೧೯೮೫ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ. ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಹನ್ನೊಂದು ಜನರ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಪ್ರಚೋದನೆಗೊಂಡು ಬಿಡುತ್ತಿದ್ದೆ. ಬಹುಶಃ ಕ್ಷೇತ್ರ ರಕ್ಷಣೆ ಎಂಬ ಅಂಶ ಅಡ್ಡಬರದಿದ್ದರೆ, ನಾನು ಹಾಗೆ ಮಾಡಿಯೇ ಬಿಡುತ್ತಿದ್ದೆ ಎನಿಸುತ್ತದೆ ಎಂದು ನುಡಿದಿದ್ದರು.  ನಿವೃತ್ತಿಯ ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ.
ಪ್ರಸನ್ನ ರು ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದರು. 

ಇ ಎ ಎಸ್ ಪ್ರಸನ್ನ ಅವರು ಕ್ರಿಕೆಟ್ಟಿನಲ್ಲಿ ಅಷ್ಟೇ ಅಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು. ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಅವರು ಹೆಸರಾಗಿದ್ದರು.




#Article 96: ಸರ್ವಜ್ಞ (103 words)


ಸರ್ವಜ್ಞ (ಸಂಸ್ಕೃತದಲ್ಲಿ ಎಲ್ಲವನ್ನೂ ತಿಳಿದವ ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿರುವ ಈತನ ಕಾಲದ ಕುರಿತು ಹೆಚ್ಚು ತಿಳಿದಿಲ್ಲ. ಇತರ ಲೇಖಕರು ಅವನ ಬಗ್ಗೆ ಮಾಡಿರುವ ಪ್ರಸ್ತಾಪಗಳಿಂದ ಮತ್ತು ಸರ್ವಜ್ಞನ ಭಾಷಾ  ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತನು ಜೀವಿಸಿದ್ದ ಕಾಲ ಸುಮಾರಾಗಿ ೧೭ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ. ಪ್ರಾಯಶಃ ಪುಷ್ಪದತ್ತ ಈತನ ನಿಜನಾಮವಾಗಿದ್ದು, ಸರ್ವಜ್ಞ ಎಂಬುದು ಈತನ ಕಾವ್ಯನಾಮ.

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ. 

ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು:

ಸರ್ವಜ್ಞನನ್ನು ಕುರಿತು ಸರ್ವಜ್ಞಮೂರ್ತಿ ಎಂಬ ಕನ್ನಡ ಚಲನಚಿತ್ರವು ೧೯೬೫ರಲ್ಲಿ ತೆರೆಕಂಡಿತು.




#Article 97: ಕನಕದಾಸರು (1182 words)


ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು  ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ  ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ  ಸೇರಿದ ಬಚ್ಚಮ್ಮ  ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು.
ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.

ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.

ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.

ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.

ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.

ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ  ಕೀರ್ತನೆಗಳ ಅಂಕಿತ  ಕಾಗಿನೆಲೆಯ ಆದಿಕೇಶವರಾಯ ಎಂಬುದು

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು  ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ: 

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಹಂಪಿಯ ಪತನವನ್ನು (೧೫೬೫) ಸಹ ಕನಕ ನೋಡಿದ್ದರು. ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ  ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.

ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ

ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು

ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ:
ಲಲಿತ ಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗು
ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨)
ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ.
ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ?
ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ
ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು..
ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ  ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 
'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 
'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.

ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ  ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ  ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ.
ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . 
ತೀರ್ಥವನು ಪಿಡಿದವರು ತಿರುನಾಮಧಾರಿಗಳೇ
ಜನ್ಮ ಸಾರ್ಥಕವಿರದವರು ಭಾಗವತರಹುದೇ 
ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . 
ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

  ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ

ತೊರೆದು ಜೀವಿಸಬಹುದೆ

ಹರಿ ನಿನ್ನ ಚರಣಗಳ‌

ಬರಿದೇ ಮಾತೇಕಿನ್ನೂ

ಅರಿತು ಪೇಳುವೆನಯ್ಯ...  ||ಪ||

 

ತಾಯಿ ತಂದೆಯ ಬಿಟ್ಟು

ತಪವ ಮಾಡಲುಬಹುದು

ದಾಯಾದಿ ಬಂಧುಗಳ ಬಿಡಲುಬಹುದು

ರಾಯ ತಾ ಮುನಿದರೆ

ರಾಜ್ಯವನೆ ಬಿಡಬಹುದು

ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||೧||

 

ಒಡಲು ಹಸಿದರೆ ಮತ್ತೆ

ಅನ್ನವನೆ ಬಿಡಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು

ಮಡದಿ ಮಕ್ಕಳ ಕಡೆಗೆ

ತೊಲಗಿಸಿಯೆ ಬಿಡಬಹುದು

ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||೨||

 

ಪ್ರಾಣವನು ಪರರು

ಬೇಡಿದರೆತ್ತಿ ಕೊಡಬಹುದು

ಮಾನಾಭಿಮಾನವ ತಗ್ಗಿಸಲುಬಹುದು

ಪ್ರಾಣದಾಯಕಾನಾದ ಆದಿಕೇಶವರಾಯ‌

ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....||೩||

ಡಾ. ರಾಜ್‍ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು 1960ರಲ್ಲಿ ತೆರೆಕಂಡಿದೆ. ನಿರ್ದೇಶಕರು ವೈ.ಆರ್.ಸ್ವಾಮಿ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ. 

ಕರ್ನಾಟಕ ಸರ್ಕಾರವು 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ. ಆ ದಿನ ಸರ್ಕಾರಿ ರಜೆ ಇರುತ್ತದೆ.

ಕರ್ನಾಟಕ ಸರ್ಕಾರವು ಕನಕದಾಸರು ರಚಿಸಿರುವ ಮತ್ತು ಹೆಸರಾಂತ ಸಾಹಿತಿಗಳು ಸಂಪಾದಿಸಿರುವ ಕೃತಿಗಳನ್ನು ಕಣಜ.ಇನ್/ಇಬುಕ್(www.kanaja.in/ebook) ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ.
ಅವುಗಳಲ್ಲಿ ಕೆಲವುಗಳು ಈ ಕೆಳಗಿನಂತಿವೆ...




#Article 98: ಪುಟ್ಟಣ್ಣ ಕಣಗಾಲ್ (213 words)


ಎಸ್.ಆರ್.ಪುಟ್ಟಣ್ಣ ಕಣಗಾಲ್ (ಡಿಸೆಂಬರ್ ೧, ೧೯೩೩ - ಜೂನ್ ೫, ೧೯೮೫) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ 'ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ' ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು.

ಕರ್ನಾಟಕದ ಪುಟ್ಟಣ್ಣ ರವರು  ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್  ಗ್ರಾಮದಲ್ಲಿ.ಇವರ ಮೊದಲ ಹೆಸರು ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ  ಇವರ ಸಹೋದರರು.

ಕಣಗಲ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು.ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಚಲನಚಿತ್ರ ನಿರ್ದೇಶಕರು ಮತ್ತು ವಿವಿಧ ವ್ಯಕ್ತಿಗಳನ್ನು ಪುಟ್ಟಣ್ಣ ಕಣಗಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಪ್ರಚಾರದ ಹುಡುಗನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕಣಗಲ್, ರಂಗಭೂಮಿಯಲ್ಲಿ ಕೆಲಸ ಮಾಡಿದ ನಂತರ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಆಕರ್ಷಿತರಾದರು ಮತ್ತು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಆರ್. ಪಂತುಲು ಅವರ ಸಹಾಯಕರಾಗಿ ಕೆಲಸ ಮಾಡಿದರು.

ಕಣಗಲ್ ಅವರು ಮೊದಲು ನಿರ್ದೇಶಿಸಿದ ಸಿನೆಮಾ ೧೯೬೪ರ ಮಲಯಾಳಂ ಚಲನಚಿತ್ರ ಸ್ಕೂಲ್ ಮಾಸ್ಟರ್.ಅದು ಅವರ ಮಾರ್ಗದರ್ಶಕ ಬಿ.ಆರ್.ಪಂತುಲು ಅವರ ಸಿನೆಮಾದ ರಿಮೇಕ್.ನಂತರ ಅವರು ತ್ರಿವೇಣಿಯವರ ಕನ್ನಡ ಕಾದಂಬರಿ   ಬೆಕ್ಕಿನ ಕಣ್ಣು ಆಧಾರಿತ ಎಂಬ ಮತ್ತೊಂದು ಮಲಯಾಳಂ ಚಿತ್ರ ಪೂಚಕ್ಕನ್ನಿ ಅನ್ನು ನಿರ್ದೇಶಿಸಿದರು. ನಿರ್ದೇಶಕರಾಗಿ ಪುಟ್ಟಣ್ಣ ಅವರ ಮೊದಲ ಕನ್ನಡ ಚಿತ್ರ ೧೯೬೭ ರಲ್ಲಿ ಮೂಡಿಬಂದ ಬೆಳ್ಳಿಮೋಡ.ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು ಮುಂತಾದ ಅನೇಕ ಮೇರುಕೃತಿಗಳನ್ನು ಅವರು ನಿರ್ದೇಶಿಸಿದರು. ಅವರ ಕೊನೆಯ ಚಿತ್ರ ಸಾವಿರ ಮೆಟ್ಟಿಲು, ಇದು ಅವರ ಜೀವಿತಾವಧಿಯಲ್ಲಿ ಬಿಡುಗಡೆಯಾಗಲಿಲ್ಲ.




#Article 99: ವಿಷ್ಣುವರ್ಧನ್ (ನಟ) (108 words)


ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೦] | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ

ಡಾ. ವಿಷ್ಣುವರ್ಧನ್ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು.೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.

 




#Article 100: ಭಾರತ ರತ್ನ (131 words)


ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ ಭಾರತ ರತ್ನ, ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು ಸತ್ಯಮೇವ ಜಯತೇ ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.




#Article 101: ಜೆ.ಆರ್.ಡಿ. ಟಾಟ (2215 words)


ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ  ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂತ್ರಜ್ಞಾನ, ದಿನನಿತ್ಯದ ಬಳಕೆಯ, ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗಳೆಯರ ಸೌಂದರ್ಯವರ್ಧಕ ಪರಿಕರಗಳು, ಇತ್ಯಾದಿಗಳ ವರೆಗೆ ಇದೆ. 
ಜೆ.ಆರ್.ಡಿ ಟಾಟಾ ಅವರು, ಆರ್.ಡಿ ಟಾಟಾ ಅವರ ಪುತ್ರರು. 'ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ' ಅವರು ತಮ್ಮ ಮಕ್ಕಳಾದ 'ಸರ್ ದೊರಾಬ್ ಟಾಟ 'ಹಾಗೂ 'ಸರ್ ರತನ್ ಟಾಟಾ' ಅವರಷ್ಟೇ ಪ್ರಾಮುಖ್ಯತೆಯನ್ನು 'ಆರ್.ಡಿ.ಟಾಟಾ' ರವರಿಗೂ, ಕೊಡುತ್ತಿದ್ದರು. ಆರ್.ಡಿ.ಯವರ ವ್ಯವಹಾರಜ್ಞಾನ, ಮೇಧಾವಿತನ, ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಪ್ರಗತಿ ಸಾಧಿಸುತ್ತಿದ್ದ ಪರಿ, ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟರಿಗೆ ಪ್ರಿಯವಾಗಿತ್ತು. ತಮ್ಮ ತರುವಾಯ, ಟಾಟಾ ಉದ್ಯಮದ ಜವಾಬ್ದಾರಿಯನ್ನು ಹೊರಬಲ್ಲ  ಒಬ್ಬ ಸಮರ್ಥ ಪ್ರವರ್ತಕನಂತೆ ಅವರಿಗೆ ಗೋಚರಿಸಿದರು. ಜೆ.ಆರ್.ಡಿ  ಅವರಿಗೆ ತಂದೆಯವರ ಗುಣಗಳೆಲ್ಲ ರಕ್ತಗತವಾಗಿ ಬಂದಿತ್ತು.

'ಜೆಹಾಂಗೀರ್ ರತನ್ ಜಿ ದಾದಾಭಾಯ್ ಟಾಟಾ,' ಅವರು ಪಾರ್ಸಿ, ' ಝೊರಾಸ್ಟ್ರಿಯನ್ ಮತ,' ಕ್ಕೆ ಸೇರಿದವರು. ತಂದೆ ಬಹಳ ಮಡಿವಂತರು. ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ ೫ ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ ೨೯ ಜುಲೈ ೧೯೦೪ ರಲ್ಲಿ ಪ್ಯಾರಿಸ್ ನಲ್ಲಿ ಹುಟ್ಟಿದರು. ಇವರ ಅಕ್ಕ, 'ಸಿಲ್ಲ', ೧೯೦೩ ರಲ್ಲಿ ಜನಿಸಿದರು. 'ರೋಡಾಬೆ,' (೧೯೦೯ ), 'ದರಾಬ್,' (೧೯೧೨) ಮತ್ತು 'ಜಿಮ್ಮಿ,' (೧೯೧೬) ಇವರ ಇತರ ಒಡಹುಟ್ಟಿದವರು. ಜೆಹಾಂಗೀರ್ (ಎಲ್ಲರು ಅವರನ್ನು 'ಜೆ' ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಷಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವುದು ಹತ್ತಿರದ ಅರ್ಥ.  'ಆರ್.ಡಿ.ಟಾಟಾ, ' 'ಜೆಮ್ ಸೆಟ್ ಜಿ ಟಾಟಾ' ಅವರ ಸೋದರಮಾವ, 'ದಾದಾಭಾಯ್'  ಅವರ ಮಗ. ಜೆಮ್ ಸೆಟ್ ಜಿಯವರು ಭಾರತದ ಪ್ರಪ್ರಥಮ ಔದ್ಯೋಗಿಕ ಕ್ಷೇತ್ರಗಳನ್ನು ಪ್ರಾರಂಭಿಸಿದ್ದೇ ಅಲ್ಲದೆ  ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕಿದವರು. ಅದಕ್ಕಾಗಿ ಜಮ್ ಸೆಟ್ ಜಿಯವರನ್ನು,  ಭಾರತದ ಕೈಗಾರಿಕಾ ಕ್ಷೇತ್ರದ ಜನಕ  ನೆಂದು ಕರೆಯುತ್ತಾರೆ. ೧೮೯೫ ರಿಂದಲೂ ಆರ್. ಡಿ, ಅವರು,  ಜಮ್ ಸೆಟ್ ಜಿ ಮತ್ತು ದೊರಬ್ ಟಾಟಾ ರವರ ಜೊತೆಗೆ ಪಾಲುದಾರರಾಗಿದ್ದರು.  ಒಳ್ಳೆಯ ನಂಬಿಕಸ್ತರು ಹಾಗೂ ಕೆಲಸದಲ್ಲಿ ಅತ್ಯಂತ ದಕ್ಷರು.  ಜೆಮ್ ಸೆಟ್ ಜಿ ಅವರು ಸ್ಥಾಪಿಸಿದ ಮೂಲಭೂತ ತಂತ್ರಜ್ಞಾನಗಳು ಹಾಗೂ ಮೂಲ ಉತ್ಪಾದನಾ ಘಟಕಗಳು ಅತ್ಯಂತ ಮಹತ್ವದ ದೈನಂದಿನ  ಜೀವನಾವಶ್ಯಕ ವಸ್ತುಗಳನ್ನೊಳಗೊಂಡಿವೆ. ಉದಾಹರಣೆಗೆ : ಕಬ್ಬಿಣ ಮತ್ತು ಉಕ್ಕು, ಜವಳಿ, ವಿದ್ಯುತ್ , ಸಿಮೆಂಟ್, ಚಹಾ ಇತ್ಯಾದಿ. ಜಮ್ ಸೆಟ್ ಜಿಯವರು ಮೂಲಪುರುಷರಾದರೆ, ಜೆ.ಆರ್.ಡಿ ಯವರು  'ಟಾಟಾ ಸನ್ಸ್ ಕಂಪೆನಿ' ಯ ಅಪ್ರೆಂಟಿಸ್ ಆಗಿ, ಬೊಂಬಾಯಿಗೆ ಪಾದಾರ್ಪಣೆ ಮಾಡಿದರು. ಜೆ  ೧೯೨೫ ರಲ್ಲಿ, ಬೊಂಬಾಯಿಗೆ ಬಂದು ಟಾಟ ಕಂಪೆನಿಯಲ್ಲಿ 'ಅಪ್ರೆಂಟಿಸ್,' ಆಗಿ ಭರ್ತಿಯಾದರು. ಆಗ ತಾನೆ ಬಂದು ಸೇರಿದ ಜೆ,ಯವರಿಗೆ, ದೇಶ-ಭಾಷೆಗಳೆಲ್ಲಾ ಹೊಸದು. ಗುಜರಾತಿ, ಹಿಂದಿ ಸರಿಯಾಗಿ ಬರುತ್ತಿರಲಿಲ್ಲ. ಅವರು ವಿಮಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಬೇರೆ ಕೆಲಸಗಳಿಗೆ ಇನ್ನೂ ಅವರಿಗೆ ಬಹಳ ತರಭೇತಿಯ ಅಗತ್ಯವಿತ್ತು.  ಜೆ.ಎನ್  ಅವರ ವಿಲ್ ನಂತೆ, ದೊರಾಬ್ ಅವರಿಗೆ, ೩ ಲಕ್ಷರೂಪಾಯಿ, ವಾರ್ಷಿಕ ವೇತನ, ಆರ್. ಡಿಯವರಿಗೆ, ೨ ಲಕ್ಷರೂ. ಜೆ ಅವರಿಗೆ, ೩,೦೦೦, ದುರಾಬ್, ೨,೦೦೦ ಜಿಮ್ಮಿ ೧೦೦೦, ಮತ್ತು ಕೊನೆಯವರಿಗೆ, ೫ ರಲ್ಲಿ ಒಂದು ಭಾಗ ಹಣ ಸಂದಾಯವಾಗುತ್ತಿತ್ತು. ಆದರೆ, ಜೆ ಎಲ್ಲರಿಗೂ ಸಮಭಾಗ ಕೊಡಲು ಆಶಿಸಿದರು. ಟಾಟಾ ಕಂಪೆನಿ ಅವರಿಗೆ ಮಾಸಿಕ ೭೫೦/- ರೂ ವೇತನವನ್ನು ನಿರ್ಧರಿಸಿತ್ತು. ೧೯೨೬-೧೯೩೧ ರವರೆಗೆ, ಬರ್ದೋರ್ಜಿ ಪದ್ ಶ ರವರು ಡೈರೆಕ್ಟರ್. ಆಗ ಟಾಟಾ ಹೌಸ್ ನಲ್ಲಿ, ಒಬ್ಬ ನಿವೃತ್ತ ಐ. ಸಿ. ಎಸ್ ಅಧಿಕಾರಿ, ಟಾಟಸಂಸ್ಥೆಯ ಕಾರ್ಯಭಾರವನ್ನು ನೋಡಿಕೊಳ್ಳುತ್ತಿದ್ದರು.  ಅವರೇ ಸ್ಕಾಟ್ ಮನ್, 'ಜಾನ್ ಪೀಟರ್ ಸನ್'. ಜೆ ಅವರ ಆತ್ಮಕಥೆಯಲ್ಲಿ ಹಲವು ಬಾರಿ ಪೀಟರ್ ಸನ್ ರನ್ನು ನೆನೆಯುತ್ತಾರೆ. ಪ್ರಾರಂಭಿಕ ಹಂತದಲ್ಲಿ ಟಾಟಾ ಕಂಪೆನಿಯಂತಹ ಒಂದು ಬೃಹತ್ ಉದ್ಯಮ ಸಂಸ್ಥೆಯ ವೈವಿಧ್ಯಮಯ ಉತ್ಪಾದನಾ ಸಾಮರ್ಥ್ಯವನ್ನೂ,  ಕಾರ್ಯಕ್ಷೇತ್ರಗಳ ವಹಿವಾಟುಗಳನ್ನೂ,  ಅರ್ಥ ಮಾಡಿಕೊಳ್ಳಲು, ಆಳದಲ್ಲಿ ಹೋಗಿ, ಅಂತರಂಗವನ್ನು ಹೊಕ್ಕು ತಿಳಿದುಕೊಳ್ಳಲು ಅವರಿಗೆ ಸಹಾಯವಾಯಿತು. ಆರ್. ಡಿ ಟಾಟಾ ಅವರು, ಪೀಟರ್ ಸನ್ ರನ್ನು ಮಗ, 'ಜೆ'ಗೆ ಪರಿಚಯಿಸಿ, ಅವರ ಕೊಠಡಿಯಲ್ಲಿ ಒಂದು ಮೂಲೆಯಲ್ಲಿ ಡೆಸ್ಕ್ ಒಂದನ್ನು ಹಾಕಿಸಿಕೊಟ್ಟರು. ಪೀಟರ್ ಸನ್, ಪತ್ರಗಳಿಗೆ ಸಹಿ ಹಾಕುವ ಮೊದಲು, ಜೆ ಆಫೀಸಿನ ಪ್ರತಿ ಪತ್ರವನ್ನೂ ಓದಿ ಅವುಗಳನ್ನು ಪೀಟರ್ ಸನ್ ಅವಗಾಹನೆಗೆ ಮಂಡಿಸುತ್ತಿದ್ದರು. ಹೀಗೆ ಜೆ. ಆರ್. ಡಿ ಯವರಿಗೆ ಕಂಪೆನಿಯಲ್ಲಿ ನಡೆಯುವ ಪತ್ರ ವ್ಯವಹಾರಗಳು ಮತ್ತು ಅದಕ್ಕೆ ಸ್ಪಂದಿಸುವ ಬಗೆ ಹೇಗೆ ಎನ್ನುವ ಸ್ಥೂಲ ಪರಿಚಯವಾಯಿತು. ಇದಾದ ಬಳಿಕ, ರತನ್ ತಮ್ಮ ಮಗನಿಗೆ, 'ಟಾಟ ಸ್ಟೀಲ್ ಪ್ಲಾಂಟ್ ' ನಲ್ಲಿ ಕೆಲಸ ಕಲಿಯಲು 'ಜಮ್ ಶೆಟ್ ಪುರ' ಕ್ಕೆ, ಅಪ್ರೆಂಟಿಸ್ ಆಗಿ ಕಳಿಸಿಕೊಟ್ಟರು. ಅದೇ ವರ್ಷ, ಅಂದರೆ ೧೯೨೫ ರಲ್ಲಿ ಜೆ, ಯವರ ತಂದೆ ಆರ್. ಡಿಟಾಟಾ, ಪ್ಯಾರಿಸ್ ನಲ್ಲಿ ತೀರಿಕೊಂಡರು. ಸರ್ ದೊರಾಬ್, ಮಧುಮೇಹದ ಕಾಯಿಲೆಯಿಂದ ನರಳಿ ಕೃಶರಾದರು. ಟಾಟ ಕಂಪೆನಿಯ ಜವಬ್ದಾರಿ ದಿನೇ-ದಿನೇ ಹೆಚ್ಚಾಗುತ್ತಿತ್ತು. ವಯಸ್ಸು ಅವರನ್ನು ಹಣ್ಣುಮಾಡಿತ್ತು. ತಮಗಿಂತ ಕೇವಲ ೩ ವರ್ಷಹಿರಿಯರಾದ ಆರ್.ಡಿಯವರ ಮರಣ, ದೊರಾಬ್ ಟಾಟಾ ಮತ್ತು ಟಾಟಾ ಪರಿವಾರಕ್ಕೆ  ಒಂದು ಅಘಾತದಂತೆ, ಅನುಭವವಾಯಿತು. 

ತಂದೆ, 'ಆರ್.ಡಿ.ಟಾಟಾ' ಅವರು ಮಾಡಿದ, ಸಾಲದ ಹೊರೆ ತೀರಿಸುವುದು 'ಜೆ.ಆರ್.ಡಿ.' ಯವರ ಆದ್ಯ ಕರ್ತವ್ಯವಾಗಿತ್ತು. ೨೨ ವರ್ಷದ ಜೆ ಮನೆಯ ಹಾಗೂ ಟಾಟಾ ಸನ್ಸ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಪಾರಂಪರಿಕವಾಗಿ ತಂದೆಯವರು ನಿಭಾಯಿಸುತ್ತಿದ್ದ ಟಾಟಾ ಸನ್ಸ್ ನ ನಿರ್ದೇಶಕ ಪದವಿಯನ್ನು' ಜೆ' ಒಪ್ಪಿಕೊಂಡು ಕಂಪೆನಿಯ ಜವಾಬ್ದಾರಿಯನ್ನು ಕೂಡಲೆ ತೆಗೆದುಕೊಳ್ಳಬೇಕಾಯಿತು. ತಂದೆಯವರು ಮಾಡಿಕೊಂಡ ಸಾಲ ಹೆಚ್ಚಾಗಿತ್ತು ; ಅಲ್ಲದೆ, ಅವರು ಟಾಟಾ ಕಂಪೆನಿಯಿಂದಲೂ ಬಹಳ ಸಾಲ ಪಡೆದಿದ್ದರು. ಹಾಗೂ ಸರ್ ದೊರಾಬ್ ರವರ ಬಳಿ ಕೂಡ ಸಾಲ ಮಾಡಿಕೊಂಡಿದ್ದರು. ಮೇಲಾಗಿ ಹಣ-ಕಾಸಿನ ವಿಷಯದಲ್ಲಿ ಸರ್. ದೊರಾಬ್ ಟಾಟ ಬಹಳ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದರು. ಸ್ವಲ್ಪ ದುಂದು ವೆಚ್ಚದ ಸ್ವಭಾವದ ಆರ್. ಡಿ, ಹೆಂಡತಿಯ ಅನಾರೋಗ್ಯಕ್ಕೆ, ಮತ್ತು ವಿದೇಶದಲ್ಲಿ ಮನೆಯನ್ನು ಬಾಡಿಗೆ ಪಡೆದು ಮಾಡಿದ ವ್ಯವಸ್ಥೆಗಳಿಗೆ ಬಹಳ ಹಣಸಾಲಮಾಡಬೇಕಾಯಿತು. ಇವೆಲ್ಲಾ ಸಾಲದ ಹಣವನ್ನು ತೀರಿಸುವುದು ಜೆ ಅವರಿಗೆ ವಿಪರೀತ ಕಷ್ಟವಾಯಿತು. ಸರ್. ದೊರಾಬ್ ಎಷ್ಟೋ ಪಾಲು ಹಣ ಮಾಫಿಮಾಡಿದಾಗ್ಯೂ ಸಾಲದ ಹೊರೆ ಹೆಚ್ಚಾಗಿತ್ತು. ಜೆ ಯೋಚಿಸಿ, ಕೊನೆಗೆ, ತಮ್ಮ ಪ್ಯಾರಿಸ್ ನ 'ಹಾರ್ಡ್ ಲಾಟ್', ನಲ್ಲಿದ್ದ ಸ್ವಂತ ಮನೆ, ಹಾಗೂ ಅಲ್ಲಿನ ವ್ಯವಹಾರಗಳನ್ನೆಲ್ಲಾ ಮಾರಿದರು. ಬೊಂಬಾಯಿನ 'ಸುನಿತ', ಮತ್ತು ಇನ್ನೊಂದು ಮನೆಯನ್ನೂ ಮಾರಿ, ಬಂದ ಹಣದಿಂದ ಸಾಲವನ್ನೆಲ್ಲಾ ತೀರಿಸಿ, 'ತಾಜ್ ಮಹಲ್ ಹೋಟೆಲ್', ನಲ್ಲಿ ಸ್ವಲ್ಪ ದಿನ ವಾಸ್ತವ್ಯಕ್ಕೆ ಏರ್ಪಾಡು ಮಾಡಿ ಕೊಂಡರು. ಜೆ ತಮ್ಮ ೧೫ ನೆಯ ವರ್ಷದಲ್ಲೇ ಪ್ಯಾರಿಸ್ ನಗರದಲ್ಲಿ ಒಂದು ಸುತ್ತು ಸುತ್ತಿಸುವ ವಿಮಾನದಲ್ಲಿ ಸುತ್ತಿ ಅದರ ಸ್ಥೂಲ ಅನುಭವವನ್ನು ಪಡೆದು ಆನಂದಿಸಿದ್ದರು. ಅವರಿಗೆ ವಿಮಾನಯಾನದಲ್ಲಿ ತೀವ್ರವಾದ ಆಸಕ್ತಿ. ಅಂದಿನ ದಿನಗಳಲ್ಲಿ ಜೆ ಭಾರತದಲ್ಲಿ, ಪೈಲೆಟ್ ಲೈಸೆನ್ಸ್ ಪಡೆದ ಪ್ರಥಮ ಭಾರತೀಯರಾಗಿದ್ದರು. 

೧೯೩೦ ರಲ್ಲಿ ನೆವಿಲ್ ವಿನ್ಸೆಂಟ್ ಎಂಬ ಅಂಗ್ಲ ಪೈಲೆಟ್, ಭಾರತದ ಸ್ಥಳೀಯ ಜನರನ್ನು ತಮ್ಮ ಪುಟ್ಟ ವಿಮಾನದಲ್ಲಿ ಕುಳ್ಳಿರಿಸಿ ಕೊಂಡು ನಗರ ಪ್ರದಕ್ಷಿಣೆ ಮಾಡಿಸುವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಸಾಹಸಿ, ಹಾಗೂ ಮಹತ್ವಾಕಾಂಕ್ಷಿಯಾಗಿದ್ದ ಅವರು, ವಿಮಾನಾಸಕ್ತ ಜೆ  ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. 'ಜೆ' ಆಗಿನ್ನೂ ತಮ್ಮ ಅಸ್ಪಷ್ಟ ಹೆಜ್ಜೆಗಳನ್ನು ಟಾಟಾ ಸಾಮ್ರಾಜ್ಯದಲ್ಲಿ ಇಡುತ್ತಿದ್ದ ಕಾಲವದು. ಟಾಟಾ ಸಂಸ್ಥೆಯ ಆಗಿನ ಡೈರೆಕ್ಟರ್ ಆಗಿದ್ದ 'ಸರ್ ದೊರಾಬ್ ಟಾಟಾ'  ಅವರಿಗೆ ವಿಮಾನಯಾನದ ಸೌಕರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಅದರ ಬೆಳವಣಿಗೆಯ ಅಗಾಧ ಸಾಧ್ಯತೆಗಳ ವಿಚಾರಗಳನ್ನು ಪೀಟರ್ ಸನ್ ಮುಖಾಂತರ ದೊರಾಬ್ ಟಾಟರವರಿಗೆ ಮಾಹಿತಿ ನೀಡಿ  ಮನವರಿಕೆ ಮಾಡಿದರು. ಒಂದು ವಿಮಾನಯಾನ ಕಂಪೆನಿಯನ್ನು ಸ್ಥಾಪಿಸಲು ಕರೆಯಿತ್ತರು. ಪೈಲೆಟ್ ಆಗುವ ಕನಸು, ಹಾಗೂ ಸಾರ್ವಜನಿಕ-ವಿಮಾನಯಾನ, ಬಾಲ್ಯದಲ್ಲೇ ಮನಸ್ಸಿನಲ್ಲಿ ಹುದುಗಿದ್ದ ಆಸೆ, ಮೂರ್ತರೂಪು ಪಡೆಯಿತು. ಹೀಗೆ, ಟಾಟಾ ಏರ್ಲೈನ್ಸ್, ಅಸ್ತಿತ್ವಕ್ಕೆ ಬಂತು. ಈ ಹೊಸ ಸಂಸ್ಥೆ, ಮೊದಲಿಗೆ, 'ಟಾಟಾ ಸನ್ಸ್' ಸಂಸ್ಥೆಯ ಒಂದು ಚಿಕ್ಕ ಅಂಗವಾಗಿ ಪ್ರಾರಂಭವಾಗಿತ್ತು. ೧೫, ಅಕ್ಟೋಬರ್ ೧೯೩೨ ಭಾರದ ವಿಮಾನಯಾನದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯದಿನ. ಆ ದಿನ ಜೆರವರು ತಾವೊಬ್ಬರೇ ಕರಾಚಿಯಿಂದ ಅಹ್ಮದಾಬಾದ್ ಮುಖಾಂತರವಾಗಿ ಬೊಂಬಾಯಿಗೆ ಪುಸ್ ವಿಮಾನದ ಹಾರಾಟದ ವ್ಯವಸ್ಥೆ ಮಾಡಲಾಗಿತ್ತು.  ಸೂಕ್ಷ್ಮಮತಿ, ಸಮಯಪ್ರಜ್ಞೆ ಹಾಗೂ ದೂರದೃಷ್ಟಿ ಯನ್ನು ಹೊಂದಿದ್ದ ಜೆಯವರು, ವಿಮಾನಯಾನದ ಬಹುಮುಖ ಸವಲತ್ತುಗಳನ್ನು ಗ್ರಹಿಸಿದ್ದರು. ಸರ್. ದೊರಾಬ್ ಟಾಟಾ ಮತ್ತು ತಂದೆಯವರು ಆಗಲೇ ಭಾರಿ ಉದ್ಯಮಗಳನ್ನು ಸ್ಥಾಪಿಸಿದ್ದರು. ತಮಗೆ ಅವುಗಳಲ್ಲಿ ಪೂರ್ಣಕ್ಷಮತೆ ಇರಲಿಲ್ಲ. ತಮ್ಮ ಕ್ಷೇತ್ರವೇನಿದ್ದರೂ ವಿಮಾನಯಾನಕ್ಕೆ ಸಂಬಂಧಿಸಿದ್ದು. ಅದರಲ್ಲಿ ಅತಿ ಹೆಚ್ಚಿನ ಯೋಗದಾನ ಮಾಡುವ ಆಸೆ ಅವರಿಗೆ ಗೋಚರಿಸಿತು. 

ಯುವ ಜೆ.ಆರ್.ಡಿ.ಯವರಿಗೆ, 'ಸ್ಪೋರ್ಟ್ಸ್ ಕಾರು 'ಗಳನ್ನು ವೇಗವಾಗಿ ಓಡಿಸುವ ಒಂದು ಹುಚ್ಚಿತ್ತು. ೧೯೨೦ ರಲ್ಲಿ ಅವರ ತಂದೆ ಬ್ಯುಗಾಟ ಕಾರನ್ನು ಹುಟ್ಟು ಹಬ್ಬದ ಬಳುವಳಿಯಾಗಿ ಕೊಟ್ಟರು. ಜೆ' ತಮ್ಮ ಬ್ಯುಗೋಟ ದಲ್ಲಿ ಬೊಂಬಾಯಿನ ರಸ್ತೆಗಳಲ್ಲಿ ಭರ್ರನೆ ಓಡಾಡುವುದನ್ನು ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ಸಹಿಸಲಿಲ್ಲ. ಕಾರಿನ ವೇಗದ ಎಲ್ಲೆ ಮೀರಿದರೆಂಬ ಸುಳ್ಳು-ಆಪಾದನೆಯನ್ನು 'ಜೆ' ಮೇಲೆಹಾಕಿ, ಕೇಸ್ ಬುಕ್ ಮಾಡಿದರು. ಆಗ, 'ಜೆ' ಅವರಿಗೆ ತಿಳಿದ ಆಗಿನ ಕಾಲದ ಅತ್ಯಂತ ಹೆಸರುವಾಸಿಯಾದ ಲಾಯರ್,  'ಜ್ಯಾಕ್ ವೈಕೆಜಿ' ಯವರನ್ನು ಭೇಟಿಯಾಗಿ, ಅವರ ಸಹಾಯದಿಂದ ಕೇಸ್ ಗೆದ್ದರು. ಅವರ ಮನೆಗೆ ಹೋದಾಗ ಒಬ್ಬ ಸುಂದರ ಅತ್ಯಾಕರ್ಷಕ ಆಧುನಿಕ ತರುಣಿಯ ಭೇಟಿಯಾಯಿತು. ಈಕೆಯ ಚಿಕ್ಕಪ್ಪನೇ 'ವೈಕೆಜಿ'ಯವರು. ಹೀಗೆಯೇ ಅವರ ಭೇಟಿ ಪ್ರೇಮದಲ್ಲಿ ತಿರುಗಿ,  ೧೯೩೦ ರಲ್ಲಿ ಜೆ, 'ಥೆಲ್ಮ'  ಅವರನ್ನು ಮದುವೆಯಾದರು. ತಂದೆಯವರು ಬಹುಮಾನವಾಗಿ ಕೊಟ್ಟ 'ಬ್ಯುಗಾಟೊ ವೇಗಿಕಾರ್','ಥೆಲ್ಮಾ ವೈಕೆಜಿ,'ಯವರ ಮಿಲನಕ್ಕೆ ಕಾರಣವಾಯಿತು. 'ಥೆಲ್ಲಿ,' ಅಮೆರಿಕದಲ್ಲಿ ಜನಿಸಿದ್ದರು. ಆಕೆಯ ಪ್ರಾಥಮಿಕ ಶಾಲೆಯ ಕಲಿಕೆ ಇಟಲಿಯಲ್ಲಾಗಿತ್ತು.  ತಾಯಿ, 'ಮುರೆಲ್,' ಅಕ್ಕ,'ಕಿಟ್ಟಿ', ಥೆಲ್ಲಿ ಗಿಂತ ಕೆಲವೇ ವರ್ಷ  ದೊಡ್ಡವಳು. ಬೊಂಬಾಯಿನ,'ಜೆ. ಜೆ. ಸ್ಕೂಲ್ ಆಫ್ ಅರ್ಟ್' ನಲ್ಲಿ ಕಲಿಕೆ. ಬಣ್ಣದ ಚಿತ್ರಗಳು, ' ಪೋರ್ಟ್ರೇಟ್ಸ್' ಬರೆಯಲು ವಿಶೇಷ ಆಸಕ್ತಿ.  ಈಜುವುದು ಹಾಗೂ ನೃತದಲ್ಲಿ ಪರಿಣತಿ ಇತ್ತು. 'ಸ್ಕರ್ಟ್' ಅಥವಾ 'ಸಾಡಿ'ಯಲ್ಲಿ ಆಕೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಳು. 'ಜೆ'ಸಹಜವಾಗಿ ಮನಸೋತರು.

ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದ, ಅನುಭವಿ, 'ಸರ್ ನವರೊಸ್ ಜಿ ಸಕ್ಲಾಟ್ ವಾಲ', ರವರು ೧೯೩೮ ರಲ್ಲಿ ಲಂಡನ್ ನಲ್ಲಿ ಮರಣ ಹೊಂದಿದರು. ಸರ್. ದೊರಾಬ್ಜಿ ಅವರ ನಂತರ ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದರು. ಅವರ ಮರಣದ ನಂತರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದ ಟಾಟಾ ಸನ್ಸ್ ಕಂಪೆನಿಯನ್ನು ನಡೆಸಲು ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆಯಿತ್ತು. ಟಾಟ ಸನ್ಸ್, ಡೈರೆಕ್ಟರ್ ಗಳೆಲ್ಲಾ ಸಮಾಲೋಚಿಸಿ, ಜೆ ರವರನ್ನು ಟಾಟಾ ಸನ್ಸ್ ನ ಪ್ರಧಾನ ಡೈರೆಕ್ಟರ್ , ಆಗಿ ಚುನಾಯಿಸಿದರು. ಹಾಗೆ ೨೬, ಜುಲೈ, ೧೯೩೮ ರಂದು ಶುರುವಾದ ಟಾಟಾ ಸಂಸ್ಥೆಯ ನಂಟು, ೨೫, ಮಾರ್ಚ್, ೧೯೯೧ ರ ವರೆಗೆ ಸತತವಾಗಿ ಮುಂದುವರೆಯಿತು. ತಮ್ಮ ಕೊನೆಯ ದಿಗಳವರೆಗೆ 'ಟಾಟಾಸಂಸ್ಥೆ' ಯ ಏಳಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು.

೧೯೪೬ ರಲ್ಲಿ, ಜೆ. ಆರ್. ಡಿ. ಟಾಟಾರವರ, ಪ್ರೀತಿಯ ಕಂಪೆನಿ ,ಟಾಟಾ ಏರ್ಲೈನ್ಸ್ ಸ್ವತಂತ್ರ ಕಂಪೆನಿಯಾಯಿತು. ೨ ವರ್ಷಗಳ ನಂತರ, ಜೆ 'ಟಾಟಾ ಏರ್ ಲೈನ್ಸ್ (ಇಂಟರ್ನ್ಯಾಷನಲ್)', ಸ್ಥಾಪಿಸಿದರು. ೧೯೫೩ ರಲ್ಲಿ ಭಾರತದ ಉದ್ಯಮಗಳು ರಾಷ್ಟ್ರೀಕರಣ ವಾದಾಗ ಜೆ ಎರಡು ಕಂಪೆನಿಗಳ ನಿರ್ದೇಶಕತ್ವಕ್ಕೆ ರಾಜೀನಾಮೆ ಕೊಟ್ಟರು. ಜೆ, ಒಬ್ಬ ಸಾಹಸಿ, ವಾಣಿಜ್ಯೋದ್ಯಮಿ, ತಾಂತ್ರಿಕ ವಿಷಯಗಳನ್ನು ಚೆನ್ನಾಗಿ ಅರಿತವರು, ಮೇಲಾಗಿ ಅದರ ಆಡಳಿತದಲ್ಲಿ ಚೆನ್ನಾಗಿ ನುರಿತವರು. ವಿಮಾನಯಾನದ ಬಗ್ಗೆ,  ಕಾರ್ ರೇಸ್ ಬಗ್ಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು, ಆಧುನಿಕ ಮ್ಯಾಗಜೈನ್ ಗಳನ್ನು ಓದಿ ವಿಷಯ ಸಂಗ್ರಹಿಸಿದ್ದರು. ೧೯೮೨ ರಲ್ಲಿ ತಮ್ಮ '೭೮ ನೇ ಹುಟ್ಟುಹಬ್ಬ' ದ ದಿನದಂದು, ಟಾಟಾ ತಮ್ಮ (೧೯೩೨ ರಲ್ಲಿ ನಡೆಸಿದ ಸೋಲೋ ವಿಮಾನ ಹಾರಾಟದಂತಹ) ಚಾರಿತ್ರ್ಯಿಕ ಹಾರಾಟವನ್ನು ಇನ್ನೊಮ್ಮೆ, ಮಾಡಿ ತೋರಿಸಿದರು. ಇದು ಅಂದಿನ ನವ ಯುವಕರನ್ನು ಹುರಿದುಂಬಿಸಲು, ಹಾಗೂ ಅವರಿಗೆ ವಿಮಾನಯಾನದಲ್ಲಿ ಆಸಕ್ತಿ ಮೂಡಿಸಲು ತೆಗೆದುಕೊಂಡ ಒಂದು ಕ್ರಮವಾಗಿತ್ತು. ಆಗ ಟಾಟಾ ಕಂಪೆನಿಯ ಸುಪರ್ದಿನಲ್ಲಿ ಒಟ್ಟು ೧೪ ಕಂಪೆನಿಗಳಿದ್ದವು. ವಾಣಿಜ್ಯ ವಾಹನಗಳು, ಇಂಜಿನಿಯರಿಂಗ್, ಹೋಟೆಲ್ಗಳು, ಏರ್ ಕಂಡೀಶನರ್ ಹಾಗೂ ರೆಫ್ರಿಜರೇಟರ್ಗಳು, ಕನ್ಸಲ್ ಟೆನ್ಸಿ ಸರ್ವಿಸಸ್, ಇನ್ ಫರ್ಮೇಶನ್ ಟೆಕ್ನೊಲೊಜಿ, ಕನ್ಸುಮರ್ಸ್ ಸರ್ವಿಸಸ್, ಕನ್ಸೂಮರ್ಸ್ ಡ್ಯುರಬಲ್ಸ್, ಟಿ. ಸಿ. ಎಸ್ ಇತ್ಯಾದಿ. ಜೆ ಈಗಿನವರೆಗೆ ಮಂಚೂಣಿಯಲ್ಲಿ ಹಿರಿಯ ಹಲವು ಪ್ರಮುಖ ಸಂಸ್ಥೆಗಳನ್ನು ಪೋಷಿಸಿ ಕೊಂಡು ಬಂದರು. ಅದರಲ್ಲಿ ಅನೇಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಉತ್ಪಾದನೆಯಲ್ಲಿ ಮತ್ತು ಗುಣಮಟ್ಟದಲ್ಲಿ ಅಧಿಕ ಪ್ರಗತಿಯನ್ನು ತರಲು ಸದಾ ಪ್ರಯತ್ನಿಸಿದರು. ಭಾರತದ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಅಂತ್ಯಗೊಳಿಸಲು ತಾವು ಸ್ವತಃ ಕಂಕಣಬದ್ಧರಾಗಿ ಕೆಲಸಮಾಡಿದ್ದು.  ಭಾರತದ ಸ್ತ್ರೀಯರ ವಿದ್ಯಾಭ್ಯಾಸ ಹಾಗೂ ಅವರನ್ನು ಪೋಷಿಸುವ ಸೇವಾ ಸಂಸ್ಥೆಗಳ ಸುವ್ಯಸ್ಥಿತ ಕೆಲಸ ಕಾರ್ಯಗಳ ಮಹತ್ವದ ಬಗ್ಗೆ ಒತ್ತು ಕೊಟ್ಟರು.

ಭಾರತದ ಅತ್ಯಂತ ದೊಡ್ಡ ಕಂಪೆನಿಯ ೪ ನೆಯ ಡೈರೆಕ್ಟರ್, ಆಗಿ ಜೆ. ಚುನಾಯಿಸಲ್ಪಟ್ಟರು. ೧೯೩೯ ರಲ್ಲಿ ಇದ್ದ ಆಸ್ತಿ -೬೨ ಕೋಟಿ ಅಥವಾ ೬೨೦. ಮಿಲಿಯ ರುಪಾಯಿಗಳು.  ೧೯೬೦ ರಲ್ಲಿ ೧೦,೦೦೦ ಕೋಟಿ ಅಥವಾ, ೧೦೦ ಬಿಲಿಯನ್. ೧೪ ಕಂಪೆನಿಗಳಿಂದ, ಮಾರಾಟ ೨೮೦ ಕೋಟಿ, ೨.೮ ಬಿ. ೧೯೯೩ ರಲ್ಲಿ ೧೫,೦೦೦ ಕೋಟಿ -೧೫೦ ಬಿ.೫೦ ಕ್ಕಿಂತ ಹೆಚ್ಚು ಸಂಸ್ಥೆಗಳು ಹಾಗೂ ಲೆಕ್ಕವಿಲ್ಲದಷ್ಟು ಚಿಕ್ಕಪುಟ್ಟ ಕಂಪೆನಿಗಳು.  ಏರ್ ರ್ಲೈನ್ಸ್ ನಿಂದ ಹೋಟೆಲ್, ಟ್ರಕ್ ನಿಂದ ಲೋಕೋಮೋಟಿವ್,  ಸೋಡ ಅಶ್,  ಔಷಧಿ,  ಐರ್ ಕಂಡೀಶನ್,  ಲಿಪ್ಸ್ಟಿಕ್,  ಕಲೋನ್, ಸಿಮೆಂಟ್ ಕಂ ಸೇರಿ, ಎ. ಸಿ. ಸಿ. ಕಂಪೆನಿಯವರೆಗ. ಈಗಿರುವ ಕಂಪೆನಿಗಳನ್ನು ಧೃಢಪಡಿಸಿ, ಹೊಸ ಉದ್ಯೋಗಗಳನ್ನು ಪ್ರಾರಂಭಿಸಿದರು. ಅಡುಗೆ ಉಪ್ಪು, ಮೊದಲಾದವುಗಳು. ೧೯೬೪-೧೯೯೧, ವೇಳೆಯಲ್ಲಿ, ಭಾರತ ಸರ್ಕಾರದ ಕಂಟ್ರೋಲ್ ನೀತಿಯಿಂದ ಟಾಟಾ ಸಂಸ್ಥೆ ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಲು ಸಹಾಯವಾಗಲಿಲ್ಲ. ಜೆ.ಆರ್.ಡಿ.ಟಾಟಾರವರಿಗೆ, ಇದರ ಬಗ್ಗೆ ಸ್ವಲ್ಪ ಅಸಮಧಾನವಿತ್ತು. ಸರ್ಕಾರದ ಅನುಕೂಲವಿದ್ದಿದ್ದರೆ, ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು, ಎಂದು ಜೆ.ಆರ್.ಡಿ ಹೇಳುತ್ತಿದ್ದರು.

ಜೆ.ಆರ್.ಡಿ.ಯವರು, ಟಾಟಾ ಉದ್ಯಮ ಕ್ಷೇತ್ರದ ಬೇರೆ ಪ್ರಮುಖ ಡೈರೆಕ್ಟರ್ ಗಳ ಕಾರ್ಯವನ್ನು ಪರಿಶೀಲಿಸಿ, ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟು, ಅವರಿಗೆ ಮುಂದುವರೆಯಲು ಅಗತ್ಯವಾದ ಸಹಾಯವನ್ನು ಮಾಡುತ್ತಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಅನೇಕ ಪ್ರತಿಷ್ಠಿತ ಪ್ರತಿಭೆಗಳನ್ನು ಗುರುತಿಸಿದರು. ಕೆಲವರು ಟಾಟಾ ಸಂಸ್ಥೆಯಲ್ಲಿ ದಶಕಗಳಿಂದ ಕೆಲಸ ಮಾಡಿದ ನಿಷ್ಠಾವಂತ ಅಧಿಕಾರಿಗಳು. ಅವರಲ್ಲಿ 'ಸರ್ ಹೋಮಿ ಮೋದಿ',  'ಸರ್ ಅರ್ದೆಶಿರ್ ಜಲಾಲ್',  'ಸರ್ ಜೆಹಾಂಗೀರ್ ಘಾಂಧಿ',  'ರೂಸ್ಸಿಮೋಡಿ', ವಿಜ್ಞಾನಿಗಳಾದ 'ಹೋಮಿ ಭಾಭ', ಲಾಯರ್, 'ಜೆ. ಡಿ. ಚೋಕ್ಸಿ', 'ನಾನಿ ಪಾಲ್ಕಿವಾಲ', 'ಜೆ. ಎನ್. ಮಥಾಯ್', ಎಕೋನೊಮಿಸ್ಟ್ಸ್, 'ಏ. ಡಿ. ಶ್ರಾಫ್', 'ಡಿ. ಆರ್. ಪೆಂಡ್ಸೆ', 'ಫ್ರೆಡ್ಡಿಮೆಹ್ತ', ಮುಂತಾದವರು ಮುಖ್ಯರು. ಅವರಲ್ಲಿ ಕೆಲವರು ರೋಲ್ ಮಾಡೆಲ್  ಆಗಿ ಮೆರೆದರು. 'ದರ್ಬಾರಿ ಸೇಠ್ ', 'ಸುಮಂತ್ ಮೂಲ್ಗಾಂವ್ ಕರ್ ' ಮುಂತಾದವರು, ಅತ್ಯಂತ ಪ್ರಭಾವೀ ಕುಶಲಕರ್ಮಿಗಳು.  ಟಾಟಾ ಕಂಪೆನಿಗಳನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಈ ಮಹಾರಥಿಗಳ ಪಾತ್ರ , ಅತಿಮುಖ್ಯವಾಗಿತ್ತು.  ಟಾಟಾ ಅಡ್ಮಿನಿಸ್ಟ್ರೆಟಿವ್ ಸರ್ವಿಸೀಸ್, ಟಾಟಾ ಮ್ಯಾನೆಜ್ಮೆಂಟ್ ಸೆಂಟರ್, ಪ್ರೊಫೆಶನಲ್ಸ್, ಮುಂದೆ ಮುಂದೆ ಹೋಗಲು ಇಂತಹ ನಿಸ್ವಾರ್ಥ ವ್ಯಕ್ತಿಗಳು ಕಾರಣರಾದರು.  ಹೌರಸೇತುವೆಗೆ ಬೇಕಾದ ಅತಿ ಗಟ್ಟಿಯಾದ ಉಕ್ಕು, 'ಟಿಸ್ಕ್ರೋಮ್', ತಯಾರು ಮಾಡಲಾಯಿತು. 'ಟಿಸ್ಕೊರ್', (ಎನ್ನುವ ಅತಿ ಗಟ್ಟಿಯಾದ ಉಕ್ಕಿನ ಅಲಾಯ್) ನ್ನು ಭಾರತೀಯ ರೈಲ್ವೆ ಕೋಚ್ ಗಳಿಗೆ ಬಳಸುವ, ಸ್ಟೀಲ್,ಟಾಟಾ ಕಂಪೆನಿ ತಯಾರು ಮಾಡಿತು. ಬೇರೆ ಕಂಪೆನಿಗಳಿಗೆ ಹೋಲಿಸಿದರೆ, ಟಾಟಾ ಸಂಸ್ಥೆ ಪ್ರಾರಂಭದಲ್ಲೇ ಕೆಲಸಗಾರರಿಗೆ ಅನೇಕ ಸೌಕರ್ಯಗಳನ್ನು ಕಲ್ಪಿಸಿದ್ದರು. ೧೯೧೨ ರಲ್ಲೆ ಟಾಟಾ ಸಂಸ್ಥೆಯವರು, ತಮ್ಮ ಕಾರ್ಮಿಕರಿಗೆ, ೮ ಗಂಟೆ ಕೆಲಸದ ಶಿಫ್ಟ್ ನ್ನು ಆಯೋಜಿಸಿದ್ದರು. ಆದರೆ, ಆ ದಿನಗಳಲ್ಲಿ ಯೂರೋಪ್ ನಲ್ಲೂ ೧೨ ಗಂಟೆ ಕಾಲದ ಕೆಲಸದ ನಿಯಮವಿತ್ತು. ೧೯೨೦ ರಲ್ಲೇ ತಮ್ಮ ಕರ್ಮಚಾರಿಗಳಿಗೆ 'Leave with pay', 'Provident fund', ಮುಂತಾದ ಸೌಲಭ್ಯಗಳನ್ನು ಕೊಟ್ಟಿದ್ದರು. ಇನ್ನಿತರ ಕಂಪೆನಿಗಳು ಇಂತಹ ಸೌಲಭ್ಯಗಳ ಬಗ್ಗೆ, ಯೋಚಿಸಲೂ ಸಾಧ್ಯವಿಲ್ಲದ ಕಾಲವದು. ಆದ್ದರಿಂದ ಟಾಟಾ ಸಂಸ್ಥೆ, ನಮ್ಮದೇಶದ ಅತ್ಯಂತ ಭಾರಿ ಉದ್ಯಮಗಳನ್ನು ಪ್ರ ಪ್ರಥಮವಾಗಿ ಸ್ಥಾಪಿಸುವದರ ಜೊತೆಗೆ, ಅನೇಕ ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಜನತೆಗೆ ಕೊಟ್ಟು, ಭಾರತದ ಉದ್ಯಮ ವಲಯದಲ್ಲಿ ಮಂಚೂಣಿಯಲ್ಲಿ ಮುಂದುವರೆಯಲು ಸಹಾಯವಾಯಿತು.

೧೯೮೦
ಭಾರತದ ಭವಿತವ್ಯಕ್ಕೆ ನಾಗರಿಕ-ವಿಮಾನಯಾನದ ಶುಭಾರಂಭ ಅತ್ಯಂತ ಆಶಾದಾಯಕವೂ, ಅವಶ್ಯಕವೂ ಆಗಿತ್ತು. ಜೆ  ಅವರಿಗೆ, 'Indian Airlines' ಮತ್ತು , 'Air India', ಎರಡಕ್ಕೂ ಚೆರ್ಮನ್ ಆಗಲು ಕರೆ ಬಂತು. ಅವರು ೧೯೭೮ ರ ವರೆಗೆ ಹೇಗೋ ಏರ್ ಇಂಡಿಯದಲ್ಲಿ ಇದ್ದರು. ೧೯೮೦ ರಲ್ಲಿ ಅವರಿಗೆ ಪುನಃ ಕೇಳಿ ಕೊಳ್ಳಲಾಯಿತು. ಅವರೊಬ್ಬ  ಐತಿಹಾಸಿಕ ಪುರುಷರು . ಅಷ್ಟುಹೊತ್ತಿಗೆ ಭಾರತದಲ್ಲಿ ವಿಮಾನಯಾನದ ಶಕೆ, ಪ್ರಾರಂಭವಾಗಿದ್ದರೂ ರಾಜಕೀಯದಿಂದಾಗಿ,' ಜೆ' ಯವರ ಆಸಕ್ತಿಯ ತೀವ್ರತೆಯನ್ನು ಕಳೆದು ಕೊಂಡಿತ್ತು. ಜೆ ರವರಿಗೇನೋ, ವಿಮಾನಯಾನ ಹಾಗೂ ವಾಯು ಸಾಗಾಣಿಕೆಯ ಪ್ರಕ್ರಿಯೆಗಳ ಪ್ರತಿ ಹಂತದಲ್ಲೂ ಕಳಕಳಿಯಿತ್ತು. ಏಕೆಂದರೆ ಅವರಿಗೆ ಪ್ರತಿ ವಿಚಾರಗಳು ಚೆನ್ನಾಗಿ ತಿಳಿದಿದ್ದವು. ೧೯೮೨ ರಲ್ಲಿ, ಭಾರತದಲ್ಲಿ ವಾಯುಯಾನದ ಬಂಗಾರದ ಹಬ್ಬ ವನ್ನು ಆಚರಿಸಲು ಅವರು ಕೈಗೊಂಡ ಕಾರ್ಯವೆಂದರೆ, ಪುನಃ ೧೯೩೨ ರ ಕಾರ್ಯವನ್ನು ಪುನರಾಚರಣೆ ಮಾಡುವುದರಿಂದ. ಕರಾಚಿಯಿಂದ ಅಹಮದಾಬಾದ್ ಮೂಲಕ, ಮುಂಬಯಿ ಯಾನ-ಯುವ ಜನರಿಗೆ ಪ್ರೇರಣೆ ಸಿಗಲೆಂದು.

೧೯೧೨ ರಲ್ಲಿಯೇ, ದೊರಾಬ್ ಟಾಟಾ ಮತ್ತು, ಆರ್. ಡಿ. ಟಾಟಾರವರು, ಪ್ರಥಮ ಸೆಮೆಂಟ್ ಕಂಪೆನಿಯನ್ನು ತೆರೆದರು. ೧೯೨೧ ರಲ್ಲಿ ಎರಡನೆಯ, ಸೆಮೆಂಟ್ ಫ್ಯಾಕ್ಟರಿಯನ್ನು ಕರ್ನಾಟಕದ ಶಹಾಬಾದ್ ನಲ್ಲಿ ಪ್ರಾರಂಬಿಸಿದರು. ೧೯೩೬ ರಲ್ಲಿ, ಮತ್ತೆ ೩ ಕಂಪೆನಿಗಳು ಇವಕ್ಕೆ ಸೇರ್ಪಡೆಯಾಗಿ ಅದರ ಹೆಸರು 'ACC', (Associated Cement Co;) ಆಯಿತು. ಬಾಯ್ಲರ್, ರೈಲ್ವೆ ಎಂಜಿನ್ ಗಳ ತಯಾರಿಕೆ, ಬಿಟ್ಟು, ಮೋಟರ್ ಕಾರ್, ಟ್ರಕ್ಸ್ ಗಳ ತಯಾರಿಕೆಯಲ್ಲಿ ತಮ್ಮ ಗಮನ ಹರಿಸಿದರು. ಆಗ, ಸುಮಂತ್ ಮೂಲ್ಗಾಂವ್ ಕರ್ ಎಂಬ ಯುವಕ, 'Imperial College of Science  Technology', ಲಂಡನ್, ನಿಂದ 'Mechanical Engineering' ನಲ್ಲಿ, ಪದವಿ ಪಡೆದು, ೧೯೨೯ ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಅವರು, ಗುಜರಾತ್ ರಾಜ್ಯದ ದ್ವಾರಕದಲ್ಲಿ, 'C. P Cement Works', ಎಂಬ ಸಂಸ್ಥೆ ಯಲ್ಲಿ ೨೫೦ ರೂ. ಸಂಬಳ ಕ್ಕೆ ದುಡಿಯುತ್ತಿದ್ದರು. ೨ ನೆಯ World war ನಿಂದಾಗಿ ವಿದೇಶಗಳಿಂದ ಆಮದು ಬಂದಾಗಿತ್ತು ಆಗ ಮೂಲ್ಗಾಂಕರ್, Chaibasa,Cement ಕಂ ಯಲ್ಲಿ ತಾವೇ, ತಮಗೆ ಬೇಕಾದ ಸಿಮೆಂಟ್ ಯಂತ್ರಗಳನ್ನು ನಿರ್ಮಿಸಿ, ಕೆಲಸವನ್ನು ಚಾಲನೆಯಲ್ಲಿಟ್ಟರು.  'ಸುಮಂತ್ ಮೂಲ್ಗಾಂಕರ್' ರವರ ಪ್ರಾಮಾಣಿಕತೆ, ಉನ್ನತ ವ್ಯಾಸಂಗ, ಮತ್ತು ಕೆಲಸದಲ್ಲಿ ದಕ್ಷತೆಗಳು 'ಜೆ.ಆರ್.ಡಿ' ಯವರನ್ನು ಆಕರ್ಷಿಸಿದವು.  ಇಂತಹ ವ್ಯಕ್ತಿತ್ವವನ್ನು ಹೊಂದಿದ ಸುಮಂತ್,  ತುಂಬ ಹಿಡಿಸಿದರು. ಜೆ.ಆರ್.ಡಿ,  ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದರು. ಸುಮಂತ್, ಜೆ.ಆರ್.ಡಿಯವರ ಬಗ್ಗೆ ಕೇಳಿದ್ದರು. ಇದು ಅವರಿಬ್ಬರ ಸ್ನೇಹವನ್ನು ಬೆಸೆಯಲು ಸಹಾಯಕವಾಯಿತು ಜೆ. ಆರ್. ಡಿ ರವರ ಕೆಲಸ ಮಾಡಿಸುವ ವೈಖರಿ ಎಲ್ಲರಿಗೂ ಬೆರಗುಗೊಳಿಸುವಂತಿತ್ತು. ಮೊದಲು, ತಕ್ಕ ಮನುಷ್ಯರನ್ನು ಹುಡುಕುವುದು, ಅವರಲ್ಲಿ ಆಸಕ್ತಿ ಮನಗಂಡ ನಂತರ, ಅವರಿಗೆ, ಹಣಸಹಾಯ, ಪದವಿಗಳನ್ನು ಕೊಟ್ಟು, ವಿದೇಶದಲ್ಲಿ ಪ್ರಶಿಕ್ಷಣ ಕೊಡಿಸಿ, ಅವರಿಗೆ ಅಧಿಕಾರವನ್ನು ಒಪ್ಪಿಸಿ ದೂರದಲ್ಲಿ ನಿಂತು ಅವರ ಪ್ರಗತಿಯನ್ನು ಗಮನಿಸುವ ಸ್ವಭಾವ,ಜೆ ರವರದು. ತಾವು ಕಾಲೇಜ್ ವಿದ್ಯಾಭ್ಯಾಸವನ್ನು ಮಾಡದೆ ಇದ್ದರೂ, ತಮ್ಮದೇ ಆದ ಶೈಲಿಯಲ್ಲಿ ಕಾರ್ಯ-ಸಾಧಿಸುವ ಕಲೆ ಅವರಿಗೆ ಕರಗತವಾಗಿತ್ತು. ಅವರ ನಿಕಟದಲ್ಲಿ ದುಡಿದು, ಹಾಗೆ ಮುಂದೆ ಬಂದ ವ್ಯಕ್ತಿಗಳಿಗೇನು ಕಡಿಮೆಯಿಲ್ಲ. ಮೂಲ್ಗಾಂಕರ್  ಕೂಡಲೇ ಟಾಟಾ ಸಿಮೆಂಟ್ ಕಂಪೆನಿಯ 'Executive Director', ಆದರು. ಅವರನ್ನು , USA ಮತ್ತು England ಗೆ ಹೆಚ್ಚಿನ ಪ್ರಶಿಕ್ಷಣಕ್ಕಾಗಿ ಕಳಿಸಿಕೊಟ್ಟರು. ೧೯೪೯ ರಲ್ಲಿ, 'TELCO' ಪಾದಾರ್ಪಣೆ ಮಾಡಿತು. ಮೊದಲು Boilers ಮತ್ತು ನಂತರದಲ್ಲಿ 'Locomotives', ಮಾಡಲು ಮೊದಲುಮಾಡಿದರು. ಮೂಲ್ಗಾವ್ಕರ್ 'Director and Incharge', ಆಗಿ ನೇಮಿಸಲ್ಪಟ್ಟರು.

೧೯೫೦ ರಲ್ಲಿ Germany ಯ, Daimler-Benz, ಕಂಪೆನಿಯ  ಜೊತೆ ಸೇರಿ, Tata Locomotive and Engineering Co;(TELCO)  ಸ್ಥಾಪಿಸಿದರು. ೧೫ ವರ್ಷಗಳ ಇದರ ಕಾರ್ಯ ಚಟುವಟಿಕೆಗಳು ಬದಲಾಗಿ, ನಂತರ, TELCO, Tata Engineering  Locomotive Co; ಎಂದು ೨೪, ಸೆಪ್ಟೆಂಬರ್, ೧೯೬೦ ಯಲ್ಲಿ ಹೆಸರಿಸರಾಯಿತು. ಮೊದಲು, ೨೫,೦೦೦ ಮಿಲಿಯನ್ ರೂಪಾಯಿಗಳ, ಹಾಗೂ ,TISCO, ಕಂಪೆನಿಯ ೨೧,೦೦೦ ಮಿ. ರೂಪಾಯಿಗಳ ಟರ್ನ್ ಓವರ್, ಆಯಿತು. ೧೯೬೦ ರಲ್ಲಿ ಪುಣೆಯಲ್ಲಿನ TELCO ಫ್ಯಾಕ್ಟೊರಿ ಯನ್ನು ಆಧುನಿಕರಿಸಲಾಯಿತು. ೧೯೮೮ ರಲ್ಲಿ, ಸುಮಂತ್ ಮೂಲ್ಗಾಂವ್ ಕರ್ ರವರು, ಹೊಸದಾಗಿ ನೇಮಿಸಲ್ಪಟ್ಟ ಟಾಟಾ ಡೈರೆಕ್ಟರ್, ರತನ್ ಟಾಟಾ, ರವರಿಗಾಗಿ ತಮ್ಮ ಸ್ಥಳವನ್ನು ತೆರೆವು ಮಾಡಿಕೊಟ್ಟು, ನಿವೃತ್ತರಾದರು. ಕೆಲವೇ ತಿಂಗಳುಗಳಲ್ಲಿ ಮೃತರಾದರು. ಸುಮಂತ್ ಮೂಲ್ಗವ್ ಕರ್ ರನ್ನು ಜೆ. ಆರ್.ಡಿ ಯವರು, ತಮ್ಮ ೬೮ ನೆ ವಯಸ್ಸಿನಲ್ಲಿ ಟೆಲ್ಕೊ ಚೇರ್ಮನ್ ಶಿಪ್ ನಿಂದ ಕೆಳಗಿಳಿದು, ಛೇರ್ಮನ್ ಆಗಿ ನೇಮಿಸಿದ್ದರು. ದರ್ಬಾರಿ ಸೇಠ್ ರವರಿಗೆ ತಮ್ಮ ೭೮ ನೆಯ ವಯಸ್ಸಿನಲ್ಲಿ, ಟಾಟಾ ಕೆಮಿಕಲ್ಸ್ ಛೇರ್ ಮನ್ ಅಗಿ ಜವಾಬ್ದಾರಿಯ ಅಧಿಕಾರವನ್ನು ವಹಿಸಿ ಕೊಟ್ಟಿದ್ದರು. ಹಾಗೆಯೇ ರುಸ್ಸಿಯವರಿಗೆ ತಮ್ಮ ೮೦ ನೆಯ ವಯಸ್ಸಿನಲ್ಲಿ,  ಟಾಟಾ ಸ್ಟೀಲ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ೧೯೮೧ ರಲ್ಲಿ ರತನ್ ಟಾಟಾ ರವರನ್ನು Chairman of Tata Industries ಆಗಿ ನೇಮಕ ಮಾಡಿ ತಾವು ಹೊರಗಡೆಯಿದ್ದು ಗಮನಿಸುತ್ತಿದ್ದರು. 
೧೯೯೧-೧೯೯೩ 
ಟಾಟಾ ಡೈರೆಕ್ಟರ್, 'ಸರ್ ನವರೋಜಿ ಸಕ್ಲಾಟ್ ವಾಲ' ತೀರಿಕೊಂಡ ಮೇಲೆ, ಟಾಟಾ ಸನ್ಸ್ ಗೆ ನೇಮಿಸಲ್ಪಟ್ಟ ಸಮಯ, ಜುಲೈ ೨೬, ೧೯೩೮ ನಲ್ಲಿ. ಜೆ ಶುರು ಮಾಡಿದಾಗ ೧೪ ಕಂಪೆನಿಗಳು Tata  Sons; ನಲ್ಲಿದ್ದವು. ಅವರ ಮುಂದಾಳತ್ವದಲ್ಲಿ ಅನೇಕ ಮೊಟ್ಟ ಮೊದಲ ಚಟುವಟಿಕೆಗಳಿಗೆ ನಾಂದಿಯಾಯಿತು. ಕಮರ್ಷಿಯಲ್ ವಾಹನಗಳು, ವೆಹಿಕಲ್ಸ್ , ಇಂಜಿನಿಯರಿಂಗ್, ಹೋಟೆಲ್, ಏರ್ ಕಂಡಿಶನಿಂಗ್ ಮತ್ತು ರೆಫ್ರಿಜರೇಶನ್,  ಕನ್ಸೂಮರ್ ಸರ್ವೀಸಸ್ ಮತ್ತು ಐ.ಟಿ, ಕನ್ಸೂಮರ್ ಪದಾರ್ಥಗಳು, ಡ್ಯೂರಬಲ್ಸ್, ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್. ಟಿ.ಸಿ.ಎಸ್. ಮೊದಲು, ಟಾಟ ಮತ್ತು ಸನ್ಸ್ ಗೆ ಸಾಫ್ಟ್ ವೇರೆ ಒದಗಿಸಲು ಪ್ರಾರಂಭವಾದದ್ದು, ೧೯೬೮ ಈಗ ದೇಶದ ಅತಿ ಭಾರಿ ಸಂಸ್ಥೆಯಾಗಿ ರೂಪುಗೊಂಡಿದೆ. ಜೆ, ದೇಶದ ಹಲವರು ಸಮಸ್ಯೆಗಳಿಗೆ ಸ್ಪಂದಿಸಿ ತಮ್ಮ ಯೋಗದಾನ ಮಾಡಿದ್ದಾರೆ. 'ಫ್ಯಾಮಿಲಿ ಪ್ಲಾನಿಂಗ್ , ಅಂಡ್ ಪಾಪ್ಯುಲೇಶನ್ ಕಂಟ್ರೋಲ್'. ವಿಶ್ವಸಂಸ್ಥೆ, ಅವರಿಗೆ ಸೆಪ್ಟೆಂಬರ್, ೧೯೯೨ ರಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ. ದೇಶದಾದ್ಯಂತ ವಿದ್ಯಾಪ್ರಸಾರ, ಅನಕ್ಷರತೆಯ ನಿರ್ಮೂಲನೆ ಅವರ ಗುರಿಯಾಗಿತ್ತು. ಮಕ್ಕಳು ಹಾಗೂ ಅಬಲ ಸ್ತ್ರೀಯರ ಯೋಗಕ್ಷೇಮ, ಮತ್ತು ಅವರ ಜೀವನಸ್ತರದಲ್ಲಿ ಆದಾಯ ಹೆಚ್ಚಿಸುವ ಕಾರ್ಯಗಳು. 'NCPA', 'TIFR' ಗಳ ಸ್ಥಾಪನೆ. 'National Institute for Advanced Studies', ಬೆಂಗಳೂರಿನಲ್ಲಿ. ಭಾರತದ ಪ್ರಥಮ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆ. Tata Memorial Hospital for Cancer Research  Treatment, ತಮ್ಮ ೪೦ ನೆಯ ವಯಸಿನಲ್ಲಿ ವಿವಿಧೋದ್ದೇಶಗಳ ಪೂರೈಕೆಗಾಗಿ, 'JRD Tata Trust', ಸ್ಥಾಪನೆಯಾಯಿತು. ತಮ್ಮ ಟಾಟಾ ಸನ್ಸ್ ನಲ್ಲಿದ್ದ ,ಮತ್ತು ಇತರ ಟಾಟಾ ಕಂಪೆನಿಗಳಲ್ಲಿದ, ಶೇರ್ ಗಳನ್ನು ಮಾರಿ, ಮಕ್ಕಳು , ಹಾಗೂ ಸ್ರೀಯರಿಗಾಗಿ, ಒಂದು ಸ್ವಂತ ಟ್ರಸ್ಟ್, 'JRD Tata Trust  Thelma Tata Trust' ಮಾಡಿದರು. ನೆಹರು ರವರ ಸ್ನೇಹ ಅವರಿಗೆ ದೊರೆಯಿತು.

ಎರಡನೆಯ ವಿಶ್ವಯುದ್ಧದ ತರುವಾಯ, ಭಾರತ ದೇಶದಲ್ಲಿ ಯಂತ್ರೀಕರಣದಿಂದ ಉತ್ಪಾದನೆ ಹೆಚ್ಚಿಸಲು, 'ಜೆ ' ರವರ ಮನಸ್ಸು ಹಾತೊರೆಯುತ್ತಿತ್ತು. ತಮ್ಮ ಜೊತೆಗೆ, ಆಗಿನ ಭಾರತದ ಸುಪ್ರಸಿದ್ಧ ಉದ್ಯಮಿಗಳಾದ, 'ಜಿ.ಡಿ.ಬಿರ್ಲ, 'ಕಸ್ತುರ್ ಭಾಯ್ ಲಾಲ್ ಭಾಯ್' ಮುಂತಾದವರನ್ನು ಸೇರಿಸಿ ಕೊಂಡರು. ಟೆಕ್ನೋಕ್ರಾಟ್,  'ಜಾನ್ ಮಥಾಯ್',  ಅರ್ದೇಶಿರ್ ದಲಾಲ್,  ಎ.ಡಿ.ಶ್ರಾಫ್, ೧೯೪೪ ರ ಜನವರಿಯಲ್ಲಿ ಬಾಂಬೆ ಪ್ಲಾನ್, ತಯಾರಿಸಿದರು. ಇದು Plan of Economic Development for India , ಎಂದು ಪ್ರಸಿದ್ಧಿಯಾಗಿದೆ. ಜನವರಿ ೧೯೪೪ ರಲ್ಲಿ ಒಂದು ರಿಪೊರ್ಟ್, ಮತ್ತೊಂದು ೧೯೪೪ ರಲ್ಲಿ ಮತ್ತೊಂದು ವರದಿ ತಯಾರಾಯಿತು. ಜೆ. ಆರ್. ಡಿ. ಯವರಿಗೆ ಸಂದ ಪ್ರಶಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅವರಿಗೆ ಭಾರತ ಸರ್ಕಾರದ ಅತಿಹೆಚ್ಚಿನ ಬಹುಮಾನ, ಭಾರತರತ್ನ ಪ್ರಶಸ್ತಿ, ೧೯೯೨ ರಲ್ಲಿ ದೊರೆಯಿತು.




#Article 102: ವಿಶ್ವನಾಥನ್ ಆನಂದ್ (235 words)


ವಿಶ್ವನಾಥನ್ ಆನಂದ್ (ಜನನ: ಡಿಸೆಂಬರ್ ೧೧, ೧೯೬೯) ಭಾರತದ ಪ್ರಸಿದ್ಧ ಚದುರಂಗದ (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, ೨೦೦೪ ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು (ಗ್ಯಾರಿ ಕ್ಯಾಸ್ಪರೋವ್ ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.

ಕೆಲವೊಮ್ಮೆ ವಿಶಿ ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು!

೧೯೯೫ ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಆಗಿನ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್‍ರ ವಿರುದ್ಧ ವಿಶ್ವ ಚಾಂಪಿಯನ್‍ಶಿಪ್ ಸರಣಿಯನ್ನು ಆಡಿದರು. ಮೊದಲ ಎಂಟು ಪಂದ್ಯಗಳು ಡ್ರಾ ಆದವು. ವಿಶ್ವ ಚಾಂಪಿಯನ್‍ಶಿಪ್ ಸರಣಿಯಲ್ಲಿ ಹಿಂದೆಂದೂ ಪ್ರಾರಂಭದಲ್ಲೇ ಇಷ್ಟು ಡ್ರಾ ಗಳು ನಡೆದಿರಲಿಲ್ಲ. ಒಂಬತ್ತನೆಯ ಪಂದ್ಯವನ್ನು ಆನಂದ್ ಗೆದ್ದರೂ ಮುಂದಿನ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತರು. ಒಟ್ಟು ಸರಣಿಯನ್ನು ೭.೫ - ೧೦.೫ ರಿಂದ ಸೋತರು.

೨೦೦೦ ದಲ್ಲಿ ಫಿಡೆ (ಚೆಸ್ ಸರಣಿಗಳನ್ನು ಆಯೋಜಿಸುವ ಅಂತಾರಾಷ್ಟ್ರೀಯ ಸಂಸ್ಥೆ) ಯಿಂದ ಆಯೋಜಿತ ವಿಶ್ವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ರಷ್ಯದ ಅಲೆಕ್ಸೀ ಶಿರೋವ್ ರನ್ನು ೩.೫-೦.೫ ರಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರು.

ಅಕ್ಟೋಬರ್ ೨೦೦೩ ರಲ್ಲಿ ಪ್ರಪಂಚದ ಹನ್ನೆರಡು ಅತ್ಯುತ್ತಮ ಆಟಗಾರರಲ್ಲಿ ಹತ್ತು ಜನರು ಪಾಲ್ಗೊಂಡ ವೇಗದ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಗೆದ್ದರು. (ವೇಗದ ಚೆಸ್ ಆಟಗಳಲ್ಲಿ ಆಟಗಾರರು ತಮ್ಮ ನಡೆಗಳನ್ನು ನಡೆಸಲು ಕಡಿಮೆ ಸಮಯ ಹೊಂದಿರುತ್ತಾರೆ. ಈ ಸರಣಿಯಲ್ಲಿ ಪ್ರತಿ ಪಂದ್ಯದ ಆರಂಭದಲ್ಲಿ ಆಟಗಾರರಿಗೆ ೨೫ ನಿಮಿಷಗಳ ಸಮಯವಿದ್ದು, ಪ್ರತಿ ನಡೆಯ ನಂತರ ೧೦ ಸೆಕೆಂಡುಗಳಷ್ಟು ಹೆಚ್ಚುವರಿ ಸಮಯ ಸಿಕ್ಕುತ್ತಿತ್ತು.) 

ಮೆಕ್ಸಿಕೊ ನಗರದಲ್ಲಿ ನಡೆದ ೨೦೦೭ರ ಚದುರಂಗ ವಿಶ್ವ ಪಂದ್ಯಾವಳಿಯಲ್ಲಿ ಆನಂದ್ ಒಂದು ಪಂದ್ಯವನ್ನೂ ಸೋಲದೆ ಗೆದ್ದು, ಸೆಪ್ಟೆಂಬರ್ ೨೯ರಂದು ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದರು.

ಆನಂದ್ ಗೆದ್ದಿರುವ ಇತರ ಕೆಲವು ಪ್ರಸಿದ್ಧ ಸರಣಿಗಳು:

ಕಳೆದ ಹತ್ತು ವರ್ಷಗಳ ಉದ್ದಕ್ಕೂ ಪ್ರಪಂಚದ ಐದು ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಆನಂದ್ ಇದ್ದಾರೆ. ಇದರಲ್ಲಿ ಬಹುಕಾಲ ಪ್ರಪಂಚದ ಮೂರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.




#Article 103: ಕ್ರಿಸ್ಮಸ್ (371 words)


ಕ್ರಿಸ್ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. ಜುಡಾಯಿಸಮ್ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್ನ ವಂಶದಲ್ಲಿ ಮೆಸ್ಸಾಯ (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ.

ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ಜಪಾನ್ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ ಎರಡನೆ ಶತಮಾನದಿಂದ ಆರಂಭವಾಯಿತು. ಕ್ರೈಸ್ತ ಚರ್ಚ್ ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ ಡಿಸೆಂಬರ್ ೨೫ ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ. 

ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು ಎಪಿಫನಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. 
ಕ್ರಿಸ್ಮಸ್ ಹೊಸ ವರ್ಷದ ಸಮೀಪ ಬರುವುದರಿಂದ ಕ್ರಿಸ್ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು. 

ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ.

ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. ಸಾಂಟಾ ಕ್ಲಾಸ್ ಎಂಬುದು ಸಂತ ನಿಕೋಲಾಸ್ ಎಂಬುದರ ಅಪಭ್ರಂಶ. 
ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.

ಎಲ್ಲ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ ಹಿಮದ ಮನುಷ್ಯ ಮೊದಲಾದ ಅಲಂಕಾರಗಳೂ ಸಾಮಾನ್ಯ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ. 

ಕ್ರಿಸ್ಮಸ್ಗೆ ಸಂಬಂಧಪಟ್ಟ ಆಚರಣೆಗಳು ಡಿಸೆಂಬರ್ ತಿಂಗಳ ಆರಂಭದಲ್ಲಿ ಅಡ್ವೆಂಟ್ ನಿಂದ ಆರಂಭವಾಗುತ್ತವೆ - ಇದು ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬ. ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ (ಕ್ರಿಸ್ಮಸ್ ಕ್ಯಾರಲ್). ಕ್ರಿಸ್ಮಸ್ ಔತಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ವಿಶಿಷ್ಟವಾದ ತಿನಿಸುಗಳುಂಟು. ಈ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ಒಂದಿ ವಿಶಿಷ್ಟ ಅನುಭೂತಿ ಇದೆ.

ಅಡ್ವೆಂಟ್ ಶುರುವಾಗುತ್ತಿದ್ದಂತೆ ಚರ್ಚುಗಳು ಕ್ರಿಸ್ಮಸ್ಸಿಗೆ ತೆರೆದುಕೊಳ್ಳುತ್ತವೆ. ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ಗಳಲ್ಲಿ ನಡೆಯುತ್ತವೆ. ಕ್ರಿಸ್ಮಸ್ ನಂತರ ಹನ್ನೆರಡನೆ ದಿನದಂದು ಎಪಿಫನಿ ಆಚರಣೆಗಳ ನಂತರ ಕ್ರಿಸ್ಮಸ್ ಕಾಲ ಮುಗಿಯುತ್ತದೆ.




#Article 104: ತುಳಸಿ ಪೂಜೆ (177 words)


ತುಳಸಿ ಪೂಜೆ - ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಮಹಾಪೂರವೇ ಜರುಗುತ್ತದೆ. 

ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು. 

ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತವಾದ ನೆಲ್ಲಿಗಿಡವನ್ನು) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನ ದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪುಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿ ಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ-ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ.




#Article 105: ಕೆಂಪು ಕೋಟೆ (295 words)


ಕೆಂಪು ಕೋಟೆ ದೆಹಲಿಯ ಸಮೀಪ ಆಗ್ರಾ ನಗರದಲ್ಲಿ ಇದೆ. ಪ್ರಸಿದ್ಧ ತಾಜ್ ಮಹಲ್ ಇಂದ ೨.೫ ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಬಹುದು. 

೧೬ ನೆಯ ಶತಮಾನದ ಕೊನೆಯಲ್ಲಿ ಅಕ್ಬರನ ಕಾಲದಲ್ಲಿ ಮೊಘಲರು ಈ ಕೋಟೆಯನ್ನು ಲೋದಿ ವಂಶದಿಂದ ಪಡೆದರು. ಅಕ್ಬರ್ ತನ್ನ ಆಡಳಿತದ ಸಮಯದಲ್ಲಿ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು. ಇದರಿಂದಾಗಿ ಆಗ್ರಾ ನಗರ ಹೆಚ್ಚು ಸಮೃದ್ಧವಾಯಿತೆನ್ನಬಹುದು. ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ, ಮತ್ತು ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು. ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ-ರಾಣಿಯರ ನಿವಾಸವಾಗಿಯೂ ಉಪಯೋಗಗೊಳ್ಳಲಾರಂಭಿಸಿತು. 

ಕೆಂಪು ಕೋಟೆ ತನ್ನ ಇಂದಿನ ರೂಪ ಪಡೆದದ್ದು ಅಕ್ಬರನ ಮೊಮ್ಮಗ ಷಾ ಜಹಾನನ ಕಾಲದಲ್ಲಿ. ಷಾ ಜಹಾನ್ ನ ಕಾಲದ ಶಿಲ್ಪಕಲೆ ಶ್ವೇತ ಅಮೃತಶಿಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿತ್ತು (ಉದಾಹರಣೆಗೆ ತಾಜ್ ಮಹಲ್). ಷಾ ಜಹಾನ್ ಇಲ್ಲಿದ್ದ ಕೆಲವು ಕಟ್ಟಡಗಳನ್ನು ಉರುಳಿಸಿ ತನ್ನದೇ ಆದ ಹೊಸ ಕಟ್ಟಡಗಳನ್ನು ನಿರ್ಮಿಸಲು ಆರಂಭಿಸಿದ. 

ನಂತರದ ವರ್ಷಗಳಲ್ಲಿ ಷಾ ಜಹಾನ್ ನ ಮಗ ಔರಂಗಜೇಬ್ ಷಾ ಜಹಾನನನ್ನು ಇದೇ ಕೆಂಪು ಕೋಟೆಯಲ್ಲಿ ಬಂಧನದಲ್ಲಿರಿಸಿದ. ನಂಬಿಕೆಯಂತೆ, ಷಾ ಜಹಾನ್ ನಿಧನನಾಗಿದ್ದು ಕೆಂಪು ಕೋಟೆಯ ಮುಸಮ್ಮನ್ ಬುರ್ಜ್ ಎಂಬ ಗೋಪುರದಲ್ಲಿ - ಇದು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು ತಾಜ್ ಮಹಲ್ ನ ಅದ್ಭುತ ದೃಶ್ಯ ಇಲ್ಲಿಗೆ ಕಾಣುತ್ತದೆ. 

೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಯುದ್ಧ ಇದೇ ಸ್ಥಳದಲ್ಲಿ ಜರುಗಿತು.

ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು ೨೧ ಮೀ ಎತ್ತರ ಇವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. ಕೋಟೆಯ ಸುತ್ತಳತೆ ೨.೪ ಕಿಮೀ.

ಕೋಟೆಯಲ್ಲಿ ಎರಡು ದ್ವಾರಗಳಿವೆ - ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ (ಅಥವಾ ಅಮರ್ ಸಿಂಗ್ ದ್ವಾರ). ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಕೋಟೆಯ ಈ ಭಾಗವನ್ನು ಉಪಯೋಗಿಸುವುದರಿಂದ ಈ ದ್ವಾರ ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಪ್ರವಾಸಿಗಳು ಸಾಮಾನ್ಯವಾಗಿ ಉಪಯೋಗಿಸುವುದು ಲಾಹೋರ್ ದ್ವಾರವನ್ನು (ಲಾಹೋರ್ ನ ಕಡೆ ಮುಖ ಮಾಡಿರುವುದರಿಂದ ಈ ಹೆಸರು). 

ಶಿಲ್ಪಕಲೆಯ ದೃಷ್ಟಿಯಿಂದ ಈ ಕೋಟೆಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಶೈಲಿಗಳ ಸಮಾಗಮವನ್ನು ಕಾಣಬಹುದು. ಒಟ್ಟಾರೆ ಶಿಲ್ಪಕಲೆ ಮುಸ್ಲಿಮ್ ಶೈಲಿಗಳಿಂದ ಸ್ಫೂರ್ತಿ ಪಡೆದಿದ್ದರೂ, ಕೆಲವು ಅಲಂಕಾರಗಳಲ್ಲಿ ಹಿಂದೂ ಶಿಲ್ಪಕಲೆಯ ಪ್ರಭಾವವನ್ನು ಕಾಣಬಹುದು. 

ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಗಳ ಭಾಷಣ ನಡೆಯುವುದು ಕೆಂಪು ಕೋಟೆಯಲ್ಲಿಯೇ. ಇದೇ ದಿನ ಭಾರತೀಯ ಸೈನ್ಯದ ಅನೇಕ ತುಕಡಿಗಳು ಇಲ್ಲಿ ಪ್ರಭಾತಭೇರಿ (ಪೆರೇಡ್) ನಡೆಸುತ್ತವೆ. ಹಾಗೆಯೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಸಾಂಸ್ಕೃತಿಕ ಪ್ರದರ್ಶನಗಳ ಮೆರವಣಿಗೆ ನಡೆಯುತ್ತದೆ. ಇದೇ ಸಂದರ್ಭದಲ್ಲಿಯೇ ಭಾರತದ ರಕ್ಷಣೆಗೆ ಅತ್ಯುನ್ನತ ಸೇವೆ ನೀಡಿದ ಸೈನಿಕರಿಗೆ ಪರಮ್ ವೀರ್ ಚಕ್ರ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ.

೧೯೮೩ ರಲ್ಲಿ  ಈ ಕೋಟೆಯನ್ನು ಪ್ರಪಂಚ ಸಂಸ್ಕೃತಿ ಕ್ಷೇತ್ರ ಎಂದು ಘೋಷಿಸಿತು. 




#Article 106: ತಾಜ್ ಮಹಲ್ (2507 words)


ತಾಜ್‌ ಮಹಲ್‌  (; ಹಿಂದಿ: ताज महल ; ಪರ್ಷಿಯನ್‌/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್‌‌ ಚಕ್ರವರ್ತಿ ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು.

ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ (ತಾಜ್‌ ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ. 1983ರಲ್ಲಿ ತಾಜ್‌ ಮಹಲ್‌ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು ಎಂದು ಉಲ್ಲೇಖಿಸಲಾಗಿದೆ.

ತಾಜ್‌ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು 1632ರಲ್ಲಿ ಪ್ರಾರಂಭವಾಗಿ, ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು.ಈ ಸಮಾಧಿಯು 17-ಹೆಕ್ಟೇರ್ (42-ಎಕರೆ)ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು. ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು. ಅವರಲ್ಲಿ ಲಾಹೋರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.

ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್‌‌ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ. ಹೆಚ್ಚಿನ ಮೊಘಲ್‌‌ ಸಮಾಧಿಗಳಂತೆ, ಇದರ ಮೂಲ ಅಂಶಗಳು ಕೂಡ ಪರ್ಷಿಯನ್‌ ಶೈಲಿಯದ್ದು. 

ಇದರ ಅಡಿಪಾಯದ ರಚನೆಯು ಮೂಲಭೂತವಾಗಿ ನಯಗೊಳಿಸಿದ ಮೂಲೆಗಳೊಂದಿಗೆ ದೊಡ್ಡ, ಬಹು-ಕೋಣೆ ಹೊಂದಿರುವ ಘನವಾಗಿದೆ ಮತ್ತು ನಾಲ್ಕು ಕಡೆಗಳಲ್ಲಿಯೂ ಸರಿಸುಮಾರು 55 ಮೀಟರ್‌ಗಳ ಅಸಮ ಅಷ್ಟಭುಜಗಳಿಂದ ರಚಿತವಾಗಿದೆ. ಪ್ರತಿ ಕಡೆಗಳಲ್ಲಿ ಭಾರಿ ಪಿಸ್ತಾಕ್‌  ಅಥವಾ ಕಮಾನು ದಾರಿ ಮತ್ತು ಎರಡು ಕಡೆಯಲ್ಲಿ ಬಣವೆಯಂತಿರುವ ಎರಡು ಸಮಾನ ಆಕಾರದ, ಕಮಾನಿನ ಮೊಗಸಾಲೆಗಳೊಂದಿಗೆ ಐವಾನ್‌ನ್ನು ರಚಿಸಲಾಗಿದೆ. ಬಣವೆಯಂತೆ ಮಾಡಿದ ಪಿಸ್ತಾಕ್‌ಗಳ ಈ ಕಲಾಕೃತಿ ನಯಗೊಳಿಸಿದ ಮೂಲೆ ಪ್ರದೇಶಗಳಲ್ಲಿ ಪ್ರತಿಕೃತಿಸುವುದು, ಕಟ್ಟಡದ ಎಲ್ಲಾ ಕಡೆಗಳಲ್ಲಿ ಹೊಂದಿಕೊಳ್ಳುವಂತೆ ಪೂರ್ಣವಾಗಿ ವಿನ್ಯಾಸವನ್ನು ಮಾಡಲಾಗಿದೆ. ನಾಲ್ಕು ಮಿನರೆಟ್ಟುಗಳಿಂದ ಸಮಾಧಿಯನ್ನು ರಚಿಸಲಾಗಿದೆ. ಅದರಲ್ಲಿ ಒಂದೊಂದು ನಯಗೊಳಿಸಿದ ಮೂಲೆಗಳ ಮುಖಮಾಡಿರುವ ಪೀಠದ ಪ್ರತಿ ಮೂಲೆಗಳಲ್ಲಿರುವುದು. ಮಹಲಿನ ಮುಖ್ಯ ಕೋಣೆಯಲ್ಲಿ ನಕಲಿ ಶಿಲೆಗಳಿಂದ ಅಲಂಕೃತವಾದ ಮಮ್ತಾಜ್‌ ಮಹಲ್‌ ಮತ್ತು ಷಹ ಜಹಾನ್‌‌‌ರ ಶಿಲಾಶವ ಪೆಟ್ಟಿಗೆಯಿದೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿವೆ.

ಸಮಾಧಿಯನ್ನು ಸುತ್ತುವರಿದಿರುವ ಅಮೃತಶಿಲೆಯ ಈ ಮಹಲ್‌ ನಯನ ಮನೋಹರವಾಗಿದೆ.ಮಹಲ್‌ ಸುಮಾರು 35 ಮೀಟರ್‌ಗಳಷ್ಟು ಎತ್ತರವಾಗಿದೆ. ಇದು ಸರಿಸುಮಾರು ಅಡಿಪಾಯದ ಉದ್ದದಷ್ಟೇ ಇದೆ. ಸುಮಾರು 7 ಮೀಟರ್‌ಗಳಷ್ಟು ಎತ್ತರದ ಸಿಲಿಂಡರ್ ಆಕಾರದ ಡ್ರಮ್‌ನ ಮೇಲೆ ಕುಳಿತಂತೆ ಕಾಣುತ್ತದೆ. ಇದರ ಆಕಾರದ ಕಾರಣದಿಂದ, ಈ ಗುಮ್ಮಟವನ್ನು ಈರುಳ್ಳಿ ಗುಮ್ಮಟ ಅಥವಾ ಅಮೃದ್‌  (ಸೀಬೆಹಣ್ಣಿನಾಕಾರದ ಗುಮ್ಮಟ) ಎಂದು ಕೆಲವೊಮ್ಮೆ ಕರೆಯಲಾಗುವುದು. ಇದರ ತುದಿಯನ್ನು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಮಹಲಿನ ಎತ್ತರವನ್ನು ಎದ್ದು ಕಾಣಿಸುವಂತೆ ಮಾಡುತ್ತದೆ. ಪ್ರಧಾನ ಗುಮ್ಮಟದ ಈರುಳ್ಳಿ ಆಕಾರವನ್ನು ಪ್ರತಿಕೃತಿಸುವ, ಪ್ರತಿ ಮೂಲೆಗಳಲ್ಲಿರುವ ನಾಲ್ಕು ಚಿಕ್ಕ ಗುಮ್ಮಟಾಕಾರದ ಛತ್ರಿಗಳನ್ನು  (ಕಿಯೊಸ್ಕ್‌ಗಳು) ಮುಖ್ಯ ಗುಮ್ಮಟದ ಆಕಾರದಲ್ಲೇ ನಿರ್ಮಿಸಲಾಗಿದೆ. ಅವುಗಳ ದುಂಡುಕಂಬಗಳ ಪೀಠಕ್ಕೂ ಕಂಬಕ್ಕೂ ನಡುವಿನ ಭಾಗವು ಸಮಾಧಿಯ ಚಾವಣಿಯ ಸುತ್ತಲು ತೆರೆದಿರುತ್ತದೆ. ಇದು ಒಳಾಂಗಣಕ್ಕೆ ಬೆಳಕನ್ನು ಒದಗಿಸುತ್ತದೆ. ಎತ್ತರದ ಅಲಂಕಾರಿಕ ಶೃಂಗಗಳು (ಗುಲ್ಡಾಸ್ತಾಗಳು ) ಮೂಲ ಗೋಡೆಗಳ ಅಂಚುಗಳಲ್ಲಿ ವ್ಯಾಪಿಸಿವೆ ಮತ್ತು ಇವುಗಳು ಗುಮ್ಮಟದ ಎತ್ತರ ನೋಡುವುದಕ್ಕೆ ಎದ್ದು ಕಾಣುವಂತೆ ಮಾಡುತ್ತದೆ. ಕಮಲ ಕಲಾಕೃತಿಯು ಛತ್ರಿಗಳು ಮತ್ತು ಗುಲ್ಡಸ್ತಾಗಳೆರಡರಲ್ಲು ಪುರಾವರ್ತನೆಗೊಂಡಿದೆ. ಚಿನ್ನದ ಲೇಪನವನ್ನು ಹೊಂದಿರುವ ಗುಮ್ಮಟ ಮತ್ತು ಛತ್ರಿಗಳು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಮಿಶ್ರಣವಾಗಿವೆ. 

ಪ್ರಮುಖ ಗೋಪುರವು ಮೂಲತಃ ಚಿನ್ನದಿಂದ ಮಾಡಲ್ಪಟ್ಟಿದೆ, ಆದರೆ 19ನೇ ಶತಮಾನದಲ್ಲಿ ಕಂಚಿನ ಲೇಪಿತ ಗೋಪುರದೊಂದಿಗೆ ಬದಲಿಸಲಾಯಿತು. ಈ ವೈಶಿಷ್ಟ್ಯವು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಸಂಮಿಶ್ರಣದ ಒಂದು ಉತ್ತಮ ಉದಾಹರಣೆಯಾಗಿದೆ. ಗೋಪುರದ ತುದಿಯಲ್ಲಿ ಚಂದ್ರನ ಆಕೃತಿಯಿದೆ. ಅದರ ಸ್ವರ್ಗಾಭಿಮುಖವಾಗಿ ಮುಖಮಾಡಿರುವ ಈ ಶೃಂಗವು ಅಪ್ಪಟ ಮುಸ್ಲಿಂ ಕಲಾಕೃತಿಯ ಪ್ರಧಾನ ಅಂಶ. ಪ್ರಮುಖ ಗೋಪುರದ ತುದಿಯಲ್ಲಿ ಚಂದ್ರನಿರುವ ಕಾರಣ, ಚಂದ್ರನ ಶೃಂಗಗಳು ಮತ್ತು ಗೋಪುರದ ತುದಿ ಸೇರಿ ಶಿವನ ಸಾಂಪ್ರದಾಯಿಕ ಹಿಂದೂ ಚಿಹ್ನೆಯಾದ ತ್ರಿಶೂಲ ಆಕಾರದಂತೆ ಕಾಣುವುದು.

ಸುಮಾರು 40 ಮೀಟರ್‌ಗಳಿಗಿಂತ ಹೆಚ್ಚು ಉದ್ದವಿರುವ ಪ್ರತಿ ಮಿನರೆಟ್ಟುಗಳು ವಿನ್ಯಾಸಕಾರನ ಭವ್ಯತೆಯನ್ನು ಪ್ರದರ್ಶಿಸುತ್ತವೆ. ಪ್ರಾರ್ಥನೆಗಾಗಿ ಮಹಮ್ಮದೀಯ ಘೋಷಕರು ಮುಸ್ಲಿಂ ಬಾಂಧವರನ್ನು ಕರೆಯುವ ಕಾರ್ಯಕ್ಕಾಗಿ ಮಿನರೆಟ್ಟುಗಳನ್ನು ಮಸೀದಿಗಳ ಸಾಂಪ್ರದಾಯಿಕ ಅಂಶದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಮಿನರೆಟ್ಟುಗಳನ್ನು ಕೆಲಸ ಮಾಡುವ ಎರಡು ಮೊಗಸಾಲೆಗಳಿಂದ ಮೂರು ಸಮ ಭಾಗಗಳಾಗಿ ವಿಗಂಡಿಸಲಾಗಿದ್ದು ಇವು ಗೋಪುರವನ್ನು ಸುತ್ತುವರಿದಿವೆ. ಗೋಪುರದ ಮೇಲೆ ಕೊನೆಯ ಮೊಗಸಾಲೆಯಿದ್ದು, ಇದು ಸಮಾಧಿಯ ವಿನ್ಯಾಸವನ್ನು ಹೋಲುವ ಛತ್ರಿಯಿಂದ ಸುತ್ತುವರಿಯಲ್ಪಟ್ಟಿದೆ. ಗೋಪುರದ ತುದಿಯಲ್ಲಿರುವ ಎಲ್ಲಾ ಛತ್ರಿಗಳು ಕಮಲದ ವಿನ್ಯಾಸದ ಅಲಂಕಾರಿಕ ಅಂಶದಿಂದ ಕೂಡಿವೆ. ಮಿನರೆಟ್ಟುಗಳನ್ನು ಪೀಠದಿಂದ ಸ್ವಲ್ಪ ಹೊರಕ್ಕೆ ನಿರ್ಮಿಸಲಾಗಿದೆ. ಆದ್ದರಿಂದ, ಒಂದು ವೇಳೆ ಕುಸಿತದ ಸಮಯದಲ್ಲಿ, (ಆ ಕಾಲದಲ್ಲಿ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿರುವ ಸಾಮಾನ್ಯ ಅಂಶವಾಗಿದೆ) ಗೋಪುರದ ವಸ್ತುಗಳು ಸಮಾಧಿಯಿಂದ ದೂರ ಬೀಳಲೆಂದು ಹೀಗೆ ಮಾಡಲಾಗಿದೆ.

ತಾಜ್‌ ಮಹಲ್‌ನ ಹೊರಾಂಗಣ ಅಲಂಕಾರ ಮೊಘಲ್‌ ವಾಸ್ತುಶಿಲ್ಪದಲ್ಲಿರುವ ಉತ್ತಮ ಅಂಶಗಳಿಂದ ಕೂಡಿದೆ. ಆ ಮೇಲ್ಮೈ ಅಲಂಕಾರಗಳ ಬದಲಾವಣೆಗಳು ಪ್ರಮಾಣಾನುಗುಣವಾಗಿ ನಾಜೂಕುಗೊಳಿಸಲಾಗಿದೆ. ಕಟ್ಟಡದ ಅಲಂಕಾರಿಕ ಅಂಶಗಳನ್ನು ಬಣ್ಣ ಬಳಿಯುವುದು, ಗಾರೆ ಮಾಡುವುದು, ಕಲ್ಲು ಕೆತ್ತನೆ, ಅಥವಾ ಕೆತ್ತನೆಯಿಂದ ಮಾಡಲಾಗಿದೆ. ಮಾನವ ವರ್ಗೀಕರಣಗಳ ವಿರುದ್ಧ ಮುಸ್ಲಿಂ ಧರ್ಮದ ನಿಷೇಧವನ್ನು ಈ ಸಾಲುಗಳಲ್ಲಿ ಬರೆಯಲಾಗಿದ್ದು, ಇಲ್ಲಿ ಚಿತ್ರಿಸಲಾಗಿರುವ ಅಂಶಗಳನ್ನು ಅಲಂಕಾರಿಕ ಅಂಶಗಳು ಸುಂದರ ಬರಹಗಾರಿಕೆ, ಅಮೂರ್ತ ಪ್ರಕಾರಗಳು ಅಥವಾ ಸಸ್ಯಕ ಕಲಾಕೃತಿಗಳಾಗಿ ವಿಂಗಡಿಸಲಾಗಿದೆ.

ಸಂಕೀರ್ಣದಾದ್ಯಂತ ಖುರಾನ್‌ನ ಪಠ್ಯಭಾಗವನ್ನು ಅಲಂಕಾರಿಕ ಅಂಶಗಳಾಗಿ ಬಳಸಲಾಗಿದೆ. ಈ ಪಠ್ಯಭಾಗಗಳನ್ನು ಅಮಾನತ್‌ ಖಾನ್‌‌ರವರು ಆರಿಸಿದ್ದರು ಎಂದು ಇತ್ತೀಚಿನ ವಿದ್ವಾಂಸರು ಹೇಳುತ್ತಾರೆ.
ನ್ಯಾಯದ ಪರಿಕಲ್ಪನೆಯನ್ನು ಪಠ್ಯವು ಉಲ್ಲೇಖಿಸುತ್ತದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿದೆ:


ಮಹಾದ್ವಾರದಲ್ಲಿ ಸುಂದರ ಬರವಣಿಗೆಯಲ್ಲಿ ಹೀಗೆ ಬರೆಯಲಾಗಿದೆ ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವಿರಿ, ಮತ್ತು ದೇವರು ನಿಮ್ಮೊಂದಿಗೆ ಶಾಂತಿಯನ್ನು ಹೊಂದುವರು.  

ಅಮೂರ್ತ ಆಕೃತಿಗಳನ್ನು ಉದ್ದಕ್ಕೂ ಬಳಸಲಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಡ ಪೀಠ, ಮಿನರೆಟ್ಟುಗಳು, ದ್ವಾರ, ಮಸೀದಿ, ಜವಾಬ್‌ಗಳಲ್ಲಿ ಮತ್ತು ಸಮಾಧಿಯ ಮೇಲ್ಮೈ ಮೇಲೆ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಮರಳುಕಲ್ಲಿನ ಕಟ್ಟಡಗಳಲ್ಲಿನ ಗುಮ್ಮಟಗಳು ಮತ್ತು ಕಮಾನುಗಳನ್ನು ವಿಸ್ತಾರವಾದ ಜ್ಯಾಮಿತಿಯ ಪ್ರಕಾರಗಳಲ್ಲಿ ರಚಿಸಲು ಕೆತ್ತಿದ ಚಿತ್ರಕಲೆಯ ಜಾಲರ ವಿನ್ಯಾಸದೊಂದಿಗೆ ಮಾಡಲಾಗಿದೆ. ಹೆರಿಂಗ್‌ಬೋನಿನ ಮೂಳೆ ಕೆತ್ತನೆಯು ಹಲವು ಜೋಡಣೆಗಳ ನಡುವಿನ ಜಾಗವನ್ನು ಸೂಚಿಸುತ್ತದೆ. ಬಿಳಿ ಕೆತ್ತನೆಗಳನ್ನು ಮರಳುಶಿಲೆಯ ಕಟ್ಟಡಗಳಲ್ಲಿ ಬಳಸಲಾಗಿದೆ ಮತ್ತು ಬಿಳಿ ಅಮೃತಶಿಲೆಗಳಲ್ಲಿ ತಿಳಿಗಪ್ಪು ಮತ್ತು ಕಪ್ಪು ಕೆತ್ತನೆಗಳನ್ನು ಬಿಡಿಸಲಾಗಿದೆ. ಅಮೃತಶಿಲೆ ಕಟ್ಟಡಗಳ ಗಾರೆ ಮಾಡಿದ ಪ್ರದೇಶಗಳಲ್ಲಿ ಹೊಳಪಿನ ಬಣ್ಣವನ್ನು ಬಳಿಯಲಾಗಿದೆ ಮತ್ತು ಗಮನಾರ್ಹ ಸಂಕೀರ್ಣತೆಯ ಜ್ಯಾಮಿತಿಯ ಆಕೃತಿಗಳನ್ನು ರಚಿಸಲಾಗಿದೆ. ಮಹಡಿಗಳು ಮತ್ತು ಕಾಲುದಾರಿಗಳಲ್ಲಿ ಹೊಳಪಿನ ತಬಲದಂತಹ ಆಕಾರಗಳಲ್ಲಿ ಹೆಂಚುಗಳು ಅಥವಾ ದಿಮ್ಮಿಗಳನ್ನು ಬಳಸಲಾಗಿದೆ.

ಸಮಾಧಿಯ ಕೆಳಗೋಡೆಗಳಲ್ಲಿ ಹೂವುಗಳು ಮತ್ತು ದ್ರಾಕ್ಷಿ ಬಳ್ಳಿಯ ಚಿತ್ರಣಗಳನ್ನು ನೈಜ ಲೋಹದ ಉಬ್ಬುಗಳೊಂದಿಗೆ ಶ್ವೇತ ಅಮೃತಶಿಲೆ ನಡುದಿಂಡುಗಳನ್ನು ಕೆತ್ತಲಾಗಿದೆ. ಕೆತ್ತನೆಗಳ ಅಂದವಾದ ಶಿಲ್ಪಶೈಲಿ ಮತ್ತು ನಡುದಿಂಡುಗಳ ಅಂಚುಗಳನ್ನು ಎತ್ತಿತೋರಿಸಲು ಅಮೃತಶಿಲೆಯನ್ನು ನಯಗೊಳಿಸಲಾಗಿದೆ ಮತ್ತು ಕಮಾನುದಾರಿಯ ಮೂಲೆಗಟ್ಟುಗಳನ್ನು ಹೆಚ್ಚಾಗಿ ಜ್ಯಾಮಿತಿಯ ದ್ರಾಕ್ಷಿ ಬಳ್ಳಿಗಳು, ಹೂಗಳು ಮತ್ತು ಹಣ್ಣುಗಳಿಂದ ಕೂಡಿದ ಸೊಗಸಾದ ಪಿಯೆತ್ರಾ ದುರಾ ಕೆತ್ತನೆಗಳೊಂದಿಗೆ ಅಲಂಕರಿಸಲಾಗಿದೆ. ಹಳದಿ ಅಮೃತಶಿಲೆ, ಜ್ಯಾಸ್ಪರ್‌ ಮತ್ತು ಜೇಡ್‌ ಕಲ್ಲುಗಳ ಕೆತ್ತನೆಗಳನ್ನು ನಯಗೊಳಿಸಲಾಗಿದೆ ಮತ್ತು ಅವುಗಳನ್ನು ಗೋಡೆಗಳ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡಲಾಗಿದೆ.

ತಾಜ್‌ ಮಹಲ್‌ನ ಒಳಭಾಗದ ಮೆಟ್ಟಿಲುಗಳ ಅಂದವು ಸಾಂಪ್ರದಾಯಿಕ ಅಲಂಕಾರಿಕ ಅಂಶಗಳಿಗಿಂತ ಭಿನ್ನವಾಗಿದೆ. ಇಲ್ಲಿ ಕೆತ್ತನೆ ಕೆಲಸವು ಪಿಯೆತ್ರಾ ದುರಾ ಶೈಲಿಯಲ್ಲಿಲ್ಲ; ಬದಲಿಗೆ ಅತ್ಯಮೂಲ್ಯ ಮತ್ತು ಅಮೂಲ್ಯ ಶಿಲಾಲಿಖಿತರತ್ನಗಳಿಂದ ಕೂಡಿದೆ. ಒಳ ಕೋಣೆಯು ಅಷ್ಟಭುಜಾಕೃತಿಯಲ್ಲಿದ್ದು, ಎಲ್ಲ ಕಡೆಯಿಂದಲೂ ಪ್ರವೇಶಿಸಬಹುದಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಆದರೂ ದಕ್ಷಿಣದ ಉದ್ಯಾನಕ್ಕೆ ಮುಖಮಾಡಿರುವ ದ್ವಾರವನ್ನು ಮಾತ್ರ ಬಳಸಲಾಗುತ್ತಿದೆ. ಒಳ ಗೋಡೆಗಳು ಸುಮಾರು 25 ಮೀಟರ್‌ಗಳಷ್ಟು ಎತ್ತರವಾಗಿದೆ ಮತ್ತು ಸೂರ್ಯ ಕಲಾಕೃತಿಯೊಂದಿಗೆ ಅಲಂಕೃತಗೊಂಡ ನಕಲಿ ಒಳ ಗುಮ್ಮಟ ಮಹಲಿನ ಮೇಲ್ಭಾಗದಲ್ಲಿದೆ. ಎಂಟು ಪಿಸ್ತಾಕ್ ಕಮಾನುಗಳು ನೆಲ ಮಟ್ಟದಲ್ಲಿರುವ ಜಾಗವನ್ನು ರೂಪಿಸಿವೆ ಮತ್ತು ಅದರ ಹೊರಗೆ ಪ್ರತಿ ಕೆಳ ಪಿಸ್ತಾಕ್‌ ಸುಮಾರು ಗೋಡೆಯ ಮಧ್ಯ ಭಾಗದಲ್ಲಿ ಎರಡನೆಯ ಪಿಸ್ತಾಕ್‌ನಿಂದ ಮೇಲ್ಭಾಗವನ್ನು ಹೊಂದಿರುತ್ತದೆ. ಮೇಲ್ಭಾಗದ ನಾಲ್ಕು ಕೇಂದ್ರ ಕಮಾನುಗಳು ಮೊಗಸಾಲೆ ಅಥವಾ ವೀಕ್ಷಣಾ ಪ್ರದೇಶವಾಗಿವೆ ಮತ್ತು ಪ್ರತಿ ಮೊಗಸಾಲೆಯ ಬಾಹ್ಯ ಕಿಟಕಿಗಳು ಜಟಿಲ ಪರದೆ ಅಥವಾ ಅಮೃತಶಿಲೆನಿಂದ ಕತ್ತರಿಸಿದ ಜಲಿ ಯನ್ನು ಹೊಂದಿವೆ. ಹೆಚ್ಚುವರಿಯಾಗಿ, ಮೊಲೆಗಳಲ್ಲಿರುವ ಛತ್ರಿಗಳಿಂದ ಸುತ್ತುವರಿದ ತೆರದ ಚಾವಣಿಗಳ ಮೂಲಕ ಮೊಗಸಾಲೆಯ ಕಿಟಕಿಗಳಿಂದ ಬರುವ ಬೆಳಕು ಒಳಾಂಗಣವನ್ನು ಪ್ರವೇಶಿಸುತ್ತದೆ. ಪ್ರತಿ ಕೋಣೆಯ ಗೋಡೆಯನ್ನು ಸಂಕೀರ್ಣದ ಹೊರಾಂಗಣದಾದ್ಯಂತ ಕಂಡುಬರುವ ಲೋಹದ ಉಬ್ಬುಗಳು, ಜಟಿಲ ಶಿಲಾಲಿಖಿತ ಕೆತ್ತನೆ ಮತ್ತು ನಯಗೊಳಿಸಿದ ಸುಂದರ ಬರಹದ ಫಲಕಗಳು, ವಿನ್ಯಾಸ ಅಂಶಗಳನ್ನು ವರ್ಣರಂಜಿತ ಶಿಲ್ಪಶೈಲಿಯಿಂದ ಪ್ರತಿಫಲಿಸುವಂತೆ ಉತ್ತಮವಾಗಿ ಅಲಂಕರಿಸಲಾಗಿದೆ. ಜಟಿಲ ಕೊರೆಯವ ಕೆಲಸದ ಮೂಲಕ ಕೆತ್ತಿದ ಎಂಟು ಅಮೃತಶಿಲೆ ಫಲಕಗಳಿಂದ ಮಾಡಿದ ಸ್ಮಾರಕ ಸಮಾಧಿಗಳು ಅಷ್ಟಭುಜಾಕೃತಿ ಅಮೃತಶಿಲೆ ಪರದೆ ಅಥವಾ ಜಲಿ ಯ ಅಂಚುಗಳನ್ನು ಹೊಂದಿವೆ. ಉಳಿದ ಮೇಲ್ಮೈಗಳನ್ನು ಬೆಲೆಬಾಳುವ ಕಲ್ಲುಗಳಲ್ಲಿ ಜೋಡಿ ದ್ರಾಕ್ಷಿ ಬಳ್ಳಿಗಳು, ಹಣ್ಣುಗಳು ಮತ್ತು ಹೂಗಳನ್ನು ಕೆತ್ತುವುದರೊಂದಿಗೆ ಅತ್ಯಂತ ಸೂಕ್ಷ್ಮ ಶಿಲ್ಪಶೈಲಿಯಲ್ಲಿ ಕೆತ್ತಲಾಗಿದೆ.

ಮುಸ್ಲಿಂ ಸಂಪ್ರದಾಯವು ಸಮಾಧಿಯ ಹೆಚ್ಚಿನ ಅಲಂಕಾರವನ್ನು ನಿಷೇಧಿಸುತ್ತದೆ. ಹಾಗಾಗಿ ಮಮ್ತಾಜ್‌ ಮತ್ತು ಷಹ ಜಹಾನ್‌‌ರವರ ಮುಖಗಳನ್ನು ಬಲ ಭಾಗ ಮತ್ತು ಮೆಕ್ಕಾದ ಕಡೆಗೆ ತಿರುಗಿಸುವುದರೊಂದಿಗೆ ಒಳಕೋಣೆಯ ಕೆಳಗೆ ಸರಳ ರಹಸ್ಯ ಜಾಗದಲ್ಲಿರಿಸಲಾಗಿದೆ. ಮಮ್ತಾಜ್‌ ಮಹಲ್‌ಳ ಸ್ಮಾರಕ ಸಮಾಧಿಯನ್ನು ಒಳ ಕೋಣೆಯ ಸರಿಯಾದ ಕೇಂದ್ರ ಭಾಗದಲ್ಲಿ 2.5 ಮೀಟರ್‌ಗಳಿಂದ 1.5 ಮೀಟರ್‌ಗಳಷ್ಟು ಉದ್ದದ ಚೌಕಾಕಾರದ ಅಮೃತಶಿಲೆ ತಳಹದಿಯಲ್ಲಿ ನಿರ್ಮಿಸಲಾಗಿದೆ. ಅಡಿಪಾಯ ಮತ್ತು ಶವಪೆಟ್ಟಿಗೆಯನ್ನು ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳೊಂದಿಗೆ ನಯವಾಗಿ ಕೆತ್ತಲಾಗಿದೆ. ಶವಪೆಟ್ಟಿಗೆಯಲ್ಲಿರುವ ಸುಂದರ ಬರಹಗಳು ಮಮ್ತಾಜ್‌ಳ ಕುರಿತು ತಿಳಿಸುವುದು ಮತ್ತು ಹೊಗಳುವುದು. ಶವಪೆಟ್ಟಿಗೆಯ ಮುಚ್ಚಳದ ಮೇಲಿರುವ ಎತ್ತರಿಸಲಾದ ಆಯತಾಕಾರದ ಹಲಗೆಯು ಬರವಣಿಗೆ ಪೀಠವನ್ನು ಸೂಚಿಸುತ್ತದೆ. ಷಹ ಜಹಾನ್‌‌ನ ಸ್ಮಾರಕ ಸಮಾಧಿಯು ಮಮ್ತಾಜ್‌ಳ ಸಮಾಧಿಯ ಪಕ್ಕ ಪಶ್ಚಿಮ ದಿಕ್ಕಿನಲ್ಲಿದೆ ಮತ್ತು ಅದು ಮಾತ್ರ ಪೂರ್ಣ ಸಂಕೀರ್ಣದಲ್ಲಿ ವಿಷಮಪಾರ್ಶ್ವದ ಅಂಶವಾಗಿ ಗೋಚರಿಸುವುದು. ಅವನ ಸ್ಮಾರಕ ಸಮಾಧಿಯು ಅವನ ಹೆಂಡತಿಯ ಸಮಾಧಿಗಿಂತ ದೊಡ್ಡದಾಗಿದೆ, ಆದರೆ ಒಂದೇ ಸಮನಾದ ಅಂಶಗಳನ್ನು ಪ್ರತಿಫಲಿಸುವುದು. ಇದು ಎತ್ತರವಾದ ಅಡಿಪಾಯದ ಮೇಲಿರುವ ದೊಡ್ಡದಾದ ಶವಪೆಟ್ಟಿಗೆಯಾಗಿದೆ. ಇದನ್ನು ವಿಸ್ಮಯಗೊಳಿಸುವ ನಿಖರತೆಯೊಂದಿಗೆ ಶಿಲಾಲಿಖಿತದಿಂದ ಅಲಂಕರಿಸಲಾಗಿದೆ ಮತ್ತು ಸುಂದರ ಬರಹಗಳಿಂದ ಬರೆದ ಬರಹವು ಅವನ ಗುರುತು ತಿಳಿಸುವುದು. ಶವಪೆಟ್ಟಿಗೆ ಮುಚ್ಚಳದ ಮೇಲೆ ಚಿಕ್ಕ ಲೇಖನಿ ಪೆಟ್ಟಿಗೆಯ ಸಾಂಪ್ರದಾಯಿಕ ಶಿಲ್ಪಾಕೃತಿಯಂತಿದೆ. ಲೇಖನಿ ಪೆಟ್ಟಿಗೆ ಮತ್ತು ಬರವಣಿಗೆ ಪೆಟ್ಟಿಗೆಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶವಪೆಟ್ಟಿಗೆಯನ್ನು ಅಲಂಕರಿಸುವ ಸಾಂಪ್ರದಾಯಿಕ ಮೊಘಲ್‌‌ ಶವಸಂಸ್ಕಾರ ಚಿಹ್ನೆಗಳಾಗಿವೆ. ಮಮ್ತಾಜ್‌ಳ ಶ್ರೇಷ್ಠತೆ, ಭವ್ಯತೆ, ಗಾಂಭೀರ್ಯತೆ, ಅನನ್ಯತೆ, ಚಿರಂತನ, ಮತ್ತು ವೈಭವತೆ...  ಗುಣಗಳು ಸೇರಿದಂತೆ ದೇವರ ತೊಂಬತ್ತೊಬತ್ತು ಹೆಸರುಗಳನ್ನು ಮಮ್ತಾಜ್‌ ಮಹಲ್‌ಳ ನೈಜ ಸಮಾಧಿಯ ಪಾರ್ಶ್ವಗಳಲ್ಲಿ ಕೆತ್ತಲಾಗಿರುವ ಸುಂದರ ಬರಹಗಳಲ್ಲಿ ಕಾಣಬಹುದು . ಷಹ ಜಹಾನ್‌‌ನ ಸಮಾಧಿಯಲ್ಲಿ ಅವನು 1076 ಹಿಜಿರಾ ವರ್ಷದ ರಜಾಬ್‌ ತಿಂಗಳ ಇಪ್ಪತ್ತಾರರ ರಾತ್ರಿ ಈ ಪ್ರಪಂಚದಿಂದ ಪರಲೋಕದ ಭೋಜನ ಭವನಕ್ಕೆ ಪ್ರಯಾಣಿಸಿದರು  ಎಂದು ಸುಂದರ ಬರಹಗಳಲ್ಲಿ ಕೆತ್ತಲಾಗಿದೆ.

 
ಸಂಕೀರ್ಣವು 300 ಮೀಟರ್‌ ಉದ್ದವಾದ ಛಾರ್ಬಾಘ್‌  ಅಥವಾ ಮೊಘಲ್‌‌ ಉದ್ಯಾನವನ್ನು ಒಳಗೊಂಡಿದೆ.
ಉದ್ಯಾನದಲ್ಲಿ ಎತ್ತರಿಸಿದ ಹಾದಿಗಳನ್ನು ನಿರ್ಮಿಸಲಾಗಿದ್ದು ನಾಲ್ಕು ಕಾಲು ಭಾಗದಲ್ಲಿ ಪ್ರತಿಯೊಂದನ್ನು 16 ಕೆಳ ಹೂದೋಟಗಳು ಅಥವಾ ಹೂಹಾಸುಗಳಾಗಿ ವಿಂಗಡಿಸಲಾಗಿದೆ. ಉದ್ಯಾನದ ಕೇಂದ್ರದಲ್ಲಿ ಎತ್ತರದ ಅಮೃತಶಿಲೆಯ ನೀರಿನ ತೊಟ್ಟಿ ಇದೆ. ಸಮಾಧಿ ಮತ್ತು ದ್ವಾರದ ನಡುವಿನ ಮಧ್ಯದಾರಿಯಲ್ಲಿ ಉತ್ತರ-ದಕ್ಷಿಣ ಅಕ್ಷದಲ್ಲಿ ಪ್ರತಿಫಲಿಸುವ ಕೊಳವು ಭವ್ಯ ಸಮಾಧಿಯ ಬಿಂಬವನ್ನು ಪ್ರತಿಫಲಿಸುತ್ತದೆ. ಮಹಮ್ಮದ್‌ರಿಗೆ ವಚನವಿತ್ತಂತೆ ಸಿರಿವಂತಿಕೆಯ ಸೂಚಕವಾಗಿ ಕಟ್ಟಿರುವ ಅಮೃತಶಿಲೆಯ ನೀರಿನ ತೊಟ್ಟಿಯನ್ನು ಅಲ್‌ ಹವ್ದ್‌ ಅಲ್‌-ಕವ್ತಾರ್‌  ಎಂದು ಕರೆಯಲಾಗುತ್ತದೆ. ಉದ್ಯಾನದ ಇನ್ನೊಂದೆಡೆ ಸಾಲುಮರಗಳು ಮತ್ತು ನೀರಿನ ಕಾರಂಜಿಗಳಿವೆ. ಭಾರತಕ್ಕೆ ಮೊದಲ ಮೊಘಲ್‌‌ ಚರ್ಕವರ್ತಿ ಬಾಬರ್‌ ಪರ್ಷಿಯನ್ ಉದ್ಯಾನಗಳಿಂದ ಪ್ರೇರೇಪಿತನಾಗಿ ಛಾರ್ಬಾಘ್‌ ಉದ್ಯಾನವನ್ನು ಪರಿಚಯಿಸಿದನು.ಇದು ಜನ್ನಾದ (ಸ್ವರ್ಗ)ದಲ್ಲಿ ಹರಿಯುವ ನಾಲ್ಕು ನದಿಗಳನ್ನು ಸೂಚಿಸುತ್ತದೆ. ಮತ್ತು ಪರ್ಷಿಯಾದ ಪ್ಯಾರಿಡೇಜಾ  ಎಂದರೆ ಸ್ವರ್ಗ ಉದ್ಯಾನದಿಂದ ಸೃಷ್ಟಿಯಾದ 'ಗೋಡೆಗಳ ಉದ್ಯಾನ'ವನ್ನು ಬಿಂಬಿಸುತ್ತದೆ. ಮೊಘಲ್‌‌ ಅವಧಿಯ ಮುಸ್ಲಿಂ ಧರ್ಮದ ಆಧ್ಯಾತ್ಮಿಕತೆಯಲ್ಲಿ, ಉದ್ಯಾನದ ಕೇಂದ್ರದಲ್ಲಿರುವ ಕಾರಂಜಿ ಅಥವಾ ಬೆಟ್ಟದಿಂದ ಹರಿಯುವ ನಾಲ್ಕು ನದಿಗಳು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವಕ್ಕೆ ಉದ್ಯಾನವನ್ನು ಬೇರ್ಪಡಿಸುವುದರೊಂದಿಗೆ ಶ್ರೀಮಂತಿಕೆಯ ಮಾದರಿ ಉದ್ಯಾನದಂತೆ ಸ್ವರ್ಗವನ್ನು ವಿವರಿಸಲಾಗಿದೆ.

ಹೆಚ್ಚಿನ ಮೊಘಲ್‌‌ ಛಾರ್ಬಾಘ್‌ಗಳು ಮಧ್ಯಭಾಗದಲ್ಲಿ ಸಮಾಧಿ ಅಥವಾ ಉದ್ಯಾನಗೃಹವನ್ನು ಹೊಂದಿದ್ದು ಆಯತಾಕಾರದಲ್ಲಿರುತ್ತವೆ. ಅವುಗಳಲ್ಲಿ ತಾಜ್‌ ಮಹಲ್‌ ಉದ್ಯಾನವು ಅಸಾಮಾನ್ಯವಾದದ್ದು. ಪ್ರಧಾನ ಭಾಗವಾಗಿರುವ ಸಮಾಧಿಯು ಉದ್ಯಾನದ ಕೊನೆಯ ಭಾಗದಲ್ಲಿದೆ. ಯಮುನಾ ನದಿಯ ಇನ್ನೊಂದು ಬದಿಯಲ್ಲಿ ಮಹ್ತಾಬ್‌ ಬಾಘ್‌ ಅಥವಾ ಬೆಳದಿಂಗಳ ಉದ್ಯಾನದ ಆವಿಷ್ಕಾರದೊಂದಿಗೆ, ಭಾರತೀಯ ಪುರಾತತ್ವ ಸಂಸ್ಥೆ ತನ್ನ ವರದಿಯಲ್ಲಿ ಯಮುನಾ ನದಿ ಸ್ವರ್ಗದ ನದಿಗಳಲ್ಲಿ ಒಂದಾಗಿರುವಂತೆ ಕಾಣಬೇಕೆಂಬ ಆಶಯದೊಂದಿಗೆ ಉದ್ಯಾನದ ವಿನ್ಯಾಸದೊಂದಿಗೆ ಅದನ್ನು ಸೇರಿಸಲಾಗಿತ್ತು ಎಂದು ಹೇಳಿದೆ. ಈ ಉದ್ಯಾನ ಶಾಲಿಮರ್‌ ಉದ್ಯಾನಗಳಂತೆ ಅದೇ ರೀತಿಯ ವಿನ್ಯಾಸ ಮತ್ತು ವಾಸ್ತು ಲಕ್ಷಣಗಳನ್ನು ಹೊಂದಿರುವುದರಿಂದ ಅದೇ ವಾಸ್ತುಶಿಲ್ಪಿ ಅಲಿ ಮರ್ದಾನ್‌ರವರು ಈ ಉದ್ಯಾನವನ್ನೂ ವಿನ್ಯಾಸಗೊಳಿರಬಹುದೆಂದು ಹೇಳಲಾಗಿದೆ. ಆರಂಭಿಕ ದಿನಗಳಲ್ಲಿ ಉದ್ಯಾನವು ಹೇರಳ ಪ್ರಮಾಣದ ಗುಲಾಬಿಗಳು, ನೈದಿಲೆಗಳು, ಮತ್ತು ಹಣ್ಣಿನ ಮರಗಳು ಸೇರಿದಂತೆ ಅನೇಕ ಸಸ್ಯವರ್ಗಗಳಿಂದ ಕೂಡಿತ್ತು. ಮೊಘಲ್‌‌ ಸಾಮ್ರಾಜ್ಯ ಪತನವಾಗುತ್ತಾ ಹೋದಂತೆ ಈ ಉದ್ಯಾನದ ನಿರ್ವಹಣೆ ಕಳೆಗುಂದುತ್ತಾ ಹೋಯಿತು. ನಂತರ ಬ್ರಿಟಿಷ್‌ ಆಳ್ವಿಕೆಯ ಸಮಯದಲ್ಲಿ ತಾಜ್‌ ಮಹಲ್‌ ನಿರ್ವಹಣೆಯನ್ನು ಅವರು ವಹಿಸಿಕೊಂಡ ಮೇಲೆ, ಅವರು ಲಂಡನ್‌ನ ಹುಲ್ಲು ಹಾಸುಗಳನ್ನು ಬಳಸಿ ಉದ್ಯಾನದ ಮೇಲ್ಮೈಯನ್ನು ಬದಲಾಯಿಸಿದರು.

ತಾಜ್‌ ಮಹಲ್‌ ಸಂಕೀರ್ಣದ ಮೂರು ಕಡೆಯಲ್ಲಿ ದಂತಾಕೃತಿಯಿಂದ ಕೂಡಿದ ಕೆಂಪು ಮರಳುಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದ್ದು ಇದು ನದಿಗೆ ಎದುರು ದಿಕ್ಕಿನಲ್ಲಿ ತೆರೆದುಕೊಂಡಿದೆ. ಕೋಟೆಯ ಹೊರಗೆ ಷಹ ಜಹಾನ್‌ನ ಇತರ ಪತ್ನಿಯರು ಮತ್ತು ಮಮ್ತಾಜ್‌ನ ಮೆಚ್ಚಿನ ಸೇವಕನ ದೊಡ್ಡದಾದ ಸಮಾಧಿ ಸೇರಿದಂತೆ ಇತರ ಹಲವು ಭವ್ಯ ಸಮಾಧಿಗಳಿವೆ. ಕೆಂಪು ಮರಳುಕಲ್ಲುಗಳಿಂದ ಕಟ್ಟಲಾದ ಈ ಸಮಾಧಿಗಳು ಆ ಕಾಲದ ಚಿಕ್ಕ ಮೊಘಲ್‌‌ ಸಮಾಧಿಗಳ ಮಾದರಿಗಳಾಗಿದ್ದವು. ಉದ್ಯಾನಕ್ಕೆ ಮುಖಮಾಡಿರುವ ಒಳಗೋಡೆಯ ಮುಂಭಾಗದಲ್ಲಿ ಎತ್ತರದ ಕಮಾನುಗಳನ್ನು ನಿರ್ಮಿಸಲಾಗಿದೆ. ಇದು ಹಿಂದೂ ದೇವಾಲಯಗಳ ಅಪ್ಪಟ ವಾಸ್ತು ಶೈಲಿಯಲ್ಲಿದೆ. ನಂತರ ಈ ಶೈಲಿಯನ್ನು ಮೊಘಲ್‌‌ ಮಸೀದಿಗಳ ನಿರ್ಮಾಣಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಈಗ ವಸ್ತುಸಂಗ್ರಹಾಲಯದಂತೆ ಬಳಸಲಾಗುತ್ತಿರುವ ಗುಮ್ಮಟಾಕಾರದ ಛತ್ರಿಗಳು  ಮತ್ತು ಸಂಗೀತ ಕೋಣೆ ಯಂತಿರುವ ವೀಕ್ಷಣಾ ಪ್ರದೇಶಗಳು ಅಥವಾ ವೀಕ್ಷಣಾ ಗೋಪುರಗಳಂತಹ ಚಿಕ್ಕ ಕಟ್ಟಡಗಳಿಂದ ಕೋಟೆಯನ್ನು ವಿಭಿನ್ನವಾಗಿ ಕಟ್ಟಲಾಗಿದೆ.

ಮುಖ್ಯದ್ವಾರ (ದರ್ವಾಜಾ ) ಸ್ಮಾರಕವಾಗಿದ್ದು, ಇದನ್ನು ಅಮೃತಶಿಲೆಯಿಂದ ಕಟ್ಟಲಾಗಿದೆ. ಆರಂಭಿಕ ಮೊಘಲ್‌‌ ಚರ್ಕವರ್ತಿಗಳ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಈ ಸ್ಮಾರಕ ಕಟ್ಟಡಲಾಗಿದೆ. ಈ ಕಮಾನುದಾರಿಯು ಸಮಾಧಿಯ ಕಮಾನುದಾರಿಯ ರಚನೆಯನ್ನು ಹೋಲುತ್ತವೆ. ಮತ್ತು ಇದರ ಪಿಸ್ತಾಕ್‌  ಕಮಾನುಗಳನ್ನು ಸಮಾಧಿಯಲ್ಲಿರುವಂತೆ ಸುಂದರ ಬರಹಗಳಲ್ಲಿ ಅಲಂಕರಿಸಲಾಗಿದೆ. ಇದು ಪುಷ್ಪಾಕೃತಿಯ ಕಲಾಕೃತಿಗಳೊಂದಿಗೆ ಲೋಹದ ಉಬ್ಬುಗಳು ಮತ್ತು ಪಿಯೆತ್ರಾ ದುರಾದ ಕೆತ್ತನೆಗಳನ್ನು ಒಳಗೊಂಡಿದೆ. ಕಮಾನಿನ ಆಕಾರದ ಚಾವಣಿಗಳು ಮತ್ತು ಗೋಡೆಗಳು ಸಂಕೀರ್ಣದ ಇತರ ಮರಳುಕಲ್ಲಿನ ಕಟ್ಟಡಗಳಲ್ಲಿ ಕಂಡುಬರುವಂತೆ ಜಟಿಲವಾದ ಜ್ಯಾಮಿತಿಯ ವಿನ್ಯಾಸಗಳನ್ನು ಹೊಂದಿವೆ.

ಸಮಾಧಿಯ ಕಡೆ ತೆರೆದುಕೊಂಡಿರುವ ಎರಡು ಭವ್ಯ ಮರಳುಕಲ್ಲಿನ ಕಟ್ಟಡಗಳು ಸಂಕೀರ್ಣದ ಕೊನೆಯ ಭಾಗದಲ್ಲಿವೆ. ಅವುಗಳ ಹಿಂಭಾಗವು ಪೂರ್ವ ಮತ್ತು ಪಶ್ಚಿಮ ಗೋಡೆಗಳಿಗೆ ಸಮಾನಾಂತರವಾಗಿದ್ದು ಎರಡು ಕಟ್ಟಡಗಳು ಕರಾರುವಕ್ಕಾಗಿ ಒಂದನ್ನೊಂದು ಹೋಲುತ್ತವೆ. ಪಶ್ಚಿಮದಲ್ಲಿರುವ ಕಟ್ಟಡವು ಮಸೀದಿಯಾಗಿದ್ದು ಇನ್ನೊಂದು ಕಟ್ಟಡವು ಜವಾಬ್‌  (ಉತ್ತರ) ಆಗಿದೆ. ವಾಸ್ತುಶೈಲಿಯನ್ನು ಸರಿದೂಗಿಸುವುದಕ್ಕಾಗಿ ಈ ಕಟ್ಟಡ ಕಟ್ಟಲಾಗಿತ್ತು. ಇದನ್ನು ಅತಿಥಿಗೃಹವಾಗಿ ಬಳಸಿರಬಹುದು. ಈ ಎರಡು ಕಟ್ಟಡಗಳ ನಡುವೆ ಜವಾಬ್‌ ನಲ್ಲಿರುವ ಮಿರಾಬ್‌ ನ (ಮೆಕ್ಕಾಕ್ಕೆ ಮುಖಮಾಡಿರುವ ಮಸೀದಿಯ ಗೋಡೆಗಳಲ್ಲಿರುವ ಗೂಡು) ಕೊರತೆಯೂ ಸೇರಿದಂತೆ ಅಸಮಾನತೆಯಿದೆ ಮತ್ತು ಜವಾಬ್‌‌ ನ ಮಹಡಿಗಳು ಜ್ಯಾಮಿತಿಯ ವಿನ್ಯಾಸದಲ್ಲಿ ರಚನೆಯಾಗಿವೆ. ಇದೇ ವೇಳೆ ಮಸೀದಿಯ ಮಹಡಿಗಳಲ್ಲಿ 569 ಪ್ರಾರ್ಥನೆ ಹಾಸುಗಳನ್ನು ಭಿನ್ನವಾಗಿ ಕಪ್ಪು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಮಸೀದಿಯ ದೊಡ್ಡ ಸಭಾಂಗಣದ ಮೂಲ ವಿನ್ಯಾಸವು ಷಹ ಜಹಾನ್‌ನು ಕಟ್ಟಿದ ಇತರ ಕಟ್ಟಡಗಳಂತೆ ವಿಶೇಷವಾಗಿ ದೆಹಲಿಯ ಮಸೀದ್‌-ಜಹಾನ್‌ ನುಮಾ  ಅಥವಾ ಜಮಾ ಮಸೀದಿಯಂತೆ ಮೂರು ಗುಮ್ಮಟಗಳನ್ನು ಹೊಂದಿದೆ‌. ಈ ಕಾಲದ ಮೊಘಲ್‌ ಮಸೀದಿಗಳು ಪ್ರಾರ್ಥನಾ ಮಂದಿರವನ್ನು ಒಂದು ಮುಖ್ಯ ಪ್ರಾರ್ಥನಾ ಸ್ಥಳ ಮತ್ತು ಎರಡೂ ಬದಿಯಲ್ಲಿ ಚಿಕ್ಕ ಪ್ರಾರ್ಥನಾ ಸ್ಥಳಗಳಂತೆ ಮೂರು ಮುಖ್ಯ ಭಾಗಗಳಾಗಿ ವಿಭಾಗಿಸುತ್ತವೆ. ತಾಜ್‌ ಮಹಲ್‌ನಲ್ಲಿ‌ ಪ್ರತಿ ಪ್ರಾರ್ಥನಾ ಸ್ಥಳದಲ್ಲಿ ದೊಡ್ಡದಾದ ಕಮಾನಿನಂತಹ ಗುಮ್ಮಟಕಾರದ ರಚನೆಯಿದೆ. ಈ ನೆರೆಹೊರೆಯ ಕಟ್ಟಡಗಳ ನಿರ್ಮಾಣ ಕಾರ್ಯ 1643ರಲ್ಲಿ ಪೂರ್ಣಗೊಂಡಿತು. 

ತಾಜ್‌ ಮಹಲ್‌ನ್ನು ಕೋಟೆಯ ನಗರ ಆಗ್ರಾದ ದಕ್ಷಿಣ ಭಾಗದಲ್ಲಿರುವ ಭೂಪ್ರದೇಶದಲ್ಲಿ ಕಟ್ಟಲಾಗಿದೆ. ತಾಜ್‌ ಮಹಲ್‌ ಕಟ್ಟಿದ್ದ ಸ್ಥಳಕ್ಕೆ ಪ್ರತಿಯಾಗಿ ಆಗ್ರಾದ ಕೇಂದ್ರ ಭಾಗದಲ್ಲಿದ್ದ ದೊಡ್ಡ ಅರಮನೆಯೊಂದನ್ನು ಷಹ ಜಹಾನ್‌ನು ಮಹರಾಜ ಜೈ ಸಿಂಗ್‌ರವರಿಗೆ ಕೊಡುಗೆಯಾಗಿ ನೀಡಿದನು. ಸುಮಾರು ಮೂರು ಎಕರೆಗಳಷ್ಟು ಪ್ರದೇಶದಲ್ಲಿ ಭೂಶೋಧನೆ ಮಾಡಲಾಯಿತು. ನೀರು ಜಿನುಗುವುದನ್ನು ಕಡಿಮೆ ಮಾಡಲು ಕಸವನ್ನು ತುಂಬಿ ಮಣ್ಣನ್ನು ಹಾಕಲಾಯಿತು ಮತ್ತು ನದಿ ದಡದಿಂದ ಮೇಲಿನ ೫೦ ಮೀಟರ್‌ಗಳಷ್ಟು ಎತ್ತರದ ಪ್ರದೇಶವನ್ನು ಸಮತಟ್ಟು ಮಾಡಲಾಯಿತು.ಸಮಾಧಿ ಸ್ಥಳದಲ್ಲಿ ಹಿಂದೆ ಬಾವಿಗಳನ್ನು ತೋಡಲಾಗಿದ್ದು ಪಾದಾಧಾರಕಲ್ಲು ಮತ್ತು ಹೆಂಟೆಗಳಿಂದ ತುಂಬಿಸಲಾಗಿತ್ತು. ಬಲಿಷ್ಠ ಬಿದಿರಿನ ಬದಲು ದೊಡ್ಡ ಇಟ್ಟಿಗೆಯನ್ನು ಬಳಸಿ ಕೆಲಸಗಾರರು ಕಟ್ಟಿದ ಹಂಗಾಮಿ ಕಟ್ಟಡವು ಸಮಾಧಿಯನ್ನು ಹೋಲುತ್ತದೆ. ಈ ಹಂಗಾಮಿ ಕಟ್ಟಡವು ಎಷ್ಟು ದೊಡ್ಡದಾಗಿದೆ ಎಂದರೆ ಕೆಲಸಗಾರರ ಇದನ್ನು ಕಿತ್ತುಹಾಕಲು ವರ್ಷಗಳೇ ಬೇಕಾಗಬಹುದು. ದಂತಕತೆಯ ಪ್ರಕಾರ, ಹಂಗಾಮಿ ಕಟ್ಟಡದಿಂದ ಇಟ್ಟಿಗೆಗಳನ್ನು ಯಾರಾದರೂ ಕೀಳಬಹುದೆಂದು ಭಾವಿಸಿ ಅದನ್ನು ಕೀಳಲು ಷಹ ಜಹಾನ್‌ ‌ಆಜ್ಞಾಪಿಸಿದ್ದ. ಆದ್ದರಿಂದ ಒಂದೇ ರಾತ್ರಿಯಲ್ಲಿ ರೈತರಿಂದ ಅದನ್ನು ಕಿತ್ತುಹಾಕಲಾಯಿತು. ನಿರ್ಮಾಣ ಸ್ಥಳಕ್ಕೆ ಅಮೃತಶಿಲೆ ಮತ್ತು ವಸ್ತುಗಳನ್ನು ಸಾಗಿಸಲು ಹದಿನೈದು ಕಿಲೋಮೀಟರ್‌ಗಳ ಉದ್ದದ ಜಲ್ಲಿಯಿಂದ ಹದಗೊಳಿಸಿದ ರಸ್ತೆಯನ್ನು ಮಾಡಲಾಗಿತ್ತು ಮತ್ತು ಅದರಲ್ಲಿ ಇಪ್ಪತ್ತು ಅಥವಾ ಮೂವತ್ತು ಎತ್ತುಗಳಿಂದ ಎಳೆಯಲ್ಡಡುತ್ತಿದ್ದ ವಿಶೇಷವಾಗಿ ನಿರ್ಮಿಸಿದ ಬಂಡಿಗಳಲ್ಲಿ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ದೊಡ್ಡ ಕಂಬ ಮತ್ತು ತೊಲೆ ಬೇಕಾದ ಸ್ಥಾನಕ್ಕೆ ದಿಮ್ಮಿಗಳನ್ನು ಏರಿಸಲು ರಾಟೆ ವ್ಯವಸ್ಥೆಯನ್ನು ಬಳಸಲಾಗಿತ್ತು. ಪುರ್ಸ್‌ ನ ಉಪನದಿಗಳಿಂದ ನೀರನ್ನು ಹಗ್ಗ ಮತ್ತು ಬಕೆಟ್‌ನ್ನು ಬಳಸಿ ಪ್ರಾಣಿಗಳ ಸಹಾಯದಿಂದ ಎತ್ತಲಾಗುತ್ತಿತ್ತು ಮತ್ತು ಅದನ್ನು ದೊಡ್ಡ ಸಂಗ್ರಹ ತೊಟ್ಟಿಗೆ ತುಂಬಿ, ದೊಡ್ಡ ವಿತರಣಾ ತೊಟ್ಟಿಗೆ ಏರಿಸಲಾಗುತ್ತಿತ್ತು. ಅದರಿಂದ ನೀರನ್ನು ಮೂರು ಉಪ ತೊಟ್ಟಿಗಳಿಗೆ ಹಾಯಿಸಿ, ನಂತರ ಅಲ್ಲಿಂದ ಕೊಳವೆಯ ಮುಖಾಂತರ ಸಂಕೀರ್ಣಕ್ಕೆ ತಲುಪಿಸಲಾಗುತ್ತಿತ್ತು. 

ಪೀಠ ಮತ್ತು ಸಮಾಧಿಯ ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು 12 ವರ್ಷ ತೆಗೆದುಕೊಳ್ಳಲಾಗಿತ್ತು. ಸಂಕೀರ್ಣದ ಇನ್ನುಳಿದ ಭಾಗವನ್ನು ಎಂದರೆ ಕ್ರಮವಾಗಿ ಮಸೀದಿಗಳು, ಜವಾಬ್‌ ಮತ್ತು ದ್ವಾರಬಾಗಿಲು ಕಟ್ಟಲು ಮತ್ತೆ 10 ವರ್ಷಗಳ ಸಮಯ ಹಿಡಿಯಿತು. ಸಂಕೀರ್ಣದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ, ಕಟ್ಟಡ ಪೂರ್ಣಗೊಳ್ಳುವ ವಿಚಾರದಲ್ಲಿ ವ್ಯತ್ಯಾಸಗಳಿದ್ದ ಕಾರಣ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ದಿನಾಂಕದಲ್ಲೂ ಒಮ್ಮತವಿರಲಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಭವ್ಯ ಸಮಾಧಿಯು 1643ರಲ್ಲಿ ಪೂರ್ಣಗೊಂಡಿತು, ಆದರೆ ಸಂಕೀರ್ಣದ ಉಳಿದ ಭಾಗದ ನಿರ್ಮಾಣ ಕಾರ್ಯ ಬಾಕಿ ಇದ್ದು ಕೆಲಸ ಮುಂದುವರಿಯಿತು. ಎಲ್ಲ ಸಮಯದಲ್ಲೂ ಅಂದಾಜು ವೆಚ್ಚವವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಕಷ್ಟವಾದ್ದರಿಂದ ಅಂದಾಜು ನಿರ್ಮಾಣದ ವೆಚ್ಚ ಬದಲಾಗುತ್ತಿತ್ತು. ಆ ಕಾಲದಲ್ಲೇ ಒಟ್ಟು ವೆಚ್ಚವನ್ನು ಸುಮಾರು 32 ದಶಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು.

ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾರತ ಮತ್ತು ಏಷ್ಯಾದ್ಯಂತದ ದೊರೆಯುವ ಹಲವು ವಸ್ತುಗಳನ್ನು ಬಳಸಿ ನಿರ್ಮಿಸಲಾಯಿತು ಮತ್ತು ಸುಮಾರು 1,000 ಆನೆಗಳನ್ನು ಕಟ್ಟಡ ನಿರ್ಮಾಣದಲ್ಲಿ ವಸ್ತುಗಳ ಸಾಗಣಿಕೆಗಾಗಿ ಬಳಸಲಾಯಿತು. ರಾಜಸ್ಥಾನದಿಂದ ಪಾರದರ್ಶಕವಾದ ಬಿಳಿ ಅಮೃತಶಿಲೆಯನ್ನು, ಪಂಜಾಬ್‌ನಿಂದ ಜ್ಯಾಸ್ಪರ್‌ನ್ನು, ಚೀನಾದಿಂದ ಜೇಡ್‌ ಮತ್ತು ಸ್ಪಟಿಕವನ್ನು ತರಿಸಲಾಗಿತ್ತು. ಟಿಬೆಟ್‌ನಿಂದ ವೈಡೂರ್ಯ, ಅಫ್ಘಾನಿಸ್ಥಾನದಿಂದ ಲ್ಯಾಪಿಸ್‌ ಲಜುಲಿ, ಶ್ರೀಲಂಕಾದಿಂದ ನೀಲಮಣಿ ಮತ್ತು ಅರೇಬಿಯಾದಿಂದ ಕ್ಯಾಲ್ಸಡೆನಿಯನ್ನು ತರಿಸಿಕೊಂಡು ಅದನ್ನು ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ಟಾಗಿ ಇಪ್ಪತ್ತೆಂಟು ವಿಧಗಳ ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳನ್ನು ಬಿಳಿ ಅಮೃತಶಿಲೆಯಲ್ಲಿ ಕೊರೆದು ಇಡಲಾಯಿತು.

ಉತ್ತರ ಭಾರತದಾದ್ಯಂತ ಇಪ್ಪತ್ತು ಸಾವಿರ ಕಾರ್ಮಿಕರನ್ನು ಕಟ್ಟಡ ಕೆಲಸದಲ್ಲಿ ಬಳಸಿಕೊಳ್ಳಲಾಗಿತ್ತು. ಬುಖಾರದಿಂದ ಶಿಲ್ಪಿಗಳು, ಸಿರಿಯಾ ಮತ್ತು ಪರ್ಷಿಯಾದಿಂದ ಸುಂದರ ಲಿಪಿಗಾರರು, ದಕ್ಷಿಣ ಭಾರತದಿಂದ ವಾಸ್ತುಶಿಲ್ಪಿಗಳು, ಬಲೂಚಿಸ್ತಾನದಿಂದ ಕಲ್ಲುಕಡೆಯುವವರು, ಕಟ್ಟಡದ ಗೋಪುರ ಕಟ್ಟುವುದರಲ್ಲಿ ಪರಿಣಿತರು, ಅಮೃತಶಿಲೆಯಲ್ಲಿ ಹೂಗಳನ್ನು ಕೆತ್ತುವವರು ಕ್ರಿಯಾತ್ಮಕ ಘಟಕವನ್ನು ರಚಿಸಿದ ಮೂವತ್ತೇಳು ಜನರಲ್ಲಿದ್ದಾರೆ. ಈ ಕೆಳಗಿನವರು ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾಗಿಯಾದ ಕೆಲವು ನಿರ್ಮಾಪಕರಾಗಿದ್ದಾರೆ:

ತಾಜ್‌ ಮಹಲ್‌ನ ನಿರ್ಮಾಣವು ಪೂರ್ಣಗೊಂಡ ಕೆಲವೇ ದಿನಗಳ ನಂತರ, ಷಹ ಜಹಾನ್‌‌ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೆ ಒಳಗಾದನು ಮತ್ತು ಅವನನ್ನು ಆಗ್ರಾ ಬಂದರಿನ ಬಳಿ ಗೃಹ ಬಂಧನದಲ್ಲಿಡಲಾಯಿತು. ಷಹ ಜಹಾನ್‌‌ನ ಮರಣದ ನಂತರ, ಅವನ ಹೆಂಡತಿಯ ಸಮಾಧಿಯ ಪಕ್ಕದಲ್ಲಿ ಔರಂಗಜೇಬ್‌ ಷಹ ಜಹಾನ್‌‌ನನ್ನು ಮಣ್ಣು ಮಾಡಿದನು.

ವಾರ್ಷಿಕವಾಗಿ ತಾಜ್‌ ಮಹಲ್‌ಗೆ 2 ರಿಂದ 4 ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ 200,000ಕ್ಕಿಂತ ಹೆಚ್ಚು ಜನರು ವಿದೇಶದಿಂದ ಬಂದವರಾಗಿರುತ್ತಾರೆ. ಹೆಚ್ಚಿನ ಪ್ರವಾಸಿಗರು ಚಳಿಗಾಲವಾದ ಅಕ್ಟೋಬರ್‌, ನವೆಂಬರ್ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಭೇಟಿ ನೀಡುತ್ತಾರೆ. ಸಂಕೀರ್ಣದ ಸಮೀಪ ಮಾಲಿನ್ಯಕಾರಕ ವಾಹನಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಿಂದ ನಡೆದುಕೊಂಡು ಹೋಗಬೇಕು ಇಲ್ಲವೇ ವಿದ್ಯುತ್‌ ಬಸ್ಸನ್ನು ಹತ್ತಿ ಪ್ರಯಾಣಿಸಬೇಕು. ಖವಾಸ್‌ಪುರಾಸ್‌‌ನ್ನು (ಉತ್ತರ ಬೀದಿ) ಪ್ರಸ್ತುತವಾಗಿ ಹೊಸ ಪ್ರವಾಸಿ ಕೇಂದ್ರದಂತೆ ಬಳಸುವುದಕ್ಕಾಗಿ ನವೀಕರಿಸಲಾಗಿದೆ. ತಾಜ್‌ನ ದಕ್ಷಿಣ ಭಾಗದಲ್ಲಿರುವ ಚಿಕ್ಕ ಪಟ್ಟಣವನ್ನು ತಾಜ್‌ ಘಂಜಿ ಅಥವಾ ಮಮ್ತಾಜಾಬಾದ್‌ ಎಂದು ಕರೆಯುತ್ತಾರೆ. ಮೂಲತಃ ಇದನ್ನು ಪ್ರವಾಸಿಗರು ಮತ್ತು ಕೆಲಸಗಾರರ ಅವಶ್ಯಕತೆಗಳನ್ನು ಪೂರೈಸಲು ತಂಗುದಾಣ, ಬೀದಿ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗಿತ್ತು. ವಿಶ್ವದಾದ್ಯಂತ ಇರುವ ಶಿಫಾರಸು ಮಾಡಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್‌ ಮಹಲ್ ಸೇರಿದೆ. ಅಲ್ಲದೆ, ಇತ್ತೀಚೆಗೆ ನೆಡೆದ ಚುನಾವಣೆಯಲ್ಲಿ 100 ದಶಲಕ್ಷ ಮತಗಳೊಂದಿಗೆ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿರುವುದು ಸೇರಿದಂತೆ ಆಧುನಿಕ ಜಗತ್ತಿನ ಏಳು ಅದ್ಭುತಗಳ ಪಟ್ಟಿಗಳಲ್ಲೂ ಕೂಡ ಸೇರಿದೆ‌.

ತಾಜ್‌ ಮಹಲ್‌ನ ಆವರಣ ಪ್ರತಿ ಶುಕ್ರವಾರದ 12 ರಿಂದ 2 ಗಂಟೆಗಳವರೆಗೆ ಪ್ರಾರ್ಥನೆಗೆಂದು ತೆರೆಯುವ ಕಾರಣ ಶುಕ್ರವಾರವನ್ನು ಹೊರತುಪಡಿಸಿ ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 7ಗಂಟೆಯವ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂಕೀರ್ಣವು  ಶುಕ್ರವಾರಗಳು ಮತ್ತು ರಂಜಾನ್‌ ತಿಂಗಳನ್ನು ಹೊರತುಪಡಿಸಿ, ಹುಣ್ಣಿಮೆ ಹಾಗೂ ಹುಣ್ಣೆಮೆಯ ಹಿಂದಿನ ಮತ್ತು ನಂತರ ಎರಡು ದಿನ ತಾಜ್‌ ಮಹಲ್‌ನ ರಾತ್ರಿ ವೀಕ್ಷಣೆಗೆಂದೇ ಪ್ರವಾಸಿಗರಿಗೆ ಪ್ರವೇಶ ತೆರೆದಿರಲಾಗಿರುತ್ತದೆ. ಭದ್ರತಾ ಕಾರಣಗಳಿಗಾಗಿ  ಪಾರದರ್ಶಕ ಬಾಟಲುಗಳಲ್ಲಿ ನೀರು, ಚಿಕ್ಕ ವೀಡಿಯೊ ಕ್ಯಾಮರಾಗಳು, ಸ್ಟಿಲ್‌ ಕ್ಯಾಮರಾಗಳು, ಸಂಚಾರಿ ದೂರವಾಣಿಗಳು ಮತ್ತು ಮಹಿಳೆಯರ ಚಿಕ್ಕ ಪರ್ಸುಗಳಂತಹ ಐದು ವಸ್ತುಗಳನ್ನು ಮಾತ್ರ ತಾಜ್‌ ಮಹಲ್‌ನೊಳಗೆ ಅನುಮತಿಸಲಾಗಿದೆ. 

ತಾಜ್ ಮಹಲ್ ನಿರ್ಮಾಣವಾದಾಗಿನಿಂದಲೂ ಬೆರಗುಗೊಳಿಸುವಂತಿದ್ದು, ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಅತೀತವಾಗಿದೆ, ಅಷ್ಟೆ ಅಲ್ಲದೆ ಸ್ಮಾರಕ ಕುರಿತ ತಾರ್ಕಿಕ ನಿಷ್ಕರ್ಷೆಗಳ ಮೇಲೆ ವೈಯಕ್ತಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ನಿರಂತರವಾಗಿ ಮೇಲುಗೈ ಸಾಧಿಸಿವೆ.

ಯಮುನಾ ನದಿಯುದ್ದಕ್ಕೂ ಕಪ್ಪು ಅಮೃತಶಿಲೆಯಲ್ಲಿ ಭವ್ಯ ಸಮಾಧಿಯನ್ನು ನಿರ್ಮಿಸಲು ಷಹ ಜಹಾನ್‌‌ ಯೋಜನೆ ರೂಪಿಸಿದ್ದನು ಎಂಬುದನ್ನು ಐತಿಹಾಸಿಕ ಕಾಲದಿಂದಲೇ ಚಾಲ್ತಿಯಲ್ಲಿರುವ ನಂಬಿಕೆಗಳು ಹೇಳುತ್ತವೆ. 1665ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಯೂರೋಪಿಯನ್ ಪ್ರವಾಸಿಗ ಜೀನ್‌-ಬಾಪ್ಟಿಸ್ಟ್‌ ಟ್ಯಾವೆರ್ನಿಯರ್‌ನ ಕಾಲ್ಪನಿಕ ಬರಹಗಳಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ.ಸಮಾಧಿಯ ನಿರ್ಮಾಣ ಸಾಧ್ಯವಾಗುವುದಕ್ಕಿಂತ ಮೊದಲೇ ಷಹ ಜಹಾನ್ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೊಂಡ ಎಂದು ಹೇಳಲಾಗಿದೆ. ಮಹ್ತಾಬ್‌ ಬಾಘ್‌ ನಬೆಳದಿಂಗಳ ಉದ್ಯಾನ ದಲ್ಲಿ ನದಿಯುದ್ದಕ್ಕೂ ಇರುವ ಕಪ್ಪು ಅಮೃತಶಿಲೆಯ ಅವಶೇಷಗಳು ಈ ದಂತಕತೆಯನ್ನು ಪುಷ್ಟೀಕರಿಸುವಂತಿವೆ.ಆದಾಗ್ಯೂ, 1990ರಲ್ಲಿ ಕೈಗೊಂಡ ಉತ್ಖನನಗಳು ಬಿಳಿ ಕಲ್ಲುಗಳು ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಹಿಡಿದಿವೆ. 2006ರಲ್ಲಿ ಪ್ರಾಕ್ತನ ವಿಮರ್ಶಕರು ಬೆಳದಿಂಗಳದ ಉದ್ಯಾನದಲ್ಲಿರುವ ಕೊಳದ ಒಂದು ಭಾಗವನ್ನು ಪುನರ್‌ನಿರ್ಮಿಸಿ ಕಪ್ಪು ಭವ್ಯ ಸಮಾಧಿಯ ಮೂಲದ ಬಗ್ಗೆ ಹೆಚ್ಚು ನಂಬಲಾರ್ಹ ವಾದವನ್ನು ಮಂಡಿಸಿದರು. ಷಹ ಜಹಾನ್‌‌ನ ಯೋಚನಾ ಲಹರಿಗಳಿಗೆ ಅನುರೂಪವಾಗಿಸಿ ಮತ್ತು ಕೊಳವನ್ನು ಸ್ಥಳಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಿಳಿ ಭವ್ಯ ಸಮಾಧಿಯ ಕಪ್ಪು ಪ್ರತಿಫಲನವನ್ನು ಸ್ಪಷ್ಟವಾಗಿ ನೋಡಬಹುದು.

ಸಮಾಧಿಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವಾಸ್ತುಶಿಲ್ಪಿಗಳು ಮತ್ತು ಕುಶಲಕಾರ್ಮಿಕರನ್ನು ಷಹ ಜಹಾನ್ ಅಂಗವಿಚ್ಛೇದನಗೊಳಿಸಿದ್ದು, ಊನಗೊಳಿಸಿ ಪೀಡಿಸಿದ್ದು ಮತ್ತು ಇದರಿಂದಾಗಿ ಮರಣಗಳು ಸಂಭವಿಸಿದ ಬಗ್ಗೆ ಭಯಾನಕ ವಿವರಗಳಿವೆ. ಆದರೆ ಈ ವಿವರಗಳನ್ನು ಖಚಿತಪಡಿಸುವ ಯಾವುದೇ ಸಾಕ್ಷಿಗಳು ಇಲ್ಲ. ಇದೇ ತೆರನಾದ ವಿನ್ಯಾಸದ ಇನ್ನಾವುದೇ ನಿರ್ಮಾಣದಲ್ಲಿ ಭಾಗಿಯಾಗುವುದಿಲ್ಲ ಎಂಬ ಒಪ್ಪಂದಕ್ಕೆ ಸಮಾಧಿ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರಿಂದ ಸಹಿ ಹಾಕಿಸಿಕೊಳ್ಳಲಾಗಿತ್ತು ಎಂದೂ ಕೆಲವು ಕಥೆಗಳು ಹೇಳುತ್ತವೆ. ಇತರೆ ಹಲವು ಜನಪ್ರಿಯ ಕಟ್ಟಡಗಳ ಬಗ್ಗೆಯೂ ಇದೇ ತೆರನಾದ ಹೇಳಿಕೆಗಳಿವೆ. 1830ರಲ್ಲಿ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್‌ ವಿಲಿಯಂ ಬೆಂಟಿಂಕ್‌ರವರು ತಾಜ್‌ ಮಹಲ್‌ ಕೆಡವಿ, ಅದರಲ್ಲಿರುವ ಅಮೃತಶಿಲೆಯನ್ನು ಹರಾಜು ಹಾಕಲು ಯೋಜಿಸಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಆಗ್ರಾ ಕೋಟೆಯ ನಿರ್ಮಾಣದ ವೇಳೆ ತ್ಯಜಿಸಲಾದ ಅಮೃತಶಿಲೆಯ ಮಾರಾಟದಿಂದ ನಿಧಿ-ಸಂಗ್ರಹಿಸಲು ಬೆಂಟೆಂಕ್‌ ಉದ್ದೇಶಿಸಿದ್ದೇ ಮೇಲಿನ ಕಥೆಯ ಹುಟ್ಟಿಗೆ ಮೂಲ ಕಾರಣ ಎಂದು ಬೆಂಟಿಂಕ್‌ರ ಜೀವನ ಚರಿತ್ರೆಕಾರ ಜಾನ್‌ ರೊಸ್ಸೆಲ್ಲಿ ಹೇಳಿದ್ದಾರೆ.

ತಾಜ್‌ ಮಹಲ್‌ನ್ನು ಕಟ್ಟಿಸಿದ್ದು ಹಿಂದೂ ರಾಜ ಎಂದು ತಿಳಿಸಿ ಪಿ.ಎನ್‌. ಓಕ್‌ರವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಛ ನ್ಯಾಯಾಲಯ 2000ರಲ್ಲಿ ತಿರಸ್ಕರಿಸಿತು. ಭಾರತಕ್ಕೆ ಮುಸ್ಲಿಮರು ಆಕ್ರಮಣ ನಡೆಸುವುದಕ್ಕೂ ಮುಂಚೆಯಿದ್ದ, ಈಗ ಮುಸಲ್ಮಾನ ಸುಲ್ತಾನರಿಗೆ ಸೇರಿದ್ದು ಎನ್ನಲಾಗುವ ದೇಶದ ಇತರ ಐತಿಹಾಸಿಕ ಕಟ್ಟಡಗಳ ಜೊತೆಗೆ ತಾಜ್‌ ಗುರುತಿಸಿಕೊಂಡಿರುವ ಕಾರಣ, ಅದು ಹಿಂದೂ ಶಿವ ದೇವಾಲಯ ಮೂಲವನ್ನು ಹೊಂದಿದೆ ಎಂಬುದು ಓಕ್‌ರವರ ವಾದ. ರವೀಂದ್ರನಾಥ್‌ ಟಾಗೋರ್‌ರವರು ಈ ಸಮಾಧಿಯನ್ನು ವನ್‌ ಟಿಯರ್‌‌-ಡ್ರಾಪ್‌...ಅಪಾನ್‌ ದಿ ಚಿಕ್‌ ಆಫ್‌ ಟೈಮ್‌  ಎಂದು ವರ್ಣಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸ್ಮಾರಕ ಸಮಾಧಿಯ ಮೇಲೆ ನೀರಿನ ಹನಿ ಬಿದ್ದಂತೆ ಎಂದು ಹೆಚ್ಚು ಕಾವ್ಯಾತ್ಮಕವಾಗಿ ಬಣ್ಣಿಸಲಾಗಿದೆ. ಶಿಖರಾಗ್ರದಲ್ಲಿರುವ ಛಾಯಾರೇಖಾಕೃತಿಯನ್ನು ಹೊಡೆದಲ್ಲಿ, ಅದು ನೀರನ್ನು ಹೊರಸೂಸುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಈವೆರೆಗೂ, ಛಾಯಾರೇಖಾಕೃತಿಯು ಬಳೆಗಳ ತುಂಡುಗಳಿಂದ ಸುತ್ತುವರಿದಿರುವುದನ್ನು ಮಾತ್ರ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಬಾಂಗ್ಲಾದೇಶದ ತಾಜ್‌ ಮಹಲ್‌ , ಮಹಾರಾಷ್ಟ್ರದ ಔರಂಗಬಾದ್‌ನಲ್ಲಿರುವ ಬೀಬಿ ಕಾ ಮಕ್ಬಾರ, ಮತ್ತು ವಿಸ್ಕೊನ್ಸಿನ್‌ನ ಮಿಲ್ವೌಕಿನಲ್ಲಿರುವ ತ್ರಿಪೊಲಿ ಶ್ರಿನ್‌ ದೇವಾಲಯ ತಾಜ್‌ ಮಹಲ್‌ ಮಾದರಿಯ ಕಟ್ಟಡಗಳಾಗಿವೆ.




#Article 107: ಯೇಸು ಕ್ರಿಸ್ತ (145 words)


ಯೇಸು ಅಥವಾ ಜೀಸಸ್ (ಕ್ರಿ.ಪೂ ೬-೪ ರಿಂದ ಕ್ರಿ.ಶ. ೨೯-೩೩) ಕ್ರೈಸ್ತ ಧರ್ಮದ ಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು 'ದೇವರಕುಮಾರ'ನೆಂದು ವಿಶ್ವಾಸಿಸುತ್ತಾರೆ.

'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ  ವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ ಯೇಸು ಕ್ರಿಸ್ತ (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. ಇಸ್ಲಾಮ್ ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ. 

ಯೇಸು ಹುಟ್ಟಿದ್ದು ಬೆತ್ಲೆಹೆಮ್‌ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ. ತಾಯಿ ಸಂತ ಮೇರಿ. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗೃಹದೀಂದ,ಪವಿತ್ರಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿ ಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು, ಇವತ್ತಿಗು ಮುಂಜಾನೆ, ಸಾಯಂಕಾಲ ಆಕಾಶದಲ್ಲಿ ಚುಕ್ಕೆ ಕಾಣಿಸುತ್ತದೆ.




#Article 108: ಎಂ.ಎಸ್.ಸುಬ್ಬುಲಕ್ಷ್ಮಿ (207 words)


ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಜನಪ್ರಿಯವಾಗಿ ಎಂ.ಎಸ್., ಅಥವಾ ಎಂ.ಎಸ್.ಎಸ್., ಎಮ್ಮೆಸ್ಸಮ್ಮ), (ಸೆಪ್ಟೆಂಬರ್ ೧೬, ೧೯೧೬ - ಡಿಸೆಂಬರ್ ೧೧, ೨೦೦೪) ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು.
 

೧೯೧೬ ರಲ್ಲಿ ಮಧುರೈ ಪಟ್ಟಣದಲ್ಲಿ ಹುಟ್ಟಿದರು. 

೧೯೩೬ ರಲ್ಲಿ 'ಸದಾಶಿವಂ ಅಯ್ಯರ್' ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾದರು. ೧೯೪೦ ರಲ್ಲಿ ಇಬ್ಬರೂ ವಿವಾಹವಾದರು.

ಡಿಸೆಂಬರ್ ೨, ೨೦೦೪ ರಂದು ಅಸ್ವಸ್ಥರಾದ ಎಂ.ಎಸ್. ಡಿಸೆಂಬರ್ ೧೧ ರಂದು ದಿವಂಗತರಾದರು. 

ಎಂ ಎಸ್ ೧೦ ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿ-ಮುದ್ರಣ ಹೊರಬಂದಿತು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯರ್ ಅವರಿಂದ ಕರ್ನಾಟಕ ಸಂಗೀತ ಹಾಗೂ ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದುಸ್ಥಾನಿ ಸಂಗೀತ ಕಲಿತುಕೊಂಡರು. ೧೭ನೇ ವಯಸ್ಸಿನಲ್ಲಿ ಮದರಾಸು ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಎಂ ಎಸ್, ಇಲ್ಲಿಯವರೆಗೆ ಅನೇಕ ಭಾಷೆಗಳಲ್ಲಿ ಎಣಿಕೆಗೆ ಸಿಕ್ಕದಷ್ಟು ಹಾಡುಗಳನ್ನು ಹಾಡಿದ್ದಾರೆ (ಮುಖ್ಯವಾಗಿ ತಮಿಳು, ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಮಲಯಾಳಂ, ತೆಲುಗು, ಸಂಸ್ಕೃತ). ಸ್ವಲ್ಪ ಕಾಲ ಚಿತ್ರರಂಗದಲ್ಲೂ ಕೈಯಾಡಿಸಿದ ಎಂ ಎಸ್, ೧೯೪೫ ರಲ್ಲಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಮೀರಾ ಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ್ದರು.೭೨ ರಾಗಗಳೂ ಅವರ ನಾಲಿಗೆಯಲ್ಲಿ ನರ್ತನ ಮಾಡಿವೆ.
ಸುಬ್ಬುಲಕ್ಷ್ಮಿಯವರು ಕಳೆದ ಐದು ದಶಕಗಳಲ್ಲಿ ಭಾರತದಾದ್ಯಂತ ಕಛೇರಿಗಳನ್ನು ನಡೆಸಿದ್ದಾರೆ. ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಅನೇಕ ಬಾರಿ ವಿದೇಶಗಳಲ್ಲಿ ಸಂಗೀತೋತ್ಸವಗಳ ಮೂಲಕ ಭಾರತವನ್ನು  ಪ್ರತಿನಿಧಿಸಿದ್ದಾರೆ. ೧೯೯೭ ರಲ್ಲಿ ಅವರ ಪತಿಯ ಮರಣದ ನಂತರ ಎಂ ಎಸ್ ಅವರು ಸಾರ್ವಜನಿಕ ಕಛೇರಿಗಳನ್ನು ನೀಡುವುದನ್ನು ನಿಲ್ಲಿಸಿದರು. 

ಪ್ರಪಂಚದಾದ್ಯಂತ ಕೇಳುಗರನ್ನು ಆಕರ್ಷಿಸಿದ 'ಎಂ ಎಸ್' ಅವರಿಗೆ ಬಂದಿರುವ ಪ್ರಶಂಸೆಗಳು ಅಪಾರ. ಅವರ ಹರಿ ತುಮ್ ಹರೋ ಜನ್ ಕೀ ಭೀರ್ ಎಂಬ ಮೀರಾ-ಭಜನೆಯನ್ನು ಕೇಳಿದ ಮಹಾತ್ಮ ಗಾಂಧಿ ಆ ಭಜನೆ ಕೇವಲ ಅವರಿಗಾಗಿಯೇ ಮಾಡಿಸಿದ್ದು, ಇನ್ನಾರಿಗೂ ಅಲ್ಲ ಎಂದು ಹೇಳಿದ್ದರು! ಭಾರತೀಯ ಸಂಗೀತಗಾರರೊಬ್ಬರಿಗೆ ದೊರಕಬಹುದಾದ ಪ್ರಶಸ್ತಿಗಳೆಲ್ಲವೂ ಎಂ.ಎಸ್ ಅವರಿಗೆ ದೊರಕಿವೆ:  ಸುಬ್ಬುಲಕ್ಷ್ಮಿ ಅವರು 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ವಿಶ್ವಸಂಸ್ಥೆಯು ವಿಶೇಷ ಅಂಚೆ ಚೀಟಿ ಹೊರ ತರಲು ಮುಂದಾಗಿದೆ.




#Article 109: ವೀಣೆ ಶೇಷಣ್ಣ (1194 words)


ವೀಣೆ ಶೇಷಣ್ಣ ನವರು,   (೧೮೫೨-೧೯೨೬) ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಇವರು ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. ವೀಣೆ ಶೇಷಣ್ಣನವರ ತಂದೆ, ’ಬಕ್ಷಿ ಚಿಕ್ಕರಾಮಪ್ಪ’ನವರೂ ಸಹ 'ಮುಮ್ಮಡಿ ಕೃಷ್ಣರಾಜ ಒಡೆಯರು' ಅರಸರಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದ 'ಆಸ್ಥಾನ ವಿದ್ವಾಂಸ'ರಾಗಿದ್ದರು. ಅವರಿಂದ ಮತ್ತು ಮೈಸೂರು 'ಸದಾಶಿವರಾಯ'ರಿಂದ ಸಂಗೀತವನ್ನು ಕಲಿತ 'ಶೇಷಣ್ಣ'ನವರು ವೀಣೆ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು. ವೀಣೆ ಮಾತ್ರವಲ್ಲದೆ 'ಪಿಯಾನೊ', 'ಪಿಟೀಲು', 'ಸಿತಾರ್' ಮೊದಲಾದ ವಾದ್ಯಗಳನ್ನೂ ನುಡಿಸುತ್ತಿದ್ದ ಶೇಷಣ್ಣನವರು ಕೆಲವು ರಚನೆಗಳನ್ನೂ ರಚಿಸಿದ್ದಾರೆ.

ಸ್ವಾತಂತ್ರ್ಯಪೂರ್ವ ಭಾರತದ ಅನೇಕ ಅರಸರು ಇವರನ್ನು ಸನ್ಮಾನಿಸಿದ್ದರು. ಬರೋಡದ ಮಹಾರಾಜರು ಬರೋಡದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ವೀಣೆ ಶೇಷಣ್ಣನವರನ್ನು ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿದ್ದರಂತೆ. 'ವಿಕ್ಟೋರಿಯ ರಾಣಿ'ಯ ಮರಣಾನಂತರ ಗದ್ದುಗೆಗೆ ಬಂದ, ಇಂಗ್ಲೆಂಡಿನ ಅಂದಿನ ರಾಜ, ಐದನೇ ಜಾರ್ಜ್ (George V),  ದೆಹಲಿಯಲ್ಲಿ ಆಯೋಜಿಸಿದ ಅವರ ದರ್ಬಾರ್ ಸಮಯದಲ್ಲಿ  ಶೇಷಣ್ಣನವರ ಸಂಗೀತ-ಕಛೇರಿಯನ್ನು ಕೇಳಿ, ಸಂಪ್ರೀತರಾಗಿ ಅವರ ಒಂದು  'ತೈಲ ಚಿತ್ರ'ವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳಲು 'ಲಂಡನ್ ನ  ಬಕಿಂಗ್ ಹ್ಯಾಂ ಅರಮನೆ'ಗೆ  ತೆಗೆದುಕೊಂಡು ಹೋಗಿದ್ದರಂತೆ.
೧೯೨೪ ರ, 'ಬೆಳಗಾವಿಯ ಕಾಂಗ್ರೆಸ್ ಅಧಿವೇಶನ'ದಲ್ಲಿ 'ಮಹಾತ್ಮ ಗಾಂಧಿ'ಯವರು, ಮತ್ತು ಅವರ ಜೊತೆಗಾರರು, ತಮ್ಮ ಇತರ ಕೆಲಸಗಳನ್ನು ಮುಂದೂಡಿ,  ಹಲವು  ತಾಸುಗಳ ಕಾಲ  ಮಂತ್ರಮುಘ್ದರಾಗಿ, ಶೇಷಣ್ಣನವರ ಕಛೇರಿಯನ್ನೇ ಕೇಳುತ್ತಾ ಕುಳಿತಿದ್ದರಂತೆ. ತಮ್ಮ ಭಾವಪೂರ್ಣ ವೀಣಾವಾದನದ  ವಿಶಿಷ್ಟ ವೈಖರಿಯಿಂದ ಹಾಗೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಮೈಸೂರಿಗೆ, ಕರ್ನಾಟಕಕ್ಕೆ, ಕಲಾಪ್ರಪಂಚದಲ್ಲೇ ಅತ್ಯುನ್ನತವಾದ ಸ್ಥಾನವನ್ನು ಗಳಿಸಿಕೊಟ್ಟು ’ವೀಣೆಯ ಬೆಡಗಿದು ಮೈಸೂರು,’ ಎಂದು ಮೈಸೂರನ್ನು ಗುರುತಿಸುವಂತೆ ಮಾಡಿದವರು, ’ವೀಣೆ ಶೇಷಣ್ಣನವರು.”

ಪಾಶ್ಚಾತ್ಯ ಸಂಗೀತ ವಿದ್ವಾಂಸರು, ಶೇಷಣ್ಣನವರನ್ನು ’ದ ಕಿಂಗ್ ಆಫ್ ವೀಣಾ ಪ್ಲೇಯರ್’ ಎಂದು ಕರೆದು ಗೌರವಿಸಿದ್ದಾರೆ. ಶೇಷಣ್ಣನವರಿಗೆ ವೀಣೆ ಒಂದು ವಾದ್ಯವಷ್ಟೆ ಆಗಿರದೆ ’ನಾದದೇವಿಯನ್ನು ಔಪಾಸಿಸುವ ಸಾಧನೆಯಾಗಿತ್ತು’. ಸಂಗೀತ ವಿದ್ಯಾನಿಧಿಯೇ ಆಗಿದ್ದ  ಶೇಷಣ್ಣನವರು,  ಪ್ರತಿದಿನ ೮ ಗಂಟೆಗಳ ಅವಿರತ ಸಾಧನೆ ಮಾಡುತ್ತಿದ್ದು, ಅವರ ಏಕಾಗ್ರತೆ, ಕಲಾಪ್ರೇಮ ಆದರ್ಶ ಪ್ರಾಯವಾದುವು. 'ಮೈಸೂರು ಸದಾಶಿವರಾಯ'ರಲ್ಲಿ ಗಾಯನವನ್ನು ಅಭ್ಯಾಸಮಾಡಿದುದರಿಂದ   ಶೇಷಣ್ಣನವರು  ನೇರ 'ತ್ಯಾಗರಾಜ ಶಿಷ್ಯಪರಂಪರೆ'ಗೆ ಸೇರಿದಂತಾಯಿತು. 'ಭೈರವಿ ವರ್ಣ'ದ (ವೀರಿ ಬೋಣಿ) ಕರ್ತ, 'ಆದಿ ಅಪ್ಪೈಯ್ಯ' ನವರ ವಂಶಸ್ಥರೂ,  ಈ ವಂಶದ ೨೪ ನೆಯ ಕುಡಿಯೂ ಆಗಿದ್ದಾರೆ.

'ಅಸ್ಥಾನದ ಪೋಷಾಕಿ' ನಲ್ಲಿ ಶೇಷಣ್ಣನವರು ಅದ್ಭುತವಾಗಿ ಕಾಣಿಸುತ್ತಿದ್ದರು. ಅತ್ಯಂತ ಗೆಲುವಿನ ಹಾಗೂ ಗೌರವಾನ್ವಿತ, ಆಕರ್ಷಕ ವ್ಯಕ್ತಿತ್ವ ಅವರದು.ಬೇರೆಯವರಿಗೆ ಹೋಲಿಸಿದರೆ ಅತಿ ಸರಳವೂ ಆಡಂಬರವಿಲ್ಲದ ಉಡುಪಾಗಿತ್ತು. ಆಗಿನಕಾಲದ ಪೋಷಾಕಿನ ಪದ್ಧತಿಯಂತೆ, ಕೊಕ್ಕರೆ ಬಿಳುಪಿನ ಕಚ್ಚೆ ಪಂಚೆ, ಉದ್ದವಾದ ಕಪ್ಪು ಕೋಟಿನ ಮೇಲೆ ಬಿಳಿಯ ಮಡಿಸಿದ ಅಂಗವಸ್ತ್ರ, ಹಾಗೂ ಬಿಳಿಯ ಪೇಟ ಧರಿಸುತ್ತಿದ್ದರು. ದಟ್ಟವಾದ ಮೀಸೆ, ವಿಶಾಲವಾದ ಹಣೆಯ ಮೇಲೆ ನಾಮ ಹಾಗೂ ಅಕ್ಷತೆ ರಂಜಿಸುತ್ತಿತ್ತು. ಕುತ್ತಿಗೆಯನ್ನು ಯಾವಾಗಲೂ ಎತ್ತರದಲ್ಲಿ ಇಟ್ಟುಕೊಂಡೇ ನಡೆಯುತ್ತಿದ್ದ, ಹೊಳಪಿನ ಕಣ್ಣುಗಳ, ಅಷ್ಟೇನೂ ಭರ್ಜರಿ ಆಳಲ್ಲದಿದ್ದರೂ ದೂರದಿಂದಲೇ ಕಂಡುಹಿಡಿಯಬಹುದಾದ ಪ್ರಭಾವೀ ವ್ಯಕ್ತಿತ್ವ. ವೀಣೆನುಡಿಸಲೋಸ್ಕರವೇ ದೇವರು ದಯಪಾಲಿಸಬಹುದಾದ ಉದ್ದವಾದ ಬೆರಳುಗಳು, ಅವರ ಇರುವಿಕೆಯಿಂದ ಸಭಾಂಗಣದ ಮಹತ್ವ ಉಜ್ವಲವಾಗಿರುತ್ತಿತ್ತು. ವೀಣೆನುಡಿಸಲು ಕುಳಿತರೆಂದರೆ ಯೋಗಿಯನ್ನು ಮೀರಿಸುವ 'ತಪಶ್ಚರ್ಯೆ' ಅವರ ಮುಖದಮೇಲೆ ಪ್ರಖರವಾಗಿ ಕಾಣಿಸುತ್ತಿತ್ತು. ತಮ್ಮ ೨೬ ವರ್ಷಗಳ ವಯಸ್ಸಿನಲ್ಲಿಯೇ, ದಕ್ಷಿಣ ಭಾರತದ ರಾಜಮಹಲ್ ಗಳಲ್ಲಿ ಮಠಗಳಲ್ಲಿ, ಜಮೀನ್ದಾರದ ಗೃಹಗಳಲ್ಲಿ, ಹಾಗೂ ಅವರ ವಾದ್ಯಸಂಗೀತಾಭಿಲಾಶಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟಿದ್ದರು. ಆ ಸಮಯದಲ್ಲಿ ಈಗಿನಂತೆ 'ಸಾರ್ವಜನಿಕ ಸಭೆ'ಗಳಲ್ಲಿ ಇಂತಹ 'ಸಂಗೀತ ವಾದ್ಯ ಕಾರ್ಯಕ್ರಮಗಳು' ಇರಲೇ ಇಲ್ಲ.

ಶೇಷಣ್ಣನವರ  ತಂದೆಯವರು, 'ಚಿಕ್ಕರಾಮಯ್ಯನವರು', ಅವರು 'ಮಾಧ್ವ ಬ್ರಾಹ್ಮಣರು', ಹಾಗೂ 'ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವಿದ್ವಾಂಸರಾಗಿದ್ದರು'. ಅವರಿಗೆ 'ವೀಣಾಭಕ್ಷಿ ಚಿಕ್ಕರಾಮಪ್ಪ'ನವರೆಂದೇ ಹೆಸರಾಗಿತ್ತು. 'ತಾಯಿ'ಯವರೂ ಸಂಗೀತ ವಂಶಜರೇ. ಸುಮಾರು ೧ಂ ನೇ ವಯಸ್ಸಿನಲ್ಲೇ 'ಮುಮ್ಮಡಿ  ಕೃಷ್ಣರಾಜವೊಡೆಯರ ಮುಂದೆ ’ಪಲ್ಲವಿ’ಯನ್ನು ಹಾಡಿ ಸನ್ಮಾನಿತರಾಗಿದ್ದರು. ಪ್ರಾರಂಭದಲ್ಲಿ ತಂದೆಯವರಿಂದ ಸಂಗೀತ ಪಾಠ ನಡೆಯುತ್ತಿತ್ತು. ಆದರೆ, ವಿಧಿವಶಾತ್  ಶೇಷಣ್ಣನವರ  ೧೩ ನೆ ವಯಸ್ಸಿನಲ್ಲಿಯೇ ತಂದೆಯವರು ಮರಣಹೊಂದಿದರು. ಆನಂತರ ಸಂಗೀತಾಭ್ಯಾಸವನ್ನು ನಿಲ್ಲಿಸದೆ, 'ವೀಣಾ ಸುಬ್ಬಣ್ಣನವರ ತಂದೆ', 'ದೊಡ್ಡ ಶೇಷಣ್ಣನವರಲ್ಲಿ ಮುಂದುವರೆಸಿದರು. ’ಅಕ್ಕ ವೆಂಕಮ್ಮನವರು’ ತಮ್ಮನ ಸಂಗೀತಾಭ್ಯಾಸಕ್ಕೆ ವಿಶೇಷ  ಕಾಳಜಿ ವಹಿಸಿ ಸಹಕಾರ ಕೊಟ್ಟರು. ಶೇಷಣ್ಣನವರಿಗೆ ದೈವದತ್ತವಾಗಿ ಸಂಗೀತ-ಕಲೆ ಒಲಿದಿತ್ತು. ಸತತವಾಗಿ ಸಾಧನೆಮಾಡಿ ಅವರು ತಮ್ಮದೇ ಅದ ಸ್ವತಂತ್ರ ವೀಣಾಶೈಲಿಯನ್ನು ರೂಪಿಸಿಕೊಂಡರು. ವೀಣೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರು. ಎಂಥವರನ್ನೂ ಮರುಳುಮಾಡುವ  ಮೋಡಿಗೊಳಿಸುವ ಸನ್ಮೋಹನಾಸ್ತ್ರ ಬೀರುವ ಅಧ್ಬುತ ಸಂಗೀತ ಅವರದು.
'ಮನೋಧರ್ಮ ಸಂಗೀತ'ವೇ ಅವರ ಕಛೇರಿಯ ಪ್ರಮುಖಭಾಗವಾಗಿರುತ್ತಿತ್ತು. ಕೆಲವೇ ಆಯ್ದ ಕೀರ್ತನೆಗಳನ್ನು ತೆಗೆದುಕೊಂಡು ಅದ್ಭುತವಾಗಿ ನುಡಿಸುತ್ತಿದ್ದರು. ’ತಿಲ್ಲಾನ’ ’ಜಾವಳಿಗಳು’ ಕಛೇರಿಯ ಅಂತ್ಯದಲ್ಲಿ ನುಡಿಸಲ್ಪಡುತ್ತಿದ್ದವು. ರಸಿಕರಿಗೆ ಅವುಗಳ ಆಕರ್ಷಣೆ ಹೆಚ್ಚಾಗಿತ್ತು. ’ತಾನ ಪ್ರಸ್ತುತಿ’ಯಲ್ಲಿ ಎತ್ತಿದ ಕೈ. ತಮ್ಮ ಜೀವಮಾದದಲ್ಲಿ ಎಂದೂ ಅವರು ಅಹಂಭಾವದಿಂದ ನಡೆದುಕೊಂಡ ಕ್ಷಣಗಳಿರಲಿಲ್ಲ. ’ನಾದಾನು ಸಂಧಾನದ ಉದ್ಘಾರ’ಳೆಂಬ,  ’ಭಲೆ’, ’ಆಹಾ’, ’ಭೇಷ್’ ಇತ್ಯಾದಿ ಪದಗಳು ಅವರಿಗೆ ಅರಿವಿಲ್ಲದೆ ಮೂಡಿಬರುತ್ತಿದ್ದವು. ಸುಮಾರು ೨ಂ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದ   ಶೇಷಣ್ಣನವರು  ಪಿಟೀಲು, ಪಿಯಾನೋ, ಸ್ವರಬತ್, ಜಲತರಂಗ, ನಾಗಸ್ವರ, ಹಾರ್ಮೋನಿಯಮ್, ಮಯೂರ ವಾದ್ಯ, ಮೃದಂಗ,  ಇತ್ಯಾದಿಗಳನ್ನು ನುಡಿಸುತ್ತಿದ್ದರು. ಹಲವು ವೇಳೆ ಯಾವುದಾದರೂ ಸಂಗೀತ ಕಛೇರಿಯಲ್ಲಿ ವೈಲಿನ್ ಪಕ್ಕವಾದ್ಯದವರು  ಬರದಿದ್ದಾಗ, ವೈಲಿನ್ನನ್ನು  ತಾವೇ ನುಡಿಸಿ ಸಹಕರಿಸಿದ ಸನ್ನಿವೇಶಗಳಿವೆ.

'ಮುಮ್ಮಡಿ ಕೃಷ್ಣರಾಜ ಒಡೆಯರು 'ಪಟ್ಟಕ್ಕೆ ಬಂದ ಸಮಯದಲ್ಲೇ ವೈಣಿಕ ಶೇಷಣ್ಣನವರ ವೀಣಾವಾದನದ ಮಾಧುರ್ಯದಿಂದ ಪ್ರಭಾವಿತರಾಗಿದ್ದ ಮಹಾರಾಜರು, ’ವೈಣಿಖ ಶಿಖಾಮಣಿ' ಬಿರುದನ್ನು ದಯಪಾಲಿಸಿದ್ದರು. 'ಜಯಚಾಮರಾಜ ವೊಡೆಯರು',  'ಶೇಷಣ್ಣ'ನವರನ್ನು ತಮ್ಮ  ಅರಮನೆಯ 'ಆಸ್ಥಾನವಿದ್ವಾಂಸ'ರ ನ್ನಾಗಿ ನೇಮಿಸಿದರು.'ಸುಬ್ಬಣ್ಣನವರ ಗಾಯನ', 'ಶೇಷಣ್ಣನವರ ವೀಣೆ', 'ಮಹಾರಾಜರ ಪಿಟೀಲು,'  'ಅಪರೂಪದ ಭಾವಾನು ಸಂಧನ'ದ 'ಸಂಗೀತ ಮೇಳ'ವಾಗಿತ್ತೆಂದು ನೆನೆಸುತ್ತಿದ್ದರು. ಮೈಸೂರು ಸಂಸ್ಥಾನದ ಅರಸರ ಪ್ರತಿಷ್ಠೆ ಮತ್ತು ಭಾಗ್ಯದ ಸಂಕೇತವಾಗಿ ಶೇಷಣ್ಣನವರ ಸಂಗೀತ ಪರಿಗಣಿಸಲ್ಪಟ್ಟಿತ್ತು.
'ರಾಮನಾಥ ಪುರಂ ಭಾಸ್ಕರ ಸೇತುಪತಿ ಮಹಾರಾಜರು' ನವರಾತ್ರಿ ಮೊದಲ ದಿನದಲ್ಲಿ ಏರ್ಪಡಿಸಿದ್ದ ಶೇಷಣ್ಣನವರ ವೀಣೆಯನ್ನು ಸತತ ಕೇಳಬೇಕೆಂದು ವಿನಂತಿಸಿದರು. ಇಡೀ ನವರಾತ್ರಿ ಹಬ್ಬ ಅರಮನೆಯಲ್ಲಿ 'ವೀಣಾಮೃತ ಸುಧೆ'ಯನ್ನು ಹರಿಸಿದ ಶೇಷಣ್ಣನವರಿಗೆ  ’ಕನಕಾಭಿಶೇಕ’ಮಾಡಿಸಿ ಅಂಬಾರಿಯಮೇಲೆ ಮೆರವಣಿಗೆ ಮಾಡಿಸಿದರಂತೆ. ಅನಂತರ, ಪ್ರತಿವರ್ಷವೂ ಇದೇ ತರಹದ ಸಂಗೀತೋತ್ಸವ  ಇದ್ದೇ ಇರುತ್ತಿತ್ತು.

'ಸಯ್ಯಾಜಿರಾವ್ ಗಾಯಕವಾಡ್ 'ರವರು, ಮತ್ತು ಅವರ ಮಹಾರಾಣಿಯವರು ಸತತ ಮೂರು ದಿನಗಳ ವೀಣಾವಾದನವನ್ನು ಏರ್ಪಡಿಸಿ, ಸಕಲ ರಾಜಮರ್ಯಾದೆಗಳೊಂದಿಗೆ ಸನ್ಮಾನಿಸಿ ರಾಣಿಯವರು ಸ್ವತಃ ಬಳಸುತ್ತಿದ್ದ ಮೇನೆಯನ್ನು ಬಹುಮಾನವಾಗಿ ನೀಡಿದರು.  ಶೇಷಣ್ಣನವರು  ಮೈಸೂರಿಗೆ ವಾಪಸ್  ಬಂದಾಗ ಒಡೆಯರೂ ಹೆಮ್ಮೆಯಿಂದ ಬೀಗಿಹೋಗಿ ಮೈಸೂರಿನಲ್ಲೂ 'ರಾಜಲಾಂಛನ'ದಲ್ಲಿ ವಿಶೇಷವಾಗಿ ಸತ್ಕಾರನೀಡಿದರು. ಮಹಾರಾಜರು,  ಶೇಷಣ್ಣನವರಿಗೆ, ಮೇನೆಯಲ್ಲಿ ಉಪಾಸೀನರಾಗಬೇಕೆಂದು ಕೊಂಡಾಗ ಸುತರಾಂ ಒಪ್ಪದೆ, ’ನಾನು ಕಲಾವಿದನಷ್ಟೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ವೀಣೆಯನ್ನು ನುಡಿಸಿದ್ದೇನೆ. ವೀಣೆಯ ಸಾಮರ್ಥ್ಯಕ್ಕೆ ನಾನು ನುಡಿಸಬಲ್ಲೆನೇ’ ಎಂದು ಹೇಳಿ ವೀಣೆಯನ್ನು ಮೇನೆಯ ಪಲ್ಲಕ್ಕಿಯಲ್ಲಿ ಇಟ್ಟು ಮುಂದೆ ತಾವು ವಿನೀತರಾಗಿ ನಡೆದರಂತೆ.
ತಂಜಾವೂರಿನಕೃಷ್ಣಸ್ವಾಮಿ ನಾಯಕರ ಮನೆಯಲ್ಲಿ ನಡೆದ ಒಂದು 'ಸಂಗೀತ ಗೋಷ್ಠಿ'ಯಲ್ಲಿ  ಶೇಷಣ್ಣನವರೊಂದಿಗೆ ಮಹಾವೈದ್ಯನಾಥ ಅಯ್ಯರ್, ಶರಭಶಾಸ್ತ್ರಿ, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಮೊದಲಾದ ವಿದ್ವಾಂಸರುಗಳ ಕಲಾ ವಿನಿಕೆಯಲ್ಲಿ ಪರಸ್ಪರ ಅವರುಗಳಲ್ಲೇ ತೀರ್ಮಾನವಾಗುವ 'ಶ್ರೇಷ್ಟ ವಿದ್ವಾಂಸರಿಗೆ' ಅತ್ಯಂತ ಬೆಲೆ ಬಾಳುವ ’ಸೀಮೇಕಮಲದ ಉಂಗುರ’,  ಬಹುಮಾನವಾಗಿತ್ತು. ಕಛೇರಿಯ ಕೊನೆಯಲ್ಲಿ 'ಮಹಾವೈದ್ಯನಾಥ ಅಯ್ಯರ್' ಮಾತನಾಡಿ,  ವೀಣೆ ಶೇಷಣ್ಣನವರದ್ದು  ಊಹೆಗೆ ನಿಲುಕದ ಮನೋಧರ್ಮ ಆ ನಾದ ಮಾಧುರ್ಯಕ್ಕೆ ನಾವೆಲ್ಲಾ ಮನಸೋತಿದ್ದೇವೆ. ಇಂದಿನ ಬಹುಮಾನ ನಿಷ್ಪಕ್ಷಪಾತವಾಗಿ ಅವರಿಗೇ ಸಲ್ಲಬೇಕು.

ಬರೋಡಾದ ಮಹಾರಾಜರು ಒಮ್ಮೆ ಮೈಸೂರಿನ ದರ್ಬಾರಿಗೆ ಅತಿಥಿಯಾಗಿ ಬಂದಾಗ,  ಶೇಷಣ್ಣನವರ ಸಂಗೀತವನ್ನು ದರ್ಬಾರಿನಲ್ಲಿ ಕೇಳಿದ್ದಲ್ಲದೆ ಮತ್ತೆ, ತಮ್ಮ ವಿಶ್ರಾಂತಿಯ ಸಮಯದಲ್ಲಿ  ಅವರ ಸಂಗೀತವನ್ನು ಪುನಃ ಕೇಳಲು ಅಪೇಕ್ಷಿಸಿದರು. ಅವರ ಮನಸ್ಸಿಗೆ ಮುದವಾಗುವಂತ ಕರ್ನಾಟಕ, ಪಾಶ್ಚಾತ್ಯ, ಹಿಂದೂಸ್ಥಾನಿ ಸಂಗೀತಗಳ ಮಿಶ್ರಣಮಾಡಿ ಪ್ರಸ್ತುತಪಡಿಸಿದರಂತೆ. ಆ ಸಮಯದಲ್ಲಿ ಮಹಾರಾಜರು ಇರಲಿಲ್ಲ. ಅವರು ವಾಪಸ್ ಬಂದಮೇಲೆ, ವಿಷಯಗಳನ್ನು ಕೇಳಿ ತಿಳಿದುಕೊಂಡು ಹೆಮ್ಮೆಪಟ್ಟು ಆಸ್ಥಾನಕ್ಕೆ ಕರೆಸಿದರಂತೆ. ಹೆದರಿಕೆಯಿಂದ ಭೇಟಿಮಾಡಿದ ಶೇಷಣ್ಣನವರು ವಿವರಿಸುವ ಮೊದಲೇ ಮಹಾರಾಜರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಶೇಷಣ್ಣನವರ ಸಮಯಸ್ಪೂರ್ಥಿಯನ್ನು ಕೊಂಡಾಡಿದರಂತೆ.

ಸನ್,  ೧೯೨೪ ರಲ್ಲಿ 'ಮಹಾತ್ಮ ಗಾಂಧಿ'ಯವರ ಅಧ್ಯಕ್ಷತೆಯಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಶೇಷಣ್ಣ ನವರ ವೀಣಾವಾದನದ ಏರ್ಪಾಡಾಗಿತ್ತು. ಆಗಲೇ ೭೩ ವರ್ಷ ಪ್ರಾಯದ, ಅಷ್ಟೇನೂ ಆರೋಗ್ಯ ಸರಿಯಿರದ ಶೇಷಣ್ಣನವರು, ಪೂರ್ವ ನಿಯೋಜಿತ ವ್ಯವಸ್ಥೆಯಂತೆ, ಕೇವಲ ಅರ್ಧಗಂಟೆಯ ವಿನಿಕೆಯ ಕಾರ್ಯಕ್ರಮಕ್ಕೆ ಒಪ್ಪಿಗೆನೀಡಿದ್ದರು. ಒಂದುಗಂಟೆಯಾದರೂ ಸಂಗೀತ ರಸಿಕರು ಮಿಸುಕಾಡದೆ ಕುಳಿತಿದ್ದರು. ಗಾಂಧೀಜಿಯವರ ಜೊತೆ, ಸಂಗೀತದಲ್ಲಿ ಭಾಗವಹಿಸಿದ್ದವರು, 'ಸರೋಜಿನಿನಾಯಿಡು', 'ಜವಹರಲಾಲ್ ನೆಹರು', ಮೋತೀಲಾಲ್ ನೆಹರು, ಮದನ ಮೋಹನ ಮಾಳವೀಯ, ಲಾಲಾ ಲಜಪತ್ ರಾಯ್, ರಾಜೇಂದ್ರ ಪ್ರಸಾದ್,  ಮೊದಲಾದ ನಾಯಕರೂ ತುಟಿಪಿಟಕ್ಕನ್ನದೆ ನಾದ-ಸಾಗರದಲ್ಲಿ ತೇಲುತ್ತಿದ್ದರು. ಹಾಗೆ ಅವರನ್ನೆಲ್ಲಾ ಮೋಡಿಮಾಡಿ ಒಂದು ವಿಕ್ರಮವನ್ನೇ ಸಾಧಿಸಿದರು, ಶೇಷಣ್ಣನವರು. ಸೋಮವಾರವಾದ್ದರಿಂದ ಬಾಪೂಜಿಯವರಿಗೆ, ಮೌನವ್ರತವಿತ್ತು. ಕಛೇರಿಯು ಸಾಗಿಯೇ ಇತ್ತು. ಗಾಂಧೀಜಿಯವರ ಆಪ್ತಕಾರ್ಯದರ್ಶಿಯವರು ಒಂದು ಚೀಟಿಯಲ್ಲಿ ಬರೆದು, 'ಇನ್ನು ನಾವು ಹೋಗೋಣವೇ 'ಎಂದಾಗ,  ಬಾಪು, ಕಾಗದ ಹಿಂದೆ ಬರೆದ ಟಿಪ್ಪಣಿ, ಇಂದಿಗೂ ನೆನೆಯಲು ಯೋಗ್ಯವಾಗಿದೆ. ’ಹೊತ್ತು ಮೀರಿಯೇ ಹೋದರೂ ಪ್ರಮಾದವೇನಿಲ್ಲ, ಆಗಲಂತೆ ಬಿಡಿ.’ ಸುದೀರ್ಘಕಾಲದ ಕಛೇರಿಯ ಬಳಿಕ ಗಾಂಧೀಜಿಯೇ ಕಡುಕಾಲನಿಯಮಿಯೂ ಕಟು ವ್ರತಾಚರಣಿಯೂ ಆಗಿದ್ದ ಬಾಪುರವರು, ಮೌನವನ್ನು ಮುರಿದು ಉದ್ಧರಿಸಿಯೇ ಬಿಟ್ಟರು. ಇದು ದೇವಗಾನ. ಇದನ್ನು ಕೇಳಿದ ನಾವೇ ಧನ್ಯರು. ಇಷ್ಟನ್ನು ಹೇಳದೇ ಹೇಗೆ ಮೌನಾಚರಣೆ ವಹಿಸಲಿ. ಅದೇರೀತಿ, ಮಹಾತ್ಮರ ಮುಂದೆ ವೀಣೆ ನುಡಿಸುವ ಶೇಷಣ್ಣನವರ ಮಹದಾಶೆ ನೆರವೇರಿತು ಕೂಡ.

'ವೀಣೆ ಶೇಷಣ್ಣ' ನವರು ೨ಂ ನೇ ಶತಮಾನದ 'ವಾಗ್ಗೇಯಕಾರರೂ ಹೌದು'. ಅನೇಕ ಕೃತಿಗಳನ್ನೂ ಸ್ವರಜತಿಗಳನ್ನೂ ವರ್ಣಗಳನ್ನೂ ತಿಲ್ಲಾನಗಳನ್ನೂ ರಚಿಸಿದ್ದಾರೆ. ಒಟ್ಟಾರೆ ೫೩ ಕ್ಕೂ ಹೆಚ್ಚು ರಚನೆಗಳನ್ನು ರಚಿಸಿದ್ದಾರೆ.  ವರ್ಣಗಳು ವಿದ್ವತ್ಪೂರ್ಣವಾಗಿದ್ದು, ಖಂಡದೃವ, ಮಿಶ್ರತ್ರಿಪುಟ, ಖಂಡ, ತ್ರಿಪುಟದಂತಹ  ತಾಳಗಳಲ್ಲಿದ್ದು  ೨ ರಾಗಮಾಲಿಕಾ ವರ್ಣಗಳು  ೧೪, ೧೮ ರಾಗಗಳನ್ನು ಹೊಂದಿವೆ. 'ಶೇಷ ಅಂಕಿತ'ದಲ್ಲಿ ರಚನೆಗಳನ್ನು ಮಾಡಿದ್ದು ಕೆಲವು ಮಾತ್ರ 'ಜಯಚಾಮರಾಜ ಒಡೆಯರ್ 'ಮತ್ತು 'ಕೃಷ್ಣರಾಜ ಒಡೆಯರ್ 'ನಾಮಾಂಕಿತದಲ್ಲಿದೆ. ಅವರ 'ತಿಲ್ಲಾನಗಳು' ಬಹು ಆಕರ್ಷಣೀಯವಾಗಿ ಹೆಣೆದಿರುವಂತವು. 'ರಾಲ್ಲಪಲ್ಲಿ ಅನಂತರಾಮ ಶರ್ಮ',  ಹಾಗೂ 'ವಾಸುದೇವಾಚಾರ್ಯರು' ಅವರ ಕೃತಿಗಳನ್ನು  ಶ್ಲಾಘಿಸಿದ್ದಾರೆ. ಶೇಷಣ್ಣ ನವರ ಎಲ್ಲಾ ರಚನೆಗಳನ್ನೂ 'ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾ'ದವರು ಪ್ರಕಟಿಸಿದ್ದಾರೆ. 'ಮೈಸೂರು ವಾಗ್ಗೇಯಕಾರರು'  ಶೀರ್ಷಿಕೆಯಡಿಯಲ್ಲಿ 'ವಿದುಷಿ. ಎಂ ಎಸ್ ಶೀಲಾ'ರವರ 'ಹಂಸಧ್ವನಿ ಸಂಸ್ಥೆ'ಯಿಂದ ಹೊರಬಂದ ಅನೇಕ ಸಿ.ಡಿ ಗಳಲ್ಲಿ 'ವೀಣೆ ಶೇಷಣ್ಣ'ನವರ ರಚನೆಗಳೂ  ಇದ್ದು ಇದನ್ನೂ ’'ಗುರು ಶೀಲಾ'” ರವರೇ ಹಾಡಿದ್ದಾರೆ.

'ಬ್ರಿಟಿಷ್ ಚಕ್ರವರ್ತಿ, ೫ ನೇ ಜಾರ್ಜ್ ಪಟ್ಟಾಭಿಷೇಕ,' 'ದೆಹಲಿ'ಯಲ್ಲಿ ನಡೆದಾಗ,  'ಶೇಷಣ್ಣನವರ ವೀಣಾವಾದನದ ಕಛೇರಿ,'  ಇತ್ತು. ಅದ್ಭುತವೂ ಸೋಜಿಗವೂ ಎನ್ನಿಸಿದ ಈ ವೀಣಾವಾದನದ ಮಾಧುರ್ಯದಿಂದ ಚಕ್ರವರ್ತಿಯವರು ಪ್ರಭಾವಿತರಾಗಿ, ಆ  ಸವಿನೆನಪಿಗೆ  'ಶೇಷಣ್ಣನವರ ತೈಲ-ಚಿತ್ರವನ್ನು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆಯ ಕಲಾಮಂದಿರ' ದಲ್ಲಿ ಕೊಂಡೊಯ್ದು, ಇರಿಸಿದ್ದಾರೆ.

ಶೇಷಣ್ಣನವರು ’ಮೈಸೂರು ವೀಣಾ ಪರಂಪರೆ ’ಗೆ, ದೊಡ್ಡ  ”  ಸಂಗೀತ ಶಾಸ್ತ್ರದಲ್ಲಿ ನಿಷ್ಣಾತ  ಶಿಷ್ಯವೃಂದ ವನ್ನೇ  ತಮ್ಮ ಅನುಪಮ ಕೊಡುಗೆಯಾಗಿ ಸಲ್ಲಿಸಿದ್ದಾರೆ. ಅವರಲ್ಲಿ ಪ್ರಮುಖರು,

ಒಮ್ಮೆ ಉತ್ತರಭಾರತದಿಂದ ಒಬ್ಬ 'ಜಲತರಂಗ ವಾದ್ಯದ ಸಂಗೀತಗಾರರು', 'ಮೈಸೂರು ಆಸ್ಥಾನ'ದಲ್ಲಿ ಒಂದು ಸುಂದರವಾದ ಕಾರ್ಯಕ್ರಮ ಕೊಟ್ಟರು. ಪ್ರಭುಗಳು ಸಂತೋಷಗೊಂಡಿದ್ದಲ್ಲದೆ  ಅತ್ಯಂತ  ಪ್ರಭಾವಿತರಾಗಿದ್ದರು. ಶೋತೃಗಳ ಸಾಲಿನಲ್ಲಿ ಕುಳಿತು ಸಂಗೀತವನ್ನು ಆಲಿಸುತ್ತಿದ್ದ 'ಶೇಷಣ್ಣ'ನವರು, ಕಾರ್ಯಕ್ರಮ ಮುಗಿದನಂತರ  ಅರಸರನ್ನು ಭೆಟ್ಟಿಮಾಡಿ, 'ಜಲತರಂಗವಾದ್ಯ'ದ ಪರಿಕರಗಳನ್ನು ರಾತ್ರಿ, ತಮ್ಮ ಹತ್ತಿರ ಇಟ್ಟುಕೊಳ್ಳಲು ಅನುಮತಿ ಕೋರಿದರು. 'ಸಂಗೀತ'ದಲ್ಲಿ ಎಷ್ಟು ಸಮರ್ಪಣಾಭಾವವಿತ್ತೆಂದರೆ, ರಾತ್ರಿಯೆಲ್ಲಾ ಸಾಧನೆಮಾಡಿ ಮಾರನೆಯ ದಿನ ರಾತ್ರಿ ಮಹಾರಾಜರ ಮುಂದೆ 'ಜಲತರಂಗ ವಾದನ ದ ಕಛೇರಿ' ಕೊಟ್ಟರು. ಕಾರ್ಯಕ್ರಮ ಮುಗಿದ ಮೇಲೆ ಆ ಸಂಗೀತಕಾರರು, ಮಂಚದಮೇಲೆ ಬಂದು 'ಶೇಷಣ್ಣ'ನವರನ್ನು ಅಭಿನಂದಿಸಿದರಂತೆ. ಈ ಸಂಗತಿ, ಅವರ 'ಆಸಕ್ತಿ' ಮತ್ತು ಹೊಸದನ್ನು ಕಲಿತುಕೊಳ್ಳುವ 'ಅಸ್ತೆ'ಯನ್ನು ದರ್ಶಾಯಿಸುತ್ತದೆ.

ಈಗಿನ ವೀಣೆ ನುಡಿಸುವ 'ಮೈಸೂರು ಶೈಲಿ',  ಪ್ರಖ್ಯಾತವಾಗಿದೆ. ಇದನ್ನು ಪ್ರಸಿದ್ಧಿಪಡಿಸಿದವರು, ಶೇಷಣ್ಣನವರೇ.  ಆದರೆ ಇದಕ್ಕೆ ಮೊದಲು ಸಿತಾರಿನಂತ ವೀಣೆಯ ಬುರುಡೆಯನ್ನು ತೊಡೆಗೆ ಒತ್ತಿಕೊಂಡು ನುಡಿಸುವ ಪದ್ಧತಿಯಿತ್ತು.  ಆದರೆ ಶೇಷಣ್ಣನವರು, ಪದ್ಮಾಸನದಲ್ಲಿ ಕುಳಿತು, ಈಗಿನ ತರಹ ವೀಣೆಯನ್ನು ತಮ್ಮ ಎರದೂ ತೊಡೆಗಳ ಮೇಲೆ ಇಟ್ಟುಕೊಂಡು ನುಡಿಸುವ ಪರಿಪಾಠವನ್ನು ಜಾರಿಗೆ ತಂದರು. ತಮ್ಮ  ಎರಡು ಬೆರಳುಗಳಿಂದ ತಂತಿಗಳನ್ನು ಮೀಟುವುದರ ಜೊತೆಗೆ, ಎರಡೂ ತಂತಿಗಳು ಒಂದಕ್ಕೊಂದು ತಗುಲದಂತೆ ಏರ್ಪಾಟು ಮಾಡಿಕೊಳ್ಳುವ ಪದ್ಧತಿಯೂ ಅವರದೇ.

ಹೊರನಾಡಿನಿಂದ ಬಂದ ಕಲಾವಿದರು, ಮೈಸೂರು ದರ್ಬಾರಿನಲ್ಲಿ ’ವಿನಿಕೆ”ಮಾಡಬೇಕಾಗಿದ್ದರೆ, ಮೊದಲು ಶೇಷಣ್ಣನವರರಿಗೆ ತೃಪ್ತಿ ದೊರೆತರೆ ಮಾತ್ರ, ಎಂಬ ಮಹಾರಾಜರ ಕಟ್ಟಪ್ಪಣೆ ಇತ್ತು. ಶೇಷಣ್ಣನವರು   'ವಿದ್ಯಾಪಕ್ಷಪಾತಿಗಳು,' 'ಅರ್ಹರಾದ ಕಲಾವಿದರ'ನ್ನು ಅತ್ಯಂತ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ’ಗುಣಕ್ಕೆ ಮತ್ಸರವಿಲ್ಲ’ ಎನ್ನುವ  ಹೇಳಿಕೆಯ ಪ್ರತಿಪಾದಕರಾಗಿದ್ದರು.

ಪ್ರತಿದಿನವೂ ಶೇಷಣ್ಣನವರ ಮನೆಯಲ್ಲಿ  'ವಿದ್ವಾಂಸರ ಗೋಷ್ಟಿ ಕಛೇರಿಗಳು'  ನಡೆದಿರುತ್ತಿತ್ತು. ಇದಲ್ಲದೆ,  ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿ ಹಬ್ಬಗಳಲ್ಲಿ ೧ಂ ದಿನಗಳು, ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ತಮ್ಮ ಮನೆಯ ಮಹಡಿಯ ಮೇಲೆ ವೀಣಾಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅರಮನೆಯಲ್ಲಿ ಹೋಗಲಾರದ ಶ್ರೋತೃಗಳಿಗೆ ಈ ಸೌಲಭ್ಯ ಮುದನೀಡಿತ್ತು.  ಶೇಷಣ್ಣನವರು ತಮ್ಮ ಅಂತ್ಯದದಿನಗಳಲ್ಲಿ ನನಗೆ ಸಾವಿನ ಭಯವಿಲ್ಲ ; ಆದರೆ,  ಈ ವೀಣೆಯನ್ನು ಬಿಟ್ಟು ನಾನೊಬ್ಬನೆ ಹೋಗಬೇಕಲ್ಲಾ ಎನ್ನುವ ಸಂಕಟ,  ಎನ್ನುತ್ತಿದ್ದರು.

ಲೇಖನ-' ಮಹಾನ್ ಕಲಾವಿದ ವೀಣೆ ಶೇಷಣ್ಣ

'ಮೈಸೂರು ಸುಬ್ರಹ್ಮಣ್ಯಂ', 'ಡಾ ವಿ. ಎಸ್. ಸಂಪತ್ಕುಮಾರಾಚಾರ್ಯ', 'ಪ್ರೊ. ವಿ. ರಾಮರತ್ನಂ', 'ಮೈಸೂರು ಎ. ರಾಜಾರಾವ್' ರವರ, ಲೇಖನಗಳು, ’ಸಂಗೀತ ಸಮಯ’-'ಎಸ್. ಕೃಷ್ಣ ಮೂರ್ತಿ'.




#Article 110: ಭಾರತೀಯ ಸಶಸ್ತ್ರ ಪಡೆ (266 words)


ಭಾರತೀಯ ಸಶಸ್ತ್ರ ಪಡೆ ಭಾರತದ ಗಣರಾಜ್ಯದ ಮಿಲಿಟರಿ ಪಡೆಗಳಾಗಿವೆ. ಇದು ಮೂರುವೃತ್ತಿಪರ ಸಮವಸ್ತ್ರ ಸೇವೆಗಳನ್ನು ಒಳಗೊಂಡಿದೆ: ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ. ಹೆಚ್ಚುವರಿಯಾಗಿ, ಭಾರತೀಯ ಸಶಸ್ತ್ರ ಪಡೆಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಅರೆಸೈನಿಕ ಸಂಸ್ಥೆಗಳು (ಅಸ್ಸಾಂ ರೈಫಲ್ಸ್, ಮತ್ತು ವಿಶೇಷ ಗಡಿನಾಡು ಪಡೆ) ಮತ್ತು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಮತ್ತು ವಿವಿಧ ಅಂತರ್-ಸೇವಾ ಆಜ್ಞೆಗಳು ಮತ್ತು ಸಂಸ್ಥೆಗಳು ಬೆಂಬಲಿಸುತ್ತವೆ. ಸಂಯೋಜಿತ ರಕ್ಷಣಾ ಸಿಬ್ಬಂದಿ. ಭಾರತದ ರಾಷ್ಟ್ರಪತಿಗಳು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್. ಭಾರತೀಯ ಸಶಸ್ತ್ರ ಪಡೆಗಳು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ (ಎಂಒಡಿ) ನಿರ್ವಹಣೆಯಲ್ಲಿದೆ. ೧.೪ ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಸಿಬ್ಬಂದಿಯೊಂದಿಗೆ, ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯವನ್ನು ಹೊಂದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಅನ್ನು ಸಹ ಹೊಂದಿದೆ. ೨೦೧೫ರ ಕ್ರೆಡಿಟ್ ಸ್ಯೂಸ್ ವರದಿಯ ಪ್ರಕಾರ, ಭಾರತೀಯ ಸಶಸ್ತ್ರ ಪಡೆ ವಿಶ್ವದ ಐದನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ.

ಹಲವಾರು ಸಹಸ್ರಮಾನಗಳಷ್ಟು ಹಳೆಯದಾದ ಮಿಲಿಟರಿ ಇತಿಹಾಸವನ್ನು ಭಾರತ ಹೊಂದಿದೆ. ಸೈನ್ಯದ ಮೊದಲ ಉಲ್ಲೇಖವು ವೇದಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿ ಕಂಡುಬರುತ್ತದೆ. ಬಿಲ್ಲುಗಾರಿಕೆ ಕುರಿತಾದ ಶಾಸ್ತ್ರೀಯ ಭಾರತೀಯ ಪಠ್ಯಗಳನ್ನು ಮತ್ತು ಸಾಮಾನ್ಯವಾಗಿ ಸಮರ ಕಲೆಗಳನ್ನು ಧನುರ್ವೇದ ಎಂದು ಕರೆಯಲಾಗುತ್ತದೆ.

ಭಾರತೀಯ ಸಶಸ್ತ್ರ ಪಡೆ ಮೂರು ಮುಖ್ಯ ಅಂಗಗಳಿವೆ:

ಇವುಗಳೊಂದಿಗೆ ಭಾರತೀಯ ಸೈನ್ಯದ ಅಂಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅಂಗಗಳು ಸಹ ಸೇರಿವೆ:

ಇತ್ತೀಚೆಗೆ (ಸಪ್ಟಂಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅಂಗವೆಂದರೆ 

ಭಾರತೀಯ ಸೇನೆಯ ವತಿಯಿಂದ ಕೊಡಲ್ಪಡುವ ಅತ್ಯುಚ್ಚ ಪ್ರಶಸ್ತಿ ಪರಮ ವೀರ ಚಕ್ರ.

ರಕ್ಷಣಾ ಸಚಿವಾಲಯವು Rs.3,000 ಕೋಟಿ ಮೊತ್ತದ ಸೇನಾ ಸಲಕರಣೆಗಳಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ.
ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಸುವುದು. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರುವ ಎಆರ್‌ವಿಗಳನ್ನು ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್‌ ಲಿಮಿಟೆಡ್ ತಯಾರಿಸುತ್ತದೆ. ಸಾಮರ್ಥ್ಯ* 20 ಟನ್ ಎಳೆಯುವ ಸಾಮರ್ಥ್ಯ* 8 ಟನ್ ಭಾರ ಎತ್ತುವ ಸಾಮರ್ಥ್ಯ; ಕ್ಷಿಪಣಿಯ ವಿಶೇಷತೆಗಳು;* ಈ ಕ್ಷಿಪಣಿಯ ಗರಿಷ್ಠ ವೇಗ-3,700 ಕಿ.ಮೀ.  ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ; * 290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ ಹೋದಿದೆ;* 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವುದು.




#Article 111: ಭಾರತೀಯ ವಾಯುಸೇನೆ (211 words)


ಭಾರತೀಯ ವಾಯುಸೇನೆ ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ಇದನ್ನು ಸ್ಥಾಪಿಸಿದ್ದು ಅಕ್ಟೋಬರ್ ೮, ೧೯೩೨ ರಂದು.

೧೯೩೨ ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ. 

ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್‍ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇಂದ್ರ ಸಿಂಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿಂಗ್. ೧೯೩೩ ರಲ್ಲಿ ಸೇರಿದ ಈ ಐವರಲ್ಲಿ ಭೂಪೇಂದ್ರ ಸಿಂಗ್ ಮತ್ತು ಅಮರ್ಜೀತ್ ಸಿಂಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಎ ಬಿ ಅವನ್ ಭಾರತದ ವಿಂಗಡಣೆಯ ನಂತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮುಂದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು. 

ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್‍ಗಳು ವಾಯುಸೇನೆಯನ್ನು ಸೇರಿದರು.

ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ೨ ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು.

ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿಂದ ಸಹಾಯ ಪಡೆದ ಪಠಾಣರ ದಳವೊಂದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿಂಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸಂಬರ್ ೩೧, ೧೯೪೮ ರಲ್ಲಿ ಈ ಯುದ್ಧ ಕೊನೆಗೊಂಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸಂದರ್ಭ ಈ ಯುದ್ಧದಲ್ಲಿ ಉಂಟಾಗಲಿಲ್ಲ.

ಜೂನ್ ೩೦, ೧೯೬೦ ರಲ್ಲಿ ಕಾಂಗೋ ದೇಶದ ಮೇಲಿನ ಬೆಲ್ಜಿಯಮ್ ನ ಆಡಳಿತ ಹಠಾತ್ತಾಗಿ ಕೊನೆಗೊಂಡಿತು. ಆಗ ಅಲ್ಲಿ ಶಾಂತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಈ ಕಾಲದಲ್ಲಿ ಉಪಯೋಗಿತವಾಯಿತು.

ಗಲಿವೆ




#Article 112: ರಾಮಕೃಷ್ಣ ಪರಮಹಂಸ (8127 words)


ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ ೧೮, ೧೮೩೬ - ಆಗಸ್ಟ್ ೧೬, ೧೮೮೬) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು ಗಧಾದರ. ನಮನ 

ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.

ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು ಅವಿದ್ಯಾಮಾಯೆ ಮತ್ತು ವಿದ್ಯಾಮಾಯೆ ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. ಅವಿದ್ಯಾಮಾಯೆ ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು. 

ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ ಏಕಮ್ ಸದ್ವಿಪ್ರಾಃ ಬಹುಧಾ ವದಂತಿ (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್ ಧರ್ಮ, ಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತಂತ್ರ ಮಾರ್ಗಗಳು). 

ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ:

ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು.
ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ,  ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು. 

ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು.

ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ.

ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು.  ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು.

ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು. 

ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು. 

ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು. 

ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು.

ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು. 

ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು.

ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು. 

ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು. 

ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು. 

ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ.

ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ ಎಂದರು. ಇದನ್ನು ಕೇಳಿ ದುರ್ಗಾದಾಸನು ನೋಡೋಣ, ಹೇಗೆ ಮಾಡುವೆಯೊ ಎಂದನು. 

ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ? ಎಂದು ಕೇಳಿದಳು. ದುರ್ಗಾದಾಸನು, ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ ಅಣ್ಣ, ಬರುತ್ತೀನಿ ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು. 

ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು? ಎಂದು ಕೇಳಿದನು. ಶ್ರೀರಾಮಕೃಷ್ಣರು, ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು. 

ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು

ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು. 

ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ.

ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ ಎಂದರು. ಹೃದಯನು, ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು.

ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು  ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು.

ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು.

ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ. ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ. 

ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. 

ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು. 

ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ? ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು.

ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು.

ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು. 

ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ ದೇವರೂ ಕೂಡ ನಿಯಮವನ್ನು ಮೀರಲಾರ ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ? ಎಂದು ಕೇಳಿದನು. ಶ್ರೀರಾಮಕೃಷ್ಣರು, ಅವನ ಇಚ್ಛೆಯಾದರೆ ಬಿಡದೆ ಏನು? ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, ನೋಡು ದೇವರಿಗೆ ಯಾವುದು ಅಸಾಧ್ಯ? ಎಂದರು. ಮಥುರನು, ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ! ಎಂದು ತೆಪ್ಪಗಾದನು. 

ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ? ಎಂದರು. 

ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು. 

ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ. 

ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು. 

ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು. 

ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ.

ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ.

ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ.

ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು.

ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು. 

ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು. 

ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು. 

ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು.

ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು.

ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು.

ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು. 

ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು. 

ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ.

ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು. 

ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ

ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು. 

ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು. 

ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು.

ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು. 

ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು. 

ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು  ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು.  ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು. 

ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ ಎನ್ನುತ್ತಿದ್ದರು. 

ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು ಎಂದರು.

ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು ಎಂದರು. 

ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು. 

ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು.

ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು. 

ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು.

ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ ! ಎನ್ನುತ್ತಿದ್ದರು.

ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು. 

ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು
ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ,  ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು. 

ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು.

ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ.

ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು.  ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು.

ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು. 

ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು. 

ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು. 

ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು.

ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು. 

ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು.

ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು. 

ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು. 

ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು. 

ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ.

ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ ಎಂದರು. ಇದನ್ನು ಕೇಳಿ ದುರ್ಗಾದಾಸನು ನೋಡೋಣ, ಹೇಗೆ ಮಾಡುವೆಯೊ ಎಂದನು. 

ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ? ಎಂದು ಕೇಳಿದಳು. ದುರ್ಗಾದಾಸನು, ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ ಅಣ್ಣ, ಬರುತ್ತೀನಿ ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು. 

ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು? ಎಂದು ಕೇಳಿದನು. ಶ್ರೀರಾಮಕೃಷ್ಣರು, ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು. 

ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು

ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು. 

ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ.

ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ ಎಂದರು. ಹೃದಯನು, ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು.

ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು  ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು.

ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು.

ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ. ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ. 

ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. 

ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು. 

ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ? ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು.

ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು.

ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು. 

ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ ದೇವರೂ ಕೂಡ ನಿಯಮವನ್ನು ಮೀರಲಾರ ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ? ಎಂದು ಕೇಳಿದನು. ಶ್ರೀರಾಮಕೃಷ್ಣರು, ಅವನ ಇಚ್ಛೆಯಾದರೆ ಬಿಡದೆ ಏನು? ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, ನೋಡು ದೇವರಿಗೆ ಯಾವುದು ಅಸಾಧ್ಯ? ಎಂದರು. ಮಥುರನು, ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ! ಎಂದು ತೆಪ್ಪಗಾದನು. 

ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ? ಎಂದರು. 

ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು. 

ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ. 

ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು. 

ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು. 

ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ.

ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ.

ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ.

ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು.

ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು. 

ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು. 

ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು. 

ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು.

ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು.

ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು.

ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು. 

ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು. 

ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ.

ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು. 

ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ

ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು. 

ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು. 

ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು.

ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು.

ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು. 

ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು. 

ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು  ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು.  ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು. 

ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ ಎನ್ನುತ್ತಿದ್ದರು. 

ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು ಎಂದರು.

ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು ಎಂದರು. 

ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು. 

ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು.

ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು. 

ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು.

ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ ! ಎನ್ನುತ್ತಿದ್ದರು.

ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು. 

ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು

ರಾಮಕೃಷ್ಣ ಮಿಷನ್

ಶಾರದಾದೇವಿ

ವಿವೇಕಾನಂದ




#Article 113: ಜಿ.ವಿ.ಅಯ್ಯರ್ (237 words)


ಕನ್ನಡ ಚಿತ್ರರ೦ಗದ ಬೀಷ್ಮ ಎಂಬ ಪ್ರಖ್ಯಾತಿಯ ಜಿ ವಿ ಅಯ್ಯರ್ (ಸೆಪ್ಟೆಂಬರ್ ೩, ೧೯೧೭ - ಡಿಸೆಂಬರ್ ೨೧, ೨೦೦೩) ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು.

ಜಿ.ವಿ.ಅಯ್ಯರ್ ಅವರ ಪೂರ್ಣ ಹೆಸರು ಗಣಪತಿ ವೆಂಕಟರಮಣ ಅಯ್ಯರ್.  ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಹುಟ್ಟಿದ ಜಿ.ವಿ.ಅಯ್ಯರ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಸೂರಿನ ಸದಾರಮೆ ನಾಟಕ ಕಂಪನಿಯಲ್ಲಿ, ಹಾಗೂ ಗುಬ್ಬಿ ನಾಟಕ ಕಂಪನಿಯಲ್ಲಿ ಪರಿಚಾರಕರಾಗಿ, ಪೋಸ್ಟರ್ ಬರೆಯುವವರಾಗಿ ಕೆಲಸ ಮಾಡಿದರು.  ನಂತರ ಅವಕಾಶಗಳನ್ನರಸಿ ಪುಣೆಗೆ ಹೋದ ಅಯ್ಯರ್, ಹೋಟೆಲ್ ಮಾಣಿಯಾಗಿದ್ದುಕೊಂಡೇ ಚಿತ್ರರಂಗದಲ್ಲಿನ ಅವಕಾಶಗಳಿಗೆ ಪ್ರಯತ್ನಿಸಿದರು.  ಅದು ಫಲಕಾರಿಯಾಗದೇ, ಕರ್ನಾಟಕಕ್ಕೆ ಹಿಂದಿರುಗಿದರು.

  ರಾಧಾರಮಣ ಚಿತ್ರದ ಕೇಶಿದೈತ್ಯನ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

 ಬಿಡುಗಡೆಯಾದ ಬೇಡರ ಕಣ್ಣಪ್ಪ ಚಿತ್ರದ ಕೈಲಾಸನ ಪಾತ್ರದಲ್ಲಿನ ಅಭಿನಯ ಅಯ್ಯರ್ ಅವರಿಗೆ ಜನಪ್ರಿಯತೆಯನ್ನು ಒದಗಿಸಿತು. ಚಲನಚಿತ್ರಗಳಲ್ಲಿ ನಟಿಸುತ್ತಿದ್ದರೂ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.

 ತೆರೆಕಂಡ ಸೋದರಿ ಚಿತ್ರದಲ್ಲಿನ ಹಾಡುಗಳು ಮತ್ತು ಸಂಭಾಷಣೆ ಬರೆಯುವುದರೊಂದಿಗೆ ಚಲನಚಿತ್ರ ಸಾಹಿತಿಯಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು.

ಭೂದಾನ () ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾದರು.

ಕನ್ನಡದ ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿರುವಾಗ, ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು ಇವರನೊಡಗೂಡಿ ಕನ್ನಡ ಕಲಾವಿದರ ಸಂಘವನ್ನು ಸ್ಥಾಪಿಸಿ, ರಾಜ್ಯಾದ್ಯಂತ ಪ್ರವಾಸ ಮಾಡಿ ಕನ್ನಡ ಚಿತ್ರೋದ್ಯಮ ನೆಲೆ ನಿಲ್ಲಲು, ಕಲಾವಿದರು ಬದುಕಲು ಮಾರ್ಗಗಳನ್ನು ಹುಡುಕಿದರು. ಈ ಸಂಘದ ಗೆಳೆಯರೊಡನೆ ರಣಧೀರ ಕಂಠೀರವ ಚಲನಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದರು.

ಜಿ.ವಿ.ಅಯ್ಯರ್ ಪ್ರಸಿದ್ಧಿ ಪಡೆದಿರುವುದು ಚಿತ್ರ ನಿರ್ದೇಶಕರಾಗಿ. ಒಟ್ಟು ಸುಮಾರು ೬೫ ಚಿತ್ರಗಳಲ್ಲಿ ನಿರ್ದೇಶಕರಾಗಿ ಅಥವಾ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಜಿ.ವಿ.ಅಯ್ಯರ್ ೧೯೭೫ ರಿಂದ ಮುಂದಕ್ಕೆ ಬಾಕ್ಸ್ ಆಫೀಸನ್ನು ಲೆಕ್ಕಿಸದೆ ಕಲಾತ್ಮಕ ಚಿತ್ರಗಳತ್ತ ತಿರುಗಿದರು. ಸಂಸ್ಕೃತ ಭಾಷೆಯಲ್ಲಿ ಅನೇಕ ಪ್ರಸಿದ್ಧ ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ ಹಿಂದಿ ಭಾಷೆಯಲ್ಲಿಯೂ ನಿರ್ದೇಶನ ಮಾಡಿದರು.

 ಬೇಡರ ಕಣ್ಣಪ್ಪ ನಾಟಕವನ್ನೂ ನಿರ್ದೇಶಿಸಿದ್ದರು.ಇವರು ನಿರ್ದೇಶಿಸಿದ ಪ್ರಥಮ ಸಂಸ್ಕೃತ ಚಿತ್ರ ಆದಿ ಶಂಕರಾಚಾರ್ಯಭಾರತದ ಅತ್ಯುತ್ತಮ ಚಿತ್ರವೆನಿಸಿ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿದೆ.ನಮನ  

೧೯೭೫ರಲ್ಲಿ ಆಚಾರ್ಯ ಬಿರುದನ್ನು ಪಡೆದ ಅಯ್ಯರ್ ತಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡರು.ಅದರಲ್ಲಿ ಚಪ್ಪಲಿ ತೊಡುವುದನ್ನು ತ್ಯಜಿಸಿ ಮುಂದೆ ಬರಿಗಾಲಲ್ಲೇ ನಡೆದಾಡಿದರು.

ಜಿ.ವಿ.ಅಯ್ಯರ್ ಬಾಣಭಟ್ಟನ ಸಂಸ್ಕೃತ ಕೃತಿಯಾದ ಕಾದಂಬರಿಯನ್ನು ಚಿತ್ರೀಕರಿಸುವ, ಹಾಗೂ ರಾಮಾಯಣ ಮಹಾಕಾವ್ಯವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಚಿತ್ರಿಸುವ ಯೋಚನೆಯಲ್ಲಿದ್ದರು. ಈ ಕುರಿತ ಚರ್ಚೆಗಾಗಿ ಮುಂಬೈಗೆ ತೆರೆಳಿದ್ದಾಗಲೇ ೨೦೦೩ ಡಿಸೆಂಬರ್ ೨೧ರಂದು ಮೂತ್ರ ಪಿಂಡದ ಸೋಂಕಿನಿಂದ ತಮ್ಮ ೮೬ನೇ ವಯಸ್ಸಿನಲ್ಲಿ ನಿಧನರಾದರು.




#Article 114: ಭಾರತದ ಪ್ರಧಾನ ಮಂತ್ರಿ (104 words)


ಭಾರತದ ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ. ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು. 

ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪	ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು.




#Article 115: ವೀಣೆ (594 words)


ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದು ತಂತಿವಾದ್ಯವಾದ ವೀಣೆ. ಬಹಳ ಹಳೆಯ ವಾದ್ಯವಾದ ವೀಣೆಯ ವಿನ್ಯಾಸ ಅನೇಕ ಶತಮಾನಗಳಿಂದಲೂ ಬದಲಾಗುತ್ತಾ ಬಂದಿದೆ. ಸದ್ಯಕ್ಕೆ ಅತ್ಯಂತ ಜನಪ್ರಿಯ ವಿನ್ಯಾಸಕ್ಕೆ ಸರಸ್ವತಿ ವೀಣೆ ಎಂದು ಹೆಸರು. ಇದರಲ್ಲಿ ಮೂರು ತಂತಿಗಳು ಹಿತ್ತಾಳೆಯವು ಮತ್ತು ಒಂದು ಮುಖ್ಯ ತಂತಿ.  ಜೊತೆಗೆ ಮೂರು ಸಹಾಯಕ ತಂತಿಗಳು ಇವೆ. 

ಸಪ್ತ ಸ್ವರದ ಮನೆಗಳು ಮೇಣ ಕಟ್ಟುವುದರ ಮೂಲಕ ಆಯಾ ಸ್ಥಾನಗಳಲ್ಲಿ  ಕೂಡಿಸುವುದರಿಂದ ವೀಣೆ ನುಡಿಸಲು ಕಷ್ಟವಿಲ್ಲ. ಆದರೆ ಇದನ್ನು ಕಲಿಯಲು ತಾಳ್ಮೆ ಹಾಗೂ ಆಸಕ್ತಿ ಬೇಕು. ನಿಧಾನವಾಗಿ ಒಲಿಸಿಕೊಂಡು, ಆನಂದದ ಅನುಭೂತಿ ಪಡೆಯಬಹುದಾದ ವಾದ್ಯ ವೀಣೆ. ಅನೇಕ ವರ್ಷಗಳ ಪರಿಶ್ರಮದಿಂದ ಪಾಂಡಿತ್ಯ ಗಳಿಸಬಹುದು. ಒಲಿಸಿಕೊಂಡಾಗ ವೀಣೆ ನಮ್ಮ ಆತ್ಮ ಸಂಗಾತಿಯಾಗಿ, ನಮ್ಮದೇ ಮನದ ಭಾವನೆಗಳನ್ನು ವ್ಯಕ್ತಪಡಿಸತೊಡಗುತ್ತದೆ. ವೀಣೆ ಎಂದೊಡನೆ ನಮಗೆ ನೆನಪಾಗುವುದೇ ದೇವಿ ಸರಸ್ವತಿ. ಸರಸ್ವತಿ ದೇವಿಯು ಸಂಗೀತದ ಅಧಿದೇವತೆ. ಅವಳು ವೀಣಾಪಾಣಿ. ಸರಸ್ವತಿ ದೇವಿಯು ವೇದಗಳ ಅಭಿಮಾನಿ. ಬ್ರಹ್ಮ ದೇವರ, ಚತುರವದನನ ರಾಣಿ ಎಂದರೆ ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಇವಳು ಮರೆವೆಯೇ ಇಲ್ಲದ ಹಾಗೂ ಅನವರತವೂ ಪರಮಾತ್ಮನ ಸ್ತುತಿ ಮಾಡುವವಳು, ಬ್ರಹ್ಮಾಣಿ – ತತ್ವಜ್ಞಾನಿ ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.

ನಮ್ಮ ದೇಶದಲ್ಲಿ ಇರುವಷ್ಟು ಸಂಗೀತ ವಾದ್ಯಗಳು ಬೇರೆಲ್ಲೂ ಇಲ್ಲವೆನ್ನಬಹುದೇನೋ..! ಪ್ರತಿಯೊಂದು ವಾದ್ಯವೂ ತನ್ನದೇ ಆದ ಒಂದು ಆಕಾರ, ರಚನೆ ಮತ್ತು ಧ್ವನಿಯನ್ನು ಹೊಂದಿದೆ ಮತ್ತು ವಿಶಿಷ್ಟವಾಗಿದೆ.  ಶಾಸ್ತ್ರದಲ್ಲಿ ಈ ವಾದ್ಯಗಳನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ.  ಅವುಗಳು :

ವೀಣೆ ಈಗಿರುವ ಸ್ವರೂಪಕ್ಕೆ ಬರುವ ಮೊದಲು ಅನೇಕ ಬದಲಾವಣೆಗಳನ್ನು ಹೊಂದಿದ್ದಾಗಿರಬಹುದು.  ಕಾಳಿದಾಸನ ’ಶ್ಯಾಮಲಾ ದಂಡಕ’ದಲ್ಲಿ  ಮಾಣಿಕ್ಯವೀಣಾಂ ಉಪಲಾಲಯಂತೀಂ  ಎನ್ನುತ್ತಾ ಶ್ಯಾಮಲೆಯಾದ ಶಾರದಾಂಬೆಯು ಮಾಣಿಕ್ಯ ಮಯವಾದ ವೀಣೆಯನ್ನು ನುಡಿಸುತ್ತಿದ್ದಳು ಎಂದಿದ್ದಾರೆ.  ಹಾಗೇ ಪ್ರತಿಜ್ಞಾ ಯೌಗಂಧರಾಯಣ ನಾಟಕದಲ್ಲಿ ರಾಜಾ ಉದಯನು ಘೋಷವತೀ ಎಂಬ ವೀಣೆಯನ್ನು ನುಡಿಸಿದ್ದನೆಂದು ಕೂಡ ಉಲ್ಲೇಖವಿದೆ.  ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ನಾದಜ್ಯೋತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರಿಗೆ ಗುರು ಚಿದಂಬರನಾಥ ಯೋಗಿಯ ಅನುಗ್ರಹದಿಂದ ಕಾಶಿಕ್ಷೇತ್ರದಲ್ಲಿ ಗಂಗೆಯಲ್ಲಿ ದೊರೆತ ವೀಣೆಯ ಮೇಲೆ ದೇವನಾಗರಿಯಲ್ಲಿ ರಾಮ ಎಂದು ಕೆತ್ತಲ್ಪಟ್ಟಿದೆಯಂತೆ.  ಹೀಗೆ ವೀಣೆಯ ಇತಿಹಾಸ ತುಂಬಾ ಹಿಂದಿನದೆಂಬ ಮಾತು ನಮಗೆ ಅರ್ಥವಾಗುತ್ತದೆ.

ಐತರೇಯೋಪನಿಷತ್ತಿನಲ್ಲಿ ನಮ್ಮ ದೇಹವನ್ನು ವೀಣೆಯೆಂದು ಉಲ್ಲೇಖಿಸಿದ್ದಾರೆ....

ಅಥ ಖಲ್ವಿಯಂ ದೈವೀವೀಣಾ ಭವತಿ |  ತದನುಕೃತಿರಸೌ ಮಾನುಷೀ ವೀಣಾ ಭವತಿ |   
ಯಥಾಸ್ಯಾ: ಶಿರ ಏವಮಮುಷ್ಯಾ: ಶಿರ: |
ಯಥಾಸ್ಯಾ ಉದರಮೇವಮಮುಷ್ಯಾ ಅಂಭಣಮ್ | ಯಥಾಸ್ಯೈ ಜಿಹ್ವಾ - ಏವಮಮುಷ್ಯೈ ವಾದನಮ್ |
ಯಥಾಸ್ಯಾಸ್ತಂತ್ರಯ ಏವಮಮುಷ್ಯಾ ಅಂಗುಲಯ: | ಯಥಾಸ್ಯಾ: ಸ್ವರಾ ಏವಮಮುಷ್ಯಾ: ಸ್ವರಾ: ||

ಈ ದೇಹವೊಂದು ದೈವೀವೀಣೆ. ಮನುಷ್ಯರು ನಿರ್ಮಿಸಿದ ಮರದ ವೀಣೆ ದೇವರು ನಿರ್ಮಿಸಿದ ಈ ದೇಹವೀಣೆಯದೇ ಅನುಕರಣೆ.  ದೇಹಕ್ಕೆ ತಲೆಯಿದ್ದಂತೆ ಮರದ ವೀಣೆಗೆ ಪುಟ್ಟ ಬುರುಡೆ ಇದೆ, ದೇಹದ ಉದರ ಹಾಗೂ ಪೀಠವಿದ್ದಂತೆ ವೀಣೆಗೆ ಕೊಡ ಅಥವಾ ದೊಡ್ಡ ಬುರುಡೆಯಿದೆ.  ಬೆನ್ನುಹುರಿಯು ಉದ್ದಕ್ಕೆ ದೇಹದಲ್ಲಿ  ಪೀಠದಿಂದ ಕಂಠದವರೆಗೆ ಪಸರಿಸಿ ಪೀಠವನ್ನು ಮತ್ತು ದೇಹದ ಕೆಳಗಿನ ಭಾಗದ ಸಂಪರ್ಕವನ್ನು ತಲೆಗೆ ಮುಟ್ಟಿಸಿದೆಯೋ ಹಾಗೆ ವೀಣೆಯಲ್ಲಿ ಮರದ ದೋಣಿ ಕೊಡವನ್ನು ಪುಟ್ಟ ಬುರುಡೆಗೆ ಸೇರಿಸಿದೆ.  ಬೆನ್ನುಹುರಿಯಲ್ಲಿರುವಂತೆಯೇ ಈ ದೋಣಿಯ ಮೇಲೆ ಮೇಣವನ್ನು ಕಟ್ಟಿ ಅವುಗಳ ಮೇಲೆ ೨೪ ಎರಕದ ಮೆಟ್ಟಿಲುಗಳನ್ನು ಸ್ವರಸ್ಥಾನಗಳಾಗಿ ಜೋಡಿಸಿರುತ್ತಾರೆ.  ದೇಹದ ವೀಣೆಗೆ ನಾಲಿಗೆ ಹೇಗೆ ಸ್ವರ / ನಾದವನ್ನು ಉತ್ಪತ್ತಿ ಮಾಡುವುದೋ ಹಾಗೆ ವೀಣೆಯ ಮೇಲೆ ವಾದಕನ ಬೆರಳುಗಳು ನಾದವನ್ನು ಸೃಷ್ಟಿಸುತ್ತವೆ. ದೇಹಕ್ಕೆ ನರಗಳೇ ತಂತಿಗಳು.  ನಾದ ಮೈತುಂಬಿದಾಗ, ನರ ನರವೂ ನಾದದ ಅಲೆಯಲ್ಲಿ ತೇಲಿಹೋಗುವುದು. ಹಾಗೇ ವೀಣೆಯ ತಂತಿಗಳೂ, ವಾದಕನ ಬೆರಳುಗಳು ತಂತಿಯ ಮೇಲೆ ಆಟವಾಡಿದಾಗ, ಅಲೆ ಅಲೆಯಾಗಿ ನಾದ ವೀಣೆಯ ಕೊಡದಿಂದ ಚಿಮ್ಮುತ್ತದೆ.  ದೇಹವೆಂಬ ದೈವೀವೀಣೆ ದೇವರ ಗುಣಗಾನಕ್ಕೇ ಮೀಸಲಾದ ವೀಣೆ.  ಈ ದೇಹ ವೀಣೆಗೆ ನಮ್ಮ ಕೈಗಳೇ ತಾಳವಾದ್ಯ. ಕೈ ತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆಯಿಂದ ಭಗವಂತನ ಸ್ಮರಣೆಯನ್ನು ನುಡಿಸಬೇಕು.
 

ಸರಸ್ವತಿ ದೇವಿಯನ್ನು ವೀಣಾಪಾಣಿ ವಿಶ್ವ ಕಲ್ಯಾಣಿ, ಗಾಯನ, ನರ್ತನ ನಂದ ಪ್ರದಾಯಿನಿ ಎನ್ನುತ್ತಾ,  ಅವಳದು ಎಂತಹ ಗಾಯನವೆಂದರೆ ಮೌನದ ಗಾಯನ, ಎಂತಹ ನರ್ತನವೆಂದರೆ ಕಾಣದ ನರ್ತನ, ಧ್ಯಾನದ ಕಿವಿ ಕಣ್ಗಳಿಗೆ ಅಮೃತದ ಸ್ವಾದನ ಎನ್ನುತ್ತಾರೆ ಡಿವಿಜಿಯವರು.  ಸಂಗೀತ ಶಾಸ್ತ್ರದಲ್ಲಿ ಬರುವ ಆಹತ – ಅನಾಹತದ ನೆನಪು ಮಾಡಿಕೊಡುತ್ತದೆ - ಆಹತವೆಂದರೆ ಕೇಳಿಸಿಕೊಳ್ಳುವ ಶಬ್ದ, ಅನಾಹತವೆಂದರೆ ಕೇಳಲು ಸಾಧ್ಯವಿಲ್ಲದಂತಹ ಶಬ್ದ.  ಇಂತಹ ಮೌನದ ಗಾಯನ, ಕಾಣದ ನರ್ತನವನ್ನು ಸರಸ್ವತಿ ದೇವಿ ಪರಮಾತ್ಮ ಚನ್ನಕೇಶವ ಸ್ವಾಮಿಗೆ ಅರ್ಪಿಸುತ್ತಾಳೆ.  ಯಾರು ಸದಾ ಸರಸ್ವತಿ ದೇವಿಯ ಧ್ಯಾನದಲ್ಲಿ ಇರುವರೋ ಅವರಿಗೆ ಈ ಗಾಯನ ಮತ್ತು ನರ್ತನ ಅಮೃತದ ಸ್ವಾದನದಂತೆ ಇರುತ್ತದೆ ಎಂದು ಸುಂದರವಾಗಿ ವರ್ಣಿಸಿದ್ದಾರೆ ಡಿವಿಜಿಯವರು ತಮ್ಮ ಅಂತಃಪುರ ಗೀತೆ  ಸಂಕಲನದಲ್ಲಿರುವ ವೀಣಾಪಾಣಿ ವಿಶ್ವ ಕಲ್ಯಾಣಿ ಗಾಯನ ನರ್ತನ ನಂದ ಪ್ರದಾಯಿನಿ.. ಎಂಬ ರಚನೆಯಲ್ಲಿ. 

ಶೃಂಗಾರ ರಸದ ಪ್ರಚೋದನೆಗೆ ಕೂಡ ವೀಣೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸಿದ್ದಾರೆ ಕವಿ ಶ್ರೀ ಸಾ ಶಿ ಮರುಳಯ್ಯ.  ಅವರು ತಮ್ಮ  ಶ್ರುತಿ ಸುಖ್ಹ ನಿನದೆ ಕಲರವ ವರದೇ.... ಓ ಗೆಳತಿ.. ಘೋಷವತಿ... || ಎಂಬ ರಚನೆಯಲ್ಲಿ ಉದಯನ ನುಡಿಸುತ್ತಿದ್ದನೆನ್ನಲಾದ ಘೋಷವತಿ ಎಂಬ ವೀಣೆಯನ್ನು ಕುರಿತು ಪ್ರಸ್ತಾಪಿಸಿದ್ದಾರೆ.

ಉದಯನ ಹೃದಯ ಮೋದ ತರಂಗಿಣಿ | ವಾಸವದತ್ತಾ ಪ್ರಣಯ ಪ್ರಚೋದಿನಿ |
ಕುಂಜರ ಭಂಜನಿ ಕುಮುದ ನಿರಂಜನಿ | ಮಂಗಳ ಪತಗಳ ಮಧುರ ಸುಭಾಷಿಣಿ ||
ಚಿಗುರಿನ ಬೆರಳಲಿ ತಂತಿಯ ಮೀಟಲು | ಷಡಜದ ಸವಿದನಿ ಜಿನುಗಿಸುವೆ |
ಪಂಚಮದಂಚಿಗೆ ನಾದದ ಬ್ರಹ್ಮಕೆ | ವೀಣಾಮಣಿ ನೀ ಕುಣಿಯಿಸುವೆ ||
ಪ್ರದ್ಯೋತ್ತೋನ್ನತ ಪ್ರಥಮ ಪ್ರಭಾತಕೆ | ಧೃತಗತಿಯಲಿ ನೀ ಸಂಚಲಿಸಿ |
ರಾಗಿಣಿ ಭಾಮಿನಿ ಪ್ರೇಮೋನ್ಮಾದಿನಿ | ಮಧುಕರ ಮಿಲನಕೆ ನೆರವಾಗೇ ||  

ನುಡಿಸುವ ಉದಯನನ ಹೃದಯದ ತರಂಗಿಣಿ, ರಾಗಿಣಿ, ಭಾಮಿನಿ, ಪ್ರೇಮೋನ್ಮಾದಿನಿ ಎಂದೆಲ್ಲಾ ವರ್ಣಿಸುತ್ತಾ ಚಿಗುರಿನ ಬೆರಳುಗಳು ತಂತಿಯ ಮೀಟಿದಾಗ ಷಡ್ಜದ ಸವಿದನಿಯಿಂದ ಪಂಚಮದ ಪ್ರೇಮನಾದವನ್ನು ಹೊರಡಿಸುತ್ತಾ,  ಹೃದಯದಲ್ಲಿ ಸುಖದ ಕಲ್ಪನೆಯ ತರಂಗಗಳನ್ನು ಮೀಟಿ ಎಚ್ಚರಿಸುತ್ತಾ ಮಧುಕರ ಮಿಲನಕ್ಕೆ ನೆರವಾಗೇ ಎಂದು ನುಡಿದಿದ್ದಾರೆ. ವೀಣೆಗೆ ಸಂಬಂಧಪಟ್ಟ ಇತರ ಕೆಲವು ವಾದ್ಯಗಳೆಂದರೆ;




#Article 116: ಸಂತೂರ್ (180 words)


ಸಂತೂರ್ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲಿ ಒಂದು. 

ಸ೦ತೂರ್ ಎ೦ಬ ಪದ ಪರ್ಷಿಯನ್ ಭಾಷೆಯಿ೦ದ ಬ೦ದದ್ದು. ಸ೦ಸ್ಕೃತದಲ್ಲಿ ಈ ವಾದ್ಯದ ಹೆಸರು ಶತತ೦ತ್ರಿ ವೀಣೆ - ನೂರು ತ೦ತಿಗಳ ವೀಣೆ ಎ೦ದರ್ಥ. ಏಷ್ಯಾ ಮತ್ತು ಯೂರೋಪ್ ಖ೦ಡಗಳ ಯಾತ್ರಿಕ ಸ೦ಗೀತಗಾರರಿ೦ದ ಹರಡಲ್ಪಟ್ಟದ್ದರಿ೦ದ ಸ೦ತೂರ್ ವಿವಿಧ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಕ೦ಡುಬರುತ್ತದೆ. ಇರಾನ್, ಇರಾಕ್, ಮತ್ತು ಟರ್ಕಿ ದೇಶಗಳಲ್ಲಿ ೭೨ ತ೦ತಿಗಳನ್ನು ಹೊ೦ದಿರುವ ಸ೦ತೂರ್ ಎ೦ದೇ ಹೆಸರುಳ್ಳ ವಾದ್ಯವು೦ಟು. ಚೀನಾ ದೇಶದಲ್ಲಿ ಯಾ೦ಗ್-ಕಿನ್ ಎಂದು ಕರೆಯಲ್ಪಟ್ಟು ೪೫ ತ೦ತಿಗಳನ್ನು ಹೊ೦ದಿದ್ದರೆ, ಇದೇ ವಾದ್ಯದ ಇನ್ನೊ೦ದು ರೂಪ ಗ್ರೀಸ್ ನಲ್ಲಿ ಸ೦ತೂರಿ ಎ೦ಬ ಹೆಸರನ್ನು ಹೊಂದಿದೆ. ಹ೦ಗೆರಿ ಮತ್ತು ರೊಮೇನಿಯಾಗಳ ಸಿ೦ಬಲಾನ್ ಸಹ ಇದೇ ರೀತಿಯ ವಾದ್ಯ. 

ಭಾರತದಲ್ಲಿ ಕಾಶ್ಮೀರದ ಜಾನಪದ ವಾದ್ಯವಾಗಿದ್ದ ಸ೦ತೂರನ್ನು ಶಾಸ್ತ್ರೀಯ ಸ೦ಗೀತಕ್ಕೆ ಸೂಕ್ತವಾದ ವಾದ್ಯವಾಗಿ ಮಾರ್ಪಾಟುಗೊಳಿಸಿದವರಲ್ಲಿ ಪ್ರಮುಖರು ಪ೦ಡಿತ್ ಶಿವಕುಮಾರ್ ಶರ್ಮಾ. ಆಧುನಿಕ ಭಾರತೀಯ ಸ೦ತೂರ್ ಸಾಮಾನ್ಯವಾಗಿ ೮೭ ತ೦ತಿಗಳನ್ನು ಹೊ೦ದಿರುತ್ತದೆ.

ಕಾಶ್ಮೀರದ ಜಾನಪದ ಸ೦ತೂರ್ ಮೊದಲಿಗೆ ೧೦೦ ತ೦ತಿಗಳನ್ನು ಹೊ೦ದಿದ್ದು ಮುಖ್ಯವಾಗಿ ಸೂಫಿ ಸ೦ತರ ಸ೦ಗೀತಕ್ಕೆ ಉಪಯೋಗಿಸಲ್ಪಡುತ್ತಿತ್ತು. ಶಿವಕುಮಾರ್ ಶರ್ಮಾ ರವರ ತ೦ದೆ ಪ೦ಡಿತ್ ಉಮಾ ದತ್ ಶರ್ಮಾ ಶಾಸ್ತ್ರೀಯ ಸ೦ಗೀತಕ್ಕೆ ಇದರ ಸೂಕ್ತತೆಯನ್ನು ಮನಗ೦ಡರು. ನಂತರ ಶಿವಕುಮಾರ್ ಶರ್ಮಾ ಈ ವಾದ್ಯದ ರಚನೆಯಲ್ಲಿ ಸರಿಯಾದ ಬದಲಾವಣೆಗಳನ್ನು ತ೦ದರು. 

ಭಾರತೀಯ ಶಾಸ್ತ್ರೀಯ ಸ೦ಗೀತಕ್ಕೆ ಅತ್ಯಗತ್ಯವಾದ ಗಮಕಗಳನ್ನು ನುಡಿಸುವ ಸಾಮರ್ಥ್ಯ ಮೊದಲು ಈ ವಾದ್ಯದಲ್ಲಿ ಇರಲಿಲ್ಲ. ವಾದ್ಯದ ರಚನೆಯೊ೦ದಿಗೆ ಅದನ್ನು ನುಡಿಸುವ ತ೦ತ್ರಕ್ಕೂ ಸೂಕ್ತವಾದ ಬದಲಾವಣೆಗಳನ್ನು ಪರಿಚಯಿಸಿದ ಶಿವಕುಮಾರ್ ಶರ್ಮಾ ಗಮಕಗಳನ್ನು ನುಡಿಸುವ ಸಾಮರ್ಥ್ಯವನ್ನು ಈ ವಾದ್ಯಕ್ಕೆ ತ೦ದರು. ಇದನ್ನು ನುಡಿಸುವಾಗ ಉಪಯೋಗಿಸುವ ಕಲಮ್ (ಮರದ ಸಣ್ಣ ಸುತ್ತಿಗೆಯ೦ಥ ಉಪಕರಣ) ಅನ್ನು ತ೦ತಿಗಳ ಮೇಲೆ ಸರಾಗವಾಗಿ ಸಾಗಿಸುವ ಮೂಲಕ ಗಮಕಗಳನ್ನು ನುಡಿಸಬಹುದು. 

ಸ೦ತೂರ್ ಶಾಸ್ತ್ರೀಯ ಕಛೇರಿಯಲ್ಲಿ ಮೊದಲ ಬಾರಿಗೆ ೧೯೫೫ ರಲ್ಲಿ ಉಪಯೋಗಿತವಾಯಿತು. 




#Article 117: ಭಾರತದ ರಾಷ್ಟ್ರಪತಿ (207 words)


ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ  ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ. ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ.

ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು.  ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

ಭಾರತೀಯ ಸಂವಿಧಾನದ ೫೨ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ಅಧ್ಯಕ್ಷರು:

ಅಧಿಕೃತವಾಗಿ ಕಾರ್ಯಾಂಗದ ಮುಖ್ಯಸ್ಥರಾದರೂ, ಭಾರತದ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಅಧಿಕಾರವುಳ್ಳ ಸ್ಥಾನ ಪ್ರಧಾನಮಂತ್ರಿಗಳದ್ದು (ಸಂವಿಧಾನದ ೭೪ ನೆಯ ಪರಿಚ್ಛೇದದಂತೆ). ಭಾರತದ ಸಂವಿಧಾನದ ೫೩ ನೆಯ ಪರಿಚ್ಛೇದದಂತೆ ಸಂಸತ್ತಿಗೆ ಅಧ್ಯಕ್ಷರ ಅಧಿಕಾರವನ್ನು ಬೇರೊಂದು ಪದವಿಯಲ್ಲಿರುವ ವ್ಯಕ್ತಿಗೆ ವರ್ಗಾಯಿಸುವ ಶಕ್ತಿಯುಂಟು.

ಸಾಂಪ್ರದಾಯಿಕವಾಗಿ ಅಧ್ಯಕ್ಷರ ಕೆಲಸಗಳಲ್ಲಿ ಒಂದು ಪ್ರಧಾನಮಂತ್ರಿ ಮತ್ತು ಇತರ ಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಡುವುದು.

ಸಂವಿಧಾನದ ೬೧ ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು.




#Article 118: ಶ್ರೀನಿವಾಸ ರಾಮಾನುಜನ್ (895 words)


ಶ್ರೀನಿವಾಸ ರಾಮಾನುಜನ ಅಯ್ಯ೦ಗಾರ್ ರಾಮಾನುಜನ್ (ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ವಿಶ್ವದ ಶ್ರೇಷ್ಠ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ.  “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ  ವಿಖ್ಯಾತ ನುಡಿ.  ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ’ ಅಪೂರ್ವ ಸಾಮರ್ಥ್ಯವಿತ್ತು.  

ಜೇಮ್ಸ್ ಆರ್. ನ್ಯೂಮನರ ದಿ ವರ್ಲ್ಡ್ ಆಫ್ ಮ್ಯಾಥಮೆಟಿಕ್ಸ್ ಎಂಬ ನಾಲ್ಕು ಸಂಪುಟಗಳ ಚಿರಸ್ಥಾಯಿ ಉದ್ಗ್ರಂಥದಲ್ಲಿ ರಾಮಾನುಜನ್ನರ ಕುರಿತು ಈ ಉಲ್ಲೇಖವಿದೆ.  ಶುದ್ಧ ಗಣಿತದ ಬತ್ತಳಿಕೆಯಲ್ಲಿ ವಿಶ್ಲೇಷಣಾ ಆಯುಧಗಳ ಭಾರೀ ಸಂಗ್ರಹವಿದೆ ಮತ್ತು ಎಲ್ಲ ಸರಳತೆ ಗತಕಾಲದ ವಿಚಾರವೆಂದು ತಿಳಿಯುತ್ತಿದ್ದ ಆ ದಿನಗಳಲ್ಲಿ “ಈ ಎಲ್ಲ ಪರಿಕರಗಳ ನೆರವಿಲ್ಲದೆಯೇ ಹೊಸ ವಿಚಾರಗಳನ್ನು ಮಂಡಿಸಬಲ್ಲ ಒಬ್ಬ ಜೀನಿಯಸ್ ಉದಯಿಸಿದರು”.  ನ್ಯೂಮನರು ಮುಂದುವರಿಸಿ, “ಶ್ರೀನಿವಾಸ ರಾಮಾನುಜನ್ನರ ಜೀವನ ಒಂದು ಯುಗಾರಂಭವನ್ನು ಸೂಚಿಸುತ್ತದೆ.  ಭಾರತದಲ್ಲಿ ವಿವಿಧ ಕಾಲ ಘಟ್ಟಗಳಲ್ಲಿ   ಉನ್ನತ ಪ್ರತಿಭೆಯ ಗಣಿತಜ್ಞರಿದ್ದರು.  ಕಾಲಾನುಕ್ರಮದಲ್ಲಿ ಅಂಥವರನ್ನು ಕೊನೆಯ ಗ್ರೀಕ್ ಕಾಲದವರೆಗೆ ಗುರುತಿಸಬಹುದು.  ಆದರೆ ಉತ್ತುಂಗತೆಯ ನಿರಪೇಕ್ಷಮಾನದಿಂದ ಅಳೆದಾಗ ಪೌರ್ವಾತ್ಯ ಗಣಿತಜ್ಞರಲ್ಲೆಲ್ಲಾ, ರಾಮಾನುಜನ್ನರ ಜೀನಿಯಸ್ ಅತ್ಯುಚ್ಛವೆಂದೆನಿಸುತ್ತದೆ” ಎಂದು ಹೇಳಿದ್ದಾರೆ.

ಶ್ರೀನಿವಾಸ ರಾಮಾನುಜನ್ನರ ಬಗ್ಗೆ ಬರೆಯುತ್ತ ಜವಾಹರಲಾಲ್ ನೆಹರೂರವರು ತಮ್ಮ ಡಿಸ್ಕವರಿ ಆಫ್ ಇಂಡಿಯಾದಲ್ಲಿ ಹೀಗೆ ನುಡಿಯುತ್ತಾರೆ:  “ಭಾರತದಲ್ಲಿ ಗಣಿತದ ವಿಚಾರದಲ್ಲಿ,  ಇತ್ತೀಚಿಗಿನ ಒಬ್ಬರು ಅಸಾಧಾರಣ ವ್ಯಕ್ತಿಯನ್ನು ಕುರಿತು ಯೋಚಿಸುವುದು ಅನಿವಾರ್ಯವಾಗುವಂತೆ ಮಾಡುತ್ತದೆ.  ಅವರೇ ಶ್ರೀನಿವಾಸ ರಾಮಾನುಜನ್.  ದಕ್ಷಿಣ ಭಾರತದ ಒಂದು ಬಡ ಬ್ರಾಹ್ಮಣ ಕುಟುಂಬಅಲ್ಲಿ ಜನಿಸಿ ಸೂಕ್ತ ವಿದ್ಯಾಭ್ಯಾಸಕ್ಕೆ ಅವಕಾಶಗಳಿಲ್ಲದೆ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್ನಲ್ಲಿ ಒಬ್ಬ ಕಾರಕೂನರಾದರು.  ಆದರೆ ಅವರು ಸಹಜ ಪ್ರತಿಭೆಯ ಯಾವುದೋ ತಡೆಯಲಾಗದ ಲಕ್ಷಣಗಳಿಂದ ಬುದ್ಬುದಿಸುತ್ತಿದ್ದರು;  ಸಂಖ್ಯೆ ಹಾಗೂ ಸಮೀಕರಣಗಳೊಂದಿಗೆ ಅವರು ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದರು.  ಮುಂದೆ ಅವರು ಕೇಂಬ್ರಿಜ್ಗೆ ತೆರಳಿ ಅಲ್ಲಿ ಬಹಳ ಅಲ್ಪಾವಧಿಯಲ್ಲೇ ಮೂಲಭೂತ ಮೌಲ್ಯದ ಹಾಗೂ ವಿಸ್ಮಯಕರ ಸ್ವಂತಿಕೆಯ ಕಾರ್ಯವೆಸಗಿದರು.  ಇಂಗ್ಲೆಂಡಿನ ರಾಯಲ್ ಸೊಸೈಟಿ ತನ್ನ ನಿಯಮಗಳನ್ನು ಭಾಗಶಃ ಸಡಿಲಿಸಿ ಅವರನ್ನು ಫೆಲೋ ಆಗಿ ಆಯ್ಕೆ ಮಾಡಿತು.  ಪ್ರೊಫೆಸರ್ ಜೂಲಿಯನ್ ಹಕ್ಸ್ಲಿಯವರು, ನಾನು ತಿಳಿದಿರುವಂತೆ ಎಲ್ಲೋ ಒಂದೆಡೆ ರಾಮಾನುಜರನ್ನು ಈ ಶತಮಾನದ ಶ್ರೇಷ್ಠತಮ ಗಣಿತಜ್ಞ ಎಂದಿದ್ದಾರೆ.”

ಈ ಮಹಾನ್ ಮೇಧಾವಿ ಶ್ರೀನಿವಾಸ ಅಯ್ಯಂಗಾರ್ ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು.  ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು.  ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ.

ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು.  ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು.  ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು  ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು.  ಅವರು ವೇದ, ಉಪನಿಷತ್ತು, ತಿರುಕ್ಕುರುಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು.  ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು.  ೧೯೦೩ರಲ್ಲಿ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ  ತೇರ್ಗಡೆಯಾದರು.

ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ  ಇನ್ನ್ಯಾವುದೇ  ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ.  ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ  ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು.  ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು.  ಇದು ಮನೆಯವರಿಗೆ ಇಷ್ಟವಾಗಲಿಲ್ಲ.  ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು.

ಮದುವೆ ಒಂದು ಬದಲಾವಣೆಯನ್ನು ತಂದಿತು.  ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು.  ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ  ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು.  ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು.  ಸ್ವಲ್ಪ ದಿನ ಮನೆಯ ಪಾಠಮಾಡಿದರು.  ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ.    ೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂದು ಹೋಗುವಷ್ಟರಮಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್.  ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು.  ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು  ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು.

ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ಪಿ. ವಿ. ಶೇಷು ಅಯ್ಯರ್ ಅವರಿಂದ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ  ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ ೧೯೧೧ರಲ್ಲಿ ಪ್ರಕಟವಾಯಿತು.  ಈ ಸಂಪುಟದ ಒಂದು ಸಂಚಿಕೆಯಲ್ಲಿ ರಾಮಾನುಜನ್ನರ ‘ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು” ಪ್ರಕಟಗೊಂಡಿತು.  ೧೯೧೨ರಲ್ಲಿ ಇನ್ನೆರಡು ಪ್ರಬಂಧಗಳು ಬಂದವು.   ಮದ್ರಾಸ್ ಪೋರ್ಟ್ ಟ್ರಸ್ಟಿನ ಅಧ್ಯಕ್ಷ ಸರ ಫ್ರಾನ್ಸಿಸ್ ಸ್ಪ್ರಿಂಗ್ ರಾಮಾನುಜನ್ ಅವರಲ್ಲಿ ಆಸಕ್ತಿ ತಳೆದು ಅವರ ಪ್ರಗತಿಯನ್ನು ವೀಕ್ಷಿಸುತ್ತಿದ್ದರು.  ಒಂದು ದಿನ ಅವರ ಸಹಿಗಾಗಿ ಒಂದು ಕಡತ ಬಂತು.  ಅದನ್ನು ಪರಾಂಬರಿಸುತ್ತಿದ್ದಾಗ ಎಲಿಪ್ಟಿಕ್ ಅನುಕಲನಾಂಕಗಳಿಗೆ ಸಂಬಂಧಿಸಿದ ಕೆಲವು ಫಲಿತಗಳನ್ನೊಳಗೊಂಡ ಬಿಳಿ ಹಾಳೆಗಳನ್ನು ಕಂಡರು.  ಸ್ವಯಂ ಗಣಿತದಲ್ಲಿ ಆಸಕ್ತರಾಗಿದ್ದ ಅವರಿಗೆ ಅದು ರಾಮಾನುಜನ್ ಅವರ ಕೆಲಸವೆಂದು ತಿಳಿದು ಸಂತೋಷವಾಯಿತು. 

ಪೋರ್ಟ್ ಟ್ರಸ್ಟಿನಲ್ಲಿನ ಕೆಲಸ ಶ್ರೀನಿವಾಸ ರಾಮಾನುಜನ್ ಮತ್ತು ಅವರ ಕುಟುಂಬಕ್ಕೆ ಅರೆಹೊಟ್ಟೆಯನ್ನು ತುಂಬಿಸುವಷ್ಟು ಮಾತ್ರದ್ದಾಗಿತ್ತು.    ಕಡುಬಡತನ ಮತ್ತು ಎಲ್ಲ ತರಹದ ಸಂಕಷ್ಟವಿದ್ದರೂ ರಾಮಾನುಜನ್ ಎಂದೂ ತಾಳ್ಮೆಗೆಡುತ್ತಿರಲಿಲ್ಲ.  ಅವರು ಮದ್ರಾಸಿನಲ್ಲಿ ಟ್ರಿಪ್ಲಿಕೇನಿನ ಸಮೀಪದಲ್ಲಿ ವಾಸಿಸುತ್ತಿದ್ದಾಗ ಒಂದು ರಾತ್ರಿ ಖಗೋಳ ಪ್ರಪಂಚದ ವಿಸ್ಮಯಗಳ ಕುರಿತು ಗೆಳೆಯನೊಡನೆ ಮಾತನಾಡುತ್ತಿದ್ದರು.  ಅದನ್ನು ತಡೆಯಲು ಯಾರೋ ಹಠಾತ್ತಾಗಿ ರಾಮಾನುಜನ್ನರ ತಲೆಯ ಮೇಲೆ ಗಡಿಗೆ ತುಂಬಾ ನೀರು ಸುರಿದರು.  ಕೋಪಾವಶೇಶದಲ್ಲಿ ಸಿಡಿಯುವ ಬದಲು, ರಾಮಾನುಜನ್ ನಗುತ್ತ ಅಂದರು:  “ದೇವರ ದಯೆ, ನನಗೆ ಗಂಗಾಸ್ನಾನವಾಯಿತು.  ಇನ್ನೂ ಜಾಸ್ತಿ ಇದ್ದಾರೆ ಸಂತೋಷ.”.  ಶಾಂತ ಮತ್ತು ಏಕಾಗ್ರಚಿತ್ತದಿಂದ ರಾಮಾನುಜನ್ ತಮ್ಮ ಕೆಲಸ ಮುಂದುವರಿಸಿದರು.

ಪ್ರೊ. ಪಿ. ವಿ. ಶೇಷು ಅಯ್ಯರ್ ಅಂತಹ ಹಿರಿಯರು ಮತ್ತು ಹಿತಚಿಂತಕರು ಟ್ರಿನಿಟಿ ಕಾಲೇಜಿನ ಫೆಲೋ ಆಗಿದ್ದ ಪ್ರೊ. ಜಿ. ಹೆಚ್ ಹಾರ್ಡಿ ಮತ್ತು ಕೇಂಬ್ರಿಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜನ್ ತಮ್ಮ ಗಣಿತೀಯ ಶೋಧನೆಗಳನ್ನು ತಿಳಿಸಬೇಕೆಂದು ಒತ್ತಾಯಿಸಿದರು.  ಇದನ್ನು ಮಾಡಲು ಮೊದಲು ಅವರಿಗೆ ಮನಸ್ಸಿರಲಿಲ್ಲ.  ಆದರೆ ಒತ್ತಾಯ ಜಾಸ್ತಿಯಾದಾಗ ಅವರು ಪ್ರೊ. ಹಾರ್ಡಿಯವರಿಗೆ ಬರೆಯಲು ನಿರ್ಧರಿಸಿದರು.  ಹೀಗೆ ಕ್ರಮೇಣ ಅವರ ಜೀವನವನ್ನೇ ಬದಲಿಸಿದ ಮತ್ತು ಭಾರತವನ್ನು ಪ್ರಪಂಚದ ಗಣಿತೀಯ ನಕ್ಷೆಯಲ್ಲಿ ಸೇರಿಸಿದ ಪತ್ರ ವ್ಯವಹಾರ ಪ್ರಾರಂಭಗೊಂಡಿತು.  ತಮ್ಮ ಮೊದಲ ಪತ್ರದಲ್ಲೇ ರಾಮಾನುಜನ್ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು.  ಈ ಚಿಂತನೆಗಳು ಕೇಂಬ್ರಿಜ್ನಲ್ಲಿ ಹೊಸ ಸಂಚಲನವನ್ನೇ ಉಂಟುಮಾಡಿತು.  ಕ್ರಮೇಣದಲ್ಲಿ ಶ್ರೀನಿವಾಸನ್ ಕೆಂಬ್ರಿಡ್ಜ್ಗೆ ಬಂದಿಳಿದರು.  

ರಾಮಾನುಜನ್ನರ ಕಾರ್ಯವಿಧಾನ ಸ್ವಂತಿಕೆಯಿಂದ ಕೂಡಿದ್ದು ಅವರ ಸಲಕರಣೆಗಳು ಸಂಪೂರ್ಣವಾಗಿ ಅವರದ್ದೇ ಆಗಿದ್ದುವು.  ಇಂಗ್ಲೆಂಡಿನಲ್ಲಿ ಅವರಿದ್ದ ಐದು ವರ್ಷಗಳಲ್ಲಿ ಅವರ ಇಪ್ಪತ್ತೊಂದು ಪ್ರಬಂಧಗಳು ಯೂರೋಪಿನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾದವುಗಳಲ್ಲಿ ಐದು ಪ್ರೊ. ಹಾರ್ಡಿಯವರೊಂದಿಗೆ ಬರೆದುವು. ಪ್ರೊ. ಹಾರ್ಡಿ ಅವರಲ್ಲದೆ  ಆ ಕಾಲದ ಶ್ರೇಷ್ಠ ವಿದ್ವಾಂಸರಾದ ಪ್ರೊ. ಜೆ. ಇ. ಲಿಟ್ಲ್ ವುಡ್,  ಪ್ರೊ. ಎಲ್. ಜೆ. ಮೊರ್ಡಲ್, ಪ್ರೊ. ಜಿ. ಎನ್. ವಾಟ್ಸನ್  ಮುಂತಾದ ಸಕಲರೂ ಶ್ರೀನಿವಾಸ ರಾಮಾನುಜನ್ ಅವರ ಶ್ರೇಷ್ಠತೆಯನ್ನು ಕೊಂಡಾಡಿದರು.kannada

ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದುಕೊಟ್ಟವು.  ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರುವರಿ ೨೮, ೧೯೧೮ರಲ್ಲಿ ಶ್ರೀನಿವಾಸ  ರಾಮಾನುಜನ್ ಚುನಾಯಿತರಾದರು.  ೧೮೪೧ರಲ್ಲಿ ಸರ್ ಆರ್ ದೇಸೀರ್ ಕರ್ ಸೇಟ್ಜಿ ಅವರು  ರಾಯಲ್ ಸೊಸೈಟಿಗೆ ಚುನಾಯಿತರಾಗಿದ್ದನ್ನು ಬಿಟ್ಟರೆ  ಈ ಗೌರವ ಪಡೆದ ಪ್ರಥಮರು ರಾಮಾನುಜನ್ ಅವರೇ.   ರಾಮಾನುಜನ್ನರ ಆಯ್ಕೆ ಮುಂದೆ ಭಾರತೀಯ ವಿಜ್ಞಾನಿಗಳನ್ನು ಉತ್ತೇಜನಗೊಳಿಸಿ ಒಂದೇ ದಶಕದೊಳಗೆ ಇನ್ನೂ ಮೂವರು ಚುನಾಯಿತರಾದರು.  ಅವರೇ ಜಗದೀಶ್ ಚಂದ್ರ ಬೋಸ್, ಸಿ ವಿ ರಾಮನ್ ಮತ್ತು ಮೇಘನಾದ ಸಹಾ.  ಹೀಗೆ ರಾಮಾನುಜನ್ನರ ಸಿದ್ಧಿ ಭಾರತೀಯ ವಿಜ್ಞಾನ ಮತ್ತು ಗಣಿತದಲ್ಲಿ ಹೊಸ ಯುಗವನ್ನು ಆರಂಭಿಸಿತು.  

ಕೆಂಬ್ರಿಡ್ಜ್ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು.  ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು.  ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦ರಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು.  ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು.  

ಪ್ರೊ. ಹಾರ್ಡಿ ಹೇಳುತ್ತಾರೆ:  “ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ.  ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಖಂಡಿತವಾಗಿಯೂ ನಾನು ಕಂಡಿಲ್ಲ.  ಅವರನ್ನು ಅಯ್ಳರ್ ಅಥವಾ ಜುಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ  ಮಾತ್ರ ಹೋಲಿಸಲು ಸಾಧ್ಯ.  ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು.  ರಾಮಾನುಜನ್  ಅವರದೇ ಆದ ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಅವರಿಗೆ ಸರಿಸಾಟಿಗಳಿಲ್ಲದಂತೆ ಮಾಡಿದವು”

ರಾಮಾನುಜನ್ ಅವರ ಸಂಶೋಧನೆಗಳಲ್ಲಿ ಮುಖ್ಯವಾಗಿ ಈ ಕ್ಷೇತ್ರಗಳನ್ನು ಹೆಸರಿಸಬಹುದು:




#Article 119: ತಮಿಳುನಾಡು (4932 words)


ತಮಿಳುನಾಡು(தமிழ்நாடு) ಭಾರತದ ದಕ್ಷಿಣ ತುದಿಯಲ್ಲಿರುವ ರಾಜ್ಯ.  ಭಾರತ ಗಣರಾಜ್ಯದ ದಕ್ಷಿಣದ ಒಂದು ರಾಜ್ಯ.ಚೆನ್ನೈ ತಮಿಳುನಾಡಿನ ರಾಜಧಾನಿ ಮತ್ತು ಅತಿ ದೊಡ್ಡ ನಗರವಾಗಿದೆ.
ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳೆಂದರೆ ಪಾಂಡಿಚೇರಿ, ಕೇರಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ. ದಕ್ಷಿಣಪೂರ್ವಕ್ಕೆ ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾ ರಾಷ್ಟ್ರವಿದೆ.    
ತಮಿಳುನಾಡು ಉತ್ತರದಲ್ಲಿ ಪೂರ್ವ ಘಟ್ಟಗಳಿಂದ, ಪಶ್ಚಿಮದಲ್ಲಿ ನೀಲಗಿರಿ ಮಲೆಗಳು, ಆನಮಲೆ ಹಾಗು ಪಾಲಕ್ಕಾಡಿನಿಂದ, ಪೂರ್ವದಲ್ಲಿ ಬಂಗಾಳ ಕೊಲ್ಲಿಯಿಂದ, ಆಗ್ನೇಯದಲ್ಲಿ ಮನ್ನಾರ್ ಖಾರಿ, ಪಾಲ್ಕ್ ಜಲಸಂಧಿಯಿಂದ, ದಕ್ಷಿಣದಲ್ಲಿ ಹಿಂದು ಮಹಾಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ತಮಿಳುನಾಡು ವಿಸ್ತೀರ್ಣದಲ್ಲಿ ಭಾರತದ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಏಳನೆಯ  ಅತಿ ದೊಡ್ಡ ರಾಜ್ಯವಾಗಿದೆ. ತಮಿಳುನಾಡು ನಿವ್ವಳ ದೇಶೀಯ ಉತ್ಪನ್ನಕ್ಕೆ ಐದನೆಯ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ.ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು(೧೦.೫೬%) ವ್ಯಾಪಾರ ಉದ್ಯಮಗಳನ್ನು ಹೊಂದಿದೆ. ತಮಿಳುನಾಡು ಹಲವು ನೈಸರ್ಗಿಕ ಸಂಪನ್ಮೂಲಗಳಿಗೆ, ದ್ರಾವಿಡ ವಾಸ್ತುಶಿಲ್ಪ ಶೈಲಿಯ ಭವ್ಯವಾದ ಹಿಂದು ದೇವಾಲಯಗಳಿಗೆ, ಗಿರಿಧಾಮಗಳಿಗೆ, ಸಮುದ್ರತೀರದ ವಿಹಾರಧಾಮಗಳಿಗೆ, ತೀರ್ಥಯಾತ್ರಾ ಸ್ಥಳಗಳಿಗೆ ಹಾಗು ಐದು ಯುನೆಸ್ಕೋ ವಿಶ್ವ ಪಾರಂಪರಿಕ ನಿವೇಶನಗಳಿಗೆ ಬೀಡಾಗಿದೆ.

ಪರ್ಯಾಯ ದ್ವೀಪದ ಆಗ್ನೇಯ ತುದಿಯಲ್ಲಿ, ಉ. ಅ 8o 5' —13o 3  ಪೂ. ರೇ. 76o 15 — 80o 20 ನಡುವೆ ಇದೆ. ಉತ್ತರದಲ್ಲಿ ಆಂಧ್ರಪ್ರದೇಶ, ಪೂರ್ವದಲ್ಲಿ ಬಂಗಾಳ ಕೊಲ್ಲಿ, ದಕ್ಷಿಣದಲ್ಲಿ ಹಿಂದೂ ಸಾಗರ, ಪಶ್ಚಿಮದಲ್ಲಿ ಕೇರಳ, ವಾಯವ್ಯ ಮತ್ತು ಉತ್ತರದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಇವು ಇದರ ಮೇರೆಗಳು. ಪಶ್ಚಿಮದ ಅಂಚಿನಲ್ಲಿ ಪಶ್ಚಿಮ ಘಟ್ಟಗಳು ಹಬ್ಬಿವೆ. ತಮಿಳುನಾಡಿಗೆ ಪೂರ್ವದಲ್ಲಿ ಸು. 998 ಕಿ.ಮೀ ಉದ್ದದ ಸಮುದ್ರ ತೀರವಿದೆ. 

ತಮಿಳು ನಾಡನ್ನು ಸ್ಥೂಲವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು: 

ಪಶ್ಚಿಮದಲ್ಲಿರುವ ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗಿಂತ ತೀರ ಭಿನ್ನವಾದವು. ಅವು ಏಕಪ್ರಕಾರವಾಗಿ ಹಬ್ಬಿರುವ ಶ್ರೇಣಿಗಳು. ಬೃಹತ್ತಿನಲ್ಲಿಯೂ ಮಹತ್ತಿನಲ್ಲಿಯೂ ಅವುಗಳ ಮುಂದೆ ಪೂರ್ವಘಟ್ಟಗಳು ಬಲು ಕುಬ್ಜ. ಪಾಲಕ್ಕಾಡ್ ಬಳಿಯ ಘಾಟಿನ ಅಗಲ ಸುಮಾರು 24ಕಿ.ಮೀ. ಈ ಘಾಟಿನಿಂದ ದಕ್ಷಿಣಕ್ಕೆ ಪಶ್ಚಿಮ ಘಟ್ಟಗಳು ಮತ್ತೆ ಏರಿ, ಅಣ್ಣಾಮಲೈ ಬೆಟ್ಟಗಳಾಗಿ ಪರಿಣಮಿಸುತ್ತವೆ. ಇವುಗಳ ಪೂರ್ವ ಶಾಖೆಯೇ ಪಳನಿ ಬೆಟ್ಟ. ಇದರಲ್ಲಿರುವ ಕೋಡೈಕ್ಕಾನಾಲ್ ಒಂದು ಬೇಸಗೆ ಗಿರಿಧಾಮ. ಅಲ್ಲಲ್ಲಿ 6,000-7,000 ಅಡಿಗಳ ಎತ್ತರಕ್ಕಿರುವ ಪಶ್ಚಿಮ ಘಟ್ಟಗಳಿಗೆ ಪಾಲಕ್ಕಾಡ್ ಮತ್ತು ಷೆನ್‍ಕೊಟ್ಟಾ ಬಳಿ ಮಾತ್ರ ತೆರಪುಗಳವೆ. ಪೂರ್ವ ಪಶ್ಚಿಮ ಘಟ್ಟಗಳು ನೀಲಗಿರಿ ಜಿಲ್ಲೆಯಲ್ಲಿ ಸಂಧಿಸಿ ಒಂದು ಪರ್ವತ ಗ್ರಂಥಿಯಾಗಿ ಪರಿಣಮಿಸಿವೆ. ತಮಿಳು ನಾಡಿನಲ್ಲಿರುವ ಶಿಖರಗಳು ದೊಡ್ಡ ಬೆಟ್ಟ (8,650') ಮಾಕುರ್ತಿ (8,380') ಮತ್ತು ಅಣ್ಣೈ ಮುಡಿ (8,837'). ಇವುಗಳಲ್ಲಿ ಮೊದಲನೆಯ ಎರಡು ನೀಲಗಿರಿ ಬೆಟ್ಟಗಳಲ್ಲೂ ಕೊನೆಯದು ಅಣ್ಣಾ ಮಲೈ ಬೆಟ್ಟಗಳಲ್ಲೂ ಇವೆ.
ವೈಗೈ, ತಾಮ್ರಪರ್ಣಿ ಮುಂತಾದ ಮುಖ್ಯ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತವೆ. ಪಾಲಾರ್, ಪೊನ್ನೈಯಾರ್, ಕಾವೇರಿ_ಇವು ಅಂತರರಾಜ್ಯ ನದಿಗಳು. ಸ್ಥಳೀಯ ಪ್ರಾಮುಖ್ಯವುಳ್ಳ ನದಿಗಳು ಅರಣಿಯಾರ್, ಕೋರ್ತಲಿಯಾರ್, ಕೂವಮ್, ಗಡಿಲಾಮ್, ಗೋಮುಖಿ, ಮಣಿಮುಕ್ತ, ಉತ್ತರವೆಲ್ಲಾರ್, ಅಗ್ನಿಯಾರ್, ದಕ್ಷಿಣ ವೆಲ್ಲಾರ್, ದಕ್ಷಿಣ ಪಾಲಾರ್, ವೈಪ್ಪಾರ್, ಚಿತ್ತಾರ್, ಕೋಡೈಯಾರ್ ಮತ್ತು ಪಟಿಯಾರ್, ಕೋಡೈಯಾರ್ ಮತ್ತು ಪಟಿಯಾರ್‍ಗಳನ್ನುಳಿದು ಎಲ್ಲ ನದಿಗಳೂ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಂಗಾಳ ಕೊಲ್ಲಿ ಸೇರುತ್ತವೆ. ಈ ನದಿಗಳ ಮೇಲ್ದಂಡೆಗಳು ಬಂಡೆಗಲ್ಲು ಪ್ರದೇಶಗಳಾದ್ದರಿಂದ ಅಲ್ಲಿ ಜಲೋತ್ಸರಣ ಮಾಡಿಕೊಂಡು ಹರಿಯುವುದರಿಂದ ಕೆಳದಂಡೆಗಳ ಮೈದಾನ ಹಾಗೂ ಕರಾವಳಿಗಳಲ್ಲಿ ಅವಕ್ಕೆ ಕಟ್ಟೆಗಳನ್ನು ಕಟ್ಟಿ ನೀರಾವರಿಗೂ ವಿದ್ಯುತ್ತಿನ ಉತ್ಪಾದನೆಗೂ ನೀರನ್ನು ಬಳಸಿಕೊಳ್ಳಲಾಗಿದೆ. ತಮಿಳು ನಾಡಿನ ಅತ್ಯಂತ ದೊಡ್ಡ ನದಿ ಕಾವೇರಿ (ನೋಡಿ- ಕಾವೇರಿನದಿ). ಕರ್ನಾಟಕದ ಮಡಿಕೇರಿ ಜಿಲ್ಲೆಯಲ್ಲಿ ಹುಟ್ಟುವ ಈ ನದಿ ಆಗ್ನೇಯಾಭಿಮುಖವಾಗಿ ಹರಿದು ಶಿವನಸಮುದ್ರದ ಜಲಪಾತಗಳಿಂದ ಕೆಳಕ್ಕೆ ತಮಿಳು ನಾಡನ್ನು ಪ್ರವೇಶಿಸುತ್ತದೆ. ಭವಾನಿ, ನೊಯ್ಯಾಲ್, ಅಮರಾವತಿ_ಇವು ತಮಿಳು ನಾಡಿನಲ್ಲಿ ಕಾವೇರಿಯ ಮುಖ್ಯ ಉಪನದಿಗಳು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಕಾವೇರಿಯಲ್ಲಿ ಪ್ರವಾಹ ವಿಶೇಷವಾಗಿರುತ್ತದೆ.

ತಮಿಳು ನಾಡಿನದು ಮೂಲಭೂತವಾಗಿ ಉಷ್ಣವಲಯದ ವಾಯುಗುಣ. ಉಷ್ಣತೆಯಲ್ಲಿ ಅತಿಯಾದ ಏರಿಳಿತಗಳಿಲ್ಲ. ಗರಿಷ್ಠ ಉಷ್ಣತೆ 43o ಅ (110o ಈ)ನ್ನು ಸಾಮಾನ್ಯವಾಗಿ ಮೀರುವುದಿಲ್ಲ. ಕನಿಷ್ಠ ಉಷ್ಣತೆ 18o ಅ (65o ಈ) ಗಿಂತ ಕೆಳಕ್ಕೆ ಇಳಿಯುವುದು ಅಪರೂಪ. ಅತ್ಯಂತ ಕಡಿಮೆ ಉಷ್ಣತೆ ದಾಖಲಾಗುವುದು ಡಿಸೆಂಬರ್ ಮತ್ತು ಜನವರಿಗಳಲ್ಲಿ : ಅತ್ಯಂತ ಹೆಚ್ಚಿನ ಉಷ್ಣತೆ ಏಪ್ರಿಲ್ ನಿಂದ ಜೂನ್ ವರೆಗೆ. ಆಗ್ನೇಯ ಮತ್ತು ಈಶಾನ್ಯ ಮಾನ್ಸೂನುಗಳ ಕಾಲದಲ್ಲಿ ರಾಜ್ಯದಲ್ಲಿ ಮಳೆಯಾಗುತ್ತದೆ. ಇವೆರಡರ ನಡುವೆ ಸುಮಾರು ಆರು ವಾರಗಳ ಅಂತರ ಇರುತ್ತದೆ. ಸಾಮಾನ್ಯವಾಗಿ ಆಗ್ನೇಯ ಮಾನ್ಸೂನ್ ಮಳೆ ಕ್ರಮಪ್ರಾಪ್ತವಾದ್ದು. ಈಶಾನ್ಯ ಮಾನ್ಸೂನ್ ಕೆಲಮೊಮ್ಮೆ ಮಳೆ ತಾರದಿರುವುದುಂಟು. ಎರಡರಿಂದ ಐದು ವರ್ಷಗಳವರೆಗೆ ಹೀಗಾಗಬಹುದು. ಒಂದೇ ವರ್ಷದಲ್ಲಿ ಎರಡೂ ಮಾನ್ಸೂನ್‍ಗಳ ನಿರಾಶೆಗೊಳಿಸುವುದು ಬಲು ವಿರಳ. ಒಟ್ಟು ವಾರ್ಷಿಕ ಮಳೆಯಲ್ಲಿ ಈಶಾನ್ಯ ಮಾನ್ಸೂನಿನ ಪಾಲು ಕರಾವಳಿ ಜಿಲ್ಲೆಗಳಲ್ಲಿ ಸೇ. 60. ಒಳನಾಡಿನಲ್ಲಿ ಸೇ. 40. ಅಕ್ಟೋಬರ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲೇ ಬಹುತೇಕ ಮಳೆ. ಒಳನಾಡಿನಲ್ಲಿ ಅಕ್ಟೋಬರ್‍ನಲ್ಲಿ ಹೆಚ್ಚು ಮಳೆಯಾದರೆ, ಕರಾವಳಿ ಜಿಲ್ಲೆಗಳಲ್ಲಿ ನವೆಂಬರಿನಲ್ಲಿ ಹೆಚ್ಚು ಮಳೆ. ಈಶಾನ್ಯ ಮಾನ್ಸೂನ್ ಮಳೆ ಎಲ್ಲ ಜಿಲ್ಲೆಗಳಲ್ಲೂ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿರುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ಬಹಳ ಮಟ್ಟಿಗೆ ಅವನಮನ (ಡಿಪ್ರೆಷನ್) ಮತ್ತು ಚಂಡಮಾರುತಗಳನ್ನು ಅವಲಂಬಿಸಿರುತ್ತದೆ. ಮಾರ್ಚ್-ಮೇ ತಿಂಗಳುಗಳಲ್ಲಿ ಗುಡುಗಿನಿಂದ ಕೂಡಿದ ಮಳೆ 5em—15emವರಗೆ ಮಳೆ ಆಗುವುದು ನೀಲಗಿರಿ ಮತ್ತು ಇತರ ಬೆಟ್ಟಸೀಮೆಗಳಲ್ಲಿ. ರಾಮನಾಥಪುರಂ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಮಳೆ.
 

ತಮಿಳು ನಾಡಿನ ಸಸ್ಯ ಅಲ್ಲಿಯ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ್ದು. ರಾಜ್ಯದ ಸೇ. 15 ಭಾಗ ಅರಣ್ಯಾವೃತ. ನೀಲಗಿರಿ, ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ ಉನ್ನತ ಭಾಗಗಳಲ್ಲಿ ಉಪ ಅಲ್ಪೈನ್ ಸಸ್ಯ ಬೆಳೆಯುತ್ತದೆ. ಪಶ್ಚಿಮ ಘಟ್ಟಗಳ ಪೂರ್ವ ಪಾಶ್ರ್ವದಲ್ಲೂ ಉತ್ತರ ಮತ್ತು ಮಧ್ಯ ಜಿಲ್ಲೆಗಳ ಬೆಟ್ಟಗಳ ಪ್ರದೇಶದಲ್ಲೂ ನಿತ್ಯ ಹಸುರಿನ ಮತ್ತು ಪರ್ಣಪಾತಿ ಸಸ್ಯಗಳೂ ಕುರುಚಲುಗಳೂ ಇವೆ. ಕೆಳ ಕಾವೇರಿ ಕಣಿವೆಯಲ್ಲಿ ಅತ್ಯಂತ ಸಮೃದ್ಧವಾದ ನಿತ್ಯ ಹಸುರಿನ ಆರ್ದ್ರ ಅರಣ್ಯಗಳುಂಟು. ನಾನಾ ಸ್ತರಗಳಿಂದ ಕೂಡಿದ ಸಸ್ಯಜಾತಿಗಳನ್ನಿಲ್ಲಿ ಕಾಣಬಹುದು. ಮಧ್ಯಕಣಿವೆಯ ಕಾಡುಗಳನ್ನೆಲ್ಲ ಕಡಿದು ಇಲ್ಲಿಯ ನೆಲವನ್ನೆಲ್ಲ ವ್ಯವಸಾಯಕ್ಕೆ ಬಳಸಿಕೊಂಡಿರುವುದರಿಂದ ಮೂಲ ನೈಸರ್ಗಿಕ ಸಸ್ಯ ಇಲ್ಲಿ ಕಾಣುವುದಿಲ್ಲ. ಅಲ್ಲಲ್ಲಿ ಕುರುಚಲೂ ನೀರಿನ ಹರಿವಿನ ಬಳಿಯಲ್ಲಿ ಮತ್ತು ತಗ್ಗಿನ ನೆಲೆಗಳಲ್ಲಿ ಕಾಡುಗಳೂ ಇವೆ. 

ರಾಜ್ಯದ ಜಲಪಕ್ಷಿಗಳ ವೈವಿಧ್ಯವನ್ನು ವೇದಾಂತಂಗಳ್ ಪಕ್ಷಿಧಾಮದಲ್ಲೂ ಇತರ ವನ್ಯ ಜೀವಿಗಳ ಬಗೆಗಳನ್ನು ಮುದು ಮಲೈ ಅಭಯಾರಣ್ಯದಲ್ಲೂ ಕಾಣಬಹುದು. ತಮಿಳುನಾಡಿನ ಮುಖ್ಯ ಅಭಯಾರಣ್ಯಗಳು ಇವು (ಇವುಗಳ ವಿಸ್ತೀರ್ಣಗಳನ್ನು ಹೆಕ್ಟೇರುಗಳಲ್ಲಿ ಆವರಣಗಳೊಳಗೆ ಕೊಟ್ಟಿದೆ)  

ದೇವಾಲಯ ಇಲ್ಲದ ಊರಿನಲ್ಲಿ ವಾಸಮಾಡಬಾರದು ಎಂದು ಒಂದು ತಮಿಳು ಗಾದೆ ಇದೆ. ತಮಿಳು ನಾಡಿನಲ್ಲಿ ದೇವಾಲಯ ಇಲ್ಲದ ದೊಡ್ಡ ಊರೇ ಇಲ್ಲ. ಮಧುರೈ ಜಿಲ್ಲೆಯ ರಾಜಧಾನಿಯಾಗಿರುವ ಮಧುರೆಯಲ್ಲಿ ಪ್ರಸಿದ್ಧವಾದ ಮೀನಾಕ್ಷಿ ದೇವಾಲಯ ಇದೆ. ಶಕ್ತಿಯ (ಪಾರ್ವತಿಯ) ಹಿರಿಮೆಯನ್ನು ಇದು ತೋರಿಸುತ್ತದೆ. ಮಧುರೈಗೆ ಸಮೀಪದಲ್ಲಿ ತಿರುಪ್ಪರಕ್ಕುನ್‍ಅಮ್ ಇದೆ. ಇದು ಪ್ರಸಿದ್ಧವಾದ ಮುರುಗನ ಗುಡಿ.ಕಾಂಚೀಪುರದಲ್ಲಿ ಸಂಸ್ಕೃತ ಮತ್ತು ತಮಿಳು ಸಂಸ್ಕೃತಿಯನ್ನು ಕಾಣಲಾಗುವುದು. ಹಳೆಯ ಕಾಲದಲ್ಲಿ ಕಂಚಿಯಲ್ಲಿ ಪಸಿದ್ಧ ವಿಶ್ವವಿದ್ಯಾಲಯ ಇತ್ತು. ಕಂಚಿಯಲ್ಲಿ ಹಲವು ದೇವಾಲಯಗಳಿದ್ದರೂ ಕಾಮಾಕ್ಷಿ ದೇವಾಲಯವೂ ವರದರಾಜ ದೇವಾಲಯವೂ ಹೆಸರಿಸುವಂಥವಾಗಿವೆ.	ರಾಮೇಶ್ವರಮ್ ಎಂಬ ಸ್ಥಳ ರಾಮನಾಥಪುರಮ್ ಜಿಲ್ಲೆಯಲ್ಲಿದೆ. ರಾವಣನನ್ನು ಕೊಂದ ಪಾಪನಿವಾರಣೆಗಾಗಿ ರಾಮ ಶಿವನನ್ನು ಪೂಜಿಸಿದ ಸ್ಥಳ ಇದೆಂದು ಹಿಂದೂಗಳ ನಂಬಿಕೆ, ಈ ದೇವಾಲಯ ತಮಿಳು ನಾಡಿನ ವಾಸ್ತುವಿನ ಹಿರಿಮೆಗೆ ಸಾಕ್ಷಿಯಾಗಿದೆ. ಈ ಗುಡಿಯ ಉದ್ದ 1000 ಅಡಿ, ಅಗಲ 657 ಅಡಿ. ಉತ್ತರ ಆರ್ಕಾಟ್ ಜಿಲ್ಲೆಯಲ್ಲಿರುವ ತಿರುವಣ್ಣಾಮಲೈ ಕಾರ್ತಿಕೈ ದೀಪದಿಂದ ಪ್ರಸಿದ್ಧಿ ಪಡೆದಿದೆ.ದಕ್ಷಿಣ ಆರ್ಕಾಟ್ ಜಿಲ್ಲೆಯ ಚಿದಂಬರದಲ್ಲಿ ಇರುವುದು ನಟರಾಜ ದೇವಾಲಯ. ಇಲ್ಲಿ ಶಿವ ನೃತ್ಯ ಮಾಡುವ ರೂಪದಲ್ಲಿ ದರ್ಶನ ಕೊಡುತ್ತಾನೆ. ಅವನ ಅಟ ಪ್ರಪಂಚವನ್ನೇ ಆಡಿಸುವುದು ಎನ್ನುವರು. ಚಿದಂಬರದಲ್ಲಿ ಆಚರಿಸುವ ಆರಿದ್ರಾದರ್ಶನ ಪ್ರಖ್ಯಾತ ಪಡೆದಿದೆ. ಚಿದಂಬರಕ್ಕೆ ಪೂರ್ವ ದೆಸೆಯಲ್ಲಿರುವುದು ಅಣ್ಣಾಮಲೈ ನಗರ. ಅಲ್ಲಿ ಅಣ್ನಾಮಲೈ ವಿಶ್ವವಿದ್ಯಾಲಯ ಇದೆ.	
ತಿರುಚ್ಚಿರಾಪ್ಪಳ್ಳಿಗೆ ಸಮೀಪದಲ್ಲಿರುವ ಶ್ರೀರಂಗಮ್ ವಿಷ್ಣುಕ್ಷೇತ್ರ. ಶ್ರೀ ರಂಗನಾಥ ಶ್ರೀರಂಗದ ದೇವಾಲಯದಲ್ಲಿ ಮಲಗಿಕೊಂಡಿದ್ದಾನೆ. ಶ್ರೀರಂಗಕ್ಕೆ ಸಮೀಪದಲ್ಲಿರುವುದು ತಿರುವಾನೈಕ್ಕಾ. ಇಲ್ಲಿ ಇರುವ ಅಖಿಲಾಂಡೇಶ್ವರಿ ಜಂಬುಕೇಶ್ವರನ ದೇವಾಲಯ ಪ್ರಸಿದ್ಧವಾಗಿದೆ.ತಂಜಾವೂರ್ ಜಿಲ್ಲೆಯ ಕೇಂದ್ರವಾದ ತಂಜಾವೂರಿಗೆ 35 ಮೈ. ದೂರದಲ್ಲಿರುವ ತಿರುವಾರೂರಿನಲ್ಲಿ ತ್ಯಾಗರಾಜರ ಸಮಾಧಿ ಇದೆ. ತಿರುವಾರೂರಿನ ತೆಪ್ಪಶ್ತಿರು¿¿õÁ (ತೆಪ್ಪೋತ್ಸವ) ಹೆಸರಿಸುವಂಥದು. ತಿರುವಾರೂರಿನಲ್ಲಿ ಇರುವ ರಥ ತುಂಬ ದೊಡ್ಡದು, ಬಲು ಸುಂದರವಾದ್ದು. ಚೆಂಗಲ್ಪಟ್ಟು ಜಿಲ್ಲೆಯಲ್ಲಿರುವುದು ತಿರುಕ್ಕರುಕ್ಕನ್‍ರಮ್ ಎಂಬ ಸ್ಥಳ. ಪಳನಿಯಲ್ಲಿ ಮುರುಗನ ದೇವಾಲಯವಿದೆ. ತಂಜಾವೂರು ಜಿಲ್ಲೆಯ ಕುಂಭಕೋಣದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಖಮ್ ಎಂಬ ಹಬ್ಬ ನಡೆಯುತ್ತದೆ. ಮಹಾಮಖಮ್ ಕೊಳದಲ್ಲಿ ಸ್ನಾನಮಾಡುವುದಕ್ಕೆ ಇತರ ಭಾರತದ ಭಾಗಗಳಿಂದ ಯಾತ್ರಿಕರು ಬರುವರು. ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಾಲಯ ತುಂಬ ದೊಡ್ಡದು. ಇದನ್ನು ದೊಡ್ಡ ದೇವಾಲಯ ಎಂದೇ ಜನರು ಕರೆಯುವರು. ತಿರುತ್ತಣಿ, ತಿರುನೆಲ್ವೇಲಿ ಜಿಲ್ಲೆಯ ತಿರುಚ್ಚೆಂದೂರ್, ಕನ್ಯಾಕುಮಾರಿ_ಇವು ಪ್ರಸಿದ್ಧ ಪುಣ್ಯಸ್ಥಳಗಳು.

ತಮಿಳು ನಾಡಿನ ಪುಣ್ಯಸ್ಥಳಗಳು ಚರಿತ್ರೆ, ಸಾಹಿತ್ಯ, ಸಮಯ, ತತ್ತ್ವ, ಪುರಾಣಗಳಿಂದ ಪ್ರಸಿದ್ಧಿ ಪಡೆದಿವೆ. ಹಲವು ಶೈವ ಸ್ಥಳಗಳನ್ನು ಕುರಿತು ಅಪ್ಪರ್, ಸಂಬಂಧರ್, ಸುಂದರರ್ ಮುಂತಾದವರು ತೇವಾರಗಳನ್ನು ಹಾಡಿದ್ದಾರೆ. ಶ್ರೀವೈಷ್ಣವ ಸ್ಥಳಗಳಿಗೆ ಮಂಗಳಾಶಾಸನಗಳಿವೆ; ಎಂದರೆ ಆಳ್ವಾರಗಳು ಇವನ್ನು ಹಾಡಿ ಹೊಗಳಿದ್ದಾರೆ. 63 ನಾಯನ್‍ಮಾರ್‍ಗಳೂ 12 ಆಳ್ವಾರ್‍ಗಳೂ ಹುಟ್ಟಿದ ಗ್ರಾಮಗಳೂ ಪುಣ್ಯಸ್ಥಳಗಳೇ. ತಮಿಳು ನಾಡಿನಲ್ಲಿ ಇತರ ಮತದವರ ಪುಣ್ಯಸ್ಥಳಗಳೂ ಉಂಟು. ತಂಜಾವೂರು ಜಿಲ್ಲೆಯ ನಾಗಪಟ್ಟಿನಕ್ಕೆ ಸಮೀಪದಲ್ಲಿರುವ ವೇಳಾಂಗಣ್ಣಿ ಕ್ರೈಸ್ತರ ಪವಿತ್ರ ಸ್ಥಳ. ನಾಗೂರ್ ಎಂಬುದು ಮಹಮ್ಮದೀಯರ ಪವಿತ್ರ ಕ್ಷೇತ್ರ. ವೇಳಾಂಗಣ್ಣಿಯ ಹಬ್ಬವನ್ನೂ ನಾಗೂರ್ ಕಂದೂರಿ ಹಬ್ಬವನ್ನೂ ನೋಡಲು ಹಿಂದೂಗಳೂ ಗುಂಪು ಗುಂಪಾಗಿ ಹೋಗುತ್ತಾರೆ.     
									                          

ತಮಿಳು ನಾಡಿನ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳದರಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ರಾಜ್ಯ ವಿಧಾನಮಂಡಲದಲ್ಲಿ ವಿಧಾನ ಪರಿಷತ್ತು (ಮೇಲ್ಮನೆ) ಮತ್ತು ವಿಧಾನ ಸಭೆ ಇವೆ. ವಿಧಾನ ಸಭೆಯ ಸದಸ್ಯರು ಸಾಮಾನ್ಯವಾಗಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಮತದಾನದಿಂದ ನೇರವಾಗಿ ಆಯ್ಕೆಯಾಗುತ್ತಾರೆ. ವಿಧಾನ ಸಭೆ, ಸ್ಥಳೀಯ ಸಂಸ್ಥೆಗಳು, ಪದವೀಧರರು. ಅಧ್ಯಾಪಕ ಕ್ಷೇತ್ರಗಳಿಂದ ಆಯ್ಕೆ ಹೊಂದಿದವರು, ಮತ್ತು ರಾಜ್ಯಪಾಲರಿಂದ ನಾಮಕರಣವಾದವರು ವಿಧಾನ ಪರಿಷತ್ತಿನ ಸದಸ್ಯರು. ಮುಖ್ಯಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ನ್ಯಾಯಾಲಯಗಳಿವೆ.ರಾಜ್ಯವನ್ನು 30 ಜಿಲ್ಲೆಗಳಾಗಿ ವಿಂಗಡಿಸಲಾಗಿದೆ: ಜಿಲ್ಲೆಯ ಉನ್ನತ ಅಧಿಕಾರಿ ಕಲೆಕ್ಟರ್.

ಜಿಲ್ಲೆಯಿಂದ ಕೆಳಗಿನ ಹಂತಗಳ ಆಡಳಿತ ಘಟಕಗಳು ತಾಲ್ಲೂಕು, ಫಿರ್ಕಾ ಮತ್ತು ಗ್ರಾಮಗಳು. ತಮಿಳು ನಾಡಿನಲ್ಲಿ 29 ಜಿಲ್ಲಾ ಅಭಿವೃದ್ಧಿ ಮಂಡಲಿಗಳೂ 374 ಪಂಚಾಯಿತಿ ಮಂಡಲಿಗಳೂ (ಬ್ಲಾಕ್) 12,490 ಗ್ರಾಮ ಪಂಚಾಯಿತಿಗಳೂ ಇವೆ. ಕ್ಷೇತ್ರಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ ವಿಸ್ತರಣೆ, ಸ್ಥಳೀಯ ಸಂಸ್ಥೆಗಳು ಮತ್ತು ನಾಯಕತ್ವದ ವಿಕಾಸ ನೆರವಿನೊಂದಿಗೆ ಸ್ವಸಹಾಯ-ಇವನ್ನು ಸಾಧಿಸಲು ಸಮುದಾಯ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ರಾಜ್ಯದಲ್ಲಿರುವ ವಿಶ್ವ ವಿದ್ಯಾನಿಲಯಗಳು ಇವು : ಮದ್ರಾಸ್ ವಿಶ್ವವಿದ್ಯಾನಿಲಯ, ಮದ್ರಾಸು; ಅಣ್ಣಾಮಲೈ ವಿಶ್ವವಿದ್ಯಾನಿಲಯ, ಅಣ್ಣಾಮಲೈ ನಗರ, ಮಧುರೈ ವಿಶ್ವದ್ಯಾನಿಲಯ ಮಧುರೈ. ಜನಸಂಖ್ಯೆಗನುಗುಣವಾಗಿ ಶಾಲಾ ಕಾಲೇಜುಗಳು ಹೆಚ್ಚಾಗಿವೆ. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ.

ತಮಿಳು ನಾಡಿನ ಕಲೆ, ಸಾಹಿತ್ಯ, ಸಂಸ್ಕøತಿಗಳು ಬಹಳ ಪ್ರಾಚೀನವೂ ವಿಶಿಷ್ಟವೂ ಆದಂಥವು. ಭಾರತೀಯ ಹಾಗೂ ವಿಶ್ವ ಚಿಂತನಕ್ಕೆ ತಮಿಳು ನಾಡಿನ ಒಂದು ದೊಡ್ಡ ಕೊಡುಗೆಯೆಂದರೆ ವಳ್ಳುವರ್ ಅವರ ತಿರುಕ್ಕುರಳ್. ಇದು ಜೀವನಕ್ಕೆ ಸಂಬಂಧಿಸಿದ ನೀತಿ ಸಂಹಿತೆಯಾಗಿರುವುದಲ್ಲದೆ ತಮಿಳರ ಅಂತ:ಸತ್ವದ, ಅವರ ಕ್ರಿಯಾಶೀಲ ಚೈತನ್ಯದ ಪ್ರತೀಕವಾಗಿದೆ. ತಂಜಾವೂರು, ಮಹಾಬಲಿಪುರಂ, ಕಾಂಚೀಪುರಂ ಮುಂತಾದ ಸ್ಥಳಗಳಲ್ಲಿಯ ದೇಗುಲ ಗೋಪುರಗಳೂ ಬಂಡಿಗಳ ಮೇಲೆ ಕೊರೆದ ಶಿಲ್ಪಗಳೂ ತಂಜಾವೂರಿನ ನವಿರಾದ ಕರಕುಶಲ ಕಲಾಕೃತಿಗಳೂ ಭರತನಾಟ್ಯವೂ ಈ ರಾಜ್ಯದ ದೀರ್ಘ ಹಾಗೂ ಭವ್ಯ ಸಾಂಸ್ಕøತಿಕ ಪರಂಪರೆಯನ್ನು ಸಾರುತ್ತವೆ. ತಮಿಳು ವಾಸ್ತುಶಿಲ್ಪದ ಮಹೋನ್ನತ ಕಾಲವೆಂದರೆ 9 ನೆಯ ಶತಮಾನದ ನಡುವಿನಿಂದ 11ನೆಯ ಶತಮಾನದ ಕೊನೆಯವರೆಗಿನದು. ಮಹಾಬಲಿಪುರದಲ್ಲಿರುವ, ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ, ಬಂಡೆಯಲ್ಲಿ ಕೊರೆದ, ಗುಹಾ ವಾಸ್ತುಗಳೂ ಏಕಶಿಲಾ ದೇವಾಲಯಗಳೂ ಅದ್ಭುತ ಕೃತಿಗಳು. ತಮಿಳುನಾಡು ಹಿಂದಿನಿಂದಲೂ ನೆರೆಯ ದೇಶ ಪ್ರದೇಶಗಳೊಂದಿಗೂ ವಿಭಿನ್ನ ಸಂಸ್ಕøತಿಗಳೊಂದಿಗೂ ಸ್ನೇಹಯುತ ಸಂಬಂಧ ಬೆಳೆಸಿ, ತನ್ನ ವೈಶಿಷ್ಟ್ಯಕ್ಕೆ ಕುಂದು ಬಾರದಂತೆ ಇತರ ಸಂಸ್ಕøತಿಗಳ ಉತ್ಕøಷ್ಟ ಅಂಶಗಳನ್ನು ಜೀರ್ಣಿಸಿಕೊಂಡಿದೆ. ಕರ್ನಾಟಕ ಸಂಗೀತ ಹಾಗೂ ಭರತನಾಟ್ಯದ ಬೆಳವಣಿಗೆಗೆ ತಮಿಳುನಾಡು ವಿಶಿಷ್ಟವಾದ ಕಾಣಿಕೆ ಸಲ್ಲಿಸಿದೆ. ಲೋಹದ ಎರಕದಲ್ಲಿ ತಮಿಳು ಕೆಲಸಗಾರರು ಶ್ರೇಷ್ಠವಾದ ತಾಂತ್ರಿಕ ಪರಿಪೂರ್ಣತೆ ಸಾಧಿಸಿದರು. ಇತಿಹಾಸದ ಉದ್ದಕ್ಕೂ ಸಾಹಿತ್ಯ, ಜ್ಞಾನ, ಕಲೆ, ವಾಸ್ತು, ಶಿಲ್ಪ, ಆಡಳಿತ ಪದ್ಧತಿಗಳು ಮತ್ತು ದರ್ಶನಗಳಲ್ಲಿ ತಮಿಳರ ಪ್ರತಿಭೆ ಅದ್ಭುತವಾಗಿಯೂ ದಟ್ಟವಾಗಿಯೂ ಅಭಿವ್ಯಕ್ತವಾಗಿದೆ. ಪುರಾತತ್ವ ಕ್ಷೇತ್ರದಲ್ಲಿ ತಮಿಳುನಾಡು ಸಂಪದ್ಯುಕ್ತವಾದ್ದು. ಪ್ರಾಚೀನ ಭಾರತದ ಸಂಸ್ಕøತಿಯ ವಿಶಿಷ್ಟತೆಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿರುವ ರಾಜ್ಯ ತಮಿಳುನಾಡು.

ತಮಿಳುನಾಡಿನ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 61.54 ಕ್ಕಿಂತ ಕಡಿಮೆಯಿಲ್ಲದಷ್ಟು ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ಮುಖ್ಯ ವಾಣಿಜ್ಯ ಬೆಳೆಗಳು-ಅವನ್ನು ಬೆಳಯುವ ನೆಲದ ವಿಸ್ತೀರ್ಣಕ್ಕೆ ಅನುಗುಣವಾಗಿ-- ನೆಲಗಡಲೆ, ಹತ್ತಿ, ಕಬ್ಬು, ಎಳ್ಳು, ತೆಂಗು, ಮರಗೆಣಸು ಮತ್ತು ಹರಳು ರಾಜ್ಯದ ಮುಖ್ಯ ಆಹಾರ ಬೆಳಗಳು ಬತ್ತ ಮತ್ತು ಇತರ ಧಾನ್ಯಗಳು, ಕಾಳುಗಳು ಈರುಳ್ಳಿ, ಆಲೂಗಡ್ಡೆ, ಗೆಣಸು, ಮರಗೆಣಸು, ಮತ್ತು ಬಾಳೆ. ಭಾರತದ ಕ್ವಿನೈನ್ ಉತ್ಪಾದಿಸುವ ಎರಡು ರಾಜ್ಯಗಳ ಪೈಕಿ ತಮಿಳು ನಾಡೂ ಒಂದು. ಸಾಗುವಳಿಗೆ ಒಳಪಟ್ಟಿರುವ ಒಟ್ಟು ನೆಲದ ವಿಸ್ತೀರ್ಣ 59,34,000 ಹೆಕ್ಟೇರ್. ಇದರಲ್ಲಿ 23,99,000 ಹೆಕ್ಟೇರ್‍ಗಳು ನೀರಾವರಿಗೆ ಒಳಪಟ್ಟಿವೆ ಹೆಚ್ಚು ಇಳುವರಿಯ ತಳಿಗಳನ್ನು ಬಳಸಲಾರಂಭಿಸಿದ್ದರಿಂದ ರಾಜ್ಯದ ಸಂಪ್ರದಾಯ ಬದ್ಧ ಬೇಸಾಯಕ್ರಮದಲ್ಲಿ ಅಗಾಧ ಬದಲಾವಣೆಗಳಾಗಿವೆ. ಒಂದು ಬೆಳೆ ತೆಗೆಯುತ್ತಿದ್ದ ಅನೇಕ ರೈತರು ಎರಡು-ಮೂರು ಬೆಳೆ ತೆಗೆಯಲಾರಂಭಿಸಿದ್ದಾರೆ. 

	

ರಾಜ್ಯದ ಮುಖ್ಯ ನೀರಾವರಿ ಕಾಮಗಾರಿಗಳು ಮೆಟ್ಟೂರ್ (ಸೇಲಂ ಮತ್ತು ಕೊಯಮತ್ತೂರು ಜಿಲ್ಲೆಗಳು), ಕೆಳ ಭವಾನಿ (ಕೊಯಮತ್ತೂರು ಮತ್ತು ತಿರುಚಿ ಜಿಲ್ಲೆಗಳು), ಅರಣಿಯಾರ್ (ಚೆಂಗಲ್ಪಟ್ಟು ಜಿಲ್ಲೆ) ಅಮರಾವತಿ (ಕೊಯಮತ್ತೂರು ಜಿಲ್ಲೆ), ಸಾತನೂರ್ (ಉತ್ತರ ಮತ್ತು ದಕ್ಷಿಣ ಆರ್ಕಾಟ್). 
                         					        
ರಾಜ್ಯದ ಮುಖ್ಯ ವಿದ್ಯುತ್ ಉತ್ಪಾದನ ಕಾಮಗಾರಿಗಳು ಇವು: 1 ಮುಚಕುಂದ್ ಜಲ ವಿದ್ಯುತ್ ಯೋಜನೆ, 2. ಪೈಕಾರ ಜಲವಿದ್ಯುತ್ ಯೋಜನೆ, 3. ಮೆಯರ್ ಜಲವಿದ್ಯುತ್ ಯೋಜನೆ, 4. ಚೆನ್ನೈ ಶಾಖ ವಿದ್ಯುತ್ ಯೋಜನೆ, 5. ಪಾಪನಾಶಂ ವಿದ್ಯುತ್ ವ್ಯವಸ್ಥೆ, 6. ಮೆಟ್ಟೂರ್ ಜಲ ವಿದ್ಯುತ್ ಯೋಜನೆ. ರಾಜ್ಯದ ಅತ್ಯಂತ ದೊಡ್ಡ ವಿದ್ಯುತ್ ಯೋಜನೆಯೆಂದರೆ ಕುಂದಾ ವಿದ್ಯುತ್ ವ್ಯವಸ್ಥೆಯದು. ಕೊಲೊಂಬೋ ಯೋಜನೆಯ ಅಡಿಯಲ್ಲಿ ಕೆನಡದ ನೆರವಿನಿಂದ ಈ ಯೋಜನೆಯನ್ನು ಆರಂಭಿಸಲಾಯಿತು. ನೀಲಗಿರಿ ಬೆಟ್ಟಗಳ ನಡುವೆ ಈ ವಿದ್ಯುತ್ ಕೇಂದ್ರ ನೆಲೆಗೊಂಡಿದೆ. ಗ್ರಾಮೀಣ ವಿದ್ಯುದೀಕರಣದಲ್ಲಿ ತಮಿಳು ನಾಡು ಇತರ ರಾಜ್ಯಗಳಿಗಿಂತ ಮುಂದೆ ಇದೆ.

ರಾಜ್ಯದ ಮೀಸಲು ಅರಣ್ಯಗಳ ವಿಸ್ತೀರ್ಣ 17,258 ಚ.ಕಿಮೀ. ರಾಜ್ಯದ ಒಟ್ಟು ವಿಸ್ತೀರ್ಣದಲ್ಲಿ 15.5% ಭಾಗ ಅರಣ್ಯಾವೃತ. ಸಾಗುವಾನಿ, ಸೌದೆ, ಬೊಂಬು, ಶ್ರೀಗಂಧ, ಚರ್ಮಹದಕ್ಕೆ ಬೇಕಾದ ತೊಗಟೆ ಮುಂತಾದವು ಅರಣ್ಯೋತ್ಪನ್ನಗಳು. ಪಶ್ಚಿಮದ ಕಾಡುಗಳಲ್ಲಿ ತೇಗ, ಬೀಟೆ ಮುಂತಾದ ಸಾಗುವಾನಿ ಮರಗಳೂ ಸಿಗುತ್ತವೆ. ಸಾಗುವನಿ ಮರಗಳ ಕಾಡುಗಳು ಬಹುತೇಕ ಪಶ್ಚಿಮ ಘಟ್ಟಗಳ ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಸೀಮಿತವಾಗಿವೆ. ಕೊಯಮತ್ತೂರು, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳ ಕಾಡುಗಳಲ್ಲಿ ನಲವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ಸಾಗುವಾನಿ ಜಾತಿಗಳಿವೆ. ತೇಗದ ಆನಂತರ ಅತ್ಯಂತ ಪ್ರಮುಖವಾದ ಅರಣ್ಯೋತ್ಪನ್ನವೆಂದರೆ ಶ್ರೀಗಂಧ.

ತಮಿಳು ನಾಡಿನಲ್ಲಿ ಕಬ್ಬಿಣ ಅದಿರು, ಬಾಕ್ಸೈಟ್, ಜಿಪ್ಸಂ, ಅಭ್ರಕ, ಸುಣ್ಣಕಲ್ಲು, ಪಿಂಗಾಣಿ ಮಣ್ಣು, ಮ್ಯಾಗ್ನೆಸೈಟ್, ಲವಣ, ಇಲ್ಮೆನೈಟ್, ಮೊನಾಜೈಟ್, ಜಿರ್ಕಾನ್, ಮುಂತಾದ ಖನಿಜಗಳ ನಿಕ್ಷೇಪಗಳಿವೆ. ತಿರುನೆಲ್ವೇಲಿ ಮತ್ತು ಕನ್ಯಾಕುಮಾರಿ, ಜಿಲ್ಲೆಗಳ ಕರಾವಳಿಯಲ್ಲಿ ಅಲೆಗಳ ಪ್ರಕ್ರಿಯೆಯಿಂದಾಗಿ ಸಂಗ್ರಹವಾಗಿರುವ ಮರಳಿನಲ್ಲಿ ತೋರಿಯಂ ಸಿಗುತ್ತದೆ. ಕಾವೇರಿ ಜಲಾನಯನ ಭೂಮಿಯ ಪ್ರಥಮ ಯುಗೀಣ ಸಂಕೀರ್ಣದಲ್ಲಿ ಭಿನ್ನಸ್ತರಶಿಲೆ, ಗ್ರಾನೈಟ್, ನೀಸ್ ಮುಂತಾದವು ಇವೆ. ಸೇಲಂ_ಕೊಯಮತ್ತೂರು ವಲಯ ಖನಿಜಸಂಪದ್ಯುಕ್ತವಾದ್ದು. ತಲಮೈ, ಕಂಜಮಲೈ, ಗೋಡುಮಲೈಗಳಲ್ಲಿ ಸೇ.60ಕ್ಕಿಂತ ಹೆಚ್ಚು ಕಬ್ಬಿಣಾಂಶ ಇರುವ ಕಬ್ಬಿಣ ಅದಿರುಗಳಿವೆ. ಜಲವಿದ್ಯುತ್ ಶಕ್ತಿಯಿಂದ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯನ್ನು ಸ್ಥಾಪಿಸಲು ವಿಶೇಷ ಅವಕಾಶವುಂಟು. ತಮಿಳು ನಾಡಿನಲ್ಲಿ ಕಲ್ಲಿದ್ದಲಿನ ನಿಕ್ಷೇಪಗಳಿಲ್ಲ. ಆದರೆ ನೈವೇಲಿಯ ಬಳಿ 200 ಕೋಟಿ ಟನ್ ಲಿಗ್ನೈಟ್ ನಿಕ್ಷೇಪಗಳಿವೆ.

ರಾಜ್ಯದಲ್ಲಿರುವ ದೊಡ್ಡ ಕೈಗಾರಿಕೆಗಳು ಕೆಳಗಿನಂತಿವೆ.

 			

ಮೇಲೆ ಹೇಳಿದವಲ್ಲದೆ ಹೊಗೆಸೊಪ್ಪು, ಬೆಂಕಿಕಡ್ಡಿ, ಎಣ್ಣೆ ತೆಗೆಯುವುದು, ಇಟ್ಟಿಗೆ, ಹೆಂಚು, ಸುಣ್ಣ, ಕುಂಭ, ಹತ್ತಿ ಹಿಂಜುವುದು, ಹೆಣಿಗೆ, ರೇಷ್ಮೆ, ಮೂಳೆ ಗೂಬ್ಬರ, ಬಣ್ಣ, ಸಾಬೂನು, ಕಾಗದ, ಗಾಜು, ಮರಕೊಯ್ತ, ಹಗ್ಗ ಮುಂತಾದ ಕೈಗಾರಿಕೆಗಳೂ ಇವೆ. ಗಣಿಗಾರಿಕೆಯಲ್ಲಿ ಸಾಕಷ್ಟು ಮಂದಿಗೆ ಉದ್ಯೋಗ ಒದಗಿಸಿರುವ 18,095 ಘಟಕಗಳಿವೆ. ಭಾರತದ ಒಟ್ಟು ಚರ್ಮೋದ್ಯೋಗದಲ್ಲಿ ಸೆ. 60 ಭಾಗ ತಮಿಳುನಾಡಿನಲ್ಲಿದೆ. ಕುಡ್ಡಲೂರು ಮತ್ತು ಟುಟಿಕೋರಿನ್‍ಗಳಲ್ಲಿ ಗೊಬ್ಬರ ಮತ್ತು ರಾಸಾಯನಿಕಗಳ ಕಾರ್ಖಾನೆಗಳಿವೆ.

ಗಿಂಡಿಯ ಬಳಿ ಹಿಂದೂಸ್ತಾನ್ ಟೆಲಿಪ್ರಿಂಟರ್ಸ್ ಲಿ. ತಿರುಚ್ಚಿರಾಪ್ಪಳ್ಳಿಯಲ್ಲಿ ಅಧಿಕ ಒತ್ತಡ ಬಾಯಿಲರ್ ಕಾರ್ಖಾನೆ, ಉದಕಮಂಡಲದಲ್ಲಿ ಕಚ್ಚಾ ಫಿಲಂ ಕಾರ್ಖಾನೆ. ಆವಡಿಯಲ್ಲಿ ಭಾರಿ ವಾಹನಗಳ (ಟ್ಯಾಂಕ್) ಕಾರ್ಖಾನೆ, ಪೆರಂಬೂರಿನ ಇಂಟೆಗ್ರಲ್ ಕೋಚ್ (ರೈಲ್ವೆ ಗಾಡಿ) ಕಾರ್ಖಾನೆ, ನೈವೇಲಿಯ ಲಿಗ್ನೈಟ್ ಕಾರ್ಪೋರೇಷನ್ ಇವು ಕೇಂದ್ರ ಸರ್ಕಾರದ ಕೊಡ್ಡ ಕೈಗಾರಿಕಾ ಸಂಸ್ಥೆಗಳು. ತಮಿಳು ನಾಡು ಸರ್ಕಾರದ ಅಧೀನದಲ್ಲಿರುವ ಎರಡು ದೊಡ್ಡ ಕಾರ್ಖಾನೆಗಳು ಮದ್ರಾಸ್ ರಸಗೊಬ್ಬರ ಕಾರ್ಖಾನೆ ಮತ್ತು ಉಣ್ಣೆ ಪರಿಷ್ಕರಣ ಕೇಂದ್ರ.

ತಮಿಳು ನಾಡಿನ ಗೃಹಕೈಗಾರಿಕೆಗಳು ಪ್ರಾಚೀನವಾದವು. ಧರ್ಮ ಸರಕು, ಕುಂಭ ಕಲೆ, ಛತ್ರಿ, ಹಿತ್ತಾಳೆ ಸಾಮಾನು ಕೈಮಗ್ಗ, ಕಲ್ಲಿನ ಪಾತ್ರೆಗಳು, ಗಾಜಿನ ಬಳೆ, ಬೆಂಕಿಕಡ್ಡಿ, ಜರತಾರಿ, ಅಲ್ಯೂಮಿನಿಯಂ ಪದಾರ್ಥಗಳು, ದಂತ ಕೆಲಸ, ಕಲ್ಲು ಹಲಗೆ, ಮತಗೊರೆತ, ಖಾದಿ, ತಾಳೆಬೆಲ್ಲ, ಚಾಪೆ, ತೆಂಗಿನನಾರಿನ ಸರಕು ಮುಂತಾದವು ಹಳೆಯ ಗೃಹಕೈಗಾರಿಕೆಗಳು.

ಬಹಳ ಪ್ರಾಚೀನ ಕಾಲದಿಂದ ತಮಿಳು ನಾಡು ವಿದೇಶಗಳೊಂದಿಗೆ ವ್ಯಾಪಾರ ನಡೆಸುತ್ತ ಬಂದಿದೆ. ಅದರ ಅನೇಕ ನೈಸರ್ಗಿಕ ಸರಕುಗಳಿಗೆ ಹಿಂದಿನಿಂದಲೂ ವಿದೇಶಿ ಬೇಡಿಕೆಯಿದೆ. ಮೆಣಸು, ಮುತ್ತು, ದಂತ, ಲವಂಗ, ಶ್ರೀಗಂಧ, ತೇಗ, ಬೀಟೆ, ಕುರುಂದ-ಇವು ಕೆಲವು ಸರಕುಗಳು. ಪ್ರಾಚೀನ ಮೆಸೆಪೊಟೋಮಿಯಕ್ಕೆ ತಮಿಳು ನಾಡಿನಿಂದ ಅಕ್ಕಿ ರಫ್ತಾಗುತ್ತಿತ್ತು.

ಸಹಕಾರ ಚಳವಳಿಯಲ್ಲಿ ವಿಶೇಷವಾಗಿ ಮುಂದುವರೆದಿರುವ ರಾಜ್ಯಗಳಲ್ಲಿ ತಮಿಳು ನಾಡೂ ಒಂದು. ವಿವಿಧ ಬಗೆಯ ಸಹಕಾರ ಸಂಘಗಳ ಸಂಖ್ಯೆಯನ್ನು ಮುಂದೆ ಕೊಟ್ಟಿದೆ:-

	ವಿಶ್ವ ವಿದ್ಯಾಲಯಗಳಲ್ಲಿ ಸಹಕಾರವೂ ಒಂದು ಬೋಧನ ವಿಷಯವಾಗಿದೆ.

ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ ಮಾರ್ಗವಿದ್ದು ಇದರಲ್ಲಿ 60,901, ಕಿ.ಮೀ ಉತ್ತಮ ರಸ್ತೆಯಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು ದಕ್ಷಿಣ ಭಾರತದ ಮುಖ್ಯ ವಿಮಾನ ಸಂಪರ್ಕವಾಗಿದೆ. ಸೇಲಂ, ಕೊಯಮತ್ತೂರು, ತಿರುಚಿನಪಳ್ಳಿ, ಮಧುರೆ ವಿಮಾನ ನಿಲ್ದಾಣಗಳಿವೆ. ಚೆನ್ನೈ, ಮಧುರೈ, ತಿರುಚಿನಾಪಳ್ಳಿ, ಕೊಯಂಬತ್ತೂರು ಮತ್ತು ತಿರುನೇಲ್‍ವೇಲಿ ಮುಖ್ಯ ರೈಲು ನಿಲ್ದಾಣಗಳಿದ್ದು ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ.	ತಮಿಳು ನಾಡಿನಲ್ಲಿ 876.03 ಕಿಮೀ. ಬ್ರಾಡ್ ಗೇಜ್ ಮತ್ತು 2,889.05 ಕಿಮೀ. ಮೀಟರ್ ಗೇಜ್ ರೈಲುಮಾರ್ಗಗಳಿವೆ. ದಕ್ಷಿಣ ಭಾರತದಲ್ಲಿ ಬಹಳ ಹೆಚ್ಚಿನ ರೈಲ್ವೆ ಸೌಲಭ್ಯ ಉಳ್ಳ ರಾಜ್ಯ ತಮಿಳು ನಾಡು. ಮದ್ರಾಸಿನೊಂದಿಗೆ ರಾಜ್ಯದ ಎಲ್ಲ ಪ್ರಮುಖ ಕೇಂದ್ರಗಳೂ ಭಾರತದ ಮುಖ್ಯ ನಗರಗಳೂ ರೈಲ್ವೆ ಸಂಪರ್ಕ ಹೊಂದಿವೆ. ದಕ್ಷಿಣ ರೈಲ್ವೆಯ ಮುಖ್ಯ ಕಚೇರಿ ಮದ್ರಾಸಿನಲ್ಲಿದೆ.	ಈಗ ತಮಿಳುನಾಡಿನಲ್ಲಿ ಒಟ್ಟು 1,50,095 ಕಿ.ಮೀ. ರಸ್ತೆಯಿದ್ದು ಇದರಲ್ಲಿ 60,901 ಕಿ.ಮೀ ಟಾರ್ ಹಾಗೂ ಕಾಂಕ್ರೀಟಿನಿಂದ ಕೂಡಿವೆ. ಒಟ್ಟು 4181 ಕಿ.ಮೀ ರೈಲು ಮಾರ್ಗವಿದೆ. ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಕೊಯಮತ್ತೂರು ಮತ್ತು ಸೇಲಂಗಳಲ್ಲಿ ವಿಮಾನ ನಿಲ್ದಾಣಗಳಿವೆ. ಚೆನ್ನೈ ಟುಟಿಕೋರಿನ್, ಕುಡಲೂರು ಮತ್ತು ನಾಗಾಪಟ್ಟಣಮ್‍ಗಳಲ್ಲಿ ಬಂದರುಗಳಿವೆ. ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪೂರ್ವತೀರದ ಮುಖ್ಯ ಬಂದರೂ ಆಗಿದೆ. ಚೆನ್ನೈ ಜೊತೆಗೆ ನಾಗಪಟ್ಟಿನಮ್, ತುತುಕೋರಿನ್, ಕುಡಲೂರು ಬಂದರುಗಳಿವೆ.								  (

ದಕ್ಷಿಣ ಭಾರತದ ಇತರ ಪ್ರದೇಶಗಳಂತೆ ತಮಿಳು ನಾಡಿನಲ್ಲೂ ಪ್ರಾಗೈತಿಹಾಸಿಕ ಮಾನವನ ಅವಶೇಷಗಳಿವೆ. ತಮಿಳುನಾಡಿನಲ್ಲಿ ಮಾನವ ಎಂದಿನಿಂದ ವಾಸಿಸುತ್ತ ಬಂದಿದ್ದಾನೆಂದು ಹೇಳುವುದು ಸಾಧ್ಯವಿಲ್ಲದಿದ್ದರೂ, ಕಲ್ಲಿನಲ್ಲಿ ಆಯುಧಗಳನ್ನು ಮಾಡಿಕೊಳ್ಳಲು ಪ್ರಾರಂಭಿಸಿದನಿಂದ —ಎಂದರೆ ಮಧ್ಯ ಪ್ಲೀಸ್ಟೊಸೀನ್ ಕಾಲದಿಂದ —ಅವನ ಅಸ್ತಿತ್ವದ ಅವಶೇಷಗಳು ಹೇರಳವಾಗಿ ದೊರಕಿವೆ.	1863ರಲ್ಲಿ ರಾಬರ್ಟ್ ಬ್ರೂಸ್‍ಫೂಟರಿಗೆ ಮದ್ರಾಸಿನ ಹತ್ತಿರ ಪಲ್ಲಾವರಮ್‍ನಲ್ಲಿ ದೊರೆತ ಪುರಾತನ ಶಿಲಾಯುಗಧ ಆಯುಧದಿಂದ ತಮಿಳುನಾಡಿಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಭಾರತದಲ್ಲೇ ಪ್ರಾಗೈತಿಹಾಸಿಕ ಮಾನವನ ಅವಶೇಷಗಳ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.ಚೆಂಗಲ್‍ಪಟ್ಟು ಜಿಲ್ಲೆಯಲ್ಲಿರುವ ಕೋರ್ತಲಯಾರ್ ನದಿಯ ಪ್ರದೇಶದಲ್ಲಿ, ಈ ನದಿಯ ಹಳೆಯ ದಂಡೆಗಳ ಮೇಲೆ, ಆದಿ ಶಿಲಾಯುಗದ ಕಾಲದಲ್ಲೆ ಮಾನವರು ವಾಸಿಸುತ್ತಿದ್ದರೆಂಬುದು, ಡಿ ಟೆರ್ರ, ವಿ.ಡಿ. ಕೃಷ್ಣಸ್ವಾಮಿ, ಕೆ,ವಿ. ಬ್ಯಾನರ್ಜಿ ಇವರು ಮಾಡಿರುವ ಸಂಶೋಧನೆಗಳಿಂದ ತಿಳಿದುಬಂದಿದೆ. ಇವರು ಬಯಲು ಪ್ರದೇಶದಲ್ಲಿ ಹಾಗೂ ನೈಸರ್ಗಿಕ ಗುಹೆಗಳಲ್ಲಿ ವಾಸಿಸುತ್ತಿದ್ದರು : ಬೇಟೆಯಾಡುವುದು ಮತ್ತು ಗೆಡ್ಡೆ ಗೆಣಸುಗಳನ್ನು ಅಗೆದು ತಿನ್ನುವುದೇ ಇವರ ಮುಖ್ಯ ಕಸುಬಾಗಿತ್ತು. ಇವರು ಕ್ವಾರ್ಟ್‍ಸೈಟ್ ಉಂಡೆಕಲ್ಲಿನ ತಿರುಳಿನಲ್ಲಿ ಮಾಡಿದ ಕೈಗೊಡಲಿ. ಬಾಚಿ ಮತ್ತು ಅಂಡಾಕಾರದ ಆಯುಧಗಳನ್ನು ಉಪಯೋಗಿಸುತ್ತಿದ್ದರು-ಎಂಬುದಾಗಿ ಗೊತ್ತಾಗಿದೆ.ಮಧ್ಯ ಪ್ಲೀಸ್ಟೊಸೀನ್ ಕಾಲದ ಆಯುಧಗಳನ್ನು ದಕ್ಷಿಣ ಭಾರತದ ಇತರ ಸ್ಥಳಗಳಲ್ಲಿ, ದಕ್ಷಿಣ ಆಫ್ರಿಕ ಮತ್ತು ಯೂರೋಪ್‍ನಲ್ಲಿ ದೊರಕುವ ಅಬ್ಬೆವಿಲಿಯನ್ ಮತ್ತು ಅಷೀಲಿಯನ್ ಆಯುಧಗಳ ರೀತಿಯವು. ಈ ಕಾಲದ ನೆಲೆಗಳು ತಮಿಳು ನಾಡಿನ ಹಲವಾರು ಕಡೆಗಳಲ್ಲಿ ದೊರಕಿದ್ದರೂ ಅವುಗಳ ಅಧ್ಯಯನ ಇನ್ನೂ ನಡೆದಿಲ್ಲ.

ಪ್ಲೀಸ್ಟೊಸೀನ್ ಯುಗದ ಅಂತಿಮ ಕಾಲದಲ್ಲಿ ಪ್ರಚಲಿತವಾಗಿದ್ದ ಮಧ್ಯ ಶಿಲಾಯುಗದ ಸಂಸ್ಕøತಿಯ ನೆಲೆಗಳು ಚೆಂಗಲ್‍ಪಟು, ಉತ್ತರ ಅರ್ಕಾಟ್, ಧರ್ಮಪುರಿ ಮತ್ತು ಮಧುರೈ ಜಿಲ್ಲೆಗಳಲ್ಲಿ ಕಂಡುಬಂದಿವೆ. ಈ ಸಂಸ್ಕøತಿಗೆ ಕಾರಣರಾದ ಜನರೂ ಬಯಲು ಹಾಗೂ ನೈಸರ್ಗಿಕ ಗುಹೆಗಳಲ್ಲಿ ಜೀವಿಸುತ್ತಿದ್ದಂತೆ ಕಂಡುಬರುತ್ತದೆ. ಇವರ ಆಯುಧಗಳು ಹಿಂದಿನವುಗಳಿಗಿಂತ ಸಣ್ಣವು ಹಾಗೂ ಹೆಚ್ಚು ವೈವಿಧ್ಯಪೂರ್ಣ. ಇವರು ಕೈಗೂಡಲಿ, ಬಾಣದ ತುದಿ ಮತ್ತು ರಂಪಿಗೆಗಳನ್ನು ಹರೆಯಲು ಮತ್ತು ಕುಯ್ಯಲು ಅನುಕೂಲವಾದ ಮತ್ತು ನೀಳ ಚಕ್ಕೆ ಕಲ್ಲುಗಳಲ್ಲಿ ಮಾಡಿದ ಆಯುಧಗಳನ್ನು ಉಪಯೋಗಿಸುತ್ತಿದ್ದರು. ತೊಗಲನ್ನು ಬೇಕಾದ ಆಕಾರಕ್ಕೆ ಹೊಲೆಯುವುದಕ್ಕೂ ಬೇಟೆಯಾಡುವುದಕ್ಕೂ ಇವನ್ನು ಉಪಯೋಗಿಸುತ್ತಿದ್ದರು.

ಕ್ರಿ.ಪೂ. 4000ಕ್ಕಿಂತ ಹಿಂದಿನದೆಂದು ನಂಬಲಾಗಿರುವ ಅಂತ್ಯ ಶಿಲಾಯುಗ (ಸೂಕ್ಷ್ಮ ಶಿಲಾಯುಗ) ಸಂಸ್ಕøತಿಯ ನೆಲೆಗಳು ಚೆಂಗಲ್‍ಪಟು,್ಟ ಧರ್ಮಪುರಿ, ಮಧುರೈ ಮತ್ತು ರಾಮನಾಡು ಜಿಲ್ಲೆಗಳಲ್ಲಿ ದೊರೆತಿವೆ. ಈ ಕಾಲದ ಆಯುಧಗಳು ಇನ್ನೂ ಸಣ್ಣವು. ಬಾಣದ ತುದಿ, ರಂಪಿಗೆ ಹಾಗೂ ಹೆರೆಯಲು ಮತ್ತು ಕುಯ್ಯಲು ಅನುಕೂಲವಾದ ಆಯುಧಗಳು. ಅರ್ಧ ಚಂದ್ರಾಕೃತಿಯ ಮತ್ತು ತ್ರಿಕೋಣಾಕೃತಿಯ ಚಿಕ್ಕ ಆಯುಧಗಳು ಉಪಯೋಗದಲ್ಲಿದ್ದುವು. ಬಯಲುಗಳಲ್ಲಿದ್ದ ಇವರ ನೆಲೆಗಳಲ್ಲಿ ಸಿಕ್ಕಿರುವ ಆಯುಧಗಳಿಂದ ಈ ಜನರು ಸಣ್ಣ ಬೇಟೆಗಳನ್ನು ಆಡುತ್ತಿದ್ದರು ಮತ್ತು ಮೀನುಗಳನ್ನು ಹಿಡಿದು ಹಾಗೂ ಕಾಡು ದವಸ ಧಾನ್ಯಗಳನ್ನು ತಿಂದು ಜೀವಿಸುತ್ತಿದ್ದರು-ಎಂಬುದು ತಿಳಿದುಬರುತ್ತದೆ.

ನವಶಿಲಾಯುಗ ಸಂಸ್ಕೃತಿಯ ನೆಲೆಗಳು ಧರ್ಮಪುರಿ ಮತ್ತು ಉತ್ತರ ಅರ್ಕಾಟ್ ಜಿಲ್ಲೆಗಳಲ್ಲಿ ಮಾತ್ರ ಕಂಡುಬಂದಿವೆ. ಈ ಪ್ರಾಂತ್ಯದ ಬೇರೆಡೆಗಳಲ್ಲಿ ಈ ಜನ ಉಪಯೋಗಿಸುತ್ತಿದ್ದ, ಉಜ್ಜಿ ನಯಮಾಡಿದ ಕೊಡಲಿಗಳು ದೊರೆತಿದ್ದರೂ ಬೇರಾವ ಅವಶೇಷಗಳೂ ಇದುವರೆಗೂ ದೊರೆತಿಲ್ಲ.

ಉತ್ತರ ಅರ್ಕಾಟ್ ಜಿಲ್ಲೆಯ ಪೈಯಂಪಲ್ಲಿ ಗ್ರಾಮದಲ್ಲಿಯ ಉತ್ಖನನದಿಂದ ಈ ಜನರ ಜೀವನ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿದೆ. ಕ್ರಿ.ಪೂ.ಸು.1800ರಷ್ಟು ಹಿಂದೆ ಇವರು ನೀರಿನ ಸೌಕರ್ಯ ಇದ್ದ ಸ್ಥಳಕ್ಕೆ ಹತ್ತಿರದಲ್ಲಿ ದೊಡ್ಡ ಬಂಡೆಗಳಿಂದ ಕೂಡಿದ ಬೆಟ್ಟಗಳ ಬುಡದಲ್ಲಿ, ತಡಿಕೆ ಮತ್ತು ಮಣ್ಣಿನ ಗೋಡೆಗಳಿಂದ ಚಿಕ್ಕ ಗೋಲಾಕೃತಿಯ ಗುಡಿಸಲುಗಳನ್ನು ಕಟ್ಟಿಕೊಂಡು ಸಣ್ಣ ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಇವರು ನಾಯಿ ಕುರಿ, ಹಸು ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು: ಹಳ್ಳಿಯ ಸುತ್ತ ಧಾನ್ಯಗಳನ್ನು ಬೆಳೆಸುತ್ತಿದ್ದರು. ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ತಿಳಿಬೂದು ಬಣ್ಣದ ನಯವಾದ ಕಲ್ಲಿನಿಂದ ತೆಗೆದ ಚಕ್ಕೆಗಳಲ್ಲಿ ಕೈಯಿಂದ ಮಾಡಿದ ಸಣ್ಣ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಇವರಿಗೆ ಲೋಹಗಳ ಬಳಕೆ ಗೊತ್ತಿರಲಿಲ್ಲ. ಇವರು ತಮಿಳು ನಾಡಿನ ಪ್ರದೇಶಕ್ಕೆ ಉತ್ತರದಿಂದ, ಈಗಿನ ಕರ್ನಾಟಕ ಪ್ರದೇಶದಿಂದ, ಬಂದರೆಂದು ಊಹಿಸಲಾಗಿದೆ.

ತಮಿಳು ನಾಡಿನಲ್ಲಿ ನವಶಿಲಾಯುಗದವರು ವಾಸಿಸುತ್ತಿದ್ದಂತೆಯೇ ದೊಡ್ಡ ಕಲ್ಲುಗಳ ಗೋರಿಗಳನ್ನು ಕಟ್ಟುವ ಜನಾಂಗದವರು ಬಹುಶಃ ಕರ್ನಾಟಕದಿಂದ ಬಂದರೆಂಬುದು ಪೈಯಂಪಲ್ಲಿ ಉತ್ಖನನದಿಂದ ತಿಳಿದುಬರುತ್ತದೆ. ಇವರು ಕ್ರಿ.ಪೂ. 500ಕ್ಕೆ ಹಿಂದೆ ತಮಿಳು ನಾಡಿಗೆ ಬಂದರೆಂದು ಊಹಿಸಲಾಗಿದೆ. ಈ ಜನರು ತಮ್ಮೊಡನೆ ಕಬ್ಬಿಣದ ಬಳಕೆಯ ಕೌಶಲವನ್ನೂ ಚಕ್ರದ ಮೇಲೆ ಕಪ್ಪು ಕೆಂಪು ಹಾಗೂ ಕಪ್ಪು -ಕೆಂಪುಬಣ್ಣದ ಮಣ್ಣಿನ ಪಾತ್ರೆಗಳನ್ನು ಮಾಡುವ ವಿಧಾನವನ್ನೂ ತಂದರು. ತಮಿಳು ನಾಡಿನಲ್ಲಿ ಕೆರೆಗಳನ್ನು ಕಟ್ಟಿ ಜಮೀನನ್ನು ಸಾಗುವಳಿ ಮಾಡುವ ವಿಧಾನವನ್ನು ಈ ಜನಾಂಗದವರು ಆರಂಭಿಸಿದರೆಂದು ಊಹಿಸಲಾಗಿದೆ. ನವ ಶಿಲಾಯುಗದವರಂತೆಯೇ ಇವರೂ ಮನೆಗಳನ್ನು ಕಟ್ಟಿಕೊಂಡು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ವ್ಯವಸಾಯ, ಮೀನು ಹಿಡಿಯುವುದು-ಇವು ಇವರ ಮುಖ್ಯ ಕಸುಬುಗಳಾಗಿದ್ದುವು.

ಇವರ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಶಿಲಾಗೋರಿಗಳು. ಇವರು ನಿರ್ಮಿಸುತ್ತಿದ್ದ ಬೃಹತ್ ಶಿಲಾಗೋರಿಗಳಲ್ಲಿ ನಾನಾ ವಿಧಗಳಿದ್ದುವು. ನಾಲ್ಕು ಅಥವಾ ಹಲವು ಹಲಗೆ ಕಲ್ಲುಗಳನ್ನು ಕೋಣೆಯಾಕಾರದಲ್ಲಿ ಜೋಡಿಸಿ ಅದರಲ್ಲಿ ಅಸ್ಥಿಯನ್ನೋ ಅಸ್ಥಿಯುಳ್ಳ ಗಡಿಗೆಯನ್ನೋ ಇಟ್ಟು ಮೇಲೊಂದು ಹಲಗೆ ಕಲ್ಲನ್ನು ಮುಚ್ಚಿ ಸುತ್ತಲೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನಿಟ್ಟು, ಮಧ್ಯದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ತುಂಬುವುದು ಒಂದು ವಿಧ. ಆಳವಾದ ಗುಂಡಿಯಲ್ಲಿ ಆಸ್ಥಿವುಳ್ಳ ಮಣ್ಣಿನ ಪಾತ್ರೆಯನ್ನೂ ಇತರ ವಸ್ತುಗಳನ್ನೂ ಹೂತು ಸುತ್ತಲೂ ಬಂಡೆಕಲ್ಲುಗಳನ್ನು ಇಟ್ಟು ಮಧ್ಯದಲ್ಲಿ ಸಣ್ಣ ಕಲ್ಲುಗಳನ್ನು ತುಂಬುವುದು ಇನ್ನೊಂದು ವಿಧ ಪ್ರಾಣಿಯಾಕಾರದ ಉದ್ದನೆಯ ದೊಡ್ಡ ಬಾನೆಯಲ್ಲಿ ಅಸ್ಥಿ ಮತ್ತು ಇತರ ವಸ್ತುಗಳನ್ನು ಇಟ್ಟು ಹೂತು ಸುತ್ತಲೂ ಬಂಡೆಕಲ್ಲುಗಳನ್ನಿಟ್ಟು ಮಧ್ಯದಲ್ಲು ಸಣ್ಣಕಲ್ಲುಗಳನ್ನು ತುಂಬುವುದು, ಮತ್ತೊಂದು ವಿಧ. ಇಂಥ ಹಲವು ರೀತಿಗಳಿದ್ದುದು ಕಂಡುಬರುತ್ತದೆ. ಸತ್ತವನ ಆತ್ಮಕ್ಕೆ ಮುಂದೆ ಬೇಕಾಗಬಹುದೆಂಬ ನಂಬಿಕೆಯಿಂದ ಮಣ್ಣಿನ ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರ ಮತ್ತಿತರ ಪರ್ದಾಥಗಳನ್ನು ಹಾಗೂ ಅವರ ನಿತ್ಯೋಪಯೋಗದ ವಸ್ತುಗಳನ್ನು ಇಟ್ಟು ಅಲ್ಲಿ ಹೂಳುತ್ತಿದ್ದರು.

ತಮಿಳು ನಾಡಿನ ಇತಿಹಾಸ ಬಲು ಪ್ರಾಚೀನವಾದ್ದು. ಭಾಷೆ ವೈಜ್ಞಾನಿಕವಾಗಿ ಭಾರತ ಉಪಖಂಡದಲ್ಲಿ ಇದು ಬಹುಶಃ ಅತ್ಯಂತ ಹಳೆಯ ಭಾಷೆ ಮೊತ್ತ. ಗತ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಸಂಸ್ಕøತಿ ನಾಗರಿಕತೆಗಳ ಭಾಷೆ ಸಾಹಿತ್ಯಗಳೂ ಚಿತ್ರಕಲೆ ವಾಸ್ತುಶಿಲ್ಪಗಳೂ ಸಂಗೀತವೂ ಬೆಳೆದಂತೆ ದೇಶ ಬೇರೆಡೆಯಲ್ಲೆಲ್ಲೂ ಬೆಳೆಯಲಿಲ್ಲ. ಉನ್ನತ ಬೆಳೆವಣಿಗೆ ಹೊಂದಿದ ತಮಿಳು ಭಾಷೆ ಅದರಲ್ಲಿ ಸೃಷ್ಟಿಯಾದ ಅನಶ್ವರ ಸಾಹಿತ್ಯ, ಉದಾತ್ತವಾದ ಗೋಪುರಗಳು, ಮಧುರೈ ಮಹಾಬಲಿಪುರಂ ತಂಜಾವೂರು ಕಾಂಚೀಪುರಗಳಲ್ಲಿ ಕೆತ್ತಲಾದ ಅಮರ ವಾಸ್ತು ಶಿಲ್ಪಗಳು ತಂಜಾವೂರಿನ ಉತ್ಕøಷ್ಟ ಕರಕೌಶಲ, ಭರತನಾಟ್ಯ ಕಲಾವಿದರ ಲಲಿತ ಚಲನೆಗಳು - ಇವು, ಮತ್ತು ಇಂಥ ಹಲವು, ತಮಿಳು ನಾಡಿನ ಸಾಂಸ್ಕøತಿ ಪರಂಪರೆಯ ಅಂಶಗಳು.ತಮಿಳು ನಾಡಿಗೆ ಸಂಬಂಧಿಸಿದಂತೆ ಬೃಹದ್ಬಾರತದ ಇತಿಹಾಸವನ್ನು ದಕ್ಷಿಣ ಭಾರತದ ಇತಿಹಾಸದ ಒಂದು ಉಜ್ವಲ ಅಧ್ಯಾಯವೆಂದು ಪರಿಗಣಿಸಬಹುದು.

ತಮಿಳುನಾಡಿನ ಸಂಸ್ಕøತಿಕ ಪ್ರಭಾವಗಳು -- ಮುಖ್ಯವಾಗಿ ಲಿಪಿ. ನಂಬಿಕೆಗಳು, ಕಲೆಗಳು ಮುಂತಾದುವುಗಳಲ್ಲಿ -- ಮಲಯ, ಸುಮಾತ್ರ, ಜಾವ, ಬಾಲಿ, ಕಾಂಬೋಡಿಯ ಮತ್ತು ಸೈಯಾಮ್‍ಗಳನ್ನು ತಲಪಿವೆ. ಇತರ ದೇಶಗಳು ಮತ್ತು ಸಂಸ್ಕøತಿಗಳೊಂದಿಗಿನ ಸಂಪರ್ಕದ ಅವಕಾಶವನ್ನು ತಮಿಳು ನಾಡು ಬಳಸಿಕೊಳ್ಳುವುದರಲ್ಲಿ, ಅವುಗಳಲ್ಲಿಯ ಉತ್ತಮಾಂಶಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ.

ತಮಿಳು ನಾಡಿನ ಪ್ರಾಚೀನ ಇತಿಹಾಸವನ್ನು ಅದರ ಭಾಷೆಯಿಂದ ಮತ್ತು ಇತಿಹಾಸ ಪೂರ್ವಕಾಲದ ಪಳೆಯುಳಿಕೆಗಳ ಅಧ್ಯಯನದಿಂದ ಅರಿಯಬಹುದು. ತಮಿಳಿನ ಅತ್ಯಂತ ಪ್ರಾಚೀನ ನಷ್ಟವಾಗಿದೆ. ತಮಿಳಿನ ತೊಲ್‍ಕಾಪ್ಪಿಯಮ್ ಎಂಬ ಪ್ರಸಿದ್ಧ ವ್ಯಾಕರಣ ಗ್ರಂಥವನ್ನು ಕ್ರಿ. ಪೂ. 325 - ಕ್ರಿ.ಪೂ.88 ಕಾಲಕ್ಕೆ ನಿರ್ದೇಶಿಸಬಹುದು. ಕೆಲವು ವಿದ್ವಾಂಸರು ಇದು ಇನ್ನೂ ಹಿಂದಿನ ಕಾಲದ್ದೆಂದು ಹೇಳುತ್ತಾರೆ. ತಿರುಕ್ಕುರಳ್, ಶಿಲಪ್ಪದಿಕಾರಂ, ಮಣಿಮೇಖಲೈ ಮುಂತಾದ ಪ್ರಾಚೀನ ತಮಿಳು ಸಾಹಿತ್ಯ ಕೃತಿಗಳನ್ನು ಸಂಗಮ್ ಸಾಹಿತ್ಯವೆಂದು ಕರೆಯಲಾಗಿದೆ. ಇವು ಸೃಷ್ಟಿಯಾದ ಕಾಲವನ್ನು ತಮಿಳು ಸಾಹಿತ್ಯದ ಸುವರ್ಣ ಯುಗವೆಂದು ಕರೆಯಲಾಗಿದೆ. ಕ್ರಿ.ಶ. ಮೊದಲ ಮೂರು ಶತಮಾನಗಳನ್ನು ಸಂಗಮ್ ಯುಗವೆಂದು ಕರೆಯಲಾಗಿದೆ. ಆ ಕಾಲದ ತಮಿಳರು ಕಟ್ಟು ನಿಟ್ಟಾದ ಜಾತಿಗಳಾಗಿ ವಿಂಗಡವಾಗಿರಲಿಲ್ಲ. ಆಗಿನ ಜನಜೀವನ ಬಹುತೇಕ ಗ್ರಾಮೀಣವಾಗಿತ್ತು. ಹಳ್ಳಿಗಳು ಸ್ವಸಂಪೂರ್ಣವಾಗಿದ್ದುವು. ರೂಢಿಯ ನಿಯಮಗಳೇ ಕಾನೂನುಗಳ ಸ್ಥಾನ ಪಡೆದಿದ್ದುವು. ಒಂದು ಪ್ರದೇಶದ ಜನರು ಇನ್ನೊಂದು ಪ್ರದೇಶದ ಜನರೊಂದಿಗೆ ಪದಾರ್ಥಗಳ ವಿನಿಮಯ ಮಾಡಿಕೊಳ್ಳತೊಡಗಿದಾಗ ಪಟ್ಟಣಗಳು ಎದ್ದವು. ಕ್ರಿ.ಪೂ.500—ಕ್ರಿ,ಪೂ.100ರ ಅವಧಿಯಲ್ಲಿ ತಮಿಳು ನಾಡಿನ ವಿದೇಶಿ ವ್ಯಾಪಾರ ವಿಶೇಷವಾಗಿ ಬೆಳೆದದ್ದರ ಫಲವಾಗಿ ಅನೇಕ ರೇವುಪಟ್ಟಣಗಳು ಬೆಳೆದುವು.

ತಮಿಳು ನಾಡಿನ ಇತಿಹಾಸಕಾಲ ಕ್ರಿ.ಪೂ 4ನೆಯ ಶತಮಾನದಿಂದ ಆರಂಭವಾಗುತ್ತದೆ. ಸಂಗಮ್ ಯುಗದ ಕೊನೆಯ ವರೆಗೆ (ಕ್ರಿ.ಶ 3ನೆಯ ಶತಮಾನ) ಅದರ ಇತಿಹಾಸ ಸ್ಪಷ್ಟವೂ ಸಮಗ್ರವೂ ಆಗಿ ತಿಳಿದುಬಂದಿಲ್ಲ. ಚೇರ, ಚೋಳ ಮತ್ತು ಪಾಂಡ್ಯರು ನೆರೆಯ ಸ್ವತಂತ್ರ ರಾಜ್ಯಗಳನ್ನಾಳುತ್ತಿದ್ದರೆಂಬುದು ಅಶೋಕನ 2ನೆಯ ಮತ್ತು 13ನೆಯ ಶಿಲಾಶಾಸನಗಳಿಂದ ತಿಳಿದುಬರುತ್ತದೆ. ಸತ್ಯಪುತ್ರರು ಬಹುಶ: ಕೊಂಗುನಾಡನ್ನಾಳುತ್ತಿದ್ದವರು. ಆ ಕಾಲದ ಇತಿಹಾಸದ ಕೆಲವು ಹೊಳಹುಗಳು ಮುಖ್ಯವಾಗಿ ಸಂಗಮ್ ಕೃತಿಗಳಿಂದ ದೊರಕುತ್ತವೆ. ಇವನ್ನು ಇತಿಹಾಸ ಗ್ರಂಥಗಳೆನ್ನಲಾಗದಿದ್ದರೂ ತತ್ಕಾಲದ ಜನರ, ಅವರ ದೊರೆಗಳ, ಪಾಳೆಯಗಾರರ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಮತೀಯ ಜೀವನಕ್ಕೆ ಸಂಬಂಧಿಸಿದ ಐತಿಹಾಸಿಕ ಸಾಮಗ್ರಿ ನಮಗೆ ದೊರಕುತ್ತದೆ.

ಸಂಗಮ್ ಯುಗದ ಅಂತ್ಯದ ಅನಂತರದ ಮೂರು ಶತಮಾನಗಳ ಇತಿಹಾಸ ಶೂನ್ಯವಾಗಿದೆ. ಇದನ್ನು ಕಳಭ್ರ ವಿಚ್ಚಿತ್ತಿ ಅವಧಿ ಎಂದು ಹೇಳಲಾಗಿದೆ ಕಳಭ್ರರು ಕಾಡುಜನರು. ಇವರು ಬಹುಶ: ಕರ್ನಾಟಕದ ಪ್ರದೇಶದಿಂದ ಬಂದರು. ಇವರು ಕ್ರಿ.ಶ. 6ನೆಯ ಶತಮಾನದ ನಡುಗಾಲದವರೆಗೆ ತಮಿಳು ನಾಡನ್ನು ಆಕ್ರಮಿಸಿಕೊಂಡಿದ್ದರು. ಮಧುರೆಯ ಸುತ್ತಮುತ್ತಣ ಪ್ರದೇಶದಲ್ಲಿ ಮತ್ತೆ ಪ್ರಬಲರಾದ ಪಾಂಡ್ಯರೂ ಕಾಂಚೀಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ತೊಂಡೈ ಮಂಡಲವನ್ನಾಳತೊಡಗಿದ ಪಲ್ಲವರು ಕಲಭ್ರರ ಆಳ್ವಿಕೆಯನ್ನು ಕೊನೆಗೊಳಿಸಿದರು. 9ನೆಯ ಶತಮಾನದ ನಡುಗಾಲದವರೆಗೂ ತಮಿಳು ನಾಡನ್ನು ಪಾಂಡ್ಯರೂ ಪಲ್ಲರೂ ವಾಸ್ತವವಾಗಿ ಹಂಚಿಕೊಂಡು ಆಳಿದರು. ದಕ್ಷಿಣಭಾರತದ ಇತಿಹಾಸದಲ್ಲಿ ಈ ಅವಧಿ ಅತ್ಯಂತ ಕ್ರಿಯಾಶೀ¯ವಾದ್ದು. 9ನೆಯ ಶತಮಾನದ ವರೆಗೆ ಚೋಳರು ಅಜ್ಞಾತರಾಗಿದ್ದರು. ಆಗ ಅವರು ತಲೆಯೆತ್ತ ತೊಡಗಿ ಮುಂದಿನ ಸುಮಾರು ನಾಲ್ಕು ಶತಮಾನಗಳ ಕಾಲ ರಾಜ್ಯವಾಳಿದರು. ಪಲ್ಲವ ಆಳ್ವಿಕೆ ಕೊನೆಗೊಂಡಿತು. ಪಾಂಡ್ಯ ಮತ್ತು ಚೇರ ರಾಜ್ಯಗಳು ಅವರ ಅಧೀನಕ್ಕೆ ಬಂದುವು. ರಾಜರಾಜ ಮತ್ತು ರಾಜೇಂದ್ರ ಗಂಗೈಕೊಂಡರ (985-1044) ಆಳ್ವಿಕೆಯಲ್ಲಿ ಚೋಳ ಸಾಮ್ರಾಜ್ಯದ ಅಧಿಕಾರ ಮಹೋನ್ನತ ಶಿಖರ ಮುಟ್ಟಿತು. ರಾಜೇಂದ್ರ ಗಂಗೈಕೊಂಡ ಉತ್ತರಕ್ಕೆ ಗಂಗಾ ನದಿಯ ವರೆಗೂ ದಂಡೆತ್ತಿ ಹೋಗಿದ್ದ. ಸಾಗರದಾಚೆಗಿನ ಶ್ರೀವಿಜಯನ ರಾಜ್ಯದ ಮೇಲೂ ಏರಿಹೋದ. ಚೋಳರ ಆಳ್ವಿಕೆಯ ಕಾಲದಲ್ಲಿ ತಮಿಳು ನಾಡು ಬಲಿಷ್ಠ ಗರಿಷ್ಠ ರಾಜಕೀಯ ಶಕ್ತಿಯಾಗಿತ್ತು. ಸ್ವಾಯತ್ತಾತ್ಮಕ ಗ್ರಾಮಸಭೆಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದ ಅತ್ಯಂತ ಸುಸಂಘಟಿತ ಆಡಳಿತ ವ್ಯವಸ್ಥೆ, ಸಾಹಿತ್ಯಕ ಧಾರ್ಮಿಕ ಚಟುವಟಿಕೆಗಳ ಉನ್ನತಿಕೆ, ವಾಸ್ತುಶಿಲ್ಪ ಕಲಾವೈಭವ-ಇವು ಈ ಕಾಲದ ಮಹತ್ತ್ವದ ಸಾಧನೆಗಳು. 13ನೆಯ ಶತಮಾನದಲ್ಲಿ ಚೋಳರ ಕ್ಷೀಣದಶೆಯೊಂದಿಗೆ ಪಾಂಡ್ಯರು ಸ್ವಲ್ಪ ಕಾಲ ಮತ್ತೆ ಪ್ರಬಲರಾದರು. ಇವರು ಬಹುತೇಕ ಇಡೀ ತಮಿಳು ನಾಡನ್ನಾಳಿದರು.

ತಮಿಳರ ನಾಗರಿಕತೆ ಅವರು ವಾಸವಾಗಿದ್ದ ಪ್ರದೇಶಗಳಿಷ್ಟೆ ಸೀಮಿತವಾಗಿರಲಿಲ್ಲ. ಚೋಳರ ಆಳ್ವಿಕೆಯ ಸುವರ್ಣಯುಗದಲ್ಲಿ ಸಾಹಸಿ ನಾವಿಕರು ಅನೇಕ ಅಪರಿಚಿತ ಸಮುದ್ರಗಳನ್ನು ದಾಟಿ ದೂರದೂರ ದೇಶಗಳಲ್ಲಿ ತಮಿಳು ಸಂಸ್ಕøತಿ ನಾಗರಿಕತೆಗಳನ್ನು ಪ್ರಸಾರ ಮಾಡಿದರು. ಈಗಲೂ ದೂರ ಪ್ರಾಚ್ಯದಲ್ಲಿ ಈ ಪ್ರವಾಸಿಗಳ ನಿಷ್ಕøಷ್ಟ ದಾಖಲೆಗಳು ಕಾಣಸಿಗುತ್ತವೆ.

ಮುಸ್ಲಿಮರ ಕರ್ಣಾಟಕ ಆಕ್ರಮಣ ಸಂಪೂರ್ಣವಾದ್ದು 1652ರಲ್ಲಿ. 1693ರಲ್ಲಿ ಮಧುರೈ ಮತ್ತು ತಂಜಾವೂರು ಔರಂಗ್‍ಜೇಬನ ಅಧೀನ ರಾಜ್ಯಗಳಾದವು. 1686ರಲ್ಲಿ ಪುದುಕೋಟೈಯ ತೊಂಡಮಾನರು ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದರು. ಮಧುರೆಯ ರಾಜಪ್ರತಿನಿಧಿಯಾಗಿದ್ದ (1689-1706) ರಾಣಿ ಮಂಗಮ್ಮಾಳ್ ರಸ್ತೆಗಳನ್ನೂ ದೇವಸ್ಥಾನಗಳನ್ನೂ ಕೊಳಗಳನ್ನು ಛತ್ರಗಳನ್ನೂ ಕಟ್ಟಿಸಿದಳು. ಜನೋಪಯುಕ್ತ ಕಾರ್ಯಗಳಿಂದಾಗಿ ಇಂದಿಗೂ ಅವಳ ನೆನಪು ತಮಿಳು ನಾಡಿನಲ್ಲಿ. ಇನ್ನೊಬ್ಬ ರಾಜಪ್ರತಿನಿಧಿಯಾಗಿದ್ದ (1732-1736) ರಾಣಿ ಮೀನಾಕ್ಷಿಗೆ ಆರ್ಕಾಟ್ ನವಾಬ್ ದೋಸ್ತ್‍ಅಲಿ ಮೋಸ ಮಾಡಿ ಅವಳನ್ನು ಸೆರೆಹಿಡಿದು ಅವಳ ರಾಜ್ಯವನ್ನು ವಶಪಡಿಸಿಕೊಂಡ. ಕರ್ನಾಟಕದ ನವಾಬರು 18ನೆಯ ಶತಮಾನದ ಆರಂಭದ ವೇಳೆಗೆ ಬಹುತೇಕ ಇಡೀ ತಮಿಳುನಾಡಿನ ಮೇಲೆ ಒಡೆತನ ಸ್ಥಾಪಿಸಿದರು.

ತಂಜಾವೂರಿನ ನಾಯಕರು ಹೆಚ್ಚು ಕಡಿಮೆ ಸ್ವತಂತ್ರರಾಗಿದ್ದರೂ ಕೇಂದ್ರ ಅಧಿಕಾರಕ್ಕೆ ವಿಧೇಯರಾಗಿದ್ದರು. ಅನೇಕ ಮುಖ್ಯ ಸಂದರ್ಭಗಳಲ್ಲಿ ಅದರ ನೆರವಿಗೆ ಹೋದರು. ಇವರ ಪೈಕಿ ಕೊನೆಯವನು ವಿಜಯರಾಘವ (1633-73). ಇವನು ದುರ್ಬಲನೂ ಅಸಮರ್ಥನೂ ಆದ ಆಡಳಿತಗಾರನಾಗಿದ್ದ. ಇತರ ನಾಯಕರೂ ಮುಸ್ಲಿಮರೂ ಯರೋಪಿಯನ್ನರೂ ನೀಡಿದ ಕೋಟಲೆಗಳನ್ನು ಎದುರಿಸಲಾರದೆ ಹೋದ. ತಂಜಾವೂರು ಸ್ವಲ್ಪ ಕಾಲ ಬಿಜಾಪುರ ಸುಲ್ತಾನನ ಆಳ್ವಿಕೆಗೆ ತುತ್ತಾಗಿತ್ತು (1659). ಮದುರೆಯ ನಾಯಕ ಚೊಕ್ಕನಾಥ ತಂಜಾವೂರಿನ ಮೇಲೆ ಆಕ್ರಮಣ ನಡೆಸಿದಾಗ (1673) ವಿಜಯರಾಘವ ಮಡಿದ. 1676ರಲ್ಲಿ ಏಕೋಜಿ (ವೆಂಕೋಜಿ) ತಂಜಾವೂರಿನ ಸಿಂಹಾಸನವನ್ನಾಕ್ರಮಿಸಿಕೊಂಡ, ತಂಜಾವೂರು ನಾಯಕರ ಆಳ್ವಿಕೆ ಕೊನೆಗೊಂಡಿತು. ಏಕೋಜಿಯ ಅನಂತರ ಅವನ ವಂಶದವರು ಕರ್ನಾಟಕದ ನವಾಬನ ಆಶ್ರಯದಲ್ಲೂ ಅನಂತರ ಈಸ್ಟ್ ಇಂಡಿಯ ಕಂಪನಿಯ ಆಶ್ರಿತರಾಗಿಯೂ ಮುಂದುವರಿದರು. 1799ರಲ್ಲಿ ವೆಲ್ಲೆಸ್ಲಿಯ ಒತ್ತಡದಿಂದಾಗಿ ತಂಜಾವೂರಿನ ರಾಜ ಸರ್ಪೋಜಿ ಜೀವನಾಂಶ ಪಡೆದು ತನ್ನ ರಾಜ್ಯವನ್ನು ಬ್ರಿಟಿಷ್ ಆಡಳಿತದಲ್ಲೆ ಒಪ್ಪಿಸಿದ. 1855ರಲ್ಲಿ ಕೊನೆಯ ರಾಜ ತೀರಿಕೊಂಡ, ಅವನಿಗೆ ಗಂಡು ಸಂತಾನ ಇರಲಿಲ್ಲ. ಆದ್ದರಿಂದ ರಾಜಪದವಿ ಕೊನೆಗೊಂಡಿತು. ಒಟ್ಟಿನಲ್ಲಿ ದೌರ್ಬಲ್ಯ, ಉತ್ತರಾಧಿಕಾರದ ಬಗ್ಗೆ ವಾದವಿವಾದಗಳು, ಅದರ ಆಡಳಿತಗಾರರಿಂದಲೂ ಹೊರಂಗಣ ಆಕ್ರಮಣಕಾರರಿಂದಲೂ ಆ ಪ್ರದೇಶದ ಸಂಪತ್ತಿನ ಲೂಟಿ_ಇವು ತಂಜಾವೂರಿನ ಮರಾಠಿ ಆಡಳಿತದ ಹೆಗ್ಗುರುತುಗಳೆನ್ನಬಹುದು.	

ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಜಿಂಜೀಯಲ್ಲಿ ನಾಯಕರ ಆಳ್ವಿಕೆ ಆರಂಭವಾಯಿತು. 1649ರಲ್ಲಿ ಬಿಜಾಪುರದ ಸೇನೆಯಿಂದ ಜಿಂಜೀಯ ನಾಯಕರ ಆಳ್ವಿಕೆ ಕೊನೆಗೊಂಡಿತು. ಫ್ರಾಂಕ್ವಾ ಮಾರ್ಟಿನ್ ಎಂಬ ಫ್ರೆಂಚನಿಗೆ ಪುದುಚೇರಿಯಲ್ಲಿ ನೆಲೆ ಏರ್ಪಡಿಸಿಕೊಳ್ಳಲು 1674ರಲ್ಲಿ ಬಿಜಾಪುರದ ರಾಜ್ಯಪಾಲ ಅನುಮತಿ ನೀಡಿದ. ಮೂರು ವರ್ಷಗಳಲ್ಲಿ ಶಿವಾಜಿ ಕರ್ನಾಟಕದ ದಂಡೆಯಾತ್ರೆ ನಡೆಸಿದ. ಅವನು ಕರ್ನಾಟಕದಲ್ಲಿ ಸ್ಥಾಪಿಸಿದ ಸರ್ಕಾರಕ್ಕೆ ಜಿಂಜೀ ಆಡಳಿತಕೇಂದ್ರವಾಯಿತು. ಆದರೆ 1698 ರಲ್ಲಿ ಅದು ಮೊಗಲರ ವಶವಾಯಿತು. ಕರ್ನಾಟಕದಲ್ಲಿ ಕೋಲೆರೂನ್ ಉತ್ತರಕ್ಕೆ ಮೊಗಲರ ನೇರ ಆಡಳಿತ ಆರಂಭವಾಯಿತು.

ತಮಿಳು ನಾಡಿನ ಆಧುನಿಕ ಇತಿಹಾಸ ಆರಂಭವಾಗುವುದು 16-17ನೆಯ ಶತಮಾನಗಳಲ್ಲಿ : ಪಶ್ಚಿಮದ ರಾಷ್ಟ್ರಗಳು ಇಲ್ಲಿಗೆ ಬಂದಾಗ, ಈಗಿನ ಚೆನ್ನೈ ನಗರದಲ್ಲಿ ಮತ್ತು ಅದರ ಸುತ್ತಮುತ್ತ ಪೋರ್ಚುಗೀಸರು, ಇಂಗ್ಲಿಷರು ಮುಂತಾದವರು ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದಾಗ, ಚೆನ್ನೈನಲ್ಲಿ ಈಗ ಫೋರ್ಟ್ ಸೇಂಟ್ ಜಾರ್ಜ್ ಇರುವ ಪ್ರದೇಶವನ್ನು ಬ್ರಿಟಿಷರು ಪ್ರವೇಶಿಸಲು 1639ರ ಆಗಸ್ಟ್ 22ರಂದು ಫ್ರಾನ್ಸಿಸ್ ಡೇ ಎಂಬವನಿಗೆ ಫರ್ಮಾನ್ ನೀಡಿದವನು ನಾಯಕ ವೆಂಕಟಾದ್ರಿ. ಅಂದಿನಿಂದ ಚೆನ್ನೈ ನಗರ ತಮಿಳು ನಾಡಿನ ಎಲ್ಲ ರಾಜಕೀಯ ಶೈಕ್ಷಣಿಕ ಆರ್ಥಿಕ ಸಾಂಸ್ಕøತಿಕ ಬೆಳವಣಿಗೆಯ ಕೇಂದ್ರವಾಗಿದೆ. 1639ರಲ್ಲಿ ಸ್ಥಾಪಿತವಾದಾಗ 7,000 ಜನರ ವಸತಿಯಾಗಿ ಆರಂಭವಾದ ನಗರ ಕ್ರಮವಾಗಿ ಬೆಳೆದಿದೆ.

ಚಕ್ರವರ್ತಿ ಔರಂಗಜೇಬನ ಮರಣಾನಂತರ ದಕ್ಷಿಣದ ಮೇಲೆ ಮೊಗಲ್ ಚಕ್ರವರ್ತಿಗಳ ಹತೋಟಿ ಸಡಿಸಲಾಯಿತು. ಆರ್ಕಾಟ್ ನವಾಬನನ್ನು ತನ್ನ ಆಶ್ರಿತನನ್ನಾಗಿ ಮಾಡಿಕೊಂಡು ನಿಜಾಮ 1724ರಲ್ಲಿ ತನ್ನ ಅಧಿಕಾರ ಸ್ಥಾಪಿಸಿದ. ನಿಜಾಮನಿಗೂ ಮರಾಠರಿಗೂ ನಡುವೆ ಅಧಿಕಾರಕ್ಕಾಗಿ ನಡೆಯುತ್ತಿದ್ದ ಕಚ್ಚಾಟ ಈ ವ್ಯವಸ್ಥೆಯಿಂದೇನೂ ಬದಲಾಗಲಿಲ್ಲ. ಆ ವೇಳೆಗೆ ಯೂರೋಪಿಯನ್ ಕಂಪನಿಗಳು ಬಲಿಷ್ಠವಾಗಿದ್ದವು. 1748ರಲ್ಲಿ ನಜಾಮ್-ಉಲ್-ಮುಲ್ಕನ ಮರಣಾನಂತರ ಅಧಿಕಾರಕ್ಕಾಗಿ ನಡೆದ ಯುದ್ಧಗಳಲ್ಲಿ ಇಂಗ್ಲಿಷರೂ ಫ್ರೆಂಚರೂ ಪರಸ್ಪರ ವಿರುದ್ಧ ಪಕ್ಷಗಳನ್ನು ವಹಿಸಿ ಕಾದಾಡಿದರು. ವ್ಯಾಪಾರ ಮತ್ತು ರಾಜ್ಯಕಾರಣದಲ್ಲಿ ತಮ್ಮ ನಡುವಣ ಸ್ಪರ್ಧೆಯ ಇತ್ಯರ್ಥಕ್ಕಾಗಿ ಸೆಣಸಿದುವು. ಅಂತಿಮವಾಗಿ ಇಂಗ್ಲಿಷರಿಗೆ ಜಯ ಒಲಿಯಿತು. ಅವರ ಪಕ್ಷಕಾರ ಮಹಮ್ಮದ್ ಅಲಿವಲಾಜಾ ಕರ್ನಾಟಕದ ನವಾಬನಾದ (1752). ಭಾರತದ ಉಳಿದ ಭಾಗಗಳಂತೆ ತಮಿಳು ನಾಡೂ 18ನೆಯ ಶತಮಾನದಲ್ಲಿ ಅವ್ಯವಸ್ಥೆ ಮತ್ತು ದುರಾಡಳಿತಗಳಿಗೆ ಒಳಗಾಗಿತ್ತು: ಬಹುತೇಕ ಅರಾಜಕತೆಯೇ ಹಬ್ಬಿತ್ತು. ಮದ್ರಾಸಿನಲ್ಲಿದ್ದ ಕಂಪನಿ ಸರ್ಕಾರ ದುರ್ಬಲವಾಗಿತ್ತು : ನಿಜಾಮ ಮತ್ತು ಮಹಮ್ಮದ್ ಅಲಿ ಇವರ ನಡುವೆಯಾಗಲಿ ಮಹಮ್ಮದ್ ಅಲಿ ಮತ್ತು ಇತರ ಸಣ್ಣಪುಟ್ಟ ಆಡಳಿತಗಾರರ ನಡುವೆಯಾಗಲಿ ಶಾಂತಿ ಸ್ಥಿರಗೊಳಿಸಲು ಅಸಮರ್ಥವಾಗಿತ್ತು; ಮಹಮ್ಮದ್ ಅಲಿಯ ಅನ್ಯಾಯಗಳನ್ನು ನಿಲ್ಲಿಸಲಾರದಾಗಿತ್ತು. ಮಹಮ್ಮದ್ ಅಲಿಯ ಕೋಟೆಗಳು ಇಂಗ್ಲಿಷರ ಅಧೀನದಲ್ಲಿದ್ದುವು. ಯುದ್ಧ ಕಾಲದಲ್ಲಿ ಇಡೀ ಆಡಳಿತವನ್ನು ಇಂಗ್ಲಿಷರು ವಹಿಸಿಕೊಳ್ಳಬಹುದಿತ್ತು. ಯೂರೋಪಿಯನ್ ಸಾಲಿಗರಿಂದ ನವಾಬ ಬಹಳ ಸಾಲ ಮಾಡಿದ್ದ. ಕಂಪನಿಗೆ ಇದು ಒಂದು ಸಮಸ್ಯೆಯಾಗಿತ್ತು. ನವಾಬ ಟಿಪ್ಪು ಸುಲ್ತಾನನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದಾನೆಂದು ವೆಲ್ಲೆಸ್ಲಿ ಕಂಡುಹಿಡಿದ. ಕರ್ನಾಟಕದ ಆಡಳಿತವನ್ನು ವಹಿಸಿಕೊಳ್ಳುವುದಕ್ಕೆ ಅದೇ ಒಂದು ನೆರವಾಯಿತು. ಇದಕ್ಕೆ ಪ್ರತಿಯಾಗಿ ವರಮಾನದ ಐದನೆಯ ಒಂದು ಭಾಗವನ್ನು ನವಾಬನಿಗೆ ವರ್ಷಾಶನವಾಗಿ ನೀಡಲಾಯಿತು. ಇದಕ್ಕೆ ಮುಂಚೆ, 3ನೆಯ ಮೈಸೂರು ಯುದ್ಧದ (1792) ಫಲವಾಗಿ ದಿಂಡಿಗಲ್ ಮತ್ತು ಅದರ ಸುತ್ತಮುತ್ತಣ ಪ್ರದೇಶವನ್ನೂ ಇನ್ನು ಕೆಲವು ಪ್ರದೇಶಗಳನ್ನೂ ಟಿಪ್ಪು ಸುಲ್ತಾನನಿಂದ ಕಿತ್ತುಕೊಳ್ಳಲಾಗಿತ್ತು. 1799ರಲ್ಲಿ ಕೊಯಮತ್ತೂರು ಇಂಗ್ಲಿಷರಿಗೆ ಸೇರಿತು.

ಹೀಗೆ 19ನೆಯ ಶತಮಾನದ ಆರಂಭದ ವೇಳೆಗೆ ಇಡೀ ತಮಿಳು ನಾಡು ಕಂಪನಿಯ ಆಡಳಿತಕ್ಕೆಒಳಪಟ್ಟಿತ್ತು. ವಾರನ್ ಹೇಸ್ಟಿಂಗ್ಸ್ ಗವರ್ನರ್ ಆದಾಗಿನಿಂದ ಇಂಗ್ಲಿಷರು ದೇಶದ ಆಳ್ವಿಕೆಯಲ್ಲಿ ಹೆಚ್ಚು ಆಸಕ್ತರಾದರು. ತಮಿಳು ನಾಡಿನ ಬಹುಭಾರವನ್ನೂ ತೆಲುಗು ಮಲಯಾಳಂ ಕನ್ನಡ ಭಾಷೆಗಳನ್ನಾಡುತ್ತಿದ್ದ ಜನರಿದ್ದ ಕೆಲವು ಪ್ರದೇಶಗಳನ್ನೂ ಒಳಗೊಂಡ ಮದ್ರಾಸ್ ಪ್ರಾಂತ್ಯದ ರಚನೆಯಾಯಿತು. ಮದ್ರಾಸ್ ನಗರ ರಾಜಧಾನಿಯಾಯಿತು. ಮಧುರೈ, ತಂಜಾವೂರು, ಕಾಂಚೀಪುರ, ಗಂಗೈಕೊಂಡ ಚೋಳಪುರ ಇವೆಲ್ಲ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡುವು. ಬ್ರಿಟಷರು ಪ್ರಥಮವಾಗಿ ವ್ಯಾಪಾರದಲ್ಲಿ ಆಸಕ್ತರಾಗಿದ್ದುದರಿಂದ ಬಂದರು ನಗರವಾದ ಮದ್ರಾಸ್ ಅವರ ಗಮನ ಸೆಳೆಯಿತು. ಬ್ರಿಟಿಷ್ ಆಡಳಿತದ ಕಾಲದ ಮದ್ರಾಸ್ ಪ್ರಾಂತ್ಯದಲ್ಲಿ 25 ಜಿಲ್ಲೆಗಳಿದ್ದುವು. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅದರ ಅಂಗವಾದ ಮದ್ರಾಸ್ ಪ್ರಾಂತ್ಯ ಕೂಡ ಸ್ವತಂತ್ರವಾಯಿತು. 1950ರಲ್ಲಿ ಭಾರತ ಗಣರಾಜ್ಯವಾದಾಗ ಚೆನ್ನೈ ಒಂದು ರಾಜ್ಯವಾಯಿತು. ತೆಲುಗು ಮಾತನಾಡುವ ಜನರು ಬಹುಸಂಖ್ಯೆಯಲ್ಲಿದ್ದ ಭಾಗವನ್ನು 1953ರಲ್ಲಿ ಆಂಧ್ರ ರಾಜ್ಯವೆಂದು ಪ್ರತ್ಯೇಕಿಸಲಾಯಿತಲ್ಲದೆ, ಬಳ್ಳಾರಿ ಜಿಲ್ಲೆಯನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. 1956ರಲ್ಲಿ ಭಾರತದ ರಾಜ್ಯಗಳ ಪುನರ್ವಿಂಗಡಣೆಯಾದಾಗ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ರಾಜ್ಯಕ್ಕೂ (ಕರ್ನಾಟಕ) ಮಲಬಾರು ಕೇರಳ ರಾಜ್ಯಕ್ಕೂ ಹಿಂದಿನ ತಿರುವಾಂಕೂರು ಸಂಸ್ಥಾನದ ದಕ್ಷಿಣ ಭಾಗದ ತಮಿಳು ಪ್ರದೇಶಗಳು ಮದ್ರಾಸ್ ರಾಜ್ಯದ ಪ್ರದೇಶಕ್ಕೂ ಸೇರಿದುವು. ರಾಜ್ಯಕ್ಕೆ ಅಧಿಕೃತವಾಗಿ ತಮಿಳು ನಾಡು ಎಂದು ನಾಮಕರಣವಾಯಿತು.					 	

ತಮಿಳು ನಾಡಿನಲ್ಲಿ ಕ್ರಿ.ಶ. 7ನೆಯ ಶತಮಾನಕ್ಕೆ ಹಿಂದಿನ, ಯಾವುದೇ ಧರ್ಮಕ್ಕೆ ಸೇರಿದ, ಕಟ್ಟಡಗಳು ಉಳಿದುಬಂದಿಲ್ಲ. ಆದರೆ ಕ್ರಿ.ಪೂ. ಸು. 2ನೆಯ ಶತಮಾನದಿಂದ ಕ್ರಿ.ಶ 2ನೆಯ ಶತಮಾನದವರೆಗಿನ ಸಂಗಮ್ ಸಾಹಿತ್ಯದಲ್ಲೂ ಅನಂತರ ಆಳ್ವಾರ್‍ಗಳು ಮತ್ತು ನಾಯನ್ಮಾರ್‍ಗಳು ರಚಿಸಿದ ಭಕ್ತಿ ಸಾಹಿತ್ಯದಲ್ಲೂ ಧಾರ್ಮಿಕ ಕಟ್ಟಡಗಳಿಗೆ ಸಂಬಂಧಿಸಿದ ಹಲವಾರು ಉಲ್ಲೇಖಗಳಿವೆ. ಇಳಙÉ್ಕೂೀಯಿಲ್.  ಮಾಡಕ್ಕೋಯಿಲ್ ಆಲರ್ ಕೋಯಿಲ್‍ಗಳು ಇವುಗಳ ಪೈಕಿ ಕೆಲವು. ಅಲ್ಲದೆ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ಪಾರಿಭಾಷಿಕ ಪದಗಳೂ ಸಾಹಿತ್ಯದಲ್ಲಿ ಕಂಡುಬಂದಿವೆ. ಇದರಿಂದ ಸಂಗಮ್ ಕಾಲದಲ್ಲೇ ತಮಿಳು ನಾಡಿನಲ್ಲಿ ಹಲವಾರು ಕಟ್ಟಡಗಳು ನಿರ್ಮಾಣಗೊಂಡಿದ್ದುವೆಂದು ಹೇಳಬಹುದು. ಬೇಗನೆ ನಶಿಸುವ ಮರಮುಟ್ಟುಗಳನ್ನು ಬಹುಶ: ಆಗ ಉಪಯೋಗಿಸಿದ್ದುದು ಆ ಕಟ್ಟಡಗಳು ಇಂದು ಉಳಿದಿಲ್ಲದಿರುವುದಕ್ಕೆ ಕಾರಣವಾಗಿರಬಹುದು.

ಆದರೆ ಅನಂತರ ವೈಷ್ಣವ ಹಾಗೂ ಶೈವ ಭಕ್ತಿಪಂಥಗಳು ತಮಿಳು ನಾಡಿನಲ್ಲೆಲ್ಲ ಹಬ್ಬಿದುವು. ಈ ಚಳವಳಿಗಳ ಫಲವಾಗಿ ಎಲ್ಲೆಲ್ಲೂ ದೇವಾಲಯಗಳು ನಿರ್ಮಿತವಾಗಿವೆ. ರಚನಾಕ್ರಮದಲ್ಲಿ, ಅಲಂಕರಣದಲ್ಲಿ ಇವು ವಿಭಿನ್ನವಾಗಿದ್ದರೂ ಇವುಗಳಲ್ಲಿ ಅನುಸರಿಸಿದ ಶೈಲಿ ಮಾತ್ರ ಒಂದೇ. ಅದು ದ್ರಾವಿಡ ಶೈಲಿ. ಗೋಪುರಾಕಾರದ ಮೇಲ್ಕಟ್ಟಡ. ಸರಳವಾದ ಹೊರಮೈಗೋಡೆ, ಎಂಬ ಸಾಲುಗಳುಳ್ಳ ಮಂಟಪಗಳು-ಇವು ಈ ಶೈಲಿಯ ಪ್ರಮುಖ ಲಕ್ಷಣಗಳು.

ಶತಮಾನಗಳ ಅನಂತರ ಬಂದ ಶಿಲ್ಪಶಾಸ್ತ್ರ ಗ್ರಂಥಗಳು ಮತ್ತು ಆಗಮಗಳು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಅನೇಕ ವಿವರಗಳನ್ನೂ ನೀಡಿವೆ. ಕಟ್ಟಡಗಳಿಗಾಗಿ ಸೂಕ್ತವಾದ ಕ್ಷೇತ್ರದ ಹಾಗೂ ಸಾಮಗ್ರಿಗಳ ಆಯ್ಕೆ, ಭಿನ್ನ ವಿನ್ಯಾಸಗಳಿಗೆ ಸಂಬಂಧಿಸಿದ ಮಾನಗಳು, ದೇವಾಲಯಗಳಲ್ಲಿ ಸ್ಥಾಪಿಸುವ ಪ್ರತಿಮೆಗಳ ಲಕ್ಷಣಗಳು. ಪೂಜಾವಿಧಿ ಪೂಜಾಸಾಮಗ್ರಿ, ತಾತ್ತ್ವಿಕ ಹಿನ್ನೆಲೆ, ಮುಂತಾದ ಎಲ್ಲ ವಿವರಗಳನ್ನೂ ಈ ಗ್ರಂಥಗಳಲ್ಲಿ ಕೊಟ್ಟಿದೆ. ಅನೇಕ ಸ್ತರಗಳ ವಿಮಾನಗಳನ್ನೂ ಒಂದರಿಂದ ಹಿಡಿದು ಸಾವಿರದವರೆಗಿನ ಕಂಬಗಳನ್ನುಳ್ಳ ಮಂಟಪಗಳನ್ನೂ ರಚಿಸುವ ವಿಧಾನಗಳನ್ನು ವಿವರಿಸಿದೆ. ವಿಮಾನ (ಗರ್ಭಗೃಹ). ಮಂಟಪಗಳು, ಪ್ರಾಕಾರ, ಧ್ವಜ ಸ್ತಂಭ ಹಾಗೂ ಗೋಪುರ-ಇವು ದೇವಾಲಯದಲ್ಲಿ ಪ್ರಮುಖವಾದ ಭಾಗಗಳು. ವಿಮಾನದಲ್ಲೂ ಅಧಿಷ್ಠಾನ, ಭಿತ್ತಿ, ಪ್ರಸ್ತರ, ಹಾರ, ಶಿಖರ ಮತ್ತು ಸ್ತೂಪಿ ಎಂಬ ಷಡಂಗಗಳಿರುತ್ತವೆ.

ತಮಿಳುನಾಡಿನ ಅತ್ಯಂತ ಪ್ರಾಚೀನ ದೇವಾಲಯದ ವಾಸ್ತುಶಿಲ್ಪವನ್ನು ಪಲ್ಲವ 1ನೆಯ ಮಹೇಂದ್ರವರ್ಮ (ಸು.580-630) ಬಂಡೆಯಲ್ಲಿ ಕೊರೆಯಿಸಿದ ದೇವಾಲಯಗಳಲ್ಲಿ ಕಾಣಬಹುದು. ಮಂಡಗ ಪಟ್ಟುವಿನ ಗುಹಾ ದೇವಾಲಯವೊಂದರಲ್ಲಿ ದೊರೆತ ಆತನ ಶಾಸನದಲ್ಲಿ ಅವನು ಬ್ರಹ್ಮ ವಿಷ್ಣು ಮಹೇಶ್ವರರಿಗಾಗಿ ಮರ, ಲೋಹ ಮತ್ತು ಗಾರೆಗಳಿಂದ ಕೂಡಿದ ಆಯತನವನ್ನು ಕಟ್ಟಿಸಿದುದಾಗಿ ಹೇಳಿದೆ. ಈ ಕಾಲಕ್ಕೆ ಸೇರಿದ ಇಂಥ ಗುಡಿಗಳು ಮದ್ರಾಸಿನ ಬಳಿಯ ಪಲ್ಲವರಂ, ತಿರುಚನಾಪಲ್ಲಿ, ದಳವಾನೂರು ಮುಂತಾದ ಕಡೆಗಳಲ್ಲಿ ಸಿಕ್ಕಿವೆ. ಇವುಗಳಲ್ಲಿ ಒಂದು, ಮೂರು ಅಥವಾ ಹೆಚ್ಚಿನ ಗರ್ಭಗೃಹಗಳಿವೆ. ಅಷ್ಟಕೋನಾಕಾರದ ನಡು ಭಾಗದಿಂದ ಕೂಡಿದ ಚಚ್ಚೌಕನೆಯ ಕಂಬಗಳಿರುತ್ತವೆ. ಈ ಕಂಬಗಳ ಚಚ್ಚೌಕದ ಬದಿಗಳ ಮೇಲೆ ಕಮಲ ಫಲಕಗಳಿವೆ. ಒಂದು ಬಾಗು ಇರುವ, ಏಣುಗಳುಳ್ಳ, ಮನುಷ್ಯನ ಮುಖವನ್ನು ಕೆತ್ತಿರುವ ಕಪೋತ ಪಾಲಿಕೆಗಳೂ ಗುಡಿಯ ದ್ವಾರದ ಎರಡೂ ಕಡೆ ಇರುವ ಎರುಡು ಕಥೆಗಳ ದ್ವಾರಪಾಲಕ ಮೂರ್ತಿಗಳೂ ಇರುತ್ತವೆ. ಇವು ಈ ಗುಡಿಗಳ ಪ್ರಮುಖ ಲಕ್ಷಣಗಳು.

ಒಂದನೆಯ ಮಹೇಂದ್ರವರ್ಮನ ಮಗ 1ನೆಯ ನರಸಿಂಹವರ್ಮ ಮಾಮಲ್ಲ(7ನೆಯ ಶತಮಾನದ ನಡುಗಾಲ) ಬಾದಾಮಿಗೆ ದಂಡೆತ್ತಿ ಹೋದಾಗ ಅಲ್ಲಿ ಬಯಲಿನಲ್ಲಿ ಕಟ್ಟಿದ್ದ, ಕಿರಿದಾದರೂ ಮುದ್ದಾದ, ಗುಡಿಗಳನ್ನು ಕಂಡ. ಆ ವೇಳೆಗಾಗಲೇ ಆ ಶೈಲಿಯಲ್ಲಿ ರೂಪುಗೊಂಡಿತ್ತು ಅವುಗಳಿಂದ ಪ್ರಭಾವಿತನಾದ ಆತ ಮಹಾಬಲಿಪುರದಲ್ಲಿ ಸಮುದ್ರತೀರದ ಮೇಲಿದ್ದ ಹೆಬ್ಬಂಡೆಗಳನ್ನು ಕೊರೆಯಿಸಿ ರಥಗಳೆಂದು ಕರೆಯಲಾದ ಅಖಂಡವಾದ ಗುಡಿಗಳನ್ನು ಕಟ್ಟಿಸಿದ, ಬಯಲಿನಲ್ಲಿ ಗುಡಿಗಳನ್ನು ಕಟ್ಟುವ ಪ್ರವೃತ್ತಿ ಇಲ್ಲಿಂದ ಆರಂಭವಾಯಿತು ಗುಡಿಸಿಲಿನ ಆಕಾರದ ಭೀಮರಥ ಮತ್ತು ಗಜಪೃಷ್ಠಾಕಾರದ ನಕುಲ ಸಹದೇವರಥಗಳು ತಮಿಳು ನಾಡಿನಲ್ಲಿ ಉಳಿದಿರುವ ಅತ್ಯಂತ ಪ್ರಾಚೀನ ದೇವಾಲಯಗಳ ಉದಾಹರಣೆಗಳು. ಇವುಗಳ ಶಿಖರಗಳು ಚೌಕ, ಅಷ್ಟಕೋನ ಅಥವಾ ಜಗಪೃಷ್ಠಾಕಾರಗಳಲ್ಲಿವೆ. ಗೋಡೆಯನ್ನು ಗೋಡೆಗಂಬಗಳಿಂದ ಅಂಕಣಗಳಾಗಿ ವಿಭಜಿಸಲಾಗಿದೆ. ಈ ಕಂಬಗಳ ತುದಿಯಲ್ಲಿ ತರಂಗಬೋದಿಗೆಗಗಳನ್ನು ಕೂಡಿಸಲಾಗಿದೆ. ಇವುಗಳ ನಡುವೆ ಮಾನವ ಹಾಗೂ ದೈವಆಕೃತಿಯ ವಿವಿಧ ಭಂಗಿಯ ವಿಗ್ರಹಗಳನ್ನು ಬಿಡಿಸಲಾಗಿದೆ. ಅವುಗಳ ಭಿನ್ನ ರೂಪಗಳಿಂದಾಗಿಯೂ ಅಚ್ಚುಕಟ್ಟಾದ ಪ್ರಮಾಣ, ನಾಜೂಕಾದ ಕೆತ್ತನೆ ಮತ್ತು ಅಲಂಕಾರಗಳಿಂದಾಗಿಯೂ ಈ ಕಂಬಗಳು ಇಂದಿಗೂ ಸಾಟಿಯಿಲ್ಲದವುಗಳೆನಿಸಿವೆ. ಈ ಗುಡಿಗಳಾವುದಕ್ಕೂ ಪ್ರಾಕಾರ, ಮಹಾದ್ವಾರ, ಗೋಪುರ ಮುಂತಾದವು ಇಲ್ಲ. 

ಪಲ್ಲವ 1ನೆಯ ಪರಮೇಶ್ವರವರ್ಮನ, ಎಂದರೆ 7ನೆಯ ಶತಮಾನದ ಉತ್ತರಾರ್ಧದ, ಕಾಲದಿಂದ ಹೊಸ ನಮೂನೆಯ ಆಲಯಗಳು ನಿರ್ಮಾಣವಾಗತೊಡಗಿದುವು. ಇವು ಏಕಶಿಲೆಯಲ್ಲಿ ಬಿಡಿಸಿದವುಗಳಾಗಿರದೆ ಕಲ್ಲಿನ ತುಂಡುಗಳಿಂದ ನಿರ್ಮಿತವಾದವು. ಚೆಂಗಲ್ಪಟ್‍ಗೆ ಸಮೀಪದ ಕೂರಮ್‍ನಲ್ಲಿಯ ಶಿವಾಲಯ ಇದಕ್ಕೆ ಒಂದು ಪ್ರಾಚೀನ ನಿದರ್ಶನ. ಇದು ಮಹಾಬಲಿಪುರದ ನಕುಲ-ಸಹದೇವ ರಥದಂತೆ ಗಜಪೃಷ್ಠಾಕಾದಲ್ಲಿರುವುದು ಗಮನಾರ್ಹ. ತಿರುಕ್ಕಳು ಕುನ್ಚಮ್‍ನಲ್ಲಿ ಇಂಥ ಇನೊಂದು ಆಲಯವಿದೆ. ಈ ದೇವಾಲಯಗಳೂ ಅಷ್ಟು ದೊಡ್ಡವೇನೂ ಅಲ್ಲ. ಇವಕ್ಕೂ ಪ್ರಾಕಾರವಾಗಲಿ ಗೋಪುರವಾಗಲಿ ಇಲ್ಲ. 

ರಾಜಸಿಂಹ ಇಮ್ಮಡಿ ನರಸಿಂಹವರ್ಮನ ಕಾಲದಲ್ಲಿ ವಾಸ್ತುಶಿಲ್ಪ ಅದುವರೆಗೂ ಅಭಿವೃದ್ಧಿ ಹೊಂದಿದಷ್ಟು ಅಭಿವೃದ್ಧಿ ಹೊಂದಿತ್ತು. ಇದು ಮುಂದಿನ ಹಲವು ಶತಮಾನಗಳಿಗೆ ಮಾದರಿಯಾಗಿ ಉಳಿಯಿತು. ತಮಿಳು ನಾಡಿನ ವಾಸ್ತು ಶಿಲ್ಪ ಅದೇ ಜಾಡಿನಲ್ಲಿ ಮುಂದುವರಿಯಿತೆನ್ನಬಹುದು. ರಾಜಧಾನಿಯಾದ ಕಾಂಚೀಪುರದ ಕೈಲಾಸನಾಥ ಮತ್ತು ಪನಮಲೈ ಗ್ರಾಮದ ತಾಲಗಿರೀಶ್ವರ ದೇವಾಲಯಗಳೂ ಮಹಾಬಲಿಪುರದ ಸಮುದ್ರತೀರದಲ್ಲಿರುವ, ಮೂರು ಗರ್ಭಗುಡಿಗಳಿಂದ ಕೂಡಿದ ಅಪೂರ್ವ ದೇವಾಲಯವೂ ಇವನ ಕಾಲದಲ್ಲಿ ವಾಸ್ತುಶಿಲ್ಪ ಕ್ಷೇತ್ರದಲ್ಲಿ ಆದ ಸಾಧನೆಯ ಪ್ರತೀಕಗಳಾಗಿವೆ. ಇವು ಮೂರೂ ಕಲ್ಲಿನ ಕಟ್ಟಡಗಳು. ಇವು ಹಲವು ತಲಗಳ ಉನ್ನತ ಮೇಲ್ಕಟ್ಟಡಗಳಿಂದ ಕೂಡಿವೆ. ತಾಲಗಿರೀಶ್ವರ ಆಲಯ ವಿನಾ ಉಳಿದ ಎರಡಕ್ಕೆ ಪ್ರಾಕಾರಗಳಿವೆ. ಕಂಚಿಯ ಕೈಲಾಸನಾಥಾಲಯದ ಪ್ರಾಕಾರದ ಒಳಹೊರ ಪಾಶ್ರ್ವಗಳಲ್ಲಿ ಹಲವಾರು ಸಣ್ಣ ಗುಡಿಗಳ ಸಾಲುಗಳಿರುವುದು ಗಮನಾರ್ಹ. ಸಣ್ಣ ಗೋಪುರ ಸಹ ಈ ಆಲಯಕ್ಕಿದೆ; ಈ ಬಗೆಯ ರಚನೆಗಳಲ್ಲಿ ಇದೇ ಅತ್ಯಂತ ಪ್ರಾಚೀನವಾದ್ದು. ಮಧ್ಯದ ಗುಡಿಯಲ್ಲಿ ಲಿಂಗವನ್ನು ಪ್ರತಿಷ್ಠಿಸಿದೆ. ಇದಕ್ಕೆ ಪೂರಕವಾಗಿ ಹೊರಮುಖವಾಗಿ ಇನ್ನೂ ಏಳು ಗುಡಿಗಳಿವೆ. ಆದರೆ ಅನಂತರದ ಕಾಲದಲ್ಲಿ ಈ ಉಪಗುಡಿಗಳನ್ನು ಮುಖ್ಯ ಗುಡಿಯಿಂದ ಪ್ರತ್ಯೇಕಿಸಿ ದೇವಾಲಯದ ಅಂಗಳದಲ್ಲಿ ಕಟ್ಟುವ ಪದ್ಧತಿ ಅಸ್ತಿತ್ವಕ್ಕೆ ಬಂತು. ಮಹಾಬಲಿಪುರದ ಕಡಲಕರೆಯ ದೇವಾಲಯದ ಗೋಪುರ ಈಗ ಉಳಿದಿಲ್ಲ. ಆದರೆ ಅದರ ಪ್ರಾಕಾರದಲ್ಲಿ ತಲೆ ಎತ್ತಿ ಮಲಗಿದ ವೃಷಭಗಳನ್ನು ಸಾಲಾಗಿ ಕೆತ್ತಲಾಗಿತ್ತು. ಅವುಗಳಲ್ಲಿ ಕೆಲವು ಇನ್ನೂ ಇವೆ.

ಕಾಂಚೀಪುರದ ವೈಕುಂಠ ಪೆರುಮಾಳ್ ದೇವಾಲಯ ಸಹ ಸುಮಾರು ಇದೇ ಕಾಲದ್ದು; ಎಂದರೆ ಎಂಟನೆಯ ಶತಮಾನದ ಮಧ್ಯಭಾಗಕ್ಕೆ ಸೇರಿದ್ದು. ಅನ್ಯತ: ಮೇಲಿನ ಗುಡಿಗಳಂತೆಯೇ ಇದ್ದರೂ, ಇದಕ್ಕೆ ಮೂರು ಅಂತಸ್ತುಗಳ ವಿಮಾನವಿದೆ. ಇಂಥ ವಿಮಾನಗಳನ್ನು ಅಷ್ಟಾಂಗ ವಿಮಾನಗಳೆಂದು ಕರೆಯಲಾಗಿದೆ. ಈ ಬಗೆಯ ವಿಮಾನಕ್ಕೆ ಇದು ಬಹುಶ: ಅತ್ಯಂತ ಪ್ರಾಚೀನ ನಿದರ್ಶನ.

ಅನಂತರದ ಶತಮಾನಗಳಲ್ಲಿ ಚೌಕ ಅಥವಾ ಗಜಪೃಷ್ಠಾಕಾರದ ಶೀಲಾ ದೇವಾಲಯಗಳು ಸಾಮಾನ್ಯವಾಗಿ ನಿರ್ಮಿತವಾಗಿತ್ತಿದ್ದುವು. ಕೆಲವು ದೇವಾಲಯಗಳು ಚೌಕನೆಯ ಮೈಯ, ಆದರೆ ಗಜಪೃಷ್ಠಾಕೃತಿಯ ಮೇಲ್ಕಟ್ಟಡವುಳ್ಳಂಥವಾಗಿದ್ದುವು. ಇನ್ನು ಕೆಲವು ದೇವಾಲಯಗಳಲ್ಲಿ ವರ್ತುಲಾಕಾದ ಗರ್ಭಗುಡಿಗಳೂ ಚೌಕಾಕಾರದ ಪ್ರಾಕಾರಗಳೂ ಇದ್ದುವು. ಪುದುಕೋಟೈ ಜಿಲ್ಲೆಯ ನಾರ್ತಾಮಲೈ ಗ್ರಾಮದ ವಿಜಯಾಲಯ ಚೋಳೇಶ್ವರ ದೇವಾಲಯದಲ್ಲಿ ಇಂಥ ವರ್ತುಲಾಕಾರದ ಗರ್ಭಗುಡಿ ಇದೆ. ಚೋಳ ಶೈಲಿಯ ಆರಂಭದ ದೆಸೆಯನ್ನು ಇಲ್ಲಿ ಗುರುತಿಸಬಹುದು. ಇದು ಬಹುಶ: 9ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯಾಲಯ ಚೋಳನಿಂದ ನಿರ್ಮಿತವಾಯಿತೆಂದು ಹೇಳಲಾಗಿದೆ. ಇಲ್ಲಿ ಮಧ್ಯದ ಮುಖ್ಯ ಗುಡಿಯ ಸುತ್ತಲೂ ಉಪಗುಡಿಗಳನ್ನು ನಿರ್ಮಿಸಲಾಗಿದೆ. ಈ ಹೊಸ ಪದ್ಧತಿಯಲ್ಲಿ ಸ್ವಲ್ಪ ಕಾಲದ ಅನಂತರ ನಿರ್ಮಿಸಲಾದ ಕಟ್ಟಡದ ಉದಾಹರಣೆಯೆಂದರೆ ಪುದುಕೋಟೈ ಬಳಿಯ ತಿರುಕ್ಕಟ್ಟಳ್ಳೆ ಗ್ರಾಮದ ಸುಂದರೇಶ್ವರಾಲಯ. ಸುಮಾರು ಇದೇ ಅವಧಿಯ, ಆದರೆ ಪಾಂಡ್ಯರ ಆಳ್ವಿಕೆಗೆ ಒಳಪಟ್ಟ ಪ್ರದೇಶದ ಕಛಿಗುಮಲೈಯಲ್ಲಿಯ ವೆಟ್ಟುವನ್ ಕೋವಿಲ್‍ನಲ್ಲಿ ಸಹ ಚೋಳರ ಪ್ರದೇಶದ ದೇವಾಲಯ ವಾಸ್ತು ಲಕ್ಷಣಗಳನ್ನು ಕಾಣಬಹುದು. ಇಲ್ಲಿಯದು ಏಕಶಿಲಾ ದೇವಾಲಯ.

ಈ ಶೈಲಿಯ ದೇವಾಲಯಗಳಲ್ಲಿ ಮುಖ್ಯವಾಗಿ ಆರು ಅಥವಾ ಎಂಟು ಮೂಲೆಗಳ ಅಥವಾ ಗೋಳಾಕಾರದ ಶಿಖರಗಳು, ಗರ್ಭಗುಡಿಯ ಸುತ್ತಲಿನ ಗೋಡೆಯ ಒಳಮುಖದಲ್ಲಿ ಅಳವಡಿಸಲಾದ ದೇವಕೋಷ್ಠಗಳು. ಆಯಾಕಾರದ ಬೋದಿಗೆಗಳನ್ನುಳ್ಳ ಕಂಬಗಳು ಮತ್ತು ಗೋಡೆಗಂಬಗಳು ಇರುತ್ತವೆ. ಈ ಬೋದಿಗೆಗಳ ಎರಡು ತುದಿಗಳನ್ನು ಒಂದು ಕೋನದಲ್ಲಿ ತುಂಡರಿಸಿದಾಗ ಮಧ್ಯಭಾಗ ಮುಂಚಾಚಿದಂತೆ ತೋರುತ್ತದೆ. ದೇವಕೋಷ್ಠಗಳಲ್ಲಿ ಸಾಮಾನ್ಯವಾಗಿ ಗಣೇಶ, ದಕ್ಷಿಣಾಮೂರ್ತಿ, ಅರ್ಧನಾರೇಶ್ವರ ಮತ್ತು ದುರ್ಗೆಯರ ವಿಗ್ರಹಗಳನ್ನು ಸ್ಥಾಪಿಸಲಾಗಿರುತ್ತದೆ.

ವಿಜಯಾಲಯನ ಮಗ ಆದಿತ್ಯ ಕಾವೇರಿಯ ಎರಡೂ ತೀರಗಳಲ್ಲಿ ಹಲವಾರು ಗುಡಿಗಳನ್ನು ಕಟ್ಟಿಸಿದ. ಅವುಗಳಲ್ಲಿ ಹಲವು ಈಗಲೂ ಇವೆ. ಇವನು ಸಂಪ್ರದಾಯವನ್ನು ಮುಂದುರಿಸಿದುದಲ್ಲದೆ ಕೆಲವು ಹೊಸ ರೀತಿಗಳನ್ನೂ ಪ್ರಾರಂಭಿಸಿದ. ಉಪಾನದಿಂದ ಸ್ತೂಪಿಯ ವರೆಗೂ ಚೌಕಾಕಾರದ ದೇವಾಲಯಗಳು ನಿರ್ಮಿತವಾದ್ದು ಈ ಕಾಲದಲ್ಲಿ, ಕುಂಭಕೋಣದ ನಾಗೇಶ್ವರಾಲಯ ಇದಕ್ಕೊಂದು ನಿದರ್ಶನ. ಶ್ರೀನಿವಾಸನಲ್ಲೂರಿನ ಕೊರಂಗನಾಥ ದೇವಾಲಯದಲ್ಲೂ ಇದೇ ವಿನ್ಯಾಸವಿದೆಯಾದರೂ ಇದರಲ್ಲಿ ಇನ್ನೊಂದು ನಾವೀನ್ಯವನ್ನು ಕಾಣಬಹುದು. ಗರ್ಭಗುಡಿಯನ್ನು ಆವರಿಸುವ ಮಂಟಪದ ಎತ್ತರವನ್ನು ಇಲ್ಲಿ ದ್ವಿಗುಣೀಕರಿಸಲಾಗಿದೆ. ಇದರಿಂದ ಇಡೀ ಕಟ್ಟಡದ ಭವ್ಯತೆ ಹೆಚ್ಚಿದೆ. ತಂಜಾವೂರಿನ ರಾಜ ರಾಜೇಶ್ವರ ಅಥವಾ ಬೃಹದೀಶ್ವರಾಲಯ ಇದಕ್ಕೊಂದು ಉತ್ಕøಷ್ಟ ಮಾದರಿ. ಇದನ್ನು ಕಟ್ಟಿಸಿದವನು 1ನೆಯ ರಾಜರಾಜ ಚೋಳ. ಆದಿತ್ಯನ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳ ಮಾದರಿಯ ಹಲವು ಶಿಲಾ ದೇವಾಲಯಗಳನ್ನು 10ನೆಯ ಶತಮಾನದಲ್ಲಿ ಕಟ್ಟಲಾಯಿತು. ಇವೆಲ್ಲ ಸರಳ, ಅಷ್ಟು ದೊಡ್ಡವಲ್ಲ, ಆಡಂಬರಪೂರಿತವಲ್ಲ. ಇಂಥ ದೇಗುಲದ ಸುತ್ತಲೂ ಒಂದೇ ಒಂದು ಪ್ರಾಕಾರ ಇರುತ್ತದೆ. ಇದರ ಮೇಲ್ಕಟ್ಟಡ ಮೂರು ಅಂತಸ್ತುಗಳಿಗಿಂತ ಹೆಚ್ಚು ಎತ್ತರವಾಗಿರುವುದಿಲ್ಲ. ಮೇಲ್ಕಟ್ಟಡದ ಪಾಗಾರಗಳಲ್ಲಿ ಕೂಟ, ಶಾಲಾ ಹಾಗೂ ಪಂಜರಗಳನ್ನು ಉಬ್ಬು ಚಿತ್ರಗಳಲ್ಲಿ ಕಡೆಯಲಾಗಿದೆ.

ಅನಂತದ ಶತಮಾನಗಳಲ್ಲಿ ದೇವಾಲಯದ ಪ್ರಾಕಾರದೊಳಗೆ ಇತರ ಕಟ್ಟಡಗಳನ್ನು ಜೋಡಿಸುವ ಪದ್ಧತಿ ಬೆಳೆಯಿತು. ಸ್ತ್ರೀ ದೇವತೆಗಳಿಗೆ ಪ್ರತ್ಯೇಕವಾದ ಗುಡಿಗಳು ಕಟ್ಟಲ್ಪಟ್ಟುವು. ಕಂಬಗಳಲ್ಲಿ, ಗೋಡೆಗಂಬಗಳಲ್ಲಿ ಜಟಿಲವಾದ ಕೆತ್ತನೆಗಳನ್ನು ಅಳವಡಿಸಿ ಮಂಟಪಗಳನ್ನು ಪರಿಷ್ಕರಿಸಲಾಯಿತು. ಕಂಬಗಳ ಎರಡು ತುದಿಗಳ ಬೋದಿಗೆಗಳು ಗೆಡ್ಡೆಯಾಕಾರ ತಾಳಿದುವು. ಕುದುರೆಗಳಿಂದ ಎಳೆಯಲ್ಪಟ್ಟ ರಥವನ್ನು ಹೋಲುವ ಮುಂಭಾಗವುಳ್ಳ ಮಂಟಪಗಳು ಅಸ್ತಿತ್ವಕ್ಕೆ ಬಂದುವು. ಎತ್ತರವಾದ ವಿಮಾನ, ಕುಬ್ಜವಾದ ಗೋಪುರ ಮತ್ತು ಒಂದೇ ಪ್ರಾಕಾರವನ್ನೊಳಗೊಂಡ, 12ನೆಯ ಶತಮಾನದ ಜೋಳ ಶೈಲಿಯ ದೇವಾಲಯಗಳಿಗೆ ದಾರಾಸುರಮ್‍ದ ಶಿವಾಲಯ, ತ್ರಿಭುವನದಲ್ಲಿಯ ಕಂಪಹರೇಶ್ವರಾಲಯ- ಇವು ನಿದರ್ಶಗಳಾಗಿವೆ. 

ಅನಂತರದ ಪಾಂಡ್ಯರ ಕಾಲದಲ್ಲಿ ಗೋಪುರಗಳು ಸಹ ಅನೇಕ ಅಂತಸ್ತುಗಳನ್ನೊಳಗೊಂಡು ಎತ್ತರವಾದುವು. ಪ್ರಾಕಾರಗಳ ಸಂಖ್ಯೆ ಬೆಳೆಯಿತು. ಒಳಗಿನ ಬೇರೆ ಬೇರೆ ದೇವತೆಗಳಿಗೂ ಸ್ತ್ರೀ ದೇವತೆಗಳಿಗೂ ಪ್ರತ್ಯೇಕ ಗುಡಿಗಳನ್ನು ಕಟ್ಟಲಾಯಿತು. ನೂರು ಅಥವಾ ಸಾವಿರ ಕಂಬಗಳ ಮಂಟಪಗಳು ಕಾಣಿಸಿಕೊಂಡುವು. ಚಿದಂಬರಂ, ತಿರುವಣ್ಣಾಮಲೈಗಳ ಆಲಯಗಳನ್ನು ನೋಡಿದಾಗ ಈ ಅಂಶಗಳು ವ್ಯಕ್ತವಾಗುತ್ತವೆ. ಈ ಹೊಸ ಪ್ರವೃತ್ತಿಯ ಫಲವಾಗಿ ವಿಮಾನಗಳಲ್ಲಿ ನಯ ಗೆಲಸ ಕಡಿಮೆಯಾಗಿ, ಅವು ತಮ್ಮ ಪ್ರಾಧಾನ್ಯವನ್ನು ಕಳೆದುಕೊಂಡುವು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಗೋಪುರಗಳ, ಮಂಟಪಗಳು ಮತ್ತು ಪ್ರಾಕಾರಗಳ ರಚನೆಯಲ್ಲಿ ಇನ್ನಷ್ಟು ಪ್ರಗತಿಯಾಯಿತು. ಇದು ಇಡೀ ತಮಿಳು ನಾಡಿಗೂ ಹಬ್ಬಿತು. ಈ ಘಟ್ಟದ ರಚನೆಗಳ ಉತ್ಕøಷ್ಟ ಉದಾಹರಣೆಗಳನ್ನು ನಾವು ವಿಜಯನಗರದ ರಾಜಧಾನಿಯ ವಿಠಲ, ಹಜಾರ ರಾಮ ಮುಂತಾದ ದೇಗುಲಗಳಲ್ಲೇ ಅಲ್ಲದೆ ಪ್ರಾಂತೀಯ ಪಟ್ಟಣಗಳಾದ ವೆಲ್ಲೂರು, ಕಂಚಿ, ಕುಂಭಕೋಣ, ಶ್ರೀರಂಗಂ, ಮುಂತಾದವುಗಳಲ್ಲಿಯ ದೇವಾಲಯಗಳಲ್ಲೂ ಕಾಣಬಹುದು. ವೆಲ್ಲೂರಿನ ಕಲ್ಯಾಣಮಂಟಪ (15ನೆಯ ಶತಮಾನ), ಚಿದಂಬರಂ ಶ್ರೀರಂಗಂ ತಿರುವಣ್ಣಾಮಲೈಗಳ ಗೋಪುರಗಳು ಗಮನಾರ್ಹ ಉದಾಹರಣೆಗಳು. ಮಂಟಪದಲ್ಲಿಯ ಅಖಂಡ ಶಿಲಾಸ್ತಂಭಗಳು ಕ್ರಮೇಣ ಬೇಟೆಯ ದೃಶ್ಯಗಳು, ಅಲಂಕೃತ ವ್ಯಾಳಗಳು ಮುಂತಾದವುಗಳಿಂದ ಚಿತ್ರಿತವಾದ ಕಲಾಕೃತಿಕಡೆತಗಳಾದುವು. ಈ ಸ್ತಂಭಗಳೇ ಅಲ್ಲದೆ ಶಿಲಾಮಂಟಪಗಳೂ ವಿಶಿಷ್ಟ ಕಲಾಕೃತಿಗಳಾದುವು. ಇವುಗಳಲ್ಲಿರುವ, ಮುಂಜಾಜಿದ, ಎರಡು ಬಾಗುಗಳುಳ್ಳ ಏಣುಗಳೂ (ಕೊಡಂಗೈ) ಅವುಗಳಲ್ಲಿ ತೋರುವ ಕೆತ್ತನೆಯ ಕೆಲಸವೂ ವಿಚಿತ್ರವಾದಂಥವು. ಅವುಗಳ ಅಡಿಯಲ್ಲಿ, ಮರಕ್ಕೆ ಮೊಳೆ ಹೊಡೆದಂತೆ ಅಥವಾ ತಿರುಪುಮೊಳೆ ತಿರುಗಿಸಿದಂತೆ ಕಾಣುವ ಕೆತ್ತನೆಯ ಕೆಲಸವೂ ಅದ್ಭುತವಾದಂಥವು. ಕಲ್ಲಿನ ಕೆಲಸದ ಈ ರೂವಾರಿಗಳು ತಮ್ಮ ಕಾಲದ ಬಡಗಿಗಳನ್ನು ಮೀರಿಸಲು ಯತ್ನಿಸುತ್ತಿದ್ದರೆಂಬುದನ್ನು ತೋರಿಸುವ ಈ ಕಂಡೆತಗಳು ಮರಗೆಲಸಗಳೇಯೋ ಏನೋ ಎಂಬ ಭ್ರಮೆ ಬರಿಸುತ್ತವೆ. ಮುಖ್ಯ ಗುಡಿಯ ಸುತ್ತ ಹೆಚ್ಚು ಹೆಚ್ಚು ಪ್ರಾಕಾರಗಳನ್ನು ನಿರ್ಮಿಸುವ ಪದ್ಧತಿಯಿಂದ ಇಡೀ ವಾಸ್ತುಶಿಲ್ಪ ಸಂಕೀರ್ಣಕ್ಕೆ ಒಂದು ಭವ್ಯತೆಯನ್ನು ದೊರಕಿಸಿ ಕೊಡುವ ಪ್ರಯತ್ನ ಸಫಲವಾಯಿತು. ಕಾವೇರಿ ತೀರದ ಜಂಬುಕೇಶ್ವರಮ್‍ನ ಪಂಚ ಪ್ರಾಕಾರ ಸಂಕೀರ್ಣ, ಶ್ರೀರಂಗದ ಸಪ್ತ ಪ್ರಾಕಾರ ಸಂಕೀರ್ಣ-ಇವು ಈ ಅಮೋಘ ಬೆಳೆವಣಿಗೆಗೆ ಸಾಕ್ಷಿಗಳಾಗಿ ನಿಂತಿವೆ. ಈ ಆಲಯಗಳ ಅತ್ಯಂತ ಹೊರ ಪ್ರಾಕಾರದ ನಾಲ್ಕು ಪ್ರವೇಶದ್ವಾರಗಳ ಮೇಲೂ ಉನ್ನತವಾದ ಗೋಪುರಗಳಿವೆ. ಈ ಬೃಹದ್ಗೋಪುರಗಳನ್ನು ಸಾಮಾನ್ಯವಾಗಿ ರಾಯಗೋಪುರಗಳೆಂದು ಕರೆಯುತ್ತಾರೆ. ಈ ಗೋಪುರಗಳ ನಿರ್ಮಾಣಕ್ಕೆ ಅಗತ್ಯವಾದ ಅಗಾಧವಾದ ಸಾಮಗ್ರಿಯನ್ನೂ ಮಾನವಶಕ್ತಿಯನ್ನೂ ಧರ್ಮನಿಷ್ಠ ಜನರನೇಕರು ಮನ:ಪೂರ್ವಕವಾಗಿ ಒದಗಿಸಿದ್ದರಿಂದಲೂ ಧರ್ಮನಿಷ್ಠ ದೊರೆಗಳು ಅವರಿಗೆ ಸ್ಫೂರ್ತಿ ನೀಡಿದ್ದರಿಂದಲೂ ಇಂಥ ಕಟ್ಟಡಗಳ ನಿರ್ಮಾಣ ಸಾಧ್ಯವಾಯಿತೆನ್ನಬಹುದು. ಹಲವು ಬಗೆಯ ಸಾಮಗ್ರಿಗಳಿಂದಲೂ ಭಾಗಗಳಿಂದಲೂ ಸಂಯೋಜಿತವಾದಂತೆ ತೋರುವಂತೆ ಮಂಟಪಗಳನ್ನೂ ಸ್ತಂಭಗಳನ್ನೂ ಕೊರೆಯುತ್ತಿದ್ದರು. ಕಂಬದ ಬೋದಿಗೆಗಳು ಮೊದಲಿನಂತೆ ಗೆಡ್ಡೆಯಂತಿರುವ ಬದಲು ಬಾಳೆಯ ಹೂವಿನ ಆಕಾರ ತಾಳಿದುವು. ಇವನ್ನು ಪುಷ್ಪ ಬೋದಿಗೆಗಳೆಂದು ಕರೆಯಲಾಗಿದೆ. ಇಸ್ಲಾಂ ವಾಸ್ತುಶಿಲ್ಪದ ಪ್ರಭಾವದಿಂದ ವಿಜಯನಗರದ ಅರಸರು ಮತ್ತು ಅವರ ಮಾಂಡಲಿಕರು ಇಟ್ಟಿಗೆ ಹಾಗೂ ಗಾರೆಗಳನ್ನು ಉಪಯೋಗಿಸಿ ಕಮಾನುಗಳನ್ನು ಕಟ್ಟಲು ಆರಂಭಿಸಿದರು.

ಈ ಕಾಲದಲ್ಲಿ ಮಂಟಪ ನಿರ್ಮಾಣಕ್ಕೆ ವಿಶೇಷವಾದ ಗಮನ ನೀಡಲಾಯಿತು. ಅವುಗಳಲ್ಲಿಯ ಕಂಬಗಳು ಬಹಳವಾಗಿ ಪರಿಷ್ಕಾರಗೊಂಡುವು. ಕಂಬಗಳ ದುಂಡನೆಯ ದಿಂಡುಗಳಲ್ಲಿ ಪುರಾಣಗಳಿಂದ ಆಯ್ದ ಕಥೆಗಳನ್ನು ನಿರೂಪಿಸುವ ಚಿತ್ರಗಳನ್ನೂ ಗ್ರಾಮ ಜೀವನ ಚಿತ್ರಗಳನ್ನೂ ಕೊರೆಯಲಾಯಿತು. ಕೆಲವು ಕಂಬಗಳಲ್ಲಿ ಅರಸರ ಮತ್ತು ಅವರ ಸಂಬಂಧಿಕರ ಪ್ರತಿಕೃತಿಗಳನ್ನು ಕೊರೆಯಲಾಗುತ್ತಿತ್ತು. ಇನ್ನು ಹಲವು ಕಂಬಗಳ ದಿಂಡುಗಳಲ್ಲಿ ಬಹುಮುಖಗಳ ಸಣ್ಣ ಸಣ್ಣ ಕಂಬಗಳನ್ನು ಕೊರೆದು, ಅವನ್ನು ಬಡಿದರೆ ಸಂಗೀತಸ್ವರಗಳು ಹೊರಡುವಂತೆ ಮಾಡಲಾಯಿತು. ಆಧುನಿಕ ಸಂಗೀತಶಾಸ್ತ್ರಜ್ಞರು ಇವನ್ನು ಸಂಗೀತ ಸ್ತಂಭಗಳೆಂದು ಕರೆದಿದ್ದಾರೆ. ಮಧುರೈ ಮೀನಾಕ್ಷಿಯ ಪುದುಮಂಟಪದಲ್ಲಿ ಈ ನಾನಾ ಬಗೆಯ ಕಂಬಗಳನ್ನು ಕಾಣಬಹುದು. ಪುದುಕೋಟೈ ಜಿಲ್ಲೆಯ ಅವಿಂದೈಯಾರ್‍ಕೋವಿಲ್‍ನ ಆತ್ಮನಾಥಸ್ವಾಮಿ ದೇವಾಲಯದಲ್ಲೂ ತಿರುನೆಲ್ವೇಲಿಯ ನೆಲ್ಲೈಯಪ್ಪರ್ ದೇವಾಲಯದಲ್ಲೂ ಇಂಥವೇ ಮಂಟಪಗಳಿವೆ. 

ದಕ್ಷಿಣ ಭಾರತದಲ್ಲಿ ತಮಿಳು ನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅಶೋಕನ ಕಾಲದ ಶಾಸನಗಳು ಇಲ್ಲ. ಆದರೆ ತಮಿಳು ಶಾಸನಗಳು ಕ್ರಿ.ಪೂ ಸುಮಾರು 3ನೆಯ ಶತಮಾನದಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಕೆಲವು ಶಾಸನಗಳಲ್ಲಿ ಅಪರೂಪವಾಗಿ ಸ.ಧ.ಶ ಎಂಬ ಅಕ್ಷರಗಳನ್ನು ಉಪಯೋಗಿಸಿದ್ದರೂ, ಸಾಮಾನ್ಯವಾಗಿ ಇವುಗಳಲ್ಲಿ ಚ,ತ,ಚ ಎಂಬ ವರ್ಗಪ್ರಥಮಾಕ್ಷರ ಅಥವಾ ತತ್ಸಮಗಳನ್ನೇ ಉಪಯೋಗಿಸಿದೆ. ಮಧುರೈ, ತಿರುನೆಲ್ವೇಲಿ ಮತ್ತು ರಾಮನಾಥಪುರಮ್ ಜಿಲ್ಲೆಗಳಲ್ಲಿ ದೊರೆತ ಬ್ರಾಹ್ಮೀಲಿಪಿಯ ಶಾಸನಗಳು ತಮಿಳು ಮತ್ತು ಪ್ರಾಕೃತಗಳಿಂದ ಕೂಡಿದ ಮಿಶ್ರಭಾಷೆಯಲ್ಲಿವೆ. ಸಾಮಾನ್ಯವಾಗಿ ಗುಡ್ಡಗಳಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ನಿರ್ಮಿಸಿದ ಕಲ್ಲಿನ ಹಾಸುಗಳ ಮೇಲಿರುವ ಈ ಶಾಸನಗಳಲ್ಲಿ ಆ ಹಾಸುಗಳನ್ನು ಅಲ್ಲಿ ಅಳವಡಿಸಿದ ದಾನಿಗಳ ಹಾಗೂ ಆ ಸ್ಥಳಗಳ ಹೆಸರುಗಳಿವೆ. ಒಮ್ಮೊಮ್ಮೆ ಆ ದಾನಿಯ ವೃತ್ತಿಯನ್ನು ಸೂಚಿಸಲಾಗಿದೆ; ಪೊನ್ ವಾಣಿಕನ್, ಉಪು ವಾಣಿಕನ್ ಪಾಣಿತ ವಾಣಿಕನ್, ಎಂದು ಮುಂತಾಗಿ ಅವುಗಳಲ್ಲಿ ಹೇಳಿದೆ. ಈ ಗುಹೆಗಳನ್ನು ಪಾಳಿ, ತಾಣಮ್, ಅರಿಟ್ಟಾನಮ್ ಎಂದೆಲ್ಲ ಕರೆಯಲಾಗಿದೆ. ನೆಡುಂಜಯನ್, ಪೆರುಞ, ಕಡುಞಕೋನ್ ಇತ್ಯಾದಿಗಳು ವೈಯಕ್ತಿಕ ಹೆಸರುಗಳು. ಸಾಮಾನ್ಯವಾಗಿ: ಇವು ಕಲ್ಲಿನ ಈ ಹಾಸುಗಳ ಕೊಡುಗೆಗಳ ದಾಖಲೆಗಳು. ಇವು ಜೈನಮತಕ್ಕೆ ಸೇರಿದವರ ಶಾಸನಗಳೆಂದು ತಿಳಿಯಲಾಗಿದೆ. ಪುದುಚೇರಿಯ ಹತ್ತಿರದ ಅರಿಕಮೇಡು ಮತ್ತು ತಿರುವ್ವಿರಾಪ್ಪಳ್ಳಿ ಜಿಲ್ಲೆಯ ಉಜೈಯೂರ್. ತಿರುನೆಲ್ವೇಲಿ ಜಿಲ್ಲೆಯ ಕೊ ಮುಂತಾದ ಸ್ಥಳಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ಗೀರುಬರಹಗಳಿಂದ ಕೂಡಿದ ಮಡಕೆಗಳು ದೊರಕಿವೆ. ಅರಿಕಮೇಡಿನ, ಕ್ರಿ.ಶ.1-2ನೆ ಶತಮಾನದವೆಂದು ನಿರ್ಣಯಿಸಲಾದ, ಕೆಲವು ಗೀರುಬರಹಗಳವು ಪ್ರಾಕೃತಭಾಷೆಗಳಲ್ಲೂ ಉಳಿದವು ತಮಿಳು ಭಾಷೆಯಲ್ಲೂ ಇವೆ. ಈರೋಡಿನ ಬಳಿಯ ಅರಚಲೂರಿನಲ್ಲಿ ದೊರೆತ ಗುಹಾಶಾಸನಗಳು ಕ್ರಿ.ಶ. 3ನೆಯ ಶತಮಾನಕ್ಕೆ ಸೇರಿದವು. ಬ್ರಾಹ್ಮೀಲಿಪಿಯ ಎರಡು ಸಾಲಿನ ಶಾಸನ ತಮಿಳಿನಲ್ಲಿದೆ. ಇವು ಪ್ರಾಚೀನತಮ ತಮಿಳು ಶಾಸನಗಳೆಂದು ಹೇಳಲಾಗಿದೆ. ಸಮೀಪದಲ್ಲಿ ಕೊರೆಯಲಾದ, ಸಂಗೀತ ಮತ್ತು ನೃತ್ಯಗಳಿಗೆ ಸಂಬಂಧಿಸಿದ ಚಿಹ್ನೆಗಳನ್ನು ಈ ಶಾಸನ ನಿರೂಪಿಸುವಂತೆ ತೋರುತ್ತದೆ. ಈ ಚಿಹ್ನೆಗಳನ್ನು ರೂಪಿಸಿದಾತ ತೇವನ್ ಜಾತ್ತನ್ ಎಂಬ ಹೂವಾಡಿಗ. ತಿರುನಾಥರ್ಕುಣ್ರಿ ಎಂಬಲ್ಲಿ ಕ್ರಿ.ಶ.ಸು.5ನೆಯ ಶತಮಾನಕ್ಕೆ ಸೇರಿದ ವಟ್ಟೆಯಿತ್ತು ಬರಹದ ಶಾಸನವೊಂದು ದೊರೆತಿದ್ದು ಅದು ಬಹುಶಃ ಜೈನಮತದವನಾದ ಚಂದ್ರನಂದಿ ಆಚಾರ್ಯನೆಂಬವನನ್ನು ನಿರೂಪಿಸುತ್ತದೆ. ಧರ್ಮಪುರಿ, ಸೇಲಂ ಮೊದಲಾದ, ಕರ್ನಾಟಕಕ್ಕೆ ಸೇರಿದಂತಿರುವ, ಜಿಲ್ಲೆಗಳಲ್ಲಿ ಕಂಗ, ಕಟ್ಟಿ, ವಾಣ ಮುಂತಾದ ಮಾಂಡಲಿಕ ಮನೆತನಗಳವರ ಶಾಸನಗಳು ಈಗ ದೊರೆತಿವೆ. ಇವುಗಳಲ್ಲಿ ತಮಿಳು ಹಾಗೂ ವಟ್ಟೆಯಿತ್ತು ಲಿಪಿಗಳಿಗೆ ಸಮಾನವಾದ ಲಿಪಿಯ ರೂಪಗಳನ್ನು ಕಾಣಬಹುದು. ಇವೆಲ್ಲ ಬಹುಮಟ್ಟಿಗೆ ವೀರಗಲ್ಲುಗಳ ಮೇಲಿನ ಶಾಸನಗಳು. ಪಲ್ಲರ ತಾಮ್ರಶಾಸನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಮೊದಲನೆಯದು ಪ್ರಾಕೃತ ಶಾಸನಗಳದು. ಶಿವಸ್ಕಂಧವರ್ಮನ್‍ನ ಮೈದವೋಲು ಮತ್ತು ಹಿರೆಗಡಗಲಿ ತಾಮ್ರಶಾಸನಗಳು. ಸಿಂಹವರ್ಮನ್‍ನ ಸಕ್ರೆಪಟ್ಟಣ ತಾಮ್ರಶಾಸನ-ಇವು ಈ ಶಾಸನಗಳಲ್ಲಿ ಕೆಲವು ಅನಂತರದ ಗುಂಪಿನ ಶಾಸನಗಳು ಗ್ರಂಥ ಲಿಪಿಯಲ್ಲಿ, ಸಂಸ್ಕ್ರತ ಮತ್ತು ತಮಿಳು ಭಾಷೆಗಳಲ್ಲಿವೆ. ಇವೂ ದಾನ ಶಾಸನಗಳೇ. ಪಲ್ಲವರ ಶಿಲಾಶಾಸನಗಳು ಚುಟುಕಾಗಿವೆ. ಅನೇಕ ವೇಳೆ ಅವನ್ನು ಚಿತ್ರಗಳ ಕೆಳಗಿನ ಪಟ್ಟಿಗಳಲ್ಲಿ ಕೊರೆಯಲಾಗಿದೆ. ಅವು ದಾನಿಯ ಅಥವಾ ಶಿಲ್ಪಿಯ ಹೆಸರನ್ನು ಉಲ್ಲೇಖಿಸುತ್ತವೆ. ಕಾಂಚೀಪುರದ ವೈಕುಂಠನಾಥ ದೇವಾಲಯದಲ್ಲಿ ಪಲ್ಲವಮಲ್ಲ ಪಟ್ಟಾಭಿಷೇಕಕ್ಕೆ ಬಂದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳನ್ನು ಹಾಗೂ ಅವುಗಳ ಕೆಳಗಿನ ಪಟ್ಟಿಗಳ ಶಾಸನಗಳನ್ನು ಉದಾಹರಿಸಬಹುದು. ಈ ಕಾಲದ ಪಾಂಡ್ಯರ ತಾಮ್ರಶಾಸನಗಳಲ್ಲಿಯ ತಮಿಳುಭಾಗದಲ್ಲಿ ಅರಸನ ಸಾಧನೆಗಳನ್ನು ವರ್ಣಿಸುವ ಪದ್ಯಗಳಿರುತ್ತವೆ.

ಚೋಳರ ಆದಿತ್ಯನ ಕಾಲದಿಂದ ತಮಿಳು ನಾಡಿನಲ್ಲಿ ಅನೇಕ ಶಿವಾಲಯಗಳನ್ನು ಕಟ್ಟಲಾಯಿತು. ಆ ದೇವಾಲಯಗಳ ಗೋಡೆಗಳಲ್ಲಿ ಅಳವಡಿಸಲಾದ ಕಲ್ಲುಗಳ ಮೇಲೆ ಶಾಸನಗಳನ್ನು ಕೊರೆಯತೊಡಗಿದರು. ಆರಂಭದಲ್ಲಿ ಅರಸನ ಹೆಸರು, ಬಿರುದು, ಶಾಸನ ಹುಟ್ಟಿದ ತಿಂಗಳು (ಸೌರಮಾನ), ನಕ್ಷತ್ರ ಮತ್ತು ವಾರ ದಿನಗಳನ್ನು ನಮೂದಿಸಲಾಗುತ್ತಿತ್ತು. ಚೋಳರ ಶಾಸನಗಳು ತಮಿಳು ಅಕ್ಷರದಲ್ಲಿ, ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಇವೆ. ಹಲವರು ದೇವಾಲಯಗಳ ಗೋಡೆಗಳ ಮೇಲೆ ಕೊರೆದ ಈ ಶಾಸನಗಳು ದೀರ್ಘವಾಗಿವೆ. ಇವು ತಮಿಳು ನಾಡಿನ ಸಾಮಾಜಿಕ ಜೀವನದ ವಿವಿಧ ಮುಖಗಳನ್ನು ಕುರಿತು ಬಹಳ ವಿವರಗಳನ್ನೊದಿಗಿಸುತ್ತವೆ. ಒಂದನೆಯ ರಾಜನಿಂದ ಪ್ರಾರಂಭವಾಗಿ ಅವನ ಉತ್ತರಾಧಿಕಾರಿಗಳು ಮುಂದುವರಿಸಿದ ಮೈ ಕೀರ್ತಿಗಳು (ಪ್ರಶಸ್ತಿ) ಐತಿಹಾಸಿಕ ವಿವರಗಳಿಂದ ತುಂಬಿವೆ. ಅರಸನ ಆಳ್ವಿಕೆಯ ವರ್ಷಗಳು ಹೆಚ್ಚಿದಂತೆ ಈ ಪ್ರಶಸ್ತಿಗಳು ಧೀರ್ಘವಾಗಿ, ಹೊಸ ಸಾಧನೆಗಳ ಉಲ್ಲೇಖಗಳು ಅವುಗಳಲ್ಲಿರುತ್ತವೆ. ಹಲವಾರು ಉತ್ಪ್ರೇಕ್ಷೆಗಳಿದ್ದರೂ ಇವು ಐತಿಹಾಸಿಕ ದಾಖಲೆಗಳೆಂದೇ ಹೇಳಬೇಕು. ಸಾಮಾನ್ಯವಾಗಿ ಇತರ ವಿವರಗಳ ಜೊತೆಗೆ ಅರಸನ ಆಳ್ವಿಕೆಯ ವರ್ಷಗಳನ್ನು ಇವುಗಳಲ್ಲಿ ಕೊಟ್ಟಿರುತ್ತದೆ. ಚೋಳರ ತಾಮ್ರಶಾಸನಗಳಲ್ಲಿ ತಿರುವಾಲಂಗಾಡು ಮತ್ತು ಕರಂದೈ ತಾಮ್ರಪಟಗಳು ಈವರೆಗೆ ತಿಳಿದ ಇಂಥ ಶಾಸನಗಳಲ್ಲಿ ಅತ್ಯಂತ ದೊಡ್ಡವು. ಚೋಳರ ಸಮಕಾಲೀನರಾದ ಪಾಂಡ್ಯರು ತಮ್ಮ ಶಾಸನಗಳಿಗಾಗಿ ತಮಿಳು ಮತ್ತು ವಟ್ಟೆಯಿತ್ತು ಲಿಪಿಗಳನ್ನು ಬಳಸಿದರು. ಪಾಂಡ್ಯರ ಶಾಸನಗಳಲ್ಲಿ ಕಾಲವನ್ನು ಸೂಚಿಸುವಾಗ 4+6, 8+3 ಮುಂತಾದ ಎರಡೆರಡು ತೇದಿಗಳನ್ನು ನಮೂದಿಸಲಾಗಿದೆ. ಇದಕ್ಕೆ ಕಾರಣವೇನೆಂಬುದು ಗೊತ್ತಿಲ್ಲವಾದರೂ, ಇವು 10, 11 ಇತ್ಯಾದಿ ವರ್ಷಗಳನ್ನು ಸೂಚಿಸುತ್ತವೆ ಎಂದು ಭಾವಿಸಲಾಗಿದೆ.ವಿಜಯನಗರ ಶಾಸನಗಳನ್ನು ತೆಲಗು ಲಿಪಿ ಮತ್ತು ಭಾಷೆಯಲ್ಲಿ ಅಂತೆಯೇ ನಂದಿನಾಗರೀ ಲಿಪಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರೆಯಲಾರಂಭವಾಯಿತು. ಈ ಬಗೆಯ ತಾಮ್ರಶಾಸನಗಳ ಎಷ್ಟೋ ಮಾದರಿಗಳನ್ನು ಮದ್ರಾಸಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಶೇಖರಿಸಲಾಗಿದೆ.




#Article 120: ಆಂಧ್ರ ಪ್ರದೇಶ (3390 words)


ಆಂಧ್ರ ಪ್ರದೇಶ  () (, ಭಾಷಾಂತರ: ಆಂಧ್ರದ ಪ್ರಾಂತ್ಯ, ಸಂಕ್ಷಿಪ್ತವಾಗಿ ಎ.ಪಿ.  ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದುಭಾರತದ ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ  ಜನಸಂಖ್ಯೆಯಲ್ಲಿ ಹತ್ತನೇ ಅತಿ ದೊಡ್ಡ ರಾಜ್ಯವಾಗಿದೆ. ಪ್ರಸ್ತುತ ರಾಜಧಾನಿ ಮತ್ತು ಹೈದರಾಬಾದ್‌. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ‌. ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. ಗುಜರಾತ್‌‌ ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್‌ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ ಭಾರತದ ಅನ್ನದ ಪಾತ್ರೆ  ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. 
ಇದರ  ಆಂಧ್ರ ಪ್ರದೇಶವು ೧೯೫೬ರ ನವೆಂಬರ್ ೧ರಂದು ಆಂಧ್ರ ರಾಜ್ಯದಿಂದ ರಚನೆಯಾಯಿತು.

ಐತರೇಯ ಬ್ರಾಹ್ಮಣ (B.C.೮೦೦) ಹಾಗೂ ಮಹಾಭಾರತದಂತಹ ಸಂಸ್ಕೃತ ಮಹಾಕಾವ್ಯಗಳಲ್ಲಿ ಆಂಧ್ರ ಸಾಮ್ರಾಜ್ಯ ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ. 

ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ ದೊರೆತವು. ಈ ಅವಧಿಯಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.ವಿನುಕೊಂಡವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು ವೆಂಗಿಯಲ್ಲಿನ ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ ಶಾತವಾಹನರು ಮತ್ತು ನಂತರದ ದಿನಗಳಲ್ಲಿ ಇಕ್ಷ್ವಾಕು ಮನೆತನಗಳ ಅಡಿಯಲ್ಲಿ ಚಾಲುಕ್ಯರು, ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ ರಾಜರಾಜ ನರೇಂದ್ರನು ರಾಜಮುಂಡ್ರಿಯನ್ನು CE ೧೦೨೨ರ ಆಸುಪಾಸಿನಲ್ಲಿ ಆಳಿದನು. 
ಪಲ್ನಾಡು ಯದ್ಧದಿಂದಾಗಿ ಪೂರ್ವದ ಚಾಲುಕ್ಯರ ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ ಕಾಕತೀಯಸಾಮ್ರಾಜ್ಯವು ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್‌ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು. 
ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ ಸುಲ್ತಾನನಾದ ಘಿಯಾಜುದ್ದೀನ್‌ ತುಘಲಕ್‌ನು ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್‌‌ನ್ನು ವಶಪಡಿಸಿಕೊಳ್ಳಲು ಉಲುಘ್‌‌ ಖಾನ್‌ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.ಪ್ರತಾಪರುದ್ರರಾಜನನ್ನು ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ ದೆಹಲಿ ಸುಲ್ತಾನರಿಂದ ವಾರಂಗಲ್‌ನ್ನು ಪುನಃ ವಶಪಡಿಸಿಕೊಂಡ ಮುಸುನೂರಿ ನಾಯಕರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು ಭಾರತದ ಇತಿಹಾಸದಲ್ಲಿನ ಮಹಾನ್‌ ಚಕ್ರಾಧಿಪತ್ಯಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾಯಿತು. ವಾರಂಗಲ್‌ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಹರಿಹರ ಮತ್ತು ಬುಕ್ಕರು ಈ ಸಾಮ್ರಾಜ್ಯದ ಸಂಸ್ಥಾಪಕರು.
ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: ಅದಿಲಾಬಾದ್‌‌, ಅನಂತಪುರ್‌‌, ಚಿತ್ತೂರ್‌, ಕಡಪ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರ್‌‌, ಹೈದರಾಬಾದ್‌, ಕರೀಂನಗರ, ಖಮ್ಮಮ್‌, ಕೃಷ್ಣ, ಕರ್ನೂಲ್‌, ಮೆಹಬೂಬ್‌ ನಗರ‌, ಮೇಡಕ್‌, ನಲ್ಗೊಂಡ, ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್‌, ನಿಜಾಮಬಾದ್‌‌, ಪ್ರಕಾಶಮ್‌, ರಂಗಾರೆಡ್ಡಿ, ಶ್ರೀಕಾಕುಲಂ, ವಿಶಾಖಪಟ್ಟಣಂ, ವಿಜಯನಗರಂ ಮತ್ತು ವಾರಂಗಲ್‌.
ಪ್ರತಿ ಜಿಲ್ಲೆಯನ್ನೂ ವಿವಿಧ ಮಂಡಲಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.ಹೈದರಾಬಾದ್‌ ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ ಸಿಕಂದರಾಬಾದ್‌ನ ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. ವಿಶಾಖಪಟ್ಟಣವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ ಭಾರತೀಯ ನೌಕಾಪಡೆಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. ವಿಜಯವಾಡ ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: ಕಾಕಿನಾಡ, ವಾರಂಗಲ್‌, ಗುಂಟೂರ್‌, ತಿರುಪತಿ, ರಾಜಮುಂಡ್ರಿ, ನೆಲ್ಲೂರ್‌, ಓಂಗೊಲ್, ಕರ್ನೂಲ್‌, ಅನಂತಪುರ್‌, ಕರೀಂನಗರ‌, ನಿಜಾಮಾಬಾದ್‌ ಮತ್ತು ಏಲೂರು.

ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು ಮೂರನೆಯ ಸಾಲಾರ್ ಜಂಗರು (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'ಮುಸುಕಿನ ರೆಬೆಕ್ಕಾ,'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ.

ತೆಲುಗು ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ. 
ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ. ರಾಜ್ಯದಲ್ಲಿನ ಪ್ರಮುಖ ಅಲ್ಪಸಂಖ್ಯಾತ ಭಾಷಿಕ ಸಮುದಾಯಗಳಲ್ಲಿ ಉರ್ದು (೮.೬೩%), ಹಿಂದಿ (೦.೬೩%) ಮತ್ತು ತಮಿಳು (೧.೦೧%) ಮಾತನಾಡುವವರು ಸೇರಿದ್ದಾರೆ. ಭಾರತ ಸರ್ಕಾರವು ೨೦೦೮ರ ನವೆಂಬರ್ ೧ರಂದು ತೆಲುಗು ಭಾಷೆಗೆ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆ ಎಂಬ ಸ್ಥಾನಮಾನ ನೀಡಿದೆ.
ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, ಕನ್ನಡ (೦.೯೪%), ಮರಾಠಿ (೦.೮೪%), ಒರಿಯಾ (೦.೪೨%), ಗೊಂಡಿ (೦.೨೧%) ಮತ್ತು ಮಲಯಾಳಂ (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ ಗುಜರಾತಿ (೦.೦೯%), ಸಾವರ (೦.೦೯%), ಕೋಯ (೦.೦೮%), ಜಟಪು (೦.೦೪%), ಪಂಜಾಬಿ (೦.೦೪%), ಕೊಳಮಿ (೦.೦೩%), ಕೊಂಡ (೦.೦೩%), ಗಡಬ (೦.೦೨%), ಸಿಂಧಿ (೦.೦೨%), ಗೋರ್ಖಾಲಿ/ನೇಪಾಳಿ (೦.೦೧%) ಮತ್ತು ಖೊಂಡ್‌/ಕೊಂಧ್(೦.೦೧%) ಸೇರಿವೆ.
ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ ತೆಲುಗು ಜನ; ಇವರು ಆರ್ಯರು ಮತ್ತು ದ್ರಾವಿಡರ ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ.

ಕೃಷಿಯು, ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ ಗೋದಾವರಿ, ಕೃಷ್ಣ, ಪೆನ್ನಾ ಮತ್ತು ತುಂಗಭದ್ರ ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.ಅಕ್ಕಿ, ಕಬ್ಬು, ಹತ್ತಿ, ಮೆಣಸಿನಕಾಯಿ (ಮೆಣಸಿನ ಹಣ್ಣು), ಮಾವು ಮತ್ತು ಹೊಗೆಸೊಪ್ಪು ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, ಸಸ್ಯಜನ್ಯ ತೈಲದ ಉತ್ಪಾದನೆಗೆ ಬಳಕೆಯಾಗುವ ಸೂರ್ಯಕಾಂತಿ ಮತ್ತು ಕಡಲೆಕಾಯಿಯಂತಹ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ ನಾಗಾರ್ಜುನ ಸಾಗರ ಜಲಾಶಯ, ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆಗಳನ್ನು ಒಳಗೊಂಡಂತೆ ಹಲವು ಅಂತರ‌ರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ.

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು ‌(೧,೮೦೦ ದಶಲಕ್ಷ ‌‌$)ಇತ್ತು. ರಾಜ್ಯದ ರಾಜಧಾನಿಯಾದ ಹೈದರಾಬಾದ್‌, ದೇಶದ ಬೃಹತ್‌ ಮೂಲ ಔಷಧವಸ್ತು ತಯಾರಕ ರಾಜಧಾನಿ ಎಂದು ಪರಿಗಣಿತವಾಗಿದ್ದು, ದೇಶದ ೧೦ ಅಗ್ರಗಣ್ಯ ಔಷಧೀಯ ಕಂಪನಿಗಳಲ್ಲಿ ೫೦%ನಷ್ಟು ಕಂಪನಿಗಳು ರಾಜ್ಯದ ಮೂಲವನ್ನು ಹೊಂದಿವೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ರಾಜ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ರಾಜ್ಯದ ಹಲವು ಕಂಪನಿಗಳು ಅಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ. 
ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ ಸುಣ್ಣದ ಕಲ್ಲುಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್‌ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಕೃಷ್ಣ ಗೋದಾವರಿ ಜಲಾನಯನ ಪ್ರದೇಶವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್‌ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ.
ಜಲ ವಿದ್ಯುತ್‌ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್‌‌ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ. 
೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ
೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್‌‌(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. ಕಾಸು ಬ್ರಹ್ಮಾನಂದ ರೆಡ್ಡಿ ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು ಎನ್‌.ಟಿ.ರಾಮ ‌ರಾವ್‌ರವರು ೧೯೮೩ರಲ್ಲಿ ಮುರಿದರು. ಪಿ.ವಿ.ನರಸಿಂಹ ರಾವ್‌ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ ತಂಗುತೂರಿ ಪ್ರಕಾಶಮ್‌, ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ ಕಾಸು ಬ್ರಹ್ಮಾನಂದ ರೆಡ್ಡಿ, ಮರ್ರಿ ಚೆನ್ನಾ ರೆಡ್ಡಿ, ಜಲಗಂ ವೆಂಗಲ್‌ ರಾವ್‌, ನೆದುರುಮಲ್ಲಿ ಜನಾರ್ಧನ ರೆಡ್ಡಿ, ನಾದೇಂಡ್ಲ ಭಾಸ್ಕರ ರಾವ್‌, ಕೋಟ್ಲ ವಿಜಯ ಭಾಸ್ಕರ ರೆಡ್ಡಿ, ಎನ್‌.ಟಿ.ರಾಮ ರಾವ್, ನಾರಾ ಚಂದ್ರಬಾಬು ನಾಯ್ಡು ಮತ್ತು ವೈ.ಎಸ್‌.ರಾಜಶೇಖರ ರೆಡ್ಡಿಯವರುಗಳು ಸೇರಿದ್ದಾರೆ.
ಹೈದರಾಬಾದ್‌ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ
೧೯೮೩ರಲ್ಲಿ ತೆಲುಗು ದೇಶಮ್‌ ಪಕ್ಷವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು ಎನ್‌.ಟಿ.ರಾಮ ರಾವ್‌ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್‌ ರಾವ್‌ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು. 
೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್‌. ಜನಾರ್ಧನ್‌ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್‌ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು. 
೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು. 
೨೦೦೮ರಲ್ಲಿ ಚಲನಚಿತ್ರ ತಾರೆ ಜಿರಂಜೀವಿಯವರಿಂದ ಪ್ರಜಾ ರಾಜ್ಯಂ ಪಕ್ಷ(PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್‌ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್‌ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು. 
ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್‌ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್‌.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು.

ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ ಅಮರಾವತಿಯಲ್ಲಿನ , ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್‌ನಲ್ಲಿರುವ ಸಾಲಾರ್‌ ಜಂಗ್‌ ವಸ್ತುಸಂಗ್ರಹಾಲಯ, ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; ವಿಶಾಖಪಟ್ಟಣಂನಲ್ಲಿರುವ ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್‌‌ ಬಂಗಲೆಯಲ್ಲಿದ್ದು ಮದ್ರಾಸ್‌ ಪ್ರಾಂತ್ಯದಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.ವಿಜಯವಾಡದಲ್ಲಿರುವ ವಿಕ್ಟೋರಿಯಾ ಜುಬಿಲಿ ವಸ್ತುಸಂಗ್ರಹಾಲಯವು ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಮೂರ್ತಿಗಳು, ಶಸ್ತ್ರಾಸ್ತ್ರಗಳು, ಮೊನಚಾದ ಆಯುಧಗಳು ಮತ್ತು ಶಾಸನಗಳನ್ನು ಹೊಂದಿದೆ. ಈಗ ಇದು ಬೃಹತ್ ೩D ಪರದೆಯನ್ನೊಳಗೊಂಡ ಐಮ್ಯಾಕ್ಸ್‌ ಥಿಯೇಟರ್‌ ಒಂದನ್ನು ಹಾಗೂ ೩-೫ ಮಲ್ಟಿಪ್ಲೆಕ್ಸ್‌ಗಳನ್ನೂ ಹೊಂದಿದೆ. ಟಾಲಿವುಡ್‌‌ (ತೆಲುಗು ಚಿತ್ರರಂಗ) ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ತಯಾರಿಸುತ್ತದೆ. 
NTR ರವರು ಟಾಲಿವುಡ್‌ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ.

ರಾಜ್ಯವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದೇ ಹೆಸರಾಗಿರುವ ತ್ಯಾಗರಾಜರು, ಅನ್ನಮಾಚಾರ್ಯರು, ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ ರಾಮದಾಸುರವರಂತಹ ಕರ್ನಾಟಕ ಸಂಗೀತದ ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು. 
ಮಹಾನ್‌‌ ಮ್ಯಾಂಡೋಲಿನ್‌ ವಾದಕ ಮ್ಯಾಂಡೋಲಿನ್‌ ಶ್ರೀನಿವಾಸ್‌ ಕೂಡ ಆಂಧ್ರ ಪ್ರದೇಶದವರು. 
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಹಾಡುಗಳೂ ಬಹಳ ಜನಪ್ರಿಯವಾಗಿವೆ.ಕರ್ನಾಟಕ ಸಂಗೀತದಲ್ಲಿ ಮತ್ತಷ್ಟು ರಾಗಗಳನ್ನು ಸೃಷ್ಟಿಸಿದ, ಕರ್ನಾಟಕ ಸಂಗೀತದ ಮಹಾನ್‌ ಗಾಯಕರಾದ ಶ್ರೀ ಮಂಗಳಂಪಲ್ಲಿ ಬಾಲಮುರಳಿಕೃಷ್ಣ ರವರು ಕೂಡ ತೆಲುಗು ಪರಂಪರೆಗೆ ಸೇರಿದವರು.

ಎಲ್ಲ ಜಾತಿಗಳ ಹಿಂದೂ ಸಂತರು ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, ಹರಿಜನ ಮತ್ತು ಮುಸ್ಲಿಂ ಅನುಯಾಯಿಗಳನ್ನು ಹೊಂದಿದ್ದರು. ಬೆಸ್ತರಾಗಿದ್ದ ರಘು ಕೂಡ ಶೂದ್ರರಾಗಿದ್ದರು. ಸಂತ ಕಕ್ಕಯ್ಯ ಚೂರ(ಚಮ್ಮಾರ) ಹರಿಜನ ಸಂತರಾಗಿದ್ದರು.
ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, ದ್ವೈತಾದ್ವೈತ ತತ್ವವನ್ನು ಸ್ಥಾಪಿಸಿದ ನಿಂಬರ್ಕ, ಭಾರತ ಸ್ವಾತಂತ್ರ್ಯದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ ಶ್ರೀ ಸತ್ಯ ಸಾಯಿ ಬಾಬಾ, ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್‌.

ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ
ಭಾರತದಾದ್ಯಂತ ಇರುವ ಹಿಂದೂಗಳಿಗೆ ತಿರುಪತಿ ಅಥವಾ ತಿರುಮಲ ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು ವೆಂಕಟೇಶ್ವರದೇವರಿಗೆ ಸಮರ್ಪಣೆಯಾಗಿದೆ. ತಿರುಪತಿಯು ಚಿತ್ತೂರ್ ಜಿಲ್ಲೆಯಲ್ಲಿದೆ. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ. 
ಸಿಂಹಾಚಲಂ ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, ಪ್ರಹ್ಲಾದನನ್ನು ಅವನ ದುಷ್ಠ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಿದ ಸಂರಕ್ಷಕ ದೇವರಾದ ನರಸಿಂಹನ ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. ವಿಜಯವಾಡ ನಗರದಲ್ಲಿರುವ ಕನಕ ದುರ್ಗ ದೇವಸ್ಥಾನ ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. ಶ್ರೀ ಕಾಳಹಸ್ತಿ ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, ಚಿತ್ತೂರ್‌‌ ಜಿಲ್ಲೆಯಲ್ಲಿನ ಸ್ವರ್ಣಮುಖಿ ನದಿಯ ದಡದಲ್ಲಿದೆ. 
ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ಸ್ವಾಮಿಗೆ ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, ಚೋಳರ ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ ಶ್ರೀ ಕೃಷ್ಣ ದೇವರಾಯನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ ತೆಲುಗು ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್‌ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು. 

ಶ್ರೀ ಶೈಲಂ, ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಶಿವ ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ ಜ್ಯೋತಿರ್ಲಿಂಗಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ಸ್ಕಂದ ಪುರಾಣ ದಲ್ಲಿ ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.ಆದಿ ಶಂಕರರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ ಶಿವಾನಂದ ಲಹರಿ ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು ಪಾರ್ವತಿಯರು ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ ಮಹಾಕಾಳಿ ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಶ್ರೀರಾಮ ಸ್ವಾಮಿಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು ಕರ್ನೂಲ್‌ ಜಿಲ್ಲೆಯಲ್ಲಿದೆ. 

ಭದ್ರಾಚಲಂ ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು ಗೋದಾವರಿ ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-ಕಂಚೇರ್ಲ ಗೋಪಣ್ಣ) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. ತ್ರೇತಾಯುಗದಲ್ಲಿ ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. ಶ್ರೀರಾಮ ನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣರೊಡಗೂಡಿ ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು ಖಮ್ಮಮ್ ಜಿಲ್ಲೆಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ. 
ಬಸರ್‌-ಸರಸ್ವತಿ ದೇವಸ್ಥಾನವು, ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು ಅದಿಲಾಬಾದ್‌ ಜಿಲ್ಲೆಯಲ್ಲಿದೆ. ಯಾಗಂಟಿ ಗುಹೆಗಳು ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್‌ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ ಹಿಂದೂ ಬಿರ್ಲಾ ಮಂದಿರ, ಮತ್ತು ರಾಮಪ್ಪ ದೇವಸ್ಥಾನ, ಮುಸ್ಲಿಂರ ಮೆಕ್ಕಾ ಮಸೀದಿ ಮತ್ತು ಚಾರ್ಮಿನಾರ್‌, ಜೊತೆಗೆ ಹುಸೇನ್‌ ಸಾಗರ್‌ ಜಲಾಶಯದ ಮೇಲಿರುವ ಬುದ್ಧನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ. 

ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು. 
ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ ಬೆಜ್ಜಮ್‌ ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು. 
ಹಲವು ಪುರಾಣಗಳಲ್ಲೊಂದು ಈ ಸ್ಥಳದೊಂದಿಗೆ ಸಂಬಂಧ ಹೊಂದಿದೆ. ಅದೆಂದರೆ, ಶಿವನಿಂದ ವರ ಪಡೆಯಲು ಅರ್ಜುನ ಶಿವವನ್ನು ಕುರಿತು ಇಂದ್ರಕೀಲ ಪರ್ವತದ ಮೇಲೆ ಕುಳಿತು ತಪಸ್ಸು ಮಾಡಿದನು. ನಂತರ ಅರ್ಜುನ ಶಿವನಿಂದ ವರ ಪಡೆದು ವಿಜಯಿಯಾದನು. ಈ ನಗರಕ್ಕೆ ವಿಜಯವಾಡ ಎಂದು ಹೆಸರು ಬರಲು ಇದೇ ಕಾರಣವಾಯಿತು. ಅಸುರಾಧಿಪತಿ ಮಹಿಷಾಸುರನನ್ನು ಸಂಹರಿಸಿದ ಕನಕದುರ್ಗ ದೇವತೆಯ ವಿಜಯೋತ್ಸವದ ಕುರಿತು ಮತ್ತೊಂದು ಜನಪ್ರಿಯ ದಂತಕಥೆಯಿದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆಗೆ ರಾಕ್ಷಸರ ಕಾಟವು ಅತಿಯಾಗಿ ಸಹಿಸಲು ಅಸಾಧ್ಯವಾಗಿತ್ತು. ಆಗ ಇಂದ್ರಕೀಲ ಋಷಿಯು ಉಗ್ರವಾಗಿ ತಪಸ್ಸು ಮಾಡಿದನು. ಅದನ್ನು ಮೆಚ್ಚಿ ದೇವತೆಯು ಪ್ರತ್ಯಕ್ಷಳಾದಾಗ, ತನ್ನ ತಲೆಯ ಮೇಲೆ ಆಕೆಯು ನೆಲೆಸಿ ದುರುಳ ರಾಕ್ಷಸರಿಂದ ರಕ್ಷಣೆ ಒದಗಿಸಬೇಕೆಂದು ಋಷಿಯು ಪ್ರಾರ್ಥಿಸಿದನು. ಋಷಿಯ ಕೋರಿಕೆಯ ಮೇರೆಗೆ, ರಾಕ್ಷಸರನ್ನು ಸಂಹರಿಸಿದ ದುರ್ಗಾ ದೇವತೆಯು ಇಂದ್ರಕೀಲದಲ್ಲಿ ಶಾಶ್ವತವಾಗಿ ನೆಲೆಸಿದಳು. 
ತದನಂತರ, ಅವಳು ರಾಕ್ಷಸದೊರೆ ಮಹಿಷಾಸುರರನ್ನು ಸಂಹರಿಸಿ ವಿಜಯವಾಡದ ಜನರನ್ನು ರಾಕ್ಷಸರ ದುಷ್ಟ ಹಿಡಿತದಿಂದ ರಕ್ಷಿಸಿದಳು.  ನವರಾತ್ರಿ ಎಂದು ಕರೆಯುವ ದಸರಾ ಹಬ್ಬದ ಸಮಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಮಹತ್ವವಾದವುಗಳೆಂದರೆ, ಸರಸ್ವತಿ ಪೂಜೆ ಮತ್ತು ತೆಪ್ಪೋತ್ಸವ. ದುರ್ಗಾ ದೇವತೆಗಾಗಿ ದಸರಾ ಹಬ್ಬವನ್ನು ಇಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು ಈ ವರ್ಣಮಯ ಆಚರಣೆಯಲ್ಲಿ ಭಾಗವಹಿಸಿ ನಂತರ ಕೃಷ್ಣಾ ನದಿಯಲ್ಲಿ ಮಿಂದು ಪುನೀತರಾಗುತ್ತಾರೆ.

ಬಾಪೂರವರ ಚಿತ್ರಕಲೆ, ನಂದೂರಿ ಸುಬ್ಬರಾವ್‌ ಅವರ ಯೆಂಕಿ ಪಾಟಲು ,(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,(ಮುಲ್ಲಪುಡಿಯವರಿಂದ ರಚನೆಯಾದ ಪಾತ್ರ), ಅನ್ನಮಯ್ಯನ ಹಾಡುಗಳು, ಅವಕಾಯ (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), ಗೊಂಗುರ (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ ಚಟ್ನಿ), ಅಟ್ಲ ತಡ್ಡಿ (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ದೂಡು ಬಸವಣ್ಣ (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ ವಿಗ್ರಹಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ ದುರ್ಗಿಯ ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್‌ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ'‌, 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ.

ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್‌‌, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ.
ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ MBA ಮತ್ತು MCA ಕಾಲೇಜುಗಳು; ೫೦೦ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ.
ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಸೈನ್ಸ್‌ (ಹೈದರಾಬಾದ್‌ನಲ್ಲಿರುವ BITS ಪಿಲಾನಿ ಆವರಣ) ಮತ್ತು IIT ಹೈದರಾಬಾದ್‌ನಂತಹ ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ. 
ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ , ಹೈದರಾಬಾದ್ (IIIT-H), ಹೈದರಾಬಾದ್‌ ವಿಶ್ವವಿದ್ಯಾಲಯ(ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (NIFT) ಮತ್ತು ದಿ ಇನ್‌ಸ್ಟಿಟ್ಯೂಟ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಕೇಟರಿಂಗ್‌ ಟೆಕ್ನಾಲಜಿ ಅಂಡ್‌‌ ಅಪ್ಲೈಡ್‌ ನ್ಯೂಟ್ರಿಷನ್‌ ಇವೂ ಕೂಡ ಹೈದರಾಬಾದ್‌ನಲ್ಲಿವೆ. ಪ್ರತಿಷ್ಠಿತ ಒಸ್ಮಾನಿಯಾ ವಿಶ್ವವಿದ್ಯಾಲಯ ಕೂಡ ಇರುವುದು ಹೈದರಾಬಾದ್‌ನಲ್ಲೇ. 
 
ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್‌ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್‌.ಟಿ.ರಾಮ ರಾವ್‌ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು.

ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ಈನಾಡು , ಆಂಧ್ರ ಜ್ಯೋತಿ , ಸಾಕ್ಷಿ , ಪ್ರಜಾಶಕ್ತಿ , ವಾರ್ತಾ , ಆಂಧ್ರ ಭೂಮಿ , ವಿಶಾಲಾಂಧ್ರ , ಸೂರ್ಯಾ , ಮತ್ತು ಆಂಧ್ರ ಪ್ರಭ , ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು.
ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ಸಿಯಾಸತ್‌ ಡೈಲಿ , ಮುನ್ಸಿಫ್‌ ಡೈಲಿ , ರೆಹ್ನುಮಾ-ಇ-ಡೆಕ್ಕನ್‌ , ಇತಿಮದ್ ಉರ್ದು ಡೈಲಿ , ಆವಾಂ ಮತ್ತು ಮಿಲಾಪ್‌ ಡೈಲಿ 
ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್‌ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ಡೆಕ್ಕನ್‌ ಕ್ರಾನಿಕಲ್‌,  ದಿ ಹಿಂದು , ದಿ ಟೈಮ್ಸ್ ಆಫ್ ಇಂಡಿಯಾ , ದಿ ನ್ಯೂ ಇಂಡಿಯನ್‌ ಎಕ್ಸ್‌‌ಪ್ರೆಸ್ , ದಿ ಎಕನಾಮಿಕ್‌ ಟೈಮ್ಸ್ , ದಿ ಬಿಸಿನೆಸ್‌ ಲೈನ್‌  
ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ಸ್ವತಂತ್ರ ವಾರ್ತಾ , ವಿಶಾಖಪಟ್ಟಣಂ ನಿಜಾಮಾಬಾದ್‌ , ಮತ್ತು ಹೈದರಾಬಾದ್‌ನಿಂದ ಪ್ರಕಟವಾಗುವ ಅತ್ಯಂತ ಹಳೆಯ ಹಿಂದಿ ಪತ್ರಿಕೆಗಳಲ್ಲಿ ಒಂದಾದ ಹಿಂದಿ ಮಿಲಾಪ್‌ .

ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು ಭಾರತದ ಕೊಹಿನೂರ್‌  ಎಂದು ಬಿಂಬಿಸಿದೆ.
ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. ವೆಂಕಟೇಶ್ವರ ಸ್ವಾಮಿಯ ನೆಲೆಬೀಡಾದ ತಿರುಪತಿಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. ನಲ್ಲಮಲ ಬೆಟ್ಟದಲ್ಲಿ ಸೇರಿಕೊಂಡಿರುವ ಶ್ರೀ ಶೈಲಂ ಕ್ಷೇತ್ರವು ಶ್ರೀ ಮಲ್ಲಿಕಾರ್ಜುನ ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್‌ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್‌ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, ಥೊಟ್ಲಕೊಂಡ, ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್‌ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ.
ಬಾದಾಮಿ ಚಾಲುಕ್ಯರು (ಬಾದಾಮಿಯು ಕರ್ನಾಟಕದಲ್ಲಿದೆ.) ೬ನೇ ಶತಮಾನದಲ್ಲಿ ನಿರ್ಮಿಸಿರುವ ಆಲಂಪುರ್‌ ಭ್ರಮಾ ದೇವಸ್ಥಾನಗಳು  ಚಾಲುಕ್ಯರ ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. ವಿಜಯನಗರ ಸಾಮ್ರಾಜ್ಯವು ಅಸಂಖ್ಯಾತ ಸ್ಮಾರಕಗಳು, ಶ್ರೀಶೈಲಂ ದೇವಸ್ಥಾನ ಮತ್ತು ಲೇಪಾಕ್ಷಿ ದೇವಸ್ಥಾನಗಳನ್ನು ನಿರ್ಮಿಸಿತು.
ವಿಶಾಖಪಟ್ಟಣಂನಲ್ಲಿರುವ ಗೋಲ್ಡನ್‌ ಬೀಚ್‌, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ ಅರಕು ಕಣಿವೆ, ಹಾರ್‌ಸ್ಲೆ ಬೆಟ್ಟಗಳ ಗಿರಿಧಾಮಗಳು, ಪಾಪಿ ಕೊಂಡಾಲು ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು ತಲಕೋಣದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ‌ ರಸ್ತೆಯನ್ನು ಹೊಂದಿರುವ ಯರಾಡ ಬೀಚ್‌, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು.
ಬೊರ್ರ ಗುಹೆಗಳು

ಬೊರ್ರ ಗುಹೆಗಳು ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್‌ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್‌ ಭೂವಿಜ್ಞಾನಿಯಾದ ವಿಲಿಯಂ ಕಿಂಗ್‌ ಜಾರ್ಜ್‌, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ಬುರ್ರ ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್‌ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು.
ಬೆಲಂ ಗುಹೆಗಳು ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ಬಿಲಂ  ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ. 
ತೆಲುಗಿನಲ್ಲಿ ಈ ಗುಹೆಗಳಿಗೆ ಬೆಲಂ ಗುಹಾಲು ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್‌ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು ಪ್ರವೇಶದ್ವಾರದಿಂದ ಇದ್ದು, ಅದನ್ನು ಪಾತಾಳಗಂಗಾ ಎಂದು ಕರೆಯಲಾಗುತ್ತದೆ.
೧,೨೬೫ ಮೀಟರ್‌ನಷ್ಟು ಎತ್ತರದಲ್ಲಿರುವ ಹಾರ್‌ಸ್ಲೆ ಬೆಟ್ಟಗಳು, ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್‌ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್‌ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ.
ಚಾರ್ಮಿನಾರ್‌, ಗೋಲ್ಕೊಂಡ ಕೋಟೆ, ಚಂದ್ರಗಿರಿ ಕೋಟೆ, ಚೌಮಹಲ್ಲ ಅರಮನೆ, ಮತ್ತು ಫಲಕ್ನುಮ ಅರಮನೆ ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು.
ಕೃಷ್ಣ ಜಿಲ್ಲೆಯಲ್ಲಿರುವ ವಿಜಯವಾಡದಲ್ಲಿನ ಕನಕ ದುರ್ಗ ದೇವಸ್ಥಾನ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ ವೆಂಕಟೇಶ್ವರ ದೇವಸ್ಥಾನ (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ.

ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು.
ಆಂಧ್ರ ಪ್ರದೇಶದ ಸರ್ಕಾರದ ಒಡೆತನದ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್‌ ಮತ್ತು ಬೈಸಿಕಲ್‌ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ.
ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: ಹೈದರಾಬಾದ್‌ (ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), ವಿಶಾಖಪಟ್ಟಣಂ, ವಿಜಯವಾಡ, ರಾಜಮುಂಡ್ರಿ ಮತ್ತು ತಿರುಪತಿ.ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, ನೆಲ್ಲೂರ್, ವಾರಂಗಲ್‌, ಕಡಪ, ತಡೆಪಲ್ಲಿಗುಡೆಂ ರಾಮಗುಂಡಂ ಮತ್ತು ಒಂಗೊಲ್‌
ಆಂಧ್ರ ಪ್ರದೇಶವು ವಿಶಾಖಪಟ್ಟಣಂ ಮತ್ತು ಕಾಕಿನಾಡದಲ್ಲಿ ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ ಮಚಲೀಪಟ್ಣಂ, ನಿಜಾಮ್‌ಪಟ್ಣಂ(ಗುಂಟೂರ್‌‌) ಮತ್ತು ಕೃಷ್ಣಪಟ್ಣಂಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ ಗಂಗಾವರಂನಲ್ಲಿ ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ.

ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ಸೀಮಾಂಧ್ರ

ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು. 294 ಸದಸ್ಯರಿದ್ದ ಆಂಧ್ರ ವಿಧಾನಸಭೆಯಲ್ಲಿ ವಿಭಜಕನೆಯ ನಂತರ 175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.




#Article 121: ಆರ್ಯಭಟ (ಗಣಿತಜ್ಞ) (156 words)


ಆರ್ಯಭಟ ಭಾರತದ ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ. 

ಆರ್ಯಭಟ ಕ್ರಿ.ಶ. ೪೭೬ ರಲ್ಲಿ ಅಷ್ಮಕದಲ್ಲಿ ಜನಿಸಿದ್ದು. ನಂತರ ಜೀವಿಸಿದ್ದು ಕುಸುಮಪುರದಲ್ಲಿ. ಆರ್ಯಭಟನ ವ್ಯಾಖ್ಯಾನಕಾರ ಒ೦ದನೆಯ ಭಾಸ್ಕರನ (ಸು. ಕ್ರಿ.ಶ. ೬೨೯) ಅಭಿಪ್ರಾಯದಲ್ಲಿ ಈ ಕುಸುಮಪುರ ಇ೦ದಿನ ಪಾಟ್ನಾ (ಪಾಟಲಿಪುತ್ರ). 
ಆರ್ಯಭಟ ತನ್ನ ಮುಖ್ಯ ಕೃತಿಯಾದ ಆರ್ಯಭಟೀಯದಲ್ಲಿ 

 ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುವ ಬಗೆಯ ಬಗ್ಗೆ ಗಣಿತದ ಮತ್ತು ಖಗೋಳಶಾಸ್ತ್ರದ ಬಗ್ಗೆ ತನ್ನ ಸಿದ್ಧಾ೦ತಗಳನ್ನು ಮ೦ಡಿಸಿದ. ಹಾಗೆಯೇ ಎಲ್ಲ ಗ್ರಹಗಳೂ ಸೂರ್ಯನ ಸುತ್ತಲೂ ಸುತ್ತುವ ಕಕ್ಷೆಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸಿದ. ಹಾಗಾಗಿ ಆರ್ಯಭಟನ ಸೌರವ್ಯೂಹ ಸಿದ್ಧಾ೦ತ ಸೂರ್ಯಕೇ೦ದ್ರೀಯವಾದದ್ದು (heliocentric). ಈ ಪುಸ್ತಕ ನಾಲ್ಕು ಭಾಗಗಳಾಗಿ ವಿ೦ಗಡಿತವಾಗಿದೆ:

ಈ ಕೃತಿಯಲ್ಲಿ ಆರ್ಯಭಟ ಒಂದು ದಿನವನ್ನು ಸೂರ್ಯೋದಯದಿ೦ದ ಆರ೦ಭವಾಗುವುದೆ೦ದು ಲೆಕ್ಕಕ್ಕೆ ತೆಗೆದುಕೊ೦ಡರೆ, ತನ್ನ ಇನ್ನೊ೦ದು ಕೃತಿಯಾದ ಆರ್ಯಭಟ-ಸಿದ್ಧಾ೦ತದಲ್ಲಿ ದಿನದ ಆರ೦ಭವನ್ನು ಮಧ್ಯರಾತ್ರಿಯಾಗಿ ಪರಿಗಣಿಸಿದ್ದಾನೆ. 
ಆರ್ಯಭಟನ ಲೆಕ್ಕಾಚಾರದ೦ತೆ, ಭೂಮಿ ೧೫೮,೨೨,೩೭,೫೦೦ ಬಾರಿ ತಿರುಗಲು ತೆಗೆದುಕೊಳ್ಳುವ ಸಮಯ ಚ೦ದ್ರ ೫,೭೭,೫೩,೩೩೬ ಬಾರಿ ತಿರುಗುವ ಸಮಯಕ್ಕೆ ಸಮ. ಇದು ಖಗೋಳಶಾಸ್ತ್ರದ ಒಂದು ಮೂಲಭೂತ ಸ೦ಖ್ಯೆಯನ್ನು ಅಳೆಯಲು ದಾರಿ ಮಾಡಿಕೊಟ್ಟಿತು: ೧೫೮,೨೨,೩೭,೫೦೦/೫,೭೭,೫೩,೩೩೬ = ೨೭.೩೯೬೪೬೯೩೫೭೨. ಇದು ಆಧುನಿಕ ಗಣಿತದ ಸಹಾಯದಿ೦ದ ಲೆಕ್ಕ ಹಾಕಿದ ಮೌಲ್ಯಕ್ಕೆ ಬಹಳ ಹತ್ತಿರವಿದೆ. 
ಗಣಿತದ ಇನ್ನೊ೦ದು ಮೂಲಭೂತ ಸ್ಥಿರಸ೦ಖ್ಯೆಯಾದ π (ಪೈ) ನ ಲೆಕ್ಕಾಚಾರಕ್ಕೆ ಆರ್ಯಭಟ ಇದನ್ನು ತಿಳಿಸುತ್ತಾನೆ: ನೂರಕ್ಕೆ ನಾಲ್ಕನ್ನು ಸೇರಿಸಿ, ಎ೦ಟರಿ೦ದ ಗುಣಿಸಿ, ೬೨,೦೦೦ ಸೇರಿಸಿ, ಬ೦ದದ್ದನ್ನು ೨೦,೦೦೦ ದಿ೦ದ ಭಾಗಿಸಿ. ಇದರಿ೦ದ ಗಣಿಸಬಹುದಾದ π ನ ಮೌಲ್ಯ ೬೨೮೩೨/೨೦,೦೦೦ = ೩.೧೪೧೬. ಮೊದಲ ನಾಲ್ಕು ದಶಮಾ೦ಶ ಸ್ಥಾನಗಳಿಗೆ ಈ ಮೌಲ್ಯ ಸರಿಯಾದುದು.




#Article 122: ಪಿ.ವಿ.ನರಸಿಂಹರಾವ್ (204 words)


ಪಾಮುಲಪರ್ತಿ ವೆಂಕಟ ನರಸಿಂಹರಾವ್ (ತೆಲುಗು:పి.వి.నరసింహారావు) (ಜೂನ್ ೨೮, ೧೯೨೧ - ಡಿಸೆಂಬರ್ ೨೩, ೨೦೦೪) ಭಾರತದ ೯ ನೆಯ ಪ್ರಧಾನ ಮಂತ್ರಿಗಳು. 

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ನರಸಿಂಹರಾವ್, ಸ್ವಾತಂತ್ರ್ಯಾನಂತರ ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಕೆಲವು ಖಾತೆಗಳನ್ನು ನಿರ್ವಹಿಸಿ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಇದರ ನಂತರ ರಾಷ್ಟ್ರೀಯ ಮಟ್ಟಕ್ಕೇರಿದ ನರಸಿಂಹರಾವ್ ಕೇಂದ್ರ ಸರ್ಕಾರದ ಕೆಲ ಖಾತೆಗಳನ್ನು ನಿರ್ವಹಿಸಿದರು (ಮುಖ್ಯವಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರಗಳಲ್ಲಿ ವಿದೇಶ ವ್ಯವಹಾರಗಳ ಖಾತೆ). 

೧೯೯೧ ರಲ್ಲಿ ರಾಜೀವ್ ಗಾಂಧಿಯವರ ಮರಣಾನಂತರ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ನೆಹರು-ಗಾಂಧಿ ಮನೆತನಕ್ಕೆ ಸೇರಿದವರಲ್ಲದಿದ್ದರೂ ಪೂರ್ಣ ಐದು ವರ್ಷಗಳ ಕಾಲ ಪ್ರಧಾನಿ ಸ್ಥಾನದಲ್ಲಿದ್ದ ಮೊದಲ ವ್ಯಕ್ತಿ ನರಸಿಂಹರಾಯರೇ. 

ಅವರು ಪ್ರಧಾನಿಯಾದ ಹೊಸತರಲ್ಲಿ ಭಾರತ ಸರ್ಕಾರ ತೀವ್ರವಾದ ಆರ್ಥಿಕ ತೊಂದರೆಯಲ್ಲಿತ್ತು. ತುರ್ತಾಗಿ ಡಾ. ಮನಮೋಹನ್ ಸಿಂಗ್ ಅವರನ್ನು ವಿತ್ತ ಮಂತ್ರಿ ಸ್ಥಾನಕ್ಕೆ ಮತ್ತು ಮಾಂಟೇಕ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿತ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ ರಾವ್, ಆರ್ಥಿಕ ಸ್ವತಂತ್ರೀಕರಣ ನೀತಿಗಳನ್ನು ಪರಿಚಯಿಸಿದರು. ತಕ್ಷಣವೇ ಸುಧಾರಿಸಲಾರಂಭಿಸಿದ ಭಾರತೀಯ ಆರ್ಥಿಕ ವ್ಯವಸ್ಥೆ, ಶೇ. ೫.೫ ರ ಪ್ರಮಾಣದಲ್ಲಿ ಮೇಲೇರಲಾರಂಭಿಸಿತು. ಇಡೀ ದಶಕದ ವರೆಗೆ ಇಷ್ಟು ಅಥವಾ ಇನ್ನೂ ಹೆಚ್ಚು ಸುಧಾರಣೆಯನ್ನು ಭಾರತ ದಾಖಲಿಸುತ್ತಾ ಬಂದಿದೆ. 

ತಮ್ಮ ಅವಧಿ ಮುಗಿದ ನಂತರ ಅನೇಕ ಲಂಚ ಪ್ರಕರಣಗಳಲ್ಲಿ ನರಸಿಂಹರಾವ್ ಆಪಾದಿತರಾಗಿದ್ದರು. ನ್ಯಾಯಾಲಯದಲ್ಲಿ ಇವರ ವಿರುದ್ಧ ತೀರ್ಪು ಬಂದರೂ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯ ಅವರನ್ನು ಎಲ್ಲ ಆಪಾದನೆಗಳಿಂದ ಮುಕ್ತಗೊಳಿಸಿತು. 

೧೭ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದ ರಾವ್, ಜ್ಞಾನಪೀಠ ಪುರಸ್ಕೃತ ತೆಲುಗು ಲೇಖಕ ವಿಶ್ವನಾಥ ಸತ್ಯನಾರಾಯಣರ ಕಾದಂಬರಿ ವೇಯಿ ಪದಗಾಲು ಅನ್ನು ಹಿಂದಿ ಭಾಷೆಗೆ ಸಹಸ್ರ ಫಣ್ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. 

ಸಾಮಾನ್ಯವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿದ್ದ ನರಸಿಂಹರಾವ್ ಅವರಿಗೆ ಸುದ್ದಿ ಮಾಧ್ಯಮದವರು ಇಟ್ಟ ಅಡ್ಡಹೆಸರು ಚಾಣಕ್ಯ! ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಭಾರತೀಯ ರಾಜಕೀಯದ ಬಗೆಗೆ ದ ಇನ್‌ಸೈಡರ್ ಎಂಬ ಇಂಗ್ಲಿಷ್ ಕಾದಂಬರಿಯನ್ನು ಬರೆದರು. 

ಡಿಸಂಬರ್ ೨೦೦೪ ರಲ್ಲಿ ಹೃದಯಾಘಾತಕ್ಕೆ ಒಳಗಾದ ರಾವ್ ಡಿಸಂಬರ್ ೨೩ ರಂದು ನಿಧನರಾದರು. 




#Article 123: ಸಾಂಟಾ ಕ್ಲಾಸ್ (131 words)


ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುವ ಕತೆಯಂತೆ, ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ; ಕ್ರಿಸ್ಮಸ್ ನ ಹಿಂದಿನ ದಿನ (ಕ್ರಿಸ್ಮಸ್ ಈವ್) ಹಿಮಜಿಂಕೆಗಳಿಂದ (ರೀಯಿಂಡೀರ್) ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ಕ್ರಿಸ್ಮಸ್ ಬಿಟ್ಟರೆ ವರ್ಷದ ಉಳಿದ ಭಾಗ ಸಾಂಟಾ ತನ್ನ ಮನೆಯಲ್ಲಿ ತನ್ನ ಪತ್ನಿಯ (ಮಿಸೆಸ್ ಸಾಂಟಾ ಕ್ಲಾಸ್) ಜೊತೆ ಇರುತ್ತಾನೆ. ಸಾಂಟಾ ನ ಮನೆ ಎಲ್ಲಿದೆ ಎಂಬುದರ ಬಗ್ಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಕಥೆಗಳಿವೆ - ಉತ್ತರ ಅಮೆರಿಕದ ಜಾನಪದ ಕಥೆಯಂತೆ ಸಾಂಟಾ ಕ್ಲಾಸ್ ವಾಸಿಸುವುದು ಉತ್ತರ ಧ್ರುವದಲ್ಲಿ ಮತ್ತು ಸೇಂಟ್ ಜಾರ್ಜ್ ಸಾಂತಾ ಕ್ಲಾಸ್ ಮತ್ತು ತಾಯಿಯ ಕ್ರಿಸ್ಮಸ್ ಮತ್ತು ಕುಟುಂಬವನ್ನು ಗೌರವಿಸಿ ಮತ್ತು ನಿಮಗೆ ಮಕ್ಕಳನ್ನು ಜಾರ್ಜ್ ಮತ್ತು ಮಿಟರ್ ನೈಟ್ ಮೂನ್ ಮತ್ತು ಸೋಲ್ ಇನ್ವಿಕ್ಟಸ್ ಸನ್ ಡೇ ಜಾರ್ಜ್ ಯುನಿವರ್ಸಲಿ ಸತ್ಯದ ರಿಯಾಲಿಟಿ ಪ್ರಶಾಂತತೆ ನ್ಯಾಯ ಮತ್ತು ಶಾಶ್ವತ ಜೀವನದಲ್ಲಿ ಶಾಶ್ವತವಾದ ಹೃದಯದೊಂದಿಗೆ ಶಾಂತಿ ಅನಂತತೆಯನ್ನು ಹೊಂದಿರುವ ಉಡುಗೊರೆಗಳನ್ನು ನೀಡುವುದಿಲ್ಲ.

ದೊಡ್ಡವರು ಯಾರೂ ಸಾಂಟಾ ಕ್ಲಾಸ್ ಅನ್ನು ನಂಬದಿದ್ದರೂ, ಮಕ್ಕಳಲ್ಲಿ ವಿನೋದಕ್ಕಾಗಿ ಈ ಕಥೆಯನ್ನು ಪ್ರಚಲಿತವಾಗಿರಿಸಲಾಗಿದೆ. ಸ್ವಲ್ಪ ದೊಡ್ಡವರಾದ ಮೇಲೆ ಮಕ್ಕಳಿಗೆ ಸಾಂಟಾ ಕ್ಲಾಸ್ ಕೇವಲ ಜಾನಪದ ನಂಬಿಕೆ ಎಂದು ತಿಳಿಯುತ್ತದೆ.




#Article 124: ಭಾರತೀಯ ಕ್ರಿಕೆಟ್ ತಂಡ (328 words)


ಭಾರತೀಯ ಕ್ರಿಕೆಟ್ ತ೦ಡ ಭಾರತ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಭಾರತ ತ೦ಡ ಮೊದಲ ಟೆಸ್ಟ್ ಪ೦ದ್ಯವನ್ನು ಜೂನ್ ೨೫, ೧೯೩೨ ರಲ್ಲಿ ಇ೦ಗ್ಲೆ೦ಡಿನ ಲಾರ್ಡ್ಸ್ ಮೈದಾನದಲ್ಲಿ ಆಡಿತು.

ಈಗಿನ ಭಾರತ ತ೦ಡದ ಕೆಲವು ಪ್ರಸಿದ್ಧ ಆಟಗಾರರೆ೦ದರೆ ಧೋನಿ,,  ವಿರಾಟ್ ಕೊಹ್ಲಿ, ಪೂಜಾರ, ರೈನಾ, ಯುವರಾಜ್ ಸಿಂಗ್ ಮತ್ತಿತರರು. ಹಿ೦ದಿನ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎರಪ್ಪನಳ್ಳಿ ಪ್ರಸನ್ನ, ಬಿ ಎಸ್ ಚಂದ್ರಶೇಖರ್, ಗುಂಡಪ್ಪ ವಿಶ್ವನಾಥ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್  ಮತ್ತಿತರರು.

ಭಾರತೀಯ ತ೦ಡದ ಆರ೦ಭಿಕ ವರ್ಷಗಳ ಕೆಲ ಪ್ರಸಿದ್ಧ ಆಟಗಾರರೆ೦ದರೆ ಸಿ ಕೆ ನಾಯುಡು, ಲಾಲಾ ಅಮರ್ನಾಥ್, ಮೊಹಮ್ಮದ್ ನಿಸಾರ್ ಮೊದಲಾದವರು. ಸ್ವಾತ೦ತ್ರ್ಯಾನ೦ತರ ಭಾರತ ಆಡಿದ ಮೊದಲ ಪ೦ದ್ಯ ೧೯೪೮ ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ ನಲ್ಲಿ. ಭಾರತದ ನಾಯಕತ್ವವನ್ನು ಲಾಲಾ ಅಮರ್ನಾಥ್ ವಹಿಸಿದ್ದರೆ ಆಸ್ಟ್ರೇಲಿಯಾದ ನಾಯಕತ್ವವನ್ನು ಡಾನ್ ಬ್ರಾಡ್ಮನ್ ವಹಿಸಿದ್ದರು. ಭಾರತದ ಮೊದಲ ಟೆಸ್ಟ್ ವಿಜಯ ಬ೦ದದ್ದು ಇ೦ಗ್ಲೆ೦ಡಿನ ವಿರುದ್ಧ ಮದರಾಸಿನಲ್ಲಿ ೧೯೫೨ ರಲ್ಲಿ. ಮೊದಲ ಸರಣಿ ಗೆಲುವು ಬ೦ದಿದ್ದು ಅದೇ ವರ್ಷ ಪಾಕಿಸ್ತಾನದ ವಿರುದ್ಧ.

೫೦ ಮತ್ತು ೬೦ ರ ದಶಕದ ಕೆಲವು ಪ್ರಸಿದ್ಧ ಆಟಗಾರರಲ್ಲಿ ವಿನೂ ಮ೦ಕಡ್, ಹೇಮು ಅಧಿಕಾರಿ, ಮನ್ಸೂರ್ ಅಲಿ ಖಾನ್ ಪಟೌಡಿ, ಚ೦ದೂ ಬೋರ್ಡೆ ಮೊದಲಾದವರನ್ನು ಹೆಸರಿಸಬಹುದು. ಭಾರತದ ಹೊರಗೆ ಮೊದಲ ಟೆಸ್ಟ್ ವಿಜಯ ಬ೦ದದ್ದು ನ್ಯೂಜೀಲೆ೦ಡ್ ನ ವಿರುದ್ಧ ೧೯೬೮ ರಲ್ಲಿ.

೭೦ ರ ದಶಕದಲ್ಲಿ ಭಾರತೀಯ ಕ್ರಿಕೆಟ್ ನ ನಾಲ್ಕು ಮುಖ್ಯ ಬೌಲರ್ ಗಳು ಬಿಷನ್ ಸಿ೦ಗ್ ಬೇಡಿ, ಎರಾಪಳ್ಳಿ ಪ್ರಸನ್ನ, ಬಿ ಎಸ್ ಚ೦ದ್ರಶೇಖರ್ ಮತ್ತು ಶ್ರೀನಿವಾಸ್ ವೆ೦ಕಟರಾಘವನ್. ಇದೇ ಕಾಲದಲ್ಲಿಯೇ ಪ್ರಸಿದ್ಧ ಬ್ಯಾಟುಗರರಾದ ಸುನಿಲ್ ಗವಾಸ್ಕರ್ ಮತ್ತು ಗು೦ಡಪ್ಪ ವಿಶ್ವನಾಥ್ ಬೆಳಕಿಗೆ ಬ೦ದರು. ಈ ದಶಕದ ಕೊನೆಗೆ ಕಪಿಲ್ ದೇವ್ ಉತ್ತಮ ಆಲ್‍ರೌ೦ಡರ್ ಆಗಿ ಬೆಳೆದರು.

೮೦ ರ ದಶಕದಲ್ಲಿ ಮಹಮದ್ ಅಜರುದ್ದೀನ್, ರವಿ ಶಾಸ್ತ್ರಿ, ಸಂಜಯ್ ಮಾಂಜ್ರೇಕರ್, ಕ್ರಷ್ಣಮಾಚಾರಿ ಶ್ರೀಕಾಂತ್, ಮದನ್ ಲಾಲ್, ಮಣಿ೦ದರ್ ಸಿ೦ಗ್ ಮೊದಲಾದವರು ಪ್ರಸಿದ್ಧರಾದರು. ೧೯೮೩ ರಲ್ಲಿ ಭಾರತ ವಿಶ್ವ ಕಪ್ ಅನ್ನು ಗೆದ್ದಿತು. ಮತ್ತೆ ೧೯೮೫ ರಲ್ಲಿ ಆ೦ತಾರಾಷ್ಟ್ರೀಯ ಚಾ೦ಪಿಯನ್‍ ಶಿಪ್ ಅನ್ನು ಆಸ್ಟ್ರೇಲಿಯಾದಲ್ಲಿ ಗೆದ್ದಿತು. ೧೯೮೬ ರಲ್ಲಿ ಇ೦ಗ್ಲೆ೦ಡಿನಲ್ಲಿ ಗೆದ್ದ ಟೆಸ್ಟ್ ಸರಣಿ ಇದುವರೆಗೆ ಭಾರತದ ಹೊರಗೆ ಭಾರತದ ಕೊನೆಯ ಟೆಸ್ಟ್ ಸರಣಿ ವಿಜಯವಾಗಿದೆ. ಇದೇ ದಶಕದಲ್ಲಿ  ಗವಾಸ್ಕರ್ ೧೦,೦೦೦ ರನ್ನುಗಳನ್ನು ದಾಟಿದ ಮೊದಲ ಬ್ಯಾಟುಗಾರರಾದರು. ೩೪ ಶತಕಗಳನ್ನು ಸಹ ದಾಖಲಿಸಿದರು.

೯೦ ರ ದಶಕದ ಆರ೦ಭದಲ್ಲಿ ತೆ೦ಡೂಲ್ಕರ್ ಮತ್ತು ಅನಿಲ್ ಕು೦ಬ್ಳೆ ಪ್ರಸಿದ್ಧರಾದರು. ೧೯೯೯ ರಲ್ಲಿ ಅನಿಲ್ ಕು೦ಬ್ಳೆ ಒ೦ದೇ ಇನಿ೦ಗ್ಸಿನಲ್ಲಿ ಹತ್ತೂ ವಿಕೆಟ್ ಗಳನ್ನು (ಪಾಕಿಸ್ತಾನ) ಪಡೆದ ಎರಡನೆಯ ಬೌಲರ್ ಆದರು. ಸಚಿನ ತೆ೦ಡೂಲ್ಕರ್ ಅನೇಕ ದಾಖಲೆಗಳನ್ನು ನಿರ್ಮಿಸುತ್ತಿದ್ದ೦ತೆ (ಏಕದಿನ ಪ೦ದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು ಮತ್ತು ಅತಿ ಹೆಚ್ಚು ಶತಕಗಳು, ಇತ್ಯಾದಿ), ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮೊದಲಾದವರು ಅ೦ತಾರಾಷ್ಟ್ರೀಯ ಕ್ರಿಕೆಟ್‍ ನಲ್ಲಿ ಹೆಜ್ಜೆಯೂರತೊಡಗಿದರು.

ಇತ್ತೀಚಿನ ವರ್ಷಗಳಲ್ಲಿ ಹೊರದೇಶಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತ೦ಡ, ೨೦೦೩ ರ ವಿಶ್ವ ಕಪ್ ನಲ್ಲಿ ಫೈನಲ್ ತಲುಪಿತು.

 ಭಾರತೀಯ ಕ್ರಿಕೆಟ್ ತಂಡವು  ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲು ಐ.ಸಿ.ಸಿ. ಸ್ಥಾನ ಪಟ್ಟಿಯಲ್ಲಿ 52ನೇ ಸ್ಥಾನದಲ್ಲಿದೆ.

 ಪಂದ್ಯಗಳನ್ನು ಆಡಲು ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಕೆಳಕಂಡ ಆಟಗಾರರಿದ್ದಾರೆ




#Article 125: ೨೦೦೪ ಹಿಂದೂ ಮಹಾಸಾಗರದ ಭೂಕಂಪ (107 words)


೨೦೦೪ರ ಹಿಂದೂ ಮಹಾಸಾಗರದ ಭೂಕಂಪ ಸಮುದ್ರದ ನೀರಿನಡಿ ನಡೆದ ರಿಖ್ಟರ್ ಮಾಪನದಲ್ಲಿ ೮.೯ ರಷ್ಟು ಬಲವಾದ ಭೂಕಂಪ. ಇದು ಡಿಸೆಂಬರ್ ೨೬, ೨೦೦೪ ರಂದು ಇಂಡೊನೇಷ್ಯಾದಲ್ಲಿರುವ ಸುಮಾತ್ರ ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು ಭಾರತ, ಶ್ರೀಲಂಕಾ, ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. ಸುನಾಮಿ ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು. 

ಮೊದಲ ವರದಿಗಳ ಪ್ರಕಾರ ರಿಖ್ಟರ್ ಮಾಪನದಲ್ಲಿ ೬.೮ ರಷ್ಟು ಬಲವಾದ ಭೂಕಂಪ, ನಂತರ ರಿಖ್ಟರ್ ೮.೯ ರಷ್ಟು ಇದೆಯೆ೦ದು ನಿಗದಿಪಡಿಸಲಾಯಿತು. ಇದು ವರೆಗೆ ದಾಖಲಾದ ಅತಿ ದೊಡ್ಡ ಭೂಕಂಪ ಚಿಲಿ ದೇಶದಲ್ಲಿ ನಡೆದ ರಿಖ್ಟರ್ ೯.೫ ರಷ್ಟಿತ್ತು. ಈಗ ನಡೆದ ಭೂಕಂಪ ಕಳೆದ ೪೦ ವರ್ಷಗಳಲ್ಲಿ ಅತಿ ದೊಡ್ಡದು. 

ಭೂಕಂಪದ ಕೇಂದ್ರಬಿಂದು ಸುಮಾತ್ರಾ ದ್ವೀಪದಿಂದ ಸುಮಾರು ೧೦೦ ಮೈಲಿ ಪಶ್ಚಿಮದಲ್ಲಿದ್ದು ಸಮುದ್ರಮಟ್ಟದಿಂದ ೬.೨ ಮೈಲಿ ಕೆಳಗಿತ್ತು. ಭೂಕಂಪವನ್ನು ದೂರದೇಶಗಳಲ್ಲಿಯೂ ಗುರುತಿಸಲಾಗುವಷ್ಟು ಬಲವಾಗಿತ್ತು (ಉದಾ: ಭಾರತ, ಶ್ರೀಲಂಕಾ).




#Article 126: ಕೊನಾರ್ಕ್ (195 words)


ಕೊನಾರಕ್ (ಕೊಣಾರ್ಕ) ಒಡಿಶಾ ರಾಜ್ಯದ ಕರಾವಳಿಲ್ಲಿರುವ ದೇವಾಲಯ ಶಿಲ್ಪಕಲೆಗೆ ಪ್ರಸಿದ್ಧವಾದ ಕ್ಷೇತ್ರ. ಇಲ್ಲಿರುವ ಸೂರ್ಯ ದೇವಾಲಯ ಯುನೆಸ್ಕೋ ದಿ೦ದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. ಕೋನಾರ್ಕ ದೇವಾಲಯವು ವಾಸ್ತವವಾಗಿ ಒಂದು ಕಲ್ಲಿನ ರಥ. ಇಪ್ಪತ್ನಾಲ್ಕು ಚಕ್ರಗಳ ರಥದೊಳಗೆ ವಿರಾಜಮಾನನಾದ ಸೂರ್ಯದೇವನ ಈ ಗುಡಿಯನ್ನು ಗಂಗ ವಂಶದ ದೊರೆ ಮೂರನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ ಕಟ್ಟಲಾಗಿದೆ. ಸಮುದ್ರ ದಡದ ಉಸುಕು ನೆಲದಲ್ಲಿ ಭದ್ರ ಬುನಾದಿ ಇಲ್ಲದ ಕಾರಣ ನೈಸರ್ಗಿಕ ವಿಕೋಪಕ್ಕೆ ಸುಲಭವಾಗಿ ಪಕ್ಕಾಗಿದೆ. ಇಂಗ್ಲಿಷರ ಆಳ್ವಿಕೆಯ ಕಾಲದಲ್ಲಿ ಪುರಾತತ್ವ ಇಲಾಖೆಯು ಈ ಗುಡಿಯನ್ನು ಸಂರಕ್ಷಿಸಿದ್ದರಿಂದ ಇದನ್ನು ಇಂದಿಗೂ ನಾವು ನೋಡಬಹುದಾಗಿದೆ. ಸೂರ್ಯನ ಪ್ರತಿಮೆಯನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದ್ದು ಚಾವಣಿ ಕುಸಿಯದಂತೆ ಊರುಗೋಲುಗಳ ಆಸರೆ ನೀಡಿ ಗುಡಿಯನ್ನು ಮುಚ್ಚಲಾಗಿದೆ. ಗುಡಿಯ ಹೊರಗಿನ ಶಿಲ್ಪಕಲಾಕೃತಿಗಳು, ರಥಚಕ್ರಗಳ ಶ್ರೀಮಂತ ಸೌಂದರ್ಯ, ಮಿಥುನಶಿಲ್ಪಗಳ ಸಾಲುಸಾಲು ಗಮನ ಸೆಳೆಯುತ್ತವೆ. ಮಾತ್ರವಲ್ಲ ನರ್ತನಶಾಲೆ, ಕುದುರೆ ಮತ್ತು ಸವಾರ, ಆನೆಸಿಂಹಗಳ ಸಮಾಗಮ ಮುಂತಾದ ಶಿಲ್ಪಗಳೂ ನೋಡತಕ್ಕವು.  ಇಂದು ಕೋನಾರ್ಕ ಸೂರ್ಯದೇವಾಲಯವು ವಿಶ್ವಪರಂಪರೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ವರ್ಷಕ್ಕೊಮ್ಮೆ ನಡೆವ ಕೋನಾರ್ಕ ಉತ್ಸವವು ಚೇತೋಹಾರಿಯಾಗಿರುತ್ತದೆ.

ಕೊಣಾರ್ಕದ ದೇವಾಲಯ ತನ್ನ ಶಿಲ್ಪಕಲೆಯ ಭವ್ಯತೆ ಮತ್ತು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಗೆ ಹೆಸರಾಗಿದೆ. 

ಕೊಣಾರ್ಕದ ಭವ್ಯ ಸೂರ್ಯ ದೇವಾಲಯ ಒಡಿಶಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಶಿಲ್ಪಕಲೆಯಲ್ಲಿ ಪ್ರಪ೦ಚದಲ್ಲೇ ಅತ್ಯ೦ತ ವೈಭವಪೂರ್ಣವಾದ ಉದಾಹರಣೆಗಳಲ್ಲಿ ಒಂದು ಎ೦ದೂ ಸಹ ಇದನ್ನು ಪರಿಗಣಿಸಲಾಗಿದೆ. ೧೩ ನೆಯ ಶತಮಾನದಲ್ಲಿ ನರಸಿ೦ಹದೇವನಿ೦ದ ಕಟ್ಟಿಸಲ್ಪಟ್ಟ ಈ ದೇವಾಲಯದ ಮೂಲ  ವಿನ್ಯಾಸದ೦ತೆ ಇದು ಒಂದು ದೊಡ್ಡ ರಥದ ಆಕಾರದಲ್ಲಿದ್ದಿತು - ಏಳು ಕುದುರೆಗಳಿ೦ದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊ೦ದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು ಕಟ್ಟಲಾಯಿತು. ಈಗ ಭಾಗಶ: ಹಾಳಾಗಿರುವ ಈ ದೇವಾಲಯ ಈಗಿನ ಸ್ಥಿತಿಯಲ್ಲಿಯೂ ಅದರ ಶಿಲ್ಪಿಗಳ ದೃಷ್ಟಿ ಮತ್ತು ಪ್ರತಿಭೆಯನ್ನು ತೋರುತ್ತದೆ. ನ೦ಬಿಕೆಯ೦ತೆ, ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪದತಲದಲ್ಲಿ ಬೀಳುತ್ತಿದ್ದವು!




#Article 127: ಖಜುರಾಹೊ (590 words)


 

ಖಜುರಾಹೊ ಭಾರತದ ಮಧ್ಯ ಪ್ರದೇಶದಲ್ಲಿರುವ ಒಂದು ನಗರ, ದೆಹಲಿಯಿಂದ ೬೨೦ ಕಿಮೀ ದಕ್ಷಿಣದಲ್ಲಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಖಜುರಾಹೊ, ಮಧ್ಯಕಾಲೀನ ಹಿಂದೂ ದೇವಾಲಯಗಳ ಅತಿ ದೊಡ್ಡ ಗುಂಪು. ಇದು ಇಲ್ಲಿನ ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರಾಗಿದೆ. 

ಒಂದು ಕಾಲದಲ್ಲಿ ಖಜುರಾಹೊ ಚಂಡೇಲಾ ರಜಪೂತರ ರಾಜಧಾನಿಯಾಗಿತ್ತು. ೧೦ ನೆಯ ಶತಮಾನದಿ೦ದ ೧೨ ನೆಯ ಶತಮಾನದ ವರೆಗೆ ಆಳಿದ ಈ ರಾಜವ೦ಶದ ಅರಸರು, ಖಜುರಾಹೊ ದ ದೇವಸ್ಥಾನಗಳನ್ನು ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಕಟ್ಟಿಸಿದರು. ಇಲ್ಲಿನ ಇಡೀ ಪ್ರದೇಶ ಎ೦ಟು ದ್ವಾರಗಳಿದ್ದ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು. ಪ್ರತಿ ದ್ವಾರದ ಎರಡು ಬದಿಯಲ್ಲಿಯೂ ಖರ್ಜೂರದ ವೃಕ್ಷಗಳಿದ್ದುದರಿಂದ ಈ ಸ್ಥಳಕ್ಕೆ ಖಜುರಾಹೊ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಮೊದಲಿಗೆ ಎಂಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ. 

ಖಜುರಾಹೊ ದಲ್ಲಿರುವ ದೇವಸ್ಥಾನಗಳ ಸಮೂಹ ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. 

ಶೈವ, ವೈಷ್ಣವ ಮತ್ತು ಜೈನ ಧರ್ಮೀಯವಾದ ಈ ಮಂದಿರಗಳು ಆಗಿನ ರಾಜರ ಮತ್ತು ಜನತೆಯ ಸರ್ವಧರ್ಮ ಸಮನ್ವಯ ಭಾವನೆಗಳ ಪ್ರತೀಕಗಳಾಗಿವೆ.

	
ನದಿಯ ದಡದಲ್ಲಿ ಎತ್ತರವಾದ ಜಗತಿಗಳ ಮೇಲೆ ಒಂದೊಂದು ಪ್ರತ್ಯೇಕವಾಗಿ ನಿಂತಿರುವ ಈ ದೇವಾಲಯಗಳ ರಚನೆಯಲ್ಲಿ ಯಾವುದೇ ಬಗೆಯ ವ್ಯವಸ್ಥಾಬದ್ಧ ಯೋಜನೆಯೂ ಕಂಡುಬರುವುದಿಲ್ಲ. ಸಣ್ಣವಾದರೂ ಎತ್ತರವಾದ ವಿಶಾಲ ಜಗತಿನ ಮೇಲೆ ನಿಂತಿರುವ ಈ ಮಂದಿರಗಳು ಸ್ವಯಂಪೂರ್ಣವಾದ ಉತ್ತಮ ವಾಸ್ತುಕೃತಿಗಳಾಗಿವೆ. ಗರ್ಭಗೃಹ, ಮಂಟಪ ಮತ್ತು ಅರ್ಧಮಂಟಪಗಳೇ ಈ ಭಾಗಗಳು. ಕೆಲವು ಮಂದಿರಗಳಲ್ಲಿ ಗರ್ಭಗೃಹಕ್ಕೆ ಸೇರಿದಂತೆ ಅಂತರಾಲ, ಮುಂಭಾಗದಲ್ಲಿ ಮಹಾಮಂಟಪ ಮತ್ತು ಪ್ರದಕ್ಷಿಣಮಾರ್ಗಗಳೂ ಇವೆ. ಎತ್ತರವಾದ ಜಗತಿಯ ಮೇಲೆ ತಳಭಾಗದ ಅಂತಸ್ತು, ಗೋಡೆಗಳು, ಬಾಗಿಲು ಕಿಟಕಿಗಳು, ಮೇಲ್ಭಾಗದ ಉನ್ನತವಾದ ಶಿಖರಗಳು ಈ ದೇವಾಲಯಗಳ ಮುಖ್ಯ ಅಂಗಗಳಾಗಿದ್ದು ಕಟ್ಟಡದ ಔನ್ನತ್ಯವನ್ನು ಎತ್ತಿತೋರುತ್ತವೆ. ಹೊರಗೋಡೆಗಳ ಮೇಲಿನ ಅಂಕರಣ ಕೆತ್ತನೆಗಳು ಕಟ್ಟಡಗಳ ಭವ್ಯತೆಯನ್ನು ಹೆಚ್ಚಿಸುತ್ತವೆ. ಆನಂದಮಯ ತೃಪ್ತ ಜೀವನದ ಭಾವವನ್ನು ಬೀರುತ್ತಿರುವ ಮಾನವರ ಮತ್ತು ಸುಂದರ ದೇವತೆಗಳ ಶಿಲ್ಪಗಳು ನೂರಾರು ಸಂಖ್ಯೆಯಲ್ಲಿ ಅಲಂಕರಣ ಕಾರ್ಯದಲ್ಲಿ ಯೋಜಿತವಾಗಿವೆ. ಇವೆಲ್ಲದರಿಂದ ಇಡೀ ಕಟ್ಟಡವೇ ಜೀವಂತವಾಗಿರುವಂತೆ ಭಾಸವಾಗುತ್ತದೆ. ಮುಂಭಾಗದಿಂದ ಮೆಟ್ಟುಲುಮೆಟ್ಟಿಲಾಗಿ ಕಟ್ಟಡದ ಶಿಖರ ಅತ್ಯಂತ ಉನ್ನತ ಭಾಗವಾಗಿದ್ದು ದೇವಾಲಯದ ಪ್ರಾಶಸ್ತ್ಯವನ್ನು ಹೆಚ್ಚಿಸುವಂತೆ ಕಾಣುತ್ತದೆ. ಖಜುರಾಹೊ ದೇವಾಲಯಗಳ ಶಿಖರಗಳು ಬಹಳ ಸುಂದರವಾಗಿವೆ; ಕಟ್ಟಡದ ಎಲ್ಲ ಭಾಗಗಳಿಗೂ ಕೇಂದ್ರಬಿಂದುಗಳಾಗಿವೆ. ಕೇಂದ್ರಶಿಖರದ ಸುತ್ತ ಇರುವ ಸಣ್ಣಸಣ್ಣ ಶಿಖರಗಳು ಅದರ ಭವ್ಯತೆಯನ್ನು ಹೆಚ್ಚಿಸಿವೆ.

ದೇವಾಲಯದ ಒಳಭಾಗವನ್ನು ಮತೀಯ ಕಾರ್ಯಗಳಿಗೆ ಹೊಂದುವಂತೆ, ಸ್ಥಳಪರಿಮಿತಿಯನ್ನು ಗಮನದಲ್ಲಿಟ್ಟುಕೊಂಡು, ಯೋಜಿಸಲಾಗಿದೆ. ಕಟ್ಟಡಕ್ಕೆ ಒಂದೇ ಪ್ರವೇಶ ಮಾರ್ಗವಿದ್ದು ಮೆಟ್ಟಿಲುಗಳ ಸರಣಿಯ ಮೂಲಕ ಒಳಹೊಗಬೇಕು. ಈ ರೀತಿ ಅರ್ಧಮಂಟಪಕ್ಕೆ ಪ್ರವೇಶಮಾಡಿ ಕಂಬಗಳಿಂದ ಕೂಡಿದ ಮಂಟಪದೊಳಕ್ಕೆ ಹೋದಾಗ ಅಂತರಾಳದ ಮುಂದೆ ನಿಲ್ಲಬೇಕು. ಅದರ ಮುಂದಿನ ಭಾಗವೇ ಗರ್ಭಗೃಹ. ದೇವಾಲಯದ ಒಂದು ಪಾಶ್ರ್ವದಲ್ಲಿ, ಸಾಮಾನ್ಯವಾಗಿ ಎಡಪಾಶ್ರ್ವದಲ್ಲಿ, ಮಹಾಮಂಟಪ ಮತ್ತು ಗರ್ಭಗೃಹದ ಸುತ್ತ ಪ್ರದಕ್ಷಿಣಮಾರ್ಗ ಇವೆ. ದೇವಾಲಯದ ಒಳಭಾಗದಲ್ಲೂ ಅನೇಕ ಶಿಲ್ಪಗಳು ಅದರ ಅಲಂಕರಣವನ್ನು ಹೆಚ್ಚಿಸುತ್ತವೆ. ಆ ಶಿಲ್ಪಗಳಲ್ಲಿ ಕುಬ್ಜ ಸುಂದರ ಸ್ತ್ರೀ ವಿಗ್ರಹಗಳು ಗಮನಾರ್ಹವಾಗಿವೆ. ಅದರಲ್ಲೂ ಬೋದಿಗೆಗಳ ಮೇಲಿನ ಸೂರುಗಳಲ್ಲಿರುವ ವಿಗ್ರಹಗಳು ಮತ್ತು ಕುಸುರಿ ಕೆಲಸ ಕಲಾ ಐಸಿರಿಯ, ಕಲೆಗಾರನ ಮಹೋನ್ನತೆಯ ಸಾಕ್ಷಿಗಳಾಗಿವೆ. ಮಧ್ಯದ ಮಂಟಪದ ಚಾವಣಿಯಲ್ಲಿರುವ ಭುವನೇಶ್ವರಿ ಖಜುರಾಹೊ ದೇವಾಲಯಗಳ ಅತ್ಯುತ್ಕøಷ್ಟವಾದ ಕೆತ್ತನೆಗಳಿಂದ ಕೂಡಿದೆ. ಜ್ಯಾಮಿತೀಯ ಆಕಾರದ ವೃತ್ತ, ಅರ್ಧವೃತ್ತ ಮತ್ತು ರೇಖಾವಿನ್ಯಾಸಗಳಿಂದ ಅತ್ಯಂತ ನಯನಮನೋಹರವಾದ ಅಲಂಕರಣವನ್ನು, ಶಿಲ್ಪಗಳನ್ನು ಕಲ್ಲಿನಲ್ಲಿ ಬಿಡಿಸಿದ್ದಾರೆ.

ಇಲ್ಲಿಯ ದೇವಾಲಯಗಳಲ್ಲಿ ಮುಖ್ಯವಾದ ವಾಯವ್ಯ ಭಾಗದ ಸಮೂಹದಲ್ಲಿ ಶೈವ ವೈಷ್ಣವ ಮಂದಿರಗಳಿವೆ. ಇವುಗಳಲ್ಲಿ ಕಂದರ್ಯ ಮಹಾದೇವ್ ಭಾರತದ ಅತಿಸುಂದರ ದೇಗುಲಗಳಲ್ಲೊಂದು. ಬೇಲೂರು, ಹಳೆಯಬೀಡುಗಳಲ್ಲಿರುವಂತೆ ಎತ್ತರವಾದ ಜಗಲಿಯ ಮೇಲೆ ಇದನ್ನು ಕಟ್ಟಲಾಗಿದೆ. 109 ಅಡಿ ಉದ್ದ 60 ಅಡಿ ಅಗಲ ಮತ್ತು ಭೂಮಿಯ ಮೇಲಿನಿಂದ 116 ಅಡಿ ಎತ್ತರ ಅಥವಾ ಜಗತಿಯಿಂದ 88 ಅಡಿ ಇರುವ ತಳಹದಿಯ ಮೇಲೆ ನಿರ್ಮಿತವಾಗಿದೆ. ಆಕಾರದಲ್ಲಿ ಅಷ್ಟು ಬೃಹತ್ತಾಗಿಲ್ಲದಿದ್ದರೂ ಒಂದು ಘನವಾಗಿ, ಎತ್ತರದಿಂದ ಎತ್ತರಕ್ಕೆ, ಒಂದನ್ನೊಂದು ಮೀರಿ ಏರುತ್ತಿರುವ ಶಿಖರಗಳಿಂದ ಕೊನೆಗೆ ಏಕಮೇವಾದ್ವಿತೀಯವಾಗಿ ನಿಮಿರಿನಿಂತ ಗಿರಿಶೃಂಗದಂಥ ಗರ್ಭಾಂಕಣದ ಶಿಖರದ ಔನ್ನತ್ಯ ಪ್ರೇಕ್ಷಕರ ಹೃನ್ಮನಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಕಲೆಯ ದೃಷ್ಟಿಯಿಂದ ಭುವನೇಶ್ವರದ ದೇವಾಲಯಗಳು ಆಕರ್ಷಣೀಯವಾಗಿದ್ದರೆ, ಮಹಾದೇವ ದೇವಾಲಯ ಬೇಲೂರಿನ ಚನ್ನಕೇಶವ ದೇವಾಲಯದಂತೆ ಒಳಗೂ ಹೊರಗೂ ಮನೋಹರವಾಗಿದೆ. ಅಷ್ಟದಿಕ್ಪಾಲಕರು, ಅಪ್ಸರೆಯರು, ಸುರಸುಂದರಿಯರು, ವಿದ್ಯಾಧರೆಯರು ಇತ್ಯಾದಿ ವಿವಿಧ ಭಂಗಿಭಾವಗಳ ರಮಣೀಯ ಶಿಲಾಕೃತಿಗಳು ಇಲ್ಲಿ ಗುಂಪುಗೂಡಿವೆ. ಇಲ್ಲಿಯ ಕಲಾಸಂಪತ್ತು, ಭಾವಪ್ರೇರಕಶಕ್ತಿ ಅತ್ಯದ್ಭುತವಾದುದೆಂದು ಕಲಾವಿಮರ್ಶಕರು ಉದ್ಗಾರವೆತ್ತಿದ್ದಾರೆ. ಈ ಗುಂಪಿನ ವೈಷ್ಣವ ದೇವಾಲಯಗಳಲ್ಲಿ ಚತುರ್ಭುಜ ವಿಷ್ಣುಮಂದಿರ 85 ಅಡಿ ಉದ್ದ ಮತ್ತು 44 ಅಡಿ ಅಗಲವಾಗಿದೆ. ಪಂಚಾಯತನ ಪದ್ಧತಿಯಲ್ಲಿ ನಿರ್ಮಿತವಾಗಿರುವ ಈ ಮಂದಿರಗಳಲ್ಲಿ ಐದು ಗರ್ಭಗೃಹಗಳಿವೆ. ಈ ಹಿಂದೂ ದೇವಾಲಯಗಳ ಮಾದರಿಯಲ್ಲೇ ನಿರ್ಮಿತವಾದ ಆರು ಜೈನ ದೇವಾಲಯಗಳು ಆಗ್ನೇಯ ಭಾಗದಲ್ಲಿದೆ. ಇವುಗಳ ಹೊರಗೋಡೆಗಳ ಮೇಲೆ ತೋರಣಗಳು, ಸ್ತಂಭಿಕೆಗಳು ಮುಂತಾದ ವಾಸ್ತುಕೃತಿಗಳ ಅಲಂಕರಣವಿಲ್ಲದೆ ಅವು ಸರಳವಾಗಿವೆ. ಅವುಗಳ ಸ್ಥಾನದಲ್ಲಿ ಜೋಡಿಸಲಾಗಿರುವ ಮೂರ್ತಿಗಳಿಂದಾಗಿ ಈ ಗೋಡೆಗಳಿಗೆ ವಿಶೇಷವಾದ ಶೋಭೆ ಪ್ರಾಪ್ತವಾಗಿದೆ. ಈ ಜೈನ ಮಂದಿರಗಳಲ್ಲಿ ಮುಖ್ಯವಾದ ಜಿನನಾ ಬಸದಿ 60 ಅಡಿ ಉದ್ದ ಮತ್ತು 30 ಅಡಿ ಅಗಲವಾದ್ದು.

ಈ ಗುಂಪಿನ ಪಕ್ಕದಲ್ಲಿರುವ ಪಾಳಾದ ಜೈನಮಂದಿರವೊಂದು ಗಮನಾರ್ಹವಾದ್ದು. ಘಂಟೈ ಮಂದಿರವೆಂದು ಹೆಸರಾದ ಈ ಮಂದಿರ ಪೂರ್ಣವಾಗಿದ್ದಾಗ ಆ ರೀತಿಯ ಕಟ್ಟಡಗಳಲ್ಲಿ ಮಕುಟಪ್ರಾಯವಾಗಿತ್ತೆಂದು ಹೇಳಬಹುದು. ಈಗ ಉಳಿದಿರುವ ಭಾಗಗಳಲ್ಲಿರುವ, ಉತ್ತಮ ಕೈಚಳಕ ತೋರುವ ಕಂಬಗಳು, ಭವ್ಯ ಕೆತ್ತನೆಗಳಿರುವ ಪ್ರವೇಶದ್ವಾರ ನೋಟಕರ ಕಣ್ಮನಗಳನ್ನು ತಣಿಸುತ್ತವೆ. ಈ ಪರಿಸರದಲ್ಲಿರುವ ಮತ್ತೆ ಕೆಲವು ಮಂದಿರಗಳೂ ಉತ್ತಮ ಕಲಾವಂತಿಕೆಯಿಂದ ಕೂಡಿವೆ; ಕೆಲವು ಪಾಳು ಬಿದ್ದಿವೆ. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಮಹೋನ್ನತ ಘಟ್ಟವನ್ನು ರೂಪಿಸುವ ಉತ್ತಮ ನಿದರ್ಶನಗಳ ಸಾಲಿನಲ್ಲಿ ಸೇರುತ್ತವೆಂದು ನಿಸ್ಸಂದೇಹವಾಗಿ ಹೇಳಬಹುದು. ಭಾರತೀಯ ಶಿಲ್ಪಕಲೆಯ ಪರಾಕಾಷ್ಠೆಯ ಉತ್ತಮ ನಿದರ್ಶನಗಳಲ್ಲಿ ಖಜುರಾಹೊದ ಶಿಲ್ಪಗಳೂ ಸೇರುತ್ತವೆ. ಹಂತಹಂತವಾಗಿ ಕೆತ್ತಲಾದ ನಗ್ನ ಅಪ್ಸರೆಯರ ಅಸಾಧಾರಣ ಸುಂದರ ದೇಹಗಳು ಬಾಗಿ ಬಳುಕುತ್ತ ನೋಟಕರ ಚಿತ್ತವನ್ನು ತಮ್ಮಲ್ಲಿ ಸೆರೆಹಿಡಿಯುತ್ತವೆ. ಸುಂದರ ಸ್ತ್ರೀಯರ ದೇಹಗಳಲ್ಲಿ ತುಂಬಿ ತುಳುಕುವ ವಿವಿಧ ಶೃಂಗಾರ ಪ್ರಧಾನ ಭಾವಭಂಗಿಗಳು, ಪುರುಷರ ಚಿತ್ತವನ್ನು ಕ್ಷೋಭೆಗೊಳಿಸುವ ರಸಮಯ ಸನ್ನಿವೇಶಗಳು ಪ್ರೇಕ್ಷಕರ ಒಂದೊಂದು ನೋಟಕ್ಕೂ ಹೊಸಹೊಸ ಭಾವನೆಗಳನ್ನು ಸೂಚಿಸುತ್ತವೆ. ಮಧ್ಯಯುಗೀನ ಭಾರತೀಯ ಶಿಲ್ಪಿಗಳು ತಮ್ಮ ಅತಿಮಾನುಷ ಕಲಾದವಂತಿಕೆಯನ್ನು ಖಜುರಾಹೊ ಮಂದಿರಗಳಲ್ಲಿ ಪ್ರದರ್ಶಿಸಿ ವಿಶ್ವದ ಕಲಾ ಇತಿಹಾಸದಲ್ಲಿ ಅಮರರಾಗಿದ್ದಾರೆ. 							 				




#Article 128: ಫತೇಪುರ್ ಸಿಕ್ರಿ (212 words)


ಫತೇಪುರ್ ಸಿಕ್ರಿ ೧೬ ನೆಯ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಅಕ್ಬರ್ ಕಟ್ಟಿಸಿದ ರಾಜಧಾನಿ. ಇದು ಆಗ್ರಾ ನಗರದ ಸಮೀಪದಲ್ಲಿದೆ.  ಸಾ೦ಪ್ರದಾಯಿಕ ರಾಜಧಾನಿಯಾಗಿ ಮಾತ್ರ ಉಪಯೋಗಿಸಲ್ಪಟ್ಟದ್ದರಿ೦ದ ಫತೇಪುರ್ ಸಿಕ್ರಿಗೆ ಹೆಚ್ಚಿನ ಕೋಟೆಗಳ ರಕ್ಷಣೆಗಳಿಲ್ಲ. ಅಕ್ಬರನ ವ್ಯಕ್ತಿತ್ವ ಮತ್ತು ಆದರ್ಶಗಳಿ೦ದ ಪ್ರಭಾವಿತವಾದ ಈ ನಗರ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. 

ಅಕ್ಬರ್ ಧಾರ್ಮಿಕ ಸಹಿಷ್ಣುತೆ ಮತ್ತು ಧರ್ಮಸಮನ್ವಯತೆಯಲ್ಲಿ ನ೦ಬಿಕೆಯನ್ನು ಹೊ೦ದಿದ್ದ. ವಿವಿಧ ಮತ-ಧರ್ಮಗಳಿ೦ದ ನ೦ಬಿಕೆಗಳನ್ನು ಹೊ೦ದಿದ್ದ ದೀನ್-ಇ-ಇಲಾಹಿ ಎ೦ಬ ಮತವನ್ನೂ ಸ್ಥಾಪಿಸಿದ್ದ. ಹಿ೦ದೂ ಧರ್ಮದ ಜನರೊ೦ದಿಗೆ ರಾಜಕೀಯ ಹಾಗೂ ವೈಯಕ್ತಿಕ ಸ೦ಬ೦ಧಗಳನ್ನು ಮಾಡಿಕೊ೦ಡಿದ್ದ ಅಕ್ಬರ್ ಈ ನಗರದ ವಿನ್ಯಾಸವನ್ನು ನಿರ್ಧರಿಸಿದ ಪ್ರಮುಖ ವ್ಯಕ್ತಿ. ಹಾಗಾಗಿ ಅವನ ವೈಯಕ್ತಿಕ ಆದರ್ಶಗಳ ಪ್ರಭಾವವನ್ನು ಈ ನಗರದಲ್ಲಿ ಕಾಣಬಹುದು. 

ನಗರದ ವಿನ್ಯಾಸದಲ್ಲಿ ವಿಶಾಲವಾದ ಸ್ಥಳಗಳಲ್ಲಿ ಕಟ್ಟಡಗಳನ್ನು ಕಟ್ಟುವುದರ ಮೂಲಕ ವೈಶಾಲ್ಯದ ಭಾವನೆಯನ್ನು ಮೂಡಿಸಲು ಪ್ರಜ್ಞಾಪೂರ್ವಕ ಯತ್ನವನ್ನು ಮಾಡಲಾಗಿದೆಯೆ೦ಬುದನ್ನು ಸ್ಪಷ್ಟವಾಗಿ ಕಾಣಬಹುದು. ನಗರದಲ್ಲಿ ಗಮನಿಸಬಹುದಾದ ಒಂದು ಅ೦ಶವೆ೦ದರೆ ಎಲ್ಲ ಮುಖ್ಯ ಸ್ಥಳಗಳಲ್ಲಿಯೂ ಚೌಕಗಳ ಇರುವಿಕೆ ಮತ್ತು ಚೌಕಗಳ ಸುತ್ತಲೂ ಹಿನ್ನೆಲೆಯಾಗಿ ಕಟ್ಟಡಗಳ ನಿರ್ಮಾಣ. ಇತರ ಮೊಘಲ್ ನಗರಗಳು (ಉದಾ: ಷಾಜಹಾನಾಬಾದ್) ಪೂರ್ವನಿರ್ಧಾರಿತ ಯೋಜನೆಗಳನ್ನು ಹೊ೦ದಿವೆ - ಆದರೆ ಫತೇಪುರ್ ಸಿಕ್ರಿಯಲ್ಲಿ ಅನೌಪಚಾರಿಕ ಯೋಜನೆ ಮತ್ತು ಸುಧಾರಣೆಗಳನ್ನು ಕಾಣಬಹುದು. 

ಫತೇಪುರ್ ಸಿಕ್ರಿಯ ಕಟ್ಟಡಗಳಲ್ಲಿ ವಿವಿಧ ಸ್ಥಳೀಯ ನಿರ್ಮಾಣ ತ೦ತ್ರಗಳ ಸಮಾಗಮವನ್ನು ಕಾಣಬಹುದು, ಉದಾಹರಣೆಗೆ ಗುಜರಾತಿ ಮತ್ತು ಬೆ೦ಗಾಲಿ ಕಟ್ಟಡ ವಿನ್ಯಾಸಗಳನ್ನು ಹೊ೦ದಿರುವ ಅನೇಕ ಕಟ್ಟಡಗಳು ಇಲ್ಲಿವೆ. ಇದಕ್ಕೆ ಮುಖ್ಯ ಕಾರಣ ಭಾರತದ ವಿವಿಧೆಡೆಗಳಿ೦ದ ಬ೦ದ ಕುಶಲ ಕೆಲಸಗಾರರನ್ನು ಈ ಕಟ್ಟಡಗಳನ್ನು ಕಟ್ಟುವ ಕೆಲಸದಲ್ಲಿ ನಿಯೋಜಿಸಿಕೊಳ್ಳಲಾಗಿತ್ತು. ಹಿ೦ದೂ, ಜೈನ ಮತ್ತು ಮುಸ್ಲಿಮ್ ನಿರ್ಮಾಣ ಶೈಲಿಗಳ ಸಮಾಗಮವೂ ಇಲ್ಲಿದೆ. ಕಟ್ಟಡಗಳನ್ನು ಕಟ್ಟಲು ಉಪಯೋಗಿಸಿರುವ ಮುಖ್ಯ ವಸ್ತು ಕೆ೦ಪು ಕಲ್ಲು (ಅಕ್ಬರನ ಕಾಲದ ಶೈಲಿ ಇದು). 

ಅನೇಕ ಧಾರ್ಮಿಕ ಮತ್ತು ಜಾತ್ಯತೀತ ಕಟ್ಟಡಗಳನ್ನು ಹೊ೦ದಿರುವ ಈ ನಗರದ ಕೆಲವು ಮುಖ್ಯ ಕಟ್ಟಡಗಳು:

ಅನೇಕ ವರ್ಷಗಳ ಶ್ರಮದಿ೦ದ ಕಟ್ಟಲ್ಪಟ್ಟಿದ್ದರೂ ಫತೇಪುರ್ ಸಿಕ್ರಿ ಹೆಚ್ಚು ವರ್ಷಗಳ ಕಾಲ ಉಪಯೋಗಿಸಲ್ಪಡಲಿಲ್ಲ. ಇದಕ್ಕೆ ಒಂದು ಕಾರಣ ಪ್ರಾಯಶಃ ಉತ್ತಮ ನೀರಿನ ಸೌಲಭ್ಯ ಈ ಪ್ರದೇಶದಲ್ಲಿ ಇಲ್ಲದೆ ಇರುವುದು. 

ಫತೇಪುರ್ ಸಿಕ್ರಿ ಯುನೆಸ್ಕೋ ದಿ೦ದ ವಿಶ್ವ ಪರಂಪರೆಯ ತಾಣ ಎಂದು ಮಾನ್ಯತೆ ಪಡೆದಿದೆ. 




#Article 129: ಶ್ರೀಲಂಕಾ (402 words)


ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ (೧೯೭೨ ರ ಮೊದಲು ಸಿಲೋನ್)  ಭಾರತೀಯ ಉಪಖಂಡದ ಆಗ್ನೇಯದಲ್ಲಿರುವ ದ್ವೀಪ ರಾಷ್ಟ್ರ.ಪುರಾತನ ಕಾಲದಿಂದ ಲಂಕಾ, ಲಂಕಾದ್ವೀಪ, ಸಿಂಹಳದ್ವೀಪ, ಸೆರೆಂದಿಬ್ ಮೊದಲಾದ ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಶ್ರೀಲಂಕಾ ಬ್ರಿಟಿಷ್ ಆಡಳಿತದ ಕಾಲದಲ್ಲಿ ಸಿಲೋನ್ ಎಂದು ಹೆಸರು ಪಡೆದಿತ್ತು. ೧೯೭೨ ರಲ್ಲಿ ಅದರ ಹೆಸರನ್ನು ಶ್ರೀಲಂಕಾ ಎಂದು ಬದಲಾಯಿಸಲಾಯಿತು.   

ಶ್ರೀಲಂಕೆಗೆ ಸಿಂಹಳ ಜನರು ಸುಮಾರು ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರಾಯಶಃ ಉತ್ತರ ಭಾರತದಿಂದ ಬಂದಿರಬಹುದೆಂದು ಊಹಿಸಲಾಗಿದೆ. ಕ್ರಿ.ಪೂ. ಮೂರನೇ ಶತಮಾನದಲ್ಲಿ ಇಲ್ಲಿಗೆ ಬೌದ್ಧ ಧರ್ಮವನ್ನು ಪರಿಚಯಿಸಲಾಯಿತು. ನಂತರ ದಕ್ಷಿಣ ಭಾರತದಿಂದ ತಮಿಳರ ವಲಸೆ ಆರಂಭವಾಗಿ ಕ್ರಿ.ಶ. ೧೩ನೇ ಶತಮಾನದ ಕಾಲಕ್ಕೆ ಸಾಕಷ್ಟು ತಮಿಳರ ಜನಸಂಖ್ಯೆ ಶ್ರೀಲಂಕೆಯಲ್ಲಿತ್ತು. 

೧೬ನೆಯ ಶತಮಾನದಲ್ಲಿ ಶ್ರೀಲಂಕೆಯ ಕೆಲ ಭಾಗಗಳನ್ನು  ಪೋರ್ಚುಗೀಸರು ವಶಪಡಿಸಿಕೊಂಡರು. ನಂತರ ಇತರ ಯೂರೋಪಿನ ದೇಶಗಳೂ ಬಂದವು. ೧೭೯೬ ರಲ್ಲಿ ಶ್ರೀಲಂಕಾ ಸಂಪೂರ್ಣವಾಗಿ  ಬ್ರಿಟಿಷರ ಕೈಸೇರಿತು. ೧೯೪೮ ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾ, ೧೯೭೨ ರಲ್ಲಿ ತನ್ನ ಹೆಸರನ್ನು ಅಧಿಕೃತವಾಗಿ ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ ಎಂದು ಬದಲಾಯಿಸಿತು. 

ಕಳೆದ ಎರಡು ದಶಕಗಳಲ್ಲಿ ಶ್ರೀಲಂಕೆಯ ತಮಿಳು ಜನರು ಮತ್ತು ಸಿಂಹಳೀಯರ ನಡುವೆ ಸಾಕಷ್ಟು ಅಶಾಂತಿ ಏರ್ಪಟ್ಟಿದ್ದು, ಎಲ್‍ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಾಕಷ್ಟು ತೊಂದರೆಗಳುಂಟಾಗಿವೆ. ೨೦೦೪ರಲ್ಲಿ ಒಂದು ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.

ಶ್ರೀಲಂಕೆಯ ಈಗಿನ ಅಧ್ಯಕ್ಷರು ಮೈತೀಪಾಲ ಸಿರಿಸೇನಾ. ಈಗಿನ ಪ್ರಧಾನ ಮಂತ್ರಿಗಳು ವಿಕ್ರಮಸಿಘ್ಹ.

ಶ್ರೀಲಂಕಾ ಅತೀ ಚಿಕ್ಕ ದ್ವೀಪ ಹಾಗೂ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ.ಇಲ್ಲಿ ಅನೇಕ ಬೀಚ್,ಹೋಟೆಲ್,ರೆಸ್ಟೋರೆಂಟ್‍ಗಳು ಅಭಿವೃಧ್ದಿಯ ಪಥದಲ್ಲಿವೆ.ಇದರ ಜೊತೆಗೆ ವನ್ಯಸಂಪತ್ತು ಕೂಡ ಪ್ರವಸಿಗರನ್ನು ಆಕರ್ಷಿಸುತ್ತಿದೆ.ಈ ದೇಶದ ದಕ್ಷಿಣ ಕರಾವಳಿಯಲ್ಲಿನ ಮೊಟ್ಟೆ ಇಡುವ ಆಮೆಗಳು,ವರ್ಣರಂಜಿತ ಪಕ್ಷಿಗಳು,ನಾನಾ ಬಗೆಯ ಮಂಗಗಳು,ಚಿರತೆಗಳು,ನೀಲಿ ತಿಮಿಂಗಿಲ, ಹಾರುವ ಮೀನು ಮತ್ತು ಡಾ‌‍ಲ್ಫಿನ್ಜತೆಗಿನ ಆಟ ಇಲ್ಲಿನ ಪ್ರವಾಸಿ ತಾಣದ ಪ್ರಮುಖ ಅಂಶಗಳು.ಈ ದೇಶ ಇತ್ತೀಚೆಗೆ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ.ಪರ್ವತಅರೋಹಿಗಲಿಗೆ ಶ್ರೀಲಂಕಾವು ಬಹಳ ಉಪಯುಕ್ತವಾದ ದೇಶ.ಶ್ರೀಲಂಕಾದ ಹೆದ್ದಾರಿಯ ಪಕ್ಕದಲ್ಲಿ ಆನೆಗಳಿಗೆ ಪಾರ್ಕ್ ಗಳನ್ನು ಮಾಡಿಸಲಾಗಿದೆ, ಗಾಲೆ ಎಂಬಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು,ಯೇಲ್ ನ್ಯಾಷನಲ್ ಪಾರ್ಕ್ ನಲ್ಲಿರುವ ಚಿರತೆಗಳು, ಶ್ರೀಲಂಕಾದ ಬೆಟ್ಟ ಪ್ರದೇಶಗಳಲ್ಲಿ ತಯಾರಾಗಿ ಮಾರುಕಟ್ಟೆಗೆ ಹೋಗುವ ಕಾಫಿ,ಟೀ ವ್ಯವಹಾರ, ಕಾಡಿನ ನಡುವಿನಲ್ಲಿರುವ ಪ್ರಾಚೀನ ಅವಶೇಷಗಳು ಇಲ್ಲಿನ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳು. ಈ ಕಾರಣಗಳಿಂದಾಗಿ ಪ್ರಸಿಧ್ದ ಪ್ರವಾಸಿಗ ಮಾರ್ಕೋ ಪೋಲೋ ಶ್ರೀಲಂಕಾ ದೇಶವನ್ನು ವಿಶ್ವದ ಅತ್ಯುತ್ತಮ ದ್ವೀಪಗಳ ಸಾಲಿಗೆ ಸೇರಿಸಿರುತ್ತಾನೆ. 

ಕೊಲಂಬೊ ಶ್ರೀಲಂಕಾದ ರಾಜಧಾನಿಯಾಗಿದೆ.ಮಾರ್ಚ್ನಿನಿಂದ ಮೇ ತಿಂಗಳಿನೊಳಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.ಇಲ್ಲಿ ಮಹಾದೇವಿ ವಿಹಾರ,ಪಾರ್ಕ್,ಹೂಗಳ ಮಾರುಕಟ್ಟೆ,ಅತ್ಯುತ್ತಮ ಶ್ರೇಣಿಯ ರೆಸ್ಟೋರೆಂಟ್ಗಳನ್ನು ನೋಡಬಹುದು.ಇಲ್ಲಿ ಜು‍ಲೈ ಆಗಸ್ಟ್ ತಿಂಗಳುಗಳ ನಡುವೆಯು ಇಲ್ಲಿನ ಪ್ರಸಿದ್ದ ಹಬ್ಬವಾದ ವೇಲೇ ‌ಫೆಸ್ಟಿವಲ್ ನಡೆಯುತ್ತದೆ.

ಶ್ರೀಲಂಕಾದ ಪಾಮ್ ಬೀಚ್ ಸುಮಾರು ೧೬೦೦ ಕಿ.ಮೀವರೆಗೆ ವ್ಯಾಪಿಸಿರುವುದು.ಇದರ ಪಕ್ಕದಲ್ಲಿಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಇರುವುದರಿಂದ ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚು.ಗಾಲೆಯಲ್ಲಿರುವ ಅನ್ ವಾಟೂನಾ ಕಡಲ ತೀರ ಪ್ರಪಂಚದ ಮುಂಚೂಣಿಯಲ್ಲಿರುವ ೧೫ ಕಡಲ ತೀರಗಳ ಪಟ್ಟಿಯಲ್ಲಿದೆ.ಇಲ್ಲಿನ ಬೆಂಟೋಟ ಕಡಲ ತೀರದಲ್ಲಿ ಡೈವಿಂಗ್ ಮತ್ತು ಸ್ನಾರ್ಕ್ ಲಿಂಗ್ ಮಾಡುವ ಅವಕಾಶವಿದೆ.ಹವಳದ ಮತ್ತು ನೀರಿನೊಳಗಿರುವ ಗುಹೆಗಳು ಅಭಿವ್ರದ್ದಿಯ ಪಥದಲ್ಲಿದೆ.

ಶ್ರೀಲಂಕಾದ ಅತ್ಯುನ್ನತ ಪರ್ವತ ಶ್ರೇಣಿಯಲ್ಲಿ ಒಂದಾಗಿರುವ ಇದು ಆ ದೇಶದ ಜಾನಪದ ವಿದ್ವತ್ತಿಗೂ ಕಾರಣವಾಗಿದೆ.ಇದಕ್ಕೆ ಮುಖ್ಯ ಕಾರಣ ಶ್ರೀಪಾದ ಇರುವುದು ಇದೇ ಜಾಗದಲ್ಲಿ.ಬೌದ್ಧ,ಹಿಂದು,ಮುಸ್ಲಿಂ,ಕ್ರೈಸ್ತರೆಲ್ಲರೂ ಈ ಪರ್ವತ ಶ್ರೇಣಿಯನ್ನು ಪವಿತ್ರ  ಸ್ಥಳವೆಂದು ಪರಿಗಣಿಸಿದ್ದಾರೆ. ಈ ಪರ್ವತ ಶ್ರೇಣಿಯನ್ನು ತಲುಪಬೇಕಾದರೆ ಸುಮಾರು ೪೮೦೦ ಮೆಟ್ಟಿಲುಗಳನ್ನು ದಾಟಿಕೊಡು  ಸಾಗಬೇಕು. 

ಸಾವಿರಾರು  ವರ್ಷಗಳ  ಹಿಂದೆ ಅನುರಾಧಪುರವು  ಶ್ರೀಲಂಕಾ  ದೇಶದ  ರಾಜಧಾನಿಯಾಗಿತ್ತು. ಈ  ಪ್ರಾಚೀನ  ನಗರಿಯನ್ನು  ನೋಡಿದಾಗ  ಇಲ್ಲಿ  ಬಹು  ಹಿಂದೆಯೇ  ನಾಗರಿಕತೆಯು   ಚಾಲ್ತಿಯಲ್ಲಿತ್ತು  ಎಂದು ತಿಳಿದು  ಬರುತ್ತದೆ.ಈ  ಊರಿನ  ರಚನೆಯನ್ನು  ಕೂಡ  ಬಹಳ  ಯೋಜನಾಬದ್ದವಾಗಿ  ಮಾಡಲಾಗಿದೆ. ಇಲ್ಲಿನ  ಪ್ರಾಚೀನ ದೇವಸ್ಧಾನಗಳ  ಅವಶೇಷಗಳು, ಅರಮನೆ, ದೈತ್ಯ  ಗಾತ್ರದ  ಸ್ತೂಪಗಳು  ಇಲ್ಲಿನ ಇತಿಹಾಸವನ್ನು  ವಿವರಿಸುತ್ತದೆ. 

ಶ್ರೀಲಂಕಾದ  ಬೌದ್ಧ  ಪರಂಪರೆಯ  ಒಂದು ಒಳನೋಟವು ಡಂಬುಲ್ಲ  ಗುಹೆ ದೇವಾಲಯದಲ್ಲಿ ಕಾಣಸಿಗುತ್ತದೆ. ಇಲ್ಲಿ  ದೈತ್ಯಕಾರದ ಕಲ್ಲಿನ  ಶಿಲಾ ಸ್ತರದಲ್ಲಿ  ಧಾರ್ಮಿಕ  ಭಿತ್ತಿ ಚಿತ್ರಗಳನ್ನು ಸಂಗ್ರಹಿಸಲಾಗಿದೆ. 

ಇದು  ವಿಶ್ವ ಪರಂಪರೆಯ  ತಾಣಗಳಲ್ಲಿ  ಒಂದಾಗಿದೆ.ಇಲ್ಲಿ ನಡೆಯುವ ಸಾಹಿತ್ಯ ಉತ್ಸವ ಬಹಳ ಜನಪ್ರಿಯವಾಗಿದೆ.ಈ ಪ್ರದೇಶ ಕರಿ ಮರದ ಕೆತ್ತನೆ ಹಾಗೂ ವಜ್ರದ ಹೊಳಪು ಹೊಂದಿರುವ ಕರಕುಶಲ ಕೇಂದ್ರವಾಗಿಯೂ ಪ್ರಸಿದ್ದಿಯಾಗಿದೆ.




#Article 130: ಗುಲ್ಜಾರಿ ಲಾಲ್ ನಂದಾ (112 words)


ಗುಲ್ಜಾರಿ ಲಾಲ್ ನಂದಾ

ಗುಲ್ಜಾರಿ ಲಾಲ್ ನಂದಾ (ಜುಲೈ ೪, ೧೮೯೮ - ಜನವರಿ ೧೫, ೧೯೯೮) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು.

ಲಾಹೋರ್, ಆಗ್ರಾ ಮತ್ತು ಅಲಹಾಬಾದ್ ಗಳಲ್ಲಿ ಅಧ್ಯಯನ ನಡೆಸಿದ ನಂದಾ ಅವರು ೧೯೨೧ರಲ್ಲಿ ಮುಂಬಯಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ೧೯೩೭ರಲ್ಲಿ ಮುಂಬಯಿ ಸರ್ಕಾರದ ವಿಧಾನಸಭೆಗೆ ಚುನಾಯಿತರಾಗಿದ್ದರು.

ಸ್ವಾತಂತ್ರ್ಯಾನಂತರ ೧೯೫೦ ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾದರು. ಹಾಗೆಯೇ ನೀರಾವರಿ ಮತ್ತು ವಿದ್ಯುಚ್ಛಕ್ತಿ ಖಾತೆಗಳಲ್ಲಿ ಸಚಿವರಾದರು. ೧೯೫೨ ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೫೭ ಮತ್ತು ೧೯೬೨ ರಲ್ಲಿ ಮತ್ತೆ ಲೋಕಸಭೆಗೆ ಚುನಾಯಿತರಾದರು. ಉದ್ಯೋಗ ಖಾತೆಯ ಸಚಿವರಾಗಿ ನಂತರ ೧೯೬೩ ರಿಂದ ೬೬ ರ ವರೆಗೆ ಗೃಹ ಖಾತೆಯನ್ನು ಪಡೆದರು.

ಜವಾಹರಲಾಲ್ ನೆಹರುರವರು ೧೯೬೪ ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಗುಲ್ಜಾರಿ ಲಾಲ್ ನಂದಾ ಪ್ರಧಾನಿಯಾಗಿದ್ದರು. ಮತ್ತೊಮ್ಮೆ ಲಾಲ್ ಬಹಾದುರ್ ಶಾಸ್ತ್ರಿ ೧೯೬೬ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಪ್ರಧಾನಿಗಳಾಗಿದ್ದರು.

ಗುಲ್ಜಾರಿ ಲಾಲ್ ನಂದಾ ಭಾರತ ರತ್ನ ಪ್ರಶಸ್ತಿ ವಿಜೇತರು.

ಗುಲ್ಜಾರಿಲಾಲ್ ನಂದಾ ಇವರು ಮಹಾತ್ಮ ಗಾಂಧೀಜಿಯವರ ತತ್ವಗಳ ಅನುಯಾಯಿಗಳಾಗಿದ್ದರು.

೧೯೯೮ರ ಜನವರಿಯಲ್ಲಿ ಶ್ರೀ ಗುಲ್ಜಾರಿಲಾಲ್ ನಂದಾ ನಿಧನರಾದರು.




#Article 131: ಇಂದಿರಾ ಗಾಂಧಿ (2412 words)


ಇಂದಿರಾ ಪ್ರಿಯದರ್ಶಿನಿ ಗಾಂಧಿಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; (೧೯ ನವೆಂಬರ್ ೧೯೧೭ – ೩೧ ಅಕ್ಟೋಬರ್ ೧೯೮೪) ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ  ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಇಂದಿನವರೆಗೆ ಆ ಸ್ಥಾನ ಅವರ ಪಾಲಿನದ್ದೇ ಆಗಿದೆ. ಅವರು ಮಹಾತ್ಮ ಗಾಂಧಿ ಅವರ ಸಂಬಂಧಿಕಳಲ್ಲ.

ರಾಜಕೀಯ ಪ್ರಭಾವವಿದ್ದ ನೆಹರು ಕುಟುಂಬದಲ್ಲಿ ಅವರ ಜನನ. ಬೆಳೆದದ್ದು ತೀಕ್ಷ್ಣ ರಾಜಕೀಯ ವಾತಾವರಣದಲ್ಲಿ. ಮೋತಿಲಾಲ್ ನೆಹರು ಈಕೆಯ ಅಜ್ಜ. ಅವರೊಬ್ಬ ಪ್ರಮುಖ ಭಾರತೀಯ ರಾಷ್ಟ್ರೀಯ ಮುಖಂಡ. ಭಾರತೀಯ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮುಂದಾಳು ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರು ಇಂದಿರಾಗಾಂಧಿಯವರ ತಂದೆ. ೧೯೪೧ರಲ್ಲಿ ಆಕ್ಸ್‌ಫರ್ಡ್ನಿಂದ ಭಾರತಕ್ಕೆ ಹಿಂದಿರುಗಿದ ನಂತರ ಈಕೆ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ೧೯೫೦ರ ದಶಕದಲ್ಲ್ಲಿ, ಮೊದಲ ಭಾರತದ ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಂದೆಗೆ ವೈಯಕ್ತಿಕ ಸಹಾಯಕರಾಗಿ ಅನಧಿಕೃತ ಸೇವೆ ಸಲ್ಲಿಸಿದರು.೧೯೬೪ರಲ್ಲಿ ಅವರ ತಂದೆಯ ನಿಧನ. ನಂತರ ಭಾರತದ ರಾಷ್ಟ್ರಪತಿಯಿಂದ ರಾಜ್ಯಸಭೆಯ ಸದಸ್ಯರಾಗಿ ಇವರ ನೇಮಕ. ಮುಂದೆ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿಯಾಗಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಚಿವ ಸಂಪುಟದ ಸದಸ್ಯೆ.

ಶಾಸ್ತ್ರಿಯವರ ಹಠಾತ್ ಮರಣಾನಂತರ ಇಂದಿರಾಗಾಂಧಿ ಪ್ರಧಾನ ಮಂತ್ರಿಯಾದರು. ಇವರನ್ನು ಪ್ರಧಾನಿ ಗದ್ದುಗೆಗೇರಿಸುವಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಕಾಮರಾಜ್ಅವರದ್ದು ಪ್ರಮುಖ ಪಾತ್ರ. ಗಾಂಧಿ ಯವರಿಂದ ಜನಾನುರಾಗಿ ರಾಜಕೀಯ ಸಿದ್ಧಾಂತಸ್ಥಾಪನೆ. ಚತುರ ಎದುರಾಳಿಗಳ ವಿರುದ್ಧ ಚುನಾವಣೆ ಗೆಲ್ಲುವಲ್ಲಿ ತನ್ನ ಸಾಮರ್ಥ್ಯದ ಪ್ರದರ್ಶನ. ಅವರಿಂದ ಹೆಚ್ಚು ಎಡ-ಪಕ್ಷೀಯ ಆರ್ಥಿಕ ನೀತಿಗಳ ಅನುಷ್ಠಾನ ಮತ್ತು ಕೃಷಿ ಉತ್ಪಾದಕತೆಗೆ ಬೆನ್ನು ತಟ್ಟಿ ಪ್ರೋತ್ಸಾಹ. ೧೯೭೧ರಲ್ಲಿ ಪಾಕಿಸ್ಥಾನದೊಂದಿಗೆ ನಡೆದ ಕದನದಲ್ಲಿ ಭಾರತದ್ದು ನಿರ್ಣಾಯಕ ಗೆಲುವು. ಈ ಸಂದರ್ಭದಲ್ಲಿ ಇಂದಿರಾ ಪ್ರಧಾನ ಮಂತ್ರಿ. ೧೯೭೫ ಅವರ ಪಾಲಿಗೆ ಒಂದು ಅಭದ್ರತೆಯ ಅವಧಿ. ಇದರಿಂದಾಗಿ ಆಗ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಕೆ. ದೀರ್ಘ ಕಾಲೀನ ನಿರಂಕುಶ ಪ್ರಭುತ್ವ. ಪರಿಣಾಮವಾಗಿ, ಸೋಲರಿಯದ ಕಾಂಗ್ರೆಸ್ ಪಕ್ಷಕ್ಕೆ 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವ. 1980 ಚುನಾವಣೆ ಯಲ್ಲಿ ಕಾಂಗ್ರೆಸ್‌ಗೆ ಮತ್ತೆ ಜಯ. ಪ್ರಧಾನ ಮಂತ್ರಿ ಅಧಿಕಾರ ಮತ್ತೆ ಇಂದಿರಾ ಗಾಂಧಿ ಕೈಗೆ. ೧೯೮೪ ಜೂನ್‌ನಲ್ಲಿ, ದಂಗೆಕೋರರನ್ನು ಬಂಧಿಲೆಂದು ಗಾಂಧಿ ಆದೇಶದ ಮೇರೆಗೆ ಸಿಖ್‌ರ ಪವಿತ್ರ ಸ್ವರ್ಣ ಮಂದಿರದೊಳಕ್ಕೆ ಭಾರತೀಯ ಸೇನಾ ಪಡೆಯಿಂದ ಬಲವಂತ ಪ್ರವೇಶ. ಈ ಕಾರ್ಯಾಚರಣೆಯ ಪ್ರತೀಕಾರವಾಗಿ ೧೯೮೪ ಅಕ್ಟೋಬರ್ ೩೧ರಂದು ಇಂದಿರಾ ಗಾಂಧಿ ಹತ್ಯೆಗೆ ತುತ್ತಾದರು.

ಇಂದಿರಾಗಾಂಧಿ 1917 ನವೆಂಬರ್ 19ರಂದು ಪಂಡಿತ್ ಜವಾಹರ್‌ಲಾಲ್ ನೆಹರು ಮತ್ತು ಕಮಲಾ ನೆಹರು ಅವರಿಗೆ ಜನಿಸಿದರು. ಈ ದಂಪತಿಗಳಿಗೆ ಇಂದಿರಾ ಏಕಮಾತ್ರ ಪುತ್ರಿ. ನೆಹರು ಅವರದು ಗೌರವಾನ್ವಿತ ಕಾಶ್ಮೀರಿ ಪಂಡಿತ್ ಕುಟುಂಬ. ಇವರು ಜನಿಸಿದಾಗ, ಅಜ್ಜ ಮೋತಿಲಾಲ್ ನೆಹರು ಮತ್ತು ತಂದೆ ಜವಾಹರ್‌ಲಾಲ್ ನೆಹರು, ಇಬ್ಬರೂ ಪ್ರಭಾವಿ ರಾಜಕೀಯ ಮುಖಂಡರು. ಗಾಂಧಿ ಬಾಲ್ಯವನ್ನು ನೆಹರು ಕುಟುಂಬದ ಮನೆ ಆನಂದ ಭವನದಲ್ಲಿ ಕಳೆಯತ್ತಾ ಬೆಳೆದರು. ಈ ಸಂದರ್ಭದಲ್ಲಿ ತೀಕ್ಷ್ಣ ರಾಜಕೀಯ ವಾತಾವರಣ ಆ ಮನೆಯಲ್ಲಿ ನೆಲೆಸಿತ್ತು. ನೆಹರು ಮನೆಮಂದಿಯಿಂದ ದೂರ ಉಳಿದಿದ್ದ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಪ್ರೀತಿಯಲ್ಲಿ ಬೆಳೆದ ಇಂದಿರಾ ದೃಢ ರಕ್ಷಣಾತ್ಮಕ ಸ್ವಭಾವವನ್ನೂ ಮತ್ತು ಏಕಾಂಗಿ ವ್ಯಕ್ತಿತ್ವವನ್ನೂ ರೂಢಿಸಿಕೊಂಡಿದ್ದರು. ನೆಹರು ಮನೆಯಲ್ಲಿ ಆಗ ರಾಜಕೀಯ ಚಟುವಟಿಕೆಯ ಪ್ರವಾಹ. ಹೀಗಾಗಿ ಕುಟುಂಬದವರೊಂದಿಗೆ ಬೆರೆಯಲು ಆಗುತ್ತಿರಲಿಲ್ಲ. ವಿಜಯಲಕ್ಷ್ಮಿ ಪಂಡಿತ್‌ರನ್ನೂ ಒಳಗೊಂಡಂತೆ, ಇವರು ತಮ್ಮ ತಂದೆಯ ಸೋದರಿಯರೊಂದಿಗೆ, ವೈಯಕ್ತಿಕ ಭಿನ್ನಾಪ್ರಾಯ ಹೊಂದಿದ್ದರು. ಅವರೊಂದಿಗಿನ ಈ ಬಗೆಯ ಸಂಬಂಧವು ರಾಜಕೀಯ ಜಗತ್ತಿನಲ್ಲೂ ಹಾಗೇ ಮುಂದುವರಿಯಿತು.
'ನಾನು ಸೆರೆಮನೆಯಲ್ಲಿದ್ದಾಗ ಪೋಲೀಸರು ಪದೇ ಪದೇ ಮನೆಗೆ ಬಂದು, ಸರಕಾರ ಅವರಿಗೆ ವಿಧಿಸಿದ ದಂಡ ಪಾವತಿಯ ಪ್ರತಿಯಾಗಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದರು'-ಎಂದು ಇವರ ತಂದೆ ತಮ್ಮ ಆತ್ಮಚರಿತ್ರೆ ಟುವರ್ಡ್ ಫ್ರೀಡಮ್ ‌ನಲ್ಲಿ ಬರೆಯುತ್ತಾರೆ. ನನ್ನ ನಾಲ್ಕು-ವರ್ಷದ ಮಗಳು ಇಂದಿರಾ ಹೀಗೆ ನಡೆಯುತ್ತಿದ್ದ ಸತತ ಲೂಟಿಯಿಂದ ತುಂಬಾ ನೊಂದಿದ್ದಳು. ತೀವ್ರ ಅಸಂತೋಷವನ್ನು ವ್ಯಕ್ತಪಡಿಸಿದ್ದ ಅವಳು ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಳು ಎಂದು ನೆಹರು ಹೇಳುತ್ತಾರೆ. ಬಾಲ್ಯದಲ್ಲಿ ಉಂಟಾದ ಅಚ್ಚಳಿಯದಂಥ ಈ ಬಗೆಯ ನೆನಪು ಪೋಲೀಸ್ ವ್ಯವಸ್ಥೆಯ ಬಗ್ಗೆ ಅವಳಲ್ಲಿ ವಿಭಿನ್ನ ದೃಷ್ಟಿಯನ್ನೇ ಸೃಷ್ಟಿಸುವುದೇನೋ ಎಂಬುದು ನನ್ನ ಕಳಕಳಿಯಾಗಿತ್ತು.
ಇಂದಿರಾ ಯುವಕ ಮತ್ತು ಯುವತಿಯರಿಗಾಗಿ ವಾನರ ಸೇನೆ ಚಳವಳಿಗೆ ಚಾಲನೆ ನೀಡಿದರು. ಅದು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುಟ್ಟ ಆದರೆ ಗಮನಾರ್ಹ ಪಾತ್ರ ವಹಿಸಿತು. ಸೂಕ್ಷ್ಮ ಮಾಹಿತಿ ಪ್ರಕಟಣೆಗಳನ್ನು ಮತ್ತು ನಿರ್ಬಂಧಿತ ಸಂಗತಿಗಳನ್ನು ಪ್ರಸಾರ ಮಾಡಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸದಸ್ಯರಿಗೆ ನೆರವಾಯಿತು. ಧ್ವಜ ಪಥ ಸಂಚಲನ ನಡೆಸಿತು ಮತ್ತು ಪ್ರತಿಭಟನೆಗಳನ್ನು ಹಮ್ಮಿಕೊಂಡಿತು. ತಂದೆಯ ಮನೆಯಿಂದ ಶಾಲಾ ಚೀಲದಲ್ಲಿ ಪ್ರಮುಖ ಕ್ರಾಂತಿಯ ಆರಂಭಕ್ಕಾಗಿ ರೂಪುರೇಷೆ ಸಿದ್ಧವಾಗಿದ್ದ ಯೋಜನೆಗಳ ಪ್ರಮುಖ ದಾಖಲೆಯನ್ನು ಪೊಲೀಸರ ಮೂಗಿನಡಿಯಲ್ಲೇ ರಹಸ್ಯವಾಗಿ ಇಂದಿರಾ ಸಾಗಿಸಿದ್ದರು. ಇದು 1930ರಲ್ಲಿನ ಕ್ರಾಂತಿಗೆ ಪ್ರೇರಣೆ ನೀಡಿತು ಎಂಬುದೊಂದು ಮಾತು ಜನಜನಿತ.

ಇಂದಿರಾಗಾಂಧಿ ತಾಯಿ ಕಮಲಾ ನೆಹರು ಬಹಳ ದಿನದ ಹೆಣಗಾಟದ ನಂತರ 1936ರಲ್ಲಿ ಕ್ಷಯ ರೋಗಕ್ಕೆ ಬಲಿಯಾದರು. ಇಂದಿರಾಗೆ ಆಗಿನ್ನೂ 18 ವರ್ಷ. ಹೀಗಾಗಿ ಇವರು ಬಾಲ್ಯದಲ್ಲಿ ಸುಭದ್ರ ಕುಟುಂಬ ಜೀವನದ ಸುಖವನ್ನು ಅನುಭವಿಸಲಿಲ್ಲ. ಇಂಗ್ಲೆಂಡ್‌ನ, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೊಮರ್‌ವಿಲ್ಲೆ ಕಾಲೇಜಿನಲ್ಲಿ 1930ರ ಉತ್ತರಾರ್ಧದಲ್ಲಿ ವ್ಯಾಸಂಗ ನಿರತರಾಗಿದ್ದಾಗ ಅವರು ಲಂಡನ್ ಮೂಲದ ತೀವ್ರಗಾಮಿ ಸ್ವಾತಂತ್ರ-ಪರವಾದ ಇಂಡಿಯಾ ಲೀಗ್ (= ಭಾರತೀಯ ಒಕ್ಕೂಟ)ನ ಸದಸ್ಯರಾಗಿದ್ದರು.

ಅವರು ಯುರೋಪ್ ಖಂಡ ಮತ್ತು UKಯಲ್ಲಿದ್ದಾಗ, ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದ ಪಾರ್ಸಿ ತರುಣ ಫಿರೋಜ್ ಗಾಂಧಿಯನ್ನು ಭೇಟಿಯಾದರು (ಅವರು ಮೋಹನ್‌ದಾಸ್ ಗಾಂಧಿಅವರ ದತ್ತುಪುತ್ರ). ಭಾರತಕ್ಕೆ ಹಿಂದಿರುಗಿದ ನಂತರ, ಫಿರೋಜ್ ಗಾಂಧಿಯವರು ನೆಹರು ಕುಟುಂಬಕ್ಕೆ ತುಂಬಾ ಹತ್ತಿರವಾದರು, ವಿಶೇಷವಾಗಿ ಇಂದಿರಾರವರ ತಾಯಿ ಕಮಲಾ ನೆಹರುರವರಿಗೆ ಮತ್ತು ಇಂದಿರಾರವರಿಗೂ ಸಹ.

ಇಂದಿರಾ ಮತ್ತು ಫಿರೋಜ್ ಗಾಂಧಿಯವರು ಭಾರತಕ್ಕೆ ಹಿಂದಿರುಗಿದಾಗ, ಪರಸ್ಪರ ಪ್ರೀತಿಸುತ್ತಿದ್ದರು. ವೈದ್ಯರ ಸೂಚನೆಯನ್ನೂ ಮೀರಿ ಅವರು ಮದುವೆಯಾಗಲು ನಿರ್ಧರಿಸಿದರು. ಫಿರೋಜ್ ಗಾಂಧಿಯವರಲ್ಲಿದ್ದ ಮುಕ್ತ ಮನೋಭಾವ, ಹಾಸ್ಯ ಪ್ರಜ್ಞೆ ಮತ್ತು ಆತ್ಮ-ವಿಶ್ವಾಸವನ್ನು ಇಂದಿರಾ ಇಷ್ಟಪಟ್ಟರು. ತಮ್ಮ ಮಗಳು ಅಷ್ಟು ಬೇಗ ಮದುವೆಯಾಗುವ ಆಲೋಚನೆ ನೆಹರುಗೆ ಇಷ್ಟವಾಗಲಿಲ್ಲ. ಈ ಪ್ರೇಮ ವಿವಾಹವನ್ನು ತಪ್ಪಿಸಲು ಮಹಾತ್ಮಾಗಾಂಧಿಯವರ ಸಹಾಯವನ್ನು ಪಡೆಯಲು ಅವರು ಪ್ರಯತ್ನಿಸಿದರು. ಇಂದಿರಾ ಹಠ ಹಿಡಿದರು. 1942 ಮಾರ್ಚ್‌ನಲ್ಲಿ ಹಿಂದು ಆಚರಣೆಯಂತೆ ಮದುವೆ ನೆರವೇರಿತು.
ಫಿರೋಜ್ ಮತ್ತು ಇಂದಿರಾ ಇಬ್ಬರೂ ಸಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದರು. 1942ರಲ್ಲಿ ನಡೆದ 'ಭಾರತ ಬಿಟ್ಟು ತೊಲಗಿ' ಚಳವಳಿಯಲ್ಲಿ ಭಾಗವಹಿಸಿದಾಗ ಅವರಿಬ್ಬರೂ ಬಂಧನಕ್ಕೊಳಗಾದರು. ಸ್ವಾತಂತ್ರ್ಯಾ ನಂತರ, ಫಿರೋಜ್‌ ಚುನಾವಣಾ ಕಣಕ್ಕೆ ಇಳಿದರು. ಉತ್ತರ ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರ ಇಬ್ಬರು ಮಕ್ಕಳಾದ ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಹುಟ್ಟಿದ ನಂತರ, ಬಿಗಡಾಯಿಸಿದ ಅವರ ಸಂಬಂಧ ಬೇರ್ಪಡುವಷ್ಟರ ಮಟ್ಟಿಗೆ ಬಂತು. ಮರು-ಚುನಾಯಿತರಾದ ಸ್ವಲ್ಪ ದಿನಗಳಲ್ಲೇ ಫಿರೋಜ್‌ ಹೃದಯಾಘಾತಕ್ಕೆ ಈಡಾದರು. ಇದರಿಂದ ಮತ್ತೆ ರಾಜಿಯಾದರು. ಇವರಿಬ್ಬರ ಸಂಬಂಧ ಫಿರೋಜ್ ಗಾಂಧಿ 1960ರ ಸೆಪ್ಟೆಂಬರ್‌ನಲ್ಲಿ ನಿಧನರಾಗುವ ಕೆಲವು ವರ್ಷಗಳ ಮುಂದಿನವರೆಗೆ ಉಳಿದಿತ್ತು.

ಮೊರಾರ್ಜಿ ದೇಸಾಯಿಯವರ ವಿರೋಧದ ನಡುವೆಯೂ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಕೆ. ಕಾಮರಾಜ್‌ ಅವರು ಇಂದಿರಾ ಗಾಂಧಿಯನ್ನು ಪ್ರಧಾನ ಮಂತ್ರಿ ಗದ್ದುಗೆಗೆ ಏರಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದರು.ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಜಯಶೀಲರಾದರು. ಮೊರಾರ್ಜಿ ದೇಸಾಯಿಯವರ 169 ಮತಕ್ಕೆ ಎದುರಾಗಿ ಇವರು 355 ಮತಗಳನ್ನು ಪಡೆಯುವ ಮೂಲಕ ಭಾರತದ ಐದನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನ ರಾದರು.

 

ಪೂರ್ವ ಪಾಕಿಸ್ಥಾನದ ನಾಗರಿಕರ ವಿರುದ್ಧ ಪಾಕಿಸ್ಥಾನ ಸೇನಾ ಪಡೆ ವ್ಯಾಪಕ ದೌರ್ಜನ್ಯ ನಡೆಸಿತು.
ಸುಮಾರು 10 ದಶಲಕ್ಷ ನಿರಾಶ್ರಿತರು ಭಾರತಕ್ಕೆ ವಲಸೆ ಬಂದು ದೇಶದಲ್ಲಿ ಅಭದ್ರತೆ ಸೃಷ್ಟಿಸಿದರು ಮತ್ತು ಆರ್ಥಿಕ ಮುಗ್ಗಟ್ಟಿಗೆ ಕಾರಣರಾದರು. ರಿಚರ್ಡ್ ನಿಕ್ಸನ್‌ ನೇತೃತ್ವದ ಅಮೆರಿಕ ಸಂಯುಕ್ತ ಸಂಸ್ಥಾನ ಪಾಕಿಸ್ಥಾನಕ್ಕೆ ಬೆಂಬಲ ನೀಡಿತು ಮತ್ತು ಯುದ್ಧ ಮಾಡದ ಹಾಗೆ ಭಾರತಕ್ಕೆ ಎಚ್ಚರಿಕೆ ನೀಡುವ UN ನಿರ್ಣಯ ಕೈಗೊಂಡಿತು. 
ನಿಕ್ಸನ್‌ಗೆ ಇಂದಿರಾರನ್ನು ಕಂಡರೆ ವೈಯಕ್ತಿಕವಾಗಿ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ರಾಜ್ಯದ ಕಾರ್ಯದರ್ಶಿ ಹೆನ್ರಿ ಕಿಸಿಂಜರ್‌ ಜೊತೆಗಿನ ಖಾಸಗಿ ಸಂಪರ್ಕದಲ್ಲಿ ಇಂದಿರಾರನ್ನು ಮಾಟಗಾತಿ ಮತ್ತು ಚತುರ ಗುಳ್ಳೆನರಿ ಎಂದು ಟೀಕಿಸಿದ್ದಾರೆ (ಈ ಸಂಗತಿ ರಾಜ್ಯ ಆಡಳಿತ ವಿಭಾಗದಿಂದ ಈಗ ಹೊರಬಿದ್ದಿದೆ).. ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಇಂದಿರಾ ಸಹಿ ಹಾಕಿದರು. ಇದರಿಂದ ರಾಜಕೀಯ ಬೆಂಬಲ ಮತ್ತು UNನಲ್ಲಿ ಸೋವಿಯತ್ ನಿರಾಕರಣಾಧಿಕಾರ ಸಿಕ್ಕಿತು. 1971ರ ಯುದ್ಧದಲ್ಲಿ ಭಾರತ ಜಯಗಳಿಸಿತು ಹಾಗೂ ಬಾಂಗ್ಲಾದೇಶ ಹುಟ್ಟಿಕೊಂಡಿತು.

ಹೊಸ ಪಾಕಿಸ್ಥಾನಿ ಅಧ್ಯಕ್ಷ ಜುಲ್ಫಿಕಾರ್ ಆಲಿ ಭುಟ್ಟೊ ಅವರನ್ನು ಇಂದಿರಾ ವಾರಾವಧಿಯ ಶಿಮ್ಲಾ ಶೃಂಗ ಸಭೆಗೆ ಆಮಂತ್ರಿಸಿದರು. ಮಾತುಕತೆ ವಿಫಲವಾಯಿತಾದರೂ, ರಾಜ್ಯದ ಇಬ್ಬರು ಮುಖಂಡರು ಶಿಮ್ಲಾ ಒಪ್ಪಂದಕ್ಕೆ ಅಂತಿಮವಾಗಿ ಸಹಿ ಹಾಕಿದರು. ಮಾತುಕತೆ ಮತ್ತು ಶಾಂತಿ ಸಂಧಾನದ ಮೂಲಕ ಕಾಶ್ಮೀರ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದು ಅದು ಎರಡೂ ದೇಶಗಳನ್ನು ಪರಿಮಿತಿಯಲ್ಲಿಟ್ಟಿತು. ನಿಕ್ಸನ್‌ ಜೊತೆಗಿನ ಇವರ ಬದ್ಧ ದ್ವೇಷದಿಂದಾಗಿ, ಯುನೈಟೆಡ್ ಸ್ಟೇಟ್ಸ್‌ ಸಂಬಂಧವು ದೂರವಾಗುತ್ತಾ ಹೋಯಿತು ಮತ್ತು ಸೋವಿಯತ್ ಒಕ್ಕೂಟದೊಂದಿಗಿನ ಸಂಬಂಧವು ನಿಕಟವಾಯಿತು.
ಗಡಿ ನಿಯಂತ್ರಣ ರೇಖೆಯನ್ನು ಶಾಶ್ವತ ಎಲ್ಲೆ ಎಂದು ಮಾಡದೇ ಇದ್ದುದಕ್ಕಾಗಿ ಕೆಲವರಿಂದ ಇಂದಿರಾ ಗಾಂಧಿ ಟೀಕೆಗೊಳಗಾದರು ಹಾಗೂ ಪಾಕಿಸ್ತಾನದಿಂದ ಆಕ್ರಮಿತವಾದ ಕಾಶ್ಮೀರದ ಭಾಗವನ್ನು ಪಾಕಿಸ್ಥಾನದಿಂದ ಹಿಂಪಡೆಯಬೇಕಿತ್ತು ಎಂದು ಇನ್ಕೆಲವರು ಅಭಿಪ್ರಾಯ ಪಟ್ಟರು. ಪಾಕಿಸ್ಥಾನದ 93,000 ಯುದ್ಧ ಕೈದಿಗಳು ಭಾರತದ ವಶದಲ್ಲಿದ್ದರು. ವಿವಾದ ಇತ್ಯರ್ಥಕ್ಕೆ ವಿಶ್ವಸಂಸ್ಥೆಯಾಗಲೀ ಅಥವಾ ಹೊರಗಿನವರು ಯಾರೇ ಆಗಲಿ ಮೂಗುತೂರಿಸುವುದನ್ನು ಒಪ್ಪಂದವು ತಕ್ಷಣವೇ ನಿವಾರಿಸಿತು. ಪಾಕಿಸ್ಥಾನ ಸದ್ಯದಲ್ಲೇ ಮಾಡಬಹುದಾದ ಭಾರೀ ದಾಳಿಯ ಸಂಭವನೀಯತೆಯನ್ನು ಇದು ತಗ್ಗಿಸಿತು. ಸಮಸ್ಯೆಯು ಸೂಕ್ಷ್ಮದ್ದಾದ್ದರಿಂದ ಸಂಪೂರ್ಣ ಶರಣಾಗತಿಯನ್ನು ಭುಟ್ಟೊರಿಂದ ಕೋರದೆ, ಅವರು ಪಾಕಿಸ್ಥಾನ ತಹಬಂದಿಗೆ ಬರಲು ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಅನುಮತಿಸಿದರು. ವ್ಯವಹಾರ ಸಂಬಂಧಗಳು ಮುಂದುವರಿಯಿತಾದರೂ ಹೆಚ್ಚಿನ ಸಂಪರ್ಕ-ಸಂಬಂಧಕ್ಕೆ ಎಷ್ಟೋ ವರ್ಷಗಳವರೆಗೆ ಬಾಗಿಲು ಮುಚ್ಚಿತ್ತು.

ಇಂದಿರಾ ಆಡಳಿತ 1960ರ ಉತ್ತರಾರ್ಧದಲ್ಲಿ US ಡಾಲರ್ ಎದುರು ರುಪಾಯಿ ಮೌಲ್ಯವನ್ನು 40% ನಷ್ಟು ಇಳಿಸಿತು. ಒಂದು ಡಾಲರ್‌ಗೆ ಇದ್ದ ರೂ.4ರ ಬೆಲೆ ರೂ.7 ಆಯಿತು. ವಾಣಿಜ್ಯ ವರ್ಧನೆ ಇದರ ಉದ್ದೇಶವಾಗಿತ್ತು.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (=ಚೀನಾ ಗಣತಂತ್ರ) ಒಡ್ಡಿದ ಪರಮಾಣು ಬೆದರಿಕೆಗೆ ಉತ್ತರವಾಗಿ ಮತ್ತು ಪರಮಾಣು ಬಲಿಷ್ಠ ರಾಷ್ಟ್ರಗಳು ಸ್ವತಂತ್ರವಾಗಿರುವಂತೆ ಭಾರತವೂ ತನ್ನ ಸ್ಥಿರತೆ ಮತ್ತು ಭದ್ರತಾ ಹಿತ ರಕ್ಷಣೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ 1967ರಲ್ಲಿ ರಾಷ್ಟ್ರೀಯ ಪರಮಾಣು ಯೋಜನೆಯನ್ನು ಗಾಂಧಿ ಪ್ರಾರಂಭಿಸಿದರು. 1974ರಲ್ಲಿ ಭಾರತವು ರಾಜಸ್ಥಾನದ ಪೊಖ್ರಾನ್‌ನ ಬಂಜರು ಹಳ್ಳಿಯಲ್ಲಿ 'ಸ್ಮೈಲಿಂಗ್ ಬುದ್ಧ'(=ಹಸನ್ಮುಖಿ ಬುದ್ಧ) ಎಂಬ ಅನಧಿಕೃತ ಕೋಡ್ ಹೆಸರು ಹೊಂದಿದ್ದ ರಹಸ್ಯ ಪರಮಾಣು ಪರೀಕ್ಷೆಯನ್ನು ಭೂಗರ್ಭದೊಳಗೆ ಯಶಸ್ವಿಯಾಗಿ ಮಾಡಿತು. ನಡೆಸಲಾದ ಪರೀಕ್ಷೆಯು ಶಾಂತಿಯ ಉದ್ಧೇಶಕ್ಕಾಗಿ ಎಂದು ವಿವರಿಸುತ್ತಾ, ಭಾರತವು ಪ್ರಪಂಚದ ಅತಿಕಿರಿಯ ಪರಮಾಣು ಶಕ್ತಿಯಾಗಿ ಹೊರಹೊಮ್ಮಿತು.

ಕೃಷಿ ಕ್ಷೇತ್ರದಲ್ಲಿನ ವಿಶೇಷ ಹಾಗೂ ನವೀನ ಯೋಜನೆಗಳು ಮತ್ತು 1960ರಲ್ಲಿ ಬಿಡುಗಡೆಯಾದ ಸರಕಾರದ ಹೆಚ್ಚಿನ ಬೆಂಬಲ ಭಾರತವು ದೀರ್ಘಕಾಲದಿಂದ ಎದುರಿಸುತ್ತಿದ್ದ ಆಹಾರ ಕೊರತೆಯನ್ನು ನೀಗಿಸಿತು. ಜೊತೆಗೆ ಗೋಧಿ, ಭತ್ತ, ಹತ್ತಿ ಮತ್ತು ಹಾಲಿನ ಉತ್ಪಾದನೆಗೆ ಬೇಡಿಕೆಗಿಂತಲೂ ಅಧಿಕವಾಯಿತು. ಗಾಂಧಿಯವರು ನಿಕ್ಸನ್ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ (ನಿಕ್ಸನ್‌ ಪಾಲಿಗೆ ಇಂದಿರಾ ಮಾಟಗಾತಿ ಮುದುಕಿ, ಇಬ್ಬರದ್ದೂ ಪರಸ್ಪರ ಇಂಥ ಭಾವನೆಯೇ), ಯುನೈಟೆಡ್ ಸ್ಟೇಟ್ಸ್‌‌ ಅನ್ನು ಆಹಾರದ ನೆರವಿಗಾಗಿ ಅವಲಂಬಿಸುವ ಬದಲಿಗೆ ರಾಷ್ಟ್ರವು ಆಹಾರ ರಫ್ತು ಮಾಡುವ ಮಟ್ಟಕ್ಕೆ ಬೆಳೆಯಿತು. ವಾಣಿಜ್ಯ ಬೆಳೆ ಉತ್ಪಾದನೆಯ ವೈವಿಧ್ಯೀಕರಣವನ್ನೂ ಸಾಧಿಸಲಾ ಯಿತು. ಈ ಸಾಧನೆಯನ್ನು ಹಸಿರು ಕ್ರಾಂತಿ ಎಂದು ಕರೆಯಲಾಯಿತು. ನಂತರ ಕ್ಷೀರೋತ್ಪಾದನೆಯ ಸರದಿ. ಅಧಿಕ ಹಾಲಿನ ಉತ್ಪಾದನೆ ಆಯಿತಾದ್ದರಿಂದ ಈ ಸಂದರ್ಭವನ್ನು 'ಶ್ವೇತಕ್ರಾಂತಿ' ಎನ್ನಲಾಯಿತು. ಅಪೌಷ್ಟಿಕತೆಯ ವಿರುದ್ಧ ಸೆಣಸಲು, ಅದೂ ವಿಶೇಷವಾಗಿ ಸಣ್ಣ ಮಕ್ಕಳ ಲ್ಲಿನ ಪೌಷ್ಟಿಕ ಕೊರತೆ ನೀಗಿಸಲು ಇದು ನೆರವಾಯಿತು. 'ಆಹಾರ ಭದ್ರತೆ' ಎಂದು ಕರೆಯಲಾದ ಮತ್ತೊಂದು ಯೋಜನೆ ಗಾಂಧಿ ಅಧಿಕಾರ ಅವಧಿಯನ್ನು 1975ರವರೆಗೆ ಕೊಂಡೊಯ್ಯಲು ಮತ್ತೊಂದು ಬೆಂಬಲದ ಮೂಲವಾಗಿತ್ತು. 

ಗರೀಬಿ ಹಟಾವೊ ಆಂದೋಳನದ ಯೋಜನೆಗಳು, ಸ್ಥಳೀಯವಾಗಿ ಕಾರ್ಯರೂಪಕ್ಕೆ ಬಂದರೂ ಸಹ, ನವದೆಹಲಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಿಧಿ ನೆರವು ಪಡೆದು ಅಭಿವೃದ್ಧಿ ಗಳಿಸಿ, ಮೇಲ್ವಿಚಾರಣೆ ಮಾಡಲ್ಪಟ್ಟವು ಮತ್ತು ಸಿಬ್ಬಂದಿವರ್ಗವನ್ನು ಪಡೆದವು. ರಾಷ್ಟ್ರಾದ್ಯಂತ ವಿನಿಯೋಗಿಸುವ ಬಹುದೊಡ್ಡ ಸಂಪನ್ಮೂಲಗಳೊಂದಿಗೆ ಈ ಯೋಜನೆಗಳು ಕೇಂದ್ರ ರಾಜಕೀಯ ನಾಯಕತ್ವವನ್ನು ಒದಗಿಸಿದವು.. ಗರೀಬಿ ಹಟಾವೊ ಬಡತನ ನೀಗಿಸುವಲ್ಲಿ ವಿಫಲವಾದುದನ್ನು ವಿದ್ವಾಂಸರು ಮತ್ತು ಇತಿಹಾಸಜ್ಞರು ಈಗ ಒಪ್ಪಿದ್ದಾರೆ - ಆರ್ಥಿಕ ಅಭಿವೃದ್ಧಿಗಾಗಿ ಬಿಡುಗಡೆಯಾದ ಒಟ್ಟು ಮೊತ್ತದಲ್ಲಿ 4% ಮಾತ್ರ ಮೂರು ಪ್ರಮುಖ ಬಡತನ ನಿರ್ಮೂಲನಾ ಕಾರ್ಯಕ್ರಮಕ್ಕೆ ಮೀಸಲಾಯಿತು. ವಿನಿಯೋಗವಾದ ಇದರಲ್ಲಿ 'ಕಡುಬಡವರಿಗೆ' ತಲಪಿದ್ದು ಅತ್ಯಲ್ಪ. ಗಾಂಧಿ ಮರು-ಚುನಾವಣೆಗೆ ಜನರ ಬೆಂಬಲವನ್ನು ಹುಟ್ಟುಹಾಕಲು ಪ್ರಮುಖವಾಗಿ ಬಳಸಲ್ಪಟ್ಟ ಈ ಘೋಷಣೆಯು ಬರೀ ಪೊಳ್ಳಾಯಿತು.

ಇಂದಿರಾ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಿ ನನ್ನ ಕೊನೆಯ ಉಸಿರಿರುವವರೆಗೆ ನಾನು ಜನಸೇವೆಯಲ್ಲಿ ತೊಡಗಿರುತ್ತೇನೆ ಎಂದು ಘೋಷಿಸಿದರು. ಈ ಸಂದರ್ಭವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡ ಪ್ರತಿ ಪಕ್ಷಗಳು ಮತ್ತು ಅವರ ಬೆಂಬಲಿಗರು ಒಟ್ಟಾಗಿ ಈ ಘೋಷಣೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಅವರ ರಾಜೀನಾಮೆಗೆ ಆಗ್ರಹಿಸಿದವು. ಈ ಪ್ರತಿಭಟನೆಯಲ್ಲಿ ಬೇರೆಬೇರೆ ಸಂಘ ಸಂಸ್ಥೆಗಳು ಪಾಲ್ಗೊಂಡ ಕಾರಣ ಅನೇಕ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ನಿರಾಯುಧ ಜನಜಂಗುಳಿಯ ಮೇಲೆ ಗುಂಡುಹಾರಿಸುವ ಆದೇಶಗಳನ್ನು ಧಿಕ್ಕರಿಸುವಂತೆ J.P. ನಾರಾಯಣ್ ಪೋಲೀಸರಿಗೆ ಕರೆ ನೀಡಿದ್ದರಿಂದ ಆಂದೋಲನ ಮತ್ತಷ್ಟು ಬಲಯುತವಾಯಿತು. ಗಾಂಧಿ ಸರಕಾರದೊಂದಿಗೆ ಸಾರ್ವಜನಿಕರ ಭ್ರಮನಿರಸನದ ಜೊತೆ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡು ಸಂಸತ್‌ ಭವನ ಮತ್ತು ದೆಹಲಿಯ ಅವರ ಮನೆಯ ಸುತ್ತ ಜನ ಜಮಾಯಿಸಿ ಪ್ರತಿಭಟಿಸಿದರು ಮತ್ತು ರಾಜೀನಾಮೆಗಾಗಿ ಒತ್ತಾಯಿಸಿದರು.

ಈ ಹೊತ್ತಿಗಾಗಲೇ ಇಂದಿರಾ ನಿರಂಕುಶಾಧಿಕಾರಿ ಧೋರಣೆಯ ಆಪಾದನೆಗೊಳಗಾಗಿದ್ದರು.ಸಂಸತ್ತಿನಲ್ಲಿ ಅವರಿಗಿದ್ದ ಭಾರೀ ಬಹುಮತವನ್ನು ಬಳಸಿಕೊಂಡು, ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ಸಂವಿಧಾನವನ್ನು ತಿದ್ದುಪಡಿ ಮಾಡಿತು. ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಸಮತೋಲನವನ್ನು ಮಾರ್ಪಡಿಸಿದ ತಿದ್ದುಪಡಿಯಲ್ಲಿ ಕೇಂದ್ರ ಸರಕಾರದ ಕೈಗೆ ಅಧಿಕ ಅಧಿಕಾರ ಇರುವಂತೆ ನೋಡಿಕೊಂಡಿತು. ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳನ್ನು ಸಂವಿಧಾನದ 356ನೇ ನಿಬಂಧನೆಯನ್ನು ಬಳಸಿ ಅವರು ಎರಡು ಬಾರಿ, ರಾಷ್ಟ್ರಪತಿ ಆಡಳಿತವನ್ನು ಹೇರಿದರು ಮತ್ತು ನಿಯಂತ್ರಣವೆಲ್ಲವನ್ನೂ ತಮ್ಮ ವಶದಲ್ಲಿ ಇಟ್ಟುಕೊಂಡರು. ಈ ರಾಜ್ಯಗಳಲ್ಲಿ ಕಾನೂನು ಕುಸಿದು ಬಿದ್ದಿದೆ ಮತ್ತು ಅರಾಜಕತೆ ತಾಂಡವವಾಡುತ್ತಿದೆ ಎಂಬ ಸಬೂಬು ನೀಡಿದರು. ಗಾಂಧಿ ಅಧಿಕಾರಕ್ಕೆ ಏರಲು ಕಾರಣ ಕರ್ತರಾಗಿದ್ದ ಅವರ ನಿಕಟ ರಾಜಕೀಯ ಸಲಹೆಗಾರ P. N. ಹಕ್ಸರ್ ಅವರಂಥ ಕೆಲವರನ್ನು ದೂರ ತಳ್ಳಿ ಇಂದಿರಾರ ರಾಜಕೀಯ ಸಲಹೆಗಾರರಾಗಿ ಬೆಳೆದ ಸಂಜಯ್ ಗಾಂಧಿಯ ಉಸ್ತುವಾರಿಕೆ ಚುನಾಯಿತ ಅಧಿಕಾರಿಗಳ ಮತ್ತು ಆಡಳಿತಾತ್ಮಕ ಸೇವಾ ವಿಭಾಗದ ಅಸಮಾಧಾನಕ್ಕೆ ಕಾರಣವಾಯಿತು. ಸರ್ವಾಧಿಕಾರೀ ಆಡಳಿತದ ಬಯಕೆಯ ಅವರ ಹೊಸ ಪ್ರವೃತ್ತಿಗೆ ಪ್ರತ್ಯುತ್ತರವಾಗಿ, ಜಯ ಪ್ರಕಾಶ್ ನಾರಾಯಣ್, ಸತ್ಯೇಂದ್ರ ನಾರಾಯಣ್ ಸಿನ್ಹ ಮತ್ತು ಆಚಾರ್ಯ ಜೀವತ್ರಾಮ್ ಕೃಪಾಲನಿಯಂತಹ ಮೇಧಾವಿಗಳು ಮತ್ತು ಸ್ವಾತಂತ್ರ್ಯ-ಹೋರಾಟಗಾರರು ಗಾಂಧಿಯವರ ವಿರುದ್ಧ ಮತ್ತು ಅವರ ಸರಕಾರದ ವಿರುದ್ಧ ಟೀಕಾ ಪ್ರಹಾರದ ಭಾಷಣ ಮಾಡುತ್ತಾ ಭಾರತಾದ್ಯಂತ ಸಂಚರಿಸಿದರು.

ಆಂದೋಲನದಲ್ಲಿ ಭಾಗವಹಿಸಿದ ಎದುರಾಳಿಗಳನ್ನು ಬಂಧಿಸುವಂತೆ ಗಾಂಧಿ ಆದೇಶ ನೀಡುವ ಮೂಲಕ ಸಹಜ ವಾತಾವರಣ ಪುನಃಸ್ಥಾಪಿಸಲು ಮುಂದಾದರು. ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಕಾನೂನು ಕುಸಿತ ಮತ್ತು ಅವ್ಯವಸ್ಥೆ ಭುಗಿಲೆದ್ದಿದ್ದನ್ನು ಗಮನಿಸಿದ ಅವರ ಸಚಿವ ಸಂಪುಟ ಮತ್ತು ಸರಕಾರವು ತುರ್ತು ಪರಿಸ್ಥಿತಿ ಘೋಷಿಸುವಂತೆ ರಾಷ್ಟಾಧ್ಯಕ್ಷ ಫಕ್ರುದ್ದೀನ್ ಆಲಿ ಅಹಮದ್‌ ಅವರಿಗೆ ಶಿಫಾರಸು ಮಾಡಿತು.ತತ್ಪರಿಣಾಮವಾಗಿ, ಅಹಮದ್‌ರವರು ಆಂತರಿಕ ಅವ್ಯವಸ್ಥತೆಯ ಕಾರಣ ಒಡ್ಡಿ ಸಂವಿಧಾನದ 352ರ ನಿಬಂದನೆಗೆ ಅನುಗುಣವಾಗಿ 1975ರ ಜೂನ್ 26ರಂದು ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದರು.

ಕೆಲವೇ ತಿಂಗಳುಗಳಲ್ಲಿ, ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿದ್ದ ಗುಜರಾತ್ ಮತ್ತು ತಮಿಳುನಾಡು ಎರಡು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸಲಾಯಿತು ಈ ಮೂಲಕ ಇಡೀ ರಾಷ್ಟ್ರವನ್ನು ನೇರ ಕೇಂದ್ರ ಆಡಳಿತದ ಹಿಡಿತಕ್ಕೆ ತರಲಾಯಿತು. ಕರ್ಫ್ಯೂ ವಿಧಿಸಲು ಮತ್ತು ನಾಗರಿಕರನ್ನು ಅನಿರ್ದಿಷ್ಟವಾಗಿ ಬಂಧನದಲ್ಲಿಡಲು ಪೊಲೀಸರಿಗೆ ಅಧಿಕಾರ ನೀಡಲಾಯಿತು. ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಾಲಯ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಿತು. ತಮ್ಮ ಕೆಲಸಕಾರ್ಯಗಳಲ್ಲಿ ಸಂಜಯ್ ಗಾಂಧಿಯವರ ಹಸ್ತಕ್ಷೇಪವನ್ನು ಸಹಿಸಲಾಗದೇ ಪ್ರತಿಭಟಿಸಿ, ಭವಿಷ್ಯದ ಪ್ರಧಾನ ಮಂತ್ರಿ ಎಂದು ಬಿಂಬಿತರಾಗಿದ್ದ ಇಂದರ್ ಕುಮಾರ್ ಗುಜ್ರಾಲ್‌ ವಾರ್ತಾ ಮತ್ತು ಪ್ರಸಾರ ಖಾತೆ ಮಂತ್ರಿ ಪದವಿಗೆ ರಾಜಿನಾಮೆ ನೀಡಿ ಹೊರಬಂದರು. ಅಂತಿಮವಾಗಿ, ರಾಜ್ಯ ರಾಜಪಾಲರ ಶಿಫಾರಸಿನ ಮೇರೆಗೆ ರಾಜ್ಯ ಸರಕಾರವನ್ನು ವಜಾಗೊಳಿಸಲು ಅನುಮತಿಸುವ ಸಂವಿಧನಾತ್ಮಕ ನಿಬಂಧನೆಯ ಪ್ರಕಾರ ವಿರೋಧಪಕ್ಷ ಆಡಳಿತ ನಡೆಸುತ್ತಿದ್ದ ರಾಜ್ಯ ಸರಕಾರಗಳನ್ನು ತೆಗೆದುಹಾಕುವುದರೊಂದಿಗೆ, ಸನಿಹದಲ್ಲೇ ಜರುಗಬೇಕಿದ್ದ ವಿಧಾನ ಸಭಾ ಚುನಾವಣೆಗಳನ್ನು ಅನಿರ್ದಿಷ್ಟಾವಧಿ ಮುಂದೂಡಲಾಯಿತು.
ಸ್ವತಃ ತಮಗೆ ವಿಶೇಷ ಅಧಿಕಾರಗಳನ್ನು ನೀಡುವಂತೆ ತುರ್ತುಪರಿಸ್ಥಿತಿ ನಿಯಮಾವಳಿಯನ್ನು ಇಂದಿರಾ ಪರಿವರ್ತಿಸಿದರು.

ಸಂಸತ್ತಿನಲ್ಲಿ ಚರ್ಚಿಸುವ ಅವಶ್ಯಕತೆಯೇ ಇಲ್ಲದಂತೆ ಶಾಸನಗಳನ್ನು ರೂಪಿಸುವ ಮತ್ತು 'ತಾನು ಹೇಳಿದ್ದೇ ಕಾನೂನು' ಮತ್ತು ಅದು ಕಾಯಿದೆ ಬದ್ಧ ಎಂಬಂಥ ಸುಗ್ರೀವಾಜ್ಞೆ ಹೊರಡಿಸುವಂತೆ ಅವರು ರಾಷ್ಟ್ರಪತಿ ಅಹಮದ್‌ ಅವರನ್ನು ಒತ್ತಾಯಿಸಿದರು ಎಂಬ ಆಪಾದನೆಯೂ ಅವರ ಮೇಲಿದೆ.
ಅದೇ ಸಮಯದಲ್ಲಿ, ಗಾಂಧಿ ಸರಕಾರವು ಭಿನ್ನಾಭಿಪ್ರಾಯಕ್ಕೆ ಇತಿಶ್ರೀ ಹಾಡುವ ಉದ್ದೇಶದಿಂದ ಸಾವಿರಾರು ರಾಜಕೀಯ ಮುಖಂಡರನ್ನು ಬಂಧನಕ್ಕೆ ಈಡು ಮಾಡಿತು, ಮುಂದೊಮ್ಮೆ ದೆಹಲಿಯ Lt. ಗವರ್ನರ್‌ ಆದ, ಜಗ ಮೋಹನ್ರ, ಮೇಲ್ವಿಚಾರಣೆಯಲ್ಲಿ ದೆಹಲಿಯ ಜಮಾ ಮಸೀದಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯವನ್ನು ಸಂಜಯ್‌ ಆರಂಭಿಸಿದರು, ಇದರಿಂದ ಸಾವಿರಾರು ಜನ ಮನೆಮಠ ಕಳೆದುಕೊಂಡರು, ನೂರಾರು ಮಂದಿ ಸಾವನ್ನಪ್ಪಿದರು, ಮತ್ತು ರಾಷ್ಟ್ರದ ರಾಜಧಾನಿಯ ಆ ಪ್ರದೇಶದಲ್ಲಿ ಪ್ರಾಂತೀಯ ವೈಮನಸ್ಸು ಬೆಳೆಯಿತು-ಎಂದು ಆರೋಪಿಸಲಾಗಿದೆ. ಸಾವಿರಾರು ಮಂದಿಯ ಮೇಲೆ ಬಲವಂತವಾಗಿ ಕುಟುಂಬ ಯೋಜನೆಯನ್ನು ಅನುಷ್ಠಾನಗೊಳಿಸಿ ಸಂತಾನಹರಣಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಬಹುತೇಕ ಸಂದರ್ಭಗಳಲ್ಲಿ ಚಿಕಿತ್ಸೆಯನ್ನು ಹೀನಾಯವಾಗಿ ನಿರ್ವಹಿಸಲಾಯಿತು.

ತುರ್ತು ಪರಿಸ್ಥಿತಿಯನ್ನು ಎರಡು ಬಾರಿ ವಿಸ್ತರಿಸಿದ ಇಂದಿರಾ ಗಾಂಧಿ ತಮ್ಮ ಆಡಳಿತವನ್ನು ಸಮರ್ಥಿಸಲು ಮತದಾರರಿಗೆ ಒಂದು ಅವಕಾಶ ನೀಡುವುದಕ್ಕಾಗಿ 1977ರಲ್ಲಿ ಚುನಾವಣೆ ಘೋಷಿಸಿದರು. ಅತಿಯಾದ ನಿಯಂತ್ರಣಕ್ಕೆ ಒಳಪಟ್ಟ ಪತ್ರಿಕಾ ಲೇಖನಗಳನ್ನು ಓದಿದ ಇಂದಿರಾ ಇದು ತಮ್ಮ ಜನಪ್ರಿಯತೆಯ ಪರಾಕಾಷ್ಠೆ ಎಂದು ತಪ್ಪಾಗಿ ಗ್ರಹಿಸಿದರು. ಇವರ ಪ್ರತಿಯೊಂದು ಹೆಜ್ಜೆಯನ್ನೂ ಜನತಾ ಪಕ್ಷ ವಿರೋಧಿಸಿತು. ಜಯ ಪ್ರಕಾಶ್ ನಾರಾಯಣ್‌‌ರನ್ನು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಇಟ್ಟುಕೊಂಡು, ಇಂದಿರಾರ ದೀರ್ಘಕಾಲೀನ ದ್ವೇಷಿಯಾದ ದೇಸಾಯಿ ನೇತೃತ್ವದ ಜನತಾ ಪಕ್ಷವು ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರ ಎರಡರ ನಡುವಿನ ಆಯ್ಕೆಗೆ ಈ ಚುನಾವಣೆ ಕಟ್ಟ ಕಡೆಯ ಅವಕಾಶ ಎಂದು ಸಾರಿತು. ಇಂದಿರಾರ ಕಾಂಗ್ರೆಸ್ ಪಕ್ಷ ಭಾರೀ ಸೋಲುಂಡಿತು. ಇಂದಿರಾ ಮತ್ತು ಸಂಜಯ್ ಗಾಂಧಿ ಇಬ್ಬರೂ ಚುನಾವಣೆಯಲ್ಲಿ ಸೋತರು. ಕಾಂಗ್ರೆಸ್ 153 (ಹಿಂದಿನ ಲೋಕಸಭೆಗೆ 350ಕ್ಕೆ ಹೋಲಿಸಿದಾಗ) ಸ್ಥಾನಗಳಿಗೆ ಇಳಿಯಿತು. ಇದರಲ್ಲಿನ 92 ಸ್ಥಾನ ದಕ್ಷಿಣ ರಾಜ್ಯಗಳಿಗೆ ಸೇರಿದ್ದು.

ದೇಸಾಯಿಯವರು ಪ್ರಧಾನ ಮಂತ್ರಿಯಾದರು. 1969ರಲ್ಲಿ ಆಡಳಿತ ಪಕ್ಷದವರ ಆಯ್ಕೆಯಾಗಿದ್ದ ನೀಲಮ್ ಸಂಜೀವ ರೆಡ್ಡಿಯವರು ಗಣತಂತ್ರದ ರಾಷ್ಟ್ರಪತಿಯಾದರು. ಗಾಂಧಿ 1978ರಲ್ಲಿ ಚುನಾವಣೆಯಲ್ಲಿ ಮತ್ತೆ ಗೆಲ್ಲುವವರೆಗೆ ತಮಗೆ ಕೆಲಸ, ಆದಾಯ ಅಥವಾ ಮನೆ ಇಲ್ಲವೆಂದು ತೊಳಲಾಡುತ್ತಿದ್ದರು. ಕಾಂಗ್ರೆಸ್ ಪಕ್ಷವು 1977ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಭಜನೆಗೆ ತುತ್ತಾಯಿತು.ಗಾಂಧಿ ಬೆಂಬಲಿಗರಾದ ಜಗಜೀವನ್ ರಾಮ್ ಮತ್ತು ಅವರಿಗೆ ಹೆಚ್ಚು ನಿಷ್ಠಾವಂತರಾಗಿದ್ದ ಬಹುಗುಣ ಮತ್ತು ನಂದಿನಿ ಸತ್ಪಥಿ-ಅಂಥ ಅನುಭವಿಗಳು ಅವರಿಂದ ದೂರ ಸರಿದರು. ಈ ಮೂವರೂ ಗಾಂಧಿಯವರಿಗೆ ಅತಿ ನಿಕಟರಾಗಿದ್ದರಾದರೂ ಸಂಜಯ್ ಗಾಂಧಿ ನಿರ್ಮಿತ ರಾಜಕೀಯ ಪರಿಸ್ಥಿತಿಯಿಂದಾಗಿ ಹೊರಬರುವಂತೆ ಅವರನ್ನು ಬಲವಂತಕ್ಕೊಳಪಡಿಸಿತು. ಇಂದಿರಾನ್ನು ಅಧಿಕಾರದಿಂದ ಉಚ್ಚಾಟನೆ ಮಾಡುವಂಥ ಉದ್ದೇಶ ಸಂಜಯ್‌ಗೆ ಇತ್ತು ಎಂಬ ವದಂತಿ ಹಬ್ಬಿತ್ತು. ಅಧಿಕೃತವಾಗಿ ಪ್ರತಿಪಕ್ಷ ಎಂಬ ಮನ್ನಣೆ ಇದ್ದರೂ ಕಾಂಗ್ರೆಸ್ ಇತರ ಸಣ್ಣ ಪಕ್ಷಗಳಂತಾಯಿತು.
ಮೈತ್ರಿ ಕೂಟದ ಅಂಕೆಮೀರಿದ ಕಾದಾಟದಿಂದ ಆಡಳಿತ ನಡೆಸಲು ಸಾಧ್ಯವಾಗದಿದ್ದುರಿಂದ, ಜನತಾ ಸರಕಾರದ ಗೃಹ ಮಂತ್ರಿ ಚೌಧರಿ ಚರಣ್ ಸಿಂಗ್‌ ಭಾರತೀಯ ನ್ಯಾಯಾಲಯದಲ್ಲಿ ಸುಲಭವಾಗಿ ಸಾಬೀತುಪಡಿಸಲು ಸಾಧ್ಯವಾಗದಂತಹ ಅನೇಕ ನಿಯಮಗಳನ್ನು ಆಧಾರವನ್ನಾಗಿಸಿ ಇಂದಿರಾ ಮತ್ತು ಸಂಜಯ್ ಗಾಂಧಿಯವರ ಬಂಧನಕ್ಕೆ ಆದೇಶಿಸಿದರು. ಬಂಧನದಿಂದಾಗಿ ಗಾಂಧಿ ಸಂಸತ್ತಿನಿಂದ ಉಚ್ಚಾಟಿತರಾದಂತಾಯಿತು.ಅನುಸರಿಸಲಾದ ಈ ಕಾರ್ಯತಂತ್ರ ವಿಪತ್ಕಾರಕವಾಗಿ ಅವರಿಗೇ ತಿರುಗುಬಾಣವಾಯಿತು. ಎರಡು ವರ್ಷಗಳ ಹಿಂದಷ್ಟೇ ಅವರ ನಿರಂಕುಶಾಧಿಕಾರೀ ವರ್ತನೆಯಿಂದ ಬೇಸತ್ತಿದ್ದ ಜನತೆ ಅವರ ಮೇಲೆ ಅನುಕಂಪದ ಮಳೆ ಸುರಿದರು. ಬಂಧಿಸಿದ್ದು ಮತ್ತು ದೀರ್ಘಕಾಲೀನ ವಿಚಾರಣೆಗೆ ಅವರನ್ನು ಗುರಿಪಡಿಸಿದ್ದೇ ಈ ಅನುಕಂಪದ ಗಾಳಿ ಬೀಸಲು ಕಾರಣವಾಯಿತು.
ಇಂದಿರಾರ (ಅಥವಾ ಅದೊಂದು ಹೆಣ್ಣು ಎಂದು ಕೆಲವರು ಅವರನ್ನು ಮೂದಲಿಸಿದರು) ವಿರುದ್ಧದ ದ್ವೇಷ ಮಾತ್ರ ಜನತಾ ಮಿತ್ರ ಪಕ್ಷಗಳನ್ನು ಒಂದುಗೂಡಿಸಿತ್ತು. ಸಮಾನ ಮನಸ್ಕತೆ ಎಂಬುದು ಮಾಯವಾಯಿತು. ಮಂದುವರೆದ ಈ ಅಂತಃಕಲಹವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವಲ್ಲಿ ಇಂದಿರಾ ಸಫಲರಾದರು. ಅವರು ಮತ್ತೆ ಭಾಷಣ ನೀಡಲು ಪ್ರಾರಂಭಿಸಿದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಎಸಗಿದ ತಪ್ಪುಗಳಿಗಾಗಿ ಕ್ಷಮೆಯಾಚಿಸಿದರು. ದೇಸಾಯಿಯವರು 1979ರ ಜೂನ್‌ನಲ್ಲಿ ರಾಜಿನಾಮೆ ನೀಡಿದರು, ಮತ್ತು ಚರಣ್ ಸಿಂಗ್‌ ಅವರನ್ನು ರೆಡ್ಡಿಯವರು ಪ್ರಧಾನ ಮಂತ್ರಿಯಾಗಿ ನೇಮಿಸಿದರು. ಅವರ ಸರಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವುದಾಗಿ ಗಾಂಧಿ ಭರವಸೆ ನೀಡಿದರು. 
ಸ್ವಲ್ಪ ದಿವಸಗಳ ನಂತರ, ಅವರು ಆರಂಭದಲ್ಲಿ ನೀಡಿದ್ದ ಬೆಂಬಲವನ್ನು ಅಲ್ಪ ಕಾಲದಲ್ಲೇ ಹಿಂದೆಗೆದುಕೊಂಡರು. ರಾಷ್ಟ್ರಪತಿ ರೆಡ್ಡಿ 1979ರ ಚಳಿಗಾಲದಲ್ಲಿ ಸಂಸತ್ತನ್ನು ವಿಸರ್ಜಿಸಿದರು. ನಂತರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಅಧಿಕಾರ ಗದ್ದುಗೆ ಏರಿತು.

ಗಾಂಧಿಯವರ ಮುಂದಿನ ವರ್ಷಗಳು ಪಂಜಾಬ್‌ನ ಸಮಸ್ಯೆಗಳೊಂದಿಗೆ ನಾಶವಾದವು. 1984ರ ಜೂನ್‍‌ನಲ್ಲಿ, ಜರ್ನೈಲ್ ಸಿಂಗ್ ಭಿಂದ್ರಾನ್‌ವಾಲೆ ಸಿಖ್ ಪ್ರತ್ಯೇಕತಾ ವಾದಿ ಗುಂಪು ಸಿಖ್‌ ಧರ್ಮದ ಪವಿತ್ರ ಮಂದಿರ ಸ್ವರ್ಣ ದೇವಾಲಯದೊಳಗೆ ಬಿಡಾರ ಹೂಡಿ, ಅಲ್ಲಿ ಶಸ್ತ್ರಾಸ್ತ್ರಗಳನ್ನು ಜಮಾಯಿಸುತ್ತಿತ್ತು. ಸ್ವರ್ಣ ಮಂದಿರ ಮತ್ತು ಆಸುಪಾಸಿನ ಕಟ್ಟಡಗಳಲ್ಲಿ ಸಾವಿರಾರು ನಾಗರಿಕರಿದ್ದಾಗಲೇ ಸೇನೆಯು ಗುಂಡು ಹಾರಿಸಿತು. ಇದರಿಂದ ಅನೇಕ ನಾಗರಿಕರು ಅನಾಹುತಕ್ಕೆ ತುತ್ತಾದರು.'ಆಪರೇಶನ್ ಬ್ಲೂ ಸ್ಟಾರ್' ಕಾರ್ಯಾಚರಣೆಗೆ ಗಾಂಧಿ ನೀಡಿದ ಆದೇಶ ಅಂತರಾಷ್ಟ್ರೀಯ ಮಾಧ್ಯಮದಲ್ಲಿ ತೀವ್ರ ಖಂಡನೆಗೆ ಒಳಗಾಯಿತು.ಸೇನೆ ಮತ್ತು ನಾಗರಿಕರಿಗೆ ಉಂಟಾದ ಅನಾಹುತ ಎಷ್ಟು ಎಂಬ ಅಂಕಿಸಂಖ್ಯೆಯಲ್ಲಿ ಸರಕಾರ ನೀಡಿದ್ದಕ್ಕೂ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕೊಟ್ಟಿದ್ದಕ್ಕೂ ವ್ಯತ್ಯಾಸವಿದೆ. 79 ಸೈನಿಕರು, ಮತ್ತು 492 ಸಿಖ್‌ರು ಅನಾಹುತಕ್ಕೆ ಈಡಾದರು ಎಂದು ಸರಕಾರ ಅಂದಾಜು ನೀಡಿದರೆ, ಅನೇಕ ಮಹಿಳೆಯರು ಮತ್ತು ಮಕ್ಕಳೂ ಒಳಗೊಂಡಂತೆ, ಸ್ವಯಂ ಸೇವಾ ಸಂಸ್ಥೆಗಳು ನೀಡುವ ಲೆಕ್ಕದ ಪ್ರಕಾರ 500 ಅಥವಾ ಅದಕ್ಕಿಂತ ಹೆಚ್ಚು ಯೋಧರು ಮತ್ತು 3,000 ಸಿಖ್‌ರು ಕಷ್ಟನಷ್ಟಕ್ಕೆ ಸಿಲುಕಿದರು. ಜೊತೆಗೆ ಅನೇಕ ಮಕ್ಕಳು ಮಹಿಳೆಯರು ಚಕಮಕಿಯಲ್ಲಿ ಘಾಸಿಗೊಂಡರು. ನಾಗರಿಕ ಅವಘಡಕ್ಕೆ ಸಂಬಂಧಿಸಿದ ನಿಖರ ಅಂಕಿಅಂಶ ವಿವಾದಕ್ಕೆ ಸಿಕ್ಕಿಬಿದ್ದರೆ, ಯೋಗ್ಯ ದಾಖಲೆಗಳ ಕೊರತೆ ಮತ್ತು ದಾಳಿ ನಡೆಸಿದ ಸಮಯ ಮತ್ತು ಅದಕ್ಕೆ ಅನುಸರಿಸಲಾದ ರೀತಿನೀತಿಯು ಕಟು ಟೀಕೆಗೆ ಒಳಗಾಯಿತು. ಇಂದಿರಾರ ಈ ಕಾರ್ಯಾಚರಣೆಯನ್ನು ಸಿಖ್‌ರ ವಿರುದ್ಧ ಅವರು ಮಾಡಿದ ವೈಯಕ್ತಿಕ ದಾಳಿ ಎಂದು ಖಂಡಿಸಲಾಯಿತು. 'ಸಿಖ್‌ರಿಗೆ ಸ್ವಾತಂತ್ರ್ಯನೀಡಿ,ಅವರಿಗಾಗಿಯೇ ಖಲಿಸ್ಥಾನ ಎಂಬ ಪ್ರತ್ಯೇಕ ರಾಜ್ಯವನ್ನು ರಚಿಸಿ' ಎಂಬಂಥ ಸರಕಾರ ವಿರೋಧೀ ನೀತಿಯನ್ನು ಬಿತ್ತುತ್ತಿದ್ದ ಉಗ್ರಗಾಮಿ ಭಿಂದ್ರನ್‌ವಾಲೆ ಮತ್ತು ಆತನ ಸಹಚರರನ್ನು ಹೊರದಬ್ಬುವುದೇ ಈ ಮುತ್ತಿಗೆಯ ಮೂಲ ಉದ್ದೇಶ ಎಂದು ಕಾರ್ಯಾಚರಣೆಯನ್ನು ಇಂದಿರಾ ಸಮರ್ಥಿಸಿಕೊಂಡರು.
ಸಿಖ್‌ ಸಮುದಾಯಕ್ಕೆ ಸೇರಿದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್‌ ಎಂಬ ಗಾಂಧಿಯ ಅಂಗರಕ್ಷಕರಿಬ್ಬರು 1984ರ ಅಕ್ಟೋಬರ್ 31ರಂದು,1984ರ ಅಕ್ಟೋಬರ್ 31ರಂದು,ಸೇವಾ ಬಳಕೆಗಾಗಿ ಇದ್ದ ಆಯುಧಗಳಿಂದ ಅವರನ್ನು ಹತ್ಯೆಗೈದರು. ಈ ಹತ್ಯೆ ನಡೆದದ್ದು ನವದೆಹಲಿಯ ಪ್ರಧಾನ ಮಂತ್ರಿ ನಿವಾಸವಾಗಿದ್ದ ನವೆಂಬರ್ 1, ಸಫ್ದರ್ಜಂಗ್‌ ರಸ್ತೆಯಲ್ಲಿನ ಉದ್ಯಾನದಲ್ಲಿ. ಐರಿಷ್ ದೂರದರ್ಶನಕ್ಕೆ ಸಾಕ್ಷ್ಯಚಿತ್ರ ಚಿತ್ರೀಕರಿಸುತ್ತಿದ್ದ ಬ್ರಿಟಿಷ್ ನಟ ಪೀಟರ್ ಉಸ್ತಿನೊವ್‌ ಅವರಿಗೆ ಸಂದರ್ಶನ ನೀಡುವುದಕ್ಕಾಗಿ, ಇಂದಿರಾ ಸತ್ವಂತ್ ಮತ್ತು ಬಿಯಾಂತ್‌ ಕಾವಲಿನಲ್ಲಿದ್ದ ಕಿರು ದ್ವಾರವನ್ನು ದಾಟುತ್ತಿದ್ದಂತೆಯೇ ಈ ದುಷ್ಕೃತ್ಯ ನಡೆಯಿತು. ಇವರ ಬೆಂಗಾವಲಿನಲ್ಲಿ ವಿಕೆಟ್ ಗೇಟ್‌ನ್ನು ದಾಟಿದ್ದರು. ಘಟನೆ ಆಧಾರಿಸಿ ಈ ದುರ್ಘಟನೆ ನಡೆದಾಕ್ಷಣ ಲಭ್ಯವಾದ ಮಾಹಿತಿಯಂತೆ ಬಿಯಾಂತ್ ಸಿಂಗ್ ಪಾರ್ಶ್ವಾಯುಧವನ್ನು ಬಳಸಿ ಅವರಿಗೆ ಮೂರು ಬಾರಿ ಗುಂಡುಹಾರಿಸಿದರೆ, ಸತ್ವಂತ್ ಸಿಂಗ್ ಸ್ಟೆನ್ ಸಬ್‌ಮೆಷಿನ್ ಗನ್ ಬಳಸಿ 30 ಸುತ್ತು ಹೊರದಬ್ಬಲಾಯಿತು. ಮೇನಕಾ ಜೊತೆ ಹೊರದೂಡಲ್ಪಟ್ಟ ಸಂಜಯ್ ಪುತ್ರ  ಕೂಡ ಈಗ ಪ್ರಮುಖ ಪ್ರತಿ ಪಕ್ಷ BJPಯ ಸದಸ್ಯರಾಗಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ.

ಭಾರತದ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿ 1970ರಲ್ಲಿ ಬಲವಂತ ಸಂತಾನ ಶಕ್ತಿಹರಣ ಯೋಜನೆಯನ್ನು ಜಾರಿಗೆ ತಂದರು.ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವ ಪುರುಷರು ಸಂತಾನ ಶಕ್ತಿಹರಣ ಚಿಕಿತ್ಸೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕೆಂಬುದು ಅಧಿಕೃತವಾಯಿತು. ಆದರೆ ಮದುವೆಯಾಗದ ಹಲವಾರು ಯುವಕರು, ರಾಜಕೀಯ ವಿರೋಧಿಗಳು ಮತ್ತು ಅಮಾಯಕ ಪುರುಷರೂ ಸಹ ಇದಕ್ಕೆ ಈಡಾದರು ಎಂದು ನಂಬಲಾಗಿದೆ. ಈ ಯೋಜನೆ ಭಾರತದಲ್ಲಿ ಸಾರ್ವಜನಿಕ ಜಿಗುಪ್ಸೆಯನ್ನು ನಿರ್ಮಿಸಿದ ಪರಿ ಈಗಲೂ ನೆನಪಾಗುತ್ತದೆ ಮತ್ತು ಖಂಡಿಸಲಾಗುತ್ತದೆ. ಇದರಿಂದಾಗಿ ಕುಟುಂಬ ಯೋಜನೆಯ ಬಗ್ಗೆ ಜನತೆಗೆ ತಪ್ಪು ಮಾಹಿತಿ ರವಾನೆಯಾಗಿದೆ ಎಂದು ದೂಷಿಸಲಾಗಿದೆ. ಸರಕಾರದ ಇಂಥ ಯೋಜನೆಗಳಿಗೆ ದಶಕಗಳ ಕಾಲ ಅಡಚಣೆ ಉಂಟಾಯಿತು.ಇಂದಿರಾ ಗಾಂಧಿ ಭಾರತ ಸುಸಂತಾನಶಾಸ್ತ್ರ ಸಮಾಜ ಎಂಬ ಸಂಸ್ಥೆಯ ಸದಸ್ಯರಾಗಿ ಸುಸಂತಾನಶಾಸ್ತ್ರದ ಕಲ್ಪನೆಗೆ ಪ್ರಬಲ ದಾರ್ಶನಿಕ ಮತ್ತು ವೈಯಕ್ತಿಕ ಗಾಢನಂಬಿಕೆಯನ್ನು ಹೊಂದಿದ್ದರು ಎಂಬುದನ್ನು ಈ ಸಂಗತಿಗಳು ಪ್ರಬಲವಾಗಿ ಬಿಂಬಿಸುತ್ತವೆ.

ಪ್ರಚಲಿತ ಪುರುಷ-ಪ್ರಧಾನ ಸಮಾಜದಲ್ಲಿ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿ ಮತ್ತು ಪ್ರಭಾವಿ ನಾಯಕಿಯಾಗಿ ಇಂದಿರಾ ಗಾಂಧಿ ಭಾರತದ ಸ್ತ್ರೀ ಸಮುದಾಯದ ಸಂಕೇತವಾಗಿದ್ದಾರೆ.
ಗಾಂಧಿಯವರಿಂದ ಗಳಿಸಲ್ಪಟ್ಟ ಗ್ರಾಮೀಣ ಜನರ ಅಭಿಮಾನವು ಭಾರತದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿನಲ್ಲಿ ಹಾಗೂ ನೆಹರು-ಗಾಂಧಿ ಕುಟುಂಬಕ್ಕೆ ಜನ ನೀಡುತ್ತಿರುವ ಬೆಂಬಲದಲ್ಲಿಯೂ ಸಹ ಅದರ ಪ್ರಭಾವವನ್ನು ಹೊಂದಿದೆ. ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರನ್ನು ಪೂಜ್ಯ ಭಾವನೆಯಿಂದ ಇಂದಿರಾ-ಅಮ್ಮ (ಅನೇಕ ಭಾಷೆಗಳಲ್ಲಿ ಅಮ್ಮ ಅಂದರೆ ತಾಯಿ ಎಂದರ್ಥ) ಎಂದು ಜನ ನೆನೆಯುತ್ತಾರೆ. ಅವರ ಗರೀಬಿ ಹಟಾವೊ ಘೋಷಣೆಯನ್ನು ರಾಜಕೀಯ ಪ್ರಚಾರ ಸಂದರ್ಭದಲ್ಲೆಲ್ಲಾ ಈಗಲೂ ಕಾಂಗ್ರೆಸ್‌ ಬಳಸುತ್ತದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಸ್ತುತ ಅಧ್ಯಕ್ಷೆಯೂ ಹಾಗೂ ಇಂದಿರಾ ಗಾಂಧಿ ಸೊಸೆಯೂ ಆಗಿರುವ ಸೋನಿಯಾ ಗಾಂಧಿಯವರ ಶೈಲಿಯು ಇಂದಿರಾ ಶೈಲಿಯನ್ನು ಹೋಲುತ್ತದೆ ಎಂದು ಹೇಳಲಾಗಿದೆ.
'ಇಂದಿರಾ ಆವಾಸ್ ಯೋಜನೆ'-ಗ್ರಾಮೀಣ ಜನರಿಗೆ ಅಲ್ಪ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುವ ಕೇಂದ್ರ ಸರಕಾರದ ಈ ಯೋಜನೆಗೆ ಇಟ್ಟಿರುವ ಹೆಸರೂ ಅವರದ್ದೇ ಆಗಿದೆ. ಹೊಸದೆಹಲಿಯ ವಿಮಾನ ನಿಲ್ದಾಣಕ್ಕೆ 'ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ' ಎಂಬ ಹೆಸರಿಟ್ಟು ಇವರನ್ನು ಗೌರವಿಸಲಾಗಿದೆ.




#Article 132: ಮೊರಾರ್ಜಿ ದೇಸಾಯಿ (416 words)


ಮೊರಾರ್ಜಿ ದೇಸಾಯಿ ಮೊರಾರ್ಜಿ (29 ಫೆಬ್ರವರಿ 1896 - 10 ಏಪ್ರಿಲ್ 1995) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು 1977 ರಿಂದ 1979 ರವರೆಗೆ ಭಾರತದಲ್ಲಿ 4 ನೇ ಪ್ರಧಾನಿಯಾಗಿ(ಜನತಾ ಪಾರ್ಟಿ) ಸರ್ಕಾರಕ್ಕೆ ಸೇವೆ ಸಲ್ಲಿಸಿದರು. ರಾಜಕಾರಣದಲ್ಲಿ ಅವರ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ಅವರು ಹಲವಾರು ಪ್ರಮುಖ ಹುದ್ದೆಗಳನ್ನು ಸರ್ಕಾರದಲ್ಲಿ ಹೊಂದಿದ್ದರು: ಮುಂಬಯಿ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ, ಹಣಕಾಸು ಸಚಿವ ಮತ್ತು ಭಾರತದ ಉಪ ಪ್ರಧಾನ ಮಂತ್ರಿ. ಅಂತರರಾಷ್ಟ್ರೀಯ ಸನ್ನಿವೇಶದಲ್ಲಿ, ದೇಸಾಯಿ ತಮ್ಮ ಶಾಂತಿ ಕ್ರಿಯಾವಾದಕ್ಕಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿದ್ದಾರೆ ಮತ್ತು ಎರಡು ಪ್ರತಿಸ್ಪರ್ಧಿ ದಕ್ಷಿಣ ಏಷ್ಯಾದ ರಾಜ್ಯಗಳು, ಪಾಕಿಸ್ತಾನ ಮತ್ತು ಭಾರತ ನಡುವೆ ಶಾಂತಿ ಆರಂಭಿಸಲು ಪ್ರಯತ್ನಗಳನ್ನು ಮಾಡಿದ್ದಾರೆ. 1974 ರಲ್ಲಿ ಭಾರತದ ಮೊದಲ ಪರಮಾಣು ಸ್ಫೋಟವಾದ ನಂತರ, ದೇಸಾಯಿ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧವನ್ನು ಪುನಃಸ್ಥಾಪಿಸಲು ಸಹಾಯ ಮಾಡಿದರು ಮತ್ತು 1971 ರ ಇಂಡೋ-ಪಾಕಿಸ್ತಾನಿ ಯುದ್ಧದಂತಹ ಸಶಸ್ತ್ರ ಸಂಘರ್ಷವನ್ನು ತಪ್ಪಿಸಲು ಪ್ರತಿಜ್ಞೆ ಮಾಡಿದರು.

ಮೊರಾರ್ಜಿ ದೇಸಾಯಿ ಅವರು 1896 ರ ಫೆಬ್ರುವರಿ 29 ರಂದು ಮುಂಬಯಿ ಪ್ರೆಸಿಡೆನ್ಸಿ (ಈಗ ಗುಜರಾತ್ನಲ್ಲಿ) ನ ಬಲ್ಸೇರಿ ಜಿಲ್ಲೆಯ ಭಾಡೆಲಿ ಗ್ರಾಮದಲ್ಲಿ ಜನಿಸಿದರು. ಎಂಟು ಮಕ್ಕಳು ಅತ್ಯಂತ ಹಿರಿಯರು. ಅವರ ತಂದೆ ಶಾಲೆಯ ಶಿಕ್ಷಕರಾಗಿದ್ದರು. ದೇಸಾಯಿ ಸೌರಾಷ್ಟ್ರದಲ್ಲಿರುವ ಕುಂಡ್ಲಾ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಒಳಗಾದರು, ಸಾವರ್ಕುಂಡ್ಲಾ ಈಗ ಜೆ.ವಿ. ಮೋದಿ ಶಾಲೆ ಎಂದು ಕರೆಯುತ್ತಾರೆ ಮತ್ತು ನಂತರ ಬಲ್ ಅವಾ ಬಾಯ್ ಹೈಸ್ಕೂಲ್, ವಲ್ಸಾದ್ ಸೇರಿದರು.  ಮುಂಬೈಯ ವಿಲ್ಸನ್ ಕಾಲೇಜ್ನಿಂದ ಪದವೀಧರರಾದ ನಂತರ, ಅವರು  ನಾಗರಿಕ ಸೇವೆಗೆ ಸೇರಿದರು. ಅಲ್ಲಿ 1927-28ರ ಗಲಭೆಗಳ ಸಮಯದಲ್ಲಿ ಹಿಂದುಗಳ ಮೇಲೆ ಮೃದುವಾಗಿ ಹೋಗುವ ಅಪರಾಧವೆಂದು ಪರಿಗಣಿಸಲ್ಪಟ್ಟು ಮೇ 1930 ರಲ್ಲಿ ಗೋಧ್ರಾದ ಜಿಲ್ಲಾಧಿಕಾರಿಯಾಗಿ ದೇಸಾಯಿ ರಾಜೀನಾಮೆ ನೀಡಿದರು.  ದೇಸಾಯಿ ನಂತರ  ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿದರು ಮತ್ತು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಾಗರಿಕ ಅಸಹಕಾರ ಚಳವಳಿಯಲ್ಲಿ ಸೇರಿಕೊಂಡರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಅನೇಕ ವರ್ಷಗಳ ಕಾಲ ಜೈಲಿನಲ್ಲಿದ್ದರು ಮತ್ತು ಅವರ ಚೂಪಾದ ನಾಯಕತ್ವದ ಕೌಶಲ್ಯ ಮತ್ತು ಕಠಿಣ ಚೈತನ್ಯದಿಂದಾಗಿ ಅವರು ಸ್ವಾತಂತ್ರ್ಯ ಹೋರಾಟಗಾರರ ನಡುವೆ ನೆಚ್ಚಿನವರಾಗಿದ್ದರು ಮತ್ತು ಗುಜರಾತ್ ಪ್ರದೇಶದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದರು. 1934 ಮತ್ತು 1937 ರಲ್ಲಿ ಪ್ರಾಂತೀಯ ಚುನಾವಣೆಗಳು ನಡೆದಾಗ, ದೇಸಾಯಿ ಅವರು ಮುಂಬಯಿ ಪ್ರೆಸಿಡೆನ್ಸಿಯ ಕಂದಾಯ ಸಚಿವ ಮತ್ತು ಗೃಹ ಸಚಿವರಾಗಿ ಆಯ್ಕೆಯಾದರು.

ತುರ್ತು ಪರಿಸ್ಥಿತಿಯನ್ನು ಎತ್ತಿಹಿಡಿಯಲು ಇಂದಿರಾ ಗಾಂಧಿಯವರು ನಿರ್ಧರಿಸಿದ ನಂತರ ಸಾಮಾನ್ಯ ಚುನಾವಣೆ ನಡೆಯಿತು. ಜನತಾ ಪಾರ್ಟಿ ಚುನಾವಣೆಯಲ್ಲಿ ಜಯ ಸಾಧಿಸಿತು ಮತ್ತು ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ದೇಸಾಯಿ ನೆರೆಹೊರೆಯ ಮತ್ತು ವಿರೋಧಿ ಪಾಕಿಸ್ತಾನದೊಂದಿಗೆ ಸಂಬಂಧವನ್ನು ಸುಧಾರಿಸಲು ಕೆಲಸ ಮಾಡಿದರು. 1962 ರ ಯುದ್ಧದ ನಂತರ ಮೊದಲ ಬಾರಿಗೆ ಚೀನಾದೊಂದಿಗಿನ ಸಾಮಾನ್ಯ ಸಂಬಂಧಗಳನ್ನು ಮರುಸ್ಥಾಪಿಸಿತು. ಅವರು ಜಿಯಾ-ಉಲ್-ಹಕ್ ಅವರೊಂದಿಗೆ ಸಂವಹನ ನಡೆಸಿದರು ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಿದರು. ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪುನಃ ಸ್ಥಾಪಿಸಲಾಯಿತು. ಅವರ ಸರ್ಕಾರ ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿತು.

ಮೊರಾರ್ಜಿ ದೇಸಾಯಿ ಅವರು 1980 ರ ಸಾರ್ವತ್ರಿಕ ಚುನಾವಣೆಯಲ್ಲಿ ಹಿರಿಯ ರಾಜಕಾರಣಿಯಾಗಿ ಜನತಾ ಪಕ್ಷಕ್ಕೆ ಪ್ರಚಾರ ಮಾಡಿದರು ಆದರೆ ಚುನಾವಣೆಯಲ್ಲಿ ಸ್ವತಃ ಸ್ಪರ್ಧಿಸಲಿಲ್ಲ. ನಿವೃತ್ತಿಯಲ್ಲಿ ಅವರು ಮುಂಬೈಯಲ್ಲಿ ವಾಸಿಸುತ್ತಿದ್ದರು ಮತ್ತು 1995 ರಲ್ಲಿ 99 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕೊನೆಯ ವರ್ಷಗಳಲ್ಲಿ ಅವರ ಪೀಳಿಗೆಯ ಸ್ವಾತಂತ್ರ್ಯ ಹೋರಾಟಗಾರನಾಗಿ ಅವರು ಹೆಚ್ಚು ಗೌರವವನ್ನು ಹೊಂದಿದ್ದರು.
ಮೊರಾರ್ಜಿ ದೇಸಾಯಿ ಮಹಾತ್ಮ ಗಾಂಧಿಯವರ ತತ್ವಗಳ ಮತ್ತು ನೈತಿಕತೆಯ ಕಟ್ಟುನಿಟ್ಟಾದ ಅನುಯಾಯಿಯಾಗಿದ್ದರು.

ಮೊರಾರ್ಜಿ ದೇಸಾಯಿಯವರು ಗಾಂಧಿಯ ಅನುಯಾಯಿಯಾಗಿದ್ದರು, ಸಾಮಾಜಿಕ ಕಾರ್ಯಕರ್ತರು, ಸಂಸ್ಥಾಪಕ ಬಿಲ್ಡರ್ ಮತ್ತು ಉತ್ತಮ ಸುಧಾರಕರಾಗಿದ್ದರು. ಅವರು ಗುಜರಾತ್ ವಿದ್ಯಾಪೀಠದ ಚಾನ್ಸಲರ್ ಆಗಿದ್ದರು. ಪ್ರಧಾನ ಮಂತ್ರಿಯಾಗಿದ್ದ ತಮ್ಮ ಅವಧಿಯಲ್ಲಿ ಅವರು ಅಕ್ಟೋಬರ್ ತಿಂಗಳಲ್ಲಿ ವಿದ್ಯಾಪೀಠಕ್ಕೆ ಭೇಟಿ ನೀಡುತ್ತಿದ್ದರು.

ಮೊರಾರ್ಜಿ ದೇಸಾಯಿ ಅವರು 15 ನೇ ವಯಸ್ಸಿನಲ್ಲಿ 1911 ರಲ್ಲಿ ಗುಜ್ರಬೆನ್ರನ್ನು ಮದುವೆಯಾದರು. ಅವರ ಮಗ ಕಾಂತಿ ದೇಸಾಯಿ ಮತ್ತು ಜಗದೀಪ್ ದೇಸಾಯಿ ಮತ್ತು ಭಾರತ್ ದೇಸಾಯಿ ಮೊಮ್ಮಕ್ಕಳು. ಮಧುಕೇಶ್ವರ್ ದೇಸಾಯಿ, ಅವರ ಶ್ರೇಷ್ಠ-ಮೊಮ್ಮಗ ಜಗದೀಪ್ ದೇಸಾಯಿಯವರ ಮಗ ಪ್ರಸ್ತುತ ಬಿಜೆಪಿಯ ಯುವ ವಿಭಾಗವಾದ ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.
ಭಾರತ್ ದೇಸಾಯಿಯ ಮಗ ವಿಶಾಲ್ ದೇಸಾಯಿ ಅವರು ಬರಹಗಾರ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದಾರೆ




#Article 133: ಅಟಲ್ ಬಿಹಾರಿ ವಾಜಪೇಯಿ (652 words)


ಅಟಲ್ ಬಿಹಾರಿ ವಾಜಪೇಯಿ( 25 ಡಿಸೆಂಬರ್ 1924  - 16 ಆಗಸ್ಟ್ 2018)ಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು.

ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು, ಮೊದಲ ಬಾರಿಗೆ 1996 ರಲ್ಲಿ 13 ದಿನಗಳ ಅವಧಿಗೆ, 1998 ರಿಂದ 1999 ರವರೆಗೆ ಹನ್ನೊಂದು ತಿಂಗಳ ಅವಧಿ, ಮತ್ತು ನಂತರ 1999 ರಿಂದ 2004 ರವರೆಗಿನ ಪೂರ್ಣಾವಧಿಗೆ.ಲೋಕಸಭೆ, ಕೆಳಮನೆಗೆ ಹತ್ತು ಬಾರಿ ಮತ್ತು ಮೇಲ್ಮನೆಗೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾದ ಅವರು ನಾಲ್ಕು ದಶಕಗಳ ಕಾಲ ಭಾರತೀಯ ಸಂಸತ್ ಸದಸ್ಯರಾಗಿದ್ದರು. 2009 ರವರೆಗೆ ಉತ್ತರ ಪ್ರದೇಶದ ಲಖನೌದ ಸಂಸತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆರೋಗ್ಯದ ಕಾರಣದಿಂದಾಗಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾದರು. 1968 ರಿಂದ 1972 ರವರೆಗೆ ನೇತೃತ್ವ ವಹಿಸಿದ್ದ ಹಿಂದಿನ ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ವಾಜಪೇಯಿ ಒಬ್ಬರಾಗಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿಯ ಕ್ಯಾಬಿನೆಟ್ನಲ್ಲಿ ವಿದೇಶಾಂಗ ಸಚಿವರಾಗಿದ್ದರು.  ಅವರೊಬ್ಬ ಕವಿ,  ಪತ್ರಕರ್ತ, ವಾಗ್ಮಿ, ಚಿಂತಕ, ದಾರ್ಶನಿಕ, ರಾಜಕಾರಣಿಯಾಗಿದ್ದರು. 

ಇವರು ರಾಜಕಾರಣದೊಂದಿಗೆ ಅನೇಕ ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 1961 ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರು. ಆಲ್ ಇಂಡಿಯ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಟ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿದ್ದರು. ಪಂಡಿತ ದೀನದಯಾಳು ಉಪಾಧ್ಯಾಯ ಸ್ಮಾರಕ ಸಮಿತಿ, ದೀನದಯಾಳು ಧಾಮ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಕವಿ-ಬರೆಹಗಾರರಾಗಿಯೂ ಹೆಸರು ಗಳಿಸಿದ್ದಾರೆ. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ಹಾಗೂ ವೀರ ಅರ್ಜುನ್ ಮುಂತಾದ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಮೇರಿ ಇಕ್ಯಾವನ್ ಕವಿತಾಯೇಂ, ಸಂಕಲ್ಪಕಾಲ, ಕೈದಿ ಕವಿರಾಜ್ ಕೇ ಕುಂಡಲಿಯಾ (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆಯಲ್ಲಿ ರಚಿಸಿದ ಕವನಗಳು), ಅಮರ್ ಆಗ್ ಹೈ (ಕವನ ಸಂಕಲನಗಳು) ಮೇರಿ ಸಂಸದೀಯ ಯಾತ್ರಾ (4 ಸಂಪುಟಗಳಲ್ಲಿ), ಶಕ್ತಿ ಸೇ ಶಾಂತಿ, ಲೋಕ ಸಭಾ ಮೆ ಅಟಲ್‍ಜೀ (ಭಾಷಣಗಳ ಸಂಪುಟ: ಮೃತ್ಯು ಯಾ ಹತ್ಯಾ, ಅಟಲ್ ಬಲಿದಾನ್), ಜನಸಂಘ ಔರ್ ಮುಸಲ್ಮಾನ್, ಸಂಸದ್ ಮೇ ತೀನ್ ದಶಕ್ (ಮೂರು ಸಂಪುಟಗಳಲ್ಲಿ), ಇವು ಹಿಂದಿಯಲ್ಲಿ ರಚಿತವಾದ ಪ್ರಮುಖ ಕೃತಿಗಳಾಗಿವೆ. ಫೋರ್ ಡಿಕೇಡ್ಸ್ ಇನ್ ಪಾರ್ಲಿಮೆಂಟ್ (ಭಾಷಣಗಳು, ಮೂರು ಸಂಪುಟ) ಹಾಗೂ ನ್ಯೂ ಡೈಮೆನ್‍ಷನ್ಸ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ-ಇವು ಇಂಗ್ಲಿಷಿನಲ್ಲಿ ಹೊರಬಂದಿರುವ ಪ್ರಸಿದ್ಧ ಗ್ರಂಥಗಳು.

ಇವರು 1996 ಮೇ 16-31ರವರೆಗೆ ಮೊದಲಬಾರಿ, 1998-99ರವರೆಗೆ ಎರಡನೆಯಬಾರಿ ಹಾಗೂ 1999 ಅಕ್ಟೋಬರ್ 13 ರಿಂದ 2004 ಮೇ 12ರವರೆಗೆ ಮೂರನೆಯ ಬಾರಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದರು. 1998-99ರ ಇವರ ಅಧಿಕಾರಾವಧಿಯನ್ನು ಧೈರ್ಯ ಹಾಗೂ ದೃಢ ನಂಬಿಕೆಯ ಒಂದು ವರ್ಷ ಎಂದು ಕರೆಯಲಾಗಿದೆ. ಇವರ ಅವಧಿಯಲ್ಲಿ ಪೋಕ್ರಾನ್‍ನಲ್ಲಿ ನಡೆಸಿದ ಅಣುಬಾಂಬ್ ಪರೀಕ್ಷಾರ್ಥ ಸ್ಫೋಟದಿಂದಾಗಿ ಭಾರತ ಅಣುಬಾಂಬ್ ಹೊಂದಿದ ರಾಷ್ಟ್ರಗಳಿಗೆ ಸೇರ್ಪಡೆಯಾಯಿತು(1998). ಎರಡೂ ರಾಷ್ಟ್ರಗಳ ನಡುವೆ ಸೌಹಾರ್ದವನ್ನು ವೃದ್ಧಿಸುವ ಆಶಾಭಾವನೆಯಿಂದ ಭಾರತ-ಪಾಕಿಸ್ತಾನಗಳ ನಡುವೆ ಬಸ್ ಪ್ರಯಾಣವನ್ನು ಪ್ರಾರಂಭಿಸಿದರು(1999). ಇವರ ಅಧಿಕಾರಾವಧಿಯ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ಸಂಭವಿಸಿ ಭಾರತ ವಿಜಯಿಯಾಯಿತು. ಸೌಹಾರ್ದದ ಈ ಪ್ರಯತ್ನ ನಿಂತಿತು. ಈಗ ಮೂಡುತ್ತಿರುವ ಭಾರತ-ಪಾಕ್ ಶಾಂತಿಪ್ರಕ್ರಿಯೆಗೆ ವಾಜಪೇಯಿ ಚಾಲನೆ ನೀಡಿದರು.

ಇವರು ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇದ್ದಿತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಸಾಧನೆ. ಇವರು ಗ್ರಾಮೀಣ ಬಡಜನರ ಆರ್ಥಿಕ ಸಬಲೀಕರಣದ ಮಹದೋದ್ದೇಶ ಹೊಂದಿ, ಉತ್ತಮ ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ, ಮಾನವ ಸಂಪನ್ಮೂಲಗಳ ಬೆಳೆವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ನಿಯೋಜಿಸಿದರು. ಭಾರತ ಒಂದು ಪ್ರಬಲ ಸ್ವಾವಲಂಬೀ ರಾಷ್ಟ್ರವಾಗಬೇಕೆಂಬುದು ಇವರ ಹೆಬ್ಬಯಕೆ. 52ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಂಪುಕೋಟೆಯಲ್ಲಿ ಆಚರಿಸಿದ ಸಂದರ್ಭದಲ್ಲಿ ಭಾಷಣ ಮಾಡುತ್ತಾ “ನನಗೊಂದು ಭವ್ಯ ಭಾರತದ ಕಲ್ಪನೆಯಿದೆ. ಆ ಭಾರತ ಹಸಿವೆಯಿಂದ, ಭಯದಿಂದ ಮುಕ್ತವಾಗಿರುತ್ತದೆ; ಆ ಭಾರತ ನಿರಕ್ಷರತೆ ಮತ್ತು ದಾರಿದ್ರ್ಯದಿಂದ ದೂರವಾಗಿರುತ್ತದೆ” ಎಂದು ಹೇಳಿದ್ದಾರೆ. ಇವರನ್ನು 90ರ ದಶಕದ ಭಾರತದ ರಾಷ್ಟ್ರ ರಾಜಕೀಯದ ಅತ್ಯಂತ ಪ್ರಬಲ ವ್ಯಕ್ತಿಯೆಂದು ಪರಿಗಣಿಸಲಾಗಿದೆ. ಮೊದಲಿನಿಂದಲೂ ಹಿಂದು ಸಂಘಪರಿವಾರದ ರಾಜಕೀಯ ಮುಖವಾಣಿಯಾದ ಜನಸಂಘ, ಜನತಾಪಕ್ಷ, ಭಾರತೀಯ ಜನಸಂಘಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ಇವರು ಈ ದಶಕದಲ್ಲಿ ಎನ್.ಡಿ.ಎ. (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಎಂಬ ಒಕ್ಕೂಟವನ್ನು ರಚಿಸಿ ಮೂರು ಬಾರಿ ಪ್ರಧಾನಮಂತ್ರಿಗಳಾಗಿ ಸರ್ಕಾರ ನಡೆಸಿದರು. ಅನಿವಾರ್ಯವಾದ ಒಕ್ಕೂಟ ಸರ್ಕಾರ ಧರ್ಮಕ್ಕೆ ರಾಷ್ಟ್ರಮಟ್ಟದಲ್ಲಿ ಉತ್ತಮ ನಾಂದಿ ಹಾಡಿದರು. ರಾಜಕೀಯ ಸ್ಥಿರತೆಯ ಪ್ರಯತ್ನ, ಆರ್ಥಿಕ ಬೆಳೆವಣಿಗೆಯಲ್ಲಿ ಪ್ರಗತಿ, ಉತ್ತಮ ಹೆದ್ದಾರಿಗಳ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ತಮ ವಿದೇಶಾಂಗ ಸಂಬಂಧಗಳು ಇವರ ಸರ್ಕಾರದ ಪ್ರಮುಖ ಸಾಧನೆಗಳೆನ್ನಬಹುದು. ಆದರೆ ಗುಜರಾತಿನ ಕೋಮುವಾದಿ ಗಲಭೆ ಹಾಗೂ ಹಿಂದೆಂದೂ ಕಾಣದ ಅಲ್ಲಿನ ಹಿಂಸಾಚಾರ ಇವರ ಕಾಲದ ದುರ್ಘಟನೆಗಳು. ಅನಂತರದ ಸಾರ್ವತ್ರಿಕ ಚುನಾವಣೆಯಲ್ಲಿ (2004) ಇವರ ನಾಯಕತ್ವದ ಎನ್.ಡಿ.ಎ. ಒಕ್ಕೂಟ ಸೋತು ಇವರ ರಾಜಕೀಯ ನಾಯಕತ್ವಕ್ಕೆ ಹಿನ್ನೆಡೆ ಉಂಟಾಯಿತು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವವನ್ನೂ ಇವರು ಒಪ್ಪಿಕೊಳ್ಳಲಿಲ್ಲ. ಆದರೆ ರಾಷ್ಟ್ರರಾಜಕಾರಣದಲ್ಲಿ ಬಿಜೆಪಿಯ ಒಳವ್ಯವಹಾರಗಳಲ್ಲಿ ಇಂದಿಗೂ ವಾಜಪೇಯಿ ಸಕ್ರಿಯ. ಭಾರತೀಯ ಸಾರ್ವಜನಿಕ ಜೀವನದಲ್ಲಿ ಅಜಾತಶತ್ರು ಎಂದೇ ಹೆಸರು ಮಾಡಿದ್ದಾರೆ. ಮಾತುಗಾರಿಕೆಯಲ್ಲಿ ಅವರನ್ನು ಮೀರಿಸುವರಿಲ್ಲ. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿ ಇತಿಹಾಸ ನಿರ್ಮಿಸಿದರು.

ಇವರಿಗೆ ಪದ್ಮವಿಭೂಷಣ ಪ್ರಶಸ್ತಿ(1992), 1994ರಲ್ಲಿ ಭಾರತದ ಅತ್ಯುತ್ತಮ ಸಂಸದೀಯ ಪಟು ಎಂಬ ಪುರಸ್ಕಾರ ಲಭಿಸಿವೆ.

ಡಿಸೆಂಬರ್ 2005 ರಲ್ಲಿ ರಾಜಕೀಯ ನಿವೃತ್ತಿ ಘೋಷಿಸಿದ ವಾಜಪೇಯಿ ಮುಂದಿನ ಯಾವ ಚುನಾವನೆಯಲ್ಲಿಯೂ ಸ್ಪರ್ಧಿಸುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದರು. ಬಿ ಜೆ ಪಿ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಮುಂಬೈನ ಶಿವಾಜಿ ಪಾರ್ಕ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ವಾಜಪೇಯಿ ನನ್ನ ನಂತರ ಲಾಲ್‍ಕೃಷ್ಣ ಅಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಬಿ.ಜೆ.ಪಿ ಗೆ ರಾಮ ಲಕ್ಷ್ಮಣರಂತೆ ಇರಲಿದ್ದಾರೆ ಎಂದು ಹೇಳುವ ಮೂಲಕ ತಮ್ಮ ನಂತರ ಪಕ್ಷವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಸೂಚಿಸಿದ್ದರು. ಮುಂದೆ ಆರೋಗ್ಯ ಸಮಸ್ಯೆಯಿಂದ ಬಳಲಿದ ವಾಜಪೇಯಿ ದೆಹಲಿಯ ಉನ್ನತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು. ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿದ ಪರಿಣಾಮ 2009 ರ ಲೋಕಸಭಾ ಚುನಾವಣೆಯ ಯಾವ ಪ್ರಚಾರ ಕಾರ್ಯಗಳಲ್ಲಿಯೂ ಅವರು ಭಾಗಿಯಾಗಲಿಲ್ಲ.  

    

ಮೂತ್ರಪಿಂಡ ಹಾಗು ಪಾರ್ಶ್ವ ವಾಯು ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿಯವರ ಆರೋಗ್ಯದಲ್ಲಿ ಕೆಲ ದಿನಗಳ ಹಿಂದೆ ಏರುಪೇರಾಗಿತ್ತು. ಮಧುಮೇಹ ಹಾಗು ರಕ್ತದೊತ್ತಡ ಸಮಸ್ಯೆಗಳಿಂದಾಗಿ ಅವರನ್ನು ಜೂನ್ ೧೧ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ೨೦೧೮ ಆಗಸ್ಟ್ ೧೬ ರ ಬೆಳಗ್ಗಿನಿಂದಲೇ ಚಿಕಿತ್ಸೆಗೆ ಸ್ಪಂದಿಸುವುದನ್ನು ಕ್ಷೀಣಿಸಿದ ವಾಜಪೇಯಿ ಸಾಯಂಕಾಲ ೫:೦೫ ರ ಸಮಯಕ್ಕೆ ನಿಧನರಾದರು.




#Article 134: ಇಂದ್ರಕುಮಾರ್ ಗುಜ್ರಾಲ್ (578 words)


(ಜನನ: ಡಿಸೆಂಬರ್ ೪, ೧೯೧೯-ಮರಣ: ನವೆಂಬರ್, ೩೦, ೨೦೧೨) 
ಇಂದ್ರ ಕುಮಾರ್ ಗುಜ್ರಾಲ್,ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು. ಹೆಚ್.ಡಿ.ದೇವೇಗೌಡರನಂತರ ರಾಜ್ಯಸಭೆಯಿಂದ ನೇಮಕಗೊಂಡ ಎರಡನೇ ಪ್ರಧಾನಿಯಾಗಿದ್ದಾರೆ. ಇಂದ್ರ ಕುಮಾರ್ ಗುಜ್ರಾಲ್ ಒಬ್ಬ ಬುದ್ಧಿಜೀವಿ, ಸಭ್ಯರಾಜಕಾರಣಿ, ಆದರ್ಶವಾದಿ, ಶಾಂತಿಪ್ರಿಯ, ತನ್ನದೇ ಆದ ರಾಜಕೀಯ ನೀತಿ ಹಾಗೂ ತಮ್ಮ ವಿಶಿಷ್ಠ ಛಾಪು ಇರುತ್ತಿತ್ತು. ಸೈದ್ಧಾಂತಿಕ ಹಾಗೂ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ತಮ್ಮ ಸ್ವಸಾಮರ್ಥ್ಯದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಮೆರೆದರು. ಆಳವಾದ ಜ್ಞಾನ ಹೊಂದಿದ್ದರು. ೨ ಬಾರಿ ವಿದೇಶಾಂಗ ಸಚಿವರಾಗಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಸ್ನೇಹ ಸಂಬಂಧ ಸೌಹಾರ್ದಯುತವಾಗಿರಬೇಕೆನ್ನುವ ಸಿದ್ಧಾಂತ. ವಿದೇಶೀಯರೂ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು.

ರಾಜಕೀಯ ಜೀವನ ಪರಿಶುದ್ಧವಾಗಿತ್ತು. ಶ್ರೀಮತಿ ಇಂದಿರಾಜಿಯವರ ಸಂಪುಟದಲ್ಲಿ ವಿವಿಧ ಖಾತೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಜನತಾದಳದ ನೇತೃತ್ವದ ಸಂಯುಕ್ತರಂಗ ವಹಿಸಿಕೊಂಡ ಸರ್ಕಾರದಲ್ಲೂ ಪ್ರಧಾನಿಯಾಗಿ ಶೋಭಿಸಿದರು. ಎಚ್.ಡಿ.ದೇವೇಗೌಡರಿಗೆ ನೀಡಲಾದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡಿತು. ಆಗ ಅಜಾತಶತೃವಿನಂತಿದ್ದ ಪ್ರಧಾನಿಯಾಗಿ ಚುನಾಯಿಸಲ್ಪಟ್ಟರು. ಇದ್ದದ್ದು ಕೇವಲ ೧೦ ತಿಂಗಳಾದರೂ ಪಕ್ಷಭೇದವಿಲ್ಲದೆ ಎಲ್ಲರೊಡನೆಯೂ ಸೌಹಾರ್ದಯುತವಾಗಿ ವ್ಯವಹರಿಸಿ ಜನರ ಹೃದಯವನ್ನು ಗೆಲ್ಲುವ ಶಕ್ತಿಯಿತ್ತು.

ಜನಿಸಿದ್ದು ಸನ್. ೧೯೧೯ ರ ಡಿಸೆಂಬರ್, ೪ ರಂದು, ಪಾಕೀಸ್ತಾನದ ಝೀಲಂ ನಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಅವತಾರ್ ನಾರಾಯಣ್ ಹಾಗೂ ಪುಷ್ಪಾ ಗುಜ್ರಾಲರಿಗೆ. ಡಿಎವಿ ಕಾಲೇಜ್, ಹೈಲಿ ಕಾಲೆಜ್ ಆಫ್ ಕಾಮರ್ಸ್, ಮತ್ತು ಪ್ರಸಕ್ತ ಲಾಹೋರಿನಲ್ಲಿರುವ 'ಫೋರ್ ಮ್ಯಾನ್ ಕ್ರಿಶ್ಚಿಯನ್ ಕಾಲೇಜ್' ನಲ್ಲಿ ಕಲಿತ ಗುಜ್ರಾಲ್, ವಿದ್ಯಾರ್ಥಿಯಾದಾಗಲೇ ರಾಜಕಾರಣದಲ್ಲಿ ಭಾಗಿಯಾಗಿದ್ದರು. ಮುಂದೆ, 'ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಧುಮಿಕಿ ೧೯೪೨ ರಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ಕಮ್ಯುನಿಷ್ಟ್ ಪಕ್ಷದ ಸದಸ್ಯರಾದರು. ಅವರಿಗೆ ಇಬ್ಬರುಗಂಡುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಪತ್ನಿ ೧೧ನೇ ಜುಲೈ ೨೦೧೧ರಂದು ಕಾಲವಾದರು. ತಮ್ಮ ಜೀವನದುದ್ದಕ್ಕೂ 'ಅಜಾತಶತೃ'ವೆಂದು ಹೆಸರಾದ ಅವರು, ಮೌಲ್ಯಾಧಾರಿತ ರಾಜಕೀಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಪ್ರಧಾನಮಂತ್ರಿಯ ಸ್ಥಾನದಲ್ಲಿದ್ದಾಗ ಒತ್ತಡದಲ್ಲೂ ಸಮಾಧಾನವಾಗಿರುವುದು ಹೇಗೆ ಎನ್ನುವ ಉದಾಹರಣೆಗೆ ಅವರು ಅನ್ವರ್ಥನಾಮರಾಗಿದ್ದರು. ಸಂಕಷ್ಟದ ಸಮಯದಲ್ಲಿ ಶಾಂತ ಮನಸ್ಸಿನಿಂದ ಇರುವ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ತಾವು ನಂಬಿದ ಮೌಲ್ಯಗಳಲ್ಲಿ ಅಚಲ ನಿಷ್ಟೆಯಿಂದ ಇರುತ್ತಿದ್ದರು. ವಿಧ್ಯಾರ್ಥಿಯಾಗಿದ್ದಾಗಲೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.  ದಶಕಗಳಕಾಲ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆ ಸ್ನೇಹ ಬಾಂಧವ್ಯ ಇರಿಸಿಕೊಳ್ಳಲು ೫ ತತ್ವಗಳನ್ನು ರೂಪಿಸಿದ್ದರು. ಅವನ್ನು 'ಗುಜ್ರಾಲ್ ಡಾಕ್ಟ್ರಿನ್,' ಎಂದು ಕರೆಯುತ್ತಾರೆ. ರಾಷ್ಟ್ರದ ವಿಭಜನೆಯ ಸಮಯದಲ್ಲಿ ಪಾಕೀಸ್ತಾನದಿಂದ ವಲಸೆಬಂದ ಗುಜ್ರಾಲ್, ತಳಮಟ್ಟದ ರಾಜಕೀಯ ಕಾರ್ಯಕರ್ತರಾಗಿದ್ದರೂ ಅದೃಷ್ಟದ ಬಲದಿಂದ ಪ್ರಧಾನಿಯ ಪಟ್ಟವೇರಿದರು.

ಒಬ್ಬ ಪ್ರತಿಭಾನ್ವಿತ ವ್ಯಕ್ತಿ. ಅತ್ಯುತ್ತಮ ಓದುಗ, ಬರಹಗಾರ, ವಿದೇಶಾಂಗ ವ್ಯವಹಾರ ಖಾತೆಯ ಸಚಿವರಾಗಿ ಭಾರತವನ್ನು ವಿಶ್ವಮಟ್ಟದಲ್ಲಿ ಸಮರ್ಥವಾಗಿ ಗುರುತಿಸುವಂತೆ ನಡೆದುಕೊಂಡರು. ಅಪ್ಪಟ ದೇಶಪ್ರೇಮಿ, ಮಾಸ್ಕೋದಲ್ಲಿ ಪ್ರತ್ಯೇಕವಾದ ವಿದೇಶಾಂಗ ವ್ಯವಹಾರಗಳ ಸಚಿವರ ಅಗತ್ಯವಿರಲಿಲ್ಲ. ಗುಜ್ರಾಲ್ ನೆಹರೂ ತತ್ವಗಳ ಆಧಾರದಮೇಲೆ ಅಪಾರ ವಿಶ್ವಾಸ ಪ್ರೀತಿ ಇಟ್ಟುಕೊಂಡಿದ್ದರು. ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವ ಕ್ಲಿಷ್ಟ ಘಟ್ಟದಲ್ಲೂ ಅವರು ಹಲವಾರು ಸಂಕೀರ್ಣ ವಿಚಾರಗಳನ್ನೂ ಬಹಳ ಯಶಸ್ವಿಯಾಗಿ ನಿಭಾಯಿಸಿದ್ದರು. ಗುಜ್ರಾಲ್ ತಮ್ಮ ಬಿಡುವಿನ ಸಮಯದಲ್ಲಿ ಉರ್ದು ಕವನಗಳನ್ನು ಸಹ ಬರೆಯುತ್ತಿದ್ದರು.

೫೦ ರ ದಶಕದಲ್ಲಿ 'ಎನ್.ಡಿ.ಎಂಸಿಯ ಉಪಾಧ್ಯಕ್ಷರಾಗಿ ಅಧಿಕಾರ ಪರ್ವ' ಆರಂಭಿಸಿದರು. ೧೯೬೪ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವ ಪೂರ್ವದಲ್ಲಿ ಗುಜ್ರಾಲರು ೧೯೫೮ರಲ್ಲಿ ನವದೆಹಲಿಯ ಪೌರ ಸಮಿತಿಯ ಉಪಾಧ್ಯಕ್ಷರಾದರು. ಅವರು ೧೯೬೪ರಲ್ಲಿ ರಾಜ್ಯಸಭೆಯ ಸದಸ್ಯರಾದರು. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ದೂರದರ್ಶನದ ಮೇಲ್ಚಿಚಾರಣೆಯನ್ನಲ್ಲದೇ, ಮಾಧ್ಯಮ ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಜಲಸಂಪನ್ಮೂಲ ಖಾತೆಯನ್ನೂ ಕೂಡ ಸಂಭಾಳಿಸಿದ್ದಾರೆ. ನಂತರ ಇಂದಿರಾ ಗಾಂಧಿಯವರಿಂದ ಸೊವಿಯೆಟ್ ಒಕ್ಕೂಟದ ರಾಯಭಾರಿಯಾಗಿ ನೇಮಿಸಲ್ಪಟ್ಟು, ಮೊರಾರ್ಜಿ ದೇಸಾಯಿ ಹಾಗೂ ಚೌಧುರಿ ಚರಣ್ ಸಿಂಗ್‍ರ ಅಧಿಕಾರಾವಧಿಯಲ್ಲಿಯೂ ಕೂಡ ಮುಂದುವರೆದರು. ೧೯೮೦ ರಲ್ಲಿ ಕಾಂಗ್ರೆಸ್ ತೊರೆದು, ಜನತಾದಳಕ್ಕೆ ಸೇರಿದರು. ೧೯೮೯ ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರಕಾರದ ವಿದೇಶಾಂಗ ಸಚಿವರಾದರು. ಕುವೈಟ್ ನ್ನು ಇರಾಕ್ ಆಕ್ರಮಿಸಿದಾಗ, ಅತಂತ್ರ ಸ್ಥಿತಿಯಲ್ಲಿದ್ದ ಸಾವಿರಾರು ಭಾರತೀಯರ ಸಮಸ್ಯೆಗಳನ್ನು ಬಗೆಹರಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರ ಯುನೈಟೆಡ್ ಫ್ರಂಟ್ ಸರಕಾರ ಸನ್ ೧೯೯೭ ರಲ್ಲಿ ಪತನವಾದಮೇಲೆ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ 'ಗುಜ್ರಾಲರೇ ಪ್ರಧಾನಿ'. ಯುಎಫ್ ನಾಯಕ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತಿತರ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ತಲೆದೋರಿದಾಗ, ಗುಜ್ರಾಲ್, ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಪ್ರಧಾನಿ'ಯಾದ ಅದೃಷ್ಟವಂತರು. ಐ.ಜಿ.ಗುಜ್ರಾಲ್ ರವರ ರಾಜಕೀಯ ಜೀವನದ ಮೆಟ್ಟಿಲುಗಳು :

ಈ ಬಾರಿ ಪ್ರಧಾನಿಯಾಗಿ ಇದ್ದದ್ದು ೨ ತಂಗಳು ಮಾತ್ರ. ರಾಜೀವ್ ಗಾಂಧಿಯವರ ಹತ್ಯೆ ತನಿಖೆ ನಡೆಸಿದ ಜೈನ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಂಡಾಗ, ಗುಜ್ರಾಲ್ ಸರಕಾರ ಮತ್ತೊಮ್ಮೆ ಪತನಗೊಂಡಿತು.

ವೃದ್ಧಾಪ್ಯ,, ಬಹುಅಂಗ ವೈಫಲ್ಯ,, ಹಾಗೂ ಗಂಭೀರ ಸ್ವರೂಪದ ಎದೆ ಸೋಂಕಿಗೆ ತುತ್ತಾದ ೯೨ ವರ್ಷ ಪ್ರಾಯದ ಇಂದ್ರಕುಮಾರ್ ಗುಜ್ರಾಲ್ ರವರು, ಸುಮಾರು ಒಂದು ವರ್ಷದಿಂದ 'ಡಯಾಲಿಸಿಸ್' ಗೆ ಒಳಪಡುತ್ತಿದ್ದರು. ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ನವೆಂಬರ್ ೧೯ ರಂದು ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಅವರು, ಗುರ್ಗಾವ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನವೆಂಬರ್, ೩೦, ಶುಕ್ರವಾರದಂದು, ಮದ್ಯಾನ್ಹ ೩-೨೭ ಕ್ಕೆ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದರಿಂದ 'ಜೀವರಕ್ಷಕ ವ್ಯವಸ್ಥೆ'ಯನ್ನು ಒದಗಿಸಲಾಗಿತ್ತು. ಶ್ರೀ ಗುಜ್ರಾಲರು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 'ನರೇಂದ್ರ ಗುಜ್ರಾಲ್' ರಾಜ್ಯಸಭಾ ಸದಸ್ಯ., ಹಾಗೂ ಅಕಾಲಿ ದಳದ ನಾಯಕ. 'ಸತೀಶ್ ಗುಜ್ರಾಲ್,' ಸುಪ್ರಸಿದ್ಧ ಚಿತ್ರ ಕಲಾವಿದ, ಮತ್ತು 'ಆರ್ಕಿಟೆಕ್ಟ್ 'ಆಗಿದ್ದಾರೆ. ಗುಜ್ರಾಲ್ ಅವರ ಪತ್ನಿ ಶೀಲಾ ಗುಜ್ರಾಲ್ ಖ್ಯಾತ ಕವಯಿತ್ರಿ. ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಶೀಲಾ, ಸನ್ ೨೦೧೧ ರಲ್ಲಿ ತೀರಿಕೊಂಡರು. ಇಂದ್ರ ಕುಮಾರ್ ಗುಜ್ರಾಲ್ ರವರ, ಅಂತ್ಯ ಕ್ರಿಯೆ, ನವ ದೆಹಲಿಯಲ್ಲಿ ಡಿಸೆಂಬರ್ ೧ ರಂದು, ಶನಿವಾರ ಮಧ್ಯಾನ್ಹ ೩.೩೦ ಕ್ಕೆ 'ಸ್ಮೃತಿ ಸ್ಥಲ್' ನಲ್ಲಿ ಜರುಗಿತು. ಗುಜ್ರಾಲ್ ರವರ ಮೃತದೇಹಕ್ಕೆ ಅಗ್ನಿಯನ್ನು ಇಬ್ಬರು ಮಕ್ಕಳೂ ಸೋಕಿಸಿದರು. ಶ್ರೀ ಗುಜ್ರಾಲ್ ರವರ ಅಗಲುವಿಕೆಯ ಶೋಕವನ್ನು ಅಚರಿಸಲು, ಕೇಂದ್ರ ಸರ್ಕಾರ, ೭ ದಿನಗಳ ಶೋಕವನ್ನು ಪ್ರಕಟಿಸಿದೆ.




#Article 135: ಮಾತಾ ಹರಿ (168 words)


ಮಾತಾ ಹರಿ (ಆಗಸ್ಟ್ ೭, ೧೮೭೬–ಅಕ್ಟೋಬರ್ ೧೫, ೧೯೧೭) Margaretha Geertruida Zelle (ಆಂಗ್ಲದಲ್ಲಿ ಮಾರ್ಗರೆಟ್ ಗೆರ್ಟ್ರುಡ್ ಝೆಲ್ಲೆ) ರವರ ನಾಮಾಂಕಿತವಾಗಿತ್ತು (ಅಡ್ಡಹೆಸರು, ಬಳಕೆಯ ಹೆಸರು). ಇವರು ಡಚ್ ನೃತ್ಯಗಾತಿ, ಮೊದಲನೇ ವಿಶ್ವ ಯುದ್ಧದ ಸಮಯದಲ್ಲಿ ಬೇಹುಗಾರಿಕೆ ನಡೆಸಿದ ಕಾರಣ ಆರೋಪಿಯೆಂದು ಪರಿಗಣಿಸಲ್ಪಟ್ಟು ಶಿಕ್ಶೆಗೆ ಗುರಿಯಾದರು.

ಮಾತಾ ಹರಿ ಲೀಯುವಾರ್ಡನ್‌ನಲ್ಲಿ ಒಬ್ಬ ಡಚ್ ವ್ಯಾಪಾರಸ್ಥನಿಗೆ ಜನಿಸಿದವರು. ಇವರ ತಾಯಿ ಜಾವಾ ದ್ವೀಪದವರು. ೨೦ನೇ ಶತಮಾನದ ಕೊನೆಯಲ್ಲಿ - ಇವರು ಶಿಕ್ಷಕರಾಗ ಬಯಸಿ ಫಲಿಸದೇ ಹೋದದ್ದು, ಇವರ ವಿವಾಹ ಮುರಿದು ಬಿದ್ದದ್ದು (ಇವರಿಗೆ ಎರಡು ಮಕ್ಕಳಿದ್ದರು) ಇವರ ಜೀವನದಲ್ಲಿ ಘಟಿತ ಘಟನೆಗಳು. ಇದರ ತರುವಾಯ ಇವರು ಪ್ಯಾರಿಸ್‌ಗೆ ಬಂದರು. ಜಾವಾದಿಂದ ಬಂದ ರಾಣಿಯಂತೆ ಮೆರೆದು, ನೃತ್ಯಗಾತಿಯಾದರು. ಓರಿಯೆಂಟಲ್ ಶೈಲಿಯ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದರು. ಇವರ ರಂಗಮಂಚದ ಹೆಸರು (ನಾಮಾಂಕಿತ) - ಮಾತಾ ಹರಿ (ಮಲಯ್‌ನಲ್ಲಿ ಹಾಗೂ ಬಹಸಾದಲ್ಲಿ ಸೂರ್ಯ ಅಥವಾ ಮುಂಜಾನೆಯ ಕಣ್ಣು ಎಂಬರ್ಥ ಮೂಡುತ್ತದೆ). ಇವರು ನಾಯಕಸಾನಿಯೂ ಹೌದು (ಬಹುಶಃ ಹಲವು ಮಿಲಿಟರಿ ಅಧಿಕಾರಿಗಳೊಂದಿಗೆ, ರಾಜಕೀಯ ವ್ಯಕ್ತಿಗಳೊಂದಿಗೆ ವ್ಯವಹಾರಗಳಿದ್ದಿರಬಹುದು).

ಮಿಸ್ ಝೆಲ್ಲೆ ಹಲವು ಫ್ರೆಂಚ್ ಹಾಗೂ ಜರ್ಮನ್ ಮಂಚಗಳನ್ನಲಂಕರಿಸಿ, ಅಂತರರಾಷ್ಟ್ರೀಯ ಕೂಟಕೃತ್ಯದಲ್ಲಿ ಕೈ ಗೊಂಬೆಯಾದರು. ಆದರೂ ಕೂಡ ಇತಿಹಾಸ ತಜ್ಞರಿಂದ ಇಂದಿಗೂ ಕೂಡ ಮಾತಾ ಹರಿಯ ಬೇಹುಗಾರಿಕಾ ಕೃತ್ಯಗಳ ನಿಜವಾದ ಸ್ವರೂಪದ ಬಗೆಗೆ ಸರಿಯಾದ ಸಮಜಾಯಿಶಿ ನೀಡಲಾಗಿಲ್ಲ. ೧೯೧೭ರಲ್ಲಿ ಇವರನ್ನು ಫ್ರಾನ್ಸ್‌ನಲ್ಲಿ ಕಟಕಟೆಯ ಮುಂದೆ ಹಾಜರುಪಡಿಸಲಾಯಿತು. ಇವರನ್ನ್ನು ಬೇಹುಗಾರಿಕೆ, ಎರಡು ಬದಿಯಲ್ಲೂ ಮಾಹಿತಿ ನೀಡುವಿಕೆ (ಜರ್ಮನಿ ಮತ್ತು ಫ್ರಾನ್ಸ್, ಎರಡಕ್ಕೂ ಮಾಹಿತಿ ರವಾನೆ) ಹಾಗೂ ವಿಶ್ವದ ಮೊದಲನೇ ಮಹಾ ಯುದ್ಧದಲ್ಲಿ ಸಾವಿರಾರು ಸಿಪಾಯಿಗಳ ಸಾವಿಗೆ ಕಾರಣರಾದ ಆರೋಪಕ್ಕೆ ಗುರಪಡಿಸಲಾಯಿತು. ಆರೋಪ ಧೃಡಪಟ್ಟು, ಇವರನ್ನು ಅಕ್ಟೋಬರ್ ೧೫, ೧೯೧೭ರಲ್ಲಿ ಗೋಲೀಬಾರಿಗೆ ಗುರಿಪಡಿಸಲಾಯಿತು.




#Article 136: ಇನ್ಸಾಟ್ (249 words)


ಇನ್ಸಾಟ್ (INSAT - Indian Satellite ಎಂಬುದರ ಸಂಕ್ಷಿಪ್ತ ರೂಪ) ಭಾರತದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ಇಸ್ರೋದಿಂದ ನಿರ್ಮಿಸಲ್ಪಟ್ಟು ಭೂಮಿಯ ಸುತ್ತ ಕಕ್ಷೆಗೆ ಬಿಡಲಾಗುತ್ತಿರುವ ಕೃತಕ ಉಪಗ್ರಹಗಳ ಸರಣಿ. ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸಂಪರ್ಕ. 
೧೯೮೦ರ ದಶಕದಿಂದಲೂ ಇನ್ಸಾಟ್ ಉಪಗ್ರಹಗಳನ್ನು ಉಪಯೋಗಿಸಲಾಗಿದೆ. ಪ್ರತಿ ದಶಕದಲ್ಲಿಯೂ ಇನ್ಸಾಟ್ ಉಪಗ್ರಹಗಳ ಒಂದು ಹೊಸ ಸರಣಿ ನಿರ್ಮಾಣವಾಗುತ್ತದೆ; ಹೀಗೆ ೮೦ರ ದಶಕದಲ್ಲಿ ಇನ್ಸಾಟ್-೧ ಸರಣಿ (ಇನ್ಸಾಟ್-೧ ,ಇನ್ಸಾಟ್-೩,ಇನ್ಸಾಟ್-೪,ಇನ್ಸಾಟ್-೫ ಇತ್ಯಾದಿ), ೯೦ ರ ದಶಕದಲ್ಲಿ ಇನ್ಸಾಟ್-೨ ಸರಣಿ ನಿರ್ಮಾಣವಾದವು. ೨೦೦೦ ದಿ೦ದ ಮುಂದಕ್ಕೆ ಇನ್ಸಾಟ್-೩ ಸರಣಿ, ೨೦೧೦ ರಲ್ಲಿ ಇನ್ಸಾಟ್-೫ ಉಪಯೋಗದಲ್ಲಿದೆ.ಇನ್ಸಾಟ್ ಉಪಗ್ರಹಗಳೆಲ್ಲವೂ ಭಾರತದ ದೂರಸಂಪರ್ಕ ಉಪಗ್ರಹಗಳು. ಇವುಗಳಿಂದ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆ ಮತ್ತು ದೂರಸಂಪರ್ಕ ಸೇವೆಗಳಿಗೆ ಮತ್ತು ಸಾಮಾನ್ಯ ದೂರದರ್ಶನ ಸೇವೆಗಳನ್ನು ಬಿತ್ತರಿಸಲು ಉಪಯೋಗಿಸಲಾಗಿದೆ.
ಇನ್ಸಾಟ್ ಉಪಗ್ರಹಗಳಲ್ಲಿ ವಿವಿಧ ತರಂಗಾಂತರಗಳಲ್ಲಿ ಕಾರ್ಯನಿರ್ವಹಿಸುವ ಟ್ರಾನ್ಸ್ಪಪಾಂಡರ್ ಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ 'ಸಿ' 'ಎಸ್' 'ಕ' ಮತು 'ಕು' ತರಂಗಗಳು ಪ್ರಮುಖವಾದುವು. ಉದಾಹರಣೆಗೆ ಟಾಟಾ, ಏರ್ ಟೆಲ್, ರಿಲಯೆನ್ಸ್ ಬಿಗ್ ಮತ್ತು ವಿಡಿಯೋಕಾನ್ ಸಂಸ್ಥೆಗಳು ಪ್ರಸಾರ ಮಾಡುತ್ತಿರುವ ಡಿ.ಟಿ.ಎಚ್. (ನೇರ ಮನೆಗೆ ದೂರದರ್ಶನ) ಸೇವೆಗಳು ಇನ್ಸಾಟ್ ಉಪಗ್ರಹದಿಂದ ಪ್ರಸಾರ ಮಾಡಲ್ಪಟ್ಟವಾಗಿವೆ.
೯೦ರ ದಶಕದಲ್ಲಿ ಇನ್ಸಾಟ್ ಉಪಗ್ರಹಗಳು ಸಂಗ್ರಹಿಸಿದ ಹವಾಮಾನ ಮಾಹಿತಿಯನ್ನು ಗುಪ್ತಸಂಕೇತಗಳ ಮೂಲಕ ಭಾರತಕ್ಕೆ ತಲುಪಿಸಲಾಗುತ್ತಿತ್ತು. ಇದರಿಂದ ಸುತ್ತಲ ದೇಶಗಳಿಗೆ ಈ ಮಾಹಿತಿ ದೊರೆಯುತ್ತಿರಲಿಲ್ಲ. ೧೯೯೭ ರಲ್ಲಿ ಅಮೆರಿಕದ ಅಂತರಿಕ್ಷ ಸಂಶೋಧನಾ ಕೇಂದ್ರವಾದ ನಾಸಾ ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದ ಮೇರೆಗೆ ಇತರ ಕೆಲ ದೇಶಗಳಿಗೆ ಇನ್ಸಾಟ್ ಉಪಗ್ರಹಗಳ ಮಾಹಿತಿಯನ್ನು ಒದಗಿಸಲಾಗುತ್ತಿದೆ. 
ಇನ್ಸಾಟ್ ಉಪಗ್ರಹಗಳ ಮುಖ್ಯ ಉದ್ದೇಶ ದೂರಸ೦ಪರ್ಕವಾದರೂ, ಪ್ರತಿ ಸರಣಿಯ ಒಂದು ಉಪಗ್ರಹಕ್ಕೆ ಭೂಮಿಯ ಸ್ಪಷ್ಟ ಚಿತ್ರ ತೆಗೆಯಬಲ್ಲ ರೇಡಿಯೋ ಉಪಕರಣವನ್ನು (VHRR - Very High Resolution Radiometer) ಅಳವಡಿಸಲಾಗುತ್ತದೆ. ಈ ಉಪಗ್ರಹದಿ೦ದ ಬರುವ ಚಿತ್ರಗಳು ಹವಾಮಾನ ವರದಿಗೆ ಅನುಕೂಲ ಮಾಡಿಕೊಟ್ಟಿವೆ. ೨೦೦೪ರಲ್ಲಿ ಹವಾಮಾನ ವರದಿಗಾಗಿಯೇ ಮೀಸಲಾದ ಮೆಟ್-ಸ್ಯಾಟ್ ಉಪಗ್ರಹವನ್ನು ಹಾರಿಬಿಡಲಾಯಿತು.

ಇನ್ಸಾಟ್-೪ಎ ಭಾರತದಇಸ್ರೋ ಸಂಸ್ಥೆ ನಿರ್ಮಿಸಿದ ೧೨ ವರ್ಷಗಳ ಕಾಲ ದೂರಸಂಪರ್ಕ ಸಂಬಂಧಿಸಿದ ಸೇವೆ ನೀಡುವ ಉಪಗ್ರಹ. ಭಾರತೀಯ ಕಾಲಮಾನುಸಾರ ೨೨ ಡಿಸೆಂಬರ್ ೨೦೦೫ ಗುರುವಾರ ಬೆಳಗ್ಗೆ ೪.೦೩ ಗಂಟೆಗೆ ಸರಿಯಾಗಿ ಫ್ರೆಂಚ್ ಗಯಾನಾದ ಕೌರು ಉಡಾವಣಾ ಕೇಂದ್ರದಿಂದ ಎರಿಯನ್ ೫ ಪೀಳಿಗೆಯ ರಾಕೆಟ್‌ನಿಂದ ಈ ಉಪಗ್ರಹ ಉಡಾವಣೆಗೊಂಡಿತು. ಸುಮಾರು ೩೦೮೦ ಕೆಜಿ ತೂಕದ ಈ ಉಪಗ್ರಹದಲ್ಲಿ ೧೨ ಕ್ಯೂಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳು ಮತ್ತು ೧೨ ಸಿ ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳಿವೆ. ಈ ಉಪಗ್ರಹದಿಂದ ಡಿಟಿಎಚ್ ದೂರದರ್ಶನ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯಾಗಲಿದೆ ಎಂದು ವಿಶೇಷಜ್ಞರ ಅಭಿಪ್ರಾಯ. 




#Article 137: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (204 words)


ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (). ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತ.ನಾ), ಹಾಸನ(ಕರ್ನಾಟಕ) ಮತ್ತು ಶ್ರಿಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನೂ ತಯಾರಿಸುತ್ತದೆ.

ಇಸ್ರೋ ಸಂಸ್ಥೆಯು ಪ್ರತಿ ವರ್ಷ ಸುಮಾರು ೧೫೦ ಇಂಜಿನಿಯರ್ ಗಳನ್ನು ಇಂಜಿನಿಯರ್-ಎಸ್.ಸಿ ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಅದು ಒಂದು ಪರೀಕ್ಷೆಯನ್ನು ಮತ್ತು ಸಂದರ್ಶನವನ್ನು ನಡೆಸುತ್ತದೆ. ಇದು ಒಂದು ಪಾರದರ್ಶಕವಾದ ಕ್ರಿಯೆಯಾಗಿದ್ದು ಯಾವುದೇ ಗೋಜಲುಗಳಿಗೆ ಇಲ್ಲಿ ಅವಕಾಶವಿಲ್ಲ. ಪ್ರತಿಭೆಯಿರುವವರಿಗೆ ಮಾತ್ರ ಕೆಲಸ. ತನ್ನ ಕೆಳಹುದ್ದೆಗಳಿಗೂ (ಟ್ರೇಡ್ಸ್ ಮೆನ್ ಮತ್ತು ಟೆಕ್ನೀಶಿಯನ್) ಇದೆ ಪ್ರಕ್ರಿಯೆಯನ್ನು ಇದು ನಡೆಸುತ್ತದೆ.

ಇಂಜಿನಿಯರ್- ಎಸ್.ಸಿ- ವಿದ್ಯಾರ್ಹತೆ- ಬಿ.ಇ ೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಕೆಮಿಕಲ್, ಕಂಪ್ಯೂಟರ್ ಸ್ಯನ್ಸ್, ಸಿವಿಲ್)
ಟೆಕ್ನೀಶಿಯನ್ ವಿದ್ಯಾರ್ಹತೆ- ಡಿಪ್ಲಮೋ ೭೦% (ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್)
ಟ್ರೇಡ್ಸ್ ಮೆನ್ ವಿದ್ಯಾರ್ಹತೆ- ಐ.ಟಿ.ಐ. ೭೦% (ಫಿಟ್ಟರ್, ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಮುಂತಾದುವು)

 

ಭಾರತ ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಇಸ್ರೋ ಅನ್ನು ೧೯೬೯ ರಲ್ಲಿ ಸ್ಥಾಪಿಸಲಾಯಿತು. ೧೯೭೫ ರಲ್ಲಿ ಮೊದಲ ಭಾರತೀಯ ಉಪಗ್ರಹ ಆರ್ಯಭಟ ರಷ್ಯಾದ ರಾಕೆಟ್ ಒಂದರ ಮೂಲಕ ಕಕ್ಷೆಗೆ ಹಾರಿತು. ಉಪಗ್ರಹವೊಂದರ ಮೊದಲ ಭಾರತೀಯ ಉಡಾವಣೆ ೧೯೮೦ ರಲ್ಲಿ ನಡೆಯಿತು. 

೧೯೭೨ ರಲ್ಲಿ ಅಂತರಿಕ್ಷ ಸಮಿತಿ ಮತ್ತು ಅಂತರಿಕ್ಷ ಇಲಾಖೆಗಳ ಸ್ಥಾಪನೆಯ ನಂತರ ಇಸ್ರೋ ದ ಮೇಲ್ವಿಚಾರಣೆಯನ್ನು ಈ ಸಂಸ್ಥೆಗಳಿಗೆ ವರ್ಗಾಯಿಸಲಾಯಿತು...

 

ಪರೀಕ್ಷಾರ್ಥ ಉಡಾವಣೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ ಸೇರಿ ಎಟಿವಿ 02ನ ತೂಕ :3277 ಕೆ.ಜಿ.
ಸ್ಕ್ರಾಮ್‌ಜೆಟ್‌ ಎಂಜಿನ್‌ಗಳು ಕಾರ್ಯನಿರ್ವಹಿಸಿದ ಅವಧಿ :5 ಸೆಕೆಂಡ್*
ಪರೀಕ್ಷೆಯ ಅವಧಿ :300 ಸೆಕೆಂಡ್‌*
ಉಡಾವಣಾ ಸ್ಥಳದಿಂದ ಬಂಗಾಳ ಕೊಲ್ಲಿಯಲ್ಲಿ ಎಟಿವಿ ಬಿದ್ದ ಸ್ಥಳದ ನಡುವಿನ ಅಂತರ :320 ಕಿ.ಮೀ*
ಕಾರ್ಯಾಚರಣೆಯಲ್ಲಿ ಎಟಿವಿ ಮುಟ್ಟಿದ ವೇಗ :7408 ಕಿ.ಮೀ/ಮ್ಯಾಕ್‌ 6




#Article 138: ಮಕರ ಸಂಕ್ರಾಂತಿ (178 words)


 

ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.

ಇದೆ ಕಾಲಕ್ಕೆ ಚಳಿಗಾಲ ಮುಗಿದು ಹೋಗುತ್ತದೆ ಮನುಷ್ಯ ದೇಹದಲ್ಲಿ ಚಳಿಯಿಂದ ಚರ್ಮ ಎಣ್ಣೆ ಅಂಶ ಕಡಿಮೆಯಾಗುತ್ತದೆ ಅದಕ್ಕೆ ಏಣ್ಣಿನ ಅಂಶ ಇರುವ ಎಳ್ಳು ತಿನ್ನಿ ಅನ್ನೋವುದು ವಾಡಿಕೆ ಇರಬಹುದು ಆದರೆ ವೈಜ್ಞಾನಿಕವಾಗಿ ಅದು ಸಾಭೀತಾಗಿದೆ

(*ಕಬ್ಬು ಈ ಭಾಗಗಳಲ್ಲಿ ಪ್ರಧಾನ ಏಕೆಂದರೆ ಹಬ್ಬದ ಋತುವಿನ ಸುಗ್ಗಿಯ ಸೂಚಿಸುತ್ತದೆ. )ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ  ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ  ಸಂಪ್ರದಾಯವಿದೆ. 

ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ:

ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. 

ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು. 

ಶಾಸ್ತ್ತ್ರ ದೃಷ್ಟಿಯಲ್ಲಿ ಸಂಕ್ರಾಂತಿ 
ನಿರ್ಣಯಸಿಂಧುವಿನಲ್ಲಿ ಈ ಹಬ್ಬದ ವಿಚಾರವಾಗಿ ಹೀಗೆ ಹೇಳಿದೆ.

ಧರ್ಮ ಸಿಂಧುವಿನಲ್ಲಿ ಹೀಗೆ ಹೇಳಿದೆ




#Article 139: ಗಣರಾಜ್ಯೋತ್ಸವ (589 words)


ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26 ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬಂದು ಭಾರತವು  ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ...

ಆಗಸ್ಟ್ 15 1947ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪  ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊಂಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು.

ಮುಖ್ಯ ಗಣರಾಜ್ಯೋತ್ಸವವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರಾಜ್‌ಪಾತ್‌ನಲ್ಲಿ ಭಾರತದ ರಾಷ್ಟ್ರಪತಿಗಳ ಮುಂದೆ ನಡೆಸಲಾಗುತ್ತದೆ.  ಈ ದಿನ, ರಾಜ್‌ಪಾತ್‌ನಲ್ಲಿ ವಿಧ್ಯುಕ್ತ ಮೆರವಣಿಗೆಗಳು ನಡೆಯುತ್ತವೆ, ಇದನ್ನು ಭಾರತಕ್ಕೆ ಗೌರವವಾಗಿ ನಡೆಸಲಾಗುತ್ತದೆ;  ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಅದರ ಏಕತೆ.

ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ಮುಖ್ಯ ಲೇಖನ: ದೆಹಲಿ ಗಣರಾಜ್ಯೋತ್ಸವ ಮೆರವಣಿಗೆ ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯನ್ನು  ರಾಜಧಾನಿ ನವದೆಹಲಿಯಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿದೆ.  ಭಾರತ ಗೇಟ್‌ನ ಹಿಂದೆ ರಾಜ್‌ಪಾತ್‌ನಲ್ಲಿರುವ ರಾಷ್ಟ್ರಪತಿ ಭವನ (ಅಧ್ಯಕ್ಷರ ನಿವಾಸ) ದ್ವಾರಗಳಿಂದ ಪ್ರಾರಂಭವಾದ ಈ ಘಟನೆಯು ಮೂರು ದಿನಗಳ ಕಾಲ ನಡೆಯುವ ಭಾರತದ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿದೆ.  ಮೆರವಣಿಗೆ ಭಾರತದ ರಕ್ಷಣಾ ಸಾಮರ್ಥ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. [4]

ನೌಕಾಪಡೆಗೆ ಹೆಚ್ಚುವರಿಯಾಗಿ ಭಾರತೀಯ ಸೇನೆಯ ಒಂಬತ್ತರಿಂದ ಹನ್ನೆರಡು ವಿಭಿನ್ನ ರೆಜಿಮೆಂಟ್‌ಗಳು, ಮತ್ತು ವಾಯುಪಡೆಯು ತಮ್ಮ ಬ್ಯಾಂಡ್‌ಗಳೊಂದಿಗೆ ತಮ್ಮ ಎಲ್ಲಾ ಉತ್ಕೃಷ್ಟ ಮತ್ತು ಅಧಿಕೃತ ಅಲಂಕಾರಗಳಲ್ಲಿ ಕಳೆದವು.  ಭಾರತೀಯ ಸಶಸ್ತ್ರ ಪಡೆಗಳ ಕಮಾಂಡರ್-ಇನ್-ಚೀಫ್ ಆಗಿರುವ ಭಾರತದ ರಾಷ್ಟ್ರಪತಿಗಳು ವಂದನೆ ಸಲ್ಲಿಸುತ್ತಾರೆ.  ಭಾರತದ ವಿವಿಧ ಪ್ಯಾರಾ-ಮಿಲಿಟರಿ ಪಡೆಗಳು ಮತ್ತು ಇತರ ನಾಗರಿಕ ಪಡೆಗಳ ಹನ್ನೆರಡು ತುಕಡಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. [5]

ಬೀಟಿಂಗ್ ರಿಟ್ರೀಟ್ ಮುಖ್ಯ ಲೇಖನ: ಹಿಮ್ಮೆಟ್ಟುವಿಕೆಯನ್ನು ಸೋಲಿಸುವುದು ಗಣರಾಜ್ಯೋತ್ಸವದ ಅಂತ್ಯವನ್ನು ಅಧಿಕೃತವಾಗಿ ಸೂಚಿಸಿದ ನಂತರ ಬೀಟಿಂಗ್ ರಿಟ್ರೀಟ್ ಸಮಾರಂಭವನ್ನು ನಡೆಸಲಾಗುತ್ತದೆ.  ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29 ರ ಸಂಜೆ ಇದನ್ನು ನಡೆಸಲಾಗುತ್ತದೆ.  ಇದನ್ನು ಮಿಲಿಟರಿ, ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮೂರು ರೆಕ್ಕೆಗಳ ತಂಡಗಳು ನಿರ್ವಹಿಸುತ್ತವೆ.  ಈ ಸ್ಥಳವು ರೈಸಿನಾ ಬೆಟ್ಟ ಮತ್ತು ಪಕ್ಕದ ಚೌಕ, ವಿಜಯ್ ಚೌಕ್, ರಾಷ್ಟ್ರಪತಿ ಭವನದ (ಅಧ್ಯಕ್ಷರ ಅರಮನೆ) ಉತ್ತರ ಮತ್ತು ದಕ್ಷಿಣ ಭಾಗದಿಂದ ರಾಜ್‌ಪಾತ್‌ನ ಕೊನೆಯಲ್ಲಿ ಇದೆ. [6]

 ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿಗಳು ಅಶ್ವದಳದ ಘಟಕವಾದ (ಪಿಬಿಜಿ) ಬೆಂಗಾವಲು ಆಗಮಿಸುತ್ತಾರೆ.  ಅಧ್ಯಕ್ಷರು ಬಂದಾಗ, ಪಿಬಿಜಿ ಕಮಾಂಡರ್ ಅವರು ರಾಷ್ಟ್ರೀಯ ವಂದನೆ ನೀಡುವಂತೆ ಘಟಕವನ್ನು ಕೇಳುತ್ತಾರೆ, ಅದರ ನಂತರ ಸೇನೆಯು ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ನುಡಿಸುತ್ತದೆ.  ಸೈನ್ಯವು ಸಾಮೂಹಿಕ ಬ್ಯಾಂಡ್‌ಗಳಿಂದ ಪ್ರದರ್ಶನ ಸಮಾರಂಭವನ್ನು ಅಭಿವೃದ್ಧಿಪಡಿಸುತ್ತದೆ, ಇದರಲ್ಲಿ ಮಿಲಿಟರಿ ಬ್ಯಾಂಡ್‌ಗಳು, ಪೈಪ್ ಮತ್ತು ಡ್ರಮ್ ಬ್ಯಾಂಡ್‌ಗಳು, ವಿವಿಧ ಸೇನಾ ರೆಜಿಮೆಂಟ್‌ಗಳ ಬಗ್ಲರ್‌ಗಳು ಮತ್ತು ಟ್ರಂಪೆಟರ್‌ಗಳು ಮತ್ತು ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್‌ಗಳು ಭಾಗವಹಿಸುತ್ತವೆ, ಇದು ಮಹಾತ್ಮ ಗಾಂಧಿಯವರ ನೆಚ್ಚಿನ ಅಬೈಡ್ ವಿಥ್ ಮಿ ನಂತಹ ಜನಪ್ರಿಯ ರಾಗಗಳನ್ನು ನುಡಿಸುತ್ತದೆ.  ಸ್ತುತಿಗೀತೆ, ಮತ್ತು ಕೊನೆಯಲ್ಲಿ ಸಾರೇ ಜಹಾನ್ ಸೆ ಅಚ್ಚಾ. [7] [8] [9]

ಪ್ರಶಸ್ತಿ ವಿತರಣೆ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಅಧ್ಯಕ್ಷರು ಪ್ರತಿವರ್ಷ ಭಾರತದ ನಾಗರಿಕರಿಗೆ ಪದ್ಮಾ ಪ್ರಶಸ್ತಿಗಳನ್ನು ವಿತರಿಸಿದರು, ಇದು ಭಾರತದ ರತ್ನ ನಂತರದ ಪ್ರಮುಖ ಪ್ರಶಸ್ತಿ, ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ.  ಈ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡಲಾಗಿದೆ, ಅಂದರೆ.  ಪ್ರಾಮುಖ್ಯತೆಯ ಕ್ಷೀಣಿಸುತ್ತಿರುವ ಕ್ರಮದಲ್ಲಿ ಪದ್ಮವಿಭೂಷಣ, ಪದ್ಮಭೂಷಣ್ ಮತ್ತು ಪದ್ಮಶ್ರೀ.

ಅಸಾಧಾರಣ ಮತ್ತು ವಿಶಿಷ್ಟ ಸೇವೆ ಗಾಗಿ ಪದ್ಮವಿಭೂಷಣ್.  ಪದ್ಮವಿಭೂಷಣ್ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.  ಉನ್ನತ ಕ್ರಮಾಂಕದ ವಿಶಿಷ್ಟ ಸೇವೆ ಗಾಗಿ ಪದ್ಮಭೂಷಣ್.  ಪದ್ಮಭೂಷಣ್ ಭಾರತದ ಮೂರನೇ ಅತಿ ಹೆಚ್ಚು ನಾಗರಿಕ ಪ್ರಶಸ್ತಿ.  ವಿಶೇಷ ಸೇವೆ ಗಾಗಿ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ.  ಪದ್ಮಶ್ರೀ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.  ರಾಷ್ಟ್ರೀಯ ಗೌರವಗಳಾಗಿದ್ದರೂ, ಪದ್ಮಾ ಪ್ರಶಸ್ತಿಗಳು ನಗದು ಭತ್ಯೆಗಳು, ಪ್ರಯೋಜನಗಳು ಅಥವಾ ರೈಲು / ವಿಮಾನ ಪ್ರಯಾಣದಲ್ಲಿ ವಿಶೇಷ ರಿಯಾಯಿತಿಗಳನ್ನು ಒಳಗೊಂಡಿಲ್ಲ. [10]  ಭಾರತದ ಸುಪ್ರೀಂ ಕೋರ್ಟ್‌ನ 1995 ರ ಡಿಸೆಂಬರ್ ತೀರ್ಪಿನ ಪ್ರಕಾರ, ಯಾವುದೇ ಶೀರ್ಷಿಕೆಗಳು ಅಥವಾ ಗೌರವಗಳು ಭಾರತ್ ರತ್ನ ಅಥವಾ ಯಾವುದೇ ಪದ್ಮ ಪ್ರಶಸ್ತಿಗಳೊಂದಿಗೆ ಸಂಬಂಧ ಹೊಂದಿಲ್ಲ;  ಗೌರವಿಸುವವರು ಅವುಗಳನ್ನು ಅಥವಾ ಅವರ ಮೊದಲಕ್ಷರಗಳನ್ನು ಪ್ರತ್ಯಯಗಳು, ಪೂರ್ವಪ್ರತ್ಯಯಗಳು ಅಥವಾ ಪ್ರಶಸ್ತಿ ಪುರಸ್ಕೃತರ ಹೆಸರಿಗೆ ಲಗತ್ತಿಸಲಾದ ಪೂರ್ವ ಮತ್ತು ನಂತರದ ನಾಮನಿರ್ದೇಶನಗಳಾಗಿ ಬಳಸಲಾಗುವುದಿಲ್ಲ.  ಲೆಟರ್‌ಹೆಡ್‌ಗಳು, ಆಮಂತ್ರಣ ಪತ್ರಗಳು, ಪೋಸ್ಟರ್‌ಗಳು, ಪುಸ್ತಕಗಳು ಇತ್ಯಾದಿಗಳಲ್ಲಿ ಇದು ಅಂತಹ ಯಾವುದೇ ಬಳಕೆಯನ್ನು ಒಳಗೊಂಡಿದೆ. ಯಾವುದೇ ದುರುಪಯೋಗದ ಸಂದರ್ಭದಲ್ಲಿ, ಪ್ರಶಸ್ತಿ ಪುರಸ್ಕೃತನು ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಾನೆ, ಮತ್ತು ಗೌರವವನ್ನು ಪಡೆದ ನಂತರ ಅಂತಹ ಯಾವುದೇ ದುರುಪಯೋಗದ ವಿರುದ್ಧ ಅವನು ಅಥವಾ ಅವಳು ಎಚ್ಚರಿಕೆ ವಹಿಸುತ್ತಾರೆ. [11]

ಅಲಂಕಾರವು ಅಧ್ಯಕ್ಷರ ಕೈ ಮತ್ತು ಮುದ್ರೆಯಡಿಯಲ್ಲಿ ನೀಡಲಾದ ಸನಾದ್ (ಪ್ರಮಾಣಪತ್ರ) ಮತ್ತು ಮೆಡಾಲಿಯನ್ ಅನ್ನು ಒಳಗೊಂಡಿದೆ.  ಸ್ವೀಕರಿಸುವವರಿಗೆ ಪದಕದ ಪ್ರತಿಕೃತಿಯನ್ನು ಸಹ ನೀಡಲಾಗುತ್ತದೆ, ಅವರು ಬಯಸಿದರೆ ಯಾವುದೇ ವಿಧ್ಯುಕ್ತ / ರಾಜ್ಯ ಕಾರ್ಯಗಳು ಇತ್ಯಾದಿಗಳಲ್ಲಿ ಧರಿಸಬಹುದು.  ಪ್ರತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಗಳನ್ನು ನೀಡುವ ಸ್ಮರಣಾರ್ಥ ಕರಪತ್ರವನ್ನು ಹೂಡಿಕೆ ಸಮಾರಂಭದ ದಿನದಂದು ಬಿಡುಗಡೆ ಮಾಡಲಾಗುತ್ತದೆ.

ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.




#Article 140: ಜುಗಾರಿ ಕ್ರಾಸ್ (234 words)


ಜುಗಾರಿ ಕ್ರಾಸ್  ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ಪ್ರಕಾಶಕರು: ಪುಸ್ತಕ ಪ್ರಕಾಶನ.

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ಜುಗಾರಿ ಕ್ರಾಸ್ ಮಲೆನಾಡಿನ ಒಬ್ಬ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆಯಾಗಿದೆ. ಸಂಪೂರ್ಣ ಕೃತಿಯು ಮಲೆನಾಡಿನ ಆಡುಭಾಷೆಯಲ್ಲೆ ಬರೆಯಲ್ಪಟ್ಟಿದ್ದು ಓದುವರಿಗೆ ಬಹಳ ಮನರಂಜನೆಯನ್ನು ಕೊಡುತ್ತದೆ. ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಮಲೆನಾಡಿನ ಜೇವನ, ಪರಿಸರ ಹಾಗು ಅಲ್ಲಿನ ಕಷ್ಟ-ಸುಖಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರೆ. ಕಥೆಯು ಕಾಲ್ಪನಿಕವಾದರೂ, ನೈಜತೆಗೆ ಬಹಳ ಹತ್ತಿರವಾಗಿದೆ. ಮಲೆನಾಡಿನ ದಟ್ಟ ಕಾಡುಗಳಲ್ಲಿ ಬದುಕುತ್ತಿರುವ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಈ  ಕೃತಿ ಮಲೆನಾಡಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ಇದೊಂದು ಕೇವಲ ೨೪ ಗಂಟೆಗಳ ಅವಧಿಯಲ್ಲಿ ನಡೆಯುವ ಪತ್ತೆದಾರಿ ಕಾದಂಬರಿಯಾಗಿದೆ. ಈ ಘಟನೆ ನಡೆಯುವ ಪ್ರದೇಶ ಮಂಗಳೂರು - ಬೆಂಗಳೂರು ರಸ್ತೆಯಲ್ಲಿರುವ ಜುಗಾರಿ ಕ್ರಾಸ್ ಮತ್ತು ದೇವಪುರಗಳಲ್ಲಿ. ಕಾದಂಬರಿಯಲ್ಲಿ ರಹಸ್ಯವಾಗಿ ನಡೆಯುವ ಅಪರಾಧ ಪ್ರಕರಣಗಳು ಒಂದು ಕಥೆಯಾದರೆ, ಪತ್ತೆದಾರ ಅವುಗಳನ್ನು ಬಯಲಿಗೆಳೆಯುವ ಕತೆ ಇನ್ನೊಂದು. ಬಸ್ಸಿನಲ್ಲಿ ಪ್ರಯಾಣ ಮಾಡುವ ಸುರೇಶ ಮತ್ತು ಗೌರಿಯರ ಒಂದು ದಿನದ ಅನುಭವ ಓದುಗನಿಗೆ ಒಂದು ಯುಗದ ಅನುಭವವನ್ನು ಉಂಟುಮಾಡುತ್ತದೆ. ಯಾಲಕ್ಕಿಯ ಮೂಟೆಯನ್ನು ಮಾರಲು ಬಸ್ಸಿನಲ್ಲಿ ಸಾಗಿಸುವಾಗ ಸುರೇಶ - ಗೌರಿಯರು ತಮಗೆ ಗೊತ್ತಿಲ್ಲದಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಭೂಗತ ಜಗತ್ತಿನ ಚಕ್ರವ್ಯೂಹದೊಳಗೆ ಸಿಲುಕಿ ಕೊನೆಗೆ ಪಾರಾಗುತ್ತಾರೆ. ಹಾಗೆ ನೋಡಿದರೆ ಇದು ಸಾಹಸ ಕಥೆಯಾಗಿದೆ. ಇವರಿಬ್ಬರ ಸಾಹಸ ಸಿದ್ದಿಯೆಂದರೆ ಕೊನೆಗೆ ಜೀವ ಉಳಿಸಿಕೊಳ್ಳುವುದಾಗಿದೆ.

ಮೂಕಿ ದ್ಯಾವಮ್ಮನ ಮಗಳು ಹೂವಿನ ಮಾಲೆಗಳನ್ನು ಮಾರುತ್ತಿರುವಾಗ ದೌಲತರಾಮ ಅವಳಿಗೆ ಹತ್ತು ರೂಪಾಯಿ ನೋಟು ಕೊಟ್ಟು ಅವಳನ್ನು ಅಲ್ಲಿಂದ  ಸಾಗಹಾಕುವುದು ತಾವು ಮಾಡುವ ಕೃತ್ಯಕ್ಕೆ ಅಡ್ಡಲಾಗಿದ್ದಾಳೆಂಬ ಕಲ್ಪನೆ ಅವರಿಗೆ. ಅವಳು ತನಗೆ ಗೊತ್ತಿಲ್ಲದೆ ಬಂದು ಅಪರಾಧದ ಕೃತ್ಯಕ್ಕೆ ಅಡ್ಡಲಾಗಿ ನಿಂತಿರುವುದೇ ಅವಳ ತಪ್ಪು. ಸುರೇಶ ಗೌರಿಯರು ಕೂಡ ಅವಳಂತೆ ತಮಗೆ ಅರಿವಾಗದಂತೆ ಅಪರಾಧದ ವಿರುದ್ಧ ನಿಂತಿದ್ದಾರೆ.

ಈ ಅಪರಾಧಗಳ ಲೋಕದ ಅನಾವರಣವನ್ನು ಪತ್ತೇದಾರನಾದ ರಾಜಪ್ಪ ಮಾಡಲು ಹೋಗುತ್ತಾನೆ. ಹಳೆಯ ಕಾವ್ಯದ ಕಡತ - ಸಹ್ಯಾದ್ರಿ ಶಿಖರವೊಂದರಲ್ಲಿ ಕೆಂಪು ರತ್ನಗಳಿರುವ ಸ್ಥಳದ ಸುಳಿವು ಭೂಗತ ಜಗತ್ತಿನ ಅನಾವರಣದ ವಸ್ತುಗಳಾಗಿವೆ.

ಒಟ್ಟಿನಲ್ಲಿ ಜುಗಾರಿ ಕ್ರಾಸ್ ಕಾದಂಬರಿಯಲ್ಲಿ ಅಂತರ್ಗತವಾಗಿರುವ ಸಾಹಸ ಕಥೆ ಮತ್ತು ಪತ್ತೇದಾರಿ ಕಾದಂಬರಿಯಾಗಿ ಅದ್ಭುತವಾಗಿ ಮೂಡಿಬಂದಿದೆ. ಕಾದಂಬರಿಯನ್ನು ಓದುತ್ತಾ ಹೋದಂತೆ ಕಲ್ಪನಾ ಜಗತ್ತಿನಲ್ಲಿ ನಿಂತು ನೋಡುತ್ತಿರುವಂತೆ ತಾನು ಅದರಲ್ಲಿನ ಪಾತ್ರವೆಂಬಂತೆ  ಓದುಗನಿಗೆ ಭಾಷವಾಗುತ್ತದೆ.




#Article 141: ಮೌರ್ಯ ಸಾಮ್ರಾಜ್ಯ (434 words)


ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. 324 ರಿಂದ ಕ್ರಿ.ಪೂ. 185 ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುತ್ತ ತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು. ಮೌರ್ಯರ ಏಳಿಗೆ ಭಾರತದ ಇತಿಹಾಸದಲ್ಲಿ ಕತ್ತಲೆಯಿಂದ ಬೆಳಕಿನತ್ತ ಕಾಲಿಡುವ ಕಾಲ ಎಂದು  ವಿ.ಎ. ಸ್ಮಿತ್ ಹೇಳಿದ್ದಾರೆ.

ಮಗಧ(ಇಂದಿನ ಬಿಹಾರದ ಭಾಗ) ಪ್ರದೇಶದಲ್ಲಿ ಇದ್ದ ೧೬ ಜನಪದವನ್ನು(ಅಥವಾ ಗಣರಾಜ್ಯವನ್ನು) ಸೋಲಿಸಿ ಹರ್ಯಂಕ ವಂಶದವರು ಪ್ರಬಲ ಸಾಮ್ರಾಜ್ಯ ಕಟ್ಟಿದರು. ನಂತರ, ಮಗಧವನ್ನು ನಂದವಂಶದವರು ಸುಮಾರು ೬೦ ವರ್ಷಗಳ ಕಾಲ ಆಳಿದರು. ಅಲೆಗ್ಸಾಂಡರನ ದಂಡಯಾತ್ರೆ ನಂದವಂಶದವರನ್ನು ಎದುರಿಸುವ ಮುನ್ನವೇ ಹಿಂತಿರುಗಿತು. ಅಲೆಕ್ಸಾಂಡರ್ ಭಾರತದಿಂದ ಹಿಂದಿರುಗಿ ಕ್ರಿ.ಪೂ. ೩೨೪ರಲ್ಲಿ ನಿಧನನಾದ ನಂತರ ಭಾರತದಲ್ಲಿನ ಆತನ ಸಾಮ್ರಾಜ್ಯ ಹಂಚಿಹೋಗಲಾರಂಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದು ಚಂದ್ರಗುಪ್ತ ಮೌರ್ಯ. ಗ್ರೀಕರ ದಾಳಿಯಿಂದ ಅಸ್ತವ್ಯಸ್ಥಗೊಂಡ ಪಂಜಾಬನ್ನು ಚಂದ್ರಗುಪ್ತ ಮೌರ್ಯ ತನ್ನ ಅಧಿಪತ್ಯವನ್ನು ಪ್ರಾರಂಭಿಸಿದ. ಸುಮಾರು ಕ್ರಿ.ಪೂ. ೩೨೩ರಲ್ಲಿ ಅಲೆಗ್ಸಾಂಡರನ ಭಾರತದ ಭಾಗಗಳನ್ನು ಗೆದ್ದು, ೩೨೧ರಲ್ಲಿ ಪಾಟಲಿಪುತ್ರವನ್ನು ಗೆದ್ದ. ನಂದರ ದುರಾಡಳಿತವೂ ಅವರ ಪತನಕ್ಕೆ ಕಾರಣವಾಗಿ, ಚಂದ್ರಗುಪ್ತನಿಗೆ ಸಹಾಯವಾಯಿತು.

ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣವೇ ತಕ್ಷಶಿಲೆಯ ಅರ್ಥಶಾಸ್ತ್ರಜ್ಞ (ಚಾಣಕ್ಯ) ಕೌಟಿಲ್ಯ.ತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ.ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ(ಚಾಣಕ್ಯ)ಕೌಟಿಲ್ಯನ ಸಹಾಯದೊಂದಿಗೆ ಮಗಧ ರಾಜ್ಯದ ನಂದವಂಶದ ಆಗಿನ ದೊರೆಯಾಗಿದ್ದ ಧನಾನಂದನನ್ನು ಅಧಿಕಾರದಿಂದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ.೩೨೧ ರಲ್ಲಿ ಸ್ಥಾಪಿಸಿದ. ನಂತರ ಇಂದಿನ ಪಂಜಾಬವನ್ನು  ಸಹ ಗೆದ್ದು ತಕ್ಷಶಿಲೆಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.

ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರ ಮತ್ತು ಅರಕೋಸಿಯಾ ಪ್ರಾಂತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿಂದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚಂದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್). 

ಚಾಣಕ್ಯನ ಮಂತ್ರಿತ್ವದ ಅಡಿಯಲ್ಲಿ ಚಂದ್ರಗುಪ್ತ ಕೇಂದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇಂದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವಂತೆ, ಮರದ ಕೋಟೆಯನ್ನು ಹೊಂದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊಂದಿದ್ದಿತು. ಚಾಣಕ್ಯನು ತಕ್ಷಶಿಲೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಜ್ಞನಾಗಿದ್ದ. ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿಂದ ಕಾಪಾಡಲು. ಚಂದ್ರಗುಪ್ತನು ಒಳ್ಳೆಯ ಆಡಳಿತಗಾರನಾಗಿದ್ದ

ಚಂದ್ರಗುಪ್ತನ ಮಗ ಬಿಂದುಸಾರ ಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ. ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್) ಆತನ ಆಸ್ಥಾನದಲ್ಲಿದ್ದನೆಂದು ತಿಳಿದುಬಂದಿದೆ. ಹುಟ್ಟುವಾಗಲೆ ಇವನ ಹಣೆಯ ಮೆಲೆ ಇದ್ದ ವಿಷದ ಬಿಂದುವಿನಿಂದಲೆ ಅವನಿಗೆ ಬಿಂದುಸಾರ ಎಂದು ಹೆಸರು, ಆತನ ಮಗನೇ ಅಶೋಕ.

ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ. ೨೭೩-೨೩೨). ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲಂಕಾ, ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದುದೇವಾಂನಾಂಪ್ರಿಯ ಅಂದರೆ ದೇವರಿಗೆ ಪ್ರೀತಿಯಾದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು. ಬೌದ್ದ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲಂಕಾಗೆ ಅಶೋಕನು ಕಳುಹಿಸಿದನು.

ಮೆತಸ್ತನೀಸ್-ನ ಇಂಡಿಕಾ ಮತ್ತು ಕೌಟಿಲ್ಯನ ಅರ್ಥಶಾಸ್ತ್ರಗಳು ಹೇಳುವಂತೆ, ಕೇಂದ್ರ ಸರಕಾರವು ಪ್ರಬಲ ಮತ್ತು ಸುಭದ್ರವಾಗಿತ್ತು. ಮೌರ್ಯರ ಆಡಳಿತ, ಮುಘಲರ  ಆಡಳಿತಕ್ಕಿಂತಲೂ ಉತ್ತಮವಾಗಿತ್ತೆಂದು ವಿನ್ಸ್ಂಟ್ ಸ್ಮಿಥ್ (ವಿ.ಎ. ಸ್ಮಿತ್) ಹೇಳಿದ್ದಾರೆ.  

ಪಾಟಲಿಪುತ್ರದ ವ್ಯವಹಾರಗಳನ್ನು ನೋಡಿಕೊಳ್ಳಲು ಹಲವು ಸಮಿತಿಗಳಿದ್ದವು. 

 

ಚಂದ್ರಗುಪ್ತನ ಕಾಲದಲ್ಲಿ ೪ ಪ್ರಾಂತಗಳು: 

ಅಶೋಕನು, ೫ನೇ ಪ್ರಾಂತವನ್ನಾಗಿ, ಕಳಿಂಗವನ್ನು ಸೇರಿಸಿದ.  

ಪ್ರಾಂತಗಳ ಕೆಳಗೆ ಜನಪದಗಳಿದ್ದವು.

ಇವರಷ್ಟೇ ಅಲ್ಲದೇ, ರಾಜರಿಗೆ ವರದಿ ಮಾಡುವ ಗುಪ್ತಚರರ ಜಾಲವೇ ಇತ್ತು. 

ಅಶೋಕನ ಆಡಳಿತದ ನಂತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿಂದ ಆಳಲ್ಪಟ್ಟಿತು. ಮೌರ್ಯ ವಂಶದ ಕೊನೆಯ ಚಕ್ರವರ್ತಿ ಬೃಹದ್ರಥ. ಕ್ರಿ.ಪೂ. 180 ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿ ಶುಂಗ ವಂಶವನ್ನು ಸ್ಥಾಪಿಸಿದ.




#Article 142: ಹಿಮಾಲಯ (531 words)


ಹಿಮಾಲಯ ಭಾರತೀಯ ಉಪಖಂಡವನ್ನು ಟಿಬೆಟ್ ಪ್ರಸ್ಥಭೂಮಿಯಿಂದ ಪ್ರತ್ಯೇಕಿಸುವ ಒಂದು ಬೃಹತ್ ಪರ್ವತ ಶ್ರೇಣಿ. ಎವರೆಸ್ಟ್ ಶಿಖರವನ್ನೂ ಒಳಗೊಂಡಂತೆ ಪ್ರಪಂಚದ ಅತಿ ಎತ್ತರದ ಹಲವಾರು ಪರ್ವತಶಿಖರಗಳು ಇಲ್ಲಿವೆ. ಹಾಗೆಯೇ ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ ಹಿಮಾಲಯ ಎಂದರೆ ಹಿಮದ ಮನೆ ಎಂದರ್ಥ (ಹಿಮ+ಆಲಯ=ಹಿಮಾಲಯ).

ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ ಪ್ಯಾಂಜಿಯ ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು. ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ.

ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ ನಂಗಾ ಪರ್ಬತ್ ಇಂದ ಪೂರ್ವದಲ್ಲಿ ನಾಮ್ಚೆ ಬರ್ವಾ ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯn ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು:

ಹಿಮಾಲಯ ಶ್ರೇಣಿಗಳಲ್ಲಿ ಅನೇಕ ಹಿಮನದಿಗಳನ್ನು (glacier) ಕಾಣಬಹುದು. ಧ್ರುವ ಪ್ರದೇಶಗಳನ್ನು ಬಿಟ್ಟರೆ ಪ್ರಪಂಚದ ಅತಿ ದೊಡ್ಡ ಹಿಮನದಿಯಾದ ಸಿಯಾಚೆನ್ ಇಲ್ಲಿಯೇ ಇರುವುದು. ಇಲ್ಲಿರುವ ಹಿಮನದಿಗಳಲ್ಲಿ ಪ್ರಸಿದ್ಧವಾದ ಇತರ ಕೆಲವೆಂದರೆ ಗಂಗೋತ್ರಿ, ಯಮುನೋತ್ರಿ, ನುಬ್ರಾ ಮತ್ತು ಖುಂಬು.

ಹಿಮಾಲಯ ಶ್ರೇಣಿಯ ಎತ್ತರದ ಪ್ರದೇಶಗಳು ವರ್ಷವಿಡೀ ಹಿಮಾವೃತವಾಗಿರುತ್ತವೆ. ಈ ಪ್ರದೇಶಗಳು ಅನೇಕ ದೊಡ್ಡ ನದಿಗಳ ತವರು. ಸಿಂಧೂ ನದಿ ಟಿಬೆಟ್ ನಲ್ಲಿ ಸೆಂಗೆ ಮತ್ತು ಗಾರ್ ನದಿಗಳ ಸಂಗಮದಲ್ಲಿ ಹುಟ್ಟಿ ಪಾಕಿಸ್ತಾನದ ಮೂಲಕ ಸಾಗಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಗಂಗಾ ನದಿ ಭಾಗೀರಥಿಯಾಗಿ ಗಂಗೋತ್ರಿ ಹಿಮನದಿಯಲ್ಲಿ ಜನ್ಮ ತಾಳಿ ಅಲಕನಂದಾ, ಯಮುನಾ ನದಿಗಳನ್ನು ಸೇರಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಸೇರುತ್ತದೆ. ಬ್ರಹ್ಮಪುತ್ರ ನದಿ ಪಶ್ಚಿಮ ಟಿಬೆಟ್ ನಲ್ಲಿ ಹುಟ್ಟಿ, ದಕ್ಷಿಣಪೂರ್ವಕ್ಕೆ ಹರಿದು ನಂತರ ತನ್ನ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಭಾರತ ಮತ್ತು ಬಾಂಗ್ಲಾದೇಶಗಳ ಮೂಲಕ ಬಂಗಾಳ ಕೊಲ್ಲಿಗೆ ಹರಿಯುತ್ತದೆ. 
ಇನ್ನಿತರ ಕೆಲವು ಹಿಮಾಲಯ ನದಿಗಳೆಂದರೆ ಇರವಡ್ಡಿ, ಸಲ್ವೀನ್ ಮೊದಲಾದವು (ಬರ್ಮಾ ದತ್ತ ಹರಿಯುತ್ತವೆ).

ಹಿಮಾಲಯ ಪ್ರದೇಶದಲ್ಲಿ ನೂರಾರು ಸರೋವರಗಳು ಕಂಡುಬರುತ್ತವೆ. ಈ ಸರೋವರಗಳಲ್ಲಿ ಹೆಚ್ಚಿನವು ೫,೦೦೦ ಮೀ. ಗಿಂತ ಕಡಿಮೆ ಎತ್ತರದಲ್ಲಿ ಸಿಗುತ್ತವೆ, ಹಾಗೂ ಈ ಸರೋವರಗಳ ವಿಸ್ತಾರವು ಎತ್ತರದೊಂದಿಗೆ ಕಡಿಮೆಯಾಗುತ್ತದೆ. ಇವುಗಳಲ್ಲಿ ಪ್ಯಾಂಗಾಂಗ್ ತ್ಸೋ ಸರೋವರ ಅತಿ ದೊಡ್ಡದು. ಭಾರತ/ಟಿಬೆಟ್ ಸರಹದ್ದಿನ ಬಳಿಯಿರುವ ಈ ಸರೋವರವು ಸುಮಾರು ೮ ಕಿ.ಮೀ. ಅಗಲ ಹಾಗೂ ೧೩೪ ಕಿ.ಮೀ. ಉದ್ದವಿದ್ದು, ೪,೬೦೦ ಮೀ. ಎತ್ತರದಲ್ಲಿದೆ. ಎತ್ತರದಲ್ಲಿರುವ ಒಂದು ಮುಖ್ಯವಾದ ಸರೋವರ ಗುರುಡೋಗ್ಮಾರ್. ಉತ್ತರ ಸಿಕ್ಕಿಂನಲ್ಲಿರುವ ಗುರುಡೋಗ್ಮಾರ್ ೫,೧೪೮ ಮೀ. (೧೬,೮೯೦ ಅಡಿ) ಎತ್ತರದಲ್ಲಿದೆ. ಇನ್ನಿತರ ದೊಡ್ಡ ಸರೋವರಗಳಲ್ಲಿ ಭಾರತ/ಚೀನಾ ಸರಹದ್ದಿನ ಬಳಿ ಸಿಕ್ಕಿಂನಲ್ಲಿರುವ ಛಾಂಗು ಸರೋವರವೂ ಸೇರಿದೆ.
ಹಿಮನದಿಗಳ ಚಟುವಟಿಕೆಯಿಂದ ಸೃಷ್ಟಿಯಾದ ಸರೋವರಗಳಿಗೆ ಭೂವಿಜ್ಞಾನಿಗಳು ಟಾರ್ನ್‍ಗಳೆಂದು ಕರೆಯುತ್ತಾರೆ. ಹೆಚ್ಚಿನ ಟಾರ್ನ್‍ಗಳು ಹಿಮಾಲಯದಲ್ಲಿ ೫,೫೦೦ ಮೀ. ಗಿಂತ ಹೆಚ್ಚು ಎತ್ತರದಲ್ಲಿ ಕಂಡುಬರುತ್ತವೆ.

ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ - ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. 
ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ.

ಹಿಮಾಲಯ ಶ್ರೇಣಿಯು ಸಾವಿರಾರು ವರ್ಷಗಳಿಂದ ಜನರ ಚಲವಲನಗಳಿಗ ಸ್ವಾಭಾವಿಕವಾಗಿಯೇ ಅಡಚಣೆಯನ್ನು ಉಂಟುಮಾಡಿದೆ. ಇದಕ್ಕೆ ಕಾರಣ ಹಿಮಾಲಯದ ದೊಡ್ಡ ಗಾತ್ರ, ಎತ್ತರ ಮತ್ತು ವೈಶಾಲ್ಯತೆ. ಮುಖ್ಯವಾಗಿ ಈ ಅಡಚಣೆಯು, ಭಾರತ ಉಪಖಂಡದ ಜನರು ಚೆನಾ ಮತ್ತು ಮಂಗೋಲಿಯಾದ ಜನರ ಜೊತೆ ಸುಲಭವಾಗಿ ಬೆರೆಯದಂತೆ ಮಾಡಿದೆ. ಇದರಿಂದಾಗಿ ಇಂದಿಗೂ ಈ ಎರಡು ಪ್ರದೇಶಗಳ ಭಾಷೆಗಳಲ್ಲಿ ಮತ್ತು ಆಚಾರಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಇದಲ್ಲದೆ ಹಿಂದಿನಿಂದಲೂ ಹಿಮಾಲಯವು ವಾಣಿಜ್ಯ ಮಾರ್ಗಗಳಿಗೆ ಹಾಗೂ ಸಾಮ್ರಾಜ್ಯ ವಿಸ್ತರಣೆಗಳಿಗೆ ಪ್ರತಿಭಂದವೊಡ್ಡಿದೆ. ಉದಾ:. ಜೆಂಘಿಜ್ ಖಾನ್‍ನಿಗೆ ತನ್ನ ಸಾಮ್ರಾಜ್ಯವನ್ನು ಹಿಮಾಲಯ ಶ್ರೇಣಿಯ ದಕ್ಷಿಣಕ್ಕೆ ಹಾಗೂ ಭಾರತ ಉಪಖಂಡಕ್ಕೆ ವಿಸ್ತಾರ ಮಾಡಲು ಆಗಲಿಲ್ಲ.

ಹಿಂದೂ ಪುರಾಣಗಳಲ್ಲಿ ಹಿಮಾಲಯವನ್ನು ಹಿಮವತ (ಪಾರ್ವತಿಯ ತಂದೆ) ಎಂಬ ದೇವನನ್ನಾಗಿ ವ್ಯಕ್ತಿತ್ವಾರೋಪಣೆ ಮಾಡಲಾಗಿದೆ. ಇದಲ್ಲದೆ, ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಹಿಮಾಲಯದ ಹಲವಾರು ಸ್ಥಳಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ.




#Article 143: ರಾಜಾ ರವಿ ವರ್ಮ (1145 words)


ರಾಜಾ ರವಿವರ್ಮ( ೨೯, ಏಪ್ರಿಲ್, ೧೮೪೮-೨,  ಅಕ್ಟೋಬರ್,  ೧೯೦೬ ) - ಭಾರತದ ಸುಪ್ರಸಿದ್ಧ ವರ್ಣಚಿತ್ರಗಾರ.

ರಾಜಾ  ರವಿವರ್ಮರು  ಕಿಳಿಮಾನೂರು  ಊರಿನ,  ರಾಜವಂಶಕ್ಕೆ ಸೇರಿದವರು.  ಈ ಗ್ರಾಮ, ತಿರುವನಂತಪುರದ  ಉತ್ತರಕ್ಕೆ,  ೨೫ ಮೈಲಿ ದೂರದಲ್ಲಿದೆ.  ಕಂಡನೂರು ದೆಶತ್ತ್ ಮತ್ತು  ಉಮಾ  ಅಂಬಾಬಾಯಿಯವರ ಒಲವಿನ ಮಗನಾಗಿ,  ೨೯,  ಆಗಸ್ಟ್,  ೧೮೪೮ ರಲ್ಲಿ ರವಿವರ್ಮರು ಜನಿಸಿದರು.   ತಾಯಿ ಕವಯಿತ್ರಿ,  ಮತ್ತು ಸುಸಂಸ್ಕೃತರು.  ತಂದೆ,  ಸಂಸ್ಕೃತವನ್ನು ಓದಿಕೊಂಡವರು.  ಚಿಕ್ಕಂದಿನಿಂದಲೂ ರವಿಯವರು ದೈವಭಕ್ತರು.  ಆಚಾರ,  ನಿಷ್ಠೆ,  ಆತ್ಮಸ್ಥೈರ್ಯ, ಮತ್ತು  ಆತ್ಮವಿಶ್ವಾಸಗಳು,  ಅವರಿಗೆ ಹುಟ್ಟಿನಿಂದಲೆ ಬಂದಿದ್ದವು.  ಪ್ರತಿದಿನ ಬೆಳಿಗ್ಯೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ,  ಸೌಂದರ್ಯಲಹರಿ,  ಸ್ವಯಂವರ,  ಮಂತ್ರಗಳನ್ನು  ಬಾಯಿಪಾಠವಾಗಿ ಹೇಳುತ್ತಿದ್ದರು.

ರವಿ,  [ ರವಿವರ್ಮರನ್ನು  ಬಾಲ್ಯದಲ್ಲಿ ಗೆಳೆಯರು ಹಾಗೆಯೇ ಕರೆಯುತ್ತಿದ್ದದ್ದು ]   ಸಾಹಿತ್ಯ,  ವ್ಯಾಕರಣ, ಶಾಸ್ತ್ರೀಯ ಸಂಗೀತ,  ಮತ್ತು  ವೇದಪುರಾಣಗಳಲ್ಲಿ  ಆಸಕ್ತರು.  ರಾಮಾಯಣ,  ಮಹಾಭಾರತ, ಅವರಿಗೆ ಬಲು ಪ್ರಿಯವಾದ ಗ್ರಂಥಗಳು.   ಅಮರಕೋಶ,  ಸಿದ್ಧರೂಪ,  ಅವರಿಗೆ  ೫  ನೆ ವಯಸ್ಸಿನಲ್ಲೇ ಬಾಯಿಪಾಠವಾಗಿತ್ತು.   ಅವರ ಮಾವ,  ರಾಜರಾಜವರ್ಮರು ಒಳ್ಳೆಯ ಕಲಾಸಾಧಕರು. ಅವರು  ಆಗಿನ  ತಿರುವಾಂಕೂರಿನ ಮಹಾರಾಜರಾದ,  ಆಯಿಲ್ಯಂ ತಿರುನಾಳ್ ರವರಿಗೆ ರವಿಯನ್ನು  ಪರಿಚಯಿಸಿದರು. ಆಗ ರವಿಗೆ ಕೇವಲ ೧೪ ವರ್ಷ ವಯಸ್ಸು. ದೊರೆಗಳು  ರವಿಗೆ ಆಗಿನಕಾಲದ ಪ್ರಮುಖ ಚಿತ್ರಕಲಾವಿದರು  ರಚಿಸಿದ, ಸಚಿತ್ರ ಪುಸ್ತಕವನ್ನು ಕೊಟ್ಟು ಅದನ್ನು ಅಭ್ಯಸಿಸಲು ಹೇಳಿದರು. ಅಳಗಿರಿ ನಾಯ್ಡು ಅವರನ್ನು ಪರಿಚಯಿಸಿ, ಅವರಬಳಿ  ತಮ್ಮ  ಕಲಾಭ್ಯಾಸವನ್ನು  ಮುಂದುವರೆಸಲು  ಅನುಮತಿ  ನೀಡಲಾಯಿತು.

೧೮೬೬  ರಲ್ಲಿ,  ವೀರಶೃಂಖಲೆ ,  ಪ್ರಶಸ್ತಿಯ ಜೊತೆಗೆ, ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ,  ನೇಮಿಸಲ್ಪಟ್ಟರು ; ತಿಂಗಳಿಗೆ  ೫೦ ರೂಗಳ ಮಾಸಾಶನದ ಏರ್ಪಾಡುಮಾಡಲಾಯಿತು. ೧೮೬೮ ರಲ್ಲಿ,  ಥಿಯೊಡರ್ ಜೆನ್ಸನ್,  ಎಂಬ  ಐರೋಪ್ಯ ಚಿತ್ರಕಲಾಕಾರನು  ಕೇರಳಕ್ಕೆ ಬಂದಿದ್ದನು.  ತನ್ನ ಐರೋಪ್ಯ ಚಿತ್ರಕಲೆಯ ವಿವರಗಳನ್ನು ತೋರಿಸಿ ಅಲ್ಲಿನ ಭಾವ ವೈವಿಧ್ಯತೆಗಳನ್ನು ವಿವರಿಸಿದನು. ತೈಲ ವರ್ಣಚಿತ್ರಗಳ ಸಂಯೋಜನೆಯನ್ನು ಅವನು ರವಿಗೆ ಹೆಳಿಕೊಟ್ಟನು. ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ನಮ್ಮ ದೇಶದ ವರ್ಣಚಿತ್ರಗಳಲ್ಲಿ ಮಾತ್ರ ಕಾಣಬಹುದು. ರವಿಯವರು ಅದನ್ನು ತಾವೇ ವೀಕ್ಷಿಸಿ ಕಲಿತುಕೊಂಡರು. ಮತ್ತು ರವಿ ದೂರದಿಂದ ನೋಡಿಯೇ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ಮನನಮಾಡಿದರು.  ಅರಮನೆಯಲ್ಲಿ ಚಿತ್ರಕಲೆಗಾಗಿಯೇ ಒಂದು ಪ್ರತ್ಯೇಕ ಕೊಠಡಿಯನ್ನು  ಮೀಸಲಾಗಿಟ್ಟಿದ್ದರು.  ಹಿರಿಯ ಕಲಾವಿದರಾದ,  ರಾಮಸ್ವಾಮಿ ನ್ಯಾಕರ್, ಮತ್ತು ಆರ್ಮುಗಂ ಪಿಳ್ಳೆಯವರ ಪ್ರಭಾವವೂ,  ರವಿಯವರಮೇಲೆ ಆಯಿತು. ಈ ಗುರುಗಳು ರವಿಯವರಿಗೆ ತಕ್ಕ ಕಲಾಮೂಲ ಅಡಿಪಾಯವನ್ನು ಸುಸ್ಥಿರವಾಗಿ ಹಾಕಿಕೊಟ್ಟಿದ್ದರಿಂದ  ಕಲೆಯ ಹೊಸ ಹೊಸ ಪದ್ಧತಿಗಳು,  ವಿನ್ಯಾಸಗಳೂ ಬಂದಾಗ, ಪ್ರಾಕಾರಗಳನ್ನು  ಅರಿಯಲು ಅವರಿಗೆ ತೊಂದರೆಯೇನೂ ಆಗಲಿಲ್ಲ.  ರವಿವರ್ಮರು ತಮ್ಮ ಸ್ವಂತ ಸಹಾಯದ ಕಲಿಕೆಯಿಂದಲೇ  ಕಲೆಯನ್ನು  ತಮ್ಮದಾಗಿಸಿಕೊಂಡರು.  ಕಲೆಗೆ ಪೂರಕವಾದ ಮಾಹಿತಿಗಳನ್ನು  ಅವರು,  ಪುರಾಣ ಪುಣ್ಯಕಥೆಗಳನ್ನು ಪಠಿಸುವ ಮೂಲಕ ತಮ್ಮ ಕಲಾ-ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು.  ರವಿಯವರ ವಿವಾಹ, ರಾಜಕುಟುಂಬಕ್ಕೆ ಸೇರಿದ ಪುರೂರು ಟ್ಟಾತಿನಾಳ್ ರಾಣಿ,(ರಾಣಿ ಭಾಗೀರತಿಬಾಯಿ)(ಕೊಚ್ಚು ಪಂಗಿ ಅಮ್ಮ)  ಎಂಬ ಕನ್ಯೆಯೊಡನೆ ನೆರವೇರಿತು.   ಈಕೆ ಮಾವೇಲಿಕ್ಕರ ಮನೆತನದವಳು. ಈ ದಂಪತಿಗಳಿಗೆ ೩ ಗಂಡುಮಕ್ಕಳು ಹಾಗೂ ೨ ಹೆಣ್ಣು ಮಕ್ಕಳು ಜನಿಸಿದರು. ಚೊಚ್ಚಲು ಮಗ ಕೇರಳವರ್ಮ, ೧೮೭೬ ರಲ್ಲಿ  ಜನಿಸಿದನು. ಎರಡನೆಯ ಮಗ ರಾಮವರ್ಮ ೧೮೭೯ ರಲ್ಲಿ  ಹುಟ್ಟಿದ . ಮೂರನೆಯ ಮಗನೇ  ರಾಜ ರಾಜ ವರ್ಮ. ಮಹಾಪ್ರಭ, ಮತ್ತು ಉಮಬಾಯಿ ಹೆಣ್ಣುಮಕ್ಕಳು. ಮಹಾಪ್ರಭ ತಂದೆಯವರ  ೨ ಪ್ರಸಿದ್ಧ  ತೈಲಚಿತ್ರಗಳಿಗೆ ರೂಪದರ್ಶಿಯಾಗಿದ್ದರು. ಇವರ ಮಗಳೇ ಮಹರಾಣೀ ಸೇತುಲಕ್ಷ್ಮಿ ಬಾಯಿ. ಈಕೆ ತಿರುವಂತಪುರದ ಮಹಾರಾಜರನ್ನು ಮದುವೆಯಾಡಳು.  ಕೇರಳವರ್ಮ ೧೯೧೨ ರಲ್ಲಿ ಎಲ್ಲೋ ಕಾಣೆಯಾದನು.  ಅವನ ಯಾವ ಸುಳಿವೂ ತಿಳಿಯಲಿಲ್ಲ. ರಾಮವರ್ಮ,  ಬೊಂಬಾಯಿನ  ಜೆ. ಜೆ. ಸ್ಕೂಲ್  ಆಫ್ ಆರ್ಟ್ಸ ನಲ್ಲಿ  ಚಿತ್ರಕಲಾವಿದ್ಯಾಭ್ಯಾಸಮಾಡಿದನು. ಈತನು  ದಿವಾನ್  ಪೀ. ಜಿ. ಎನ್ ಉನ್ನಿಥನ್ ರವರ ಸೋದರಿ, ಗೌರಿ ಕುಂಜಮ್ಮನವರೊಂದಿಗೆ ವಿವಾಹ ಮಾಡಿಕೊಂಡನು.

೧೮೭೦ ರಲ್ಲಿ, ಕೊಲ್ಲೂರಿನ ಮೂಕಂಬಿಕಾ ದೇವಿಸನ್ನಿಧಿಗೆ ಹೋಗಿ, ಅಲ್ಲಿ ೪೧ ದಿನಗಳ ವ್ರತಾಚರಣೆ ಮಾಡಿದರು.   ಏಕಾಗ್ರತೆಯಿಂದ ಸರಸ್ವತಿ ದೇವಿಯ ಭಜನೆ, ನಡೆಯುತ್ತಿತ್ತು.  ಕೊನೆಗೆ,  ಮಂಗಳಕ್ಕೆ ೩ ದಿನ ಮೊದಲು,  ಸರ್ವಾಂಗಸುಂದರಿ,  ಮೂಕಾಂಬಿಕಾ ಅಮ್ಮನವರು  ಕಾಣಿಸಿಕೊಂಡು, ಪ್ರೀತಿವಾತ್ಸಲ್ಯದಿಂದ ತಮ್ಮ ಸ್ನೇಹಹಸ್ತವನ್ನು  ಅವರ ಮಸ್ತಕದಮೇಲೆ ಇಟ್ಟು ಹರಸಿದಂತೆ ಕನಸಾಯಿತಂತೆ. ಅಂದಿನಿಂದ ಅವರು ರಚಿಸಲು ಪ್ರಯತ್ನಿಸಿದ ಎಲ್ಲಾ ದೇವಿಯರ ಚಿತ್ರಗಳಿಗೂ,  ಅಮ್ಮನವರೇ ರೂಪದರ್ಶಿಯಾಗಿ ಅವರಿಗೆ, ಸ್ಪೂರ್ತಿ ಕೊಟ್ಟರಂತೆ.  ಉತ್ತರಭಾರತಕ್ಕೆ ಹೋದಾಗ,  ಅಲ್ಲಿನ  ವೇಷ-ಭೂಷಣ,  ಜೀವನ-ಕ್ರಮವಿಧಾನ,  ಆಚಾರ-ವ್ಯವಹಾರ,  ಮರ್ಯಾದೆ ಕುಲಂಕುಶವಾಗಿ  ನೋಡಿಕೊಂಡು  ಬಂದರು. ಹೀಗೆ ಅವರು ತಮ್ಮ ಕಲೆಯ ಅಭಿವ್ಯಕ್ತಿಗಾಗಿ ಅನೇಕ ಏರ್ಪಾಡು, ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಯಿತು. ವಿಷ್ಣು ಧರಮೋತ್ತರ ಪುರಾಣದಲ್ಲಿ ವಿವರಿಸಿದ ಚಿತ್ರಸೂತ್ರ  ಕಲಾ ಆಯಾಮಗಳು ತೀರ ನೀರಸವಾಗಿದ್ದು ಅವುಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಲಾರದ ಪ್ರಸಂಗವನ್ನು ಅವರು ತಿರಸ್ಕರಿಸಿ, ನಮ್ಮ ಪುರಾಣಪುರುಷರುಗಳು, ದೇವಿಯರು ಸಾಮಾನ್ಯಮಾನವರಂತೆ ಇರುವ ಚಿತ್ರಗಳನ್ನು ಅವರು ಪ್ರಸಿದ್ದಿಪಡಿಸಿದರು. ಇದು ಆ ಕಾಲದಲ್ಲಿ ರವಿಯವರು ಆಗಲೇ ಪ್ರಸ್ತುತದಲ್ಲಿದ್ದ ಕಲಾ ಪದ್ಧತಿಗೆ ವಿರೋಧವಾಗಿ ಸ್ಪಂದಿಸಿದ ರೀತಿಯಾಗಿತ್ತು. ಕೊನೆಗೆ ಅದೇ ಸರ್ವರ ಮನಗೆದ್ದಿತು.

ಊರ್ವಶಿ,  ರಂಭೆ,  ತಿಲೋತ್ತಮೆ,  ಉಷೆ, ಎಂಬನಾಯಿಕೆಯರ ಚಿತ್ರಗಳನ್ನು ರಚಿಸಿದ್ದು ತಮ್ಮ ಪುರಾಣಗಳ ಅಧ್ಯಯನದ  ಜ್ಞಾನದಿಂದ.  ಮರಾಠಾ, ಗುಜರಾತೀ, ಮಲಬಾರೀ ,  ರಾಜ್ ಪೂತ್ ವನಿತೆಯರ ಸುಂದರ ಚಿತ್ರಗಳು ಅವರ ಕಲಾಸಂಗ್ರಹದಲ್ಲಿ ಸೇರಿಕೊಂಡವು.  ಆಗಿನ  ಪ್ರಮುಖ ವ್ಯಕ್ತಿಗಳಾದ  ತಿಲಕ್,  ರಾನಡೆಯವರ  ಚಿತ್ರಗಳನ್ನೂ,    ಹಿಮಾಲಯ ಪರ್ವತಶ್ರೇಣಿಯ ಭವ್ಯತೆಯನ್ನೂ,  ಮತ್ತು ದೇಶದ ಎಲ್ಲಾ ಗಿರಿಧಾಮಗಳ, ಪ್ರದೇಶಗಳ  ಪ್ರಕೃತಿಸಿರಿಯನ್ನೂ ತಮ್ಮ ಕುಂಚದಲ್ಲಿ ಸೆರೆಹಿಡಿದರು.   ೧೯೦೪ ರಲ್ಲಿ,  ರವಿವರ್ಮರಿಗೆ,  ಬ್ರಿಟಿಶ್ ಸರ್ಕಾರ,  ಕೈಸರ್-ಎ ಹಿಂದ್  ಎಂಬ ಪ್ರಶಸ್ತಿ ಕೊಡಲಾಯಿತು.  ಪುದುಕೋಟೈ,  ಆಳ್ವಾರ್,  ಮೈಸೂರ್,  ಬರೋಡ,  ಇಂದೋರ್, ಗ್ವಾಲಿಯರ್,  ಜೈಪುರ, ಉದಯಪುರಗಳ ರಾಜರ ಆಹ್ವಾನ ಬಂದಿತ್ತು.

ಒಬ್ಬ  ಆಂಗ್ಲಸಂಸ್ಕೃತ  ವಿದ್ವಾಂಸರು, ಪ್ರಕಟಿಸಿದ  ಶಾಕುಂತಲ  ಮಹಾಕಾವ್ಯದ  ಮುಖಪುಟಕ್ಕೆ ತಕ್ಕದಾದ ಚಿತ್ರವನ್ನು ಬರೆದುಕೊಟ್ಟರು.  ಈ  ಪುಸ್ತಕ ಹೆಸರುವಾಸಿಯಾಗಿದ್ದು, ಕಾವ್ಯ ಸೌಂದರ್ಯಕ್ಕೆ.  ಆದರೆ ಹೆಚ್ಚು ಜನಪ್ರಿಯವಾದದ್ದು ಪುಸ್ತಕದ ಹೊರಕವಚದಲ್ಲಿ ಮೂಡಿಸಿದ್ದ ಶಕುಂತಳೆಯ ಮುಗ್ಧ ಸೌಂದರ್ಯಕ್ಕೆ. ಹೀಗೆ ಪುಸ್ತಕದ ಜೊತೆಗೆ, ರವಿವರ್ಮರೂ  ವಿಶ್ವದಾದ್ಯಂತ ಹೆಸರುವಾಸಿಯಾದ  ವ್ಯಕ್ತಿಯಾದರು.

೧೮೭೬,  ರಲ್ಲಿ  ಪ್ಯಾರಿಸ್ಸಿನಲ್ಲಿ  ಪ್ರದರ್ಶನಗೊಂಡ, ವಸ್ತುಕಲಾ ಪ್ರದರ್ಶನ, ದಲ್ಲಿ '  ಮಲೆಯಾಳದ ವನಿತೆ  ಎಂಬ ತೈಲಚಿತ್ರಕ್ಕೆ,  ರವಿವರ್ಮರಿಗೆ ಗೋಲ್ಡ್ ಮೆಡಲ್, ಪ್ರಶಸ್ತಿ ದೊರೆಯಿತು. ಅದೇ ವರ್ಷ ವಿಯನ್ನ ದಲ್ಲಿ ಏರ್ಪಡಿಸಿದ ಪ್ರದರ್ಶನದಲ್ಲೂ,  ಮಲಯಾಳದ ವನಿತೆ, ಗೆ ಬಹುಮಾನ ದೊರೆಯಿತು. ಈ ಪ್ರದರ್ಶನಗಳಿಂದ ರವಿವರ್ಮರಿಗೆ ವಿಶ್ವಮಾನ್ಯತೆ ದೊರೆಯಿತು. ಸೀರೆ ಉಡುಪನ್ನು ಅವರ ಭವ್ಯಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಆಗಿನಕಾಲದಲ್ಲಿ ಕೇರಳ ಮುಂತಾದ ರಾಜ್ಯಗಳಲ್ಲಿ ಸೀರೆ ಉಡುವ ಪರಂಪರೆ ಇರಲಿಲ್ಲ. ಹಾಗಾಗಿ,  ಸೀರೆಉಡುಪನ್ನು ದೇಶದಾದ್ಯಂತ ಪ್ರಸಿದ್ಧಿಪಡಿಸಿದ ಶ್ರೇಯಸ್ಸು  ಅವರಿಗೆ ಸಲ್ಲುತ್ತದೆ.

ಬಕಿಂಗ್ ಹ್ಯಾಮ್ ಡ್ಯೂಕರ,  ಎತ್ತರದ ನಿಲುವಿನ ತೈಲಚಿತ್ರವನ್ನು  ಬರೆದುಕೊಟ್ಟಿದ್ದರು.  ಅದನ್ನು ಮದ್ರಾಸ್ ಸರ್ಕಾರ,  ತಮ್ಮ ಆಫೀಸಿನ ಮುಖ್ಯದ್ವಾರದಮುಂದೆ ಪ್ರದರ್ಶಿಸಿದ್ದರು.

೧೮೭೭ ರಲ್ಲಿ,  ಮದ್ರಾಸ್ ಲಲಿತಕಲಾ ಅಕ್ಯಾಡಮಿಯವರು ಪ್ರಸ್ತುತಪಡಿಸಿದ,  ವಸ್ತು ಪ್ರದರ್ಶನದಲ್ಲಿ, ರವಿವರ್ಮರ,  ವೀಣೆನುಡಿಸುವ ತಮಿಳು ಮಹಿಳೆ ಎಂಬ ತೈಲಚಿತ್ರದ ಪ್ರದರ್ಶನವಾಗಿತ್ತು. ದುಶ್ಯಂತನಿಗೆ ಶಕುಂತಳೆ ಬರೆಯುತ್ತಿರುವ ಪ್ರೇಮ-ಪತ್ರ,ದ  ತೈಲಚಿತ್ರಕ್ಕೆ ಬಹುಮಾನ ದೊರೆಯಿತು.

ಒಮ್ಮೆ  ಆಗಿನ  ಬ್ರಿಟಿಷ್ ಗವರ್ನರ್, ತಿರುವನಂತಪುರದ  ಅರಮನೆಗೆ ಬಂದವರು, ನೇರವಾಗಿ ಶಕುಂತಲ, ತೈಲಚಿತ್ರವನ್ನು ನೋಡಲು ಹೋದರು. ಅಲ್ಲೇ ನಿಂತಿದ್ದರೂ ಗವರ್ನರ್ ಸಾಹೇಬರು ಆಯಿಲ್ಯಂರವರನ್ನು ವಿಚಾರಿಸದೇ ಹೋದ ಘಟನೆಯಿಂದ  ರಾಜರು ತತ್ತರಿಸಿದರು.  ಆಯಿಲ್ಯಂ ತಿರುನಾಳ್ ರವರಿಗೆ  ಅವಮಾನವಾಗಿ,  ಮುಖಭಂಗವಾಯಿತು.  ಕೂಡಲೇ ರವಿವರ್ಮರನ್ನು  ಅರಮನೆಯಿಂದ  ವಜಾ ಮಾಡಿದರು.  ೧೮೮೦ ರಲ್ಲಿ  ಆಯಿಲ್ಯಂ ತಿರುನಾಳ್  ತೀರಿಕೊಂಡಮೇಲೆ  ಹೊಸರಾಜ,  ವಿಶಾಖಂ ತಿರು ಆಯಿಲ್ಯರು,  ರವಿವರ್ಮರನ್ನು ಪುನಃ  ಬರಮಾಡಿಕೊಂಡು ಸನ್ಮಾನಿಸಿದರು.  

೧೮೮೧ ರಲ್ಲಿ,  ದಮಯಂತಿ,  ಸೈರಂಧ್ರಿ,  ಸರಸ್ವತಿ,  ಲಕ್ಷ್ಮಿ,  ಮೊಘಲ್ ಶೈಲಿ ಮತ್ತು ರಾಜಸ್ಥಾನಿ  ಶೈಲಿಗಳನ್ನು  ಸ್ವಲ್ಪದಿನ  ಅಭ್ಯಾಸಮಾಡಿದರು.  ೩  ವರ್ಷಗಳಕಾಲ ಬರೋಡದಲ್ಲೆ ಇದ್ದರು.  ಆ ಸಮಯದಲ್ಲಿ  ಸೀತಾ-ಪರಿತ್ಯಾಗದ ತೈಲಚಿತ್ರವನ್ನು ರಚಿಸಿ ಅರಸರಿಗೆ ಕೊಟ್ಟಿದ್ದರು. ಮಹಾರಾಜರಿಗೆ ಅತಿಯಾದ ಆನಂದವಾಯಿತು.  ಬರೋಡದ ನರೇಶರು ರವಿವರ್ಮರಿಗೆ, ಗೌರವಾರ್ಥವಾಗಿ, ೫೦,೦೦೦ ರೂಪಾಯಿಗಳನ್ನೂ, ಆನೆ, ಧನ-ಕನಕಗಳನ್ನು ಉಡುಗೊರೆಯಾಗಿ ಕೊಟ್ಟರು. ಸ್ವಲ್ಪ ದಿನ ತಮ್ಮ ತಾಯ್ನಾಡಿಗೆ ಹೋಗಿ ತಮ್ಮಕಲಾಭ್ಯಾಸದ ಮನೆಗುರುಗಳಾದ,  ಅವರ ಮಾವನವರ ಪಾದಗಳಮೇಲೆ ೫,೦೦೦ ರೂಪಾಯಿಗಳನ್ನು ಸಮರ್ಪಿಸಿ,  ನಮಸ್ಕರಿಸಿ,  ತಮ್ಮ ಭಕ್ತಿಭಾವವನ್ನು  ಪ್ರದರ್ಶಿಸಿದರು.   ೧೮೮೭ ರಲ್ಲಿ ಅವರು ಒಂದು ವರ್ಷ ಊರುಬಿಟ್ಟು ಹೋಗಲಿಲ್ಲ.

೧೮೯೧ ರಲ್ಲಿ,  ತಾವು ರಚಿಸಿದ್ದ  ೧೪ ಪೇಂಟಿಂಗ್  ತೆಗೆದುಕೊಂಡು ರೈಲಿನಲ್ಲಿ ಬರೋಡಾಕ್ಕೆ ಹೋಗುತ್ತಿರುವಾಗ,  [ ಉದ್ದ-೫  ಅಡಿ, ೩  ಅಂಗುಲ,  ಅಗಲ-೩  ಅಡಿ ೮  ಅಂಗುಲ ಗಾತ್ರದ ದೊಡ್ಡ ತೈಲಚಿತ್ರಗಳು.]  ಮಧ್ಯೆ, ಬೊಂಬಾಯಿನಲ್ಲಿ ಉಳಿದುಕೊಂಡರು.  ಊರಿನಿಂದ ಬಂದ ತಂತಿವಾರ್ತೆಯಿಂದ ವಿಚಲಿತಗೊಂಡರು.  ಊರಿನಲ್ಲಿ ಅವರ ಪ್ರೀತಿಯ ಪತ್ನಿ ತೀರಿಕೊಂಡಿದ್ದರು.  ಈ ವಾರ್ತೆ ಸಿಡಿಲಿನಂತೆ ಎರಗಿತು.  ಕೂಡಲೇ ವಾಪಸ್ಸು ಹೋಗಿ ೧ ತಿಂಗಳು ಊರಿನಲ್ಲೇ ಇದ್ದು  ಮತ್ತೆ ಬರೋಡಾ ಹೋದರು.

ಕೃಷ್ಣರಾಜವೊಡೆಯರ ಕಾಲದಲ್ಲಿ ಜಗನ್ಮೋಹನ ಅರಮನೆ ನಿರ್ಮಿಸಲಾಯಿತು.  ಆಗ ಮಹಾರಾಜರು ರವಿವರ್ಮರನ್ನು ಕರೆಸಿ, ಅವರ ತೈಲಚಿತ್ರಗಳಿಂದ ಅರಮನೆ ಅಲಂಕೃತವಾಗಬೇಕೆಂದು  ಮನವಿ ಮಾಡಿಕೊಂಡರು. ಅವರ ಇಷ್ಟದಂತೆ ರವಿವರ್ಮರು ೯ ಭವ್ಯ ಚಿತ್ರಗಳನ್ನು ರಚಿಚಿದರು.  ಜೊತೆಗೆ, ರಾಜಪರಿವಾರದ ಜನರ, ಮತ್ತು ಅರಮನೆಯ ಪರಿಸರದ ಚಿತ್ರಗಳನ್ನೂ ಅತ್ಯಂತ ಸೊಗಸಾಗಿ ಬಿಡಿಸಿಕೊಟ್ಟರು.  ಪಾಂಡವರ ದ್ಯೂತ, ಕೌರವನ ಆಸ್ತಾನದಲ್ಲಿ ಪ್ರವೇಶಿಸಿದ ಶ್ರೀ ಕೃಷ್ಣ, ಬಂಧನಕ್ಕಾಗಿ ಸಾಗರದ ಮುಂದೆ, ಬಿಲ್ಲುಹೂಡಿದ ಶ್ರೀ ರಾಮಚಂದ್ರ. ಇವು ರವಿವರ್ಮರು ರಚಿಸಿದ ಕೆಲವಾರು  ಶ್ರೇಷ್ಟಚಿತ್ರಗಳೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇಲ್ಲಿ ದಾಖಲಿಸಬಹುದಾದ ಮತ್ತೊಂದು ಭವ್ಯ ತೈಲಚಿತ್ರವನ್ನು ಬರೆದು ರವಿವರ್ಮರು ಅತ್ಯಂತ ಯಶಸ್ಸನ್ನು ಗಳಿಸಿದರು. ೩ ಜನ  ನಂಬಿಕೆಯ ಅನುಚರರೊಡನೆ,  ಆಶ್ವಾಸನೆ ಕೊಡಲು  ಕೈಯಲ್ಲಿ ಭವಾನಿತಾಯಿ ಪ್ರಸಾದಿಸಿದ  ಖಡ್ಗವನ್ನು  ಝಳಪಿಸುತ್ತಾ ಶಿವನೇರಿದುರ್ಗದಬಳಿ,  ಅರಿಭಯಂಕರನಾಗಿ ಕುದುರೆಯನ್ನೇರಿ ಬರುತ್ತಿರುವ ವೀರಶಿವಾಜಿಯವರ ಚಿತ್ರ,  ಬಹುಶಃ ಬಹುತೇಕ  ಮಹಾರಾಷ್ಟ್ರದವರ  ಮನೆಗಳಲ್ಲಿ ಈ ವರ್ಣಚಿತ್ರವನ್ನು ಕಟ್ಟು ಹಾಕಿಸಿ ಇಟ್ಟುಕೊಂಡಿದ್ದಾರೆ. ರವಿವರ್ಮರು  ಚಿತ್ರಿಸಿದ ವರ್ಣಚಿತ್ರಗಳು  ಒಟ್ಟು  ೮೯.  ಅವೆಲ್ಲಾ  ಅಚ್ಚಾಗಿ ಮದ್ಯಮವರ್ಗದ ಕಲಾಪ್ರೇಮಿಗಳಿಗೆ,  ಸಾಂತ್ವನ ನೀಡುವಲ್ಲಿ ಸಹಕಾರಿಯಾದವು.

ಆಸ್ತಾನ ಕಲಾವಿದರಾಗಿ ನೇಮಿತರಾಗಿದ್ದರು.  ವಿರಾಟನ ಆಸ್ಥಾನ,  ಶಕುಂತಳೆ, ಹಂಸ ದಮಯಂತಿ, ರುಕ್ಮಾಂಗದ ಮತ್ತು ಮೋಹಿನಿ.  ಪ್ರತಿ ವರ್ಣಚಿತ್ರಗಳಿಗೂ  ತಲಾ ೩,೦೦೦ ರೂ ಪ್ರಶಸ್ತಿ ಕೊಡಲಾಯಿತು.  ಚಿತ್ರ ಆರ್ಟ್ ಗ್ಯಾಲರಿ ಎಂಬ ಸಂಸ್ತೆಯನ್ನು ಸ್ಥಾಪಿಸಲಾಯಿತು. ಅಲ್ಲಿ ರವಿವರ್ಮರ  ೧೪ ಭಾರಿ ಎತ್ತರದ ತೈಲಚಿತ್ರಗಳನ್ನು ಸ್ಥಾಪಿಸಲಾಗಿದೆ. ೧೦ ಸಣ್ಣಗಾತ್ರದ ಪೇಂಟಿಂಗ್ ಗಳಿವೆ. ೨ ಅಪೂರ್ಣ ಚಿತ್ರಗಳೂ ಇವೆ.  ಬಹುಶಃ ರವಿವರ್ಮರ ಕೊನೆಯದಿನಗಳಲ್ಲಿ ಅವರ ಮಾನಸಿಕಬಲ ಸ್ವಲ್ಪ ಕಡಿಮೆಯಾಗಿತ್ತು.  ಹೆಚ್ಚು ಹೊತ್ತು ಕುಳಿತು ಕೆಲಸಮಾಡುವುದು ಸಾಧ್ಯವಿರಲಿಲ್ಲ. ಅವರ ಸೋದರ,  ರಾಜರಾಜ ವರ್ಮರು ತೀರಿಕೊಂಡಮೇಲೆ ಅವರಿಗೆ ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗಿತ್ತು. ಆರೋಗ್ಯವೂ ಸರಿಯಾಗಿರದೆ ಖಂಡಾಲ ಲೋನಾವಲಗಳಲ್ಲಿ ಸ್ವಲ್ಪದಿನ ಇದ್ದು ಸುಧಾರಿಸಿಕೊಡರು.  ಇದೇ ಸಮಯದಲ್ಲಿ ಹೈದರಾಬಾದಿನ ರಾಜಾ ದೀನ ದಯಳರ ಒತ್ತಾಯಾಕ್ಕೆ ಮಣಿದು ಅಲ್ಲಿಗೆ ಹೋಗಿ,  ೨ ತಿಂಗಳಿದ್ದು ವರ್ಣಚಿತ್ರಗಳನ್ನು ರಚಿಸಿಕೊಟ್ಟುಬಂದರು.  ೧೯೦೬ ರಲ್ಲಿ ತಮ್ಮ ೫೭ ನೆಯ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು.

ಸಾಮಾನ್ಯ ಜನರಿಗೆ ತೈಲಚಿತ್ರಗಳನ್ನು ಕೊಳ್ಳುವುದು ಸಾಧ್ಯವಿಲ್ಲದಮಾತು. ಅದಕ್ಕಾಗಿ ರವಿವರ್ಮರು, ಒಬ್ಬ ಪಾಲುದಾರನ ಜೊತೆಗೆ, ಒಪ್ಪಂದ ಮಾಡಿಕೊಂಡು ಒಂದು ಮುದ್ರಣಾಲಯವನ್ನು ಬೊಂಬಾಯಿನಲ್ಲಿ ಸ್ಥಾಪಿಸಿದರು.  ಅದನ್ನು ನೋಡಿಕೊಳ್ಳಲು ಸದಾ ಅವರು ಅಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಪಾಲುದಾರ, ಹಣವನ್ನೆಲ್ಲಾ ಲಪಟಾಯಿಸಿದ್ದ.  ೧೮೯೪ ರಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಿದ್ದರಿಂದ ತಮ್ಮ ಮುದ್ರಣಾಲಯವನ್ನು ಮಾರುವ ಪರಿಸ್ಥಿತಿ ಬಂತು. ಅವರು ಮೊದಲು  ಕಾರ್ಲಿ ಎಂಬ ಜಾಗಕ್ಕೆ ಸ್ಥಳಾಂತರಿಸಿದರು.  ಅಲ್ಲೂ ವ್ಯಾಪಾರ ಕುದುರದೆ, ಒಬ್ಬ  ವಿದೇಶಿಗೆ  ೨೫  ಸಾವಿರ ರೂಪಾಯಿಗಳಿಗೆ ಮಾರಿದರು.

ನಳ-ದಮಯಂತಿ,  ಶಂತನು ಮತ್ತು ಮತ್ಸ್ಯಗಂಧಿ,  ರಾಧಾ-ಮಾಧವ,  ಶ್ರೀಕೃಷ್ಣ-ದೇವಕಿ,  ಅರ್ಜುನ-ಸುಭದ್ರೆ, ದ್ರೌಪದಿ ವಸ್ತ್ರಾಪಹರಣ,  ವಿಶ್ವಾಮಿತ್ರ-ಮೇನಕೆ, ಹರಿಶ್ಚಂದ್ರ-ತಾರಾಮತಿ,  ಸೀತಾ-ಸ್ವಯಂವರ,  ಭರತ, ಸಿಂಹದ ಮರಿಯಜೊತೆ,  ಶ್ರೀಕೃಷ್ಣನ ಜನನ, ಕೀಚಕ ಸೈರಂಧ್ರಿ,  ಕಂಸಮಾಯೆ,   ಶಂತನು ಮತ್ತು ಗಂಗೆ, ಮುಂತಾದ  ಒಟ್ಟು  ೧೪  ತೈಲಚಿತ್ರಗಳು.

ಅಮೆರಿಕದ ಚಿಕಾಗೋ ನಲ್ಲಿ ನಡೆದ ' ವಸ್ತುಕಲಾ ಪ್ರದರ್ಶನ' ಕ್ಕೆ ೧೦ ವರ್ಣಚಿತ್ರಗಳನ್ನು ಭಾರತದಿಂದ ಕಳಿಸಲಾಗಿತ್ತು.  ಅದು ರವಿವರ್ಮರದೇ ಎಂದು ಹೇಳಬೇಕಾಗಿಲ್ಲ.  ಬರೋಡಾ  ಮಹಾರಾಜರು  ಕಳಿಸುವ  ಏರ್ಪಾಡುಮಾಡಿದ್ದರು.  ೨ ಪ್ರಶಸ್ತಿಗಳನ್ನು ರವಿವರ್ಮರು ಗಿಟ್ಟಿಸಿದ್ದರು.  ಸ್ವಾಮಿ ವಿವೇಕಾನಂದರು  ಆಗ ಅಮೆರಿಕೆಯಲ್ಲಿದ್ದರು.  ರವಿವರ್ಮರ  ತೈಲ ವರ್ಣಚಿತ್ರಗಳನ್ನು ನೋಡಿ ವಿಸ್ಮಯರಾದ ಅವರು,  ಇದನ್ನು ಬರೆದ  ಮಹಾಕಲಾಕಾರನನ್ನು ಭೇಟಿಮಾಡುವ ಉತ್ಸುಕತೆ ತೋರಿಸಿದ್ದರು.  ಒಮ್ಮೆ ಬೊಂಬಾಯಿಗೆ ಬಂದಾಗ,  ರವಿವರ್ಮರ ಮನೆಯಲ್ಲೇ ಒಂದು ದಿನ ಉಳಿದುಕೊಂಡಿದ್ದರಂತೆ.

ರಾಜಾ ರವಿವರ್ಮರು ತಮ್ಮ ೫೮ ನೆಯ ಸಣ್ಣ ಪ್ರಾಯದಲ್ಲೇ  ೨, ಅಕ್ಟೋಬರ್,  ನವೆಂಬರ್, ೧೯೦೬ ರಲ್ಲಿ ನಿಧನರಾದರು. ಭಾರತ ಸರ್ಕಾರ ಅವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಹೊರಡಿಸಿದ್ದರು.

Selected Readings :

   London, Reaktion Book.

ಲೇಖಕರು.  ಬಿ. ನರಸಿಂಗರಾವ್, ಡಾ. ಎಲ್. ಎಸ್. ಶೇಷಗಿರಿರಾವ್, ರವರ ಕಿರುಪುಸ್ತಕಮಾಲೆ.

  




#Article 144: ಮಹಾಭಾರತ (223 words)


ಮಹಾಭಾರತ ಭಾರತದ  ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು. ಇದು ಹಿಂದೂ ಧರ್ಮದ ಒಂದು ಮುಖ್ಯ ಪಠ್ಯವೂ ಹೌದು. ವಿಶ್ವ ಸಾಹಿತ್ಯದ ಸಾಧನೆಗಳಲ್ಲಿ ಒಂದೆಂದು ಪರಿಗಣಿತವಾಗಿರುವ ಮಹಾಭಾರತ ಭಾರತೀಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಸಂಪೂರ್ಣ ಮಹಾಭಾರತ ಒಂದು ಲಕ್ಷಕ್ಕೂ ಹೆಚ್ಚು ಶ್ಲೋಕಗಳನ್ನು ಒಳಗೊಂಡಿದ್ದು  ಗ್ರೀಕ್ ನ ಜನಪದ ಮಹಾಕಾವ್ಯಗಳಾದ  ಇಲಿಯಡ್ ಮತ್ತು ಒಡಿಸ್ಸಿ - ಎರಡನ್ನೂ ಸೇರಿಸಿದರೂ ಮಹಾಭಾರತದ ಏಳನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ. ಮಹಾಭಾರತ 18ಪರ್ವ ಮತ್ತು 1ಲಕ್ಷ ಶ್ಲೋಕಗಳನ್ನು ಒಳಗೊಂಡ ಅದ್ಭುತ ಮಹಾಕಾವ್ಯವಾಗಿದೆ.
ಮಹಾಭಾರತವು ವ್ಯಾಸ ಮುನಿಶ್ರೇಷ್ಠರಿಂದ ಮೂಲವಾಗಿ ರಚಿಸಲ್ಪಟ್ಟಿದೆ; ಎಂದು ನಂಬಲಾಗಿದೆ. ಮಹಾಭಾರತವನ್ನು ಪಂಚಮವೇದವೆಂದು ಕರೆಯಲಾಗಿದೆ. ಶ್ರೀ ಕೃಷ್ಣನಿಂದ ಪಾರ್ಥನಾದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಮಹಿಮಾನ್ವಿತವಾದ ಭಗವದ್ಗೀತೆ ಯನ್ನು ಮಹಾಭಾರತದ ಆತ್ಮ (ಅಂತರಾತ್ಮ) ಎನ್ನಲಾಗಿದೆ.

ಮಹಾಭಾರತ 'ಜಯ' ಎಂಬ ಗ್ರಂಥದಿಂದ ನಿಷ್ಪನ್ನವಾಗಿದ್ದೆಂದು ಕೆಲವರ ಪ್ರತೀತಿ. ಇದರಲ್ಲಿ ಉಲ್ಲೇಖಿಸಿರುವ ಘಟನೆಗಳ ನಿಜವಾದ ಕಾಲ ಸರಿಯಾಗಿ ತಿಳಿದಿಲ್ಲ. ಮಹಾಭಾರತದಲ್ಲಿ ಕಂಡು ಬರುವ ಘಟನೆಗಳು ನಿಜವಾದ ಘಟನೆಗಳನ್ನು ಆಧರಿಸಿ ಬರೆದದ್ದೋ ಅಲ್ಲವೋ ಎಂಬುದು ಕೆಲವರಲ್ಲಿ ಚರ್ಚಾಸ್ಪದ ವಿಷಯ. ಮ್ಯಾಕ್ಸ್ ಮುಲ್ಲರ್ ಪ್ರಕಾರ ಈ ಘಟನೆಗಳು ನಡೆದ ಸಂದರ್ಭ ಸುಮಾರು ಕ್ರಿ.ಪೂ. 1400. ಇನ್ನು ಮಹಾಭಾರತದ ಘಟನೆಗಳನ್ನು ಅವಲೋಕಿಸಿ ಭಾರತೀಯ ಪಂಚಾಂಗ ರೀತ್ಯ ಕಾಲನಿರ್ಣಯ ಮಾಡಿದ ಹಲವು ವಿದ್ವಾಂಸರ ಪ್ರಕಾರ ಅದರಲ್ಲಿ ಉಲ್ಲೇಖ ಮಾಡಲಾಗಿರುವ ಅಂತರಿಕ್ಷ ಚಟುವಟಿಕೆಗಳು (ಗ್ರಹಣ ಇತ್ಯಾದಿ) ಸುಮಾರು ಕ್ರಿ.ಪೂ. 3100ಕ್ಕೆ ಹೋಲುತ್ತವೆ.

ಮಹಾಭಾರತದ ಮುಖ್ಯವಾಗಿ ಚಂದ್ರವಂಶದ ರಾಜರುಗಳ ಕಥೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಕುರುವಂಶ (ಚಂದ್ರ ವಂಶ)ದ ಸದಸ್ಯರ ನಡುವೆ ನಡೆಯುವ ಹೋರಾಟವನ್ನು ಕುರಿತದ್ದು ಎಂದು ಹಲವರ ಅಭಿಮತವಾದರೂ ಈ ಹೋರಾಟದ ಕಥೆ ಕುರುಕ್ಷೇತ್ರ  ಎನಿಸಿಕೊಳ್ಳುತ್ತದೆ. ಹಸ್ತಿನಾಪುರದ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆಯುವ ಈ ಹೋರಾಟ ಕುರುಕ್ಷೇತ್ರದಲ್ಲಿ ನಡೆಯುವ ಹದಿನೆಂಟು ದಿನದ ಕುರುಕ್ಷೇತ್ರ ಯುದ್ದದಲ್ಲಿ ನಿರ್ಧಾರವಾಗುತ್ತದೆ. ಮಹಾಭಾರತದ ಕಥೆ ಶಂತನು ಮಹಾರಾಜನ ಕಥೆಯಿಂದ ಆರಂಭವಾಗಿ,  ಕೃಷ್ಣನ ಅವಸಾನ, ಪಾಂಡವರ ಸ್ವರ್ಗಾರೋಹಣದೊಂದಿಗೆ ಕೊನೆಗೊಳ್ಳುತ್ತದೆ. ಮಹಾಭಾರತದ ಉದ್ದಕ್ಕೂ ಬರುವ ಪಾತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಅಚ್ಚೊತ್ತಿರುವ ಪಾತ್ರಗಳು. ಮುಖ್ಯ ಕಥೆಯಲ್ಲದೆ, ಮಹಾಭಾರತದಲ್ಲಿ ಅನೇಕ ಉಪಕಥೆ ಗಳುಂಟು. ಹಾಗೆಯೇ ಭಗವದ್ಗೀತೆಯಂಥ ಸ್ವತಂತ್ರವಾಗಿ ನಿಲ್ಲಬಲ್ಲಂಥ ಗ್ರಂಥಗಳೂ ಮಹಾಭಾರತದ ಭಾಗಗಳಾಗಿ ಭೀಷ್ಮ ಪರ್ವದಲ್ಲಿ ಕಂಡುಬರುತ್ತವೆ. ವ್ಯವಸ್ಥೆಯ ದೃಷ್ಟಿಯಿಂದ, ಮಹಾಭಾರತದಲ್ಲಿ ಹದಿನೆಂಟು ಪರ್ವಗಳಿವೆ.

ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ:




#Article 145: ಇಲಿಯಡ್ (1191 words)


 
ಇಲಿಯಡ್ ಪ್ರಾಚೀನ ಗ್ರೀಕ್ ಮಹಾಕಾವ್ಯಗಳಲ್ಲೊಂದು. ಕಾಲ ಸು. ಕ್ರಿ. ಪೂ. 8ನೆಯ ಶತಮಾನ. ರಚಿಸಿದವ ಹೋಮರ್ ಕವಿ ಎಂದು ಪ್ರತೀತಿಯಿದೆ. ಗ್ರೀಕರಿಗೂ ಟ್ರಾಯ್ ನಗರದವರಿಗೂ ನಡೆದ ಯುದ್ಧದ ವರ್ಣನೆ ಇದರ ವಸ್ತು. ಆ ಯುದ್ಧದ ಕಡೆಯ ದಿನಗಳ ಘಟನೆಗಳು ಇದರಲ್ಲಿ ನಿರೂಪಿತವಾಗಿವೆ. ಗ್ರೀಕರ ಅಗ್ರವೀರ ಅಕಿಲೀಸ್ ತಾನು ಯುದ್ಧ ಮಾಡುವುದಿಲ್ಲವೆಂದು ಹೇಳಿ ಬೇರೆಯಾಗಿ ನಿಂತುದರ ಪರಿಣಾಮವಾಗಿ ಗ್ರೀಕರಿಗಾದ ಅನಾಹುತಗಳಲ್ಲೂ ಇದರ ಬಹುಭಾಗವನ್ನು ತೆಗೆದುಕೊಂಡಿವೆ. ಇದರಲ್ಲಿರುವುದು ಒಟ್ಟು ಇಪ್ಪತ್ತನಾಲ್ಕು ಕಾಂಡಗಳು.  

ಇಲಿಯಡ್ ಷಟ್ಪದಿಯಲ್ಲಿ ರಚಿಸಲ್ಪಟ್ಟಿದ್ದು ಸುಮಾರು ೧೬,೦೦೦ ಸಾಲುಗಳನ್ನು ಒಳಗೊಂಡಿದೆ. ನಂತರದ ಗ್ರೀಕರು ಇದನ್ನು ೨೪ ಅಧ್ಯಾಯಗಳಾಗಿ ವಿಂಗಡಿಸಿದರು. 

ಇಲಿಯಡ್ ಮತ್ತು ಹೋಮರನ ಇನ್ನೊಂದು ಮಹಾಕಾವ್ಯವಾದ ಒಡಿಸ್ಸಿ ಪ್ರಾಚೀನ ಗ್ರೀಕ್ ಕಾವ್ಯದ ಪ್ರಧಾನ ಕೃತಿಗಳೆಂದು ಹೇಳಲಾಗುತ್ತದೆ. ಹೋಮರ್ ಕವಿ ನಿಜವಾದ ವ್ಯಕ್ತಿಯೇ ಅಲ್ಲವೇ, ಅಥವಾ ಹೋಮರ್ ಒಬ್ಬನೇ ವ್ಯಕ್ತಿಯೋ ಅನೇಕ ವ್ಯಕ್ತಿಗಳೋ ಮೊದಲಾದ ಚರ್ಚೆಗಳು ಅನೇಕ ವರ್ಷಗಳಿಂದ ನಡೆದಿವೆ.  

ಇಲಿಯಡ್ ನ ಕಥೆ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವಿನ ಯುದ್ಧವೊಂದರ ಹತ್ತನೆ ಮತ್ತು ಕೊನೆಯ ವರ್ಷದ ಘಟನೆಗಳನ್ನು ಕುರಿತದ್ದು. ಮುಖ್ಯವಾಗಿ ಅಕೀಲೀಸ್ ಎಂಬ ಗ್ರೀಕ್ ವೀರನ ಸಾಹಸಗಳನ್ನು ತಿಳಿಸುತ್ತದೆ. ಅಕೀಲೀಸ್ ಮತ್ತು ಅಗಮೆಮ್ನಾನ್ ರ ನಡುವಿನಾ ಜಗಳದೊಂದಿಗೆ ಆರಂಭಗೊಂಡು, ಹೆಕ್ಟರ್ ಎಂಬ ಟ್ರಾಯ್ ದೇಶದ ವೀರನ ಮರಣ ಮತ್ತು ಅಂತ್ಯಸಂಸ್ಕಾರದೊಂದಿಗೆ ಕಾವ್ಯ ಕೊನೆಗೊಳ್ಳುತ್ತದೆ.

ಟ್ರಾಯ್ ನಗರದ ರಾಜ ಪ್ರಯಮನ ಮಗ ಪ್ಯಾರಿಸ್ ಗ್ರೀಸಿನ ಸ್ಪಾರ್ಟಾದ ಮೆನೆಲಾಸನ ಪತ್ನಿ ಪರಮ ಸುಂದರಿ ಹೆಲೆನಳನ್ನು ಎತ್ತಿಕೊಂಡು ಹೋದುದು ತಮ್ಮ ನಾಡಿಗೇ ಆದ ಅಪಮಾನವೆಂದು ಕೆರಳಿದ ಗ್ರೀಕ್ ರಾಜರು ತಮ್ಮ ತಮ್ಮ ಯೋಧರೊಡನೆ ನೂರಾರು ಹಡಗುಗಳಲ್ಲಿ ಈಜಿಯನ್ ಸಮುದ್ರವನ್ನು ದಾಟಿ ಏಷ್ಯ ಮೈನರಿನ ವಾಯವ್ಯಮೂಲೆಯಲ್ಲಿ ಕಡಲತೀರಕ್ಕೆ ಮೂರು ಮೈಲಿ ದೂರದಲ್ಲಿದ್ದ ಟ್ರಾಯ್ ಕೋಟೆಗೆ ಮುತ್ತಿಗೆ ಹಾಕಿದರು. ಟ್ರಾಯ್ ಜನ (ಟ್ರೋಜನರು) ಕೋಟೆಯ ಬಾಗಿಲನ್ನು ಭದ್ರಪಡಿಸಿ ಒಂಬತ್ತು ವರ್ಷ ಕಳೆದರೂ ಅಲ್ಲಾಡಲಿಲ್ಲ. ಅಷ್ಟು ಕಾಲವೂ ಗ್ರೀಕರು ಸುತ್ತಮುತ್ತಲ ಸಣ್ಣಪುಟ್ಟ ರಾಜ್ಯಗಳಿಗೆ ಮುತ್ತಿಗೆ ಹಾಕಿ ಅವನ್ನು ಗೆದ್ದು ಅಲ್ಲಿನವರನೇಕರನ್ನು ಸೆರೆಯಾಳುಗಳಾಗಿಯೂ, ದಾಸಿಯರಾಗಿಯೂ ಹಿಡಿದು ತಂದರು. ಅಂಥವರಲ್ಲಿ ಒಬ್ಬಳು ಅಕಿಲೀಸನ ದಾಸಿ ಬ್ರಿಸೇಯಿಸ್, ಬ್ರೈಸಿಸ್ ಎಂಬುವನ ಮಗಳು. ಗ್ರೀಕರ ಪ್ರಧಾನ ಸೇನಾಪತಿ ಮೆನೆಲಾಸನ ತಮ್ಮ ಆಗಮೆಮ್ನಾನ್‍ನ ದಾಸಿ ಕ್ರಿಸೇಯಿಸ್ ಕ್ರೈಸಿಸನ ಮಗಳು ಇನ್ನೊಬ್ಬಳು. ಕ್ರೈಸೀಸ್ ಅಪೊಲೊ ದೇವನ ಪೂಜಾರಿ, ಅವನು ತನ್ನ ಮಗಳಿಗುಂಟಾದ ಪಾಡನ್ನು ನೋಡಿ ಆ ದೇವತೆಗೆ ಮೊರೆಯಿಡಲು, ಗ್ರೀಕರನ್ನು ಶಿಕ್ಷಿಸುವ ಸಲುವಾಗಿ ಅಪೊಲೊ ವ್ಯಾಧಿಯೊಂದನ್ನು ಗ್ರೀಕ್ ಸೈನಿಕರಲ್ಲಿ ಹರಡಿದ. ಕಾಲ್ಟಾಸ್ ಎಂಬ ದಿವ್ಯಜ್ಞಾನಿಯಿಂದ ಈ ಪಿಡುಗಿಗೆ ಕಾರಣವನ್ನು ತಿಳಿದುಕೊಂಡ ಗ್ರೀಕರು ಕ್ರಿಸೇಯೀಸಳನ್ನು ಅವಳ ತಂದೆಗೆ ಹಿಂದಿರುಗಿಸಬೇಕೆಂದು ಒತ್ತಾಯ ಮಾಡಿದರು. ಹಾಗೆ ಮಾಡಲೇಬೇಕಾಗಿ ಬಂದಾಗ ಆಗಮೆಮ್ನಾನ್ ತನ್ನ ದಾಸಿ ಹೋದುದರಿಂದ ಅವಳಿಗೆ ಬದಲಾಗಿ ಅಕಿಲೀಸನ ದಾಸಿಯನ್ನು ಬಲವಂತವಾಗಿ ತಂದಿಟ್ಟುಕೊಂಡ. ಇದರಿಂದ ಅಸಮಾಧಾನಗೊಂಡ ಅಕಿಲೀಸ್ ತಾನು ಯುದ್ಧದಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿ ತನ್ನ ಅನುಯಾಯಿಗಳಾದ ಮಿರ್ ಮಿಡನ್ನರನ್ನು ಕರೆದುಕೊಂಡು ದೂರನಿಂತ. ಅಕಿಲೀಸನ ತಾಯಿ ಥೆಟಿಸ್ ಎಂಬ ದೇವತೆ. ಅವಳು ತನ್ನ ಮಗನಿಗಾದ ಅಪಮಾನವನ್ನು ಕಂಡು ದುಃಖಿತಳಾಗಿ ದೇವಾಧಿದೇವ ಜ್ಯೂಸನ ಬಳಿಗೆ ಹೋಗಿ ದೂರಿತ್ತಳು. ಗ್ರೀಕರು ಅಕಿಲೀಸನ ಹಿರಿಮೆಯನ್ನು ಅರಿತುಕೊಳ್ಳುವಂತೆ ಮಾಡುವುದಾಗಿ ಜ್ಯೂಸ್ ಮಾತುಕೊಟ್ಟ. ಈ ದಾಸಿಯರ ಪ್ರಸಂಗ ಇಲಿಯಡ್‍ನ ಮೊದಲ ಕಾಂಡದ ಕಥೆ.

ಗ್ರೀಕರಿಗೆ ಅಕಿಲೀಸನ ಔನ್ನತ್ಯದ ಅರಿವಾಗಬೇಕಾದರೆ ಯುದ್ಧ ಆರಂಭವಾಗಬೇಕು. ಆದ್ದರಿಂದ ಎರಡನೆ ಕಾಂಡದಲ್ಲಿ ಜ್ಯೂಸ್ ಆಗಮೆಮ್ನಾನಿಗೊಂದು ಕನಸನ್ನು ಕಳುಹಿಸಿ ಯುದ್ಧ ಮಾಡಬೇಕೆಂದು ಸೂಚಿಸುತ್ತಾನೆ. ಆಗಮೆಮ್ನಾನ್ ತನ್ನ ಜನರನ್ನು ಪರೀಕ್ಷಿಸಲು ತಾವೆಲ್ಲ ಸ್ವದೇಶಕ್ಕೆ ಹಿಂದಿರುಗಬೇಕೆಂದು ಹೇಳುತ್ತಾನೆ. ತಕ್ಷಣ ಅವರೆಲ್ಲ ಸಂತೋಷದಿಂದ ಹಡಗುಗಳ ಕಡೆಗೆ ಓಡುತ್ತಾರೆ. ಒಡಿಸ್ಸಿಯಸ್ ಅವರನ್ನು ಹಿಂದಕ್ಕಟ್ಟುತ್ತಾನೆ. ಈ ಸಂದರ್ಭದಲ್ಲಿ ಗ್ರೀಕ್ ಹಡಗುಗಳನ್ನೂ ಗ್ರೀಕ್ ಸೈನ್ಯದ ಪ್ರಮುಖರನ್ನೂ ಕುರಿತ ವಿವರಗಳು ಬರುತ್ತವೆ. ಮೂರನೆಯ ಕಾಂಡದಲ್ಲಿ ಹೆಲೆನಳನ್ನು ಹಾರಿಸಿಕೊಂಡು ಬಂದು ಯುದ್ಧಕ್ಕೆ ಕಾರಣನಾಗಿದ್ದ ಪ್ಯಾರಿಸ್ ಅವಳ ಪತಿ ಮೆನೆಲಾಸ್‍ನೊಡನೆ ದ್ವಂದ್ವಯುದ್ಧದಲ್ಲಿ ತೊಡಗಿ ಸಾಯುತ್ತಾನೆ. ಅವನು ಸಾಯುವ ವೇಳೆಗೆ ಅವನ ಪಕ್ಷಪಾತಿಯಾದ ಸೌಂದರ್ಯಾಧಿದೇವತೆ ಆಫ್ರೋಡಿಟಿ ಅವನನ್ನು ಯುದ್ಧಭೂಮಿಯಿಂದ ಕರೆದೊಯ್ಯುತ್ತಾಳೆ. ನಾಲ್ಕನೆಯ ಕಾಂಡದಲ್ಲಿ ಗ್ರೀಕರ ಪರವಾಗಿರುವ ಅಥೀನದೇವಿ ಟ್ರಾಯ್ ಪಕ್ಷದ ಪ್ಯಾಂಡರಸ್ ಎಂಬಾತನನ್ನು ಮೆನಲಾಸನಿಗೆ ಗುರಿಯಿಟ್ಟು ಬಾಣಪ್ರಯೋಗ ಮಾಡುವಂತೆ ಪ್ರೇರಿಸಿ ಎರಡು ಸೈನ್ಯಗಳಿಗೂ ಮತ್ತೆ ಯುದ್ಧ ಆರಂಭವಾಗುವಂತೆ ಮಾಡುತ್ತಾಳೆ. ಐದನೆ ಕಾಂಡದಲ್ಲಿ ಗ್ರೀಕರ ಡಿಯೋಮಿಡಿಸ್ ವೀರಾವೇಶದಿಂದ ಹೋರಾಡಿ ಪ್ಯಾಂಡರಸನ್ನೂ ಇನ್ನಿತರ ಅನೇಕ ಟ್ರೋಜನರನ್ನೂ ಕೊಲ್ಲುತ್ತಾನೆ. ಟ್ರೋಜನರಿಗೆ ಸಹಾಯ ಮಾಡುವ ಆಫ್ರೋಡಿಟಿ ಮತ್ತು ಐರಿಸ್ ದೇವತೆಗಳೂ ಅವನ ಆಯುಧಗಳ ಸವಿಗಾಣದೆ ಹೋಗುವುದಿಲ್ಲ. 

ಆರನೆಯ ಕಾಂಡದಲ್ಲಿ ಟ್ರಾಯ್‍ನ ಹಿರಿಯ ರಾಜಕುಮಾರ ಹೆಕ್ಟರ್ ಟ್ರಾಯ್ ನಗರದವರೆಲ್ಲ ಅಥೀನಳಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಸಲಹೆಕೊಟ್ಟು ತನ್ನ ಹೆಂಡತಿ (ಆಂಡ್ರೊಮೆಕೆ) ಮತ್ತು ಪುಟ್ಟಮಗುವನ್ನು ಮನಕರಗುವಂಥ ಸನ್ನಿವೇಶವೊಂದರಲ್ಲಿ ಭೇಟಿ ಮಾಡಿ ಬೀಳ್ಕೊಂಡು ಸಮರಭೂಮಿಗೆ ತೆರಳುತ್ತಾನೆ. 

ಏಳನೆ ಕಾಂಡದಲ್ಲಿ ಟ್ರೋಜನ್ ವೀರ ಹೆಕ್ಟರನಿಗೂ ಗ್ರೀಕರ ಕಡೆಯ ಏಜ್ಯಾಕ್ಸ್‍ಗೂ ಕಾಳಗ ನಡೆಯುತ್ತದೆ. 

ದೇವತೆಗಳು ಯಾರೂ ಯುದ್ಧದಲ್ಲಿ ಭಾಗವಹಿಸಕೂಡದೆಂದು ಜ್ಯೂಸ್ ಅಪ್ಪಣೆ ಮಾಡುತ್ತಾನೆ (ಎಂಟನೆ ಕಾಂಡ). ಹೀರಾ ಮತ್ತು ಅಥೀನ ದೇವಿಯರು ಮೊದಮೊದಲು ಇದನ್ನು ಒಪ್ಪದೆ ಇದ್ದರೂ ಆಮೇಲೆ ಸುಮ್ಮನಾಗುತ್ತಾರೆ. ಯುದ್ಧ ಗ್ರೀಕರಿಗೆ ಪ್ರತಿಕೂಲವಾಗಿ ತಿರುಗುತ್ತದೆ. 

ತತ್ಕಾರಣ (ಒಂಬತ್ತನೆ ಕಾಂಡದಲ್ಲಿ) ಆಗಮೆಮ್ನಾನ್ ಬ್ರಿಸೇಯಿಸಳನ್ನು ಅಕಿಲೀಸಿಗೆ ಹಿಂದಕ್ಕೆ ಕೊಟ್ಟುಬಿಡುವುದಾಗಿಯೂ ಜೊತೆಗೆ ಬೇರೆ ಉಡುಗೊರೆಗಳನ್ನು ಕೊಡುವುದಾಗಿಯೂ ಹೇಳಿಕಳುಹಿಸುತ್ತಾನೆ. ಅಕಿಲೀಸ್ ಈ ಸಂಧಾನಕ್ಕೆ ಒಪ್ಪದೆ ಕೋಪದಿಂದ ಸಿಡಿದೆದ್ದು ಮಾರನೆಯ ದಿನವೇ ಸ್ವದೇಶಕ್ಕೆ ಮರುಳುವುದಾಗಿ ಶಪಥ ಮಾಡುತ್ತಾನೆ. 

ಹತ್ತನೆಯ ಕಾಂಡದಲ್ಲಿ ಒಡಿಸ್ಸಿಯಸ್ ಮತ್ತು ಡಿಯೊಮೀಡರು ಟ್ರಾಯ್ ಸೈನ್ಯವ್ಯೂಹದಲ್ಲಿ ಗೂಢಚರ್ಯೆ ನಡೆಸಿ ಆ ಕಡೆಯ ಕೆಲವರನ್ನು ಸಂಹರಿಸುತ್ತಾರೆ. 

ಹನ್ನೊಂದನೆ ಕಾಂಡದಲ್ಲಿ ಆಗಮೆಮ್ನಾನ್, ಒಡಿಸ್ಸಿಯಸ್, ಡಿಯೊಮೀಡಿಸ್ ಮೊದಲಾದವರು ಗಾಯಗೊಳ್ಳುತ್ತಾರೆ. ಅಕಿಲೀಸ್ ಯುದ್ಧ ಹೇಗೆ ಸಾಗುತ್ತದೆಯೆಂದು ನೋಡಿಬರಲು ತನ್ನ ಆಪ್ತ ಸ್ನೇಹಿತ ಪೆಟ್ರಾಕ್ಲಸನನ್ನು ಕಳುಹಿಸಿಕೊಡುತ್ತಾನೆ. ವೃದ್ಧ ನೆಸ್ಟರ್ ಅಕಿಲೀಸ್ ಯುದ್ಧಕ್ಕೆ ಬರುವಂತೆ ಮಾಡಬೇಕೆಂದೂ ಅದಿಲ್ಲದಿದ್ದರೆ ತನ್ನ ಇತರ ಯೋಧರೊಡನೆ ಪೆಟ್ರಾಕ್ಲಿಸನನ್ನಾದರೂ ಕಳುಹಿಸಿಕೊಡಬೇಕೆಂದೂ ಸೂಚಿಸುತ್ತಾನೆ. 

ಹನ್ನೆರಡರಿಂದ ಹದಿನಾರನೆ ಕಾಂಡಗಳವರೆಗೂ ಯುದ್ಧದಲ್ಲಿ ಒಮ್ಮೆ ಆ ಕಡೆ ಒಮ್ಮೆ ಈ ಕಡೆ ಜಯ ಲಭಿಸುತ್ತದೆ. ಜ್ಯೂಸನ ಆಜ್ಞೆಗೆ ವಿರೋಧವಾಗಿಯೇ ದೇವತೆಗಳು ತಮತಮಗೆ ಬೇಕಾದವರಿಗೆ ಸಹಾಯವೆಸಗುತ್ತಾರೆ. ಕೊನೆಗೆ ಹೆಕ್ಟರ್ ನುಗ್ಗಿ ಬಂದು ಗ್ರೀಕರ ನಾವೆಗಳಿಗೆ ಬೆಂಕಿಯಿಡಲು ಯತ್ನಿಸುತ್ತಾನೆ. ಪೆಟ್ರಾಕಿಸ್ ಅಕಿಲೀಸನನ್ನು ಯುದ್ಧಕ್ಕೆ ಬರಬೇಕೆಂದು ಬೇಡಿಕೊಳ್ಳುತ್ತಾನೆ. ಅಕಿಲೀಸ್ ತಾನು ಹೋಗಲು ಈಗಲು ಇಷ್ಟಪಡುವುದಿಲ್ಲ. ತನ್ನ ಯುದ್ಧ ಕವಚವನ್ನು ಗೆಳೆಯನಿಗೆ ಕೊಟ್ಟು ಅದನ್ನು ಧರಿಸಿಹೋಗಿ ಟ್ರೋಜನರನ್ನು ಹಿಂದಕ್ಕೆ ಬರಬೇಕೆಂದು; ಪೆಟ್ರಾಕ್ಲಿಸನಿಗೆ ಹೇಳುತ್ತಾನೆ. ಅಕಿಲೀಸನ ಕವಚವನ್ನು ಧರಿಸಿ ಹೋಗುವ ಪೆಟ್ರಾಕ್ಲಿಸ್ ಟ್ರೋಜನರನ್ನು ಟ್ರಾಯ್ ಕೋಟಿಯವರೆಗೂ ಅಟ್ಟಿಸಿಕೊಂಡು ಹೋಗುತ್ತಾನೆ. ಅಲ್ಲಿ ಅವನು ಹೆಕ್ಟರಿನಿಂದ ಹತನಾಗುತ್ತಾನೆ. (16ನೆಯ ಕಾಂಡ). 

ಹದಿನೇಳನೆಯ ಕಾಂಡದಲ್ಲಿ ಹೆಕ್ಟರ್ ಅಕಿಲೀಸನ ಕವಚವನ್ನು ಕಿತ್ತಿಟ್ಟುಕೊಳ್ಳುತ್ತಾನೆ. ಅವನ ಮೃತ ದೇಹವನ್ನು ಮೆನೆಲಾಸ್ ಮೊದಲಾದವರು ಕಷ್ಟಪಟ್ಟು ಉಳಿಸಿಕೊಂಡು ಹೋಗುತ್ತಾರೆ. ಗೆಳೆಯನಿಗಾದ ದುರಂತವನ್ನು ಕಂಡು ಕೋಪೋದ್ರಕ್ತನಾಗುವ ಅಕಿಲೀಸ್ ಸೇಡು ತೀರಿಸಿಕೊಳ್ಳಲೆಂದು ಸಮರಕ್ಕಿಳಿಯುತ್ತಾನೆ. ಈಗ ಹೆಕ್ಟರನ ವಶವಾಗಿರುವ ಅವನ ಕವಚಕ್ಕೆ ಬದಲಾಗಿ ದೇವತೆಗಳ ಕಮ್ಮಾರ ಹೆಫೀಸ್ಟ್ಸ್ ಅವನಿಗೊಂದು ಹೊಸ ಗುರಾಣಿಯನ್ನೂ ಇತರ ಆಯುಧಗಳನ್ನೂ ಮಾಡಿಕೊಡುತ್ತಾನೆ. ಆ ಗುರಾಣಿಯ ಮೇಲೆಲ್ಲ ಗ್ರೀಕರ ಜೀವನದ ಚಿತ್ರಗಳು ವಿಪುಲವಾಗಿ ಚಿತ್ರಿತವಾಗಿರುತ್ತದೆ. ಅವನ್ನು ಧರಿಸಿ ಅಕಿಲೀಸ್ (ತಾನು ಅಲ್ಪಾಯು ಎಂಬ ಭವಿಷ್ಯವಾಣಿಯಿದ್ದರೂ ಲೆಕ್ಕಿಸದೆ) ಮುಂದೆ ನುಗ್ಗಿ ಯುದ್ಧದ ಕಣವನ್ನು ಹೊಕ್ಕು ಹೋರಾಡತೊಡಗುತ್ತಾನೆ. ಅವನಿಲ್ಲದೆ ಗ್ರೀಕರಿಗೆ ಜಯ ದೊರೆಯಕೂಡದೆಂದು ಜ್ಯೂಸ್ ಥೆಟಿಸಳಿಗಿತ್ತಿದ್ದ ಮಾತು ಈಗ ಸತ್ಯವಾಗುತ್ತದೆ. ಜ್ಯೂಸ್ ದೇವನೆ ಈಗ ಒಂದು ಪಕ್ಷ ವಹಿಸುವುದರಿಂದ ಇತರ ಸ್ತ್ರೀಪುರುಷ ದೇವತೆಗಳೆಲ್ಲ ತಮಗೆ ಬೇಕಾದ ಕಡೆ ಸೇರಿ ಬೇಕಾದವರಿಗೆ ಸಹಾಯ ಮಾಡುತ್ತಾರೆ (21ನೆಯ ಕಾಂಡ). 

ಅಕಿಲೀಸ್ ಟ್ರೋಜನ್ ಸೈನಿಕರನ್ನು ಮಟ್ಟಹಾಕುತ್ತಾನೆ (21ನೆಯ ಕಾಂಡ). ಇಪ್ಪತ್ತೆರಡನೆಯ ಕಾಂಡದಲ್ಲಿ ಹೆಕ್ಟರ್ ಟ್ರಾಯ್ ಕೋಟೆಯ ಗೋಡೆಯ ಬಳಿ ಕಾದು ನಿಂತಿರುತ್ತಾನೆ. ಅಲ್ಲಿಗೆ ಬರುವ ರೋಷಭೀಷಣನಾದ ಅಕಿಲೀಸನನ್ನು ನೋಡಿ ಅವನು ಕಾಲುಕೀಳುತ್ತಾನೆ. ಅದರಿಂದ ಪ್ರಯೋಜನವಾಗುವುದಿಲ್ಲ. ಕಡೆಗೆ ಆತ ಅಕಿಲೀಸನ ಆಯುಧಕ್ಕೆ ತುತ್ತಾಗಿ ಸತ್ತುಬೀಳುತ್ತಾನೆ. ಅವನ ಶವವನ್ನು ತನ್ನ ರಥದ ಗಾಲಿಗೆ ಕಟ್ಟಿ ಮಣ್ಣಿನಲ್ಲಿ ಎಳೆದುಕೊಂಡು ಅಕಿಲೀಸ್ ತನ್ನ ಬಿಡಾರಕ್ಕೆ ಧಾವಿಸುತ್ತಾನೆ. ಹೆಕ್ಟರನ ನೆಂಟರಿಷ್ಟರ ದುಃಖ ಉಕ್ಕಿಬರುತ್ತದೆ. 

ಇಪ್ಪತ್ತಮೂರನೆಯ ಕಾಂಡದಲ್ಲಿ ಅಕಿಲೀಸ್ ಪೆಟ್ರಾಕ್ಲಿಸನ ಮೃತದೇಹದ ದಹನ ಮಾಡುತ್ತಾನೆ. ಅದರೊಡನೆ ಹನ್ನೆರಡು ಮಂದಿ ಟ್ರೋಜನ್ ಯುವಕರನ್ನು ಸುಡುತ್ತಾನೆ. 

ಆದರೆ (24ನೆ ಕಾಂಡ) ಹೆಕ್ಟರನ ದೇಹಕ್ಕೆ ಅವನು ಅತ್ಯಂತ ಅಗೌರವವನ್ನು ತೋರಿಸಲು ಜ್ಯೂಸ್ ಥೆಟೆಸಳನ್ನು ಕಳುಹಿಸಿ ಹೀಗೆ ಮಾಡಿದರೆ ಅವನು ದೇವತೆಗಳ ಕೋಪಕ್ಕೆ ಪಾತ್ರನಾಗಬೇಕಾಗುವುದೆಂದು ಹೇಳಿಕಳಿಸುತ್ತಾನೆ. ಹೆಕ್ಟರನ ಮುದಿ ತಂದೆ ಪ್ರಿಯಮ್ ಮಗನ ದೇಹವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ರಾತ್ರಿಯ ಕತ್ತಲಲ್ಲಿ ಅಕಿಲೀಸನ ಬಿಡಾರಕ್ಕೆ ಬರುತ್ತಾನೆ. ಅವನ್ನು ಕಂಡು ಮರುಕದಿಂದ ಕರಗುವ ಅಕಿಲೀಸ್ ಹೆಕ್ಟರನ ದೇಹವನ್ನು ಹಿಂದಕ್ಕೆ ಕೊಡಲು ಒಪ್ಪುವುದಲ್ಲದೆ ಹೆಕ್ಟರನ ಉತ್ತರಕ್ರಿಯೆಗಳೆಂದು ಕೆಲದಿನ ಯುದ್ಧ ನಿಲ್ಲಿಸುತ್ತಾನೆ. ಹೇಗೆ ಅಕಿಲೀಸನ ಹಿರಿಮೆ ಸ್ಥಾಪಿತವಾಗುತ್ತದೆ.

ಇದು ಇಲಿಯಡ್ ಕಾವ್ಯದ ಕಥೆ.

ಇಲಿಯಡ್ ಎಂಬುದು ಟ್ರಾಯ್‍ನ ಇನ್ನೊಂದು ಹೆಸರಾದ ಇಲಿಯಮ್‍ನಿಂದ ಬಂದುದು (ಇಲ್ಲಸ್ ಎಂಬುವನು ಅದರ ಸ್ಥಾಪಕನೆಂಬ ನಂಬಿಕೆಯಿತ್ತು. ಇಲಿಯಮ್‍ನಲ್ಲಿ ಅವನ ಹೆಸರಿನ ಸೂಚನೆಯಿದೆ). ಟ್ರೋಜನ್ ಯುದ್ಧ ವಾಸ್ತವವಾಗಿ ನಡೆಯಿತೆಂಬುದಕ್ಕೆ ಭೂ ಸಂಶೋಧಕರಿಗೆ ರುಜುವಾತು ಸಿಕ್ಕಿದೆ. ಕ್ರಿ.ಪೂ. 12ನೆಯ ಶತಮಾನದಲ್ಲಿ ಗ್ರೀಕರಿಗೂ ಟ್ರಾಯ್ ಜನಕ್ಕೂ ಒಂದು ನಿಜವಾದ ಯುದ್ಧ ನಡೆದಿರಬೇಕು;. ಅದರ ಯೋಧರ ಮತ್ತು ವೀರರ ವಿಚಾರವಾಗಿ ಅನೇಕಾನೇಕ ಕಥೆಗಳು ಹುಟ್ಟಿಕೊಂಡು ಬೆಳೆದಿರಬೇಕು. ಕ್ರಿ. ಪೂ. ಎಂಟನೆ ಶತಮಾನದ ಹೊತ್ತಿಗೆ ಇಂಥ ನೂರಾರು ಕಥೆ, ಕವನಗಳು ಜನಗಳಲ್ಲಿ ಬಾಯಿಂದ ಬಾಯಿಗೆ ಹಬ್ಬಿ ಪ್ರಚಾರವಾಗಿದ್ದಿರಬೇಕು. ಹೋಮರ್ ಎಂಬ ಕವಿ ಅವನ್ನು ಸಂಗ್ರಹಿಸಿ ಅವಕ್ಕೆ ಪರಸ್ಪರ ಸಂಬಂಧವನ್ನು ಕಲ್ಪಿಸಿ ಅವನ್ನು ಜೋಡಿಸಿ ಪರಿಷ್ಕರಿಸಿ ಇಲಿಯಡ್ ಕಾವ್ಯವಾಗಿ ಹೆಣೆದಿರಬೇಕು.

ಈ ಮಹಾಕಾವ್ಯದ ಪ್ರಾರಂಭದ ಪಂಕ್ತಿಗಳೇ ಹೇಳುವಂತೆ ಇದರ ವಸ್ತು 'ಅಕಿಲೀಸನ ಕ್ರೋಧ. ಸತ್ತ ಮಹಾವೀರ ಹೆಕ್ಕಡನ ಶವವನ್ನು ರಥಕ್ಕೆ ಕಟ್ಟಿ ಪ್ರತಿ ಬೆಳಗೂ ಅಕಿಲೀಸ್ ಅದನ್ನು ಮಣ್ಣಿನಲ್ಲಿ ಎಳೆಯುತ್ತಾನೆ. ಕ್ರೋಧವು ಮನುಷ್ಯನನ್ನು ಹೇಗೆ ಮೃಗವನ್ನಾಗಿ ಮಾಡಿ ಬಿಡುವುದೆಂಬ ಚಿತ್ರ ಇಲ್ಲಿದೆ. ಪ್ರಿಯತಮೆ ಅಕಿಲೀಸನ ಗುಡಾರಕ್ಕೆ ಬಂದು ಮಗನ ದೇಹವನ್ನು ಬೇಡುವುದು ಜಗತ್ತಿನ ಸಾಹಿತ್ಯದ ಮರೆಯಲಾಗದ ದೃಶ್ಯಗಳಲ್ಲಿ ಒಂದು. ಅಕಿಲೀಸ್ ಕರಗಿ ಹೋಗಿ, ಪಶುವಾಗಿದ್ದವನು ಮತ್ತೆ ಮನುಷ್ಯನಾಗುತ್ತಾನೆ. ಹೆಕ್ಟರ್ ತನ್ನ ಹೆಂಡತಿಯನ್ನೂ ಮಗುವನ್ನು ನೋಡುವುದು, ಹೆಲೆನ್ ಹೆಕ್ಟರನ ಶವದ ಬಳಿ ದುಃಖಿಸುವುದು ಭಾವಾತಿರೇಕವಿಲ್ಲದೆ ಹೃದಯವನ್ನು ಮುಟ್ಟುವ ದೃಶ್ಯಗಳು.

ಈ ಮಹಾಕಾವ್ಯದಲ್ಲಿ ದೇವತೆಗಳ ಚಿತ್ರಣವೂ ಇದೆ. ಬಹುಮಟ್ಟಿಗೆ, ಈ ದೇವತೆಗಳಿಗಿಂತ ಬಹುಮಂದಿ ಮನುಷ್ಯನೇ ಉದಾತ್ತರಾಗಿ, ಗೌರವಾರ್ಹರಾಗಿ ಕಾಣುತ್ತಾರೆ. ದೇವತೆಗಳು ಅಮರರು, ಶಕ್ತಿಶಾಲಿಗಳು, ಅದರಿಂದ ಮನುಷ್ಯರು ಅವರಿಗೆ ತಲೆ ಬಾಗಿ ನಡೆಯಬೇಕು. ಇಲ್ಲಿ ಮನುಷ್ಯನ ಜಗತ್ತಿನ ಅತ್ಯುನ್ನತ ಮೌಲ್ಯಗಳು ಸಾಹಸ ಮತ್ತು ವೀರನೆಂಬ ಶುಭ್ರ ಯಶಸ್ಸು ಇಲ್ಲಿ ಕವಿ ಸುಮಾರು ಕ್ರಿ.ಪೂ. 11-12ನೆಯ ಶತಮಾನದ ಕಂಚಿನ ಯುಗವನ್ನು ಚಿತ್ರಿಸುತ್ತಿದ್ದಾನೆ, ಇದೊಂದು ವೀರಯುಗ.

ಹೋಮರನ ಮಹಾಕಾವ್ಯಗಳು ಯೂರೋಪಿನ ಮಹಾಕಾವ್ಯ ಪರಂಪರೆಯನ್ನು ಪ್ರಾರಂಭಿಸಿದವು. ಮಹಾಕಾವ್ಯವು ತನ್ನ (ನಾಯಕನ) ಯುಗದ ಮೌಲ್ಯಗಳ ಸಾಕಾರಮೂರ್ತಿಯಾದ ಅಪ್ರತಿಮ ವೀರನ ಸುತ್ತ ಬೆಳೆದ ದೀರ್ಘ ಕಥೆಯಾಯಿತು, ಮಾನವಾತೀತಿ ಜಗತ್ತು ಇದರಲ್ಲಿ ಸೇರಿಕೊಂಡಿತು, ಇಡೀ ಕಾವ್ಯ ಒಂದು ಮಹತ್ತರ ಘಟನೆಯ ಸುತ್ತ ರೂಪ ತಾಳಿತು, ಹಿನ್ನೋಟದ ಕಥನ (ರಿಟ್ರಾಸ್ಪೆಕ್ಟಿನ್ ನ್ಯಾರೇಷನ್) ಕಥನ ತಂತ್ರದ ಭಾಗವಾಯಿತು. ಮಹೋಪಮೆಯನ್ನು ಮೊದಲು ಬಳಸಿದವನು ಹೋಮರ್, ಆದುದರಿಂದ ಇದಕ್ಕೆ 'ಹೋಮೆರಿಕ್ ಸಿಮಿಲಿ ಎಂದೂ ಹೆಸರು.

ಪಾಶ್ಚಾತ್ಯ ವಿಮರ್ಶಕರು ಮಹಾಕಾವ್ಯಗಳಲ್ಲಿ ಎರಡು ಬಗೆ ಎನ್ನುತ್ತಾರೆ. ಮೊದಲನೆಯದು 'ಪ್ರೈಮರಿ ಎಪಿಕ್. ಇದಕ್ಕೆ ಮಾದರಿ ಇಲ್ಲಿ, ಇದೇ ಮುಂದಿನ ಮಹಾಕಾವ್ಯಗಳಿಗೆ ಮಾದರಿ, ಮಹಾಕಾವ್ಯಗಳ ಪರಂಪರೆಯನ್ನು ಪ್ರಾರಂಭಿಸುತ್ತದೆ. ಇದು 'ಪ್ರಿಮಿಟಿನ್ ಎಪಿಕ್ ಸರ್ಕಾರಿ ಹೊರವಲಯ ಮುದ್ರಣಾಲಯ ಹೌದು. ಅನಂತರ ಬರುವವು 'ಸೆರೆಂಡಾ ಎಪಿಕ್‍ಗಳು, ನಾಗರೀಕತೆಯ ಮಹಾಕಾವ್ಯಗಳು. ಇಲಿಯಡ್ ಪ್ರೈಮರಿ ಎಪಿಕ್; ಪಾಶ್ಚಾತ್ಯ ಮಹಾಕಾವ್ಯ ಪರಂಪರೆಯ ಉದ್ಘಾಟನೆಯನ್ನು ಮಾಡಿತು

ಹೋಮರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂಬ ವಾದವೂ ಇದೆ. ಗ್ರೀಕ್ ಭಾಷೆಯಲ್ಲಿ ಆ ಮಾತಿಗೆ ಸಂಗ್ರಾಹಕ ಎಂದು ಅರ್ಥ. ಆದಕಾರಣ ಹಲವರು ರಚಿಸಿದ ಕವಿತೆಗಳನ್ನು ಯಾರೋ ಸಂಗ್ರಹಿಸಿ ಸಂಪಾದಿಸಬೇಕು. ಅವನಿಗೆ ಹೋಮರ್ ಎಂಬ ಅನ್ವರ್ಥನಾಮ ಬಂದಿರಬೇಕು ಎಂದು ಕೆಲವರು ವಿದ್ವಾಂಸರು ಹೇಳುತ್ತಾರೆ. ಆದರೆ ಹೋಮರ್ ಕವಿ ತಮ್ಮವನು, ತಮ್ಮ ಮಡಿಲಲ್ಲಿ ಹುಟ್ಟಿ ಬೆಳೆದವನು ಎಂದು ಈಗಲೂ ಗ್ರೀಕ್ ಪಟ್ಟಣಗಳು ಹೇಳಿಕೊಳ್ಳುತ್ತಿದ್ದುದನ್ನೂ ಈ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಂಡಿರಬೇಕು. ಒಬ್ಬನೇ ರಚಿಸಿರಲಿ ಅನೇಕರ ಕೈವಾಡ ಅದರಲ್ಲಿರಲಿ, ಈ ಕಾವ್ಯದಲ್ಲಿ ಎದ್ದು ಕಾಣುವ ಕಲ್ಪನೆಯ ಐಕ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದರ ಸರಳತೆ, ನೇರವಾದ ಕಥಾನಿರೂಪಣೆ, ಯುದ್ಧ ಪ್ರಸಂಗಗಳ ವರ್ಣನೆಗಳು, ಪ್ರಾಚೀನ ಗ್ರೀಕರ ಜನಜೀವನದ ಚಿತ್ರಗಳು, ಬಗೆಬಗೆಯ ಪಾತ್ರಗಳು, ಅಲ್ಲಲ್ಲಿ ಬರುವ ತಿಳಿ ಹಾಸ್ಯ, ಮನಕರಗಿಸುವ ದೃಶ್ಯಗಳು, ಮಾನವಸ್ವಭಾವದ ಅರಿವು, ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕ್ರೋಧದ ದುಷ್ಪರಿಣಾಮದ ಸೂಚನೆ-ಇವೇ ಮೊದಲಾದ ಅಂಶಗಳಿಗೆ ಈ ಕೃತಿ ಹೆಸರಾಂತಿದೆ. ಇಲಿಯಡ್ ಕಾವ್ಯ ಗ್ರೀಕ್ ಮಹಾರುದ್ರ ನಾಟಕಗಳಿಗೆ ವಸ್ತುವನ್ನೊದಗಿಸಿತಲ್ಲದೆ ಯೂರೋಪಿನ ಸಾಹಿತ್ಯದಲ್ಲಿ ಮುಂದೆ ಬಂದ ವರ್ಜಿಲ್, ಡಾಂಟೆ, ಟ್ಯಾಸೊ, ಮಿಲ್ಟನ್ ಮೊದಲಾದ ಕವಿಗಳ ಮಹಾಕಾವ್ಯಗಳಿಗೆ ಮಾದರಿಯಾಯಿತು. ಇದರ ರೂಪಲಕ್ಷಣಗಳನೇಕವನ್ನು ಆ ಕವಿಗಳು ಅನುಕರಿಸಿದ್ದಾರೆ. ಅದರ ಛಂದಸ್ಸು ಕೂಡ (ಅಲ್ಪ ಸ್ವಲ್ಪ ಬದಲಾವಣೆಗಳೊಡನೆ) ಐರೋಪ್ಯ ಮಹಾಕಾವ್ಯಗಳ ಕವಿಪ್ರಿಯ ಛಂದಸ್ಸಾಗಿ ಉಳಿದುಬಂದಿದೆ. 




#Article 146: ಭಗವದ್ಗೀತೆ (371 words)


ಶ್ರೀ ಭಗವದ್ಗೀತೆಯು ಮಹಾಭಾರತದಲ್ಲಿನ ಕುರುಕ್ಷೇತ್ರ ಯುಧ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು.

ಗೀತೆಯನ್ನು ಪಾಂಡವ ರಾಜಕುಮಾರ ಅರ್ಜುನ ಮತ್ತು ಅವರ ಮಾರ್ಗದರ್ಶಿ ಮತ್ತು ರಥ ಸಾರಥಿ ಶ್ರೀ ಕೃಷ್ಣನ ನಡುವಿನ ಸಂಭಾಷಣೆಯ ನಿರೂಪಣಾ ಚೌಕಟ್ಟಿನಲ್ಲಿ ಹೊಂದಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧರ್ಮ ಯುಧಾ (ನೀತಿವಂತ ಯುದ್ಧ) ದ ಆರಂಭದಲ್ಲಿ, ಅರ್ಜುನನು ತನ್ನ ಸ್ವಂತ ರಕ್ತಸಂಬಂಧಿಗಳ ವಿರುದ್ಧದ ಯುದ್ಧದಲ್ಲಿ ಯುದ್ಧವು ಉಂಟುಮಾಡುವ ಹಿಂಸೆ ಮತ್ತು ಸಾವಿನ ಬಗ್ಗೆ ನೈತಿಕ ಸಂದಿಗ್ಧತೆ ಮತ್ತು ಹತಾಶೆಯಿಂದ ತುಂಬಿರುತ್ತಾನೆ. ಅವರು ತ್ಯಜಿಸಬೇಕೆ ಎಂದು ಅವರು ಆಶ್ಚರ್ಯ ಪಡುತ್ತಾರೆ ಮತ್ತು ಕೃಷ್ಣನ ಸಲಹೆಯನ್ನು ಹುಡುಕುತ್ತಾರೆ, ಅವರ ಉತ್ತರಗಳು ಮತ್ತು ಪ್ರವಚನವು ಭಗವದ್ಗೀತೆಯನ್ನು ಒಳಗೊಂಡಿದೆ. ನಿಸ್ವಾರ್ಥ ಕ್ರಿಯೆಯ ಮೂಲಕ ಧರ್ಮವನ್ನು ಎತ್ತಿಹಿಡಿಯುವ ತನ್ನ ಕ್ಷತ್ರಿಯ (ಯೋಧ) ಕರ್ತವ್ಯವನ್ನು ಪೂರೈಸಲು ಕೃಷ್ಣನು ಅರ್ಜುನನಿಗೆ ಸಲಹೆ ನೀಡುತ್ತಾನೆ. ಅರ್ಜುನನು ಎದುರಿಸುತ್ತಿರುವ ಯುದ್ಧವನ್ನು ಮೀರಿದ ಸಂದಿಗ್ಧತೆಗಳು ಮತ್ತು ತಾತ್ವಿಕ ಸಮಸ್ಯೆಗಳು.

ಭಗವದ್ಗೀತೆಯ ಶೀರ್ಷಿಕೆಯಲ್ಲಿರುವ ಗೀತಾ ಎಂದರೆ ಹಾಡು. ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು ಭಗವದ್ ಪದವನ್ನು ಹಲವಾರು ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅಂತೆಯೇ ಆಸ್ತಿಕ ಶಾಲೆಗಳು, ಭಗವಂತನ ಮಾತುಗಳು, ದೈವಿಕ ಹಾಡು ಮತ್ತು ಸೆಲೆಸ್ಟಿಯಲ್ ಸಾಂಗ್ ನಿಂದ ಶೀರ್ಷಿಕೆಯನ್ನು ದೇವರ ವಾಕ್ಯ ಎಂದು ವ್ಯಾಖ್ಯಾನಿಸಲಾಗಿದೆ. ಇತರರಿಂದ ಭಾರತದಲ್ಲಿ, ಅದರ ಸಂಸ್ಕೃತ ಹೆಸರನ್ನು ಹೆಚ್ಚಾಗಿ ಶ್ರೀಮದ್ ಭಗವದ್ಗೀತೆ ಎಂದು ಬರೆಯಲಾಗುತ್ತದೆ. श्रीमद् भगवद् गीता (ನಂತರದ ಎರಡು ಪದಗಳನ್ನು ಒಂದೇ ಪದವಾಗಿ ಬರೆಯಲಾಗುತ್ತದೆ भगवद्गीता), ಅಲ್ಲಿ ಶ್ರೀಮದ್ ಪೂರ್ವಪ್ರತ್ಯಯವನ್ನು ಉನ್ನತ ಮಟ್ಟದ ಗೌರವವನ್ನು ಸೂಚಿಸಲು ಬಳಸಲಾಗುತ್ತದೆ. ಹಿಂದೂ ದೇವರು ಕೃಷ್ಣನ ಜೀವನ ಮತ್ತು ವಿಷ್ಣುವಿನ ವಿವಿಧ ಅವತಾರಗಳನ್ನು ನಿರ್ವಹಿಸುವ ಪುರಾಣವಾದ ಶ್ರೀಮದ್ ಭಾಗವತದೊಂದಿಗೆ ಇದು ಗೊಂದಲಕ್ಕೀಡಾಗಬಾರದು. ಈ ಕೃತಿಯನ್ನು ಈಶ್ವರ ಗೀತಾ, ಅನಂತ ಗೀತಾ, ಹರಿ ಗೀತಾ, ವ್ಯಾಸ ಗೀತಾ ಅಥವಾ ಸರಳವಾಗಿ ಗೀತಾ ಎಂದೂ ಕರೆಯುತ್ತಾರೆ.

ಭಗವದ್ಗೀತೆ ಮಹಾಭಾರತ ಮಹಾಕಾವ್ಯದ ಭೀಷ್ಮಪರ್ವದ ೨೩ ನೇ ಅಧ್ಯಾಯದಿಂದ ೪೦ ನೇ ಅಧ್ಯಾಯದ ನಡುವೆ ಬರುವ ಭಾಗ. ಹಿಂದೂ ಧರ್ಮ ಮತ್ತು ತತ್ವಶಾಸ್ತ್ರದ ಮುಖ್ಯ ಪಠ್ಯಗಳಲ್ಲಿ ಒಂದಾದ ಸುಮಾರು ೭೦೦ ಶ್ಲೋಕಗಳ ಭಗವದ್ಗೀತೆ, ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳ ಒಟ್ಟು ಸಮಾಗಮವೆನ್ನಬಹುದು. ಕೆಲವೊಮ್ಮೆ ಯೋಗೋಪನಿಷತ್ ಅಥವಾ ಗೀತೋಪನಿಷತ್ ಪಂಚಮವೇದವೆಂದೂ ಭಗವದ್ಗೀತೆಯನ್ನು ಕರೆಯಲಾಗುತ್ತದೆ.

'ಭಗವದ್ಗೀತೆ' ಆರಂಭವಾಗುವುದು ಮಹಾಭಾರತ ಯುದ್ಧದ ಆರಂಭವಾಗುವ ಮೊದಲು. ತಮ್ಮ ಸೈನ್ಯಕ್ಕೆ ರಣಭೂಮಿಯಲ್ಲಿ ಇದಿರಾದ ಕೌರವರ ಸೇನೆಯಲ್ಲಿ ತನ್ನ ಬಹಳಷ್ಟು ಬಂಧುಗಳನ್ನು ಕಂಡು ಅರ್ಜುನ ಉತ್ಸಾಹ ಕಳೆದುಕೊಂಡು ಮಾರ್ಗದರ್ಶನಕ್ಕಾಗಿ ಕೃಷ್ಣನತ್ತ ತಿರುಗಿದಾಗ. ಆತ್ಮದ ಅಮರತ್ವದ ಬಗ್ಗೆ ಪ್ರಸ್ತಾಪಿಸುತ್ತ ಕೃಷ್ಣ 'ಗೀತೋಪದೇಶ'ವನ್ನು ಆರಂಭಿಸುತ್ತಾನೆ. ಇದರ ನಂತರ ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ವಿವರಿಸುತ್ತಾನೆ.
ಇದನ್ನು ಶ್ರೀಕೃಷ್ಣನು ಅರ್ಜುನನಿಗೆ ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಕಾದಶಿಯ ದಿನ ಉಪದೇಶಿಸಿದನು. ಆದುದರಿಂದ ಇದನ್ನು ಗೀತಾ ಜಯಂತಿ ಅಂತ ಕರೆಯಲಾಗಿದೆ.

ಭಾರತದ ೧೪ನೇ ಪ್ರಧಾನಿ ನರೇಂದ್ರ ಮೋದಿ ಅವರು ಭಗವದ್ಗೀತೆಯನ್ನು ವಿಶ್ವದ ಅತಿದೊಡ್ಡ ಕೊಡುಗೆ ಎಂದು ಕರೆದರು. ಮೋದಿ ಅದರ ಯು.ಎಸ್. ಭೇಟಿಯ ಸಂದರ್ಭದಲ್ಲಿ ೨೦೧೪ ರಲ್ಲಿ ಅಂದಿನ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾಗೆ ನೀಡಿದರು. ೧೮ನೇ ಶತಮಾನದ ಆರಂಭದಲ್ಲಿ ಪಾಶ್ಚಿಮಾತ್ಯ ವಿದ್ವಾಂಸರು ಅದರ ಅನುವಾದ ಮತ್ತು ಅಧ್ಯಯನದೊಂದಿಗೆ ಭಗವದ್ಗೀತೆ ಹೆಚ್ಚು ಮೆಚ್ಚುಗೆ ಮತ್ತು ಜನಪ್ರಿಯತೆಯನ್ನು ಗಳಿಸಿತು. ಭಾರತೀಯ ಇತಿಹಾಸಕಾರ ಮತ್ತು ಬರಹಗಾರ ಖುಷ್ವಂತ್ ಸಿಂಗ್ ಅವರ ಪ್ರಕಾರ, ರುಡ್ಯಾರ್ಡ್ ಕಿಪ್ಲಿಂಗ್ ಅವರ ಪ್ರಸಿದ್ಧ ಕವಿತೆ ಇಫ್  ಇಂಗ್ಲಿಷ್ನಲ್ಲಿ ದಿ ಗೀತಾ ಸಂದೇಶದ ಸಾರ.

ಭಗವದ್ಗೀತೆಯನ್ನು ಮಹಾತ್ಮ ಗಾಂಧಿ ಮತ್ತು ಸರ್ವೆಪಲ್ಲಿ ರಾಧಾಕೃಷ್ಣನ್ ಸೇರಿದಂತೆ ಪ್ರಮುಖ ಭಾರತೀಯರು ಮಾತ್ರವಲ್ಲದೆ ಆಲ್ಡಸ್ ಹಕ್ಸ್ಲೆ, ಹೆನ್ರಿ ಡೇವಿಡ್ ಥೋರೊ, ಜೆ. ರಾಬರ್ಟ್ ಒಪೆನ್ಹೈಮರ್, ರಾಲ್ಫ್ ವಾಲ್ಡೋ ಎಮರ್ಸನ್, ಕಾರ್ಲ್ ಜಂಗ್, ಹರ್ಮನ್ ಹೆಸ್ಸೆ ಮತ್ತು ಬೆಲೆಂಟ್ ಎಸೆವಿಟ್.




#Article 147: ಪಾಂಡವರು (375 words)


ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.

ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.

ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ ಮಾದ್ರಿಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, ದ್ರೋಣಾಚಾರ್ಯರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು.

ಪಾಂಡವರ ತಂದೆ ಪಾಂಡು ವಿಚಿತ್ರವೀರ್ಯನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ ಧೃತರಾಷ್ಟ್ರ ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು.

ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ ಶಕುನಿಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ ಮಹಾಭಾರತದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗ, ವಲಲನಾದ ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು.

ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ.




#Article 148: ಒನಕೆ ಓಬವ್ವ (103 words)


ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಛಲವಾದಿ ಸಮುದಾಯದ ಕಹಳೆ ಮದ್ದಹನುಮಪ್ಪನ ಹೆಂಡತಿ. ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿ ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಪಾಪಿ ಶತ್ರುವಿನ ಕತ್ತಿಗೆ ಬಲಿಯಾದವರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು. ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು  ಗೌರವಿಸಲಾಗಿದೆ.

ಓಬವ್ವ ಅವರು ಕನ್ನಡ ಸ್ತ್ರೀಯರಲ್ಲಿ ಹೆಮ್ಮೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.  ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನ ಅನುಕ್ರಮದಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ.




#Article 149: ಟಿಮ್ ಬರ್ನರ್ಸ್ ಲೀ (590 words)


ಸರ್ ಟಿಮೊತಿ ಜಾನ್ ಟಿಮ್ ಬೆರ್ನರ್ಸ್-ಲೀ (ಜನನ: ಜೂನ್ ೮, ೧೯೫೫ ಲಂಡನ್) ವಿಶ್ವವ್ಯಾಪಿ ಜಾಲದ ಜನಕ.

ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್‌ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ ಕೊಂಡಿಯ ಮೇಲೆ ಕ್ಲಿಕ್ ಮಾಡಿ ನೋಡಿ. ನೀವು ಮೂಲ ವಿಷಯ ಬಿಟ್ಟು ಇನ್ನೆಲ್ಲೋ ತಲುಪಿರುತ್ತೀರಾ. ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷಯ ಎಂದರೆ ಕೊಂಡಿ, ತಂತು ಅಥವಾ ಲಿಂಕ್. ಈ ತಂತು ಮೇಲೆ ಕ್ಲಿಕ್ ಮಾಡಿದಂತೆಲ್ಲಾ ಇನ್ನೊಂದು ಜಾಲತಾಣ (ವೆಬ್‌ಸೈಟ್) ಅಥವಾ ಜಾಲಪುಟ (ವೆಬ್‌ಪೇಜ್) ತೆರೆದುಕೊಳ್ಳುತ್ತದೆ. ಹೀಗೆ ಮಾಹಿತಿಗಳನ್ನು ಕುಣಿಕಾ ಬಂಧನಗೊಳಿಸುವುದಕ್ಕೆ ಹೈಪರ್‌ಟೆಕ್‌ಸ್ಟ್ ಎಂಬ ಹೆಸರಿದೆ. 

ಅಂತರಜಾಲ ಒಂದು ರೀತಿಯಲ್ಲಿ ಸರ್ವಾಂತರ್ಯಾಮಿಯಾಗಿದೆ. ಅದರ ಬಗ್ಗೆ ಕೇಳದವರು ಇಲ್ಲವೇ ಇಲ್ಲವೆಂದರೂ ನಡೆಯುತ್ತದೆ. ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ. ಅಂತರಜಾಲ ಎಂದರೆ ಏನು ಎಂದು ಹಲವು ಮಂದಿಯನ್ನು ಕೇಳಿ ನೋಡಿ. ಹೆಚ್ಚಿನವರು ಹೇಳುವ ಉತ್ತರ - www. ಈ www ಎಂದರೆ ಅಂತರಜಾಲ ಅಲ್ಲ ಎಂದು ಎಷ್ಟು ಮಂದಿಗೆ ಗೊತ್ತಿದೆ? ಆಶ್ಚರ್ಯವಾಯಿತೇ? www ಎಂದರೆ ವರ್ಲ್ಡ್ ವೈಡ್ ವೆಬ್ ಎಂಬುದರ ಸಂಕ್ಷಿಪ್ತ ರೂಪ. ಇದು ಅಂತರಜಾಲದ ಒಂದು ಅಂಗವೇ ವಿನಾ ಅದುವೇ ಅಂತರಜಾಲವಲ್ಲ! ಅಂತರಜಾಲದಲ್ಲಿ ವಿಶ್ವವ್ಯಾಪಿ ಜಾಲ (www), ವಿ-ಅಂಚೆ (ಇ-ಮೈಲ್), ಟೆಲ್‌ನೆಟ್, ಎಫ್‌ಟಿಪಿ, ನ್ಯೂಸ್‌ಗ್ರೂಪ್, ಇತ್ಯಾದಿ ಹಲವು ವಿಭಾಗಗಳಿವೆ. ಇವಗಳಲ್ಲಿ ಪ್ರತಿಯೊಂದರ ಬಗೆಗೂ ಹಲವು ಪ್ರತ್ಯೇಕ ಲೇಖನ ಬರೆಯುವಷ್ಟು ವಿಷಯಗಳಿವೆ. ಇನ್ನೂ ಒಂದು ಸ್ವಾರಸ್ಯಕರ ವಿಷಯವೆಂದರೆ ಈ ವಿಶ್ವವ್ಯಾಪಿ ಜಾಲ ಕೇವಲ ಹನ್ನೊಂದು ವರ್ಷಗಳಷ್ಟು ಹಳೆಯದು!

ನಾನೀಗ ಹೇಳಹೊರಟಿರುವುದು ವಿಶ್ವವ್ಯಾಪಿ ಜಾಲದ ಬಗ್ಗೆ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ. ಈ ತಾಣಗಳೆಲ್ಲ ಒಟ್ಟು ಸೇರಿ ವಿಶ್ವವ್ಯಾಪಿ ಜಾಲವಾಗಿದೆ. ತಾಣದಿಂದ ತಾಣಕ್ಕೆ ತಂತುಗಳ ಮೂಲಕ ಲಂಘನ ಮಾಡಬಹುದು. ಈ ರೀತಿಯ ಸಂಪರ್ಕಕ್ಕೆ ಹೈಪರ್‌ಲಿಂಕಿಂಗ್ ಎನ್ನುತ್ತಾರೆ. ಈ ವಿಶ್ವವ್ಯಾಪಿ ಜಾಲದಲ್ಲಿ ಇರುವ ತಾಣಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಒಂದು ಗುಂಡು ಪಿನ್ನಿನಿಂದ ಹಿಡಿದು ರಾಕೆಟ್ ತನಕದ ಮಾಹಿತಿಗಳನ್ನು ನೀಡುವ ತಾಣಗಳು ಅಲ್ಲಿವೆ.

ವಿಜ್ಞಾನದ ಬಹುಪಾಲು ಸಂಶೋಧನೆಗಳಂತೆ ಈ ವಿಶ್ವವ್ಯಾಪಿ ಜಾಲದ ಸಂಶೋಧನೆಯೂ ಆಕಸ್ಮಿಕವಾಗಿಯೇ ಆದುದು. ಟಿಮ್ ಬರ್ನರ್ಸ್ ಲೀ (Tim Berners-Lee) ಎಂಬುವರು ೧೯೮೦ರಲ್ಲಿ ಜಿನೇವಾದಲ್ಲಿರುವ ಯುರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಸಂಶೋಧನಾಲಯದಲ್ಲಿ (CERN, ಸರ್ನ್) ಕೆಲಸದಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆ, ಅವುಗಳಿಗೆ ಸಂಬಂಧಪಟ್ಟ ಆಕರ ಮಾಹಿತಿ ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಗಣಕದಲ್ಲಿ ವ್ಯವಸ್ಥಿತವಾಗಿ ತನಗೆ ಸುಲಭವಾಗಿ ಸಿಗುವಂತೆ ಸಂಗ್ರಹಿಸಿಡಲು ಅವರು ಹೈಪರ್ಟೆಕ್ಸ್ಟ್ ವಿಧಾನವನ್ನು ಪ್ರಥಮ ಬಾರಿ ಬಳಸಿದರು. ಅವರು ಈ ಕೆಲಸಕ್ಕಾಗಿಯೇ ಎನ್‌ಕ್ವೈರ್ ಹೆಸರಿನ ಒಂದು ಗಣಕ ಕ್ರಮವಿಧಿ (ಕಂಪ್ಯೂಟರ್ ಪ್ರೋಗ್ರಾಮ್) ರಚನೆ ಮಾಡಿದರು. ಅದೇನೂ ಪರಿಪೂರ್ಣ ತಂತ್ರಾಂಶವಾಗಿರಲಿಲ್ಲ. ಆದರೆ ಅವರ ಕೆಲಸದ ಅವಧಿ ಮುಗಿದುದರಿಂದ ಅವರು ಹಿಂದಕ್ಕೆ ತೆರಳಿದರು.

ಆದರೆ ಅವರು ಪುನಃ ೧೯೮೪ರಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿ ಅಲ್ಲಿಗೇ ಬಂದರು. ತಾವು ಹಿಂದೆ ಬಳಸಿದ ಎನ್‌ಕ್ವೈರ್ ಅವರ ತಲೆಯಲ್ಲಿ ಕೊರೆಯುತ್ತಿತ್ತು. ಹೈಪರ್ಟೆಕ್ಸ್ಟ್ ಮತ್ತು ಅಂತರಜಾಲಗಳು ಈಗಾಗಲೇ ಅಸ್ತಿತ್ವದಲ್ಲಿದ್ದವು. ಸರ್ನ್ನವರ ಸಂಶೋಧನೆಗಳು ಪ್ರಪಂಚಾದ್ಯಂತ ನಡೆಯುತ್ತಿದ್ದವು. ಎಲ್ಲ ಕಡೆಗಳಿಂದ ಸರ್ನ್‌ಗೆ ಸಂಶೋಧನೆಯ ವರದಿಗಳನ್ನು ವಿದ್ಯುನ್ಮಾನ (ಇಲೆಕ್ಟ್ರಾನಿಕ್) ವಿಧಾನದಿಂದ ಕಳುಹಿಸಲು ಒಂದು ನಿಶ್ಚಿತ ಪದ್ಧತಿಯನ್ನು ಪಾಲಿಸಬೇಕಿತ್ತು. ಇದು ಬಹುಮಂದಿ ವಿಜ್ಞಾನಿಗಳಿಗೆ ತಲೆನೋವು ತರುತ್ತಿತ್ತು. ಲೀ ಇದರ ಬಗ್ಗೆ ತಲೆಕೆಡಿಸಿಕೊಂಡರು. ತಾನು ಈಗಾಗಲೇ ಬಳಸುತ್ತಿದ್ದ ಎನ್‌ಕ್ವೈರ್ ಅನ್ನು ತನಗೆ ಮಾತ್ರವಲ್ಲದೆ ಇತರರಿಗೂ ಬಳಸಲು ಅನುಕೂಲವಾಗುವಂತೆ ಪರಿರ್ತಿಸಿದರು. 

೧೯೮೯ರಲ್ಲಿ ಲೀ ಅವರು ಮಾಹಿತಿ ಜಾಲವೊಂದರ ವಿನ್ಯಾಸದ ಬಗ್ಗೆ ಸರ್ನ್‌ಗೆ ಒಂದು ಕ್ರಿಯಾ ಯೋಜನೆ ಒಪ್ಪಿಸಿದರು. ಇದರ ಬಗ್ಗೆ ಅವರಿಗೆ ಯಾವುದೇ ಉತ್ತರ ಬರಲಿಲ್ಲ. ಆದರೆ ಅವರು ಅದರ ಬಗ್ಗೆ ಚಿಂತಿಸದೆ ಪ್ರಪಂಚದ ಎಲ್ಲ ಮಾಹಿತಿಗಳನ್ನು ಅಂತರಜಾಲದ ಮೂಲಕ ತಂತುಗಳಲ್ಲಿ ಬೆಸೆಯುವ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸ ತೊಡಗಿದರು. ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ ಒಂದು ಪ್ರತ್ಯೇಕ ವಿಳಾಸವನ್ನು ಅಭಿವೃದ್ಧಿ ಮಾಡಿದರು. ಇದುವೇ ಇಂದು ನಾವೆಲ್ಲರೂ ಬಳಸುವ ಯುನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಅರ್ಥಾತ್ ತಾಣಸೂಚಿ. ಈ ತಾಣಸೂಚಿಗಳಿಗೆ ಉದಾಹರಣೆ ಬೇಕಿದ್ದರೆ www.vishvakannada.com, www.microsoft.com, www.google.com, ಇತ್ಯಾದಿ. ಲೀ ಅವರು ಬಳಸಿದ ಪ್ರಥಮ ತಾಣಸೂಚಿ - info.cern.ch. ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆಯನ್ನು ಹುಟ್ಟು ಹಾಕಿದರು. ಅದುವೇ ಹೈಪರ್ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (HTML). ಇಷೆಲ್ಲಾ ಆದರೂ ಸರ್ನ್‌ನ ನೌಕರಶಾಹಿ ಮಂದಿಗೆ ಇದರ ಮಹತ್ವ ಅರಿವಾಗಲಿಲ್ಲ. ಅವರ ಕ್ರಿಯಾಯೋಜನೆಗೆ ಹಣಕಾಸಿನ ಸಹಾಯವೂ ಬರಲಿಲ್ಲ. ಆದರೆ ಲೀ ತಮ್ಮ ಕೆಲಸ ನಿಲ್ಲಿಸಲಿಲ್ಲ. ಜಗತ್ತಿನಾದ್ಯಂತ ಎಲ್ಲ ಸಂಶೋಧಕರಿಗೆ ವಿ-ಅಂಚೆ (ಇಮೈಲ್) ಕಳುಹಿಸಿ ತಮ್ಮ ಈ ಸಂಶೋಧನೆಯನ್ನು ಬಳಸಲು ಕೇಳಿಕೊಂಡರು. ಇದರ ಮಹತ್ವ ಬಹು ಬೇಗನೆ ಹಲವಾರು ತಂತ್ರಜ್ಞರುಗಳಿಗೆ ಅರಿವಾಗಿ ಅವರೆಲ್ಲ ಅದನ್ನು ಬಳಸತೊಡಗಿದರು. ಇದರ ಫಲವೇ ಇಂದು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ. ಆದರೆ ಸರ್ನ್‌ನ ನೌಕರಶಾಹಿ ಇನ್ನೂ ಗೊರಕೆ ಹೊಡೆಯುತ್ತಿತ್ತು. ಕೊನೆಗೂ ವಿಶ್ವವ್ಯಾಪಿ ಜಾಲವನ್ನು ಮುಂದುವರೆಸಲು ೧೯೯೪ರಲ್ಲಿ ಅಮೇರಿಕಾದ ಎಮ್.ಐ.ಟಿ.ಯಿಂದ ಅವರಿಗೆ ಕರೆಬಂತು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು. 

ವೆಬ್‌ನ ಜನಕ ಎಂದೇ ಖ್ಯಾತರಾಗಿರುವ ಲೀ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಬ್ರಿಟಿಷ್ ಸರಕಾರ ಅವರಿಗೆ “ಸರ್” ಬಿರುದಿತ್ತು ಸನ್ಮಾನಿಸಿದೆ. ಅವರು ಮಾಡಿದ ಸಂಶೋಧನೆಗೆ ಸಮಾನವಾದ ಮೂಲಭೂತ ಸಂಶೋಧನೆಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ - ಈ ಯಾವುದೇ ಕ್ಷೇತ್ರದಲ್ಲಿ ಮಾಡಿದ್ದರೆ ಅವರಿಗೆ ನೋಬೆಲ್ ಪುರಸ್ಕಾರ ದೊರೆಯುತ್ತಿತ್ತು. ಟೈಮ್ ಮ್ಯಾಗಝಿನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ ೧೦೦ ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ. ಐನ್‌ಸ್ಟೈನ್ ಅವರ ಹೆಸರೂ ಈ ಪಟ್ಟಿಯಲ್ಲಿದೆ ಎಂದರೆ ಲೀ ಅವರ ಸಂಶೋಧನೆಯ ಮಹತ್ವ ಅರಿವಾಗುವುದು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂನ ಅಧ್ಯಕ್ಷರಾಗಿ ಅವರು ಈಗಲೂ ಹೊಸ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.




#Article 150: ತರಂಗ (132 words)


ತರಂಗಗಳು ದ್ರವ್ಯ ಮತ್ತು ಜಾಗದಲ್ಲಿ, ಕಾಲಕ್ಕನುಗುಣವಾಗಿ ಶಕ್ತಿಯ ಸಮ್ಮೋಹನದೊಂದಿಗೆ ಹರಡುವ ತುಮುಲಗಳು. ತರಂಗ ಚಲನೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಸಾಮಾನ್ಯವಾಗಿ ಈ ಕ್ರಿಯೆಯಲ್ಲಿ ಅತಿ ಕಡಿಮೆ ಅಥವಾ ಶೂನ್ಯ  ದ್ರವ್ಯ ಸ್ಥಳಾಂತರ ನೆಡೆಯುತ್ತದೆ. ಉದಾಹರಣೆಗೆ ಶಾಂತವಾದ ನೀರಿನಲ್ಲಿ ಒಂದು ಸಣ್ಣ ಕಲ್ಲು ಎಸೆದಾಗ ಕಲ್ಲಿನ ಶಕ್ತಿ ನೀರಿನ ಮೇಲ್ಭಾಗದಲ್ಲಿ ತರಂಗಗಳನ್ನು ಉಂಟುಮಾಡುತ್ತದೆ. ತರಂಗ ಚಲನೆಯನ್ನು ಸಮೀಕರಣಗಳ ಮೂಲಕ ವಿಷ್ಲೇಶಿಸುತ್ತಾರೆ. ಈ ಸಮೀಕರಣದ ಗಣಿತ ನಮೂನೆಯು ತರಂಗದ ವಿಧದ ಆಧಾರದ ಮೇಲೆ, ಆ ತರಂಗ ಹೇಗೆ ಕಾಲಕ್ರಮೇಣ ಚಲಿಸುವುದು ಎಂಬುದನ್ನು ವಿವರಿಸುತ್ತದೆ.

ತರಂಗಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ಮೊದಲನೆಯದು ಯಾಂತ್ರಿಕ ತರಂಗಗಳು. ಇವು ಚಲನೆಗೆ ಮಾಧ್ಯಮವನ್ನು ಆಧರಿಸಿವೆ. ಉದಾಹರಣೆಗೆ ಶಬ್ದ ತರಂಗ. ಯಾಂತ್ರಿಕ ತರಂಗಗಳು ಪ್ರವಹಿಸುವಾಗ ಮಾಧ್ಯಮವು ವಿರೂಪಗಳ್ಳುತ್ತದೆ. ಆ ಕ್ಷಣದಲ್ಲಿ ಪನಃಸ್ಥಾಪಿತ ಬಲಗಳು ಮಾಧ್ಯಮವನ್ನು ಮೊದಲಿನ ಸ್ಥಿತಿಗೆ ತರುತ್ತವೆ. ಎರಡನೆಯದು ವಿದ್ಯುತ್ ಕಾಂತೀಯ ತರಂಗಗಳು. ಇವುಗಳ ಚಲನೆಗೆ ಮಾಧ್ಯಮಗಳ ಅವಶ್ಯಕತೆಯಿಲ್ಲ. ಇವು ವಿದ್ಯುದಂಶಪೂರಿತ ಕಣಗಳಿಂದ ಸೃಷ್ಟಿಯಾದ ವಿದ್ಯುತ್ ಹಾಗು ಕಾಂತಕ್ಷೇತ್ರದ ಆವರ್ತಕ ಆಂದೋಲನಗಳನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವು ನಿರ್ವಾತದಲ್ಲೂ ಚಲಿಸುವ ಶಕ್ತಿಯನ್ನು ಹೊಂದಿವೆ. ಉದಾಹರಣೆಗೆ ರೇಡಿಯೋ ತರಂಗಗಳು, ಸೂಕ್ಷ್ಮ ತರಂಗಗಳು, ರಕ್ತಾತೀತ ತರಂಗಗಳು, ದೃಶ್ಯ ತರಂಗಗಳು, ನೇರಳಾತೀತ ತರಂಗಗಳು, ಕ್ಷ ತರಂಗಗಳು, ಗ್ಯಾಮ ತರಂಗಗಳು. ಈ ತರಂಗಗಳು ತರಂಗಾಂತರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿವೆ.
  




#Article 151: ಲಿನಕ್ಸ್ (482 words)


ಲಿನಕ್ಸ್ ಗಣಕಯಂತ್ರದ ಕಾರ್ಯನಿರ್ವಹಣ ಸಾಧನ (Operating System) ಹಾಗೂ ಅದರ ಕರ್ನೆಲ್ (Kernel). ಇದು ಮುಕ್ತ ತಂತ್ರಾಂಶ, ಮುಕ್ತ ಆಕರ ವಿಕಸನೆಯ ಒಂದು ಉತ್ತಮ ಉದಾಹರಣೆ.
ಮೂಲವಾಗಿ ಲಿನಕ್ಸ್ ಎಂದಾಗ ಲಿನಕ್ಸ್ 'ಕರ್ನೆಲ್'ಅನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಅದರೆ ಸಾಮಾನ್ಯವಾಗಿ ಲಿನಕ್ಸ್ 'ಕರ್ನೆಲ್'ಅನ್ನು ಬಳಸಿಕೊಂಡ ಯುನಿಕ್ಸ್ ತರಹದ (ಗ್ನು/ಲಿನಕ್ಸ್ ಎಂದೂ ಶೃತವಾದ) ಆಪರೇಟಿಂಗ್ ಸಿಸ್ಟಮ್ ಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಲಿನಕ್ಸ್ ವಿತರಣೆಗಳು ಮೂಲತಃ ರಚನೆಯ ಜೊತೆಗೆ ಸಾಧಾರಣವಾಗಿ ಹಲವು ವಿಭಿನ್ನ ತಂತ್ರಾಂಶಗಳನ್ನೊಳಗೊಂಡು ಹೊರಬರುತ್ತವೆ. ಫೆಡೊರಾ ಕೋರ್, ಮ್ಯಾಂಡ್ರೇಕ್, ಉಬುಂಟು ಮುಂತಾದವು ಬಹು ಜನಪ್ರಿಯ ಲಿನಕ್ಸ್ ವಿತರಣೆಗಳಲ್ಲಿ ಕೆಲವು.
ಮೂಲತಃ ಇಂಟೆಲ್ 386 ಮೈಕ್ರೊಪ್ರಾಸೆಸರ್ ಗಳಿಗೆ ವಿಕಸಿತಗೊಳಿಸಲಾದ ಲಿನಕ್ಸ್ ಈಗ ಹಲವು ಗಣಕ ವಾಸ್ತುಶಿಲ್ಪಗಳಿಗೆ ಅಧಾರ ನೀಡುತ್ತದೆ. ಸ್ವಕೀಯ ಗಣಕ ಯಂತ್ರಗಳಿಂದ ಹಿಡಿದು ಸೂಪರ್ ಕಂಪ್ಯೂಟರ್ ಗಳವರೆಗೂ (Super Computer = ಅತ್ಯುತ್ಕೃಷ್ಟ ಗಣಕ ಯಂತ್ರ) ಇದರ ಉಪಯೋಗ ಪಡೆಯಬಹುದಾಗಿದೆ. ಇದಲ್ಲದೇ, ಮೊಬೈಲ್ ಫೋನ್ ಗಳು, ಸ್ವಕೀಯ ವೀಡಿಯೋ ರೆಕಾರ್ಡರ್ ಗಳಂತಹ ಎಮ್ಬೆಡ್ಡೆಡ್ (Embedded) ರಚನೆಗಳಲ್ಲೂ ಉಪಯೋಗಿಸಲಾಗುತ್ತಿದೆ.
 
ಸ್ವಯಂ ಸೇವಕರು, ಉತ್ಸಾಹಿಗಳಿಂದ ಬಹುವಾಗಿ ವಿಕಸಿತಗೊಳಿಸಲ್ಪಟ್ಟ, ಬಳಸಲ್ಪಟ್ಟ ಲಿನಕ್ಸ್, ಕಾಲಕ್ರಮೇಣ ಐಟಿ ದೈತ್ಯರಾದ ಐ.ಬಿ.ಎಮ್, ಹಿವ್ಲೆಟ್ ಪ್ಯಾಕರ್ಡ್ ನಂತಹ ಕಂಪೆನಿಗಳ ಬೆಂಬಲವನ್ನು ಪಡೆದು, ಸರ್ವರ್ ಮಾರುಕಟ್ಟೆಯಲ್ಲಿ ಇತರೆ ಖಾಸಗಿ ಕಂಪೆನಿಗಳ ಒಡೆತನದ ಯುನಿಕ್ಸ್ ಆವೃತ್ತಿಗಳನ್ನು ಹಾಗೂ ಮೈಕ್ರೊಸಾಫ್ಟ್ ವಿಂಡೋಸ್ ತಂತ್ರಾಂಶವನ್ನು ಸದೆಬಡಿಯುತ್ತಿದೆ. ತತ್ವ ಪ್ರತಿಪಾದಕರು, ಹಾಗೂ ಹಲವು ವಿಶ್ಲೇಷಕರು ಈ ಯಶಸ್ಸಿಗೆ 'ಲಿನಕ್ಸ್'ನ ಸ್ವಾತಂತ್ರ್ಯ, ನಿರ್ವಹಣೆಯ ವೆಚ್ಚ, ಭದ್ರತೆ, ಹಾಗೂ ಭರವಸೆಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. 

೧೯೯೧ರಲ್ಲಿ ಫಿನ್ಲಂಡ್ನ ಲೈನಸ್ ಟೋರ್ವಾಲ್ಡ್ಸ್ ಎಂಬ ಗಣಕಶಾಸ್ತ್ರ ಛಾತ್ರನು ಹವ್ಯಾಸವಾಗಿ ಲಿನಕ್ಸ್ ಕರ್ನಲ್ ಬರೆಯಲು ಪ್ರಾರಂಭಿಸಿದನು. ತನ್ನ ಗಣಕಯಂತ್ರಲ್ಲಿದ್ದ ಮಿನಿಕ್ಸ್ ಕಾರ್ಯನಿರ್ವಹಣ ಸಾಧನವು(OS) ಕೆಲವು ಮಿತಿಗಳನ್ನು ಹೊಂದಿದ್ದರಿಂದ, ಅವುಗಳನ್ನು ವಿಸ್ತರಿಸಲೆಂದು ಪ್ರಾರಂಭವಾದ ಹವ್ಯಾಸವು ಆಧುನಿಕ ಆಪರೇಟಿಂಗ್ ಸಿಸ್ಟಮ್ ಗಳಿಗಿಂತ ಬಹುಮುಖ ಸಾಮರ್ಥ್ಯ ಹೊಂದಿದ ಆಪರೇಟಿಂಗ್ ಸಿಸ್ಟಮ್ ಒಂದರ ರಚನೆಗೆ ನಾಂದಿಯಾಗಬಹುದೆಂದು ಸ್ವತಃ ಲೈನಸ್ ಕೂಡ ಆಲೋಚಿಸಿರಲಿಲ್ಲವಂತೆ.
ಲಿನಕ್ಸ್ ನ ಹೆಚ್ಚಿನ ಬೆಳವಣಿಗೆಗೆ ಅದರ 'ಮುಕ್ತ ತಂತ್ರಾಂಶ' ನೀತಿಯೇ ಕಾರಣವೆಂದು ಸಾಮಾನ್ಯ ಅಭಿಪ್ರಾಯ. ತಾನು ಬರೆದ ತಂತ್ರಾಂಶವನ್ನು ಎಲ್ಲರೂ ಸ್ವತಂತ್ರವಾಗಿ ಬಳಸಲಿ ಹಾಗೂ ಮುಕ್ತವಾಗಿ ಬೆಳೆಸಲಿ ಎಂದು ಲೈನಸ್ ತನ್ನ ಆಕರವನ್ನು ಸೆಪ್ಟೆಂಬರ್ ೧೯೯೧ರಲ್ಲಿ ಅಂತರ್ಜಾಲದಲ್ಲಿ(Internet) ಮುಕ್ತವಾಗಿ ವಿತರಿಸಿದನು . ಕೆಲವೇ ತಿಂಗಳಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಹವ್ಯಾಸೀ ಪ್ರೊಗ್ರಾಮರ್ ಗಳು ಅದಕ್ಕೆ ತಮ್ಮ ಜೋಡಣೆಗಳನ್ನು ಸೇರಿಸುತ್ತಾ ಬಂದು ಅದಕ್ಕೆ ಒಂದು ಪರಿಪೂರ್ಣ ರೂಪ ತಂದುಕೊಟ್ಟರು. ಇಂದಿಗೂ ಈ ಪ್ರಗತಿಯು ಸಾಗಿದ್ದು, ಪ್ರತಿಯೊಂದು ಕಾರ್ಯಕ್ಕೆ, ಪ್ರತಿಯೊಬ್ಬರ ಅಭಿರುಚಿಗನುಗುಣವಾಗಿ ಹಲವಾರು ವಿತರಣೆಗಳ ರೂಪದಲ್ಲಿ ಲಿನಕ್ಸ್ ದೊರೆಯುತ್ತಿದೆ. ಕೆಳಗಿನ ಲಿನಕ್ಸ್ ವಿತರಣೆಗಳ ಪಟ್ಟಿಯು ಈ ತತ್ವಕ್ಕೆ ಆಧಾರವಾಗಿರುತ್ತದೆ.

 

ಪ್ರಮುಖ ಲಿನಕ್ಸ್ ವಿತರಣೆಗಳನ್ನು (linux distributions (distros)) ದರ್ಶಿಸುವ ಚಿತ್ರವು ಬಲಕ್ಕಿದೆ. ವಿತರಣೆಗಳು ವಿವಿಧ ಗುಂಪುಗಳಿಂದ ತಯಾರಿಸಲಾಗಿದ್ದು ತಮ್ಮ ತಮ್ಮ ಆಚಾರಣೆಗಳು, ಮತ್ತು ಉಪಯೋಗಗಳಿಂದಾಗಿ ಬಿನ್ನವಾಗಿವೆ .

ಮ್ಯಾಂಡ್ರಿವ (ಮ್ಯಾಂಡ್ರೇಕ್ + ಕನೆಕ್ಟಿವ) ವಸ್ತುಶಃ ಅತಿ ಸುಲಭವಾದ ಹಾಗೂ ಲಿನಕ್ಸ್ ಉಪಯೋಗಿಸುವ ಹೊಸಬರಲ್ಲಿ ಬಹಳ ಜನಪ್ರಿಯವಾದ ವಿತರಣೆ.

ರೆಡ್ ಹ್ಯಾಟ್ ರವರಿಂದ ಪ್ರಾಯೋಜನೆ ಮಾಡಲಾಗಿ ಪ್ರಾರಂಭವಾದ ಫೆಡೊರಾ ಕೋರ್, ಇಂದು ಸರ್ವವ್ಯಾಪಿ ಕಾರ್ಯ ನಿರ್ವಹಣ ಸಾಧನವನ್ನು ತಯಾರಿಸುವ ಧ್ಯೇಯವನ್ನು ಹೊಂದಿದೆ. 

ರೆಡ್ ಹ್ಯಾಟ್ ಇತರ ಲಿನಕ್ಸ್ ವಿತರಣೆಗಳಿಗಿಂತ ಅತಿ ಹೆಚ್ಚಾಗಿ ಬಳಕೆಯಲ್ಲಿದೆ.

ಉಬುಂಟು, ಡೆಬಿಯನ್ ಆಧರಿಸಿ ತಯಾರಿಸಲಾದ ಒಂದು ವಿತರಣೆ. ಬಹಳಷ್ಟು ಜನರ ಪ್ರಶಂಸೆಗೆ ಒಳಗಾದ ಇದು, ಸದ್ಯದ ಸ್ಥಿತಿಯಲ್ಲಿ ಕನ್ನಡ ಚೆನ್ನಾಗಿ ಮೂಡಿ ಬರುವ ವಿತರಣೆಗಳಲ್ಲೊಂದು.

ಡೆಬಿಯನ್ ವಿತರಣೆಯು ಯುನಿಕ್ಸ್ ಮತ್ತು ಮುಕ್ತ ತಂತ್ರಾಂಶಗಳ ಮಾದರಿಯಾಗಿ ಬೆಳೆದು ಬಂದಿದೆ. ವಿಶ್ವ ವ್ಯಾಪಿ ಕಾರ್ಯ ನಿರ್ವಹಣ ಸಾಧನ ತತ್ವವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯು ಅತಿ ಹೆಚ್ಚಿನ ಉಪಕರಣಗಳಲ್ಲಿ ತಮ್ಮ ನಿರ್ವಹಣ ಸಾಧನವನ್ನು ನಿರ್ವಹಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸುಸೇ ವಿತರಣೆಯುನೊವೆಲ್ ಇನ್ಕ್ ರವರದಾಗಿದ್ದು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ. 

ಲಿನ್ಸ್ಪೈರ್ ವಿತರಣೆಯು ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ . ಮನೆಯಲ್ಲಿ ಉಪಯೋಗಿಸಲೆಂದು ಮಾರುಕಟ್ಟೆಮಾಡಲಾಗುತ್ತಿರುವ ಈ ವಿಸ್ತರಣೆಯು ಲಿನಕ್ಸ್ applicationsಗಳ ಸುಲಭ download ಮತ್ತು ಉಪಯುಕ್ತತೆ ಯನ್ನು ದೊರಕಿಸಿಕೊಡುವ ಧ್ಯೇಯವನ್ನು ಹೊಂದಿದೆ.

ಸ್ಲೆಕ್ವೇರ್ ಇತರ ವಿಸ್ತರಣೆಗಳಿಗಿಂತ ಹೆಚ್ಚು ಯುನಿಕ್ಸ್ (UNIX)ಅನ್ನು ಹೋಲುತ್ತದೆ. ಸ್ಲೆಕ್ವೇರ್ ತನ್ನ ವಿಸ್ತರಣೆಯಲ್ಲಿ ಕೇವಲ ಸ್ಥಾಯಿ ಗಳ್ನ್ನುಅಳವಡಿಸುತದೆ.

೨೦೦೧ ರಲ್ಲಿ ನ್ಯೂ ಯೋರ್ಕ್ ಮತ್ತು ಒಟ್ಟಾವ(ಒಂಟರಿಒ)ದಲ್ಲಿ ಪ್ರಾರಂಭವಾದ ಝಾಂದ್ರೊಸ್ ಕಂಪನಿಯು ಕೋರೆಲ್ ಲಿನಕ್ಸ್ ಎಂಬ ಇನ್ನೊಂದು ವಿಸ್ತರಣೆಯನ್ನಾಧಾರಿಸಿದೆ. ವಿನ್ಡೋಸ್ OSಅನ್ನು ಹೋಲು ವ ಈ ವಿಸ್ತರಣೆಯು ಮನೆ ಮತ್ತು ವ್ಯಾಪಾರ ಎಂಬ ಎರಡು ವಿನ್ಯಾಸಗಳಲ್ಲಿ ಮಾರಲಾಗುತ್ತದೆ.

ರೆಡ್ಮನ್ಡ್ ಲಿನಕ್ಸ್ ಕೊರ್ಪ್ ಎಂದು ೨೦೦೦ ದಲ್ಲಿ ಶುರುವಾದ ಲೈಕೋರಿಸ್ ವಿತರಣೆಯು ಸರ್ವರೂ ಸುಲಭವಾಗಿ ಉಪಯೊಗಿಸಲಾಗುವಂತಹ OS ಅನ್ನು ಮಾಡುವ ಧ್ಯೆಯ ಹೊಂದಿತ್ತು . ಇದರ ಲೈಕೋರಿಸ್ ಡೆಸ್ಕ್ಟೊಪ್ ಬಹಳ ಹೆಸರುವಾಸಿಯಾಗಿದೆ. ಲೈಕೋರಿಸ್ ಸಂಸ್ಥೆಯು ಮೆಪಲ್ ವೆಲಿ, ವಾಶಿಂಗ್ಟನ್, ಅಮೆರಿಕದಲ್ಲಿದೆ.

ಮೆಪಿಸ್ ಕೆ.ಡಿ.ಇ ಡೆಸ್ಕ್ಟೊಪ್ ಅನ್ನು ಬಳಸುವ ಲಿನಕ್ಸ್ ವಿತರಣೆ. ಇದೂ ಕೂಡ ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ .

ಆರ್ಚ್ ಲಿನಕ್ಸ್ ವಿತರಣೆಯು ಐದು ತತ್ವಗಳಿಗೆ ಬದ್ಧವಾಗಿದೆ. ಈ ತತ್ವಗಳು ಸರಳತೆ, ಆಧುನಿಕತೆ, ವಾಸ್ತವಿಕವಾದ, ಬಳಕೆದಾರ ಕೇಂದ್ರೀಕರಣ, ಹಾಗು ಬಹುಮುಖತೆ.




#Article 152: ನ್ಯಾನೋತಂತ್ರಜ್ಞಾನ (505 words)


ನ್ಯಾನೋತಂತ್ರಜ್ಞಾನ ಅಥವಾ ನ್ಯಾನೋಟೆಕ್ನಾಲಜಿ ನ್ಯಾನೋಮೀಟರ್ ಪ್ರಮಾಣದಲ್ಲಿ ಮಾಡಲಾಗುವ ಯಾವುದೇ ತಂತ್ರಜ್ಞಾನ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ (ಸಾಧಾರಣವಾಗಿ ೦.೧ ರಿಂದ ೧೦೦ ನ್ಯಾ.ಮೀ.). ಒಂದು ನ್ಯಾನೋಮೀಟರ್ ಎಂದರೆ ಒಂದು ಮಿಲ್ಲಿ ಮೀಟರ್‌ ನ ಸಾವಿರದ ಒಂದನೇ ಅಂಶ. ಕೆಲವೊಮ್ಮೆ ಈ ಶಬ್ಧವನ್ನು ಮೈಕ್ರೋಸ್ಕೋಪಿಕ್ ತಂತ್ರಜ್ಞಾನವನ್ನು ಉಲ್ಲೇಖಿಸಲು ಉಪಯೋಗಿಸಲಾಗುತ್ತದೆ.

ನ್ಯಾನೊಟೆಕ್ನಾಲಜಿ ( ನ್ಯಾನೊತಾಂತ್ರಿಕ) ಒಂದು, ಪರಮಾಣು ಆಣ್ವಿಕ ಮತ್ತು ಸುಪ್ರಮೊಲೆಕೂಲರ್ ಪ್ರಮಾಣದಲ್ಲಿ ಮ್ಯಾಟರ್ಗಳನ್ನೂ ಬದಲಾಯಿಸುವ ಒಂದು ವಿಧಿ. ನ್ಯಾನೊತಂತ್ರಜ್ಞಾನದ ಆರಂಭಿಕ ವ್ಯಾಪಕ ವಿವರಣೆ  ನಿಖರವಾಗಿ ಅತಿಸೂಕ್ಷ್ಮ ಉತ್ಪನ್ನಗಳ ತಯಾರಿಕೆ ಎಂದು ಹೇಳಲಾಗುವ , ಪರಮಾಣುಗಳ ಮತ್ತು ಕಣಗಳ ನಿರ್ವಹಣೆ ನಿರ್ದಿಷ್ಟ ತಾಂತ್ರಿಕ ಗುರಿ ಎಂದು ಕರೆಯಲಾಗುತಿತ್ತು, ಈಗ ಅಣುಗಳ ನ್ಯಾನೊತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ನ್ಯಾನೊತಂತ್ರಜ್ಞಾನದ ಒಂದು ಸಾಮಾನ್ಯ ವಿವರಣೆ ತರುವಾಯ ಮ್ಯಾಟರ್  ಕನಿಷ್ಠ ಒಂದು ಆಯಾಮ 1 100 ನ್ಯಾನೋಮೀಟರುಗಳಷ್ಟು ಗಾತ್ರದ ಜೊತೆ ನ್ಯಾನೊತಂತ್ರಜ್ಞಾನದ ವ್ಯಾಖ್ಯಾನಿಸುವ ರಾಷ್ಟ್ರೀಯ ನ್ಯಾನೊಟೆಕ್ನಾಲಜಿ ಇನಿಶಿಯೇಟಿವ್, ಸ್ಥಾಪಿಸಿದರು. ಈ ವ್ಯಾಖ್ಯಾನವು ಕ್ವಾಂಟಂ ಯಾಂತ್ರಿಕ ಪರಿಣಾಮಗಳು ಈ ಪರಿಮಾಣ-ಕ್ಷೇತ್ರದಲ್ಲಿ ಪ್ರಮಾಣದ ಮುಖ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ, ಮತ್ತು ಆದ್ದರಿಂದ ವ್ಯಾಖ್ಯಾನ ಸಂಭವಿಸುವ ಮ್ಯಾಟರ್ ವಿಶೇಷ ಗುಣಗಳನ್ನು ವ್ಯವಹರಿಸಲು ಸಂಶೋಧನೆ ಮತ್ತು ತಂತ್ರಜ್ಞಾನಗಳ ಎಲ್ಲಾ ರೀತಿಯ ಸೇರಿದೆ ಸಂಶೋಧನಾ ವರ್ಗದ ಒಂದು ನಿರ್ದಿಷ್ಟ ತಾಂತ್ರಿಕ ಗುರಿ ಬದಲಾಯಿತು ನಿಗದಿತ ಗಾತ್ರದ ಮಿತಿ ಕಮ್ಮಿಯಾಯಿತು.ಅದರ ಸಾಮಾನ್ಯ ಲಕ್ಷಣ ಗಾತ್ರ ಸಂಶೋಧನೆ ಮತ್ತು ಅನ್ವಯಗಳ ವ್ಯಾಪಕ ಉಲ್ಲೇಖಿಸಲು ಈ ಪದವು ಬಹುವಚನದ ರೂಪದಲ್ಲಿ ನ್ಯಾನೊಟೆಕ್ನಾಲಜೀಸ್ ಹಾಗೂ ನ್ಯಾನೊಪ್ರಮಾಣದ ತಂತ್ರಜ್ಞಾನಗಳು ನೋಡಲು ಆದ್ದರಿಂದ ಸಾಮಾನ್ಯವಾಗಿದೆ. ಏಕೆಂದರೆ ಸಂಭಾವ್ಯ ಅನ್ವಯಗಳನ್ನು (ಕೈಗಾರಿಕಾ ಮತ್ತು ಸೇನಾ ಸೇರಿದಂತೆ) ವಿವಿಧ ಸರ್ಕಾರಗಳು ನ್ಯಾನೊತಂತ್ರಜ್ಞಾನ ಸಂಶೋಧನೆಯಲ್ಲಿ ಬಿಲಿಯನ್ಗಟ್ಟಲೆ ಡಾಲರ್ ಬಂಡವಾಳ ತೊಡಗಿಸಿದ್ದಾರೆ. 2012 ರವರೆಗೆ, ತನ್ನ ರಾಷ್ಟ್ರೀಯ ನ್ಯಾನೊಟೆಕ್ನಾಲಜಿ ಇನಿಶಿಯೇಟಿವ್ ಮೂಲಕ, ಅಮೇರಿಕಾ 3.7 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ, ಯುರೋಪಿಯನ್ ಯೂನಿಯನ್ 1.2 ಶತಕೋಟಿ ಹಾಗು ಜಪಾನ್ 750 ಮಿಲಿಯನ್ ಡಾಲರ್ ಹೂಡಿಕೆ.

ನ್ಯಾನೊಟೆಕ್ನಾಲಜಿ ಮೇಲ್ಮೈ ಗಾತ್ರ ಅಧಾರಿತವಾಗಿ  ಬಹಳ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ  ಅವುಗಳು ವಿಜ್ಞಾನ ಸಾವಯವ ರಸಾಯನಶಾಸ್ತ್ರ, ಅಣು ಜೀವಶಾಸ್ತ್ರ, ಅರೆವಾಹಕ ಭೌತಶಾಸ್ತ್ರ, ಮಿಕ್ರೊಫಬ್ರಿಕಶನ್, ಅಣು ಎಂಜಿನಿಯರಿಂಗ್, ಇತ್ಯಾದಿ ವೈವಿಧ್ಯಮಯ ವಿಜ್ಞಾನದ ಜಾಗ ಸೇರಿದಂತೆ ನೈಸರ್ಗಿಕವಾಗಿ ಬಹಳ ವಿಶಾಲವಾಗಿದೆ  ಸಂಬಂಧಿಸಿದ ಸಂಶೋಧನೆ ಮತ್ತು ಅಳವಡಿಕೆಗೆ ಪರಮಾಣು ಮಾಪಕದ ಮ್ಯಾಟರ್ ನಿಯಂತ್ರಣಕ್ಕೆ ನಿರ್ದೇಶನ ನ್ಯಾನೊಪ್ರಮಾಣದ ಮೇಲೆ ಆಯಾಮಗಳನ್ನು ಹೊಸ ವಸ್ತುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ, ಸಾಂಪ್ರದಾಯಿಕ ಸಾಧನ ಭೌತಶಾಸ್ತ್ರದ ವಿಸ್ತರಣೆಗಳನ್ನು ಅಣುಗಳ ಸ್ವಯಂ ಜೋಡಣೆ ಆಧಾರದ ಮೇಲೆ ಸಂಪೂರ್ಣವಾಗಿ ಹೊಸ ಮಾರ್ಗಗಳನ್ನು ಹಿಡಿದು ಅಭಿವೃದ್ದಿ ಕಾರ್ಯ ನಡೆದಿದೆ.

ವಿಜ್ಞಾನಿಗಳು ಪ್ರಸ್ತುತ ನ್ಯಾನೊತಂತ್ರಜ್ಞಾನದ ಭವಿಷ್ಯದ ಪರಿಣಾಮಗಳನ್ನು ಚರ್ಚಿಸುತ್ತಿದ್ದಾರೆ. ನ್ಯಾನೊಟೆಕ್ನಾಲಜಿ ಇಂತಹ ನ್ಯಾನೋಮೆಡಿಸಿನ್, ನಾನೋ ಎಲೆಕ್ಟ್ರಾನಿಕ್ಸ್, ಜೈವಿಕ ಶಕ್ತಿಯ ಉತ್ಪಾದನೆ, ಮತ್ತು ಗ್ರಾಹಕ ಉತ್ಪನ್ನಗಳಲ್ಲಿ ಅನ್ವಯಗಳ ವ್ಯಾಪಕ ಶ್ರೇಣಿಯ ಅನೇಕ ಹೊಸ ವಸ್ತುಗಳನ್ನು ಮತ್ತು ಸಾಧನಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ, ನ್ಯಾನೊತಂತ್ರಜ್ಞಾನದ ಅದೇ ವಿಷಯಗಳ ಅನೇಕ ಹೊಸ ತಂತ್ರಜ್ಞಾನ, ವಿಷಕಾರಕ ಮತ್ತು ನ್ಯಾನೊವಸ್ತುಗಳ ಪರಿಸರ ಪರಿಣಾಮ, ಬಗ್ಗೆ ಸೇರಿದಂತೆ ಹಲವಾರು ತೊಂದರೆ ಹುಟ್ಟುಹಾಕುತ್ತದೆ  ಮತ್ತು ವಿವಿಧ ಪ್ರಳಯ ಸನ್ನಿವೇಶಗಳಲ್ಲಿ ಬಗ್ಗೆ ಊಹಾಪೋಹದ ಜಾಗತಿಕ ಆರ್ಥಿಕತೆ ತಮ್ಮ ಸಂಭಾವ್ಯ ಪರಿಣಾಮಗಳ ಈ ಕಾಳಜಿಗಳು ನ್ಯಾನೊತಂತ್ರಜ್ಞಾನದ ವಿಶೇಷ ನಿಯಂತ್ರಣ ಆಗಬೇಕಿದೆ ಎಂಬುದನ್ನು ಸಮರ್ಥನಾ ಗುಂಪುಗಳು ಮತ್ತು ಸರ್ಕಾರಗಳು ನಡುವೆ ಚರ್ಚೆ ಕಾರಣವಾಗಿವೆ.

ನ್ಯಾನೊತಂತ್ರಜ್ಞಾನದ ಶ್ರೇಯಾಂಕದ ಕಲ್ಪನೆಗಳನ್ನು ತನ್ನ ಚರ್ಚೆಗೆ  ಹೆಸರಾದ ಭೌತವಿಜ್ಞಾನಿ ರಿಚರ್ಡ್ ಫೆನ್ಮನ್ 1959 ರಲ್ಲಿ ಕೆಳಭಾಗದಲ್ಲಿ ಸಾಕಷ್ಟು ಕೋಣೆಗಳು ಇಲ್ಲ ಎಂಬ ಚರ್ಚೆಯಲ್ಲಿ ಚರ್ಚಿಸಿದರು. ಆತ ಪರಮಾಣುಗಳ ನೇರ ಕುಶಲ ನಿರ್ವಹಣೆಯ ಮೂಲಕ ಸಂಶ್ಲೇಷಣೆ ಸಾಧ್ಯತೆಯನ್ನು ವಿವರಿಸಿದ್ದಾರೆ . ಪದ ನ್ಯಾನೋ ತಂತ್ರಜ್ಞಾನ ಮೊದಲು 1974 ರಲ್ಲಿ ನೊರಿಒ ತನಿಗುಚಿ ಮೂಲಕ ಆವಿಷ್ಕಾರವಾದರು ಅದು  ವ್ಯಾಪಕವಾಗಿ ತಿಳಿದಿರಲಿಲ್ಲ ಆದರೂ ಬಳಸಲಾಯಿತು.

ಫೆನ್ಮನ್ನ ಪರಿಕಲ್ಪನೆಗಳು ಸ್ಫೂರ್ತಿ, ಕೆ ಎರಿಕ್ ಡ್ರೆಕ್ಸ್ಲರ್ ಪದ ನ್ಯಾನೊತಂತ್ರಜ್ಞಾನದ ಬಳಸಲಾಗುತ್ತದೆ ಸೃಷ್ಟಿ ತನ್ನ 1986 ಪುಸ್ತಕ ಎಂಜಿನ್: ಒಂದು ನ್ಯಾನೊಪ್ರಮಾಣದ ಅಸೆಂಬ್ಲರ್ ಸ್ವತಃ ಪ್ರತಿಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಇದು ಕಲ್ಪನೆಯನ್ನು ಸೂಚಿಸುತ್ತದೆ ನ್ಯಾನೊತಂತ್ರಜ್ಞಾನದ ಬರುವ ಯುಗದ ಮತ್ತು ಪರಮಾಣು ನಿಯಂತ್ರಣ ಅನಿಯಂತ್ರಿತ ಸಂಕೀರ್ಣತೆಯ ಮತ್ತು  ಇತರ ವಸ್ತುಗಳ ಉಲ್ಲೇಖ ಮಾಡಲಾಗಿದೆ . 1986 ರಲ್ಲಿ ಸಹ ಡ್ರೆಕ್ಸ್ಲರ್ ಸಾರ್ವಜನಿಕ ಅರಿವು ಮತ್ತು ನ್ಯಾನೊತಂತ್ರಜ್ಞಾನ ಪರಿಕಲ್ಪನೆಗಳು ಮತ್ತು ಪರಿಣಾಮಗಳು ತಿಳುವಳಿಕೆ ಹೆಚ್ಚಿಸಲು ಸಹಾಯ ದೂರದೃಷ್ಟಿ ಇನ್ಸ್ಟಿಟ್ಯೂಟ್ ಸ್ಥಾಪಿಸಲಾಯಿತು.

ಹೀಗಾಗಿ, 1980 ರಲ್ಲಿ ಒಂದು ಕ್ಷೇತ್ರವಾಗಿ ನ್ಯಾನೊತಂತ್ರಜ್ಞಾನದ ಹುಟ್ಟು ಅಭಿವೃದ್ಧಿ ಮತ್ತು ನ್ಯಾನೊತಂತ್ರಜ್ಞಾನ ಒಂದು ಕಾಲ್ಪನಿಕ ಚೌಕಟ್ಟಿನಲ್ಲಿ ಜನಪ್ರಿಯಗೊಳಿಸಿದರು ಡ್ರೆಕ್ಸ್ಲರ್ ಸೈದ್ಧಾಂತಿಕ ಮತ್ತು ಲೋಕೋಪಯೋಗಿ, ಒಂದೆಡೆ ಮೂಲಕ ಸಂಭವಿಸಿದೆ, ಮತ್ತು ಉನ್ನತ ಗೋಚರತೆಯನ್ನು ಪರಮಾಣು ನಿಯಂತ್ರಣ ಭವಿಷ್ಯ ಹೆಚ್ಚುವರಿ ವ್ಯಾಪಕ ಗಮನ ಸೆಳೆದರು ಪ್ರಾಯೋಗಿಕ ಬೆಳವಣಿಗೆಗಳು ನಡೆದವು. 1980 ರಲ್ಲಿ, ಎರಡು ಪ್ರಮುಖ ಪ್ರಗತಿಗಳು ಆಧುನಿಕ ಯುಗದಲ್ಲಿ ನ್ಯಾನೊತಂತ್ರಜ್ಞಾನದ ಬೆಳವಣಿಗೆ ಕಿಡಿ ಆಯಿತು.

ಮೊದಲ, ಆವಿಷ್ಕಾರ 1981 ರಲ್ಲಿ ಸ್ಕ್ಯಾನಿಂಗ್ ಟನಲಿಂಗ್ ಸೂಕ್ಷ್ಮದರ್ಶಕ ಪ್ರತ್ಯೇಕ ಅಣುಗಳು ಮತ್ತು ಬಂಧಗಳ ಅಭೂತಪೂರ್ವ ದೃಶ್ಯೀಕರಣ ನೀಡುತ್ತದೆ, ಮತ್ತು ಯಶಸ್ವಿಯಾಗಿ 1989 ರಲ್ಲಿ ವೈಯಕ್ತಿಕ ಪರಮಾಣುಗಳಿಗೆ ಕುಶಲತೆಯಿಂದ ಉಪಯೋಗಿಸಲಾಗಿತ್ತು ಸೂಕ್ಷ್ಮದರ್ಶಕದ ಅಭಿವರ್ಧಕರು ಗರ್ಡ್ ಬಿನ್ನಿಂಗ್ ಮತ್ತು ಹೆನ್ರಿಕ್ ಅರ್ನೆಸ್ಟ್ ಐಬಿಎಂ ಜ್ಯೂರಿಚ್ ರೀಸರ್ಚ್ ಲ್ಯಾಬೋರೇಟರಿ ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಪಡೆದರು 1986 ರಲ್ಲಿ ಭೌತಶಾಸ್ತ್ರದಲ್ಲಿ  ಬಿನ್ನಿಂಗ್ , ಕುಅತೆ ಮತ್ತು ಗರ್ಬರ್, ಅದೇ ವರ್ಷ ಹೋಲುವ ಅಣು ಬಲ ಸೂಕ್ಷ್ಮ ಕಂಡುಹಿಡಿದರು.




#Article 153: ಸಂಸ್ಕೃತ (1934 words)


ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು  ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ  ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಭೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಸಂಸ್ಕೃತದ ಪ್ರಥಮ ಕೃತಿ ಹಿಂದೂ ಧರ್ಮದ 'ವೇದ'ಗಳಲ್ಲಿ ಒಂದಾದ ಋಗ್ವೇದ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವಭಾಷೆ' ಎಂದೂ ಹಿಂದೆ ಕರೆಯುತ್ತಿದ್ದರು.

ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು.

ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು ಪಾಣಿನಿಯ ಅಷ್ಟಾಧ್ಯಾಯೀ (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು.  

ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿಷ್ಠಾನ ನಗರದಲ್ಲಿದ್ದ ಶಾತವಾಹನ ದೊರೆಗೆ ಸಂಬಂಧಿಸಿದ ‘ಮೋದಕಂ ತಾಡಯ’ದ ಕಥೆ ಬಹುಶಃ ದಕ್ಷಿಣ ಭಾರತದಲ್ಲಿ ಸಂಸ್ಕೃತದ ಹರಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಕರ್ನಾಟಕದ ಪ್ರಾಚೀನತಮ ಸಂಸ್ಕೃತ ಶಾಸನವೆಂದರೆ ಕುಬ್ಜ (ನೋಡಿ) ಬರೆದ ತಾಳಗುಂದ ಶಾಸನ (ಸು.450). ಇದರಲ್ಲಿರುವ ರಚನಾ ಪಾಂಡಿತ್ಯ ಆ ಕಾಲಕ್ಕಾಗಲೇ ಸಂಸ್ಕೃತ ಈ ನಾಡಿನಲ್ಲಿ ಚೆನ್ನಾಗಿ ಬೇರೂರಿರಬೇಕೆಂಬುದನ್ನು ತಿಳಿಸುವುದಲ್ಲದೆ, ಅದೇ ಕಾಲದ ಹಲ್ಮಿಡಿ ಶಾಸನದಿಂದ ಸಂಸ್ಕೃತ ಭಾಷೆ ಕನ್ನಡ ರಚನೆಗಳ ಮೇಲೂ ಪ್ರಭಾವ ಬೀರುವ ಸ್ಥಿತಿಯಲ್ಲಿದ್ದಿತೆಂಬುದನ್ನು ತೋರಿಸುತ್ತದೆ. ಇಲ್ಲಿಂದ ಮುಂದೆ ಸಂಸ್ಕೃತ ಶಿಷ್ಟಭಾಷೆಯಾಗಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿ ತತ್ಕಾಲದ ಉನ್ನತ ವರ್ಗಗಳಿಂದ ಪ್ರೋತ್ಸಾಹ ಗಳಿಸಿತು. ನೂರಾರು ಸಂಸ್ಕೃತ ಶಾಸನಗಳು ಕನ್ನಡದಲ್ಲಿ ರಚಿತವಾದವು. ಅನೇಕ ಕವಿಗಳು, ಶಾಸ್ತ್ರಕಾರರು ಈ ನಾಡಿನಲ್ಲಿ ಆಗಿಹೋದರು. ನೂರಾರು ಸಂಸ್ಕೃತ ಗ್ರಂಥಗಳ ರಚನೆಯಾಯಿತು. ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಗಣ್ಯವಾದುದು. ಹಾಗೆಯೇ ಸಂಸ್ಕೃತದ ಶ್ರುತಿ ಸ್ಮೃತಿ ಪುರಾಣ ಇತಿಹಾಸಗಳು ಕರ್ನಾಟಕದಲ್ಲಿ ಹರಡಿ ಅವು ಹಾಗೂ ಇತರ ಸಂಸ್ಕೃತ ಕೃತಿಗಳು ಕನ್ನಡ ದೇಶದ ಸಂಸ್ಕೃತಿ ಹಾಗೂ ನುಡಿಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತ ಬಂದಿವೆ.  

ಕರ್ನಾಟಕದ ಭಾಗಗಳನ್ನು ಆಳುತ್ತಿದ್ದ ಸಾತವಾಹನರ ಆಸ್ಥಾನಭಾಷೆ ಪ್ರಾಕೃತವಾಗಿದ್ದರೂ ಅವರು ಸಂಸ್ಕೃತ ಭಾಷೆಯನ್ನು ಕೂಡ ಪ್ರೋತ್ಸಾಹಿಸುತ್ತಿದ್ದಿರಬಹುದು. ಇವರ ಕಾಲದಲ್ಲೇ ರಾಮಾಯಣ ಮಹಾಭಾರತಗಳಷ್ಟು ಕವಿಜನಪ್ರಿಯವಾದ ಬೃಹತ್ಕಥೆ ಪೈಶಾಚೀ ಪ್ರಾಕೃತದಲ್ಲಿ ಗುಣಾಢ್ಯನೆಂಬಾತನಿಂದ ರಚಿತವಾದಂತೆ, ಮಹಾರಾಷ್ಟ್ರೀ ಪ್ರಾಕೃತದಲ್ಲಿ ಏಳುನೂರು ಮುಕ್ತಕಗಳ ಸಂಗ್ರಹವಾದ ಸತ್ತಸ ರಾಜನಾದ ಹಾಲನಿಂದಲೇ ಸಂಗ್ರಹಿತವಾದಂತೆ, ಅವನ ಆಸ್ಥಾನಪಂಡಿತನಾದ ಸರ್ವವರ್ಮನಿಂದ ಕಾತಂತ್ರವೆಂಬ ನೂತನ ಸಂಸ್ಕೃತ ವ್ಯಾಕರಣವೂ ನಿರ್ಮಿತವಾಯಿತು. ಮುಂದೆ ಬೃಹತ್ಕಥೆ ಸಂಸ್ಕೃತಕ್ಕೂ ಮೂರುನಾಲ್ಕು ರೂಪಾಂತರಗಳನ್ನು ಉತ್ತರದ ಕವಿಗಳಿಂದ ಪಡೆದುದನ್ನು ನೋಡುತ್ತೇವೆ. ಆದರೆ ಮೂಲ ಬೃಹತ್ಕಥೆ ದಕ್ಷಿಣದ್ದೇ; ಇದರ ಒಂದು ಅಂಶದ ರೂಪಾಂತರವೇ ಸುಪ್ರಸಿದ್ಧವಾದ ಪಂಚತಂತ್ರ ಕೂಡ. ಈ ಪಂಚತಂತ್ರದ ಒಂದು ಆವೃತ್ತಿಯ ಪ್ರವರ್ತಕ ಕೂಡ ಕರ್ನಾಟಕದ ವಸುಭಾಗಭಟ್ಟ (ಈ ಕೃತಿ ಬೃಹತ್ತರ ಭಾರತದ ಲೇಯಾಸ್ ಹಾಗೂ ಜಾವ ದ್ವೀಪದ ಭಾಷೆಗಳಲ್ಲಿಯೂ ಭಾಷಾಂತರಗೊಂಡಿದೆ).

ಭಾಸನ (ಸು.2ನೆಯ ಶತಮಾನ) ದ್ವಿತೀಯಾಕ್ಷರ ಪ್ರಾಸಗಳನ್ನು ಅನುಲಕ್ಷಿಸಿ ಆತ ಕನ್ನಡಿಗನಿದ್ದಿರಬೇಕೆಂದು ಯು.ವೆಂಕಟಕೃಷ್ಣರಾವ್ ಊಹಿಸಿದ್ದಾರೆ (ಈ ಊಹೆಗೆ ಹೆಚ್ಚಿನ ಸಮರ್ಥನೆ ಬೇಕಾಗಿದೆ).

ಪೂಜ್ಯಪಾದ (ಅಥವಾ ದೇವನಂದಿ 5 ಅಥವಾ 6ನೆಯ ಶತಮಾನ) ಪಾಣಿನಿಯ ಸೂತ್ರಗಳಿಗೆ ಶಬ್ದಾವತಾರವೆಂಬ ವ್ಯಾಖ್ಯಾನ ರಚಿಸಿದ್ದನೆಂದು ಶಾಸನಗಳಲ್ಲಿ ಹೇಳಲಾಗಿದೆ. ಈತ ಜೈನೇಂದ್ರ ವ್ಯಾಕರಣವೆಂಬ ಹೊಸ ವ್ಯಾಕರಣ ಪಂಥವನ್ನು ನಿರ್ಮಾಣ ಮಾಡಿದ. ಇದರಲ್ಲಿ ಪ್ರಾಯೋಗಿಕ ದೃಷ್ಟಿಯಿಂದ ಪಾಣಿನಿಯ ಸೂತ್ರಗಳನ್ನು ಸಂಗ್ರಹಿಸಲಾಗಿದೆ.

ಗಂಗರಾಜನಾದ ದುರ್ವಿನೀತ (6ನೆಯ ಶತಮಾನ) ಬೃಹತ್ಕಥೆಯ ಸಂಸ್ಕೃತ ರೂಪಾಂತರಕಾರರಲ್ಲಿ ಒಬ್ಬನೆಂದು ಕೆಲವು ಶಾಸನಗಳು ಹೇಳುತ್ತವೆ. ದುರ್ವಿನೀತನ ಸಮಕಾಲೀನನೂ ಸಂಸ್ಕೃತದ ಪ್ರಸಿದ್ಧ ಮಹಾಕಾವ್ಯವಾದ ಕಿರಾತಾರ್ಜುನೀಯದ ಕರ್ತೃವೂ ಆದ ಭಾರವಿ ದುರ್ವಿನೀತನ ಆಸ್ಥಾನದಲ್ಲಿಯೂ ಕೆಲಕಾಲ ಇದ್ದನೆಂಬ ಐತಿಹ್ಯವನ್ನು ಈಚೆಗೆ ದೊರೆತ ದಂಡಿಯ ಅವಂತಿಸುಂದರೀ ಕಥಾ ಎಂಬ ಗದ್ಯಕೃತಿ ಒಳಗೊಂಡಿದೆ. ದಂಡಿ ಸಹ ಕೆಲವು ಕಾಲ ದುರ್ವಿನೀತನ ಆಸ್ಥಾನದಲ್ಲಿ ಇದ್ದಿರಬೇಕು. ನಾಟಕಕಾರರಲ್ಲಿ ಪ್ರಸಿದ್ಧನಾದ ಮೃಚ್ಫಕಟಿಕಕಾರ ಶೂದ್ರಕನು ಗಂಗರಾಜ ಶಿವಮಾರನಿರಬೇಕೆಂದು ಸಾಲೆತೊರೆ ಎಂಬ ವಿದ್ವಾಂಸರ ಊಹೆ.

ಭಾರವಿ ಮತ್ತು ಕಾಳಿದಾಸ ಮಹಾಕವಿಗಳ ಸ್ಪಷ್ಟ ಶಿಲಾಶಾಸನೋಲ್ಲೇಖ ದೊರೆಯುವುದು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದ ಐಹೊಳೆಯ ಶಾಸನದಲ್ಲಿ (634). ಆ ಶಾಸನದ ಕರ್ತೃ ರವಿಕೀರ್ತಿ ತನ್ನನ್ನು ಆ ಇಬ್ಬರು ಮಹಾಕವಿಗಳಿಗೆ ಸಮನೆಂದು ಹೊಗಳಿಕೊಂಡಿದ್ದಾನೆ. ಈ ಪ್ರಶಸ್ತಿ ಶಾಸನ ಇಮ್ಮಡಿ ಪುಲಕೇಶಿಯ ಪರಾಕ್ರಮಾದಿಗಳನ್ನು ಕಾವ್ಯಮಯ ಶೈಲಿಯಲ್ಲಿ ವರ್ಣಿಸುತ್ತದೆ. ಇದರ ಭಾಷೆ ಸರಾಗವಾಗಿ ಹರಿಯುತ್ತದೆ. ನಾನಾ ಬಗೆಯ ವೃತ್ತಗಳಲ್ಲಿ ರಚಿತವಾದ ಇದರಲ್ಲಿ ಕಾವ್ಯದ ಹಲವು ಲಕ್ಷಣಗಳು ಕಾಣಬರುತ್ತವೆ. ಇದಕ್ಕೂ ಮುಂಚಿನ ಮಂಗಲೀಶನ ಶಾಸನದಲ್ಲಿ (ಸು.600) ಒಂದನೆಯ ಕೀರ್ತಿವರ್ಮನ ದಿಗ್ವಿಜಯವನ್ನು ವರ್ಣಿಸುವಲ್ಲಿ ಕಾಳಿದಾಸನ ರಘುವಂಶದ ರಘು ದಿಗ್ವಿಜಯವನ್ನೇ ಮಾದರಿಯಾಗಿಟ್ಟುಕೊಳ್ಳಲಾಗಿದೆ. ಇಮ್ಮಡಿ ಪುಲಕೇಶಿಯ ಸೊಸೆ, ಚಂದ್ರಾದಿತ್ಯನ ರಾಣಿ ವಿಜಯಾ ಅಥವಾ ಬಿಜ್ಜಾ ಅಥವಾ ಬಿಜ್ಜಿಕಾ (ವಿಜ್ಜಿಕೆ) ಪ್ರೌಢ ಪಾಂಡಿತ್ಯ ಪಡೆದಿದ್ದಳೆಂದು ತಿಳಿದುಬರುತ್ತದೆ. ಕೌಮುದೀ ಮಹೋತ್ಸವವೆಂಬ ನಾಟಕ ಬರೆದವಳು ಇವಳೇ ಎಂದು ವಿದ್ವಾಂಸರ ಅಭಿಪ್ರಾಯ.

ಬಾದಾಮಿಯ ಚಾಳುಕ್ಯರ ಕಾಲದಲ್ಲಿಯೇ ಶಂಕರಾಚಾರ್ಯರ ವೇದಾಂತ ಭಾಷ್ಯಗಳೂ ಹುಟ್ಟಿಕೊಂಡಿರಬಹುದು. ಸಮಂತಭದ್ರನ ತತ್ತ್ವಾರ್ಥ ಸೂತ್ರ ಮಹಾಭಾಷ್ಯ, ಆಪ್ತಮೀಮಾಂಸಾ ಮುಂತಾದ ಉದ್ದಾಮ ಧರ್ಮ ಗ್ರಂಥಗಳೂ ಈ ಕಾಲದಲ್ಲಿ ಬಂದವು. ತತ್ತ್ವಾರ್ಥಾಸೂತ್ರಕ್ಕೆ ಸರ್ವಾರ್ಥಸಿದ್ಧಿ ವ್ಯಾಖ್ಯೆಯನ್ನು ಪುಜ್ಯಪಾದ ರಚಿಸಿದ. ಮತ್ತೊಬ್ಬ ಜೈನ ಪಂಡಿತ ಅಕಲಂಕ ತತ್ತ್ವಾರ್ಥ ರಾಜವಾರ್ತಿಕ, ಅಷ್ಟಶತೀ, ನ್ಯಾಯವಿನಿಶ್ಚಯ ಮುಂತಾದುವನ್ನು ರಚಿಸಿದ್ದಾನೆ.

ರಾಷ್ಟ್ರಕೂಟರ ಕಾಲದಲ್ಲಿ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಒಂದನೆಯ ಅಮೋಘ ವರ್ಷ (814-78) ಸ್ವಯಂ ಗ್ರಂಥಕಾರನಾಗಿದ್ದುದಲ್ಲದೆ (ಪ್ರಶ್ನೋತ್ತರ-ರತ್ನಮಾಲಿಕಾ ಇವನ ಕೃತಿಯೆನ್ನುತ್ತಾರೆ) ಜಿನಸೇನಾಚಾರ್ಯರು ಮಹಾಪುರಾಣ, ಪಾಶಾರ್ವ್‌ಭ್ಯುದಯಗಳೆಂಬ ಉದ್ಗ್ರಂಥಗಳನ್ನು ಬರೆಯಲು ನೆರವಾದ. ಶಾಕಟಾಯನ ವ್ಯಾಕರಣವೆಂಬ ನವೀನ ಪ್ರಸ್ಥಾನವೂ ಈಗಲೇ ಉದಿಸಿತು. ಅದರ ವೃತ್ತಿಗೆ ಅಮೋಘ ವೃತ್ತಿಯೆಂದೇ ಹೆಸರಿದೆ. ಮಹಾವೀರನೆಂಬ ಪಂಡಿತ ಜ್ಯೋತಿಶಾಸ್ತ್ರದ ಗಣಿತಸಾರ ಸಂಗ್ರಹವನ್ನು ಬರೆದಿದ್ದಾನೆ.

ಅದ್ವೈತವೇದಾಂತ ದೃಷ್ಟಿಯಿಂದ ರಾಷ್ಟ್ರಕೂಟರ ಕಾಲವನ್ನು ಸುವರ್ಣಯುಗವೆಂದು ಕರೆಯಬಹುದು. ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದ ಮತ್ತು ಸುರೇಶ್ವರರು ವೇದಾಂತ ಪ್ರಚಾರದಲ್ಲಿ ನಿರತರಾಗಿದ್ದರು. ಸುರೇಶ್ವರರ ಶಿಷ್ಯ ಸರ್ವಜ್ಞಾತ್ಮನ್ ‘ಸಂಕ್ಷೇಪ ಶಾರೀರಕ’ ವನ್ನು ರಚಿಸಿದ. ಇದೇ ಯುಗದಲ್ಲಿ ಯಾಜ್ಞವಲ್ಕ್ಯಸ್ಮೃತಿಗೆ ವಿಶ್ವರೂಪ ಬರೆದ ‘ಬಾಲಕ್ರೀಡಾ ವ್ಯಾಖ್ಯೆ’ ಬಹಳ ಪ್ರಸಿದ್ಧವಾಯಿತು.

ಮುಮ್ಮಡಿ ಇಂದ್ರನ (914-29) ಆಸ್ಥಾನ ಕವಿಯಾಗಿದ್ದ ತ್ರಿವಿಕ್ರಮಭಟ್ಟ ನಳಚಂಪು ಮತ್ತು ಮದಾಲಸಾಚಂಪು ಎಂಬ ಎರಡು ಕೃತಿಗಳನ್ನು ರಚಿಸಿದ. ಇವೆರಡು ಸಂಸ್ಕೃತ ಸಾಹಿತ್ಯದ ಚಂಪು ಪ್ರಕಾರದ ಉಪಲಬ್ಧ ಪ್ರಾಚೀನತಮ ಕೃತಿಗಳು. ಇವನ ಚಂಪುಶೈಲಿಯಲ್ಲಿ ಬಾಣನ ಗದ್ಯವೈಭವ ಹಾಗೂ ನಾಟಕಕಾರರ ಪದ್ಯ ಪ್ರಾಗಲ್ಭ್ಯಗಳೆರಡೂ ರಸಮಯವಾಗಿ ಜೊತೆಗೂಡಿವೆ. ಇವನಿಗೆ ಮೊದಲೇ ದಂಡಿ ಚಂಪು ಪ್ರಭೇದವನ್ನು ಹೇಳಿ, ಅದರ ಸ್ವರೂಪವನ್ನು ತಿಳಿಸಿದ್ದನಾದರೂ ತ್ರಿವಿಕ್ರಮನಿಗೆ ಮೊದಲು ಯಾವ ಚಂಪು ಕೃತಿಯೂ ದೊರೆತಿಲ್ಲ. ಮುಮ್ಮಡಿ ಕೃಷ್ಣನೂ (939-67) ಸ್ವತಃ ವಿದ್ವಾಂಸನಾಗಿದ್ದು ಪಿಂಗಲನ ಛಂದಸ್ಸೂತ್ರದ ಮೇಲೆ ವ್ಯಾಖ್ಯಾನ ಬರೆದ. ಇವನ ಆಶ್ರಯದಲ್ಲಿ ಹಲಾಯುಧ ಒಂದು ಕೋಶವನ್ನೂ ಕವಿಗಳಿಗೆ ಉಪಯುಕ್ತವಾದ ಕೃತಿಗಳನ್ನೂ ರಚಿಸಿದ.

ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಜೈನರೂ ಅಮೋಘ ಕಾಣಿಕೆಯನ್ನಿತ್ತಿದ್ದಾರೆ. ವೀರಸೇನ ಮತ್ತು ಜಿನಸೇನರು 1,00,000 ಶ್ಲೋಕಗಳ ವಿಸ್ತಾರವಾದ ಧವಲಾ, ಜಯಧವಲಾ ಮತ್ತು ಮಹಾಧವಲಾ ಎಂಬ ಷಟ್ ಖಂಡಾಗಮ ವ್ಯಾಖ್ಯಾನವನ್ನು ಪುರೈಸಿದರು. ಜಿನಸೇನರು ಆದಿಪುರಾಣ ಮತ್ತು ಪಾಶರ್ವ್‌ನಾಥಪುರಾಣಗಳನ್ನೂ ಬರೆದು ಪ್ರಸಿದ್ಧರಾದರು. ಅಸಗನಿಗೆ ಸಂಸ್ಕೃತ ಕನ್ನಡಗಳೆರಡರಲ್ಲಿಯೂ ಸಮಾನವಾದ ಕವಿತಾ ಸಾಮಥರ್ಯ್‌ವಿತ್ತು. ಸಂಸ್ಕೃತದಲ್ಲಿ ಈತ ವರ್ಧಮಾನಪುರಾಣವನ್ನು ರಚಿಸಿದ್ದಾನೆ. ವಿದ್ಯಾನಂದ ಎಂಬುವನು ಸಮಂತಭದ್ರನ ಆಪ್ತಮೀಮಾಂಸಾ, ಆಪ್ತಪರೀಕ್ಷಾ ಇತ್ಯಾದಿ ಗ್ರಂಥಗಳಿಗೆ ಅಷ್ಟಸಾಹಸ್ರೀ ಎಂಬ ಅದ್ಭುತವಾದ ವ್ಯಾಖ್ಯಾನ ರಚಿಸಿದ್ದಾನೆ.

ವೇಮುಲವಾಡದ ಚಾಳುಕ್ಯರ ಆಶ್ರಯದಲ್ಲಿದ್ದ ಸೋಮದೇವಸೂರಿ (ಸು.959) ಯಶಸ್ತಿಲಕಚಂಪು ಎಂಬ ಕೃತಿಯನ್ನೂ ನೀತಿವಾಕ್ಯಾಮೃತವೆಂಬ ಗ್ರಂಥವನ್ನೂ ರಚಿಸಿದ. ಯಶಸ್ತಿಲಕಚಂಪುವಿನಲ್ಲಿ ಕವಿ ನಾನಾಶಾಸ್ತ್ರದಲ್ಲಿ, ತನಗಿದ್ದ ಪಾಂಡಿತ್ಯ ಹಾಗೂ ಜಾಣ್ಮೆಯನ್ನು ಪ್ರದರ್ಶಿಸಿಕೊಂಡಿದ್ದಾನೆ. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಈ ಕೃತಿ ಅಮೂಲ್ಯವಾದು ದಾಗಿದೆ. ನೀತಿವಾಕ್ಯಾಮೃತ ರಾಜನೀತಿಶಾಸ್ತ್ರದ ಕೈಪಿಡಿಯಂತಿದೆ. ಇದರಲ್ಲಿ ರಾಜಕೀಯ ವ್ಯವಹಾರಗಳ ಸೂಕ್ಷ್ಮ ನಿರೂಪಣೆಯ ಜತೆಗೆ ಜನಸಾಮಾನ್ಯರಿಗೂ ಸಂಬಂಧಿಸಿದ ನೀತಿಗಳನ್ನು ಎಲ್ಲರಿಗೂ ಅರ್ಥವಾಗುವ ಕ್ರಮದಲ್ಲಿ ನಿರೂಪಿಸಿದ್ದಾನೆ. ಸೋಮದೇವಸೂರಿ ಕವಿಯಷ್ಟೇ ಅಲ್ಲ ತತ್ತ್ವಶಾಸ್ತ್ರದಲ್ಲಿಯೂ ನಿಷ್ಣಾತನಾಗಿದ್ದ ‘ಷಣ್ಣವತಿ ಪ್ರಕರಣ’ ಇವನ ಕೊಡುಗೆ.
ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಬಂದರೆ ಎರಡನೆಯ ಜಯಸಿಂಹನ ಆಳಿಕೆಯಲ್ಲಿ (1015-44) ವಾದಿರಾಜನ ಯಶೋಧರಚರಿತ ಮತ್ತು ಪಾಶರ್ವ್‌ನಾಥ ಚರಿತ ಎಂಬ ಸುಂದರ ಕಾವ್ಯಗಳು ಮೂಡಿಬಂದವು. ವಾದಿರಾಜನ ಪಾಂಡಿತ್ಯವನ್ನು ಅನೇಕ ಶಾಸನಗಳು ಕೊಂಡಾಡಿವೆ. ಅಕಲಂಕನ ಮಹಾಗ್ರಂಥವನ್ನು ಕುರಿತ ಸಮಗ್ರ ವ್ಯಾಖ್ಯಾನ ‘ನ್ಯಾಯ ವಿನಿಶ್ಚಯ ಟೀಕೆ’ ವಾದಿರಾಜನ ಮೇರು ಕೃತಿ. ಇವನು ಉತ್ತಮ ಬರೆಹಗಾರನಾಗಿದ್ದ, ಜೊತೆಗೆ ಸಮರ್ಥ ವಾಗ್ಮಿಯಾಗಿದ್ದನೆಂದು ತಿಳಿದುಬರುತ್ತದೆ. ಲಕುಲೀಶ ಪಂಡಿತ ಅಥವಾ ವಾದಿರುದ್ರಗುಣ ಮಹಾವಿದ್ವಾಂಸನೆಂದೂ ಜೈನ ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದೂ 1036ರ ಶಾಸನವೊಂದು ತಿಳಿಸುತ್ತದೆ. ವಾದಿರಾಜನ ಸಹಪಾಠಿ ಮತ್ತು ಮತಿಸಾಗರನ ಶಿಷ್ಯನಾದ ದಯಪಾಲ ಎಂಬುವನು ಶಾಕಟಾಯನ ವ್ಯಾಕರಣದ ಉಪಯುಕ್ತವಾದ ಪುನರ್ವಿಮರ್ಶಿತ ಕೈಪಿಡಿಯನ್ನು ಸಿದ್ಧಗೊಳಿಸಿದ. ರೂಪಸಿದ್ಧಿಯೆಂದು ಕರೆಯಲಾದ ಇದನ್ನು ಹಲವು ಶಾಸನಗಳಲ್ಲಿ ಹೊಗಳಲಾಗಿದೆ.

ಇದೇ ಕಾಲದಲ್ಲಿ ಕಾವ್ಯಾವಲೋಕನದ ಕರ್ತೃ ನಾಗವರ್ಮ ಸಂಸ್ಕೃತ ಕೋಶವೊಂದನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಆದರೆ ಇದು ಉಪಲಬ್ಧವಿಲ್ಲ. ಈ ಕಾಲದಲ್ಲಿ ವಾದೀಭಸಿಂಹನ ಗದ್ಯಚಿಂತಾಮಣಿ, ಕ್ಷತ್ರಚೂಡಾಮಣಿ ಎಂಬ ಗದ್ಯಕಾವ್ಯಗಳು ಬಾಣನ ಮಾದರಿಯಲ್ಲಿ ನಿರ್ಮಿತವಾದವು. ಜಯಕೀರ್ತಿಯ ಛಂದೋನುಶಾಸನವೂ ಇದೇ ಕಾಲದ್ದು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ (1076-1127), ಕರ್ಣ, ಭೋಜಾದಿಗಳ ಆಸ್ಥಾನಗಳನ್ನೆಲ್ಲ ಸುತ್ತಿ ಬಂದಿದ್ದ ಕಾಶ್ಮೀರದ ಬಿಲ್ಹಣ ಮಹಾಕವಿಗೆ ತನ್ನ ಆಸ್ಥಾನದಲ್ಲಿ ವಿದ್ಯಾಪತಿಯೆಂಬ ಪದವಿಯನ್ನಿತ್ತು ಅವನಿಂದ ವಿಕ್ರಮಾಂಕ ದೇವಚರಿತವೆಂಬ ಮನೋಹರ ಐತಿಹಾಸಿಕ ಕಾವ್ಯವನ್ನು ಬರೆಯಿಸಿದ. ಇದೇ ವಿಕ್ರಮಾದಿತ್ಯನ ಕಾಲದಲ್ಲಿ ವಿಜ್ಞಾನೇಶ್ವರ ಎಂಬ ಪಂಡಿತ ಧರ್ಮಶಾಸ್ತ್ರ ಸಾಹಿತ್ಯದಲ್ಲಿಯೇ ತುಂಬಾ ಮನ್ನಣೆಗಳಿಸಿರುವ ಮಿತಾಕ್ಷರಾ ವ್ಯಾಖ್ಯೆಯನ್ನು ಯಾಜ್ಞವಲ್ಕ್ಯಸ್ಮೃತಿಗೆ ಬರೆದ. ಚಾಳುಕ್ಯ ಅರಸ ಮೂರನೆಯ ಸೋಮೇಶ್ವರ ಭೂಲೋಕಮಲ್ಲ (1127-39) ಅಭಿಲಾಷಿತಾರ್ಥಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ವಿಶ್ವಕೋಶವನ್ನು ರಚಿಸಿದ. ಇದರಲ್ಲಿ ಸಂಸ್ಕೃತ ಕಾವ್ಯ, ಶಾಸ್ತ್ರ, ಕಲೆ, ವಿಜ್ಞಾನ, ಧರ್ಮ ಮುಂತಾದ ಸಕಲ ವಿದ್ಯಾಪ್ರಕಾರಗಳೂ ಸಂಕ್ಷಿಪ್ತವಾಗಿ ಹಾಗೂ ಸಪ್ರಮಾಣವಾಗಿ ಅಂತರ್ಗತವಾಗಿವೆ. ವನಸ್ಪತಿಗಳು, ಪ್ರಾಣಿಗಳು, ಪುಷ್ಪರಚನೆ, ಶಕುನಗಳು, ಕಾಮಶಾಸ್ತ್ರ, ಚಿತ್ರ, ಸಂಗೀತ, ರಾಜನೀತಿ, ಭೂಗೋಳ, ಪಾಕಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳಿಗೂ ಇಲ್ಲಿ ಸಮಾವೇಶ ದೊರೆತಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಇಡೀ ಸಂಸ್ಕೃತ ಸಾಹಿತ್ಯದಲ್ಲೇ ಇಂಥ ಗ್ರಂಥ ಮತ್ತೊಂದಿಲ್ಲ. ಈ ದೊರೆಯ ಆಶ್ರಯದಲ್ಲೇ ಇದ್ದ ಪಾಶರ್ವ್‌ದೇವ ಸಂಗೀತ ಸಮಯಸಾರವನ್ನು ರಚಿಸಿದ್ದಾನೆ. ಇಮ್ಮಡಿ ಜಗದೇಕಮಲ್ಲ (1139-49) ಸಂಗೀತಕ್ಕೆ ಸಂಬಂಧಿಸಿದಂತೆ ಸಂಗೀತ ಚೂಡಾಮಣಿ ಎಂಬ ಗ್ರಂಥವನ್ನು ಬರೆದಿದ್ದಾನೆ.

ಹೊಯ್ಸಳರ ರಾಜ್ಯದಲ್ಲಿಯ ಎರಡನೆಯ ವೀರಬಲ್ಲಾಳನ ಆಸ್ಥಾನಕವಿ ವಿದ್ಯಾಚಕ್ರವರ್ತಿಯ ರುಕ್ಮೀಣೀಕಲ್ಯಾಣನಾಟಕ ಹಾಗೂ ಅಲಂಕಾರಸರ್ವಸ್ವ ಸಂಜೀವಿನೀ ಮತ್ತು ಕಾವ್ಯಪ್ರಕಾಶ ಸಂಪ್ರದಾಯಪ್ರಕಾಶಿನೀ ಎಂಬ ಅಲಂಕಾರ ಶಾಸ್ತ್ರಗ್ರಂಥಗಳು ಮಹತ್ತ್ವದ್ದಾಗಿದೆ. ಇವನ ಮಗನಾದ ಸಕಲವಿದ್ಯಾಚಕ್ರವರ್ತಿ ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ಬರೆದಿದ್ದಾನೆ.

ಕರ್ನಾಟಕದಲ್ಲಿಯೇ ಹುಟ್ಟಿಬೆಳೆದ ಮಧ್ವಾಚಾರ್ಯರು ವೇದಾಂತ ಪಂಥವೊಂದನ್ನು ಸ್ಥಾಪಿಸಿ ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನೂ ರಾಮಾಯಣ, ಮಹಾಭಾರತ, ಭಾಗವತಗಳ ತಾತ್ಪರ್ಯ ನಿರ್ಣಯ ಮೊದಲಾದ 37 ಗ್ರಂಥಗಳನ್ನೂ ರಚಿಸಿದರು.
ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಸಂಸ್ಕೃತ ವಾಙ್ಮಯ ಉನ್ನತಿಗೆ ಹೆಚ್ಚಿನ ಪ್ರಚೋದನೆ ನೀಡಿತು. ಸಾಮ್ರಾಜ್ಯ ಸ್ಥಾಪಕರಾದ ಮಾಧವ ವಿದ್ಯಾರಣ್ಯರು ಅವರ ಗುರುಗಳಾದ ಭಾರತೀತೀರ್ಥರು ಹಾಗೂ ಅವರ ತಮ್ಮಂದಿರಾದ ಸಾಯಣ ಮತ್ತು ಭೋಗನಾಥ ಇವರಿಂದ ಸಂಸ್ಕೃತ ವಾಙ್ಮಯದ ಎಲ್ಲ ಪ್ರಕಾರಗಳು ಸಮೃದ್ಧವಾದುವು. ತೈತ್ತೀರೀಯ ಸಂಹಿತೆ ಮುಂತಾದ ನಾಲ್ಕು ವೇದ ಸಂಹಿತೆಗಳು, ಅವುಗಳ ಬ್ರಾಹ್ಮಣಗಳು ಹೀಗೆ 18 ವೇದಗ್ರಂಥಗಳಿಗೆ ಮಾಧವಾಚಾರ್ಯ (ವಿದ್ಯಾರಣ್ಯರ) ನೇತೃತ್ವದಲ್ಲಿ ಅನೇಕರ ನೆರವಿನಿಂದ ಸಾಯಣಾಚಾರ್ಯರು ಭಾಷ್ಯ ರಚಿಸಿದರು. ಇವುಗಳಲ್ಲಿ ಒಂದೊಂದು ಸಂಹಿತೆಯ ಪ್ರಾರಂಭದಲ್ಲಿಯೂ ಪೀಠಿಕೆಯಲ್ಲಿ ವೇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪುರ್ವಮೀಮಾಂಸಾ ಸೂತ್ರಗಳ ಆಧಾರದ ಮೇಲೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಸಾಯಣರ ಯಜ್ಞತಂತ್ರ ಸುಧಾನಿಧಿ ಮತ್ತು ಪ್ರಯೋಗ ರತ್ನಮಾಲಾ ಗ್ರಂಥಗಳು ಶ್ರೌತಯಜ್ಞಗಳ ಪ್ರಯೋಗವನ್ನು ಸ್ಪಷ್ಟಪಡಿಸುತ್ತವೆ.

ಸ್ಮೃತಿ ಕ್ಷೇತ್ರದಲ್ಲಿ ಪರಾಶರ ಸ್ಮೃತಿಗೆ ಮಾಧವೀಯ ವ್ಯಾಖ್ಯೆ ಮತ್ತು ವ್ಯವಹಾರದ ವಿಷಯದಲ್ಲಿ ಪರಾಶರಮಾಧವೀಯ ಗ್ರಂಥಗಳು ಹೊರಬಂದವು. ಪ್ರಾಯಶ್ಚಿತ್ತ ಸುಧಾನಿಧಿಯೂ ಇದೇ ವಿಭಾಗಕ್ಕೆ ಸೇರಿದ ಕೃತಿ. ದೇವಣ್ಣಭಟ್ಟ (ಸು.1145) ನಾನಾ ಸ್ಮೃತಿಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯನ್ನು ಮತ್ತು ನರಹರಿ ಎಂಬುವನು ಸ್ಮೃತಿಕೌಸ್ತುಭವನ್ನೂ ರಚಿಸಿದರು. ವ್ಯಾಕರಣದಲ್ಲಿ ಮಾಧವೀಯವಾದ ಧಾತುವೃತ್ತಿಯನ್ನು ಗಮನಿಸಬಹುದು.

ದರ್ಶನ ಪ್ರಪಂಚದಲ್ಲಿ ಮಾಧವ ವಿದ್ಯಾರಣ್ಯರ ಜೈಮಿನೀಯ ನ್ಯಾಯಮಾಲಾವಿಸ್ತರ ಮತ್ತು ವೈಯಾಸಿಕ ನ್ಯಾಯಮಾಲಾವಿಸ್ತರ ಮತ್ತು ಸಾಯಣಾಚಾರ್ಯರ ಸರ್ವದರ್ಶನಸಂಗ್ರಹ ಇವು ಮುಖ್ಯವಾದವು. ಪದ್ಮಪುರಾಣದ ಸೂತಸಂಹಿತೆಯ ವ್ಯಾಖ್ಯೆ ತಾತ್ಪರ್ಯ ದೀಪಿಕೆಯೂ ಇವರದು. ಅಲಂಕಾರಶಾಸ್ತ್ರಕ್ಕೆ ಸೇರಿದ ಅಲಂಕಾರಸುಧಾನಿಧಿಯೂ ಸಾಯಣರ ಹೆಸರಿನಲ್ಲಿದೆ. ಸಾಯಣರು ಸುಭಾಷಿತಸುಧಾನಿಧಿ ಎಂಬ ಸುಭಾಷಿತ ಸಂಗ್ರಹವನ್ನೂ ಸಿದ್ಧಪಡಿಸಿದರು. ಭೋಗನಾಥ ಉತ್ತಮ ಕವಿಯೆಂದೂ ಹಲವು ಕೃತಿಗಳನ್ನು ರಚಿಸಿದನೆಂದೂ ಉಲ್ಲೇಖವಿದೆ. ಆದರೆ ಆತನ ಕೃತಿಗಳು ಯಾವುವೂ ದೊರೆತಿಲ್ಲ.

ತನ್ನ ಪತಿ ಕಂಪಣ ಅಥವಾ ಕಂಪರಾಯ ಮಧುರೆಯನ್ನು ವಶಪಡಿಸಿಕೊಂಡುದನ್ನು ಕಣ್ಣಾರೆ ಕಂಡ ಗಂಗಾದೇವಿ, ಆ ವಿಜಯ ಯಾತ್ರೆಯನ್ನು ಮಧುರಾವಿಜಯ ಅಥವಾ ವೀರಕಂಪಣ ರಾಯಚರಿತವೆಂಬ ಹೆಸರಿನಲ್ಲಿ ಕಾವ್ಯವೊಂದನ್ನು ರಚಿಸಿದ್ದಾಳೆ (ಸು.1360). ವಿಜಯನಗರದ ವಿರೂಪಾಕ್ಷ ನರಕಾಸುರ ವಿಜಯವನ್ನು ರಚಿಸಿದ. ಈ ಕಾಲದಲ್ಲೇ ಮುಂದೆಯೂ ಸಾಲುವಾಭ್ಯುದಯ ಮುಂತಾದ ಅನೇಕ ಕಾವ್ಯಗಳು ರಚಿತವಾದವು.
ವಿಜಯನಗರದ ಅನಂತರ ರಾಜಕೀಯ ಕೇಂದ್ರ ಹಂಚಿಹೋದಂತೆ ವಿದ್ಯಾಕೇಂದ್ರಗಳೂ ಹಂಚಿಹೋದವು. ಆದರೆ ಸಂಸ್ಕೃತಕ್ಕಿದ್ದ ಪ್ರೋತ್ಸಾಹ ಕುಂಠಿತವಾದರೂ ಅಳಿಸಿಹೋಗಲಿಲ್ಲ. ಕೆಳದಿಯ ದೊರೆ ಬಸವ ಭೂಪಾಲ ಸ್ವತಃ ಕವಿಯಾಗಿದ್ದ. ಸೋಮದೇವನ ಅಭಿಲಷಿತಾರ್ಥ ಚಿಂತಾಮಣಿಯ ಮಾದರಿಯನ್ನು ಅನುಸರಿಸಿ ಶಿವತತ್ತ್ವ ರತ್ನಾಕರ ಎಂಬ ಗ್ರಂಥವನ್ನು ಈತ ಸಿದ್ಧಪಡಿಸಿದ. ಇದು 108 ಅಧ್ಯಾಯಗಳುಳ್ಳ ಬೃಹದ್ಗ್ರಂಥ. ಇವನದೇ ಇನ್ನೊಂದು ಉದ್ಗ್ರಂಥ ಸುಭಾಷಿತ ಸುರದ್ರುಮ ಎಂಬ ಸೂಕ್ತಿಕೋಶ. ಶ್ರೀರಂಗಪಟ್ಟಣದ ದಳವಾಯಿ ನಂಜರಾಜ ನಂಜರಾಜಯಶೋಭೂಷಣ ಎಂಬ ಅಲಂಕಾರ ಗ್ರಂಥವನ್ನು ಬರೆದ. ಅಲ್ಲಿಯೇ ಪ್ರಧಾನಿಯಾಗಿದ್ದ ವೆಂಕಟಪ್ಪಯ್ಯ ಭೂಪತಿ ಅಥವಾ ವೆಂಕಾಮಾತ್ಯ ಹಲವಾರು ಗ್ರಂಥಗಳನ್ನು ರಚಿಸಿದ. ಇವನ ಅಲಂಕಾರಮಣಿದರ್ಪಣದಲ್ಲಿ ಅದುವರೆಗೆ ಅಲಂಕಾರ ಶಾಸ್ತ್ರದಲ್ಲಿ ನಡೆದ ಚರ್ಚೆಗಳನ್ನು ಸುಲಲಿತವಾಗಿ ಸಂಗ್ರಹಿಸಲಾಗಿದೆ. ಇವನ ಕುಶಲವ ವಿಜಯಚಂಪು ಭಟ್ಟಿಕಾವ್ಯದ ಮಾದರಿಯಲ್ಲಿ ವ್ಯಾಕರಣ ನಿಯಮಗಳಿಗೆ ಉದಾಹರಣೆ ಯಾಗಿರುವಂತೆ ರಚಿಸಲಾದ ಶಾಸ್ತ್ರಕಾವ್ಯ. ಈತ ಇವಲ್ಲದೆ ಹತ್ತು ಬಗೆಯ ರೂಪಕಗಳಿಗೂ ಒಂದೊಂದು ಉದಾಹರಣೆಯಾಗುವಂತೆ ಹತ್ತು ರೂಪಕಗಳನ್ನು ಬರೆದಿದ್ದಾನೆ.

ಮೇಲುಕೋಟೆಯ ಜಗ್ಗೂಆಳ್ವಾರರು ನಿರ್ಮಿಸಿದ ಪ್ರತಿಜ್ಞಾಕೌಟಿಲ್ಯಂ, ಪ್ರಸನ್ನರಾಘವಂ, ಮಹೀಹರಣಂ ಮುಂತಾದ ಅನೇಕ ಕಾವ್ಯಗಳು ಗಮನಾರ್ಹವಾಗಿವೆ. ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್, ಕನ್ನಡ, ಹಿಂದೀಗಳಿಗೆ ಅನುವಾದಿಸಿ ಸಂಸ್ಕೃತ ಸಾಹಿತ್ಯವನ್ನು ಅನ್ಯರಿಗೆ ಪರಿಚಯ ಮಾಡಿಕೊಡುವಲ್ಲಿ ವಿದ್ವಾಂಸರಾದ ಕೆ. ಕೃಷ್ಣಮೂರ್ತಿ, ಎನ್. ರಂಗನಾಥಶರ್ಮ ತುಂಬಾ ಶ್ರಮಿಸಿದ್ದಾರೆ. ಇವರಂತೆಯೇ ಅನೇಕ ಆಧುನಿಕ ವಿದ್ವಾಂಸರು ತಮ್ಮದೇ ಆದ ಕೊಡುಗೆಯನ್ನು ಮೂಲ ಸಾಹಿತ್ಯಕ್ಕಾಗಲೀ ಅಥವಾ ಅನುವಾದ ಸಾಹಿತ್ಯಕ್ಕಾಗಲೀ ಅರ್ಪಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳು ಮಹತ್ಕೃತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ಶಾಖೆ ಸಂಸ್ಕೃತದ ಬೆಳೆವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸುತ್ತಿದೆ.

ವಿಜಯನಗರ ಕಾಲದಾರಭ್ಯ ಆಧುನಿಕ ಕಾಲದ ತನಕ ಸಂಸ್ಕೃತದಲ್ಲಿ ಸೃಜನಾತ್ಮಕ ಕಾರ್ಯ ಎಷ್ಟೊಂದು ಅಗಾಧವಾಗಿ ಸಾಗಿದೆಯೆಂದರೆ ದೊರೆಯುವ ಸಂಸ್ಕೃತ ಹಸ್ತಪ್ರತಿಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚಾಗುತ್ತದೆ. ಈ ಗ್ರಂಥಗಳೆಲ್ಲ ಹೆಚ್ಚಾಗಿ ಪುರ್ವ ಮಹಾಕವಿಗಳ, ಸ್ತೋತ್ರಕಾರರ ಮಾದರಿಯಲ್ಲಿ ಬರೆದ ನೂತನ ರಚನೆಗಳು, ಇಲ್ಲವೆ ನಾನಾ ಶಾಸ್ತ್ರಗ್ರಂಥಗಳಿಗೆ ಟೀಕೆಟಿಪ್ಪಣಿಗಳು, ಇಲ್ಲವೆ ಧರ್ಮಶ್ರದ್ಧೆಯಿಂದ ಬರೆದ ಆಚಾರ್ಯ ಪುರುಷರ ದಿಗ್ವಿಜಯಗಳು, ಬಾಲೋಪಯೋಗಿ ಕಥಾನಕಗಳು ಮತ್ತು ಧರ್ಮಾಚರಣೆಗೆ ಉಪಯುಕ್ತವಾದ ಕೈಪಿಡಿಗಳು, ಮಂತ್ರ-ತಂತ್ರ ಪರಿಷ್ಕಾರಗಳು.

ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಭಗವದ್ಗೀತಾ ಪ್ರಬಂಧ ಮೀಮಾಂಸಾ (1902), ಮೀಮಾಂಸಾ ಭಾಷಾಭೂಷಣ (1928) ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೀಮಾಂಸಾ ಭಾಷಾಭೂಷಣ ಕುಮಾರಿಲಭಟ್ಟನ ತತ್ತ್ವಗಳನ್ನು ಪ್ರತಿಪಾದಿಸುವ ಗ್ರಂಥ. ದರ್ಶನೋದಯ (1933) ನಾನಾದರ್ಶನ ಪದ್ಧತಿಗಳ ವಿಷಯದೃಷ್ಟಿ ಮತ್ತು ವಿಮರ್ಶೆಯಿಂದ ಕೂಡಿದ ಲಲಿತ ಹಾಗೂ ಸ್ಪಷ್ಟ ನಿರೂಪಣೆಗಳನ್ನೊಳಗೊಂಡಿದೆ. ಮೇಲುಕೋಟೆಯ ಜಗ್ಗು ವೆಂಕಟಾಚಾರ್ಯರ ಹೆಸರಿನಲ್ಲಿ ಹತ್ತಾರು ಕೃತಿಗಳಿವೆ. ಕಾರ್ಕಳದ ಪಂಡಿತೆ ರಮಾಬಾಯಿ ಅವರು ಸುಲಲಿತ ಸಂಸ್ಕೃತದಲ್ಲಿ ಗ್ರಂಥರಚಿಸಿ ಖ್ಯಾತಿಪಡೆದಿದ್ದಾರೆ.

ಮುತ್ತಯ್ಯ ಭಾಗವತರ್ ಹುಟ್ಟುಕನ್ನಡಿಗರಲ್ಲದಿದ್ದರೂ ಅವರ ಸಂಗೀತ ಕೃತಿಗಳ ರಚನೆ ಬಹುತೇಕವಾಗಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಡೆಯಿತು. ಇಲ್ಲೇ ಮೈಸೂರಿನ ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಹೆಸರನ್ನು ಹೇಳಬಹುದು. ಇವರಿಬ್ಬರ ಕೃತಿಗಳೂ ಜನಪ್ರಿಯತೆಯನ್ನೂ ಗಳಿಸಿವೆ.

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಆಳ್ವಿಕೆಯಲ್ಲೂ ಸಂಸ್ಕೃತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇವರೇ ಸ್ವತಃ ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಇವರು ನಿಯೋಜಿಸಿದ ಪುರಾಣ, ವೇದ, ವೇದಾಂತ ಗ್ರಂಥಗಳನ್ನು ಮೂಲ ಮತ್ತು ಕನ್ನಡ ಅನುವಾದದೊಡನೆ ಪ್ರಕಟಿಸುವ ಮಹಾಯೋಜನೆಯಂತೆ 12 ಮಹಾ ಪುರಾಣಗಳು, 12 ಉಪಪುರಾಣಗಳು, 6 ಆಧ್ಯಾತ್ಮಿಕ ಗ್ರಂಥಗಳು (ಆನಂದ ಅಧ್ಯಾತ್ಮ ರಾಮಾಯಣಗಳು, ಯೋಗವಾಸಿಷ್ಠ, ಪ್ರಸ್ಥಾನತ್ರಯ ಭಾಷ್ಯಗಳು), ಒಂದೆರಡು ತಂತ್ರ ಗ್ರಂಥಗಳ ಋಕ್ಸಂಹಿತೆ, ಐತರೇಯ ಬ್ರಾಹ್ಮಣ ಮತ್ತು ಆರಣ್ಯಕ ಮತ್ತು ನಿರುಕ್ತ-ಈ ಗ್ರಂಥಗಳು ಸುಮಾರು 350 ಸಂಪುಟಗಳಲ್ಲಿ ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಪ್ರಕಾಶಿತವಾಗಿವೆ. ಪುರಾಣಗಳ, ವೇದಾಂತ ಗ್ರಂಥಗಳ ಮೂಲ ಮತ್ತು ಅನುವಾದ ಪ್ರಕಟವಾಗಿದ್ದರೆ, ಸಂಹಿತೆ, ಬ್ರಾಹ್ಮಣ ಗ್ರಂಥಗಳು ಸಾಯಣ ಭಾಷ್ಯ ವಿಸ್ತಾರವಾದ ಕನ್ನಡ ವಿವರಣೆಯೊಂದಿಗೆ ಹೊರಬಂದಿವೆ. ನಿರುಕ್ತಕ್ಕೂ ವಿಸ್ತಾರವಾದ ವಿವರಣೆಯಿದೆ. ವೇದಗ್ರಂಥಗಳಿಗೆ ಇಂಗ್ಲಿಷ್ ಅನುವಾದವನ್ನು ಕೊಡಲಾಗಿದೆ. ಈ ಮಾಲೆಯ ಮೂಲಕ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿ ಪ್ರಚಾರಕ್ಕೆ, ಸಂಸ್ಕೃತ ಭಾಷಾಧ್ಯಯನಕ್ಕೆ ಒಡೆಯರ್ ಅವರು ಇತ್ತ ನೆರವು ಅಪಾರವಾದುದು. ಇತ್ತೀಚೆಗೆ ಜಯಚಾಮರಾಜೇಂದ್ರರ ಕೃತಿಗಳಾದ ಶ್ರೀತತ್ತ್ವನಿಧಿ ಮೊದಲಾದ 9 ಕೃತಿಗಳು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ಕನ್ನಡ ಇಂಗ್ಲಿಷ್ ಅನುವಾದಗಳೊಂದಿಗೆ ಪ್ರಕಟವಾಗಿವೆ.

ವಿದ್ಯಾಭ್ಯಾಸ ಹಾಗೂ ಸಂಸ್ಕೃತ ಪ್ರಚಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕಾರ್ಯ ಕಳೆದ ಶತಮಾನದ ಕೊನೆಯಿಂದ ನಡೆದು ಬಂದಿದೆ. ಎಚ್. ಸುಬ್ಬರಾವ್ ರಚಿಸಿದ, ‘ವಿದ್ಯಾಭ್ಯಾಸ ಪದ್ಧತಿ’ ಹರ್ಬರ್ಟ್ ಸ್ಪೆನ್ಸರನ ಗ್ರಂಥದ ಅನುವಾದ. ಪೆರಿಸ್ವಾಮಿ ತಿರುಮಲಾಚಾರ್ ಸದ್ವಿದ್ಯಾ ಆಂಗ್ಲೋ-ಸಂಸ್ಕೃತ ಪಾಠಶಾಲೆಯ ಸ್ಥಾಪಕರಲ್ಲೊಬ್ಬರಾಗಿದ್ದು, ಬಾಲಬೋಧಗಳನ್ನು ಸಿದ್ಧಪಡಿಸಿದರು.

ಹಿಂದಿನಿಂದಲೂ ಉಡುಪಿ, ಶೃಂಗೇರಿ, ಕೂಡ್ಲಿ, ಸಂಕೇಶ್ವರಗಳಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲೂ ಸಂಸ್ಕೃತ ಪಾಠಶಾಲೆಗಳಿದ್ದವು. ಪರ್ದಲ, ಕಾರ್ಕಳಗಳಲ್ಲಿ ಮಹಾ ಪಾಠಶಾಲೆಗಳಿದ್ದವು (ಓರಿಯಂಟಲ್ ಕಾಲೇಜು). ಈಚೆಗೆ ಆಧುನಿಕ ವಿದ್ಯಾಭ್ಯಾಸದ ಏರ್ಪಾಡುಗಳಾದಂತೆ ಸಂಸ್ಕೃತ ವಿದ್ಯಾಭ್ಯಾಸ ಪ್ರಗತಿ ಸಾಧಿಸಿದೆ. ಶೃಂಗೇರಿ, ಉಡುಪಿ, ಕಾರ್ಕಳಗಳಲ್ಲಿದ್ದ ಪಾಠಶಾಲೆಗಳು ಸುವ್ಯವಸ್ಥಿತವಾಗಿವೆ. ಮೈಸೂರು, ಬೆಂಗಳೂರುಗಳಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಉನ್ನತ ಮಟ್ಟದ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಲಾಗಿದೆ. ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಅವಕಾಶವಿದೆ.

ಸಂಸ್ಕೃತದಲ್ಲಿ ಪತ್ರಿಕೆ, ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಬೆಳಗಾಂವಿಯಿಂದ ಪ್ರಕಟವಾಗುತ್ತಿದ್ದ ಸಂಸ್ಕೃತ ಚಂದ್ರಿಕಾ ಮತ್ತು ಮಧುರವಾಣೀ ನಿಯತಕಾಲಿಕೆಗಳು ಬಹಳ ಪ್ರಭಾವವನ್ನು ಬೀರಿವೆ. ಇದರ ಏಳ್ಗೆಗಾಗಿ ಪಂಡರೀನಾಥ ಗಲಗಲಿಯವರು ಬಹಳ ಶ್ರಮವಹಿಸಿ ದುಡಿದಿದ್ದಾರೆ. ಅಮರ ಭಾರತೀ ನಿಯತಕಾಲಿಕೆ ವಾರಾಣಸಿಯಲ್ಲಿ ಪ್ರಕಾಶಿತವಾದರೂ ಅದರ ಸಂಪಾದಕರಾದ ನರಸಿಂಹಾಚಾರ್ ಕರ್ನಾಟಕದವರು. ಏಕಮಾತ್ರ ದೈನಿಕವಾದ ಸುಧರ್ಮಾ ಮೈಸೂರಿನಲ್ಲಿ ಕೆ.ಎಸ್.ವರದರಾಜ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು.
ಸಂಸ್ಕೃತ-ಕನ್ನಡ ಭಾಷೆಗಳೆರಡೂ ಸು.2000 ವರ್ಷಗಳಿಂದ ಜೊತೆಯಲ್ಲಿಯೇ ಬೆಳೆಯುತ್ತ ಬಂದಿವೆ; ಪರಸ್ಪರ ಪ್ರಭಾವಿತವಾಗಿವೆ. ಕನ್ನಡ ಭಾಷೆಯ ಪ್ರಭಾವವೂ ಸಂಸ್ಕೃತದ ಮೇಲೆ ಆಗಿದೆ ಎಂಬುದಕ್ಕೆ ಸಂಸ್ಕೃತ ಕನ್ನಡದಿಂದ ಎರವಲು ಪಡೆದಿರಬಹುದಾದ ಒಂದೆರಡು ಪದಗಳನ್ನು ಇಲ್ಲಿ ಉದಾಹರಣೆಗಾಗಿ ಹೇಳಬಹುದು. ಆರ್ಬಟ-ಆರ್ಭಟ, ಗುದ್ದಲಿ-ಕುದ್ದಾಲ, ಗೊಟರು-ಕೋಟಕ. ಹೆಂಟೆ-ಹೆಂಡೆ, ಪಿಂಡು-ಪಿಂಡ ಇತ್ಯಾದಿ. ಸಂಸ್ಕೃತ ಪದಗಳು ಕನ್ನಡದಲ್ಲಿ ಧಾರಾಳವಾಗಿ ಬಳಕೆಯಾಗುತ್ತಾ ಬಂದಿವೆ. ಇಂದಿನ ಪಾರಿಭಾಷಿಕ ಪದಗಳನ್ನು ರೂಪಿಸುವುದರಲ್ಲಿಯೂ ಸಂಸ್ಕೃತದ ಉಪಯೋಗ ಬಹಳಷ್ಟಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವುದು ಹೆಚ್ಚು. ಸಂಸ್ಕೃತದಲ್ಲಿದ್ದ ವಿಜ್ಞಾನ, ಕಲೆ ಮತ್ತು ತತ್ತ್ವಶಾಸ್ತ್ರ ಮೊದಲಾದ ವಾಙ್ಮಯ ವಿಭಾಗಗಳ ಬಗೆಗಿನ ಗ್ರಂಥಗಳೆಲ್ಲವನ್ನೂ ಕ್ರಮೇಣ ಕನ್ನಡದಲ್ಲಿಯೂ ಬರೆಯಲಾಯಿತು. ಮೊದಮೊದಲಿಗೆ ವಿಷಯ ನಿರೂಪಣೆಯಲ್ಲಿ ಸಂಸ್

ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವರು ಕಾಳಿದಾಸ. ಅಭಿಜ್ಞಾನ ಶಾಕುಂತಲಮ್ ನಾಟಕ ಇವರ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರಮ್, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ರಘುವಂಶಮ್ ಮತ್ತು ಕುಮಾರಸಂಭವಮ್ ಎಂಬ ಮಹಾಕಾವ್ಯಗಳನ್ನೂ, ಮೇಘದೂತಮ್ ಮತ್ತು 
ಋತುಸಂಹಾರಮ್ ಎಂಬ ಖಂಡಕಾವ್ಯಗಳನ್ನೂ ಬರೆದಿದ್ದಾರೆ. ಇವರ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ.

ಗಮನಿಸಿ : ಕಾಳಿದಾಸರಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಆದರೆ ಕಾಳಿದಾಸರನ್ನು ಹೀಗೆ ಕರೆಯುವ ಯಾವುದೇ ಅಗತ್ಯವಿಲ್ಲ. ಏಕೆಂದರೆ, ಶೇಕ್ಸ್ ಪಿಯರ ಕಾಲ ಏಪ್ರಿಲ್ ೨೬ ೧೫೬೪, ಹಾಗು ಕಾಳಿದಾಸರ ಕಾಲ ೫ ನೇ ಶತಮಾನ. ಕಾಳಿದಾಸರ ಕಾವ್ಯಗಳು ಎಷ್ಟೋ ಶತಮಾನ ಹಳೆಯದು. ಇನ್ನು ಶೇಕ್ಸ್ ಪಿಯರನ್ನು ಇಂಗ್ಲೆಂಡಿನ ಕಾಳಿದಾಸರೆಂದು ಕರೆಯುವುದರಲ್ಲಿ ಅರ್ಥವಿದೆ. ತಪ್ಪಾದ ಈ ವಾಕ್ಯವನ್ನು ಭಾರತೀಯರು ಎಂದೂ ಒಪ್ಪುವುದಿಲ್ಲ, ಒಪ್ಪುವ ಅಗತ್ಯವೂ ಇಲ್ಲ.

 ೨೦೦೩ ರಲ್ಲಿ ಆರಂಭಿಸಲಾಯಿತು.  ಇದುವರೆಗೂ ಸಂಸ್ಕೃತ ವಿಕಿಪೀಡಿಯಾದಲ್ಲಿ ೧೫೦೦೦ ಪುಟಗಳನ್ನು ರಚಿಸಲಾಗಿದೆ.




#Article 154: ರನ್ನ (917 words)


ರನ್ನನು (೯೪೯-೧೦೨೦). ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯರಲ್ಲಿ ಒಬ್ಬನಾಗಿದ್ದಾನೆ.ಇವನ ಊರು ಬೆಳುಗುಲಿ(ರನ್ನ ಬೆಳಗಲಿ). ಹಳಗನ್ನಡದ ಮಹತ್ತ್ವದ ಕವಿ. ಪಂಪನ ಕಿರಿಯ ಸಮಕಾಲೀನವ . ಅಜಿತತೀರ್ಥಂಕರ ಪುರಾಣತಿಲಕಂ,  ಸಾಹಸಭೀಮವಿಜಯ  (ಗದಾಯುದ್ಧ) ಎಂಬ ಕಾವ್ಯಗಳ ಕರ್ತೃ. ಶಕ್ತಿಕವಿ ಎಂದೇ ಖ್ಯಾತನಾಗಿದ್ದಾನೆ.  ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯೆ ಸಿಡಿಲ ಚಕ್ಕೆ ಎಂಬ ಹೊಗಳಿಕೆಗೆ  ಕುವೆಂಪು  ಅವರಿಂದ ಪಾತ್ರನಾಗಿದ್ದಾನೆ.'

ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲ ಹಾಗೂ ಅವನ ಮಗ ಸತ್ಯಾಶ್ರಯ ಇರವಬೆಡಂಗ ಇವರ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು

ರನ್ನನು ಕ್ರಿ.ಶ.೯೪೯ರಲ್ಲಿ ಬೆಳುಗುಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ  ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು..ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ:

ರನ್ನನ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಚಾರಗಳು ಇವನ ಎರಡೂ ಕೃತಿಗಳಿಂದ ದೊರೆಯುತ್ತವೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ ತೊರಗಲಿಗೆ ಉತ್ತರಕ್ಕೂ ಬೆಳುಗಲಿ ದೇಶವಿದೆ. ಈ ಬೆಳುಗುಲಿ 500ರಲ್ಲಿ ಅಗ್ಗಳವೆನಿಸುವ ಜಮಖಂಡಿ ಎಂಬ ಪ್ರಾಂತ್ಯವಿದೆ. ಇದಕ್ಕೆ ತಿಲಕಪ್ರಾಯವಾಗಿ ಪ್ರಸಿದ್ಧಿ ಪಡೆದ ಬೆಳುಗುಲಿ (ಈಗಿನ ರನ್ನ ಬೆಳಗಲಿ) ಎಂಬುದೇ ರನ್ನನ ಜನ್ಮಸ್ಥಳ. ತಾಯಿ ಅಬ್ಬಲಬ್ಬೆ; ತಂದೆ ಜಿನವಲ್ಲಭ; ಅಣ್ಣಂದಿರು ರೇಚಣ ಮತ್ತು ಮಾರಯ್ಯ. ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು. ಧರ್ಮದಲ್ಲಿ ನಿಷ್ಠೆಯುಳ್ಳವರೆಂದು ಇವರ ವರ್ಣನೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು. ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ.

ರನ್ನ ಜೈನಧರ್ಮೀಯನಾದರೂ ವೈಶ್ಯ ಪಂಗಡದವನೆಂದು ಹೇಳಲಾಗಿದೆ. ಕವಿ ತನ್ನ ಕಾವ್ಯಗಳಲ್ಲಿ  ಪುಟ್ಟಿದ ಬಳೆಗಾರ ಕುಲದೊಳ್ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಪದೇ ಪದೇ ಬಳಸಿದ್ದಾನೆ. ಇಂತಹ ವರ್ಗವೊಂದರಿಂದ ಬಂದ ವ್ಯಕ್ತಿಯೊಬ್ಬ ಕವಿಯಾದದ್ದು ವಿಶೇಷ. ಆದರೂ ಈ ವರ್ಗಸಂವೇದನೆ ಇವನ ಕಾವ್ಯಗಳಲ್ಲಿ ಇಲ್ಲ. ಅಷ್ಟರಮಟ್ಟಿಗೆ ಜೈನಧರ್ಮ ಇವನನ್ನು ಆವರಿಸಿದೆ.

ರನ್ನನಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು ಬಳೆಗಾರವೃತ್ತಿ. ಆದರೆ ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬರಬೇಕಾಯಿತು. ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕøತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು. ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಪುಣ್ಯ ವಿಶೇಷದಿಂದ ಇವನಿಗೆ ಗಂಗಮಂತ್ರಿ ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತಂದು ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು.

ಚಾವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾದ ರನ್ನ ಗಂಗರಾಜ್ಯದಿಂದ ಹಿಂದಿರುಗಿ ಚಾಳುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಡಂಗ ಈತನಿಗೆ ಆಶ್ರಯ ನೀಡಿದ. ಹೀಗೆ ರನ್ನ ಗಂಗರಾಜ್ಯದಿಂದ ಹಿಂದಿರುಗಲು ಅತ್ತಿಮಬ್ಬೆಯ ಪ್ರಭಾವಿ ವ್ಯಕ್ತಿತ್ವ ಕಾರಣವಿರಬೇಕು. ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಬಂದು ಗೊಮ್ಮಟದರ್ಶನ ಪಡೆದ ವಿಚಾರ ಅಜಿತಪುರಾಣದಲ್ಲಿ ಬಂದಿದೆ. ಹಾಗೆ ಬಂದಿದ್ದಾಗ ರನ್ನ ಅವಳ ವ್ಯಕ್ತಿತ್ವಕ್ಕೆ ಆಕರ್ಷಿತನಾಗಿ ತನ್ನ ರಾಜ್ಯಕ್ಕೆ ಮರಳಲು ಮನಸ್ಸುಮಾಡಿರಬೇಕು. ಕವಿ ಇದ್ದಕ್ಕಿದ್ದಂತೆ ಮೇಲೇರಿದವನಲ್ಲ; ಹಂತ ಹಂತವಾಗಿ ಮುಂದೆ ಬಂದವನು. ಇದನ್ನು ತಿಳಿಸುವ ಪದ್ಯವೊಂದು 'ಗದಾಯುದ್ಧ ದಲ್ಲಿದೆ. ಆರಂಭಕ್ಕೆ ಸಾಮಂತರ ನೆರವು ದೊರೆತ್ತಿದ್ದು, ಇವರಾರೆಂಬುದರ ಬಗ್ಗೆ ಚರ್ಚೆಯಿದೆ. ಆದರೆ ಕವಿಗೆ ನೆರವಾದ ಈ ಸಾಮಂತ ರಟ್ಟರಾಜ ಒಂದನೆಯ ಕಾರ್ತವೀರ್ಯನಿರಬೇಕೆಂಬ ಊಹೆಯಿದೆ. ಮುಂದೆ ಅಭ್ಯುದಯಕ್ಕೆ ಕಾರಣನಾದವನು ಮಂಡಲೇಶ್ವರನಾದ ಚಾವುಂಡರಾಯನೆಂಬುದು ಸ್ಪಷ್ಟ. ಗಂಗದಂಡನಾಯಕನಾದ ಚಾವುಂಡರಾಯನಿಂದ ತಾನು 'ರತ್ನವಾಗಿ ರೂಪುಗೊಂಡೆನೆಂದು ಈತನೇ ಹೇಳಿಕೊಂಡಿದ್ದಾನೆ. ಹೀಗೆ ಬೆಳೆದ ರನ್ನ ಚಕ್ರವರ್ತಿ ತೈಲಪನಲ್ಲಿ 'ಮಹಿಮೋನ್ನತಿ'ಯನ್ನೇ ಪಡೆದ. ಅವನಿಂದ 'ಕವಿಚಕ್ರವರ್ತಿ ಎಂಬ ಬಿರುದನ್ನೂ ಗಳಿಸಿದ. 'ಗದಾಯುದ್ಧ ವನ್ನು ದಂಡನಾಯಕ ಕೇಶಿ ತಿದ್ದಿದವನೆಂದು ಹೇಳಿಕೊಂಡಿರುವುದರಿಂದ, ಈ ಕೇಶಿಯೇ ರನ್ನನನ್ನು ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋರುವುದು.

ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆಯೇ ಅತ್ತಿಮಬ್ಬೆಯೂ ಮುಖ್ಯಳಾಗಿದ್ದಾಳೆ. ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಠನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೆ ಎಂಬುದು ಕವಿಯ ಹೇಳಿಕೆ. ರನ್ನನಿಂದ ಅಜಿತಪುರಾಣವನ್ನು ಹೇಳಿಸಿದವಳು ಅತ್ತಿಮಬ್ಬೆ. ಆದಿಪುರಾಣ, ಶಾಂತಿಪುರಾಣಗಳಿಗೆ ಸಮಾನವಾದ ಈ ಕೃತಿಯನ್ನು 'ಆಶ್ರಿತ ಚಿಂತಾಮಣಿಗತ್ತಿಮಬ್ಬೆಗರ್ತಿಯೆ ಪೇಳ್ದಂ' ಎಂದಿದ್ದಾನೆ. ಕವಿ. ಇದರಿಂದ ಅತ್ತಿಮಬ್ಬೆ ಪರವಾಗಿರುವ ಇವನ ಗೌರವ ವ್ಯಕ್ತವಾಗುತ್ತದೆ. ಹೀಗಾಗಿ ರನ್ನ ಪ್ರತಿಭಾವಂತನಾಗಿದ್ದು, ಅದನ್ನು ಗುರುತಿಸುವ ಜನರ ಸಹವಾಸ ದೊರಕಿದ್ದರಿಂದ ಸುಲಭವಾಗಿ ಮೇಲೇರಲು ಸಾಧ್ಯವಾಯಿತು. ಕವಿ ತಾನು ಸೌಮ್ಯ ಸಂವತ್ಸರದಲ್ಲಿ ಹುಟ್ಟಿದವನೆಂದು ಹೇಳಿಕೊಂಡಿದ್ದಾನೆ. ಇದು 949 ಆಗುತ್ತದೆ. ಆದ್ದರಿಂದ ರನ್ನ ಹುಟ್ಟಿದ್ದು 949ರಲ್ಲಿ ಎನ್ನುವುದು ಖಚಿತ. ರನ್ನನ ಕಾಲವನ್ನು ಸಾಮಾನ್ಯವಾಗಿ 993 ಎಂದು ನಿಗದಿಪಡಿಸುವುದು ವಾಡಿಕೆ. ಇದಕ್ಕೆ ಅಜಿತಪುರಾಣದ ಕಾಲ 993 ಎಂದು ಸ್ಪಷ್ಟವಾಗಿರುವುದೇ ಕಾರಣ. ರನ್ನ ಅಜಿತಪುರಾಣವನ್ನು ಅತ್ತಿಮಬ್ಬೆಯ ಆಶ್ರಯದಲ್ಲಿ ಬರೆದಿರುವನಾದರೂ ಒಂದು ರೀತಿಯಲ್ಲಿ ಬರೆದನೆಂದು ಹೇಳಬಹುದಾಗಿದೆ. ಆದ್ದರಿಂದ ರನ್ನನ ಕಾಲಗ್ರಹಿಕೆಯಲ್ಲಿ ತೈಲಪನ ಆಳ್ವಿಕೆಯ ಕಾಲ ಸಹಜವಾಗಿಯೇ ಗಮನಕ್ಕೆ ಬರುತ್ತದೆ. ಸತ್ಯಾಶ್ರಯವನ್ನು ಸಮೀಕರಿಸಿ ಗದಾಯುದ್ಧವನ್ನು ಬರೆದಿದ್ದರಿಂದ ಈ ಕಾವ್ಯದ ಕಾಲ ಸತ್ಯಾಶ್ರಯನ ಕಾಲಕ್ಕಿಂತ ಬೇರೆಯಾಗುವುದು ಸಾಧ್ಯವಿಲ್ಲ. ಈ ಕಾರಣದಿಂದ ಗದಾಯುದ್ಧದ ಕಾಲವನ್ನು 1005 ಎಂದು ಗುರುತಿಸಲಾಗಿದೆ. ಕವಿ 1020ರಲ್ಲಿ ತೀರಿಕೊಂಡಿರಬೇಕೆಂದು ಅಭಿಪ್ರಾಯವಿದೆ.

ರನ್ನನಿಗೆ ಕವಿರತ್ನ, ಕವಿಮುಖಚಂದ್ರ, ಕವಿಚಕ್ರವರ್ತಿ, ಕವಿರಾಜಶೇಖರ, ಕವಿಜನಚೂಡಾರತ್ನ, ಕವಿಚರ್ತುಮುಖ, ಉಭಯಕವಿ ಮೊದಲಾದ ಬಿರುದುಗಳಿವೆ. 'ಉಭಯ ಕವಿನ ಎಂದಿರುವುದರಿಂದ ಸಂಸ್ಕøತದಲ್ಲಿಯೂ ಬರೆದಿರಬಹುದೆ ಎಂಬ ಅನುಮಾನ ಬರುವುದು ಸಹಜ. ಆದರೆ ಅದಕ್ಕೆ ಆಧಾರಗಳಿಲ್ಲ. ರನ್ನ ತನ್ನನ್ನು 'ಉಭಯ ವ್ಯಾಕರಣ ಪಂಡಿತ ಎಂದು ಹೇಳಿಕೊಂಡಿರುವುದರಿಂದ, ಇವನಿಗೆ ವ್ಯಾಕರಣದಲ್ಲಿಯೂ ಪ್ರವೇಶವಿದ್ದಿರಬೇಕೆಂದು ತೋರುವುದು. ರನ್ನನು 'ರನ್ನಂವೈಯಾಕರಣಂ ಎಂದು ಹೇಳಿರುವುದರಿಂದ ಇದು ಮತ್ತಷ್ಟು ಬಲಪಡುವುದು. ಈತ 'ರನ್ನ ನಿಘಂಟು ರಚಿಸಿರುವ ಹಿನ್ನೆಲೆಯಲ್ಲಿ ನೋಡಿದರೆ, ಇಂತಹ ಪ್ರಯೋಗವನ್ನು ಇವನು ಮಾಡಿರಲೂಬಹುದು.'

ರನ್ನ ತನ್ನ ಕಾವ್ಯದಲ್ಲಿ ವ್ಯಾಸ ವಾಲ್ಮೀಕಿಯರನ್ನೂ ಕಾಳಿದಾಸ ಬಾಣವನ್ನೂ ನೆನೆದಿದ್ದಾನೆ. 'ಗದಾಯುದ್ಧ ದ ಮೇಲೆ ಪ್ರಭಾವ ಬೀರಿದ ಪಂಪ, ಭಾಸ, ಭಟ್ಟ ನಾರಾಯಣರನ್ನು ನೆನೆಯದಿರುವುದು ಆಶ್ಚರ್ಯ. ಆದರೆ ಅಜಿತಪುರಾಣದಲ್ಲಿ ಪಂಪನ ಸ್ಮರಣೆಯಿದೆ. ಪಂಪ, ಪೊನ್ನ, ರನ್ನ-ಈ ಮೂವರು ಜಿನ ಸಮಯ ದೀಪಕರ್ ಎಂದು ಹೇಳುತ್ತಾನೆ. ಕವಿಗಳಲ್ಲಿ ಪುಣ್ಯವಂತರೂ ಕೃತಾರ್ಹರೂ ಸೊಬಗರೂ ಆದವರು ಇಬ್ಬರೇ; ಕವಿತಾಗುಣಾರ್ಣವ ಮತ್ತು ಕವಿರತ್ನ ಎಂದು ಹೇಳುವಲ್ಲಿಯೂ ಪಂಪನ ಉಲ್ಲೇಖವಿದೆ. ರನ್ನ ತನ್ನ ಕಾವ್ಯಶಕ್ತಿಯನ್ನು ಕುರಿತು ಅನೇಕ ಮಾತುಗಳಲ್ಲಿ ಹೇಳಿಕೊಂಡಿದ್ದಾನೆ. ಅವುಗಳಲ್ಲಿ ವಾಗ್ದೇವಿಯ ಭಂಡಾರದ ಮುದ್ರೆಯ ನೊಡೆದಂಎಂಬುದು ಒಂದು; ತನ್ನ ಕೃತಿಯನ್ನು ಪರೀಕ್ಷಿಪಂಗೆಂಟೆರ್ದೆಯೇ ಎಂಬುದು ಮತ್ತೊಂದು. ಇದು ತನ್ನ ಕಾವ್ಯಶಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರುವ ಕವಿಯ ಸವಾಲು.

ರನ್ನ ಬರೆದಿರುವ ಕೃತಿಗಳು ಎಷ್ಟು ಎಂಬ ಬಗ್ಗೆ ಜಿಜ್ಞಾಸೆಯಿದೆ. ಕವಿಯೇ ಹೇಳಿರುವಂತೆ ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ, ಅಜಿತಪುರಾಣ, ಸಾಹಸಭೀಮವಿಜಯ, ರನ್ನಕಂದ-ಈ ಐದು ಕೃತಿಗಳನ್ನು ರಚಿಸಿರುವಂತೆ ತೋರುತ್ತದೆ. ಮೊದಲೆರಡು ಕೃತಿಗಳು ದೊರೆಯದಿರುವುದರಿಂದ, ಅನೇಕ ಊಹೆಗಳಿಗೆ ಎಡೆಮಾಡಿ ಕೊಟ್ಟಿದೆ. ಪರಶುರಾಮಚರಿತ, ಚಾವುಂಡರಾಯನನ್ನು (ಸಮರ ಪರಶುರಾಮ ಎಂಬ ಬಿರುದಾಂಕಿತ) ಕುರಿತ ಕೃತಿಯಾಗಿರಬೇಕು. ರನ್ನನಿಗೆ ಮೊದಲು ಆಶ್ರಯ ಕೊಟ್ಟವನು ಚಾವುಂಡರಾಯನಾದುದರಿಂದ, ತನ್ನ ಮೊದಲ ಕೃತಿಯನ್ನು ಅವನ ಪರವಾಗಿ ಬರೆದಿರಬೇಕು. ಇದರಲ್ಲಿ ಚಾವುಂಡರಾಯನ ಚರಿತೆಯಂತೆಯೇ ಪುರಾಣ ಪರಶುರಾಮನ ಕಥೆಯೂ ಸೇರಿರಬೇಕು. 'ಚಕ್ರೇಶ್ವರಚರಿತ ತೈಲಪ ಚಕ್ರವರ್ತಿಯನ್ನು ಕುರಿತದ್ದೆಂಬುದಕ್ಕೆ ಆಧಾರಗಳಿವೆ. ರನ್ನನಿಗೆ ತೈಲಪ ಪ್ರಮುಖ ಆಶ್ರಯದಾತ; 'ಕವಿಚಕ್ರವರ್ತಿ ಬಿರುದನ್ನು ಕೊಟ್ಟವನು. ಆದ್ದರಿಂದ 'ಚಕ್ರೇಶ್ವರ ಚರಿತ ತೈಲಪನನ್ನು ಕುರಿತದ್ದೆಂಬುದು ಸ್ಪಷ್ಟ. ಇದು ಪೂರ್ಣ ಐತಿಹಾಸಿಕ ಕಾವ್ಯವಾಗಿರುವ ಸಾಧ್ಯತೆಯೂ ಇದೆ. 'ರನ್ನಕಂದ ಒಂದು ನಿಘಂಟು. ಪದಗಳಿಗೆ ಅರ್ಥವನ್ನು ಕಂದಪದ್ಯ ರೂಪದಲ್ಲಿ ಬರೆದಿರುವುದ ಇದರ ವಿಶೇಷ. ನಿಘಂಟುಗಳಲ್ಲಿ ಇದು ಪ್ರಾಚೀನವಿರಬೇಕೆಂದು ತೋರುವುದು. ಅಸಮಗ್ರವಾಗಿ ದೊರೆತಿರುವುದರಿಂದ ಕವಿ, ಕೃತಿ ವಿಷಯವಾಗಿ ಹೆಚ್ಚಿನ ವಿಚಾರಗಳು ತಿಳಿಯುವುದಿಲ್ಲ. ದೊರೆತಿರುವ ಪದ್ಯಗಳಲ್ಲಿ ಕವಿರತ್ನ ಎಂದಿರುವುದರಿಂದ ಇದು ರನ್ನನ ಕೃತಿ ಎಂದು ಭಾವಿಸಲು ಯಾವ ಅಡ್ಡಿಯೂ ಇಲ್ಲ.

ಅಜಿತತೀರ್ಥಂಕರಪುರಾಣ ಧಾರ್ಮಿಕ ಕಾವ್ಯ. ಎರಡನೆಯ ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆದಿಪುರಾಣ ಮತ್ತು ಶಾಂತಿಪುರಾಣಗಳಿಗೆ ಸಮಾನವಾದ ಕೃತಿಯೆಂದು ಇದರ ಅಭಿಪ್ರಾಯ. 'ಆದಿಪುರಾಣ' ದ ಕಥಾವೈಭವ ಇದಕ್ಕಿಲ್ಲದಿರುವುದರಿಂದ, ಅದರ ಎತ್ತರಕ್ಕೆ ಏರಲಾರದೆಂದೇ ತೋರುತ್ತದೆ. ಆದರೆ ಪೊನ್ನನ ಶಾಂತಿಪುರಾಣಕ್ಕಿಂತ ಇದು ಉತ್ತಮ ಕೃತಿ ಎಂದು ದೃಢವಾಗಿ ಹೇಳಬಹುದು. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ. ಕವಿಕಾವ್ಯ ಆಶ್ರದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ ಮೂರರಲ್ಲಿ ಸಾಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ. ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಾಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ ಆಗಿದೆ.

ರನ್ನನ ಕೃತಿಗಳಲ್ಲಿ ಸಾಹಸಭೀಮವಿಜಯ ಅತಿ ಮುಖ್ಯವಾದುದು. ಇವನ ಲೌಕಿಕ ಕೃತಿಗಳಲ್ಲಿ ಉಪಲಬ್ಧವಿರುವಂಥದು ಇದೊಂದೇ. ಗದಾ ಸೌಪ್ತಿಕ ಪರ್ವಗಳ ಕಥೆಯೇ ಇದರ ವಸ್ತು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸುವುದರಿಂದ (ಸಿಂಹಾವಲೋಕನ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಅದರ ಕಾರಣ ಮತ್ತು ಪರಿಣಾಮಗಳನ್ನು ಕೃತಿ ಆದ್ಯಂತ ಸೂಚಿಸುತ್ತದೆ. ಕೃತಿಗೆ 'ಸಾಹಸಭೀಮವಿಜಯ ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ. ಮಹಾಭಾರತದ ಭೀಮನೊಡನೆ ಆಶ್ರದಾತನಾದ ಸತ್ಯಾಶ್ರಯ ಚಕ್ರವರ್ತಿಯಾದ ಮೇಲೆಯೇ ರನ್ನ ಈ ಕಾವ್ಯವನ್ನು ಬರೆದಿರಬೇಕೆನಿಸುತ್ತದೆ. ಪುರಾಣಕಥೆಯಲ್ಲಿ ಸಮಕಾಲೀನ ಇತಿಹಾಸವನ್ನು ಸಮೀಕರಿಸುವುದರ ಮೂಲಕ ಕಾವ್ಯದಲ್ಲಿ ಹೊಸಧ್ವನಿಯನ್ನು ಉಂಟುಮಾಡಬೇಕೆಂಬ ರನ್ನನ ಧೋರಣೆಗೆ ಪಂಪನೇ ಆದರ್ಶ. ಕಥಾನಾಯಕ ಭೀಮನಾದರೂ ದುರ್ಯೋಧನನ ಪಾತ್ರವೇ ಹೆಚ್ಚು ಜೀವಂತವಾಗಿ ಚಿತ್ರಣಗೊಂಡಿದೆ. ಈತ ಕಾವ್ಯದಲ್ಲಿ ದುರಂತನಾಯಕನಾಗಿ ಕಂಡರಣೆಗೊಂಡಿದ್ದಾನೆ. ಪಂಪನನ್ನು ಅನುಸರಿಸಿಯೂ ಅವನಿಗೆ ಸಾಕಷ್ಟು ಋಣಿಯಾಗಿಯೂ ರನ್ನ ಮಹತ್ವದ ಕಾವ್ಯ ನಿರ್ಮಿಸಿದ ಎಂಬುದು ಮುಖ್ಯ ವಿಚಾರ.




#Article 155: ಕದಂಬ ರಾಜವಂಶ (1305 words)


ಕದಂಬ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.

ಕದಂಬರು (ಕ್ರಿ.ಶ.೩೪೫-೫೨೫) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭ ಕಾಲವಾಗಿದೆ.
ಕ್ರಿ.ಶ. ೩೪೫ರಲ್ಲಿ ಮಯೂರವರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.

ಕದಂಬರ ಮೂಲದ ಬಗ್ಗೆ ಹಲವಾರು ಐತಿಹ್ಯಗಳಿವೆ. ಒಂದು ಕಥೆಯ ಪ್ರಕಾರ ಈ ವಂಶದ ಮೂಲಪುರುಷ ತ್ರಿಲೋಚನ ಕದಂಬ (ಹಲಸಿ ಮತ್ತು ದೇಗಾಂವಿಯ ದಾಖಲೆಗಳ ಪ್ರಕಾರ ಇವನ ಹೆಸರು ಜಯಂತ). ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದಾಗ ಹುಟ್ಟಿದವನು ಇವನು (ಎಂದೇ ಕದಂಬ ಎಂಬ ಹೆಸರು). ಇನ್ನೊಂದು ಕಥೆಯ ಪ್ರಕಾರ ಮಯೂರಶರ್ಮನೇ ಶಿವ ಮತ್ತುಭೂದೇವಿಯ ಮಗನಾಗಿ ಹುಟ್ಟಿ ಕದಂಬ ವಂಶವನ್ನು ಸ್ಥಾಪಿಸಿದ. ಇವನಿಗೂ ಮೂರು ಕಣ್ಣುಗಳಿದ್ದವು. ಕನ್ನಡ ಬ್ರಾಹ್ಮಣರ ಇತಿಹಾಸ ವಿವರಿಸುವ ಗ್ರಾಮ ಪದ್ಧತಿ ಎಂಬ ಕನ್ನಡ ಪುಸ್ತಕದ ಪ್ರಕಾರ, ಮಯೂರಶರ್ಮನು ಶಿವಪಾರ್ವತಿಗೆ ಸಹ್ಯಾದ್ರಿ ಪರ್ವತಶ್ರೇಣಿಯ ಕದಂಬ ವೃಕ್ಷದ ಕೆಳಗೆ ಹುಟ್ಟಿದವನಾಗಿದ್ದ. ಇದೇ ವಂಶದ ಕುಡಿಯಾದ ನಾಗರಖಾಂಡ ಕದಂಬರೆಂಬ ವಂಶದ ಒಂದು ಶಾಸನದ ಪ್ರಕಾರ, ಈ ವಂಶದ ಮೂಲ ನಂದ ಸಾಮ್ರಾಜ್ಯದವರೆಗೂ ಹೋಗುತ್ತದೆ. ಮಕ್ಕಳಿಲ್ಲದ ರಾಜಾ ನಂದನು , ಮಕ್ಕಳಿಗಾಗಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸಲು, ಅವನಿಗೆ ಎರಡು ಮಕ್ಕಳಾಗುವುದಾಗಿಯೂ, ಅವರಿ ಕದಂಬ ಕುಲ ಎಂಬ ಹೆಸರು ಬರುವುದಾಗಿಯೂ, ಹಾಗೂ ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಬೇಕೆಂದೂ ನಭೋವಾಣಿಯಾಯಿತು.

ಕದಂಬರ ಮೂಲದ ಬಗ್ಗೆ ಎರಡು ಸಿದ್ಧಾಂತಗಳಿವೆ. ಒಂದು ಕನ್ನಡ ಮೂಲ ಇನ್ನೊಂದು ಉತ್ತರ ಭಾರತ ಮೂಲ. ಆದರೆ ಉತ್ತರ ಭಾರತದ ಮೂಲದ ಬಗ್ಗೆ ಆ ವಂಶಪರಂಪರೆಯ ನಂತರದ ದಾಖಲೆಗಳಲ್ಲಿ ಮಾತ್ರ ಉಲ್ಲೇಖವಿದ್ದು, ಅದನ್ನು ಬರಿಯ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಇದರ ಮೊದಲ ಉಲ್ಲೇಖ ೧೦೫೩ ಮತ್ತು ೧೦೫೫ರ ಹರಿಕೇಸರಿ ದೇವನ ಶಾಸನಗಳಲ್ಲಿ ದೊರಕಿದ್ದು , ಮುಂದಿನ ಶಾಸನಗಳು ಇದನ್ನೇ ಮತ್ತೆ ಉಲ್ಲೇಖಿಸಿ, ಮಯೂರಶರ್ಮನು ಹಿಮಾಲಯದ ಮೇಲೆ ಅಧಿಪತ್ಯ ಸ್ಥಾಪಿಸಿದನು ಎಂದು ಬಣ್ಣಿಸುತ್ತವೆ. ಇದನ್ನು ಸಮರ್ಥಿಸುವ ಮತ್ತಾವುದೇ ದಾಖಲೆಗಳು ಕಂಡುಬರದೇ ಇದ್ದಕಾರಣ , ಈ ವಾದ ಹೆಚ್ಚು ವಿಶ್ವಾಸಾರ್ಹವಾಗಿಲ್ಲ. ಕೇವಲ ದಕ್ಷಿಣ ಭಾರತದಲ್ಲಿಯೇ ಕಂಡುಬರುವ ಕದಂಬ ವೃಕ್ಷದ ಹೆಸರು ಈ ವಂಶದ ದಕ್ಷಿಣ ಭಾರತ ಮೂಲವನ್ನು ಸೂಚಿಸುತ್ತದೆ.

ಕದಂಬರ ಜಾತಿಯ ಬಗ್ಗೆಯೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ತಾಳಗುಂದ ಶಾಸನದ ಪ್ರಕಾರ ಕದಂಬರು ಮೂಲತಃ ಬ್ರಾಹ್ಮಣರಾದರೆ, ಅವರು ಆದಿವಾಸಿ ಜನಾಂಗಕ್ಕೆ ಸೇರಿದವರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಕದಂಬರು , ಇಂದಿನ ಕೇರಳ, ತಮಿಳುನಾಡುಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಸಂಘರ್ಷದಲ್ಲಿದ್ದ, ಕಡಂಬು ಎಂಬ ಬುಡಕಟ್ಟಿಗೆ ಸೇರಿದವರು ಎಂಬ ಅಭಿಪ್ರಾಯವನ್ನೂ ಮಂಡಿಸಲಾಗಿದೆ. ಸುಬ್ರಹ್ಮಣ್ಯ ಮತ್ತು ಕದಂಬ ವೃಕ್ಷವನ್ನು ಮನೆದೇವರಾಗಿ ಪೂಜಿಸುವವರಾಗಿ ಕಡಂಬುಗಳ ಉಲ್ಲೇಖ ತಮಿಳಿನ ಸಂಗಮ ಸಾಹಿತ್ಯದಲ್ಲಿ ದೊರಕುತ್ತದ

ಕೆಲ ಇತಿಹಾಸಕಾರರು ಕದಂಬರ ಬ್ರಾಹ್ಮಣ ಮೂಲ, ಅವರನ್ನು ಉತ್ತರಭಾರತದ ಬೇರನ್ನು ಸೂಚಿಸುತ್ತದೆ ಎಂದು ವಾದಿಸಿದರೂ, ಅದಕ್ಕೆ ಪ್ರತಿಯಾಗಿ ಮಧ್ಯಯುಗದ ಮೊದಮೊದಲ್ಲಿ ದ್ರಾವಿಡರನ್ನು ಬ್ರಾಹ್ಮಣ ಪಂಗಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಇತ್ತು ಎಂಬ ವಾದವೂ ಇದೆ.

ಅದೇನೇ ಇದ್ದರೂ, ಸ್ಥಳೀಯ ಕನ್ನಡಿಗರಾಗಿದ್ದ ಕದಂಬರು ತಮ್ಮ ರಾಜ್ಯದ ಆಡಳಿತ ಮತ್ತು ರಾಜಕೀಯದಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನ ಕೊಟ್ಟರು. ಇದನ್ನು ಗಮನಿಸಿದರೆ ಕದಂಬರು ಬ್ರಾಹ್ಮಣ ಕುಲಕ್ಕೆ ಬರಮಾಡಿಕೊಂಡ ಕನ್ನಡ ಭಾಷಿಕರಾಗಿದ್ದರು ಎಂದು ಸಿದ್ಧವಾಗುತ್ತದೆ ಎಂದು ಕೆಲ ವಿದ್ವಾಂಸರ ಅಭಿಮತ. ರಾಜಾ ಕೃಷ್ಣವರ್ಮನ ಮೊದಮೊದಲ ಶಾಸನಗಳಲ್ಲಿ ಕಂಡುಬರುವ ಕದಂಬರು ನಾಗರ ಪೀಳಿಗೆಯವರು ಎಂಬ ಉಲ್ಲೇಖ ಕೂಡಾ ಕದಂಬರು ಕರ್ನಾಟಕದವರಾಗಿದ್ದರು ಎಂದು ಖಚಿತಪಡಿಸುತ್ತದೆ.

ಕದಂಬರ ಇತಿಹಾಸದ ಮೂಲ ಆಕರಗಳೆಂದರೆ ಕನ್ನಡ ಮತ್ತು ಸಂಸ್ಕೃತದ ಶಾಸನಗಳು. ಮುಖ್ಯವಾಗಿ ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರು ಮಾನವ್ಯಗೋತ್ರದವರೂ, ಹರಿತಿಪುತ್ರ ಪೀಳಿಗೆಯವರೂ ಆಗಿದ್ದು, ಬನವಾಸಿಯ ಚುಟು ಎಂಬ ಶಾತವಾಹನರ ಜಹಗೀರುದಾರರ ಸಂಬಂಧಿಕರಾಗಿದ್ದರು.

ಕದಂಬರ ನಾಣ್ಯಗಳಲ್ಲಿ ಕನ್ನಡ, ನಾಗರಿ ಮತ್ತು ಗ್ರಂಥ ಲಾಂಛನ ಮತ್ತು ಭಾಷೆಗಳಿವೆ.

ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ ೪೫೦) ಕದಂಬರು ಆಡಳಿತಾತ್ಮಕ ಭಾಷೆಯಾಗಿ ಕನ್ನಡವನ್ನು ಉಪಯೋಗಕ್ಕೆ ತಂದುದಕ್ಕೆ ಸಾಕ್ಷಿಯಾಗಿದೆ. ಅವರ ಆಳ್ವಿಕೆಯ ಮೊದಲ ಭಾಗದ ಮೂರು ಶಾಸನಗಳು ಪತ್ತೆಯಾಗಿವೆ. ಸತಾರಾ ಕಲೆಕ್ಟೋರೇಟಿನಲ್ಲಿ ಕದಂಬರ ಆಳ್ವಿಕೆಯ ಮೊದಮೊದಲಲ್ಲಿ ಟಂಕಿಸಿದ ವಿರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು ದೊರಕಿವೆ. ರಾಜಾ ಭಗೀರಥ (ಕ್ರಿ.ಶ. ೩೯೦-೪೧೫) ನ ಕಾಲದ , ಶ್ರೀ ಮತ್ತು ಭಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯವೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಐದನೆಯ ಶತಮಾನದ ತಾಮ್ರದ ನಾಣ್ಯದಲ್ಲಿಯೂ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿದ್ದು ಕದಂಬರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುದನ್ನು ಇನ್ನಷ್ಟು ಪುಷ್ಟಿಗೊಳಿಸುತ್ತದೆ.

ರಾಜಾ ಶಾಂತಿವರ್ಮನ (ಕ್ರಿ.ಶ. ೪೫೦) ಕಾಲದ ತಾಳಗುಂದದ ಶಾಸನ ಕದಂಬರ ಸಾಮ್ರಾಜ್ಯದ ಹುಟ್ಟಿನ ಬಗ್ಗೆ ಸಂಭವನೀಯ ವಿವರಗಳನ್ನು ನೀಡುತ್ತದೆ. ಅದರ ಪ್ರಕಾರ , ತಾಳಗುಂದ ( ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿದೆ)ದ ನಿವಾಸಿ ಮಯೂರಶರ್ಮನು , ತನ್ನ ಅಜ್ಜ ಮತ್ತು ಗುರು , ವೀರಶರ್ಮನೊಂದಿಗೆ ಕ್ರಿ.ಶ. ೩೪೫ರಲ್ಲಿ ವೈದಿಕ ವಿದ್ಯಾರ್ಜನೆಗೋಸ್ಕರ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಪವಾಗಿ , ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತಗೊಂಡು , ಪ್ರತೀಕಾರದ ಪ್ರತಿಜ್ಞೆಗೈದು, ಕಂಚಿಯನ್ನು ಬಿಟ್ಟು ವಾಪಸು ಬರುತ್ತಾನೆ. ತನ್ನ ಬ್ರಾಹ್ಮಣತ್ವಕ್ಕೆ ತಿಲಾಂಜಲಿ ನೀಡಿ ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ. ತನ್ನ ಬಂಟರೊಂದಿಗೆ ಸೈನ್ಯ ಕಟ್ಟಿ ಶ್ರೀಶೈಲದ ಯುದ್ಧದಲ್ಲಿ ಪಲ್ಲವರನ್ನು ಸೋಲಿಸುತ್ತಾನೆ.

ಪಲ್ಲವರು ಮತ್ತು ಕೋಲಾರದ ಬೃಹತ್ ಬಾಣರು ಮುಂತಾದ ಕಿರುಆರಸರೊಂದಿಗೆ ದೀರ್ಘಕಾಲದ ಕಿರುಕುಳ ಯುದ್ಧದ ನಂತರ ಕದಂಬರು ಸ್ವತಂತ್ರ ರಾಜ್ಯವನ್ನು ಘೋಷಿಸಿದರು. ಅವರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ಅಂತಸ್ತನ್ನು ಒಪ್ಪಬೇಕಾಗಿ ಬಂತು. ಹೀಗೆ ಅಪಮಾನದ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕರ್ನಾಟಕದ ಮೊಟ್ಟ ಮೊದಲ ರಾಜ್ಯ ಸ್ಥಾಪನೆಯಾಯಿತು. ಮಯೂರಶರ್ಮ ವೈದಿಕ ವಿದ್ಯಾಭ್ಯಾಸಕ್ಕಾಗಿ ದೂರದ ಕಂಚಿಗೆ ತೆರಳಿದ್ದು ಆ ಕಾಲದಲ್ಲಿ ಆ ಪ್ರದೇಶದಲ್ಲಿ ವೈದಿಕ್ ಶಿಕ್ಷಣ ಹೆಚ್ಚು ಅಭಿವೃದ್ಧಿವಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಗುಡ್ನಾಪುರದಲ್ಲಿ ಈಚೆಗೆ ಸಿಕ್ಕಿದ ಶಾಸನದ ಪ್ರಕಾರ ಮಯೂರಶರ್ಮನ ಅಜ್ಜ ವೀರಶರ್ಮನು ಅವನಿಗೆ ಗುರುಸಮಾನನಾಗಿದ್ದು, ಅವನ ತಂದೆ ಬಂಧುಸೇನನು ಕ್ಷತ್ರಿಯ ವಂಶವನ್ನು ಸ್ವೀಕಾರ ಮಾಡಿದನು.

ಮಯೂರಶರ್ಮನ ಮಗ ಕಂಗವರ್ಮ ೩೬೫ರಲ್ಲಿ ಪಟ್ಟವೇರಿದ. ವಾಕಟಕ ಪೃಥ್ವೀಸೇನನಿಂದ ಯುದ್ಧದಲ್ಲಿ ಪರಾಜಿತನಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ. ಇವನ ಮಗ ಭಗೀರಥನು ತಂದೆ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆದುಕೊಂಡ ಎಂದು ಹೇಳಲಾದರೂ, ವಾಕಟಕ ಶಾಸನಗಳಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಭಗೀರಥನ ಪುತ್ರ ರಘು ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದನು.ಅವನ ನಂತರ ಪಟ್ಟಕ್ಕೆ ಬಂದವನೇ, ಕದಂಬ ವಂಶದಲ್ಲೇ ಅತಿ ಬಲಿಷ್ಟ ಮತ್ತು ಉಗ್ರ ರಾಜ ಎಂದು ಹೆಸರಾದ, ಕಾಕುಸ್ಥವರ್ಮ . ಇವನ ಒಬ್ಬಳು ಮಗಳನ್ನು ಗುಪ್ತ ಸಾಮ್ರಾಜ್ಯದ ಸ್ಕಂದಗುಪ್ತನಿಗೆ ಕೊಟ್ಟು ಮದುವೆಮಾಡಲಾಗಿತ್ತು. ಇನ್ನೊಬ್ಬ ಮಗಳು ವಾಕಟಕ ರಾಜ ನರೇಂದ್ರಸೇನನನ್ನು ವಿವಾಹವಾಗಿದ್ದಳು. ತಾಳಗುಂದ ಶಾಸನದ ಪ್ರಕಾರ ಕಾಕುಸ್ಥವರ್ಮನು ಇದೇ ರೀತಿಯ ವಿವಾಹಸಂಬಂಧಗಳನ್ನು ಭಟಾರಿ, ದಕ್ಷಿಣ ಕನ್ನಡದ ಅಳೂಪರು ಮತ್ತು ಗಂಗವಾಡಿಯ ಪಶ್ಚಿಮ ಗಂಗ ಮನೆತನಗಳೊಂದಿಗೂ ಇಟ್ಟುಕೊಂಡಿದ್ದನು. ಮಹಾಕವಿ ಕಾಳಿದಾಸನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.

ಕಾಕುಸ್ಥವರ್ಮನ ನಂತರ ಬಂದವರಲ್ಲಿ, ೪೮೫ರಲ್ಲಿ ಪಟ್ಟವೇರಿದ ರವಿವರ್ಮ ಒಬ್ಬನೇ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲಿ ಯಶಸ್ವಿಯಾದ. ಅವನ ರಾಜ್ಯಭಾರದ ಕಾಲದಲ್ಲಿ , ಪಲ್ಲವರು ಮತ್ತು ಗಂಗರೊಂದಿಗೆ ಯುದ್ಧಗಳೂ , ಅಂತಃಕಲಹಗಳೂ ಗಮನಾರ್ಹವಾದವುಗಳು. ನರ್ಮದಾ ನದಿಯ ದಂಡೆಯವರೆಗೂ ಹಬ್ಬಿದ್ದ ವಾಕಟಕರನ್ನು ಸೋಲಿಸಿದ್ದು ಇವನ ಹೆಗ್ಗಳಿಕೆ. ಕದಂಬ ರಾಜ್ಯ ಇಂದಿನ ಬಹುತೇಕ ಕರ್ನಾಟಕ, ಗೋವಾ ಮತ್ತು ಇಂದಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳನ್ನು ಒಳಗೊಂಡಿತ್ತು. ಅಂತಃಕಲಹದಿಂದಾಗಿ , ಇವನ ನಂತರ ಈ ರಾಜವಂಶ ಅವನತಿಯ ಹಾದಿ ಹಿಡಿಯಿತು. ಕದಂಬರ ವಿಷ್ಣುವರ್ಮನ ಬೀರೂರಿನ ಫಲಕದಲ್ಲಿ ಶಾಂತಿವರ್ಮನನ್ನು ಸಮಸ್ತ ಕರ್ನಾಟಕದ ಒಡೆಯ ಎಂದು ಸಂಬೋಧಿಸಲಾಗಿದೆ. ಮುಖ್ಯ ಧಾರೆಯಿಂದ ೪೫೫ರಲ್ಲಿ ಬೇರೆಯಾದ ತೃಪಾವರ್ತ ಎಂಬ ಶಾಖೆಯು ಬೆಳಗಾವಿಯ ಹತ್ತಿರದ ಮುರೋಡ್ ಎಂಬಲ್ಲಿ ಸ್ವಲ್ಪಕಾಲ ಆಳಿ ನಂತರ ಹರಿವರ್ಮನ ಕಾಲದಲ್ಲಿ ಬನವಾಸಿಯ ಪ್ರಧಾನ ರಾಜ್ಯದೊಂದಿಗೆ ವಿಲೀನವಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯದ ಪತನವಾಯಿತು.ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರ , ಅದರನಂತರ ರಾಷ್ಟ್ರಕೂಟರ ಮತ್ತು ಕಲ್ಯಾಣಿ ಚಾಲುಕ್ಯರ ಸಾಮಾಂತರಾಗಿ ಈ ವಂಶ ಮುಂದುವರಿಯಿತು. ಮಯೂರಶರ್ಮನ ಉತ್ತರಾಧಿಕಾರಿಗಳು ತಮ್ಮ ಕ್ಷತ್ರಿಯ ವಂಶ ಸೂಚಕವಾಹಗಿ ವರ್ಮ' ಎಂಬ ಹೆಸರನ್ನು ಸ್ವೀಕರಿಸಿದರು.

ಶಾತವಾಹನರಾಜರುಗಳಂತೆ ಕದಂಬರೂ ತಮ್ಮನ್ನು ಧರ್ಮಮಹಾರಾಜ ಎಂದು ಕರೆದುಕೊಳ್ಳುತ್ತಿದ್ದರು. ಶಾಸನಗಳ ಅಧ್ಯಯನದಿಂದ ಆ ಕಾಲದ ಅನೇಕ ಹುದ್ದೆಗಳ ಪತ್ತೆ ಹಚ್ಚಲಾಗಿದೆ. ಪ್ರಧಾನ (ಪ್ರಧಾನ ಮಂತ್ರಿ), ಮನೆವೆರ್ಗಡೆ (ಪರಿಚಾರಕ) , ತಂತ್ರಪಾಲ ಅಥವಾ ಸಭಾಕಾರ್ಯ ಸಚಿವ (ಕಾರ್ಯದರ್ಶಿ), ವಿದ್ಯಾವೃದ್ಧ (ವಿದ್ವಾಂಸ ವೃದ್ಧರು), ದೇಶಾಮಾತ್ಯ (ವೈದ್ಯ), ರಹಸ್ಯಾಧ್ಯಕ್ಷ (ಖಾಸಗೀ ಕಾರ್ಯದರ್ಶಿ ), ಸರ್ವಕಾರ್ಯಕರ್ತ (ಮುಖ್ಯ ಕಾರ್ಯದರ್ಶಿ), ಧರ್ಮಾಧ್ಯಕ್ಷ ( ಮುಖ್ಯ ನ್ಯಾಯಾಧೀಶ),ಭೋಜಕ ಮತ್ತು ಆಯುಕ್ತ ( ಇತರ ಅಧಿಕಾರಿಗಳು)ಇತ್ಯಾದಿ. ಸೇನೆಯಲ್ಲಿ ಜಗದಾಲ, ದಂಡನಾಯಕ ಮತ್ತು ಸೇನಾಪತಿ ಎಂಬ ಹುದ್ದೆಗಳಿದ್ದವು.

ರಾಜವಂಶದ ಪಟ್ಟದ ರಾಜಕುಮಾರ ರಾಜನಿಗೆ ಆಡಳಿತದಲ್ಲಿ ನೆರವು ನೀಡುತ್ತಿದ್ದ. ಇತರ ರಾಜಕುಮಾರರುಗಳು ವಿವಿಧ ಪ್ರಾಂತಗಳ ರಾಜ್ಯಪಾಲರುಗಳಾಗಿ ನೇಮಕವಾಗುತ್ತ್ಫಿದ್ದರು. ಕಾಕುಸ್ಥವರ್ಮನು ತನ್ನ ಮಗ ಕೃಷ್ಣನನ್ನು ತ್ರಿಪರ್ವತಾಹ ಎಂಬ ಪ್ರದೇಶದ ರಾಜ್ಯಪಾಲನನ್ನಾಗಿ ನೇಮಿಸಿದ್ದನು. ಮುಂದೆ ಇದು ರಾಜ ವಂಶ ಬೇರೆ ಬೇರೆ ಕವಲುಗಳಾಗಿ ಒಡೆಯಲು ಕಾರಣೀಭೂತವಾಯಿತು.

ರಾಜ್ಯವನ್ನು ಮಂಡಲ ಮತ್ತು ದೇಶ ಎಂದು ವಿಭಾಜಿಸಲಾಗಿತ್ತು. ಅನೇಕ ವಿಷಯ( ಜಿಲ್ಲೆ) ಗಳಿಂದ ಒಂದು ಮಂಡಲವಾಗುತ್ತಿತ್ತು. ಒಟ್ಟು ಒಂಭತ್ತು ವಿಷಯಗಳನ್ನು ಗುರುತಿಸಲಾಗಿದೆ. ಮಹಾಗ್ರಾಮ ( ತಾಲೂಕು) ಮತ್ತು ದಶಗ್ರಾಮ ( ಹೋಬಳಿ) ಇತರ ಉಪ ವಿಭಾಗಗಳಾಗಿದ್ದವು. ಕೃಷಿ ಉತ್ಪನ್ನದ ಆರರಲ್ಲೊಂದು ಭಾಗವನ್ನು ಸುಂಕವೆಂದು ವಸೂಲಿಮಾಡಲಾಗುತ್ತಿತ್ತು . ಸುಂಕವನ್ನು ಪೆರ್ಜುಂಕ ( ಹೊರೆಯ ಮೇಲಿನ ಸುಂಕ) , ವಡ್ಡರಾವುಲ ( ರಾಜಮನೆತನದ ಸುರಕ್ಷೆಗಾಗಿ ಸಾಮಾಜಿಕ ಸುಂಕ), ಬಿಲ್ಕೋಡ (ಮಾರಾಟ ತೆರಿಗೆ), ಕಿರುಕುಳ ( ಭೂ ಕಂದಾಯ) , ಪಣ್ಣಾಯ ( ಅಡಿಕೆಯ ಮೇಲಿನ ಸುಂಕ) , ವ್ಯಾಪಾರಿಗಳೇ ಮತ್ತಿತರರ ಮೇಲೆ ವೃತ್ತಿ ಸುಂಕ ಇತ್ಯಾದಿಗಳ ರೂಪದಲ್ಲಿ ವಸೂಲು ಮಾಡಲಾಗುತ್ತಿತ್ತು.

ಕದಂಬರು ವೈದಿಕ ಹಿಂದೂ ಧರ್ಮದ ಅನುಯಾಯಿಗಳಾಗಿದ್ದರು. ಮಯೂರಶರ್ಮ , ಬಹುಶಃ, ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ಅವನ ಮುಂದಿನವರು , ತಮ್ಮ ಕ್ಷತ್ರಿಯ ಕುಲದ ಲಾಂಛನವಾಗಿ ವರ್ಮ ಎಂಬ ಹೆಸರನ್ನು ಧರಿಸಿದರು. ಕೃಷ್ಣವರ್ಮ ಮೊದಲಾದ ಕೆಲ ಕದಂಬ ರಾಜರು ಅಶ್ವಮೇಧ ಯಾಗವನ್ನು ಮಾಡಿದ್ದರು. ಅವರ ತಾಳಗುಂದದ ಶಾಸನವು ಶಿವನ ಪ್ರಾರ್ಥನೆಯೊಂದಿಗೆ ಮೊದಲಾದರೆ, ಹಲ್ಮಿಡಿ ಮತ್ತು ಬನವಾಸಿಗಳಲ್ಲಿ ವಿಷ್ಣುವಿನ ಹೆಸರು ಕಾಣಬರುತ್ತದೆ. ಅವರ ಕುಲದೇವರೆನ್ನಲಾದ ಮಧುಕೇಶ್ವರ ದೇವಾಲಯವನ್ನು ಕಟ್ಟಿದರು. ಕುಡಲೂರು, ಸಿರ್ಸಿ ಇತ್ಯಾದಿಗಳಲ್ಲಿ ಸಿಕ್ಕಿರುವ ಅನೇಕ ದಾಖಲೆಗಳು ವಿದ್ವಜ್ಜನರಿಗೆ ಉಂಬಳಿ ಬಿಟ್ಟ ವಿಷಯವನ್ನು ಹೇಳುತ್ತವೆ. ಬೌದ್ಧ ವಿಹಾರಗಳಿಗೂ ಉಂಬಳಿ ಬಿಡಲಾಗುತ್ತಿತ್ತು.

ಜೈನ ಧರ್ಮವನ್ನೂ ಪ್ರೋತ್ಸಾಹಿಸಿದ ಕದಂಬರು ಬನವಾಸಿ, ಬೆಳಗಾವಿ, ಮಂಗಳೂರು ಮತ್ತು ಗೋವಾ ಸುತ್ತಮುತ್ತ ಅನೇಕ ಜೈನ ದೇವಾಲಯಗಳನ್ನು ಕಟ್ಟಿಸಿದರು. ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೆ ಹೆಸರಾಗಿದ್ದ ಕದಂಬ ರಾಜ ಮತ್ತು ರಾಣಿಯರು ದೇವಾಲಯ ಮತ್ತು ವಿದ್ಯಾಸಂಸ್ಥೆಗಳಿಗೆ ಧಾರಾಳ ಉಂಬಳಿಯನ್ನು ಬಿಟ್ಟದ್ದಲ್ಲದೆ, ಧನಸಹಾಯವನ್ನೂ ಮಾಡಿದರು. ಆದಿಕವಿ ಪಂಪನು ತನ್ನ ಕೃತಿಗಳಲ್ಲಿ ಕದಂಬರನ್ನು ಹಾಡಿ ಹೊಗಳಿದ್ದಾನೆ. ಅವನ ನುಡಿಗಳಾದ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮತ್ತು “ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್ ಬನವಾಸಿ ದೇಶದೊಳ್ ಇಂದಿಗೂ ಕನ್ನಡಿಗರ ಮನೆಮಾತಾಗಿದೆ.

ಕದಂಬರು ಕರ್ನಾಟಕದ ಶಿಲ್ಪಕಲಾ ಪರಂಪರೆಗೆ ಗಮನಾರ್ಹ ಕೊಡಿಗೆ ನೀಡಿದರು. ಚಾಲುಕ್ಯ ಮತ್ತು ಪಲ್ಲವ ಶೈಲಿಯನ್ನು ಕೆಲವು ವಿಷಯಗಳಲ್ಲಿ ಹೋಲುವ ಕದಂಬ ಶಿಲ್ಪಕಲೆ ತನ್ನದೇ ಛಾಪನ್ನು ಹೊಂದಿದೆ. ಕದಂಬರು ಶಾತವಾಹನರ ಶಿಲ್ಪಕಲಾ ಶೈಲಿಯನ್ನೂ ಅಳವಡಿಸಿಕೊಂಡರು. ಕದಂಬರ ಶಿಲ್ಪಕಲೆಯ ಮೂಲ ಲಕ್ಷಣ ಕದಂಬ ಶಿಖರ ಎಂದೇ ಕರೆಯಲಾಗುವ ಶಿಖರ. ಮೆಟ್ಟಿಲು ಮಟ್ಟಿಲಾಗಿ ಪಿರಮಿಡಿನಂತೆ ಮೇಲೇರಿ ಕಳಶ (ಅಥವಾ ಸ್ತೂಪಿಕಾ) ದಲ್ಲಿ ಕೊನೆಗೊಳ್ಳುವ ಈ ಶಿಖರದಲ್ಲಿ ಮತ್ತೆ ಯಾವುದೇ ಅಲಂಕಾರಗಳಿಲ್ಲ. ಅನೇಕ ಶತಮಾನಗಳ ನಂತರ ಇದೇ ಶೈಲಿಯ ಶಿಖರಗಳ ಉಪಯೋಗ ದೊಡ್ಡಗದ್ದವಳ್ಳಿಯ ಹೊಯ್ಸಳ ದೇವಾಲಯಮತ್ತು ಹಂಪೆಯ ಮಹಾಕೂಟ ದೇವಾಲಯದಲ್ಲಿ ಕಂಡುಬರುತ್ತದೆ. ಕೆಲ ದೇವಾಲಯಗಳಲ್ಲಿ ಕಲ್ಲಿ ಜಾಲಂಧ್ರಗಳೂ ಕಾಣಸಿಗುತ್ತವೆ. ಮುಂದೆ ಚಾಲುಕ್ಯ- ಹೊಯ್ಸಳ ಶಿಲ್ಪಕಲೆ ಎಂದು ಹೆಸರಾದ ಶೈಲಿಗೆ ಅಡಿಪಾಯ ಕದಂಬರ ಕಾಲದಲ್ಲಿ ಹಾಕಲಾಯಿತು ಎಂದು ನಂಬಲಾಗಿದೆ. ಕದಂಬರ ಕಾಲದ, ಹತ್ತನೆಯ ಶತಮಾನದ , ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯವನ್ನು ಇಂದಿಗೂ ಬನವಾಸಿಯಲ್ಲಿ ನೋಡಬಹುದು. ಇಲ್ಲಿನ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು.

ಕದಂಬರ ನೆನಪಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಬನವಾಸಿಯಲ್ಲಿ ಕದಂಬೋತ್ಸವವೆಂಬ ಸಾಂಸ್ಕೃತಿಕ ಉತ್ಸವವನ್ನು ನಡೆಸುತ್ತದೆ. ಮಯೂರಶರ್ಮನ ಕಥೆಯನ್ನು ಆಧರಿಸಿದ ಮಯೂರ ಕನ್ನಡ ಚಲನಚಿತ್ರ ಎಪ್ಪತ್ತರ ದಶಕದಲ್ಲಿ ತೆರೆಕಂಡಿತ್ತು. ಇದರಲ್ಲಿ ಡಾ. ರಾಜಕುಮಾರ್ ನಾಯಕ ಪಾತ್ರ ವಹಿಸಿದ್ದರು. ೨೦೦೫ರಲ್ಲಿ ಕಾರವಾರದಲ್ಲಿ ಉದ್ಘಾಟಿತವಾದ , ಭಾರತದ ಅತ್ಯಾಧುನಿಕ ಮಿಲಿಟರಿ ನೌಕಾನೆಲೆಗೆ INS ಕದಂಬ ಎಂದು ಹೆಸರಿಡಲಾಗಿದೆ.




#Article 156: ಸೇವುಣ (659 words)


ದೇವಗಿರಿಯ ಯಾದವರು ಎಂದೇ ಹೆಸರಾಗಿರುವ ಸೇವುಣರು ಉತ್ತರ ಕರ್ನಾಟಕ, ಮಹಾರಾಷ್ಟ್ರಗಳನ್ನೊಳಗೊಂಡ ಪ್ರದೇಶವನ್ನು ಆಳಿದ ಕನ್ನಡ ರಾಜಮನೆತನ. ರಾಷ್ಟ್ರಕೂಟರ ಸರದಾರರಾಗಿಯೂ, ಮುಂದೆ ಹೊಯ್ಸಳರಂತೆಯೆ ಕಲ್ಯಾಣದ ಚಾಲುಕ್ಯ ದೊರೆಗಳ ಸಾಮಂತರಾಗಿಯೂ ಇದ್ದರು. ಚಾಲುಕ್ಯ ಸಾಮ್ರಾಜ್ಯ ಅವನತಿಯ ಹಾದಿ ಹಿಡಿದಂತೆ ಪ್ರಾಬಲ್ಯಕ್ಕೆ ಏರಿದರು. ಐದನೆಯ ಭಿಲ್ಲಮ ಕಲ್ಯಾಣವನ್ನು ವಶಪಡಿಸಿಕೊಂಡು ತಾನು ಸ್ವತಂತ್ರನೆಂದು ಘೋಷಿಸಿಕೊಂಡ. ದೇವಗಿರಿಯ ಅಭೇದ್ಯ ಕೋಟೆಯನ್ನು ನಿರ್ಮಿಸಿ ರಾಜಧಾನಿಯನ್ನು ಅಲ್ಲಿಗೆ ಸ್ಥಳಾಂತರಿಸಿದ.  ಸೇಉಣರು ಹೊಯ್ಸಳರೊಂದಿಗೆ ಅನೇಕ ಯುದ್ದಗಳನ್ನು ನಡೆಸೆದರು. ಕೃಷ್ಣಾ-ತುಂಗಭದ್ರಾ 
 ನದಿ ಮಧ್ಯಪ್ರದೇಶ ಒಬ್ಬರಿಂದೊಬ್ಬರಿಗೆ ಕೈ ಬದಲಾಯಿಸುತ್ತಿತ್ತು. ನಂತರ ಒಂದು ಮಾದರಿಯ ಒಪ್ಪಂದ ಏರ್ಪಟ್ಟು, ಸೇವುಣರು ತುಂಗಭದ್ರೆಯ ಉತ್ತರಕ್ಕೂ, ಹೊಯ್ಸಳರು ದಕ್ಷಿಣಕ್ಕೂ ತಮ್ಮ ಪ್ರಭಾವ ಪ್ರಾಬಲ್ಯಗಳನ್ನು ವಿಸ್ತರಿಸಿದರು. ಒಂದು ಕಾಲದಲ್ಲಿ ಸೇವುಣ ರಾಜ್ಯ ನರ್ಮದೆಯವರೆಗೆ ಹಬ್ಬಿತ್ತು. ಮುಂದೆ ದೆಹಲಿಯ ಸುಲ್ತಾನ ಅಲ್ಲಾಉದ್ದೀನ್‌ ಖಿಲ್ಜಿ ದೇವಗಿರಿಯನ್ನು ಗೆದ್ದು ತನ್ನ ರಾಜ್ಯಕ್ಕೆ ಸೇರಿಸಿಕೊಂಡಾಗ ಸೇವುಣರ ರಾಜ್ಯ ಕೊನೆಗಂಡಿತು. ಛತ್ರಪತಿ ಶಿವಾಜಿಯ ತಾಯಿ ಜೀಜಾಬಾಯಿಯ ತವರು ಮನೆತನ ದೇವಗಿರಿಯ ರಾಜವಂಶಕ್ಕೆ ಸೇರಿದ್ದು.

ಸಾಂಸ್ಕೃತಿಕವಾಗಿ ಸೇವುಣರು ಕಲ್ಯಾಣದ ಚಾಲುಕ್ಯರ ಸಂಪ್ರದಾಯವನ್ನು ಮುಂದುವರೆಸಿರದರು. ಗಣಿತಜ್ಞ ಭಾಸ್ಕರಾಚಾರ್ಯ, ಭಾರತೀಯ ಸಂಗೀತಶಾಸ್ತ್ರದ ಪ್ರಮಾಣ ಗ್ರಂಥ ಸಂಗೀತ ರತ್ನಾಕರವನ್ನು ರಚಿಸಿದ ಶಾರ್ಙ್ಗದೇವ ಸೇವುಣರ ಕಾಲದವರು.

ಸೇವುಣ ರಾಜರನ್ನು “ದೇವಗಿರಿಯ ಯಾದವರು” ಎಂದೂ ಕರೆಯುವುದುಂಟು. ಮಹಾರಾಷ್ಟ್ರದ ವಿಶಾಲ ಭಾಗದಲ್ಲಿ ಆಳಿದ್ದರಿಂದ ಅವರನ್ನು “ಮರಾಠರು” ಎಂದೂ ಕರೆಯಲಾಗುತ್ತದೆ. ಆದರೆ ಈ ರಾಜವಂಶದ ಸರಿಯಾದ ಹೆಸರು ಸೇಉಣ ಅಥವಾ ಸೇವುಣ[2]. ಇವರದೇ ಶಾಸನಗಳಲ್ಲಾಗಲೀ ಅಥವಾ ಅವರ ಸಮಕಾಲೀನ ರಾಜ್ಯಗಳಾಗಿದ್ದ ಹೊಯ್ಸಳ, ಕಾಕತೀಯ ಅಥವಾ ಪಶ್ಚಿಮ ಚಾಲುಕ್ಯರ ಶಾಸನಗಳಲ್ಲಾಗಲೀ ಈ ರಾಜವಂಶವನ್ನು ಸೇಉಣರೆಂದೇ ಸಂಬೋಧಿಸಲಾಗಿದೆ.[3].  ಈ ಹೆಸರಿನ ಮೂಲ ಬಹುಶಃ ಈ ವಂಶದ ಎರಡನೆಯ ರಾಜ ಸೇಉಣಚಂದ್ರನಿಂದ ಬಂದಿರಬಹುದೆಂದು ಊಹೆಯಿದೆ

ಈ ವಂಶದ ಮೂಲದ ಬಗ್ಯೆ ವಿದ್ವಾಂಸರಲ್ಲಿ ಅನೇಕ ಅಭಿಪ್ರಾಯಗಳಿದ್ದರೂ ಸೇಉಣರು ಕನ್ನಡಿಗರೆಂಬುದಕ್ಕೆ ಬಲವಾದ ಆಧಾರಗಳಿವೆ..

ಡಾ.ಸಿ.ಎಮ್.ಕುಲಕರ್ಣಿ[14], ಕಾಲಿನ್ ಮಸೀಕಾ, ಡಾ. ಶ್ರೀನಿವಾಸ ರಿತ್ತಿ ಮೊದಲಾದ ಸಂಶೋಧಕರು, ಸೇವುಣರು ಮೂಲತಃ ಕನ್ನಡಿಗರಾಗಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾಷಾಶಾಸ್ತ್ರಜ್ಞ  ಕಾಲಿನ್ ಮಸೀಕಾರ ಪ್ರಕಾರ ಸೇವುಣರು ಕನ್ನಡ ಭಾಷಿಕರಾಗಿದ್ದು , ತಮ್ಮ ಶಾಸನಗಳಲ್ಲಿ ಸಂಸ್ಕೃತದೊಂದಿಗೆ ಕನ್ನಡವನ್ನೂ ಬಳಸಿದ್ದಾರೆ. ಆದರೆ, ಮುಂದೆ ಮುಸ್ಲಿಮರ ಆಕ್ರಮಣದ ಕಾಲದಲ್ಲಿ , ಅವರು ಮರಾಠಿ ಭಾಷೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದ್ದು , ಅವರ ಶಾಸಗಳಲ್ಲಿ ಮರಾಠಿ ಸಾಲುಗಳು ಮತ್ತು ನುಡಿಗಟ್ಟುಗಳು ಕಾಣಬರಲು ತೊಡಗುತ್ತವೆ.[15]. ಡಾ.ಶ್ರೀನಿವಾಸ ರಿತ್ತಿಯವರ ಪ್ರಕಾರ , ಸೇವುಣರು ಮೂಲತಃ ಕನ್ನಡಿಗರಾಗಿದ್ದು , ದಖ್ಖನಿನಲ್ಲಿ ಆಗಿನ ರಾಜಕೀಯ ಪರಿಸ್ಥಿತಿಯಿಂದ ಅವರು ಉತ್ತರಕ್ಕೆ ವಲಸೆ ಹೋಗಿರಬಹುದು. [16]

ಅನೇಕ ಸೇವುಣ ರಾಜರುಗಳ ಹೆಸರು ಅಥವಾ ಬಿರುದು ಕನ್ನಡ ಮೂಲದವಾಗಿವೆ. ಉದಾಹರಣೆಗೆ ಧಡಿಯಪ್ಪ, ಭಿಲ್ಲಮ, ರಾಜುಗಿ, ವಾಸುಗಿ. ಕಲಿಯ ಬಲ್ಲಾಳ ಇತ್ಯಾದಿ. ಇನ್ನೂ ಕೆಲ ರಾಜರ ಸಿಂಘಣ , ಮಲ್ಲುಗಿ ಎಂಬ ಹೆಸರುಗಳು ದಕ್ಷಿಣ ಕಲಚೂರ್ಯರ ಹೆಸರುಗಳನ್ನು ಹೋಲುತ್ತವೆ. ದಾಖಲೆಗಳ ಪ್ರಕಾರ ಸೇವೂಣರ ಮೊದಲ ರಾಜರುಗಳಲ್ಲಿ ಒಬ್ಬನಾದ ಎರಡನೆಯ ಸೇವುಣಚಂದ್ರನು , ಸೆಲ್ಲವಿದೇಗ ಎಂಬ ಕನ್ನಡ ಬಿರುದಾಂಕಿತನಾಗಿದ್ದನು.

ತಮ್ಮ ರಾಜ್ಯಭಾರದ  ಅವಧಿಯುದ್ದಕ್ಕೂ , ಸೇವುಣರು, ಕನ್ನಡ ರಾಜವಂಶಗಳೊಂದಿಗೆ ನಿಕಟ ಲಗ್ನಸಂಬಂಧವನ್ನು ಇಟ್ಟುಕೊಂಡಿರುವುದು ಕಂಡುಬರುತ್ತದೆ.  [3].  ಎರಡನೆಯ ಭಿಲ್ಲಮನು ರಾಷ್ಟ್ರಕೂಟ ವಂಶದ ಲಚ್ಚಿಯವ್ವೆಯನ್ನು ಮದುವೆಯಾಗಿದ್ದನು. ರಾಷ್ಟ್ರಕೂಟರ ಸೇನಾಧಿಕಾರಿ ದೋರಪ್ಪನ ಮಗಳು ವಡ್ಡಿಯವ್ವೆಯನ್ನು ವಡ್ಡಿಗನು ವರಿಸಿದ್ದನು. ವೇಸುಗಿ ಮತ್ತು ಮೂರನೆಯ ಭಿಲ್ಲಮನ ಹೆಂಡತಿಯರು ಚಾಲುಕ್ಯ ವಂಶದ ರಾಜಕುಮಾರಿಯರಾಗಿದ್ದರು.

ಸೇವುಣರ ರಕ್ತಸಂಬಂಧಿಗಳಾಗಿದ್ದ ಅವರ ಅನೇಕ ದಂಡನಾಯಕರು ಕನ್ನಡ ಭಾಷಿಕರಾಗಿದ್ದರು. ಸೇವುಣರ ಮಾಸವಾಡಿಯು ಇಂದಿನ ಧಾರವಾಡ ಪ್ರದೇಶದಲ್ಲಿತ್ತು. ಡಾ. ಎ.ವಿ. ನರಸಿಂಹಮೂರ್ತಿಯವರ ಪ್ರಕಾರ, ಮಾನ್ಯಖೇಟ (ಇಂದಿನ ಮಾಳಖೇಡ) ದಿಂದ ಆಳುತ್ತಿದ್ದ ರಾಷ್ಟ್ರಕೂಟರ ಆಳ್ವಿಕೆಯ ಉತ್ತರಾರ್ಧದಲ್ಲಿ , ಸೇವುಣ ದಂಡನಾಯಕರುಗಳನ್ನು ನಾಸಿಕ ಪ್ರದೇಶದಲ್ಲಿ ಆಡಳಿತ ನಡೆಸಲು ಕರ್ನಾಟಕದಿಂದ ಕಳುಹಿಸಲಾಯಿತು. [4].

ಅಷ್ಟೇ ಅಲ್ಲ, ಸೇವುಣರ ರಾಜ್ಯದ ಐನೂರಕ್ಕೂ ಹೆಚ್ಚು ಶಿಲಾಶಾಸನಗಳು ಕರ್ನಾಟಕದಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಎರಡನೆಯ ಭಿಲ್ಲಮನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಈ ಬಹುತೇಕ ಶಾಸನ ಭಾಷೆ ಕನ್ನಡವಾಗಿದೆ. ಇನ್ನೂ ಅನೇಕ ಶಾಸನಗಳ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆದ ಕನ್ನಡವಾಗಿದೆ[3].  ಸೇವುಣರ ಮೊದಮೊದಲ ನಾಣ್ಯಗಳಲ್ಲಿ ಕನ್ನಡ ಲಾಂಛನಗಳಿವೆ. ಇವೆಲ್ಲವುಗಳ ಆಧಾರದ ಮೇಲೆ, ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರು, ಸೇವುಣರ ರಾಜ್ಯದಲ್ಲಿ , ಮರಾಠಿ ಮತ್ತು ಸಂಸ್ಕೃತದೊಂದಿಗೆ ಕನ್ನಡವೂ ರಾಜಭಾಷೆಯಾಗಿರುವುದು ಖಂಡಿತ ಎಂಬ ನಿರ್ಧಾರಕ್ಕೆ ಬರುತ್ತಾರೆ. [17].

ಸ್ವತಃ ಸೇವುಣರು ತಮ್ಮನ್ನು ಉತ್ತರ ಭಾರತದ ಚಾಂದ್ರವಂಶಿ ಯಾದವ ಕುಲದವರು ಎಂದು ಕರೆದುಕೊಂಡಿದ್ದಾರೆ[5][6]. ಹೇಮಾದ್ರಿ ಬರೆದ ಸಂಸ್ಕೃತ  ಗ್ರಂಥ ವ್ರತಖಂಡದ 21ನೆಯ ಪದ್ಯದಲ್ಲಿ , ಸೇವುಣರು ಮೂಲತಃ ಮಥುರೆಯವರಾಗಿದ್ದು ನಂತರ ದ್ವಾರಕೆಗೆ ಬಂದರು ಎಂದು ಉಲ್ಲೇಖಿಸಲಾಗಿದೆ. ಹೇಮಾದ್ರಿಯು ಅವರನ್ನು ಕೃಷ್ಣಕುಲೋತ್ಪನ್ನ , ಅರ್ಥಾತ್ ಕೃಷ್ಣನ ವಂಶಸ್ಥರು ಎಂದು ಕರೆದಿದ್ದಾನೆ[7]. ಇತರ ಕೆಲ ಶಾಸನಗಳು ಅವರನ್ನು ದ್ವಾರಾವತೀಪುರಾವರಾಧೀಶ್ವರರು (ದ್ವಾರಕೆಯ ಒಡೆಯರು) ಎಂದು ಉಲ್ಲೇಖಿಸಿವೆ.

ಸೇವುಣರು ಉತ್ತರ ಭಾರತದಿಂದ ಬಂದವರು ಎಂಬ ವಾದವನ್ನು ಡಾ. ಕೋಲಾರ್ಕರ್ ಮೊದಲಾದ ಅನೇಕ ಆಧುನಿಕ ಸಂಶೋಧಕರು ಸಮರ್ಥಿಸುತ್ತಾರೆ[8].

ಪ್ರೊ. ಜಾರ್ಜ್ ಮೊರೇಸ್ [9], ವಿ.ಕೆ.ರಾಜವಾಡೆ, ಸಿ.ವಿ.ವೈದ್ಯ, ಡಾ. ಎ.ಎಸ್. ಅಲ್ಟೇಕರ್ , ಡಾ.ಬಿ.ಆರ್.ಭಂಡಾರ್ಕರ್ ಮತ್ತು ಜೆ. ಡಂಕನ್ ಎಮ್. ಡೆರ್ರೆಟ್ [4],  ಮೊದಲಾದ ವಿದ್ವಾಂಸರು,ಸೇವುಣರು ಮರಾಠಾ ಮೂಲದವರಾಗಿದ್ದರು ಎಂದು ಅಭಿಪ್ರಾಯಪಡುತ್ತಾರೆ. ಸೇವುಣರು ಮರಾಠಿ ಭಾಷೆಯ ಪ್ರೋತ್ಸಾಹಕರಾಗಿದ್ದರು[10].  ಈ ನಾ ಯಕರಾಜ್ಯವು ಮೊಟ್ಟಮೊದಲ ಮರಾಠಾ ಸಾಮ್ರಾಜ್ಯ ಎಂದು ದಿಗಂಬರ ಬಾಲಕೃಷ್ಣ ಮೊಕಾಶಿಯವರು ಅನುಮೋದಿಸುತ್ತಾರೆ[11].  ತಮ್ಮ ಪುಸ್ತಕ ಮಧ್ಯಯುಗೀಯ ಭಾರತ (Medieval India)ದಲ್ಲಿ , ಸಿ.ವಿ.ವೈದ್ಯ,  ನನಿಸ್ಸಂದೇಹವಾಗಿಯೂ ಶುದ್ಧ ಮರಾಠಿ ಕ್ಷತ್ರಿಯವಂಶದವರು ಎನ್ನುತ್ತಾರೆ.

ನಾಸಿಕದ ಹತ್ತಿರದ ಅಂಜನೇರಿ ಎಂಬಲ್ಲಿ ದೊರಕಿದ ಶಿಲಾಶಾಸನದ ಪ್ರಕಾರ ಯಾದವ ವಂಶದ ಒಂದು ಕಿರು ಶಾಖೆಯು ಅಂಜನೇರಿಯನ್ನು  ಮುಖ್ಯ ನಗರವಾಗಿಟ್ಟುಕೊಂಡು , ಸಣ್ಣ ಪ್ರದೇಶವನ್ನು ಆಳುತ್ತಿತ್ತು.. ಇದೇ ಶಾಸನವು, ಈ ಯಾದವ ವಂಶದ ಸೇವುಣದೇವ ಎಂಬ ರಾಜನು ತನ್ನನ್ನು ಮಹಾಸಾಮಂತ ಎಂದು ಕರೆದುಕೊಂಡಿದ್ದಾಗಿಯೂ, ಜೈನ ದೇವಾಲವೊಂದಕ್ಕೆ ದತ್ತಿ ಬಿಟ್ಟದ್ದಾಗಿಯೂ ಹೇಳುತ್ತದೆ. [12]..ಡಾ. ಓ.ಪಿ.ವರ್ಮಾ ಮೊದಲಾದ ವಿದ್ವಾಂಸರ ಪ್ರಕಾರ ಯಾದವರು ಮರಾಠಿ ಭಾಷಿಕರಾಗಿದ್ದು , ಇವರ ಕಾಲವು ಮರಾಠಿ ಇತಿಹಾಸದಲ್ಲಿ ಮಹತ್ವದ ಕಾಲವಾಗಿದೆ. [13].

ಶಿವಾಜಿಯ ತಾಯಿ ಜೀಜಾಬಾಯಿಯು ಯಾದವ ವಂಶಸ್ತರು ಎಂದು ಕರೆದುಕೊಳ್ಳುತ್ತಿದ್ದ ಸಿಂದಖೇಡ ರಾಜರ ಜಾಧವ ಕುಲಕ್ಕೆ ಸೇರಿದವಳಾಗಿದ್ದಳು.

ರಾಷ್ಟ್ರಕೂಟರ ಹಾಗೂ ನಂತರ ಪಶ್ಚಿಮ ಚಾಲುಕ್ಯರ ಸಾಮಂತರಾಗಿದ್ದ[2] ಸೇವುಣರ ರಾಜವಂಶ ಜಾರಿಗೆ ಬಂದದ್ದು  ಸುಬಾಹುವಿನ ಮಗ ಧೃತಪ್ರಹಾರನ ಕಾಲದಲ್ಲಿ.. ವ್ರತಖಂಡ ಗ್ರಂಥದ ಪ್ರಕಾರ ಈ ರಾಜ್ಯದ ರಾಜಧಾನಿ ಶ್ರೀನಗರವಾಗಿತ್ತು. ಆದರೆ, ಇನ್ನೊಂದು ಶಿಲಾಶಾಸನದ ಪ್ರಕಾರ ರಾಜಧಾನಿಯು, ಚಂದ್ರಾದಿತ್ಯ ಪುರವಾಗಿತ್ತು ( ಇದು ಇಂದಿನ ನಾಸಿಕ ಜಿಲ್ಲೆಯ ಚಾಂದೋರು) [12].
ಸೇವುಣರಿಗೆ ಆ ಹೆಸರು ಬಂದದ್ದು  ಧೃತಪ್ರಹಾರನ ಮಗ ಸೇವುಣಚಂದ್ರನಿಂದ. ಅವನ ರಾಜ್ಯ ಮೂಲತಃ ಸೇವುಣದೇಶ ವೆಂಬ ಪ್ರದೇಶ ( ಇಂದಿನ ಮಹಾರಾಷ್ಟ್ರದ ಖಾಂದೇಶ್ ಭಾಗ) ವಾಗಿತ್ತು. ನಂತರದ ರಾಜ ಎರಡನೆಯ ಭಿಲ್ಲಮನು , ಪರಮಾರರ ದೊರೆ ಮುಂಜ ವಿರುದ್ಧದ ಕದನದಲ್ಲಿ  ಮೂರನೆಯ ತೈಲಪನಿಗೆ ನೆರವು ನೀಡಿದನು. ಎರಡನೆಯ ಸೇವುಣಚಂದ್ರನು ಆರನೆಯ ವಿಕ್ರಮಾದಿತ್ಯನಿಗೆ ಸಿಂಹಾಸನವನ್ನು ದಕ್ಕಿಸಿಕೊಳ್ಳಲು ಸಹಾಯ ಮಾಡಿದನು.

ಸೇವುಣ ರಾಜರುಗಳಲ್ಲಿ ಸಿಂಧನ, ಕೃಷ್ಣದೇವ, ಮಹಾದೇವ ಮತ್ತು ರಾಮದೇವ ಇವರುಗಳನ್ನು ಸಮರ್ಥ ರಾಜರೆಂದು ಪರಿಗಣಿಸಲಾಗಿದೆ. [8]

 

 




#Article 157: ಚಿಟ್ಟೆ (484 words)


ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ  ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. 

ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ 'ಲೆಪಿಡಾಪ್ಟರಿಸ್ಟ್'ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ.

ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ.

ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಆದರೆ ಯಾವಾಗಲೂ ಅಲ್ಲ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುತ್ತಿದೆ. ಅವರು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾರೆ ಮತ್ತು ನಿರಂತರವಾಗಿ ತಿನ್ನುತ್ತಾರೆ. ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು.

ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಕ್ರೈಸಲಿಸ್ ಕೇಸಿಂಗ್ ಸ್ಪ್ಲಿಟ್ಸ್ ಒಮ್ಮೆ, ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು.
ಈ ವಿಭಾಗದಲ್ಲಿರುವ ಚಿತ್ರಗಳು ಅದರ ಹೋಸ್ಟ್ ಸಸ್ಯಗಳಾದ ಫೆನ್ನೆಲ್ನ ಕಪ್ಪು ಸ್ವಲ್ಲೋಟೈಲ್ನ ಜೀವನಚಕ್ರವನ್ನು ಹೊಂದಿವೆ. ಚಿತ್ರಗಳು ಕೆಂಟುಕಿ ಸಹಕಾರ ವಿಸ್ತರಣೆ ಸೇವೆ ಪ್ರಕಟಣೆ -95 ರಿಂದ ಬಂದಿದ್ದು, ಥಾಮಸ್ ಜಿ. ಬರ್ನೆಸ್ ಅವರಿಂದ ಸ್ಥಳೀಯ ಸಸ್ಯಗಳೊಂದಿಗೆ ಚಿಟ್ಟೆಗಳ ಆಕರ್ಷಣೆ.

ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವರ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ ನೀವು ಅನುಸರಿಸಬೇಕಾದ ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೈಬರ್ನೇಷನ್ ನಂತಹ ಕೆಲವು ಚಟುವಟಿಕೆಗಳನ್ನು ವೀಕ್ಷಿಸಲು, ಕೆಲವು ಪತ್ತೇದಾರಿ ಕೆಲಸವನ್ನು ಒಳಗೊಂಡಿರಬಹುದು. ಬೇಸ್ಕಿಂಗ್, ಪುಡ್ಲಿಂಗ್ ಅಥವಾ ವಲಸೆ ಮಾಡುವಂತಹ ಇತರ ಚಟುವಟಿಕೆಗಳನ್ನು ವೀಕ್ಷಿಸಲು, ನೀವು ಸರಿಯಾದ ಸಮಯದಲ್ಲಿ ಸೂಕ್ತ ಸ್ಥಳದಲ್ಲಿರಬೇಕು. ಚಟುವಟಿಕೆಯ ಲಾಗ್ ಅನ್ನು ಇರಿಸಿ ಮತ್ತು ಪ್ರತಿ ಚಟುವಟಿಕೆಯಲ್ಲಿ ನೀವು ತೊಡಗಿಸಿಕೊಳ್ಳುವಲ್ಲಿ ಎಷ್ಟು ವಿಭಿನ್ನ ಚಿಟ್ಟೆಗಳಿವೆ ಎಂಬುದನ್ನು ನೋಡಿ. ವೈಯಕ್ತಿಕ ಚಿಟ್ಟೆ ಪುಟಗಳಿಂದ ಬಂದ ಮಾಹಿತಿಯು ಕೆಲವು ಚಟುವಟಿಕೆಗಳನ್ನು ಎಲ್ಲಿ ಸಂಭವಿಸಬಹುದು ಎಂದು (ಅಥವಾ ಯಾವ ಸಸ್ಯಗಳ ಮೇಲೆ) ನಿಮಗೆ ಕೆಲವು ಸುಳಿವುಗಳನ್ನು ನೀಡಬಹುದು.

ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಚಿಟ್ಟೆ ತನ್ನ ಜೀವನ ಚಕ್ರದ ಪೂರ್ಣಗೊಳಿಸಲು ಸಲುವಾಗಿ ಎರಡೂ ವಿಧದ ಆಹಾರಗಳು ಲಭ್ಯವಿರಬೇಕು.
ಮರಿಹುಳುಗಳು ಅವರು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವರು ಸಹಜವಾಗಿ ತಿಳಿದಿದ್ದಾರೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವರು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವರು pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲುಗಳು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರಿನ ಕುಡಿಯಲು ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವುದನ್ನು ಅವರು ಪಡೆಯುತ್ತಾರೆ.
ವಯಸ್ಕರ ಚಿಟ್ಟೆಗಳು ಅವರು ತಿನ್ನುವುದರ ಬಗ್ಗೆ ಸಹ ಆಯ್ದವು. ಮರಿಹುಳುಗಳನ್ನು ಹೋಲುತ್ತದೆ, ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವರು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತಾರೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಬಿಸಿಲಿನ ಪ್ರದೇಶಗಳಲ್ಲಿ ಗಾಳಿಯಿಂದ ರಕ್ಷಿಸಲು ಬಯಸುತ್ತವೆ.




#Article 158: ಕವಿರಾಜಮಾರ್ಗ (469 words)


ಕವಿರಾಜಮಾರ್ಗ :-
ಕವಿರಾಜಮಾರ್ಗ ಕನ್ನಡದಲ್ಲಿ ಇದುವರೆಗೆ ಲಭ್ಯವಾಗಿರುವ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನ. ಇದು ಪಂಪಪೂರ್ವ ಯುಗದಲ್ಲಿ ರಚಿತವಾದುದು. ಇದೊಂದು ಅಲಂಕಾರಿಕ ಲಕ್ಷಣ ಗ್ರಂಥ. ಇದನ್ನು ಕ್ರಿ.ಶ. ೮೫೦ ರ ಆಸುಪಾಸಿನಲ್ಲಿ ರಚಿಸಲಾಗಿದೆ. ಕರ್ತೃ ಶ್ರೀವಿಜಯನೆಂಬುದು ಬಹುತೇಕ ವಿದ್ವಾಂಸರ ಅಭಿಮತವಾಗಿದೆ.  ಗ್ರಂಥದ ಮೊದಲಿಗೆ ಅಮೋಘವರ್ಷ ನೃಪತುಂಗ  ದೊರೆಯ ಹೆಸರು ಬಂದಿರುವುದರಿಂದ ಇದನ್ನು ಆತನ ಆಳ್ವಿಕೆಯ ಅವಧಿಯಲ್ಲೇ ರಚಿಸಿದ್ದಿರಬಹುದಾಗಿದೆ.

ಕವಿರಾಜಮಾರ್ಗ(ಕ್ರಿ.ಶ.೮೫೦) : -  ಕವಿರಾಜಮಾರ್ಗದ ಕರ್ತೃ ಶ್ರೀವಿಜಯ . ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಗ್ರಂಥ. ಇದು ರಚಿತವಾದ ಕಾಲಾವಧಿ ಪ್ರ.ಶ. ೮೧೫-೭೭. ಇದರ ಕರ್ತೃ ರಾಷ್ಟ್ರಕೂಟ ಅರಸು ನೃಪತುಂಗನೆಂದು ಹೇಳುವುದು ವಾಡಿಕೆಯಾಗಿದೆ.  ಆದರೆ ಈ ವಿಷಯದ ಬಗ್ಗೆ ವಿದ್ವಾಂಸರ ನಡುವೆ ಪ್ರಬಲವಾದ ವಾದವಿವಾದಗಳು ನಡೆದಿವೆ. ಅವರಲ್ಲಿ ಮೂರು ಪಕ್ಷಗಳಿವೆ. ಮೊದಲನೆಯ ಪಕ್ಷದವರು ನೃಪತುಂಗನೇ ಈ ಗ್ರಂಥವನ್ನು ರಚಿಸಿದನೆಂದು ಹೇಳುತ್ತಾರೆ. ಎರಡನೆಯ ಪಕ್ಷದವರು ಆತನ ಆಸ್ಥಾನದಲ್ಲಿದ್ದ ಕವೀಶ್ವರನೆಂಬಾತ ಇದರ ಕರ್ತೃವೆಂದು ಅಭಿಪ್ರಾಯಪಡುತ್ತಾರೆ. ನೃಪತುಂಗನ ಸಭಾಸದನಾದ ಶ್ರೀವಿಜಯನೆಂಬುವನು ಈ ಗ್ರಂಥವನ್ನು ಬರೆದನೆಂಬುದು ಮೂರನೆಯ ಪಕ್ಷದವರ ವಾದ. ಇವರಲ್ಲಿ ಮೂರನೆಯ ಪಕ್ಷದವರ ವಾದ ಪ್ರಬಲವಾದ ಸಾಕ್ಷ್ಯಗಳನ್ನು ಹೊಂದಿರುವುದಲ್ಲದೆ ಅದೇ ಸತ್ಯಾಂಶವಾಗಿಯೂ ನಿಲ್ಲಬಹುದೆಂದು ತೋರುತ್ತದೆ.

ಕವಿರಾಜಮಾರ್ಗದ ಪ್ರತಿ ಪರಿಚ್ಛೇದದ ಕೊನೆಯಲ್ಲಿ 'ನೃಪತುಂಗ ದೇವಾನುಮತಪ್ಪ ಕವಿರಾಜಮಾರ್ಗದೊಳ್' ಎಂದು ಹೇಳುವುದರಿಂದ ಇದು ರಾಷ್ಟ್ರಕೂಟದೊರೆ ಅಮೋಘವರ್ಷ ನೃಪತುಂಗನ (ಕ್ರಿ.ಶ ೮೧೪-೮೭೭)ಕಾಲದಲ್ಲಿ ಹುಟ್ಟಿದುದದೆಂದು ನಿರ್ಧರಿಸಲಾಗಿದೆ. ಕವಿರಾಜಮಾರ್ಗ ಕೃತಿಯಲ್ಲಿ ಮೂರು ಪರಿಚ್ಛೇದಗಳಿವೆ.

ಮೊದಲ ಪರಿಚ್ಛೇದದಲ್ಲಿ ಮಂಗಳಾಚರಣೆ, ಪೂರ್ವಕವಿಸ್ತುತಿ ಮೊದಲಾದ ಪೀಠಿಕಾಭಾಗದ ಪದ್ಯಗಳಾದ ಮೇಲೆ ನೃಪತುಂಗ ಕಾವ್ಯಾಭ್ಯಾಸದ ಅವಶ್ಯಕತೆ, ಕವಿತ್ವರಚನಾಶಕ್ತಿಯಿಂದ ಉಂಟಾಗುವ ಮಾರ್ಗ ಮೊದಲಾದ ವಿಷಯಗಳ ಬಗ್ಗೆ ತಿಳಿಸಿದ್ದಾನೆ.

ಕವಿರಾಜಮಾರ್ಗ ಕನ್ನಡದ ಆದ್ಯ ಉಪಲಬ್ಧ ಗ್ರಂಥವಾಗಿರುವುದಲ್ಲದೆ ಆದ್ಯ ಲಕ್ಷಣ ಗ್ರಂಥವೂ ಆಗಿದೆ. ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. ಇದರಲ್ಲಿ ಮೂರು ಪರಿಚ್ಛೇದಗಳಿವೆ:

ಗ್ರಂಥದ ಆದಿಯಲ್ಲಿ ಮಂಗಳಪದ್ಯಗಳು, ಸರಸ್ವತೀ ಪ್ರಾರ್ಥನೆ, ಕವೀಶ್ವರರ ಪ್ರಾರ್ಥನೆ, ನೃಪತುಂಗನ ಸಭಾಸದರ ವಿಚಾರ ಹಾಗೂ ಸ್ವವಿಚಾರಗಳಿವೆ. ಅನಂತರ ಕವಿ-ಕಾವ್ಯ, ಗದ್ಯ-ಪದ್ಯ ಮತ್ತು ಚತ್ತಾಣ-ಬೆದಂಡೆಗಳನ್ನು ಕುರಿತು ವಿಚಾರಗಳಿವೆ. ಕನ್ನಡನಾಡು ನುಡಿಗಳ ಬಗೆಗಿನ ಮಾತುಗಳಿವೆ. ಸಮಸಂಸ್ಕೃತ, ಯತಿ, ಕಾರಕ ಮುಂತಾದವುಗಳಿಗೆ ಸಂಬಂಧಿಸಿದ ದೋಷಗಳ ವಿವರಣೆಯಿದೆ. ಹೀಗೆ ಮೊದಲ ಪರಿಚ್ಛೇದದ ವಿಷಯಗಳು ವಿವಿಧವಾಗಿವೆ. ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರಗಳ ನಿರೂಪಣೆ ಮತ್ತು ದಕ್ಷಿಣೋತ್ತರ ಮಾರ್ಗಗಳ ಪ್ರಸ್ತಾಪವಿದೆ. ಮೂರನೆಯ ಪರಿಚ್ಛೇದ ಅರ್ಥಾಲಂಕಾರಗಳಿಗೆ ಸಂಬಂಧಿಸಿದೆ. ಇಡೀ ಗ್ರಂಥ ಕಂದಪದ್ಯಗಳಿಂದ ರಚಿತವಾಗಿದ್ದರೂ ಹಲಕೆಲವು ಗೀತಿಕೆಗಳು, ಶ್ಲೋಕಗಳು ಹಾಗೂ ವೃತ್ತಗಳು ನಡುನಡುವೆ ಬರುತ್ತವೆ.

ಕವಿಕಾವ್ಯಗಳ ಬಗ್ಗೆ ಇಲ್ಲಿ ಹೇಳಿರುವ ಮಾತುಗಳು ತುಂಬ ಸುಂದರವೂ ಉಚಿತವೂ ಆಗಿವೆ. ಕವಿಗಳಲ್ಲಿರುವ ತಾರತಮ್ಯಗಳನ್ನು ನಿರೂಪಿಸುವಲ್ಲಿ ಸ್ವತಂತ್ರ ವಿಚಾರಶಕ್ತಿ ವ್ಯಕ್ತವಾಗಿದೆ. ಆ ಪದ್ಯಗಳನ್ನು ನೋಡಬಹುದು.

   :ತೆರೆದಿರೆ ಪೆರರ್ಗರೆಪಲಾರ್ಪವಂ  ಮಾತರೆವಂ.
   :ಕಿರೆದರೊಳೆ ಪಿರಿದುಮರ್ಥಮ
   :ನರೆಪಲ್  ನೆರೆವಾತನಂತನಿಂದಂ  ನಿಪುಣಂ|| -  ಪದ್ಯ ೧೫

   :ತೊಡರ್ಚಲರೆವಾತನಾತನಿಂದಂ  ಜಾಣಂ
   :ತಡೆಯದೆ ಮಹಾಧ್ವ  ಕೃತಿಗಳ
   :ನೊಡರಿಸಲಾರ್ಪಾತ ನೆಲ್ಲರಿಂದಂ ಬಲ್ಲಂ|| -    ಪದ್ಯ  ೧೬

ಸಾಹಿತ್ಯಚರಿತ್ರೆಯ ಅಜ್ಞಾತಯುಗದ ಮೇಲೆ ಕವಿರಾಜಮಾರ್ಗ ವಿಶೇಷವಾಗಿ ಬೆಳಕು ಬೀರುತ್ತದೆ. ಕನ್ನಡ ಕಾವ್ಯಗಳಲ್ಲಿ ಗದ್ಯಪದ್ಯಸಂಮಿಶ್ರಿತವಾದ, ಗದ್ಯ ಪ್ರಾಚುರ್ಯ ಹೆಚ್ಚಾದ, ಗದ್ಯಕಥಾಪ್ರಕಾರವೊಂದಿದ್ದಿತು (೧-೨೭), ಚತ್ತಾಣ-ಬೆದಂಡೆ ಎಂಬ ದೇಸಿಗಬ್ಬಪ್ರಕಾರಗಳು ಪ್ರಚುರವಾಗಿದ್ದುವು (೧-೩೩), ವಿಮಳೋದಯ ನಾಗಾರ್ಜುನಾದಿಗಳು ಗದ್ಯಾಶ್ರಮಗುರುತಾಪ್ರತೀತಿಯನ್ನು ಕೈಗೊಂಡಿದ್ದರು (೧-೨೯), ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲಾದಿಗಳ ವಸ್ತು ವಿಸ್ತರರಚನೆ ‘ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ’ ಎನ್ನಿಸಿಕೊಂಡಿದ್ದುವು (೧-೩೨), ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ ಸತತಂ (೧-೪೮), ಆಗಿನ ಕಾಲಕ್ಕೇ ಕನ್ನಡ ಕಾವ್ಯ ಪರಂಪರೆಯೊಂದು ರೂಢಮೂಲವಾಗಿದ್ದಿತು, ಪೂರ್ವದ ಹಳಗನ್ನಡವೊಂದಿದ್ದಿತು-ಇವೇ ಮುಂತಾದ ಅಂಶಗಳಲ್ಲದೆ ಅಲ್ಲಲ್ಲಿ ಬರುವ ಪುರಾಣಕವಿಗಳ್, ಪರಮಕವಿಪ್ರಧಾನರಾಕಾವ್ಯಂಗಳ್, ಪೂರ್ವಕಾವ್ಯರಚನೆಗಳೂ-ಇತ್ಯಾದಿ ಪ್ರಯೋಗಗಳು ಕವಿರಾಜಮಾರ್ಗಕ್ಕಿಂತ ಹಿಂದಿನ ಕಾವ್ಯನಿರ್ಮಾಣೋದ್ಯೋಗದ ಜಾಡಿನ ಹೆಜ್ಜೆಗುರುತುಗಳಾಗಿವೆ.

ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮).

ಎರಡನೇ ಪರಿಚ್ಛೇದ ಅಲಂಕಾರಗಳ ಲಕ್ಷಣಗಳನ್ನು ಹೇಳಲು ಮೀಸಲಾಗಿದೆ. ಇದರಲ್ಲಿ ನೃಪತುಂಗ ಪ್ರಾಸದ ವಿಷಯವನ್ನು ಹೇಳತೊಡಗಿ-'ಕನ್ನಡಕ್ಕೆ ಸತತಂ ಪ್ರಾಸಂ' ಎಂದು ನುಡಿದು ಪ್ರಸಭೇದಗಳನ್ನು ವಿವರಿಸಿ ಅವುಗಳಿಗೆ ದೇಷ್ಟಾಂತಗಳನ್ನು ನೀಡಿದ್ದಾನೆ. ಮೂರನೇ ಪರಿಚ್ಛೇದದಲ್ಲಿ ಆ ಕಾಲಕ್ಕೆ ಸಂಸ್ಕೃತದ ಲಾಕ್ಷಣಿಕರು ಪ್ರಚಾರ ಮಾಡಿದ್ದ ಸುಮಾರು.೩೫ ಅಲಂಕಾರಗಳನ್ನು ಹೇಳಿದ್ದಾನೆ.

ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ.  

ಕವಿರಾಜಮಾರ್ಗ ಶಾಸ್ತ್ರಗ್ರಂಥವಾದರೂ ಅಲ್ಲಲ್ಲಿ ಕವಿತ್ವದ ಸೊಗಸು ಮಿನುಗಿದೆ; ಅಲ್ಲಲ್ಲಿ ಕಂಡುಬರುವ ಉಪಮೆ, ನಾಣ್ಣುಡಿಗಳು ಮನಸೆಳೆಯುವಂತಿವೆ. ಕಲ್ತೊಡನೋದುವುವಲ್ತೆ ಗಿಳಿಗಳುಂ ಪುರುಳಿಗಳುಂ, ಕಾಣದಂತೆಂದುಂ ಕಣ್ಗಳ್ ತಮ್ಮ ಕಾಡಿಗೆಯಂ, ಒತ್ತುಂಗರಡೆಯ ಮದ್ದಳೆಯ ಜರ್ಝರ ಧ್ವನಿಗಳವೊಲ್, ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೊಲ್, ಕೇಡಡಸಿದಂದು ಬಗೆಯುಂ ಕೂಡದು, ಕೂಸಿನ ತಲೆಯೊಳ್ ಬಿಣ್ಪೊರೆಯನಿಟ್ಟವೋಲ್ ಈ ಮೊದಲಾದವು ಮನೋಹರವಾದ ವರ್ಣನಾಭಾಗಗಳು. ಇದರ ಶೈಲಿ ಲಲಿತವಾಗಿದೆ, ಉಚಿತವಾಗಿದೆ. ಇದರಲ್ಲಿ ನಾಣ್ನುಡಿಯ ಬೆಡಗಿದೆ. ಉದ್ದಕ್ಕೂ ಸ್ವತಂತ್ರವಿಚಾರಮಾರ್ಗವಿದೆ.	(ಜೆ.ಎಸ್.ಸಿ.)




#Article 159: ಅಂತರಜಾಲ (103 words)


ಅಂತರಜಾಲ [ಇಂಗ್ಲಿಷ್: Internet ಇಂಟರ್‌ನೆಟ್] ಎನ್ನುವುದು ಕಂಪ್ಯೂಟರ್ ನೆಟ್‌ವರ್ಕ್‌ಗಳ (ಜಾಲಬಂಧಗಳ) ಒಂದು ನೆಟ್‌ವರ್ಕ್‌ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್‌ವರ್ಕ್‌ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ.

ಇಂಟರ್‌ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು. ಆದರೆ ಅದು ಜನಸಾಮಾನ್ಯರಿಗೆ ಗೋಚರವಾಗಿದ್ದು ೧೯೯೦ರ ದಶಕದಲ್ಲಿ.

ಹಲವು ಸಂಸ್ಥೆಗಳು, ತಮ್ಮ ಅಂತರಜಾಲದ ಯೋಜನೆ ಹಾಗು ಕಾರ್ಯಗತಗೊಳಿಸುವಿಕೆಗೆ ಗಮನಾರ್ಹ ಸಂಪನ್ಮೂಲವನ್ನು ಮೀಸಲಾಗಿ ಇಡುತ್ತವೆ. ಏಕೆಂದರೆ ಇದು ಸಂಸ್ಥೆಯ ಯಶಸ್ಸಿಗೆ ಸೃಷ್ಟಿಸುವ ಯೋಜನಾ ಪ್ರಾಮುಖ್ಯತೆಯಾಗುತ್ತದೆ. ಯೋಜನೆಯಲ್ಲಿ ಒಳಗೊಳ್ಳುವ ಕೆಲ ವಿಷಯ ಗಳೆಂದರೆ:

ವಾಸ್ತವವಾಗಿಯೂ ಕಾರ್ಯಗತಗೊಳಿಸುವಿಕೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿದೆ: 

ಅಂತರಜಾಲದ ವಿಭಾಗ ರಚನೆಯಲ್ಲಿರುವ ಮತ್ತೊಂದು ಉಪಯೋಗಿ ಅಂಶವೆಂದರೆ, ಅಂತರಜಾಲದ ನಿರ್ವಹಣೆಗೆ ಬದ್ಧನಾದ ಒಬ್ಬ ಪ್ರಮುಖ ವ್ಯಕ್ತಿಯ ಜೊತೆಗೆ ಈತನು ವಿಷಯಸೂಚಿಗಳನ್ನು ಪ್ರಚಲಿತದಲ್ಲಿಡಲು ಜವಾಬ್ದಾರನಾಗಿರುತ್ತಾನೆ. ಅಂತರಜಾಲದ ಕುರಿತ ಪ್ರತಿಕ್ರಿಯೆಗಾಗಿ, ಬಳಕೆದಾರರ ಒಂದು ಸಾಮಾಜಿಕ ನೆಟ್ವರ್ಕಿಂಗ್ ಮೂಲಕ ಪಡೆಯಬಹುದು. ಇದರಿಂದ ಬಳಕೆದಾರರಿಗೆ ಏನು ಬೇಕು ಹಾಗು ಅವರು ಏನನ್ನು ಬಯಸುತ್ತಾರೆಂಬುದನ್ನು ಸೂಚಿಸಬಹುದು.




#Article 160: ಯುಗಾದಿ (117 words)


ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ  ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಯುಗಾದಿ ಪದದ ಉತ್ಪತ್ತಿ ಯುಗ+ಆದಿ - ಹೊಸ ಯುಗದ ಆರಂಭ ಎಂದು.

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.  
ಬೇವು - ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ 
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆ
ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ 
ಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋ
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ||ಯುಗ ಯುಗಾದಿ ಕಳೆದರು||




#Article 161: ರೆಡ್ ಹ್ಯಾಟ್ (143 words)


ರೆಡ್ ಹ್ಯಾಟ್ ಮುಕ್ತ ತಂತ್ರಾಂಶಕ್ಕೆ ಮೀಸಲಾದ ಕೆಲಸಗಳನ್ನು ಕೈಗೊಳ್ಳುವ ಅತಿ ದೊಡ್ಡ ಮತ್ತು ಅತಿ ಗುರುತಿಸಲ್ಪಟ್ಟ ಸಂಸ್ಥೆಗಳಲ್ಲಿ ಒಂದು. ೧೯೯೩ ರಲ್ಲಿ ಆರಂಭಿಸಲ್ಪಟ್ಟ ಈ ಸಂಸ್ಥೆ ೭೦೦ ಕೆಲಸಗಾರರನ್ನು ಪ್ರಪಂಚದ ೨೨ ಸ್ಥಳಗಳಲ್ಲಿ ಹೊಂದಿದೆ. ಇದರ ಮುಖ್ಯ ಕಛೇರಿ ಇರುವುದು ಅಮೆರಿಕಾದ ರಾಲೀ, ನಾರ್ತ್ ಕೆರೊಲೈನಾ ದಲ್ಲಿ.

ಮುಖ್ಯವಾಗಿ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ, ಅದರ ಅಭಿವೃದ್ಧಿ, ನಿರ್ವಹಣೆ ಮತ್ತು ಅಂತರಜಾಲ ವಿಷಯಗಳಿಗೆ ಸಂಬಂಧಪಟ್ಟ ಮುಕ್ತ ತಂತ್ರಾಂಶಗಳ ಬೆಳವಣಿಗೆ ಈ ಸಂಸ್ಥೆಯ ಕ್ಷೇತ್ರಗಳು. 

ಮಾರ್ಕ್ ಈವಿಂಗ್ ರಿಂದ ೧೯೯೩ ರಲ್ಲಿ ರೆಡ್ ಹ್ಯಾಟ್ ಸ್ಥಾಪಿಸಲ್ಪಟ್ಟಿತು. ೧೯೯೫ ರಲ್ಲಿ ಕೆನಡಾ ದ ಎಸಿಸಿ ಕಾರ್ಪೊರೇಷನ್ ನೊಂದಿಗೆ ರೆಡ್ ಹ್ಯಾಟ್ ಸೇರಿದ ನಂತರ, ಬಾಬ್ ಯಂಗ್ ೧೯೯೯ ರ ವರೆಗೆ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ೧೯೯೯ ರಲ್ಲಿ ೬೦ ಲಕ್ಷ ಶೇರುಗಳನ್ನು ಮಾರುಕಟ್ಟೆಗೆ ಬಿಟ್ಟ ಸಂಸ್ಥೆ ೧೯೯೯ ರಲ್ಲಿ ಸಿಗ್ನಸ್ ಸೊಲೂಷನ್ಸ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಸೇರಿತು. 

ರೆಡ್ ಹ್ಯಾಟ್ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಈ ಸಂಸ್ಥೆಯ ಮುಖ್ಯ ತಂತ್ರಾಂಶ. ಇದರ ಅಭಿವೃದ್ಧಿ ಹಾಗೂ ವಿತರಣೆ ಅನೇಕ ವರ್ಷಗಳಿಂದ ನಡೆದಿದೆ. ಇತ್ತೀಚೆಗೆ, ರೆಡ್ ಹ್ಯಾಟ್ ಲಿನಕ್ಸ್ ನ ೯ ನೇ ಆವೃತ್ತಿಯ ನಂತರ, ಫೆದೋರಾ ಲಿನಕ್ಸ್ ನ ಜೊತೆಗೂ ರೆಡ್ ಹ್ಯಾಟ್ ಕೆಲಸ ಮಾಡುತ್ತಿದೆ. ಫೆದೋರಾ ಲಿನಕ್ಸ್ ನ ಇನ್ನೊಂದು ವಿತರಣೆಯಾಗಿದ್ದು ಫೆದೋರಾ ಪ್ರಾಜೆಕ್ಟ್ ಇದನ್ನು ನಿಭಾಯಿಸುತ್ತದೆ. ರೆಡ್ ಹ್ಯಾಟ್ ಈ ಪ್ರಾಜೆಕ್ಟ್ ನ ಸಹಾಯಕ ಸಂಸ್ಥೆಗಳಲ್ಲಿ ಒಂದು. 




#Article 162: ಬಾದಾಮಿ (1258 words)


ಈ ಲೇಖನವು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಸ್ಥಳದ ಬಗ್ಗೆ.
 

ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.

ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕನ್ನಡಿಗರ ಮೊತ್ತಮೊದಲ ಸಾಮ್ರಾಜ್ಯವಾದ ಕದಂಬರ ಆಳ್ವಿಕೆಯಲ್ಲಿ ದಂಡಾಧಿಕಾಕಾರಿಯಾಗಿದ್ದ ಜಯಸಿಂಹನೆಂಬುವನು ಕ್ರಿ ಶ ೫೦೦ ರಲ್ಲಿ ಸಿಡಿದುಹೋಗಿ ಹೊಸ ತಂಡವೊಂದನ್ನು ಕಟ್ಟಿ, ಈಗಿನ ಬಾದಾಮಿ ಪ್ರದೇಶದಲ್ಲಿ  ಹೊಸ ರಾಜ್ಯ ಸ್ಥಾಪಿಸಿದ. ಇದೇ ಮುಂದೆ ಇತಿಹಾಸದಲ್ಲಿ ಚಾಳುಕ್ಯ ರಾಜ ಮನೆತನವೆಂದು ಪ್ರಸಿದ್ಧವಾಯಿತು. ಅಂದರೆ ಚಳುಕ್ಯರು ಕದಂಬ ವಂಶಸ್ಥರೇ ಆಗಿದ್ದು ಕದಂಬರ ಆಡಳಿತದ  ಮುಂದುವರಿದ ಭಾಗವೆಂದು ಹೇಳಬಹುದು. ಬಾದಾಮಿಯಲ್ಲಿ ಸಿಕ್ಕ ಶಾಸನದಲ್ಲಿ ಉಲ್ಲೇಖಿಸಿರುವಂತೆ ಚಳುಕ್ಯರು ಮಾನವ್ಯ ಗೋತ್ರದ ವಂಶಜರು. ಕದಂಬರೂ ಕೂಡ ಇದೇ ವಂಶಕ್ಕೆ ಸೇರಿದವರು. ಆದ್ದರಿಂದ ಇವರದ್ದೂ ಕದಂಬರ ಕುಲವೇ ಆಗಿದೆ. ಅಲ್ಲದೆ ಚಳುಕ್ಯ  ಎಂಬುದು ಸಲಿಕೆ,ಚಲಿಕೆ ಶಬ್ದಗಳಿಂದ ನಿಷ್ಪತ್ತಿಯಾಗಿದೆಯೆಂದು ಅಭಿಪ್ರಾಯಪಡಲಾಗಿದೆ.ಇವುಗಳು ಅಚ್ಚ  ಕನ್ನಡ ಪದಗಳಾಗಿದ್ದು ವ್ಯವಸಾಯದಲ್ಲಿ ಉಪಯೋಗಿಸುವ ವಸ್ತುಗಳಾಗಿವೆ. ಆದ್ದರಿOದ ಚಳುಕ್ಯರು ಕನ್ನಡಿಗರೇ ಹೊರತು ಬೇರೆಲ್ಲಿಂದಲೋ ಬಂದು ಆಕ್ರಮಣ ಮಾಡಿ ರಾಜ್ಯಸ್ಥಾಪನೆ ಮಾಡಿದವರಲ್ಲ ಎಂಬುದು ಇತಿಹಾಸಜ್ಞರ  ಒಟ್ಟಾರೆ ಅಭಿಪ್ರಾಯವಾಗಿದೆ. ಇವರ ರಾಜಲಾಂಛನ ವರಾಹ! ಮೂಲತ: ವೈಷ್ಣವ ಮತಾವಲಂಬಿಗಳಾಗಿದ್ದ ಇವರು ೧ನೇ ವಿಕ್ರಮಾದಿತ್ಯನ ಕಾಲದಿಂದ 'ಶಿವಮಂಡಲ ದೀಕ್ಷೆ' ಪಡೆದು ಶೈವ ಸಂಪ್ರದಾಯವನ್ನು ಅನುಸರಿಸಲು ಶುರುಮಾಡಿದರು.ಕದಂಬರ ಆಡಳಿತದಲ್ಲಿ ದಂಡಾಧೀಶನಾಗಿ ಈ ಪ್ರಾಂತದಲ್ಲಿ ನಿಯುಕ್ತನಾಗಿದ್ದ ಜಯಸಿಂಹನೆಂಬುವವ ಮೊತ್ತಮೊದಲು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಶುರು ಮಾಡುತ್ತಾನೆ. ಇವನೇ ಚಳುಕ್ಯರ ಮೂಲವಂಶಸ್ಥ. ನಂತರದಲ್ಲಿ ರಣರಾಗ, ೧ನೇ ಪುಲಿಕೇಶಿ, ೧ನೇ ಕೀರ್ತಿವರ್ಮ ಹೀಗೆ ವಂಶ ಮುಂದುವರಿಯುತ್ತದೆ.  ಕೀರ್ತಿವರ್ಮ ಕ್ರಿ ಶ 597ರಲ್ಲಿ ನಡೆದ  ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದಾಗ 2ನೇ ಪುಲಿಕೇಶಿಯೂ ಸೇರಿದಂತೆ ಅವನ ಮಕ್ಕಳೆಲ್ಲ ಚಿಕ್ಕವರಿದ್ದರು. ಆದ್ದರಿಂದ ಕೀರ್ತಿವರ್ಮನ ತಮ್ಮನಾದ ಮಂಗಳೇಶನು ಸುಮಾರು 12ವರ್ಷ ರಾಜ್ಯವಾಳಿದ. 2ನೇ ಪುಲಕೇಶ ವಯಸ್ಸಿಗೆ ಬಂದಾಗ ಕೀರ್ತಿವರ್ಮ ರಾಜಧರ್ಮದ ಶಿಷ್ಟಾಚಾರದಂತೆ ಅವನಿಗೆ ರಾಜ್ಯ ಒಪ್ಪಿಸಲು ಹಿಂದೇಟು ಹಾಕಿ ತನ್ನ ಮಕ್ಕಳಿಗೆ ಅಧಿಕಾರ ಹಸ್ತಾಂತರಿಸುವ ಹುನ್ನಾರ ಮಾಡಿದ. ಆಗ 2ನೇ ಪುಲಕೇಶಿಯು ಚಿಕ್ಕಪ್ಪನನ್ನು ಕೊಂದು ಅಧಿಕಾರ ಕಿತ್ತುಕೊಂಡ. ಚಾಳುಕ್ಯರಲ್ಲಿ ಅತ್ಯಂತ ಪ್ರಬಲ ಆಡಳಿತ ನೀಡಿದ ಕಣ್ಣು ಕೋರೈಸುವ ಶೂರ ದೊರೆ ಈತ ಎಂದೂ  ಪ್ರಸಿದ್ಧನಾಗಿದ್ದಾನೆ. ಇವನ ನಂತರ ಈ ವಂಶದ  ಹೆಸರಿಸಬಹುದಾದ ರಾಜರುಗಳೆಂದರೆ ೧ನೇ ವಿಕ್ರಮಾದಿತ್ಯ, ವಿನಯಾದಿತ್ಯ, ವಿಜಯಾದಿತ್ಯ ಹಾಗು ೨ನೇ ವಿಕ್ರಮಾದಿತ್ಯ. ೨ನೇ ವಿಕ್ರಮಾದಿತ್ಯ  ತನ್ನ ಮುತ್ತಾತನಂತೆ ಅತ್ಯಂತ ಶೂರ ದೊರೆಯಾಗಿದ್ದು ತಮ್ಮ ಪಾರಂಪರಿಕ ವೈರಿಗಳಾಗಿದ್ದ ಪಲ್ಲವರನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಕಂಚಿಯ ಕೈಲಾಸನಾಥರ್ ದೇವಾಲಯದಲ್ಲಿ ಕನ್ನಡ ಶಾಸನೊವೊಂದನ್ನು ನೆಡೆಸುತ್ತಾನೆ.  

ಇಂಥ ಹೆಮ್ಮೆಯ ಸಾಮ್ರಾಜ್ಯ  ಕ್ರಿ ಶ 753ರಲ್ಲಿ  ಕೀರ್ತಿವರ್ಮನಿಂದ ಕೊನೆಯಾಗುತ್ತದೆ. ತಮ್ಮ ಕೈಕೆಳಗೆ  ಮಾಡಲೀಕರಾಗಿದ್ದ ರಾಷ್ಟ್ರಕೂಟರ ದಂತಿವರ್ಮನಿಗೆ ಸೋಲುವ ಮೂಲಕ ಚಳುಕ್ಯರ ಆಳ್ವಿಕೆ ತಾತ್ಕಾಲಿಕವಾಗಿ  ಕೊನೆಯಾಗುತ್ತದೆ. 

ನಂತರ ರಾಷ್ಟ್ರಕೂಟರು ಸುಮಾರು 250 ವರ್ಷ ಆಡಳಿತ ನಡೆಸುತ್ತಾರೆ. ಇತಿಹಾಸದ ಕಾಲಚಕ್ರ ಉರುಳುತ್ತದೆ. ಕ್ರಿ ಶ 973ರಲ್ಲಿ ಮತ್ತೆ ಚಳುಕ್ಕರ 2ನೇ ತೈಲಪನು ರಾಷ್ಟ್ರಕೂಟರ 2ನೇ ಕರ್ಕನನ್ನು ಸೋಲಿಸುವ ಮೂಲಕ ಆಡಳಿತವನ್ನು ಹಿಂದಕ್ಕೆ ಪಡೆಯುತ್ತಾನೆ. 

ಇಲ್ಲಿಯವರೆಗೆ ಅಳಿದುಳಿದ ಚಾಳುಕ್ಯರು  ಈಗಿನ  ಬೀದರ್ ನ ಬಸವಕಲ್ಯಾಣವನ್ನು ಕೇಂದ್ರವನ್ನಾಗಿ ಮಾಡಿಕೊಂಡು  ಆಡಳಿತ ನಡೆಸಿದ್ದರಿಂದ ಇಲ್ಲಿಂದ ಮುಂದೆ  ಈ ಗುಂಪನ್ನು ಇತಿಹಾಸದಲ್ಲಿ  ಕಲ್ಯಾಣ ಚಾಳುಕ್ಯರು ಎಂದು ಗುರುತಿಸಲಾಗುತ್ತದೆ ಅಲ್ಲದೇ ಬಾದಾಮಿಯನ್ನು ವಶಪಡಿಸಿಕೊಂಡ ನಂತರವೂ ಅಲ್ಲಿಂದಲೇ ಆಡಳಿತವನ್ನು ಮುಂದುವರಿಸುತ್ತಾರೆ. ಈ ಆಳ್ವಿಕೆ ಕ್ರಿ ಶ 12ನೇ ಶತಮಾನದವರೆಗೆ ಮುಂದುವರಿಯುತ್ತದೆ.

ಈಗಿನ ತೆಲಂಗಾಣದ ಅಲಂಪುರ ಪ್ರದೇಶದಲ್ಲಿ  ವೆಂಗಿ ಚಾಳುಕ್ಯರು ಎಂದು ಗುರುತಿಸಲ್ಪಡುವ  ಇನ್ನೊಂದು ಗುಂಪು ಆಡಳಿತ ನಡೆಸಿದ್ದು ಕಂಡುಬರುತ್ತದೆ. ಇದು ಕೂಡ ಚಳುಕ್ಯ ವಂಶಾಡಳಿತವೆ.  ಕ್ರಿ ಶ  616ರಲ್ಲಿ 2ನೇ ಪುಲಕೇಶಿ ತನ್ನ ಶೌರ್ಯ-ಸಾಹಸಗಳಿಂದ ಆಂಧ್ರಪ್ರದೇಶದ ಕೆಲ ಭಾಗಗಳನ್ನು ಗೆದ್ದುಕೊಂಡ. ಅಲ್ಲಿನ ಆಡಳಿತ ನೋಡಿಕೊಳ್ಳಲು ತನ್ನ ಸೋದರನಾದ  ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯನ್ನಾಗಿ ನೇಮಿಸಿದ. ಇವನು ಅಣ್ಣನ ಮರಣದ ನಂತರ  ಸ್ವತಂತ್ರ ಆಡಳಿತ ನಡೆಸುವ ಮೂಲಕ ವೆಂಗಿ ಚಳುಕ್ಯ ವಂಶದ ಉದಯಕ್ಕೆ ಕಾರಣನಾಗುತ್ತಾನೆ. 

ಇಡೀ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ. ಅದರಲ್ಲೂ ಭಾರತೀಯ ದೇವಾಲಯ ವಾಸ್ತುವಿನ  ತೊಟ್ಟಿಲು ಎಂದು ಪ್ರಸಿದ್ಧವಾದ ಪಟ್ಟದಕಲ್ಲು ಚಾಳುಕ್ಯ ಅರಸರೆಲ್ಲರೂ ಪಟ್ಟಾಭಿಷಿಕ್ತರಾಗುತ್ತಿದ್ದ ಸ್ಥಳ.  ಇಲ್ಲಿ ಸುತ್ತ-ಮುತ್ತಲಿರುವ ಐಹೊಳೆ,ಪಟ್ಟದಕಲ್ಲು ಹಾಗು ಮಹಾಕೂಟಗಳಲ್ಲೆಲ್ಲ ಚಾಳುಕ್ಯರ ಬಿಟ್ಟುಹೋಗಿರುವ ಐತಿಹಾಸಿಕ ಅವಶೇಷಗಳನ್ನು ಕಾಣಬಹುದು. 

ಬಾದಾಮಿಯು ಚಾಳುಕ್ಯರ ವಂಶಾಡಳಿತಕ್ಕೆ ನಾಂದಿ ಹಾಡಿದ ಸ್ಥಳ. ಇತಿಹಾಸದಲ್ಲೇ ಇಷ್ಟೊಂದು ಭವ್ಯ,ಬೃಹತ್ ಹಾಗು ಕಲಾನೈಪುಣ್ಯತೆಯಿಂದ ಕೂಡಿದ ಗುಹಾಲಯ ಇನ್ನೊಂದಿಲ್ಲ. ಇಲ್ಲಿ ಒಟ್ಟು ೪ ಗುಹಾಲಯಗಳಿದ್ದು ಅವು ಅನುಕ್ರಮವಾಗಿ ಶೈವ, ವೈಷ್ಣವ,ಜೈನ ಹಾಗು ಬೌದ್ಧ ಧರ್ಮವನ್ನು ಬಿಂಬಿಸುತ್ತವೆ. ಇಲ್ಲಿ ಬೃಹತ್ ಬೆಟ್ಟವನ್ನು ಬೆಣ್ಣೆಯಂತೆ ಕೊರೆದು ಕಲಾಸಿರಿಯನ್ನು ತುಂಬಿರುವುದು ಎಂಥವರನ್ನೂ ಚಕಿತರನ್ನಾಗಿಸುತ್ತದೆ. ಅಪಾರ ಶ್ರಮ, ಸಹನೆ ಹಾಗು ಸಂಪತ್ತನ್ನು  ಬೇಡುವ ಈ ಕೆಲಸ ಚಾಳುಕ್ಯರ ಮಹತ್ವಾಕಾಂಕ್ಷೆಯಲ್ಲಿ ಅರಳಿ ನಿಂತಿರುವುದು  ಕಂಡುಬರುತ್ತದೆ. 

ಇಲ್ಲಿನ ೧ನೇ ಗುಹಾಲಯ ಶೈವ ಸಂಪ್ರದಾಯಕ್ಕೆ ಸೇರಿದೆ. ಇದನ್ನು ೫ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ೧ನೇ ಪುಲಿಕೇಶಿಯ ಕಾಲದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಹರಿಹರ, ಅರ್ಧನಾರೀಶ್ವರ, ವಾತಾಪಿ ಗಣಪತಿ, ಕಾರ್ತಿಕೇಯ ಹಾಗು ನಟರಾಜ ಶಿಲ್ಪಗಳಿವೆ. ಸಭಾಮಂಟಪದಲ್ಲಿನ ಚೌಕಾಕಾರದ ಬೃಹತ್ ಕಂಬಗಳೂ, ಅದರ ಮೇಲೆ  ಮೂಡಿಸಿರುವ ಮಣಿ ಕೆತ್ತನೆಗಳು ಅಲ್ಲಿನದೇ ಛತ್ತನಲ್ಲಿ ಆಕಾಶದಲ್ಲಿ ತೇಲಾಡುತ್ತಿರುವಂತೆ ಕೆತ್ತಿರುವ ಗಂಧರ್ವ ಪ್ರೇಮಿಗಳ ಶಿಲ್ಪಗಳು ಆಕರ್ಷಕವಾಗಿವೆ. ಇಲ್ಲಿರುವ ಪ್ರತಿಯೊಂದು ಶಿಲ್ಪವೂ ತನ್ನದೇ ಆದ ವೈವಿಧ್ಯತೆಯಿಂದ ವಿವರಪೂರ್ಣವಾಗಿವೆ. ಅದರಲ್ಲೂ 18ಕೈಗಳ ನಟರಾಜ, ಅದರ ಪ್ರತಿಯೊಂದು ಕೈಯಲ್ಲಿ ಹಿಡಿದ ವಿವಿಧ ಆಯುಧಗಳು, ಅದರ ನರ್ತನದ ವಿಶೇಷ ಭಂಗಿ ಮೋಹಕವಾಗಿದೆ. ಇಷ್ಟೊಂದು ಬಾಹುಗಳುಳ್ಳ ನಟರಾಜನ ಶಿಲ್ಪ ಪ್ರಪಂಚದಲ್ಲಿ ಮತ್ತೆಲ್ಲೂ ಕಾಣಸಿಗುವುದಿಲ್ಲ. ಅಲ್ಲಿನ ಇನ್ನೊಂದು ವಿಶೇಷ  ಶಿಲ್ಪ ಅರ್ಧನಾರೀಶ್ವರನದ್ದು  ಇದರಲ್ಲಿನ ಪಾರ್ವತಿ ಭಾಗದಲ್ಲಿನ ಕಿರೀಟ, ಕರ್ಣಕುಂಡಲ, ಬಳೆಗಳು, ತೋಳ್ಬಂದಿ ಮುಂತಾದವುಗಳು ಹಾಗು ಶಿವನ ಭಾಗದಲ್ಲಿನ ಜಟಾಮುಕುಟ, ನಾಗಪರಶು, ಅರ್ಧಚಕ್ರ ಹಾಗು ನಂದಿಯ ಕೆತ್ತನೆಗಳು ಆಕರ್ಷಕವಾಗಿವೆ. ಅಲ್ಲೇ ಬುಡದಲ್ಲಿ ಶಿವನ  ಈ 'ಅರ್ಧನಾರೀಶ್ವರ'ನ ರೂಪಕ್ಕೆ ಕಾರಣನಾದ ಅಸ್ಥಿಪಂಜರದ ಭೃಂಗಋಷಿಯ ಕೆತ್ತನೆಯನ್ನು ವಿಶೇಷವಾಗಿ ಗಮನಿಸಬೇಕು. ಮತ್ತೊಂದು ಗಮನ ಸೆಳೆಯುವ ಶಿಲ್ಪವೆಂದರೆ ಲಕ್ಷ್ಮಿ-ಪಾರ್ವತಿ ಸಹಿತನಾಗಿರುವ  ಹರಿ-ಹರನ ಶಿಲ್ಪ. ಇದರಲ್ಲೂ ಶಿವನ ಭಾಗದಲ್ಲಿರುವ ಜಟಾಮುಕುಟ, ಸರ್ಪಕುಂಡಲ, ಸರ್ಪಯಜ್ಞೋಪವೀತಗಳು ಗಮನ ಸೆಳೆಯುತ್ತವೆ. ಇದಲ್ಲದೇ ಇಲ್ಲಿನ ತ್ರಿಶೂಲಧಾರಿ  ದ್ವಾರಪಾಲಕರು, ಐದುಹೆಡೆಯ ನಾಗರಾಜ, ವಿದ್ಯಾಧರ ದಂಪತಿಗಳು, ಪಾರ್ವತಿ ಕಲ್ಯಾಣ, ಭಿಕ್ಷಾಟನಾ ಶಿವ, ಸ್ತ್ರೀ-ಪುರುಷರ ಮಿಥುನ ಶಿಲ್ಪಗಳು ಆಕರ್ಷಕವಾಗಿವೆ.

೨ನೇ ಗುಹಾಲಯ ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಕೀರ್ತಿವರ್ಮನ ಕಾಲದಲ್ಲಿ ನಿರ್ಮಿಸಲಾಗಿದೆ. ಇದು ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳನ್ನು ಹೊಂದಿದ್ದು ಪ್ರವೇಶದ್ವಾರದ ಎಡ-ಬಲ ಬದಿಯಲ್ಲಿ ಬೃಹತ್  ದ್ವಾರಪಾಲಕರು ಸ್ವಾಗತಿಸುತ್ತಾರೆ. ಇಲ್ಲಿನ ಭೂವರಾಹ ಮೂರ್ತಿ, ವಿರಾಟ್ ರೂಪದ ವಾಮನ-ತ್ರಿವಿಕ್ರಮನ ಶಿಲ್ಪ, ಶುಕ್ರಾಚಾರ್ಯರು ವಿಷ್ಣುವಿಗೆ ಅರ್ಘ್ಯ ಸಮರ್ಪಸಿತ್ತಿರುವುದು, ಬಲಿಚಕ್ರವರ್ತಿಯ ಸಂಹಾರ ಮುಂತಾದವುಗಳು ಗಮನ ಸೆಳೆಯುತ್ತವೆ.

೩ನೇ ಗುಹಾಲಯ ಮತ್ತೊಂದು ವೈಷ್ಣವ ಗುಹಾಲಯ. ಇದನ್ನು ಚಾಳುಕ್ಯ ದೊರೆ ಮಂಗಳೇಶನು ತನ್ನ ಸಹೋದರ ಕೀರ್ತಿವರ್ಮನ ಪಟ್ಟಾಭಿಷೇಕದ ನೆನಪಿಗೆ ನಿರ್ಮಿಸಿದ್ದಾನೆ. ಇದು ಇಲ್ಲಿರುವ ಎಲ್ಲ ಗುಹಾಲಯಗಳಲ್ಲಿ ಅತಿ ದೊಡ್ಡದು. ಇಲ್ಲೂ ಕೂಡ ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳು ಇವೆ. ಇಲ್ಲಿನ ೮ ಕೈಗಳ ವಿಷ್ಣುವಿನ ಬೃಹತ್ ಶಿಲ್ಪ, ಆ ಕೈಗಳಲ್ಲಿ ಹಿಡಿದಿರುವ ವಿವಿಧ ಆಯುಧಗಳ  ವಿವರಪೂರ್ಣ ಕೆತ್ತನೆ, ಹಾಗು ಇದರ ಎದುರಲ್ಲೇ ವಾಮನಾವತಾರದ ಬೃಹತ್ ಶಿಲ್ಪ ಮೋಹಕವಾಗಿವೆ. ಇಷ್ಟೇ ಅಲ್ಲದೆ ಶೇಷಶಯನ ವಿಷ್ಣು, ಬೃಹದಾಕಾರದ ಭೂವರಾಹ ಶಿಲ್ಪಗಳು, ನರಸಿಂಹ, ಹರಿಹರ ಹಾಗು ವಿಷ್ಣುಪುರಾಣದ ಕಥಾನಕದ ದೃಶ್ಯಾವಳಿಯ ಕೆತ್ತನೆಗಳನ್ನು ಕಾಣಬಹುದು.

೪ನೇ ಗುಹಾಲಯ ಜೈನ ಮತಾವಲಂಬದ್ದು. ಇಲ್ಲಿನ ಗರ್ಭಗೃಹದಲ್ಲಿ ಮಹಾವೀರನ  ಮೂರ್ತಿ ಇದೆ. ಮುಖ ಮಂಟಪದಲ್ಲಿ ಪಾರ್ಶ್ವನಾಥ-ಬಾಹುಬಲಿಯರ ಬೃಹತ್ತ ಶಿಲ್ಪಗಳಿವೆ. ಇಲ್ಲಿರುವ ಬಾಹುಬಲಿಯ ಮೂರ್ತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನ ಮೂರ್ತಿಯೆಂಬ ಖ್ಯಾತಿ ಇದೆ.

ಇದಲ್ಲದೇ ಇಲ್ಲಿ ಜಂಬುಲಿಂಗ ದೇವಾಲಯ, ಕೆಳಗಿನ ಶಿವಾಲಯ ಹಾಗು ಮೇಲಿನ ಶಿವಾಲಯ ಹಾಗು ಭೂತನಾತ ದೇವಾಲಯಗಳಲ್ಲದೇ ಅಲ್ಲಲ್ಲಿ  ಚಿಕ್ಕ-ಪುಟ್ಟ ಅಸಂಖ್ಯ ಗುಡಿ-ಗುಂಡಾರಗಳಿವೆ. ಅವುಗಳ ಮಧ್ಯದಲ್ಲೇ ಐತಿಹಾಸಿಕ ಮಹತ್ವದ ಕಪ್ಪೆಅರೆಭಟ್ಟನ ಶಾಸನವಿದೆ.

೨೦೦೧ ರ ಜನಗಣತಿಯ ಪ್ರಕಾರ ಬಾದಾಮಿ ಪಟ್ಟಣದ ಜನಸಂಖ್ಯೆ 25847 (೨೦೦೧ ರ ಜನಗಣತಿ ಪ್ರಕಾರ) ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ---%, ಮಹಿಳೆಯರಲ್ಲಿ ---% ರಷ್ಟು ಸಾಕ್ಷರ ಪ್ರಮಾಣ ಇದೆ.BAdami is a great place.

ಪ್ರಮುಖ ವಿದ್ಯಾಸಂಸ್ಥೆಗಳು

ಪರಂಪರೆ

  ಸಂಗೀತ ಮತ್ತು ಕಲೆ 
ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

ಜೋಳ, ಸಜ್ಜೆ, ಶೇಂಗಾ, ಸೂರ್ಯಪಾನ (ಸೂರ್ಯ ಕಾಂತಿ), ಉಳ್ಳಾಗಡ್ಡಿ(ಈರುಳ್ಳಿ).  ಪ್ರಮುಖ ಆಹಾರ ಧಾನ್ಯ ಜೋಳ ಜೊತೆಗೆ ಗೋಧಿ, ಬೇಳೆಕಾಳುಗಳು.

ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲಿನಿಂದ ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮ ಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ.  ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ.  ಈ ದೇವಾಲಯದಲ್ಲಿ ಶಿವನ ಅರ್ಧನಾರೀಶ್ವರ ಮತ್ತು ಹರಿಹರ ಅವತಾರಗಳ  ಕೆತ್ತನೆಗಳಿದ್ದು ನಟರಾಜನ ಅವತಾರದಲ್ಲಿ ತಾಂಡವ ನೃತ್ಯದಲ್ಲಿ ತೊಡಗಿರುವ ಕೆತ್ತನೆಯನ್ನು ಕಾಣಬಹುದಾಗಿದೆ. ಪರಮ ಶಿವನನ್ನು ಹರಿಹರನ ಬಲಕ್ಕೆ ಮತ್ತು ವಿಷ್ಣುವನ್ನು ಎಡಭಾಗದಲ್ಲಿ ಇರಿಸಲಾಗಿದೆ. ಈ ಗುಹೆಗೆ ಭೇಟಿ ಕೊಟ್ಟಾಗ ಮಹಿಷಾಸುರಮರ್ಧಿನಿ ಮತ್ತು ಗಣಪತಿ ,ಶಿವಲಿಂಗ ಹಾಗೂ ಷಣ್ಮುಖರನ್ನೂ ಕಾಣಬಹುದು.

ಎರಡನೇ ಗುಹೆ ಸ್ವಾಮಿ ವಿಷ್ಣುವಿಗೆ ಸಮರ್ಪಿಸಲಾಗಿದ್ದು ಇಲ್ಲಿನ ವರಾಹ ಮತ್ತು ತ್ರಿವಿಕ್ರಮರ ಅವತಾರಗಳಲ್ಲಿ ಬಿಂಬಿಸಲಾಗಿದೆ.  ಪುರಾಣದಲ್ಲಿ ಹೇಳಿರುವ ವಿಷ್ಣು ಮತ್ತು ಆತನ ಗರುಡ ಅವತಾರವನ್ನು ಈ ದೇವಾಲಯದ ಛಾವಣಿಯಲ್ಲಿ ಕಾಣಬಹುದು.  100 ಅಡಿ ಆಳವಿರುವ ಈ ಮೂರನೇ ಗುಹೆಯಲ್ಲಿ ತ್ರಿವಿಕ್ರಮ ಹಾಗೂ ನರಸಿಂಹರ ಅವತಾರದಲ್ಲಿ ವಿಷ್ಣುವಿನ 3 ಕಲಾಕೃತಿಗಳಿವೆ.  ಇದರ ಜೊತೆಗೆ ಪ್ರವಾಸಿಗರು ಶಿವ ಮತ್ತು ಪಾರ್ವತಿಯರ ಕಲ್ಯಾಣ ಮಹೋತ್ಸವದ ದೃಶ್ಯಗಳನ್ನು ಈ ದೇವಾಲಯದ ಗೋಡೆಗಳ ಮೇಲೆ ಕಲಾಕೃತಿಗಳ ರೂಪದಲ್ಲಿ ಕಾಣಬಹುದು. ನಾಲ್ಕನೇ ಗುಹೆ ದೇವಾಲಯ ಜೈನ ಧರ್ಮಕ್ಕೆ ಸಮರ್ಪಿತವಾಗಿದ್ದು ಮಹಾವೀರನು ಕುಳಿತಿರುವ ಭಂಗಿಯ ಕಲಾಕೃತಿ ಮತ್ತು ತೀರ್ಥಂಕರ ಪಾರ್ಶ್ವನಾಥರ ಪ್ರತಿಮೆಯನ್ನು ಗುಹೆಯ ಜೊತೆಯಲ್ಲೇ ನಿರ್ಮಿಸಿರುವುದನ್ನು ಕಾಣಬಹುದು.

ಭೂತನಾಥ ದೇವಾಲಯಗಳ ಸಮೂಹದ ಒಂದು ಭಾಗವಾಗಿಹ ಮಲ್ಲಿಕಾರ್ಜುನ ದೇವಾಲಯವು ಗುಂಪಿನ ಎರಡನೇ ಮಹತ್ವದ ದೇವಾಲಯವಾಗಿದೆ.  ಅಗಸ್ತ್ಯ ಪುಷ್ಕರಿಣಿಯ ಈಶಾನ್ಯ ದಿಕ್ಕಿನಲ್ಲಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಸಹಜ ವಾಸ್ತು ಶೈಲಿಯ ವಿಶೇಷತೆಯಾದ ಎತ್ತರಿಸಿದ ಬೃಹತ್ ನಿರ್ಮಾಣವಾಗಿದೆ.  ದೇವಾಲಯವು ಸಮಾಂತರವಾದ ವೇದಿಕೆಗಳು, ಬೃಹತ್ ಚೌಕ ಗೋಪುರಾಕೃತಿ ಮತ್ತು ಸಾದಾ ಗೋಡೆಗಳು ಮತ್ತು ಕೋನವಾದ ಛಾವಣಿಗಳುಳ್ಳ ತೆರೆದ ಮಂಟಪಗಳನ್ನು ಹೊಂದಿದೆ.  ಬಾದಾಮಿಯನ್ನು ಪ್ರವಾಸಿಸುವವರು ನೋಡಬೇಕಾದ ಸ್ಥಳಗಳ ಪಟ್ಟಿಯಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನು ಸೇರಿಸಿಕೊಳ್ಳಬಹುದು.

ಬಾದಾಮಿಯನ್ನು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುರಾತನ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಈ ವಸ್ತು ಸಂಗ್ರಹಾಲಯವನ್ನು 1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿದ್ದು ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು ಬಳಸಲಾಗುತಿತ್ತು. ಆದರೆ 1982 ರಷ್ಟರಲ್ಲಿ ಇದನ್ನು ವಿಶಿಷ್ಟವಾದ ಸ್ಥಳೀಯ ಕೆತ್ತನೆಗಳನ್ನು ಪ್ರದರ್ಶಿಸುವಂತಹ ಸಂಗ್ರಹಾಲಯವಾಗಿ ಮಾರ್ಪಾಡು ಮಾಡಲಾಯಿತು. 

ಈ ಸಂಗ್ರಹಾಲಯವನ್ನು ಸಂದರ್ಶಿಸುವ ಸಮಯದಲ್ಲಿ ಪ್ರವಾಸಿಗರು ಸಮೃದ್ಧಿ ಗೆ ಹೆಸರಾದ ಲಜ್ಜಾ ಗೌರಿ ಆಕೃತಿಗಳು ಮತ್ತು 6ನೇ ಶತಮಾನದಿಂದ 16ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಿದ ಪ್ರಾಚೀನ ಶಾಸನಗಳನ್ನು ಕಾಣಬಹುದು. ಈ ಸಂಗ್ರಹಾಲಯದಲ್ಲಿ 4 ಪ್ರದರ್ಶನಾ ಘಟಕಗಳಿದ್ದು ಅವುಗಳಲ್ಲಿ ಶಿವ, ವಿಷ್ಣುವಿನ ವಿವಿಧ ಅವತಾರಗಳು, ಗಣಪತಿ ಹಾಗೂ ಭಗವದ್ಗೀತೆಯನ್ನು ಬಿಂಬಿಸುವ ಹಲವು ದೃಶ್ಯಾವಳಿಗಳನ್ನು ಪ್ರದರ್ಶಿಸುತ್ತವೆ. ಶಿವನ ವಾಹನವಾದ ಸುಂದರವಾದ ನಂದಿಯ ವಿಗ್ರಹವನ್ನು ಸಂಗ್ರಹಾಲಯದ ಪ್ರವೇಶದಲ್ಲಿ ಇರಿಸಲಾಗಿದೆ.

ಈ ಸಂಗ್ರಹಾಲಯದಲ್ಲಿ ನಾಲ್ಕು ಪ್ರದರ್ಶನಾಗೂಡುಗಳಿದ್ದು ಮುಂಭಾಗದಲ್ಲಿ ಮತ್ತು ವರಾಂಡದಲ್ಲಿಯೂ ಸಹ ತೆರೆದ ಪ್ರದರ್ಶನಾ ಗೂಡುಗಳಿವೆ. ಇಲ್ಲಿನ ಪ್ರದರ್ಶನಗೂಡುಗಳಲ್ಲಿ ಒಂದರಲ್ಲಿರುವ ಶಿಡ್ಲಫಡಿ ಗುಹೆಯೂ ಪ್ರಾಚೀನ ಕಾಲದ ಕಲ್ಲಿನ ನೆಲೆಗೆ ಸಾಕ್ಷಿಯಾಗಿದೆ. ಕಲ್ಲಿನ ಕಲಾಕೃತಿಗಳೊಂದಿಗೆ ಈ ಪ್ರದರ್ಶನಾಗೂಡು ಪ್ರಾಚೀನ ಕಲೆ ಹಾಗೂ ಹಲವು ಶಾಸನಗಳನ್ನು ಪ್ರದರ್ಶಿಸುತ್ತದೆ. ಅಲ್ಲಿರುವ ತೆರೆದ ವರಾಂಡ ಪ್ರದರ್ಶನಾಗೂಡಿನಲ್ಲಿ ಪ್ರವಾಸಿಗರು ವೀರಗಲ್ಲುಗಳನ್ನು, ದ್ವಾರಪಾಲಕ ಜೋಡಿಯ ಆಕರ್ಷಕ ಚಿತ್ರಕಲೆ ಮತ್ತು ಶಾಸನಗಳನ್ನು ನೋಡಬಹುದು. ಸಂಗ್ರಹಾಲಯದ ಹೊಸ ಪ್ರದರ್ಶನಾಗೂಡಿನಲ್ಲಿ ಹಲವು ಶಿಲಾಶಾಸನ ವಿವರಗಳು ಮತ್ತು ವಾಸ್ತುಶಿಲ್ಪಗಳನ್ನು ಪ್ರದರ್ಶಿಸಲಾಗಿದೆ.

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಬಾದಾಮಿ ಪಟ್ಟಣ ಸಾರಿಗೆ  ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.

ವಾರ್ಡ್ ಗಳು 
ನಗರದಲ್ಲಿ ಒಟ್ಟು [೨೨] ವಾರ್ಡ್ ಗಳು ಇರುತ್ತವೆ.

ಬಾದಾಮಿ  ಪ್ರಮುಖ ಬಡಾವಣೆಗಳು

 ಸಿನಿಮಾ ಚಿತ್ರ ಮಂದಿರಗಳು 
ಶ್ರೀ ಮಹಾಕೂಟೆಶ್ವರ,  ಶ್ರೀ ಕುಮಾರೆಶ್ವರ, ಶೀತಲ್

ರೊಟ್ಟಿ ,  ಪಲ್ಯ, ಚಪಾತಿ, ಹೋಳಿಗಿ, ಕಡುಬು, ಸಿರಾ, ಉಪ್ಪಿಟ್ಟು, ಅವಲಕ್ಕಿ ವಗ್ಗರಣೆ, ಬಜ್ಜಿ, ಚೂಡಾ, ಮಾಂಸಾಹಾರ ಇತ್ಯಾದಿ

೧. The Chalukyas of Badami Ed. Dr. M. S. Nagaraja Rao, The Mythic Society, Bangalore 1978

೨. ಪಲ್ಲವ ಸೈನಿಕರು ಬಾದಾಮಿಯಿಂದ ಕೊಂಡೊಯ್ದ ಗಣಪನ ಪ್ರತಿಮೆಯೊಂದನ್ನು ಕಂಚಿಯ ದೇವಾಲಯದ ಪ್ರಾಕಾರದಲ್ಲಿ ಪ್ರತಿಷ್ಠಾಪಿಸಲಾಯಿತು. ಇದುವೆ ವಾತಾಪಿ ಗಣಪತಿ. ಮುತ್ತುಸ್ವಾಮಿ ದೀಕ್ಷಿತರು ತಮ್ಮ ಪ್ರಸಿದ್ಢ ಕೃತಿಯಲ್ಲಿ ಭಜಿಸಿದ್ದು ಈ ಗಣಪನನ್ನೆ. ವಾತಾಪಿಯೆಂದರೆ ಬಾದಾಮಿಯೆ.




#Article 163: ಶ್ರೀ ರಾಮ ನವಮಿ (332 words)


ಶ್ರೀ ರಾಮನವಮಿ ಹಿಂದೂ ದೇವರಾದ ರಾಮನ ಹುಟ್ಟಿದ ದಿನ. ಶ್ರೀ ರಾಮ ರಾಮಾಯಣದ ಕಥಾ ನಾಯಕ ಹಾಗೂ ಆದಿಕಾಲದ ಭಾರತದ ಅಯೋಧ್ಯೆಯ ರಾಜ. ದಶರಥ ಮಹಾ
ರಾಜ ಶ್ರೀ ರಾಮನ ತಂದೆ. ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ಶ್ರೀ ರಾಮನವಮಿ ಯುಗಾದಿಯ ಎಂಟು ದಿನಗಳ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ ಆಚರಿಸಲಾಗುತ್ತದೆ.
ಈ ದಿನವನ್ನು  ರಾಮನ ಕಥಾ ವಾಚನಗೋಷ್ಠಿಗಳು , ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಓದಿ ಅನುಸರಿಸಲಾಗಿದೆ. ಈ ದಿನದಂದು ಕೆಲವು ವೈಷ್ಣವ ಹಿಂದೂಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಇತರರು ತಮ್ಮ ಮನೆಯಲ್ಲಿಯೇ ಪ್ರಾರ್ಥಿಸುತ್ತಾರೆ ಮತ್ತು ಕೆಲವರು ಪೂಜೆ ಮತ್ತು ಆರತಿಯ ಭಾಗವಾಗಿ ಸಂಗೀತದೊಂದಿಗೆ ಭಜನೆ ಅಥವಾ ಕೀರ್ತನೆಯಲ್ಲಿ ಭಾಗವಹಿಸುತ್ತಾರೆ. ಕೆಲವು ಭಕ್ತರು ಶಿಶು ರಾಮನ ಸಣ್ಣ ಪ್ರತಿಮೆಗಳನ್ನು ತೆಗೆದುಕೊಂಡು ಅದಕ್ಕೆ ಅಭಿಷೇಕವನ್ನು ಮಾಡಿ, ವಸ್ತ್ರವನ್ನು ತೊಡಿಸಿ ನಂತರ ಅದನ್ನು ತೊಟ್ಟಿಲಲ್ಲಿ ಇರಿಸುವ ಮೂಲಕ ಪೂಜಿಸುತ್ತಾರೆ. ದತ್ತಿ ಕಾರ್ಯಕ್ರಮಗಳು ಮತ್ತು ಹಲವು ಸಮುದಾಯಗಳಲ್ಲಿ ಭೋಜವನ್ನೂ ಆಯೋಜಿಸಲಾಗುತ್ತದೆ. ಈ ಹಬ್ಬವು ಅನೇಕ ಹಿಂದೂಗಳಿಗೆ ನೈತಿಕ ಪ್ರತಿಬಿಂಬದ ಒಂದು ಸಂದರ್ಭವಾಗಿದೆ. ಕೆಲವರು ಈ ದಿನದಂದು ವ್ರತ (ಉಪವಾಸ) ಮಾಡುತ್ತಾರೆ.
ಈ ದಿನದ ಪ್ರಮುಖ ಆಚರಣೆಗಳು ಅಯೋಧ್ಯೆ ಮತ್ತು ಸೀತಾ ಸಮಾಹಿತ್ ಸ್ಥಲ್ (ಉತ್ತರ ಪ್ರದೇಶ), ಸೀತಮಾರ್ಹಿ (ಬಿಹಾರ), ಜನಕ್ಪುರ್ಧಮ್ (ನೇಪಾಳ), ಭದ್ರಾಚಲಂ (ತೆಲಂಗಾಣ), ಕೋದಂಡರಾಮ ದೇವಸ್ಥಾನ, ವೊಂಟಿಮಿಟ್ಟಾ (ಆಂಧ್ರಪ್ರದೇಶ) ಮತ್ತು ರಾಮೇಶ್ವರಂ(ತಮಿಳುನಾಡು)ನಲ್ಲಿ ಕಾಣಬಹುದು. ರಥಯಾತ್ರೆಗಳು , ರಥದ ಶೋಭ ಯಾತ್ರೆ ಎಂದೂ ಕರೆಯಲ್ಪಡುವ ರಥದ ಮೆರವಣಿಗೆಗಳಲ್ಲಿ ಸೀತೆ , ಅವರ ಸಹೋದರ ಲಕ್ಷ್ಮಣ ಮತ್ತು ಹನುಮಾನ್ ಇವರನ್ನು ಹಲವಾರು ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಅಯೋಧ್ಯೆಯಲ್ಲಿ, ಅನೇಕರು ಪವಿತ್ರವಾದ ಸರಯು ನದಿಯಲ್ಲಿ ಸ್ನಾನ ಮಾಡಿ ನಂತರ ರಾಮನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ರಾಮನವಮಿಯಂದು ದಕ್ಷಿಣ ಭಾರತದ ಮನೆಗಳಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ, ಪಾನಕ ಹಾಗೂ ಕೋಸಂಬರಿಗಳನ್ನು ಬಂದವರಿಗೆ ನೀಡಿ ಆಚರಿಸಲಾಗುತ್ತದೆ. ರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಗಿನ ಅಯೋಧ್ಯೆಯಲ್ಲಿ, ತಮಿಳುನಾಡಿನ ರಾಮೇಶ್ವರಂನಲ್ಲಿ ಈ ದಿನದಂದು ಶ್ರೀ ರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಕರ್ನಾಟಕಾದ್ಯಂತ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತ ಕಛೇರಿಗಳು ಆಯೋಜಿಸಲ್ಪಡುತ್ತವೆ. ಇದರಲ್ಲಿ ಕರ್ನಾಟಕದ ಹಾಗೂ ಇತರೆ ರಾಜ್ಯಗಳಿಂದ ಸಂಗೀತ ವಿದ್ವಾಂಸರು ಬಂದು ಪಾಲ್ಗೊಳುತ್ತಾರೆ.
ಪೂರ್ವ ಭಾರತದ ರಾಜ್ಯಗಳಾದ ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ, ಜಗನ್ನಾಥ ದೇವಾಲಯಗಳು ಮತ್ತು ಪ್ರಾದೇಶಿಕ ವೈಷ್ಣವ ಸಮುದಾಯದವರು ರಾಮ ನವಮಿಯನ್ನು ಆಚರಿಸುತ್ತಾರೆ ಮತ್ತು ಬೇಸಿಗೆಯಲ್ಲಿ ತಮ್ಮ ವಾರ್ಷಿಕ ಜಗನ್ನಾಥ ರಥಯಾತ್ರೆಗೆ ಸಿದ್ಧತೆಗಳು ಪ್ರಾರಂಭವಾಗುವ ದಿನವೆಂದು ಪರಿಗಣಿಸುತ್ತಾರೆ.
ಇಸ್ಕಾನ್‌ಗೆ ಸಂಬಂಧಿಸಿದ ಭಕ್ತರು ಹಗಲಿನ ಹೊತ್ತಿನಲ್ಲಿ ಉಪವಾಸ ಮಾಡುತ್ತಾರೆ. ಬೆಳೆಯುತ್ತಿರುವ ಸ್ಥಳೀಯ ಹಿಂದೂ ಸಭೆಯ ಅಗತ್ಯತೆಗಳನ್ನು ತಿಳಿಸುವ ಉದ್ದೇಶದಿಂದ ಹಲವಾರು ಇಸ್ಕಾನ್ ದೇವಾಲಯಗಳು ರಜೆಯ ಸಂದರ್ಭದಲ್ಲಿ ಪ್ರಮುಖ ಆಚರಣೆಯನ್ನು ಪರಿಚಯಿಸಿದವು.

ಉತ್ಸವದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ , ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ.
ಸಂತ ರಾಂಪಾಲ್ ಜಿ ಅವರ ಭಕ್ತರು ಆದಿ ರಾಮ (ಸುಪ್ರೀಂ ರಾಮ) ಬಗ್ಗೆ ಕಬೀರ್ ಸಾಹಿಬ್ ಅವರ ಬನಿಸ್ ಪಠಣ ಮಾಡುವ ಮೂಲಕ ಈ ದಿನವನ್ನು ಕಳೆಯುತ್ತಾರೆ. ಇವರನ್ನು ಅವರು ಸರ್ವೋಚ್ಚ ಸೃಷ್ಟಿಕರ್ತ ಎಂದು ಪರಿಗಣಿಸುತ್ತಾರೆ. 

ಉತ್ತರ ಪ್ರದೇಶ, ಬಿಹಾರ , ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನೆಲೆಸಿರುವ ಭಾರತೀಯ ಹಿಂದೂ ವಲಸಿಗರು ಆಚರಿಸುವ ಹಿಂದೂ ಹಬ್ಬಗಳಲ್ಲಿ ರಾಮ ನವಮಿಯೂ ಒಂದು.




#Article 164: ದೆಹಲಿ (3792 words)


 

ದೆಹಲಿ ಸ್ಥಳೀಯವಾಗಿ ದಿಲ್ಲಿ  ಎಂದೇ ಹೆಸರಾಗಿರುವ     ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್‌.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್‌ಗಾಂವ್‌, ಫರಿದಾಬಾದ್ ಮತ್ತು ಘಜೀಯಾಬಾದ್‌ ಸೇರಿವೆ).

NCTಗೆ ಸಮೀಪವಿರುವ ಕೆಲವು ನಗರಗಳು ಮತ್ತು NCT ವ್ಯಾಪ್ತಿಯಲ್ಲಿ ಬರುವ ಭಾರತದ ರಾಜಧಾನಿ ನವ ದೆಹಲಿಯನ್ನೂ ಆಗಿಂದಾಗ್ಗೆ ದೆಹಲಿಯೆಂದೇ ಕರೆಯುವುದುಂಟು. NCT ಎನ್ನುವುದು ಒಕ್ಕೂಟ ವ್ಯವಸ್ಥೆಯ ಕೇಂದ್ರಾಡಳಿತ ಪ್ರದೇಶ.

ದೆಹಲಿಯು ಯಮುನಾ ನದಿಯ ದಂಡೆಯಲ್ಲಿದ್ದು, ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದಲೇ ನಿರಂತರವಾಗಿ ವಾಸಕ್ಕೆ ಬಳಕೆಯಾಗಿದೆ.

ದೆಹಲಿ ಸುಲ್ತಾನರು ತಲೆ ಎತ್ತಿದ ನಂತರ, ದೆಹಲಿಯು ರಾಜಕೀಯ, ಸಾಂಸ್ಕೃತಿಕ ಮತ್ತು ವಾಣಿಜ್ಯ ನಗರವಾಗಿ ಪ್ರಾಮುಖ್ಯತೆಗೆ ಬಂದಿತು, ಜೊತೆಗೆ ವಾಯವ್ಯ ಭಾರತ ಮತ್ತು ಇಂಡೋ-ಗಂಗಾ ಬಯಲು ಪ್ರದೇಶಗಳ ಮಧ್ಯೆ ವ್ಯಾಪಾರ ಮಾರ್ಗಗಳೂ ಬೆಳೆದವು.

ಪ್ರಾಚೀನ ಮತ್ತು ಮದ್ಯಕಾಲೀನದ ಹಲವು ಸ್ಮಾರಕಗಳು, ಪುರಾತತ್ವ ಸ್ಥಳಗಳು ಹಾಗೂ ಹೀಗೆ ಇನ್ನೂ ಹಲವು ದೆಹಲಿಯಲ್ಲಿವೆ. ೧೬೩೯ರಲ್ಲಿ ದೆಹಲಿಯನ್ನು ಆಳಿದ ಮೊಘಲ್ ಚಕ್ರವರ್ತಿ ಷಹಜಹಾನ್ ಹೊಸ ಸುಭದ್ರ ನಗರವನ್ನು ನಿರ್ಮಿಸಿದನು, ಅದು ೧೬೪೯ ರಿಂದ ೧೮೫೭ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು 18ನೇ ಮತ್ತು 19ನೇ ಶತಮಾನಗಳಲ್ಲಿ ಭಾರತದ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ,  ೧೯೧೧ರಲ್ಲಿ ಜಾರ್ಜ್ ವಿ ದೆಹಲಿಯನ್ನೇ ರಾಜಧಾನಿಯೆಂದು ಮತ್ತೆ ಘೋಷಿಸುವವರೆಗೆ ಕಂಪೆನಿ ಆಡಳಿತ ಮತ್ತು ಬ್ರಿಟೀಷ್ ರಾಜ್ಯ ಹೀಗೆ ಎರಡಕ್ಕೂ ಕಲ್ಕತ್ತಾವೇ ರಾಜಧಾನಿಯಾಗಿತ್ತು.

೧೯೪೭ರಲ್ಲಿ ಭಾರತಕ್ಕೆ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ್ಯ ಸಿಕ್ಕಾಗ, ನವದೆಹಲಿಯನ್ನು ದೇಶದ ರಾಜಧಾನಿ ಮತ್ತು ಸರ್ಕಾರ ಪೀಠವೆಂದು ಘೋಷಿಸಲಾಯಿತು. ಭಾರತದ ಸಂಸತ್ತು ಸೇರಿದಂತೆ ಸಂಯುಕ್ತ ಸರ್ಕಾರದ ಹಲವು ಪ್ರಮುಖ ಕಛೇರಿಗಳಿಗೆ ನವ ದೆಹಲಿ ಮನೆಯಾಗಿದೆ.

ದೇಶದೆಲ್ಲೆಡೆಯಿಂದ ಬರುವ ವಲಸಿಗರಿಂದಾಗಿ ದೆಹಲಿ ಕಾಸ್ಮೊಪಾಲಿಟನ್‌ ಮಹಾನಗರವಾಗಿ ಬೆಳೆದಿದೆ. ತುಲನಾತ್ಮಕವಾಗಿ ಹೆಚ್ಚು ಆದಾಯವುಳ್ಳ ಸರಾಸರಿ ಜನಸಂಖ್ಯೆ, ತ್ವರಿತ ಅಭಿವೃದ್ಧಿ ಮತ್ತು ನಗರೀಕರಣದಿಂದಾಗಿ ಇಂದು ದೆಹಲಿ ಬದಲಾಗಿದೆ.

ದೆಹಲಿಯಿಂದು ಭಾರತದ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮತ್ತು ವಾಣಿಜ್ಯ ಕೇಂದ್ರ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇರುವ ನಗರ­ಗ­ಳಲ್ಲಿ ದೆಹಲಿ ಎರಡನೇ ಸ್ಥಾನ ಪಡೆದು­ಕೊಂಡಿದೆ. 1990ರಿಂದ 2014ರ ಅವಧಿ­ಯಲ್ಲಿ ಜನಸಂಖ್ಯೆ ದ್ವಿಗುಣಗೊಂ­ಡಿದ್ದು ಈಗಿನ ದೆಹಲಿಯ ಜನಸಂಖ್ಯೆ 2.5 ಕೋಟಿ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಮೊದಲ ಸ್ಥಾನದಲ್ಲಿ ಜಪಾನ್‌ ರಾಜಧಾನಿ ಟೋಕಿಯೊ (೩.೭೮ ಕೋಟಿ) ಇದೆ.(೧೨-೭-೨೦೧೪ ಪ್ರಜಾವಾಣಿ ೧೨-೭-೨೦೧೪)

ಥಾರ್‌ ರಜಪೂತರು ನಗರವನ್ನು ಕರೆಯುವಾಗ ಹಿಂದಿ/ಪ್ರಾಕೃತ್‌ ಪದ ದಿಲಿ  (ಬಂಧಮುಕ್ತ)ಯನ್ನು ಬಳಸಿದರು, ಏಕೆಂದರೆ ರಾಜಾ ಧಾವ ಕಟ್ಟಿಸಿದ ಕಬ್ಬಿಣದ ಕಂಬದ ಅಡಿಪಾಯ ಬಲಹೀನವಾಗಿತ್ತು ಮತ್ತು ಅದನ್ನು ನಂತರ ಬದಲಾಯಿಸಲಾಯಿತು.

ರಜಪೂತರ ಅವಧಿಯಲ್ಲಿ ಈ ಪ್ರಾಂತದಲ್ಲಿ ಪರಿಚಲನೆಯಲ್ಲಿದ್ದ ನಾಣ್ಯಗಳನ್ನು ದೆಹಲಿವಾಲ್  ಎಂದು ಕರೆಯಲಾಗುತ್ತದೆ.

ಇನ್ನು ಕೆಲವು ಇತಿಹಾಸಜ್ಞರ ಪ್ರಕಾರ, ದೆಹಲೀಜ್‌  ಅಥವಾ ದೆಹಲಿ  ಪದ ಭಾಷಾಮಾಲಿನ್ಯಗೊಂಡು ಉಂಟಾದ ದಿಲ್ಲಿ ಯಿಂದ ದೆಹಲಿ ಪದ ಹುಟ್ಟಿಕೊಂಡಿದೆ, ದಿಲ್ಲಿ ಎಂದರೆ ಹಿಂದಿಯಲ್ಲಿ ಹೊಸ್ತಿಲು ಎಂಬರ್ಥ-ಮತ್ತು ಇಂಡೋ-ಗಂಗಾನದಿ ಬಯಲು ಪ್ರದೇಶಗಳಿಗೆ ಹೆಬ್ಬಾಗಿಲಿ ನಂತಿರುವ ಸಾಂಕೇತಿಕ ನಗರ. ನಗರದ ಮೂಲ ಹೆಸಲು ದಿಲ್ಲಿಕಾ ಎಂದು ಇನ್ನೊಂದು ವಾದ ಹೇಳುತ್ತದೆ.

ಚಿತ್ರ:Qutab.jpg|thumb|left|[37]ರಲ್ಲಿ, ಕುತುಬ್‌ ಮಿನಾರ್‌ ವಿಶ್ವದ ಅತಿ ದೊಡ್ಡ ಸ್ವಾಧಾರಿತ ಇಟ್ಟಿಗೆಯ ಮಿನಾರತ್‌ ಆಗಿದೆ.[39]
]
BC ಅಂದರೆ ಕ್ರಿಸ್ತಪೂರ್ವ ಎರಡು ಸಾವಿರ ವರ್ಷ ಮತ್ತು ಅದಕ್ಕಿಂತಲೂ ಹಿಂದೆ,

ದೆಹಲಿಯ ಮುಸ್ಲಿಂ ಸುಲ್ತಾನರು ತಮ್ಮ ಹಿಂದೂ ಪ್ರಜೆಗಳ ಬಗ್ಗೆ ಅತಿ ಸಹಿಷ್ಣುತೆ ಹೊಂದಿದ್ದಾರೆಂದು ಭಾವಿಸಿ ೧೩೯೮ರಲ್ಲಿ ತಿಮೂ ಲೆಂಕ್‌ ಭಾರತದ ಮೇಲೆ ಆಕ್ರಮಣ ನಡೆಸಿದನು. ದೆಹಲಿಯನ್ನು ಪ್ರವೇಶಿಸಿದ ತಿಮೂರ್ ನಗರವನ್ನು ದೋಚಿ, ನಾಶಪಡಿಸಿ ಅವಶೇಷಗಳನ್ನು ಮಾತ್ರ ಬಿಟ್ಟು ಹೋದನು.

ಭಾರತದ ಇತರೆ ಭಾಗಗಳಿಂದ ದೆಹಲಿಗೆ ವಲಸೆ ಬರುವುದು ಈಗಲೂ ಮುಂದುವರಿದಿದೆ. ಇದರಿಂದಾಗಿ ದೆಹಲಿಯ ಜನಸಂಖ್ಯೆ ಏರುತ್ತಿದ್ದು, ಜನನ ಪ್ರಮಾಣ ಇಳಿಯುತ್ತಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿರುವ ದೆಹಲಿ, ಅತ್ತ ಕೇಂದ್ರಾಡಳಿತ ಪ್ರದೇಶವೂ ಅಲ್ಲ, ಇತ್ತ ಪೂರ್ಣ ಪ್ರಮಾಣದ ರಾಜ್ಯವೂ ಆಗಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಆಡಳಿತದ ಹೊಣೆಯು ಕೇಂದ್ರ ಸರ್ಕಾರಕ್ಕೆ ಸೇರಿ­ದ್ದರೆ, ರಾಜ್ಯಗಳ ಆಡಳಿತವು ಚುನಾಯಿತ ಪ್ರತಿನಿಧಿಗಳ (ಶಾಸಕರ) ಸರ್ಕಾರದ ನಿಯಂತ್ರಣ­ದಲ್ಲಿ ಇರುತ್ತದೆ. ದೆಹಲಿ­ಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ಇದೆ. ಇದೇ ಕಾರಣಕ್ಕೆ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನ­ಮಾನ ಸಿಗಬೇಕು ಎನ್ನುವ ಕೂಗು ಕೇಳಿ ಬರುತ್ತದೆ.

ಅಟಲ್ ಬಿಹಾರಿ ವಾಜಪೇಯಿ  ನೇತೃತ್ವದ ಎನ್‌ಡಿಎ ಸರ್ಕಾರವು 2003ರಲ್ಲಿಯೇ ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಲು ಉದ್ದೇಶಿಸಿತ್ತು. ಈ ಸಂಬಂಧ ಲೋಕಸಭೆಯಲ್ಲಿ ಮಸೂದೆಯನ್ನೂ ಮಂಡಿಸ­ಲಾಗಿತ್ತು. ಸಂಸತ್ತಿನ ಸ್ಥಾಯಿ ಸಮಿತಿ ಪರಾಮರ್ಶೆಗೆ ಒಪ್ಪಿಸಿರುವ ಈ ಮಸೂದೆ ಇದುವರೆಗೂ ನೆನೆಗುದಿಗೆ ಬಿದ್ದಿದೆ.

ಬ್ರಿಟಿಷರು ಕೋಲ್ಕತ್ತಾ ಬದಲಿಗೆ ದೆಹಲಿಯನ್ನು ದೇಶದ ರಾಜಧಾನಿ­ಯನ್ನಾಗಿ 1911ರಲ್ಲಿ ಘೋಷಿಸಿದ್ದರು. 2011ರಲ್ಲಿ ರಾಜಧಾನಿ ಘೋಷಣೆಗೆ 100 ವರ್ಷ ತುಂಬಿದ ಸಂದರ್ಭದಲ್ಲಿ  ಲೋಕಸಭೆಯಲ್ಲಿ ಸಂಸ­ದರು  ಪಕ್ಷಭೇದ ಮರೆತು ದೆಹಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು.

ಕೇಂದ್ರಾಡಳಿತ ಪ್ರದೇಶ

ಈ ಪ್ರದೇಶದ ಆಡಳಿತ ಉಸ್ತುವಾರಿ ಹೊಣೆ­  ವಿಧಾನ ಸಭೆಗೆ ಒಪ್ಪಿಸ­ಲಾಯಿತು. ಮಂತ್ರಿ­ಮಂಡಳ, ಅದ­ಕ್ಕೊಬ್ಬ ಮುಖ್ಯಮಂತ್ರಿ ಇರಬೇಕು ಎಂದು ನಿಗದಿಪಡಿಸ­ಲಾಯಿತು. ವಿಧಾನ­ಸಭೆಗೆ ಇರುವ ವಿಶೇಷ ಅಧಿಕಾರವನ್ನು ದೆಹಲಿಗೆ ಅನ್ವಯಿಸಲಿಲ್ಲ. ಹೀಗಾಗಿ ದೆಹಲಿ ವಿಶೇಷ ದರ್ಜೆಯ ಕೇಂದ್ರಾಡಳಿತ ಪ್ರದೇಶ­ವಾಯಿತು. ದೆಹಲಿಯಂತೆಯೇ ಪುದುಚೆರಿ ಕೂಡ ಕೇಂದ್ರಾಡಳಿತ ಮತ್ತು ರಾಜ್ಯದ ಸ್ಥಾನಮಾನ ಹೊಂದಿದೆ.

ವಿಧಾನಸಭೆ ಚುನಾವಣೆ

ಡಿಡಿಎ ನಿಯಂತ್ರಣದಲ್ಲಿ ಭೂಮಿ
ದೆಹಲಿ ವ್ಯಾಪ್ತಿಯ ಭೂಮಿಯು ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ನಿಯಂತ್ರಣದಲ್ಲಿ ಇದೆ. ಈ ಪ್ರಾಧಿಕಾರವು ಭೂಮಿ ವಶಪಡಿಸಿ­ಕೊಳ್ಳುವ ಸಂಪೂರ್ಣ ಅಧಿಕಾರ ಹೊಂದಿದೆ. ಕೇಂದ್ರ ನಗರಾಭಿವೃದ್ಧಿ ವ್ಯವಹಾರ ಸಚಿವಾಲಯದ ನಿಯಂತ್ರ­ಣ­­ದಡಿ ‘ಡಿಡಿಎ’ ಕಾರ್ಯನಿರ್ವ­ಹಿಸುತ್ತದೆ.

ಕಾಯ್ದೆ–ಸುವ್ಯವಸ್ಥೆ ಹೊಣೆಗಾರಿಕೆ
ದೆಹಲಿಯಲ್ಲಿ ಕಾಯ್ದೆ ಸುವ್ಯವಸ್ಥೆ ನೋಡಿಕೊಳ್ಳುವ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಇಲ್ಲ.  ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸ್ ವ್ಯವಸ್ಥೆಯ ಉಸ್ತುವಾರಿ ನೋಡಿಕೊ­ಳ್ಳುತ್ತದೆ. ಇಲ್ಲಿಯ ಮೆಟ್ರೊ­ಪಾಲಿಟನ್ ಪೊಲೀಸ್ ಪಡೆಯು ವಿಶ್ವದಲ್ಲಿಯೇ ಅತಿದೊಡ್ಡ ಮೆಟ್ರೊ­ಪಾಲಿಟನ್ ಪಡೆ­ಯಾಗಿದೆ.

ದೆಹಲಿಯ ಆಡಳಿತದ ನಿರ್ವಹ­ಣೆಯು ಸಾಕಷ್ಟು ಸಂಕೀರ್ಣ­ವಾಗಿದೆ. ನಾಗರಿಕ ಸೇವೆಗಳಾದ ಸ್ವಚ್ಛತೆ, ರಸ್ತೆಗಳ ನಿರ್ವಹಣೆ, ಕೆಲವು ತೆರಿಗೆ, ಮೂಲ­ಸೌಕರ್ಯ, ಮುಂತಾದವುಗಳ ಹೊಣೆ­ಗಾ­ರಿಕೆ­ಯನ್ನು  ಮುನ್ಸಿಪಲ್ ಕಾರ್ಪೊ­ರೇಷನ್  ನಿರ್ವಹಿಸುತ್ತದೆ.  1992­ರಲ್ಲಿ ಸಂವಿಧಾನದ  74ನೆ ತಿದ್ದುಪಡಿ ಅನ್ವಯ, ದೆಹಲಿ ಮುನ್ಸಿಪಲ್ ಕಾರ್ಪೊ­ರೇಷನ್ ಪುನರ್ ರಚನೆಗೊಂಡಿತು.

ಪೌರ ಸಂಸ್ಥೆಗಳು ದೆಹಲಿಯ ಲ್ಯೂಟಿಯೆನ್ಸ್ ದೆಹಲಿ ಪ್ರದೇಶದ ಮೇಲೆ ಯಾವುದೇ ಅಧಿಕಾರ ಹೊಂದಿಲ್ಲ.  ಈ ಪ್ರದೇಶದಲ್ಲಿ ಕೇಂದ್ರ ಸಚಿವರು, ಸಂಸದರು, ರಾಜತಾಂತ್ರಿಕರು ನೆಲೆಸಿ­ದ್ದಾರೆ. ಈ ಪ್ರದೇಶದ ನಿರ್ವಹಣೆ­ಯನ್ನು ಚುನಾಯಿತರಲ್ಲದ ಸದಸ್ಯರು ಇರುವ ನವದೆಹಲಿ ಮುನ್ಸಿಪಲ್ ಮಂಡಳಿ ನಿಭಾಯಿಸುತ್ತದೆ.

ಸೇನಾ ಪಡೆಗಳ ಕಚೇರಿಗಳು ಮತ್ತು ಸಿಬ್ಬಂದಿಯ ವಸತಿ ಪ್ರದೇಶವನ್ನು ಚುನಾಯಿತ ಕಂಟೋನ್‌ಮೆಂಟ್  ಮಂಡಳಿಯು ನಿಭಾಯಿಸುತ್ತದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯು,  ನಿರ್ದಿಷ್ಟವಾಗಿ ಗ್ರಾಮೀಣ ಮತ್ತು ನಗರಗಳನ್ನು ಒಳಗೊಂಡು ವಿಶಾಲವಾಗಿ ವ್ಯಾಪಿಸಿಕೊಂಡಿದೆ.ದೆಹಲಿಯು ಗರಿಷ್ಠ ಉದ್ದ ಮತ್ತು ವಿಸ್ತಾರವನ್ನು ಹೊಂದಿದೆ. ದೆಹಲಿಯಲ್ಲಿ ಮೂರು ಸ್ಥಳೀಯ ಸಂಸ್ಥೆಗಳಿವೆ(ಕಾನೂನು ಸಮ್ಮತ ಪಟ್ಟಣಗಳು) ಅವುಗಳೆಂದರೆ, ದೆಹಲಿ ಪುರಸಭೆ(ಪ್ರದೇಶವು, ನವದೆಹಲಿ ಪುರಸಭೆ ಸಮಿತಿ ಮತ್ತು ದೆಹಲಿ ಸೇನಾವಸತಿ ಮಂಡಳಿ.

ದೆಹಲಿ ವಿಕಸನಶೀಲನ ಪ್ರದೇಶವಾಗಿದ್ದು, ಉತ್ತರದ ತುದಿಯಲ್ಲಿ ಸರೂಪ್ ನಗರವಿದ್ದರೆ, ದಕ್ಷಿಣದಲ್ಲಿ ರಾಜೋರ್ಕಿವರೆಗೂ ವ್ಯಾಪಿಸಿದೆ. ಪಶ್ಚಿಮ ತುದಿಯಲ್ಲಿ ನಜಾಫ್‌ಘರ್ ಇದ್ದು, ಮತ್ತು ಪೂರ್ವ ತುದಿಯಲ್ಲಿ ಯಮುನಾ ನದಿಯಿದೆ.(ಇಲ್ಲಿ ಹೆಚ್ಚುಕಡಮೆ ಸಂಪ್ರದಾಯವಾದಿಗಳೇ ಇದ್ದಾರೆ). ಶಾಹ್ದಾರಾ ಮತ್ತು ಭಜನ್ಪುರ ಮುಂತಾದ ಸ್ಥಳಗಳು ಪೂರ್ವ ತುದಿಯಲ್ಲಿದ್ದು, ಇವು ದೆಹಲಿಯ ಪ್ರಮುಖ ವ್ಯಾಪಾರ ಕೇಂದ್ರಗಳೂ ಹೌದು.ದಕ್ಷಿಣ ಮತ್ತು ಪೂರ್ವದ ಗಡಿಗಳೆನ್ನಲಾದ ನೋಯ್ಡಾ ಮತ್ತು DLFಅನ್ನು NCR ಆವರಿಸಿಕೊಂಡಿದೆ.

ವಿಚಿತ್ರವೇನೆಂದರೆ, ದೆಹಲಿಯ ಮುಖ್ಯ ಹರವು ನಿರ್ದಿಷ್ಟ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿಲ್ಲ (ಉದಾಹರಣೆಗೆ, ಲಂಡನ್‌ಗಿಂತ ವ್ಯತಿರಿಕ್ತವಾಗಿದೆ. ಅಲ್ಲಿ ಥೇಮ್ಸ್ ನದಿ ಮಧ್ಯಭಾಗದಲ್ಲಿದ್ದು, ಹ್ಯಾಪ್‌ಸ್ಟೆಡ್ ಹೀತ್ ಬೆಟ್ಟ ಉತ್ತರದ ಮೊದಲ ಗಡಿಯಾಗಿದ್ದರೆ, ದಕ್ಷಿಣದ ಗಡಿಯು ನದಿ ಬಳಿ ಯಿದೆ. ಅಂತೆಯೇ ಪಶ್ಚಿಮದ ಗಡಿಯು ಪ್ಯಾಡ್ಡಿಂಗ್ಟನ್-ಜಲಾನಯನ ಪ್ರದೇಶದ ಕೆಳತುದಿಯಲ್ಲಿದೆ) ದೆಹಲಿಯ ಮುಖ್ಯ ನಗರ ಪ್ರದೇಶ ದಕ್ಷಿಣದ ಸಾಕೆಟ್‌ನಲ್ಲೇ ಮುಕ್ತಾಯವಾಗುವುದಿಲ್ಲ, ಸುಲಭವಾಗಿ ಹೇಳುವುದಿದ್ದರೆ ಉತ್ತರದ ಗಡಿ ಹಿಂದೆ ಕಾನ್ಹಾಟ್ ಪ್ಲೇಸ್ ಆಗಿತ್ತು, ಅಂತೆಯೇ ಪಶ್ಚಿಮದ ಗಡಿ NH೮ ಆಗಿತ್ತು.

ದೆಹಲಿ ಭೂಪ್ರದೇಶವು ಯದ್ವಾತದ್ವಾ ವಿಸ್ತಾರವಾಗಿದೆ. ಉತ್ತರದ ಬಯಲು ಕೃಷಿ ಭೂಮಿಯಿಂದ ಆರಂಭವಾಗಿ ಒಣ ಭೂಮಿಯಲ್ಲಿ ಕೊನೆಗೊಳ್ಳುತ್ತದೆ, ಅಂತೆಯೇ ದಕ್ಷಿಣದಲ್ಲಿ ನಿರ್ಜಲ ಬೆಟ್ಟಗಳಿವೆ(ರಾಜಸ್ಥಾನದ ಅರಾವಳಿ ಬೆಟ್ಟಗಳ ಇನ್ನೊಂದು ಮಗ್ಗುಲು).ನಗರದ ದಕ್ಷಿಣ ಭಾಗಗಳಲ್ಲಿ ನೈಸರ್ಗಿಕವಾದ ಬೃಹತ್ ಸರೋವರಗಳಿದ್ದ ಕಾಲವೊಂದಿತ್ತು. ಆದರೆ ಈಗ ಅವು ಗಣಿಗಾರಿಕೆಯಿಂದಾಗಿ ಬತ್ತಿ ಹೋಗಿವೆ. ನಗರದ ಗಡಿ ಯಮುನಾ ನದಿ.

ದೆಹಲಿ ನಗರದ ಭಾಗವಾಗಿರದ ನದಿಯ ಪೂರ್ವಕ್ಕಿರುವ ಪ್ರದೇಶಗಳೊಂದಿಗೆ ನಗರಕ್ಕೆ ಉತ್ತಮ ಸಂಪರ್ಕವಿದ್ದಾಗ್ಯೂ, ಅನೇಕ ಸೇತುವೆಗಳು ಮತ್ತು ಮೆಟ್ರೋ ಸುರಂಗಮಾರ್ಗಗಳು ನಗರವನ್ನು ಪ್ರತ್ಯೇಕಿಸುತ್ತವೆ. ನವ ದೆಹಲಿ ಸೇರಿದಂತೆ ನಗರದ ಒಟ್ಟು ಸಮಗ್ರತೆಯು ನದಿಯ ಪಶ್ಚಿಮ ಭಾಗಕ್ಕಿದೆ. ನದಿಯ ಪೂರ್ವ ಭಾಗ ಈಗಲೂ NCRನ್ನೇ ಮುಂದುವರಿಸಿದ್ದರೂ, ಅದು ದೆಹಲಿಯಲ್ಲ.

ದೆಹಲಿಯುಭಾರತದ ಉತ್ತರ ಭಾಗದಲ್ಲಿದೆ. ಇದು ಪೂರ್ವದಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ಹರಿಯಾಣ ಎಂಬ ಭಾರತೀಯ ರಾಜ್ಯಗಳಿಂದ ಸುತ್ತುವರಿಯಲ್ಪಟ್ಟಿದೆ. ದೆಹಲಿಯ ಸರಿಸುಮಾರು ಭಾಗವು ಗಂಗಾನದಿಯ ಬಯಲು ಪ್ರದೇಶಗಳಲ್ಲಿದೆ.

ಯಮುನಾ ನದಿ ಬಯಲು ಪ್ರದೇಶ ಮತ್ತು ದೆಹಲಿಯ ಪರ್ವತ ಶ್ರೇಣಿಗಳು ದೆಹಲಿಯ ಎರಡು ಪ್ರಮುಖ ಭೌಗೋಳಿಕ ಲಕ್ಷಣವಾಗಿದೆ. ಕೆಳಮಟ್ಟದಲ್ಲಿರುವ ಯಮುನಾ ನದಿ ಬಯಲು ಪ್ರದೇಶವು ಕೃಷಿಗೆ ಸೂಕ್ತವಾದ ಮೆಕ್ಕಲು ಮಣ್ಣನ್ನು ಒದಗಿಸುತ್ತದೆ. ಆದರೂ ಈ ನದಿ ಬಯಲು ಪ್ರದೇಶಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗುವ ಪ್ರವೃತ್ತಿ ಹೊಂದಿವೆ. ೩೧೮ ಮೀಟರ್‌ (೧,೦೪೩ ಅಡಿ)  
ಎತ್ತರವಿರುವ ಇಲ್ಲಿನ ಪರ್ವತಶ್ರೇಣಿಗಳು ಈ ಪ್ರದೇಶದ ಅತ್ಯಂತ ಪ್ರಭಾವಿ ಭೌಗೋಳಿಕ ಲಕ್ಷಣವನ್ನು ರೂಪಿಸಿವೆ. ಅರಾವಳಿ ಪರ್ವತ ಶ್ರೇಣಿಯು ನಗರದ ದಕ್ಷಿಣ ಭಾಗದಿಂದ ಆರಂಭಗೊಂಡು ಪಶ್ಚಿಮ, ಈಶಾನ್ಯ ಮತ್ತು ವಾಯುವ್ಯ ಭಾಗಗಳನ್ನು ಸುತ್ತುವರಿದಿದೆ. ಹಿಂದೂ ಧರ್ಮದ ಪವಿತ್ರ ನದಿಯಾಗಿರುವ ಯಮುನಾ ನದಿಯು ದೆಹಲಿಯಲ್ಲಿ ಹರಿಯುವ ಪ್ರಮುಖ ನದಿಯಾಗಿದೆ.

ಇಲ್ಲಿ ಹರಿಯುವ ಇನ್ನೊಂದು ನದಿಯಾದ ಹಿಂದೊನ್‌ ನದಿಯು ಘಜೀಯಾಬಾದ್‌ನಿಂದ ದೆಹಲಿಯ ಪೂರ್ವ ಭಾಗ ವನ್ನು ಬೇರ್ಪಡಿಸುತ್ತದೆ. ದೆಹಲಿಯು ಭೂಕಂಪ ಪ್ರದೇಶ-IV ವ್ಯಾಪ್ತಿಯಲ್ಲಿರುವುದರಿಂದ, ಅದು ಪ್ರಮುಖ ಭೂಕಂಪಗಳಿಗೆ ಗುರಿಯಾಗಬಹುದು.

ದೆಹಲಿಯಲ್ಲಿ ಏಪ್ರಿಲ್‌ ತಿಂಗಳ ಆರಂಭದಿಂದ ಅಕ್ಟೋಬರ್‌ನ ಮಧ್ಯದವರೆಗೂ ದೀರ್ಘಾವಧಿ ಬೇಸಿಗೆಯಿದ್ದು, ವಿಪರೀತವಾದ ಉಷ್ಣ ಹವೆಯಿರುತ್ತದೆ. ಈ ನಡುವೆ ಮುಂಗಾರು ಮಾರುತವೂ ಬಂದು ಹೋಗುತ್ತದೆ. ಮಾರ್ಚ್‌ ತಿಂಗಳ ಆರಂಭದಲ್ಲಿ ಗಾಳಿಯು ಹಿಮ್ಮುಖವಾಗಿ ಬೀಸುತ್ತದೆ. ಅಂದರೆ ವಾಯುವ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿನಡೆಗೆ ಬೀಸುತ್ತದೆ. ಜೊತೆಗೆ ಇದು ರಾಜಸ್ಥಾನದಿಂದ ಬಿಸಿಗಾಳಿ ಮತ್ತು ಮರಳನ್ನು ತರುತ್ತದೆ. ಇದು ದೆಹಲಿಯ ಬೇಸಿಗೆಯ ಲಕ್ಷಣ. ಇದನ್ನು ಲೂ ಎಂದು ಕರೆಯುತ್ತಾರೆ.

ದೆಹಲಿಯಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ ವಿಪರೀತ ಉಷ್ಣ ಹವಾಗುಣವಿರುತ್ತದೆ. ಜೂನ್‌ನ ಕೊನೆಯಲ್ಲಿ ಮುಂಗಾರು ಮಾರುತ ಬರುವುದರಿಂದ ಬಿಸಿಲಿನಿಂದ ಸ್ವಲ್ಪ ಮಟ್ಟಿನ ಬಿಡುವು ಸಿಗುತ್ತದೆ. ಆದರೆ ಅದೇ ಸಮಯದಲ್ಲಿ ಆದ್ರತೆ ಹೆಚ್ಚಾಗುತ್ತದೆ. ಚಳಿಗಾಲವು ಡಿಸೆಂಬರ್‌ನ ಕೊನೆಯಲ್ಲಿ ಆರಂಭಗೊಂಡು, ಜನವರಿಯ ಹೊತ್ತಿಗೆ ಭಾರಿ ಹಿಮದೊಂದಿಗೆ ಕ್ರೂರವಾಗುತ್ತದೆ. ಗರಿಷ್ಠ ತಾಪಮಾನದ ವ್ಯಾಪ್ತಿಯು −೦.೬ °C (೩೦.೯ °F) ಯಿಂದ ೫೫ವರೆಗೆ ಇರುತ್ತದೆ.

ವಾರ್ಷಿಕ ತಾಪಮಾನ ೨೫ °C (೭೭ °F) ಆಗಿದ್ದು, ಮಾಸಿಕ ತಾಪಮಾನದ ವ್ಯಾಪ್ತಿಯು ೧೩ °Cಯಿಂದ ೩೨ °Cವರೆಗೆ (೫೬ °F ಯಿಂದ ೯೦ °F) ಇರುತ್ತದೆ. ವಾರ್ಷಿಕ ಸರಾಸರಿ ಮಳೆಯ ಪ್ರಮಾಣವು ೭೧೪ ಮಿಲಿ ಮೀಟರ್‌ನಷ್ಟಿದ್ದು (೨೮.೧ ಅಂಗುಲಗಳು), ಈ ಪೈಕಿ ಜುಲೈ ಮತ್ತು ಆಗಸ್ಟ್‌ನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ದೆಹಲಿಗೆ ಮುಂಗಾರು ಮಾರುತ ಸರಾಸರಿಯಾಗಿ ಜೂನ್‌ ೨೯ರಂದು ಆಗಮಿಸುತ್ತದೆ.

ಜುಲೈ ೨೦೦೭ರ ಹೊತ್ತಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿಯನ್ನು ಒಂಬತ್ತು ಜಿಲ್ಲೆಗಳು, ೨೭ ತೆಹ್ಸಿಲ್‌ಗಳು, ೫೯ ಗಣತಿ ನಗರಗಳು, ೧೬೫ ಗ್ರಾಮಗಳು ಮತ್ತು ಮೂರು ಕಾನೂನು ಸಮ್ಮತ ನಗರಗಳಾದ ದೆಹಲಿಯ ಪುರಸಭೆ(MCD), ನವ ದೆಹಲಿ ಪುರಸಭೆ ಸಮಿತಿ (NDMC) ಮತ್ತು ದೆಹಲಿ ಸೇನಾವಸತಿ ಮಂಡಳಿ (DCB) ಸಂಕ್ಷಿಪ್ತಗೊಳಿಸಲಾಗಿತ್ತು.

ದೆಹಲಿ ಮಹಾನಗರ ಪ್ರದೇಶ ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿಯೊಳಗಿದೆ (NCT). NCT ಈ ಮುಂದಿನ ಮೂರು ಸ್ಥಳೀಯ ಪುರಸಭಾ ಸಂಸ್ಥೆಗಳನ್ನು ಹೊಂದಿದೆ: ದೆಹಲಿಯ ಪುರಸಭೆ (MCD), ನವ ದೆಹಲಿ ಪುರಸಭೆ ಸಮಿತಿ (NDMC) ಮತ್ತು ದೆಹಲಿ ಸೇನಾವಸತಿ ಮಂಡಳಿ. ಸುಮಾರು ೧೩.೭೮ ದಶಲಕ್ಷ ಜನರಿಗೆ ಪೌರ ಸೌಕರ್ಯವನ್ನು ಒದಗಿಸುತ್ತಿರುವ MCDಯು,  ವಿಶ್ವದ ಅತಿ ದೊಡ್ಡ ಪುರಸಭಾ ಸಂಸ್ಥೆಗಳಲ್ಲಿ ಒಂದಾಗಿದೆ.

ಭಾರತದ ರಾಜಧಾನಿಯಾಗಿರುವ ನವದೆಹಲಿಯು NDMC ಆಡಳಿತದಡಿಯಲ್ಲಿ ಬರುತ್ತದೆ. NDMC ಅಧ್ಯಕ್ಷರನ್ನು ದೆಹಲಿಯ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಭಾರತ ಸರಕಾರ ನೇಮಿಸುತ್ತದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಹೊರಗಡೆ ದೆಹಲಿಯ ನಾಲ್ಕು ಮುಖ್ಯ ಉಪನಗರಗಳಿವೆ. ಅವುಗಳೆಂದರೆ ಗುರ್‌ಗಾಂವ್‌, ಫರಿದಾಬಾದ್‌ (ಹರಿಯಾಣದಲ್ಲಿರುವ), ಉತ್ತರ ಪ್ರದೇಶದಲ್ಲಿರುವ ನೋಯ್ಡಾ ಮತ್ತು ಘಜೀಯಾಬಾದ್‌.

ದೆಹಲಿಯನ್ನು ಒಂಬತ್ತು ಜಿಲ್ಲೆಗಳಾಗಿ ವಿಭಾಗಿಸಲಾಗಿದೆ. ಪ್ರತಿ ಜಿಲ್ಲೆಗೆ (ವಿಭಾಗ) ಸಹಾಯಕ ಕಮೀಷನರ್‌ ಮುಖ್ಯ ಅಧಿಕಾರಿ, ಮತ್ತು ಜಿಲ್ಲೆಯನ್ನು ಮೂರು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ. ಉಪವಿಭಾಗ ನ್ಯಾಯಾಧೀಶರು ಪ್ರತಿ ಉಪವಿಭಾಗದ ಮುಖ್ಯ ಅಧಿಕಾರಿಯಾಗಿರುತ್ತಾರೆ. ಎಲ್ಲಾ ಸಹಾಯಕ ಕಮೀಷನರ್‌ಗಳು ವಿಭಾಗೀಯ ಕಮೀಷನರ್‌ರಿಗೆ ವರದಿ ಸಲ್ಲಿಸಬೇಕಾಗುತ್ತದೆ. ದೆಹಲಿಯ ಜಿಲ್ಲಾ ಆಡಳಿತವು ಎಲ್ಲಾ ರೀತಿಯ ರಾಜ್ಯ ಮತ್ತು ಕೇಂದ್ರ ಸರಕಾರದ ನೀತಿಗಳನ್ನು ಕಾರ್ಯಗತಗೊಳಿಸುವ ಮತ್ತು ಸರಕಾರದ ಹಲವು ಕಾರ್ಯಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಸಂಸ್ಥೆಯಾಗಿದೆ.

ದೆಹಲಿಯ ನ್ಯಾಯನಿರ್ವಹಣೆಯು ದೆಹಲಿ ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ದೆಹಲಿ ಕೆಳಮಟ್ಟದ ನ್ಯಾಯಾಲಯಗಳನ್ನೂ ಹೊಂದಿದೆ: ಅವುಗಳೆಂದರೆ ಪೌರ ಸಂಬಂಧಿ ಪ್ರಕರಣಗಳಿಗೆ ಚಿಕ್ಕ ಪ್ರಕರಣಗಳ ನ್ಯಾಯಾಲಯ ಮತ್ತು ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಸೆಷನ್ಸ್‌ ನ್ಯಾಯಾಲಯ. ಪೊಲೀಸ್ ಕಮೀಷನರ್‌ ನೇತೃತ್ವದ ದೆಹಲಿ ಪೊಲೀಸ್‌ ಪಡೆಯು ವಿಶ್ವದ ಅತ್ಯಂತ ದೊಡ್ಡ ಮಹಾನಗರ ಪೊಲೀಸ್ ಪಡೆಗಳ ಪೈಕಿ ಒಂದು.
ದೆಹಲಿಯನ್ನು ಆಡಳಿತಾತ್ಮಕವಾಗಿ ಒಂಬತ್ತು ಪೊಲೀಸ್‍-ವಲಯಗಳಾಗಿ ವಿಂಗಡಿಸಲಾಗಿದ್ದು, ಮತ್ತು ಅದನ್ನು ೯೫ ಸ್ಥಳೀಯ ಪೊಲೀಸ್‌ ಕಛೇರಿಗಳಾಗಿ ವಿಭಾಗಿಸಲಾಗಿದೆ.

ಈ ಹಿಂದೆ ವಿಶೇಷ ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಟ್ಟಿದ್ದ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ತನ್ನದೇ ಆದ ಶಾಸನ ಸಭೆ, ಲೆಫ್ಟಿನೆಂಟ್‌ ಗವರ್ನರ್‌, ಮಂತ್ರಿ ಮಂಡಲ ಮತ್ತು ಮುಖ್ಯಮಂತ್ರಿಯನ್ನು ಹೊಂದಿದೆ. ಶಾಸನ ಸಭೆ ಸ್ಥಾನಗಳನ್ನು NCTನಲ್ಲಿನ ಪ್ರಾದೇಶಿಕ ಕ್ಷೇತ್ರಗಳಿಂದ ನೇರವಾಗಿ ಆಯ್ಕೆಮಾಡುವುದರಿಂದ ಭರ್ತಿಗೊಳಿಸಲಾಗುತ್ತದೆ. ಆದರೂ ಭಾರತದ ಕೇಂದ್ರ ಸರಕಾರ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರ ಜಂಟಿಯಾಗಿ ನವದೆಹಲಿಯ ಆಡಳಿತವನ್ನು ನಡೆಸುತ್ತವೆ.

ದೆಹಲಿಯ ಒಂದು ನಗರವಾದ ನವದೆಹಲಿಯು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಭಾರತ ಸರಕಾರ ಎರಡರ ಶಾಸನ ಸಭೆಯಲ್ಲೂ ಸದಸ್ಯತ್ವ ಹೊಂದಿದೆ. ಸಾರಿಗೆ ಮತ್ತು ಇತರ ಸೇವೆಗಳ ನಿರ್ವಹಣೆಯನ್ನು ದೆಹಲಿ ಸರಕಾರ ವಹಿಸಿಕೊಂಡರೆ, ಪೊಲೀಸ್‌ನಂತಹ ಸೇವೆಗಳ ಜವಬ್ದಾರಿಯನ್ನು ನೇರವಾಗಿ ಕೇಂದ್ರ ಸರಕಾರ ವಹಿಸಿಕೊಳ್ಳುತ್ತದೆ. ೧೯೫೬ಯ ನಂತರ ಮೊದಲ ಬಾರಿಗೆ ೧೯೯೩ರಲ್ಲಿ ನೇರ ಸಂಯುಕ್ತ ಒಕ್ಕೂಟ ನಿಯಮದ ಅನುಸಾರ ಶಾಸನ ಸಭೆಯನ್ನು ಮರುಸ್ಥಾಪಿಸಲಾಯಿತು.

ಹೆಚ್ಚುವರಿಯಾಗಿ ದೆಹಲಿಯ ಪುರಸಭೆ ಮಂಡಳಿಯು (MCD) ಪಂಜಾಯತಿ ರಾಜ್‌ ಕಾಯಿದೆಯ ಭಾಗದ ಅನುಸಾರ ನಗರದ ಪೌರಾಡಳಿತವನ್ನು ನಿರ್ವಹಿಸುತ್ತಿದೆ. ದೆಹಲಿಯ ನಗರ ಪ್ರದೇಶವಾದ ನವ ದೆಹಲಿಯು ದೆಹಲಿ ರಾಜ್ಯ ಸರಕಾರ ಮತ್ತು ಭಾರತ ಸರಕಾರ ಎರಡರ ಶಾಸನ ಸಭೆಯಲ್ಲೂ ಸದಸ್ಯತ್ವ ಹೊಂದಿದೆ. ಭಾರತದ ಸಂಸತ್ತು, ರಾಷ್ಟ್ರಪತಿ ಭವನ (ಅಧ್ಯಕ್ಷರ ಅಧಿಕೃತ ಮನೆ) ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯ ನವದೆಹಲಿಯಲ್ಲಿದೆ.

ದೆಹಲಿಯಲ್ಲಿ ಒಟ್ಟು ೨೭೩ ಶಾಸನ ಸಭೆ ಸ್ಥಾನಗಳು ಮತ್ತು ಹತ್ತು ಲೋಕ ಸಭಾ (ಭಾರತೀಯ ಸಂಸತ್ತಿನ ಕೆಳಮನೆ) ಸ್ಥಾನಗಳಿವೆ.

ದೆಹಲಿಯು ಭಾರತ ರಾಷ್ಟ್ರೀಯ ಕಾಂಗ್ರೆಸ್‌‌ನ ಸಾಂಪ್ರದಾಯಿಕ ಅಭೇದ್ಯವಾದ ಕೋಟೆಯಾಗಿದೆ, ಇದಕ್ಕೆ ಕಾಂಗ್ರೆಸ್ ಪಕ್ಷವೆಂಬ ಹೆಸರೂ ಇದೆ.೧೯೯೦ರ ದಶಕದಲ್ಲಿ ಮದನ್‌ ಲಾಲ್‌ ಖುರಾನರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷ (BJP) ಅಧಿಕಾರಕ್ಕೆ ಬಂದಿತ್ತು. ಆದಾರೂ, ೧೯೯೮ರಲ್ಲಿ ಹಾಲಿ ಮುಖ್ಯಮಂತ್ರಿಯಾಗಿರುವ ಶೀಲಾ ದೀಕ್ಷಿತ್‌ರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರವನ್ನು ಪಡೆಯಿತು. ಕಾಂಗ್ರೆಸ್ ೨೦೦೩ ಮತ್ತು ೨೦೦೮ ಚುನಾವಣೆಗಳಲ್ಲೂ ಅಧಿಕಾರವನ್ನು ಉಳಿಸಿಕೊಂಡಿತು.

ಸಾಮಾನ್ಯ ದರದಲ್ಲಿ ರೂ. ೧,೧೮೨ ಶತಕೋಟಿ (US$೨೪.೫ ಶತಕೋಟಿ) ಮತ್ತು PPP ದರದಲ್ಲಿ ರೂ. ೩,೩೬೪ ಶತಕೋಟಿ (US$೬೯.೮ ಶತಕೋಟಿ) ರಾಜ್ಯದ ಸ್ಥಳೀಯ ಉತ್ಪನ್ನದೊಂದಿಗೆ (FY ೨೦೦೭) 

ದೆಹಲಿಯು ಉತ್ತರ ಭಾರತದಲ್ಲಿ ಅತಿ ದೊಡ್ಡ ವಾಣಿಜ್ಯ ಕೇಂದ್ರವಾಗಿದೆ. ೨೦೦೭ರಲ್ಲಿ ದೆಹಲಿಯು ಪ್ರಸಕ್ತ ದರದಲ್ಲಿ ರೂ. ೬೬,೭೨೮ (US$೧,೪೫೦)ರಷ್ಟು ತಲಾ ಆದಾಯವನ್ನು ಹೊಂದಿದ್ದು, ಭಾರತದಲ್ಲಿ ಚಂಡೀಗಡ್‌ ಮತ್ತು ಗೋವಾ ನಂತರದ ಮೂರನೆಯ ಸ್ಥಾನವನ್ನು ಪಡೆದಿದೆ.

ದೆಹಲಿಯ ಒಟ್ಟು SDPಯ ೭೦.೯೫%ರಷ್ಟು ಪ್ರಾದೇಶಿಕ ವಲಯದಿಂದ ಬರುತ್ತದೆ, ದ್ವೀತಿಯ ಮತ್ತು ಪ್ರಾಥಮಿಕ ವಲಯಗಳಿಂದ ಅನುಕ್ರಮವಾಗಿ ೨೫.೨% ಮತ್ತು ೩.೮೫%ರಷ್ಟು ಆದಾಯ ಬರುತ್ತದೆ. ದೆಹಲಿಯ ಕಾರ್ಮಿಕ ವರ್ಗವು ಒಟ್ಟು ಜನಸಂಖ್ಯೆಯ ೩೨.೮೨%ರಷ್ಟಿದ್ದು, ೧೯೯೧ ಮತ್ತು ೨೦೦೧ನ ನಡುವೆ ೫೨.೫೨%ರಷ್ಟು ಏರಿಕೆ ಕಂಡುಬಂದಿದೆ.

ದೆಹಲಿಯ ನಿರುದ್ಯೋಗ ದರವು ೧೯೯೯–೨೦೦೦ರಲ್ಲಿ ೧೨.೫೭%ರಷ್ಟಿದ್ದು, ಇದು ೨೦೦೩ರಲ್ಲಿ ೪.೬೩%ಕ್ಕೆ ಇಳಿದಿದೆ. ೨೦೦೪ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ೬೩೬,೦೦೦ ಜನರು ವಿವಿಧ ಉದ್ಯೋಗ ವಿನಿಮಯ ಕಾರ್ಯಕ್ರಮಗಳೊಂದಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

೨೦೦೧ರಲ್ಲಿ ಎಲ್ಲಾ ಸರಕಾರಿ (ಕೇಂದ್ರ ಮತ್ತು ರಾಜ್ಯ) ಮತ್ತು ಅರೆಸರಕಾರಿ ವಲಯದ ಕಾರ್ಮಿಕರ ಸಂಖ್ಯೆ ೬೨೦,೦೦೦ರಷ್ಟಿತ್ತು. ಹಾಗೆಯೇ ಸಂಘಟಿತ ಖಾಸಗಿ ಕಾರ್ಮಿಕರ ಸಂಖ್ಯೆಯು ೨೧೯,೦೦೦ರಷ್ಟಿತ್ತು. ಪ್ರಮುಖ ಸೇವಾ ಉದ್ಯಮಗಳಲ್ಲಿ ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ, ಹೋಟೆಲ್‌, ಬ್ಯಾಂಕಿಂಗ್‌, ಮಾಧ್ಯಮ ಮತ್ತು ಪ್ರವಾಸೋದ್ಯಮಗಳು ಸೇರಿವೆ.

ಹಲವು ಗ್ರಾಹಕ ಸರಕು ಉದ್ಯಮಗಳಂತೆ ಅಭಿವೃದ್ಧಿ ಹೊಂದುತ್ತಿರುವ ದೆಹಲಿಯ ಉತ್ಪಾದನಾ ಉದ್ಯಮವು ದೆಹಲಿಯೊಳಗೆ ಮತ್ತು ಸುತ್ತಮುತ್ತ ಉತ್ಪಾದನಾ ಘಟಕಗಳು ಮತ್ತು ಕೇಂದ್ರಗಳನ್ನು ಹೊಂದಿದೆ. ದೆಹಲಿಯ ದೊಡ್ಡ ಗಾತ್ರದ ಗ್ರಾಹಕ ಮಾರುಕಟ್ಟೆ, ಅದರೊಂದಿಗೆ ಪರಿಣಿತ ಕಾರ್ಮಿಕರ ಲಭ್ಯತೆಯಿಂದಾಗಿ ದೆಹಲಿಯು ವಿದೇಶಿ ಬಂಡಾವಾಳವನ್ನು ಆಕರ್ಷಿಸುತ್ತಿದೆ.

೨೦೦೧ರಲ್ಲಿ ಉತ್ಪಾದನಾ ವಲಯವು ೧೨೯,೦೦೦ರಷ್ಟು ಕೈಗಾರಿಕಾ ಘಟಕವನ್ನು ಹೊಂದಿದ್ದು, ೧,೪೪೦,೦೦೦ರಷ್ಟು ಕಾರ್ಮಿಕರನ್ನು ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಿದೆ.

ನಿರ್ಮಾಣ, ಶಕ್ತಿ ಮೂಲ, ದೂರ ಸಂಪರ್ಕ, ಆರೋಗ್ಯ ಮತ್ತು ಸಮುದಾಯ ಸೇವೆಗಳು ಮತ್ತು ರಿಯಲ್ ಎಸ್ಟೇಟ್‌ ಪ್ರಕಾರಗಳು ದೆಹಲಿ ಅರ್ಥವ್ಯವಸ್ಥೆಯ ಏಕೀಕೃತ ಭಾಗವಾಗಿದೆ. ದೇಶದಲ್ಲೇ ಅತಿ ದೊಡ್ಡ ಮತ್ತು ಅತಿ ವೇಗದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಚಿಲ್ಲೆರೆ ವ್ಯಾಪಾರ ಉದ್ಯಮಗಳು ದೆಹಲಿಯಲ್ಲಿವೆ.

ಇದರಿಂದಾಗಿ ಭೂಮಿದರವು ತೀವ್ರಗತಿಯಲ್ಲಿ ಏರುತ್ತಿದೆ ಮತ್ತು ಪ್ರಸ್ತುತ ದೆಹಲಿ ಪ್ರತಿ ಚದರ ಅಡಿಗೆ $೧೪೫.೧೬ ದರದೊಂದಿಗೆ ವಿಶ್ವದ ದುಬಾರಿ ಕಛೇರಿ ನಿರ್ಮಾಣ ಸಾಧ್ಯತೆಯ ಸ್ಥಳದಲ್ಲಿ ೭ನೇ ಸ್ಥಾನವನ್ನು ಪಡೆದಿದೆ. ಭಾರತದ ಇತರೆಡೆಯಿರುವಂತೆ, ತ್ವರಿತಗತಿಯಲ್ಲಿ ಬೆಳವಣಿಗೆ ಯಾಗುತ್ತಿರುವ ಚಿಲ್ಲರೆ ವ್ಯಾಪಾರ ವ್ಯವಸ್ಥೆಯು ಸಾಂಪ್ರದಾಯಿಕ ಅಸಂಘಟಿತ ಚಿಲ್ಲರೆ ವ್ಯಾಪಾರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದೆಂದು ನಿರೀಕ್ಷಿಸಲಾಗಿದೆ.

ದೆಹಲಿಯಲ್ಲಿ ನೀರು ಸರಬರಾಜು ಕಾರ್ಯವನ್ನು ದೆಹಲಿ ಜಲ ಮಂಡಳಿ (DJB) ನಿರ್ವಹಿಸುತ್ತದೆ. ೨೦೦೬ರಲ್ಲಿ ಅದು ೬೫೦ MGD (ಪ್ರತೀ ದಿನಕ್ಕೆ ದಶಲಕ್ಷ ಗ್ಯಾಲನ್‌ಗಳು) ನೀರು ಪೂರೈಸಿತ್ತು. ೨೦೦೫-೦೬ರಲ್ಲಿ ನೀರಿನ ಬೇಡಿಕೆ ೯೬೩ MGD ಗ್ಯಾಲನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿತ್ತು.

ನೀರಿನ ಉಳಿದ ಬೇಡಿಕೆಗಳನ್ನು ಖಾಸಗಿ ಮತ್ತು ಸಾರ್ವಜನಿಕ ಕೊಳವೆ ಬಾವಿಗಳು ಮತ್ತು ಕೈಪಂಪುಗಳು ಪೂರೈಸುತ್ತವೆ. DJBಗೆ ೨೪೦ MGDಯಷ್ಟು ನೀರು ಪೂರೈಸುತ್ತಿರುವ ಭಾಕ್ರಾ ಸಂಗ್ರಹವೇ ಬಹುದೊಡ್ಡ ನೀರಿನ ಆಕರವಾಗಿದೆ, ಉಳಿದ ನೀರನ್ನು ಯಮುನಾ ಮತ್ತು ಗಂಗಾ ನದಿಗಳು ಪೂರೈಸುತ್ತವೆ.ಅಂತರ್ಜಲ ಮಟ್ಟ ಕುಸಿತ ಹಾಗೂ ಜನಸಾಂದ್ರತೆಯ ಹೆಚ್ಚಳದಿಂದಾಗಿ ದೆಹಲಿಯು ನೀರಿನ ಕೊರತೆಯನ್ನು ಅನುಭವಿಸುತ್ತಿದ್ದು, ಗಂಭೀರ ಸ್ಥಿತಿಯಲ್ಲಿದೆ.

ದೆಹಲಿಯು ಪ್ರತೀದಿನ ೮೦೦೦ ಟನ್‌ಗಳಷ್ಟು ಘನತ್ಯಾಜ್ಯಗಳನ್ನು ಉತ್ಪಾದಿಸುತ್ತದೆ ಮತ್ತು ಅವುಗಳನ್ನು MCDಯು ತ್ಯಾಜ್ಯ ವಸ್ತುಗಳನ್ನು ಹೂತುಹಾಕುವ ಪ್ರದೇಶಗಳಲ್ಲಿ ಮೂರು ರಾಶಿಹಾಕುತ್ತದೆ. ಪ್ರತೀ ದಿನದ ಗೃಹಬಳಕೆಯಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಮಟ್ಟ  ೪೭೦  MGDಗಳಷ್ಟಿದೆ ಮತ್ತು ಕೈಗಾರಿಕಾ ತ್ಯಾಜ್ಯ ನೀರಿನ ಮಟ್ಟ ೭೦ MGDಗಳಷ್ಟಿದೆ. ಚರಂಡಿ ನೀರಿನ ಹೆಚ್ಚಿನ ಭಾಗವು ಸಂಸ್ಕರಣೆಯಾಗದೆ ಯಮುನಾ ನದಿಗೆ ನೇರವಾಗಿ ಹರಿಯುತ್ತದೆ.

ನಗರದ ತಲಾ ವಿದ್ಯುತ್ ಬಳಕೆಯು ಸುಮಾರು ೧,೨೬೫ kWhರಷ್ಟಿದೆ, ಆದರೆ ನಿಜವಾದ ಬೇಡಿಕೆ ಅದಕ್ಕಿಂತ ಹೆಚ್ಚಿದೆ. MCD ನಿರ್ವಹಿಸುತ್ತಿದ್ದ ದೆಹಲಿ ವಿದ್ಯುತ್ ಪೂರೈಕೆ ಜವಾಬ್ದಾರಿಯನ್ನು ೧೯೯೭ರಲ್ಲಿ ದೆಹಲಿ ವಿದ್ಯುತ್ ಬೋರ್ಡ್(DVB) ವಹಿಸಿಕೊಂಡಿತು.

ನಗರದ ಬೇಡಿಕೆಗೆ ಸಾಕಾಗುವಷ್ಟು ವಿದ್ಯುತ್‌ ಉತ್ಪಾದಿಸುವುದು DVBಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ, ಭಾರತದ ಉತ್ತರ ವಲಯದ ವಿದ್ಯುತ್‌ವಾಹಕ ತಂತಿಗಳ ಜಾಲದಿಂದ ಅದನ್ನು ಪಡೆದುಕೊಳ್ಳುತ್ತಿದೆ. ಇದರಿಂದಾಗಿ ದೆಹಲಿಯು ವಿದ್ಯುತ್ ಕೊರತೆ ಅನುಭವಿಸುತ್ತಿದೆ, ಆಗಿಂದಾಗ್ಗೆ ವಿಶೇಷ ವಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಬೇಸಿಗೆ ಕಾಲದಲ್ಲಿ ಪೂರ್ಣ ವಿದ್ಯುತ್‌ ಖೋತಾ ಮತ್ತು ಅರೆ ವಿದ್ಯುತ್‌ ಖೋತಾಗಳನ್ನು ಮಾಡಲಾಗುತ್ತದೆ.

ಸದಾ ಅಡ್ಡಿಪಡಿಸುವ ಮತ್ತು ಆಗಿಂದಾಗ್ಗೆ ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ದೆಹಲಿಯ ಅನೇಕ ಕೈಗಾರಿಕಾ ಘಟಕಗಳು ವಿದ್ಯುತ್ ಬೇಡಿಕೆಯ ಪೂರೈಕೆಗಾಗಿ ತಮ್ಮದೇ ಆದ ವಿದ್ಯುತ್ ಜನರೇಟರ್‌ಗಳನ್ನು ಅವಲಂಬಿಸಿವೆ. ಕೆಲವು ವರ್ಷಗಳ ಹಿಂದೆ ದೆಹಲಿಯ ವಿದ್ಯುತ್ ಕ್ಷೇತ್ರವನ್ನು ಖಾಸಗಿ ಕಂಪೆನಿಗಳಿಗೆ ಹಸ್ತಾಂತರಿಸಲಾಯಿತು. ವಿದ್ಯುತ್ ಹಂಚಿಕೆಯ ಜವಾಬ್ದಾರಿಯನ್ನು ಟಾಟಾ ಪವರ್ ಮತ್ತು ರಿಲೈಯನ್ಸ್ ಎನರ್ಜಿ ನಡೆಸುವ ಕಂಪೆನಿಗಳು ವಹಿಸಿಕೊಂಡವು.

ದೆಹಲಿ ಅಗ್ನಿಶಾಮಕ ಸೇವೆಯು ೪೩ ಅಗ್ನಿಶಾಮಕ ಕೇಂದ್ರಗಳನ್ನು ಹೊಂದಿದೆ. ಅವು ವರ್ಷಕ್ಕೆ ೧೫,೦೦೦ ಬೆಂಕಿ ಅನಾಹುತ ಮತ್ತು ರಕ್ಷಣೆಯ ಕರೆಗಳನ್ನು ಸ್ವೀಕರಿಸುತ್ತವೆ.

ಸರ್ಕಾರಿ ಸ್ವಾಮ್ಯದ ಮಹಾನಗರ ದೂರವಾಣಿ ನಿಗಮ ಲಿಮಿಟೆಡ್ (MTNL) ಮತ್ತು ಖಾಸಗಿ ಸಂಸ್ಥೆಗಳಾದ ವೊಡಾಫೋನ್ ಎಸ್ಸಾರ್, ಏರ್‌ಟೆಲ್, ಐಡಿಯ ಸೆಲ್ಯುಲರ್, ರಿಲಯನ್ಸ್ ಇನ್ಫೊಕಾಮ್, ಮತ್ತು ಟಾಟಾ ಇಂಡಿಕಾಮ್ ಮೊದಲಾದವುಗಳು ನಗರಕ್ಕೆ ದೂರವಾಣಿ ಮತ್ತು ಸಂಚಾರಿ ದೂರವಾಣಿ ಸೇವೆಯನ್ನು ಒದಗಿಸುತ್ತಿವೆ. ೨೦೦೮ರ ಮೇನಲ್ಲಿ, ಏರ್‌ಟೆಲ್ ಸಂಸ್ಥೆ ದೆಹಲಿಯಲ್ಲಿ ಸರಿಸುಮಾರು ೪ ದಶಲಕ್ಷ ಸಂಚಾರಿ ದೂರವಾಣಿ ಚಂದಾದಾರರನ್ನು ಹೊಂದಿತ್ತು.

ಈ ಸಂಚಾರಿ ದೂರವಾಣಿ ವ್ಯಾಪ್ತಿಯು ಬಹು ವಿಸ್ತಾರವಾದುದು ಹಾಗೂ GSM ಮತ್ತು CDMA (ರಿಲಯನ್ಸ್ ಮತ್ತು ಟಾಟಾ ಇಂಡಿಕಾಮ್‌ನ) ಎರಡೂ ಸೇವೆಗಳು ಲಭ್ಯವಿದೆ. ಕೈಗೆಟಕುವ ದರದಲ್ಲಿ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸಂಪರ್ಕ ನೀಡುತ್ತಿರುವ ಸಂಸ್ಥೆಗಳ ಸಂಖ್ಯೆ ಕೂಡ ನಗರದಲ್ಲಿ ಬೆಳೆಯುತ್ತಿದೆ.

ಚಿತ್ರ:Delhi Airport India.jpg|thumb|ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಏಷ್ಯಾದಲ್ಲೇ ತುಂಬಾ ನಿಬಿಡವಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.[175] ಇಲ್ಲಿ ವಿಮಾನ ನಿಲ್ದಾಣದ 1D ಅನ್ನು ತೋರಿಸಲಾಗಿದೆ.
]
]

ದೆಹಲಿಯಲ್ಲಿ ಬಸ್‌ಗಳು, ಆಟೊ ರಿಕ್ಷಾಗಳು ಮತ್ತು ಮೆಟ್ರೋ ರೈಲು ವ್ಯವಸ್ಥೆಯು ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತಿವೆ. ಬಸ್‌ಗಳು ಹೆಚ್ಚು ಜನಪ್ರಿಯ ಸಾರಿಗೆ ವ್ಯವಸ್ಥೆಯಾಗಿದ್ದು, ಒಟ್ಟು ಬೇಡಿಕೆಯ ಸುಮಾರು ೬೦%ರಷ್ಟನ್ನು ಪೂರೈಸುತ್ತಿವೆ. ಸರ್ಕಾರಿ ಸ್ವಾಮ್ಯದ ದೆಹಲಿ ಸಾರಿಗೆ ಸಂಸ್ಥೆಯು (DTC) ನಗರಕ್ಕೆ ಬಸ್ ಸೇವೆಯನ್ನು ಒದಗಿಸುತ್ತಿರುವ ಪ್ರಮುಖ ಸಂಸ್ಥೆ. DTCಯು ವಿಶ್ವದಲ್ಲೇ ಅತಿ ದೊಡ್ಡ ಪರಿಸರ-ಸ್ನೇಹಿ CNG ಬಸ್‌ಗಳ ವ್ಯವಸ್ಥೆಯನ್ನು  ನಡೆಸುತ್ತಿದೆ. ಕ್ಷಿಪ್ರ ಬಸ್ ಪ್ರಯಾಣ ಜಾಲವು ಅಂಬೇಡ್ಕರ್ ನಗರ ಮತ್ತು ದೆಹಲಿ ಗೇಟ್ ಮಧ್ಯೆ ಸಾಗುತ್ತದೆ.

ದೆಹಲಿ ಮೆಟ್ರೋ ರೈಲು ಸಂಸ್ಥೆ (DMRC) ರೂಪಿಸಿ, ನಡೆಸುತ್ತಿರುವ ಸಾಮೂಹಿಕ ಕ್ಷಿಪ್ರ ಪ್ರಯಾಣ ವ್ಯವಸ್ಥೆಯಾದ ದೆಹಲಿ ಮೆಟ್ರೋ ನಗರದ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿದೆ. ೨೦೦೭ರ ವೇಳೆಗೆ ದೆಹಲಿ ಮೆಟ್ರೋ ಒಟ್ಟು ೬೫ ಕಿ.ಮೀ (೪೦ ಮೈಲುಗಳು) ಉದ್ದ ಮತ್ತು ೫೯ ನಿಲ್ದಾಣಗಳನ್ನು ಹೊಂದಿರುವ ಮೂರು ಮಾರ್ಗಗಳನ್ನು ಹೊಂದಿತ್ತು, ಮತ್ತು ಇತರೆ ಹಲವು ಮಾರ್ಗಗಳು ನಿರ್ಮಾಣ ಹಂತದಲ್ಲಿದ್ದವು.

ಮಾರ್ಗ ೧ ರಿಥಲ ಮತ್ತು ಶಾಹ್ದರ ಮಧ್ಯೆ, ಮಾರ್ಗ ೨ ಜಹಾಂಗಿರಿ ಹಾಗೂ ಸೆಂಟ್ರಲ್ ಸೆಕ್ರೆಟರಿಯೇಟ್ ಮಧ್ಯೆ ಭೂಮಿಯಡಿಯಲ್ಲಿ ಮತ್ತು ಮಾರ್ಗ ೩ ಇಂದ್ರಪ್ರಸ್ಥ, ಬಾರಖಂಬ ರೋಡ್ ಮತ್ತು ದ್ವಾರಕ ಉಪನಗರ ನಡುವೆ ಹಾದುಹೋಗುತ್ತದೆ. ಮೆಟ್ರೋ ರೈಲು ಜಾಲದ IIನೇ ಹಂತದ ಕಾರ್ಯವು ನಿರ್ಮಾಣ ಹಂತದಲ್ಲಿದ್ದು, ಅದು ಒಟ್ಟು ೧೨೮ ಕಿಮೀ ಉದ್ದವಿರುತ್ತದೆ. ಇದರ ನಿರ್ಮಾಣ ಕಾಮಗಾರಿ ೨೦೧೦ರೊಳಗೆ ಪೂರ್ಣಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಹಂತ-I US$೨.೩ ಶತಕೋಟಿ ದರದಲ್ಲಿ ಪೂರ್ಣಗೊಂಡಿದೆ ಮತ್ತು ಹಂತ-IIಕ್ಕೆ ಹೆಚ್ಚುವರಿಯಾಗಿ US$೪.೩ ಶತಕೋಟಿ ವೆಚ್ಚವಿದೆ. ಹಂತ-III ಮತ್ತು IV ಅನುಕ್ರಮವಾಗಿ ೨೦೧೫ ಮತ್ತು ೨೦೨೦ರೊಳಗೆ ಪೂರ್ಣಗೊಳ್ಳಬೇಕು, ಹೀಗಾದಲ್ಲಿ ಲಂಡನ್ ಭೂಗತಮಾರ್ಗಕ್ಕಿಂತ ಉದ್ದವಾಗಿರುವ ೪೧೩.೮ ಕಿಮೀ ಉದ್ದದ ಜಾಲವನ್ನು ಅದು ನಿರ್ಮಿಸಿದಂತಾಗುತ್ತದೆ.

ಟ್ಯಾಕ್ಸಿಗಳಿಗಿಂತ ಕಡಿಮೆ ಬಾಡಿಗೆ ಇರುವುದರಿಂದ ಆಟೋ ರಿಕ್ಷಾಗಳು ದೆಹಲಿಯಲ್ಲಿ ಹೆಚ್ಚು ಜನಪ್ರಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದೆ. ಹೆಚ್ಚಿನವುಗಳು ಕುಗ್ಗಿಸಿದ ನೈಸರ್ಗಿಕ ಅನಿಲದಿಂದ (CNG) ಚಲಿಸುತ್ತವೆ ಹಾಗೂ ಹಳದಿ ಮತ್ತು ಹಸಿರು ಬಣ್ಣದಲ್ಲಿವೆ. ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿದ್ದರೂ, ದೆಹಲಿ ಸಾರ್ವಜನಿಕ ಸಾರಿಗೆಯ ಅವಿಭಾಜ್ಯ ಅಂಗವಲ್ಲ. ಹೆಚ್ಚಿನ ಟ್ಯಾಕ್ಸಿಗಳನ್ನು ಖಾಸಗಿ ಚಾಲಕರೇ ಚಲಾಯಿಸುತ್ತಾರೆ. ಟ್ಯಾಕ್ಸಿ ಹಿಡಿಯುವುದಕ್ಕಾಗಿ ಅಕ್ಕಪಕ್ಕದಲ್ಲೇ ಟ್ಯಾಕ್ಸಿ ನಿಲುಗಡೆಗಳಿರುತ್ತವೆ. ಹೆಚ್ಚುವರಿಯಾಗಿ, ಕೇಂದ್ರ ಸಂಖ್ಯೆಗೆ ಕರೆಮಾಡುವ ಮೂಲಕ ಆದೇಶಿಸಬಹುದಾದ ಹವಾನಿಯಂತ್ರಿತ ರೇಡಿಯೊ ಟ್ಯಾಕ್ಸಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಅವು ಪ್ರತೀ ಕಿಲೋಮೀಟರ್‌ಗೆ ೧೫ ರೂಪಾಯಿಷ್ಟು ದರ ಹೇಳುತ್ತವೆ.

ದೆಹಲಿ ಪ್ರಮುಖ ರೈಲು ನಿಲ್ದಾಣ , ಮಾತ್ರವಲ್ಲದೆ ಉತ್ತರ ರೇಲ್ವೆಯ ಮುಖ್ಯ ಕಾರ್ಯಾಲಯವೂ ಹೌದು. ನಗರದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳೆಂದರೆ - ಹಳೆ ದೆಹಲಿ, ನಿಜಾಮುದ್ದಿನ್ ರೈಲು ನಿಲ್ದಾಣ, ಸರೈ ರೋಹಿಲ್ಲ ಮತ್ತು ನವ ದೆಹಲಿ ರೈಲು ನಿಲ್ದಾಣ. ದೆಹಲಿಯು ಅನೇಕ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ಹೆದ್ದಾರಿಗಳ ಮೂಲಕ ಇತರ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ.

ಶ್ರೀಮಂತ ಮತ್ತು ವಾಣಿಜ್ಯ ಉಪ ನಗರಗಳೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ದೆಹಲಿ ಪ್ರಸ್ತುತ ಮೂರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ಹೊಂದಿದೆ ಮತ್ತು ಇನ್ನು ಮೂರು ನಿರ್ಮಾಣ ಹಂತದಲ್ಲಿದೆ. ದೆಹಲಿ-ಗುರ್‌ಗಾಂವ್ ಎಕ್ಸ್‌ಪ್ರೆಸ್ ಹೆದ್ದಾರಿಯು ದೆಹಲಿಯನ್ನು ಗುರ್‌ಗಾಂವ್ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. DND ಫ್ಲೈವೇ ಮತ್ತು ನೋಯಿಡಾ-ಗ್ರೇಟರ್ ನೋಯಿಡಾ ಎಕ್ಸ್‌ಪ್ರೆಸ್ ಹೆದ್ದಾರಿಯು ದೆಹಲಿಯನ್ನು ಎರಡು ಶ್ರೀಮಂತ ಉಪನಗರಗಳೊಂದಿಗೆ ಸಂಪರ್ಕಿಸುತ್ತದೆ. ಬೃಹತ್ ನೋಯಿಡಾದಲ್ಲಿ ಹೊಸ ವಿಮಾನ ನಿಲ್ದಾಣ ವಾಗಬೇಕಿದೆ. ಅಲ್ಲದೆ ನೋಯಿಡಾ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಆಗಬೇಕಿದೆ.

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (DEL) ದೆಹಲಿಯ ಪಶ್ಚಿಮ ಭಾಗದಲ್ಲಿದೆ. ಅದು ನಗರದ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ನಾಗರಿಕ ಬಾಹ್ಯಾಕಾಶ ವ್ಯವಹಾರಕ್ಕೆ ಪ್ರಮುಖ ಪ್ರವೇಶ ದ್ವಾರವಾಗಿ ಕೆಲಸ ಮಾಡುತ್ತದೆ. ೨೦೦೬–೦೭ರಲ್ಲಿ ಈ ವಿಮಾನ ನಿಲ್ದಾಣ ೨೩ ದಶಲಕ್ಷಕ್ಕಿಂತಲೂ ಹೆಚ್ಚು ಪ್ರಯಾಣಿಕರ ದಟ್ಟಣೆಯಿಂದ ಇತಿಹಾಸ ನಿರ್ಮಿಸಿತು. ಇದರಿಂದಾಗಿ ದಕ್ಷಿಣ ಏಷ್ಯಾದಲ್ಲೇ ಹೆಚ್ಚು ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದು ಎಂಬ ಖ್ಯಾತಿಯನ್ನೂ ಈ ನಿಲ್ದಾಣ ಪಡೆಯಿತು.

US$೧.೯೩ ಶತಕೋಟಿ ವೆಚ್ಚದಲ್ಲಿ ೩ನೇ ಹೊಸ ನಿಲ್ದಾಣ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, ಇದು ೨೦೧೦ರ ವೇಳೆಗೆ ವಾರ್ಷಿಕವಾಗಿ ಹೆಚ್ಚುವರಿ ೩೪ ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಲಿದೆ. ಮುಂದಿನ ವಿಸ್ತರಣಾ ಯೋಜನೆಗಳ ಪ್ರಕಾರ ೨೦೨೦ರೊಳಗೆ ವಾರ್ಷಿಕವಾಗಿ ೧೦೦ ದಶಲಕ್ಷಕ್ಕೂ ಮಿಕ್ಕಿ ಪ್ರಯಾಣಿಕರನ್ನು ನಿರ್ವಹಿಸುವ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತದೆ.

ಸಾಮಾನ್ಯ ವಾಯುಯಾನಕ್ಕಾಗಿ ದೆಹಲಿಯಲ್ಲಿರುವ ಇನ್ನೊಂದು ಸಫ್ದರ್ಜಂಗ್ ವಿಮಾನ ನಿಲ್ದಾಣವನ್ನು ಬಳಸಲಾಗುತ್ತಿದೆ. ಖಾಸಗಿ ವಾಹನಗಳು ಸಾರಿಗೆಯ ಒಟ್ಟು ಬೇಡಿಕೆಯ ೩೦%ರಷ್ಟನ್ನು ಪೂರೈಸುತ್ತವೆ. ೧೯೨೨.೩೨ ಕಿ.ಮೀ ಉದ್ದದ ರಸ್ತೆಯಲ್ಲಿ ಪ್ರತೀ ೧೦೦ km² ರಸ್ತೆಗೆ, ದೆಹಲಿಯು ಭಾರತದಲ್ಲೇ ಅತಿಹೆಚ್ಚು ರಸ್ತೆ ಜನದಟ್ಟಣೆಯನ್ನು ಹೊಂದಿದೆ.

ಐದು ರಾಷ್ಟ್ರೀಯ ಹೆದ್ದಾರಿಗಳು ದೆಹಲಿಯನ್ನು ಭಾರತದ ಇತರ ಭಾಗಗಳೊಂದಿಗೆ ಜೋಡಿಸುತ್ತವೆ: NH ೧, ೨, ೮, ೧೦ ಮತ್ತು ೨೪. ದೆಹಲಿಯ ರಸ್ತೆಗಳನ್ನು MCD (ದೆಹಲಿ ಪುರಸಭೆ), NDMC, ದೆಹಲಿ ಸೇನಾವಸತಿ ಮಂಡಳಿ, ಸಾರ್ವಜನಿಕ ಕೆಲಸ-ಕಾರ್ಯಗಳ ಇಲಾಖೆ (PWD) ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತದೆ.

ದೆಹಲಿಯ ಜನಸಂಖ್ಯಾ ಬೆಳವಣಿಗೆಯ ವೇಗದ ಪ್ರಮಾಣದೊಂದಿಗೆ, ಆರ್ಥಿಕ ಅಭಿವೃದ್ಧಿಯ ವೇಗದ ಪ್ರಮಾಣ ಸೇರಿ ಕೊಂಡಿರುವುದರಿಂದಾಗಿ, ಸಾರಿಗೆಯ ಬೇಡಿಕೆ ಏರುತ್ತಾ ಹೋಗಿ ನಗರದಲ್ಲಿ ಅಸ್ತಿತ್ವದಲ್ಲಿರುವ ಸಾರಿಗೆ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ೨೦೦೮ರಲ್ಲಿ, ಮಹಾನಗರ ದೆಹಲಿ NCRನಲ್ಲಿರುವ ವಾಹನಗಳ ಸಂಖ್ಯೆ ೧೧೨ ಲಕ್ಷಗಳು (೧೧.೨ ದಶಲಕ್ಷ).

೨೦೦೮ರಲ್ಲಿ ದೆಹಲಿಯಲ್ಲಿ ಪ್ರತೀ ೧,೦೦೦ ನಿವಾಸಿಗಳಿಗೆ ೮೫ ಕಾರುಗಳಿದ್ದವು. ದೆಹಲಿಯಲ್ಲಿ ಸಾರಿಗೆ ಬೇಡಿಕೆಯನ್ನು ಪೂರೈಸಲು, ರಾಜ್ಯ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ದೆಹಲಿ ಮೆಟ್ರೋವನ್ನು ಒಳಗೊಂಡ ಸಾಮೂಹಿಕ ಕ್ಷಿಪ್ರ ಪ್ರಯಾಣದ ವ್ಯವಸ್ಥೆಯ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದವು. ಎಲ್ಲಾ ಸಾರ್ವಜನಿಕ ಸಾರಿಗೆ ವಾಹನಗಳು ಡೀಸೆಲ್ ಮತ್ತು ಇತರ ಹೈಡ್ರೊ-ಕಾರ್ಬನ್‌ಗಳ ಬದಲಿಗೆ ಕುಗ್ಗಿಸಿದ ನೈಸರ್ಗಿಕ ಅನಿಲವನ್ನು (CNG) ಇಂಧನವಾಗಿ ಬಳಸಬೇಕೆಂದು ಭಾರತದ ಸರ್ವೋಚ್ಚ ನ್ಯಾಯಾಲಯ ೧೯೯೮ರಲ್ಲಿ ಆದೇಶಿಸಿತು.

ದೆಹಲಿಯಲ್ಲಿನ ಅನೇಕ ಜನಾಂಗೀಯ ಗುಂಪುಗಳು ಮತ್ತು ಸಂಸ್ಕೃತಿಗಳು ಅದನ್ನು ಕಾಸ್ಮೊಪಾಲಿಟನ್ (ಲೋಕಮಿತ್ರ) ನಗರವನ್ನಾಗಿ ಮಾಡಿವೆ. ಉತ್ತರ ಭಾರತದ ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿರುವ ದೆಹಲಿಯು ಬ್ಲೂ ಕಾಲರ್ ಮತ್ತು ವೈಟ್ ಕಾಲರ್ ಎರಡೂ ರೀತಿಯ ನೌಕರರನ್ನು ದೇಶದ ಎಲ್ಲಾ ಭಾಗಗಳಿಂದ ತನ್ನ ಸೆಳೆದುಕೊಂಡು ಇನ್ನಷ್ಟು ವೈವಿಧ್ಯವಾಗಿ ಬೆಳೆಯುತ್ತಿದೆ. ರಾಜತಾಂತ್ರಿಕ ಕೇಂದ್ರ, ೧೬೦ ರಾಷ್ಟ್ರಗಳ ರಾಯಭಾರಿ ಕಛೇರಿಗಳ ನಿವಾಸವಾಗಿರುವ  ದೆಹಲಿಯು ದೊಡ್ಡಪ್ರಮಾಣದ ವಿದೇಶವಾಸಿ ಜನರನ್ನೂ ಹೊಂದಿದೆ. ೨೦೦೧ರ ಭಾರತದ ಜನಗಣತಿಯ ಪ್ರಕಾರ, ದೆಹಲಿಯ ಆ ವರ್ಷದ ಜನಸಂಖ್ಯೆ ೧೩,೭೮೨,೯೭೬. ಇದಕ್ಕೆ ಅನುಗುಣವಾದ ಜನಸಂಖ್ಯಾ ಸಾಂದ್ರತೆಯು ಪ್ರತೀ km²ಗೆ ೯,೨೯೪ ಜನರು,  ಲಿಂಗಾನುಪಾತ ಪ್ರತೀ ೧೦೦೦ ಪುರುಷರಿಗೆ ೮೨೧ ಮಹಿಳೆಯರು ಮತ್ತು ೮೧.೮೨%ಸಾಕ್ಷರತಾ ದರವಿತ್ತು. ೨೦೦೪ರ ಹೊತ್ತಿಗೆ ಅಂದಾಜು ಮಾಡಲಾದ ಜನಸಂಖ್ಯೆಯು ೧೫,೨೭೯,೦೦೦ಗೆ ಏರಿತು. ಆ ವರ್ಷ ಜನನ ಪ್ರಮಾಣ, ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣವು (೧೦೦೦ ಜನರಿಗೆ) ಅನುಕ್ರಮವಾಗಿ ೨೦.೦೩, ೫.೫೯ ಮತ್ತು ೧೩.೦೮ ಆಗಿತ್ತು.

೨೦೦೭ರ ಹೊತ್ತಿಗೆ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಜನಸಂಖ್ಯೆ ೨೧.೫ ದಶಲಕ್ಷವನ್ನು ಮೀರಿ ಬೆಳೆದು ಮುಂಬಯಿಯನ್ನೂ ಹಿಂದಿಕ್ಕಿ ದೇಶದ ಅತಿ ದೊಡ್ಡ ಮಹಾನಗರವಾಗಬಹುದು ಎಂದು ಅಂದಾಜಿಸಲಾಗಿದೆ. ೧೯೯೯–೨೦೦೦ರ ಒಂದು ಅಂದಾಜಿನ ಪ್ರಕಾರ, ದೆಹಲಿಯಲ್ಲಿ ಪ್ರತೀ ತಿಂಗಳಿಗೆ $೧೧ ಅಥವಾ ಅದಕ್ಕಿಂತ ಕಡಿಮೆ ವೆಚ್ಚದಲ್ಲಿ ಬಡತನ ರೇಖೆಗಿಂತ ಕೆಳಗೆ ಜೀವನ ನಡೆಸುವ ಜನರ ಒಟ್ಟು ಸಂಖ್ಯೆ ೧,೧೪೯,೦೦೦(ಅದು ಒಟ್ಟು ಜನಸಂಖ್ಯೆಯ ೮.೨೩%, ಇಡೀ ಭಾರತಕ್ಕೆ ಹೋಲಿಸಿದರೆ ೨೭.೫%)ಇರಬಹುದು.

೨೦೦೧ರಲ್ಲಿ ದೆಹಲಿಯ ಜನಸಂಖ್ಯೆಯು ವಲಸೆಯಿಂದಾಗಿ ೨೮೫,೦೦೦ ಮತ್ತು ಪ್ರಕೃತಿ ಸಹಜ ಜನಸಂಖ್ಯೆ ಏರಿಕೆಯಿಂದಾಗಿ ೨೧೫,೦೦೦ರಷ್ಟು ಹೆಚ್ಚಿತು. ಇದು ದೆಹಲಿಯನ್ನು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಗೆ ಸೇರಿಸಿದೆ. ೨೦೧೫ರ ವೇಳೆಗೆ ಟೋಕಿಯೊ ಮತ್ತು ಮುಂಬಯಿಯ ನಂತರ ದೆಹಲಿಯು ಪ್ರಪಂಚದಲ್ಲೇ ಮೂರನೇ ಅತೀದೊಡ್ಡ ಜನನಿಬಿಡ ಪ್ರದೇಶವಾಗುವ ನಿರೀಕ್ಷೆಯಿದೆ. ದ್ವಾರಕವು  ಏಷ್ಯಾದ ಅತಿದೊಡ್ಡ ವಾಸಯೋಗ್ಯ ಬಡಾವಣೆಯಾಗಿದ್ದು, ಇದು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿದೆ.

ದೆಹಲಿಯ ೮೨% ಮಂದಿ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. ನಗರದಲ್ಲಿ ಮುಸ್ಲಿಂ (೧೧.೭%), ಸಿಖ್‌‌ (೪.೦%), ಜೈನ (೧.೧%) ಮತ್ತು ಕ್ರೈಸ್ತರ (೦.೯%) ದೊಡ್ಡ ಸಮುದಾಯಗಳೇ ಇವೆ. ಪಾರ್ಸಿಗಳು, ಆಂಗ್ಲೋ-ಭಾರತೀಯರು, ಬೌದ್ಧ ಧರ್ಮದವರು ಮತ್ತು ಯಹೂದಿ‌ಗಳೂ ಇಲ್ಲಿ ಅಲ್ಪಸಂಖ್ಯೆಯಲ್ಲಿದ್ದಾರೆ.

ನಗರದ ಪ್ರಮುಖ ಮಾತನಾಡುವ ಭಾಷೆ ಹಿಂದೂಸ್ಥಾನಿ ಭಾಷೆ ಹಾಗೂ ಲಿಖಿತ ಭಾಷೆ ಇಂಗ್ಲೀಷ್. ನಗರದಲ್ಲಿ ಸಾಮಾನ್ಯವಾಗಿ ಮಾತನಾಡುವ ಇತರ ಭಾಷೆಗಳೆಂದರೆ ಹಿಂದಿ, ಪಂಜಾಬಿ ಮತ್ತು ಉರ್ದುವಿನ ಉಪಭಾಷೆಗಳು. ಭಾರತಾದ್ಯಂತದ ಇತರೆ ಭಾಷಿಕ ಗುಂಪುಗಳು ಈ ನಗರದಲ್ಲಿ ಯಥೇಚ್ಛವಾಗಿ ಗುರುತಿಸಲ್ಪಟ್ಟಿವೆ; ಅವುಗಳಲ್ಲಿ ಪ್ರಮುಖವಾದವು ಪಂಜಾಬಿ, ಹರಿಯಾಣಿ, UP, ಬಿಹಾರಿ, ಬಂಗಾಳಿ, ತಮಿಳು, ರಾಜಸ್ಥಾನಿ, ತೆಲುಗು, ಈಶಾನ್ಯ, ಕನ್ನಡ, ಮಲಯಾಳಂ, ಮರಾಠಿ ಮತ್ತು ಗುಜರಾತಿ.

ಒಂದು ಶತಕೋಟಿ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದ ೩೫ ನಗರಗಳಿಗೆ ಹೋಲಿಸಿದರೆ ೨೦೦೫ರಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಪ್ರತಿಶತ (೧೬.೨%) ಅಪರಾಧಗಳು ವರದಿಯಾಗಿವೆ. ರಾಷ್ಟ್ರದಲ್ಲಿ ಅತಿ ಹೆಚ್ಚು ಮಹಿಳಾಪರಾಧ (೨೭.೬ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಪ್ರತೀ ೧೦೦,೦೦೦ಗೆ ೧೪.೧) ಮತ್ತು ಬಾಲಾಪರಾಧ (೬.೫ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಪ್ರತೀ ೧೦೦,೦೦೦ಗೆ ೧.೪)ಗಳನ್ನೂ ನಗರ ಕಂಡಿದೆ.

ಭಾರತದ ರಾಜಧಾನಿ ದೆಹಲಿಯ ಸಂಸ್ಕೃತಿಯ ಮೇಲೆ ಅದರ ದೀರ್ಘಕಾಲೀನ ಇತಿಹಾಸ ಮತ್ತು ಐತಿಹಾಸಿಕ ಸಾಂಗತ್ಯವು ಪ್ರಭಾವ ಬೀರಿದೆ. ಇದನ್ನು ನಗರದಲ್ಲಿ ಕಂಡುಬರುವ ಅನೇಕ ಪ್ರಮುಖ ದಾಖಲೆಗಳ ನಿದರ್ಶನದ ಮೂಲಕ ನಿರೂಪಿಸಬಹುದು; ಭಾರತದ ಪುರಾತತ್ವಶಾಸ್ತ್ರ ಸಮೀಕ್ಷೆಯು ದೆಹಲಿಯಲ್ಲಿ ೧೨೦೦ ಪುರಾತನ ಕಟ್ಟಡಗಳನ್ನು ಮತ್ತು ೧೭೫ ಸ್ಮಾರಕಗಳನ್ನು ಪತ್ತೆಹಚ್ಚಿದೆ. ಇದು ದೆಹಲಿಯನ್ನು ರಾಷ್ಟ್ರೀಯ ಪುರಾತನ ಪ್ರದೇಶವನ್ನಾಗಿ ಮಾಡಿದೆ. ಹಳೆ ನಗರದಲ್ಲಿ ಮೊಘಲರು ಮತ್ತು ಟರ್ಕಿಯ ಆಡಳಿತಗಾರರು ಜಾಮ ಮಸೀದಿ (ಭಾರತದ ಅತಿ ದೊಡ್ಡ ಮಸೀದಿ) ಮತ್ತು ಕೆಂಪು ಕೋಟೆಯಂತಹ ಅನೇಕ ವಾಸ್ತುಶಿಲ್ಪ ಅದ್ಭುತಗಳನ್ನು ನಿರ್ಮಿಸಿದ್ದಾರೆ.

ಮೂರು ವಿಶ್ವ ಪುರಾತನ ಪ್ರದೇಶಗಳಾದ ಕೆಂಪು ಕೋಟೆ, ಕುತುಬ್‌ ಮಿನಾರ್‌ ಮತ್ತು ಹೂಮಾಯುನ್‌ನ ಸಮಾಧಿಗಳು ದೆಹಲಿಯಲ್ಲಿವೆ. ಇತರ ಸ್ಮಾರಕಗಳೆಂದರೆ - ಇಂಡಿಯಾ ಗೇಟ್‌, ಜಂತರ್ ಮಂತರ್ (೧೮ನೇ ಶತಮಾನದ ಖಗೋಳ ಸಂಬಂಧದ ವೀಕ್ಷಣಾಲಯ) ಮತ್ತು ಪುರಾಣ ಖಿಲಾ (೧೬ನೇ ಶತಮಾನದ ಕೋಟೆ). ಲಕ್ಷ್ಮಿನಾರಾಯಣ ದೇವಾಲಯ, ಅಕ್ಷರಧಾಮ ಮತ್ತು ಬಹಾ ಕಮಲ ದೇವಾಲಯ ಮೊದಲಾದವುಗಳು ಆಧುನಿಕ ವಾಸ್ತುಶಿಲ್ಪಕ್ಕೆ ಉದಾಹರಣೆಗಳು.

ರಾಜ್‌ ಘಾಟ್‌ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಸ್ಮಾರಕಗಳು ಮಹಾತ್ಮಾ ಗಾಂಧಿ ಮತ್ತು ಇತರ ಗಣ್ಯ ವ್ಯಕ್ತಿಗಳ ಸ್ಮಾರಕಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿದೆ. ನವ ದೆಹಲಿಯು ಬ್ರಿಟೀಷ್ ವಸಹಾತು ಶೈಲಿಯ ವಾಸ್ತುಶಿಲ್ಪವನ್ನು ನೆನಪಿಸುವ ಅನೇಕ ಸರಕಾರಿ ಕಟ್ಟಡಗಳಿಗೆ ಮತ್ತು ಅಧಿಕೃತ ನಿವಾಸಗಳಿಗೆ ಮನೆಯಾಗಿದೆ. ರಾಷ್ಟ್ರಪತಿ ಭವನ, ಆಡಳಿತ ಕಛೇರಿ, ರಾಜ್‌ಪಥ್, ಭಾರತದ ಸಂಸತ್ತು ಮತ್ತು ವಿಜಯ್ ಚೌಕ್ ಮೊದಲಾದ ಪ್ರಮುಖ ಕಟ್ಟಡಗಳೂ ಇಲ್ಲಿವೆ. ಸಫ್ದರ್ಜಂಗ್‌ನ ಸಮಾಧಿಯು ಮೊಘಲ್ ಉದ್ಯಾನ ಶೈಲಿಗೆ ಉದಾಹರಣೆಯಾಗಿದೆ.

ದೆಹಲಿಯ ಸಾಂಗತ್ಯ ಮತ್ತು ರಾಜಧಾನಿ ನವ ದೆಹಲಿಗೆ ಭೌಗೋಳಿಕವಾಗಿ ಹತ್ತಿರವಿರುವುದು ರಾಷ್ಟ್ರೀಯ ದಿನಾಚರಣೆಗಳು ಮತ್ತು ರಜಾದಿನಗಳ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಗಣರಾಜ್ಯ ದಿನ, ಸ್ವಾತಂತ್ರ್ಯ ದಿನ ಮತ್ತು ಗಾಂಧಿ ಜಯಂತಿ  (ಗಾಂಧಿಯವರ ಜನ್ಮದಿನ) ಮೊದಲಾದ ರಾಷ್ಟ್ರೀಯ ದಿನಾಚರಣೆಗಳನ್ನು ದೆಹಲಿಯಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತ ಸ್ವಾತಂತ್ರ್ಯ ದಿನದಂದು (೧೫ ಆಗಸ್ಟ್) ಭಾರತದ ಪ್ರಧಾನ ಮಂತ್ರಿಯವರು ಕೆಂಪು ಕೋಟೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ.

ದೆಹಲಿಯ ಹೆಚ್ಚಿನ ನಿವಾಸಿಗಳು ಸ್ವಾತಂತ್ರ್ಯದ ಸಂಕೇತವಾದ ಗಾಳಿಪಟಗಳನ್ನು ಹಾರಿಸುವ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಗಣರಾಜ್ಯ ದಿನದ ಪಥಸಂಚಲನವು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಿಲಿಟರಿಯನ್ನು ಪ್ರದರ್ಶಿಸುವ ಅತಿ ದೊಡ್ಡ ಸಾಂಸ್ಕೃತಿಕ ಮತ್ತು ಸೇನಾ ಮೆರವಣಿಗೆಯಾಗಿದೆ.

ಶತಮಾನಗಳಿಂದಲೇ ದೆಹಲಿಯು ಅದರ ಸಮ್ಮಿಶ್ರ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಫೂಲ್ ವಾಲೋ ಕಿ ಸೈರ್‌ ಎಂಬ ಪ್ರತೀವರ್ಷ ಸೆಪ್ಟೆಂಬರ್‌ನಲ್ಲಿ ಆಚರಿಸಲ್ಪಡುವ ಒಂದು ಆಚರಣೆಯು ಇದಕ್ಕೆ ನಿಜವಾದ ಸಂಕೇತವಾಗಿದೆ. ಹೂವುಗಳನ್ನು ಮತ್ತು ಹೂಗಳಿಂದ ಅಲಂಕರಿಸಿದ ಬೀಸಣಿಗೆಗಳನ್ನು (ಇದನ್ನು ಪಂಖ ಎನ್ನುತ್ತಾರೆ) ೧೩ನೇ ಶತಮಾನದ ಸೂಫಿ ಸಂತ ಕ್ವಾಜಾ ಭಕ್ತಿಯಾರ್ ಕಾಕಿಯ ಪವಿತ್ರ ಸ್ಮಾರಕಕ್ಕೆ ಮತ್ತು ಮೆಹ್ರೌಲಿಯಲ್ಲಿರುವ ಯೋಗ್ಮಾಯ ದೇವಾಲಯಕ್ಕೆ ಆ ದಿನದಂದು ಅರ್ಪಿಸಲಾಗುತ್ತದೆ.

ದೀಪಾವಳಿ (ಬೆಳಕಿನ ಹಬ್ಬ), ಮಹಾವೀರ ಜಯಂತಿ, ಗರುನಾನಕರ ಜನ್ಮದಿನ, ದುರ್ಗಾ ಪೂಜಾ, ಹೋಳಿ, ಲೋಹ್ರಿ, ಮಹಾ ಶಿವರಾತ್ರಿ, ಈದ್-ಉಲ್-ಫಿತರ್ ಮತ್ತು ಬುದ್ಧ ಜಯಂತಿ ಮೊದಲಾದವುಗಳು ನಗರದ ಇನ್ನಿತರ ಧಾರ್ಮಿಕ ಹಬ್ಬಗಳು. ಕುತುಬ್ ಉತ್ಸವವು ಒಂದು ಸಾಂಸ್ಕೃತಿಕ ದಿನಾಚರಣೆ.

ಕುತುಬ್‌ ಮಿನಾರ್‌ ಹಿನ್ನೆಲೆಯನ್ನು ಹೇಳುವ ಈ ದಿನಾಚರಣೆಯ ದಿನದಂದು ರಾತ್ರಿಯಿಡೀ ಭಾರತದ ಖ್ಯಾತ ಸಂಗೀತಗಾರರ ಮತ್ತು ನೃತ್ಯಗಾರರ ಪ್ರದರ್ಶನಗಳು ನಡೆಯುತ್ತವೆ. ಗಾಳಿಪಟ ಹಾರಿಸುವ ಹಬ್ಬ, ಅಂತರರಾಷ್ಟ್ರೀಯ ಮಾವಿನ ಹಣ್ಣಿನ ಉತ್ಸವ ಮತ್ತು ವಸಂತ ಪಂಚಮಿ  (ವಸಂತಕಾಲ ಹಬ್ಬ) ಮೊದಲಾದ ದಿನಾಚರಣೆಗಳನ್ನು ದೆಹಲಿಯಲ್ಲಿ ಪ್ರತೀವರ್ಷ ಆಚರಿಸಲಾಗುತ್ತದೆ.

ಏಷ್ಯಾದ ಅತೀದೊಡ್ಡ ಆಟೋ ಪ್ರದರ್ಶನ ಆಟೋ ಎಕ್ಸ್‌ಪೋ ಎರಡು ವರ್ಷಕ್ಕೊಮ್ಮೆ ದೆಹಲಿಯಲ್ಲಿ ನಡೆಯುತ್ತದೆ.

ವಿಶ್ವ ಪುಸ್ತಕ ಉತ್ಸವವು ಪ್ರಗತಿ ಮೈದಾನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಸುಮಾರು ೨೩ ರಾಷ್ಟ್ರಗಳು ಭಾಗವಹಿಸುವ ಈ ಉತ್ಸವವು ಪ್ರಪಂಚದಲ್ಲೇ ಎರಡನೇ ಅತಿ ದೊಡ್ಡ ಪುಸ್ತಕ ಪ್ರದರ್ಶನವಾಗಿದೆ. ದೆಹಲಿಯು ಹೆಚ್ಚು ಸಂಖ್ಯೆಯ ಓದುಗರನ್ನು ಹೊಂದಿರುವುದರಿಂದ ಅದನ್ನು ಭಾರತದ ಪುಸ್ತಕಗಳ ರಾಜಧಾನಿ ಎಂದೂ ಕರೆಯುತ್ತಾರೆ.

ಕಬಾಬ್ ಮತ್ತು ಬಿರಿಯಾನಿಯಂತಹ ಪಂಜಾಬಿ ಮತ್ತು ಮೊಘಲ್ ರುಚಿ ತಿನಿಸುಗಳು ದೆಹಲಿಯಲ್ಲಿ ಸುಪ್ರಸಿದ್ಧ.

ಪ್ರಪಂಚದ ಎಲ್ಲೆಡೆಯಿಂದ ಬಂದವರಿಂದಾಗಿ ಹಾಗೂ ವಲಸಿಗರಿಂದಾಗಿ ದೆಹಲಿಯಲ್ಲಿ,  ರಾಜಸ್ಥಾನಿ, ಮಹಾರಾಷ್ಟ್ರಿಯನ್, ಬಂಗಾಳಿ, ಹೈದರಾಬಾದಿ ಅಡುಗೆ ಪದ್ಧತಿಗಳು ಮತ್ತು ಇಡ್ಲಿ, ಸಾಂಬಾರ್ ಮತ್ತು ದೋಸೆಯಂತಹ ದಕ್ಷಿಣ ಭಾರತ ಆಹಾರ ತಿನಿಸುಗಳೆಲ್ಲವೂ ಲಭ್ಯವಿದೆ.

ಸ್ಥಳೀಯ ತಿನಿಸುಗಳೆಂದರೆ ಚಾಟ್‌  ಮತ್ತು ದಹಿ-ಪಾಪ್ರಿ . ಇಟಾಲಿಯನ್, ಜಪಾನೀಸ್, ಮತ್ತು ಚೈನೀಸ್ ಶೈಲಿಗಳ ಅಂತರರಾಷ್ಟ್ರೀಯ ಅಡುಗೆಯನ್ನು ಬಡಿಸುವ ಅನೇಕ ಚಿಕ್ಕ ಆಹಾರ ಮಳಿಗೆಗಳು ದೆಹಲಿಯಲ್ಲಿವೆ.

ದೆಹಲಿ ಐತಿಹಾಸಿಕವಾಗಿ ಯಾವತ್ತೂ ಉತ್ತರ ಭಾರತದ ಪ್ರಮುಖ ವ್ಯಾಪಾರ ಕೇಂದ್ರವಾಗಿ ಉಳಿದಿದೆ. ಶ್ರೀಮಂತ ಮೊಘಲ್‌ ಗತಕಾಲದ ಆಸ್ತಿಯು ಹಳೆ ದೆಹಲಿಯಲ್ಲಿ ಇನ್ನೂ ಇದೆ. ಅದನ್ನು ಹಳೆ ನಗರದ ಗೋಜಲುಗೋಜಲಾದ ಓಣಿಗಳಲ್ಲಿ ಮತ್ತು ಕಿಕ್ಕಿರಿದು ತುಂಬಿರುವ ಬಜಾರುಗಳಲ್ಲಿ ಕಾಣಬಹುದು.

ಹಳೆ ನಗರದ ಮಲಿನ ಮಾರುಕಟ್ಟೆಗಳು ಎಲ್ಲ ಶ್ರೇಣಿಯ ಸಾರಸಂಗ್ರಹ ಉತ್ಪನ್ನಗಳನ್ನು ಹೊಂದಿವೆ. ಕೊಳಚೆ ಪ್ರದೇಶದ ಮಾವಿನಕಾಯಿ, ನಿಂಬೆ ಮತ್ತು ಬಿಳಿಬದನೆಯ ಉಪ್ಪಿನಕಾಯಿಯಿಂದ ಹಿಡಿದು ಸಕ್ಕರೆ-ಲೇಪನದ ಔಷಧಿ ಗುಟುಕಗಳು, ಬೆಳ್ಳಿ ಆಭರಣಗಳು, ಮದುವೆ ಹೆಣ್ಣಿನ ಉಡುಪುಗಳು, ಕತ್ತರಿಸದ ಮತ್ತು ನಾರಿನ ಬಟ್ಟೆಗಳು, ಸಂಬಾರ ಪದಾರ್ಥಗಳು, ಸಿಹಿತಿನಿಸುಗಳವರೆಗೆ ಎಲ್ಲಾ ರೀತಿಯ ವಸ್ತುಗಳೂ ಇಲ್ಲಿ ಲಭ್ಯವಿವೆ. ಕೆಲವು ಹಳೆ ರಾಜಯೋಗ್ಯ ಹಾವೆಲಿಸ್  (ಭವ್ಯ ಮಹಲುಗಳು) ಹಳೆ ನಗರದಲ್ಲಿ ಇನ್ನೂ ಇವೆ.

ದೆಹಲಿಯಲ್ಲಿನ ಮೂರು-ಶತಮಾನ-ಹಳೆಯ ವ್ಯಾಪಾರ ಕೇಂದ್ರ ಚಾಂದನಿ ಚೌಕ್ ಆಭರಣ ಮತ್ತು ಝರಿ  ಸೀರೆಗಳಿಗೆ ಹೆಚ್ಚು ಹೆಸರುವಾಸಿಯಾದ ವ್ಯಾಪಾರ ಕೇಂದ್ರವಾಗಿದೆ.

ಜರ್ದೋಜಿ  (ಚಿನ್ನದ ಎಳೆಗಳಿಂದ ಮಾಡಿದ ಕಸೂತಿ ಕೆಲಸ) ಮತ್ತು ಮೀನಕರಿ  (ಗಾಜಿನ ಕಲಾಕೃತಿಗಳು) ಮೊದಲಾದವುಗಳನ್ನು ದೆಹಲಿಯ ಕಲೆ ಮತ್ತು ಕರಕುಶಲ ಕೆಲಸಗಳಲ್ಲಿ ಪ್ರಮುಖವಾಗಿ ಕಾಣಬಹುದು. ದಿಲ್ಲಿ ಹಾತ್‌, ಹೌಜ್ ಖಾಸ್‌, ಪ್ರಗತಿ ಮೈದಾನದಲ್ಲಿ ವಿವಿಧ ರೀತಿಯ ಭಾರತೀಯ ಕರಕುಶಲ ಮತ್ತು ಕೈಮಗ್ಗದ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ. ಒಟ್ಟಾರೆ ಹೇಳುವುದಾದರೆ ದೆಹಲಿಯು ಕ್ರಮೇಣವಾಗಿ ಇಡೀ ದೇಶದ ಬಹುಸಂಖ್ಯಾತ ಮಾನವಕುಲವನ್ನು ತನ್ನಲ್ಲಿ ಅಂತರ್ಗತ ಮಾಡಿಕೊಂಡಿದೆ, ಅಲ್ಲದೆ ವಿವಿಧ ಸಾಂಸ್ಕೃತಿಕ ಶೈಲಿಗಳ ಅಪರೂಪದ ಸಮುದಾಯಗಳನ್ನು  ರೂಪಿಸಿದೆ.

ದೆಹಲಿಯು ಈ ಕೆಳಗಿನ ಸೋದರ ನಗರಗಳನ್ನು ಹೊಂದಿದೆ:

ಚಿತ್ರ:AIIMS central lawn.jpg|thumb|ನಿರಂತರವಾಗಿ ಭಾರತದ ಉತ್ತಮ ವೈದ್ಯಕೀಯ ಕಾಲೇಜು ಆಗಿ ಆಯ್ಕೆಗೊಂಡದ್ದರಿಂದ [285] ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು ವೈದ್ಯಕೀಯ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಜಾಗತಿಕ ನಾಯಕನಂತೆ ಮೆರೆಯುತ್ತಿದೆ

ದೆಹಲಿಯ ಶಾಲೆಗಳು ಮತ್ತು ಉನ್ನತ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣ ನಿರ್ದೇಶನ ಮಂಡಳಿ, NCT ಸರಕಾರ, ಅಥವಾ ಖಾಸಗಿ ಸಂಸ್ಥೆಗಳಿಂದ ನಿರ್ವಹಿಸಲ್ಪಡುತ್ತದೆ. ೨೦೦೪–೦೫ರ ವೇಳೆಗೆ ದೆಹಲಿಯಲ್ಲಿ ೨,೫೧೫ ಪ್ರಾಥಮಿಕ, ೬೩೫ ಮಾಧ್ಯಮಿಕ, ೫೦೪ ಪ್ರೌಢ ಮತ್ತು ೧,೨೦೮ ಹಿರಿಯ ಪ್ರೌಢ ಶಾಲೆಗಳಿದ್ದವು. ಆ ವರ್ಷದಲ್ಲಿ ನಗರದಲ್ಲಿನ ಉನ್ನತ ಶೈಕ್ಷಣಿಕ ಸಂಸ್ಥೆಗಳು ೧೬೫ ಕಾಲೇಜುಗಳನ್ನು ಸೇರಿಸಿಕೊಂಡವು. ಅವುಗಳಲ್ಲಿ ಐದು ವೈದ್ಯಕೀಯ ಕಾಲೇಜುಗಳು ಮತ್ತು ಎಂಟು ಇಂಜಿನಿಯರಿಂಗ್ ಕಾಲೇಜುಗಳು , ಆರು ವಿಶ್ವವಿದ್ಯಾಲಯಗಳು—DU, JNU, JMI, GGSIPU, IGNOU ಮತ್ತು ಜಾಮಿಯಾ ಹಂದರ್ದ್ ಹಾಗೂ ಒಂಬತ್ತು ಸ್ವಾಯತ್ತ ವಿಶ್ವವಿದ್ಯಾಲಯಗಳು. ಅದರಲ್ಲಿ GGSIPU ಒಂದು ಮಾತ್ರ ರಾಜ್ಯ ವಿಶ್ವವಿದ್ಯಾಲಯ; IGNOU ತೆರೆದ ವಿಶ್ವವಿದ್ಯಾಲಯ; ಉಳಿದೆಲ್ಲವೂ ಕೇಂದ್ರ ವಿಶ್ವವಿದ್ಯಾಲಯಗಳು.

ಚಿತ್ರ:IITDelhiMath.jpg|thumb|left|ಭಾರತದ ಉತ್ತಮ ವೈದ್ಯಕೀಯ ಕಾಲೇಜುಗಳಂತೆ ಸುಸಂಗತವಾಗಿ ಶ್ರೇಣಿಗೊಳ್ಳುತ್ತಾ, [285] ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು ವೈದ್ಯಕೀಯ ಸಂಶೋಧನೆ ಮತ್ತು ಚಿಕಿತ್ಸೆಯಲ್ಲಿ ಜಾಗತಿಕ ನಾಯಕನಂತೆ ಕಾರ್ಯನಿರ್ವಹಿಸುತ್ತಿದೆ

ಇಂಗ್ಲೀಷ್ ಅಥವಾ ಹಿಂದಿ ಭಾಷಾ ಮಾಧ್ಯಮವಾಗಿರುವ ದೆಹಲಿಯ ಖಾಸಗಿ ಶಾಲೆಗಳು ಎರಡು ನಿರ್ವಹಣಾ ಘಟಕಗಳಲ್ಲಿ ಒಂದಕ್ಕೆ ಒಳಪಟ್ಟಿರುತ್ತವೆ. ಆ ಘಟಕಗಳೆಂದರೆ - ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್ ಆಫ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ (CISCE) ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE). ೨೦೦೪–೦೫ರಲ್ಲಿ ದೆಹಲಿಯಲ್ಲಿ ಸುಮಾರು ೧೫.೨೯ ಲಕ್ಷ (೧.೫೨೯ ದಶಲಕ್ಷ) ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಗಳಿಗೆ, ೮.೨೨ ಲಕ್ಷ (೦.೮೨೨ ದಶಲಕ್ಷ) ವಿದ್ಯಾರ್ಥಿಗಳು ಮಾಧ್ಯಮಿಕ ಶಾಲೆ ಗಳಿಗೆ ಮತ್ತು ೬.೬೯ ಲಕ್ಷ (೦.೬೬೯ ದಶಲಕ್ಷ) ಪ್ರೌಢಶಾಲೆಗಳಿಗೆ ದಾಖಲಾಗಿದ್ದರು. ಒಟ್ಟು ದಾಖಲಾತಿಯಲ್ಲಿ ೪೯% ವಿದ್ಯಾರ್ಥಿನಿಯರಾಗಿದ್ದರು. ಅದೇ ವರ್ಷ ದೆಹಲಿ ಸರಕಾರ ರಾಜ್ಯದ ಸ್ಥಳೀಯ ಒಟ್ಟು ಉತ್ಪನ್ನದ ೧.೫೮ % ರಿಂದ ೧.೯೫%ರವರೆಗಿನ ಉತ್ಪನ್ನವನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಿತು.

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು, Dr. ರಾಮ್ ಮನೋಹರ್ ಲೋಹಿಯ ಆಸ್ಪತ್ರೆ  PGIMER, ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ದೆಹಲಿ, ನೇತಾಜಿ ಸುಭಾಸ್ ತಾಂತ್ರಿಕ ಶಿಕ್ಷಣ ಸಂಸ್ಥೆ, ದೆಹಲಿ ಇಂಜಿನಿಯರಿಂಗ್ ಕಾಲೇಜು, ಗುರು ಗೋವಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ, ವ್ಯವಸ್ಥಾಪನಾ ಅದ್ಯಯನ ಶಾಖೆ, ಭಾರತೀಯ ಕಾನೂನು ಶಿಕ್ಷಣ ಸಂಸ್ಥೆ, ದೆಹಲಿ ಅರ್ಥಶಾಸ್ತ್ರ ಶಿಕ್ಷಣ ಸಂಸ್ಥೆ, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ವಿದೇಶಿ ವ್ಯಾಪಾರ ಶಿಕ್ಷಣ ಸಂಸ್ಥೆ ಮೊದಲಾದವುಗಳು ದೆಹಲಿಯಲ್ಲಿರುವ ಪ್ರಮುಖ ಉನ್ನತ ಶಿಕ್ಷಣ ಅಥವಾ ಸಂಶೋಧನಾ ಸಂಸ್ಥೆಗಳು. ೨೦೦೮ರ ಸಮೀಕ್ಷೆಯ ಪ್ರಕಾರ ದೆಹಲಿಯ ಒಟ್ಟು ನಿವಾಸಿಗಳಲ್ಲಿ ಸುಮಾರು ೧೬% ಜನರು ಕನಿಷ್ಠ ಕಾಲೇಜು ಪದವಿಯನ್ನು ಹೊಂದಿದ್ದರು.

ಭಾರತದ ರಾಜಧಾನಿ ನವ ದೆಹಲಿಯು ಸಂಸತ್ತು ಅಧಿವೇಶನದ ನಿರಂತರ ದೂರದರ್ಶನ ಪ್ರಸಾರ ಸೇರಿದಂತೆ, ರಾಜಕೀಯ ವರದಿಗಳ ಕೇಂದ್ರ ಬಿಂದು. ಸರ್ಕಾರಿ ಸ್ವಾಮ್ಯದ ಪ್ರೆಸ್‌ ಟ್ರಸ್ಟ್ ಆಫ್‌ ಇಂಡಿಯಾ ಮತ್ತು ದೂರದರ್ಶನ ಮೊದಲಾದ ಅನೇಕ ದೇಶವ್ಯಾಪಿ ಮಾಧ್ಯಮ ಸಂಸ್ಥೆಗಳು ಈ ನಗರದಲ್ಲಿವೆ. ಎರಡು ಉಚಿತ ಭೂ-ದೂರದರ್ಶನ ಚಾನೆಲ್‌ಗಳನ್ನು ದೂರದರ್ಶನ ಪ್ರಸಾರ ಮಾಡುತ್ತದೆ. ಅಂತೆಯೇ ಅನೇಕ ಹಿಂದಿ, ಇಂಗ್ಲೀಷ್ ಮತ್ತು ಪ್ರಾದೇಶಿಕ ಭಾಷೆಗಳು  ಮತ್ತು  ಕೇಬಲ್ ಚಾನೆಲ್‌ಗಳನ್ನು ಬಹು ವ್ಯವಸ್ಥೆ ನಿರ್ವಾಹಕರು ಪ್ರಸಾರ ಮಾಡುತ್ತಾರೆ.

ಉಪಗ್ರಹ ಟೆಲಿವಿಷನ್ ನಗರದಲ್ಲಿ ಇನ್ನೂ ಹೆಚ್ಚು-ಪ್ರಮಾಣದ ಚಂದಾದಾರರನ್ನು ಪಡೆದುಕೊಳ್ಳಬೇಕಿದೆ.

ಪತ್ರಿಕೋದ್ಯಮವು ದೆಹಲಿಯಲ್ಲಿ ಪ್ರಸಿದ್ಧ ಸುದ್ದಿ ಮಾಧ್ಯಮವಾಗಿದೆ. ೨೦೦೪–೦೫ರ ಸಂದರ್ಭದಲ್ಲಿ ನಗರದಲ್ಲಿ ೧೩ ಭಾಷೆಗಳ ೧೦೨೯ ವಾರ್ತಾಪತ್ರಿಕೆಗಳು ಪ್ರಕಟಿಸಲ್ಪಟ್ಟಿದ್ದವು. ಅವುಗಳಲ್ಲಿ ೪೯೨ ಹಿಂದಿ ಭಾಷೆಯ ವಾರ್ತಾಪತ್ರಿಕೆಗಳು. ಅದರಲ್ಲಿ ಪ್ರಮುಖವಾದವುಗಳೆಂದರೆ - ನವಭಾರತ್ ಟೈಮ್ಸ್‌ , ಹಿಂದೂಸ್ಥಾನ್ ದೈನಿಕ್‌ , ಪಂಜಾಬ್‌ ಕೇಸರಿ , ದೈನಿಕ್ ಜಾಗರಣ್‌ , ದೈನಿಕ್ ಭಾಸ್ಕರ್‌  ಮತ್ತು ದೈನಿಕ್ ದೇಶಬಂಧು . ಇಂಗ್ಲೀಷ್ ಭಾಷೆ ವಾರ್ತಾಪತ್ರಿಕೆಗಳಲ್ಲಿ ಒಂದಾಗಿರುವ ದಿ ಹಿಂದುಸ್ಥಾನ್‌ ಟೈಮ್ಸ್‌  ಅತಿ ದೊಡ್ಡ ದೈನಿಕವಾಗಿತ್ತು, ಮತ್ತು ಇದರ ದಶಲಕ್ಷದಷ್ಟು ಪ್ರತಿಗಳು ಮಾರಾಟವಾಗುತ್ತಿದ್ದವು.




#Article 165: ಆಗ್ರಾ (588 words)


ಆಗ್ರಾ ನಗರ ಭಾರತ ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ ತಾಜ್ ಮಹಲ್ ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ.

ಆಗ್ರಾವು 1526 ರಿಂದ 1628ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾಲದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು. ಮೊಘಲ್ ಸಾಮ್ರಾಟ ಬಾಬರ್ 1526 ರಲ್ಲಿ ಆಗ್ರಾವನ್ನು ಈ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನು. ಮೊಘಲ್ ಸಾಮ್ರಾಟರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ನಿಷ್ಣಾತರು. ಈ ನಗರವನ್ನು ಆಳಿದ ನಿಕಟ ಪೂರ್ವ ರಾಜ, ರಾಣಿಯರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಇವರು ನಿರ್ಮಿಸಿದ ಅತ್ಯಂತ ವೈಭವಯುತ ಸ್ಮಾರಕಗಳು, ಇಂದಿಗು ವಾಸ್ತುಶಿಲ್ಪದ ಹೆಗ್ಗುರುತುಗಳಾಗಿ ಉಳಿದುಕೊಂಡು, ಅವರ ನೈಪುಣ್ಯತೆಯನ್ನು ಇಂದಿನವರಿಗು ಸಾರಿ ಸಾರಿ ಹೇಳುತ್ತಿವೆ.
ಅದರಲ್ಲಿಯೂ ಚಕ್ರವರ್ತಿ ಶಾ ಜಹಾನ್ ತನ್ನ ಪ್ರೀತಿ ಪಾತ್ರ ಮಡದಿಗಾಗಿ ನಿರ್ಮಿಸಿದ, ಸರಿಸಾಟಿಯಿಲ್ಲದ ಪ್ರೀತಿಯ ಧ್ಯೋತಕವಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ತಾಜ್ ಮಹಲ್ ಗೋರಿಯು ಅಪರಿಮಿತ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡು ನಿಂತಿದೆ. ಇದರ ಜೊತೆಗೆ ಅಕ್ಬರ್ ಚಕ್ರವರ್ತಿಯು ಆಗ್ರಾ ನಗರದ ಹೊರಭಾಗದಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳನ್ನು ನಿರ್ಮಿಸಿ ಈ ಊರಿಗೆ ಮತ್ತಷ್ಟು ಮೆರಗು ನೀಡಿದನು.

ಆಗ್ರಾ ಶುಷ್ಕ ಹವಾಮಾನ ಹೊಂದಿದೆ. ಸಾಧಾರಣ ಚಳಿ, ದೀರ್ಘವಾದ, ಶುಷ್ಕ ಬೇಸಗೆ ಮತ್ತು ಕಡಿಮೆ ಅವಧಿಯ ಮಾನ್ಸೂನ್ ಇಲ್ಲಿಯ ಹವಾಮಾನ ವೈಶಿಷ್ಟ್ಯ. ಇಲ್ಲಿಯ ಮಾನ್ಸೂನ್ ದೇಶದ ಉಳಿದೆಡೆಯಂತೆ ತೀಕ್ಷ್ಣವಾಗಿಲ್ಲ.

೨೦೧೧ರ ಜನಗಣತಿಯಂತೆ ಆಗ್ರಾದ ಜನಸಂಖ್ಯೆ ೧೭,೭೫,೧೩೪. ೫೩% ಪುರುಷರು ಮತ್ತು ೪೭% ಮಹಿಳೆಯರು. ಸಾಕ್ಷರತೆಯ ಪ್ರಮಾಣ ೮೧%. ಹಿಂದೂ, ಇಸ್ಲಾಂ ಮತ್ತು ಜೈನ ಧರ್ಮಗಳು ಮುಖ್ಯ ಧರ್ಮಗಳು.

ಆಗ್ರಾದ ಪ್ರದೇಶದ ಉಲ್ಲೇಖವು ಮಹಾಭಾರತ ಗ್ರಂಥದಲ್ಲಿದ್ದರೂ ೧೫೦೪ ರಲ್ಲಿ ದೆಹಲಿಯ ಸುಲ್ತಾನನಾದ ಸಿಕಂದರ್ ಲೋಧಿಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ ಇಬ್ರಾಹಿಂ ಲೋಧಿಯು ಇದನ್ನು ಮೊದಲನೆಯ ಪಾಣಿಪತ್ ಯುದ್ಧ ದಲ್ಲಿ ಬಾಬರನಿಗೆ ಸೋಲುವವರೆಗೆ ಎಂದರೆ ೧೫೨೬ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ೧೫೩೦ರಲ್ಲಿ ಬಾಬರ್‍ನ ನಿಧನದ ನಂತರ ಅವನ ಮಗ ಹುಮಾಯೂನ್ ಶೇರ್ ಶಾಹ್‍ನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ. ಹುಮಾಯೂನನ ಮಗ ಅಕ್ಬರ್ ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ. ಇದರ ನಂತರ ಆಗ್ರಾದ ಸುವರ್ಣ ಯುಗ. ಅಕ್ಬರ್,ಜಹಾಂಗೀರ್, ಷಾ ಜಹಾನ್ ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು. ಮುಂದೆ ಔರಂಗಜೇಬ ೧೬೫೩ರಲ್ಲಿ ಔರಂಗಾಬಾದ್ ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು. ಮೊಘಲರ ಅವನತಿಯ ನಂತರ ಈ ಪ್ರದೇಶ ೧೮೦೩ ರ ವರೆಗೆ ಮರಾಠರ ಸ್ವಾಧೀನವಿದ್ದು ಇದರ ಹೆಸರು ಪುನಃ ಆಗ್ರಾ ಎಂದು ಬದಲಾಯಿತು. ಮುಂದೆ ಇದು ಬ್ರಿಟಿಷರ ವಶವಾಯಿತು.ಇಲ್ಲಿರುವ ತಾಜ್ ಮಹಲ್, ಆಗ್ರಾ ಕೋಟೆ ಹಾಗೂ ಫತೇಪುರ್ ಸಿಕ್ರಿ ವಿಶ್ವ ಪರಂಪರೆಯ ತಾಣಗಳಾಗಿ ಘೋಷಿತವಾಗಿವೆ.

ಆಗ್ರಾವು ಆಗ್ರಾ , ಜೈಪುರ್ ಮತ್ತು ದೆಹಲಿಗಳನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭಾಗವಾಗಿದೆ. ದೆಹಲಿಗೆ ಇದು ಹತ್ತಿರವಿರುವುದರಿಂದಾಗಿ ಹಲವಾರು ಪ್ರವಾಸಿಗರು ಒಂದು ದಿನದ ಪ್ರವಾಸದ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ತಾಜ್ ಮಹಲ್ ಜೊತೆಗೆ ಮತ್ತಷ್ಟು ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರಿಗಾಗಿ ಇಲ್ಲಿ ಹಲವಾರು ಹೋಟೆಲ್ ಮತ್ತು ಲಾಡ್ಜ್ ಗಳು ಇಲ್ಲಿವೆ.
ಸಮೀಪದಲ್ಲಿರುವ ಫತೇಪುರ್ ಸಿಕ್ರಿ ಮತ್ತು ಮಥುರಾಗಳಿಗೆ ಇಲ್ಲಿ ಸ್ಥಳ ವೀಕ್ಷಣಾ ಪ್ರವಾಸಗಳು ಲಭ್ಯವಿವೆ. ಈ ನಗರದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಒಂದು ಮಾರುಕಟ್ಟೆಯಿದೆ. ಇದರಲ್ಲಿ ಪ್ರವಾಸಿಗರು ತಮಗೆ ಬೇಕಾದ ಆಭರಣಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳ್ಳಬಹುದು. ಇದರ ಜೊತೆಗೆ ಇಲ್ಲಿನ ದಲ್ಲಾಳಿಗಳು, ರಿಕ್ಷಾದವರು ಮತ್ತು ಅನಧಿಕೃತ ಮಾರ್ಗದರ್ಶಿಗಳನ್ನು ನಿಭಾಯಿಸಲು ತಯಾರಾಗಿರಿ.

ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡಗಳು ನಿಸ್ಸಂಶಯವಾಗಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಚೀನಿ ಕಾ ರೌಝಾ, ದಿವಾನ್- ಇ-ಅಮ್ ಮತ್ತು ದಿವಾನ್- ಇ-ಖಾಸ್ ಕಟ್ಟಡಗಳು ಮೊಘಲರ ಕಾಲದ ವಾಸ್ತುಶಿಲ್ಪ ವೈಭವದ ಒಳನೋಟವನ್ನು ಒದಗಿಸುತ್ತವೆ. ಇತ್‍ಮಡ್- ಉದ್- ದೌಲಾಹ್ ಸಮಾಧಿ, ಮರಿಯಂ ಝಮಾನಿ ಸಮಾಧಿ, ಜಸ್ವಂತ್ ಕಿ ಛಾತ್ರಿ, ಚೌಸತ್ ಖಂಬ ಮತ್ತು ತಾಜ್ ವಸ್ತು ಸಂಗ್ರಹಾಲಯ ಇಲ್ಲಿ ನೋಡಬೇಕಾಗಿರುವ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿವೆ. 
ಭಾರತದ ಇತರ ನಗರಗಳಂತೆ ಆಗ್ರಾವು ಸಹ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತಿದೆ. ಇಲ್ಲಿರುವ ಜಾಮಾ ಮಸೀದಿಯು ಪ್ರಖ್ಯಾತ ಹಿಂದೂ ದೇವಾಲಯವಾದ ಬಾಗೇಶ್ವರ್ ದೇವಾಲಯದೊಂದಿಗೆ ಸ್ಥಳವನ್ನು ಹಂಚಿಕೊಂಡಿದೆ. ಬೇರೆ ನಗರಗಳಲ್ಲಿರುವಂತೆ ಆಗ್ರಾದಲ್ಲಿ ಸಹ ನಯನ ಮನೋಹರ ತಾಣಗಳು, ವಾಸನೆಗಳು ಮತ್ತು  ಗೌಜು ಗದ್ದಲಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರ ಜೊತೆಗೆ ಸೋಮಿ ಬಾಗ್ ಮತ್ತು ಮೆಹ್ತಾಬ್ ಬಾಗ್‍ನಂತಹ ಪ್ರಶಾಂತವಾದ ಉದ್ಯಾನವನಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ನೋಡಲು ತುಂಬಾ ಸೊಗಸಾಗಿರುತ್ತವೆ. ಅಲ್ಲದೆ ತಾಜ್ ಮಹಲ್ ಸಹ ಜನರ ಗೌಜು ಗದ್ದಲದಿಂದ ದೂರದಲ್ಲಿ ನೆಲೆಗೊಂಡಿದೆ.
ಆಗ್ರಾಗೆ ಕೇವಲ ಪ್ರವಾಸಿಗರು ಮಾತ್ರ ಆಕರ್ಷಿತರಾಗುತ್ತಾರೆ ಎಂದು ತಿಳಿಯಬೇಡಿ. ಇಲ್ಲಿರುವ ಕೀತಂ ಕೆರೆ ಮತ್ತು ಸುರ್ ಸರೋವರ್ ಪಕ್ಷಿಧಾಮಕ್ಕೆ ವಿದೇಶಿ ಹಕ್ಕಿಗಳಾದ  ಹೆರ್ಜಾಲೆ, ಸೈಬಿರಿಯನ್ ಕೊಕ್ಕರೆ, ಸರಸ್ ಕೊಕ್ಕರೆಗಳು, ಬ್ರಾಹ್ಮಣಿ ಬಾತುಕೋಳಿಗಳು, ಗೀಸ್ ಮತ್ತು ಗಡ್‍ವಲ್ ಹಾಗು ಹಂಸಗಳು ಸಹ ಆಕರ್ಷಿತಗೊಂಡು ಭೇಟೀ ನೀಡುತ್ತವೆ.

 
ತಾಜ್ ಮಹಲ್ ಇದು ಪ್ರಪಂಚದ ಪ್ರಸಿದ್ಧ ಕಟ್ಟಡಗಳಲ್ಲಿ ಒಂದು. ಮುಸಲ್ಮಾನ ಶಿಲ್ಪಕಲೆಯ ಉತ್ಕೃಷ್ಟ ಉದಾಹರಣೆ.೧೬೫೩ರಲ್ಲಿ ನಿರ್ಮಾಣಗೊಂಡ ತಾಜ್ ಮಹಲ್ ಷಾ ಜಹಾನ್ ನಿಂದ ನಿರ್ಮಿಸಲ್ಪಟ್ಟಿತು.ಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿತವಾದ ಇದರ ನಿರ್ಮಾಣ ಸಮಯ ಸುಮಾರು ೨೨ ವರ್ಷಗಳು.(೧೬೩೦ -೧೬೫೨). ಸುಮಾರು ೨೦ ಸಾವಿರ ಜನರ ಶ್ರಮದಿಂದ ಇದನ್ನು ನಿರ್ಮಿಸಲಾಗಿದೆ.
  
ಆಗ್ರಾ ಕೋಟೆ
   
೧೫೫೬ರಲ್ಲಿ ಅಕ್ಬರನಿಂದ ಕಟ್ಟಲ್ಪಟ್ಟಿತು.ಷಾ ಜಹಾನನ ಕಾಲದಲ್ಲಿ ಇದನ್ನು ಅರಮನೆಯನ್ನಾಗಿ ಪರಿವರ್ತಿಸಲಾಗಿತ್ತು.ಕೋಟೆಯ ಒಳಗಡೆ ಮೋತಿ ಮಸ್ಜಿದ್,ದಿವಾನ್-ಈ-ಆಮ್,ದಿವಾನ್-ಈ-ಖಾಸ್,ಜಹಾಂಗೀರನ ಅರಮನೆ,ಖಾಸ್ ಮಹಲ್,ಶೀಷ್ ಮಹಲ್ ಮುಂತಾದವುಗಳು ಮುಖ್ಯವಾಗಿವೆ.ಕೋಟೆಯ ಒಟ್ಟು ಸುತ್ತಳತೆ ಸುಮಾರು ೨.೪ ಕಿ.ಮೀ.
ಫತೇಪುರ್ ಸಿಕ್ರಿ
  
ಇದು ಅಕ್ಬರನಿಂದ ಕಟ್ಟಲ್ಪಟ್ಟಿತ್ತು. ಅಕ್ಬರನು ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡುವ ಉದ್ಧೇಶದಿಂದ ಕಟ್ಟಿದನಾದರೂ ಬಳಿಕ ನೀರಿನ ಕೊರೆತೆಯಿಂದ ಇದನ್ನು ತ್ಯಜಿಸಿ ಪುನಃ ಅಗ್ರಾಕ್ಕೆ ತನ್ನ ರಾಜಧಾನಿಯನ್ನು  ಸ್ಥಳಾಂತರಿಸಿದನು.




#Article 166: ಹುಬ್ಬಳ್ಳಿ (376 words)


ಹುಬ್ಬಳ್ಳಿ(ಗಂಡು ಮೆಟ್ಟಿದ ನಾಡು) ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಮುಖ ವಾಣಿಜ್ಯ ನಗರ.ಬೆಂಗಳೂರಿನ ನಂತರ ಕರ್ನಾಟಕದ ಎರಡನೇ ಅತಿ ದೊಡ್ಡ ನಗರ ಹುಬ್ಬಳ್ಳಿ-ಧಾರವಾಡ, ನಗರವು ಧಾರವಾಡ ಜಿಲ್ಲೆಯಲ್ಲಿದೆ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ, ಬೆಂಗಳೂರಿನಿಂದ ಸುಮಾರು 410 ಕಿ.ಮೀ ಹಾಗೂ ಪುಣೆಯಿಂದ ಸುಮಾರು 430 ಕಿ.ಮೀ ದೂರದಲ್ಲಿದೆ. 2011ರ ಭಾರತದ ಜನಗಣತಿಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನಸಂಖ್ಯೆ 943,788.ಅದರಲ್ಲಿ 474,518 ಪುರುಷರು ಮತ್ತು 469,270 ಮಹಿಳೆಯರಿದ್ದಾರೆ.

 

ಹುಬ್ಬಳ್ಳಿ, (ಕನ್ನಡ: ಹುಬ್ಬಳ್ಳಿ) ಭಾರತದ ಕರ್ನಾಟಕ ರಾಜ್ಯದ ಒಂದು ಪ್ರಮುಖ ನಗರ. ಹೆಸರು ಹುಬ್ಬಳ್ಳಿ ಅಕ್ಷರಶಃ ಕನ್ನಡ ಹೂಬಿಡುವ ಬಳ್ಳಿ ಎಂದರ್ಥ. ಒಟ್ಟಾಗಿ ಹುಬ್ಬಳ್ಳಿ-ಧಾರವಾಡ ಎಂದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು,, ಬೆಂಗಳೂರು ನಂತರ ಕರ್ನಾಟಕದ ಎರಡನೇ ಅತಿ ದೊಡ್ಡ ನಗರಕೂಡಾ ಆಗಿದೆ. ಧಾರವಾಡ ಸುಮಾರು 20 ಕಿ ಧಾರವಾಡ ಆಗ್ನೇಯ ಇದೆ ಆಡಳಿತ ಪ್ರಧಾನ ಹುಬ್ಬಳ್ಳಿ ನಗರವು ಆದರೆ, ವಾಣಿಜ್ಯ ಸೆಂಟರ್ ಮತ್ತು ಉತ್ತರ ಕರ್ನಾಟಕದ ವ್ಯಾಪಾರ ಕೇಂದ್ರವಾಗಿದೆ. ಹತ್ತಿ ಮತ್ತು ನೆಲಗಡಲೆ ರೀತಿಯ ಬೆಳೆಗಳು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಸಿ, ಹುಬ್ಬಳ್ಳಿ ಎರಡೂ ಉತ್ಪನ್ನಗಳಿಗೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಇರುತ್ತದೆ. ಇದು ದಕ್ಷಿಣ ಪಾಶ್ಚಾತ್ಯ ರೈಲ್ವೆ ವಲಯ ಮತ್ತು ಹುಬ್ಬಳ್ಳಿ ರೈಲ್ವೆ ವಿಭಾಗ ಪ್ರಧಾನ ಕೇಂದ್ರವಾಗಿದೆ ಎಂದು ಕೂಡ ಭಾರತೀಯ ರೈಲ್ವೆಯ ಪ್ರಮುಖ.

ಜನಸಂಖ್ಯೆ 

ಹವಾಮಾನ

ಹುಬ್ಬಳ್ಳಿ-ಧಾರವಾಡ ಉಷ್ಣವಲಯದ ತೇವ ಮತ್ತು ಒಣ ಹವೆ ಹೊಂದಿದೆ. ಬೇಸಿಗೆ ಆರಂಭದಲ್ಲಿ ಜೂನ್ ಕೊನೆಯಲ್ಲಿ ಫೆಬ್ರವರಿ ಬಿಸಿ ಮತ್ತು ಶುಷ್ಕ, ಶಾಶ್ವತವಾದ ಇವೆ. ಅವರು ಮಧ್ಯಮ ಉಷ್ಣತೆ ಮತ್ತು ಮಳೆಯ ದೊಡ್ಡ ಪ್ರಮಾಣದ, ಮಾನ್ಸೂನ್ ಅನುಸರಿಸಲ್ಪಡುತ್ತದೆ. ತಾಪಮಾನವು ವಾಸ್ತವವಾಗಿ ಮಳೆ, ಅಕ್ಟೋಬರ್ ಕೊನೆಯ ಹಿಂದಿನ ಫೆಬ್ರವರಿ ವಾಸ್ತವವಾಗಿ ಸೌಮ್ಯವಾಗಿರುತ್ತದೆ. ಈ ಹುಬ್ಬಳ್ಳಿ ಸೂಕ್ತ ಕಾಲ. ಹುಬ್ಬಳ್ಳಿ ಸರಾಸರಿ ಸಮುದ್ರ ಮಟ್ಟದಿಂದ ಎತ್ತರ ೬೨೬,೯೮ ಮೀಟರ್. ಸರಾಸರಿ ವಾರ್ಷಿಕ ಮಳೆ ೮೩೮ ಮಿಮೀ. 

ಇತಿಹಾಸ

ಇಂಡಸ್ಟ್ರಿಯಲ್  ವ್ಯವಹಾರ ಅಭಿವೃದ್ಧಿ

ಹುಬ್ಬಳ್ಳಿ-ಧಾರವಾಡ ಪುರಸಭ

ವಾಣಿಜ್ಯ

ನಗರದ ಮಲೆನಾಡು ಮತ್ತು ಡೆಕ್ಕನ್ ಪ್ರಸ್ಥಭೂಮಿಯ ನಡುವೆ ವಿಭಜಿತ ಸಾಲಿನಲ್ಲಿ ಇದೆ. ಮಲೆನಾಡು ಇದರ ಕಾಡುಗಳು ಮತ್ತು ಅರಣ್ಯ ಆಧಾರಿತ ಉದ್ಯಮಗಳು ಹೆಸರಾಗಿದೆ ಮತ್ತು ಇತರ ಮೂರು ಕಡೆ ಪ್ರದೇಶದಲ್ಲಿ ಹತ್ತಿ, ಶೇಂಗಾ, ಎಣ್ಣೆಬೀಜಗಳು ಮ್ಯಾಂಗನೀಸ್ ಅದಿರು ಮತ್ತು ಗ್ರಾನೈಟ್ ಕಲ್ಲುಗಳು ರೀತಿಯಲ್ಲಿ ತಮ್ಮ ಕೃಷಿ ಉತ್ಪನ್ನಗಳ ಕರೆಯಲಾಗುತ್ತದೆ. ಹುಬ್ಬಳ್ಳಿ ಹತ್ತಿ ಮಾರುಕಟ್ಟೆ ಭಾರತದ ಅತ್ಯಂತ ದೊಡ್ಡ ನಡುವೆ ಒಂದು.

ಸಾರಿಗೆ

ಪ್ರವಾಸೋದ್ಯಮ

ಚಂದ್ರಮೌಳೇಶ್ವರ  ದೇವಸ್ಥಾನ, ಹುಬ್ಬಳ್ಳಿ, ಉತ್ತರ ಕರ್ನಾಟಕ

ಬನಶಂಕರಿ ದೇವಸ್ಥಾನ ಅಮರಗೋಳ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ, ಸಂರಕ್ಷಣೆ ಮತ್ತು ಪುನಃಸ್ಥಾಪನೆ ಪ್ರಗತಿಯಲ್ಲಿದೆ. ನುಗ್ಗಿಕೇರಿ ದೂರ ಧಾರವಾಡ ೫ ಕಿಮೀ ಸಮೀಪವಿರುವ ದೇವಸ್ಥಾನದ ಪ್ರಸ್ತುತ ನಾನು ಬಳಿಯಿರುವ ಒಂದು ಸರೋವರವು ಹನುಮಾನ್ ಒಂದು ದೇವಸ್ಥಾನ

ಹುಬ್ಬಳ್ಳಿ-ಧಾರವಾಡ ನಗರಗಳು, ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇಯ ದೊಡ್ಡ ನಗರವಾಗಿದೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೆಣಸಿನಕಾಯಿ (ಬ್ಯಾಡಗಿ), ಹತ್ತಿ ಮತ್ತು ಶೇಂಗಾ ಬೆಳೆಗಳು ವ್ಯಾಪಕವಾಗಿ ಬೆಳೆಯಲ್ಪಡುತ್ತವೆ. ಇವುಗಳಿಗೆ ಹುಬ್ಬಳ್ಳಿ ದೊಡ್ಡ ಮಾರುಕಟ್ಟೆಯಾಗಿದೆ. ಅಮರಗೋಳದ ಹತ್ತಿರವಿರುವ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯು ಭಾರತದಲ್ಲಿಯೆ ಅತಿ ದೊಡ್ಡ ಮಾರುಕಟ್ಟೆ ಪ್ರಾಂಗಣವನ್ನು ಹೊಂದಿದೆ.

ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.

ಇಲ್ಲಿ ಅನೇಕ ಸರ್ಕಾರೇತರ ಸಂಸ್ಥೆಗಳಿದ್ದು  ನಗರದ  ಹಾಗೂ ದೇಶಪಾಂಡೆ ಶಿಕ್ಷಣ ಪ್ರತಿಷ್ಠಾನ ಇವರ ಅಡಿಯಲ್ಲಿ  ಸಹ ಅನೇಕ ನಿರುದ್ಯೋಗಿಗಳಿಗೆ ವಿವಿಧ ಕೌಶಲ್ಯ ತರಬೇತಿ ನೀಡಿ ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸಿದೆ.

ಧಾರವಾಡ ಪೇಡ
ಹುಬ್ಬಳ್ಳಿ-ಧಾರವಾಡಗಳಲ್ಲಿ ಧಾರವಾಡ ಪೇಡವು ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಸಿಹಿಯು ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಡ ಅಂಗಡಿಯಲ್ಲಿ ದೊರೆಯುತ್ತದೆ. 




#Article 167: ಛತ್ರಪತಿ ಶಿವಾಜಿ (669 words)


ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು. ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು. ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. 

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ.

ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟ್ರ ನಿರ್ವಣದ ಕನಸು ಕಂಡವರು.

ಮಹಾರಾಷ್ಟ್ರದ ಅಸ್ಮಿತೆ ಶಿವಾಜಿ ಭೋಂಸ್ಲೆ ಅವರ ಕುಟುಂಬದ ತಾಯಿಬೇರು ಕನ್ನಡನಾಡಿನಲ್ಲಿದೆ. ಇದರ ವಾಸ್ತವಾಂಶಗಳೇನೇ ಇದ್ದರೂ ಶಿವಾಜಿಗೆ ಕನ್ನಡ ಭೂಮಿ ಪ್ರೇರಣಾ ಸ್ಥಳವಾಗಿತ್ತೆಂಬುದು ನಿಜ. ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು 17ನೇ ಶತಮಾನದ ಮೊದಲರ್ಧದಲ್ಲಿ. ರಾಜ್ಯ ವಿಸ್ತರಣೆಯಲ್ಲಿ ಮೊಗಲರಿಗೂ ವಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟ್ಟು(1636) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು. ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು. ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು. ಇಂತಹ ಧೈರ್ಯಶಾಲಿ ಮರಾಠಿ ಸರದಾರರದಲ್ಲಿ ಮಾಲೋಜಿ ಭೋಂಸ್ಲೆಯ ಮಗ ಶಹಾಜಿ ಭೋಂಸ್ಲೆ ಅವರೂ ಒಬ್ಬರು. ವಿಜಾಪುರದ ಅಣತಿಯಂತೆ ಸೈನ್ಯ ಮುನ್ನಡೆಸುತ್ತಿದ್ದ ಶಹಾಜಿ ಹಾಗೂ ರಣದುಲ್ಲಾ ಖಾನ್​ರು ಬೆಂಗಳೂರು ಕೆಂಪೇಗೌಡರ ಸೈನ್ಯದೊಡನೆ ಮುಖಾಮುಖಿಯಾಗಿದ್ದು 1638ರ ಡಿಸೆಂಬರ್ ಮಾಹೆಯಲ್ಲಿ. ಜೋರು ಕಾಳಗದ ಬಳಿಕ ಸಂಧಿ ಏರ್ಪಟ್ಟು ಕೆಂಪೇಗೌಡ ತನ್ನ ರಾಜಧಾನಿಯನ್ನು ಮಾಗಡಿಗೆ ಸ್ಥಳಾಂತರಿಸಿದಾಗ ಬೆಂಗಳೂರು ಕೋಟೆ ವಿಜಾಪುರ ಸುಲ್ತಾನರ ಕೈವಶವಾಯಿತು. ಆಗ ಬೆಂಗಳೂರನ್ನು ಮಹಮ್ಮದ್ ಆದಿಲ್ ಷಾನಿಂದ ಜಹಗೀರು ಪಡೆದರು ಶಹಾಜಿ ಭೋಂಸ್ಲೆ.ಛತ್ರಪತಿ ಶಿವಾಜಿ ಸತ್ತ ಸ್ಥಳ ಚಿತ್ರದುರ್ಗದ ಬೊಮ್ಮಸಮುದ್ರ

ಬಹುಪಾಲು ಸಮಯವನ್ನು ಯುದ್ಧಗಳಲ್ಲಿಯೇ ಕಳೆಯುತ್ತಿದ್ದ ಶಹಾಜಿ ಅವರು ಜೀಜಾಬಾಯಿಯ ಲಗ್ನವಾಗಿದ್ದರು. ಇವರ ಮಗನಾಗಿ ಶಿವಾಜಿ ಹುಟ್ಟಿದ್ದು ಪುಣೆಯ ಸಮೀಪದ ಶಿವನೇರಿ ದುರ್ಗದಲ್ಲಿ. ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು. ತಮ್ಮದೇ ಆದ ನಾಣ್ಯಗಳನ್ನು ಠಂಕಿಸುತ್ತಿದ್ದರು. ಕೋಟೆ ಪ್ರದೇಶದಲ್ಲಿ ಗೌರಿ ಮಹಲ್ ಎಂಬ ಸುಸಜ್ಜಿತ ಮನೆಯನ್ನು ನಿರ್ವಿುಸಿದ್ದರು. ನಂದಿಬೆಟ್ಟ ಆಗಲೇ ಶಹಾಜಿ ಬೇಸಿಗೆ ರಾಜಧಾನಿಯಾಗಿತ್ತು. ಶಿವಾಜಿಯ ಮೊದಲ ಮಗ ಸಂಬಾಜಿ ಕೋಲಾರ- ದೊಡ್ಡಬಳ್ಳಾಪುರ ಪ್ರದೇಶಗಳ ಆಡಳಿತ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು.

ತನ್ನ 12ನೇ ವಯಸ್ಸಿನವರೆಗೆ ಬೆಂಗಳೂರಿನಲ್ಲೇ ವಾಸವಿದ್ದ ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟವರು ಅಣ್ಣ ಸಂಬಾಜಿ. ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ 19ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು..

ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು(ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ.

ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು 1640-42ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್​ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಯುದ್ಧಕೌಶಲದಿಂದ ಹಲವಾರು ಯುದ್ಧಗಳಲ್ಲಿ ವಿಜಯ ಸಾಧಿಸಿ 1674ರಲ್ಲಿ ಮರಾಠ ರಾಜ್ಯಕ್ಕೆ ನಾಂದಿಹಾಡಿದರು. 

ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೊಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರು ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಲಿನ ಬಳಿ ಬಂದರು.

ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕನಿರಬೇಕೆಂದು ತಿಳಿದು ಸ್ವಾಗತಿಸಿದಳು. ಅವನು ಹಸಿದಿರುವನೆಂದು ಅರಿತ ಮಹಿಳೆಯು ಕೈ ಕಾಲು ಮುಖ ತೊಳೆಯಲು ನೀರು ನೀಡಿದಳು ಮತ್ತು ವಿಶ್ರಮಿಸಲು ಚಾಪೆಯನ್ನು ಹಾಸಿದಳು. ಅವನು ವಿಶ್ರಮಿಸಿದ ನಂತರ ಮಹಿಳೆಯು ಬಿಸಿ ಬಿಸಿ ಅನ್ನ ಮತ್ತು ಸಾಂಬಾರನ್ನು ತಿನ್ನಲು ನೀಡಿದಳು.

ತುಂಬಾ ಹೊಟ್ಟೆ ಹಸಿದಿದ್ದ ಶಿವಾಜಿಯು ತಕ್ಷಣ ತಿನ್ನಲು ಬಿಸಿ ಅನ್ನಕ್ಕೆ ಕೈ ಹಾಕಿದನು. ಬಿಸಿ ತಡೆಯಲಾರದೆ ಚೀರಿದನು ಮತ್ತು ಸ್ವಲ್ಪ ಅನ್ನವನ್ನು ಚಲ್ಲಿದನು. ಇದನ್ನು ನೋಡಿದ ಮಹಿಳೆಯು ಹೇಳಿದಳು, ಅರೇ ನೀನು ಸಹ ನಿನ್ನ ಸ್ವಾಮಿ ಶಿವಾಜಿಯಂತೆ ಗಡಿಬಿಡಿ ಮಾಡುತ್ತೀಯ. ಅದಕ್ಕೆ ಕೈ ಸುಟ್ಟುಕೊಂಡೆ ಮತ್ತು ಸ್ವಲ್ಪ ಅನ್ನವನ್ನು ಬೀಳಿಸಿದೆ.

ಶಿವಾಜಿಯು ಆಶ್ಚರ್ಯದಿಂದ, ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಯಾಕೆ ಹೇಳುತ್ತೀಯ? ಎಂದು ಕೇಳಿದನು.

ಆಗ ಮಹಿಳೆಯು ಹೇಳಿದಳು, ನೋಡು ಮಗನೆ, ಶಿವಾಜಿಯು ತನ್ನ ಗಡಿಬಿಡಿ ಇಂದಾಗಿ ಶತ್ರುಗಳ ಸಣ್ಣ ಕೋಟೆಯನ್ನು ಗೆಲ್ಲುವ ಬದಲಾಗಿ ದೊಡ್ಡ ದೊಡ್ಡ ಕೋಟೆಗಳನ್ನು ಗೆಲ್ಲಲು ಹೊಗುತ್ತಿದ್ದಾನೆ ಮತ್ತು ಇದರಿಂದಾಗಿ ಅವನು ತನ್ನ ವೀರ ಸೈನಿಕರನ್ನು ಕಳೆದುಕೊಳ್ಳುತ್ತಿದ್ದಾನೆ. ಅದರ ಬದಲಿಗೆ ತಾಳ್ಮೆಯಿಂದ ಮೊದಲು ಸಣ್ಣ ಸಣ್ಣ ಕೋಟೆಗಳನ್ನು ಗೆದ್ದರೆ ಅವನ ಬಲವೂ ಹೆಚ್ಚುತ್ತದೆ ಮತ್ತು ಸೈನಿಕರೂ ಉಳಿಯುತ್ತಾರೆ. ಅದೇ ರೀತಿ ನೀನು ಮೊದಲು ಬದಿಯಲ್ಲಿರುವ ತಣ್ಣಗಿರುವ ಅನ್ನವನ್ನು ಮೊದಲು ತಿನ್ನು.

ಶಿವಾಜಿಯು ಕೂಡಲೇ ವೃದ್ಧ ಮಹಿಳೆಯ ಮಾತಿನ ಹಿಂದಿರುವ ಅರ್ಥವನ್ನು ಅರಿತನು ಮತ್ತು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ಮಾಡಬಾರದೆಂದು ಅರಿತನು.

೧೭ನೇ ಶತಮಾನದಲ್ಲಿ, ಶಿವಾಜಿ ಪೂರ್ವ ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಅವರ ತಾಯಿ ಜೀಜಾಮಾತೆಯು ಶಿವಾಜಿಗೆ ಸಣ್ಣ ವಯಸ್ಸಿನಿಂದಲೂ ನಾಮಜಪವನ್ನು ಮಾಡಿಸುತ್ತಿದ್ದಳು. ಒಬ್ಬ ರಾಜನಿಗೆ ಬೇಕಾದ ಎಲ್ಲ ಯುದ್ಧಕಲೆಗಳನ್ನೂ ಜೀಜಾಮಾತೆಯು ಶಿವಾಜಿಗೆ ಕಲಿಸಿದ್ದಳು. ಜೀಜಾಮಾತೆ ಮತ್ತು ಗುರು ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶಿವಾಜಿಯು ಆದರ್ಶ ರಾಜನಾದನು. ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು. ಶಿವಾಜಿಯು ಆದರ್ಶ ರಾಜ್ಯವನ್ನು ಸ್ಥಾಪಿಸಿದನು. ಶಿವಾಜಿಯು ರಾಜ್ಯವನ್ನು ಧೈರ್ಯ, ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ಸ್ಥಾಪಿಸಿದ್ದನು.

ಶಿವಾಜಿ ಮಹಾರಾಜರು 1680 ಏಪ್ರಿಲ್ 14 ಮರಣ ಹೊಂದಿದರು. 




#Article 168: ಗೊರೂರು ರಾಮಸ್ವಾಮಿ ಅಯ್ಯಂಗಾರ್ (203 words)


ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಜುಲೈ ೪, ೧೯೦೪ - ಸೆಪ್ಟೆಂಬರ್ ೨೮, ೧೯೯೧)  ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಕಾವ್ಯನಾಮ - ಸೀತಾತನಯ . ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ  ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.

ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್  ಅವರು 1904ರ ಜುಲೈ 4ರಂದು ಹಾಸನ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಜನಿಸಿದರು .  ಅವರ 
ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷಮ್ಮ.  ತಮ್ಮ ಹಳ್ಳಿಯಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿದ ಗೊರೂರರು ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿದರು. ಅನಂತರ ಅವರು ಗಾಂಧೀಜಿಯ ಆಶ್ರಮವನ್ನು ಸೇರಿ, ಗುಜರಾತಿನ ವಿದ್ಯಾಪೀಠದ ವಿದ್ಯಾರ್ಥಿಯಾದರು. ಬಳಿಕ ಮದ್ರಾಸಿನ ‘ಲೋಕಮಿತ್ರ’ ಮತ್ತು ‘ಭಾರತಿ’ ಪತ್ರಿಕೆಗಳ ಕನ್ನಡ ಸಮಾಚಾರ ಲೇಖಕರಾಗಿ ಸ್ವಲ್ಪಕಾಲ ಕೆಲಸಮಾಡಿ, ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಹರಿಜನೋದ್ಧಾರ ಅದರ ಮುಖ್ಯ ಕಾರ್ಯವಾಗಿತ್ತು. ಅದನ್ನು ಗೊರೂರರು ಶ್ರದ್ಧೆಯಿಂದ ನಿರ್ವಹಿಸಿದರು. ಆಮೇಲೆ ಬೆಂಗಳೂರಿನ ಅಖಿಲ ಭಾರತ ಚರಕ ಸಂಘದ ಖಾದಿ ವಸ್ತ್ರಾಲಯದ ಸಂಚಾಲಕರಾದರು.  ಅಲ್ಲಿಯೇ ಅವರ ಸಾಹಿತ್ಯ ಸೇವೆ ಮೊದಲಾಯಿತು. 1933ರಲ್ಲಿ ಗೊರೂರರು ತಮ್ಮ ಗ್ರಾಮಕ್ಕೆ ಮರಳಿ, ಮೈಸೂರು ಗ್ರಾಮ ಸೇವಾಸಂಘವನ್ನು ಸ್ಥಾಪಿಸಿ, ಖಾದಿ ಪ್ರಚಾರ, ಹರಿಜನೋದ್ಧಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆಗಳು ಮುಂತಾದ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದರು. 1942ರ ‘ಚಲೇ ಜಾವ್’ ಚಳವಳಿಯಲ್ಲಿ ಅವರು ಭಾಗವಹಿಸಿ, ತುರಂಗವಾಸವನ್ನು ಅನುಭವಿಸಿದರು.  ಸ್ವಾತಂತ್ರ್ಯ ಬಂದ ಮೇಲೆ ಮೈಸೂರಿನಲ್ಲಿ ಪ್ರಜಾ ಸರ್ಕಾರ ಸ್ಥಾಪನೆಗಾಗಿ ನಡೆದ ಚಳವಳಿಯಲ್ಲೂ ಭಾಗವಹಿಸಿದರು. ಅದು ಸ್ಥಾಪಿತವಾದ ಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.  ಈ ಅವಧಿಯಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಅವರು ದುಡಿದರು.  ..

ಸಾಲು ದೀಪಗಳು ಕೃತಿಯಲ್ಲಿ ಡಾ. ಸಿ. ಪಿ. ಕೃಷ್ಣಕುಮಾರ್ ಅವರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕುರಿತ ಲೇಖನ




#Article 169: ಹೈದರಾಲಿ (703 words)


ಸಯ್ಯದ್ ವಲ್ ಶರೀಫ್ ಹೈದರ್ ಅಲಿ ಖಾನ್ ಅಥವಾ ಹೈದರ್ ಅಲಿ (ಕ್ರಿ. ಶ. 1722 - 7 ಡಿಸೆಂಬರ್ 1782) ದಕ್ಷಿಣ ಭಾರತದ ಮೈಸೂರು ರಾಜ್ಯವನ್ನಾಳುತ್ತಿದ್ದ ಸುಲ್ತಾನ. ಇವನು  ಟಿಪ್ಪು ಸುಲ್ತಾನನ ತಂದೆ. ಶ್ರೀರಂಗಪಟ್ಟಣವನ್ನು  ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ಮೊದಲು ಇವನು ಮೈಸೂರು ರಾಜರ ದಿಂಡಿಗಲ್‌ನ ಫೌಜುದಾರನಾಗಿದ್ದ. ತನ್ನ ಸೈನಿಕ ಕಾರ್ಯಾಚರಣೆಗಳಿಂದಾಗಿ ಮೈಸೂರು ಒಡೆಯರಾಗಿದ್ದ ಚಿಕ್ಕಕೃಷ್ಣರಾಜ ಒಡೆಯರ್‌ ರವರ ದಳವಾಯಿ ಸ್ಥಾನಕ್ಕೇರಿದ. ಕ್ರಮೇಣ 1761 ರಲ್ಲಿ ಮೈಸೂರಿನ ಸರ್ವಾಧಿಕಾರಿಯಾಗಿಯೂ, 1766 ರಲ್ಲಿ ಅವರ ಮರಣಾನಂತರ ಮೈಸೂರಿನ ವಾಸ್ತವ ಸುಲ್ತಾನನಾಗಿಯೂ ಅಧಿಕಾರ ವಹಿಸಿಕೊಂಡ.

ಹೈದರನ ಜನ್ಮವರ್ಷದ ಬಗೆಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. 1717-1721 ರ ನಡುವಿನ ಅವಧಿಯಲ್ಲಿ ಅವನು ಜನಿಸಿರಬಹುದೆಂದು ಹೇಳಲಾಗಿದೆ
ಹೈದರನ ಪೂರ್ವಿಕರು ಅರೇಬಿಯಾದ ‌ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಇರಾನ್‌, ಇರಾಕ್‌ಗಳ ಮೂಲಕ ಭಾರತಕ್ಕೆ ವಲಸೆ ಬಂದು ದೆಹಲಿಯಲ್ಲಿ ನೆಲೆಸಿದ್ದರು. ದೆಹಲಿಯಿಂದ ಗುಲ್ಬರ್ಗಾ ನಂತರ ಬಿಜಾಪುರಗಳಲ್ಲಿ ನೆಲೆನಿಂತರು. ಬಿಜಾಪುರ ಮೊಘಲರ ವಶವಾದಾಗ ಕೋಲಾರಕ್ಕೆ ಬಂದು ನೆಲೆಸಿದರು. ತಂದೆ ಫತೇ ಮಹಮ್ಮದ್‌ ಶಿರಾ ಮತ್ತು ಆರ್ಕಾಟಿನ ನವಾಬನ ಸೇವೆಯಲ್ಲಿದ್ದ. 

ಹೈದರ್ ಕೋಲಾರ ಸಮೀಪದ ಬೂದಿಕೋಟೆಯಲ್ಲಿ ಫತ್‌ ಮಹಮ್ಮದ್‌ ಮತ್ತು ಲಾಲ್‌ ಬಾಯಿ ದಂಪತಿಯ ಎರಡನೇ ಮಗನಾಗಿ ಜನಿಸಿದ‌. ಇವನ ಆರಂಭಿಕ ಜೀವನದ ಕುರಿತು ಅಷ್ಟು ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ; ತಂದೆಯ ಮರಣಾನಂತರ ತನ್ನ ಸಹೋದರ ಷಹಬಾಜ್‌ ಜೊತೆಗೂಡಿ ಆರ್ಕಾಟಿನ ನವಾಬನ ಸೇನೆಯಲ್ಲಿ ಸೇವೆ ಸಲ್ಲಿಸಿದ. ಕಾರಣ ಶಿಕ್ಷಣ ವಂಚಿತನಾಗಿ ಬೆಳೆಯಬೇಕಾಯಿತು. ಮುಂದೆ ಶ್ರೀರಂಗಪಟ್ಟಣಕ್ಕೆ ಬಂದು ಚಿಕ್ಕಪ್ಪ ಇಬ್ರಾಹಿಂ ಸಾಹಿಬ್‌ ಸಹಾಯದಿಂದ ಮೈಸೂರಿನ ಚಿಕ್ಕಕೃಷ್ಣರಾಜ ಒಡೆಯರ ಸೇನೆಯಲ್ಲಿ ಸಹೋದರನೊಂದಿಗೆ 300 ಕಾಲಾಳುಗಳು ಮತ್ತು 70 ಕುದುರೆಗಳಿದ್ದ ತುಕಡಿಯ ಮುಖ್ಯಸ್ಥನಾಗಿ ನೇಮಕಗೊಂಡ.

ಹೈದರ್‌ ಮೈಸೂರಿನ ಸೇನೆ ಪ್ರವೇಶಿಸಿದ ಸಂದರ್ಭದಲ್ಲಿ ಚಿಕ್ಕದೇವರಾಜ ಒಡೆಯರನ್ನು ನೆಪಮಾತ್ರಕ್ಕೆ ಸಿಂಹಾಸನದಲ್ಲಿ ಕೂರಿಸಿ ದಳವಾಯಿ ದೇವರಾಜನೂ, ಸರ್ವಾಧಿಕಾರಿ ನಂಜರಾಜನೂ ಅಧಿಕಾರ ಚಲಾಯಿಸುತ್ತಿದ್ದರು. 1749 ರಲ್ಲಿ ಯ ಮುತ್ತಿಗೆಯಲ್ಲಿ ಇವನು ತೋರಿದ ಸಾಹಸಗಳಿಂದಾಗಿ ಬಹುಬೇಗ ಉನ್ನತ ಹುದ್ದೆಗೇರಿದ.

ಕರ್ನಾಟಿಕ್‌ ಯುದ್ಧಗಳಿಂದ ಹೈದರ್‌ ತಂದಿದ್ದ ಅಪಾರ ಸಂಪತ್ತು ಅವನಲ್ಲೇ ಉಳಿದಿತ್ತೇ ವಿನಃ ನಂಜರಾಜನಿಗೆ ಸೇರಲಿಲ್ಲ. ಅದನ್ನು ಮೈಸೂರು ಸೈನಿಕರ ವೇತನ ಬಾಕಿ ನಿರ್ವಹಿಸಲು ಬಳಸಿಕೊಂಡು ಸೈನಿಕರ ಸಂಪೂರ್ಣ ವಿಶ್ವಾಸ ಗಳಿಸಿಕೊಂಡನಲ್ಲದೇ, ನಂಜರಾಜನಿಗೆ ಒದಗಿದ್ದ ಆರ್ಥಿಕ ಸಂಕಷ್ಟ ಪರಿಹರಿಸಿ ಅವನಿಂದ ದಿಂಡಿಗಲ್ಲಿನ ಫೌಜುದಾರಿಕೆಯನ್ನು ಪಡೆದುಕೊಂಡ. ಈ ವೇಳೆಗೆ ಹೈದರನ ಕೈಯಡಿ 1500 ಕುದುರೆಗಳೂ, 300 ಪದಾತಿದಳವೂ, 2000 ಜವಾನರೂ ಇದ್ದರು.

 ಪ್ರದೇಶಗಳನ್ನಾಳುತ್ತಿದ್ದ ಯನ್ನು ಕೈಗೊಂಡು ಯಶಸ್ವಿಯಾಗಿ, ಸಂಪತ್ತಿನೋಂದಿಗೆ ಹಿಂದಿರುಗಿದ. ಈ ಕಾರ್ಯಸಾಧನೆಗಾಗಿ ದೇವರಾಜನಿಂದ ಬೆಂಗಳೂರಿನ ಜಹಗೀರು ಪಡೆದ.

ಮರಾಠರು ಬೆಂಗಳೂರು, ಚನ್ನಪಟ್ಟಣ ಮೊದಲಾದ ಪ್ರದೇಶಗಳನ್ನು ವಶಪಡಿಸಿಕೊಂಡು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಾರಂಭಿಸಿದರು. 1758 ರಲ್ಲಿ ಹೈದರ್‌ ಮರಾಠರನ್ನು ಬೆಂಗಳೂರು ಮತ್ತು ಚೆನ್ನಪಟ್ಟಣಗಳಿಂದ ಹೊರದೂಡುವಲ್ಲಿ ಯಶಸ್ವಿಯಾದ. 

ಚಿಕ್ಕಕೃಷ್ಣರಾಜರು ಹೈದರನ ಶೌರ್ಯ-ಸಾಹಸಗಳಿಗೆ ಅವನಿಗೆ ಫತೇ ಹೈದರ್‌ ಬಹದ್ದೂರ್‌ ಎಂಬ ಬಿರುದನ್ನಿತ್ತು ಗೌರವಿಸಿದರು. ಅದೇ ವೇಳೆಗೆ ನಂಜರಾಜನನ್ನೂ ಅಧಿಕಾರದಿಂದ ಪದಚ್ಯುತಗೊಳಿಸಲಾಗಿತ್ತು. ಹೈದರ್‌ 1759ರ ವೇಳೆಗೆ ನವಾಬ್‌ ಹುದ್ದೆಗೇರಿದ ಮೈಸೂರಿನ ಮೊದಲಿಗನಾದ.

ಮೈಸೂರು ರಾಜಮಾತೆಯೂ, ಸೈನಿಕ ಕಾರ್ಯದರ್ಶಿ ಖಂಡೇರಾಯನೂ ಕ್ರಮೇಣ ಹೈದರ್‌ ಮುಸಲ್ಮಾನನೆಂದೂ, ಅವನ ಏಳಿಗೆಯನ್ನು ಸಹಿಸಲಾರದೆಯೂ ಒಳಸಂಚು ರೂಪಿಸಿ, 1760 ಆಗಸ್ಟ್‌ ನಲ್ಲಿ ಮರಾಠರು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡುತ್ತಾರೆಂದು ತಿಳಿದಿದ್ದ ಖಂಡೇರಾಯ 12ನೇ ಆಗಸ್ಟ್‌ 1760 ಹೈದರನ ಶಿಭಿರದ ಮೇಲೆಯೇ ಶ್ರೀರಂಗಪಟ್ಟಣ ಕೋಟೆಯಿಂದ ಗುಂಡು ಹಾರಿಸಲು ಶುರು ಮಾಡಿದ್ದ. ಆದರೆ ಹೈದರ್‌ ಇದರಿಂದ ತಪ್ಪಿಸಿಕೊಂಡು ಸೇನೆಯನ್ನೂ ರಕ್ಷಿಸಿದ. ಇನ್ನೊಂದೆಡೆ ಖಂಡೇರಾಯನ ನಿರೀಕ್ಷೆಯಂತೆ ಮರಾಠರೂ ದಾಳಿ ಮಾಡಲಿಲ್ಲ. ಆ ಸಂದರ್ಭ ಹೈದರ್‌ ಅಪಾಯದಿಂದ ಪಾರಾಗಲು ತಾತ್ಕಾಲಿಕ ಒಪ್ಪಂದವೊಂದನ್ನು ಖಂಡೇರಾಯನೊಂದಿಗೆ ಮಾಡಿಕೊಂಡ. 
ಮುಂದುವರಿದು, ಚದುರಿದ್ದ ಸೇನೆಯನ್ನು ಸಂಘಟಿಸಿ, ಫ್ರೆಂಚ್‌ ಸೇನಾ ನೆರವನ್ನೂ ಪಡೆದು ಗಡಿಯಂಚಿನ ಪ್ರದೇಶಗಳನ್ನು ವಶಪಡಿಸಿಕೊಳ್ಲುವಲ್ಲಿ ನಿರತನಾದ. ಕೊಯಮತ್ತೂರು ಮತ್ತು ಸೇಲಂ ಪ್ರದೇಶಗಳನ್ನು ಗೆದ್ದುಕೊಂಡ. ಆದರೂ ಖಂಡೇರಾಯನನ್ನು ಎದುರಿಸಲು ಹೈದರ್‌ ಶಕ್ತನಾಗಿರಲಿಲ್ಲ. ಕೊನೆಗೆ ನಿವೃತ್ತ ಸರ್ವಾಧಿಕಾರಿ ನಂಜರಾಜನ ನೆರವನ್ನು ಪಡೆದು ದಾಳಿಯೆಸಗಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹಾಗೂ ಮೈಸೂರಿನ ಸುಲ್ತಾನನಾದ.

ಖಂಡೇರಾಯನ ಬಂಡಾಯವನ್ನು ಸಮರ್ಥವಾಗಿ ಅಡಗಿಸಿದ ಹೈದರ್‌ ಮೈಸೂರು ರಾಜ್ಯದ ಸಂಪೂರ್ಣ ಹಿಡಿತ ಕೈಗೆತ್ತಿಕೊಂಡ. 
ಈ ಮಧ್ಯೆ 1761 ರ ಮೂರನೇ ಪಾಣಿಪತ್‌ ಕದನದಲ್ಲಿ ಮರಾಠಾ ಒಕ್ಕೂಟ ಅಹ್ಮದ್‌ ಷಾ ಅಬ್ದಾಲಿಯ ಸೇನೆಯೆದುರು ಸಂಪೂರ್ಣವಾಗಿ ಸೋತುಹೊಗಿತ್ತು. ಇನ್ನೊಂದೆಡೆ 1764ರ ದಲ್ಲಿ ಮೀರ್‌ ಖಾಸಿಂ ನೆರವಿಗೆ ನಿಂತು ಸೋತಿದ್ದ ಮೊಘಲ್‌ ದೊರೆ  1765ರ ಒಪ್ಪಂದದಂತೆ ಇಂಗ್ಲೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಕೈಗೊಂಬೆಯಾಗಿದ್ದ. ಕುಸಿದ ಪ್ರಭಲ ಸಾಮ್ರಾಜ್ಯಗಳ ಲಾಭ ಪಡದ ಹೈದರ್‌ 1761 ರಲ್ಲಿ ದಖ್ಖನ್ನಿನ ಮೊಘಲ್‌ ರಾಜಧಾನಿ ಶಿರಾವನ್ನೂ, ಮುಂದುವರಿದು ಶಿರಾದ ಸುತ್ತಮುತ್ತಲ ಪ್ರಾಂತ್ಯಗಳನ್ನೂ (ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಪೆನುಕೊಂಡ ಮಡಕಶಿರಾ, ನಂದಿದುರ್ಗ, ಹರಪನಹಳ್ಳಿ ಮತ್ತು ಚಿತ್ರದುರ್ಗ) ಜಯಿಸಿದ. ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದ್ದ ಬಿದನೂರು ವಿಜಯ ಇವನ ವಿಜಯಗಳಲ್ಲೇ ಅತೀ ಪ್ರಮುಖವಾದದ್ದು. ಹೊನ್ನಾವರದಿಂದ ಪಶ್ಚಿಮ ತೀರಕ್ಕೂ, ಗೋವೆಯ ವರೆಗೂ ಸಾಮ್ರಾಜ್ಯ ವಿಸ್ತರಿಸಿಕೊಂಡ.  ನೆರವನ್ನು ಪಡೆದು ನೌಕಾಪಡೆಯನ್ನು ಬಲಗೊಳಿಸಿ ನಾಯರ್ ಗಳಿಂದ ಮಲಬಾರ್‌ ವಶಪಡಿಸಿಕೊಂಡ.

ಬಕ್ಸಾರ್‌ ಕದನದ ವಿಜಯದ ನಂತರ  ನೇತೃತ್ವದ ಈಸ್ಟ್‌ ಇಂಡಿಯಾ ಕಂಪನಿ ಎರಡನೇ ಷಾ ಆಲಂ ಮತ್ತು ಮೈಸೂರಿನ ನವಾಬನನ್ನು ಮಣಿಸಲು ಮರಾಠ ಒಕ್ಕೂಟಕ್ಕೆ ನೆರವನ್ನು ನೀಡಲು ಮುಂದಾಯಿತು. ಅಲ್ಲದೇ ಮೈಸೂರು-ಮರಾಠರ ಸೆಣೆಸಾಟಗಳು, ತನ್ನ ವೈರಿ ಫ್ರೆಂಚ್‌ ಸೇನಾ ನೆರವಿನೊಂದಿಗೆ ದಖ್ಖನ್ನಿನಲ್ಲಿ ಪ್ರಬಲನಾಗಿ ಬೆಳೆಯುತ್ತಿದ್ದ ಹೈದರ್ ಏಳಿಗೆಯು ಬ್ರಿಟೀಷ್ ವ್ಯಾಪಾರಿ ಕಂಪನಿಯ‌ ಯುದ್ಧಪ್ರವೇಶಕ್ಕೆ ನಾಂದಿ ಹಾಡಿದವು. 
ಮೈಸೂರಿನ ಸಾಂಪ್ರದಾಯಿಕ ವೈರಿ ಮರಾಠರು ಮತ್ತು ಹೈದರಾಬಾದಿನ ನಿಜಾಮನೊಂದಿಗೆ ಒಕ್ಕೂಟ ರಚಿಸಿಕೊಂಡ ಬ್ರಿಟೀಷರು 1766 ರಲ್ಲಿ ಹೈದರನ ವಿರುದ್ಧ ದಾಳಿಯೆಸಗಿದರು. ಆದರೆ ಚಾಣಾಕ್ಷತೆಯಿಂದ ಒಕ್ಕೂಟವನ್ನು ಒಡೆದು ಬ್ರಿಟೀಷರನ್ನು ಮಣಿಸಿದ ಹೈದರ್‌ 1770 ರಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವಂತೆ ಆದೇಶಿಸಿದನು. ವಿಧಿಯಿಲ್ಲದೇ ಬ್ರಿಟೀಷರು ಕ್ಕೆ 1770 ರಲ್ಲಿ ಸಹಿ ಹಾಕಬೇಕಾಯಿತು. ಇದು ಬ್ರಿಟೀಷರಿಗೆ ಅವಮಾನಕರವೂ, ಹೈದರನಿಗೆ ಪ್ರಖ್ಯಾತಿಯನ್ನೂ ತಂದುಕೊಟ್ಟ ಒಪ್ಪಂದವಾಗಿತ್ತು.

ಮೊದಲನೇ ಆಂಗ್ಲೋ ಮೈಸೂರು ಯುದ್ಧದಿಂದ ಮರಾಠರಿಗೇನೂ ಲಾಭವಾಗಲಿಲ್ಲ. ಬದಲಾಗಿ ಮೈಸೂರಿನ ಮೇಲಿನ ಹಗೆತನ ಇನ್ನಷ್ಟು ಹೆಚ್ಚಾಯಿತು. 1770 ರ ಜನವರಿಯಲ್ಲಿ ಮರಾಠರು ಹೈದರನ ವಿರುದ್ಧ ದಂಡೆತ್ತಿ ಬಂದಾಗ ಮದ್ರಾಸು ಒಪ್ಪಂದದ ಕರಾರಿನಂತೆ ಇವನಿಗೆ ಬ್ರಿಟೀಷರು ಸೇನಾ ನೆರವನ್ನು ನೀಡಲಿಲ್ಲ. ಆದರೂ ಮರಾಠರನ್ನು ಯಶಸ್ವಿಯಾಗಿ ಸೋಲಿಸಿ, ಕೃಷ್ಣಾನದಿಯ ತನಕ ತನ್ನ ಎಲ್ಲೆಯನ್ನು ವಿಸ್ತರಿಸುವಲ್ಲಿ ಯಶಸ್ವಿಯಾದ ಹಾಗೂ ಕೊಡಗನ್ನು ವಶಕ್ಕೆ ಪಡೆದುಕೊಂಡ.

ಮರಾಠರ ದಾಳಿಗಳ ಸಂದರ್ಭ ಮದ್ರಾಸು ಒಪ್ಪಂದದಂತೆ, ದಾಳಿಗಳ ಸಂದರ್ಭ ನೀಡಬೇಕಿದ್ದ ಯಾವುದೇ ಸೇನಾ ನೆರವನ್ನು ಬ್ರಿಟೀಷರು ಹೈದರಾಲಿಗೆ ನೀಡಲಿಲ್ಲ. ಅಲ್ಲದೇ ಗುಂಟೂರು ಆಕ್ರಮಣದಿಂದಾಗಿ ಹೈದರಾಬಾದಿನ ನಿಜಾಮನ ಮೇಲೂ, ಒಪ್ಪಂದಗಳ ಉಲ್ಲಂಘನೆಗಾಗಿ  ಮೇಲೂ ಬ್ರಿಟೀಷರು ಕೊಪಗೊಂಡಿದ್ದರು. ಈ ವೇಳೆಗೆ ಮೊದಲ ಆಂಗ್ಲೋ ಮರಾಠ ಯುದ್ಧ ಆಂರಂಭವಾಗಿತ್ತು(1775). ಬ್ರಿಟೀಷರನ್ನು ಮಣಿಸಲು ಮರಾಠರು ಹೈದರನಿಗೆ ಬೆಂಬಲವಿತ್ತರು. ನಿಜಾಮನ ಬೆಂಬಲವನ್ನೂ ಪಡೆದುಕೊಂಡ ಹೈದರ್‌ ಒಕ್ಕೂಟ ರಚಿಸಿಕೊಂಡು ತಮಿಳುನಾಡಿಗೆ ಕ್ಷಿಪ್ರದಾಳಿಯಿತ್ತು ಬ್ರಿಟೀಷರ ವಿರುದ್ಧ ಘಟಿಸಿದ ಯುದ್ಧದಲ್ಲಿ ಜಯಗಳಿಸಿದ ಮತ್ತು ಆರ್ಕಾಟ್ ಅನ್ನು ಆಕ್ರಮಿಸಿದ. ಮುಂದುವರಿದು ಹೈದರ್‌ ಮತ್ತು ಟಿಪ್ಪು ನೇತೃತ್ವದ ಸೇನೆಗಳು ಪೊಲ್ಲಿಲೂರು ಕದನದಲ್ಲಿ ಬೇಲಿ ನೇತೃತ್ವದ ಕಂಪನಿ ಸೇನೆಯನ್ನು ಸೋಲಿಸಿ ಸೆರೆಹಿಡಿದವು. ನಂತರ ನ ವಿರುದ್ಧ ನಡೆದ ಯುದ್ಧಗಳಲ್ಲಿ (ಪೋರ್ಟೊ ನೋವೋ ಕದನ) ಹೈದರ್‌ ಸೋಲನುಭವಿಸಬೇಕಾಯಿತು ಆದರೂ ತಂಜಾವೂರಿನ ಮುತ್ತಿಗೆಯಲ್ಲಿ ಯಶಸ್ವಿಯಾದ.

ಬ್ರಿಟೀಷರೊಂದಿಗಿನ ಸೆಣೆಸಾಟಗಳು ಮುಗಿಯುವ ಮೊದಲೇ ಹೈದರ್‌ ವಿಪರೀತ ಬೆನ್ನುಹುರಿ ಹುಣ್ಣಿನಿಂದ(ಬೆನ್ನುಫಣಿ ರೋಗ)) ಬಳಲಬೇಕಾಯಿತು. ಅದು ಡಿ.7 1782 ರಲ್ಲಿ ಅವನನ್ನು ಚಿತ್ತೂರು ಬಳಿಯ ಸೇನಶಿಬಿರದಲ್ಲಿ  ಬಲಿಪಡೆದುಕೊಂಡಿತು. ಹೈದರನನ್ನು ಶ್ರೀರಂಗಪಟ್ಟಣದಲ್ಲಿ ಸಮಾಧಿಮಾಡಲಾಯಿತು ಮತ್ತು 1782-84 ರ ಅವಧಿಯಲ್ಲಿ ಅವನ ಮಗ ಟಿಪ್ಪು ಸುಲ್ತಾನ್ ಗುಂಬಜ್ ನಿರ್ಮಿಸಿದ.




#Article 170: ಐಹೊಳೆ (573 words)


ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು,  ಬೆಂಗಳೂರಿನಿಂದ ೪೮೩ ಕಿ. ಮೀ ಹಾಗೂ ಹುನಗುಂದ ದಿಂದ ೩೫ ಕಿ.ಮಿ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಹುನಗುಂದ ತಾಲ್ಲೂಕಿಗೆ ಸೇರಿದ ಐಹೊಳೆ ಬಾದಾಮಿ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ.

ಐಹೊಳೆಯು ಬಾದಾಮಿ  ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ. ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು. ಐಹೊಳೆ ಒಂದು ಅಧಿ ಷ್ಠಾನ. ಅಂದರೆ ಸರಕಾರದ ಆಡಳಿತಾಕಾರದ ಒಂದು ಕೇಂದ್ರ ಅಥವಾ ರಾಜಧಾನಿನಗರವಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ. ಆರ್ಯಪುರವಾಗಿದ್ದ ಸ್ಥಳ ಕಾಲಾನುಕ್ರಮದಲ್ಲಿ ಆಡುಭಾಷೆಯಲ್ಲಿಐಹೊಳೆ ಯಾಯಿ ತು. ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಐಹೊಳೆಗೆ ಭಾರತೀಯ ಇತಿಹಾಸದಲ್ಲಿ ತುಂಬ ಮಹತ್ವದ ಸ್ಥಾನವಿದೆ.  ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ.   6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು  ನಡೆದದ್ದನ್ನು ಕಾಣುತ್ತೇವೆ.  ಶಾಸನದಲ್ಲಿ ಈ ಸ್ಥಳವನ್ನು  ಅಯ್ಯವೊಳೆ-ಆಯಿವೊಳೆ-ಐಯಾವೊಳಿ-ಆರ್ಯಪುರ ಮುಂತಾಗಿ ಉಲ್ಲೇಖಿಸಲಾಗಿದ್ದು ಬರುಬರುತ್ತ ಐಹೊಳೆ ಆಗಿರುವ ಸಾಧ್ಯತೆ ಇದೆ.  ಇದಲ್ಲದೇ ಐನೂರು ಪಂಡಿತರು ಇದ್ದದ್ದರಿಂದ ಐಹೊಳೆ ಎಂದಾಯ್ತೆಂತಲೂ ಪರುಶುರಾಮನು ಕ್ಷತ್ರಿಯರನ್ನು ನಿರ್ನಾಮ ಮಾಡಿ  ರಕ್ತ ಸಿಕ್ತ ಪರಶುವನ್ನು ಇಲ್ಲಿನ ಹೊಳೆಯೊಂದರಲ್ಲಿ ತೊಳೆದಾಗ ಇಡೀ ನದಿ ನೀರೆ ಕೆಂಪಾಯ್ತತಂತೆ. ಇದನ್ನು ಕಂಡು ಊರಿನ ಮಹಿಳೆಯರು 'ಅಯ್ಯಯ್ಯೋ ಹೊಳಿ' ಎಂದು ಉದ್ಗರಿಸಿದ್ದೇ ಮುಂದೆ ಬರುಬರುತ್ತ ಐಹೊಳೆಯಾಯ್ತೆಂಬ ಪೌರಾಣಿಕ  ಐತಿಹ್ಯಗಳೂ ಈ ಊರಿನ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ.

ಇಲ್ಲಿ ಕ್ರಿ.ಪೂ. ೬-೭ನೇ ಶತಮಾನದಲ್ಲಿ ಅಂದರೆ 'ಕಬ್ಬಿಣದ ಯುಗ'ದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. ೬ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.

ವಾಸ್ತುಶಿಲ್ಪ: ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳನ್ನು ಕಾಣಬಹುದು.  ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇವನ್ನು ಸ್ಥಳೀಯವಾಗಿ ಸಿಗುವ ಕೆಂಪು ಮರಳು ಶಿಲೆಯಲ್ಲಿ ನಿರ್ಮಿಸಿದ್ದರಿಂದ ಅನೇಕ ದೇವಾಲಯಗಳು ಕಾಲನ ಹೊಡೆತಕ್ಕೆ ಸಿಕ್ಕು  ಹಾಳಾಗಿವೆ.  ಅಲ್ಲದೇ ಮುಸ್ಲಿಂ ದಾಳಿಯಿಂದ ಹಾಗು ಜನರಲ್ಲಿರುವ ಇತಿಹಾಸ ಪ್ರಜ್ಷೆಯ ಕೊರತೆಯಿಂದ ಮತ್ತು  ನಿಧಿಯ ಆಶೆಯಿಂದಲೂ ಅನೇಕ ದೇವಾಲಯಗಳು ಹಾಳಾಗಿರುವ ಕನ್ನಡ ಸಾಹಿತ್ಯ. ಹಾಗೂ ಇಲ್ಲಿ ಅನೇಕ ಜನರು ಈ ಕಟ್ಟಡಗಳನ್ನು ನೋಡಲು ಬಂದಾಗಲೂ ಶಿಲೆಗಳನ್ನು ಮುಟ್ಟಿ ಹಾಳಾಗಿವೆ, ಎಂದು ಹೇಳಲಾಗಿದೆ.

ಇಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಔತ್ತರೇಯ ಪದ್ಧತಿಯ ಪ್ರಭಾವವು ಕಂಡು ಬರುತ್ತದೆ. ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ ೨೨ ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.

ಇಲ್ಲಿನ ದೇವಾಲಯಗಳ  ವಿಚಿತ್ರ ಹೆಸರುಗಳಿಗೆ ಐತಿಹಾಸಿಕವಾಗಿ ಯಾವ ಸಮರ್ಥನೆಯೂ ಸಿಗುವುದಿಲ್ಲ.  ಬಹುಶ: ಬ್ರಿಟಿಷರ ಕಾಲದಲ್ಲಿ ಸರ್ವೇ ಮಾಡಲು ಪ್ರಾರಂಭಿಸಿದಾಗ ಆಯಾ ದೇವಾಲಯಗಳಲ್ಲಿ ಆಗ ವಾಸವಾಗಿದ್ದ  ವ್ಯಕ್ತಿಗಳಿಂದ ಇಂಥ ಹೆಸರುಗಳು ಬಂದಿರುವ ಸಾಧ್ಯತೆ ಇದೆ.

೧. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದದ್ದು. ಇದು ಮೂಲತ: ಸೂರ್ಯದೇವಾಲಯವಾಗಿದ್ದು 

ಕೋಟೆ ಅಂದರೆ ದುರ್ಗಕ್ಕೆ ಹತ್ತಿರವಿರುವುದರಿಂದ ದುರ್ಗ ದೇವಾಲಯವೆಂದು ಪ್ರಸಿದ್ಧವಾಗಿದೆ. ಕ್ರಿ ಶ 742ರಲ್ಲಿ 2ನೇ ವಿಕ್ರಮಾದಿತ್ಯನ

ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ 

ವಿಶೇಷತೆ. ಇದರ  ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ 

ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ. 

ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.        

೨. ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ ಲಾಡಖಾನ್ದ್ದೇ ಇಲ್ಲಿನ ಪ್ರಾಚೀನ ದೇವಾಲಯ. ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ. ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ.  ಇದರ ಹೆಸರಿಗೂ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ.  ಬಹುಶ: ಮುಸ್ಲಿಂ ಸಂತನೊಬ್ಬ ಇಲ್ಲಿ  ವಾಸವಾಗಿದ್ದರಿಂದ ಈ ಹೆಸರು ಬಂದಿರಬಹುದು. ಪೂರ್ವದಲ್ಲಿ ಇದೊಂದು ಸಮುದಾಯ ಭವನಾಗಿದ್ದು ನಂತರದ ಕಾಲಘಟ್ಟದಲ್ಲಿ ಗರ್ಭಗುಡಿಯನ್ನು ಸೇರಿಸಿದಂತಿದೆ.  ಇಲ್ಲಿನ ಕಂಬವೊಂದರ ಮೇಲೆ  ಚಳುಕ್ಯರ ರಾಜ ಲಾಂಛನ, ಕಲ್ಲಿನ ಏಣಿ ಹಾಗು ವಿವಿಧ ಚಿತ್ತಾರದ ಜಾಲಂಧ್ರಗಳು ಗಮನ ಸೆಳೆಯುತ್ತವೆ 

೩. ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ ಮೇಗುಟಿ(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು. ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತ ವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ.  ಇದು ಬೆಟ್ಟದ ಮೇಲಿದ್ದು ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಇದನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬ ಕವಿ ಕಟ್ಟಿಸಿದ.  ಇಲ್ಲಿನ ಮುಖಮಂಟಪದ ಹೊರಭಿತ್ತಿಯ ಮೇಲೆ ಚಾಳುಕ್ಯ ಅರಸರ ವಂಶಾವಳಿ ಹಾಗು ಉತ್ತರ ಭಾರತದ ವಿಷ್ಣುವರ್ಧನ ಹಾಗು ಇಮ್ಮಡಿ ಪುಲಕೇಶಿ ನಡುವೆ ನಡೆದ ಯುದ್ಧದ ವಿವರಣಾತ್ಮಕ ಶಾಸನವಿದೆ.  ಇಲ್ಲಿ ಮಹಡಿ ಮೇಲೊಂದು  ಗರ್ಭಗುಡಿ ಇರುವುದು ವಿಶೇಷ.  ಮೇಲಿರುವ ಗರ್ಭಗೃಹಕ್ಕೆ ಹೋಗಲು ಅಂತರಾಳದಲ್ಲಿ ಮೆಟ್ಟಿಲುಗಳಿವೆ.  ಇದು ಕರ್ನಾಟಕದ ಅತ್ಯಂತ ಪುರಾತನ ಜಿನಾಲಯವಾಗಿದ್ದು  ಅಧ್ಯನದ ದೃಷ್ಟಿಯಿಂದ ಮಹತ್ವದ್ದಾಗಿದೆ.

೪. ಕೊಂಟಿಗುಡಿ (ಕೊಂಟ ಅಥವಾ ತ್ರಿಶೂಲವನ್ನು ಸದಾ ಹೊಂದಿದವನೊಬ್ಬನು ವಾಸಿಸುತ್ತಿದ್ದ ಕಾರಣ ಈ ಹೆಸರು) ಎಂದು ಹೆಸರು ಪಡೆದ ದೇವಾಲಯದ ೪ ಕಂಭಗಳಿಗೆ ಆಧಾರವೇ ಇಲ್ಲ ;ಅವು ಅಡಿಯಿಂದ ಗುಂಡಾದ ಬೋದಿಗೆಯವರೆಗೆ ಚೌಕಾಕಾರವಾಗಿವೆ.




#Article 171: ಸರ್ವೆಪಲ್ಲಿ ರಾಧಾಕೃಷ್ಣನ್ (103 words)


ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ , (ಜನನ : ೫ ನೇ ಸೆಪ್ಟೆಂಬರ್, ೧೮೮೮./ 5 ಸೆಪ್ಟೆಂಬರ್ 1888 - 17 ಏಪ್ರಿಲ್ 1975) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ (೧೯೦೫-೧೯೦೬) ಶಿಕ್ಷಣ ಪಡೆದಿದ್ದರು. ಶಿಕ್ಷಕರಾಗಿದ್ದ 'ಡಾ. ಸರ್ವಪಲ್ಲಿ ರಾಧಾಕೃಷ್ಣನ್' ೧೯೬೨ ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು.

ವೆಲ್ಲೂರಿನಲ್ಲಿರುವಾಗಲೇ ಕೇವಲ ೧೬ ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು.

ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕದ ತೇಜಿಸಿಧರು 




#Article 172: ಬೇಲೂರು (1058 words)


ಬೇಲೂರು - ಹಾಸನ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲೊಂದು. ಶಿಲಾಬಾಲಿಕೆಯರ ಬೇಲೂರು ಎಂದು ಪ್ರಸಿದ್ಧವಾಗಿರುವ ಬೇಲೂರು, ಶಿಲ್ಪಕಲೆಗೆ ಖ್ಯಾತಿ ಪಡೆದಿದೆ. ಹಳೇಬೀಡು, ಸೋಮನಾಥಪುರದ ಜೊತೆಗೆ ಬೇಲೂರು, ಹೊಯ್ಸಳ ಸಾಮ್ರಾಜ್ಯದ ಶಿಲ್ಪಕಲೆಯ ದೇವಾಲಯಗಳೆಂದು ಪ್ರಸಿದ್ಧವಾಗಿವೆ. ಪ್ರತಿ ವರ್ಷವೂ ದೇಶವಿದೇಶದ ಲಕ್ಷಾಂತರ ಪ್ರವಾಸಿಗಳು ಈ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಹಳೇಬೀಡಿಗೆ ಮುನ್ನ ಬೇಲೂರು ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 

ಶಾಸನಗಳ ಪ್ರಕಾರ ಈ ನಗರವನ್ನು ವೇಲಾಪುರಿ ಎಂದೂ ಕರೆಯಲಾಗುತಿತ್ತು ಎಂದು ತಿಳಿದುಬರುತ್ತದೆ. ವರ್ಷ ೨೦೦೫ರಲ್ಲಿ ದವರು ಶ್ರವಣಬೆಳಗೊಳದ ಗೊಮ್ಮಟನ ಜೊತೆಗೆ ಬೇಲೂರು-ಹಳೇಬೀಡನ್ನೂ ವಿಶ್ವ ಸಂಸ್ಕೃತಿ ನಿಲಯವಾಗಿ ಘೋಷಿಸಲು ನೇಮಿಸಿದ್ದಾರೆ.ಈ ದೇವಾಲಯವನ್ನು ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದೂ, ಸೌಮ್ಯಕೇಶವಸ್ವಾಮಿ ದೇವಸ್ಥಾನವೆಂದೂ ಕರೆಯುವ ವಾಡಿಕೆ ಇರುವುದಾಗಿ ಸ್ಥಳೀಯ ಜನರಿಂದ ಕಂಡು ಬರುತ್ತದೆ.

ಬೇಲೂರಿನಲ್ಲಿ ಚೆನ್ನಕೇಶವಸ್ವಾಮಿಯ ದೇವಸ್ಥಾನ ಮತ್ತು ದೇವಸ್ಥಾನದ ಆವರಣವೇ ಮುಖ್ಯ ಆಕರ್ಷಣೆ. ಶಿಲ್ಪಕಲೆಗೇ ನಿದರ್ಶನವಾಗಿರುವ ಈ ದೇವಾಲಯದದಲ್ಲಿ ಚೆನ್ನಕೇಶವ ಸ್ವಾಮಿಯ ದೇವಸ್ಥಾನದ ಜೊತೆಗೆ, ಸೌಮ್ಯನಾಯಕಿ ಅಮ್ಮನವರ ದೇವಸ್ಥಾನ, ರಂಗನಾಯಕಿ ಅಮ್ಮನವರ ದೇವಸ್ಥಾನ ಮತ್ತು ಕಪ್ಪೆಚೆನ್ನಿಗರಾಯನ ದೇವಸ್ಥಾನಗಳು ಮುಖ್ಯ ಆಕರ್ಷಣೆಗಳು. ಇದಲ್ಲದೇ ಮಖ್ಯ ದೇವಸ್ಥಾನದ ಹೊರಭಾಗದಲ್ಲಿರುವ ಶಿಲಾಬಾಲಿಕೆಗಳು, ದೇವಸ್ಥಾನದ ಒಳಾಂಗಣದ ಕಂಬಗಳು ಮತ್ತು ದೇವಾಲಯದ ಗೋಪುರ ನಯನ ಮನೋಹರ.

ಬೇಲೂರು ಒಂದು ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಚೆನ್ನಕೇಶ್ವರ ದೇವಾಲಯ ಪ್ರಪಂಚದಲ್ಲಿ ಪ್ರಸಿದ್ಧಿ ಪಡೆದಿದೆ. ಈ ದೇವಾಲಯ ನೋಡಲು ಹೆಚ್ಚು ಹೆಚ್ಚು ಜನ ಬರುತ್ತಾರೆ. 

ಇಲ್ಲಿರುವ ಶ್ರೀ ಚೆನ್ನಕೇಶ್ವರ ದೇವಾಲಯವೂ ಹೊಯ್ಸಳರ ಕಾಲದಲ್ಲಿ ಪ್ರತಿಷ್ಠಾಪನೆಯಾಯಿತು  ಹಾಗೂ ಈ ದೇವಾಲಯವು ನಕ್ಷತ್ರ ಆಕಾರದಲ್ಲಿದೆ ಈ ದೇವಾಲಯವು ಸೂಕ್ಷ್ಮ ಕೆತ್ತನೆಯಿಂದ ಕೂಡಿದೆ  ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ  ಇಲ್ಲಿಗೆ ಬೇರೆ ಬೇರೆ ಕಡೆಯಿಂದ ಹೆಚ್ಚುಹೆಚ್ಚು ಜನ ಬಂದು ಈ ದೇವಾಲಯನ್ನು ವೀಕ್ಷಿಸುತ್ತಾರೆ

ಸಿದ್ದರಹಳಿ ಎಂಬ ಹೆಸರು ಬರಲು ಕಾರಣ ಇದೆ ಅದೇನೆಂದರೆ ಪ್ರಸಿದ್ಧ ದೇವಾಲಯ ಮತ್ತು ಪ್ರತೀವರ್ಷ 

ವಿವಿಧ ವಿಶೇಷ ಪೂಜೆ ಮಾಡುತ್ತಾರೆ.ಬೇಲೂರು ತಾಲ್ಲೂಕಿನ ೧೮ಕಿ.ಮಿ ಸಮೀಪದಲ್ಲಿರುವ ಸಿದ್ದರಹಳ್ಳಿಯಲ್ಲಿ ಪ್ರಸಿದ್ದವಾದ ದೇವಾಲಯವಿದ್ದು ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಹಬ್ಬವನ್ನು ಮಾಡುತ್ತಾರೆ ಆ ಹಬ್ಬವನ್ನು ಸಿದ್ದರ ಹಬ್ಬ ಎಂದು ಆಚರಿಸುತ್ತಾರೆ. ಹಿಂದಿನ ಕಾಲದಿಂದಲೂ ಈ ಹಬ್ಬವನ್ನು ಆಚರಿಸಲಾಗಿದ್ದು ಇದ್ದರಿಂದಾಗಿ ಈ ಊರಿಗೆ ಸಿದ್ದರಹಳ್ಳಿ ಎಂದು ಹೆಸರು ಬರಲು ಕಾರಣವಾಗಿದೆ.ಈ ಭಾಗದಲ್ಲಿ ಹೆಚ್ಚು ಭತ್ತ ಹಾಗೂ ಮೆಕ್ಕೆಜೋಳ.ರಾಗಿ ಬೆಳೆಯುತ್ತಾರೆ.

ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲಿಯಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಬೇಲೂರು, ಬೆಂಗಳೂರಿನಿಂದ ೨೨೨ ಕಿ.ಮಿ, ಮೈಸೂರಿನಿಂದ ೧೪೯ ಕಿ.ಮಿ ಮತ್ತು ಜಿಲ್ಲಾ ಕೇಂದ್ರದಿಂದ ೩೭ಕಿ.ಮಿ ದೂರದಲ್ಲಿದೆ. ಇಲ್ಲಿಗೆ ಬರಲು ರಸ್ತೆ ಮಾರ್ಗವೇ ಮುಖ್ಯ ಮಾರ್ಗವಾಗಿದ್ದು, ಹತ್ತಿರದ ಅರಸೀಕೆರೆಗೆ ಅಥವಾ ಬಾಣಾವರಕ್ಕೆ ರೈಲಿನಲ್ಲಿ ಬಂದು, ಅಲ್ಲಿಂದ ಮುಂದಕ್ಕೆ ಬಸ್ಸಿನಲ್ಲಿ ಬರಬಹುದು. ಬಾಣಾವರದದಿಂದ ಹಳೇಬೀಡು ಕೇವಲ ೨೫ ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಬೇಲೂರು ಕೇವಲ ೧೫ ಕಿ.ಮೀ ದೂರದಲ್ಲಿರುತ್ತದೆ. ಬೆಂಗಳೂರಿನಿಂದ ರೈಲು ಮಾರ್ಗವಾಗಿ ಬಾಣಾವರದ ರೈಲ್ವೆ ನಿಲ್ದಾಣದಲ್ಲಿ ಇಳಿದರೆ ಅಲ್ಲಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ಸಿನ ಸೌಲಭ್ಯವಿರುತ್ತದೆ.

ಇದನ್ನು ಹಿ೦ದೆ ವೇಲುಪುರ ಎ೦ದು ಕರೆಯುತ್ತಿದ್ದರು. ದೇವಾಲಯ ಕಟ್ಟುವ ಕಾರ್ಯ ಹೊಯ್ಸಳ ಚಕ್ರವರ್ತಿಯಾದ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ರಾಜಾ ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ತನ್ನ ಗುರುಗಳಾದ ಶ್ರೀ ರಾಮಾನುಜಾಚಾರ್ಯರ ಆಶಿರ್ವಾದದೊಂದಿಗೆ ಚೆನ್ನಕೇಶವಸ್ವಾಮಿಯ ವಿಗ್ರಹವನ್ನು ಪ್ರತಿಷ್ಠೆ ಮಾಡಿದನು. ಈ ರೀತಿಯಾಗಿ ಈ ದೇವಸ್ಥಾನಕ್ಕೆ ವಿಜಯನಾರಾಯಣಸ್ವಾಮಿ ದೇವಸ್ಥಾನವೆಂದು ಹೆಸರು ಬಂದಿದೆ. ಸುಮಾರು ೧೦೩ ವರ್ಷಗಳ ಕಾಲ ನಡೆದಂತಹ ಈ ದೇವಾಲಯದ ಕಾರ್ಯ, ವಿಷ್ಣುವರ್ಧನನ ಮೊಮ್ಮಗನಾದ ಇಮ್ಮಡಿ ವೀರ ಬಲ್ಲಳನ ಆಳ್ವಿಕೆಯಲ್ಲಿ ರೂಪಗೊಂಡಿತು. ದೇವಾಲಯಕ್ಕೆ ಒಂದು ವಿಮಾನ ಗೋಪುರವಿದ್ದು, ಈ ಕಾರಣವಾಗಿ ಇದನ್ನು ಹೊಯ್ಸಳದ ಏಕಕೂಟ ಶೈಲಿಯ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಗೋಪುರವು ೭೦ ಅಡಿಗಳಿಗೂ ಎತ್ತರವಾಗಿದ್ದು ಧಾಳಿಕಾರರ ಹಾವಳಿಗೆ ಸಿಕ್ಕಿ ವಿರೂಪಗೊಂಡಿತ್ತು. ಇದನ್ನು ೧೩೯೭ರಲ್ಲಿ ವಿಜಯನಗರದ ಅರಸರಾದ ಕೃಷ್ಣದೇವರಾಯರ ಮುತ್ತಜ್ಜರಾದ ಹರಿಹರ ಮಹಾರಾಜರ ದಂಡಾಧಿಪತಿ ಸಾಲುವ ಗೊಂಡನೆಂಬವರು ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡರು. ಈ ದೇವಾಲಯಕ್ಕೆ ಇನ್ನೊಂದು ಬಾಗಿಲಿದೆ. ಇದಕ್ಕೆ 'ಆನೆ ಬಾಗಿಲು' ಎಂದು ಕರೆಯುತ್ತಾರೆ 

ಬೇಲೂರೀನಲ್ಲಿ  ಅನೇಕ ದೇವಾಯಗಳಿವೆ. ಅವುಗಳಲ್ಲಿ ಚನ್ನ ಕೇಶವ ದೇವಾಲಯ ಪ್ರಸಿದ್ದವಾಗಿದೆ. 

ಗೋಪುರದ ಮೂಲಕ ಒಳಗೆ ಬಂದ ಕೂಡಲೆ ಪ್ರದಕ್ಷಿಣಾಕಾರದಲ್ಲಿ ದೇವಾಲಯವನ್ನು ಸುತ್ತಿದರೆ ಕಾಣುವ ಮುಖ್ಯ ದೇವಸ್ಥಾನಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಇದಲ್ಲದೆ ಗೋಪುರದ ಎಡಭಾಗದಲ್ಲಿ ಮಂಟಪ ಸಾಲನ್ನು ಮಾಡಿ ಅಲ್ಲಿ ಚಿಕ್ಕ ಗುಡಿಗಳನ್ನು ಮಾಡಿದ್ದಾರೆ. ಇದರ ನಂತರ ಶ್ರೀ ರಾಮದೇವರ ಗುಡಿ ಇದೆ. ಗೋಪುರದ ಬಲಭಾಗದಲ್ಲಿ ಪುಷ್ಕರಣಿಯನ್ನು ಮಾಡಲಾಗಿದೆ. ಪ್ರಮುಖ ದೇವಸ್ಥಾನವಾದ ಚೆನ್ನಕೇಶವ ದೇವಸ್ಥಾನದ ವಿವರಣೆಯನ್ನು ಮುಂದಿನ ಭಾಗದಲ್ಲಿ ನೀಡಲಾಗಿದೆ. ಇಲ್ಲಿ ದೇವಸ್ಥಾನದ ಮಿಕ್ಕ ಆವರಣವನ್ನು ವಿವರಿಸಲಾಗಿದೆ.

ಈ ಗುಡಿಯು ಮುಖ್ಯ ಗುಡಿಯ ಹಾಗೆ ನಕ್ಷತ್ರಾಕಾರವಾದ/ಶ್ರೀಚಕ್ರದ ಪೀಠದ ಮೇಲೆ ಕಟ್ಟಲ್ಪಟ್ಟಿದೆ. ಸ್ಥಳೀಯ ಕೆಲವು ಜನರಿಂದ ಇದೇ ಮೂಲವಾಗಿ ಪ್ರಧಾನ ದೇವಾಲಯವಾಗಬೇಕಿತ್ತು ಎಂದು ಕೇಳಿ ಬಂದರೂ ಈ ನಕ್ಷತ್ರಾಕಾರದ  ಪೀಠವನ್ನು ಬಿಟ್ಟರೆ ಯಾವುದೇ ಸಾಕ್ಷ್ಯಾಧಾರಗಳು ಮೂಡಿ ಬಂದಿಲ್ಲ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಕಪ್ಪೆ ಚೆನ್ನಿಗರಾಯನ ವಿಗ್ರಹವಿದೆ. ಈ ವಿಗ್ರಹದ ಹೊಟ್ಟೆಯಲ್ಲಿ ಕಪ್ಪೆಯನ್ನು ಕೆತ್ತಲಾಗಿದೆ. ಅಮರಶಿಲ್ಪಿ ಜಕ್ಕಣಾಚಾರ್ಯರ ದಂತಕಥೆಯ ಮೂಲದಿಂದ ನಮಗೆ ಇದರ ಹಿನ್ನಲೆ ತಿಳಿದುಬರುತ್ತದೆ. ಹಿಂದೆ ಜಕ್ಕಣಾಚಾರ್ಯರಿಗೂ ಅವರ ಮಗ ಡಂಕಣಾಚಾರ್ಯರಿಗೂ ವಾದ ನಡೆದು, ಡಂಕಣನು ಚೆನ್ನಿಗರಾಯನ ವಿಗ್ರಹದಲ್ಲಿ ದೋಷವಿರುವುದಾಗಿ ಹೇಳಿ, ಅದನ್ನು ನಿರೂಪಿಸಲು ಹೊರಟಾಗ ವಿಗ್ರಹದ ಗರ್ಭದಲ್ಲಿ ಕಪ್ಪೆ ಕಂಡು ಬರಲು, ವಿಗ್ರಹಕ್ಕೆ ಈ  ಹೆಸರು ಬಂದಿತೆಂದು ಹೇಳಲಾಗುತ್ತದೆ. ಇದಲ್ಲದೇ ಒಳಾಂಗಣದಲ್ಲಿ ಗೋಪಾಲಕೃಷ್ಣ, ಮಹಿಷಾಸುರಮರ್ದಿನಿ ಮತ್ತು ವಿಷ್ಣು-ಲಕ್ಷ್ಮಿಯರ ಸುಂದರ ಮೂರ್ತಿಗಳಿವೆ.

ಕಪ್ಪೆ ಚೆನ್ನಿಗರಾಯ ದೇವಸ್ಥಾನದ ಎಡಪಾರ್ಶ್ವದಲ್ಲಿರುವ ದೇವಸ್ಥಾನ ರಂಗನಾಯಕಿ ಅಮ್ಮನವರ ದೇವಸ್ಥಾನ. ಚತುರ್ಭುಜಾಧಾರಿಯಾದಿ ಸೌಮ್ಯನಾಯಕಿ ಅಮ್ಮನವರು. ಸೌಮ್ಯನಾಯಕಿ ಅಮ್ಮನವರು ಚೆನ್ನಕೇಶವನ ಮೆಚ್ಚಿನ ಪತ್ನಿಯೆಂದು ಹೇಳುತ್ತಾರೆ.

ಸೌಮ್ಯನಾಯಕಿ ಅಮ್ಮನವರ ದೇವಾಲಯದ ನಂತರ ಸಿಗುವುದೇ ಕಲ್ಯಾಣ ಮಂಟಪ. ಇಲ್ಲಿ ಚೆನ್ನಕೇಶವ ಸ್ವಾಮಿಗೂ ಸೌಮ್ಯನಾಯಕಿ ಅಮ್ಮನವರಿಗೂ ಕಲ್ಯಾಣೋತ್ಸವವನ್ನು ಮಾಡಲಾಗುತ್ತೆ. ಇದರ ಜೊತೆಗೆ ಜಾತ್ರೆಯ ಸಮಯದಲ್ಲಿ ಹೋಮಯಾಗಾದಿಗಳು ನಡೆಯುತ್ತವೆ.

ಇದು ಕಲ್ಯಾಣ ಮಂಟಪದ ಒಳಭಾಗದಲ್ಲಿದೆ. ಒಳಗೆ ಗರ್ಭಗುಡಿಯಲ್ಲಿರುವ ವಿಗ್ರಹ ಭಿನ್ನವಾಗಿದೆ. ಈ ಕಾರಣವಾಗಿ ಈ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ.

ವೀರನಾರಾಯಣ ದೇವಸ್ಥಾನದ ನಂತರ ಸಿಗುವುದು ಈ ದೇವಸ್ಥಾನ. ರಂಗನಾಯಕಿ ಅಮ್ಮನವರನ್ನು ಚೆನ್ನಕೇಶವಸ್ವಾಮಿಯ ಜೇಷ್ಠ ಪತ್ನಿ ಎಂದು ಹೇಳುತ್ತಾರೆ. ಕಾರಣಾಂತರಗಳಿಂದ ರಂಗನಾಯಕಿ ಅಮ್ಮನವರಿಗೆ ಆಭರಣಗಳನ್ನು ತೊಡಿಸಲಾಗುವುದಿಲ್ಲವೆಂದು ಹೇಳಲಾಗುತ್ತದೆ.

ದೇವಸ್ಥಾನದ ಆವರಣದಲ್ಲಿ ಮೇಲ್ಕಂಡ ದೇವಸ್ಥಾನಗಳನ್ನು ಬಿಟ್ಟು ನೋಡಲು ಇನ್ನೂ ಕೆಲವು ಆಕರ್ಷಣೆಗಳಿವೆ. ಯಜ್ಞ ಯಾಗಾದಿಗಳನ್ನು ಮಾಡಲು ಯಾಗಶಾಲೆ, ಅಡಿಗೆ ಮಾಡಲು ಪಾಕಶಾಲೆ, ಪುಷ್ಕರಣಿ ಇತ್ಯಾದಿಗಳ ವ್ಯವಸ್ಥೆ ಇದೆ. ಇವುಗಳನ್ನು ಈ ಕೆಳಗೆ ವಿವರಿಸಲಾಗಿದೆ.

ದೇವಸ್ಥಾನವನ್ನು ಗೋಪುರದ ಮೂಲಕ ಪ್ರವೇಶಿಸಿದರೆ ಆವರಣದ ಎಡಭಾಗದಲ್ಲಿ ಸುಮಾರ್ಉ ೪೦ಅಡಿ ಎತ್ತರದ ಒಂದು ಕಂಬ ಕಾಣಿಸುವುದು. ಈ ಕಂಬವನ್ನು ನಕ್ಷತ್ರಾಕಾರದ ಒಂದು ಜಗುಲಿಯ ಮೇಲೆ ನಿರಾಧಾರವಾಗಿ ನಿಲ್ಲ್ಲಿಸಲಾಗಿದೆ. ಕಂಬವು ಈ ಜಗುಲಿಯ ಮಧ್ಯದಲ್ಲಿದ್ದು ಇದರ ಕೆಳಗಡೆ ೪ಸಂದುಗಳನ್ನು ಮಾಡಲಾಗಿದೆ. ಈ ಸಂದುಗಳ ಮೂಲಕ ಒಂದು ಕಡೆ ಇಂದ ಇನ್ನೊಂದು ಕಡೆ ನೋಡಬಹುದು. ಈ ರೀತಿಯಾಗಿ ಈ ಕಂಬವು ಯಾವ ಆಧಾರವೂ ಇಲ್ಲದೆ ನಿಂತಿದೆ ಎಂದು ಖಚಿತವಾಗುತ್ತದೆ. ಜೊತೆಗೆ ವಾಯವ್ಯ ದಿಕ್ಕಿನಿಂದ ಒಂದು ತೆಳುವಾದ ಬಟ್ಟೆ ಅಥವ ಪೇಪರ್ ಚೂರನ್ನು ತುದಿಯಿಂದ ಮಧ್ಯದ ವರೆಗೆ ತಳ್ಳಿದರೆ ಸಲೀಸಾಗಿ ಹೋಗುತ್ತದೆ - ಹೀಗಾಗಿ ಇದು ಮೂರೇ ದಿಕ್ಕುಗಳಲ್ಲಿ ನಿಂತಿದೆ ಎಂದು ಸಾಬೀತಾಗುತ್ತದೆ. ಈ ಕಾರಣಾಂತರಗಳಿಂದ ಇದನ್ನು ಗುರುತ್ವಾಕೇಂದ್ರ ಕಂಬ(ಗ್ರಾವಿಟಿ ಪಿಲ್ಲರ್) ಎಂದು ಕರೆಯುತ್ತಾರೆ.ಈ ತುದಿಯ ಬೆಳಕನ್ನು ಆ ತುದಿಯಿಂದ ನೋಡಬಹುದು.

ದೇವಸ್ಥಾನದ ಇನ್ನೊಂದು ಬಾಗಿಲಿಗೆ ಆನೆಬಾಗಿಲು ಎಂದು ಕರೆಯುತ್ತಾರೆ. ಇದು ಸಾಧಾರಣವಾಗಿ ಮುಚ್ಚಿರುತ್ತದೆ. ಮೂಲ ದ್ವಾರ ಗೋಪುರದ ದ್ವಾರವಾಗಿದ್ದರೂ, ದೇವರಿಗೆ ನಡೆಯುವ ಎಲ್ಲಾ ಉತ್ಸವಗಳು ಈ ದ್ವಾರದ ಮೂಲಕವಾಗಿ ಸಂಚರಿಸುತ್ತದೆ. ಈ ರೀತಿಯಾಗಿ ಇದು ವೈಶಿಷ್ಟತೆಯನ್ನು ಪಡೆದಿದೆ.

ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ. ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ. ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು, ಯೋಗನರಸಿಂಹರು, ಕಾಳಿಮರ್ಧನ ಕೃಷ್ಣ, ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ. ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ. ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ. ಈ ಶಿಲೆಗಳಲ್ಲಿ ಸುಮಾರು ೪ ಅಡಿ ಎತ್ತರದ ಗಣಪತಿಯ ವಿಗ್ರಹ, ವಿಷ್ಣು, ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು. ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ.ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ, ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂದು ಸ್ಥಳೀಯರಿಂದ ತಿಳಿಯುತ್ತದೆ.

ಆನೆ ಬಾಗಿಲಿನ ಪಕ್ಕದಲ್ಲಿರುವುದೇ ಪಾಕಶಾಲೆ. ಇಲ್ಲಿ ಪ್ರತಿ ದಿವಿಸವೂ ದೇವರ ನೈವೇದ್ಯಕ್ಕಾಗಿ ಪ್ರಸಾದವನ್ನು ಮಾಡುತ್ತಾರೆ. ಇದರ ಪಕ್ಕದಲ್ಲೇ ಯಾಗಶಾಲೆ ಉಂಟು. ರಥೋತ್ಸವ ಅಥವ ಉತ್ಸವದ ಸಮಯದಲ್ಲಿ ಇಲ್ಲಿ ಶಾಸ್ತ್ರೀಯವಾಗಿ ನಡೆಯಬೇಕಾದ ಯಜ್ಞ-ಯಾಗಾದಿಗಳನ್ನು ಮಾಡುತ್ತಾರೆ.

ಯಾಗಶಾಲೆಯ ಪಕ್ಕದಲ್ಲಿ ರಾಮದೇವರ ದೇವಸ್ಥಾನವಿದೆ. ಗರ್ಭಗುಡಿಯಲ್ಲಿ ರಾಮ, ಸೀತೆ, ಲಕ್ಷ್ಮಣ ಮತ್ತು ಮಾರುತಿಯರ ವಿಗ್ರಹಗಳಿದೆ. ಸಾಮಾನ್ಯವಾಗಿ ರಾಮನ ಎಡಭಾಗದಲ್ಲಿರುವ ಸೀತೆ, ಇಲ್ಲಿ ಬಲಭಾಗದಲ್ಲಿರುವುದನ್ನು ಕಾಣಬಹುದು.
ರಾಮದೇವರ ದೇವಸ್ಥಾನದ ಪಕ್ಕದಲ್ಲಿ ವಾಹನ ಮಂಟಪವಿದೆ. ಉತ್ಸವಗಳಿಗೆ ಬೇಕಾಗುವ ವಾಹನ ಪ್ರತಿಮೆಗಳನ್ನು ಇಲ್ಲಿ ಇಡಲಾಗಿದೆ. ಸುಮಾರು  ೭ ಅಡಿ ಎತ್ತರದ ಹಿತ್ತಾಳೆಯಿಂದ ನಿರ್ಮಿಸಲಾಗಿರುವ ಗರುಡ, ಹಂಸ, ಆನೆ, ಆಂಜನೇಯ, ಕುದುರೆ, ನವಿಲು ಮುಂತಾದ ವಿಗ್ರಹಗಳನ್ನು ಇಲ್ಲಿ ಇಟ್ಟಿರುತ್ತಾರೆ. ಉತ್ಸವದ ಸಮಯದಲ್ಲಿ ದೇವರ ಉತ್ಸವ ಮೂರ್ತಿಗೆ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿ, ಈ ವಾಹನಗಳ ಮೇಲೆ ಕೂರಿಸಿ ಊರಿನಲ್ಲಿ ಉತ್ಸವ ಮಾಡುತ್ತಾರೆ.

ಗೋಪುರದ ಬಲಭಾಗದಲ್ಲಿರುವ ಪುಷ್ಕರಣಿ/ಕಲ್ಯಾಣಿಗೆ ಗಜಾಗುಂಡ ಎಂದು ಹೆಸರು. ಇದನ್ನು ವಾಸುದೇವತೀರ್ಥ ಎಂದೂ ಕರೆಯುತ್ತಾರೆ. ಈ ಕಲ್ಯಾಣಿಯಲ್ಲಿ ಅನೇಕರೀತಿಯ ಮೀನುಗಳನ್ನು ಬಿಟ್ಟಿರುತ್ತಾರೆ. ಈ ಕಲ್ಯಾಣಿಯ ಬಾಗಿಲನ್ನು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ನೀರಿನ ಹತ್ತಿರ ಹೋಗುವ ಪ್ರವೇಶವಿರುವುದಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಇಲ್ಲಿಯ ದೇವಾಲಯಗಳನ್ನು ನೋಡಿ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು ಎಂದಿದ್ದಾರೆ.

ಯಗಚಿ ಜಲಾಶಯ
ಯಗಚಿ ಜಲಾಶಯವು ಹಾಸನ ಜಿಲ್ಲೆಯಿಂದ 45ಕಿ.ಮೀ ದೂರದಲ್ಲಿ ಬೇಲೂರು ಬಳಿಯಲ್ಲಿದೆ. ಇದು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ. ಈ ಜಲಾಶಯವು 2004 ರಲ್ಲಿ ಹಾಸನ, ಚಿಕ್ಕಮಗಳೂರು ಮತ್ತು ಬೇಲೂರು ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಮತ್ತು ನೀರಾವರಿ ಸೌಲಭ್ಯವನ್ನು ನೀಡುವ ಉದ್ದೇಶದಿಂದ ನಿರ್ಮಾಣಗೊಂಡಿತು. ಯಗಚಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಜಲಾಶಯವು ಸಮುದ್ರ ಮಟ್ಟದಿಂದ 965 ಅಡಿ ಎತ್ತರದಲ್ಲಿದೆ. ಯಗಚಿ ಜಲಾಶಯದ ಹೊರಹರಿವು 4300 ಕ್ಯುಸೆಕ್ಸ್ ಮತ್ತು ಒಳ ಹರಿವು 4500 ಕ್ಯುಸೆಕ್ಸ್ ಇರುತ್ತದೆ. ಈ ಜಲಾಶಯವನ್ನು ನಕ್ಸಲ್ ಸಮಸ್ಯೆಯಿಂದಾಗಿ ಪೋಲಿಸರು ಕಾಯುತ್ತಿರುತ್ತಾರೆ.

ವಾಟರ್ ಆಡ್ವೇಂಚರ್ ಸ್ಪೋರ್ಟ್ಸ್
ಇತ್ತೀಚೆಗೆ ಈ ಜಲಾಶಯದ ಹಿನ್ನೀರಿನಲ್ಲಿ ಯಗಚಿ ವಾಟರ್ ಆಡ್ವೇಂಚರ್ ಸ್ಪೋರ್ಟ್ಸ್ ಸೆಂಟರ್ ಎಂಬ ಸಾಹಸ ಕ್ರೀಡಾ ಕೇಂದ್ರವು ತಲೆ ಎತ್ತಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುತ್ತಿದೆ. ಹಾಗಾಗಿ ಇಲ್ಲಿ ಪ್ರವಾಸಿಗರು ಬನಾನ ಬೋಟ್ ರೈಡ್, ಕ್ರೂಸ್ ಬೋಟ್, ಸ್ಪೀಡ್ ಬೋಟ್ , ಜೆಟ್ ಸ್ಕೈಯಿಂಗ್ ಮತ್ತು ಬಂಪರ್ ರೈಡ್ಸ್ ನಂತಹ ಸಾಹಸ ದೋಣಿ ಯಾನಗಳನ್ನು ಇಲ್ಲಿ ಮಾಡಬಹುದು. ಇಷ್ಟೇ ಅಲ್ಲದೆ ಈ ಸ್ಥಳದಲ್ಲಿ ಪ್ರವಾಸಿಗರು ಪ್ರಶಾಂತವಾಗಿ ಕಾಲ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ.

ಯಗಚಿ ನದಿಯ ಉಪಯೋಗಗಳು: ಕೃಷಿಗೆ ನೀರು ಪೂರೈಕೆ ಕುಡಿಯಲು ನೀರು ಪೂರೈಕೆ ಮನೋರಂಜನಾ ಜಲ ಕ್ರೀಡೆಗಳು ಮೀನು ಸಾಕಾಣಿಕೆ ಪ್ರವಾಸಿಗರಿಗೆ ಆಕರ್ಷಣೆಯಸ್ಥಳ ಅಂತರ್ಜಲ ವೃದ್ಧಿ

೧. 

೨. 

೩. 

೪. 

೫. 
೬.




#Article 173: ಕಾರ್ಮಿಕರ ದಿನಾಚರಣೆ (473 words)


ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.

ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.

ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ 1889ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ 1ನೆಯ ದಿನಾಂಕವನ್ನು (ಅದು ವಾರದ ಯಾವ ದಿನವೇ ಬರಲಿ) ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನವೆಂದು ಆಚರಿಸಬೇಕೆಂದು ನಿರ್ಧರಿಸಲಾಯಿತು. ಮೇ 1ರಂದು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕೆಂದು ಒತ್ತಾಯಪಡಿಸಲು ನೇರ ಕ್ರಮ ಕೈಗೊಳ್ಳಬೇಕೆಂದೂ ನಿರ್ಣಯಿಸಲಾಯಿತು. 

ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನಾಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ 1 ಸಾರ್ವಜನಿಕ ರಜಾ ದಿನ. 

ಪ್ರಪಂಚದ ಹಲವೆಡೆ ಮೇ ೧ರಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ 

ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. 20ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿನಿಂದ-ಇದರ ಆಚರಣೆ ಆರಂಭವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನೊಳಗೊಂಡ ಪ್ರದರ್ಶನಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ. ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. 1927ರಲ್ಲಿ ಮುಂಬಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಚರಿಸಿದಾಗ ಪೋಲೀಸರು ಅನೇಕ ನಿರ್ಬಂಧಕಾಜ್ಞೆಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ. 1928 ರಿಂದ 1934ರ ವರೆಗೆ ಆ ಉತ್ಸವಾಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದುವು. ಎರಡನೆಯ ಮಹಾಯುದ್ಧಾನಂತರ ಆ ದಿನವನ್ನು ಹೆಚ್ಚು ವ್ಯಾಪಕವಾಗಿ ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರೂ ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿದವು. 1969ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದುವು.

ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ ಸೆಪ್ಟೆಂಬರ್ ಮೊದಲನೆಯ ಸೋಮವಾರದಂದು ಕಾರ್ಮಿಕ ದಿನವನ್ನಾಚರಿಸಲಾಗುತ್ತದೆ. ಆ ದಿನವನ್ನಾಚರಿಸಬೇಕೆಂಬ ಚಳವಳಿಯನ್ನು ಅಲ್ಲಿ ಪ್ರಾರಂಭಿಸಿದವರು ನೈಟ್ಸ್ ಆಫ್ ಲೇಬರ್ ಎಂಬ ಕಾರ್ಮಿಕ ಸಂಘಗಳವರು. 1882, 1883 ಮತ್ತು 1884ರಲ್ಲಿ ಅವರು ಕಾರ್ಮಿಕ ದಿನದಂದು ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನ ನಡೆಸಿದರು. ಕಾರ್ಮಿಕ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ, 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು ಅಮೆರಿಕಾದಲ್ಲಿ, ಪ್ರತಿವರ್ಷದ ಸೆಪ್ಟೆಂಬರ್ ಮೊದಲನೆಯ ಸೋಮವಾರವನ್ನು ಕಾರ್ಮಿಕ ದಿನವೆಂದು ಪರಿಗಣಿಸಬೇಕೆಂದೂ ಅಂದು ರಜಾ ಘೋಷಿಸಬೇಕೆಂದೂ ಅವರು 1884ರಲ್ಲಿ ನಿರ್ಣಯ ಮಾಡಿದರು. ಈ ಚಳವಳಿಗೆ ರಾಷ್ಟ್ರದ ಎಲ್ಲ ಕಾರ್ಮಿಕ ಸಂಘಗಳು ಬೆಂಬಲ ದೊರಕಿತು. ಮೊಟ್ಟಮೊದಲು ಕಾಲೊರಾಡೂ ರಾಜ್ಯ ಆ ದಿನವನ್ನು ಕಾರ್ಮಿಕ ದಿನವೆಂದು ಮಾನ್ಯ ಮಾಡಲು 1887ರ ಮಾರ್ಚಿ 15ರಂದು ಕಾಯಿದೆಯೊಂದನ್ನು ಅನುಮೋದಿಸಿತು. ಇದೇ ಕ್ರಮವನ್ನು ಇತರ ಕೆಲವು ರಾಜ್ಯಗಳೂ ಅನುಸರಿಸಿದುವು (ನ್ಯೂಯಾರ್ಕ್, ನ್ಯೂ ಜರ್ಸಿ, ಮಸಚುಸೆಟ್ಸ್). ಅಮೆರಿಕಾದ್ಯಂತ ಅಂದು ರಜಾ ದಿನವೆಂದು ಘೋಷಿಸುವ ವಿಧೇಯಕಕ್ಕೆ ಅಮೆರಿಕದ ಕಾಂಗ್ರೆಸ್ 1894ರ ಜೂನ್ 28ರಂದು ಒಪ್ಪಿಗೆ ನೀಡಿತು. ಇದನ್ನು ಕಾರ್ಯರೂಪಕ್ಕೆ ತರಲು ಎಲ್ಲ ರಾಜ್ಯಗಳೂ ಸಮ್ಮತಿಸಿ, ಆ ಪ್ರಕಾರ ಅಗತ್ಯವಾದ ಕಾಯಿದೆ ಮಾಡಿದುವು. ಕೆನಡದಲ್ಲಿ ಬಹುತೇಕ ಪ್ರಾಂತ್ಯಗಳಲ್ಲಿ ಕಾರ್ಮಿಕ ದಿನಾಚರಣೆಗೆ ಕಾನೂನು ರಚಿಸಲಾಗಿದೆ. ಕಾನೂನಿಲ್ಲದ ಪ್ರಾಂತ್ಯಗಳಲ್ಲಿ ಆಯಾ ಗವರ್ನರುಗಳು ಆ ಬಗ್ಗೆ ಘೋಷಣೆ ನೀಡುತ್ತಾರೆ. ಅಮೆರಿಕ ಕೆನಡಗಳಲ್ಲಿ ಎಲ್ಲ ವರ್ಗಗಳ ಜನರೂ ಅದನ್ನು ಆಚರಿಸುತ್ತಾರೆ. ಅಂದು ಬಹುತೇಕ ಎಲ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನೂ ಮುಚ್ಚಲಾಗುತ್ತದೆ. ಸಭೆ, ವನಭೋಜನ, ಪ್ರದರ್ಶನ, ಮೆರವಣಿಗೆ, ಭಾಷಣ, ಕ್ರೀಡೆಗಳು- ಇವು ಅಂದು ಸಾಮಾನ್ಯ.      

 




#Article 174: ರಾಷ್ಟ್ರಕೂಟ (107 words)


ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು. ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ.

ರಾಷ್ಟ್ರಕೂಟ ಯಾದವವಂಶ - 8ನೆಯ ಶತಮಾನದ ಮಧ್ಯಭಾಗದಿಂದ 10ನೆಯ ಶತಮಾನದ ಕೊನೆಯವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುಭಾಗವನ್ನು ಆಳಿದ ರಾಜಮನೆತನ.




#Article 175: ತೆಲುಗು (1891 words)


 
ದ್ರಾವಿಡಭಾಷಾವರ್ಗಕ್ಕೆ ಸೇರಿದ ತೆಲುಗನ್ನು ಆಂಧ್ರಭಾಷೆಯೆಂದು ಕರೆಯುವುದು ಅಷ್ಟು ಸರಿಯಲ್ಲದಿದ್ದರೂ ರೂಢಿಯಲ್ಲಿ ಆ ಹೆಸರೂ ನಿಂತು ಬಿಟ್ಟಿದೆ. ಇದಕ್ಕೇನು ಕಾರಣವೆಂದರೆ ಆಂಧ್ರ ಚಕ್ರಾಧಿಪತ್ಯವೂ ತೆಲುಗು ದೇಶವೂ ಸಮಾನವ್ಯಾಪ್ತಿಯುಳ್ಳವಲ್ಲ. ಚಕ್ರಾಧಿಪತ್ಯದ ಒಂದು ಭಾಗವಾದ ಮಹಾರಾಷ್ಟ್ರ ಎಂದಿಗೂ ತೆಲುಗು ದೇಶದ ಒಂದು ಭಾಗವಾಗಲಿಲ್ಲ. ತೆಲುಗು ದೇಶದ ಭಾಗಗಳಾದ ಕಳಿಂಗದ ಮಧ್ಯ ಮತ್ತು ದಕ್ಷಿಣ ಭಾಗಗಳು ಆಂಧ್ರ ಚಕ್ರಾಧಿಪತ್ಯಕ್ಕೆ ಎಂದೂ ಸೇರಿರಲಿಲ್ಲ. ತೆಲುಗು ದೇಶದಲ್ಲಿ ನೂರಾರು ಸಂಸ್ಕೃತ ಮತ್ತು ಪ್ರಾಕೃತಿಕ ಪದಗಳು ಬಳಕೆಯಲ್ಲಿವೆ ಮತ್ತು ಇನ್ನೂ ಹೆಚ್ಚಿನ ಪದಗಳು ತೆಲುಗು ಸಾಹಿತ್ಯದಲ್ಲಿ ಪ್ರಯುಕ್ತವಾಗಿವೆ. ಆದರೆ ಈ ಸಾಲ ತೆಗೆದುಕೊಂಡ ಶಬ್ದಗಳಿಂದ, ಇವು ಎಷ್ಟೇ ಇರಲಿ, ನಾಡಿನಲ್ಲಿ ಎಷ್ಟೇ ಹರಡಲಿ, ಭಾಷಾ ಬಾಂಧವ್ಯವನ್ನು ನಿರ್ಧರಿಸಲಾಗದು. ತೆಲುಗು ತೆಲಂಗಾಣದ (ತ್ರಿಲಿಂಗ) ಭಾಷೆ. ಅದು ಈಗಿನ ಆಂಧ್ರ ಪ್ರದೇಶದ ಭಾಷೆಯಾಗಿರುವುದರಿಂದ ಅದರ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಡಲಾಗಿದೆ.

ರಾಜಮಹೇಂದ್ರಿಯಲ್ಲಿದ್ದ ಪೂರ್ವ ಚಾಲುಕ್ಯ ವಂಶದ ರಾಜರಾಜ ನರೇಂದ್ರನ (1033-43) ಆಸ್ಥಾನದಲ್ಲಿದ್ದ ನನ್ನಯನ  ಕಾಲಕ್ಕೆ ಹಿಂದೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬ ವಿಷಯವನ್ನು ನಿರೂಪಿಸಲು ನಮಗೆ ತಕ್ಕಷ್ಟು ಆಧಾರಗಳು ದೊರೆತಿಲ್ಲ. ಬೆಜವಾಡದಲ್ಲಿರುವ (ವಿಜಯವಾಡ) ಒಂದು ಕಂಬದಲ್ಲಿ ಕೊರೆದಿರುವ ಯುದ್ಧಮಲ್ಲ ಶಾಸನಮು ಎಂಬ ಶಾಸನ ಮತ್ತು ನನ್ನಯ್ಯನಿಗೆ ಹಿಂದಿನ ಇತರ ಶಾಸನಗಳಲ್ಲಿ ಪದ್ಯಗಳಿವೆ; ಅವುಗಳ ಭಾಷೆ ನನ್ನಯ್ಯ ಬಳಸಿರುವ ಭಾಷೆಯ ಹಾಗೆಯೇ ಇದೆ. ತೆಲುಗು ಭಾಷೆ ಅಥವಾ ಸಾಹಿತ್ಯ ಯಾವಾಗ ಹುಟ್ಟಿತ್ತೆಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದು ಕ್ರಿ.ಶ 600ರ ಹೊತ್ತಿಗೆ ದ್ರಾವಿಡ ಭಾಷೆಯ ಒಂದು ಪ್ರತ್ಯೇಕ ಶಾಖೆಯಾಗಿ ಇದ್ದಿತ್ತೆಂಬುದನ್ನು ಆ ಕಾಲದ ಚೋಳ ಮಹಾರಾಜರ ತೆಲುಗು ಶಾಸನವೊಂದರಿಂದ ನಿರ್ದಿಷ್ಟವಾಗಿ ಹೇಳಬಹುದು.

ನನ್ನಯ್ಯನ ಕಾಲದಿಂದಾಚೆಗೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬುದಕ್ಕೆ ತಕ್ಕಷ್ಟು ಸಾಕ್ಷ್ಯಗಳಿವೆ. ತಮಿಳಿನಲ್ಲಿ ದ್ರಾವಿಡಾಂಶ ಹೇರಳವಾಗಿ ನಿಂತುಬಿಟ್ಟಿದೆ. ಸಂಸ್ಕೃತ ಅಥವಾ ಪ್ರಾಕೃತದ ಪ್ರಭಾವಕ್ಕೆ ಅದು ಅಷ್ಟಾಗಿ ಈಡಾಗಲಿಲ್ಲ; ಆದರೆ ಇತರ ಮೂರು ದ್ರಾವಿಡ ಭಾಷೆಗಳು ಸಂಸ್ಕೃತ ಮತ್ತು ಪ್ರಾಕೃತ ಶಬ್ದಗಳನ್ನು ಹೇರಳವಾಗಿ ತೆಗೆದುಕೊಂಡಿದೆ.ಮಲೆಯಾಳ ತನ್ನ ದ್ರಾವಿಡಾಂಶದಲ್ಲಿ ಕನ್ನಡ ತೆಲುಗುಗಳಿಗಿಂತಲೂ ತಮಿಳಿಗೆ ಹೆಚ್ಚು ಸಮೀಪವಾಗಿದೆ. ತೆಲುಗಿಗೂ ಕನ್ನಡಕ್ಕೂ ಸಮಾನಾಂಶಗಳು ಹೆಚ್ಚಾಗಿದ್ದರೂ ತೆಲುಗುಗಿಂತಲೂ ಕನ್ನಡದಲ್ಲಿ ದ್ರಾವಿಡಾಂಶ ಹೆಚ್ಚು. ಈ ಬಾಂಧವ್ಯಗಳು ಮತ್ತು ವ್ಯತ್ಯಾಸಗಳನ್ನು ಈ ಭಾಷೆಗಳು ಬೆಳೆದ ಕ್ಷೇತ್ರಗಳ ಭೌಗೋಳಿಕ ವೈಲಕ್ಷಣಗಳಿಂದಲೂ ಪ್ರಾಚೀನ ಹಾಗೂ ಮಧ್ಯಕಾಲದ ಭಿನ್ನಭಿನ್ನ ರಾಜಕೀಯ ಪರಿಸ್ಥಿತಿಗಳಿಂದಲೂ ಸುಲಭವಾಗಿ ತರ್ಕಿಸಬಹುದು. ತೆಲುಗು ದೇಶ ದಖನ್ನಿನ ಮಧ್ಯಭಾಗದಲ್ಲಿದೆ. ಓಂಡ್ರ ದೇಶದವರು ಈಶಾನ್ಯದಲ್ಲೂ ಮಧ್ಯಪ್ರದೇಶದ ಹಿಂದಿ ಭಾಷೆಯ ಜನರು ಉತ್ತರದಲ್ಲೂ ಮಹಾರಾಷ್ಟ್ರರು ವಾಯುವ್ಯದಲ್ಲೂ ಕನ್ನಡಿಗರು ಪಶ್ಚಿಮದಲ್ಲೂ ತಮಿಳರು ದಕ್ಷಿಣದಲ್ಲೂ ಅದನ್ನು ಸುತ್ತುವರಿದಿದ್ದಾರೆ. ದಕ್ಷಿಣಕ್ಕೆ ಪ್ರಸರಿಸುವಾಗ ಆರ್ಯಸಂಸ್ಕೃತಿ ಅನಿವಾರ್ಯವಾಗಿ ಮೊದಲು ತೆಲುಗು ದೇಶವನ್ನು ಹಾಯ್ದೇ ದಕ್ಷಿಣ ತುದಿಯನ್ನು ಮುಟ್ಟಬೇಕು. ಆದುದರಿಂದ ತೆಲುಗುಭಾಷೆ ಮತ್ತು ಸಂಸ್ಕೃತಿಗಳು ಆರ್ಯಭಾಷೆ ಮತ್ತು ಸಂಸ್ಕೃತಿಗಳಿಂದ ದಕ್ಷಿಣದ ಇತರ ಪ್ರದೇಶಗಳಿಗಿಂತ ಹೆಚ್ಚಾಗಿ ಪ್ರಭಾವಿತವಾದವು. ತೆಲುಗಿಗಿರುವ ಮತ್ತೊಂದು ಲಾಭಾಂಶವೇನೆಂದರೆ ಮಿಕ್ಕೆಲ್ಲ ದ್ರಾವಿಡ ಭಾಷೆಗಳಿಗಿಂತಲೂ ತೆಲುಗನ್ನು ಆಡುವ ಜನರೇ ಹೆಚ್ಚು ಮಂದಿ (ಸುಮಾರು ಮೂರು ಕೋಟಿ ಅರವತ್ತು ಲಕ್ಷ ಜನ) ಇದ್ದಾರೆ. ತನ್ನ ಮೃದು ಮಧುರ ಧ್ವನಿಗೆ ಅದು ಹೆಸರಾಗಿದೆ. ಪಾಶ್ಚಾತ್ಯ ಪ್ರವಾಸಿಗರು ಇದನ್ನು ಪೂರ್ವದ ಇಟಾಲಿಯನ್ ಎಂದು ಕರೆದಿದ್ದಾರೆ.

ತೆಲುಗು ಭಾಷೆ ಪ್ರಾಚೀನ ಕಾಲದಲ್ಲಿ ಹೇಗೆ ಬೆಳೆಯಿತು ಎಂಬುದನ್ನು ನಿರೂಪಿಸುವಾಗ ನನ್ನಯ್ಯನಿಗೆ ಪೂರ್ವದ ಕಾಲದ ಒಂದು ವಿಶಿಷ್ಟ ಲಕ್ಷಣವನ್ನು ಗಮನಕ್ಕೆ ತೆಗೆದುಕೊಳ್ಳುವುದು ಆವಶ್ಯಕ. ಇತರ ಭಾಷೆಗಳಲ್ಲಿ ಇನ್ನೂ ಉಳಿದುಕೊಂಡಿರುವ ಗಳ್(ಕಳ್) ಎಂಬ ಬಹುವಚನ ಪ್ರತ್ಯಯದ ಸ್ಥಾನವನ್ನು ನನ್ನಯ್ಯನಿಗೆ ಬಹು ಹಿಂದೆಯೇ - ಲು ಎಂಬುದು ಆಕ್ರಮಿಸಿಕೊಂಡಿತು. ಅದು ಬಹುಕಾಲದಿಂದಲೂ ತೆಲುಗಿನಲ್ಲಿತ್ತೆಂಬುದನ್ನು ತೋರಿಸಲು -ಮ್ರಾ (ನ್) ಕುಲು (ಮರಗಳು) ; ಕೊಲ (ನ್) ಕುಲು (ಕೊಳಗಲು); ಈಗಲು (ನೊಣಗಳು); ಏನುಗಲು (ಆನೆಗಳು) ಎಲುಕಲು(ಇಲಿಗಳು) ಇತ್ಯಾದಿ ಬಹುವಚನ ರೂಪಗಳು ನಿದರ್ಶನವಾಗಿ ಉಳಿದು ಬಂದಿದೆ. ಮುಂದೆ ಬಹುವಚನ ಪ್ರತ್ಯಯ ಲ (ಉ) ಎಂದು ತೆಲುಗರು ಕಂಡುಕೊಂಡಾಗ ಏಕವಚನ ರೂಪಗಳನ್ನು ರಚಿಸಲು ಲು ವನ್ನು ಕಳೆದಿಟ್ಟರು. ಉದಾಹರಣೆಗೆ, ಈಗ, ಏನುಗ, ಏಲುಕ; ತಮಿಳಿನ ಈ ಯಾನೈ, ಮುಂತಾದುವನ್ನು ನೋಡಬಹುದು.

ತಮಿಳು ಮತ್ತು ಇತರ ದ್ರಾವಿಡ ಭಾಷೆಗಳಲ್ಲಿರುವಂತೆ ತೆಲುಗು ಸಹ ಬಹುವಚನ ದ್ವಿಲಿಂಗ ಪ್ರತ್ಯಯ [ರ(ಉ)] ವನ್ನು ಉಳಿಸಿಕೊಂಡಿದೆ. ಉದಾರಣೆಗೆ, ವಾರು (ಅವರು), ವೀರು (ಇವರು), ಎವರು (ಯಾರು?), ಮೀರು (ನೀವು), ಆದರೆ ಸರ್ವತ್ರ ಹರಡಿರುವ ಲು ವಿನ ಪ್ರಭಾವ ಎಷ್ಟೆಂದರೆ, ಅದಿಲ್ಲದಿದ್ದರೆ ಬಹುವಚನದ ಭಾವ ಸಮಗ್ರವಾಗಿ ಮನಸ್ಸಿಗೆ ತಟ್ಟುವುದಿಲ್ಲ. ಆದುದರಿಂದ ಕಾಲಕ್ರಮದಲ್ಲಿ ವಾರಲು, ವೀರಲು, ಮೀರಲು, ಮುಂತಾದವುಗಳು ಬೆಳೆದವು. ಇವು ಇಂಗ್ಲೀಷಿನಲ್ಲಿ ಚಿಲ್ರನ್ಸ್, ಮೆನ್ಸ್, ಡೇಟಾಸ್, ಎಂಬ ಹಾಗಿವೆ. ಕೆಲವು ಸಂದರ್ಭಗಳಲ್ಲಿ ದ್ವಿಲಿಂಗೀ ಬಹುವಚನ ಪ್ರತ್ಯಯದ ಸ್ಥಾನವನ್ನು ಸಹ ಲು ಆಕ್ರಮಿಸುತ್ತದೆ. ಉದಾಹರಣೆಗೆ, ವಾಂಡ್ಲು; ವಾಳ್ಳು (ಅವರು); ಕೂತುಂಡ್ಳು, ಕೂತೂಳ್ಳು, (ಹೆಣ್ಣು ಮಕ್ಕಳು) ಇತ್ಯಾದಿ. ಅನೇಕಾಕ್ಷರ ರೂಪಗಳನ್ನು ಮೊಟಕುಗೊಳಿಸಿದ ರೂಪಗಳು ನನ್ನಯ್ಯನ ಕಾಲದಷ್ಟು ಮುಂಚಿನಿಂದಲೇ ತಲೆದೋರುತ್ತದೆ. ಉದಾಹರಣೆಗೆ ಪೂಜಿಂಚಿತೇ? ಎಂಬ ನನ್ನಯ್ಯನ ಪ್ರಯೋಗ ಪೂಜಿಂಚಿತಿವೇ? (ಪೂಜಿಸಿದೆಯಾ) ಎಂಬುದರಿಂದ ಹುಟ್ಟಿದೆ. ಪೂಜಿಂಚಿತಿವೇನಿನ್ (ಪೂಜಿಸಿದ್ದೇ ಆದರೆ) ಎಂಬ ದೀರ್ಘರೂಪ ಕ್ರಮೇಣ ಪೂಜಿಂಚಿತಿವೇನಿ ಎಂದಾಗಿ, ಬಳಿಕ ವೇನ್-ವೇ; ತೇನ್-ತೇ ಮುಂತಾದ್ದಾಗಿ ಈಗಿನ ಪೂಜಿಸ್ತೇ ಎಂಬ ರೂಪಕ್ಕಿಳಿದಿದೆ. ಪೂಜಿಂಚಿತೇನ್ ಎಂಬುದಕ್ಕಿಂತ ಹಿಂದಿನ ಶಬ್ದರೂಪಗಳಲ್ಲಿ `ವಿ ಎಂಬುದಿದ್ದು ಮಧ್ಯಮ ಪುರುಷದ ಏಕವಚನವನ್ನು ನಿರ್ದೇಶಿಸುತ್ತಿತ್ತು. ಆದರೆ ಆ ತರುವಾಯದ ರೂಪಗಳಲ್ಲಿ ವಿ ಅಳಿದುಹೋಗಿ ಆ ರೂಪ ಎಲ್ಲ ಜನಕ್ಕೂ ಏಕವಚನ ಬಹುವಚನಗಳೆರಡಲ್ಲೂ ಪ್ರಯುಕ್ತವಾಗತೊಡಗಿತು. ಹೀಗೆ ಮಟ್ಟ ಸಮ ಮಾಡುವ ಪ್ರವೃತ್ತಿ ಈ ಮಾತುಗಳಲ್ಲಿ ಕಂಡು ಬರುತ್ತದೆ. ಅಂಟಿವೇನಿನ್ ಎಂಬುದರಿಂದ ಅನ್‍ಟೆ (ನೀನು ಹೇಳಿದರೆ); ಐತಿವೇನಿನ್ ಎಂಬುದರಿಂದ ಐತೆ (ನೀನು ಹೀಗಾಗುವುದಾದರೆ) ಇತ್ಯಾದಿ. ಕವಿಗಳು ಈ ಎಲ್ಲ ರೂಪಗಳನ್ನೂ ಛಂದಸ್ಸಿನ ಸೌಕರ್ಯಕ್ಕಾಗಿ ಉಪಯೋಗಿಸುತ್ತಾರೆ. ಕಾವ್ಯಗಳಲ್ಲೂ ಅವುಗಳನ್ನು ಅನುಸರಿಸಿ ಬರೆದ ವ್ಯಾಕರಣಗಳಲ್ಲೂ ಜನರಾಡುವ ಮಾತಿನಲ್ಲಿ ತೋರಿ ಬರುವ ಬದಲಾವಣೆಗಳು ಕಂಡುಬರುವುದಿಲ್ಲ. ಏಕೆಂದರೆ ಬಹು ಹಿಂದಣ ಕವಿಗಳು ಅನಿವಾರ್ಯವಾಗಿ ತಾವಾಡುತ್ತಿದ್ದ ಭಾಷೆಯನ್ನೇ ತಮ್ಮ ಕಾವ್ಯಗಳಲ್ಲಿ ಬಳಸುತ್ತಿದ್ದರೂ ಮುಂದೆ ಬಂದ ಕವಿಗಳು ಹಿಂದಿನ ಕವಿಗಳ ಭಾಷೆಗೆ ತಮ್ಮ ಕಾಲದ ಆಡುಮಾತಿಗಿಂತಲೂ ಹೆಚ್ಚಿನ ಗಮನವನ್ನು ಕೊಡುತ್ತಿದ್ದರು; ವೈಯಾಕರಣರು ಭಾಷೆ ಒಂದೇ ಸಲಕ್ಕೆ ಸ್ಥಿರರೂಪವನ್ನು ಪಡೆದುಬಿಟ್ಟಿರುವಂತೆ ಭಾವಿಸಿ ಪ್ರಾಚೀನ ಕವಿಗಳ ಪ್ರಯೋಗಗಳನ್ನೇ ಅವಲಂಬಿಸಿ ವ್ಯಾಕರಣ ಸೂತ್ರಗಳನ್ನು ರಚಿಸಿದರು. ಆದರೆ ಕವಿಗಳು ತಿಳಿದೋ ತಿಳಿಯದೆಯೋ ವ್ಯಾಕರಣ ಸೂತ್ರಗಳನ್ನು ಮುರಿಯುತ್ತಿದ್ದರು. ಎಷ್ಟು ಪ್ರಾಚೀನವಾದರೆ ಅಷ್ಟು ಶ್ರೇಷ್ಠ ಎಂಬ ಸೂತ್ರವನ್ನು ಸಂಪ್ರದಾಯ ನಿಷ್ಠ ಕವಿಗಳೂ ವೈಯಾಕರಣರೂ ಭಾಷಾಕ್ಷೇತ್ರದಲ್ಲೂ ಎತ್ತಿ ಹಿಡಿದಿದ್ದರು. ಆದರೆ ಕವಿಗಳು ಹಳೆಯ ವ್ಯಾಕರಣಸೂತ್ರಗಳನ್ನು ಬದಿಗೊತ್ತಿ ಜೀವಂತವಾಗಿರುವ ಆಡುಮಾತನ್ನೇ ಬಳಸಲು ಹಿಂಜರಿಯಲಿಲ್ಲ. ಏಕೆಂದರೆ ಅವು ಅವರ ಭಾವಗಳನ್ನು ಪ್ರಕಟಿಸಲು ಹೆಚ್ಚು ಪರಿಣಾಮಕಾರಿಯಾಗಿದ್ದುವಲ್ಲದೆ ಪ್ರಾಚೀನ ಶಬ್ದಗಳಿಗಿಂತಲೂ ಸುಲಭವಾಗಿ ಅರ್ಥವಾಗುತ್ತಿದ್ದವು. ಆದರೆ ಇಂಥ ಕವಿಗಳು ಬಹು ವಿರಳ. ಅವರು ಆಡುಮಾತುಗಳನ್ನು ಎಚ್ಚರದಿಂದಲೂ ಅಂಜಿಕೆಯಿಂದಲೂ ಪ್ರಯೋಗಿಸುತ್ತಿದ್ದರು. ಶಾಸನಗಳು, ಹಾಡುಗಳು, ಶತಕಗಳು ಮತ್ತು ತಮ್ಮ ತತ್ತ್ವಗಳು ಜನಕ್ಕೆ ತಿಳಿದು ಅವು ಅವರಲ್ಲಿ ಹರಡಬೇಕೆಂಬ ಆಸೆಯುಳ್ಳ ಶೈವ ಕವಿಗಳ ದ್ವೀಪದ ಕಾವ್ಯಗಳು ಆಡುಮಾತುಗಳನ್ನು ಅವುಗಳ ರೂಢಿಯ ಅರ್ಥದಲ್ಲೇ ಹೆಚ್ಚಾಗಿ ಬಳಸುತ್ತಿದ್ದರು. 1700-1850 ರಲ್ಲಿ ಬೆಳೆದ ಗದ್ಯ ಪ್ರಕಾರ ಕಥೆ, ಪ್ರಬಂಧ, ವ್ಯಾಖ್ಯಾನ, ಕಾಗದಗಳು ಮುಂತಾದ ಎಲ್ಲ ಪ್ರಕಾರಗಳ ಲೇಖನಗಳಿಗೂ ಒದಗಿ ಬಂತು. ಈ ಗದ್ಯ ಲೇಖನಗಳ ಬಹುಭಾಗವನ್ನು ಪ್ರಚಲಿತ ಭಾಷೆಯಲ್ಲೇ ಬರೆಯಲಾಗುತ್ತಿತ್ತು; ಅದು ತೆಲುಗು ಭಾಷಾ ಚರಿತ್ರೆಯನ್ನು ವ್ಯಾಸಂಗಿಸಲು ಬಯಸುವವರಿಗೆ ಆ ಭಾಷೆಯ ಬೆಳವಣಿಗೆಗಳನ್ನು ಗುರುತಿಸಲು ಕಾವ್ಯಗಳ ಭಾಷೆಗಿಂತ ಹೆಚ್ಚು ಸಹಕಾರಿಯಾಗಿದೆ. ಈ ಸಂಪ್ರದಾಯವನ್ನು ಸಿ. ಪಿ. ಬ್ರೌನ್ ಪ್ರೋತ್ಸಾಹಿಸಿದ. ತನ್ನ ಇಂಗ್ಲಿಷ್ ಶಬ್ದಕೋಶಗಳಲ್ಲಿ ಆತ ಪದಗಳ ಅರ್ಥವನ್ನು ವಿವರಿಸಲು ಪ್ರಚಲಿತ ಭಾಷೆಯನ್ನೇ ಉಪಯೋಗಿಸಿದ. ಆದರೆ ಕಾವ್ಯ ಭಾಷೆಯಲ್ಲಿ ನೀತಿ ಚಂದ್ರಿಕೆ ಎಂಬುದನ್ನು ಬಾಲ ವ್ಯಾಕರಣ ಎಂಬ ವ್ಯಾಕರಣ ಗ್ರಂಥವನ್ನು ಬರೆದ ಪರವಸ್ತು ಚಿನ್ನಯ್ಯಸೂರಿ ಈ ಸಂಪ್ರದಾಯಕ್ಕೆ ತಡೆಹಾಕಿದ. ಆತನ ನೀತಿ ಚಂದ್ರಿಕೆ ಕೃತಕವಾದ ಭಾಷೆಯಲ್ಲಿ ರಚಿತವಾಗಿದೆ. ಬಳಕೆಯಲ್ಲಿಲ್ಲದ ಆಡಂಬರದ ಪದಗಳು, ಅಲಂಕಾರ ನಿಬಿಡದ ಶೈಲಿ, ನಯವಾದ ಬಳಸು ಮಾತಿನ ಸಂಸ್ಕಂತ ಪದಗಳ ಸಮಾಸ ಜಾಲಗಳು- ಇವು ಆ ಭಾಷೆಯ ಲಕ್ಷಣ. ಆತನ ವ್ಯಾಕರಣ ಅಸಮಗ್ರವಾಗಿ ಅಸಂಗತವಾಗಿ ಇದ್ದರೂ ಕಾವ್ಯಗಳ ಭಾಷೆಯನ್ನು ಅವಲಂಬಿಸಿ ರಚಿತವಾಗಿತ್ತು. ಆತನ ಕೃತಿಗಳ ಪರಿಣಾಮವಾಗಿ ತೆಲುಗಿನಲ್ಲಿ ಆರೋಗ್ಯಕರವಾದ ಗದ್ಯದ ಮುನ್ನಡೆ ನಿಂತುಹೋಯಿತು. ಸುಮಾರು ಅರುವತ್ತು ವರ್ಷಗಳವರೆಗೆ ಆತನ ಸಮಕಾಲೀನ ಮತ್ತು ತರುವಾಯ ಬಂದ ತೆಲುಗು ಗದ್ಯ ಲೇಖಕರು ಯಾರೂ ಆತನ ಕೃತಿಗಳ ಮಾದರಿಗೆ ಎದುರು ಮಾತನ್ನೆತ್ತದೆ ಅನುಸರಿಸಿದರು. ಹೀಗೆ ಈತನ ಶೈಲಿಯನ್ನು ಅನುಕರಿಸುವ ಉತ್ಸಾಹದಲ್ಲಿ ಇವರು ಸಾಮಾನ್ಯ ಪದಗಳನ್ನು ಬಿಟ್ಟು ಹಳೆಯ ಶಬ್ದಗಳನ್ನು ಸಂಸ್ಕಂತ ಸಮಾಸಗಳಿಂದ ತುಂಬಿರುವ ಪದಗಳನ್ನೂ ಉಪಯೋಗಿಸತೊಡಗಿದರು. ಚಿನ್ನಯ್ಯಸೂರಿಯ ನೀತಿಚಂದ್ರಿಕೆ ಅಥವಾ ಅಂಥ ಶೈಲಿಯಲ್ಲಿ ಬರೆದ ಇತರ ಗ್ರಂಥಗಳನ್ನು ಶಾಲಾ ಕೊಠಡಿಗಳಲ್ಲಿ ಮಾತ್ರ ಛಾಸರನ ಭಾಷೆಯಲ್ಲಿರುವ ಛಾಸರನ ಪದ್ಯಗಳನ್ನು ಹೇಗೋ ಹಾಗೆ, ಓದಲು ಏರ್ಪಡಿಸಿದ್ದರೆ, ತೆಲುಗು ವಿದ್ಯಾರ್ಥಿಗಳಿಗಾಗಲಿ ತೆಲುಗು ಬರಹಗಾರರಿಗಾಗಲಿ ಯಾವ ಕೆಡುಕೂ ಆಗುತ್ತಿರಲಿಲ್ಲ. ಆದರೆ ಪಂಡಿತರೂ ವಿದ್ಯಾ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳ ಅಧಿಕಾರಿಗಳೂ ಒಂದು ಹೆಜ್ಜೆ ಮುಂದೆ ಹೋದರು. ಶಾಲೆಗಳಲ್ಲೂ ಆಡುಮಾತನ್ನು ನಿಷೇಧಿಸಿದರು. ಆಡುಮಾತಿನಲ್ಲಿ ತಮ್ಮ ಮನೆಮಾತಿನಲ್ಲಿ ಪ್ರಬಂಧಗಳನ್ನು ಬರೆಯಲು ಮತ್ತು ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಲು ಅವಕಾಶ ಕೊಡಲಿಲ್ಲ. ಸಾಮಾಜಿಕ ಬದಲಾವಣೆಗಳನ್ನೂ ದಲಿತರ ಉದ್ಧಾರವನ್ನು ಪ್ರತಿಪಾದಿಸುತ್ತಿದ್ದ ವೀರೇಶಲಿಂಗಂ ಪಂತುಲು ಕೂಡ ಮೊದಲು ಚಿನ್ನಯ್ಯಸೂರಿ ಹಾಕಿಕೊಟ್ಟ ಮೇಲು ಪಂಕ್ತಿಯನ್ನೇ ಅನುಸರಿಸಿದ. ಆದರೆ ಇಂಥ ಮಾದರಿಯ ನಿರುಪಯೋಗಿತೆಯನ್ನು ಬೇಗನೆ ಅರಿತುಕೊಂಡು ವಿದ್ಯಾರ್ಥಿಗಳಿಗೂ ಸಾಮಾನ್ಯ ಓದುಗನಿಗೂ ತಿಳಿಯುವಂತೆ ತನ್ನ ಭಾಷೆಯನ್ನು ಸರಳ ಮಾಡಿಕೊಂಡ. ಜೀವಂತ ಭಾಷೆಯ ಸಾಮಥ್ರ್ಯವನ್ನು ಆತ ಗಮನಕ್ಕೆ ತಂದುಕೊಳ್ಳದಿರಲಿಲ್ಲ; ತನ್ನ ಬರೆಹಗಳು ಸ್ಕೂಲು ಕಾಲೇಜುಗಳಿಗಲ್ಲ ಎಂದುಕೊಂಡು ಆತ ತನ್ನ ಸಾಮಾಜಿಕ ನಾಟಕಗಳಲ್ಲೂ ಪ್ರಹಸನಗಳಲ್ಲೂ ಅದನ್ನು ಬಳಸಿದ. ಆದರೆ ಎರಡು ಅಂಶಗಳು ಆತನ ತಿಳಿವಳಿಕೆಗೆ ಬರಲಿಲ್ಲ; ಒಂದು-ಆಗ ಇದ್ದ ವ್ಯಾಕರಣಗಳು ಕಾವ್ಯದ ಭಾಷೆಗೆ ಮಾತ್ರ ಉಪಯುಕ್ತವಾದುವು ಮತ್ತು ಕಾಲಕಾಲಕ್ಕೆ ಮುಂದಿನ ಕವಿಗಳ ಪ್ರಯೋಗಗಳ ದೃಷ್ಟಿಯಿಂದ ಅವನ್ನು ತಿದ್ದಬೇಕು ಎಂಬಂಶ. ಎರಡು-ಜೀವಂತ ಭಾಷೆಗಳು ಯಾವಾಗಲೂ ಚಲಿಸುತ್ತಲೇ ಇವೆ, ಮುಂಬರಿಯುತ್ತಿವೆ, ಬದಲಾಯಿಸುತ್ತಿವೆ, ಅವನ್ನು ವ್ಯಾಕರಣದಿಂದ ಕಟ್ಟಿ ಹಾಕಲಾಗುವುದಿಲ್ಲ. ವ್ಯಾಕರಣಗಳೆಲ್ಲ ಅವನ್ನು ಹಿಂಬಾಲಿಸಬೇಕು ಎಂಬುದು ಮತ್ತೊಂದಂಶ. ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಳ್ಳುವಂತೆ ಆಧುನಿಕ ತೆಲುಗು ಚಳವಳಿ ಸಾಧುವೆಂಬುದನ್ನು ವೀರೇಶಲಿಂಗಂ ತುಂಬ ತಡವಾಗಿ ಅರಿತುಕೊಂಡ. ಗಿಡುಗು ರಾಮಮೂರ್ತಿ ಮತ್ತು ಗುರುಜಾಡ ಅಪ್ಪಾರಾವ್ ಎಂಬವರಿಂದ 1910ರಲ್ಲಿ ಪ್ರೇರಿತವಾದ ಈ ಚಳವಳಿ, ಚಿನ್ನಯ್ಯಸೂರಿ ತಡೆ ಹಾಕುವವರೆಗೂ ನಡೆದು ಬಂದಿದ್ದ ಆಡುಮಾತಿನಲ್ಲೇ ತೆಲುಗು ಗದ್ಯವನ್ನು ಬರೆಯಬೇಕೆಂಬ ಪಂಥದವರೊಡನೆ ರಾಮಮೂರ್ತಿ ಹಲವು ವರ್ಷಗಳ ಕಾಲ ಹೋರಾಡಬೇಕಾಯಿತು. 1920ರ ಹೊತ್ತಿಗೆ ಆತ ಜಯಶಾಲಿಯಾದ. ಪತ್ರಿಕಾಕರ್ತರು ಕ್ರಮೇಣ ಜೀವಂತ ಭಾಷೆಯನ್ನೇ ತಮ್ಮ ಸಂಪಾದಕೀಯಗಳಿಗೂ ಇತರ ಲೇಖನಗಳಿಗೂ ಬಳಸತೊಡಗಿದರು. ಸಾವಿರಗಟ್ಟಲೆ ಗ್ರಂಥಗಳು ಜೀವಂತಭಾಷೆಯಲ್ಲೇ 1930-60ರ ಅವಧಿಯಲ್ಲಿ ಪ್ರಕಟವಾಗಿವೆ. ಪದ್ಯದ ಬರವಣಿಗೆಯಲ್ಲಿ ಸಹ, ಆಧುನಿಕ ಕವಿಗಳು ಉಪಯೋಗಿಸುವ ಭಾಷೆಯಲ್ಲಿ ನಿರುಪಯುಕ್ತವಾದ ಹಳೆಯ ಶಬ್ದಗಳಿರುವುದಿಲ್ಲ ಮತ್ತು ಆಧುನಿಕ ಪದ ಪ್ರಯೋಗಗಳನ್ನೇ ಬಳಸುತ್ತಾರೆ. ಆದರೆ ಹಳೆಯ ಸಂಪ್ರದಾಯವನ್ನೂ ಅನುಸರಿಸುವ ಕವಿಗಳೂ ಇದ್ದಾರೆ. ಅವರು ಹಳೆಯ ವ್ಯಾಕರಣಗಳ ನಿಯಮಗಳಿಗೆ ಅನುಸಾರವಾಗಿ ಬರೆಯಲೂ ಯತ್ನಿಸುತ್ತಿದ್ದಾರೆ. ಆದರೆ ಹೀಗೆ ಬರೆಯುವುದರಲ್ಲಿ ಅವರು ದೋಷಗಳಿಗೆಡೆಗೊಡುವುದೂ ಅನಿವಾರ್ಯವಾಗಿಯೇ ಆಗುತ್ತಿದೆ. ಜಾಗವಿಲ್ಲದ್ದರಿಂದ, ನನ್ನಯ್ಯನ ಕಾಲದಿಂದಲೂ ಭಾಷೆ ಹೇಗೆ ಬದಲಾಯಿಸುತ್ತ ಬಂದಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ತೆಲುಗಿನಲ್ಲಿ ಕೆಲವು ಸಂಸ್ಕೃತ ಶಬ್ದಗಳಿಗೆ ಬೇರೆ ಅರ್ಥಗಳು ಬಂದಿವೆ. ಉದಾಹರಣೆಗೆ, ಅಭ್ಯಂತರಂ ಎಂಬುದಕ್ಕೆ ಸಂಸ್ಕೃತದಲ್ಲಿ ಒಳಕೋಣೆ ಎಂದು ಅರ್ಥ; ತೆಲುಗಿನಲ್ಲಿ ಇದಕ್ಕೆ ಆಕ್ಷೇಪಣೆ ಎಂಬ ಅರ್ಥ ಬಂದಿದೆ. ಈ ಅರ್ಥದ ಬದಲಾವಣೆ ಹೇಗಾಯಿತೆಂದು ಈಗ ನೋಡೋಣ. ಯಾವನಾದರೊಬ್ಬ ಆಗಂತುಕ ರಹಸ್ಯವಾಗಿ ಮಾತಾಡಲು ಅಪೇಕ್ಷಿಸಿದಾಗ, ಮನೆಯ ಯಜಮಾನ ಆತನನ್ನು ಒಳಕೋಣೆಗೆ ಕರೆದುಕೊಂಡು ಹೋಗುತ್ತಾನೆ. ಮಾತಾಡಲು ಬಂದಾಗ ಯಜಮಾನ ಒಳಕೋಣೆಗೆ ಹೋಗೋಣವೇ ಎಂದು ಕೇಳುತ್ತಾನೆ. ಬಂದವನು, ಏಕೆ, ಬೇಡ ಬೇಡ ಅದು ಅವಶ್ಯಕವಲ್ಲ ಈ ಮೊಗಸಾಲೆಯಲ್ಲೇ ಹೇಳಬೇಕಾದುದನ್ನು ಹೇಳುತ್ತೇನೆ. ಎನ್ನುತ್ತಾನೆ. ಮುಂದೆ ಇದು ಇಲ್ಲಿಯೇ ಹೇಳಲು ನನ್ನ ಆಕ್ಷೇಪಣೆಯೇನೂ ಇಲ್ಲ ಎಂಬರ್ಥಕ್ಕೆ ತಿರುಗಿತು. ಪ್ರಾಚೀನತಮ ಕವಿಗಳು ಪ್ರಯೋಗಿಸಿರುವ ಕೆಲವು ತೆಲುಗು ಶಬ್ದಗಳನ್ನು ಈಗಲೂ ಉಪಯೋಗಿಸುತ್ತಾರೆ. ಆದರೆ ಬೇರೆ ಅರ್ಥದಲ್ಲಿ. ಉದಾಹರಣೆಗೆ, ಕಂಪು ಎಂಬುದಕ್ಕೆ ಹಿಂದೆ ಯಾವ ಬಗೆಯ ವಾಸನೆಗಾದರೂ ಪ್ರಯುಕ್ತವಾಗುತ್ತಿತ್ತು, ಮುಂದೆ ಅದಕ್ಕೆ ನಾತ ಎಂಬ ಅರ್ಥ ಬಂದಿದೆ.

ಚೀರೆಲು ಎಂಬುದನ್ನು ಹದಿಮೂರನೆಯ ಶತಮಾನದ ತಿಕ್ಕನ ರುಮಾಲಿನ ಬಟ್ಟೆ ಎಂಬರ್ಥದಲ್ಲಿ ಪ್ರಯೋಗಿಸಿ. ಈಗದಕ್ಕೆ ಹೆಂಗಸರ ಸೀರೆ ಎಂಬರ್ಥ ಬಂದಿದೆ. ರೇಪು ಎಂಬುದಕ್ಕೆ ಮೊದಲು ಪ್ರಾತಃಕಾಲ ಎಂಬರ್ಥವಿದ್ದು ಈಗ ನಾಳೆ ಎಂಬರ್ಥ ಬಂದಿದೆ. ನಡುವಣ ಸ್ವರಗಳನ್ನೋ ಅಕ್ಷರಗಳನ್ನೋ ಬಿಟ್ಟು ಶಬ್ದಗಳನ್ನು ಸಂಕ್ಷೇಪಗೊಳಿಸಲಾಗಿದೆ.

ಉದಾಹರಣೆಗೆ, ಚಿಲುಕಚಿಲ್ಕ [ಗಿಳಿ]; ಮೊಲಕಮೊಲ್ಕ [ಚಿಗುರು]; ಕೊಲಂದಿಕೊಲ (ಒ) ದಿಕೊಲ್ಡಕೊದ್ದಿ (ಕೆಲವು, ಸ್ವಲ್ಪ); ಚೇಸಿನದಿಚೇಸಿಂದಿ (ಮಾಡಿದುದು); ಮೂಡ್-ಆಗು-ನಾಡುಮೂಡ್-ಅವು-ನಾಡು ಮೂಡೋನಾಡು [ಮೂರನೆಯದಿನ]; ಇರುವಡಿಇರುವೈಇರವೈ [ಇಪ್ಪತ್ತು] ಅಂತಯುನುಅಂತಾನುಅಂತಾ(ಎಲ್ಲ); ಅಂತದನಿಕ [ಅಲ್ಲಿಯವರೆಗೆ] ಅಂತದಾಕಅಂದಾಕ; ವಲುವರುವಲುವದುವಲದುವಲ್‍ದುವದುಕ [ಬೇಕಾಗಿಲ್ಲ, ಬೇಡ] ವಚ್ಚುಚುವಸ್ತು[ಬರುವುದು].

ಕ್ರಿಯಾಪದಗಳಲ್ಲಿ ಕೆಲವು ಸಂಕ್ಷಿಪ್ತರೂಪಗಳನ್ನು ಹೊಂದಿರುವುದು ಕುತೂಹಲಜನಕವಾಗಿವೆ. ಉದಾಹರಣೆಗೆ, ಚೇಯು (ಮಾಡು); ಚೇಯು ಚುಂಡುಡುನು (ಮಾಡುತ್ತಾ ನಾನಿದ್ದೇನೆ) ಎಂಬುದನ್ನು ನನ್ನಯ್ಯ ಬಳಸಿದ್ದಾನೆ. ತರುವಾಯ ಅದು ಚೇಯು-ಚ-ಉಂಡುನು ಎಂದಾಯಿತು. ಕೊನೆಗೆ ಅದರ ಆಧುನಿಕ ರೂಪ ಚೇಸ್ತು ಉಂಡುನು ಎಂದಾಗಿದೆ ಮತ್ತು ಉಂಡುನು ಎಂಬುದು ಉಂದಟಾನು ಎಂದಾಗಿದೆ. ಇದೇ ರೀತಿಯಲ್ಲಿ ಚೇಯು-ಚ್-ಉಂಡುದುರು ಮತ್ತು ಚೇಯುಚುಂದ್ರು (ಅವರು ಮಾಡುತ್ತಿದ್ದಾರೆ) ಎಂಬ ರೂಪಗಳನ್ನು ಪ್ರಾಚೀನತಮ ಕವಿಗಳು ಬಳಸುತ್ತಿದ್ದರು. ಇವು ಈ ಚೇಸ್ತೂ ಉಂಟುರು ಎಂದು ತೀರದ ಜಿಲ್ಲೆಗಳಲ್ಲೂ ಚೇಸ್ತುಂಡ್ರು ಎಂದು ತೆಲಂಗಾಣದಲ್ಲೂ ಆಗಿದೆ.

ಚೇಸಿತಿನಿ (ನಾನು ಮಾಡಿದೆ)ಚೇಸ್ತಿನಿಚೇಸ್ತಿ ಎಂಬುದು ಸೀಡೆಡ್ (ಬಿಟ್ಟು ಕೊಟ್ಟ) ಜಿಲ್ಲೆಗಳಲ್ಲೂ ತೆಲಂಗಾಣದಲ್ಲೂ ಬಳಕೆಯಲ್ಲಿದೆ. ಆದರೆ ತೀರದ ಜಿಲ್ಲೆಗಳಲ್ಲಿ ಕಣ್ಮರೆಯಾಗಿದೆ. ಅದರ ಜಾಗದಲ್ಲಿ ಚೇಸಿ-ನ-ವಾಡನು ಎಂಬುದು ಪುಲ್ಲಿಂಗದಲ್ಲೂ ಚೇಸಿ-ನ-ದಾನನು ಎಂಬುದು ಸ್ತ್ರೀಲಿಂಗದಲ್ಲೂ ಪ್ರಯುಕ್ತವಾಗುತ್ತಿದೆ. ಇವುಗಳು ಕ್ರಮವಾಗಿ ಅಖ್ಯಾತ ಪ್ರತ್ಯಯಗಳನ್ನು ಹಚ್ಚುವುದರಿಂದ ಆದುವಲ್ಲ. ಮಾಡಿದ್ದನ್ನು ಹೇಳಲು ಉಪಯೋಗಿಸುವ ರೂಪಗಳು ಮೊದಲನೆಯದರ ಪದಶಃ ಅರ್ಥ ಏನೆಂದರೆ ಅದನ್ನು ಮಾಡಿದವನು ನಾನು ಎಂದು. ಎರಡನೆಯದಕ್ಕೆ ಅದನ್ನು ಮಾಡಿದವಳು ನಾನು ಎಂದು. ಇವೆರಡರಲ್ಲಿ ಪ್ರತಿಯೊಂದು ಕಾಲಕ್ರಮೇಣ ಬದಲಾಯಿಸಿದೆ. ಚೇಸಿನವಾಡನುಚೇಸಿನಾಡನುಚೇಸಿನ್‍ಡ ಅಥವಾ ಚೇಸಿನಾನುಚೇಶಾನು; ಚೇಸಿನದಾನನು. ಚೇಸಿನದಾನ ಅಥವಾ ಚೇಸಿನಾನುಚೇಶಾನು. ಇವೆರಡು ಸಂದರ್ಭಗಳಲ್ಲೂ ಕೊನೆಯ ರೂಪಗಳು ಚೇಸಿನನು ಮತ್ತು ಚೇಶಾನು ಎಂದಾಗಿ ಲಿಂಗಸೂಚಕವಾದ ಯಾವ ಪ್ರತ್ಯಯಗಳನ್ನೂ ಹೊಂದದೆ ಇವೆ. ಹೀಗೆಮಟ್ಟಸಮಾಡುವ ಪ್ರಕ್ರಿಯೆಯನ್ನು ಆಧುನಿಕರು ಸಮೀಚೀನವಾದ ವಿಕಾಸವೆಂದೂ ಶುದ್ಧಪದ ಪ್ರಿಯರು ಹಸೆಗೆಟ್ಟ ಬದಲಾವಣೆಯೆಂದೂ ಭಾವಿಸುತ್ತಾರೆ. ಪ್ರಾಚೀನತಮ ಲೇಖಕರು ತಪ್ಪದೆ ಬಳಸುತ್ತಿದ್ದ ಅರ್ಧಾನುಸ್ವಾರ (0) ಮತ್ತು ಶಕಟರೇಫ (¾) ಗಳನ್ನು ಆಧುನಿಕರು ಕೈಬಿಟ್ಟಿದ್ದಾರೆ. ಅದನ್ನು ಎಲ್ಲಿ ಉಪಯೋಗಿಸಬೇಕೆಂಬುದನ್ನು ಬರೆಹಗಾರರು ಅರಿತಿದ್ದ ಕಾಲವೊಂದಿತ್ತು. ಏಕೆಂದರೆ ಜನ ಅವನ್ನು ಉಚ್ಚರಿಸುತ್ತಿದ್ದರು. ಕಾಲಕ್ರಮೇಣ ಜನರ ಮಾತಿನ ರೂಢಿ ತೆಲುಗು ದೇಶದ ಅನೇಕ ಭಾಗಗಳಲ್ಲಿ ಅಷ್ಟೋ ಇಷ್ಟೋ ಬದಲಾಯಿಸುತ್ತ ಬಂತು. ನಾಗರಿಕತೆಯಲ್ಲೂ ಮುಂದುವರಿದಿದ್ದ ಮಧ್ಯಭಾಗದ ಜನರಲ್ಲಿ ಮಾತಿನ ಉಚ್ಚಾರಗಳಲ್ಲಿ ವ್ಯತ್ಯಾಸಗಳು ಬೇಗನೆಯೂ ವಿಸ್ತಾರವಾಗಿಯೂ ಹರಡಿದುವು. ದೇಶದ ಕೊನೆ ಮೂಲೆಗಳಲ್ಲಿ ಮಾತ್ರ ಈ ವ್ಯತ್ಯಾಸಗಳು ನಿಧಾನವಾಗಿ ವ್ಯಾಪಿಸಿದವು, ಏಕೆಂದರೆ ಭೌಗೋಳಿಕವಾದ ಅಡಚಣೆಗಳಿಂದ ಆ ಭಾಗದ ಜನರು ಭಾಷೆಯ ಮುಖ್ಯ ಪ್ರವಾಹದ ಸಂಸರ್ಗದಿಂದ ದೂರ ಉಳಿದರು. ನದಿಯಲ್ಲಿ ನೆರೆಯುಕ್ಕಿದಾಗ ನೀರು ಅಕ್ಕಪಕ್ಕದ ಹಳ್ಳ ಕೊಳ್ಳಗಳಿಗೆ ಹರಿದು ಹಿಂಗಿ ಹೋಗುವವರೆಗೂ ಅಥವಾ ಮತ್ತೊಂದು ನೆರೆ ಬಂದಾಗ ಅದರೊಡನೆ ಬೆರೆಯುವವರೆಗೂ ಕೆಲವು ವರ್ಷಗಳ ಕಾಲ ಅಲ್ಲೆ ತಂಗಿರುತ್ತದೆ. ಆದರೆ ನದಿಯ ನೀರು ಮಾತ್ರ ಸತತವಾಗಿ ಬದಲಾಯಿಸುತ್ತಲೇ ಇರುತ್ತದೆ. ಜೀವಂತವಾಗಿರುವ ಭಾಷೆಯ ವಿಚಾರದಲ್ಲೂ ಹೀಗೆಯೇ ಪೂರ್ವದ ಕವಿಗಳು ಉಪಯೋಗಿಸಿರುವ ಹಲವು ಪದಗಳು ನಾಡಿನ ಮಧ್ಯಭಾಗದಲ್ಲಿ ಬಳಕೆಯಲ್ಲಿಲ್ಲದೆ ಹಿಂದೆ ಸರಿದಿವೆ. ಆದರೆ ಕೊನೆ ಮೂಲೆಗಳಲ್ಲಿ ಅವನ್ನು ಜನ ಇನ್ನೂ ಬಳಸುತ್ತಿದ್ದಾರೆ. ಉದಾಹರಣೆಗೆ: ಕುರು (ಸ್ವಲ್ಪ; ಕೊಂಚ); ಕುರು ಮಾಪು ಪುಟ್ಟಂ (ಸ್ವಲ್ಪ ಕೊಳೆಯಾಗಿರುವ ಬಟ್ಟೆ) ಎಂಬುದನ್ನು ನನ್ನಯ್ಯನ ಪ್ರಯೋಗ; ಅದು ತೆಲುಗು ದೇಶದ ಮಧ್ಯಭಾಗದಲ್ಲಿ ಕಣ್ಮರೆಯಾಯಿತು; ಆದರೆ ದೇಶದ ಉತ್ತರ ಭಾಗದ ಕೊನೆಯ ಜಿಲ್ಲೆಯ ಹಳ್ಳಿಗಳ ಜನ ಬಳಸುತ್ತಾರೆ.

ಮಿಕ್ಕೆಲ್ಲ ಭಾಷೆಗಳಂತೆಯೇ ತೆಲುಗು ಸಹ ಸ್ವಂತವಾಗೂ ಪರಭಾಷೆಯಿಂದ ಎರವಲು ಪಡೆದೂ ಶಬ್ದಸಂಪತ್ತನ್ನು ಬೆಳೆಸಿಕೊಂಡಿದೆ. ಕೆಲವು ಶಬ್ದಗಳಿಗೆ ಹೊಸ ಅರ್ಥಗಳು ಬಂದಿವೆ. ಕೆಲವಕ್ಕೆ ಮೂಲ ಅರ್ಥದಿಂದ ಉದ್ಭವವಾದ ಮತ್ತೊಂದು ಅರ್ಥ ಪ್ರಾಪ್ತವಾಗುತ್ತದೆ. ಉದಾಹರಣೆಗೆ, ಮಾಟ (ಮಾತು) ಎಂಬುದನ್ನು ಮೂಲದ ಅರ್ಥಕ್ಕೆ ಸಮೀಪವಾಗಿಯೋ ಅಥವಾ ದೂರವಾಗಿಯೋ ಇರುವ ಅನೇಕ ಭಾವಗಳನ್ನು ಹೇಳಲು ಉಪಯೋಗಿಸುತ್ತಾರೆ. ಸಿ.ಪಿ. ಬ್ರೌನ್ ಈ ಪದಕ್ಕೆ ಮಾತು, (ಪದ) ಮಾತುಗೊಡುವದು, ಸುದ್ದಿ ಎಂಬ ಅರ್ಥ ಕೊಟ್ಟಿದ್ದಾನೆ. ಅಲ್ಲದೆ ಗಮನಾರ್ಹವಾದ ಉದಾಹರಣೆಗಳನ್ನು ಕೊಟ್ಟಿದ್ದಾನೆ; ಮಾಟಾಡು, ಮಾಟಕಾರಿ (ವಾಚಾಳಿ), ಮಾಟಲಕು ಪಟ್ಟುಕೊಂಟೆ ವಿಡವದು (ಮಾತನಾಡಲು ಮೊದಲು ಮಾಡಿದರೆ ಮುಗಿಸಲೇ ಒಲ್ಲೆ), ಮಂಚಿ ಮಾಟ (ಒಳ್ಳೆಯದು), ನಾಕು ತುರುಕ ಮಾಟಲು ರಾವು (ನನಗೆ ತುರುಕು ಮಾತು ತಿಳಿಯದು), ವಾಡಿಕಿ ನಾಕು ಮಾಟಲು ಲೇವು (ನನಗೂ ಅವನಿಗೂ ಮಾತಿಲ್ಲ), ಅತನು ಮಾಟ ತಪ್ಪಲೇದು (ಆತ ಕೊಟ್ಟ ಭಾಷೆಯನ್ನು ತಪ್ಪುವುದಿಲ್ಲ), ನಾ ಮಾಟ ವೇರು, ನೀ ಮಾಟ ವೇರು (ನಾನೊಂದು ಹೇಳುತ್ತೇನೆ, ನೀನೊಂದು ಹೇಳುತೀಯ) ಆಯನ ಮಾಟಕು ಎದುರುಲೇದು (ಆತನ ಮಾತಿಗೆ ಎದುರಿಲ್ಲ), ವೊಕ ಮಾಟ ಯಿಚ್ಚಿಪದಿಮಾಟಲು ತೀಸುಕೊನ್ನಾಡು (ಒಂದು ಮಾತಿಗೆ ಹತ್ತು ಮಾತು ಪಡೆದ), ಆ ಮಾಟ ವಿಂಟೇ ಆಯನ ಯೇಮನುನು? (ಈ ಮಾತು ಕೇಳಿದರೆ ಆತ ಏನೆಂದಾನು?) ಕೆಲವು ಶಬ್ದಗುಚ್ಚಗಳಲ್ಲಿ ಮಾಟ ಎಂಬುದನ್ನು ಭಾಷಾಂತರಿಸುವ ಅವಶ್ಯವಿಲ್ಲ. ಉದಾಹರಣೆಗೆ, ಆಮೆ ತಿರುಗವಸ್ತುವಲ್ಲದೆ ಮಾಟ ತೆಲಿಸಿ (ಅವಳು ಹಿಂದಿರುಗುತ್ತಾಳೆಂದು ತಿಳಿದು); ಆ ಮಾಟೇಯೆರುಗನು (ಆ ವಿಷಯವೇ ತಿಳಿಯದು); ಇಪ್ಪಟ್ಲೋ ವಾನಿ ಮಾಟ ಸಾಗದು (ಈಗ ಅವನ ಮಾತು ನಡೆಯದು); ಯೆಂತ ಮಾಟ! (ಎಂಥ ಮಾತು!) ಮಾಟ ಎಂಬುದನ್ನು ಇನ್ನೂ ಹಲವಾರು ಬಗೆಗಳಲ್ಲಿ ಉಪಯೋಗಿಸುತ್ತಾರೆ. ದೇಸೀ ಪ್ರಯೋಗಗಳನ್ನು ಬೆಳೆಸಿರುವ ಇಂಥ ಹಲವಾರು ಪದಗಳಿವೆ. ಶಬ್ದಾರ್ಥ ನಿರ್ವಚನ ಶಾಸ್ತ್ರಕ್ಕೆ ತೆಲುಗು ಭಾಷೆಯಲ್ಲಿ ಒಳ್ಳೆಯ ಅವಕಾಶವಿದೆ.

ಇತರ ಭಾಷೆಗಳಿಂದ ತೆಲುಗು ನೂರಾರು ಶಬ್ದಗಳನ್ನು ತೆಗೆದುಕೊಂಡಿದೆ. ಮೊದಲು ಅದು ಸಂಸ್ಕಂತದಿಂದ ನೇರವಾಗಿಯೂ ಪ್ರಾಕೃತದ ಮೂಲಕವೂ ಅನೇಕ ಶಬ್ದಗಳನ್ನು ತೆಗೆದುಕೊಂಡಿತು; ಸಂಸ್ಕಂತದ ತದ್ಭವಗಳನ್ನು ರೂಪಿಸಿಕೊಂಡಿತು. ಉದಾಹರಣೆಗೆ, ಸಂಸ್ಕಂತದ `ಮುಖ'ದಿಂದ ಮೊಗಮುಲು, ಮುಗ್ಧಾ ಎಂಬುದರಿಂದ ಮುದ್ದ-(ರಾಲು), ಯುವತಿಯಿಂದ ಉವಿದ; ಅಗ್ನಿಯಿಂದ ಅಗ್ಗಿ ಮುಂತಾದವು.

ಅದು ಸಾಮಾನ್ಯವಾಗಿ ಪ್ರತ್ಯಯರಹಿತ ಶಬ್ದಗಳನ್ನು ತೆಗೆದುಕೊಂಡು ತನ್ನದೇ ಆದ ವಿಭಕ್ತಿ ಮತ್ತು ಅಖ್ಯಾತ ಪ್ರತ್ಯಯಗಳನ್ನು ಸೇರಿಸಿಕೊಳ್ಳುತ್ತದೆ. ಉದಾಹರಣೆಗೆ, ಪುರುಷುಡು, ಪುಷ್ಪಂ, ಗುರುವು, ಸುರಲು, ಜನಿಸ್ತು (ಜನಿಸುವದು), ರಕ್ಷಿಸ್ತು ಇದಕ್ಕೆ ಕೆಲವು ಅಪವಾದಗಳಿವೆ; ಉದಾಹರಣೆಗೆ, ಮನಸಾ, ಕ್ರಮಶಃ ಅಥವಾ ಕ್ರಮೇಣ ಇತ್ಯಾದಿ.

ಎರವು ತೆಗೆದುಕೊಂಡ ಪದಗಳನ್ನು ಜೀರ್ಣಿಸಿಕೊಳ್ಳುವ ವಿಧಾನದಲ್ಲಿ ಒಂದು ವಿಶೇಷಾಂಶ ಗೋಚರಿಸುತ್ತದೆ. ಇಂಗ್ಲಿಷಿನ ರೂಲ್ ಎಂಬ ಶಬ್ದಕ್ಕೆ ಅದರ ಬಹುವಚನ ಪ್ರತ್ಯಯವನ್ನು ಸೇರಿಸಿ ಹೇಳುತ್ತಾರೆ. ನೀಕು ರೂಲ್ಸು ತೆಲುಸನಾ? (ನಿನಗೆ ರೂಲ್ಸು ಗೊತ್ತೇ?) ನೀವು ರೂಳ್ಳು ಗೀಯಗವಲಾ? (ನೀನು ಗೆರೆಗಳನ್ನು ಎಳೆಯ ಬಲ್ಲೆಯಾ). ಮನ್ಸ ಮುಂತಾದ ಶಬ್ದಗಳಲ್ಲಿ ಅಂತ್ಯದಲ್ಲಿರುವ `ಸ್ ಎಂಬ ಅಕ್ಷರವನ್ನು ಬಹುವಚನ ಪ್ರತ್ಯಯವಾಗಿ ತೆಲುಗನಾಕು ಸಮನು ವಚ್ಚಿಂದಿ ಎನ್ನುತ್ತಾನೆ. ಇದನ್ನು ಬಹುವಚನದಲ್ಲಿ ಉಪಯೋಗಿಸುವಾಗ ಸಮನ್‍ಲು ಎಂದು ಪ್ರಯೋಗಿಸುತ್ತಾನೆ. ಇದು ಅರಗಿಸಿಕೊಳ್ಳುವ ವಿಧಾನವನ್ನು ಸೂಚಿಸುತ್ತದೆ.

ಕೆಲವು ಪರಕೀಯ ಶಬ್ದಗಳು ಜನಕ್ಕೆ ಎಷ್ಟು ಪರಿಚಿತವಾಗಿವೆಯೆಂದರೆ ಅವು ತೆಲುಗು ಶಬ್ದಗಳಲ್ಲ ಎಂದು ಅವರಿಗೆ ಹೇಳಿದಾಗ ಅವರು ಅಚ್ಚರಿಗೊಳ್ಳುತ್ತಾರೆ. ಉದಾಹರಣೆಗೆ: ರೈಲು ಬಂಡಿ, ಕಾನಿಸ್ತೇಬಲು, ಪೋಸ್ಟ್ ಆಫೀಸು, ಕವರು, ಇಸ್ಕೂಲು, ಕಾಲೇಜಿ, ಇಸ್ಪೇಟು, ಕಳಾವರು, ಕೋರ್ಟು, ವೋಟು, ಟಿಕೆಟ್ಟು, ಲಾಯರು, ಅಸುಪತ್ರಿ -ಮುಂತಾದುವು. ತೆಲುಗಿನಲ್ಲಿ ಒಗಟುಗಳೂ ಗಾದೆಗಳೂ ತುಂಬ ಇವೆ. ಇವುಗಳಲ್ಲಿ ತಮ್ಮದೇ ಆದ ಅಂತರಪ್ರಾಸ, ಅಂತ್ಯಪ್ರಾಸ, ಛಂದೋಲಯಗಳು ಮುಂತಾದ ಲಕ್ಷಣಗಳು ಇವೆ. ಪೋರಾನಿ ಛೋಟುಲಕುಪೋತೆ, ರಾರಾನಿ ನಿಂದಲು ರಾಕ ಮಾನವು (ಹೋಗಬಾರದ ಜಾಗಕ್ಕೆ ಹೋದರೆ ನೀನು ನಿಂದೆಗೂ ಅವಮಾನಕ್ಕೂ ಪಾತ್ರನಾಗಬೇಕಾಗುತ್ತದೆ); ಮಾಟಲು ಕೋಟಲು ದಾಟುತಾಯ್; ಕಾನಿ ಕಾಳ್ಳು ಗಡಪ ದಾಟಲೇವು (ಮಾತುಗಳು ಕೋಟೆಗಳನ್ನು ದಾಟುತ್ತವೆ; ಕಾಲುಗಳು ಹೊಸಿಲನ್ನು ದಾಟವು- ಬರಿ ಬಾಯಿ ಮಾತಿನವನ್ನು ಕುರಿತು ಹೀಯಾಳಿಕೆ), ಒಕನಾಡು ವಿಂದು ಒಕನಾಡು ಮಂದು (ಒಂದು ದಿನ ಹಬ್ಬ, ಒಂದು ದಿನ ಮದ್ದು), ತಾನು ವಲಚಿಂದಿ ರಂಭ; ತಾನು ಮುನಿಗಿಂದಿ ಗಂಗ (ತಾನೊಲಿದವಳು ರಂಭೆ; ತಾನು ಮಿಂದುದು ಗಂಗೆ); ತಾಡುಲೇನಿ ಕಟ್ಟು; ಕೋಲಲೇನಿ ಪೆಟ್ಟು (ಹಗ್ಗವಿಲ್ಲದ ಕಟ್ಟು, ಬಾಣವಿಲ್ಲದ ಗುರಿ); ಶುಲ್ಕ ಪ್ರಿಯಾಲು, ಶೂನ್ಯ ಹಸ್ತಾಲು (ಶುಲ್ಕ ಹೊಗಳಿಕೆ, ಶೂನ್ಯ ಹಸ್ತ) ಇತ್ಯಾದಿ.

ಒಗಟೆಗಳೂ ಅಂತರಪ್ರಾಸ, ಅಂತ್ಯಪ್ರಾಸ ಮತ್ತು ಛಂದಸ್ಸುಗಳಿಂದ ನಿಬದ್ಧವಾಗಿವೆ. ಉದಾಹರಣೆಗೆ ತೆಲ್ಲನಿಮಡಿಲೋ ನಲ್ಲನಿವಿತ್ತುಲು; ಚೇತಿತೊತಲ್ಲಿನಾ, ನೋಟಿತೋ ಏರಿನಾಂ (ಬಿಳಿ ಹೊಲದಲ್ಲಿ ಕಪ್ಪು ಬೀಜಗಳನ್ನು ನಮ್ಮ ಕೈಯಿಂದ ಬಿತ್ತಿದೆವು, ಬಾಯಿಂದ ಎತ್ತಿದೆವು)- ಬಿಳಿಯ ಕಾಗದದ ಮೇಲೆ ಕಪ್ಪು ಶಾಯಿಯಿಂದ ಬರೆದು ಆಮೇಲೆ ಅದನ್ನು ಓದುವದನ್ನು ಕುರಿತ ಒಗಟೆಯಿದು. ದಾನಿ ಭೋಗಂ ರಾಜ ಭೋಗಂ, ದಾನಿ ಪಾಲು ಪೆಂಟಪಾಲು (ಅದರ ಭೋಗ ರಾಜಭೋಗ, ಅದರ ಪಾಲು ತಿಪ್ಪೆ)- ರಾಜನು ಊಟ ಮಾಡಿದ ಬಾಳೆ ಎಲೆಯ ವರ್ಣನೆ ಇದು.

ತೆಲುಗು ಸಾಹಿತ್ಯ




#Article 176: ಮರಾಠಿ (869 words)


ಮರಾಠಿ 	- 
ಇಂಡೋಆರ್ಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖಭಾಷೆ. ಮಹಾರಾಷ್ಟ್ರೀ ಅಪಭ್ರಂಶದಿಂದ ವಿಕಾಸಗೊಂಡಿದೆ. ಮಹಾರಾಷ್ಟ್ರ ರಾಜ್ಯದ ಆಡಳಿತ ಭಾಷೆಯಾಗಿರುವ ಇದು 68,022,000(2001) ಜನರ ತಾಯಿನುಡಿಯಾಗಿದ್ದು ಭಾರತೀಯ ಸಂವಿಧಾನ ಮಾನ್ಯತೆ ಪಡೆದಿದೆ. 

	ಈ ಭಾಷೆಯಲ್ಲಿ ಸ್ವರ ವ್ಯಂಜನ ವಿಸರ್ಗ ಎಂಬ ಮೂರು ಬಗೆಯ ಸಂಧಿ ವ್ಯವಸ್ಥೆ ಇದೆ. ನಾಮಪದದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಭೇದಗಳೂ ಏಕವಚನ ಬಹುವಚನ ರೂಪುಗಳೂ ಇವೆ. ಪುಲ್ಲಿಂಗ ದೊಡ್ಡಸ್ಥಿಕೆಯನ್ನೂ ಸ್ತ್ರೀಲಿಂಗ ಕೋಮಲತೆಯನ್ನೂ ನಪುಂಸಕಲಿಂಗ ಕ್ಷುದ್ರತೆಯನ್ನೂ ಸೂಚಿಸುತ್ತವೆ. ಎಂಬುದು ಮರಾಠೀ ಜನರ ಭಾವನೆ. 

ಬಹುವಚನ ರೂಪದ ಸಾಮಾನ್ಯ ಅಂತ್ಯ ಪ್ರತ್ಯಯಗಳೆಂದರೆ-ಏ,-ಯಾ, ಇವು ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. 

ಪುರುಷಾರ್ಥಕ ಸರ್ವನಾಮಗಳಲ್ಲಿ ಉತ್ತಮ ಪುರುಷ (ಮೀ- ನಾನು, ಆಮೀ- ನಾವು); ಮಧ್ಯಮ ಪುರುಷ(ತೂ-ನೀನು, ತುಮ್ಹೀ-ನೀವು); ಪ್ರಥಮ ಪುರುಷ(ತೋ-ಅವನು, ತೀ-ಅವಳು, ತೇ-ಅದು ತ್ಯಾ-ಅವರು, ತೇ-ಅವು)ರೂಪುಗಳಿವೆ. ಪ್ರಥಮ ಪುರುಷದ ಸರ್ವನಾಮಗಳು ನಿರ್ದೇಶಾತ್ಮಕ ಸರ್ವನಾಮಗಳಾಗಿ ಬಳಕೆಯಾಗುತ್ತವೆ.

ವಿಶೇಷಣಗಳು ನಾಮಗಳ ವಿಭಕ್ತಿ ಪ್ರತ್ಯಯಗಳನ್ನು ತೆಗೆದುಕೊಳ್ಳುತ್ತವೆ. ಸರ್ವನಾಮಗಳನ್ನು ವಿಶೇಷಣ ರೂಪದಲ್ಲಿ ಬಳಸುವುದುಂಟು. ತರತಮ ವ್ಯಕ್ತಪಡಿಸಲು-ಪೇಷೌ ಮತ್ತು ಹೊಸಪ್ರತ್ಯಯಗಳನ್ನು ಸೇರಿಸಿ ಹೇಳುತ್ತಾರೆ. ಉದಾಹರಣೆಗೆ ರಾಮಾಪೇಷೌ (ರಾಮನಿಗಿಂತ), ರುಪ್ಯಾಹೂನ (ರೂಪಾಯಿಗಿಂತ). ಅಗದೀ, ಅತಿ, ಅತಿಶಯ, ಮೋಠಾ, ಚಾಂಗಲಾ ಎಂಬ ಕ್ರಿಯಾವಿಶೇಷಣಗಳ ಸಹಾಯದಿಂದಲೂ ತರತಮ ಭಾವ ತೋರಿಸಲು ಸಾಧ್ಯವಿದೆ. ಅತಿಶಯ ಹುಶಾರ (ಬಲು ಬುದ್ಧಿವಂತ) ಅಗದೀ ಲಹಾನ (ಅತೀ ಚಿಕ್ಕದು) ಇತ್ಯಾದಿ. ವಸ್ತುಗಳೊಳಗಿನ ಸಾಮ್ಯವನ್ನು ಇತರಾ, ಏವಢಾ, ಸಾರಖಾ, ಪ್ರಮಾಣೀ ಈ ಶಬ್ದಗಳಿಂದ ಸೂಚಿಸಬಹುದು. ಏವಢಾಗೂಳ (ಇಷ್ಟು ಬೆಲ್ಲ). ಸಿಂಹಾಸಾರಖಾ (ಸಿಂಹದಂತೆ) ಇತ್ಯಾದಿ. ವಿಶೇಷಣ ದ್ವಿರುಕ್ತಿಗಳು ಅನೇಕತ್ವ (ಉಂಚ ಉಂಚ ವೃಕ್ಷೆ-ಎತ್ತರೆತ್ತರ ಮರಗಳು); ಗುಣಾಧಿಕ್ಯ (ತೋರಾಗಾನೇ ಲಾಲ ಲಾಲ ರ್ಛಾಲಾ-ಅವನು ಕೋಪದಿಂದ ಕೆಂಪುಕೆಂಪಾದನು); ಏರಿಳಿತಗಳು (ಸಕಾಳಚೀ ಸಾವಲೀ ಜೂಡ ಆಜೂಡ ಹೋತೇ-ಮುಂಜಾವಿನ ನೆರಳು ಗಿಡ್ಡಾಗಿಡ್ಡಾಗಿರುತ್ತದೆ. ದುಪಾರಜೀ ಲಾಂಬ ಲಾಂಬ ಹೋತ ಜಾತೇ - ಮಧ್ಯಾಹ್ನ ನೆರಳು ಉದ್ದುದ್ದಾಗುತ್ತ ಹೋಗುತ್ತದೆ.); ಪೃಥಕತ್ವ (ಸರ್ವ ಮುಕಾಸ ಏಕ ಲಾಡು ದ್ಯಾ-ಎಲ್ಲ ಮಕ್ಕಳಿಗೂ ಒಂದೊಂದು ಲಡ್ಡು ಕೊಡಿರಿ) ಸೂಚಿಸಲು ಬಳಕೆಯಾಗುತ್ತವೆ. 

ಕ್ರಿಯಾಪದಗಳಲ್ಲಿ ಎರಡು ವಿಧ. ಪೂರ್ಣ ಮತ್ತು ಅಪೂರ್ಣ. ಸಾರ್ವಕಾಲಿಕ ಅರ್ಥದಲ್ಲಿ ಬಳಕೆಯಾಗುವಂಥವು ಪೂರ್ಣ ಕ್ರಿಯಾಪದಗಳು, ಸಕರ್ಮಕ, ಅಕರ್ಮಕ, ಸಹಾಯಕ, ಭಾವಾತ್ಮಕ ಮೊದಲಾದ ಕ್ರಿಯಾಪದಗಳೂ ಉಂಟು. ಧಾತುಗಳಿಗೆ ಸೇರಿಸುವ ಪ್ರತ್ಯಯಗಳಿಗೆ ಆಖ್ಯಾತ ಪ್ರತ್ಯಯಗಳೆನ್ನುತ್ತಾರೆ. ಇದನ್ನು ಸೇರಿಸಿ ಬೇರೆ ಬೇರೆ ಕ್ರಿಯಾಪದಗಳನ್ನು ರಚಿಸಿಕೊಳ್ಳಬಹುದು. ಉದಾಹರಣೆಗೆ ಅಜ್ಞಾರ್ಥಕ, ನಿಕ್ಷೇದಾರ್ಥಕ, ವಿಧ್ಯರ್ಥಕ, ಸಂಕೇತಾರ್ಥಕ ಇತ್ಯಾದಿ. ಕ್ರಿಯಾಪದಗಳು ಆತ್ಮನೇಪದ ಮತ್ತು ಪರಸ್ಮೈಪದ ಎಂಬುದಾಗಿ ಎರಡು ಗಣಗಳಲ್ಲಿ ನಡೆಯುತ್ತವೆ. ಆತ್ಮಪದದಲ್ಲಿ ಧಾತುಗಳಿಗೆ ಲೋಪಉಂಟಾಗುವುದಿಲ್ಲ ಮತ್ತು ಇದರಲ್ಲಿ ಅಕರ್ಮಕ ಮತ್ತು ಅನಿಯಮಿತ ಧಾತುಗಳಿರುತ್ತವೆ. ಪರಸ್ಮೈಪದದಲ್ಲಿ ಬರುವ ಧಾತುಗಳಿಗೆ-ಇ ಪ್ರತ್ಯಯ ಸೇರಿಸಿ, ಅವುಗಳ ರೂಪಗಳನ್ನು ಸಿದ್ಧಪಡಿಸುತ್ತಾರೆ. ಉದಾಹರಣೆಗೆ ಕರಣೇ(ಮಾಡು), ಮಿ ಕರಿತೋ ಆಹೆ (ನಾನು ಮಾಡುತ್ತಿರುವೆ.) ಕಾಲ ಮತ್ತು ಅರ್ಥವನ್ನೊಳಗೊಂಡ ಏಳು ಬಗೆಯ ಆಖ್ಯಾತ ಪ್ರತ್ಯಯಗಳಿವೆ. ಇವು ಸೇರಿ ಕ್ರಿಯಾಪದ ರೂಪಗಳುಂಟಾಗುತ್ತವೆ. ಇವುಗಳಲ್ಲಿ (1) ಮರಾಠೀ ಸ್ವತಂತ್ರ ಭಾಷೆಯಾಗಿ ಪರಿವರ್ತನೆ ಹೊಂದಿದ ಮೇಲೆ ಸಿದ್ಧವಾದ ಕೆಲವು ಆಖ್ಯಾತಗಳು. ಇವಕ್ಕೆ ಮರಾಠೀ ವ್ಯಾಕರಣ ನಿಯಮಗಳು ಪೂರ್ತಿ ಅನ್ವಯಿಸುತ್ತವೆ. ಇವುಗಳ ರೂಪ ಮೂರು ಬಗೆಯ ಲಿಂಗಗಳಲ್ಲಿ ಇರುತ್ತವೆ. (2) ಕೆಲವು ಪ್ರತ್ಯಯಗಳು ಸಂಸ್ಕøತ ಪ್ರತ್ಯಯಗಳಿಂದ ಬಂದಿವೆ. ಭೂತಕಾಲದ ಪ್ರತ್ಯಯ-ಲಾ,-ಲಾಸ,-ಲೋ, ಭವಿಷ್ಯತ್ಕಾಲದ ಪ್ರತ್ಯಯ,-ಏನ,-ಈನ, ವರ್ತಮಾನ ಕಾಲದ ಪ್ರತ್ಯಯ-ತೋ,-ತೋಸ ಇತ್ಯಾದಿ. 

	ಮೂಲಧಾತುವಿಗೆ-ವ ಸೇರಿಸಿ ಪೇರಣಾರ್ಥಕ ರೂಪಿಸುತ್ತಾರೆ. ಈ ರೂಪಕ್ಕೆ ಮತ್ತೆ ಆಖ್ಯಾತ ಪ್ರತ್ಯಯ ಸೇರಿಸಿ, ಕ್ರಿಯಾಪದ ಸಿದ್ಧಪಡಿಸುತ್ತಾರೆ. ಒಂದಕ್ಷರದ ಮತ್ತು ಇ-ಕಾರಾಂತ ಧಾತುಗಳಿಗೆ-ವವ ಸೇರಿಸುತ್ತಾರೆ. ರೂಪಗಳನ್ನು ರೂಪಿಸುವಾಗ ಪ್ರೇರಣಾರ್ಥಕ ಕ್ರಿಯಾಪದಗಳಿಗೆ ಇ ಪರಸ್ಮೈಪದ ಆದೇಶವಾಗುವುದಿಲ್ಲ. ಈ ಕ್ರಿಯಾಪದಗಳನ್ನು ಕರ್ತರಿ ಪ್ರಯೋಗ-ದಲ್ಲಿ ಬಳಸುವುದಿಲ್ಲ. ವಚನ ಕರ್ತೃವಿನ ಲಿಂಗದಂತೆ ಬದಲಾಗುವುದಿಲ್ಲ. ಸಕರ್ಮಕ ಪ್ರೇರಣಾರ್ಥಕ ಕ್ರಿಯಾಪದಗಳಿಂದ ಕರ್ಮಣಿ ಪ್ರಯೋಗವಾಗುತ್ತದೆ. ಸಕರ್ಮಕ ಮತ್ತು ಅಕರ್ಮಕ ಪ್ರಯೋಗಗಳಲ್ಲಿಯ ಉದ್ದೇಶ ಚರ್ತುಥಿಯಲ್ಲಿ ಅಥವಾ ಪ್ರಾತಿಪದಿಕದ ಷಷ್ಠಿ ರೂಪದಿಂದ ಸಿದ್ಧವಾದ ತೃತೀಯಾದಲ್ಲಿರುತ್ತದೆ. ಪ್ರೇರಣಾರ್ಥಕ ಕ್ರಿಯಾಪದಗಳನ್ನು ಎರಡು ರೀತಿಯಲ್ಲಿ ಸಿದ್ಧಪಡಿಸುತ್ತಾರೆ. ಮೂಲಧಾತುವಿನ-ಅವ ಪ್ರತ್ಯಯ ಸೇರಿಸುವುದು. ಮೂಲಧಾತುವಿನಲ್ಲಿ ವ್ಯತ್ಯಾಸಮಾಡುವುದು. ಅಕಾರಾಂತ ಧಾತುಗಳಿಗೆ ಪ್ರತ್ಯಯ ಪರರೂಪ ಸಂಧಿಯಿಂದ ಇಲ್ಲವೆ. ಸಂಧಿ ನಿಯಮದಿಂದ ಸೇರುತ್ತದೆ. ಉದಾಹರಣೆಗೆ ತರವ, ಬಸವ, ನಿಜವ, ಸಮಜಾವಣಿ ನಿಭಾವಣೀ, ಸನಜವಣೀ ನಿಭವಣೀ ಇತ್ಯಾದಿ. ಅನುಕರಣವಾಚಕ ಧಾತುಗಳಿಗೆ ಸಂಸ್ಕøತದ ಸಾಮಾನ್ಯ ಸಂಧಿನಿಯಮಗಳು ಅನ್ವಯಿಸುತ್ತವೆ. ಕೃದಂತ ಪ್ರತ್ಯಯಗಳಲ್ಲಿ-ಲಾ,-ಲೀಲಾ ಭೂತಕಾಲವನ್ನೂ-ಣಾರ,-ಣಾರಾ, ಭವಿಷ್ಯತ್ಕಾಲವನ್ನೂ-ತ-ತಾ-ತಾನಾ ವರ್ತಮಾನಕಾಲವನ್ನೂ ಸೂಚಿಸುತ್ತವೆ. ನಾಮ ಮತ್ತು ಧಾತುಸಾಧಿತಗಳ ನಡುವೆ ಸಂಯೋಗವಾಗಿ ಸಂಯುಕ್ತ ಕ್ರಿಯಾಪದಗಳಾಗುವುದುಂಟು. ಉದಾಹರಣೆಗೆ ಗೋವಿಂದರಾವಾನೀ ಪುಷ್ಕಳ ಪೈಸಾ ಸಂಪಾದಕ ಕೇಲಾ (ಗೋವಿಂದರಾವನು ಹೆಚ್ಚು ಹಣ ಸಂಪಾದನೆ ಮಾಡಿದನು), ಪರಮೇಶ್ವರಾನೇ ಜಗ ಉತ್ಪನ್ನಕೇಲೇ ಆಹೇ (ಪರಮೇಶ್ವರನು ಜಗತ್ತನ್ನು ಸೃಷ್ಟಿಸಿದ್ದಾನೆ). ಕರ್ತರಿ ಪ್ರಯೋಗದಲ್ಲಿ ಕ್ರಿಯಾಪದ ಕರ್ತೃವಿನಂತೆ ನಡೆಯುತ್ತದೆ. ಕರ್ತೃವಿನಂತೆ ಕ್ರಿಯಾಪದದ ಪುರುಷ ಮತ್ತು ವಚನ ಬದಲಾಗುತ್ತವೆ. ಕರ್ತರಿ ಪ್ರಯೋಗ ಸಕರ್ಮಕ ಮತ್ತು ಅಕರ್ಮಕ ಕರ್ಮಣಿ ಪ್ರಯೋಗದಲ್ಲಿ ಕ್ರಿಯಾಪದ ಕರ್ಮದಂತೆ ನಡೆಯುತ್ತದೆ. ಆಧುನಿಕ ಮರಾಠೀಯಲ್ಲಿ ಅಕರ್ಮಕ ಕ್ರಿಯಾಪದಗಳ ಭೂತಕಾಲದಲ್ಲಿ ವಿಧ್ಯರ್ಥಕ ವಾಕ್ಯಗಳಲ್ಲಿ ಕಮ್ ಪ್ರತ್ಯಯ ರಹಿತವಾಗಿದ್ದರೆ, ಕರ್ಮಣಿ ಪ್ರಯೋಗವಾಗುತ್ತದೆ. ಭಾವೇಪ್ರಯೋಗ ಈ ಭಾಷೆಯ ಒಂದು ವೈಶಿಷ್ಟ್ಯ. ಈ ಪ್ರಯೋಗದಲ್ಲಿ ಮೂಲಕ್ರಿಯೆಯ ಕರ್ಮವನ್ನು ತೋರಿಸುವ ಶಬ್ದ ಸಪ್ರತ್ಯವಾಗಿದ್ದು ಕರ್ತೃತೃತೀಯದಲ್ಲಿರುತ್ತದೆ. ಆದ್ದರಿಂದ ಕರ್ಮದಂತೆ ಕ್ರಿಯಾಪದ ನಡೆಯುವುದಿಲ್ಲ. ಕರ್ಮ ಸಪ್ರತ್ಯವಾಗಿರುವುದರಿಂದ ಅವರ ಪ್ರಭಾವ ಕ್ರಿಯಾಪದದ ಮೇಲೆ ಆಗುವುದಿಲ್ಲ. ಆದ್ದರಿಂದ ವಾಕ್ಯದಲ್ಲಿ ಕ್ರಿಯಾಪದದ ನಪುಂಸಕಲಿಂಗ ಏಕವಚನದ ರೂಪಮಾತ್ರ ಬರುತ್ತದೆ. ಭಾವೇ ಪ್ರಯೋಗದಲ್ಲಿ ಕ್ರಿಯೆಯ ಭಾವವೇ ಕರ್ತೃ, ಮೂಲಧಾತುವಿನ ಭೂತಕಾಲವಾಚಕ ಕೃದಂತದ ಮುಂದೆ ಸಹಾಯಕ `ಅಸ ಧಾತುವಿನ ರೂಪ ಪ್ರಯೋಗವಾಗಬೇಕು. ಆಧುನಿಕ ಮರಾಠೀಯಲ್ಲಿ `ಅಸ ಧಾತು ಲೋಪವಾಗಿ ಮೂಲಭೂತ ಕಾಲವಾಚಕ ಕೃದಂತವೇ ಕ್ರಿಯಾಪದವಾಗಿರುತ್ತದೆ. ಹೀಗಾಗಿ, ಮೂಲಕ್ರಿಯೆಯ ಕರ್ತೃ, ಕರ್ಮ ಮತ್ತು ನಪುಂಸಕಲಿಂಗ ರೂಪವೇ ಕ್ರಿಯಾಪದವೆಂದು ತಿಳಿಯುವುದುಯುಕ್ತ. ಭಾವೇ ಪ್ರಯೋಗ ಸಕರ್ಮಕ ಮತ್ತು ಅಕರ್ಮಕ ಕ್ರಿಯಾಪದಕ್ಕೆ ಆಗುತ್ತದೆ. ಸ್ಥಳವಾಚಕ, ಕಾಲವಾಚಕ ಸಂಖ್ಯಾವಾಚಕ, ಪರಿಣಾಮವಾಚಕ ಮತ್ತು ಕ್ರಿಯಾವಿಶೇಷಣಗಳುಂಟು. ನಾಮಗಳು ಮತ್ತು ಅವುಗಳಂತಿರುವ ಶಬ್ದಗಳೊಡನೆ ವಿಭಕ್ತಿಪ್ರತ್ಯಯದಂತೆ ಸಂಯೋಗ ಹೊಂದುವುದರ ಮೂಲಕ ಶಬ್ದಗಳೊಡನೆ ಸಂಬಂಧ ಕಲ್ಪಿಸುವ ಸ್ವತಂತ್ರ ಶಬ್ದಯೋಗಿ ಅವ್ಯಯಗಳೆನ್ನುತ್ತಾರೆ. ಕೆಲವು ಶಬ್ದಯೋಗೀ ಅವ್ಯಯಗಳು ಕ್ರಿಯಾವಿಶೇಷಣಗಳಾಗಿರುತ್ತವೆ. ಕ್ರಿಯಾಪದಗಳೊಡನೆ ಸ್ವತಂತ್ರ ಸಂಬಂಧವಿದ್ದಾಗ ಇವು ಕ್ರಿಯಾವಿಶೇಷಣಗಳಾಗುತ್ತವೆ. ನೇರವಾಗಿ ನಾಮಗಳೊಡನೆ ಸಂಬಂಧವಿದ್ದಾಗ ಇವು ಶಬ್ದಯೋಗಿ ಅವ್ಯಯಗಳಾಗುತ್ತವೆ. 

	ತದ್ಧಿತ ಶಬ್ದಗಳು ರೂಪಗೊಳ್ಳುವಾಗ ಬಗೆ ಬಗೆಯ ಅಕ್ಷರಗಳು ಆದಿಯಲ್ಲಿ ಬರುತ್ತವೆ. ಸಂಸ್ಕøತದ ಅನೇಕ ಉಪಸರ್ಗಗಳು ಸೇರ್ಪಡೆಯಾಗಿವೆ. ಉದಾಹರಣೆಗೆ ಅತಿ-ಅನ-ಅಭಿ-ಉತ್-ನಿ-ಪರಾ ಇತ್ಯಾದಿ. ಮರಾಠೀಯವೇ ಆದ ಕೆಲವನ್ನು ಇಲ್ಲಿ ಉದಾಹರಿಸಬಹುದು. ಅಡ-(ಅಡಸರ)-ಅಡ-(ಆ0ಡನಾಂವ), ಪಡ-(ಪಡತಾಳಾ), ಭರ-(ಭರಪೂರ), ಘಟ-(ಘಟಫಜಿ ತಿ)

	ಈ ಭಾಷೆಯಲ್ಲಿ ಸಾಮಾನ್ಯ, ಸಂಯೋಜಿತ, ಮಿಶ್ರ ಎಂಬ ವಾಕ್ಯ ಭೇಧಗಳುಂಟು. ಕರ್ಮಣಿ ಪ್ರಯೋಗದ ವಾಕ್ಯಗಳಲ್ಲಿ ಮಾತ್ರ ಕ್ರಿಯಾಪದ ಕರ್ಮದಂತೆ ಪ್ರಯೋಗವಾಗುತ್ತದೆ. ಈ ಪದ್ಧತಿ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಬಂದಿದೆ.

ಇದರ ಉಗಮ ನಾಗರಿ ಲಿಪಿಯಿಂದ ಆಗಿದೆ. ಅಶೋಕನ ಶಿಲಾಲೇಖದ ಬ್ರಾಹ್ಮೀ, ಸಾತವಾಹನ, ಕ್ಷಹರಾತ ಮೊದಲಾದವರ ಶಿಲಾಲೇಖಗಳಲ್ಲಿಯ ಬ್ರಾಹ್ಮೀ, ವಾಕಟಾಕರ ಕಾಲದ ಪೇಟಿಕಾ-ಶೀಷಕ ಹಾಗೂ ಉತ್ತರ ಬ್ರಾಹ್ಮೀ ಲಿಪಿಯ ನಾಗರೀ ರೂಪಗಳನ್ನು ಆಧರಿಸಿ ಈ ಲಿಪಿ ಜನ್ಮ ತಳೆಯಿತು. ಸುಮಾರು 10ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆ ಮತ್ತು ಬರೆಹ ಜನ್ಮ ತಾಳಿದವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಪಾದ ಪಕ್ಕದಲ್ಲಿರುವ ಶಿಲಾಲೇಖ ಬರೆಹ (ಸುಮಾರು 982) ಚಾವುಂಡರಾಜೇಂ ಕರವೀಯಲೇ ಎಂಬುದು ಮರಾಠೀ ಭಾಷೆಯ ಪ್ರಾಚೀನ ಬರೆಹವೆಂದು ನಂಬಲಾಗಿತ್ತು. ಈ ಶಿಲಾಲಿಪಿ 12ನೆಯ ಶತಮಾನದ್ದೆಂದು ಎಚ್. ಜಿ. ತುಳಪುಳ ಮತ್ತು ಎ.ಎಸ್. ಆಳ್ತೆಕರ್ ಅವರು ನಿರ್ಧರಿಸಿದ್ದಾರೆ. ಶಿಲಹಾರಕೇಶಿದೇವನ ಅಕ್ಷೀಗ್ರಾಮದ ಶಿಲಾಲೇಖವೇ(1012) ಪ್ರಾಚೀನಬರೆಹವೆಂದು ತುಳಪುಳೆ ಅಭಿಪ್ರಾಯ ಪಟ್ಟಿದ್ದಾರೆ. ಎಮ್ ಜಿ. ದೀಕ್ಷಿತ ಎಂಬುವರು ಇದರ ಕಾಲ 1210 ಎಂದಿದ್ದಾರೆ. 1060ರ ದಿವೇ ಅಗರ್ ತಾಮ್ರಪಟ್ಟಿಕೆಯೇ ಪುರಾತನ ಶಿಲಾಲೇಖ ಎಂಬುದಾಗಿ ಅಭಿಪ್ರಾಯ ಪಟ್ಟಿರುವವರೂ ಉಂಟು. ಮುಕುಂದರಾಜನ ವಿವೇಕ ಸಿಂಧು ಎಂಬುದು ಪ್ರಾಚೀನ ಉಪಲಬ್ಧ ಗ್ರಂಥ(12ನೆಯ ಶತಮಾನ). ಅನಂತರದ್ದು ಜ್ಞಾನೇಶ್ವರಿ (1290), ತರುವಾಯದ್ದು ಮಹಾನುಭಾವ ಸಾಹಿತ್ಯ(13ನೆಯ ಶತಮಾನ). ಈ ಲಿಪಿ ಬಳಕೆ ದೇವಗಿರಿಯ ಯಾದವರ ಕಾಲದಲ್ಲಿ ಪ್ರಾಚುರ್ಯಕ್ಕೆ ಬಂದಿತ್ತು. ಇದನ್ನು ಪೃಷ್ಠಮಾತ್ರಾ ಶಿರೋಮಾತ್ರಾ ಮತ್ತು ಮೋಡಿ ಎಂಬುದಾಗಿ ವರ್ಗೀಕರಿಸಲಾಗಿದೆ. ಮರಾಠೀ ಮೊತ್ತ ಮೊದಲ ಬರಹಗಳನ್ನು ಪೃಷ್ಠ ಮಾತ್ರಾಶಿರೋಮಾತ್ರಾ ಇಲ್ಲವೇ ಇವೆರಡು ಮಿಶ್ರಣ ರೂಪದಲ್ಲಿ ಬರೆಯಲಾಗಿದೆ. ಕನ್ನಡ ಲಿಪಿಯಲ್ಲೂ ಬರೆದಿರುವ ನಿರ್ದೇಶನ ಉಂಟು ಉದಾಹರಣೆಗೆ ಶಾ.ಶ. 1271ರ ಕ್ರಿಶ. 1349) ವಿಮ್ನಮಂತ್ತಿಯ ಖಾಟೇಗ್ರಾಮದ ಮರಾಠೀ ತಾಮ್ರಪಟ.

ಶತಮಾನಗಳು ಕಳೆದಂತೆ ಈ ಲಿಪಿಯ ಒಂದೊಂದು ಅಕ್ಷರವೂ ತನ್ನ ಸ್ವರೂಪದಲ್ಲಿ ವ್ಯತ್ಯಾಸ ಪಡೆದಿದೆ. ಆ, ಇ, ಏ, ಓ, ಗಮನಾರ್ಹ ಬೆಳವಣಿಗೆ ಪಡೆದ ಅಕ್ಷರಗಳು (ಇ) ಮತ್ತು ತ್ರಿಕೋನಾಕೃತಿಯ ಏ ಅಕ್ಷರ ಯಾವುದಾದರೂ ದಾಖಲೆಯಲ್ಲಿದ್ದಾರೆ ಅವು ಲಿಪಿಯ ಪ್ರಾಚೀನತೆಯನ್ನು ಸೂಚಿಸುತ್ತವೆ. 

ಚ,ಛ,ಜ,ಣ,ಥ,ಧ,ಬ.ಭ,ರ,ಸ ಅಕ್ಷರಗಳ ಚಾಕ್ಷುಷರೂಪಗಳು ಪ್ರಸ್ತುತ ಬಳಕೆಯಲ್ಲಿರುವ ಲಿಪಿಗೆ ಹತ್ತಿರವೇ ಆದ ರೂಪಗಳನ್ನು ಪಡೆದಿದ್ದುವು,ಶ-ಸ,ಲ-ಳ, ಇವು ಉಚ್ಚಾರಣಾ ಸಾಮ್ಯದಿಂದ ಒಂದರ ಸ್ಥಳದಲ್ಲಿ ಇನ್ನೊಂದು ಸಹಜವಾಗಿ ಪ್ರಯೋಗವಾಗುತ್ತಿದ್ದುವು. ಚ-ವ, ಪ-ಯ, ಧ-ಬ, ಉ-ಡ, ಇವು ಚಾಕ್ಷುಷ ರೂಪಸಾದೃಶ್ಯ ಪಡೆದಿದ್ದುವು. ಅನುಸ್ವಾರವನ್ನು ಅರ್ಧಚಂದ್ರಾಕೃತಿಯಲ್ಲಿ ಬರೆಯಲಾಗುತ್ತಿತ್ತು.

ಕ್ರಿ.ಶ. ಸು. 14-15ನೆಯ ಶತಮಾನದಲ್ಲಿ ಮೋಡೀ ಲಿಪಿ ಬಳಕೆಗೆ ಬಂದಿರಬಹುದು. ಬಹುಮನೀ ಸುಲ್ತಾನ್ ಮುಜಾಹಿದ್ ದೊರೆಯ ಕಾಲದ(1375-78) ಒಂದು ತಾಮ್ರಪಟ ಸದ್ಯ ಪ್ರಾಚೀನ ದಾಖಲೆ. ಆಂಧ್ರಪ್ರದೇಶ ಸರ್ಕಾರದ ಪುರಾತತ್ತ್ವ  ಇಲಾಖೆಯಲ್ಲಿರುವ ಈ ದಾಖಲೆಯನ್ನು ಭುಸಾರೆ ಸಂಪಾದಿಸಿದ್ದಾರೆ. ಮೋಡೀಲಿಪಿಯನ್ನು ಮೊದಲು ಹೇಮಾದ್ರಿ ಮಂತ್ರಿ (13ನೆಯ ಶತಮಾನ) ಬಳಕೆಯಲ್ಲಿ ತಂದನು. ತ್ವರಿತವಾಗಿ ಬರೆಯಲು ಮೋಡೀ ಲಿಪಿಯನ್ನು ಬಳಸುತ್ತಿದ್ದುದರಿಂದ ಚಿರಸ್ಮಾರಕಗಳಾದ ಶಿಲಾಲೇಖಗಳಲ್ಲಿ ಅದನ್ನು ಬಳಸಲಿಲ್ಲವೆಂದು ತೋರುತ್ತದೆ. ಆದರೂ ಅದರ ಪ್ರಭಾವ ಬರೆವಣಿಗೆಯ ಮೇಲೆ ಸಾಕಷ್ಟು ಆಗಿದೆ. ಪಂಕ್ತಿಯ ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ನಿಲ್ಲಿಸದೆ ಏಕಪ್ರಕಾರವಾಗಿ ಬರೆದುಕೊಂಡುಹೋಗುವ ಒಂದು ಕ್ಲಿಷ್ಟ ಬರೆವಣಿಗೆ ಮೋಡೀ ಲಿಪಿಯದು ಎನ್ನಬಹುದು.




#Article 177: ತ್ರಿವೇಣಿ (116 words)


ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.

ತ್ರಿವೇಣಿಯವರ 6 ಕಾದಂಬರಿಗಳು ಚಲನಚಿತ್ರಗಳಾಗಿವೆ.

ಬೆಕ್ಕಿನ ಕಣ್ಣು ಕಾದಂಬರಿಯನ್ನು ಚಲಚ್ಚಿತ್ರವನ್ನಾಗಿ ನಿರ್ದೇಶಿಸಲು ಶ್ರೀ ಪುಟ್ಟಣ್ಣ ಕಣಗಾಲ್'ರು ಬಯಸಿದ್ದರು. ಆದರೆ ಕಾರಣಾಂತರದಿಂದ ಅದನ್ನು ಕನ್ನಡದಲ್ಲಿ ಮಾಡದೆ ಮಲಯಾಳಂನಲ್ಲಿ ಪೂಚಕಣ್ಣಿ ಎಂಬ ಹೆಸರಿನಲ್ಲಿ ನಿರ್ದೇಶಿಸಿದರು.  ಪ್ರೇಮ್ ನಜೀರ್, ಅಡೂರ್ ಭಾಸಿ, ತಿಕ್ಕುರಿಸಿ ಸುಕುಮಾರನ್ ನಾಯರ್ ಮೊದಲಾದವರು ಅಭಿನಯಿಸಿದ ಈ ಚಿತ್ರ ೧೯೬೬ರಲ್ಲಿ ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಗಳಿಸಿತ್ತು.

ತ್ರಿವೇಣಿ ಅವರ ಕಾದಂಬರಿ ಮತ್ತು ಕತೆಗಳನ್ನು ಆಧರಿಸಿ ನಟ ಶ್ರೀನಿವಾಸ ಮೂರ್ತಿ ಅವರು ಈ ಟೀವಿಗಾಗಿ ಧಾರಾವಾಹಿ ಸರಣಿ ಮಾಡಿದ್ದಾರೆ. ತ್ರಿವೇಣಿ ಅವರ 'ಅವಳ ಮನೆ', 'ಅಪಸ್ವರ', 'ಅಪಜಯ' ಮುಂತಾದ ಕಾದಂಬರಿಗಳನ್ನು ದೂರದರ್ಶನ ಮಾಧ್ಯಮಕ್ಕೆ ಅಳವಡಿಸಿದ್ದಾರೆ. ಈ ಧಾರಾವಾಹಿ ಜನವರಿ ೨೯ ೨೦೦೭ ರಿಂದ ಪ್ರಸಾರವಾದವು.

ತ್ರಿವೇಣಿಯವರು ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ಜುಲೈ ೨೯, ೧೯೬೩ರಂದು ತಮ್ಮ ಹನ್ನೊಂದು ದಿನದ ಹೆಣ್ಣು ಮಗುವನ್ನು ಬಿಟ್ಟು ನಿಧನರಾದರು. ಈಗ ತ್ರಿವೇಣಿಯವರ ಕೃತಿಗಳ ಹಕ್ಕುಗಳು ಅವರ ಮಗಳಾದ ಮೀರಾ ಕುಮಾರ್ ಅವರಲ್ಲಿವೆ.




#Article 178: ಒರಿಸ್ಸಾ (207 words)


ಒಡಿಶಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ. ಈ ರಾಜ್ಯದ ರಾಜಧಾನಿ ಭುವನೇಶ್ವರ.
ಮಹಾಭಾರತದ ಕಾಲದಲ್ಲಿ ಕಳಿಂಗ ಎಂದು ಪ್ರಖ್ಯಾತವಾದ ನಾಡು ಇಂದಿನ ಒಡಿಶಾ.
ಒಡಿಶಾ ಬ್ರಿಟೀಷ್ ಇಂಡಿಯಾದ ಒಂದು ಪ್ರಾಂತ್ಯವಾಗಿ ೧ ಎಪ್ರಿಲ್ ೧೯೩೬ರಲ್ಲಿ ರಚಿಸಲಾಯಿತು ಮತ್ತು ಮುಖ್ಯವಾಗಿ ಒಡಿಯಾ ಮಾತಾಡುವ ಜನರಿಂದ ಕೂಡಿತ್ತು.
ಆದ್ದರಿಂದ ೧ ಎಪ್ರಿಲ್ ಅನ್ನು ಉತ್ಕಲ ದಿವಸವನ್ನಾಗಿ ಆಚರಿಸಲಾಗುತ್ತದೆ.

ಒಡಿಶಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ. ಒಡಿಯಾ ರಾಜ್ಯದ ಆಡಳಿತ ಭಾಷೆಯಾಗಿದೆ ಹಾಗು ಅತಿ ಹೆಚ್ಚು ಉಪಯೋಗಿಸಲ್ಪಡುವ ಭಾಷೆಯಾಗಿದೆ. ಒಡಿಶಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ ಕಿ.ಮೀ.) ಹೊಂದಿದೆ ಪಾರಾದೀಪ್ ನಲ್ಲಿ ಪ್ರಮುಖ ಬಂದರನ್ನು ಹೊಂದಿದೆ. ಕಡಿಮೆಯಗಲದ ಸಮತಟ್ಟಾದ ಕರಾವಳಿಯು ಹಾಗು ಮಹಾನದಿಯ ಮುಖಜ ಭೂಮಿಯು ಬಹುಪಾಲು ಜನಸಂಖ್ಯೆಗೆ ಆಶ್ರಯವಾಗಿದೆ. ಒಡಿಶಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ. ರಾಜ್ಯದ ಅತಿ ಎತ್ತರದ ಸ್ಥಳ ದೇವಮಾಲಿಯಾಗಿದೆ. ಜಗತ್ತಿನ ಅತಿ ಉದ್ದವಾದ ಅಣೆಕಟ್ಟುಗಳಲ್ಲಿ ಒಂದಾದ ಹಿರಾಕುಡ್ ಅಣೆಕಟ್ಟು ಒಡಿಶಾದಲ್ಲಿದೆ. ಒಡಿಶಾ ತೀವ್ರವಾದ ಚಂಡಮಾರುತಗಳಿಗೀಡಾಗಿದೆ. 
ನೋಡಿ

೨೦೧೧ ನವಂಬರ್ ೪ ರಂದು ಹಿಂದೆ ಇದ್ದ ಒಡಿಶಾ ಎಂಬ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಯಿತು.ಒಡಿಶಾ ಎಂಬ ಹಸರು ಸಂಸ್ಕತದ ಒಡ್ರ ದೇಶ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.

ಇತಿಹಾಸ ಪೂರ್ವದಿಂದಲೂ ಒಡಿಶಾದಲ್ಲಿ ಬುಡಕಟ್ಟು ಜನಾಂಗ ವಾಸವಾಗಿದ್ದರು.ಅಧಿಕೃತವಾಗಿ ಒಡಿಸ್ಸಾಕ್ಕೆ ಸುಮಾರು ೫೦೦೦ ವರ್ಷಗಳ ಇತಿಹಾಸವಿದೆ. ಕಳಿಂಗ ಪೂರ್ವದಲ್ಲಿ ಇದನ್ನು ಓಡ್ರ ದೇಶ ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಇದು  ಮುಖ್ಯವಾಗಿ ಮಹಾನದಿಯ ಕಣಿವೆ ಪ್ರದೇಶಕ್ಕೆ ಸೀಮಿತವಾಗಿದ್ದಿತು.ಈ ಪ್ರದೇಶವು ಕಳಿಂಗ,ಕೋಶಲ,ಉತ್ಕಲ ಮುಂತಾದ ವಂಶದವರಿಂದ ಆಳಲ್ಪಟ್ಟಿತ್ತು. ಇದರಲ್ಲಿ ಕಳಿಂಗ ವಂಶದ ಬಗ್ಗೆ ವೇದ ಕಾಲದ ಬರಹಗಾರರಿಂದಲೂ ಉಲ್ಲೇಖಿಸಲ್ಪಟ್ಟಿತ್ತು.
. ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿ ಬೋದಾಯನ ಋಷಿಯು ಕಳಿಂಗವು ವೈದಿಕ ಸಂಸ್ಕೃತಿಯಿಂದ ಹೊರಗಿದ್ದುದನ್ನು ಉಲ್ಲೇಖಿಸುತ್ತಾರೆ.
. 

ಒಡಿಶಾವು ಪ್ರಪಂಚದ ಇತಿಹಾಸದಲ್ಲಿ ಪ್ರಾಮುಖ್ಯವಾದ ಒಂದು ಘಟನೆಗೆ ಸಾಕ್ಷಿಯಾಗಿದೆ. ಅದುವೇ ಕಳಿಂಗ .  ಯುದ್ಧ. ಕ್ರಿಸ್ತಪೂರ್ವ ೨೬೧ರಲ್ಲಿ ನಡೆದ ಈ ಯುದ್ಧದ ಪರಿಣಾಮ ಚಕ್ರವರ್ತಿ ಅಶೋಕನು ಹಿಂಸೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದ. ಮುಂದಿನ ದಿನಗಳಲ್ಲಿ ಬೌದ್ದಧರ್ಮವು ಭಾರತದಿಂದಾಚೆಗೂ ಪಸರಿಸಲು ಪ್ರೇರಕನಾದ.




#Article 179: ಬಸವಕಲ್ಯಾಣ (192 words)


ಬಸವಕಲ್ಯಾಣ ನಗರವು  ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯಲ್ಲಿದೆ. ಬೀದರ್ ನಗರದಿಂದ ಸುಮಾರು 80 ಕಿಲೊಮೀಟರ್ ದೂರದಲ್ಲಿ ಇರುವ ಇದು ರಾಜ್ಯದ ಅತ್ಯಂತ ಐತಿಹಾಸಿಕ ನಗರಗಳಲ್ಲಿ ಒಂದು. 

ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪಟ್ಟಣವೇ ಇಂದಿನ ಬಸವ ಕಲ್ಯಾಣ. ಬೀದರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ಈ ಊರಿನ ಜನಸಂಖ್ಯೆ ೫೮,೭೪೨  (೨೦೦೧ರ ಭಾರತದ ಜನಗಣತಿಯ ಪ್ರಕಾರ).ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಕಲ್ಯಾಣದಿ೦ದ ಸುಮಾರು ೨೫೦ ವರುಷಗಳವರೆಗೆ ಆಳ್ವಿಕೆ ನಡೆಸಿದರು. 

ಇದು ಕೂಡ ಬಸವಕಲ್ಯಾಣದಿಂದ 15 ಕಿ.ಮೀ. ದೂರ ಪಶ್ಚಿಮ ದಿಕ್ಕಿಗಿದೆ. ಇಲ್ಲಿ ಉಮಾಮಹೇಶ್ವರ ದೇಗುಲದ ಸಂಕೀರ್ಣವು ಕಾಣಬಹುದಾಗಿದ್ದು ಪೂರ್ತಿ ಜರ್ಝರಿತವಾಗಿದೆ. ಇದು ಕೂಡ ಕಲಾಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ. (ಶಿಲ್ಪ ಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿರು ಉಮಾಮಹೇಶ್ವರ ದೇಗುಲ ಸಂಕೀರ್ಣ )

ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯಿಂದ ಕಲ್ಯಾಣಪುರಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಬಲದೇವ ಮಂತ್ರಿಯ ನಂತರ ಬಸವಣ್ಣನವರಿಗೆ ಪ್ರಧಾನಿ ಹುದ್ದೆಯನ್ನು ನೀಡಲಾಯಿತು. ಅವರು ಬಿಜ್ಜಳ ಅರಸರ ಭಾಂಡಾರಿಯಷ್ಟೇ ಆಗಿರದೆ ಭಕ್ತಿ ಭಾಂಡಾರಿಯೂ ಆದರು. ನೆಲ ಪಾವನವಾಯಿತು. ಜನಮನ ನೆಲೆ ಕಂಡಿತು. ಈ ಆಧುನಿಕ ದೇವಾಲಯ ಸಾಂಸ್ಕೃತಿಕ ಕೇಂದ್ರವೂ ಆಗಿದೆ. (ಚಿತ್ರದಲ್ಲಿ ಕಾಣುತ್ತಿರುವದು  ಬೊಮ್ಮಗೊಂಡೇಶ್ವರ ಕೆರೆ)

ಬಸವೇಶ್ವರ ದೇವಾಲಯದ ಸಮೀಪ ಇರುವ ಈ ಸ್ಮಾರಕ ಕಟ್ಟೆಯೊಂದರ ರೂಪದಲ್ಲಿದೆ. ಇದರ ಸಂಬಂಧ ಬಸವಣ್ಣನವರೊಂದಿಗೆ ಇದ್ದಿತೆಂದು ತಿಳಿದುಬರುತ್ತದೆ.

ಬಸವ ಕಲ್ಯಾಣದ ಹೊರವಲಯದಲ್ಲಿರುವ ಇದು ಸ್ಮಾರಕ ಗುಹೆಯ ಮಾದರಿಯಲ್ಲಿದೆ. ಬಸವಣ್ಣನವರ ಮಹಾಮನೆ ಎಂದೇ ಜನರು ಇದನ್ನು ಕಾಣುತ್ತಾರೆ.

ಅರಿವಿನ ಮನೆಯ ಪಕ್ಕದಲ್ಲಿಯೇ ಈ ಗುಹೆ ಇದ್ದು , ತಂಪಾದ ನೆಲೆಯಾಗಿದೆ. ಹಡಪದ ಅಪ್ಪಣನವರು ಬಸವಣ್ಣನವರ ನಿಕಟವರ್ತಿಗಳಾಗಿದ್ದರು. ತಾಂಬೂಲವನ್ನು ಸಲ್ಲಿಸುವ ಕಾಯಕ ಅವರದ್ದಾಗಿತ್ತೆಂದು ತಿಳಿದುಬರುತ್ತದೆ.

ಈ ಎರಡೂ ಗವಿಗಳು ಅಕ್ಕಪಕ್ಕದಲ್ಲಿವೆ. ಚೆನ್ನಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ ಎಂಬುದು ಅಭಿಪ್ರಾಯ. ಈ ಗವಿಗಳು ಹನ್ನೆರಡನೇ ಶತಮಾನದ ಮಹಿಳೆಯರ ಆಧ್ಯಾತ್ಮಿಕ ಸಾಧನೆಯ ಕುರುಹುಗಳು.




#Article 180: ವಿಕಿಪೀಡಿಯ (170 words)


ವಿಕಿಪೀಡಿಯ (ಇಂಗ್ಲಿಷ್: Wikipedia ) ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ.

ಇದು ಪ್ರಸ್ತುತ ವಿಕಿಮೀಡ ಫೌ಼ಂಡೇಷನ್ () ಎಂಬ ಅಮೆರಿಕದ ಸ್ಯಾನ್‌ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ  ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ).

'ವಿಕಿಪೀಡಿಯ' ಎಂಬ ಪದವು ಒಂದು ಮಿಶ್ರಪದ () ಆಗಿದ್ದು, ಹವಾಯಿ ಭಾಷೆಯ 'ವಿಕಿ' (ಅಂದರೆ 'ಶೀಘ್ರ' ಎಂದರ್ಥ) ಹಾಗು ಇಂಗ್ಲಿಷ್‌ನ 'ಎನ್‌ಸೈಕ್ಲೊಪೀಡಿಯ' ಎಂಬ ಎರಡು ಪದಗಳು ಸೇರಿ ರಚನೆಯಾಗಿದೆ.

ವಿಕಿಪೀಡಿಯವು ಮೂಲತಃ ನ್ಯುಪೀಡಿಯ (Nupedia) ಎಂಬ ಇನ್ನೊಂದು ಇಂಗ್ಲಿಷ್ ವಿಶ್ವಕೋಶೀಯ ಜಾಲತಾಣದ ಯೋಜನೆಯಿಂದ ಮೂಡಿಬಂದಿತು. ಜಿಮ್ಮಿ ವೇಲ್ಸ್ () ಮತ್ತು ಲ್ಯಾರಿ ಸ್ಯಾಂಗರ್ () ಎಂಬುವವರು ಇದನ್ನು  ಜನವರಿ ೧೫, ೨೦೦೧ ರಂದು ಆರಂಭಿಸಿದರು. ಪ್ರಸ್ತುತ ಇದು ವಿಕಿಮೀಡಿಅ ಫೌ಼ಂಡೇಷನ್ ಎಂಬ ಒಂದು ಲಾಭೋದ್ದೆಶರಹಿತ ಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.

ವಿಕಿಪೀಡಿಯಾದಲ್ಲಿರುವ ಮಾಹಿತಿಗಳನ್ನು ವಗೀ‍ಕರಿಸಿದಾಗ ಅವುಗಳಲ್ಲಿ
ಸಂಸ್ಕ್ರತಿ ಮತ್ತು ಕಲೆ - ೩೦%
ವ್ಯಕ್ತಿಗಳ ಚರಿತ್ರೆ - ೧೫%
ಬೌಗೋಳಿಕ ಮತ್ತು ಸ್ಥಳ ಮಾಹಿತಿ -14%
ಸಮಾಜ ಮತ್ತು ಸಮಾಜ ವಿಜ್ಞಾನ - ೧೨ %
ಐತಿಹಾಸಿಕ ಘಟನೆಗಳು - ೧೧%
ನೈಸರ್ಗಿಕ ಮತ್ತು ಬೌತ ವಿಜ್ಞಾನ - ೯%
ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ - ೪%
ಧರ್ಮ ಮತ್ತು ನಂಬಿಕೆ - ೨%
ಆರೋಗ್ಯ - ೨%
ಗಣಿತ ಮತ್ತು ಅದರ ತಂತ್ರಗಳು - ೧%
ಚಿಂತನೆಗಳು ಮತ್ತು ತತ್ವಶಾಸ್ತ್ರ - ೧%




#Article 181: ಪುಣೆ (2132 words)


ಪುಣೆ ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಪ್ರಮುಖ ನಗರ. ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ, ಮುಳಾ ಮತ್ತು ಮುಠಾ ಎಂಬ ನದಿಗಳ ದಂಡೆಯಲ್ಲಿರುವ ಈ ನಗರವು ಪುಣೆ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ಪುಣೆ ಮಹಾರಾಷ್ಟ್ರದ ಎರಡನೆಯ ಹಾಗೂ ಭಾರತದ ಏಳನೆಯ ಅತಿದೊಡ್ಡ ನಗರ. ಅನೇಕ ಪ್ರಸಿದ್ಧ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳು ಇಲ್ಲಿರುವ ಕಾರಣ ಇದನ್ನು  ಪೂರ್ವದ ಆಕ್ಸ್‍ಫರ್ಡ್ ಎಂದೂ ಕರೆಯಲಾಗುತ್ತದೆ. ಅನೇಕ ವಾಹನ ಹಾಗೂ ಇಂಜಿನಿಯರಿಂಗ್ ಸಂಬಂಧಪಟ್ಟ  ದೊಡ್ಡ ಕೈಗಾರಿಕೆಗಳಿಗೆ ನೆಲೆಯಾಗಿರುವ ಪುಣೆ ದೊಡ್ಡ ಔದ್ಯಮಿಕ ಕೇಂದ್ರವೂ ಹೌದು. ಕಳೆದ ಒಂದೆರಡು ದಶಕಗಳಲ್ಲಿ ಪುಣೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಉದ್ಯಮಕ್ಕಾಗಿಯೂ ಹೆಸರಾಗಿದೆ. ೨೦೦೧ರ ಜನಗಣತಿಯ ಪ್ರಕಾರ ಪುಣೆಯ ಜನಸಂಖ್ಯೆ ೪೫ ಲಕ್ಷ. ಬಹಳ ಹಳೆಯ ಇತಿಹಾಸವಿರುವ ಪುಣೆ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಎಂದೂ ಹೆಸರಾಗಿದೆ. ಇಲ್ಲಿಯ ಮುಖ್ಯ ಭಾಷೆ ಮರಾಠಿ.

ಪುಣೆ ನಗರದ ಹೆಸರು ಪುಣ್ಯನಗರಿ ಎಂಬ ಶಬ್ದದಿಂದ ಬಂದಿರಬೇಕು ಎಂದು ನಂಬಲಾಗಿದೆ. ಕ್ರಿ.ಶ. ೮ನೆಯ ಶತಮಾನದಲ್ಲಿ ಈ ಊರನ್ನು ಪುನ್ನಕ (ಅಥವಾ ಪುಣ್ಯಕ) ಎಂಬ ಹೆಸರಿನಿಂದ ಉಲ್ಲೇಖಿಸಿರುವುದು ದಾಖಲೆಗಳಲ್ಲಿ ಕಾಣಬರುತ್ತದೆ. ಕ್ರಿ.ಶ.೧೧ನೆಯ ಶತಮಾನದಲ್ಲಿ ಕಸಬೇ ಪುಣೆ ಮತ್ತು ಪುನವಾಡಿ ಎಂಬ ಉಲ್ಲೇಖವೂ ಕಾಣಬರುತ್ತದೆ. ಮರಾಠಾ ಸಾಮ್ರಾಜ್ಯದ ಕಾಲದಲ್ಲಿ ಇದನ್ನು ಪುಣೆ  ಎಂದು ಸಂಭೋದಿಸಲಾಗುತ್ತಿತ್ತು. ಮುಂದೆ ಬ್ರಿಟಿಷರ ಬಾಯಲ್ಲಿ ಇದು ಪೂನಾ ಎಂದಾಯಿತು. ಪುಣೆ ಈಗಿನ ಅಧಿಕೃತ ಹೆಸರು .

ಈ ನಗರದ ಬಗ್ಯೆ ಮೊಟ್ಟಮೊದಲ ಉಲ್ಲೇಖ ಕ್ರಿ.ಶ. ೭೫೮ರ ರಾಷ್ಟ್ರಕೂಟರ ಆಳ್ವಿಕೆಯ ಕಾಲದಲ್ಲಿ ಕಾಣಬರುತ್ತದೆ. ಇಂದಿಗೂ ಪುಣೆಯ ಜಂಗಲೀ ಮಹಾರಾಜ ರಸ್ತೆಯಲ್ಲಿರುವ ಪಾತಾಳೇಶ್ವರ ಗುಹಾ ದೇವಾಲಯ ೭ನೆಯ ಶತಮಾನದಷ್ಟು ಹಳೆಯದು. 

೧೭ನೆಯ ಶತಮಾನದವರೆಗೆ ಈ ಪಟ್ಟಣವು ನಿಜಾಮ ಶಾಹಿ, ಆದಿಲ ಶಾಹಿ, ಮುಘಲರು ಇತ್ಯಾದಿ ರಾಜ್ಯಗಳ ಅಧೀನದಲ್ಲಿತ್ತು. ೧೭ನೆಯ ಶತಮಾನದಲ್ಲಿ ಸತಾರಾದ ಶಹಾಜಿರಾಜೆ ಭೋಸ್ಲೇಗೆ ಪುಣೆ ನಗರವನ್ನು ನಿಜಾಮ ಶಹಾನು ಜಹಗೀರು ಕೊಟ್ಟನು. ಈ ಜಹಗೀರಿನಲ್ಲಿ ಶಹಾಜಿಯ ಹೆಂಡತಿ ಜೀಜಾಬಾಯಿಯು ನೆಲೆಸಿದ್ದಾಗ, ೧೬೨೭ರಲ್ಲಿ ಶಿವನೇರಿ ಕೋಟೆಯಲ್ಲಿ ಶಿವಾಜಿರಾಜೆ ಭೋಸ್ಲೆಯ ಜನನವಾಯಿತು. ತನ್ನ ಸಂಗಡಿಗರೊಂದಿಗೆ ಪುಣೆ ನಗರದ ಆಸುಪಾಸಿನಲ್ಲಿ ಪ್ರವರ್ಧಮಾನಕ್ಕೆ ಬಂದ ಶಿವಾಜಿಯು ಮುಂದೆ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ. ಮುಂದೆ ಪೇಶವಾಗಳ ಕಾಲದಲ್ಲಿ ಛತ್ರಪತಿಯ ರಾಜಧಾನಿ ಸತಾರಾಕ್ಕೆ ಬದಲಾದರೂ, ಪುಣೆಯು ಆಡಳಿತಾತ್ಮಕ ರಾಜಧಾನಿಯಾಗಿ ಮುಂದುವರೆಯಿತು. ಪೇಶವಾಯಿಯ ಕಾಲದಲ್ಲಿ ಪುಣೆ ನಗರ ಭರದಿಂದ ಬೆಳೆಯಿತು.

 
ಶಿವಾಜಿ ಮಹಾರಾಜನ ಜೀವನದಲ್ಲಿ ಹಾಗೂ ಮರಾಠಾ ಇತಿಹಾಸದಲ್ಲಿ ಪುಣೆ ನಗರಕ್ಕೆ ಮಹತ್ವದ ಸ್ಥಾನವಿದೆ. ಕ್ರಿ.ಶ. ೧೬೩೫-೩೬ರ ಸುಮಾರಿನಲ್ಲಿ ಜೀಜಾಬಾಯಿಯು ಪುಣೆಯಲ್ಲಿ ನೆಲೆಸಲು ಬಂದಾಗಿನಿಂದ ಪುಣೆಯ ಇತಿಹಾಸದಲ್ಲಿ ಹೊಸ ಪರ್ವವೇ ಪ್ರಾರಂಭವಾಯಿತು. ಪುಣೆಯ ಲಾಲ್ ಮಹಲ್ ಎಂಬ ಅರಮನೆಯಲ್ಲಿ ಶಿವಾಜಿ ಮತ್ತು ಜೀಜಾಬಾಯಿಯ ವಾಸ್ತವ್ಯವಿತ್ತು.  ಪುಣೆಯ ಊರದೇವರು - ಕಸಬಾ ಗಣಪತಿಯನ್ನು ಸ್ಥಾಪಿಸಿದವಳು ಜೀಜಾಬಾಯಿ. ೧೭ನೆಯ ಶತಮಾನದಲ್ಲಿ ಛತ್ರಪತಿ ಶಾಹು ಮಹಾರಾಜನ ಪ್ರಧಾನಮಂತ್ರಿ, ಪೇಶವೇ ಬಾಜೀರಾಯನು, ಮುಠಾ ನದಿಯ ದಂಡೆಯಲ್ಲಿ ಶನಿವಾರವಾಡೆಯನ್ನು ಕಟ್ಟಿ ಅಲ್ಲಿಯೇ ನೆಲೆಸಿದ. 

ಖರಡಾದ ಐತಿಹಾಸಿಕ ಕೋಟೆಯಲ್ಲಿ ೧೭೯೫ರಲ್ಲಿ ನಿಜಾಮನಿಗೂ ಮರಾಠರಿಗೂ ಯುದ್ಧವಾಯಿತು. ೧೮೯೭ರ ಖಡಕಿ ಯುದ್ಧದಲ್ಲಿ ಮರಾಠರು ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಪರಾಜಿತರಾದ ಮೇಲೆ ಪುಣೆ ನಗರವು  ಬ್ರಿಟಿಷರ ಕೈ ಸೇರಿತು. ಪುಣೆಯ ಮಹತ್ವವನ್ನು ಮನಗಂಡ ಬ್ರಿಟಿಷರು ಖಡಕಿಯಲ್ಲಿ ಸೇನಾ ಕಂಟೋನ್ಮೆಂಟ್ ಅನ್ನು ಸ್ಥಾಪಿಸಿದರು.

೧೮೫೮ರಲ್ಲಿ ಪುಣೆ ನಗರಪಾಲಿಕೆ ಸ್ಥಾಪನೆಯಾಯಿತು. ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಪುಣೆಯಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳು ಪ್ರಾರಂಭವಾಗಿ ಪುಣೆ ಶಿಕ್ಷಣ ಕೇಂದ್ರವಾಗಿ ಹೆಸರಾಗಲು ಅಡಿಪಾಯ ಹಾಕಿದವು.

ಭಾರತದ ಸ್ವಾತಂತ್ರ ಹೋರಾಟ ಮತ್ತು ಸಮಾಜಸುಧಾರಣೆಗಳಲ್ಲಿ ಪುಣೆಯ ಸ್ಥಾನ ವಿಶಿಷ್ಟವಾದದ್ದು. ಲೋಕಮಾನ್ಯ ತಿಲಕ್  ಮತ್ತು  ಸಾವರಕರರು ಸುಮಾರು ಏಳು ದಶಕಗಳ ಕಾಲ ತಮ್ಮ ರಾಜಕೀಯ ಚಟುವಟಿಕೆಗಳಿಂದ ಪುಣೆಯ ಮಹತ್ವವನ್ನು ಉಳಿಸಿ, ಬೆಳೆಸಿದರು. ಮಹಾದೇವ ಗೋವಿಂದ ರಾನಡೆ, ರಾ.ಗ.ಭಂಡಾರ್ಕರ್, ವಿಠ್ಠಲ ರಾಮಜೀ ಶಿಂದೆ, ಗೋಪಾಲ ಕೃಷ್ಣ ಗೋಖಲೆ, ಮಹಾತ್ಮಾ ಫುಲೆ ಇತ್ಯಾದಿ ಸಮಾಜ ಸುಧಾರಕರ ಮತ್ತು ರಾಷ್ಟ್ರ ಮಟ್ಟದ ನಾಯಕರ  ಕಾರ್ಯಕೇಂದ್ರವೂ ಪುಣೆಯಾಗಿತ್ತು.

 
ಪುಣೆ ನಗರದ   ಮಧ್ಯಬಿಂದು (Zero milestone) ನಗರದ ಜಿ.ಪಿ.ಓ ಹೊರಗಿದೆ. ಸಹ್ಯಾದ್ರಿ ಪರ್ವತಶ್ರೇಣಿಯ ಪೂರ್ವದಲ್ಲಿ , ಸಮುದ್ರಮಟ್ಟದಿಂದ ೫೬೦ ಮೀಟರ್ (೧೮೩೭ ಅಡಿ) ಎತ್ತರದಲ್ಲಿರುವ ಪುಣೆ, ಭೀಮಾ ನದಿಯ ಉಪನದಿಗಳಾದ ಮುಳಾ ಮತ್ತು ಮುಠಾ ನದಿಗಳ ದಂಡೆಯಮೇಲಿದೆ. ಪವನಾ ಮತ್ತು ಇಂದ್ರಾಯಣಿ ನದಿಗಳು ಈ ನಗರದ ಉತ್ತರ - ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತವೆ. ಸಮುದ್ರಮಟ್ಟದಿಂದ ೮೦೦ ಮೀಟರ್ ಎತ್ತರದಲ್ಲಿರುವ ವೇತಾಳ ಟೇಕಡಿ ನಗರದ ಅತಿ ಎತ್ತರದ ತಾಣ. ಶಿವಾಜಿಯ ಇತಿಹಾಸದ ಅವಿಭಾಜ್ಯ ಅಂಗ , ೧೩೦೦ ಮೀಟರ್ ಎತ್ತರದಲ್ಲಿರುವ , ಸಿಂಹಗಡ ಕೋಟೆಯು ಪುಣೆಯ ಸಮೀಪದಲ್ಲಿದೆ. ಕೊಯ್ನಾ ಭೂಕಂಪವಲಯದ ವ್ಯಾಪ್ತಿಯಲ್ಲಿ ಬರುವ ಪುಣೆಯಲ್ಲಿ ಮಧ್ಯಮ ಸ್ತರದ ಹಾಗೂ ಲಘು ಭೂಕಂಪಗಳು ಆದದ್ದುಂಟು. ಕಾತ್ರಜದಲ್ಲಿ ೨೦೦೪ರ ಮೇ ೧೭ರಂದು ರಿಚ್ಟರ್ ಮಾಪನದಲ್ಲಿ ೩.೨ರಷ್ಟಿದ್ದ ಭೂಕಂಪವಾಗಿತ್ತು.

ಪುಣೆ ಪೇಟೆಗಳ ನಗರ. ನದಿಯ ದಡದಲ್ಲಿ ಹರಡಿಕೊಂಡಿದ್ದ  ನಗರವು ,  ಹೊಸಹೊಸ ಪೇಟೆಗಳ ಹೆಸರು ಹೊತ್ತು ಬೆಳೆಯತೊಡಗಿತು. ಈ ಪೇಟೆಗಳ ಹೆಸರು ವಾರದ ದಿನಗಳಿಂದ, ಐತಿಹಾಸಿಕ ಕಾರಣಗಳಿಂದ ಹೆಸರು ಪಡೆದುಕೊಂಡಿವೆ. ಪುಣೆಯ ಪೇಟೆಗಳ ಪಟ್ಟಿ ಇಂತಿದೆ. 

ಪುಣೆಯ ಉಪನಗರಗಳು

 
ನಗರದಲ್ಲಿ ಮಳೆಗಾಲ, ಬೇಸಿಗೆ ಮತ್ತು ಚಳಿಗಾಲ ಪ್ರಧಾನವಾಗಿ ಅನುಭವಕ್ಕೆ ಬರುತ್ತವೆ. ಬೇಸಿಗೆಕಾಲ  ಮಾರ್ಚಿನಿಂದ ಮೇವರೆಗೆ ಇದ್ದು ಉಷ್ಣಾಂಶ ಸುಮಾರು ೨೫ ರಿಂದ ೨೯ ಡಿಗ್ರಿ ಸೆಂಟಿಗ್ರೇಡು ಇರುತ್ತದೆ.  ಏಪ್ರಿಲ್ಲಿನಲ್ಲಿ ಬಿಸಿಲಿನ ಧಗೆ ಅತಿಹೆಚ್ಚಿರುತ್ತದೆ.ಪುಣೆಯಲ್ಲಿ ರಾತ್ರಿಯ ಉಷ್ಣಾಂಶ ಸಾಕಷ್ಟು ಕಡಿಮೆಯಿರುತ್ತದೆ.  ಜೂನಿನಲ್ಲಿ ಅರಬೀ ಸಮುದ್ರದ ಕಡೆಯಿಂದ ಬರುವ ಮುಂಗಾರಿನಿಂದ ಮಳೆಗಾಲ ಆರಂಭವಾಗುತ್ತದೆ. ವರ್ಷಕ್ಕೆ ಸರಾಸರಿ ೭೨೨ ಮಿಲಿಮೀಟರ್ ಮಳೆ ಸುರಿಯುತ್ತದೆ. ಮಳೆಯ ಪ್ರಮಾಣ ಅತಿ ಹೆಚ್ಚಿಲ್ಲದಿದ್ದರೂ ಕೆಲವೊಮ್ಮೆ ಪುಣೆ ನಗರದ ಜನಜೀವನವನ್ನು ಅಸ್ತವ್ಯಸ್ತ ಮಾಡುವುದು ಅಪರೂಪವಲ್ಲ.ಮಳೆಗಾಲದ ಉಷ್ಣಾಂಶ ೨೦ ರಿಂದ ೨೮ ಡಿಗ್ರಿ ಸೆಂಟಿಗ್ರೇಡು ಇರುತ್ತದೆ.
 
ಅಕ್ಟೋಬರ್  ಸುಮಾರಿಗೆ ಹಗಲಿನ ಉಷ್ಣಾಂಶ ಹೆಚ್ಚಿದ್ದು ರಾತ್ರಿ ತಂಪಾಗುತ್ತದೆ.  ನವೆಂಬರಿನಿಂದ ಪ್ರಾರಂಭವಾಗುವ ಚಳಿಗಾಲ ಫೆಬ್ರುವರಿಯವರೆಗೂ ಇರುತ್ತದೆ. ಪುಣೆ ಪ್ರವಾಸಕ್ಕೆ ಇದು ಪ್ರಶಸ್ತ ಕಾಲ. ಹಗಲು ೨೯ ಡಿಗ್ರಿ ಸೆಂಟಿಗ್ರೇಡಿನಷ್ಟು ಬಿಸಿಯಿದ್ದು, ರಾತ್ರಿ ಇದು ೧೦ ಡಿಗ್ರಿ ಸೆಂಟಿಗ್ರೇಡಿಗಿಂತಲೂ ಕಡಿಮೆಯಾಗುತ್ತದೆ. ಡಿಸೆಂಬರ್, ಜನವರಿಯಲ್ಲಂತೂ ಉಷ್ಣಾಂಶ ೫-೬ ಡಿಗ್ರಿ ಸೆಂಟಿಗ್ರೇಡಿಗೆ ಇಳಿಯುತ್ತದೆ. 

ಪುಣೆಯಲ್ಲಿ ಅತಿ ಹೆಚ್ಚು ತಾಪಮಾನ ೪೩.೩ ಡಿಗ್ರಿ ಸೆಂಟಿಗ್ರೇಡು ಏಪ್ರಿಲ್ ೨೦, ೧೯೮೭-೮೮ರಂದು ದಾಖಲಾಗಿತ್ತು. ಅಂತೆಯೇ ಅತಿ ಕಡಿಮೆ ತಾಪಮಾನ ೧.೭ ಡಿಗ್ರಿ ಸೆಂಟಿಗ್ರೇಡು  ಜನವರಿ ೧೭ ೧೯೩೫ರಲ್ಲಿ ದಾಖಲಾಗಿತ್ತು. ಈಚೆಗೆ ಅಂದರೆ ೧೯೯೧ರ ಜನವರಿಯಲ್ಲಿ ಉಷ್ಣಾಂಶ ೨.೮ ಡಿಗ್ರಿ ಸೆಂಟಿಗ್ರೇಡಿಗೆ ಕುಸಿದಿತ್ತು.

 
ಪುಣೆ ನಗರದ ೨೫ ಕಿ.ಮೀ. ಆಸುಪಾಸಿನಲ್ಲಿ ಸುಮಾರು ೧,೦೦೦ ಹೂಬಿಡುವ ಸಸ್ಯವರ್ಗವೂ, ೨೦೪ ಚಿಟ್ಟೆಯಂಥಾ ಪ್ರಾಣಿಗಳೂ, ೩೫೦ ಪಕ್ಷಿಗಳೂ, ಮತ್ತು ೬೪ ಸಸ್ತನಿಗಳ ಪ್ರಬೇಧಗಳು ಕಾಣಸಿಗುತ್ತವೆ.

 
ಮಹಾರಾಷ್ಟ್ರದಲ್ಲಿ ಮುಂಬೈಯನ್ನು ಬಿಟ್ಟರೆ , ಪುಣೆ ಅತಿ ದೊಡ್ಡ ಔದ್ಯಮಿಕ ಕೇಂದ್ರ. ಪ್ರಪಂಚದಲ್ಲಿ ಅತಿ ಹೆಚ್ಚು  ದ್ವಿಚಕ್ರ ವಾಹನಗಳನ್ನು ತಯಾರಿಸುವ ಬಜಾಜ್ ಆಟೋ, ಭಾರತದಲ್ಲಿಯೇ ಅತಿ ಹೆಚ್ಚು ಪ್ರವಾಸೀ ಮತ್ತು ಔದ್ಯೋಗಿಕ ವಾಹನಗಳನ್ನು ತಯಾರಿಸುವ ಟಾಟಾ ಮೋಟರ್ಸ್ ಇವುಗಳ ಕಾರ್ಖಾನೆಗಳಿರುವುದು ಪುಣೆಯಲ್ಲಿ. ಇದಲ್ಲದೆ ಕೈನೆಟಿಕ್, ಡೈಮ್ಲರ್- ಕೈಸ್ಲರ್ , ಫೋರ್ಸ್ ಮೋಟರ್ಸ್ ಇತ್ಯಾದಿ ದೊಡ್ಡ ವಾಹನ ಉದ್ಯಮಗಳಿಗೂ ಪುಣೆ ನೆಲೆಯಾಗಿದೆ. 

ಪುಣೆ ಇಂಜಿನಿಯರಿಂಗ್ ಉದ್ಯಮಕ್ಕೂ ಹೆಸರುವಾಸಿಯಾಗಿದೆ. ಜಗತ್ತಿನಲ್ಲಿಯೇ ಎರಡನೇ ಅತಿ ದೊಡ್ಡ ಫೋರ್ಜಿಂಗ್ ಕಂಪನಿ - ಭಾರತ್ ಫೋರ್ಜ್, ಕಮಿನ್ಸ್ ಎಂಜಿನ್ಸ್, ಅಲ್ಫಾ ಲಾವಲ್, ಥರ್ಮ್ಯಾಕ್ಸ್, ಸ್ಯಾಂಡ್ವಿಕ್ ಏಶಿಯಾ, ಥೈಸನ್ ಕ್ರುಪ್ (ಮೊದಲಿನ ಬಖಾವ್ ವೂಲ್ಫ್) , ಕೆಎಸ್‍ಬಿ ಪಂಪ್ಸ್, ಫೋರ್ಬ್ಸ್ ಮಾರ್ಶಲ್ ಇವೇ ಮೊದಲಾದ ನಾಮಾಂಕಿತ ಉದ್ಯಮಗಳೂ ಪುಣೆಯಲ್ಲಿವೆ. 

ವಿದ್ಯುತ್ ಮತ್ತು ಗೃಹೋಪಯೋಗಿ ಉಪಕರಣಗಳನ್ನು ನಿರ್ಮಿಸುವ ವರ್ಲ್‍ಪೂಲ್ ಮತ್ತು ಎಲ್.ಜಿ., ಖಾದ್ಯ ಪದಾರ್ಥಗಳನ್ನು ತಯಾರಿಸುವ ಫ್ರಿಟೋ ಲೇಸ್ (ಕೋಕಾ ಕೋಲಾ ಕಂಪನಿ) ಇತ್ಯಾದಿ ಇತರ ಉದ್ಯೋಗಗಳು ಪುಣೆಯಲ್ಲಿವೆ. ಇವಲ್ಲದೆ ಮಧ್ಮ ಮತ್ತು ಲಘು ಉದ್ಯಮಗಳೂ ವಿಪುಲವಾಗಿವೆ. 

೧೯೯೦ ದಶಕದಲ್ಲಿ ಪ್ರಾಂಭವಾದ  ಹಿಂಜವಾಡಿಯ ರಾಜೀವ ಗಾಂಧಿ ಐ.ಟಿ. ಪಾರ್ಕ್ , ಮಗರಪಟ್ಟಾದ ಸೈಬರ್ ಸಿಟಿ, ತಳವಡೆಯ ಎಮ್.ಐ.ಡಿ.ಸಿ  ಸಾಫ್ಟ್‍ವೇರ್  ಪಾರ್ಕ್, ಕಲ್ಯಾಣಿ ನಗರದ ಮೆರಿಸಾಫ್ಟ್ ಐ.ಟಿ. ಪಾರ್ಕ್  ಇವೇ ಮೊದಲಾದವುಗಳಿಂದ ಸಾಫ್ಟ್‍ವೇರ್ ರಂಗದಲ್ಲಿಯೂ ಪುಣೆ ಭರದಿಂದ ಬೆಳೆಯತೊಡಗಿದೆ. ಭಾರತದ ಪ್ರಸಿದ್ಧ ಕಂಪನಿಗಳಾದ ಇನ್ಫೋಸಿಸ್, ವಿಪ್ರೋ, ಟೀ.ಸಿ.ಎಸ್, ಟೆಕ್ ಮಹೀಂದ್ರ, ಸತ್ಯಮ್, ಐಫ್ಲೆಕ್ಸ್ , ಇವಲ್ಲದೆ ಬಹುರಾಷ್ಟ್ರೀಯ ಕಂಪನಿಗಳಾದ ಐ.ಬಿ.ಎಮ್, ಸೀಮನ್ಸ್, ರೆಡ್ ಹ್ಯಾಟ್, ಏ.ಡಿ.ಎಸ್, ಮೊದಲಾದವುಗಳು ತಮ್ಮ ಕಾರ್ಯಶಾಖೆಗಳನ್ನು ಪುಣೆಯಲ್ಲಿ ತೆರೆದಿವೆ. 

ಇಂಗ್ಲೀಷ್ ಮಾತನಾಡಬಲ್ಲ ವಿದ್ಯಾವಂತರ ಸಂಖ್ಯೆ ವಿಪುಲವಾಗಿರುವ ಕಾರಣ  ಬಿ.ಪಿ.ಓ. ಉದ್ಯೋಗದಲ್ಲಿಯೂ ಪುಣೆ ಮುಂದಿದೆ. ಕನ್ವರ್ಜಿಸ್, ಡಬ್ಲ್ಯು.ಎನ್.ಎಸ್, ಇನ್ಫೋಸಿಸ್, ವಿಪ್ರೋ ಇತ್ಯಾದಿಗಳು ಪುಣೆಯಲ್ಲಿರು ಈ ಉದ್ಮದ ಕೆಲ ನಾಮವಂತ ಕಂಪನಿಗಳು.

ಮಾರ್ಕೆಟ್ ಯಾರ್ಡ್ ಮತ್ತು ಮಹಾತ್ಮಾ ಫುಲೆ ತರಕಾರಿ ಮಂಡಿ ಕೃಷಿಕರಿಗೆ ಮುಖ್ಯವಾದ ಪೇಟೆಗಳು. ಅಂತೆಯೇ ರವಿವಾರ ಪೇಟೆ ಗ್ರಾಹಕೋಪಯೋಗಿ ವಸ್ತುಗಳ ಸಗಟು ವ್ಯಾಪಾರಕ್ಕೆ. ಬುಧವಾರ ಪೇಟೆ ವಿದ್ಯುತ್ ಹಾಗೂ ಕಂಪ್ಯೂಟರ್ ಉಪಕರಣಗಳು, ಚಳಿಗಾಲದ ದಿರುಸುಗಳು, ಪುಸ್ತಕಗಳು, ಇತ್ಯಾದಿಗಳ ಚಿಲ್ಲರೆ ಹಾಗೂ ಸಗಟು ವ್ಯವಹಾರಕ್ಕೆ ಪ್ರಸಿದ್ಧಿಯಾಗಿವೆ. ಬುಧವಾರ ಪೇಟೆಯ ಅಂಗವಾದ ತುಳಶೀಬಾಗ್ ಮತ್ತು ಡೆಕ್ಕನ್ನಿನ ಹಾಂಗ್ ಕಾಂಗ್ ಲೇನ್ ಮಹಿಳೆಯರಿಗೆ ಪ್ರಿಯವಾದ ದೈನಂದಿನ ವಸ್ತುಗಳ ಚಿಲ್ಲರೆ ವ್ಯಾಪಾರಕೇಂದ್ರಗಳು. ಇದೇ ಭಾಗದ ಅಪ್ಪಾ ಬಳವಂತ ಚೌಕದಲ್ಲಿ ಮಕ್ಕಳ ಶಾಲಾ ಪುಸ್ತಕಗಳ ಮಾರುಕಟ್ಟೆಯಿದೆ. ಲಕ್ಷ್ಮೀ ರೋಡು ಬಟ್ಟೆ ಮತ್ತು ಬಂಗಾರದ ಆಭರಣಗಳಿಗೆ ಪ್ರಸಿದ್ಧವಾಗಿದೆ. ಕ್ಯಾಂಪಿನ ಮಹಾತ್ಮಾ ಗಾಂಧಿ ಮತ್ತು ಈಸ್ಟ್ ರಸ್ತೆಗಳು ಪಾಶ್ಚಿಮಾತ್ಯ ಜೀವನಶಯಲಿಯ ಉಪಕರಣಗಳ ವ್ಯಾಪಾರಕೆಂದ್ರ. ಅಂತೆಯೇ ಜಂಗಲೀ ಮಹಾರಾಜ ರಸ್ತೆ, ಫರ್ಗ್ಯುಸನ್ ರಸ್ತೆ, ಕರ್ವೆ ರಸ್ತೆ ಇವುಗಳಲ್ಲಿ ವಿವಿಧ ವಸ್ತುಗಳ ಚಿಲ್ಲರೆ ವ್ಯಾಪಾರದ ಮಾರುಕಟ್ಟೆಗಳು ಬೆಳೆಯುತ್ತಿವೆ.

ಪುಣೆ ನಗರದ ಆಡಳಿತ ವ್ಯವಸ್ಥೆ ಪುಣೆ ನಗರಪಾಲಿಕೆಯ ಕೈಯಲ್ಲಿದೆ. ಮೂಲಭೂತ ಸೌಕರ್ಯಗಳು ಮತ್ತು ನಗರದ ಆಡಳಿತದ ಮೇಲುಸ್ತುವಾರಿಯನ್ನು ನಗರಪಾಲಿಕೆ ನೋಡಿಕೊಳ್ಳುತ್ತದೆ. ಆಡಳಿತಾತ್ಮಕ ಮುಖ್ಯಸ್ಥರಾದ ಮಹಾರಾಷ್ಟ್ರ ಸರಕಾರದಿಂದ ನೇಮಿತರಾದ ಐ.ಎ.ಎಸ್. ಅಧಿಕಾರಿ, ಪುಣೆಯ ಕಮೀಷನರ್ (ಆಯುಕ್ತ) ಕೈಯಲ್ಲಿ ಬಹುತೇಕ ಅಧಿಕಾರ ಕೇಂದ್ರೀಕೃತವಾಗಿದೆ. ನಗರಪಾಲಿಕೆ ಚುನಾವಣೆಯಲ್ಲಿ ಜನರಿಂದ ಆಯ್ದುಬಂದ ನಗರಸೇವಕರು ( ಕಾರ್ಪೋರೇಟರುಗಳು) ನಗರಪಾಲಿಕೆಯ ಅಂಗವಾಗಿದ್ದು ಇವರ ನೇತೃತ್ವ ಮಹಾಪೌರ (ಮೇಯರ್) ವಹಿಸುತ್ತಾರೆ. ಮೇಯರ್ ಪದವಿಯು ಕೇವಲ ನಾಮಮಾತ್ರದ್ದಾಗಿದ್ದು ಆಡಳಿತಾತ್ಮಕ ಅಧಿಕಾರ ಬಹಳ ಸೀಮಿತವಾಗಿದೆ. ಪುಣೆ ನಗರಪಾಲಿಕೆಯಲ್ಲಿ ೪೮ ಉಪವಿಭಾಗಗಳಿದ್ದು, ಪ್ರತಿಯೊಂದು ಉಪವಿಭಾಗವನ್ನೂ ಸಹಾಯಕ ಆಯುಕ್ತರು ನೋಡಿಕೊಳ್ಳುತ್ತಾರೆ.

ಪುಣೆ ನಗರದ ಪೋಲೀಸ್ ಮುಖ್ಯಾಧಿಕಾರಿ (ಉಪಾಯುಕ್ತ) ರಾಜ್ಯದ ಗೃಹ ಮಂತ್ರಿಗಳಿಂದ ನಿಯಮಿಸಲ್ಪಟ್ಟ ಐ.ಪಿ.ಎಸ್. ಅಧಿಕಾರಿಯಾಗಿರುತ್ತಾರೆ. ಇಲ್ಲಯ ಪೋಲೀಸ್ ವ್ಯವಸ್ಥೆಯ ನಿರ್ವಹಣೆ ಮತ್ತು ಜವಾಬುದಾರಿ ರಾಜ್ಯದ ಗೃಹಖಾತೆಯ ಮೇಲಿದೆ.

ಭಾರತದ ಇತರ ನಗರಗಳೊಂದಿಗೆ ಪುಣೆ ನಗರ ರಸ್ತೆ, ರೈಲು ಮತ್ತು ವಿಮಾನಗಳ ಮೂಲಕ ಚೆನ್ನಾಗಿ ಸಂಪರ್ಕ ಹೊಂದಿದೆ. ಇಲ್ಲಿಯ ವಿಮಾನ ನಿಲ್ದಾಣ ಮೊದಲು ಬರಿಯ ದೇಶೀ ಸ್ಥಾನಗಳ ವಿಮಾನಗಳಿಗಾಗಿ ಇದ್ದದ್ದು, ಈಚೆಗೆ ದುಬೈ ಹಾಗೂ ಸಿಂಗಪುರದಂತಹ ವಿದೇಶೀ ನಗರಗಳಿಗೂ ನೇರ ಸಂಪರ್ಕ ಕಲ್ಪಿಸುತ್ತಿದೆ. 

ಹೊಚ್ಚ ಹೊಸ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಪುಣೆಯಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಚಾಕಣ ಮತ್ತು ರಾಜಗುರುನಗರ ಗ್ರಾಮಗಳ ನಡುವೆ ಸ್ಥಾಪಿಸುವ ಮಹಾರಾಷ್ಟ್ರ ಸರಕಾರದ ಯೋಜನೆಯಿದೆ. ಇದರ ನಿರ್ವಹಣೆಯ ಜವಾಬ್ದಾರಿ ಮಹಾರಾಷ್ಟ್ರ ರಾಜ್ಯ ಔದ್ಯೋಗಿಕ ಮಹಾಮಂಡಲಕ್ಕೆ ವಹಿಸಲಾಗಿದೆ.

ಪುಣೆ ಮತ್ತು ಶಿವಾಜಿನಗರ ರೈಲ್ವೆ ಸ್ಟೇಷನ್ನುಗಳಲ್ಲಿ ಪ್ರಮುಖವಾದವುಗಳು. ಪುಣೆ ಸ್ಟೇಷನ್ನಿನಲ್ಲಿ ಎಲ್ಲಾ ರೈಲುಗಳೂ ನಿಲ್ಲುತ್ತವೆ. ಪುಣೆ ಸ್ಟೇಷನ್ ಮತ್ತು ಲೋನಾವಳಾ ಮಧ್ಯೆ ಲೋಕಲ್ ರೈಲುಗಳು ಸಂಚರಿಸುತ್ತವೆ. ಇದರ ಮೂಲಕ ಪಿಂಪ್ರಿ, ಖಡಕೀ ಮತ್ತು ಚಿಂಚವಡದಂಥಹಾ ಉಪನಗರಗಳನ್ನು ಪುಣೆ ನಗರದೊಂದಿಗೆ ಬೆಸೆಯಲು ಸಾಧ್ಯವಾಗಿದೆ. ಪುಣೆಯಿಂದ ಲೋನಾವಳಾದವರೆಗೆ ಲೋಕಲ್ ಸಂಚರಿಸಿದರೆ, ಅತ್ತ ಮುಂಬಯಿ ಲೋಕಲುಗಳು ಕರ್ಜತ್ ಸ್ಟೇಷನ್ ವರೆಗೂ ಬರುತ್ತವೆ. ರೈಲ್ವೆ ಆಡಳಿತವು ಲೋನಾವಳಾದ ರೈಲನ್ನು ಕರ್ಜತ್ / ಖೋಪೋಲಿಯವರೆಗೆ ವಿಸ್ತರಿಸುವ ಯೋಜನೆಯನ್ನು ಪರಿಶೀಲಿಸುತ್ತಿದೆ (೨೦೦೭). ಈ ಯೋಜನೆ ಕೈಗೂಡಿದಲ್ಲಿ ಪುಣೆ ಮುಂಬಯಿ ಮಧ್ಯೆ ಎಲ್ಲಾ ನಿಲ್ದಾಣಗಳಿಗೂ ಲೋಕಲಿನ ಸಂಪರ್ಕ ಬಂದಂತಾಗುತ್ತದೆ. ಕರ್ಜತ್ ಪನವೇಲ್ ನಡುವಿನ ರೈಲು ಮಾರ್ಗ ಪೂರ್ತಿಗೊಂಡಿದ್ದು, ಇದರಿಂದಾಗಿ ಮುಂಬಯಿ ಪುಣೆ ನಡುವಿನ ಅಂತರ ೨೯ಕಿ.ಮೀ.ನಷ್ಟು ಕಡಿಮೆಯಾಗಲಿದೆ. 

೧೯೯೦ರ ದಶಕದಲ್ಲಿ ಪೂರ್ತಿಗೊಳಿಸಲಾದ ಮುಂಬಯಿ ಪುಣೆ ದ್ರುತಗತಿ ಹೆದ್ದಾರಿ (Express way) ಯಿಂದಾಗಿ ಇವೆರಡು ನಗರಗಳ ನಡುವಿನ ಸಂಚಾರ ಹೆಚ್ಚು ಆರಾಮದಾಯಕವೂ, ಶೀಘ್ರಗತಿಯದೂ ಆಗಿದೆ. ಮುಂಬಯಿ ಪುಣೆ ನಡುವಿನ ಸುಮಾರು ೧೯೨ ಕಿ.ಮೀ. ಅಂತರವನ್ನು ಈಗ ಕೇವಲ ಎರಡೂವರೆಯಿಂದ ಮೂರು ತಾಸಿನಲ್ಲಿ ಕ್ರಮಿಸಬಹುದು. ಮುಂಬಯಿ ಪುಣೆ ನಡುವೆ ಸುಮಾರು ಪ್ರತಿ ೧೫-೨೦ ನಿಮಿಷಕ್ಕೊಮ್ಮೆ  ಬಸ್ಸು ಹೊರಡುತ್ತದೆ. ಸರಕಾರೀ ಮತ್ತು ಖಾಸಗೀ ಬಸ್ಸುಗಳು ಪುಣೆಯಿಂದ ದೂರದ ಬೆಂಗಳೂರು, ಹೈದರಾಬಾದುಗಳಿಗೂ ನೇರ ಸಂಪರ್ಕ ಕಲ್ಪಿಸುತ್ತವೆ. ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮಹಾರಾಷ್ಟ್ರದ ಮೂಲೆಮೂಲೆಗಳಿಗೂ ಇಲ್ಲಿಂದ ಸಂಚರಿಸುತ್ತವೆ.

೨೦೧೦ರ ಸುಮಾರಿಗೆ ಪುಣೆ ಐ.ಟಿ. ಉದ್ಯೋಗದ ದೊಡ್ಡ ಕೇಂದ್ರವಾಗಿ ಬೆಳೆಯುವ ಲಕ್ಷಣಗಳಿವೆ. ಪುಣೆಯ ನೌಕರಿ ಮಾಡುವವರ ಸಂಖ್ಯೆ ಭರದಿಂದ ಬೆಳೆಯುತ್ತಿದೆ. ಅದರೊಂದಿಗೇ ಕಾರುಗಳು ಮತ್ತು ದ್ವಿಚಕ್ರವಾಹನಗಳ ಸಂಖ್ಯೆಯೂ ಏರುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ೨೦೦೫ರಲ್ಲಿ ಇಲ್ಲಿ ೨ ಲಕ್ಷ ಕಾರುಗಳೂ, ೧೦ ಲಕ್ಷ ದ್ವಿಚಕ್ರವಾಹನಗಳೂ ಇದ್ದವೆಂದು ಅಂದಾಜಿದೆ. ಈ ವಾಹನಗಳ ಹೆಚ್ಚಳದಿಂದ ರಸ್ತೆಯಲ್ಲಿ ವಾಹನದಟ್ಟಣೆ ಹೆಚ್ಚುಹೆಚ್ಚಾಗುತ್ತಿದೆ. ರಸ್ತೆಗಳ ಅಗಲೀಕರಣ, ಫ್ಲೈ ಓವರುಗಳ ನಿರ್ಮಾಣ ಇವುಗಳು ಯೋಜನೆಯಲ್ಲಿದ್ದರೂ, ಕಾರ್ಯಗತವಾಗಲೂ ವಿಳಂಬವಾಗುತ್ತಿದೆ. ಪಾರ್ಕಿಂಗಿಗೆ ಜಾಗ ಸಿಗುವುದು ದುಸ್ತರವಾಗುತ್ತಿದೆ. 

ಪುಣೆಯ ಉಪನಗರಗಳಾದ ಕಲ್ಯಾಣಿನಗರ, ವಿಮಾನನಗರ, ಮಗರಪಟ್ಟಾ, ಪಿಂಪ್ರಿ, ಚಿಂಚವಾಡ, ಬಾಣೇರ್, ವಾಕಡ್, ಔಂಧ್, ಹಿಂಜೆವಾಡಿ, ಬಿಬ್ವೇವಾಡಿ, ವಾನವಡಿ, ನಿಗಡಿ ಇವೆಲ್ಲಾ ಬಿರುಸಿನಿಂದ ಬೆಳೆಯುತ್ತಿವೆ.

ಪಿ.ಎಮ್.ಟಿ ಮತ್ತು ಪಿ.ಸಿ.ಎಮ್.ಟಿ ಇವು ಕ್ರಮವಾಗಿ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ನಗರಪಾಲಿಕೆಗಳು ನಡೆಸುವ ಸಾರಿಗೆ ಸಂಸ್ಥೆಗಳು. ಸಾರ್ವಜನಿಕ ಸಾರಿಕೆ ವ್ಯವಸ್ಥೆಯಿದ್ದರೂ, ಅದು ಏರುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಅಸಮರ್ಥವಾಗಿದೆ.ಇದಲ್ಲದೆ ಆಟೋರಿಕ್ಷಾಗಳೂ ಲಭ್ಯವಿವೆ.

೨೦೦೧ರ ಜನಗಣತಿಯ ಪ್ರಕಾರ ಪುಣೆ ನಗರ ಪ್ರದೇಶದ ಜನಸಂಖ್ಯೆ ೪೪,೮೫,೦೦೦. ಇದರಲ್ಲಿ ಪಿಂಪ್ರಿ ಚಿಂಚವಾಡ ಅವಳಿ ನಗರಗಳೂ ಸೇರಿವೆ. ಭರದಿಂದ ಬೆಳೆಯುತ್ತಿರುವ ವಾಹನಗಳು ಮತ್ತು ಸಾಫ್ಟ್‍ವೇರ್  ಉದ್ಯಮಗಳಿಂದಾಗಿ ಪರಪ್ರಾಂತೀಯರ ವಲಸೆಯಾಗುತ್ತಿದ್ದು , ಜನಸಂಖ್ಯೆ ಏರುತ್ತಿದೆ. ೨೦೦೩ರಿಂದ ಕಟ್ಟಡ ಉದ್ಯಮದಲ್ಲಿಯೂ ಪ್ರಗತಿ ಕಾಣುತ್ತಿದೆ. ಜನಸಂಖ್ಯೆಯಲ್ಲಿ ಪುಣೆ ಭಾರತದಲ್ಲಿ ಏಳನೆಯ ಸ್ಥಾನದಲ್ಲಿದೆ. ಪುಣೆಯ ತಲಾ ಉತ್ಪನ್ನ (per capita income) ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಬಡವ-ಶ್ರೀಮಂತರ ನಡುವಿನ ಅಂತರವೂ ಬಹಳ ಕಡಿಮೆಯಿದೆ. ಪುಣೆ ವಾಸಿಗಳಿಗೆ ಪುಣೇಕರ್ ಎಂದು ಸಂಬೋಧಿಸುವುದುಂಟು. ನಗರ ಮುಖ್ಯ ಭಾಷೆ ಮರಾಠಿಯಾಗಿದ್ದು , ಇಂಗ್ಲೀಷ್ ,  ಕನ್ನಡ, ಹಿಂದಿಗಳೂ ಕೇಳಿಬರುತ್ತವೆ. 

ಕಾಕಾ ಹಲವಾಯಿಯವರ ಸಿಹಿ ತಿಂಡಿಗಳು, ಚಿತಳೆ ಬಂಧುರವರ ಬಾಕರವಡಿ, ಅಂಬಾ ಬರ್ಫಿ , ಸುಜಾತಾ ಮತ್ತು ಕಾವರೆ ಇಲ್ಲಿಯ ಮಸ್ತಾನಿ, ಬುಧಾಣಿಯವರ ಆಲೂ ವೇಫರ್ಸ್, ಲಷ್ಮೀನಾರಾಯಣ ಚಿವಡಾ ಇವು ಪುಣೆಯ ವೈಶಿಷ್ಟ್ಯಗಳಲ್ಲಿ ಕೆಲವು. ಜಂಗಲೀ ಮಹಾರಾಜ ರಸ್ತೆ, ಕ್ಯಾಂಪಿನಲ್ಲಿಯ ಮಹಾತ್ಮಾ ಗಾಂಧೀ ಮತ್ತು ಈಸ್ಟ್ ರಸ್ತೆಗಳು, ಫರ್ಗ್ಯುಸನ್ ರಸ್ತೆ, ಇವು  ಖಾದ್ಯ ಪ್ರಿಯರ ವಿಶೇಷ ತಾಣಗಳು. ಫರ್ಗ್ಯುಸನ್ ರಸ್ತೆಯ ವೈಶಾಲಿ ಹೋಟೆಲು ಸಾಕಷ್ಟು ಪ್ರಸಿಧ್ದವಾಗಿದೆ. ಅಮೃತತುಲ್ಯ ಎಂಬ ಚಹಾದ ಅಂಗಡಿ ಪುಣೆಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇನ್ನು ಬಾಕೀ ಮಹಾರಾಷ್ಟ್ರೀಯ ನಗರಗಳಂತೆ ಇಲ್ಲಿಯೂ ಮಿಸಳ್, ವಡಾ ಪಾವ್ ಇತ್ಯಾದಿ ಗಲ್ಲಿ ಗಲ್ಲಿಗಳಲ್ಲಿಯೂ ದೊರೆಯುತ್ತದೆ. 

ಪುಣೆಯ ಮತ್ತೊಂದು ವೈಶಿಷ್ಟ್ಯವೆಂದರೆ ಡೈನಿಂಗ್ ಹಾಲುಗಳು. ಅಗ್ಗವಾದರೂ ಅನ್ ಲಿಮಿಟೆದ್ ಊಟ ಇವುಗಳ ಹೆಗ್ಗಳಿಕೆ. ರಸ್ತೆಯ ಕೈಗಾಡಿಗಳಲ್ಲಿ ಸಿಗುವ , ಕಛ್ಛೀ ದಾಬೇಲಿ, ಭೇಳ್ ( ಮಂಡಕ್ಕಿಯ ಪ್ರಕಾರಗಳು), ಪಾಣಿಪುರೀ ಇತ್ಯಾದಿಗಳು ಇಲ್ಲಿ ಪ್ರಸಿದ್ಧವಾಗಿವೆ. ನಗರ ಹಳೆಯ ಪ್ರದೇಶಗಳಲ್ಲಿ ಕೊಲ್ಹಾಪುರೀ ಪದ್ಧತಿಯ ಊಟ ಜನಪ್ರಿಯವಾಗಿದೆ. 

ಸಕಾಳ, ಲೋಕಸತ್ತಾ, ಫುಢಾರಿ ಮತ್ತು ಕೇಸರೀ ಮೊದಲಾದ ಮರಾಠೀ ಪತ್ರಿಕೆಗಳೂ, ಇಂಡಿಯನ್ ಎಕ್ಸ್ ಪ್ರೆಸ್ , ಟೈಮ್ಸ್ ಆಫ್ ಇಂಡಿಯಾ ಮತ್ತು ಮಹಾರಾಷ್ಟ್ರ ಹೆರಾಲ್ಡ್  ಮೊದಲಾದ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಜನಪ್ರಿಯ. ಆಕಾಶವಾಣಿ, ರೇಡಿಯೋ ಮಿರ್ಚಿ ಮತ್ತು ಪುಣೆ ವಿದ್ಯಾಪೀಠದವರ ವಿದ್ಯಾವಾಣಿ ಇವುಗಳ ಬಾನುಲಿ ಕೇಂದ್ರಗಳು ಪುಣೆಯಲ್ಲಿ ಕೇಳಲು ಸಿಗುತ್ತವೆ. ಝೀ ಮರಾಠಿ, ಈ ಟಿವಿ ಮರಾಠಿ ಮತ್ತು ಸಹ್ಯಾದ್ರಿ ಇವು ಮರಾಠಿ ವೀಕ್ಷಕರ ಮೆಚ್ಚಿನ ಟಿವಿ ವಾಹಿನಿಗಳು. ಇವಲ್ಲದೆ ಬಾಕೀ ನಗರಗಳಲ್ಲಿಯಂತೆ ಅನೇಕ ಇಂಗ್ಲೀಷ್ , ಹಿಂದಿ, ಕನ್ನಡ ಮತ್ತು ಇತರ ಭಾರತೀಯ ಭಾಷೆಗಳ ಕೇಬಲ್ ವಾಹಿನಿಗಳೂ ಇಲ್ಲಿ ಲಭ್ಯವಿವೆ.

ಪುಣೆಯನ್ನು ಮಹಾರಾಷ್ಟ್ರದ  ಸಾಂಸ್ಕೃತಿಕ ರಾಜಧಾನಿ ಎಂದೇ ಪರಿಗಣಿಸಲಾಗಿದೆ. ಪುಣೆಯಲ್ಲಿ ಆಡುವ ಮರಾಠಿ ಭಾಷೆ ಮಾದರಿ ಮರಾಠಿ ಎಂದು ಮನ್ನಿಸಲಾಗುತ್ತದೆ. ರಸಿಕರಾದ ಪುಣೆ ವಾಸಿಗಳಿಗಾಗಿ ವರ್ಷಪೂರ್ತಿ ಸಂಗೀತ, ಸಾಹಿತ್ಯ , ನಾಟಕ ಇತ್ಯಾದಿ ಒಂದಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ.

 
೧೮೯೪ರಲ್ಲಿ ಲೋಕಮಾನ್ಯ  ತಿಲಕರಿಂದ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಯಿತು. ಮಹಾರಾಷ್ಟ್ರದ ಎಲ್ಲೆಡೆಯಲ್ಲಿಯೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರೂ, ಪುಣೆಯಲ್ಲಿ ಈ ಹಬ್ಬದ ಸೊಗಸೇ ವಿಶಿಷ್ಟವಾದದ್ದು. ಭಾದ್ರಪದ ಶುಕ್ಲ ಚತುರ್ಥಿಯಿಂದ (ಸಾಧಾರಣ ಆಗಸ್ಟ್ ಇಲ್ಲ  ಸೆಪ್ಟೆಂಬರಿನಲ್ಲಿ ಬರುತ್ತದೆ) ಹಿಡಿದು ಮುಂದಿನ ಹತ್ತು ದಿನಗಳ ತನಕ , ಅಂದರೆ, ಅನಂತ ಚತುರ್ದಶಿಯವರೆಗೆ ಸಂಪೂರ್ಣ ಪುಣೆ ನಗರದಲ್ಲಿ ಹಬ್ಬದ ವಾತಾವರಣವಿರುತ್ತದೆ. ಈ ಉತ್ಸವವನ್ನು ನೋಡಿ ಆನಂದಿಸಲು ದೇಶ ವಿದೇಶಗಳಿಂದ ಜನ ಆಗಮಿಸುತ್ತಾರೆ. ಓಣಿಓಣಿಗಳ್ಲಿಯೂ ಗಣೇಶ ಮಂಡಳಗಳ ಅಬ್ಬರ ಕೇಳಿಬರುತ್ತದೆ. ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರ ಪ್ರವಾಸೀ ಮಹಾಮಂಡಳವು  ಇದೇ ಸಂಧರ್ಭದಲ್ಲಿ ಪುಣೆ ಫೆಸ್ಟಿವಲ್ ಎಂಬ ಹೆಸರಿನಲ್ಲಿ  ದೊಡ್ಡ ಮೇಳವನ್ನು ಏರ್ಪಡಿಸುತ್ತದೆ. ಇದರಲ್ಲಿ ಸಂಗೀತ, ನೃತ್ಯ, ನಾಟಕ ಮತ್ತು ಕ್ರೀಡಾ ಪ್ರಕಾರಗಳ ಖ್ಯಾತನಾಮರಿಂದ ಕಾರ್ಯಕ್ರಮಗಳಾಗುತ್ತವೆ. ಅನಂತ ಚತುರ್ದಶಿಯಂದು ವಿಸರ್ಜನೆಯೊಂದಿಗೆ ಈ  ಹಬ್ಬ ಮುಕ್ತಾಯಗೊಳ್ಳುತ್ತದೆ. ಅಂದಿನ ಮುಂಜಾನೆಯಿಂದ ಪ್ರಾರಂಭವಾಗುವ ವಿಸರ್ಜನೆಯು ಮಾರನೆ ದಿನ ಮುಂಜಾನೆಯವೆರಗೂ ನಡೆದಿರುತ್ತದೆ. 

ಈ ಮೆರವಣಿಗೆಯಲ್ಲಿ ಈ ಐದು ನಿರ್ದಿಷ್ಡ ಗಣಪತಿ ಮಂಡಳಿಗಳಿಗೆ ಮೊದಲ ಪಟ್ಟ ಕೊಡಲಾಗಿದೆ. 
 

ಪ್ರಾಣ ಪ್ರತಿಷ್ಟಾಪನೆ ಮಾಡಿದ ಮೂರ್ತಿಯನ್ನು ವಿಸರ್ಜಿಸಿ ಉತ್ಸವಮೂರ್ತಿಯನ್ನು ಮರಳಿ ತರುತ್ತಾರೆ. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಪ್ರಾತಿನಿಧಿಕ ಕಲೆಗಳಾದ ಡೋಲು, ಲೇಝಿಮ್ ಇತ್ಯಾದಿಗಳ ಪ್ರದರ್ಶನವನ್ನೂ ನೋಡಬಹುದು. ಅನೇಕ ಶಾಲೆಗಳೂ ತಮ್ಮ ವಿದ್ಯಾರ್ಥಿಗಳಿಂದ ಉತ್ಸಾಹದಿಂದ ಇಂಥಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಡಿಸೆಂಬರಿನಲ್ಲಿ  ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಎಂಬ ದೊಡ್ಡ ಸಮಾರಂಭ ನಡೆಯುತ್ತದೆ. ಮೂರು ರಾತ್ರಿ ನಡೆಯುವ ಈ ಸಮಾರಂಭದಲ್ಲಿ  ಹಿಂದೂಸ್ತಾನಿ  ಮತ್ತು ಕರ್ನಾಟಕ ಸಂಗೀತದ ದಿಗ್ಗಜಗಳು ಪಾಲ್ಗೊಳ್ಲುತ್ತಾರೆ. ಸಂಗೀತ ಪ್ರೇಮಿಗಳಿಗೆ ಇದೊಂದು ವಾರ್ಷಿಕ ಹಬ್ಬ.

ಪುಣೆ ಮರಾಠಿ ಬುದ್ಧಿಜೀವಿಗಳ ನಗರವಾಗಿದೆ. ರಂಗಭೂಮಿ ಮರಾಠಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾಂಪ್ರದಾಯಿಕ, ಪ್ರಾಯೋಗಿಕ ಅಥವಾ ವ್ಯಾವಸಾಯಿಕ ಯಾವುದೇ ಪೈಕಿಯದಾದರೂ ಪುಣೆಯ ಜನ ಅವನ್ನು ನೋಡಿ ಪ್ರೋತ್ಸಾಹಿಸುತ್ತಾರೆ. ಟಿಳಕ ಸ್ಮಾರಕ ಮಂದಿರ, ಬಾಲಗಂಧರ್ವ ರಂಗಮಂದಿರ, ಭರತ ನಾಟ್ಯ ಮಂದಿರ, ಯಶವಂತರಾವ್ ಚವಾಣ್ ನಾಟ್ಯಗೃಹ, ಸುದರ್ಶನ ರಂಗಮಂಚ ಮತ್ತು ಪಿಂಪ್ರಿ ಚಿಂಚವಡ ನಾಟ್ಯಗೃಹ ಇವು ಮಹತ್ವದ ನಾಟಕಮಂದಿರಗಳು.

ಪುಣೆಯಲ್ಲಿರು ಅನೇಕ ಮಲ್ಟಿಪ್ಲೆಕ್ಸುಗಳು ಹಿಂದಿ, ಮರಾಠಿ ಹಾಗೂ ಹಾಲಿವುಡ್ಡಿನ ಚಿತ್ರಗಳನ್ನು ಪ್ರದರ್ಶಿಸುತ್ತವೆ. ಪುಣೆ ನಿಲ್ದಾಣದ ಸಮೀಪದಲ್ಲಿರು ಐನಾಕ್ಸ್, ವಿದ್ಯಾಪೀಠ ರಸ್ತೆಯಲ್ಲಿರುವ ಈ-ಸ್ಕ್ವೆಯರ್ , ಸತಾರಾ ರಸ್ತೆ ಮತ್ತು ಕೋಥರೂಡಿನಲ್ಲುರವ ಸಿಟಿಪ್ರೈಡ್ , ಕಲ್ಯಾಣಿನಗರದ ಗೋಲ್ಡ್ ಅಡ್ಲ್ಯಾಬ್ಸ್ ಮತ್ತು ಆಕುರ್ಡಿಯ ಫೇಮ್ ಗಣೇಶ್ ವಿಷನ್ ಇವು ಕೆಲವು ಖ್ಯಾತ ಚಿತ್ರಮಂದಿರಗಳು.

ಚತುಃಶೃಂಗಿ ಮಂದಿರ ನಗರದ ಉತ್ತರ-ಪಶ್ಚಿಮದ ಗುಡ್ಡದ ಇಳಿಜಾರಿನಲ್ಲಿದೆ. ನವರಾತ್ರಿಯಲ್ಲಿ ಇಲ್ಲಿ ವಿಶೇಷ ಜನದಡ್ಡಣೆಯಿರುತ್ತದೆ. ನಗರದ ಪರ್ವತಿ ದೇವಸ್ಥಾನವೂ ಪ್ರಸಿದ್ಧವಾಗಿದೆ. 

ಪುಣೆಯ ಸಮೀಪದಲ್ಲಿರು ಆಳಂದಿ ಮತ್ತು ದೇಹೂ ಇಲ್ಲಿಯೂ ಪ್ರಸಿದ್ಧ ದೇವಾಲಯಗಳಿವೆ. ಆಳಂದಿಯಲ್ಲಿ ಸಂತ ಜ್ಞಾನೇಶ್ವರನ ಮತ್ತು ದೇಹೂ ಇಲ್ಲಿ ಸಂತ ತುಕಾರಾಮನ ಸಮಾಧಿಗಳಿವೆ. ಪ್ರತಿವರ್ಷ ವಾರಕರಿ ಸಂಪ್ರದಾಯದ ಭಕ್ತರುಗಳು ಇಲ್ಲಿಂದ ಈ ಸಂತರುಗಳ ಪಲ್ಲಕ್ಕಿಗಳನ್ನು ಹೊತ್ತು ಪಂಢರಪುರದವರೆಗೆ ಕಾಲುನಡಿಗೆಯಲ್ಲಿ ಪ್ರವಾಸ ಮಾಡುತ್ತಾರೆ. ಆಷಾಢದ ಏಕಾದಶಿಯಂದು ಈ ಭಕ್ತರುಗಳು ಪಂಢರಪುರದಲ್ಲಿ ಸೇರುತ್ತಾರೆ. 

ಪುಣೆಯಲ್ಲಿ ಯಹೂದಿಗಳ (ಬೆನೆ ಇಸ್ರೇಲ್) ದೊಡ್ಡ ಜನವಸತಿಯಿದೆ. ಇಲ್ಲಿರುವ ಓಹೇಲ್ ಡೇವಿಡ್ ಎಂಬ ಇವರ ಸಿನೆಗಾಗ್ (ಯಹೂದಿಗಳ ಪ್ರಾರ್ಥನಾ ಸ್ಥಳ)  ಏಶಿಯಾದಲ್ಲಿಯೇ ಅತಿ ದೊಡ್ಡದು. ಪುಣೆ ಮೆಹೆರಬಾಬಾ ಎಂಬ ಸಂತರ ಜನ್ಮಸ್ಥಾನ. ಆಚಾರ್ಯ ರಜನೀಶರ ಆಶ್ರಮ ಪುಣೆಯ ಕೋರೆಗಾಂವ್ ಪಾರ್ಕಿನಲ್ಲಿದೆ. ದೇಶ ವಿದೇಶಗಳ ಪ್ರವಾಸಿಗಳು ಭೇಡಿ ನೀಡುವ ಈ ಆಶ್ರಮದಲ್ಲಿ ಭಕ್ತರಿಗೆ ಬೇಕಾದ ಎಲ್ಲ ಸೌಕರ್ಯಗಳೂ, ಬೃಹತ್ ಧ್ಯಾನಗೃಹವೂ ಸೇರಿದಂತೆ,  ಇವೆ.

 
ಭಾರತದ ಸ್ವಾತಂತ್ರದ ನಂತರ ಪುಣೆ  ಶಿಕ್ಷಣ ಮತ್ತು ಸಂಶೋಧನೆಗೆ ಹೆಸರಾಯಿತು. ಪುಣೆ ವಿದ್ಯಾಪೀಠ, ರಾಷ್ಟ್ರೀಯ ರಾಸಾಯನಿಕ ಪ್ರಯೋಗಶಾಲೆ (National Chemical Laboratory), ರಾಷ್ಟ್ರೀಯ ಸಂರಕ್ಷಣ ಪ್ರಬೋಧಿನಿ (National Defence Academy) ಈ ಸಂಸ್ಥೆಗಳ ಸ್ಥಾಪನೆಯೂ ಈ ಹೆಸರು ಬರಲಿಕ್ಕೆ ಕಾರಣವಾಯಿತು. ಫರ್ಗ್ಯುಸನ್ ಕಾಲೇಜು, ಸ.ಪ. ಮಹಾವಿದ್ಯಾಲಯ, ಸರಕಾರೀ ಇಂಜಿನಿಯರಿಂಗ್ ಕಾಲೇಜು ಈ ಹಳೆಯ ಸಂಸ್ಥೆಗಳಂತೂ ೧೯೦೦ರಿಂದಲೇ ಪ್ರಸಿದ್ಧವಾಗಿದ್ದವು. ಇವಲ್ಲದೇ ಇನ್ನೂ ಅನೇಕ ಶಿಕ್ಷಣ ಸಂಸ್ಥೆಗಳೂ ಇಲ್ಲಿದ್ದು ವಿದ್ಯಾಭ್ಯಾಸಕ್ಕೆಂದು ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಪುಣೆ ವಾಸಿಗಳೂ ಸಹ ಉಚ್ಚ ಶಿಕ್ಷಣ - ಸಂಶೋಧನೆಯಲ್ಲಿ ಅಪಾರ ಆಸಕ್ತಿ ಇಟ್ಟುಕೊಂಡಿದ್ದಾರೆ. ಇದೆಲ್ಲದರಿಂದ, ಹಿಂದೆ ಜವಹರಲಾಲ್ ನೆಹರೂ ಪೂರ್ವದ ಆಕ್ಸ್‍ಫರ್ಡ್ ಎಂದು ಹೆಸರು ಕೊಟ್ಟದ್ದು ಈಗಲೂ ಅನ್ವರ್ಥವಾಗಿದೆ.

ಪುಣೆ ನಗರಪಾಲಿಕೆಯು ಅನೇಕ ಶಾಲೆಗಳನ್ನು ನಡೆಸುತ್ತದೆ. ಆದರೆ ಖಾಸಗೀ ಆಡಳಿತದಲ್ಲಿ ನಡೆಸಲ್ಪಡುವ ಶಾಲೆಗಳು ಜನಪ್ರಿಯವಾಗಿವೆ. ಪುಣೆಯ ಶಾಲೆಗಳಲ್ಲಿಯ ಬಹುತೇಕ ಮಹಾರಾಷ್ಟ್ರ ರಾಜ್ಯ ಸರಕಾರದ ಪಠ್ಯಕ್ರಮವನ್ನು ಅನುಸರಿಸಿದರೂ ಕೇಂದ್ರೀಯ ಪಠ್ಯಕ್ರಮಗಳಾದ ಐ ಸಿ ಎಸ್ ಇ ಮತ್ತು ಸಿ ಬಿ ಎಸ್ ಇ ಯನ್ನು ಅನುಸರಿಸುವ ಶಾಲೆಗಳೂ ಬೇಕಾದಷ್ಟಿವೆ. ಜಪಾನಿ ಭಾಷಾ ಶಿಕ್ಷಣದಲ್ಲಿ ಪುಣೆ ಭಾರತದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಪುಣೆ ವಿದ್ಯಾಪೀಠವಷ್ಟೇ ಅಲ್ಲದೆ ಅನೇಕ ಸಂಸ್ಥೆಗಳೂ ಜಪಾನಿ ಭಾಷೆಯ ಶಿಕ್ಷಣವನ್ನು ನೀಡುತ್ತಿವೆ. ಇದಲ್ಲದೆ ಜರ್ಮನ್ (ಮ್ಯಾಕ್ಸ್ ಮ್ಯುಲ್ಲರ್ ಭವನ), ಫ್ರೆಂಚ್ ( ಆಲಿಯಾಂಸ್ ಫ್ರಾಂಸೆ ದ ಪೂನಾ) ಈ ಭಾಷೆಗಳಲ್ಲು ಕಲಿಯುವ ಅವಕಾಶವಿದೆ. ಕೆಲವು ಶಾಲೆಗಳಲ್ಲಿ ಎಂಟನೆಯ ತರಗತಿಯೀಮದಲೇ ರಶಿಯನ್, ಜರ್ಮನ್ ಭಾಷೆಗಳನ್ನು ಕಲಿಯುವ ಸೌಲಭ್ಯವಿದೆ. 

ಪುಣೆಯ ಬಹುತೇಕ ಕಾಲೇಜುಗಳು ಪುಣೆ ವಿದ್ಯಾಪೀಠದ ಅಧೀನದಲ್ಲಿವೆ. ವಿದ್ಯಾರ್ಥಿಗಳ ಸಂಖ್ಯೆಯ ಪ್ರಕಾರ ಪುಣೆ ವಿದ್ಯಾಪೀಠವು ಪ್ರಪಂಚದಲ್ಲಿಯೇ ಅತಿ ದೊಡ್ಡ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಇದಲ್ಲದೇ ಕೆಲವು ಸ್ವಾಯತ್ತ ಮಹಾವಿದ್ಯಾಲಯಗಳೂ ಇಲ್ಲಿವೆ. 

ಪುಣೆಯ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು 

ಪುಣೆಯೊಂದರಲ್ಲಿಯೇ ಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ಇಂಜಿನಿಯರಿಂಗ್ ಪದವಿ ಪಡೆದುಕೊಳ್ಳುತ್ತಾರೆ ಎಂದು ಒಂದು ಅಂದಾಜಿದೆ. 

ಪುಣೆ ವಿದ್ಯಾಪೀಠವಲ್ಲದೆ ಅನೇಕ ಪ್ರಸಿದ್ಧ ಸಂಶೋಧನಾ ಸಂಸ್ಥೆಗಳೂ ಪುಣೆಯಲ್ಲಿವೆ. ಅವುಗಳಲ್ಲಿ ಕೆಲವೆಂದರೆ 

ಮಿಲಿಟರಿ ನಡೆಸುವ ಅನೇಕ ಶಿಕ್ಷಣ / ಸಂಶೋಧನಾ  ಸಂಸ್ಥೆಗಳೂ ಇಲ್ಲಿವೆ. ಅವುಗಳೆಂದರೆ 

ಪುಣೆಯ ಅತಿ ಜನಪ್ರಿಯ ಕ್ರೀಡೆ ಕ್ರಿಕೆಟ್. ಇದಲ್ಲದೆ ಹಾಕಿ, ಫುಟ್ಬಾಲ್, ಟೆನಿಸ್ ಮತ್ತು ಕಬಡ್ಡಿ ಸಹಾ ಸಾಕಷ್ಟು ಲೋಕಪ್ರಿಯವಾಗಿವೆ. ಪ್ರತಿವರ್ಷ ಪುಣೆಯಲ್ಲಿ ಅಂತರರಾಷ್ಟ್ರೀಯ ಮೆರಥಾನ್ ಓಟದ ಸ್ಪರ್ಧೆ ಏರ್ಪಡಿಸುತ್ತಾರೆ. ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನಿನ ಕೇಂದ್ರ ಕಛೇರಿ ಇಲ್ಲಿಯ ನೆಹರೂ ಸ್ಟೇಡಿಯಮ್ಮಿನಲ್ಲಿದೆ. ಡೆಕ್ಕನ್ ಜಮಖಾನಾದಲ್ಲಿ ಅನೇಕ ಕ್ರೀಡೆಗಳ ಸೌಲಭ್ಯವಿದೆ. ೧೯೯೪ರ ರಾಷ್ಟ್ರೀಯ ಕ್ರೀಡೆಗಳು ನಡೆದದ್ದು ಬಾಲೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕುಲದಲ್ಲಿ. ಇದೇ ಸಂಕುಲದಲ್ಲಿ ೨೦೦೮ರ ಕಾಮನ್ವೆಲ್ತ್ ಕ್ರೀಡೆಗಳು ಜರುಗಲಿವೆ.
 
ಪುಣೆಯ ಕೆಲವು ಖ್ಯಾತನಾಮ ಕ್ರೀಡಾ ಪಟುಗಳೆಂದರೆ ಹೇಮಂತ ಮತ್ತು ಹೃಷೀಕೇಷ ಕಾನೇಟಕರ್, ರಾಧಿಕಾ ತುಳಪುಳೆ ಮತ್ತು ನಿತಿನ್ ಕೀರ್ತನೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನಿನ ಅಧ್ಯಕ್ಷ ಸುರೇಶ್ ಕಲ್ಮಾಡಿ ಪುಣೆಯನ್ನು ಪ್ರತಿನಿಧಿಸುವ  ಸಂಸತ್ ಸದಸ್ಯ.

ಪುಣೆಯ ಮುಖ್ಯ ಪ್ರವಾಸಿ ತಾಣಗಳೆಂದರೆ ಪರ್ವತೀ, ಸಿಂಹಗಡ ಕೋಟೆ, ಶನಿವಾರ ವಾಡೆ, ಖಡಕವಾಸಲಾ ಆಣೆಕಟ್ಟು, ರಾಜಾ ದಿನಕರ್ ಕೇಳ್ಕರ್ ಸಂಗ್ರಹಾಲಯ, ಪಾನಶೇಟ್ ಆಣೆಕಟ್ಟು, ಬಾಲಗಂಧರ್ವ ರಂಗಮಂದಿರ, ಲಾಲ್ ಮಹಲ್, ಆಗಾಖಾನ್ ಅರಮನೆ,

ಈ ಕೆಳಕಂಡ ನಗರಗಳನ್ನು ಪುಣೆಯ ಅವಳಿ ನಗರಗಳೆಂದು ಪರಿಗಣಿಸಲಾಗುತ್ತದೆ 




#Article 182: ಘಟಪ್ರಭಾ (171 words)


ಘಟಪ್ರಭಾ ಕೃಷ್ಣಾ ನದಿಯ ಉಪನದಿ.

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ  ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿ.ಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ.
ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿ.ಮೀ ವಿಸ್ತಾರವಾಗಿದೆ.

ಹಿರಣ್ಯಕೇಶಿ ಹಾಗು ತಾಮ್ರಪರ್ಣ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭ ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ. ಈ ತಡೆಗೋಡೆಯಿಂದ ೭೧ ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ ೪೨,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು ೧೦೯ ಕಿ.ಮೀ ವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ ೬೫೯ ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು  ೧,೩೯,೬೧೪ ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.

ಹಿಡಕಲ್ ಜಲಾಶಯದ ಎತ್ತರವನ್ನು ಹೆಚ್ಚಿಸುವ ಯೋಜನೆಯನ್ನು ಎತ್ತಿಕೊಳ್ಳಲಾಗಿದೆ. ಇದರಿಂದ ೧೪೪೮ ದಶಲಕ್ಷ ಘನ ಮೀಟರುಗಳಷ್ಟು ಸಂಗ್ರಹವನ್ನು ಮಾಡುವ ಯೋಜನೆಯಿದ್ದು  ೨೦೨ ಕಿಮೀ ಉದ್ದದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ.

ಇವೆಲ್ಲ ಕಾರ್ಯಕ್ರಮಗಳ ಮೂಲಕ ಘಟಪ್ರಭಾ ನದಿಯಿಂದ ಒಟ್ಟು ೩,೩೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವುದು.

ಗೋಕಾಕ ಪಟ್ಟಣದಿಂದ ೧೦ ಕಿ.ಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ.
ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.




#Article 183: ಕನ್ನಡ ಸಾಹಿತ್ಯ ಪ್ರಕಾರಗಳು (215 words)


ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು. ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಶಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಇದರಲ್ಲಿ ಸೇರಬಹುದು /ಸೇರಬೇಕು.

ವಚನ ಎಂಬ ಪದಕ್ಕೆ ಮಾತು ಎಂಬ ಸಾಮಾನ್ಯ ಅರ್ಥವಿದೆ, ಶರಣನಾದವನು ಶಿವಾನುಭವದಿಂದ ಪರಿಪಕ್ವವಾದ ಮನದಿಂದ ನುಡಿಯುವ ಪ್ರತಿಮಾತುಗಳು, ಸಂಭಾಷಣೆಗಳು ಸಾಹಿತ್ಯದ ರೂಪತಳೆದಿವೆ. ಶರಣರ ದೃಷ್ಟಿಯಲ್ಲಿ ವಚನ ಎಂಬ ಪದಕ್ಕೆ ಮೀರಲಾಗದ ಮಾತು, ಭಾಷೆಯರೂಪದ ಮಾತು ಎಂಬ ಅರ್ಥವಿದೆ.
ಕೆಲವು ಪ್ರಮುಖ ವಚನಕಾರರು-

ಡಿ.ವಿ.ಜಿ.

ದೇವರ ಹಾಡು ಮತ್ತು ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಹಾಡುವ ಒಂದು ಪ್ರಕಾರ. ಉದಾಹರಣೆ ಪುರಂದರದಾಸರ, ಕನಕದಾಸರ ಕೀರ್ತನೆಗಳು.

ಒಂದು ವಸ್ತು ವಿಷಯವನ್ನು ಇಟ್ಟುಕೊಂಡು, ವಿಸ್ತಾರವಾಗಿ ಬರೆಯುತ್ತಾ ಹೋಗುವ ಪ್ರಕಾರ. ಇದು ಸಾಹಿತ್ಯದ ಬಹು ಮುಖ್ಯ ಪ್ರಕಾರ.

ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ.

ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆಧಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ.

ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಉದಾಹರಣೆಗೆ :

ಇವುಗಳಲ್ಲಿ ಲಘು ಹಾಸ್ಯ ಪ್ರಬಂಧಗಳು ಅಥವಾ ಲಲಿತ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ.

ಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು (ಅಪೂರ್ವ ಪಶ್ಚಿಮ- ಕೋಶಿ ಕಾರಂತ )

ಆತ್ಮ ಚರಿತ್ರೆ, ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಷಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಸೇರಬಹದು /ಸೇರಬೇಕು. 

ಅಂದರೆ ಒಂದು ಕೆಟ್ಟ ಘಟನೆಯನ್ನು, ಮನಕ್ಕೆ ನೋವು ಕೊಡುವಂತಹ ಘಟನೆಯನ್ನು ವಿವರಿಸುವ ಪ್ರಕಾರವೆ ದುರಂತ ಸಾಹಿತ್ಯ.




#Article 184: ಸೊಲ್ಲಾಪುರ (755 words)


ಕರ್ನಾಟಕದ ಬಿಜಾಪುರ ಜಿಲ್ಲೆಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಜಿಲ್ಲೆ ಸೊಲ್ಲಾಪುರ. ಹಿಂದೆ 'ಸೊನ್ನಲಿಗೆ'ಯಾಗಿದ್ದ ಸೊಲ್ಲಾಪುರ ಕರ್ಮಯೋಗಿ ಸಿದ್ಧರಾಮೇಶ್ವರರ ಕರ್ಮಭೂಮಿ.ಸೊಲ್ಲಾಪುರ (ಮರಾಠಿಯಲ್ಲಿ ಸೋಲಾಪುರ್‍) ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ , ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ದಕ್ಷಿಣ ರೈಲುದಾರಿಯಲ್ಲಿ ಇದೊಂದು ಪ್ರಮುಖ ಜಂಕ್ಷನ್. ಅನೇಕ ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳು ಇಲ್ಲಿವೆ. ವಿದ್ಯುತ್ ಮಗ್ಗಗಳು ಹಾಗೂ ಹತ್ತಿ ಗಿರಣಿಗಳ ಮುಖ್ಯ ಕೇಂದ್ರವೂ ಇದಾಗಿದೆ. ಸೊಲ್ಲಾಪುರದ ಚಾದರಗಳು (ಬೆಡ್ ಶೀಟುಗಳು) ತಮ್ಮ ಹೊಸ ಹೊಸ ವಿನ್ಯಾಸಗಳಿಗೆ ಮತ್ತು ತಾಳಿಕೆಯಿಂದಾಗಿ ಮನೆಮಾತಾಗಿವೆ. ಇಲ್ಲಿಯ ಊರದೈವ ಶ್ರೀ ಸಿದ್ಧೇಶ್ವರ. ಮಕರಸಂಕ್ರಾಂತಿಯಂದು ನಡೆಯುವ ನಂದಿಧ್ವಜದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. 
ಮಹಾರಾಷ್ಟ್ರದ ಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರ ಜಿಲ್ಲೆ ಮುಂದಿದೆ. ಇಲ್ಲಿಯ ಹುತಾತ್ಮರ ಸ್ಮಾರಕಕ್ಕೆ ದಿನವೂ ಅನೇಕರು ವಂದಿಸುತ್ತಾರೆ. ಕೂಡಲಸಂಗಮ, ಕರ್ಮಾಲಾ, ಮತ್ತು ಬಾರ್ಶಿ ಶಿಕ್ಷಣ ಮತ್ತು ಔದ್ಯೋಗೀಕರಣದಿಂದ ಪ್ರಗತಿಪಥದಲ್ಲಿವೆ. ಅಕ್ಕಲಕೋಟೆಯ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬೃಹತ್ ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ.

ಸೊಲ್ಲಾಪುರ ಜಿಲ್ಲೆ ಪುರಾತನ ಕಾಲದಿಂದಲೂ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು ಮತ್ತು ಬಹಮನಿ ಸುಲ್ತಾನ ಇತ್ಯಾದಿ ರಾಜರುಗಳ ಆಳ್ವಿಕೆಗೆ ಒಳಪಟ್ಟಿತ್ತು. ಸೊಲ್ಲಾಪುರ ಎಂಬ ಹೆಸರು ಸೋಳಾ ( ಹದಿನಾರು) ಮತ್ತು ಪುರ ( ಹಳ್ಳಿ) ಎಂಬ ಪದಗಳಿಂದ ಬಂದಿರಬೇಕು ಅನ್ನುತ್ತಾರೆ. ಈಗಿನ ಸೊಲ್ಲಾಫುರದಲ್ಲಿ ಆದಿಲಪುರ, ಅಹಮದ್ ಪುರ, ಚಪಲದೇವ, ಫತೇಹ್ ಪುರ, ಜಾಮದಾರವಾಡಿ, ಕಲಜಾಪುರ, ಖದರಪುರ, ಖಂಡೇರ್‍ವಕಿವಾಡಿ, ಮುಹಮ್ಮದ್ ಪುರ, ರಾನಾಪುರ, ಸಂದಾಲಪುರ, ಶೇಕ್ ಪುರ, ಸೋಲಾಪುರ, ಸೋನಲಗಿ, ಸೋನಾಪುರ ಮತ್ತು ವೈದಕ್ ವಾಡಿ ಎಂಬ ಹದಿನಾರು ಹಳ್ಳಿಗಳು ಅಡಕವಾಗಿವೆ. ಆದರೆ ಈಚೆಗಿನ ಸಂಶೋಧನೆಯ ಪ್ರಕಾರ ಈ ನಂಬಿಕೆ ನಿರಾಧಾರವಾದದ್ದು. ಕಾಮಟಿ ಎಂಬಲ್ಲಿ ಸಿಕ್ಕಿರುವ, ಶಕೆ ೧೨೩೮ರ, ಯಾದವರ ಪತನದ ನಂತರದ ಕಾಲದ, ಒಂದು ಸಂಸ್ಕೃತ ಶಾಸನದ ಪ್ರಕಾರ ಈ ಊರಿನ ಹೆಸರು ಸೋನಾಲಿಪುರ. ಸೊಲ್ಲಾಪುರ ಕೋಟೆಯೊಳಗಿನ ಒಂದು ಶಾಸನದ ಪ್ರಕಾರ , ಈ ಊರನ್ನು ಸೋನಾಲಪುರ ಎಂದು ಕರೆಯಲಾಗುತ್ತಿತ್ತು. ಕೋಟೆಯ ಬಾವಿಯಮೇಲಿನ ಬರಹದ ಪ್ರಕಾರ ಊರಿನ ಹೆಸರು ಸಂದಾಲಪುರ ಎಂದಿತ್ತು.

ಮುಸ್ಲಿಮ್ ಆಡಳಿತದಕಾಲದಲ್ಲಿಯೂ ಇದು ಸಂದಾಲಪುರವಾಗಿತ್ತು. ಆದ್ದರಿಂದ ಸೋನಾಲಪುರ ಕಾಲಕ್ರಮೇಣ ತನ್ನ ನ ಕಾರವನ್ನು ಕಳೆದುಕೊಂಡು ಸೋಲಾಪುರ ಎಂದಾಗಿರಬಹುದು ಎಂದು ಊಹಿಸಲು ಕಾರಣಗಳಿವೆ. ಮುಂದೆ ಬ್ರಿಟಿಶರ ಬಾಯಲ್ಲಿ ಇದು ಶೋಲಾಪುರವಾಗಿ , ಈಗಲೂ ಶೋಲಾಪುರ ಎಂಬ ಹೆಸರನ್ನೂ ಉಪಯೋಗಿಸಲಾಗುತ್ತದೆ.

ಈಗಿನ ಸೋಲಾಪುರ ಜಿಲ್ಲೆ ಮೊದಲು ಅಹಮದ್ ನಗರ, ಪುಣೆ ಮತ್ತು ಸತಾರಾ ಜಿಲ್ಲೆಗಳಲ್ಲಿ ಹಂಚಿಹೋಗಿತ್ತು. ೧೮೩೮ರಲ್ಲಿ ಇದು ಅಹಮದ್ ನಗರದ ಉಪ-ಜಿಲ್ಲೆಯಾಯಿತು. ಇದರಲ್ಲಿ ಬಾರ್ಶಿ, ಮೋಹೋಲ್,ಮಧಾ, ಕರ್ಮಾಲಾ, ಇಂಡಿ, ಹಿಪ್ಪರಗಿ ಮತ್ತು ಮುದ್ದೇಬಿಹಾಳ ಉಪವಿಭಾಗಳು ಸೇರಿದ್ದವು. ೧೮೬೪ರಲ್ಲಿ ಈ ಉಪ-ಜಿಲ್ಲೆಯನ್ನು ರದ್ದುಗೊಳಿಸಲಾಯಿತು. ೧೮೭೧ರಲ್ಲಿ ಇದನ್ನು ಸೊಲ್ಲಾಪುರ,ಬಾರ್ಶಿ, ಮೋಹೋಲ್, ಮಧಾ ಮತ್ತು ಕರ್ಮಾಲಾ ಅಲ್ಲದೆ ಸತಾರಾ ಜಿಲ್ಲೆಯ ಎರಡು ಉಪ-ವಿಭಾಗಗಳಾದ ಪಂಢರಪುರ ಮತ್ತು ಸಂಗೋಳಾ ಸೇರಿದಂತೆ ಒಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಯಿತು. ೧೮೭೫ರಲ್ಲಿ ಇದಕ್ಕೆ ಮಾಲ್ಶಿರಸ್ ಉಪ-ವಿಭಾಗವನ್ನು ಸೇರಿಸಲಾಯಿತು. ೧೯೫೬ರ ರಾಜ್ಯಗಳ ಪುನರ್‍ರಚನೆಯ ಸಂದರ್ಭದಲ್ಲಿ ಸೊಲ್ಲಾಪುರ ಮಹಾರಾಷ್ಟ್ರಕ್ಕೆ ಸೇರಿತು. 

ಭಾರತ ಸ್ವತಂತ್ರವಾಗುವ ಮೊದಲೇ ಸ್ವತಂತ್ರವಾಗಿದ್ದು ಸೊಲ್ಲಾಪುರದ ವೈಶಿಷ್ಟ್ಯ. ೧೯೩೦ರ ಮೇ ೯ರಿಂದ ೧೧ರವರೆಗೆ ಇಲ್ಲಿಯ ಜನಗಳಿಗೆ ಸ್ವಾತಂತ್ರ್ಯ ಲಭಿಸಿತ್ತು. ಈ ವಿಶಿಷ್ಟ ಕಥೆ ಇಂತಿದೆ.ಮೇ ೧೯೩೦ರಲ್ಲಿ ಮಹಾತ್ಮಾ ಗಾಂಧಿಯವರ ಬಂಧನದೊಂದಿಗೆ ದೇಶಾದ್ಯಂತ ಬ್ರಿಟಿಶರ ವಿರುದ್ಧ ಪ್ರತಿಭಟನೆ ಪ್ರಾರಂಭವಾಯಿತು. ಅದು ಸೊಲ್ಲಾಪುರಕ್ಕೂ ಹಬ್ಬಿ ಅಲ್ಲಿಯೂ ಮೆರವಣಿಗೆ, ಪ್ರತಿಭಟನೆಗಳಾದವು. ಪೋಲೀಸರ ಗುಂಡೇಟಿನಲ್ಲಿ ಅನೇಕರು ಮಡಿದರು. ಇದರಿಂದ ರೊಚ್ಚಿಗೆದ್ದ ಜನಜಂಗುಳಿ ಪೋಲೀಸ್ ಠಾಣೆಗೆ ನುಗ್ಗಿದರು. ಅಲ್ಲಿದ್ದ ಪೋಲೀಸರು ಮತ್ತಿತರ ಅಧಿಕಾರಿಗಳು ಸೊಲ್ಲಾಪುರದಿಂದ ಪಲಾಯನ ಹೂಡಿದರು. ಈ ಸನ್ನಿವೇಶದಲ್ಲಿ ಊರಿನ ಕಾನೂನು ಪಾಲನೆ , ಶಾಂತಿ ಕಾಪಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿತ್ತು. ಅಂದಿನ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಮಕೃಷ್ಣ ಜಾಜು , ಇತರೆ ಕಾಂಗ್ರೆಸ್ಸಿಗರೊಂದಿಗೆ ೯ರಿಂದ ೧೧ರವರೆಗೆ ಈ ಜವಾಬ್ದಾರಿಯನ್ನು ನಿಭಾಯಿಸಿದರು.

ಅಂತೆಯೇ, ಭಾರತದ ಮುನಿಸಿಪಾಲಿಟಿಗಳಲ್ಲಿಯೇ ಮೊದಲಬಾರಿಗೆ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಿದ ಹೆಗ್ಗಳಿಕೆಯೂ (೧೯೩೦ರಲ್ಲಿ) ಈ ಊರಿನದು. ಗಾಂಧಿಯವರ ದಾಂಡಿ ಉಪ್ಪಿನ ಸತ್ಯಾಗ್ರಹದಿಂದ ಸ್ಪೂರ್ತಿಗೊಂಡ ಸೊಲ್ಲಾಪುರದ ಕೆಲ ತರುಣರು ಸೊಲ್ಲಾಪುರದ ಮುನಿಸಿಪಾಲಿಟಿ ಕಟ್ಟಡದ ಮೇಲೆ ರಾಷ್ಟ್ರಧ್ವಜ ಹಾರಿಸಲು ತೀರ್ಮಾನಿಸಿದರು. ಅ ಯೋಜನೆಯ ಪ್ರಕಾರ ಪುಣೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ. ಅಣ್ಣಾಸಾಹೇಬ ಭೋಪಟ್ಕರ್‍ ೧೯೩೦ರ ಏಪ್ರಿಲ್ ೬ನೆ ತಾರೀಖು ಮುನಿಸಿಪಾಲಿಟಿಯ ಮೇಲೆ ಧ್ವಜ ಹಾರಿಸಿದರು. ಇದರಿಂದ ತ್ರಸ್ತರಾದ ಬ್ರಿಟಿಶರು ಸೊಲ್ಲಾಫುರದಲ್ಲಿ ಮಾರ್ಶಿಯಲ್ ಲಾ ಜಾರಿ ಮಾಡಿ, ಅನೇಕ ಮುಂದಾಳುಗಳನ್ನು ಹಾಗೂ ನಾಗರೀಕರರನ್ನು ಬಂಧಿಸಿದರು. ಮಲ್ಲಪ್ಪ ಧನಶೆಟ್ಟಿ, ಕುರ್ಬಾ ನ್ ಹುಸೇನ್ , ಜಗನ್ನಾಥ ಶಿಂದೆ ಮತ್ತು ಕಿಸನ್ ಸಾರ್ದಾ ಇವರನ್ನು ಮಂಗಳವಾರ ಪೋಲೀಸ್ ಠಾಣೆಯ ಇಬ್ಬರು ಪೋಲಿಸರನ್ನು ಕೊಂದ ಆರೋಪದ ಮೇಲೆ ಬಂಧಿಸಲಾಯಿತು. ಕೆಳ ನ್ಯಾಯಾಲಯದಲ್ಲಿ ಇವರಿಗೆ ವಿಧಿಸಲಾದ ಗಲ್ಲು ಶಿಕ್ಷೆ, ಮುಂದೆ ಉಚ್ಚ ನ್ಯಾಯಾಲಯದಲ್ಲಿಯೂ ಖಾಯಮ್ ಆಗಿ , ಈ ನಾಲ್ವರನ್ನು ೧೯೩೧ರ ಜನವರಿ ೧೨ರಂದು ಗಲ್ಲಿಗೇರಿಸಲಾಯಿತು. ಈ ನಾಲ್ವರು ಹುತಾತ್ಮರ ಸ್ಮರಣಾರ್ಥ ನಗರಮಧ್ಯದಲ್ಲಿ ಇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿ , ಈ ಜಾಗವನ್ನು ಹುತಾತ್ಮಾ ಚೌಕ ಎಂದು ಹೆಸರಿಸಲಾಗಿದೆ.

ಇಲ್ಲಿಯ ಊರದೇವರು ಶ್ರೀ ಸಿದ್ಧರಾಮೇಶ್ವರ. ೧೨ನೆಯ ಶತಮಾನದ ಈ ಐತಿಹಾಸಿಕ ವ್ಯಕ್ತಿಯ ಕರ್ಮಯೋಗ ದಿಂದ ದೈವತ್ವಕ್ಕೇರಿದ. ಸಿದ್ಧರಾಮ ವೀರಶೈವ ಧರ್ಮಕ್ಕೆ ಅಪಾರ ಕೊಡುಗೆ ನೀಡಿದ್ದು, ವೀರಶೈವರ ಆಚಾರ್ಯ ಪಂಥಕ್ಕೆ ಸೇರಿದವನು, ಅದ್ಬುತ ವಚನಕಾರ.

ಉಭಯಕವಿ ಕಮಲರವಿ ಎಂದು ಬಿರುದಾಂಕಿತನಾದ ರಾಘವಾಂಕನು ಸಿದ್ದರಾಮ ಚರಿತೆಯನ್ನು ಷಟ್ಪದಿಯಲ್ಲಿ ರಚಿಸಿ ,ಸಿದ್ದರಾಮನ ಮೇರುವ್ಯಕ್ತಿತ್ವ ವನ್ನು  ಅಭಿವ್ಯಕ್ತಗೊಳಿಸಿದ್ದಾನೆ.  ಬರಗಾಲಪೀಡಿತ ಸೊಲ್ಲಾಪುರದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಿದ್ಧರಾಮೇಶ್ವರನು ೪೦೦೦ ಶಿವಶರಣರೊಂದಿಗೆ , ಕೆರೆಯನ್ನು ತೋಡಿದನು ಮತ್ತು ದೇವಾಲಯಗಳನ್ನು ನಿರ್ಮಿಸಿದನು. ಆತ ಸೊಲ್ಲಾಪುರದಲ್ಲಿಯೇ ಸಜೀವ ಸಮಾಧಿಗೇರಿದನು.ಅವನ ವಚನಗಳನ್ನು  ಡಾ.ಎಲ್.ಬಸವರಾಜುರವರು ಸಂಪಾದಿಸಿ 'ಸೋನ್ನಲಾಪುರದ ಸಂತ ಸಿದ್ದರಾಮನ ನಿಜ ವಚನಗಳು ', ಎಂಬ ಪುಸ್ತಕದಲ್ಲಿ ಹೊರತಂದಿದ್ದಾರೆ .

ಸೊಲ್ಲಾಪುರ ಮುಂಬಯಿಯಿಂದ ೪೩೩ ಕಿ.ಮೀ, ಪುಣೆಯಿಂದ ೨೪೪ ಕಿ.ಮೀ ದೂರದಲ್ಲಿದೆ. ಸೊಲ್ಲಾಪುರ ದೆಹಲಿ, ಹೈದರಾಬಾದು, ಬೆಂಗಳೂರು ಮೊದಲಾದ ನಗರಗಳಿಗೆ ರೈಲು ಮತ್ತು ರಸ್ತೆಯ ನೇರ ಸಂಪರ್ಕ ಹೊಂದಿದೆ. ಸೊಲ್ಲಾಫುರದಿಂದ ೧೮ ಕಿ.ಮೀ ದೂರದಲ್ಲಿರುವ ನಾನಜ್ Great Indian Bustardಗೆ ನೆಲೆಯಾಗಿದೆ. (ಸ್ಥಳೀಯ ಹೆಸರು ಮಳ್ಧೋಕ್).ಈ ಕಾರಣದಿಂದ ಇದು ಒಂದು ಅಂತರರಾಷ್ಟ್ರೀಯ ಪರಿಸರ ಪ್ರವಾಸಿಗಳ ಆಕರ್ಷಣೆಯಾಗಿದೆ.

ಮಹಾರಾಷ್ಟ್ರದ ಅತಿ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಪಂಢರಪುರ ಇಲ್ಲಿಂದ ೭೦ ಕಿ.ಮೀ ದೂರದಲ್ಲಿದೆ. ಇಲ್ಲಿ ಚಂದ್ರಭಾಗಾ ನದಿಯ ತೀರದಲ್ಲಿ ವಿಠೋಬ -ರಖುಮಾಯಿಯ ಮಂದಿರವಿದೆ. ಪುರಂದರದಾಸರ ಆರಾಧ್ಯದೈವ ಪಂಢರಪುರದ ವಿಠ್ಠಲ. ಇಲ್ಲಿಂದ ೩೮ ಕಿ.ಮೀ ದೂರದ ಅಕ್ಕಲಕೋಟೆ ಮಠ ಮತ್ತು ಸ್ವಾಮಿಗಳಿಂದ ಭಕ್ತರ ಮನಸ್ಸನ್ನು ಸೆಳೆಯುತ್ತದೆ.

ಸೊಲ್ಲಾಪುರ (ಮರಾಠಿಯಲ್ಲಿ ಸೋಲಾಪುರ್‍) ಮಹಾರಾಷ್ಟ್ರ ರಾಜ್ಯದ ದಕ್ಷಿಣ ಪೂರ್ವದಲ್ಲಿ ಕರ್ನಾಟಕದ ಗಡಿಯಲ್ಲಿರುವ ನಗರ , ಮತ್ತು ಅದೇ ಹೆಸರಿನ ಜಿಲ್ಲೆಯ ಕೇಂದ್ರ. ಉತ್ತರ ದಕ್ಷಿಣ ರೈಲುದಾರಿಯಲ್ಲಿ ಇದೊಂದು ಪ್ರಮುಖ ಜಂಕ್ಷನ್. ಇಲ್ಲಿ ಅನೇಕ ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳು ಇಲ್ಲಿವೆ. ವಿದ್ಯುತ್ ಮಗ್ಗಗಳು ಹಾಗೂ ಹತ್ತಿ ಗಿರಣಿಗಳ ಮುಖ್ಯ ಕೇಂದ್ರವೂ ಇದಾಗಿದೆ. ಸೊಲ್ಲಾಪುರದ ಚಾದರಗಳು (ಬೆಡ್ ಶೀಟುಗಳು) ತಮ್ಮ ಹೊಸ ಹೊಸ ವಿನ್ಯಾಸಗಳಿಗೆ ಮತ್ತು ತಾಳಿಕೆಯಿಂದಾಗಿ ಮನೆಮಾತಾಗಿವೆ. ಇಲ್ಲಿಯ ಊರದೈವ ಶ್ರೀ ಸಿದ್ಧೇಶ್ವರ. ಮಕರಸಂಕ್ರಾಂತಿಯಂದು ನಡೆಯುವ ನಂದಿಧ್ವಜದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. 
ಮಹಾರಾಷ್ಟ್ರದಬೀಡಿ ಉದ್ಯಮದಲ್ಲಿಯೂ ಸೊಲ್ಲಾಪುರ ಜಿಲ್ಲೆ ಮುಂದಿದೆ. ಇಲ್ಲಿಯ ಹುತಾತ್ಮರ ಸ್ಮಾರಕಕ್ಕೆ ದಿನವೂ ಅನೇಕರು ವಂದಿಸುತ್ತಾರೆ. ಕೂಡಲಸಂಗಮ, ಕರ್ಮಾಲಾ, ಮತ್ತು ಬಾರ್ಶಿ ಶಿಕ್ಷಣ ಮತ್ತು ಔದ್ಯೋಗೀಕರಣದಿಂದ ಪ್ರಗತಿಪಥದಲ್ಲಿವೆ. ಅಕ್ಕಲಕೋಟೆಯ ಸ್ವಾಮಿ ಮಹಾರಾಜರ ಮಠಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಬೃಹತ್ ಸಂಖ್ಯೆಯ ಭಕ್ತರು ನಡೆದುಕೊಳ್ಳುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ ೮೭೩,೦೩೭. ಇದರಲ್ಲಿ ಪುರುಷರು ೫೧% ಮತ್ತು ಸ್ತ್ರೀಯರು ೪೯%. ಇಲ್ಲಿಯ ಸರಾಸರಿ ಸಾಕ್ಷರತೆಯ ಪ್ರಮಾಣ ೬೭% ಇದ್ದು ಇದು ಭಾರತದ ಸರಾಸರಿ ಸಾಕ್ಷರತಾ ಪ್ರಮಾಣ (೫೯.೫%)ಕ್ಕಿಂತ ಹೆಚ್ಚಾಗಿದೆ. ಪುರಷರ ಸಾಕ್ಷರರು ೭೫% ಮತ್ತು ಸ್ತ್ರೀ ಸಾಕ್ಷರರು ೫೮% ಇದ್ದಾರೆ. ೬ ವರ್ಷಕ್ಕಿಂತ ಸಣ್ಣ ಮಕ್ಕಳು ೧೩% ಇದ್ದಾರೆ. ಮರಾಠಿ ಮುಖ್ಯಭಾಷೆಯಾಗಿದ್ದರೂ, ಕನ್ನಡ ಮಾತನಾಡುವವರೂ ವಿಪುಲವಾಗಿದ್ದಾರೆ. 




#Article 185: ಭಾರತದ ಸ್ವಾತಂತ್ರ್ಯ ದಿನಾಚರಣೆ (379 words)


ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ ೧೫ ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ |ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ ಜನ ಗಣ ಮನವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.

ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿ‍ಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ ರ ಅನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ,(12.15ರ) ನಂತರ 

ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ  ಸರ್ದಾರ್ ವಲ್ಲಭಭಾಯ್ ಪಟೇಲ್ ರು  ಲಾರ್ಡ್ ಮೌಂಟ್ ಬ್ಯಾಟನ್ನರನ್ನು   ಭಾರತದ ಗವರ್ನರ್ ಜನರಲ್  ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ  ಅವರು ಬಂದರು. ಪಟೇಲರು  ೫೬೫ ರಾಜಸಂಸ್ಥಾನಗಳ   ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು  ವಹಿಸಿಕೊಂಡರು,  ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ  ಸೈನಿಕ ಬಲವನ್ನು ಉಪಯೋಗಿಸಿ ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ ತಂತ್ರವನ್ನು ಉಪಯೋಗಿಸಿದರು.

ಸಂವಿಧಾನ ರಚನಾಸಭೆಯು ಸಂವಿಧಾನದ ಕರಡ ಸಭೆಯನ್ನು    26 ನವೆಂಬರ್ 1949; ರಂದು  ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು .     26 ಜನವರಿ 1950 ರಂದು   ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು.   ಸಂವಿಧಾನ ರಚನಾಸಭೆಯು  ಡಾ. ರಾಜೇಂದ್ರಪ್ರಸಾದರನ್ನು ದೇಶದ  ಪ್ರಥಮ ರಾಷ್ಟ್ರಪತಿ  ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು  ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು  ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು .  ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ  ಮತ್ತು  ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು .

ಸ್ವಾತಂತ್ರ್ಯದ ಮಾಂತ್ರಿಕ ಕ್ಷಣವನ್ನು ಕವಿ ಪ್ರದೀಪ್ ರು ಜಾಗೃತಿ (1954) ಚಿತ್ರದಲ್ಲಿ ಹೀಗೆ ಚಿತ್ರಿಸಿದ್ದಾರೆ:

ಆಗಸ್ಟ್ 15 ಭಾರತದ ರಾಷ್ಟೀಯ ರಜಾದಿನವಾಗಿದೆ. ರಾಜಧಾನಿ ನವದೆಹಲಿ ಯಲ್ಲಿ ಬಹ್ವಂಶ ಸರಕಾರಿ ಕಚೇರಿಗಳು ವಿದ್ಯುದ್ದೀಪಗಳಿಂದ ಬೆಳಗುತ್ತವೆ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ದೇಶದಾದ್ಯಂತ ನಗರಗಳಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ರಾಜಕೀಯ ಧುರೀಣರು ನೆರವೇರಿಸುತ್ತಾರೆ . ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣವನ್ನು ಆಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಾರೆ . ಶಾಲೆಕಾಲೇಜುಗಳು ತಮ್ಮ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಬಂಧುಮಿತ್ರರು ಭೋಜನಕೂಟ ಮತ್ತು ಪ್ರವಾಸಗಳಿಗೆಂದು ಸೇರುತ್ತಾರೆ. ಹೌಸಿಂಗ್ ಕಾಲನಿಗಳು , ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮನರಂಜನಾ ಕಾರ್ಯಕ್ರಮಗಳನ್ನೂ, ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರೆ.

ಭಾರತದ ಅನೇಕ ಪ್ರದೇಶಗಳಲ್ಲಿ ಸ್ವಾತಂತ್ರ್ಯದಿನದಂದು ಗಾಳಿಪಟಗಳನ್ನು ಹಾರಿಸುವ ಪದ್ದತಿ ಜನಪ್ರಿಯವಾಗಿದೆ . ಅಕಾಶವು ನೂರಾರು ಬಣ್ಣ ಬಣ್ಣದ ಪಟಗಳಿಂದ ಕಂಗೊಳಿಸುವುದು. ಜನರು ಗಾಳಿಪಟಗಳನ್ನು ಹಾರಿಸುವ ಸ್ಪರ್ಧೆಗಳಲ್ಲಿ ತೊಡಗುವರು ಕಟ್ಟಡಗಳ ಬಾಲ್ಕನಿಗಳು ಮತ್ತು ಮನೆಗಳ ಮಾಳಿಗೆಗಳಿಂದ ಜನರು ಗಾಳಿಪಟಗಳನ್ನು ಬಾನಿಗೆ ಹಾರಬಿಡುವರು.ಸಂಜೆಯ ವೇಳೆ ಗಾಳಿಪಟಗಳು ಮುಗಿಲ ಮುಟ್ಟುವಂತೆ ಮೇಲೇರುತ್ತಿದ್ದಂತೆ ಮಕ್ಕಳ ಹರ್ಷೋಲ್ಲಾಸದ ಧ್ವನಿಗಳು ಎಲ್ಲೆಲ್ಲೂ ಕೇಳಬರುತ್ತವೆ .




#Article 186: ಎ.ಪಿ.ಜೆ.ಅಬ್ದುಲ್ ಕಲಾಂ (155 words)


( ಅಬ್ದುಲ್ ಕಲಾಂ azaad ತಂದೆ info ಜುಲೈ ೨೦೦೨ ರಿಂದ ೨೫ ಜುಲೈ ೨೦೦೭ರ ತನಕ ಭಾರತದ ೧೧ನೇ ರಾಷ್ಟ್ರಪತಿಗಳಾಗಿದ್ದರು.

ಇವರು ಹುಟ್ಟಿ ಬೆಳೆದದ್ದು ತಮಿಳುನಾಡಿನ ರಾಮೇಶ್ವರಂನಲ್ಲಿ. ಇವರು ಭೌತಶಾಸ್ತ್ರ ಮತ್ತು ಅಂತರಿಕ್ಷಯಾನ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಅಧ್ಯಯನ ನಂತರ ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದರು.ಭಾರತದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕ್ಷಿಪಣಿ ಮತ್ತು ಉಡಾವಣಾ ತಂತ್ರಜ್ಞಾನದ ಅಭಿವೃದ್ಧಿಯ ಅಧ್ಯಯನದಿಂದ, ಇವರು ಭಾರತದ ಕ್ಷಿಪಣಿ ಮಾನವ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದರು. ೧೯೯೮ರಲ್ಲಿ ನೆಡೆದ ಭಾರತದ ಪೋಖ್ರಾನ್-೨ ಪರಮಾಣು ಪರೀಕ್ಷೆಯಲ್ಲಿ  ಸಾಂಸ್ಥಿಕವಾಗಿ, ತಾಂತ್ರಿಕವಾಗಿ ಮತ್ತು ರಾಜಕೀಯವಾಗಿ ಒಂದು ಪ್ರಮುಖ ಪಾತ್ರ ವಹಿಸಿದರು. ಇದು ೧೯೭೪ರಲ್ಲಿ ನಡೆದ ಮೂಲ ಪರಮಾಣು ಪರೀಕ್ಷೆಯ ನಂತರ ನೆಡೆದ ಮೊದಲ ಪರಮಾಣು ಪರೀಕ್ಷೆಯಾಗಿದೆ. ಕಲಾಂ ಅವರು ೨೦೦೨ ರಲ್ಲಿ, ಆಡಳಿತ ಪಕ್ಷ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎರಡು ಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು.ಐದು ವರುಷಗಳ ಅವಧಿ ಪೂರೈಸಿದ ನಂತರ, ಅವರು ಶಿಕ್ಷಣ, ಬರವಣಿಗೆ ಮತ್ತು ಸಾರ್ವಜನಿಕ ಸೇವೆಯ ಜೀವನಕ್ಕೆ ಮರಳಿದರು. ಅವರು ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ಅವಿವಾಹಿತರಾಗಿದ್ದರು. ಅಬ್ದುಲ್ ಕಲಾಂ  ಅವರನ್ನ ಭಾರತದ  ಮಿಸೈಲ್ ಮ್ಯಾನ್ ಆಫ್  ಇಂಡಿಯ  ಎಂದು  ಕರೆಯುತ್ತಾರೆ

nನಿಜ

by Kevin




#Article 187: ಆರ್. ವೆಂಕಟರಾಮನ್ (328 words)


ರಾಮಸ್ವಾಮಿ ವೆಂಕಟರಾಮನ್ (4 ಡಿಸೆಂಬರ್ 1910 – 27 ಜನವರಿ 2009)ವಕೀಲ, ಸ್ವಾತಂತ್ರ್ಯ ಹೋರಾಟಗಾರ, ಕೇಂದ್ರ ಸಚಿವರಾಗಿದ್ದರು. ಇವರು   ೧೯೮೭ರಿಂದ ೧೯೯೨ರವರೆಗೆ ಭಾರತದ ರಾಷ್ಟ್ರಪತಿಗಳಾಗಿದ್ದರು. ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೮೭ ರಿಂದ ೨೪.೦೭.೧೯೯೨

೧೯೧೦ರ ಡಿಸೆಂಬರ್ ೪ ರಂದು ತಮಿಳು ನಾಡಿನ ತಂಜಾವೂರ್ ಜಿಲ್ಲೆಯ ರಾಜಮಡಮ್ ಹಳ್ಳಿಯಲ್ಲಿ ವೆಂಕಟರಾಮನ್ ಅವರ ಜನನ. ತಂದೆ ರಾಮಸ್ವಾಮಿ ಅಯ್ಯರ್ ವಕೀಲರು. ಸುಸಂಸ್ಕೃತ ವ್ಯಕ್ತಿ ದೇಶ ಸೇವೆಯ ಮೊದಲ ಪಾಠಗಳು ಕುಟುಂಬದ ಹಿರಿಯರಿಂದಲೇ ವೆಂಕಟರಾಮನ್ ಅವರಿಗೆ ಲಭಿಸಿತ್ತು. ವಿಶ್ವವಿದ್ಯಾಲಯದವರೆಗಿನ ಶಿಕ್ಷಣವನ್ನು ತಮ್ಮ ಜಿಲ್ಲೆಯಲ್ಲಿ ಮುಗಿಸಿ, ಮದರಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಹಾಗೂ ಕಾನೂನಿನಲ್ಲಿ ಬಿ.ಎಲ್.ಪದವಿಗಳನ್ನು ಪಡೆದರು. ಬ್ರಿಟಿಷ್ ಸರ್ಕಾರದ ಗುಲಾಮನಾಗಲು ಇಷ್ಟವಿಲ್ಲದೆ, ೧೯೩೫ರಲ್ಲಿ ಮದರಾಸ್, ಉಚ್ಚನ್ಯಾಯಲಯದಲ್ಲಿ ವಕೀಲರಾದರು. ೧೯೩೮ರಲ್ಲಿ ಜಾನಕಿದೇವಿ ಅವರೊಂದಿಗೆ ವಿವಾಹವಾಯಿತು. ಮುಂದೆ, ೧೯೫೧ರಲ್ಲಿ ಭಾರತದ ಶ್ರೇಷ್ಠ ನ್ಯಾಯಲಯದಲ್ಲಿ ನ್ಯಾಯವಾದಿಯಾದರ. ವಕೀಲ ವೃತ್ತಿಯನ್ನು ಆರಂಭಿಸಿದ ದಿನಗಳಿಂದಲೂ ಅವರು ತೋರಿದ ಅಸಾಧಾರಣ ಪ್ರತಿಭೆ ಮತ್ತು ಜಾಣ್ಮೆಗಳು ರಾಜಾಜಿಯವರಿಂದಲೂ ಪ್ರಶಂಸೆ ಗಳಿಸಿದ್ದವು.

ಕಾರ್ಮಿಕ ಸಂಘಟನೆಯ ವಕೀಲ, ಅದರ ಅಧ್ಯಕ್ಷ, ಕಾಂಗ್ರೆಸ್ ಸಂಸ್ಥೆಯ ಸಾಮಾನ್ಯ ಕೆಲಸಗಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ, ಅದೇ ಸಂಸ್ಥೆಯ ಆಡಳಿತ ನ್ಯಾಯಮಂಡಳಿಯ (Administarative Tribunal) ಅಧ್ಯಕ್ಷ, ಸಂಸತ್ ಸದಸ್ಯ, ತಮಿಳು ನಾಡು ಹಾಗು ಕೇಂದ್ರ ಸಂಪುಟಗಳಲ್ಲಿ ಮಂತ್ರಿ, ಉಪರಾಷ್ಟ್ರಪತಿ, ರಾಷ್ಟ್ರಪತಿ-ಹೀಗೆ ವೈವಿಧ್ಯಪೂರ್ಣ ಸಾರ್ವಜನಿಕ ಸೇವೆಯ ಅನುಭವ ಅವರದು. ಸಮರ್ಥನ್ಯಾಯವಾದಿ, ಅರ್ಥಿಕರಂಗದ ಅಪಾರ ಜ್ಞಾನವುಳ್ಳವರು, ರಾಜಕೀಯ ಕ್ಷೇತ್ರದ “ಸೂಕ್ಷ್ಮಗಳನ್ನು ಅರಿತವರು. ಆಡಳಿತದಲ್ಲಿ ಸಿದ್ಧಹಸ್ತರು , ನಡೆನುಡಿಯಲ್ಲಿ ವಿನಯ, ಶುದ್ಧಚಾರಿತ್ರ್ಯ, ನ್ಯಾಯಪರತೆ ಇವುಗಳಿಂದ ಎಲ್ಲರ ಪ್ರೀತಿ, ವಿಶ್ವಾಸ, ಗೌರವ ಗಳಿಸಿಕೊಂಡವರು ವೆಂಕಟರಾಮನ್

೧೯೪೨ರ “ಭಾರತ ಬಿಟ್ಟು ತೊಲಗಿ” ಆಂದೋಳನದಲ್ಲಿ ಭಾಗವಹಿಸಿ ಎರಡು ವರ್ಷ ಸೆರೆಮನೆವಾಸ ಅನುಭವಿಸಿದರು. ವಕೀಲ ವೃತ್ತಿ ಆರಂಭಿಸಿದಾಗಿನಿಂದಲೂ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಸೆರೆಮನೆಯಿಂದ ಬಿಡುಗಡೆಯಾದ ಕೂಡಲೆ ಅವರು ಮಾಡಿದ ಮೊದಲ ಕೆಲಸ, ತಮಿಳು ನಾಡು ಕಾಂಗ್ರೆಸ್ಸಿನ ಕಾರ್ಮಿಕ ವಿಭಾಗದ ಸಂಘಟನೆ. ಕಾರ್ಮಿಕರ ಉಪಯೋಗಕ್ಕಾಗಿ Labour Law Journal ಎಂಬ ನಿಯತಕಾಲಿಕೆಯನ್ನು ಆರಂಭಿಸಿದರು. ಪ್ಲಾಂಟೇಷನ್, ಎಸ್ಟೇಟ್, ಬಂದರು, ರೈಲ್ವೆ, ಪತ್ರಿಕೋದ್ಯಮ- ಈ ಎಲ್ಲ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೫೦ರಲ್ಲಿ ತಾತ್ಕಾಲಿಕ ಸಂಸತ್ತಿಗೆ ಆಯ್ಕೆಯಾದ ವೆಂಕಟರಾಮನ್ ಮುಂದೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದರು. ಆದರೆ ೧೯೫೭ರಲ್ಲಿ ಮಾತ್ರ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿ ಸರ್ಕಾರದಲ್ಲಿ ಕೈಗಾರಿಕೆ,ಕಾರ್ಮಿಕ ಶಾಖೆ ಮತ್ತಿತರ ಪ್ರಮುಖ ಖಾತೆಗಳ ಮಂತ್ರಿಯಾಗಿ ದುಡಿದು, ತಮ್ಮ ರಾಜ್ಯವನ್ನು ಒಂದು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ರೂಪಸಿದರು.

ಕೇಂದ್ರ ಯೋಜನಾ ಆಯೋಗದ ಸದಸ್ಯತ್ವ, ಸಾರ್ವಜನಿಕ ಲೆಕ್ಕಪತ್ರಗಳ ಪರಿಶೀಲನಾ ಸಮಿತಿಯ ಅಧ್ಯಕ್ಷತೆ(Public Accounts Committee), ಕೇಂದ್ರ ಸಂಪುಟದ ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ಸಮಿತಿಗಳ ಸದಸ್ಯತ್ವ, International Monetary Fund (IMF),The International Bank of Rconstruction and Development (IBRD) ಮತ್ತು Asian Developmetn Bank (ADB)- ಇವುಗಳ ಗವರ್ನರ್ ಪದವಿ ಇತ್ಯಾದಿ ವೆಂಕಟರಾಮನ್ ನಿವಹಿಸಿದ ಕೆಲವು ಉನ್ನತ ಹುದ್ದೆಗಳು. ೧೯೮೦ರಲ್ಲಿ ಕೆಂದ್ರ ವಿತ್ತಮಂತ್ರಿಯಾಗಿ, ನಂತರ ರಕ್ಷಣಾ ಮಂತ್ರಿಯಾಗಿ ೧೯೮೪ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವೆಂಕಟರಾಮನ್ ಅವರಿಗಿದ್ದ ಅಪಾರ ಜ್ಞಾನದಿಂದ ಲಾಭವನ್ನು ಪಡೆಯಲು, ಅಂದಿನ ಪ್ರಧಾನಿ ನೆಹರೂ ಅವರು, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವೆಂಕಟರಾಮನ್ ಅವರನ್ನು ಆರಿಸಿದ್ದರು.೧೯೫೩ ರಿಂದ ೧೯೬೧ ರ ಅವಧಿಯಲ್ಲಿ ಅವರು ಹಾಗೆ ಏಳು ಬಾರಿ ಪ್ರತಿನಿಧಿಸಿದ್ದಾರೆ.ಅಂತಾರ್ರಾಷ್ಟ್ರೀಯ ಕಾರ್ಮಿಕ ಹಾಗೂ ಸಂಸದೀ. 




#Article 188: ನೀಲಂ ಸಂಜೀವ ರೆಡ್ಡಿ (138 words)


ನೀಲಂ ಸಂಜೀವ ರೆಡ್ಡಿ ೧೯೭೭ - ೧೯೮೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು. ಇವರು ಭಾರತದ ಆರನೇ ರಾಷ್ಟ್ರಪತಿಗಳು, ಇವರು ಅವಿರೋಧವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾದ ಭಾರತದ ಏಕೈಕ ವ್ಯಕ್ತಿ.
ಇವರು ಆಂಧ್ರ ಪ್ರದೇಶ ರಾಜ್ಯ ಜಿಲ್ಲೆಯ ಅನಂತಪುರ ಜಿಲ್ಲೆಯ ಇಲ್ಲೂರು ಹಳ್ಳಿಯಲ್ಲಿ  ಹುಟ್ಟಿದರು. ೧೯೬೪ರಲ್ಲಿ ಕೇಂದ್ರ ಸರಕಾರದ ಮಂತ್ರಿ ಮಂಡಲದಲ್ಲಿ  ಉಕ್ಕು ಮತ್ತು ಗಣಿ ಖಾತೆಯ ಸಚಿವರಾದರು. ಮುಂದೆ ೧೯೬೬ ರಲ್ಲಿ ಸಾರಿಗೆ. ನಾಗರಿಕ ವಿಮಾನಯಾನ, ಪ್ರವಾಸೋದ್ಯಮ ಮತ್ತು ನೌಕಾ ಸಾರಿಗೆಯ ಸಚಿವರಾಗಿದ್ದರು. ೧೯೬೭ ರಲ್ಲಿ ಲೋಕಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿ ಅಭೂತಪೂರ್ವ ಮೆಚ್ಚುಗೆಯನ್ನು ಗಳಿಸಿದರು.. 

ಅವರು ೧೯೭೫ ರಲ್ಲಿ ಶ್ರೀ ಜಯಪ್ರಕಾಶ್ ನಾರಾಯಣ್ ಜೊತೆಗೆ  ಮತ್ತೆ ಸಕ್ರಿಯ ರಾಜಕೀಯಕ್ಕೆ  ಮರಳಿದರು. ಮಾರ್ಚ್ ೧೯೭೭ ರಲ್ಲಿ, ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಆಂಧ್ರ ಪ್ರದೇಶದ ನಂದ್ಯಾಲ  ಕ್ಷೇತ್ರದಿಂದ ಲೋಕ ಸಭೆಗೆ ಸ್ಪರ್ಧಿಸಿದರು. ಅವರು ಆಂಧ್ರ ಪ್ರದೇಶದಿಂದ  ಆಯ್ಕೆಯಾದ ಏಕೈಕ  ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಅವರು ಸರ್ವಾನುಮತ ದಿಂದ ೨೬ ಮಾರ್ಚ್ ೧೯೭೭ ರಂದು ಲೋಕಸಭೆಯ ಸ್ಪೀಕರ್  ಆಗಿ ಆಯ್ಕೆಯಾದರು. ಅವರನ್ನು  ಈವರೆಗೆ ಭಾರತೀಯ ಸಂಸತ್ತಿನ ಲೋಕಸಭೆ ಕಂಡ  ಅತ್ಯುತ್ತಮ ಸ್ಪೀಕರ್ ಎಂದು ಬಣ್ಣಿಸಲಾಗಿದೆ.

ಅವರು ಜುಲೈ ೧೯೭೭ ರಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರು ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಪತಿಯೂ  ಭಾರತದ ಈವರೆಗಿನ ಇತಿಹಾಸದಲ್ಲಿ ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿಯೂ ಹೌದು.

ಅವರು ೧೯೯೬ ರಲ್ಲಿ ಬೆಂಗಳೂರಿನಲ್ಲಿ ತೀರಿಕೊಂಡರು.

 




#Article 189: ಬಾಬು ರಾಜೇಂದ್ರ ಪ್ರಸಾದ್ (795 words)


ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿ ಸಮಾಜಸೇವಕರಾಗಿ ಅವರು ಮಹತ್ವದ ಸೇವೆ ನೀಡಿದವರು.

೧೮೮೪ರ ಡಿಸೆಂಬರ್ ೩ನೇ ತಾರೀಖು ಬಿಹಾರದ ಜೇರಡ್ಡೆ ಎಂಬ ಹಳ್ಳಿಯಲ್ಲಿ ಪ್ರಸಾದರು ಜನಿಸಿದರು. ತಂದೆ ಮಹದೇವ ಸಹಾಯ್; ಸಂಸ್ಕೃತ ಮತ್ತು ಫಾರಸಿ ವಿದ್ವಾಂಸರು; ಅಲ್ಲದೆ ವೈದ್ಯರು.  ತಾಯಿ ಕಮಲೇಶ್ವರಿ ದೇವಿ; ಸಂಪ್ರದಾಯಸ್ಥರು, ದೈವಭಕ್ತೆ, ಪ್ರತಿದಿನವೂ ರಾಮಾಯಣದ ಕತೆಗಳನ್ನು ಮಗನಿಗೆ ಹೇಳುವರು. ಇಬ್ಬರು ಗಂಡು ಮತ್ತು ಮೂವರು ಹೆಣ್ಣು ಮಕ್ಕಳ ಕುಟುಂಬ. ಬಡವ – ಬಲ್ಲಿದ, ಹಿಂದೂ- ಮುಸ್ಲಿಂ ಮುಂತಾದ ಯಾವ ಭೇದ ಭಾವವೂ ಇಲ್ಲದ ಆಡಂಬರಹಿತವಾದ ಗ್ರಾಮೀಣ ಜನರ ಒಡನಾಟದಲ್ಲಿ ಬೆಳೆದ ಪ್ರಸಾದರು ಉಚ್ಚ ಆದರ್ಶ, ನೈತಿಕ ನಡೆವಳಿಕೆ ಮತ್ತು ಋಜು ಸ್ವಭಾವವನ್ನು ಮೈಗೂಡಿಸಿಕೊಂಡರು. ಕೇವಲ ೧೨ನೇ ವಯಸ್ಸಿನಲ್ಲೇ ರಾಜ ಬನ್ಸಿದೇವಿಯವರೊಂದಿಗೆ ವಿವಾಹವೂ ಆಯಿತು.

ಆಗಿನ ಪದ್ಧತಿಯಂತೆ, ಪ್ರಸಾದರ ಮೊದಲ ಶಿಕ್ಷಣ ಪರ್ಷಿಯನ್ ಭಾಷೆಯಲ್ಲಿ, ಒಬ್ಬ ಮುಸಲ್ಮಾನ್ ಮೌಲ್ವಿಯಿಂದ. ಪ್ರತಿಭಾಶಾಲಿಯಾಗಿದ್ದ ಪ್ರಸಾದರು ಶಾಲಾ ಕಾಲೇಜುಗಳಲ್ಲಿ ಅತ್ಯಂತ ಮೇಧಾವಿ ವಿದ್ಯಾರ್ಥಿ ಎನ್ನಿಸಿಕೊಂಡಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಿಂದ ಹಿಡಿದು ಬಿ.ಎ., ಎಂ.ಎ. ಹಾಗೂ ಕಾನೂನು ಪರೀಕ್ಷೆಗಳಲ್ಲಿ ಅವರಿಗೇ ಪ್ರಥಮಸ್ಥಾನ. ಚರ್ಚೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನಗಳು ಇವರಿಗೆ ಕಟ್ಟಿಟ್ಟದ್ದು.

ಪ್ರಸಾದರ ಸಮಾಜ ಸೇವಾ ಕಾರ್ಯಗಳಿಗೆ ವಿದ್ಯಾರ್ಥಿ ದೆಸೆಯಲ್ಲೇ ಅಡಿಪಾಯ ಹಾಕಲಾಗಿತ್ತು ತಮ್ಮ ಅಣ್ಣ ಮಹೇಂದ್ರ ಪ್ರಸಾದರಿಂದ “ಸ್ವದೇಶಿ”ಯ ಪಾಠ ಕಲಿತಿದ್ದ ಪ್ರಸಾದರು ಸೋದರಿ ನಿವೇದಿತಾ, ಸುರೇಂದ್ರನಾಥ ಬ್ಯಾನರ್ಜಿ ಮುಂತಾದ ದೇಶ ಪ್ರೇಮಿಗಳ ಭಾಷಣಗಳಿಂದ ಪ್ರಭಾವಿತರಾಗಿದ್ದರು. ವಿದ್ಯಾರ್ಥಿ ವೃಂದದಲ್ಲಿ ಇವರು ಜನಪ್ರಿಯ ನಾಯಕ. 1906ರಲ್ಲಿ ಬಿಹಾರಿ ವಿದ್ಯಾರ್ಥಿಗಳನ್ನು ಒಂದುಗೂಡಿಸಿ “Bihari students conference” ಎಂಬ ಸಂಘವನ್ನು ಕಟ್ಟಿದರು.

ಪ್ರಸಾದರ ವೃತ್ತಿ ಜೀವನ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಆರಂಭಗೊಂಡಿತು. ಆನಂತರ ಅವರು  ಕಲ್ಕತ್ತಾ ಮತ್ತು ಪಾಟ್ನಾಗಳಲ್ಲಿ ವಕೀಲ ವೃತ್ತಿ ನಡೆಸಿದರು.   ಪಾಟ್ನಾ ವಿಶ್ವ ವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದರು.

ಅಂದಿನ ಕಾಲದಲ್ಲಿ ಇಡೀ ದೇಶವೇ ಒಂದು ಹೊಸ ಚೈತನ್ಯವನ್ನು ಪಡೆದಿತ್ತು. ಅಂದಿನ ವಾತಾವರಣವೇ ಒಂದು ಹೊಸ ಬಾಳಿನ ನಿರೀಕ್ಷೆ ಮತ್ತು ಆದರ್ಶದ ಅಲೆಗಳಿಂದ ತುಂಬಿತ್ತು ಎಂದು ಪ್ರಸಾದರು ಹೇಳುತ್ತಾರೆ. ಬಂಗಾಲದ ವಿಭಜನೆ, ವಿದೇಶಿ ವಸ್ತುಗಳ ನಿರಾಕರಣೆ, ಸ್ವದೇಶಿ ಚಳುವಳಿ ಮುಂತಾದ ಅನೇಕ ವಿಷಯಗಳು ಎಲ್ಲೆಡೆಯೂ ಚರ್ಚಿತವಾಗುತ್ತಿದ್ದವು. ಬಿಹಾರದ ಸ್ಥಿತಿಗತಿಗಳನ್ನು ಸುಧಾರಿಸಲು ಪ್ರಸಾದರು ನಡೆಸುತ್ತಿದ್ದ ಚಟುವಟಿಕೆಗಳು ಗೋಪಾಲಕೃಷ್ಣ ಗೋಖಲೆಯವರ ಗಮನಕ್ಕೆ ಬಂತು.  ಆಗ ತಾನೇ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಗಾಂಧೀಜಿಯವರ ಗಮನವನ್ನೂ ಸೆಳೆಯಿತು.

ಗಾಂಧೀಜಿಯವರನ್ನು ಪ್ರಸಾದರು ೧೯೧೫ರ ವರ್ಷದಲ್ಲಿ ಮೊದಲು  ಭೇಟಿಯಾದರು. ಆದರೆ ಈ ಭೇಟಿಗಳು ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಗಾಂಧೀಜಿಯವರ ವ್ಯಕ್ತಿತ್ವ ಮತ್ತು ಕ್ರಿಯಾಶಕ್ತಿಗಳ ಪರಿಚಯವಾದದ್ದು ಚಂಪಾರಣ್‌ದಲ್ಲಿ. ಪ್ರಸಾದರು ಅಲ್ಲಿಂದ ಮುಂದೆ ಗಾಂಧೀಜಿಯವರ ಅನುಯಾಯಿಯಾದರು. ಕೈತುಂಬ ವರಮಾನ ತರುತ್ತಿದ್ದ ವಕೀಲ ವೃತ್ತಿಯನ್ನು ತ್ಯಜಿಸಿದರು. ಜನರ ಹಿತಕ್ಕೆ ಮಾರಕವಾದ ಕಾನೂನುಗಳೆಲ್ಲವನ್ನೂ ವಿರೋಧಿಸಿದರು. ಈ ಅಸಹಕಾರಗಳಿಂದ ಸರ್ಕಾರದ ದೃಷ್ಟಿಯಲ್ಲಿ ದೇಶದ್ರೋಹಿ ಎನಿಸಿಕೊಂಡರು. ಸೆರೆಮನೆವಾಸ, ಸ್ವಂತ ಗಳಿಕೆ ಇಲ್ಲದ್ದರಿಂದ ಕಷ್ಟಕಾರ್ಪಣ್ಯಗಳು, ಎಡೆಬಿಡದೆ ಕಾಡುತ್ತಿದ್ದ ಅಸ್ತಮಾ ಇವು ಯಾವುವೂ ಅವರ ಕಾರ್ಯಚಟುವಟಿಕೆಗಳಿಗೆ ಅಡ್ಡಿಬರಲಿಲ್ಲ. ಸದಾ ಭಾರತದ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಭಾಷಣ ಮತ್ತು ಲೇಖನಗಳ ಮೂಲಕ ಜನ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದರು.

೧೯೩೪ರ ಜನವರಿ ೧೫ರಂದು ಸಂಭವಿಸಿದ ಭಯಂಕರ ಭೂಕಂಪ ಹಾಗೂ ಪ್ರವಾಹಗಳಿಂದ ಇಡೀ ಬಿಹಾರವೇ ತತ್ತರಿಸಿತ್ತು. ಅದರ ಮರುದಿನವೇ ಸೆರೆಮನೆಯಿಂದ ಬಿಡುಗಡೆ ಹೊಂದಿದ ಪ್ರಸಾದರು, ತಮ್ಮ ತೀವ್ರ ಅನಾರೋಗ್ಯವನ್ನೂ ಲೆಕ್ಕಿಸದೆ ಬಹುದೊಡ್ಡ ಪ್ರಮಾಣದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯವನ್ನು ಸಂಘಟಿಸಿದರು. ಮರುವರ್ಷವೇ ಕ್ವೆಟ್ಟಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಂತ್ರಸ್ತರಾದವರಿಗೂ ನೆರವು ಕಳಿಸಲು ಶ್ರಮಿಸಿದರು. ಸರ್ಕಾರದ ಕಾರ್ಯಕ್ರಮಕ್ಕಿಂತ ಯಶಸ್ವಿಯಾದ ಅವರ ಕಾರ್ಯಕ್ರಮ ಅವರ ಸಂಘಟನಾ ಚಾತುರ್ಯಕ್ಕೆ ಹಾಗೂ ಕ್ರಿಯಾಶಕ್ತಿಗೆ ಸಾಕ್ಷಿಯಾಗಿದ್ದವು. ಅವರ ಈ ಎಲ್ಲ ಜನಹಿತ ಕಾರ್ಯಗಳಿಂದಾಗಿ ರಾಜೇಂದ್ರ ಪ್ರಸಾದರು ಜನರ ಪ್ರೀತಿಯ “ರಾಜೆನ್ ಬಾಬು” ಆದರು.

೧೯೩೪ರಲ್ಲಿ ಮುಂಬಯಿ (ಈಗಿನ ಮುಂಬಯಿ) ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ; ೧೯೨೯ ಹಾಗೂ ೧೯೩೬ರಲ್ಲಿ ಬಿಹಾರದ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷತೆ, ಅಖಿಲ ಭಾರತ ಕಾಂಗ್ರೆಸ್‌ನ ಅಧ್ಯಕ್ಷ ಪದವಿ – ಇವು ಅವರು ಅಲಂಕರಿಸಿದ ಕೆಲವು ಪ್ರಮುಖ ಹುದ್ದೆಗಳು.

೧೯೩೫ರ ಭಾರತ ಸರ್ಕಾರ ಕಾಯಿದೆ ಪ್ರಕಾರ ೧೯೩೭ರಲ್ಲಿ ಚುನಾವಣೆ ನಡೆದು, ಮಂತ್ರಿ ಮಂಡಲಗಳು ರಚನೆಯಾಗುವ ಕಾಲಕ್ಕೆ ಸಕ್ರಿಯ ಪಾತ್ರ ವಹಿಸಿದ ಕಾಂಗ್ರೆಸ್ ಸಂಸದೀಯ ಸಮಿತಿಯ ಒಬ್ಬ ಪ್ರಮುಖ ಸದಸ್ಯರು  ರಾಜೇಂದ್ರ ಬಾಬು. 1946ರಲ್ಲಿ ಭಾರತದ ತಾತ್ಕಾಲಿಕ ಸರ್ಕಾರದಲ್ಲಿ ಆಹಾರ ಮತ್ತು ಕೃಷಿ ಖಾತೆಗಳ ಮಂತ್ರಿಯಾಗಿ ಗಣನೀಯ ಸಾಧನೆ ಮಾಡಿದರು. ಅದೇ ವರ್ಷ ಭಾರತದ ಸಂವಿಧಾನವನ್ನು ರೂಪಿಸಲು ಹಾಗೂ ತಾತ್ಕಾಲಿಕ ಸಂಸತ್ತಾಗಿ ಕಾರ್ಯ ನಿರ್ವಹಿಸಲು ರಚಿತವಾದ ಸಂವಿಧಾನ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಸಂವಿಧಾನ ನಿರ್ಮಾಣದಲ್ಲಿ ರಾಜೀನ್‌ಬಾಬು ಅವರ ಕಾಣಿಕೆಯು ಅಮೂಲ್ಯವಾದುದು.

೧೯೫೦ರ ಜನವರಿ ೨೬ರಂದು ಭಾರತವು ಗಣರಾಜ್ಯವಾದಾಗ ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ೧೯೫೨ ಮತ್ತು ೧೯೫೭ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಮೇಲೂ ರಾಜೆನ್ ಬಾಬು ಅವರೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಒಟ್ಟು ೧೨ ವರ್ಷಗಳ ಕಾಲ ರಾಷ್ಟ್ರಪತಿಗಳಾಗಿದ್ದ ರಾಜೆನ್ ಬಾಬು ಆ ಸ್ಥಾನಕ್ಕೆ ಒಂದು ಅನನ್ಯ ಗೌರವ ತಂದುಕೊಟ್ಟರು.

೧೯೬೨ರಲ್ಲಿ ರಾಷ್ಟ್ರಪತಿ ಸ್ಥಾನದಿಂದ ನಿವೃತ್ತರಾಗಿ, ತಾವೇ ಪಾಟ್ನಾದಲ್ಲಿ ಸ್ಥಾಪಿಸಿದ ಸದಾಕತ್ ಆಶ್ರಮದಲ್ಲಿ ನೆಲೆಸಿದರು.

ಕಡೆಯ ದಿನಗಳಲ್ಲಿ ರಾಜೇಂದ್ರ ಪ್ರಸಾದರು ತುಂಬ ದುಃಖ ಅನುಭವಿಸಿದರು. ಪತ್ನಿ ಹಾಗೂ ಪ್ರೀತಿಯ ಅಕ್ಕ ಇವರ ಮರಣ, ಚೀನಾ ದೇಶ ಭಾರತದ ಮೇಲೆ ನಡೆಸಿದ ಆಕ್ರಮಣ ಇವೆಲ್ಲವೂ ಅವರನ್ನು ತುಂಬ ದುಃಖಕ್ಕೀಡು ಮಾಡಿದವು. ಕೇವಲ ಒಂದು ವರ್ಷದೊಳಗೇ ೧೯೬೩ರ ಫೆಬ್ರವರಿ ೨೮ರಂದು ನಿಧನರಾದರು

ದೇಶದ ಅತ್ಯುಚ್ಛ ಪದವಿಯನ್ನಲಂಕರಿಸಿದರೂ, ಆ ಪದವಿಗೆ ತಕ್ಕ ವೈಭವವೆಲ್ಲವೂ ಅವರನ್ನು ಸುತ್ತುವರಿದಿದ್ದರೂ, ಅವರು ಮಾತ್ರ ಆಡಂಬರ ರಹಿತ ಜೀವನವನ್ನೇ ನಡೆಸಿಕೊಂಡು ಬಂದರು. ಸಂವಿಧಾನಿಕವಾಗಿ ರಾಷ್ಟ್ರಪತಿ ಸ್ಥಾನಕ್ಕೆ ಘನತೆ ಹಾಗೂ ಗೌರವಗಳನ್ನು ದೊರಕಿಸಿಕೊಟ್ಟರು. ಜನರ ಸಂಪರ್ಕವನ್ನು ಉಳಿಸಿಕೊಳ್ಳುವುದಕ್ಕಾಗಿ, ರೈಲಿನಲ್ಲೇ ಪ್ರವಾಸ ಮಾಡುತ್ತಿದ್ದರು. ತಮಗೆ ನಿಗದಿಯಾಗಿದ್ದ ಸಂಬಳ ಮತ್ತು ಭತ್ಯಗಳನ್ನು ಸ್ವ–ಇಚ್ಛೆಯಿಂದ ೨,೫೦೦ ರೂಪಾಯಿಗಳಿಗೆ ಇಳಿಸಿಕೊಂಡರು. ಶ್ರೀ ಕೆ.ಎಂ. ಮುನ್ಷಿಯವರ ಅಹ್ವಾನದ ಮೇಲೆ ಐತಿಹಾಸಿಕ ಸೋಮನಾಥ ದೇವಾಲಯದ ಜೀರ್ಣೊದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪಟ್ನಾ, ಜುಲೈ 4: ಸ್ವತಂತ್ರ ಭಾರತದ ಮೊಟ್ಟಮೊದಲ ಪ್ರಜೆಯ ಬ್ಯಾಂಕ್ ಖಾತೆ ಇನ್ನೂ ಚಾಲ್ತಿಯಲ್ಲಿದೆ! ಯಾವುದಪ್ಪಾ ಆ ಬ್ಯಾಂಕು ಇನ್ನೂ ಅಂಥಾ ಖಾತೆಯನ್ನು ಉಳಿಸಿಕೊಂಡಿರುವುದು ಎಂದು ಆಶ್ಚರ್ಯಪಟ್ಟಿರಾ? ಅದುವೇ ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್. ಇನ್ನು ರಾಷ್ಟ್ರದ ಮೊಟ್ಟಮೊದಲ ಪ್ರಜೆ ದಿವಂಗತ ಬಾಬು ರಾಜೇಂದ್ರ ಪ್ರಸಾದ್. ಅದಿರಲಿ ಈ ವಿಷ್ಯಾ ಈಗೇಕೆ ಎಂದರೆ 14ನೇ ರಾಷ್ಟ್ರಪತಿ ಪದಗ್ರಹಣದ ಕಾಲ ಸನ್ನಿಹಿತವಾಗಿದೆ. ಆದ್ದರಿಂದ ಒಂದಷ್ಟು ಹಳೆಯ ಮೆಲುಕುಗಳು... ಸುಮಾರು 50 ವರ್ಷಗಳ ನಂತರವೂ ಸಾಕ್ಷಾತ್ ರಾಷ್ಟ್ರಪತಿಯೊಬ್ಬರ ಉಳಿತಾಯ ಖಾತೆಯನ್ನು ಉಳಿಸಿಕೊಂಡಿರುವ ಹೆಮ್ಮೆ ಬಿಹಾರದ ಪಟ್ನಾದಲ್ಲಿ Exhibition Road ನಲ್ಲಿರುವ PNB ಶಾಖೆಯದ್ದಾಗಿದೆ. ಬಾಬು ರಾಜೇಂದ್ರ ಪ್ರಸಾದ್ ಅವರು ತಾವು ಅಸುನೀಗುವುದಕ್ಕೆ ಕೆಲವೇ ತಿಂಗಳುಗಳ ಮುನ್ನ, 1962ರ ಅಕ್ಟೋಬರ್ 24ರಂದು ಈ ಖಾತೆಯನ್ನು ತೆರೆದಿದ್ದರು. 'ನಮ್ಮ ಬ್ಯಾಂಕು ಇಂದಿಗೂ ರಾಜೇಂದ್ರ ಪ್ರಸಾದ್ ಅವರ ಖಾತೆಗೆ prime customer status ಸ್ಥಾನಮಾನ ನೀಡಿದೆ. ಅದು ನಮ್ಮ ಹೆಮ್ಮೆಯೂ ಹೌದು' ಎನ್ನುತ್ತಾರೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್ಎಲ್ ಗುಪ್ತಾ ಅವರು. ಶಾಖೆಯ ನೋಟಿಸ್ ಬೋರ್ಡಿನಲ್ಲಿ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಭಾವಚಿತ್ರವನ್ನು ಹಾಕಿ ಅದರ ಕೆಳಗೆ ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು 0380000100030687 ನಮೂದಿಸಿದೆ. ಅಂದಹಾಗೆ ಪ್ರತಿ ಆರು ತಿಂಗಳಿಗೊಮ್ಮೆ ಈ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತಿರುತ್ತದೆ. ಆದರೆ ಇದುವರೆಗೂ ಯಾರೂ ಈ ಹಣ ತಮಗೆ ಸೇರಬೇಕು ಎಂದು ಕೇಳಿಕೊಂಡು ಬಂದಿಲ್ಲ. ಸಹಜ ಕುತೂಹಲದಿಂದ ಅವರ ಖಾತೆಯಲ್ಲಿರುವ ಮೊತ್ತ ಎಷ್ಟು ಎಂದು ನೋಡಿದಾಗ ಆ ಮೊತ್ತ 1,813 ರೂಪಾಯಿ. ಎಂಬುದು ಬೆಳಕಿಗೆ ಬರುತ್ತದೆ. ಬಾಬು ರಾಜೇಂದ್ರ ಪ್ರಸಾದ್ ಅವರು ಬಿಹಾರದ ಸಿವಾನ್ ಜಿಲ್ಲೆಯ ಜೆರಾಡಿ ಗ್ರಾಮದಲ್ಲಿ 1884ರ ಡಿಸೆಂಬರ್ 3ರಂದು ಜನಿಸಿದ್ದರು. ಪಟ್ನಾದಲ್ಲಿ 1963ರ ಫೆಬ್ರವರಿ 28ರಂದು ಮೃತಪಟ್ಟಿದ್ದರು. ಅವರು 1952ರಿಂದ 1962ರ ವರೆಗೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ರಾಜೇಂದ್ರ ಪ್ರಸಾದರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಮಾನ ಪ್ರಭುತ್ವವಿತ್ತು. ಈ ಎರಡರಲ್ಲಿಯೂ ಪುಸ್ತಕಗಳನ್ನು ಬರೆದಿದ್ದಾರೆ. “ಚಂಪಾರಣ್ ಸತ್ಯಾಗ್ರಹ” ಮಹಾತ್ಮಾ ಗಾಂಧಿಯವರ ಪದತಲದಲ್ಲಿ “ಆತ್ಮಕಥೆ”, “ಭಾರತದ ವಿಭಜನೆ” ಇವು ಅವರ ಕೆಲವು ಪ್ರಮುಖ ಪುಸ್ತಕಗಳು.

ಅಲಹಾಬಾದ್ ಹಾಗೂ ದಿಲ್ಲಿ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದವು.  ೧೯೬೨ರಲ್ಲಿ “ಭಾರತ ರತ್ನ” ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.




#Article 190: ಬಿ.ಡಿ.ಜತ್ತಿ (607 words)


ಬಸಪ್ಪ ದಾನಪ್ಪ ಜತ್ತಿ(ಬಿ.ಡಿ.ಜತ್ತಿ) (ಸೆಪ್ಟೆಂಬರ್ 10,1912 - ಜೂನ್ 7, 2002) - ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.

ಕರ್ನಾಟಕದ ಬಾಗಲಕೋಟೆ ಜಿಲ್ಲೆ(ಹಳೆಯ ವಿಜಯಪುರ)ಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ 1912ರ ಸೆಪ್ಟಂಬರ್ 10ರಂದು ಜನಿಸಿದರು. ತಂದೆ ದಾನಪ್ಪ ಜತ್ತಿ, ತಾಯಿ ಭಾಗವ್ವ. ದಾನಪ್ಪ ಜತ್ತಿಯವರು ಒಬ್ಬ ವ್ಯಾಪಾರಿ, ಅವರ ಮೂವರು ಗಂಡುಮಕ್ಕಳಲ್ಲಿ ಬಸಪ್ಪನವರು ಒಬ್ಬರು.ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು. 

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸದ ಅನಂತರ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ವ್ಯಾಸಂಗಮಾಡಿ ಆಟ್ರ್ಸ್ ಪದವಿಯನ್ನೂ ಸೈಕ್ಸ್ ಲಾ ಕಾಲೇಜಿನಲ್ಲಿ ಎಲ್‍ಎಲ್.ಬಿ. ಪದವಿಯನ್ನೂ ಗಳಿಸಿ (1940) ಜಮಖಂಡಿಯಲ್ಲಿ ವಕೀಲರಾಗಿ ಜೀವನ ಆರಂಭಿಸಿದರು (1940-45). 1948ರಲ್ಲಿ ಜಮಖಂಡಿಯು ಮುಂಬಯಿಗೆ ಸೇರಿದ ನಂತರ ಮತ್ತೆ ಕಾನೂನು ವೃತ್ತಿಗೆ ವಾಪಸಾದರು

೧೯೪೦ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು.  ಬಸಪ್ಪನವರು 10 ವರ್ಷದ ಬಾಲಕನಾಗಿದ್ದಾಗಲೇ 5 ವರ್ಷದ ಬಾಲಕ ಸಂಗವ್ವಳೊಂದಿಗೆ ವಿವಾಹವಾಯಿತು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು.

ಮುಂಬಯಿ ರಾಜ್ಯ ಶಾಸನ ಸಭೆಗೆ ಅವರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ಒಂದೇ ವಾರದಲ್ಲಿ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. 

ಕರ್ನಾಟಕದ ಮುಖ್ಯಮಂತ್ರಿಯಾಗಿ 1958ರಲ್ಲಿ ನೇಮಕಗೊಂಡು 1962ರ ತನಕ ಆಡಳಿತ ನಡೆಸಿದರು. 3ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಿಂದ ಮರು ಚುನಾಯಿತರಾದರು. 1962ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಅದೇ ಕ್ಷೇತ್ರದಿಂದ ನಾಲ್ಕನೆಯ ಶಾಸನಸಭೆಗೆ ಮರು ಚುನಾವಣೆಯಲ್ಲಿ ಆಯ್ಕೆ ಯಾದರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಯಾದರು. ನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ತೊಡಗಿಸಿಕೊಂಡು 1968ರಲ್ಲಿ ಪಾಂಡಿಚೆರಿಯ ಲೆಫ್ಟಿನೆಂಟ್‌ ಗವರ್ನರ್‌ ಆಗಿ ನೇಮಕಗೊಂಡರು. 1973ರಲ್ಲಿ ಒರಿಸ್ಸಾದ ರಾಜ್ಯಪಾಲರಾಗಿ, ನಂತರ 1974ರಲ್ಲಿ ಭಾರತದ ಉಪರಾಷ್ಟ್ರಾಧ್ಯಕ್ಷರಾಗಿ 1980ರ ವರೆಗೆ ಸೇವೆ ಸಲ್ಲಿಸಿದರು. 

ರಾಜ್ಯದಲ್ಲಿ ಸಚಿವರಾಗಿ, ನಂತರ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪಾಂಡಿಚೇರಿಯಲ್ಲಿ ಲೆ.ಗೌವರನರ್ ಆಗಿ ಸೇವೆ ಸಲ್ಲಿಸಿ, ಮುಂದೆ ಉಪರಾಷ್ಟ್ರಪತಿ ಮತ್ತು ಫಕ್ರುದ್ದಿನ್ ಅಹ್ಮದ್ ಅವರ ಅಕಾಲ ಮೃತ್ಯುವಿನ ನಂತರ ಕೆಲಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಇವರು ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರ, ಸರಳ ಜೀವಿ ಮತ್ತು ರಾಜಕೀಯ ಜಟ್ಟಿಎಂದು ಜತ್ತಿ ಹೆಸರು ಗಳಿಸಿದ್ದಾರೆ.

ಜಮಖಂಡಿಯ ಪೌರಸಭೆಯ ಸದಸ್ಯರಾಗಿ ಎರಡುಬಾರಿ ಆಯ್ಕೆ ಹೊಂದಿದರಲ್ಲದೆ ಅದರ ಅಧ್ಯಕ್ಷರಾಗಿಯೂ ಇದ್ದರು (1940-45). ಜಮಖಂಡಿ ಸಂಸ್ಥಾನದ ಪ್ರಜಾ ಪರಿಷತ್ತಿನ ಪ್ರಮುಖ ಕಾರ್ಯಕರ್ತರಲ್ಲಿ ಇವರೂ ಒಬ್ಬರಾಗಿದ್ದರು. ಜಮಖಂಡಿಯಲ್ಲಿ ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಯಾದಾಗ ಮಂತ್ರಿಮಂಡಳ ರಚಿಸುವ ಹೊಣೆ ಇವರದಾಯಿತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಸಂಸ್ಥಾನಗಳ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಕ್ಷಿಣ ಸಂಸ್ಥಾನಗಳ ಒಕ್ಕೂಟರಚನೆಯ ಪ್ರಯತ್ನಗಳು ನಡೆದಿದ್ದುವು. ಜತ್ತಿಯವರು ಜಮಖಂಡಿ ಸಂಸ್ಥಾನಿಕರ ಮನವೊಲಿಸಿ ಭಾರತ ಒಕ್ಕೂಟದಲ್ಲಿ ಆ ಸಂಸ್ಥಾನ ವಿಲೀನಗೊಳ್ಳುವಂತೆ ಮಾಡಲು ಶ್ರಮಿಸಿದರು. ವಿಲೀನಗೊಂಡ ಪ್ರದೇಶಗಳ ಪ್ರನಿನಿಧಿಯಾಗಿ ಜತ್ತಿಯವರು ಮುಂಬಯಿ ವಿಧಾನಸಭೆಗೆ ನಾಮಕರಣ ಹೊಂದಿದರು ಮತ್ತು ಅಲ್ಲಿಯ ಮುಖ್ಯಮಂತ್ರಿ ಬಿ.ಜಿ ಖೇರರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು (1948). 1952ರ ಚುನಾವಣೆಯಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾಗಿ ಆ ರಾಜ್ಯದ ಆರೋಗ್ಯ ಮತ್ತು ಕಾರ್ಮಿಕ ಉಪಮಂತ್ರಿಯಾದರು.

ಅವರು ಪುದುಚೇರಿಯ ಲೆ.ಗೌವರನರಾಗಿ ನೇಮಕವಾದ್ದು 1968ರಲ್ಲಿ. 1973ರಲ್ಲಿ ಅವರು ಒರಿಸ್ಸದ ರಾಜ್ಯಪಾಲರಾದರು. 1973-74ರಲ್ಲಿ ಆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಾಗ ಜತ್ತಿಯವರು ಅದರ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ ದೆಹಲಿಯಲ್ಲಿ ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, ನಿಜಲಿಂಗಪ್ಪನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ ನೀಲಂ ಸಂಜೀವ ರೆಡ್ಡಿಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.

ಬಸವೇಶ್ವರರ ಉಪದೇಶ ಮತ್ತು ವಿಚಾರಗಳ ಪ್ರಚಾರದ ಉದ್ದೇಶದಿಂದ ರಚಿತವಾಗಿರುವ ಬಸವ ಸಮಿತಿಗೆ ಜತ್ತಿಯವರು ಪ್ರಾರಂಭದಿಂದಲೂ ಅಧ್ಯಕ್ಷರಾಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ಅವರು ಆಧ್ಯಾತ್ಮದಲ್ಲಿ ಒಲವು ಬೆಳೆಸಿಕೊಂಡಿದ್ದಾರೆ. 

ಬಸವ ಸಮಿತಿಯು ೧೯೬೪ರಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಬಿ.ಡಿ. ಜತ್ತಿ ಅವರಿಂದ ಸ್ಥಾಪನೆಗೊಂಡು, ೧೨ನೇ ಶತಮಾನದ ಬಸವಣ್ಣವರ ಹಾಗು ಅವರ ಸಮಕಾಲೀನ ಶರಣರ ತತ್ವ ಸಂದೇಶಗಳನ್ನು ಪ್ರಪಂಚದಾದ್ಯಂತ ಸಾರುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಭಾರತದ ಮಾಜಿ ರಾಷ್ಟ್ರಪತಿ ಡಾ|| ಬಸಪ್ಪ ದಾನಪ್ಪ ಜತ್ತಿ ಅವರು ಬಸವಣ್ಣವರ ಹಾಗೂ ಶರಣರ ತತ್ವಗಳನ್ನು, ಶರಣ ಸಂಸ್ಕೃತಿಯನ್ನು ಶರಣರ ಸಮಾನತೆಯ ತತ್ವವನ್ನು ಸಾರುವ ಉದ್ದೇಶದಿಂದ ೧೯೬೪ರಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪಕ್ಷ, ಜಾತಿ ಭೇದವಿಲ್ಲದೆ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಸವ ಸಂದೇಶಗಳನ್ನು ಹಾಗೂ ಶರಣರ ತತ್ವಗಳನ್ನು ಪ್ರಚಾರ ಮಾಡುತ್ತಿದೆ.

ಬಸವ ಸಮಿತಿಯು ಶರಣರ ಸಂಸ್ಕೃತಿಯನ್ನು ಪ್ರಚಾರ ಮಾಡುವ ಮತ್ತು ಎಲ್ಲಾ ಮಾನವರ ಕಲ್ಯಾಣಕ್ಕಾಗಿ (ಉದ್ಧಾರಕ್ಕಾಗಿ) ಶರಣರ ಕೊಟ್ಟ ಸಂದೇಶಗಳನ್ನು ಕಲುಷಿತಗೊಳಿಸದೆ ಇಂದಿನ ಆಧುನಿಕ ಸಮಾಜಕ್ಕೆ ಒಪ್ಪುವಂತೆ ನವೀಕರಿಸುವ ಉದ್ದೇಶ ಹೊಂದಿದೆ.

ಅನ್ನದಾನಯ್ಯ ಪುರಾಣಿಕ,ಕೆ.ಎಂ.ನಂಜಪ್ಪ,ವೈ.ಸಿ.ಬಸಪ್ಪ,ಗಂಗಪ್ಪ,ಬಿ.ಎಸ್.ಶಂಕರಪ್ಪಶೆಟ್ಟಿ, ಪಾವಟೆ ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ ಅಖಿಲ ಭಾರತ ಬಸವ ಸಮಿತಿ ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯ ಪುರಾಣಿಕನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.

ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:

ಬಿ.ಡಿ.ಜತ್ತಿಯವರ ಆತ್ಮಕತೆ -  ನನಗೆ ನಾನೇ ಮಾದರಿ.




#Article 191: ಕೆ ಆರ್ ನಾರಾಯಣನ್ (277 words)


ಕೊಚೇರಿಲ್ ರಾಮನ್ ನಾರಾಯಣನ್ ಜುಲೈ ೨೫, ೧೯೯೭ - ಜುಲೈ ೨೪, ೨೦೦೨ರ ವರಗೆ ಭಾರತದ ರಾಷ್ಟ್ರಪತಿಯಾಗಿದ್ದರು.

ತಿರುವಾಂಕೂರು ರಾಜ್ಯದ ಪೆರುಂಥನಂ  ಹಳ್ಳಿಯಲ್ಲಿ ೨೭ ಅಕ್ಟೋಬರ್ ೧೯೨೦ರಂದು ಜನಿಸಿದ ನಾರಾಯಣನ್  ವೈದ್ಯರಾದ ರಾಮನ್ ವೈದ್ಯರ್ ಮತ್ತು ಪಾಪಿಯಮ್ಮ ದಂಪತಿಗಳಿಗೆ ೪ನೆಯ ಕೂಸು. ೪ ಫ಼ೆಬ್ರವರಿ ೧೯೨೧ರಂದು ಜನಿಸಿದ್ದರೂ, ಶಾಲಾ ದಾಖಲೆಗಳಲ್ಲಿ ೨೭ ಅಕ್ಟೋಬರ್ ೧೯೨೦ ಎಂದು ನಮೂದಿಸಲ್ಪಟ್ಟಿದೆ.

ಉಳವನೂರು ಸರ್ಕಾರಿ ಶಾಲೆ, ಕೊಟ್ಟಾಯಂ ಕಾಲೇಜುಗಳಲ್ಲಿ ಓದಿದ ನಾರಾಯಣನ್,  ತಿರುವಾಂಕೂರು  ವಿಶ್ವವಿದ್ಯಾಲಯದಲ್ಲಿ ಮೊದಲ ದರ್ಜೆಯಲ್ಲಿ ಇಂಗ್ಲೀಷ್ ಎಂ ಎ  ಪದವಿ ಪಡೆದರು. ಮೊದಲ ದಲಿತ ಪದವೀಧರ ಎಂಬ ಹೆಗ್ಗಳಿಕೆ ನಾರಾಯಣನ್‌ರದ್ದು.ದಿಲ್ಲಿಯಲ್ಲಿ ಹಿಂದೂ ಪತ್ರಿಕೆಗೆ ವರದಿಗಾರನಾಗಿಯೂ (೧೯೪೪-೪೫) ಕೆಲಸಗೈದರು.

ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿವೇತನ ನೆರವಿನಿಂದ ರಾಜ್ಯಶಾಸ್ತ್ರ  ಅಧ್ಯಯನ ಮಾಡುವಾಗ ಹೆರಾಲ್ಡ್ ಲಾರ್ಸ್ಕಿರ ನೆಚ್ಚಿನ ಶಿಷ್ಯರಾಗಿದ್ದರು. ನಾರಾಯಣನ್‌ರಿಗೆ ೧೯೪೮ರಲ್ಲಿ  ಲಾರ್ಸ್ಕಿ ಅಭಿಮಾನಪೂರ್ವಕವಾಗಿ ನೆಹರೂರಿಗೆ ಪರಿಚಯಪತ್ರವನ್ನು ಇತ್ತರು. ಅದನ್ನು ಓದಿ ಪ್ರಭಾವಿತರಾದ ನೆಹರೂ, ನಾರಾಯಣನ್‌ರನ್ನು ನೇರವಾಗಿ ಭಾರತೀಯ ವಿದೇಶಾಂಗ ಸೇವೆಗೆ ನೇಮಕ ಮಾಡಿದರು.

ಆರಂಭಿಸಿದರು ತನ್ನ ನೆಹರು ಆಡಳಿತದಲ್ಲಿ ಭಾರತೀಯ ವಿದೇಶಾಂಗ ಸೇವೆ ಸದಸ್ಯರಾಗಿ ಭಾರತದಲ್ಲಿ ವೃತ್ತಿ.  ಜಪಾನ್, ಯುನೈಟೆಡ್ ಕಿಂಗ್ಡಮ್, ಥೈಲ್ಯಾಂಡ್, ಟರ್ಕಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ರಾಯಭಾರಿಯಾಗಿ ಕಾರ್ಯ ಮತ್ತು ದೇಶದ ಅತ್ಯುತ್ತಮ ರಾಯಭಾರಿ ಎಂದು ನೆಹರೂ ಉಲ್ಲೇಖಿಸಲಾಗುತ್ತದೆ.

ನಾರಾಯಣನ್‌ ಇಂದಿರಾಗಾಂಧಿಯ ಮನವಿಯ ರಾಜಕೀಯಕ್ಕೆ ಪ್ರವೇಶಿಸಿ ಲೋಕಸಭೆಗೆ ಮೂರು ಸತತ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಡಿಯಲ್ಲಿ ಕೇಂದ್ರ ಸಂಪುಟ  ರಾಜ್ಯ ಸಚಿವ ಕಾರ್ಯನಿರ್ವಹಿಸಿದರು. ದಲಿತ ಸಮುದಾಯದ ಸದಸ್ಯ, ಹುದ್ದೆಗೆ -೧೯೯೨ ರಲ್ಲಿ ಒಂಬತ್ತನೇ ಉಪಾಧ್ಯಕ್ಷ ಆಯ್ಕೆಯಾದರು, ನಾರಾಯಣನ್ ಮೇಲೆ ೧೯೯೭ ರಲ್ಲಿ ಅಧ್ಯಕ್ಷಯಾಗಿ ಆಯ್ಕೆಯಾದರು. -

ನಾರಾಯಣನ್ ಹಲವಾರು ಆಧಾರಗಳ ಮತ್ತು ಹೆಚ್ಚಿನ ಸಾಂವಿಧಾನಿಕ ಕಚೇರಿ ವ್ಯಾಪ್ತಿಯನ್ನು ವಿಸ್ತರಿಸಿ ಸ್ವತಂತ್ರ ಮತ್ತು ಪ್ರತಿಷ್ಠಾಪನೆಯ ಅಧ್ಯಕ್ಷ ಪರಿಗಣಿಸಲಾಗಿದೆ. ಅವರು ಸಂವಿಧಾನದ ನಾಲ್ಕು ಮೂಲೆಗಳಲ್ಲಿ ಒಳಗೆ ಕೆಲಸ ಮಾಡಿದ ಒಂದು ಕೆಲಸ ಅಧ್ಯಕ್ಷ ಎಂದು ಬಣ್ಣಿಸಿಕೊಂಡಿದ್ದಾರೆ; ಮಿಡ್ವೇ ನೇರ ಶಕ್ತಿ ಮತ್ತು ಪ್ರಶ್ನೆ ಅಥವಾ ವಿವೇಚನೆ ಇಲ್ಲದೆ ಸರ್ಕಾರದ ನಿರ್ಧಾರಗಳನ್ನು ಸೂಚಿಸಿತು ಒಬ್ಬ ರಬ್ಬರ್ ಸ್ಟ್ಯಾಂಪ್ಗಳನ್ನು ಅಧ್ಯಕ್ಷ ಹೊಂದಿರುವ ಒಂದು ಕಾರ್ಯನಿರ್ವಾಹಕ ಅಧ್ಯಕ್ಷ ನಡುವೆ ಏನೋ.  ಅವರು ಅಧ್ಯಕ್ಷರಾಗಿ ತಮ್ಮ ವಿವೇಚನೆಗೆ ಅಧಿಕಾರವನ್ನು ಬಳಸಲಾಗುತ್ತದೆ ಮತ್ತು ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಮಾವೇಶ ಹಾಗೂ ಪೂರ್ವನಿದರ್ಶನವನ್ನು ವಿಪಥವಾಗಿವೆ - ಆದರೆ ಸೀಮಿತವಾಗಿಲ್ಲ - ರಾಜ್ಯ ಸರಕಾರವು ಔಟ್ ಮತ್ತು ಸಲಹೆ ಇಲ್ಲ ರಾಷ್ಟ್ರಪತಿ ಆಡಳಿತ ಹೇರುವ, ಒಂದು ತೂಗುಯ್ಯಾಲೆಯ ಸಂಸತ್ತನ್ನು ಪ್ರಧಾನಿ ನೇಮಕ ಕೇಂದ್ರ ಸಚಿವ ಸಂಪುಟ ಮತ್ತು ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ. ಭಾರತೀಯ ಸ್ವಾತಂತ್ರ್ಯ ಗೋಲ್ಡನ್ ಜುಬಿಲಿ ಆಚರಣೆಯ ಅಧ್ಯಕ್ಷತೆ ಮತ್ತು ೧೯೯೮ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಮತ್ತೊಂದು ಹೊಸ ದೃಷ್ಟಾಂತವಾಗಿ, ಯಾವಾಗ ಕಛೇರಿಯಲ್ಲಿ  ಮೊಟ್ಟ ಮೊದಲ ಭಾರತೀಯ ಅಧ್ಯಕ್ಷರಾದರು.




#Article 192: ಗೂಗಲ್ (952 words)


ಗೂಗಲ್ ಇಂಕ್ ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುವ ವಿಶೇಷ ಅಮೆರಿಕನ್ ಬಹುರಾಷ್ಟ್ರೀಯ ನಿಗಮವಾಗಿದೆ. ಈ ಸಂಸ್ಥೆಯು ಹುಡುಕಾಟ, ಕ್ಲೌಡ್ ಕಂಪ್ಯೂಟಿಂಗ್, ತಂತ್ರಾಂಶ ಮತ್ತು ಆನ್ಲೈನ್ ಜಾಹೀರಾತು ತಂತ್ರಜ್ಞಾನಗಳು ಒಳಗೊಂಡಿವೆ. ಇದರ ಲಾಭ ಬಹಳಷ್ಟು ಆಡ್ ವರ್ಡ್ಸ್ ನಿಂದ ಪಡೆಯಲು ಅವರು ಡಿ ಸಮಯದಲ್ಲಿ ಗೂಗಲ್ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಸ್ಥಾಪಿಸಿದರು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಒಟ್ಟಾಗಿ ಅವರು ತನ್ನ ಪಾಲನ್ನು 16 ರಷ್ಟು ಸ್ವಂತ. ಅವರು ಸೆಪ್ಟೆಂಬರ್ 4, 1998 ರಂದು ಒಂದು ಖಾಸಗಿ ಕಂಪನಿ ಗೂಗಲ್ ಸಂಘಟಿತ. ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ ಆಗಸ್ಟ್ 19, 2004 ರಂದು ಆರಂಭಿಸಲಾಯಿತು. ಪ್ರಾರಂಭದಿಂದಲೇ ತನ್ನ ಧ್ಯೇಯವು ವಿಶ್ವದ ಮಾಹಿತಿ ಸಂಘಟಿಸಲು ಮತ್ತು ಇದು ಸಾರ್ವತ್ರಿಕವಾಗಿ ಸುಲಭವಾಗಿ ಮತ್ತು ಉಪಯುಕ್ತ ಮಾಡಲು, ಮತ್ತು ಅದರ ಅನಧಿಕೃತ ಘೋಷಣೆ ದುಷ್ಟ ಬೇಡಿ ಎಂಬುದಾಗಿತ್ತು. 2006ರಲ್ಲಿ ಗೂಗಲ್ ಕ್ಯಾಲಿಫೋರ್ನಿಯಾದ ಮೌಂಟನ್‌ವ್ಯೂ‌ನಲ್ಲಿ ಪ್ರಧಾನ ತೆರಳಿದರು. ಏಕೀಕರಣಕ್ಕಾಗಿ ರಿಂದ ಕ್ಷಿಪ್ರ ಬೆಳವಣಿಗೆಯನ್ನು ಉತ್ಪನ್ನಗಳು, ಸ್ವಾಧೀನಗಳು, ಮತ್ತು ಗೂಗಲ್ನ ಪ್ರಮುಖ ಹುಡುಕಾಟ ಎಂಜಿನ್ ಮೀರಿ ಪಾಲುದಾರಿಕೆ ಒಂದು ಸರಣಿ ಹಾಕಿತು. ಇದು ಇಮೇಲ್, ಒಂದು ಆಫೀಸ್ ಸೂಟ್, ಮತ್ತು ಸಾಮಾಜಿಕ ನೆಟ್ವರ್ಕಿಂಗ್ ಸೇರಿದಂತೆ ಆನ್ಲೈನ್ ಉತ್ಪಾದನೆ ಸಾಫ್ಟ್ವೇರ್ ನೀಡುತ್ತದೆ. ಡೆಸ್ಕ್ಟಾಪ್ ಉತ್ಪನ್ನಗಳು ವೆಬ್ ಬ್ರೌಸಿಂಗ್, ಸಂಘಟಿಸುವ ಹಾಗೂ ಸಂಪಾದಿಸುವ ಫೋಟೋಗಳನ್ನು, ಮತ್ತು ಇನ್ಸ್ಟೆಂಟ್ ಮೆಸೇಜಿಂಗ್ ಅರ್ಜಿಗಳನ್ನು ಸೇರಿವೆ. ಕಂಪನಿ ಆಂಡ್ರಾಯ್ಡ್ ಮೊಬೈಲ್ ಆಪರೇಟಿಂಗ್ ವ್ಯವಸ್ಥೆಯ ಅಭಿವೃದ್ಧಿ ಮತ್ತು ಒಂದು Chromebook ಎಂದು ನೆಟ್ಬುಕ್ ಒಂದು ವಿಶೇಷ ಮಾದರಿ ಬ್ರೌಸರ್ ಕೇವಲ ಗೂಗಲ್ ಕ್ರೋಮ್ ಒಎಸ್ ಕಾರಣವಾಗುತ್ತದೆ. ಗೂಗಲ್ ಸಂಪರ್ಕ ಯಂತ್ರಾಂಶ ನೊಳಕ್ಕೆ ಸಾಗಿದ್ದು, ಅದರ ಉನ್ನತ ನೆಕ್ಸಸ್ ಸಾಧನಗಳ ಉತ್ಪಾದನೆಯಲ್ಲಿ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಕರೊಂದಿಗೆ ಪಾಲುದಾರರು ಮತ್ತು ಮೇ 2012 ರಲ್ಲಿ ಮೊಟೊರೊಲಾ ಮೊಬಿಲಿಟಿ ಸ್ವಾಧೀನಪಡಿಸಿಕೊಂಡಿತು. 2012 ರಲ್ಲಿ, ಒಂದು ಫೈಬರ್ ಆಪ್ಟಿಕ್ ಮೂಲಸೌಕರ್ಯ ಒಂದು ಗೂಗಲ್ ಫೈಬರ್ ಬ್ರಾಡ್ಬ್ಯಾಂಡ್ ಸೇವೆ ಸುಲಭಗೊಳಿಸಲು ಕಾನ್ಸಾಸ್ ಸಿಟಿ ರಲ್ಲಿ ಸ್ಥಾಪಿಸಲಾಯಿತು. ನಿಗಮದ ವಿಶ್ವದಾದ್ಯಂತ ದಶಮಾಂಶ ಕೇಂದ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಮಿಲಿಯನ್ ಸರ್ವರ್ಗಳನ್ನು ಚಾಲನೆ ಮಾಡಲು ಅಂದಾಜಿಸಲಾಗಿದೆ ಮತ್ತು ಪ್ರತಿ ದಿನ ಬಳಕೆದಾರ ರಚಿಸಿದ ದತ್ತಾಂಶದ ಬಿಲಿಯನ್ ಮೇಲೆ ಹುಡುಕಾಟ ವಿನಂತಿಗಳನ್ನು ಮತ್ತು ಸುಮಾರು ಇಪ್ಪತ್ತನಾಲ್ಕು ಪೇಟಬೈಟ್ಗಳು ಪ್ರಕ್ರಿಯೆಗೊಳಿಸಲು. ವಿಶ್ವದಲ್ಲೇ ಅತಿ ಹೆಚ್ಚು ಸಂದರ್ಶಿತ ವೆಬ್ಸೈಟ್ ಮಾಹಿತಿ ಡಿಸೆಂಬರ್ 2012 ಅಲೆಕ್ಸಾ ಪಟ್ಟಿ google.com ರಲ್ಲಿ. ಟಾಪ್ ನೂರು ಇತರ ಭಾಷೆಗಳು ಆಕೃತಿ, ಹಲವಾರು ಗೂಗಲ್  ಸೈಟ್ಗಳಲ್ಲಿ ನಂತಹ ಯೂಟ್ಯೂಬ್ ಮತ್ತು ಬ್ಲಾಗರ್ ಹಲವಾರು ಇತರ ಗೂಗಲ್  ಸ್ವಾಮ್ಯದ ತಾಣಗಳು ಹಾಗೆ. ಗೂಗಲ್ BrandZ ಬ್ರ್ಯಾಂಡ್ ಇಕ್ವಿಟಿ ಡೇಟಾಬೇಸ್ ಎರಡನೇ ಸ್ಥಾನದಲ್ಲಿದೆ. ಇದರ ಮಾರುಕಟ್ಟೆಯ ಪ್ರಭುತ್ವವನ್ನು ಹಕ್ಕುಸ್ವಾಮ್ಯ, ಸೆನ್ಸಾರ್ಶಿಪ್, ಮತ್ತು ಗೌಪ್ಯತೆ ಸೇರಿದಂತೆ ಸಮಸ್ಯೆಗಳನ್ನು ಪ್ರತಿ ಟೀಕೆಗೆ ಕಾರಣವಾಗಿದೆ.ಆದರೆ ಇತ್ತೀಚೆಗಷ್ಟೇ www.ಗೂಗಲ್.com ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಪ್ರವೀಣ್ ಪಟೇಲ್ ಎಂಬುವವರಿಗೆ ಸೇರಿದೆ.

ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್  ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಎಂಬ ಪಿ.ಹೆಚ್.ಡಿ. ವಿದ್ಯಾರ್ಥಿಗಳ ಸಂಶೋಧನೆಯ ಫಲವಾಗಿದೆ. ಇವರ ಈ ಪ್ರೊಜೆಕ್ಟ್ 2002 ರ ಮಾರ್ಚ್ ನಲ್ಲಿ ಆರಂಭವಾಯಿತು.
ಸಾಂಪ್ರದಾಯಿಕ ಹುಡುಕಾಟ ಎಂಜಿನ್ ಹುಡುಕಾಟ ಪದಗಳನ್ನು ಪುಟ ಕಾಣಿಸಿಕೊಂಡರು ಎಷ್ಟು ಬಾರಿ ಎಣಿಸುವ ಮೂಲಕ ಫಲಿತಾಂಶಗಳನ್ನು ಸ್ಥಾನ, ಎರಡು ಜಾಲತಾಣಗಳಲ್ಲಿ ಸಂಬಂಧಗಳನ್ನು ವಿಶ್ಲೇಷಿಸಿ ಒಂದು ಉತ್ತಮ ವ್ಯವಸ್ಥೆ ಬಗ್ಗೆ ಸಿದ್ಧಾಂತ. ಈ ಹೊಸ ತಂತ್ರಜ್ಞಾನವನ್ನು ಪೇಜ್ರ್ಯಾಂಕ್ ಎಂದು; ಇದು ಪುಟಗಳ ಸಂಖ್ಯೆಯಿಂದ ಒಂದು ವೆಬ್ಸೈಟ್ ಪ್ರಸ್ತುತತೆ ನಿರ್ಧರಿಸುತ್ತದೆ, ಮತ್ತು ಆ ಪುಟಗಳು ಪ್ರಾಮುಖ್ಯತೆಯನ್ನು, ಮೂಲ ಸೈಟ್ ಮರಳಿ ಸಂಪರ್ಕಿಸುತ್ತದೆ. ರಾಬಿನ್ ಲಿ ವಿನ್ಯಾಸಗೊಳಿಸಿದ IDD ಮಾಹಿತಿ ಸೇವೆಗಳು ನಿಂದ ರಾಂಕ್ ಡೆಕ್ಸ್ ಎಂಬ ಒಂದು ಸಣ್ಣ ಹುಡುಕಾಟ ಎಂಜಿನ್ ಈಗಾಗಲೇ ಸೈಟ್ ಅಂಕ ಮತ್ತು ಪುಟ ಶ್ರೇಣೀಕೃತವಾಗಲು ಇದೇ ತಂತ್ರ ಅನ್ವೇಷಿಸುವ, 1996 ರಿಂದ, ಆಗಿತ್ತು. ಲಿ ಚೀನಾ ರಲ್ಲಿ ಬೈದು ಸ್ಥಾಪಿಸಿದಾಗ ರಾಂಕ್ ಡೆಕ್ಸ್ ತಂತ್ರಜ್ಞಾನ ನಂತರ ಪೇಟೆಂಟ್ ಮತ್ತು ಬಳಸಲಾಗುತ್ತದೆ. ವ್ಯವಸ್ಥೆಯ ಒಂದು ಸೈಟ್ ಪ್ರಾಮುಖ್ಯತೆಯನ್ನು ಅಂದಾಜು ಮಾಡಲು ಬ್ಯಾಕ್ಲಿಂಕ್ ಪರೀಕ್ಷಿಸಿದ್ದು ಏಕೆಂದರೆ ಪೇಜ್ ಮತ್ತು ಬ್ರಿನ್ ಮೂಲತಃ, ತಮ್ಮ ಹೊಸ ಸರ್ಚ್ ಇಂಜಿನ್ ಬ್ಯಾಕ್ರಬ್ ಅಡ್ಡಹೆಸರು.
ಅಂತಿಮವಾಗಿ, ಅವರು ಗೂಗಾಲ್ ಮಾಹಿತಿಯನ್ನು ಪ್ರಮಾಣದಲ್ಲಿ, ಅಂದರೆ ಪದದ ತಪ್ಪು ಹುಟ್ಟಿದೆ, ಗೂಗಲ್ಗೆ ಹೆಸರು ಬದಲಾಯಿಸಲಾಯಿತು. ಮೂಲತಃ, ಗೂಗಲ್ ಡೊಮೇನ್ಗಳ google.stanford.edu ಮತ್ತು z.stanford.edu ಜೊತೆ, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿ ವೆಬ್ಸೈಟ್ ಅಡಿಯಲ್ಲಿ ನಡೆಯಿತು. 
ಗೂಗಲ್ ಡೊಮೇನ್ ಹೆಸರನ್ನು ಸೆಪ್ಟೆಂಬರ್ 15, 1997 ರಂದು ನೋಂದಾಯಿಸಲಾಗುತ್ತಿತ್ತು ಮತ್ತು ಕಂಪನಿ ಸೆಪ್ಟೆಂಬರ್ 4, 1998 ರಲ್ಲಿ ಸಂಘಟಿತವಾಯಿತು. ಇದು ನೆಲೆಗೊಂಡಿತ್ತು ಒಂದು ಸ್ನೇಹಿತನ (ಸೂಸನ್ Wojcicki) ಮೆನ್ಲೋ ಪಾರ್ಕ್, ಕ್ಯಾಲಿಫೋರ್ನಿಯಾದ ಗ್ಯಾರೇಜ್. ಕ್ರೆಗ್ ಸಿಲ್ವರ್ಸ್ಟೇನ್ ಸ್ಟಾನ್ಫೋರ್ಡ್ ಒಂದು ಸಹವರ್ತಿ ಪಿಎಚ್ಡಿ ವಿದ್ಯಾರ್ಥಿ, ಮೊದಲ ಉದ್ಯೋಗಿ ನೇಮಕಗೊಂಡನು.
ಮೇ 2011 ರಲ್ಲಿ, ಗೂಗಲ್ ಗೆ ಮಾಸಿಕ ವಿಶಿಷ್ಟ ಸಂದರ್ಶಕರ ಸಂಖ್ಯೆ ಮೊದಲ ಬಾರಿಗೆ ಒಂದು ಶತಕೋಟಿ, ಮೇ 2010 ರಿಂದ 8.4 ಪ್ರತಿಶತ ಏರಿಕೆ (931 ಮಿಲಿಯನ್) ಮೀರಿಸಿತು. ಜನವರಿ 2013 ರಲ್ಲಿ, ಗೂಗಲ್, 2012 ರ ವರ್ಷದಲ್ಲಿ ವಾರ್ಷಿಕ ಆದಾಯ $ 50 ಬಿಲಿಯನ್ ಗಳಿಸಿದ ಘೋಷಿಸಿತು. ಈ $ 38 ಬಿಲಿಯನ್ ತಮ್ಮ 2011 ಒಟ್ಟು ಅಗ್ರ ಕಂಪನಿಯು ಈ ಸಾಧನೆ ತಲುಪಿತು ಮೊದಲ ಬಾರಿಗೆ.

ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್.

ಸೆಪ್ಟೆಂಬರ್ ೪, ೧೯೯೮

ಲಾರಿ ಪೇಜ್, ಸರ್ ಜೇ ಬ್ರಿನ್
ಈತ ಹುಟ್ಟಿದ್ದು  ಮಾಚ್೯ 26, 1973ರಂದು. ಈತ ಗಣಕಯಂತ್ರ ವಿಜ್ಞಾನಿ ಮತ್ತು ಅಂತರ್ ಜಾಲ ಉದ್ಯಮಿ. ಇವರು ೧೯೯೮ರ ಸಪ್ಟೇಮರ್ ೪ರಂದು ಗೂಗಲ್ ಸ್ಥಾಪನೆ ಮಾಡಿದರು.

೫೩೫೪೬(೨೦೧೨/೪)

ಗೂಗಲ್ ಹುಡುಕಾಟ, ಅಂತರಜಾಲ ಹುಡುಕಾಟ ಯಂತ್ರ, ಕಂಪನಿಯ ಅತ್ಯಂತ ಜನಪ್ರಿಯ ಸೇವೆಯಾಗಿದೆ. ನವೆಂಬರ್ 2009 ರಲ್ಲಿ ಕಾಮ್ಸ್ಕೋರ್ ಪ್ರಕಟಿಸಿದ ಮಾರುಕಟ್ಟೆ ಸಂಶೋಧನೆ ಪ್ರಕಾರ, ಗೂಗಲ್ 65.6% ನಷ್ಟಿರುವ ಒಂದು ಮಾರುಕಟ್ಟೆ ಪಾಲನ್ನು ಹೊಂದಿದೆ, ಯುನೈಟೆಡ್ ಸ್ಟೇಟ್ಸ್ ಮಾರುಕಟ್ಟೆಯಲ್ಲಿ ಪ್ರಬಲ ಸರ್ಚ್ ಎಂಜಿನ್ ಆಗಿದೆ. ಬಳಕೆದಾರರು ಅವರು ಕೀವರ್ಡ್ಗಳನ್ನು ಮತ್ತು ನಿರ್ವಾಹಕರು ಬಳಕೆಯ ಮೂಲಕ ಆಸೆ ಮಾಹಿತಿ ಹುಡುಕಬಹುದು ಆದ್ದರಿಂದ ಗೂಗಲ್ ಸೂಚಿಕೆಗಳನ್ನು ವೆಬ್ ಪುಟಗಳ ಶತಕೋಟಿ. 
ಅದರ ಜನಪ್ರಿಯತೆಯ ಹೊರತಾಗಿಯೂ, ಇದು ಸಂಸ್ಥೆಗಳ ಸಂಖ್ಯೆ ಟೀಕೆಗೊಳಗಾದನು. 2003 ರಲ್ಲಿ, ನ್ಯೂಯಾರ್ಕ್ ಟೈಮ್ಸ್ ತನ್ನ ಸೈಟ್ ವಿಷಯವನ್ನು Google ನ ಹಿಡಿದಿಟ್ಟುಕೊಳ್ಳುವ ವಿಷಯವನ್ನು ತನ್ನ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಗೂಗಲ್ನ ಅನುಕ್ರಮಣಿಕೆ ಬಗ್ಗೆ ದೂರು. ಈ ಸಂದರ್ಭದಲ್ಲಿ, ನೆವಾಡಾ ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ಟ್ ಕೋರ್ಟ್ ಫೀಲ್ಡ್ ವಿ ಗೂಗಲ್ ಮತ್ತು ಪಾರ್ಕರ್ ವಿ ಗೂಗಲ್ ಗೂಗಲ್ ಪರವಾಗಿ ಆಳ್ವಿಕೆ. ಇದಲ್ಲದೆ, ಪ್ರಕಟಣೆ 2600: ಹ್ಯಾಕರ್ ಕ್ವಾರ್ಟರ್ಲಿ ವೆಬ್ ದೈತ್ಯ ಹೊಸ ತ್ವರಿತ ಹುಡುಕಾಟ ವೈಶಿಷ್ಟ್ಯವನ್ನು ಅನೂಶೋಧಿಸಲು ಆಗುವುದಿಲ್ಲ ಎಂದು ಪದಗಳ ಪಟ್ಟಿ ಮಾಡಿದ್ದಾನೆ. ಗೂಗಲ್ ವಾಚ್ ಅವರು ಹೊಸ ವೆಬ್ಸೈಟ್ಗಳು ಮತ್ತು ಪರವಾಗಿ ಸ್ಥಾಪಿಸಲಾಯಿತು ಸೈಟ್ಗಳು ಭೇದಭಾವವನ್ನು ಎಂದು, ಗೂಗಲ್ ಪೇಜ್ರ್ಯಾಂಕ್ ಕ್ರಮಾವಳಿ ಟೀಕಿಸಿದ್ದಾರೆ. ಸೈಟ್ ಗೂಗಲ್ ಮತ್ತು ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (NSA) ಮತ್ತು ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (CIA) ನಡುವಿನ ಸಂಬಂಧಗಳು ಇವೆ ಎಂದು ಬಂದಿದೆ. ಈ ಟೀಕೆಯ ಹೊರತಾಗಿಯು, ಮೂಲ ಹುಡುಕಾಟ ಎಂಜಿನ್ ಒಂದು ಇಮೇಜ್ ಹುಡುಕಾಟ ಎಂಜಿನ್, ಗೂಗಲ್ ನ್ಯೂಸ್ ಹುಡುಕು ಸೈಟ್, ಗೂಗಲ್ ನಕ್ಷೆಗಳು, ಮತ್ತು ಹೆಚ್ಚು ಸೇರಿದಂತೆ, ಜೊತೆಗೆ ನಿಗದಿತ ಸೇವೆಗಳನ್ನು ಹರಡಿತು. 2006 ರ ಆರಂಭದಲ್ಲಿ, ಕಂಪನಿಯ ಬಳಕೆದಾರರು ಅಪ್ಲೋಡ್ ಮಾಡಲು ಅವಕಾಶ ಇದು ಗೂಗಲ್ ವೀಡಿಯೊ, ಹುಡುಕು, ಬಿಡುಗಡೆ ಮತ್ತು ಇಂಟರ್ನೆಟ್ ವೀಡಿಯೊಗಳನ್ನು ವೀಕ್ಷಿಸಲು. ಗೂಗಲ್ ಸೇವೆಯ ಹುಡುಕಾಟ ವಿಷಯದ ಮೇಲೆ ಹೆಚ್ಚು ಗಮನ ಪರದೆಯಿಂದ 2009 ರಲ್ಲಿ, ಆದರೆ, ಗೂಗಲ್ ವೀಡಿಯೊ ಅಪ್ಲೋಡ್ ನಿಲ್ಲಿಸಲಾಯಿತು. ಕಂಪನಿಯನ್ನು ಗೂಗಲ್ ಡೆಸ್ಕ್ಟಾಪ್, ಒಬ್ಬರ ಕಂಪ್ಯೂಟರ್ಗೆ ಸ್ಥಳೀಯ ಕಡತಗಳನ್ನು ಹುಡುಕಲು ಬಳಸುವ ಎ ಡೆಸ್ಕ್ಟಾಪ್ ಹುಡುಕಾಟ ಅಪ್ಲಿಕೇಶನ್ ಅಭಿವೃದ್ಧಿ ಆದರೆ ಇದು 2011 ರಲ್ಲಿ ನಿಲ್ಲಿಸಲಾಯಿತು. ಹುಡುಕಾಟ ಗೂಗಲ್ನ ಅತ್ಯಂತ ಇತ್ತೀಚಿನ ಅಭಿವೃದ್ಧಿ ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಮತ್ತು ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಬಗ್ಗೆ ಮಾಹಿತಿ ಉಚಿತ ಪ್ರವೇಶವನ್ನು ಒದಗಿಸುತ್ತದೆ ಗೂಗಲ್ ಸ್ವಾಮ್ಯಗಳು, ರಚಿಸಲು ಟ್ರೇಡ್ಮಾರ್ಕ್ ಆಫೀಸ್ ತನ್ನ ಸಹಯೋಗವನ್ನು ಹೊಂದಿದೆ. ಹೆಚ್ಚು ವಿವಾದಾತ್ಮಕ ಹುಡುಕು ಸೇವೆಗಳು ಗೂಗಲ್ ಆತಿಥೇಯರು ಒಂದು ಗೂಗಲ್ ಪುಸ್ತಕಗಳು. ಕಂಪನಿ ಅವಕಾಶ ಅಲ್ಲಿ ತನ್ನ ಹೊಸ ಪುಸ್ತಕ ಹುಡುಕಾಟ ಎಂಜಿನ್ ಒಳಗೆ, ಪುಸ್ತಕಗಳು ಮತ್ತು ಅಪ್ಲೋಡ್ ಸೀಮಿತ ಮುನ್ನೋಟಗಳು, ಮತ್ತು ಪೂರ್ಣ ಪುಸ್ತಕಗಳು ಸ್ಕ್ಯಾನಿಂಗ್ ಆರಂಭಿಸಿದರು. ಲೇಖಕರು ಗಿಲ್ಡ್, 8,000 ಅಮೇರಿಕಾದ ಲೇಖಕರು ಪ್ರತಿನಿಧಿಸುವ ಎ ಗುಂಪು, ಈ ಸೇವೆಯನ್ನು 2005 ರ ಗೂಗಲ್ ವಿರುದ್ಧ ನ್ಯೂಯಾರ್ಕ್ ಸಿಟಿ ಫೆಡರಲ್ ನ್ಯಾಯಾಲಯದಲ್ಲಿ ಎ ಕ್ಲಾಸ್ ಆಕ್ಷನ್ ದಾವೆಯನ್ನು ಹೂಡಿತು. ಗೂಗಲ್ ಪುಸ್ತಕಗಳು ಬಗ್ಗೆ ಹಕ್ಕುಸ್ವಾಮ್ಯ ಕಾನೂನುಗಳು ಎಲ್ಲಾ ಅಸ್ತಿತ್ವದಲ್ಲಿರುವ ಮತ್ತು ಐತಿಹಾಸಿಕ ಅನ್ವಯಗಳೊಂದಿಗೆ ಅನುಸರಣೆ ಎಂದು ಉತ್ತರಿಸಿದರು. ಗೂಗಲ್ ಅಂತಿಮವಾಗಿ ಅಮೇರಿಕಾದ, ಬ್ರಿಟನ್, ಆಸ್ಟ್ರೇಲಿಯಾ, ಮತ್ತು ಕೆನಡಾದಿಂದ ಪುಸ್ತಕಗಳು ತನ್ನ ಸ್ಕ್ಯಾನ್ ಸೀಮಿತಗೊಳಿಸಲು 2009 ರಲ್ಲಿ ಎ ಪರಿಷ್ಕೃತ ಒಪ್ಪಂದಕ್ಕೆ.. ಇದಲ್ಲದೆ, ಪ್ಯಾರಿಸ್ ಸಿವಿಲ್ ನ್ಯಾಯಾಲಯವು ತನ್ನ ದತ್ತಸಂಚಯದಿಂದ ಲಾ ಮಾರ್ಟಿನೇರ್ (ಎಡಿಶನ್ಸ್ ಡು ಸೆವಿಲ್) ಕೃತಿಗಳಲ್ಲಿ ತೆಗೆದು ಅದನ್ನು ಕೇಳುವ, 2009 ರ ಕೊನೆಯಲ್ಲಿ ಗೂಗಲ್ ವಿರುದ್ಧ ಆಳ್ವಿಕೆ. Amazon.com ಜೊತೆಗೆ ಸ್ಪರ್ಧೆಯಲ್ಲಿ, ಗೂಗಲ್ ಹೊಸ ಪುಸ್ತಕಗಳ ಡಿಜಿಟಲ್ ಆವೃತ್ತಿಗಳನ್ನು ಮಾರುತ್ತದೆ. ಜುಲೈ 21, 2010 ರಂದು, ಹೊಸದಾಗಿ ಬಿಂಗ್ ಪ್ರತಿಕ್ರಿಯೆಯಾಗಿ, Google ನಲ್ಲಿ ಗುರುತಿಸಿದಾಗ ದೊಡ್ಡದು ಎಂದು ಚಿಕ್ಕಚಿತ್ರಗಳನ್ನು ಒಂದು ಸ್ಟ್ರೀಮಿಂಗ್ ಸರಣಿಯನ್ನು ಪ್ರದರ್ಶಿಸಲು ತನ್ನ ಇಮೇಜ್ ಹುಡುಕಾಟ ಅಪ್ಡೇಟ್ಗೊಳಿಸಲಾಗಿದೆ. ವೆಬ್ ಹುಡುಕಾಟ ಇನ್ನೂ ಜುಲೈ 23, 2010 ರಂದು, ಪುಟ ರೂಪದಲ್ಲಿ ಪ್ರತಿ ಬ್ಯಾಚ್ ಕಂಡುಬರುವ ಸಹ, ಕೆಲವು ಇಂಗ್ಲೀಷ್ ಪದಗಳನ್ನು ನಿಘಂಟು ವ್ಯಾಖ್ಯಾನಗಳು ವೆಬ್ ಹುಡುಕಾಟಕ್ಕಾಗಿ ಸಂಪರ್ಕ ಫಲಿತಾಂಶಗಳು ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಗೂಗಲ್ನ ಗಣನೆಯು ಬಹುಶಃ ಸ್ಪನ್ ವಿಷಯವನ್ನು ತೆಗೆದುಹಾಕಲು N-ಗ್ರಾಂ ಬಳಕೆಯಿಂದ ಅಧಿಕ ಗುಣಮಟ್ಟದ ವಿಷಯಕ್ಕೆ ಹೆಚ್ಚು ಒತ್ತು ನೀಡುವ, ಮಾರ್ಚ್ 2011 ರಲ್ಲಿ ಬದಲಾಯಿಸಲಾಯಿತು.




#Article 193: ಸುನಿಲ್ ದತ್ (192 words)


ಸುನಿಲ್ ದತ್ (ಜೂನ್ ೬, ೧೯೨೯ ndash; ಮೇ ೨೫, ೨೦೦೫)  ಭಾರತೀಯ ನಟ, ರಾಜಕಾರಣಿ. ಬಾಲಿವುಡ್ ಎಂದೇ ಖ್ಯಾತವಾದ ಹಿಂದಿ ಚಿತ್ರರಂಗದಲ್ಲಿ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರಸ್ತುತ ಮನಮೋಹನ್ ಸಿಂಗ್ ನಾಯಕತ್ವದ ಸರಕಾರದಲ್ಲಿ  ಕೇಂದ್ರ ಮಂತ್ರಿಯಾಗಿ ಕ್ರೀಡೆ ಹಾಗೂ ಯುವಜನ ಖಾತೆಯನ್ನು ವಹಿಸಿಕೊಂಡಿದ್ದರು.

೧೯೨೯ರಲ್ಲಿ ಖರ್ಡ್ ಹಳ್ಳಿಯಲ್ಲಿ (ಇಂದಿನ ಪಾಕಿಸ್ತಾನ, ಅಂದಿನ ಭಾರತ) ಹುಟ್ಟಿದ ಇವರು ೧೯೪೭ರಲ್ಲಿ ಭಾರತದ ವಿಭಜನೆಯಾದ ನಂತರ ಹುಟ್ಟೂರನ್ನು ತೊರೆದರು. ಇವರು ವಿದ್ಯಾಭ್ಯಾಸ ಮಾಡಿದ್ದು ಮುಂಬೈನ ಜಯ್ ಹಿಂದ್ ಕಾಲೇಜಿನಲ್ಲಿ.

ಹಿಂದಿ ಚಿತ್ರರಂಗದಲ್ಲಿ ಅಪಾರ ಯಶಸ್ಸು ಪಡೆದಿದ್ದ ನಟಿ ನರ್ಗಿಸ್ ಜೊತೆ ಮದರ್ ಇಂಡಿಯಾ ಚಿತ್ರದಲ್ಲಿ ಆಕೆಯ ಮಗನ ಪಾತ್ರದಲ್ಲಿ ಸುನಿಲ್ ದತ್ ನಟಿಸಿದರು.  ಸುನಿಲ್ ದತ್ ಮತ್ತು ನರ್ಗಿಸ್ ೧೧-೦೩-೧೯೫೮ರಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳು. ಮಗ ಸಂಜಯ್ ದತ್ ಕೂಡ ಬಾಲಿವುಡ್ ತಾರೆ. ಸುನಿಲ್ ದತ್ ೨೫-೦೫-೨೦೦೫ರಂದು ಬಾಂದ್ರಾ, ಮುಂಬೈನಲ್ಲಿ ಹೃದಯಾಘಾತದಿಂದ ನಿದ್ರೆಯಲ್ಲಿಯೇ ಮರಣ ಹೊಂದಿದರು.

ಆಕಾಶವಾಣಿಯಲ್ಲಿ ಕೆಲಸ ಪ್ರಾರಂಭಿಸಿದ ಇವರು ಹಿಂದಿ ಸಿನೆಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು. ೧೯೫೬ರ ಹೊತ್ತಿಗೆ ಯಶಸ್ವಿ ನಟರಾದರು. ಮದರ್ ಇಂಡಿಯಾ ಚಿತ್ರದಲ್ಲಿ ಶ್ರೀಮಂತ ಜಮೀನುದಾರನ ವಿರುದ್ಧ ಬಂಡಾಯ ಹೂಡುವ ಬಡರೈತನ ಮಗನಾಗಿ ಕಾಣಿಸಿಕೊಂಡರು. ತಮ್ಮ ಪಾತ್ರದಲ್ಲಿ ಅತ್ಯಂತ ಸಹಜವಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಮುಂದೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಜನಪ್ರಿಯ ನಟರಾದರು. ಪಡೋಸನ್ ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ನಟಿಸಿ ಜನಮನವನ್ನು ಗೆದ್ದರು. ರೇಷ್ಮಾ ಔರ್ ಶೇರಾ ಚಿತ್ರದಲ್ಲಿ ಬಹಳ ಗಂಭೀರ ಪಾತ್ರವನ್ನೂ ಅಷ್ಟೇ ಸಹಜವಾಗಿ ನಿರ್ವಹಿಸಿದರು. ಪ್ರಖ್ಯಾತ ಬಾಲಿವುಡ್ ನತಿಯರಾದ ಆಶಾ ಪರೇಖ್, ವಹೀದಾ ರಹಮಾನ್, ಸಾಧನಾ, ಸಾಯಿರಾ ಬಾನು ಮೊದಲಾದವರ ಜೊತೆ ನಟಿಸಿದ್ದಾರೆ.

೧೯೮೪ರಲ್ಲಿ ಇವರು ಕಾಂಗ್ರೆಸ್ (ಐ) ಪಕ್ಷವನ್ನು ಸೇರಿದರು, ಹಾಗೂ ಮುಂಬೈನ ವಾಯುವ್ಯ ಚುನಾವಣಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಸಾಧಿಸಿ ಬಂದರು.

ಸಮಕಾಲೀನ ನಟರು: ನರ್ಗೀಸ್, ಜಾನಿ ವಾಲ್ಕರ್, ವಹೀದಾ ರಹ್ಮಾನ್, ಸಾಧನಾ, ಮೀನಾ ಕುಮಾರಿ, ನೂತನ್




#Article 194: ಷಟ್ಪದಿ (296 words)


ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ.
ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.ಉದ್ದಂಡ ಷಟ್ಪದಿ ಎಲ್ಲಾ ಷಟ್ಪದಿಗಳಿಂದ ಬೇರೆಯಾಗಿದೆ.

ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ಪ್ರಥಮವಾಗಿ ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. 
ಕುಮಾರವ್ಯಾಸನ 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ   ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ.
ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ.

ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು. 

ಇವುಗಳಲ್ಲಿ ಭಾಮಿನೀ ಷಟ್ಪದಿ ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ  ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:

 ವೇದ ಪುರುಷನ | ಸುತನ ಸುತನ ಸ
 ಹೋದರನ ಹೆ|ಮ್ಮಗನ ಮಗನ ತ
 ಳೋದರಿಯ ಮಾ|ತುಳನ ಮಾವನ|ನತುಳಭುಜಬಲ|ದಿ
 ಕಾದು ಗೆಲಿದನ|ನಣ್ಣನವ್ವೆಯ 
 ನಾದಿನಿಯ ಜಠ|ರದಲಿ ಜನಿಸಿದ
 ನಾದಿಮೂರುತಿ | ಸಲಹೊ ಗದುಗಿನ | ವೀರನಾರಯ|ಣ

'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ.

ಷಟ್ಪದಿಗಳೂ ಸೇರಿದಂತೆ ಹಲವಾರು ಛಂದೋಪ್ರಕಾರಗಳ ಲಕ್ಷಣಗಳ ಕೈಗೆಟುಕುವಂತಹ ವಿವರಣೆಯನ್ನು ಅ.ರಾ. ಮಿತ್ರರ 'ಛಂದೋಮಿತ್ರ' ದಲ್ಲಿ ಕಾಣಬಹುದು. ಷಟ್ಪದಿಗಳ ಉಗಮ ವಿಕಾಸಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಸೇಡಿಯಾಪು ಕೃಷ್ಣಭಟ್ಟರ, ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಗ್ರಂಥಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾಣಬಹುದು.

ಪ್ರಾಚೀನ ಕಾಲದಲ್ಲಿ ಅಂಶಗಣಘಟಿತವಾದ ಒಂದೇ ಒಂದು ಷಟ್ಪದಿ ಇತ್ತೆನ್ನಲಾಗಿದೆ. ಅಂಶ ಷಟ್ಪದಿಯ ಲಕ್ಷಣ: 6 ಪಾದಗಳು; 1-2ನೆಯ ಮತ್ತು 4-5ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳು, 3-6ನೆಯ ಪಾದಗಳಲ್ಲಿ 2-2 ವಿಷ್ಣುಗಣಗಳೊಂದಿಗೆ 1-1 ರುದ್ರಗಣ ಇರುತ್ತದೆ. ಪದ್ಯಾರ್ಥದ ಕೊನೆಗೆ ಯತಿ. 12ನೆಯ ಶತಮಾನದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುವ ವೀರಶೈವ ವಚನಕಾರರು ಹಾಗೂ ಅನಂತರದ ಭಕ್ತಿ ಪಂಥದವರು ಮಾಡಿದ ಸಾಹಿತ್ಯ ಕ್ರಾಂತಿಗಳಲ್ಲಿ ದೇಶ್ಯಛಂದಸ್ಸಿನ ಪುನರುಜ್ಜೀವನ ಮತ್ತು ನವೀಕರಣವೂ ಪ್ರಮುಖ ವಿಚಾರಗಳಾಗಿವೆ.
ಈ ಕಾಲದಲ್ಲಿ ಪರಂಪರಾಗತವಾಗಿದ್ದ ಅಂಶಷಟ್ಪದಿ ಮಾತ್ರಾಗಣಾತ್ಮಕ ವಾಗಿ ಮಾತ್ರಾಷಟ್ಪದಿಯಾಯಿತು. ಪೋಲಾಳ್ವ ದಂಡನಾಥ (1224), ರಾಘವಾಂಕ (ಸು.1230), ಕುಮುದೇಂದು (1275)-ಈ ಕೆಲವರು ಮಾತ್ರಾಷಟ್ಪದಿಯ ಆದ್ಯ ಕೃಷಿಕರು.

ನಡುಗನ್ನಡ ಕಾಲದಲ್ಲಿ ಮಾತ್ರಾಷಟ್ಪದಿ ಶರ, ಕುಸುಮ, ಭೋಗ, ಭಾಮಿನೀ, ಪರಿವರ್ಧಿನೀ ಹಾಗೂ ವಾರ್ಧಕ ಷಟ್ಪದಿಗಳೆಂಬ ಆರು ಬಗೆಯಲ್ಲಿ ಕಾಣಿಸಿಕೊಂಡು ಜನಪ್ರಿಯವಾಗಿದೆ. ಇವುಗಳ ಲಕ್ಷಣಗಳನ್ನು ಹೀಗೆ ಗುರುತಿಸಲಾಗಿದೆ:

ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರನ್ನು ಹೊಂದಿರುವ ಕರ್ನಾಟಕ ಭಾರತ ಕಥಾಮಂಜರಿ ಎಂಬ ಕಾವ್ಯವನ್ನು ಬರೆದು ಖ್ಯಾತನಾದ ಈತ ಐರಾವತ ಎಂಬ ಕೃತಿಯನ್ನು ರಚಿಸಿದನೆಂದು ತಿಳಿದುಬಂದಿದೆ.

                        
                            
                           




#Article 195: ಮೈಕ್ರೋಸಾಫ್ಟ್ ವಿಂಡೋಸ್ (100 words)


ಮೈಕ್ರೊಸಾಫ್ಟ್ ವಿಂಡೋಸ್ () ಮೈಕ್ರೋಸಾಫ್ಟ್ ಕೃತ ಹಲವು ಕಾರ್ಯಕಾರಿ ವ್ಯವಸ್ಥೆಗಳ ಸರಮಾಲೆ. ಇದರಲ್ಲಿ ಮೊದಲಿಗ, ೧೯೮೫ರಲ್ಲಿ ಬಳಕೆಗೆ ತಂದ ವಿಂಡೋಸ್ ವ್ಯವಸ್ಥೆ. ಅಂದು ವಿಂಡೋಸ್ MS-DOSಗೆ ವಿಂಡೋಸ್ ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) - ಗಣಕದ ಕಾರ್ಯವನ್ನು ನಿಯಂತ್ರಿಸುವ, ಸಮ್ಮೇಳಿಸುವ ತಂತ್ರಾಂಶ). ಇದು ಮೈಕ್ರೋಸಾಫ್ಟ್ ಕಂಪೆನಿಯ ತಂತ್ರಾಂಶಗಳಲ್ಲೊಂದು. ೧೯೮೫ ರಲ್ಲಿ ಮೊದಲ ಬಾರಿಗೆ ಈ ತಂತ್ರಾಂಶ ಬಿಡುಗಡೆಯಾಯಿತು. ಅಲ್ಲಿಂದೀಚೆಗೆ ಅನೇಕ ಆವೃತ್ತಿಗಳು ಬಿಡುಗಡೆಗೊಂಡಿವೆ. ಎಲ್ಲಕ್ಕಿಂತ ಇತ್ತೀಚಿನ 'ಆವೃತ್ತಿಗೆ ವಿಂಡೋಸ್ ೮' ಎಂದು ಹೆಸರು. 

ವಿಂಡೋಸ್‌ನ ವಿವಿಧ ಆವೃತ್ತಿಗಳು ಹೀಗಿವೆ:

ವಿಂಡೋಸ್‌ನ ಎಕ್ಸ್‌ಪಿ ಆವೃತ್ತಿಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಲಾಯಿತು. ವಿಂಡೋಸ್‌ನಲ್ಲಿ ಕನ್ನಡವನ್ನು ಯುನಿಕೋಡ್ ಸಂಕೇತೀಕರಣದ ಮೂಲಕ ಅಳವಡಿಸಲಾಗಿದೆ. ಪ್ರಾರಂಭದ ಆವೃತ್ತಿಯಲ್ಲಿ ಅಂದರೆ ವಿಂಡೋಸ್‌ ಎಕ್ಸ್‌ಪಿಯಲ್ಲಿ ಕನ್ನಡದ ಅಳವಡಿಕೆ ಮಾಡಿದಾಗ ಕೆಲವು ನ್ಯೂನತೆಗಳಿದ್ದವು. ಅದರಲ್ಲಿ ಕನ್ನಡಕ್ಕಾಗಿ ಬಳಸಿದ ತುಂಗ ಹೆಸರಿನ ಫಾಂಟ್‌ನಲ್ಲಿ ಕೆಲವು ಅಕ್ಷರಗಳು ತಪ್ಪಾಗಿ ಮೂಡಿಬರುತ್ತಿದ್ದವು. ಕನ್ನಡದ ಅಕಾರಾದಿ ವಿಂಗಡಣೆಯಲ್ಲೂ ತಪ್ಪುಗಳಿದ್ದವು. ಈ ಎಲ್ಲ ತಪ್ಪುಗಳನ್ನು ಮುಂದಿನ ಆವೃತ್ತಿಗಳಲ್ಲಿ ಸರಿಪಡಿಸಲಾಗಿದೆ.




#Article 196: ಮ್ಯಾಕ್ ಓಎಸ್ X (233 words)


ಆಪಲ್ ಕಂಪ್ಯೂಟರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ಗಣಕಯಂತ್ರ ಕಾರ್ಯನಿರ್ವಹಣ ಸಾಧನ. ಸುಂದರವಾದ ಚಿತ್ರಾತ್ಮಕ ಸಂಪರ್ಕ ಸಾಧನ.  ಅಳವಡಿಸಲಾಗಿರುವ ಈ ಸಾಧನವು ಬಿ.ಎಸ್.ಡಿ ಯೂನಿಕ್ಸ್ ಅಡಿಪಾಯದ ಮೇಲೆ ನಿರ್ಮಿತವಾಗಿದೆ. 

೧೯೮೫ರಲ್ಲಿ ಸ್ಟೀವ್ ಜಾಬ್ಸ್ ಆಪಲ್ ತ್ಯಜಿಸಿ ನೆಕ್ಷ್ಟ್ ಸಂಸ್ಥೆಯನ್ನು ನಿರ್ಮಿಸಿದರು. ಅಲ್ಲಿ ಮ್ಯಾಖ್ ಕರ್ನಲ್ () ಮತ್ತು ಬಿ.ಎಸ್.ಡಿ ಯೂನಿಕ್ಸ್ ಅಳವಡಿಸಿಕೊಂಡು ನೆಕ್ಟ್ ಸ್ಟೆಪ್ () ಎಂಬ ವಸ್ತು-ನಿಷ್ಟ ಕಾರ್ಯನಿರ್ವಹಣ ಸಾಧನವನ್ನು () ನಿರ್ಮಿಸಲಾಯಿತು. ಈ ಮಧ್ಯೆ ಸ್ಟೀವ್ ಜಾಬ್ಸ್ ಇಲ್ಲದಿರುವ ವರ್ಷಗಳಲ್ಲಿ ಆಪಲ್ ಸಂಸ್ಥೆಯು ತನ್ನದೇ ಆದ ಹೊಸ ತಲೆಮಾರಿನ ಕಾರ್ಯನಿರ್ವಹಣ ಸಾಧನಗಳನ್ನು ತಯಾರಿಸಲು ಪ್ರಯತ್ನಿಸಿತಾದರೂ ಅಂತಹ ಯಶಸ್ಸು ಕಾಣಲಿಲ್ಲ.

ನಂತರ ತನ್ನ ಮುಂದಿನ ಕಾರ್ಯನಿರ್ವಹಣ ಸಾಧನದ ಅಡಿಪಾಯಕ್ಕೆ ಆಪಲ್ ಸಂಸ್ಥೆಯು ನೆಕ್ಟ್ ಸ್ಟೆಪ್ ನ ಓಪೆನ್ ಸ್ಟೆಪ್ ಅನ್ನು ಆಯ್ದುಕೊಂಡಿತು, ಹಾಗೆಯೇ ನೆಕ್ಟ್ ಸ್ಟೆಪ್ ‍ಅನ್ನು ತನ್ನೊಳಗೆ ವಿಲೀನಗೊಳಿಸಿತು. ಸ್ಟೀವ್ ಜಾಬ್ಸ್ ಮತ್ತುಮ್ಮೆ ಆಪಲ್ ನೇತೃತ್ವ ವಹಿಸಿಕೊಂಡು, ಅಲ್ಲಿಯವರೆಗೆ ಕೇವಲ ಗಣಕತಂತ್ರಜ್ಞರು ಬಳಸುವಂತಿದ್ದ ಓಪೆನ್ ಸ್ಟೆಪ್ ಅನ್ನು ಗೃಹಪಯೋಗಿ ಗಣಕಗಳಲ್ಲಿ ಅಳವಡಿಸುವಂತಹ ಕಾರ್ಯನಿರ್ವಹಣ ಸಾಧನವನ್ನಾಗಿ ಬದಲಿಸಲು ರಾಪ್ಸಡಿ ಎಂಬ ಕಾರ್ಯ ಪ್ರಾರಂಭಿಸಿದರು. ಕೆಲವು ಪ್ರಾರಂಭದ ತೊಡಕುಗಳನ್ನು ನಿವಾರಿಸಿ, ಹಳೆಯ ಮ್ಯಾಕ್ ಓಎಸ್ ಅವತರಣಿಕೆಗಳಿಂದ ಸುಲಲಿತವಾಗಿ ಮಾರ್ಪಾಡು ಮಾಡಲು ಸಹಾಯಕವಾಗುವಂತಹ ರೀತಿಯಲ್ಲಿ ರಾಪ್ಸಡಿಯಿಂದ ಮ್ಯಾಕ್ ಓಎಸ್ X ನಿರ್ಮಾಣಗೊಂಡಿತು.

ಮ್ಯಾಕ್ ಓಎಸ್ X ತನ್ನ ಮುಂದಿನ ಅವತರಣಿಕೆಗಳಲ್ಲಿ ಹಳೆಯ ಸಾಧನಗಳಿಗೆ ಹೊಂದಿಕೊಂಡಂತಿರಬೇಕಾದ ಧ್ಯೇಯವನ್ನು ಬದಿಗುತ್ತಿ, ಡಿಜಿಟಲ್ ಜನಜೀವನಕ್ಕೆ ಉಪಯುಕ್ತವಾಗುವಂತಹ ಚಿತ್ರ, ಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಚ್ಚು ಬಳಕೆಯಾಗುವಂತಹ ತಂತ್ರಾಂಶಗಳಿಗೆ ಸಹಾಯಕವಾಗುವ ದಿಸೆಯಲ್ಲಿ ವಿಕಾಸಗುಳ್ಳುತ್ತಾ ಬಂದಿತು.

ಓಎಸ್ X ಹೆಸರಲ್ಲಿ X ಎಂಬುದು ರೋಮನ್ ಸಂಖ್ಯೆ (ಇಂಗ್ಲಿಷ್ ಅಕ್ಷರ ಎಕ್ಸ್ ಅಲ್ಲ). ಹಳೆಯ ಮ್ಯಾಕಿನ್ತೋಶ್(ಮ್ಯಾಕ್) ಕಾರ್ಯನಿರ್ವಹಣ ಸಾಧನಗಳಾದ ೮, ೯ ಇದೇ ಕ್ರಮದಲ್ಲಿ ಇದು ೧೦ನೆಯ ಅವತರಣಿಕೆ. ಆದರೆ ಇದನ್ನು ಎಕ್ಸ್ ಎಂದು ತಪ್ಪಾಗಿ ಬಳಸುವುದು ಕೂಡ ಸಾಮಾನ್ಯವಾಗಿದೆ. ಹಾಗೆಯೇ ಮ್ಯಾಕ್ ಓಎಸ್ X ನ ಎಲ್ಲ ಉಪ ಅವತರಣಿಕೆಗಳ ಒಂದು ವಿಶೇಷವೇನೆಂದರೆ ಬೆಕ್ಕಿನ ಪ್ರಭೇದದ ಪ್ರಾಣಿಗಳ ಹೆಸರನ್ನು ಬಳಸಿರುವುದು.

ಮ್ಯಾಕ್ ಓಎಸ್ X ತಂತ್ರಾಂಶ ಬರವಣಿಗೆಗೆ ಕೊಕೊ(Cocoa) ಫ್ರೇಮ್ ವರ್ಕ ಉಪಯೋಗಿಸಲಾಗುತ್ತದೆ. ಕೊ(Cocoa) ಫ್ರೇಮ್ ವರ್ಕ ಅನ್ನು ಆಬಜೆಕ್ಟೀವ್-ಸಿ(objective-c) ಭಾಷೆಯಲ್ಲಿ ಬರೆಯಲಾಗಿದೆ.

ಮ್ಯಾಕ್ ಓಎಸ್ ೧೦.೩ ವರೆಗಿನ ಕಾರ್ಯನಿರ್ವಹಣ ಸಾಧನ ppc ಯಂತ್ರಾಂಶದ ಮೇಲೆ ಕಾರ್ಯನಿರ್ವಹಿಸುತ್ತದೆ. ಮ್ಯಾಕ್ ಓಎಸ್ ೧೦.೪ ನಂತರದ ಆವೃತ್ತಿಗಳು ppc ಹಾಗೂ ಇಂಟೆಲ್ನ x86 ಯಂತ್ರಾಂಶದ ಮೇಲೆ ಕಾರ್ಯನಿರ್ವಹಿಸುತ್ತದೆ.




#Article 197: ಬಿಲ್ ಗೇಟ್ಸ್ (2243 words)


  

ವಿಲಿಯಂ ಹೆನ್ರಿ ಬಿಲ್‌ ಗೇಟ್ಸ್‌ III  (ಅಕ್ಟೋಬರ್‌ 28, 1955ರಲ್ಲಿ ಜನನ) ರವರು ಅಮೆರಿಕದ ಪ್ರಭಾವಿ ಉದ್ಯಮಿ , ಪರೋಪಕಾರಿ ಮತ್ತು ಪಾಲ್‌ ಅಲೆನ್‌ ಜೊತೆಗೂಡಿ ತಾವೇ ಸ್ಥಾಪಿಸಿದ ಮೈಕ್ರೋಸಾಫ್ಟ್‌ ಎಂಬ ಸಾಫ್ಟ್‌ವೇರ್‌ ಕಂಪನಿಯ ಅಧ್ಯಕ್ಷ. 
ಇವರು ವಿಶ್ವದ ಅತಿದೊಡ್ಡ ಸಿರಿವಂತರಲ್ಲಿ ಒಬ್ಬರೆಂಬ ಸ್ಥಾನವನ್ನು ಹಲವು ವರ್ಷಗಳಿಂದ ಸ್ಥಿರವಾಗಿ ಉಳಿಸಿಕೊಂಡು ಬಂದಿದ್ದಾರೆ
ಮತ್ತು ಒಟ್ಟಾರೆಯಾಗಿ 2009 ರವರೆಗಿನ ವಿಶ್ವದ ಅತಿದೊಡ್ಡ ಸಿರಿವಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಮೈಕ್ರೋಸಾಫ್ಟ್‌ ಸಂಸ್ಥೆಯಲ್ಲಿನ ತಮ್ಮ ವೃತ್ತಿಜೀವನದಲ್ಲಿ, CEO ಹಾಗೂ ಮುಖ್ಯ ಸಾಫ್ಟ್‌ವೇರ್‌ ವಿನ್ಯಾಸಕನಂತಹ ಉನ್ನತ ಸ್ಥಾನಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕಂಪನಿಯ ಸಾಮಾನ್ಯ ಸ್ಟಾಕ್‌ನ ಪೈಕಿ ಶೇ 8ಕ್ಕಿಂತ ಹೆಚ್ಚಿನ ಷೇರುಗಳನ್ನು ಹೊಂದಿರುವ ಮೈಕ್ರೋಸಾಫ್ಟ್‌ನ ಅತಿಡೊಡ್ಡ ಏಕವ್ಯಕ್ತಿ ಷೇರುದಾರರೆನಿಸಿಕೊಂಡಿದ್ದಾರೆ.     
ಹಲವಾರು ಪುಸ್ತಕಗಳಿಗೆ ಅವರು ಲೇಖಕ ಇಲ್ಲವೇ ಸಹ-ಲೇಖಕರಾಗಿದ್ದಾರೆ.

ಪರ್ಸನಲ್‌ ಕಂಪ್ಯೂಟರ್‌ ಕ್ರಾಂತಿಯ ವಿಶ್ವಪ್ರಸಿದ್ಧ ಉದ್ಯಮಿಗಳಲ್ಲಿ ಬಿಲ್‌ ಗೇಟ್ಸ್‌ ಒಬ್ಬರು.ಹಲವರು ಇವರನ್ನು ಮೆಚ್ಚಿಕೊಂಡಿದ್ದಾರಾದರೂ, ಇವರ ವ್ಯಾಪಾರಿ ಕಾರ್ಯತಂತ್ರಗಳು ಸ್ಪರ್ಧಾಕ್ಮತೆಯ-ವಿರೋಧಿ ಎಂದು ಉದ್ಯಮದೊಳಗಿನ ಬಹಳಷ್ಟು ಮಂದಿ ಟೀಕಿಸುತ್ತಾರೆ. ಈ ಅಭಿಪ್ರಾಯವನ್ನು ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯಗಳು ಎತ್ತಿ ಹಿಡಿದಿವೆ ಮೈಕ್ರೋಸಾಫ್ಟ್‌ನ ಕುರಿತಾದ ಟೀಕೆಯನ್ನು ನೋಡಿ). 

ತಮ್ಮ ವೃತ್ತಿಜೀವನದ ನಂತರದ ಘಟ್ಟಗಳಲ್ಲಿ, ಬಿಲ್‌ amp; ಮೆಲಿಂಡ ಗೇಟ್ಸ್‌ ಪ್ರತಿಷ್ಠಾನದ ಮೂಲಕ ಹಲವು ದತ್ತಿ ಪ್ರತಿಷ್ಠಾನಗಳಿಗೆ ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಧನ ಸಹಾಯ ಮಾಡುವ ಮೂಲಕ ಹಲವು ಪರೋಪಕಾರಿ ಸಾಹಸಗಳಲ್ಲಿ ಗೇಟ್ಸ್‌ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.   

ಇವರು ಕ್ರಮೇಣವಾಗಿ ತಮ್ಮ ಜವಾಬ್ದಾರಿಗಳನ್ನು ಮುಖ್ಯ ಸಾಫ್ಟ್‌ವೇರ್ ವಿನ್ಯಾಸಕರಾಗಿದ್ದ ರೇ ಓಝೀಹಾಗೂ ಸಂಶೋಧನೆ ಮತ್ತು ಕಾರ್ಯತಂತ್ರಗಳ ಮುಖ್ಯಾಧಿಕಾರಿಯಾದ್ದ ಕ್ರೇಗ್ ಮುಂಡೀಯವರಿಗೆ ವರ್ಗಾಯಿಸಿದರು.  2008ರ ಜೂನ್‌ 27 ಮೈಕ್ರೋಸಾಫ್ಟ್‌ನಲ್ಲಿನ ಬಿಲ್‌ ಗೇಟ್ಸ  ತಮ್ಮ ಪೂರ್ಣಕಾಲಿಕ ದುಡಿಮೆಗೆ ವಿದಾಯ ಹೇಳಿದರು. ಈಗ ಅವರು ಮೈಕ್ರೋಸಾಫ್ಟ್‌ನ ಅಕಾರ್ಯಕಾರಿ ಅಧ್ಯಕ್ಷರಾಗಷ್ಟೇ ಉಳಿದಿದ್ದಾರೆ.

ಇಂಗ್ಲಿಷ್, ದಲ್ಬೈಒದ್ ಜರ್ಮನ್, ಐರಿಷ್, ಸ್ಕಾಟಿಷ್ ತಲೆಮಾರಿನ ವಿಲಿಯಂ ಎಚ್. ಗೇಟ್ಸ್, Sr. ಮತ್ತು ಮೇರಿ ಮ್ಯಾಕ್ಸ್‌ವೆಲ್‌ ಗೇಟ್ಸ್‌ ದಂಪತಿಗಳ ಮಗನಾಗಿ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಗೇಟ್ಸ್‌ ಜನಿಸಿದರು.  ಇವರದು ಮೇಲ್ಮಧ್ಯಮ ವರ್ಗದ ಕುಟುಂಬ; ಇವರ ತಂದೆ ಪ್ರಖ್ಯಾತ ವಕೀಲರಾಗಿದ್ದರು ಮತ್ತು ಇವರ ತಾಯಿ ಫಸ್ಟ್‌ ಇಂಟರ್‌ಸ್ಟೇಟ್ ಬ್ಯಾಂಕ್‌ಸಿಸ್ಟಮ್‌ ಮತ್ತು ಯುನೈಟೆಡ್‌ ವೇ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲೊಬ್ಬರಾಗಿ ಸೇವೆ ಸಲ್ಲಿಸಿದ್ದರು. ಆಕೆಯ ತಂದೆ ಜೆ. ಡಬ್ಲ್ಯು. ಮ್ಯಾಕ್ಸ್‌ವೆಲ್, ನ್ಯಾಷನಲ್‌ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಗೇಟ್ಸ್‌ಗೆ ಕ್ರಿಸ್ಟಿ (ಕ್ರಿಸ್ಟಿಯಾನ್ನೆ) ಎಂಬ ಹೆಸರಿನ ಒಬ್ಬರು ಅಕ್ಕ ಮತ್ತು ಲಿಬ್ಬಿ ಎಂಬ ಹೆಸರಿನ ಒಬ್ಬರು ತಂಗಿ ಇದ್ದಾರೆ. 
ಇವರು ತಮ್ಮ ಕುಟುಂಬದಲ್ಲಿನ ಗೇಟ್ಸ್‌ ಹೆಸರಿನ ನಾಲ್ಕನೇ ವ್ಯಕ್ತಿಯಾಗಿದ್ದರೂ ಸಹ, ವಿಲಿಯಂ ಗೇಟ್ಸ್‌ III ಅಥವಾ ಟ್ರೇ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಏಕೆಂದರೆ ಅವರ ತಂದೆ ತಮ್ಮದೇ ಹೆಸರಿನ ಮುಂದಿದ್ದ III ಎಂಬ ಉತ್ತರ ಪ್ರತ್ಯಯವನ್ನು ಕೈಬಿಟ್ಟಿದ್ದರು. ಇವರು ಬಾಲ್ಯದಲ್ಲಿದ್ದಾಗ ತಮ್ಮ ಮಗ ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನ ನಡೆಸಬೇಕೆಂಬುದು ಗೇಟ್ಸ್ ಪೋಷಕರ ಬಯಕೆಯಾಗಿತ್ತು. 

ಇವರು ತಮ್ಮ 13ನೇ ವಯಸ್ಸಿನಲ್ಲಿ ಲೇಕ್‌ಸೈಡ್‌ ಸ್ಕೂಲ್‌ ಎಂಬ ಒಂದು ಮೀಸಲು ಪ್ರಾಥಮಿಕ ಶಾಲೆಗೆ ದಾಖಲಾದರು. 
ಇವರು ಎಂಟನೇ ತರಗತಿಯಲ್ಲಿದ್ದಾಗ ಶಾಲೆಯ ಮದರ್ಸ್‌ ಕ್ಲಬ್‌, ಲೇಕ್‌ಸೈಡ್‌ 
ಕೊಕ್ಕ್ಗ್ಕ್ಗುಜರಿ ಮಾರಾಟದಿಂದ ಬಂದ ಆದಾಯವನ್ನು ಶಾಲೆಯ ಮಕ್ಕಳಿಗೆ ASR-33 ಟೆಲಿಪ್ರಿಂಟರ್‌ ಸಾಧನ‌ ಮತ್ತು ‌ಜನರಲ್ ಎಲೆಕ್ಟ್ರಿಕ್(GE) ಕಂಪ್ಯೂಟರ್‌ನ, ಕಂಪ್ಯೂಟರ್‌ ಸಮಯದ ಒಂದು ವಿಭಾಗವನ್ನು ಕೊಳ್ಳಲು ಬಳಸಿಕೊಂಡಿತು. 
ಗೇಟ್ಸ್‌ BASICನಲ್ಲಿ GE ಸಿಸ್ಟಮ್‌ನ್ನು ಪ್ರೋಗ್ಯ್ರಾಮ್‌ ಮಾಡಲು ಆಸಕ್ತಿ ವಹಿಸಿದರು. ಇದನ್ನು ಸಾಧಿಸಲು ಇವರಿಗೆ ಗಣಿತ ತರಗತಿಗಳಿಂದ ವಿಯಾಯಿತಿ ದೊರೆಯಿತು. ಇದೇ ಯಂತ್ರದ ಮೇಲೆ ಗೇಟ್ಸ್‌ ತಮ್ಮ ಮೊದಲ ಕಂಪ್ಯೂಟರ್‌ ಪ್ರೊಗ್ರಾಮ್‌ ಅನ್ನು ಬರೆದರು. ಇದು ಟಿಕ್‌-ಟ್ಯಾಕ್‌-ಟೋ ಎಂಬ ವಿಶಿಷ್ಟ ಚೌಕದಾಟದ ಅಳವಡಿಕೆಯಾಗಿದ್ದು, ಕಂಪ್ಯೂಟರ್‌ಗೆ ಎದುರಾಗಿ ಕುಳಿತು ಬಳಕೆದಾರರು ಆಟಗಳನ್ನಾಡಲು ಇದು ಅವಕಾಶ ಒದಗಿತು. ಈ ಯಂತ್ರದಿಂದ ಮತ್ತು ತಂತ್ರಾಂಶದ ಸಂಕೇತಗಳನ್ನು (ಸಾಫ್ಟ್‌ವೇರ್‌ ಕೋಡ್‌ಗಳನ್ನು) ಎಲ್ಲ ಸಮಯದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ತರುವ ಇದರ ಕಾರ್ಯಕ್ಷಮತೆಯ ಪರಿಯಿಂದ ಗೇಟ್ಸ್‌ರವರು ಮೋಡಿಗೊಳಗಾಗಿದ್ದರು. 
ತನ್ನ ವಿಚಾರ ಮಂಥನದಿಂದ ಆ ಕ್ಷಣಕ್ಕೆ ಹಿಂದಕ್ಕೆ ಬಂದ ಅವರು ಆ ಕುರಿತು ವರ್ಣಿಸುತ್ತಾ, ಈ ಯಂತ್ರದಲ್ಲಿ ಅಚ್ಚುಕಟ್ಟುತನದಿಂದ ಕೂಡಿರುವಂಥಾದ್ದೇನೋ ಇತ್ತು ಎಂದು ಉದ್ಗರಿಸಿದರು. ಮದರ್ಸ್ ಕ್ಲಬ್‌ನ ದೇಣಿಗೆ ಖಾಲಿಯಾದ ಮೇಲೆ, ಗೇಟ್ಸ್‌ ಮತ್ತು ಇತರೆ ವಿದ್ಯಾರ್ಥಿಗಳು DEC PDP ಮಿನಿಕಂಪ್ಯೂಟರ್‌ಗಳನ್ನು ಒಳಗೊಂಡಂತೆ ವಿವಿಧ ವಿನ್ಯಾಸದ ಕಂಪ್ಯೂಟರ್‌ಗಳಿಗೆ ಸಮಯವನ್ನು ವಿನಿಯೋಗಿಸುತ್ತಾ ಬಂದರು.
ಈ ಸಿಸ್ಟಮ್‌ಗಳಲ್ಲೊಂದಾದ PDP-10, ಕಂಪ್ಯೂಟರ್ ಸೆಂಟರ್‌ ಕಾರ್ಪೊರೇಷನ್‌ (CCC)ಸಂಸ್ಥೆಗೆ ಸೇರಿತ್ತು. ಈ ಕಂಪನಿಯು ಲೇಕ್‌ಸೈಡ್‌ ಸ್ಕೂಲ್‌ನ ನಾಲ್ವರು ವಿದ್ಯಾರ್ಥಿಗಳಾದ ಗೇಟ್ಸ್‌, ಪಾಲ್‌ ಅಲೆನ್‌, ರಿಕ್ ವೀಲ್ಯಾಂಡ್‌, ಮತ್ತು ಕೆಂಟ್‌ ಇವಾನ್ಸ್‌ರವರ ಮೇಲೆ ಬೇಸಿಗೆಯ ಅವಧಿಗೆ ಬಹಿಷ್ಕಾರ ಹೇರಿತ್ತು. ಉಚಿತವಾದ ಕಂಪ್ಯೂಟರ್‌ ಕಾಲಾವಕಾಶವನ್ನು ಪಡೆಯಲು ಕಂಪ್ಯೂಟರ್‌ನಲ್ಲಿ ಆಪರೇಟಿಂಗ್‌ ಸಿಸ್ಟಂನಲ್ಲಿದ್ದ ನ್ಯೂನತೆಗಳ ಪ್ರಯೋಜನವನ್ನು ಪಡೆಯುತ್ತಿದ್ದ ಕಾರಣಕ್ಕಾಗಿ ಕಂಪನಿಯು ಅವರನ್ನು ಹಿಡಿದುಹಾಕಿದ ನಂತರ ಈ ಬಹಿಷ್ಕಾರವನ್ನು ಹೇರಿತ್ತು. 

ನಿಷೇಧದ ಅವಧಿ ಕೊನೆಯಾಗುವ ಹೊತ್ತಿಗೆ, ತಮಗೆ ಬೇಕಿರುವ ಕಂಪ್ಯೂಟರ್‌ನ ಕಾಲಾವಕಾಶಕ್ಕೆ ಪ್ರತಿಯಾಗಿ CCCಯ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿದುಕೊಡುವ ಪ್ರಸ್ತಾವವನ್ನು ಈ ನಾಲ್ವರು ವಿದ್ಯಾರ್ಥಿಗಳು ಮುಂದಿಟ್ಟರು. 

ಟೆಲಿಪ್ರಿಂಟರ್‌ ಮೂಲಕವಾಗಿ ಸಿಸ್ಟಮ್‌ ಅನ್ನು ಬಳಸುವುದಕ್ಕೆ ಬದಲು, CCCಯ ಕಚೇರಿಗಳಿಗೆ ತೆರಳಿದ ಗೇಟ್ಸ್‌, ಸಿಸ್ಟಮ್‌ನ್ನು ನಡೆಸುತ್ತಿದ್ದ ವಿವಿಧ ಪ್ರೋಗ್ರ್ಯಾಮ್‌ಗಳ ಮೂಲ ಸಂಕೇತಗಳನ್ನು (ಸೋರ್ಸ್‌ ಕೋಡ್‌) ಅಧ್ಯಯನ ಮಾಡಿದರು. ಈ ಪ್ರೋಗ್ರ್ಯಾಮ್‌ಗಳಲ್ಲಿ FORTRAN, LISP ಹಾಗೂ ಯಂತ್ರಭಾಷೆ (ಮೆಷೀನ್‌ ಲಾಂಗ್ವೇಜ್‌)ಯಲ್ಲಿನ ಪ್ರೋಗ್ರ್ಯಾಮ್‌ಗಳೂ ಸೇರಿದ್ದವು.

CCC ಸಂಸ್ಥೆಯೊಂದಿಗಿನ ಇವರ ಸಂಬಂಧವು ಕಂಪನಿ ಉದ್ಯಮದಿಂದ ಹೊರಗುಳಿಯುವವರೆಗೂ, ಅಂದರೆ, 1970ರವರೆಗೂ ಮುಂದುವರಿಯಿತು. ಇದರ ನಂತರದ ವರ್ಷದಲ್ಲಿ, ಇನ್‌ಫರ್ಮೇಷನ್‌ ಸೈನ್ಸಸ್‌ ಇಂಕ್‌ ಎಂಬ ಸಂಸ್ಥೆಯು ಲೇಕ್‌ಸೈಡ್‌ ಸ್ಕೂಲ್‌ನ ಈ ನಾಲ್ಕು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಂಡು, COBOLನಲ್ಲಿ ಸಂಬಳದಾರರ ಪಟ್ಟಿಯ (ಪೇ ರೋಲ್‌) ಪ್ರೋಗ್ಯ್ರಾಮ್‌ ಒಂದನ್ನು ರಚಿಸಲು ಅವಕಾಶನೀಡುವುದರ ಜೊತೆಗೆ, ಕಂಪ್ಯೂಟರ್‌ ಕಾಲಾವಕಾಶ ಹಾಗೂ ರಾಯಧನವನ್ನೂ ಅವರಿಗೆ ನೀಡಿತು.ಪ್ರೋಗ್ರ್ಯಾಮ್‌ ಬರೆಯುವುದಕ್ಕೆ ಸಂಬಂಧಿಸಿದಂತೆ ಗೇಟ್ಸ್‌ ಹೊಂದಿದ್ದ ಸಾಮರ್ಥ್ಯವು ಸಂಸ್ಥೆಯ ಆಡಳಿತಗಾರರ ಅರಿವಿಗೆ ಬಂದನಂತರ, ತಮ್ಮ ಶಾಲೆಯ ತರಗತಿಗಳಲ್ಲಿನ ವಿದ್ಯಾರ್ಥಿಗಳನ್ನು ಪಟ್ಟಿಮಾಡುವುದಕ್ಕೆ ಗೇಟ್ಸ್‌ ಶಾಲೆಯ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ನ್ನು ಬರೆದರು.ಬಹುತೇಕ ಹುಡುಗಿಯರೇ ತುಂಬಿದ್ದ ತರಗತಿಗಳಲ್ಲಿ ತಮ್ಮನ್ನು ಕೂರಿಸಲೆಂಬ ಉದ್ದೇಶದಿಂದ ಅವರು ಸಂಕೇತಗಳನ್ನು ಮಾರ್ಪಡಿಸಿದರು. ಈ ಕುರಿತು ಅವರು ನಂತರ ಮಾತಾಡುತ್ತಾ, ನಾನು ಸುಸ್ಪಷ್ಟವಾಗಿ ಯಶಸ್ಸನ್ನು ಪ್ರದರ್ಶಿಸಿದ ಯಂತ್ರವೊಂದರಿಂದ ಒಲ್ಲದ ಮನಸ್ಸಿನಿಂದ ದೂರ ಸರಿಯಲು ತುಂಬಾ ಕಷ್ಟವಾಗಿತ್ತು ಎಂದು ಅಭಿಪ್ರಾಯಪಟ್ಟರು. ತಮ್ಮ 17ನೇ ವಯಸ್ಸಿನಲ್ಲಿ ಗೇಟ್ಸ್‌, ಇಂಟೆಲ್ 8008 ಪ್ರೊಸೆಸರ್‌ ಅನ್ನು ಆಧರಿಸಿ ಟ್ರಾಫಿಕ್‌ ಕೌಂಟರ್‌ಗಳನ್ನು ರೂಪಿಸಲು ಸ್ನೇಹಿತ ಅಲೆನ್‌ ಜೊತೆ ಸೇರಿ ಟ್ರ್ಯಾಫ್‌-ಓ-ಡಾಟ ಎಂಬ ಹೊಸ ಸಾಹಸಕ್ಕೆ ಕೈಹಾಕಿದರು. 

ಗೇಟ್ಸ್‌‌ 1973ರಲ್ಲಿ ಲೇಕ್‌ಸೈಡ್‌ ಸ್ಕೂಲ್‌ನಿಂದ ಪದವಿ ಪಡೆದರು. 
ಇವರುSAT ಪರೀಕ್ಷೆಯಲ್ಲಿ 1600ಕ್ಕೆ 1590 ಅಂಕ ಗಳಿಸಿದರು. ತರುವಾಯ ಉನ್ನತ ವಿದ್ಯಾಭ್ಯಾಸಕ್ಕಾಗಿ 1973ರ ಅಂತ್ಯದ ವೇಳೆಗೆ ಹಾರ್ವರ್ಡ್ ಕಾಲೇಜ್‌ಗೆ ಸೇರಿದರು. 1990ರ ದಶಕದ ಮಧ್ಯ ಭಾಗಕ್ಕೂ ಮುಂಚೆ SAT ಪರೀಕ್ಷೆಯಲ್ಲಿ 1590 ಅಂಕ ಗಳಿಸಿದರೆ, ಅಂತಹವರ IQ ಅಂದಾಜು 170 ಎಂದು ಭಾವಿಸಲಾಗಿತ್ತು. ಈ ಅಂಶ ಆಗಿನ ಮಾಧ್ಯಮಗಳಲ್ಲಿ ಆಗಿದಾಂಗ್ಗೆ ಪ್ರಕಟವಾಗುತ್ತಲೇ ಇತ್ತು. 
ಇವರು ಹಾರ್ವರ್ಡ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಒಂದು ನಿಶ್ಚಿತವಾದ ಅಧ್ಯಯನದ ಯೋಜನೆಯನ್ನು ಹೊಂದಿರಲಿಲ್ಲ. ಅಲ್ಲದೆ ಶಾಲೆಯ ಕಂಪ್ಯೂಟರ್‌ಗಳನ್ನು ಬಳಸುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. 
ಪಾಲ್‌ ಅಲೆನ್‌ರೊಂದಿಗೆ ಸಂಪರ್ಕ ಉಳಿಸಿಕೊಂಡಿದ್ದ ಗೇಟ್ಸ್‌, 1974ರ ಬೇಸಗೆಯಲ್ಲಿ ಹನಿವೆಲ್‌ನಲ್ಲಿ ಅವರನ್ನು ಸೇರಿಕೊಂಡರು. ಇದರ ನಂತರದ ವರ್ಷದಲ್ಲಿ ಇಂಟೆಲ್‌ 8080 CPU ಆಧಾರಿತ MITS ಆಲ್ಟೇರ್‌ 8800  ಬಿಡುಗಡೆಯಾಯಿತು. ಇದನ್ನು ನೋಡಿದ ಗೇಟ್ಸ್ ಮತ್ತು ಅಲೆನ್‌, ತಮ್ಮದೇ ಸ್ವಂತ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಲು ಇದು ಸಕಾಲ ಎಂದು ತೀರ್ಮಾನಿಸಿದರು.
ಈ ನಿರ್ಧಾರದ ಬಗ್ಗೆ ಗೇಟ್ಸ್ ತನ್ನ ಹೆತ್ತವರೊಂದಿಗೆ ಚರ್ಚಿಸಿದರು. ತನ್ನದೇ ಸಂಸ್ಥೆ ಸ್ಥಾಪಿಸುವ ವಿಚಾರದಲ್ಲಿ ಗೇಟ್ಸ್‌ ಅವರಿಗಿದ್ದ ಬಯಕೆಯನ್ನು ಕಣ್ಣಾರೆ ಕಂಡಿದ್ದ ಅವರು ತಮ್ಮ ಮಗನ ಕೆಲಸಕ್ಕೆ ಬೆಂಬಲ ಸೂಚಿಸಿದರು.

]
ಪಾಪುಲರ್ ಎಲೆಕ್ಟ್ರಾನಿಕ್ಸ್  ಪತ್ರಿಕೆಯು ತನ್ನ 1975ರ ಜನವರಿ ಸಂಚಿಕೆಯಲ್ಲಿ ಆಲ್ಟೇರ್‌ 8800 ಬಗ್ಗೆ ವಿವರವಾಗಿ ಬರೆದಿತ್ತು. ಇದನ್ನು ಓದಿದ ಗೇಟ್ಸ್‌, ಹೊಸ ಮೈಕ್ರೋಕಂಪ್ಯೂಟರ್ ಸೃಷ್ಟಿಸಿದ ಮೈಕ್ರೋ ಇನ್‌ಸ್ಟ್ರುಮೆಂಟೇಷನ್‌ ಅಂಡ್‌ ಟೆಲಿಮೆಟ್ರಿ ಸಿಸ್ಟಮ್ಸ್‌ (MITS) ಸಂಸ್ಥೆಯನ್ನು ಸಂಪರ್ಕಿಸಿ, ತಾವು ಮತ್ತು ತಮ್ಮ ಸ್ನೇಹಿತರು ಅದೇ ನೆಲೆಗಟ್ಟಿಗಾಗಿ BASIC ಇಂಟರ್‌ಪ್ರಿಟರ್ ಒಂದರ ಮೇಲೆ ಈಗಾಗಲೇ ಕೆಲಸ ಮಾಡಲು ಆರಂಭಿಸಿದ್ದುದನ್ನು ತಿಳಿಸಿದರು. 
ವಾಸ್ತವದಲ್ಲಿ ಗೇಟ್ಸ್‌ ಮತ್ತು ಅಲೆನ್‌ ಬಳಿ ಆಲ್ಟೇರ್‌ ಇರಲೇ ಇಲ್ಲ. ಜೊತೆಗೆ ಇದಕ್ಕಾಗಿ ಯಾವುದೇ ಸಂಕೇತವನ್ನೂ ಬರೆದಿರಲಿಲ್ಲ. MITSನ ಆಸಕ್ತಿಯನ್ನು ಅಳೆಯುವ ಉದ್ದೇಶದಿಂದಷ್ಟೇ ಅವರಿಬ್ಬರೂ ಈ ರೀತಿ ಹೇಳಿದ್ದರು. MITS ಅಧ್ಯಕ್ಷ ಎಡ್‌ ರಾಬರ್ಟ್ಸ್ ಇವರನ್ನು ಭೇಟಿ ಮಾಡಲು ಒಪ್ಪಿ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಇವರನ್ನು ಆಹ್ವಾನಿಸಿದರು. ಕೆಲವು ವಾರಗಳ ನಂತರ ಇವರು ಮಿನಿಕಂಪ್ಯೂಟರ್‌ನಲ್ಲಿ ಚಾಲನೆಯಾಗುವ ಆಲ್ಟೇರ್‌ ಎಮ್ಯುಲೇಟರ್‌ ಎಂಬ ಸೂತ್ರವನ್ನು ಮತ್ತು ಇದರ ನಂತರ BASIC ಇಂಟರ್‌ಪ್ರಿಟರ್‌ ಅನ್ನು ಆಭಿವೃದ್ಧಿಪಡಿಸಿದರು. 
ಅಲ್ಬುಕರ್ಕ್‌ನಲ್ಲಿರುವ MITSನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಯೋಗಾರ್ಥ ಪ್ರದರ್ಶನದಲ್ಲಿ ಗೇಟ್ಸ್‌ಗೆ ಅಮೋಘ ಯಶಸ್ಸು ದೊರೆಯಿತಲ್ಲದೆ, ಇಂಟರ್‌ಪ್ರಿಟರ್‌ಗಳನ್ನು ಆಲ್ಟೇರ್‌ BASIC ಸ್ವರೂಪದಲ್ಲಿ ವಿತರಿಸುವ ಕುರಿತು MITSನೊಂದಿಗೆ ಒಡಂಬಡಿಕೆ ಏರ್ಪಟ್ಟಿತು. ಪಾಲ್‌ ಅಲೆನ್‌ ಅವರನ್ನು ಉದ್ಯೋಗಿಯಾಗಿ MITS ನೇಮಿಸಿಕೊಂಡಿತು. ಹಾಗೂ ಗೇಟ್ಸ್‌‌ ಅಲ್ಬುಕರ್ಕ್‌ನಲ್ಲಿನ MITS ಕಚೇರಿಯಲ್ಲಿ ಅಲೆನ್‌ನೊಂದಿಗೆ ಕೆಲಸ ಮಾಡಲು ಹಾರ್ವರ್ಡ್‌ನಿಂದ 1975ರ ನವೆಂಬರ್‌ನಲ್ಲಿ ಗೈರುಹಾಜರಿ ರಜೆ‌ಯನ್ನು ಪಡೆದರು.  
ಗೇಟ್ಸ್‌ ಮತ್ತು ಅಲೆನ್‌ ತಮ್ಮ ಪಾಲುದಾರಿಕೆಯನ್ನು ಮೈಕ್ರೋ-ಸಾಫ್ಟ್‌ ಎಂದು ಹೆಸರಿಸಿ, ತಮ್ಮ ಮೊದಲ ಕಚೇರಿಯನ್ನು ಅಲ್ಬುಕರ್ಕ್‌ನಲ್ಲಿ ತೆರೆದರು.
ಒಂದೇ ವರ್ಷದಲ್ಲಿ ಕಂಪನಿಯ ಹೆಸರಿನ ನಡುವೆ ಇದ್ದ ಅಡ್ಡಗೆರೆಯನ್ನು(-) ಕೈಬಿಡಲಾಯಿತು. ಅಲ್ಲದೆ 1976ರ ನವೆಂಬರ್‌‌ 25ರಂದು ಮೈಕ್ರೋಸಾಫ್ಟ್‌ ಹೆಸರಿನ ವ್ಯಾಪಾರನಾಮವನ್ನು ಸೆಕ್ರೆಟರಿ ಆಫ್‌ ಸ್ಟೇಟ್‌ ಆಫ್‌ ನ್ಯೂ ಮೆಕ್ಸಿಕೋ ಕಚೇರಿಯಲ್ಲಿ ನೋಂದಾಯಿಸಲಾಯಿತು. ಇದಾದ ನಂತರ, ಅರ್ಧಕ್ಕೆ ನಿಲ್ಲಿಸಿದ್ದ ವ್ಯಾಸಂಗವನ್ನು ಪೂರ್ಣಗೊಳಿಸಲು ಗೇಟ್ಸ್‌ರವರು ಮತ್ತೆ ಹಾರ್ವರ್ಡ್‌ಗೆ ಹಿಂದಿರುಗಲೇ ಇಲ್ಲ. 

ಕಂಪ್ಯೂಟರ್‌ ಹವ್ಯಾಸಿಗಳಲ್ಲಿ ಮೈಕ್ರೋಸಾಫ್ಟ್ನ BASIC ಸಾಕಷ್ಟು ಜನಪ್ರಿಯವಾಯಿತು. ಆದರೆ ಮಾರುಕಟ್ಟೆ ಮಾಡುವುದಕ್ಕೆ ಮುಂಚಿನ ನಕಲೊಂದು ಬಳಕೆದಾರರ ಮಧ್ಯೆ ಸೋರಿಕೆಯಾಗಿ, ಅನಧಿಕೃತ ರೀತಿಯಲ್ಲಿ ವ್ಯಾಪಕವಾಗಿ ವಿತರಣೆಯಾಗುತ್ತಿದೆ ಎಂಬುದನ್ನು ಗೇಟ್ಸ್‌ ಪತ್ತೆ ಹಚ್ಚಿದರು. 1976ರ ಫೆಬ್ರವರಿಯಲ್ಲಿ ಗೇಟ್ಸ್‌ MITS ಸುದ್ದಿಪತ್ರದಲ್ಲಿ ಹವ್ಯಾಸಿಗಳಿಗೊಂದು ಮುಕ್ತ ಪತ್ರ ವನ್ನು ಬರೆದರು. ಹಣ ಪಾವತಿಯಾಗದೆ MITS ಸಂಸ್ಥೆಯು ಸಾಫ್ಟ್‌ವೇರ್‌ನ ಉತ್ಪಾದನೆ, ವಿತರಣೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಹಾಗೂ ಸಾಫ್ಟ್‌ವೇರ್‌ನ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂಬ ವಿಷಯವನ್ನು ಆ ಪತ್ರ ಒಳಗೊಂಡಿತ್ತು.
ಈ ಮುಕ್ತ ಪತ್ರ ಅನೇಕ ಕಂಪ್ಯೂಟರ್‌ ಹವ್ಯಾಸಿಗಳ ನಡುವೆ ಅಪಖ್ಯಾತಿಗೆ ಗುರಿಯಾಯಿತು. ಆದರೆ ಸಾಫ್ಟ್‌ವೇರ್‌ ಅಭಿವೃದ್ಧಿ ಮಾಡುವವರು ತಮ್ಮ ಉತ್ಪನ್ನಗಳಿಗೆ ಸಲ್ಲಬೇಕಾದ ಪಾವತಿಯನ್ನು ಕೇಳುವ ಸಾಮರ್ಥ್ಯ ಹೊಂದಿರಬೇಕು ಎಂದು ಗೇಟ್ಸ್‌ ದೃಢವಾಗಿ ನಂಬಿದ್ದರು. 
ಮೈಕ್ರೋಸಾಫ್ಟ್ 1976ರ ಉತ್ತರಾರ್ಧದಲ್ಲಿ MITS ಕಂಪನಿಯಿಂದ ಹೊರಬಂದು ಸ್ವತಂತ್ರವಾಯಿತು. ಅಲ್ಲದೆ ವಿವಿಧ ಸಿಸ್ಟಮ್‌ಗಳಿಗೆ ಪ್ರೋಗ್ಯ್ರಾಮಿಂಗ್‌ ಭಾಷೆ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮುಂದುವರಿಸಿತು. 1979ರ ಜನವರಿ 1ರಂದು ಅಲ್ಬುಕರ್ಕ್‌ನಿಂದ ವಾಷಿಂಗ್ಟನ್‌ನ ಬೆಲ್ಲೆವ್ಯೂ ನಗರದಲ್ಲಿನ ಹೊಸ ಕಚೇರಿಗೆ ಕಂಪನಿಯು ಸ್ಥಳಾಂತರಗೊಂಡಿತು.   

ಮೈಕ್ರೋಸಾಫ್ಟ್‌‌ನ ಆರಂಭಿಕ ವರ್ಷಗಳಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ಎಲ್ಲ ಉದ್ಯೋಗಿಗಳೂ ವ್ಯಾಪಕ ಹೊಣೆಗಾರಿಕೆಯನ್ನು ಹೊಂದಿದ್ದರು. 

ಸಾಫ್ಟ್‌ವೇರ್‌ ಸಂಕೇತಗಳನ್ನು ಬರೆಯುವ ಕೆಲಸವನ್ನು ಗೇಟ್ಸ್‌ ಮುಂದುವರಿಸಿದರಲ್ಲದೆ, ಕಂಪನಿಯ ವ್ಯವಹಾರದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಆರಂಭದ ಐದು ವರ್ಷಗಳಲ್ಲಿ ಕಂಪನಿ ಬರೆಯುವ ಎಲ್ಲ ಕೋಡ್‌ಗಳನ್ನು ಇವರೇ ಸ್ವತಃ ಪರೀಕ್ಷಿಸಿದರು. ಅಲ್ಲದೆ ಅಗತ್ಯ ಕಂಡುಬಂದಾಗಲೆಲ್ಲಾ ಅದರ ಕೆಲವು ಭಾಗಗಳನ್ನು ಮರು ರಚಿಸುತ್ತಿದ್ದರು.

ಡಿಜಿಟಲ್‌ ರಿಸರ್ಚ್‌ ಕಂಪನಿಯೊಂದಿಗಿನ IBM ಮಾತುಕತೆಗಳು ನಿರೀಕ್ಷಿತ ಮಟ್ಟದಲ್ಲಿರದಿದ್ದುದರಿಂದ, ಪರವಾನಗಿಯ ಒಪ್ಪಂದವು ಅವರ ಕೈಗೆ ಸಿಗಲಿಲ್ಲ.  
IBM ಪ್ರತಿನಿಧಿಯಾಗಿದ್ದ ಜಾಕ್‌ ಸ್ಯಾಮ್ಸ್‌, ಗೇಟ್ಸ್‌ರೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ಪರವಾನಗಿ ಪಡೆಯುವಲ್ಲಿನ ತೊಂದರೆಗಳನ್ನು ವಿವರಿಸಿ, ಸ್ವೀಕಾರಾರ್ಹ ಆಪರೇಟಿಂಗ್‌ ಸಿಸ್ಟಮ್‌ ಒಂದನ್ನು ಅಭಿವೃದ್ಧಿಪಡಿಸಿಕೊಡುವಂತೆ ಕೇಳಿಕೊಂಡರು.ಕೆಲವು ವಾರಗಳ ನಂತರ, ಗೇಟ್ಸ್‌ CP/Mಗೆ ಸಮಾನವಾಗಿದ್ದ 86-DOS (QDOS) ಎಂಬ ಆಪರೇಟಿಂಗ್‌ ಸಿಸ್ಟಮ್‌ ಒಂದನ್ನು ಬಳಸಿಕೊಳ್ಳಲು ಉದ್ದೇಶಿಸಿದರು. ಇದನ್ನು PCಯ ರೀತಿಯಲ್ಲೇ ಇದ್ದ ಯಂತ್ರಾಂಶವೊಂದಕ್ಕೆ ಒಂದಕ್ಕೆ ಸಿಯಾಟಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್‌(SCP)ನ ಟಿಮ್‌ ಪೀಟರ್ಸನ್‌ ಎಂಬುವವರು ಅಭಿವೃದ್ಧಿಪಡಿಸಿದ್ದರು. SCP ಕಂಪನಿಯೊಂದಿಗೆ ಮೈಕ್ರೋಸಾಫ್ಟ್‌ ಒಪ್ಪಂದ ಮಾಡಿಕೊಂಡು, ಅವರ ಏಕೈಕ ಪರವಾನಗಿ ಏಜೆಂಟ್‌ ಆಯಿತು. ತದನಂತರ 86-DOSನ ಪೂರ್ಣ ಮಾಲೀಕತ್ವವನ್ನು ತಾನೇ ಪಡೆಯಿತು. PCಗೆ ಆಪರೇಟಿಂಗ್ ಸಿಸ್ಟಮ್‌ ಅನ್ನು ಅಳವಡಿಸಿದ ನಂತರ ಮೈಕ್ರೋಸಾಪ್ಟ್‌ ಅದನ್ನು IBMಗೆ PC-DOS ಎಂಬ ಹೆಸರಿನಲ್ಲಿ ವಿತರಣೆ ಮಾಡಿ, ಒಂದೇ ಸಲಕ್ಕೆ 50,000$ ಶುಲ್ಕವನ್ನು ಪಡೆದುಕೊಂಡಿತು. ಆದರೆ ಆಪರೇಟಿಂಗ್‌ ಸಿಸ್ಟಮ್ ಮೇಲಿನ ಹಕ್ಕುಸ್ವಾಮ್ಯವನ್ನು ಮಾತ್ರ ಗೇಟ್ಸ್‌ ಹಸ್ತಾಂತರ ಮಾಡಲಿಲ್ಲ. ಏಕೆಂದರೆ, ಇತರ ಯಂತ್ರಾಂಶ ಮಾರಾಟಗಾರರು IBM ಸಿಸ್ಟಮ್‌ ಅನ್ನು ಸ್ವತಃ ಹುಟ್ಟುಹಾಕಬಹುದು ಎಂಬ ನಂಬಿಕೆ ಗೇಟ್ಸ್‌ಗಿತ್ತು.
ಅವರು ಅದನ್ನು ಸಾಧಿಸಿಯೇಬಿಟ್ಟರು ಮತ್ತು MS-DOSನ ಮಾರಾಟದಿಂದಾಗಿ ಮೈಕ್ರೋಸಾಫ್ಟ್‌ ಕಂಪನಿಯು ಐಟಿ ಉದ್ಯಮದ ದೈತ್ಯ ಸಂಸ್ಥೆಯಾಗಿ ಹೊರಹೊಮ್ಮಿತು. 

ಮೈಕ್ರೋಸಾಫ್ಟ್ ಕಂಪನಿ ತನ್ನ ಮೈಕ್ರೋಸಾಫ್ಟ್‌ ವಿಂಡೋಸ್‌ನ ಮೊದಲ ಬಿಡಿ ಆವೃತ್ತಿಯನ್ನು 1985ರ ನವೆಂಬರ್‌ 20ರಂದು ಬಿಡುಗಡೆ ಮಾಡಿತು ಹಾಗೂ ಆಗಸ್ಟ್‌ನಲ್ಲಿ OS/2 ಹೆಸರಿನ ಪ್ರತ್ಯೇಕ ಆಪರೇಟಿಂಗ್ ಸಿಸ್ಟಮ್‌ ಅಭಿವೃದ್ಧಿಪಡಿಸಲು IBMನೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. 
ಎರಡೂ ಸಂಸ್ಥೆಗಳು ಹೊಸ ಸಿಸ್ಟಮ್‌ನ ಮೊದಲ ಆವೃತ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರೂ, ಇವುಗಳ ನಡುವೆ ಏರುತ್ತಲೇ ಇದ್ದ ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದ ಈ ಸಂಸ್ಥೆಗಳ ಪಾಲುದಾರಿಕೆ ಒಳಗೊಳಗೇ ಹಾಳಾಯಿತು. 

ಕಾರ್ಯಕಾರಿ ಅಧಿಕಾರಿಯಾಗಿದ್ದ ಗೇಟ್ಸ್‌ ಮೈಕ್ರೋಸಾಫ್ಟ್‌ನ ಹಿರಿಯ ವ್ಯವಸ್ಥಾಪಕರನ್ನು ಮತ್ತು ಪ್ರೋಗ್ರ್ಯಾಮ್‌ ವ್ಯವಸ್ಥಾಪರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು. ಈ ಸಭೆಗಳ ಸಾಕ್ಷಾತ್‌ ವಿವರಣೆಗಳು ಇವರನ್ನು ವರ್ಣಿಸುವ ರೀತಿಯಲ್ಲಿಯೇ ಹೇಳವುದಾದರೆ, ಗೇಟ್ಸ್‌ ಪದತಃ ಕಲಹಪ್ರಿಯರಾಗಿದ್ದರು. ವ್ಯವಸ್ಥಾಪಕರ ವ್ಯವಹಾರದ ಕಾರ್ಯತಂತ್ರಗಳಲ್ಲಿ ಅಥವಾ ಪ್ರಸ್ತಾವನೆಗಳಲ್ಲಿ ಕಂಪನಿಯ ದೀರ್ಘಕಾಲೀನ ಹಿತಾಸಕ್ತಿಗಳನ್ನು ಅಪಾಯಕ್ಕೆ ಸಿಲುಕಿಸುವಂತಹ ನ್ಯೂನತೆಗಳು ಕಂಡುಬಂದರೆ ಗೇಟ್ಸ್‌ ಅವರಿಗೆ ಛೀಮಾರಿ ಹಾಕುತ್ತಿದ್ದರು.
ವಿಷಯವೊಂದರ ನಿರೂಪಣೆ ನಡೆಯುತ್ತಿರುವಾಗ ಮಧ್ಯೆ ಬಾಯಿ ಹಾಕುತ್ತಿದ್ದ ಅವರು, ಇಂಥಾ ಅವಿವೇಕದ ಕೆಲಸವನ್ನು ನಾನೆಂದಿಗೂ ನೋಡಿಲ್ಲ ಎಂದು ಟೀಕಿಸಿಬಿಡುತ್ತಿದ್ದರು. ತಮ್ಮ ವಾಗ್ದಾಳಿಯನ್ನು ಮುಂದುವರಿಸುತ್ತಾ, ನಿಮ್ಮ ಕೆಲಸಗಳನ್ನು ಬಿಟ್ಟು ನೀವೇಕೆ ಶಾಂತಿ ಪಡೆಯನ್ನಾದರೂ ಸೇರಬಾರದು? ಎಂದು ಗೇಟ್ಸ್‌ ಗದರಿಕೊಳ್ಳುತ್ತಿದ್ದರು.

ಗೇಟ್ಸ್‌ರ ಕೋಪಕ್ಕೆ ಗುರಿಯಾದವರು, ಅವರಿಗೆ ಸಂಪೂರ್ಣವಾಗಿ ತೃಪ್ತಿಯಾಗುವವರೆಗೂ ತಮ್ಮ ಪ್ರಸ್ತಾವನೆಯನ್ನು ಸಮರ್ಥಿಸಿಕೊಂಡು ವಿವರವಾಗಿ ಹೇಳಬೇಕಾಗುತ್ತಿತ್ತು. ತಮ್ಮ ಅಧೀನದಲ್ಲಿನ ಅಧಿಕಾರಿಗಳು ಅನಗತ್ಯವಾಗಿ ತಮ್ಮ ಕಾರ್ಯದಲ್ಲಿ ವಿಳಂಬ ಮಾಡುವುದು ಅಥವಾ ಮುಂದೂಡುವುದು ಕಂಡುಬಂದರೆ ನಾನಿದನ್ನು ವಾರಾಂತ್ಯದೊಳಗೆ ಮಾಡುತ್ತೇನೆ ಎಂದು ವ್ಯಂಗ್ಯವಾಗಿ ಟೀಕಿಸುವುದಕ್ಕೆ ಗೇಟ್ಸ್‌ ಹೆಸರುವಾಸಿಯಾಗಿದ್ದರು.

ಮೈಕ್ರೋಸಾಫ್ಟ್‌ನ ಇತಿಹಾಸದುದ್ದಕ್ಕೂ, ಪ್ರಮುಖವಾಗಿ ಅದರಲ್ಲಿನ ಆಡಳಿತ ಮತ್ತು ಕಾರ್ಯಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಗೇಟ್ಸ್‌ರವರ ಪಾತ್ರವಿತ್ತು. ಆದರೂ ಇವರು ಕಂಪನಿಯ ಆರಂಭಿಕ ವರ್ಷಗಳಲ್ಲಿ, ನಿರ್ದಿಷ್ಟವಾಗಿ ಪ್ರೋಗ್ರ್ಯಾಮಿಂಗ್‌ ಭಾಷೆಗೆ ಸಂಬಂಧಿಸಿದ ಕಂಪನಿಯ ಉತ್ಪನ್ನಗಳಲ್ಲಿ ಇದರ ಸಕ್ರಿಯ ಸಾಫ್ಟ್‌ವೇರ್‌ ಅಭಿವೃದ್ದಿಕಾರರಾಗಿದ್ದರು.  ಇವರು TRS-80 ಮಾಡೆಲ್‌ 100 ಲೈನ್‌ ಮೇಲೆ ಕೆಲಸ ಮಾಡುತ್ತಿದ್ದುದರಿಂದ, ಅಭಿವೃದ್ಧಿ ತಂಡದಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡಿರಲಿಲ್ಲ. ಆದರೆ ಕಂಪನಿಯ ಉತ್ಪನ್ನಗಳನ್ನು 1989ರಲ್ಲಿ ವಿಶ್ವದೆಲ್ಲೆಡೆ ವಿತರಿಸುವ ತನಕವೂ ಸಂಕೇತಗಳನ್ನು ಬರೆದರು.  ಲೋಕೋಪಕಾರಕ್ಕೆ ತಮ್ಮ ಹೆಚ್ಚಿನ ಸಮಯ ಮೀಸಲಿಡುವುದಕ್ಕೋಸ್ಕರ ಮುಂದಿನ ಎರಡು ವರ್ಷಗಳಲ್ಲಿ ತಮ್ಮ ದಿನನಿತ್ಯದ ಜವಾಬ್ಧಾರಿಗಳಿಂದ ಬೇರೊಂದು ಪಾತ್ರಕ್ಕೆ ವರ್ಗಾವಣೆ ಹೊಂದುವುದರ ಕುರಿತಾದ ನಿರ್ಧಾರವನ್ನು 2006ರ ಜೂನ್‌ 15ರಂದು ಗೇಟ್ಸ್‌ ಪ್ರಕಟಿಸಿದರು. 

ಇಬ್ಬರು ಉತ್ತರಾಧಿಕಾರಿಗಳ ನಡುವೆ ಗೇಟ್ಸ್‌ ತಮ್ಮ ಜವಾಬ್ದಾರಿಗಳನ್ನು ಹಂಚಿದರು. ದೈನಂದಿನ ಅಡಳಿತ ಹೊಣೆಗಾರಿಕೆಯನ್ನು ರೇ ಓಝೀಯವರಿಗೆ ಮತ್ತು ದೀರ್ಘಕಾಲೀನ ಉತ್ಪನ್ನ ಕಾರ್ಯತಂತ್ರದ ಹೊಣೆಗಾರಿಕೆಯನ್ನು ಕ್ರೇಗ್‌ ಮುಂಡೀಯವರಿಗೆ ಒಪ್ಪಿಸಿದರು. 

ಮೈಕ್ರೋಸಾಫ್ಟ್‌ನ ವ್ಯವಹಾರ ಪದ್ಧತಿಗಳಮೇಲಿನ ಟ್ರಸ್ಟ್‌‌ ವಿರೋಧಿ ದಾವೆ ಹೂಡುವಿಕೆಗೆ ಕಾರಣವಾಗಿದ್ದ ಹಲವು ತೀರ್ಮಾನಗಳಿಗೆ ಗೇಟ್ಸ್‌ರವರ ಅನುಮೋದನೆಯಿತ್ತು.1998ರ ಯುನೈಟೆಡ್‌ ಸ್ಟೇಟ್ಸ್‌ v. ಮೈಕ್ರೋಸಾಫ್ಟ್  ಪ್ರಕರಣದಲ್ಲಿ ಪ್ರಮಾಣ ಮಾಡಿಕೊಟ್ಟ ಹೇಳಿಕೆಯ ಕೈಫಿಯತ್ತನ್ನು ಗೇಟ್ಸ್ ಪುರಾವೆಯಾಗಿ ಸಲ್ಲಿಸಿದಾಗ, ಇದೊಂದು ನುಣುಚಿಕೊಳ್ಳುವ ಪ್ರಯತ್ನ ಎಂದು ಹಲವು ಪತ್ರಕರ್ತರು ಬರೆದರು. 
ವರದಿಯಲ್ಲಿನ ಸ್ಪರ್ಧಿಸು, ಸಂಬಂಧಪಟ್ಟ ಮತ್ತು ನಾವು ಎಂಬ ಪದಗಳ ಸಾಂದರ್ಭಿಕ ಅರ್ಥವನ್ನು ಕುರಿತಾಗಿ ಪರೀಕ್ಷಕ ಡೇವಿಡ್‌ ಬೋಯೀಸ್‌ರೊಂದಿಗೆ ಗೇಟ್ಸ್‌ ವಾಗ್ವಾದ ನಡೆಸಿದರು.ಬಿಸಿನೆಸ್‌ವೀಕ್‌  ಇದನ್ನು ವರದಿ ಮಾಡಿತ್ತು.

ತಮ್ಮ ಪದಗಳ ಮತ್ತು ಕಾರ್ಯಗಳ ಅರ್ಥವನ್ನು ತಪ್ಪಾಗಿ ಚಿತ್ರಿಸಲು ಪ್ರಯತ್ನಿಸಿದ್ದ ಬೋಯೀಸ್‌ರ ಪ್ರಯತ್ನವನ್ನಷ್ಟೇ ತಾವು ತಡೆದದ್ದು ಎಂದು ನಂತರ ಗೇಟ್ಸ್‌ ಹೇಳಿದರು. 
ಕೈಫಿಯತ್ತನ್ನು ಸಲ್ಲಿಸುವ ಸಂದರ್ಭದಲ್ಲಿನ ತಮ್ಮ ವರ್ತನೆಗೆ ಸಂಬಂಧಿಸಿದಂತೆ, ನಾನು ಬೋಯಿಸ್‌ನನ್ನು ದೂರ ಮಾಡಿದೆನಾ?... 
ನಾನು ನನ್ನ ತಪ್ಪೊಪ್ಪಿಕೊಳ್ಳುತ್ತೇನೆ. 
ಬೋಯೀಸ್‌ ಮೇಲೆ ಕೀಳುಮಟ್ಟದ ಒರಟುತನವನ್ನು ಪ್ರದರ್ಶಿಸಿದ್ದಕ್ಕಾಗಿ ಅದೆಷ್ಟು ದಂಡ ವಿಧಿಸಬೇಕೋ ಅಷ್ಟನ್ನು ನನ್ನ ಮೇಲೆ ವಿಧಿಸಬಹುದು ಎಂದು ಅವರು ಹೇಳಿಕೊಂಡಿದ್ದರು. ಗೇಟ್ಸ್ ನಿರಾಕರಣೆಯ ಹೊರತಾಗಿಯೂ ನ್ಯಾಯಾಧೀಶರು, ಮೈಕ್ರೋಸಾಫ್ಟ್‌ ಕಂಪನಿಯು ಸ್ಪರ್ಧೆಯನ್ನು ನಿರ್ಬಂಧಿಸುವ ಮೂಲಕ ಏಕಸ್ವಾಮ್ಯತ್ವ ಮತ್ತು ನಿರ್ಬಂಧ ವಿಧಿಸುವಿಕೆಯನ್ನು ಕೈಗೊಂಡಿದ್ದು, ಇದು ಶರ್ಮನ್‌ ಟ್ರಸ್ಟ್‌ ವಿರೋಧಿ ಕಾಯಿದೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ತೀರ್ಪು ನೀಡಿದರು. 

ಮೈಕ್ರೋಸಾಫ್ಟ್‌ ಉತ್ಪನ್ನಗಳನ್ನು ಉತ್ತೇಜಿಸುವ ಜಾಹೀರಾತು ಸರಣಿಯಲ್ಲಿ ಕನಿಷ್ಟ ಒಂದರಲ್ಲಾದರೂ ತಾವು ಕಾಣಿಸಿಕೊಳ್ಳಬೇಕೆಂದು ಗೇಟ್ಸ್‌ 2008ರಲ್ಲಿ ನಿರ್ಧರಿಸಿದರು. ಈ ಜಾಹೀರಾತಿನಲ್ಲಿ ಜೆರ್ರಿ ಸಿನ್‌ಫೆಲ್ಡ್‌ ಸಹತಾರೆಯಾಗಿ ನಟಿಸಿದ್ದರು. ಸಿನ್‌ಫೆಲ್ಡ್‌ ಮಾಲ್‌ ರಿಯಾಯಿತಿ ಪಾದರಕ್ಷೆ ಅಂಗಡಿ (ಶೂ ಸರ್ಕಸ್‌)ಯೊಂದರ ಮೆಟ್ಟಿಲೇರಿ ಹೋಗುತ್ತಿರುವಾಗ, ಗೇಟ್ಸ್‌ ಪಾದರಕ್ಷೆಯನ್ನು ಖರೀದಿ ಮಾಡುತ್ತಿರುವುದನ್ನು ಗಮನಿಸುತ್ತಾರೆ. ಈ ಅಪರಿಚಿತರ ನಡುವೆ ನಡೆಯುವ 90 ಸೆಕೆಂಡ್‌ಗಳ ಮಾತುಕತೆಯೇ ಈ ಜಾಹೀರಾತು. ಮಾರಾಟಗಾರ, ಗೇಟ್ಸ್ ಅವರಿಗೆ ಗಾತ್ರದಲ್ಲಿ ಅತಿ ದೊಡ್ಡದಾದ ಪಾದರಕ್ಷೆಗಳನ್ನು ಮಾರಲು ಪ್ರಯತ್ನಿಸುತ್ತಿರುತ್ತಾನೆ. ಗೇಟ್ಸ್‌ ಪಾದರಕ್ಷೆಗಳನ್ನು ಕೊಳ್ಳುತ್ತಿರುವಾಗ, ಅವರು 1977ರಲ್ಲಿ ನ್ಯೂ ಮೆಕ್ಸಿಕೋದಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಂಧಿಸಿದಾಗ ತೆಗೆದ ಚಿತ್ರದ ಸ್ವಲ್ಪ ಪರಿಷ್ಕರಿಸಿದ ಆವೃತ್ತಿಯಾಗಿ ಬಳಸಿಕೊಂಡಿದ್ದ ತಮ್ಮ ರಿಯಾಯಿತಿ ಕಾರ್ಡ್ ಅನ್ನು ಮೇಲೆತ್ತುತ್ತಾರೆ,

ಅವರು ಮಾಲ್‌ನಿಂದ ಹೊರಬರುತ್ತಿರುವಂತೆ, ನೀವು ನಿಮ್ಮ ಬುದ್ಧಿಯನ್ನು ಇತರೆ ಡೆವಲಪರ್‌ಗಳೊಂದಿಗೆ ಒಗ್ಗೂಡಿಸುವ ಉದ್ದೇಶ ಹೊಂದಿರುವಿರಾ ಎಂದು ಗೇಟ್ಸ್‌ ಅವರನ್ನು ಸ್ಟಿನ್‌ಫೆಲ್ಡ್‌ ಕೇಳುತ್ತಾರೆ. ಗೇಟ್ಸ್ ಅದಕ್ಕೆ ಹೌದು ಎಂದಾಗ, ಸಿನ್‌ಫೆಲ್ಡ್‌ ಮತ್ತೊಮ್ಮೆ, ಬಳಕೆಯೋಗ್ಯ ಕಂಪ್ಯೂಟರ್‌ ಅನ್ನು ನಿರ್ಮಿಸುವ ಪಥದಲ್ಲಿ ಕೆಲಸ ನಡೆಯುತ್ತಿದೆಯೇ ಎಂದು ಕೇಳಿದಾಗ, ಹೌದು ಎನ್ನುವ ಉತ್ತರ ಸಿಗುತ್ತದೆ. ಇದು ಸಿನ್‌ಫೆಲ್ಡ್‌ನದೇ ಆಗಿರುವ ನಥಿಂಗ್‌ (ಸಿನ್‌ಫೆಲ್ಡ್‌ ) ಎನ್ನುವ ಪ್ರದರ್ಶನದ ಬಗ್ಗೆ ತೋರುತ್ತಿರುವ ಗೌರವಾರ್ಪಣೆ ಎಂದು ಕೆಲವರು ಹೇಳುತ್ತಾರೆ. ಈ ಸರಣಿಯ ಎರಡನೇ ಜಾಹೀರಾತುನಲ್ಲಿ, ಗೇಟ್ಸ್‌ ಮತ್ತು ಸ್ಟಿನ್‌ಫೆಲ್ಡ್‌ ಸಾಮಾನ್ಯ ಕುಟುಂಬವೊಂದರ ಮನೆಯಲ್ಲಿದ್ದು, ಸಾಮಾನ್ಯ ಜನರೊಂದಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯವಿದೆ.ಅದು ಕೂಡ ಸತ್ತ್ಯ

ಮೈಕ್ಟೋಸಾಫ್ಟ್‌ ಸಂಸ್ಥೆಯನ್ನು ಬಿಟ್ಟನಂತರ, ಗೇಟ್ಸ್‌ ತಮ್ಮ ಪರೋಪಕಾರಿ ಸೇವೆಗಳನ್ನು ಮತ್ತು ಇತರೆ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 1964ರಲ್ಲಿ ಕಾರ್ನೆಲ್‌ ವಿಶ್ವವಿದ್ಯಾಲಯದಲ್ಲಿ ರಿಚರ್ಡ್ ಫೆನ್‌ಮನ್ ಎನ್ನುವರು ದಿ ಕ್ಯಾರೆಕ್ಟರ್‌ ಆಫ್‌ ಫಿಸಿಕಲ್‌ ಲಾ‌ ಎನ್ನುವ ಶಿರೋನಾಮೆಯ ಪ್ರಚಾರ ಉಪನ್ಯಾಸ ಮಾಲೆಯನ್ನು ನೀಡಿದ್ದರು. ಇದನ್ನು BBC ಧ್ವನಿಮುದ್ರಿಸಿಕೊಂಡಿತ್ತು. ಈ ವಿಡಿಯೋ ಹಕ್ಕುಗಳನ್ನು ಕೊಂಡುಕೊಂಡ ಗೇಟ್ಸ್‌ ಅದನ್ನು ಮೈಕ್ರೋಸಾಫ್ಟ್‌ನ ಟುವ ಯೋಜನೆಯಲ್ಲಿ ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದರು.

ಗೇಟ್ಸ್‌,ದಲ್ಲಾಸ್‌ನವರಾದ ಮೆಲಿಂಡ ಫ್ರೆಂಚ್‌ ಅವರನ್ನು 1994ರ ಜನವರಿ 1ರಂದು ಟೆಕ್ಸಾಸ್‌ನಲ್ಲಿ ವಿವಾಹವಾದರು. 
ಇವರಿಗೆ ಜೆನ್ನಿಫರ್‌ ಕ್ಯಾಥರಿನ್‌ (1996), ರೋರಿ ಜಾನ್‌ (1999) ಮತ್ತು ಫೋಬೆ ಅಡೆಲೆ (2002) ಎಂಬ ಮೂವರು ಮಕ್ಕಳಿದ್ದಾರೆ. 
ಗೇಟ್ಸ್‌ ದಂಪತಿಗಳ ಮನೆಯು ಮಣ್ಣಿನ ಛಾವಣಿಯ ಮನೆಯಾಗಿದ್ದು, ಇದರ ಪಕ್ಕದಲ್ಲಿ ಬೆಟ್ಟವೊಂದಿದೆ. ಈ ಬೆಟ್ಟವು ವಾಷಿಂಗ್ಟನ್‌ನ ಮೆಡಿನನಗರದದಲ್ಲಿರುವ ವಾಷಿಂಗ್ಟನ್‌ ಸರೋವರವನ್ನು ಮೇಲಿನಿಂದ ನೋಡುವಂತಿದೆ. 
ಕಿಂಗ್‌ ಕೌಂಟಿ ಸಾರ್ವಜನಿಕ ದಾಖಲೆಗಳ ಪ್ರಕಾರ, 2006ರಲ್ಲಿದ್ದಂತೆ ಈ ಆಸ್ತಿಯ (ಜಮೀನು ಮತ್ತು ಮನೆ ) ಒಟ್ಟು ನಿರ್ಧಾರಿತ ಮೌಲ್ಯವು 125 ದಶಲಕ್ಷ$ ಹಾಗೂ ಇದರ ವಾರ್ಷಿಕ ಆಸ್ತಿ ತೆರಿಗೆ 991,000$ನಷ್ಟಿದೆ. 

ಗೇಟ್ಸ್‌ ಅವರ ಖಾಸಗಿ ಸಂಪಾದನೆಯಲ್ಲಿ ಲಿಯೋನಾರ್ಡೋ ಡಾ ವಿಂಚಿ ಬರಹಗಳ ಸಂಗ್ರಹವಾಗಿರುವ ಕೋಡೆಕ್ಸ್‌ ಲೆಸ್ಟರ್‌ಕೂಡ ಒಂದು. ಇದನ್ನು 1994ರ ಹರಾಜಿನಲ್ಲಿ 30.8 ದಶಲಕ್ಷ $ಗೆ ಗೇಟ್ಸ್‌ ಖರೀದಿಸಿದ್ದರು. ಗೇಟ್ಸ್‌ ಅತ್ಯಾಸಕ್ತಿಯ ಓದುಗ ಎಂದು ಹೆಸರಾಗಿದ್ದಾರೆ. ಅಲ್ಲದೆ ಇವರ ಮನೆಯ ಒಳಮಾಳಿಗೆಯಲ್ಲಿ ಬೃಹತ್ತಾದ ಗ್ರಂಥಾಲಯವಿದ್ದು, ಇದನ್ನು ದಿ ಗ್ರೇಟ್‌ ಗ್ಯಾಟ್ಸ್‌ಬೈ ಕೃತಿಯಿಂದ ಆಯ್ದ ಉಕ್ತಿಯ ಕೆತ್ತನೆಯಿಂದ ಅಲಂಕರಿಸಲಾಗಿದೆ.  ಬ್ರಿಡ್ಜ್‌, ಟೆನ್ನಿಸ್ ಮತ್ತು ಗಾಲ್ಫ್‌ ಆಟಗಳನ್ನು ಆಡುವ ಮೂಲಕ ಅವರು ಸಂತೋಷವನ್ನು ಕಂಡುಕೊಂಡಿದ್ದಾರೆ.

ಇವರ ಬಹುದಿನಗಳ ಸ್ನೇಹಿತ ವಾರೆನ್‌ ಬಫೆಟ್‌ರವರು ಮು‌ಖ್ಯಸ್ಥರಾಗಿದ್ದ ಬರ್ಕ್‌ಷೈರ್‌ ಹಾಥ್‌ವೇ ಎಂಬ ಒಂದು ಹೂಡಿಕಾ ಕಂಪನಿಗೆ 2004ರಲ್ಲಿ ಗೇಟ್ಸ್‌ ನಿರ್ದೇಶಕರಾಗಿ ನೇಮಕಗೊಂಡರು. 

ಇವರ ಸಂಪತ್ತಿನಲ್ಲಿ ಬಹು ಭಾಗವನ್ನು ದಾನವಾಗಿ ನೀಡಬಹುದೆಂದು ಸಾರ್ವಜನಿಕ ಅಭಿಪ್ರಾಯ ಸಂಚಯಗೊಳ್ಳುತ್ತಾ ಹೋದಾಗ, ಇತರರು ತಮ್ಮ ಬಗ್ಗೆ ಹೊಂದಿದ್ದ ನಿರೀಕ್ಷೆಗಳನ್ನು ಗೇಟ್ಸ್‌ ಅರ್ಥ ಮಾಡಿಕೊಳ್ಳಲು ಆರಂಭಿಸಿದರು. ಆಂಡ್ಯ್ರೂ ಕಾರ್ನೆಗೀ ಮತ್ತು ಜಾನ್‌ ಡಿ. ರಾಕ್‌ಫೆಲ್ಲರ್‌ ಅವರ ಲೋಕೋಪಕಾರಿ ಕಾರ್ಯಗಳನ್ನು ಅಧ್ಯಯನ ಮಾಡಿದ ಗೇಟ್ಸ್‌, ವಿಲಿಯಂ ಎಚ್‌. ಗೇಟ್ಸ್ ಪ್ರತಿಷ್ಠಾನ‌ ಸ್ಥಾಪಿಸಲು 1994ರಲ್ಲಿ ಮೈಕ್ರೋಸಾಫ್ಟ್‌ನ ಷೇರುಗಳ ಒಂದಷ್ಟು ಭಾಗವನ್ನು ಮಾರಿದರು. 2000ರಲ್ಲಿ ಗೇಟ್ಸ್‌ ಮತ್ತು ಅವರ ಪತ್ನಿ ಮೆಲಿಂಡ ಗೇಟ್ಸ್‌ ಮೂರು ಕುಟುಂಬಗಳ ಪ್ರತಿಷ್ಠಾನಗಳನ್ನು ಒಗ್ಗೂಡಿಸಿ ಬಿಲ್‌ amp; ಮೆಲಿಂಡ ಗೇಟ್ಸ್ ಫೌಂಡೇಷನ್‌ ಎಂಬ ದತ್ತಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಇದು ಪಾರದರ್ಶಕವಾಗಿಕಾರ್ಯನಿರ್ವಹಿಸುತ್ತಿರುವ ವಿಶ್ವದ ಬೃಹತ್‌ ದತ್ತಿ ಪ್ರತಿಷ್ಠಾನ ಎಂಬ ಹೆಗ್ಗಳಿಕೆ ಪಡೆದಿದೆ. 
ಪ್ರತಿಷ್ಠಾನದ ಹಣವು ವೆಲ್‌ಕಮ್‌ ಟ್ರಸ್ಟ್‌ನಂತಹ ಇತರೆ ಪ್ರಮುಖ ದತ್ತಿ ಸಂಸ್ಥೆಗಳಿಂತ ಭಿನ್ನವಾಗಿ ಹೇಗೆ ವ್ಯಯವಾಗುತ್ತದೆ ಎನ್ನುವುದನ್ನು ದಾನಿಗಳು ತಿಳಿಯಲಿ ಎಂಬ ಕಾರಣಕ್ಕೆ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. 
ಡೇವಿಡ್‌ ರಾಕ್‌ಫೆಲ್ಲರ್‌ ಅವರ ಔದಾರ್ಯ ಮತ್ತು ಅತೀವವಾದ ಪರೋಪಕಾರಿ ಗುಣ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಗೇಟ್ಸ್‌ ಹಾಗೂ ಅವರ ತಂದೆ, ರಾಕ್‌ಫೆಲ್ಲರ್‌ ಅವರನ್ನು ಹಲವು ಬಾರಿ ಭೇಟಿ ಮಾಡಿ, ರಾಕ್‌ಫೆಲ್ಲರ್‌ ಕುಟುಂಬದ ಪರೋಪಕಾರಿ ಉದ್ದೇಶಗಳ ಮಾದರಿಯಲ್ಲಿಯೇ ತಮ್ಮ ದಾನದ ಸ್ವರೂಪವನ್ನೂ ರೂಪಿಸಿಕೊಂಡರು. ಅಂದರೆ ಸರ್ಕಾರಗಳು ಮತ್ತು ಇತರೆ ಸಂಸ್ಥೆಗಳು ನಿರ್ಲಕ್ಷಿಸಿರುವ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ರೂಪುರೇಷೆಯನ್ನು ತಯಾರಿಸಿದರು. 2007ರವರೆಗೆ ಇದ್ದಂತೆ, ಬಿಲ್‌ ಮತ್ತು ಮೆಲಿಂಡ ಗೇಟ್ಸ್‌ ಅಮೆರಿಕದ ಉದಾರ ಪರೋಪಕಾರಿಗಳು ಎಂದು ಕರೆಸಿಕೊಂಡಿದ್ದು, ಇವರು 28 ಶತಕೋಟಿ $ಗೂ ಹೆಚ್ಚಿನ ಹಣವನ್ನು ದಾನವಾಗಿ ನೀಡಿದ್ದಾರೆ. 

ಪ್ರತಿಷ್ಠಾನವು ಟೀಕೆಗಳನ್ನೂ ಎದುರಿಸಿದೆ. ತನ್ನ ಹೂಡಿಕೆಯ ಮೇಲಿನ ಲಾಭವನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ, ಪ್ರತಿಷ್ಠಾನವು ತನ್ನ ವಿತರಣೆಯಾಗಿಲ್ಲದ ಆಸ್ತಿಯನ್ನು ಹೂಡಿಕೆ ಮಾಡುತ್ತದೆ ಎಂಬುದು ಇದರ ಹಿಂದಿನ ಕಾರಣ. ಇದರ ಪರಿಣಾಮವಾಗಿ, ಈಗಾಗಲೇ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಬಡತನ ಮತ್ತಷ್ಟು ಹೆಚ್ಚಲು ಕಾರಣವಾಗಿವೆ ಎಂದು ಟೀಕೆಗೆ ಗುರಿಯಾಗಿರುವ ಕಂಪನಿಗಳನ್ನು ಪ್ರತಿಷ್ಠಾನದ ಹೂಡಿಕೆಗಳು ಒಳಗೊಂಡಿವೆ. ದುರಂತವೆಂದರೆ ಇದೇ ದೇಶಗಳಲ್ಲಿ ಪ್ರತಿಷ್ಠಾನ ಬಡತನವನ್ನು ನೀಗಿಸಲು ಪ್ರಯತ್ನಪಡುತ್ತಿದೆ. ಅಂತಹ ಕಂಪನಿಗಳೆಂದರೆ ಪರಿಸರವನ್ನು ವ್ಯಾಪಕವಾಗಿ ಹಾಳುಗೆಡವುತ್ತಿರುವ ಕಂಪನಿಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ತನ್ನ ಉತ್ಪನ್ನಗಳನ್ನು ಮಾರದ ಔಷಧಿ ಸಂಸ್ಥೆಗಳು.  
ಮಾಧ್ಯಮಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರತಿಷ್ಠಾನವು 2007ರಲ್ಲಿ, ಸಾಮಾಜಿಕ ಜವಾಬ್ಧಾರಿಯನ್ನು ಮೌಲ್ಯಮಾಪನ ಮಾಡಲು ತನ್ನ ಹೂಡಿಕೆಗಳ ಪರಿಶೀಲನೆ ಮಾಡುವುದಾಗಿ ಘೋಷಿಸಿತು.  ಇದು ತರುವಾಯ ಪರಿಶೀಲನೆಯನ್ನು ರದ್ದುಪಡಿಸಿತಲ್ಲದೆ ಕಂಪನಿಯ ಪದ್ಧತಿಗಳನ್ನು ಪ್ರಭಾವಿಸುವ ಮತ ಚಲಾವಣೆ ಹಕ್ಕನ್ನು ಬಳಸುವಾಗ ಹೆಚ್ಚಿನ ಲಾಭ ತರುವಲ್ಲಿ ಹೂಡಿಕೆ ಮಾಡುವ ತನ್ನ ನಿಯಮಕ್ಕೆ ಬದ್ಧವಾಗಿ ಹಾಗೆಯೇ ಉಳಿಯಿತು. 

ಟೈಮ್‌ ನಿಯತಕಾಲಿಕವು ಗೇಟ್ಸ್‌ ಅವರನ್ನು  ಎಂದು ಗುರ್ತಿಸಿದೆ. ಅಲ್ಲದೆ 2004, 2005, ಮತ್ತು 2006ರಲ್ಲಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರು ಎಂದೂ ಹೆಸರಿಸಿದೆ. ಗೇಟ್ಸ್‌, ಇವರ ಪತ್ನಿ ಮೆಲಿಂಡ ಮತ್ತು U2 ರಾಕ್‌ ಬ್ಯಾಂಡ್‌ನ ಹಾಡುಗಾರ ಬೊನೊ ಇವರನ್ನು ಇವರ ಜನೋಪಕಾರಿ ಕೆಲಸಗಳಿಗಾಗಿ 2005ರ ವರ್ಷದ ವ್ಯಕ್ತಿಗಳು ಎಂದು ಟೈಮ್‌  ನಿಯತಕಾಲಿಕವು ಗೌರವಿಸಿದೆ. 2006ರ‍ಲ್ಲಿ, ನಮ್ಮ ಕಾಲದ ಹೀರೋಗಳು ಎಂಬ ಪಟ್ಟಿ ಸಿದ್ಥಪಡಿಸಲು ನಡೆದ ಮತದಾನದಲ್ಲಿ ಗೇಟ್ಸ್‌ ಎಂಟನೇ ಸ್ಥಾನ ಗಳಿಸಿದ್ದರು. ಸಂಡೆ ಟೈಮ್ಸ್‌ ನ 1999ರ ಪವರ್‌ ಲಿಸ್ಟ್‌ನಲ್ಲಿ ಇವರು ಸೇರ್ಪಡೆಗೊಂಡಿದ್ದರು. ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್ಸ್ ಮ್ಯಾಗಜಿನ್‌  1994ರಲ್ಲಿ ಇವರನ್ನು ವರ್ಷದ CEO ಎಂದು ಆಯ್ಕೆ ಮಾಡಿತ್ತು. ಟೈಮ್‌  1998ರಲ್ಲಿ ಪ್ರಕಟಿಸಿದ ಟಾಪ್‌ 50 ಸೈಬರ್‌ ಇಲೈಟ್‌ ಪಟ್ಟಿಯಲ್ಲಿ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದರು. 1999ರಲ್ಲಿ ಅಪ್‌ಸೈಡ್‌  ಇಲೈಟ್‌ 100ರಲ್ಲಿ ಎರಡನೇ ಸ್ಥಾನ ಪಡೆದಿದ್ದರು. ದಿ ಗಾರ್ಡಿಯನ್‌ ಯು 2001ರಲ್ಲಿ ಪತ್ರಿಕೆ ಬಿಡುಗಡೆ ಮಾಡಿದ ಮಾಧ್ಯಮದಲ್ಲಿನ 100 ಅತಿ ಪ್ರಭಾವಶೀಲ ಜನರ ಪಟ್ಟಿಯಲ್ಲಿ ಇವರು ಒಬ್ಬರಾಗಿದ್ದರು.

ಇವರು ಪೆಕಿಂಗ್‌ ವಿಶ್ವವಿದ್ಯಾಲಯದ ಗೌರವ ಟ್ರಸ್ಟೀ ಆಗಿ 2007ರಲ್ಲಿ ಆಯ್ಕೆಯಾದರು.. ಇಷ್ಟೇ ಅಲ್ಲದೇ, ಕೀಟಶಾಸ್ತ್ರಜ್ಞರು ಎರಿಸ್ಟಾಲಿಸ್‌ ಗೇಟ್ಸಿ  ಎಂಬ ಹೂವಿನ ನೊಣಕ್ಕೆ ಬಿಲ್‌ ಗೇಟ್ಸ್‌ ಅವರ ಹೆಸರನ್ನು ಗೌರವಸೂಚಕವಾಗಿ ಇರಿಸಿದ್ದಾರೆ.  

ವಿಶ್ವದಾದ್ಯಂತ, ವಿಶೇಷವಾಗಿ ಮೆಕ್ಸಿಕೋದಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ನಿರ್ದಿಷ್ಟವಾಗಿ ಅನ್‌ ಪೇಸ್‌ ಡೆ ಲೆಕ್ಟೋರೆಸ್‌  ಎಂಬ ಯೋಜನೆಯಲ್ಲಿ ಅವರು ಕೈಗೊಂಡ ಪರೋಪಕಾರಿ ಕೆಲಸಗಳಿಗಾಗಿ 2006ರ ನವೆಂಬರ್‌ನಲ್ಲಿ ಗೇಟ್ಸ್‌ ಮತ್ತು ಅವರ ಪತ್ನಿಗೆ ಆರ್ಡರ್‌ ಆಫ್‌ ದಿ ಆಝ್‌ಟೆಕ್‌ ಈಗಲ್‌ ಎಂಬ ಪ್ರಶಸ್ತಿ ನೀಡಲಾಯಿತು.  

ಗೇಟ್ಸ್‌ ಎರಡು ಪುಸ್ತಕಗಳನ್ನು ಬರೆದಿದ್ದಾರೆ:

ಚೈತನ್ಯ ಇನ್ಫೋ-ಸಿಸ್ ಕಂಪ್ಯೂಟರ್ ಸೆಂಟರ್ ಮುದ್ಗಲ್




#Article 198: ಮೈಕ್ರೋಸಾಫ್ಟ್ (446 words)


ಮೈಕ್ರೋಸಾಫ್ಟ್ ಅಮೆರಿಕದಲ್ಲಿ ಕೇಂದ್ರೀಕೃತವಾದ ಬಹುರಾಷ್ಟ್ರೀಯ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆ. ಗಣಕಯಂತ್ರ, ಮೊಬೈಲ್ ಫೋನ್ ಮತ್ತಿತರ ಸಾಧನಗಳಲ್ಲಿ ಉಪಯೋಗಿಸಬಹುದಾದ ವಿವಿಧ ರೀತಿಯ ತಂತ್ರಾಂಶಗಳನ್ನು ಈ ಸಂಸ್ಥೆ ವಿಕಸನಗೊಳಿಸಿ ಮಾರಾಟ ಮಾಡುತ್ತದೆ. ಇದರ ಅತ್ಯಂತ ಯಶಸ್ವಿ ತಂತ್ರಾಂಶಗಳೆಂದರೆ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಮತ್ತು ಮೈಕ್ರೋಸಾಫ್ಟ್ ಆಫೀಸ್ ಗುಂಪಿನ ತಂತ್ರಾಂಶಗಳು. ಈ ಸಂಸ್ಥೆಯನ್ನು ಸ್ಥಾಪಿಸಿದವರು ಬಿಲ್ ಗೇಟ್ಸ್.

ಆಲ್ಟೇರ್ ೮೮೦೦ ಗಣಕಯಂತ್ರದ ಬಿಡುಗಡೆಯ ನಂತರ, ಆ ಯಂತ್ರದ ಮೇಲೆ ಬೇಸಿಕ್ ಭಾಷೆಯನ್ನು ಉಪಯೋಗಿಸಲು ತಂತ್ರಾಂಶವೊಂದನ್ನು ಬಿಲ್ ಗೇಟ್ಸ್ ಪ್ರದರ್ಶಿಸಿದರು. ಈ ಗಣಕಯಂತ್ರವನ್ನು ತಯಾರಿಸುತ್ತಿದ್ದ ಸಂಸ್ಥೆ ಈ ತಂತ್ರಾಂಶವನ್ನು ಮಾರಾಟ ಮಾಡಲು ಒಪ್ಪಿಗೆಯಿತ್ತ ನಂತರ ಬಿಲ್ ಗೇಟ್ಸ್ ಹಾರ್ವರ್ಡ್ ವಿಶ್ವವಿದ್ಯಾಲಯವನ್ನು ಬಿಟ್ಟು ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದರು.

ಮೈಕ್ರೋಸಾಫ್ಟ್ ಸಂಸ್ಥೆಯ ಮೊದಲ ಯಶಸ್ಸು ಡಾಸ್ ಕಾರ್ಯಾಚರಣ ವ್ಯವಸ್ಥೆ. ಐಬಿಎಮ್ ಸಂಸ್ಥೆಯ ಗಣಕಯಂತ್ರಗಳಿಗೂ ಈ ಕಾರ್ಯಾಚರಣ ವ್ಯವಸ್ಥೆಯನ್ನು ವಿಸ್ತರಿಸಿದ ಮೇಲೆ ಮೈಕ್ರೋಸಾಫ್ಟ್ ದೊಡ್ಡ ಸಂಸ್ಥೆಯಾಗಿ ಬೆಳೆಯಿತು.

ಆಗಸ್ಟ್ ೧೯೮೫ ರಲ್ಲಿ ಮೈಕ್ರೋಸಾಫ್ಟ್ ಮತ್ತು ಐಬಿಎಮ್ ಸೇರಿ ಒಎಸ್/೨ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಹೊರತಂದರು. ಇದೇ ವರ್ಷದಲ್ಲಿ ಮೈಕ್ರೋಸಾಫ್ಟ್ ತನ್ನ ಪ್ರಸಿದ್ಧ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನೂ ಬಿಡುಗಡೆ ಮಾಡಿತು. ಮಾರ್ಚ್ ೧೩, ೧೯೮೬ ರಂದು ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು.

೧೯೮೯ ರಲ್ಲಿ ಮೈಕ್ರೋಸಾಫ್ಟ್ ಆಫೀಸ್ ಎಂಬ ತಂತ್ರಾಂಶ ಸಲಕರಣೆಗಳ ಸಮೂಹವನ್ನು ಬಿಡುಗಡೆ ಮಾಡಿತು. ಇದು ಇತರ ಸಂಸ್ಥೆಗಳ ಇಂಥದೇ ತಂತ್ರಾಂಶಗಳಿಗಿಂತ ಹೆಚ್ಚು ಯಶಸ್ವಿಯಾಯಿತು. ೧೯೯೦ ರಲ್ಲಿ ವಿಂಡೋಸ್ ೩.೦, ೧೯೯೩ ರಲ್ಲಿ ವಿಂಡೋಸ್ ಎನ್ ಟಿ, ೧೯೯೫ ರಲ್ಲಿ ವಿಂಡೋಸ್ ೯೫ ಬಿಡುಗಡೆಯಾದವು.

೯೦ ರ ದಶಕದ ಮಧ್ಯದಲ್ಲಿ ಮೈಕ್ರೋಸಾಫ್ಟ್ ಅಂತರಜಾಲಕ್ಕೆ ಸಂಬಂಧಪಟ್ಟ ತಂತ್ರಾಂಶಗಳನ್ನು ಸಹ ಮಾರಾಟ ಮಾಡಲಾರಂಭಿಸಿತು. ಎಮ್ ಎಸ್ ಎನ್ ಎಂಬ ಪ್ರಮುಖ ಅಂತರಜಾಲ ಸೇವೆಯನ್ನು ಆರಂಭಿಸಿತು. ೧೯೯೬ ರಲ್ಲಿ ಎನ್ ಬಿ ಸಿ ಸಂಸ್ಥೆಯಂದಿಗೆ ಸೇರಿ ಎಮ್ ಎಸ್ ಎನ್ ಬಿ ಸಿ ಎಂಬ ಕೇಬಲ್ ಟಿವಿ ಚಾನಲ್ ಅನ್ನು ಆರಂಭಿಸಲಾಯಿತು. ಪಿಡಿಎ, ಮೊಬೈಲ್ ಫೋನ್ ಮೊದಲಾದ ಕಿರು ಯಂತ್ರಗಳ ಮೇಲೆ ಕೆಲಸ ಮಾಡಬಲ್ಲ ವಿಂಡೋಸ್ ಸಿಇ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಯಿತು.

ಅಂತರಜಾಲದಲ್ಲಿ ತಾಣಗಳನ್ನು ಭೇಟಿ ನೀಡಲು ಮೈಕ್ರೋಸಾಫ್ಟ್ ನ ತಂತ್ರಾಂಶವಾದ ಇಂಟರ್ನೆಟ್ ಎಕ್ಸ್ಪ್ಲೋರರ್ ಅನ್ನು ವಿಂಡೋಸ್ ಮತ್ತು ಮ್ಯಾಕ್ - ಈ ಎರಡೂ ಕಾರ್ಯಾಚರಣ ವ್ಯವಸ್ಥೆಗಳಿಗೆ ಬಿಡುಗಡೆ ಮಾಡಲಾಯಿತು. ತನ್ನ ಸ್ಪರ್ಧಾಳು ತಂತ್ರಾಂಶ ನೆಟ್ ಸ್ಕೇಪ್ ಗಿಂತ ಇದು ಹೆಚ್ಚು ಯಶಸ್ವಿಯಾಗಲಾರಂಭಿಸಿತು. ಇದಕ್ಕೆ ಸಂಬಂಧಪಟ್ಟಂತೆ ೧೯೯೪ ರ ಒಂದು ಒಪ್ಪಂದವನ್ನು ಮೈಕ್ರೋಸಾಫ್ಟ್ ಮೀರಿತ್ತು ಎಂದು ೧೯೯೭ ರಲ್ಲಿ ಅಮೆರಿಕದ ನ್ಯಾಯ ಇಲಾಖೆ ದೂರು ದಾಖಲಿಸಿಕೊಂಡಿತು. ಏಪ್ರಿಲ್ ೩, ೨೦೦೦ ದಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಮೈಕ್ರೋಸಾಫ್ಟ್ ಸಂಸ್ಥೆ ಗ್ರಾಹಕರ ಹಿತರಕ್ಷಣೆಗಾಗಿ ಇಬ್ಭಾಗವಾಗಬೇಕೆಂಬ ತೀರ್ಪು ನೀಡಿತು.

೧೯೯೮ ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನ ಅಧ್ಯಕ್ಷ ಸ್ಥಾನವನ್ನು ಸ್ಟೀವ್ ಬಾಮರ್ ಅವರಿಗೆ ಬಿಟ್ಟುಕೊಟ್ಟರು; ಆದರೆ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆದರು. ೧೯೯೮ ರಲ್ಲಿ ವಿಂಡೋಸ್ ೯೮, ೨೦೦೧ ರಲ್ಲಿ ವಿಂಡೋಸ್ ಎಕ್ಸ್ ಪಿ ಬಿಡುಗಡೆಯಾದವು. ಎಕ್ಸ್ ಬಾಕ್ಸ್ ಎಂಬ ಟಿವಿ ಆಟಗಳನ್ನಾಡುವ ಯಂತ್ರದ ಬಿಡುಗಡೆಯ ನಂತರ ಮೈಕ್ರೋಸಾಫ್ಟ್ ಗೇಮಿಂಗ್ ಮಾರುಕಟ್ಟೆಯನ್ನೂ ಪ್ರವೇಶಿಸಿತು.

ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ವಿಸ್ಟಾ, ಜನವರಿ ೨೦೦೭ ರಲ್ಲಿ ಬಿಡುಗಡೆಯಾಯಿತು.

ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೭, ಜುಲೈ ೨೦೦೯ ರಲ್ಲಿ ಬಿಡುಗಡೆಯಾಯಿತು.

ಮೈಕ್ರೋಸಾಫ್ಟ್ ನ ಸ್ಮಾರ್ಟ್‌‌ಫೋನ್ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ಫೋನ್, ನವಂಬರ್ ೨೦೧೦ ರಲ್ಲಿ ಬಿಡುಗಡೆಯಾಯಿತು.

ಮೈಕ್ರೋಸಾಫ್ಟ್ ನ ಕಾರ್ಯಾಚರಣ ವ್ಯವಸ್ಥೆ ವಿಂಡೋಸ್ ೮, ಅಕ್ಟೋಬರ್ ೨೦೧೨ ರಲ್ಲಿ ಬಿಡುಗಡೆಯಾಯಿತು.

ಫೆಬ್ರವರಿ ೧, ೨೦೦೮ ರಂದು ಮೈಕ್ರೋಸಾಫ್ಟ್ ಅಂತರಜಾಲ ಸಂಸ್ಥೆ ಯಾಹೂ ಅನ್ನು ೪೪.೬ ಶತಕೋಟಿ ಡಾಲರ್ ಕೊಟ್ಟು ಕೊಳ್ಳಲು ಮುಂದಾಯಿತು. ಆದರೆ ಈ ಪ್ರಸ್ತಾಪವನ್ನು ಯಾಹೂ ತಿರಸ್ಕರಿಸಿತು. ನಂತರ ಮೈಕ್ರೋಸಾಫ್ಟ್ ತನ್ನ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತು.

ಮೈಕ್ರೋಸಾಫ್ಟ್‌ ತನ್ನ ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡವನ್ನು ಅಳವಡಿಸಿತು. ಈ ಅಳವಡಿಕೆಯಲ್ಲಿ ಯುನಿಕೋಡ್ ಕನ್ನಡ ಪಠ್ಯದ ತೋರುವಿಕೆ (ರೆಂಡರಿಂಗ್), ಇನ್‌ಸ್ಕ್ರಿಪ್ಟ್ ಕೀಲಿಮಣೆ, ಕನ್ನಡದಲ್ಲಿ ಫೈಲ್‌ಗಳಿಗೆ ಹೆಸರು ನೀಡುವ ಸೌಲಭ್ಯ, ಕನ್ನಡದ ಅಕಾರಾದಿ ವಿಂಗಡಣೆ, ಎಲ್ಲ ಇದ್ದವು. ಕನ್ನಡ ಪಠ್ಯವನ್ನು ಪರದೆಯಲ್ಲಿ ತೋರಲು ಬಳಸಿದ ಕನ್ನಡ ಯುನಿಕೋಡ್ ಆಧಾರಿತ ಓಪನ್‌ಟೈಪ್ ಫಾಂಟ್ ತುಂಗ. ಅದರಲ್ಲಿ ಕನ್ನಡದ ಕೆಲವು ಅಕ್ಷರಗಳಲ್ಲಿ, ಉದಾ ಮೋ, ದೋಷಗಳಿದ್ದವು. ಮೈಕ್ರೋಸಾಫ್ಟ್ ಈ ದೋಷಗಳನ್ನು ೨೦೦೩ರಲ್ಲಿ ವಿಂಡೋಸ್ ಸರ್ವರ‍್ ೨೦೦೩ ಆವೃತ್ತಿಯಲ್ಲಿ ಸರಿಪಡಿಸಿತು. ನಂತರದ ವಿಸ್ತ, ವಿಂಡೋಸ್ ೭ ಮತ್ತು ೮ ಆವೃತ್ತಿಗಳಲ್ಲಿ ಕನ್ನಡದ ಅಳವಡಿಕೆಯಲ್ಲಿ ಯಾವ ದೋಷವೂ ಇಲ್ಲ. ಮೈಕ್ರೋಸಾಫ್ಟ್ ಕಂಪೆನಿ ತನ್ನ  ತಾಣದ ಮೂಲಕ ಇನ್ನಷ್ಟು ಕೀಲಿಮಣೆ ವಿನ್ಯಾಸಗಳನ್ನು ನೀಡಿದೆ. 




#Article 199: ಮಹಾರಾಷ್ಟ್ರ (137 words)


ಮಹಾರಾಷ್ಟ್ರ ಭಾರತದ ಪಶ್ಚಿಮದ  ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ ಮಧ್ಯಪ್ರದೇಶದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ ಕರ್ನಾಟಕದಿಂದ, ಆಗ್ನೇಯದಲ್ಲಿ  ತೆಲಂಗಾಣದಿಂದ ಹಾಗೂ ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ.

ಆಧುನಿಕ ಮರಾಠಿ ಭಾಷೆ ಮಹಾರಾಷ್ಟ್ರ ಪ್ರಾಕೃತ ದಿಂದ ಅಭಿವೃದ್ಧಿಗೊಂಡಿದೆ, ಮತ್ತು  ಮಹಾರಾಷ್ಟ್ರ ಜೈನ ಸಾಹಿತ್ಯದಲ್ಲಿ  ಮರ್ಹಟ್ಟಾ  (ನಂತರ  ಮರಾಠರಿಗೆ ಬಳಸಲಾಗುತ್ತದೆ) ಎಂಬ ಪದವು ಕಂಡುಬರುತ್ತದೆ.
ಮಹಾರಾಷ್ಟ್ರ, ಮಹಾರಾಷ್ಟ್ರಿ, ಮರಾಠಿ ಮತ್ತು ಮರಾಠಾ ಪದಗಳು ಒಂದೇ ಮೂಲದಿಂದ ಹುಟ್ಟಿಕೊಂಡಿರಬಹುದು. ಆದಾಗ್ಯೂ, ಅವರ ನಿಖರವಾದ ವ್ಯುತ್ಪತ್ತಿ ಅನಿಶ್ಚಿತವಾಗಿದೆ.
ಭಾಷಾ ವಿದ್ವಾಂಸರಲ್ಲಿ ಹೆಚ್ಚು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಸಿದ್ಧಾಂತವೆಂದರೆ ಮರಾಠಾ ಮತ್ತು ಮಹಾರಾಷ್ಟ್ರ ಪದಗಳು ಅಂತಿಮವಾಗಿ  ಮಹಾ  ಮತ್ತು  ರಾಷ್ಟ್ರೀಯ ,  ಡೆಕ್ಕನ್ ಪ್ರದೇಶದಲ್ಲಿ ಆಳುವ ಸಣ್ಣ ಮುಖ್ಯಸ್ಥರ ಬುಡಕಟ್ಟು ಅಥವಾ ರಾಜವಂಶದ ಹೆಸರು. ಮತ್ತೊಂದು ಸಿದ್ಧಾಂತವೆಂದರೆ, ಈ ಪದವು  ಮಹಾ  (ಶ್ರೇಷ್ಠ) ಮತ್ತು  ರಥ  /  ರಥಿ  ಪದಗಳಿಂದ ಬಂದಿದೆ.
ಪರ್ಯಾಯ ಸಿದ್ಧಾಂತವು ಈ ಪದವು ಮಹಾ (ಶ್ರೇಷ್ಠ) ಮತ್ತು ರಾಷ್ಟ್ರ (ರಾಷ್ಟ್ರ / ಪ್ರಭುತ್ವ) ಪದದಿಂದ ಬಂದಿದೆ ಎಂದು ಹೇಳುತ್ತದೆ. ಆದಾಗ್ಯೂ, ಈ ಸಿದ್ಧಾಂತವು ಆಧುನಿಕ ವಿದ್ವಾಂಸರಲ್ಲಿ ಸ್ವಲ್ಪ ವಿವಾದಾಸ್ಪದವಾಗಿದೆ, ಇದು ನಂತರದ ಬರಹಗಾರರ ಸಂಸ್ಕೃತೀಕೃತ ವ್ಯಾಖ್ಯಾನವೆಂದು ನಂಬುತ್ತಾರೆ.




#Article 200: ಒರಿಯಾ (1091 words)


ಒರಿಯಾ ಒಂದು ಭಾರತೀಯ ಭಾಷೆ.ಒಡಿಶಾ (ಹಿಂದಿನ ಒರಿಸ್ಸಾ) ರಾಜ್ಯದ ಅಧಿಕೃತ ಭಾಷೆ ಇದು ಇಂಡೋ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು, ಇಂಡೋ-ಆರ್ಯನ ಶಾಖೆಯಲ್ಲಿದೆ.

ಒರಿಯ ಭಾಷೆ  ಒರಿಸ್ಸ ರಾಜ್ಯದ ಜನರ ಭಾಷೆ. ಭಾರತ ಸಂವಿಧಾನದಿಂದ ಮಾನ್ಯತೆ ಪಡೆದಿರುವ 22 ಭಾಷೆಗಳಲ್ಲಿ ಒಂದು. ಆರ್ಯಭಾಷಾ ಪರಿವಾರದ ಮುಖ್ಯ ಭಾಷೆಗಳಲ್ಲೊಂದಾಗಿದ್ದು ಮಾಗಧ ಅಪಭ್ರಂಶದಿಂದ ಬೆಳೆದು ಬಂದ ಬಂಗಾಳಿ, ಅಸ್ಸಾಮೀ ಭಾಷೆಗಳೊಂದಿಗೆ ನಿಕಟ ಸಂಬಂಧ ಪಡೆದಿದೆ. ಮೂವತ್ತೆರಡು ಸಾವಿರ ಚದರ ಮೈಲಿ ಪ್ರದೇಶವನ್ನು ಹೊಂದಿದೆ. ಇಲ್ಲಿ ಶೇ. 81.4ರಷ್ಟು (2002) ಜನ ಈ ಭಾಷೆಯನ್ನಾಡುತ್ತಾರೆ. ಭಾರತದ ಬಂಗಾಲ ಕೊಲ್ಲಿಯ ತೀರದಲ್ಲಿ ಪ್ರಚಾರದಲ್ಲಿರುವ ಈ ಭಾಷೆ ಉತ್ತರದಲ್ಲಿ ಬಂಗಾಳಿ, ವಾಯವ್ಯದಲ್ಲಿ ಬಿಹಾರ, ದಕ್ಷಿಣದಲ್ಲಿ ತೆಲುಗು ಭಾಷೆಗಳಿಂದಲೂ ನೈಋತ್ಯದಲ್ಲಿ ಮರಾಠಿಯ ಹಾಲ್ವಿ ಮತ್ತು ಭತ್ರಿ ಉಪಭಾಷೆಗಳು ಮತ್ತು ಪುರ್ವೀ ಹಿಂದಿಯ ಛತ್ತೀಸ್ಗಡಿ ಉಪಭಾಷೆಗಳಿಂದಲೂ ಆವರಿಸಲ್ಪಟ್ಟಿದೆ.

ಆಂಗ್ಲಭಾಷೆಯಲ್ಲಿ ಕ್ಯಾನರೀಸ್ ಎಂದು ಕರೆಯುವ ಭಾಷೆಯ ನಿಜವಾದ ಹೆಸರು ಕನ್ನಡವಾಗಿರುವಂತೆಯೇ ಆಂಗ್ಲಭಾಷೆಯಲ್ಲಿ ಒರಿಯ ಎನ್ನಿಸಿಕೊಂಡ ಭಾಷೆಯ ಸರಿಯಾದ ಹೆಸರು ಒಡಿಯ. ಶಬ್ದದ ಉತ್ಪತ್ತಿಯನ್ನು ನೋಡಿದರೆ ಒರಿಸ್ಸ ಶಬ್ದ ಒರಿಸು ಎನ್ನುವ (ಒಕ್ಕಲಿಗ, ರೈತ) ಶಬ್ದದಿಂದಲೂ ಒಡಿಯ ಜನ ಎಂಬ ಶಬ್ದ ಓಢ್ರ ಎಂಬ ಒರಿಸ್ಸದ ಪ್ರಾಚೀನ ನಿವಾಸಿಗಳ ಹೆಸರಿನಿಂದಲೂ ಬಂದಿವೆಯೆಂದು ಊಹಿಸಬಹುದು. ಈಗಲೂ ಎಷ್ಟೊ ಜನ ಈ ಶಬ್ದವನ್ನು ಉರಿಯ ಎಂದು ತಪ್ಪಾಗಿ ಉಚ್ಚರಿಸುತ್ತಾರೆ. ಕಳೆದ ಶತಮಾನದ ಇಂಡಿಯನ್ ಸಿವಿಲ್ ಸರ್ವಿಸಿಗೆ ಸೇರಿದ ಕೆಲವು ಭಾಷಾವಿಜ್ಞಾನಿ ಒರಿಯ ಶಬ್ದವನ್ನು ಉಪಯೋಗಿಸುತ್ತಿದ್ದುದರಿಂದ ಅದೇ ಹೆಸರು ಬಳಕೆಗೆ ಬಂದಿರಬೇಕು.

ಒರಿಯ ಭಾಷೆಗೆ ತನ್ನದೇ ಆದ ವಿಶಿಷ್ಟವಾದ ಲಿಪಿಯಿದೆ. ಈ ಲಿಪಿ ಬ್ರಾಹ್ಮೀಲಿಪಿ ಯಿಂದಲೇ ಬೆಳೆದುಬಂದುದಾಗಿದ್ದು, ದೇವನಾಗರಿಯ ಸೋದರ ಲಿಪಿಯೆನಿಸಿಕೊಂಡಿದೆ ಯಾದರೂ ದೇವನಾಗರಿಯಿಂದ ತೀರ ಭಿನ್ನವಾಗಿದೆ. ಉತ್ತರ ಭಾರತದ ಮತ್ತು ದಕ್ಷಿಣ ಭಾರತದ ಲಿಪಿಗಳನ್ನು ಹೋಲುವ ಈ ಲಿಪಿ ಎರಡೂ ವರ್ಗದ ಲಿಪಿಗಳಿಗೆ ಮಧ್ಯವರ್ತಿ ಯಾಗಿದೆಯೆನ್ನಬಹುದು. ದಕ್ಷಿಣ ಲಿಪಿಗಳೊಡನೆ ಇದರ ಸಾಮ್ಯ ಹೆಚ್ಚೆಂದು ಹೇಳಬಹುದು. ಒರಿಯ ಅಕ್ಷರಗಳ ಈಗಿನ ರೂಪ ತೆಲುಗು, ಮಲಯಾಳ, ತಮಿಳು, ಸಿಂಹಳಿ ಮತ್ತು ಬರ್ಮೀ ಭಾಷೆಯ ಅಕ್ಷರಗಳನ್ನು ಬಹುಮಟ್ಟಿಗೆ ಹೋಲುತ್ತದೆ. ಒರಿಯದ ಪ್ರತಿ ಅಕ್ಷರದ ಮೇಲ್ಭಾಗದಲ್ಲಿ ಒಂದೇ ರೀತಿಯ ಅರ್ಧವೃತ್ತಾಕಾರವಿರುವುದರಿಂದ ಎಲ್ಲ ಅಕ್ಷರಗಳೂ ಒಂದೇ ಬಗೆಯಾಗಿರುವಂತೆ ಭಾಸವಾಗುತ್ತದೆ. ಕೆಲವು ವಿದೇಶೀಯರಂತೂ ನೋಡಿದೊಡನೆ ಎಲ್ಲ ಅಕ್ಷರಗಳೂ ಒಂದೇ ರೀತಿಯ ವೃತ್ತಾಕಾರಗಳಾಗಿವೆಯೆಂದು ಭಾವಿಸುತ್ತಾರೆ. ಆ ವೃತ್ತಾಕಾರಗಳ ಒಳಗೆ ಇನ್ನು ಕೆಲವು ಆಕಾರಗಳಿವೆಯೆಂಬುದನ್ನು ಕಾಣಲು ಅವರು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಬೇಕಾಗುತ್ತದೆ. ಪ್ರಾಯಶಃ ತಾಳ ಪತ್ರದಲ್ಲಿ ಕಬ್ಬಿಣದ ಕಂಠದಿಂದ ಬರೆಯುತ್ತಿದ್ದುದರಿಂದ ಈ ರೀತಿ ಗುಂಡುಗುಂಡಾದ ಅಕ್ಷರಗಳು ಪ್ರಚಾರಕ್ಕೆ ಬಂದಿರಬೇಕು. ಇತ್ತೀಚೆಗೆ ಒಬ್ಬಿಬ್ಬರು ನೀಳವಾದ ತಲೆ ಕಟ್ಟುಗಳನ್ನು ಕೊಟ್ಟು ದೇವನಾಗರಿಯ ರೀತಿಯಲ್ಲಿ ಇದನ್ನು ಬರೆಯುವ ಪ್ರಯತ್ನ ಮಾಡಿದ್ದಾರಾದರೂ ಅದು ಫಲಕಾರಿಯಾಗಲಿಲ್ಲ. ಈಗ ಒರಿಸ್ಸ ಸರ್ಕಾರ ಲಿಪಿ ಸುಧಾರಣೆಯ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ಕಳಿಂಗ ರಾಜನಾದ ಅನಂತವರ್ಮ ವಜ್ರಹಸ್ತದೇವನ ಶಿಲಾಶಾಸನವೇ (1051) ಒರಿಯದಲ್ಲಿ ಈವರೆಗೆ ದೊರೆತ ಅತಿ ಪ್ರಾಚೀನ ಶಾಸನ. ಇದಲ್ಲದೆ ಪ್ರ.ಶ.ಪು. 3ನೆಯ ಶತಮಾನದ ಅಶೋಕನ ಮತ್ತು ಪ್ರ.ಶ.ಪು. ಮೊದಲ ಶತಮಾನದ ಖಾರವೇಲನ ಶಿಲಾಶಾಸನಗಳು ಕೂಡ ಒರಿಸ್ಸದಲ್ಲಿ ಸಿಕ್ಕಿವೆ. ಈ ಶಾಸನಗಳಿಂದ ಆ ಕಾಲದಲ್ಲಿ ಪಾಲಿ ಭಾಷೆ ಪ್ರಚಾರದಲ್ಲಿದ್ದುದು ಕಂಡುಬರುತ್ತದೆ. ಈ ಶಾಸನಗಳ ಮತ್ತು ನಮಗೆ ದೊರೆತ ಅತಿ ಪ್ರಾಚೀನ ಸಾಹಿತ್ಯಕೃತಿಗಳ ನಡುವಣ ಯುಗದಲ್ಲಿ ಓಢ್ರ ಎನ್ನುವ ಉಪಭಾಷೆಯ ಹೆಸರೂ ಕೇಳಿಬರುತ್ತದೆ. ಪಾಲಿ, ಪ್ರಾಕೃತಗಳ ಪ್ರಭಾವದಿಂದ ಬೆಳೆದುಬಂದ ಈ ಭಾಷೆಯನ್ನು ಬೌದ್ಧರು ಉಪಯೋಗಿಸುತ್ತಿದ್ದರು. ಎರಡನೆಯ ಶತಮಾನದ ಭರತನ ನಾಟ್ಯಶಾಸ್ತ್ರದಲ್ಲಿಯೂ 7ನೆಯ ಶತಮಾನದ ಹೂಯೆನ್ತ್ಸಾಂಗನ ಬರೆಹಗಳಲ್ಲಿಯೂ ಇದರ ಉಲ್ಲೇಖವಿದೆ. ಒರಿಯ ರಾಜ್ಯದ ಗಡಿಯೊಳಗೆ ಪ್ರಚಾರದಲ್ಲಿದ್ದ ಸಂಸ್ಕೃತ ಮತ್ತು ದ್ರಾವಿಡ ಭಾಷೆಗಳಲ್ಲಿ ಬರುವ ಒರಿಯ ಶಬ್ದ ಮತ್ತು ನುಡಿಗಟ್ಟುಗಳಿಂದಲೂ ಏಳನೆಯ ಮತ್ತು 9ನೆಯ ಶತಮಾನದ ಶಿಲಾಶಾಸನಗಳಿಂದಲೂ ಒರಿಯ ಭಾಷೆಯ ಚಾರಿತ್ರಿಕ ಪ್ರಗತಿಯನ್ನು ಊಹಿಸಬಹುದು. 13ನೆಯ ಶತಮಾನದ ಭುವನೇಶ್ವರ ದೇವಸ್ಥಾನದ ಶಾಸನದಿಂದ ಒರಿಯ ಭಾಷೆ ಆ ವೇಳೆಗಾಗಲೆ ಕೆಲವು ಶತಮಾನಗಳಿಂದ ಅಭಿವೃದ್ಧಿಗೊಳ್ಳುತ್ತಿತ್ತೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ. 10-12ನೆಯ ಶತಮಾನಗಳ ಮಧ್ಯದಲ್ಲಿ ರಚಿಸಲಾಗಿದೆಯೆಂದು ಊಹಿಸಬಹುದಾದ ಸಾರಳಾದಾಸ ಕವಿಯ ಮಹಾಭಾರತವೇ ಉಪಲಬ್ಧ ಒರಿಯ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದುದು. ಈ ಗ್ರಂಥದ ನಿಜವಾದ ಕಾಲನಿಷ್ಕರ್ಷೆಯ ಬಗ್ಗೆ ವಾದವಿವಾದಗಳಿದ್ದು ಕೆಲವರು ಇದನ್ನು 15ನೆಯ ಶತಮಾನದ ಕೃತಿಯೆಂದು ಊಹಿಸುತ್ತಾರೆ.

ಕಟಕ್ ಮತ್ತು ಪುರಿ ಪ್ರದೇಶಗಳಲ್ಲಿನ ಆಡುನುಡಿ ಈ ಭಾಷೆಯ ಮುಖ್ಯ ಪ್ರಭೇದವೆಂದೂ ಒರಿಯ ಮಾತಾಡುವ ಎಲ್ಲ ಜನರೂ ಈ ಪ್ರಭೇದವನ್ನು ಅರ್ಥಮಾಡಿಕೊಳ್ಳಬಲ್ಲರೆಂದೂ ಹೇಳಬಹುದು. ಒರಿಯದ ಉಪಭಾಷಾಪರಿವೀಕ್ಷಣೆ ಈ ವರೆಗೆ ನಡೆದಿಲ್ಲ. ಹೀಗಾಗಿ ಉಪಭಾಷೆಗಳ ವಿತರಣೆಗೆ ಸಂಬಂಧಿಸಿದಂತೆ ಯಾವ ಸಾಹಿತ್ಯವೂ ನಮಗೆ ದೊರೆಯುವುದಿಲ್ಲ. ಆದರೂ ಸ್ಥೂಲವಾಗಿ ಕೆಲವು ಪ್ರಧಾನ ಪ್ರಭೇದಗಳನ್ನು ಗುರುತಿಸಬಹುದು. ಸಂಬಲ್ಪುರ ಮತ್ತು ಅದರ ಆಸುಪಾಸಿನ ಜಿಲ್ಲೆಗಳ ಜನರ ಆಡುನುಡಿಯಾದ ಸಂಬಲ್ಪುರಿ ಈ ಭಾಷೆಯ ಪ್ರಧಾನ ಪ್ರಭೇದಗಳಲ್ಲಿ ಒಂದು. ಇದು ಛತ್ತೀಸ್ಗಢಿ ಮತ್ತು ಹಿಂದಿಯಿಂದ ಪ್ರಭಾವಿತವಾಗಿದೆ. ಇನ್ನೊಂದು ಪ್ರಭೇದ ಉತ್ತರ ಭಾಗದಲ್ಲಿ ಬಂಗಾಳದ ಗಡಿ ಪ್ರದೇಶದಲ್ಲಿ ಪ್ರಚಾರದಲ್ಲಿದೆ. ಇದು ಬಂಗಾಳಿಯಿಂದ ಎಷ್ಟು ಪ್ರಭಾವಿತವಾಗಿದೆಯೆಂದರೆ ಗ್ರಿಯರ್ಸನ್ನನ ಮಾತಿನಲ್ಲಿ ಹೇಳುವುದಾದರೆ ಈ ಭಾಗದ ಜನರ ಆಡುಮಾತಿನಲ್ಲಿ ಒರಿಯದಲ್ಲಿ ಪ್ರಾರಂಭವಾದ ವಾಕ್ಯ ಬಂಗಾಳಿಯಲ್ಲಿ ಕೊನೆಗೊಳ್ಳುತ್ತದೆ. ರಾಜ್ಯದ ಉತ್ತರ ಭಾಗದಲ್ಲಿ ಕೆಲವೆಡೆಯಂತೂ ಒರಿಯ ಪುಸ್ತಕಗಳು ಬಂಗಾಳಿ ಲಿಪಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಮುದ್ರಿತವಾಗಿ ಸಾಮಾನ್ಯ ಜನತೆಯಲ್ಲಿ ಪ್ರಚಾರದಲ್ಲಿವೆ. ದಕ್ಷಿಣದ ಗಂಜಾಂ ಮತ್ತು ಕೋರಾಪುಟ್ ಜಿಲ್ಲೆಗಳಲ್ಲಿನ ಆಡುಮಾತು ತೆಲುಗು ಭಾಷೆಯಿಂದ ಪ್ರಭಾವಿತವಾಗಿದೆ. ಈ ಪ್ರಭೇದವನ್ನು ದಕ್ಷಿಣೀ ಎಂದು ಕರೆಯುತ್ತಾರೆ. ಕೋರಾಪುಟ್ ಜಿಲ್ಲೆಯ ಗಿರಿಜನರಲ್ಲಿ ಪ್ರಚಾರದಲ್ಲಿರುವ ಆಡುನುಡಿ ದಕ್ಷಿಣೀ ಭಾಷೆಯಿಂದ ಭಿನ್ನವಾಗಿದ್ದು ದೇಶೀಯ ಎನ್ನಿಸಿಕೊಳ್ಳುತ್ತದೆ.

ಹಲವು ಶತಮಾನಗಳವರೆಗೆ ಒರಿಸ್ಸ ರಾಜ್ಯ ತೆಲಿಂಗ ರಾಜರ ಅಧೀನದಲ್ಲಿತ್ತು. 20ನೆಯ ಶತಮಾನದಲ್ಲೂ ಹಲವು ಕಾಲ ಅದರ ಒಂದು ಭಾಗ ಮದ್ರಾಸ್ ಸರಕಾರದ ಆಳ್ವಿಕೆಗೊಳಗಾಗಿತ್ತು. ಹೀಗಾಗಿ ಅನೇಕ ತಮಿಳು ಮತ್ತು ತೆಲುಗು ಶಬ್ದಗಳು ಒರಿಯ ಭಾಷೆಯಲ್ಲಿ ಸೇರಿಕೊಂಡಿವೆ. ಸು. ಐವತ್ತು ವರ್ಷಗಳ ಕಾಲ ಒರಿಸ್ಸ ರಾಜ್ಯ ನಾಗಪುರದ ಭೋನ್ಸ್ಲೆ ರಾಜರ ವಶದಲ್ಲಿತ್ತು. ಹೀಗಾಗಿ ಒರಿಯ ಮರಾಠಿ ಶಬ್ದಗಳನ್ನೂ ಸ್ವೀಕರಿಸಿದೆ. ಒರಿಸ್ಸ ರಾಜ್ಯದ ಐದನೆಯ ಒಂದು ಪಾಲು ಜನಸಂಖ್ಯೆ ಗಿರಿಜನರಿಂದ ಕೂಡಿರುವುದರಿಂದ ಕೋಂಡ್, ಕೋಲ್ಹ, ಕುಯಿ, ಹೊ, ಸವರ, ಜುವಂಗ್ ಮುಂತಾದ ಭಾಷೆಗಳ ಶಬ್ದಗಳೂ ಒರಿಯದ ಭಂಡಾರಕ್ಕೆ ಸೇರಿಕೊಂಡಿವೆ. ಇವುಗಳ ಜೊತೆ ಸಂಸ್ಕೃತದ ತತ್ಸಮ ಮತ್ತು ತದ್ಭವ ಶಬ್ದಗಳು, ಅರೇಬಿಕ್ ಮತ್ತು ಪರ್ಷಿಯನ್ ಶಬ್ದಗಳೂ ಗಣನೀಯ ಪ್ರಮಾಣದಲ್ಲಿ ಸೇರಿಕೊಂಡಿವೆ. ಪೋರ್ಚುಗೀಸ್ ಮತ್ತು ಇತರ ವಿದೇಶೀ ಶಬ್ದಗಳು ನೇರವಾಗಿ ಅಥವಾ ಇತರ ಭಾರತೀಯ ಭಾಷೆಗಳ ಮೂಲಕ ಒರಿಯ ಶಬ್ದಭಂಡಾರಕ್ಕೆ ಬಂದು ಸೇರಿವೆ. ಇಂಗ್ಲಿಷ್ ಶಬ್ದಗಳಂತೂ ಆಬಾಲವೃದ್ಧರ ಆಡುನುಡಿಯಲ್ಲಿ ದಿನದಿನಕ್ಕೂ ಅಧಿಕ ಸಂಖ್ಯೆಯಲ್ಲಿ ಬಂದು ನೆಲೆಯೂರುತ್ತಿವೆ. 

ಆನುವಂಶಿಕವಾಗಿ ಒರಿಯ ಭಾಷೆ ಬಂಗಾಳಿ ಮತ್ತು ಅಸ್ಸಾಮೀಗಳಿಗೆ ಸಮೀಪವಾಗಿದ್ದರೂ ಲಿಪಿ ಮತ್ತು ಧ್ವನಿವ್ಯವಸ್ಥೆಯಲ್ಲಿ ಈ ಭಾಷೆ ಅವಕ್ಕಿಂತ ಭಿನ್ನವಾಗಿದೆ. ಇದರ ಒಂದು ಪ್ರಧಾನವಾದ ಮತ್ತು ಮೂಲಭೂತವಾದ ವೈಶಿಷ್ಟ್ಯವೆಂದರೆ ಅಕ್ಷರಗಳು ಸ್ವರಾಂಗತವಾಗಿರುವುದು. ಒರಿಯದ ಶಬ್ದಗಳೂ ಸ್ವರದಲ್ಲಿ ಕೊನೆಗೊಳ್ಳುತ್ತವೆ (ಅಜಂತಗಳಾಗಿವೆ). ಸೋದರಭಾಷೆಗಳಲ್ಲಿ ಅಜಂತಗಳಲ್ಲದ ಶಬ್ದಗಳು ಒರಿಯದಲ್ಲಿ ಓ ಎಂಬ ವಿಶಿಷ್ಟವಾದ ವಿವೃತ ಒ ಕಾರದಲ್ಲಿ (ಎ) ಕೊನೆಗೊಳ್ಳುತ್ತವೆ. ಹಿಂದಿ ಮತ್ತು ಬಂಗಾಳಿಯ ಘರ್ ಎನ್ನುವ ಹಲಂತ ಶಬ್ದ ಒರಿಯದಲ್ಲಿ ಘೊರೊ (ghoಡಿo) ಎಂದು ಅಜಂತವಾಗುತ್ತದೆ. ಇದರಿಂದಾಗಿಯೆ ಗ್ರಿಯರ್ಸನ್ ಒರಿಯ ಭಾಷೆಯಲ್ಲಿ, ಬರೆವಣಿಗೆ ಮತ್ತು ಉಚ್ಚಾರಣೆ ಒಂದೇ ರೀತಿಯಾಗಿವೆಯೆಂದು ಹೇಳಿದ್ದಾನೆ. ಸ್ವರಗಳ ಹ್ರಸ್ವ ದೀರ್ಘ ರೂಪಗಳು ಪ್ರತ್ಯೇಕ ಸ್ವನಿಮಯಗಳಾಗಿಲ್ಲ. ಸಂಸ್ಕೃತ ಶಬ್ದಗಳಲ್ಲಿನ ದೀರ್ಘಸ್ವರಗಳು ಹ್ರಸ್ವ ಸ್ವರಗಳಾಗಿ ಉಚ್ಚರಿಸಲ್ಪಡುತ್ತವೆ. ಇನ್ನೆರಡು ವಿಚಾರಗಳಲ್ಲಿಯೂ ಒರಿಯ ಹಿಂದಿ ಮತ್ತು ಬಂಗಾಳಿಯಿಂದ ಭಿನ್ನವಾಗಿದೆ. ಹಿಂದಿ ಮತ್ತು ಬಂಗಾಳಿಯಲ್ಲಿಲ್ಲದ ಣ ಮತ್ತು ಳ ಒರಿಯದಲ್ಲಿದೆ. ಸ, ಶ, ಷ ಗಳೆಂಬ ಮೂರು ಊಷ್ಮಧ್ವನಿಗಳ ಸ್ಥಾನದಲ್ಲಿ ಬಂಗಾಳಿ ಭಾಷೆ ಶಕಾರವನ್ನು ಮಾತ್ರ ಬಳಸಿದರೆ ಒರಿಯ ಸಕಾರವನ್ನು ಮಾತ್ರ ಬಳಸುತ್ತದೆ. ಬರೆಹದಲ್ಲಿ ಬಕಾರ ಮತ್ತು ವಕಾರ ಪ್ರತ್ಯೇಕವಾಗಿ ಕಂಡುಬಂದರೂ ಉಚ್ಚಾರಣೆಯಲ್ಲಿ ಈ ಎರಡರ ಸ್ಥಾನದಲ್ಲಿ ಓಷ್ಠ್ಯ, ಬಕಾರ ಮಾತ್ರ ಬಳಕೆಯಲ್ಲಿದೆ. ಪದಾಘಾತ ಮತ್ತು ಸ್ವರವನ್ನು ಈ ತನಕ ಯಾರೂ ಅಧ್ಯಯನ ಮಾಡದಿದ್ದರೂ ಅವುಗಳ ವಿಚಾರವಾಗಿ ಒಂದೆರಡು ಮಾತುಗಳನ್ನು ಹೇಳಬಹುದು. ಶಬ್ದದ ಪ್ರಥಮಾಕ್ಷರಕ್ಕೆ ಆಘಾತವಿರುತ್ತದೆ. ಬಹ್ವಕ್ಷರೀ ಶಬ್ದಗಳಲ್ಲಿ ಪ್ರಥಮಾಕ್ಷರಕ್ಕೆ ಆಘಾತವಿಲ್ಲ. ವಾಕ್ಯದ ಕೊನೆಯಲ್ಲಿ ವಾಕ್ಯಸ್ವರ ಇಳಿಮುಖವಾಗುತ್ತದೆ.

ಒರಿಯದಲ್ಲಿ ಏಕ, ಬಹು ಎಂಬ ಎರಡು ವಚನಗಳಿವೆ. ಬಹುತ್ವವನ್ನು ದ್ಯೋತಿಸುವ ಶಬ್ದಗಳನ್ನು ಏಕವಚನ ರೂಪಕ್ಕೆ ಸೇರಿಸಿ ಬಹುವಚನ ರೂಪಗಳನ್ನು ಪಡೆಯಬಹುದು. ಸಂಸ್ಕೃತದ ಗುಣ, ಕುಳ ಮತ್ತು ದ್ರಾವಿಡ ಭಾಷೆಗಳ ಗಳ್ ಇವುಗಳಿಂದ ಸಿದ್ಧಿಸಿದ ಗುಡಿ, ಗುಡಿಕ ಅಥವಾ ಗುಡಕ ಶಬ್ದಗಳು ಬಹುವಚನ ಸಾಧಕಗಳು. ಉದಾ. ಲೋಕ=ಮನುಷ್ಯ; ಲೋಕಗುಡಿಕ, ಲೋಕಗುಡಕ=ಮನುಷ್ಯರು. ಹಾಗೆಯೇ ಮನೆ, ಎ ಮುಂತಾದ ಪ್ರತ್ಯಯಗಳನ್ನು ಸೇರಿಸಿಯೂ ಲೋಕಮನೆ, ಲೋಕೆ ಮುಂತಾದ ಬಹುವಚನ ರೂಪಗಳನ್ನು ಪಡೆಯಬಹುದು. ಒರಿಯ ವ್ಯಾಕರಣದಲ್ಲಿ ಲಿಂಗ ವಿವಕ್ಷೆಯಿಲ್ಲ. ನೈಸರ್ಗಿಕ ಲಿಂಗ ವ್ಯವಸ್ಥೆಯ ಆಧಾರದ ಮೇಲೆ ಪುಲ್ಲಿಂಗ ಶಬ್ದಗಳಿಂದ ಸ್ತ್ರೀಲಿಂಗ ರೂಪಗಳನ್ನು ಸುಲಭವಾಗಿ ಸಾಧಿಸಬಹುದು. ನೈಸರ್ಗಿಕ ಲಿಂಗಭೇದಕ್ಕನುಸಾರವಾಗಿ ಸಜೀವ ವಾಚಕ ಶಬ್ದಗಳು ಸ್ತ್ರೀಲಿಂಗ ಪುಲ್ಲಿಂಗಗಳೆಂದು ವಿಭಾಗಿಸಲ್ಪಟ್ಟಿವೆ. ಪುಲ್ಲಿಂಗ ಶಬ್ದದಿಂದ ಸ್ತ್ರೀಲಿಂಗ ರೂಪ ಪಡೆಯಲು ಹಲವು ವಿಧಾನಗಳಿವೆ. ಗಂಡು ಮತ್ತು ಹೆಣ್ಣು ಶಬ್ದಗಳನ್ನು ಆ ಶಬ್ದದ ಮುಂದೆ ಜೋಡಿಸುವುದು: ಒಂಡಿರಾ ಛೇಟಿ=ಹೋತ, ಮಾಯಿ ಛೇಟಿ=ಆಡು; ಅಥವಾ ಸ್ತ್ರೀಲಿಂಗ ವಾಚಕವಾದ ಪ್ರತ್ಯೇಕ ಶಬ್ದವೊಂದನ್ನು ಬಳಸುವುದುಂಟು. ಕಾಕ=ಚಿಕ್ಕಪ್ಪ, ಖುಡಿ=ಚಿಕ್ಕಮ್ಮ ಇತ್ಯಾದಿ. ಸಾಮಾನ್ಯವಾಗಿ ಬರುವ ಸ್ತ್ರೀಲಿಂಗ ಪ್ರತ್ಯಯಗಳೆಂದರೆ ಇ, ಅಣಿ ಮತ್ತು ಉಣಿ. ಬುಢಾ=ಮುದುಕ, ಬುಢೀ=ಮುದುಕಿ, ಬಾಯ=ಹುಚ್ಚ, ಬಾಯಾಣಿ=ಹುಚ್ಚಿ, ಬಾಘೊ=ಹುಲಿ, ಬಾಘುಣಿ=ಹೆಣ್ಣು ಹುಲಿ-ಇತ್ಯಾದಿ. ಒರಿಯದಲ್ಲಿ ಐದು ವಿಭಕ್ತಿಗಳಿವೆ. ಈ ವಿಭಕ್ತಿಗಳು ಪ್ರತ್ಯಯರೂಪದಲ್ಲಿರದೆ ಪರಸರ್ಗ ರೂಪದಲ್ಲಿವೆ. ದ್ವಿತೀಯ ಮತ್ತು ಚತುರ್ಥೀ ವಿಭಕ್ತಿಗಳಿಗೆ ಕು ಎನ್ನುವ ಒಂದೇ ರೂಪವಿದೆ. ಕ್ರಿಯಾಪದಗಳಲ್ಲಿ ಮೂರು ಕಾಲಭೇದಗಳಿವೆ. ವರ್ತಮಾನ, ಭೂತ, ಭವಿಷ್ಯದ್ ರೂಪಗಳು ಒಚ್ಛ್‌, ಲ ಮತ್ತು ಬ ಎನ್ನುವ ಪ್ರತ್ಯಯಗಳಿಂದ ಸಿದ್ಧಿಸುತ್ತವೆ. ಖಾವುಚ್ಛಿ=ತಿನ್ನುತ್ತಾನೆ, ಖಾಯಿಲಾ=ತಿಂದನು, ಖಾಯಿಬೊ=ತಿನ್ನುವನು-ಇತ್ಯಾದಿ. ಗ್ರಿಯರ್ಸನ್ನನ ಅಭಿಪ್ರಾಯದಂತೆ ಒರಿಯದ ಕ್ರಿಯಾಪದ ರೂಪಗಳು ತುಂಬ ಸರಳವಾಗಿಯೂ ವ್ಯವಸ್ಥಿತವಾಗಿಯೂ ಇವೆ. ಕಾಲಭೇದಗಳು ಬಹಳ ಇದ್ದರೂ ಅವು ತರ್ಕಬದ್ಧವಾಗಿದ್ದು ಅವುಗಳಲ್ಲಿ ಅಡಗಿರುವ ವ್ಯವಸ್ಥೆ ಬೇರೆ ಬೇರೆ ಕೃದಂತ ನಾಮಗಳಲ್ಲಿಯೂ ಕಂಡುಬರುತ್ತದೆ.

ಸಾಹಿತ್ಯಭಾಷೆಯಾಗಿ ಒರಿಯ ಎಷ್ಟು ಸಮೃದ್ಧವಾಗಿ ಬೆಳೆದಿದೆಯೆನ್ನುವುದನ್ನು ಸೂಕ್ಷ್ಮವಾಗಿ ತೋರಿಸುವ ಸಲುವಾಗಿ ಮಾತ್ರ ಇಲ್ಲಿ ಸಾಹಿತ್ಯ ಭಾಗವನ್ನು ಸಂಗ್ರಹವಾಗಿ ಕೊಟ್ಟಿದೆ. ವಿವರಗಳಿಗೆ 	(ನೋಡಿ- ಒರಿಯಾ ಸಾಹಿತ್ಯ).

ಒರಿಯ ಭಾಷೆಯ ಸಾಹಿತ್ಯ ತುಂಬ ಸಮೃದ್ಧವಾಗಿದೆ. ಅದು ಸಾಮಾನ್ಯ ಜನತೆಯ ಸಾಹಿತ್ಯ. ಈ ರಾಜ್ಯದಲ್ಲಿ ನೆಲೆನಿಂತ ಆಂಧ್ರರು, ಮರಾಠರು, ಬಂಗಾಳಿಗಳು, ಮುಸ್ಲಿಮರು, ಆದಿವಾಸಿಗಳು-ಎಲ್ಲರೂ ಇದಕ್ಕೆ ತಮ್ಮ ಕಾಣಿಕೆಗಳನ್ನರ್ಪಿಸಿದ್ದಾರೆ. ಜಗನ್ನಾಥ ದೇವರನ್ನು ವರ್ಣಿಸಿದ ಸಾಲಬೆಗ ಎನ್ನುವ ಮುಸ್ಲಿಂ ಕವಿ, ಮಧ್ಯಕಾಲೀನ ವೈಷ್ಣವ ಸಾಹಿತ್ಯವನ್ನು ಬೆಳೆಸಿದ ಚೈತನ್ಯ ಮಹರ್ಷಿಯ ಶಿಷ್ಯರಾದ ಬಂಗಾಳಿ ವೈಷ್ಣವರು ಜನತೆಯ ನಾಲಗೆಯಲ್ಲಿ ನಲಿದಾಡುವಂಥ ಸಂಗೀತ ರೂಪಕಗಳನ್ನು ರಚಿಸಿದ ಕುರುಡನಾದ ಖೊಂಡಕವಿ-ಇವರೆಲ್ಲ ಈ ಸಾಹಿತ್ಯಕ್ಕೆ ಅಪುರ್ವವಾದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ರಾಧಾನಾಥ ರೇ, ಆನಂದಶಂಕರ ರೇ ಮುಂತಾದ ಪ್ರತಿಭಾವಂತ ಬಂಗಾಳಿ ಕವಿಗಳು ಒರಿಯದಲ್ಲಿ ಗ್ರಂಥಗಳನ್ನು ರಚಿಸಿದ್ದಾರೆ. ಶತಮಾನಗಳುರುಳಿದಂತೆ, ರಾಜವಂಶಗಳು ಬದಲಾದಾಗ ಧಾರ್ಮಿಕ ವಿಶ್ವಾಸಗಳು ಬದಲಾದಂತೆ, ಸಾಹಿತ್ಯ ಸ್ವರೂಪವೂ ಮಾರ್ಪಾಟಾದುದು ಕಂಡುಬರುತ್ತದೆ. ಮೊದಲು ಜೈನ್, ಆಮೇಲೆ ಬೌದ್ಧ, ತರುವಾಯ ಶೈವ ಮತ್ತು ಶಾಕ್ತಮತಗಳು ಪ್ರಭಾವಶಾಲಿಯಾಗಿದ್ದುವು. ಆಮೇಲೆ ಜನತೆಯ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿ ಅವರ ಮನಸ್ಸಿನಲ್ಲಿ ಬೇರೂರಿನಿಂತ ಧಾರ್ಮಿಕ ಸಂಪ್ರದಾಯವೆಂದರೆ ರಾಮಭಕ್ತಿ ಮತ್ತು ಕೃಷ್ಣಭಕ್ತಿ ಸಂಪ್ರದಾಯ. ಒರಿಯ ಸಾಹಿತ್ಯ ಇದರಿಂದ ತುಂಬ ಸಮೃದ್ಧವಾಗಿದೆ. ಒರಿಯದಲ್ಲಿ ಕಡಿಮೆಯೆಂದರೆ ಮೂವತ್ತು ರಾಮಾಯಣಗಳೂ ನಾಲ್ಕೈದು ಮಹಾಭಾರತಗಳೂ ಇವೆ. ಎಲ್ಲ ಪುರಾಣಗಳೂ ಇವೆ. ಮಧ್ಯಕಾಲದ ಅಲಂಕಾರಶಾಸ್ತ್ರಸಾಹಿತ್ಯವೂ ಸಾಕಷ್ಟು ಸಮೃದ್ದವಾಗಿದೆ. ಪುರಾಣಗ್ರಂಥಗಳು ತಮ್ಮ ಕಥಾಪ್ರೌಢಿಮೆಯಿಂದಲೂ ಅಲಂಕಾರಗ್ರಂಥಗಳು ತಮ್ಮ ಭಾಷೆ, ಭಾವ ಮತ್ತು ಶಬ್ದಾರ್ಥಸೌಂದರ್ಯದಿಂದಲೂ ಜನರ ಮನಸ್ಸನ್ನು ಸೂರೆಗೊಂಡಿವೆ. ಜನತೆಯ ಹೃದಯವನ್ನು ಆಕರ್ಷಿಸುವುದರಲ್ಲಿ ಪ್ರಾಚೀನ ಸಾಹಿತ್ಯದಷ್ಟು ಆಧುನಿಕ ಸಾಹಿತ್ಯ ಸಫಲವಾಗಿಲ್ಲ ಎಂದು ಹೇಳಬಹುದು. ಆದರೂ ಭಾಷೆ ಮತ್ತು ಕಲ್ಪನೆಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಒರಿಯ ಸಾಹಿತ್ಯ ತನ್ನ ಆಧುನಿಕ ಬರೆವಣಿಗೆಗಳಲ್ಲಿ ಪರಿಪಕ್ವತೆಯನ್ನು ಹೊಂದಿದೆ. ಇದರ ಕೆಲವು ಅತ್ಯುತ್ತಮ ಗ್ರಂಥಗಳು ಭಾರತದ ಇತರ ಭಾಷೆಗಳಲ್ಲಿನ ಅತ್ಯುತ್ತಮ ಗ್ರಂಥಗಳ ಸಾಲಿನಲ್ಲಿ ನಿಲ್ಲಬಲ್ಲವಾಗಿವೆ.			




#Article 201: ಪಂಜಾಬಿ (461 words)


ಪಂಜಾಬಿ ಒಂದು ಇಂಡೋ ಆರ್ಯ ಭಾಷೆ ಮತ್ತು ಇದನ್ನು ಜಗತ್ತಿನಾದ್ಯಂತ ಸುಮಾರು ೧೦ ಕೋಟಿ ಜನರು ಮಾತನಾಡುತ್ತಾರೆ. ಇದು ಅತಿ ಹೆಚ್ಚು ಭಾಷಿಗರ ಪಟ್ಟಿಯಲ್ಲಿ ೧೦ನೇ ಸ್ಥಾನದಲ್ಲಿದೆ. ಐತಿಹಾಸಿಕ ಪಾಕಿಸ್ತಾನ ಮತ್ತು ಭಾರತಗಳ ಪಂಜಾಬ್ ಪ್ರದೇಶದ ಸ್ಥಳೀಯರು ಮಾತನಾಡುವ ಭಾಷೆ. 

ಪಾಕಿಸ್ತಾನದಲ್ಲಿ ಪಂಜಾಬಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ, ಭಾರತದಲ್ಲಿ ಇದರ ಭಾಷಿಗರ ಸಂಖ್ಯೆಯಲ್ಲಿನ ಸ್ಥಾನ ೧೧. ಇದು ಭಾರತೀಯ ಉಪಖಂಡದಲ್ಲಿನ ಮೂರನೆಯ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಯುನೈಡ್‌ ಕಿಂಗ್‌ಡಮ್‌ನಲ್ಲಿ ೪ನೆಯ ಅತಿಹೆಚ್ಚು ಜನರು ಮಾತನಾಡುವ ಭಾಷೆಯಾದರೆ ಕೆನಡದಲ್ಲಿನ ಅದರ ಸ್ಥಾನ ಮೂರನೆಯದು (ಇಂಗ್ಲೀಶ್ ಮತ್ತು ಪ್ರೆಂಚ್ ನಂತರದ ಸ್ಥಾನ). ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ, ಸೌದಿ ಅರೇಬಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಗಣನೀಯ ಸಂಖ್ಯೆಯ ಜನರು ಮಾತನಾಡುತ್ತಾರೆ.

ಅಮೃತಸರ ಮತ್ತು ಲಾಹೋರ್ ಸುತ್ತಮುತ್ತಲು ಮಾತನಾಡುವ ಮಾಝಿ ಉಪಭಾಷೆ ಪ್ರತಿಷ್ಠೆ ಪಡೆದಿದೆ. ಈ ಉಪಭಾಷೆಯನ್ನು ಪಂಜಾಬ್‌ನ ಹೃದಯ ಪ್ರದೇಶವಾದ ಮಾಝದಲ್ಲಿ ಮಾತನಾಡುತ್ತಾರೆ. ಈ ಪ್ರದೇಶವು ಲಾಹೋರ್, ಅಮೃತಸರ, ಗುರುದಾಸ್ಪುರ್, ಕಸೂರ್, ತರನ್ ತಾರನ್, ಫೈಸಲಾಬಾದ್, ನಾನ್‌ಕನ ಸಾಹಿಬ, ಪಠಾಣ್‌ಕೋಟ್, ಓಕರ, ಪಾಕ್‌ಪಟ್ಟನ, ಸಾಹಿವಾಲ, ನರೊವಾಲ, ಶೇಖುಪುರ, ಸಿಯಾಲ್‌ಕೋಟ, ಚಿನೊಟ, ಗುಜ್ರನವಾಲ, ಮತ್ತು ಗುಜರಾತ್ (ಪಾಕಿಸ್ತಾನ ಮತ್ತು ಭಾರತದ ಜಿಲ್ಲೆಗಳು) ಜಿಲ್ಲೆಗಳನ್ನು ಒಳಗೊಂಡಿದೆ. ಪಾಕಿಸ್ತಾನದಲ್ಲಿ ಬಳಸುವ ಮಾಝಿಯ ಪದಕೋಶವು ಹೆಚ್ಚು ಪರ್ಸಿಯೀಕರಣವಾಗಿದೆ.

ಇಂಡೊ ಆರ್ಯ ಭಾಷೆಯಾದ ಪಂಜಾಬಿಯು ಮಧ್ಯಕಾಲಿನ ಉತ್ತರ ಭಾರತದ ಪ್ರಮುಖ ಭಾಷೆಯಾದ ಶೌರಸೇನಿಯಿಂದ ಬಂದಿದೆ. ಪರಿದುದ್ದೀನ್ ಗಂಜ್‌ಶಕರ ಅದರ ಮೊದಲ  ಪ್ರಮುಖ ಕವಿ ಎಂದು ಸಾಮಾನ್ಯವಾಗಿ ಗುರುತಿಸಲಾಗಿದೆ.

೧೫ನೆಯ ಶತಮಾನದಲ್ಲಿ ಪಂಜಾಬ್ ಪ್ರಾಂತದಲ್ಲಿ ಸಿಖ್ ಧರ್ಮ ಹುಟ್ಟಿತು ಮತ್ತು ಸಿಖ್ಖರು ಮಾತನಾಡುವ ಪ್ರಮುಖ ಭಾಷೆ ಪಂಜಾಬಿ. ಗುರು ಗ್ರಂಥ ಸಾಹಿಬ್‌ನ ಬಹು ಭಾಗಗಳನ್ನು ಗುರುಮುಖಿಯಲ್ಲಿ ಬರೆಯಲಾಗಿದೆ ಆದರೆ ಸಿಖ್ ಧರ್ಮಗ್ರಂಥಗಳಲ್ಲಿ ಪಂಜಾಬಿಯಷ್ಟೇ ಬಳಕೆಯಾಗಿಲ್ಲ. ಜನಮ್‌ಸಾಕ್ಷಿ ಗುರುನಾನಕ್‌ರ (೧೪೬೯-೧೫೩೯) ಜೀವನ ಮತ್ತು ಐತಿಹ್ಯಗಳನ್ನು ಹೇಳುವ ಕಥೆಗಳು ಪಂಜಾಬಿ ಗದ್ಯದ ಆರಂಭಿಕ ಉದಾಹರಣೆಗಳು. ೧೬ ರಿಂದ ೧೮ನೆಯ ಶತಮಾನದ ಬುಲೇ ಷಾನಂತಹ (೧೬೮೦-೧೭೫೭) ಹಲವು ಮುಸ್ಲಿಂಮರು ಸೂಪಿ ಕಾವ್ಯ ಬೆಳವಣಿಗೆಗೆ ಕಾರಣರಾದರು.

ಪಂಜಾಬಿಯ ಸೂಫಿ ಕಾವ್ಯ ಪಂಜಾಬಿ ಸಾಹಿತ್ಯಿಕ ಸಂಪ್ರದಾಯವನ್ನು ಸಹ ಪ್ರಭಾವಿಸಿದೆ. ವಿಶೇಷವಾಗಿ ದುರಂತ ಪ್ರೇಮದ ಪ್ರಕಾರವಾದ ಪಂಜಾಬಿ ಕಿಸ್ಸಾ ಇದಕ್ಕೆ ಉದಾಹರಣೆ. ಭಾರತೀಯ, ಪರ್ಶಿಯಾದ, ಕುರಾನಿನ ಮೂಲಗಳಿಂದಲೂ ಪ್ರಭಾವಿತವಾದ ಈ ಪ್ರಕಾರದ ವಾರಿಸ್ ಶಾನ (೧೮೦೨-೧೮೯೨) ಹಿರ್ ರಾಂಝ ಜನಪ್ರಿಯವಾಗಿದೆ. 

ಪ್ರಮಾಣಕ ಪಂಜಾಬಿಯು ಪಾಕಿಸ್ತಾನ ಮತ್ತು ಭಾರತಗಳೆರಡರಲ್ಲಿಯೂ ಮಾಳವೈ ಪಂಜಾಬಿಯ ಬರವಣಿಗೆಯ ಪ್ರಮಾಣಕ. ಪಾಕಿಸ್ತಾನದಲ್ಲಿ ಪಂಜಾಬಿಯನ್ನು ಸಾಮಾನ್ಯವಾಗಿ ಶಾಮುಖಿ ಲಿಪಿಯಲ್ಲಿ ಬರೆಯಲಾಗುತ್ತದೆ. ಇದು ಪರ್ಶಿಯಾದ ಮಾರ್ಪಡಿಸಿದ ರೂಪ. ಭಾರತದಲ್ಲಿ ಬಹಳಷ್ಟು ಕಡೆ ಲಿಪಿ ಗುರುಮುಖಿಯಲ್ಲಿರುತ್ತದೆ. ಭಾರತದ ಕೇಂದ್ರ ಮಟ್ಟದಲ್ಲಿ ಎರಡು ಪ್ರಮುಖ ಅಧಿಕೃತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಶ್ ಪ್ರಭಾವದಲ್ಲಿ ಕೆಲವೊಮ್ಮೆ ದೇವನಾಗರಿ ಅಥವಾ ಲ್ಯಾಟಿನ್ ಲಿಪಿಯಲ್ಲಿಯೂ ಬರೆಯುವುದು ಕಂಡುಬರುತ್ತದೆ. 

ಭಾರತದಲ್ಲಿ ಪಂಜಾಬಿ ೨೨ ಎಂಟನೆಯ ಪರಿಚ್ಛೇದದಲ್ಲಿರುವ ಭಾಷೆಗಳಲ್ಲಿ ಒಂದು ಮತ್ತು ಪಂಜಾಬ್ ರಾಜ್ಯದ ಮೊದಲ ಅದಿಕೃತ ಭಾಷೆ. ವಾಸ್ತವದಲ್ಲಿ ಪಂಜಾಬಿ ಪಾಕಿಸ್ತಾನದ ಬಹುಸಂಖ್ಯಾತರು ಮಾತನಾಡುವ ಭಾಷೆಯಾಗಿದ್ದಾಗ್ಯೂ ಅಲ್ಲಿ ಯಾವ ಪ್ರಾಂತೀಯ ಭಾಷೆಗಳನ್ನು ಕೇಂದ್ರದಲ್ಲಿ ಗುರುತಿಸಿಲ್ಲ, ಪಾಕಿಸ್ತಾನದ ಎರಡು ರಾಷ್ಟ್ರೀಯ ಸಂಪರ್ಕ ಭಾಷೆಗಳು ಉರ್ದು ಮತ್ತು ಇಂಗ್ಲೀಶ್. ಆದರೆ ಅದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕೃತ ಭಾಷೆ. ಈ ಪ್ರಾಂತವು ಎರಡನೆ ಅತಿದೊಡ್ಡ ಮತ್ತು ಜನಸಂಖ್ಯೆಯಲ್ಲಿ ಮೊದಲನೆಯ ದೊಡ್ಡ ಪ್ರಾಂತ. 

ಪಾಕಿಸ್ತಾನದಲ್ಲಿ ಪಂಜಾಬಿ ಅತಿಹೆಚ್ಚು ಜನರು ಮಾತನಾಡುವ ಭಾಷೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕೃತ ಭಾಷೆ. ಪಂಜಾಬಿಯನ್ನು ಸ್ಥಳೀಯ ಭಾಷೆಯಾಗಿ ಶೇ ೪೪.೧೫ಗೂ ಹೆಚ್ಚು ಪಾಕಿಸ್ತಾನೀಯರು ಮಾತನಾಡುತ್ತಾರೆ. ಸುಮಾರು ಶೇ ೭೦ರಷ್ಟು ಪಾಕಿಸ್ತಾನಿಯರು ಪಂಜಾಬಿಯನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಮಾತನಾಡುತ್ತಾರೆ ಮತ್ತು ಕೆಲವೊಂದು ಜನರಿಗೆ ಅದು ಮೂರನೆಯ ಭಾಷೆ. ಪಾಕಿಸ್ತಾನ ಪಂಜಾಬಿನ ರಾಜಧಾನಿಯಾದ ಲಾಹೋರ್‌ನಲ್ಲಿ ಶೇ೮೬ರಷ್ಟು ಈ ಭಾಷೆ ಮಾತನಾಡುತ್ತಾರೆ. ಇದು ಜಗತ್ತಿನಲ್ಲೇ ಅತಿಹೆಚ್ಚು ಸ್ಥಳೀಯ ಪಂಜಾಬಿ ಭಾಷಿಕರಿರುವ ನಗರ. ಫೈಸಲಾಬಾದ್‌ನಲ್ಲಿ ಈ ಸಂಖ್ಯೆ ಶೇ ೭೬ ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೇ ೭೧. ಇವೆರಡು ಅತಿ ಹೆಚ್ಚು ಸ್ಥಳೀಯ ಪಂಜಾಬಿ ಭಾಷಿಕರಿರುವ ನಗರಗಳ ಸ್ಥಾನದಲ್ಲಿ ಎರಡನೆಯ ಮತ್ತು ಮೂರನೆಯ ಸ್ಥಾನ ಪಡೆದಿವೆ. ಕರಾಚಿ ನಗರದಲ್ಲಿನ ಪಂಜಾಬಿ ಭಾಷಿಕರ ಸಂಖ್ಯೆ ಸಹ ದೊಡ್ಡದು.

	
ಗಮನಿಕೆ: ೧೯೮೧ರ ಪಾಕಿಸ್ತಾನದ ರಾಷ್ಟ್ರೀಯ ಜನಗಣತಿ ಪಶ್ಚಿಮ ಪಂಜಾಬಿನ ಉಪಭಾಷೆಗಳಾದ ಸರೈಕ, ಪೊಥೊಹರಿ ಮತ್ತು ಹಿಂಡಕೊಗಳಿಗೆ ಭಿನ್ನ ಭಾಷೆಯ ಸ್ಥಾನ ಕೊಟ್ಟಿತು. ಇದು ಪಂಜಾಬಿ ಭಾಷಿಗರ ಸಂಖ್ಯೆಯ ಕುಗ್ಗುವಿಕೆಯನ್ನು ವಿವರಿಸುತ್ತದೆ. 

ಭಾರತದಲ್ಲಿ ಪಂಜಾಬಿಯು ಸುಮಾರು ೩ ಕೋಟಿ ಜನರ ಸ್ಥಳೀಯ ಭಾಷೆ, ಎರಡನೆಯ ಅಥವಾ ಮೂರನೆಯ ಭಾಷೆ. ಪಂಜಾಬಿಯು ಭಾರತದ ಪಂಜಾಬ್, ಹರಿಯಾಣ ಮತ್ತು ದೆಹಲಿ ರಾಜ್ಯಗಳ ಅಧಿಕೃತ ಭಾಷೆ. ಪಂಜಾಬಿ ಭಾಷಿಕರು ಇರುವ ಕೆಲವು ಪ್ರಮುಖ ನಗರ ಕೇಂದ್ರಗಳು ಅಂಬಾಲ, ಲುದಿಯಾನ, ಅಮೃತಸರ, ಚಂಡೀಗರ್, ಜಲಂಧರ್ ಮತ್ತು ದೆಹಲಿ.




#Article 202: ಪಶ್ಚಿಮ ಬಂಗಾಳ (6093 words)


ಪಶ್ಚಿಮ ಬಂಗಾಳ ಪೂರ್ವ ಭಾರತದ ರಾಜ್ಯಗಳಲ್ಲೊಂದು. 
ಪಶ್ಚಿಮ ಬಂಗಾಲ - ಭಾರತ ಗಣರಾಜ್ಯದ ಒಂದು ರಾಜ್ಯ. ದೇಶದ ಈಶಾನ್ಯ ಭಾಗದಲ್ಲಿ, ಉ,ಅ. 21( 38'-27(10' ಮತ್ತು ಪೂ. ರೇ. 85(50'-89(50' ನಡುವೆ ಇದೆ. ಕರ್ಕಾಟಕದ ಸಂಕ್ರಾಂತಿ ವೃತ್ತ ಈ ರಾಜ್ಯದ ನಡುವೆ ಹಾದುಹೋಗುತ್ತದೆ. ರಾಜ್ಯದ ಉತ್ತರದಲ್ಲಿ ಸಿಕ್ಕಿಂ ಮತ್ತು ಭೂತಾನ್, ದಕ್ಷಿಣದಲ್ಲಿ ಬಂಗಾಲ ಕೊಲ್ಲಿ, ಪೂರ್ವದಲ್ಲಿ ಅಸ್ಸಾಂ ಮತ್ತು ಬಾಂಗ್ಲಾ ದೇಶ, ಪಶ್ಚಿಮದಲ್ಲಿ ಒರಿಸ್ಸ, ಬಿಹಾರ ಮತ್ತು ನೇಪಾಲ ಇವೆ ಇದರ ವಿಸ್ತೀರ್ಣ 88,752 ಚದರ ಕಿಮೀ. ಜನ ಸಂಖ್ಯೆ 8,02,21,171 (2001). ಜನಸಂಖ್ಯೆಯಲ್ಲಿ ಈ ರಾಜ್ಯದ್ದು ಭಾರತದ ರಾಜ್ಯಗಳ ಪೈಕಿ ನಾಲ್ಕನೆಯ ಸ್ಥಾನ, ರಾಜಧಾನಿ ಕೊಲ್ಕತ್ತ.

ಪಶ್ಚಿಮ ಬಂಗಾಲ ಬಹುತೇಕ ಮೆಕ್ಕಲು ಬಯಲು ಪ್ರದೇಶ. ಇದರ ಬಹುಭಾಗ ಗಂಗಾನದಿಯ ಮುಖಜ ಭೂಮಿ. ಒಟ್ಟು ಪ್ರದೇಶ ಸೇಕಡ ಒಂದು ಭಾಗ ಮಾತ್ರ ಪರ್ವತ ಪ್ರದೇಶ ಈ ರಾಜ್ಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು: 1 ಉತ್ತರದಲ್ಲಿರುವ ಹಿಮಾಲಯ ಮತ್ತು ಅದರ ತಪ್ಪಲಿನ ಪ್ರದೇಶ, 2 ದಕ್ಷಿಣದ ಮೆಕ್ಕಲು ಮಣ್ಣಿನ ಬಯಲು, ರಾಜ್ಯದ ಉತ್ತರ ಗಡಿಯಲ್ಲಿ ಜಗತ್ತಿ ಅತ್ಯಂತ ಎತ್ತರದ ಹಿಮಾಲಯ ಪರ್ವತ ಶ್ರೇಣಿಯ ಏರು ಇದೆ. ಈ ಸೀಮೆ ಡಾರ್ಜಿಲಿಂಗ್ ಜಿಲ್ಲೆಯನ್ನು ಒಳಗೊಳ್ಳುತ್ತದೆ. ಈ ಜಿಲ್ಲೆ ಸಮುದ್ರಮಟ್ಟದಿಂದ 3,658 ಮೀ. ಎತ್ತರದಲ್ಲಿದೆ. ಕಾಂಚನಗಂಗ ಶಿಖರ ಇದಕ್ಕೆ ಸಮೀಪದಲ್ಲಿದೆ. ಮೋಡವಿಲ್ಲದ ದಿನಗಳಲ್ಲಿ ಗೌರೀಶಂಕರ ಶಿಖರ ಇಲ್ಲಿಗೆ ಕಾಣುತ್ತದೆ.

ಹಿಮಾಲಯ ತಪ್ಪಲಿನ ಹರವು ಜಲಪೈಗುರಿ ಮತ್ತು ಕೂಚ್‍ಬಿಹಾರ್ ಜಿಲ್ಲೆಗಳಲ್ಲಿ ಹಬ್ಬಿದೆ. ತಗ್ಗುನೆಲವಿರುವ ಈ ಪ್ರದೇಶವನ್ನು ತರೈ ಎನ್ನುತ್ತಾರೆ. ಒಂದು ಕಾಲದಲ್ಲಿ ಇಲ್ಲಿ ಮಲೇರಿಯ, ಕಾಲಾ ಆಚಾರ್ ರೋಗಗಳು ಹಬ್ಬಿದ್ದು, ಇದು ಅನಾರೋಗ್ಯಕರ ಪ್ರದೇಶವಾಗಿತ್ತು. ಈಗ ಇಲ್ಲಿಯ ಜಲೋತ್ಸಾರಣ ವ್ಯವಸ್ಥೆಯಿಂದಾಗಿ ಅನಾರೋಗ್ಯದ ಪರಿಸ್ಥಿತಿ ತಪ್ಪಿದೆಯಲ್ಲದೆ ನೆಲವನ್ನು ಸಾಗುವಳಿಗೆ ಒಳಪಡಿಸಲಾಗಿದೆ. ಭಾರತದ ಕೆಲವು ಉತ್ಕøಷ್ಟ ಚಹ ತೋಟಗಳು ಇಲ್ಲಿವೆ. ಈ ಭಾಗದ ನದಿಗಳು ಮಳೆಗಾಲದಲ್ಲಿ ತುಂಬಿ ರಭಸವಾಗಿ ಹರಿಯುತ್ತವೆ. ತಿಷ್ಟ, ಟೊರ್ಸ್, ಜಾಲ್ದಾಕ್, ರಣಜಿತ್ ಮೊದಲಾದ ನದಿಗಳು ಬೆಟ್ಟದ ಕೊರಕಲುಗಳಿಂದ ಇಳಿದು ಬರುವಾಗ ಕಲ್ಲು, ಮರಳು ಮತ್ತು ಮೆಕ್ಕಲನ್ನು ಹೆಚ್ಚಾಗಿ ತಂದು ಹರಡುತ್ತವೆ.

ವಿಶಾಲವಾದ ಮೆಕ್ಕಲು ಬಯಲು ಉತ್ತರದ ಜಲಪೈಗುರಿ ಮತ್ತು ಸಿಲಗುರಿಯಿಂದ ಹಿಡಿದು ದಕ್ಷಿಣದ ಸುಂದರಬನ ಖಾರಿಯ ವರೆಗೆ ಹರಡಿಕೊಂಡಿದೆ. ಮಾಲ್ಡಾ ಜಿಲ್ಲೆಯನ್ನು ಒಳಗೊಳ್ಳುವ ಮಹಾನದಿ ಬಯಲು ಅನೇಕ ಸಣ್ಣ ತೊರೆಗಳಿಂದ ಕೂಡಿದ ಎತ್ತರದ ಮೆಕ್ಕಲು ಪ್ರದೇಶ, ಬೀರ್‍ಭೂಮ್, ಬದ್ರ್ವಾನ್, ಬಂಕುರ, ಮಿಡ್ನಾಪುರ ಮತ್ತು ಪುರುಲಿಯ ಜಿಲ್ಲೆಗಳನ್ನು ಒಳಗೊಳ್ಳುವ ಪ್ರಸ್ಥಭೂಮಿಯ ಅಂಚುನೆಲ ಅಲ್ಲಲ್ಲಿ ಗುಡ್ಡಬೆಟ್ಟಗಳಿಂದ ಕೂಡಿರುವ, ವಿರಳವಾದ ಕಾಡುಗಳನ್ನುಳ್ಳ ಕೆಂಪು ಮಣ್ಣಿನ ಪ್ರದೇಶ, ಗಂಗಾ ನದಿಯ ದಕ್ಷಿಣಕ್ಕೆ ಇರುವ ಬಯಲು ಭಾಗೀರಥಿ ಹೂಗ್ಲಿ ನದಿಯಿಂದಾಗಿ ಇಬ್ಭಾಗವಾಗಿದೆ. ಆಗ್ನೇಯ ಬಯಲು ದಾಮೋದರರ ಮೊದಲಾದ ನದಿಗಳ ಪ್ರವಾಹ ತಂದ ಮೆಕ್ಕಲುಮಣ್ಣಿನಿಂದ ಉಂಟಾದ್ದು, ಅರಣ್ಯನಾಶ, ಸಡಿಲಮಣ್ಣು ಮೊದಲಾದ ಕಾರಣಗಳಿಂದಾಗಿ ಮಣ್ಣಿನ ಸವೆತ ಉಂಟಾಗಿ, ನದಿಗಳಲ್ಲಿ ನೀರು ಅಪಾರವಾಗಿ ಹರಿದು ಸಾಗರದ ಪಾಲಾಗುತ್ತಿದೆ. ನೈಋತ್ಯ ಬಯಲು ಅಸಂಖ್ಯಾತ ಸರೋವರಗಳಿಂದಲೂ ಜೌಗು ಪ್ರದೇಶಗಳಿಂದಲೂ ಕೂಡಿದೆ. ಇನ್ನೂ ದಕ್ಷಿಣಕ್ಕೆ ಸುಂದರ ಬನವೆಂದು ಹೆಸರಾದ ವೈವಿಧ್ಯಪೂರ್ಣ ಜಲ-ಭೂಸಂಕೀರ್ಣವಿದೆ. ಕಾಂತಿ ಕರಾವಳಿಯಲ್ಲಿ ಮರಳುರಾಶಿ ಹಾಗೂ ಉಪ್ಪು ಮಣ್ಣಿನ ಜೌಗು ನೆಲಗಳಿವೆ. ವ್ಯಾಪಕವಾದ ಬತ್ತದ ಗದ್ದೆಗಳಿಂದಲೂ ಮಾವು ತೆಂಗು ಬಾಳೆ ತೋಪುಗಳಿಂದಲೂ ತುಂಬಿರುವ ದಕ್ಷಿಣದಲ್ಲಿ ದಟ್ಟ ಜನಸಂದಣಿ ಇದೆ. ಅನೇಕ ಪ್ರಮುಖ ನದಿಗಳ ಪ್ರಭಾವದಿಂದಾಗಿ ದಕ್ಷಿಣದ ಮೆಕ್ಕಲು ಬಯಲು ಉಂಟಾಗಿದೆ. ನದಿಗಳಲ್ಲಿ ಮುಖ್ಯವಾದವೆಂದರೆ ಭಾಗೀರಥಿ ಹಾಗೂ ಅದರ ಉಪನದಿಗಳಾದ ಮಯೂರಾಕ್ಷಿ, ದಾಮೋದರ, ಕಂಗ್ರಾಬತಿ ಮತ್ತು ರೂಪ ನಾರಾಯಣ್, ಸಾಗರಕ್ಕೆ ಸೇರಲಿರುವ ಭಾಗೀರಥಿಯ ಕೊನೆಯ ಭಾಗವನ್ನು ಹೂಗ್ಲಿ ಎನ್ನುತ್ತಾರೆ, ಇದು ಗಂಗಾನದಿಯ ಶಾಖೆಯೇ, ಹೂಗ್ಲಿ ನದಿಯಿಂದ ಕಲ್ಕತ್ತಕ್ಕೆ ಸಾಗರಸಂಪರ್ಕ ಏರ್ಪಟ್ಟಿದೆ.

ಉತ್ತರದ ಎತ್ತರ ಪ್ರದೇಶಗಳನ್ನು ಬಿಟ್ಟರೆ, ಪಶ್ಚಿಮ ಬಂಗಾಲದಲ್ಲಿ ಮೂಲಭೂತವಾಗಿ ಉಷ್ಣವಲಯದ ವಾಯುಗುಣವಿದೆ. ಇಲ್ಲಿ ಹೆಚ್ಚು ಆದ್ರ್ರತೆ ಹಾಗೂ ತಕ್ಕಮಟ್ಟಿಗೆ ಅಧಿಕ ಉಷ್ಣತೆ ಇರುತ್ತದೆ.

ಪಶ್ಚಿಮ ಬಂಗಾಲದಲ್ಲಿ ವಾಯುಗುಣ ಮತ್ತು ಮಣ್ಣಿಗೆ ಅನುಗುಣವಾದ ಸಸ್ಯವರ್ಗವಿದೆ. ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡ 13.4 ರಷ್ಟು ನೆಲ ಅರಣ್ಯಾವೃತ. ಜನಸಾಂದ್ರತೆ ಹೆಚ್ಚುತ್ತಿರುವುದರಿಂದ ಹೆಚ್ಚು ಹೆಚ್ಚು ಭೂಮಿಯನ್ನು ಸಾಗುವಳಿಗೆ ತರಲಾಗುತ್ತಿದೆ. ಇದರಿಂದ ಪಶ್ಚಿಮ ಬಂಗಾಲದ ನೈಸರ್ಗಿಕ ಸಸ್ಯಸಂಪತ್ತು ನಶಿಸುತ್ತಿದೆ. ಸಾಮಾನ್ಯವಾಗಿ ಇಲ್ಲಿ ಮೂರು ಬಗೆಯ ಅರಣ್ಯಗಳನ್ನು ಗುರುತಿಸಬಹುದು : 1 ಪರ್ವತಪ್ರದೇಶದ ಸಮಶೀತೋಷ್ಣ ಕಾಡು, 2 ಪರ್ವತ ತಪ್ಪಲಿನ ಪರ್ಣಪಾತಿ ಕಾಡು, 3 ಸುಂದರಬನದ ಉಷ್ಣವಲಯ ಕಾಡು, ಉತ್ತರದಲ್ಲಿ ಪರ್ವತ ಇಳಿಜಾರುಗಳಲ್ಲಿ ಚಹ ತೋಟಗಳು ಹಾಗೂ ದೇವದಾರು ಅರಣ್ಯಗಳು ಹಬ್ಬಿಕೊಂಡಿವೆ. ತಪ್ಪಲು ಪ್ರದೇಶದ ವಿರಳ ಕಾಡುಗಳಲ್ಲಿ ಸಾಲವೃಕ್ಷ, ಮಾಹುವ, ಪಾರಾಶ, ಸಂಪಿಗೆ, ಬೀಟೆ ಮುಂತಾದ ಮರಗಳನ್ನು ಕಾಣಬಹುದು. ಬಯಲಿನ ಕಾಡುಗಳಲ್ಲಿ ಬೆಲೆಬಾಳುವ ಮರಮುಟ್ಟು ನೀಡುವ ವೃಕ್ಷಗಳಿವೆ. ಬೊಂಬು ಮತ್ತು ನೀಳ ಹುಲ್ಲು ವಿಪುಲವಾಗಿ ಬೆಳೆಯುತ್ತವೆ. ಕಾಂತಿ ಕರಾವಳಿಯಲ್ಲಿ ಸಮುದ್ರದ ಕೊರೆತವನ್ನು ತಪ್ಪಿಸಲು ಸರ್ವೆಮರಗಳ ಕಾಡನ್ನು ಬೆಳೆಸಲಾಗುತ್ತಿದೆ. ಶೀಘ್ರವಾಗಿ ಬೆಳೆಯುವ ಜಪಾನೀ ಮರ ಕುಡ್ಜುವನ್ನು ನೆಡಲಾಗುತ್ತಿದೆ. ಈ ಭಾಗದ ನೈಸರ್ಗಿಕ ಸಸ್ಯವೆಂದರೆ ಕೆಯಾ ಪೊದೆ. ಇದರ ಸುವಾಸನೆಯ ಹೂಗಳನ್ನು ಸಂಗ್ರಹಿಸಿ ಪ್ರಸಿದ್ಧ ಕೆವ್ರಾ ಸುಗಂಧವನ್ನು ಉತ್ಪಾದಿಸುತ್ತಾರೆ, ಸಾಲದವೃಕ್ಷಗಳು ಮರಳು ಮಣ್ಣಿನಲ್ಲಿ ಬೆಳೆಯುತ್ತವೆ. ಇತರ ವೃಕ್ಷಗಳು ಜೌಗುನೆಲದಲ್ಲಿ ಹೇರಳ. ಮಾವು, ಹಲಸು ಹಾಗೂ ಬಾಳೆ ಪಶ್ಚಿಮ ಬಂಗಾಲದ ಪ್ರಮುಖ ಫಲವೃಕ್ಷಗಳು.

ಉತ್ತರದ ಜಿಲ್ಲೆಗಳ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಕಾಡೆಮ್ಮೆ, ನೀರಾನೆ ಮತ್ತು ಇತರ ಹಲವು ದೊಡ್ಡಪುಟ್ಟ ಪ್ರಾಣಿಗಳಿವೆ. ಉರಗ ಹಾಗೂ ಪಕ್ಷಿಗಳ ವಿವಿಧ ಜಾತಿಗಳು ಇಲ್ಲಿ ಉಂಟು. ಜಾಲ್ದಾಕಾ ನದಿ ಕಣಿವೆಯಲ್ಲಿ ಒಂದು ಪ್ರಾಣಿನಾಮವಿದೆ.

ಪಶ್ಚಿಮ ಬಂಗಾಲದ ಜನಸಂಖ್ಯೆಯಾದ 9,13,47,736 .(2011) ಇಲ್ಲಿಯ ಜನಸಂಖ್ಯೆ 38,074 ಹಳ್ಳಿಗಳಲ್ಲಿ ಮತ್ತು 223 ಪಟ್ಟಣಗಳಲ್ಲಿ ಹಂಚಿಕೆಯಾಗಿದೆ.  ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆಯುಳ್ಳ ನಗರಗಳು 15. ಐದು ಸಾವಿರಕ್ಕಿಂತ ಹೆಚ್ಚು ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯುಳ್ಳ ಪಟ್ಟಣಗಳು 123. ಕೈಗಾರಿಕಾ ಸಂಕೀರ್ಣಗಳಿಂದ ಬೃಹತ್ತಾಗಿ ಬೆಳೆದು ಸಮುದಾಯವಾಗಿರುವ ನಾಲ್ಕು ಮಹಾನಗರವಲಯಗಳಿವೆ. ಇವುಗಳ ಪೈಕಿ ಕೊಲ್ಕತ್ತ ಮಹಾನಗರ ಅತ್ಯಂತ ದೊಡ್ಡದು. ಹೂಗ್ಲಿ ನದಿಯ ಇಕ್ಕೆಲಗಳ 76 ಪಟ್ಟಣ ಬಡಾವಣೆಗಳು ಇದರಲ್ಲಿ ಸೇರಿವೆ. ಎರಡನೆಯದೆಂದರೆ 13 ಪಟ್ಟಣಗಳುಳ್ಳ ಆಸನ್‍ಸೋಲ್-ದುರ್ಗಾಪುರ ವಲಯ. ಭಾಗೀರಥಿಯ ಇಕ್ಕೆಲದ ಎಂಟು ಪಟ್ಟಣಗಳ ಮುರ್ಷಿದಾಬಾದ್ ವಲಯ ಮೂರನೆಯದು. ನಾಲ್ಕನೆಯದು ಮಿಡ್ನಾಪುರ ಜಿಲ್ಲೆಯ ಉತ್ತರದಲ್ಲಿದೆ. ಇದರಲ್ಲಿ ಹಾಲ್ದಿಯವೂ ಸೇರಿದಂತೆ 6 ಪಟ್ಟಣಗಳಿವೆ.

ಈ ನಾಲ್ಕು ವಲಯಗಳ ಒಟ್ಟು ಜನಸಂಖ್ಯೆ 83,30,000 (1971). ಬಂಗಾಳದ ಸೇ 16ರಷ್ಟು ಜನರು ಭಾರತದ ಅತ್ಯಂತ ಬೃಹತ್ ನಗರವಾದ ಕೊಲ್ಕತ್ತದಲ್ಲಿ ನೆಲಸಿದ್ದಾರೆ. 1912ರ ವರೆಗೆ ಭಾರತ ಸರ್ಕಾರದ ರಾಜಧಾನಿಯಾಗಿದ್ದ ಈ ನಗರ ಈಗ ಭಾರತದ ವಾಣಿಜ್ಯ ರಾಜಧಾನಿಯಾಗಿದೆ.
ವಿವಿಧ ಮತಗಳ ಜನಸಮುದಾಯವಿರುವ ಈ ರಾಜ್ಯದಲ್ಲಿ ಹಿಂದುಗಳು ಒಟ್ಟು ಜನಸಂಖ್ಯೆಯ ಸೇ. 79ರಷ್ಟು ಮಂದಿ ಮುಸ್ಲಿಮರು, ಉಳಿದ ಸೇಕಡ ಒಂದರಷ್ಟು ಜನಸಂಖ್ಯೆಯಲ್ಲಿ ಕ್ರೈಸ್ತರು, ಬೌದ್ಧರು, ಜೈನರು ಹಾಗೂ ಸಿಖ್ಖರು ಸೇರಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ಮಾನ್ಯತೆ ಪಡೆದ 41 ಬುಡಕಟ್ಟು ಸಮುದಾಯಗಳಿವೆ. ಇವುಗಳಲ್ಲಿ ಪ್ರಸಿದ್ಧವಾದವು ಬಯಲುಸೀಮೆಯಲ್ಲಿ ಸಂತಾಲ, ಒರಾವೂ ಮತ್ತು ಮುಂಡ, ಹಿಮಾಲಯ ಪ್ರದೇಶಗಳಲ್ಲಿ ಲೆಪ್ಚಾ ಹಾಗೂ ಭೂತಿಯ, ಬುಡಕಟ್ಟು ಜನರ ಸಂಖ್ಯೆ ಒಟ್ಟು ಜನಸಂಖ್ಯೆಯ ಸೇ. 6.

ರಾಜ್ಯದ ಮುಖ್ಯ ಭಾಷೆ ಬಂಗಾಲಿ, ಜನಸಂಖ್ಯೆಯ ಶೇ, 84ರಷ್ಟು ಮಂದಿ ಬಂಗಾಲಿ ಮಾತನಾಡುತ್ತಾರೆ. ಇತರ ಭಾಷೆಗಳು ಹಿಂದಿ (ಸೇ.5), ಸಂತಾಲಿ (ಸೇ. 3). ಉರ್ದು (ಸೇ.2) ಮತ್ತು ನೇಪಾಲಿ (ಸೇ.1) ಒರಾವೂ ಮತ್ತು ಇಂಗ್ಲಿಷ್ ಭಾಷೆಗಳೂ ಪ್ರಚಾರದಲ್ಲಿವೆ.

ಪಶ್ಚಿಮ ಬಂಗಾಲದ ಸರ್ಕಾರ ವ್ಯವಸ್ಥೆ ಭಾರತ ಗಣರಾಜ್ಯದ ಇತರ ರಾಜ್ಯಗಳವುಗಳಂತೆಯೇ ಇದೆ. ರಾಷ್ಟ್ರಪತಿಯಿಂದ ನೇಮಕ ಹೊಂದಿದ ರಾಜ್ಯಪಾಲ ರಾಜ್ಯದ ಮುಖ್ಯ. ಆದರೆ ಅಧಿಕಾರ ಚಲಾವಣೆ ಇವರ ಕೈಯಲ್ಲಿರುವುದಿಲ್ಲ. ವಿಧಾನ ಸಭೆಯ ಬಹುಮತ ಪಕ್ಷದ ಸದಸ್ಯ ಪ್ರತಿನಿಧಿಗಳು ಸರ್ಕಾರ ರಚಿಸುತ್ತಾರೆ. ಮುಖ್ಯ ಮಂತ್ರಿ ಮತ್ತು ಆತನ ಸಂಪುಟ ಸದಸ್ಯರು ವಿಧಾನ ಮಂಡಲಕ್ಕೆ ಉತ್ತರವಾದಿಗಳಾಗಿರುತ್ತಾರೆ.

ರಾಜ್ಯದ ನ್ಯಾಯವ್ಯವಸ್ಥೆ ಉಚ್ಚ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಮುಖ್ಯ ನ್ಯಾಯಾಧೀಶ ಹಾಗೂ ಇತರ ನ್ಯಾಯಾಧೀಶರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಜಿಲ್ಲೆಯ ಮತ್ತು ಅದಕ್ಕಿಂತ ಕೆಳಗಿನ ಸೆಷನ್ಸ್ ನ್ಯಾಯಲಯಗಳ ನ್ಯಾಯಾಧೀಶರ ನೇಮಕ ರಾಜ್ಯಪಾಲರಿಂದ.

ಪ್ರೆಸಿಡೆನ್ಸಿ. ಬದ್ರ್ವಾನ್ ಹಾಗೂ ಜಲ್ ಪೈಗುರಿ-ಇವು ರಾಜ್ಯದ ಆಡಳಿತ ವಿಭಾಗಗಳು, ಇವುಗಳ ಕೇಂದ್ರ ಕಛೇರಿಗಳು ಅನುಕ್ರಮವಾಗಿ ಕಲ್ಕತ್ತ, ಚಿನ್‍ಸುರ ಮತ್ತು ಜಲಪೈಗುರಿಗಳಲ್ಲಿವೆ. ಪ್ರತಿ ವಿಭಾಗಕ್ಕೂ ಒಬ್ಬ ವಿಭಾಗಾಧಿಕಾರಿ ಇರುತ್ತಾನೆ. ಪ್ರತಿಯೊಂದು ವಿಭಾಗದಲ್ಲೂ ಹಲವು ಜಿಲ್ಲೆಗಳಿರುತ್ತವೆ. ರಾಜ್ಯದ ಜಿಲ್ಲೆಗಳ ಸಂಖ್ಯೆ ೨೩ ಜಿಲ್ಲೆಗಳ ವಿವರಗಳನ್ನು ಕೋಷ್ಟಕ 1ರಲ್ಲಿ ನೀಡಿದೆ. ಜಿಲ್ಲೆಯ ಅಧಿಕಾರಿ ಕಲೆಕ್ಟರ್. ಆತ ಜಿಲ್ಲಾದಂಡಾಧೀಶನೂ ಹೌದು. ಪ್ರತಿಯೊಂದು ಜಿಲ್ಲೆಯೂ ಮತ್ತೆ ಹಲವು ಥಾನಾಗಳಾಗಿ ವಿಭಾಗವಾಗುತ್ತವೆ. ಒಟ್ಟು ಇಂಥ 48 ಉಪವಿಭಾಗಗಳಿವೆ.

ಪ್ರಸ್ತುತ ಪಶ್ಚಿಮ ಬಂಗಾಲದಲ್ಲಿ ೨೩ ಜಿಲ್ಲೆಗಳಿವೆ .

ಪ್ರತಿಯೊಂದು ಉಪವಿಭಾಗದಲ್ಲೂ ಉಪವಿಭಾಗಾಧಿಕಾರಿ ಮತ್ತು ಹಲವಾರು ಪೋಲಿಸ್ ಠಾಣೆಗಳಿರುತ್ತವೆ. ಪ್ರತಿ ಪೋಲಿಸ್ ಠಾಣೆಯ ಆಡಳಿತವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳು ಇರುತ್ತವೆ. ಗ್ರಾಮ ಸ್ವಯಮಾಡಳತವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಹಲವು ಗ್ರಾಮಗಳು ಸೇರಿದ ಗ್ರಾಮಗಳು ಸೇರಿದ ಗ್ರಾಮಪಂಚಾಯಿತಿಗಳ ಅಸ್ತಿತ್ವವನ್ನು 1956ರ ಪಶ್ಚಿಮ ಬಂಗಾಲ ಪಂಚಾಯಿತಿ ಅಧಿನಿಯಮದ ಮೂಲಕ ಘೋಷಿಸಲಾಯಿತು. ಊರಿನ ನೈರ್ಮಲ್ಯೀಕರಣ, ರಕ್ಷಣೆ, ಗ್ರಾಮ ಪೋಲಿಸ್ ಮೇಲ್ವಿಚಾರಣೆ, ಗೃಹಕೈಗಾರಿಕೆಗಳ ಅಭಿವೃದ್ಧಿ- ಇವು ಪಂಚಾಯಿತಿಗಳ ಮೂಲ ಕರ್ತವ್ಯ, ಪಶ್ಚಿಮ ಬಂಗಾಲದಲ್ಲಿ ಸುಮಾರು 20,000 ಗ್ರಾಮ ಪಂಚಾಯಿತಿಗಳೂ, ಸುಮಾರು 3.000 ಅಂಚಲ್ ಪಂಚಾಯಿತಿಗಳೂ ಇವೆ.

ರಾಜ್ಯ ಯೋಜನೆಯ ಅಡಿಯಲ್ಲಿ 8,60,000ಕ್ಕೂ ಹೆಚ್ಚು ಕಾರ್ಮಿಕರಿಗೆ ಆರೋಗ್ಯ ಉದ್ಯೋಗ, ರಕ್ಷಣೆ ಹಾಗೂ ಮಾತೃತ್ವ ವಿಮೆಯ ಸೌಲಭ್ಯ ನೀಡಲಾಗಿದೆ. ಅಲ್ಲದೆ. 800ಕ್ಕೂ ಹೆಚ್ಚೂ ವೈದ್ಯರ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ನೀಡಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕೈಗಾರಿಕೆ ಮತ್ತು ಕೃಷಿ ಇವೆಲ್ಲವುಗಳಲ್ಲಿ ಮೇಲಿನ ಅಂಕಿ ಅಂಶಗಳನ್ನು ಮೀರಿಸಿ ಈಗ ಪ್ರಗತಿಯಾಗಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕು.

ಪಶ್ಚಿಮ ಬಂಗಾಲದ ಜನರ ಮುಖ್ಯ ಕಸುಬು ವ್ಯವಸಾಯ. ಸೇ. 57.5 ಮಂದಿ ಕೃಷಿಯನ್ನು ಅವಲಂಬಿಸಿದ್ದಾರೆ. ರಾಜ್ಯದ ನೆಲದ ಸೇ 60 ರಷ್ಟು ಭಾಗ ಸಾಗುವಳಿಗೆ ಒಳಪಟ್ಟಿದೆ. ರಾಜ್ಯದ ಮುಖ್ಯ ಬೆಳೆ ಬತ್ತ. ಒಟ್ಟು ಸಾಗುವಳಿ ಪ್ರದೇಶದ ಸೇ 70ರಷ್ಟು ಇದಕ್ಕೆ ಮೀಸಲು ಇತ್ತೀಚೆಗೆ ಅಹಾರ ಬೆಳೆ ಉತ್ಪಾದನೆಯ ವಿನ್ಯಾಸ ತೀವ್ರವಾಗಿ ಬದಲಿಸುತ್ತಿದೆ. ಗೋಧಿಯೂ ಒಂದು ಪ್ರಮುಖ ಬೆಳೆಯಾಗುತ್ತಿದೆ. ಬಾರ್ಲಿ ಮತ್ತು ಜೋಳ ಗಾಣ ಬೆಳೆಗಳೂ ಬೆಳೆಯುತ್ತವೆ. ರಾಷ್ಟ್ರದ ಒಟ್ಟು ಆಹಾರ ಉತ್ಪಾದನೆಯಲ್ಲಿ ಈ ರಾಜ್ಯದ ಪಾಲು ಸೇ 7 ಈ ವಿಚಾರದಲ್ಲಿ ರಾಜ್ಯದ್ದು 4ನೆಯ ಸ್ಥಾನ. ಇಲ್ಲಿಯ ವಾಣಿಜ್ಯ ಬೆಳೆಗಳಲ್ಲಿ ಮುಖ್ಯವಾದವು. ಸೆಣಬು. ಚಹ ಮತ್ತು ವೀಳೆಯದೆಲೆ, ಭಾರತದ ಒಟ್ಟು ಸಣಬು ಉತ್ಪಾದನೆಯಲ್ಲಿ ಸೇ 50ರಷ್ಟು ಇಲ್ಲಿ ಬೆಳೆಯುತ್ತದೆ. ಚಹ ಪ್ರಮುಖ ಪ್ಲಾಂಟೇಷನ್ ಬೆಳೆ. ಅಸ್ಸಾಮನ್ನು ಬಿಟ್ಟರೆ ಈ ರಾಜ್ಯವೇ ಅತ್ಯಂತ ಹೆಚ್ಚು ಚಹ ಬೆಳೆಯುವ ರಾಜ್ಯ. ಅತ್ಯಂತ ರುಚಿಕರ ಹಿಮಾಲಯದ ಚಹ ಇಲ್ಲಿಯದು. ಪರ್ವತ ಶ್ರೇಣಿಗಳ ಇಳುಕಲುಗಳಲ್ಲಿ ಚಹ ತೋಟಗಳು ಸಮೃದ್ಧವಾಗಿವೆ. ಮಗ್ಗಲಲ್ಲಿಯೇ ಚಹ ಕಾರ್ಖಾನೆಗಳುಂಟು ಸಂಸ್ಕರಣ ಹೊಂದಿದ ಕಪ್ಪು ಚಹ ಪುಡಿಯನ್ನು ಕಲ್ಕತ್ತೆಯ ಮಾರುಕಟ್ಟೆಗೆ ಸಾಗಿಸುತ್ತಾರೆ. ಇಲ್ಲಿಯ ಸೆಣಬು ಮತ್ತು ಚಹ ಭಾರತದ ವಿದೇಶಿ ವಿನಿಮಯ ಸಂಪಾದನೆಯ ಸರಕುಗಳು, ರಾಜ್ಯದಲ್ಲಿ ಸಾಗುವಳಿಯಾಗುತ್ತಿರುವ ಪ್ರಮುಖ ಜಮೀನಿನ ಸೇ 2ರಷ್ಟು ಪ್ರದೇಶದಲ್ಲಿ ಎಣ್ಣೆ ಬೀಜಗಳನ್ನು ಬೆಳೆಯುತ್ತಾರೆ. ರಾಜ್ಯದ ಅಗತ್ಯವನ್ನು ಇಲ್ಲಿಯ ಬೆಳೆ ಭಾಗಶಃ ಪೂರೈಸುತ್ತದೆ.

ಎಣ್ಣೆ ಬೀಜಗಳಲ್ಲಿ ಸಾಸುವೆ ಪ್ರಮುಖವಾದ್ದು. ಬಂಗಾಲದಲ್ಲಿ ಅಡುಗೆಗೆ ಸಾಸುವೆ ಎಣ್ಣೆಯನ್ನೇ ಹೆಚ್ಚಾಗಿ ಉಪಪ್ರಮುಖವಾದ್ದು. ಬಂಗಾಲದಲ್ಲಿ ಅಡುಗೆಗೆ ಸಾಸುವೆ ಎಣ್ಣೆಯನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಅಲ್ಲದೆ ಈ ಎಣ್ಣೆಯನ್ನು ಮೈಗೂ ತಿಕ್ಕಿಕೊಳ್ಳಲು ಬಳಸುತ್ತಾರೆ. ಹತ್ತಿ, ತಂಬಾಕು ಮತ್ತು ಕಬ್ಬು ಇತರ ಮುಖ್ಯ ಬೆಳೆಗಳು, ಡಾರ್ಜಿಲಿಂಣ್ ಶ್ರೇಣಿಗಳಲ್ಲಿ ಸೇಬು ಮೊದಲಾದ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇವುಗಳ ಬೆಳೆಯಿಂದ ಸುತ್ತಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುವ ನಿರೀಕ್ಷೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಾಳೆ, ಪರಂಗಿ, ಮಾವು, ಹಲಸು, ಅನಾನಸುಗಳನ್ನು ಬೆಳೆಯುತ್ತಾರೆ. 2002-2003 ರ ಸಾಲಿನಲ್ಲಿ 14,389.2 ಸಾವಿರ ಟನ್ನುಗಳ ಬತ್ತವನ್ನು 887.4 ಸಾವಿರ ಟನ್ನುಗಳ ಗೋಧಿಯನ್ನೂ 167.9 ಸಾವಿರ ಟನ್ನುಗಳ ದ್ವಿದಳ ಧಾನ್ಯಗಳನ್ನೂ, 475.8 ಸಾವಿರ ಟನ್ನುಗಳ ತೈಲ ಬೀಜಗಳನ್ನೂ 6,902.5 ಸಾವಿರ ಟನ್ನುಗಳ ಆಲೂಗಡ್ಡೆಯನ್ನು ಬೆಳೆಯಲಾಗಿತ್ತು. 2001-02 ರ ಸಾಲಿನಲ್ಲಿ 8,505 ಸಾವಿರ ಬೇಲುಗಳ ಸೆಣಬನ್ನೂ ಬೆಳೆಯಲಾಗಿತ್ತು.

ಪಶ್ಚಿಮ ಬಂಗಾಲ ಹೆಚ್ಚು ಮಳೆ ಬೀಳುವ ಪ್ರದೇಶವಾದ್ದರಿಂದ ನೀರಾವರಿಗೆ ಅಂಥ ಪ್ರಾಮುಖ್ಯವಿಲ್ಲ. ರಾಜ್ಯದ ಒಟ್ಟು ಸಾಗುವಳಿ ನೆಲದ ಶೇ 38ರಷ್ಟು ಪ್ರದೇಸ ನೀರಾವರಿಗೆ ಒಳಪಟ್ಟಿದೆ. (ಪೂರ್ಣವಾಗಿ ನೀರಾವರಿಗೆ ಒಳಪಟ್ಟಿರುವ ನೆ ಸೇ 11 : ಭಾಗಶಃ ನೀರಾವರಿ ಇರುವ ನೆಲ ಶೇ. 27) ಸರ್ಕಾರದಿಂದ ನಿಯಂತ್ರಿತವಾದ ನಾಲೆಗಳು ಮತ್ತು ಕೆರೆಗಳು ಸಹಾಯದಿಂದ ಪ್ರಮುಖ. ಗೌಣ ಹಾಗೂ ಸಾಧಾರಣ ನೀರಾವರಿ ಯೋಜನೆಗಳ ಮೂಲಕ ಸುಮಾರು ಹತ್ತು ಲಕ್ಷ ಹೆಕ್ಟೇರ್ ಜಮೀನು ಸಾಗುವಳಿಯಾಗುತ್ತದೆ. ಸ್ವಾತಂತ್ರ್ಯಾನಂತರ ಅನೇಕ ವಿವಿಧೋದ್ದೇಶ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಮುಖ್ಯವಾದವು ದಾಮೋದರ ಕಣೆವೆ ಹಾಗೂ ಮಯೂರಾಕ್ಷಿ ಯೋಜನೆಗಳು ಖಂಡೆಲ್ ಶಾಖವಿದ್ಯುತ್ ಕೇಂದ್ರ ಹಾಗೂ ದುರ್ಗಾಪುರ ವಿದ್ಯುತ್ ಕೇಂದ್ರ ಇವೆ.

ಇಡೀ ರಾಷ್ಟ್ರದ ಜಾನುವಾರುಗಳಲ್ಲಿ ಸೇ 56ರಷ್ಟು ಇಲ್ಲಿವೆ. ಜಾನುವಾರು ಸಾಂದ್ರತೆ ಕಿಲೋ ಮೀಟರಿಗೆ 200, ಹೈನಿನ ಹಸು ಎಮ್ಮೆಗಳು ಕಲ್ಕತ್ತ ನಗರದ ಸುತ್ತ ಸಾಂದ್ರಿಕೃತವಾಗಿವೆ. ಕ್ಷೀರೋತ್ಪಾದನಾ ಕೈಗಾರಿಕೆಯೊಂದಿಗೆ ಉಪ ಉತ್ಪಾದನೆಯಾಗಿ ಧರ್ಮ ಕೈಗಾರಿಕೆ ಅಭಿವೃದ್ಧಿಗೊಳ್ಳುತ್ತಿದೆ. ಸರ್ಕಾರ ಅನೇಕ ರೇಷ್ಮೆ ಫಾರಂಗಳನ್ನು ಸ್ಥಾಪಿಸಿದೆ. ಜೇನು ಸಾಕುವುದಕ್ಕೂ ಪ್ರೋತ್ಸಾಹವಿದೆ. ಕೋಳಿ ಮೊಟ್ಟೆಗಳ ಉತ್ಪಾದನೆಯಲ್ಲೂ ಈ ರಾಜ್ಯ ಅಗ್ರಸ್ಥಾನದಲ್ಲಿದೆ.

ಬಂಗಾಲಿಗಳ ಆಹಾರದಲ್ಲಿ ಮೀನೂ ಪ್ರಮುಖವಾದ್ದು ಸಿಹಿನೀರಿನ ಮೀನುಗಾರಿಕೆಯಲ್ಲಿ ಈ ರಾಜ್ಯಕ್ಕೆ ಭಾರತದಲ್ಲಿ ಅಗ್ರಸ್ಥಾನ. ಸುಂದರಬನಗಳಲ್ಲಿ ಮತ್ತು ನದಿಗಳಿವೆ. ಪ್ರದೇಶದಲ್ಲಿ ಗಣನೀಯವಾಗಿ ಮೀನು ಬೆಳೆ ತೆಗೆಯಲಾಗುತ್ತದೆ. ಜೊತೆಗೆ ಕರಾವಳಿ ಮೀನು ಉತ್ಪಾದನೆಯೂ ಬೆಳೆದಿವೆ. ಆಳ ಕಡಲು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೂ ರಾಜ್ಯದ ಬೇಡಿಕೆಯನ್ನು ಪೂರೈಸುವಷ್ಟು ಮೀನು ಉತ್ಪಾದನೆಯಾಗುತ್ತಿಲ್ಲ ಸಾಮಾನ್ಯವಾಗಿ ಮನೆಮನೆಯಲ್ಲೂ ಮೀನುಕೊಳಗಳಿರುತ್ತವೆ. ಮೀನುಸಾಕಣೆ ಕೇಂದ್ರಗಳು ವಾಣಿಜ್ಯಮಟ್ಟದಲ್ಲಿ ಅಭಿವೃದ್ಧಿಗೊಳ್ಳುತ್ತಿವೆ.

ಬಿಹಾರವನ್ನು ಬಿಟ್ಟರೆ ಪಶ್ಚಿಮ ಬಂಗಾಲವೇ ಅತ್ಯಂತ ಹೆಚ್ಚು ಖನಿಜಗಳನ್ನು ಉತ್ಪಾದಿಸುವ ರಾಜ್ಯ. ರಾಷ್ಟ್ರದಲ್ಲಿ ಉತ್ಪಾದನೆಯಾಗುವ ಖನಿಜಗಳಲ್ಲಿ ಐದನೆಯ ಒಂದು ಭಾಗ ಪಶ್ಚಿಮ ಬಂಗಾಲದಲ್ಲಾಗುತ್ತದೆ. ಕಲ್ಲಿದ್ದಲು ಪ್ರಮುಖ ಖನಿಜ. ರಾಜ್ಯದ ಒಟ್ಟು ಖನಿಜೋತ್ಪಾದನೆಯ ಶೇ 99 ಭಾಗ ಕಲ್ಲಿದ್ದಲು, ಭಾರತದ ಒಟ್ಟು ಕಲ್ಲಿದ್ದಲು ಉತ್ಪಾದನೆಯ ಶೇ 30ರಷ್ಟು ಇಲ್ಲಿಯದು. ಜೇಡಿಮಣ್ಣು ಇನ್ನೊಂದು ಪ್ರಮುಖ ಖನಿಜ. ಡೊಲಮೈಟ್ ವಿಪುಲವಾಗಿ ದೊರೆಯುತ್ತದೆ. ಕ್ವಾಟ್ರ್ಸ್ ಮತ್ತು ಟಂಗ್‍ಸ್ಟನ್‍ಗಳೂ ದೊರೆಯುತ್ತವೆ. ಮಿಡ್ನಾಪುರದ ಬಳಿ ಮ್ಯಾಂಗನೀಸ್ ಅದುರು ನಿಕ್ಷೇಪಗಳಿವೆ. ಕಿÁರ್ಜಿಲಿಂಣ್ ಬಳಿ ಸ್ವಲ್ಪ ಪ್ರಮಾಣದಲ್ಲಿ ಆರ್ಸೆನಿಕ್ ದೊರೆಯುತ್ತದೆ. ರಾಣಿಗಂಜ್ ಕಲ್ಲಿದ್ದಲ ಗಣಿಯ ಸಮೀಪದಲ್ಲಿ ಕಬ್ಬಿಣದ ಅದುರು ನಿಕ್ಷೇಪಗಳಿವೆ.

ಪಶ್ಚಿಮ ಬಂಗಾಲ ಮೊದಲಿನಿಂದಲೂ ಕೈಗಾರಿಕಾ ಬೆಳವಣಿಗೆಯ ಮುಂಚೂಣಿಯಲ್ಲಿದೆ. ಹಿಂದಿನ ಬಂಗಾಲದ ವಿಭಜನೆಯಾದ ಮೇಲೆ ಇಲ್ಲಿ ಆರ್ಥಿಕ ಅವ್ಯವಸ್ಥೆ ಉಂಟಾಗಿ ಎರಡು ಪ್ರಮುಖ ಉದ್ಯಮಗಳಿಗೆ ಧಕ್ಕೆಯಾಯಿತು. ಇಲ್ಲಿ ಸೆಣಬು ಕೈಗಾರಿಕೆ ಪೂರ್ವ ಪಾಕಿಸ್ತಾನದಲ್ಲಿ ಬೆಳೆಯುವ ಕಚ್ಚಾ ಸಣಬನ್ನೂ ಅವಲಂಬಿಸಿತ್ತು. ಉತ್ತರದ ಪ್ಲಾಂಟೇಷನ್‍ಗಳಿಂದ ಚಹವನ್ನು ಪೂರ್ವ ಪಾಕಿಸ್ತಾನದ ಮೂಲಕ ಹಾದುಹೋಗುವ ರೈಲು ಹಾಗೂ ಜಲಮಾರ್ಗಗಳ ಮೂಲಕ ಸಾಗಿಸಲಾಗುತ್ತಿತ್ತು. ಈ ಅಸ್ತವ್ಯಸ್ತತೆಯನ್ನು ನಿವಾರಿಸಿಕೊಂಡು ಹೊಸ ಉದ್ಯಮಗಳನ್ನು ಅಭಿವೃದ್ಧಿಗೊಳಿಸುವುದು ರಾಜ್ಯದ ಪ್ರಮುಖ ಆರ್ಥಿಕ ಗುರಿಯಾಯಿತು. ಸಣಬು ಮತ್ತು ಚಹ ಕೈಗಾರಿಕೆಗಳು ರಾಜ್ಯದಲ್ಲಿ ಪ್ರಮುಖವಾಗಿವೆ. ಕಾಗದ ಮತ್ತು ಉಕ್ಕು ಕಾರ್ಖಾನೆಗಳನ್ನು ಆರಂಭಿಸಿದ ಪ್ರಥಮ ರಾಜ್ಯ ಇದು. ರಾಣಿಗಂಜ್ ಬಳಿ ಕಲ್ಲಿದ್ದಲ ಪತ್ತೆಯಾದ್ದು ಭಾರತದಲ್ಲಿ ಕೈಗಾರಿಕಾ ಕ್ರಾಂತಿಗೆ ಕಾರಣವಾಯಿತು. ರಾಜ್ಯದಲ್ಲಿ ಎರಡು ಉಕ್ಕು ಸ್ಥಾವರಗಳಿವೆ. ದುರ್ಗಾಪುರದ ಕಾರ್ಖಾನೆ ಸರ್ಕಾರಿ ವಲಯದ್ದ; ಬರ್ನ್‍ಪುರದ ಕಾರ್ಖಾನೆ ಖಾಸಗಿ ವಲಯದ್ದು, ರೈಲ್ವೆ ಎಂಜಿನ್, ಕೇಬಲ್, ರಸಗೊಬ್ಬರ ಮತ್ತು ನೌಕಾ ನಿರ್ಮಾಣ ಇವು ಇತರ ಕೆಲವು ದೊಡ್ಡ ಕೈಗಾರಿಕೆಗಳು. ಹಾಲ್ದಿಯ ಬಳಿ ಭಾರತೀಯ ರಸಗೊಬ್ಬರ ಕಂಪನಿ ತನ್ನ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಅಲ್ಲದೆ ಇಲ್ಲಿ ತೈಲಸಂಸ್ಕರಣ ಕೇಂದ್ರ ಹಾಗೂ ಬಂದರು ನಿರ್ಮಾಣವಾಗುತ್ತವೆ. ಹೂಗ್ಲಿ ಜಲಾನಯನದ ಸುತ್ತ ಅನೇಕ ಹತ್ತಿ ಗಿರಣಿಗಳಿವೆ. ಕಲ್ಕತ್ತ ನಗರದಲ್ಲಿ ಪ್ರಮುಖ ಬಟ್ಟೆ ಗಿರಣಿಗಳಿವೆ. ಇಲ್ಲಿಯ ಇತರ ಕೆಲವು ಉದ್ಯಮಗಳೆಂದರೆ ಮೋಟಾರು ವಾಹನ, ಸೈಕಲ್, ಹಡಗು ಮತ್ತು ಮೋಟಾರು ದೋಣಿಗಳ ತಯಾರಿಕೆ, ಲಘು ಎಂಜಿನಿಯರಿಂಗ್, ಅಲ್ಯೂಮಿನಿಯಮ್, ಕಾಗದ, ರಾಸಾಯನಿಕ, ಪಾದರಕ್ಷೆ, ಸಿಮೆಂಟ್, ಸ್ಕೂಟರ್, ವಿದ್ಯುದುಪಕರಣಗಳು ಮತ್ತು ಮಿನಿ ಉಕ್ಕು ಸ್ಥಾವರಗಳು ಹೊಸ ಕೈಗಾರಿಕೆಗಳು.

ಬಂಗಾಲಿಗಳು ಬುದ್ಧಿಜೀವಿಗಳು, ಕಲಾಪ್ರೇಮಿಗಳು ಎಂದು ಹೆಸರಾಗಿದ್ದಾರೆ. ಸಾಹಿತ್ಯ, ಕಲೆ, ಸಂಗೀತ ಹಾಗೂ ನಾಟಕಗಳಿಗೆ ಪ್ರೋತ್ಸಾಹ ನೀಡುತ್ತಾರೆ. 19ನೆಯ ಶತಮಾನದ ಆರಂಭದಿಂದಲೇ ಪಾಶ್ಚಾತ್ಯ ಸಂಪರ್ಕದಿಂದಾಗಿ ಬಂಗಾಲಿ ಸಾಹಿತ್ಯದಲ್ಲಿ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಯಿತು. ಇದು ಭಾರತದ ಇತರ ಭಾಷಾ ಸಾಹಿತ್ಯಗಳ ಮೇಲೆ ಪ್ರಭಾವ ಬೀರಿದೆ. ನೊಬೆಲ್ ಪಾರಿತೋಷಕ ಪಡೆದ ರವೀಂದ್ರನಾಥ ಠಾಕೂರರಲ್ಲದೆ ಬಂಕಿಮಚಂದ್ರ, ಶರಚ್ಚಂದ್ರ ಮುಂತಾದ ಯುಗಪ್ರವರ್ತಕ ಸಾಹಿತಿಗಳು ಬಂಗಾಲಿಯಲ್ಲಿ ಕೃತಿರಚನೆ ಮಾಡಿದ್ದಾರೆ. ಬಂಗಾಲಿ ರಂಗಭೂಮಿ ಜನಪ್ರಿಯವಾಗಿದೆ. ವೃತ್ತಿ ಹಾಗೂ ಹವ್ಯಾಸೀ ಎರಡೂ ರಂಗಭೂಮಿಗಳು ಪ್ರಚಲಿತವಾಗಿವೆ. ಇಲ್ಲಿ ಸಾಮಾನ್ಯವಾಗಿ ಪೌರಾಣಿಕ ಹಾಗೂ ಐತಿಹಾಸಿಕ ವಸ್ತುಗಳೇ ಪ್ರಧಾನವಾದರೂ ಇವು ಇತ್ತೀಚೆಗೆ ಆಧುನಿಕ ವಸ್ತುಗಳಿಂದಲೂ ಆಕರ್ಷಿತವಾಗಿವೆ. ಗ್ರಾಮ ಕವಿಗಳ ನಡುವೆ ನಡೆಯುವ ಆಶು ಸಂಗೀತ ಕಾವ್ಯ ಸ್ಪರ್ಧೆ ಜನಪ್ರಿಯವಾಗಿದೆ. ಇನ್ನೊಂದು ಗ್ರಾಮಾಂತರ ಮನೋರಂಜನೆ ಎಂದರೆ ಪರಂಪರಾಗತವಾಗಿ ಬಂದ ಕಥಾಕೂಟ ಎಂಬ ಹರಿಕಥೆ.
ಜನರಿಗೆ ಸಾರ್ವತ್ರಿಕವಾಗಿ ಮನೋರಂಜನೆ ನೀಡುವ ಪ್ರಮುಖ ಉದ್ಯಮ ಚಲನಚಿತ್ರ. ಬಂಗಾಲಿ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ಗಳಿಸಿವೆ. ಅವುಗಳಲ್ಲಿಯ ಭಾರತೀಯ ಸಮಾಜ ನಿರೂಪಣೆಯ ಕುಶಲತೆ ಮೆಚ್ಚುಗೆ ಗಳಿಸಿದೆ. ನಿರ್ದೇಶಕ ಸತ್ಯಜಿತ್‍ರಾಯ್‍ರ ಕೃತಿಗಳು ಗಮನಾರ್ಹ.

ಸಾಂಪ್ರದಾಯಿಕ ಸಂಗೀತದ ರೂಪಗಳು ಭಕ್ತಿ ಹಾಗೂ ಸಾಂಸ್ಕೃತಿಕ ಗೀತೆಗಳಲ್ಲಿ ವಿಕಾಸಗೊಂಡಿವೆ. ರವೀಂದ್ರನಾಥ ಠಾಕೂರರು ರಚಿಸಿ ರಾಗ ಸಂಯೋಜಿಸಿದ ಗೀತೆಗಳು ರವೀಂದ್ರ ಸಂಗೀತವೆಂದು ಹೆಸರಾಗಿವೆ. ಶುದ್ಧ ಭಾರತೀಯ ಸಂಗೀತ ಹಾಗೂ ಪರಂಪರಾಗತ ಜನಪದ ಸಂಗೀತ ಮೂಲಗಳಿಂದ ಹಕ್ಕಿ ರಾಗ ಸಂಯೋಜಿಸಿರುವ ರವೀಂದ್ರ ಸಂಗೀತ ಬಂಗಾಲಿ ಸಾಂಸ್ಕøತಿಕ ಜೀವನದ ಮೇಲೆ ಪ್ರಬಲ ಪ್ರಭಾವಬೀರಿದೆ.

ಜೇಡಿಮಣ್ಣಿನ ಹಾಗೂ ಕೆಂಪುಮಣ್ಣಿನ ಮೂರ್ತಿಗಳು ಹಾಗೂ ಅಲಂಕಾರಿಕ ಚಿತ್ರಕಲೆ ಇವು ಜನಪ್ರಿಯವಾಗಿವೆ. ಕಲ್ಕತ್ತದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಶನ್ ಆಫ್ ಸೈನ್ಸ್, ಬೋಸ್ ಸಂಶೋಧನ ಕೇಂದ್ರ ಮತ್ತು ಕಲ್ಕತ್ತ ವಿಶ್ವವಿದ್ಯಾಲಯದ ವಿಜ್ಞಾನ ಪ್ರಯೋಗಾಲಯಗಳು ವಿಜ್ಞಾನಕ್ಕೆ ಗಮನಾರ್ಹ ಕೊಡುಗೆ ನೀಡಿವೆ. ಅತ್ಯಂತ ಪ್ರಸಿದ್ಧ ಇತಿಹಾಸ ಸಂಶೋಧನ ಸಂಸ್ಥೆಯಾದ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಇಲ್ಲಿದೆ. ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯ ಭಾರತದ ಪುರಾತತ್ವ ಹಾಗೂ ಅಂತರರಾಷ್ಟ್ರೀಯ ಸಾಂಸ್ಕøತಿಕ ಸಂಬಂಧಗಳನ್ನು ಅಧ್ಯಯನ ಮಾಡುವ ಜಗತ್ಪ್ರಸಿದ್ಧ ಕೇಂದ್ರ.

ಈ ರಾಜ್ಯದಿಂದ ಹೊರಡುವ ದೈನಿಕ ಪತ್ರಿಕೆಗಳಲ್ಲಿ ಪ್ರಮುಖವಾದವು ಅಮೃತಬಜಾರ್ ಪತ್ರಿಕೆ. ಹಿಂದೂಸ್ತಾನ್ ಸ್ಟ್ಯಾಂಡರ್ಡ್ ಮತ್ತು ಸ್ಟೇಟ್ಸ್‍ಮನ್ (ಇಂಗ್ಲಿಷ್) ಆನಂದ ಬಜಾರ್ ಪತ್ರಿಕೆ ಮತ್ತು ಜುಗಾಂತರ (ಬಂಗಾಲಿ); ಹಾಗೂ ಸನ್ಮಾರ್ಗ (ಹಿಂದಿ).

ಪಶ್ಚಿಮ ಬಂಗಾಲದ ಇತಿಹಾಸಪೂರ್ವ ಸಂಸ್ಕøತಿಗಳು ಅಲ್ಲಿಯ ಭೌಗೋಲಿಕ ವೈವಿಧ್ಯಕ್ಕೆ ಅನುಗುಣವಾಗಿ ವೈವಿಧ್ಯಮಯವಾಗಿವೆ. ನೈಋತ್ಯ ಭಾಗದ ಪ್ರಾಚೀನ ಮೆಕ್ಕಲು ಮಣ್ಣಿನ ಪ್ರದೇಶ ಛೋಟಾನಾಗಪುರ ಪ್ರಸ್ಥಭೂಮಿಯ ಭಾಗವಾಗಿದ್ದು ಪ್ರಾಚೀನತಮ ಶಿಲಾಪದರಗಳಿಂದ ಆವೃತವಾಗಿದೆ. ಈ ಪ್ರದೇಶದಲ್ಲಿ ಪ್ಲೀಸ್ಟೊಸೀನ್ ಯುಗದ ನದಿ ಮಟ್ಟಗಳಲ್ಲಿ ಶಿಲಾಯುಗ ಸಂಸ್ಕøತಿಗಳಿಗೆ ಅವಶ್ಯಕವಾಗಿದ್ದ ಕಲ್ಲುಗಳು ಇವೆ. ಆ ಪ್ರದೇಶದಲ್ಲಿ ಈವರೆಗೆ ಹೆಚ್ಚಿನ ಭೂಶೋಧನೆಗಳು ನಡೆದಿಲ್ಲವಾದರೂ ಮಧ್ಯಶಿಲಾಯುಗ ಮತ್ತು ಅನಂತರಕಾಲದ ಅವಶೇಷಗಳು ಅಲ್ಲಲ್ಲಿ ಕಂಡುಬಂದಿದೆ. ಶಿಲಾಯುಗದ ಸಂಸ್ಕøತಿಗಳ ದೃಷ್ಟಿಯಿಂದ ಮುಖ್ಯವಾದ ಉತ್ತರ ಭಾಗದಲ್ಲೂ ಪ್ರಾಚೀನ ಶಿಲಾಪದರಗಳಿವೆ. ಅಲ್ಲಿ ಕೆಲವು ಮುಖ್ಯ ಶಿಲಾಯುಗ ನೆಲೆಗಳು ಕಂಡುಬಂದಿವೆ.

ಬಂಕುರಾ, ಪುರುಲಿಯಾ, ಬೀರ್‍ಭೂಮ್ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ಆದಿ ಶಿಲಾಯುಗದ ವಿವಿಧ ಹಂತಗಳಿಗೆ ಸೇರುವ ಕೈಗೊಡಲಿ ಮತ್ತು ಕ್ಲೀವರ್ ಕೊಡಲಿ, ಕ್ಲಾಕ್ಟೋನಿಯನ್ ಮತ್ತು ಲೆವಾಲ್ವಾಸಿಯನ್ ರೀತಿಯ ಚಕ್ಕೆ ಕಲ್ಲಿನ ಆಯುಧಗಳು ಸಿಕ್ಕಿವೆ. ಆದಿಮಾನವ ಭಾರತದ ಇತರ ಪ್ರದೇಶಗಳಲ್ಲಿದ್ದಂತೆ ಅಲ್ಲೂ ವಾಸಮಾಡುತ್ತಿದ್ದನೆಂದು ಅದರಿಂದ ತಿಳಿದುಬರುತ್ತದೆ. ಅನಂತರ ಕಾಲದ ಮಧ್ಯಶಿಲಾಯುಗ ಸಂಸ್ಕøತಿಗೆ ಸೇರುವ, ಚಕ್ಕೆ ಕಲ್ಲಿನ ಆಯುಧಗಳು ಬೀರ್‍ಭೂಮ್ ಮತ್ತು 24 ಪರಗಣ ಜಿಲ್ಲೆಯ ಕೆಲವು ನೆಲೆಗಳಲ್ಲಿ ಕಂಡುಬಂದಿವೆ. ಅದಿ ಮತ್ತು ಮಧ್ಯಶಿಲಾಯುಗಗಳ ಅವಶೇಷಗಳು ಇಲ್ಲಿಯ ನದಿ ಪದರಗಳಲ್ಲಿ ಅನಂತರಕಾಲದ ಅವಶೇಷಗಳನ್ನೊಳಗೊಂಡಿರುವ ಪದರಗಳ ಕೆಳಗೆ ದೊರಕಿರುವುದರಿಂದಲೂ ಭಾರತದ ಇತರ ಪ್ರದೇಶಗಳಲ್ಲಿ ಅಂಥ ಅವಶೇಷಗಳೊಂದಿಗೆ ಸಿಕ್ಕಿರುವ ಪ್ರಾಣಿಗಳ ಪಳೆಯುಳಿಕೆಗಳ ಅಧ್ಯಯನದಿಂದಲೂ ಅಂಥ ಅವಶೇಷಗಳನ್ನು ಅನುಕ್ರಮವಾಗಿ ಮಧ್ಯ ಮತ್ತು ಅಂತ್ಯ ಪ್ಲೀಸ್ಟೋಸೀನ್ ಕಾಲಕ್ಕೆ ನಿರ್ದೇಶಿಸಬಹುದು. ಪಶ್ಚಿಮ ಬಂಗಾಲದ ಶಿಲಾಯುಗಮಾನವನ ಪರಿಸರ ಮತ್ತು ಸಾಂಸ್ಕøತಿಕ ಸಿದ್ಧತೆ ಇವುಗಳ ದೃಷ್ಟಿಯಿಂದ ಇವರ ಜೀವನ ರೀತಿನೀತಿಗಳು ಆಗಿನ ಭಾರತದ ಇತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರನ್ನು ಹೋಲುತ್ತಿದ್ದುವೆಂದು ನಿಸ್ಸಂದೇಹವಾಗಿ ಹೇಳಬಹುದು.

ಹೊಲೊಸೀನ್ ಯುಗದ ಪ್ರಾರಂಭದ ಕಾಲಕ್ಕೆ ಸೇರುವ ಅಂತ್ಯಶಿಲಾಯುಗ ಅಥವಾ ಸೂಕ್ಷ್ಮಶಿಲಾಯುಧ ಸಂಸ್ಕøತಿಯ ಅವಶೇಷಗಳ ಬರ್ದ್‍ವಾನ್ ಜಿಲ್ಲೆಯಲ್ಲಿ ದಾಮೋದರ ನದಿ ಕಣಿವೆಯ ಕೆಲವೆಡೆಗಳಲ್ಲಿ ಕಂಡುಬಂದಿವೆ. ಅವುಗಳಲ್ಲಿ ಪ್ರಮುಖ ನೆಲೆ ದುರ್ಗಾಪುರದ ಬಳಿ ಇರುವ ಬೀರ್‍ಭಾನ್‍ಪುರ. 1937ರಲ್ಲಿ ಎನ್.ಜೆ. ನುಜುಲ್‍ದಾರ್ ಅಲ್ಲಿ ಸೂಕ್ಷ್ಮಶಿಲಾಯುಧಗಳನ್ನು ಪತ್ತೆ ಹಚ್ಚಿದರು. 1954 ಮತ್ತು 1957ರಲ್ಲಿ ಬಿ.ಬಿ.ಲಾಲ್ ಅಲ್ಲಿ ಸಂಶೋಧನೆಗಳನ್ನು ನಡೆಸಿ ಆ ಸಂಸ್ಕøತಿಯ ವಿವರಗಳನ್ನು ದೊರಕಿಸಿದ್ದಾರೆ. ಪ್ರಾಚೀನ ನದಿ ಮಟ್ಟದ ಮೇಲೆ ಹಳ್ಳದಿಬ್ಬಗಳಿಂದ ಕೂಡಿದ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಾನವರು ಕೊರಲಗು ಫಲಕಗಳನ್ನೂ (ಬ್ಲೇಡ್ಸ್) ಮುಕ್ಕೋಣಾಕಾರದ, ಅರ್ಧಚಂದ್ರಾಕೃತಿಯ ಮತ್ತು ಚೂಪಾದ ತುದಿಗಳಿದ್ದ ಆಯುಧಗಳನ್ನೂ ಹೆರೆಯುವ ಮತ್ತು ಕೊರೆಯುವ ಸಲಕರಣೆಗಳನ್ನೂ ಬಳಸುತ್ತಿದ್ದರು. ಅವರ ಗುಡಿಸಿಲುಗಳ ಆಕಾರ, ಆಗಿನ ವಾತಾವರಣದ ಪರಿಸ್ಥಿತಿ ಇವುಗಳ ಬಗ್ಗೆಯೂ ಕೆಲವು ಮಾಹಿತಿಗಳು ದೊರಕಿವೆ. ಸಂತಾಲ್ ಪರಗಣ, ಬಂಕುರಾ ಮತ್ತು ಬರ್ದ್‍ವಾನ್ ಜಿಲ್ಲೆಯ ಹಲವೆಡೆಗಳಲ್ಲಿ ಈ ಸಂಸ್ಕøತಿಯ ನೆಲೆಗಳು ಕಂಡುಬಂದಿವೆ. ಈ ಸಂಸ್ಕøತಿಯ ಕಾಲವನ್ನು ಕ್ರಿ.ಪೂ. ಸುಮಾರು 4000-1500 ಎಂದು ನಿರ್ಣಯಿಸಲಾಗಿದೆ.

ನವಶಿಲಾಯುಗ-ತಾಮ್ರಶಿಲಾಯುಗ ಸಂಸ್ಕøತಿಗಳು ಪಶ್ಚಿಮ ಬಂಗಾಲದ ಬಂಕುರಾ, ಬೀರ್‍ಭೂಮ್, ಪುರುಲಿಯಾ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ಪ್ರಸರಿಸಿದ್ದುವು. ಅಲ್ಲಿ ಈ ಸಂಸ್ಕøತಿಗಳು ಭಾರತದ ಇತರ ಪ್ರದೇಶಗಳಲ್ಲಿ ಕಂಡುಬಂದಿರುವ ಅಂಥ ಸಂಸ್ಕøತಿಗಳಿಗಿಂತ ಸ್ವಲ್ಪ ಭಿನ್ನವಾಗಿದ್ದುವು. ಆಂಧ್ರ ಕರ್ನಾಟಕಗಳ ನವಶಿಲಾ ಯುಗ ಮತ್ತು ಪಶ್ಚಿಮ ಮಧ್ಯಭಾರತದ ತಾಮ್ರಶಿಲಾಯುಗ ಸಂಸ್ಕøತಿಗಳು ದೂರದ ಈ ಗಡಿ ಪ್ರದೇಶಕ್ಕೆ ತಲುಪುವುದರಲ್ಲಿ ಹಲವಾರು ಪ್ರಾದೇಶಿಕ ಪ್ರಭಾವಗಳಿಗೆ ಸಿಕ್ಕಿದ್ದು ಈ ಭಿನ್ನತೆಗೆ ಕಾರಣ. ಬಹುಶಃ ಅದೇ ಕಾರಣದಿಂದ ಅವು ಸ್ವಲ್ಪ ಈಚಿನ ಕಾಲಕ್ಕೆ ಸೇರುತ್ತವೆ. ಬರ್ದ್‍ವಾನ್ ಜಿಲ್ಲೆಯ ಪಾಂಡುರಾಜರ್ ಧೀಬಿಯಲ್ಲಿ ಆ ಸಂಸ್ಕøತಿಯ ಕಾಲದಲ್ಲಿ ಬತ್ತದ ಬೇಸಾಯ ಪ್ರಮುಖ ಆಹಾರೋತ್ಪಾದನ ಚಟುವಟಿಕೆಯಾಗಿದ್ದ, ಮತ್ತು ಆ ಜನರು ಚೀನ ಮತ್ತು ಆಗ್ನೇಯ ಏಷ್ಯ ಪ್ರದೇಶಗಳೊಂದಿಗೆ ಸಂಪರ್ಕ ಪಡೆದಿದ್ದ ಸಂಗತಿಗಳು ಅಲ್ಲಿ ನಡೆದ ಸಂಶೋಧನೆಗಳಿಂದ ವ್ಯಕ್ತಪಟ್ಟಿವೆ. ನಾಯಕರ ಹಿಡಿತದಲ್ಲಿದ್ದ ಸಣ್ಣ ಪಂಗಡಗಳಲ್ಲಿ ಅವರು ವಾಸಿಸುತ್ತಿದ್ದಿರಬಹುದು. ಬೀರ್‍ಭೂಮ್ ಜಿಲ್ಲೆಯ ಮಹಿಸ್‍ದಲ್, ನಾನೂರ್ ಮತ್ತು ಹರಿಯಾಪುರ, ಬಂಕುರಾ ಜಿಲ್ಲೆಯ ತುಳಸಿಪುರ ಮತ್ತು ಕೆಲವು ನೆಲೆಗಳು, ಮಿಡ್ನಾಪುರ ಪರಿಸರ-ಇವುಗಳಲ್ಲಿ ಆ ಸಂಸ್ಕøತಿಯ ಮಾಹಿತಿಗಳು ದೊರಕಿವೆ. ಇಡೀ ಪ್ರದೇಶದ ಸಾಂಸ್ಕøತಿಕ ಲಕ್ಷಣಗಳು ಮೂಲತಃ ಒಂದೇ ರೀತಿಯವಾಗಿದ್ದರೂ ಆಯುಧ ರೀತಿ ಮತ್ತು ಸಲಕರಣೆಗಳಲ್ಲಿ ಅಲ್ಲಲ್ಲಿ ಕೆಲವು ವ್ಯತ್ಯಾಸಗಳಿದ್ದವು. ಉದಾಹರಣೆಗೆ ವರ್ಣಚಿತ್ರಿತ ಅಥವಾ ಅಲಂಕಾರರಹಿತವಾದ ಕಪ್ಪು ಮತ್ತು ಕೆಂಪು ಬಣ್ಣದ ಹೊಳೆಯುವ ಕೆಂಪು ಬಣ್ಣದ ಮತ್ತು ಜಾರು ನಳಿಕೆಯ ಸುಟ್ಟ ಮಣ್ಣಿನ ಪಾತ್ರೆಗಳು, ನಯಗೊಳಿಸಿದ ಕಲ್ಲಿನ ಆಯುಧಗಳು ಮೊದಲಾದ ಸಲಕರಣೆಗಳು ಎಲ್ಲೆಡೆಗಳಲ್ಲೂ ಕಂಡುಬಂದರೂ, ಪ್ರತಿ ಪಂಗಡದ ಅನುವಂಶಿಕ ವೈವಿಧ್ಯದಿಂದಾಗಿ ಅವುಗಳ ಸಾಂಸ್ಕøತಿಕ ಜೀವನದಲ್ಲಿ ಕೆಲವು ಭಿನ್ನತೆಗಳು ಕಂಡುಬರುತ್ತವೆ. ಪಾಂಡುರಾಜರ್ ಧೀಬಿ ನೆಲೆಯಲ್ಲಿ ಈ ಜನರು ಗಟ್ಟಿಸಿದ ನೆಲಗಟ್ಟು ಮತ್ತು ಕೆಸರು ಬಳಿದ ತಡಿಕೆ ಗೋಡೆಗಳಿದ್ದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಸಗಣಿ ಮತ್ತು ಸುಣ್ಣವನ್ನು ಸಹ ತಡಿಕೆ ಗೋಡೆಗಳಿಗೆ ಲೇಪಿಸಿದ್ದುದಕ್ಕೆ ಮಾಹಿತಿಗಳಿವೆ. ಮರದ ಕಂಬಗಳ ಆಧಾರದ ಮೇಲೆ ನಿಂತಿದ್ದ ಚಾವಣೆಗೆ ಹುಲ್ಲು ಅಥವಾ ಸಣ್ಣ ಹೆಂಚುಗಳನ್ನು ಹೊದಿಸಲಾಗುತ್ತಿತ್ತು. ಮನೆಗಳಲ್ಲಿ ಅಡುಗೆ ಒಲೆಗಳ ಅವಶೇಷಗಳನ್ನು ಗುರುತಿಸಲಾಗಿದೆ. ಒಂದೇ ಕೋಣೆಯ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದ ಈ ಜನರು ಹಲವು ರೀತಿಯ ಮಡಕೆಕುಡಿಕೆಗಳನ್ನು ಬಳಸುತ್ತಿದ್ದರು. ಬತ್ತದ ಹೊಟ್ಟನ್ನು ಜೇಡಿಮಣ್ಣಿನೊಂದಿಗೆ ಕಲೆಸಿ ಕೈಯಿಂದ ರೂಪಿಸಿದ, ದಪ್ಪ, ಬೂದು ಬಣ್ಣದ ಇಲ್ಲವೇ ಕುಂಬಾರ ಚಕ್ರದ ಮೇಲೆ ತಯಾರಿಸಿದ, ಅಲಂಕಾರರಹಿತವಾದ ತೆಳ್ಳನೆಯ, ತಿಳಿಕೆಂಪಿನ ಮತ್ತು ಕಪ್ಪು-ಕೆಂಪು ಬಣ್ಣದ ಪಾತ್ರೆಗಳನ್ನು ಮೊದಲಿಗೆ ಬಳಸುತ್ತಿದ್ದರು. ಕುಂಬಾರ ಚಕ್ರದ ಮೇಲೆ ನಾಜೂಕಾಗಿ ತಯಾರಿಸಿದ ವರ್ಣಚಿತ್ರಮಯವಾದ ವಿವಿಧ ಆಕಾರಗಳ ಮಡಿಕೆಕುಡಿಕೆಗಳ, ಜಾರುನಳಿಕೆಯ ಮತ್ತು ತಳಭಾಗದಲ್ಲಿ ರಂಧ್ರಗಳಿದ್ದ ಪಾತ್ರೆಗಳು ಇವನ್ನು ಅವರು ಅನಂತರ ಬಳಸುತ್ತಿದ್ದರು. ಇವು ಅವರ ಸಂಪದ್ಯುಕ್ತಧಾರ್ಮಿಕ ಜೀವನ ಮತ್ತು ಆಹಾರ ತಯಾರಿಕಾ ಪದ್ಧತಿಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತವೆ. ಅವರು ಪಾತ್ರೆಗಳ ವರ್ಣಮಯ ಚಿತ್ರಗಳಿಗೆ ಸರಳ ರೇಖಾವಿನ್ಯಾಸಗಳನ್ನು ಬಳಸುತ್ತಿದ್ದರು. ತಾಮ್ರದ ಸರಳ ಅಥವಾ ಅಲಂಕೃತ ಬಳೆಗಳು, ಬೆರಳುಂಗುರ, ಉಗುರು ಕತ್ತರಿ, ಕಾಡಿಗೆ ಕಡ್ಡಿ, ಮಣಿಗಳು, ಬಾಣದ ಮೊನೆಗಳು, ಈಟಿಮೊನೆ, ಚಪ್ಪಟೆಯಾದ ಬಾಚಿ ಅಥವಾ ಮಚ್ಚುಕತ್ತಿ ಮೊದಲಾದ ಸಲಕರಣೆಗಳು ಆ ಕಾಲದ ಉತ್ತರಾರ್ಧದಲ್ಲಿ ಬಳಕೆಯಲ್ಲಿದ್ದುದರಿಂದ ಅವರಿಗೆ ಲೋಹಗಾರಿಕೆಯಲ್ಲಿದ್ದ ಪರಿಶ್ರಮವನ್ನು ಊಹಿಸಬಹುದು. ಸೂಕ್ಷ್ಮ ಶಿಲಾಯುಧಗಳೂ ವೈವಿಧ್ಯಪೂರ್ಣವಾಗಿವೆ. ಕಲ್ಲಿನ ನಯಗೊಳಿಸಿದ ಆಯುಧಗಳು ದೊರಕಿವೆಯಾದರೂ ಅವು ಅನಂತರ ಕಾಲದವೆಂದು ಶಂಕಿಸಲಾಗಿದೆ. ಮೂಳೆಯಿಂದ ತಯಾರಿಸಿದ ಆಯುಧಗಳೂ ಆಗ ಬಳಕೆಯಲ್ಲಿದ್ದುವು. ಅಕ್ಕಿ, ಮೀನು, ಕಾಡು ಹಸು, ಜಿಂಕೆ ಮತ್ತು ಹಂದಿಗಳನ್ನು ಅವರು ಆಹಾರವಾಗಿ ತಿನ್ನುತ್ತಿದ್ದರು. ಈ ಸಂಸ್ಕøತಿಗಳನ್ನು ಕ್ರಿ.ಪೂ 1200-ಕ್ರಿ,ಪೂ 800ರ ಕಾಲಕ್ಕೆ ನಿರ್ದೇಶಿಲಾಗಿದೆ.

ಕಬ್ಬಿಣ ಯುಗದ ಕಾಲದಲ್ಲಿ ಆ ಮೊದಲಿಗಿಂತಲೂ ಜೀವನ ರೀತಿ ಬಹುಮಟ್ಟಿಗೆ ಸುಧಾರಿಸಿತು. ಪಾಂಡುರಾಜರ್ ಧಿ. ಬಿ. ಮಹಿಸ್‍ದಲ್ ಮುಂತಾದೆಡೆಗಳಲ್ಲಿ ನಡೆದಿರುವ ಉತ್ಖನನಗಳಲ್ಲಿ ತಾಮ್ರ ಮತ್ತು ಕಬ್ಬಿಣದ ಅದುರನ್ನು ಕರಗಿಸಲು ಉಪಯೋಗಿಸುತ್ತಿದ್ದ ಕುಲುಮೆಗಳೂ ದೊರಕಿವೆ. ಅಲ್ಲಿಯ ಗೃಹೋಪಯೋಗಿ ವಸ್ತುಗಳು ಹೆಚ್ಚು ಪ್ರಗತಿಪರವಾಗಿವೆ. ವ್ಯವಸಾಯಕ್ರಮದಲ್ಲಿ, ಗೃಹನಿರ್ಮಾಣ ವಿಧಾನಗಳಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಸತ್ತವರ ದೇಹಗಳನ್ನು ಗುಳಿಗಳಲ್ಲಿ ಪೂರ್ಣವಾಗಿ ಅಥವಾ ಆಂಶಿಕವಾಗಿ, ಅಥವಾ ಶವಜಾಡಿಗಳಲ್ಲಿ ಹೂಳೂತ್ತಿದ್ದರು. ಆ ಸುಮಾರಿಗೆ ಬರವಣಿಗೆ ಮತ್ತು ನಾಣ್ಯ ಪದ್ಧತಿ ರೂಢಿಗೆ ಬಂದು, ಸುವ್ಯವಸ್ಥಿತ ರಾಜ್ಯಪದ್ಧತಿ ನೆಲೆಸಿತ್ತು. ಕಬ್ಬಿಣ ಯುಗದ ಸಂಸ್ಕøತಿ ಕ್ರಿ,ಪೂ 700ರಿಂದ ಪ್ರಾರಂಭವಾಯಿತೆಂದು ಹೇಳಲಾಗಿದೆ. ಇತಿಹಾಸ : ವೇದೋಪನಿಷತ್ತುಗಳ ಕಾಲದ ಪಶ್ಚಿಮ ಬಂಗಾಲದ ಇತಿಹಾಸದ ಬಗ್ಗೆ ನಮಗೆ ಮಾಹಿತಿಗಳು ಲಭ್ಯವಾಗಿಲ್ಲ. ಆ ಸಮಯದ ಜನಜೀವನ ರೀತಿಯನ್ನು ಆಗಿನ ಪ್ರಾಗೈತಿಹಾಸಿಕ ಸಂಸ್ಕøತಿಗಳ ಸಮೀಕ್ಷೆಯಿಂದ ತಿಳಿಯಬಹುದು. ಕ್ರಿ.ಪೂ 7ನೆಯ ಶತಮಾನದ ವೇಳೆಗೆ ಆ ಪ್ರದೇಶದಲ್ಲಿ ಗೌಡ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ಕ್ರಿ.ಪೂ 5-4ನೆಯ ಶತಮಾನಗಳಲ್ಲಿ ಪಶ್ಚಿಮ ಬಂಗಾಲ ಮಗಧ ಸಾಮ್ರಾಜ್ಯದಲ್ಲಿ ಸೇರಿತ್ತು. ತರುವಾಯ ಅದು ಮೌರ್ಯ ಸಾಮ್ರಾಜ್ಯದಲ್ಲಿ ಅಡಕವಾಯಿತು. ಮತ್ತೆ ಕ್ರಿ,ಶ 4ನೆಯ ಶತಮಾನದ ಆದಿಭಾಗದಲ್ಲಿ ಗುಪ್ತ ಸಾಮ್ಯಾಜ್ಯದೊಂದಿಗೆ ಸೇರುವವರೆಗಿನ ಬಂಗಾಲದ ಇತಿಹಾಸ ಗೊತ್ತಿಲ್ಲ.

ಸಮುದ್ರಗುಪ್ತ ಬಂಕುರಾ ಜಿಲ್ಲೆಯಲ್ಲಿ ಆಳುತ್ತಿದ್ದ ಚಂದ್ರವರ್ಮನನ್ನು ಸೋಲಿಸಿ ಅದನ್ನು ತನ್ನ ಆಧಿಪತ್ಯಕ್ಕೆ ಸೇರಿಸಿಕೊಂಡ ಮೇಲೆ ಆ ಪ್ರದೇಶ ಗುಪ್ತ ದೊರೆಗಳ ವಶದಲ್ಲಿ ಮುಂದುವರಿಯಿತು. ಮತ್ತೆ 507ರ ಸುಮಾರಿಗೆ ಗೋಪಚಂದ್ರ ಒಂದು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದುದಾಗಿ ತಿಳಿದುಬರುತ್ತದೆ. ಆ ವಂಶದ ಗೋಪಚಂದ್ರ, ಧರ್ಮಾದಿತ್ಯ ಮತ್ತು ಸಮಾಚಾರದೇವ ಇವರು ಮಹಾರಾಜಾಧಿರಾಜ ಎಂಬ ಬಿರುದು ಧರಿಸಿದ್ದರು. 550ರವರೆಗೆ ಆಳಿದ ಆ ವಂಶದವರು ಗುಪ್ತರ ನಾಣ್ಯಗಳ ಅನುಕರಣೆಯ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು.
ಉತ್ತರಕಾಲೀನ ಗುಪ್ತ ಚಕ್ರವರ್ತಿ 6ನೆಯ ಶತಮಾನದಂತ್ಯದಲ್ಲಿ ಅಧಿಕಾರ ಕಳೆದುಕೊಂಡಾಗ ಗೌಡ ದೇಶದಲ್ಲಿ ಪ್ರಸಿದ್ಧಿಗೆ ಬಂದ ಶಶಾಂಕ ಬಂಗಾಲದ ಇತಿಹಾಸದಲ್ಲಿ ಹೆಸರಾದ ದೊರೆ. ಅವನ ರಾಜಧಾನಿ ಕರ್ಣಸುವರ್ಣ (ಈಗಿನ ಮುರ್ಷಿದಾಬಾದ್ ಜಿಲ್ಲೆಯ ರಂಗಮಾತಿ). ಬಂಗಾಲದ ಹೆಚ್ಚು ಭಾಗ, ಮಗಧ ಮತ್ತು ಒರಿಸ್ಸಾದ ಹಲವು ಪ್ರದೇಶಗಳು ಅವನ ವಶದಲ್ಲಿದ್ದುವು. ಪೂರ್ವದಲ್ಲಿ ಕಾಮರೂಪದ ಭಾಸ್ಕರವರ್ಮ ಮತ್ತು ಪಶ್ಚಿಮದಲ್ಲಿ ಕನೌಜಿನ ದೊರೆ ಮೌಖರಿ ವಂಶದ ಗ್ರಹವರ್ಮ ಅವನ ಮುಖ್ಯ ಶತ್ರುಗಳು. ಈ ಕಾರಣದಿಂದ ಅವನು ಮಾಲ್ವದ ದೇವಗುಪ್ತನೊಂದಿಗೆ ಮೈತ್ರಿ ಬೆಳೆಸಿದ. ಶಶಾಂಕ ಮತ್ತು ದೇವಗುಪ್ತರು ಕೂಡಿ ಯುದ್ಧದಲ್ಲಿ ಗ್ರಹವರ್ಮನನ್ನು ಕೊಂದಾಗ, ಗ್ರಹವರ್ಮನೊಂದಿಗೆ ವಿವಾಹ ಸಂಬಂಧ ಹೊಂದಿದ ಸ್ಥಾಣೇಶ್ವರದ ಪುಷ್ಯಭೂತಿ ಮನೆತನದೊಂದಿಗೆ ಶಶಾಂಕನ ಹಗೆತನ ಬೆಳೆಯಿತು. ತನ್ನ ಭಾವನ ಸಹಾಯಕ್ಕೆ ಧಾವಿಸಿ, ಆ ವಂಶದ, ರಾಜ್ಯವರ್ಧನನನ್ನು ಮೋಸದಿಂದ ಶಶಾಂಕ 666ರಲ್ಲಿ ಕೊಲ್ಲಿಸಿದನೆಂದು ಹೇಳಲಾಗಿದೆ. ತನ್ನ ಅಣ್ಣನ ಕೊಲೆಯ ಸೇಡು ತೀರಿಸಿಕೊಳ್ಳಲು ಹರ್ಷವರ್ಧನ ಪ್ರತಿಜ್ಞೆ ಮಾಡಿದುದಾಗಿ ಹೇಳಲಾಗಿದ್ದರೂ ಹರ್ಷ ಮತ್ತು ಶಶಾಂಕರ ನಡುವೆ ನೇರ ಹೋರಾಟ ನಡೆದ ಬಗ್ಗೆ ಮಾಹಿತಿಗಳಿಲ್ಲ. ಶಶಾಂಕ 619ರ ವರೆಗೆ ಆಳುತ್ತಿದ್ದುದಾಗಿ ತಿಳಿದುಬಂದಿದೆ. ಅವನು ಬಹುಶಃ 636-37ರ ವರೆಗೂ ಗೌಡಾಧಿಪನಾಗಿದ್ದನೆಂದು ಹ್ಯುಯೆನ್ ತ್ಸಾಂಗನ ಬರವಣಿಗೆಗಳಿಂದ ಊಹಿಸಲಾಗಿದೆ. ಆದರೆ ಅದು ಸಂದೇಹಾಸ್ಪದ, ಬಂಗಾಲವನ್ನು ಸ್ವತಂತ್ರಗೊಳಿಸಿದುದಲ್ಲದೆ, ಬಿಹಾರ ಒರಿಸ್ಸಗಳಲ್ಲೂ ತನ್ನ ಪ್ರಭಾವ ಬೀರಿದ ಕೀರ್ತಿ ಅವನಿಗೆ ಸಲ್ಲುತ್ತದೆ.

ಅವನ ತರುವಾಯ ಪಶ್ಚಿಮ ಬಂಗಾಲದಲ್ಲಿ ಕರ್ಣಸುವರ್ಣ, ತಾಮ್ರಲಿಪ್ತಿ ಮತ್ತು ಪುಂಡ್ರವರ್ಧನ ಎಂಬ ಸ್ವತಂತ್ರರಾಜ್ಯಗಳಿದ್ದುವು. ಆದರೆ ಆಂತರಿಕ ಕಲಹಗಳು ಹೆಚ್ಚಿದ್ದುವು. ಅರಾಜಕತೆ ವ್ಯಾಪಕವಾಗಿತ್ತು. ತರುವಾಯ ಜಯನಾಗನೆಂಬುವನು ಒಂದು ಸ್ವತಂತ್ರ ರಾಜ್ಯ ಸ್ಥಾಪಿಸಿದ. ಅವನ ಕಾಲಮಾನ ನಿರ್ದಿಷ್ಟವಲ್ಲದಿದ್ದರೂ ಕಾಮರೂಪದ ಭಾಸ್ಕರವರ್ಮನ ಮರಣಾನಂತರ ಅವನು ಅಧಿಕಾರಕ್ಕೆ ಬಂದಿರಬೇಕು. ತನ್ನ ರಾಜಧಾನಿಯಾದ ಕರ್ಣಸುವರ್ಣದಿಂದ ಹೊರಡಿಸಿದ ಶಾಸನದಿಂದ ಅವನಿಗೆ ಮಹಾರಾಜಾಧಿರಾಜನೆಂಬ ಬಿರುದಿದ್ದ ಸಂಗತಿ ತಿಳಿಯುತ್ತದೆ. ಅವನು ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದ್ದ. ಅವನು ಸಮರ್ಥ ದೊರೆಯಾಗಿದ್ದರೂ ಅವನ ಉತ್ತರಾಧಿಕಾರಿಗಳ ಮತ್ತು ರಾಜ್ಯವಿಸ್ತಾರದ ಬಗ್ಗೆ ಏನೂ ತಿಳಿದಿಲ್ಲ. 725-735ರ ನಡುವೆ ಯಶೋವರ್ಮನೆಂಬ ಸಮರ್ಥ ದೊರೆ ಆ ಪ್ರದೇಶದಲ್ಲಿ ಆಳುತ್ತಿದ್ದುದಾಗಿ ತಿಳಿದುಬಂದಿದೆ. ತರುವಾಯ ಪಶ್ಚಿಮಬಂಗಾಲ ಕಾಶ್ಮೀರದ ಲಲಿತಾದಿತ್ಯನ ವಶವಾಯಿತು. ಕಾಶ್ಮೀರದ ಜಯಾಪೀಡ ಸ್ವಲ್ಪ ಕಾಲಾನಂತರ ರಾಜ್ಯ ಕಳೆದುಕೊಂಡು ಪುಂಡ್ರವರ್ಧನಕ್ಕೆ ಬಂದು ಅಲ್ಲಿಯ ದೊರೆ ಜಯಂತನ ಮಗಳನ್ನು ವಿವಾಹವಾಗಿ, ಅವನ ರಾಜ್ಯ ವಿಸ್ತರಣೆಗೆ ಸಹಾಯ ನೀಡಿದ.

ಅಂಥ ಅನಿಶ್ಚಿತ ಪರಿಸ್ಥಿತಿಯಿಂದ 750ರ ಪಾಲವಂಶದ ದೊರೆಗಳು ಬಂಗಾಲವನ್ನು ರಕ್ಷಿಸಿದರು. ತಮ್ಮ ನಾಡಿನ ಅನಾಯಕ ಪರಿಸ್ಥಿತಿಗಳನ್ನು ಕೊನೆಗೊಳಿಸಿ ಅದರ ಪುರೋಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಆ ಪ್ರದೇಶದ ಸಣ್ಣ ರಾಜರು ಒಗ್ಗೂಡಿ ಸಮರ್ಥನೂ ಧೀರನೂ ಆದ. ಪುಂಡ್ರವರ್ಧನದಲ್ಲಿ ಹುಟ್ಟಿ ವಂಗರಾಜ್ಯವನ್ನಾಳುತ್ತಿದ್ದ, ಗೋಪಾಲನನ್ನು (750-770) ತಮ್ಮ ಅಧಿರಾಜನನ್ನಾಗಿ ಆರಿಸಿದರು. ಅ ವಂಶದ ಅರಸರು 1155ರ ವರೆಗೂ ಆಳಿ, ಹಲವಾರು ಏರುಪೇರುಗಳನ್ನನುಭವಿಸಬೇಕಾಗಿ ಬಂದರೂ, ಬಂಗಾಲದ ಕೀರ್ತಿಧ್ವಜವನ್ನು ಎತ್ತಿಹಿಡಿದರು. ಧರ್ಮಪಾಲ (770-810) ಮತ್ತು ದೇವಪಾಲ (810-850) ಆ ವಂಶದ ಪ್ರಸಿದ್ಧ ದೊರೆಗಳು. ಅವರು ತಮ್ಮ ರಾಜ್ಯವನ್ನು ವಿಸ್ತಾರಗೊಳಿಸಿದರಲ್ಲದೆ ಇಡೀ ಉತ್ತರ ಭಾರತದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಸಾಮಥ್ರ್ಯಗಳಿಸಿದ್ದರು. ಮೌಲ್ವದ ಪ್ರತೀಹಾರ ದೊರೆ ವತ್ಸರಾಜ ಮತ್ತು ರಾಷ್ಟ್ರಕೂಟ ಧ್ರುವನಿಂದ ಧರ್ಮಪಾಲ ಸೋತನಾದರೂ, ರಾಷ್ಟ್ರಕೂಟರಿಂದ ವತ್ಸರಾಜ ಸೋಲನ್ನನುಭವಿಸಿದ್ದರ ಫಲವಾಗಿ ಧರ್ಮಪಾಲ ಉತ್ತರಭಾರತದಲ್ಲಿ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಯಿತು. ಧರ್ಮಪಾಲ ವತ್ಸರಾಜನ ಮಿತ್ರನಾದ ಇಂದ್ರಾಯುಧನನ್ನು ಕನೌಜಿನ ಸಿಂಹಾಸನದಿಂದ ಇಳಿಸಿ ತನ್ನ ಆಶ್ರಿತನಾದ ಚಕ್ರಾಯುಧನಿಗೆ ಸಿಂಹಾಸನ ಕೊಡಿಸಿದ. ಅವನತಿಕಾಲದಲ್ಲಿ ವತ್ಸರಾಜನ ಮಗ 2ನೆಯ ನಾಗಭಟ ಚಕ್ರಾಯುಧನನ್ನೂ ಅವನ ಸಹಾಯಕ್ಕೆ ಬಂದ ಧರ್ಮಪಾಲನನ್ನೂ ಸೋಲಿಸಿದ. ರಾಷ್ಟ್ರಕೂಟ 3ನೆಯ ಗೋವಿಂದ ಮತ್ತೆ ಉತ್ತರ ಭಾರತದ ರಾಜಕೀಯದಲ್ಲಿ ಪ್ರವೇಶಿಸಿ ನಾಗಭಟನನ್ನು ಸೋಲಿಸಿದ. ಧರ್ಮಪಾಲ ಮತ್ತು ಚಕ್ರಾಯುಧರು ಅವನಿಗೆ ಶರಣಾದರು. ದೂರದ ದಖನ್ನಿನ ರಾಷ್ಟ್ರಕೂಟರ ಸಾರ್ವಭೌಮತ್ವವನ್ನೊಪ್ಪಿಕೊಂಡಿದ್ದರಿಂದ ಧರ್ಮಪಾಲನಿಗೆ ನಿಜಕ್ಕೂ ಯಾವ ತೊಂದರೆಯೂ ಉಂಟಾಗಲಿಲ್ಲ. ದೇವಪಾಲ ಸಿಂಹಾಸನವನ್ನೇರಿದ ಅನಂತರ ಅಸ್ಸಾಮ್, ಒರಿಸ್ಸ, ಹಿಮಾಲಯ ಪರ್ವತ ಪ್ರದೇಶಗಳು ಮತ್ತು ವಾಯವ್ಯಭಾರತದ ಕೆಲವು ಭಾಗಗಳನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿದ. ಅವನು ದಕ್ಷಿಣದ ಪಾಂಡ್ಯ ಶ್ರೀಮಾರ ಶ್ರೀವಲ್ಲಭನನ್ನು ಸೋಲಿಸಿದನೆಂದು ಹೇಳಲಾಗಿದ್ದರೂ ಆ ಸಂಗತಿ ನಂಬಲರ್ಹವಲ್ಲ. ದೇವಪಾಲನ ಆಸ್ಥಾನಕ್ಕೆ ಸುಮಾತ್ರದ ಶೈಲೇಂದ್ರ ದೊರೆ ಬಾಲಪುತ್ತದೇವ ತನ್ನ ದೂತರನ್ನು ಕಳಿಸಿ ತಾನು ನಾಲಂದದಲ್ಲಿ ಕಟ್ಟಿಸಿದ್ದ ಬೌದ್ಧ ವಿಹಾರಕ್ಕೆ ಕೆಲವು ದತ್ತಿಗಳನ್ನು ಪಡೆದುಕೊಂಡ ಸಂಗತಿ ಅಲ್ಲಿಯ ಶಾಸನದಿಂದ ತಿಳಿದುಬರುತ್ತದೆ. ಧರ್ಮಪಾಲ ಮತ್ತು ದೇವಪಾಲ ಬೌದ್ಧಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದುದಲ್ಲದೆ ವಿಕ್ರಮಶಿಲಾ ವಿದ್ಯಾಲಯವನ್ನು ಸ್ಥಾಪಿಸಿ ವೃದ್ಧಿಪಡಿಸಿದರು.

ದೇವಪಾಲನ ತರುವಾಯ ಪಾಲವಂಶ ಸ್ವಲ್ಪಕಾಲ ದುಃಸ್ಥಿತಿಗೊಳಗಾಗಿದ್ದು ಮತ್ತೆ 908ರಲ್ಲಿ ಚೇತರಿಸಿಕೊಂಡಿತು. 860ರ ಸುಮಾರಿನಲ್ಲಿ ರಾಷ್ಟ್ರಕೂಟರು ಮತ್ತೆ ಬಂಗಾಲದ ಮೇಲೆ ದಾಳಿ ನಡೆಸಿದರು. ಪ್ರತೀಹಾರರು ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಕೆಲವು ಸಾಮಂತರಾಜರು ಸ್ವಾತಂತ್ರ್ಯ ಘೋಷಿಸಿಕೊಂಡರು. ಅಂಥ ಪರಿಸ್ಥಿತಿಯಲ್ಲಿ ರಾಷ್ಟ್ರಕೂಟ 2ನೆಯ ಕೃಷ್ಣ ಪ್ರತೀಹಾರರ ಬಲವನ್ನು ನಾಶಪಡಿಸಿದಾಗ ನಾರಾಯಣಪಾಲ ರಾಷ್ಟ್ರಕೂಟರ ಮೈತ್ರಿ ಬೆಳೆಸಿದ. ಕೃಷ್ಣನ ಮೊಮ್ಮಗಳನ್ನು ತನ್ನ ಮಗ ರಾಜ್ಯಪಾಲನಿಗೆ ವಿವಾಹಮಾಡಿ ಆ ಮೈತ್ರಿಯನ್ನು ಬಲಗೊಳಿಸಿದ. ಮತ್ತೆ ಬಲಹೀನಗೊಂಡ ಪಾಲರಾಜ್ಯವನ್ನು 1021ರಲ್ಲಿ ಚೋಳ 1ನೆಯ ರಾಜೇಂದ್ರ ಆಕ್ರಮಿಸಿ ಬಲಹೀನಗೊಂಡ ಪಾಲರಾಜ್ಯವನ್ನು 1021ರಲ್ಲಿ ಚೋಳ 1ನೆಯ ರಾಜೇಂದ್ರ ಆಕ್ರಮಿಸಿ ಮಹೀಪಾಲನನ್ನು ಸೋಲಿಸಿದ. 1068ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ವಿಗ್ರಹಪಾಲನನ್ನು ಸೋಲಿಸಿದರೂ ರಾಮಪಾಲನ (1077-1120) ಕಾಲದಲ್ಲಿ ಚೇತರಿಸಿಕೊಂಡ ಈ ವಂಶ 1155ರ ವರೆಗೂ ಬಂಗಾಲದ ಕೆಲವು ಭಾಗಗಳಲ್ಲಿ ಆಳುತ್ತಿತ್ತು.

ಪಾಲ ದೊರೆಗಳು ಬೌದ್ಧಮತಕ್ಕೆ ಪ್ರೋತ್ಸಾಹ ನೀಡಿ ನಾಲಂದ ಮತ್ತು ವಿಕ್ರಮ ಶಿಲಾ ವಿದ್ಯಾಲಯಗಳನ್ನು ವೃದ್ಧಿಗೊಳಿಸಿದರು. ಪ್ರಸಿದ್ಧ ಬೌದ್ಧ ಪಂಡಿತ ದೀಪಂಕರ ಶ್ರೀಜ್ಞಾನ ಅತಿಸ್ಸ ನಯಪಾಲನ ಕಾಲದಲ್ಲಿ ವಿಕ್ರಮ ಶಿಲೆಯ ಪ್ರಾಚಾರ್ಯನಾಗಿದ್ದು ಟಿಬೆಟ್ಟಿನ ದೊರೆಯ ಆಮಂತ್ರಣದ ಮೇರೆಗೆ ಆ ದೇಶಕ್ಕೆ ಹೋಗಿ ನೆಲೆಸಿ ಬೌದ್ಧ ಪ್ರಸಾರಕ್ಕೆ ಕಾರಣನಾದ. ಪಾಲ ದೊರೆಗಳು ಕಲೆಗೆ ಅಮಿತ ಪ್ರೋತ್ಸಾಹ ನೀಡಿದರು.

ಸೇನರು 1095ರಿಂದ ಪಾಲದೊರೆಗಳ ಸಾಮಂತರಾಗಿ ಪಶ್ಚಿಮ ಬಂಗಾಲದಲ್ಲಿ ಕ್ರಮೇಣ ಪ್ರಬಲರಾಗುತ್ತಿದ್ದರು. ಆ ವಂಶದ ಮೂಲ ಪುರುಷನಾದ ಸಾಮಂತಸೇನ ಕರ್ನಾಟಕದಿಂದ ಹೋಗಿ ರಾಢಾ ಪ್ರಾಂತ್ಯದಲ್ಲಿ ಸಣ್ಣ ರಾಜ್ಯ ಸ್ಥಾಪಿಸಿದ. ಅವನ ಮಗ ಹೇಮಂತಸೇನನ ಕಾಲದಲ್ಲಿ ಅವರ ಅಧಿಕಾರ ಬೆಳೆಯಿತು. 1095ರಲ್ಲಿ ಆ ಮನೆತನದ ಮೂರನೆಯ ದೊರೆ ವಿಜಯಸೇನ ಪಾಲದೊರೆ ರಾಮಪಾಲನನ್ನು ಸೋಲಿಸಿ ಬಂಗಾಲದ ಬಹುಭಾಗವನ್ನು ವಶಪಡಿಸಿಕೊಂಡ. ಮಾಲ್ವ, ಮಿಥಿಲಾ ಮತ್ತು ಕಾಮರೂಪಗಳು ಅವನ ದಾಳಿಗೆ ತುತ್ತಾದುವು. ಅವನ ದೀರ್ಘ ಆಳ್ವಿಕೆಯ ಅನಂತರ 1158ರಲ್ಲಿ ಸಿಂಹಾಸನವನ್ನೇರಿದ ವಲ್ಲಾಳಸೇನ ಉತ್ತಮ ಯೋಧ ಮತ್ತು ವಿದ್ಯಾಭಿಮಾನಿ; ಸ್ವತಃ ಎರಡು ಗ್ರಂಥಗಳನ್ನು ರಚಿಸಿದನೆಂದು ಹೇಳಲಾಗಿದೆ. ಇವನು ಚಾಲುಕ್ಯ ವಿಕ್ರಮಾದಿತ್ಯನ ಮಗಳು ರಾಮದೇವಿಯನ್ನು ವಿವಾಹವಾಗಿದ್ದ. ಮುಪ್ಪಿನಲ್ಲಿ ರಾಜ್ಯವನ್ನು ಮಗ ಲಕ್ಷ್ಮಣಸೇನನಿಗೆ ವಹಿಸಿ, ಪತ್ನಿಯೊಂದಿಗೆ ಧಾರ್ಮಿಕ ಜೀವನದಲ್ಲಿ ಕಾಲ ಕಳೆದನೆಂದು ಹೇಳಲಾಗಿದೆ. 1178ರಲ್ಲಿ ರಾಜ್ಯಭಾರ ವಹಿಸಿಕೊಂಡ ಲಕ್ಷ್ಮಣಸೇನ ಗಾಹಡವಾಲ ಚಂದ್ರನನ್ನು 1183-92ರ ನಡುವೆ ಹಲವು ಬಾರಿ ಸೋಲಿಸಿ ವಾಯವ್ಯ ಭಾರತದಲ್ಲಿ ತನ್ನ ಅಧಿಕಾರ ಸ್ಥಾಪಿಸಿದನಲ್ಲದೆ ಕಳಿಂಗ ದೇಶವನ್ನು ಗೆದ್ದನೆಂದು ಅವನ ಶಾಸನಗಳಿಂದ ತಿಳಿದುಬಂದಿದೆ. ಆದರೆ 1202ರಲ್ಲಿ ಇಖ್ತಿಯಾರ್-ಉದ್-ದೀನ್ ಮಹಮ್ಮದ್ ಖಿಲ್ಜಿಯ ನೇತೃತ್ವದಲ್ಲಿ ಬಂದ ಮುಸ್ಲಿಮರ ಸೈನ್ಯ ರಾಜಧಾನಿ ನದಿಯಾವನ್ನು ಆಕ್ರಮಿಸಿದಾಗ ಪೂರ್ವ ಬಂಗಾಲಕ್ಕೆ ಹಿನ್ನಡೆದು ಸ್ವಲ್ಪಕಾಲದ ಅನಂತರ ತೀರಿಕೊಂಡ.

ಸೇನ ದೊರೆಗಳು ಸಂಸ್ಕೃಂತ ಸಾಹಿತ್ಯಕ್ಕೆ ಆಶ್ರಯ ಕೊಟ್ಟಿದ್ದರು. ಕವಿ ಜಯದೇವ ಮತ್ತು ನ್ಯಾಯಶಾಸ್ತ್ರ ಪಂಡಿತ ಹಲಾಯುಧ ಇವರು ಸೇನ ದೊರೆಗಳ ಆಶ್ರಿತರು.

ಇಖ್ತಿಯಾರ್-ಉದ್-ದೀನ್ ಮಹಮ್ಮದ್ ಖಲ್ಜಿ(1202-1206) ಪಶ್ಚಿಮ ಬಂಗಾಲವನ್ನು ವಶಪಡಿಸಿಕೊಂಡ ಅನಂತರ ದೆಹಲಿ ಸುಲ್ತಾನರ ಅಧೀನನಾಗಿ ಆಳುತ್ತಿದ್ದಾಗ 1205ರಲ್ಲಿ ಟಿಬೆಟ್ಟಿನ ಮೇಲೆ ನಡೆಸಿದ ದಾಳಿ ವಿಫಲಗೊಂಡಿತು; 1206ರಲ್ಲಿ ಅವನು ತೀರಿಕೊಂಡ. ಅವನ ತರುವಾಯದ ಪ್ರಾಂತ್ಯಾಧಿಕಾರಿಗಳು ಆಗಾಗ್ಗೆ ದೆಹಲಿಯ ವಿರುದ್ಧ ಬಂಡೇಳುತ್ತಿದ್ದರು. 1280ರಲ್ಲಿ ತಘ್ರಿಲನ ನೇತೃತ್ವದಲ್ಲಿ ನಡೆದ ದಂಗೆಯನ್ನು ಸುಲ್ತಾನ್ ಬಲ್ಬನ್ ನಿಷ್ಕರುಣೆಯಿಂದ ಹತ್ತಿಕ್ಕಿದ. ಆದರೂ ಅವನತಿ ಕಾಲದಲ್ಲೇ ಬುಘ್ರಾಖಾನನ ದಂಗೆ ಫಲಕಾರಿಯಾಗಿ, ಅವನು ನಸೀರುದ್ದೀನ್ ಎಂಬ ಹೆಸರಿನಿಂದ ಸ್ವತಂತ್ರನಾಗಿ ಪಶ್ಚಿಮ ಬಂಗಾಲದ ಲಖ್ನೌತಿಯಿಂದ (ಮಾಲ್ಡಾ ಜಿಲ್ಲೆ) ಆಳತೊಡಗಿದ. 1291ರಲ್ಲಿ ರುಕ್ನುದ್ದೀನ್ ಕೈಕಾಉಸ್, 1301ರಲ್ಲಿ ಶಂಶುದ್ದೀನ್ ಫಿರೂಜ್ ಷಾ ಅಧಿಕಾರಕ್ಕೆ ಬಂದರು. ಫಿರೂಜ್ ಷಾನ ಕಾಲದಲ್ಲಿ ಪಾಂಡುವ ನಗರದ ಸ್ಥಾಪನೆಯಾಯಿತು. ಘಿಯಾಸ್-ಉದ್-ದೀನ್ ಬಹದೂರ್ ಷಾ 1322ರಲ್ಲಿ ಅಧಿಕಾರಕ್ಕೆ ಬಂದ. ಇವನು 1324ರಲ್ಲಿ ದೆಹಲಿಯ ತುಗಲಕ್ ಮಹಮದನ ಬಂದಿಯಾಗಿದ್ದು ಸ್ವಲ್ಪ ಕಾಲಾನಂತರ ಬಿಡುಗಡೆ ಹೊಂದಿ ದೆಹಲಿಯಿಂದ ಮರಳಿ ತನ್ನ ಅಧಿಕಾರವನ್ನು ಮತ್ತೆ ಪಡೆದ. 1366ರಲ್ಲಿ ಫಕ್ರುದ್ದೀನ್ ಮುಂಬಾರಕ್ ಷಾನ ನೇತೃತ್ವದಲ್ಲಿ ಪಶ್ಚಿಮ ಬಂಗಾಲ ಸ್ವತಂತ್ರವಾಯಿತು.

ಇಲಿಯಾಸ್ ಶಾಹಿ ಮನೆತನ ಬಂಗಾಲದಲ್ಲಿ 1345ರಿಂದ 1487ರ ವರೆಗೆ ಅಧಿಕಾರದಲ್ಲಿತ್ತು. ಶಂಶುದ್ದೀನ್ ಇಲಿಯಾಸ್ ಷಾ (1345-57) ಪೂರ್ವ ಬಂಗಾಲ, ತಿರ್ಹುತ್, ಒರಿಸ್ಸ ಮತ್ತು ವಾರಣಾಸಿ ಪ್ರದೇಶಗಳನ್ನು ವಶಪಡಿಸಿಕೊಂಡ. ಸಿಕಂದರ್ ಷಾ (1357-91) ಎರಡು ಬಾರಿ ದೆಹಲಿಯ ಸುಲ್ತಾನ ಫಿರೂಜ್ ಷಾ ಗುಗಲಕನ ವಿರುದ್ಧ ಹೋರಾಡಬೇಕಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡ. ಅವನ ಕಾಲದ ಅದೀನ ಮಸೀದಿ (1368) ಪಶ್ಚಿಮ ಬಂಗಾಲದ ಉತ್ತಮ ವಾಸ್ತು ನಿರ್ಮಾಣ. ಘಿಯಾಸುದ್ಧೀನ್ ಅಜರ್ಮ ಷಾನಿಂದ 1415ರಲ್ಲಿ ಹಿಂದೂ ಸರದಾರ ರಾಜಾ ಗಣೇಶ ಅಧಿಕಾರ ಕಸಿದುಕೊಂಡು ತನ್ನ ಮಗನನ್ನು ಸಿಂಹಾಸನಕ್ಕೆ ತಂದ. ಆದರೆ ಆ ಹೊಸ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ ಜಲಾಲುದ್ದೀನ್ ಎಂಬ ಹೆಸರಿನಿಂದ 1431ರ ವರೆಗೆ ಆಳಿದ. ಇಲಿಯಾಸ್ ಷಾಹಿ ವಂಶದ ನಸಿರುದ್ದೀನ್ ಮಹಮ್ಮದ್ ಷಾ (1437-1459) ಮತ್ತೆ ತನ್ನ ವಂಶವನ್ನು ಅಧಿಕಾರಕ್ಕೆ ತಂದ. ಆ ವಂಶದವರು 1487ರ ವರೆಗೆ ಆಳಿದರು. ಅನಂತರ ಅಧಿಕಾರಕ್ಕೆ ಬಂದ ಸಯ್ಯಿದ್ ಮನೆತನದಲ್ಲಿ (1493-1538) ಅಲ್ಲಾಉದ್ದೀನ್ ಹುಸೇನ್ ಷಾ ಪ್ರಮುಖ. ಆ ಸಮರ್ಥ ಸುಲ್ತಾನನ ಕಾಲದಲ್ಲಿ ರಾಜ್ಯದ ಸಂಪದಭಿವೃದ್ಧಿಯಾಯಿತು. ರಾಜ್ಯವಿಸ್ತಾರದೊಂದಿಗೆ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳಿಗೂ ಪ್ರೋತ್ಸಾಹ ದೊರಕಿತು. ವೈಷ್ಣವ ಸಂತ ಚೈತನ್ಯನಿಗೆ ಆಶ್ರಯ ಸಿಕ್ಕಿತು.

ಮೊಗಲ್ ವಂಶದ ಸ್ಥಾಪಕ ಪಕ ಬಾಬರ್ 1526ರಲ್ಲಿ ಬಂಗಾಲವನ್ನು ವಶಪಡಿಸಿಕೊಂಡರೂ ಮತ್ತೆ ಅಲ್ಲಿ ಅನಾಯಕತ್ವದ ಪರಿಸ್ಥಿತಿ ಉಂಟಾಯಿತು. 1538ರಲ್ಲಿ ಹುಮಾಯೂನ್ ಬಂಗಾಲದ ಮೇಲೆ ದಾಳಿ ಮಾಡಿದಾಗ ಇದು ಕೊನೆಗೊಂಡಿತು. ಆದರೆ ಮರುವರ್ಷವೇ ಪಶ್ಚಿಮ ಬಂಗಾಲ ಸೇರಿದಂತೆ ಮೊಗಲ್ ಸಾಮ್ಯಾಜ್ಯವನ್ನು ಸೂರ್ ಮನೆತನದ ಷೇರ್ ಷಾ ಆಕ್ರಮಿಸಿಕೊಂಡ. ಸುಲೇಮಾನ್ ಕರ್ನಾನಿ 1564ರಲ್ಲಿ ಪಶ್ಚಿಮ ಬಂಗಾಲವನ್ನು ಸೂರ್ ಮನೆತನದಿಂದ ಗೆದ್ದುಕೊಂಡು ಹೆಸರಿಗೆ ಮಾತ್ರ ದೆಹಲಿ ಅಧಿಪತ್ಯವನ್ನು ಒಪ್ಪಿಕೊಂಡು ಸ್ವತಂತ್ರನಾದ. ಅಕ್ಬರ್ 1576ರಲ್ಲಿ ಪಶ್ಚಿಮ ಬಂಗಾಲವನ್ನು ಮೊಗಲರ ನೇರ ಆಡಳಿತಕ್ಕೆ ಸೇರಿಸಿಕೊಂಡ. ಮೊಗಲರ ಆಳ್ವಿಕೆಯಲ್ಲಿ ಆ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಗಳು ನೆಲಸಿದ್ದುವು. ಅದೇ ಸಮಯದಲ್ಲಿ ಯೂರೋಪಿನ ವರ್ತಕರು ಅಲ್ಲಿ ತಮ್ಮ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿದರು. ದೆಹಲಿಯ ಆಡಳಿತ ಬಲಹೀನಗೊಂಡಾಗ ಅಲಿವರ್ದಿ ಖಾನ್ 1740ರಿಂದ ಹೆಚ್ಚು ಕಡಿಮೆ ಸ್ವತಂತ್ರನಾದ. ದಕ್ಷ ಮತ್ತು ಸಮರ್ಥ ಆಡಳಿತಗಾರನಾದ ಅಲಿವರ್ದಿವಿದೇಶಿ ವರ್ತಕರನ್ನು ಹಿಡಿತದಲ್ಲಿಟ್ಟುಕೊಂಡಿದ್ದ. ಅವರಲ್ಲಿ ಪೈಪೋಟಿಗೆ ಅವಕಾಶ ನೀಡಲಿಲ್ಲ. ಆ ವೇಳೆಗೆ ಮರಾಠರು ದಾಳಿ ಮಾಡಿದ್ದರು. ಅವರಿಗೆ ಅಧಿಕ ಹಣವನ್ನೂ ಒರಿಸ್ಸದ ಕೆಲವು ಭಾಗಗಳನ್ನೂ ಕೊಡಬೇಕಾಯಿತು. ಅವನ ಮಗ ಸಿರಾಜುದ್ದೌಲ (1756-1757) ಸಿಂಹಾಸನವನ್ನೇರಿದಾಗ ಇಂಗ್ಲಿಷರು ಪ್ರಬಲರಾದರು. ಇಂಗ್ಲಿಷರ ಸೈನ್ಯ ರಾಬರ್ಟ್ ಕ್ಲೈವ್ ಮತ್ತು ವಾಟ್ಸನರ ನೇತೃತ್ವದಲ್ಲಿ 1757ರ ಜನವರಿಯಲ್ಲಿ ಕಲ್ಕತ್ತೆಯನ್ನು ವಶಪಡಿಸಿಕೊಂಡಿತು. ಜೂನ್ 23ರಂದು ಪ್ಲಾಸಿ ಕದನಾನಂತರ ಸಿರಾಜುದ್ದೌಲನ ಶಿರಶ್ಛೇದ ಮಾಡಿತು, ಮೀರ್ ಜಾಫರ್ ಹೆಸರಿಗೆ ನವಾಬನಾದ. ಇಂಗ್ಲಿಷರು ಸರ್ವಾಧಿಕಾರಿಗಳಾದರು. ಅವರು 1765ರಲ್ಲಿ ಮೊಗಲ್ ಚಕ್ರವರ್ತಿ 2ನೆಯ ಷಾ ಆಲಮನಿಂದ ಬಂಗಾಲದ ದಿವಾನಿ ಹಕ್ಕನ್ನು ಪಡೆದರು. ಕ್ಲೈವ್ ಬಂಗಾಲದ ಗವರ್ನರಾದ. ಇಂಗ್ಲಿಷರ ಆಳ್ವಿಕೆಯಲ್ಲಿ 1770ರಲ್ಲಿ ಸಂಭವಿಸಿದ ಭೀಕರ ಕ್ಷಾಮದಲ್ಲಿ ಬಂಗಾಲದ 1/3 ರಷ್ಟು ಮಂದಿ ಸಾವಿಗೀಡಾದರು. 1772ರಲ್ಲಿ ವಾರನ್ ಹೇಸ್ಟಿಂಗ್ಸ್ ಗವರ್ನರಾದ. 1773ರಲ್ಲಿ ಅವನನ್ನು ಭಾರತದಲ್ಲಿ ಬ್ರಿಟಿಷರ ಆಡಳಿತಕ್ಕೆ ಸೇರಿದ ಎಲ್ಲ ಪ್ರದೇಶಗಳಿಗೂ ಗವರ್ನರ್-ಜನರಲ್ ಆಗಿ ನೇಮಿಸಲಾಯಿತು. ಕಲ್ಕತ್ತ ಅವನ ರಾಜಧಾನಿಯಾಯಿತು. ಇಂಗ್ಲಿಷರ ಆಳ್ವಿಕೆಯಲ್ಲಿ ಆಡಳಿತ ದೃಷ್ಟಿಯಿಂದ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಗವರ್ನರ್ ಜನರಲ್ಲನ ನೇರ ಆಡಳಿತದಲ್ಲಿದ್ದ ಬಂಗಾಲವನ್ನು 1854ರಲ್ಲಿ ಲೆಫ್ಟೆನಂಟ್-ಗವರ್ನರನ ಆಡಳಿತಕ್ಕೆ ಒಳಪಡಿಸಲಾಯಿತು. ಕರ್ಜನನ ಕಾಲದಲ್ಲಿ 1905ರಲ್ಲಿ ನಡೆದ ಬಂಗಾಲ ವಿಭಜನೆಯನ್ನು ಸುರೇಂದ್ರನಾಥ ಬ್ಯಾನರ್ಜಿಯವರ ನೇತೃತ್ವದಲ್ಲಿ ಜನರು ವಿರೋಧಿಸಿ ಸ್ವದೇಶಿ ಚಳವಳಿಯನ್ನಾರಂಭಿಸಿದರು. ಇಂಗ್ಲಿಷರು ಅದನ್ನು ಹತ್ತಿಕ್ಕಲು ಮಾಡಿದ ಪ್ರಯತ್ನಗಳ ವಿರುದ್ಧ ಬಾರಿ ಚಳವಳಿ ನಡೆಯಿತು. ಇಡೀ ಭಾರತವೇ ಇದನ್ನು ಪ್ರತಿಭಟಿಸಿತು. 1911ರಲ್ಲಿ ಬ್ರಿಟಿಷರು ವಿಭಜನೆಯನ್ನು ಕೊನೆಗೊಳಿಸಿದರು. 1947ರಲ್ಲಿ ಭಾರತ ಸ್ವತಂತ್ರವಾದಾಗ ಮತ್ತೆ ಬಂಗಾಲದ ವಿಭಜನೆಯಾಗಿ, ಪಶ್ಚಿಮ ಬಂಗಾಲ ಭಾರತದಲ್ಲಿ ಸೇರಿತು. ಅದು ಈಗ ಭಾರತ ಒಕ್ಕೂಟದ ಒಂದು ರಾಜ್ಯವಾಗಿದೆ.

ಪಶ್ಚಿಮ ಬಂಗಾಲದ ಪ್ರಾಕೃತಿಕ ಸನ್ನಿವೇಶ ಮತ್ತು ವಾಯುಗುಣದ ಸ್ವಭಾವದಿಂದ ಪ್ರಾಚೀನ ನಿರ್ಮಾಣಗಳು ಹೆಚ್ಚಾಗಿ ಉಳಿದುಬಂದಿಲ್ಲ. ಮೊದಲಿನ ಇಟ್ಟಿಗೆ ಕಟ್ಟಡಗಳು ಪೂರ್ಣವಾಗಿ ಅಳಿದುಹೋಗಿವೆ. ಆದರೆ ಒರಿಸ್ಸ ವಾಸ್ತುಶೈಲಿಯಿಂದ ಪ್ರೇರಿತವಾದ ಕೆಲವು ಕಲ್ಲಿನ ಕಟ್ಟಡಗಳನ್ನು ಬಂಕುರಾ ಮತ್ತು ಬರ್ದವಾನ್ ಜಿಲ್ಲೆಗಳಲ್ಲಿ ಕಾಣಬಹುದು. ಅನಂತರ ಕಾಲದಲ್ಲಿ ಜಾನಪದ ಶೈಲಿಯಿಂದ ಪ್ರೇರಿತವಾದ ಸ್ಥಾನಿಕ ಮಾದರಿಯ ಕಟ್ಟಡಗಳು ನಿರ್ಮಾಣವಾದುವು. ಮೊದಲ ರೀತಿಯ ಕಟ್ಟಡಗಳು ಎತ್ತರವಾದ ಶಿಖರವುಳ್ಳ ಒಂದು ಕೋಣೆಯ ಕಲ್ಲಿನ ಗುಡಿಗಳು; ಭುವನೇಶ್ವರದ ಮಂದಿರಗಳ ಮಾದರಿಯ ಸಣ್ಣ ನಿರ್ಮಾಣಗಳು. ಅವುಗಳ ಎತ್ತರ ಚತುರಸ್ರತಳ ಪ್ರಮಾಣದ ಮೂರೂವರೆಯಷ್ಟಿರುತ್ತಿತ್ತು. ಶಖರದ ಎರಡಂತಸ್ತುಗಳನ್ನು ಜೋಡು ಕಪೋತಗಳಿಂದ ಪ್ರತ್ಯೇಕಿಸಿರಲಾಗುತ್ತಿತ್ತು. ಲಂಬಾಕೃತಿಯ ಶಿಖರಗಳ ಮೇಲಿನ ಅಡ್ಡಗಲದ ಕಪೋತಗಳು ವೈದೃಶ್ಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದುವು. ಬರ್ದವಾನ್ ಜಿಲ್ಲೆಯ ಬರಾಕರ್ ಎಂಬಲ್ಲಿ ಅಂಥ ಹಲವು ಗುಡಿಗಳಿವೆ. ಬಹೂಲರಾದ ಸಿದ್ಧೇಶ್ವರ ದೇವಾಲಯ ಆ ಶೈಲಿಯ ಉತ್ತಮ ನಿದರ್ಶನ. 10ನೆಯ ಶತಮಾನದ ಆ ಕಟ್ಟಡದ ಇಟ್ಟಿಗೆ ಗೋಡೆಗಳ ಮೇಲ್ಭಾಗವನ್ನು ಸುಟ್ಟ ಮಣ್ಣಿನ ಫಲಕಗಳ ಮೇಲಿನ ಉಬ್ಬುಶಿಲ್ಪಗಳಿಂದ ಅಲಂಕರಿಸಲಾಗಿತ್ತು. ಶಿಲ್ಪಗಳು ಅಧಿಕಸಂಖ್ಯೆಯಲ್ಲಿದ್ದರೂ ಅತ್ಯಲಂಕರಣಭಾವವನ್ನು ಉಂಟುಮಾಡುವುದಿಲ್ಲ; ಅದರ ರಮ್ಯತೆಯನ್ನು ಹೆಚ್ಚಿಸಿವೆ. ಅನಂತರ ಕಾಲದ ಜಾನಪದ ಶೈಲಿಯ ಕಟ್ಟಡಗಳಿಗೆ ಅಲ್ಲಿ ಹೇರಳವಾಗಿ ಸಿಕ್ಕುವ ಜಂಬುಕಲ್ಲನ್ನು ಅಥವಾ ಇಟ್ಟಿಗೆಗಳನ್ನು ಬಳಸಲಾಗಿತ್ತು. ಅವು ಜೋಪಡಿಯಾಕಾರದಲ್ಲಿವೆ. ಕಾಲಾನುಕ್ರಮವಾಗಿ ಮರದ ಗೋಡೆಗಳ ಮತ್ತು ಬಿದಿರು ಚಾವಣಿಯ ನಿರ್ಮಾಣಶೈಲಿ ಮುಂದುವರಿಯಿತು. ಆ ನಿರ್ಮಾಣಗಳು ಆ ಪ್ರದೇಶದ ಅರಣ್ಯವಾಸಿ ಪೂರ್ವಜರ ಕುಟೀರಗಳನ್ನು ಹೋಲುತ್ತಿದ್ದುವು. ಅವುಗಳ ಇಳಿಜಾರಾದ ಚಾವಣಿ ಮತ್ತು ಬಾಗಿದಕಪೋತಗಳು ಜಾನಪದ ಶೈಲಿಗಿಂತ ಪ್ರಗತಿ ಪರವಾದರೂ ಉನ್ನತ ಮಟ್ಟಕ್ಕೇರಲಿಲ್ಲ. ಚತುರಸ್ರವಾದ ಕಟ್ಟಡಗಳ ಗೋಡೆಗಳು ನೇರವಾಗಿದ್ದು, ಮೇಲ್ಭಾಗದಲ್ಲಿ ಬಾಗಿದ ಚಾವಣಿ ಇರುತ್ತಿತ್ತು. ಹಾಗಾಗಿ ಚಾವಣಿ ಮತ್ತು ಕಪೋತಗಳು ಪರವಲಯಕಾರದವು. ಅಧಿಕ ಮಳೆಯನೀರು ಸುಲಭವಾಗಿ ಹರಿದುಹೋಗಲು ಅದು ಸಹಾಯಕವಾಗುತ್ತಿತ್ತು. ಬಾಗಿದ ಚಾವಣಿಗಳ ಮೇಲಿನ ಶಿಖರಗಳ ವಿಭಿನ್ನ ಸಂಖ್ಯೆಗೆ ಅನುಗುಣವಾಗಿ ಏಕರತ್ನ ತ್ರಿರತ್ನ ಪಂಚರತ್ನ ಗುಡಿಗಳೆಂದು ಅವನ್ನು ಪರಿಗಣಿಸಲಾಗುತ್ತಿತ್ತು. ಮುಂಭಾಗದಲ್ಲಿ ಮೂರು ಕಮಾನುಗಳೂ ಪ್ರತಿಕಮಾನಿನ ಕೆಳಗೆ ಕಂಬಗಳಿಂದ ಕೂಡಿದ ಬಾಗಿಲುಗಳೂ ಇರುತ್ತಿದ್ದುವು. ಸೂಚಿಯ ಆಕಾರದ ಕಮಾನುಗಳಲ್ಲಿ ಕಂಬಗಳಿಂದ ಕೂಡಿದ ಬಾಗಿಲುಗಳು ಇರುತ್ತಿದ್ದವು. ಆ ಕಮಾನುಗಳಲ್ಲಿ ಚಾಚಿದ ಕೋಡುಗಳಿರುತ್ತಿದ್ದುವು. ಒಳಭಾಗದಲ್ಲಿರುತ್ತಿದ್ದ ವಿಶಾಲ ಹಜಾರದ ಸುತ್ತಲೂ ಮೇಲಂತಸ್ತಿನಲ್ಲಿ ಉಪ್ಪರಿಗೆಯ ಮೊಗಸಾಲೆಯಿರುತ್ತಿತ್ತು. ಗೋಡೆಗಳ ಮೇಲೆ ಸುಟ್ಟ ಮಣ್ಣಿನ ಉಬ್ಬುಚಿತ್ರಫಲಕಗಳ ಅಲಂಕರಣವಿರುತ್ತಿತ್ತು. ಆ ಶಿಲ್ಪಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಸಾಮಾನ್ಯ ಜನಜೀವನಕ್ಕೆ ಸಂಬಂಧಿಸಿದ ದೃಶ್ಯಗಳ ನಿರೂಪಣೆಯಿರುತ್ತಿತ್ತು. ಬಂಕುರಾ ಜಿಲ್ಲೆಯ ವಿಷ್ಣಪುರದಲ್ಲಿ ಮಲ್ಲರಾಜನ ಮನೆತನದ ದೊರೆಗಳು ಕಟ್ಟಿಸಿದ ದೇವಾಲಯಗಳು ಈ ರೀತಿಯವು. ಅಲ್ಲಿರುವ ಜಂಬುಕಲ್ಲಿನ ಏಕಶಿಖರದ ಲಾಲ್ಜುಯಿ (1 58), ಇಟ್ಟಿಗೆಯ ಏಕಶಿಖರದ ಮದನ ಮೋಹನ (1694), ಇಟ್ಟಿಗೆಯ ಪಂಚರತ್ನ ರೀತಿಯ ಶ್ಯಾಮರಾಯ (1643) ಮತ್ತು ಜಂಬುಕಲ್ಲಿನ ಪಂಚರತ್ನರೀತಿಯ ಮದನಗೋಪಾಲ (1665) ಮಂದಿರಗಳು, ಇವು 17ನೆಯ ಶತಮಾನದವಾದರೂ ಹಿಂದಿನ ಶೈಲಿಯ ನಿಜವಾದ ಪ್ರತೀಕಗಳಾಗಿವೆ. ಇದೇ ಶೈಲಿಯ ಎರಡು ಗುಡಿಗಳುಳ್ಳ ಜೋಡ್ ಬಂಗ್ಲಾ ಮಂದಿರಗಳಲ್ಲಿ ಮುಂಭಾಗದಲ್ಲಿ ಎರಡು ಗುಡಿಸಿಲುಗಳನ್ನು ಸೇರಿಸಿದ್ದಂತೆ ಕಂಡರೂ ಒಳಭಾಗದ ಮಧ್ಯದಲ್ಲಿ ಒಂದು ಥಾಕುರ್ ಬಡಿ ಮತ್ತು ಬದಿಗಳಲ್ಲಿ ಎರಡು ಕೋಣೆಗಳು ಇರುತ್ತಿದ್ದುವು. ಅವುಗಳಲ್ಲೊಂದರಲ್ಲಿರುತ್ತಿದ್ದ ಸೋಪಾನಪಂಕ್ತಿ ಮೇಲಿನ ಮೊಗಸಾಲೆಗೆ ಒಯ್ಯುತ್ತಿತ್ತು. ಗುಪ್ತಪಾರಾದ ಚೈತನ್ಯಮಂದಿರ ಮತ್ತು ವಿಷ್ಣುಪುರದ ಕೆಸ್ತರಾಯ (1726) ಈ ಮಾದರಿಯವು.

ಮತ್ತೊಂದು ಮಾದರಿಯು ಪೌರಸ್ತ್ಯ ಶೈಲಿಯ ಸುಂದರ ಸತ್ತ್ವಪೂರ್ಣ ಕಟ್ಟಡಗಳು ಲಖ್ನೌತಿಯಲ್ಲಿ ಪಾಲ-ಸೇನರ ಆಶ್ರಯದಲ್ಲಿ ನಿರ್ಮಾಣಗೊಂಡುವು. ಅವನ್ನು ನೆರೆಯ ರಾಜಮಹಲ್ ಬೆಟ್ಟಗಳಲ್ಲಿ ಸಿಕ್ಕುವ ಕಪ್ಪು ಬಸಾಲ್ಟ್ ಕಲ್ಲಿನಲ್ಲಿ ಕಟ್ಟಲಾಗಿದೆ. ಈಗ ಆ ಕಟ್ಟಡಗಳು ನಾಶವಾಗಿದ್ದರೂ ಅನಂತರಕಾಲದ ಮುಸ್ಲಿಮ್ ವಾಸ್ತುಗಳಲ್ಲಿ ಅವುಗಳ ಕಲ್ಲುಗಳನ್ನು ಬಳಸಿಕೊಂಡಿರುವುದರಿಂದ ಆ ಹಿಂದೂ ಕಟ್ಟಡಗಳ ವಾಸ್ತುಲಕ್ಷಣಗಳನ್ನು ತಿಳಿಯಬಹುದು. ಆ ಹಿಂದೂ ದೇವಾಲಯಗಳಲ್ಲಿ ಅಲಂಕಾರ ಪೂರ್ಣವಾದ ಎತ್ತರವಾದ ಅಂತಸ್ತುಗಳಿದ್ದ ಶಿಖರಗಳು ಮತ್ತು ತ್ರಿಪತ್ರಕ (ಟ್ರಿಫಾಯಲ್) ಕಮಾನುಗಳಿರುತ್ತಿದ್ದುವು. ಅವು ಹೆಚ್ಚು ಕಡಿಮೆ ಬೋಧ್ ಗಯೆಯ ದೇವಾಲಯವನ್ನು ಹೋಲುತ್ತಿದ್ದುವು. ಗೌರ್ ಮತ್ತು ಪಾಂಡುವ ಪಟ್ಟಣಗಳಲ್ಲಿರುವ ಮಸೀದಿಗಳಲ್ಲಿ ಉಪಯೋಗಿಸಿರುವ ಶಿಲ್ಪ ಕೆತ್ತನೆಗಳು ಮೊದಲಿಗೆ ಆ ದೇವಾಲಯಗಳಿಗೆ ಸೇರಿದುವು. ಅವು ಪಶ್ಚಿಮ ಬಂಗಾಲದ ಅತ್ಯುತ್ತಮ ಕಲಾಕೃತಿಗಳು. ಅದೀನ ಮಸೀದಿಯ ಹಿಂದಿನ ಬಾಗಿಲಿನ ಚೌಕಟ್ಟು ಮೊದಲಿಗೆ ಲಖ್ನೌತಿಯ ವಿಷು ್ಣದೇವಾಲಯಕ್ಕೆ ಸೇರಿತ್ತು. ಅದರ ಇಬ್ಬದಿಗಳ ಕಂಬಗಳಿಗೆ ಹಗ್ಗದಂತೆ ಸುತ್ತಿಕೊಂಡಿರುವ ಶೇಷ, ತಳಭಾಗದಲ್ಲಿರುವ ಶೇಷನ ಸುರಳಿಗಳನ್ನು ಹೋಲುವ ಕಂಬದ ಪೀಠ, ಬಾಗಲುವಾಡದ ಮೇಲಿರುವ ಕಪೋತ ಇವು ಉತ್ತಮ ಕಲಾಕೃತಿಗಳು. ಗುಪ್ತರ ಶಿಲ್ಪಗಳಲ್ಲಿ ಕಾಣುವ ಭಾಂಡದೊಳಗಿಂದ ಹೊರ ಹೊಮ್ಮುವ ಲತಾಗುಚ್ಚಗಳು ಇವಕ್ಕೆ ಸ್ಫೂರ್ತಿಯಾಗಿವೆ. ಆ ಕಾಲದ ಅರಮನೆ, ಕೋಟೆ, ಕೊತ್ತಲಗಳು ಉಳಿದು ಬಂದಿಲ್ಲವಾದರೂ, ವಲ್ಲಾಳಸೇನನ ಅರಮನೆ ಕೊತ್ತಲಗಳ ಕಲ್ಲುಗಳನ್ನು ಬಳಸಿ ಆ ಸ್ಥಳದಲ್ಲಿ ಕಟ್ಟಿರುವ ಮಸೀದಿಯಲ್ಲಿರುವ ಕಂಬಗಳು ಅಂಥ ವಾಸ್ತು ನಿರ್ಮಾಣಗಳಿಗೆ ಸಾಕ್ಷಿ. ದುಂಡಾದ ಚತುರಸ್ರ ಅಥವಾ ಅಷ್ಟಮುಖ ಕಂಬಗಳು ಸಾಮಾನ್ಯವಾಗಿ 2.7 ಮೀ ಎತ್ತರ ಮತ್ತು 0,9 ಮೀ ಅಗಲ ಇವೆ.

ಈ ಮೇಲೆ ವರ್ಣಿಸಿದ ಕಣ್ಮರೆಯಾದ ವಾಸ್ತುನೈಪುಣ್ಯವನ್ನು ಹೂಗ್ಲಿ ಜಿಲ್ಲೆಯ ಸತ್‍ಗಾಂವ್‍ನಲ್ಲಿ (ಸಂಸ್ಕೃತದ ಸಪ್ತಗ್ರಾಮ; ಈಗಿನ ತ್ರಿಬೇಣಿ) ಕಾಣಬಹುದು. ಅಲ್ಲಿರುವ ಆ ಶೈಲಿಯ ಎರಡು ಹಿಂದೂ ಕಟ್ಟಡಗಳಲ್ಲಿ ಒಂದನ್ನು ಮುಸ್ಲಿಮ್ ಸಮಾಧಿಯಾಗಿಯೂ ಮತ್ತೊಂದನ್ನು ಮಸೀದಿಯಾಗಿಯೂ ಪರಿವರ್ತಿಸಲಾಗಿದೆ. ಸಮಾಧಿ ಕಟ್ಟಡದಲ್ಲಿರುವ ಎರಡು ಕೋಣೆಗಳು ಮೊದಲಿಗೆ ವೈಷ್ಣವ ಮಂದಿರದ ಅಂತರಾಳ ಮತ್ತು ಸಭಾಮಂಟಪಗಳಾಗಿದ್ದುವು. ಅಲ್ಲಿದ್ದ ಹಿಂದೂ ಶಿಲ್ಪಗಳನ್ನು ಒಡೆದು ಹಾಕಲಾಗಿದೆ. ಅದಕ್ಕೆ ನಾಲ್ಕು ದಿಕ್ಕುಗಳಿಂದಲೂ ಬಾಗಿಲುಗಳಿವೆ. ಅವುಗಳ ಸರಳವಾದ ಸೊಬಗು ಗಮನಾರ್ಹ.

ಪಶ್ಚಿಮಬಂಗಾಲ 1202ರಲ್ಲಿ ಮುಸ್ಲಿಮರ ವಶವಾದರೂ ಬಹಳ ಕಾಲದವರೆಗೆ ಅಲ್ಲಿ ಇಸ್ಲಾಮೀ ವಾಸ್ತುಶೈಲಿಯ ನಿರ್ಮಾಣಗಳು ಕಂಡುಬರಲಿಲ್ಲ. ಕ್ರಮೇಣ ಮಸೀದಿ ಮತ್ತು ಸಮಾಧಿಗಳ ನಿರ್ಮಾಣ ಪ್ರಾರಂಭವಾಯಿತು. ಇಸ್ಲಾಮೀ ಶೈಲಿಯ ಕಟ್ಟಡಗಳು ಬಹಳಮಟ್ಟಿಗೆ ಮಾಲ್ಡಾ ಜಿಲ್ಲೆಯಲ್ಲಿರುವ, ಹಲವು ಬಾರಿ ರಾಜಧಾನಿಗಳಾಗಿದ್ದ, ಲಖ್ನೌತಿ, ಗೌರ್ ಮತ್ತು ಪಾಂಡುವ ನಗರಗಳಲ್ಲಿ ಕೇಂದ್ರೀಕೃತವಾಗಿದ್ದುವು. ಅಲ್ಲಿ ಅನೇಕ ಕೋಟೆಕೊತ್ತಲಗಳ, ಅರಮನೆಗಳ, ಸೇತುವೆಗಳ, ದೇವಾಲಯಗಳ, ಮಸೀದಿಗಳ ಮತ್ತು ಸಮಾಧಿಗಳ ಅಧ್ಯಯನದಿಂದ ಪಶ್ಚಿಮಬಂಗಾಲದ ಇಸ್ಲಾಮೀ ವಾಸ್ತುಶೈಲಿಯ ಉಗಮ ಮತ್ತು ವಿಕಾಸಗಳನ್ನು ತಿಳಿಯಬಹುದು. ಆ ವಾಸ್ತುನಿರ್ಮಾಣಗಳನ್ನು 1200ರಿಂದ 1340ರ ವರೆಗಿನ, ಗೌರ್ ರಾಜಧಾನಿಯಾಗಿದ್ದ ಕಾಲದ ಅವಶೇಷಗಳು, 1340-1430ರ ನಡುವೆ ಪಾಂಡುವ ರಾಜಧಾನಿಯಾದಾಗಿನಿಂದ ಎಕ್ಲಾಖಿ ಸಮಾಧಿ ನಿರ್ಮಾಣದ ವರೆಗಿನ ಅವಶೇಷಗಳು, ಮತ್ತು 1442-1576ರಲ್ಲಿ ಮತ್ತೆ ಗೌರ್ ರಾಜಧಾನಿಯಾಗಿದ್ದ ಕಾಲದಲ್ಲಿ ಅವಶೇಷಗಳು, ಎಂದು ವಿಭಜಿಸಲಾಗಿದೆ. ಮೊದಲನೆಯ ವಿಭಾಗದ ಕಟ್ಟಡಗಳು ಬಹಳಮಟ್ಟಿಗೆ ನಾಶವಾಗಿದ್ದರೂ ತ್ರಿಬೇಣಿ ಮತ್ತು ಪಾಂಡುವಗಳಲ್ಲಿ ಕೆಲಮಟ್ಟಿಗೆ ಉಳಿದಿವೆ. ಪಾಂಡುವದ ಜೀರ್ಣವಾದ ಮಸೀದಿಯ ಗೋಡೆ ಮತ್ತು ಕಮಾನುಗಳನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. ಆದರೆ ಹಿಂದೂ ದೇವಾಲಯಗಳಿಂದ ಕಿತ್ತು ತಂದ ಬಸಾಲ್ಟ್ ಕಲ್ಲಿನ ಕಂಬಗಳನ್ನು ಬಳಸಲಾಗಿದೆ. ಅದರ ಮಧ್ಯದಲ್ಲಿರುವ ಮುಖ್ಯ ಮಿಹ್ರಾಬದ ಬಲಕ್ಕೆ ಕಲ್ಲಿನ ಉಪದೇಶ ವೇದಿಕೆ ಇದೆ. ಆ ಮಸೀದಿ ಪಾಂಡುವದ ಅನಂತರಕಾಲದ ದೊಡ್ಡ ಅದೀನ ಮಸೀದಿಗೆ ಮಾದರಿಯಾಗಿದೆ. ಪಶ್ಚಿಮ ಬಂಗಾಲದ ಚತುರಸ್ರತಳಹದಿಯ ಅನೇಕ ಗುಮ್ಮಟಗಳ ಮಸೀದಿಗಳಲ್ಲಿ ಅದು ಪ್ರಾಚೀನತಮವಾದುದು. ಅದರ ಬಳಿಯಲ್ಲಿ ಸಂತ ಷಾ ಪುರಿಯುದ್ದೀನ್ ಕಟ್ಟಿಸಿದ ಸ್ಮಾರಕಸ್ತಂಭವಿದೆ. ದೆಹಲಿಯ ಕುತ್ಬ್ ಮಿನಾರ್ ಮಾದರಿಯ ಅನೇಕ ಅಂತಸ್ತುಗಳು, ಪಾಶ್ರ್ವಮುಖಗಳು ಮತ್ತು ಪಟ್ಟಿಕೆಗಳು ಅಲಂಕರಣ ಗಮನಾರ್ಹವಾದರೂ ಅದು ಗುಜ್ಜಾಗಿದ್ದು ಒಟ್ಟು ನೋಟಕ್ಕೆ ಅಷ್ಟು ಸುಂದರವಾಗಿಲ್ಲ. 1298ರಲ್ಲಿ ನಿರ್ಮಿಸಿದ ತ್ರಿಬೇಣಿಯ ಮಸೀದಿ 16ನೆಯ ಶತಮಾನದಲ್ಲಿ ಬಹಳ ರಿಪೇರಿಗಳಿಗೆ ಗುರಿಯಾಗಿದೆ. ಅದರ ಬಳಿಯಿರುವ ಜಾಫರ್‍ಖಾನ್ ಘಾಜಿûಯ ಸಮಾಧಿ ಇನ್ನೂ ಪ್ರಾಚೀನವಾದುದಾದರೂ ಈಗ ಪಾಳುಬಿದ್ದಿದೆ. ಮೊದಲು ಕೃಷ್ಣ ದೇವಾಲಯವಾಗಿದ್ದ ಈ ಕಟ್ಟಡವನ್ನು ಪುನನಿರ್ಮಿಸಿದಾಗ ಬಸಾಲ್ಟ್ ಕಂಬಗಳ ನಡುವೆ ಇಟ್ಟಿಗೆಯ ಕಮಾನುಗಳನ್ನು ಸೇರಿಸಲಾಗಿದೆ. ಹಿಂದೂ ಕಟ್ಟಡಗಳನ್ನು ಮುಸ್ಲಿಮರು ತಮ್ಮ ಉಪಯೋಗಕ್ಕೆ ಪರಿವರ್ತಿಸಿಕೊಂಡ ರೀತಿಯನ್ನು ತಿಳಿಯಲು ಅದು ಉತ್ತಮ ನಿದರ್ಶನ. ಎರಡನೆಯ ವಿಭಾಗದ ಕಟ್ಟಡಗಳಲ್ಲಿ ಅತಿ ಮುಖ್ಯವಾದ ಆದೀನ ಮಸೀದಿ ಲಖ್ನೌತಿಯಿಂದ 17ಮೈಲಿ ದೂರದಲ್ಲಿರುವ ಹೊಸ ರಾಜಧಾನಿ ಪಾಂಡುವದಲ್ಲಿದೆ. ಸಿಕಂದರ್ ಷಾ (1358-1389) ತನ್ನ ಸ್ವಾತಂತ್ರ್ಯದ ಮತ್ತು ವೈಭವದ ಕುರುಹಾಗಿ ತನ್ನದೇ ಆದ ಹೊಸ ಶೈಲಿಯಲ್ಲಿ ಅದನ್ನು ಕಟ್ಟಿಸಿದ. ರಾಜಧಾನಿಯ ಹಲವು ಸಾವಿರ ಜನ ಮುಸ್ಲಿಮರು ಒಟ್ಟಿಗೆ ನಮಾಜು ಮಾಡಲು ಸಾಧ್ಯವಾಗುವಂಥ 122 ಮೀ ಘಿ 40 ಮೀ. ವಿಸ್ತಾರವಾದ ಪ್ರಾಂಗಣ. ಅದರ ಸುತ್ತಲೂ 260 ಕಂಬಗಳಿಂದ ಕೂಡಿದ ಮೊಗಸಾಲೆ ಇರುವ ಆ ಬೃಹತ್ ಮಸೀದಿಯ ನಿರ್ಮಾಣ 1364ರಲ್ಲಿ ಆಯಿತು. ನಾಲ್ಕು ದಿಕ್ಕುಗಳಲ್ಲೂ ಹಲವಾರು ಕಮಾನುಗಳಿದ್ದುವು. ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ಬಹಳ ಉನ್ನತವಾದ ಗುಮ್ಮಟವಿತ್ತು. ಪ್ರಾಂಗಣದ ಸುತ್ತ 88 ಕಮಾನುಗಳನ್ನೊಳಗೊಂಡ 6.7 ಮೀ ಎತ್ತರದ ಕೈಪಿಡಿ ಗೋಡೆಯಿತ್ತು. ಮೊಗಸಾಲೆಯ ಚಾವಣಿಯ ಮೇಲೆ ಎದ್ದು ಕಾಣುವ 306 ಗುಮ್ಮಟಗಳಿದ್ದುವು. ಪ್ರಾಂಗಣದ ಆಗ್ನೇಯ ಮೂಲೆಯಲ್ಲಿದ್ದ ಮೂರು ಕಮಾನು ಬಾಗಿಲುಗಳಲ್ಲಿ ಒಂದು ಕೆಳ ಅಂತಸ್ತಿನ ಒಳಕೋಣೆಗೂ ಮತ್ತೆರಡು ಮೇಲಂತಸ್ತಿನ ಬಾದಷಾ-ಕಿ-ತಖ್ತ್ ಅಥವಾ ಸುಲ್ತಾನನ ಗದ್ದುಗೆಯಿದ್ದ ಕೋಣೆಗೆ ಪ್ರವೇಶ ನೀಡುವ ಸೋಪಾನಪಂಕ್ತಿಗಳಿಗೂ ಪ್ರವೇಶ ನೀಡುತ್ತಿದ್ದುವು. ಅಲ್ಲಿರುವ ಕಂಬಗಳು ವೈಶಿಷ್ಟ್ಯಪೂರ್ಣವಾದವು. ಇಂಥವು ಬಂಗಾಲದ ಹೊರಗೆಲ್ಲೂ ಕಾಣಬರುವುದಿಲ್ಲ. ಮಸೀದಿಯ ಪಶ್ಚಿಮದ ಒಳಗೋಡೆಯಲ್ಲಿ ಪ್ರತಿ ಅಂಕಣದ ಮಧ್ಯದಲ್ಲೂ ಸುಂದರ ಕೆತ್ತನೆ ಮತ್ತು ಶಿಲ್ಪಗಳಿಂದ ಅಲಂಕೃತವಾದ ಮುನ್‍ಚಾಚಿದ ಕಮಾನುಗೂಡುಗಳಲ್ಲಿ 32 ಮಿಹ್ರಾಬ್‍ಗಳಿದ್ದವು. ಮಸೀದಿಯ ಗುಡಿಯ ಭಾಗದ ಮಧ್ಯದಲ್ಲಿ 21 ಮೀ ಘಿ 10 ಮೀ ವಿಸ್ತೀರ್ಣದ ಮತ್ತು 15 ಮೀ ಎತ್ತರದ ಹಜಾರವಿತ್ತು. ಅದರ ಇಬ್ಬದಿಗಳಲ್ಲಿ ಸಮಕೋನದಲ್ಲಿ ಅಡ್ಡನಾಗಿ ಐದೈದು ಹಜಾರಗಳು ಇದ್ದುವು. ಹಜಾರಗಳ ಮುಖಭಾಗದಲ್ಲಿದ್ದ 15ಮೀ ಅಗಲ ಮತ್ತು 18ಮೀ ಎತ್ತರದ ಅಡ್ಡ ಗೋಡೆಯಲ್ಲಿ 15 ಮೀ ಎತ್ತರ ಮತ್ತು 10ಮೀ ಅಗಲವುಳ್ಳ ಅದ್ಭುತವಾದ ಕಮಾನು ಬಾಗಿಲಿತ್ತು. ಅದರ ಇಬ್ಬದಿಗಳಲ್ಲಿರುವ ಸಣ್ಣ ಬಾಗಿಲುಗಳಿಂದ ಪ್ರಾರ್ಥನಾ ಸಮಯದ ಘೋಷಕ ಮ್ಯುಎಜಿನ್ ಮೇಲಂತಸ್ತಿನ ಮಿನಾರತ್ತಿಗೆ ಹೋಗಬಹುದಿತ್ತು. ಹಜಾರದ ಹಿಂದಿನ ಗೋಡೆಯನ್ನು ಬಹಳ ಕಲಾತ್ಮಕವಾಗಿ ಶೃಂಗರಿಸಲಾಗಿದೆ. ಈ ಭವ್ಯ ಸುಂದರ ವಿಶಾಲ ಮಸೀದಿಯ ಕೆಳಗಿನರ್ಧವನ್ನು ಹಿಂದೂ ದೇವಾಲಯಗಳಿಂದ ಕಿತ್ತು ತಂದ ಕಲ್ಲುಗಳಿಂದಲೂ ಮೇಲಿನ ಕಮಾನು ಮತ್ತು ಗುಮ್ಮಟಗಳನ್ನು ಇಟ್ಟಿಗೆಗಳಿಂದಲೂ ಕಟ್ಟಲಾಗಿದೆ. ಈ ಶೈಲಿಗೆ ಸೇರಿದ ಗೌರ್‍ನಲ್ಲಿರುವ ಅಖಿ ಸೂರಜುದ್ದೀನನ ಮಸೀದಿ ಮತ್ತು ಸಮಾಧಿ, ಊರಿನ ದಕ್ಷಿಣಕ್ಕಿರುವ ಕೊತ್ವಾಲಿ ದರ್ವಾಝಾ ಉಲ್ಲೇಖಾರ್ಹವಾದರೂ ಆದೀನದಷ್ಟು ಭವ್ಯವಾಗಿಲ್ಲ.

ಮೂರನೆಯ ವಿಭಾಗದ ಕಟ್ಟಡಗಳು ಇಸ್ಲಾಮೀ ವಾಸ್ತುಪದ್ಧತಿಯಲ್ಲಿ ಹೊಸ ಪ್ರಾದೇಶಿಕ ಶೈಲಿಯ ಪ್ರಾದುರ್ಭಾವದ ಪ್ರತೀಕಗಳು. ಈವರೆಗೆ ತಮ್ಮ ವಿಶಿಷ್ಟ ಶೈಲಿಯನ್ನು ಬಳಸಿದ ಮುಸ್ಲಿಮರು ಭೌಗೋಳಿಕ ಪರಿಸರ ಮತ್ತು ಅಧಿಕಮಳೆಯ ಪ್ರಭಾವಗಳಿಂದ ತಮ್ಮ ಕಟ್ಟಡಗಳಿಗೆ ಒದಗುವ ಹಾನಿಯನ್ನು ನಿವಾರಿಸುವ ಸಲುವಾಗಿ ಆ ಮೊದಲು ಹಿಂದೂಗಳು ಬಳಸುತ್ತಿದ್ದ ಇಳಿಜಾರು ಚಾವಣಿಯ ಕಟ್ಟಡಶೈಲಿಗೆ ಶರಣಾದರು. ಆ ಶೈಲಿಯ ಕಟ್ಟಡಗಳಿಗೆ ಮಾದರಿಯಾಗಿರುವ ಎಕ್ಲಾಖಿ ಸಮಾಧಿ (1425) ಪಾಂಡುವದಲ್ಲಿದೆ. ವಿಶಿಷ್ಟ ವಾಸ್ತುಲಕ್ಷಣದಿಂದ ಕೂಡಿದ ಈ ಸಮಾಧಿ ಆ ಶೈಲಿಯ ವಿಕಾಸದ ಪ್ರಥಮ ಹಂತವಾಗಿದೆ. ಅನಂತರದ ಆ ಶೈಲಿಯ ಕಟ್ಟಡಗಳಿಗೆ ಮಾದರಿಯಾಗಿದೆ. ಈ ದೃಷ್ಟಿಯಿಂದ ಇದು ಗಮನಾರ್ಹವಾದ್ದಾಗಿದೆ. 23 ಮೀ ಚತುರಸ್ರ ತಳಹದಿಯ ಆ ಕಟ್ಟಡದ ಎತ್ತರ 7.5 ಮೀ. ಅದರ ಮೂರು ತಿರುವುಗಳ ಸೂರು 14 ಮೀ ವ್ಯಾಸದ ಗುಮ್ಮಟ, ಮೂಲೆಗಳಲ್ಲಿರುವ ಸಣ್ಣ ಅಷ್ಟಸ್ತ್ರ ಗೋಪುರಗಳು-ಇವು ಆ ಕಟ್ಟಡದ ಮುಖ್ಯ ಲಕ್ಷಣಗಳು. ಮುಖಭಾಗದ ಗೋಡೆಯಲ್ಲಿ ಎದ್ದುಕಾಣುವ ಇಟ್ಟಿಗೆವರಸೆ, ಅದು ಎರಡು ಅಂತಸ್ತುಗಳ ಕಟ್ಟಡವೆಂಬ ಭ್ರಮೆಯನ್ನುಂಟು ಮಾಡುತ್ತದೆ. ನಾಲ್ಕು ದಿಕ್ಕುಗಳಲ್ಲಿ ಹಿಂದೂ ಕಟ್ಟಡಗಳಿಂದ ತಂದು ಸೇರಿಸಿದ ಕಲ್ಲಿನ ಬಾಗಿಲುಗಳ ಮೇಲೆ ಇಟ್ಟಿಗೆಯ ಕಮಾನುಗಳನ್ನು ರಚಿಸಲಾಗಿದೆ. ಸಮಾಧಿಕೋಣೆ ಅಷ್ಟಸ್ರವಾಗಿದ್ದು 14ಮೀ ವ್ಯಾಸವುಳ್ಳದ್ದಾಗಿದೆ. ಗೌರ್ ನಗರದ ಕೋಟೆಯ ದಖಿಲ್ ದರ್ವಾeóÁ (1465)ವಿಜಯಸ್ಮಾರಕವಾಗಿ ಇಟ್ಟಿಗೆಯಲ್ಲಿ ಕಟ್ಟಿದ ವಿಶಿಷ್ಟ ಕಟ್ಟಡ. 34.5 ಮೀ. ಉದ್ದ, 23 ಮೀ ಅಗಲ ಮತ್ತು 18 ಮೀ ಎತ್ತರದ ಕಮಾನು ಹೆಬ್ಬಾಗಿಲಿನ ಇಬ್ಬದಿಗಳಲ್ಲಿ ಕಾವಲುಗಾರರ ಕೋಣೆಗಳಿದ್ದುವು. ಗೋಡೆಗಳ ಮೇಲಿನ ಸುಟ್ಟ ಮಣ್ಣಿನ ಶಿಲ್ಪ ಫಲಕಗಳು ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿದ್ದುವು. ಮುಂದಿನ 75 ವರ್ಷಗಳಲ್ಲಿ ಎಕ್ಲಾಖಿ ಸಮಾಧಿಯ ಮಾದರಿಯ ಹಲವು ಮಸೀದಿಗಳು ಸಮಾಧಿಗಳಲ್ಲಿ ವಿವಿಧ ಸ್ಥಳಗಳಲ್ಲಿ ನಿರ್ಮಿತವಾದವು. ಕೆಲವು ಮಸೀದಿಗಳಲ್ಲಿ ತೆರೆದ ಒಳ ಪ್ರಾಂಗಣದ ಬದಲು, ಮಳೆಯಿಂದ ರಕ್ಷಣೆ ಪಡೆಯಲು ಚಾವಣಿಯಿಂದ ಕೂಡಿದ, ಕಂಬಗಳಿಂದ ಬೇರ್ಪಡಿಸಿದ ಅಂಕಣಗಳಿದ್ದ ವಿಶಾಲ ಹಜಾರಗಳನ್ನು ನಿರ್ಮಿಸಲಾಯಿತು. ಹಜಾರಗಳಿಗೆ ಮುಂಭಾಗದಿಂದ 10-12 ಬಾಗಿಲುಗಳೂ ಬದಿಗಳಿಂದ 2-3 ಬಾಗಿಲುಗಳೂ ಇರುತ್ತಿದ್ದುವು. ಗೋಡೆಗಳ ಮೇಲ್ಭಾಗವನ್ನು ಆಯಾಕಾರದ ಫಲಕಗಳಾಗಿ ವಿಭಾಗಿಸಿ ಅವುಗಳಲ್ಲಿ ಕೆತ್ತನೆಯ ಅಲಂಕಾರ ಮಾಡಲಾಗುತ್ತಿತ್ತು. ಹಜಾರದ ಹಿಂಬದಿಯ ಗೋಡೆಗಳಲ್ಲಿದ್ದ ಮುನ್‍ಚಾಚಿದ ಕಮಾನುಗೂಡುಗಳಲ್ಲಿ ಮಿಹ್ರಾಬ್‍ಗಳಿರುತ್ತಿದ್ದವು. ಗೌರ್‍ನ ತಂತಿಪಾರಾ ಮಸೀದಿ (1475), ಬಗೇರ್ಲಟ್‍ನ ಸಾತ್ ಗುಂಬeóï (1470) ಗೌರ್‍ನ ಚಮ್‍ಖಾನ್ ಮಸೀದಿ (1475), ದಾರಸ್‍ಬಾರಿ ಮತ್ತು ಲೋಟಾನ್ ಮಸೀದಿಗಳು (1480), ಗುಣ್ಮಂತ್ ಮಸೀದಿ (1484), ಛೋಟಾ ಸೊನಾ ಮಸೀದಿ (1510), ಬಡಾ ಸೋನಾ ಮಸೀದಿ (1526) ಮತ್ತು ಕದಮ್ ರಸೂಲ್ ಮಸೀದಿ (1530) ಇವು ಈ ಶೈಲಿಯ ಇತರ ಕಟ್ಟಡಗಳು. ಇವುಗಳಲ್ಲಿ ದೊಡ್ಡದಾದ ಬಡಾ ಸೋನಾ ಮಸೀದಿಯ ವ್ಯಾಸ 61ಮೀ. ಮೂರು ದಿಕ್ಕುಗಳಲ್ಲಿ ಇದಕ್ಕೆ ದೊಡ್ಡ ಕಮಾನು ಬಾಗಿಲುಗಳಿವೆ. ಇಟ್ಟಿಗೆಯ ಆಯಾಕಾರದ ಮಂದಿರದ ವಿಸ್ತಾರ 51 ಮೀ ಘಿ 22ಮೀ ಎತ್ತರ 6 ಮೀ ತುದಿಗಳಲ್ಲಿರುವ ಸಣ್ಣ ಗೋಪುರಗಳ ನಡುವೆ 11 ಕಮಾನುಗಳಿದ್ದುವು. ಒಳಗಿನ ಪ್ರತಿ ಅಂಕಣದಲ್ಲೂ ಮಿಹ್ರಾಬ್‍ಗಳಿವೆ. ಕುತ್ಬ್ ಮಿನಾರ್ ಮಾದರಿಯ ಐದು ಅಂತಸ್ತುಗಳ ಫಿರೋಜ್ ಮಿನಾರ್ (1488) ಮೊದಲಿಗೆ ವಿಜಯಸ್ತಂಭವಾಗಿತ್ತು. ಈಗ ಮ್ಯುಎಜಿನ್ ಅದನ್ನು ಬಳಸುತ್ತಿದ್ದಾನೆ. ಅದರ ಕೆಳಗಿನ ಮೂರಂತಸ್ತುಗಳಿಗೆ 12 ಪಾರ್ಶ್ವಗಳಿವೆ. ಮೇಲಿನ ಎರಡು ಅಂತಸ್ತುಗಳು ವೃತ್ತಾಕಾರದಲ್ಲಿವೆ. ಸುಟ್ಟ ಮಣ್ಣಿನ ಫಲಕಗಳೊಂದಿಗೆ ನೀಲಿ ಮತ್ತು ಬಿಳಿಯ ಲೇಪದ ಗಾಜಿನ ಹೆಂಚುಗಳ ಅಲಂಕರಣ ಅದರ ಸೊಬಗನ್ನು ಹೆಚ್ಚಿಸಿದೆ.

ಪಶ್ಚಿಮ ಬಂಗಾಲದಲ್ಲಿ ಮೌರ್ಯಪೂರ್ವ ಅಥವಾ ಮೌರ್ಯಕಾಲದ ಯಾವ ಶಿಲ್ಪಗಳೂ ದೊರಕಿಲ್ಲ. ಮಹಾಸ್ತಾನದಲ್ಲಿ ಸಿಕ್ಕಿರುವ ಕುಷಾಣಪೂರ್ವದ ಸುಟ್ಟಮಣ್ಣಿನ ಕೆಲವು ಗೊಂಬೆಗಳನ್ನು ಬರಿಗೈಯಿಂದ ಅಥವಾ ಅಚ್ಚುಗಳಲ್ಲಿ ರೂಪಿಸಲಾಗಿದೆ. ಅವುಗಳಲ್ಲಿ ಹೆಚ್ಚಿನ ಕಲಾವಂತಿಕೆಯಿಲ್ಲ. ಕುಮಾರಪುರ ಮತ್ತು ನಿಯಾಮತ್‍ಪುರಗಳ ಸೂರ್ಯ, ಮತ್ತು ಹಂಕ್ರೈಲ್‍ನ ವಿಷ್ಣ ಗಮನಾರ್ಹ ಶಿಲ್ಪಗಳು. ಅವುಗಳ ವಸ್ತುಗಳ ನಿರೂಪಣೆ ಮತ್ತು ಶೈಲಿಯಿಂದ ಅವನ್ನು ಕುಷಾಣರ ಕಾಲಕ್ಕೆ ನಿರ್ದೇಶಿಸಲಾಗಿದೆ. ಕುಮಾರಪುರದ ಸೂರ್ಯ ಏಳು ಕುದುರೆಗಳ ರಥದಲ್ಲಿ ಇಬ್ಬರು ಸೇವಕರ ನಡುವೆ ಪೀಠದ ಮೇಲೆ ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದು ನಿಂತಿದ್ದಾನೆ. ಉದ್ದನೆಯ ಅಂಗಿಯನ್ನು ತೊಟ್ಟ, ವಿಶಾಲದೇಹದ, ದುಂಡು ಕಣ್ಣುಗಳ ಈ ಶಿಲ್ಪದ ತಲೆಯ ಮೇಲೆ ಕಿರೀಟವಿದೆ. ಇದನ್ನು ಹೋಲುವ ನಿಯಾಮತ್‍ಪುರದ ಶಿಲ್ಪದಲ್ಲಿ ಅಂಗಿಯ ಮೇಲೆ ಸೊಂಟಪಟ್ಟಿಯನ್ನು ತೋರಿಸಲಾಗಿದೆ. ಹಂಕ್ರೈಲ್‍ನ ಚತುರ್ಭುಜ ವಿಷ್ಣುವಿನ ಎರಡು ಕೈಗಳು ಮುರಿದಿವೆ. ಉಳಿದಿರುವ ಬಲದ ಮೇಲ್ಕೈಯಲ್ಲಿ ಪದ್ಮ, ಎಡ ಮೇಲ್ಕೈಯಲ್ಲಿ ಶಂಖ, ಮತ್ತು ತಲೆಯ ಮೇಲೆ ಕಿರೀಟ ಮುಕುಟ ಇವೆ. ನಡುವಿಗೆ ಧೋತ್ರವನ್ನು ಸುತ್ತಲಾಗಿದೆ.

ಗುಪ್ತಕಾಲದ ಶಿಲ್ಪಗಳಲ್ಲಿ ಸುಲ್ತಾನ್‍ಗಂಜ್‍ನ ತಾಮ್ರದ ಬ್ರಹತ್ ವಿಗ್ರಹ ಅಷ್ಟು ಸುಂದರವಾಗಿಲ್ಲ. ಅದರ ಮುಖದ ಮೇಲೆ ಕಂಡುಬರುವ ದೈವೀಲಾಸ್ಯ ಗಮನಾರ್ಹ. ಪಹಾಡ್‍ಪುರದಲ್ಲಿ ಸಿಕ್ಕಿರುವ ಅಧಿಕ ಸಂಖ್ಯೆಯ ಮೂರ್ತಿಶಿಲ್ಪಗಳು ಬಂಗಾಲ ಶಿಲ್ಪ ಕಲೆಯ ಉತ್ತಮ ನಿದರ್ಶನಗಳು. ಗುಪ್ತ ಮತ್ತು ಪಾಲ-ಸೇನ ಶಿಲ್ಪ ಶೈಲಿಗಳ ಮಧ್ಯದ ಹಂತವನ್ನು ಸೂಚಿಸುವ ಈ ಕೃತಿಗಳು ಪಾಲಶಿಲ್ಪಿಗಳಿಗೆ ಪ್ರೇರಕ, ಇವುಗಳಲ್ಲಿ ಕೆಲವು ಗುಪ್ತ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ರಾಧಾಕೃಷ್ಣಮೂತಿಯದು ಕೃಶವಾದ ಲಾಲಿತ್ಯಮಯ ದೇಹ. ಮುಂದಿನ ಹಂತದ ಯಮುನೆಯ ಶಿಲ್ಪದಲ್ಲಿ ಕೆಲವು ಮಾರ್ಪಾಡುಗಳಾಗಿವೆ. ಅದಕ್ಕೂ ಮುಂದಿನ ಹಂತದ ಶಿಲ್ಪಗಳು ಭಾರವಾದ ದೇಹಗಳುಳ್ಳವಾಗಿಯೂ ಸಡಿಲವಾಗಿಯೂ ಉಬ್ಬಿಕೊಂಡು ಇರುವುವಲ್ಲದೆ ಕೆಲವು ಭಾರಿ ಪೆಡಸಾಗಿರುತ್ತವೆ. ಇಂದ್ರ ಮತ್ತು ಬೃಹಸ್ಪತಿ ಶಿಲ್ಪಗಳು ಇವಕ್ಕೆ ಉತ್ತಮ ನಿದರ್ಶನ. ಅತ್ಯಂತ ಭಾರವಾದ ಶಲಾಕೆಯಂತೆ ಪೆಡಸಾದ ದೇಹವುಳ್ಳ ಅಂಥ ಶಿಲ್ಪಗಳು ಮುಂದಿನ ಹಂತದಲ್ಲಿ ಕಲಾಭಿರುಚಿಯಲ್ಲಿ ಉಂಟಾದ ಅವನತಿಯನ್ನು ಪ್ರತಿಬಿಂಬಿಸುತ್ತವೆ. ಅವುಗಳ ನಿರೂಪಣೆ ಬಹಳ ಒರಟು. ವಾಲಿ ಸುಗ್ರೀವರ ಕಾಳಗ, ಸಂಜೀವಿನಿ ಪರ್ವತವನ್ನು ಹೊತ್ತ ಹನುಮಾನ್ ಇವು ಈ ರೀತಿಯ ಶಿಲ್ಪಗಳು. ಬೋಗ್ರಾ ಜಿಲ್ಲೆಯ ದೇವೋರಾದ ಸೂರ್ಯಶಿಲ್ಪ ಬಂಗಾಲ ಶೈಲಿಯ ಭಾವಾವೇಶದ ಪ್ರತೀಕ. ದುಂಡಾದ ಪ್ರಭಾ ಮಂಡಲದ ಕೆಳಗೆ ದಂಡಿ, ಪಿಂಗಳ, ಉಷಾ ಮತ್ತು ಪ್ರತ್ಯುಷಾ ಇವರಿಂದ ಆವೃತನಾಗಿ ನಿಂತ ಸೂರ್ಯನ ಕೈಗಳಲ್ಲಿ ಕಮಲಗಳಿವೆ. ಅವನು ಕಿರೀಟ, ಕಂಠಹಾರ, ಕೈಕಡಗಗಳು ಮತ್ತು ಪಾದರಕ್ಷೆಗಳನ್ನು ಧರಿಸಿದ್ದಾನೆ. ಪೀಠದ ಮೇಲೆ ಸಪ್ತಾಶ್ವಗಳನ್ನೂ ಅರುಣನನ್ನೂ ತೋರಿಸಲಾಗಿದೆ. ಈ ಶಿಲ್ಪ ಮತ್ಸ್ಯಪುರಾಣದ ವರ್ಣನೆಗೆ ಅನುಸಾರವಾಗಿದೆ. ಮಹಾಸ್ತಾನದ, ಚಿನ್ನದ ಲೇಪವುಳ್ಳ, ಕಂಚಿನ ಸರಳಸುಂದರ ಭಾವಪೂರ್ಣ ಮಂಜುಶ್ರೀ ಶಿಲ್ಪದ ಕೈಗಳು ವರದ ಮತ್ತು ವಿತರ್ಕ ಮುದ್ರೆಗಳಲ್ಲಿವೆ. ಧೋತ್ರ, ನಡುಪಟ್ಟಿ, ಉತ್ತರೀಯ, ಯಜ್ಞೋಪವೀತ, ಕರ್ಣಕುಂಡಲಗಳು ಮತ್ತು ಬೆಳ್ಳಿಯ ಕಣ್ಣುಗಳನ್ನು ತೊಡಿಸಲಾಗಿದೆ. ಇದು ಚಿನ್ನದ ಲೇಪವುಳ್ಳ ಕಂಚಿನ ವಿಗ್ರಹಪದ್ಧತಿಯ ಮೊದಲ ನಿದರ್ಶನ. ಅನಂತರ ಕಾಲದಲ್ಲಿ ಟಿಬೆಟ್ ಮತ್ತು ಪೂರ್ವಭಾರತಗಳಲ್ಲಿ ಈ ಪದ್ಧತಿ ಪ್ರಸಾರವಾಯಿತು. ಚುದ್ದ ಗ್ರಾಮದ ರಾಣಿ ಪ್ರಭಾವತಿ ಮಾಡಿಸಿದ ಎಂಟು ಕೈಗಳ ಸರ್ವಾಣಿ ಮತ್ತು ಕಲ್ಕತ್ತೆಯ ವಸ್ತುಸಂಗ್ರಹಾಲಯದಲ್ಲಿರುವ ಶಿವ-ಈ ಕಂಚು ಶಿಲ್ಪಗಳು ಗುಪ್ತಶೈಲಿಯ ಸಾಧಾರಣ ಕೃತಿಗಳು. ಎಲ್ಲ ತಾಮ್ರ-ಕಂಚು ಶಿಲ್ಪಗಳನ್ನು 6-7ನೇ ಶತಮಾನಗಳಿಗೆ ನಿರ್ದೇಶಿಸಬಹುದು.
ಪಾಲ-ಸೇನರ ಕಾಲದ (750-1206) ಪಶ್ಚಿಮ ಬಂಗಾಲದ ಮೂರ್ತಿಶಿಲ್ಪ ಕಲೆ ವೈವಿಧ್ಯಪೂರ್ಣವಾದ್ದು. ಆಗಿನ ಶಿಲ್ಪಗಳು ರಾಜಮಹಲ್ ಬೆಟ್ಟಗಳಲ್ಲಿ ದೊರಕುವ ಕಪ್ಪು ಛಾಯೆಯ ಬಳಪದ ಕಲ್ಲಿನಲ್ಲಿ ಗುಪ್ತಶಿಲ್ಪಗಳ ಅನುಕರಣೆಯ, ಬೊಜ್ಜುದೇಹದ ಒರಟು ಶಿಲ್ಪಗಳನ್ನು ಮೊದಲು ತಯಾರಿಸಿದರು. ಫಲಕಗಳಲ್ಲಿರುವ ಉಬ್ಬುಶಿಲ್ಪಗಳು ಸರಳವಾಗಿಯೂ ಚಲನಾತ್ಮಕವಾಗಿಯೂ ಇದೆ. 10ನೆಯ ಶತಮಾನದ ವೇಳೆಗೆ ಉಡುಪುಗಳು, ಆಭರಣಗಳು ಮತ್ತು ಹಿನ್ನೆಲೆ ಸಂಪದ್ಭರಿತವೂ ಆಕರ್ಷಕವೂ ಆದುವು. ಶಕ್ತಿಯುತ ಕೃಶದೇಹ ಮತ್ತು ನೀಳ ಸ್ನಗ್ಧವದನದಿಂದ ಕೂಡಿದ ಮೂರ್ತಿಗಳು ಸತ್ವಪೂರ್ಣವಾಗಿವೆ. 11ನೆಯ ಶತಮಾನದ ವೇಳೆಗೆ ಮೇಲ್ನೋಟದ ಸೊಬಗಿಗೆ ಪ್ರಾಧಾನ್ಯದೊರಕಿ, ಶಿಲ್ಪಗಳು ನಿಸ್ಸತ್ತ್ವವಾದುವು. ಇವು ಅತಿ ನೀಳದೇಹ, ಅಸಹಜ ಸ್ನಿಗ್ಧತೆ, ಸೋಗಿನ ಚಲನೆ, ಅತ್ಯಲಂಕಾರದ ಉಡುಪು ಮತ್ತು ಆಭರಣಗಳಿಂದ ಕೂಡಿವೆ. ಪ್ರಾರಂಭದಲ್ಲಿ, ಅಕೃತ್ರಿಮ ಧಾರ್ಮಿಕ ಭಾವನೆಗಳಿಂದ ಪ್ರೇರಿತವಾದ ಶಿಲ್ಪಕಲೆ ಕ್ರಮೇಣ ಮತೀಯ ದೃಷ್ಟಿಯಲ್ಲಿ ಶುದ್ಧವಾಗಿದ್ದರೂ ಅಂತಸ್ಸತ್ವರಹಿತವಾಗಿ ರಾಜಾಸ್ಥಾನ ಸಹಜ ವಿಷಯಲಂಪಟತೆಯನ್ನು ಸೂಚಿಸುತ್ತವೆಂದರೆ ತಪ್ಪಾಗಲಾರದು.

ಈಗ ಬಾಸ್ಟನ್ ಸಂಗ್ರಹಾಲಯದಲ್ಲಿರುವ ಬುದ್ಧವಿಗ್ರಹ ಮೊದಲನೆಯ ಶೈಲಿಯ ಉತ್ತಮ ನಿದರ್ಶನ. ವಿಶ್ವಪದ್ಮಾಸನದ ಮೇಲೆ, ಭೂಮಿಸ್ಪರ್ಶಮುದ್ರೆಯಲ್ಲಿ ಕುಳಿತಿರುವ ಧ್ಯಾನಿಬುದ್ಧನ ಕಿರೀಟ. ಕಂಠಹಾರ, ಕರ್ಣಕುಂಡಲ ಮುಂತಾದ ಆಭರಣಗಳು ಅಸಹಜವಾದರೂ, ಮಹಾಯಾನ ಪಂಥದಲ್ಲಿ ನಡೆದ ಬುದ್ಧನ ದೈವೀಕರಣದ ಪ್ರಯತ್ನದಲ್ಲಿ ವಿಶ್ವಸಮ್ರಾಟನ ನಿರೂಪಣೆ ಸಹಜವಾಗಿದೆ. ಆ ಶಿಲ್ಪದ ಪ್ರಭಾವಳಿಯಲ್ಲಿ ಗೌತಮನ ಜನನ, ಮಹಾಪರಿನಿರ್ವಾಣ, ಮೊದಲಾದ ಕೆಲವು ಘಟನೆಗಳನ್ನೂ ಪೀಠದ ಮೇಲೆ ಭಕ್ತರ ಮತ್ತು ಯಕ್ಷರ ಮೂರ್ತಿಗಳನ್ನೂ ಕಡೆಯಲಾಗಿದೆ. ಕಲ್ಕತ್ತೆಯ ವಂಗೀಯ ಸಾಹಿತ್ಯ ಪರಿಷತ್ತಿನ ಸಂಗ್ರಹಾಲಯದಲ್ಲಿರುವ, ವಿಶ್ವಪದ್ಮಾಸನದ ಮೇಲೆ ಸಮಪಾದ ಸ್ಥಾನಕ ಭಂಗಿಯಲ್ಲಿ ನಿಂತ ಬುದ್ಧಶಿಲ್ಪದ ಪೀಠದ ಮೇಲೆ 9ನೆಯ ಶತಮಾನದ ಅಕ್ಷರಗಳಲ್ಲಿ `ಯೇ ಧರ್ಮಃ ಹೇತು ಪ್ರಭವಾ. . . .ಮಹಾಶ್ರವಣಃ ಎಂಬ ಬೌದ್ಧತತ್ತ್ವದ ಬರಹವಿದೆ. ಅದರ ಪ್ರಭಾವಳಿಯ ಮೇಲೆ ಅಪೂರ್ವವಾದ ಯೋಗಾಸನ ಮುದ್ರೆಯಲ್ಲಿ ಕುಳಿತ ಬುದ್ಧನ ತೊಡೆಗಳ ಮೇಲೆ ಸೇರಿಸಲಾದ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನಿಡಲಾಗಿದೆ. ಪೀಠದ ಮೇಲೆ ಒಂದು ಮಂಗ ಮರದ ಮೇಲಿನ ಜೇನುಗೂಡಿನಿಂದ ಜೇನನ್ನು ತಂದು ಪಾತ್ರೆಯಲ್ಲಿ ಹಾಕುತ್ತಿರುವಂತೆ ರೂಪಿಸಲಾಗಿದೆ.

ಮಿಡ್ನಾಪುರ ಜಿಲ್ಲೆಯ ಬಾರಾಭೂಮ್‍ನಲ್ಲಿ ಸಿಕ್ಕಿದ, ಈಗ ಇಂಡಿಯನ್ ಸಂಗ್ರಹಾಲಯದಲ್ಲಿರುವ, ಋಷಭನಾಥನ ಶಿಲ್ಪ 10ನೆಯ ಶತಮಾನದ್ದು. ಗುಡಿಯ ಆಕಾರದ ಫಲಕದ ಮಧ್ಯದಲ್ಲಿ ಧ್ಯಾನಾಸಕ್ತನಾದ ಋಷಭನಾಥನ ಸುತ್ತ 23 ಜಿನಬಿಂಬಗಳಿವೆ. ಇಬ್ಬದಿಗಳಲ್ಲಿ ಚಾಮರಧಾರಿಗಳನ್ನೂ ಹಾರುತ್ತಿರುವ ಮಾಲಾಧಾರಿ ವಿದ್ಯಾಧರರನ್ನೂ ಪೀಠದ ಮೇಲೆ ಎರಡು ಸಿಂಹಗಳನ್ನೂ ಕೆಳಭಾಗದಲ್ಲಿ ವೃಷಭ ಮತ್ತು ಭಕ್ತದಂಪತಿಗಳನ್ನೂ ಅಂದವಾಗಿ ಕೆತ್ತಲಾಗಿದೆ. ಕಾಯೋತ್ಸರ್ಗ ಮುದ್ರೆಯಲ್ಲಿ ನಿಂತಿರುವ ಪಾಶ್ರ್ವನಾಥ ಮತ್ತು ಶಾಂತಿನಾಥರ ಶಿಲ್ಪಗಳ ಮೇಲೆ ನವಗ್ರಹಗಳನ್ನು ಕೆತ್ತಿರುವ 10-11ನೆಯ ಶತಮಾನದ ಶಿಲ್ಪಗಳು ಹಲವು ಎಡೆಗಳಲ್ಲಿ ದೊರಕಿವೆ.

ಈ ಕಾಲಕ್ಕೆ, ಸೇರುವ, ಪಶ್ಚಿಮ ಬಂಗಾಲದಲ್ಲಿ ದೊರಕಿರುವ, ಶಿವ-ಪಾರ್ವತಿಯರ ನಿರೂಪಣೆಯ ಅಥವಾ ಕಲ್ಯಾಣ ಸುಂದರ ಶಿಲ್ಪಗಳು ದಕ್ಷಿಣ ಭಾರತದ ಅಂಥ ಮೂರ್ತಿಗಳಷ್ಟು ರಮಣೀಯವಾಗಿಲ್ಲವಾದರೂ ಸ್ಥಳೀಯ ವೈವಾಹಿಕ ಪದ್ಧತಿಗಳನ್ನು ತಿಳಿಯಲು ಸಹಾಯಕವಾಗಿವೆ. 10 ಅಥವಾ 12 ಕೈಗಳುಳ್ಳ, ಪರಿವಾರಗಣಗಳಿಂದ ಸುತ್ತುವರಿಯಲ್ಪಟ್ಟ ನಟರಾಜ ತನ್ನ ವಾಹನವಾದ ನಂದಿಯ ಮೇಲೆ ನೃತ್ಯವಾಡುತ್ತಿರುವಂತೆ ತೋರಿಸುವ ಸತ್ತ್ವಪೂರ್ಣಶಿಲ್ಪಗಳು ಹಲವಾರು ಸಿಕ್ಕಿವೆ. ಕರಾಳರೂಪಿ ವಿರೂಪಾಕ್ಷನ ಮೂರ್ತಿ, ಸೇನ ದೊರೆಗಳ ಇಷ್ಟದೈವವಾದ ಪಂಚಮುಖಿ ದಶಬಾಹು ಸದಾಶಿವ ಈ ಸುಂದರಶಿಲ್ಪಗಳು ಸೇನರ ಕಾಲದವು. 11-12ನೆಯ ಶತಮಾನಗಳಿಗೆ ಸೇರಿದ ಚತುರ್ಭುಜ, ಗಜಲಕ್ಷ್ಮಿ, ಸರಸ್ವತಿ, ಸಿಂಹವಾಹಿನಿ, ದುರ್ಗೆ, ಆಸೀನ ಮಹಾಲಕ್ಷ್ಮಿ. ಲಿಂಗೋದ್ಭವಳಾದ, ಧ್ಯಾನಮುದ್ರೆಯಲ್ಲಿರುವ ಮಹಾಮಾಯೆ, ಚಾಮುಂಡಿ ಮುಂತಾದ ದೇವೀಮೂರ್ತಿಗಳು ಅನೇಕ ಸ್ಥಳಗಳಲ್ಲಿ ಸಿಕ್ಕಿವೆ.

ವಿವಿಧ ಪ್ರದೇಶಗಳಲ್ಲಿ ದೊರಕಿರುವ, ಪಶ್ಚಿಮ ಬಂಗಾಲದ ಅವನತಮುಖ ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ, ಮೂಷಿಕವಾಹನ ಷಡ್ಭುಜ ಗಣೇಶ, ಹೇರಂಬ ಗಣಪತಿ, ಸೂರ್ಯ, ಸೂರ್ಯನಾರಾಯಣ, ನವಗ್ರಹಗಳು ಮೊದಲಾದ ಶಿಲ್ಪಕೃತಿಗಳು ಇಂಡಿಯನ್ ವಸ್ತುಸಂಗ್ರಹಾಲಯದಲ್ಲಿವೆ. 8-13ನೆಯ ಶತಮಾನಗಳ ಪಶ್ಚಿಮ ಬಂಗಾಲದ ಶಿಲ್ಪಕಲೆಯ ಸೌಮ್ಯತೆ-ಲಾವಣ್ಯಗಳು ಯಾಂತ್ರಿಕವಾದರೂ ಅವುಗಳಲ್ಲಿ ತಾಂತ್ರಿಕ ಕೌಶಲವನ್ನು ಕಾಣಬಹುದು.

ಪಶ್ಚಿಮ ಬಂಗಾಲದಲ್ಲಿ ನಾಣ್ಯಗಳ ಬಳಕೆ ಕ್ರಿ.ಪೂ 3ನೆಯ ಶತಮಾನದಲ್ಲಿ ಪ್ರಾರಂಭವಾಗಿರಬಹುದೆಂದು ಕಾಣುತ್ತದೆ. ಮಹಾಸ್ತಾನ ಶಾಸನದಲ್ಲಿ 4 ಕವಡೆಗಳ ಮೌಲ್ಯದ ಗಂಡಕ ಮತ್ತು ಕಾರ್ಷಾಪಣದ 1/64 ಭಾಗವಾದ ಕಾಕನಿಕ ನಾಣ್ಯಗಳು ಉಲ್ಲೇಖವಿದೆ. ಮೌರ್ಯರ ಕಾಲದ ಬೆಳ್ಳಿಯ ಮುದ್ರಾಂಕಿತ ನಾಣ್ಯಗಳು 2.54 ಸೆಂಮೀ ವ್ಯಾಸದ ತೆಳ್ಳನೆಚಿiÀು ವೃತ್ತಾಕಾರದವು. ಅವುಗಳ ಮೇಲೆ ರೇಖಾವಿನ್ಯಾಸ, ಪ್ರಾಣಿ, ಕದಿರುಬಿಲ್ಲೆ ಮತ್ತು ಆರು ಬಾಹುಗಳ ಚಿಹ್ನೆಗಳಿರುತ್ತಿದ್ದುವು. ಅವು 50ರಿಂದ 54 ಗ್ರೇನ್‍ಗಳಷ್ಟು ತೂಕವಾಗಿರುತ್ತಿದ್ದುವು. ವಿರಳವಾದರೂ ತಾಮ್ರದ ಮುದ್ರಾಂಕಿತ ನಾಣ್ಯಗಳೂ ಬಳಕೆಯಲ್ಲಿದ್ದುವು. ಕುಷಾಣರ ಚಿನ್ನದ ಮತ್ತು ತಾಮ್ರದ ಮುದ್ರಾಂಕಿ ನಾಣ್ಯಗಳೂ ಬಳಕೆಯಲ್ಲಿದ್ದುವು. ಕುಷಾಣರ ಚಿನ್ನದ ಮತ್ತು ತಾಮ್ರದ ನಾಣ್ಯಗಳೂ ದೊರಕಿವೆ. ಪೆರಿಪ್ಲಸ್ ಗ್ರಂಥದಲ್ಲಿ ಹೇಳಿರುವ ಕಾಲ್ಟಿಸ್ ಬಹುಶಃ ಕುಷಾಣರ ಚಿನ್ನದ ನಾಣ್ಯ. ಆ ಪ್ರದೇಶದಲ್ಲಿ ಗುಪ್ತರ ಕಾಲದಲ್ಲಿ ಅವರ ಚಿನ್ನದ ನಾಣ್ಯಗಳ ಬಳಕೆ ಹೆಚ್ಚಾಗಿತ್ತು. ಗುಪ್ತರ ಮೊದಲ ನಾಣ್ಯಗಳು ಕುಷಾಣರ ಅನುಕರಣೆಯವಾಗಿದ್ದರೂ ಕ್ರಮೇಣ ಅವರು ಕಲಾತ್ಮಕವಾದ ಅನೇಕ ಹೊಸ ರೀತಿಯ ನಾಣ್ಯಗಳನ್ನು ಹೊರಡಿಸಿದರು. ಅವರ 17-18 ಬಗೆಯ ನಾಣ್ಯಗಳ ಪೈಕಿ ಬಿಲ್ಲುಗಾರ ನಾಣ್ಯವನ್ನು ಎಲ್ಲ ದೊರೆಗಳೂ ಹೊರಡಿಸಿದರು. ಅವರ ನಾಣ್ಯಗಳ ಹಿಮ್ಮುಖದಲ್ಲಿ, ಕುಳಿತ ಅಥವಾ ನಿಂತ ದೇವಿಯ ಚಿತ್ರ ಸಾಮಾನ್ಯವಾಗಿರುತ್ತಿತ್ತು. ಕ್ಷತ್ರಪರ ಅನುಕರಣೆಯ ಬೆಳ್ಳಿಯ ನಾಣ್ಯಗಳನ್ನು 2ನೆಯ ಚಂದ್ರಗುಪ್ತ ಮೊದಲಿಗೆ ಹೊರಡಿಸಿದನಾದರೂ ಬಂಗಾಲದಲ್ಲಿ ಅವು ಸ್ಕಂಧಗುಪ್ತನ ತರುವಾಯ ರೂಢಿಗೆ ಬಂದರುವು. ಗುಪ್ತರ ತಾಮ್ರದ ನಾಣ್ಯಗಳು ಈ ಪ್ರದೇಶದಲ್ಲಿ ವಿರಳ. ಆ ಕಾಲದ ಬಂಗಾಲದ ಶಾಸನಗಳಲ್ಲಿ ದೀನಾರ ಮತ್ತು ಬೆಳ್ಳಿಯ ರೂಪಕ ನಾಣ್ಯಗಳ ಉಲ್ಲೇಖಗಳಿವೆ. ಒಂದು ದೀನಾರ 16 ರೂಪಕಗಳಿಗೆ ಸಮವೆಂದು ತಿಳಿಸಲಾಗಿದೆ. 6ನೆಯ ಶತಮಾನದ ಉತ್ತರಾರ್ಧದಲ್ಲಿ ಗುಪ್ತನಾಣ್ಯಗಳ ಅನುಕರಣೆಯ ಚಿನ್ನದ ನಾಣ್ಯಗಳು-ಮುಖ್ಯವಾಗಿ ಬಿಲ್ಲುಗಾರ ಮಾದರಿ-ಬಂಗಾಲದಲ್ಲಿ ಚಲಾವಣೆಗೆ ಬಂದುವು. ಸಮಾಚಾರದೇವ ಮತ್ತು ಜುಗುಪ್ತರ ಅಂಥ ನಾಣ್ಯಗಳ ಹಿಂಬದಿಯಲ್ಲಿ ಲಕ್ಷ್ಮಿ ಅಥವಾ ಗಜಲಕ್ಷ್ಮಿಯವರ ಚಿತ್ರಗಳಿವೆ. ಸಮಾಚಾರದೇವನ ಕೆಲವು ನಾಣ್ಯಗಳ ಮುಮ್ಮುಖದಲ್ಲಿ ದೊರೆ ರಾಜಲೀಲಾ ಮುದ್ರೆಯಲ್ಲಿ ಕುಳಿತಂತೆಯೂ ಹಿಮ್ಮುಖದಲ್ಲಿ ಕುಳಿತ ಸರಸ್ವತಿಯ ಚಿತ್ರವೂ ಇವೆ. ಶಶಾಂಕನ ಕಾಲದಲ್ಲಿ ಬಳಕೆಗೆ ಬಂದ ಬೆರಕೆ ಚಿನ್ನದ ನಾಣ್ಯಗಳ ಮುಮ್ಮುಖದಲ್ಲಿ ಮೇಲೆ ಒರಗಿನಿಂತ ಶಿವನ, ಮತ್ತು ಹಿಮ್ಮುಖದಲ್ಲಿ ಕುಳೀತ ಗಜಲಕ್ಷ್ಮಿಯ ಚಿತ್ರಗಳಿದ್ದುವು. ಈ ಬೆರಕೆ ಚಿನ್ನದ ನಾಣ್ಯಗಳು 7-8ನೆಯ ಶತಮಾನಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದುವು. ಅವುಗಳ ಮುಮ್ಮುಖದಲ್ಲಿ ಧನುರ್ಧಾರಿಯಾಗಿ ನಿಂತ ಅರಸ, ಹಿಮ್ಮುಖದಲ್ಲಿ ನಿಂತ ದೇವಿ ಮತ್ತು ಇಬ್ಬದಿಗಳಲ್ಲೂ ಕೆಲವು ಅಸ್ಪಷ್ಟ ಶಾಸನಗಳು ಇರುತ್ತಿದ್ದುವು. 8ನೆಯ ಶತಮಾನದ ಒಂದು ನಾಣ್ಯದ ಮುಂಬದಿಯಲ್ಲಿ ಅವಲೋಕಿತೇಶ್ವರನ ಮುಂದೆ ಅಂಜಲಿ ಹಸ್ತನಾದ ದೊರೆಯ ಚಿತ್ರವೂ ಹಿಂಬದಿಲಯಲ್ಲಿ ಗಜಧ್ವಜದ ಚಿತ್ರವೂ ಶ್ರೀವಿಂಧ್ಯಶಕ್ತಿ ಎಂಬ ಬರಹವೂ ಇವೆ. 9ನೆಯ ಶತಮಾನದ ದೇವಪಾಲನ ನಾಣ್ಯಗಳ ಮೇಲೆ ಧನುರ್ಬಾಣಧಾರಿ ದೊರೆಯ ಮತ್ತು ಹಿಂಬದಿಯಲ್ಲಿ ಲಕ್ಷ್ಮಿಯ ಚಿತ್ರಗಳಿವೆ. ಶ್ರೀವಿಗ್ರ ಅಥವಾ ವಿಗ್ರ ಎಂಬ ಶಾಸನವುಳ್ಳ ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳು ವಿಗ್ರಹ ಪಾಲನವಿರಬಹುದು. ಪಾಲರ ಶಾಸನಗಳಲ್ಲಿ ದ್ರಮ್ಮನಾಣ್ಯದ ಉಲ್ಲೇಖವಿದೆ. ಸೇನರ ಶಾಸನಗಳಲ್ಲಿ ಉಲ್ಲೇಖಿಸಿರುವ ಪುರಾಣ ಮತ್ತು ಕಪರ್ದಕ ಪುರಾಣಗಳು ಕವಡೆಯ ಬೆಲೆಯವೆಂದೂ, ನಾಕಾಯಾನದ ತೆರ ಕೊಡಲು ಇವನ್ನು ಬಳಸಲಾಗುತ್ತಿತ್ತೆಂದೂ ಹೇಳಲಾಗಿದೆ. ಪುರಾಣ ಮತ್ತು ಕಪರ್ದಕ ಪುರಾಣಗಳು ಬೆಳ್ಳಿಯ ನಾಣ್ಯಗಳೆಂದು ಭಂಡಾರ್ಕರ್ ಭಾವಿಸಿದ್ದಾರೆ. ಅವು ನಾಣ್ಯಗಳಲ್ಲ, ಕವಡೆಯ ಬೆಲೆಯಲ್ಲಿ ಸೂಚಿಸುತ್ತಿದ್ದ ಮೌಲ್ಯಮಾಪನವೆಂಬುದಾಗಿ ಎಸ್.ಕೆ.ಚಟರ್ಜಿ ವಾದಿಸಿದ್ದಾರೆ.
ದೆಹಲಿಯ ಸುಲ್ತಾನರ ಆಳ್ವಿಕೆಯಲ್ಲಿ ಬಂಗಾಲವೂ ಸೇರಿದಂತೆ ಇಡೀ ರಾಜ್ಯದಲ್ಲಿ ಏಕರೂಪದ ನಾಣ್ಯಪದ್ಧತಿಯನ್ನು ಜಾರಿಗೆ ತಂದರು. ಆದರೆ ಕೆಲವು ಬಾರಿ ದೆಹಲಿಯ ಸುಲ್ತಾನರು ಪಶ್ಚಿಮ ಬಂಗಾಲದ ಟಂಕಸಾಲೆಯಲ್ಲಿ ನಾಣ್ಯಗಳನ್ನು ತಯಾರಿಸುತ್ತಿದ್ದರು; ಅಥವಾ ಅವರು ಬಂಗಾಲಕ್ಕಾಗಿ ವಿಶಿಷ್ಟವಾದ ನಾಣ್ಯಗಳನ್ನು ಹೊರಡಿಸುತ್ತಿದ್ದುದುಂಟು. ಅಲ್ಲದೆ ಆಗಾಗ್ಗೆ ಸ್ವತಂತ್ರ ಬಂಗಾಲದ ನವಾಬರು ತಮ್ಮ ಪ್ರತ್ಯೇಕ ನಾಣ್ಯಗಳನ್ನು ಬಳಸುತ್ತಿದ್ದರು.

ಗುಲಾಮೀ ಸಂತತಿಯ ರಜಿûಯಾ ಬೇಗಮಳ ಕಾಲದಲ್ಲಿ ಲಖ್ನೌತಿಯ ಹೆಸರಿನಲ್ಲಿ ಮುದ್ರಿಸಿದ ನಾಣ್ಯಗಳು ದೊರಕಿವೆ. ತುಗಲಕ್ ಮಹಮ್ಮದನ ಕಾಲದಲ್ಲೂ ಲಖ್ನೌತಿಯ ಹೆಸರಿನಲ್ಲಿ ಮುದ್ರಿಸಿದ ನಾಣ್ಯಗಳು ದೊರಕಿವೆ. ತುಗಲಕ್ ಮಹಮ್ಮದನ ಕಾಲದಲ್ಲೂ ಲಖ್ನೌತಿಯ ಟಂಕಸಾಲೆಯಲ್ಲಿ ಚಿನ್ನದ, ಬೆಳ್ಳಿಯ ಮತ್ತು 1329ರ ಅನಂತರ ತಾಮ್ರದ, ನಾಣುಗಳನ್ನು ಹೊರಡಿಸಲಾಗಿತ್ತು. ಮೊದಲ ನಾಣ್ಯಗಳ ಮೇಲೆ ಅಂದವಾದ ಅಲ್ ಶಹೀದ್ ಘಿಯಾಸುದ್ದೀನ್ ತುಗಲಕ್ ಎಂಬ, ಮತ್ತು ಅನಂತರಕಾಲದ ನಾಣ್ಯಗಳ ಮೇಲೆ ಕಲಿಮಾದ, ಬರಹ ಇರುತ್ತಿತ್ತು. ಮೊದಲ ನಾಣ್ಯಗಳ ತೂಕ 170 ಗುಂಜಿಗಳು. ಅನಂತರಕಾಲದ ನಾಣ್ಯಗಳು 201.5 ಗುಂಜಿ ತೂಕವಿರುತ್ತಿದ್ದುವು. ಬೆಳ್ಳಿಯ ನಾಣ್ಯಗಳ ತೂಕ 144 ಗುಂಜಿಗಳು. 1327ರ ಅನಂತರ ಬೆರಕೆ ಬೆಳ್ಳಿಯ ಟಂಕನಾಣ್ಯಗಳನ್ನು ಹೊರಡಿಸಲಾಯಿತು. ಮುಮ್ಮುಖದಲ್ಲಿ ಕಲಿಮಾ ಮತ್ತು ಕಲೀಫರ ಹೆಸರ ಮತ್ತು ಹಿಂಬದಿಯಲ್ಲಿ ತನ್ನ ಹೆಸರು, ಟಂಕಸಾಲೆಯ ಹೆಸರು, ನಾಣ್ಯ ಹೊರಡಿಸಿದ ವರ್ಷದ ಉಲ್ಲೇಖ ಇದ್ದ ಬೆರಕೆ ಬೆಳ್ಳಿಯ ಮತ್ತು ತಾಮ್ರದ ನಾಣ್ಯಗಳನ್ನು ಷೇರ್ ಷಾ ಪಾಂಡುವ ಟಂಕಸಾಲೆಯಿಂದ ಹೊರಡಿಸಿದ. 180 ಗುಂಜಿ ತೂಕದ ಆ ಬೆಳ್ಳಿಯ ರುಪಿಯಾಗಳು ಭಾರತದ ಮೊದಲ ರೂಪಾಯಿಗಳು. ಅವನ ತಾಮ್ರದ ಪೈಸಾಗಳು ಭಾರತದ ಮೊದಲ ಪೈಸೆ.

ಪಶ್ಚಿಮ ಬಂಗಾಲದ ಸ್ವತಂತ್ರರಾದ. ಅಥವಾ ಹೆಸರಿಗೆ ದೆಹಲಿ ದರ್ಬಾರಿಗೆ ಅಧೀನರಾಗಿದ್ದ, ನವಾಬರಲ್ಲಿ ಘಿಯಾಸುದ್ದೀನ್ ಇವಾeóï (1211-1226), ಮುಘಿಸುದ್ದೀನ್ ಯುeóïಬಾಕ್ (1246-1258), ರುಕ್ನುದ್ದೀನ್ ಕಾಯಿಕುಸ್ (1291-1302), ಷಂಷುದ್ದೀನ್ ಫಿರೋeóï ಷಾ (1302-1318), ಷಿಹಾಬುದ್ದೀನ್ ಬುಘ್ರಾ ಷಾ (131) ಮತ್ತು ಘಿಯಾಸುದ್ದೀನ್ ಬಹದೂರ್ ಷಾ (1310-23) ಇವರು ತಮ್ಮ ಪ್ರತ್ಯೇಕ ಬೆಳ್ಳಿ ನಾಣ್ಯಗಳನ್ನು ಹೊರಡಿಸಿದ್ದರು. ಷಂಷುದ್ದೀನ್ ಫಿರೋeóï ಷಾನ ಕೆಲವು ಚಿನ್ನದ ನಾಣ್ಯಗಳೂ ಸಿಕ್ಕಿವೆ. ಮೊದಲಿಬ್ಬರ ನಾಣ್ಯಗಳ ಮುಮ್ಮುಖದಲ್ಲಿ ಕಲಿಮಾ ಮತ್ತು ವರ್ಷ ಹಿಂಬದಿಯಲ್ಲಿ ನವಾಬನ ಹೆಸರು ಮತ್ತು ಬಿರುದು ಇರುತ್ತಿದ್ದುವು. ಕಲಿಮಾದ ಬದಲು ಕಲೀಫರ ಮತ್ತು ಅಲ್ ಮುಸ್ಟಸಿಮ್ ಬರಹಗಳನ್ನು ಕೊನೆಯ ನಾಲ್ವರು ಬಳಸಿದ್ದರು.

ಇಲಿಯಾಸ್ ಷಾಹಿ ನವಾಬರ ಕಾಲದಿಂದ 1556ರ ವರೆಗೆ ಆಳಿದ ಆರು ಮನೆತನಗಳ ನವಾಬರು ದೆಹಲಿಯ ನಾಣ್ಯ ಪದ್ಧತಿಯನ್ನು ಅನುಸರಿಸಿದರೂ ಅವರ ನಾಣ್ಯಗಳ ಅಂಚುಗಳಲ್ಲಿದ್ದ ಚಿಹ್ನೆಗಳು ಬೇರೆಯಾಗಿದ್ದುವು. ಮುಂಬದಿಯಲ್ಲಿ ಕಲೀಫರ ಹೆಸರು ಮತ್ತು ಇಸ್ಲಾಮಿಗೆ ಸಂಬಂಧಿಸಿದ ಬರಹಗಳಿರುತ್ತಿದ್ದುವು. ಜಲಾಲುದ್ದೀನನ ನಾಣ್ಯಗಳ ಮೇಲೆ ಕಲಿಮಾ, ಅದರ ಕೆಳಗೆ ಟಂಕಸಾಲೆಯ ಅಂಕಿತ ಮತ್ತು ವರ್ಷದ ಉಲ್ಲೇಖ ಇರುತ್ತಿದ್ದುವು. ಹುಸೇನ್ ಷಾಹ ಮತ್ತು ಅವನ ಉತ್ತರಾಧಿಕಾರಿಗಳು ತಮ್ಮ ನಾಣ್ಯಗಳ ಇಬ್ಬದಿಗಳಲ್ಲೂ ತಮ್ಮ ಬಿರುದುಗಳನ್ನು ಅರಬ್ಬಿ ಭಾಷೆಯಲ್ಲಿ ಬರೆಸುತ್ತಿದ್ದರು. ರಾಜಾ ಗಣೇಶ ಮತ್ತಿತರ ಹಿಂದೂ ದೊರೆಗಳ ನಾಣ್ಯಗಳ ಮೇಲೆ ಬಂಗಾಲಿ ಬರಹ ಮತ್ತು ಶಕವರ್ಷ ಇರುತ್ತಿದ್ದುವು. ಅವುಗಳ ತೂಕ-166-170 ಗುಂಜಿಗಳು.

ಪಶ್ಚಿಮ ಬಂಗಾಲ 1556ರಲ್ಲಿ ಅಕ್ಬರನ ವಶವಾದ ಮೇಲೆ ಮೊಗಲ್ ನಾಣ್ಯಪದ್ಧತಿ ರೂಢಿಗೆ ಬಂತು. ಆದರೆ ಷಾಹಜಹಾನನ ಮಗ ಷಾ ಷೂಜಾ ಅಲ್ಲಿಯ ಪ್ರಾಂತ್ಯಾಧಿಕಾರಿಯಾಗಿದ್ದಾಗ (1656-57) ಅಲ್ಲಿಯ ಅಕ್ಬರ್ ನಗರದಿಂದ ಒಂದು ಕಡೆ ಕಲಿಮಾ ಮತ್ತು ಕಲೀಫನ ಹೆಸರು, ಮತ್ತೊಂದು ಕಡೆ ತನ್ನ ಹೆಸರು ಮತ್ತು ಬಿರುದುಗಳು ಇದ್ದ ಪ್ರತ್ಯೇಕ ಚೌಕಾಕಾರದ ನಾಣ್ಯಗಳನ್ನು ಹೊರಡಿಸಿದ್ದನೆಂದು ತಿಳಿದುಬರುತ್ತದೆ.

ಭಾರತಕ್ಕೆ ಬಂದ ಯೂರೋಪಿಯನ್ ವರ್ತಕರು ಪಶ್ಚಿಮ ಬಂಗಾಲದಲ್ಲಿ ತಮ್ಮ ವ್ಯಾಪಾರದ ಕೋಠಿಗಳನ್ನು ಸ್ಥಾಪಿಸಿ ತಮ್ಮ ನಾಣ್ಯಗಳನ್ನು ಬಳಸಲಾರಂಭಿಸಿದರು. ಪೋರ್ಚುಗೀಸರು ಚಿನ್ನದ ಮೆನೊಯಲ್, ಬೆಳ್ಳಿಯ ಎಸ್ಪೆರ, ಬಸ್ತಿಯದ್ ಅಥವಾ ಸೆರಾಫಿಮ್ ಮತ್ತು ಟಂಗ ನಾಣ್ಯಗಳನ್ನು ಬಳಸುತ್ತಿದ್ದರು. 1611ರ ಅನಂತರ ತಾಮ್ರದ ಬುeóÁ ರುಕ್ಕೋಸ್ ನಾಣ್ಯಗಳನ್ನು ಹೊರಡಿಸಿದರು. ಡಚ್ಚರು ತಮ್ಮ ವಸಾಹತುಗಳಲ್ಲಿ ಮುಂಬದಿಯಲ್ಲಿ ಖಡ್ಗಧಾರಿ ಕುದುರೆ ಸವಾರನ ಚಿತ್ರ, ಹಿಂಬದಿಯಲ್ಲಿ ಎರಡು ಸಿಂಹಗಳ ಮೇಲೆ ರಾಜಚಿಹ್ನೆ ಮತ್ತು ಕೆಲವು ಬರಹಗಳು ಇದ್ದ ಬೆಳ್ಳಿಯ ಡುಕಾಟೂನ್ಸ್ ನಾಣ್ಯಗಳನ್ನು ಬಳಸುತ್ತಿದ್ದರು. ಡೇನರು ಸೀಸ ಮತ್ತು ತಾಮ್ರದ 10.2 ಮತ್ತು 1 ಕಾಸುಗಳನ್ನು ಬೆಳ್ಳಿಯ ಪಣಮ್ ಮತ್ತು ಚಿನ್ನದ ಪಗೋಡಗಳನ್ನು ಮತ್ತು ತಮ್ಮ ಮಾತೃಭೂಮಿಯಲ್ಲಿ ಚಲಾವಣೆಯಲ್ಲಿದ್ದ ಚಿನ್ನದ ಡುಕಾಟ್ಸ್ ನಾಣ್ಯಗಳನ್ನು ಬಳಸುತ್ತಿದ್ದರು. ಫ್ರೆಂಚರು ಚಂದ್ರನಗರ್‍ನಿಂದ ತಮ್ಮ ನಾಣ್ಯಗಳನ್ನು ಹೊರಡಿಸುತ್ತಿದ್ದರೆಂದು ಹೇಳಲಾಗಿದ್ದರೂ ಅವು ಈವರೆಗೆ ಸಿಕ್ಕಿಲ್ಲ. ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಮೊದಲಿಗೆ ಸ್ಥಳೀಯ ನಾಣ್ಯಗಳನ್ನು ಬಳಸುತ್ತಿತ್ತು. 1764ರ ಅನಂತರ ಕಲ್ಕತ್ತದ ಮುರ್ಷಿದಾಬಾದ್ ಟಂಕಸಾಲೆಯನ್ನು ಸ್ಥಾಪಿಸಿ ಅಲ್ಲಿಂದ ಸ್ವಂತ ನಾಣ್ಯಗಳನ್ನು ಹೊರಡಿಸಲಾರಂಭಿಸಿತು. 1835ರಿಂದ ಇಡೀ ಭಾರತ ಬ್ರಿಟಿಷ್ ಪ್ರದೇಶಗಳಲ್ಲಿ ಏಕರೂಪದ ನಾಣ್ಯಪದ್ಧತಿ ಜಾರಿಗೆ ಬಂತು. 1947ರ ಅನಂತರ ಸ್ವತಂತ್ರ ಭಾರತದ ನಾಣ್ಯಪದ್ಧತಿ ಜಾರಿಯಲ್ಲಿದೆ.




#Article 203: ಅಸ್ಸಾಂ (854 words)


(ಬ್ಲಾಗ್ ಮಾದರಿಯ ಪ್ರಬಂಧ ?) 

[೧][೨][೩][೪]

ಅಸ್ಸಾಮ್ನುಲ್ಲಿ ಒಟ್ಟು ೨೭ ಜಿಲ್ಲೆಗಳು ಇವೆ.ಇವುಗಳನ್ನು ಸ್ಥೂಲವಾಗಿ ಕೇಂದ್ರ ಅಸ್ಸಾಂ ಜಿಲ್ಲೆಗಳು,ಪಶ್ಚಿಮ ಅಸ್ಸಾಂ ಜಿಲ್ಲೆಗಳು, ಉತ್ತರ ಅಸ್ಸಾಂ ಜಿಲ್ಲೆಗಳು ಮತ್ತು ದಕ್ಷಿಣ ಅಸ್ಸಾಂ ಜಿಲ್ಲೆಗಳು ಎಂದು ವಿಭಾಗಿಸಬಹುದು.

ಪಶ್ಚಿಮ ಅಸ್ಸಾಮ್ನಜಲ್ಲಿ ಬರುವ ಈ ಜಿಲ್ಲೆರಾಜ್ಯದ ರಾಜಧಾನಿ ಡಿಸ್ಪುರರದಿಂದ ೫೦೦ ಕಿಮಿ ದೂರವಿದೆ.ಗೇರುಕಾ ಮುಖ್ ಎಂಬ ಸ್ಥಳ ಜಿಲ್ಲಾ ಕೇಂದ್ರದಿಂದ ೪೪ ಕಿಮಿ ದೂರವಿದೆ.ಇದು ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಸ್ಥಳ.ಇಲ್ಲಿ ಜಲ ವಿದ್ಯುದಾಗಾರವೊಂದಿದೆ.

ಧೇಮ್ ಜಿಯಿಂದ ೪೨ ಕಿಮಿ ದೂರವಿದೆ.ಇಲ್ಲಿ ಮಾಲಿನಿ ದೇವಿಯ ಪುರಾತನ ಮಂದಿರವಿದೆ.ಪುರಾತನ ಇತಿಹಾಸದ ಪಳೆಯುಳಿಕೆಗಳು ಉತ್ಖನನದಿಂದ ದೊರೆತಿವೆ.

ಜಿಲ್ಲಾ ಕೇಂದ್ರದಿಂದ ೨೫ ಕಿಮಿ ದೂರವಿದೆ. ಅಹೋಂ ಅರಸ ಗೌರಿನಾಥ ಸಿಂಘಾ ನಿರ್ಮಿಸಿದನೆಂದು ಹೇಳಲಾದ ಕಟ್ಟಡ ಇದೆ. ಇದರೊಂದಿಗೆ ರಾಜ್ಘತರ್,ಘರಾಕಿಯಾ ಥಾನ್ ಮತ್ತು ರಾಜ್ ಘರ್ ಆಲಿ ನೋಡಬಹುದಾದ ಸ್ಥಳಗಳು.

ಗೌಹಾತಿಯಿಂದ ೫೦೦ ಕಿಮಿ ದೂರವಿರುವ ಈ ಪಟ್ಟಣ ಕೈಗಾರಿಕಾ ನಗರ ಎಂದು ಹೆಸರಾಗಿದೆ.ಇಲ್ಲಿ ಟೀ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಕಿತ್ತಳೆ ಬೆಳೆಗೆ ಹೆಸರುವಾಸಿ.ಪ್ರವಾಸಿಗರಿಗಾಗಿ ದಹಿಂಗ್ ಪಟ್ಕಾಯ ಟೀ ಹಬ್ಬವನ್ನು ಪ್ರತೀ ವರ್ಷ ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಹಬ್ಬದ ಅಚರಣೆಯ ಸ್ಥಳ ತೀನ್ಸುರಖಿಯಾದಿಂದ ೭೦ ಕಿಮಿ ದೂರವಿದೆ.ರಸ್ತೆ ಮತ್ತು ರೈಲು ಪ್ರಯಾಣದಿಂದ ಇಲ್ಲಿಗೆ ತಲುಪಬಹುದು.ಇಲ್ಲಿ ಶಿವಧಾಮ ಮತ್ತು ಮಾರುಕ್ ನಂದನ್ ಕಾನನ್ ಪಾರ್ಕ್ ನೋಡಬಹುದು.ತಂಗಲು ಉತ್ತಮ ಹೋಟೆಲುಗಳಿವೆ.ತೀನ್ಸುತಖಿಯಾದ ಬಳಿ ಟಿಬೆಟ್ ನಿರಾಶ್ರಿತರಿಗಾಗಿ ಒಂದು ಕ್ಯಾಂಪ್ ಇದ್ದು ಇಲ್ಲಿ ಬಹಳ ಸುಂದರವಾದ ಕಾರ್ಪೆಟ್ಗವಳನ್ನು ತಯಾರಿಸಲಾಗುತ್ತದೆ.

ತೀನ್ಸುಯಖಿಯಾದಿಂದ ೧೪ ಕಿಮಿ ದೂರವಿದೆ.ತೀರ ಜೌಗು ಪ್ರದೇಶವಾಗಿದ್ದು ಕಾಡು ಕುದುರೆಗಳು,ಆನೆಗಳು,ವುಡ್ ಡಕ್,ಕಾಡೆಮ್ಮೆ,ಗಿಬ್ಬನ್ ಕೋತಿಗಳು ವಾಸಿಸುತ್ತವೆ.ಬೇರ್ಜಾನ್-ಬೋರ್ಜಾನೀ ಅಭಯಾರಣ್ಯ ತೀನ್ಸುಸಖಿಯಾದಿಂದ ೬ ಕಿಮಿ ದೂರವಿದೆ.ಇಲ್ಲಿ ಗಿಬ್ಬನ್ ಕೋತಿಗಳು ವಾಸಿಸುತ್ತವೆ.

ತೀನ್ಸುನಖಿಯದಿಂದ ೧೭ ಕಿಮಿ ದೂರವಿದೆ.ಇಲ್ಲಿ ಭಾರಿ ಗಾತ್ರದ ಹಳೆಯ ಅರಳಿ ಮರವೊಂದಿದೆ.ಭಕ್ತರು ಈ ದೇವಾಲಯಕ್ಕೆ ಬಂದು ತಮ್ಮ ಹರಕೆಯನ್ನು ಹೇಳಿಕೊಂಡು ಶಿವನಿಗೆ ಘಂಟೆಯೊಂದನ್ನು ಅರ್ಪಿಸಿ ಅದನ್ನು ಇಲ್ಲಿನ ಮರಕ್ಕೆ ಕಟ್ಟಿದರೆ ಅವರ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ.

೧೮೮೯ ರಲ್ಲಿ ಮೊದಲನೇ ಎಣ್ಣೆ ಭಾವಿಯನ್ನು ಇಲ್ಲಿ ತೋಡಲಾಯ್ತು.ಬ್ರಿಟೀಷರು ಇಲ್ಲಿಗೆ ಬಂದು ತೈಲ ನಿಕ್ಷೇಪವನ್ನು ಕಂಡು ಹಿಡಿದು ಸ್ಥಳೀಯರಿಗೆ 'ಡಿಗ್ ಬಾಯ್, ಡಿಗ್’ ಎಂದು ಅಗೆಯಲು ಹೇಳಿದ ಕಾರಣ ಆ ಪದ ಅಪಭ್ರಂಶವಾಗಿ ದಿಗ್ಬೋತಯ್ ಆಯಿತೆಂದು ಹೇಳಲಾಗುತ್ತದೆ. ಎಣ್ಣೆ ಭಾವಿಗಾಗಿ ಬ್ರಿಟೀಷರು ಮತ್ತು ಬರ್ಮೀಯರ ನಡುವೆ ಯುದ್ದ ನಡೆದು ಅದು ಆಂಗ್ಲೊ-ಬರ್ಮಾ ಯುದ್ಧ ಎಂದು ಹೆಸರಾಗಿದೆ.ಈ ಯುದ್ಧ ಸ್ಮಾರಕ ವೊಂದು ಇಲ್ಲಿದೆ.

ತೀನ್ಸು್ಖಿಯಾದಿಂದ ೭೫ ಕಿಮಿ ದೂರವಿದೆ.ಈ ಸ್ಥಳ ಮೊದಲು ಆದಿವಾಸಿಗಳ ಸರಕಿನ ಮಾರ್ಕೆಟ್ ಆಗಿತ್ತು.

ತೀನ್ಸುಮಖಿಯಾದಿಂದ ೧೫೦ ಕಿಮಿ ದೂರವಿದೆ.ಈ ಕೊಳದಲ್ಲಿ ಪ್ರತೀ ವರ್ಷ ಸಂಕ್ರಾಂತಿಯಂದು ನೂರಾರು ಭಕ್ತರು ಬಂದು ಸ್ನಾನ ಮಾಡಿ ತಮ್ಮ ಪಾಪಗಳನ್ನು ಕಳೆದುಕೊಂಡ ತೃಪ್ತಿ ಪಡೆಯುತ್ತಾರೆ.

ಟೀ ತೋಟಗಳ ನಡುವೆ ಇರುವ ಈ ಸ್ಥಳ ತನ್ನ ದೈವೀಕ ಸೌಂದರ್ಯಕ್ಕೆ ಹೆಸರಾಗಿದೆ.ಇಲ್ಲಿ ಕುದುರೆಗಳ ಮೇಲೆ ಕುಳಿತು ಸುತ್ತಬಹುದು. ಮಾರ್ಗರೀಟದಲ್ಲಿ ಪ್ಲೈ-ವುಡ್ ತಯಾರಿಕಾ ಘಟಕವಿದೆ.

ತೀನ್ಸುೀಖಿಯಾದಿಂದ ೧೩೦ ಕಿಮಿ ದೂರವಿದ್ದು ಮೈನ್ಮಾರ್ ದೇಶದ ಗಡಿ ಬಳಿಇದೆ.ಇಲ್ಲಿಗೆ ತಲುಪಲು ತೀರಾ ಕಷ್ಟಸಾಧ್ಯವಾದ ಹಾದಿ ಇದೆ.ಈ ಪ್ರದೇಶದಲ್ಲಿ ರಹಸ್ಯವಾದ ’ಲೇಕ್ ಆಫ಼್ ನೋ ರಿಟರ್ನ್’ ಎಂಬ ಸ್ಥಳವಿದೆ.ಇದು ಮೈ‍ನ್ಮಾರ್                            ನಲ್ಲಿದ್ದು ಇಲ್ಲಿಗೆ ಭೇಟಿ ನೀಡಲು ಪ್ರತಿ ತಿಂಗಳ ೧೫ ಮತ್ತು ೩೦ ರಂದು ಅನುಮತಿಸಲಾಗುತ್ತದೆ. ಈ ಸ್ಥಳದಲ್ಲಿ ಹಿಂದೆ ವಿಮಾನವೊಂದು ರಹಸ್ಯವಾಗಿ ಕಣ್ಮರೆ ಆಯಿತೆಂದು ಹೇಳಲಾಗುತ್ತದೆ.

ಜೋರ್ಹಟ್ನಿಂ್ದ ೫೫ ಕಿಮಿ ದೂರವಿದೆ.ಸಿಮಲ್ಗು್ರಿ ರೈಲು ನಿಲ್ದಾಣದಿಂದ ೧೬ ಕಿಮಿ ಇದೆ.ಈ ಪ್ರದೇಶ ಬಹಳ ಹಿಂದೆ ಆದಿವಾಸಿಗಳ ಆಡಳಿತದಲ್ಲಿತ್ತು.ಈ ನಗರದಲ್ಲಿ ೧೦೪ ಅಡಿ ಎತ್ತರದ ಶಿವನ ವಿಗ್ರಹ ಇದೆ. ಇಲ್ಲಿಗೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಏಪ್ರಿಲ್ ಉತ್ತಮ ಕಾಲ.ಇಲ್ಲಿ ೧೭೦೩ ರಲ್ಲಿ ನಿರ್ಮಿಸಲಾದ ಏಕಶಿಲಾ ಸೇತುವೆ ಇದೆ.ಇದು ಇಂದಿಗೂ ಸುಸ್ಥಿಯಲ್ಲಿದ್ದು ಈಗಲೂ ಇದರ ಮೇಲೆ ರಾಷ್ಟ್ರೀಯ ಹೆದ್ದಾರಿ-೩೭ ಸಾಗುತ್ತದೆ.

೧೭೪೬ ರಲ್ಲಿ ಅಹೋಂ ಅರಸರಿಂದ ನಿರ್ಮಿಸಲ್ಪಟ್ಟ ಎರಡು ಅಂತಸ್ತಿನ ಕಟ್ಟಡ ಮತ್ತು ಆಟದ ಮೈದಾನ ಇದೆ.

೧೭೦೦ ರಲ್ಲಿ ಈ ಅರಮನೆಗಳು ಅಹೋಂ ಅರಸರಿಂದ ನಿರ್ಮಿಸಲ್ಪಟ್ಟವು.ಈ ಅರಮನೆಗಳಿಂದ ಭೂಗತ ದಾರಿಗಳಿವೆ ಎಂದು ಹೇಳಲಾಗುತ್ತದೆ.ಸರಕು ದಾಸ್ತಾನಿಗೆ ನೆಲಮಾಳಿಗೆಗಳಿವೆ.

ಇದು ಅಹೋಂ ಅರಸರ ಸಮಾಧಿ ಸ್ಥಳ. ಇಲ್ಲಿ ಅವರ ಪವಿತ್ರಾತ್ಮಗಳಿವೆ ಎಂದು ನಂಬಲಾಗುತ್ತದೆ.ಇಲ್ಲಿ ೧೭೩೪ ರಲ್ಲಿ ೧೨೯ ಎಕರೆಗಳಷ್ಟು ವಿಸ್ತಾರವಾದ ಕೆರೆಯೊಂದನ್ನು ನಿರ್ಮಿಸಲಾಯ್ತು.ಈ ಕೆರೆಯ ದಂಡೆಯ ಮೇಲೆ ಶಿವನ ದೇವಾಲಯವೊಂದಿದೆ.

೩೧೮ ಎಕರೆಗಳಷ್ಟು ವಿಸ್ತಾರವಾಗಿರುವ ಇದು ಮಾನವ ನಿರ್ಮಿತವಾದದ್ದು.ಗೌರೀ ಸಾಗರ ಮತ್ತು ರುದ್ರ ಸಾಗರ ಕೆರೆಗಳು ನೋಡ ತಕ್ಕವು.

ಶಿವಸಾಗರದಿಂದ ೨೨ ಕಿಮಿ ದೂರವಿದ್ದು ಮುಸಲ್ಮಾನ ಸಂತ ಆಜನ್ ಪೀರ್‌ನ ಸಮಾಧಿ ಸ್ಥಳವಾಗಿದೆ.ಇಲ್ಲಿಗೆ ಮುಸ್ಲೀಮರು ಬಂದು ಈ ಸಂತನನ್ನು ಪ್ರಾರ್ಥಿಸುತ್ತಾರೆ.

ಅರುಣಚಲ ಪ್ರದೇಶದ ಪಕ್ಕ ಇರುವ ಈ ಜಿಲ್ಲೆಯನ್ನು ಟೀ ತೋಟಗಳು ಸುತ್ತುವರೆದಿವೆ. ಹಿಮಾಲಯದ ಹಿನ್ನೆಲೆ ಹೊಂದಿದ ಈ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ.ರಾಷ್ಟ್ರಿಯ ಹೆದ್ದಾರಿ-೩೭ ಇಲ್ಲಿಗೆ ತಲುಪುತ್ತದೆ.ರೈಲು ಅನುಕೂಲ ಸಾಕಷ್ಟಿದೆ.ಕೋಲ್ಕತ್ತದಿಂದ ವಿಮಾನ ಸೌಲಭ್ಯ ಇದೆ.ದಿಬ್ರೂಘರ್‌ನಲ್ಲಿ ಒಂದು ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಇದೆ.

ಕೋಲಿ ಆಯಿ ಎಂಬಾಕೆ ದಿಬಾರು ಸತ್ರದ ಮುಖ್ಯ ಪೂಜಾರಿಯ ಮಗಳು. ಈಕೆಗೆ ಭವಿಷ್ಯ ಹೇಳುವ ವಿಶೇಷ ಶಕ್ತಿ ಇತ್ತೆಂದು ಹೇಳಲಾಗುತ್ತದೆ.ಈಕೆಯ ಮರಣಾನಂತರ ದೇವಾಲಯ ನಿರ್ಮಿಸಿ ಆಕೆಯ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ.ಇಲ್ಲಿಗೆ ಪ್ರತೀ ವರ್ಷ ಸಹಸ್ರಾರು ಅಸ್ಸಾಮಿಯರು ಭೇಟಿ ನೀಡುತ್ತಾರೆ.ದಿನೋಯ್ ಸತ್ರ,ದೆಹಿಂಘ್ ನಾಮ್ಟಿ್ ಸತ್ರ,ದಿನ್ ಜೋಯ್ ಸತ್ರ,ಮೊಡರ್ ಕಾಲ್ ಸತ್ರ,ಘರ್ ಪಾರ ಸತ್ರ ಮುಂತಾದುವುಗಳಿವೆ.

ಜೋರ್‌ಹಟ್ ಅಹೋಂ ಅರಸರ ಕೊನೆಯ ರಾಜಧಾನಿಯಾಗಿತ್ತು.ಇಲ್ಲಿ ಸುಮಾರು ೧೩೫ ಕ್ಕೂ ಹೆಚ್ಚು ಟೀ ತೋಟಗಳಿವೆ.ಈ ಜಿಲ್ಲೆಯಲ್ಲಿ ಸುಮಾರು ೧.೫ ಲಕ್ಷ ಜನಸಂಖ್ಯೆ ಇದೆ.೧೮೫೬ ರಲ್ಲಿ ಸ್ಥಾಪಿತವಾದ ಈಸ್ಟ್ರನ್ ಥಿಯೋಲಾಜಿಕಲ್ ಕಾಲೇಜ್ ಮತ್ತು ೧೯೪೮ ರಲ್ಲಿ ಸ್ಥಾಪಿತವಾದ ಅಸ್ಸಾಮ್ ಕೃಷಿ ಕಾಲೇಜು ಇದೆ. ಅರಸರ ಕಾಲದಲ್ಲಿ ಆನೆಗಳನ್ನು ಹಿಡಿಯಲು ನಿರ್ಮಿಸಿದ್ದ ಖೆಡ್ಡಾ ಈಗಲೂ ಗಾಜ್ಪುರರದಲ್ಲಿದೆ. ಈ ಜಿಲ್ಲೆಯಲ್ಲಿರುವ ಅಸ್ಸಂ‍ನ ಪ್ರಸಿದ್ದ ಸಿನ್ನಮೋರ್ ಟೀ ತೋಟ ೧೮೫೦ ರಿಂದ ಪ್ರಸಿದ್ದಿಯಾಗಿದೆ.

ಮಜುಲಿ ಬ್ರಹ್ಮಪುತ್ರ ನದಿಯಿಂದ ಸುತ್ತುವರೆದು ದ್ವೀಪದಂತಾಗಿದೆ.ಇದು ವೈಷ್ಣವರಿಗೆ ಪವಿತ್ರವಾದ ಸ್ಥಳ.ಇಲ್ಲಿ ಅವರಿಗೆ ಪವಿತ್ರವಾದ ನಾಲ್ಕು ಸತ್ರಗಳಿವೆ.ಆಯುನಿಯಾತಿ, ದಕ್ಷಿಣಾಪಥ, ಘರಾಮುರ್,ಮತ್ತು ಕಮಲಬಾರಿ ಇವು ಶ್ರೀಮಾತ ಶಂಕರದೇವನ ಕಾಲದಲ್ಲಿ ಸ್ಥಾಪಿತವಾಗಿ ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಿವೆ.ಇಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ಅಭಿನಯಿಸಲಾಗುತ್ತದೆ.

ಬುರಿ ಗೋಸಾಯ್ ದೇವಾಲಯಗಳು ನೋಡತಕ್ಕ ಸ್ಥಳಗಳು.  ಬಂಗಾಲ ಪುಕುರಿ ಕೆರೆ ರೂಪ್ ಸಿಂಗ್ ಬಂಗಾಲನಿಂದ ನಿರ್ಮಿತವಾಯ್ತು.ರೂಪ್ ಸಿಂಗ್ ಈ ಕೆರೆ ನಿರ್ಮಿಸಲು ತಾನು ಮಾಡಿದ ಕೊಲೆಗೆ ಪ್ರತಿಫ಼ಲವಾಗಿ ಪಡೆದ ಹಣದಿಂದ ನಿರ್ಮಿಸಿದ ಎಂಬ ಕಾರಣಕ್ಕಾಗಿ ಇಂದಿಗೂ ಜನ ಇದರ ನೀರನ್ನು ಬಳಸುವುದಿಲ್ಲ.

ಈ ಜಿಲ್ಲೆಯಲ್ಲೆ ಪ್ರಸಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಇದೆ. ೧೯೦೮ ರಲ್ಲಿ ಸ್ಥಾಪಿತವಾದ ಈ ಪಾರ್ಕ್ ೧೯೮೫ ರಲ್ಲಿ ವಿಶ್ವ ಸಂಸ್ಥೆಯಿಂದ ಸಂರಕ್ಷಿತ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಈ ಪಾರ್ಕನ್ನು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಮುಚ್ಚಲಾಗಿರುತ್ತದೆ. ಇಲ್ಲಿಗೆ ಭೇಟಿ ನೀಡಲು ನವೆಂಬರ್‌ನಿಂದ ಮಾರ್ಚ್ ಉತ್ತಮ ಕಾಲ. ಈ ಪಾರ್ಕ್‌ನಲ್ಲಿ ಜೀಪ್ ಸಫ಼ಾರಿ,ಆನೆ ಸಫ಼ಾರಿ ಇದೆ.ತಂಗಲು ಅಸ್ಸಾಮ್ ಸರಕಾರದ ಟೂರಿಸ್ಟ್ ಲಾಡ್ಜ್ ಇದೆ.
ಗೋಲಾಘಾಟ್‌ನಿಂದ ೧೮ ಕಿಮಿ ದೂರದಲ್ಲಿ ಬಿಸಿನೀರ ಬುಗ್ಗೆ ಇದೆ. ಇದನ್ನು ಅಸ್ಸಾಮಿಯರು ಗರಂ ಪಾನಿ ಎಂದು ಕರೆಯುತ್ತಾರೆ.ಇದು ದಿಮಾಪುರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-೩೯ ರ ಬಳಿಯೆ ಇದೆ.ಇದಕ್ಕೆ ತುಸು ದೂರದಲ್ಲಿ ಒಂದು ಶಿವ ದೇವಾಲಯವಿದೆ. ಬಾರ್ಡೊವಾ,ಬಾರ್‌ಪೇಟ,ಮಾದುಪುರಗಳಲ್ಲಿ ವೈಷ್ನವ ಸತ್ರಗಳಿವೆ.ನುಮಿಲಿ ಘರ್‌ನ ಶಿವದೇವಾಲಯ ಅಹೋಂ ಅರಸರಿಂದ ನಿರ್ಮಿತವಾದದ್ದು.ಇಲ್ಲಿ ಸಾವಿರಾರು ಸಂಖ್ಯೆಯ ಕೋತಿಗಳಿವೆ.

ಇದು ಗೌಹಾತಿಯಿಂದ ೯೫ ಕಿಮಿ ದೂರವಿದೆ.ಇಲ್ಲಿ ಮುಬಾರಿ ದಾಸ ಹಬ್ಬವನ್ನು ಅಚರಿಸಲಾಗುತ್ತಿದ್ದು ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಬ್ಬ.ಇಲ್ಲಿ ಶ್ರೀ ಕೃಷ್ಣನ ರಾಸ ಲೀಲಾ ದೃಶ್ಯಗಳನ್ನು ಶ್ರದ್ದೆ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಹರಿ ದೇವಾಲಯದ ಅಂಗಳದಲ್ಲಿ ನವೆಂಬರ್ ತಿಂಗಳಲ್ಲಿ ಈ ಹಬ್ಬ ನಡೆಯುತ್ತದೆ. ವಾಸುದೇವ ದೇವಾಲಯ,ಕಾಲ ಭೈರವ ಲಿಂಗರಾಜ ಮಂದಿರ,ಬಾಗೇಶ್ವರಿ,ಗೌರಿ ದೇವಾಲಯ,ಹರಿ ಮಂದಿರ,ಬಿಲ್ಲೇಶ್ವರ ಮಂದಿರ,ಅಡಬಾರಿ ಕಾಳಿ ದೇವಾಲಯ ನೋಡತಕ್ಕ ಸ್ಥಳಗಳು. ಗೋ ಹೈ ಕಮಾಲ್ ಅಲಿ ರಸ್ತೆಯು ಕೋಚ್ ಅರಸ ಕಮಾಲ್ ನಿಂದ ನಿರ್ಮಿಸಲ್ಪಟ್ಟಿತು.ಕೂಚ್ ಬಿಹಾರ ಮತ್ತು ಉತ್ತರ ಲಖಿಂಪುರಗಳನ್ನು ಸಂಪರ್ಕಿಸುವ ಈ ರಸ್ತೆಯ ನಿರ್ಮಾಣ ಅದ್ಭುತವಾಗಿದೆ.

ಬಾರ್‌ಪೇಟ ಪಟ್ಟಣವು ರಾಜಧಾನಿಯಿಂದ ೧೪೦ ಕಿಮಿ ದೂರವಿದೆ. ಈ ಪಟ್ಟಣದಿಂದ ರಾಷ್ಟ್ರೀಯ ಹೆದ್ದಾರಿ-೩೧ ಹಾದುಹೋಗುತ್ತದೆ.ಇಲ್ಲಿನ ಹೋಳಿಹಬ್ಬ ಅಥವಾ ದೌಲಿ ಜಾತ್ರೆ ಪ್ರಸಿದ್ದವಾಗಿದೆ.ಇದನ್ನು ವಸಂತ ಹಬ್ಬ ಎಂದೂ ಕರೆಯಬಹುದು.ವಸಂತನ ಆಗಮನವನ್ನು ಸ್ವಾಗತಿಸುವ ಸಲುವಾಗಿ ನೃತ್ಯಗಳು ಮತ್ತು ಹೋಳಿ ಹಾಡುಗಳನ್ನು ಹಾಡುತ್ತಾರೆ.ಇದೇ ಸಂದರ್ಭಗಳಲ್ಲಿ ಇಲ್ಲಿನ ಸತ್ರಗಳಾದ ಬಾರ್‌ಪೇಟ ಸತ್ರ,ಸೌಂದರಿಯ ಸತ್ರ ಮತ್ತು ಗಣಕ್ಕುಚಿ ಸತ್ರಗಳಲ್ಲಿ ದಶಾವತಾರದ ನೃತ್ಯಗಳನ್ನು ಅಭಿನಯಿಸಲಾಗುತ್ತದೆ.ಇಲ್ಲಿನ ಸತ್ರಗಳು ಮತ್ತು ಅವುಗಳ ಶಾಖೆಗಳಲ್ಲಿ ಜಾನಪದ ಲೋಕಸಂಗೀತ, ಲಾವಣಿ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಗೀತೆಗಳನ್ನು ಹಾಡಿ ಅಭಿನಯಿಸಲಾಗುತ್ತದೆ.ಇಲ್ಲಿ ಹಿತ್ತಾಳೆ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಷ್ಟೇನು ಮುಂದುವರೆಯದ ಇಲ್ಲಿ ವಿಶೇಷಗಳೇನೂ ಇಲ್ಲ.

ನಂದೇಶ್ವರ ದೇವಾಲಯ:ಇದು ೧೦-೧೧ ನೇ ಶತಮಾನದಲ್ಲಿ ನಿರ್ಮಿತವಾದ ಶಿವ ದೇವಾಲಯ. ಶಿವರಾತ್ರಿಯಂದು ನೂರಾರು ಭಕ್ತರು ಆಗಮಿಸಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ.

ಧುಬ್ರಿ ರಾಜಧಾನಿಯಿಂದ ೨೯೫ ಕಿಮಿ ದೂರವಿದೆ.ಧುಬ್ರಿಯನ್ನು ಅಸ್ಸಾಮಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.ವಿವಿಧ ಸಂಸ್ಕೃತಿ,ಭಾಷೆಗಳ ಜನತೆ ಇಲ್ಲಿ ನೆಲಸಿರುವುದರಿಂದ ಈ ಸ್ಥಳ ವಿಶಿಷ್ಟಗಳ ಸಂಗಮವಾಗಿದೆ.ಇಲ್ಲಿನ ಪ್ರಮುಖ ಭಾಷೆ ಗೋಲ್ಪೋರಿಯ.

????




#Article 204: ಗುಜರಾತಿ ಭಾಷೆ (698 words)


ಗುಜರಾತಿ ಭಾಷೆ ಒಂದು ಇಂಡೋ -ಆರ್ಯನ್ ಶಾಖೆಗೆ ಸೇರಿದ ಭಾಷೆ. ಇದು  ಗುಜರಾತ್ ರಾಜ್ಯದ ಅಧಿಕೃತ ಭಾಷೆಯಷ್ಟೇ ಅಲ್ಲದೆ ಕೇಂದ್ರಾದೀನ ಪ್ರದೇಶಗಳಾದ ದಾದ್ರ ಮತ್ತು ನಗರಹವೇಲಿ ಮತ್ತು ದಿಯು ಮತ್ತು ದಾಮನ್ ಗಳ ಅಧಿಕೃತ ಭಾಷೆಯೂ ಹೌದು.
ಭಾರತ ರಾಜ್ಯಾಂಗದಲ್ಲಿ ನಮೂದಾಗಿರುವ 15 ಭಾರತೀಯ ಭಾಷೆಗಳಲ್ಲಿ ಒಂದು; ಗುಜರಾತಿನ ಪ್ರಾಂತಭಾಷೆ. ಗುಜರಾತ್ ರಾಜ್ಯದಲ್ಲೂ ಗುಜರಾತಿ ಸಮುದಾಯಗಳು ನೆಲೆಸಿರುವ ಭಾರತದ ವಿವಿಧ ಭಾಗಗಳಲ್ಲೂ ಭಾರತದ ಹೊರಗೆ ಏಷ್ಯ, ಅಫ್ರಿಕಗಳಲ್ಲೂ ಈ ಭಾಷೆಯನ್ನಾಡುವ ಜನ ನೆಲೆಸಿದ್ದಾರೆ. ಗುಜರಾತಿ ಮಾತನಾಡುವವರ ಸಂಖ್ಯೆ ೫೪.೬ ಲಕ್ಷ . ಗುಜರಾತಿ ಇಂಡೋ-ಆರ್ಯನ್ ಭಾಷೆಗಳಲ್ಲೊಂದು. ಇದರ ಪೂರ್ವ ಮತ್ತು ಈಶಾನ್ಯ ಗಡಿಯಲ್ಲಿ ರಾಜಸ್ಥಾನಿ ಇದೆ. ಸಹಜವಾಗಿ ಇವೆರಡು ಭಾಷೆಗಳೂ ಕ್ರಮೇಣ ಬೆರೆಯುತ್ತ ಬಂದಿವೆಯಾಗಿ ಎಲ್ಲೆಕಟ್ಟಿನ ಭಾಗಗಳಲ್ಲಿ ಉಪಭಾಷೆಗಳು ಯಾವ ಮೂಲದಿಂದ ಬಂದಿವೆಯೆಂಬುದನ್ನು ನಿರ್ಧರಿಸುವುದು ಕಷ್ಟ.

ವಾಂಙ್ಮಯ ಮತ್ತು ವೈಚಾರಿಕ ಗದ್ಯ ಸಾಹಿತ್ಯದ ದೃಷ್ಟಿಯಿಂದ ಆಧುನಿಕ ಗುಜರಾತಿ ಸಾಹಿತ್ಯ ಸಮೃದ್ಧವಾಗಿವೆ. ಇದರ ಸಾಹಿತ್ಯಿಕ ಪರಂಪರೆಯ ಇತಿಹಾಸ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಉಪದೇಶಾತ್ಮಕ ಗದ್ಯ ಹಾಗೂ ಭಾವಗೀತಾತ್ಮಕ ಮತ್ತು ಪ್ರಶಂಸಾತ್ಮಕ (ಅಥವಾ ಮಾಗಧ) ಪದ್ಯ ರೂಪದ ರಚನೆಗಳು ಈ ಹಂತದಲ್ಲಿ ಕಾಣದೊರೆಯುತ್ತವೆ. 

ಗುಜರಾತಿ ಲಿಪಿ ದೇವನಾಗರಿ ಲಿಪಿಯ ಸುತ್ತು ಬರಹದ ರೂಪದ್ದಾಗಿದ್ದು, ಕಳೆದ ಆರೇಳು ಶತಮಾನಗಳಿಂದಲೂ ಪಶ್ಚಿಮ ಭಾರತದಲ್ಲಿ (ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ) ಬಳಕೆಯಲ್ಲಿತ್ತು. ಇದನ್ನು ಮಹಾಜನಿ ಎಂದು ಕರೆಯುತ್ತಾರೆ. ಇದರ ವರ್ಣಮಾಲೆ ಸಂಸ್ಕೃತಜನ್ಯವಾಗಿದ್ದು, ಅಕ್ಷರಗಳ ಆಕಾರ ದೇವನಾಗರಿಯನ್ನು ತುಂಬ ನಿಕಟವಾಗಿ ಹೋಲುತ್ತದೆ.

ಗುಜರಾತಿನ ಇಂಡೋ-ಯೂರೋಪಿಯನ್ (ಭಾರೋಷೀಯ) ಭಾಷಾ ಪರಿವಾರದ ಇಂಡೋ-ಇರಾನಿಯನ್ (ಭಾರತೀಯ ಇರಾನಿ) ಉಪವರ್ಗದ ಇಂಡೋ-ಆರ್ಯನ್ (ಭಾರತೀಯ-ಆರ್ಯ) ಶಾಖೆಗೆ ಸೇರಿದ. ಇಂಡೋ-ಆರ್ಯನ್ ಶಾಖೆಯ ಎರಡು ಮುಖ್ಯಕವಲುಗಳು (ಉತ್ತರದ ಕವಲು-ಪಹಾಡಿ. ಪಂಜಾಬಿ, ಲಹಂದ, ಸಿಂಧಿ, ಕಚ್ಛಿ; ಪೂರ್ವದ ಕವಲು-ಬಂಗಾಳಿ ಅಸ್ಸಾಮಿ ಮತ್ತು ಒರಿಯ) ಬೇರ್ಪಟ್ಟ ತರುವಾಯ ಪಶ್ಚಿಮ, ದಕ್ಷಿಣ ಮತ್ತು ನಡುವಣ ಶಾಖೆಗಳು ಮತ್ತೆ ಕವಲೊಡೆದವು. ದಕ್ಷಿಣದ ಭಾಷೆಗಳ (ಮರಾಠಿ-ಕೊಂಕಣಿ) ಬೇರ್ಪಡೆಯನ್ನು ಹಿಂಬಾಲಿಸಿ, ಪಶ್ಚಿಮದ ಭಾಷೆಗಳೂ (ಗುಜರಾತಿ, ರಾಜಸ್ಥಾನಿ, ಭೀಲಿ) ನಡುವಣ ವಲಯದ (ಪಶ್ಚಿಮ ಹಿಂದಿ) ಭಾಷೆಗಳಿಂದ ಬೇರ್ಪಟ್ಟವು. ನಡುವಣ ವಲಯದಲ್ಲಿ ನಾಮವಾಚೀ ಏಕವಚನ ಪುಲ್ಲಿಂಗದ ಆ ಕಾರಾಂತ್ಯದ ರೂಪದಲ್ಲೂ ಪಶ್ಚಿಮ ವಲಯದಲ್ಲಿ ಓ ಕಾರಾಂತ್ಯದ ರೂಪದಲ್ಲೂ ಈ ಬೇರ್ಪಡೆ ಎದ್ದು ಕಾಣುತ್ತದೆ. ಹೀಗಾಗಿ ಪಶ್ಚಿಮ ಮಲಯದಲ್ಲಿ ಘೋಡ (ಕುದುರೆ) ರೂಪವೂ ಗುಜರಾತಿಯಲ್ಲಿ ಘೋಡೊ ರೂಪವೂ ಕಾಣದೊರೆಯುತ್ತವೆ. ಪಶ್ಚಿಮ ಮತ್ತು ದಕ್ಷಿಣ ವರ್ಗದ ಭಾಷೆಗಳೂ ನಪುಂಸಕ ಲಿಂಗವನ್ನು ಉಳಿಸಿಕೊಂಡಿವೆ. ಪಶ್ಚಿಮ ವಲಯದ ಭಾಷೆಗಳಲ್ಲಿ ಮೊದಲಿಗೆ ಭೀಲಿಯೂ ಅನಂತರದಲ್ಲಿ ಗುಜರಾತಿ ಹಾಗೂ ರಾಜಸ್ಥಾನದ ಉಪಭಾಷೆಗಳೂ ಬೇರ್ಪಡುತ್ತವೆ.

ಗುಜರಾತಿ ಧ್ವನಿಮಾವ್ಯವಸ್ಥೆಯ ವಿಶಿಷ್ಟ ಲಕ್ಷಣಗಳೆಂದರೆ ಎಂಟು ಸ್ತರಗಳ - ಇ, ಎ ( ಉ ಓ ( ಅಆ-ವ್ಯವಸ್ಥೆ ಮತ್ತು ನ ಹಾಗೂ ಣ ಗಳ ಮತ್ತು ಲ ಮತ್ತು ಳ ಗಳ ಸ್ಪಷ್ಟ ಧ್ವನಿಘಟಕಗಳು. ಆರು ಸ್ವರಗಳೂ - ಇ (, ಉ (, ಆ, ಆ - ಅನುನಾಸಿಕಗಳಾಗಿಯೂ ಬರಬಹುದು. ಎಲ್ಲ ಸ್ವರಗಳೂ ಘೋಷ ಅಥವಾ ಆರ್ಧಘೋಷ ಸ್ವರಗಳಾಗಿರಬಹುದು. ಹೀಗಾಗಿ, ಬಾರ್ (ಹನ್ನೆರಡು) ಬಾರ್ (ಹೊರಗೆ) (ಅಕ್ಷರದ ಕೆಳಗಿನ ಕಿರುಗೀಟು ಅರ್ಧಘೋಷ ಸ್ವರವನ್ನು ಸೂಚಿಸುತ್ತವೆ) ಮತ್ತು ಭಾರ್ (ಹೊರೆ) ನಂಥ ಶಬ್ದಗಳಲ್ಲಿ ಬಾರ್‍ನಲ್ಲಿ ಬರುವ ಅರ್ಧಘೋಷಸ್ವರ ಬಾರ್ ಮತ್ತು ಭಾರ್‍ನಲ್ಲಿ ಬರುವ ಸಾಮಾನ್ಯ ದೀರ್ಘ ಸ್ವರವಾದ ಆ ಕ್ಕಿಂತ ಭಿನ್ನವಾಗಿದೆ. ಸ್ವರಗಳ ಮಾತ್ರೆಗೆ ಗುಜರಾತಿಯಲ್ಲಿ ಅಂಥ ಮಹತ್ತ್ವವಿಲ್ಲ. ಲಿಪಿಯಲ್ಲೇನೋ ಇ, ಉ, ಕಾರಗಳ ಹ್ವಸ್ವ ಮತ್ತು ದೀಘ ಸ್ವರಗಳನ್ನೇ ಸೂಚಿಸುವ ಪ್ರತ್ಯೇಕ ವರ್ಣಗಳಿವೆ; ( ಮತ್ತು ( ಕಾರಗಳಿಗೆ (ದೇವನಾಗರಿ ಸಂಪ್ರದಾಯದಂತೆ) ಪ್ರತ್ಯೇಕ ವರ್ಣಗಳಿಲ್ಲ.

ನಾಮರೂಪಗಳಲ್ಲಿ ಗುಜರಾತಿ ಮೂರು ಲಿಂಗಗಳನ್ನೂ ಎರಡು ವಚನಗಳನ್ನೂ ಹೊಂದಿದೆ. ವಿಶೇಷ್ಯ, ವಿಶೇಷಣ ಮತ್ತು ಕೃದಂತ ರೂಪಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಲ್ಲಿಯೂ ಏಕ ಮತ್ತು ಬಹು ವಚನಗಳಲ್ಲಿಯೂ ಸಾಧಿಸಬಹುದು. ವಿಭಕ್ತಿ ರೂಪಕ್ಕೆ ಸಂಬಂಧಿಸಿದಂತೆ ಹೆಚ್ಚೆಂದರೆ ಮೂರು ವಿಭಕ್ತಿ ರೂಪಗಳನ್ನು ಸ್ಪಷ್ಟವಾಗಿ ಗುರುತಿಸಬಹುದು: ಪ್ರತ್ಯಕ್ಷ ಏಕವಚನ, ಪ್ರತ್ಯಕ್ಷ ಬಹುವಚನ ಮತ್ತು ಪರೋಕ್ಷ ರೂಪ. ಈ ಬಗೆಗಳಲ್ಲಿ ಪುಲ್ಲಿಂಗ ನಾಮಪದಗಳು ಎರಡು ರೂಪಗಳನ್ನು ನಪುಂಸಕ ಲಿಂಗನಾಮಪದಗಳು ಮೂರು ರೂಪಗಳನ್ನು ಹೊಂದಿರುತ್ತವೆ. ಸಬಲ ನಾಮಪದಗಳಿಗೆ ಹಾಗೂ ಸ್ತ್ರೀಲಿಂಗ ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳಾವುವೂ ಇರುವುದಿಲ್ಲ. ದಿಕ್ರೋ ನಂಥ ( ಪುಲ್ಲಿಂಗದ ನಾಮಪದ ಹಾಗೂ ಮಾಥೂನಂಥ ನಪುಂಸಕ ನಾಮಪದಗಳಿಗೆ ಈ ರೀತಿ ಪ್ರತ್ಯಯಗಳನ್ನು ಹಚ್ಚಬಹುದು. 

ಹಾಥೀ (ಆನೆ) ಮತ್ತು ಮಚ್ಛರ್ (ಸೊಳ್ಳೆ) ಯಂಥ ಸಬಲ ನಾಮಪದಗಳಿಗೆ ವಿಭಕ್ತಿರೂಪಗಳನ್ನು ಹಚ್ಚುವುದಿಲ್ಲ. ಅಂತೆಯೇ, ದಿಕ್ರಿ (ಮಗಳು), ತಮಾಕು (ಹೊಗೆಸೊಪ್ಪು), ಬೋ (ರಿಬ್ಬನ್), ಸತ್ತಾ (ಅಧಿಕಾರ) ದಂಥ ಸ್ತ್ರೀಲಿಂಗ ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳನ್ನಾಗಲೀ ವಚನ ಪ್ರತ್ಯಯಗಳನ್ನಾಗಲೀ ಹಚ್ಚುವುದಿಲ್ಲ. ಪ್ರಾಚೀನ ವಿಭಕ್ತಿ ಪ್ರತ್ಯಯಗಳಿಗೆ ಬದಲಾಗಿ ಅನೇಕ ಅಬೆಯ ಪರಪ್ರತ್ಯಯಗಳನ್ನು ಬಳಸಲಾಗುತ್ತದೆ. ಓ ಎಂಬ ಹೊಸ ಬಹುವಚನ ಪ್ರತ್ಯಯವನ್ನು (18 ನೆಯ ಶತಮಾನದಿಂದ ಈಚೆಗೆ) ಬಳಸಲಾಗುತ್ತಿದೆ ಐಚ್ಛಿಕವಾಗಿ ವಿಭಕ್ತಿ ಪ್ರತ್ಯಯ ಸಹಿತವಾದ ಬಹುವಚನ ರೂಪದಲ್ಲಿ ಆ ಪ್ರತ್ಯಯವನ್ನೂ ಬಳಸಲಾಗುತ್ತಿದೆ.

ಉದಾ: ದಿಕ್ರ್ + ಆ ( ದಿಕ್ರ್ + ಆ + ಓ (ಮಕ್ಕಳು), ( ( ( ಮಾಥ್ + ಆ ಮಾಥ್ + ಆ + ಓ (ತಲೆಗಳು)

ಗುಜರಾತಿನ ಪುರುಷವಾಚಕ ಸರ್ವನಾಮಗಳಲ್ಲಿ ಲಿಂಗವಿವಕ್ಷೆಯಿಲ್ಲ. ಉತ್ತಮ ಪುರುಷ ಬಹುವಚನದಲ್ಲಿ ಸಮಾವೇಶಿ ಮತ್ತು ಅಸಮಾವೇಶಿ ಸರ್ವನಾಮಗಳಿಗೆ ಪ್ರತ್ಯೇಕ ರೂಪಗಳಿವೆ: ಅಮೆ (ನಾವು-ಅಸಮಾವೇಶಿ), ಆಪ್‍ಣೆ (ನಾವು-ಸಮಾವೇಶಿ).

ಕ್ರಿಯಾರೂಪದಲ್ಲಿ ಗುಜರಾತಿ ಪುರುಷ ಮತ್ತು ವಚನ ರೂಪ ನಿದರ್ಶನವನ್ನು ಹೊಂದಿದೆ. ಪರಪ್ರತ್ಯಯಗಳನ್ನು ಹಚ್ಚುವುದರ ಮೂಲಕ ಕಾಲ ಮತ್ತು ಅವಸ್ಥಾ ವಿಶೇಷಗಳನ್ನು ಅಥವಾ ಕ್ರಿಯಾರೂಪಗಳನ್ನು (ಮೂಡ್ಸ್) ಸೂಚಿಸಲಾಗುತ್ತದೆ. ಹೋ (ಇರು) ಎಂಬ ಸಹಾಯಕ ಕ್ರಿಯಾಪದಯುಕ್ತವಾದ ಬಹುಪದ ರಚನೆಗಳ ಮೂಲಕ ಪೂರ್ಣಕಾಲಗಳನ್ನು ಸೂಚಿಸಲಾಗುತ್ತದೆ. ತಾತ್ಕಾಲಿಕ ವರ್ತಮಾನಕಾಲ. ಭೂತಕಾಲ ಮತ್ತು ಪೂರ್ವಕಾಲಿಕ ರೂಪಗಳು ಕೃದಂತಗಳಾಗಿದ್ದು, ನಾಮಪದಗಳಂತೆಯೇ ಅವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಲಾಗುತ್ತದೆ. ಕಾರಕ ರೂಪಗಳಂತೆಯೇ ಧಾತುರೂಪಗಳನ್ನೂ ನಡೆಸಬಹುದು. ಏಕವಚನದಲ್ಲಿ ಎರಡು, ಬಹುವಚನದಲ್ಲಿ ಎರಡು-ಹೀಗೆ ಕ್ರಿಯಾರೂಪನಿದರ್ಶನದಲ್ಲಿ ಅಥವಾ ಕ್ರಿಯಾರೂಪ ಕಾಲಿಕೆಯಲ್ಲಿ ಹೆಚ್ಚೆಂದರೆ ನಾಲ್ಕು ರೂಪಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.

ದಕ್ಷಿಣ, ಮಧ್ಯ ಹಾಗೂ ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಪರ್ಯಾಯದ್ವೀಪ-ಇವು ಗುಜರಾತಿಯ ನಾಲ್ಕು ಪ್ರಮುಖ ಉಪಭಾಷಾ ವಲಯಗಳು. ಸೌರಾಷ್ಟ್ರದ ಉಪಭಾಷೆಗಳು ಪ್ರಾಚೀನವಾದುವಾಗಿದ್ದು ಕೆಲವು ಪ್ರಾಚೀನತರ ರೂಪಗಳನ್ನು ಉಳಿಸಿಕೊಂಡಿವೆ. ಅವುಗಳಲ್ಲಿ ಕೆಲವು ಆರು ಸ್ವರ (( ಮತ್ತು ( ಗಳನ್ನು ಬಿಟ್ಟು) ವ್ಯವಸ್ಥೆಯನ್ನು ಹೊಂದಿವೆ.

( ಉತ್ತರದ ಉಪಭಾಷೆಗಳು ನೆರೆಯ ಪ್ರದೇಶದ ಭೀಲಿ ಭಾಷೆಯ ಕೆಲವು ಲಕ್ಷಣಗಳನ್ನು ಒಳಗೊಂಡಿವೆ. ಅನುನಾಸಿಕ ( ಅಥವಾ ಇ ಇ ಅನುನಾಸಿಕ ವ್ಯಂಜನಗಳ ಸನಿಹದಲ್ಲಿದ್ದಾಗ ವಿವೃತ ( ಅಥವಾ ( ಆಗಿಯೂ ಬದಲಾಗುವುದು ಹಾಗೂ ಕ ಕಾರ ಗ ಕಾರಗಳು ಇ, ಏ ಅಥವಾ ( ಯ ಕಾರದ ಎದುರಿನಲ್ಲಿ ಚಕಾರ ಜ ಕಾರಗಳಾಗಿ ತಾಲವ್ಯೀಕರಣಕ್ಕೊಳಗಾಗುವುದು-ಇವು ಉತ್ತರ ಹಾಗೂ ಮಧ್ಯ ಗುಜರಾತಿ ಉಪಭಾಷೆಗಳ ವಿಶಿಷ್ಟ ಲಕ್ಷಣ. ಮುಂದಿನ ವರ್ಣದಲ್ಲಿಯ ಕಾರವಿದ್ದರೆ ವರ್ಣವ್ಯತ್ಯಯವಾಗುವುದು ದಕ್ಷಿಣದ ಉಪಭಾಷೆಗಳ ವಿಶಿಷ್ಟ ಲಕ್ಷಣ. ಹೀಗಾಗಿ ಶಿಷ್ಟ ಆಪ್ಯೋ ರೂಪ ದಕ್ಷಿಣದ ಭಾಷಾಶೈಲಿಯಗಳಲ್ಲಿ ಗಮನಾರ್ಹವಾದುವೆಂದರೆ ಸೌರಾಷ್ಟ್ರ ಹಾಗೂ ಹಾಗೂ ದಕ್ಷಿಣ ಗುಜರಾತಿನ ಕರಾವಳಿಯ ಬೆಸ್ತರ ಮಾತು. ಸೌರಾಷ್ಟ್ರದ ವಂದಿಮಾಗಧೀಯ ಹಾಗೂ ಹುಲ್ಲುಗಾವಲಿನ ಜನಸಮುದಾಯಗಳ ಮಾತು. ಸೌರಾಷ್ಟ್ರದ ಇಸ್ಮಾಯಿಲೀ ಖೋಜಾಗಳ ಮಾತು ಮತ್ತು ದಕ್ಷಿಣ ಗುಜರಾತಿನ ಪಾರ್ಸಿಗಳ ಮಾತು. ಒಟ್ಟಿನಲ್ಲಿ ಮಧ್ಯ ಹಾಗೂ ಉತ್ತರ ಗುಜರಾತಿನ ಉಪಭಾಷೆಗಳು ಆವಿಷ್ಕಾರಕ ಉಪಭಾಷೆಗಳು. ಸುಶಿಕ್ಷಿತ, ಮೇಲು ಜಾತಿಯ ಜನಸಮುದಾಯದ ಮಾತೇ ಆಧುನಿಕ ಶಿಷ್ಟ ಗುಜರಾತಿಗೆ ಆಧಾರವಾಗಿದೆ.




#Article 205: ತುಳು (423 words)


ತುಳು ಭಾರತ ದೇಶದ ಕರ್ನಾಟಕ ರಾಜ್ಯದ ಪಶ್ಚಿಮ ತೀರದಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೆರಳದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚು ಮಾತನಾಡುವ ಭಾಷೆ. ತುಳು ಮಾತಾಡುವವರನ್ನು ತುಳುವರು (ಅಥವಾ ತುಳುವಲ್ಲಿ ತುಳುವೆರ್ ) ಎಂದು ಕರೆಯುತ್ತಾರೆ. ತುಳು ಭಾಷೆಯನ್ನು  ದಕ್ಷಿಣ ಭಾರತದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಹಿಂದೆ ಅಂದರೆ ಸುಮಾರು ೧೦ನೇ ಶತಮಾನದಲ್ಲಿ  ತುಳು ಬ್ರಾಹ್ಮಣರು ದಕ್ಷಿಣ ಭಾರತದ ಭಾಗಗಳಲ್ಲಿ ವಿಕಾಸವಾದ 

ತಿಗಳಾರಿ ಲಿಪಿ ಎಂಬ  ಬ್ರಾಹ್ಮಿ ಆಧಾರಿತ ಲಿಪಿಯನ್ನು  ಉಪಯೋಗಿಸುತ್ತಿದರು.  ತುಳುವ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಈ ಲಿಪಿಯನ್ನು  ತುಳು ಲಿಪಿ ಎಂದು ಕರೆಯಲಾಗಿದೆ. ಈ ಲಿಪಿಯನ್ನು   ಸಂಸ್ಕೃತ ದ ಶ್ಲೋಕಗಳನ್ನು ಬರೆದಿಟ್ಟುಕೊಳ್ಳಲು ಬಳಸುತಿದ್ದರು.  ಆದರೆ  ಅದರ ವ್ಯಾಪಕ ಬಳಕೆ ಇಲ್ಲದಿದ್ದ  ಕಾರಣ ಕಾಲಕ್ರಮೇಣ  ಲಿಪಿ ಬಳಕೆ ನಶಿಸಿ ಹೋಗಿದೆ. ಇತ್ತಿಚೆನ ದಿನಗಳಲ್ಲಿ ಹಳೆಯ  ಈ ಲಿಪಿಯ ಪುನರುಜ್ಜೀವನಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆ.  ಪುರಾತನ ತಿಗಳಾರಿ ಲಿಪಿ ಮಲೆಯಾಳಂ ಲಿಪಿಯನ್ನು ಹೋಲುತ್ತದೆ.ಪ್ರಸ್ತುತ ತುಳುಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಾರೆ. 

ತುಳುಭಾಷೆಯಲ್ಲಿ ರಚಿತವಾಗಿರುವ ಕೃತಿಗಳ ಲಭ್ಯತೆ  ಕಡಿಮೆ ಇರುವುದರಿಂದ ತುಳು ಭಾಷೆಯ ಪ್ರಾಚೀನತೆಯನ್ನು ಅಂದಾಜು ಮಾಡುವುದು ಕಷ್ಟ. ಆದರೂ  ತುಳು ಭಾಷೆಯ ಪ್ರಾಚೀನತೆಯನ್ನು ತುಳುವ ಜನ ಜೀವನದಲ್ಲಿ  ಅಡಕವಾಗಿರುವ ವಿಶಿಷ್ಟ ಸಂಸ್ಕೃತಿ ಹಾಗೂ  ಪಾಡ್ದನ ಎಂಬ ಜಾನಪದ ಸಾಹಿತ್ಯಗಳಿಂದ ನಿಷ್ಕರ್ಷೆ ಮಾಡಬಹುದು.  ದಕ್ಷಿಣ ಕನ್ನಡ, ಉಡುಪಿ ಮತ್ತು  ಕಾಸರಗೋಡು ಜಿಲ್ಲೆಯ ಬಹುಪಾಲು ಜನರು ತುಳು ಭಾಷೆ ಮಾತನಾಡುತ್ತಾರೆ. ಈ ಜಿಲ್ಲೆಗಳನ್ನು ಒಳಗೊಂಡ ಪ್ರದೇಶವನ್ನು  ಚಾರಿತ್ರಿಕವಾಗಿ ತುಳುನಾಡು ಎಂದು ಕರೆಯಲಾಗುತ್ತದೆ. ಹಾಗೆಯೇ ಮುಂಬಯಿ ಪಟ್ಟಣ, ಗುಜರಾತ್ ರಾಜ್ಯದ ಕೆಲ ಭಾಗಗಳಲ್ಲಿ ತುಳುವರು ಇದ್ದಾರೆ. ಸುಮಾರು ೨ ದಶಲಕ್ಷ ಜನರು ತುಳು ಭಾಷೆ ಮಾತಾಡುತ್ತಾರೆ.

ತುಳು ಭಾಷೆಯು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಅಲ್ಲದೆ ಭಾರತದ ಪ್ರಾಚೀನ ಭಾಷೆಗಳಲ್ಲೊಂದು ಎಂಬ ಸ್ಥಾನವನ್ನು ಪಡೆದಿದೆ. ತುಳು ಮಾತನಾಡುವ ಪ್ರದೇಶಗಳಲ್ಲಿ ದಕ್ಷಿಣದಿಂದ ಉತ್ತರಕ್ಕೆ ಮಾತನಾಡುವ ಶೈಲಿಯು ಬದಲಾಗುತ್ತದೆ. ಮಾತನಾಡುವ ಶೈಲಿಗೆ ಅನುಸಾರವಾಗಿ ತುಳು ಭಾಷೆಯನ್ನು ಮುಖ್ಯವಾಗಿ ೪ ವಿಧವಾಗಿ ವಿಂಗಡನೆ ಮಾಡಬಹುದು: - ಬ್ರಾಹ್ಮಣ, ಸಾಮಾನ್ಯ, ಜೈನ, ಹಾಗೂ ಬುಡಕಟ್ಟು.

ಮಲಯಾಳಂ ಕೃತಿ ಕೇರಳೊತ್ಪತ್ತಿ , ಸಂಗಮ ಸಾಹಿತ್ಯದ  ಕೆಲವು ಹಾಗೂ  ತುಳು ಜನಪದ ಪಾಡ್ದನ ಹಾಡುಗಳ ಪ್ರಕಾರ, ಚಾರಿತ್ರಿಕವಾಗಿ ತುಳುನಾಡಿನ ವಿಸ್ತಾರವು ಕಾಸರಗೋಡಿನ ಚಂದ್ರಗಿರಿ ನದಿಯಿಂದ (ಈಗಿನ ಕೇರಳ) ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರೆಗೆ ಇತ್ತು ಎಂದು ತಿಳಿಯಲಾಗಿದೆ. ಆದರೆ ಈಗಿನ ತುಳುನಾಡು ದಕ್ಷಿಣ ಕನ್ನಡ ಹಾಗೂ ಉಡುಪಿ (ಕುಂದಾಪುರ ತಾಲೂಕು ಬಿಟ್ಟು) ಜಿಲ್ಲೆಗಳಿಗೆ ಹಾಗೂ ಕೇರಳ ದಲ್ಲಿರುವ ಕಾಸರಗೋಡು ಜಿಲ್ಲೆಗೆ ಸೀಮಿತವಾಗಿದ್ದರೂ,  ಮಹಾರಾಷ್ಟ್ರದ ಮುಂಬಾಯಿ ಹಾಗೂ ಥಾಣೆಗಳಲ್ಲಿ ಬಹಳಷ್ಟು ತುಳುವರು ಇದ್ದಾರೆ.

ಹಿಂದೆ ತುಳು ಬ್ರಾಹ್ಮಣರು ತುಳು ಭಾಷೆ ಬರೆಯಲು ತಿಗಳಾರಿ ಲಿಪಿಯನ್ನು ಉಪಯೋಗಿಸುತ್ತಿದ್ದರು. ಇದನ್ನೇ ತುಳು ಲಿಪಿ ಎಂದು ಪರಿಗಣಿಸಲಾಗಿದೆ. ಈ ಲಿಪಿಯನ್ನು ಸಂಸ್ಕೃತದ ಶ್ಲೋಕಗಳನ್ನು ಬರೆದಿಟ್ಟುಕೊಳ್ಳಲು ಉಪಯೋಗಿಸುತ್ತಿದ್ದರು. ತದನಂತರ, ತುಳುಲಿಪಿಯಲ್ಲಿ ಬರೆಯಲಾದ ಹಲವು ಗ್ರಂಥಗಳ ಹಸ್ತಪ್ರತಿಗಳು ಲಭಿಸಿವೆ. ಪ್ರಸ್ತುತವಾಗಿ ತುಳು ಬರೆಯಲು ವ್ಯಾಪಕವಾಗಿ ಕನ್ನಡ ಲಿಪಿಯನ್ನು ಬಳಸುತ್ತಾರೆ.  ಕೂಡಾ ಕನ್ನಡ ಲಿಪಿಯಲ್ಲಿದೆ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ತುಳು ಲಿಪಿಗಳನ್ನು ಕಲಿಸಲಾಗುತ್ತಿದ್ದು, ಕೆಲವು ಸಂಸ್ಥೆ ಸಂಘಟನೆಗಳು, ತುಳು ಲಿಪಿ ಕಲಿಸುವ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ.

೧೯೭೧ನೇ ಇಸವಿಯಲ್ಲಿ ತುಳು ಸಿನಿಮಾಲೋಕ ಉದ್ಘಾಟನೆಯಾಗಿ ಮೊದಲ ತುಳು ಸಿನಿಮಾ ಎನ್ನ ತಂಗಡಿ ಬಿಡುಗಡೆಯಾಯಿತು. ಮುಂದೆ ತುಳುವಿನಲ್ಲಿ ಸುಮಾರು ೪೦ ಸಿನಿಮಾಗಳು ತಯಾರಾದವು. 

ಬಿಡುಗಡೆ ಆಗದಿರುವ ಸಿನಿಮಾಗಳು ೪

ಯಕ್ಷಗಾನದಲ್ಲಿ ಭಾಷೆ,ಪ್ರಸಂಗ ಮತ್ತು ವೇಷಭೂಷಣಗಳಲ್ಲಿ ವೈಶಿಷ್ಟ್ಯತೆಗಳನ್ನು ಮೈಗೂಡಿಸಿಕೊಂಡಿರುವ ತುಳು ಯಕ್ಷಗಾನ ಪರಂಪರೆಯನ್ನು ವಿದ್ವಾಂಸರು ತುಳುತಿಟ್ಟು ಎಂದು ಗುರುತಿಸಿಕೊಂಡಿದ್ದಾರೆ. ಇದು ತೆಂಕುತಿಟ್ಟು ಯಕ್ಷಗಾನದ ಪ್ರಭೇದವಾಗಿ ವ್ಯವಸಾಯಿ ಮೇಳವಾಗಿ ಬೆಳೆದು ಬಂತು.ತುಳು ಯಕ್ಷಗಾನವು ತುಳುನಾಡಿನಲ್ಲಿ ಉಗಮವಾದರೂ,ಅದರ ಮಾಧ್ಯಮ ಕನ್ನಡವೇ ಆಗಿದ್ದಿತು. ಹಿಂದಿನ ದಿನಗಳಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿದ್ದರಿಂದ ತುಳು ಭಾಷೆಯ ಪ್ರಸಂಗಗಳು-ಪ್ರದಶ‌‌ನಗಳು ವಿಫುಲವಾಗಿ ಕಂಡು ಬರುತ್ತದೆ.

೧೮೮೭ರಲ್ಲಿ ಬಾಯಾರು ಪೆರುವಡಿ ಸಂಕಯ್ಯ ಭಾಗವತರು ರಚಿಸಿದ ಪಂಚವಟಿ-ವಾಲಿಸುಗ್ರೀವೆರೆ ಕಾಳಗೊ ಎಂಬುದು ತುಳು ಭಾಷೆಯಲ್ಲಿ ದೊರಕಿದ ಮೊದಲ ಉಪಲಬ್ದ ಪ್ರಸಂಗ ಕೃತಿ. ಅನಂತರ ಮೂವತ್ತರ ದಶಕದಲ್ಲಿ ಕೃಷ್ಣ ಸಂಧಾನ,ಅಂಗದ ಸಂಧಾನಮೊದಲಾದ ಪ್ರಸಂಗ ಕೃತಿಗಳು ರಚನೆಯಾದವು. ೧೯೨೯ರಲ್ಲಿ ಪಂದಬೆಟ್ಟು ವೆಂಕಟರಾಯರು ಕೋಟಿ-ಚೆನ್ನಯ ಎಂಬ ಅವಳಿ ಪುಣ್ಯಪುರುಷರ ಸಾಹಸಗಾಧೆಯನ್ನು ತುಳು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿದ ಮೊದಲ ಪ್ರಯತ್ನವಾಗಿದೆ. ಪ್ರಾರಂಭದ ದಿನಗಳಲ್ಲಿ ಕನ್ನಡ ಯಕ್ಷಗಾನಗಳು ಜನಪ್ರೀಯಗೊಂಡರೂ ತುಳುನಾಡಿನ ಜನತೆ ತುಳು ಭಾಷೆಯ ಯಕ್ಷಗಾನಕ್ಕೆ ಒಲವು ತೋರಿಸಿದ್ದರ ಪರಿಣಾಮವಾಗಿ ಜಾನಪದ,ಐತಿಹಾಸಿಕ,ಕಾಲ್ಪನಿಕ ಪ್ರಸಂಗಗಳ ಟೆಂಟ್ ಮೇಳಗಳು ಹುಟ್ಟಿಕೊಂಡವು.

 
  
  




#Article 206: ಗುಜರಾತ್ (3638 words)


ಗುಜರಾತ್ (ગુજરાત - ಗುಜರಾತಿ ಭಾಷೆಯಲ್ಲಿ )  ಭಾರತದ ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ರಾಜ್ಯ. ಈ ರಾಜ್ಯ ಅರಬ್ಬೀ ಸಮುದ್ರ, ಪಾಕಿಸ್ತಾನದ ಸೀಮೆಗೆ ಸಮೀಪದಲ್ಲಿದೆ. ರಾಜ್ಯದ ರಾಜಧಾನಿ ಗಾಂಧಿನಗರ (ಗುಜರಾತ್). ಅಹ್ಮದಾಬಾದ್ ಗುಜರಾತಿನ ವಾಣಿಜ್ಯ ರಾಜಧಾನಿ. ಅರಬ್ಬೀ ಸಮುದ್ರದ ತೀರದಲ್ಲಿ, ಉ. ಅ. 20° 1’ - 24° 7’ ಮತ್ತು ಪು. ರೇ. 68° 4’ - 74° 4’ ನಡುವೆ ಇದೆ. ಉತ್ತರದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ರಾಜಸ್ತಾನ, ಪೂರ್ವದಲ್ಲಿ ಮಧ್ಯಪ್ರದೇಶ ಮತ್ತು ದಕ್ಷಿಣದಲ್ಲಿ ಮಹಾರಾಷ್ಟ್ರ ಪಶ್ಚಿಮ, ನೈರುತ್ಯ ಮತ್ತು ದಕ್ಷಿಣದಲ್ಲಿ ಅರಬ್ಬೀ ಸಮುದ್ರ ಮತ್ತು ಖಂಭತ್ ಹಾಗೂ ಕಚ್ ಖಾರಿ ಸುತ್ತುವರೆದಿವೆ. ಈ ರಾಜ್ಯದ ವಿಸ್ತೀರ್ಣ 1,96,024 ಚ.ಕಿಮೀ. ಜನಸಂಖ್ಯೆ 6,03,83,628 (2011).ಗುಜರಾತಿನ ಒಂದು ವೈಶಿಷ್ಟ್ಯವೆಂದರೆ ಅದರ ಕರಾವಳಿ. ಭಾರತದ ಬೇರಾವ ರಾಜ್ಯಕ್ಕೂ ಇಷ್ಟು ಉದ್ದವಾದ ಸಮುದ್ರತೀರವಿಲ್ಲ. ಇದು ಗುಜರಾತಿನ ವಾಯುಗುಣ, ಆರ್ಥಿಕತೆ ಮತ್ತು ಸಾಮಾಜಿಕ ವ್ಯವಸ್ಥೆಗಳ ಮೇಲೆ ಬಹಳ ಹೆಚ್ಚಿನ ಪ್ರಭಾವ ಬೀರಿದೆ. ಭಾರತದ ಒಟ್ಟು ವಿಸ್ತೀರ್ಣದಲ್ಲಿ ಶೇ. 6.1 ರಷ್ಟಿರುವ ಈ ರಾಜ್ಯದ ಜನಸಂಖ್ಯೆ ಭಾರತದ್ದರ ಶೇ.4.8 ರಷ್ಟಿದೆ.

ಪ್ರಪಂಚದ ಎಂಟು ಸ್ಥಿರಭಾಗಗಳಲ್ಲಿ ಒಂದಾದ ಭಾರತ ಪರ್ಯಾಯದ್ವೀಪ ಭೂಇತಿಹಾಸದ ಯಾವ ಕಾಲದಲ್ಲೂ ಸಂಪುರ್ಣವಾಗಿ ಸಮುದ್ರಾಕ್ರಮಣಕ್ಕೆ ಒಳಪಟ್ಟಿರಲಿಲ್ಲ. ಜುರಾಸಿಕ್, ಕ್ರಿಟೇಷಸ್ ಮತ್ತು ತೃತೀಯ ಭೂಕಾಲ ಯುಗಗಳಲ್ಲಿ ಗುಜರಾತಿನ ಕೆಲವು ಭಾಗಗಳು ಮಾತ್ರ ಸಮುದ್ರಾಕ್ರಮಣಕ್ಕೆ ಒಳಪಟ್ಟಿದ್ದವು. ಆದ್ದರಿಂದ ಗುಜರಾತಿನ ಭೂಇತಿಹಾಸ ಈ ಕಾಲಗಳ ಶಿಲೆಗಳಿಂದ ಮಾತ್ರ ಪ್ರತಿನಿಧಿತವಾಗಿದೆ. ಇವನ್ನು ಹೀಗೆ ವರ್ಗೀಕರಿಸಬಹುದು. ತೃತೀಯ ಭೂಕಾಲ ಯುಗದ ಶಿಲಾವರ್ಗಗಳು - ಡೆಕ್ಕನ್ ಟ್ರ್ಯಾಪ್; ನರ್ಮದಾ ಕಣಿವೆಯ ಬಾಗ್ ಪದರಗಳು - ಕ್ರಿಟೇಷಸ್ ಅಂತ್ಯಕಾಲ; ಕಚ್ಛ್‌ ಪ್ರದೇಶದ ತೀರ ನಿಕ್ಷೇಪಗಳು - ಜುರಾಸಿಕ್ ಮಧ್ಯಕಾಲ ದಿಂದ ಕ್ರಿಟೇಷಸ್ ಆದಿಯವರೆಗೆ; ಚಾಂಪ್ನರ್ ಶಿಲಾವರ್ಗ - ಆರ್ಷೇಯ ಕಲ್ಪ.

ಚಾಂಪ್ನರ್ ಶಿಲಾವರ್ಗ: ವಡೋದರಕ್ಕೆ ಸುಮಾರು 65ಕಿಮೀ ಪುರ್ವದಲ್ಲಿ ನೈಸ್ ಶಿಲೆಯಿಂದೊಡಗೂಡಿದ ಅತ್ಯಂತ ಪುರಾತನ ಕಾಲದ ಪದರಶಿಲೆಗಳು ಹೊರಕಂಡಿವೆ. ಡಬ್ಲ್ಯು. ಟಿ. ಬ್ಲ್ಯಾನ್ಫೋರ್ಡ ಎಂಬಾತ ಇವನ್ನು ಚಾಂಪ್ನರ್ ಶಿಲಾವರ್ಗ ಎಂದು ಕರೆದು, ಇವು ರಾಜಸ್ತಾನದ ಆರಾವಳಿ ಶಿಲಾವರ್ಗಕ್ಕೆ ಸಮಕಾಲೀನವಾದವುಗಳೆಂದು ಸ್ಥಾಪಿಸಿದ. ಚಾಂಪ್ನರ್ ಶಿಲಾವರ್ಗಕ್ಕೂ ಈಗ ಕರ್ನಾಟಕದಲ್ಲಿರುವ ಮಾದರಿ ಧಾರವಾಡ ಶಿಲಾವರ್ಗಕ್ಕೂ ಬಹಳ ಸಾಮ್ಯವಿರುವುದರಿಂದ, ಇವೆರಡು ಶಿಲಾವರ್ಗಗಳು ಡೆಕ್ಕನ್ ಟ್ರ್ಯಾಪಿನ ಕೆಳಗೆ ಒಂದಾಗಿವೆ ಎಂಬುದರಲ್ಲಿ ಸಂಶಯವಿಲ್ಲ.

ಕಚ್ಛ್‌ ತೀರ ನಿಕ್ಷೇಪಗಳು: ವಿಂಧ್ಯನ್ ಕಾಲದಿಂದಲೂ ಸಮುದ್ರ ನಿಕ್ಷೇಪಗಳನ್ನೇ ಕಾಣದಿದ್ದ ಪರ್ಯಾಯ ದ್ವೀಪಭಾಗ ಜುರಾಸಿಕ್ ಮಧ್ಯಕಾಲದಲ್ಲಿ ಸಮುದ್ರಾಕ್ರಮಣಕ್ಕೆ ಒಳಪಟ್ಟಿತು. ಕಾಠಿಯಾವಾಡದ ಉತ್ತರಭಾಗ ಸಮುದ್ರದ ಅಡಿಯಲ್ಲಿ ಮುಳುಗಿ ಅಲ್ಲಿ ಸುಮಾರು 1829 ಮೀ ದಪ್ಪದ ನಿಕ್ಷೇಪಗಳು ಸಂಚಯನವಾಗಿವೆ. ಇವು ಪೂರ್ವ - ಪಶ್ಚಿಮವಾಗಿ ಹಬ್ಬಿರುವ ಮೂರು ಶೃಂಗಮಡಿಕೆಗಳಾಗಿ ಹೊರಕಂಡಿವೆ. ಈ ಶಿಲಾಪರಂಪರೆಯನ್ನು ಪಚಂ, ಚಾರಿ, ಕಟ್ರೋಲ್ ಮತ್ತು ಉಮಿಯ ಎಂದು ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ. ಇದು ಜುರಾಸಿಕ್ ಯುಗದ ಬಾಕೋನಿಯನ್ ಕಾಲದಿಂದ ಕ್ರಿಟೇಷಸ್ ಯುಗದ ನಿಯೊಕೋಮಿಯನ್ ಅಥವಾ ಅಪ್ಸಿಯನ್ ಕಾಲದವರೆಗಿನ ಶಿಲಾನಿಕ್ಷೇಪಗಳಿಂದ ಕೂಡಿದೆ. ಈ ಶಿಲಾಸಮುದಾಯದ ಮೇಲೆ ಡೆಕ್ಕನ್ ಟ್ರ್ಯಾಪ್ ಅಥವಾ ಇಯೊಸೀನ್ ಯುಗದ ಶಿಲೆಗಳಿವೆ. ಪಚಂ ಶ್ರೇಣಿ ಕಚ್ ಖಾರಿಯಲ್ಲಿರುವ ಪಚಂ ದ್ವೀಪದಲ್ಲಿ ಹೊರಕಂಡಿರುವುದರಿಂದ ಈ ಹೆಸರು ಬಂದಿದೆ. ಈ ಶಿಲೆಗಳ ದಪ್ಪ ಸುಮಾರು 305 ಮೀ. ಭೂಜ್‍ಗೆ ಸುಮಾರು 49 ಕಿಮೀ. ವಾಯವ್ಯದಲ್ಲಿ ಚಾರಿ ಎಂಬ ಹಳ್ಳಿಯ ಹತ್ತಿರ ಪಚಂ ಶ್ರೇಣಿಗಿಂತ ಕಿರಿಯ ಶಿಲೆಗಳು ಹೊರಕಂಡಿವೆ. ಆದ್ದರಿಂದ ಇವನ್ನು ಚಾರಿ ಶ್ರೇಣಿ ಎಂದು ಹೆಸರಿಸಲಾಗಿದೆ. ಕಟ್ರೋಲ್ ಶಿಲಾಶ್ರೇಣಿ ಅನೇಕ ವಿಧದ ಮರಳುಶಿಲೆಗಳು ಮತ್ತು ಜೇಡುಶಿಲೆಗಳಿಂದಾಗಿದೆ. ಇವನ್ನು ಆರೋಹಣ ಕ್ರಮದಲ್ಲಿ ಕಂಟ್ಕೋಟ್ ಮರಳು ಶಿಲೆ, ಕಟ್ರೋಲ್ ಶಿಲೆ ಮತ್ತು ಗಾಜನ್ಸಾರ್ ಪದರಗಳಾಗಿ ವಿಂಗಡಿಸಿದೆ. ಇವು ಆರ್ಗೋವಿಯನ್ ಕಾಲದ ಅಂತ್ಯದಿಂದ ಪೋರ್ಟ್ ಲ್ಯಾಂಡಿಯನ್ ಕಾಲದವು. ಕಂಟ್ಕೋಟ್ ಮರಳು ಶಿಲೆ ವಾಗಡ್ ಸುತ್ತಮುತ್ತ ಹೊರಕಂಡಿದೆ. ಇದರಲ್ಲಿ ಎಪಿಮಾಯೈಟಿಸ್ ಟ್ರಾನ್ಸಿಯನ್ಸ್‌, ಪ್ರಾಸ್ಪೊದಿಸ್ಪಿಂಕ್ಟೆಸ್ ವಿರ್ಗುಲಾಯಿಡ್ಸ್‌, ಟಾರ್ಕುಟಿಸ್ಟಿಂಕ್ಟೆಸ್ ಟಾರ್ಕುಟಿಸ್ ಎಂಬ ಅವಶೇಷಗಳಿವೆ. ಕಟ್ರೋಲ್ ಶಿಲಾಪದರದ ಕೆಳ ಮತ್ತು ಮಧ್ಯಭಾಗಗಳಲ್ಲಿ ಒಪ್ಪಲೈಡ್ಸ್‌, ಕಟ್ರೋಲಿಸೆರಾಸ್, ಅಸ್ಟಿಡೊಸೆರಾಸ್, ಸ್ಟ್ರೆಬ್ಲೈಟಿಸ್ ಮತ್ತು ವಾಗೆನಿಯಗಳ ಅವಶೇಷಗಳಿವೆ. ಕಟ್ರೋಲ್ ಶಿಲಾಶ್ರೇಣಿಯ ಮೇಲ್ಭಾಗ ಅವಶೇಷರಹಿತ ವಾಗಿದೆ. ಗಾಜನ್ಸಾರ್ ಪದರಗಳಲ್ಲಿ ಗ್ಲೋಕಿಸೆರಾಸ್ ಮತ್ತು ಪಿಲ್ಲೊಸೆರಾಸ್ಗಳಿವೆ. ಈ ಶಿಲಾಶ್ರೇಣಿಗಿಂತ ಕಿರಿಯ ಶಿಲೆಗಳು ಭೂಜ್‍ಗೆ ವಾಯವ್ಯಕ್ಕೆ ಸುಮಾರು 80 ಕಿಮೀ ದೂರದಲ್ಲಿರುವ ಉಮಿಯ ಎಂಬ ಹಳ್ಳಿಯ ಹತ್ತಿರ ಉತ್ತಮವಾಗಿ ಹೊರಕಂಡಿವೆ. ಇವುಗಳಿಗೆ ಉಮಿಯ ಶ್ರೇಣಿ ಎಂದು ಹೆಸರು. ಇದರ ದಪ್ಪ ಸುಮಾರು 915 ಮೀಟರುಗಳು. ರಾಜನಾಥ್ ಎಂಬವರು ಈ ಶಿಲಾಶ್ರೇಣಿಯನ್ನು ಉಮಿಯ, ಉಕ್ರ ಮತ್ತು ಭೂಜ್ ಎಂದು ಮೂರು ಶಿಲಾಪಾದಗಳಾಗಿ ವಿಂಗಡಿಸಿದ್ದಾರೆ. ಉಮಿಯ ಪಾದದಲ್ಲಿ ಫಾಸಿಲ್ ಮರಳುಶಿಲೆ ಮತ್ತು ಜೇಡುಶಿಲೆಗಳು ಇವೆ. ಇವುಗಳ ಮಧ್ಯದ ಒಂದು ಪದರದಲ್ಲಿ ಟ್ರೈಗೋನಿಯ ಎಂಬ ಲೆಮಲಿಬ್ರ್ಯಾಂಕಿನ ಅವಶೇಷಗಳಿವೆ. ಇವು ಜುರಾಸಿಕ್ ಅಂತ್ಯದಿಂದ ಕ್ರಿಟೇಷಸ್ ಯುಗದ ಆದಿಕಾಲವನ್ನು ಸೂಚಿಸುತ್ತವೆ. ಉಮಿಯಪಾದದ ಮೇಲಿರುವ ಉಕ್ರಪಾದವೂ ಸಾಗರಜನಿತವಾದುದು. ಇದರಲ್ಲಿರುವ ಅಮ್ಮೊನೈಟುಗಳು ಕೂಡ ಇದೇ ಕಾಲವನ್ನು ಸೂಚಿಸುತ್ತವೆ. ಭೂಜ್ಪಾದದಲ್ಲಿ ಝಮಿಯ ಟೀಲೋಫಿಲ್ಲಂ ಮತ್ತು ಪಾಮೊಕ್ಸೈಲಾನ್ ಮುಂತಾದ ಸಸ್ಯಗಳು ಇವೆ. ಈ ಸಸ್ಯಗಳು ಜುರಾಸಿಕ್ ಅಂತ್ಯಕಾಲವನ್ನು ಸೂಚಿಸುತ್ತವೆ. ಆದರೆ ಇವುಗಳ ಕೆಳಗಿನ ಶಿಲೆಗಳು ಕ್ರಿಟೇಷಸ್ ಆದಿಕಾಲದವುಗಳಾದ್ದರಿಂದ ಇವು ಸಹ ಕ್ರಿಟೇಷಸ್ ಆದಿಕಾಲದವೆಂದು ನಿರ್ಧರಿಸಲಾಗಿದೆ.

ಬಾಗ್ ಪದರಗಳು : ನರ್ಮದಾ ನದಿ ಕಣಿವೆಯಲ್ಲಿ ಗ್ವಾಲಿಯರ್ ಹತ್ತಿರವಿರುವ ಬಾಗ್ ಎಂಬ ಪಟ್ಟಣದಿಂದ ಪುರ್ವಪಶ್ಚಿಮವಾಗಿ ಕಾಠಿಯಾವಾಡದವರೆಗೆ ಪರಸ್ಪರ ಬೇರ್ಪಟ್ಟ ನಿಕ್ಷೇಪಗಳು ಅನೇಕ ಕಡೆ ರೂಪುಗೊಂಡಿವೆ. ಚೆರ್ಟ್ ಮತ್ತು ಚಿಪ್ಪುಗಳಿಂದ ಕೂಡಿದ ಅಶುದ್ಧ ಸುಣ್ಣ ಶಿಲೆ, ಬೆಣಚುಶಿಲೆ, ಮತ್ತು ಜೇಡುಶಿಲೆಗಳು ಇಲ್ಲಿನ ಪ್ರಮುಖ ಶಿಲೆಗಳು. ಇವು ಡೆಕ್ಕನ್ ಟ್ರ್ಯಾಪ್ ಶಿಲೆಗಳ ಕೆಳಗಿದ್ದು ಅವು ಶಿಥಿಲೀಕರಿಸಿದ ಮೇಲೆ ಹೊರಕಂಡಿವೆ. ಸಿನಮೇನಿಯನ್ ಕಾಲದಲ್ಲಿ ಟೆತಿಸ್ ಸಾಗರ ನರ್ಮದಾ ನದಿಕಣಿವೆಯನ್ನು ಆಕ್ರಮಿಸಿದಾಗ ಇವು ನಿಕ್ಷೇಪಗೊಂಡವು. ಇವುಗಳಲ್ಲಿ ಫಾಸಿಲುಗಳು ಸುಮಾರು 18-22 ಮೀ ನಷ್ಟು ಶಿಲೆಗಳಲ್ಲಿ ಮಾತ್ರ ಇವೆಯಷ್ಟೆ. ಇವನ್ನು ವರ್ಗೀಕರಿಸಲಾಗಿದೆ.
ಬಾಗ್ ಪದರಗಳ ವಿಭಾಗ
ನಿಮಾರ್ ಮರಳುಶಿಲೆ ಪಶ್ಚಿಮಕ್ಕೆ ಹೋದಹಾಗೆಲ್ಲ ದಪ್ಪವಾಗುತ್ತದೆ. ಇದು ಉತ್ತಮ ಕಟ್ಟಡ ಶಿಲೆ. ಇದನ್ನು ವಡೋದರ ಹತ್ತಿರದ ಸಾಂಘಿರ್ ಎಂಬಲ್ಲಿ ತೆಗೆಯುತ್ತಾರೆ. ಗಂಟು ಜೇಡು ಮಿಶ್ರ ಸುಣ್ಣಶಿಲೆ ಬಹುಗಟ್ಟಿ. ದಿಯೋಲ ಸುಣ್ಣ ಮಿಶ್ರ ಜೇಡು 3 ಮೀ ದಪ್ಪವಿದ್ದರೂ ಫಾಸಿಲುಗಳು ವಿಶೇಷವಾಗಿವೆ. ಇದರ ಮೇಲೆ ಹವಳದ ಸುಣ್ಣಶಿಲೆ ಇದೆ. ಇದರಲ್ಲಿ ಬ್ರಿಯೊಜೋ಼ವಗಳ ಅವಶೇಷಗಳು ಹೆಚ್ಚಾಗಿವೆ. ಬಾಗ್ ಪದರಗಳಲ್ಲಿರುವ ಫಾಸಿಲುಗಳು ಕ್ರಿಟೇಷಸ್ ಯುಗದ ಸಿನಮೇನಿಯನ್ ಕಾಲದಿಂದ ಸಿನೋನಿಯನ್ ಕಾಲದವರೆಗಿನ ಅವಧಿಯನ್ನು ಸೂಚಿಸುತ್ತವೆ. ಆದರೆ ಈ ಫಾಸಿಲುಗಳು ಸಮೀಪದ ತಿರುಚನಾಪಲ್ಲಿ ಶಿಲಾಸ್ತೋಮಗಳಲ್ಲಿನ ಸಮಕಾಲೀನ ಅವಶೇಷಗಳಿಗಿಂತ ತೀರ ಭಿನ್ನವಾಗಿವೆ; ಬದಲು ಅರೇಬಿಯ ಮತ್ತು ಯುರೋಪಿನ ಕ್ರಿಟೇಷಸ್ ಅವಶೇಷಗಳನ್ನು ಹೋಲುತ್ತವೆ. ಅಂದರೆ ಇವೆರಡು ಪ್ರದೇಶಗಳು ಬೇರೆ ಬೇರೆ ಸಾಗರಗಳ ಆಕ್ರಮಣಕ್ಕೆ ಒಳಪಟ್ಟಿದ್ದುದೇ ಅಲ್ಲದೆ, ಆ ಎರಡು ಸಾಗರಗಳು ಅಗಲವಾದ ಭೂಭಾಗದಿಂದ ಬೇರ್ಪಟ್ಟಿದ್ದುವೆಂದು ಸಹ ಅರಿವಾಗುತ್ತದೆ. ಒಂದು ಟೆತಿಸ್ ಸಾಗರದ ಶಾಖೆ, ಮತ್ತೊಂದು ದಕ್ಷಿಣ ಸಮುದ್ರದ ಶಾಖೆ.
ಡೆಕ್ಕನ್ ಟ್ರ್ಯಾಪ್ : ಕ್ರಿಟೇಷಸ್ ಯುಗದ ತರುವಾಯ ಮಹಾ ಭೂ ಪ್ರಳಯವಾಯಿತು. ಆಗ ಮಹತ್ತರ ಬದಲಾವಣೆಗಳಾದವು: ಅಗಾಧ ಪ್ರಮಾಣದ ಭೂ ಚಲನೆಯಾಯಿತು. ಅದುವರೆಗೂ ಅಸ್ಥಿತ್ವದಲ್ಲಿದ್ದ ಗೊಂಡವಾನ ಭೂಭಾಗ ಭಾರತ ಪರ್ಯಾಯದ್ವೀಪ, ಆಸ್ಟ್ರೇಲಿಯ, ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಅಂಟಾರ್ಕ್ಟಿಕ್ ಎಂಬ ಖಂಡಗಳಾಗಿ ಬೇರ್ಪಟ್ಟಿತು. ಬೇರ್ಪಟ್ಟ ಭೂಭಾಗಗಳನ್ನೆಲ್ಲ ಹಿಂದೆಂದೂ ಕಂಡರಿಯದ (ನಿರ್ಜೀವಕಲ್ಪವನ್ನುಳಿದು) ಶಿಲಾರಸದ ಉಗುಳುವಿಕೆ ಆಯಿತು. ಆ ಕಾಲದಲ್ಲಿ ಹೊರಹೊಮ್ಮಿದ ಶಿಲಾರಸದಿಂದ ಡೆಕ್ಕನ್ ಟ್ರ್ಯಾಪ್ ಆಯಿತು. ಈ ಶಿಲಾವರ್ಗ ಗುಜರಾತಿನ ಬಹುಭಾಗವನ್ನು ಆಕ್ರಮಿಸಿದೆ. ಶಿಲಾರಸ ಹೊರಹೊಮ್ಮುವಿಕೆ ಸಾಮಾನ್ಯರೀತಿಯ ಅಗ್ನಿಪರ್ವತದಿಂದಾದುದಲ್ಲ. ನೂರಾರು ಮೀಟರ್ ಅಗಲ, ಅನೇಕ ಕಿಲೋಮೀಟರ್ ಉದ್ದದ ಕವಲಾಗಿದ್ದ ಬಿರುಕುಗಳ ಮೂಲಕ ಹೊರಹೊಮ್ಮುವಿಕೆ. ಇದು ಘನೀಭವಿಸಿರುವ ಬಿರುಕುಗಳು ಈಗಲೂ ಬರೂಚ್‍ನ ಸಮೀಪದ ರಾಜಪಿಪ್ಲ ಬೆಟ್ಟಗಳು, ಕಚ್ ಮತ್ತು ಕಾಠಿಯಾವಾಡ ಮತ್ತಿತರ ಪ್ರದೇಶಗಳಲ್ಲಿವೆ. ಇವುಗಳಿಗೆ ಡೈಕುಗಳೆಂದು ಹೆಸರು. ಸೌರಾಷ್ಟ್ರ ಪ್ರದೇಶದ ಅಮ್ರೋಲಿ ಮತ್ತು ಜಾಸ್ಡನ್ ಸುತ್ತಲಿರುವ ಡೈಕುಗಳು ಹೊರಗಾಮಿಯಾಗಿ ಹಂಚಿವೆ. ಗಿರ್ನಾರ್ ಮತ್ತು ಚೊಗತ್ ಚಮರ್ಡಿಗಳಲ್ಲಿ ನಿರ್ದಿಷ್ಟದ್ವಾರದ ಸಾಮಾನ್ಯ ಅಗ್ನಿಪರ್ವತಗಳಿವೆ. ಪುರ್ವಸೌರಾಷ್ಟ್ರ ಮತ್ತು ನರ್ಮದಾ ಕಣಿವೆಗಳಲ್ಲಿಯೂ ಡೈಕುಗಳ ಸಮೂಹಗಳಿವೆ. ಕಚ್ಚ್‌ ಮತ್ತು ಕಾಠಿಯಾವಾಡ ಪ್ರದೇಶದ ಡೆಕ್ಕನ್ ಟ್ರ್ಯಾಪಿನಲ್ಲಿ ಆಮ್ಲೀಯ, ಮಧ್ಯವರ್ತಿ ಮತ್ತು ಪ್ರತ್ಯಾಮ್ಲೀಯ ಶಿಲಾ ವಿಧಗಳಿವೆ. ಇವೆಲ್ಲ ಶಿಲಾರಸ ಪ್ರಭೇದಗೊಳ್ಳುವಿಕೆಯಿಂದಾದವು. ಗಿರ್ನಾರ್ ಮತ್ತು ಔಷಮ್ ಬೆಟ್ಟಗಳಲ್ಲಿ ಸಾಮಾನ್ಯ ಬೆಸಾಲ್ಟ್‌ ವಿಧವಲ್ಲದೆ ಲಿಂಬರ್ಗೈಟ್, ಆಂಡೆಸೈಟ್, ರೈಯೊಲೈಟ್, ಆಬ್ಸಿಡಿಯಾನ್, ಪಿಚ್ಸ್ಟೋನ್ ಮುಂತಾದ ಜ್ವಾಲಾಮುಖಜ ಶಿಲೆಗಳೂ ಲ್ಯಾಂಪ್ರೋಫೈರ್ ಆಲಿವೀನ್, ಗ್ರ್ಯಾಬ್ರೊ, ಮಾನ್ಜೊನೈಟ್, ನೆಫೆಲೀನ್ ಸಯನೈಟ್, ಗ್ರ್ಯಾನೋಫೈರ್ ಮುಂತಾದ ಮಧ್ಯಾಂತರ ಶಿಲೆಗಳೂ ಇವೆ. ನರ್ಮದಾ ಕಣಿವೆಯಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆ ಬಾಗ್ ಪದರಗಳ ಮೇಲೆ ಅನನುರೂಪವಾಗಿರುವುದನ್ನೂ ಸೂರತ್ ಮತ್ತು ಭಡೋಚ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಮೇಲೆ ನಮ್ಮುಲಿಟಿಕ್ ಸುಣ್ಣಶಿಲೆ ಅನನುರೂಪತೆಯಿಂದ ನಿಕ್ಷೇಪಗೊಂಡಿರುವುದನ್ನೂ ಬ್ಲ್ಯಾನ್ ಫೋರ್ಡ್ ಗುರುತಿಸಿದ (1879). ಕಚ್ಛ್‌ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆ ಜುರಾಸಿಕ್ ಕಾಲದ ತೀರನಿಕ್ಷೇಪಗಳ ಮೇಲೆ ಮತ್ತು ನಮ್ಮುಲಿಟಿಕ್ ಸುಣ್ಣಶಿಲೆಯ ಕೆಳಗಿರುವುದನ್ನೂ ವರದಿ ಮಾಡಿದ. ಆದ್ದರಿಂದ ಟ್ರ್ಯಾಪ್ ಶಿಲೆ ಮಧ್ಯ ಕ್ರಿಟೇಷಸ್ ಕಾಲದಿಂದ ಅಂತ್ಯ ಕ್ರಿಟೇಷಸ್ ಕಾಲದ್ದಾಗಿರಬೇಕೆಂದು ಆತನ ಅಭಿಪ್ರಾಯ.
ತೃತೀಯ ಭೂಕಾಲಯುಗದ ನಿಕ್ಷೇಪಗಳು : ಸೂರತ್ , ಭಡೋಚ, ನರ್ಮದಾ ಕಣವೆ ಪ್ರದೇಶಗಳಲ್ಲಿ ಇಯೋಸೀನ್ ಕಾಲದ ನಮ್ಮುಲಿಟಿಕ್ ಸುಣ್ಣಶಿಲೆ ಎರಡು ಕಡೆಗಳಲ್ಲಿ ಹೊರಕಂಡಿದೆ. ಇವೆರಡರ ಮಧ್ಯ ಕಿಮ್ ನದಿಯ ಮೆಕ್ಕಲು ನಿಕ್ಷೇಪವಾಗಿದೆ. ಇವೆರಡರಲ್ಲಿ ಕಿಮ್ ಮತ್ತು ನರ್ಮದಾಗಳ ನಡುವೆ ಇರುವುದು ದೊಡ್ಡದು. ಇದರ ಉದ್ದ 48ಕಿಮೀ. ಅಗಲ ಸು. 19ಕಿಮೀ. ಇನ್ನೊಂದು ತಪತಿ ನದಿಯ ಉತ್ತರಕ್ಕೆ 16 ಕಿಮೀ ವಿಸ್ತರಿಸಿದೆ. ಇದರ ಅಗಲ 24 ಕಿಮೀ. ಇವು ಲಾಕಿ ಮತ್ತು ಕಿರ್ತಾರ್ ಶಿಲಾವರ್ಗಗಳಿಗೆ ಸಮದೂಗುತ್ತವೆ. ಈ ಶಿಲೆಗಳ ಮೇಲೆ ಕಾಕಿ ಬಣ್ಣದ ಜೇಡುಶಿಲೆಗಳಿವೆ. ಇವುಗಳ ಮಧ್ಯೆ ಜೇಡು ಮತ್ತು ಸುಣ್ಣಮಿಶ್ರ ಜೇಡು ಪದರಗಳಿವೆ. ಗುಜರಾತಿನಲ್ಲಿ ಇದೇ ಕಾಲದ ಶಿಲೆಗಳು ಮರಳು ಶಿಲೆ, ನೊರಜುಗಳು ಮತ್ತು ಜೇಡುಶಿಲೆಗಳಿಂದ ಕೂಡಿ 1220 - 1525 ಮೀಟರುಗಳಷ್ಟು ದಪ್ಪ ರೂಪುಗೊಂಡಿವೆ. ಇವು ನಾರಿ ಮತ್ತು ಗಾಜ್ (ಆಲಿಗೋಸೀನ್ ಮತ್ತು ಮಯೋಸೀನ್ ಆದಿಕಾಲ) ಶಿಲಾವರ್ಗಗಳಿಗೆ ಸರಿದೂಗುತ್ತವೆ. ಇವುಗಳಲ್ಲಿ ಪೊರಮಿನಿಫೆರಗಳ ಅವಶೇಷಗಳು ಅಧಿಕವಾಗಿವೆ. ಇವು ತೈಲಭರಿತ ಶಿಲೆಗಳು. ಭೂಜ್, ಅಂಕಲೇಶ್ವರ್ ಮುಂತಾದ ಕಡೆಗಳಲ್ಲಿ ತೈಲಬಾವಿಗಳಿವೆ. ಕ್ಯಾಂಬೆ ಮತ್ತು ರಾಜಪಿಪ್ಲಗಳಲ್ಲಿ ಗುಂಡುಶಿಲೆಗಳಲ್ಲಿರುವ ಜಾಸ್ಪರಿನಿಂದ ಸಾಧಾರಣ ರತ್ನ ಶಿಲೆಗಳನ್ನು ತಯಾರಿಸಲಾಗುತ್ತಿದೆ. ಸೌರಾಷ್ಟ್ರದ ಅತ್ಯಂತ ಪಶ್ಚಿಮಭಾಗದಲ್ಲಿ ಗಾಜ್ ಕಾಲದ ಶಿಲೆಗಳ ಮೇಲೆ ಜಿಪ್ಸಂನಿಂದ ಕೂಡಿದ ಜೇಡು ಮತ್ತು ಪೊರಮಿನಿಫೆರಗಳಿಂದ ಕೂಡಿದ ಸುಣ್ಣಶಿಲೆಗಳಿವೆ. ಇವಕ್ಕೆ ದ್ವಾರಕಾಪದರಗಳೆಂದು ಹೆಸರು. ಇವು ಮಯೋಸೀನ್ ಯುಗದ ಮಧ್ಯ ಮತ್ತು ಅಂತ್ಯಕಾಲದವು. ಕ್ಯಾಂಬೆ ಖಾರಿಯಲ್ಲಿರುವ ಪಿರಾಂನಲ್ಲಿ ಮಧ್ಯಶಿವಾಲಿಕ್ ಕಾಲದ ಶಿಲೆಗಳಿವೆ. ಇವುಗಳಲ್ಲಿ ಸಸ್ತನಿಗಳ ಅವಶೇಷಗಳಿವೆ. ಅಹಮದಾಬಾದಿನ ಸಮೀಪದಲ್ಲಿರುವ ತಗ್ಗುಪ್ರದೇಶದಲ್ಲಿ ನೆರಿತಿಯಂ, ಪೊಟಮೈಡಿಸ್ಗಳ ಅವಶೇಷಗಳಿರುವ ನಿಕ್ಷೇಪಗಳಿವೆ. ಆದ್ದರಿಂದ ಈ ಪ್ರದೇಶ ಪ್ಲೀಸ್ಟೊಸೀನ್ ಕಾಲದಲ್ಲಿ ಸಮುದ್ರ ಅಳಿವೆಯಾಗಿತ್ತೆಂದು ಭಾವಿಸಬಹುದು. ಕಾಠಿಯಾವಾಡ ಪುರ್ವಭಾಗದಲ್ಲಿ ಮಿಲಿಯೊಲೈಟ್ ಪೊರಮಿನಿಫೆರಗಳಿಂದ ಕೂಡಿದ ವರ್ತಮಾನಕಾಲದ ಸುಣ್ಣಶಿಲೆ ಇದೆ. ಇದಕ್ಕೆ ಪೋರ್ಬಂದರ್ ಶಿಲೆ ಎಂದು ಹೆಸರು. ಈ ಪ್ರದೇಶ ಇತ್ತಿಚೇಗೆ ಮೇಲೆದ್ದಿರುವುದರ ಕುರುಹು ಈ ಶಿಲೆ.
ರಾಜಪುತಾನ ಮರುಭೂಮಿ ನೈಋತ್ಯದಲ್ಲಿ ಒಂದು ವಿಶಾಲವಾದ ತಗ್ಗುಭೂಮಿಯೊಂದಿಗೆ ಸೇರಿಕೊಳ್ಳುತ್ತದೆ. ಇದಕ್ಕೆ ಕಚ್ಛಿನ ರಣ್ ಪ್ರದೇಶ ಎಂದು ಹೆಸರು. ವರ್ಷದ ಕೆಲವು ದಿವಸಗಳಲ್ಲಿ ಇದು ಕೆಸರು ಪ್ರದೇಶವಾಗಿದ್ದು, ಬೇಸಗೆಯಲ್ಲಿ ಒಣಗಿರುತ್ತದೆ. ಹಿಂದೆ ಇದು ಅರಬ್ಬೀ ಸಮುದ್ರದ ಒಂದು ಕೋವೆಯಾಗಿತ್ತು. ಅನೇಕ ಚಿಕ್ಕ ನದಿಗಳು ಮೆಕ್ಕಲನ್ನು ತಂದು ಇದರಲ್ಲಿ ತುಂಬಿ ಕೋವೆಯನ್ನು ಮುಚ್ಚಿವೆ.

ಗುಜರಾತ್ ರಾಜ್ಯವನ್ನು ಸ್ಥೂಲವಾಗಿ ಐದು ಭಾಗಗಳಾಗಿ ವಿಂಗಡಿಸಬಹುದು :

ಇಲ್ಲಿಯ ಅನೇಕ ನದಿ ತೊರೆಗಳು ಬಲು ಸಣ್ಣವು. ಕಚ್ಛಿಗೆ ಉತ್ತರದಲ್ಲೂ ಕಚ್ಛಿನ ಮತ್ತು ಗುಜರಾತಿನ ಮುಖ್ಯ ಭೂಮಿಯ ನಡುವೆಯೂ ಇರುವ ರಣ್ಗಳೂ ಕರಾವಳಿಯ ಜವುಗು ನೆಲದಂತೆ ಉದ್ಭವವಾದಂಥವು. ಕಚ್ಛ್‌ ರಣದ ವಿಸ್ತೀರ್ಣ 11,270 ಕಿಮೀ. ಚಿಕ್ಕ ರಣ್ ಕಿರಿದು. ಇದರ ವಿಸ್ತೀರ್ಣ 4,000 ಚ. ಕಿಮೀ ಗಿಂತ ಹೆಚ್ಚಿಲ್ಲ. ಮಳೆಯಿಲ್ಲದಾಗ ಇವೆರಡೂ ಪ್ರದೇಶಗಳೂ ಒಣನೆಲಗಳಾಗಿರುತ್ತವೆ. ಮಳೆಗಾಲದಲ್ಲಿ ಜಲೋತ್ಸಾರಣ ಕ್ರಿಯೆ ಸರಿಯಾಗಿ ನಡೆಯದೆ ಇವು ಜಲಭರಿತವಾಗುತ್ತವೆ.
ಕರಾವಳಿಯ ಜವುಗು ನೆಲಕ್ಕೂ ಒಳನಾಡಿನ ಪ್ರಸ್ಥಭೂಮಿ ಮತ್ತು ಪರ್ವತಗಳಿಗೂ ನಡುವೆ ಗುಜರಾತಿನ ಮೈದಾನ ಹಬ್ಬಿದೆ. ಇದು ಸಾಬರ್ಮತೀ, ಮಾಹೀ, ನರ್ಮದಾ, ತಾಪಿ ಮತ್ತು ಅವುಗಳ ಉಪನದಿಗಳಿಂದ ಕೂಡಿದ್ದು. ಮಧ್ಯಭಾರತದ ಎತ್ತರದ ನೆಲದಿಂದ ಥಟ್ಟನೆ ಕೆಳಕ್ಕೆ ಇಳಿಯುವ ನದಿಗಳು ಇಲ್ಲಿ ನಿಧಾನವಾಗಿ, ಅಂಕುಡೊಂಕಾಗಿ, ಅಲ್ಲಲ್ಲಿ ನಿಂತು ಸಾಗುತ್ತವೆ. ನದಿಗಳು ತಂದುಹಾಕಿದ ಮೆಕ್ಕಲು ಮಣ್ಣಿನಿಂದ ಮೈದಾನ ಆವೃತವಾಗಿದೆ. ಇಲ್ಲಿಯ ಮಣ್ಣು ವೈವಿಧ್ಯಮಯ.
ಸೌರಾಷ್ಟ್ರ ಪ್ರಸ್ಥಭೂಮಿ 75 ಮೀ ನಿಂದ 300 ಮೀ ವರೆಗೆ ಎತ್ತರವಾಗಿದೆ. ಪಶ್ಚಿಮ ಭಾರತದ ಬಹುಭಾಗವನ್ನು ಒಮ್ಮೆ ಆವರಿಸಿದ್ದ ಲಾವದ ಉಳಿಕೆಯ ನೆಲವಿದು. ಕವಿಚಿಟ್ಟ ಸಕ್ಕರೆ ಪೊಟ್ಟಣದ ರೀತಿಯಲ್ಲಿ ಪ್ರಸ್ಥಭೂಮಿ ಸ್ವಲ್ಪ ಸ್ವಲ್ಪವಾಗಿ ಮೇಲೇರಿ, ಮಧ್ಯ ಭಾಗದಲ್ಲಿ ಬೆಟ್ಟಗುಡ್ಡಗಳಾಗಿ ಪರಿಣಮಿಸಿದೆ. ಇದರ ಉತ್ತರದಲ್ಲಿ ಮಂಡ ಬೆಟ್ಟಗಳೂ ದಕ್ಷಿಣದಲ್ಲಿ ಗಿರ್ ಬೆಟ್ಟಗಳೂ ಇವೆ. ಇವೆರಡನ್ನೂ ಕೂಡಿಸುವ ಕಿರಿದಾದ ಪ್ರದೇಶ ಈ ಪ್ರಸ್ಥಭೂಮಿಯ ಉಳಿದ ಭಾಗಕ್ಕಿಂತ ಎತ್ತರವಾದ್ದು. ಪ್ರಸ್ಥಭೂಮಿಯ ಒಂದು ಮುಖ್ಯ ವೈಶಿಷ್ಟ್ಯವೆಂದರೆ 60 ಮೀ ವರೆಗೆ ಅಗಲವಾಗಿರುವ, 60 ಕಿಮೀ ವರೆಗಿನ ಉದ್ದದ ಡೈಕುಗಳು. ನದಿಗಳು ಮಧ್ಯದ ಎತ್ತರದ ನೆಲದಲ್ಲಿ ಹುಟ್ಟಿ ಎಲ್ಲ ದಿಕ್ಕುಗಳಲ್ಲೂ ಹರಿಯುತ್ತವೆ. ಮಚ್ಫೂ, ಆಜಿ, ಭಾದರ್, ಶತ್ರುಂಜೀ, ಮತ್ತು ಭಗವಾ ಇಲ್ಲಿಯ ಮುಖ್ಯ ನದಿಗಳು.
ಕಚ್ಛಿನ ಪ್ರಸ್ಥಭೂಮಿ ಪ್ರದೇಶ ಪುರ್ವದಿಂದ ಪಶ್ಚಿಮದ ಕಡೆಗೆ ಇಳಿಜಾರಾಗಿದೆ. ಇಲ್ಲಿಯ ನದಿಗಳು ಕಚ್ಛ್‌ ಖಾರಿಯೊಳಕ್ಕೆ ಹರಿಯುತ್ತವೆ.
ಬೆಟ್ಟಗಳ ಸಾನುಪ್ರದೇಶ 75 ಮೀ. - 150 ಮೀ, ಎತ್ತರದ ಕಿರು ಅಗಲದ ನಡುಪಟ್ಟಿ. ನರ್ಮದಾ ತಾಪಿಗಳ ನಡುವೆ ಕಿರಿದಾಗಿರುವ ಈ ಪ್ರದೇಶ ನರ್ಮದೆಯಿಂದ ಉತ್ತರಕ್ಕೆ 25 ಕಿಮೀ. ಮತ್ತು ಇನ್ನೂ ಹೆಚ್ಚಿನ ಅಗಲವಾಗುತ್ತದೆ. ಈ ಇಳಿಜಾರು ನೆಲದ ಪ್ರದೇಶದಲ್ಲಿ ಮಣ್ಣು ಶೇಖರವಾಗಲು ಅವಕಾಶವಿಲ್ಲ. ಇದು ನುರುಜು ಕಲ್ಲಿನಿಂದ ಕೂಡಿದೆ. ಅಲ್ಲಲ್ಲಿ ಮಾತ್ರ ಹುಲ್ಲೂ ಕಾಡೂ ಉಂಟು. ಬೆಟ್ಟಗಳ ಪ್ರದೇಶದಲ್ಲಿ ವಾಸಿಸುವ ಕೆಲವು ಹಿಂದುಳಿದ ಬುಡಕಟ್ಟುಗಳ ಜನ ಇಲ್ಲಿ ಬೆಳೆಯುವ ಸಾವೆ, ರಾಗಿ ಮುಂತಾದ ಧಾನ್ಯ ವಿನಾ ಬೇರೇನೂ ಇಲ್ಲಿ ಬೆಳೆಯುವುದಿಲ್ಲ.
ಗುಜರಾತಿನ ಬೆಟ್ಟಗಳ ಪ್ರದೇಶ ಕಚ್ಛ್‌, ಕಾಠಿಯಾವಾಡ್ಗಳ ಮಧ್ಯಭಾಗಗಳಲ್ಲೂ ರಾಜ್ಯದ ಪೂರ್ವ ಎಲ್ಲೆಯಲ್ಲೂ ಇದೆ. ಇದು 300 ಮೀ.ಗಿಂತ ಎತ್ತರದ ಪ್ರದೇಶ. ಇದು ಬಹುತೇಕ ಶಿಲಾಮಯ; ಹೆಚ್ಚು ಮಳೆ ಬೀಳುವಲ್ಲಿ ಕಾಡುಗಳಿವೆ. ಇದು ದೀರ್ಘಕಾಲದ ಸವೆತಕ್ಕೆ ಒಳಗಾಗಿದೆ. ಕಚ್ಛಿನ ಬೆಟ್ಟಗಳು ಪುರ್ವಪಶ್ಚಿಮವಾಗಿ ಹಬ್ಬಿವೆ. ಇವುಗಳಲ್ಲಿ ಅತ್ಯಂತ ಎತ್ತರವಾದ್ದು ಧಿನೋಧರ್ (388 ಮೀ.) ಇತರ ಬೆಟ್ಟಗಳು ಉಮಿಯ (274 ಮೀ.), ಝುರಾ (316 ಮೀ.), ವರಾದ್ (344 ಮೀ.) ಮತ್ತು ರತ್ನಾಲ್ (349 ಮೀ.).
ಕಾಠಿಯಾವಾಡದ ಉನ್ನತ ಪ್ರದೇಶದ ಉತ್ತರ ಭಾಗದಲ್ಲಿ ಮಂಡ ಬೆಟ್ಟಗಳೂ ದಕ್ಷಿಣದಲ್ಲಿ ಗಿರ್ ಶ್ರೇಣಿಯೂ ಇವೆ. ದಕ್ಷಿಣದ ಶ್ರೇಣಿ ಹೆಚ್ಚು ಎತ್ತರ. ಇದರ ಉನ್ನತ ಬೆಟ್ಟ ಸರ್ಕಲ (643 ಮೀ.). ನಂದಿವೇಲ 529 ಮೀ. ಎತ್ತರವಾಗಿದೆ. ಗಿರ್ ಶ್ರೇಣಿ ಅರಣ್ಯಮಯ. ಇಲ್ಲಿ ಸಿಂಹಗಳಿವೆ (ನೋಡಿ- ಗಿರ್ ಅರಣ್ಯ). ಗುಜರಾತಿನ ಅತ್ಯುನ್ನತ ಬೆಟ್ಟ ಗಿರ್ನಾರ್ . ಇದರ ಗರಿಷ್ಠ ಎತ್ತರ 1,117 ಮೀ. (ಗೋರಖ್ ನಾಥ್ ಶಿಖರ). ಇದು ಜುನಾಗಢದ ಬಳಿ ಇದೆ. ಪೋರ್‍ಬಂದರ್‍ಗೆ ಪುರ್ವದಲ್ಲಿರುವ ಬಾರ್ದ, ಅದಕ್ಕೂ ಪುರ್ವದ ಅಲೆಚ್ ಇವು ಇತರ ಬೆಟ್ಟಗಳು.
ಸೂರತ್ ಕೋಟೆ
ರಾಜ್ಯದ ಉತ್ತರ, ಈಶಾನ್ಯ ಮತ್ತು ಪುರ್ವ ಗಡಿಗಳನ್ನು ಬಳಸಿರುವ ಶ್ರೇಣಿಗಳು ಉನ್ನತವಾದವು. ಇವು ಗಡಿಯಾಚೆಗಿನ ಶ್ರೇಣಿಗಳ ಅಂಚಿನ ಭಾಗಗಳು. ಸಬರಕಂತಾ, ಪಂಚಮಹಲ, ವಡೋದರ, ಸೂರತ್ ಮತ್ತು ಭಡೋಚ ಜಿಲ್ಲೆಗಳಲ್ಲಿ ಇವು ಚಾಚಿವೆ. ಉತ್ತರದ ಬೆಟ್ಟಗಳು ಆರಾವಳಿಯ ಭಾಗ. ಇವು ಹಿಮ್ಮತ ನಗರದಿಂದ ಉತ್ತರಕ್ಕೆ ಕ್ರಮಕ್ರಮವಾಗಿ ಏರುತ್ತ ನಡೆಯುತ್ತವೆ. ರಾಜ್ಯದಿಂದ ಹೊರಕ್ಕೆ ಅಬು ಶಿಖರದ ಗುಂಪಿನಲ್ಲಿ ಗುರುಶಿಖರ ಅತ್ಯಂತ ಎತ್ತರವಾದ್ದು. ಸಸ್ಯ ರಹಿತವಾದ ಈ ಪ್ರದೇಶದ ಮುಖ್ಯ ಬೆಟ್ಟಗಳು ರತನ್ಮಲ್ ಮತ್ತು ಪಾವಗಢ ಪಶ್ಚಿಮ ಭಾಗದಲ್ಲಿ ಬನಾಸ್ ನದಿಯೂ ಪುರ್ವದಲ್ಲಿ ಸಾಬರ್ಮತಿಯೂ ಹುಟ್ಟುತ್ತವೆ. ಛೋಟಾ ಉದಯಪುರಕ್ಕೆ ದಕ್ಷಿಣಕ್ಕಿರುವ ಶ್ರೇಣಿ ನರ್ಮದಾ ಮತ್ತು ತಾಪಿ ನದಿಗಳ ಉಗಮದ ಪ್ರದೇಶ. ನರ್ಮದೆಯ ಉತ್ತರದ ಪ್ರದೇಶ ವಿಂಧ್ಯಪರ್ವತಗಳ ಭಾಗ. ಅದಕ್ಕೆ ವನಮಾಲಾ ಬೆಟ್ಟಗಳೆಂಬ ಹೆಸರಿದೆ. ನರ್ಮದೆಗೆ ದಕ್ಷಿಣದಲ್ಲಿರುವುದು ಸಾತ್ಪುರ ಬೆಟ್ಟಗಳ ಪಶ್ಚಿಮದ ಚಾಚು. ಇದು ರಾಜಪಿಪ್ಲ ಎನಿಸಿಕೊಂಡಿದೆ. ತಾಪಿಗೆ ದಕ್ಷಿಣದ್ದು ಸಹ್ಯಾದ್ರಿಯ ಅಂಚು. ಇಲ್ಲಿಂದ ಹಲವು ಸಣ್ಣ ನದಿಗಳು ಹರಿದು ಬಂದು ನೆಟ್ಟಗೆ ಸಮುದ್ರ ಸೇರುತ್ತವೆ. ಇವುಗಳ ಪೈಕಿ ಪುರ್ಣಾ,ಅಂಬಿಕಾ, ಪಾರ್ ಮತ್ತು ದಮಣಗಂಗಾ ಮುಖ್ಯವಾದವು.
ಗುಜರಾತಿನ ಸಹಜ ಜಲೋತ್ಸಾರಣ ವ್ಯವಸ್ಥೆ ಏಕಮುಖವಾದ್ದಲ್ಲ. ಕಚ್ಚಿನಲ್ಲಿ ನದಿಗಳು ಮಧ್ಯದ ಎತ್ತರ ಪ್ರದೇಶದಿಂದ ಉತ್ತರಕ್ಕೂ ದಕ್ಷಿಣಕ್ಕೂ ಹರಿಯುತ್ತವೆ. ದಕ್ಷಿಣಕ್ಕೆ ಹರಿಯುವ ನದಿಗಳಲ್ಲಿ ಮುಖ್ಯವಾದವು ಮತೀ, ನಯೀರಾ, ಕನಕಮತೀ ಮತ್ತು ರುಕ್ಮಮತೀ. ಇವಕ್ಕೆ ಉಪನದಿಗಳು ಹೆಚ್ಚಾಗಿಲ್ಲ. ಪ್ರತಿಯೊಂದು ತೊರೆಯೂ ರಣನಲ್ಲೋ ಕಚ್ಛ್‌ ಖಾರಿಯಲ್ಲೋ ಕೊನೆಗೊಳ್ಳುತ್ತದೆ. ನದಿಗಳು ಬೇಸಗೆಯಲ್ಲಿ ಒಣಗಿಹೋಗುತ್ತವೆ; ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ.
ಸೌರಾಷ್ಟ್ರದಲ್ಲಿ ಮಧ್ಯದ ದಿಣ್ಣೆನೆಲದಿಂದ ಎಲ್ಲ ದಿಕ್ಕುಗಳಿಗೂ ನದಿಗಳು ಪ್ರವಹಿಸುತ್ತವೆ. ಭಾದರ್ ಅತ್ಯಂತ ಉದ್ದವಾದ ನದಿ (260 ಕಿಮೀ). ಇದು ಪಶ್ಚಿಮಕ್ಕೆ ಹರಿದು ಪೋರ್ಬಂದರಿನ ಬಳಿಯ ನವೀಬಂದರಿನಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಶತ್ರುಂಜೀ, ಮಚ್ಫೂ ಮತ್ತು ಆಜೀ ಇತರ ಮುಖ್ಯ ನದಿಗಳು. ಶತ್ರುಂಜೀ ನದಿ ಗಿರ್ ಶ್ರೇಣಿಯಲ್ಲಿ ಉಗಮಿಸಿ ಪುರ್ವಾಭಿಮುಖವಾಗಿ ಹರಿದು ಸುಲ್ತಾನ್ಪುರದಲ್ಲಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಮಚ್ಫೂ ಮತ್ತು ಆಜೀ ನದಿಗಳು ಅನುಕ್ರಮವಾಗಿ ಚಿಕ್ಕ ರಣ್ ಮತ್ತು ಕಚ್ಛ್‌ ಖಾರಿಯನ್ನು ಸೇರುತ್ತವೆ. ಇವುಗಳಲ್ಲದೆ ಹಲವಾರು ಸಣ್ಣ ಹೊಳೆಗಳು ಸೌರಾಷ್ಟ್ರದ ಕರಾವಳಿಯಲ್ಲಿ ಹರಿಯುತ್ತವೆ. ಕಚ್ಛ್‌ ಖಾರಿ ಮತ್ತು ಅರಬ್ಬೀ ಸಮುದ್ರದ ಕರಾವಳಿಗಳೇ ಅಲ್ಲದೆ ಕ್ಯಾಂಬೇ ಖಾರಿಯ ಕರಾವಳಿಯಲ್ಲಿ ಕೂಡ ಜಲೋತ್ಸಾರಣ ಸಮರ್ಪಕವಾಗಿಲ್ಲದೆ ನೀರು ನಿಂತು ಜವುಗುಂಟಾಗಿದೆ.
ಗುಜರಾತ್ ಮೈದಾನದ ನದಿಗಳು ದೂರದ ಬೆಟ್ಟಗಳಲ್ಲಿ ಹುಟ್ಟಿ ಹರಿದುಬರುತ್ತವೆ. ಬನಾಸ್, ಸರಸ್ವತಿ ಮತ್ತು ರೂಪೆನ್ ನದಿಗಳು ಚಿಕ್ಕ ರಣ್ ಅನ್ನು ಸೇರುತ್ತವೆ. ಉಳಿದವು ಸಮುದ್ರ ಸೇರುವುದು ಕ್ಯಾಂಬೇ ಖಾರಿಯಲ್ಲಿ. ಚಿಕ್ಕ ರಣ್ ಸೇರುವ ನದಿಗಳು ಬೇಸಗೆಯಲ್ಲಿ ಒಣಗಿರುತ್ತವೆ. ಬೆಟ್ಟದಿಂದ ಹೊತ್ತು ತಂದ ಮಣ್ಣನ್ನು ಹೊರಲಾರದೆ ಮೈದಾನದಲ್ಲಿ ಬಿಟ್ಟು ಹೊರಳುತ್ತವೆ. ಇವುಗಳ ಪಾತ್ರಗಳು ಬಲು ವಿಶಾಲ.
ಸಾಬರ್ಮತಿಯ ಉದ್ದ 300 ಕಿಮೀ. ಅಹಮದಾಬಾದಿನಿಂದ ಮುಂದಕ್ಕೆ ನದಿಯ ಪಾತ್ರ ಪದೇ ಪದೇ ಬದಲಾಗುತ್ತಿರುವುದುಂಟು. ಮಾಹೀನದಿ 500 ಕಿಮೀ, ಉದ್ದವಾಗಿದೆ. ಅದು ಗುಜರಾತಿನಲ್ಲಿ 180 ಕಿಮೀ.ಗಿಂತಲೂ ಉದ್ದವಾಗಿ ಹರಿದು ಸಮುದ್ರ ಸೇರುತ್ತದೆ. ಸಾಬರ್ಮತಿ ಮತ್ತು ಮಾಹೀ, ಇವೆರಡೂ ನದಿಗಳ ಉಪನದಿಗಳು ಇವುಗಳ ಎಡ ದಂಡೆಗಳಲ್ಲಿ ಬಂದು ಸೇರುತ್ತವೆ.
ಗುಜರಾತಿನ ಅತ್ಯಂತ ಮುಖ್ಯ ನದಿಗಳು ನರ್ಮದಾ ಮತ್ತು ತಾಪಿ. ಗುಜರಾತಿನಲ್ಲಿ ನರ್ಮದಾ ನದಿ ಹರಿಯುವ ದೂರ 150 ಕಿಮೀ. ಇದು ಭಡೋಚದ ಬಳಿ ಕ್ಯಾಂಬೇ ಖಾರಿಯನ್ನು ಸೇರುತ್ತದೆ. ಓರ್ಸಂಗ್, ಕರ್ಜನ್, ಅಮರಾವತಿ, ಭೂಖಿ ಇವು ನರ್ಮದೆಯ ಮುಖ್ಯ ಉಪನದಿಗಳು. ಸಮುದ್ರ ಸಂಗಮದ ಕಡೆಯಿಂದ ಮೇಲಣ ನೂರು ಕಿಮೀ.ಗಳ ದೂರ ಇದು ಗುಜರಾತಿನ ಅತ್ಯಂತ ಫಲವತ್ತಾದ ಮೈದಾನದ ಮೂಲಕ ಹರಿಯುತ್ತದೆ. ನದೀಪಾತ್ರ ಬದಲಿಸಿದ್ದರ ಪರಿಣಾಮವಾಗಿ, ಇದರಲ್ಲಿ ಕೆಲವು ದ್ವೀಪಗಳು ಸಂಭವಿಸಿವೆ. ಭಡೋಚದಿಂದ ಮೇಲಕ್ಕೆ ಸು. 23 ಕಿಮೀ ದೂರದಲ್ಲಿರುವ ಶುಕ್ಲತೀರ್ಥ, ನದೀಮುಖಜ ಭೂಮಿಯಲ್ಲಿರುವ ಆಲಿಯ ಮುಖ್ಯವಾದವು. ತಾಪೀ ನದಿ ನರ್ಮದೆಗಿಂತ ಚಿಕ್ಕದಾದರೂ ಗುಜರಾತಿನಲ್ಲಿ ಇದರ ಹರಿವಿನ ಉದ್ದ ನರ್ಮದೆಯದಕ್ಕಿಂತ ಹೆಚ್ಚು. ಗುಜರಾತಿನಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಇದರ ಜಲಾನಯನ ಭೂಮಿಯಾದ್ದರಿಂದ ನೀರಾವರಿ ಮತ್ತು ವಿದ್ಯುತ್ತಿನ ದೃಷ್ಟಿಯಲ್ಲಿ ಇದರ ವಿಭವ ಅಧಿಕ. ಪುರ್ವದ ಬೆಟ್ಟಸೀಮೆಯನ್ನು ಕಕ್ರ ಪಾರದ ಬಳಿ ಬಿಟ್ಟು 100 ಕಿಮೀ ದೂರ ಸಾಗಿ ಸೂರತ್ತಿನಿಂದ ಮುಂದೆ ಇದು ಸಮುದ್ರವನ್ನು ಕೂಡಿಕೊಳ್ಳುತ್ತದೆ. ಇದರ ಪಾತ್ರ ನರ್ಮದೆಯದರಷ್ಟು ವಿಶಾಲವಲ್ಲ. ಈ ನದಿಯ ಕೆಳಭಾಗದ ನೆಲ ಹತ್ತಿ ಬೆಳೆಯಬಲ್ಲ ಫಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದೆ.
ಒಟ್ಟಿನಲ್ಲಿ ದಕ್ಷಿಣ ಗುಜರಾತಿನ ನದಿಗಳು ಸಮಾನಾಂತರಗಳಲ್ಲಿ ಹರಿದು ಸಮುದ್ರ ಸೇರುತ್ತವೆ. ಸಾತ್ಪುರಾ ಮತ್ತು ಪಶ್ಚಿಮ ಘಟ್ಟಗಳ ಸಣ್ಣ ಚಾಚುಗಳು ಈ ನದಿಗಳು ಪರಸ್ಪರ ಕೂಡದಂತೆ ಪ್ರತ್ಯೇಕಿಸಿವೆ. ನರ್ಮದಾ, ಕಿಂ, ತಾಪಿ, ಪೂರ್ಣಾ, ಅಂಬಿಕಾ, ಪಾರಾ ಮತ್ತು ದಮಣಗಂಗಾ - ಇವು ಮುಖ್ಯ ನದಿಗಳು. ಸಮುದ್ರದ ಭರತದಿಂದಾಗಿ ಇವುಗಳ ಮುಖಭಾಗಗಳಲ್ಲಿ ಉಪ್ಪು ನೀರು ಒಳಗೆ ನುಗ್ಗುತ್ತದೆ. ಆದ್ದರಿಂದ ಈ ನದಿಗಳ ತಳಭಾಗದ ಬಳಿ ಇರುವ ಪಟ್ಟಣಗಳಿಗೆ ಇವುಗಳ ನೀರು ಕುಡಿಯಲು ಉಪಯುಕ್ತವಾಗಿಲ್ಲ. ಕರಾವಳಿಯ ಬಳಿ ನೆಲ ಬಹಳ ತಗ್ಗಾಗಿರುವುದರಿಂದ ಜಲೋತ್ಸಾರಣಕ್ಕೆ ತಡೆಯುಂಟಾಗಿದೆ.

ಉತ್ತರದಲ್ಲಿ ರಾಜಸ್ತಾನದಿಂದ ದಕ್ಷಿಣದಲ್ಲಿ ಕೊಂಕಣ ಸೀಮೆಯ ವರೆಗೆ ಹಬ್ಬಿರುವ ಗುಜರಾತು ಅತಿ ಹೆಚ್ಚಿನ ಮಳೆ ಪ್ರದೇಶದಿಂದ ಮರುಭೂಮಿಯ ವರೆಗಿನ ನಾನಾ ವಾಯುಗುಣಗಳಿಂದ ಕೂಡಿದ ಭಾಗಗಳನ್ನೊಳಗೊಂಡಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ 2,000 ಮಿಮೀ ಗಳಷ್ಟು ಮಳೆಯಾದರೆ, ಅತ್ಯಂತ ಉತ್ತರದಲ್ಲಿ, ಬನಾಸ್ಕಾಂತ ಜಿಲ್ಲೆಯ ಕೆಲವು ಭಾಗಗಳಲ್ಲಿ, 300 - 400 ಮಿಮೀ ಗಳಿಗಿಂತ ಹೆಚ್ಚು ಮಳೆಯಿಲ್ಲ. ಇಡೀ ರಾಜ್ಯ ಮಾನ್ಸೂನ್ ವಲಯದಲ್ಲಿದೆ. ಜೂನ್ ನಡುಗಾಲದಿಂದ ಅಕ್ಟೋಬರ್ ನಡುಗಾಲದವರೆಗೆ ಮಳೆ - ನೈಋತ್ಯ ಮಾನ್ಸೂನಿನಿಂದ. ಚಳಿಗಾಲದಲ್ಲಿ ಹವೆ ಶುಷ್ಕವಾಗಿಯೂ ಹಿತವಾಗಿಯೂ ಇರುತ್ತದೆ. ಆದರೆ ಉತ್ತರ ಭಾರತದಲ್ಲಿ ಬೀಸುವ ಶೀತಮಾರುತಗಳು ಗುಜರಾತನ್ನೂ ಒಮ್ಮೊಮ್ಮೆ ಪ್ರವೇಶಿಸುವುದುಂಟು. ವರ್ಷದಲ್ಲಿ ಜನವರಿ ಅತ್ಯಂತ ಶೀತಮಾಸ. ನವೆಂಬರಿನ ಮಧ್ಯದಿಂದ ಫೆಬ್ರವರಿಯ ಮಧ್ಯದವರೆಗೆ ಚಳಿಗಾಲ. ಅಲ್ಲಿಂದ ಮುಂದೆ ಉಷ್ಣತೆ ಏರುತ್ತ ಸಾಗಿ, ಮೇ ತಿಂಗಳಲ್ಲಿ ಗರಿಷ್ಠವಾಗುತ್ತದೆ. ನೈಋತ್ಯ ಮಾನ್ಸೂನಿನ ಆಗಮನದಿಂದಾಗಿ ಜೂನ್ ತಿಂಗಳು ಥಟ್ಟನೆ ತಂಪಾಗುತ್ತದೆ. ಆದರೆ ಮುಖ್ಯವಾಗಿ ಕರಾವಳಿಯಲ್ಲಿ ವಾತಾವರಣದ ತೇವದಿಂದಾಗಿ ಹವೆ ಅಷ್ಟೇನೂ ಹಿತಕರವಾಗಿರುವುದಿಲ್ಲ. ಚಳಿಗಾಲವೇ ಹೆಚ್ಚು ಚೈತನ್ಯದಾಯಕ ಕಾಲ. ರಾಜ್ಯದ ಕೆಲವು ಭಾಗಗಳಲ್ಲಿ ಮೇ ತಿಂಗಳಲ್ಲಿ ಉಷ್ಣತೆ 45.0 ಸೆಂ. ಮುಟ್ಟುವುದುಂಟು. ರಾಜ್ಯದ ಬಹುಭಾಗ 35.0 ಮತ್ತು 42.50 ಸೆಂ. ಸಮಶಾಖರೇಖೆಯ ನಡುವೆ ಬರುತ್ತದೆ. ಕಚ್ಛ್‌, ಸೌರಾಷ್ಟ್ರಗಳ ಕರಾವಳಿಯಲ್ಲಿ ಉಷ್ಣತೆ ಕನಿಷ್ಠ. ಇದು ಕಡಲಿನ ಪ್ರಭಾವ. ಸಮುದ್ರದ ಗಾಳಿ ಒಳನಾಡಿನಲ್ಲಿ 30 - 40 ಕಿಮೀವರೆಗೆ ಬೀಸುವುದುಂಟು. ಜನವರಿಯಲ್ಲಿ ಎಲ್ಲೂ ಗರಿಷ್ಠ ಉಷ್ಣತೆ 30.0 ಸೆಂ.ನ್ನು ದಾಟುವುದಿಲ್ಲ. ದಕ್ಷಿಣಕ್ಕೆ ಬಂದಂತೆ ಉಷ್ಣತೆ ಅಧಿಕವಾಗುತ್ತದೆ.
ಗುಜರಾತಿನಲ್ಲಿ ಮಳೆಯ ಪರಿಮಾಣ ಒಂದೆಡೆಯಿಂದ ಇನ್ನೊಂದೆಡೆಗೆ ತೀವ್ರವಾಗಿ ವ್ಯತ್ಯಾಸವಾಗುತ್ತದೆ. ದಕ್ಷಿಣದಲ್ಲಿರುವ ಬಲ್ಸಾರ್ ಜಿಲ್ಲೆಯಲ್ಲಿ 2,000 ಮಿಮೀ. ಮಳೆ. ಉತ್ತರಕ್ಕೆ ಹೋದಂತೆ ಇದು ಥಟ್ಟನೆ ಇಳಿಯುತ್ತದೆ. ಕೇವಲ 100 ಕಿಮೀ. ಉತ್ತರದಲ್ಲೆ (ಉದಾ : ಸೂರತ್) ಇದು 1,040 ಮಿಮೀ. ಅಲ್ಲಿಂದ ಮುಂದಕ್ಕೆ ಕ್ರಮಕ್ರಮವಾಗಿ ಕಡಿಮೆಯಾಗುತ್ತದೆ. ಸೌರಾಷ್ಟ್ರದಲ್ಲಿ 500 ಮಿಮೀ.ಗಿಂತ ಕಡಿಮೆ ಮಳೆ. ಗಿರ್ನಾರಿನಲ್ಲಿ ಮಾತ್ರ 700 ಮಿಮೀ. ಮಳೆಯಾಗುತ್ತದೆ. ಅದು ಹಸಿರು ತುಂಬಿದ ಪ್ರದೇಶ. ಕಚ್ಛ್‌ ಅರೆ - ಮರುಭೂಮಿ. ಅಲ್ಲಿ ಬಹುಭಾಗದಲ್ಲಿ 400 ಮಿಮೀ.ಗಿಂತ ಕಡಿಮೆ ಮಳೆಯಾಗುತ್ತದೆ. ಭುಜನಲ್ಲಿ ಕೇವಲ 340 ಮಿಮೀ. ಗುಜರಾತಿನ ಬಯಲುಸೀಮೆಯಲ್ಲಿ ಉತ್ತರಕ್ಕೆ ಹೋದಂತೆ ಮಳೆ ಕಡಿಮೆ. ವಡೋದರದಲ್ಲಿ 910 ಮಿಮೀ. ಅಹಮದಾಬಾದಿನಲ್ಲಿ 730 ಮಿಮೀ. ಭಾವನಗರದಲ್ಲಿ 500 ಮಿಮೀ. ದೀಸದಲ್ಲಿ 60 ಮಿಮೀ. ಎಲ್ಲೆಲ್ಲಿ ಬೆಟ್ಟಗಳಿವೆಯೊ ಅಲ್ಲಿ ನೆರೆಯ ನೆಲದ್ದಕ್ಕಿಂತ ಹೆಚ್ಚು ಮಳೆಯಾಗುತ್ತದೆ. ಬನಾಸ್ಕಂಟಾದಲ್ಲಿ ಆರಾವಳಿ ಮತ್ತು ಅಬು ಶ್ರೇಣಿಗಳ ನೆರೆಯ ಪ್ರದೇಶದಲ್ಲಿ 800 ಮಿಮೀ ಗಿಂತ ಹೆಚ್ಚು ಮಳೆಯಾಗುತ್ತದೆ.
ಮಳೆಯ ದೃಷ್ಟಿಯಿಂದ ಗುಜರಾತ್ ರಾಜ್ಯದ ಮುಖ್ಯ ವಲಯಗಳು ಇವು :

ಗುಜರಾತಿನ ಸಸ್ಯಸಂಪತ್ತು ಮಳೆಗೆ ಅನುಸಾರವಾಗಿ ವ್ಯತ್ಯಾಸಗೊಳ್ಳುತ್ತದೆ. ಸಾಕಷ್ಟು ಮಳೆಯಾಗಿಯೂ ಕೃಷಿಗೆ ಉಪಯೋಗವಿಲ್ಲದ ಪ್ರದೇಶಗಳಲ್ಲಿ ಕಾಡುಗಳು ಇವೆ. ಗುಜರಾತಿನಲ್ಲಿ ಮೈದಾನಕ್ಕಿಂತ ಬೆಟ್ಟಗಳ ಪ್ರದೇಶದಲ್ಲಿ ಉತ್ತರಕ್ಕಿಂತ ದಕ್ಷಿಣದಲ್ಲಿ ಮಳೆ ಹೆಚ್ಚಾಗಿರುವುದರಿಂದ ರಾಜ್ಯದ ಆಗ್ನೇಯ ಭಾಗದ ಮತ್ತು ಸೌರಾಷ್ಟ್ರದ ಬೆಟ್ಟಗಳಲ್ಲಿ ಕಾಡುಗಳು ಸಾಂದ್ರಿಕರಿಸಿವೆ. ಕಚ್ಛಿನ ಬೆಟ್ಟಗಳು ಉತ್ತರದಲ್ಲಿರುವುದರಿಂದಲೂ ಮಳೆ ಮಾರುತಗಳಿಗೆ ಹೆಚ್ಚಿನ ಅಡಚಣೆ ಒಡ್ಡದಿರುವುದರಿಂದಲೂ ಅಲ್ಲಿ ಕಾಡುಗಳಿಲ್ಲ. ಗುಜರಾತಿನ ಶೇ. 8.99 ಪ್ರದೇಶ ಅರಣ್ಯಗಳಿಂದ ಆವೃತವಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಕಾಡಿನ ಪ್ರದೇಶ ಅಲ್ಪಸ್ವಲ್ಪವಾದರೂ ಇದ್ದೇ ಇರುವುದಾದರೂ ಆರ್ಥಿಕ ದೃಷ್ಟಿಯಿಂದ ಮುಖ್ಯವಾದ ಜಿಲ್ಲೆಗಳು ಇವು : ಡಾಂಗ್ಸ್‌, ಪಂಚಮಹಲ್, ಭಡೋಚ, ಸೂರತ್, ಬಲ್ಸಾರ್, ಜುನಾಗಢ, ಸಬರಕಂಟಾ ಮತ್ತು ಬನಾಸ್ಕಂಟಾ. ದಕ್ಷಿಣದ ಮೂರು ಜಿಲ್ಲೆಗಳಾದ ಡಾಂಗ್ಸ್‌, ಸೂರತ್, ಭಡೋಚಗಳಲ್ಲಿ ರಾಜ್ಯದ ಶೇ. 40 ರಷ್ಟು ಅರಣ್ಯ ಪ್ರದೇಶವಿದೆ. 1,250 ಮಿಮೀ ಗಳಿಗಿಂತ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ತೇಗ, ಮತ್ತಿ, ಮತ್ತು ದಿಂಡಲು ಮುಖ್ಯ ಮರಗಳು. ಮಳೆ ಕಡಿಮೆಯಾದಂತೆ ತೇಗ ಕಡಿಮೆಯಾಗಿ ಎಲಚಿ, ಮುತ್ತುಗ, ಕಾಚು ಮರಗಳು ಬೆಳೆಯುತ್ತವೆ. ಮಳೆ ಇನ್ನೂ ಕಡಿಮೆಯಾಗಿರುವ ಉತ್ತರ ಭಾಗದಲ್ಲಿ ಕರಿಜಾಲಿ, ಬಿಳಿಗೊಬ್ಬಳಿ, ಚಿಪ್ಪುರಿ, ಎಲಚಿ, ಕಳ್ಳಿ ಜಾತಿಯ ಗಿಡಗಳು ಬೆಳೆಯುತ್ತವೆ. ಹೆಚ್ಚು ಅಥವಾ ಸಾಮಾನ್ಯ ಮಳೆಯ ಪ್ರದೇಶಗಳಲ್ಲಿ ಬಿದಿರು ಒಂದು ಮುಖ್ಯ ಸಸ್ಯ. ಗುಜರಾತಿನಲ್ಲಿ ಬಿದಿರು ಕಾಡುಗಳ ಒಟ್ಟು ವಿಸ್ತೀರ್ಣ 1927.5 ಚ.ಕಿಮೀ ಉತ್ತರಕ್ಕಿಂತ ದಕ್ಷಿಣದಲ್ಲಿ ಬಿದಿರು ಕಾಡುಗಳು ಹೆಚ್ಚು.
ಗುಜರಾತಿನ ಕಾಡುಗಳ ಪ್ರಯೋಜನವನ್ನು ಸಂಪುರ್ಣವಾಗಿ ಪಡೆದಿಲ್ಲ. ಅವನ್ನು ಸರಿಯಾಗಿ ರಕ್ಷಿಸುವ ಕ್ರಮವನ್ನು ಕೈಗೊಂಡಿಲ್ಲ. ಅರಣ್ಯಗಳ ವಿಸ್ತೀರ್ಣ ಕ್ರಮ ಕ್ರಮವಾಗಿ ಕಡಿಮೆಯಾಗುತ್ತಿದೆ. ಗಿರ್ ಅರಣ್ಯ ಕಳೆದ 140 ವರ್ಷಗಳಲ್ಲಿ ಅರ್ಧಕ್ಕೆ ಕುಗ್ಗಿದೆ. ರಾಜ್ಯದ ವಾರ್ಷಿಕ ಸಾಗುವಾನಿ ಉತ್ಪಾದನೆ 36ಲಕ್ಷ ಘ. ಅಡಿ. ಗುಜರಾತಿನ ಬಿದಿರಿನ ವಿಭವ 2 ಲಕ್ಷ ಟನ್ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ 80,000 ಟನ್ ಬಿದಿರು ಡಾಂಗ್ಸ್‌ ಮತ್ತು ರಾಜಪಿಪ್ಲ ಪ್ರದೇಶದಲ್ಲಿದೆ.

ಗುಜರಾತಿಗಳು ಹೆಚ್ಚು ಮೈಕಟ್ಟಿನ ಜನರಲ್ಲವಾದರೂ ಸ್ವಭಾವತಃ ಸಜ್ಜನರು, ಸೌಜನ್ಯಶೀಲರು, ಶಾಂತಿಪ್ರಿಯರು, ಧೈರ್ಯ, ಶೌರ್ಯ, ಔದಾರ್ಯ, ದೇಶಭಕ್ತಿ ಮತ್ತು ಅತಿಥಿಸತ್ಕಾರಗಳಿಗಾಗಿ ಹೆಸರಾದವರು. ಉದ್ಯೋಗ ಪ್ರಿಯತೆಯೊಡನೆ ಉಲ್ಲಾ ಪ್ರವೃತ್ತಿಯನ್ನೂ ಹೊಂದಿದವರು. ಸಮುದ್ರದ ಸಾಮೀಪ್ಯ ಮತ್ತು ಆರ್ಥಿಕ ಅನುಕೂಲತೆಗಳಿಗಾಗಿ ಸ್ವಾಭಾವಿಕವಾಗಿಯೇ ಈ ಜನರಲ್ಲೊಂದು ವಿಶೇಷ ಸಾಹಸ ಮತ್ತು ಸಂಚರೋತ್ಸಾಹ ಕಂಡುಬರುತ್ತದೆ 2011ರ ಜನಗಣತಿ ಪ್ರಕಾರ ಈ ರಾಜ್ಯದ 6,03,83,628 ಪ್ರಜೆಗಳಲ್ಲಿ ಪುರಷರು 26,385,577 ಮಂದಿ. ಮಹಿಳೆಯರು 24,285,440 ಮಂದಿ ಇದ್ದಾರೆ. ಚ.ಕಿಮೀ. ಜನಸಾಂದ್ರತೆ 258 ಮಂದಿ. ನಗರವಾಸಿಗಳು ಶೇ 37.4 ಮಂದಿ ಇದ್ದಾರೆ.ಗುಜರಾತ್ ರಾಜ್ಯದಲ್ಲಿ 25 ಜಿಲ್ಲೆಗಳೂ, 242 ಪಟ್ಟಣಗಳೂ 18,539 ಗ್ರಾಮಗಳೂ ಇವೆ. 

ಗುಜರಾತಿನ ಪ್ರಾದೇಶಿಕ ಭಾಷೆ ಗುಜರಾತಿ. ಬಹುಜನರು ಹಿಂದಿಯನ್ನು ಸುಲಭವಾಗಿ ಮಾತನಾಡಬಲ್ಲರು. ಬಲು ದೀರ್ಘವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಇಲ್ಲಿಯ ಜನಜೀವನಕ್ಕೆ ತನ್ನದೇ ಆದ ಮೆರುಗು ಬಂದಿದೆ. ಶ್ರೀಕೃಷ್ಣ, ದಯಾನಂದ ಸರಸ್ವತೀ, ನರಸಿಂಹ ಮೆಹ್ತಾ, ಮಹಾತ್ಮ ಗಾಂಧೀ ಮತ್ತಿತರರ ಜೀವನ ದರ್ಶನ ಸಾಹಿತ್ಯಗಳು ಗುಜರಾತಿನ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿದೆ. ಶ್ರೀಕೃಷ್ಣನ ಮೊಮ್ಮಗನಾದ ಅನಿರುದ್ಧನ ಮಡದಿ ಉಷಾ ಆರಂಭಿಸಿದ ಲಾಸ್ಯ ಪರಂಪರೆ ಇಂದಿಗೂ ಈ ರಾಜ್ಯದ ಹಬ್ಬಹುಣ್ಣಿಮೆಗಳಲ್ಲಿ, ಮುಖ್ಯವಾಗಿ ನವರಾತ್ರಿ ಹಬ್ಬದಲ್ಲಿ, ಗರ್ಭಾ ನೃತ್ಯದಲ್ಲಿ ಉಳಿದುಬಂದಿದೆ.

ಭಾರತದಲ್ಲಿ ಪ್ರಗತಿಪರ ಬೇಸಾಯಕ್ಕೆ ಹೆಸರಾದ ಪ್ರದೇಶಗಳಲ್ಲಿ ಗುಜರಾತ್ ರಾಜ್ಯವೂ ಒಂದು. ಹತ್ತಿ ಮತ್ತು ನೆಲಗಡಲೆ ಬೆಳೆಗಳಲ್ಲಿ ಇಡಿಯ ರಾಷ್ಟ್ರದಲ್ಲಿ ಈ ರಾಜ್ಯ ಪ್ರಮುಖವಾಗಿದೆ. ಈ ಬೆಳೆಗಳು ರಾಜ್ಯದ ಅನೇಕ ಕೈಗಾರಿಕೆಗಳ ಅಭಿವೃದ್ಧಿಗೂ ತನ್ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೂ ಬುನಾದಿಯಾಗಿ ಪರಿಣಮಿಸಿದೆ. ಒಟ್ಟು 1,95,93,000 ಹೆಕ್ಟೇರ್ ಭೂವಿಸ್ತಾರವುಳ್ಳ ಈ ರಾಜ್ಯದಲ್ಲಿ 35.15 ಲಕ್ಷ ಹೆಕ್ಟೇರ್ (2003) ಭೂಮಿ ಕೃಷಿಗೆ ಉಪಯುಕ್ತವಾದ್ದು. ಅದರಲ್ಲಿ 16,27,000 ಹೆಕ್ಟೇರ್ ಅರಣ್ಯಪ್ರದೇಶ; 5,37,000 ಹೆಕ್ಟೇರ್ ಬೇಸಾಯವಲ್ಲದ ಇತರ ಉದ್ದೇಶಗಳಿಗೆ ಬಳಸಲಾದ ಜಮೀನು; 43,41,000 ಹೆಕ್ಟೇರ್ ಸಾಗುವಳಿ ಮಾಡಲಾಗದ ಬಂಜರು ಭೂಮಿ; 1,11,000 ಹೆಕ್ಟೇರ್ ಹುಲ್ಲುಗಾವಲು; 22,000 ಹೆಕ್ಟೇರ್ ವಿವಿಧ ಗಿಡಮರಗಳುಳ್ಳ ಪ್ರದೇಶ; 5,08,000 ಹೆಕ್ಟೇರ್ ಸಾಗುವಳಿ ಮಾಡಬಹುದಾದ ಪಾಳುಭೂಮಿ; 685 ಹೆಕ್ಟೇರ್ ಉತ್ತು ಬಿತ್ತದೆ ಬಿಟ್ಟ ನಿರ್ಲಕ್ಷಿತ ಭೂಮಿ. ಸುಮಾರು 1,05,00,000 ಹೆಕ್ಟೇರ್ ಭೂಮಿ ಮಾತ್ರವೇ ನೀರಾವರಿಗೆ ಒಳಪಟ್ಟಿದ್ದು. ಶೇ. 90ರಷ್ಟು ಭೂಮಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ.
ಈ ರಾಜ್ಯದಲ್ಲಿ ನೀರಾವರಿಯ ವಿಶೇಷ ಸೌಲಭ್ಯಗಳಿಲ್ಲದಿದ್ದರೂ ಬೇಸಾಯಕ್ಕೆ ಬಳಸುವ ಶಾಸ್ತ್ರೀಯ ಪದ್ಧತಿಗಳಿಂದಾಗಿ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಕಾಲಕಾಲಕ್ಕೆ ಹೆಚ್ಚಳವನ್ನೇ ಸಾಧಿಸಲಾಗಿದೆ.ನೆಲಗಡಲೆ ಮತ್ತು ಹತ್ತಿ ಈ ರಾಜ್ಯದ ಎರಡು ಮುಖ್ಯ ಬೆಳೆಗಳು. ಇಡೀ ದೇಶದಲ್ಲಿ ನೆಲಗಡಲೆಯ ಬೆಳೆಗೆ ಒಳಪಟ್ಟ ಭೂಮಿಯ ಶೇ. 25 ಭಾಗವೂ ಹತ್ತಿಯ ಬೆಳೆಗೊಳಪಟ್ಟ ಭೂಮಿಯ ಶೇ. 21 ಭಾಗವೂ ಈ ರಾಜ್ಯದಲ್ಲಿದೆ.
ನೆಲಗಡಲೆ ಮತ್ತು ಹತ್ತಿಯ ಇಡೀ ದೇಶದ ವಾರ್ಷಿಕ ಉತ್ಪನ್ನಗಳಲ್ಲಿ ಅನುಕ್ರಮವಾಗಿ ಶೇ. 23 ಮತ್ತು ಶೇ. 29 ಗುಜರಾತಿನಲ್ಲಿ ಬೆಳೆಯುತ್ತವೆ.ಬೇಸಾಯ ಶಿಕ್ಷಣ ಪ್ರಸಾರಕ್ಕಾಗಿ ಜುನಾಗಢ, ಆನಂದ್, ನವಸಾರಗಳಲ್ಲಿ ವ್ಯವಸಾಯದ ಮಹಾವಿದ್ಯಾಲಯಗಳನ್ನು ತೆರೆಯಲಾಗಿದೆ. ಅಹಮದಾಬಾದಿನಲ್ಲಿ 1972 ರಲ್ಲಿ ಕೃಷಿ ವಿಶ್ವವಿದ್ಯಾಲಯ ಆರಂಭವಾಯಿತು. ರಾಜ್ಯದಲ್ಲಿ 13 ಕೃಷಿ ಶಾಲೆಗಳಿವೆ. ಸೂರತ್, ವಡೋದರ, ಆನಂದ್ ಮತ್ತು ಜುನಾಗಢದಲ್ಲಿ ಗ್ರಾಮ ಸೇವಕರ ತರಬೇತು ಕೇಂದ್ರಗಳಿವೆ.ಅರಳೆ, ಗುಜರಾತಿನ ಒಂದು ಮುಖ್ಯ ಉತ್ಪನ್ನ

ಗುಜರಾತಿನಲ್ಲಿ ಬಾವಿ ಕೆರೆಗಳಲ್ಲದೆ ಸುಮಾರು 50 ಮಧ್ಯಮ ಗಾತ್ರದ ನೀರಾವರಿ ಯೋಜನೆಗಳೂ , ದೊಡ್ಡ ಗಾತ್ರದ ನೀರಾವರಿ ಯೋಜನೆಗಳೂ ಉಂಟು. ಯೋಜನೆಗಳಿಂದ ದೊರೆಯುವ ನೀರು ರಾಜ್ಯದ ಒಟ್ಟು ಸಾಗುವಳಿ ಕ್ಷೇತ್ರದ ಶೇ. 11 ಭಾಗವನ್ನು ಮಾತ್ರ ತಣಿಸಬಲ್ಲದು. ರಾಜ್ಯದ ನದಿಗಳಿಂದ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವ ಪ್ರಯತ್ನಗಳಲ್ಲದೆ, ಸಹಸ್ರಾರು ನೀರಾವರಿ ಬಾವಿಗಳನ್ನು ತೋಡಿಸುವ ಕಾರ್ಯ ನಡೆದಿದೆ. ಜೊತೆಗೆ ಒಣ ಬೇಸಾಯದ ವ್ಯವಸ್ಥಿತ ಕ್ರಮಗಳಿಗಾಗಿಯೂ ವಿಶೇಷ ಗಮನ ಕೊಡುವುದು ಅನಿವಾರ್ಯವೆನಿಸಿದೆ. ಅದಕ್ಕಾಗಿ 1949ರಿಂದ ಜಮೀನಿನಲ್ಲಿ ಸಮಪಾತಳೀ ಒಡ್ಡು ರಚಿಸುವ ಯೋಜನೆಯನ್ನಾರಂಭಿಸಿ ಮೊದಲೆರಡು ದಶಕಗಳಲ್ಲಿಯೇ 22 ಲಕ್ಷ ಎಕರೆಗಳ ಜಮೀನಿನಲ್ಲಿ ಇಂಥ ಒಡ್ಡುಗಳನ್ನು ಹಾಕಲಾಯಿತು. ಖೇಡಾ ಜಿಲ್ಲೆಯ ಕೋಠಿಯಖಾಡ ಒಣ ಬೇಸಾಯದ ಪ್ರಾತ್ಯಕ್ಷಿಕಾ ಕೇಂದ್ರದಲ್ಲಿ ಭೂ ಸಂರಕ್ಷಣೆಯ ವಿವಿಧ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಜುನಾಗಢ, ಮಂಗ್ರೋಲ, ಮುಂದ್ರಾ, ಊನಾ, ಕೋಡಿನಾರ್, ಧಾರಿ, ಮಾಹುವಾ, ಮೊಟೇರಾ, ದೇಹಗಾಮ್, ವಡೋದರ, ನವಸಾರಿ, ಗಾಂಡೇವಿ, ಪಾರ್ದಿ, ಪಾರಿಯಗಳಲ್ಲಿರುವ ಸರ್ಕಾರಿ ಸಸಿದೋಟಗಳಿಂದ ಹೂ - ಹಣ್ಣುಗಳು ಸಸಿಗಳನ್ನು ರೈತರಿಗೆ ಹಂಚಲಾಗುತ್ತದೆ. ಅಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಸಂಶೋಧನ ಕೇಂದ್ರಗಳ ಮೂಲಕ ತೋಟಗಾರಿಕೆಯ ಅಭಿವೃದ್ಧಿಯ ಮಾಹಿತಿಯನ್ನು ಪೂರೈಸಲಾಗುತ್ತಿದೆ.

ಈ ರಾಜ್ಯದಲ್ಲಿರುವ ವಿದ್ಯುದುತ್ಪಾದನ ಕೇಂದ್ರಗಳಿವು:

ರಾಜ್ಯದ ನಗರಗಳಲ್ಲದೆ ಸು. 3,500 ಗ್ರಾಮಗಳಿಗೂ 52,000 ನೀರಿನ ಪಂಪ್‍ಸೆಟ್‍ಗಳಿಗೂ ವಿದ್ಯುತ್ ಪುರೈಕೆಯಾಗಿದೆ. ಲಕ್ಷ ಮನೆಗಳಿಗೆ ವಿದ್ಯುತ್ತನ್ನೊದಗಿಸಲಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ಚ್ಛಕ್ತಿಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. 2005ರಲ್ಲಿ ಒಟ್ಟು 8763 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಿತ್ತು.

ಗುಜರಾತಿಗೆ 1,600 ಕಿಮೀ ಕರಾವಳಿ ಇರುವುದರಿಂದ ಮೀನುಗಾರಿಕೆಯ ಅಭಿವೃದ್ಧಿಗೆ ಇಲ್ಲಿ ಸಾಕಷ್ಟು ಅವಕಾಶವುಂಟು. ಒಳನಾಡಿನಲ್ಲಿರುವ ನಾಲ್ಕು ದೊಡ್ಡ ನದಿಗಳೂ ಕೆರೆ ಕಾಲುವೆಗಳೂ ಇದಕ್ಕೆ ಉಪಯುಕ್ತವಾಗಿವೆ. ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 2 ಲಕ್ಷ ಟನ್ ಮೀನಿನ ಉತ್ಪಾದನೆಯಾಗುತ್ತದೆ. ಇದರ ಅಭಿವೃದ್ಧಿಗಾಗಿ ವೀರಾವಲ, ಪೋರ್ಬಂದರ್, ಬಲಸಾರ್, ಮಧವಾಡ ಮತ್ತು ಅಂಬರ್ಗಾಂವ್ಗಳಲ್ಲಿ ಸೇವಾಕೇಂದ್ರಗಳನ್ನೂ ಅಂಬರ್ಗಾಂವ್, ವೀರಾವಲ ಮತ್ತು ಬಲ್ಸಾರ್ಗಳಲ್ಲಿ ಆಧುನಿಕ ದೋಣಿಗಳ ನಿರ್ಮಾಣ ಕೇಂದ್ರಗಳನ್ನೂ ತೆರೆಯಲಾಗಿದೆ. ವೀರಾವಲ, ಜಾಫರಾಬಾದ್, ಅಂಬರಗಾಂವ್, ಪೋರ್ಬಂದರ್, ಮಂಗ್ರೋಲ್ ಮತ್ತು ಹೀರಾತೋಟ್ ಬಂದರುಗಳಲ್ಲಿ ಈ ಉದ್ಯಮ ದೊಡ್ಡ ಗಾತ್ರದಲ್ಲಿ ನಡೆಯುತ್ತಿದೆ. ಗುಜರಾತಿನಿಂದ ಹೊರದೇಶಗಳಿಗೆ ಸು.1 ಕೋಟಿ ರೂ. ಮೌಲ್ಯದ ಮೀನು ರಫ್ತಾಗುತ್ತದೆ.

ಗುಜರಾತಿನಲ್ಲಿ ಉಪ್ಪು, ಸುಣ್ಣದಕಲ್ಲು, ಮ್ಯಾಂಗನೀಸ್,ಜಿಪ್ಸಮ್, ಪಿಂಗಾಣಿ ಮಣ್ಣು, ಕ್ಯಾಲ್ಸೈಟ್,ಬಾಕ್ಸೈಟ್, ಪೆಟ್ರೋಲಿಯಂ, ಅಮೂಲ್ಯ ಶಿಲೆ, ಬಣ್ಣಕ್ಕೆ ಬಳಸುವ ಕೆಮ್ಮಣ್ಣು ಅಗೇಟ್ ಶಿಲೆ ಮುಂತಾದ ಖನಿಜಗಳು ವಿಪುಲವಾಗಿ ದೊರೆಯುತ್ತದೆ. ಸೌರಾಷ್ಟ್ರ ಮತ್ತು ಕಚ್ಟ್‌ ಉತ್ತಮ ದರ್ಜೆಯ ಬಾಕ್ಸೈಟ್ ಮತ್ತು ಸುಣ್ಣದ ಕಲ್ಲುಗಳಿಗೆ ಹೆಸರಾಗಿದ್ದರೆ, ವಡೋದರ ಜಿಲ್ಲೆಯ ಛೋಟಾ ಉದಯಪುರದ ಬಳಿ ಪ್ಲುರೈಟ್ ದೊರೆಯುತ್ತದೆ. ವಡೋದರ, ಬನಾಸ್ಕಂಟ, ಭಡೋಚ, ಭಾವನಗರ, ಕಚ್ಛ, ರಾಜಕೋಟೆ ಜಿಲ್ಲೆಗಳಲ್ಲಿ ದೊರೆಯುವ ಬೆಲೆ ಬಾಳುವ ಕಲ್ಲುಗಳು ಗುಜರಾತಿನ ಮುಖ್ಯವಾಗಿ ಖಂಬಾತ್ ಮತ್ತು ಸೂರತಿನ, ಕಲಾವಿದರ ಕೈಗಳಲ್ಲಿ ವಿವಿಧ ಆಕರ್ಷಕ ರೂಪ ತಳೆದು ದೇಶವಿದೇಶಗಳಲ್ಲಿ ವಿಶೇಷ ಬೇಡಿಕೆಗೆ ಪಾತ್ರವಾಗಿದೆ. ಗುಜರಾತಿನ ತೈಲ ಮತ್ತು ಅನಿಲ ಸಂಪತ್ತಿನ ಸರ್ವೇಕ್ಷಣೆ ನಡೆಸಿ ಅದನ್ನು ಹೊರತೆಗೆಯುವ ಕೆಲಸ ನಡೆದಿದೆ. ತೈಲ ಮತ್ತು ನೈಸರ್ಗಿಕ ಅನಿಲ ಆಯೋಗದ ನೇತೃತ್ವದಲ್ಲಿ 530 ಬಾವಿಗಳನ್ನು ತೋಡಲಾಗಿದೆ. ಪ್ರತಿವರ್ಷ 11.275 ಟನ್ ತೈಲ ತೆಗೆಯುವ ಉದ್ದೇಶವಿರಿಸಿಕೊಂಡು ಕಾರ್ಯ ನಡೆದಿದೆ. ಅಂಕಲೇಶ್ವರ, ಕಲೋಲ, ನವಾಗಾಮ್‍ಗಳು ತೈಲೋತ್ಪಾದನೆಯ ಮುಖ್ಯ ಕೇಂದ್ರಗಳು.

ಸಹಕಾರೀ ಆಂದೋಲನದಲ್ಲೂ ಈ ರಾಜ್ಯ ಸಾಕಷ್ಟು ಪ್ರಗತಿ ಸಾಧಿಸಿದೆ. ಗ್ರಾಮ ಮಟ್ಟದಲ್ಲಿ 28 ಲಕ್ಷ ಸದಸ್ಯರುಳ್ಳ 9.885 ಪ್ರಾಥಮಿಕ ಸಂಘಗಳುಂಟು. 325 ಸಹಕಾರೀ ಬೇಸಾಯ ಸಂಘಗಳೂ. 58 ಸಂಯುಕ್ತ ಸಹಕಾರೀ ಬೇಸಾಯ ಸಂಘಗಳೂ 450 ನೀರೆತ್ತುವ ಸಹಕಾರೀ ಸಂಘಗಳೂ ಕಾರ್ಯನಿರತವಾಗಿವೆ. ಇವಲ್ಲದೆ ವರ್ಷಕ್ಕೆ ಸರಾಸರಿ 1,000-1.250 ದಶಲಕ್ಷ ಟನ್ ಕಬ್ಬಿನಿಂದ ಸಕ್ಕರೆ ತಯಾರಿಸುವ 11 ಸಹಕಾರಿ ಸಕ್ಕರೆ ಕಾರ್ಖಾನೆಗಳುಂಟು. 63 ಪ್ರಾಥಮಿಕ ಮೀನುಗಾರಿಕೆ ಸಂಘಗಳೂ 14 ಒಣ ಮೀನುಗಳ ಮಾರಾಟ ಸಂಘಗಳೂ 8 ತಾಜಾ ಮೀನುಗಳ ಮಾರಾಟ ಸಂಘಗಳೂ ಇವೆ. ಹಾಲಿನ ಉತ್ಪಾದನೆ, ಪುರೈಕೆ, ಗೃಹ ನಿರ್ಮಾಣ ಮತ್ತು ವಸತಿ ವ್ಯವಸ್ಥೆಗಳಿಗಾಗಿ ಈ ರಾಜ್ಯದಲ್ಲಿ ಆಗಿರುವ ಸಹಕಾರೀ ಸಂಘಟನೆ ವಿಶಿಷ್ಟವಾದ್ದು. 2.88.399 ಸದಸ್ಯರುಳ್ಳ 1.552 ಹಾಲುಪುರೈಕೆಯ ಸಹಕಾರೀ ಸಂಘಗಳೂ 1.43.522 ಸದಸ್ಯರುಳ್ಳ 4.215 ಗೃಹನಿರ್ಮಾಣ ಸಂಘಗಳೂ ಈ ರಾಜ್ಯದಲ್ಲಿವೆ. 166 ನೇಕಾರರ ಸಂಘಗಳೂ 779 ಇತರ ಕೈಗಾರಿಕೆಗಳ ಸಂಘಗಳೂ 959 ಗ್ರಾಹಕರ ಸಂಘಗಳೂ, 89 ವ್ಯವಸಾಯೇತರ ಸಂಘಗಳೂ ರಾಜ್ಯದಲ್ಲಿವೆ.

ಇಲ್ಲಿ 14.123 ಸಣ್ಣ ಕೈಗಾರಿಕೆಗಳಿವೆ. ಗೃಹ-ಗುಡಿ ಕೈಗಾರಿಕೆಗಳು ಮಾತ್ರವಲ್ಲದೆ ದೊಡ್ಡ ಮತ್ತು ಮಧ್ಯಮ ಗಾತ್ರಗಳ ಕೈಗಾರಿಕೆಗಳಲ್ಲೂ ರಾಜ್ಯ ಮುಂದುವರಿದಿದೆ.

ಅಹಮದಾಬಾದ್ ಸೂರತ್, ವಡೋದರ, ಖೇಡಾ, ಭಾವನಗರ, ಸುರೇಂದ್ರ ನಗರ, ರಾಜಕೋಟೆ, ಜಾಮ್ನಗರಗಳಲ್ಲಿ ಕಾರ್ಖಾನೆಗಳು ಹೆಚ್ಚಾಗಿ ಬೆಳೆದಿವೆಯಾದರೂ ಇತರ ಕಡೆಗಳಲ್ಲೂ ಕೆಲವು ಕೈಗಾರಿಕೆಗಳುಂಟು. ಜವಳಿ ಕೈಗಾರಿಕೆ ಅತ್ಯಂತ ಮುಖ್ಯವಾದ್ದು. ಎಂಜಿಯರಿಂಗ್, ರಸಾಯನವಸ್ತು. ಔಷಧಗಳು, ಸಿಮೆಂಟ್, ಕುಂಭ, ಗಾಜು, ಗೊಬ್ಬರ, ಕಾಗದ ಇವು ಇತರ ಕೈಗಾರಿಕೆಗಳು. ವಡೋದರÀದಲ್ಲಿ ಪೆಟ್ರೋಲಿಯಂ ಪರಿಷ್ಕರಣ ಕೇಂದ್ರವಿದೆ. ಭಾರತದ ಔದ್ಯೋಗಿಕ ನಕ್ಷೆಯಲ್ಲಿ ಈ ರಾಜ್ಯಕ್ಕೊಂದು ಮಹತ್ತ್ವದ ಸ್ಥಾನ ಪ್ರಾಪ್ತವಾಗಿದೆ. 2002ರ ಅಂತ್ಯದಲ್ಲಿ 19,696 ಕಾರ್ಯನಿರತ ಕೈಗಾರಿಕಾ ಘಟಕಗಳಿದ್ದವು. ಸೆಪ್ಟೆಂಬರ್ 2003ರಲ್ಲಿ 2.83 ಲಕ್ಷ ಸಣ್ಣ ಕೈಗಾರಿಕೆಗಳಿದ್ದವು. ಸರಾಸರಿ 8.40 ಲಕ್ಷ ಮಂದಿಗೆ ಉದ್ಯೋಗಾವಕಾಶವಿತ್ತು.

ಈ ರಾಜ್ಯದಲ್ಲಿ 11.928 ಗ್ರಾಮ ಪಂಚಾಯತಿಗಳೂ 56 ಪಟ್ಟಣ ಪಂಚಾಯತಿಗಳೂ 182 ತಾಲ್ಲೂಕು ಪಂಚಾಯತಿಗಳೂ 17 ಜಿಲ್ಲಾ ಪಂಚಾಯತಿಗಳೂ (ಗಾಂಧೀನಗರ ಮತ್ತು ಡಾಂಗ್ಸ ಜಿಲ್ಲೆಗಳ ಹೊರತಾಗಿ) ಇವೆ. ಗಿರಿಜನರ ಜೀವನಾಭಿವೃದ್ಧಿಗಾಗಿ 53 ವಿಶೇಷ ಅಭಿವೃದ್ದಿ ಘಟಕಗಳನ್ನು ರಾಜ್ಯದಲ್ಲಿ ರಚಿಸಲಾಗಿದೆ. ತಮ್ಮ ಸೇವಾ ಸಿಬ್ಬಂದಿಯನ್ನು ತಾವೇ ಆಯ್ದುಕೊಳ್ಳುವ ಅಧಿಕಾರವನ್ನಲ್ಲದೆ ಆಯಾ ಪ್ರದೇಶಗಳ ಅಭಿವೃದ್ಧಿಗಾಗಿ ನೂರಕ್ಕೆ ನೂರರಷ್ಟು ಭೂಕಂದಾಯವನ್ನು ಬಳಸಿಕೊಳ್ಳುವ ಸವಲತ್ತನ್ನೂ ಈ ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡಲಾಗಿದೆ.

ಹಿಂದುಳಿದ ಜನಗಳ ಕಲ್ಯಾಣ ದೃಷ್ಟಿಯಿಂದ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 120 ಲಕ್ಷ ಜನ ಹಿಂದುಳಿದ ಸಮಾಜಕ್ಕೆ ಸೇರಿದ್ದು ಅವರಲ್ಲಿ ಸುಮಾರು 36 ಲಕ್ಷ ಜನ ಪರಿಶಿಷ್ಟ ಜಾತಿಯವರೂ 75 ಲಕ್ಷ ಜನ ಪರಿಶಿಷ್ಟ ಜನಾಂಗದವರೂ 4 ಲಕ್ಷ ಜನ ಅಲೆಮಾರಿ ಜನಾಂಗಕ್ಕೆ ಸೇರಿದವರೂ, 4 ಲಕ್ಷ ಜನ ಇತರರೂ ಇದ್ದಾರೆ. ಈ ಜನರ ಶಿಕ್ಷಣ ಆರ್ಥಿಕ ಅಭಿವೃದ್ದಿ. ಆರೋಗ್ಯ ವಸತಿಸೌಕರ್ಯ ಇತ್ಯಾದಿ ಕಾರ್ಯಯೋಜನೆಗಳ ಮೂಲಕ ಸಮಾಜಕಲ್ಯಾಣದ ಪ್ರಯತ್ನಗಳು ನಡೆದಿದೆ. ಹಿಂದುಳಿದ ಜನರ ಮಕ್ಕಳಿಗೆ ಉಚಿತವಾದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ದೊರೆಯುತ್ತದೆ. ಬಾಲಕಿಯರ ಹೆಚ್ಚಿನ ಶಿಕ್ಷಣಕ್ಕಾಗಿ 117 ಆಶ್ರಮ ಶಾಲೆಗಳನ್ನು ತೆರೆಯಲಾಗಿದೆ. ಸರ್ಕಾರಿ ಭೂಮಿಯ ವಿತರಣೆ, ಭೂಸುಧಾರಣೆ ಬೇಸಾಯದ ಸಲಕರಣೆಗಳ ಪುರೈಕೆ ಕೈಗಾರಿಕೆಗಳಲ್ಲಿ ತರಬೇತು ಮತ್ತು ಆರ್ಥಿಕ ನೆರವುಗಳ ಮೂಲಕ ಹಿಂದುಳಿದ ಜನಾಂಗಗಳ ಜನ ಮುಂದುವರಿಯುವಂತೆ ಯತ್ನಿಸಲಾಗುವುದು. ಅವರ ಶಾರೀರಿಕ ದುಡಿಮೆಗೆ ತಕ್ಕ ಫಲ ಸಿಗಬೇಕೆಂಬ ದೃಷ್ಟಿಯಿಂದ ಈ ಜನಾಂಗಗಳ ಜನರುಳ್ಳ ಸಹಕಾರಿ ಸಂಘಗಳ ರಚನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಹಮದಾಬಾದ್ ಸೂರತ್, ರಾಜಕೋಟೆ, ಡಾಹೋದ ವಡೋದರ, ಸುರೇಂದ್ರನಗರ, ಜುನಾಗಢ, ಪೋರ್ಬಂದರ್, ಫಾನ್ಸಾ, ಮೆಹೆಸಾನಾ, ಮಾಂಡವಿ ಮತ್ತು ಭಾವನಗರಗಳಲ್ಲಿರುವ ಅಂಗವಿಕಲರ ಮತ್ತು ಕುರುಡ ಕಿವುಡ-ಮೂಕರ ಶಿಕ್ಷಣ ಸಂಸ್ಥೆಗಳು ಸಮಾಜಕಲ್ಯಾಣ ಕಾರ್ಯಕ್ರಮದಲ್ಲಿ ಮಹತ್ತ್ವದ ಪಾತ್ರವಹಿಸುತ್ತವೆ.

ಈ ರಾಜ್ಯದ ನಗರಗಳಲ್ಲದೆ ಗ್ರಾಮಾಂತರ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ 60-80 ಸಾವಿರ ಜನಕ್ಕೊಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಗಳನ್ನು ತೆರೆಯಲಾಗಿದೆ. ಒಟ್ಟು 251 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ರಾಜ್ಯದಲ್ಲಿವೆ.ಅಹಮದಾಬಾದ್, ವಡೋದರ, ಜಾಮ್ನಗರ ಮತ್ತು ಸೂರತ್ಗಳಲ್ಲಿ ವೈದ್ಯಕೀಯ ಕಾಲೇಜುಗಳೂ ಜಾಮ್ನಗರದಲ್ಲಿ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯವೂ ಇವೆ. ಜಾಮ್ನಗರದಲ್ಲಿರುವ ಸೂರ್ಯಕಿರಣ ಚಿಕಿತ್ಸಾಕೇಂದ್ರ ರಾಷ್ಟ್ರದಲ್ಲಿಯೇ ಅನನ್ಯಸದೃಶವಾದ್ದು.

ಈ ರಾಜ್ಯದಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ 1961ರಲ್ಲಿ ಸ್ವೀಕೃತವಾಗಿ 1964ರಿಂದ ಜಾರಿಗೆ ಬಂತು. ರಾಜ್ಯದ ಒಟ್ಟು 21,900 ಪ್ರಾಥಮಿಕ ಶಾಲೆಗಳಲ್ಲಿ 86,000 ಶಿಕ್ಷಕರು ದುಡಿಯುತ್ತಿದ್ದಾರೆ. 2,150 ಮಾಧ್ಯಮಿಕ ಶಾಲೆಗಳೂ 134 ವಿವಿಧೋದ್ದೇಶ ಶಾಲೆಗಳೂ 270 ಉಚ್ಚ ಶಿಕ್ಷಣ ಶಾಲೆಗಳೂ ಇವೆ. ಬೆಳಕಿಯರ ಶಿಕ್ಷಣ ಪ್ರಸಾರಕ್ಕಾಗಿ ಮಾಧ್ಯಮಿಕ ಹಂತದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ರಾಜ್ಯದ ಮಾಧ್ಯಮಿಕ ಶಿಕ್ಷಣ ಮಂಡಲಿ ಮಾಧ್ಯಮಿಕ ಶಿಕ್ಷಣ ರೂಪರೇಷೆಗಳನ್ನು ಹಾಕುವುದಲ್ಲದೆ ವಿದ್ಯಾರ್ಥಿಗಳ ಪರೀಕ್ಷೆಗಳ ಏರ್ಪಾಡು ಮಾಡುತ್ತದೆ.
ಈ ರಾಜ್ಯದಲ್ಲಿ 13 ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ ಅಹಮದಾಬಾದಿನಲ್ಲಿ ಗಾಂಧಿಯವರು ಸ್ಥಾಪಿಸಿದ ಗುಜರಾತ್ ವಿದ್ಯಾಪೀಠವೂ ಒಂದು. ಗುಜರಾತ್‍ನಲ್ಲಿ 4 ಕೃಷಿ ವಿಶ್ವವಿದ್ಯಾಲಯಗಳಿವೆ. ರಾಜ್ಯದಲ್ಲಿರುವ ಕಾಲೇಜುಗಳ ಸಂಖ್ಯೆ 255 ವಡೋದರ ನಗರದಲ್ಲಿರುವ ಕೇಂದ್ರ ವಾಚನಾಲಯವಲ್ಲದೆ ರಾಜಕೋಟೆ. ಜಾಮ್ನಗರ ಸುರೇಂದ್ರನಗರ. ಜುನಾಗಢ, ಭಾವನಗರ, ಮತ್ತು ಭುಜ್ಗಳಲ್ಲಿರುವ ಸರ್ಕಾರಿ ಜಿಲ್ಲಾ ವಾಚನಾಲಯಗಳೂ ಇನ್ನಿತರ ಸಾರ್ವಜನಿಕ ವಾಚನಾಲಯಗಳೂ ಜನರಿಗೆ ವಾಚನ ಸೌಕರ್ಯ ಒದಗಿಸುತ್ತವೆ. ಈ ರಾಜ್ಯದಲ್ಲಿ ಒಟ್ಟು 34 ನಗರ ವಾಚನಾಲಯಗಳೂ 235 ಪಟ್ಟಣ ವಾಚನಾಲಯಗಳೂ, 40 ಮಹಿಳಾ ವಾಚನಾಲಯಗಳೂ 34 ಬಾಲ ವಾಚನಾಲಯಗಳೂ 4,027 ಗ್ರಾಮ ವಾಚನಾಲಯಗಳು ರಾಜಪಿಪ್ಲಾ ಮತ್ತು ತ್ರಾಪಜಗಳಲ್ಲಿ ಎರಡು ಸರ್ಕಾರಿ ಸಂಚಾರಿ ವಾಚನಾಲಯಗಳೂ ಇವೆ. ಗುಜರಾತ್ ವಾಚನಾಲಯ ಸಮಿತಿ ಮತ್ತು ಗುಜರಾತ್ ವಾಚನಾಲಯ ಸಹಕಾರಿ ಸಂಘಗಳು ಸರ್ಕಾರದ ಸಹಾಯದಿಂದ ರಾಜ್ಯದ ವಾಚನಾಲಯಗಳು ಅಭಿವೃದ್ಧಿಗಾಗಿ ಪ್ರಯತ್ನಿಸುತ್ತಿವೆ. ರಾಜ್ಯದಲ್ಲಿ ಒಟ್ಟು 46 ದಿನಪತ್ರಿಕೆಗಳೂ 132 ವಾರಪತ್ರಿಕೆಗಳೂ 70 ಪಕ್ಷಪತ್ರಿಕೆಗಳೂ 241 ಮಾಸಪತ್ರಿಕೆಗಳು 22 ತ್ರೈಮಾಸಿಕಗಳೂ ಪ್ರಕಟವಾಗುತ್ತಿದ್ದುವು.

ಈ ರಾಜ್ಯದಲ್ಲಿ ವಿವಿಧ ಮಾರ್ಗಗಳ ಸೌಕರ್ಯ ಸಾಕಷ್ಟಿದೆ. ರಾಷ್ಟ್ರೀಯ ಮತ್ತು ರಾಜ್ಯದ ಹೆದ್ದಾರಿಗಳನ್ನೊಳಗೊಂಡು 2002-03ರ ಅಂತ್ಯದಲ್ಲಿ ನಗರ ಪಾಲಿಕೆ ರಸ್ತೆಗಳನ್ನು ಬಿಟ್ಟು ಒಟ್ಟು 74,075 ಕಿಮೀ ರಸ್ತೆಯಿದ್ದು ಇದರಲ್ಲಿ 70,743 ಕಿಮೀ ಉತ್ತಮ ರಸ್ತೆಯಿತ್ತು. ರಾಜ್ಯದಲ್ಲಿ 1,134 ಕಿಮೀ ಬ್ರಾಡ್ ಗೇಜ್, 3,381 ಕಿಮೀ ಮೀಟರ್ ಗೇಜ್, 1,141 ಕಿಮೀ ನ್ಯಾರೋ ಗೇಜ್ ರೈಲುಮಾರ್ಗಗಳಿವೆ. ಅಹಮದಾಬಾದ್-ಗಾಂಧಿನಗರಗಳಲ್ಲಿ ಮೆಟ್ರೋ ರೈಲಿನ ಯೋಚನೆಗಳು 2011ರಿಂದ ಪ್ರಾರಂಭವಾಗಿದೆ. ಇಡೀ ದೇಶದ 21 ಮಧ್ಯಮ ಮತ್ತು 150 ಸಣ್ಣ ಬಂದರುಗಳು ಇದೊಂದೇ ರಾಜ್ಯದಲ್ಲಿವೆ. ಕಾಂಡ್ಲಾ ದೊಡ್ಡ ಬಂದರು. ಓಖಾ, ಭಾವನಗರ, ಖೇಡಿ ಸಿಕ್ಕ ವಿರಾವಲ್, ನವಲಾಖಿ, ಪೋರ್ಬಂದರ್, ಭಡೋಚ್, ಸೂರತ್, ಜಾಖಾನ್, ಮುಂದ್ರ ಪುಂಧರ, ದ್ವಾರಕಾ, ಮುಂಗ್ರೋಳ್, ಮಾಧವಾಡ, ಜವಾಬಂದರ್, ರಾಜ್ಪಾರಾ, ಜಾಫರಾಬಾದ್, ರಜುಲಾ, ಮಹುವಾ. ತಲಾಜ, ಘೋಘಾ, ಭಗ್ಡವಾ, ವಾನ್ಸಿ, ವೋರ್ಸಿ, ಬಿಲಿವೋರಾ, ಬಲ್ಸಾರ್, ಉಮರ್ಸಾದಿ, ಕೋಲಾಕ್, ಮರೋಳಿ ಉಮರ್ಗಾಂವ್-ಇವು ಇತರ ಬಂದರುಗಳು. ಅಹಮದಾಬಾದ್, ಭಾವನಗರ, ರಾಜಕೋಟೆ, ಪೋರ್ಬಂದರ್, ಜಾಮ್ನಗರ ಕೇಶೋದ್, ಭುಚ್, ಸೂರತ್, ವಡೋದರ, ಮತ್ತು ಕಾಂಡ್ಲಾಗಳಲ್ಲಿ ವಿಮಾನ ನಿಲ್ದಾಣಗಳಿವೆ. ದೆಹಲಿ ಮುಂಬಯಿಗಳೊಂದಿಗೆ ನೇರ ವಾಯುಸಂಪರ್ಕವೇರ್ಪಟ್ಟಿದೆ.

ಸೌರಾಷ್ಟ್ರದಲ್ಲಿ ಕೃಷ್ಣಲೀಲೆಯ ಕೇಂದ್ರಗಳಾಗಿದ್ದ ದ್ವಾರಕಾ ಮತ್ತು ವೀರಾವಲಗಳಲ್ಲಿ ಸುಂದರವಾದ ಮಂದಿರಗಳಿವೆ. ಸೋಮನಾಥ ದೇವಾಲಯವು ಸೌರಾಷ್ಟ್ರದ ಆಕರ್ಷಣೆಗಳಲ್ಲೊಂದು. ಗಾಂಧಿಯವರ ಜನ್ಮ ಸ್ಥಳವಾದ ಪೋರ್ಬಂದರ್ ತನ್ನ ಹಳೆಯ ಮತ್ತು ಹೊಸ ನಾಗರಿಕತೆಗಳ ಕುರುಹುಗಳಿಗಾಗಿ ಹೆಸರಾಗಿದೆ. ಪಾಲಿಟಾಣಾ ಜೈನಮಂದಿರಗಳ ನಗರ. ಉತ್ತರ ಗುಜರಾತಿನಲ್ಲಿ ಪಾಟಣ ಮತ್ತು ಸಿದ್ಧಪುರಗಳು ಸಹಸ್ರಲಿಂಗ ದೇವಾಲಯ ಮತ್ತು ರುದ್ರ ಮಹಲುಗಳಿಗಾಗಿ ಪ್ರಸಿದ್ಧವಾದಂಥವು. ವಡೋದರ, ಸೂರತ್, ಜಾಮ್ನಗರ, ಭಾವನಗರ, ಖಂಬಾತ್, ರಾಜಕೋಟೆ, ಜುನಾಗಢ ಮುಂತಾದ ನಗರಗಳು ತಮ್ಮ ಐತಿಹಾಸಿಕ ಪರಂಪರೆಯಿಂದಲೂ ಆಧುನಿಕ ಸಾಧನೆಗಳಿಂದಲೂ ಮಹತ್ತ್ವದ ನಗರಗಳೆನಿಸಿವೆ. ಗಾಂಧೀನಗರ ಆಧುನಿಕ ರೀತಿಯಲ್ಲಿ ನಿರ್ಮಿತವಾದ ರಾಜಧಾನಿ, ನಲ್ ಸರೋವರ ಪಕ್ಷಿಧಾಮ.

ಗುಜರಾತಿನಲ್ಲಿ ೨೫  ಜಿಲ್ಲೆಗಳಿವೆ.  ಇವು:

ಗುಜರಾತ್ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ೨೧-೫-೨೦೧೪,/21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿ ಆಯ್ಕೆಯಾಗಿದ್ದಾರೆ.ಮುಖ್ಯ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದ್ದರಿಂದ ಅವರ ನಂತರ ಆನಂದಿ ಬೆನ್ ಪಟೇಲ್ ಮುಖ್ಯ ಮಂತ್ರಿಯಾಗಿ ಆಯ್ಕಯಾದರು.

ಗುಜರಾತು ಸರ್ಕಾರ




#Article 207: ಅರುಣಾಚಲ ಪ್ರದೇಶ (980 words)


ಅರುಣಾಚಲ ಪ್ರದೇಶ - ಭಾರತದ ಈಶಾನ್ಯ ರಾಜ್ಯಗಳಲ್ಲೊಂದು. ದಕ್ಷಿಣದಲ್ಲಿ ಅಸ್ಸಾಂ, ಆಗ್ನೇಯದಲ್ಲಿ ನಾಗಾಲ್ಯಾಂಡ್, ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್ ಮತ್ತು ಉತ್ತರದಲ್ಲಿ ಟಿಬೆಟ್‌ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಸನ್ನಿವೇಶ ಮತ್ತು ವಿಸ್ತೀರ್ಣ: ಈ ರಾಜ್ಯ 26ಡಿಗ್ರಿ-28′ ಉತ್ತರ ಅಕ್ಷಾಂಶದಿಂದ 29ಡಿಗ್ರಿ-30′ ಉ.ಅಕ್ಷಾಂಶದವರೆಗೂ ರೇಖಾಂಶಿಕವಾಗಿ 91ಡಿಗ್ರಿ30′ ಪೂ.ರೇ. ದಿಂದ 96ಡಿಗ್ರಿ 30′ ಪೂ.ರೇ. ದವರೆಗೂ ವಿಸ್ತರಿಸಿದೆ. ಈ ರಾಜ್ಯ ಪೂರ್ವದಲ್ಲಿ ಮ್ಯಾನ್ಮಾರ್, ಪಶ್ಚಿಮದಲ್ಲಿ ಭೂತಾನ್, ಉತ್ತರದಲ್ಲಿ ಚೀನ ಮತ್ತು ಟಿಬೆಟ್‍ಗಳ ಅಂತಾರಾಷ್ಟ್ರೀಯ ಗಡಿಗಳನ್ನು ಹೊಂದಿದ್ದರೆ, ದಕ್ಷಿಣದಲ್ಲಿ ಅಸ್ಸಾಂ ಮತ್ತು ನಾಗಾಲ್ಯಾಂಡ್ರಾಜ್ಯಗಳ ಗಡಿಗಳನ್ನು ಹೊಂದಿದೆ. ಈ ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣ 83,743 ಚ.ಕಿಮೀ. ಇದು 16 ಜಿಲ್ಲೆಗಳನ್ನು ಹೊಂದಿದ್ದು, ಇಟಾನಗರ ಈ ರಾಜ್ಯದ ರಾಜಧಾನಿಯಾಗಿದ್ದು ಸಮುದ್ರಮಟ್ಟದಿಂದ 530 ಮೀ ಎತ್ತರದಲ್ಲಿದೆ. ಜನಸಂಖ್ಯೆ 13,82.611.ಜನಸಂಖ್ಯೆ ಬೆಳವಣಿಗೆಯ ತಖ್ತೆ ಇಲ್ಲಿದೆ.

ಅರುಣಾಚಲ ಪ್ರದೇಶ ಭಾರತದ ಈಶಾನ್ಯ ಗಡಿ ಭಾಗದ ಹಿಮಾಲಯ ಪರ್ವತಗಳ ಭಾಗದಲ್ಲಿರುವ ರಾಜ್ಯವಾಗಿದೆ. ಇದು ನಾಲ್ಕು ಮೇಲ್ಮೈ ಲಕ್ಷಣಗಳಿಂದ ಕೂಡಿದೆ. 

ಹಿಮಾಲಯದ ಶಿವಾಲಿಕ್ ಭಾಗ ಈ ರಾಜ್ಯದಲ್ಲಿ ಹಲವಾರು ಶ್ರೇಣಿಗಳನ್ನು ಹೊಂದಿದೆ. ಶಿವಾಲಿಕ್ ಪ್ರದೇಶಕ್ಕೆ ಹೊಂದಿಕೊಂಡಂತೆ ಹಬ್ಬಿರುವ ಹಲವಾರು ಬೆಟ್ಟ ಸರಣಿಗಳು ಈ ರಾಜ್ಯದಲ್ಲಿ ಉತ್ತರ ದಕ್ಷಿಣಾಭಿಮುಖವಾಗಿ ಹಬ್ಬಿವೆ. ಈ ರಾಜ್ಯದಲ್ಲಿ ಟಿಬೆಟ್‍ನಿಂದ ಭಾರತಕ್ಕೆ ಪ್ರವೇಶಿಸುವ ಬ್ರಹ್ಮ ಪುತ್ರಾ ನದಿ ಪ್ರಮುಖವಾದದ್ದು. ಇಲ್ಲಿನ ನದಿಗಳು ತಮ್ಮ ಪಾತ್ರವನ್ನು ಆಳವಾಗಿ ಕೊರೆದು ಕಣವೆ ಪ್ರದೇಶವನ್ನು ನಿರ್ಮಿಸುವುದರ ಜೊತೆಗೆ, ಅಸ್ಸಾಂ ರಾಜ್ಯದ ಮೈದಾನದಿಂದ ಇವನ್ನು ಪ್ರತ್ಯೇಕಿಸಿವೆ. ಎತ್ತರವಾದ ತಳ ಹಿಮಾಲಯದ (ಶಿವಾಲಿಕ್) ಭಾಗದಿಂದ ತಗ್ಗಾದ ನದಿ ಕಣಿವೆ ಪ್ರದೇಶದ ಕಡೆಗೆ ಈ ರಾಜ್ಯದುದ್ದಕ್ಕೂ ಇಳಿಜಾರು ಪ್ರದೇಶ ಕಂಡುಬರುತ್ತದೆ.

ಈ ರಾಜ್ಯ ಎತ್ತರವಾದ ಪರ್ವತ ಭಾಗದಿಂದ ಕೂಡಿದ್ದು ಇಳಿಜಾರನ್ನು ಹೊಂದಿ ಹಾಗೂ ವಾರ್ಷಿಕವಾಗಿ 500 ಸೆಂಮೀ ಮಳೆವನ್ನು ಪಡೆಯುವುದರಿಂದ ಇಲ್ಲಿ ಸರೋವರಗಳು ಮತ್ತು ನದಿಗಳು ಉಗಮ ಹೊಂದಿವೆ. ಹಲವಾರು ನದಿಗಳು ತಗ್ಗು ಪ್ರದೇಶದ ಕಡೆಗೆ ಹರಿಯುವುದರ ಜೊತೆಗೆ ಆಳವಾದ ಕಣವೆಯನ್ನು ನಿರ್ಮಿಸಿವೆ. ಇಲ್ಲಿ ಹರಿಯುವ ಪ್ರಮುಖ ನದಿ ಬ್ರಹ್ಮಪುತ್ರ ಇದು ಭಾರತದ ಪ್ರಮುಖ ನದಿಗಳಲ್ಲೊಂದಾಗಿದ್ದು, ಟಿಬೆಟಿನಿಂದ ಹರಿದು ಬಂದು ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳ ಮೂಲಕ ಹರಿದು ಬಂಗಾಲಕೊಲ್ಲಿಗೆ ಸೇರುವ ಮೊದಲು
ಬಾಂಗ್ಲಾದೇಶದ ಮೂಲಕವೂ ಹರಿಯುತ್ತದೆ. ಇಲ್ಲಿ ಕಾಮೆಂಗ್, ಸುಬನ್ ಸಿರಿ, ಸಿಯಾಂಗ್, ಲೋಹಿತ್ ಮತ್ತು ಟೆರಾವ್, ಕಾಮ್ಟ, ಶಿವೂಮ್, ದಿಬಾಂಗ್, ನೋಹಾ - ದಿಹಾಂಗ್, ಕಾಮ್ಟಾಂಗ್ ಮುಂತಾದವು ಪ್ರಮುಖ ನದಿಗಳು.

ಈ ರಾಜ್ಯದ ಪರ್ವತ ಪ್ರದೇಶಗಳು ದಟ್ಟ ಅರಣ್ಯಗಳನ್ನು ಹೊಂದಿದ್ದು, ಹೆಚ್ಚು ಮಳೆಯನ್ನು ಪಡೆಯುವುದರಿಂದ ವಿಭಿನ್ನ ರೀತಿಯ ಮಣ್ಣುಗಳನ್ನು ಹೊಂದಿದೆ. ಇಲ್ಲಿ ನಾಲ್ಕು ವಿಧದ ಮಣ್ಣುಗಳನ್ನು ಕಾಣಬಹುದು: 

ಎತ್ತರಕ್ಕನುಗುಣವಾಗಿ ವ್ಯತ್ಯಾಸವಾಗುತ್ತದೆ. ಈ ರಾಜ್ಯದ ದಕ್ಷಿಣ ಭಾಗ ಉಷ್ಣ ಮತ್ತು ತೇವಯುತ ಉಪ ಉಷ್ಣವಲಯ ವಾಯುಗುಣವನ್ನು ಹೊಂದಿದೆ. ಕೇಂದ್ರ ಭಾಗ ತಂಪಾದ ವಾಯುಗುಣವನ್ನು ಹೊಂದಿದ್ದರೆ, ಇದರ ಉತ್ತರ ಭಾಗ ಆಲ್ಪೈನ್ ವಾಯುಗುಣವನ್ನು ಹೊಂದಿದೆ. ಮಳೆ ಅಸಮಾನವಾಗಿ ಹಂಚಿಕೆಯಾಗಿದ್ದು, ವರ್ಷವಿಡೀ ಮಳೆ ಬೀಳುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್‍ವರೆಗಿನ ಅವಧಿ ಈ ರಾಜ್ಯದಲ್ಲಿನ ಅತಿ ತೇವಯುತ ಋತುವಾಗಿರುತ್ತದೆ. ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದಿಂದ ಡಿಸೆಂಬರ್ ತಿಂಗಳ ಮಧ್ಯದವರೆಗೆ ಹಾಗೂ ಮಧ್ಯ ಮಾರ್ಚ್‍ನಿಂದ ಮಧ್ಯ ಜೂನ್‍ವರೆಗಿನ ಅವಧಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಒಳ್ಳೆಯ ಅವಧಿಯಾಗಿದ್ದು, ಆಗ ನಿರಭ್ರ ಆಕಾಶವಿರುವುದರ ಜೊತೆಗೆ ಉತ್ತಮ ಹವಾಗುಣವಿರುತ್ತದೆ. ಇಲ್ಲಿ ಮಳೆ 100 - 575 ಸೆಂಮೀವರೆಗೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ.

ಇದು ಶ್ರೀಮಂತವಾದ ಸಸ್ಯ ಸಂಪತ್ವನ್ನು ಹೊಂದಿದ್ದು, ಸು. 5000 ಜಾತಿಯ ಮರಗಿಡಗಳಿವೆ. ಇದರಲ್ಲಿ ಸು. 500 ಅಪರೂಪದ ಸಸ್ಯ ಸಂಕುಲಗಳಿವೆ. ಇಲ್ಲಿನ ಸ್ವಾಭಾವಿಕ ಸಸ್ಯ ವರ್ಗ ಈ ರಾಜ್ಯದ ಮಳೆಯ ಹಂಚಿಕೆ, ಎತ್ತರ ಮತ್ತು ಮಣ್ಣಿನ ಲಕ್ಷಣಗಳನ್ನು ಆಧರಿಸಿದಂತೆ ಹಂಚಿಕೆ ಗೊಂಡಿದೆ. ಈ ರಾಜ್ಯದಲ್ಲಿ ಕಂಡು ಬರುವ ಸಸ್ಯವರ್ಗಗಳನ್ನು ಅಗಲ ಎಲೆಯುಳ್ಳ ಐದು ವಿಧದ ಅರಣ್ಯಗಳಾಗಿ ವಿಂಗಡಿಸಲಾಗಿದೆ: 

ಈ ರಾಜ್ಯ ವನ್ಯಪ್ರಾಣಿ ಸಂಕುಲ ಹೊಂದಿರುವ ಭಾರತದ ರಾಜ್ಯಗಳಲ್ಲಿ ಶ್ರೀಮಂತವಾದದ್ದು. ಇಲ್ಲಿ ವಿಶಿಷ್ಟ್ಟ ಹಾಗೂ ವಿವಿಧ ಜಾತಿಯ 85 ಪ್ರಾಣಿ ಸಂಕುಲಗಳು ಕಂಡುಬರುತ್ತವೆ. ಇಲ್ಲಿನ ಶಿವಾಲಿಕ್ಮತ್ತು ಮೈದಾನದ ಅಂಚುಗಳಲ್ಲಿ ಆನೆ, ಕಾಡೆಮ್ಮೆಗಳು ಕಂಡುಬರುತ್ತವೆ. ಹುಲಿ, ಚಿರತೆ, ಬಿಳಿಬಣ್ಣದ ಗಿಬ್ಬನ್, ಹಿಮಜಿಂಕೆ, ಕೆಂಪು ಬಣ್ಣದ ಚಿರತೆ, ಹಿಮಾಲಯದ ಕಪ್ಪು ಕರಡಿ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತಿವೆ. ಇದಲ್ಲದೇ 500 ವಿವಿಧ ಜಾತಿಯ ಪಕ್ಷಿಗಳು ಇಲ್ಲಿ ವಾಸಿಸುತ್ತಿದ್ದು, ಭಾರತೀಯ ಹಾರ್ನ್‍ಬಿಲ್ ಜಾತಿಯ ಪಕ್ಷಿಗಳಿಗೆ ಈ ರಾಜ್ಯ ತವರಿದ್ದಂತೆ. ಬಿಳಿ ರೆಕ್ಕಗಳಿರುವ ಮರದ ಬಾತುಕೋಳಿ, ಹಸುರು ಪಾರಿವಾಳ, ಬಂಗಾಲದ ಫ್ಲೋರಿಕಾನ್, ಟಿಮ್ನಿನಿಕ್ಸ್, ಸ್ಕ್ಲಾಟರ್ಮಾ ನಾರ್ ಟಿಗೋಡಾನ್‍ಗಳಂತಹ ಪಕ್ಷಿಗಳು ಇಲ್ಲಿವೆ. ಇವುಗಳ ಸಂರಕ್ಷಣೆಗಾಗಿ ಹಲವು ವನ್ಯ ಜೀವಿ ಸಂರಕ್ಷಣಾ ಹಾಗೂ ಪಕ್ಷಿ ಧಾಮ ಗಳು ಈ ರಾಜ್ಯದಲ್ಲಿ ಸ್ಥಾಪನೆ ಗೊಂಡಿವೆ; ಇಲ್ಲಿ ಎರಡು ರಾಷ್ಟ್ರೀಯ ಉದ್ಯಾನವನಗಳಾದ ನಾಮ್ ದಪ್ಹಾ ಮತ್ತು ಮೌಲಿಂಗ್‍ಗಳು ಹಾಗೂ ಈ ರಾಜ್ಯದ ಅರಣ್ಯ ಇಲಾಖೆಯಿಂದ ನಿರ್ವಹಿಸಲಡುತ್ತಿರುವ 8 ವನ್ಯ ಜೀವಿ ಸಂರಕ್ಷಣಾ ಧಾಮಗಳಾದ ಪಾಕಾಯ್, ಇಟಾನಗರ, ಡೇಯಿಂಗ್ ಇರಿಂಗ್, ಮೆಹಾಪೋಕಾನೆ, ಈಗಲ್ಸ್ ನೆಸ್ಟ್, ಕಮ್ಲಾಂಗ್ ಮತ್ತು ದಿಬಾಂಗ್‍ಗಳು ಇವೆ.

ಈ ರಾಜ್ಯದಲ್ಲಿ ವರ್ಗಾವಣೆ ಬೇಸಾಯ ಕ್ರಮ (ಜೂಮಿಂಗ್) ಜಾರಿಯಲ್ಲಿದೆ. ಒಗ್ಗೂಡಿ ಕೃಷಿ ಮಾಡುವ ಪದ್ಧತಿ ಮುಖ್ಯಸ್ಥಾನವನ್ನು ಪಡೆದುಕೊಂಡಿದೆ. ಈ ರಾಜ್ಯದ ಬಹುತೇಕ ಜನ ಈ ಪದ್ಧತಿವನ್ನು ಪ್ರಾಚೀನ ಕಾಲದಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಜೂಮಿಂಗ್ ಬೇಸಾಯ ಪದ್ಧತಿಯಲ್ಲಿ (ಕುಂಬ್ರಿ) ಅಲ್ಲಲ್ಲಿ ಅರಣ್ಯದಲ್ಲಿರುವ ಮರಗಳನ್ನು ಕಡಿದು ಕೆಲವು ವರ್ಷಗಳ ಅನಂತರ ಬೆಂಕಿಯಲ್ಲಿ ಸುಟ್ಟು ಹಾಕಿ ಆ ಪ್ರದೇಶವನ್ನು ನೇಗಿಲಿನಂತಹ ಉಪಕರಣದಿಂದ ಉಳುಮೆ ಮಾಡಿ ನೇಗಿಲ ಹಿಂದೆ ಬಿತ್ತನೆ ಬೀಜಗಳನ್ನು ಬಿತ್ತಿ, ಕನಿಷ್ಟ ಪಕ್ಷ ನಾಲ್ಕು ಭಾರಿ ಕಳೆ ತೆಗೆದು, ಬೆಳೆಯುತ್ತಿರುವ ಬೆಳೆಯನ್ನು ಕಾಡು ಪ್ರಾಣಿಗಳು ಮತ್ತು ಪಕ್ಷಿಗಳಿಂದ ಕಾಯುವ ಹಾಗೂ ಸಂರಕ್ಷಿಸುವುದರ ಮೂಲಕ ಅಳಿದುಳಿದ ಮಿಶ್ರ ಫಲವನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಕೆಲಸಗಾರರು ಪುರುಷ, ಮಹಿಳೆ ಹಾಗೂ ಮಕ್ಕಳು ಸು. 5-6 ತಿಂಗಳುಗಳ ಕಾಲ ಇದಕ್ಕಾಗಿ ಶ್ರಮವಹಿಸುವರು. ಬತ್ತ, ತೃಣ
ಧಾನ್ಯಗಳು, ಗೋದಿ ಮತ್ತು ಮೆಕ್ಕೆಜೋಳ ಇಲ್ಲಿನ ಪ್ರಮುಖ ಬೆಳೆಗಳು. ಆಲೂಗಡ್ಡೆ, ಬದನೆ, ಶುಂಠಿ, ಮೆಣಸಿನಕಾಯಿ, ಕುಂಬಳ, ಸೌತೆ, ಅನಾನಸ್, ಕಿತ್ತಳೆ, ನಿಂಬೆ ಪರಂಗಿ, ಬಾಳೆ ಇತ್ಯಾದಿ ತರಕಾರಿ ಮತ್ತು ಹಣ್ಣುಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.

ಈ ರಾಜ್ಯ ಅಪಾರ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಹೊಂದಿದೆ. ಕಲಿದ್ದಲು, ಸುಣ್ಣಕಲ್ಲು ಕಬ್ಬಿಣದ ಅದಿರು, ಗ್ರಾನೈಟ್, ಬೆಣಚು ಶಿಲೆ, ಅಭ್ರಕ, ತಾಮ್ರ, ಡಾಲೋಮೈಟ್, ಕಚ್ಚಾ ತೈಲ, ಸ್ವಾಭಾವಿಕ ಅನಿಲ ಹಾಗೂ ಅಮೃತಶಿಲೆಗಳಂತಹ ಖನಿಜ ಸಂಪನ್ಮೂಲಗಳು ಈ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹಂಚಿಕೆಯಾಗಿವೆ. ಇದರ ಜೊತೆಗೆ ಜಲವಿದ್ಯುಚ್ಛಕ್ತಿವನ್ನು ಉತ್ಪಾದಿಸಬಲ್ಲ ಸಂಭಾವ್ಯ ಪ್ರದೇಶವಾಗಿದೆ. ಇಲ್ಲಿ 1991 ರಲ್ಲಿ ಅರುಣಾಚಲ ಪ್ರದೇಶ ಖನಿಜ ಅಭಿವೃದ್ಧಿ ಮತ್ತು ವಾಣಿಜ್ಯ ಕಾರ್ಪೋರೇಷನ್ ಲಿಮಿಟೆಡ್ ಅರಂಭವಾಯಿತು. ನಾಮ್‍ಚಿಕ್ ನಾಮ್‍ಹುಕ್ ಪ್ರದೇಶಗಳಲ್ಲಿನ ಕಲಿದ್ದಲು ಕ್ಷೇತ್ರಗಳು ಈ ಸಂಸ್ಥೆಯ ಅಧೀನದಲ್ಲಿವೆ.

ಈ ರಾಜ್ಯ ಹೊಂದಿರುವ ಅರಣ್ಯ ಸಂಪನ್ಮೂಲದ ಆಧಾರದ ಮೇಲೆ ಹಲವಾರು ಮಧ್ಯ ಮ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿದೆ. ಇಲ್ಲಿ ಸಿಮೆಂಟ್ ಉತ್ಪಾದನ ಸ್ಥಾವರಗಳೂ ಹಣ್ಣು ಸಂರಕ್ಷಣಾ ಘಟಕಗಳೂ ತಲೆಯೆತ್ತಿವೆ. ಅಸಂಖ್ಯಾತ ಕರಕುಶಲ ಉತ್ಪನ್ನ ತರಬೇತಿ ಕೇಂದ್ರಗಳಿವೆ. ಇಲ್ಲಿನ ಕೈಮಗ್ಗ ಕೈಗಾರಿಕೆಗಳು ಅತ್ಯುತ್ತಮ ಪ್ರಗತಿಯನ್ನು ಸಾಧಿಸಿವೆ. ಇಲ್ಲಿನ ಜನ ಬೆತ್ತ ಮತ್ತು ಬಿದಿರಿನ ಬುಟ್ಟಿಗಳನ್ನು ಹೆಣೆಯುವುದರಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಮರದ ಕೆತ್ತನೆ, ಕಮ್ಮಾರಿಕೆಗಳಂತಹ ವೃತ್ತಿಗಳೂ ಕೆಲವು ಹಳ್ಳಿಗಳಲ್ಲಿ ಕಂಡು ಬರುತ್ತವೆ. ಗುದ್ದಲಿ, ಹಾರೆ ಇತ್ಯಾದಿ ಕೃಷಿ ಯೋಗ್ಯ ಹಾಗೂ ದೈನಂದಿನ ಚಟುವಟಿಕೆಗಳಿಗೆ ಅಗತ್ಯವೆನಿಸುವ ಉಪಕರಣಗಳನ್ನೂ ತಯಾರಿಸಲಾಗುತ್ತದೆ. ಇಲ್ಲಿ ಸಣ್ಣ ಪ್ರಮಾಣದ ಗುಡಿ ಕೈಗಾರಿಕೆಗಳು, ಪ್ಲೈವುಡ್ ಹಾಗೂ ಮೇಣದ ಬತ್ತಿ ತಯಾರಿಕಾ ಘಟಕಗಳೂ ಸ್ಥಾಪನೆಗೂಂಡಿವೆ.

ಈ ರಾಜ್ಯ ಉತ್ತಮ ರಸ್ತೆ ಮತ್ತು ವಾಯುಸಾರಿಗೆ ಸಂಪರ್ಕಗಳನ್ನು ಹೊಂದಿದೆ. ರಾಜ್ಯ ಸಾರಿಗೆ ಸಂಸ್ಥೆ ಕ್ರಮಬದ್ಧವಾಗಿ ಹಾಗೂ ನಿರಂತರವಾಗಿ ರಾಜ್ಯದ ವಿವಿಧ ಪ್ರದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತಿರುವುದರ ಜೊತೆಗೆ ನೆರೆ ರಾಜ್ಯಗಳೂಡನೆ ಸಂಪರ್ಕವನ್ನು ಕಲಿಸಿಕೊಟ್ಟಿದೆ. ನಾಹರ್‍ಲಗೂನ್ ಮಾರ್ಗವಾಗಿ ಉತ್ತರ ಲಖಿಂಪುರ ಮತ್ತು ಇಟಾನಗರಗಳ ನಡುವೆ ನೇರ ಸಾರಿಗೆ ಸೇವೆಯನ್ನು ಕಲ್ಪಿಸಲಾಗಿದೆ. ಪ್ರತಿ ನಿತ್ಯವೂ ಇಟಾನಗರದಿಂದ 429 ಕಿಮೀ ದೂರದಲ್ಲಿರುವ ಗುವಾಹಟಿಗೆ ಬಸ್ ಸಂಪರ್ಕವಿದೆ. ಇಟಾನಗರದಿಂದ 33 ಕಿಮೀ ಹಾಗೂ ನಹಾರ್ ಲಗೂನ್‍ ನಿಂದ 23 ಕಿಮೀ ದೂರದಲ್ಲಿರುವ ಅಸ್ಸಾಮಿನ ಹಾರ್ಮುಟಿ ರೈಲ್ವೆ ನಿಲ್ದಾಣ ಈ ರಾಜ್ಯಕ್ಕೆ ಹತ್ತಿರದ ರೈಲು ನಿಲ್ದಾಣ. ಆದರೂ ಇಟಾನಗರದಿಂದ 60 ಕಿಮೀ, ನಹರ್ ಲಗೂನ್‍ನಿಂದ 50 ಕಿಮೀ ದೂರದಲ್ಲಿರುವ ಅಸ್ಸಾಂ ರಾಜ್ಯದ ಉತ್ತರ ಲಖಿಂಪುರ ರೈಲ್ವೆ ನಿಲ್ದಾಣ, ಆಧುನಿಕ ಸೌಲಭ್ಯ ಗಳನ್ನು ಒಳಗೊಂಡಿರುವ ನಿಲ್ದಾಣ. ಇಟಾನಗರದಿಂದ 67 ಕಿಮೀ ನಹರ್‍ಲಗೂನ್‍ನಿಂದ 57 ಕಿಮೀ ದೂರದಲ್ಲಿರುವ ಅಸ್ಸಾಂನ ಉತ್ತರ ಲಖಿಂಪುರದಲ್ಲಿರುವ ಲಿಲಾಬಾರಿಯಲ್ಲಿಯ ವಿಮಾನ ನಿಲ್ದಾಣ ಅತಿ ಸಮೀಪವಾದದ್ದಾಗಿದೆ. ಇಂಡಿಯನ್ ಏರ್‍ಲೈನ್ಸ್ ಸಂಸ್ಥೆ ಪ್ರತೀ ಬುಧವಾರ, ಶುಕ್ರವಾರ ಮತ್ತು ಭಾನುವಾರಗಳಂದು ಕೋಲ್ಕತ್ತದಿಂದ ತೇಜ್‍ಪುರಗಳ ನಡುವೆ (ಇಟಾನಗರದಿಂದ 216 ಕಿಮೀ ದೂರದಲ್ಲಿರುವ) ನೇರ ವಿಮಾನ ಸೇವೆಯನ್ನೂ ಕಲ್ಪಿಸುತ್ತಿದೆ. ಗುವಾಹಟಿಯಿಂದ ನಹರ್ ಲಗೂನ್‍ಗಳ ನಡುವೆ ಹೆಲಿಕಾಪ್ಟರ್ ಸೇವೆಯನ್ನು ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಹಲವು ಪಟ್ಟಣ, ನಗರ ಮತ್ತು ವಾಣಿಜ್ಯ ಕೇಂದ್ರಗಳಿವೆ. ಸಾಮಾನ್ಯವಾಗಿ ಪವಾಸಿ ಕೇಂದಗಳು ವಾಣಿಜ್ಯ ಕೇಂದ್ರಗಳಾಗಿಯೂ ಕಂಡುಬರುತ್ತವೆ. ತವಾಂಗ್, ಬಾಮ್ಡಿಲಾ, ಟಿಪಿ, ಇಟಾನಗರ, ಝಿರೋ, ಡಾಪೋರಿಜೋ, ಅಲಾಂಗ್, ಪರಶುರಾಮ್‍ರಾಯ್ ಕುಂಡ್, ಮಲಿನಿತನ್, ಲಿಕ್‍ಬಾಲಿ, ನಾಮ್‍ಸಾಯ್, ಮಾಯಾವೋ ಮತ್ತು ಚಾಂಗ್‍ಲಾಂಗ್ ಇಲ್ಲಿನ ಪ್ರವಾಸಿ ತಾಣಗಳು. ಇಲ್ಲಿನ ಮರದ ಕೆತ್ತನೆ, ಬಿದಿರು ಮತ್ತು ಬೆತ್ತದ ಬುಟ್ಟಿ ಮತ್ತು ಕರಕುಶಲ ಉತನ್ನಗಳು ಈ ರಾಜ್ಯವನ್ನು ವಾಣಿಜ್ಯಾತ್ಮಕವಾಗಿ ಖ್ಯಾತಿಗೊಳಿಸಿದೆ. ರಾಜ್ಯದ ಜನಸಂಖ್ಯೆ 10,91,117. ಅದರಲ್ಲಿ 5,73,951 ಪುರುಷರು, 5,17,166 ಸ್ತ್ರೀಯರು. ಇಲ್ಲಿನ ಲಿಂಗಾನುಪಾತ ಪ್ರಮಾಣ 1000 ಪುರುಷರಿಗೆ 901 ಸ್ತ್ರೀಯರು. ಈ ರಾಜ್ಯದ ಸಾಕ್ಷರತೆಯ ಪ್ರಮಾಣ ಶೇ. 54.74. ಇಲ್ಲಿನ ಜನಸಂಖ್ಯೆ ಮುಖ್ಯವಾಗಿ ಬುಡಕಟ್ಟು ಸಮುದಾಯದವರಿಂದ ಕೂಡಿದೆ. ಈ ರಾಜ್ಯ 20 ಮುಖ್ಯ ಬುಡಕಟ್ಟು ಹಾಗೂ ಅವುಗಳ ಅಸಂಖ್ಯಾತ ಉಪಬುಡಕಟ್ಟುಗಳನ್ನು ಹೊಂದಿದೆ. ಮುಖ್ಯವಾದ ಬುಡಕಟ್ಟುಗಳೆಂದರೆ - ಆದೀಸ್, ನಿಶಿ, ಅಪತಾನಿ, ಟಾಗಿನ್, ವಿಸ್ಮಿ, ಖಾಮ್ಟಿ, ನಾಯ್ಟಿ, ವಾಂಖೋ, ಟಾಂಗ್‍ಕಾ, ಸಿಂಗ್‍ಪ್ಹೋ, ಮೊನ್ಹಾ, ಕೆರ್ಡೂಕ್‍ಪೆನ್ ಮತ್ತು ಅಕಾಗಳು. ಇವರು ತಮ್ಮದೇ ಆದ ಭಾಷೆಗಳನ್ನು ಮಾತನಾಡುತ್ತಾರೆ. ಇಲ್ಲಿನ ಪ್ರಮುಖ ಭಾಷೆಗಳು ಮೋದ್ವಾ, ಅಪತಾನಿ, ಹಿಲ್ ಮಿರಿ, ಇಡು, ಟಾಗಿನ್ ಆದಿ, ಕಾಮ್ಟಿ, ಸಿಂಗ್‍ಪ್ಹೋ ಟಾಂಗ್‍ಸಾ, ನೋಕ್ಟೆ, ವಾಂಖೋ, ದಿಗಾರೂ, ಮಿಜಿ.

ಇಟಾನಗರ, ನಹರ್‍ಲಗೂನ್, ಟವಾಂಗ್, ಬಾಮ್ಡಿಲಾ, ರೂಪ, ಭಾಲುಕ್ ಪೊಂಗ್, ಸೆಪ್ಪಾ, ದಾಪೋರಿಜೋ, ಅಲಾಂಗ್, ಪಾಸಿಘಾಟ್, ಯಿಂಗ್ ಕಿಯಾಂಗ್ ರೋಯಿಂಗ್, ಟೆಝ, ನಾಮ್‍ಸಾಯ್, ಖೋನ್ಸಾ, ಅದಿನಿ, ಚಾಂಗ್‍ಲಾಂಗ್ ಮುಂತಾದವು.

(ಸಂಪಾದಕರು ಇದನ್ನು ಅಳಿಸದಿರಲಿ-ಇಲ್ಲವೇ ಬೇರೆ ಪುಟ ತೆರೆಯಲಿ;ಮಾಹಿತಿ ಅಳಿಸುವುದು ಸರಿಯಲ್ಲ)




#Article 208: ಗೋವ (249 words)


ಗೋವ - ಭಾರತದ ರಾಜ್ಯಗಳಲ್ಲೊಂದು. ವಿಸ್ತೀರ್ಣದಲ್ಲಿ ಇದು ಭಾರತದ ಅತ್ಯಂತ ಸಣ್ಣ ರಾಜ್ಯ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ದಕ್ಷಿಣದಲ್ಲಿ ಕರ್ನಾಟಕ ಹಾಗೂ ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ. ವಿಸ್ತೀರ್ಣದಲ್ಲಿ ಗೋವಾ ಭಾರತದ ಅತಿ ಚಿಕ್ಕ ರಾಜ್ಯ ಹಾಗೂ ಜನಸಂಖ್ಯೆಯಲ್ಲಿ ನಾಲ್ಕನೇ ಅತಿ ಸಣ್ಣ ರಾಜ್ಯ. ಇದರ ವಿಸ್ತೀರ್ಣ 3,702. ಚ.ಕಿಮೀ. ಜನಸಂಖ್ಯೆ 14,57,723 (2011). ಗೋವಾದ ರಾಜಧಾನಿ ಪಣಜಿ ಹಾಗೂ ವಾಸ್ಕೋ ಡ ಗಾಮಾ ಅತಿ ದೊಡ್ಡ ನಗರವಾಗಿದೆ.

ಗೋವದ ವಾಯುಗುಣ ತೇವೋಷ್ಣಮಯ. ಉಷ್ಣತೆಯಲ್ಲಿ ಹೆಚ್ಚು ವಾರ್ಷಿಕ ಅಂತರಗಳಿಲ್ಲ. 100 ಮೀಗಿಂತ ಹೆಚ್ಚು ಎತ್ತರವಿಲ್ಲದ ಪೂರ್ವಾರ್ಧ ಭಾಗದಲ್ಲಿ 90”-120” (2,800-3,500ಮಿಮೀ) ಮಳೆಯಾಗುತ್ತದೆ. ಉಷ್ಣತೆ 70° ಫ್ಯಾ. - 90° ಫ್ಯಾ. (22° ಸೆಂ-32° ಸೆಂ). ಹೆಚ್ಚು ಎತ್ತರದ ಪ್ರದೇಶವಾದ (ಗರಿಷ್ಠ ಎತ್ತರ 1,200 ಮೀ) ಪೂರ್ವಭಾಗದಲ್ಲಿ ಹೆಚ್ಚು ಮಳೆಯಾಗುತ್ತದೆ (ಗರಿಷ್ಠ 300”). ಇಲ್ಲಿ ಉಷ್ಣತೆಯ ಅಂತರವೂ ಅಧಿಕ. 

ಗೋವದ ಮುಖ್ಯ ನೀರಾವರಿ ಯೋಜನೆಗಳು ಇವು : 1 ಸಾಂಗೆ ತಾಲ್ಲೂಕಿನ ಸಾತಾಲಿ ಮತ್ತು ದೂದ್ ಸಾಗರ್. 2 ಬಾರ್ದೇಜ್ ತಾಲ್ಲೂಕಿನಲ್ಲಿ ಅಂಜುನಾ, ಮಹಾರಾಷ್ಟ್ರದೊಂದಿಗೆ ಕೂಡಿ ತಿಲಾರಿ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ತಿಲಾರಿ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. 2013ರ ಹೊತ್ತಿಗೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. 

ಗೋವದಲ್ಲಿ ರಸ್ತೆ ಮಾರ್ಗವಿದೆ. ರಾಷ್ಟ್ರೀಯ ಹೆದ್ದಾರಿ 224 ಕಿಮೀ, ರಾಜ್ಯ ಹೆದ್ದಾರಿ 232 ಕಿಮೀ, ಜಿಲ್ಲಾ ರಸ್ತೆಗಳು 815 ಕಿಮೀ ಇವೆ. ಇಂದು ಗೋವ ರೈಲು ಮಾರ್ಗ ಬಹಳಷ್ಟು ಸುಧಾರಿಸಿದ್ದು ಮುಂಬಯಿ, ಮಂಗಳೂರು, ತಿರುವನಂತಪುರಗಳಿಗೆ ಕೊಂಕಣ ರೈಲು ಮಾರ್ಗ  ಸಂಪರ್ಕ ಕಲ್ಪಿಸಿದೆ. ಮುಂಬಯಿ, ದೆಹಲಿ, ಕೊಚ್ಚಿ, ಚೆನ್ನೈ, ಬೆಂಗಳೂರು ನಗರಗಳಿಗೆ ವಿಮಾನ ಸಂಪರ್ಕವಿದೆ. 

ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಕೆಲವು ಬೀಚುಗಳು ಗೋವದಲ್ಲಿವೆ. ಕಲಾಂಗೂಟೆ, ಕೋಲ್ವ, ದೋನಾ ಪಾಲಾ, ಸಿರಿದಾವೊ, ವಾಗತೋರ, ಮಾಂದ್ರೇ ಮತ್ತು ಮೋರ್ಜಿ ಬೀಚುಗಳಿಗೆ ಪ್ರವಾಸಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ಗೋವ ಭಾರತದಲ್ಲೇ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಇಲ್ಲಿಯ ಜಿಡಿಪಿಯು ಭಾರತದ ಸರಾಸರಿ ಜಿಡಿಪಿಗಿಂತ ಎರಡೂವರೆ ಪಟ್ಟು ಹೆಚ್ಚಿದೆ.

ಗೋವದ ಐತಿಹಾಸಿಕ ಜನಸಂಖ್ಯೆಯ ಏರಿಕೆಯನ್ನು ಈ ಕೆಳಗಿನ ತಖ್ತೆಯಲ್ಲಿ ಕೊಡಲಾಗಿದೆ.

ಗೋವ ವೆಲ್ಹಾದ ಗುಡ್ಡವೊಂದರ ಮೇಲೆ ಪಿಲಾಡ್ ಮೊನಾಸ್ಟರಿ ಇದೆ. ಇದರ ವಿಶಾಲವಾದ ಒಳ ಅಂಗಳದಲ್ಲಿ ಅತಿ ಸುಂದರವಾಗಿ ಕಂಡರಿಸಿರುವ ಕಂಬವೊಂದು ನಿಂತಿದೆ. 1541 ರಲ್ಲಿ ನಿರ್ಮಿಸಿದ ಉನ್ನತವಾದ ಸೇಂಟ್ ಪಾಲ್ಸ್‌ ಕಾಲೇಜಿನ ಒಂದು ಭಾಗ ಮಾತ್ರ ಬೀಳದೆ ನಿಂತಿದೆ.
ಗೋವದ ಮನೆಗಳಲ್ಲೂ ಲ್ಯಾಟಿನ್ ಶೈಲಿಯ ಪ್ರಭಾವವನ್ನು ಗುರುತಿಸಬಹುದು. ಆ ಪಟ್ಟಣವನ್ನು ನೋಡಿದರೆ ಲ್ಯಾಟಿನ್ ನಗರದಂತೆಯೇ ಕಾಣುತ್ತದೆ.  




#Article 209: ಜಮ್ಮು ಮತ್ತು ಕಾಶ್ಮೀರ (1043 words)


ಭೂಮಿಯ ಮೇಲಿರುವ ಸ್ವರ್ಗ ಎಂದರೆ ಅದು ಜಮ್ಮು ಕಾಶ್ಮೀರ. ಅದರಲ್ಲೂ ಲಡಾಖ್ ಇಂಡಸ್ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣಗಲ್ಲೊಂದು. ಲಡಾಖ್‌ನಲ್ಲಿ ಒಂದಲ್ಲ ಒಂದು ಬಾಲಿವುಡ್ ಚಿತ್ರಗಳು ಚಿತ್ರೀಕರಣವಾಗುವುದರಿಂದ ಲಡಾಖ್‌ನ ಸುಂದರ ತಾಣಗಳು ಪದೇ ಪದೇ ಪ್ರವಾಸಿಗರ ಮನಸ್ಸಿನ ಪಟದೊಳಗೆ ಇಳಿಯುವ ಚಾನ್ಸೇ ಜಾಸ್ತಿ. ಲಡಾಖ್‌ಗೆ ‘ಕೊನೆಯ ಸಂಗ್ರೀಲಾ’, ‘ಕಿರು ಟಿಬೆಟ್’, ‘ಚಂದ್ರನ ಭೂಮಿ’ ಹಾಗೂ ‘ಚಂದ್ರನ ತುಂಡು’ ಎಂಬ ಹೆಸರುಗಳು ಈ ಪ್ರವಾಸಿ ತಾಣದ ಖ್ಯಾತಿಯನ್ನು ದುಪ್ಪಟ್ಟು ಮಾಡುತ್ತದೆ. ರಾಜಧಾನಿ ಲೇಹ್ ಹೊರತುಪಡಿಸಿದರೆ ಲಡಾಖ್‌ನಲ್ಲಿ ಅತೀ ಹೆಚ್ಚು ನೋಡಬಲ್ಲ ಪ್ರವಾಸಿ ತಾಣಗಳಿವೆ.
ಅಲಚಿ, ನೂಬ್ರಾ ಕಣಿವೆ, ಹೇಮಿಸ್, ಲಮ್ಯಾರು, ಜನ್ಸ್‌ಕರ್ ಕಣಿವೆ, ಕರಂಗಲಿ, ಪಂಗೊಂಗ್ ಸೊ, ಸೋ ಕಾರ್ ಹಾಗೂ ಸೊ ಮೋರಿರಿ ಮುಖ್ಯವಾಗಿದೆ. ಆಕರ್ಷಕ ಕೆರೆಗಳು, ಕಣ್ಮನ ಸೆಳೆಯುವ ಪರ್ವತ, ಆಕರ್ಷಕ ಭೂಪ್ರದೇಶ ಹಾಗೂ ಬೆಟ್ಟದ ಆಕರ್ಷಕ ತಪ್ಪಲುಗಳು ಇಲ್ಲಿನ ಜೀವಂತಿಕೆಯನ್ನು ಮತ್ತೆ ಮತ್ತೆ ಎತ್ತಿ ಹಿಡಿದಿವೆ. ಲಡಾಖಿ, ಪುರೀಗ್, ಟಿಬೇಟಿಯನ್, ಹಿಂದಿ ಹಾಗೂ ಇಂಗ್ಲಿಷ್ ಇಲ್ಲಿನ ಪ್ರಮುಖ ಭಾಷೆಗಳಾಗಿ ಪ್ರವಾಸಿಗರಿಗೆ ಎದುರುಗೊಳ್ಳುತ್ತಿದೆ. ಸಮುದ್ರ ಮಟ್ಟದಿಂದ ಲಡಾಖ್ ಇರುವುದು ೩೫೦೦ ಮೀಟರ್ ಎತ್ತರದಲ್ಲಿ. ಹಿಮಾಲಯ ಹಾಗೂ ಕಾರಾಕೋರಂ ಎಂಬೆರಡು ಪರ್ವತ ಶ್ರೇಣಿಗಳ ನಡುವೆ ಇದಿದೆ.

ಅಲ್ಲದೇ ಹೆಚ್ಚುವರಿ ಆಕರ್ಷಣೆಯಾಗಿ ಜನ್ಸಕರ್ ಹಾಗೂ ಲಡಾಖ್ ಕಣಿವೆಗಳು ಇದನ್ನು ಸುತ್ತಿವರಿದಿದ್ದು ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ನಂಬಿಕೆಗಳ ಪ್ರಕಾರ, ಲಡಾಖ್ ದೊಡ್ಡ ಕೆರೆಯೊಂದರ ಮುಳುಗಿದ ಭಾಗ. ಇದರಿಂದ ಇದು ವರ್ಷದ ಎಲ್ಲಾ ದಿನ ಭೌಗೋಳಿಕ ಬದಲಾವಣೆಯನ್ನು ತೋರಿಸುತ್ತದೆ. ಇದರಿಂದಾಗಿ ಇದು ಲಡಾಖ್ ಒಂದು ಕಣಿವೆ ಪ್ರದೇಶ. ಈ ಭಾಗದಲ್ಲಿ ಬೌದ್ಧ ಧರ್ಮ ಅತ್ಯಂತ ಪ್ರಭಾವಿಯಾಗಿದ್ದು, ತನ್ನ ಪ್ರಭುತ್ವ ಸಾಧಿಸಿದೆ. ಆಶ್ರಮ ಅಥವಾ ಗೋಂಪ್‌ಗಳು ಇಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ತಾಣ. ಹೇಮಿಸ್ ಆಶ್ರಮ, ಸಂಕರ ಗೋಂಪಾ, ಮಾಥೂ ಆಶ್ರಮ, ಶೇ ಗೋಂಪಾ, ಸ್ಪಿತುಕ್ ಆಶ್ರಮ ಹಾಗೂ ಸತಂಕ ಆಶ್ರಮಗಳು ಇಲ್ಲಿನ ಅತ್ಯಂತ ಪ್ರಸಿದ್ಧ ಹಾಗೂ ಗುರುತಾದ ಧಾರ್ಮಿಕ ಕೇಂದ್ರಗಳು. ಇವಲ್ಲದೇ ತಿಕ್ಸೆ ಆಶ್ರಮ ಹಾಗೂ ತೆಸ್ಮೋ ಆಶ್ರಮಗಳು ಕೂಡ ಭೇಟಿಗೆ ಯೋಗ್ಯವಾದ ತಾಣಗಳು.

ಉತ್ಸವಗಳಲ್ಲಿ ಪ್ರಮುಖವಾಗಿ ಗಾಲ್ಡನ್ ನಮ್ಚೋಟ್, ಬುದ್ಧ ಪೂರ್ಣಿಮೆ, ದೋಸ್‌ಮೋಚೇ ಹಾಗೂ ಲೋಸಾರ್‌ಗಳು ಲಡಾಖ್‌ನಾದ್ಯಂತ ನಡೆಯುವ ಅದ್ದೂರಿ ಆಚರಣೆಗಳು. ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರೂ ಇಲ್ಲಿ ಬಂದು ಸೇರುತ್ತಾರೆ. ದೋಸ್‌ಮೋಚೇ ಉತ್ಸವದಲ್ಲಿ ನೃತ್ಯ, ಪ್ರಾರ್ಥನೆ ಹಾಗೂ ಪ್ರದರ್ಶನ ನಡೆಯುತ್ತದೆ. ಈ ಉತ್ಸವ ಇಲ್ಲಿನ ನಾಗರಿಕರಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸುತ್ತದೆ. ಎರಡು ದಿನಗಳ ಕಾಲ ಈ ಆಚರಣೆ ನಡೆಯುತ್ತದೆ. ಟಿಬೇಟಿಯನ್ ಬೌದ್ಧ ಧರ್ಮೀಯರ ಪಾಲಿಗೆ ಇದೊಂದು ವಿಶೇಷ ಸಮಾರಂಭ. ಸಖಾ ದವಾ ಆಚರಣೆಯು ಗೌತಮ ಬುದ್ಧ ಹುಟ್ಟಿದ ದಿನದ ಸಂಭ್ರಮಕ್ಕೆ ಕೈಗೊಳ್ಳುವ ಉತ್ಸವ. ಅಲ್ಲದೇ ಬುದ್ಧನ ಸಾವಿನ ದಿನವೂ ಇದೇ ಆಗಿದೆ. ಟಿಬೇಟಿಯನ್ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳ ಹಬ್ಬ ಇದಾಗಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯುತ್ತದೆ. ಇಡೀ ತಿಂಗಳು ಈ ಆಚರಣೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.
ಪ್ರವಾಸಿಗರು ಇಲ್ಲಿ ಓಡಾಡಲು ಬಾಡಿಗೆ ಕಾರು ಅಥವಾ ಬೈಕ್ ಪಡೆಯಬಹುದು. ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿಗೆ ಸ್ವಂತ ವಾಹನದಲ್ಲಿ ಆಗಮಿಸುತ್ತಾರೆ. ಇದು ಸಂಚಾರಕ್ಕೂ ಸರಳ. ಪ್ರದೇಶದಲ್ಲಿ ಸಂಚಾರ ಸಾಕಷ್ಟು ದುಸ್ತರವಾಗಿರುವುದರಿಂದ ವಾಹನದೊಂದಿಗೆ ಬರುವವರು ಜತೆಗೆ ಅಗತ್ಯ ಬಿಡಿಭಾಗವನ್ನೂ ತಂದುಕೊಳ್ಳುವುದು ಒಳಿತು ಎನ್ನುವ ಸಲಹೆ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಇದು ಸಹಾಯಕ್ಕೆ ಆಗುತ್ತದೆ. ಇಲ್ಲಿರುವ ಸಾಕಷ್ಟು ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ತುಪ್ಕಾಸ್ ಅಥವಾ ಸೂಪ್ ನೂಡಲ್ಸ್ ಹಾಗೂ ಮೋಮೊಸ್ ಅಥವಾ ಡುಪ್ಲಿಂಗ್‌ಗಳನ್ನು ಆಹಾರ ರೂಪದಲ್ಲಿ ನೀಡುತ್ತವೆ. ಇದು ಈ ಭಾಗದ ಜನಪ್ರಿಯ ತಿಂಡಿ ಕೂಡ. ಪ್ರವಾಸಿಗರು ಲಡಾಖ್‌ಗೆ ವರ್ಷದ ಯಾವುದೇ ಸಮಯದಲ್ಲಿಯೂ ಬರಬಹುದು. ಆದರೆ ಉತ್ತಮ ಸಮಯ, ಮೇ ನಿಂದ ಸೆಪ್ಟೆಂಬರ್ ನಡುವಿನ ಅವಧಿ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಮಯವಾಗಿರುತ್ತದೆ. ತಾಪಮಾನ ಕೂಡ ೩೩ ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಿರುವುದಿಲ್ಲ ಅದು ಪ್ರವಾಸಿಗರಿಗೆ ಪ್ಲಸ್ ಪಾಯಿಂಟ್.

ಅಲ್ಚಿ ಗ್ರಾಮದಲ್ಲಿ ನೆಲೆಗೊಂಡಿರುವ ಅಲ್ಚಿ ಬೌದ್ಧ ಮಠ ಲಡಾಖ್ ನಲ್ಲಿರುವ ಹಲವು ಪುರಾತನ ಮಠಗಳಲ್ಲಿ ಒಂದು. ಸಿಂಧೂ ನದಿಯ ತಟದ ಮೇಲಿರುವ ಈ ಮಠವನ್ನು ಅಲ್ಚಿ ಚೊಸ್ಖೋರ್ ಹಾಗು ಅಲ್ಚಿ ಗೊಂಪಾ ಎಂಬ ನಾಮಗಳಿಂದಲೂ ಸಂಭೋದಿಸಲಾಗುತ್ತದೆ. ಈ ಮಠವನ್ನು ಸಂಸ್ಕೃತದಲ್ಲಿರುವ ಬೌದ್ಧ ವ್ಯಾಖ್ಯಾನಗಳನ್ನು ಟಿಬೇಟಿಯನ್ ಭಾಷೆಗೆ ಭಾಷಾಂತರಿಸಿದ ಭಾಷಾಂತರಗಾರ ರಿಂಚೆನ್ ಝಾಂಗ್ಪೊ ಎಂಬಾತನು ೯೫೮ ಮಾತು೧೦೫೫ ಮಧ್ಯದ ಅವಧಿಯಲ್ಲಿ ನಿರ್ಮಿಸಿದ ಎಂದು ನಂಬಲಾಗಿದೆ. ಈ ಮಠದ ಒಂದು ಮಹತ್ವವಾದ ಗುಣಲಕ್ಷಣವೆಂದರೆ, ಇದು ಸಮತಟ್ಟಾದ ಭೂಮಿಯಲ್ಲಿ ನಿರ್ಮಿತವಾದುದು. ಈ ಮಠ ಸಂಕೀರ್ಣದಲ್ಲಿ ಮೂರು ದೇವಾಲಯಗಳನ್ನು ನೋಡಬಹುದಾಗಿದ್ದು, ಅವುಗಳೆಂದರೆ ಡು-ಖಾಂಗ್, ಸುಮ್-ಸೆಕ್ ಮತ್ತು ಮಂಜುಶ್ರೀ ದೇವಾಲಯಗಳು. ಕಾರ್ಟೆನ್ಸ್ ಅಥವಾ ಸ್ತೂಪಗಳು ಈ ದೇವಾಲಯದ ಅಂಗಳದಲ್ಲಿರುವ ಮುಖ್ಯವಾದ ರಚನೆಗಳು. ಪ್ರಸ್ತುತ ಲಿಕಿರ್ ಬೌದ್ಧ ಮಠದ ಸನ್ಯಾಸಿಗಳು ಈ ಅಲ್ಚಿ ಮಠದ ನಿರ್ವಹಣೆ ಮಾಡುತ್ತಿದ್ದಾರೆ. ಈ ಮಠದಲ್ಲಿ ಛಾಯಾಚಿತ್ರಣವನ್ನು ನಿಷೇಧಿಸಲಾಗಿದ್ದು, ವಿದ್ಯುತ್ ಸಂಪರ್ಕ ಇನ್ನೂ ಇಲ್ಲದಿರುವ ಕಾರಣ ಪ್ರವಾಸಿಗರು ಟಾರ್ಚ್ ಗಳನ್ನು ಹಿಡಿದು ಪ್ರವೇಶ ಪಡೆಯಬಹುದು.

ಹೆಮಿಸ್ ಆಶ್ರಮ ಲೇಹ ನಿಂದ ೪೦ ಕಿಮೀ ದೂರದಲ್ಲಿದೆ. ಸತ್ಸಂಗ ರಸ್ಪ ನವಂಗ್ ಗ್ಯಾತ್ಸೋ ಮೊದಲ ಬಾರಿ ದೇಹಧಾರಣೆ ಮಾಡಿದಾಗ ೧೬೩೦ ರಲ್ಲಿ ಈ ಆಶ್ರಮವನ್ನು ಕಟ್ಟಲಾಯಿತು. ೧೬೭೨ ರಲ್ಲಿ ಮಹಾಯೋಗ ತಂತ್ರ ಶಾಲೆಯನ್ನು ತೆರೆಯುವದಕ್ಕೆ ಧಾರ್ಮಿಕ ಶಿಕ್ಷಣ ನೀಡುವುದಕ್ಕೆ ದೊರೆ ಸೆಂಗೆ ನಂಪರ್ ಗ್ಯಾಲ್ವಾ ಅವರಿಂದ ಮರು ಸ್ಥಾಪಿಸಲ್ಪಟ್ಟಿತು. ಹೆಮಿಸ್ ಆಶ್ರಮ ಅಥವಾ ಹೆಮಿಸ್ ಗೊಂಪವನ್ನು ಟಿಬೇಟಿಯನ್ ವಾಸ್ತು ಶೈಲಿಯಲ್ಲಿ ಬೌದ್ದ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಬಿಂಬಿಸುವಂತೆ ಕಟ್ಟಲಾಗಿದೆ. ಬೌದ್ದ ಧರ್ಮ ಸ್ಥಾಪಕ ಬುದ್ದನ ತಾಮ್ರದ ಮೂರ್ತಿಯು ಈ ಆಶ್ರಮದ ಮುಖ್ಯ ಆಕರ್ಷಣೆ. ಕಾಲಚಕ್ರ ಮತ್ತು ದಿಕ್ಪಾಲಕರ ಚಿತ್ರಕಲೆಗಳು ಗೋಡೆಗಳ ಮೇಲಿವೆ. ದುಃಖಂಗ್ ಮತ್ತು ಶೊಂಗ್ ಖಂಗ್. ಪ್ರಸ್ತುತ್ ಬೌದ್ದ ಧರ್ಮದ ಒಳಪಂಗಡವಾದ ದ್ರುಕ್ಪಾಗೆ ಹೆಮಿಸ್ ಆಶ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಲಾಗಿದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಹೆಮಿಸ್ ನ ವಾರ್ಷಿಕ ಉತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಟಿಬೇಟಿಯನ್ ಬೌದ್ದ ಇತಿಹಾಸದಲ್ಲಿನ ಪ್ರಮುಖ ಆಕಾರ ಗುರು ಪದ್ಮಸಂಭವನಿಗೆ ಗೌರವ ಸಲ್ಲಿಸಲು ಲಕ್ಷಾಂತರ ಭಕ್ತರು ಸೇರುತ್ತಾರೆ.

ಅಲ್ಚಿ ಬೌದ್ಧ ಮಠ ಸಂಕೀರ್ಣದ ಮಧ್ಯಭಾಗದಲ್ಲಿ ಕಂಡುಬರುವ ದೇವಾಲಯ ಡು-ಖಾಂಗ್. ಈ ಮಠ ಸಂಕೀರ್ಣದಲ್ಲೆ ಇದೊಂದು ಪುರಾತನ ಹಾಗು ದೊಡ್ಡದಾದ ದೇವಾಲಯವಾಗಿದ್ದು, ಇದರಲ್ಲೆ ಬೌದ್ಧ ಸನ್ಯಾಸಿಗಳು ಹಲವು ಆಚರಣೆಗಳನ್ನು ಕೈಗೊಳ್ಳುತ್ತಾರೆ. ೧೨ ಹಾಗು ೧೩ ನೇ ಶತಮಾನದಲ್ಲಿ ಈ ದೇವಾಲಯವನ್ನು ಇತರೆ ರಚನೆಗಳೊಂದಿಗೆ ವಿಸ್ತರಿಸಲಾಯಿತು.

ಏನಿಲ್ಲವೆಂದರೂ ಬುದ್ಧನ ಸುಮಾರು ೧೦೦೦ ಹಸಿಚಿತ್ರಗಳನ್ನು ಈ ದೇವಾಲಯದ ಇಕ್ಕೆಲಗಳಲ್ಲಿ ರಚಿಸಲಾಗಿದೆ. ಈ ದೇವಾಲಯದ ಹೊರದ್ವಾರದಲ್ಲಿ, ಹಿಂದು ಧರ್ಮದ ವಿನಾಶನದ ಪ್ರತೀಕವಾದ ಮಹಾಕಾಲ್, ಶಿವ ಮತ್ತು ಭಾವಚಕ್ರ ಅಥವಾ ಜೀವನಚಕ್ರ ಆಕೃತಿಗಳನ್ನು ಕಾಣಬಹುದು. ದೇವಾಲಯದ ಗೋಡೆಗಳು ಪಂಚ ತತ್ಘಟಗಳನ್ನು ಪ್ರತಿಫಲಿಸುತ್ತದೆ.

ವಜ್ರ ಭೈರವ ದೇಗುಲ ಲೇಹ್‌ನಿಂದ ೧೦ ಕಿ.ಮೀ. ದೂರದಲ್ಲಿದೆ. ಇದನ್ನು ಗೆಲುಗ್ಪಾ ಅಥವಾ ‘ಯಲ್ಲೋವ್ ಹ್ಯಾಟ್’ ಪಂಗಡದ ರಕ್ಷಕ ‘ತಾಂತ್ರಿಕ್’ ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ಪ್ರವೇಶಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಲಭಿಸುತ್ತದೆ. ಕಾರಣ ಇಲ್ಲಿರುವ ವಿಗ್ರಹವು ಅತೀಂದ್ರೀಯ ಶಕ್ತಿಯನ್ನು ಹೊಂದಿರುವುದಾಗಿದೆ. ಮಿಕ್ಕಂತೆ ಉಳಿದ ಸಮಯದಲ್ಲಿ ಈ ವಿಗ್ರಹವನ್ನು ಆಶ್ರಮದಲ್ಲಿರುವ ಒಂದು ಚೇಂಬರ್ ನಲ್ಲಿ ಇರಿಸಲಾಗಿರುತ್ತದೆ. ಇದರಿಂದ ವರ್ಷಕ್ಕೊಮ್ಮೆ ಮಾತ್ರ ದರ್ಶನ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ. ಈ ದೇಗುಲವು ಅತ್ಯಂತ ಪುರಾತನ ಕಟ್ಟಡ ಎಂಬ ಖ್ಯಾತಿಯನ್ನೂ ಹೊಂದಿದೆ. ಇಲ್ಲಿ ೬೦೦ ವರ್ಷ ಹಳೆಯದಾದ ಚಿತ್ರಕಲೆಗಳು, ಇಲ್ಲಿನ ಕಟ್ಟಡದ ಗೋಡೆಗೆ ಅಲಂಕೃತವಾಗಿವೆ. ಪ್ರವಾಸಿಗರು ಇಲ್ಲಿಗೆ ಟ್ಯಾಕ್ಸಿ ಅಥವಾ ಜೀಪ್ ಪಡೆದು ಆರಾಮವಾಗಿ ತಲುಪಬಹುದು. ಹೆಚ್ಚುವರಿಯಾಗಿ ಹೇಳುವುದಾದರೆ ಇಲ್ಲಿ ಬರುವ ಪ್ರವಾಸಿಗರು ಮಹಾಕಾಲ ದೇವಾಲಯ, ಸ್ಪಿಚ್ಯುವಲ್ ಗೆಸ್ಚರ್, ಸ್ಪಿಚ್ಯುವಲ್ ಆಶ್ರಮವನ್ನೂ ನೋಡಬಹುದು. ಇವು ಈ ಪ್ರದೇಶದ ಆಸುಪಾಸಲ್ಲಿಯೇ ಕಂಡುಬರುತ್ತವೆ.

ಸ್ಟಾಕ್ ಪ್ಯಾಲೇಸ್ ಅನ್ನು ರಾಜಾ ತೇಸ್ಪಾಲ್ ತೊಂದುಪ್ ನಮಂಗ್ಯಾಲಾ ಅವರು ೧೮೨೫ ರಲ್ಲಿ ನಿರ್ಮಿಸಿದರು. ಇಂಡಸ್ ನದಿ ದಂಡೆಯ ಮೇಲಿರುವ ಈ ಪ್ಯಾಲೇಸ್ ನಗರದಿಂದ ೧೫ ಕಿ.ಮೀ. ದೂರದಲ್ಲಿದೆ. ಈ ಪ್ಯಾಲೇಸ್ ೧೦೮ ಕಂಗ್ಯಾರು ಸಂಪುಟವನ್ನು ಒಳಗೊಂಡಿದೆ. ಟಿಬೇಟಿಯನ್ ಬುದ್ಧಿಸಂ ಶಾಲೆಗಳಲ್ಲಿ ಪಠ್ಯರೂಪದ ಆಕರಗಳು ಇಲ್ಲಿವೆ. ಇವನ್ನು ಇಲ್ಲಿನ ಗ್ರಂಥಾಲಯದಲ್ಲಿ ಜೋಪಾನವಾಗಿ ಇರಿಸಲಾಗಿದೆ. ಶ್ರೀಮಂತ ಕುಟುಂಬದ ವಾಸಕ್ಕೆ ಮತ್ತು ರಾಜ ಸೆಂಗ್ಯೆ ನಂಗ್ಯಾಲರ ವಾಸಕ್ಕೆ ಇದು ಮೊದಲು ಬಳಕೆ ಆಗುತ್ತಿತ್ತು. ಇದು ಸಾಂಪ್ರದಾಯಿಕ ಶೈಲಿ ಹಾಗೂ ಆಕರ್ಷಕ ವಾಸ್ತುಶಿಲ್ಪ ಮಾದರಿಯನ್ನು ಒಳಗೊಂಡು ನಿರ್ಮಾಣವಾಗಿದೆ. ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಣೆಗೆ ಇದು ಉತ್ತಮ ತಾಣವಾಗಿದೆ. ಇದು ಇಲ್ಲಿನ ಹೆಚ್ಚುವರಿ ವಿಶೇಷತೆಯೂ ಕೂಡ ಹೌದು.

ಇಲ್ಲಿನ ಇನ್ನೊಂದು ವೈಶಿಷ್ಟ್ಯಅಂದರೆ ವರ್ಷಕ್ಕೊಮ್ಮೆ ನಡೆಯುವ ನೃತ್ಯ ಉತ್ಸವ. ಇದಕ್ಕೆ ಸಾಕ್ಷಿಯಾಗಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ, ಪ್ರವಾಸಿಗರು ಇಲ್ಲಿರುವ ಅಪರೂಪದ ನಾಣ್ಯಗಳ ಸಂಗ್ರಹ, ರಾಯಲ್ ವಸ್ತುಗಳು ಹಾಗೂ ಇನ್ನಿತರೆ ಪ್ರಮುಖ ಸಾಮಗ್ರಿಗಳನ್ನು ನೋಡಬಹುದು. ಇಲ್ಲಿ ತಲುಪಿದರೆ ಸುತ್ತಿ ಬರಲು ಕನಿಷ್ಠ ೪ ರಿಂದ ೫ ಘಂಟೆಗಳು ಬೇಕು. ಪ್ಯಾಲೇಸ್ ಸುತ್ತಿ ಎಲ್ಲವನ್ನೂ ನೋಡಿ ಬರಲು ಇಷ್ಟು ಕಾಲ ಅತ್ಯಗತ್ಯ. ಪ್ಯಾಲೇಸ್ ಒಳಗಿರುವ ಸ್ಪಿಟ್ಯುಕ್ ಆಶ್ರಮ ಪ್ರಮುಖ ಆಕರ್ಷಣೆ. ಪ್ಯಾಲೇಸ್ ತಲುಪಲು ಇಚ್ಛಿಸುವ ಪ್ರವಾಸಿಗರು ಸುಲಭವಾಗಿ ಕಾರು, ಜೀಪ್ ಬಾಡಿಗೆ ಪಡೆದು ಬಂದು ತಲುಪಬಹುದಾಗಿದೆ.
ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್
ಲೇಹ್‌ನಲ್ಲಿ ಅತ್ಯಂತ ಜನಪ್ರಿಯವಾದ ಇನ್ನೊಂದು ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್. ಇಂಡಸ್ ನದಿಯ ದಡದ ಮೇಲೆ ಈ ಕ್ರೀಡೆಯನ್ನು ಆಸ್ವಾದಿಸಬಹುದಾಗಿದೆ. ಇದು ಸಾಹಸ ಕ್ರೀಡೆಗೆ ಉತ್ತೇಜನ ನೀಡುವ ತಾಣ. ಇದು ೧೧ ಸಾವಿರ ಅಡಿ ಎತ್ತರದಲ್ಲಿದೆ. ಹೀಗಾಗಿ ಇದು ಪ್ಯಾರಾಗ್ಲೈಡಿಂಗ್‌ಗೆ ಹೇಳಿಮಾಡಿಸಿದಂತಿದೆ. ಅಕ್ಟೋಬರ್‌ನಿಂದ ಜೂನ್ ನಡುವಿನ ಅವಧಿ ಪ್ಯಾರಾಗ್ಲೈಡಿಂಗ್‌ಗೆ ಸಕಾಲ.

ಪ್ರವಾಸಿಗರಿಗೆ ಇಲ್ಲಿನ ಪ್ರಮುಖ ಆಕರ್ಷಣೆ ಟ್ರೆಕ್ಕಿಂಗ್. ಜೂನ್ ತಿಂಗಳಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಇಲ್ಲಿನ ವೀಕ್ಷಣಾ ತಾಣಗಳು ಅತ್ಯಂತ ಮನೋಹರವಾಗಿ ಗೋಚರಿಸುತ್ತವೆ. ಪ್ರವಾಸಿಗರು ಈ ಸಂದರ್ಭದಲ್ಲಿ ಟ್ರೆಕ್ಕಿಂಗ್‌ನ ತರಹೇವಾರಿ ಅನುಭವ ಪಡೆದುಕೊಳ್ಳಬಹುದು. ಹಿಮಾವೃತ್ತವಾದ ಹಿಮಾಲಯ ಪರ್ವತದ ಮೇಲೆ ಟ್ರೆಕ್ಕಿಂಗ್ ತೆರಳುವ ಸುವರ್ಣಾವಕಾಶ ಇಲ್ಲಿ ಸಿಗುತ್ತದೆ. ಅನುಭವಿ ಹಾಗೂ ನುರಿತ ಟ್ರೆಕ್ಕಿಂಗ್ ಪಟುಗಳು ಇಲ್ಲಿ ತೆರಳಲು ತರಬೇತಿ ನೀಡುತ್ತಾರೆ. ಇವರು ಲೇಹ್‌ನ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಪ್ರವಾಸಿಗರಿಗೆ ಟ್ರೆಕ್ಕಿಂಗ್ ತೆರಳಲು ಮಾರ್ಗದರ್ಶನ ನೀಡುವ ಸಾಕಷ್ಟು ಶಿಕ್ಷಣ ಕೇಂದ್ರಗಳು ಇಲ್ಲಿವೆ. ಜೂನ್ ಹಾಗೂ ಸೆಪ್ಟೆಂಬರ್ ತಿಂಗಳು ಇಲ್ಲಿ ಟ್ರೆಕ್ಕಿಂಗ್ ತೆರಳಲು ಸಕಾಲ. ಮರ್ಖಾ ಕಣಿವೆ ಪ್ರದೇಶ ಮಾರ್ಗ, ಸ್ಪಿತಿಯಿಂದ ಲಡಾಖ್ ನಡುವಿನ ಮಾರ್ಗ, ಲಡಾಖ್ ಜನ್ಸಕರ್ ಮಾರ್ಗ ಹಾಗೂ ನುಬ್ರಾ ಕಣಿವೆ ಮಾರ್ಗ ಮುಂತಾದವು ಕೆಲ ಜನಪ್ರಿಯ ಟ್ರೆಕ್ಕಿಂಗ್ ಮಾರ್ಗಗಳಾಗಿವೆ. ಇದರ ಹೊರತಾಗಿ ಇಂಡಸ್ ನದಿ ಪಾತ್ರದಲ್ಲಿ ನಿರ್ಮಾಣವಾಗಿರುವ ಕಣಿವೆ ಮಾರ್ಗದಲ್ಲಿ ಸಫಾರಿಗೂ ಯೋಜನೆ ಹಾಕಿಕೊಳ್ಳಬಹುದು.
(ತಜ್ಞರ ಕೆಲಸ:ಉಲ್ಲೇಖಗಳನ್ನು ಹಾಕದೆ - ವಿಷಯ ತುಂಬಲಾಗಿದೆ)

 	
	
	

ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಗುರುವಾರ ಜನ 7, 2016 - ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಶ್ವಾಸಕೋಶ, ಉಸಿರಾಟದ ತೊಂದರೆ ಇದ್ದ ಹಿನ್ನೆಲೆಯಲ್ಲಿ ನವದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ದಾಖಲಾದ ದಿನದಿಂದ ಪ್ಲೇಟ್ ಲೆಟ್ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿತ್ತು.   




#Article 210: ಮಧ್ಯ ಪ್ರದೇಶ (895 words)


ಮಧ್ಯ ಪ್ರದೇಶ ಹೆಸರು ಸೂಚಿಸುವಂತೆ ಮಧ್ಯ ಭಾರತದಲ್ಲಿರುವ ಒಂದು ರಾಜ್ಯ. ಮಧ್ಯ ಪ್ರದೇಶದ ಒಟ್ಟು ವಿಸ್ತೀರ್ಣ ೩೦೮,೨೫೨ ಚ. ಕೀ.(೧೧೯,೦೧೭ ಚ.ಮೈಲಿ) ಇದರ ರಾಜಧಾನಿ  ಭೋಪಾಲ. ನವೆಂಬರ್  ೧, ೨೦೦೦ದಲ್ಲಿ ಮಧ್ಯ ಪ್ರದೇಶದಿಂದ  ಛತ್ತೀಸ್‍ಘಡವನ್ನು ರಚಿಸುವ ಮೊದಲು, ಕಳೆದ ಶತಮಾನದ ಕೊನೆಯ ವರೆವಿಗೂ   ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ರಾಜ್ಯವಾಗಿತ್ತು. ಈಗ ರಾಜಾಸ್ಥಾನ್ಆ ಮನ್ನಣೆಗೆ ಪಾತ್ರವಾಗಿದೆ. ಮಧ್ಯ ಪ್ರದೇಶದ ಕೆಲವು ಕ್ಷೇತ್ರಗಳ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಮಧ್ಯ ಪ್ರದೇಶದ  ರ್ಯಾಸೇನ್ ಜಿಲ್ಲೆಯಲ್ಲಿರುವ ಭೀಮ್ ಬೆಟ್ಕಾ ಗುಹೆಯಲ್ಲಿ ಒಂದು ಲಕ್ಷ ವರ್ಷಕ್ಕೂ ಹಿಂದೆ ಮಾನವ ವಸತೀತ್ತೆಂದು ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಅಪೂರ್ವ ಗುಹಾಚಿತ್ರಗಳು ೩೦ ಆವಿರವರ್ಷಕ್ಕೂ ಹಿಂದಿನವು.

ಮಧ್ಯ ಪ್ರದೇಶ ರಾಜ್ಯದಲ್ಲಿ ಒಟ್ಟು ೪೫ ಜಿಲ್ಲೆಗಳಿದ್ದು ಅವುಗಳನ್ನು ೮ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಆ ಎಂಟು ವಿಭಾಗಗಳೆಂದರೆ :
 
೧. ಭೂಪಾಲ್ : ಭೂಪಾಲ್, ರ್ಯಾಸೆನ್,ರಾಜ್ ಗರ್, ಸೆಹೋರ್, ಮತ್ತು ವಿದಿಶಾ ಜಿಲ್ಲೆಗಳು.
 
೨. ಗ್ವಾಲಿಯರ್ : ಅಶೋಕನಗರ, ಧಾತಿಯಾ, ಗುಣಾ, ಗ್ವಾಲಿಯರ್, ಮತ್ತು ಶಿವಪುರಿ ಜಿಲ್ಲೆಗಳು.
 
೩. ಇಂದೋರ್ : ಬಾರ್ವಾನಿ, ಬುರ್ಹಾನ್ ಪುರ್, ಧಾರ್, ಇಂದೋರ್, ಝುಬುವಾ,ಖಾಂಡ್ವಾ, ಆಲಿರಾಜ್ ಪುರ್, ಮತ್ತು ಖಾರ್ಗೋಣೆ ಜಿಲ್ಲೆಗಳು.
 
೪. ಜಬಲ್ಪುರ್: ಬಾಲ್ ಘಾಟ್, ಛಿಂದ್ ವಾರಾ, ಜಬಲ್ ಪುರ್, ಕಟ್ನಿ, ಮಾಂಡ್ಲಾ, ನರಸಿಂಗ್ ಪುರ್,ಮತ್ತು ಸಿಯೋನಿ ಜಿಲ್ಲೆಗಳು.

೫. ರೇವಾ : ರೇವಾ, ಸತ್ನಾ, ಸೀಧೀ, ಮತ್ತು ಸಿಂಗ್ರೌಲಿ ಜಿಲ್ಲೆಗಳು.

೬. ಸಗರಂದ್ : ಛತ್ತರ್ ಪುರ್, ದಾಮೋಹ್, ಪನ್ನಾ, ಸಾಗರ್, ಮತ್ತು ಟಿಕಮ್ ಗರ್ ಜಿಲ್ಲೆಗಳು.

೭. ಉಜ್ಜಯಿನಿ : ದೇವಾಸ್, ಮಂದ ಸೌರ್, ನೀಮಚ್, ರತ್ಲಾಂ, ಶಾಜಾಪುರ್, ಮತ್ತು ಉಜ್ಜಯಿನಿ ಜಿಲ್ಲೆಗಳು.

೮. ಶಹಡೋಲ್ : ಶಾಹ್ ದೋಲ್, ಅನುಪ್ಪುರ್, ಡಿಂಡೋರಿ, ಮತ್ತು  ಉಮಾರಿಯಾ ಜಿಲ್ಲೆಗಳು.

'ಹಿಂದಿ' ಮಧ್ಯಪ್ರದೇಶದ ಪ್ರಮುಖ ಭಾಷೆ. ಆ ಭಾಷೆಯ ಜನಪದ  ರೂಪಗಳೂ ಇಲ್ಲಿ ಪ್ರಚಲಿತವಾಗಿವೆ. ಮಾಲ್ವಾದ ಮಾಲ್ವಿ, ನಿಮಾರ್ ನ ನಿಮಾಡಿ, ಬುಂದೇಲ್ ಖಂಡ್ ನ ಬುಂದೇಲಿ, ಬಾಗೇಲ್ ಖಂಡ್ ನ ಬಾಗೇಲಿ ಮತ್ತು ಅವಧಿ-ಇವೆಲ್ಲಾ ಹಿಂದಿ ಭಾಷೆಯ ರೂಪಾಂತರಗಳು.ಭಿಲೋಡಿ (ಭಿಲ್ ಭಾಷೆ), ಗೊಂಡಿ, ಕೋರ್ಕು, ಕಾಲ್ಟೋ (ನಿಹಾಲಿ)- ಇವು ಮಧ್ಯಪ್ರದೇಶದ ಕೆಲವು 'ಆದಿವಾಸಿ ಭಾಷೆಗಳು'. ಮಧ್ಯ ಪ್ರದೇಶದ ಹಲವು ಭಾಗಗಳಲ್ಲಿ ಎರಡು ಶತಮಾನಕ್ಕೂ ಹೆಚ್ಚು ಕಾಲ ಮರಾಠರು ಆಡಳಿತ ನಡೆಸಿದ್ದ ಕಾರಣ 'ಮರಾಠಿ' ಮಾತಾಡುವ ಜನ ಹೆಚ್ಚಾಗಿದ್ದಾರೆ. ಭೂಪಾಲ್ ನ ಆಸುಪಾಸಿನಲ್ಲೂ 'ಆಫ್ಘಾನಿಸ್ತಾನ', ಮತ್ತು 'ವಾಯವ್ಯ ಪಾಕಿಸ್ತಾನ'ದಿಂದ ವಲಸೆಬಂದು ನೆಲೆಸಿರುವ ಸಾಕಷ್ಟು ಬುಡಕಟ್ಟಿನ ಜನರಿದ್ದಾರೆ. ಅವರು, ’ಸರ್ಯಾಕಿ’ ಮತ್ತು ’ಪಾಶ್ತೋ’ ಭಾಷೆಯನ್ನು ಆಡುತ್ತಾರೆ.

ಮಧ್ಯಪ್ರದೇಶದ 'ಉಜ್ಜಯನಿ'ಯಲ್ಲಿ ಪ್ರಸಿದ್ಧ ಸಂಸ್ಕೃತ ಕವಿ, 'ಕಾಳಿದಾಸ'ನು ಜೀವಿಸಿದ್ದನೆಂಬ (ಕ್ರಿ.ಶ ೩೭೫ ರಿಂದ ೪೧೫ ರವರೆಗೆ) ಪ್ರತೀತಿಯಿದೆ. ಪುರಾಣಕಾಲದಲ್ಲಿ ಈ ನಗರಕ್ಕೆ ಆವಂತಿಕಾನಗರವೆಂದು ಹೆಸರಿತ್ತು. ಈ ನಗರಕ್ಕೆ, ಆವಂತಿ, ಆವಂತಿಕಾಪುರಿ, ಆವಂತಿಕಾ, ಕುಶಸ್ತಲಿ, ಭಾಗಾವತಿ, ಕುಮುದ್ವತಿ, ಹಿರಣ್ಯಾವತಿ,ವಿಶಾಲಾ, ಎಂಬೆಲ್ಲಾ ಹೆಸರುಗಳಿದ್ದವು. ಇಲ್ಲಿಯೇ 'ಕೃಷ್ಣ-ಬಲರಾಮ'ರು ಶಿಕ್ಷಣ ಪಡೆದ 'ಸಂದೀಪನಿ ಮಹರ್ಷಿಯ ಆಶ್ರಮ'ವೂ ಇದೆ. 'ಶಿಪ್ರಾನದಿ'ಯ ದಂಡೆಯಮೇಲಿರುವ ಉಜ್ಜೈನ್ ನಲ್ಲಿ ಮಹಾಕಾಲೇಶ್ವರ್ ಮಂದಿರವಿದೆ. ಈಶ್ವರ ಪ್ರತಿರೂಪವಾದ ಇಲ್ಲಿ ಅರ್ಚಿಸಲಾಗುತ್ತದೆ. ಭಾರತದಲ್ಲಿ ಪ್ರಖ್ಯಾತವಾಗಿರುವ  ೧೨ ಜ್ಯೋತಿರ್ಲಿಂಗಗಳಲ್ಲಿ 'ಸ್ವಯಂಭು'ವಾಗಿರುವ  ಈ ಶಿವಲಿಂಗ ಹೆಚ್ಚು ಶಕ್ತಿಶಾಲಿಯೆಂದು ಭಕ್ತರು ನಂಬಿದ್ದಾರೆ. ಕಾಳಿದಾಸನು ತನ್ನ ಕಾವ್ಯಗಳಲ್ಲಿ ವರ್ಣಿಸಿ ಪ್ರಶಂಸಿರುವುದು ಕಂಡುಬರುತ್ತದೆ. ಈ ಶಿವಲಿಂಗದ ವೈಶಿಷ್ಟ್ಯವೆಂದರೆ, ದಕ್ಷಿಣದಕಡೆ ಮುಖಮಾಡಿಕೊಂಡಿರುವುದು. ಅದೂ ಅಲ್ಲದೆ ಶಿವನ ವಾಹನವಾದ ನಂದಿಯ ವಿಗ್ರಹವೂ ದಕ್ಷಿಣದಿಕ್ಕಿಗಿದೆ. ಅದ್ದರಿಂದ ಈ ಲಿಂಗಕ್ಕೆ 'ದಕ್ಷಿಣಾಮೂರ್ತಿ'ಯೆಂದು ಹೆಸರುಬರಲು ಕಾರಣವಾಯಿತು. ಮಹಾಕಾಲನ ಮಂದಿರ ೫ ಅಂತಸ್ತಿನ ಭವ್ಯ ಮಂದಿರವಾಗಿದ್ದು ವಿಶಾಲ ಪ್ರಾಂಗಣ ಸರೋವರವನ್ನು ಹೊಂದಿದೆ. ನೆಲಾಂತಸ್ತಿನಿಂದ ಕೆಳಭಾಗದ ಲಿಂಗಕ್ಕೆ ಸದಾಕಾಲವೂ ನೀರು ಮತ್ತು ಹಾಲಿನ ಅಭಿಷೇಕ ಮಾಡುತ್ತಿರುತ್ತಾರೆ. ಲಿಂಗದ ಸುತ್ತಲೂ ಸತತವಾಗಿ ಅಗೋಚರ ಕಿರಣಗಳು ಬರುವುದರಿಂದ ಇದರ ಎದುರಿಗೆ  ೩ ನಿಮಿಷವೂ ನಿಲ್ಲಲು ಆಗುವುದಿಲ್ಲ. ಪ್ರತಿ ದೀಪಾವಳಿಯ ದಿನ 'ದೀಪೋತ್ಸವ' ಅದ್ಧೂರಿಯಾಗಿ ನಡೆಯುತ್ತದೆ. ೩ ನೆಯ ಅಂತಸ್ತಿನಲ್ಲಿರುವ 'ನಾಗಚಂದ್ರೇಶ್ವರ ಮಂದಿರ' ನಾಗರಪಂಚಮಿಯ ದಿನ ಮಾತ್ರವೇ ಭಕ್ತರಿಗೆ ತೆರೆದಿರುತ್ತದೆ. ಭಕ್ತಗಣವೇ ಸ್ವತಃ ತಮ್ಮ ಕೈನಿಂದ ಅರ್ಚನೆ ಮಾಡಿ ನಮಸ್ಕರಿಸಬಹುದು.ಉಜ್ಜಯನಿಯ ಹರಿಸಿದ್ಧಿಮಂದಿರ್, ೫೨ ಶಕ್ತಿ ಪೀಠಗಳಲ್ಲೊಂದಾಗಿದೆ. 'ಗರುಡಪುರಾಣ'ದಲ್ಲಿ ಭಾರತದ ೭  ಪವಿತ್ರ ಕ್ಷೇತ್ರಗಳಲ್ಲಿ ಒಂದೆಂದು ಗುರುತಿಸಲಾಗಿತ್ತು.(ಅಯೋಧ್ಯೆ, ಮಥುರಾ, ಕಾಶಿ, ಕಾಂಚಿ, ಆವಂತಿಕಾ, ಪುರಿ, ದ್ವಾರಾವತಿ) ಏಪ್ರಿಲ್ ನಿಂದ ಜೂನ್ ವರೆಗೆ ಬೇಸಿಗೆ ಕಾಲ, ೪೫  ಡಿಗ್ರಿ ಉಷ್ಣತೆ ಯಿದ್ದು  ಪ್ರವಾಸಕ್ಕೆ ಅನುಕೂಲವಿಲ್ಲ. ಮಳೆಗಾಲ,ಜೂನ್ ನಿಂದ ಸೆಪ್ಟೆಂಬರ್ ವರೆಗೆ, ನವೆಂಬರ್-ಫೆಬ್ರವರಿ ವರೆಗೆ ಚಳಿಗಾಲ, ಹಗಲಿನ ವೇಳೆ, ೨೦ ಡಿಗ್ರಿ ಉಷ್ಣತೆ, ರಾತ್ರಿ ಸೊನ್ನೆ ಡಿಗ್ರಿ ಇರುತ್ತದೆ. ಹಾಗಾಗಿ  ಅಲ್ಲಿಗೆ ಭೆಟ್ಟಿಕೊಡಲು ಅತ್ಯುತ್ತಮ ವಾದ ಸಮಯವೆಂದರೆ, ಅಕ್ಟೋಬರ್ ನಿಂದ ಜನವರಿಯವರೆಗೆ,

ಆಗ ಲಕ್ಷಾಂತರ ಭಕ್ತಾದಿಗಳು ದೇಶವಿದೇಶಗಳಿಂದ ಬಂದು, ಇಲ್ಲಿನ ಪವಿತ್ರ ನದಿಯಲ್ಲಿ ಸ್ನಾನಮಾಡಿ,ಪುನೀತರಾಗುತ್ತಾರೆ. 'ನಾಗಾಸಾಧುಗಳು' ಹಾಗೂ 'ಅಘೋರಿ'ಗಳು ಇಲ್ಲಿ ನೆರೆದಿರುತ್ತಾರೆ. ನದಿಯ ಇಕ್ಕೆಲೆಗಳಲ್ಲಿ ಕಣ್ಣು ಹಾಯಿಸಿದ ಕಡೆಗಳಲ್ಲೆಲ್ಲಾ ದೇವಾಲಯಗಳ ಸಮೂಹವೇ ಗೋಚರಿಸುತ್ತದೆ. ಈ ನಗರದಲ್ಲಿ ಸಮಯವನ್ನು ಕರಾರುವಾಕ್ಕಾಗಿ ತಿಳಿಸುವ ಸಾಧನಗಳಿರುವುದರಿಂದ ಭಾರತದ ಗ್ರೀನ್ ವಿಚ್ ಎಂದು ಪ್ರಸಿದ್ದಿಯಾಗಿದೆ. 'ಜಂತರ್ ಮಂತರ್' ಎಂಬ ತಾಣದಲ್ಲಿ  ಸಮಯವನ್ನು ನಿಖರವಾಗಿ ಮಾಪಿಸಲಾಗುತ್ತದೆ. ಇದೇ ತರಹದ 'ಜಂತರ್ ಮಂತರ್' ಗಳು ದೇಶದ ದೆಹಲಿ, ಜಯಪುರ್, ವಾರಾಣಾಸಿ, ಗಳಲ್ಲಿವೆ. ಜೈಪುರದ ರಾಜ ಈ ತರಹದ ವೀಕ್ಷಣಾಲಯವನ್ನು ನಿರ್ಮಿಸಿದ. 'ಖಗೋಳ ಶಾಸ್ತ್ರ'ದ ಬಗ್ಗೆ ಅರಿಯಲು ಬಯಸುವವರಿಗೆ, ಅಂತರಿಕ್ಷ, ಸೂರ್ಯ ಕಿರಣ, ಚಂದ್ರಬಿಂಬ, ನಕ್ಷತ್ರಗಳ ಚಲನೆ ಮುಂತಾದ ಗತಿವಿಧಿಗಳ ಬಗ್ಗೆ ತಿಳಿಸಲು ಅನೇಕ ಸಾಧನಗಳು ಕಣ್ಣಿಗೆ ಗೋಚರಿಸುತ್ತವೆ. ಇವುಗಳಿಂದ ಸಮಯದ ಪರಿಕಲ್ಪನೆಯನ್ನು ತಿಳಿಯಲು ಅನುಕೂಲ.

ಮಹಾ ಜ್ಯೋತಿಷಿ, 'ವರಾಹ ಮಿಹಿರ' ಸಹಿತ ಉಜ್ಜಯಿನಿಯಲ್ಲಿ ವಾಸಿಸಿದ್ದರು. ಧಾರಾದ ರಾಜ 'ಭೋಜರಾಜನ ಆಸ್ಥಾನ'ದಲ್ಲಿ ಕವಿಗಳಿಗೆ ವಿಶೇಷ ಮನ್ನಣೆಯನ್ನು ಕೊಟ್ಟು ಆಶ್ರಯವನ್ನು ಕೊಡಲಾಗಿತ್ತು. ರಾಜಾ ಭೋಜ ಸ್ವತಃ ಒಬ್ಬ ಶ್ರೇಷ್ಟ ಕವಿಯಾಗಿದ್ದರು. ಹಲವಾರು ಕೃತಿಗಳನ್ನು ರಚಿಸಿದ್ದಾರೆ. 'ಧಾರ ನಗರ'ದಲ್ಲಿ ಭೋಜರಾಜರು ನಿರ್ಮಿಸಿದ 'ಸಂಸ್ಕೃತ ಪಾಠಶಾಲೆ' ಇಂದಿಗೂ ಇದೆ. ಶಾಲೆಯ ಗೋಡೆಗಳ ಮೇಲೆ ಸಂಸ್ಕೃತ ಭಾಷೆಯಲ್ಲಿ ಕೆತ್ತಿದ ಹಲವಾರು ಶ್ಲೋಕಗಳಿವೆ. ಮಧ್ಯಪ್ರದೇಶ ಇನ್ನೂ ಹಲವಾರು ಖ್ಯಾತ ಪಂಡಿತರಿಗೆ ತವರುಮನೆ. ಅವರುಗಳಲ್ಲಿ ಪ್ರಮುಖರು, 'ಧನಪಾಲ', 'ಭರ್ತುಹರಿ', 'ಆಶಾಧಾರ', 'ಮನತುಂಗ', 'ಬ್ರಹ್ಮಗುಪ್ತ', 'ಭಾಸ್ಕರಾಚಾರ್ಯ', ಮುಂತಾದವರು. 'ಚಂದ್ರಗುಪ್ತ ವಿಕ್ರಮಾದಿತ್ಯ ಮಹಾರಾಜ' ನ ಕಾಲದಲ್ಲಿ, 'ಧನ್ವಂತರಿ', 'ಕ್ಷಪಣಕ' (ಸಿದ್ಧಸೇನ) 'ಅಮರ ಸಿಂಹ', 'ಸಂಕು', 'ವೇತಾಲಭಟ್ಟ', 'ಘಟಕರ್ಪರ', 'ಕಾಳಿದಾಸ', 'ವರಾಹಮಿಹಿರ', ಮತ್ತು 'ವರರುಚಿ' ಎಂಬ ನವರತ್ನಗಳಿದ್ದರು. ಆಧುನಿಕ ಕಾಲದ ಕೆಲವು ಹೆಸರಾಂತ ಕವಿಗಳು', 'ಮಾಖನ್ ಲಾಲ್', 'ಚತುರ್ವೇದಿ', 'ಶರದ್ ಜೋಶಿ', 'ಗಜಾನನ', 'ಮಾಧವ ಮುಕ್ತಿ', 'ಬೊಧ' ಮತ್ತು 'ವಿನೋದ್ ಕುಮಾರ್', 'ಶುಕ್ಲಾ' ಮುಂತಾದವರು.

'ಮಧ್ಯ ಪ್ರದೇಶ' ಆದಿವಾಸಿಗಳ ರಾಜ್ಯ. ಯಾವುದೇ ಪರಕೀಯ ಆಚಾರ, ಸಂಸ್ಕೃತಿಗಳ ಸೋಂಕುತಾಗದೆ ಶತಮಾನಗಳ ಕಾಲದಿಂದಲೂ ತನ್ನ ದೇಶಿ ಸಂಕೃತಿಯ ಸ್ವಂತಿಕೆಯನ್ನು ಮಧ್ಯ ಪ್ರದೇಶ, ಕಾಪಾಡಿಕೊಂಡು ಬಂದಿದೆ. ಈ ಪ್ರದೇಶದ ಹಬ್ಬ ಹರಿದಿನಗಳಲ್ಲಿ ಮತ್ತು ಜಾತ್ರೆಗಳಲ್ಲಿ ಪುರಾತನಕಾಲದ ಅಪೂರ್ವ ಹಾಡು-ಕುಣಿಗಳಲ್ಲಿ  ಶತಮಾನದ ಸಂಪ್ರದಯದ  ಛಾಯೆಯನ್ನು ಕಾಣಬಹುದು.
ಕರ್ಮಾ ನೃತ್ಯಮಧ್ಯ ಪ್ರದೇಶ' ದ, ವಾಯವ್ಯ ಭಾಗದಲ್ಲಿ ನೆಲೆಸಿರುವ ಗೊಂಡ ಜನಸಮುದಾಯ, ಹಾಗೂ ಒರಾಂವ್ ಪಂಗಡ ಗಳ ಕುಣಿತ,'ಮಧ್ಯ ಪ್ರದೇಶ'ದ 'ಅತಿಪ್ರಾಚೀನ ಆದಿವಾಸಿ ನೃತ್ಯ ಪ್ರಕಾರ'ವೆಂದು ಪರಿಗಣಿಸಲ್ಪಟ್ಟಿದೆ. ದೇಶದ ಇತರೆ ಭಾಗಗಳಲ್ಲಿ ಇದರ ಭಿನ್ನ ರೂಪಗಳನ್ನು ಕಾಣಬಹುದು. ಈ ನೃತ್ಯಗಳನ್ನು ನಾವು ಹೆಚ್ಚಾಗಿ ಶರತ್ಕಾಲದ ಆರಂಭದಲ್ಲಿ ಇಲ್ಲವೇ ಮಳೆಗಾಲದ ಕೊನೆಯಲ್ಲಿ ಪ್ರದರ್ಶನಗೊಳ್ಳುವುದನ್ನು ಕಾಣಬಹುದು.

'ಮಧ್ಯಪ್ರದೇಶ,' ಅಪಾರ  ಪ್ರಾಕೃತಿಕ ನಿಸರ್ಗ ಸಂಪನ್ನು ಹೊಂದಿದ  ರಾಜ್ಯವಾಗಿದೆ. ಭಾರತದ ೧೨.೪ % ಪ್ರತಿಶತ್ ಅರಣ್ಯ ಇರುವುದು ಈ ರಾಜ್ಯದಲ್ಲೇ. ರಾಜ್ಯದ ೩೧ % ಪ್ರತಿಶತ್, (೯೫,೨೨೧ ಚ.ಕೀ.ಮೀ) ಭಾಗ ಅರಣ್ಯಗಳು ಆಕ್ರಮಿಸಿವೆ. ಮಧ್ಯ, ಪೂರ್ವ, ಮತ್ತು ದಕ್ಷಿಣ ಭಾಗಗಳಲ್ಲಿ ದಟ್ಟ ಅಡವಿಗಳಿದ್ದರೆ,  ಉತ್ತರ ಮತ್ತು ಈಶಾನ್ಯ ಭೂಭಾಗಗಳಲ್ಲಿ, ಕುರುಚಲು ಗಿಡಗಳ ಪ್ರದೇಶಗಳಿವೆ.

ಒಟ್ಟು  ೯ ರಾಷ್ಟ್ರೀಯ ಉದ್ಯಾನಗಳಿವೆ. ಭಾಂದವ್ ಘರ್, ಕಾನ್ಹಾ, ಸತ್ಪುರಾ, ಸಂಜಯ್, ಮಾಧವ್, ವನ್ ವಿಹಾರ್, ಮಾಂಡ್ಲಾ, ಪನ್ನಾ ಮತ್ತು ಪೆಂಚ್ ರಾಷ್ಟ್ರೀಯ ಉದ್ಯಾನಗಳು. ಇವಲ್ಲದೆ ಹಲವಾರು  ಪ್ರಾಕೃತಿಕ ಸಂರಕ್ಷಣಾ ತಾಣಗಳಿವೆ. ಮಂಡ್ಲಾ ರಾಷ್ತ್ರೀಯ ಉದ್ಯಾನ ಸಸ್ಯ ಪಳೆಯುಳಿಕೆಗಳಿಗೆ  ಸುಪ್ರಸಿದ್ಧವಾಗಿದೆ.

'ಬೀಡಿ ಉದ್ಯಮ'ಕ್ಕೆ ಇವು ಅತ್ಯವಶ್ಯಕ. 'ತೆಂಡು ಎಲೆಗಳು'  ಮಧ್ಯಪ್ರದೇಶದ ಅಡವಿಗಳಲ್ಲಿ ವಿಪುಲ ಮಾತ್ರದಲ್ಲಿ ದೊರೆಯುವುದರಿಂದ  'ಬೀಡಿ ಕೈಗಾರಿಕೆ' ಮಂಚೂಣಿಯಲ್ಲಿದೆ.

ವಿಶಾಲವಾದ ರಾಜ್ಯಗಳಲ್ಲಿ ಒಂದಾದ 'ಮಧ್ಯಪ್ರದೇಶ'ದ ಖಾದ್ಯಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುತ್ತವೆ. ಗೋಧಿ ಮತ್ತು ಮಾಂಸಾಹಾರದ ಖಾದ್ಯಗಳು ಉತ್ತರ ಹಾಗೂ ಪಶ್ಚಿಮಭಾಗದ ಮಧ್ಯಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಅಕ್ಕಿ ಮತ್ತು ಮೀನಿನ ಆಹಾರಗಳು ಹೆಚ್ಚು ಪ್ರಚಲಿತದಲ್ಲಿವೆ. ಹಾಲು ಮತ್ತು ಹಾಲಿನ ಖಾದ್ಯಗಳು ಗ್ವಾಲಿಯರ್ ಮತ್ತು ಇಂದೂರ್ ನಗರಗಳಲ್ಲಿ ಹೆಚ್ಚು ತಯಾರಿಸಲ್ಪಡುತ್ತವೆ. ಮಾಳ್ವ ಪ್ರದೇಶದ ಅಡುಗೆಯಲ್ಲಿ ಸಸ್ಯಾಹಾರಕ್ಕೆ ಹೆಚ್ಚು ಪ್ರಾಶಸ್ತ್ಯಕೊಡುತ್ತಾರೆ. ಇಲ್ಲಿನ ಖಾದ್ಯಗಳಲ್ಲಿ ರಾಜಾಸ್ತಾನಿ ಮತ್ತು ಗುಜರಾತ್ ರಾಜ್ಯದ ಖಾದ್ಯಗಳ ಶೈಲಿಯ ಮಿಶ್ರಣವಿದೆ. ಜೋಳದೆ ತೆನೆ, ಮತ್ತು ಹಾಲಿನಿಂದ ಸಿದ್ಧವಾದ ಆಹಾರಪದಾರ್ಥಗಳಲ್ಲಿ ಅತಿ ಹೆಸರುವಾಸಿಯಾದ, 'ಭುಟ್ಟೇಕಿ ಕೀಸ್', 'ಗೋಧಿ ಹುಡ್', ಮತ್ತು ಮೊಸರಿನಲ್ಲಿ ತಯಾರಾದ 'ಚಕ್ಕೀ ಕಿ ಶಾಕ್' ಈ ಪ್ರದೇಶದ ಸ್ವಾದಿಷ್ಟ ತಿನಸುಗಳಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಟ್ಟಿವೆ. ಸಿಹಿತಿಂಡಿಗಳ ಪಟ್ಟಿ ಹೀಗಿದೆ.

ಭೂಪಾಲ್ ನಲ್ಲಿ ಮಾಂಸ ಮತ್ತು ಮೀನಿನಿಂದ ತಯಾರಾದ ಖಾದ್ಯಗಳು ಹೆಚ್ಚು ಬೇಡಿಕೆಯಲ್ಲಿವೆ.

'ದಾಲ್' ಜೊತೆಗೆ ಬಡಿಸಿಕೊಂಡು ಮೆಲ್ಲುವ 'ರೊಟ್ಟಿ' ಇಲ್ಲಿನ ವಿಶೇಷ ಊಟಗಳಲ್ಲೊಂದು.

'ಮಹುವಾ ಮರದ ಹೂವು'ಗಳಿಂದ ತಯಾರಾಗುವ ಮದ್ಯವನ್ನು 'ಖರ್ಜೂರ' ಹಣ್ಣಿನಿಂದ ತಯಾರಿಸುತ್ತಾರೆ. 'ಪಾನಪ್ರಿಯ'ರಿಗೆ ಇದೊಂದು ಮುದಕೊಡುವ ಪೇಯವಾಗಿದೆ.

'ಇಂದೂರ್ ನಗರ'ದಲ್ಲಿ ಇಂತಹ ಖಾದ್ಯಗಳನ್ನು ಮಾರುವ ಗಾಡಿಗಳು ಎಲ್ಲೆಡೆ ಲಭ್ಯವಿವೆ. ಈ ನಗರದ 'ಸರಾಫಾ ಬಜಾರ್', 'ಛಪ್ಪನ್ ದೂಕಾನ್',ಮುಂತಾದ ರಸ್ತೆಗಳಲ್ಲಿ 'ಪೋಹಾ ಜಿಲೇಬಿ', 'ಭುಟ್ಟೇ ಕೀ ಕೀಸ್', ಮುಂತಾದ ರುಚಿರುಚಿಯಾದ ಖಾದ್ಯಗಳು ಉಪಲಬ್ಧವಿವೆ.




#Article 211: ಮಣಿಪುರ (579 words)


ದೇಶದ ಈಶಾನ್ಯ ಭಾಗದ ಪ್ರವಾಸ ತಾಣಗಳಲ್ಲಿ ಮಣಿಪುರ ರಾಜ್ಯ ನಾನಾ ಕಾರಣಗಳಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಎದುರುಗೊಳ್ಳುತ್ತದೆ. ಒಂದು ಪ್ರವಾಸಿ ತಾಣಗಳಿಂದ ಮುದ ನೀಡಿದರೆ ಮತ್ತೊಂದೆಡೆ ತನ್ನೂರಿನ ಹಬ್ಬಗಳಿಂದ ಸದಾ ಕಾಲ ಯಾರಿಗೂ ಗೊತ್ತಿಲ್ಲದೇ ಸುದ್ದಿಯಾಗುತ್ತದೆ. ಪ್ರಶಾಂತ ಭೂ ದೃಶ್ಯಗಳು, ವಿಲಕ್ಷಣ ವನ್ಯ ಜೀವಿಗಳು, ಅಲ್ಲಿನ ಜನರ ಆತಿಥ್ಯ ನೋಡಿದರೆ ಆ ಜಗದ ಪ್ರೀತಿ ಹುಟ್ಟುವುದರಲ್ಲಿ ಸಂಶಯವಿಲ್ಲ. ಇದೇ ಕಾರಣದಿಂದ ಲಕ್ಷ ಗಟ್ಟಲೆ ಹಣ ಸುರಿದು ಸ್ವಿಜರ್‌ಲ್ಯಾಂಡ್‌ಗೆ ಕಣ್ಣ ಹಾಕುವ ಪ್ರವಾಸಿಗರು ಸ್ವಿಟ್ಜರ್ಲ್ಯಾಂಡ್ ಆಫ್ ಇಂಡಿಯಾ ಎಂದು ಕರೆಯಲಾಗುವ ಮಣಿಪುರಕ್ಕಂತೂ ಗ್ಯಾರಂಟಿಯಾಗಿ ಬಂದು ಬಿಡಬಹುದು. ಇದರ ಜತೆಗೆ ಮತ್ತೂ ಪ್ರವಾಸಿಕ್ಕಾಗಿ ಸಮಯ, ಹಣದ ಉಳಿತಾಯವಾದರಂತೂ ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ ಹಾಗೂ ಪಶ್ಚಿಮಕ್ಕೆ ಅಸ್ಸಾಂ ಹಾಗೂ ಪೂರ್ವಕ್ಕೆ ಬರ್ಮಾದ ಅಂತಾರಾಷ್ಟ್ರೀಯ ಗಡಿರೇಖೆ ಇರುವುದರಿಂದ ಅಲ್ಲೂ ಪ್ರವಾಸ ಕೈಗೊಳ್ಳುವ ಅವಕಾಶ ಸಿಗುತ್ತದೆ.

ನಗರದಿಂದ ೧೦ಕಿಮೀ ದೂರದಲ್ಲಿದೆ. ಮಣಿಪುರದ ರಾಜಧಾನಿ ನಗರ. ಇದು ಏಳು ಪರ್ವತಶ್ರೇಣಿಗಳಿಂದ ಸುತ್ತುವರಿದಿದೆ. ಸಾಂಸ್ಕೃತಿಕ ಹಾಗೂ ಕಮರ್ಷಿಯಲ ಚಟುವಟಿಕೆಗಳ ಕೇಂದ್ರ ಬಿಂದು. ಪ್ರಕೃತಿಯ ಸೊಬಗು ಮತ್ತು ವನ್ಯಜೀವಿಗಳಿಗೆ ಹೆಸರುವಾಸಿ. ಪುರಾತನ ಇತಿಹಾಸವಿರುವ ಅನೇಕ ದೇವಾಲಯಗಳು, ಸ್ಮಾರಕಗಳನ್ನು ನೋಡಬಹುದು.

ಇಲ್ಲಿ ಮಹಿಳೆಯರದ್ದೇ ವ್ಯವಹಾರ. ಮಹಿಳೆಯರೇ ನಡೆಸುವ ದೇಶದ ದೊಡ್ಡ ಮಾರ್ಕೆಟ ಇದು. ಇಲ್ಲಿ ನೀವು ಮಣಿಪುರದ ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳನ್ನು ಖರೀದಿಸಬಹುದು. ಶಾಲ, ಬಾಸ್ಕೆಟ, ಬ್ಯಾಗ್, ಉಡುಗೆ, ಗೃಹಪಯೋಗಿ ವಸ್ತುಗಳು ಅಲ್ಲದೇ ಬೆತ್ತ ಹಾಗೂ ಬಿದಿರಿನಿಂದ ಮಾಡಿದ ವಸ್ತುಗಳನ್ನು ಹೆಚ್ಚಾಗಿ ಪ್ರವಾಸಿಗರು ಖರೀದಿಸುತ್ತಾರೆ.

ಮಣಿಪುರದ ಮಾಜಿ ದೊರೆಗಳ ಅರಮನೆಯ ಪಕ್ಕದಲ್ಲಿ ಈ ದೇವಾಲಯವಿದೆ. ಇದು ವೈಷ್ಣವರ ಪ್ರಮುಖ ಆರಾಧ್ಯ ದೇವಸ್ಥಾನ. ಸಾಮಾನ್ಯ ರಚನೆಯಿಂದ ಕೂಡಿದ್ದು, ಎರಡು ಗುಮ್ಮಟಗಳಿವೆ. ಅದರಲ್ಲೂ ಮುಖ್ಯವಾಗಿ ಈ ದೇವಸ್ಥಾನಕ್ಕೆ ದೇಶ- ವಿದೇಶದ ಪ್ರವಾಸಿಗರು ಬಂದು ಹೋಗುತ್ತಾರೆ. ಮಣಿಪುರದ ಪ್ರವಾಸ ತಾಣಗಳಲ್ಲಿ ಈ ದೇವಳ ಮೊದಲ ಸ್ಥಾನದಲ್ಲಿ ನಿಂತಿದೆ.

ಈ ಪ್ರವಾಸಿ ತಾಣವನ್ನು ಪ್ರವಾಸಿಗರು ನೋಡಲೇಬೇಕು. ಇಂಫಾಲ್‌ನಿಂದ ೪೮ ಕಿಮೀ ದೂರದದಲ್ಲಿ ಸೇಂದ್ರ ದ್ವೀಪವಿದೆ. ಇದು ಲೋಕ್ತಕ್ ಸರೋವರದ ಮಧ್ಯಭಾಗದಲ್ಲಿ ಎತ್ತರದ ಪರ್ವತದಂತೆ ಕಾಣುತ್ತದೆ.

ಅಪರೂಪದ ಸ್ಥಳೀಯ ಪ್ರಾಂತ್ಯದ ಜಿಂಕೆ ಎಂದು ಕರೆಯಲ್ಪಡುವ ಶಾಂಗೈ ಎಂಬ ವನ್ಯಮೃಗ ಕಾಣಿಸಿಕೊಳ್ಳುತ್ತದೆ. ಇಂಫಾಲ್‌ನಿಂದ ೫೩ ಕಿಮೀ ದೂರದಲ್ಲಿದೆ. ಇದು ನೀರಿನ ಮೇಲೆ ತೇಲುತ್ತಿದೆ. ಇದು ಈ ಪಾರ್ಕ್ ವಿಶಿಷ್ಟತೆಗಳಲ್ಲಿ ಒಂದಾಗಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆದು ಬಿಡುತ್ತದೆ. ಇಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.

ಇಂಡೋ-ಮಯನ್ಮಾರ್ ಗಡಿರೇಖೆಯನ್ನೇ ಮೋರೆಹ್ ಪಟ್ಟಣ ಎನ್ನುತ್ತಾರೆ. ಇಂಫಾಲ್‌ನಿಂದ ೧೧೦ಕಿಮೀ ದೂರದಲ್ಲಿದೆ. ಈಶಾನ್ಯ ಭಾಗದ ಪ್ರಮುಖ ವಾಣಿಜ್ಯ ನಗರಿ ಕೇಂದ್ರ. ಇಲ್ಲಿ ಕಡಿಮೆ ಬೆಲೆಗೆ ಥಾಯ, ಚೈನೀಸ್ ಹಾಗೂ ಬರ್ಮಾದ ಗ್ಯಾಜೆಟ್, ಉಡುಗೆ, ಕಾರ್ಪೆಟ ಹಾಗೂ ಗೃಹ ಅಲಂಕಾರ ವಸ್ತುಗಳನ್ನು ಖರೀದಿಸಲು ಸೂಕ್ತವಾದ ಪ್ರವಾಸಿ ತಾಣ.

ಇದು ಮಣಿಪುರದ ಸಾಂಸ್ಕೃತಿಕ ನಗರಿ ಎಂದೇ ಬಿಂಬಿತ. ೧೮೯೧ರಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ಮಣಿಪುರಿ ರಾಜಮನತೆನಗಳಿಂದಾಗಿ ಈ ನಗರಿಯನ್ನು ಐತಿಹಾಸಿಕ ದೃಷ್ಟಿಯಿಂದ ಪ್ರವಾಸಿಗರು ನೋಡಬಹುದು. ಇದರ ಜತೆಯಲ್ಲಿ ಯುದ್ದದಲ್ಲಿ ಮಡಿದವರ ಸಮಾಧಿ ಕೂಡ ಕಾಣಬಹುದು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಮಡಿದ ಬ್ರಿಟಿಷ್ ಹಾಗೂ ಭಾರತೀಯ ಸೈನಿಕರ ಸಮಾಧಿ ಇಲ್ಲಿ ನಿರ್ಮಾಣ ಮಾಡಲಾಗಿದೆ.

ಮಣಿಪುರ ಹಾಗೂ ನಾಗಾಲ್ಯಾಂಡ್ ಬಾರ್ಡರ್‌ನಲ್ಲಿರುವ ಸೇನಾಪಟ್ಟಿ ಜಿಲ್ಲೆಯಲ್ಲಿರುವ ಡಜೂಕ್ ಕಣಿವೆ ಹುಲ್ಲುಗಾವಲುಗಳಿಂದ ಆವೃತ್ತವಾಗಿದೆ. ಮುಖ್ಯವಾಗಿ ಲಿಲ್ಲಿ ಹೂಗಳಿಗೆ ಇದು ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಸಾಹಸ ಕ್ರೀಡಾ ಪ್ರೇಮಿಗಳಿಗಂತೂ ಇದು ಮೆಚ್ಚಿನ ತಾಣ. ಮಣಿಪುರ ಮೌಂಟರೇನಿಂಗ್ ಆಂಡ್ ಟ್ರಕ್ಕಿಂಗ್ ಅಸೋಸಿಯೇಶನ್ ವಿಶೇಷ ರೀತಿಯ ಟ್ರಕ್ಕಿಂಗ್‌ಗಳನ್ನು ಆಯೋಜಿಸುತ್ತದೆ. ಇದರ ಜತೆಗೆ ನವೆಂಬರ್ ತಿಂಗಳಲ್ಲಿ ವಿಶೇಷ ಮಣಿಪುರ ಶಾಂಘೈ ಫೆಸ್ಟಿವಲ್‌ವನ್ನು ಕೂಡ ಆಯೋಜನೆ ಮಾಡುತ್ತದೆ. ಈ ಫೆಸ್ಟಿವಲ್ ಸಮಯದಲ್ಲಂತೂ ಸಾವಿರಾರು ಪ್ರವಾಸಿಗರು ಬಂದು ಸೇರುತ್ತಾರೆ.

ಇಂಫಾಲ್‌ನಿಂದ ೪೫ಕಿಮೀ ದೂರದಲ್ಲಿ ಈ ಮ್ಯೂಸಿಂಯ ನೆಲೆನಿಂತಿದೆ. ಇಂಡಿಯನ್ ನ್ಯಾಷನಲ್ ಆರ್ಮಿಯ ಭಾವುಟ ಸೇರಿದಂತೆ ನೇತಾಜಿ ಸುಭಾಷ್‌ಚಂದ್ರ ಭೋಸ್‌ಗೆ ಸಂಬಂಧ ಪಟ್ಟ ಸಾಕಷ್ಟು ಸಾಮಗ್ರಿಗಳು ಇಲ್ಲಿವೆ.

ಮಣಿಪುರದಲ್ಲಿ ವರ್ಷಪೂರ್ತಿ ಹತ್ತಾರು ಹಬ್ಬಗಳು ಇಲ್ಲಿಯ ಜನರನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಜತೆಗೆ ಸಾಮಾಜಿಕವಾಗಿ ಗಟ್ಟಿಮಾಡಿದೆ. ಇಲ್ಲಿನ ಜನರ ಭಾವನಾತ್ಮಕ, ಧಾರ್ಮಿಕ ಬದುಕಿಗೆ ಈ ಹಬ್ಬಗಳು ಪ್ರೇರಣೆಯನ್ನು ನೀಡುತ್ತದೆ. ಇದು ತಮ್ಮ ಸೋಲಿನಿಂದ ಎದ್ದು ಬರಲು ಧೈರ್ಯ ತುಂಬುತ್ತದೆ ಎನ್ನುವ ನಂಬಿಕೆ ಮಣಿಪುರಿಗರದ್ದು.

ಮಣಿಪುರದಲ್ಲಿರುವ ಹಿಂದೂಗಳು ಆಚರಣೆ ಮಾಡುವ ಹಬ್ಬ ಯೋಶಾಂಗ್ ಇದನ್ನು ಬೇರೆ ರಾಜ್ಯಗಳಲ್ಲಿ ಹೋಳಿಯಾಗಿ ಆಚರಣೆ ಮಾಡುತ್ತಾರೆ. ಫೆಬ್ರವರಿ/ ಮಾರ್ಚ್ ತಿಂಗಳ ಹುಣ್ಣಿಮೆಯ ದಿನದಿಂದ ಆರಂಭವಾಗಿ ಐದು ದಿನಗಳ ಕಾಲ ಹಬ್ಬದ ಆಚರಣೆ ನಡೆಯುತ್ತದೆ. ಇದು ಮಣಿಪುರದ ಆರಂಭದ ಹಬ್ಬ. ಇದರಲ್ಲಿ ಮಣಿಪುರಿ ಹುಡುಗಿಯರು ಹಾಗೂ ಹುಡುಗರು ಕೋಲು ತೆಗೆದುಕೊಂಡು ಕುಣಿಯುತ್ತಾ, ಹಾಡುಗಳನ್ನು ಹಾಡುತ್ತಾ ಮನರಂಜನೆ ನೀಡುತ್ತಾರೆ.

ಮಣಿಪುರದಲ್ಲಿ ನಾನಾ ಬುಡಕಟ್ಟು ಜನಾಂಗದವರು ಭಿನ್ನ ಭಿನ್ನ ರೀತಿಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇಡೀ ವರ್ಷ ಕಷ್ಟಪಟ್ಟು ದುಡಿದು ಸಂಗ್ರಹ ಮಾಡಿದ ದವಸ ಧಾನ್ಯಗಳಿಂದ ಕೆಲವನ್ನು ಬಳಸಿಕೊಂಡು ಊಟ ಮಾಡುವ ಪರಂಪರೆ ಇದೆ. ಹೆಚ್ಚಾಗಿ ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ.

ಡಿಸೆಂಬರ್/ಜನವರಿ ತಿಂಗಳಲಿ ಹೆಚ್ಚಾಗಿ ಆಚರಣೆ ಮಾಡಲಾಗುತ್ತದೆ. ಇದು ಐದು ದಿನಗಳ ಕಾಲ ನಡೆಯುತ್ತದೆ. ಕುಣಿತ, ಆಟ, ಉಡುಗೆ-ತೊಡುಗೆ ಬದಲಾವಣೆ ಮೊದಲಾದವುಗಳನ್ನು ಇಲ್ಲಿ ಕಾಣಬಹುದು.

ಏಪ್ರಿಲ್ ತಿಂಗಳಲ್ಲಿ ಮಣಿಪುರಿ ರಾಜ್ಯ ಹೊಸ ವರ್ಷವನ್ನು ಆಚರಣೆ ಮಾಡುತ್ತದೆ. ಇದನ್ನು ಚೆರ್ರಿಬೋ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ವಿಶೇಷ ರೀತಿಯ ಅಡುಗೆ, ಪರ್ವತರೋಹಣ ಮೊದಲಾದವುಗಳನ್ನು ಈ ಹಬ್ಬದ ಸಮಯದಲ್ಲಿ ಮಾಡಲಾಗುತ್ತದೆ.
ಇವುಗಳ ಜತೆಗೆ ಕಾಂಗ್ ಮಣಿಪುರಿಗಳ ರಥಯಾತ್ರೆ,ಹೇಕ್ರೂಒಂಟಿಗೋಬಾ, ನಿಂಗೋಳ್ ಚಾಕ್ ಕೋಬಾ, ಲೂಯೀ ನಾಗೀ ನೀ, ಚೂಫಾಸ್ ಹಬ್ಬ ಹೀಗೆ ಹತ್ತಾರು ಹಬ್ಬಗಳಿಂದ ಮಣಿಪುರಿ ರಾಜ್ಯದ ಮಂದಿ ಖುಷಿಯಿಂದ ಬದುಕು ಕಟ್ಟುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ಕೂಡ ಈ ಹಬ್ಬಗಳ ಮೂಲಕ ಅವರಿಗೆ ಹತ್ತಿರವಾಗುತ್ತಾರೆ.

ಮಣಿಪುರಕ್ಕೆ ಎ ಪ್ರಮುಖ ನಗರಗಳಿಂದ ವಿಮಾನಯಾನ ಸೌಲಭ್ಯವಿದೆ. ಮಣಿಪುರದಲ್ಲಿ ರೈಲು ನಿಲ್ದಾಣವಿಲ್ಲ. ಆದರೆ ಹತ್ತಿರದ ರೈಲು ನಿಲ್ದಾಣ ೨೧೫ಕಿಮೀ. ದೂರದಲ್ಲಿರುವ ಡಿಮಾಪುರದಲ್ಲಿದೆ. ಸ್ಥಳೀಯವಾಗಿ ಸುತ್ತಾಡಲು ಇಂಫಾಲ್‌ನಲ್ಲಿರುವ ಹೋಟೆಲ್‌ಗಳು ಟ್ಯಾಕ್ಸಿ, ಖಾಸಗಿ ವಾಹನಗಳ ವ್ಯವಸ್ಥೆ ಮಾಡುತ್ತದೆ. ಇಂಫಾಲ್‌ದಲ್ಲಿ ಉಳಿದುಕೊಳ್ಳುವುದಕ್ಕೇನೂ ಸಮಸ್ಯೆಯಿಲ್ಲ. ಬಜೆಟ್‌ಗೆ ಅನುಗುಣವಾಗಿ ಊಟ-ವಸತಿ ವ್ಯವಸ್ಥೆ ಲಭ್ಯ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಕಾಲ ನವೆಂಬರ್‌ನಿಂದ ಏಪ್ರಿಲ ತಿಂಗಳು ಬಹಳ ಸೂಕ್ತ.




#Article 212: ಮಿಝೋರಂ (463 words)


ಮಿಝೋರಂ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ೨೦೦೧ದ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೮,೮೮,೫೭೩ ಇತ್ತು. ೯೦.೨೭ ಪ್ರತಿಶತ ಸಾಕ್ಷರತೆಯನ್ನು ಹೊಂದಿರುವ ಮಿಝೋರಂ ಸಾಕ್ಷರತೆ ಪ್ರಮಾಣದಲ್ಲಿ ಕೇರಳದ ನಂತರ ಎರಡನೇ ಸ್ಥಾನದಲ್ಲಿದೆ.

ಈ ರಾಜ್ಯವನ್ನು ಉತ್ತರದಲ್ಲಿ ಭಾರತದ ಅಸ್ಸಾಮ ಮತ್ತು ಮಣಿಪುರ ರಾಜ್ಯಗಳು, ಪೂರ್ವ ದಕ್ಷಿಣಗಳಲ್ಲಿ ಬರ್ಮ, ಪಶ್ಚಿಮದಲ್ಲಿ ಬಾಂಗ್ಲಾದೇಶ ಮತ್ತು ಭಾರತದ ತ್ರಿಪುರಾ ರಾಜ್ಯ ಸುತ್ತುವರೆದಿವೆ. ಮೀಜೊರಮ್‍ನ ವಿಸ್ತೀರ್ಣ 21,081 ಚ.ಕಿಮೀ. ರಾಜಧಾನಿ ಐಝ್ವಾಲ್.

ಮೀಜೊರಮ್ ಬೆಟ್ಟಗಳ ಪ್ರದೇಶ. ಮೀಜೊ ಭಾಷೆಯಲ್ಲಿ ಮೀಜೊರಮ್ ಎಂದರೆ ಬೆಟ್ಟಗಳ (ಜೋ) ಜನ (ಮೀ) ಇರುವ ಪ್ರದೇಶ ಎಂದು ಅರ್ಥ. ಇಲ್ಲಿಯ ಬೆಟ್ಟಗಳ ದಕ್ಷಿಣೋತ್ತರವಾಗಿ ಹಬ್ಬಿವೆ. ಇವುಗಳ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 900 ಮೀ. ಅತ್ಯುನ್ನತ ಬ್ಲ್ಯೂಶಿಖರ 2.165 ಮೀ ಎತ್ತರವಾಗಿದೆ.

ಮೀಜೊರಮ್‍ನ ಉತ್ತರಭಾಗದಲ್ಲಿ ಹರಿಯುವ ಮುಖ್ಯ ನದಿಗಳು ಧಾಲೇಶ್ವರಿ (ತ್ಲಾವೆಂಗ್) ಸೊನಾಯ್ ಮತ್ತು ತುಯಿವಾವ್ಲ್ ಇವು ಬಾರಾಕ್ ನದಿಯನ್ನು ಸೇರುತ್ತವೆ. ದಕ್ಷಿಣದಲ್ಲಿ ಕೋಲದೀನದಿ ಮತ್ತು ಅದರ ಉಪನದಿಗಳು ಹರಿಯುತ್ತವೆ. ಪಶ್ಚಿಮದ ಮುಖ್ಯ ನದಿ ಕರ್ಣಪುಲಿ. ಇದು ಬಾಂಗ್ಲಾದೇಶದಲ್ಲಿ ಮುಂದುವರಿಯುತ್ತದೆ.

ಮೀಜೊರಮ್‍ನ ಕಣಿವೆಗಳು ಮಳೆಗಾಲದಲ್ಲಿ ನೀರಿನಿಂದ ಕೂಡಿದ್ದು ವಾಸಕ್ಕೆ ಯೋಗ್ಯವೆನಿಸವು ಮತ್ತು ಅನಾರೋಗ್ಯಕರವೆನಿಸಿವೆ. ಇಲ್ಲಿಯ ಎತ್ತರ ಪ್ರದೇಶ ಹಿತಕರವಾದ ವಾಯುಗುಣದಿಂದ ಕೂಡಿದೆ. ಮೀಜೊರಮ್‍ನ ವಾರ್ಷಿಕ ಸರಾಸರಿ ಮಳೆ 254 ಸೆಂಮೀ. ಉತ್ತರದಲ್ಲಿ ಐಜಾವ್ಲ್‍ನಲ್ಲಿ ಬೀಳುವ ಮಳೆ 208 ಸೆಂಮೀ, ದಕ್ಷಿಣದ ಲುಂಗ್ಲೇನಲ್ಲಿ 350 ಸೆಂಮೀ ಮಳೆಯಾಗುತ್ತದೆ.

ಕೃಷಿ ಇಲ್ಲಿಯ ಮುಖ್ಯ ಅರ್ಥಿಕ ಜೀವಾಳ.  ಕಾಡು ಕಡಿದು ಸುಟ್ಟು ಬರಿದಾದ ನೆಲದಲ್ಲಿ ಬೆಳೆ ತೆಗೆಯುವ ಅತ್ಯಂತ ಹಿಂದುಳಿದ `ಜೂಮ್ ಬೇಸಾಯ ಪದ್ದತಿ ಸಾಮಾನ್ಯ. ವೈಜ್ಞಾನಿಕವಾದ ಆಧುನಿಕ ಕೃಷಿ ಪದ್ದತಿಗಳನ್ನು ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ, ಬತ್ತ ಪ್ರಮುಖ ಆಹಾರಧಾನ್ಯ. ಮುಸುಕಿನ ಜೋಳ ಶುಂಠಿ ಬೆಳೆಯುತ್ತಾರೆ. ಬೆಟ್ಟಗಳ ಇಳಿಜಾರುಗಳಲ್ಲಿ ಮೆಟ್ಟಲು ಮೆಟ್ಟಲಾಗಿ ನೆಲವನ್ನು ಕಡಿದು ಈ ಬೆಳೆಗಳನ್ನು ಬೆಳೆಯಲಾಗುತ್ತದೆ. ರಬ್ಬರ್, ಕಾಫಿ, ಚಹಾ ಮುಂತಾದ ತೋಟದ ಬೆಳೆಗಳನ್ನು ಬೆಳೆಯಲು ಪ್ರಯತ್ನಗಳು ನಡೆದಿದೆ.

ಮೀಜೊರಮ್‍ನಲ್ಲಿ ದೊಡ್ಡ ಕೈಗಾರಿಕೆಗಳು ಇಲ್ಲ.  ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆಗಳಿವೆ.  ರೇಷ್ಮೆ ಉದ್ಯಮವೂ ಹಳೆಯದು.  ಶುಂಠಿರಸ ತೆಗೆಯುವುದು.  ಎಣ್ಣೆ ಉತ್ಪಾದನೆ, ಫಲಸಾರ ಮುದ್ರಣ ಮರಕೊಯ್ಯುವುದು.  ಇಟ್ಟಿಗೆ, ಸಾಬೂನು ತಯಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳಿವೆ.

ಮೀಜೊರಮ್ ರಾಜ್ಯದ ಜಿಲ್ಲೆಗಳು ಐಜಾವ್ಲಾ ಲುಂಗ್ಲೈ ಮತ್ತು ಛಿಮ್ಟುಟಿಪುಯಿ.  ಐಜಾವ್ಲಾ ರಾಜಧಾನಿ. ರಾಜ್ಯದಲ್ಲಿ ಒಟ್ಟು ಎಂಟು ಪಟ್ಟಣಗಳಿವೆ.  ಐಜಾವ್ಲಾ ಜಿಲ್ಲೆಯ ವಿಸ್ತೀರ್ಣ 12,589 ಚ.ಕಿಮೀ. ಜನಸಂಖ್ಯೆ 3,40,826 (1981). ಮುಖ್ಯ ಪಟ್ಟಣ ಐಝ್ವಾಲ್.. ಲುಂಗ್ಲೈ ಜಿಲ್ಲೆ 4,536 ಚಕಿಮೀ ವಿಸ್ತಾರವಾಗಿದೆ.  ಇದರ ಜನಸಂಖ್ಯೆ 86,511 (1981).  ಜಿಲ್ಲೆಯ ಆಡಳಿತ ಕೇಂದ್ರ ಲುಂಗ್ಲೈ.  ಛಿಮ್ಟುಟಿಪುಯಿ ಜಿಲ್ಲೆಯ ವಿಸ್ತೀರ್ಣ 3,957 ಚಕಿಮೀ ಜನಸಂಖ್ಯೆ 66,420 (1981).  ಆಡಳಿತ ಕೇಂದ್ರ ಛಿಮ್ಟುಟಿಪುಯಿ.  ಮೀಜೊರಮ್‍ನ ಭಾಷೆಗಳು ಮೀಜೊ ಮತ್ತು ಇಂಗ್ಲಿಷ್.  ಇಲ್ಲಿ ಶೇಕಡಾ 60ರಷ್ಟು ಮಂದಿ ಅಕ್ಷರಸ್ಥರು.

ಮೀಜೊ ಜನಗಳು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು.  ಇಲ್ಲಿಗೆ ಬರುವ ಮೊದಲು ಇವರು ಬರ್ಮದ ಷಾನ್ ರಾಜ್ಯದ ಪ್ರದೇಶದಲ್ಲಿ ನೆಲಸಿದ್ದರು.  ಬರ್ಮವನ್ನು ಬಿಟ್ಟು ಇವರು ಪಶ್ಚಿಮಾಭಿಮುಖವಾಗಿ ಸಾಗಿ ಲುಷಾಯಿ ಬೆಟ್ಟಗಾಡು ಪ್ರದೇಶವನ್ನು ಆಕ್ರಮಿಸಿಕೊಂಡರು.  ಬ್ರಿಟಿಷ್ ಅಡಳಿತ ಇದ್ದಕಾಲದಲ್ಲಿ ಮೀಜೊ ಜನರು ಬ್ರಿಟಿಷ್ ಅಕ್ರಮಿತ ಪ್ರದೇಶಗಳ ಮೇಲೆ ಪದೇ ಪದೇ ಧಾಳಿ ಮಾಡುತ್ತಿದ್ದರು.  ಬ್ರಿಟಿಷ್ ಸೇನಾ ನೆಲೆಗಳ ಮೇಲೂ ಏರಿಬರುತ್ತಿದ್ದರು.  ಬ್ರಿಟಷ್ ಸೇನೆ ಮೀಜೋಗಳ ಮೇಲೆ ಯುದ್ದ ಮಾಡಿ ಅವರ ನೆಲವನ್ನು ವಶಪಡಿಸಿಕೊಂಡು 1891ರಲ್ಲಿ ಅದನ್ನು ಬ್ರಿಟಿಷ್ ಭಾರತಕ್ಕೆ ಸೇರಿಸಿತು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೀಜೊರಮ್ ಅಸ್ಸಾಮ್ ರಾಜ್ಯದ ಒಂದು ಜಿಲ್ಲೆಯಾಗಿ ಮುಂದುವರಿಯಿತು. 1964ರಲ್ಲಿ ಸಂಸತ್ತು ಸ್ವೀಕರಿಸಿದ ಒಂದು ಅಧಿನಿಯವಂದ ಪ್ರಕಾರ ಇದರ ಹೆಸರನ್ನು ಲುಷಾಯಿ ಬೆಟ್ಟ ಜಿಲ್ಲೆ ಎಂಬುದರಿಂದ ಮೀಜೊ ಬೆಟ್ಟ ಜಿಲ್ಲೆ ಎಂದು ಬದಲಾಯಿಸಲಾಯಿತು.

ಭಾರತ ಸರ್ಕಾರದ ಅಡಿಯಲ್ಲಿ ತಮ್ಮ ಪುರೋಭಿವೃದ್ಧಿ ಆಗುತ್ತಿಲ್ಲವೆಂಬ ಭಾವನೆಯಿಂದ ಅನೇಕ ಮೀಜೊಗಳು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸತೊಡಗಿದ್ದರು. ಇವರಿಗೆ ಅನ್ಯ ದೇಶಗಳ ಬೆಂಬಲ ಪ್ರೋತ್ಸಾಹಗಳು ದೊರಕುತ್ತಿದ್ದುವು. ದಂಗೆಕೋರರನ್ನಡಗಿಸಲು ಸರ್ಕಾರ ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು.  ಸರ್ಕಾರ ಇದನ್ನು ಗಲಭೆಗೊಳಗಾದ ಪ್ರದೇಶವೆಂದು ಸಾರಿತು.  ಮೀಜೊರಮ್‍ನಲ್ಲಿ ಶಾಂತಿ ಸ್ಥಾಪಿಸಲು ನಡಸಿದ ಯತ್ನಗಳು ಯಶಸ್ವಿಯಾಗಲಿಲ್ಲ.  1972ರಲ್ಲಿ ಇದಕ್ಕೆ ಮೀಜೊರಮ್ ಎಂದು ಹೆಸರು ನೀಡಿ ಕೇಂದ್ರ ಶಾಸಿತ ಪ್ರದೇಶವಾಗಿ ಮಾಡಿ ಅಸ್ಸಾಮಿನಿಂದ ಪ್ರತ್ಯೇಕಗೊಳಿಸಿದರು, ಅದರಿಂದಲೂ ದಂಗೆಕೋರರಿಗೆ ತೃಪ್ತಿಯಾಗಲಿಲ್ಲ.

ಮೀಜೊಗಳಲ್ಲಿ ಲುಷಾಯಿ, ಪಾವಿ, ಸೈಥೆ, ರಾಲ್ಟೆ. ಪಾಂಗ್ ಹ್ಮಾರ್. ಕುಕಿ. ಮರಾ ಲಾಖೆರ್ ಮುಂತಾದ ಅನೇಕ ಬುಡಕಟ್ಟುಗಳಿವೆ. 19ನೆಯ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವಕ್ಕೆ ಒಳಪಟ್ಟು ಅನೇಕರು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ಮೀಜೊ ಭಾಷೆಗೆ ಅದರದೇ ಲಿಪಿ ಇರಲಿಲ್ಲ. ಪಾದ್ರಿಗಳು ರೋಮನ್ ಲಿಪಿಯನ್ನು ಬಳಕೆಗೆ ತಂದರಲ್ಲದೆ ಅಲ್ಲಿಯ ಜನಕ್ಕೆ ಇಂಗ್ಲಿಷ್ ಬೋಧಿಸತೊಡಗಿದರು.  ಇದರ ಫಲವಾಗಿ ಅಲ್ಲಿ ಅಕ್ಷರಸ್ಥರ ಪ್ರಮಾಣ ಹೆಚ್ಚಿತು.  ಇಂದು ಅಲ್ಲಿ ಕ್ರೈಸ್ತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರು ಇಂಗ್ಲಿಷ್ ಮೀಜೊ ಎರಡೂ ಭಾಷೆಗಳನ್ನಾಡುತ್ತಾರೆ.  ಗಡಿ ಪ್ರದೇಶದಲ್ಲಿರುವ ಚಕ್ಮಾ ಮುಂತಾದ ಬುಡಕಟ್ಟುಗಳ ಜನರು ಬೌದ್ಧರು.  ಅವರ ಭಾಷೆ ಬಂಗಾಲಿ.




#Article 213: ಮೇಘಾಲಯ (3203 words)


ಮೇಘಾಲಯ  (ಉಚ್ಚಾರಣೆ ) ಈಶಾನ್ಯ ಭಾರತದಲ್ಲಿರುವ ಒಂದು ಸಣ್ಣ ರಾಜ್ಯ.  ಶಾಸ್ತ್ರೀಯವಾಗಿ, ಮೇಘಾಲಯ  ಎಂಬ ಶಬ್ದವು, ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಮೋಡಗಳ ನಿವಾಸ  ಎಂದರ್ಥ.  ಮೇಘಾಲಯವು ದೇಶದ ಈಶಾನ್ಯಭಾಗದಲ್ಲಿರುವ ಬೆಟ್ಟ-ಗುಡ್ಡಗಳುಳ್ಳ ಪಟ್ಟೆಯಿದ್ದಂತಿದೆ. ಪೂರ್ವದಿಂದ ಪಶ್ಚಿಮಕ್ಕೆ 300 ಕಿಲೋಮೀಟರ್‌ ಹಾಗೂ 100 ಕಿಲೋಮೀಟರ್‌ ಅಗಲಕ್ಕೆ ವ್ಯಾಪಿಸಿದೆ. ಇದರ ಒಟ್ಟು ವಿಸ್ತೀರ್ಣ 8,700 ಚದರ ಮೈಲ್‌ಗಳು (22,720 ಚದರ ಕಿಲೋಮೀಟರ್‌ಗಳು).  ಇಸವಿ 2000ದಲ್ಲಿ ಜನಸಂಖ್ಯೆಯು 2,175,000ದಷ್ಟಿತ್ತು.  ರಾಜ್ಯದ ಉತ್ತರ ಭಾಗದಲ್ಲಿ ಆಸ್ಸಾಂ‌ ರಾಜ್ಯ ಹಾಗೂ ದಕ್ಷಿಣ ಭಾಗದಲ್ಲಿ ಬಾಂಗ್ಲಾ ದೇಶವಿದೆ.  ಪೂರ್ವದ ಸ್ಕಾಟ್ಲೆಂಡ್‌  ಎಂದು ಕರೆಯಲಾದ ಶಿಲ್ಲಾಂಗ್‌, ಮೇಘಾಲಯದ ರಾಜಧಾನಿ. ಈ ನಗರದ ಜನಸಂಖ್ಯೆ 260,000ದಷ್ಟಿದೆ.ರಾಜ್ಯದ ಮೂರನೆಯ ಒಂದು ಭಾಗವು ಕಾಡುಪ್ರದೇಶವಾಗಿದೆ.  ಮೇಘಾಲಯದ ಉಪ-ಉಷ್ಣ ಅರಣ್ಯಗಳ ಪರಿಸರ ವಲಯವು ರಾಜ್ಯಾದ್ಯಂತ ವ್ಯಾಪಿಸಿದೆ. ಇದರ ಬೆಟ್ಟ-ಗುಡ್ಡ ಕಾಡುಗಳು, ಉತ್ತರ ಹಾಗೂ ದಕ್ಷಿಣದಲ್ಲಿರುವ ತಗ್ಗುಪ್ರದೇಶ ಉಷ್ಣವಲಯ ಕಾಡುಗಳಿಗಿಂತಲೂ ಭಿನ್ನವಾಗಿವೆ.  ಮೇಘಾಲಯದ ಕಾಡುಗಳು ಸಸ್ತನಿ ಹಾಗೂ ಪಕ್ಷಿವರ್ಗ, ಪ್ರಾಣಿಗಳ ಹಾಗೂ ಸಸ್ಯಗಳ ಜೀವವೈವಿಧ್ಯಕ್ಕೆ ಖ್ಯಾತಿಯಾಗಿದೆ.

ಆಸ್ಸಾಂ‌ ರಾಜ್ಯದ ಮೂರು ಜಿಲ್ಲೆಗಳಾದ ಏಕೀಕೃತ ಖಾಸಿ ಹಿಲ್ಸ್‌, ಜೈನ್ ತಿಯಾಗಳ ಹಿಲ್ಸ್‌ ಹಾಗೂ ಗಾರೊ ಹಿಲ್ಸ್‌ ಜಿಲ್ಲೆಗಳನ್ನು ಜನವರಿ 1972ರಲ್ಲಿ ಬೇರ್ಪಡಿಸುವುದರ ಮೂಲಕ ಮೇಘಾಲಯ ರಾಜ್ಯವನ್ನು ಸ್ಥಾಪಿಸಲಾಯಿತು.  ಪೂರ್ಣಪ್ರಮಾಣದ ರಾಜ್ಯವಾಗುವ ಮುಂಚೆ, ಮೇಘಾಲಯಕ್ಕೆ 1970ರಲ್ಲಿ ಅರೆ-ಸ್ವಾಧಿಕಾರದ ಸ್ಥಿತಿ ನೀಡಲಾಗಿತ್ತು.ಖಾಸಿ, ಗಾರೊ ಮತ್ತು ಜೈನ್ ತಿಯಾಗಳು ಬುಟಕಟ್ಟು ಜನಾಂಗಗಳು ತಮ್ಮದೇ ಆದ ಸಾಮ್ರಾಜ್ಯಗಳನ್ನು ಹೊಂದಿದ್ದವು. ಹತ್ತೊಂಬತ್ತನೆಯ ಶತಮಾನದಲ್ಲಿ ಅವು ಬ್ರಿಟಿಷ್‌ ಆಳ್ವಿಕೆಗೆ ಒಳಗಾದವು.  ಆನಂತರ, ಬ್ರಿಟಿಷ್‌ ಆಡಳಿತವು 1835ರಲ್ಲಿ ಮೇಘಾಲಯವನ್ನು ಆಸ್ಸಾಂ‌ನೊಂದಿಗೆ ಏಕೀಕರಣಗೊಳಿಸಿತು.  ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ಒಪ್ಪಂದದ ಫಲವಾಗಿ, ಈ ವಲಯ ತನ್ನ ಅರೆ-ಸ್ವಾಧಿಕಾರ ಸ್ಥಿತಿಯ ಅನುಕೂಲ ಪಡೆದಿತ್ತು.ಕಳೆದ 16 ಅಕ್ಟೋಬರ್‌ 1905ರಂದು ಲಾರ್ಡ್‌ ಕರ್ಜನ್‌ ಬಂಗಾಳವನ್ನು ಇಬ್ಭಾಗಿಸಿದಾಗ, ಮೇಘಾಲಯವು, 'ಪೂರ್ವ ಬಂಗಾಳ ಹಾಗೂ ಆಸ್ಸಾಂ‌' ಹೊಸ ಪ್ರಾಂತ್ಯದ ಅಂಶವಾಯಿತು.  ಆದರೂ, 1912ರಲ್ಲಿ ಬಂಗಾಳವನ್ನು ಪುನಃ ಏಕೀಕರಣರಣಗೊಳಿಸಿದಾಗ, ಮೇಘಾಲಯ ಆಸ್ಸಾಂ‌ ಪ್ರಾಂತ್ಯದ ಅಂಗವಾಯಿತು.ಭಾರತ ಸರ್ಕಾರ ಕಾಯಿದೆ 1919ರ ವಿಧಿ 52Aರಂತೆ, 3 ಜನವರಿ 1921ರಂದು ಪರಿಷತ್ತಿನಲ್ಲಿರುವ ರಾಜ್ಯಪಾಲರು ಖಾಸಿ ರಾಜ್ಯಗಳನ್ನು(ಗುಡ್ಡಗಾಡು ಜನಾಂಗವಿರುವ ಬೆಟ್ಟಪ್ರದೇಶಗಳ) ಹೊರತುಪಡಿಸಿ, ಮೇಘಾಲಯದ ಉಳಿದೆಲ್ಲ ವಲಯಗಳನ್ನು 'ಹಿಂದುಳಿದ ಪ್ರದೇಶಗಳು' ಎಂದು ಘೋಷಿಸಿದರು. ಆದರೂ, ಅಂತಿಮವಾಗಿ, 1935ರಲ್ಲಿ ಜಾರಿಗೊಳಿಸಲಾದ ಭಾರತ ಸರ್ಕಾರ ಕಾಯಿದೆಯಡಿ,  ಸರ್ಕಾರವು, ಹಿಂದುಳಿದ ಪ್ರದೇಶಗಳನ್ನು 'ಹೊರತುಪಡಿಸಿದ' ಹಾಗೂ 'ಭಾಗಶಃ ಹೊರತುಪಡಿಸಿದ' ಪ್ರದೇಶಗಳನ್ನಾಗಿ ಮರುವಿಂಗಡಿಸಿತು.ಇಸವಿ 1947ರಲ್ಲಿ ಭಾರತ ಸ್ವತಂತ್ರಗೊಂಡಾಗ, ಇಂದಿನ ಮೇಘಾಲಯದಲ್ಲಿ, ಆಸ್ಸಾಂ‌ನ ಎರಡು ಜಿಲ್ಲೆಗಳಿದ್ದು, ಅಸೊಮ್‌ ರಾಜ್ಯದೊಳಗೇ ಸೀಮಿತ ಸ್ವಾಯತ್ತತೆ ಪಡೆದಿದ್ದವು.ಆಸೊಮ್‌ ಪುನಸ್ಸಂಘಟನಾ ಕಾಯಿದೆ 1969ರಡಿ, ಮೇಘಾಲಯ ರಾಜ್ಯಕ್ಕೆ ಸ್ವಯಮಾಧಿಕಾರ ನೀಡಲಾಯಿತು.  ಈ ಕಾಯಿದೆಯು 2 ಏಪ್ರಿಲ್‌ 1970ರಂದು ಜಾರಿಗೆ ಬಂದಿತು. ಆಸ್ಸಾಂ‌ ರಾಜ್ಯದೊಳಗೇ ಮೇಘಾಲಯ ಸ್ವತಂತ್ರ ರಾಜ್ಯವನ್ನಾಗಿ ಸ್ಥಾಪಿಸಲಾಯಿತು.  ಸಂವಿಧಾನದ ಆರನೆಯ ಕಲಮ್‌ ಪ್ರಕಾರ ಈ ರಾಜ್ಯವು ಶಾಸನ ಅಧಿಕಾರ ಹೊಂದಿತ್ತು.  ಶಾಸನದಲ್ಲಿ 37 ಸದಸ್ಯರಿದ್ದರು.ಈಶಾನ್ಯ ವಲಯದ (ಪುನಸ್ಸಂಘಟನೆ) ಕಾಯಿದೆ 1971ನ್ನು 1971ರಲ್ಲಿ ಸಂಸತ್ತಿನಲ್ಲಿ ಮಂಜೂರು ಮಾಡಲಾಯಿತು. ಇದರಂತೆ ಸ್ವಾಯತ್ತ ರಾಜ್ಯ ಮೇಘಾಲಯಕ್ಕೆ ಪೂರ್ಣಪ್ರಮಾಣದ ಸ್ವತಂತ್ರ ಲಭಿಸಿತು.  ದಿನಾಂಕ 21 ಜನವರಿ 1972ರಂದು ಮೇಘಾಲಯ ರಾಜ್ಯತ್ವ ಪಡೆಯಿತು. ತನ್ನದೇ ಆದ ಶಾಸಕಾಂಗವನ್ನೂ ಹೊಂದಿತು.

ಮೇಘಾಲಯದ ಜನಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರದ್ದೇ ಬಹುಪಾಲು ಆಗಿದೆ.  ಅದರಲ್ಲೂ ಖಾಸಿ ಜನಸಮೂಹ ಅತಿದೊಡ್ಡ ಗುಂಪಾಗಿದೆ; ನಂತರ ಗಾರೊಸಮುದಾಯ.  ಬ್ರಿಟಿಷರು ಬೆಟ್ಟ-ಗುಡ್ಡದ ಜನಾಂಗದವರು ಎಂದು ಕರೆಯಲಾಗುತ್ತಿದ್ದ ಗುಂಪುಗಳಲ್ಲಿ ಇವೂ ಸಹ ಸೇರಿವೆ.  ಜೈನ್ ತಿಯಾರು, ಕೊಚ್‌, ಹಜೋಂಗ್‌, ದಿಮಾಸಾ, ಹ್ಮಾರ್‌, ಕುಕಿ, ಲಖರ್‌, ಮಿಕಿರ್‌, ರಭಾ  ಮತ್ತು ನೇಪಾಳಿ ಸೇರಿದಂತೆ ಇತರೆ ಬುಡಕಟ್ಟು ಗುಂಪುಗಳೂ ಸಹ ಮೇಘಾಲಯದಲ್ಲಿ ವಾಸಿಸುತ್ತವೆ. ಭಾರತದಲ್ಲಿ ಕ್ರಿಶ್ಚಿಯನ್‌ ಜನಸಂಖ್ಯೆ ಅಧಿಕ ಇರುವ ಮೂರು ರಾಜ್ಯಗಳಲ್ಲಿ ಮೇಘಾಲಯವವೂ ಒಂದು. ಇಲ್ಲಿನ ಜನಸಂಖ್ಯೆಯ 70.3%ರಷ್ಟು ಕ್ರಿಶ್ಚಿಯನ್‌ ಧರ್ಮದವರಾಗಿದ್ದಾರೆ.  ಇತರೆ ಎರಡು ರಾಜ್ಯಗಳೆಂದರೆ ನಾಗಾಲೆಂಡ್‌ ಮತ್ತು ಮಿಜೊರಾಮ್‌. ಇವರಡೂ ರಾಜ್ಯಗಳು ಭಾರತದ ಈಶಾನ್ಯ ಭಾಗದಲ್ಲಿವೆ.  ಈ ವಲಯದಲ್ಲಿ ಹಿಂದೂ ಧರ್ಮದವರು ಎರಡನೆಯ ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆ. ಜನಸಂಖ್ಯೆಯಲ್ಲಿ ಸುಮಾರು 13.3%ರಷ್ಟು ಹಿಂದೂ ಧರ್ಮದವರಾಗಿದ್ದಾರೆ.   ಗಮನಾರ್ಹ ಅಲ್ಪಸಂಖ್ಯಾತ, ಎಂದರೆ ಜನಸಂಖ್ಯೆಯ 11.5%ರಷ್ಟು ಸಾಂಪ್ರದಾಯಿಕ ಅನಿಮಿಸ್ಟ್‌ ಧಾರ್ಮಿಕತೆಯನ್ನು ಅನುಸರಿಸುತ್ತವೆ. (ಜನಗಣತಿ ಪ್ರಕಾರ 'ಇತರೆ' ಎಂದು ವಿಂಗಡಿಸಲಾಗಿದೆ.   ಜನಸಂಖ್ಯೆಯಲ್ಲಿ 4.3%ರಷ್ಟು ಮುಸ್ಲಿಮರಿದ್ದಾರೆ.  ಇಸವಿ 1991ರಲ್ಲಿ ಮೇಘಾಲಯ ರಾಜ್ಯ ಜನಸಂಖ್ಯೆಯಲ್ಲಿ 65%ರಷ್ಟು ಕ್ರಿಶ್ಚಿಯನ್ನರಿದ್ದಾಗ, 1.1 ದಶಲಕ್ಷ (11 ಲಕ್ಷ) ಜನ ಕ್ರಿಶ್ಚಿಯನ್‌ರು, ಈಶಾನ್ಯ ಭಾರತದ ಈ ರಾಜ್ಯವನ್ನು ಅತಿ ಹೆಚ್ಚು ಕ್ರಿಶ್ಚಿಯನ್ನರು ವಾಸಿಸುವ ವಲಯವನ್ನಾಗಿಸಿದರು.   ಆ ಸಮಯದಲ್ಲಿ, ಮಿಜೊರಾಮ್‌ಗಿಂತಲೂ ಮೇಘಾಲಯದಲ್ಲಿ ಹೆಚ್ಚು ಕ್ರಿಶ್ಚಿಯನ್ನರಿದ್ದರು
ಇಸವಿ 2001ರಲ್ಲಿ ಭಾರತದ ಜನಗಣತಿಯ ಪ್ರಕಾರ, ರಾಜ್ಯದಲ್ಲಿ ಪ್ರತಿ 1000 ಪುರುಷರಿಗೆ 975 ಸ್ತ್ರೀಯರಿದ್ದು, ರಾಷ್ಟ್ರೀಯ ಸರಾಸರಿ 933ಕ್ಕಿಂತಲೂ ಬಹಳ ಹೆಚ್ಚಾಗಿತ್ತು.  ಅದು ಇಸವಿ 1981ರಲ್ಲಿ 954 ಇದ್ದದ್ದು, ನಿಧಾನವಾಗಿ ಬೆಳೆಯುತ್ತಿದೆ.  ಸಾಂಪ್ರದಾಯಿಕವಾಗಿ, ಗ್ರಾಮಾಂತರ ಪ್ರಧೇಶಗಳಲ್ಲಿ ಲಿಂಗ ಅನುಪಾತವು ನಗರ ವಲಯಕ್ಕಿಂತಲೂ ಹೆಚ್ಚಾಗಿದೆ.  ಆದರೂ, 2001ರ ಜನಗಣತಿ ಪ್ರಕಾರ, ನಗರವಲಯದಲ್ಲಿ ಪ್ರಮಾಣವು 985 ಇದ್ದದ್ದು, ಸಾಮಾನ್ಯ ಅಂತರಕಿಂತಲೂ 972ರಷ್ಟು ಹೆಚ್ಚಾಗಿರುತ್ತದೆ.  ಇದರ ಹಿಂದಿನ ಕಾರಣ, ಭಾರತದ ಇತರೆಡೆಗಿಂತಲೂ ಭಿನ್ನವಾಗಿ, ಮೇಘಾಲಯದಲ್ಲಿ ಗಂಡುಮಕ್ಕಳಿಗಾಗಿ ವಿಶೇಷ ಆದ್ಯತೆ ಇಲ್ಲದಿರುವುದು ಎಂದು ಹೇಳಲಾಗಿದೆ.

ಇಂಗ್ಲಿಷ್ ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಖಾಸಿ ಮತ್ತು ಗಾರೊ ಮೇಘಾಲಯದಲ್ಲಿನ ಪ್ರಮುಖ ಭಾಷೆಗಳಾಗಿವೆ. 
ಖಾಸಿ ಭಾಷೆ ಮೇಘಾಲಯದ ಪ್ರಮುಖ ಭಾಷೆಗಳಲ್ಲೊಂದು.  Khasia, Khassee, Cossyah ಅಥವಾ Kyi ಎಂದೂ ಅಕ್ಷರಶಃ ಬರೆಯಲಾದ ಖಾಸಿ ಭಾಷೆಯು ಆಸ್ಟ್ರೊ-ಏಷ್ಯಾಟಿಕ್‌ ಗುಂಪಿನ ಮೊನ್‌-ಖ್ಮೆರ್‌ ಕುಟುಂಬದ ಒಂದು ಅಂಗ. ಮೇಘಾಲಯದಲ್ಲಿ ವಾಸಿಸುವ ಸುಮಾರು 900,000 ಜನರು ಈ ಭಾಷೆ ಮಾತನಾಡುತ್ತಾರೆ. ಖಾಸಿ ಭಾಷೆಯಲ್ಲಿ ಬಳಸಲಾದ ಹಲವು ಪದಗಳನ್ನು ಬಂಗಾಳಿ ಮತ್ತು ಅಸೊಮಿಸ್‌ನಂತಹ ಭಾರತೀಯ-ಆರ್ಯನ್‌ ಭಾಷೆಗಳಿಂದ ಎರವಲು ಪಡೆಯಲಾಗಿದೆಯೆನ್ನಲಾಗಿದೆ.  ಖಾಸಿ ಭಾಷೆ ತನ್ನ ಆರಂಭಿಕ ದಿನಗಳಿಂದಲೂ ತನ್ನದೇ ಆದ ಅಕ್ಷರಲಿಪಿ ಹೊಂದಿರಲಿಲ್ಲ.  ಮೊನ್‌-ಖ್ಮೆರ್‌ ಕುಟುಂಬದಲ್ಲಿ ಭಾರತದಲ್ಲಿ ಉಳಿದಿರುವ ಕೆಲವೇ ಭಾಷೆಗಳಲ್ಲಿ ಖಾಸಿ ಭಾಷೆ ಸಹ ಒಂದು.ಗಾರೊ ಭಾಷೆ ಬೊಡೊ ಭಾಷೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಜನಸಂಖ್ಯೆಯಲ್ಲಿ ಬಹುಪಾಲು ಜನರು ಮಾತನಾಡುವ ಗಾರೊ ಭಾಷೆ, ಆ'ವೆ, ಚಿಸಾಕ್‌, ಆ'ಬೆಂಗ್‌, ಗಾಂಚಿಂಗ್‌, ಕಾಮರೂಪ್‌, ಆ'ಚಿಕ್‌, ಡಾಕಾ ಮತ್ತು ಮಾಟ್ಚಿಯಂತಹ ಹಲವಾರು ಭಾಷಾಪ್ರಬೇಧಗಳನ್ನು ಬಳಸಿ ಮಾತನಾಡಬಹುದಾಗಿದೆ.ಮೇಘಾಲಯದಲ್ಲಿ ಇನ್ನೊಂದು ಭಾಷೆ, ಜೈನ್ ತಿಯಾಗಳು ಹಿಲ್ಸ್‌ ಜನರು ಮಾತನಾಡುವ ಭಾಷೆಯಾಗಿದೆ.  ಈ ಭಾಷೆಯು ಸಾಮಾನ್ಯ ಖಾಸಿ ಭಾಷೆಯ ಪರಿವರ್ತಿತ ರೂಪವಾಗಿದೆ.  ಖಾಸಿ ಭಾಷೆಯೊಂದಿಗೆ ಜೈನ್ ತಿಯಾ ಭಾಷೆ ಸಹ ಖಿನ್ರಿಯಮ್‌, ಭೊಯಿ, ಪನಾರ್‌ ಮತ್ತು ವಾರ್‌ ಬುಡಕಟ್ಟು ಜನಾಂಗದವರಲ್ಲಿ ಬಳಕೆಯಾಗುತ್ತದೆ. 

ಜೈನ್ ತಿಯಾಗಳು, ಖಾಸಿಗಳು ಹಾಗೂ ಗಾರೊಗಳು ಮೇಘಾಲಯದ ಪ್ರಮುಖ ಬುಡಕಟ್ಟು ಜನಾಂಗಗಳು.  ಮೇಘಾಲಯದಲ್ಲಿರುವ ಬುಡಕಟ್ಟು ಜನಸಂಖ್ಯೆಯಲ್ಲಿ ಬಹಳಷ್ಟು ಜನರು(ಮಾತೃ ಪ್ರಧಾನ ಸಂಸ್ಕೃತಿ) ಮ್ಯಾಟ್ರಿಲೈನಿಯಲ್‌ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇದರಂತೆ, ವಂಶ ಮತ್ತು ಅನುವಂಶೀಯತೆಗಳನ್ನು ಮಹಿಳೆಯರ ಮೂಲಕ ಗುರುತಿಸಲಾಗುತ್ತದೆ.  ಖಾಸಿ ಮತ್ತು ಜೈನ್ ತಿಯಾ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ ಮ್ಯಾಟ್ರಿಲೈನಿಯಲ್‌ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ಇದರಲ್ಲಿ ಖಾ ಖದುಹ್‌ (ಅತಿ ಕಿರಿಯ ಮಗಳು) ಎಲ್ಲಾ ಸ್ವತ್ತಿನ ವಾರಸುದಾರಳಾಗುತ್ತಾಳೆ, ವೃದ್ಧಾಪ್ಯ ತಲುಪಿರುವ ಹೆತ್ತವರ ಮತ್ತು ವಿವಾಹವಾಗಿಲ್ಲದ ಸಹೋದರ-ಸಹೋದರಿಯರ ಪಾಲನೆ ಮಾಡುತ್ತಾಳೆ.  ಆದರೂ, ವಂಶದಲ್ಲಿ ಪುರುಷರು, ಅದರಲ್ಲೂ ವಿಶೇಷವಾಗಿ ತಾಯಿಯ ಸಹೋದರ, ಪಿತ್ರಾರ್ಜಿತ ಆಸ್ತಿಯ ಮೇಲೆ ಪರೋಕ್ಷ ನಿಯಂತ್ರಣ ಮಾಡುತ್ತಾರೆ. ಏಕೆಂದರೆ, ಸ್ವತ್ತಿನ ಮಾರಾಟ ಹಾಗೂ ಇತರೆ ವಿಚಾರಗಳ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಆತನೂ ಒಳಗೊಂಡಿರುತ್ತಾನೆ.  ಆದ್ದರಿಂದ, ಮೇಘಾಲಯದ ಬುಡಕಟ್ಟು ಜನಾಂಗದವರು ವಿಶ್ವದಲ್ಲೇ ಅತಿದೊಡ್ಡ ಮ್ಯಾಟ್ರಿಲೈನಿಯಲ್‌ ಸಂಸ್ಕೃತಿಯ ಅಂಗವಾಗಿದ್ದಾರೆ.   ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಮೇಘಾಲಯ ರಾಜ್ಯದಲ್ಲಿ ಹೆತ್ತವರು ಗಂಡು ಮಗುವಾಗಲೆಂದು ಆಶಿಸುವುದು ರಾಷ್ಟ್ರೀಯ ಸರಾಸರಿಗಿಂತಲೂ 73%ರಷ್ಟು ಕಡಿಮೆ. 

ಪುರಾತನ ಕಥೆಗಳ ಪ್ರಕಾರ, 13ನೆಯ ಶತಮಾನದಲ್ಲಿ, ರಾಣೀ ಸಿಂಗಾ ಅಳ್ವಿಕೆಯಲ್ಲಿ, 'ಹತಕೇಶ್ವರತ್‌' ಎನ್ನಲಾದ ಶಿವಲಿಂಗವು ಜೈನ್ ತಿಯಾಗಳು ಹಿಲ್ಸ್‌ನಲ್ಲಿದೆಯೆಂಬುದು ನಂಬಿಕೆ.   ಜೈನ್ ತಿಯಾಗಳ ಬುಡಕಟ್ಟು ಜನಾಂಗವು ಕೆಲವೊಮ್ಮೆ ಶಿವರಾತ್ರಿ Night of Lord Shiva ) ಎಂಬ ಹಿಂದೂ ಹಬ್ಬಗಳಲ್ಲಿ ಭಾಗವಹಿಸುತ್ತಾರೆ.  ಪುರಾತನ ಮೇಘಾಲಯ ವಾಸಿಗಳು ಆನಿಮಿಸಮ್‌ ಹಾಗೂ ತಮ್ಮ ಪೂರ್ವಜ-ಪೂಜೆಯ ಅಧ್ಯಾತ್ಮಿಕ ನಂಬಿಕೆಗಳನ್ನು ಹಿಂದೂ ಧರ್ಮದೊಂದಿಗೆ ಸೇರಿಸಿದರು.   ಗುಹೆಗಳಲ್ಲಿ ಶಿವ ಹಾಗೂ ದುರ್ಗಾ ವಿಗ್ರಹಗಳು ಕಾಣಸಿಗುತ್ತವೆ. 

ಮೇಘಾಲಯ ರಾಜ್ಯವನ್ನು 'ಮೇಘಾಲಯ ಪ್ರಸ್ಥಭೂಮಿ'ಯೆಂದೂ ಕರೆಯಲಾಗುತ್ತದೆ.  ಇದರಲ್ಲಿ ಬಹುಪಾಲು ಆರ್ಷೇಯ ಕಲ್ಪದ ಶಿಲಾ ಬಂಡೆಗಳ ರೂಪಗಳಿವೆ.  ಈ ಶಿಲಾ ರೂಪಗಳು ಇದ್ದಿಲು, ಸುಣ್ಣಕಲ್ಲು, ಯುರೆನಿಯಮ್‌ ಹಾಗೂ ಸಿಲಿಮನೈಟ್‌ನಂತಹ ಅಮೂಲ್ಯ ಖನಿಜಗಳ ಸಮೃದ್ಧ ನಿಕ್ಷೇಪಗಳನ್ನು ಹೊಂದಿರುತ್ತವೆ.  ಮೇಘಾಲಯದಲ್ಲಿ ಹಲವು ನದಿಗಳಿವೆ.  ಇವುಗಳಲ್ಲಿ ಹಲವು ಮಳೆಯನ್ನು ಆಧರಿಸಿರುವ ಕಾರಣ ಕಾಲಕ್ಕನುಗುಣವಾಗಿ ಕಾಣಿಸಿಕೊಳ್ಳುತ್ತವೆ.  ಡೇರಿಂಗ್‌, ಸಾಂಡಾ, ಬಾಂದ್ರಾ, ಭೋಗೈ, ಡಾರೆಂಗ್‌, ಸಿಂಸಾಂಗ್‌, ನಿತೈ ಹಾಗೂ ಭೂಪೈ - ಇವು ಗಾರೊ ಹಿಲ್ಸ್‌ ವಲಯದಲ್ಲಿ ಪ್ರಮುಖ ನದಿಗಳು.  ಉಮ್‌ಖ್ರಿ, ಉಮಿಯಮ್‌, ಕಿಂಚಿಯಾಂಗ್‌ (ಜಾಡುಕಾಟ), ಮಾವ್ಪಾ, ಉಮಿಯಿವ್‌ (ಅಥವಾ ಬಾರಾಪಾನಿ), ಮೈನ್ಗೋಟ್‌ ಹಾಗೂ ಮೈಂಟ್ಡು,  ಪ್ರಸ್ಥಭೂಮಿಯ ಕೇಂದ್ರೀಯ ಮತ್ತು ಪೂರ್ವ ವಿಭಾಗದಲ್ಲಿ ಪ್ರಮುಖ ನದಿಗಳು.  ದಕ್ಷಿಣ ಖಾಸಿ ಹಿಲ್ಸ್‌ ವಲಯದಲ್ಲಿ, ಈ ನದಿಗಳು ಆಳವಾದ ಕಂದರಗಳು ಮತ್ತು ಸುಂದರ ಜಲಪಾತಗಳನ್ನು ಸೃಷ್ಟಿಸಿವೆ.ಪ್ರಸ್ಥಭೂಮಿಯ ಉನ್ನತ ಶ್ರೇಣಿಯು 150ರಿಂದ 1961 ಮೀಟರ್‌ಗಳ ವರೆಗೂ ಇದೆ.  ಖಾಸಿ ಹಿಲ್ಸ್‌ ಇರುವ ಪ್ರಸ್ಥಭೂಮಿಯ ಕೇಂದ್ರ ಭಾಗವು ಹೆಚ್ಚು ಎತ್ತರ ಹೊಂದಿದೆ. ನಂತರ,ಜೈನ್ ತಿಯಾ ಹಿಲ್ಸ್‌ ವಲಯವಿರುವ ಪೂರ್ವ ವಲಯವು ಎರಡನೆಯ ಅತಿ ದೊಡ್ಡ ಎತ್ತರವೆನಿಸಿದೆ.  ಶಿಲಾಂಗ್‌ ಶಿಖರವು ಮೇಘಾಲಯದಲ್ಲಿರುವ ಅತ್ಯುನ್ನತ ಶಿಖರವಾಗಿದೆ. ಖಾಸಿ ಹಿಲ್ಸ್‌ನಲ್ಲಿರುವ ಅದು ಒಂದು ಪ್ರಮುಖ IAF ಕೇಂದ್ರಸ್ಥಾನವನ್ನೂ ಸಹ ಹೊಂದಿದೆ. ಇದು ಶಿಲಾಂಗ್‌ ನಗರಕ್ಕಿಂತಲೂ ಮೇಲ್ಮಟ್ಟದಲ್ಲಿದೆ.  ಇದು 1961 ಮೀಟರ್‌ಗಳಷ್ಟು ಎತ್ತರವಿದೆ.  ಪ್ರಸ್ಥಭೂಮಿಯ ಪಶ್ಚಿಮ ವಿಭಾಗದಲ್ಲಿರುವ ಗಾರೊ ಹಿಲ್ಸ್‌ ವಲಯವು ಹೆಚ್ಚು ಕಡಿಮೆ ಸಮತಟ್ಟಾಗಿದೆ. ಗಾರೊ ಹಿಲ್ಸ್‌ನ ಅತಿ ಎತ್ತರದ ಸ್ಥಳವು ನೊಕ್ರೆಕ್‌ ಶಿಖರವಾಗಿದ್ದು, ಇದರ ಎತ್ತರ 1516 ಮೀಟರ್‌ಗಳು.

ಮೇಘಾಲಯದಲ್ಲಿ ಸದ್ಯಕ್ಕೆ ಏಳು ಜಿಲ್ಲೆಗಳಿವೆ.  ಅವು ಪೂರ್ವ ಗಾರೊ ಹಿಲ್ಸ್‌, ಪೂರ್ವ ಖಾಸಿ ಹಿಲ್ಸ್‌, ಜೈನ್ ತಿಯಾಗಳು ಹಿಲ್ಸ್‌, ರೀ-ಭೊಯಿ, ದಕ್ಷಿಣ ಗಾರೊ ಹಿಲ್ಸ್‌, ಪಶ್ಚಿಮ ಗಾರೊ ಹಿಲ್ಸ್‌ ಹಾಗೂ ಪಶ್ಚಿಮ ಖಾಸಿ ಹಿಲ್ಸ್‌.ಪೂರ್ವ ಗಾರೊ ಹಿಲ್ಸ್‌  ಜಿಲ್ಲೆ 1976ರಲ್ಲಿ ರಚನೆಯಾಯಿತು. ಇಸವಿ 2001ರಲ್ಲಿ ನಡೆಸಿದ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆಯು 247,555ರಷ್ಟಿದೆ.  ಇದರ ವಿಸ್ತೀರ್ಣ 2603 ಚದರ ಕಿಲೊಮೀಟರ್‌ಗಳು.  ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ವಿಲಿಯಂನಗರದಲ್ಲಿದೆ. (ಅಂದು ಈ ಸ್ಥಳಕ್ಕೆ ಸಿಂಸನ್‌ಗಿರಿ ಎನ್ನಲಾಗಿತ್ತು).ಪೂರ್ವ ಖಾಸಿ ಹಿಲ್ಸ್‌  ಜಿಲ್ಲೆಯನ್ನು 28 ಅಕ್ಟೋಬರ್‌ 1976ರಂದು ಖಾಸಿ ಹಿಲ್ಸ್‌ ಜಿಲ್ಲೆಯಿಂದ ಬೇರ್ಪಡಿಸಿ ರಚಿಸಲಾಯಿತು.  ಜಿಲ್ಲೆಯ ವಿಸ್ತೀರ್ಣ 2,748 ಚದರ ಕಿಲೋಮೀಟರ್‌. ಇಸವಿ 2001 ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆ 660,923ರಷ್ಟಿದೆ.  ಪೂರ್ವ ಖಾಸಿ ಹಿಲ್ಸ್‌ನ ಕೇಂದ್ರ ಕಾರ್ಯಸ್ಥಾನ ಶಿಲಾಂಗ್‌ನಲ್ಲಿದೆ.ಜೈನ್ ತಿಯಾಗಳು ಹಿಲ್ಸ್‌  ಜಿಲ್ಲೆಯು 22 ಫೆಬ್ರವರಿ 1972ರಂದು ರಚನೆಯಾಯಿತು. ಇದರ ಭೌಗೋಳಿಕ ವಿಸ್ತೀರ್ಣ 3819 ಚದರ ಕಿಲೋಮೀಟರ್‌ಗಳು. ಇಸವಿ 2001ರ ಜನಗಣತಿಯ ಪ್ರಕಾರ ಈ ಜಿಲ್ಲೆಯು 295,692ರಷ್ಟು ಜನಸಂಖ್ಯೆ ಹೊಂದಿದೆ.  ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ಜೊವೈನಲ್ಲಿದೆ.  ಜೈನ್ ತಿಯಾಗಳು ಹಿಲ್ಸ್‌ ರಾಜ್ಯದಲ್ಲಿಯೇ ಅತಿ ಹೆಚ್ಚು ಇದ್ದಿಲು ತಯಾರಿಸುವ ಜಿಲ್ಲೆಯಾಗಿದೆ.  ರಾಜ್ಯಾದ್ಯಂತ ಇದ್ದಿಲು ಗಣಿಗಳನ್ನು ಕಾಣಬಹುದಾಗಿದೆ.ದಿನಾಂಕ 4 ಜೂನ್‌ 1992ರಂದು ಪೂರ್ವ ಖಾಸಿ ಹಿಲ್ಸ್‌ ಜಿಲ್ಲೆಯನ್ನು ವಿಭಜಿಸಿ ರಿ-ಭೊಯಿ  ಜಿಲ್ಲೆಯನ್ನು ರಚಿಸಲಾಯಿತು.  ಇದರ ವಿಸ್ತೀರ್ಣ 2448 ಚದರ ಕಿಲೋಮಿಟರ್‌ಗಳು.  ಇಸವಿ 2001ರ ಜನಗಣತಿ ಪ್ರಕಾರ ಜಿಲ್ಲೆಯ ಒಟ್ಟು ಜನಸಂಖ್ಯೆಯು 192,795ರಷ್ಟಿತ್ತು.  ಜಿಲ್ಲೆಯ ಕೇಂದ್ರ ಕಾರ್ಯಸ್ಥಾನವು ನೊಂಗ್ಪೊಹ್‌ನಲ್ಲಿದೆ.  ಇಲ್ಲಿ ಬೆಟ್ಟ-ಗುಡ್ಡಗಳ ಭೂಪ್ರದೇಶವಿದ್ದು, ಹೆಚ್ಚುಪಾಲು ಕಾಡು ವ್ಯಾಪಿಸಿದೆ.  ರಿ-ಭೊಯಿ ಜಿಲ್ಲೆಯು ಅನಾನಸ್‌ ಫಲಗಳಿಗಾಗಿ ಬಹಳ ಖ್ಯಾತವಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅನಾನಸ್‌ ಬೆಳೆಯುವ ಸ್ಥಳವಾಗಿದೆ.ಪಶ್ಚಿಮ ಗಾರೊ ಹಿಲ್ಸ್‌ ಜಿಲ್ಲೆಯು 18 ಜೂನ್‌ 1992ರಂದು ವಿಭಜನೆಗೊಂಡು ದಕ್ಷಿಣ ಗಾರೊ ಹಿಲ್ಸ್‌  ಜಿಲ್ಲೆ ರಚನೆಯಾಯಿತು. ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣವು 1850 ಚದರ ಕಿಲೊಮೀಟರ್‌ಗಳಷ್ಟಿದೆ.  ಇಸವಿ 2001ರ ಜನಗಣತಿಯ ಪ್ರಕಾರ ಜಿಲ್ಲೆಯ ಜನಸಂಖ್ಯೆಯು 99,100ರಷ್ಟಿದೆ.  ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಬಾಘ್ಮಾರಾದಲ್ಲಿದೆ.ಪಶ್ಚಿಮ ಗಾರೊ ಹಿಲ್ಸ್‌  ಜಿಲ್ಲೆಯು ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಇದರ ಭೌಗೋಳಿಕ ವಿಸ್ತೀರ್ಣ 3714 ಚದರ ಕಿಲೋಮೀಟರ್‌ಗಳಷ್ಟಿದೆ. ಇಸವಿ 2001ರ ಜನಗಣತಿಯ ಪ್ರಕಾರ ಈ ಜಿಲ್ಲೆಯ ಜನಸಂಖ್ಯೆ 515,813ರಷ್ಟಿದೆ.  ಜಿಲ್ಲೆಯ ಕೇಂದ್ರ ಕಾರ್ಯಸ್ಥಾನ ಟುರಾದಲ್ಲಿದೆ.ಪಶ್ಚಿಮ ಖಾಸಿ ಹಿಲ್ಸ್‌  ಜಿಲ್ಲೆ ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ಇದರ ಭೌಗೋಳಿಕ ವಿಸ್ತೀರ್ಣವು 5247 ಚದರ ಕಿಲೋಮೀಟರ್‌ಗಳಷ್ಟಿವೆ. ಖಾಸಿ ಹಿಲ್ಸ್‌ ಜಿಲ್ಲೆಯಿಂದ ದಿನಾಂಕ 28 ಅಕ್ಟೋಬರ್‌ 1976ರಂದು ಪಶ್ಚಿಮ ಖಾಸಿ ಹಿಲ್ಸ್‌ ಎಂಬ ಜಿಲ್ಲೆಯನ್ನು ರಚಿಸಲಾಯಿತು.  ಜಿಲ್ಲೆಯ ಪ್ರಧಾನ ಕಾರ್ಯಸ್ಥಾನ ನೊಂಗ್‌ಸ್ಟೊಯಿನ್‌ನಲ್ಲಿದೆ.

ರಾಜ್ಯದ ಕೆಲವು ವಲಯಗಳಲ್ಲಿ ಸರಾಸರಿ ವಾರ್ಷಿಕ ಮಳೆ 1200 ಸೆಂಟಿಮೀಟರ್‌ಗಳಷ್ಟು ಅಧಿಕವಿರುವ ಕಾರಣ, ಮೇಘಾಲಯವು ಭಾರತದಲ್ಲೇ ಅತಿ ತೇವವಾಗಿರುವ ರಾಜ್ಯವಾಗಿದೆ.  ಕಡಿಮೆ ಎತ್ತರವುಳ್ಳ ಗಾರೊ ಹಿಲ್ಸ್‌ ವಲಯವನ್ನು ಹೊಂದಿರುವ ಪ್ರಸ್ಥಭೂಮಿಯ ಪಶ್ಚಿಮ ಭಾಗವು ವರ್ಷದ ಬಹಳಷ್ಟು ಕಾಲ ಹೆಚ್ಚಿನ ಉಷ್ಣಾಂಶ ಹೊಂದಿರುತ್ತವೆ.  ಅತಿ ಹೆಚ್ಚು ಎತ್ತರ ಹೊಂದಿರುವ ಶಿಲಾಂಗ್‌ ವಲಯದಲ್ಲಿ ಸಾಮಾನ್ಯವಾಗಿ ಕಡಿಮೆ ಉಷ್ಣಾಂಶ ಇರುತ್ತದೆ.  ಈ ವಲಯದಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ (ಸೆಲ್ಸಿಯಸ್‌ ಮಾಪನ) ದಾಟುವುದು ಬಹಳ ಅಪರೂಪ. ಚಳಿಗಾಲದಲ್ಲಿ ಉಷ್ಣಾಂಶ ಸೊನ್ನೆಗಿಂತಲೂ ಕೆಳಗಿಳಿಯುವುದು ಸಾಮಾನ್ಯ. ರಾಜಧಾನಿ ಶಿಲಾಂಗ್‌ನ ದಕ್ಷಿಣದ ಖಾಸಿ ಹಿಲ್ಸ್‌ನಲ್ಲಿರುವ ಚೆರಾಪುಂಜಿ ಪಟ್ಟಣವು ಋತುವಿನಲ್ಲಿಯೇ ಅತಿ ಹೆಚ್ಚು ಮಳೆ ಪಡೆವ , ವಿಶ್ವದಾಖಲೆ ಹೊಂದಿದೆ. ಚೆರಾಪುಂಜಿಯಿಂದ 16 ಕಿಲೋಮಿಟರ್‌ ಪಶ್ಚಿಮದಲ್ಲಿರುವ ಮಾಸಿನ್ರಾಮ್‌ ಗ್ರಾಮದಲ್ಲಿ ಅತಿ ಹೆಚ್ಚು ವಾರ್ಷಿಕ ಮಳೆಯಾಗುವ ವಿಶ್ವದಾಖಲೆ ಹೊಂದಿದೆ.  ಮೇಘಾಲಯಕ್ಕೆ ಪ್ರವಾಸ ಹೋಗಲು ಸೂಕ್ತ ಕಾಲ ಮಾರ್ಚ್‌ನಿಂದ ಜುಲೈ ತಿಂಗಳ ವರೆಗೆ.  ಭಾರತದ ಬಯಲುಸೀಮೆ ಪ್ರದೇಶದಲ್ಲಿ ವಿಪರೀತ ತಾಪಮಾನದಿಂದ ಪಾರಾಗಲು ಬ್ರಿಟಿಷ್‌ ಮತ್ತು ಆಸ್ಸಾಂ‌ ಟೀ ಎಸ್ಟೇಟ್‌ ಮಾಲೀಕರು ಬೇಸಿಗೆ ಕಾಲದಲ್ಲಿ ಮೇಘಾಲಯಕ್ಕೆ ಸ್ಥಳಾಂತರಗೊಳ್ಳುವುದು ಸಾಮಾನ್ಯ.

ಮೇಘಾಲಯದಲ್ಲಿ ಆರ್ಥಿಕತೆಯು ಪ್ರಮುಖವಾಗಿ ಭೂಸಂಪತ್ತನ್ನು ಅಧರಿಸಿದೆ.  ಮೇಘಾಲಯದ ಒಟ್ಟು ಕಾರ್ಮಿಕ ಸಮೂಹದ ಮೂರರಲ್ಲಿ ಇಬ್ಬರು ಕೃಷಿ ಮತ್ತು ಅದಕ್ಕೆ ಸಂಬಂಧಿತ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ.  ಆದರೆ, ರಾಜ್ಯದ NSDPಗಾಗಿ ಈ ಕ್ಷೇತ್ರದ ಕೊಡುಗೆ ಮೂರನೆಯ ಒಂದು ಭಾಗಕ್ಕಿಂತಲೂ ಕಡಿಮೆ.  ರಾಜ್ಯದಲ್ಲಿನ ಕೃಷಿಯು ಬಹಳ ಕಡಿಮೆ ಇಳುವರಿ ಮತ್ತು ಅಸಮರ್ಪಕ ಬೇಸಾಯ ಪದ್ಧತಿಗಳಿಂದ ಕೂಡಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಬಡತನವಿದೆ.  ಇದರ ಫಲವಾಗಿ, ಜನಸಂಖ್ಯೆಯಲ್ಲಿ ಹೆಚ್ಚುಪಾಲು ಕೃಷಿಯಲ್ಲಿ ತೊಡಗಿದ್ದರೂ, ಮಾಂಸ, ಮೊಟ್ಟೆ, ದವಸ-ಧಾನ್ಯಗಳು ಇತ್ಯಾದಿಗಾಗಿ ಮೇಘಾಲಯ ಇತರೆ ರಾಜ್ಯಗಳಿಂದ ಆಮುದುಗಳನ್ನು ಅವಲಂಬಿಸಿದೆ. ಮೂಲಭೂತ ಸೌಲಭ್ಯಗಳ ವ್ಯವಸ್ಥೆಯ ನ್ಯೂನತೆಗಳ ಕಾರಣ, ರಾಜ್ಯದ ಆರ್ಥಿಕತೆಯು ದೇಶದ ಇತರೆಡೆಯ ಆರ್ಥಿಕತೆಗಿಂತಲೂ ಹಿಂದುಳಿಯುವಂತಾಗಿದೆ.ಮೇಘಾಲಯ ಪ್ರಕೃತಿಯ ಸಂಪನ್ಮೂಲಗಳ ಸಮೃದ್ಧ ಆಗರವಾಗಿದೆ.  ಇವುಗಳಲ್ಲಿ ಇದ್ದಿಲು, ಸುಣ್ಣಕಲ್ಲು, ಸಿಲಿಮೆನೈಟ್‌, ಕವೊಲಿನ್‌ ಹಾಗೂ ಗ್ರಾನೈಟ್‌ ಕಲ್ಲು ಸಹ ಸೇರಿವೆ. ಮೇಘಾಲಯದಲ್ಲಿ ವಿಶಾಲ ಕಾಡುಪ್ರದೇಶ, ಸಮೃದ್ಧ ಜೈವಿಕ ವೈವಿಧ್ಯ ಮತ್ತು ಹಲವು ಕೆರೆ-ಕೋಡಿಗಳಿವೆ.  ಕೈಗಾರಿಕೀಕರಣವು ಸೂಕ್ತ ಮಟ್ಟ ತಲುಪಿಲ್ಲ. ಜೊತೆಗೆ, ಕಳಪೆ ಮಟ್ಟದ ಮೂಲಭೂತ ಸೌಲಭ್ಯವು ಈ ಸಮೃದ್ಧ ಪೃಕೃತಿಯ ಸಂಪನ್ಮೂಲಗಳ ಬಳಕೆ ಮತ್ತು ರಾಜ್ಯದ ಆರ್ಥಿಕತೆಗೆ ತೊಡಕಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡು ದೊಡ್ಡ ಪ್ರಮಾಣದ ಗಾರೆ ತಯಾರಿಕಾ ಘಟಗಳು ಜೈನ್ ತಿಯಾಗಳು ಹಿಲ್ಸ್‌ ಜಿಲ್ಲೆಯಲ್ಲಿ ಸ್ಥಾಪನೆಯಾಗಿವೆ. ಇವುಗಳ ಉತ್ಪಾದನಾ ಸಾಮರ್ಥ್ಯ 900 MTDಗಿಂತಲೂ ಹೆಚ್ಚು. ಈ ಜಿಲ್ಲೆಯಲ್ಲಿ ಲಭ್ಯವಿರುವ ಉತ್ತಮ ಗುಣಮಟ್ಟದ ಸುಣ್ಣಕಲ್ಲಿನ ಸಮೃದ್ಧ ನಿಕ್ಷೇಪಗಳನ್ನು ಬಳಸಿಕೊಳ್ಳಲು ಇನ್ನಷ್ಟು ಗಾರೆ ತಯಾರಿಕಾ ಘಟಕಗಳ ಆರಂಭಕ್ಕೆ ಕಾರಣವಾಗಬಹುದು.  ಮೇಘಾಲಯ ರಾಜ್ಯವು ಪ್ರಾಕೃತಿಕ ಸೌಂದರ್ಯ ಹೊಂದಿದೆ. ಇಲ್ಲಿನ ರಾಜ್ಯ ಸರ್ಕಾರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದನ್ನು ಬಳಸಿಕೊಳ್ಳಲು ಯತ್ನಿಸುತ್ತಿದೆ.  ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಭದ್ರತಾ ಸಮಸ್ಯೆಗಳ ಕಾರಣ ಮೇಘಾಲಯ ರಾಜ್ಯದ ಪ್ರವಾಸೋದ್ಯಮದ ಬೆಳವಣಿಗೆಗೆ ತೊಡಕಾಗಿದೆ.

ಅಂಕಿ-ಅಂಶಗಳು ಮತ್ತು ಯೋಜನೆಯ ಅನುಷ್ಟಾನ ಸಚಿವಾಲಯ ವು ಮಾರುಕಟ್ಟೆ ಬೆಲೆಯಲ್ಲಿ  ರಾಜ್ಯದ ಸಮಗ್ರ ಸ್ಥಳೀಯ ಉತ್ಪನ್ನದ ಆಗುಹೋಗುಗಳ ಪಟ್ಟಿ ಕೆಳಕಂಡಂತಿದೆ.

ಇಸವಿ 2004ರಲ್ಲಿ ಮೇಘಾಲಯದ ಸಮಗ್ರ ರಾಜ್ಯ ಸ್ಥಳೀಯ ಉತ್ಪನ್ನವು ಇಂದಿನ ದರಗಳಲ್ಲಿ $1.6 ಶತಕೋಟಿ ಎಂದು ಅಂದಾಜು ಮಾಡಲಾಗಿದೆ.

ಭಾರತ ಸರ್ಕಾರದಡಿ ಸರ್ವೋಚ್ಚ ಯೋಜನಾ ಇಲಾಖೆಯಾಗಿರುವ ಯೋಜನಾ ಆಯೋಗದ ಪ್ರಕಾರ, 2000ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಮೂರನೆಯ ಒಂದು ಭಾಗದಷ್ಟು ಬಡತನದ ರೇಖೆಯ ಕೆಳಗಿದ್ದಾರೆ, ಎಂದು ಅಂದಾಜು ಮಾಡಲಾಗಿದೆ.  ಗ್ರಾಮಾಂತರ ಪ್ರದೇಶಗಳಲ್ಲಿ ಬಡತನ 55%ರಷ್ಟಿದ್ದು, ನಗರವಲಯದಲ್ಲಿನ ಬಡತನಕ್ಕಿಂತಲೂ ಎರಡರಷ್ಟಿದೆ.

ಮೇಘಾಲಯದ ಒಟ್ಟು ಭೌಗೋಳಿಕ ವಲಯದಲ್ಲಿ ಸುಮಾರು 10%ರಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.  ಈ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಸೀಮಿತ ಹಾಗೂ ಉತ್ಪಾದಕತೆ ಕಡಿಮೆ.  ಇದರ ಫಲವಾಗಿ, ಜನಸಂಖ್ಯೆಯ ಬಹುಪಾಲು ಕೃಷಿಯಲ್ಲಿ ಮಗ್ನರಾಗಿದ್ದರೂ, ರಾಜ್ಯದ GDPಗಾಗಿ ಕೃಷಿಯ ಉತ್ಪಾದನೆಯು ಬಹಳ ಕಡಿಮೆ ಹಾಗೂ ಕೃಷಿಕಾರ್ಯದಲ್ಲಿ ತೊಡಗುವ ಜನತೆಯಲ್ಲಿ ಬಹುಪಾಲು ಬಡವರಾಗಿಯೇ ಉಳಿದುಕೊಂಡಿದ್ದಾರೆ.  ಕೃಷಿ ಕಾರ್ಯ ನಡೆಯುವ ವಲಯಗಳಲ್ಲಿ ಗಮನಾರ್ಹ ಪಾಲು, ಸಾಂಪ್ರದಾಯಿಕ ಕೃಷಿ ರೀತ್ಯಾ ನಡೆಯುತ್ತದೆ. (ಇದಕ್ಕೆ ಸ್ಥಳೀಯವಾಗಿ [ಭರಾಟೆಯ]ಝೂಮ್‌ ಕೃಷಿ ಎನ್ನಲಾಗಿದೆ).
ಮೇಘಾಲಯದಲ್ಲಿ ಆಹಾರ ಧಾನ್ಯಗಳು ಪ್ರಮುಖ ಬೆಳೆಗಳಾಗಿವೆ.  ಇವುಗಳನ್ನು ಸುಮಾರು 1,330 ಚದರ ಕಿಲೋಮೀಟರ್‌ಗಳಲ್ಲಿ, ಅರ್ಥಾತ್‌ ರಾಜ್ಯದ ಕೃಷಿಕಾರ್ಯ ಪ್ರದೇಶದ 60%ರಷ್ಟು ಭಾಗದಲ್ಲಿ ಬೆಳೆಯಲಾಗುತ್ತಿದೆ.  ಆಹಾರ ಧಾನ್ಯಗಳ ಉತ್ಪಾದನೆಯು 230 ಸಾವಿರ ಟನ್‌ಗಳಿಗಿಂತಲೂ ಹೆಚ್ಚಾಗಿದೆ.  ರಾಜ್ಯದಲ್ಲಿ ಉತ್ಪಾದನೆಯಾಗುವ ಧಾನ್ಯ ಉತ್ಪಾದನೆಯಲ್ಲಿ ಅಕ್ಕಿಯದು 80%ರಷ್ಟು ಪಾಲು.  ಮೆಕ್ಕೆ ಜೋಳ, ಗೋಧಿ ಮತ್ತು ಇತರೆ ಕೆಲವು ಏಕ-ದಳ ಧಾನ್ಯ-ಬೇಳೆಕಾಳುಗಳು ಸಹ ಈ ರಾಜ್ಯದ ಪ್ರಮುಖ ಖಾದ್ಯ ಫಸಲುಗಳಾಗಿವೆ.ರೇಪ್‌ಸೀಡ್‌, ಸಾಸಿವೆ, ನಾರಗಸೆ, ಸೋಯ್ಬೀನ್‌, ಹರಳುಗಿಡ ಮತ್ತು ಎಳ್ಳು ಎಣ್ಣೆಕಾಳುಗಳನ್ನು ಸುಮಾರು 100 ಚದರ ಕಿಲೋಮೀಟರ್‌ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ.  ರೇಪ್‌ಸೀಡ್‌ ಮತ್ತು ಸಾಸಿವೆ ಈ ರಾಜ್ಯದಲ್ಲಿ ಬಹಳ ಪ್ರಮುಖ ಎಣ್ಣೆಬೀಜಗಳಾಗಿವೆ. ಸುಮಾರು 6.5 ಸಾವಿರ ಟನ್‌ಗಳಷ್ಟು ಖಾದ್ಯ ಎಣ್ಣೆಬೀಜ ಉತ್ಪನ್ನದಲ್ಲಿ ಇವೆರಡದ್ದು ಮೂರರಲ್ಲಿ ಎರಡರಷ್ಟು ಪಾಲು.
ಕೇವಲ ಹತ್ತಿ, ಜೂಟ್ ಹಾಗೂ ಮೆಸ್ಟಾ ಮಾತ್ರ ಮೇಘಾಲಯ ರಾಜ್ಯದ ವಾಣಿಜ್ಯ ಬೆಳೆಯಾಗಿವೆ. ಈ ಬೆಳೆಗಳನ್ನು ವಿಶಿಷ್ಟವಾಗಿ ಗಾರೊ ಹಿಲ್ಸ್‌ನಲ್ಲಿ ಬೆಳಸಲಾಗುತ್ತವೆ. ಅವುಗಳ ಉತ್ಪನ್ನ ಮತ್ತು ಕೃಷಿಕಾರ್ಯ ನಡೆಸುವ ವಿಸ್ತೀರ್ಣವು ಕಡಿಮೆಯಾಗುತ್ತಿದೆ. ಕೆಲವು ಇಳುವರಿ ಇಲ್ಲದ  ಬೆಳೆಗಳು ಜನಪ್ರಿಯತೆ ಕಳೆದುಕೊಳ್ಳುತ್ತಿವೆ.ಮೇಘಾಲಯದಲ್ಲಿರುವ ಹವಾಗುಣ, ಹಣ್ಣು-ತರಕಾರಿ, ಹೂವು, ಮೆಣಸು ಮತ್ತು ಔಷಧ ಗಿಡಗಳು ಸೇರಿದಂತೆ ವಿವಿಧ-ರೀತಿಯ ತೋಟಗಾರಿಕಾ ಬೆಳೆ ಬೆಳೆಯಲು ಅವಕಾಶ ನೀಡುತ್ತದೆ.  ಅಧಿಕ ಮೌಲ್ಯದ ಬೆಳೆಗಳು ಎಂದು ಇವನ್ನು ಪರಿಗಣಿಸಲಾಗಿದೆ, ಆದರೆ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಹಾರ ಭದ್ರತಾ ವಿಷಯಗಳು ಇವುಗಳನ್ನು ಬೆಳೆಸುವುದರಲ್ಲಿ ರೈತರಿಗೆ ಕೆಲಮಟ್ಟಿಗೆ ಅಡ್ಡಿಪಡಿಸುತ್ತವೆ.ಮೇಘಾಲಯ ರಾಜ್ಯದಲ್ಲಿ ಬೆಳೆಸಲಾದ ಪ್ರಮುಖ ಫಲಗಳಲ್ಲಿ ನಿಂಬೆಜಾತಿಯ ಹಣ್ಣುಗಳು, ಅನಾನಸ್‌, ಪರಂಗಿಹಣ್ಣು, ಬಾಳೆಹಣ್ಣು ಇತ್ಯಾದಿ ಸೇರಿವೆ. ಮೇಘಾಲಯದಲ್ಲಿ ಬೆಳೆಸಲಾದ ಮ್ಯಾಂಡರಿನ್‌ ಕಿತ್ತಳೆ ಹಣ್ಣುಗಳು ಬಹಳ ಉನ್ನತ ಗುಣಮಟ್ಟದ್ದೆಂದು ಹೇಳಲಾಗಿದೆ. ಇದರ ಜೊತೆಗೆ, ಹೂಕೋಸು, ಎಲೆಕೋಸು ಮತ್ತು ಮೂಲಂಗಿ ಸೇರಿದಂತೆ, ಮೇಘಾಲಯದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಸಲಾಗುತ್ತದೆ.ರಾಜ್ಯಾದ್ಯಂತ ಅಡಕೆ ತೋಟಗಳನ್ನು ಕಾಣಬಹುದು; ಅದರಲ್ಲೂ ವಿಶಿಷ್ಟವಾಗಿ ಗುವಾಹಾಟಿಯಿಂದ ಶಿಲಾಂಗ್‌ ಕಡೆಗೆ ಹೋಗುವ ಮಾರ್ಗದಲ್ಲಿ ಈ ರೀತಿಯ ತೋಟಗಳು ಹೇರಳವಾಗಿವೆ.  ಇತ್ತೀಚೆಗೆ, ಚಹಾ, ಕಾಫಿ ಮತ್ತು ಗೋಡಂಬಿಯಂತಹ ಫಸಲುಗಳನ್ನು ಪರಿಚಯಿಸಲಾಗುತ್ತಿದ್ದು, ಅವು ಜನಪ್ರಿಯಗಾಗುತ್ತಿವೆ.  ವಿವಿಧ ರೀತಿಯ ಮೆಣಸು, ಹೂವು, ಔಷಧೀಯ ಸಸ್ಯ ಮತ್ತು ಅಣಬೆಗಳನ್ನೂ ಸಹ ರಾಜ್ಯದಲ್ಲಿ ಬೆಳೆಸಲಾಗುತ್ತದೆ.

ದೇಶದ ಇಬ್ಭಾಗವಾದಾಗಿನಿಂದ ಈಶಾನ್ಯ ವಲಯದಲ್ಲಿ ಮೂಲಭೂತ ಸೌಲಭ್ಯ ಇಲ್ಲದ್ದರಿಂದ ತೀವ್ರ ಸಮಸ್ಯೆಗಳಿಗೆ ಕಾರಣವಾಗಿದೆ. ವಲಯದಲ್ಲಿ ಕೇವಲ 2%ರಷ್ಟು ಮಾತ್ರ ದೇಶದ ಉಳಿದ ಭಾಗಗಳೊಂದಿಗೆ  ಸಂಬಂಧ ಹೊಂದಿದೆ.  ಈ ವಲಯವು ಸಿಲಿಗುರಿ ಕಾರಿಡಾರ್‌ ಅಥವಾ ಚಿಕನ್ಸ್‌ ನೆಕ್‌ ಎನ್ನಲಾದ ಇಕ್ಕಟ್ಟು ದಾರಿಯ ಮೂಲಕ ಪಶ್ಚಿಮ ಬಂಗಾಳ ರಾಜ್ಯದೊಂದಿಗೆ ಸಂಪರ್ಕ ಹೊಂದಿದೆ.  ಮೇಘಾಲಯವು ಸಂಪೂರ್ಣವಾಗಿ ಭೂ ಆವೃತ್ತ ರಾಜ್ಯವಾಗಿದೆ. ದೂರ-ದೂರದ ಬಿಡಿ ಬಿಡಿಯಾದ ಸ್ಥಳಗಳಲ್ಲಿ ಸಣ್ಣ-ಪ್ರಮಾಣದ ಜನವಸತಿಗಳಿವೆ.  ರಾಜ್ಯದೊಳಗೆ ರಸ್ತೆ ಸಾರಿಗೆಯೇ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ.  ರಾಜಧಾನಿ ಶಿಲಾಂಗ್‌ನಲ್ಲಿ ರಸ್ತೆ ವ್ಯವಸ್ಥೆ ಚೆನ್ನಾಗಿದ್ದರೂ, ಇತರೆ ವಲಯಗಳಲ್ಲಿ ವ್ಯವಸ್ಥೆ ಸೂಕ್ತವಾಗಿಲ್ಲ.  ರಾಜ್ಯದ ಹೆಚ್ಚಿನ ರಸ್ತೆಗಳಲ್ಲಿ ಡಾಂಬರು ಹಾಕಿಲ್ಲ.  ಮೇಘಾಲಯಕ್ಕೆ ಬರುವವರಲ್ಲಿ ಬಹುಪಾಲು ನೆರೆಯ ರಾಜ್ಯ ಆಸ್ಸಾಂ‌ನ ಗುವಾಹಾಟಿ ಕಡೆಯಿಂದ ಬರುತ್ತಾರೆ. ಗುವಾಹಟಿಯು ರಾಜ್ಯದಿಂದ ಸರಿಸುಮಾರು 103 ಕಿಲೋಮೀಟರ್‌ ದೂರದಲ್ಲಿದೆ.  ಆಸ್ಸಾಂ‌ ಪ್ರಮುಖ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಹೊಂದಿದೆ. ದೇಶದ ಇತರೆಡೆಗೆ ಇಲ್ಲಿಂದ ಹಲವು ರೈಲು ಹಾಗು ವಿಮಾನ ಮಾರ್ಗಗಳಿವೆ.  ರಾಜ್ಯದಲ್ಲಿ ಹಳೆಯ ಮರದ ಸೇತುವೆಗಳು ಇನ್ನೂ ಇವೆ.ಮೇಘಾಲಯದಲ್ಲಿ ಯಾವುದೇ ರೈಲು ಕೊನೆಗೊಳ್ಳುವ ತುತ್ತತುದಿಗಳಿಲ್ಲ.  ಶಿಲಾಂಗ್‌ನಿಂದ 40 ಕಿಲೋಮೀಟರ್‌ ದೂರದಲ್ಲಿ, ಗುವಾಹಟಿ ಕಡೆಗೆ ಹೋಗುವ ಹೆದ್ದಾರಿಯಲ್ಲಿರುವ ಉಮ್ರೊಯಿಯಲ್ಲಿ ಸಣ್ಣ ವಿಮಾನ ನಿಲ್ದಾಣವಿದೆ.  ವಿಮಾನ ನಿಲ್ದಾಣ ಚಿಕ್ಕದಾಗಿರುವ ಕಾರಣ, ದೊಡ್ಡ ವಿಮಾನಗಳು ಇಲ್ಲಿ ಬಂದಿಳಿಯಲಾಗುವುದಿಲ್ಲ. ಕೋಲ್ಕತ್ತಾ ಹಾಗೂ ನೆರೆಯ ರಾಜ್ಯ ತ್ರಿಪುರಾದ ರಾಜಧಾನಿ ಅಗರ್ತಲಾದಿಂದ ಕೇವಲ ಸಣ್ಣ ವಿಮಾನಗಳು ವಾಯು ಸಾರಿಗೆ ಸೇವೆ ಸಲ್ಲಿಸುತ್ತವೆ.

ಇಸವಿ 2003ರಲ್ಲಿ ಭಾರತೀಯ ಅರಣ್ಯ ಸಂಸ್ಥೆ ಪ್ರಕಟಿಸಿದ ರಾಜ್ಯ ಅರಣ್ಯ ವರದಿ ಪ್ರಕಾರ, ಮೇಘಾಲಯದಲ್ಲಿ 9,496 ಚದರ ಕಿಲೋಮೀಟರ್‌ಗಳಷ್ಟು ಅರಣ್ಯವ್ಯಾಪ್ತಿಯಿದೆ. ಇದು ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದ 42.34%ದಷ್ಟಿದೆ.  ಮೇಘಾಲಯದ ಉಪ-ಉಷ್ಣವಲಯ ಕಾಡುಗಳು ಏಷ್ಯಾದ ಅತಿ ಸಮೃದ್ಧ ಸಸ್ಯತಾಣಗಳಲ್ಲಿ ಒಂದು.  ಈ ಕಾಡುಗಳಲ್ಲಿ ಬಹಳಷ್ಟು ಮಳೆಯಾಗಿ, ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿ ಜೀವವೈವಿಧ್ಯಕ್ಕೆ ಆಧಾರವಾಗಿವೆ.  ಮೇಘಾಲಯದ ಕಾಡು ವಲಯದ ಸಣ್ಣ ಭಾಗವನ್ನು 'ಪವಿತ್ರ ತೋಪುಗಳು' ಎನ್ನಲಾಗಿದೆ. (ಭಾರತದಲ್ಲಿ ಪವಿತ್ರ ತೋಪುಗಳು ನೋಡಿ).  ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳ ಆಧಾರದ ಮೇಲೆ, ಹಲವು ಸಮುದಾಯಗಳು ಈ ಪ್ರಾಚೀನ ಕಾಡುಗಳ ಸಣ್ಣ ಗುಂಪುಗಳನ್ನು ನೂರಾರು ವರ್ಷಗಳಿಂದಲೂ ಸಂರಕ್ಷಿಸುತ್ತಾ ಬಂದಿವೆ.  ಧಾರ್ಮಿಕ ಕಾರ್ಯಗಳಿಗಾಗಿ ಈ ಕಾಡುಗಳನ್ನು ಸಂರಕ್ಷಿಸಲಾಗಿದ್ದು, ಸಾಮಾನ್ಯವಾಗಿ ಯಾವುದೇ ರೀತಿಯ ನಾಶಮಾಡುವಿಕೆಯಿಂದ ರಕ್ಷಿಸಲಾಗಿವೆ.  ಈ ಪವಿತ್ರ ತೋಪುಗಳು ಅಪರೂಪವೆನಿಸಿದ ಹಲವು ಗಿಡ ಮತ್ತು ಪ್ರಾಣಿ ಪ್ರಭೇದಗಳ ತಾಣವಾಗಿವೆ.  ಪಶ್ಚಿಮ ಗಾರೊ ಹಿಲ್ಸ್‌ನಲ್ಲಿರುವ ನೊಕ್ರೆಕ್‌ ಜೀವಗೋಳ ಅರಣ್ಯ ಮತ್ತು ಬಲಫಕ್ರಮ್‌ ರಾಷ್ಟ್ರೀಯ ಉದ್ಯಾನಗಳನ್ನು 'ಮೇಘಾಲಯದ ಬಹಳಷ್ಟು ಜೀವವೈವಿಧ್ಯ ಹೊಂದಿದ ಸಮೃದ್ಧ ತಾಣಗಳು' ಎಂದು ಪರಿಗಣಿಸಲಾಗಿದೆ.  ಇದರ ಜೊತೆಗೆ, ಮೇಘಾಲಯದಲ್ಲಿ ಮೂರು ವನ್ಯಜೀವಿಧಾಮಗಳಿವೆ.  ಇವು ನೊಂಗ್ಖಿಲೆಮ್‌ ಅಭಯಾರಣ್ಯ, ಸಿಜು ಅಭಯಾರಣ್ಯ ಮತ್ತು ಭಾಗ್ಮಾರಾ ಅಭಯಾರಣ್ಯ. ಇವು ಕೀಟಭಕ್ಷಕ ಹೂಜಿ ಗಿಡ ನೆಪೆಂತೆಸ್‌ ಖಾಸಿಯಾನಾ ಗೆ ತಾಣವಾಗಿದೆ.

ವೈವಿಧ್ಯಮಯ ಹವಾಗುಣ ಮತ್ತು ಭೂಸ್ವರೂಪ ಹೊಂದಿರುವ ಕಾರಣ, ಮೇಘಾಲಯ ಕಾಡುಗಳು ವಿಶಾಲವಾದ ಸಸ್ಯ ವೈವಿಧ್ಯಕ್ಕೆ ಆಧಾರವಾಗಿವೆ. ಇದರಲ್ಲಿ ಪರಾವಲಂಬಿಗಳು, ಅಧಿಸಸ್ಯಗಳು, ರಸಭರಿತ ಗಿಡಗಳು ಮತ್ತು ಪೊದೆಸಸ್ಯಗಳು ಸೇರಿವೆ.  ಪ್ರಮುಖ ಮರಗಳ ವಿಧಗಳಲ್ಲಿ ಶೊರಿಯಾ ರೊಬಸ್ಟಾ ( ) ಮತ್ತು ಟೆಕ್ಟೊನಾ ಗ್ರ್ಯಾಂಡಿಸ್‌ (ಸಾಗುವಾನಿ ಮರ) ಸಹ ಸೇರಿವೆ.  ಮೇಘಾಲಯದಲ್ಲಿ ಭಾರಿ ಪ್ರಮಾಣದ ವೈವಿಧ್ಯದ ಹಣ್ಣು-ತರಕಾರಿಗಳು, ಮೆಣಸು ಮತ್ತು ಔಷಧೀಯ ಸಸ್ಯಗಳಿವೆ.  ಇಲ್ಲಿರುವ 325 ವಿಧಗಳ ಸೀತೆಹೂವಿನ ಗಿಡಗಳಿಗೂ ಸಹ ಮೇಘಾಲಯ ಖ್ಯಾತಿಯಾಗಿದೆ.  ಇವುಗಳಲ್ಲಿ ಅತಿ ದೊಡ್ಡ ಪ್ರಭೇದವು, ಖಾಸಿ ಬೆಟ್ಟಗಳಲ್ಲಿರುವ ಮಾವ್ಸ್‌ಮಾಯಿ, ಮಾವ್‌ಮ್ಲುಹ್‌ ಮತ್ತು ಸೊಹ್ರಾರಿಮ್‌ ಕಾಡುಗಳಲ್ಲಿವೆ.ವಿವಿಧ ಜಾತಿಗಳ ಸಸ್ತನಿಗಳು, ಪಕ್ಷಿಗಳು, ಸರಿಸೃಪಗಳು ಹಾಗೂ ಕೀಟಗಳು ಮೇಘಾಲಯದಲ್ಲಿವೆ.  ಪ್ರಮುಖ ಸಸ್ತನಿ ಪ್ರಭೇದಗಳಲ್ಲಿ ಆನೆಗಳು, ಕರಡಿಗಳು, ಪುನುಗು ಬೆಕ್ಕುಗಳು, ಮುಂಗುಸಿಗಳು, ವೀಸೆಲ್‌ಗಳು (ಮುಂಗುಸಿ ಜಾತಿಯ ಚತುಷ್ಪಾದಿ), ದಂಶಕಗಳು,(ಕೋರೆ ಹಲ್ಲಿರುವ ಪ್ರಾಣಿ) ಕಾಡೆತ್ತುಗಳು, ಕಾಡುಕೋಣಗಳು, ಜಿಂಕೆಗಳು, ಕಾಡು ಹಂದಿಗಳು ಹಾಗೂ ಹಲವು ಮಂಗನ ಜಾತಿಗೆ ಸೇರಿದ ಪ್ರಾಣಿಗಳು ಸೇರಿವೆ.  ವಿವಿಧ ಬಾವಲಿಗಳೂ ಸಹ ಮೇಘಾಲಯದಲ್ಲಿವೆ.  ಸಿಜು ಗುಹೆಗಳೂ ಸೇರಿದಂತೆ ಮೇಘಾಲಯದಲ್ಲಿರುವ ಹಲವು ಸುಣ್ಣದಕಲ್ಲಿನ ಗುಹೆಗಳಲ್ಲಿ ಬಹಳ ಅಪರೂಪ ಪ್ರಭೇದದ ಬಾವಲಿಗಳು ವಾಸಿಸುತ್ತವೆ.ಮಡಿವಾಳ ಹಕ್ಕಿ, ರಾಬಿನ್‌ ಹಕ್ಕಿ, ಬುಲ್ಬುಲ್‌, ಬೆಟ್ಟದ ಮೈನಾ ಸೇರಿದಂತೆ ಪ್ರಮುಖ ಹಕ್ಕಿ ಪ್ರಭೇದಗಳು ಜೋಡಿಯಾಗಿಯೋ ಅಥವಾ ಗುಂಪುಗಳಲ್ಲಿ ಮೇಘಾಲಯದ ಬೆಟ್ಟಕಾಡುಗಳಲ್ಲಿ ವಾಸಿಸುತ್ತವೆ. ಕೊಂಬುಕೊಕ್ಕಿನ ಹಕ್ಕಿಯು ಮೇಘಾಲಯದಲ್ಲಿರುವ ಅತಿದೊಡ್ಡ ಹಕ್ಕಿಯಾಗಿದೆ.  ಇತರೆ ಹಕ್ಕಿಗಳಲ್ಲಿ ನವಿಲು ಜೀವಂಜೀವ (ಫೆಸೆಂಟ್‌ ಹಕ್ಕಿ), ದೊಡ್ಡ ಭಾರತೀಯ ಉದ್ದ ತೋಕೆಯ ಸಣ್ಣ ಗಿಳಿ, ಹಸಿರು ಪಾರಿವಾಳ ಹಾಗೂ ಬ್ಲೂ ಜೇ ಹಕ್ಕಿಗಳೂ ಸೇರಿವೆ.  ಸುಮಾರು 250ಕ್ಕಿಂತಲೂ ಹೆಚ್ಚು ಪ್ರಭೇದಗಳ ಚಿಟ್ಟೆಗಳು, ಅದರಲ್ಲೂ ವಿಶೇಷವಾಗಿ, ಭಾರತದಲ್ಲಿ ಕಂಡುಬಂದ ಒಟ್ಟು ಪ್ರಭೇದಗಳಲ್ಲಿ ನಾಲ್ಕನೆಯ ಒಂದರಷ್ಟು ಮೇಘಾಲಯದಲ್ಲಿವೆ.ಮೇಘಾಲಯದಲ್ಲಿ ಕಂಡುಬರುವ ಸಾಮಾನ್ಯ ಸರೀಸೃಪಗಳೆಂದರೆ ಹಲ್ಲಿಗಳು, ಮೊಸಳೆಗಳು ಹಾಗೂ ಆಮೆಗಳು.  ಹೆಬ್ಬಾವು, ತಾಮ್ರಶೀರ್ಷಿ ಹಾವು, Green Tree Racer, ಭಾರತೀಯ ನಾಗರಹಾವು, ಕಾಳಿಂಗ ಸರ್ಪ, ಹವಳದ ಹಾವು ಹಾಗೂ ಮಂಡಲದ ಹಾವು ಸೇರಿದಂತೆ ಹಲವು ಬಗೆಯ ಹಾವುಗಳು ಮೇಘಾಲಯದಲ್ಲಿವೆ.

 
ಶಿಲಾಂಗ್‌ ನಗರದಲ್ಲಿ ಹಲವು ಪ್ರಸಿದ್ಧ ಶಾಲೆ ಮತ್ತು ಕಾಲೇಜುಗಳಿವೆ.  ಈಶಾನ್ಯ ಭಾರತದ ಅಬಿವೃದ್ಧಿ ಯೋಜನೆಯ ಅಂಗವಾಗಿ, ಮಾನವ ಸಂಪನ್ಮೂಲ ಸಚಿವಾಲಯವು ಏಳನೆಯ ಭಾರತೀಯ ಆಡಳಿತ ನಿರ್ವಹಣಾ ಕೌಶಲ್ಯ ಸಂಸ್ಥೆಯ (ಐಐಎಂ) ಏಳನೆಯ ವಿದ್ಯಾಲಯವನ್ನು ಶಿಲಾಂಗ್‌ನಲ್ಲಿ ಆರಂಭಿಸಿತು. ಇದಕ್ಕೆ ರಾಜೀವ್‌ ಗಾಂಧಿ ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ಎನ್ನಲಾಗಿದೆ. ಈ ವಿದ್ಯಾಲಯವು ಶೈಕ್ಷಣಿಕ ವರ್ಷ 2008ರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಿತು.

ಮುಂಚೆ, ಇಂದಿನ ಮೇಘಾಲಯಕ್ಕೆ ಸೇರಿದ ವಲಯಗಳನ್ನು ಪ್ರವೇಶಿಸಲು ವಿದೇಶೀ ಪ್ರವಾಸಿಗರಿಗೆ ವಿಶೇಷ ಪ್ರವೇಶಾನುಮತಿಯ ಅಗತ್ಯವಿತ್ತು.  ಆದರೆ, 1955ರಲ್ಲಿ ಈ ನಿರ್ಬಂಧಗಳನ್ನು ತೆರವುಗೊಳಿಸಲಾಯಿತು.  ದೇಶದಲ್ಲಿ ಅತ್ಯಂತ ಸುಂದರ ಪ್ರಕೃತಿ ಭೂಸೌಂದರ್ಯ ಹೊಂದಿರುವ ರಾಜ್ಯಗಳಲ್ಲಿ ಮೇಘಾಲಯವೂ ಒಂದು.  ವಿವಿಧ ಅಸಕ್ತಿ ಹೊಂದಿರುವ ಪ್ರವಾಸಿಗರನ್ನು ಆಕರ್ಷಿಸಲು ಮೇಘಾಲಯ ಸಾಕಷ್ಟು ಪ್ರವಾಸೀ ತಾಣಗಳನ್ನು ಹೊಂದಿದೆ.

ರಾಷ್ಟ್ರದಲ್ಲಿ ಉಳಿದುಕೊಂಡಿರುವ ಅತ್ಯಂತ ದಟ್ಟ ಕಾಡುಗಳ ಪೈಕಿ ಗಮನಾರ್ಹ ಅಂಶವು ಮೇಘಾಲಯದಲ್ಲಿದೆ. ಇದರಿಂದಾಗಿ ಇದು ರಾಷ್ಟ್ರದಲ್ಲಿನ ಪ್ರಮುಖ ಪರಿಸರೀಯ ಪ್ರವಾಸೀ ತಾಣಗಳಲ್ಲೊಂದು ಎಂದು ಪರಿಗಣಿಸಲಾಗಿದೆ.  ಮೇಘಾಲಯದಲ್ಲಿರುವ ಉಪ-ಉಷ್ಣ ಕಾಡುಗಳು ಹಲವು ಬಗೆಯ ಸಸ್ಯ-ವನ್ಯಜೀವಿಗಳಿಗೆ ಆಸರೆಯಾಗಿವೆ.  ಮೇಘಾಲಯದಲ್ಲಿ ಎರಡು ರಾಷ್ಟ್ರೀಯ ಉದ್ಯಾನಗಳು ಹಾಗೂ ಮೂರು ಅಭಯಾರಣ್ಯಗಳಿವೆ.

ಪರ್ವತಾರೋಹಣ, ಗುಡ್ಡ ಹತ್ತುವುದು, ಟ್ರೆಕಿಂಗ್‌, ಹೈಕಿಂಗ್‌, ಜಲ-ಸಾಹಸ ಕ್ರೀಡೆಗಳು (ವಾಟರ್‌ ಸ್ಪೋರ್ಟ್ಸ್‌) ಇತ್ಯಾದಿ ಸೇರಿದಂತೆ ವಿವಿಧ ಸಾಹಸ-ಪ್ರವಾಸಗಳಿಗೆ ಮೇಘಾಲಯ ಪ್ರಸಿದ್ಧ ತಾಣವಾಗಿದೆ. ಮೇಘಾಲಯ ರಾಜ್ಯದಲ್ಲಿ ಹಲವು ಟ್ರೆಕಿಂಗ್‌ ಮಾರ್ಗಗಳಲ್ಲಿ ಸಾಗುವಾಗ, ಕಾಡುಪಾಪಗಳು (ಸ್ಲೋ ಲೊರಿಸ್‌), ವಿವಿಧ ಬಗೆಯ ಜಿಂಕೆಗಳು ಹಾಗೂ ಕರಡಿಗಳಂತಹ ಅಪರೂಪದ ಪ್ರಾಣಿಗಳನ್ನು ನೋಡಬಹುದಾಗಿದೆ.  ಉಮಿಯಮ್‌ ಕೆರೆಯಲ್ಲಿ ಜಲಕ್ರೀಡೆಯ ಅಂಕಣಗಳಿವೆ. ಇಲ್ಲಿ ಮಾನವ-ಚಾಲಿತ ದೋಣಿಗಳು (ರೋ-ಬೋಟ್‌ಗಳು), ಪಾದ-ಚಾಲಿತ ದೋಣಿಗಳು (ಪ್ಯಾಡ್ಲ್‌ ಬೋಟ್‌ಗಳು), ತೇಲುವ ದೋಣಿಗಳು (ಸೇಯ್ಲಿಂಗ್‌ ಬೋಟ್‌ಗಳು), ಸ್ಕೂಟರ್‌-ದೋಣಿಗಳು (ವಾಟರ್‌ ಸ್ಕೂಟರ್‌ಗಳು) ಹಾಗೂ ವೇಗದ ದೋಣಿಗಳ ಸೌಲಭ್ಯಗಳಿವೆ.ಇಡೀ ರಾಜ್ಯಾದ್ಯಂತ ಸುಮಾರು 500 ಸುಣ್ಣದಕಲ್ಲು ಹಾಗೂ ಮರಳುಗಲ್ಲಿನ ಗುಹೆಗಳಿವೆಯೆಂದು ಅಂದಾಜು ಮಾಡಲಾಗಿದೆ. ಇವುಗಳಲ್ಲಿ ಕೆಲವು ಇಡೀ ಉಪಖಂಡದಲ್ಲೇ ಅತಿ ಉದ್ದನೆಯ ಹಾಗೂ ಅತಿ ಆಳವಾದ ಗುಹೆಗಳೂ ಇವೆ.  ಕ್ರೆಮ್‌ ಲಿಯಟ್‌ ಪ್ರಾಹ್‌ ಅತಿ ಉದ್ದನೆಯ ಗುಹೆ ಹಾಗೂ ಸಿನ್ರಾಂಗ್‌ ಪಮಿಯಾಂಗ್‌ ಅತಿ ಆಳವಾದ ಗುಹೆಯಾಗಿದೆ. ಇವೆರಡೂ ಗುಹೆಗಳು ಜೈನ್ ತಿಯಾಗಳು ಹಿಲ್ಸ್‌ನಲ್ಲಿವೆ. ಯೂನೈಟೆಡ್‌ ಕಿಂಗ್ಡಮ್‌, ಜರ್ಮೆನಿ, ಆಸ್ಟ್ರಿಯಾ, ಐರ್ಲೆಂಡ್‌ ಹಾಗೂ US ದೇಶಗಳಿಂದ ಆಗಮಿಸುವ ಗುಹೆ ಪ್ರವಾಸಿಗರು, ಸುಮಾರು ಒಂದು ದಶಕದಿಂದಲೂ ಮೇಘಾಲಯಕ್ಕೆ ಭೇಟಿ ನೀಡಿ ಇಲ್ಲಿನ ಗುಹೆಗಳನ್ನು ವೀಕ್ಷಿಸಲು ಬರುವರಿದ್ದಾರೆ.  ಇವುಗಳಲ್ಲಿ ಹಲವು ಗುಹೆಗಳನ್ನು ಇನ್ನೂ ಅಭಿವೃದ್ಧಿ ಪಡಿಸುವುದಾಗಲೀ, ಪ್ರಮುಖ ಪ್ರವಾಸೀ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿಲ್ಲ.

ಚೆರಾಪುಂಜಿ ಈಶಾನ್ಯ ಭಾರತದಲ್ಲೇ ಅತಿ ಜನಪ್ರಿಯ ಪ್ರವಾಸೀ ತಾಣವಾಗಿದೆ.  ಇದು ರಾಜಧಾನಿ ಶಿಲಾಂಗ್‌ನ ದಕ್ಷಿಣಕ್ಕಿದೆ.  ಈ ಪಟ್ಟಣವು ಈಗ ಬಹಳ ಚಿರಪರಿಚಿತವಾಗಿದ್ದು ಯಾವುದೇ ಪರಿಚಯದ ಅಗತ್ಯವಿಲ್ಲ. ರಮಣೀಯ ಭೂಚಿತ್ರಣವುಳ್ಳ, 50 ಕಿಲೋಮೀಟರ್‌ ಉದ್ದದ ರಸ್ತೆಯು ಚೆರಾಪುಂಜಿ ಮತ್ತು ಶಿಲಾಂಗ್‌ ನಗರಗಳ ನಡುವೆ ಸಂಪರ್ಕವೇರ್ಪಡಿಸುತ್ತದೆ.ರಾಜ್ಯದಲ್ಲಿ ಚಿರಪರಿಚಿತ ಜಲಪಾತಗಳ ಪೈಕಿ ಎಲಿಫೆಂಟ್‌ ಫಾಲ್ಸ್‌‌, ಶಾದ್ಥುಮ್‌ ಫಾಲ್ಸ್‌, ವೇಯ್ನಿಯಾ ಫಾಲ್ಸ್‌, ಬಿಷಪ್‌ ಪಾಲ್ಸ್‌, ನೊಹ್ಕಾಲಿಕೇಯ್‌ ಫಾಲ್ಸ್‌, ಲ್ಯಾಂಗ್ಷಿಯಾಂಗ್‌ ಫಾಲ್ಸ್‌ ಹಾಗೂ ಸ್ವೀಟ್‌ ಫಾಲ್ಸ್‌‌ ಸೇರಿವೆ.  ಮಾಸಿನ್ರಾಮ್‌ ಬಳಿ ಜಾಕ್ರೆಮ್‌ನ ಬಿಸಿ ನೀರಿನ ಕಾರಂಜಿಗಳು ರೋಗಗಳನ್ನು ವಾಸಿಮಾಡುವ ಹಾಗೂ ಔಷಧೀಯ ಗುಣಗಳನ್ನು ಹೊಂದಿವೆಯೆಂದು ನಂಬಲಾಗಿದೆ.ಮೇಘಾಲಯದಲ್ಲಿ ಹಲವು ನೈಸರ್ಗಿಕ ಹಾಗೂ ಮಾನವನಿರ್ಮಿತ ದೊಡ್ಡಕೆರೆಗಳಿವೆ.  ಗುವಾಹಾಟಿ-ಶಿಲಾಂಗ್‌ ರಸ್ತೆಯಲ್ಲಿರುವ ಉಮಿಯಮ್‌ ಕೆರೆಯು 'ಬಡಾ ಪಾನಿ' (ದೊಡ್ಡ ಪ್ರಮಾಣದ ನಿರುಳ್ಳ ಕೆರೆ) ಎಂದು ಖ್ಯಾತವಾಗಿದೆ. ಇದು ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ.  ಮೇಘಾಲಯದಲ್ಲಿ ಹಲವು ಉದ್ಯಾನಗಳಿವೆ; ಥಂಗ್‌ಖಾರಂಗ್‌ ಉದ್ಯಾನ, ಇಕೊ-ಪಾರ್ಕ್‌, ಸಸ್ಯಶಾಸ್ತ್ರೀಯ ತೋಟ ಹಾಗೂ ಲೇಡಿ ಹೈದರಿ ಉದ್ಯಾನವು ಇವುಗಳಲ್ಲಿ ಹೆಸರುವಾಸಿ.  ಶಿಲಾಂಗ್‌ನಿಂದ 96 ಕಿಲೊಮೀಟರ್‌ ದೂರದಲ್ಲಿರುವ ಡಾಕಿ ಪಟ್ಟಣವು ಬಾಂಗ್ಲಾದೇಶದ ಪ್ರವೇಶ ದ್ವಾರವಾಗಿದೆ. ಇದು ಮೇಘಾಲಯದ ಅತ್ಯುನ್ನತ ಪರ್ವತಶ್ರೇಣಿಗಳು ಹಾಗೂ ಬಾಂಗ್ಲಾದೇಶದ ಗಡಿ ನೆಲೆಗಳ ರಮಣೀಯ ಭೂಚಿತ್ರಣ ಹೊಂದಿದೆ.

ರಾಜ್ಯದಲ್ಲಿ ರಸ್ತೆ ಮತ್ತು ಸಂವಹನ ಜಾಲಗಳು ಕಳಪೆ ಮಟ್ಟದ್ದಾಗಿವೆ.  ಶಿಲಾಂಗ್‌-ಜೊವಾಯಿ, ಶಿಲಾಂಗ್‌-ಟುರಾ ಮತ್ತು ಶಿಲಾಂಗ್‌-ಸೊಹ್ರಾ ದಂತಹ ಪ್ರಮುಖ ಮಾರ್ಗಗಳ ಗುಣಮಟ್ಟವು ಚೆನ್ನಾಗಿದ್ದರೂ, ಆಂತರಿಕ ರಸ್ತೆ ಜಾಲಗಳು ಬಹಳ ಕಳಪೆ ಮಟ್ಟದ್ದಾಗಿದ್ದು ಅಸಮರ್ಪಕವಾಗಿ ನಿರ್ವಹಿಸಲಾಗಿವೆ.  ರಾಜ್ಯದ ರಾಜಧಾನಿ ಶಿಲಾಂಗ್‌ನ ಹೊರಗೆ ಮಾರುಕಟ್ಟೆಗಳಿರುವುದು ಬಹಳ ವಿರಳ.  ಬ್ಯಾಂಕಿಂಗ್ ಸೌಲಭ್ಯಗಳು ಸಹ ಬಹಳ ನಿಯಮಿತವಾಗಿದ್ದು, ಕೇವಲ ಕೆಲವೇ ಅಂಗಡಿ ಮಳಿಗೆಗಳಲ್ಲಿ ಮಾತ್ರ ಕ್ರೆಡಿಟ್‌ ಕಾರ್ಡ್‌ಗಳು ಸ್ವೀಕೃತವಾಗುತ್ತವೆ.  ರಾಜ್ಯದ ಅತಿ ಪ್ರಮುಖ ಪ್ರವಾಸೀ ತಾಣಗಳು ಗಾರೊ ಹಿಲ್ಸ್‌ನಲ್ಲಿವೆ. ಆದರೂ, ಈ ತಾಣಗಳು ರಾಜ್ಯದ ಇತರೆ ಭಾಗಗಳೊಂದಿಗೆ ಅಷ್ಟು ಸಮರ್ಪಕ ಸಂಪರ್ಕ ಹೊಂದಿಲ್ಲ. ಒಟ್ಟಾರೆ, ಈಶಾನ್ಯ ಭಾರತದಲ್ಲಿ ಹಲವು ವರ್ಷಗಳಿಂದ ಆತಂಕವಾದದ ಸಮಸ್ಯೆ ಹಾಗೂ ಇದರಿಂದಾಗಿರುವ ಭದ್ರತಾ ಸಮಸ್ಯೆಗಳ ಕಾರಣ, ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ.  ಭಾರತ ಪ್ರವಾಸ ಕೈಗೊಳ್ಳುವ ವಿದೇಶೀಯರಿಗೆ ತಮ್ಮ ಸರ್ಕಾರಗಳು ಈಶಾನ್ಯ ಭಾರತದ ಕಡೆ ಪ್ರಯಾಣಿಸಬೇಡಿ, ಎಂದು ಸಲಹೆ ನೀಡಿರುವುದು ಭದ್ರತೆಯ ಕುರಿತ ಪರಿಕಲ್ಪನೆಯನ್ನು ಇನ್ನಷ್ಟು ಬಿಗುವಾಗಿಸಿದೆ.  ಆದರೂ, ಮೇಘಾಲಯ ರಾಜ್ಯದ ಮೇಲೆ ಈಶಾನ್ಯ ವಲಯದಲ್ಲಿನ ಆತಂಕವಾದದ ಸಮಸ್ಯೆಯ ಪ್ರಭಾವ ಕಡಿಮೆಯೆಂದು ಹೇಳಲಾಗಿದೆ.  ಶಿಲಾಂಗ್‌ನಲ್ಲಿರುವ ಸದ್ಯದ ಸ್ಥಿತಿಯಲ್ಲಿ ಪ್ರವಾಸಿಗರು ಮೇಘಾಲಯಕ್ಕೆ ಬಂದು ಅದರ ಸುಂದರ ಭೂಚಿತ್ರಣವನ್ನು ನೋಡಿ ಆನಂದಿಸಬಹುದು.

ಭಾರತದ ಇತರೆ ರಾಜ್ಯಗಳಂತೆ, ಮೇಘಾಲಯದಲ್ಲಿಯೂ ಸಹ ಒಂದೇ ಸಭೆಯುಳ್ಳ ಶಾಸನವಿದೆ.  ರಾಜ್ಯ ಶಾಸನ ಸಭೆಯಲ್ಲಿ ಸದ್ಯಕ್ಕೆ 60 ಜನ ಸದಸ್ಯರಿದ್ದಾರೆ.  ಮೇಘಾಲಯ ರಾಜ್ಯದಿಂದ ಇಬ್ಬರು ಲೋಕಸಭಾ (ಭಾರತ ಸಂಸತ್ತಿನ ಕೆಳಮನೆ) ಸದಸ್ಯರಿದ್ದಾರೆ. ಶಿಲಾಂಗ್‌ ಮತ್ತು ಟುರಾ ಸಂಸದೀಯ ಕ್ಷೇತ್ರಗಳಿಂದ ತಲಾ ಒಬ್ಬೊಬ್ಬ ಚುನಾಯಿತ ಸಂಸದರಿದ್ದಾರೆ.  ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ ಒಬ್ಬ ಪ್ರತಿನಿಧಿಯಿದ್ದಾರೆ.  ಭಾರತ ಸರ್ಕಾರದಿಂದ ಆಯ್ಕೆ ಮಾಡಲಾದ ರಾಜ್ಯಪಾಲರು ರಾಜ್ಯದ ಔಪಚಾರಿಕ ಮುಖ್ಯಸ್ಥರಾಗಿರುತ್ತಾರೆ.  ಆದರೆ, ನೈಜ ಸಂಪೂರ್ಣ ಕಾರ್ಯಕಾರೀ ಅಧಿಕಾರ ರಾಜ್ಯದ ಮುಖ್ಯಮಂತ್ರಿಗಳೊಂದಿಗಿರುತ್ತವೆ.ಮೇಘಾಲಯ ತನ್ನದೇ ಆದ ಉಚ್ಚನ್ಯಾಯಾಲಯ ಹೊಂದಿಲ್ಲ.  ಮೇಘಾಲಯ ರಾಜ್ಯವು ಗುವಾಹಟಿ ಉಚ್ಚನ್ಯಾಯಾಲಯದ ವ್ಯಾಪ್ತಿಯೊಳಗಿದೆ.  ಗುವಾಹಟಿ ಉಚ್ಚ ನ್ಯಾಯಾಲಯದ ಸಂಚಾರೀ ಪೀಠವು ಶಿಲಾಂಗ್‌ ನಗರದಲ್ಲಿ 1974ರಿಂದಲೂ ಕಾರ್ಯ ನಿರ್ವಹಿಸುತ್ತಿದೆ.

ಇವನ್ನೂ ಗಮನಿಸಿ 

ದೇಶದ ಗ್ರಾಮಾಂತರ ಜನತೆಗೆ ಸ್ವಾಯತ್ತತೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ, ಭಾರತ ಸಂವಿಧಾನದಲ್ಲಿ ನಿಯಮಗಳನ್ನು ಮಾಡಲಾಯಿತು. ಇದರಂತೆ, ಪಂಚಾಯತಿ ರಾಜ್‌ ಸಂಸ್ಥೆಗಳನ್ನು ಸ್ಥಾಪಿಸಲಾಯಿತು.  ಆದರೂ, ಮೇಘಾಲಯ ಹಾಗೂ ಈಶಾನ್ಯ ಭಾಗದ ಅಂಶವಾಗಿದ್ದ ಅಂದಿನ ಆಸ್ಸಾಂ‌ ರಾಜ್ಯದಲ್ಲಿ ಅಪೂರ್ವ ಸಂಪ್ರದಾಯಗಳು ಚಾಲ್ತಿಯಲ್ಲಿದ್ದ ಕಾರಣ, ಆಸ್ಸಾಂ‌ನಲ್ಲಿ ಪ್ರತ್ಯೇಕ ರಾಜಕೀಯ ಮತ್ತು ಆಡಳಿತ ರೂಪಕ್ಕೆ ಚಾಲನೆ ನೀಡುವ ಅಗತ್ಯವಿತ್ತು.  ಇನ್ನೂ ಹೆಚ್ಚಾಗಿ, ವಲಯದಲ್ಲಿರುವ ಕೆಲವು ಬುಡಕಟ್ಟು ಸಮುದಾಯಗಳೂ ಸಹ ತಮ್ಮದೇ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಗಳನ್ನಿಟ್ಟುಕೊಂಡಿದ್ದವು. ಹಾಗಾಗಿ ಈ ಪಂಚಾಯತಿ ರಾಜ್‌ ಸಂಸ್ಥೆಗಳು ಈ ಸಾಂಪ್ರದಾಯಿಕ ಪದ್ದತಿಗಳೊಂದಿಗೆ ಘರ್ಷಣೆ ಸಂಭವಿಸಬಹುದಾಗಿತ್ತು. ಗೋಪಿನಾಥ್‌ ಬೊರ್ಡೊಲೊಯಿ ನೇತೃತ್ವದ ಉಪಸಮಿತಿಯೊಂದರ ಶಿಫಾರಸಿನ ಮೇರೆಗೆ, ಬುಡಕಟ್ಟು ಜನಾಂಗದವರಿಗೆ ಸರಳ ಹಾಗೂ ಕಡಿಮೆ ಖರ್ಚಿನ ಸ್ಥಳೀಯ ಸ್ವಾಯತ್ತತೆ ನೀಡಲು, ಸಂವಿಧಾನಕ್ಕೆ ಆರನೆಯ ವಿಧಿಯನ್ನು ಸೇರಿಸಲಾಗಿತ್ತು.  ಆರನೆಯ ವಿಧಿಯ ಪ್ರಕಾರ, ಇಂದಿನ ಮೇಘಾಲಯದಲ್ಲಿರುವ ವಲಯಗಳು ಸೇರಿದಂತೆ, ಈಶಾನ್ಯ ಭಾರತದ ಕೆಲವು ವಲಯಗಳಲ್ಲಿ ಸ್ವಯಮಾಧಿಕಾರದ ಜಿಲ್ಲಾ ಪರಿಷತ್‌ಗಳ (ADCಗಳ) ರಚನೆಗಾಗಿ ಅವಕಾಶ ಒದಗಿಸಿತು.  ಆರನೆಯ ವಿಧಿಯಡಿ ಈ ಸ್ವಯಮಾಧಿಕಾರದ ಜಿಲ್ಲಾ ಪರಿಷತ್‌ಗಳ (ADCಗಳ) ರಚನೆ ಮತ್ತು ನಿರ್ವಹಣೆಯ ರೀತಿಯನ್ನು ವಿಸ್ತೃತವಾಗಿ ನಮೂದಿಸಿ, ADCಗಳ ಅಧಿಕಾರ ವ್ಯಾಪ್ತಿಯನ್ನು ಸಹ ನಮೂದಿಸಲಾಯಿತು.  ಸದ್ಯಕ್ಕೆ ಮೇಘಾಲಯದಲ್ಲಿ ಮೂರು ADCಗಳಿವೆ: ಖಾಸಿ ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌, ಗಾರೊ ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌ ಹಾಗೂ ಜೈನ್ ತಿಯಾಗಳು ಹಿಲ್ಸ್‌ ಸ್ವಯಮಾಧಿಕಾರ ಜಿಲ್ಲಾ ಪರಿಷತ್‌.

ಮೂರೂ ಪ್ರಮುಖ ಜನಾಂಗೀಯ ಬುಡಕಟ್ಟು ಗುಂಪುಗಳಾದ ಖಾಸಿಗಳು, ಜೈನ್ ತಿಯಾಗಳುಗಳು ಹಾಗೂ ಗಾರೊಗಳು ತಮ್ಮದೇ ಆದ ಸಾಂಪ್ರದಾಯಿಕ ರಾಜಕೀಯ ಸಂಸ್ಥೆಗಳನ್ನು ಹೊಂದಿವೆ. ಇವು ನೂರಾರು ವರ್ಷಗಳಿಂದಲೂ ಚಾಲ್ತಿಯಲ್ಲಿವೆ.  ಈ ಮೂರೂ ರಾಜಕೀಯ ಸಂಸ್ಥೆಗಳು ತಕ್ಕ ಮಟ್ಟಿಗೆ ಸಮರ್ಪಕವಾಗಿ ಅಭಿವೃದ್ದಿ ಹೊಂದಿದ್ದು, ಗ್ರಾಮ ಮಟ್ಟ, ಪಂಗಡ ಮಟ್ಟ ಹಾಗೂ ರಾಜ್ಯ ಮಟ್ಟ ಸೇರಿದಂತೆ ಹಲವು ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. 
ಖಾಸಿಗಳ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲಿ, ಪ್ರತಿಯೊಂದು ಸಮುದಾಯವು ತನ್ನದೇ ಆದ ಪರಿಷತ್‌ ಹೊಂದಿದೆ. ಇದಕ್ಕೆ 'ದರ್ಬಾರ್‌ ಕುರ್‌ ಎನ್ನಲಾಗಿದೆ. ಮುಖ್ಯಸ್ಥನು ಇದರ ಅಧ್ಯಕ್ಷತೆ ವಹಿಸುತ್ತಿದ್ದನು.  ಆ ಪಂಗಡದ ಆಂತರಿಕ ವಿಚಾರಗಳನ್ನು ದರ್ಬಾರ್‌ ಅಥವಾ ಪರಿಷತ್‌ ನಿರ್ವಹಿಸುತ್ತಿತ್ತು.  ಇದೇ ರೀತಿ, ಪ್ರತಿಯೊಂದು ಗ್ರಾಮಕ್ಕೂ 'ಡರ್ಬನ್‌ ಷ್ನಾಂಗ್‌' (ಗ್ರಾಮ ದರ್ಬಾರ್‌ ಅಥವಾ ಪರಿಷತ್‌) ಎಂಬ ಒಂದು ಸ್ಥಳೀಯ ಶಾಸನವಿತ್ತು. ಗ್ರಾಮದ ಮುಖ್ಯಸ್ಥರು ಇದರ ಅಧ್ಯಕ್ಷತೆ ವಹಿಸುತ್ತಿದ್ದರು.  ಈ ಪರಿಷತ್‌ಗಳು ಅಥವಾ ದರ್ಬಾರ್‌ಗಳು, ನೈರ್ಮಲ್ಯ, ನೀರು ಸರಬರಾಜು, ಆರೋಗ್ಯ, ರಸ್ತೆಗಳು, ಶಿಕ್ಷಣ ಮತ್ತು ವ್ಯಾಜ್ಯಗಳ ಇತ್ಯರ್ಥದಂತಹ ಸಾಮಾನ್ಯ ವಿಚಾರಗಳಲ್ಲಿ ಆಡಳಿತದ ಪಾತ್ರ ಮುಖ್ಯವಾಗಿತ್ತು.  ಆದರೂ, ಅಂತರ-ಗ್ರಾಮ ವ್ಯಾಜ್ಯಗಳನ್ನು ಅಕ್ಕಪಕ್ಕದ ಖಾಸಿ ಗ್ರಾಮಗಳನ್ನು ಒಳಗೊಂಡ ಒಂದು ರಾಜಕೀಯ ಘಟಕದ ಮೂಲಕ ಇತ್ಯರ್ಥಗೊಳಿಸಲಾಗುತ್ತಿತ್ತು.  ಈ ರಾಜಕೀಯ ಘಟಕಕ್ಕೆ (ಬಲಾಢ್ಯ ಸಂಸ್ಥೆ) ರೇಯ್ಡ್‌ ಎಂದು ಕರೆಯಲಾಗುತ್ತಿತ್ತು.  ರೇಯ್ಡ್‌ ತನ್ನದೇ ಆದ ರೇಯ್ಡ್‌ ದರ್ಬಾರ್‌ ಎಂಬ ಪರಿಷತ್ತನ್ನು ಹೊಂದಿತ್ತು. ಬಸನ್‌ರು, ಲಿಂಗ್ಡೊಹ್‌ಗಳು ಅಥವಾ ಸರ್ದಾರ್‌ಗಳು ಎಂಬ ಚುನಾಯಿತ ಮುಖ್ಯಸ್ಥರು ಈ ರೇಯ್ಡ್‌ ದರ್ಬಾರ್‌ನ ಅಧ್ಯಕ್ಷತೆ ವಹಿಸುತ್ತಿದ್ದರು.  ರೇಯ್ಡ್‌ಗಿಂತಲೂ ಮೇಲಾಗಿ, ಸಯೀಮ್ಷಿಪ್‌ ಎಂಬ ಸರ್ವೊನ್ನತ ರಾಜಕೀಯ ಪ್ರಾಧಿಕಾರವಿತ್ತು.  ಸಯೀಮ್ಷಿಪ್‌ ಹಲವಾರು ರೇಯ್ಡ್‌ಗಳ ಸಮ್ಮಿಲನವಾಗಿತ್ತು. ಸಯೀಮ್‌ (ರಾಜ) ಇದರ ಅಧ್ಯಕ್ಷತೆ ವಹಿಸುವವನಾಗಿದ್ದನು.  ಸಯೀಮ್‌ 'ದರ್ಬಾರ್‌ ಹಿಮ' ಎಂಬ ರಾಜ್ಯ ಶಾಸನದ ಮೂಲಕ ಖಾಸಿ ರಾಜ್ಯವನ್ನು ಆಳುತ್ತಿದ್ದರು.  ಚುನಾವಣೆ ಬಹುಪಾಲು ವಯಸ್ಕ ಪುರುಷ ಮತದಾರರ ಮೂಲಕ ನಡೆಸಲಾಗುತ್ತಿತ್ತು.ಜೈನ್ ತಿಯಾಗಳುಗಳು ಖಾಸಿಗಳನ್ನು ಭಾಗಶಃ ಹೋಲುವಂತೆ ಮೂರು ಹಂತಗಳ ರಾಜಕೀಯ ವ್ಯವಸ್ಥೆ ಹೊಂದಿದ್ದರು.  ಸಯೀಮ್‌ ಇದರ ಸರ್ವೋನ್ನತ ರಾಜಕೀಯ ಪ್ರಾಧಿಕಾರವಾಗಿದ್ದರು.  ಈ ರಚನೆಯ ಎರಡನೆಯ ಮಟ್ಟದಲ್ಲಿ 'ರೇಯ್ಡ್‌ಗಳು' ಎಂಬ ಜೈನ್ ತಿಯಾಗಳ ಗ್ರಾಮಗಳ ಸಮ್ಮಿಲನವಿತ್ತು.  ಡೊಲೊಯ್‌ಗಳು ಇವುಗಳ ಮುಖ್ಯಸ್ಥರಾಗಿದ್ದರು. ಇವರು ರೇಯ್ಡ್‌ ಮಟ್ಟದಲ್ಲಿ, ಕಾರ್ಯಕಾರಿಯ, ದಂಡಾಧಿಕಾರಿಯ, ಧಾರ್ಮಿಕ ಹಾಗೂ ವಿಧ್ಯುಕ್ತ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು.  ಅತಿ ಕೆಳಗಿನ ಮಟ್ಟದಲ್ಲಿ, ಗ್ರಾಮದ ಮುಖ್ಯಸ್ಥರಿದ್ದರು.  ಪ್ರತಿಯೊಂದು ಆಡಳಿತ ಮಟ್ಟವೂ ತನ್ನದೇ ಆದ ಪರಿಷತ್‌ ಅಥವಾ ದರ್ಬಾರ್‌ಗಳನ್ನು ಹೊಂದಿತ್ತು.  ಬಹಳಷ್ಟು ಚುನಾವಣೆಗಳನ್ನು ವಯಸ್ಕ ಪುರುಷ ಮತದಾರರ ಮೂಲಕ ನಡೆಸಲಾಗುತ್ತಿತ್ತು.ಗಾರೊಗಳ ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ, ಗಾರೊ ಗ್ರಾಮಗಳ ಸಮೂಹವು ಸೇರಿ ಒಂದು A·king ಆಗಿತ್ತು.  ಗಾರೊಗಳ ರಾಜಕೀಯ ಸಂಸ್ಥೆಯಲ್ಲಿ ಏಕೈಕ ರಾಜಕೀಯ ಮತ್ತು ಆಡಳಿತ ಪ್ರಾಧಿಕಾರವಾದ ನೊಕ್ಮಾಗಳ ಮೇಲ್ವಿಚಾರಣೆಯಲ್ಲಿ A·king ಕಾರ್ಯನಿರ್ವಹಿಸುತ್ತಿತ್ತು.  ನೊಕ್ಮಾ ನ್ಯಾಯಾಂಗ ಹಾಗೂ ಶಾಸನದ ಕಾರ್ಯ ನಿರ್ವಹಿಸುತ್ತಿದ್ದರು.  A·king ಸಂಬಂಧಿತ ವಿಚಾರಗಳನ್ನು ಚರ್ಚಿಸಿ ಬಗೆಹರಿಸಲು ನೊಕ್ಮಾಗಳು ಸಭೆ ಸೇರುತ್ತಿದ್ದರು.  ಗಾರೊಗಳಲ್ಲಿ ಸಮರ್ಪಕವಾಗಿ ಸಂಘಟಿತ ಪರಿಷತ್‌ಗಳಾಗಲಿ ದರ್ಬಾರ್‌ಗಳಾಗಲೀ ಇರಲಿಲ್ಲ.ಕಳೆದ 3 ಮಾರ್ಚ್‌ 2008ರಂದು, ದೂರದ ಈಶಾನ್ಯ ಭಾರತದ ರಾಜ್ಯ ಮೇಘಾಲಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ ವಿಚತ್ರ ಹೆಸರುಗಳುಳ್ಳ ಅಭ್ಯರ್ಥಿಗಳ ಪೈಕಿ ಫ್ರಾಂಕೆನ್ಸ್ಟೀನ್‌ ಮೊಮಿನ್‌, ಬಿಲ್ಲಿ ಕಿಡ್‌ ಸಂಗ್ಮಾ ಹಾಗೂ ಅಡೊಲ್ಫ್‌ ಲು ಹಿಟ್ಲರ್‌ ಮಾರಾಕ್‌ ಎಂಬ ಮೂವರು ಪುರುಷರಿದ್ದರು.  ಕಳೆದ, 5 ಫೆಬ್ರವರಿ 2008ರಂದು ವರದಿಯಾದಂತೆ, 60 ಚುನಾವಣಾ ಕ್ಷೇತ್ರಗಳಿಗಾಗಿ 331 ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿದ್ದರು. ಇವರಲ್ಲಿ ವಿಚಿತ್ರ ಹೆಸರುಗಳಿಗೆ ಯಾವುದೇ ಬರವಿರಲಿಲ್ಲ. 




#Article 214: ಚದುರಂಗ (ಆಟ) (466 words)


ಚದುರಂಗ (ಚೆಸ್) ಇಬ್ಬರು ಆಟಗಾರರಿ೦ದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ - ಒಂದು ರಾಜ, ಒಂದು
ರಾಣಿ, ಎರಡು ಆನೆ, ಎರಡು ಕುದುರೆ, ಎರಡು ಒಂಟೆ ಮತ್ತು ಎಂಟು ಪದಾತಿಗಳು. ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ. ಪ್ರತಿ ಕಾಯಿಯೂ ಸಹ ವಿಶಿಷ್ಟ ರೀತಿಯಲ್ಲಿ ಚಲಿಸುತ್ತದೆ ಹಾಗೂ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸಬಲ್ಲುದು. ಆಟದ ಉದ್ದೇಶ ಎದುರಾಳಿಯ ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ.

ಚದುರಂಗ ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಶುದ್ಧವಾಗಿ ಆಟಗಾರರ ಆಲೋಚನೆ, ಯೋಜನಾ ಸಾಮರ್ಥ್ಯ ಮತ್ತು ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಹಾಗಿದ್ದೂ, ಈ ಆಟ ಎಷ್ಟು ಕ್ಲಿಷ್ಟವಾಗಿರಬಲ್ಲುದೆಂದರೆ ಒಂದು ಪಂದ್ಯದಲ್ಲಿ ಸಾಧ್ಯವಿರಬಹುದಾದ ಒಟ್ಟು ನಡೆಗಳ ಸಂಖ್ಯೆ ವಿಶ್ವದಲ್ಲಿರುವ ಎಲ್ಲ ಪರಮಾಣುಗಳ ಸಂಖ್ಯೆಗಿಂತಲೂ ಹೆಚ್ಚು ಎಂದು ಲೆಕ್ಕ ಹಾಕಲಾಗಿದೆ!

ಚದುರಂಗ, ಪ್ರಪಂಚದ ಅತ್ಯಂತ ಜನಪ್ರಿಯ ಆಟಗಳಲ್ಲಿಯೂ ಒಂದು. ಕೆಲವರ ವರ್ಣನೆಯಂತೆ, ಇದು ಕೇವಲ ಆಟವಾಗಿರದೆ ಇದೊಂದು ಕಲೆ, ವಿಜ್ಞಾನ, ವರ್ಚುಯಲ್ ಯುದ್ಧಕಲೆ, ಮತ್ತು ಮಾನಸಿಕ ವ್ಯಾಯಾಮ ಎಂದು ವರ್ಣಿಸಿದವರೂ ಉಂಟು. ಮನರಂಜನೆಗಾಗಿ ಹಾಗೂ ಸ್ಪರ್ಧಾತ್ಮಕವಾಗಿ ಪ್ರಪಂಚದಾದ್ಯಂತ ಈ ಆಟವನ್ನು ಆಡಲಾಗುತ್ತದೆ. ಅಂತರಜಾಲ ತಾಣಗಳ ಮೂಲಕ, ಈಮೇಲ್ ಮೂಲಕ ಸಹ ಇದನ್ನು ಬಹಳಷ್ಟು ಆಡಲಾಗುತ್ತದೆ. ಚದುರಂಗ ಆಟಕ್ಕೆ ಸಂಬಂಧಪಟ್ಟ ಇತರ ಆಟಗಳೂ ಪ್ರಪಂಚದ ವಿವಿಧೆಡೆಗಳಲ್ಲಿ ಜನಪ್ರಿಯ - ಚೀನಾದ್ ಶಿಯಾಂಗ್-ಕಿ, ಜಪಾನ್ ನ್ ಶೋಗಿ ಮೊದಲಾದವು ಈ ಗುಂಪಿಗೆ ಸೇರುತ್ತವೆ.

ಚದುರಂಗ ಉಗಮಗೊಂಡದ್ದು ಎಲ್ಲಿ ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಇವೆ - ಗ್ರೀಸ್, ಭಾರತ, ಈಜಿಪ್ಟ್ ಮೊದಲಾದ ದೇಶಗಳಲ್ಲಿ ಉಗಮಗೊಂಡಿತು ಎಂದು ವಿವಿಧ ಚರಿತ್ರಕಾರರ ಅಭಿಪ್ರಾಯ. ಆದರೆ ಸಾಮಾನ್ಯವಾಗಿ ಒಪ್ಪಲ್ಪಟ್ಟಿರುವ ಸಿದ್ಧಾಂತದಂತೆ ಇಂದಿನ ಚದುರಂಗ ಆಟದ ಪೂರ್ವರೂಪದ ಉಗಮ ಸುಮಾರು ಕ್ರಿ.ಶ. ಆರನೇ ಶತಮಾನದ ಭಾರತದಲ್ಲಿ ಆಯಿತು. ಭಾರತದಿಂದ ೧೦ ನೇ ಶತಮಾನದ ನಂತರ ಮಧ್ಯಪೂರ್ವ ದೇಶಗಳ ಮೂಲಕ ಸ್ಪೇನ್ ಮತ್ತು ಇತರ ಯೂರೋಪಿಯನ್ ದೇಶಗಳತ್ತ ಹರಡಿತು ಎಂದು ಹೇಳಲಾಗುತ್ತದೆ.

೧೫ ನೆಯ ಶತಮಾನದಿಂದ ಇತ್ತೀಚೆಗೆ ಚದುರಂಗದ ನಿಯಮಗಳು ಸಾಕಷ್ಟು ಬದಲಾಗಿವೆ. ವಿವಿಧ ಕಾಯಿಗಳು ಚಲಿಸುವ ರೀತಿಯೂ ಸಹ ಸ್ವಲ್ಪ ಬದಲಾಗಿದೆ. ಮೊದಲು ಒಂಟೆ ತನ್ನ ನಾಲ್ಕು ಮೂಲೆಗಳ ದಿಕ್ಕಿನಲ್ಲಿ ಎರಡು ಚೌಕಗಳಷ್ಟು ಮಾತ್ರ ಚಲಿಸಬಹುದಾಗಿತ್ತು. ರಾಣಿ ಇದೇ ದಿಕ್ಕುಗಳಲ್ಲಿ ಒಂದೇ ಚೌಕ ಚಲಿಸುತ್ತಿತ್ತು. ೧೫ ನೆಯ ಶತಮಾನದ ಕೊನೆಗೆ ಇಟಲಿ ದೇಶದಿಂದ ಹೊಸ ನಿಯಮಗಳ ಪಾಲನೆ ಶುರುವಾಯಿತು. ಪದಾತಿಗಳು ತಮ್ಮ ಮೊದಲ ನಡೆಯಲ್ಲಿ ಒಂದು ಅಥವಾ ಎರಡು ಚೌಕಗಳನ್ನು ಕ್ರಮಿಸುವ ಸಾಮರ್ಥ್ಯ ಪಡೆದವು. ರಾಣಿ ಅತ್ಯಂತ ಹೆಚ್ಚು ಸಾಮರ್ಥ್ಯವುಳ್ಳ ಕಾಯಿಯಾಯಿತು. ಆನ್ ಪಾಸಾನ್, ಕ್ಯಾಸಲಿಂಗ್ ಮೊದಲಾದ ವಿಶಿಷ್ಟ ನಿಯಮಗಳು ಸಹ ಬೆಳಕಿಗೆ ಬಂದವು.

ಚೆಸ್ ಕಾಯಿಗಳ ಆಕಾರ ಸಹ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ವಿನ್ಯಾಸವನ್ನು ಮೊದಲಿಗೆ ೧೮೪೯ ರಲ್ಲಿ ನಥಾನಿಯಲ್ ಕುಕ್ ಪ್ರಾರಂಭಿಸಿದ್ದು. ಆಗಿನ ಪ್ರಸಿದ್ಧ ಆಟಗಾರರಾದ ಹೊವರ್ಡ್ ಸ್ಟಾಂಟನ್ಇದನ್ನು ಪ್ರಸಿದ್ಧಗೊಳಿಸಿದ್ದರಿಂದ ಈ ವಿನ್ಯಾಸಕ್ಕೆ ಸ್ಟಾಂಟನ್ ವಿನ್ಯಾಸ ಎಂದೇ ಕರೆಯಲಾಗುತ್ತದೆ. ಚೆಸ್ ಪಂದ್ಯಾವಳಿಗಳಲ್ಲಿ ಉಪಯೋಗಿಸಲ್ಪಡುವ ರೀತಿಯ ಚೆಸ್ ಮಣೆ, ಕಾಯಿಗಳು ಮತ್ತು ಗಡಿಯಾರವನ್ನು ಚಿತ್ರದಲ್ಲಿ ಕಾಣಬಹುದು. ಅಂತಾರಾಷ್ಟ್ರೀಯವಾಗಿ ಈ ಆಟದ ಅಧಿಕೃತ ಉಸ್ತುವಾರಿ ನಡೆಸುವ ಸಂಸ್ಥೆ ಫಿಡೆ (FIDE). ವಿವಿಧ ದೇಶಗಳಲ್ಲಿ ಸಹ ಅನೇಕ ರಾಷ್ಟ್ರೀಯ ಸಂಸ್ಥೆಗಳು ಅಸ್ತಿತ್ವದಲ್ಲಿವೆ.

ಇತ್ತೀಚೆಗೆ ಅತ್ಯಂತ ಸಮರ್ಥವಾಗಿ ಚದುರಂಗವನ್ನು ಆಡಬಲ್ಲ ಕಂಪ್ಯೂಟರ್ ತಂತ್ರಾಂಶಗಳನ್ನು ತಯಾರಿಸಲಾಗಿದೆ. ೮೦ ರ ದಶಕದವರೆಗೂ ಕೇವಲ ಕುತೂಹಲವೆಂದು ಪರಿಗಣಿಸಲಾಗಿದ್ದ ಇಂಥ ತಂತ್ರಾಂಶಗಳು, ಇತ್ತೀಚೆಗೆ ಪ್ರಸಿದ್ಧ ಚೆಸ್ ಆಟಗಾರರನ್ನು ಪಂದ್ಯಾವಳಿಗಳಲ್ಲಿ ಸೋಲಿಸುವಷ್ಟು ಸಾಮರ್ಥ್ಯವನ್ನು ಪಡೆದಿವೆ. ಎಲ್ಲ ಗಣಕಯಂತ್ರಗಳ ಮೇಲೂ ಕೆಲಸ ಮಾಡುವ ಕೆಲವು ಪ್ರಸಿದ್ಧ ತಂತ್ರಾಂಶಗಳೆಂದರೆ ಚೆಸ್ ಮಾಸ್ಟರ್, ಫ್ರಿಟ್ಜ್ (Fritz). ಇನ್ನು ಕೆಲವು ಕೇವಲ ಸಾಫ್ಟ್‍ವೇರ್ ತಂತ್ರಾಂಶಗಳಾಗಿರದೆ ಅನೇಕ ಸಿಪಿಯು ಗಳನ್ನೊಳಗೊಂಡ ಸಮರ್ಥ ಕಂಪ್ಯೂಟರ್‍ಗಳು - ಉದಾಹರಣೆಗಳೆಂದರೆ ಡೀಪ್ ಬ್ಲೂ, ಹೈಡ್ರಾ.

ಚದುರಂಗದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರರೆಂದರೆ ವಿಶ್ವನಾಥನ್ ಆನಂದ್. ಇತರ ಕೆಲವು ಪ್ರಸಿದ್ಧ ಭಾರತೀಯ ಆಟಗಾರರೆಂದರೆ ಮೀರ್ ಸುಲ್ತಾನ್ ಖಾನ್, ಪ್ರವೀಣ್ ತಿಪ್ಸೆ, ದಿಬ್ಯೇಂದು ಬರುವಾ, ಅಭಿಜಿತ್ ಕುಂಟೆ, ಕೃಷ್ಣನ್ ಶಶಿಕಿರಣ್, ಪೆಂಡ್ಯಾಲ ಹರಿಕೃಷ್ಣ, ವಿಜಯಲಕ್ಷ್ಮಿ, ಸ್ವಾತಿ ಘಾಟೆ, ಭಾಗ್ಯಶ್ರಿ ತಿಪ್ಸೆ ಇತ್ಯಾದಿ. ಪ್ರಪಂಚದ ಕೆಲ ಪ್ರಸಿದ್ಧ ಆಟಗಾರರಲ್ಲಿ ಕೆಲವರೆಂದರೆ ಪಾಲ್ ಮಾರ್ಫಿ (೧೮೩೭ - ೧೮೮೪), ವಿಲಹೆಲ್ಮ್ ಸ್ಟೀನಿಟ್ಜ್ (೧೮೩೬ - ೧೯೦೦), ಹೋಸೆ ರಾವುಲ್ ಕಾಪಾಬ್ಲಾಂಕಾ (೧೮೮೮ - ೧೯೪೨), ಬಾಬಿ ಫಿಷರ್, ಅನತೋಲಿ ಕಾರ್ಪೋವ್, ಗ್ಯಾರಿ ಕ್ಯಾಸ್ಪರೋವ್, ವ್ಲಾಡಿಮಿರ್ ಕ್ರಾಮ್ನಿಕ್, ಬೋರಿಸ್ ಗೆಲ್ಫಾಂಡ್, ಮೊದಲಾದವರು.




#Article 215: ಸಿಕ್ಕಿಂ (138 words)


ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ  ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.

Namgyal ಮನೆತನವು 17ನೇ ಶತಮಾನದಲ್ಲಿ ಸಿಕ್ಕಿಂ ನಲ್ಲಿ ಆಡಳಿತ ನಡೆಸುತ್ತಿತ್ತು. ಈ ಮನೆತನದ ರಾಜರು ಬೌದ್ಧ ಸನ್ಯಾಸಿ ರಾಜರಾಗಿದ್ದರು, ಇವರನ್ನು chogyal ಗಳೆಂದು ಕರೆಯಲಾಗುತ್ತಿತ್ತು.೧೮೯೦ ರಲ್ಲಿ ಸಿಕ್ಕಿಂ ಬ್ರಿಟಿಷ್ ಇಂಡಿಯಾದ ಆಡಳಿತಕ್ಕೊಳಪಟ್ಟಿತ್ತು.

ಸಿಕ್ಕಿಂ ಒಂದು ವಿಶಿಷ್ಟ ಮತ್ತು ಬಹುಸಂಸ್ಕೃತಿಯ ರಾಜ್ಯ, ಇಲ್ಲಿ ಇಂಗ್ಲೀಷ್,ನೇಪಾಳಿ, ಸಿಕ್ಕಿಂಮಿಸ್ಸ,ಲೇಪಚ್ಚ ಭಾಷೆಗಳನ್ನು ಅಧಿಕೃತವಾಗಿಯೂ, ಮತ್ತು ಆಡಳಿತದ ಅನುಕೂಲಕ್ಕಾಗಿ ಲಿಂಬು,ಮಗರ್, ರಾಯ್, ತಮಂಗ್ ಮುಂತಾದ ಭಾಷೆಗಳನ್ನು ಬಳಸುತ್ತಾರೆ.
ಇಂಗ್ಲಿಷ್ ಶಾಲೆಗಳಲ್ಲಿ ಮತ್ತು ಸರ್ಕಾರಿ ಕಡತಗಳಲ್ಲಿ ಬಳಸುವ ಭಾಷೆಯಾಗಿದೆ.

ಸಿಕ್ಕಿಂನ ಆರ್ಥಿಕತೆಗೆ ಸಂಪೂರ್ಣವಾಗಿ ಕೃಷಿ ಮತ್ತು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.

ಸಿಕ್ಕಿಂನಲ್ಲಿ ಭಾರತದಲ್ಲಿ ಹೆಚ್ಚು ಸಾಂಬಾರ್ ಪದಾರ್ಥವಾದ ಚಕ್ಕೆಯನ್ನು ಬೆಳೆಯಲಾಗುತ್ತದೆ, ಮತ್ತು ಇದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.

ಲೆಪಚ್ಚಗಳನ್ನು ಸಿಕ್ಕಿಂನ ಮೂಲನಿವಾಸಿಗಳು ಎಂದು ತಿಳಿಯಲಾಗಿದೆ, ಆದರೆ ಲಿಂಬುಸ್ ಮತ್ತು ಮಗರ್ ಗಳು ಕೂಡ ಸಿಕ್ಕಿಂನ ಪೂರ್ವ ಮತ್ತು ದಕ್ಷಿಣ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಲೆಪಚ್ಚಗಳ ಮೊದಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ.
 ಎಂಟನೇ ಶತಮಾನದಲ್ಲಿ ಬೌದ್ಧ ಸನ್ಯಾಸಿಯಾದ ಪದ್ಮಸಂಭವ ಎಂಬುವವರು ಸಿಕ್ಕಿಂನಲ್ಲಿ ಬೌದ್ಧ ಧರ್ಮವನ್ನು ಹರಡಲು ಪ್ರಮುಖ ಕಾರಣಕರ್ತರಾಗಿದ್ದಾರೆ, ಇವರನ್ನು ಗುರು ರಿನ್ಪೋಚೆ ಎಂದು ಕೂಡ ಸಂಬೋಧಿಸುತ್ತಾರೆ.

ಹಿಂದೂ ಧರ್ಮವು ಒಂದನೆಯ ಸ್ಥಾನದಲ್ಲಿದ್ದರೆ,ಬೌದ್ಧದರ್ಮವು ಎರಡನೆಯ ಸ್ಥಾನದಲ್ಲಿದೆ.




#Article 216: ನಾಗಾಲ್ಯಾಂಡ್ (1154 words)


ನಾಗಾಲ್ಯಾಂಡ್ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಇದು ಪಶ್ಚಿಮದಲ್ಲಿ ಅಸ್ಸಾಂ, ಉತ್ತರದಲ್ಲಿ ಅರುಣಾಚಲ ಪ್ರದೇಶ, ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ದಕ್ಷಿಣದಲ್ಲಿ ಮಣಿಪುರದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ನಾಗಾಲ್ಯಾಂಧಿನ ರಾಜಧಾನಿ ಕೊಹಿಮ. 

ನಾಗಾಲ್ಯಾಂಡ್ ಭಾರತ ಗಣರಾಜ್ಯದ ಈಶಾನ್ಯ ಭಾಗದಲ್ಲಿರುವ ಒಂದು ಪರ್ವತಮಯ ರಾಜ್ಯ. ಅಸ್ಸಾಂ ರಾಜ್ಯಕ್ಕೂ ಮೈನ್‍ಮಾರ್ ನಡುವೆ ಇದೆ. ಈ ರಾಜ್ಯದ ಪಶ್ಚಿಮ ಮತ್ತು ವಾಯವ್ಯಕ್ಕೆ ಅಸ್ಸಾಮ್ ರಾಜ್ಯ, ಪೂರ್ವಕ್ಕೆ ಮೈನ್‍ಮಾರ್ ಮತ್ತು ದಕ್ಷಿಣಕ್ಕೆ ಮಣಿಪುರ ಇದೆ; ಪೂರ್ವದಲ್ಲಿ ಮೈನ್‍ಮಾರ್ ಗಡಿಯಿಂದ ನಾಗಾಲ್ಯಾಂಡಿನ ಉತ್ತರದ ಮೊನಚಾದ ತುದಿಯವರೆಗೆ ಅರುಣಾಚಲ ಪ್ರದೇಶ ಹಬ್ಬಿದೆ. ನಾಗಾಲ್ಯಾಂಡಿನ ವಿಸ್ತೀರ್ಣ 16,579 ಚ.ಕಿಮೀ. ಜನಸಂಖ್ಯೆ ೧೯,೮೦,೬೦೨ (೨೦೧೧)
, ರಾಜಧಾನಿ ಕೋಹಿಮ. 

ರಾಜ್ಯದ ಬಹುಭಾಗ ಹಿಮಾಲಯ ಪರ್ವತ ವ್ಯವಸ್ಥೆಗೆ ಒಳಪಟ್ಟಿದೆ. ಉತ್ತರದಲ್ಲಿ ಬ್ರಹ್ಮಪುತ್ರಾ ಬಯಲಿನಿಂದ ಥಟ್ಟನೆ ಸುಮಾರು 600 ಮೀ.ಗೆ ಏರುವ ನಾಗಾ ಬೆಟ್ಟಗಳು ಪಶ್ಚಿಮದಲ್ಲಿ 1,800 ಮೀ.ಗೂ ಹೆಚ್ಚು ಎತ್ತರವಾಗಿವೆ. ಅಲ್ಲಲ್ಲಿ ಕೆಲವು ಶಿಖರಗಳು 3,050 ಮೀ.ಗಿಂತ ಎತ್ತರವಾಗಿವೆ. ಇವುಗಳ ಪೂರ್ವಕ್ಕೆ ಇದಕ್ಕೆ ಸೇರಿಕೊಂಡಂತೆ ಇರುವ ಪಾಟ್ಕೈ ಶ್ರೇಣಿ ಈ ರಾಜ್ಯವನ್ನು ಮೈನ್‍ಮಾರ್‍ನಿಂದ ಪ್ರತ್ಯೇಕಿಸುತ್ತದೆ. ಮೈನ್‍ಮಾರ್ ಗಡಿಯಲ್ಲಿರುವ ಸಾರಮತಿ ಶಿಖರದ ಎತ್ತರ 3,826 ಮೀ. ರಾಜ್ಯದ ವಾಯವ್ಯ ಭಾಗದಲ್ಲಿ ಬ್ರಹ್ಮಪುತ್ರಾ ನದಿಯ ಉಪನದಿಗಳು ಹರಿಯುತ್ತವೆ. ಆಗ್ನೇಯ ಭಾಗ 1,200 ಮೀ.ಗಿಂತ ಎತ್ತರವಾಗಿದೆ. ಮೈನ್‍ಮಾರ್‍ನಲ್ಲಿ ಹರಿಯುವ ಚಿಂದ್ವಿನ್ ನದಿಯ ಉಪನದಿಗಳ ಜಲಾನಯನ ಭೂಮಿ ಇದು. ನೈಋತ್ಯ ಭಾಗದಲ್ಲಿ ಬರಾಕ್ ನದಿ ಉಗಮಿಸುತ್ತದೆ. ಬೆಟ್ಟಗಳು ಅಲ್ಲಲ್ಲಿ ಕತ್ತರಿಸಿದಂತಿವೆ.

ನಾಗಾಲ್ಯಾಂಡಿನದು ಮಾನ್ಸೂನ್ ವಾಯುಗುಣ. ಸರಾಸರಿ ವಾರ್ಷಿಕ ಮಳೆ ಆಗ್ನೇಯದಲ್ಲಿ 1,813 ಮಿ.ಮೀ. ಈಶಾನ್ಯದಲ್ಲಿ 2590 ಮಿ.ಮೀ.ಗಿಂತ ಅಧಿಕ. ಉಷ್ಣತೆ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ನೆಲೆದ ಎತ್ತರಕ್ಕೆ ಅನುಗುಣವಾಗಿ ಬೇಸಗೆಯಲ್ಲಿ 21(ಛಿ ನಿಂದ 40(ಛಿ ವರೆಗೆ ವ್ಯತ್ಯಾಸವಾಗುತ್ತದೆ. ಚಳಿಗಾಲದಲ್ಲಿ 4(ಛಿ ಕನಿಷ್ಠ ಮಿತಿ. ವಾತಾವರಣದಲ್ಲಿಯ ತೇವದಿಂದಾಗಿ ಬೇಸಗೆಯಲ್ಲಿ ತಗ್ಗಿನ ಪ್ರದೇಶಗಳಲ್ಲಿ ಧಗೆ ಹೆಚ್ಚು.

s roost in Nagaland. That is about 50 falcons per square kilometre.
ಬೆಟ್ಟಗಳು ದಟ್ಟವಾದ ಕಾಡಿನಿಂದ ಆವೃತವಾಗಿವೆ. ಇಲ್ಲಿಯ ಕಾಡುಗಳನ್ನು ನಿತ್ಯಹಸುರಿನ ಮರಗಳ ಕಾಡು. ಅಗಲ ಎಲೆಗಳ ಮರಗಳ ಕಾಡು. ಪೀತದಾರು ಮರಗಳ ಕಾಡು ಎಂದು ವಿಂಗಡಿಸಬಹುದು. ಸರದಿ ಬೇಸಾಯಕ್ಕಾಗಿ (ಝೂಮ್) ಕಾಡುಗಳನ್ನು ಕಡಿದ ಎಡೆಗಳಲ್ಲಿ ಎತ್ತರವಾದ ಹುಲ್ಲು, ಬಿದಿರು, ಕುರುಚಲು ಬೆಳೆದಿವೆ. 1,220 ಮೀ.ಗಳಿಗಿಂತ ಕೆಳಗಿನ ಪ್ರದೇಶದಲ್ಲಿ ನಿತ್ಯಹಸಿರು ಕಾಡುಗಳಿವೆ. ಬೆಲೆಬಾಳುವ ಸಾಗುವಾನಿ ಮರಗಳೂ, ಬಿದಿರೂ ಇವೆ. ಪೂರ್ವ ಮತ್ತು ಆಗ್ನೇಯ ಭಾಗದ ಎತ್ತರದ ಪ್ರದೇಶಗಳಲ್ಲಿ ಓಕ್, ಪೈನ್ ಮತ್ತು ಇತರ ಶಂಕುಪರ್ಣಿ ಮರಗಳಿವೆ.

ತಗ್ಗಿನ ಬೆಟ್ಟಗಳಲ್ಲಿರುವ ಪ್ರಾಣಿಗಳು ಖಡ್ಗಮೃಗ, ಆನೆ, ಹುಲಿ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ, ಕಾಡುಹಂದಿ ಮತ್ತು ಕಾಡೆತ್ತು, ಹಲವು ಬಗೆಯ ಕೋತಿಗಳು, ಮುಳ್ಳುಹಂದಿ, ಪ್ಯಾಂಗೊಲಿನ್, ಆಡು, ಕಾಡುನಾಯಿ, ನರಿ, ಪುನುಗಿನ ಬೆಕ್ಕು ಮತ್ತು ಮುಂಗುಸಿ. ಇಲ್ಲಿ ಹಲವು ಬಗೆಯ ಹಕ್ಕಿಗಳಿವೆ.

ರಾಜ್ಯದ ಜನಸಾಂದ್ರತೆ ಚ.ಕೀ.ಮೀ.ಗೆ 31 ಇದ್ದು ಪ್ರತಿ 1000 ಪುರುಷರಿಗೆ 871 ಸ್ತ್ರೀಯರಿದ್ದರು. ಈ ರಾಜ್ಯದಲ್ಲಿ ಹಿಂದುಗಳು. ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು ಮತ್ತು ಬೌದ್ಧರು ಇದ್ದಾರೆ. ನಾಗಾಗಳು ಇಂಡೋ-ಮುಂಗೊಲಾಯಿಡ್ ಬುಡಕಟ್ಟಿಗೆ ಸೇರಿದವರು. ವಿವಿಧ ಭಾಗಗಳಲ್ಲಿ ವಿವಿಧ ರೀತಿ-ನೀತಿ ಅನುಸರಿಸುವ ಅಂಗಮಿ, ಸೇಮಾ, ರೆಂಗ್ಮಾ, ಜಾಕೇಸಾಂಗ್, ಸಂಗ್‍ತಮ್, ಚಾಂಗ್, ಪೋಮ್, ಇಮ್, ಚುಂಗರ್, ಬೇನ್‍ಮುಂಗರ್, ಜೇóಲಿಯಾಂಗ್, ಕುಕೀ ಮುಂತಾದ ಹದಿನೇಳು ವಿಭಿನ್ನ ಪಂಗಡಗಳಿವೆ. ಅವರೆಲ್ಲ ಇಂಡೋ-ಟಿಬೆಟನ್ ಮೂಲದ ಮೂವತ್ತು ಭಾಷೆ-ಉಪಭಾಷೆಗಳನ್ನು ಬಳಸುತ್ತಾರೆ. ಈ ಜನ ಮಾತನಾಡುವಾಗ ಹೇರಳವಾಗಿ ಸಂಯುಕ್ತ ಪದಗಳನ್ನು ಬಳಸುತ್ತಾರಾದರೂ ಮಾತಾಡುವ ರೀತಿಯೊಳಗೊಂದು ಗೇಯತೆ ಇದೆ. ಯುದ್ಧ ಜನಾಂಗವೆಂದು ಹೆಸರಾದ ನಾಗಾಗಳು ಇಂದಿಗೂ ಯುದ್ಧ ಮತ್ತು ಬೇಟೆಯ ಉತ್ಸಾಹ ಮತ್ತು ಕ್ಷಾತ್ರಪರಂಪರೆಗಳನ್ನು ಕಾಯ್ದುಕೊಂಡು ಬಂದಿರುವುದು ಅವರ ಯುದ್ಧ ನೃತ್ಯಗಳಲ್ಲೂ ಆಟ ಪಂದ್ಯಗಳಲ್ಲೂ ಉತ್ಸವ ಮೇಳಗಳಲ್ಲೂ ಕಂಡುಬರುತ್ತದೆ. 19ನೆಯ ಶತಮಾನದವರೆಗೂ ಈ ಜನಗಳಲ್ಲಿ ಗುಲಾಮಗಿರಿ ಪದ್ಧತಿ, ದೇವತೆಗಳಿಗೆ ಮನುಷ್ಯನ ಬಲಿ ಕೊಡುವ ರೂಢಿ, ಮನುಷ್ಯರ ತಲೆ ಬೇಟೆಯಾಡುವ ಹವ್ಯಾಸ ಇವೆಲ್ಲ ಬಹು ಪ್ರಿಯವಾಗಿದ್ದುವು. ನೆರೆಹಳ್ಳಿಗಳಲ್ಲಿರುವ ವೈರಿಗಳ ತಲೆ ಬೇಟೆಯಾಡಿ ಬರುವವರು ನಿಜವಾದ ಬಂಟಾಳುಗಳೆಂಬ ಭಾವನೆ ಈ ಜನರಲ್ಲಿತ್ತು. ವೈರಿಗಳ ತಲೆಗಳನ್ನು ತುಂಡರಿಸಿ ತಂದವನು ಅವಿವಾಹಿತ ಯುವಕನಾಗಿದ್ದರಂತೂ ಅವನಿಗೆ ಅಪಾರ ಸನ್ಮಾನ. ಅವನ ಹಳ್ಳಿಯ ಅತ್ಯಂತ ಸುಂದರ ಕನ್ಯೆಯ ಕೈಹಿಡಿಯುವ ಬಹುಮಾನ ಇವು ದೊರಕುತ್ತಿದ್ದುವು. ಇಲ್ಲಿಯ ಕೆಲವು ಪಂಗಡಗಳಲ್ಲಿ ಬಹುಪತ್ನೀತ್ವವೂ ಮತ್ತೆ ಕೆಲವರಲ್ಲಿ ಏಕಪತ್ನೀತ್ವವೂ ಜಾರಿಯಲ್ಲಿವೆ. ಮನಸ್ಸಿಗೆ ಬಂದಾಗ ವಿವಾಹವಿಚ್ಛೇದನ ಪಡೆದು ಬೇರೆ ಮದುವೆಯಾಗುವ ರೂಢಿಯೂ ಬಳಕೆಯಲ್ಲಿದೆ. ಈ ಜನರಿಗೆ ದೆವ್ವ ಮತ್ತು ಭೂತಗಳಲ್ಲಿ ನಂಬಿಕೆಯುಂಟು. ಪುರುಷರು ನಡುವಿಗೊಂದು ತುಂಡು ಬಟ್ಟೆಯನ್ನೂ ಸ್ತ್ರೀಯರು ಸೋಗಾಮಿನಿ, ತಾಟ್-ನೀ ಟುಕೋ-ಲೀ-ಮಿನಿ, ಜೋಯೀ-ಲೀ-ಮಿನಿ, ಲಹು ಪಿಟಿಕಾ ಮುಂತಾದ ಹೆಸರುಗಳುಳ್ಳ ಮಿಶ್ರಬಣ್ಣದ ವಸ್ತ್ರಗಳನ್ನೂ ತೊಟ್ಟು ಕೈ ಕೊರಳು ಕಿವಿಗಳಲ್ಲಿ ಕವಡೆ, ಹರಳು, ಬಿದಿರುಗಳ ಆಭರಣಗಳನ್ನು ಧರಿಸುತ್ತಾರೆ. ಇವರ ಮುಖ್ಯ ಆಹಾರ ಅನ್ನ. ಅತಿಥಿಗಳೂ ವಯೋವೃದ್ಧರೂ ಊಟ ಮಾಡಿಯಾದ ಬಳಿಕ ಇತರರ ಊಟ ನಡೆಯುವುದು ಇಲ್ಲಿಯ ರೂಢಿ. ಬೇಟೆ ಈ ಜನರಿಗೆ ಬಲು ಪ್ರಿಯವಾದ ಹವ್ಯಾಸ. 

ನಾಗಾಲ್ಯಾಂಡ್ ರಾಜ್ಯವನ್ನು ಕೋಹಿಮ, ಮೊಕೋಕ್‍ಚಂಗ್, ತುಯೆನ್‍ಸಾಂಗ್ ಮಾನ್, ಜûುನ್ಹಿಬೊಟೊ, ವೊಕಾ, ಧೀಮಾಪುರ್ ಮತ್ತು ಫೆಕ್ ಎಂಬ ಎಂಟು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಕೋಹಿಮ, ಮೊಕೋಕ್‍ಚಂಗ್ ಮತ್ತು ತುಯೆನ್‍ಸಾಂಗ್ ಇವು ಆಯಾ ಜಿಲ್ಲೆಗಳ ಮುಖ್ಯ ಪಟ್ಟಣಗಳು. ರಾಜ್ಯದ ರಾಜಧಾನಿ ಕೋಹಿಮ. ರಾಜ್ಯದಲ್ಲಿ ಒಟ್ಟು 960 ಗ್ರಾಮಗಳಿವೆ. 169 ಗ್ರಾಮಗಳಲ್ಲಿ ತಲಾ 1,000ಕ್ಕಿಂತ ಕಡಿಮೆ ಜನವಸತಿಯಿತ್ತು.

ಈ ರಾಜ್ಯದ 90% ಜನ ಬೇಸಾಯಗಾರರು. ಗುಡ್ಡಬೆಟ್ಟಗಳಲ್ಲಿರುವ ಗಿಡಗಂಟೆಗಳಿಗೆ ಬೆಂಕಿ ಹಚ್ಚಿ ಸುಟ್ಟು ತೆರವಾದ ಜಾಗದಲ್ಲಿ ವ್ಯವಸಾಯ ಮಾಡುವ ಪದ್ಧತಿ ಇದೆ. ಕೋಗಿಲೆ ಕೂಗಿದ ಅನಂತರ ಬತ್ತದ ಬಿತ್ತನೆ ಮಾಡಿದರೆ ಹುಲುಸಾದ ಬೆಳೆ ಬರುತ್ತದೆಂದು ಜನರ ನಂಬಿಕೆ. ಈ ರಾಜ್ಯದಲ್ಲಿ ಬತ್ತವೇ ಪ್ರಮುಖ ಬೆಳೆ. ಇತರ ಧಾನ್ಯಗಳೂ ಮೆಣಸಿನಕಾಯಿ ಬೇಳೆಕಾಳುಗಳೂ ಹತ್ತಿ, ಕಬ್ಬು, ಬಟಾಟೆಗಳೂ ಬೆಳೆಯುತ್ತವೆ. ಬೇಸಾಯ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಆರಂಭವಾಗುತ್ತದೆ. ಮೊದಲು ಹೆಂಗಸರು ಹೊಲಗಳಲ್ಲಿಯ ಹಳೆಯ ಕಸ ಕೊಳೆ ತೆಗೆಯುತ್ತಾರೆ. ಗಂಡಸರು ಅಗೆಯುವ ಕೆಲಸ ಮಾಡುತ್ತಾರೆ. ಎರಡು ತಿಂಗಳಲ್ಲಿ ಗಿಡಮರಗಳನ್ನು ಸುಡುವ ಕೆಲಸ ನಡೆಯುತ್ತದೆ. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಸಣ್ಣ ಕಾಳುಗಳ ಬಿತ್ತನೆಯೂ ಏಪ್ರಿಲ್ ತಿಂಗಳಲ್ಲಿ ಬತ್ತದ ಬಿತ್ತನೆಯೂ ನಡೆಯುತ್ತದೆ. ಕೊಯಿಲಿಗೆ ಬಂದ ಬೆಳೆಗಳನ್ನು ಕೆಲವರು ಕೈಯಿಂದಲೇ ಕೀಳುತ್ತಾರೆ. ಕುಡುಗೋಲು ಬಳಸುವುದೂ ಉಂಟು. ಸುಗ್ಗಿಯಾದ ಬಳಿಕ ಧಾನ್ಯಗಳನ್ನು ಬಿದಿರಿನ ಕಣಜಗಳಲ್ಲಿ ಸಂಗ್ರಹಿಸಿಡುತ್ತಾರೆ. ರಾಜ್ಯದ ಕೆರೆಕೊಳ್ಳಗಳಲ್ಲಿ ಮೀನು ಹಿಡಿಯುತ್ತಾರೆ. ಅರಣ್ಯಗಳಿಂದ ಬಿದಿರು, ಓಕ್, ಮನೆ ಕಟ್ಟುವ ಮತ್ತು ಚಪ್ಪರಗಳಿಗೆ ಬಳಸುವ ಮರ ಉರುವಲು, ಗೋಂದು ಮುಂತಾದವು ದೊರೆಯುತ್ತವೆ.

ರಾಜ್ಯದಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಕಡಿಮೆ. ಅನೇಕ ಗ್ರಾಮಗಳಲ್ಲಿ ನೇಯ್ಗೆ ಕೆಲಸ ನಡೆಯುತ್ತದೆ. ಬಟ್ಟೆ, ರೇಷ್ಮೆ, ಬಿದಿರಿನ ಬುಟ್ಟಿಹೆಣಿಗೆ, ಕೃಷಿಗಾಗಿ ಮತ್ತು ಬೇಟೆಗಾಗಿ ಮರದ ಉಪಕರಣಗಳ ತಯಾರಿಕೆ- ಇವು ಕೆಲವು ಸಣ್ಣ ಕೈಗಾರಿಕೆಗಳು. 3 ನೇಯ್ಗೆ ಕೇಂದ್ರಗಳನ್ನೂ 3 ಗುಡಿಕೈಗಾರಿಕೆಗಳ ಕೇಂದ್ರಗಳನ್ನೂ 3 ರೇಷ್ಮೆ ಕ್ಷೇತ್ರಗಳನ್ನೂ ಒಂದು ಕುಶಲ ವಸ್ತು ತಯಾರಿಕೆಯ ತರಬೇತಿ ಮತ್ತು ಉತ್ಪಾದನ ಕೇಂದ್ರವನ್ನೂ ಸಣ್ಣ ಕೈಗಾರಿಕೆಗಳ ಸೇವಾಕೇಂದ್ರವೊಂದನ್ನೂ ಸರ್ಕಾರ ನಡೆಸುತ್ತಿದೆ. ದಿಮಾಪುರ (3,08,382) ಈ ಕೈಗಾರಿಕೆಗಳ ವ್ಯಾಪಾರ ಕೇಂದ್ರ. ರಾಜಧಾನಿ ಕೋಹಿಮ (3,14,366). ಮೊಕೋಕ್‍ಚಂಗ್ (2,27,320) ಇತರ ಪಟ್ಟಣಗಳು. ಸಾರಿಗೆ-ಸಂಪರ್ಕ: ಪರ್ವತ ಪ್ರಧಾನವಾದ ಈ ರಾಜ್ಯದಲ್ಲಿ ಸಾರಿಗೆ-ಸಂಪರ್ಕ ಕಷ್ಟಕರ. ರಾಜ್ಯದ 9,860 ಕಿ.ಮೀ. ಉದ್ದದ ರಸ್ತೆಯಲ್ಲಿ 996 ಗ್ರಾಮಗಳಿಗೆ ಸಂಪರ್ಕವೇರ್ಪಡಿಸಿದೆ. ರಾಜ್ಯದಲ್ಲಿ 8.04 ಕಿ.ಮೀ. ರೈಲು ಮಾರ್ಗವಿದ್ದು ಈಗ ಮತ್ತಷ್ಟು ದೂರ ವಿಸ್ತರಿಸಿದೆ. ದಿಮಾಪುರ ಮುಖ್ಯ ರೈಲ್ವೆ ನಿಲ್ದಾಣ. ಇದು ನಾಗಾಲ್ಯಾಂಡಿನ ಪ್ರವೇಶದ್ವಾರವೆಂದು ಪ್ರಸಿದ್ಧವಾಗಿದೆ. ಆರೋಗ್ಯ: ಈ ಪ್ರದೇಶದ ಜನ ಸಾಮಾನ್ಯವಾಗಿ ದೃಢಕಾಯರು. ಇವರು ಯುದ್ಧ ಜನಾಂಗವೆಂದೇ ಹೆಸರಾದವರು. ಇಲ್ಲಿಯ ಸ್ತ್ರೀಪುರುಷರಿಗೆ ತಮ್ಮ ಮೈಕಟ್ಟು ಮತ್ತು ಸ್ನಾಯುಬಲಗಳ ಬಗ್ಗೆ ಬಲು ಅಭಿಮಾನ. ರಾಜ್ಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳೂ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಉಪ ಕೇಂದ್ರಗಳೂ ಕ್ಷಯರೋಗ ಆಸ್ಪತ್ರೆಗಳೂ ಇವೆ.

ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳೂ ಮಾಧ್ಯಮಿಕ ಶಾಲೆಗಳೂ ಪ್ರೌಢಶಾಲೆಗಳೂ ಕಾಲೇಜುಗಳೂ ತರಬೇತಿ ಕೇಂದ್ರಗಳೂ ಒಂದು ತಾಂತ್ರಿಕ ವಿದ್ಯಾಲಯವೂ ಇದೆ.

ಹದಿಮೂರನೆಯ ಶತಮಾನದಲ್ಲಿ ಈಗಿನ ಮೈನ್‍ಮಾರ್ ಪ್ರದೇಶದ ಸರದಾರನೊಬ್ಬ ಪಾಟ್ಕೈ ಶ್ರೇಣಿಯನ್ನು ದಾಟಿ ಬಂದು ನಾಗಾ ಜನರ ಮೇಲೆ ದಾಳಿ ಮಾಡಿ ಸೋಲಿಸಿ, ಅವರ ಮೇಲೆ ಪ್ರಭುತ್ವ ಸ್ಥಾಪಿಸಿಕೊಂಡಿದ್ದನೆಂದು ದಾಖಲೆಯಿದೆ. ತದನಂತರ ಅಸ್ಸಾಮಿನ ಅಹೋಮ್ ದೊರೆಗಳು ಈ ಪ್ರದೇಶವನ್ನಾಳಿದರು. 19 ನೆಯ ಶತಮಾನದಲ್ಲಿ ಭಾರತದ ಇತರ ಪ್ರದೇಶಗಳಂತೆ ಅಸ್ಸಾಂ ಕೂಡ ಬ್ರಿಟಿಷರ ಆಡಳಿತಕ್ಕೊಳಪಟ್ಟಿತು. ನಾಗಾ ಪರ್ವತಪ್ರದೇಶವೂ ಅವರ ಅಧೀನವಾಯಿತು. 1866ರಲ್ಲಿ ಬ್ರಿಟಿಷರು ಅಸ್ಸಾಮನ್ನು ಗಡಿಜಿಲ್ಲೆ ಎಂದು ಪರಿಗಣಿಸಿದರು. 1880ರಿಂದ ನಾಗಾಲ್ಯಾಂಡನ್ನು ಬ್ರಿಟಿಷ್ ಆಡಳಿತ ಪ್ರದೇಶವೆಂದು ಕಾದಿಡಲಾಯಿತು. ಆಡಳಿತ ಯಾರದಿದ್ದರೂ ನಾಗಾ ಜನರು ತಮ್ಮ ಸ್ವಯಂ ಪಂಗಡ ಪದ್ಧತಿಯನ್ನು ಬಿಟ್ಟುಕೊಡಲಿಲ್ಲ. 1928ರಲ್ಲಿ ಇಂಗ್ಲೆಂಡಿನಿಂದ ಸೈಮನ್ ಆಯೋಗ ಭಾರತಕ್ಕೆ ಬಂದಾಗ ನಾಗಾ ಜನರ ಪ್ರಮುಖ ಪ್ರತಿನಿಧಿಗಳೆಲ್ಲ ಸೇರಿ ಒಂದು ಬಿನ್ನವತ್ತಳೆ ಸಲ್ಲಿಸಿ ನಾಗಾ ಪ್ರದೇಶದ ಅಭಿವೃದ್ಧಿ ಪ್ರತ್ಯೇಕವಾಗಿಯೇ ನಡೆಯಬೇಕೆಂದೂ ಭಾರತದ ಒಳನಾಡಿನೊಂದಿಗೆ ಈ ಪ್ರದೇಶವನ್ನು ಸೇರಿಸಕೂಡದೆಂದು ಕೇಳಿಕೊಂಡರು. ಈ ಪ್ರದೇಶದಲ್ಲಿ ಕೆಲಸಮಾಡುತ್ತಿದ್ದ ಕ್ರೈಸ್ತ ಪಾದ್ರಿಗಳು ಸದಾಕಾಲವೂ ಈ ಪ್ರತ್ಯೇಕತಾಭಾವನೆಯನ್ನು ನೀರೆರೆದು ಬೆಳೆಸಿದರು. ಭಾರತ 1947ರಲ್ಲಿ ಸ್ವತಂತ್ರವಾದಾಗ ನಾಗಾಗಳಲ್ಲಿ ಕೆಲವರು ತಮ್ಮದು ಸ್ವತಂತ್ರ ರಾಷ್ಟ್ರವೆಂದು ಪ್ರಚಾರ ಮಾಡುತ್ತ, ಭಾರತದಿಂದ ಪ್ರತ್ಯೇಕಗೊಳ್ಳಲು ಸಶಸ್ತ್ರ ಬಂಡಾಯ ಹೂಡಿದರು. ಆದರೆ ನಾಗಾಗಳಲ್ಲೇ ಇದ್ದ ನಾನಾ ಪಂಗಡಗಳಲ್ಲಿ ಒಗ್ಗಟ್ಟು ಇರಲಿಲ್ಲ. 1957ರಲ್ಲಿ ಭಾರತ ಸರ್ಕಾರ ನಾಗಾ ಬೆಟ್ಟಗಳ ಜಿಲ್ಲೆಯನ್ನೂ ತುಯೆನ್‍ಸಾಂಗನ್ನೂ ಕೇಂದ್ರ ಆಡಳಿತಕ್ಕೆ ಒಳಪಡಿಸಿತು. ಆದರೆ ನಾಗಾಗಳಲ್ಲಿ ಕೆಲವರು ಇದನ್ನು ಒಪ್ಪಲಿಲ್ಲ. ಅಶಾಂತಿ ಮುಂದುವರಿಯಿತು. ಇವರು ಭಾರತ ಸರ್ಕಾರದೊಂದಿಗೆ ಸಹಕರಿಸಲಿಲ್ಲ. ಸಂಧಾನವೂ ಮುಂದುವರಿಯಿತು. ಪ್ರತ್ಯೇಕತೆಯ ಹೆಸರಿನಲ್ಲಿ ನಡೆದ ಹಿಂಸಾಕೃತ್ಯಗಳಿಗೆ ನಾಗಾ ಜನರಲ್ಲಿ ಅನೇಕರು ಹೇಸಿ ದೂರ ಸರಿದರು. ವಿಚಾರಶೀಲ ನಾಗಾ ಜನ 1955ರಲ್ಲಿ ತಮ್ಮದೇ ಅದೊಂದು ಹೊಸ ಸಂಘಟನೆ ಮಾಡಿಕೊಂಡರು. ಆದರೆ ಮರುವರ್ಷ ಅವರ ಮುಖಂಡನ ಕೊಲೆಯಾಯಿತು. 1957ರಲ್ಲಿ ನಾಗಾ ಪಂಗಡಗಳ ಮಹಾಪರಿಷತ್ತು ಸೇರಿತು. ಭಾರತ ಸರ್ಕಾರದ ಪ್ರೇರಣೆಯಿಂದ ವಿಶಾಲ ತಳಹದಿಯ ಮೇಲೆ ನಡೆದ ಈ ಪರಿಷತ್ತಿನಲ್ಲಿ ಎಲ್ಲ ನಾಗಾ ಪಂಗಡಗಳ 1,765 ಪ್ರತಿನಿಧಿಗಳೂ ಸುಮಾರು 2,000 ವೀಕ್ಷಕರೂ ಸೇರಿದ್ದರು. ನಾಗಾ ಜನರ ಭವಿಷ್ಯವನ್ನು ಶಾಂತಿಯುತ ಮಾತುಕತೆಗಳ ಮೂಲಕ ನಿರ್ಣಯಿಸಬೇಕು; ನಾಗಾ ಪಂಗಡಗಳು ವಾಸಿಸುವ ವಿವಿಧ ಭಾಗಗಳನ್ನು ಸೇರಿಸಿ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯದ ನಿರ್ಮಾಣವಾಗಬೇಕು ಎಂದು ತೀರ್ಮಾನವಾಯಿತು. 1963ರಲ್ಲಿ ಭಾರತದ ಸಂಸತ್ತು ನಾಗಾಲ್ಯಾಂಡು ಭಾರತದ ಹದಿನಾರನೆಯ ರಾಜ್ಯವೆಂದು ಮನ್ನಣೆ ನೀಡಿತು. ಜನಪ್ರತಿನಿಧಿಗಳ ಸರ್ಕಾರ ಸ್ಥಾಪಿತವಾಯಿತು. ಆದರೆ ತಲೆಮರೆಸಿಕೊಂಡ ಕೆಲವು ಜನರು ಶಾಂತಿಪ್ರಿಯ ಜನರಿಗೆ ಕಿರುಕುಳ ನೀಡುವ ಕೃತ್ಯಗಳನ್ನು ಮುಂದುವರಿಸಿಯೇ ಇದ್ದರು. ಆದರೆ 1975ರ ಕೊನೆಕೊನೆಯಲ್ಲಿ ಭಾರತ ಸರ್ಕಾರ ಒಂದು ಒಪ್ಪಂದದ ಮೂಲಕ ನಾಗಾ ಜನರ ಸರ್ವಾಂಗೀಣ ಅಭಿವೃದ್ಧಿಯ ದಾರಿಯನ್ನು ಸುಗಮಗೊಳಿಸಿತು. ಭಾರತದ ಸಂವಿಧಾನಕ್ಕೆ ಅಧೀನವಾಗಿರುವ ಇತರ ರಾಜ್ಯಗಳಂತೆಯೇ ನಾಗಾಲ್ಯಾಂಡ್ ಕೂಡ ತನ್ನ ಜನತೆಯ ಜೀವನ ಸಂಸ್ಕøತಿಗಳನ್ನೂ ನಡೆನುಡಿಗಳನ್ನೂ ಮತಧರ್ಮಗಳನ್ನೂ ಅಭಿವೃದ್ಧಿಪಡಿಸಬಹುದೆಂಬುದು ಭಾರತ ಸರ್ಕಾರದ ನಿಲುವು. ಅಂತೆಯೇ ನಾಗಾ ಜನಗಳಲ್ಲಿ ಮೊದಲಿನಿಂದಲೂ ಬೇರೂರಿದ್ದ ಪ್ರತ್ಯೇಕತಾಭಾವನೆಯನ್ನು ತೊಡೆದುಹಾಕಿ ಅವರು ಭಾರತದಲ್ಲಿ ಒಂದಾಗಿ ಬೆಳೆಯುವಂತೆ ಮಾಡಲು ಕ್ರಮಗಳನ್ನು ಸರ್ಕಾರ ಮುಂದುವರಿಸಿದೆ.

ಕೊಹಿಮಾ (ಪಿಟಿಐ): ಮಂಗಳೂರು ಮೂಲದ ಮುಂಬಯಿ ಕನ್ನಡಿಗ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ದಿ.19/7/2014 ಶನಿವಾರ ನಾಗಲ್ಯಾಂಡ್‌ನ 19ನೇ ರಾಜ್ಯಪಾಲ­ರಾಗಿ ಅಧಿಕಾರ ಸ್ವೀಕರಿಸಿದರು.

ಹೆಚ್ಚುವರಿಯಾಗಿ ತ್ರಿಪುರಾ ರಾಜ್ಯದ ರಾಜ್ಯಪಾಲರ ಹೊಣೆಯನ್ನು  ಆಚಾರ್ಯ ಅವರಿಗೆ ವಹಿಸಲಾಗಿದ್ದು, ರಾಜಭವನದಲ್ಲಿ ನಡೆದ ಕಾರ್ಯ­ಕ್ರಮದಲ್ಲಿ ಗುವಾಹಟಿ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೆ.ಸೈಕೈ ಅವರು ಪ್ರಮಾಣವಚನ ಬೋಧಿಸಿದರು.
(ಹಿಂದಿನ ವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಹೊಸ ವಿಧಾನ ಸಭೆಯ ಅಸ್ಥಿತ್ವಕ್ಕೆ ಬಂದಿತು ಹೊಸ ಮಂತ್ರಿ ಮಂಡಳ- ವಿವರ -ಕೆಳಗೆ--)
ನಾಗಲ್ಯಾಂಡ್‌ ಮುಖ್ಯಮಂತ್ರಿ  ಟಿ.ಆರ್‌. ಜಿಲ್ಲಾಂಗ್‌ ಸೇರಿದಂತೆ ಸಂಪುಟ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಚಾರ್ಯ ಅವರು 1948–50ರಲ್ಲಿ ಮಂಗಳೂರಿನ ಎಂಜಿಎಂ ಪದವಿ ಕಾಲೇಜಿನ ಮೊದಲ ಬ್ಯಾಚ್‌ ವಿದ್ಯಾರ್ಥಿ. ನಂತರ ಕೆಲಕಾಲ ಇಲ್ಲಿನ ಕಾಡಬೆಟ್ಟು ವಿದ್ಯಾರಣ್ಯ ಶಾಲೆ­ಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿ­ಸಿದ್ದರು.ಆಮೇಲೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಾ ಸಂಘ) ಸೇರಿದ ಅವರು, 1948ರಲ್ಲಿ ಆರ್‌ಎಸ್‌ಎಸ್‌ ನಿಷೇಧ­ಕ್ಕೊಳಗಾದ ನಂತರ 30 ವರ್ಷಗಳ ಕಾಲ ಮುಂಬಯಿ ವಿಶ್ವ­ವಿದ್ಯಾಲಯದ ಸೆನೆಟ್‌ ಸದಸ್ಯರೂ ಆಗಿದ್ದರು. ಕೆಲಕಾಲ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.1995ರಿಂದ 2000ರವರೆಗೆ ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ­ಯಾಗಿದ್ದ ಆಚಾರ್ಯ ಅವರು, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ­­ಯಾಗಿದ್ದರು.

ನಾಗಾಲ್ಯಾಂಡಿನ ವಿಧಾನ ಸಭೆಯ ಚುನಾವಣೆ ೨೦೧೩ ಫೆಬ್ರವರಿ 2013 ,23/೨೩ ಕ್ಕೆ ನೆಡೆದು ;ಹಿಂದಿನವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಅಸ್ಥಿತ್ವಕ್ಕೆ ಬಂದಿತು 




#Article 217: ತ್ರಿಪುರ (681 words)


ತ್ರಿಪುರ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಉತ್ತರ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬಾಂಗ್ಲಾದೇಶದಿಂದ ಸುತ್ತುವರಿಯಲ್ಪಟ್ಟಿರುವ ತ್ರಿಪುರದ  ಪೂರ್ವಕ್ಕೆ  ಅಸ್ಸಾಂ ಮತ್ತು ಮಿಝೊರಾಮ್‌ಗಳಿವೆ.
೨೦೧೨ ರ ಹಿಂದೆ ತ್ರಿಪುರಾದಲ್ಲಿ ಧಲಾಯ್, ಉತ್ತರ ತ್ರಿಪುರ, ದಕ್ಷಿಣ ತ್ರಿಪುರ, ಮತ್ತು ಪಶ್ಚಿಮ ತ್ರಿಪುರ ಎಂಬ ನಾಲ್ಕು ಜಿಲ್ಲೆಗಳಿದ್ದವು. ಜನವರಿ, ೨೦೧೨ ರಲ್ಲಿ ಖೊವಾಯ್, ಉನಾಕೋಟಿ, ಸಿಪಾಹಿ ಜಾಲಾ, ಮತ್ತು ಗೋಮತಿ ಎಂಬ ೪ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಗರ್ತಲಾ ರಾಜಧಾನಿ ಹಾಗೂ ಅತಿದೊಡ್ಡಪಟ್ಟಣ. ಬಧಾರ್ ಘಾಟ್, ಧರ್ಮನಗರ್, ಜೋಗೇಂದ್ರ ನಗರ್, ಕೈಲಾಶ್ ಶಹರ್, ಪ್ರತಾಪ್ ಘಡ್, ಉದಯ್ ಪುರ್, ಅಮರ್ ಪುರ್, ಭೇಲೋನಿಯಾ, ಗಾಂಧಿ ಗ್ರಾಮ್, ಇಂದ್ರ ನಗರ್, ಕುಮಾರ್ ಘಾಟ್, ರಾಣಿರ್ ಬಜಾರ್, ಸೋನಾಮುರಾ, ತೇಲಿಯಾಮುರಾ.

ಈಶಾನ್ಯ ಭಾರತದ ಅಸ್ಸಾಮ್, ಅರುಣಾಚಲಪ್ರದೇಶ್,  ಮಣಿಪುರ್, ಮೇಘಾಲಯ, ಮಿಜೊರಂ, ನಾಗಾಲ್ಯಂಡ್, ಮತ್ತು ತ್ರಿಪುರ ರಾಜ್ಯಗಳನ್ನು ಜೊತೆಜೊತೆಯಾಗಿ ಸಪ್ತ ಸೋದರಿಯರು ಎನ್ನುತ್ತಾರೆ. ತ್ರಿಪುರದ ಒಟ್ಟು ವಿಸ್ತೀರ್ಣ ೪,೦೫೦.೮೬ ಚದರ ಮೈಲಿಗಳು. ಉತ್ತರದಿಂದ ದಕ್ಷಿಣಕ್ಕೆ ಗರಿಷ್ಠ ದೂರ ೭೦ ಮೈಲಿಗಳು. ಪೂರ್ವದಿಂದ ಪಶ್ಚಿಮಕ್ಕೆ ೧೧೪ ಮೈಲಿಗಳು. ಅಸ್ಸಾಮ್ ನ ಕರೀಮ್ ಗಂಜ್ ಜಿಲ್ಲೆ ಮತ್ತು ಮಿಜೊರಂನ ಐಜ್ವಾಲ್ ಜಿಲ್ಲೆಗಳಿಂದ ತ್ರಿಪುರಾಕ್ಕೆ ಹೋಗಲು ದಾರಿಗಳಿವೆ. ಐದು ಬೆಟ್ಟಗಳ ಸಾಲುಗಳು ರಾಜ್ಯದಲ್ಲಿ ಉತ್ತರದಿಂದ ಕಕ್ಷಿಣಕ್ಕೆ ಸಾಗುತ್ತವೆ. ಈ ಬೆಟ್ಟಗಳ ಹೆಸರು : (ಪಶ್ಚಿಮದಿಂದ ಪೂರ್ವಕ್ಕೆ)-ಬೋರೋಮುರಾ,  ಅಥರಾಮುರಾ, ಲೋಂಗ್, ಥರೈ, ಶಾಖಾನ್, ಜಾಮ್ ಪ್ಯು. ಇವುಗಳ ಮಧ್ಯೆ ಅಗರ್ತಲಾ-ಉದಯಪುರ್, ಖೋವಾಇ-ತೆಲಿಯಾಮುರಾ, ಕಮಾಲ್ ಪುರಾ, ಅಂಬಾಸಾ, ಕೈಲಾಸ್ ಶಹರ್-ಮಾನು ಧರ್ಮನಗರ್-ಕಾಂಚನ್ಪುರ್ ಕಣಿವೆಗಳಿವೆ. ಜಾಮ್ ಪ್ಯು ಶ್ರೇಣಿಯಲ್ಲಿರುವ ೯೩೯ ಮೀಟರ್ (೩,೦೮೧ ಅಡಿ) ಎತ್ತರದ 'ಬೆಟ್ಲಿಂಗ್ ಶಿಬ್' ತ್ರಿಪುರದ ಅತಿ ಎತ್ತರದ ಬೆಟ್ಟ. ರಾಜ್ಯದ ತುಂಬಾ ಈಶ್ರೇಣಿಗೆ ಸೇರದ ಒಂಟಿಯಾಗಿರುವ ಹಲವಾರು ಬೆಟ್ಟಗಳೂ ಇವೆ. ಇವುಗಳಿಗೆ 'ತಿಲ್ಲಾ ' ಎಂದು ಹೆಸರು. ಕಣಿವೆಗಳ ನಡುವೆ ಇರುವ ಸಮೃದ್ಧ ಕೃಷಿ ಭೂಮಿಗೆ 'ಲುಂಗಾ' ಎಂಬ ಹೆಸರಿದೆ. ಕಣಿವೆಗಳ ನಡುವೆ  ಹರಿಯುವ ಹಲವಾರು ನದಿಗಳು ಬಾಂಗ್ಲಾದೇಶಕ್ಕೆ  ಸಾಗುತ್ತವೆ. ಗುಮ್ತಿ ಪಶ್ಚಿಮಕ್ಕೆ ಹರಿದರೆ, ಕೊವ್ರಾ, ಧಾಲೃ, ಮಾನು, ಜುರಿ, ಲಾಂಗಾಯಿ, ಉತ್ತರಕ್ಕೆ ಹರಿಯುತ್ತವೆ. ಮುಹುರಿ, ಮತ್ತು  ಫೆನಿ, ನೈಋತ್ಯ ದಿಕ್ಕಿಗೆ ಹರಿಯುತ್ತವೆ.
ಚಳಿಗಾಲ : ಡಿಸೆಂಬರ್ ನಿಂದ ಫೆಬ್ರವರಿ ತಿಂಗಳ ನಡುವೆ.
ಬೇಸಗೆ : ಮಾರ್ಚ್-ಏಪ್ರಿಲ್.
ಮಳೆಗಾಲ : ಮೇ-ಸೆಪ್ಟೆಂಬರ್, ಮಾನ್ಸೂನ್ ಕಾಲದಲ್ಲಿ ನೈಋತ್ಯ ಮಾನ್ಸೂನ್ ಭಾರಿ ಮಳೆ ಸುರಿಸುತ್ತದೆ. ವರ್ಷಕ್ಕೆ ಸರಾಸರಿ ೨,೧೯೪ ಮಿ.ಮೀ. ಮಳೆ ಬೀಳುತ್ತದೆ. ಆಗ ರಾಜ್ಯದುದ್ದಕ್ಕೂ ನೆರೆಯ ಹಾವಳಿ ಆಗುವುದು ಸರ್ವೇ ಸಾಮಾನ್ಯ. ಚಳಿಗಾಲದಲ್ಲಿ ೧೩ ಡಿಗ್ರಿ ಸೆಲ್ಸಿಯಸ್ ಇದ್ದರೆ, ಬೇಸಿಗೆಯಲ್ಲಿ ೩೬ ಡಿಗ್ರಿ ಉಷ್ಣತೆ ಇರುತ್ತದೆ.
ಅಕ್ಟೋಬರ್ ನವೆಂಬರ್ ನಡುವೆ ತೇವಭರಿತ ಹವಾಮಾನ ಇರುತ್ತದೆ.

ತ್ರಿಪುರದ ಒಂದು ಬುಡಕಟ್ಟಿನ ಪಂಗಡದವರು ನಡೆಸುವ ಜನಾಂಗೀಯ ಉತ್ಸವ. ಬುಡಕಟ್ಟಿನ ಜನಗಳು ತಮ್ಮ ತಮ್ಮ ಪ್ರದೇಶದ ಗಡಿರೇಖೆಯನ್ನು ಬರೆದು , ಈ ಪೂಜೆ ಆರಂಭಿಸುತ್ತಾರೆ. ಈ ಉತ್ಸವ ಜರುಗುವ ಸಮಯದಲ್ಲಿ ಬೇರೆ ಬೇರೆ ಬುಡಕಟ್ಟುಗಳ ಜನ ಈ ನಿಯಮಿತ ಗಡಿಯ ಉಲ್ಲಂಘನೆ ಮಾಡುವಂತಿಲ್ಲ. ಹೊರಊರಿನಲ್ಲಿರುವ ಪಂಗಡ ದ ಜನ ಗಡಿಯೊಳಗೆ ಬಂದರೆ, ಪೂಜೆ ಮುಗಿಯುವ ತನಕ ಹೊರಗೆ ಹೋಗುವಂತಿಲ್ಲ.

ಉದಯಪುರದಲ್ಲಿರುವ 'ತ್ರಿಪುರಸುಂದರಿ ದೇವಾಲಯ' ಭಾರತೀಯ ೫೧ ಶಕ್ತಿಪೀಠಗಳಲ್ಲೊಂದು. ಪುರಾಣಗಳ ಪ್ರಕಾರ, ದಕ್ಷನ ಯಜ್ಞಕುಂಡದಲ್ಲಿ ದಹಿಸಿಹೋದ ಸತಿಯ ಕಳೇಬರವನ್ನು ಎತ್ತಿಕೊಂಡು ಮಹಾದೇವನು ತಾಂಡವ ನೃತ್ಯವನ್ನು ಆರಂಭಿಸಿದ್ದ ಝಳದಲ್ಲಿ ಮೂರು ಲೋಕಗಳೂ ಸುಟ್ಟುಹೋಗುವ ಸ್ಥಿತಿಯಲ್ಲಿದ್ದವು. ಶಿವನ ಆಕ್ರೋಶಕ್ಕೆ ತಡೆಹಾಕಲು ಮಹಾವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ಕಳೇಬರವನ್ನು ೫೧ ತುಂಡುಗಳಾಗಿ ಕತ್ತರಿಸಿದ ಈ ತುಂಡುಗಳುಕೆಳಗೆ ಬಿದ್ದ ಸ್ಥಳಗಳೇ ಶಕ್ತಿಪೀಠಗಳೆಂದು ಹೆಸರಾದವು. ಹಾಗೆ ಬಿದ್ದ ಸತೀದೇವಿಯ ಬಲಗಾಲು, ಮಾತಾಬಾರಿ ಎಂದು ಹೆಸರುಪಡೆಯಿತು. ದಕ್ಷಿಣ ತ್ರಿಪುರಾ ಜಿಲ್ಲೆಯ ಉದಯಪುರದಲ್ಲಿರುವ  ಈ ಕ್ಷೇತ್ರದಲ್ಲಿ ಮಾತಾ ತ್ರಿಪುರಸುಂದರಿ ದೇವಾಲಯ ನಿರ್ಮಾಣವಾಗಿದೆ. ಉದಯಪುರ ಜಿಲ್ಲಾ ಕೇಂದ್ರ. ಪ್ರತಿವರ್ಷವೂ ದೀಪಾವಳಿ ಹಬ್ಬದ ದಿನದಂದು, ಇಲ್ಲಿನ ಜಾತ್ರೆ(ಮೇಳಾ) ಯಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಬಂದು ಸೇರುತ್ತಾರೆ.೧೫೧೦ ರಲ್ಲಿ ಮಹಾರಾಜ ಧನ್ಯಮಾಣಿಕ್ಯ ಈ ದೇವಾಲಯವನ್ನು ಕಟ್ಟಿಸಿದನು. ಬಂಗಾಲಿ ಶೈಲಿಯಲ್ಲಿ ಕಟ್ಟಿರುವ ಈ ದೇವಸ್ಥಾನ ಚೌಕಾಕೃತಿಯ ಗರ್ಭಗುಡಿಯನ್ನು ಹೊಂದಿದೆ. ಅದರ ಮೇಲಿನ ಗೋಪುರ ಶಂಕುವಿನ ಆಕಾರವಿದೆ. ತ್ರಿಪುರಸುಂದರಿಯ ೨ ವಿಗ್ರಹಗಳಿವೆ. ಒಂದು ವಿಗ್ರಹಕ್ಕೆ 'ಛೋಟಿಮಾ' ಎಂದೂ ಮತ್ತೊಂದಕ್ಕೆ 'ತ್ರಿಪುರಸುಂದರೀದೇವಿ' ಎಂದೂ ಹೆಸರಿದೆ. ತ್ರಿಪುರಾದ ರಾಜರು, ಹಿಂದೆ ಮೃಗಯಾ ವಿಹಾರ, ಮತ್ತು ಯುದ್ಧಗಳ ವೇಳೆಯಲ್ಲಿ 'ಛೋಟಿಮಾ' ಮೂರ್ತಿಯನ್ನು ತಮ್ಮೊಂದಿಗೆ ಒಯ್ಯುತ್ತಿದ್ದರು. ದೇವಾಲಯದ ವಾಸ್ತು ರಚನೆ ಆಮೆಯಾಕಾರವಾಗಿರುವುದರಿಂದ ಇದಕ್ಕೆ 'ಕೂರ್ಮಪೀಠ'ವೆಂದೂ ಕರೆಯುತ್ತಾರೆ. ಕೆಂಪು-ಕಪ್ಪು ಕಾಷ್ಠಿ ಶಿಲೆಯ ಮಹಾಕಾಳೀ ವಿಗ್ರಹವನ್ನು 'ಸೋರೋಶೋ' ಎಂಬ ರೂಪದಲ್ಲಿ ಅರ್ಚಿಸಲಾಗುತ್ತದೆ. 'ಕಲ್ಯಾಣ ಸಾಗರ' ಎಂಬ ಸುಪ್ರಸಿದ್ಧ ಕೆರೆ ದೇವಾಲಯದ ಪೂರ್ವ ಭಾಗದಲ್ಲಿದೆ. ಈ ಕೆರೆಯಲ್ಲಿ ಬೃಹದ್ ಗಾತ್ರ ಮೀನುಗಳು ಹಾಗೂ ಆಮೆಗಳನ್ನು ನೋಡಬಹುದು. ಇಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಭಕ್ತರು ಮಂಡಕ್ಕಿ ಮತ್ತು ಬಿಸ್ಕತ್ ಚೂರುಗಳನ್ನು ಎಸೆಯುತ್ತಾರೆ. ತ್ರಿಪುರ ಸುಂದರಿ ದೇವಾಲಯ, ಉದಯಪುರದಿಂದ  ೩ ಕಿ.ಮೀ ಮತ್ತು ಅಗರ್ತಲಾದಿಂದ ೫೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ತಲುಪಲು, ಬಸ್ಸು ಮತ್ತು ರಿಕ್ಷಾಗಳು ಸಿಕ್ಕುತ್ತವೆ. ಉದಯಪುರದಲ್ಲಿ 'ಭುವನೇಶ್ವರಿ ದೇವಸ್ಥಾನ', 'ಗುಣಬಾಟಿ ದೇವಾಲಯ',ಹಾಗೂ ಸುಂದರ ಕೆರೆಗಳು ಇವೆ.

ಚದುರ್ದಶ ದೇವತೆಗಳ ಖಾಂದಾನಿ ಪೂಜೆಗೆ ಖಾರ್ಚಿ ಪೂಜೆ ಎನ್ನುವ ಹೆಸರಿದೆ. ಜುಲೈ-ಆಗಸ್ಟ್ ತಿಂಗಳ ನಡುವೆ ಅಮಾವಾಸ್ಯೆಯ ಬಳಿಕ ಎಂಟನೆಯ ದಿನ ಈ ಪೂಜೆ ನಡೆಯುತ್ತದೆ. ಚದುರ್ದಶ ದೇವತಾ ಮಂದಿರದಲ್ಲಿ ತ್ರಿಪುರಿ ಮೂಲದ ಚಾಂತಾಯಿ ವಂಶದ ಅರ್ಚಕರು ಪಾರಂಪರಿಕವಾಗಿ ಪೂಜೆಯನ್ನು ಮಾಡುತ್ತಾರೆ. ಇದೊಂದೇ ದೇವಾಲಯದಲ್ಲಿ ತ್ರಿಪುರಿ ಪೂಜಾರಿಗಳು ಇರುವುದು. ಚಂತಾಯ್ ಪೂಜಾರಿಗಳು ದೇವತೆಗಳನ್ನು ಸೈದ್ರಾ ನದಿಗೆ ಒಯ್ದು  ಪವಿತ್ರ ಸ್ನಾನ ಮಾಡಿಸಿ ದೇವಾಲಯಕ್ಕೆ ತರುತ್ತಾರೆ. ದೇವಿಯರ ಅಲಂಕಾರದ ಬಳಿಕ ಪೂಜೆ ನಡೆಯುತ್ತದೆ. ಖಾರ್ ಪಾಪ. ಮತ್ತು ಚಿ ಅಂದರೆ ಶುಭ್ರಗೊಳಿಸುವುದು. ಈ ಎರಡು ಶಬ್ದಗಳು ಸೇರಿ 'ಖಾರ್ಚಿ' ಎಂಬ ಹೆಸರು ಬಂದಿದೆ. ರಾಜ್ಯದ ಜನರೆಲ್ಲರ ಪಾಪ ಪರಿಹಾರಾರ್ಥವಾಗಿ ಈ ಪೂಜೆ ನಡೆಯುತ್ತದೆ. ಅಮಾ ಪೇಚಿ (ಮಾತೃದೇವತೆ ಋತುಮತಿಯಾಗುವ ದಿನದ ಆಚರಣೆ)ಯ ೧೫ ದಿನಗಳ ತರುವಾಯ ಈ ಹಬ್ಬ ಜರುಗುತ್ತದೆ. ಈ ೧೫ ದಿನಗಳಲ್ಲಿ ಉಳುವುದು, ನೆಲ ಅಗಿಯುವುದು ನಿಶಿದ್ಧ. ಖಾರ್ಚಿ ಪೂಜೆ ೭ ದಿನಗಳ ತನಕ ಜರುಗುತ್ತದೆ. ಈ ವೇಳೆ ಪುರಾತನ ಅಗರ್ತಲಾ ನಗರದ ಚತುರ್ದಶ ದೇವತಾ ಮಂದಿರದಲ್ಲಿ ಸತತವಾಗಿ ಪೂಜೆ ನಡೆಯುತ್ತದೆ. ತ್ರಿಪುರಿಗಳಲ್ಲದೆ ಇತರರೂ ಈ ಪೂಜೆಯಲ್ಲಿ ಸಂಭ್ರಮದಿಂದ ಭಾಗಗೊಳ್ಳುತ್ತಾರೆ. ಜನರು ದೇವಿಗೆ ಸಿಹಿತಿಂಡಿಗಳ ನೈವೇದ್ಯವನ್ನು ಸಮರ್ಪಿಸುತ್ತಾರೆ. ಕೋಳಿ, ಕುರಿ, ಆಡು, ಕೋಣಗಳ ಬಲಿಯನ್ನೂ ಕೊಡುವ ಸಂಪ್ರದಾಯವಿದೆ.

ತ್ರಿಪುರದ ಬಂಗಾಳಿಗಳು, ಅಕ್ಟೋಬರ್, ನವೆಂಬರ್ ತಿಂಗಳ ಸಮಯದಲ್ಲಿ ನವರಾತ್ರಿಯ ವೇಳೆ ಅತ್ಯಂತ ಸಂಭ್ರಮದಿಂದ ದುರ್ಗಾಪೂಜೆಯನ್ನು ಆಚರಿಸುತ್ತಾರೆ. ದುರ್ಗೆಯ ಮೂರ್ತಿಯನ್ನು ಕೊನೆಯದಿನ ನಗರದ ಪ್ರಮುಖ ರಸ್ತೆಗಳಲ್ಲಿ  ಮೆರವಣಿಗೆಯಲ್ಲಿ ಕೊಂಡೊಯ್ದು  ಕೊಳದಲ್ಲಿ ವಿಸರ್ಜನೆ ಮಾಡುತ್ತಾರೆ.
Big text==ತೀರ್ಥ ಮುಖ==
ಗೋಮತಿ ನದಿಯ ಉಗಮ ಸ್ಥಾನಕ್ಕೆ ತೀರ್ಥಮುಖ ಎಂದು ಹೆಸರು. ಪುರಾತನ ಕಾಲದಿಂದಲೂ ತ್ರಿಪುರಿ ಜನರಿಗೆ ಇದು ಪವಿತ್ರ ತೀರ್ಥ ಕ್ಷೇತ್ರವಾಗಿತ್ತು. ಜನವರಿ-ಫೆಬ್ರವರಿ ತಿಂಗಳ ಮಧ್ಯೆ ಉತ್ತರಾಯಣ ಸಂಕ್ರಾಂತಿಯದಿನ ತ್ರಿಪುರಿ ಬುಡಕಟ್ಟಿನ ಜನರೇ ಅಲ್ಲದೆ ತ್ರಿಪುರದ ಎಲ್ಲಾ ವರ್ಗದ ಜನರೂ ಜಾತಿ, ಪಂಥಗಳ ಭೇದವಿಲ್ಲದೆ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಸಂಭ್ರಮದಿಂದ ಪೂಜೆಮಾಡುತ್ತಾರೆ. ಇಲ್ಲಿ ಜರುಗುವ ೨ ದಿನಗಳ ಜಾತ್ರೆಯ ಪೂಜೆಯಲ್ಲಿ ತಲೆ ಕೂದಲು ಬೋಳಿಸಿ, ಭಕ್ತಿ, ಶ್ರದ್ಧೆಗಳಿಂದ ದೇವತೆಗಳ ಪೂಜೆಯನ್ನು ಮಾಡುತ್ತಾರೆ.

ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸವಾದಿ)	




#Article 218: ಉತ್ತರ ಪ್ರದೇಶ (4965 words)


ಉತ್ತರ ಪ್ರದೇಶವು  ನಿಶ್ಚಿತವಾಗಿ ಉತ್ತರ ಭಾಗದ ಪ್ರಾಂತ್ಯ[ಆಗಾಗ್ಗೆ ಇದನ್ನು U.P.  ಎಂದೂ ಸಹ ಉಲ್ಲೇಖಿಸುವರು] ಭಾರತದ ಉತ್ತರ ಭಾಗದಲ್ಲಿ ನೆಲೆಸಿರುವ ಒಂದು ರಾಜ್ಯವಾಗಿದೆ. ಸುಮಾರು 190 ಮಿಲಿಯದಷ್ಟು ಜನಸಂಖ್ಯೆಯನ್ನು ಹೊಂದಿದೆ, ಇದು ಭಾರತದ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ರಾಜ್ಯವಾಗಿದೆ, ಹಾಗೆಯೇ ಪ್ರಪಂಚದಲ್ಲೇ ಹೆಚ್ಚಿನ ಜನಸಂಖ್ಯೆಯು ಈ ರಾಷ್ಟ್ರದ ಒಳಗೆ ಇರುವುದು.

ಜೊತೆಗೆ ಉತ್ತರ ಪ್ರದೇಶವು ಹೆಚ್ಚಾಗಿ ಫಲವತ್ತಾದ ಒಂದು ದೊಡ್ಡ ಭಾಗದ ಪ್ರದೇಶವನ್ನು ಆವರಿಸಿದೆ ಮತ್ತು ಗಂಗಾನದಿಯ ಸಮ ತಲ ಪ್ರದೇಶದಲ್ಲಿ ಜನನಿಬಿಡತೆ ಹೊಂದಿದೆ. ಅಂತರಾಷ್ಟ್ರೀಯ ಸರಹದ್ದನ್ನು ಉತ್ತರದಲ್ಲಿ ನೇಪಾಳದೊಂದಿಗೆ ಭಾರತ ರಾಜ್ಯದ ಉತ್ತರಕಾಂಡವು ಅದನ್ನು ಹಂಚಿಕೊಂಡಿದೆ. ಉತ್ತರ-ಪಶ್ಚಿಮಕ್ಕೆ ಹಿಮಾಚಲ ಪ್ರದೇಶವು, ಪಶ್ಚಿಮದಲ್ಲಿ ಹರಿಯಾಣ, ದೆಹಲಿ, ಮತ್ತು ರಾಜಾಸ್ತಾನ್,ದಕ್ಷಿಣದಲ್ಲಿ ಮಧ್ಯ ಪ್ರದೇಶವು,ಚತ್ತಿಸ್ ಗಡ ಮತ್ತು ಜಾರ್ ಖಂಡ್ ದಕ್ಷಿಣದ ಪೂರ್ವದಲ್ಲಿ ಮತ್ತು ಪೂರ್ವದಲ್ಲಿ ಬಿಹಾರ್ ಭಾರತದ ರಾಜ್ಯಗಳಿವೆ. ಉತ್ತರ ಪ್ರದೇಶದ ಆಡಳಿತದ ಹಾಗೂ ಶಾಸಕಾಂಗದ ರಾಜಧಾನಿ ಲಖನೌ ಮತ್ತು ಹಣಕಾಸಿನ ಆಡಳಿತ ಹಾಗೂ ಔದ್ಯೋಗಿಕ ರಾಜಧಾನಿ ಕಾನಪುರ್. ಈ ರಾಜ್ಯದ ಉಚ್ಚ ನ್ಯಾಯಾಲಯ ಅಲಹಾಬಾದ್‌ನಲ್ಲಿ ಸ್ಥಾಪಿಸಿದ್ದೂ, ಒಂದು ನ್ಯಾಯಾಧೀಶರ ಪೀಠ ರಾಜ್ಯದ ರಾಜಧಾನಿಯಾದ ಲಖನೌನಲ್ಲಿ ಕೂಡ ಇದೆ.  ಇದು ವಾರನಾಸಿ ಹಾಗೂ ಆಗ್ರಾ ಅಂತಹ ಅನೇಕ ಐತಿಹಾಸಿಕ ನಗರಗಳ ಮನೆಯಾಗಿದೆ. ಇಲ್ಲಿನ ದೊಡ್ಡ ನಗರ ಎಂದರೆ ಕಾನಪುರ; ಗೋರಖಪುರ, ಮೀರಟ್, ಆಗ್ರಾ, ಅಲಿಘರ್, ಬರೇಲಿ, ಅಲಹಾಬಾದ್‌, ಘಾಜಿಯಾಬಾದ್ ಹಾಗೂ ನೋಯಿಡಾ ಇತರ ದೊಡ್ಡ ನಗರಗಳು.

ಭಾರತದ ಸಂಸ್ಕೃತಿಯಲ್ಲಿ ಉತ್ತರ ಪ್ರದೇಶದ ಸ್ಥಾನ ಮಹತ್ವದಾಗಿದೆ; ಇದು ಹಿಂದುತ್ವದ ಜನ್ಮಸ್ಥಾನ ಎಂದು ನಂಬಲಾಗಿದೆ, ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದ ಸದಸ್ಯತ್ವ ಹೊಂದಿರುವ, ಶಿಕ್ಷಣ ಹಾಗೂ ಸಂಸ್ಕೃತಿಯ ನೆಲೆಯಾಗಿದ್ದು ಹಲವು ಮುಖ್ಯ ಹಿಂದೂ ತೀರ್ಥಯಾತ್ರೆಗಳ ತಾಣವಾಗಿದೆ. ಬೌದ್ಧ ಧರ್ಮಕ್ಕೂ ಈ ರಾಜ್ಯ ಬಹಳ ಮುಂಚೆಯಿಂದ ಮುಖ್ಯವಾದ ಸ್ಥಳವಾಗಿದೆ. ಬುದ್ಧ ತನ್ನ ಅನುಯಾಯಿಗಳನ್ನು ಮೊದಲ ಬಾರಿಗೆ ಚೌಖಂಡಿ ಸ್ತುಪದಲ್ಲಿ ಭೇಟಿಯಾಗಿದ್ದರು.  ಸರಾನಾಥಿನ ಧಾಮೆಕ್ ಸ್ತೂಪ ಬುದ್ಧರು ಮೊದಲು ಧರ್ಮೋಪದೇಶ ನೀಡಿದ ಸ್ಥಳವೆಂದು ಸ್ಮಾರಕೋತ್ಸವ ನಡೆಸುತ್ತಾರೆ. ಖುಷಿನಗರದಲ್ಲಿ ಗೌತಮ ಬುದ್ಧರು ದೈವಾಧೀನರಾದರು. ಕೊನೆಯವರೆಗೆ ಇದರ ಇತಿಹಾಸದಲ್ಲೇ, ಉತ್ತರ ಪ್ರದೇಶ ರಾಜ್ಯದ
 ಪ್ರದೇಶವನ್ನು ಮಧ್ಯದಲ್ಲಿಯೇ ಭಾಗಗಳನ್ನಾಗಿಸುವುದು ಮತ್ತು ಕೆಲಕಾಲದಲ್ಲಿ ಅದರ ಪೂರ್ವ ಅಥವಾ ಪಶ್ಚಿಮದ ಪ್ರಮುಖ ಭಾಗಗಳಲ್ಲಿ ದೊಡ್ಡದಾದ ಸಾಮ್ರಾಜ್ಯಗಳನ್ನು ರಚಿಸಲು ಮಗಧರು, ನಂದರು ,ಮೌರ್ಯನ್ನರು ,ಸುಂಗಾ , ಕುಶಾನರು ,ಗುಪ್ತರು, ಪಾಲರು.ಮತ್ತು ಮೊಘಲರು ಒಳಗೊಂಡು ಪ್ರೇರೇಪಿಸುತ್ತಿದ್ದರು.

ಹಿಂದೂ-ಗಂಗಾನದಿಯ ಸಮತಲ ಪ್ರದೇಶವು, ಹೆಚ್ಚಿನ ರಾಜ್ಯಗಳಿಗೆ ಸೇತುವೆಯಾಗಿದೆ, ಹಾಗೂ ಮಧ್ಯ ಕಾಲೀನದಲ್ಲಿ ಹಿಂದೂ-ಇಸ್ಲಾಮಿಕ್ ಭಾಷೆಗಳ ಸಂಸ್ಕೃತಿಯನ್ನೇ ಇಳಿಮುಖವಾಯಿಸಿತು. ಪಿತ್ರಾಜಿತವಾದ ಮೊಘಲ್ ಸಾಮ್ರಾಜ್ಯವು ಪ್ರಂಪಚದಲ್ಲೇ ಹೆಸರಾಂತ ಮ್ಯೂಸಿಯಂ, ಶಹಜಹಾನ್ ಕಟ್ಟಿಸಿದ ತಾಜ್ ಮಹಲ್, ಮೊಘಲ್ ಸಾಮ್ರಾಜ್ಯದ ಪ್ರಖ್ಯಾತ ದೂರೆ ಅಕ್ಬರ್ ನು ಆಗ್ರಾದಲ್ಲಿ ಕಟ್ಟಿಸಿದ ಭವ್ಯವಾದ ಗೋಪುರ ಮತ್ತು ಫತೆಪುರ್ ಸಿಕ್ರಿ ಯಲ್ಲಿ ಇರು ಅಕ್ಬರನ ರಾಜಧಾನಿಯ-ಅರಮನೆಯು ಹೆಚ್ಚಿನ ಸ್ವಾಧೀನ ಪಡೆದುಕೊಂಡಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದು ರಾಷ್ಟ್ರೀಯತೆಯ ಮಧ್ಯ ಭಾಗವಾಗಿತ್ತು ಮತ್ತು ಭಾರತೀಯದ ರಾಜಕೀಯ ಹಾಗೂ ಸಾಂಸ್ಕೃತಿಕ ಚಳುವಳಿಗಳು ಪ್ರಮುಖವಾದ ಪಾತ್ರವನ್ನು ವಹಿಸಿತು. ರಾಜ್ಯದಲ್ಲಿ ಹೆಸರಾಂತ ಶ್ರೇಷ್ಠ ಪರಂಪರೆಯ ಹಸ್ತ ಕೌಶಲ್ಯಗಳು ಮತ್ತು ಗುಡಿ ಕೈಗಾರಿಕೆಗಳು ವಿವಿಧ ತರಹದ ಅತ್ಯಂತ ನಿಪುಣರಾದ ಕುಶಲ ಕರ್ಮಿಗಳು ಮತ್ತು ಕಲಾ ನೈಪುಣ್ಯರನ್ನು ಹೊಂದಿದೆ. ಈ ರಾಜ್ಯದಲ್ಲಿ 98% ಕ್ಕಿಂತ ಹೆಚ್ಚಿನ ಜನಸಂಖ್ಯೆಯ ಹಿಂದುಗಳು ಹಾಗೂ ಮುಸ್ಲೀಮರು ಜೊತೆಯಾಗಿ ನೆಲೆಯಾಗಿರುವರು.  ಉಳಿದವರಲ್ಲಿ ಸುಮಾರು 2% ಸಿಕ್ಕರು, ಜೈನರು, ಬೌದ್ಧರು ಮತ್ತು ಕ್ರಿಶಿಯನ್ನರು ಹಾಗೂ ಅದರ ಜೊತೆ ಬುಡ ಕಟ್ಟಿನ ಜನಾಂಗದವರು.

ಉತ್ತರಪ್ರದೇಶದಲ್ಲಿನ ಪ್ರಾಕ್ತನ ಶಾಸ್ತ್ರದ ಸಂಶೋಧನೆಗಳ ಪ್ರಕಾರ ಇಲ್ಲಿ ಶಿಲಾಯುಗದ ಹೋಮೋ ಸೇಪಿಯನ್ ಬೇಟೆಗಾರ-ಸಂಗ್ರಹಕಾರರು ಜನರು 85±11 ಮತ್ತು 72±8 kyr ವರ್ಷಗಳ ನಡುವೆ (ಸಾವಿರಾರು ವರ್ಷಗಳ ಹಿಂದೆ) ಛಾತರ್ಫಾಲಿಯಾ, ಮಾಹುಘರ್, ಪಾರಿಸ್ಧಿಯಾ, ಲಲಿತ್‌ಪುರ್, ನಿಹಿ ಮತ್ತು ಗೋಪಿಪುರ, ದಲ್ಲಿದ್ದರು; ಮಧ್ಯ ಶಿಲಾಯುಗಕ್ಕೆ ಸಂಬಂಧಿಸಿದ ಮತ್ತು ನಂತರದ ಪೂರ್ವ ಶಿಲಾಯುಗಕ್ಕೆ ಸಂಬಂಧಿಸಿದ 21–31 kyr BP ಯಷ್ಟು ಹಳೆಯದಾದ ಉಪಕರಣಗಳು; [12] ಮಧ್ಯಶಿಲಾಯುಗದ/ಮೈಕ್ರೋಶಿಲೆಯ ಯುಗದ ಬೇಟೆಗಾರ-ಸಂಗ್ರಹಕಾರರ ವಸತಿಗಳು  ಪ್ರತಾಪ್‌ಘರ್ ಸಮೀಪದಲ್ಲಿ ಸುಮಾರು 10,550–9550 B.C. ವರ್ಷ ಹಿಂದಿನವು ದೊರೆತಿವೆ; ಹಳ್ಳಿಗಳು, ಸಾಕಿದ ಜಾನುವಾರುಗಳು, ಕುರಿ, ಹೋತಗಳು ಮತ್ತು ಸಸ್ಯಗಳು ಮತ್ತು ಸುಮಾರು 6000 B.C. ಯಷ್ಟು ಹಿಂದಿನ ಕಾಲದಲ್ಲಿಯೇ ನಡೆದಿರಬಹುದಾದ ಕೃಷಿಯ ಕುರುಹುಗಳು - ಹೆಚ್ಚಿನವು c. 4000 ಮತ್ತು 1500 B.C.ರ ನಡುವಿನ ಸಮಯದವಾದರೂ - ಇವೆಲ್ಲವೂ  ಸಹರಾನ್‌ಪುರ ವಿಭಾಗದಲ್ಲಿ ಕಾಣುವ ಸಿಂಧೂ ನದಿ ಕಣಿವೆ ನಾಗರೀಕತೆ ಮತ್ತು ಹರಪ್ಪಾ ಸಂಸ್ಕೃತಿ ಯಿಂದ ವೇದಗಳ ಕಾಲದ ಮೂಲಕ ಮಾನವ ಸಂಸ್ಕೃತಿಯ ಉಗಮವಾದ ಶಿಲಾಯುಗಕ್ಕೆ, ಕರೆದೊಯ್ಯುತ್ತವೆ.

ಕಾಲಾ ನಂತರದಲ್ಲಿ, ಆರ್ಯನ್ನರು ಭಾರತದ ಒಳ ಭೂಖಂಡದ ಬೇರೆ ಬೇರೆ ಭಾಗಳಲ್ಲಿ ಹರಡಿಕೊಂಡರು, ದೂರ ದಕ್ಷಿಣದ ಕೇರಳ ಮತ್ತು ಶ್ರೀಲಂಕಾಗಳಲ್ಲಿ ಹೋಗಿ ಸೇರಿಕೊಂಡರು, ಹಾಗೂ ಸಕಾಲ ಮಾರ್ಗದಲ್ಲಿ, ಹಲವು ದೊಡ್ಡ ಜನಸಂಖ್ಯೆಯ ಕೇಂದ್ರಗಳಲ್ಲಿ ಪ್ರಾಚೀನ ರಾಜ್ಯಗಳು (ಮಹಾಜನಪದರು) ಉದಯಿಸಿದವು. ಪ್ರಾಚೀನ ಮಹಾಜನಪದ ಕಾಲದ ಅಯೋಧ್ಯೆಯ ಕೋಸಲ ಸಾಮ್ರಾಜ್ಯವು - ಇಲ್ಲಿಯೇ ಹಿಂದೂ ಪುರಾಣದ ಅವತಾರ ಪುರುಷನಾದ ರಾಮಾಯಣದ ರಾಮ ರಾಜ್ಯಭಾರ ಮಾಡಿದ್ದ - ಇಲ್ಲಿಯೇ ಇದೆ.  ಕೃಷ್ಣ - ಹಿಂದೂ ಪುರಾಣದ ಮತ್ತೊಬ್ಬ ಅವತಾರ ಪುರುಷ ಮತ್ತು ಮಹಾಭಾರತ ಮಹಾಕಾವ್ಯದಲ್ಲಿ ಪ್ರಮುಖ ಪಾತ್ರವಹಿಸಿದವ ಹಾಗೂ ಹಿಂದೂ ದೇವತೆ ಮಹಾವಿಷ್ಣುವಿನ ಎಂಟನೆಯ ಅವತಾರವಾದವನು - ಇಲ್ಲಿಯ ಮಥುರಾ ನಗರದಲ್ಲಿಯೇ ಜನಿಸಿದನು.    ಮಹಾಭಾರತ ಯುದ್ಧದ ನಂತರದ ಪಾಂಡವ ಅರಸು ಯುಧಿಷ್ಠಿರನ ಆಳ್ವಿಕೆಯಲ್ಲಿನ ಘಟನೆಗಳು ಇಲ್ಲಿಯ ಪಶ್ಚಿಮ ಉತ್ತರ ಪ್ರದೇಶದ ದೋಬ್ ಪ್ರದೇಶ ಮತ್ತು ದೆಹಲಿಯ ನಡುವೆ ನಡೆದಿರುವವೆಂದು (ಕುರು ಮಹಾಜನಪದದಲ್ಲಿ) ನಂಬಲಾಗಿದೆ.   ಕುರು ಸಾಮ್ರಾಜ್ಯವು ಕಪ್ಪು ಮತ್ತು ಕೆಂಪು ಸರಂಜಾಮುಗಳಿಗೆ ಮತ್ತು ಚಿತ್ರಿಸಿದ ಬೂದು ಸರಂಜಾಮುಗಳ ಸಂಸ್ಕೃತಿಗೆ ಸಂಬಂಧಿಸಿದೆ ಮತ್ತು ಇದು ಭಾರತದ ವಾಯುವ್ಯ ಭಾಗದಲ್ಲಿ ಕಬ್ಬಿಣದ ಯುಗವು ಸುಮಾರು 1000 BCEರಲ್ಲಿ ಆರಂಭವಾಗಿರುವುದನ್ನು ಸೂಚಿಸುತ್ತದೆ. ಬ್ರಹ್ಮಪುರಾಣ ಮತ್ತು ವಿಶ್ವಕ್ಸೇನ ಸಂಹಿತದಲ್ಲಿ ದೇವರ ಅವತಾರವೆಂದು ಹೇಳಲಾಗಿರುವ ಸ್ವಾಮಿನಾರಾಯಣ ಛಾಪಿಯಾ ಎಂಬ ಹಳ್ಳಿಯಲ್ಲಿ ಜನಿಸಿದರು.
ಪೂರ್ವ ಮತ್ತು ಪಶ್ಚಿಮದಿಂದ ಮಾಡಲ್ಪಟ್ಟ ಉತ್ತರ ಭಾರತದಲ್ಲಿನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಗಳು ವಿಶಾಲವಾದ ಗಂಗಾ ನದಿಯ ಬಯಲಿನ ಮೂಲಕವೇ ಆಗಬೇಕಾಗಿತ್ತು, ಮತ್ತು ಆ ಬಯಲೇ ಈಗ ಉತ್ತರ ಪ್ರದೇಶವಾಗಿದೆ.  ಮೌರ್ಯ(320-200 BCE), ಕುಶಾನ(100-250 CE), ಗುಪ್ತ(350-600 C.E.) ಸಾಮ್ರಾಜ್ಯ ಸೇರಿದಂತೆ ಭಾರತದ ಎಲ್ಲ ಪ್ರಧಾನ ಸಾಮ್ರಾಜ್ಯಗಳ ಶಕ್ತಿ ಮತ್ತು ಸ್ಥಿರತೆಗಾಗಿ ಈ ಪ್ರದೇಶದ ಮೇಲಿನ ಹಿಡಿತ ಸಾಧಿಸುವುದು ಅತಿ ಮಹತ್ವದ್ದಾಗಿತ್ತು

ಗುಪ್ತರ ಸಾಮ್ರಾಜ್ಯವನ್ನು ಮುರಿದ ಹನ್ ದಾಳಿಗಳ ತರುವಾಯ ಗಂಗಾ-ಯಮುನ ಸಂಗಮ ಪ್ರದೇಶವು ಕನೌಜ್ ಉದಯವಾಗುವುದನ್ನು ಕಂಡಿತು.  ಹರ್ಷವರ್ಧನನ(590- 647 CE) ಆಳ್ವಿಕೆಯ ಕಾಲದಲ್ಲಿ ಕನೌಜ್ ಸಾಮ್ರಾಜ್ಯವು ತನ್ನ ಉತ್ತುಂಗದ ಸ್ಥಿತಿಯಲ್ಲಿತ್ತು. ಇದು ಪಂಜಾಬ್ ಮತ್ತು ಗುಜರಾತ್ ನಿಂದ ಬೆಂಗಾಲ್ ಮತ್ತು ಒರಿಸ್ಸಾವರೆಗೆ ತನ್ನ ವಿಸ್ತಾರವನ್ನು ಹೊಂದಿದ್ದು, ಕೇಂದ್ರ ಭಾರತದ ಹಾಗೂ ನರ್ಮದಾ ನದಿಯ ಉತ್ತರ ಭಾಗಗಳನ್ನೊಳಗೊಂಡಂತೆ ಒಟ್ಟಾರೆ ಇದು ಇಡೀ ಸಿಂಧೂ-ಗಂಗಾ ತಪ್ಪಲು ಪ್ರದೇಶವನ್ನು ಆಕ್ರಮಿಸಿತ್ತು. ಬೌದ್ಧಧರ್ಮದ ಆಶ್ರಯದಾತ ಹಾಗೂ ನಳಂದದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹರ್ಷವರ್ಧನನು ಧರ್ಮಶಾಸ್ತ್ರದ ಕುರಿತಾಗಿ ಚರ್ಚೆಗಳಿಗೆ, ಕಲೆ ಮತ್ತು ಸಾಹಿತ್ಯಕ್ಕೆ ಆಶ್ರಯದಾತನಾಗಿದ್ದ.  ತಾನೇ ಅತ್ಯುತ್ತಮ ಬರಹಗಾರನಾಗಿದ್ದ ಹರ್ಷನು ಮೂರು ಸಂಸ್ಕೃತ ನಾಟಕಗಳನ್ನು ಬರೆದಿದ್ದನು.  ಭಾರತದಲ್ಲಿನ ಅನೇಕ ಸಮುದಾಯಗಳು ತಾವು ಕನೋಜ್‌ನಿಂದ ವಲಸೆ ಬಂದವರ ಸಂತತಿಯವರೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಆಗಿನ ಕನೋಜ್‌ನ ವೈಭವವನ್ನು ಸೂಚಿಸುತ್ತದೆ. ಅವರು ಬಹು ಕಾಲದಿಂದ ಉಳಿದಿದ್ದ ರೈತ ಸಮುದಾಯದ ದೂರುಗಳ ಪ್ರತಿಉತ್ತರ ನೀಡಿದರು ಹಾಗೂ ರೈತರನ್ನು ಜಮೀನುದಾರ ಮಾಲೀಕರ ಸ್ವಾಧೀನತೆಯ ಹಕ್ಕುಗಳ ದಾಳಿ ವಿರುದ್ಧ ಸಜ್ಜುಗೊಳಿಸಿದರು. ಹೀಗೆ ಅವರು ರೈತರ ಚಳುವಳಿಯ ಕಿಡಿಯನ್ನು ಭಾರತದಲ್ಲಿ ಹೊತ್ತಿಸಿದರು.

ಸ್ವಾತಂತ್ರ್ಯದ ನಂತರ, ಈ ರಾಜ್ಯವನ್ನು ಉತ್ತರ ಪ್ರದೇಶ (ಉತ್ತರ ಪ್ರಾಂತ) ಎಂದು ಇದರ ಮೊದಲ ಮುಖ್ಯಮಂತ್ರಿ ಗೋವಿಂದ್ ಬಲಭ್ ಪಂತ್‌ರಿಂದ ಮರು ಹೆಸರಿಸಲಾಯಿತು.  ಪಂತ್‌ರವರು ಜವಾಹರಲಾಲ್ ನೆಹರುಯೊಂದಿಗೆ (ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನ ಮಂತ್ರಿ) ಚೆನ್ನಾಗಿ ಪರಿಚಿತರಿದ್ದರು ಹಾಗೂ ಹತ್ತಿರದವರಾಗಿದ್ದರು ಮತ್ತು ಕಾಂಗ್ರೆಸ್ ಪಾರ್ಟಿಯಲ್ಲಿ ಕೂಡ ಜನಪ್ರಿಯರಾಗಿದ್ದರು; ಇವರು ಲಖನೌನಲ್ಲಿ ಬಹಳ ಒಳ್ಳೆಯ ಹೆಸರು ಪಡೆದ ಕಾರಣ ನೆಹರುರವರು ಇವರನ್ನು ದೇಶದ ರಾಜಧಾನಿ ಹಾಗೂ ಕೇಂದ್ರ ಸರ್ಕಾರದ ಮುಖ್ಯಾಲಯ ಆದ ದೆಹಲಿಗೆ ಕರೆದು ಡಿಸೆಂಬರ್ 27, 1954ರಲ್ಲಿ ಗೃಹ ಮಂತ್ರಿಯಾಗಿ ನೇಮಿಸಿದರು. ಇವರ ನಂತರ ಡಾ. ಸಂಪೂರ್ಣಾನಂದರವರು 1957ರವರೆಗೆ ಮುಖ್ಯಮಂತ್ರಿಗಳಾಗಿದ್ದರು, ಇವರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ಸಂಸ್ಕೃತದ ಪರಿಣಿತ ವಿದ್ವಾಂಸರಾಗಿದ್ದರು. ಆನಂತರ ಇವರು ರಾಜಸ್ಥಾನಿನ ರಾಜ್ಯಪಾಲರಾದರು.

ಸುಚೇತ ಕೃಪಲಾನಿಯವರು ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಕ್ಟೋಬರ್ 1963ಯಿಂದ ಮಾರ್ಚ್ 1967ರವರೆಗೆ ಸೇವೆ ಸಲ್ಲಿಸಿದರು, ರಾಷ್ಟ್ರದ ಕಾರ್ಮಿಕರ ಎರಡು ತಿಂಗಳುಗಳ ದೀರ್ಘ ಮುಷ್ಕರದ ಕಾರಣ ಅವರು ತಮ್ಮ ಸ್ಥಾನ ತ್ಯಾಗ ಮಾಡಬೇಕಾಯಿತು.   ಅವರ ನಂತರ ಚಂದ್ರ ಭಾನು ಗುಪ್ತಾರವರು ಮುಖ್ಯಮಂತ್ರಿಗಳ ಕಾರ್ಯಾಲಯವನ್ನು ವಹಿಸಿಕೊಂಡರು, ಇವರೊಂದಿಗೆ ಲಕ್ಷ್ಮಿ ರಾಮಾನ್ ಆಚಾರ್ಯ ಹಣಕಾಸು ಮಂತ್ರಿಯಾಗಿದ್ದರು. ಆದರೆ ಅಸ್ತವ್ಯಸ್ತತೆ ಹಾಗೂ ಗೊಂದಲತೆಯಿಂದ ಈ ಸರ್ಕಾರ ಬರೀ ಎರಡು ವರ್ಷಗಳಲ್ಲೇ ಅಂತ್ಯವಾಯಿತು, ಪರಿಣಾಮವಾಗಿ ಚರಣ್ ಸಿಂಗ್‌ರವರು ಕಾಂಗ್ರೆಸ್‌ಯಿಂದ ಶಾಸಕರ ಒಂದು ಸಣ್ಣ ಗುಂಪಿನ ಜೊತೆಗೆ ಪಕ್ಷಾಂತರ ಹೋದರು; ಅವರು ಜನ ಕಾಂಗ್ರೆಸ್ ಎಂಬ ಒಂದು ಪಾರ್ಟಿ ನಿರ್ಮಿಸಿದರು, U.P.ಯಲ್ಲಿ ಇದು ಮೊದಲ ಕಾಂಗ್ರೆಸ್ ಅಲ್ಲದ ಸರ್ಕಾರವಾಗಿತ್ತು ಹಾಗೂ ಇದು ಒಂದು ವರ್ಷಗಿಂತ ಹೆಚ್ಚು ಸಮಯದವರೆಗೆ U.P.ಯನ್ನು ಆಳಿತು.

ಉತ್ತರ ಪ್ರದೇಶ ನೇಪಾಳದೊಂದಿಗೆ ಅಂತರಾಷ್ಟ್ರೀಯ ಗಡಿ ಹಂಚಿಕೊಂಡಿದೆ ಹಾಗೂ ಭಾರತದ ರಾಜ್ಯಗಳಾದ ಉತ್ತರಾಖಂಡ್, ಹಿಮಾಚಲ್ ಪ್ರದೇಶ, ಹರಿಯಾಣಾ, ದೆಹಲಿ, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತಿಸ್‌ಗಡ್, ಝಾರ್‌ಖಂಡ್ ಹಾಗೂ ಬಿಹಾರ ಅಂತಹ ರಾಜ್ಯಗಳಿಂದ ಆವೃತವಾಗಿದೆ. ಈ ರಾಜ್ಯವನ್ನು ಎರಡು ಬೇರೆ ಬೇರೆ ನಿಮ್ನೋನ್ನತಿ ಪ್ರದೇಶಗಳಾಗಿ ವಿಭಜಿಸಬಹುದು:-
ದೊಡ್ಡದಾದ ಗಂಗಾ ಬಯಲು ಪ್ರದೇಶ ಉತ್ತರದಲ್ಲಿದೆ: ಗಂಗ-ಯಮುನಾ ಒಟ್ಟುಗೂಡುವ ನಡುವಣ ಪ್ರದೇಶ, ಗಂಗಾ ನದಿಯ ಬಯಲುಗಳು ಹಾಗೂ ಟೆರೈ ಇದರಲ್ಲಿ ಸೇರಿಕೊಂಡಿವೆ.
ಇಲ್ಲಿ ಹಲವು ಕೊಳಗಳು, ಸರೋವರಗಳು ಹಾಗೂ ನದಿಗಳಿಂದ ಕೂಡಿದ ಹೆಚ್ಚು ಫಲವತ್ತಾದ ಮೆಕ್ಕಲು ಮಣ್ಣು ಹಾಗೂ ಸಮತಲ ಲಕ್ಷಣದ ಪ್ರದೇಶವಿದೆ - (ಇಳಿಜಾರು 2 m/km).
ಚಿಕ್ಕದಾದ ವಿಂಧ್ಯಾ ಗುಡ್ಡಗಳು ಹಾಗೂ ಏರುಪೇರಿಲ್ಲದ ಸಮಸ್ಥಿತಿಯ ಪ್ರದೇಶ ದಕ್ಷಿಣದಲ್ಲಿದೆ: ಇದು ಗಟ್ಟಿ ಬಂಡೆಗಳ ಸ್ತರ ಮತ್ತು ಗುಡ್ಡಗಳು, ಬಯಲುಗಳು, ಕಣಿವೆಗಳು ಹಾಗೂ ಏರುಪೇರಿಲ್ಲದ ಸಮಸ್ಥಿತಿಯ ಹಲವು ಪ್ರದೇಶಗಳ-ವಿವರಣೆಗಳಿಂದ ಕೂಡಿದೆ; ನಿಯಂತ್ರಿತ ನೀರಿನ ಲಭ್ಯತೆಯು ಈ ಪ್ರದೇಶವನ್ನು ತುಲನಾತ್ಮಕವಾಗಿ ಬಂಜರಾಗಿಸಿದೆ.

ಈಗ ಉತ್ತರ ಪ್ರದೇಶದಲ್ಲಿ 12.8% ರಷ್ಟು ಭೂಭಾಗವನ್ನು ಕಾಡುಗಳು ಆವರಿಸಿದೆ.  ಬೆಚ್ಚುಬೀಳುವಷ್ಟು ಅರಣ್ಯನಾಶ ಹಾಗೂ ವನ್ಯ ಜೀವಿಗಳ ಅನುಮತಿಯಿಲ್ಲದೆ ಬೇಟೆಯಾಗಿದ್ದರೂ ಕೂಡ ಇಲ್ಲಿ ಸಸ್ಯ ಮತ್ತು ಜೀವಿಗಳ ವೈವಿಧ್ಯಮಯತೆ ಇದೆ. ಹಲವು ತಳಿಯ ಮರಗಳು, ಸ್ತನಿವರ್ಗದ ಪ್ರಾಣಿಗಳು, ಉರಗ ವರ್ಗದ ಪ್ರಾಣಿಗಳು ಹಾಗೂ ಹುಳುಗಳನ್ನು ಸಮಶೀತೋಷ್ಣದ ಮೇಲಿನ ಗುಡ್ಡಗಾಡು ವನಗಳ ಪಟ್ಟಿಯಲ್ಲಿ ಕಾಣಬಹುದು; ಔಷಧೀಯ ಗಿಡಗಳು ಕೂಡ ಈ ಕಾಡುಗಳಲ್ಲಿ ಲಭ್ಯವಿರುತ್ತದೆ ಅಥವಾ ಇತ್ತೀಚೆಗೆ ತೋಟಗಳಲ್ಲಿ ಬೆಳೆಸಲಾಗುತ್ತಿದೆ. ಟೆರೈ-ಡ್ವರ್ ಸವನ್ನಾ ಹಾಗೂ ಹುಲ್ಲು ಪ್ರದೇಶ ಜಾನುವಾರುಗಳಿಗೆ ಬೆಂಬಲಿಸುತ್ತದೆ. ತೇವವಾಗಿರುವ ಉದುರೆಲೆ ಅರಣ್ಯದ ಮರಗಳು ಮೇಲಿನ ಗಂಗೆಯ ಬಯಲುಗಳಲ್ಲಿ ಹಾಗೂ ನದಿಯ ದಡಗಳಲ್ಲಿ ಕೂಡ ಬೆಳೆಯುತ್ತವೆ. ವಾಸ್ತವದಲ್ಲಿ ಈ ವಿಶಾಲ ಬಯಲು ಎಷ್ಟು ಫಲವತ್ತು ಹಾಗೂ ಜೀವ ಬೆಂಲಿಕವಿದೆ ಎಂದರೆ ಏನಾದರೂ, ಎಲ್ಲಾದರೂ ಜೀವಿಸಬಲ್ಲದು ಅಥವಾ ಬೆಳೆಯಬಲ್ಲದೊ ಅದು ಇಲ್ಲಿ ಆಗುತ್ತದೆ. ಗಂಗಾ ಮತ್ತು ಅದರ ಉಪನದಿಗಳು ಹಲವು ಬಗೆಯ ದೊಡ್ಡ ಹಾಗೂ ಚಿಕ್ಕ ಉರಗ ವರ್ಗದ ಪ್ರಾಣಿಗಳ, ನೆಲಜಲ ವಾಸಿಗಳ, ತಾಜಾ-ನೀರಿನ ಮೀನು ಹಾಗೂ ಏಡಿಗಳ ನೆಲೆಯಾಗಿದೆ.  ಹೆಚ್ಚಾಗಿ ಮೋಟು ಗಿಡಗಳು, ಬಬೂಲ್ ಅಂತಹ ಮರಗಳು ಹಾಗೂ ಚಿಂಕಾರ ಅಂತಹ ಪ್ರಾಣಿಗಳು ಬಂಜರು ವಿಂಧ್ಯಾಗಳಲ್ಲಿ ಕಂಡು ಬರುತ್ತವೆ. ರಾಜ್ಯದ ಮುಖ್ಯವಾದ ಗಿಡಗಳು ಹಾಗೂ ಪ್ರಾಣಿಗಳು ಈ ರೀತಿ ಇವೆ:-
ಮರಗಳು: ಪೀತದಾರು ಮರ, ದೊಡ್ಡ ಹೂವು ಬಿಡುವ ನಿತ್ಯ ಹಸುರಿನ ಗುಲ್ಮ, ಫರ್ ಮರ, ದೇವದಾರು ಮರ, ಸಾಲ್ ಮರ, ಓಕ್‌ಮರ, ತೇಗದ ಮರ, ಶೀಶೆಮ್ ಮರ, ಮಾವಿನ ಮರ, ಬೇವಿನ ಮರ, ಆಲದ ಮರ, ಅಶ್ವತ್ಥ ಮರ, ಹುಣಸೇ ಮರ, ನೇರಳೆ ಮರ, ಮಹುವ ಮರ, ಸಿಮಲ್ ಮರ, ಗುಲಾರ್ ಮರ ಹಾಗೂ ಢಕ್ ಮರ.

ಔಷಧೀಯ ಗಿಡಗಳು : ಹಿಂಗನ್, ಢಕ್, ರಾವೊಲ್ಫಿಯಾ, ಸೆಪೆಂಟಿನ, ಹೆಕ್ಸಾಂಡ್ರಮ್, ವೈಯಾಲ ಸರಪೆನ್ಸ್, ಪೊಡೊಫೈಲಮ್, ಇಪೆಕ್ರಾ ಗೆರಾರ್‌ಡೈಯಾನ.
ದೊಡ್ಡ ಬೆನ್ನುಮೂಳೆಯುಳ್ಳ ಜೀವಿಗಳು : ಆನೆ, ಹುಲಿ, ಕರಡಿ, ನೀಲಿ ಜಿಂಕೆ, ಕಾಡು ಹಂದಿ, ಜಿಂಕೆ, ತೋಳ, ಜಂಬುಕ, ನರಿ, ಲಾಂಗೊರ್.
ಪಕ್ಷಿಗಳು : ನವಿಲು, ಮುಳ್ಳುಹಂದಿ, ಬೂದು ಬಣ್ಣದ ಲಾವಕ್ಕಿ, ಪಾರಿವಾಳ, ಸ್ವಾಲೋ ಎಂಬ ವಲಸೆ ಹೋಗುವ ಒಂದು ಪುಟ್ಟ ಹಕ್ಕಿ, ಮೈನಾ, ಭಾರತದ ಉದ್ದ ತೋಕೆಯ ಸಣ್ಣ ಗಿಳಿ, ಕಾಗೆ ಹಾಗೂ ಬಾತುಕೋಳಿ.
ಉರಗ ವರ್ಗದ ಪ್ರಾಣಿ : ಮೊಸಳೆ, ಘರಿಯಾಲ್, ಗೊಹ್, ಹಾವುಗಳು, ಓತಿಕೇತ ಹಾಗೂ ಇತರ ಹಲ್ಲಿಗಳು.
ಮೀನುಗಳು : ರೋಹು, ಕಾಟ್ಲಾ, ಖುಸಾ, ಪರಹಾನ್, ಪತ್ರಾ, ಮೊಯಿ, ಕೊರೌಚ್ ಹಾಗೂ ಸಿಂಘಿ.
ಹಿಂದು ಪುರಾಣ ಕಥೆ ಅನುಸಾರ, ಪ್ರಭು ರಾಮನ ಯೋಧ ಭಕ್ತ ಹಾನುಮಾನ ಜೀವ ಕಾಪಾಡುವ ಸಂಜೀವಿನಿ ವನಸ್ಪತಿಗಳನು ಇದೇ ಪ್ರದೇಶ ಅಥಾವಾ ತುಂಡಾದ ಉತ್ತರಾಖಂಡದ ಪ್ರದೇಶದ ಗುಡ್ಡಗಳಿಂದ ತಂದಿದ್ದನು.

ಉತ್ತರ ಪ್ರದೇಶದ ಹವಾಗುಣ ಮುಖ್ಯವಾಗಿ ಉಷ್ಣವಲಯದ ಕೆಳಗಿನದಾಗಿದೆ, ಆದರೆ ವಾತವರಣ ಸ್ಥಳದ ಹಾಗೂ ಋತುಗಳ ಅನುಗುಣವಾಗಿ ಗಮನಾರ್ಹವಾಗಿ ಬದಲಾಗುತ್ತವೆ:-
ಉಷ್ಣಾಂಶ : ಔನತ್ಯದ ಮೇಲೆ ಅವಲಂಬಿಸಿ, ಉಷ್ಣಾಂಶ ಸಾಧಾರಣವಾಗಿ ಜನವರಿಯಲ್ಲಿ  ರಿಂದ ಮೇ ಹಾಗೂ ಜೂನ್ ನಲ್ಲಿ ರವೆರೆಗೂ ಮಾರ್ಪಡಾಗುತ್ತದೆ. ಅತಿ ಹೆಚ್ಚು ಉಷ್ಣಾಂಶ ರಾಜ್ಯದ  ಗೋಂಡಾದಲ್ಲಿ ಮೇ 8, 1958ರಲ್ಲಿ ದಾಖಲಿಸಲಾಯಿತು.
ಮಳೆಯ ಸುರಿತ : ರಾಜ್ಯದಲ್ಲಿ ಮಳೆಯ ಸುರಿತದ ಪರಿಮಿತಿ ಪೂರ್ವದಲ್ಲಿ  ಹಾಗೂ ಪಶ್ಚಿಮದಲ್ಲಿ . ಶೇಖಡ 90ರಷ್ಟು ಮಳೆ ದಕ್ಷಿಣಪಶ್ಚಿಮ ಮಳೆಗಾಲದಲ್ಲೇ ಆಗುತ್ತದೆ, ಇದು ಜೂನ್‌ನಿಂದ ಸೆಪ್ಟೆಂಬರ್‌ರವರೆಗೆ ಇರುತ್ತದೆ.  ಬಹಳಷ್ಟು ಮಳೆಸುರಿತ ಈ ನಾಲ್ಕು-ತಿಂಗಳ ಕಾಲ ಕೇಂದ್ರೀಕರಿಸಿದ ಕಾರಣ, ಪ್ರವಾಹಗಳು ಒಂದು ಪುನರಾವರ್ತ ಸಮಸ್ಯೆಯಾಗಿದೆ ಮತ್ತು ಧಾನ್ಯಗಳ, ಜೀವ ಹಾಗೂ ಆಸ್ತಿಯ ಹೆಚ್ಚು ನಷ್ಟಕ್ಕೆ ಕಾರಣವಾಗಿದೆ. ಇವೆಲ್ಲಾ ವಿಶೇಷವಾಗಿ ಹೆಚ್ಚಾಗಿ ಹಿಮಾಲಯ-ಮೂಲದ ನದಿಗಳ ಅತಿ ಕಡಿಮೆ ಉತ್ತರ-ದಕ್ಷಿಣ ಇಳಿಜಾರಿನ ಪ್ರಮಾಣ ಇರುವ ರಾಜ್ಯದ ಪೂರ್ವ ಭಾಗದಲ್ಲಿ ಕಾಣಬಹುದು.
ಹಿಮಪಾತ : ರಾಜ್ಯದ ಹಿಮಾಲಯ ಪ್ರದೇಶದಲ್ಲಿ , ಪ್ರತಿ ವರ್ಷ ಹಿಮಪಾತ ಸಾಧಾರಣವಾಗಿ 3 ರಿಂದ 5 ಮೀಟರ್‌ಗಳು (10 ರಿಂದ 15 ಅಡಿಗಳಷ್ಟು) ಡಿಸೆಂಬರ್ ಹಾಗೂ ಮಾರ್ಚಿನ ಮಧ್ಯದಲ್ಲಿ ಆಗುವುದು ಸಾಮಾನ್ಯ.
ಬರಗಳು : ಕಾಲ ಕಾಲಕ್ಕೆ ಮಳೆಗಾಲದ ವೈಫಲ್ಯ, ಬರ ಪರಿಸ್ಥಿತಿ ಹಾಗೂ ಬೆಳೆ ವೈಫಲ್ಯದ ಕಾರಣವಾಗುತ್ತವೆ. 

ಈ ರಾಜ್ಯವು ಹಲವು ಬೇರೆ ಬೇರೆ ಪ್ರದೇಶಗಳನ್ನೊಳಗೊಂಡಿದೆ:-

ಉತ್ತರ ಪ್ರದೇಶ ರಾಜ್ಯ ಎಪ್ಪತ್ತು ಜಿಲ್ಲೆಗಳನ್ನು ಒಳಗೊಂಡಿದೆ, ಇವುಗಳ ಹದಿನೆಂಟು ವಿಭಜನೆಗಳ ಗುಂಪು ಕಟ್ಟಲಾಗಿದೆ:-
ಆಗ್ರಾ ವಿಭಜನೆ, ಅಲಿಘರ್ ವಿಭಜನೆ, ಅಲಹಾಬಾದ್‌ ವಿಭಜನೆ, ಆಜಂಘರ್ ವಿಭಜನೆ, ಬರೇಲಿ ವಿಭಜನೆ, ಬಸ್ತಿ ವಿಭಜನೆ, ಚಿತ್ರಕೂಟ್ ವಿಭಜನೆ, ದೇವಿಪಟನ್ ವಿಭಜನೆ, ಫೈಜಾಬಾದ್ ವಿಭಜನೆ, ಗೊರಖ್‌ಪುರ್ ವಿಭಜನೆ, ಝಾಂಸಿ ವಿಭಜನೆ, ಕಾನಪುರ್ ವಿಭಜನೆ, ಲಖನೌ ವಿಭಜನೆ, ಮೀರಟ್ ವಿಭಜನೆ, ಮಿರ್ಜಾಪುರ್ ವಿಭಜನೆ, ಮೊರಾದಬಾದ ವಿಭಜನೆ, ಸಹರಾನಪುರ್ ವಿಭಜನೆ ಮತ್ತು ವಾರಾಣಾಸಿ ವಿಭಜನೆ.
ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ ಲಖಿಮ್‌ಪುರ್ ಖೇರಿ.
ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಜಿಲ್ಲೆ ಅಲಹಾಬಾದ್‌, ನಂತರ ಕಾನಪುರ್ (2007ರ ಜನಗಣನೆ).

ಉತ್ತರ ಪ್ರದೇಶ ಭಾರತದಲ್ಲೇ ಅತಿ ಹೆಚ್ಚು ಜನಸಂಖ್ಯೆ ಉಳ್ಳ ರಾಜ್ಯ, ಇದರ ಜನಸಂಖ್ಯ ಜುಲೈ 1, 2008ರಲ್ಲಿ 190 ಮಿಲಿಯನ್‌ಗಿಂತ ಹೆಚ್ಚಾಗಿತ್ತು. ಇದು ಒಂದು ಪ್ರತ್ಯೇಕ ದೇಶವಾಗಿದ್ದರೆ, ಉತ್ತರ ಪ್ರದೇಶ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಇರುವ ಐದನೆಯ ದೇಶವಾಗುತಿತ್ತು, ಕ್ರಮೇಣವಾಗಿ ಚೈನಾ, ಭಾರತ, ಸಂಯುಕ್ತ ರಾಷ್ಟ್ರಾದ ಅಮೇರಿಕಾ ಹಾಗೂ ಇಂಡೋನೇಷಿಯಾದ ನಂತರ.
ಭಾರತದ 2001ರ ಜನಗಣನೆಯ ಪ್ರಕಾರ, ಸ್ವಲ್ಪ ಮಟ್ಟಕ್ಕೆ ಉತ್ತರ ಪ್ರದೇಶದ ಶೇಖಡ 80%ಗಿಂತ ಹೆಚ್ಚು ಜನಸಂಖ್ಯೆ ಹಿಂದುಗಳದಾಗಿದ್ದು, 18%ರಷ್ಟು ಜನಸಂಖ್ಯೆಯವರು ಮುಸ್ಲಿಮರಾಗಿದ್ದಾರೆ. ಉಳಿದ ಜನಸಂಖ್ಯೆಯವರು ಸಿಖ್‌ಗಳು, ಬೌದ್ಧ ಧರ್ಮದವರು, ಕ್ರಿಶ್ಚಿಯನರು ಹಾಗೂ ಜೈನರು.

ಉತ್ತರ ಪ್ರದೇಶದ ಜನಸಂಖ್ಯೆಯನ್ನು ಹಲವು ಜಾತಿಗಳು ಹಾಗೂ ಉಪ-ಜಾತಿಗಳಲ್ಲಿ ವಿಭಜಿಸಲಾಗಿದೆ.  ಐತಿಹಾಸಿಕವಾಗಿ, ಹಿಂದು ಸಮಾಜ ನಾಲ್ಕು ಉಪ-ವಿಭಾಗಗಳಲ್ಲಿ ಅಥವಾ ವರ್ಣಗಳಲ್ಲಿ ವಿಭಜಿಸಲಾಗಿದೆ, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಹಾಗೂ ಶೂದ್ರರು, ಇನ್ನು ಐದನೆಯ ಗುಂಪು ಜಾತಿಯ ಹೊರಗೆ ಎಂದು ಪರಿಗಣಿಸಲಾದ ದಲಿತರದು. ವಾಸ್ತವದಲ್ಲಿ, ಉತ್ತರ ಪ್ರದೇಶದ ಸಮಾಜ ಜಾತಿಗಳು ಎಂದು ಉಲ್ಲೇಖಿಸಿದ ಹಲವು ಚಿಕ್ಕ ಗುಂಪುಗಳಲ್ಲಿ ವಿಭಜಿಸಲಾಗಿದೆ.   ರಾಜ್ಯದ ಪ್ರಮುಖ ಬ್ರಾಹ್ಮಣ ಜಾತಿಗಳಲ್ಲಿ ಭಾರ್ಗವ, ಭಟ್, ಭೂಮಿಹರ್, ಗಂಗಪುತ್ರ, ಗೌರ್, ಜೋಷಿ, ಕನ್ಯಕುಬ್ಜಾ, ಮೈಥಿಲ್, ನಗರ ಸೇರಿವೆ. ಸಕಲ್‌ದ್ವಿಪಿಯ, ಸಂಧ್ಯಾ, ಸರ್ಯುಪರೀನ್, ಶ್ರೀಮಲಿ ಹಾಗೂ ತ್ಯಾಗಿ. ಹಾಗೆಯೇ, ಕ್ಷತ್ರಿಯ ವರ್ಣದಲ್ಲಿ ಹಲವು ಗುಂಪುಗಳು ಸೇರಿವೆ, ಇದರಲ್ಲಿ ರಜಪೂತ್ ಪ್ರಮುಖವಾದದ್ದು. ವೈಶ್ಯದ ಪ್ರಮುಖ ಜಾತಿಗಳು ಸಾಂಪ್ರದಾಯಿಕವಾಗಿ ವ್ಯಾಪಾರದಲ್ಲಿ ತೊಡಗಿರುತ್ತಾರೆ, ಅವುಗಳಲ್ಲಿ ಅಗ್ರಹಾರಿ, ಅಗ್ರವಾಲ್, ಬಾರ್ನವಾಲ್, ಘಾಟೆ ಬನಿಯ, ಹಲ್ವಾಯಿ, ಜೈಸ್ವಾಲ್, ಕಲ್ವಾರ್, ಕೇಸರ್ವಾನಿ, ಮಹೇಶ್ವರಿ, ಮಾಥುರ್, ಒಮಾರ್, ಓಸ್ವಾಲ್, ಪರ್ವಾರ್, ಪಟ್ವಾ, ರಸ್ತೋಗಿ, ಸಧ್ ಹಾಗೂ ತೇಲಿ ಸೇರಿವೆ. ಇವೆಲ್ಲಾ ಜಾತಿಗಳ ಜೊತೆ ಸಾಂಪ್ರದಾಯಿಕವಾಗಿ ಗುಮಾಸ್ತ ವೃತ್ತಿಯಲ್ಲಿ ತೊಡಗಿದ ಕಯಸ್ತಾ ಜಾತಿ ಕೂಡ ರಾಜ್ಯದ ಜನಸಂಖ್ಯೆಯಲ್ಲಿ ಒಂದು ಮುಖ್ಯ ಭಾಗವಾಗಿದೆ. ವೈಶ್ಯ ಜಾತಿಗಳು ಸಾಂಪ್ರದಾಯಿಕವಾಗಿ ಬೇಸಾಯದಲ್ಲಿ ತೊಡಗಿರುತ್ತಾರೆ, ಅವುಗಳಲ್ಲಿ ಅಹಿರ್, ಗಡೇರಿಯಾ, ಗೌರ್ವಾ, ಗುಜ್ಜರ್, ಜಟ್, ಕಚ್ಚಿ, ಕಂಬೊಜ್, ಕೊಯಿರಿ, ಕುರ್ಮಿ, ಮುರಾವ್, ಮಾಲಿ, ರಾವೆ ಹಾಗೂ ರೊರ್ ಸೇರಿವೆ.  ಪ್ರಮುಖ ಶೂದ್ರ ಜಾತಿಗಳಲ್ಲಿ ಬರಹೈ, ಬರ್ವಾರ್, ಬೆಲ್ದಾರ್, ಧಾಗಿ, ಧೋಬಿ, ದುಸಧ್, ಜೋಗಿ, ಕಹರ್, ಕೇವಟ್, ನಾಯಿ ಹಾಗೂ ಥಾಥೇರಾ.
ಉತ್ತರ ಪ್ರದೇಶದ ಹೊರವಲಯದ ಕ್ಷೇತ್ರಗಳು, ಹಲವು ಆದಿವಾಸಿ ಸಮುದಾಯಗಳಿಗೆ ಮನೆಯಾಗಿದೆ, ಅವುಗಳಲ್ಲಿ ಅಗಾರಿಯ, ಬೈಗಾ, ಭಾರ್, ಭೊಕ್ಸಾ, ಬಿಂದ್, ಚೇರೊ, ಗೊಂಡ್, ಕೋಲ್ ಹಾಗೂ ಕೊರ್ವಾ ಸೇರಿವೆ. ಇವುಗಳಲ್ಲಿ ಐದು ಆದಿವಾಸಿ ಸಮುದಾಯಗಳು ಭಾರತ ಸರ್ಕಾರದಿಂದ ಅನುಕೂಲವಿಲ್ಲದ ಹಿಂದುಳಿದ ಪಂಗಡಗಳು ಎಂದು ಗುರುತಿಸಲ್ಪಟ್ಟಿವೆ, ಎಂದರೆ  ಥಾರುಗಳು, ಭೊಕ್ಸಾಗಳು, ಭೊಟಿಯಾಗಳು, ಜೌನಸ್ವರಿಗಳು ಹಾಗೂ ರಾಜಿಗಳು.
ಉತ್ತರ ಪ್ರದೇಶದ ಮುಸ್ಲಿಮ್ ಸಮುದಾಯದಲ್ಲಿ ಸಗೋತ್ರವಿವಾಹ ಗುಂಪುಗಳು ಬಿರಾದರಿಗಳೆಂಬ ಉಲ್ಲೇಖನವಿದೆ. ಸಂಪ್ರಾದಾಯಕವಾಗಿ ಸಯ್ಯದ, ಸಿದ್ಧಿಕಿ, ಶೆಖ್, ಶೆಖ್‌ಜಾದಾ, ಮುಘಲ್ ಹಾಗೂ ಪಠಾಣ್, ಈ ಐದು ಸಮುದಾಯಗಳು ಇತರ ಪರದೇಶಗಳಿಂದ ಭಾರತಕ್ಕೆ ಸ್ಥಾಯಿಯಾದ ಗುಂಪುಗಳಲ್ಲಿ ಸಭ್ಯ ಎಂದು ತೋರುತ್ತದೆ.   ಈ ಗುಂಪುಗಳ ಜೊತೆ ಹತ್ತಿರದ ಸಂಬಂಧ ಇರುವ ಸಮುದಾಯಗಳು ಸಭ್ಯ ಎಂದು ತೋರುವವರು ರಜಪೂತ ಸಮುದಾಯದಿಂದ, ಡೋಗರ್, ಗರ್ಹಾ, ಗುಜ್ಜರ್, ಜೊಜಾ, ಖಾನ್‌ಜಾದಾ, ಮ್ಮಲ್‌ಕಾನಾ, ಮೆವಾಟಿ, ರಾನ್‌ಘರ್ ಹಾಗೂ ಮುಸ್ಲಿಮ್ ತಿಯಾಗಿಗಳು. ಇತರ ಪ್ರಮುಖ ಮುಸ್ಲಿಮ್ ಬಿರಾದರಿಗಳು ಅನ್ಸಾರಿ, ಬಂಜಾರ, ಬಿಸಾಟಿ, ಧೋಬಿ ಗಡ್ಡಿ, ಘೋಸಿ, ಹಜ್ಜಾಮ್, ಮನಿಹಾರ್, ಮುಸ್ಲಿಮ್ ಕಯಸ್ಥಾಗಳು, ಸೈಫಿ ಹಾಗೂ ತೆಲಿ.

ರಾಜ್ಯದ ಸಂಸತ್ತು (ವಿಧಾನ ಸಭಾ) 403 ಚುನಾವಣಾ ಘಟಕಗಳನ್ನು ಹೊಂದಿದೆ. ಉತ್ತರ ಪ್ರದೇಶದ 2007ರ ಚುನಾವಣೆಗಳಲ್ಲಿ ಮಾಯಾವತಿಯ ಬಹುಜನ್ ಸಮಾಜ ಪಾರ್ಟಿ ಅನಿರೀಕ್ಷಿತ ಬಹುಮತ ಸ್ಥಾನ ಪಡೆಯಿತು, ಇದು ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಕಾರಣವಾಯಿತು.  1991ರಲ್ಲಿ ಭಾರತೀಯ ಜನತಾ ಪಾರ್ಟಿ (BJP) ಬಹುಮತ ಪಡೆದ ನಂತರ ಇದೇ ಮೊದಲ ಬಾರಿಗೆ ಒಂದು ಪ್ರತ್ಯೇಕ ಪಾರ್ಟಿ ಸಂಪೂರ್ಣವಾದ ಬಹುಮತ ಪಡೆದದ್ದು; ಕಳೆದ ಎರಡು ದಶಕಗಳಲ್ಲಿ ಸಮಾಜವಾದಿ ಪಾರ್ಟಿ, ಭಾರತೀಯ ಜನತಾ ಪಾರ್ಟಿ ಹಾಗೂ ಬಹುಜನ್ ಸಮಾಜ ಪಾರ್ಟಿ ಇಂತಹ ಪಾರ್ಟಿಗಳ ನಡುವೆ ಹಲವು ಸಮ್ಮಿಶ್ರಣ ಸರ್ಕಾರಗಳ ಆಡಳಿತವೇ ಪ್ರಬಲವಾಗಿತ್ತು.  BSPಯ 2007ರ ಜಯದ ಒಂದು ಕಾರಣ ಎಂದರೆ ಬ್ರಾಹ್ಮಣರ ವೋಟುಗಳ ಈ ದಲಿತ ಪ್ರಧಾನವಾಗಿರುವ ಪಾರ್ಟಿಯಲ್ಲಿ ಮಿಶ್ರಣ. ಮುಂಚಿನ ದಶಕಗಳಲ್ಲಿ ಮತದಾರರ ವಿಭಜನೆಯ ಪ್ರವೃತ್ತಿ ತುಂಬ ಆಳವಾಗಿ ಬೇರೂರಿತ್ತು, ದಲಿತರು, ಮೇಲಿನ ಜಾತಿಯವರು, ಮುಸ್ಲಿಮರು ಹಾಗೂ ಹಲವು OBC ಗುಂಪುಗಳ ನಡುವೆ ಈ ರಾಜ್ಯದಲ್ಲಿ ವೋಟುಗಳು ಪ್ರತಿಬಂಧಿತವಾಗಿದ್ದವು. ಮಾಯಾವತಿ, 206 ಸೀಟುಗಳಿಂದ ಜಯವಾಗಿ, UPಯ ಮುಂದಿನ CM ಆಗಿ 13 ಮೇ 2007ರಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅವರು ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಅವರು 19 ಕ್ಯಾಬಿನೆಟ್ ದರ್ಜೆಯ ಮಂತ್ರಿಗಳ ಜೊತೆಗೆ, 21 ರಾಜ್ಯದ ಮಂತ್ರಿಗಳು ಕೂಡ ಸ್ವಂತಂತ್ರ ಹೊಣೆಗಾರಿಕೆಯನ್ನು ಪಡೆದು ರಾಜ್ಯಪಾಲ T.V. ರಾಜೇಶ್ವರ್‌ ರಿಂದ ವಚನಬದ್ಧತೆಯನ್ನು ಸ್ವೀಕರಿಸಿದರು.  ಅವರ ಪ್ರಮುಖ ಕ್ಯಾಬಿನೆಟ್ ಸಹೋದ್ಯೋಗಿಗಳ ಹೆಸರು: ಅವಧಪಾಲ್ ಸಿಂಗ್, ಬಾಬು ಸಿಂಗ್ ಕುಷಾವಾಹ, ಬಾದ್‌ಶಾಹ ಸಿಂಗ್, ನಸೀಮುದ್ದೀನ್ ಸಿದ್ಧಿಕಿ, ರಾಕೇಶ್ ಧಾರ್ ತ್ರಿಪಾಠಿ, ರತನಲಾಲ್ ಅಹಿರ್ವಾರ್ ಹಾಗೂ ಸುಧೀರ್ ಗೋಯಲ್.  ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್‌ರ ಸಮಾಜವಾದಿ ಪಾರ್ಟಿ ರಾಜ್ಯದಲ್ಲಿ 97 ಸೀಟುಗಳಿಂದ ಎರಡನೆಯ ಸ್ಥಾನ ಪಡೆಯಿತು.

ಇತ್ತೀಚಿನ ಸಮಯದಲ್ಲಿ ಆಪಾದನೆಯನ್ನು ಹೊತ್ತ ಜನರ ವ್ಯಾಪಕವಾದ ನುಸುಳಿಕೆಯಿಂದ ಉತ್ತರ ಪ್ರದೇಶದ ರಾಜಕೀಯ ಪ್ರತಿಬಿಂಬ ಹೆಸರು ಕೆಡಿಸಿಕೊಂಡಿದೆ. ಇಂತಹ ಜನರ ಯಶಸ್ಸು ಪ್ರಶ್ನಿಸುವಂತಹದಾಗಿರುತ್ತದೆ ಅಥವಾ ಇವರು ಹಿಂಸಾಚಾರ ಪ್ರವೃತ್ತಿಯನ್ನು ಹುರಿದುಂಬಿಸಿಕೊಂಡಿರುತ್ತಾರೆ.  ಆದರೆ, ಕಳೆದ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗ ಫಲಪ್ರದವಾಗಿ ತೃಪ್ತಿಕರವಾದ ಚುನಾವಣೆಯನ್ನು ನಿರ್ವಹಿಸಿದೆ ಎಂದು ಗ್ರಹಿಸಿಕೊಂಡಿತು - ಅತ್ಯಂತ ಶಿಸ್ತಿನ ಸುರಕ್ಷತೆಯನ್ನು ನಿಯೋಗಿಸುತ್ತಾ ಮತಗಟ್ಟೆ-ಆಕ್ರಮಣ, ನಕಲಿ ವೋಟುಗಳು ಹಾಗೂ ಇತರ ದುರುಪಯೋಗಗಳನ್ನು ತಡೆಯಿತು. ಆದರೂ, ಅಪರಾಧಿ-ರಾಜಕಾರಣಿಗಳು ಭಾಗವಹಿಸುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಇದಕ್ಕೆ ಮುಖ್ಯವಾದ ಕಾರಣ ಅವರ ಹಿಂದಿನ ಯಶಸ್ಸು. 2002ರ U.P. ಸಂಸತ್ತಿನ ಚುನಾವಣೆಯಲ್ಲಿ, ಅಪರಾಧಿ ದಾಖಲೆಗಳನ್ನುಳ್ಳ ಅಭ್ಯರ್ಥಿಗಳು ಸಂಸತ್ತಿನಲ್ಲಿ 403 ಸೀಟುಗಳಲ್ಲಿ 206 ಸೀಟುಗಳನ್ನು ಗೆದ್ದರು, ಇದರ ಅರ್ಥ ಒಳ್ಳೆಯ ಹೆಸರಿನ ರಾಜಕಾರಣಿಗಳಿಗಿಂತ ಹೆಚ್ಚು ಅಪರಾಧಿಗಳು ಚುನಾಯಿತರಾಗಿದ್ದರು. 2007ರ ಚುನಾವಣೆಗಳಲ್ಲಿ, ಅಪರಾಧಿಗಳ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಾಯಿತು.

ಈ ರಾಜ್ಯ ರಾಷ್ಟ್ರಕ್ಕೆ ನಾಯಕರನ್ನು ಒದಗಿಸುವ ದಾಖಲೆಯನ್ನು ಪಡೆದಿದೆ; ಭಾರತದ ಹದಿನಾಲ್ಕು ಪ್ರಧಾನ ಮಂತ್ರಿಗಳಲ್ಲಿ ಎಂಟು ಜನ ಉತ್ತರ ಪ್ರದೇಶದಿಂದ ಇದ್ದರು.  ಅವರು: ಜವಾಹರಲಾಲ್ ನೆಹರು, ಲಾಲ್ ಬಹಾದುರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಚೌಧರಿ ಚರಣ ಸಿಂಗ್, ವಿಶ್ವನಾಥ ಪ್ರತಾಪ್ ಸಿಂಗ್, ಚಂದ್ರಶೇಖರ್ ಹಾಗೂ ಅಟಲ್ ಬಿಹಾರಿ ವಾಜ್‌ಪೇಯಿ. ಅಟಲ್ ಬಿಹಾರಿ ವಾಜ್‌ಪೇಯಿ ಅವರು ಗ್ವಾಲಿಯರನಲ್ಲಿ ಜನಿಸಿದ್ದರೂ ಕೂಡ UP ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸಿದರು.
ಸಮಕಾಲೀನ ರಾಜಕೀಯ ದೃಶ್ಯ ಕೂಡ ರಾಷ್ಟ್ರದ ಸನ್ನಿವೇಶದಲ್ಲಿ ಕುತೂಹಲಕಾರಿಯಾಗಿದೆ.  ನೆಹರು-ಗಾಂಧಿ ಮೆನೆತನದ ಉತ್ತರಾಧಿಕಾರಿಗಳು U.P.ಯನ್ನು ತಮ್ಮ ತವರು ರಾಜ್ಯವೆಂದು ಒಪ್ಪಿ ಸ್ವೀಕರಿಸಿದ್ದಾರೆ.  ಕಾಂಗ್ರೆಸ್ ಪ್ರಧಾನಿ ಸೋನಿಯಾ ಗಾಂಧಿ ರಾಯ ಬರೇಲಿಯನ್ನು ಪ್ರತಿನಿಧಿಸುತ್ತಾರೆ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಅಮೇಥಿ, ಸುಲ್ತಾನ್‌ಪುರ್ ವನ್ನು ಪ್ರತಿನಿಧಿಸುತ್ತಾರೆ.  ಇಂದಿರಾ ಗಾಂಧಿಯವರೊಂದಿಗೆ ವೈಮನಸ್ಯ ಹೊಂದಿದ ಸೊಸೆ ಮೇನಕಾ ಗಾಂಧಿಯವರು BJP ಸಂಸತ್ತಿನ ಸದಸ್ಯೆ ಹಾಗೂ ಇವರ ಮಗ ವರುಣ ಗಾಂಧಿ ಕೂಡ BJP ರಾಜಕಾರಣಿಯಾಗಿ ಹಾಗೂ ಲೋಕಸಭೆಯ ಸದಸ್ಯರಾಗಿ ರಂಗಪ್ರವೇಶಿಸಿದ್ದಾರೆ.  ಇತರ ಮುಖ್ಯ ರಾಜಕೀಯ ನಾಯಕರು BJP ನಾಯಕ ಹಾಗೂ ಮಾಜಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಿಗಳಾದ ಡಾ. ಮುರಲಿ ಮನೋಹರ್ ಜೋಶಿ, SP ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್, BSP ಪ್ರಧಾನಿ ಹಾಗೂ ಈಗಿನ ನಾಲ್ಕನೇಯ ವೇಳೆಯ ಮುಖ್ಯ ಮಂತ್ರಿ ಮಾಯಾವತಿ, BJP ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಜನಾಥ ಸಿಂಗ್, ಮಾಜಿ BJP ಮುಖ್ಯ ಮಂತ್ರಿ ಕಲ್ಯಾಣ ಸಿಂಗ್, ರಾಷ್ಟ್ರೀಯ ಲೊಕದಳ ಮುಖ್ಯಸ್ಥ ಅಜೀತ ಸಿಂಗ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ನಂತರ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ನಾರಾಯಣ ದತ್ತ ತಿವಾರಿ, ಭಾರತೀಯ ಸರ್ಕಾರದ ಮಾಜಿ ಮಾಹಿತಿ ಹಾಗೂ ಪ್ರಸಾರಣ ಮಂತ್ರಿ ಮುಖ್ತಾರ ಅಬ್ಬಾಸ್ ನಖ್ವಿ, UP ಸರ್ಕಾರದ ಶಿಕ್ಷಣ ಮಂತ್ರಿ ಜಾಫರ ಅಲಿ ನಖ್ವಿ, ಮತ್ತಿತರರು.  ರಾಜಕೀಯದ ಗೋಪುರಾಕೃತಿಯ ಕಟ್ಟಡದ ಅತ್ಯಂತ ಕೆಳಗಿನ ಶ್ರೇಣಿಯಲ್ಲಿ ಈ ರಾಜ್ಯ ಹಲವು ಗ್ರಾಮ ಮಂಡಳಿಗಳನ್ನು ಹೊಂದಿದೆ, ಇದನ್ನು ಪಂಚಾಯಿತಿಗಳೆಂದು ಉಲ್ಲೇಖಿಸುತ್ತಾರೆ. ಭಾರತದ ಇತರ ರಾಜ್ಯಗಳಲ್ಲೂ ಇದೇ ತರಹದ ವ್ಯವಸ್ಥೆ ಇದೆ.

ಉತ್ತರ ಪ್ರದೇಶದ ಕ್ಷೇತ್ರದಲ್ಲಿ ಕಲಿಯುವಿಕೆಯ ದೊಡ್ಡ ಸಂಪ್ರದಾಯವೇ ಇತ್ತು, ಆದರೂ ಇದು ಬರೀ ವಿಶಿಷ್ಟರ ಹಾಗೂ ಧಾರ್ಮಿಕ ಪ್ರತಿಷ್ಠಾನದವರಿಗೆ ಮಾತ್ರ ಸಿಮಿತವಾಗಿತ್ತು. ವೇದ ಕಾಲದಿಂದ ಗುಪ್ತ ಕಾಲದವರೆಗಿನ ಅಧ್ಯಯನ ಒಳಗೊಂಡಿದ ಸಂಸ್ಕೃತ ಆಧಾರಿತ ಶಿಕ್ಷಣ, ನಂತರದ ಪಾಲಿ ಜ್ಞಾನ ಗ್ರಂಥ ಸಂಗ್ರಹ ಹಾಗೂ ಪುರಾತನದಿಂದ ಮಧ್ಯಕಾಲದವರೆಗಿನ ಅಧ್ಯಯನ ಪರ್ಷಿಯನ್/ಅರೆಬಿಕ್ ಭಾಷೆಗಳಲ್ಲಿರುವ ಸಂಗ್ರಹ, ಇವೆಲ್ಲವೂ ಬ್ರಿಟೀಷರು ಆಡಳಿತಕ್ಕೆ ಬರುವ ಮುನ್ನ ಹಿಂದೂ-ಬೌದ್ಧ-ಮುಸ್ಲಿಮ್ ಶಿಕ್ಷಣದ ಮಹಾಸೌಧವಾಗಿತ್ತು.  ಈಗಿನ ಶಾಲೆಯಿಂದ ವಿಶ್ವವಿದ್ಯಾಲಯದ ಪಶ್ಚಿಮ ಶಿಕ್ಷಣದ ಪದ್ಧತಿಯ ಆರಂಭ ಹಾಗೂ ಅಭಿವೃದ್ಧಿ ಇಲ್ಲಿಯೇ ಆಗಿದ್ದು, ದೇಶದ ಇತರ ಭಾಗಗಳಲ್ಲಿ ವಿದೇಶೀಯ ಕ್ರಿಸ್ತಧರ್ಮಪ್ರಚಾರಕರಿಂದ ಹಾಗೂ ಬ್ರಿಟಿಷ್ ವಲಸೆ ನಾಡಿನವರ ಆಡಳಿತದಿಂದ ಈ ಪದ್ಧತಿ ಅಳವಡಿಸಿಕೊಳ್ಳಲಾಯಿತು.
ಅಲಿಗಡ್ ಮುಸ್ಲಿಮ್ ವಿಶ್ವವಿದ್ಯಾಲಯ ಒಂದು ವಾಸದ ಮನೆಗಳಿರುವ ಸೈದ್ಧಾಂತಿಕವಾದ ಸಂಸ್ಥೆ.  ಬ್ರಿಟಿಷ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಮಾದರಿಯಂತೆ 1875ರಲ್ಲಿ ಸರ್ ಸೈಯದ್ ಅಹಮದ್ ಖಾನ್ ಇವರಿಂದ ಸ್ಥಾಪಿಸಲಾಗಿತ್ತು - ನಂತರ ಇದನ್ನು ಮೊಹಮದನ್ ಆಂಗ್ಲೊ-ಒರಿಯಂಟಲ್ ಕಾಲೇಜ್ ಎಂದು ಹೆಸರಿಸಲಾಯಿತು - ಮತ್ತು 1920ರಲ್ಲಿ ಇದಕ್ಕೆ ಕೇಂದ್ರ ವಿಶ್ವವಿದ್ಯಾಲಯ ಎಂಬ ದರ್ಜೆಯನ್ನು ಭಾರತದ ಸಂಸತ್ತು ನೀಡಿತು. ಭಾರತದಲ್ಲಿನ ಉತ್ತರ ಪ್ರದೇಶದ ಅಲಿಗಡ್‌ನಲ್ಲಿ ಸ್ಥಾಪಿತ ಈ ವಿಶ್ವವಿದ್ಯಾಲಯ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ರೂಪಗೊಂಡ ಮೊದಲನೆಯ ಉಚ್ಚ ಅಧ್ಯಯನ ಸಂಸ್ಥೆಯಾಗಿತ್ತು.
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಭಾರತದ ವಾರಾಣಾಸಿಯಲ್ಲಿ ಸ್ಥಾಪಿತವಾದ ಒಂದು ಕೇಂದ್ರ ವಿಶ್ವವಿದ್ಯಾಲಯ.  ಇದು ವಾರಾಣಾಸಿಯ ಕೇಂದ್ರ ಹಿಂದೂ ಕಾಲೇಜಿನಿಂದ ಪ್ರಕಟವಾಯಿತು, ಇದನ್ನು ಆನ್ನಿ ಬೆಸೆಂಟ್ ಒಬ್ಬ ಐರಿಷ್ ವಂಶದ ಬ್ರಿಟಿಷ್ ಮಹಿಳೆ ಸ್ಥಾಪಿಸಿದ್ದರು, ಇವರು ಏಪ್ರಿಲ್ 1911ರಲ್ಲಿ ವಾರಾಣಾಸಿಯಲ್ಲಿ ಒಂದು ಸಮಾನವಾದ ಹಿಂದೂ ವಿಶ್ವವಿದ್ಯಾಲಯಕ್ಕೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರೊಂದಿಗೆ ಕೈಗೂಡಿಸಿದರು.  ಕ್ರಮೇಣವಾಗಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ 1 ಅಕ್ಟೋಬರ್ 1917ರಿಂದ ಕೇಂದ್ರ ಹಿಂದೂ ಕಾಲೇಜ್‌ನ್ನು ತನ್ನ ಮೊದಲ ಘಟಕವಾಗಿಸಿಕೊಂಡು ಕಾರ್ಯಾರಂಭಿಸಿತು. ವಿಶ್ವವಿದ್ಯಾಲಯಕ್ಕೆ ಹಣ ಹೆಚ್ಚಾಗಿ ಹಿಂದೂ ರಾಜಕುಮಾರರಿಂದ ಬರುತ್ತಿತ್ತು ಹಾಗೂ ಇವತ್ತಿನ  ಆವರಣವನ್ನು ಕಾಶಿ ನರೇಶರು ದಾನ ನೀಡಿದ ಜಮೀನಿನಲ್ಲಿ ಕಟ್ಟಲಾಗಿತ್ತು.   ಏಷ್ಯಾದಲ್ಲೇ ಅತಿ ದೊಡ್ಡ ವಾಸದ ಮನೆಗಳಿರುವ ವಿಶ್ವವಿದ್ಯಾಲಯ ಎಂದು ಮನ್ನಣೆ ಪಡೆದಿದೆ, ಇಲ್ಲಿ 128ಗಿಂತ ಹೆಚ್ಚು ಬೋಧಿಸುವ ಇಲಾಖೆಗಳಿವೆ; ವಿಜ್ಞಾನ, ಭಾಷಾಧ್ಯಯನ, ಕಾನೂನು, ಇಂಜಿನಿಯರಿಂಗ್ (IT-BHU) ಹಾಗೂ ವೈದ್ಯಕೀಯ (IMS-BHU) ಸೇರಿದಂತೆ ಇಲ್ಲಿನ ಹಲವು ಕಾಲೇಜುಗಳು ಭಾರತದ ಶ್ರೇಷ್ಠ ಕಾಲೇಜುಗಳ ದರ್ಜೆಯನ್ನು ಪಡೆದಿದ್ದವು.
ಭಾರತದ ನಿರ್ವಹಣ ಸಂಸ್ಥೆ ಲಖನೌ ಭಾರತದ ನಿರ್ವಹಣ ಶಾಲೆಗಳಲ್ಲಿ ಪ್ರಮುಖವಾಗಿದೆ. 
ಭಾರತದ ತಂತ್ರಜ್ಞಾನದ ಸಂಸ್ಥೆ ಕಾನಪುರ್ - 1960ರಲ್ಲಿ ಉದ್ಯೋಗ ನಗರಿ ಕಾನಪುರ್‌ನಲ್ಲಿ ಸ್ಥಾಪಿತವಾಗಿದ್ದೂ ಅಂತರರಾಷ್ಟ್ರೀಯವಾಗಿ ಮನ್ನಣೆ ಪಡೆದ ಭಾರತದ ತಂತ್ರಜ್ಞಾನದ ಸಂಸ್ಥೆ; ಈಗ IIT-ಕಾನಪುರ್ ಅಥವಾ 'IITK' ಎಂದು ಪ್ರಚಲಿತವಾಗಿದೆ. ಇದು ಪ್ರಾಥಮಿಕವಾಗಿ ಪದವಿಪೂರ್ವದ ಶಿಕ್ಷಣವನ್ನು ಇಂಜಿನೀಯರಿಂಗ್ ಮತ್ತು ಸಂಬಂಧಪಟ್ಟ ವಿಜ್ಞಾನಗಳು ಹಾಗೂ ತಂತ್ರಜ್ಞಾನಗಳು ಹಾಗೂ ಇದೇ ಕ್ಷೇತ್ರದ ಸಂಶೋಧನೆಗಳನ್ನು ಬೋಧಿಸುವ ನಿಟ್ಟಿನಲ್ಲಿ ಕೇಂದ್ರೀಕರಿಸುತ್ತವೆ.
ಪ್ರಸಿದ್ಧ ಲಾ ಮಾರ್ಟಿನೇರ್ ಕಾಲೇಜು ಸೇರಿದಂತೆ ರಾಜ್ಯದ ರಾಜಧಾನಿ ಲಖನೌನಲ್ಲಿ ಹಲವು ಒಳ್ಳೆಯ ಹೆಸರು ಪಡೆದ ಶಾಲೆಗಳು ಇವೆ.

ಭಾರತದ ಆರ್ಥಿಕತೆಯಲ್ಲಿ  ಉತ್ತರ ಪ್ರದೇಶ ಎರಡನೇಯ ದೊಡ್ಡ ರಾಜ್ಯವಾಗಿದ್ದು, ಮೊದಲನೆಯದು ಮಹಾರಾಷ್ಟ್ರ. ಇದು ಭಾರತದ ಒಟ್ಟು GDP ಗೆ 8.17% ಒದಗಿಸುತ್ತದೆ. 1999 ಹಾಗೂ 2008ರ ನಡುವಿನಲ್ಲಿ, ಆರ್ಥಿಕತೆ ಕೇವಲ 4.4% ಪ್ರತಿ ವರ್ಷದ ಅನುಸಾರ ಬೆಳೆಯಿತು. ಇದು ಭಾರತದಲ್ಲಿ ಅತಿ ಕಡಿಮೆ ದರಗಳ ಶ್ರೇಣಿಯಲ್ಲಿ ಒಂದಾಗಿತ್ತು.
ರಾಜ್ಯದ ಮಹತ್ವದ ಆರ್ಥಿಕ ಚಟುವಟಿಕೆ ಬೇಸಾಯವಾಗಿದ್ದು, 1991ರಲ್ಲಿ ರಾಜ್ಯದ 73% ರಷ್ಟು ಜನಸಂಖ್ಯೆಯವರು ಬೇಸಾಯದಲ್ಲಿ ತೊಡಗಿದ್ದರು ಹಾಗೂ ರಾಜ್ಯದ 46% ಆದಾಯವನ್ನು ಬೇಸಾಯದಿಂದ ಪಡೆಯಲಾಗಿದೆ ಎಂದು ಲೆಕ್ಕ ಹಾಕಲಾಗಿತ್ತು. ಉತ್ತರ ಪ್ರದೇಶವು ದೇಶದಲ್ಲಿ ಆಹಾರ-ಹೆಚ್ಚಳವಿರುವ ರಾಜ್ಯ ಎಂಬ ತನ್ನ ಹಿಂದಿನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಚಿಕ್ಕ ಪ್ರಮಾಣದ ಉದ್ಯೋಗ ಘಟಕಗಳಿಗೆ ಮನೆಯಾಗಿದೆ, ಅಂದರೆ 12% ಅಂತೆ 2.3 ಮಿಲಿಯನ್‌ಗಿಂತ ಹೆಚ್ಚು ಘಟಕಗಳಿವೆ. ರಾಜ್ಯದ ಕೆಲವು ಮುಖ್ಯ ಔದ್ಯೋಗಿಕ ಮುಖ್ಯ ಸ್ಥಳಗಳು ಈ ರೀತಿ ಇವೆ:-

ಮಾಧ್ಯಮದ ಮೂಲಕ ಜಾಗತೀಕರಣ ಅಲ್ಲದೇ ಪಾಶ್ಚಿಮಾತ್ಯ ಪ್ರಭಾವ ಉತ್ತರ ಪ್ರದೇಶದ ಜೀವನ ಶೈಲಿಯ ಮೇಲೆ ಮಹತ್ತರ ಪರಿಣಾಮ ಬೀರುತ್ತಿದೆ ಮತ್ತು ಆರ್ಥಿಕತೆ ಹೊಸ ಅಭಿರುಚಿಗಳನ್ನು ಹಾಗೂ ಗ್ರಾಹಕೀಕರಣವನ್ನು ಒದಗಿಸಲು ತಾನೇ ಸಜ್ಜಾಗುತ್ತಿದೆ.  ಇದರ ಸ್ಪಷ್ಟ ಸೂಚನೆಯನ್ನು ದೊಡ್ಡ ನಗರಗಳ ಉನ್ನತ ಸ್ಥಳಗಳಲ್ಲಿ ಮನೋಹರವಾದ ವ್ಯಾಪಾರದ ಮಾಲ್‌ಗಳ ಪ್ರಕಟವಾಗುವಿಕೆ ಇಂದ ನೋಡಬಹುದು. ರಾಜ್ಯದ ಪ್ರವಾಸೋದ್ಯಮದ ದುಡಿಮೆಯಿಂದ ಕೂಡ ಆರ್ಥಿಕತೆ ಒಳ್ಳೆ ಲಾಭ ಪಡೆಯುತ್ತಿದೆ.

ಉತ್ತರ ಪ್ರದೇಶ ಹಲವು ರಾಷ್ಟ್ರಿಯ ಹಾಗೂ ಅಂತರರಾಷ್ಟ್ರಿಯ ಸಂದರ್ಶಕರನ್ನು ಸೆಳೆಯುತ್ತದೆ; 2003ರಲ್ಲಿ 71 ಮಿಲಿಯನ್‌ಗಿಂತ ಹೆಚ್ಚು ಸ್ಥಳಿಯ ಪ್ರವಾಸಿಗರು ಹಾಗೂ 25% ರಷ್ಟು ಇಡಿ ಭಾರತದ ವಿದೇಶೀ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದರು, ಇದು ಭಾರತದಲ್ಲಿನ ಒಂದು ಉನ್ನತ ಪ್ರವಾಸಿ ತಾಣ.  ಈ ರಾಜ್ಯದಲ್ಲಿ ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಎರಡು ತಾಣಗಳಿವೆ, ಅವು ಆಗ್ರಾ ಪ್ರಯಾಣ  ಹಾಗೂ ಹಿಂದೂ ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ .

ಆಗ್ರಾದಲ್ಲೇ ದಯಾಲ್ ಬಾಗ್ ಹಲವರು ವೀಕ್ಷಿಸುವ ಆಧುನಿಕ ಸಮಯದಲ್ಲಿ ನಿರ್ಮಿಸಲಾದ ಒಂದು ದೇವಸ್ಥಾನ. ಇದು ಇನ್ನು ನಿರ್ಮಾಣ ಹಂತದಲ್ಲಿದ್ದು ಪೂರ್ಣಗೊಳ್ಳಲು ಒಂದು-ಶತಮಾನವಾಗಬಹುದು.  ಅದರ ಜೀವಂತ ಎನಿಸುವ ಅಮೃತಶಿಲೆಯ ಶಿಲ್ಪಕಲೆಗಳು ಭಾರತದಲ್ಲಿ ಅದ್ವಿತೀಯವೆನಿಸಿದೆ.  ಆಗ್ರಾದ ನಂಬಲಾಗದ ಆಧುನಿಕ ಆಕರ್ಷಣೆಗಳ್ಳಲ್ಲಿ ಏಷ್ಯಾದ ಅತಿ ದೊಡ್ಡ ಸ್ಪಾ (ರೋಗನಿವಾರಕವಾದ ಖನಿಜಜಲಗಳ ಊಟೆ) ಮತ್ತು ಏಷ್ಯಾದ ಮೊದಲ ಹಾಗೂ ಏಕಮಾತ್ರ 6D ಚಿತ್ರಮಂದಿರ ಇವೆ.

ವಾರಾಣಾಸಿಯನ್ನು ಜಗತ್ತಿನ ಪುರಾತನ ನಗರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ.  ಇದು ತನ್ನ ಘಾಟಿಗಳಿಗೆ ಪ್ರಸಿದ್ಧವಾಗಿದೆ (ನದಿಯ ದಡದ ಉದ್ದಕ್ಕೂ ಮೆಟ್ಟಲುಗಳಿದ್ದು ಅಲ್ಲಿ ಜನರು ಸ್ನಾನ ಮಾಡುತ್ತಾರೆ), ಇಲ್ಲಿ ವರ್ಷಪೂರ್ತಿ ಭಾರತದಾದ್ಯಂತ ಹಾಗೂ ಹೊರದೇಶಗಳಿಂದಲೂ ಕೂಡ ಬರುವ ಭಕ್ತಾದಿಗಳಿಂದ ತುಂಬಿ ತುಳುಕುತ್ತದೆ. ಅವರು ಈ ಗಂಗಾ ನದಿಯಲ್ಲಿ ಪವಿತ್ರ ಮುಳುಗು ಹಾಕಲು ಬರುತ್ತಾರೆ.
ಮಥುರಾ ತನ್ನ ಆಕರ್ಷಕವಾದ ಹೋಲಿ ಆಚರಣೆಗೆ ಜಗತ್ತಿನಲ್ಲೆ ಪ್ರಸಿದ್ಧವಾಗಿದೆ, ಇದು ಹಲವಾರು ಪರ್ಯಟಕರನ್ನು ಕೂಡ ಆಕರ್ಷಿಸುತ್ತದೆ. ನಮ್ಮ ಭಾರತೀಯ ಚಲನಚಿತ್ರ ಉದ್ಯಮವು ಸ್ವಲ್ಪ ಹೆಚ್ಚಾಗಿ ಈ ಉತ್ಸವದ ಸಮಾಜಿಕ-ಧಾರ್ಮಿಕತೆಯನ್ನು ಮನರಂಜನೆಯ ರೂಪದಲ್ಲಿ ದರ್ಶಿಸಿದ್ದಾರೆ.
ಪ್ರತಿ ವರ್ಷ, ಸಾವಿರಾರು ಜನರು ಮಘ ಜಾತ್ರೆಯ ಉತ್ಸವದಲ್ಲಿ ಪಾಲ್ಗೊಳ್ಳಲು ಅಲ್ಹಾಬಾದಿನಲ್ಲಿ ಒಟ್ಟುಗೂಡುತ್ತಾರೆ. ಇದನ್ನು ಗಂಗಾ ನದಿಯ ದಡದ ಮೇಲೆ ಆಚರಿಸಲಾಗುತ್ತದೆ. ಇದೇ ಹಬ್ಬವನ್ನು 12 ವರ್ಷಕ್ಕೊಂದು ಸಲ ದೊಡ್ಡ ಪ್ರಮಾಣದಲ್ಲಿ ಆಯೋಜಿಸಿ ಕುಂಭ ಜಾತ್ರೆ ಎನ್ನುತ್ತಾರೆ, ಇಲ್ಲಿ 10 ಮಿಲಿಯನ್‌ಗಿಂತ ಹೆಚ್ಚು ಹಿಂದೂ ಭಕ್ತಾದಿಗಳು ಒಟ್ಟುಸೇರುತ್ತಾರೆ - ಜಗತ್ತಿನಲ್ಲೆ ಮಾನವರ ಅತಿ ಹೆಚ್ಚು ಒಗ್ಗೂಡುವಿಕೆ.
ವಾರಣಾಸಿಯ ಹತ್ತಿರವೆ ಐತಿಹಾಸಿಕವಾಗಿ ಮುಖ್ಯವಾದ ನಗರಗಳಾದ ಸಾರಾನಾಥ ಹಾಗೂ ಕುಶಿನಗರ ಸ್ಥಾಪಿತವಾಗಿವೆ. ಗೌತಮ ಬುದ್ಧ ಜ್ಞಾನೋದಯವಾದ ಮಲೇ ತನ್ನ ಮೊದಲ ಧರ್ಮೋಪದೇಶವನ್ನು ಸಾರಾನಾಥನಲ್ಲಿ ನೀಡಿದರು ಹಾಗೂ ಅವರು ಕುಶಿನಗರದಲ್ಲಿ ದೈವಾಧೀನರಾದರು; ಹೀಗಾಗಿ ಎರಡು ಸ್ಥಾನಗಳು ಬೌದ್ಧರಿಗೆ ಪ್ರಮುಖ ತೀರ್ಥಯಾತ್ರೆಯ ತಾಣಗಳು. ಸಾರಾನಾಥದಲ್ಲಿ ಅಶೋಕನ ಕಂಭಗಳಿವೆ ಹಾಗೂ ಅಶೋಕನ ಸಿಂಹ ರಾಜಧಾನಿ ಇದೆ, ಎರಡು ಪುರಾತತ್ವ ಶಾಸ್ತ್ರದ ಉಪಕರಣಗಳೆಂದು ರಾಷ್ಟ್ರಿಯ ಮಹತ್ವದ ಪ್ರಾಮುಖ್ಯತೆಯನ್ನು ಪಡೆದಿದೆ.
ವಾರಾಣಾಸಿಯಿಂದ 80 km ದೂರದಲ್ಲಿನ ಘಾಜಿಪುರ್ ತನ್ನ ಗಂಗೆಯ ಘಾಟ್‌ಗಳಿಗಲ್ಲದೆ ಬ್ರಿಟಿಷಿನ ಪ್ರಬಲವಾದ ದೊರೆ ಲಾರ್ಡ್ ಕಾರ್ನ್‌ವಾಲ್ಲಿಸ್‌ನ ಸಮಾಧಿಗೆ ಕೂಡ ಪ್ರಸಿದ್ಧವಾಗಿದೆ, ಈ ಸಮಾಧಿಯ ಉಸ್ತುವಾರಿಯನ್ನು ಭಾರತದ ಪುರಾತತ್ವ ಶಾಸ್ತ್ರ ಸರ್ವೇಕ್ಷಣೆಯವರು ನೋಡಿಕೊಳ್ಳುತ್ತಾರೆ.
ಉತ್ತರ ಪ್ರದೇಶದ ರಾಜಧಾನಿಯಾದ ಲಖನೌನಲ್ಲಿ ಕೂಡ ಬರ ಇಮಾಂಬರ ಹಾಗೂ ಛೋಟಾ ಇಮಾಂಬರ ಅಂತಹ ಹಲವಾರು ಸುಂದರ ಐತಿಹಾಸಿಕ ಸ್ಮಾರಕಗಳಿವೆ. ಔಧ-ಕಾಲದ ಬ್ರಿಟಿಷರು ವಾಸಿಸುವ ವಸತಿಗಳ ನಾಶಗೊಂಡ ಅನೇಕ ಭಾಗಗಳು ಕೂಡಿ ಇರುವ ಸ್ಥಳವನ್ನು ಕೂಡ ಇಲ್ಲಿ ಸಂರಕ್ಷಿಸಲಾಗಿದೆ, ಇವುಗಳನ್ನು ಈಗ ಪುನಃ ಸ್ಥಾಪಿಸಲಾಗುತ್ತಿದೆ.
ದುಧ್ವಾ ರಾಷ್ಟ್ರೀಯ ಉಪವನ ಹುಲಿಗಳಿಗೆ ಎಂದು ಇರುವ ದೇಶದ ಉತ್ತಮ ಮೀಸಲು ಪ್ರದೇಶಗಳಲ್ಲೊಂದು. ಲಖಿಮಪುರ್ ಖೇರಿ - ಹುಲಿಗಳ ಮನೆಯಾದ ಮಿಸಲು ಪ್ರದೇಶ ಮತ್ತು ಕಟೆರಿನೈಘಾಟ್ ವನ್ಯಜೀವಿ ಅಭಯಧಾಮ - ಭಾರತದಲ್ಲೇ ಅತಿ ಹೆಚ್ಚು ವನ್ಯಜೀವಿಗಳು ಒಂದೆಡೆ ಸೇರಿರುವ ಅಭಯಧಾಮ ಅದರಲ್ಲಿಯೂ ಹುಲಿಗಳ ಹಾಗೂ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ, ಇದು ಬಹ್‌ರೈಚ್‌ನಲ್ಲಿದ್ದು ನೇಪಾಳಿನ ಗಡಿ ಭಾಗದಲ್ಲಿದೆ ಹಾಗೂ ಪ್ರೇಕ್ಷಣೀಯ ಸ್ಥಳ.
ವಿದೇಶೀಯರಿಗೆ ಕೆಲವು ಪ್ರದೇಶಗಳಲ್ಲಿ ಪ್ರವಾಸ ಮಾಡಲು ವಿಶೇಷ ಪರವಾನಗಿ ಪತ್ರ ಪಡೆಯ ಬೇಕಾಗುತ್ತದೆ.

ಈ ರಾಜ್ಯದಲ್ಲಿ ಹಲವು ಮಾದರಿಯ ಸಾರಿಗೆಯ ದೊಡ್ಡ ಸಂಪರ್ಕ ಪದ್ಧತ್ತಿ ಇದೆ:-
ವಾಯುಯಾನ : ಈ ರಾಜ್ಯದಲ್ಲಿ ನಾಲ್ಕು ಮುಖ್ಯ ವಿಮಾನ ನಿಲ್ದಾಣಗಳು ಹಾಗೂ 23 ವಿಮಾನ ಇಳಿಯುವ ದಾರಿಗಳಿವೆ. ಲಖನೌ, ಅಗ್ರಾ, ಕಾನಪುರ್ ಹಾಗೂ ವಾರಾಣಾಸಿ ನಗರಗಳಲ್ಲಿ ರಾಷ್ಟ್ರ ಮಟ್ಟದ ಒಳ್ಳೆಯ ಸಂಪರ್ಕದ ದೇಶೀಯ ವಿಮಾನ ನಿಲ್ದಾಣಗಳಿವೆ. ಲಖನೌ ರಾಜ್ಯದಲ್ಲಿ ಅತಿ ದೊಡ್ಡ ಹಾಗೂ ಬಹಳ ಮುಖ್ಯ ವಿಮಾನ ನಿಲ್ದಾಣ. (ಬರೇಲಿಯ ತ್ರಿಶೂಲ್ ವಾಯು-ತಳವನ್ನು ದೇಶೀಯ ವಿಮಾನ-ನಿಲ್ದಾಣವಾಗಿ ಉನ್ನತೀಕರಿಸುವ ಕಾರ್ಯ ಕೂಡ ನಡೆದಿದೆ.)
ರೈಲುಮಾರ್ಗಗಳು : ಪ್ರಾಯಶಃ ರಾಜ್ಯದ ಎಲ್ಲಾ ದೊಡ್ಡ ಹಾಗೂ ಸಣ್ಣ ನಗರಗಳು ರೈಲು ಮಾರ್ಗದ ಸಂಪರ್ಕ ಹೊಂದಿದ್ದಾರೆ. ದೇಶದಲ್ಲೇ ಅತಿ ದೊಡ್ಡ ರೈಲಿನ ಸಂಪರ್ಕ ಇಲ್ಲಿದೆ; ಒಟ್ಟು ರೈಲು ಮಾರ್ಗದ ಉದ್ದ 8,546 km (2006 ಪ್ರಕಾರ) ಹಾಗೂ ಹೆಚ್ಚು ರೈಲುಮಾರ್ಗಗಳ ನಿಬಿಡತೆಯಲ್ಲಿ ಆರನೆಯ ಸ್ಥಾನ ಪಡೆದಿದೆ.
ರಸ್ತೆಮಾರ್ಗಗಳು : ದೇಶದಲ್ಲೇ ಮಹಾರಾಷ್ಟ್ರದ ನಂತರ ಈ ರಾಜ್ಯದಲ್ಲಿ ಅತಿ ದೊಡ್ಡ ರಸ್ತೆ ಸಂಪರ್ಕವಿದೆ. ಇಲ್ಲಿ 31 ರಾಷ್ಟ್ರೀಯ ಹೆದ್ದಾರಿಗಳಿವೆ (NH) ಎಂಬ ಹೆಮ್ಮೆ ಇದರದು, ಇದರ ಒಟ್ಟು ಉದ್ದ 4,942 km (ಭಾರತದ ಒಟ್ಟು NHಗಳ ಉದ್ದದ 8.5%).  ಭಾರತದ ರಸ್ತೆ ನಿಬಿಡತೆಯಲ್ಲಿ ಏಳನೆಯ ಸ್ಥಾನ ಪಡೆದಿದೆ, (1,027 km ಪ್ರತಿ 1,000 km,2 2002ರ ಪ್ರಕಾರ) ಹಾಗೂ ದೇಶದಲ್ಲಿನ ನಗರ ಪ್ರದೇಶದ ಅತಿ ದೊಡ್ಡ ಮೇಲ್ಪದರದ ರಸ್ತೆ ಸಂಪರ್ಕ ಇಲ್ಲಿದೆ (50,721 km, 2002ರ ಪ್ರಕಾರ). ಕಾನಪುರ್, ಲಖನೌ, ಬರೇಲಿ, ಅಲ್ಹಾಬಾದ್, ವಾರಾಣಾಸಿ, ಝಾಂಸಿ, ಗೋರಖಪುರ್, ಆಗ್ರಾ ಹಾಗೂ ಘಾಜಿಪುರ್ ನಗರಗಳು ಹಲವು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಪಡೆದಿದ್ದಾವೆ. ಈಗಾಗಲೆ ಲಖನೌ ಹಾಗೂ ಕಾನಪುರ್ ಮಧ್ಯೆ ನಗರದ ಮೋಟಾರುದಾರಿ ಇದೆ, ಇನ್ನು ಹೊಸ ನಗರದ ಮೋಟಾರುದಾರಿಗಳು ಆಗ್ರಾ ಹಾಗೂ ನೋಯಿಡಾ ಮಧ್ಯೆ ಮತ್ತು ನೋಯಿಡಾ ಹಾಗೂ ಬಾಲಿಯಾ ಮಧ್ಯೆ ಬರಲಿದೆ (ಘಾಜಿಪುರ್ ಬಳಿ). ರಾಜ್ಯ ಸರ್ಕಾರದ ರಸ್ತೆ ಸಾರಿಗೆ ಕಂಪನಿ UPSRTC-ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದಲ್ಲಿನ ರಾಷ್ಟ್ರೀಯ ಮಾರ್ಗಗಳ ಮೂಲಕ ರಾಜ್ಯದ ಒಳಗೆ ಹಾಗೂ ರಾಜ್ಯದಿಂದ ರಾಜ್ಯದ ಸಾರಿಗೆಯ ಸೇವೆಯನ್ನು ಒದಗಿಸುತ್ತದೆ.
ಜಲಮಾರ್ಗಗಳು : ಗಂಗಾ ನದಿಯ ಉದ್ದೊಂದು ವಿಸ್ತರಣೆ ಅಲ್ಹಾಬಾದ್ (ಉತ್ತರ ಪ್ರದೇಶ) ಇಂದ ಹಲ್ದಿಯ (ಪಶ್ಚಿಮ ಬಂಗಾಳ)ದ ವರೆಗೆ ರಾಷ್ಟ್ರೀಯ ಜಲಮಾರ್ಗ ಎಂದು ಘಷಿಸಲಾಗಿದೆ (NW) -I ಹಾಗೂ NW-Iನ ಒಟ್ಟು ಉದ್ದದಲ್ಲಿನ 600 km ಉತ್ತರ ಪ್ರದೇಶದಲ್ಲಿದೆ.
ಈ ರಾಜ್ಯದಲ್ಲಿ ದೊಡ್ಡ ಹಾಗೂ ವೈವಿದ್ಯ ಸಾರಿಗೆ ಸಂಪರ್ಕವಿದ್ದರೂ ಸಹ, ಅದರ ಪರಿಸ್ಥಿತಿ ಹಾಗೂ ಕಾರ್ಯಾನಿರ್ವಾಹಣೆಯನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸುವ ಅವಶ್ಯಕತೆ ಇದೆ.

ಉತ್ತರ ಪ್ರದೇಶ ಭಾಗದ ವಾಸ್ತುಶಿಲ್ಪಗಳು ಹಿಂದಿನ ಸಹಸ್ರವರ್ಷದ ವಿಸ್ತಾರವಾದ ಬದಲಾಗಿರುವ ಕಾಲವನ್ನು ದಾಟಿ ಉಳಿದಿವೆ. ಅವುಗಳಲ್ಲಿ ಅತಿ ಪುರಾತನವಾಗಿರುವುದು ಪುರಾತತ್ವ ಶಾಸ್ತ್ರ ಅಥವಾ ಪುರಾಣ ಸಂಗ್ರಹದ ನಿಯಮಗಳ ವ್ಯಾಪ್ತಿಯಲ್ಲಿ ಬರುತ್ತದೆ; ರಾಜ್ಯದಲ್ಲಿನ ಧಾರ್ಮಿಕ ಕ್ಷೇತ್ರಗಳನ್ನು ಪುರಾಣಗಳ ಕಥಾ ನಿರೂಪಣೆಗಳಲ್ಲಿ ಗುರುತಿಸಲು ಸಾಧ್ಯ  ಮತ್ತು ಇತರೆ  ಭಾರತೀಯ ಧರ್ಮಗಳ ಪವಿತ್ರ ಸಾಹಿತ್ಯಗಳು ಅತ್ಯಂತ ಪುರಾತನ ವಾಸ್ತುಶಿಲ್ಪದ ಮಹಾಸೌಧಗಳನ್ನು ಹೊಂದಿದೆ ಮತ್ತು ಅವುಗಳನ್ನು ಕಾಲಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಕಟ್ಟಲಾಗಿದೆ.
ಮಧ್ಯಯುಗದ ರಾಜರು ಮತ್ತು ಚಕ್ರವರ್ತಿಗಳು ಸ್ಮಾರಕಗಳನ್ನು ಉಳಿಸಿ ಹೋಗಿದ್ದಾರೆ: ಕೋಟೆಗಳು, ಅರಮನೆಗಳು, ದೇವಸ್ಥಾನಗಳು, ಮಸೀದಿಗಳು ಮತ್ತು ಭವ್ಯ ಸಮಾಧಿಗಳು, ಅವುಗಳ ಬಾಹ್ಯ ಮತ್ತು ಅಂತರಿಕ ವೈಭವ ಆ ಕಾಲಗಳ ಸಮೃದ್ಧಿಯನ್ನು ನೆನೆಪಿಸುತ್ತದೆ.  ಆಡಳಿತ, ನ್ಯಾಯ ಇಲಾಖೆ, ಆಸ್ಪತ್ರೆಗಳು, ಬ್ಯಾಂಕ್‍ಗಳು, ಅಂಚೆ ಸೇವೆಗಳು, ಪೋಲಿಸ್, ರೈಲ್ವೇ ಇತ್ಯಾದಿಗಳಿಗಾಗಿ ಕಟ್ಟಿದ ಬ್ರಿಟಿಷ್ ವಸಾಹತಿಗ ಕಟ್ಟಡಗಳನ್ನು ಹೆಚ್ಚಿನ ನಗರಗಳಲ್ಲಿ ಇನ್ನೂ ಸಹ ಕಾಣಬಹುದು; ಅವರ ವಾಸ್ತುಶಿಲ್ಪ ಹೆಚ್ಚಿನ ನಿದರ್ಶನಗಳಲ್ಲಿ ಕೇವಲ ಕ್ರಿಯಾತ್ಮಕವಾಗಿವೆ.

ಉತ್ತರ ಪ್ರದೇಶವು ಪಿತ್ರಾರ್ಜಿತವಾಗಿ ಬಂದಂತಹ ಅದರ ಶ್ರೇಷ್ಠ ಕಲೆ ಮತ್ತು ಕರಕೌಶಲ್ಯಗಳಿಗೆ ಪ್ರಖ್ಯಾತಿಯನ್ನುಗಳಿಸಿದೆ. ಹಲವು ಪ್ರಸಿಧ್ಧ ಕೇಂದ್ರಗಳು ಕೆಳಕಂಡತಿವೆ:
ಬರೇಲಿಯು ಅದರ ಝರೀ ಕೆಲಸ (ಒಂದು ವಿಧದ ದಾರದ ಅಲಂಕಾರ),ಸುರ್ಮ(ಕೋಲ್) ಮತ್ತು ಜುಮುಕಿಗಳಿಗೆ ಹೆಮ್ಮೆಪಡಬಹುದಾಗಿದೆ.

ಫಿರೋಜಾಬಾದ್, ಬಳೆಗಳ ನಗರ, ಹಾಗೆಯೇ ಇದು ಹಲವು ಬಗೆಯ ಗಾಜಿನ ಉಪಕರಣಗಳ ಕರಕೌಶಲ್ಯಗಳಿಗೆ ಮುಖ್ಯ ಸ್ಥಳವಾಗಿದೆ. ಇಲ್ಲಿನ ಕಾರ್ಖಾನೆಗಳಲ್ಲಿ ಮಾಡಿದ ಗಾಜಿನಲ್ಲಿ ಕೃತಿಗಳ ಉತ್ಪಾದನೆಯು ಆಶ್ಚರ್ಯ ಪಡುವಂತಹುದಾಗಿದ್ದು, ಇವುಗಳನ್ನು ಪ್ರಪಂಚದಾದ್ಯಂತ ರಫ್ತು ಮಾಡಲಾಗುತ್ತಿದೆ.

ಕನೋಜ್ ಪೂರ್ವದಿಂದಲೂ ಸುಗಂಧ ದ್ರವ್ಯ, ಸುವಾಸನೆ,ಮತ್ತು ರೋಸ್ ವಾಟರ್ ಹಾಗೂ ಪರಂಪರೆಯ ತಂಬಾಕುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ.

ಕಾನ್‌ಪುರ್ ಇದರ ಚರ್ಮದ ಕರ ಕುಶಲತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ;ಇಲ್ಲಿ ತಯಾರಿಸಿದ ಚಪ್ಪಲಿಗಳು ಹಾಗೂ ಇನ್ನಿತರ ಚರ್ಮದ ವಸ್ತುಗಳನ್ನು ಹೆಚ್ಚಾಗಿ ಭಾರತದ ಮಾರುಕಟ್ಟೆ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಖುರ್ಜಾ ಇದು ತನ್ನ ಸೆರಾಮಿಕ್ ಕುಡಿಕೆಗಳಿಗೆ ಹೆಸರುವಾಸಿಯಾಗಿದೆ, ಸಂಪೂರ್ಣ ರಾಜ್ಯವು ಇದರ ಮಡಿಕೆಗಳಿಗೆ ಭಾರತವೊಂದೇ ಅಲ್ಲ ಪ್ರಪಂಚದಾದ್ಯಂತ ಕೂಡ ಹೆಸರುವಾಸಿಯಾಗಿದೆ.

ರಾಜಧಾನಿ ಲಕ್ನೋ ಇದರ ಬಟ್ಟೆಗಳ ಕುಸುರಿ ಕೆಲಸ ಹಾಗೂ ರೇಷ್ಮೆ ಮತ್ತು ಹತ್ತಿ ಉಡುಪುಗಳ ಮೇಲಿನ ಕಸೂತಿ (ಚಿಕನ್) ಕೆಲಸಕ್ಕೆ ಹೆಗ್ಗಳಿಕೆಗೆ ಅರ್ಹವಾಗಿದೆ.
ಭಾದೋಹಿಯು ರತ್ನಗಂಬಳಿಗೆ ಹೆಸರುವಾಸಿಯಾಗಿದೆ ಹಾಗೂ ಪಕ್ಕದಲ್ಲಿರುವ ಡಾಲರ್ ನಗರವೆಂದೂ ಸಹ ಹೆಸರುವಾಸಿಯಾಗಿದೆ ಇದು ರಾಜ್ಯದ ಅತ್ಯಂತ ಆದಾಯವನ್ನು ಉಂಟು ಮಾಡುವಂತಹ ಜಿಲ್ಲೆಯಾಗಿದೆ.
ಮುರಾದಾಬಾದ್ ಲೋಹದ ಸರಕು ವಿಶೇಷವಾಗಿ ಮನುಷ್ಯ ಕೃತಿಯ ಹಿತ್ತಳೆ ಸಾಮಾನುಗಳಿಗೆ ಹೆಸರುವಾಸಿಯಾಗಿದೆ.

ಪಿಲಿಭಿಟ್ ತನ್ನ ಮರದ-ಕೊಳಲು ಹಾಗೂ ಮರದಲ್ಲಿ ಮಾಡಿದ ಕಾಲಿನ ಚಪ್ಪಲಿಗಳಿಗೆ ಹೆಸರುವಾಸಿಯಾಗಿದೆ(ಖಾದಾನ್).  ಇಂತಹ ಕೊಳಲುಗಳನ್ನು ಯುರೋಪ್,ಅಮೇರಿಕಾ ಮತ್ತು ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಸಹರನ್‌ಪುರ್ ದಲ್ಲಿ ತಯಾರಿಸುವಂತಹ ಮರದ ಕೆತ್ತನೆಯ ವಸ್ತುಗಳು ಹೊರದೇಶದಲ್ಲಿ ಮತ್ತು ಭಾರತದೆಲ್ಲೆಡೆ ಹೆಸರುವಾಸಿಯಾಗಿವೆ.
ವಾರಣಾಸಿಯು ತನ್ನ ಬನಾರಸ್ ಸೀರೆಗಳು ಮತ್ತು ರೇಷ್ಮೆಗೆ ಹೆಸರುವಾಸಿಯಾಗಿದೆ. ಒಂದು ಬನಾರಸ್ ಸೀರೆ ಈ ರಾಜ್ಯದ ಯಾವುದೇ ಮದುವೆಗೆ ಅವಶ್ಯಕವಾದ ಭಾಗವಾಗಿದೆ.

ಉತ್ತರ ಪ್ರದೇಶ ರಾಜ್ಯದ ಆಡಳಿತ ಭಾಷೆಯು ಹಿಂದಿ ಆಗಿರುವುದರಿಂದ, ಭಾರತದಲ್ಲಿ ಉತ್ತರ ಪ್ರದೇಶವು ಹಿಂದಿ ಭಾಷೆಯ ಕೇಂದ್ರ ಭಾಗವಾಗಿ ಪದೇ ಪದೇ ಉಲ್ಲೇಖಿಸಲ್ಪಡುತ್ತದೆ. 1951ರಲ್ಲಿ ಉತ್ತರ ಪ್ರದೇಶ ರಾಜ್ಯ ಭಾಷಾ ಕಾನೂನು ಕಾಯಿದೆಯ ಪ್ರಕಾರ ಹಿಂದಿ ಮತ್ತು ಉರ್ದು ಇವು ರಾಜ್ಯದ ಆಡಳಿತ ಭಾಷೆಯಾಗಿ ಸ್ಥಾಪಿತಗೊಂಡು ಇದೇ ವಿಷಯವು 1989ರಲ್ಲಿ ತಿದ್ದುಪಡಿ ಹೊಂದಿತು, ಜೊತೆಗೆ ರಾಜ್ಯದ ಸಾಮಾನ್ಯ ಜನತೆ ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ರಾಜ್ಯದ ಮೂಲ ಭಾಷೆಗಳು ಹಿಂದಿ ಭಾಷೆಯ ಉಪ ಭಾಷೆಗಳಾಗಿ ಪರಿಗಣಿಸಲ್ಪಟ್ಟವು.  ಭಾಷೆಗಳಿಗೆ ಸಂಬಂಧಪಟ್ಟಂತೆ ಹಿಂದಿ ಭಾಷೆಯು, ಉತ್ತರ ಪ್ರದೇಶ ರಾಜ್ಯದ ಹಿಂದೂ ಆರ್ಯ ಭಾಷೆಗಳ ಪ್ರದೇಶಗಳಾದ ಮಧ್ಯಭಾಗ, ಪೂರ್ವ ಮಧ್ಯಭಾಗ, ಪೂರ್ವ ವಲಯಗಳ ಮೂಲಕ ಹರಡಿದ್ದು ಅಲ್ಲಿನ ಪ್ರಧಾನ ಮೂಲ ಭಾಷೆಗಳಾದ ಭೊಜಪುರಿ, ಅವಧಿ, ಬುಂದೇಲಿ, ಬ್ರಜ್ ಭಾಷಾ, ಕನ್ನೌಜಿ ಮತ್ತು ಒಂದು ಪ್ರತ್ಯೇಕ ವರ್ಗದ ಭಾಷೆಯಾದ ಖರಿಬೋಲಿ ಇವುಗಳ ತಳಹದಿಯ ಮೇಲೆ ಉತ್ತಮ ಗುಣ ಮಟ್ಟದ ಹಿಂದಿ ಮತ್ತು ಉರ್ದು ಭಾಷೆಗಳು ರೂಪುಗೊಂಡಿವೆ. ರಾಜ್ಯದ ನೈಋತ್ಯ ಭಾಗದ ಅಂಚುಗಳಲ್ಲಿ ಮಾತನಾಡಲು ಬಾಘೆಲಿ ಭಾಷೆಯನ್ನು ಬಳಸಲಾಗುತ್ತದೆ. ರಾಜ್ಯ ಸರಕಾರವು ಸಾಂಸ್ಕೃತಿಕ ಉತ್ಸವಗಳ ಸಂದರ್ಭಗಳಲ್ಲಿ ಇಲ್ಲಿಯ ಪ್ರಾಂತ ಭಾಷೆಗಳನ್ನು ಪ್ರೋತ್ಸಾಹಿಸಿ ಅವುಗಳ ಬಗ್ಗೆ ತಿಳಿವಳಿಕೆನೀಡಲು ಪ್ರಯತ್ನಿಸುತ್ತದೆ, ಆದರೆ ಇದು ನಗಣ್ಯವಾಗಿದೆ. ಇದರ ಹೊರತಾಗಿ ಮಧ್ಯಕಾಲೀನ ಯುಗದ 2 ಮುಖ್ಯ ಭಾಷೆಗಳಾದ ಬ್ರಜ್ ಭಾಷಾ ಮತ್ತು ಅವಧಿ ಇವುಗಳನ್ನು ಹಿಂದಿ ಭಾಷೆಯ ಅಡಿಯಲ್ಲಿ ಸೇರಿಸಿದ ಹಾಗೆ ಪರಿಗಣಿಸಲಾಗುತ್ತಿದೆ. ಒಂದು ಕಾಲದಲ್ಲಿ ಈ ಎರಡು ಪ್ರಾಂತ ಭಾಷೆಗಳು ಆ ಪ್ರದೇಶದ ಸಾಹಿತ್ಯದ ಮುಖ್ಯ ಮಾಧ್ಯಮಗಳಾಗಿದ್ದವು ಆದರೆ ಈ ಭಾಷೆಗಳ ಅಥವಾ ಇತರ ಪ್ರಾಂತ ಭಾಷೆಗಳ ಪ್ರಗತಿ ಗಣನೀಯವಾಗಿಲ್ಲ.
ಸ್ಥಳೀಯ ಭಾಷೆಗಳನ್ನು ಮಾತನಾಡುವವರ ಅಂದಾಜು ಮಾಡುವುದು ಕಷ್ಟಕರ. ಏಕೆಂದರೆ ಹಿಂದಿ ಭಾಷೆಯು ಸರ್ಕಾರ ಮತ್ತು ಶಿಕ್ಶಣ ವ್ಯವಸ್ಥೆಯಲ್ಲಿ ಬಳಕೆಯಾಗುವ ಭಾಷೆಯಾಗಿದ್ದು ನಗರ ಪ್ರದೇಶದ ವಿಧ್ಯಾಭ್ಯಾಸ ಹೊಂದಿದ ಹೆಚ್ಚಿನ ಸಂಖ್ಯೆಯ ಜನರು ಹಿಂದಿಯನ್ನು ತಮ್ಮ ಮಾತೃಭಾಷೆ ಎಂದು ಪರಿಗಣಿಸುತ್ತಾರೆ. ಅದೇ ಹಳ್ಳಿಗಳಲ್ಲಿನ ಜನರು ಭಾಷಾ ಜ್ಞಾನದ ಕೊರತೆಯಿಂದಾಗಿ ಹಿಂದಿ ಭಾಷೆಯನ್ನು ತಮ್ಮ ಭಾಷೆಯ ಮತ್ತು ಒಟ್ಟು ವರ್ಗದ ವಿಶಿಷ್ಟತೆಯನ್ನು ಸೂಚಿಸುವುದಕ್ಕಾಗಿ ಬಳಸುತ್ತಾರೆ.  ಇತ್ತೀಚೆಗೆ ಭೊಜಪುರಿ ಭಾಷೆಯು, ಭಾಷಾಧ್ಯಯನದ ಸಮರ್ಥನೆಯನ್ನು ಕಂಡಿತು ಮತ್ತು ಅದೇ ವೇಳೆ ಬುಂದೆಲಿಯ ಬಗ್ಗೆ ಅಂತಹ ಕ್ರಿಯಾಚಟುವಟಿಕೆಯೇನೂ ನಡೆಯಲಿಲ್ಲ.

ಉತ್ತರ ಪ್ರದೇಶವು ರಾಷ್ಟ್ರೀಯ ಮಾಧ್ಯಮ ವ್ಯವಸ್ಥೆಯಲ್ಲಿ ಉತ್ತಮವಾಗಿ ಒಂದುಗೂಡಿದೆ.
ಬಾನುಲಿಯ ಪ್ರಸಾರ :- ಬಾನುಲಿಯ ಪ್ರಸಾರವು 1936ರಲ್ಲಿ ಆಲ್ ಇಂಡಿಯ ರೇಡಿಯೊ  ಮುಖಾಂತರ ಪ್ರಾರಂಭವಾಯಿತು. ( AIR  ಎಂದು ಸಂಕ್ಷಿಪ್ತಗೊಳಿಸಲಾಗಿದೆ ) ಈಗ ಅಧಿಕೃತವಾಗಿ ಆಕಾಶವಾಣಿ ಎಂದು ಗುರುತಿಸಲ್ಪಡುತ್ತಿದೆ ಇಂದು ಇದು ದೂರದರ್ಶನದ ಸಹೋದರಿ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ, ರಾಷ್ತ್ರೀಯ ದೂರದರ್ಶನ ಪ್ರಸಾರ ಮತ್ತು ಆಲ್ ಇಂಡಿಯ ರೇಡಿಯೊ ಇವೆರಡೂ ಪ್ರಸಾರ ಭಾರತಿಯ ಶಾಖೆಗಳು. (ಭಾರತೀಯ ಪ್ರಸರಣ ನಿಗಮ) ಭಾರತ ಸರ್ಕಾರದ, ಸಚಿವ ಸಂಪುಟದ ಮಾಹಿತಿ ಮತ್ತು ಪ್ರಸರಣ ಖಾತೆಯ ಸ್ವಾಯುತ್ತ ಅಧಿಕಾರದ ನಿಗಮವಾಗಿದೆ.  ಬೇರೆ ಬೇರೆ ಭಾಷೆಗಳ ಹೇಳಿಕೆ ರೂಪದ ಪ್ರಸಾರವು ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕ ಪ್ರಸಾರವಾಗುತ್ತದೆ.
ದೂರದರ್ಶನ:- ಭಾರತದಲ್ಲಿ ದೂರದರ್ಶನದ  ಕಾರ್ಯಕ್ರಮ ಪ್ರಸಾರವು ೧1959ರಲ್ಲಿ ಪರೀಕ್ಷೆಯ ಜೊತೆಗೆ ಶಿಕ್ಷಣದ ಪ್ರಸಾರ ಕಾರ್ಯಕ್ರಮದೊಂದಿಗೆ ನವ ದೆಹಲಿಯಲ್ಲಿ ಪ್ರಾರಂಭವಾಯಿತು. ದೂರದರ್ಶನವು ಕಿರುತೆರೆಯಲ್ಲಿ ಕಪ್ಪು ಬಿಳುಪಿನ ಕಾರ್ಯಕ್ರಮಗಳನ್ನು 1970ರಲ್ಲಿ ಪ್ರಾರಂಭಿಸಿತು ಮತ್ತು 1982ರಲ್ಲಿ ಬಣ್ಣದ ಕಿರುತೆರೆಯಾಗಿ ರೂಪಾಂತರಗೊಂಡಿತು. ಇಂದು ಹಲವಾರು ಖಾಸಗಿ ದೂರದರ್ಶನ ಕೇಂದ್ರಗಳು ರಾಷ್ಟೀಯ ಮಟ್ಟದಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ ಮತ್ತು ಮಾಧ್ಯಮದ ಸಕ್ರಿಯ ಹಾಗೂ ಪ್ರಭಾವಶಾಲಿ ಅಂಗಗಳಾಗಿವೆ.  ದೂರದರ್ಶನದ ಕಾರ್ಯಕ್ರಮಗಳು ಎಲ್ಲೆಡೆ ತಲುಪುವಲ್ಲಿ, ಉಪಗ್ರಹದ ಮೂಲಕ ಪ್ರಸಾರವು  ಕ್ರಾಂತಿಕಾರಿ ಬೆಳವಣಿಗೆಯನ್ನು ತಂದಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪ್ರಮುಖ ಕ್ರಿಕೆಟ್ ಪಂದ್ಯಗಳು ಅತಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವುದಲ್ಲದೆ ರಸ್ತೆ ಬದಿಯಲ್ಲಿ ಇರಿಸಿದ ದೂರದರ್ಶನವು ಕ್ರಿಕೆಟ್ ಪ್ರೇಮಿಗಳ ಜನಸ್ತೋಮವನ್ನು ಆಕರ್ಷಿಸುತ್ತದೆ.
ವೃತ್ತ ಪತ್ರಿಕೆ ಮತ್ತು ನಿಯತಕಾಲಿಕ  ಮುಂತಾದವುಗಳು. ಒಂದು ನಿರ್ದಿಷ್ಟ ಸಂಖ್ಯೆಯ ನಿಯತಕಾಲಿಕಗಳು ಹಿಂದಿ, ಆಂಗ್ಲ ಮತ್ತು ಉರ್ದುವಿನಲ್ಲಿ ಪ್ರಕಾಶಿತಗೊಂಡಿವೆ   ಪತ್ರಿಕೋದ್ಯಮದ ಬೆಳವಣಿಗೆಯು ಇಲ್ಲಿ ವಾಸಿಸಲು ಆರಂಭಿಸಿದ ಬ್ರಿಟನ್ ದೇಶದವರ ಕಾರಣದಿಂದ ಉಂಟಾದಷ್ಟೇ ಭಾರತೀಯ ಸ್ವಾತಂತ್ರ್ಯ ಚಳುವಳಿಯಿಂದಾಗಿ ಕೂಡ ಆಯಿತು ಮತ್ತು ಇತರ ವಾರ್ತೆಗಳ ಹಾಗೂ ಸಾಮಾಜಿಕ-ಧಾರ್ಮಿಕ ಸಂಸ್ಕರಣಗಳ ಪ್ರಚಾರ ಮಾಡಲು ಕೂಡ ಈ ಬೆಳವಣಿಗೆ ಅವಶ್ಯಕವಾಗಿತ್ತು. ದ ಪೈಯೋನಿಯರ್ ಪತ್ರಿಕೆಯನ್ನು ಅಲ್ಹಾಬಾದ್‌ನಲ್ಲಿ 1865ನಲ್ಲಿ ಜೋರ್ಜ್ ಆಲೆನ್ ಎಂಬ ಆಂಗ್ಲ ವ್ಯಕ್ತಿ ಸ್ಥಾಪಿಸಿದನು. 1865ಯಿಂದ 1869ರ ವರಗೆ ಇದು ವಾರದಲ್ಲಿ ಮೂರು ಸಲ ಪ್ರಕಟವಾಗುತಿತ್ತು ಮತ್ತು ನಂತರ ದೈನಿಕವಾಗಿ ಪ್ರಕಟಗೊಳ್ಳಲಾರಂಭಿಸಿತು. 1866ರಲ್ಲಿ ಪೈಯೋನಿಯರ್ ಮೇಲ್  ಎಂಬ ಬಹುತೇಕವಾಗಿ ಜಾಹಿರಾತುಗಳನ್ನುಳ್ಳ ಒಂದು ಪುರವಣಿಯನ್ನು ಇದಕ್ಕೆ ಸೇರಿಸಲಾಗಿತ್ತು.  ಅಲ್ಹಾಬಾದ್‌ನಿಂದಲೇ ದ ನ್ಯಾಶನಲ್ ಹೆರಾಲ್ಡ್ ಎಂಬ ಒಂದು ರಾಷ್ಟ್ರೀಯತಾವಾದಿ ವಾರ್ತಾಪತ್ರಿಕೆ ಪ್ರಕಾಶನಗೊಳ್ಳಲು ಆರಂಭಿಸಿತು, ನೆಹರುರವರ ಹಾಗೂ ಸಂಪಾದಕರಾಗಿ M.C. ರಾವು ಇವರ ಪ್ರೋತ್ಸಾಹದೊಂದಿಗೆ ಬ್ರಿಟಿಷರ ಕಾಲದಲ್ಲಿ ಆರಂಭವಾಯಿತು. ಸಿದ್ದಕಿ  ಎಂಬ ಉರ್ದು ಸಾಪ್ತಾಹಿಕ ಇದೆ ಕಾಲದಲ್ಲಿ ಹೆಚ್ಚು ಗೌರವಿಸಲಾದ ಬುದ್ಧಿಜೀವಿ ಮೌಲಾನ ಅಬ್ದುಲ್ ಮಾಜಿದ್ ದರ್ಯಾಬಾದಿ ಆರಂಭಿಸಿದರು, ಇದರ ಉದ್ದೇಶ ಹಿಂದೂ-ಇಸ್ಲಮ್ ಸಮಾಜವನ್ನು ಸಂಸ್ಕರಣಿಸುವುದಾಗಿತ್ತು. ಪ್ರಸ್ತುತ, ಎಲ್ಲಾ ಪ್ರಮುಖ ರಾಷ್ಟ್ರೀಯ ಮಟ್ಟದ ದೈನಿಕಗಳೆ ತಮ್ಮ ’ನಗರದ ಮುದ್ರಣಗಳನ್ನ’ ರಾಜ್ಯದ ಹಲವು ಪ್ರಮುಖ ನಗರಗಳಿಂದಲೇ ಪ್ರಕಾಶಿಸಲಾಗುತ್ತದೆ. ಈ ರಾಜ್ಯದ ತಮ್ಮ ’ಸ್ಥಳಿಯ’ ಪ್ರಕಾಶನಗಳು - ದೈನಿಕಗಳು/ಸಾಪ್ತಾಹಿಕಗಳು/ಮಾಸಿಕಗಳು ಹಲವಾರು ಇದ್ದು ಪ್ರಾಯಶಃ ಎಲ್ಲಾ ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿವೆ. ಕೆಲವು ಹಿಂದಿ ಭಾಷೆಯ ದೈನಿಕಗಳು, ಉದಾ. ಅಮರ ಉಜಾಲ ಹಾಗೂ ರಾಜಕೀಯದ ಬಲಪಂಥದ 
ದೈನಿಕ ಜಾಗರಣ್ ವ್ಯಾಪಕ ಪ್ರಸಾರ ಹೊಂದಿದ್ದು, ಅವು ಸ್ಥಳಿಯ ಮುದ್ರಣಗಳನ್ನು ಸಹಾ ಪ್ರಮುಖ ನಗರಗಳಲ್ಲಿ ಹೊಂದಿದ್ದವು. ನ್ಯಾಷನಲ್ ಹೆರಾಲ್ಡ್ ಈಗ ಉರ್ದು ಆವೃತಿಯನ್ನು ಪ್ರಕಾಶಿಸುತ್ತದೆ. ಇನ್ನು ಕೆಳ ಮಟ್ಟದಲ್ಲಿ, ಸ್ಥಳಿಯವಾಗಿ ಪ್ರಕಾಶಿತವಾದ ವಾರ್ತಾ ಪತ್ರಿಕೆಗಳು ಮತ್ತು ಸಾಹಿತ್ಯಕ ಸಾಪ್ತಾಹಿಕಗಳು ಹಾಗೂ ಮಾಸಿಕಗಳು ಅತಿ ಹೆಚ್ಚು ಸಂಖ್ಯೆಗಳಲ್ಲಿವೆ.
ಶ್ರವ್ಯ-ದೃಷ್ಟಿಗೋಚರ ಉತ್ಪನ್ನಗಳ ನಿರ್ಮಾಣ : ಬೆಳ್ಳಿ ತೆರೆಗೆ ಚಲನಚಿತ್ರದ ಬಾಲಿವುಡ್‌ ಮಟ್ಟದ ಉತ್ಪನ್ನ ಗಳು ಅಥವಾ ಉತ್ತಮ ದರ್ಜೆಯ ಮಾಹಿತಿಯುಳ್ಳ ಚಿಕ್ಕ ಸಾಕ್ಷ್ಯಚಿತ್ರಗಳು ಹೆಚ್ಚಾಗಿದ್ದರೂ ಸಹ ಉತ್ತರ ಪ್ರದೇಶದಲ್ಲಿ ಇವುಗಳ ಬೆಳವಣಿಗೆ ಇಲ್ಲ. ಹೇಗಾದರೂ, ಈ ರಾಜ್ಯದಿಮ್ದ ಕಲಾಕಾರರು ಹಾಗೂ ಬರಹಗಾರರು ಸತತವಾಗಿ ಭಾರತೀಯ ಚಲನಚಿತ್ರ ಉದ್ಯಮ ಕೇಂದ್ರಗಳಲ್ಲಿ ತಮ್ಮೆ ಪ್ರತಿಭೆಯ ನೆರವನ್ನು ನೀಡುತ್ತಲೇ ಬಂದಿದ್ದಾರೆ, ಗೀತೆ ಹಾಗೂ ಕಥೆ ಬರಹಗಾರರಾಗಿ, ರಚನೆಕಾರರು ಹಾಗೂ ಸಂಗೀತಗಾರರಾಗಿ, ಗೀತಕಾರರಾಗಿ, ನಟರಾಗಿ, ನಿರ್ದೇಶಕರಾಗಿ ಹಾಗೂ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಲೇ ಇರುತ್ತಾರೆ.

ಅತ್ಯಂತ ಪುರಾತನವಾದ ನೃತ್ಯ ಮತ್ತು ಸಂಗೀತಗಳಿಗೆ ಈ ರಾಜ್ಯವು ತಾಯಿ ನಾಡಾಗಿದೆ. ಆಗಿನ ಗುಪ್ತರುಮತ್ತು ಹರ್ಷವರ್ಧನರ ಕಾಲದಲ್ಲಿ, ಉತ್ತರಪ್ರದೇಶವು ಸಂಗೀತದ ನವೀನತೆಗೆ ಪ್ರಮುಖ ಕೇಂದ್ರವಾಗಿತ್ತು. ಹಿಂದೂಸ್ತಾನಿ ಶ್ರೇಷ್ಠ ಗಾಯನದಲ್ಲಿ ವೀರಾಗ್ರೇಸರಾಗಿದ್ದ ಸ್ವಾಮಿ ಹರಿದಾಸರು ಒಬ್ಬ ಪ್ರಖ್ಯಾತ ಸಂತ-ಸಂಗೀತಗಾರರು. ಮೊಘಲ್ ಸಾಮ್ರಾಜ್ಯದ ಅಕ್ಬರನ ಆಸ್ಥಾನದಲ್ಲಿ ,ಸ್ವಾಮಿ ಹರಿದಾಸರ ಶಿಷ್ಯನಾಗಿದ್ದ ತಾನ್‌ಸೇನನು ಪ್ರಖ್ಯಾತ ಸಂಗೀತಗಾರನಾಗಿದ್ದನು.  ತಾನ್‌ಸೇನನು ಹಾಡುತ್ತಿದ್ದ ರಾಗಗಳು ಅಧಿಕ ಸಾಮರ್ಥ್ಯವನ್ನು ಹೊಂದಿವೆ ಎಂದು ನಂಬಲಾಗಿತ್ತು. ಯಾವಾಗ ಆತ ಅವುಗಳನ್ನು ಹಾಡುತ್ತಿದ್ದ, ಆಗ ಮಳೆ ಬರುತ್ತಿತ್ತು ಅಥವಾ ದೀಪಗಳು ಬೆಳಗುತ್ತಿದ್ದವು.
ಕಥಕ್ ಒಂದು ನಮೂನೆಯ ಶ್ರೇಷ್ಠ ನೃತ್ಯ, ಇದನ್ನು ಸಂಪೂರ್ಣ ದೇಹದೊಂದಿಗೆ ಪಾದ ಮತ್ತು ತೋಳುಗಳನ್ನು ಸಮಸ್ಥಾನಗಳಲ್ಲಿ ಚಲಿಸುವರು. ಉತ್ತರ ಪ್ರದೇಶದಲ್ಲಿ ಇದು ಬೆಳೆದು ಅಭಿವೃದ್ಧಿಯನ್ನು ಹೊಂದಿದೆ. ಕೊನೆಯ ಅವಧ್‌ನ ನವಾಬನಾದ ವಾಜೀದ್ ಆಲಿ ಷಾ ಈ ಕಲೆಯ ಒಬ್ಬ ಪ್ರಖ್ಯಾತ ಆಶ್ರಯದಾತನು ಹಾಗೂ ಕಥಕ್ ನೃತ್ಯದಲ್ಲಿ ಭಾವೋದ್ದೀಪ್ತ ಪಟುವಾಗಿದ್ದನು.  ಇಂದು,ಈ ನೃತ್ಯ ಮಾದರಿಯ ಲಕ್ನೋ ಘರಾನಾ ಹಾಗೂ ಬನಾರಸ್ ಘರಾನಾ ಎಂಬ ಹೆಸರು ಎರಡು ಪ್ರಖ್ಯಾತ ಶಾಲೆಗಳಿಗೆ ರಾಜ್ಯವು ತವರಾಗಿವೆ. ಇಂದಿನ ಆಧುನಿಕ ಕಾಲದಲ್ಲಿ, ಉತ್ತರ ಪ್ರದೇಶವು ಸಂಗೀತ ಇತಿಹಾಸಕಾರರಾದ ಅನೂಪ್ ಜಲೋಟಾ, ಬಾಬಾ ಸೈಗಲ್, ಗಿರಿಜಾ ದೇವಿ, ಗೋಪಾಲ್ ಶಂಕರ್ ಮಿಶ್ರ, ಹರಿ ಪ್ರಸಾದ್ ಚೌರಾಸಿಯಾ, ಕಿಶನ್ ಮಾಹಾರಾಜ್, ನೌಷಾಧ್ ಆಲಿ, ಪಂಡಿತ್ ರವಿಶಂಕರ್, ಶುಭಾ ಮುದ್‌ಗಲ್, ಸಿದ್ದೇಶ್ವರಿ ದೇವಿ, ತಲತ್ ಮಹಾಮೂದ್, ಉಸ್ತಾದ್ ಬಿಸ್‌ಮಿಲ್ಹಾ ಖಾನ್ ಮುಂತಾದವರನ್ನು ಜಗತ್ತಿಗೆ ಕೊಟ್ಟಿದೆ. ಐತಿಹಾಸಿಕ ಗಝಲ್ ಗಾಯಕರಾದ ಬೇಗಮ್ ಆಖ್ತರ್‌ರವರು ಉತ್ತರ ಪ್ರದೇಶಕ್ಕೆ ಸೇರಿದವರಾಗಿವರು. ಗಝಲ್ ಗಾಯನದ ಪ್ರಕಾರವನ್ನು ಅವರು ಅಚ್ಚರಿಪಡಿಸುವಷ್ಟು ಎತ್ತರಕ್ಕೆ ಕೊಂಡೊಯ್ದಿದ್ದರು.  ಏ ಮೊಹಬತ್ ತೇರೆ ಅಂಜಾಮ್ ಪೆ ರೋನಾ ಆಯಾ  ಎಂಬ ಇವರ ಒಂದು ಗಾಯನವು ಎಲ್ಲಾ ಕಾಲದಲ್ಲಿಯೂ ಕೇಳುವಂತಹ ಅತ್ಯುತ್ತಮ ಗಾಯನವಾಗಿದೆ. ಹಾಗೂ ಇದು, ಆಕಸ್ಮಿಕವಾಗಿ, ಬ್ರಿಟೀಷ್ ಪಾಪ್ ಇತಿಹಾಸದ ಕ್ಲಿಫ್ ರಿಚರ್ಡ್‌ನ ಹುಟ್ಟಿದ ಸ್ಥಳವಾಗಿದೆ. ಪ್ರಖ್ಯಾತ ಗಾಯಕ ಪಂಡಿತ್ ವಿಷ್ಣು ನಾರಯಣ ಭಟ್‌ಕಾಂಡೆಯವರ ಹೆಸರನ್ನು ಲಕ್ನೋದಲ್ಲಿರುವ ಭಟ್‌ಕಾಂಡೆ ಸಂಗೀತ ವಿಶ್ವವಿದ್ಯಾಲಯಕ್ಕೆ ಇಡಲಾಯಿತು.
ಪ್ರೀತಿಯನ್ನು ಪೂಜಿಸುವ ಯಾವುದೇ ರಾಧ ಮತ್ತು ಶ್ರೀ ಕೃಷ್ಣರ ಆಚರಣೆಗಳಲ್ಲಿ ರಾಸಿಯಾ (ಬ್ರಿಜ್‌ನಲ್ಲಿ ತಿಳಿದ ಮತ್ತು ವಿಶೇಷವಾಗಿ ಪ್ರಖ್ಯಾತಿಯಾದ) ಎಂಬ ಹಾಡುಗಳು ಈ ಪ್ರದೇಶದ ಜಾನಪದ ಸಂಸ್ಕೃತಿಯಲ್ಲಿ  ಸೇರಿಹೋಗಿವೆ. ಇಂತಹ ಹಾಡುಗಳನ್ನು ಬಂಬ್  ಎಂದು ತಿಳಿದಿರುವ ದೊಡ್ಡ ಮೃದಂಗಗಳ ಸಂಗಡದೊಂದಿಗೆ ಮತ್ತು ಹಲವು ಹಬ್ಬಗಳಲ್ಲಿ ಪ್ರದರ್ಶಿಸುವರು. ಇತರ ಜಾನಪದ ನೃತ್ಯಗಳು ಅಠವಾ ಜಾನಪದ ರಂಗಭೂಮಿ ವಿಧಗಳು ಸೇರಿಕೊಂಡಿವೆ:

ಖುಷಿನಗರ್‌ನ ಫಝೀಲಾನಗರ್‌ದಲ್ಲಿರುವ ಜೋಗಿಯಾ ಜಾನುಬಿ ಪಟ್ಟಿಯ ಲೋಕ್‌ರಂಗ್ ಸಾಂಸ್ಕೃತಿಕ ಸಮಿತಿಯು ಅತ್ಯಂತ ಪ್ರಸಿದ್ಧವಾದ ಸಂಘಟನೆಯಾಗಿದ್ದು, ಇದು ಜನಪದ ಗೀತೆಗಳು, ಜನಪದ ಸಂಗೀತಗಾರರು ಮತ್ತು ಜನಪದ ಸಂಸ್ಕೃತಿಯ ಕುರಿತು ಸಂಶೋಧನೆ ಮಾಡುತ್ತಿದೆ. ಪ್ರತೀವರ್ಷ ಮೇ ತಿಂಗಳಿನಲ್ಲಿ ಈ ಸಮಿತಿಯು ಲೋಕ್‌ರಂಗ್ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಇದರಲ್ಲಿ ಸುಮಾರು 150ಕ್ಕಿಂತ ಹೆಚ್ಚು ಜನ ಕಲಾವಿದರು ಮತ್ತು ಲೇಖಕರು ಭಾಗವಹಿಸುತ್ತಾರೆ.

ಉತ್ತರ ಪ್ರದೇಶ ಅತ್ಯುತ್ತಮ ಸಸ್ಯಾಹಾರ ಮತ್ತು ಮಾಂಸಾಹಾರ ಆಹಾರವನ್ನು ತಯಾರಿಸುವಲ್ಲಿ ಶ್ರೀಮಂತ ಆಚಾರವನ್ನು ಹೊಂದಿದೆ. ಸಿಹಿತಿಂಡಿಗಳು ಸಾಂಪ್ರದಾಯಿಕ ವಿಶೇಷ ಸಂದರ್ಭಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ.
ಕ್ರಮಬದ್ಧವಾದ ಸಸ್ಯಾಹಾರ ಊಟವು ಚಪಾತಿ, ರೋಟಿಸ್ (ಫ್ಲಾಟ್‌ಬ್ರೆಡ್) ಮತ್ತು/ಅಥವಾ ಪೂರಿ (ಊದಿದ ಫ್ಲಾಟ್‌ಬ್ರೆಡ್‌ಗಳನ್ನು ಹೆಚ್ಚು ಕರಿದಿರುವ), ದಾಲ್ (ಗಟ್ಟಿ ಲೆಂಟಿಲ್ ಬೀಜದ ಸೂಪ್), ಅನ್ನ(ಬೇಯಿಸಿದ ಬಿಳಿ ಅಕ್ಕಿ), ತರಕಾರಿ ಕರ್ರಿಗಳು (ಒಂದು ಅಥವಾ ಹೆಚ್ಚು ಒಣಗಿದ/ಕರಿದ ಮತ್ತು ಕಡಿಮೆ-ದ್ರವಸ್ಥಿತಿಯ ಕರ್ರಿ), ಮೊಸರು, ಉಪ್ಪಿನಕಾಯಿಗಳು, ಅಪ್ಪಳ (ತೆಳು ಮಸಾಲ ಕ್ರಾಕರ್ಸ್) ಮತ್ತು ವಿವಿಧ ಸಿಹಿತಿಂಡಿಗಳನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಲೋಹದ ಪಾತ್ರೆಗಳಲ್ಲಿ ಬಳಸಲಾಗುತ್ತದೆ ಮತ್ತು ಚಮಚವನ್ನು ಬಳಸದೆ ಬರಿದಾದ ನೆಲದಲ್ಲಿ ಕುಳಿತು ಸಾಂಪ್ರದಾಯಿಕವಾಗಿ ತಿನ್ನಲಾಗುತ್ತದೆ.   ಸಂಪ್ರದಾಯಿಕ ಶೈಲಿಯಲ್ಲಿ ದೊಡ್ಡ ಸಮಾರಂಭವನ್ನು ಏರ್ಪಡಿಸಿದ್ದಾಗ, ಬಳಸಿ ಬೀಸಾಡಬಹುದಾದ ಸಮತಟ್ಟಾದ ತಟ್ಟೆಗಳಲ್ಲಿಯೂ (’ಪಟ್ಟಾಲ್’ ಎಂದು ಕರೆಯುವ) ಸಹ ಆಹಾರವನ್ನು ಬಡಿಸಬಹುದು, ಅವುಗಳನ್ನು ಕೆಲವು ಮರಗಳ ಅಗಲವಾದ ಎಲೆಗಳನ್ನು ಬಳಸಿ ಹೆಣೆದು ತಯಾರಿಸಲಾಗಿದೆ.
ಮಾಂಸಾಹಾರ ಊಟವು ಅನೇಕ ವಿವಿಧ ಮಾಂಸ ಅಥವಾ ಪ್ರಾಂತ್ಯದಲ್ಲಿ ಉತ್ಪತ್ತಿ ಮಾಡಿದ ಅನ್ನ ತಯಾರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು  ಅದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಮೊಘಲೈ ಆಹಾರ ಪದ್ಧತಿ ಎಂದು ಚಿರಪರಿಚಿತ; ಅವುಗಳಲ್ಲಿ ಕೆಲವು: ಕೆಬಾಬ್, ಕುಫ್ತಾ, ಕೊರ್ಮ, ಕೀಮಾ, ಪುಲಾವ್, ಬಿರಿಯಾನಿ, ಪ್ರೊಥಾಸ್ (ಸಾದಾ ಅಥವಾ ಸ್ಟಫ್ಡ್ ), ಹಲ್ವಾ, ಫಿರ್ನಿ ಇತ್ಯಾದಿ. ಜೊತೆಗೆ ಹೆಚ್ಚಿನ ಸಸ್ಯಹಾರಿ ತಿಂಡಿಗಳ ಆಯ್ಕೆಯನ್ನು ಆಹಾರ ಔತಣದ ನಡುವೆ ನೀಡಬಹುದು. ಸಂಪ್ರದಾಯಬದ್ಧವಾಗಿ, ಆಹಾರವನ್ನು ಲೋಹದ ಪಾತ್ರೆ ಅಥವಾ ಕುಂಬಾರಿಕೆಯ ಮಣ್ಣಿನ ಪಾತ್ರೆಗಳಲ್ಲಿ ಬಳಸಲಾಗುತ್ತದೆ, ಬಟ್ಟೆ-ಹಾಸಿದ ಅಥವಾ ಕಾರ್ಪೆಟ್‌ನಂತೆ ನೆಲವನ್ನು ಆವರಿಸಿದ ಹಾಸಿರುವ ಬಟ್ಟೆ ಮೇಲೆ ಕುಳಿತು ನೇರವಾಗಿ ಕೈಗಳು ಅಥವಾ (ಕೆಲವು ಸಂದರ್ಭ) ಚಮಚಗಳನ್ನು ಬಳಸಿ ಊಟ ಮಾಡಲಾಗುತ್ತದೆ.
ಅನೇಕ ಆಧುನಿಕ ಕುಟುಂಬಗಳಲ್ಲಿ, ಪಶ್ಚಿಮಾತ್ಯ ಟೇಬಲ್‌ ಸರಕುಗಳ ಮತ್ತು ಊಟ ಮಾಡುವ ಟೇಬಲ್ ಹಾಗೂ ಕುರ್ಚಿಗಳ ಬಳಕೆಯು ಸಂಪ್ರದಾಯದ-ನಡವಳಿಕೆಯಾಗಿದೆ ಮತ್ತು ಪಾಶ್ಚಿಮಾತ್ಯ ತಿಂಡಿಗಳು ಸಹ ಇದರಲ್ಲಿ ಸೇರಿದೆ.

ಉತ್ತರ ಪ್ರದೇಶದ ಜನರು ವೈವಿದ್ಯಮಯ ಉಡುಪುಗಳನ್ನು ಧರಿಸುತ್ತಾರೆ. ಆದ್ದರಿಂದ ಸಾರ್ವಜನಿಕ ನೋಟವು ಯಾವಾಗಲೂ ಅನೇಕ ವಿವಿಧ ಉಡುಪುಗಳು ಮತ್ತು ಬಣ್ಣಗಳ ಪ್ರದರ್ಶನವಾಗಿರುತ್ತದೆ. ಅಲಂಕರಿಸಿದ ಉಡುಗೆಗಳು ಸೇರಿದಂತೆ ಸಂಪ್ರದಾಯ ಶೈಲಿಗಳ ಉಡುಪುಗಳಿವೆ, ಅವುಗಳೆಂದರೆ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಧೋತಿ ಅಥವಾ ಲುಂಗಿ ಮತ್ತು ಹೊಲಿದ ಉಡುಗೆಗಳಾದ ಮಹಿಳೆಯರಿಗೆ ಸಲ್ವಾರ್ ಕಮೀಜ್ ಮತ್ತು ಪುರುಷರಿಗೆ ಕುರ್ತಾ-ಪೈಜಾಮ. ಯುರೋಪಿಯಾನ್-ಶೈಲಿಯ ಟ್ರೌಸರ್ಸ್ ಮತ್ತು ಶರ್ಟ್‌ಗಳು ಸಹ ವಿದ್ಯಾವಂತ ಪುರುಷರಿಗೆ ಸಾಮಾನ್ಯವಾಗಿವೆ.
ಉಡುಗೆಯ ಬಟ್ಟೆಯನ್ನು ಹವಾಮಾನದ ಅಗತ್ಯತೆಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ; ಆದ್ದರಿಂದ ಹತ್ತಿಯಿಂದ ನೇಯ್ದ ಬಟ್ಟೆಗಳು ಮತ್ತು ಕಾಟನ್-ಸಿಂಥೆಟಿಕ್ ಮಿಶ್ರ ಬಟ್ಟೆಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿವೆ. ಉಣ್ಣೆ ಅಥವಾ ಸಿಂಥೆಟಿಕ್ ಉಣ್ಣೆಯಿಂದ ತಯಾರಿಸಿದ ಬೆಚ್ಚಗಿನ ಬಟ್ಟೆಗಳು ಚಳಿಗಾಲದಲ್ಲಿ ಅಗತ್ಯವಾಗುತ್ತವೆ, ವಿಶೇಷವಾಗಿ ಅತ್ಯುಚ್ಚ್ರಾಯ ಸ್ಥಿತಿಯ ಚಳಿಗಾಲದಲ್ಲಿ ಸ್ವೆಟರ್, ಜಾಕೆಟ್ ಮತ್ತು/ಅಥವಾ ಕೋಟ್ ಅನ್ನು ಧರಿಸುತ್ತಾರೆ.

ಧಾರ್ಮಿಕ ಆಚರಣೆಗಳು ನಿತ್ಯ ಜೀವನದ ಸಮಗ್ರ ಭಾಗವಾಗಿವೆ ಮತ್ತು ಅವು ಭಾರತದ ಉಳಿದ ಭಾಗಗಳಲ್ಲಿಯೂ ಜನಪ್ರಿಯ ಸಾರ್ವಜನಿಕ ಕಾರ್ಯಗಳಾಗಿವೆ.   ಆದ್ದರಿಂದ ಯಾವುದೇ ಆಶ್ಚರ್ಯವಿಲ್ಲದೆ, ಅನೇಕ ಹಬ್ಬಗಳು ಹುಟ್ಟಿನಿಂದಲೇ ಧಾರ್ಮಿಕವಾಗಿವೆ, ಆದರೂ ಅನೇಕರು ಜಾತಿ ಮತ್ತು ನಂಬಿಕೆಗಳನ್ನು ಲಕ್ಷಿಸದೆ ಆಚರಿಸುತ್ತಾರೆ.

ಅತ್ಯಂತ ಪ್ರಮುಖ ಹಿಂದೂ ಹಬ್ಬಗಳೆಂದರೆ ದಿವಾಳಿ, ಹೋಳಿ ಮತ್ತು ದಸರಾ. ಈ ಹಬ್ಬಗಳಿಗೆ ಜೈನರು ಮತ್ತು ಸಿಖ್‌ರು ಸಮಾನ ಉತ್ಸಾಹ ತೋರುವುದನ್ನು ಸಹ ಗಮನಿಸಲಾಗಿದೆ.  ಬಾರಾ ವಾಫಾತ್,  ಈದ್, ಬಕ್ರಿದ್ ಮತ್ತು ಮೊಹರಾಂ -ಇವು ಮುಸ್ಲಿಂರ ಧಾರ್ಮಿಕ ಹಬ್ಬಗಳು. ಮಹಾವೀರ ಜಯಂತಿ ಯನ್ನು ಜೈನರು, ಬುದ್ಧ ಜಯಂತಿಯನ್ನು ಬುದ್ಧ ಧರ್ಮಿಯರು, ಗುರು ನಾನಕ್ ಜಯಂತಿಯನ್ನು ಸಿಖ್‌ರು ಮತ್ತು ಕ್ರಿಸ್‌ಮಸ್ ಅನ್ನು ಕ್ರಿಶ್ಚಿಯನ್ನರು ಆಚರಿಸುತ್ತಾರೆ.

ರಾಷ್ಟ್ರಾದ್ಯಂತ ಆಚರಣೆಯ ಭಾಗವಾಗಿ ಎರಡು ಜ್ಯಾತ್ಯಾತೀತ ರಾಷ್ಟ್ರೀಯ ಹಬ್ಬಗಳಾದ, ಸ್ವತಂತ್ರ ದಿನ ಮತ್ತು ಗಣರಾಜ್ಯ ದಿನವನ್ನು ಕಚೇರಿಗಳು ಮತ್ತು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರಭಕ್ತಿ ಭಾವನೆಯೊಂದಿಗೆ ಆಗಸ್ಟ್ 15 ಮತ್ತು ಜನವರಿ 26ರಂದು ಜವಾಬ್ದಾರಿಯುತವಾಗಿ ಎಲ್ಲಾ ಸರ್ಕಾರಿ ಕಛೇರಿಗಳು, ಅನೇಕ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳು ಮತ್ತು ವಿವಿಧ ಗುಂಪಿನ ವ್ಯಕ್ತಿಗಳು ಆಚರಿಸುತ್ತಾರೆ.

ಪ್ರಸ್ತುತದಲ್ಲಿ, ಉತ್ತರಪ್ರದೇಶದ ಸಾಮಾನ್ಯ ಕ್ರೀಡೆಗಳು ಎರಡು ವಿಭಿನ್ನ ಪ್ರಕಾರದಲ್ಲಿವೆ: ಅವುಗಳೆಂದರೆ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಪ್ರಮುಖವಾಗಿ ಯುರೋಪ್‌ನಲ್ಲಿ ಜನಿಸಿದ ಆಧುನಿಕ ಕ್ರೀಡೆಗಳು.
ಸಂಪ್ರದಾಯಿಕ ಕ್ರೀಡೆಗಳಾದ , ಮಲ್ಲಯುದ್ದ, ಈಜುವಿಕೆ, ಕಬ್ಬಡಿ ಸೇರಿದಂತೆ ಅತ್ಯಂತ ಹಿಂದಿನ ಕಾಲದ ಆಟಗಳನ್ನು ಈಗಲೂ ಆಡಲಾಗುತ್ತಿದೆ ಮತ್ತು ಟ್ರಾಕ್ (ಗೆರೆ ಎಳೆದ ಸಾಲು)- ಅಥವಾ ಜಲ ಕ್ರೀಡೆಗಳನ್ನು ಆಧುನಿಕ ಉಪಕರಣಗಳ ಬಳಕೆಯಿಲ್ಲದೆ ಸ್ಥಳೀಯ ಸಂಪ್ರದಾಯ ನಿಯಮಗಳ ಪ್ರಕಾರ ಆಡಲಾಗುತ್ತದೆ; ಕೆಲವು ಸಂದರ್ಭಗಳಲ್ಲಿ, ಕತ್ತಿ ಅಥವಾ ’ಪಟ’(ಕಡ್ಡಿ)ವನ್ನು ಬಳಸುವ ಸಮರೋಚಿತ ಕಲೆಗಳ ಪ್ರದರ್ಶನ ಮಾಡಲಾಗುತ್ತದೆ, ಅದು ಕ್ರೀಡೆಯ ಮೂಲ ರೂಪವಾಗಿದೆ.     ಆದರೆ, ಸಂಘಟಿತ ಪೋಷಣೆ ರದ್ಧತಿ ಮತ್ತು ಅವಶ್ಯಕ ಸೌಲಭ್ಯಗಳಿಲ್ಲದೆ ಈ ಕ್ರೀಡೆಗಳು ಪ್ರತ್ಯೇಕ ಹವ್ಯಾಸಗಳು ಅಥವಾ ಸ್ಥಳೀಯ ಸ್ಪರ್ಧಾತ್ಮಕ ಆಟಗಳಾಗಿ ಉಳಿದಿವೆ. ಉದಾ: ಆಸಕ್ತಿ ಹೊಂದಿರುವ ಶಾಲೆಗಳಲ್ಲಿ.

ಆಧುನಿಕ ಕ್ರೀಡೆಗಳು  - ಒಳಾಂಗಣ, ಮೈದಾನ ಮತ್ತು ಟ್ರಾಕ್ (ಗೆರೆ ಎಳೆದ ಸಾಲು) ಆಟಗಳು - ಜನಪ್ರಿಯವಾಗಿವೆ, ಅದರಲ್ಲೂ ವಿದ್ಯಾವಂತ ವರ್ಗದ ನಡುವೆ. ಆದರೆ ರಾಜ್ಯ ಅವುಗಳಲ್ಲಿ ಇನ್ನೂ ಎಲ್ಲಾ ರೀತಿಯ ರಾಷ್ಟ್ರೀಯ ಅರ್ಹತೆಯ ಯಶಸ್ಸನ್ನು ಹೊಂದಿದೆ. ಫೀಲ್ಡ್ ಹಾಕಿ ಆಡುತ್ತಿದ್ದ ಸಮಯದಲ್ಲಿ, ಅದು ಭಾರೀ ಪ್ರಮಾಣದಲ್ಲಿ ಜನಪ್ರಿಯವಾಗಿತ್ತು ಮತ್ತು ಉತ್ತರ ಪ್ರದೇಶ ಭಾರತದ ಕೆಲವು ಉತ್ತಮ ಹಾಕಿ ಆಟಗಾರರನ್ನು ತಯಾರಿಸಿತ್ತು, ಅವರು ದೇಶಕ್ಕೆ ಕೀರ್ತಿಯನ್ನು ತಂದರು. 
ಧ್ಯಾನ್‌ಚಂದ್, ಪೌರಾಣಿಕ ಫೀಲ್ಡ್ ಹಾಕಿಯ ಭಾರತದ ಆಟಗಾರ ಮತ್ತು ಹಲವಾರು ವರ್ಷಗಳ ಅನೇಕ ಒಲಂಪಿಕ್ ಆಟಗಳ ನಾಯಕನಾಗಿದ್ದರು, ಅವರು ಆಗಸ್ಟ್ 29,1905 ರಂದು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಜನಿಸಿದರು.  ಜರ್ಮನ್ ಆಡಳಿತಾಧಿಕಾರಿಯಾಗಿದ್ದ ಅಡೊಲ್ಫ್ ಹಿಟ್ಲರ್, ಬರ್ಲಿನ್ ಒಲಂಪಿಕ್ ಹಾಕಿ-ಫೈನಲ್ಸ್‌‌‍ನಲ್ಲಿ ಧ್ಯಾನ್‌ಚಂದ್‌’ರ ಆಟದಿಂದ ಹೆಚ್ಚು ಪ್ರಭಾವಿತರಾಗಿದ್ದರು, ಅವರು ಜರ್ಮನ್‌ಗೆ ವಲಸೆ ಹೋಗುವುದಿದ್ದರೆ ಕಲೊನೆಲ್(ಕರ್ನಲ್) ಸ್ಥಾನಕ್ಕೆ ’ಲ್ಯಾನ್ಸ್ ನಾಯಕ್’ಆಗಿ ಧ್ಯಾನ್ ಚಂದ್‌ನನ್ನು ಮೇಲೇರಿಸುವುದಾಗಿ ಅವರು ಕರೆ ನೀಡಿದ್ದರು; ಚಂದ್ ಆ ಕರೆಯನ್ನು ಒಪ್ಪಲಿಲ್ಲ.
ಹಾಕಿಯ ಜನಪ್ರಿಯತೆಯನ್ನು ಈಗ ಕ್ರಿಕೆಟ್ ಪಡೆದುಕೊಂಡಿದೆ.  ಆದಾಗ್ಯೂ ತನ್ನ ಕ್ರಿಕೆಟ್ ತಂಡಕ್ಕಾಗಿ ಹೆಸರು ಮಾಡಿಲ್ಲ, ಯುಪಿ ಫೆಬ್ರುವರಿ 2006ರ ಪಂದ್ಯಾವಳಿಯಲ್ಲಿ, ಫೈನಲ್‌ನಲ್ಲಿ ಬೆಂಗಾಳಿ ತಂಡವನ್ನು ಮಣಿಸಿ ತನ್ನ ಪ್ರಥಮ ರಣಜಿ ಟ್ರೋಪಿಯನ್ನು ಗಳಿಸಿತು. ಅದು ತನ್ನ 3 ಅಥವಾ 4 ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವುದನ್ನು ಸಹ ಹೆಗ್ಗಳಿಕೆಯಾಗಿ ಹೇಳಿಕೊಳ್ಳಬಲ್ಲದು.  ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ಭಾರತದ ಅತ್ಯಂತ ಹಳೆಯ ಕ್ರಿಕೆಟ್ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಅದು ಭಾರತದ ಕೆಲವು ಹೆಚ್ಚು ಜನಪ್ರಿಯ ವಿಜಯಗಳಿಗೆ ಸಾಕ್ಷಿಯಾಗಿದೆ.




#Article 219: ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು (459 words)


ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದು. ಈ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಇವು ಭಾರತದ ಭೂಭಾಗದಿಂದ ಸುಮಾರು ೧೨೦೦ ಕಿ.ಮೀ. ದೂರದಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ.

ಈ ಕೇಂದ್ರಾಡಳಿತ ಪ್ರದೇಶ ಕೊಲ್ಕತ್ತಾ ಹೈಕೋರ್ಟ್ ಗೆ ಸಂಬಂಧಿಸಿದೆ ..
ಸಮೀಪದ ದೇಶ- ಮಯನ್ಮಾರ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸುಮಾರು 223 ದ್ವೀಪಗಳನ್ನು ಒಳಗೊಂಡಿರುವ ಈ ಸ್ತೋಮ ಬಂಗಾಳಕೊಲ್ಲಿಯ ಪೂರ್ವಭಾಗದಲ್ಲಿದೆ. (ಉ.ಅ. 70 _ 130 ಮತ್ತು ರೇ 92 ಡಿಗ್ರಿ _95 ಡಿಗ್ರಿ). ವಿಸ್ತೀರ್ಣ 3215 ಚದರ ಮೈಲಿಗಳು. ಅಂಡಮಾನ್ ದ್ವೀಪ ಸ್ತೋಮದಲ್ಲು ಉತ್ತರ ಅಂಡಮಾನ್, ಮಧ್ಯ ಅಂಡಮಾನ್, ದಕ್ಷಿಣ ಅಂಡಮಾನ್ ಮತ್ತು ಪುಟ್ಟ ಅಂಡಮಾನ್‍ಗಳೆಂಬ ನಾಲ್ಕು ದ್ವೀಪಗಳಿವೆ. ನಿಕೋಬಾರ್ ಸ್ತೋಮದಲ್ಲಿ ಕಾರ್‍ನಿಕೋಬಾರ್ ಪುಟ್ಟ ನಿಕೋಬಾರ್ ಮತ್ತು ಗ್ರೇಟ್ ನಿಕೋಬಾರ್ ಎಂಬ ಮೂರು ದ್ವೀಪಗಳಿವೆ. ಈ ಎರಡು ಸ್ತೋಮಗಳನ್ನು ಹತ್ತನೆಯ ಡಿಗ್ರಿಯ ಕಡಲುಗಾಲುವೆ ಬೇರ್ಪಡಿಸಿದೆ. ಈ ದ್ವೀಪಗಳಿಗೆ ಪ್ರಧಾನವಾದ ರೇವುಪಟ್ಟಣ ಪೋರ್ಟ್ ಬ್ಲೇರ್ (ಸ್ಥಾಪನೆ 1858) ಇದು ಮದ್ರಾಸಿಗೆ 1120 ಕಿ.ಮೀ. ರಂಗೂನಿಗೆ 624 ಕಿ.ಮೀ. ಹಾಗೂ ಕೋಲ್ಕತ್ತಾಗೆ 1170 ಕಿ.ಮೀ. ದೂರದಲ್ಲಿದೆ.

ಈ ದ್ವೀಪಸ್ತೋಮ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿತ್ತು. ಇತ್ಸಿಂಗ್, ಮಾರ್ಕೊಪೋಲೊ, ನಿಕಾಲೊ ಕಾಂಟಿ ಮತ್ತು ಇತರ ಪ್ರವಾಸಿಗರು ಇವುಗಳ ವಿಷಯವಾಗಿ ಬರೆದಿದ್ದಾರೆ. 1789 ರಲ್ಲಿ ಕ್ಯಾಪ್ಟನ್ ಅರ್ಚಿಬಾಲ್ಡ್ ಬ್ಲೇರ್ ಎಂಬುವನು ಇಲ್ಲಿ ಬ್ರಿಟಿಷ್ ವಸಾಹತವನ್ನು ಸ್ಥಾಪಿಸಿದರು. ಬಹಳಕಾಲ ಈ ದ್ವೀಪಗಳು ದುಷ್ಕರ್ಮಿಗಳ ಕೊಲೆಪಾತಕಿಗಳ ಮತ್ತು ರಾಜಕೀಯ ಬಂದಿಗಳ ನಿವಾಸವಾಗಿತ್ತು. 1858ರಲ್ಲಿ ಜಾರಿಗೆ ಬಂದ ಬಂದಿಗಳ ರವಾನೆಯ ಕಾನೂನು 1945ರಲ್ಲಿ ರದ್ದಾಯಿತು. 1942ರಲ್ಲಿ ಜಪಾನರು ಈ ದ್ವೀಪವನ್ನಾಕ್ರಮಿಸಿದರು. 1956ರಿಂದ ಈಚೆಗೆ ಇದು ಭಾರತದ ಕೇಂದ್ರಾಡಳಿತಕ್ಕೆ ಒಳಪಟ್ಟಿದೆ.

ಈ ದ್ವೀಪಗಳು ಬೆಟ್ಟಗುಡ್ಡಗಳಿಂದ ತುಂಬಿವೆ; ಇವು ಹೆಚ್ಚಾಗಿ ಹವಳ ದ್ವೀಪಗಳು. ಇದರಿಂದಾಗಿ ಭೂಮಿಯ ಮೇಲ್ಮೈ ಲಕ್ಷಣ ಬಹಳ ವ್ಯತ್ಯಾಸಗೊಂಡಿದೆ. ಉತ್ತರದ ದಕ್ಷಿಣಾಭಿಮುಖವಾಗಿ ಹಬ್ಬಿರುವ 1000' ದಿಂದ 2500' ಗಳ ಎತ್ತರದ ಬೆಟ್ಟಗಳು ಮತ್ತು ಅವುಗಳ ಮಧ್ಯೆ ಉಂಟಾಗಿರುವ ಕಣಿವೆಗಳು ಮೇಲ್ಮೈ ಲಕ್ಷಣದ ವೈಶಿಷ್ಟ್ಯ. ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ. ಅವುಗಳಲ್ಲಿ ಮುಖ್ಯವಾದುವು ಬ್ಲೇರ್, ಕಾಲ್‍ಪಾಂಗ್, ಕಾಲಾರ ಮತ್ತು ಕಾಂಗೊ. ನದಿಗಳೆಲ್ಲ ಸಣ್ಣವು; ಮಳೆಗಾಲದಲ್ಲಿ ಮಾತ್ರ ಪ್ರವಾಹವುಳ್ಳ ನುಗ್ಗು ಹೊನಲಿನವು.

ಇಲ್ಲಿನ ವಾಯುಗುಣ ಸಾಗರೀಕ ಉಷ್ಣವಲಯದ ಮಾದರೀಯದು. ಶಾಖ 75 ಡಿಗ್ರಿ ಯಿಂದ 85 ಡಿಗ್ರಿಗಳ ವರೆಗೆ ಇರುತ್ತದೆ. ಸರಾಸರಿ ಸಾಪೇಕ್ಷಕ ಆಧ್ರ್ರತೆ 80%. ವಾರ್ಷಿಕ ಮಳೆ ಉತ್ತರ ಭಾಗದಲ್ಲಿ 75. ದಕ್ಷಿಣ ಭಾಗದಲ್ಲಿ 120.

ಇಲ್ಲಿನ ಸಸ್ಯವರ್ಗದಲ್ಲಿ ಪ್ರಧಾನವಾದವು ದಟ್ಟವಾದ ಉಷ್ಣವಲಯದ ಕಾಡುಗಳು; ನಿತ್ಯ ಹರಿದ್ವರ್ಣದ, ಚಳಿಗಾಲದಲ್ಲಿ ಎಲೆಯುದುರುವ ಮತ್ತು ಮ್ಯಾನ್‍ಗ್ರೋವ್ ಎಂಬ ಜಾತಿಯ ಮರಗಳಿಂದ ತುಂಬಿದ ಮರಗಳು ಎಲ್ಲೆಡೆ ಹಬ್ಬಿವೆ. ನಿತ್ಯಹರಿದ್ವರ್ಣದ ಕಾಡುಗಳು ನದಿ ಕಣಿವೆಗಳಲ್ಲಿಯೂ ಬೆಟ್ಟಗಳ ಮೇಲ್ಭಾಗದಲ್ಲಿಯೂ ಕಾಣಬರುವವು. ಬೆಟ್ಟಗಳ ಇಳಿಜಾರುಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಬೆಳೆಯುತ್ತವೆ. ಮ್ಯಾನ್‍ಗ್ರೊವ್ ಕಾಡುಗಳು ಕರಾವಳಿಯಲ್ಲಿ ಹೆಚ್ಚು.
ಈ ದ್ವೀಪಗಳ ಆರ್ಥಿಕ ಸಂಪತ್ತು ಅರಣ್ಯ, ಮೀನುಗಾರಿಕೆ ಮತ್ತು ವ್ಯವಸಾಯಗಳನ್ನವಲಂಬಿಸಿದೆ. ಕೆಲವು ಮುಖ್ಯ ಜಾತಿಯ ಮರಗಳು ಇಲ್ಲಿಂದ ರಫ್ತಾಗುತ್ತಿವೆ.

ಮೀನುಗಾರಿಕೆ ಹೆಚ್ಚಾಗಿ ಬೆಳೆಯಲವಕಾಶವಿದ್ದರೂ ಈಗ ಇಲ್ಲಿನ ಜನರ ಅವಶ್ಯಕತೆಯನ್ನು ಮಾತ್ರ ಪೂರೈಸುವಷ್ಟಿದೆ. ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳ ನೆಲೆಸುನಾಡಾದಾಗಲೇ ಇಲ್ಲಿ ಭೂ ವ್ಯವಸಾಯ ಪ್ರಾರಂಭವಾಯಿತು; ಈಗ ಕೇವಲ ಒಂದರಷ್ಟು ಭೂಮಿಯನ್ನು ಕೃಷಿಗೆ ಉಪಯೋಗಿಸುತ್ತಿದ್ದಾರೆ. ಉಷ್ಣ ವಲಯದ ಬೆಳೆಗಳಾದ ಎಣ್ಣೆ ಕಾಳುಗಳು, ಕಬ್ಬು, ಭತ್ತ, ಸಿಹಿ ಆಲೂಗೆಡ್ಡೆ, ಬಾಳೆ, ಪರಂಗಿ, ಮಾವು, ಸೇಬು, ತೆಂಗು, ರಬ್ಬರ್, ಟೀ ಇವೇ ಮೊದಲಾದವುಗಳನ್ನು ಬೆಳೆಯುತ್ತಾರೆ. ಆಹಾರಕ್ಕಾಗಿ ಕೋಳಿ ಸಾಕಣೆ ಎಲ್ಲೆಡೆಯೂ ಕಂಡುಬರುತ್ತದೆ. ಮರ ಕಡಿಯುವುದು ಮತ್ತು ಮರ ಕೊಯ್ಯುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವುದು ಜನರ ಮುಖ್ಯ ಉದ್ಯೋಗ. ಜಾತಂ ದ್ವೀಪದಲ್ಲಿರುವ ಚಾತಂ ಮರ ಕೊಯ್ಯುವ ಕಾರ್ಖಾನೆ ಭಾರತದಲ್ಲಿಯೇ ದೊಡ್ಡದು. ಪೋರ್ಟ್‍ಬ್ಲೇರ್‍ನಲ್ಲಿ ಒಂದು ಬೆಂಕಿಪೊಟ್ಟಣದ ಕಾರ್ಖಾನೆ ಇದೆ. ವಿವಿಧ ಕೈಗಾರಿಕೆಗಳ ಬೆಳವಣಿಗೆಗೆ ಇಲ್ಲಿ ಸಾಕಷ್ಟು ಅನುಕೂಲಗಳಿವೆ.

ಈ ದ್ವೀಪ ಸ್ತೋಮದಲ್ಲಿನ ಜನಸಂಖ್ಯೆ ೩,೭೯,೯೪೪ (೨೦೧೧). ಸುಮಾರು 400 ಹಳ್ಳಿಗಳಿವೆ. ಈ ದ್ವೀಪಸ್ತೋಮದಲ್ಲಿ ಪೋರ್ಟ್‍ಬ್ಲೇರ್ ಒಂದೇ ಜನನಿಬಿಡವಾದ ಪಟ್ಟಣ. ಜನಸಂಖ್ಯೆ-೧,೦೮,೦೫೮ (೨೦೧೧). 1951_61ರ ಅವಧಿಯಲ್ಲಿ ಪೂರ್ವಬಂಗಾಳದಿಂದ ನಿರಾಶ್ರಿತರನ್ನು ಇಲ್ಲಿ ನೆಲೆಸುವಂತೆ ಮಾಡಿದುದರಿಂದ ಜನಸಂಖ್ಯೆ 105% ಹೆಚ್ಚಿತು. ಸ್ಥಳೀಯ ಬುಡಕಟ್ಟಿನ ಒಟ್ಟು ಜನಸಂಖ್ಯೆ 14,122. ಇದು ಒಟ್ಟು ಜನಸಂಖ್ಯೆಯ 22 % ರಷ್ಟಿದೆ. ಇಲ್ಲಿನ ಜಾರಾವಾಸ್, ಒಂಗೇಸ್, ಅಂಡಮಾನೀಸ್ ಮತ್ತು ಸೆಂಟಿನಲೀಸ್ ಪಂಗಡದವರು ಪ್ರಪಂಚದ ಅತ್ಯಂತ ಪುರಾತನ ಜನಾಂಗಗಳಿಗೆ ಸೇರಿದವರು
.ದಟ್ಟವಾದ ಕಾಡುಗಳು, ಅನಾಗರೀಕ ಜನರು, ಪ್ರವೇಶಿಸಲು ಅಸಾಧ್ಯವಾದ ಭೂಸ್ಥಿತಿ ಇವುಗಳಿಂದ ಈ ದ್ವೀಪಗಳು ವಿಚಿತ್ರವಾದೊಂದು ಅಸ್ತಿತ್ವವನ್ನು ಪಡೆದಿವೆ. ಇತ್ತೀಚಿನವರೆಗೆ ಈ ದ್ವೀಪಗಳು ದಂಡನೆಗೊಳಗಾದ ಅಪರಾಧಿಗಳನ್ನಿಡುವ ಸ್ಥಳವಾಗಿದ್ದವು.ಈ ಸ್ತೋಮ ಇಂದು ಭಾರತ ಒಕ್ಕೂಟದ ಒಂದು ಭಾಗವಾಗಿ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಿದೆ. ಅರಣ್ಯ ಮತ್ತು ಮೀನುಗಾರಿಕೆಯ ಸಂಪತ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಂಡರೆ ಈ ದ್ವೀಪಗಳ ಭವಿಷ್ಯ ಉತ್ತಮವಾಗುತ್ತದೆ.




#Article 220: ಚಂಡೀಗಡ (1870 words)


ಚಂಡೀಗಡ  ( ਚੰਡੀਗੜ੍ਹ, ಹಿಂದಿ:चंडीगढ़) ಭಾರತದ ಒಂದು ನಗರ. ಈ ನಗರ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ರಾಜಧಾನಿ. ಆದರೆ ಈ ನಗರ ಎರಡೂ ರಾಜ್ಯಗಳ ಆಡಳಿತದಲ್ಲಿರದೆ, ಕೇಂದ್ರ ಸರ್ಕಾರದಡಿಯಲ್ಲಿದ್ದು ಕೇಂದ್ರಾಡಳಿತ ಪ್ರದೇಶವಾಗಿದೆ. ಪಂಜಾಬಿನ ರಾಜ್ಯಪಾಲ ಇದರ ಆಡಳಿತದ ಮುಖ್ಯಸ್ಥ.

ಇದು ೧೯೬೬ರಿಂದ ಭಾರತದ ಪಂಜಾಬ್ ಮತ್ತು ಹರ್ಯಾಣ ಈ ಎರಡು ರಾಜ್ಯಗಳ ರಾಜಧಾನಿಯಾಗಿದೆ. ಇದರ ಹೆಸರು 'ಚಂಡಿಯ ಕೋಟೆ ' ಎಂಬುದಾಗಿ ಆಂಗ್ಲ ಭಾಷೆಗೆ ತರ್ಜುಮೆಯಾಗಿದೆ.  ಈ ಹೆಸರು ಇಲ್ಲಿಯ ಪುರಾತನ ಮಂದಿರವಾದ 'ಚಂಡಿ ಮಂದಿರ'ದಿಂದ ಬಂದಿದೆ. ಇಲ್ಲಿ ಹಿಂದೂ ದೇವತೆ ಚಂಡಿಯ ಆರಾದನೇ ನಡೆಯುತ್ತದೆ, ಚಂಡಿದೇವತೆ ನಗರದಲ್ಲಿದ್ದಾಳೆ ಎಂಬ ನಂಬಿಕೆಯಿದೆ. ಈ ಮಂದಿರವು ನಗರವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ.  ಚಂಡಿಗಢ ರಾಜ್ಯವು ಮೊಹಾಲಿ,ಪಂಚಕುಲಾ ಮತ್ತು ಜ್ಹಿರಾಕಪುರ್ ಪ್ರದೇಶಗಳನ್ನು ಒಳಗೊಂಡಿದ್ದು ೨೦೦೧ರ ಸಮೆಕ್ಷೆಯ ಪ್ರಕಾರ ಈ ಮೂರೂ ಪ್ರದೇಶಗಳ ಒಟ್ಟು ಜನಸಂಖ್ಯೆ ೧೧೬೫೧೧೧(೧.೧೬ಮಿಲಿಯ) ಇರುತ್ತದೆ.

ಇದು ಪ್ರಪಂಚದಾದ್ಯಂತ ತನ್ನ ಕಲಾಕೃತಿಗಳು ಮತ್ತು ಗ್ರಾಮೀಣ ಯೋಜನೆಗಳಿಗೆ ಹೆಸರುವಾಸಿಯಾಗಿದೆ ಇದು ಭಾರತದ ಮೊಟ್ಟ ಮೊದಲ ಆಯೊಜಿತ ನಗರವಾಗಿದೆ. ಲಿ ಕಾರ್ಬಸಿಯರ್, ಪೈರೆ ಜಿನ್ನೆರೆಟ್, ಮ್ಯಾಥ್ಯು ನೌಕಿ ಮತ್ತು ಆಲ್ಬರ್ಟ್ ಮಾಯೇರ್ ಅಂತಹ ಮಹಾನ್ ಕಲಾವಿದರ ಅತಿ ಪ್ರಸಿದ್ಧ ಕಲಾಕೃತಿಗಳ ರಚನೆಗೆ ಚಂಧಿಗಧ ಮೂಲವಾಗಿದೆ  ೨೦೦೬-೦೭ನೆ ವಾರ್ಷಿಕದ ಸಮೀಕ್ಷೆಯ ಪ್ರಕಾರ ೭೦,೩೬೧ ಮತ್ತು ಇಂದಿನ ಗಣತಿಯ ಪ್ರಕಾರ ೯೯,೨೬೨ ಸಾವಿರ ರಾಜ್ಯಾದಾಯವನ್ನು ಹೊಂದಿರುವ ಚಂಡಿಗಡ ಭಾರತದ ಅತಿ ಹೆಚ್ಚು ರಾಜ್ಯಾದಾಯವನ್ನು ಹೊಂದಿದ ಸಂಯುಕ್ತ ಪ್ರಾಂತ್ಯವಾಗಿದೆ .

೧೯೪೭ರಲ್ಲಿ ಭಾರತ ಮತ್ತು ಪಾಕಿಸ್ತಾನಗಳಾಗಿ ಬ್ರಿಟಿಷ್ ಭಾರತ ಇಬ್ಭಾಗವಾದಾಗ, ಪಂಜಾಬ್ ಪ್ರಾಂತ್ಯವು ಸಹಾ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇಬ್ಭಾಗವಾಗಿತ್ತು.  ಆಗ ವಿಭಜನೆಯಲ್ಲಿ ಲಾಹೋರ್ ಪಾಕಿಸ್ತಾನದ ಭಾಗವಾಗಿದ್ದ ಕಾರಣ ಭಾರತದ ಪಂಜಾಬ್ ಪ್ರಾಂತ್ಯಕ್ಕೆ ಒಂದು ಹೊಸ ರಾಜಧಾನಿಯ ಅಗತ್ಯವುಂಟಾಯಿತು. ಆಗಲೇ ಇದ್ದ ನಗರಗಳ ನವೀಕರಣಕ್ಕಿಂತ ಒಂದು ಹೊಸ ಯೋಜಿತ ನಗರ ಸೃಷ್ಟಿಯ ಬಗೆಗೆ ಆಲೋಚನೆಗಳು ಹೆಚ್ಚಾಗಿ ಬರತೊಡಗಿದವು. ಆಗಲೇ ಇದ್ದ ನಗರಗಳ ನವೀಕರಣಕ್ಕಿಂತ ಒಂದು ಹೊಸ ಯೋಜಿತ ನಗರ ಸೃಷ್ಟಿಯ ಬಗೆಗೆ ನಿರ್ಧಾರ ಮಾಡಲಾಯಿತು.

ಸ್ವತಂತ್ರ ಭಾರತದ ಬೇರೆ ಯಾವುದೇ ಹೊಸ ನಗರ ಯೋಜನೆಗಳಿಗಿಂತ ಚಂಡಿಗಢ ನಗರ ಯೋಜನೆ ಅತಿ ಶೀಘ್ರವಾಗಿ ಸಾಗಿತು. ಇದಕ್ಕೆ ಈ ನಗರವು ಇದ್ದ ಸ್ಥಳ ಮತ್ತು ನವಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ವೈಯಕ್ತಿಕ ಆಸಕ್ತಿಯು ಕಾರಣವಾಗಿತ್ತು.  ನೆಹರೂರವರು ನವಭಾರತದ ಮಾದರಿ ಮತ್ತು ಅಭಿವೃದ್ಧಿಯನ್ನು ಸೂಚಿಸುವ ಸಲುವಾಗಿ, ಚಂಡಿಗಡವನ್ನು ಐತಿಹಾಸಿಕ ಪರಂಪರೆಯ ಬಂಧವಿಲ್ಲದ ಹಾಗೂ ಭಾರತದ ಭವಿಷ್ಯದ ವಿಶ್ವಾಸದ ಕುರುಹಾಗಿ ನಿರ್ಮಿಸಬೇಕೆಂದು ಸೂಚಿಸಿದರು. ಚಂಡಿಗಡದ ಹಲವಾರು ಕಟ್ಟಡ ಮತ್ತು ಸ್ಮಾರಕಗಳು ೧೯೫೦ರಲ್ಲಿ ಫ್ರಾನ್ಸಿನ (ಸ್ವಿಡ್ಜರ್‌ಲ್ಯಾಂಡಿನಲ್ಲಿ ಜನಿಸಿದ) ವಾಸ್ತುಶಿಲ್ಪಿ ಮತ್ತು ಗ್ರಾಮ ನಿರ್ಮಾಪಕ ಲೆ ಕಾರ್ಬಸೈಯೇರ್‌ನಿಂದ ನಿರ್ಮಿತವಾಗಿವೆ.   ನಿಜವಾಗಿ ಲೆ ಕಾರ್ಬಸೈಯರ್ ಗ್ರಾಮ ನಿರ್ಮಾಣಕ್ಕೆ ಬಂದ ಎರಡನೇ ವಾಸ್ತುಶಿಲ್ಪಿಯಾಗಿದ್ದನು. ಮೊದಲು ಅಮೆರಿಕಾದ ವಾಸ್ತುಶಿಲ್ಪಿ ಆಲ್ಬರ್ಟ್ ಮೇಯರ್ (ಪೋಲಂಡ್ ಜನಿತ ವಾಸ್ತುಶಿಲ್ಪಿ ಮ್ಯಾಥ್ಯೂ ನೋವಿಕ್ಕಿಯೊಂದಿಗೆ ಕೆಲಸ ಮಾಡುತ್ತಿದ್ದನು) ಚಂಡಿಗಡ ನಿರ್ಮಾಣಕ್ಕೆ ಯೋಜನೆ ಹಾಕಿದ್ದನು.   ೧೯೫೦ರಲ್ಲಿ ನೋವ್ಕಿಯ ನಿಧನದ ನಂತರ ಲೆ ಕಾರ್ಬಸಿಯರ್ ಈ ಯೋಜನೆಗೆ ಕರೆಸಲ್ಪಟ್ಟನು.

೧೯೬೬ರ ನವೆಂಬರ್ ೧ ರಂದು ಭಾರತದ ನವೀಕೃತ ಹರಿಯಾಣವು ಪಂಜಾಬ ಪ್ರಾಂತ್ಯದಿಂದ ವಿಭಾಗಿಸಲ್ಪಟ್ಟಿತು. ಇದಕ್ಕೆ ಮುಖ್ಯ ಕಾರಣ ಹರಿಯಾಣವನ್ನು ಪ್ರಮುಖ ಹಿಂದಿ ಭಾಷೆ ಮಾತನಾಡುವ ಪ್ರಾಂತ್ಯವನ್ನಾಗಿ ಮಾಡುವುದಾಗಿತ್ತು. ಇದರಿಂದ ಪಂಜಾಬಿನ ಪಶ್ಚಿಮ ಪ್ರಾಂತ್ಯವು ಈಗಿನ ಹಾಗೆ ಹೆಚ್ಚು ಪಂಜಾಬಿ ಭಾಷೆ ಮಾತನಾಡುವ ಪ್ರಾಂತ್ಯವಾಗಿ ಉಳಿಯಿತು.  ಆದರೂ, ಚಂಡಿಗಡ ನಗರವು ಗಡಿಪ್ರದೇಶದಲ್ಲಿ ಇದ್ದ ಕಾರಣ ಇದನ್ನು ಈ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಈ ಎರಡು ರಾಜ್ಯಗಳ ರಾಜಧಾನಿಯನ್ನಾಗಿ ರಚಿಸಲಾಯಿತು.  ೧೯೫೨ ರಿಂದ ೧೯೬೬ ವರೆಗೆ ಇದು ಪಂಜಾಬಿನ ರಾಜಧಾನಿಯಾಗಿತ್ತು. ಇದು ಸರಾಸರಿ ೩೨೧ ಮೀಟರ್ (೧೦೫೩ ಅಂಗುಲಗಳು) ಎತ್ತರ ಇದೆ.

ಪಂಜಾಬಿನ ಮೊಹಾಲಿ, ಪಟಿಯಾಲಾ, ರೂಪನಗರ್ ಮತ್ತು ಹರಿಯಾಣದ ಪಂಚಕುಲಾಗಳು ಮತ್ತು ಅಂಬಾಲಾ ಜಿಲ್ಲೆಗಳು ಇದನ್ನು ಸುತ್ತುವರೆದಿವೆ. ಹಿಮಾಚಲ ಪ್ರದೇಶದ ಗಡಿಯೂ ಕೂಡ ಇದರ ಉತ್ತರದ ಗಡಿಯಿಂದ ಕೆಲ ನಿಮಿಷಗಳ ದೂರದಲ್ಲಿದೆ.  ಚಂಡಿಗಡವು ಹಲವಾರು ಹವಾಮಾನ ವೈಪರಿತ್ಯವನ್ನು ಹೊಂದಿದ್ದು ಇಲ್ಲಿಯ ಹವಾಮಾನವು ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ.ಇದು ಉರಿ ಬೇಸಿಗೆ, ಹದವಾದ ಛಳಿ, ಹಾಗೂ ಗಾಢವಾದ ಮಳೆಗಾಲಗಳನ್ನು ಹೊಂದಿದ್ದು ಉಷ್ಣತೆಯಲ್ಲಿ ವಿಪರೀತವಾದ ಏರಿಳಿವನ್ನು ಹೊಂದಿರುತ್ತದೆ (-೧ ಸೆ ಇಂದ ೧.೨ ಸೆ ವರೆಗೆ). ಡಿಸೆಂಬರ್ ಮತ್ತು ಜನವರಿಯ ಚಳಿ ಸಮಯದಲ್ಲಿ ಕೆಲವೊಮ್ಮೆ ಇಬ್ಬನಿಯು ಬೀಳುತ್ತದೆ. ಇಲ್ಲಿ ವಾರ್ಷಿಕ ಸರಾಸರಿ ಮಳೆಯು  ಮಿಮಿ ಇರುತ್ತದೆ. ಅಲ್ಲದೆ ನಗರದಲ್ಲಿ ಕೆಲವೊಂಮ್ಮೆ ಚಳಿಗಾಲದಲ್ಲಿ ದಕ್ಷಿಣ ಭಾಗದಿಂದ ಮಳೆ ಬರುತ್ತದೆ.

 ಸರಾಸರಿ ಉಷ್ಣತೆ

 

ಚಳಿಗಾಲದಲ್ಲಿ ಇಲ್ಲಿಯ ಸರಾಸರಿ ಉಷ್ಣತೆಯು ಗರಿಷ್ಟ ೭ ಡಿಗ್ರಿಯಿಂದ ೧೫ ಡಿಗ್ರಿ ಮತ್ತು ಕನಿಷ್ಟ -೨ ಡಿಗ್ರಿಯಿಂದ ೫ ಡಿಗ್ರಿಯವರೆಗೆ ಇರುತ್ತದೆ.ಇಲ್ಲಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಪಶ್ಚಿಮ ದಿಕ್ಕಿನಿಂದ ಎಡೆಬಿಡದ ಮಳೆಯು ಬರುತ್ತದೆ. ಕೆಲವೊಮ್ಮೆ ಮಂಜೂ ಬೀಳುತ್ತವೆ.

ಚಂಡಿಗಡದ ಹೆಚ್ಚಿನ ಪ್ರದೇಶವು ದಟ್ಟವಾದ ಆಲ ಮತ್ತು ನೀಲಗಿರಿ ಗಿಡಗಳಿಂದ ತುಂಬಿದೆ. ಅರಣ್ಯ ಪ್ರದೇಶದಲ್ಲಿ ಅಶೋಕ,ದಾಲ್ಚಿನ್ನಿ,ಹಿಪ್ಪೆನೇರಳೆ ಹಣ್ಣು ಮತ್ತಿತರ ಗಿಡ ಮರಗಳಿಂದ ತುಂಬಿದೆ.ಈ ನಗರವು ತನ್ನ ಸುತ್ತಮುತ್ತಲೂ ಅರಣ್ಯ ಪ್ರದೇಶದಿಂದ ಆವೃತವಾಗಿರುವ ಕಾರಣ ಇಲ್ಲಿ ಹಲವಾರು ವನ್ಯ ಜೀವಿಗಳು ನೆಲೆಸಲು ಮತ್ತು ಗಿಡಮರಗಳು ಬೆಳೆಯಲು ಅನುಕೂಲಕರವಾಗಿದೆ. ಜಿಂಕೆ,ಕಾಡು ಜಿಂಕೆ,ದೊಡ್ಡ ಜಾತಿಯ ಜಿಂಕೆ, ಗಿಳಿ,ಮರಕುಟಿಕ,ನವಿಲು ಮುಂತಾದವುಗಳು ಇಲ್ಲಿಯ ಸುರಕ್ಷಿತ ಅರಣ್ಯಗಳಲ್ಲಿ ನೆಲೆಸಿವೆ. ಸುಕ್ನಾ ಕೊಳದ ವಿವಿಧ ರೀತಿಯ ಬಾತುಕೋಳಿಗಳು ಮತ್ತು ಜಲಚರಗಳು ಸೈಬೀರಿಯಾ ಮತ್ತು ಜಪಾನಿನ ವಲಸೆ ಪಕ್ಷಿಗಳಿಗೆ ಆಹ್ವಾನ ನೀಡುತ್ತವೆ.

ನಗರದಲ್ಲಿ ನೆಲೆಸಿರುವ ಗಿಳಿಗಳ ಪಕ್ಷಿಧಾಮವೊಂದು ವಿವಿಧ ಬಗೆಯ ಪಕ್ಷಿಗಳಿಗೆ ತಾಣವಾಗಿದೆ.

ಅಲ್ಬೆರ್ಟ್ ಮೇಯರ್ ನಂತರದಲ್ಲಿ ಕಾರ್ಯಾರಂಭ ಮಾಡಿದ ಲೆ ಕಾರ್ಬಸಿಯರ್ ಅವರಿಂದ ನಿರ್ಮಾಣವಾದ ಚಂಡಿಗಡ ನಗರವು Congrès International d'Architecture Moderne CIAMನ ಯೋಜನೆಯಂತೆ ನಡೆದಿದ್ದು, ನಗರ ಕಾರ್ಯವೈಖರಿ, ಮಾನವನಿಗೆ ಹೊಂದುವ ಯೋಜನೆ ರೂಪ ಮತ್ತು ರಸ್ತೆ ಮತ್ತು ಕಾಲುದಾರಿ ಜಾಲಗಳನ್ನು ಜೋಡಿಸುವಿಕೆ ಈ ಎಲ್ಲವೂ ಆ ಯೋಜನೆಯಂತೆಯೇ ಕಾರ್ಯರೂಪಕ್ಕೆ ಬಂದವು.
ಚಂಡಿಗಡದ ಪರಿಕಲ್ಪನೆಯು ಮೂಲತಃ ಕಲ್ಪನಾತ್ಮಕ ಭೂಪಟದಲ್ಲಿ ಮತ್ತು ಚಿತ್ರಗಳಲ್ಲಿ, ಟಿಪ್ಪಣಿಗಳಲ್ಲಿದ್ದು ಆ ಅಸಂಖ್ಯೆ ಮಾಹಿತಿಗಳ ತರ್ಜುಮೆಯನ್ನು ಇಟ್ಟಿಗೆ ಮತ್ತು ಮರಳುಗಳಿಂದ ಮಾಡಲಾಯಿತು. ಲಿ ಚೊರ್ನಸೈಯರನು ಮೆಯರ್ ಮತ್ತು ನವಕ್ಕಿ ಯರ ಹಲವಾರು ಅಲೋಚನೆಗಳನ್ನು ಬಳಸಿ ಕೆಲಸ ಮಾಡಿದ್ದಾನೆ. ಉದಾಹರಣೆಗೆ ಮೂಲ ನೀಲನಕ್ಷೆಯ ಆಲೋಚನೆಗಳು ಮತ್ತು ಪರಿಕರಗಳು, ಅಂದರೆ ರಾಜಧಾನಿ, ನಗರ ಕೇಂದ್ರ, ವಿಧ್ಯಾಲಯದ ಒಳಾಂಗಣ, ಕೈಗಾರಿಕಾ ಪ್ರದೇಶ ಮತ್ತು ತಂಗುದಾಣ ಮುಂತಾದವು.  ಅಲ್ಲದೆ ನೆರೆಯ ಪ್ರದೇಶದ ಯೊಜನೆಗಳು ಕೂಡಾ ಮೂಲ ಯೋಜನೆಯಂತೆಯೇ ಉಳಿದಿದೆ. ಆದರೆ, ಮೇಯರ್ ಮತ್ತು ನವಕ್ಕಿಯವರ ಯೊಜನಾ ರೇಖೆಗಳನ್ನು ನಂತರ ಹಲವಾರು ಚಚ್ಚೌಕಗಳಿಂದ ಮರುರೂಪಿಸಲಾಗಿದ್ದು, ಕಟ್ಟಡಗಳು ದೊರೆತ ಸಲಕರಣೆಗಳಿಂದ ನಿರ್ಮಾಣಗೊಂಡವು.  ಹೊರತೋರುವ ಇಟ್ಟಿಗೆಗಳು ಮತ್ತು ಕಟ್ಟಡ ಕಲ್ಲುಗಳು ಒರಟು ಹೊರಮೈಯಿಂದಾಗಿ ಕಾಂಕ್ರೀಟು ಸಂಪೂರ್ಣವಾಗದೆ, ಜ್ಯಾಮಿತಿಯ ಪ್ರಕಾರ ಹೊರಮೈ ಅಪೂರ್ಣವಾಗಿ ಕಾಣತೊಡಗಿತು. ಇದು ಉದ್ಯಾನವನಗಳ ನಡುವೆ ರೂಪಿಸಿದ ಚಂಡಿಗಡದ ವಿಶಿಷ್ಟ ವಾಸ್ತುಶಿಲ್ಪದ ಮಾದರಿಯಾಯಿತು.

ಮೊದಲನೆಯ ಯೋಜನೆಯು ಎರಡು ಮುಖಗಳನ್ನು ಹೊಂದಿತ್ತು: ಮೊದಲನೆಯದು ೧೫೦,೦೦೦ ಜನಸಂಖ್ಯೆೆಗಾಗಿ ಮತ್ತು ಎರಡನೆಯದು ೫೦೦’೦೦೦ ಜನಸಂಖ್ಯೆಗಾಗಿ.  ಲಿ ಚರ್ಬಸೈರ್ ನು ನಗರವನ್ನು ಎರಡು ಸೆಕ್ಟರ್ ಗಳೆಂಬ ಘಟಕಗಳಾಗಿ ವಿಭಾಗಿಸಿದನು.
ಇದರ ಪ್ರತಿಯೊಂದು ವಿಭಾಗಗಳೂ ಅವುಗಳದ್ದೆ ಆದ ಅಗತ್ಯ ನೆಲೆ, ಕಾರ್ಯಾಗಾರ ಮುಂತಾದ ಮನರಂಜನೆ ಪ್ರದೇಶಗಳನ್ನು ಹೊಂದಿದ್ದವು.  ಈ ಸೆಕ್ಟರ್‌ಗಳು ೭ ಪ್ರಸರಣ ಪ್ರಕಾರಗಳ ಶ್ರೇಣಿ ವ್ಯವಸ್ಥೆಯಾದ  ೭ V ಗಳ ಮೂಲಕ ಸಾಗುವ ರಸ್ತೆ ಮತ್ತು ಮಾರ್ಗಗಳ ಜಾಲಗಳ ಮೂಲಕ ಈ ಸೆಕ್ಟರ್‌ಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು.

ಈ ಜಾಲದ ಅತ್ಯಂತ ಎತ್ತರದ ಬಿಂದುವು V೧ಆಗಿದ್ದು, ಇವು ಇತರೆ ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿವೆ, ೭ನೇ ತಿರುವು ಅತ್ಯಂತ ಕೆಳಗಿನ ತಿರುವಾಗಿದ್ದು, ಇದು ಪ್ರತಿಯೊಂದು ಮನೆಗೆ ದಾರಿಯನ್ನು ಕಲ್ಪಿಸುತ್ತದೆ. ಮತ್ತೆ ತಿರುವು V೮ನ್ನು ಇದಕ್ಕೆ ಸೇರಿಸಲಾಗಿದ್ದು ಇದು ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ದಾರಿಯಾಗಿದೆ.ಲಿ ಕೊರ್ಬಸೈಯರ್ ನಿಂದ ನಿರ್ಮಿತವಾದ ಅರಮನೆಗಳ ಸಮೂಹ.

ನಗರ ಯೋಜನೆಯು ಚಚ್ಚೌಕ ಮಾದರಿಯಲ್ಲಿತ್ತು.  ಇಡೀ ನಗರವು ಮಾದರಿ ವೀಕ್ಷಣೀಯ ಪ್ರದೇಶದ ಮಾದರಿಯ ಚಚ್ಚೌಕ ಭಾಗಗಳಾಗಿ ವಿಭಾಗಿಸಲ್ಪಟ್ಟಿದ್ದವು.ಪ್ರತಿಯೊಂದು ವಿಭಾಗವು ಸರಾಸರಿ ೮೦೦ಮೀx೧೨೦೦ಮೀ ಅಳತೆ ಹೊಂದಿತ್ತು. ಪ್ರತಿಯೊಂದು ಭಾಗವೂ ಪ್ರತ್ಯೇಕ ಮಾರುಕಟ್ಟೆ,ದೇವಸ್ಥಾನ,ಶಾಲಾ ಕಾಲೇಜುಗಳನ್ನು ಕೇವಲ ೧೦ ನಿಮಿಷದ ನಡುಗೆಯ ದಾರಿಯಲ್ಲಿ ಹೊಂದಿದ್ದವು.  ಮೊದಲನೆಯ ಎರಡು ಯೋಜನೆಯಂತೆ ಇಲ್ಲಿ ೧ ರಿಂದ ೪೭(೧೩ನ್ನು ಅಪಶಕುನವೆಂದು ಪರಿಗಣಿಸಿ ಬಿಡಲಾಗಿತ್ತು) ವಿಭಾಗಗಳಾಗಿ ಮಾಡಲಾಗಿತ್ತು.  ಮೊದಲನೇ ವಿಭಾಗದಲ್ಲಿ ಸಮೂಹಗಳು,ಕಾರ್ಯದರ್ಶಿ ಭವನ,ಮುಖ್ಯ ನ್ಯಾಯಾಲಯಗಳು ನಿರ್ಮಿಸಲ್ಪಟ್ಟಿದ್ದವು.ಇವು ಲಿ ಕಾರ್ಬಸೈಯರ್ನಿಂದ ನಿರ್ಮಿತವಾದ ಹಾಗೂ ಆತನ ವಾಸ್ತುಶಿಲ್ಪ ಕಲೆಗೆ ಗರಿಯನಿಟ್ಟ ಮೂರು ಪ್ರಮುಖ ಕಟ್ಟಡಗಳಾಗಿದ್ದವು.  ಈ ನಗರವು ತನ್ನ ಸುತ್ತ ೧೬ ಕಿ.ಮೀ ಪ್ರದೇಶದವರೆಗೆ ದಟ್ಟವಾದ ಅರಣ್ಯದಿಂದ ಸುತ್ತುವರೆದಿತ್ತು. ಈ ಸುತ್ತಮುತ್ತಲಿನ ಅರಣ್ಯ ಪ್ರದೇಶವು ತನ್ನ ಹಚ್ಚ ಹಸಿರಿಗೆ ಹೆಸರುವಾಸಿಯಾದ ಕಾರಣ ಈ ಪ್ರದೇಶದಲ್ಲಿ ಸಧ್ಯದಲ್ಲಿ ಇನ್ನಾವುದೂ ನವೀಕರಣ ಕಾರ್ಯಗಳು ನಡೆಯದೇ ಇರುವದು ಉತ್ತಮವೆಂಬ ಆಲೋಚನೆಯಾಗಿತ್ತು.

ಲಿ ಕೊರ್ಬಸೈಯರನು ನಗರದ ಹೆಚ್ಚಿನ ವಾಸ್ತುಶಿಲ್ಪದ ಕಾರ್ಯಕ್ಕೆ ತನ್ನ ಗುಂಪಿನ ನುರಿತ ಸದಸ್ಯರನ್ನು ಬಿಟ್ಟಿದ್ದರೂ,ನಗರದ ಸಂಪೂರ್ಣ ಯೋಜನೆ ಮತ್ತು ಪ್ರಮುಖ ಕಟ್ಟಡಗಳಾದ ಮುಖ್ಯ ನ್ಯಾಯಾಲಯ,ಕಾರ್ಯದರ್ಶಿ ಭವನ,ಸಮೂಹ ಭವನಗಳು,ವಸ್ತು ಸಂಗ್ರಹಾಲಯ,ಕಲಾ ಭವನ,ಕಲಾ ಶಾಲೆ ಮತ್ತು ಈಜುಕೊಳಗಳ ನಿರ್ಮಾಣದ ಹೊಣೆ ಖುದ್ದಾಗಿ ಹೊತ್ತುಕೊಂಡಿದ್ದನು.

ಲಿ ಕೊರ್ಬಸೈಯರ್ ನ ಅತಿ ಪ್ರಮುಖ ಕಟ್ಟಡವೆಂದರೆ ನ್ಯಾಯದ ಮನೆ,ಮುಖ್ಯ ನ್ಯಾಯಾಲಯದ ಪ್ರಮುಖ ಭಾಗ. ಇದು ಇತರೆ ೮ ನ್ಯಾಯಾಲಯ ಕಟ್ಟಡಗಳಿಗಿಂತ ಎತ್ತರವಾಗಿದೆ.  ಉಳಿದ ಎಲ್ಲಾ ಕಟ್ಟಡಗಳು ಲಿ ಕೊರ್ಬಸೈಯರ್ ನ ಸಹೋದರ ಪೈರ್ರೆ ಜಿನೆರೆಟ್,ಆಂಗ್ಲ ದಂಪತಿಗಳಾದ ಮ್ಯಾಕ್ಸ್‌ವೆಲ್ ಮತ್ತು ಜೇನ್ ಡ್ರಿವ್, ಮತ್ತು ಭಾರತದ ೯ ವಾಸ್ತುಶಿಲ್ಪಿಗಳ ಸಮೂಹಗಳಿಂದ ಸೇರಿ ನಿರ್ಮಿಸಲ್ಫಟ್ಟಿತು.

ನಗರ ನಿರ್ಮಾಣವು ಸಂಪೂರ್ಣಗೊಂಡಾಗ ಅದು ಮೂಲ ಯೋಜನೆಯನ್ನು ಹೂಲುತ್ತಿರಲಿಲ್ಲ,ಕಾರಣ ಮೂಲ ಯೋಜನೆಯಲ್ಲಿ ಒಂದು ವಿಹಾರ ತಾಣವು ನಗರದ ಯೋಜನೆಯ ಇತಿಹಾಸದಲ್ಲಿ ಒಂದು ಪ್ರಮುಖ ಭೂಭಾಗವಾಗಬೇಕೆಂಬುದಾಗಿತ್ತು.  ಇದು ಹಲವಾರು ವಾಸ್ತುಶಿಲ್ಪಿಗಳಿಗೆ,ಯೋಜನಾಕಾರರಿಗೆ, ಇತಿಹಾಸಕಾರರಿಗೆ, ಸಾಮಾಜಿಕ ವಿಜ್ಞಾನಿಗಳಿಗೆ ಆಸಕ್ತಿಯ ವಿಷಯವಾಗಿ ಮುಂದುವರೆಯಿತು.   ಚಂಡಿಗಢವು ತನ್ನೊಂದಿಗೆ ಎರಡು ಪ್ರಮುಖ ನಗರಗಳನ್ನು ಹೊಂದಿದೆ.ಪಂಚಕುಲಾ ಮತ್ತು ಮೊಹಾಲಿ.  ಕೆಲವೊಮ್ಮೆ ಈ ಮೂರು ನಗರಗಳನ್ನು ಒಟ್ಟಾಗಿ ಚಂಡಿಗಢ ತ್ರಿವಳಿಗಳೆಂದು ಕರೆಯಲಾಗುತ್ತದೆ.

ಚಂಢೀಘಡ್ ಆಡಳಿತವು ಆಡಳಿತಗಾರರ ಕೆಳಗೆ ಅಧೀನದಲ್ಲಿದೆ ಇವರನ್ನು ೨೩೯ ರ ಸಂವಿಧಾನದ ACT ನ ಕೆಳಗೆ ನೇಮಿಸಲಾಗಿದೆ. ಪಂಜಾಬ್ ನ ಗೌವರ್ನರ್ ಚಂಡಿಗಡದ ಆಡಳಿತಾಧಿಕಾರಿ ಆಗಿರುತ್ತಾರೆ. ಚಂಡಿಗಡ ಆಡಳಿತ ಅಧೀನದ ಕಾರ್ಯಗಳು ಮಂತ್ರಿ ಮಂಡಲದ ಕೆಳಗೆ ನಡೆಯುತ್ತದೆ. ಆಡಳಿತಗಾರರಿಗೆ ಸಲಹೆಗಾರರಾಗಿ,ಒಂದು ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ  ಸಮಾನ ಹುದ್ದೆಯ ಹಿರಿಯ ಅಧಿಕಾರಿಗಳು ಇದ್ದು, ಅವರು ಆಲ್ ಇಂಡಿಯಾ ಸರ್ವೀಸಸ್  ಗಳಿಗೆ ಸಂಬಂಧಿಸಿರುತ್ತಾರೆ, ನಂತರ ಎರಡನೆಯ ಹಂತದಲ್ಲಿ ಇದನ್ನು ಆಡಳಿತಗಾರರು ಅಧಿಕಾರ ನಡೆಸುವರು. ಅವನು ಸಾಮಾನ್ಯವಾಗಿ ಭಾರತೀಯ ಆಡಳಿತದ ಸೇವೆಯ AGMU ಕೇಡರ್ ಗಳಿಗೆ ಸಂಬಂಧಿಸಿರುತ್ತಾನೆ.

ಮೇಲಿನ ಮೂವರು ಅಧಿಕಾರಿಗಳು ಸಾಮಾನ್ಯವಾಗಿ AGMU cadre ಯಿಂದ ಮತ್ತು ಆಲ್ ಇಂಡಿಯಾ ಸರ್ವೀಸಸ್ ಗಳಿಗೆ ಪಂಜಾಬ್ ಮತ್ತು ಹರಿಯಾಣಗಳಿಂದಲೂ ಸಹ ಬಂದಿರುತ್ತಾರೆ.

ಭಾರತೀಯ ಜನಗಣತಿ, ಚಂಡಿಗಡ ೯೦೦,೬೩೫,ರಷ್ಟು ಜನಸಂಖ್ಯೆೆಯನ್ನು ಹೊಂದಿದೆ, ಸುಮಾರು ೭೯೦೦ ವ್ಯಕ್ತಿಗಳಿಗೆ ಒಂದು ಚದರ ಕಿಲೊ ಮೀಟರ್ ನಷ್ಟು ಸಾಂದ್ರತೆಯನ್ನು ಉಂಟುಮಾಡಿದೆ. ಒಟ್ಟು ಜನಸಂಖ್ಯೆೆಯಲ್ಲಿ ೫೪% ಪುರುಷರು ಮತ್ತು ೪೬% ಮಹಿಳೆಯರು ಇದ್ದಾರೆ. ಸ್ತ್ರಿ ಮತ್ತು ಪುರುಷರ ಪ್ರಮಾಣವು ಪ್ರತಿ ೧೦೦೦ ಪುರುಷರಿಗೆ ೭೭೭ ರಷ್ಟು ಸ್ತ್ರೀಯರಿದ್ದಾರೆ ಇದು ದೇಶದಲ್ಲಿ ಯಾವುದೇ ತರಹ ಕೆಳಮಟ್ಟದಾಗಿದೆ. ಚಂಡಿಗಡದ ಸರಾಸರಿ ಸಾಕ್ಷರತೆಯ ಪ್ರಮಾಣವು ೮೧.೯%,ಆಗಿದ್ದು ದೇಶದ ಸರಾಸರಿ ೬೪.೮% ಕ್ಕಿಂತ ಹೆಚ್ಚಾಗಿದೆ. ಇದರಲ್ಲಿ ೮೬.೧% ಪುರಶರು ಮತ್ತು ೭೬.೫% ಮಹಿಳೆಯರು ಇದ್ದಾರೆ. ಜನಸಂಖ್ಯೆೆಯ ೧೨%ರಷ್ಟು ೬ ವರ್ಷ ವಯೋಮಿತಿಗಿಂತ ಕೆಳಗಿನವರು ಪ್ರಮುಖ ಧರ್ಮಿಯರಾದ ಹಿಂದುಗಳು (೭೮.೬%), ಸಿಕ್‌ ಧರ್ಮೀಯರು (೧೬.೧%),ಇಸ್ಲಾಮಿಯರು(೩.೯%) ಮತ್ತು ಕ್ರಿಶ್ಚಿಯನ್ನರು (0.8%) ಚಂಡಿಗಡದಲ್ಲಿ ಇರುವರು. ಚಂಡಿಗಡದಲ್ಲಿ ಪಂಜಾಬಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರಾದರೂ ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆಯು ಹೆಚ್ಚು ಜನಪ್ರಿಯವಾಗಿದೆ. ಕೆಲವು ಜನರು ಉರ್ದು ಹಾಗೂ ಹಿಂದುಸ್ತಾನಿ ಭಾಷೆಯನ್ನೂ ಸಹ (ಹಿಂದಿ ಮತ್ತು ಉರ್ದು ಬೆರಸಿ)ಮಾತನಾಡುವುದು ಸಾಮಾನ್ಯವಾಗಿದೆ.

ಒಂದು ಮಹತ್ವದ ಶೇಕಡವಾರು ಚಂಡಿಗಡದ ಜನಸಂಖ್ಯೆೆಯು ಪಕ್ಕದ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ ಗಳಿಂದ ಬಂದ ಹೆಚ್ಚಿನ ವಿವಿಧ ಸರ್ಕಾರಿ ನೌಕರಿಗೆ ಸೇರಿಕೊಳ್ಳುದಕ್ಕಾಗಿ ಚಂಡಿಗಡದಲ್ಲಿ ನೆಲೆಸಿದವರಾಗಿದ್ದಾರೆ.

ಚಂಡಿಗಡದಲ್ಲಿ ಮೂರು ಸರ್ಕಾರಗಳಿರುವುದರಿಂದಾಗಿ, ಸರ್ಕಾರವೇ ಇಲ್ಲಿ ಪ್ರಮುಖ ಉದ್ಯೋಗದಾತನಾಗಿದೆ. ಆದುದರಿಂದಲೇ ಇಲ್ಲಿನ ಹೆಚ್ಚಿನ ಜನರು ಇಲ್ಲಿಯ ಯಾವುದೇ ಸರಕಾರೀ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಅಥವಾ ಅಂತಹ ಹುದ್ದೆಗಳಿಂದ ನಿವೃತ್ತಿಯನ್ನು ಹೊಂದಿದವರಾಗಿರುತ್ತಾರೆ.  ಇಂತಹ ಕಾರಣಗಳಿಂದ ಚಂಡಿಗಡವನ್ನು  ಆಗಾಗ್ಗೆ ಪಿಂಚಣಿದಾರರ ಸ್ವರ್ಗ ಎಂದು ಕರೆಯುವರು. ಸುಮಾರು ೧೫ ತರಹ ದೊಡ್ದದಾದ ಎರಡು ಸಾರ್ವಜನಿಕ ವಿಭಾಗದ ಕಾರ್ಖಾನೆಗಳನ್ನು ಇದು ಹೊಂದಿದೆ. ಇದರೊಂದಿಗೆ ಚಂಡಿಗಡದಲ್ಲಿ ೨೫೦೦ ಕ್ಕಿಂತ ಹೆಚ್ಚಿನ ಘಟಕಗಳು ಸಣ್ಣ ಪ್ರಮಾಣ ಉದ್ದಿಮೆಗಳಲ್ಲಿ ನೋಂದಣಿಗೊಂಡಿವೆ. ಕಾಗದ ತಯಾರಿಕೆ,ಮೂಲ ಲೋಹಗಳು ಮತ್ತು ಮಿಶ್ರ ಲೋಹಗಳು ಹಾಗೂ ಯಂತ್ರೋಪಕರಣಗಳು ಪ್ರಮುಖವಾದ ಕಾರ್ಖಾನೆಗಳೆನಿಸಿವೆ ಇತರ ಉದ್ದಿಮೆಗಳು ಆಹಾರ ಉತ್ಪನ್ನಗಳಿಗೆ, ಒಳಉಡುಪುಗಳು, ಯಂತ್ರೋಪಕರಣ ಸಾಧನಗಳು, ಔಷಧ ತಯಾರಿಕೆಗಳು, ಮತ್ತು ವಿದ್ಯುತ್ ಉಪಕರಣಗಳ ಕಾರ್ಖಾನೆಗಳಿವೆ. ಹೀಗಿದ್ದರೂ ಕೂಡ ಒಟ್ಟು ತಲಾ ಆದಾಯ ರೂ ೯೯,೨೬೨,ರಷ್ಟು ಇದ್ದು, ದೇಶದಲ್ಲಿಯೇ ಚಂಡಿಗಡವು ಶ್ರೀಮಂತ ನಗರವಾಗಿದೆ. ಚಂಡಿಗಡದ ಒಟ್ಟು ರಾಜ್ಯ ಗೃಹ ಬಳಕೆಯ ವಸ್ತುಗಳಿಂದ ೨೦೦೪ ರಲ್ಲಿ ಅಂದಾಜು ೨.೨ ಬಿಲಿಯನ್ ಡಾಲರ್ ನಷ್ಟು ಇತ್ತೀಚಿನ ಬೆಲೆಯಲ್ಲಿ ಹೊಂದಿದೆ.

ಚಂಡಿಗಡವು ಚೆನ್ನಾಗಿ ಅಭಿವೃಧ್ಧಿ ಹೊಂದಿದಂತಹ ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ಸೌಕರ್ಯವನ್ನು ಹೊಂದಿದೆ. ಸುಮಾರು ದೇಶದ ಎಲ್ಲಾ ಪ್ರಮುಖ ಬ್ಯಾಂಕುಗಳು ಚಂಡಿಗಡದಲ್ಲಿ ನೋಂದಣಿಯಾಗಿವೆ.  ಹೆಚ್ಚಿನ ಬ್ಯಾಂಕುಗಳು ಒಂದು ಪಾನ್ ಇಂಡಿಯಾ ಇರುವಿಕೆಯ ಜೊತೆಗೆ ಅದರ ವಲಯ/ಪ್ರಾದೇಶಿಕ ಕಛೇರಿಗಳು ಚಂಡಿಗಡದಲ್ಲಿ ಪ್ರಸ್ತುತವಾಗಿದೆ.  ಹೆಚ್ಚಾಗಿ ಇರುವಂತಹ ವಾಣಿಜ್ಯ ವಿಭಾಗದ ಎಲ್ಲಾ ಕಛೇರಿಗಳು ಒಂದೇ ವಿಭಾಗದಲ್ಲಿ ೧೭ ಭಾಗದಷ್ಟು ಬ್ಯಾಂಕ್‌ನ ಚದರ ಚಂಡಿಗಡದಲ್ಲಿದೆ.

ಚಂಡಿಗಡದಲ್ಲಿ ಮೂರು ಉದ್ಯೋಗ ಅಭಿವೃಧ್ಧಿ ಸಂಸ್ಥೆಗಳ ಕಛೇರಿಗಳಿವೆ. ಅವುಗಳೆಂದರೆ : ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ (FICCI), ದಿ ಪಿಎಚ್‌ಡಿ ಚೇಂಬರ್ ಆಫ್ ಕಾಮಾರ್ಸ್ ಮತ್ತು ಇಂಡಸ್ಟ್ರಿಸ್ (PHDCCI) ಮತ್ತು ದಿ ಕಾನ್ ಫೆಡರೇಶನ್ ಆಫ್ ಇಂಡಿಯನ್ ಇಡಸ್ಟ್ರಿಸ್(CII)ಅದರ ಯಾವುದೇ ಪ್ರಾದೇಶಿಕ ಪ್ರಮುಖ ಕಛೇರಿಗಳು ಚಂಡಿಗಡ ದ ೩೧ ರ ವಿಭಾಗದಲ್ಲಿದೆ.

ಚಂಡಿಗಡದಲ್ಲಿ ರಕ್ಷಣಾ ಪಡೆಯು ಮಹತ್ತರವಾಗಿವೆ. ಭಾರತೀಯ ವಾಯು ಪಡೆಯು ಮೂಲ ಭಾಗ ೩೧ ರ ವಿಭಾಗದಲ್ಲಿದೆ ಮತ್ತು ಚಂಡಿಮಂದಿರದ ಕಂಟೋನ್‌ಮೆಂಟಿನ ಹತ್ತಿರ ಇರುವುದಲ್ಲದೇ, ಹತ್ತಿರದ ನಗರ ಪ್ರದೇಶದ ಲೇಹ್-ಲಢಾಕ್ ಮತ್ತು ಸಿಯಾಚಿನ್ ಪ್ರ್ರಾಂತ್ಯಗಳಲ್ಲಿ ರಕ್ಷಣಾ ಪಡೆಗಳಿಗೆ ಸರಬರಾಜಿಗೆ ಈ ನಗರವು ಮೂಲವಾಗಿದೆ.

ಚಂಡಿಗಡದ ಐಟಿ ಪಾರ್ಕ್ (ಚಂಡಿಗಡ ಟೆಕ್ನಾಲಜಿ ಪಾರ್ಕ್) ಕೂಡಾ ಐಟಿ ಉದ್ಯಮದ ಕುರುಹಾಗಿದೆ.  ಚಂಡಿಗಡದ ಮೂಲಭೂತ ಸೌಕರ್ಯ, ದಿಲ್ಲಿ,ಪಂಜಾಬ್, ಹರಿಯಾಣ,ಮತ್ತು ಹಿಮಾಚಲಪ್ರದೇಶಗಳಿಗೆ ಸಾಮಿಪ್ಯತೆ ಹೊಂದಿರುವುದು ಮತ್ತು ಇಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವ ಪ್ರತಿಭೆಗಳು ಇವೆಲ್ಲವೂ ಇಲ್ಲಿಗೆ ಮಾಹಿತಿ ತಂತ್ರಜ್ಞಾನ ಉದ್ದಿಮೆಗಳಿಗೆ ಆಹ್ವಾನ ನೀಡುತ್ತಿವೆ.  ಭಾರತದ ಪ್ರಸಿದ್ದ ಕಂಪನಿಗಳು ಮತ್ತು ಅಂತರಾಷ್ಟ್ರೀಯ ನಿಗಮಗಳಾದ ಕ್ವಾರ್ಕ್,ಇನ್ಫೊಸಿಸ್,ಡೆಲ್ ನಂತಹ ಕಂಪನಿಗಳು ಈ ನಗರದಲ್ಲಿ ಮತ್ತು ಸುತ್ತಮುತ್ತಲು ನೆಲೆಯೂರಿವೆ.  ಇತ್ತೀಚೆಗೆ ಅಂತರ್ಜಾಲ ಮಾಧ್ಯಮವು ನಡೆಸಿದ ಭೂ ಮಂಡಲದ ಸೇವಾ ಸರ್ವೇಯ ಪ್ರಕಾರ ಚಂಡಿಗಡವು ೯ ನೇ ಸ್ತಾನದಲ್ಲಿದ್ದು ಪ್ರಪಂಚದಲ್ಲಿ ಗುರುತಿಸಲ್ಪಟ್ಟ ೫೦ ಅಭಿವೃದ್ದಿ ಹೊಂದಿದ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ನಗರಗಳಲ್ಲಿ ಒಂದಾಗಿದೆ.

ಚಂಡಿಗಡವು ತನ್ನ ಉತ್ತಮ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇಲ್ಲಿಯ ಶಾಲಾ ಕಾಲೇಜುಗಳು ವಿವಿಧ ರೀತಿಯ ಪಠ್ಯಕ್ರಮಗಳಿಗೆ ಗುರುತಿಸಲ್ಪಟ್ಟಿವೆ.  ಚಂಡಿಗಡದಲ್ಲಿ ಇರುವ ಕೆಲವು ಪ್ರಮುಖ ಶಾಲಾ ಕಾಲೇಜುಗಳೆಂದರೆ ಜಿಜಿಡಿಯೆಸ್‌ಸಿ ಕಾಲೇಜ್, ಡಿಎವಿ ಕಾಲೇಜ್, ಎಂಸಿಎಂಡಿಎವಿ ಕಾಲೇಜ್, ಸರಕಾರಿ ಬಾಲಕರ ಮತ್ತು ಬಾಲಕಿಯರ ಕಾಲೇಜುಗಳು ಮತ್ತು ಶಿಕ್ಷಕ ತರಬೇತಿ ಕಾಲೇಜು. ಇದಲ್ಲದೆ ಸರಕಾರವು ಹಲವಾರು ವಿಭಾಗಗಳ ಅವಶ್ಯಕತೆಗಳನ್ನು ಈಡೇರಿಸಲು ಹಲವಾರು ಮಾದರಿ ಶಾಲೆಗಳ ನಿರ್ಮಾಣವನ್ನು ಮಾಡಿದೆ. ಇವು ಹರಿಯಾಣ, ಹಿಮಾಚಲ ಪ್ರದೇಶ, ಜೆ ಮತ್ತು ಕೆ, ಪಂಜಾಬ, ಉತ್ತರಾಂಚಲ ಮತ್ತು ಆಗ್ನೇಯ ಭಾಗದ ವಿಧ್ಯಾರ್ಥಿಗಳ ಅದ್ಯಯನಕ್ಕೆ ಮೂಲ ಕೇಂದ್ರಗಳಾಗಿವೆ.

ಚಂಡಿಗಡವು ಈ ಕೆಳಕಂಡ ಕೆಲವು ಉನ್ನತ ಶಿಕ್ಷಣ ಕೇಂದ್ರಗಳನ್ನು ಹೊಂದಿದೆ.

ಇದಲ್ಲದೆ ನೆರೆಯ ಮೊಹಾಲಿಯಲ್ಲಿ ಚಂಡಿಗಡದ ಫಾರ್ಮಸಿ ಕಾಲೇಜ್(CCP) ಮತ್ತು ಚಂಡಿಗಡದ ಹೊಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರದ ಕಾಲೇಜ್ಗಳೂ(CCHM) ಇವೆ.ಮೊಹಾಲಿಯ ಭಾರತೀಯ ವೈಜ್ಞಾನಿಕ ಶಿಕ್ಷಣ ಸಂಶೋಧನಾ ಸಂಸ್ಥೆ(ಐ.ಐ.ಯೆಸ್.ಇ.ಅರ್) ಇತ್ತೀಚೆಗೆ ತೆರೆದಿದ್ದು,ವೈಜ್ಞಾನಿಕ ಸಂಶೋಧನೆಗಳಿಗೆ ಮತ್ತು ಉತ್ತಮ ವೈಜ್ಞಾನಿಕ ಪದವಿ,ಮತ್ತು ಉನ್ನತ ಪದವಿ ಶಿಕ್ಷಣವನ್ನು ಒದಗಿಸಲು ಸಹಕಾರಿಯಾಗಿದೆ. ಮೊಹಾಲಿಯ ಸಮೀಪದಲ್ಲಿ ಇರುವ ರಾಷ್ಟ್ರೀಯ ಫಾರ್ಮಸಿಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಪ್ರಥಮ ರಾಷ್ಟ್ರೀಯ ಫಾರ್ಮಸಿಟಿಕಲ್ ಸಂಸ್ಥೆಯಾಗಿದ್ದು, ಈ ಮೂಲಕ ಫಾರ್ಮಾಸಿಟಿಕಲ್ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರು ಪಡೆಯುವ ಉದ್ದೇಶ ಹೊಂದಿದೆ.   ಚಂಡಿಗಡದ ಬಾಹ್ಯಾಕಾಶ ನಗರವಾದ ಮೊಹಾಲಿಯು ಸುಧಾರಿತ ಕಂಪ್ಯೂಟೆರ್ ಟೆಕ್ನಾಲಜಿಗಳ ಆವಿಷ್ಕಾರಕ್ಕೆ ಎಡೆಮಾಡಿಕೊಟ್ಟಿದೆ. C-DAC ಮೊಹಾಲಿಯು ಟೆಲೆಮೆಡೆಸಿನ್ ಸೇರಿದಂತೆ ಸ್ಟೇಟ್ ಅಫ್ ದಿ ಅರ್ಟ್ ವಿಷಯದಲ್ಲಿ ಆವಿಷ್ಕಾರವನ್ನು ಮಾಡುತ್ತಿದೆ.

ಚಂಡಿಗಡ್‍ನಲ್ಲಿ ಪ್ರತಿಯೊಬ್ಬರ ಲೆಕ್ಕಕ್ಕೆ ಅತಿ ಹೆಚ್ಚು ಸಂಖ್ಯೆಯ ವಾಹನಗಳಿವೆ.

ಚಂಡಿಗಡ್ ಸಂಚಾರ ಪೋಲಿಸರು ಸಂಚಾರಿ ನಿಯಮಗಳ ಪರಿಪಾಲನೆಯ ಉಸ್ತುವಾರಿ ಚೆನ್ನಾಗಿ ವಹಿಸಿಕೊಂಡು ಬಹಳ ಕ್ರಮಬದ್ಧವಾದ ಸಂಚಾರಿ ವ್ಯವಸ್ಥೆ ಎಂದು ಮನ್ನಣೆ ಪಡೆದಿದೆ. ಕ್ಷೇತ್ರ ೨೩ರ ಸಂಚಾರಿ ಉದ್ಯಾನವನ ಮಕ್ಕಳಿಗೆ, ಕೈಗಾಡಿ-ಎಳೆಯುವವರಿಗೆ ಹಾಗೂ ಹೊಸ ಚಾಲಕರಿಗೆ ಸಂಚಾರಿ ಸುರಕ್ಷತೆಯನ್ನು ಪರಿಚಯ ಮಾಡಿ ಕೊಡುತ್ತದೆ.

ಕೈಗಾಡಿಗಳಲ್ಲಿ ಸ್ವಲ್ಪ ದೂರದ ಪ್ರಯಾಣ ಸಾಮಾನ್ಯ, ವಿಶೇಷವಾಗಿ ಶಾಲೆಗೆ-ಹೋಗುವ ಮಕ್ಕಳು, ಗೃಹಿಣಿಯರು ಹಾಗೂ ವೃದ್ಧರು ಇದನ್ನು ಬಳಸುತ್ತಾರೆ. ಆಟೋ-ಗಾಡಿಗಳು ಸೀಮಿತವಾಗಿದ್ದು ಹಲವೂ ಬಾರಿ ಬರಿ ISBT ಗೆ ಹೋಗಲು ಹಾಗೂ ಬರಲು ಮಾತ್ರ ಓಡಾಡುತ್ತವೆ. ಹಲವು ಹೆಚ್ಚು ಸಂಚಾರದ ರಸ್ತೆಗಳಲ್ಲಿ ಈಗ ಕೈಗಾಡಿಗಳಿಗೆ ಕಿರುದಾರಿ ಮಾಡಲಾಗಿದೆ, ಇದಕ್ಕೆ ಕೈಗಾಡಿ-ಎಳೆಯುವವರು ಕಡ್ಡಾಯವಾಗಿ ಬದ್ಧವಾಗಿರಬೇಕು. ಆಧುನಿಕ ಆಕಾಶವಾಣಿ ಸೇವೆಯುಳ್ಳ ಕ್ಯಾಬ್‌ಗಳು ಸಮರ್ಪಕವಾಗಿ ಸ್ಥಾಪಿಸಿಲಾದ ಸಂಪರ್ಕವನ್ನು ಈ ನಗರ ಹೊಂದಿದೆ ಎಂಬ ಹೆಮ್ಮೆಗಳಿಸಿದೆ.

ಚಂಡಿಗಡ್ ರಸ್ತೆಯ ಪಥದಿಂದ ಉತ್ತಮವಾಗಿ ಸಂರ್ಪಕ ಹೊಂದಿದೆ. ಚಂಡಿಗಡವನ್ನು ದೇಶದ ಇತರ ಭಾಗದೊಂದಿಗೆ ಜೋಡಿಸುವ ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳು (NH) : NH ೨೨ (ಅಂಬಾಲ - ಕಲ್ಕ - ಶಿಮ್ಲಾ - ಕಿನೊರ್) ಮತ್ತು NH ೨೧ (ಚಂಡಿಗಡ - ಲೆಹ್). ಚಂಡಿಗಡದಲ್ಲಿ ಎರಡು ಅಂತರ-ರಾಜ್ಯ ಬಸ್ ಟರ್ಮಿನಸ್ (ISBT) ಗಳಿವೆ, ಒಂದು ಉತ್ತರ,ದಕ್ಷಿಣ,ಪೂರ್ವ ದಿಕ್ಕುಗಳಿಗಾಗಿ ೧೭ನೇ ವಿಭಾಗದಲ್ಲಿದೆ,ಈ ಪ್ರದೇಶದಿಂದ ಹರಿಯಾಣ,ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ ಅಲ್ಲದೆ ದೇಶದ ರಾಜಧಾನಿ ದೆಹಲಿಯ ಎಲ್ಲಾ ಪ್ರಮುಖ ನಗರಗಳಿಗೆ ನಿರಂತರ ಬಸ್ ಸೌಲಭ್ಯವಿರುವದು.  ಮತ್ತು ಎರಡನೇಯದು ೪೩ನೇ ವಿಭಾಗವಾದ ಪಶ್ಚಿಮ ಭಾಗದಲ್ಲಿದ್ದು, ಮುಖ್ಯವಾಗಿ ಪಂಜಾಬ, ಹಿಮಾಚಲ, ಜಮ್ಮು, ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಚಂಡಿಗಡವು ISBT ಯ ಸುಮಾರು ೧೦ ಕಿ.ಮೀ. ಅಂತರದಲ್ಲಿ ಒಂದು ರೈಲು ನಿಲ್ದಾಣವನ್ನು ಹೊಂದಿದೆ. ಇಲ್ಲಿಂದ ರಾಜಧಾನಿ ನವದೆಹಲಿ,ಅಲ್ಲದೆ ಇನ್ನಿತರ ಜಂಕ್ಷನ್ಗಳಾದ ಅಂಬಾಲಾ,ಅಮೃತಸರ್,ಭಿವಾನಿ,ಚೆನ್ನೈ,ಹೌರಾ,ಕಾಲ್ಕಾ,ಲಖನೌ,ಮುಂಬಯಿ,ಪಾಟ್ನಾ,ಶ್ರಿ ಗಂಗಾನಗರ್,ಮತ್ತು ತಿರುವನಂತಪುರಂಗಳಿಗೆ ನಿರಂತರ ಸಂಪರ್ಕವನ್ನು ಹೊಂದಿದೆ.

ಚಂಡಿಗಡವು ISBT ಯಿಂದ ಸುಮಾರು ೧೨ ಕಿ.ಮಿ. ಅಂತರದಲ್ಲಿ ಚಂಡಿಗಡ ಏರ್‌ಪೋರ್ಟ್ ಎಂಬ ಒಂದು ದೇಶೀಯ ವಿಮಾನ ನಿಲ್ದಾಣವನ್ನೂ ಹೊಂದಿದೆ. ಏರ್ ಇಂಡಿಯಾ,ಜೆಟ್ ಏರ್‌ವೇಸ್,ಜೆಟ್‌ಲೈಟ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ಗಳು ನಿರಂತರವಾಗಿ ಚಂಡಿಗಡದಿಂದ ನವ ದೆಹಲಿ ಮತ್ತು ಮುಂಬಯಿಗಳಿಗೆ ವಿಮಾನ ಸಂಚಾರವನ್ನು ಮಾಡುತ್ತವೆ. ಈ ವಿಮಾನ ನಿಲ್ದಾಣವು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗುವ ತಯಾರಿಯನ್ನು ನಡೆಸಿದೆ, ಅಲ್ಲದೆ ಕಿಂಗ್‌ಫಿಶರ್ ಮತ್ತು ಸಿಲ್ಕ್‌ಏರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ಬ್ಯಾಂಕಾಕ್ ಮತ್ತು ಸಿಂಗಪುರ್ ಗಳೊಂದಿಗೆ ಇತರೆ ಪೂರ್ವ ಏಷ್ಯಾದ ದೇಶಗಳಿಗೆ ವಿಮಾನ ಸಂಪರ್ಕವನ್ನು ಕಲ್ಪಿಸುವಲ್ಲಿ ಕಾರ್ಯ ಕೈಗೊಂಡಿದೆ.

ಅತಿ ಶೀಘ್ರದಲ್ಲಿ ಈ ನಗರವು  ಮೆಟ್ರೊ ರೈಲ್ವೆ ಮತ್ತು ಅಂತರಾಷ್ಟ್ರೀಯ ವಿಮಾನನಿಲ್ದಾಣವನ್ನು ಹೊಂದುವುದರಲ್ಲಿ ಸಂಶಯವಿಲ್ಲ. ಈ ಎರಡೂ ಯೋಜನೆಗಳಿಗೆ ಸರಕಾರದ ಪರವಾನಗಿಯೂ ಸಿಕ್ಕಿದ್ದು, ಈಗ ಇವುಗಳ ನಿರ್ಮಾಣದ ಯೋಜನೆಯು ಸಿದ್ದಗೊಳ್ಳುತ್ತಿದೆ.

ಚಂಡಿಗಡವು ಅಸಂಖ್ಯ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಮನೆಯಾಗಿದೆ. ಉದಾಹರಣೆಗೆ ಪಿಎಚ್ಎಲ್ ಮತ್ತು ಐಪಿಎಲ್. ಈ ನಗರವು ತನ್ನಲ್ಲಿ ಹಲವಾರು ಕ್ರೀಡೆಗಳ ಸಮೂಹ ಕ್ರೀಡಾಂಗಣಗಳ ದೊಡ್ದ ಜಾಲವನ್ನೇ ಹೊಂದಿದೆ.  ಈ ಕ್ರೀಡಾಂಗಣಗಳ ಸಮೂಹವು ಕ್ರಿಕೆಟ್ ಕ್ರೀಡಾಂಗಣ, ಈಜು ಕಲಿಕಾ ಕೇಂದ್ರ, ಶೂಟಿಂಗ್ ಅಂಕಣ ಮತ್ತು ಹಾಕಿ ಕ್ರಿಡಾಂಗಣವನ್ನು ಹೊಂದಿದೆ.  ಚಂಡಿಗಡವು ನಗರದ ಸುತ್ತವೂ ಹಲವಾರು ಉದ್ಯಾನವನಗಳನ್ನು ಸಹಾ ಹೊಂದಿದೆ. ಅವುಗಳಲ್ಲಿ ತುಂಬ ಜನಪ್ರಿಯವಾದುದು  ಜಾಕಿರ್ ಹುಸೇನ್ ರೋಸ್ ಗಾರ್ಡನ್ (ಗುಲಾಬೀ ತೋಟ).




#Article 221: ದಮನ್ ಮತ್ತು ದಿಯು (362 words)


ದಮನ್ ಮತ್ತು ದಿಯು ಭಾರತದ ಕೇಂದ್ರಾಡಳಿತ ಪ್ರದೇಶಗಳು.ಸ್ವಾತಂತ್ರ್ಯಕ್ಕಿಂತ ಮೊದಲು ಗೋವಾದೊಂದಿಗೆ ಪೊರ್ಚುಗೀಸರ ಸ್ವಾಧೀನವಿತ್ತು.

ಗುಜರಾತ್ ರಾಜ್ಯದ ಪಶ್ಚಿಮ ತೀರದಲ್ಲಿ ಮುಂಬಯಿಯಿಂದ ಸು. 193 ಕಿ.ಮೀ. ದೂರದಲ್ಲಿ ದರ್ಮನ್ ಪ್ರದೇಶವಿದೆ. ಪೂರ್ವದಲ್ಲಿ ಗುಜರಾತ್ ರಾಜ್ಯ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ, ಉತ್ತರದಲ್ಲಿ ಕೊಲಕ್ ನದಿ ಮತ್ತು ದಕ್ಷಿಣದಲ್ಲಿ ಕಲೈ ನದಿ ದಮನ್ ಪ್ರದೇಶವನ್ನು ಸುತ್ತುವರೆದಿವೆ. ದೀವ ಒಂದು ಪುಟ್ಟ ದ್ವೀಪ. ಇದು ಗುಜರಾತಿನ ಜುನಾಘಡ್ ಜಿಲ್ಲೆಯ ದಕ್ಷಿಣಕ್ಕೆ ಅರೇಬಿಯ ಸಮುದ್ರದಲ್ಲಿದೆ. ಈ ದ್ವೀಪಕ್ಕೆ ಗುಜರಾತ್ ರಾಜ್ಯ ಎರಡು ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿದೆ. ದಾಮನ್ ಗುಜರಾತಿನ ವಲ್ಸದ್ ಜಿಲ್ಲದೆಯ ಪಕ್ಕದಲ್ಲಿದ್ದು 72 ಚ.ಕಿ.ಮೀ. ವಿಸ್ತೀರ್ಣವಿದೆ. ದೀವ್ 40 ಚ.ಕಿ.ಮೀ. ವಿಸ್ತೀರ್ಣವುಳ್ಳದ್ದು ಇವುಗಳ ಒಟ್ಟು ವಿಸ್ತೀರ್ಣ 112 ಚ.ಕಿ.ಮೀ. 2001ರ ಅಂಕಿ ಅಂಶದ ಪ್ರಕಾರ 92,512 ಮಂದಿ ಪುರುಷರು, 65,692 ಮಂದಿ ಮಹಿಳೆಯರು ಇರುವ ಈ ಪ್ರದೇಶಗಳ ಒಟ್ಟು ಜನಸಂಖ್ಯೆ 1,58,204. ಆಡಳಿತ ಕೇಂದ್ರ ಪಟ್ಟಣ ದಮನ್.

ಗೋವ, ದಮನ್ ಮತ್ತು ದೀವ್ ಇವು ಪೋರ್ಚುಗೀಸರ ಆಡಳಿತಕ್ಕೆ ಸೇರಿದ್ದ ಪ್ರದೇಶಗಳಾಗಿದ್ದವು. ಭಾರತ ಸ್ವತಂತ್ರವಾದರೂ ಇವು ಪೋರ್ಚುಗೀಸರ ಮುಷ್ಠಿಯಿಂದ ಬಿಡುಗಡೆಯಾಗಲಿಲ್ಲ. ಇದಕ್ಕಾಗಿ ಭಾರತೀಯರು ಗೋವದ ಮುಕ್ತಿಗಾಗಿ ಮತ್ತೆ ಹೋರಾಡಬೇಕಾಯಿತು. 1961ರಲ್ಲಿ ಮುಕ್ತಗೊಂಡ ಈ ಪ್ರದೇಶಗಳು ಭಾರತದ ಆಡಳಿತಕ್ಕೆ ಸೇರಿದವು. ಮುಂದೆ 1987, ಮೇ 30ರಂದು ಗೋವ ರಾಜ್ಯವಾಯಿತು. ಅಂದಿನಿಂದ ದಮನ್ ಮತ್ತು ದೀವ್‍ಗಳು ಒಕ್ಕೂಟದ ಆಡಳಿತಕ್ಕೆ ಒಳಪಟ್ಟವು. ದಮನ್ ಜಿಲ್ಲೆಯ ಜನಸಂಖ್ಯೆ ೨,೪೨,೯೧೧ ದೀವ್ ಜಿಲ್ಲೆಯ ಜನಸಂಖ್ಯೆ 44,215. ಎರಡು ಪಟ್ಟಣಗಳು, 23 ಗ್ರಾಮಗಳು ಇರುವ ಈ ಪ್ರದೇಶಗಳಿಗೆ ದಮನ್ ಮತ್ತು ದೀವ್‍ಗಳೇ ಆಡಳಿತ ಪ್ರದೇಶಗಳು.

ಈ ಪ್ರದೇಶದ ಒಟ್ಟು ಭೂ ಪ್ರದೇಶದಲ್ಲಿ 1,12,103 ಹೆಕ್ಟೇರ್‍ಗಳು ವ್ಯವಸಾಯಕ್ಕೆ ಬಳಸಲಾಗಿದೆ. ಬತ್ತ, ರಾಗಿ, ಬಾಜ್ರ, ಜೋಳ, ನೆಲಗಡಲೆ, ವಿವಿಧ ದ್ವಿದಳ ಧಾನ್ಯಗಳು, ಗೋಧಿ ಬೆಳೆಯುವುದರ ಜೊತೆಗೆ ಬಾಳೆಹಣ್ಣು, ಸಪೋಟ, ಮಾವು, ತೆಂಗು ಮತ್ತು ಕಬ್ಬು ಬೆಳೆಯುತ್ತಾರೆ. ಇಲ್ಲಿ ಅರಣ್ಯ ಪ್ರದೇಶವಿಲ್ಲವೆಂದೇ ಹೇಳಬಹುದು.

ಎರಡೂ ಪ್ರದೇಶಗಳು ಸೇರಿದಂತೆ ಸು. 746 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿವೆ. ದಮನ್ನಿನ ಆಮ್ನಿಬಸ್ ಇಂಡಸ್ಟ್ರಿಯರ್ ಡೆವಲಪ್‍ಮೆಂಟ್ ನಿಗಮ ಮುಖ್ಯ ಕೈಗಾರಿಕಾ ಕ್ಷೇತ್ರವಾಗಿದ್ದು ದಬೆಲ್, ಭಿಮ್‍ಪುರೆ, ಕಾಚಿಗಮ್ ಮತ್ತು ಕದೈಯ ಇವು ಸಹ ಕೈಗಾರಿಕಾ ಕ್ಷೇತ್ರಗಳಾಗಿವೆ. ಸಾಕಷ್ಟು ವಿದ್ಯುತ್ ಸರಬರಾಜಿದ್ದು ಪಟ್ಟಣ ಮತ್ತು ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿದೆ.

ಸಾರಿಗೆ ಸಂಪರ್ಕ ಕುರಿತಂತೆ ದಮನ್‍ನಲ್ಲಿ 191 ಕಿ.ಮೀ. ದೂರದ ಹಾಗೆ ದೀವ್‍ನಲ್ಲಿ 78 ಕಿ.ಮೀ ರಸ್ತೆಗಳಿವೆ. ನೇರ ರೈಲು ಸಂಪರ್ಕವಿಲ್ಲದ ಇವುಗಳಿಗೆ ಹತ್ತಿರದ ಮುಂಬಯಿ, ದೆಹಲಿ ಪಶ್ಚಿಮ ರೈಲು ಮಾರ್ಗದ ವಾಪಿ ನಿಲ್ದಾಣ ದಮನ್‍ಗೆ ಹತ್ತಿರವಿದ್ದರೆ ದೀವ್‍ಗೆ ಮೀಟರ್ ಗೇಜ್‍ನ ದೆಲ್ವಾಡ ರೈಲು ನಿಲ್ದಾಣ ಹತ್ತಿರವಿದೆ. ಎರಡೂ ಪ್ರದೇಶಗಳಿಗೆ ವಿಮಾನ ಸಂಪರ್ಕವಿದೆ. ಮುಂಬಯಿಯಿಂದ ದೀವ್‍ಗೆ ನಿಗದಿತವಾದ ನೇರ ವಿಮಾನ ಸಂಪರ್ಕವಿದೆ.

ಈ ಎರಡೂ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುವುದುಂಟು. ಬಾಮ್ ಜೇಸಸ್ ಚರ್ಚ್, ಆವರ್ ಲೇಡಿ ಆಫ್ ಸೀ ಚರ್ಚ್, ಅವರ್ ಲೇಡಿ ಆಫ್ ರೆಮೆಡಿಯೋಸ್ ಚರ್ಚ್, ಮೋತಿದಮನ್ ಮತ್ತು ನಾನಿ ದರ್ಮನ್ ಕೋಟೆಗಳು ಜಾಮ್‍ಪೊರೆ ಮತ್ತು ದೇವ್‍ಕ ಸಮುದ್ರ ತೀರಗಳು, ಸಾರ್ವಜನಿಕ ಉದ್ಯಾನವನ, ಮೋತಿ ದಮನ್ ಜೆಟ್ಟಿ, ಮತ್ತು ಪರ್ಗೊಲ ತೋಟಗಳು, ಮೋತಿ ದಮನ್ ವಿಹಾರ ಉದ್ಯಾನವನ, ದೇವ್‍ಕ, ದಮನ್ ಗಂಗಾ ಪ್ರವಾಸಿ ವಿಹಾರ ಕೇಂದ್ರಗಳು, ಕಾಚಿಗಮ್, ಸತ್ಯ ಸಾಗರ್ ಉದ್ಯಾನ್, ಮಿರಸಾಲ್ ಉದ್ಯಾನ, ಮತ್ತು ಜಲಕ್ರೀಡಾ ಪಾರ್ಕ್‍ಗಳು ಬಹು ಪ್ರಸಿದ್ಧ. ಅದರಂತೆ ದೀವ್‍ನ ಸಂತ ಪಾಲ್ ಚರ್ಚ್, ದೀವ್‍ನ ಕೋಟೆ ಮತ್ತು ಪನಿ ಕೊಟ ಕೋಟೆ, ನಗೋವ ಮತ್ತು ಚಕ್ರತೀರ್ಥ, ಗೋಖ್ಲಾದ ಮಕ್ಕಳ ಉದ್ಯಾನವನ ಮತ್ತು ಬೇಸಿಗೆ ಮನೆ ಯಾತ್ರಿಕರನ್ನು ಸೆಳೆಯುವ ಬಹು ಪ್ರಸಿದ್ಧ ಆಕರ್ಷಕ ಸ್ಥಳಗಳಾಗಿವೆ.

ಇತ್ತೀಚೆಗೆ ಮುಂಬಯಿಯಲ್ಲಿ ದಮನ್, ದೀವ್ ಮತ್ತು ದಾದ್ರಾ ಮತ್ತು ನಗರ್ ಹವೇಲಿ ಇವುಗಳಿಗೆ ಒಂದು ಉಚ್ಛನ್ಯಾಯಾಲಯವನ್ನು ಸ್ಥಾಪಿಸಲಾಗಿದೆ




#Article 222: ಲಕ್ಷದ್ವೀಪ (212 words)


ಲಕ್ಷದ್ವೀಪ (ಮಲಯಾಳಂನಲ್ಲಿ: : ലക്ഷദ്വീപ്) ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಂತ ಚಿಕ್ಕದಾದುದು. ಮುಖ್ಯವಾಗಿ ೧೨ ಹವಳ ದ್ವೀಪಗಳು, ೩ ಹವಳದ ರೀಫ್‌ಗಳು ಹಾಗು ೫ ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಈ ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ ೩೨ ಚದುರ ಕಿ.ಮಿ.ಗಳಷ್ಟು. ಇದಲ್ಲದೆ ಇನ್ನೂ ಹಲವಾರು ಪುಟ್ಟ ಜನನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಗಳು ಒಟ್ಟು ೧೧.

ಈಗ ಪ್ರಚಲಿತದಲ್ಲಿರುವ 'ಲಕ್ಷದ್ವೀಪ,' ಒಂದು ಕಾಲದಲ್ಲಿ 'ಲಖದೀವ್','ಮಿನಿಕೋಯ್' ಮತ್ತು 'ಅಮಿನ್ ದಿವಿ' ದ್ವೀಪಗಳು ಎಂದು ಕರೆಯಲಾಗುತ್ತಿದ್ದ, ಅರಬ್ಬೀ ಸಮುದ್ರದ ನಡುವೆ ಇರುವ ಒಂದು ದ್ವೀಪ ಸಮೂಹವಾಗಿತ್ತು. ಭಾರತದೇಶದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪದ ಒಟ್ಟು ಭೂ ವಿಸ್ತೀರ್ಣ ೩೨ ಚದರ ಕಿ.ಮೀ.ಗಳು. ಇವು ೪,೨೦೦ ಚ. ಕಿ; ಮೀ. ವಿಸ್ತೀರ್ಣದ ಜಲಭಾಗದ ಮಧ್ಯೆ ಇವೆ. ಭಾರತದ ಪಶ್ಚಿಮ ತೀರದಿಂದ ಈ ದ್ವೀಪಗಳು ೨೦೦ ರಿಂದ ೪೪೦ ಕಿ.ಮಿ ನಷ್ಟು ದೂರದಲ್ಲಿವೆ. ಈ ದ್ವೀಪ ಸಮುದಾಯವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, ಇದನ್ನು ೧೦ ತಾಲೂಕುಗಳನ್ನಾಗಿ ವಿಂಗಡಿಸಲಾಗಿದೆ. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. 'ಕೇರಳ ಹೈಕೋರ್ಟ್' ನ ಪರಿಧಿಯಲ್ಲಿ ಬರುತ್ತದೆ. ಸ್ವಾತಂತ್ರ್ಯಪೂರ್ವದ ಕಾಲದಲ್ಲಿ ಇದು 'ಮದ್ರಾಸ್ ಪ್ರೆಸಿಡೆನ್ಸಿ' ಅಂಗವಾಗಿತ್ತು. ೧೯೫೬ ರಲ್ಲಿ ಕೇಂದ್ರಾಡಳಿತ ಪ್ರದೇಶವಾಯಿತು. ಒಟ್ಟು ೩೯ ದ್ವೀಪಗಳಿವೆ; ೧೦ ರಲ್ಲಿ ಮಾತ್ರ ಜನವಸತಿ ಇದೆ. ೨೦೧೧ ರ ಜನಗಣತಿ  ಪ್ರಕಾರ, ಇಲ್ಲಿನ ಜನಸಂಖೆ ೬೪,೪೨೯ ಹೆಚ್ಚು ಜನ ಮುಸಲ್ಮಾನರು.'ಸುನ್ನಿ ಪಂಥದ ಶಫಿ ಸಮುದಾಯ'ಕ್ಕೆ ಸೇರಿದ್ದಾರೆ. ಅವರೆಲ್ಲಾ ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ ಮಿನಿಕೋಯ್ ದ್ವೀಪದಲ್ಲಿ ಮಾಹ್ಲ್ (ಮಾಹಿ) ಭಾಷೆ ಬಳಕೆಯಲ್ಲಿದೆ. ಆದಿವಾಸಿಗಳಿಲ್ಲದ ದ್ವೀಪ ಸಮುದಾಯ ಪ್ರದೇಶ. ಕ್ರಿ.ಪೂ.೧೫೦೦ ರಲ್ಲಿ, ಇಲ್ಲಿ ಜನ ವಾಸಿಸಲು ಆರಂಭಿಸಿದರು. ಪುರಾತನ ಕಾಲದ ನಾವಿಕರು ಹೇಳುವ ಕಥೆಗಳ ಪ್ರಕಾರ, ಕ್ರಿ.ಪೂ. ೬ ನೆಯ ಶತಮಾನದ ಜಾತಕ ಕಥೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಪುರಾತನ ಗ್ರೀಕ್ ನಾವಿಕರ 'ಸಮುದ್ರೀಯ ಭೂಪಟ' ಮತ್ತು ದಾಖಲೆಗಳಲ್ಲಿ ಈ ದ್ವೀಪಗಳ ಉಲ್ಲೇಖವಿದೆ. ಈ ದ್ವೀಪಕ್ಕೆ ಅವರು ಬಂದಿರಬಹುದು. 'ಪಾಥಿತ್ರಪ್ಪತ್ತು' ಎಂಬ ಸಂಗಮ ಸಾಹಿತ್ಯದಲ್ಲಿ ಈ ದ್ವೀಪಗಳು ಚೇರ ಸಾಮ್ರಾಜ್ಯಕ್ಕೆ ಸೇರಿದವು, ಎಂದು ಹೇಳಲಾಗಿದೆ. ೭ ನೆಯ ಶತಮಾನದ ಪಲ್ಲವ ಶಿಲಾಬರಹಗಳಲ್ಲಿ 'ದ್ವೀಪ ಲಕ್ಷಮ್' ಪಲ್ಲವರಿಗೆ ಸೇರಿದೆ ಎಂಬ ಉಲ್ಲೇಖವಿದೆ.

    

         
         




#Article 223: ಮೈಥಿಲಿ (141 words)


ಮೈಥಿಲಿ ಇಂಡೋ-ಆರ್ಯನ್ ಭಾಷಾ ಕುಟುಂಬದ ಒಂದು ಭಾಷೆ. ಭಾರತದ ಬಿಹಾರ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಮತ್ತು ನೇಪಾಳದ ತೆರಾಯ್ ಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ. 6,121,922 (1991) ಜನರ ತಾಯ್ನುಡಿ. ದೇಸಿಲ್ ಬಅನ, ತಿರುಹುತಿಯ ಪರ್ಯಾಯ ಪದಗಳು. ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ.

ಮಾಗಧಿ ಅಪಭ್ರಂಶದಿಂದ ವಿಕಾಸಗೊಂಡಿದೆ. ಮೈಥಿಲೀ ಎಂಬುದು ಮಂಥ್ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಪ್ರಾಚೀನ ಸಂಸ್ಕ್ರತ ಮಹಾಕಾವ್ಯಗಳಲ್ಲಿ ಮಿಥಿಲ ಎಂಬ ಪ್ರಯೋಗವಾಗಿರುವುದರಿಂದ ನಿಥಿಲಿ ಎಂಬುದೇ ಮೈಥಿಲೀಯ ಮೂಲರೂಪವೆಂದು ಹೇಳುವವರೂ ಉಂಟು.

ಈ ಭಾಷೆಯ ದ್ವನಿಗಳು ಹಿಂದೀ ಭಾಷೆಯನ್ನೇ ಹೋಲುತ್ತವೆ. ಎರಡು ಬಗೆಯ ಲಿಂಗವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆ ಇದೆ. ನಾಮಪದ, ಕ್ರಿಯಾಪದಗಳನ್ನು ಸೂಚಿಸುವ ವಿಭಕ್ತಿ-ಪ್ರತ್ಯಯಗಳು ಮತ್ತು ಕಾಲಸೂಚಕ ಪ್ರತ್ಯಯಗಳಿವೆ. ಪದರಚನೆ ವಾಕ್ಯರಚನೆ ಹಿಂದಿ ಭಾಷೆಯಲ್ಲಿರುವಂತೆಯೇ ಇದೆ. ಸಂಸ್ಕೃತ, ಪ್ರಾಕೃತ, ಅಫಭ್ರಂಶ, ಮಘಹಿ, ಭೋಜಪುರಿ ಮುಂತಾದ ಭಾಷೆಗಳ ಅನೇಕ ಶಬ್ದಗಳಿವೆ. ಮೈಥಿಲೀಯ ಮೇಲೆ ಹಿಂದೀ ಮತ್ತು ಬಂಗಾಲೀ ಭಾಷೆಗಳ ಪ್ರಭಾವ ಹೆಚ್ಚು.

ಮೈಥಿಲೀಯನ್ನು ಬರೆಯಲು ನಾಗರಿ, ಕೈಥಿ, ಮೈಥಿಲೀ ಲಿಪಿಗಳುಂಟು. ಈ ಪೈಕಿ ನಾಗರಿ ಲಿಪಿಯೇ ಹೆಚ್ಚು ಬಳಕೆಯಲ್ಲಿದೆ. ಈ ಭಾಷೆಯ ಸಾಹಿತ್ಯ ಖಡಿಬೋಲಿ-ಹಿಂದೀ ಭಾಷಾ ರೂಪದಲ್ಲೂ ಮೈಥಿಲೀ ಭಾಷಾರೂಪದಲ್ಲೂ ಇದೆ.

ಈ ಭಾಷೆಯಲ್ಲಿ ಪೂರ್ವ, ಪಶ್ಚಿಮ, ಮಧ್ಯ, ಉತ್ತರ, ದಕ್ಷಿಣ ಮೈಥಿಲೀ ಎಂಬ ಪ್ರಾದೇಶಿಕ ಪ್ರಬೇಧಗಳಿವೆ. ಇವುಗಳ ಜೊತೆಗೆ ಸಾಮಾಜಿಕ ಪ್ರಭೇದಗಳೂ ಉಂಟು. ಉತ್ತರ ದರ್ಭಾಂಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಮೈಥಿಲೀ ಭಾಷಾರೂಪವನ್ನು ಶಿಷ್ಟರೂಪವೆಂದು ಪರಿಗಣಿಸಲಾಗಿದೆ.




#Article 224: ಪದಾತಿ (ಚದುರಂಗ) (139 words)


ಪದಾತಿ (ಕಾಲಾಳು, ಆಂಗ್ಲದಲ್ಲಿ 'ಪಾನ್') ಚದುರಂಗದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುವ ಮತ್ತು ಅತಿ ದುರ್ಬಲ ಕಾಯಿ. ಇದು ಹಿಂದಿನ ಕಾಲದ ಸೈನ್ಯಗಳ ಪದಾತಿ ದಳವನ್ನು ಪ್ರತಿನಿಧಿಸುತ್ತದೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ಎಂಟು ಪದಾತಿಗಳಿರುತ್ತವೆ. 

ಪದಾತಿಗಳ ಚಲನೆ ಬೇರೆಲ್ಲ ಕಾಯಿಗಳ ಚಲನೆಗೆ ಹೋಲಿಸಿದಂತೆ ಸ್ವಲ್ಪ ವಿಚಿತ್ರವಾದದ್ದು. ಪದಾತಿಗಳು ಮುಂದಕ್ಕೆ ಮಾತ್ರ ಚಲಿಸಬಲ್ಲವು. ಮೊದಲ ಬಾರಿ ಒಂದು ಅಥವಾ ಎರಡು ಚೌಕಗಳನ್ನು ಕ್ರಮಿಸಬಲ್ಲ ಪದಾತಿಗಳು ಇದರ ನಂತರ ಒಂದೊಂದು ಚೌಕ ಮಾತ್ರ ಚಲಿಸಬಲ್ಲವು. ಬೇರೆ ಕಾಯಿಗಳನ್ನು ಹಿಡಿಯುವಾಗ ಮಾತ್ರ ಪದಾತಿಗಳು ತಮ್ಮ ಮೂಲೆಯ ಕಡೆಗಿರುವ ಒಂದು ಚೌಕ್ಕೆ ಹೋಗುತ್ತವೆ. ಕಾಣಿಸಿರುವ ಚಿತ್ರದಲ್ಲಿ ಇರುವ ಬಿಳಿ ಪದಾತಿ ಕಪ್ಪು ಆನೆ ಅಥವಾ ಕಪ್ಪು ಕುದುರೆಯನ್ನು ತಿನ್ನಬಲ್ಲದು. 

ಆನ ಪಾಸಾನ್ ಪದಾತಿಗಳ ಅತಿ ವಿಚಿತ್ರ ಚಲನೆ. ಒಂದು ಪದಾತಿ ಮೊದಲ ಬಾರಿ ಚಲಿಸುವಾಗ ಎರಡು ಚೌಕ ಕ್ರಮಿಸಿ ಎದುರಾಳಿಯ ಒಂದು ಪದಾತಿಯ ಪಕ್ಕಕ್ಕೆ ಬಂದು ನಿಂತರೆ, ಎದುರಾಳಿಯ ಪದಾತಿ ಮೊದಲನೆಯದನ್ನು ಹಿಡಿದು ಮೂಲೆಯ ಮೇಲೆ ಒಂದು ಚೌಕ ಕ್ರಮಿಸಬಲ್ಲದು (ಚಿತ್ರ ನೋಡಿ). ಬಿಳಿ ಪದಾತಿ ಕಪ್ಪು ಪದಾತಿಯನ್ನು ತಿಂದು ಗುರುತು ಹಾಕಿರುವ ಚೌಕಕ್ಕೆ ಚಲಿಸಬಲ್ಲುದು. ಈ ರೀತಿಯ ಚಲನೆ ೧೩ ನೆಯ ಶತಮಾನದಲ್ಲಿ ಪರಿಚಯಿಸಲ್ಪಟ್ಟಿದ್ದು. 

ಒಂದು ಪದಾತಿ ಇಡೀ ಮಣೆಯನ್ನು ಕ್ರಮಿಸಿ ಇನ್ನೊಂದು ತುದಿಯನ್ನು ಮುಟ್ಟಿದರೆ ಅದು ಆಟಗಾರನ ಆಯ್ಕೆಯ ಬೇರೆ ಯಾವುದಾದರೂ ಕಾಯಿಯಾಗಿ ಪರಿವರ್ತನೆ ಹೊಂದುತ್ತದೆ. 

ಚದುರಂಗ




#Article 225: ರಾಜ (ಚದುರಂಗ) (108 words)


ರಾಜ (♔♚) ಚದುರಂಗದಲ್ಲಿ ಉಪಯೋಗವಾಗುವ ಕಾಯಿಗಳಲ್ಲಿ ಒಂದು.
ಇದು ಈ ಆಟದ ಅತಿ ಮುಖ್ಯ ಕಾಯಿಯೂ ಹೌದು - ಎದುರಾಳಿಯ ರಾಜನನ್ನು ಹಿಡಿಯುವುದೇ ಇಡೀ ಆಟದ ಉದ್ದೇಶ. ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದೆ ಇದ್ದ ಹಾಗೆ ಮಾಡಿದಲ್ಲಿ ಆಟ ಮುಗಿದಂತೆ - ಇದಕ್ಕೆ ಚೆಕ್ ಮೇಟ್ ಎಂದು ಹೆಸರು. 

ರಾಜ ಯಾವುದೇ ದಿಕ್ಕಿನಲ್ಲಾದರೂ ಸರಿಯಾಗಿ ಒಂದು ಚೌಕ ಕ್ರಮಿಸಬಹುದು. ಹಾಗೆಯೇ ಆ ಚೌಕಗಳಲ್ಲಿರುವ ಎದುರಾಳಿಯ ಕಾಯನ್ನು ಆಕ್ರಮಿಸಬಹುದು. ರಾಜನಿಗೆ ಇರುವ ಒಂದು ವಿಶೇಷ ಚಲನೆಯೆಂದರೆ ಕ್ಯಾಸ್‍ಲಿಂಗ್. ಎರಡು ಕಾಯಿಗಳು ಒಂದೇ ನಡೆಯಲ್ಲಿ ಕ್ರಮಿಸುವುದು ಈ ಒಂದು ಉದಾಹರಣೆಯಲ್ಲಿ ಮಾತ್ರ. 

ಎದುರಾಳಿಯ ಯಾವುದೇ ಕಾಯಿ ರಾಜನ ಮೇಲೆ ದಾಳಿ ನಡೆಸುವುದಕ್ಕೆ ಚೆಕ್ ಎಂದು ಹೆಸರು. ಚೆಕ್ ಇಂದ ತಪ್ಪಿಸಿಕೊಳ್ಳುವುದಕ್ಕೆ ಆಗದಿದ್ದಲ್ಲಿ ಚೆಕ್ ಮೇಟ್. ರಾಜನನ್ನು ನಡೆಸುವಾಗ ಚೆಕ್ ಬರುವ೦ಥ ಯಾವುದೇ ಚೌಕಕ್ಕೆ ಅದನ್ನು ಚಲಿಸುವ೦ತಿಲ್ಲ. ಹಾಗೆಯೇ, ಚೆಕ್ ಇದ್ದಾಗ, ಕ್ಯಾಸ್‍ಲಿಂಗ್ ನಡೆಯನ್ನು ಮಾಡುವಹಾಗಿಲ್ಲ.

ಆಟ ಪ್ರಾರಂಭವಾಗುವಾಗ,

ಗಮನಿಸಿ: ಸಾಲುಗಳ ಸಂಖ್ಯ ಬಿಳಿಯ ಕಾಯಿ ನಡೆಸುವ ಸ್ಪರ್ಧಿಯ ಕಡೆಯಿಂದ.




#Article 226: ವಿಶ್ವ ತಂಬಾಕು ನಿಷೇಧ ದಿನ (200 words)


ವಿಶ್ವ ತಂಬಾಕು ನಿಷೇಧ ದಿನವು  ವಿಶ್ವ ಪರ್ಯಂತ ಪ್ರತಿ ವರ್ಷ ೩೧ ಮೆ ಯಂದು  ಆಚರಿಸಲಾಗುತ್ತದೆ
ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು  ೧೯೮೭ರ ಇಸವಿಯಲ್ಲಿ ತಂಬಾಕು  ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು  ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು..೧೯೮೭ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸ೦ಸ್ಥೆಯು ತ೦ಬಾಕು ರಹಿತ ದಿನದ ಆಚರಗೆಯ ಬಗ್ಗೆ ಅದಿನೂಚನೆ ಹೊರಡಿಸಿತು.ವಿಶ್ವ ಆರೋಗ್ಯ ಸ೦ಸ್ಥೆಯು ಆರೋಗ್ಯದ ದೃಷ್ಟಿಯಿ೦ದ ತ೦ಬಾಕು ನಿಷೇಧ ಬಗ್ಗೆ ಚಿ೦ತನೆಯನ್ನು ಕೈಗೊ೦ಡಿತು.ತ೦ಬಾಕು ಸೇವನೆಯಿ೦ದ ಪ್ರತಿ ವರ್ಷ ಪ್ರಪ೦ಚದಾದ್ಯ೦ತ ಆರು ಮಿಲಿಯ೦ನ್ ಅಷ್ಟು ಜನರು ಮರಣ ಹೊ೦ದುತಿದ್ದಾರೆ.

ಧೂಮಪಾನ ಕೆಟ್ಟದ್ದು ಆದರೆ ಧೂಮಪಾನಿಗಳು ಕೆಟ್ಟವರಲ್ಲ.ಆದುದರಿ೦ದ ಸರ್ಕಾರ ಮನುಷ್ಯನ ಭವಿಶ್ಯದ ಬಗ್ಗೆ ಚಿ೦ತಿಸಿ ತ೦ಬಾಕು ನಿಷೇಧವನ್ನು ಮಾಡುತ್ತಾರೆ.ಭಾರತ ದೇಶದಲ್ಲಿ ಕ್ಯಾನ್ಸರ್ ಹೆತ್ತ ಸೊಸೈಟಿ ರೆಡ್ ಕ್ರಾಸ್ ಸ೦ಸ್ಥೆ,ಯೆನ್ ಜಿ ಒ,ಮು೦ತಾದ ಸ೦ಸ್ಥೆಗಳು ತ೦ಬಾಕಿನ ದುಷ್ಪರಿಣಾಮಗಳ ಬಗ್ಗೆ ಹಲವು ಉಪನ್ಯಾಸ ಗಳನ್ನು,ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು

ಮೂಡುತ್ತಿವೆ.ಹಾಗೆಯೇ ತ೦ಬಾಕಿನ ಯಾವುದೇ ರೀತಿಯ ಜಾಹಿರಾತಿಗೂ ಅವಕಾಶ ಕೊಡುತಿಲ್ಲ.ತಮಿಳುನಾಡಿನಲ್ಲಿ ಕ್ಯಾನ್ಸರ್ ಸ೦ಸ್ಥೆ ತ೦ಬಾಕು ನಿಯ೦ತ್ರಣ ತೆರೆದಿದೆ.

ಇದರ ಮುಖ್ಯ ಉದ್ದೇಶವೆ೦ದರೆ ಒ೦ದು ಸ೦ಪೂರ್ಣ ದಿನ ಅ೦ದು ಘ೦ಟೆಗಳ ಕಾಲ ಯಾವುದೇ ರೀತಿಯ ತ೦ಬಾಕು ಇರುವ ವಸ್ತುಗಳನ್ನು ಸೇವಿಸದಿರುವುದು ಅಥವಾ ಉಪಯೋಗಿಸದೆ ಇರುವುದು.

ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಅ೦ದರೆ ೩೦-೪೦ ಹರೆಯದವರಿಗಿ೦ತ ಹೆಚ್ಚಾಗಿ ಯುವಕರೆ ಹೆಚ್ಚಾಗಿ ತ೦ಬಾಕು ಇರುವ ವಸ್ತುಗಳನ್ನು ಸೇವಿಸುತಿದ್ದಾರೆ.ಉವಕರಿಗೆ ಅದರಿ೦ದ ಹಾಗುವ ಹಾನಿ,ತೊ೦ದರೆಗಳನ್ನು ಅರ್ಥಮಾಡಿಸಲು ಈ ದಿನ ಒ೦ದು ಪ್ರಯತ್ನ ಇದನ್ನು ವಿಶ್ವದಾದ್ಯ೦ತೆ ಆಚರಿಸುತ್ತಾರೆ.

ತ೦ಬಾಕು ಸೇವನೆಯಿ೦ದ ಆಗುತ್ತಿರುವ ಸಾವಿನ ಸ೦ಖ್ಯೆಯು ಕ್ಷೀಣವಾಗಿ ಹೆಚ್ಚುತ್ತಲೇ ಇದೆ.ಸಿಗರೇಟ್ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತಾರೆ.ಹೀಗೆ ತಮಗೆ ಕಾಯಿಲೆಯನ್ನು ತ೦ದುಕೊಳ್ಳುವುದಲ್ಲದೆ ಇ ಚಟ ಇಲ್ಲದೆ ಜನಕ್ಕೂ ಅವರೂ ಕಾಯಿಲೆಗಳನ್ನು ಬರಿಸುತ್ತಾರೆ.ಹೀಗಾಗಿ ಬಹಳಷ್ಟು ಜನ ಸಾಯುತ್ತಾರೆ.ಇದನ್ನು ತಡೆಯುವ ದಿನವನ್ನು ಆಚರಿಸುತ್ತಾರೆ.

ಈ ದಿನವನ್ನು ಬೂದಿ ಟ್ರೇ ಗಳಲ್ಲಿ ಧೂಮುಗಳನ್ನು ಇಟ್ಟು ಆಚರಿಸುತ್ತಾರೆ.ತ೦ಬಾಕು ಹಾಗು ಅದರಿ೦ದ ತಯಾರಿಸುವ ವಸ್ತುಗಳಿ೦ದ ಆಗುವ ಹಾನಿ ತಡೆಗಟ್ಟಲು ಈ ದಿನ ಆಚರಿಸುವರು.




#Article 227: ಸ್ವಿಟ್ಜರ್ಲ್ಯಾಂಡ್ (6007 words)


ಸ್ವಿಟ್ಜರ್ಲೆಂಡ್‌‌ (  , , ), ಅಧಿಕೃತವಾಗಿ ಸ್ವಿಸ್‌ ಒಕ್ಕೂಟ (ಲ್ಯಾಟಿನ್‌ನಲ್ಲಿ ಕಾನ್‌ಪೊಡೆರೇಷ್ಯೋ ಹೆಲ್ವೆಟಿಕಾ, ಆದ್ದರಿಂದ ಇದರ ISO ರಾಷ್ಟ್ರ ಸಂಕೇತಗಳಾಗಿ CH ಮತ್ತು CHEಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ ಭೂಪ್ರದೇಶದಿಂದ ಆವೃತವಾದ ಪರ್ವತ ಪ್ರದೇಶ ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ ಪಶ್ಚಿಮ ಯೂರೋಪ್‌ನ ರಾಷ್ಟ್ರವಾಗಿದೆ.
ಸ್ವಿಟ್ಜರ್ಲೆಂಡ್‌‌ ಕ್ಯಾಂಟನ್‌ಗಳೆಂದು ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್‌ ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು ಜಾಗತಿಕ ಮಹಾನಗರಗಳಾದ ಜಿನೀವಾ ಮತ್ತು ಜ್ಯೂರಿಚ್‌ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ. ಸ್ವಿಟ್ಜರ್ಲೆಂಡ್‌‌ ಕನಿಷ್ಟ ತಲಾವಾರು GDP $67,384ನ್ನು ಹೊಂದಿ ತಲಾ ಸಮಗ್ರ ದೇಶೀಯ ಉತ್ಪನ್ನದ ಆಧಾರದಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಜ್ಯೂರಿಚ್‌ ಮತ್ತು ಜಿನೀವಾಗಳು ಅನುಕ್ರಮವಾಗಿ ವಿಶ್ವದಲ್ಲೇ ಎರಡನೇ ಮತ್ತು ಮೂರನೇ ಉನ್ನತ ಜೀವನ ಮಟ್ಟವನ್ನು ಹೊಂದಿರುವ ನಗರಗಳಾಗಿ ಶ್ರೇಯಾಂಕಿತಗೊಂಡಿವೆ. ಸ್ವಿಟ್ಜರ್ಲೆಂಡ್‌‌ ಉತ್ತರದಲ್ಲಿ ಜರ್ಮನಿಯನ್ನು, ಪಶ್ಚಿಮದಲ್ಲಿ ಫ್ರಾನ್ಸ್‌ನ್ನು, ದಕ್ಷಿಣದಲ್ಲಿ ಇಟಲಿ ಮತ್ತು ಪೂರ್ವದಲ್ಲಿ ಲಿಯೆಕ್‌ಟೆನ್ಸ್ಟೀನ್‌, ಆಸ್ಟ್ರಿಯಾಗಳನ್ನು ಗಡಿಯಾಗಿ ಹೊಂದಿದೆ. ಈ ರಾಷ್ಟ್ರವು ದೀರ್ಘಕಾಲೀನ ಅಲಿಪ್ತ ನೀತಿಯ ಇತಿಹಾಸವನ್ನು ಹೊಂದಿದೆ—1815ರಿಂದ ಇಲ್ಲಿಯವರೆಗೆ ಯಾವುದೇ ಅಂತರರಾಷ್ಟ್ರೀಯ ಯುದ್ಧಗಳಲ್ಲಿ ಭಾಗವಹಿಸಿಲ್ಲ — ಮತ್ತು ರೆಡ್‌ ಕ್ರಾಸ್‌, ವಿಶ್ವ ವ್ಯಾಪಾರ ಸಂಘಟನೆ ಮತ್ತು U.N.ನ ಎರಡು ಐರೋಪ್ಯ ಶಾಖೆಗಳಲ್ಲಿ ಒಂದು ಶಾಖೆಯೂ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಸಂಘಟನೆಗಳಿಗೆ ಆತಿಥೇಯನಾಗಿದೆ. ಈ ರಾಷ್ಟ್ರವು ಐರೋಪ್ಯ ಒಕ್ಕೂಟದ ಭಾಗವಾಗದೇ ಇದ್ದರೂ, ಇದು ಷೆಂಗನ್‌ ಒಪ್ಪಂದಕ್ಕೆ ಬದ್ಧವಾಗಿದೆ.
ಜರ್ಮನ್‌, ಫ್ರೆಂಚ್‌, ಇಟಾಲಿಯನ್‌ ಮತ್ತು ರೋಮನ್ಷ್‌ ಎಂಬ ನಾಲ್ಕು ಭಾಷೆಗಳನ್ನು ರಾಷ್ಟ್ರಭಾಷೆಗಳಾಗಿ ಹೊಂದಿರುವ ಸ್ವಿಟ್ಜರ್ಲೆಂಡ್‌‌ ಬಹುಭಾಷಿಕ ರಾಷ್ಟ್ರವಾಗಿದೆ. ರಾಷ್ಟ್ರದ ಔಪಚಾರಿಕ ಹೆಸರು ಜರ್ಮನ್‌ ಭಾಷೆಯಲ್ಲಿ , ಫ್ರೆಂಚ್‌ನಲ್ಲಿ , ಇಟಾಲಿಯನ್‌ ಭಾಷೆಯಲ್ಲಿ  ಮತ್ತು ರೋಮಾನ್ಷ್‌ನಲ್ಲಿ  ಎಂದಾಗಿದೆ. ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌‌ನ ಸ್ಥಾಪನೆಯು 1291ರ ಆಗಸ್ಟ್‌ 1ರಲ್ಲಿ ಆಗಿದ್ದುದರಿಂದ; ಸ್ವಿಸ್ ರಾಷ್ಟ್ರೀಯ ದಿನವನ್ನು ಅಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ.

ಸ್ವಿಟ್ಜರ್ಲೆಂಡ್‌‌  ಎಂಬ ಆಂಗ್ಲ ಹೆಸರು ಸ್ವಿಸ್‌ನ 16ರಿಂದ 19ನೇ ಶತಮಾನಗಳವರೆಗೆ ಬಳಕೆಯಲ್ಲಿದ್ದು ಈಗ ಬಳಕೆಯಲ್ಲಿಲ್ಲದ ರೂಪಾಂತರ ಸ್ವಿಟ್ಜರ್‌  ಪದವನ್ನು ಹೊಂದಿದ್ದ ಸಂಯುಕ್ತ ಪದವಾಗಿದೆ.  ಆಂಗ್ಲ ಪದ ಸ್ವಿಸ್  ಎಂಬುದು ಫ್ರೆಂಚ್‌ನಿಂದ ಕಡ ಪಡೆದುಕೊಂಡ  , 16ನೇ ಶತಮಾನದಿಂದಲೂ ಬಳಕೆಯಲ್ಲಿರುವ ಗುಣವಾಚಕವಾಗಿದೆ. ಸ್ವಿಟ್ಜರ್‌  ಎಂಬ ಹೆಸರು ಅಲೆಮಾನ್ನಿಕ್‌ ಮೂಲದ್ದಾಗಿದ್ದು  , ಸ್ಕ್ವಿಜ್‌  ಅದರ ಸಂಬಂಧಿತ ಪ್ರಾಂತ್ಯಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶ ಹಳೆಯ ಸ್ವಿಸ್ ಒಕ್ಕೂಟದ ಕೇಂದ್ರವಾಗಿ ಪರಿಣಮಿಸಿದ ವಾಲ್ಡ್‌ಸ್ಟಾಟ್ಟೆನ್‌ ಕ್ಯಾಂಟನ್‌ಗಳಲ್ಲಿ ಒಂದಾಗಿತ್ತು. ಪ್ರಾಥಮಿಕವಾಗಿ ಹಳೆಯ ಉನ್ನತ ಜರ್ಮನ್‌   ಎಂಬುದಾಗಿ ಸ್ಥಳನಾಮವನ್ನು 972ರಲ್ಲೇ ದೃಢೀಕೃತಗೊಳಿಸಲಾಗಿತ್ತು. ಇದು ಬಹುಶಃ ದಹಿಸಲು  ಎಂಬರ್ಥದಲ್ಲಿ ನಗರವನ್ನು ಕಟ್ಟಲು ಅರಣ್ಯವನ್ನು ದಹಿಸಿ ತೆರವುಗೊಳಿಸಿದ್ದನ್ನು ನೆನಪಿಸಲು ಇರಬಹುದು. ಈ ಹೆಸರು ನಂತರ ಕ್ಯಾಂಟನ್ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳಿಗೆ ವಿಸ್ತರಿಸಲಾಯಿತು. ಒಂದು ಭಾಗದ ಹೆಸರನ್ನು ಪೂರ್ಣ ಪ್ರದೇಶಕ್ಕೆ  ಬಳಸುವ ರೀತಿಯಲ್ಲಿ 1499ರ ಸ್ವಾಬಿಯನ್‌ ಯುದ್ಧದ ನಂತರ ಇದು ಇಡೀ ಒಕ್ಕೂಟವನ್ನು ಇದೇ ಹೆಸರಿಂದ ಕರೆಯಲಾಯಿತು.ರಾಷ್ಟ್ರದ ಸ್ವಿಸ್ ಜರ್ಮನ್‌ ಹೆಸರು   ಕ್ಯಾಂಟನ್ ಮತ್ತು ವಸಾಹತುಗಳ ಹೆಸರಿಗೆ ಸಮಾನಾರ್ಥಕವಾಗಿದ್ದರೂ , ನಿರ್ದಿಷ್ಟ ಅನುಚ್ಛೇದಗಳಿಂದ ಪ್ರತ್ಯೇಕಿಸಲಾಗಿದೆ(ಒಕ್ಕೂಟಕ್ಕೆ  , ಆದರೆ ಕ್ಯಾಂಟನ್ ಮತ್ತು ಪಟ್ಟಣಗಳಿಗೆ ಸರಳವಾಗಿ   ಎಂದು ಕರೆಯಲಾಗಿದೆ).
 
ನೆಪೋಲಿಯನ್‌ನ ಹೆಲ್ವೆಟಿಕ್‌ ಗಣರಾಜ್ಯಕ್ಕೆ ಮರಳಿ ನವೀನ-ಲ್ಯಾಟಿನ್‌ ಹೆಸರಾದ ಕಾನ್‌ಫೊಡರೇಷಿಯೋ ಹೆಲ್ವೆಟಿಕಾ  ಎಂಬುದನ್ನು ಒಕ್ಕೂಟ ರಾಷ್ಟ್ರದ ಸ್ಥಾಪನೆಯಾದ 1848ರಲ್ಲಿ ಪರಿಚಯಿಸಲಾಯಿತು.
ರೋಮನ್‌ ಯುಗದ ಮುನ್ನ ಸ್ವಿಸ್ ಪ್ರಸ್ಥಭೂಮಿಯಲ್ಲಿ ವಾಸವಾಗಿದ್ದ ಕೆಲ್ಟಿಕ್‌ ಬುಡಕಟ್ಟು ಜನಾಂಗದ ಹೆಸರಿನಿಂದ ಹೆಲ್ವೆಟೀ  ಎಂಬುದು ಈ ಹೆಸರಿಗೆ ಮೂಲವಾಗಿತ್ತು. ಹೆಲ್ವೆಟೀ  ಎಂಬ ಹೆಸರು ಇಟ್ರಸ್ಕನ್‌ ರೂಪದಲ್ಲಿ ಶಾಸನ ಬದ್ಧವಾಗಿ, ಸುಮಾರು 300 BC ಕಾಲದ ಹಡಗಿನ ಮೇಲೆ ದೃಢಪಡಿಸಲಾಗಿತ್ತು.  ಈ ಹೆಸರುಗಳು ಇತಿಹಾಸ ಶಾಸ್ತ್ರದಲ್ಲಿ ಮೊದಲು 2ನೇ ಶತಮಾನ BCಯ ಸಮಯದಲ್ಲಿನ, ಪೋಸಿಡೊನಿಯಸ್‌ ರಚಿತ ಇತಿಹಾಸದಲ್ಲಿ ಕಾಣಿಸಿಕೊಳ್ಳುತ್ತವೆ.
ಜೋಹಾನ್ನ್‌ ಕ್ಯಾಸ್ಪರ್‌ ವೇಸನ್‌ಬಕ್‌ ಎಂಬಾತನ 1672ರಲ್ಲಿ ಬರೆದ ನಾಟಕದಲ್ಲಿ 17ನೇ ಶತಮಾನದ ಹೆಲ್ವೆಟಿಯಾ  ಸ್ವಿಸ್ ಒಕ್ಕೂಟದ ರಾಷ್ಟ್ರೀಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ.

ಸ್ವಿಟ್ಜರ್ಲೆಂಡ್‌‌‌ನಲ್ಲಿನ ಮಾನವ ಅಸ್ತಿತ್ವದ ಪ್ರಾಚೀನ ಕುರುಹುಗಳು 150,000 ವರ್ಷಗಳ ಹಿಂದಿನವು.  ಸ್ವಿಟ್ಜರ್ಲೆಂಡ್‌‌‌ನಲ್ಲಿನ ಗ್ಯಾಕ್‌ಲಿಂಗೆನ್‌ನಲ್ಲಿ ಪತ್ತೆಯಾದ ಕೃಷಿ ನೆಲೆಯೇ ಅತಿ ಹಳೆಯ ಪರಿಚಿತ ನೆಲೆಯಾಗಿದ್ದು , ಇದು ಸುಮಾರು 5300 BCಗಳಷ್ಟು ಹಳೆಯದಾಗಿದೆ.
ಈ ಪ್ರದೇಶದ ಅತಿ ಹಳೆಯ ಗೊತ್ತಿರುವ ಬುಡಕಟ್ಟು ಸಂಸ್ಕೃತಿಯೆಂದರೆ ಹಾಲ್‌ಸ್ಟಟ್‌ ಮತ್ತು ಲಾ ಟೆನೆ ಸಂಸ್ಕೃತಿಗಳು. ಲಾ ಟೆನೆ ನ್ಯೂಚಾಟೆಲ್‌ ಸರೋವರದ ಉತ್ತರದಲ್ಲಿರುವ ಉತ್ಖನನ ಕ್ಷೇತ್ರದಿಂದ ಪ್ರೇರಿತವಾಗಿ ಈ ಹೆಸರುಗಳನ್ನಿಡಲಾಗಿದೆ. ಲಾ ಟೆನೆ ಸಂಸ್ಕೃತಿಯು ಕಬ್ಬಿಣ ಯುಗದ ಉತ್ತರಾರ್ಧದಲ್ಲಿ ಸುಮಾರು 450 BCಯ ಕಾಲದಲ್ಲಿ ,  ಗ್ರೀಕ್‌ ಮತ್ತು ಎಟ್ರುಸ್ಕನ್‌ ನಾಗರೀಕತೆಗಳ ಪ್ರಭಾವದಲ್ಲಿ ಬೆಳೆದು ಏಳಿಗೆ ಹೊಂದಿತು. ಸ್ವಿಸ್ ಪ್ರದೇಶದ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಪ್ರಮುಖವಾದದ್ದೆಂದರೆ ಹೆಲ್ವೆಟೀ. 58ನೇ ಇಸವಿ BCಯಲ್ಲಿ, ಬಿಬ್ರಾಕ್ಟ್‌‌ ಕಾಳಗದಲ್ಲಿ, ಜ್ಯೂಲಿಯಸ್‌ ಸೀಜರ್‌'ನ ಸೇನೆಯು ಹೆಲ್ವೆಟೀಯನ್ನು ಪರಾಭವಗೊಳಿಸಿತು.  15 BC ಕಾಲದಲ್ಲಿ ರೋಮ್‌ನ ಎರಡನೇ ಚಕ್ರವರ್ತಿಯಾಗುತ್ತಿದ್ದ , ಟಿಬೆರಿಯಸ್‌ I, ಮತ್ತು ಆತನ ಸಹೋದರ, ಡ್ರೂಸಸ್‌, ಆಲ್ಫ್ಸ್‌ ಪ್ರದೇಶವನ್ನು ವಶಪಡಿಸಿಕೊಂಡು ರೋಮ್‌ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಹೆಲ್ವೆಟೀಯು ಆಕ್ರಮಿಸಿದ ಪ್ರದೇಶ—ನಂತರದ ಕಾನ್‌ಫೊಡರೇಷಿಯೋ ಹೆಲ್ವೆಟಿಕಾ ದ ನಾಮ ಮಾತ್ರ ಭಾಗವಾಗಿದ್ದ —ಮೊದಲು ರೋಮ್‌ನ ಗಲ್ಲಿಯಾ ಬೆಲ್ಜಿಕಾ ಪ್ರಾಂತ್ಯದ ಭಾಗವಾಗಿತ್ತು. ನಂತರ ಆಗಿನ ತನ್ನ ಜರ್ಮೇನಿಯಾ ಸುಪೀರಿಯರ್‌ ಪ್ರಾಂತ್ಯದ ಭಾಗವಾಗಿತ್ತು. ಆಧುನಿಕ ಸ್ವಿಟ್ಜರ್ಲೆಂಡ್‌‌‌ನ ಪೂರ್ವ ಭಾಗವು ರಯೇಶ್ಯಾ ಎಂಬ ರೋಮ್‌ ಪ್ರಾಂತ್ಯದೊಂದಿಗೆ ವಿಲೀನವಾಗಿತ್ತು. 

ಮಧ್ಯ ಯುಗದ ಪೂರ್ವಭಾಗದಲ್ಲಿ, 4ನೇ ಶತಮಾನದಿಂದ, ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್‌‌‌ನ ಪಶ್ಚಿಮ ಹರವಿನ ಪ್ರದೇಶವು ಬರ್ಗಂಡಿಯನ್‌ ಅರಸರ ಸೀಮೆಗೆ ಒಳಪಟ್ಟಿತ್ತು. ಅಲೆಮಾನ್ನಿಗಳು ಸ್ವಿಸ್‌ ಪ್ರಸ್ಥಭೂಮಿಯಲ್ಲಿ 5ನೇ ಶತಮಾನದಲ್ಲಿ ನೆಲೆಗೊಂಡರೆ, ಆಲ್ಪ್ಸ್‌ ಕಣಿವೆಗಳಲ್ಲಿ 8ನೇ ಶತಮಾನದಲ್ಲಿ ನೆಲೆಗೊಂಡು ಅಲೆಮಾನ್ನಿಯಾ ಪ್ರದೇಶವನ್ನು ರೂಪಿಸಿದರು. ಆಧುನಿಕ-ಕಾಲದ ಸ್ವಿಟ್ಜರ್ಲೆಂಡ್‌‌ ಅಲೆಮಾನ್ನಿಯಾ ಮತ್ತು ಬರ್ಗಂಡಿ ಅಧಿಪತ್ಯಗಳ ನಡುವೆ ಹಂಚಿಹೋಗಿತ್ತು.  6ನೇ ಶತಮಾನದಲ್ಲಿ ಇಡೀ ಪ್ರದೇಶವು , 504 ADಯ ಕಾಲದಲ್ಲಿ ಕ್ಲೋವಿಸ್‌ Iನ ಅಲೆಮಾನ್ನಿಗಳ ಮೇಲಿನ ಟೋಲ್‌‌ಬಿಯಾಕ್‌ನಲ್ಲಿನ ವಿಜಯದ ನಂತರ ಮತ್ತು ನಂತರದ ಬರ್ಗಂಡಿಯನ್ನರ ಫ್ರಾಂಕಿಷ್‌ ಪ್ರಭುತ್ವದಿಂದಾಗಿ ವಿಸ್ತರಿಸುತ್ತಿದ್ದ ಫ್ರಾಂಕಿಷ್‌ ಸಾಮ್ರಾಜ್ಯದ ಭಾಗವಾಗಿತ್ತು.

ಹಳೆಯ ಸ್ವಿಸ್ ಒಕ್ಕೂಟವು ಮಧ್ಯ ಆಲ್ಪ್ಸ್‌‌ ಪರ್ವತ ಶ್ರೇಣಿಯ ಕಣಿವೆಯ ಸಮುದಾಯಗಳಲ್ಲಿ ಒಂದು ಮೈತ್ರಿ ಒಕ್ಕೂಟವಾಗಿತ್ತು. ಒಕ್ಕೂಟವು ಸಮಾನ ಆಸಕ್ತಿ(ಸುಂಕ ಮುಕ್ತ ವ್ಯಾಪಾರ)ಗಳನ್ನು ಮತ್ತು ಪ್ರಮುಖ ಪರ್ವತ ಪ್ರದೇಶದ ವ್ಯಾಪಾರ ಮಾರ್ಗಗಳಲ್ಲಿ ಶಾಂತಿ ಕಾಪಾಡುವಿಕೆ ಮುಂತಾದವುಗಳ ನಿರ್ವಹಣೆ ನಡೆಸುತ್ತಿತ್ತು . ಇದೇ ಮಾದರಿಯ ಇನ್ನಿತರ ಮೈತ್ರಿಗಳು ದಶಕಗಳ ಹಿಂದೆಯೇ ಅಸ್ತಿತ್ವದಲ್ಲಿದ್ದಿರಬಹುದಾದರೂ, ಗ್ರಾಮೀಣ ಸಮುದಾಯಗಳಾದ ಯೂರಿ, ಸ್ಕ್ವಿಜ್‌, ಮತ್ತು ನಿಡ್‌ವಾಲ್ಡೆನ್‌ಗಳ ನಡುವಿನ 1291ರ ಒಕ್ಕೂಟ ಶಾಸನಪತ್ರವು ಒಕ್ಕೂಟ ನಿರ್ಮಾಣದ ಆಧಾರ ಸ್ತಂಭವೆಂದು ಪರಿಗಣಿಸಲ್ಪಟ್ಟಿದೆ.  

ಹಳೆಯ ಸ್ವಿಸ್ ಒಕ್ಕೂಟವು ಮುಂಚಿನ ಅನೇಕ ಯುದ್ಧಗಳಿಂದಾಗಿ ಅಜೇಯತೆಯ ಕೀರ್ತಿ ಪಡೆದಿತ್ತು. ಆದರೆ ಒಕ್ಕೂಟದ ವಿಸ್ತರಣೆ ಮಾಡುವಾಗ 1515ರಲ್ಲಿ ಮಾರಿಗ್ನಾನೋ ಕಾಳಗದಲ್ಲಿನ ಸ್ವಿಸ್ ಸೋಲು ಹಿನ್ನಡೆ ಕಾಣುವಂತೆ ಮಾಡಿತು. ಇದು ಸ್ವಿಸ್ ಚರಿತ್ರೆಯ ಧೀರ ಯುಗದ ಮುಕ್ತಾಯಕ್ಕೆ ನಾಂದಿ ಹಾಡಿತು.  ಝ್ವಿಂಗ್ಲಿಯ ಸುಧಾರಣೆಯ ಯಶಸ್ಸು ಕೆಲ ಕ್ಯಾಂಟನ್‌ಗಳಲ್ಲಿ 1529 ಮತ್ತು 1531ರಲ್ಲಿ (ಕಪ್ಪೆಲರ್‌ ಕ್ರೀಗ್‌ ) ಅಂತರ-ಕ್ಯಾಂಟನ್ ಯುದ್ಧಗಳಿಗೆ ಕಾರಣವಾಯಿತು. ಈ ಆಂತರಿಕ ಯುದ್ಧಗಳು ನಡೆದ ನೂರು ವರ್ಷಕ್ಕೂ ಹೆಚ್ಚಿನ ಕಾಲದ ನಂತರವೇ, 1648ರಲ್ಲಿ, ವೆಸ್ಟ್‌ಫಾಲಿಯಾ ಒಪ್ಪಂದದ ಅಂಗವಾಗಿ, ಐರೋಪ್ಯ ರಾಷ್ಟ್ರಗಳು ಪವಿತ್ರ ರೋಮ್‌ ಸಾಮ್ರಾಜ್ಯದಿಂದ ಸ್ವಿಟ್ಜರ್ಲೆಂಡ್‌‌‌ನ ಸ್ವತಂತ್ರತೆಯನ್ನು ಮತ್ತು ಅದರ ಅಲಿಪ್ತ ನೀತಿ()ಗೆ ಮಾನ್ಯತೆ ನೀಡಿದವು. 
ಸ್ವಿಸ್ ಚರಿತ್ರೆಯ ಪೂರ್ವ ಆಧುನಿಕ ಅವಧಿಯಲ್ಲಿ, ಶ್ರೀಮಂತ ವರ್ಗದ ಕುಟುಂಬಗಳ ಹೆಚ್ಚುತ್ತಿದ್ದ ಸರ್ವಾಧಿಕಾರಿತನವು ಮೂವತ್ತು ವರ್ಷಗಳ ಯುದ್ಧದ ನಂತರದ ಆರ್ಥಿಕ ಹಿನ್ನಡೆಯೊಂದಿಗೆ ಸೇರಿಕೊಂಡು 1653ರ ಸ್ವಿಸ್ ರೈತರ ದಂಗೆಗೆ ಕಾರಣವಾಯಿತು. ಈ ಹೋರಾಟಕ್ಕೆ ಹಿನ್ನೆಲೆಯಾಗಿ, ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಕ್ಯಾಂಟನ್‌ಗಳ ನಡುವಿನ ಸಂಘರ್ಷವು ಮುಂದುವರಿದು, 1656 ಮತ್ತು 1712ರಲ್ಲಿ ನಡೆದ ವಿಲ್‌ಮರ್ಗನ್‌ ಕಾಳಗಗಳ ರೂಪದಲ್ಲಿ ಹಿಂಸೆಯನ್ನು ಸ್ಫೋಟಿಸಿತು. 

 ಬರ್ನ್‌ ಕ್ಯಾಂಟನ್, ಲ್ಯೂಸರ್ನ್‌ ಮತ್ತು ಜ್ಯೂರಿಚ್‌ಗಳೊಂದಿಗೆ ಟಾಗ್ಸಾಟ್ಸುಂಗ್‌ (ಹಿಂದಿನ ಶಾಸಕಾಂಗ ಮತ್ತು ಕಾರ್ಯಾಂಗ ಸಮಿತಿ)ನ ಅಗ್ರಸ್ಥಾನ ವಹಿಸಿದ ಮೂರು ಕ್ಯಾಂಟನ್‌ಗಳಲ್ಲಿ ಒಂದಾಗಿದೆ. 1848ರಲ್ಲಿ ಕ್ಯಾಂಟನ್‌ಗಳ ರಾಜಧಾನಿಯನ್ನೇ ಒಕ್ಕೂಟದ ರಾಜಧಾನಿಯಾಗಿ ಮುಖ್ಯವಾಗಿ ಫ್ರೆಂಚ್‌ ಭಾಷಿಕರ ಪ್ರದೇಶಕ್ಕೆ ಸನಿಹವಿರುವುದರಿಂದ, ಆಯ್ಕೆ ಮಾಡಲಾಯಿತು. 
ಶ್ರೀಮಂತ ಕುಟುಂಬಗಳ ಅಧಿಕಾರ ಪುರ್ನಸ್ಥಾಪನೆಯು ಕೇವಲ ತಾತ್ಕಾಲಿಕವಾಗಿತ್ತು. 1839ರ ಜ್ಯೂರಿಪುಟ್ಷ್‌ ಹಿಂಸಾತ್ಮಕ ಘರ್ಷಣೆಗಳ ರಾಜಕೀಯ ಅಶಾಂತಿಯ ಅವಧಿಯ ನಂತರ, 1847ರಲ್ಲಿ ಕೆಲ ಕ್ಯಾಥೊಲಿಕ್‌ ಕ್ಯಾಂಟನ್‌ಗಳು ಪ್ರತ್ಯೇಕ ಮೈತ್ರಿಕೂಟ(ಸೋಂಡರ್‌ಬಂಡ್ಸ್‌ಕ್ರೇಗ್‌)ವನ್ನು ರಚಿಸಲು ನೋಡಿದಾಗ ಅಂತರ್ಯುದ್ಧ ಭುಗಿಲೆದ್ದಿತು.  ಈ ಕಲಹವು ನೂರರ ಆಸುಪಾಸಿನ ಸಂಖ್ಯೆಯ ಜೀವಗಳನ್ನು ಬಲಿ ತೆಗೆದುಕೊಂಡು ಸುಮಾರು ಕೆಲ ವಾರಗಳ ಮಟ್ಟಿಗೆ ನಡೆಯಿತು. ಇದಕ್ಕೆ ಪ್ರಮುಖ ಕಾರಣ  ವಿರೋಧಿಗಳಿಗೆಂದು ಉದ್ದೇಶಿಸಿದ ಆಕ್ರಮಣಗಳು ತಿರುಗುಬಾಣವಾದುದರಿಂದ ಸಂಭವಿಸಿದವು.  19ನೇ ಶತಮಾನದಲ್ಲಿ ನಡೆದ ಇತರೆ ಐರೋಪ್ಯ ದಂಗೆ ಮತ್ತು ಯುದ್ಧಗಳಿಗೆ ಹೋಲಿಸಿದರೆ ಸೋಂಡರ್‌ಬಂಡ್ಸ್‌ಕ್ರೇಗ್‌ನ ದಂಗೆ ಎಷ್ಟೇ ಅಲ್ಪ ಪ್ರಮಾಣದ್ದಾದರೂ ಸ್ವಿಸ್ ಜನರ ಮನಃಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್‌‌ನ ಸಮಾಜದ ಮೇಲೆ ಬಹಳ ಪ್ರಭಾವ ಬೀರಿತು.
ಈ ಯುದ್ಧವು ಇಡೀ ಸ್ವಿಸ್ ಪ್ರಾಂತ್ಯಕ್ಕೆ ತನ್ನ ಐರೋಪ್ಯ ನೆರೆಹೊರೆಯ ವಿರುದ್ಧ ಏಕತೆ ಮತ್ತು ಬಲದ ಸಾಮರ್ಥ್ಯದ ಅಗತ್ಯವನ್ನು ಮನದಟ್ಟು ಮಾಡಿಸಿತು. ಸ್ವಿಸ್ ಸಮಾಜದ ಎಲ್ಲಾ ವರ್ಗಗಳ ಜನರು ಕ್ಯಾಥೊಲಿಕ್‌, ಪ್ರೊಟೆಸ್ಟೆಂಟ್‌, ಪ್ರಗತಿಪರ ಇಲ್ಲವೇ ಸಾಂಪ್ರದಾಯಿಕ ಯಾವುದೇ ವರ್ಗಕ್ಕೆ ಸೇರಿರಲಿ, ಆರ್ಥಿಕ ಮತ್ತು ಧಾರ್ಮಿಕ ಆಸಕ್ತಿಗಳು ಒಂದುಗೂಡಿದರೆ ಕ್ಯಾಂಟನ್‌ಗಳ ಹಿತಾಸಕ್ತಿಗೆ ಹೆಚ್ಚು ಪೂರಕ ಎಂಬುದನ್ನು ಮನಗಂಡರು.
ಇದೇ ಕಾರಣದಿಂದ ಯೂರೋಪ್‌ನ ಇತರೆ ಭಾಗಗಳು ಕ್ರಾಂತಿಯ ಕೋಲಾಹಲ ಮತ್ತು ಗಲಭೆಗಳಿಂದ ನಲುಗುತ್ತಿದ್ದರೆ, ಇತ್ತ ಸ್ವಿಸ್‌ ಜನರು ಅಮೇರಿಕದ ಶೈಲಿಯಿಂದ ಪ್ರೇರಿತವಾಗಿ ಒಂದು ಒಕ್ಕೂಟ ವ್ಯವಸ್ಥೆಯ ವಾಸ್ತವಿಕವಾದ ಸಂವಿಧಾನವನ್ನು ರಚಿಸುವುದರಲ್ಲಿ ಮಗ್ನರಾಗಿದ್ದರು. ಈ ಸಂವಿಧಾನವು ಕ್ಯಾಂಟನ್‌ಗಳಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ವಯಮಾಡಳಿತ ನಡೆಸುವ ಹಕ್ಕನ್ನು ನೀಡಿ ಉಳಿದ ಅಧಿಕಾರವನ್ನು ಕೇಂದ್ರ ಸರಕಾರಕ್ಕೆ ನೀಡಿತು. ಕ್ಯಾಂಟನ್‌ಗಳ ಅಧಿಪತ್ಯಕ್ಕೆ ಬೆಂಬಲ ಸೂಚಿಸಿದವರಿಗೆ ಮನ್ನಣೆಯೊಂದಿಗೆ (ಸೋಂಡರ್‌ಬಂಡ್‌ ಕಂಟೋನ್‌), ರಾಷ್ಟ್ರೀಯ ಸಂಸತ್ತನ್ನು ಮೇಲ್ಮನೆ ( ಸ್ವಿಸ್ ಸಂಸ್ಥಾನಗಳ ಆಡಳಿತ ಮಂಡಳಿ, ಪ್ರತಿ ಕ್ಯಾಂಟನ್‌ಗೆ ಇಬ್ಬರು ಪ್ರತಿನಿಧಿಗಳ ಹಾಗೆ) ಮತ್ತು ಕೆಳಮನೆಯೆಂದು (ಸ್ವಿಟ್ಜರ್ಲೆಂಡ್‌‌ನ ರಾಷ್ಟ್ರೀಯ ಸಮಿತಿಗೆ ದೇಶಾದ್ಯಂತದ ಸದಸ್ಯರು ಆಯ್ಕೆಯಾಗಬಹುದು) ಎಂದು ವಿಭಜಿಸಲಾಯಿತು. ಸಂವಿಧಾನದ ಯಾವುದೇ ತಿದ್ದುಪಡಿಗೆ ಜನಾಭಿಪ್ರಾಯ ಸಂಗ್ರಹಣೆಯನ್ನು ಕಡ್ಡಾಯಗೊಳಿಸಲಾಗಿದೆ. ಏಕೀಕೃತ ತೂಕ ಮಾಪನೆ ಮತ್ತು ಅಳತೆಯ ವ್ಯವಸ್ಥೆಯನ್ನು ಪರಿಚಯಿಸಲಾಯಿತು. 1850ರಲ್ಲಿ ಸ್ವಿಸ್ ಫ್ರಾಂಕ್‌ ಅನ್ನು ಸ್ವಿಸ್‌ನ ಏಕೈಕ ನಾಣ್ಯ ಪದ್ಧತಿ ಮಾಡಲಾಯಿತು. ಸಂವಿಧಾನದ 11ನೇ ಅನುಚ್ಛೇದವು ವಿದೇಶಗಳಿಗೆ ಸೇನೆಯ ಸೇವೆ ನೀಡುವುದನ್ನು ಪ್ರತಿಬಂಧಿಸಿದರೂ, ಆಗಲೂ ಎರಡು ಸಿಸಿಲೀಸ್‌ನ ಫ್ರಾನ್ಸಿಸ್‌ IIನ ರಕ್ಷಣೆಯನ್ನು ಸ್ವಿಸ್ ರಕ್ಷಣಾ ಸಿಬ್ಬಂದಿ 1860ರ ಗೇಟಾನ ಮುತ್ತಿಗೆಯ ಸಂದರ್ಭದಲ್ಲಿ ನಿರ್ವಹಿಸಿ, ಸ್ವಿಸ್ ಜನರು ವಿದೇಶಿ ಸೇವೆಗೆ ಮುಕ್ತಾಯ ಹಾಡಿದರು.

ಸಂವಿಧಾನದ ಒಂದು ಪ್ರಮುಖ ವಿಧಿಯು ಅಗತ್ಯ ಬಿದ್ದರೆ ಇಡೀ ಸಂವಿಧಾನವನ್ನು ಪುನರ್ರಚನೆ ಮಾಡಬಹುದೆಂದು, ಹಾಗಾಗಿ ಇದನ್ನು ಒಮ್ಮೆ ಕೇವಲ ಒಂದು ತಿದ್ದುಪಡಿ ಮಾಡುವ ಬದಲಿಗೆ ಒಂದು ಸಮಗ್ರ ಸಂವಿಧಾನವಾಗಿ ರೂಪಿಸಲು ಸೂಚಿಸುತ್ತದೆ. ಈ ವಿಧಿಯ ಅಗತ್ಯವು ಜನಸಂಖ್ಯೆಯ ಹೆಚ್ಚಳ ಮತ್ತು ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾದ ಸಂದರ್ಭ ಒದಗಿದಾಗ ಎದ್ದುಕಾಣಿಸಿತು. 1872ರಲ್ಲಿ ರೂಪಿಸಿದ ಸಂವಿಧಾನದ ರೂಪರೇಖೆಯು ಸಮುದಾಯದಿಂದ ತಿರಸ್ಕೃತಗೊಂಡರೂ ಅದರಲ್ಲಿ ಮಾಡಿದ ಬದಲಾವಣೆಗಳಿಂದಾಗಿ 1874ರಲ್ಲಿ ಅಂಗೀಕೃತಗೊಂಡಿತು.  ಈ ಸಂವಿಧಾನವು ಒಕ್ಕೂಟದ ಹಂತದಲ್ಲಿ ಶಾಸನಗಳನ್ನು ಜಾರಿಗೆ ತರಲು ಅನುಜ್ಞಾತ್ಮಕ ಜನಾಭಿಪ್ರಾಯವನ್ನು ಪರಿಚಯಿಸಿತು. ಇದು ರಕ್ಷಣೆ, ವ್ಯಾಪಾರ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಪಟ್ಟಂತೆ ಒಕ್ಕೂಟಕ್ಕೆ ಹೊಣೆಗಾರಿಕೆಯನ್ನು ನೀಡಿತ್ತು.1891ರಲ್ಲಿ ಇಂದಿಗೂ ಅದ್ವಿತೀಯವಾಗಿರುವ ನೇರ ಪ್ರಜಾಪ್ರಭುತ್ವದ ದೃಢವಾದ ಅಂಶಗಳನ್ನು ಸೇರಿಸಿಕೊಂಡು ಸಂವಿಧಾನವನ್ನು ಪರಿಷ್ಕರಣೆ ಮಾಡಲಾಯಿತು. 

ಎರಡೂ ವಿಶ್ವಸಮರಗಳಲ್ಲಿ ಸ್ವಿಟ್ಜರ್ಲೆಂಡ್‌‌ ಆಕ್ರಮಿತವಾಗಿರಲಿಲ್ಲ. ವಿಶ್ವ ಸಮರ Iರ ಸಮಯದಲ್ಲಿ, ಸ್ವಿಟ್ಜರ್ಲೆಂಡ್‌‌ ವ್ಲಾಡಿಮಿರ್‌ ಇಲ್ಲಿಯಿಚ್‌ ಉಲ್ಯಾನೊವ್‌ (ಲೆನಿನ್‌)ಗೆ ಆಶ್ರಯ ಕೊಟ್ಟಿತ್ತು ಅಲ್ಲದೇ ಆತ 1917ರವರೆಗೆ ಅಲ್ಲಿಯೇ ಉಳಿದಿದ್ದ.  ಸ್ವಿಸ್ ಅಲಿಪ್ತ ನೀತಿಯು 1917ರ ಗ್ರಿಮ್‌-ಹಾಫ್‌ಮನ್‌ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ತೀವ್ರ ಟೀಕೆಗೊಳಗಾದರೂ, ಈ ವಿರೋಧವು ತಾತ್ಕಾಲಿಕವಾಗಿತ್ತು. 1920ರಲ್ಲಿ, ಸ್ವಿಟ್ಜರ್ಲೆಂಡ್‌‌ ಯಾವುದೇ ಸೈನಿಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ನಿಬಂಧನೆಯ ಮೇರೆಗೆ ಜಿನೀವಾದಲ್ಲಿ ನೆಲೆಸಿರುವ ಲೀಗ್‌ ಆಫ್‌ ನೇಷನ್ಸ್‌ಗೆ ಸೇರ್ಪಡೆಗೊಂಡಿತು. ವಿಶ್ವಸಮರ IIರ ಸಮಯದಲ್ಲಿ, ಜರ್ಮನ್ನರು ಈ ದೇಶದ ಮೇಲೆ ಆಕ್ರಮಣ ನಡೆಸಲು ದೀರ್ಘ ಯೋಜನೆಗಳನ್ನು ಹಾಕಿಕೊಂಡಿದ್ದರೂ, ಸ್ವಿಟ್ಜರ್ಲೆಂಡ್‌‌ ಯಾವುದೇ ದಾಳಿಗೊಳಗಾಗಲಿಲ್ಲ.  ಸೇನಾಬಲದ ಮೂಲಕ ನೀಡಿದ ವಿರೋಧ, ಜರ್ಮನಿಯೊಂದಿಗಿನ ರಿಯಾಯಿತಿಯ ಮಾತುಕತೆ ಹಾಗೂ ವಿಶ್ವ ಸಮರದ ಕಾಲದಲ್ಲಿನ ಇತರೆ ಮಹತ್ವದ ಘಟನೆಗಳಿಂದಾಗಿ ಉದ್ದೇಶಿತ ದಾಳಿ ನಡೆಯದಿದ್ದ ಉತ್ತಮ ಅದೃಷ್ಟ ಮುಂತಾದುವುಗಳ ಒಟ್ಟಾರೆ ಫಲವಾಗಿ ಸ್ವಿಟ್ಜರ್ಲೆಂಡ್‌‌ ತನ್ನ ಸ್ವತಂತ್ರತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.ಸ್ವಿಟ್ಜರ್ಲೆಂಡ್‌ನ ಪುಟ್ಟ ನಾಜಿ ಪಕ್ಷವು ಮಾಡಿದ ಜರ್ಮನಿಯ ಮೇಲಿನ ಆಕ್ರಮಣದ ಪ್ರಯತ್ನವು ಶೋಚನೀಯವಾಗಿ ವಿಫಲವಾಯಿತು. ಸ್ವಿಸ್ ಮುದ್ರಣ ಮಾಧ್ಯಮವು ತೃತೀಯ ಜರ್ಮನ್‌ ಸಾಮ್ರಾಜ್ಯವನ್ನು, ಸಾಕಷ್ಟು ಬಾರಿ ಜರ್ಮನಿಯ ನೇತಾರರನ್ನು ಉದ್ರೇಕಿಸುವಂತೆ ಬಲವಾಗಿ ಟೀಕಿಸುತ್ತಿತ್ತು. ಜನರಲ್‌ ಹೆನ್ರಿ ಗುಸನ್‌ರ ನೇತೃತ್ವದಲ್ಲಿ ಬೃಹತ್‌ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಸನ್ನದ್ಧಗೊಳಿಸಲು ಆದೇಶಿಸಲಾಯಿತು. ಕೇವಲ ಗಡಿ ಪ್ರದೇಶದಲ್ಲಿ ಆರ್ಥಿಕ ಕೇಂದ್ರಗಳನ್ನು ರಕ್ಷಿಸುತ್ತಿದ್ದ ಸ್ಥಾಯೀ ರಕ್ಷಣಾ ನೀತಿಯಿಂದ ಹಿಂದೆ ಸರಿದು ದೀರ್ಘಕಾಲೀನ ವ್ಯವಸ್ಥಿತ ನಿರಂತರ ಸವೆಸುವ ಯುದ್ಧ ನಡೆಸುವಿಕೆ ಮತ್ತು ಆಲ್ಫ್ಸ್‌ ಪರ್ವತ ಶ್ರೇಣಿಯ ಎತ್ತರದ ಸ್ಥಳಗಳಲ್ಲಿ ರೀಡ್ಯುಟ್‌ ಎಂದು ಹೆಸರಾದ ಸದೃಢ ಉತ್ತಮ ಆಯುಧ ದಾಸ್ತಾನು ಹೊಂದಿರುವ ಪ್ರದೇಶಗಳಿಗೆ ಹಿಂತಿರುಗುವ ಮಾದರಿಯ ನೂತನ ಯುದ್ಧನೀತಿಯನ್ನು ಸ್ವಿಸ್‌ ಪಡೆ ಬದಲಿಸಿಕೊಂಡಿದೆ. ಸ್ವಿಟ್ಜರ್ಲೆಂಡ್‌‌ ಆಕ್ಸಿಸ್‌ ಮತ್ತು ಮಿತ್ರದೇಶಗಳ ನಡುವಿನ ದ್ವಿಪಕ್ಷೀಯ ಬೇಹುಗಾರಿಕೆ ಮತ್ತು ಆಗಾಗ್ಗೆ ನಡೆಯುತ್ತಿದ್ದ ಮಧ್ಯಸ್ಥಿಕೆಯ ಮಾತುಕತೆಗಳಿಗೆ ನೆಲೆಯಾಗಿತ್ತು. ಜಿನೀವಾದಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ರೆಡ್‌ಕ್ರಾಸ್‌ ಸಂಘಟನೆಯು ಈ ತರಹದ ಹಾಗೂ ಇನ್ನಿತರ ಸಂಘರ್ಷಗಳಲ್ಲಿ ಪ್ರಧಾನ ಪಾತ್ರ ವಹಿಸಿತ್ತು. 
ಸ್ವಿಟ್ಜರ್ಲೆಂಡ್‌‌ನ ವಾಣಿಜ್ಯೋದ್ಯಮವನ್ನು ಮಿತ್ರಪಕ್ಷಗಳು ಮತ್ತು ಆಕ್ಸಿಸ್‌ ದೇಶಗಳೆರಡೂ ದಿಗ್ಬಂಧಿಸಿದ್ದವು. ಜರ್ಮನಿಯ ತೃತೀಯ ಸಾಮ್ರಾಜ್ಯಕ್ಕೆ ಆರ್ಥಿಕ ಸಹಕಾರ ಮತ್ತು ಸಾಲದ ಕಾಲಾವಧಿಯ ವಿಸ್ತರಣೆಗಳು ಆಕ್ರಮಣದ ಸಾಧ್ಯಾಸಾಧ್ಯತೆಗಳ ಗ್ರಹಿಕೆಯ ಮೇಲೆ ಮತ್ತು ಇನ್ನಿತರ ವಾಣಿಜ್ಯ ಪಾಲುದಾರ ದೇಶಗಳ ಲಭ್ಯತೆಯ ಮೇಲೆ ಬದಲಾಗುತ್ತಿದ್ದವು. ಈ ರಿಯಾಯಿತಿಗಳು ವಿಚಿ ಫ್ರಾನ್ಸ್‌‌ ಮೂಲಕ ಹಾದುಹೋಗುತ್ತಿದ್ದ ನಿರ್ಣಾಯಕ ರೈಲ್ವೆ ಸಂಪರ್ಕವೊಂದನ್ನು 1942ರಲ್ಲಿ ಆಕ್ರಮಿಸಿ ಸ್ವಿಟ್ಜರ್ಲೆಂಡ್‌‌ ಸಂಪೂರ್ಣವಾಗಿ ಆಕ್ಸಿಸ್‌ ದೇಶಗಳಿಂದ ಸುತ್ತುವರೆಯುವ ಹಾಗೆ ಮಾಡಿದ ಸಮಯದಲ್ಲಿ ಗರಿಷ್ಠ ಮಟ್ಟ ಮುಟ್ಟಿತು. ವಿಶ್ವ ಸಮರದ ಅವಧಿಯಲ್ಲಿ 104,000 ಮಂದಿ ವಿದೇಶೀ ಸೈನಿಕರೂ ಸೇರಿದಂತೆ ಸುಮಾರು 300,000 ನಿರಾಶ್ರಿತರನ್ನು ಹೇಗ್‌ ಒಡಂಬಡಿಕೆಗಳಲ್ಲಿ ಸೂಚಿಸಲಾಗಿದ್ದ ಅಲಿಪ್ತ ರಾಷ್ಟ್ರಗಳ ಹಕ್ಕು ಮತ್ತು ಬಾಧ್ಯತೆ ಗಳಿಗೆ ಅನುಗುಣವಾಗಿ ನಿರ್ಬಂಧಕ್ಕೊಳಪಡಿಸಿತು. ನಿರಾಶ್ರಿತರಲ್ಲಿ 60,000 ಜನರು ನಾಜಿಗಳ ಹಿಂಸೆಯಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ಅವರಲ್ಲಿ 26,000ರಿಂದ 27,000 ಮಂದಿ ಯಹೂದಿಗಳಾಗಿದ್ದರು. ಆದರೂ, ನಾಜಿ ಜರ್ಮನಿಯೊಂದಿಗಿನ ಆರ್ಥಿಕ ಸಂಬಂಧಗಳು ಹಾಗೂ ಕಟ್ಟುನಿಟ್ಟಾದ ವಲಸೆ ಮತ್ತು ಆಶ್ರಯ ನೀತಿಗಳು ವಾದವಿವಾದಗಳಿಗೆ ಕಾರಣವಾದವು.  ಯುದ್ದ ಸಮಯದಲ್ಲಿ , ಸ್ವಿಸ್ ವಾಯುದಳವು ಎರಡೂ ಪಡೆಗಳ ಯುದ್ಧವಿಮಾನಗಳೊಂದಿಗೆ ಹೋರಾಟ ನಡೆಸಿತಲ್ಲದೇ 11 ಒಳನುಗ್ಗುತ್ತಿದ್ದ ಲುಫ್ಟ್‌ವಾಫ್ಫೆ ವಿಮಾನಗಳನ್ನು 1940ರ ಮೇ ಮತ್ತು ಜೂನ್‌ನಲ್ಲಿ ಹೊಡೆದುರುಳಿಸಿತು. ಜರ್ಮನಿಯಿಂದ ಯುದ್ಧ ಬೆದರಿಕೆ ಗ್ರಹಿಸಿದ ನಂತರ ಯುದ್ಧನೀತಿ ಬದಲಾಯಿಸಿ ಇನ್ನಿತರ ಆಕ್ರಮಣಕಾರರನ್ನು ನೆಲಕಚ್ಚಿಸಿತು. ಸಮರದಲ್ಲಿ 100ಕ್ಕೂ ಹೆಚ್ಚಿನ ಮಿತ್ರಪಕ್ಷಗಳ ಬಾಂಬರ್‌ ವಿಮಾನಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ವಶಪಡಿಸಿಕೊಂಡಿತು. 1944-45ರ ಸಮಯದಲ್ಲಿ, ಮಿತ್ರ ಪಕ್ಷಗಳ ಬಾಂಬರ್‌ ವಿಮಾನಗಳು ಪ್ರಮಾದವಶಾತ್‌ ಸ್ವಿಸ್ ಪಟ್ಟಣಗಳ ಸ್ಕಾಫ್‌ಹಾಸೆನ್‌ ( 40 ಮಂದಿ ಕೊಲ್ಲಲ್ಪಟ್ಟರು ), ಸ್ಟೇನ್‌ ಆಮ್‌ ರೇಯ್ನ್‌, ವಾಲ್ಸ್‌, ರಫ್ಸ್‌‌ (18 ಮಂದಿ ಕೊಲ್ಲಲ್ಪಟ್ಟರು)ಗಳ ಮೇಲೆ ದಾಳಿ ನಡೆಸಿದವು ಮತ್ತು 1945ರ ಮಾರ್ಚ್‌ 4ರಂದು ಬಸೆಲ್‌ ಮತ್ತು ಜ್ಯೂರಿಚ್‌ ಗಳ ಮೇಲೆ ಕುಖ್ಯಾತ ಬಾಂಬ್‌ ದಾಳಿ ನಡೆಯಿತು.

(ಸ್ವಿಸ್‌ ಅಧ್ಯಕ್ಷರನ್ನು ಪ್ರತಿ ವರ್ಷ ಮೇಲ್ಕಂಡ ಏಳು ಜನ ಸದಸ್ಯರ ಉಚ್ಚ ಸಮಿತಿಯಲ್ಲೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ, ಹಾಗೂ ಯಾವುದೇ ಅಭ್ಯರ್ಥಿ ಸತತವಾಗಿ ಎರಡು ಅವಧಿಗೆ ಆಯ್ಕೆಯಾಗಲು ಅವಕಾಶವಿರುವುದಿಲ್ಲ). ಎರಡನೇ ಅಧ್ಯಕ್ಷೆಯಾಗಿ 2007ರಲ್ಲಿ ಮಿಷೆಲಿನ್‌ ಕಾಲ್ಮಿ-ರೇ ಎಂಬಾಕೆ ಉಚ್ಚ ಹುದ್ದೆಯನ್ನೇರಿದರು. ಆಕೆ ಫ್ರೆಂಚ್‌ ಭಾಷಿಕ ಕ್ಯಾಂಟನ್‌ ಆದ (ಜೆನ್‌ಫ್‌ ಎಂದು ಜರ್ಮನ್‌‌ ಭಾಷೆಯಲ್ಲಿ, ಜಿನರ್ವಾ ಎಂದು ಇಟಾಲಿಯನ್‌ ಭಾಷೆಯಲ್ಲಿ ಕರೆಯಲಾಗುವ) ಜೆನೆವ್‌ನ ಪಶ್ಚಿಮ ಭಾಗದ ಮೂಲದವರು. ಆಕೆ ಪ್ರಸ್ತುತ ಏಳು ಜನ ಸದಸ್ಯರ ಸಚಿವ ಸಂಪುಟ/ಉಚ್ಚ ಸಮಿತಿಯಲ್ಲಿ ತನ್ನ ಸಹೋದ್ಯೋಗಿಗಳಾಗಿ ಇನ್ನಿಬ್ಬರು ಮಹಿಳೆಯರನ್ನು ಎಂದರೆ, ಆರ್ಗಾವ್‌ ಕ್ಯಾಂಟನ್‌ನ ಡೋರಿಸ್‌ ಲ್ಯೂಥರ್ಡ್‌ ಹಾಗೂ ಗ್ರಾವುಬುಂಡೆನ್‌ ಕ್ಯಾಂಟನ್‌ನ ಎವೆಲಿನ್‌ ವಿಡ್ಮರ್‌-ಷ್ಲುಂಫ್‌ರನ್ನು ಹೊಂದಿದ್ದಾರೆ. 
ಸ್ವಿಟ್ಜರ್ಲೆಂಡ್‌ ಯೂರೋಪ್‌ ಆಡಳಿತ ಮಂಡಲಿಗೆ 1963ರಲ್ಲಿ ಸೇರ್ಪಡೆಯಾಯಿತು. ಬರ್ನ್‌ ಕ್ಯಾಂಟನ್‌ನ ಕೆಲ ಪ್ರದೇಶಗಳು ಬರ್ನ್‌ ಜನರಿಂದ ಸ್ವಾತಂತ್ರ್ಯ ಪಡೆದು ಜ್ಯೂರಾ ಕ್ಯಾಂಟನ್‌‌ ಎಂಬ ಹೊಸದೊಂದು ಕ್ಯಾಂಟನ್‌‌ನ್ನು 1979ರಲ್ಲಿ  ರಚಿಸಿಕೊಂಡವು. 1999ರ ಏಪ್ರಿಲ್‌ 18ರಂದು ಜನಸಮುದಾಯ ಹಾಗೂ ಕ್ಯಾಂಟನ್‌ಗಳು ಸಂಪೂರ್ಣ ಪರಿಷ್ಕರಿಸಿದ ಒಕ್ಕೂಟ ಸಂವಿಧಾನವನ್ನು ರಚಿಸಲು ಬೆಂಬಲಿಸಿದವು. 

ಸ್ವಿಸ್ ಸಂಸತ್ತು ಎರಡು ಸಭೆಗಳನ್ನು ಹೊಂದಿದೆ : ಪ್ರತಿ ಕ್ಯಾಂಟನ್ ನಿಗದಿಪಡಿಸಿದ ವ್ಯವಸ್ಥೆಯಂತೆ ಆಯ್ಕೆಯಾಗಿರುವ 46 ಪ್ರತಿನಿಧಿಗಳನ್ನೊಳಗೊಂಡಿರುವ (ಪ್ರತಿ ಕ್ಯಾಂಟನ್‌ನಿಂದ ಇಬ್ಬರು ಮತ್ತು ಪ್ರತಿ ಅರೆ-ಕ್ಯಾಂಟನ್‌ನಿಂದ ಒಬ್ಬರು ಸೇರಿದಂತೆ) ಸಂಸ್ಥಾನಗಳ ಸಮಿತಿ, ಮತ್ತು ಪ್ರತಿ ಕ್ಯಾಂಟನ್‌‌ನ ಜನಸಂಖ್ಯೆಯ ಮೇಲೆ ಆಧಾರಿತವಾಗಿ ಅನುಪಾತಾಧರಿತ ಪ್ರತಿನಿಧಿತ್ವದ ಮೂಲಕ ಆಯ್ಕೆಯಾದ 200 ಸದಸ್ಯರನ್ನು ಹೊಂದಿರುವ ರಾಷ್ಟ್ರೀಯ ಸಮಿತಿಯನ್ನು ಹೊಂದಿದೆ. ಎರಡೂ ಸಭೆಗಳ ಸದಸ್ಯರು 4 ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ. ಎರಡೂ ಸಭೆಗಳು ಜಂಟಿ ಅಧಿವೇಶನವನ್ನು ನಡೆಸುವ ಸಂದರ್ಭದಲ್ಲಿ, ಆ ಸಭೆಗಳನ್ನು ಒಟ್ಟಿಗೆ ಒಕ್ಕೂಟ ಶಾಸನ ಸಭೆ ಎಂದು ಕರೆಯಲಾಗುತ್ತದೆ. ಜನಾಭಿಪ್ರಾಯ ಸಂಗ್ರಹಣೆಗಳ ಮೂಲಕ, ನಾಗರಿಕರು ಸಂಸತ್ತು ಅಂಗೀಕರಿಸಿದ ಯಾವುದೇ ಮಸೂದೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದಾಗಿದ್ದು, ಮತ್ತು ಶಾಸನಹಕ್ಕುಗಳ ಮೂಲಕ ಒಕ್ಕೂಟ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡುವಂತೆ ಕೋರಬಹುದು. ಇದರಿಂದಾಗಿ ಸ್ವಿಟ್ಜರ್ಲೆಂಡ್‌‌ ನೇರ ಪ್ರಜಾ ಪ್ರಭುತ್ವವನ್ನು ಹೊಂದಿರುವ ರಾಷ್ಟ್ರವೆನ್ನಬಹುದಾಗಿದೆ. 
ಒಕ್ಕೂಟ ಸಮಿತಿಯು ಒಕ್ಕೂಟ ಸರ್ಕಾರವನ್ನು ರಚಿಸುವುದಲ್ಲದೇ, ಒಕ್ಕೂಟ ಆಡಳಿತವನ್ನು ನಿರ್ದೇಶಿಸುತ್ತದೆ. ಇದರಿಂದಾಗಿ ಒಕ್ಕೂಟದ ವ್ಯವಸ್ಥೆಯ ನೇತಾರನಾಗಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿಯು ಒಕ್ಕೂಟ ಶಾಸನಸಭೆಯಿಂದ ನಾಲ್ಕು ವರ್ಷ ಅವಧಿಗೆ ಚುನಾಯಿತರಾದ ಏಳು ಮಂದಿ ಸಹೋದ್ಯೋಗಿಗಳನ್ನು ಹೊಂದಿರುವ ಸಮಿತಿಯಾಗಿದೆ. ಈ ಸಮಿತಿಯ ಕಾರ್ಯವೈಖರಿಯ ಮೇಲೆ ಶಾಸನಸಭೆಯು ಮೇಲ್ವಿಚಾರಣೆ ನಡೆಸುತ್ತದೆ. ಈ ಏಳು ಮಂದಿ ಸದಸ್ಯರಲ್ಲಿ ಒಬ್ಬರನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಶಾಸನಸಭೆಯು ಆಯ್ಕೆ ಮಾಡುತ್ತದೆ. ಇದು ಸಾಂಪ್ರದಾಯಿಕವಾಗಿ ವಾರ್ಷಿಕವಾಗಿ ಆವರ್ತನದಲ್ಲಿ ಆಯ್ಕೆ ಮಾಡಲಾಗುತ್ತದೆ; ಅಧ್ಯಕ್ಷರು ಸರ್ಕಾರದ ನೇತೃತ್ವವನ್ನು ವಹಿಸಿಕೊಳ್ಳುವುದಲ್ಲದೇ, ಪ್ರಾತಿನಿಧಿಕ ಕಾರ್ಯಗಳನ್ನು ನಡೆಸುತ್ತಾರೆ. ಆದರೂ ಅಧ್ಯಕ್ಷರು ಯಾವುದೇ ಹೆಚ್ಚಿನ ಅಧಿಕಾರವಿಲ್ಲದೆಯೇ ಹಿರಿಯ ಸಹೋದ್ಯೋಗಿಯಾಗಿದ್ದುಕೊಂಡು, ಆಡಳಿತ ಮಂಡಳಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. 

ಒಕ್ಕೂಟದ ಸರ್ವೋಚ್ಚ ನ್ಯಾಯಾಲಯವು ಇತರೆ ಒಕ್ಕೂಟ ನ್ಯಾಯಾಲಯಗಳ ಹಾಗೂ ಕ್ಯಾಂಟನ್‌ ನ್ಯಾಯಾಲಯಗಳ ತೀರ್ಪುಗಳ ಮೇಲೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ಮಾತ್ರ ಪರಿಶೀಲಿಸುತ್ತದೆ. ನ್ಯಾಯಾಧೀಶರು ಒಕ್ಕೂಟ ಶಾಸನಸಭೆಯಿಂದ ಆರು ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. 

ಸ್ವಿಸ್ ನಾಗರೀಕರು ಮೂರು ಹಂತದ ಕಾನೂನುಗಳ ವ್ಯಾಪ್ತಿಗೆ ಒಳಪಡುತ್ತಾರೆ : ಅವೆಂದರೆ ಪಂಗಡ, ಕ್ಯಾಂಟನ್ ಮತ್ತು ಒಕ್ಕೂಟ ಹಂತಗಳು. 1848ರ ಒಕ್ಕೂಟ ಸಂವಿಧಾನವು ನೇರ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಿರೂಪಿಸಿದೆ (ಸಂಸದೀಯ ಪ್ರಜಾಪ್ರಭುತ್ವ ಸಂಸ್ಥೆಗಳೂ ಇದರ ಭಾಗವಾದುದರಿಂದ ಕೆಲವೊಮ್ಮೆ  ಅರೆ-ನೇರ  ಅಥವಾ ಪ್ರಾತಿನಿಧಿಕ ನೇರ ಪ್ರಜಾಪ್ರಭುತ್ವವೆಂದೂ ಕರೆಯಲ್ಪಡುತ್ತದೆ). ಪೌರ ಹಕ್ಕುಗಳೆಂದು ಕರೆಯಲಾಗುವ ಒಕ್ಕೂಟದ ಮಟ್ಟದಲ್ಲಿ ಸ್ವಿಸ್ ನೇರ ಪ್ರಜಾಪ್ರಭುತ್ವದ ದಸ್ತೈವಜುಗಳು, (ವೊಲ್ಕ್ಸರೆಚ್ಟ್‌ , ಡ್ರಾಯಿಟ್ಸ್‌ ಸಿವಿಕ್ಸ್‌ ), ಸಂವಿಧಾನಾತ್ಮಕ ಶಾಸನಹಕ್ಕು ಗಳನ್ನು ಚಲಾಯಿಸುವ ಮತ್ತು ಜನಾಭಿಪ್ರಾಯ ಸಂಗ್ರಹಣೆಯನ್ನು  ದಾಖಲಿಸುವ ಹಕ್ಕುಗಳನ್ನು ನೀಡುತ್ತವೆ, ಇವೆರಡೂ ಸಾಂವಿಧಾನಿಕ ನಿರ್ಣಯಗಳನ್ನು ಬದಲಿಸಬಹುದಾಗಿರುತ್ತವೆ. 
ನಾಗರೀಕರ ಗುಂಪೊಂದು ಒಕ್ಕೂಟದ ಜನಾಭಿಪ್ರಾಯ ಸಂಗ್ರಹಣೆ ಯ ಮೂಲಕ ಸಂಸತ್ತು ಅಂಗೀಕರಿಸಿದ ಶಾಸನವೊಂದನ್ನು ಅದು ಅಂಗೀಕೃತವಾದ 100 ದಿನಗಳೊಳಗೆ ವಿರೋಧಿಸುವ 50,000 ಮಂದಿಯ ಸಹಿಯನ್ನು ಪಡೆಯುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ. ಹಾಗಿದ್ದ ಪಕ್ಷದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮತ ಚಲಾವಣೆಯನ್ನು ನಡೆಸಿ ಸರಳ ಬಹುಮತದ ಮೂಲಕ ಮತದಾರರು ಶಾಸನಕ್ಕೆ ಅಂಗೀಕಾರ ಇಲ್ಲವೇ ತಿರಸ್ಕಾರ ಸೂಚಿಸಬಹುದಾಗಿರುತ್ತದೆ. ಯಾವುದೇ ಎಂಟು ಕ್ಯಾಂಟನ್‌ಗಳು ಒಕ್ಕೂಟ ಶಾಸನದ ವಿರುದ್ಧ ಒಟ್ಟಿಗೆ ಜನಾಭಿಪ್ರಾಯ ಕೋರುವ ಸೌಲಭ್ಯ ಸಹಾ ಇದೆ.  

ಇದೇ ಮಾದರಿಯಲ್ಲಿ, ನಾಗರಿಕರಿಗೆ ಒಕ್ಕೂಟದ ಸಂವಿಧಾನಾತ್ಮಕ ಹಕ್ಕು ಗಳು ನೀಡುವ ಸೌಲಭ್ಯದ ಮುಖಾಂತರ 18 ತಿಂಗಳುಗಳೊಳಗೆ 100,000 ಮತದಾರರ ಸಹಿ ಪಡೆದುಕೊಂಡು   ಪ್ರಸ್ತಾಪಿತ ಸಂವಿಧಾನಾತ್ಮಕ ತಿದ್ದುಪಡಿಗಳನ್ನೂ ಸಹಾ ರಾಷ್ಟ್ರೀಯ ಮತದಾನಕ್ಕೆ ಹಾಕಬಹುದಾಗಿದೆ.  ಸಂಸತ್ತು ಹೀಗೆ ಪ್ರಸ್ತಾಪಿಸಿದ ತಿದ್ದುಪಡಿಗೆ ಪೂರಕ ಪ್ರತಿ-ಪ್ರಸ್ತಾವನೆಯನ್ನು ಸಲ್ಲಿಸಬಹುದಾಗಿದ್ದು, ನಂತರ ಚುನಾವಣೆಯಲ್ಲಿ ಎರಡೂ ಪ್ರಸ್ತಾವಗಳು ಅಂಗೀಕೃತವಾದರೆ ಮತದಾರರು ತಮ್ಮ ಆದ್ಯತೆಯನ್ನು ತಿಳಿಸಬೇಕಾಗಿರುತ್ತದೆ. ಶಾಸನ ಹಕ್ಕುಗಳ ಮೂಲಕ ಇಲ್ಲವೇ ಸಂಸತ್ತಿನ ಮೂಲಕ ಆದ ಸಂವಿಧಾನಾತ್ಮಕ ತಿದ್ದುಪಡಿಗಳು, ರಾಷ್ಟ್ರೀಯ ಜನಪ್ರಿಯತೆಯ ಮತ ಹಾಗೂ ಕ್ಯಾಂಟನ್‌ಗಳ ಆಂತರಿಕ ಮತಗಳೆರಡರಲ್ಲೂ ಉಭಯ ಬಹುಮತ ಪಡೆಯುವುದು ಕಡ್ಡಾಯ.    

ಸ್ವಿಸ್ ಒಕ್ಕೂಟ 26 ಕ್ಯಾಂಟನ್‌ಗಳನ್ನು ಹೊಂದಿದೆ: 

ಅವುಗಳ ಜನಸಂಖ್ಯೆಯು 15,000ದಿಂದ (ಅಪ್ಪೆನ್‌ಜೆಲ್‌ ಇನ್ನರ್‌ಹೋಡೆನ್‌) 1,253,500ದ ವರೆಗೆ ವ್ಯತ್ಯಾಸವಾಗಿದ್ದರೆ (ಜ್ಯೂರಿಚ್‌ ), ಮತ್ತು ಅವುಗಳ ವಿಸ್ತೀರ್ಣ 37 km²ರಿಂದ (ಬಸೆಲ್‌ -ಸ್ಟಾಡ್ಟ್‌) 7,105 km²ವರೆಗೆ (ಗ್ರಾವುಬುಂಡೆನ್‌) ಭಿನ್ನಭಿನ್ನವಾಗಿವೆ. ಕ್ಯಾಂಟನ್‌ಗಳು ಒಟ್ಟು 2,889 ಪೌರಸಂಸ್ಥೆಗಳನ್ನೊಳಗೊಂಡಿವೆ. ಸ್ವಿಟ್ಜರ್ಲೆಂಡ್‌‌ನೊಳಗೇ ಎರಡು ಪರಾಧೀನ ಪ್ರದೇಶಗಳಿವೆ, ಅವುಗಳಲ್ಲಿ : ಬುಸಿಂಗೆನ್‌ ಜರ್ಮನಿಗೆ ಸೇರಿದ್ದರೆ, ಕ್ಯಾಂಪಿಯೋನೆ ಡಿ'ಇಟಾಲಿಯಾ ಇಟಲಿಗೆ ಸೇರಿದೆ.
ಆಸ್ಟ್ರಿಯಾದ ರಾಜ್ಯವಾಗಿದ್ದ ವೋರಾರ್ಲ್‌ಬರ್ಗ್‌ನಲ್ಲಿ 1919ರ ಮೇ 11ರಂದು ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ 80%ಗೂ ಮಿಕ್ಕಿದ ಜನರು ತಮ್ಮ ರಾಜ್ಯವನ್ನು ಸ್ವಿಸ್ ಒಕ್ಕೂಟಕ್ಕೆ ವಿಲೀನಗೊಳಿಸುವುದನ್ನು ಬೆಂಬಲಿಸಿದರು.  ಆದರೂ, ಈ ವಿಲೀನವನ್ನು ಆಸ್ಟ್ರಿಯಾ ಸರ್ಕಾರ, ಮಿತ್ರದೇಶಗಳು, ಸ್ವಿಸ್‌ ಉದಾರವಾದಿಗಳು, ಸ್ವಿಸ್-ಇಟಾಲಿಯನ್‌ರು (ಸ್ವಿಟ್ಜರ್ಲೆಂಡ್‌ನ ಇಟಾಲಿಯನ್‌ ಭಾಗದಲ್ಲಿ ವಾಸಿಸುವ ಸ್ವಿಸ್ ದೇಶೀಯರು‌, ನಕ್ಷೆ ಪರಿಶೀಲಿಸಿ) ಮತ್ತು ರೋಮಂಡ್‌ಗಳು (ಸ್ವಿಟ್ಜರ್ಲೆಂಡ್‌ನ ಫ್ರೆಂಚ್‌-ಭಾಷಿಕ ಪ್ರದೇಶಗಳಲ್ಲಿ ವಾಸಿಸುವ ಸ್ವಿಸ್ ದೇಶೀಯರು‌, ನಕ್ಷೆ ಪರಿಶೀಲಿಸಿ) ಮುಂತಾದವರು ತಡೆದರು. 

ಸಾಂಪ್ರದಾಯಿಕವಾಗಿ ಸ್ವಿಟ್ಜರ್ಲೆಂಡ್‌‌ ಸೇನಾ, ರಾಜಕೀಯ ಅಥವಾ ನೇರ ಆರ್ಥಿಕ ಕಾರ್ಯಾಚರಣೆಗಳಿಗೆ ಸಂಬಂಧಿಸಬಹುದಾದ ಯಾವುದೇ ಮೈತ್ರಿಗಳಿಂದ ದೂರ ಉಳಿದಿದೆ. 1515ರಲ್ಲಿ ಅದರ ವಿಸ್ತರಣೆಯಾದ ನಂತರದಿಂದ ಅಲಿಪ್ತವಾಗಿ ನಡೆದುಕೊಂಡಿದೆ.  ಕೇವಲ 2002ರಲ್ಲಿ ಸ್ವಿಟ್ಜರ್ಲೆಂಡ್‌‌ ಸಂಯುಕ್ತ ರಾಷ್ಟ್ರ ಸಂಘದ ಪೂರ್ಣ ಪ್ರಮಾಣದ ಸದಸ್ಯತ್ವ ಪಡೆಯಿತಾದರೂ,  ಈ ರಾಷ್ಟ್ರವು ಜನಾಭಿಪ್ರಾಯದ ಮೂಲಕವಾಗಿ ಸೇರಿದ ಪ್ರಪ್ರಥಮ ರಾಷ್ಟ್ರವಾಗಿತ್ತು. ಸ್ವಿಟ್ಜರ್ಲೆಂಡ್‌‌ ಬಹುಪಾಲು ಎಲ್ಲಾ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವುದಲ್ಲದೇ ಐತಿಹಾಸಿಕವಾಗಿ ಇತರೆ ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಾ ಬಂದಿದೆ.  ಸ್ವಿಟ್ಜರ್ಲೆಂಡ್‌‌ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆದಿಲ್ಲ; ಸ್ವಿಸ್ ನಾಗರಿಕರು 1990ರ ದಶಕದ ಪೂರ್ವ ಭಾಗದಿಂದಲೇ ನಿರಂತರವಾಗಿ ತಿರಸ್ಕರಿಸುತ್ತಾ ಬಂದಿದ್ದಾರೆ.  

ಅಸಾಧಾರಣ ಸಂಖ್ಯೆಯ ಅಂತರರಾಷ್ಟ್ರೀಯ ಸಂಸ್ಥೆಗಳು, ಭಾಗಶಃ ಈ ರಾಷ್ಟ್ರದ ಅಲಿಪ್ತ ನೀತಿಯ ಕಾರಣದಿಂದ ತಮ್ಮ ಪೀಠಗಳನ್ನು ಸ್ವಿಟ್ಜರ್ಲೆಂಡ್‌‌ನಲ್ಲಿ ಸ್ಥಾಪಿಸಿವೆ. 1863ರಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಅಲ್ಲಿ ಸ್ಥಾಪಿಸಲಾಯಿತಲ್ಲದೇ ಈಗಲೂ ಅದರ ಸಾಂಘಿಕ ಕೇಂದ್ರವು ಅದೇ ದೇಶದಲ್ಲಿದೆ. ಜಿನೀವಾನಲ್ಲಿ ಐರೋಪ್ಯ ಪ್ರಸರಣಾ ಒಕ್ಕೂಟವು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಸ್ವಿಟ್ಜರ್ಲೆಂಡ್‌‌ ಸಂಯುಕ್ತ ರಾಷ್ಟ್ರ ಸಂಘಕ್ಕೆ ಇತ್ತೀಚೆಗೆ ಸೇರ್ಪಡೆಯಾದರೂ ಸಹಾ, ಜಿನೀವಾ ನಗರವು, ಸಂಯುಕ್ತ ರಾಷ್ಟ್ರ ಸಂಘದ ನ್ಯೂಯಾರ್ಕ್‌ ನಂತರದ ಎರಡನೇ ಅತಿ ದೊಡ್ಡ ಕೇಂದ್ರವಾಗಿದೆ. ಸ್ವಿಟ್ಜರ್ಲೆಂಡ್‌‌ ಲೀಗ್‌ ಆಫ್‌ ನೇಷನ್ಸ್‌‌ನ ಸ್ಥಾಪಕ ಸದಸ್ಯನಾಗಿದೆ. ಸಂಯುಕ್ತ ರಾಷ್ಟ್ರ ಸಂಘದ ಪ್ರಧಾನ ಕೇಂದ್ರವಾಗಿರುವುದಲ್ಲದೇ, ಜಿನೀವಾ ಅನೇಕ UN ಉಪಸಂಸ್ಥೆಗಳ ಕಚೇರಿಗಳನ್ನು ಉದಾಹರಣೆಗೆ ವಿಶ್ವ ಆರೋಗ್ಯ ಸಂಸ್ಥೆ (WHO), ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ(ITU) ಮತ್ತು ಇನ್ನಿತರ ಸುಮಾರು 200 ಅಂತರರಾಷ್ಟ್ರೀಯ ಸಂಸ್ಥೆಗಳ ಕಚೇರಿಗಳನ್ನು ಹೊಂದಿದೆ. 

ಇಷ್ಟೇ ಅಲ್ಲದೇ ಅನೇಕ ಕ್ರೀಡಾ ಒಕ್ಕೂಟಗಳು ಮತ್ತು ಅಂತರರಾಷ್ಟ್ರೀಯ ಐಸ್‌‌ ಹಾಕಿ ಒಕ್ಕೂಟದಂತಹಾ ಸಂಸ್ಥೆಗಳು ದೇಶದುದ್ದಕ್ಕೂ ತಮ್ಮ ಕಚೇರಿಗಳನ್ನು ಹೊಂದಿವೆ. ಪ್ರಾಯಶಃ ಅವುಗಳಲ್ಲಿ ಪ್ರಮುಖವಾದವೆಂದರೆ ಲಾಸನ್ನೆಯಲ್ಲಿರುವ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ, ಜ್ಯೂರಿಚ್‌ನಲ್ಲಿರುವ FIFA (ಅಂತರರಾಷ್ಟ್ರೀಯ ಸಾಂಘಿಕ ಫುಟ್‌ಬಾಲ್‌ ಒಕ್ಕೂಟ), ಮತ್ತು UEFA (ಐರೋಪ್ಯ ಫುಟ್‌ಬಾಲ್‌ ಸಂಘಗಳ ಒಕ್ಕೂಟ). 

ವಿಶ್ವ ಆರ್ಥಿಕ ಮಾರುಕಟ್ಟೆ ಪ್ರತಿಷ್ಠಾನವು ಜಿನೀವಾದಲ್ಲಿ ಕೇಂದ್ರವನ್ನು ಹೊಂದಿದೆ. ಡಾವೋಸ್‌ನಲ್ಲಿ ನಡೆಯುವ ವಾರ್ಷಿಕ ಸಭೆಯಿಂದಾಗಿ ಇದು ಹೆಚ್ಚು ಪ್ರಸಿದ್ಧಿಯನ್ನು ಹೊಂದಿದೆ. ಈ ಸಭೆಯಲ್ಲಿ ಪ್ರಮುಖ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ರಾಜಕೀಯ ಧುರೀಣರನ್ನೂ ಒಂದೆಡೆ ಸೇರಿಸಿ ಆರೋಗ್ಯ ಮತ್ತು ಪರಿಸರಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ನಿವಾರಣೆಗೆಂದು ಪರಿಹಾರವನ್ನು ಚರ್ಚಿಸಲಾಗುತ್ತದೆ.

ಪದಾತಿ ದಳ ಮತ್ತು ವಾಯುದಳಗಳೂ ಸೇರಿದಂತೆ ಸ್ವಿಸ್ ಸೇನಾ ಪಡೆಗಳು ಪ್ರಮುಖವಾಗಿ ಬಲವಂತವಾಗಿ ಸೇನೆಗೆ ಸೇರಿದವರನ್ನು ಹೊಂದಿವೆ. ವೃತ್ತಿಪರ ಸೈನಿಕರ ಸೇನಾಪಡೆಯ 5 ಪ್ರತಿಶತದಷ್ಟು ಮಾತ್ರವೇ ಇದ್ದು, ಉಳಿದವರೆಲ್ಲಾ ಬಲವಂತದಿಂದ ಸೇನೆಗೆ ಸೇರಿಸಲ್ಪಟ್ಟ 20ರಿಂದ 34(ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ 50) ವರ್ಷ ವಯೋಮಿತಿಯ ನಾಗರಿಕರು ತುಂಬಿದ್ದಾರೆ. ಸ್ವಿಟ್ಜರ್ಲೆಂಡ್‌‌ ಭೂಪ್ರದೇಶದಿಂದ ಸುತ್ತುವರೆಯಲ್ಪಟ್ಟಿರುವುದರಿಂದ ಇಲ್ಲಿ ನೌಕಾಪಡೆಯಿಲ್ಲ, ಆದರೂ ನೆರೆಹೊರೆಯಲ್ಲಿ ಗಡಿಯನ್ನು ಹೊಂದಿರುವ ಸರೋವರ ಪ್ರದೇಶಗಳ ರಕ್ಷಣೆಗೆ ಸೇನಾ ಗಸ್ತು ದೋಣಿಗಳನ್ನು ಬಳಸಲಾಗುತ್ತದೆ. ವ್ಯಾಟಿಕನ್‌ ಸಿಟಿಯ ಸ್ವಿಸ್ ಪಹರೆದಾರಿಕೆ ಬಿಟ್ಟರೆ ಇತರೆ ವಿದೇಶೀ ಸೇನೆಗಳಿಗೆ ಸೇವೆ ಸಲ್ಲಿಸುವುದು ಸ್ವಿಸ್‌ ನಾಗರಿಕರಿಗೆ ನಿಷಿದ್ಧವಾಗಿದೆ. 

ಸ್ವಿಸ್ ಸೇನಾ ವ್ಯವಸ್ಥೆಯ ರಚನೆಯು ಅಲ್ಲಿನ ಸೈನಿಕರು ತಮ್ಮ ಖಾಸಗಿ ಶಸ್ತ್ರಗಳೂ ಸೇರಿದಂತೆ ಎಲ್ಲಾ ಖಾಸಗಿ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟಿರಬೇಕೆಂದು ನಿರ್ಬಂಧ ವಿಧಿಸಿದೆ. ಕೆಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಪದ್ಧತಿಯನ್ನು ವಿವಾದಾತ್ಮಕ ಹಾಗೂ ಅಪಾಯಕಾರಿ ಎಂಬ ಅಭಿಪ್ರಾಯ ಪಟ್ಟಿವೆ.  ಸೇನೆಗೆ ಕಡ್ಡಾಯವಾಗಿ ಸೇರಲೇಬೇಕೆಂಬ ನಿಬಂಧನೆ ಎಲ್ಲಾ ಪುರುಷ ಸ್ವಿಸ್ ನಾಗರಿಕರಿಗೆ ಮಾತ್ರ ಅನ್ವಯಿಸುತ್ತದೆ; ಸ್ತ್ರೀಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಬಹುದು. ಸಾಧಾರಣವಾಗಿ ಅವರು 19ನೇ ವಯಸ್ಸಿನಲ್ಲಿ ಸೇನೆಯ ದಾಖಲಾತಿಗೆ ಹಾಜರಾಗಲು ಆದೇಶ ಪಡೆಯುತ್ತಾರೆ. ಯುವ ಸ್ವಿಸ್‌ ನಾಗರಿಕರಲ್ಲಿ ಮೂರನೇ ಎರಡರಷ್ಟು ಮಂದಿ ಸೇವೆಗೆ ದಾಖಲಾಗಲು ಅರ್ಹತೆಯನ್ನು ಪಡೆದಿರುತ್ತಾರೆ; ಅರ್ಹತೆ ಪಡೆಯದವರಿಗೆ ಪರ್ಯಾಯ ಸೇವೆಯೂ ಸಹಾ ಲಭ್ಯ.  ವಾರ್ಷಿಕವಾಗಿ ಸುಮಾರು 20,000 ಮಂದಿ 18ರಿಂದ 21 ವಾರಗಳ ಕಾಲ ಸೇನೆಯ ಪ್ರಾಥಮಿಕ ತರಬೇತಿಯಲ್ಲಿ ಭಾಗವಹಿಸುತ್ತಾರೆ. ಸೇನೆ  XXI ಎಂಬ ಸುಧಾರಣೆಯನ್ನು 2003ರಲ್ಲಿ ಸಾರ್ವಜನಿಕ ಅಭಿಮತದ ಮೇರೆಗೆ ಅಳವಡಿಸಿಕೊಳ್ಳಲಾಯಿತು, ಸೇನೆ  95 ಎಂಬ ಹಿಂದಿನ ಪದ್ಧತಿಯನ್ನು ರದ್ದುಗೊಳಿಸಿ, ಅಗತ್ಯ ಸಿಪಾಯಿಗಳ ಗಣನೆಯನ್ನು 400,000ರಿಂದ 200,000ಕ್ಕೆ ಇಳಿಸಲಾಯಿತು. ಅವರಲ್ಲಿ 120,000 ಮಂದಿ ಸಕ್ರಿಯ ಸೇವೆಯಲ್ಲಿದ್ದು ಇತರೆ 80,000 ಮಂದಿ ಮೀಸಲು ಪಡೆಗೆ ಸೇರಿದವರು.  

ಸ್ವಿಟ್ಜರ್ಲೆಂಡ್‌ನ ಅಖಂಡತೆ ಮತ್ತು ಅಲಿಪ್ತತೆಯನ್ನು ಕಾಪಾಡಿಕೊಳ್ಳಲು ಸಮಗ್ರವಾಗಿ ಇದುವರೆವಿಗೆ ಮೂರು ಶಸ್ತ್ರಸಜ್ಜಿತ ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ಮೊದಲನೆಯದು 1870-71ರ ಫ್ರಾಂಕೋ-ಪ್ರಷ್ಯನ್‌ ಯುದ್ಧದ ಸಂದರ್ಭದಲ್ಲಿ ನಡೆದ ಕಾರ್ಯಾಚರಣೆ. ಆಗಸ್ಟ್‌ 1914ರಲ್ಲಿ ಹಠಾತ್‌ ಘೋಷಣೆಯಾದ ಪ್ರಥಮ ವಿಶ್ವ ಸಮರಕ್ಕೆ ಪ್ರತಿಕ್ರಿಯೆಯಾಗಿ ಎರಡನೆ ಕಾರ್ಯಾಚರಣೆಯನ್ನು ನಡೆಸಲಾಯಿತು. 1939ರ ಸೆಪ್ಟೆಂಬರ್‌ನಲ್ಲಿ ಆರಂಭಿಸಲಾದ ಮೂರನೇ ಸೈನಿಕ ಕಾರ್ಯಾಚರಣೆಯು ಜರ್ಮನಿಯಿಂದ ಪೋಲೆಂಡ್‌ ಮೇಲಿನ ಆಕ್ರಮಣಕ್ಕೆ ಪ್ರತಿಯಾಗಿ ನಡೆಸಿದ್ದುದಾಗಿತ್ತು; ಈ ಕಾರ್ಯಾಚರಣೆಗೆ ಹೆನ್ರಿ ಗ್ಯುಸೆನ್‌ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. 

ಅಲಿಪ್ತ ನೀತಿಯ ಕಾರಣದಿಂದಾಗಿ ಸೇನೆಯು ಇತರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸದಿದ್ದರೂ, ಇಲ್ಲಿನ ಸೇನೆಯು ವಿಶ್ವದಾದ್ಯಂತ ನಡೆಯುತ್ತಿರುವ ಶಾಂತಿಪಾಲನಾ ನಿಯೋಗಗಳ ಭಾಗವಾಗಿದೆ. 2000ನೇ ಇಸವಿಯಿಂದ ಸ್ವಿಸ್‌ ರಕ್ಷಣಾ ಇಲಾಖೆಯು ಕೃತಕ ಉಪಗ್ರಹ ಸಂವಹನವನ್ನು ಗಮನಿಸಲು ಓನಿಕ್ಸ್‌ ಗೂಢಚಾರಿ ಮಾಹಿತಿ ವ್ಯವಸ್ಥೆಯನ್ನು ಸಹಾ ಹೊಂದಿದೆ. 

ಶೀತಲ ಸಮರದ ಕೊನೆಯ ಭಾಗದಲ್ಲಿ ಸೈನಿಕ ಚಟುವಟಿಕೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಇಲ್ಲವೇ ಸಮಗ್ರ ಸೇನಾಪಡೆಯನ್ನೇ ನಿಷೇಧಿಸಲು ಯತ್ನಗಳು ನಡೆದವು (ಸೇನಾಪಡೆ ರಹಿತ ಸ್ವಿಟ್ಜರ್ಲೆಂಡ್‌ಗಾಗಿ ಗುಂಪನ್ನು ನೋಡಿ). 1989ರ ನವೆಂಬರ್‌ 26ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಗಮನಾರ್ಹ ಜನಾಭಿಪ್ರಾಯ ಸಂಗ್ರಹಣೆ ನಡೆದಾಗ ಈ ವಿಚಾರ ಸೋಲು ಕಂಡರೂ ಸಹಾ, ಈ ಬಗೆಗೆ ಜನರ ಒಲವು ಹೆಚ್ಚಾಗಿಯೇ ಇತ್ತು.  ಹಿಂದೆಯೇ ಉದ್ದೇಶಿಸಿದ್ದ ಆದರೆ 9/11 ದಾಳಿಯ ನಂತರ ನಡೆದ ಇದೇ ಮಾದರಿಯ ಜನಾಭಿಪ್ರಾಯ ಸಂಗ್ರಹಣೆಯು 77%ಕ್ಕೂ ಹೆಚ್ಚಿನ ಮತಗಳಿಂದ ಸೋಲು ಕಂಡಿತು.

ಆಲ್ಫ್ಸ್‌ ಪರ್ವತ ಶ್ರೇಣಿಯ ಉತ್ತರ ಮತ್ತು ದಕ್ಷಿಣ ಬದಿಗಳಲ್ಲಿ ಹರಡಿರುವ ಸ್ವಿಟ್ಜರ್ಲೆಂಡ್‌‌, ಕೇವಲ  41,285 ಚದರ ಕಿಲೋಮೀಟರ್‌ಗಳ (15,940 ಚ ಮೈ) ಸೀಮಿತ ವ್ಯಾಪ್ತಿಯಲ್ಲಿ ವೈವಿಧ್ಯಮಯ ಮಾದರಿಯ ವಿಶಾಲದೃಶ್ಯ ಮತ್ತು ಹವಾಗುಣವನ್ನು ಹೊಂದಿದೆ.  ಸರಾಸರಿ ಜನಸಾಂದ್ರತೆ ಪ್ರತಿ ಚದರ ಕಿಲೋಮೀಟರ್‌(622/ಚ ಮೈ)ಗೆ 240 ಮಂದಿಯ ಹಾಗೆ  ಸುಮಾರು 7.6 ಮಿಲಿಯನ್‌ ಜನಸಂಖ್ಯೆಯನ್ನು ಹೊಂದಿದೆ.  ಆದರೂ ಪರ್ವತ ಪ್ರದೇಶಗಳಿರುವ ರಾಷ್ಟ್ರದ ದಕ್ಷಿಣ ಭಾಗವು ಮೇಲ್ಕಂಡ ಸರಾಸರಿಗಿಂತ ಕಡಿಮೆ ನಿಬಿಡತೆಯನ್ನು ಹೊಂದಿದ್ದರೆ, ಉತ್ತರ ಭಾಗ ಮತ್ತು ದಕ್ಷಿಣ ಕೊನೆಗಳು ಸರಿಸುಮಾರು ಹೆಚ್ಚಿನ ಸಾಂದ್ರತೆಯನ್ನು ಹೊಂದಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿನ ಭಾಗಶಃ ಅರಣ್ಯವಿರುವ ಮತ್ತು ಭಾಗಶಃ ಅರಣ್ಯಮುಕ್ತ ಪ್ರದೇಶಗಳೊಂದಿಗೆ ಅನೇಕ ದೊಡ್ಡ ಸರೋವರಗಳೂ ಇರುವ ಆರೋಗ್ಯಕಾರಿ ಪರ್ವತ ಪ್ರದೇಶಗಳು. 

ಸ್ವಿಟ್ಜರ್ಲೆಂಡ್‌‌ ಮೂರು ವಿಧದ ಮೂಲಭೂತ ಭೂಲಕ್ಷಣಗಳನ್ನು ಹೊಂದಿದೆ: ದಕ್ಷಿಣದಲ್ಲಿ  ಸ್ವಿಸ್ ಆಲ್ಫ್ಸ್‌, ಸ್ವಿಸ್ ಪ್ರಸ್ಥಭೂಮಿ ಅಥವಾ ಮಧ್ಯನಾಡು, ಮತ್ತು ಉತ್ತರದಲ್ಲಿ ಜ್ಯೂರಾ ಪರ್ವತಗಳು.  ಆಲ್ಫ್ಸ್‌ ಪರ್ವತಗಳು ಸುಮಾರು ರಾಷ್ಟ್ರದ ಒಟ್ಟು ವಿಸ್ತೀರ್ಣದ 60%ನಷ್ಟು  ವಿಸ್ತೀರ್ಣವನ್ನು ಹೊಂದಿ ಎತ್ತರದ ಪರ್ವತ ಶ್ರೇಣಿ ರಾಷ್ಟ್ರದ ದಕ್ಷಿಣಾರ್ಧದುದ್ದಕ್ಕೂ ಹರಡಿಕೊಂಡಿವೆ. ಸ್ವಿಸ್ ಆಲ್ಫ್ಸ್‌ನ ಎತ್ತರದ ಶೃಂಗಗಳಲ್ಲಿ, 4,634 ಮೀಟರ್‌(15,203 ಅಡಿ)ಗಳ  ಎತ್ತರವಿರುವ ಡುಪೋರ್‌ಸ್ಪಿಟ್ಸ್‌ ಅತಿ ಎತ್ತರದ್ದಾಗಿದ್ದು, ಹಿಮನದಿ ಮತ್ತು ಜಲಪಾತಗಳನ್ನು ಹೊಂದಿರುವ ಅಸಂಖ್ಯ ಕಣಿವೆಗಳನ್ನು ಹೊಂದಿದೆ. ಇವುಗಳಿಂದ ಅನೇಕ ಪ್ರಮುಖ ಐರೋಪ್ಯ ನದಿಗಳಾದ ರೈನ್‌, ರೋನ್‌, ಇನ್‌, ಆರೆ ಮತ್ತು ಟಿಕಿನೊ ನದಿಗಳ ಮೂಲತೊರೆಗಳು ಅಂತಿಮವಾಗಿ ಅತಿ ದೊಡ್ಡ ಸ್ವಿಸ್ ಸರೋವರಗಳಾದ ಜಿನೀವಾ ಸರೋವರ (ಲಾಕ್‌ ಲೆಮನ್‌), ಜ್ಯೂರಿಚ್‌ ಸರೋವರ, ನ್ಯೂಚಾಟೆಲ್‌ ಸರೋವರ, ಮತ್ತು ಕಾನ್‌ಸ್ಟಾನ್ಸ್‌ಗಳಿಗೆ ಸೇರುತ್ತವೆ. 

ಅತಿ ಹೆಚ್ಚು ಪ್ರಸಿದ್ಧವಾದ ಪರ್ವತವೆಂದರೆ ವಲಾಯಿಸ್‌ನಲ್ಲಿರುವ ಮ್ಯಾಟ್ಟರ್‌ಹಾರ್ನ್‌ (4,478 ಮೀ) ಮತ್ತು ಇಟಲಿಯ ಗಡಿಯಲ್ಲಿರುವ ಪೆನ್ನೈನ್‌ ಆಲ್ಫ್ಸ್‌. ಇನ್ನೂ ಎತ್ತರದ ಪರ್ವತಗಳು ಈ ಪ್ರದೇಶದಲ್ಲಿವೆ, ಅವೆಂದರೆ ಡುಪೋರ್‌ಸ್ಪಿಟ್ಸ್‌ (4,634 ಮೀ), ಡಾಮ್‌ (4,545 ಮೀ) ಮತ್ತು ವೇಯಿಸ್‌ಹಾರ್ನ್‌ (4,506 ಮೀ). ಆಳದಲ್ಲಿರುವ ಹಿಮನದಿಗಳಿರುವ ಲಾಟರ್‌ಬ್ರುನೆನ್‌ ಕಣಿವೆಯ ಮೇಲಿರುವ ಬರ್ನ್‌ ಪ್ರಾಂತ್ಯ ಆಲ್ಫ್ಸ್‌ ಭಾಗವು 72 ಜಲಪಾತಗಳನ್ನು ಹೊಂದಿದ್ದು ಜುಂಗ್‌ಫ್ರಾವ್‌ (4,158 ಮೀ) ಮತ್ತು ಐಗರ್‌, ಮತ್ತು ಅನೇಕ ಚಿತ್ರೋಪಮವಾದ ಕಣಿವೆಗಳಿರುವ ಪ್ರದೇಶವಾಗಿಯೂ ಹೆಸರು ಮಾಡಿದೆ. ಆಗ್ನೇಯದಲ್ಲಿ ಗ್ರಾವುಬುಂಡೆನ್‌ ಕ್ಯಾಂಟನ್‌‌ನ St. ಮೋರಿಟ್ಜ್‌ ಪ್ರದೇಶವನ್ನು ಹೊಂದಿರುವ ಉದ್ದವಾದ ಪ್ರಸಿದ್ಧ ಎಂಗಾಡಿನ್‌ ಕಣಿವೆಯಿದೆ; ನೆರೆಹೊರೆಯಲ್ಲಿರುವ ಬರ್ನಿನಾ ಆಲ್ಫ್ಸ್‌ನ ಅತ್ಯುನ್ನತ ಶೃಂಗವೆಂದರೆ ಪಿಜ್‌ ಬರ್ನಿನಾ (4,049 ಮೀ). 

ರಾಷ್ಟ್ರದ ಒಟ್ಟು ವಿಸ್ತೀರ್ಣದ 30% ವಿಸ್ತೀರ್ಣದಲ್ಲಿ ಹರಡಿರುವ ರಾಷ್ಟ್ರದ ಉತ್ತರ ಭಾಗವು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದು ಮಧ್ಯನಾಡು ಎಂದು ಕರೆಯಲ್ಪಡುತ್ತದೆ. ಇದು ಉನ್ನತ ಮುಕ್ತ ಹಾಗೂ ಪರ್ವತ ಪ್ರದೇಶವಿರುವ ವಿಶಾಲದೃಶ್ಯಗಳನ್ನು ಹೊಂದಿದೆ. ಈ ಪ್ರದೇಶವು ಭಾಗಶಃ ಅರಣ್ಯವನ್ನು, ಭಾಗಶಃ ಮೇಯುತ್ತಿರುವ ಪಶುಹಿಂಡುಗಳಿರುವ ಮುಕ್ತ ಹುಲ್ಲುಗಾವಲು ಅಥವಾ ತರಕಾರಿ ಮತ್ತು ಹಣ್ಣು ಬೆಳೆಯುವ ಜಮೀನುಗಳನ್ನು ಹೊಂದಿದ್ದರೂ ಇದು ಪರ್ವತಮಯವಾಗಿದೆ. ಅನೇಕ ದೊಡ್ಡ ಸರೋವರಗಳು ಇಲ್ಲಿಯೇ ಇವೆ ಮತ್ತು ಅತಿ ದೊಡ್ಡ ಸ್ವಿಸ್ ಮಹಾನಗರಗಳೂ ಸಹಾ ರಾಷ್ಟ್ರದ ಇದೇ ಭಾಗದಲ್ಲಿವೆ.  ಸ್ವಿಟ್ಜರ್ಲೆಂಡ್‌‌ನ ಪಶ್ಚಿಮದಲ್ಲಿರುವ ಜಿನೀವಾ ಸರೋವರ(ಫ್ರೆಂಚ್‌ನಲ್ಲಿ ಲಾಕ್‌ ಲೆಮನ್‌ ಎಂದು ಕರೆಯಲ್ಪಡುವ)ವು ಅತಿ ದೊಡ್ಡ ಸರೋವರವಾಗಿದೆ. ರೋನ್‌ ನದಿಯು ಜಿನೀವಾ ಸರೋವರದ ಪ್ರಮುಖ ಉಪನದಿಯಾಗಿದೆ.

ಸ್ವಿಸ್ ಹವಾಗುಣವು ಸಾಧಾರಣವಾಗಿ ಸಮಶೀತೋಷ್ಣತೆಯನ್ನು ಹೊಂದಿದ್ದು, ಪರ್ವತದ ತುದಿಗಳಲ್ಲಿನ ವಿಪರೀತ ಶೈತ್ಯದಿಂದ ಹಿಡಿದು ಸ್ವಿಟ್ಜರ್ಲೆಂಡ್‌‌ನ ದಕ್ಷಿಣಾಗ್ರ ತುದಿಯಲ್ಲಿ ಮೆಡಿಟರೇನಿಯನ್‌ ಹವಾಗುಣಕ್ಕೆ ಸಮೀಪದ ಆಹ್ಲಾದಕರ ವಾತಾವರಣವನ್ನು ಹೊಂದಿರುವಂತೆ ಪ್ರದೇಶಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಬೇಸಿಗೆಯು ಸಾಧಾರಣವಾಗಿ ಬೆಚ್ಚಗೆ ಮತ್ತು ತೇವಾಂಶದಿಂದ ಕೂಡಿದ್ದು ಆಗಾಗ್ಗೆ ಆವರ್ತಕ ಮಳೆಯಾಗುವುದರಿಂದ ಹುಲ್ಲುಗಾವಲು ಹಾಗೂ ಮೇಯುವಿಕೆ ಅತ್ಯಂತ ಪ್ರಶಸ್ತವಾಗಿರುವ ಪ್ರದೇಶವಾಗಿದೆ.  ಪರ್ವತ ಪ್ರದೇಶಗಳಲ್ಲಿನ ಚಳಿಗಾಲದಲ್ಲಿ ಸೂರ್ಯ ಮತ್ತು ಹಿಮವರ್ಷಗಳ ನಡುವೆ ಸ್ಥಿತ್ಯಂತರವಾಗುತ್ತಿದ್ದರೆ ಇತ್ತ ಕೆಳ ಪ್ರದೇಶಗಳು ಮೋಡ ಮತ್ತು ಇಬ್ಬನಿಗಳಿಂದಾವೃತವಾಗಿರುತ್ತವೆ.  ಇಟಲಿಯ ಕಡೆಯಿಂದ ಆಲ್ಫ್ಸ್‌ ಮೇಲೆ ಬರುವ ಬೆಚ್ಚನೆಯ ಮೆಡಿಟರೇನಿಯನ್‌ ಬೀಸು ಗಾಳಿಯಿಂದ ಕೂಡಿರುವ ಫಾನ್‌ ಎಂದು ಹೆಸರಾದ ವಾತಾವರಣದ ವಿದ್ಯಮಾನವು ವರ್ಷದ ಎಲ್ಲಾ ಸಮಯಗಳಲ್ಲೂ, ಮಳೆಗಾಲದಲ್ಲೂ ಕೂಡ ಸಂಭವಿಸುತ್ತದೆ. ವಲಾಯಿಸ್‌‌ನ ದಕ್ಷಿಣ ಕಣಿವೆ ಪ್ರದೇಶಗಳಲ್ಲಿ ಒಣ ಪರಿಸ್ಥಿತಿಯಿರುತ್ತದೆ. ಇಲ್ಲಿ ಕೇಸರಿ ಬೆಳೆಯಲಾಗುತ್ತದಲ್ಲದೇ, ಅನೇಕ ಮದ್ಯ ತಯಾರಿಸಲು ಬಳಸುವ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಗ್ರಾವುಬುಂಡೆನ್‌ ಸಹಾ ಒಣ ಹವಾಗುಣವನ್ನು ಹೊಂದಿದ್ದು ಅಲ್ಪ ಪ್ರಮಾಣದಲ್ಲಿ ತಂಪಾಗಿದ್ದರೂ, ಚಳಿಗಾಲದಲ್ಲಿ ಬಹಳಷ್ಟು ಹಿಮಪಾತವಾಗುತ್ತದೆ. ಆರ್ದ್ರ ಪರಿಸ್ಥಿತಿಯು ಆಲ್ಫ್ಸ್‌ನ ಶೃಂಗ ಪ್ರದೇಶಗಳಲ್ಲಿರುತ್ತದೆ ಮತ್ತು ಟಿಕಿನೊ ಕ್ಯಾಂಟನ್‌ನಲ್ಲಿ ಸಾಕಷ್ಟು ಬಿಸಿಲಿದ್ದರೂ ಆಗಿಂದಾಗ್ಗೆ ಜೋರು ಮಳೆಯೂ ಬರುತ್ತಿರುತ್ತದೆ.  ಸ್ವಿಟ್ಜರ್ಲೆಂಡ್‌‌ನ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಹೆಚ್ಚಿಗೆ ತಂಪಾಗಿದ್ದರೂ, ಯಾವುದೇ ಪರ್ವತ ಪ್ರದೇಶಗಳ ಎತ್ತರದ ಭಾಗಗಳಲ್ಲಿ ವರ್ಷದ ಎಲ್ಲಾ ಸಮಯಗಳಲ್ಲಿಯೂ ತಂಪಾದ ಹವೆಯನ್ನು ಅನುಭವಿಸಬಹುದಾಗಿದೆ. ಹಿಮಪಾತವು ವಾರ್ಷಿಕವಾಗಿ ಸಮಾಂತರವಾಗಿ ಹರಡಿದ್ದರೂ ಸ್ಥಳೀಯ ಹವಾಮಾನಕ್ಕನುಗುಣವಾಗಿ ವಿವಿಧ ಋತುಗಳಲ್ಲಿ ಅಲ್ಪ ವ್ಯತ್ಯಾಸಗಳಾಗುತ್ತಿರುತ್ತವೆ. ಶರತ್ಕಾಲವು ಸಾಮಾನ್ಯವಾಗಿ ಅತಿ ಹೆಚ್ಚಿನ ಒಣ ಋತುವಾಗಿದ್ದು, ಸ್ವಿಟ್ಜರ್ಲೆಂಡ್‌‌ನ ಹವಾಗುಣದ ವೈವಿಧ್ಯತೆಯು ವರ್ಷದಿಂದ ವರ್ಷಕ್ಕೆ ಬದಲಾಯಿಸುವುದರಿಂದ ಮುನ್ಸೂಚನೆ ನೀಡುವುದು ಕಷ್ಟದಾಯಕ. 

ಸ್ವಿಟ್ಜರ್ಲೆಂಡ್‌‌ನ ಪರಿಸರ ವ್ಯವಸ್ಥೆಯು ಸೂಕ್ಷ್ಮ ಪರಿಸರವನ್ನು ಹೊಂದಿದ್ದು, ಎತ್ತರದ ಪರ್ವತಗಳಿಂದ ಪ್ರತ್ಯೇಕಿಸಲ್ಪಟ್ಟ ಅನೇಕ ಸೂಕ್ಷ್ಮ ಕಣಿವೆಗಳನ್ನು ಹೊಂದಿವೆ. ಅನೇಕ ಬಾರಿ ಇದು ಪ್ರತ್ಯೇಕವಾದ ಪರಿಸರ ವ್ಯವಸ್ಥೆಗೆ ಕಾರಣೀಭೂತವಾಗಿರುತ್ತದೆ. ಪರ್ವತ ಪ್ರದೇಶಗಳೇ ಸಾಕಷ್ಟು ಮಟ್ಟಿಗೆ ಸೂಕ್ಷ್ಮ ಪರಿಸರವನ್ನು ಹೊಂದಿರುತ್ತವೆ. ಇಂತಹಾ ಪ್ರದೇಶಗಳು, ಇತರೆ ಎತ್ತರದ ಸ್ಥಳಗಳಲ್ಲಿ ಅಲಭ್ಯವಾಗಿರುವ ಅನೇಕ ಶ್ರೀಮಂತ ಸಸ್ಯ ಪ್ರಭೇದಗಳನ್ನು ಹೊಂದಿರುವುದಲ್ಲದೇ ಸ್ಥಳ ಭೇಟಿಗೆ ಬರುವ ಸಂದರ್ಶಕರಿಂದ ಹಾಗೂ ಪ್ರಾಣಿಗಳ ಮೇಯುವಿಕೆಯಿಂದ ಬಹಳಷ್ಟು ಒತ್ತಡವನ್ನು ಅನುಭವಿಸುತ್ತವೆ. ಸ್ವಿಟ್ಜರ್ಲೆಂಡ್‌‌ನ ಪರ್ವತ ಪ್ರದೇಶಗಳಲ್ಲಿನ ವೃಕ್ಷಗಳ ಸಾಲು ಇತ್ತೀಚಿನ ವರ್ಷಗಳಲ್ಲಿ ಪ್ರದೇಶದ ಕೆಳಭಾಗಕ್ಕೂ ವ್ಯಾಪಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಶುಗಳ ಹಿಂಡಿನ ಹಾಗೂ ಅವುಗಳ ಮೇಯುವಿಕೆಯಿಂದುಂಟಾಗುತ್ತಿದ್ದ ಒತ್ತಡದ ಇಳಿಕೆ.

ಸ್ವಿಟ್ಜರ್ಲೆಂಡ್‌‌ ಆಧುನಿಕ ಮತ್ತು ವಿಶ್ವದಲ್ಲೇ ಅತ್ಯಧಿಕ ಬಂಡವಾಳಶಾಹಿ ಆರ್ಥಿಕತೆಯನ್ನು ಹೊಂದಿರುವುದಲ್ಲದೇ ಸ್ಥಿರತೆಯನ್ನು ಸಹಾ ಕಾಪಾಡಿಕೊಂಡಿದೆ. 
ಈ ರಾಷ್ಟ್ರವು ಐರ್‌ಲೆಂಡ್‌ನ್ನು ಬಿಟ್ಟರೆ ಎರಡನೇ ಉನ್ನತ ಐರೋಪ್ಯ ಶ್ರೇಯಾಂಕವನ್ನು ಆರ್ಥಿಕ ಸ್ವಾತಂತ್ರ್ಯ 2008ರ ಪಟ್ಟಿ(ಪರಿವಿಡಿ)ಯಲ್ಲಿ ಹೊಂದಿರುವುದಲ್ಲದೇ, ಸಾರ್ವಜನಿಕ ಸೇವೆಗಳ ಮೂಲಕ ಹೆಚ್ಚಿನ ಪ್ರಮಾಣದ ವ್ಯಾಪಕತೆಯನ್ನು ಹೊಂದಿದೆ. ದೊಡ್ಡದಾದ ಪಾಶ್ಚಿಮಾತ್ಯ ಐರೋಪ್ಯ ಮತ್ತು ಜಪಾನ್‌ ಆರ್ಥಿಕತೆಗಳಿಗಿಂತ ಹೆಚ್ಚಿನ ನಾಮಮಾತ್ರ ತಲಾ  GDPಯನ್ನು ಹೊಂದಿದ್ದು, ಲಕ್ಸೆಂಬರ್ಗ್‌, ನಾರ್ವೆ, ಕತಾರ್‌, ಐಸ್‌ಲೆಂಡ್‌  ಮತ್ತು ಐರ್‌ಲೆಂಡ್‌ಗಳ ನಂತರ 6ನೇ ಶ್ರೇಯಾಂಕವನ್ನು ಪಡೆದಿದೆ.

]

ಖರೀದಿ ಸಾಮರ್ಥ್ಯದ ಹೋಲಿಕೆಗೆ ಹೊಂದಿಸಿದರೆ, ಸ್ವಿಟ್ಜರ್ಲೆಂಡ್‌‌ ತಲಾ GDPಯ ಪ್ರಕಾರ ವಿಶ್ವದಲ್ಲೇ 15ನೇ ಶ್ರೇಯಾಂಕವನ್ನು ಪಡೆಯುತ್ತದೆ.  ವಿಶ್ವ ಆರ್ಥಿಕ ಸಂಘಟನೆಯ  ವಿಶ್ವ ಸ್ಪರ್ಧಾತ್ಮಕತೆಯ ವರದಿಯು ಸ್ವಿಟ್ಜರ್ಲೆಂಡ್‌‌ನ ಆರ್ಥಿಕತೆಯ ಸ್ಪರ್ಧಾತ್ಮಕತೆಗೆ ಪ್ರಸಕ್ತ ವಿಶ್ವದಲ್ಲೇ ಎರಡನೇ ಅತಿ ಹೆಚ್ಚಿನ ಶ್ರೇಯಾಂಕವನ್ನು ನೀಡಿದೆ.  20ನೇ ಶತಮಾನದ ಬಹುಭಾಗದಲ್ಲಿ, ಸ್ವಿಟ್ಜರ್ಲೆಂಡ್‌‌ ಗಮನಾರ್ಹ ವ್ಯತ್ಯಾಸದೊಂದಿಗೆ ಯೂರೋಪ್‌ನ ಅತಿ ಶ್ರೀಮಂತ ರಾಷ್ಟ್ರವಾಗಿತ್ತು. 2005ರಲ್ಲಿ ಸ್ವಿಟ್ಜರ್ಲೆಂಡ್‌‌ನಲ್ಲಿನ ಮಧ್ಯಮ ಕೌಟುಂಬಿಕ ಆದಾಯವನ್ನು 95,000 CHF ಎಂದು ಅಂದಾಜಿಸಲಾಗಿತ್ತು, ಇದು ಖರೀದಿ ಸಾಮರ್ಥ್ಯ ಹೋಲಿಕೆಯಲ್ಲಿ ಸರಿಸುಮಾರು 81,000 USD (ನವೆಂ. 2008ರ ವಿನಿಮಯ ದರದಂತೆ)ರಷ್ಟು ಆಗುತ್ತದೆ, ಕ್ಯಾಲಿಫೋರ್ನಿಯಾದಂತಹಾ ಶ್ರೀಮಂತ ಅಮೇರಿಕನ್‌ ಸಂಸ್ಥಾನಗಳಿಗೆ ಸಮಾನವಾಗುತ್ತದೆ. 

ಚಿತ್ರ:Omega Speedmaster Rueckseite-2.jpg|thumb|upright|ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸ್ವಿಟ್ಜರ್ಲೆಂಡ್‌ ವಿಶ್ವದ ಅರ್ಧದಷ್ಟು ಕೈಗಡಿಯಾರಗಳ ಉತ್ಪಾದನೆಗೆ ಕಾರಣವಾಗಿದೆ. [132] (ಓಮೇಗಾ ಸ್ಪೀಡ್‌ಮಾಸ್ಟರ್‌ಅನ್ನು, NASAದವರು ಅಪೊಲೊ ಕಾರ್ಯಾಚರಣೆಗಳಿಗೆ ಆಯ್ಕೆ ಮಾಡಿದರು)

ಸ್ವಿಟ್ಜರ್ಲೆಂಡ್‌‌ ಅನೇಕ ಬಹುದೊಡ್ಡ ಅಂತರರಾಷ್ಟ್ರೀಯ ಸಂಘಟನೆಗಳಿಗೆ ನೆಲೆಯಾಗಿದೆ. ಆದಾಯದ ಪ್ರಕಾರ ಅತಿ ದೊಡ್ಡ ಸ್ವಿಸ್ ಕಂಪೆನಿಗಳೆಂದರೆ ಗ್ಲೆನ್‌ಕೋರ್‌, ನೆಸ್ಲೆ, ನೊವಾರ್ಟಿಸ್‌, ಹಾಫ್‌ಮನ್‌-ಲಾ ರೋಕೆ, ABB ಮತ್ತು ಅಡೆಕ್ಕೋಗಳು.  ಗಮನಾರ್ಹವಾದ ಉಳಿದ ಕಂಪೆನಿಗಳೆಂದರೆ UBS AG, ಜ್ಯೂರಿಚ್‌ ವಾಣಿಜ್ಯ ಸೇವೆಗಳು, ಕ್ರೆಡಿಟ್‌ ಸ್ಯೂಸ್ಸೆ, ಸ್ವಿಸ್ ರೇ, ಮತ್ತು ಸ್ವಾಚ್‌ ಸಮೂಹ. ಸ್ವಿಟ್ಜರ್ಲೆಂಡ್‌‌ ವಿಶ್ವದಲ್ಲೇ ಅತ್ಯಂತ ಸಶಕ್ತವಾದ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರವಾಗಿ ಶ್ರೇಯಾಂಕಿತವಾಗಿದೆ. 

ರಾಸಾಯನಿಕ, ಆರೋಗ್ಯ ಮತ್ತು ಔಷಧೀಯ, ಅಳತೆಯ ಉಪಕರಣಗಳು, ಸಂಗೀತ ಉಪಕರಣಗಳು, ಸ್ಥಿರಾಸ್ತಿ, ಬ್ಯಾಂಕಿಂಗ್‌ ಮತ್ತು ವಿಮೆ, ಪ್ರವಾಸೋದ್ಯಮ, ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಸ್ವಿಟ್ಜರ್ಲೆಂಡ್‌‌ನ ಪ್ರಮುಖ ಕೈಗಾರಿಕೆಗಳಾಗಿವೆ. ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸರಕೆಂದರೆ ರಾಸಾಯನಿಕಗಳು (ರಫ್ತಾಗುವ ಸರಕುಗಳ 34%ರಷ್ಟು), ಯಂತ್ರಗಳು/ವಿದ್ಯುನ್ಮಾನ ಉಪಕರಣಗಳು (20.9%ರಷ್ಟು), ಮತ್ತು ನಿಷ್ಕೃಷ್ಟ ಅಳತೆಯ ಉಪಕರಣಗಳು/ಕೈಗಡಿಯಾರಗಳು (16.9%ರಷ್ಟು).  ರಫ್ತಾಗುವ ಸೇವೆಗಳು ರಫ್ತಾಗುವ ಸರಕುಗಳ ಮೂರನೇ ಒಂದರಷ್ಟು ವಿನಿಮಯ ಗಳಿಸುತ್ತವೆ. 

ಸ್ವಿಟ್ಜರ್ಲೆಂಡ್‌‌ನಲ್ಲಿ ಸುಮಾರು  3.8 ಮಿಲಿಯನ್‌ ಮಂದಿ ಕೆಲಸ ಮಾಡುತ್ತಾರೆ. ಸ್ವಿಟ್ಜರ್ಲೆಂಡ್‌‌ ನೆರೆಹೊರೆಯ ರಾಷ್ಟ್ರಗಳಿಗಿಂತ ಹೆಚ್ಚಿನ ಹೊಂದಿಕೆಯಾಗಬಲ್ಲ ಔದ್ಯೋಗಿಕ ಮಾರುಕಟ್ಟೆಯನ್ನು ಹೊಂದಿರುವುದರಿಂದ ಇಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಪ್ರಮಾಣದಲ್ಲಿದೆ. ನಿರುದ್ಯೋಗದ ಪ್ರಮಾಣವು ಜೂನ್‌ 2000ರಲ್ಲಿನ 1.7%ನಷ್ಟು ಕಡಿಮೆ ಪ್ರಮಾಣದಿಂದ, 3.9%ರಷ್ಟು ಶೃಂಗ ಪ್ರಮಾಣಕ್ಕೆ ಸೆಪ್ಟೆಂಬರ್‌ 2004ರಲ್ಲಿ ತಲುಪಿತು. ಇದು ಭಾಗಶಃ 2003ರ ಮಧ್ಯದಲ್ಲಿನ ಆರ್ಥಿಕ ಸ್ಥಿತ್ಯಂತರದಿಂದಾಗಿದ್ದು, ಪ್ರಸಕ್ತ ನಿರುದ್ಯೋಗ ಪ್ರಮಾಣವು ಏಪ್ರಿಲ್‌ 2009ರ ಗಣನೆಯಂತೆ 3.4%ರಷ್ಟಿದೆ. ವಲಸೆಯಿಂದಾದ ನಿವ್ವಳ ಜನಸಂಖ್ಯಾ ಏರಿಕೆಯು ಸಾಕಷ್ಟು ಹೆಚ್ಚಿದ್ದು  2004ರಲ್ಲಿ ಜನಸಂಖ್ಯೆಯ 0.52%ರಷ್ಟಿತ್ತು.  ವಿದೇಶಿ ನಾಗರಿಕರ ಜನಸಂಖ್ಯೆಯು 2004ರ ಹೊತ್ತಿಗೆ 21.8%ರಷ್ಟಿದ್ದು, ಇದು ಆಸ್ಟ್ರೇಲಿಯಾದ ಪ್ರಮಾಣಕ್ಕೆ ಸಮಾನವಾಗಿದೆ. ಕಾರ್ಯನಿರತ ಪ್ರತಿ ಗಂಟೆಯ GDPಯು  ವಿಶ್ವದಲ್ಲೇ 17ನೇ ಹೆಚ್ಚಿನ ಪ್ರಮಾಣದ್ದಾಗಿದ್ದು, 2006ರಲ್ಲಿ 27.44 ಅಂತರರಾಷ್ಟ್ರೀಯ ಡಾಲರ್‌ಗಳಷ್ಟಿತ್ತು.

ಸ್ವಿಟ್ಜರ್ಲೆಂಡ್‌‌ ಅಗಾಧವಾದ ಖಾಸಗಿ ವಲಯದ ಆರ್ಥಿಕತೆಯನ್ನು ಹೊಂದಿದ್ದು ಪಾಶ್ಚಿಮಾತ್ಯ ಮಾನದಂಡಗಳ ಪ್ರಕಾರ ಅತಿ ಕಡಿಮೆ ತೆರಿಗೆ ದರಗಳನ್ನು ಹೊಂದಿದೆ; ಒಟ್ಟಾರೆ ತೆರಿಗೆಯ ಪ್ರಮಾಣವು ಅಭಿವೃದ್ಧಿ ಹೊಂದಿದ ದೇಶಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸ್ವಿಟ್ಜರ್ಲೆಂಡ್‌‌ ಉದ್ದಿಮೆ ನಡೆಸಲು ಸುಲಭವಾದ ಸ್ಥಳವಾಗಿದೆ; ಸರಾಗ ಉದ್ದಿಮೆ ಸ್ಥಾಪನೆಯ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್‌‌ 178 ರಾಷ್ಟ್ರಗಳಲ್ಲಿ 16ನೇ ಶ್ರೇಯಾಂಕವನ್ನು ಪಡೆದಿದೆ. ಸ್ವಿಟ್ಜರ್ಲೆಂಡ್‌‌ 1990ರ ದಶಕದಲ್ಲಿ ಪ್ರಗತಿಯಲ್ಲಿ ನಿಧಾನ ಗತಿಯನ್ನು ಕಂಡಿತು. 2000ನೇ ದಶಕದ ಆರಂಭದಲ್ಲಿ ಆರ್ಥಿಕ ಸುಧಾರಣೆಗಳಿಗೆ ಹೆಚ್ಚಿನ ಬೆಂಬಲ ದೊರಕಿತು ಮತ್ತು ಐರೋಪ್ಯ ಒಕ್ಕೂಟದ ಜೊತೆಗೆ ಸಾಮರಸ್ಯ ಹೊಂದಲು ಸಾಧ್ಯವಾಯಿತು.   ಕ್ರೆಡಿಟ್‌ ಸ್ಯೂಸ್ಸೆನ ಪ್ರಕಾರ, ಕೇವಲ ಸುಮಾರು 37%ರಷ್ಟು ಜನರು ಮಾತ್ರ ಸ್ವಂತ ಗೃಹಗಳನ್ನು ಹೊಂದಿದ್ದು, ಇದು ಯೂರೋಪ್‌ನಲ್ಲಿ ಅತಿ ಕಡಿಮೆ ಗೃಹ ಮಾಲಿಕತ್ವದ ಪ್ರಮಾಣವಾಗಿದೆ. ಜರ್ಮನಿಯ 113% ಮತ್ತು 104%ರ ಪ್ರಮಾಣಕ್ಕೆ ಹೋಲಿಸಿದಾಗ ಗೃಹಬಳಕೆ ಮತ್ತು ಆಹಾರ ಬೆಲೆ ಪ್ರಮಾಣಗಳು 2007ರಲ್ಲಿನ EU-25 ಪಟ್ಟಿಯ ಪ್ರಕಾರ 171% ಮತ್ತು 145%ರಷ್ಟಿದೆ.  ಸ್ವಿಟ್ಜರ್ಲೆಂಡ್‌‌ನ ಮುಕ್ತ ವ್ಯಾಪಾರ ನೀತಿಗೆ ಹೊರತಾಗಿರುವ  ಕೃಷಿ ಸಂರಕ್ಷಣೆ ವ್ಯವಸ್ಥೆಯು ಹೆಚ್ಚಿದ ಆಹಾರ ಬೆಲೆಗಳಿಗೆ ಮೂಲ ಕಾರಣವಾಗಿದೆ. OECDಯ ಪ್ರಕಾರ ಉತ್ಪಾದನಾ ಮಾರುಕಟ್ಟೆಯ ಉದಾರೀಕರಣವು ಅನೇಕ EU ರಾಷ್ಟ್ರಗಳಿಗೆ ಹೋಲಿಸಿದರೆ ಹಿನ್ನಡೆಯಲ್ಲಿದೆ. ಇಷ್ಟೆಲ್ಲಾ ಆದರೂ, ದೇಶೀಯ ಖರೀದಿ ಸಾಮರ್ಥ್ಯವು ವಿಶ್ವದಲ್ಲೇ ಅತ್ಯುತ್ತಮವಾದುದಾಗಿದೆ.  ಕೃಷಿಯನ್ನು ಹೊರತುಪಡಿಸಿದರೆ, ಐರೋಪ್ಯ  ಒಕ್ಕೂಟ ಮತ್ತು ಸ್ವಿಟ್ಜರ್ಲೆಂಡ್‌‌ ನಡುವಿನ  ಆರ್ಥಿಕ ಮತ್ತು ವಾಣಿಜ್ಯ ಪ್ರತಿಬಂಧಕಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಇಷ್ಟೇ ಅಲ್ಲದೇ ಸ್ವಿಟ್ಜರ್ಲೆಂಡ್ ವಿಶ್ವದಾದ್ಯಂತ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಸ್ವಿಟ್ಜರ್ಲೆಂಡ್‌‌ ಐರೋಪ್ಯ ಮುಕ್ತ ವ್ಯಾಪಾರ ಸಂಘದ (EFTA) ಸದಸ್ಯ ರಾಷ್ಟ್ರವಾಗಿದೆ.

ಸ್ವಿಟ್ಜರ್ಲೆಂಡ್‌‌ನ ಸಂವಿಧಾನವು ಶಾಲಾ ವ್ಯವಸ್ಥೆಯ ಜವಾಬ್ದಾರಿಯನ್ನು ಕ್ಯಾಂಟನ್‌ಗಳಿಗೆ ವಹಿಸಿರುವುದರಿಂದ ಸ್ವಿಟ್ಜರ್ಲೆಂಡ್‌ನ‌ಲ್ಲಿನ ಶಿಕ್ಷಣ ವ್ಯವಸ್ಥೆಯು ವೈವಿಧ್ಯಮಯವಾಗಿದೆ.  ಅಲ್ಲಿ ಅನೇಕ ಖಾಸಗಿ ಅಂತರರಾಷ್ಟ್ರೀಯ ಶಾಲೆಗಳೂ ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಎರಡೂ ಮಾದರಿಯ ಶಾಲೆಗಳಿವೆ. ಎಲ್ಲಾ  ಕ್ಯಾಂಟನ್‌ಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಕನಿಷ್ಟ ವಯಸ್ಸು ಆರು ವರ್ಷಗಳೆಂದು ನಿಗದಿಪಡಿಸಲಾಗಿದೆ.  ಶಾಲೆಗಳ ಮೇಲೆ ಆಧಾರಿತವಾಗಿ ಪ್ರಾಥಮಿಕ ಶಿಕ್ಷಣವು ನಾಲ್ಕು ಅಥವಾ ಐದನೇ ತರಗತಿಯವರೆಗೆ ಮುಂದುವರೆಯುತ್ತದೆ. ಸಾಂಪ್ರದಾಯಿಕವಾಗಿ ಶಾಲೆಗಳಲ್ಲಿ ಕಲಿಸುವ ಪ್ರಥಮ ವಿದೇಶಿ ಭಾಷೆಯು ಸಾಮಾನ್ಯವಾಗಿ ಇತರೆ ರಾಷ್ಟ್ರಗಳ ರಾಷ್ಟ್ರಭಾಷೆಯಾಗಿದ್ದರೂ, ಇತ್ತೀಚೆಗೆ (2000ರಲ್ಲಿ) ಕೆಲ ಕ್ಯಾಂಟನ್‌ಗಳು ಮೊದಲಿಗೆ ಆಂಗ್ಲ ಭಾಷೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವು.  ಪ್ರಾಥಮಿಕ ಶಿಕ್ಷಣದ ಕೊನೆಗೆ (ಅಥವಾ ಮಾಧ್ಯಮಿಕ ಶಿಕ್ಷಣದ ಆರಂಭದಲ್ಲಿ), ವಿದ್ಯಾರ್ಥಿಗಳು ಅವರವರ ಸಾಮರ್ಥ್ಯಾನುಸಾರವಾಗಿ, ಅನೇಕ (ಸಾಧಾರಣವಾಗಿ ಮೂರು) ವಿಭಾಗಗಳಲ್ಲಿ ಪ್ರತ್ಯೇಕಿಸಲ್ಪಡುತ್ತಾರೆ. ವೇಗವಾಗಿ ಕಲಿಯಬಲ್ಲ ವಿದ್ಯಾರ್ಥಿಗಳು ಉನ್ನತ ತರಬೇತಿಗಳನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಹಾಗೂ  ಮತುರಾಗೆಂದು ತಯಾರಾಗುತ್ತಾರೆ. ಆದರೆ ಸ್ವಲ್ಪ ನಿಧಾನವಾಗಿ ವಿದ್ಯೆಯನ್ನು ಅರಗಿಸಿಕೊಳ್ಳುವ ವಿದ್ಯಾರ್ಥಿಗಳು, ಹೆಚ್ಚಿನ ಮಟ್ಟಿಗೆ ಅವರವರ ಅಗತ್ಯಕ್ಕನುಸಾರವಾಗಿ ಅಳವಡಿಸಿದ ಶಿಕ್ಷಣವನ್ನು ಪಡೆಯುತ್ತಾರೆ. 
ಚಿತ್ರ:ETHZ.JPG|thumb|left|ಜ್ಯೂರಿಚ್‌‌ನ ETH ಝೆಂತ್ರಮ್‌ ಕ್ಯಾಂಪಸ್, ಸ್ವಿಟ್ಜರ್ಲೆಂಡ್‌‌‌ನಲ್ಲಿ ಪ್ರತಿಷ್ಠಿತ [150] ವಿಶ್ವವಿದ್ಯಾನಿಲಯವಾಗಿದ್ದು, ಇಲ್ಲಿ ಆಲ್ಬರ್ಟ್‌ ಐನ್‌ಸ್ಟೈನ್ ವಿದ್ಯಾಭ್ಯಾಸ ನಡೆಸಿದ್ದರು.
ಸ್ವಿಟ್ಜರ್ಲೆಂಡ್‌‌ನಲ್ಲಿ ಒಟ್ಟು 12 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಹತ್ತು ವಿವಿಗಳನ್ನು ಕ್ಯಾಂಟನ್ ಮಟ್ಟದಲ್ಲಿ ನಿರ್ವಹಿಸಲಾಗುವುದಲ್ಲದೇ, ಸಾಧಾರಣವಾಗಿ ತಾಂತ್ರಿಕವಲ್ಲದ ವಿಷಯಗಳನ್ನು ಕಲಿಸಲಾಗುತ್ತದೆ. ಬಸೆಲ್‌ ನಲ್ಲಿ ಸ್ವಿಟ್ಜರ್ಲೆಂಡ್‌‌ನ ಪ್ರಥಮ ವಿಶ್ವವಿದ್ಯಾಲಯವನ್ನು 1460ರಲ್ಲಿ (ಔಷಧೀಯ ಬೋಧನಾಂಗದೊಂದಿಗೆ) ಸ್ಥಾಪಿಸಲಾಯಿತು. ಈ ನಗರವು ಸ್ವಿಟ್ಜರ್ಲೆಂಡ್‌ನಲ್ಲಿ ರಾಸಾಯನಿಕ ಮತ್ತು ವೈದ್ಯಕೀಯ ‌‌ಸಂಶೋಧನೆಗಳ ಪರಂಪರೆಯನ್ನು ಹೊಂದಿದೆ. ಸರಿಸುಮಾರು 25,000 ವಿದ್ಯಾರ್ಥಿಗಳಿರುವ ಜ್ಯೂರಿಚ್‌ ವಿಶ್ವವಿದ್ಯಾಲಯವು ಸ್ವಿಟ್ಜರ್ಲೆಂಡ್‌‌ನ ಅತಿ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಒಕ್ಕೂಟ ಸರ್ಕಾರದಿಂದ ಆರ್ಥಿಕ ಬೆಂಬಲವನ್ನು ಪಡೆದ ಎರಡು ಸಂಸ್ಥೆಗಳೆಂದರೆ (1855ರಲ್ಲಿ ಸ್ಥಾಪಿತವಾದ)ಜ್ಯೂರಿಚ್‌ನ ETHZ ಮತ್ತು ಲಾಸನ್ನೆಯ EPFL (1969ರಲ್ಲಿ ಸ್ಥಾಪಿತವಾಗಿದ್ದರೂ, ಮೊದಲು ಲಾಸನ್ನೆ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿತ್ತು). ಇವೆರಡೂ ಸಂಸ್ಥೆಗಳು ಉತ್ತಮ ಅಂತರರಾಷ್ಟ್ರೀಯ ಪ್ರಖ್ಯಾತಿಯನ್ನು ಪಡೆದಿವೆ. 2008ರಲ್ಲಿ ಜ್ಯೂರಿಚ್‌ನ ETH ಪ್ರಕೃತಿ ವಿಜ್ಞಾನ ಮತ್ತು ಗಣಿತ  ಕ್ಷೇತ್ರದಲ್ಲಿ ಶಾಂಘಾಯ್‌ ವಿಶ್ವದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶ್ರೇಯಾಂಕದ ಪಟ್ಟಿಯಲ್ಲಿ 15ನೇ ಶ್ರೇಯಾಂಕವನ್ನು ಪಡೆದರೆ, ಲಾಸನ್ನೆಯ EPFL ತಾಂತ್ರಿಕತೆ/ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ  ಕ್ಷೇತ್ರಗಳಲ್ಲಿ 18ನೇ ಸ್ಥಾನವನ್ನು ಅದೇ ಪಟ್ಟಿಯಲ್ಲಿ ಪಡೆಯಿತು. 
ಇವುಗಳಷ್ಟೇ ಅಲ್ಲದೇ ಅನೇಕ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯಗಳೂ ಇವೆ. ಪದವಿ ಪೂರ್ವ ಹಾಗೂ ನಂತರದ ಶಿಕ್ಷಣದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಸ್ಟ್ರೇಲಿಯಾ ನಂತರದ ಎರಡನೇ ಅತಿ ದೊಡ್ಡ ಸ್ಥಾನವನ್ನು ಸ್ವಿಟ್ಜರ್ಲೆಂಡ್‌‌ ಹೊಂದಿದೆ. 
ವಿಶ್ವವಿಖ್ಯಾತ ಭೌತವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ರು ಬರ್ನ್‌ನಲ್ಲಿ ಕಾರ್ಯಪ್ರವೃತ್ತರಾಗಿದ್ದಾಗ ಸಂಶೋಧಿಸಿದ ಸಾಪೇಕ್ಷತಾ ಸಿದ್ಧಾಂತಕ್ಕಾಗಿ ನೀಡಿದ ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯೂ ಸೇರಿದಂತೆ ಅನೇಕ ನೊಬೆಲ್‌ ಪ್ರಶಸ್ತಿಗಳನ್ನು ಸ್ವಿಸ್ ವಿಜ್ಞಾನಿಗಳಿಗೆ ನೀಡಲಾಗಿದೆ. ಇತ್ತೀಚಿನ ವ್ಲಾಡಿಮಿರ್‌ ಪ್ರಿಲಾಗ್‌, ಹೇನ್‌ರಿಕ್‌ ಅರ್ನೆಸ್ಟ್‌, ರಿಚರ್ಡ್‌ ಅರ್ನೆಸ್ಟ್‌, ಎಡ್ಮಂಡ್‌ ಫಿಶರ್‌, ರಾಲ್ಫ್‌ ಜಿಂಕರ್‌ನ್ಯಾಗೆಲ್‌ ಮತ್ತು ಕುರ್ಟ್‌ ವುತ್ರಿಚ್‌ಗಳು ಸಹಾ ವೈಜ್ಞಾನಿಕ ಸಂಶೋಧನೆಗಳಿಗೆ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಒಟ್ಟಾರೆಯಾಗಿ ಸ್ವಿಟ್ಜರ್ಲೆಂಡ್‌‌ನೊಂದಿಗೆ ಸಂಬಂಧಿಸಿದ 113 ನೊಬೆಲ್‌ ಪ್ರಶಸ್ತಿ ವಿಜೇತರಿದ್ದಾರೆ ಮತ್ತು ಸ್ವಿಟ್ಜರ್ಲೆಂಡ್‌‌ನಲ್ಲಿರುವ ಸಂಸ್ಥೆಗಳಿಗೆ 9 ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿ ಸಂದಿದೆ. 

ಜಿನೀವಾ ಕಣ ಭೌತಶಾಸ್ತ್ರದ ಸಂಶೋಧನೆಗೆಂದು ಮೀಸಲಾದ ವಿಶ್ವದ ಅತಿ ದೊಡ್ಡ ಪ್ರಯೋಗಾಲಯವಾದ CERNನ್ನು ಹೊಂದಿದೆ. ಮತ್ತೊಂದು ಪ್ರಮುಖ ಸಂಶೋಧನಾ ಕೇಂದ್ರವೆಂದರೆ ಪಾಲ್‌ ಷೆರ್ರರ್‌ ಸಂಸ್ಥೆ. ಗಮನಾರ್ಹ ಅವಿಷ್ಕಾರಗಳೆಂದರೆ ಲಿಸರ್ಜಿಕ್‌ ಆಸಿಡ್‌ ಡೈಥೈಲಮೈಡ್‌ (LSD), ಸ್ಕ್ಯಾನಿಂಗ್‌ ಟನಲಿಂಗ್‌ ಸೂಕ್ಷ್ಮದರ್ಶಕ (ನೊಬೆಲ್‌ ಪ್ರಶಸ್ತಿ ವಿಜೇತ) ಅಥವಾ ಬಹು ಜನಪ್ರಿಯ ವೆಲ್ಕ್ರೋ. ಆಗಸ್ಟೆ ಪಿಕ್ಕಾರ್ಡ್‌ನ ಒತ್ತಡೀಕೃತ ಬಲೂನ್‌ ಮತ್ತು ಜ್ಯಾಕ್ವಿಸ್‌ ಪಿಕ್ಕಾರ್ಡ್‌ಗೆ ವಿಶ್ವದ ಸಾಗರಗಳ ಆಳದ ತಾಣವನ್ನು ಮುಟ್ಟಲು ಸಾಧ್ಯವಾಗಿಸಿದ ಬ್ಯಾಥಿಸ್ಕೇಫ್‌ನಂತಹಾ ಕೆಲವೊಂದು ತಂತ್ರಜ್ಞಾನಗಳು ಹೊಸದೊಂದು ಲೋಕವನ್ನೇ ತೆರೆದವು. 

ಸ್ವಿಟ್ಜರ್ಲೆಂಡ್‌‌ ಬಾಹ್ಯಾಕಾಶ ಸಂಸ್ಥೆ ಎಂಬ ಸ್ವಿಸ್ ಬಾಹ್ಯಾಕಾಶ ಕಚೇರಿಯು ಅನೇಕ ಬಾಹ್ಯಾಕಾಶ ತಂತ್ರಜ್ಞಾನಗಳು ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದೆ. ಇದರೊಂದಿಗೆ ಈ ರಾಷ್ಟ್ರವು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯನ್ನು 1975ರಲ್ಲಿ ಸ್ಥಾಪಿಸಿದ 10 ರಾಷ್ಟ್ರಗಳಲ್ಲಿ ಒಂದಾಗಿರುವುದಲ್ಲದೇ, ESAನ ಒಟ್ಟು ಆಯವ್ಯಯದ ಏಳನೇ ಅತಿ ದೊಡ್ಡ ದೇಣಿಗೆದಾರನಾಗಿದೆ. ಖಾಸಗಿ ಕ್ಷೇತ್ರದಲ್ಲಿ, ಓರ್ಲಿಕೊನ್‌ ಸ್ಪೇಸ್‌  ಅಥವಾ ಗಗನ ನೌಕೆಯ ಭಾಗಗಳನ್ನು ಉತ್ಪಾದಿಸುವಂತಹಾ ಮ್ಯಾಕ್ಸನ್‌ ಮೋಟಾರ್ಸ್ನಂತಹ ಅನೇಕ ಕಂಪೆನಿಗಳು ಬಾಹ್ಯಾಕಾಶ ಉದ್ದಿಮೆಯಲ್ಲಿ ತೊಡಗಿಕೊಂಡಿವೆ.

ಡಿಸೆಂಬರ್ 1992ರಲ್ಲಿ ಸ್ವಿಟ್ಜರ್ಲೆಂಡ್‌‌, ಐರೋಪ್ಯ ಆರ್ಥಿಕ ವಲಯದ ಸದಸ್ಯತ್ವದ ವಿರುದ್ಧ ಮತ ಹಾಕಿತು, ಆದರೂ ಇದು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಐರೋಪ್ಯ ಒಕ್ಕೂಟ(EU) ಹಾಗೂ ಐರೋಪ್ಯ ರಾಷ್ಟ್ರಗಳ ಜೊತೆಗೆ ಒಳ್ಳೆಯ ಸಂಬಂಧವನ್ನು ಉಳಿಸಿಕೊಂಡು ಬಂದಿದೆ. ಮಾರ್ಚ್ 2001ರಲ್ಲಿ, EU ಜೊತೆಗೆ ಸೇರಲು ನಡೆಸಿದ ಮಾತುಕತೆಗೆ ವಿರುದ್ಧವಾಗಿ ಸ್ವಿಸ್ ಜನರು ಮತ ಹಾಕಿದರು. ಇತ್ತೀಚಿನ ವರ್ಷಗಳಲ್ಲಿ, ಸ್ವಿಸ್ ತನ್ನ ಆರ್ಥಿಕ ಪದ್ಧತಿಗಳ ವಿಚಾರದಲ್ಲಿ ಬಹಳಷ್ಟು ರೀತಿಯಲ್ಲಿ EUನ ಅನುಕರಣೆ ಮಾಡುತ್ತಿದ್ದು ಅಂತರರಾಷ್ಟ್ರೀಯ ಪೈಪೋಟಿಯನ್ನು ಹೆಚ್ಚಿಸಲು ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯು ವರ್ಷಕ್ಕೆ 3%ರಷ್ಟು ಬೆಳೆಯುತ್ತಿದೆ. ಸ್ವಿಸ್ ಸರ್ಕಾರದ ಕೆಲವು ದೀರ್ಘಾವಧಿಯ ಉದ್ದೇಶಗಳಲ್ಲಿ ಸಂಪೂರ್ಣ EU ಸದಸ್ಯತ್ವವೂ ಕೂಡ ಒಂದಾಗಿದೆ, ಆದರೂ ಸಂಪ್ರದಾಯವಾದಿಗಳು SVP ಇದರ ವಿರುದ್ದ ಧ್ವನಿಯೆತ್ತಿದ್ದಾರೆ. ದಕ್ಷಿಣದ ಫ್ರೆಂಚ್-ಭಾಷಿಕ ವಲಯಗಳು ಹಾಗೂ ದೇಶದ ಕೆಲವು ನಗರ ವಲಯಗಳು EU ಕಡೆಗೆ ಹೆಚ್ಚು ಒಲವು ತೋರಿದಂತೆ ಕಂಡರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅದರ ಪ್ರಮಾಣ ನಗಣ್ಯವಾಗಿದೆ. 

ಏಕೀಕರಣದ ಕಾರ್ಯಾಲಯವನ್ನು ಸರ್ಕಾರವು ವಿದೇಶಾಂಗ ಇಲಾಖೆ ಮತ್ತು ಆರ್ಥಿಕ ಇಲಾಖೆಗಳಡಿ ಬರುವಂತೆ ರಚಿಸಿದೆ. ಸ್ವಿಟ್ಜರ್ಲೆಂಡ್‌‌‌ನ ಪ್ರತ್ಯೇಕೀಕರಣದಿಂದಾಗುವ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಿ ವ್ಯಾಪಾರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಯುರೋಪ್‌ನ ಉಳಿದ ಭಾಗ, ಬರ್ನ್‌ ಮತ್ತು ಬ್ರುಸೆಲ್ಸ್‌ನಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. 1999ರಲ್ಲೇ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತಾದರೂ 2001ರಿಂದೀಚೆಗೆ ಕಾರ್ಯಗತಗೊಳಿಸಲಾಯಿತು. ಪ್ರಥಮ ಸರಣಿಯ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಮಾನವ ಸಂಪನ್ಮೂಲಗಳ ಮುಕ್ತ ಸಂಚಾರ ಮತ್ತು 2004ರಲ್ಲಿ ಎರಡನೆ ಸರಣಿಯಲ್ಲಿ ಒಂಬತ್ತು ಕ್ಷೇತ್ರಗಳಿಗೆ ಅನುಮೋದನೆ ನೀಡಿ ಸಹಿ ಹಾಕಲಾಯಿತು. ಎರಡನೆ ಸರಣಿಯು ಷೆಂಗೆನ್‌‌‌‌ ಸಂಧಾನ ಮತ್ತು ಡಬ್ಲಿನ್ ಅಧಿವೇಶನಗಳನ್ನು ಒಳಗೊಂಡಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮಾತುಕತೆಯನ್ನು ಮುಂದುವರಿಸಿದ್ದಾರೆ. 2006ರಲ್ಲಿ, ಸ್ವಿಟ್ಜರ್ಲೆಂಡ್‌‌ ಪೂರ್ವ ಯುರೋಪ್‌ನ ಬಡ ದೇಶಗಳ ಮತ್ತು ಸಮಗ್ರ EUನ ಬೆಳವಣಿಗೆಗೆ ಧನಾತ್ಮಕ ಒಪ್ಪಂದ ಹಾಗೂ ಸಹಕಾರಗಳ ಅಂಗವಾಗಿ ಒಂದು ಶತಕೋಟಿ ಫ್ರಾಂಕ್‍ಗಳ ಹೂಡಿಕೆಗೆ ಒಪ್ಪಿಕೊಂಡಿತು‌. ಇನ್ನಷ್ಟು ಜನಾಭಿಪ್ರಾಯ ದೊರೆತ ನಂತರ ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ 300 ದಶಲಕ್ಷ ಫ್ರಾಂಕ್‌ಗಳ ಸಹಕಾರ ನೀಡುವುದಾಗಿ ತಿಳಿಸಿದೆ. ಹಲವು ಬಾರಿ ಸ್ವಿಸ್‌, ತೆರಿಗೆ ದರಗಳನ್ನು ಹೆಚ್ಚಿಸಿ ಮತ್ತು ಬ್ಯಾಂಕಿಂಗ್ ದತ್ತದ ರಹಸ್ಯ ವ್ಯವಸ್ಥೆಯನ್ನು ಸಡಿಲಗೊಳಿಸಿ EUನಾದ್ಯಂತ ಸಮಾನತೆ ಕಾಯ್ದುಕೊಳ್ಳುವಂತೆ EU ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ಒತ್ತಡ ಹೇರಿವೆ. ವಿದ್ಯುಚ್ಛಕ್ತಿ ಮಾರುಕಟ್ಟೆಯನ್ನು ಮುಕ್ತವಾಗಿಸುವುದು, ಐರೋಪ್ಯ GNSS ಗೆಲಿಲಿಯೋ ಯೋಜನೆಗಳಲ್ಲಿ ಭಾಗಿಯಾಗುವುದು, ಐರೋಪ್ಯ ರೋಗ ನಿಯಂತ್ರಣ ಮತ್ತು ಆಹಾರೋತ್ಪನ್ನಗಳ ಮಾನ್ಯತೆ ದೃಢೀಕರಣ ಕೇಂದ್ರಕ್ಕೆ ಸಹಕಾರ ನೀಡುವುದೂ ಸೇರಿದಂತೆ ನಾಲ್ಕು ವಲಯಗಳಲ್ಲಿ ಪ್ರಸಕ್ತವಾಗಿ ಪೂರ್ವಭಾವಿ ಮಾತುಕತೆಗಳು ನಡೆಯುತ್ತಿವೆ. 

ಐರೋಪ್ಯ ಒಕ್ಕೂಟದ ಗೃಹ ಖಾತೆ ಸಚಿವಾಲಯ ಡಿಸೆಂಬರ್ 12 2008ರಿಂದ, ಸ್ವಿಟ್ಜರ್ಲೆಂಡ್‌‌‌ಗೆ ಷೆಂಗೆನ್‌‌ ಪಾಸ್‌ಪೋರ್ಟ್ ಮುಕ್ತ ವಲಯದ ಪ್ರವೇಶಾನುಮತಿ ನೀಡಲಾಗಿದೆ ಎಂದು ಬ್ರುಸೆಲ್ಸ್‌ನಲ್ಲಿ ನವಂಬರ್ 27 2008ರಂದು ಪ್ರಕಟಿಸಿತು. ಭೂ-ಗಡಿಯ ತಪಾಸಣಾ ಶಿಬಿರಗಳಲ್ಲಿನ ನಿಯಂತ್ರಣವು ಸರಕು ಸಾಗಾಟಗಳಿಗೆ ಮಾತ್ರ ಸೀಮಿತವಾಗಿದ್ದು ಜನರ ಓಡಾಟಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ, ಆದರೆ 29 ಮಾರ್ಚ್ 2009ರ ತನಕ ಷೆಂಗೆನ್‌‌ ದೇಶದ ಪ್ರಜೆಗಳನ್ನು ಪಾಸ್‌ಪೋರ್ಟ್ ಹೊಂದಿರುವುದರ ಬಗ್ಗೆ ತಪಾಸಣೆಗೊಳಪಡಿಸಲಾಗುತ್ತದೆ.

ಸ್ವಿಟ್ಜರ್ಲೆಂಡ್‌‌‌ನಲ್ಲಿ 56% ಜಲವಿದ್ಯುಚ್ಛಕ್ತಿಯಿಂದ 39% ಪರಮಾಣು ವಿದ್ಯುಚ್ಛಕ್ತಿಯಿಂದ, ಮತ್ತು 5%ರಷ್ಟು ಸಾಂಪ್ರದಾಯಿಕ ಶಕ್ತಿ ಮೂಲಗಳಿಂದ ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತಿರುವುದರಿಂದ ಬಹುಪಾಲು ಇದು CO2-ಮುಕ್ತ ವಿದ್ಯುಚ್ಛಕ್ತಿ-ಉತ್ಪಾದನಾ ಜಾಲವಾಗಿದೆ.

ಸ್ವಿಸ್ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಭೂ ಸಂಚಾರ ಮಾರ್ಗಗಳು ರಸ್ತೆ ಸುಂಕ ಮತ್ತು ವಾಹನಗಳ ತೆರಿಗೆಗಳಿಂದ ಆದಾಯ ಪಡೆಯುತ್ತಿವೆ. ಸ್ವಿಸ್‌ನ ಜರ್ಮನಿ /ಫ್ರಾನ್ಸ್‌ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆ ಬಳಸಲು ಕಾರು ಮತ್ತು ಸರಕು ಸಾಗಣೆ ವಾಹನಗಳೆರಡಕ್ಕೂ ಸೇರಿ—ವಾರ್ಷಿಕ 40 ಸ್ವಿಸ್ ಫ್ರಾಂಕ್‌ ಕೊಟ್ಟು ವಿಗ್ನೆಟ್ಟೆಗಳನ್ನು (ಸುಂಕದ ಚೀಟಿಗಳು) ಖರೀದಿಸಬೇಕಾಗುತ್ತದೆ. ಸ್ವಿಸ್‌ನ ಜರ್ಮನಿ ಮಾದರಿಯ ಮೋಟಾರು ಹೆದ್ದಾರಿ ವ್ಯವಸ್ಥೆಯ ಒಟ್ಟು ಉದ್ದ 1,638km(2000ರ ಗಣನೆಯಂತೆ) ಮತ್ತು, ವಿಸ್ತೀರ್ಣ 41,290 km² ಇದ್ದು, ಪ್ರಪಂಚದ ಅತಿ ಹೆಚ್ಚು ಸಾಂದ್ರತೆಯುಳ್ಳ ಮೋಟಾರು ಹೆದ್ದಾರಿಗಳಲ್ಲಿ ಇದೂ ಒಂದಾಗಿದೆ. ಜ್ಯೂರಿಚ್‌ ವಿಮಾನ ನಿಲ್ದಾಣ ಸ್ವಿಟ್ಜರ್ಲೆಂಡ್‌‌‌ನ ಅತಿ ದೊಡ್ಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, 2007ರಲ್ಲಿ 20.7 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ. ಜಿನೀವಾ ಕಾಯಿಂಟ್ರಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 10.8 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿದೆ ಮತ್ತು ಯುರೋ ವಿಮಾನ ನಿಲ್ದಾಣ ಬಸೆಲ್-ಮ್ಯೂಲ್‌ಹೌಸ್-ಫೈರ್‌ಬರ್ಗ್ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು 4.3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು. ಇವೆರಡೂ ವಿಮಾನ ನಿಲ್ದಾಣಗಳನ್ನು ಫ್ರಾನ್ಸ್‌‌ನೊಂದಿಗೆ ಹಂಚಿಕೊಂಡಿದೆ.

ಸ್ವಿಟ್ಜರ್ಲೆಂಡ್‌‌‌‌‌‌‌‌‌‌‌‌‌‌ನ ರೈಲ್ವೆ ಮಾರ್ಗವು 5,063 km ಉದ್ದವಿದ್ದು ವಾರ್ಷಿಕ 350 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ.  2007ರಲ್ಲಿ, ಪ್ರತಿ ಸ್ವಿಸ್ ಪ್ರಜೆ ರೈಲಿನಲ್ಲಿ ಸರಾಸರಿ 2,103 kmಗಳಷ್ಟು ಪ್ರಯಾಣಿಸಿ, ಅತ್ಯಂತ ಉತ್ಸುಕ ರೈಲ್ವೇ ಬಳಕೆದಾರರು ಎನಿಸಿಕೊಂಡಿದ್ದಾರೆ.  366 km ಉದ್ದದ ನ್ಯಾರೋ ಗೇಜಿನ ರೈಲ್ವೆ ಸೇರಿದಂತೆ ಪ್ರಪಂಚದ ಕೆಲವು ಪಾರಂಪರಿಕ ಮಾರ್ಗಗಳು ಮತ್ತು ಗ್ರಾವುಬುಂಡೆನ್‌ ರೈಲ್ವೆ ಮಾರ್ಗವನ್ನು ರೇಟಿಯನ್ ರೈಲ್ವೇಸ್‌‌ನವರು ನಡೆಸಿಕೊಂಡು ಬರುತ್ತಿದ್ದರೆ, ಉಳಿದೆಲ್ಲ ಮಾರ್ಗಗಳನ್ನು ಒಕ್ಕೂಟ ರೈಲ್ವೇಸ್‌‌ನವರು ನಡೆಸಿಕೊಂಡು ಬರುತ್ತಿದ್ದಾರೆ. ಆಲ್ಪ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ರೈಲ್ವೆ ಸುರಂಗ ಮಾರ್ಗವು ಉತ್ತರದಿಂದ ದಕ್ಷಿಣಕ್ಕೆ ತೆಗೆದುಕೊಳ್ಳುವ ಪ್ರಯಾಣ ಸಮಯವನ್ನು ಉಳಿತಾಯ ಮಾಡುತ್ತದೆ.

ಸ್ವಿಟ್ಜರ್ಲೆಂಡ್‌‌‌ ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆ ನಿಯಮಾವಳಿಗಳನ್ನು ರಚಿಸಿ, ತ್ಯಾಜ್ಯ ಸಂಸ್ಕರಣೆ ಹಾಗೂ ಪುನರ್ಬಳಕೆಯಲ್ಲಿ ಹೆಚ್ಚು ಸಕ್ರಿಯವಾಗಿ, ಅಂದರೆ 66% ರಿಂದ 96% ನಷ್ಟು ಪುನರ್ಬಳಸಹುದಾದ ವಸ್ತುಗಳನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲಾಗುತ್ತದೆ. ತ್ಯಾಜ್ಯ ಪುನರ್ಬಳಸುವ ರಾಷ್ಟ್ರಗಳಲ್ಲಿ ಇದು ಮುಂಚೂಣಿಯಲ್ಲಿದೆ. ಸ್ವಿಟ್ಜರ್ಲೆಂಡ್‌‌‌ನ ಕೆಲವು ಪ್ರದೇಶಗಳಲ್ಲಿ, ಗೃಹ ತ್ಯಾಜ್ಯಗಳ ವಿಲೇವಾರಿಗೆ ಹಣ ಕೊಡಬೇಕಾಗುತ್ತದೆ. ಕಸವನ್ನು (ಬ್ಯಾಟರಿಯಂತಹ ಹಾನಿಕಾರಕ ವಸ್ತುಗಳನ್ನು ಬಿಟ್ಟು) ರಸೀದಿ ಚೀಟಿಯನ್ನು ಅಂಟಿಸಿರುವ, ಅಥವಾ ಅಧಿಕೃತವಾಗಿ ಹಣಕೊಟ್ಟು ಖರೀದಿಸಿರುವ ಚೀಲಗಳಲ್ಲಿದ್ದರೆ ಮಾತ್ರ ಸಂಗ್ರಹಿಸಲಾಗುತ್ತದೆ.  ಪುನರ್ಬಳಕೆ ಉಚಿತವಾಗಿ ನಡೆಯುವುದರಿಂದ, ಈ ರೀತಿಯ ಸಂಗ್ರಹಣೆಯಿಂದ ಪುನರ್ಬಳಕೆಯ ಕೆಲಸಕ್ಕೆ ವಿನಿಯೋಗವಾಗುವಂತೆ ಹಣ ಸಂಗ್ರಹಣೆಯಾಗುತ್ತದೆ.  ಹಣ ಕೊಟ್ಟು ಖರೀದಿಸದಿದ್ದ ಚೀಲಗಳೇನಾದರೂ ಸಿಕ್ಕರೆ, ಸ್ವಿಸ್ ಆರೋಗ್ಯ ಅಧಿಕಾರಿಗಳು ಮತ್ತು ಪೋಲೀಸರು ಅವುಗಳು ಎಲ್ಲಿಂದ ಬಂದಿದೆಯೆಂದು ತಿಳಿಯಲು ಸುಳಿವುಗಳು ಅಂದರೆ ಹಳೆ ರಶೀದಿಗಳನ್ನು ಹುಡುಕಿ ಪತ್ತೆ ಹಚ್ಚಿ, ಅಂತಹವರಿಗೆ ಸುಮಾರು 200 ರಿಂದ 500 CHFಗಳನ್ನು ದಂಡವಾಗಿ ವಿಧಿಸುತ್ತಾರೆ.

ಹಲವು ಪ್ರಮುಖ ಯುರೋಪಿನ ಸಂಸ್ಕೃತಿಗಳು ಸ್ವಿಟ್ಜರ್ಲೆಂಡ್‌‌‌ನ ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಪ್ರಭಾವ ಬೀರಿವೆ. ಸ್ವಿಟ್ಜರ್ಲೆಂಡ್‌‌‌ನಲ್ಲಿ ನಾಲ್ಕು ಅಧಿಕೃತ ಭಾಷೆಗಳಿವೆ: ಜರ್ಮನ್ (ಒಟ್ಟು ಜನ ಸಂಖ್ಯೆಯಲ್ಲಿ 63.7%, ಜೊತೆಗೆ ವಿದೇಶೀ ವಲಸಿಗರು; ಅದರಲ್ಲಿ 72.5% ಸ್ವಿಸ್ ಪೌರತ್ವ ಹೊಂದಿದ ವಲಸಿಗರು, 2000ನೇ ಇಸವಿಯಂತೆ) ಉತ್ತರಕ್ಕೆ, ಪೂರ್ವ ಮತ್ತು ಮಧ್ಯ ಭಾಗದಲ್ಲಿ; ಪಶ್ಚಿಮಕ್ಕೆ ಫ್ರೆಂಚ್ (20.4%; 21.0%); ದಕ್ಷಿಣಕ್ಕೆ ಇಟಾಲಿಯನ್ (6.5%; 4.3%).  ರೋಮಾಂಶ್‌ , ರೋಮನ್ ಭಾಷೆಯಾಗಿದ್ದು ಅಲ್ಪ ಸಂಖ್ಯಾತರು ಆಗ್ನೇಯ ಕ್ಯಾಂಟನ್‌ನ ಗ್ರಾವುಬುಂಡೆನ್‌ನಲ್ಲಿ ಸ್ಥಳೀಯವಾಗಿ ಮಾತನಾಡಲು ಬಳಸುತ್ತಾರೆ(0.5%; 0.6%), ಸಂಯುಕ್ತ ರಾಷ್ಟ್ರೀಯ ಶಾಸನವು ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್ ಭಾಷೆಗಳ ಜೊತೆಗೆ (ಶಾಸನದ 4ನೇ ಕಲಮು) ರೋಮಾಂಶ್‌ ಭಾಷೆ (70ನೇ ಕಲಮು)ಯನ್ನು ಅಧಿಕೃತ ಭಾಷೆ ಎಂದಿದೆ, ಆದರೆ ಒಕ್ಕೂಟ ಕಾನೂನುಗಳು ಮತ್ತು ಬೇರೆ ಅಧಿಕೃತ ಕಾಯಿದೆಗಳು ಈ ಭಾಷೆಗಳಲ್ಲಿ ಆಗಬೇಕೆಂದೇನೂ ಇಲ್ಲ. ಒಕ್ಕೂಟ ಸರಕಾರವು ತನ್ನ ಅಧಿಕೃತ ಭಾಷೆಗಳಲ್ಲಿ ಆಡಳಿತ ನಡೆಸಲು ತೀರ್ಮಾನಿಸಿದೆ, ಮತ್ತು ಒಕ್ಕೂಟ ಸಂವಿಧಾನದಲ್ಲಿ ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್‌ಗಳಿಗೆ ಏಕಕಾಲಿಕ ಭಾಷಾಂತರ ನಡೆಸಲಾಗುತ್ತದೆ. 
ಸ್ವಿಟ್ಜರ್ಲೆಂಡ್‌‌‌ನಲ್ಲಿ ಬಳಸುವ ಸ್ವಿಸ್‌ ಜರ್ಮನ್‌ ಎಂದು ಕರೆಯಲಾಗುವ ಭಾಷೆಯು ಅಲೆಮಾನ್ನಿಕ್‌ ಪ್ರಾಂತ್ಯಭಾಷೆಗಳ ಗುಂಪಿನ ಮುಂದಾಳು ಭಾಷೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪತ್ರ ವ್ಯವಹಾರದಿಂದ ಹಿಡಿದು ರೇಡಿಯೋ ಮತ್ತು ಟಿವಿ ವಾಹಿನಿಗಳೂ ಸ್ವಿಸ್ ದರ್ಜೆಯ ಜರ್ಮನ್‌‌ಅನ್ನು ಬಳಸುತ್ತವೆ. ಅಂತೆಯೇ, ಫ್ರೆಂಚ್‌‌ಅನ್ನು ಕೆಲವು ಹಳ್ಳಿಗಳು ಪ್ರಾಂತ್ಯ ಭಾಷೆಯನ್ನಾಗಿಸಿಕೊಂಡಿರುವ ಫ್ರಾಂಕೊ-ಪ್ರಾಂತ್ಯಗಳಿದ್ದು ಅವುಗಳನ್ನುಸ್ಯೂಸ್ಸಿ ರೋಮ್ಯಾಂಡೆ ಎನ್ನುತ್ತಾರೆ, ಅವುಗಳೆಂದರೆ ವಾಡೋಯಿಸ್, ಗ್ರೂಎರಿಯನ್, ಜುರಾಸ್ಸಿಯನ್, ಎಂಪ್ರೊ, ಫ್ರೆಬರ್ಗಿಸ್, ನ್ಯೂಚಾಟೆಲೋಯಿಸ್, ಮತ್ತು ಇಟಾಲಿಯನ್ ಮಾತನಾಡುವಲ್ಲಿ, ಟಿಕಿನೀಸ್ (ಲಂಬಾರ್ಡ್‌ನ ಪ್ರಾಂತ್ಯ ಭಾಷೆ). ಅಧಿಕೃತ ಭಾಷೆಗಳು (ಜರ್ಮನ್, ಫ್ರೆಂಚ್‌ ಮತ್ತು ಇಟಾಲಿಯನ್) ಕೆಲವು ಪದಗಳನ್ನು ಸೇರಿಸಿಕೊಂಡಿವೆ. ಅವುಗಳು ಸ್ವಿಟ್ಜರ್ಲೆಂಡ್‌‌‌ನ ಹೊರಗೆ ಅರ್ಥವಾಗುವುದಿಲ್ಲ, ಉದಾ., ಪದಗಳ ಭಾಷೆಯಿಂದ (ಫ್ರೆಂಚ್‌‌ನಿಂದ ಜರ್ಮನ್ ಬಿಲೆಟ್ಟೆ   ), ಅದೇ ರೀತಿಯ ಕೆಲವು ಪದಗಳು ಬೇರೆ ಭಾಷೆಗಳಿಂದ (ಇಟಾಲಿಯನ್‌‌ನಲ್ಲಿ ಅಜಿಯಾನೆ ಯನ್ನು ಆಕ್ಟ್  ಬದಲು ಜರ್ಮನ್‌ನ ಅಕಿಟೋನ್ ನಂತೆ ಡಿಸ್ಕೌಂಟ್ ಗೆ ಬಳಸುತ್ತಾರೆ). ಸ್ವಿಸ್ ಪ್ರಜೆಗಳಿಗೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ ಒಂದನ್ನು ಶಾಲಾ ಹಂತದಲ್ಲಿ ಕಲಿಯುವುದು ಕಡ್ಡಾಯವಾಗಿರುವುದರಿಂದ, ಅವರು ಕನಿಷ್ಟ ಪಕ್ಷ ಎರಡು ಭಾಷೆಗಳನ್ನಾದರೂ ಬಲ್ಲವರಾಗಿರುತ್ತಾರೆ.
ವಿದೇಶಿ ನಾಗರೀಕರು ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರು ಜನಸಂಖ್ಯೆ 22%ನಷ್ಟಿದ್ದು, ಇವರೆಲ್ಲರೂ (60%) ಐರೋಪ್ಯ ಒಕ್ಕೂಟ ಅಥವಾ EFTA ದೇಶಗಳಿಂದ ಬಂದವರಾಗಿರುತ್ತಾರೆ.  ಒಟ್ಟು ವಿದೇಶೀಯರಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಇಟಲಿಯವರು 17,3%ರಷ್ಟು ಇದ್ದು, ನಂತರದ ಸ್ಥಾನದಲ್ಲಿ ಜರ್ಮನ್‌‌ರು (13,2%), ಸೈಬೀರಿಯಾ ಮತ್ತು ಮಾಂಟೆನಿಗ್ರೋ (11,5%) ಮತ್ತು ಪೊರ್ಚುಗಲ್ (11,3%) ಗಳಿಂದ ಬಂದ ವಲಸಿಗರು ಇದ್ದಾರೆ.  ಏಷಿಯನ್‌ ಮೂಲದವರಲ್ಲಿ ಹೆಚ್ಚಾಗಿ ಶ್ರೀಲಂಕಾದಿಂದ ಬಂದ ವಲಸೆ ಬಂದ ತಮಿಳು ಸಂತ್ರಸ್ತರು ಕಂಡುಬರುತ್ತಾರೆ.  2000ರಲ್ಲಿ, ಕೆಲವು ದೇಶೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಅದರಲ್ಲೂ ಹೆಚ್ಚಾಗಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿರುವ ವಲಸಿಗರು ಕಂಡು ಕ್ಸೆನೋಫೋಬಿಯಾ ಬಂದವರಂತೆ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿದೇಶೀ ಪ್ರಜೆಗಳು, ಸಾಮಾನ್ಯವಾಗಿ ಸಮಸ್ಯೆಯಿಲ್ಲದೆ ಹೊಂದಿಕೊಳ್ಳುವ ವಿದೇಶೀಯರು, ಸ್ವಿಟ್ಜರ್ಲೆಂಡ್‌ನ ಮುಕ್ತ ಜೀವನಶೈಲಿಯನ್ನು ಎತ್ತಿ ಹಿಡಿದಿದೆ. 

ಸ್ವಿಸ್ ಪ್ರಜೆಗಳು ಕಡ್ಡಾಯ ಸಾರ್ವತ್ರಿಕ ಆರೋಗ್ಯ ವಿಮೆಗೆ ಒಳಪಟ್ಟಿರುವುದರಿಂದ, ಅದನ್ನು ಬಳಸಿಕೊಂಡು ಅವರಿಗೆ ಅನೇಕ ವಿಧದ ಆಧುನಿಕ ವೈದ್ಯಕೀಯ ಸೇವೆಗಳನ್ನು ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಆರೋಗ್ಯಸೇವಾ ವ್ಯವಸ್ಥೆಯನ್ನು ಬೇರೆ ಮುಂದುವರಿದ ಐರೋಪ್ಯ ರಾಷ್ಟ್ರಗಳೊಂದಿಗೆ ಹೋಲಿಸಬಹುದಾಗಿದ್ದು ಸೇವಾಕಾಂಕ್ಷಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 1990ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು 2003ರಲ್ಲಿ ಒಟ್ಟು GDPಯ 11.5%ಯಷ್ಟಿತ್ತು ಮತ್ತು, ನೀಡಲಾಗುತ್ತಿರುವ ಆರೋಗ್ಯ ಸೇವೆಗಳ ಶುಲ್ಕ ಹೆಚ್ಚುತ್ತಿರುವುದರಿಂದ ಆರೋಗ್ಯಕ್ಕಾಗಿ ಜಾಸ್ತಿ ಖರ್ಚು ಮಾಡಲಾಗುತ್ತಿದ್ದು , ನಾಗರೀಕರ ವಯೋಗುಣಗಳಿಗನುಗುಣವಾಗಿ ಮತ್ತು ಹೊಸ ಆರೋಗ್ಯಸೇವಾ ತಂತ್ರಜ್ಞಾನಗಳು ಬಂದಂತೆ, ಆರೋಗ್ಯ ಸೇವೆಗಳ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತವೆ.

ಮುಕ್ಕಾಲು ಭಾಗದಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದಾರೆ  ಕೇವಲ 70 ವರ್ಷಗಳಲ್ಲಿ ಸ್ವಿಟ್ಜರ್ಲೆಂಡ್‌‌ನಲ್ಲಿದ್ದ ಹಳ್ಳಿಗಳೆಲ್ಲ ನಗರಗಳಾಗಿ ಮಾರ್ಪಟ್ಟಿವೆ. ಸ್ವಿಸ್‌ನಲ್ಲಿ ಕಳೆದ 2,000 ವರ್ಷಗಳಲ್ಲಾಗಿದ್ದಷ್ಟು ಭೂ ಪ್ರದೇಶದ ಮಾರ್ಪಾಟುಗಳು 1935ರಿಂದೀಚೆಗೆ ನಗರೀಕರಣಗೊಳ್ಳಲು ನಡೆದಿವೆ. ನಗರಗಳ ಅವ್ಯವಸ್ಥಿತ-ಬೆಳವಣಿಗೆಯು ಪ್ರಸ್ಥಭೂಮಿ, ಜ್ಯೂರಾ ಮತ್ತು ಆಲ್ಪೈನ್ ಬೆಟ್ಟಗಳ ಮೇಲೆ ಪರಿಣಾಮ ಬೀರಿದೆಯಲ್ಲದೆ  ಭೂ-ಬಳಕೆಯ ವಿಚಾರಗಳಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಹಾಗೂ ಚರ್ಚೆ ನಡೆದಿದೆ.  21ನೇ ಶತಮಾನದ ಆರಂಭದಿಂದಲೂ, ಹಳ್ಳಿಗಾಡಿಗಿಂತ ನಗರಗಳಲ್ಲಿನ ಜನಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಸ್ವಿಟ್ಜರ್ಲೆಂಡ್‌‌ನಲ್ಲಿ ನಗರಗಳ ಸಾಂದ್ರತೆ ಹೆಚ್ಚಾಗಿದ್ದು, ದೊಡ್ಡ, ಮಧ್ಯಮ ಹಾಗೂ ಸಣ್ಣ ನಗರಗಳು ಒಂದಕ್ಕೊಂದು ಪೂರಕವಾಗಿವೆ. ಪ್ರಸ್ಥಭೂಮಿಯು ಹೆಚ್ಚು ಜನ ಸಾಂದ್ರಿತ ಅಂದರೆ ಪ್ರತಿ km2ಗೆ 450 ಜನರಿದ್ದು ಎಲ್ಲ ತರಹದ ಭೂ ಪ್ರದೇಶಗಳಲ್ಲಿಯೂ ಮನುಷ್ಯನ ಇರುವಿಕೆಯನ್ನು ತೋರಿಸುತ್ತದೆ. ಅತಿ ಹೆಚ್ಚು ಜನಸಂದಣಿಯಿರುವ ಮೆಟ್ರೊಪೋಲಿಟನ್ ನಗರಗಳು ಕ್ರಮವಾಗಿ, ಜ್ಯೂರಿಚ್‌ , ಜಿನೀವಾ -ಲಾಸನ್ನೆ, ಬಸೆಲ್ ಮತ್ತು ಬರ್ನ್ ಇನ್ನೂ ಹೆಚ್ಚುತ್ತಿವೆ.  ಅಂತರರಾಷ್ಟ್ರೀಯ ಹೋಲಿಕೆಯಲ್ಲಿ ಈ ನಗರ ಪ್ರದೇಶಗಳು ಅವುಗಳ ಜನಸಂಖ್ಯೆಗಿಂತ ಹೆಚ್ಚು ಪ್ರಾಮುಖ್ಯತೆ ಹೊಂದಿವೆ.  ಇದರ ಜೊತೆಗೆ ಎರಡು ನಗರಗಳಾದ ಜ್ಯೂರಿಚ್‌ ಮತ್ತು ಜಿನೀವಾ, ಉನ್ನತ ಮಟ್ಟದ ಜೀವನ ಶೈಲಿಗೆ ಹೆಸರುವಾಸಿಯಾಗಿವೆ. 

ಸ್ವಿಟ್ಜರ್ಲೆಂಡ್‌‌ಗೆ‌ ಯಾವುದೇ ಅಧಿಕೃತವಾದ ರಾಷ್ಟ್ರೀಯ ಧರ್ಮವಿಲ್ಲ, ಆದರೂ ಕೆಲವು ಕ್ಯಾಂಟನ್‌ಗಳು (ಜಿನೀವಾ ಮತ್ತು ನ್ಯೂಚಾಟೆಲ್‌ಗಳನ್ನು ಹೊರತುಪಡಿಸಿ) ಎಲ್ಲ ಸಂದರ್ಭಗಳಲ್ಲಿಯೂ ಕ್ಯಾಥೊಲಿಕ್‌ ಚರ್ಚು ಮತ್ತು ಸ್ವಿಸ್‌ನ ಸುಧಾರಿತ ಚರ್ಚುಗಳು ಸೇರಿದಂತೆ ಅಧಿಕೃತವಾಗಿ ಚರ್ಚುಗಳೊಂದಿಗೆ ಗುರುತಿಸಿಕೊಂಡಿವೆ. ಈ ಚರ್ಚುಗಳು, ಮತ್ತು ಕೆಲವು ಕ್ಯಾಂಟನ್‌ಗಳಲ್ಲಿ ಹಳೆಯ ಕ್ಯಾಥೊಲಿಕ್‌ ಚರ್ಚುಗಳು ಮತ್ತು ಯಹೂದ್ಯ ಸಮುದಾಯಗಳು, ಮತಾನುಯಾಯಿಗಳಿಂದ ಸಂಗ್ರಹಿಸಿದ ಹಣದಿಂದ ನಡೆಯುತ್ತವೆ. 
ಸ್ವಿಟ್ಜರ್ಲೆಂಡ್‌‌‌ನಲ್ಲಿ ಕ್ರೈಸ್ತ ಧರ್ಮವು ಪ್ರಧಾನ ಧರ್ಮವಾಗಿದ್ದು, ಕ್ಯಾಥೊಲಿಕ್‌ ಚರ್ಚ್‌ (ಒಟ್ಟು ಜನಸಂಖ್ಯೆಯಲ್ಲಿ 41.8% ) ಮತ್ತು ಹಲವು ಪ್ರೊಟೆಸ್ಟೆಂಟ್‌ (35.3%) ಪಂಥಗಳಾಗಿ ವಿಂಗಡಣೆಯಾಗಿದೆ. ವಲಸೆ ಬಂದಿರುವ ಇಸ್ಲಾಮ್ (4.3%, ಪ್ರಧಾನವಾಗಿ ಕಸೊವರ್ಸ್ ಮತ್ತು ತುರ್ಕರು) ಮತ್ತು ಪೂರ್ವದ ಸಂಪ್ರದಾಯವಾದಿ (1.8%) ಅಲ್ಪಸಂಖ್ಯಾತ ಧರ್ಮಗಳು ತಕ್ಕಷ್ಟು ಮಟ್ಟಿಗೆ ಇವೆ.  2005ರ ಯುರೊಬಾರೊಮೀಟರ್ ಸಮೀಕ್ಷೆಯಿಂದ  48% ಆಸ್ತಿಕರು, 39% ಆತ್ಮ ಅಥವಾ ಪ್ರೇರಣಾ ಶಕ್ತಿಯನ್ನು ನಂಬುವುದಾಗಿ ಹೇಳಿಕೊಂಡರೆ , 9% ನಾಸ್ತಿಕರು ಮತ್ತು 4% ಆಜ್ಞೇಯತಾವಾದಿಗಳಿರುವುದಾಗಿ ತಿಳಿದು ಬಂದಿದೆ.

ಇತಿಹಾಸದುದ್ದಕ್ಕೂ ಪ್ರೊಟೆಸ್ಟೆಂಟ್‌ಗಳು ಹಾಗೂ ದೇಶದ ಬಹುಭಾಗಗಳಲ್ಲಿ ಬಿಡಿಬಿಡಿಯಾಗಿ ಹರಡಿ ಹೋಗಿರುವ ಬಹುಸಂಖ್ಯಾತ ಕ್ಯಾಥೊಲಿಕ್‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಗಳ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಬಂದಿದೆ. ಅಪ್ಪೆನ್ಜೆಲ್‌‌ ‌‌‌ಎಂಬ ಒಂದು ಕ್ಯಾಂಟನ್, 1597ರಲ್ಲಿ ಅಧಿಕೃತವಾಗಿ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಭಾಗ‌ಗಳೆಂದು ವಿಭಜಿತವಾಯಿತು.  ದೊಡ್ಡ ನಗರಗಳಲ್ಲಿ (ಬರ್ನ್, ಜ್ಯೂರಿಚ್‌ ಮತ್ತು ಬಸೆಲ್) ಪ್ರೊಟೆಸ್ಟೆಂಟ್‌ ಪ್ರಬಲವಾದರೆ, ಮಧ್ಯ ಸ್ವಿಟ್ಜರ್ಲೆಂಡ್‌‌ ಹಾಗೂ ಟಿಕಿನೊ, ಸಾಂಪ್ರದಾಯಿಕವಾಗಿ ಕ್ಯಾಥೊಲಿಕ್‌‌ಗಳಾಗಿವೆ. ಸಾಂಡರ್‌ಬಂಡ್ಸ್‌ಕ್ರೀಗ್‌ ಕ್ಯಾಂಟನ್‌ನಲ್ಲಿ ನಡೆದ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌‌ಗಳ ಘರ್ಷಣೆಗಳಿಂದ ಎಚ್ಚೆತ್ತ ಸರ್ಕಾರವು 1848ರ ಸ್ವಿಸ್ ಸಂವಿಧಾನದಲ್ಲಿ, ಸಹಭಾಗಿತ್ವ ರಾಷ್ಟ್ರದ ಕಲ್ಪನೆಯನ್ನು ಇಟ್ಟುಕೊಂಡು, ಕ್ಯಾಥೊಲಿಕ್‌‌ ಮತ್ತು ಪ್ರೊಟೆಸ್ಟೆಂಟ್‌‌ಗಳ ಶಾಂತಿಯುತ ಸಹಬಾಳ್ವೆಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಮಾಡಿದೆ. 1980ರಲ್ಲಿ ಪ್ರೇರಿತವಾದ ಸಂಪೂರ್ಣ ಚರ್ಚುಗಳ ಮತ್ತು ರಾಷ್ಟ್ರದ ವಿಂಗಡಣೆಯು, ಕೇವಲ 21.1% ಮತ ಬೆಂಬಲದೊಂದಿಗೆ ಸ್ಪಷ್ಟವಾಗಿ ತಿರಸ್ಕರಿಸಲ್ಪಟ್ಟಿತು.

ಸ್ವಿಟ್ಜರ್ಲೆಂಡ್‌‌‌ನ ಸಂಸ್ಕೃತಿಯು ಮೇಲೆ ನೆರೆಯ ಪರಿಣಾಮ ಬೀರಿದ್ದು, ವರ್ಷ ಕಳೆದಂತೆ ಕೆಲವು ಪ್ರಾಂತೀಯ ವ್ಯತ್ಯಾಸಗಳೊಂದಿಗೆ ಆ ಸಂಸ್ಕೃತಿಯು ವೈಶಿಷ್ಟ್ಯವಾಗಿ ಮತ್ತು ಸ್ವತಂತ್ರ ಪರಂಪರೆಯಾಗಿ ಬೆಳೆದುಬಂದಿದೆ. ವಿಶೇಷವಾಗಿ, ಫ್ರೆಂಚ್‌ -ಭಾಷಿಕ ವಲಯಗಳು ಫ್ರೆಂಚ್‌ ಸಂಸ್ಕೃತಿಯತ್ತ ಹೆಚ್ಚು ವಾಲಿದ್ದು EU ಪರವಾಗಿದ್ದಾರೆ. ಸ್ವಿಸ್ ಹಿಂದಿನಿಂದಲೂ ಮಾನವಿಕ ಪರಂಪರೆಯಾಗಿದೆ, ಕಾರಣ ಸ್ವಿಟ್ಜರ್ಲೆಂಡ್‌‌‌ ರೆಡ್ ಕ್ರಾಸ್‍‌ ಚಳುವಳಿಯ ಮತ್ತು ಒಕ್ಕೂಟ ರಾಷ್ಟ್ರಗಳ ಮಾನವ ಹಕ್ಕುಗಳ ಸಮಿತಿಯ ತವರು. ಸ್ವಿಸ್ ಜರ್ಮನ್‌ ಭಾಷಿಕ ವಲಯಗಳು ಜರ್ಮನ್ ಸಂಸ್ಕೃತಿಯತ್ತ ವಾಲಿದರೂ, ಪ್ರಾಂತ್ಯ ಭಾಷೆಗಳಾದ ಉನ್ನತ ಜರ್ಮನ್‌ ಮತ್ತು ಸ್ವಿಸ್ ಜರ್ಮನ್‌‌‌‌‌‌‌‌ಗಳಲ್ಲಿ ಭಿನ್ನತೆ ಇರುವುದರಿಂದ ಜರ್ಮನ್-ಭಾಷಿಕ ಸ್ವಿಸ್ ಪ್ರಜೆಗಳು ತಮ್ಮನ್ನು ಸ್ವಿಸ್‌ಗಳೆಂದೇ ಗುರುತಿಸಿಕೊಳ್ಳುತ್ತಾರೆ. ಇಟಾಲಿಯನ್‌-ಭಾಷಿಕ ವಲಯಗಳು ಹೆಚ್ಚಾಗಿ ಇಟಾಲಿಯನ್‌ ಸಂಸ್ಕೃತಿಯನ್ನು ಹೊಂದಿವೆ. ಒಂದು ಪ್ರಾಂತ್ಯವು ತನ್ನ ಭಾಷೆಯನ್ನು ಮಾತನಾಡುವ ನೆರೆಯ ರಾಷ್ಟ್ರದೊಂದಿಗೆ ಸಾಂಸ್ಕೃತಿಕವಾಗಿಯೂ ಸಹ ಸಂಬಂಧವಿರಿಸಿಕೊಳ್ಳುತ್ತದೆ. 
ಸ್ವಿಟ್ಜರ್ಲೆಂಡ್‌‌ನ ಪೂರ್ವ ಬೆಟ್ಟಗಳಲ್ಲಿ ಭಾಷಾವಾರು ಪ್ರತ್ಯೇಕವಾಗಿರುವ ರೋಮಾಂಶ್‌‌ ‌ ಸಂಸ್ಕೃತಿಯು ದೃಢವಾಗಿದ್ದು, ತನ್ನ ಅಪರೂಪದ ಭಾಷಾ ಪರಂಪರೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ.

ಅನೇಕ ಬೆಟ್ಟ ಪ್ರದೇಶಗಳು ಚಳಿಗಾಲದಲ್ಲಿ ಸ್ಕೀ ರೆಸಾರ್ಟ್ ಸಂಸ್ಕೃತಿ, ಮತ್ತು ಬೇಸಿಗೆಯಲ್ಲಿ ಹೈಕಿಂಗ್‌ (ಪರ್ಯಟನ) ಸಂಸ್ಕೃತಿಯ ಚಟುವಟಿಕೆಗಳನ್ನು ಮೈಗೂಡಿಸಿಕೊಂಡಿವೆ. ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಮನರಂಜನಾ ಸಂಸ್ಕೃತಿಯಿದ್ದು ಪ್ರವಾಸೋದ್ಯಮಕ್ಕೆ ಒಂದು ಆಕರ್ಷಣೆಯಾಗಿದೆ, ವಸಂತ ಕಾಲ ಮತ್ತು ಶರತ್ಕಾಲದಲ್ಲಿ ಕೆಲವೇ ಪ್ರವಾಸಿಗರಿದ್ದರೂ ಸ್ವಿಸ್‌‌ಗಳು ಹೆಚ್ಚಾಗಿ ಬರುತ್ತಾರೆ. ಅನೇಕ ಪ್ರದೇಶಗಳಲ್ಲಿ ಪಾರಂಪರಿಕ ರೈತಾಪಿ ವರ್ಗ ಮತ್ತು ದನಗಾಹಿಗಳು ಅಧಿಕವಾಗಿ ಕಂಡು ಬರುತ್ತಾರೆ ಮತ್ತು ಸಣ್ಣ ತೋಟಗಳು ನಗರಗಳ ಹೊರ ವಲಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಚಿತ್ರೋದ್ಯಮದಲ್ಲಿ, ಅನೇಕ ಅಮೆರಿಕನ್‌ ನಿರ್ಮಿತ ಕಾರ್ಯಕ್ರಮಗಳು ಬರುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಸ್ವಿಸ್ ಚಿತ್ರಗಳು ಲಾಭಗಳಿಸುತ್ತಿವೆ. ದೇಶದ ಎಲ್ಲಾ ಸಂಸ್ಥೆಗಳಲ್ಲಿಯೂ ಜಾನಪದ ಕಲೆ ಜೀವಂತವಾಗಿದೆ. ಸ್ವಿಟ್ಜರ್ಲೆಂಡ್‌‌ ಸಂಗೀತ, ನೃತ್ಯ, ಕಾವ್ಯ, ಮರಗೆಲಸ ಮತ್ತು ಕಸೂತಿಗಳಿಗೆ ಪ್ರಸಿದ್ದವಾಗಿದೆ. ಆಲ್ಫೋರ್ನ್, ಮರದಿಂದ ಮಾಡಲ್ಪಟ್ಟ ಕಹಳೆ-ಮಾದರಿಯ ಸಂಗೀತ ಸಾಧನವು, ಸಂಗೀತಕ್ಕೆ ಸ್ವಾಭಾವಿಕತೆ ನೀಡಲು ಮತ್ತು ಪಾರಂಪರಿಕ ಅಕಾರ್ಡಿಯನ್‌‌ನ ಸಾಕಾರರೂಪವಾಗಿದ್ದು ಸ್ವಿಸ್ ಸಂಗೀತಕ್ಕೆ ಮೆರುಗು ನೀಡುತ್ತದೆ.

ಪ್ರಮುಖವಾಗಿ 1291ರಲ್ಲಿ ಸ್ಥಾಪಿತವಾದ ಈ ಒಕ್ಕೂಟವು ಆಗಿನಿಂದ ಜರ್ಮನ್‌-ಭಾಷಿಕ ವಲಯಗಳನ್ನು ಒಳಗೊಂಡಿದ್ದು ಸಾಹಿತ್ಯ ಪ್ರಕಾರದ ಪ್ರಾಚೀನ ರೂಪಗಳು ಕೂಡ ಜರ್ಮನ್‌ನಲ್ಲಿವೆ. 18ನೇ ಶತಮಾನದಲ್ಲಿ ಫ್ರೆಂಚ್‌ ಭಾಷೆ ಬರ್ನ್ ಹಾಗೂ ಉಳಿದ ಕಡೆಗಳಲ್ಲಿ‌ ಜನಪ್ರಿಯವಾದ್ದರಿಂದ, ಫ್ರೆಂಚ್‌ -ಭಾಷಿಕ ಮಿತ್ರ ದೇಶಗಳು ಮತ್ತು ಸಾಮಂತ ಪ್ರದೇಶಗಳು ಹಿಂದೆಂದಿಗಿಂತ ಹೆಚ್ಚು ಗುರುತಿಸಲ್ಪಟ್ಟವು.

ಸ್ವಿಸ್ ಜರ್ಮನ್‌ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದವಾದವರು ಜರೇಮಿಯಾಸ್ ಗಥೆಲ್ಫ್‌ (1797-1854) ಮತ್ತು ಗಾಟ್‌ಫ್ರೆಡ್‌ ಕೆಲ್ಲರ್‌ (1819-1890). 20ನೇ ಶತಮಾನದ ಸ್ವಿಸ್ ಸಾಹಿತ್ಯದಲ್ಲಿ ನಿಸ್ಸಂಶಯವಾದ ದೈತ್ಯಕೃತಿಗಳೆಂದರೆ ಮ್ಯಾಕ್ಸ್‌ ಫ್ರಿಷ್‌‌ (1911-91) ಮತ್ತು ಫ್ರೆಡ್ರಿಕ್ ಡ್ಯುರೆನ್‌ಮ್ಯಾಟ್ (1921-90), ಕೃತಿಗಳಾದ ದೈ ಫಿಸಿಕೆರ್‌(ದಿ ಫಿಸಿಸಿಸ್ಟ್) ಮತ್ತು ದಾಸ್ ವರ್ಸ್‌ಪ್ರಚೆನ್‌ (), 2001ರಲ್ಲಿ ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾದವು. 

ಪ್ರಸಿದ್ದ ಫ್ರೆಂಚ್‌ -ಭಾಷಿಕ ಬರಹಗಾರರೆಂದರೆ ಜೀನ್‌-ಜಾಕ್ವೆಸ್‌ ರವ್‌ಸ್ಸಾವ್‌ (1712-1778) ಮತ್ತು ಜರ್ಮೈನೇ ಡಿ ಸ್ಟೀಲ್‌ (1766-1817). ಇತ್ತೀಚಿನ ಬರಹಗಾರರಾದ ಚಾರ್ಲ್ಸ್‌ ಫರ್ಡಿನೆಂಡ್‌ ರಾಮುಜ್‌ (1878-1947) ಕಾದಂಬರಿಗಳಲ್ಲಿ , ರೈತಾಪಿ ಮತ್ತು ಗುಡ್ಡಗಾಡುಗಳಲ್ಲಿ ವಾಸಿಸುವ ಜನಗಳು ನಡೆಸುವ ಕಷ್ಟಕರ ವಾತಾವರಣದಲ್ಲಿನ ಜೀವನದ ಬಗ್ಗೆ ಹೇಳಲಾಗಿದೆ ಮತ್ತು ಬ್ಲೇಸ್‌ ಸೆಂಡ್ರಾರ್ಸ್ (ಮೊದಲು ಫ್ರೆಡ್ರಿಕ್‌ ಸ್ಹಾಸರ್‌, 1887-1961).  ಇಟಾಲಿಯನ್‌ ಮತ್ತು ರೋಮಾಂಶ್‌-ಭಾಷಿಕ ಲೇಖಕರು ಒಳ್ಳೆಯ ಕೊಡುಗೆ ನೀಡಿದ್ದಾರೆ ಆದರೆ ಅವುಗಳು ಕಡಿಮೆ ಸಂಖ್ಯೆಯಲ್ಲಿವೆ.

ಸುಪ್ರಸಿದ್ದವಾದ ಸ್ವಿಸ್ ಸಾಹಿತ್ಯ ರಚನೆಯೆಂದರೆ, ಹೈಡಿ , ತನ್ನ ತಾತನ ಜೊತೆ ಆಲ್ಪ್ಸ್‌ನಲ್ಲಿ ವಾಸಿಸುತ್ತಿದ್ದ ಒಂದು ಅನಾಥ ಹುಡುಗಿಯ ಕಥೆ, ಅತಿ ಹೆಚ್ಚು ಜನಪ್ರಿಯವಾದ ಮಕ್ಕಳ ಕೃತಿಗಳಲ್ಲಿ ಇದೂ ಒಂದಾಗಿದ್ದು, ಸ್ವಿಟ್ಜರ್ಲೆಂಡ್‌‌ನ ಸಂಕೇತವಾಗಿ ಹೊರಹೊಮ್ಮಿದೆ. ಅದರ ಲೇಖಕಿಯಾದ, ಜೊಹಾನ ಸ್ಪೈರಿ (1827-1901), ಅದೇ ರೀತಿಯ ಹಲವು ಪುಸ್ತಕಗಳನ್ನು ಬರೆದಿದ್ದಾರೆ. 

ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ಅಭಿವ್ಯಕ್ತಿಯ ಹಕ್ಕು ಭರವಸೆಯನ್ನು ಸ್ವಿಟ್ಜರ್ಲೆಂಡ್‌‌ನ ಒಕ್ಕೂಟ ಸಂವಿಧಾನವು ಕೊಟ್ಟಿದೆ‌.  ಸ್ವಿಸ್ ವಾರ್ತಾ ಸಂಸ್ಥೆ (SNA) ಮೂರು ರಾಷ್ಟ್ರೀಯ ಭಾಷೆಗಳಲ್ಲಿ—ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ದಿನದ ಎಲ್ಲ ಸಮಯದಲ್ಲಿಯೂ ಪ್ರಸಾರ ಮಾಡುತ್ತದೆ. SNAಯು ಎಲ್ಲ ಸ್ವಿಸ್ ಮಾಧ್ಯಮ ಹಾಗೂ ಹಲವು ವಿದೇಶೀ ಮಾಧ್ಯಮ ಸೇವೆಗಳಿಗೆ ಅನೇಕ ತರಹದ ಸುದ್ದಿಯನ್ನು ಒದಗಿಸುತ್ತಿದೆ. 

ಸ್ವಿಟ್ಜರ್ಲೆಂಡ್‌‌ ಐತಿಹಾಸಿಕವಾಗಿ ಸುದ್ದಿ ಪತ್ರಿಕೆಗಳ ಸಂಖ್ಯೆಯನ್ನು ತನ್ನ ಗಾತ್ರ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸುತ್ತಾ ಬಂದಿದೆ.  ಬಹಳ ಬೇಡಿಕೆಯಿರುವ ಪತ್ರಿಕೆಗಳೆಂದರೆ ಜರ್ಮನ್‌-ಭಾಷೆಯ ತಜಸ್‌-ಅನ್ಸಿಜರ್‌ ಮತ್ತು ನ್ಯೂಯೆ ಜ್ಯುಚೆರ್‌‌ ಗ್ಸೈಟುಂಗ್ NZZ, ಮತ್ತು ಫ್ರೆಂಚ್‌ -ಭಾಷೆಯ ಲಿ ಟೆಂಪ್ಸ್‌, ಇದಲ್ಲದೇ ಎಲ್ಲ ನಗರಗಳೂ ತನ್ನದೇ ಆದ ಸ್ಥಳೀಯ ಸುದ್ದಿ ಪತ್ರಿಕೆಗಳನ್ನು ಹೊಂದಿವೆ. ಸಾಂಸ್ಕೃತಿಕ ವೈವಿಧ್ಯತೆಯು ದೊಡ್ಡ ಸಂಖ್ಯೆಯ ಸುದ್ದಿ ಪತ್ರಿಕೆಗಳಿಗೆ ಕಾರಣವಾಗಿದೆ. 

ಪತ್ರಿಕಾ ಮಾಧ್ಯಮಗಳಿಗೆ ಹೋಲಿಸಿದಾಗ, ಪ್ರಸರಣಾ ಮಾಧ್ಯಮಗಳು ಹೆಚ್ಚಾಗಿ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ.  ಸ್ವಿಸ್ ಪ್ರಸರಣಾ ಸಂಸ್ಥೆಯು, ಇತ್ತೀಚೆಗೆ ತನ್ನ ಹೆಸರನ್ನು SRG SSR ಇದೀ ಸ್ಯುಸ್ಸೆ ಎಂದು ಬದಲಾಯಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರ್ಮಾಣ ಮತ್ತು ಪ್ರಸಾರವನ್ನು ನೋಡಿಕೊಳ್ಳುತ್ತದೆ. SRG SSR ಕಾರ್ಯಾಗಾರ ಘಟಕವು ಅನೇಕ ಭಾಷಾ ಪ್ರದೇಶಗಳಲ್ಲಿ ವಿಂಗಡಣೆಯಾಗಿವೆ. ರೇಡಿಯೋ ಕಾರ್ಯಕ್ರಮಗಳು ಆರು ಕೇಂದ್ರೀಯ ಮತ್ತು ನಾಲ್ಕು ಸ್ಥಳೀಯ ಕಾರ್ಯಾಗಾರಗಳಲ್ಲಿ ಹಾಗೂ ದೂರದರ್ಶನದ ಕಾರ್ಯಕ್ರಮಗಳು ಜಿನೀವಾ , ಜ್ಯೂರಿಚ್‌ ಮತ್ತು ಲುಗಾನೊಗಳಲ್ಲಿ ನಿರ್ಮಾಣವಾಗುತ್ತವೆ. ವ್ಯಾಪಕ ಕೇಬಲ್ ಜಾಲವಿರುವುದರಿಂದ ಸ್ವಿಸ್‌ ಪ್ರಜೆಗಳಿಗೆ ನೆರೆ ರಾಷ್ಟ್ರಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗಿದೆ. 

ಸ್ಕೀಯಿಂಗ್ ಮತ್ತು ಪರ್ವತಾರೋಹಣವನ್ನು ಹೆಚ್ಚಾಗಿ ಸ್ವಿಸ್ ಪ್ರಜೆಗಳು ಮತ್ತು ವಿದೇಶೀಯರು ಇಷ್ಟಪಡುತ್ತಾರೆ, ಎತ್ತರದ ಶಿಖರಗಳು ಪರ್ವತಾರೋಹಿಗಳನ್ನು ಪ್ರಪಂಚದ ಎಲ್ಲ ಭಾಗಗಳಿಂದ ಆಕರ್ಷಿಸುತ್ತವೆ. ಹಾಟ್ ರೂಟ್ ಅಥವಾ ಪಟ್ರೌಲಿ ಡೆಸ್ ಹಿಮನದಿಯಲ್ಲಿನ ಸ್ಕೀಯಿಂಗ್‌ ಸ್ಪರ್ಧೆಯು ಅಂತರರಾಷ್ಟೀಯ ಪ್ರಖ್ಯಾತಿ ಹೊಂದಿದೆ.

ಯುರೋಪಿನಲ್ಲಿರುವಂತೆಯೇ, ಅನೇಕ ಸ್ವಿಸ್‌ಗಳು ಫುಟ್‌ಬಾಲ್ ಪಂದ್ಯಕ್ಕೆ ಅಭಿಮಾನಿಗಳಾಗಿದ್ದು, ರಾಷ್ಟ್ರೀಯ ತಂಡ ಅಥವಾ 'Nati'ಗೆ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಾರೆ. ಸ್ವಿಸ್ ತಂಡ ಕ್ವಾರ್ಟರ್‌ ಫೈನಲ್ಸ್‌‌ಗೂ ಮುನ್ನವೇ ಸೋತರೂ ಸ್ವಿಟ್ಜರ್ಲೆಂಡ್‌,‌ ಆಸ್ಟ್ರಿಯಾದೊಂದಿಗೆ ಯುರೊ 2008ರ ಫುಟ್‌ಬಾಲ್ ಸ್ಪರ್ಧೆಗಳಿಗೆ ಆತಿಥ್ಯ ವಹಿಸಿಕೊಂಡಿತ್ತು. 
ಮತ್ತೊಂದು ಕಡೆ ಸ್ವಿಸ್ ತಂಡವು 2005ರಲ್ಲಿ ನಡೆದ ಬೀಚ್ ಫುಟ್‌ಬಾಲ್‌ನಲ್ಲಿ ಯುರೊ ಬೀಚ್ ಸಾಕರ್‌ ಕಪ್ಅನ್ನು ಗೆದ್ದರೆ, 2008ರಲ್ಲಿ ನಡೆದ ಬೀಚ್ ಸಾಕರ್‌‌ ಪಂದ್ಯದಲ್ಲಿ ರನ್ನರ್‌-ಅಪ್‌ ಆದರು. 

ಅನೇಕ ಸ್ವಿಸ್‌ಗಳು ಐಸ್ ಹಾಕಿಯನ್ನು ಇಷ್ಟಪಡುತ್ತಾರೆ ಮತ್ತು 12 ಕ್ಲಬ್‌ಗಳಲ್ಲಿ ಯಾವುದಾದರೂ ಒಂದನ್ನು ಲೀಗ್ Aನಲ್ಲಿ ಬೆಂಬಲಿಸುತ್ತಾರೆ. 
ಏಪ್ರಿಲ್ 2009ರಲ್ಲಿ, ಸ್ವಿಟ್ಜರ್ಲೆಂಡ್‌‌ 2009ರ IIHF ವಿಶ್ವ ಚಾಂಪಿಯನ್‌ಶಿಪ್‌ ಅನ್ನು ಸತತ 10ನೇ ಬಾರಿಗೆ ನಡೆಸಿಕೊಟ್ಟಿದೆ.  ಸ್ವಿಸ್ ತಂಡದ ಇತ್ತೀಚಿನ ಸಾಧನೆಯೆಂದರೆ 1953ರಲ್ಲಿ ನಡೆದ ಐಸ್ ಹಾಕಿಯಲ್ಲಿ, ಕಂಚಿನ ಪದಕವನ್ನು ಗೆದ್ದಿದ್ದು.
ಸ್ವಿಟ್ಜರ್ಲೆಂಡ್‌‌ಅಲಿಂಗಿ ಎಂಬ ದೋಣಿ ನಡೆಸುವ ತಂಡ ಹೊಂದಿದ್ದು, ಅದು 2003ರಲ್ಲಿ ಅಮೆರಿಕನ್ ಕಪ್‌ಅನ್ನು ಗೆದ್ದು, 2007ರಲ್ಲಿಯೂ ದಾಖಲೆಯನ್ನು ಉಳಿಸಿಕೊಂಡಿದೆ.
 
ಕಳೆದ 30 ವರ್ಷಗಳಿಂದ ಕರ್ಲಿಂಗ್‌ ಜನಪ್ರಿಯ ಚಳಿಗಾಲದ ಪಂದ್ಯವಾಗಿದ್ದು, ಸ್ವಿಸ್ ತಂಡಗಳು 2 ಮಹಿಳೆಯರ ಮತ್ತು 3 ವಿಶ್ವ ಪುರುಷರ ಕರ್ಲಿಂಗ್ ಚಾಂಪಿಯನ್‌ಶಿಪ್‌ಅನ್ನು ತನ್ನದಾಗಿಸಿಕೊಂಡಿದೆ. 1998ರಲ್ಲಿ ನಡೆದ ನಗಾನೊ ಚಳಿಗಾಲದ ಓಲಂಪಿಕ್ಸ್‌ನಲ್ಲಿ ಸ್ವಿಸ್ ಪುರುಷರ ತಂಡವು ಡೊಮಿನಿಕ್ ಆಂಡ್ರೆಸ್‌ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಇತ್ತೀಚೆಗೆ ಗಾಲ್ಫ್‌ ಕ್ರೀಡೆಯು ಜನಪ್ರಿಯವಾಗುತ್ತಿದ್ದು, 35ಕ್ಕೂ ಹೆಚ್ಚು ಗಾಲ್ಫ್ ಮೈದಾನಗಳು ಈಗಾಗಲೇ ಬಳಕೆಯಲ್ಲಿದ್ದು, ಇನ್ನೂ ಹೆಚ್ಚಿಸಲು ಉದ್ದೇಶಿಸಲಾಗಿದೆ.

ಕಳೆದ ಕೆಲ ವರ್ಷಗಳಲ್ಲಿ ಸ್ವಿಸ್‌ನ ಟೆನ್ನಿಸ್ ಆಟಗಾರರಾದ ರೋಜರ್ ಫೆಡರರ್ ಮತ್ತು ಮಾರ್ಟಿನಾ ಹಿಂಗಿಸ್‌‌, ಗ್ರ್ಯಾಂಡ್‌ ಸ್ಲಾಮ್‌ ಸಿಂಗಲ್ಸ್‌‌ನಲ್ಲಿ ಹೆಚ್ಚು ಬಾರಿ ಚಾಂಪಿಯನ್‌‌ಶಿಪ್‌‌ ಗಳಿಸಿದ್ದಾರೆ. 
ಈಗಿನ ಐಸ್ ಸ್ಕೇಟರ್‌ಗಳಲ್ಲಿ ಸ್ವಿಸ್‌ನ ಸ್ಟೀಫನ್ ಲಾಂಬಿಯೆಲ್‌ ಪ್ರಪಂಚದ ಅತ್ಯುತ್ತಮ ಆಟಗಾರರಾಗಿದ್ದಾರೆ. 
ಸ್ವಿಸ್‌ನ ಆಂಡ್ರೆ ಬಸ್ಸರ್ಟ್‌ ಯಶಸ್ವಿ ವೃತ್ತಿಪರ ಗಾಲ್ಫ್‌ ಆಟಗಾರರಾಗಿದ್ದಾರೆ.

ಇಷ್ಟಲ್ಲದೆ ಸ್ವಿಸ್ ಇನ್ನೂ ಕೆಲವು ಪಂದ್ಯಗಳಾದ ಫೆನ್ಸಿಂಗ್‌‌ (ಮಾರ್ಸೆಲ್‌ ಫಿಶರ್), ಸೈಕ್ಲಿಂಗ್‌ (ಫ್ಯಾಬಿಯನ್ ಕೆನ್ಸೆಲ್ಲಾರ), ವ್ಹೈಟ್‌ವಾಟರ್ ಸ್ಲಾಲಮ್‌ (ರೊನ್ನಿಯೇ ದುರೆನ್ಮತ್—ಕೆನೋಯೆ, ಮ್ಯಾಥಿಯಸ್ ರಾತೆನ್ಮಂಡ್—ಕಾಯಕ್), ಐಸ್ ಹಾಕಿ (ಸ್ವಿಸ್ ರಾಷ್ಟ್ರೀಯ ಲೀಗ್), ಬೀಚ್ ವಾಲಿಬಾಲ್‌ (ಸಾಶ ಹ್ಯೇಯರ್, ಮಾರ್ಕಸ್‌ ಎಗ್ಗೆರ್, ಪಾವೆಲ್ ಮತ್ತು ಮಾರ್ಟಿನ್ ಲಸಿಗ), ಮತ್ತು ಸ್ಕೀಯಿಂಗ್‌, (ಬರ್ನಾರ್ಡ್ ರಸ್ಸಿ, ಪಿರ್ಮಿನ್ ಜರ್‍‌‌ಬ್ರಿಗೆನ್ನ್, ಡಿಡಿಯರ್ ಕ್ಯುಷೆ)ಗಳಲ್ಲಿ ಯಶಸ್ವಿಯಾಯಿತು.

ಫಾರ್ಮುಲಾ ಒನ್‌ ಮತ್ತು ವಿಶ್ವ ರ್ಯಾಲಿ ಚಾಂಪಿಯನ್‌ಶಿಪ್‌ನ ವಿಖ್ಯಾತ ಚಾಲಕರಾದ ಮೈಕೆಲ್‌ ಷೂಮೇಕರ್, ನಿಕ್‌ ಹೇಯ್ಡ್‌ಫೆಲ್ಡ್ಡ್, ಕಿಮಿ ರಾಯ್ಕೊನೆನ್‌, ಫರ್ನ್ಯಾಂಡೊ ಅಲನ್ಸೊ, ಲ್ಯೂಯಿಸ್‌ ಹ್ಯಾಮಿಲ್ಟನ್‌ ಮತ್ತು ಸೆಬಾಸ್ಟಿಯನ್‌ ಲೋಬ್‌ ಎಲ್ಲರೂ ಸ್ವಿಟ್ಜರ್ಲೆಂಡ್‌‌‌ನಲ್ಲಿ ಮನೆಗಳನ್ನು, ಕೆಲ ಬಾರಿ ತೆರಿಗೆ ಕಾರಣಗಳಿಗಾಗಿಯಾದರೂ ಖರೀದಿಸಿದ್ದಾರೆ.  

ಪುರಾತನ ಪಂದ್ಯಗಳಲ್ಲಿ ಸ್ವಿಸ್ ಕುಸ್ತಿ ಅಥವಾ ಶ್ವಿನ್‌ಜೆನ್‌ ಕೂಡ ಒಂದಾಗಿದೆ. ಇದು ಒಂದು ಹಳೆಯ ಸಂಪ್ರದಾಯವಾಗಿದ್ದು ಮಧ್ಯ ಹಳ್ಳಿಗಾಡಿನ ಕ್ಯಾಂಟನ್‌ಗಳು ಮತ್ತು ಕೆಲವು ಕಡೆಗಳಲ್ಲಿ ಇದನ್ನು ರಾಷ್ಟ್ರೀಯ ಪಂದ್ಯವೆಂದು ಪರಿಗಣಿಸಲಾಗಿದೆ. ಹಾರ್ನುಸ್ಸೆನ್‌ ಸ್ವಿಸ್‌ನ ಮತ್ತೊಂದು ದೇಶೀಯ ಪಂದ್ಯವಾಗಿದ್ದು, ಬೇಸ್‌ಬಾಲ್ ಮತ್ತು ಗಾಲ್ಫ್‌ನ ಮಿಶ್ರಣದಂತಿದೆ. ಸ್ವಿಸ್‌ನ ಸ್ಟೇಯ್ನ್‌ಸ್ಟಾಸ್ಸೆನ್‌‌ ಗುಂಡು ಎಸೆತ ಪಂದ್ಯದಂತೆಯೇ ಇದ್ದು, ಭಾರದ ಕಲ್ಲುಗಳನ್ನು ಎಸೆಯುವ ಸ್ಪರ್ಧೆಯಾಗಿದ್ದು, ಸ್ಟೇಯ್ನ್‌ಸ್ಟಾಸ್ಸೆನ್‌ ಪುರಾತನ ಕಾಲದಿಂದಲೂ ಕೇವಲ ಆಲ್ಪೈನ್‌ ಜನಾಂಗದವರು ಮಾತ್ರ ನಡೆಸುತ್ತಾ ಬಂದಿದ್ದು, 13ನೇ ಶತಮಾನದಲ್ಲಿ ಬಸೆಲ್‌ನಲ್ಲಿ ನಡೆಸಿದ್ದ ಬಗ್ಗೆ ಉಲ್ಲೇಖಿಸಲಾಗಿದೆ. 1805ರಲ್ಲಿ ಪ್ರಥಮ ಬಾರಿಗೆ ಉನ್‌ಸ್ಪನ್ನೆನ್‌ಫೆಸ್ಟ್‌‌ನಲ್ಲಿ ನಡೆಸಲಾಗಿದ್ದು, 83.5 kg ಭಾರದ ಕಲ್ಲಿಗೆ ಉನ್‌ಸ್ಪನ್ನೆನ್‌‌ಸ್ಟೆನ್‌  ಎಂದು ಹೇಳಲಾಗಿದೆ.

ಸ್ವಿಟ್ಜರ್ಲೆಂಡ್‌‌ನ ಬಹು-ಪಾಕ ಪದ್ದತಿಯನ್ನು ಹೊಂದಿದೆ. ಭಕ್ಷ್ಯಗಳಾದ ಫಂಡ್ಯು, ರಾಕ್ಲೆಟ್ಟೆ ಅಥವಾ ರೊಸ್ಟಿ ದೇಶದ ಎಲ್ಲ ಕಡೆಗಳಲ್ಲಿಯೂ ಲಭ್ಯವಾಗುತ್ತವೆ, ಕೆಲವು ಪ್ರದೇಶವು ಹವಾಗುಣ ಮತ್ತು ಭಾಷೆಗಳ ಭಿನ್ನತೆಯಂತೆ ತನ್ನದೇ ಆದ ಭೋಜನ ಕಲೆ ಮತ್ತು ಶಾಸ್ತ್ರವನ್ನು ರೂಢಿ ಮಾಡಿಕೊಂಡಿದೆ.  ಸಾಂಪ್ರದಾಯಿಕ ಸ್ವಿಸ್ ಆಹಾರ ಪದ್ಧತಿಯಲ್ಲಿ, ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ಬಳಸುವ ರೀತಿಯ ಪದಾರ್ಥಗಳನ್ನೇ ಬಳಸಲಾಗುತ್ತದೆ , ಅವುಗಳೆಂದರೆ ಡೈರಿ ಉತ್ಪನ್ನಗಳು ಹಾಗೂ ಬೆಣ್ಣೆಯಂತಹ ಗ್ರುಯರೆ ಅಥವಾ ಎಮೆಂಟಲ್‌ಅನ್ನು, ಗ್ರುಯರೆ ಮತ್ತು ಎಮೆಂಟಲ್ ಕಣಿವೆಗಳಲ್ಲಿ ಉತ್ಪಾದಿಸಲಾಗುತ್ತದೆ.

ಸ್ವಿಟ್ಜರ್ಲೆಂಡ್‌‌ ‌ನಲ್ಲಿ 18ನೇ ಶತಮಾನದಲ್ಲೇ ಚಾಕೋಲೆಟ್ ಉತ್ಪಾದಿಸಲಾಯಿತಾದರೂ ಖ್ಯಾತಿ ಗಳಿಸಿದ್ದು ಮಾತ್ರ 19ನೇ ಶತಮಾನದ ಅಂತ್ಯದಲ್ಲಿ, ಆಧುನಿಕ ಪದ್ಧತಿಗಳಾದ ಕಂಚಿಂಗ್‌ ಮತ್ತು ಟೆಂಪರಿಂಗ್ ಕಂಡುಹಿಡಿದು ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸಿದ ನಂತರವಷ್ಟೇ. 1875ರಲ್ಲಿ ಡೇನಿಯಲ್‌ ಪೀಟರ್‌ ಹಾಲಿನ ಚಾಕೋಲೆಟ್‌ಅನ್ನು ಕಂಡುಹಿಡಿದ ನಂತರ ಅದು ಉತ್ತುಂಗಕ್ಕೇರಿತು.  

ಸ್ವಿಸ್ ವೈನ್‌ ಮುಖ್ಯವಾಗಿ ವಲಾಯಿಸ್‌, ವಾಡ್‌ (ಲಾವಾಕ್ಸ್‌), ಜಿನೀವಾ ಮತ್ತು ಟಿಕಿನೊಗಳಲ್ಲಿ ಉತ್ಪಾದಿಸಲಾಗುತ್ತದೆ, ಇದರಲ್ಲಿ ಬಿಳಿ ವೈನ್‌ ಕೂಡ ಸ್ವಲ್ಪ ಮಟ್ಟಿಗೆ ಸೇರಿದೆ. ದ್ರಾಕ್ಷಿ ತೋಟಗಳನ್ನು ಸ್ವಿಟ್ಜರ್ಲೆಂಡ್‌‌ನಲ್ಲಿ‌ ರೋಮ್‌ನ ಕಾಲದಿಂದರೂ ಬೆಳೆಸಲಾಗುತ್ತಿದ್ದು, ತುಂಬಾ ಹಳೆಯ ಕಾಲದ ಕುರುಹುಗಳನ್ನು ಕಾಣಬಹುದಾಗಿದೆ. ಸುಪ್ರಸಿದ್ಧವಾದ ವಿಧಗಳೆಂದರೆ ಚಾಸ್ಸೆಲಾಸ್ (ವಲಾಯಿಸ್‌ನಲ್ಲಿ ಫೆನ್‌ಡೆಂಟ್ ಎನ್ನಲಾಗುತ್ತದೆ) ಮತ್ತು ಪಿನೋಟ್ ನಾಯಿರ್‌. ಇವುಗಳಲ್ಲಿ ಟಿಕಿನೊದಲ್ಲಿ ಉತ್ಪಾದಿಸಲಾಗುವ ಮೆರ್ಲೊಟ್‌ ಪ್ರಮುಖ ವಿಧವಾಗಿದೆ. 

ಸರ್ಕಾರ




#Article 228: ಇಟಲಿ (1880 words)


ಖ್ಯಾತ ರೋಮನ್ ಸಾಮ್ರಾಜ್ಯದ ಮಾತೃಸ್ಥಾನವಾದ ಇಟಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಚಾಚಿ ನಿಂತಿರುವ ಬಹು ಸಣ್ಣ ಪರ್ಯಾಯದ್ವೀಪ. ಗಾತ್ರದಲ್ಲಿ ಚಿಕ್ಕದಾದರೂ ಹಿಂದಿನ ಕಾಲದಲ್ಲಿ ಇದು ಹೊಂದಿದ್ದ ವ್ಯಾಪ್ತಿ ಅಚ್ಚರಿಗೊಳಿಸುವಂಥದು. ರೋಮನ್ ಸಾಮ್ರಾಜ್ಯಕ್ಕಿದ್ದ ವಿಸ್ತಾರ ಮತ್ತು ಅಚ್ಚುಗಟ್ಟು ಬೇರಾವ ಸಾಮ್ರಾಜ್ಯಕ್ಕೂ ಬರಲಾರದು. 
ರೋಂ ತನ್ನ ಉಚ್ಛ್ರಾಯಸ್ಥಿತಿಯಲ್ಲಿ ಅಂದಿನ ನಾಗರಿಕ ಪ್ರಪಂಚವನ್ನೆಲ್ಲ ಏಕಚ್ಛತ್ರದಡಿ ಸಂವರಿಸಿ ಆಳಿತು. ಅದರ ವೈಭವ ಅನನ್ಯವಾದುದು; ಶಕ್ತಿ ಅದಮ್ಯವಾದುದು. ವಿಸ್ತಾರವಾದ ತನ್ನ ಸಾಮ್ರಾಜ್ಯದಲ್ಲಿ ಅದು ಏರ್ಪಡಿಸಿದ ಆಡಳಿತ ವ್ಯವಸ್ಥೆ, ನ್ಯಾಯ, ಜೀವನಕ್ರಮ-ಇವು ಇಡೀ ಸಾಮ್ರಾಜ್ಯದ ಐಕ್ಯಕ್ಕೆ ಸಹಾಯಕವಾದುವು. ರೋಮಿನಿಂದ ನಡೆದ ಈ ಬೃಹತ್ ವ್ಯವಹಾರಕ್ಕೆ ಇಟಲಿಯ ಭೂಮಿ ಆಶ್ರಯ ಕೊಟ್ಟಿತು. ರೋಮನರ ಚರಿತ್ರೆ, ನಾಗರಿಕತೆ, ಸಂಸ್ಕøತಿ, ಕಲೆ ಮೊದಲಾದ ವಿಷಯಗಳು ಅಲ್ಲಲ್ಲಿ ಪ್ರತ್ಯೇಕವಾಗಿ ಬಂದಿವೆ. ಇಲ್ಲಿ ಇಟಲಿಯ ಬಗ್ಗೆ ಬಂದಿರುವ ಲೇಖನಗಳಲ್ಲೂ ಆ ವಿಷಯಗಳ ಸಂಗ್ರಹ ನಿರೂಪಣೆ ಇದೆ. ಇಲ್ಲಿನ ಲೇಖನಗಳ ವ್ಯವಸ್ಥೆ ಹೀಗಿದೆ. ಇಟಲಿ ಎಂಬ ಲೇಖನದಲ್ಲಿ ಅದರ ಭೌಗೋಳಿಕ, ವಾಣಿಜ್ಯ ವಿಷಯಿಕ ವಿವರಗಳಿವೆ. ಇಟಲಿಯ ಇತಿಹಾಸ, ಕಲೆ, ಛಂದಸ್ಸು, ಭಾಷೆ, ಸಂಗೀತ, ಸಾಹಿತ್ಯ, ಸಾಹಿತ್ಯ ವಿಮರ್ಶೆಗಳ ಬಗ್ಗೆ ಪ್ರತ್ಯೇಕ ಶೀರ್ಷಿಕೆಗಳಿವೆ. ಇಟಲಿಯ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಕೆಲ ವಿಷಯಗಳು ಈ ಹರಹಿನಲ್ಲಿ ಬಂದಿವೆಯಾದರೂ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ವಿವರಗಳನ್ನು ಆಯಾ ವ್ಯಕ್ತಿಗಳನ್ನು ಕುರಿತ ಲೇಖನಗಳಲ್ಲಿ ಕೊಟ್ಟಿದೆ. 
ಇಟಲಿ ದಕ್ಷಿಣ ಯೂರೋಪಿನ ಒಂದು ಗಣರಾಜ್ಯ (ರಿಪಬ್ಲಿಕಾ ಇಟಾಲಿಯಾನ ಅಥವಾ ಇಟಾಲಿಯ). ಯೂರೋಪಿನಿಂದ ದಕ್ಷಿಣಾಭಿಮುಖವಾಗಿ ಮೆಡಿಟರೇನಿಯನ್ ಸಮುದ್ರದೊಳಕ್ಕೆ ಚಾಚಿರುವ ಮೂರು ಪರ್ಯಾಯದ್ವೀಪಗಳಲ್ಲಿ ಮಧ್ಯದ್ದು; ಸಾನ್ ಮರೀನೊ ಮತ್ತು ವ್ಯಾಟಿಕನ್ ನಗರಸೀಮೆಗಳನ್ನು ಬಿಟ್ಟು ಉಳಿದ ಭಾಗವೂ ಈ ಭೂಶಿರದ ಮುಂದಿನ ಭಾಗದಂತಿರುವ ಸಿಸಿಲಿ ದ್ವೀಪವೂ ಸಾರ್ಡಿನಿಯ, ಎಲ್ಬ ಮತ್ತು ಸುಮಾರು ಎಪ್ಪತ್ತು ಸಣ್ಣ ದ್ವೀಪಗಳೂ ಸೇರಿರುವ ಪ್ರದೇಶ. ಎತ್ತರ ಹಿಮ್ಮಡಿಯ ಬೊಟಿನಾಕಾರದ ಈ ಪರ್ಯಾಯದ್ವೀಪ ವಾಯವ್ಯ ದಿಕ್ಕಿನಿಂದ ಆಗ್ನೇಯಕ್ಕೆ ರೈಲುದಾರಿಯ ಕೈಮರದಂತೆ ಚಾಚಿಕೊಂಡಿದೆ. ಉತ್ತರ ಅಕ್ಷಾಂಶ 470 5 ನಿಂದ 350 39 ರವರೆಗೆ 1168 ಕಿ.ಮೀ. ಉದ್ದವಿರುವ ಈ ದೇಶವೆಲ್ಲೊ 240 ಕಿ.ಮೀ.ಗಿಂತ ಅಗಲವಾಗಿಲ್ಲ. ಇದು ಪೂರ್ವಾರ್ಧಗೋಳದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ರೇಖಾಂಶ 60 55 ನಿಂದ 180 30 ವರೆಗೆ ಹಬ್ಬಿದೆ. ಇಟಲಿಗೆ ಉತ್ತರದಲ್ಲಿ ಬಿಲ್ಲಿನಂತೆ ಬಾಗಿ ಹಬ್ಬಿರುವ ಆಲ್ಪ್ಸ್ ಪರ್ವತಶ್ರೇಣಿಯಿಂದ ಫ್ರಾನ್ಸ್ ಸ್ವಿಟ್ಜರ್ಲೆಂಡ್ ಆಸ್ಟ್ರಿಯ ಯುಗೋಸ್ಲಾವಿಯಗಳೂ ಇಟಲಿಯೂ ಪ್ರತ್ಯೇಕಗೊಂಡಿದೆ. ಆಲ್ಪ್ಸ್ ಪರ್ವತಶ್ರೇಣಿಯ ನೆತ್ತಿಯ ಗೆರೆಯೇ ಬಹಳಮಟ್ಟಿಗೆ ಇಟಲಿಗೂ ಈ ದೇಶಗಳಿಗೂ ನಡುವಣ ಗಡಿರೇಖೆ. ಇಟಲಿ ಪರ್ಯಾಯದ್ವೀಪದ ವಾಯುವ್ಯದಲ್ಲಿ ಲುಗುರಿಯನ್ ಸಮುದ್ರವೂ ಪಶ್ಚಿಮದಲ್ಲಿ ಟೆರ್ಪೆನಿಯನ್ ಸಮುದ್ರವೂ ಆಗ್ನೇಯದಲ್ಲಿ ಐಯೊನಿಯನ್ ಸಮುದ್ರವೂ ಪೂರ್ವದಲ್ಲಿ ಒಡ್ರಿಯಾಟಿಕ್ ಸಮುದ್ರವೂ ಇವೆ. ಸಿಸಿಲಿ ದ್ವೀಪಕ್ಕೂ ಆಫ್ರಿಕಕ್ಕೂ ನಡುವೆ ಇರುವ ಸಿಸಿಲಿಯನ್ ಜಲಸಂಧಿಯ ಅಗಲ ಕೇವಲ 144 ಕಿ.ಮೀ. ಹೀಗಾಗಿ ಇಟಲಿಯೂ ಸಿಸಿಲಿಯೂ ಮೇಡಿಟರೇನಿಯನ್ ಸಮುದ್ರವನ್ನೇ ಸ್ಥೂಲವಾಗಿ ಇಬ್ಭಾಗಿಸಿದೆ. ಸಿಸಿಲಿ ಸಾರ್ಡಿನಿಯಗಳು ಕೂಡಿದ ಇಟಲಿಯ ಒಟ್ಟು ವಿಸ್ತೀರ್ಣ 3,01,250 ಚ.ಕಿ.ಮೀ. ಆಡಳಿತ ಸೌಕರ್ಯಕ್ಕಾಗಿ ಇದನ್ನು ಹತ್ತೊಂಬತ್ತು ಭಾಗಗಳಾಗಿ ವಿಂಗಡಿಸಲಾಗಿದೆ. 
ಇಟಲಿಯ ರಾಜಧಾನಿ ರೋಂ. ಡಿಸೆಂಬರ್ 1967ರಲ್ಲಿದ್ದಂತೆ ಈ ದೇಶದ ಜನಸಂಖ್ಯೆ 5,36,56,000. ದ್ವಿತೀಯ ಯುದ್ಧಾನಂತರದಲ್ಲಿ 1947ರ ಶಾಂತಿ ಕೌಲಿಗೆ ಅನುಗುಣವಾಗಿ ಈ ದೇಶದ ಗಡಿ ನಿಷ್ಕರ್ಷೆಯಾಗಿದೆ. ಯುದ್ಧಪೂರ್ವದಲ್ಲಿ ಇದು ಹೊಂದಿದ್ದ ವಸಾಹತುಗಳ ಮೇಲಣ ಹಕ್ಕುಗಳನ್ನೆಲ್ಲ ಬಿಟ್ಟುಕೊಟ್ಟಿದೆ. ಇದರ ಆಕ್ರಮಣಕ್ಕೆ ಒಳಪಟ್ಟಿದ್ದ ಇಥಿಯೋಪಿಯ (ನೋಡಿ- ಅಬಿಸೀನಿಯ) 1942ರಲ್ಲಿ ತನ್ನ ಸ್ವಾತಂತ್ರ್ಯವನ್ನು ಮತ್ತೆ ಗಳಿಸಿಕೊಂಡಿತು. ಡೊಡೆಕನೀಸನ್ನು 1947ರಲ್ಲಿ ಗ್ರೀಸಿಗೆ ಸೇರಿಸಲಾಯಿತು. (ನೋಡಿ- ಗ್ರೀಸಿನ-ಚರಿತ್ರೆ) ಲಿಬಿಯ 1951ರಲ್ಲಿ ಸ್ವತಂತ್ರವಾಯಿತು. ಎರಿಟ್ಟ್ರಿಯ ಪ್ರದೇಶ 1952ರಲ್ಲಿ ಇಥಯೋಪಿಯ ಒಕ್ಕೊಟದಲ್ಲಿ ಸೇರ್ಪಡೆಹೊಂದಿತು. ಸೋಮಾಲಿಯ 1950ರಲ್ಲಿ ಇಟಲಿಯ ನ್ಯಾಸಾಧಿಕಾರಕ್ಕೊಳಪಟ್ಟಿದ್ದು. 1960ರ ಜುಲೈ ತಿಂಗಳಲ್ಲಿ ಸ್ವತಂತ್ರ ಗಣರಾಜ್ಯವಾಯಿತು. 

ಇಟಲಿಯ ಮುಖ್ಯ ಭೂಭಾಗವನ್ನು ಖಂಡಾಂತರ ಪ್ರದೇಶವೆಂದೂ ಪರ್ಯಾಯದ್ವೀಪಪ್ರದೇಶವೆಂದೂ ಎರಡು ಭಾಗಗಳಾಗಿ ವಿಂಗಡಿಸಬಹುದು. ಉತ್ತರದಲ್ಲಿ ಆಲ್ಪ್ಸ್‍ಪರ್ವತದ ದಕ್ಷಿಣದ ಇಳುಕಲೂ ದಕ್ಷಿಣಭಾಗದಲ್ಲಿ ಅಪೆನೈನ್ ಪರ್ವತಗಳ ಉತ್ತರದ ಇಳಿಜಾರು ಇಟಲಿಯ ಖಂಡಾಂತರ ಪ್ರದೇಶವನ್ನು ಅಡಕತ್ತರಿಯಂತೆ ಹಿಡಿದುಕೊಂಡಿವೆ. ಪರ್ಯಾಯದ್ವೀಪಪ್ರದೇಶದಲ್ಲಿ ಅಪೆಮಾಂಟಿರೋಸದ ಎತ್ತರ 15,217 ಅಡಿ. ಇಟಲಿಯ ಪ್ರದೇಶದಲ್ಲಿ ಇರುವ ಶಿಖರಗಳ ಪೈಕಿ ಗ್ರಾನ್ ಪಾರಾಡಿಸೊ (13,652) ಅತ್ಯಂತ ಉನ್ನತವಾದದ್ದು. ಮಧ್ಯ ಆಲ್ಪ್ಸ್ ಪಶ್ಚಿಮ ಭಾಗದಷ್ಟು ಎತ್ತರವಾಗಿಲ್ಲ. ಪೂರ್ವಭಾಗ ಇನ್ನೂ ತಗ್ಗು; ಆದರೆ ಸುಂದರ. ತೀರ ಪೂರ್ವದಲ್ಲಿ ಪೂರ್ವ-ಪಶ್ಚಿಮವಾಗಿ ಹಬ್ಬಿರುವ ಕಣಿವೆಗಳಲ್ಲಿ ಹರಿಯುವ ಹೊಳೆಗಳ ನೀರು ನಿಂತು ಸರೋವರವಾಗಿ ಪರಿಣಮಿಸಿ, ನೋಡಲು ರಮಣೀಯ. ಪಶ್ಚಿಮದಲ್ಲಿ 1,000 ದಿಂದ 1,700 ಅಡಿಗಳವರೆಗೆ ಮೇಲೆದ್ದು ಪೂರ್ವದಲ್ಲಿ 300ರಿಂದ 600 ಅಡಿಗಳವರೆಗೆ ತಗ್ಗಿ ಹಬ್ಬಿರುವ ಉತ್ತರದ ಬಯಲಿನ ಪಶ್ಚಿಮ ಭಾಗದಲ್ಲಿ ಪೋ ನದಿಯೂ ಅದರ ಉಪನದಿಗಳೂ ಪೂರ್ವಾಭಿಮುಖವಾಗಿ ಹರಿಯುತ್ತವೆ. ಪೂರ್ವದಲ್ಲಿ ಪೋ ಜೊತೆಗೆ ಅನೇಕ ಸ್ವತಂತ್ರ ನದಿಗಳಿವೆ. 
ಇಟಲಿಯ ಪರ್ಯಾಯದ್ವೀಪ ಭಾಗವನ್ನು ಕಬ್ಬಿನ ಗಿಣ್ಣುಗಳಂತೆ ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಪ್ರದೇಶದ ಪಶ್ಚಿಮಭಾಗವನ್ನು ಅನೇಕ ಸ್ವಾಭಾವಿಕ ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಕಂಪ ನದಿಯ ಮೈದಾನದಲ್ಲಿ ಫ್ಲೆಗ್ರೀನ್ ಫೀಲ್ಡ್ಸ್ ಮತ್ತು ವಿಸೊವಿಯಸ್ ಅಗ್ನಿಪರ್ವತಗಳಿವೆ. ಇವು ಇನ್ನೂ ಜೀವಂತವಾಗಿವೆ; ನೇಪಲ್ಸ್ ಪಟ್ಟಣಕ್ಕೆ ಹತ್ತಿರದಲ್ಲೇ ಇವೆ. ಅಪೆನೈನ್ ಪರ್ವತಶ್ರೇಣಿಯಲ್ಲಿ ಅನೇಕ ಬಗೆಯ ಬಂಡೆಗಳಿವೆ. ಅಪೆನೈನ್ ಶ್ರೇಣಿಗಳು ಉತ್ತರದಲ್ಲಿ ಕಿರಿದಾಗಿಯೂ ಮಧ್ಯದಲ್ಲಿ ದಪ್ಪಗೂ ಎತ್ತರವಾಗಿಯೂ ಮುಂದೆ ತಗ್ಗಿಯೂ ಇವೆ.
ಇಟಲಿಯ ನದಿಗಳ ಪ್ರವಾಹಗಳು ವರ್ಷಾದ್ಯಂತ ಒಂದೇ ಸಮನಾಗಿರುವುದಿಲ್ಲ. ಉತ್ತರದ ನದಿಗಳಲ್ಲಿ ಈ ಏರುಪೇರು ದಕ್ಷಿಣದ ನದಿಗಳಷ್ಟು ಅಧಿಕವಲ್ಲ. ಆಲ್ಪ್ಸ್ ಮೇಲ್ಭಾಗದಲ್ಲಿ ಹುಟ್ಟಿ ಹರಿಯುವ ನದಿಗಳು ಮುಂಬೇಸಗೆಯಲ್ಲಿ ಕರಗಿದ ಹಿಮನೀರಿನಿಂದ ಕೂಡಿ ಉಬ್ಬಿ ಹರಿಯುತ್ತದೆ. ಆಲ್ಪ್ಸ್‍ಪರ್ವತಗಳ ಕೆಳಪ್ರದೇಶದಲ್ಲಿ ಹುಟ್ಟುವ ನದಿಗಳಲ್ಲಿ ವರ್ಷಕ್ಕೆ ಎರಡು ಬಾರಿ ಪ್ರವಾಹ. ಮುಂಬೇಸಗೆಯಲ್ಲಿ ಹಿಮ ಕರಗಿ ನೀರು ಹರಿದರೆ ಬೇಸಗೆಯ ಕೊನೆಭಾಗದಲ್ಲೂ ಶರತ್ಕಾಲದ ಆದಿಭಾಗದಲ್ಲೂ ಬೀಳುವ ಮಳೆಯಿಂದ ತುಂಬು ಹರಿವಿರುತ್ತದೆ. ಉತ್ತರದ ಮೈದಾನದ ದಕ್ಷಿಣದಲ್ಲಿ ಹುಟ್ಟಿ ಪೋ ನದಿಯಲ್ಲಿ ಸಂಗಮವಾಗುವ ನದಿಗಳಲ್ಲಿ ಮಾರ್ಚಿಯಲ್ಲೂ ಸೆಪ್ಟಂಬರಿನಲ್ಲೂ ಪ್ರವಾಹ. ಜುಲೈ ತಿಂಗಳಿಂದ ಸೆಪ್ಟೆಂಬರ್‍ವರೆಗೆ ಅವುಗಳ ನೀರಿನ ಮಟ್ಟ ಕಡಿಮೆ. ಮಧ್ಯ ಇಟಲಿಯ ನದಿಗಳಿಗೆ ವಸಂತಋತುವೇ ಪ್ರವಾಹಕಾಲ. ಜುಲೈಯಿಂದ ಸೆಪ್ಟೆಂಬರ್‍ವರೆಗೆ ತಗ್ಗಿದ ಮಟ್ಟ. ನವೆಂಬರಿನಲ್ಲಿ ಸ್ವಲ್ಪ ಪ್ರವಾಹ. ದಕ್ಷಿಣ ಇಟಲಿಯ ನದಿಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಪ್ರವಾಹದ ಭೋರ್ಗರೆತ. ಬೇಸಗೆಯಲ್ಲಿ ಇವು ಬಹುತೇಕ ಶುಷ್ಕ. ಸ್ಥೂಲವಾಗಿ ಇದು ಇಟಲಿಯ ನದಿಗಳ ಪ್ರವಾಹದ ಚಿತ್ರ. 

ಉತ್ತರದಿಂದ ದಕ್ಷಿಣಕ್ಕೆ ಅಕ್ಷಾಂಶದಲ್ಲಿ ಸುಮಾರು ಹತ್ತು ಡಿಗ್ರಿಗಳ ಅಂತರವಿರುವುದರಿಂದಲೂ ಮೈಮೇಲೆ ಬಹು ತೀವ್ರ ಉಬ್ಬು ತಗ್ಗುಗಳಿರುವುದರಿಂದಲೂ ಇಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ವಾಯುಗುಣದಲ್ಲಿ ಬಹಳ ವ್ಯತ್ಯಾಸಗಳಿವೆ. ಸಮುದ್ರಕ್ಕಿರುವ ದೂರವೂ ಈ ವ್ಯತ್ಯಾಸಗಳಿಗೆ ಒಂದು ಕಾರಣ. ಸಮುದ್ರಪ್ರಭಾವಕ್ಕೆ ಒಳಗಾದ ಪ್ರದೇಶದಲ್ಲಿ ಮಳೆ ಹೆಚ್ಚು; ಹವೆ ಹಿತಕರ. ಎತ್ತರ ಪ್ರದೇಶ ಹೆಚ್ಚು ತಂಪು; ಅಲ್ಲಿ ಮಳೆಯೂ ಹೆಚ್ಚು. ಪರ್ವತಗಳ ಪೂರ್ವ ಬದಿಯಲ್ಲಿ ಮಳೆ ಕಡಿಮೆ. ಇದು ಮಳೆನೆರಳು ಪ್ರದೇಶ. ಉತ್ತರ ಮೈದಾನದ ಪಶ್ಚಿಮಭಾಗದಲ್ಲಿರುವ ಟುರಿನ್ನಿನಲ್ಲಿ ವರ್ಷದ ಕನಿಷ್ಠ ಮಧ್ಯಮ ಉಷ್ಣತೆ 170 ಫ್ಯಾ. ನಷ್ಟು ಕೆಳಗಿರುತ್ತದೆ. ದಕ್ಷಿಣದ ಮೆಸ್ಸಿನ ಜಲಸಂಧಿಯ ಆಚೀಚೆ ಪ್ರದೇಶದಲ್ಲಿ ಚಳಿಗಾಲದಲ್ಲಿ 530 ಫ್ಯಾ. ನಷ್ಟು ಹೆಚ್ಚು ಉಷ್ಣತೆಯಿರುತ್ತದೆ. ಬೇಸಗೆಯಲ್ಲಿ ಟರಾಂಟೊ ಖಾರಿಯ ಸುತ್ತಣ ಪ್ರದೇಶದಲ್ಲಿ ಅತಿ ಹೆಚ್ಚು ಉಷ್ಣತೆಯೂ (77.5 ಫ್ಯಾ.) ಆಲ್ಪ್ಸ್ ತಲೆಗಳ ಮೇಲೆ ಅತ್ಯಂತ ತಂಪೂ ಇರುತ್ತದೆ. ಕರಾವಳಿ ಪ್ರದೇಶ ತಗ್ಗಾಗಿರುವುದರಿಂದ ಅಲ್ಲಿ ಬೇಸಗೆಯಲ್ಲಿ ಉಷ್ಣತೆ ಹೆಚ್ಚು. ಇಟಲಿಯ ಎಲ್ಲ ಕಡೆಗೂ ಹಿಮಬೀಳುವುದಾದರೂ ದಕ್ಷಿಣದಲ್ಲಿ ಇದು ವಿರಳ. 
ಉತ್ತರದ ಆಲ್ಪ್ಸ್ ಪ್ರದೇಶದಲ್ಲಿ ಪರಮಾವಧಿ ಮಳೆ (1200); ತಗ್ಗು ಪ್ರದೇಶದಲ್ಲಿ ತೀರಕಡಿಮೆ (15”). ಪಶ್ಚಿಮ ಮಾರುತಗಳೇ ಮೋಡ ವಾಹಕಗಳಾಗಿದ್ದರಿಂದ ಪಶ್ಚಿಮದಲ್ಲಿ ಮಳೆ ಹೆಚ್ಚು. ಪೂರ್ವಭಾಗ ಶುಷ್ಕ. ಇಟಲಿಯ ದಕ್ಷಿಣಾರ್ಧದಲ್ಲಿ ಮೆಡಿಟರೇನಿಯನ್ ವಾಯುಗುಣಕ್ಕೆ ಅನುಗುಣವಾಗಿ ಮಳೆ ಬೀಳುತ್ತದೆ. ಎಂದರೆ ಚಳಿಗಾಲದಲ್ಲಿ ಮಳೆ; ಬೇಸಗೆಯಲ್ಲಿ ತೇವವಿರುವುದಿಲ್ಲ. ಉತ್ತರಕ್ಕೆ ಹೋದಂತೆಲ್ಲ ವರ್ಷಕ್ಕೆ ಎರಡು ಮಳೆಗಾಲ; ಶರತ್ ಹಾಗೂ ವಸಂತಋತುಗಳಲ್ಲಿ ಮಳೆ ಅಧಿಕ. ಆದಾಗ್ಯೂ ಚಳಿಗಾಲದಲ್ಲೇ ಮಳೆಯ ಪ್ರಮಾಣ ಹೆಚ್ಚು. ಆದರೆ ಬೇಸಗೆಯ ಒಣಹವೆಯ ಅವಧಿ ಉತ್ತರಕ್ಕೆ ಹೋದಂತೆಲ್ಲ ಕಿರಿದಾಗುತ್ತದೆ. ಪೋ ನದಿಯ ಉತ್ತರಕ್ಕೆ ಚಳಿಗಾಲದಲ್ಲೇ ಮಳೆಯ ಕನಿಷ್ಠ ಪ್ರಮಾಣ. ಈ ಮೈದಾನದಲ್ಲಿ ಚಳಿಗಾಲ, ಬೇಸಗೆಕಾಲಗಳೆರಡರಲ್ಲೂ ಸಾಮಾನ್ಯವಾಗಿ ಒಣ ಹವೆ ಇರುವುದು ಸ್ವಾರಸ್ಯದ ಸಂಗತಿಯಾಗಿದೆ. ಆಲ್ಪ್ಸ್‍ಪರ್ವತದ ಶೃಂಗ ಪ್ರದೇಶಗಳಾದರೂ ಸದಾ ದಟ್ಟವಾದ ಹಿಮಕವಚವನ್ನು ಹೊದ್ದಿರುತ್ತವೆ. ಅಷ್ಟು ಎತ್ತರವಲ್ಲದ ಅಪೆನೈನ್ ಪರ್ವತ ಶ್ರೇಣಿಗಳ ವಿಶಾಲ ಪ್ರದೇಶಗಳಲ್ಲಿ ವರ್ಷದಲ್ಲಿ ಮೂರು ನಾಲ್ಕು ತಿಂಗಳುಗಳ ಕಾಲ ಹಿಮ ಇರುತ್ತದೆ. ಅದೇ ಉತ್ತರ ಭಾಗದ ಬಯಲು ಭೂಮಿಯಲ್ಲಿ ವರ್ಷದ ಕೇವಲ ಹತ್ತುದಿನ ಹಿಮ ಕಂಡರೆ ಹೆಚ್ಚು. ವಾಯುಗುಣದ ಹಿತಾಹಿತಗಳನ್ನೂ ಜೀವನ ಸೌಲಭ್ಯಗಳನ್ನೂ ವ್ಯವಸಾಯ, ಕೈಗಾರಿಕೆಗಳ ಸೌಕರ್ಯಗಳನ್ನೂ ಗಮನಿಸಿ ಜನ ನೆಲೆನಿಲ್ಲುತ್ತ ಹೋಗಿರುವುದನ್ನು ಇಲ್ಲಿ ಕಾಣಬಹುದು. 

ಮಧ್ಯ ಐರೋಪ್ಯ ಹಾಗೂ ಮೆಡಿಟರೇನಿಯನ್ ಪ್ರದೇಶಗಳೆರಡೂ ಇಟಲಿಯಲ್ಲಿ ಒಂದರ ಮೇಲೊಂದು ಪ್ರಸರಿಸಿವೆ. ಶಂಕುವಿನಾಕಾರದ (ಕೊನಿಫರಸ್) ಮರಗಳಿಂದಲೂ ಅಗಲೆಲೆಯ ಪರ್ಣಪಾತೀ ವೃಕ್ಷಗಳಿಂದಲೂ ಕೂಡಿದ ಕಾಡುಗಳು, ಕುರುಚಲು ಕಾಡುಗಳು, ಹಸಿರು ಹುಲ್ಲುಗಾವಲುಗಳು ಮಧ್ಯ ಐರೋಪ್ಯ ಪ್ರದೇಶದ ಲಕ್ಷಣ. ಶರತ್ಕಾಲದಲ್ಲಿ ಬುಡದವರೆಗೂ ಸತ್ತು ಮತ್ತೆ ಬೆಳೆಯುವ ಸಸ್ಯಗಳು ಇಲ್ಲಿ ಅಧಿಕ. ಶಂಕುವಿನಾಕಾರದ ಮರಗಳೊ ದಪ್ಪನಾದ ಅಗಲೆಲೆಯ ನಿತ್ಯ ಹಸರು ವೃಕ್ಷಗಳೂ ವಾರ್ಷಿಕ ಸಸ್ಯಗಳೂ ಗೆಡ್ಡೆಯಿಂದ ಬೆಳೆಯುವ ಗಿಡಗಳೂ ಬೇಸಗೆಯಲ್ಲಿ ಒಣಗುವ ಹುಲ್ಲುಗಾವಲುಗಳೂ ಮೆಡಿಟರೇನಿಯನ್ ಪ್ರದೇಶದಲ್ಲಿ ಸಾಮಾನ್ಯ. ಇವೆರಡು ಸ್ವಾಭಾವಿಕ ವಿಭಾಗಗಳನ್ನೂ ಪ್ರತ್ಯೇಕಿಸುವ ಖಚಿತ ಗೆರೆ ಎಳೆಯುವುದು ಅಸಾಧ್ಯವಾದರೂ ಇಟಲಿಯ ಆಲ್ಪ್ಸ್ ಪ್ರದೇಶವನ್ನೂ ಉತ್ತರ ಮೈದಾನದ ಹೆಚ್ಚಿನ ಭಾಗವನ್ನೂ ಮಧ್ಯೆಐರೋಪ್ಯ ಪ್ರದೇಶಕ್ಕೂ ಪರ್ಯಾಯದ್ವೀಪ ಭಾಗವನ್ನು ಮೆಡಿಟರೇನಿಯನ್ ಪ್ರದೇಶಕ್ಕೂ ಸೇರಿಸಬಹುದು. ಇಟಲಿಯ ಪೂರ್ವ ಕರಾವಳಿ ಭಾಗವನ್ನು ಮೆಡಿಟರೇನಿಯನ್ ಪ್ರದೇಶದಲ್ಲೇ ವಿಶಿಷ್ಟವಾದದ್ದೆಂದು ಪರಿಗಣಿಸಬೇಕು. ಅಪೆನೈನ್ ಪರ್ವತಶ್ರೇಣಿಗಳ ಮೇಲೂ ಸಿಸಿಲಿಯ ಎಟ್ನ ಪರ್ವತದ ಮೇಲೂ ಪರ್ಣಪಾತೀ ವೃಕ್ಷಗಳ ಕಾಡುಗಳು ಅಧಿಕ. ಇಟಲಿಯ ಅನೇಕ ಭಾಗಗಳಲ್ಲಿ ಕುರುಚಲು ಗಿಡಗಳು ಸಾಮಾನ್ಯ. 

ಇಟಲಿಯ ಪ್ರಾಣಿಗಳಿಗೂ ಮಧ್ಯ ಯೂರೋಪ್ ಬಾಲ್ಕನ್ ಹಾಗೂ ಆಫ್ರಿಕಾ ಪ್ರದೇಶಗಳ ಪ್ರಾಣಿಗಳಿಗೂ ರೂಪಸಾಮ್ಯವುಂಟು. ಆದರೆ ಪ್ರಾಣಿಗಳಿಗೆ ಆತ್ಮವಿಲ್ಲವೆಂದೂ ಆದ್ದರಿಂದ ಅವು ಮಾನವಾನುಕಂಪಕ್ಕೆ ಅನರ್ಹವೆಂದೂ ಅವುಗಳ ಬಗ್ಗೆ ಉಪಯುಕ್ತತೆಯ ದೃಷ್ಟಿಯಿಂದ ಮಾತ್ರ ವರ್ತಿಸಬೇಕೆಂದೂ ಇಟಾಲಿಯನ್ನರು ಭಾವಿಸಿರುವುದರಿಂದ ಇಲ್ಲಿ ಅವು ವಿರಳ. ಬೇಟೆಯಾಡಲು ಎಲ್ಲರಿಗೂ ಹಕ್ಕುಂಟು. ಜಮೀನಿನ ಒಡೆಯನಿಗೆ ತನ್ನ ನೆಲದ ಮೇಲಿನ ಪ್ರಾಣಿಗಳ ಮೇಲೆ ಯಾವ ಸ್ವಾಮ್ಯವೂ ಇಲ್ಲ. ಆಹಾರದ ಕೊರತೆಯನ್ನು ತುಂಬಿಕೊಳ್ಳುವ ಸಲುವಾಗಿ ಪ್ರಾಣಿಗಳನ್ನು ಬೇಟೆಯಾಡುವುದು ಸಾಮಾನ್ಯ. ಹೀಗಾಗಿ ಎಲ್ಲೋ ಕೆಲವೆಡೆಗಳಲ್ಲಿ ಮಾತ್ರ ಪ್ರಾಣಿಗಳು ಇನ್ನೂ ಉಳಿದುಕೊಂಡಿವೆ. ಕರಡಿಗಳು ಅಬ್ರುಜಿ ಎಂಬಲ್ಲಿ ಇನ್ನೂ ಕಾಣಸಿಗುತ್ತವೆ. ತೋಳಗಳು ಅಪೆನೈನ್ ಶ್ರೇಣಿಗಳಲ್ಲಿ ಹೆಚ್ಚಾಗಿವೆ. ಸಣ್ಣಜಾತಿಯ ಜಿಂಕೆಗಳು (ರೋ) ಕಾಡುಗಳಲ್ಲಿ ಉಳಿದುಬಂದಿವೆ. ವೆನಿಸ್ ಬಳಿಯ ಆಲ್ಪ್ಸ್ ಪ್ರದೇಶದಲ್ಲಿ ಸಾರಂಗಗಳೂ ಆಲ್ಪ್ಸ್ ಪ್ರದೇಶದ ಎಲ್ಲೆಡೆಗಳಲ್ಲೂ ಪಾಮಾಯ್ ಮೃಗಗಳೂ ಅಲ್ಲಲ್ಲಿ ಕಾಡುಹಂದಿಗಳೂ ಇವೆ. ಹಲ್ಲಿಗಳು ಅಸಂಖ್ಯಾತ. ಬೆಟ್ಟಗಾಡುಗಳಲ್ಲಿ ಹಾವುಗಳು ಧಾರಾಳ. ಸಾವಿರಕಾಲುಗಳೂ (ಸ್ಕಾಲೊಪೇಂಡ್ರ) ಸಣ್ಣ ಚೇಳುಗಳೂ ಹೆಜ್ಜೇಡಗಳೂ (ಟರಾಂಟ್ಯುಲ) ಹಾರುಜೇಡಗಳೂ ಇಲ್ಲಿನ ವಿಷಜಂತುಗಳು, ನಾನಾ ಬಗೆಯ ಸೊಳ್ಳೆಗಳೂ ಇಲ್ಲುಂಟು. ಆದರೆ ಮಲೇರಿಯ ಮೂಲೋತ್ಪಾಟನವಾಗಿರುವುದರಿಂದ ಭಯವಿಲ್ಲ. 

ಇಟಲಿ ಕೃಷಿಪ್ರಧಾನ ರಾಷ್ಟ್ರ. ಇಲ್ಲಿಯ ಆರ್ಥಿಕ ವ್ಯವಸ್ಥೆಗೆ ವ್ಯವಸಾಯವೇ ತಳಹದಿ. ದೇಶದ 90% ರಷ್ಟು ಭಾಗ ಬೇಸಾಯದ ನೆಲದಿಂದಲೂ ಅರಣ್ಯಗಳಿಂದಲೂ ಕೂಡಿದೆ. ದೇಶದ ದುಡಿಯುವ ಜನರಲ್ಲಿ 2/5 ಭಾಗ ವ್ಯವಸಾಯದಲ್ಲೂ ಅರಣ್ಯೋದ್ಯಮದಲ್ಲೂ ನಿರತರಾಗಿದ್ದಾರೆ. 1953ರ ಭೂಸುಧಾರಣಾಕಾಯಿದೆಯ ಪ್ರಕಾರ ಜಮೀನನ್ನು ವಶಪಡಿಸಿಕೊಂಡು 1963ರಲ್ಲಿ ಸುಮಾರು 18,00,000 ಎಕರೆ ಜಮೀನನ್ನು ಪುನರ್ವಿಂಗಡಿಸಿಯೂ 16,00,000 ಎಕರೆ ಜಮೀನನ್ನು ಹೊಸದಾಗಿಯೂ ರೈತರಿಗೆ ನೀಡಲಾಯಿತು. ದೇಶದ ನಾನಾ ಕಡೆಗಳಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆಲ್ಪೈನ್ ಜಿಲ್ಲೆಗಳು ಅರಣ್ಯ, ಹಣ್ಣಿನ ತೋಟ ಹಾಗೂ ಗೋಮಾಳಗಳಿಗೆ ಪ್ರಸಿದ್ಧ. ಪೋ ಕಣಿವೆ ಪ್ರದೇಶಗಳಲ್ಲಿ ಧಾನ್ಯ ಹಾಗೂ ಹುಲ್ಲು ಬೆಳೆಯುತ್ತಾರೆ. ಬೆಟ್ಟಗಳ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ದವಸ ಧಾನ್ಯಗಳನ್ನು, ಆಲಿವ್ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಕಾಲುವೆ ವ್ಯವಸ್ಥೆ ನೀರಾವರಿ ವ್ಯವಸ್ಥೆ ತುಂಬ ಸಮರ್ಪಕವಾಗಿದೆ. 
ಪರಿಮಾಣದ ದೃಷ್ಟಿಯಿಂದ ಗೋಧಿ, ಬೀಟ್‍ರೂಟ್, ಆಲೂಗೆಡ್ಡೆ, ಜೋಳ, ಟೊಮ್ಯಾಟೊ, ಅಕ್ಕಿ, ಓಟ್ಸ್, ಬಾರ್ಲಿ, ಸಣ್ಣಗೋದಿ, ಹೊಗೆಸೊಪ್ಪು, ಸೆಣಬು-ಇವು ಮುಖ್ಯವಾದ ಬೆಳೆಗಳು. ಅಲ್ಲದೆ ಕಿತ್ತಲೆ ಹಾಗೂ ನಿಂಬೆಹಣ್ಣುಗಳನ್ನು ಹೇರಳವಾಗಿ ಬೆಳೆಯುತ್ತಾರೆ. ದ್ರಾಕ್ಷಾರಸ ಹಾಗೂ ಆಲಿವ್ ಎಣ್ಣೆಗಳ ಉತ್ಪಾದನೆಯಲ್ಲಿ ಪ್ರಸಿದ್ಧವಾದ ರಾಷ್ಟ್ರಗಳ ಪೈಕಿ ಇಟಲಿಗೆ ಎರಡನೆಯ ಸ್ಥಾನ. 
ದೇಶದ ಎಲ್ಲ ಭಾಗಗಳಲ್ಲೂ ಸುಮಾರು 1,00,00,000 ದನಕರುಗಳನ್ನೂ ಅಷ್ಟೇ ಪ್ರಮಾಣದಲ್ಲಿ ಕುರಿ, ಮೇಕೆ, ಹಂದಿಗಳನ್ನೂ ನೋಡಬಹುದಾಗಿದೆ. ಉಳಿದ ಪ್ರಾಣಿ ಸಂಪತ್ತೆಂದರೆ ಕತ್ತೆ, ಕುದುರೆ ಹಾಗೂ ಹೇಸರಗತ್ತೆ. 
ಇಟಲಿಯಲ್ಲಿ ದೊರಕುವ ಖನಿಜಸಂಪತ್ತು ಅಷ್ಟೇನೂ ಆಶಾದಾಯಕವಾದುದಲ್ಲ. ಗಂಧಕ ಹಾಗೂ ಪಾದರಸ ಹೇರಳವಾಗಿ ಸಮೃದ್ಧವಾಗಿ ದೊರಕುತ್ತದೆ. ಇಟಲಿ ಇದನ್ನು ಹೇರಳವಾಗಿ ರಫ್ತುಮಾಡುತ್ತದೆ. ಪ್ರಪಂಚದ 1/3 ಭಾಗದಷ್ಟು ಪಾದರಸ ಇಟಲಿಯಲ್ಲಿ ಉತ್ಪಾದನೆಯಾಗುತ್ತದೆ. ಕಬ್ಬಿಣ, ಸತು, ಸೀಸ, ಮ್ಯಾಂಗನೀಸ್ ಮತ್ತು ಅಲ್ಯೂಮಿನಿಯಂ ಅದುರುಗಳ ಉತ್ಪಾದನೆಯೂ ಇದೆ. ಆದರೆ ಕೈಗಾರಿಕೆಗೆ ಬೇಕಾದ ಕಬ್ಬಿಣದ ಅದುರು ಹಾಗೂ ಕಲ್ಲಿದ್ದಲು ಸಾಕಷ್ಟು ದೊರಕದಿರುವುದು ದೇಶದ ಕೈಗಾರಿಕೋದ್ಯಮಕ್ಕೆ ಭಾರಿ ಪೆಟ್ಟು. ಕೆಲವು ಮುಖ್ಯ ಗಣಿಗಳು ಸಿಸಿಲಿ, ಸಾರ್ಡಿನಿಯ, ಟಸ್ಕನಿ, ಲೊಂಬಾರ್ಡಿಗಳಲ್ಲಿವೆ. ಸಿಸಿಲಿಯಲ್ಲಿ ಅನೇಕ ಸಮೃದ್ಧ ಎಣ್ಣೆ ಬಾವಿಗಳು ದೊರಕಿವೆ. ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿ ಯೂರೋಪಿನಲ್ಲೇ ಅತಿ ಪ್ರಮುಖವಾದ ಎಣ್ಣೆ ದೊರಕುವ ಪ್ರದೇಶಗಳನ್ನಾಗಿ ಮಾಡುವ ಯೋಜನೆ ಹಾಕಿಕೊಂಡು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಜಲವಿದ್ಯುಚ್ಛಕ್ತಿಯನ್ನು ಅಧಿಕವಾಗಿ ಉತ್ಪಾದಿಸಲಾಗುತ್ತಿದೆ. 
ದೇಶದ ಕೈಗಾರಿಕೋದ್ಯಮಗಳು ಇಟಲಿಯ ಉತ್ತರಭಾಗದಲ್ಲಿ ಹೆಚ್ಚಾಗಿವೆ. ಆದರೆ ಇತ್ತೀಚೆಗೆ ದಕ್ಷಿಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉತ್ಪಾದನೆ ಹೆಚ್ಚಿಸಬೇಕೆಂದು ನಿಯೋಜಿತ ಯೋಜನೆಯನ್ನು ಹಾಕಿಕೊಂಡು ದೇಶ ಮುಂದುವರಿಯುತ್ತಿದೆ. ಇಟಲಿಯ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಮುಖವಾದದ್ದು ಎಂದರೆ ಬಟ್ಟೆ ಕೈಗಾರಿಕೆ. ಈ ಕೈಗಾರಿಕೆ ದೇಶದಲ್ಲಿ ಬಹುತೇಕ ಜನರಿಗೆ ಉದ್ಯೋಗ ನೀಡಿದೆ. ಈ ಕೈಗಾರಿಕೋದ್ಯಮದಲ್ಲಿ ಮುಖ್ಯವಾಗಿ ಸಿಲ್ಕ್, ಉಣ್ಣೆ ಮತ್ತು ಹತ್ತಿ ಹಾಗೂ ಕೃತಕನೂಲಿನ ಬಟ್ಟೆಗಳ ಉತ್ಪಾದನೆ ಹೆಚ್ಚಾಗಿದೆ. ರಾಸಾಯನಿಕ ವಸ್ತು, ಸಕ್ಕರೆ ಹಾಗೂ ಮೋಟಾರ್ ಕಾರು, ಕೈಗಾರಿಕೆಗಳು ಪ್ರಮುಖವಾದ ಉದ್ಯಮಗಳಾಗಿವೆ. ವೈರ್‍ಲೆಸ್ ಮತ್ತು ಬೆರಳಚ್ಚು ಯಂತ್ರ, ವ್ಯವಸಾಯಕ್ಕೆ ಬೇಕಾದ ಉಪಕರಣ ಬೈಸಿಕಲ್ಲು, ಮೋಟಾರ್ ಸೈಕಲ್ಲು-ಇವು ಕೈಗಾರಿಕೋದ್ಯಮದ ಇತರ ಉತ್ಪಾದಿತ ವಸ್ತುಗಳು.  (ನೋಡಿ- ಇಟಲಿಯ-ಆರ್ಥಿಕ-ವ್ಯವಸ್ಥೆ)

ಬಹುಪುರಾತನ ಕಾಲದಿಂದ ಇಟಲಿಗೆ ಅನೇಕ ಜನಾಂಗಗಳು ಬಂದು ಸೇರಿವೆ. ಆರ್ಯರು, ಕೆಲ್ಟರು, ಗೋಥರು, ಇಟ್ರಸ್ಕನರು ಮುಂತಾದ ಜನಾಂಗಗಳ ಜನರು ಇಟಲಿಯ ಮೇಲೆ ದಾಳಿ ನಡೆಸಿದರು. ಪ್ರತಿಯೊಂದು ದಾಳಿಯ ಅನಂತರವೂ ಅವರಲ್ಲಿ ಸ್ವಲ್ಪಜನ ಅಲ್ಲೇ ನೆಲೆಯೂರಿದರು. ಹೀಗೆ ಇಟಲಿಯಲ್ಲಿ ಅನೇಕ ಜನಾಂಗಗಳ ಮಿಶ್ರಣವಾಗುತ್ತ ಬಂದಿದೆ. ಈಗ ಅದು ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳಿಂದ ಕೂಡಿದೆ. ಇಂದಿಗೂ ಇಟಲಿಯ ಜನರಲ್ಲಿ ವೈವಿಧ್ಯವನ್ನು ಕಾಣಬಹುದು. 
ದೇಶದ ಒಟ್ಟು ವಿಸ್ತೀರ್ಣದ ದೃಷ್ಟಿಯಿಂದ ಇಟಲಿಯಲ್ಲಿ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಜನಸಾಂದ್ರತೆ ಇಲ್ಲದಿದ್ದರೂ ಪರ್ವತಮಯ ಪ್ರದೇಶದಿಂದಾಗಿ ಜನವಸತಿ ಕೆಲವೇ ಅತಿ ಹೆಚ್ಚಾಗಿದೆ. ಈಗಂತೂ ಇದೊಂದು ಸಮಸ್ಯೆಯೇ ಆಗಿ ಪರಿಣಮಿಸಿದೆ. 1936ರಲ್ಲಿ ಪ್ರತಿ ಚ.ಮೈ.ಗೆ 359 ಮಂದಿ ಇದ್ದರು. 1961ರಲ್ಲಿ ಇದು 435ಕ್ಕೇರಿತು. 1961ರ ಗಣತಿಯಂತೆ ಪ್ರತಿ ಚ.ಮೈ.ಗೆ 80 ರಿಂದ 907ರವರೆಗೆ ವಿವಿಧ ರೀತಿಯಲ್ಲಿ ಜನಸಾಂದ್ರತೆ ಹರಡಿತ್ತು. ಈಗ ಜನಸಂಖ್ಯೆಯ ಏರಿಕೆಯ ಪ್ರಮಾಣ ಅಷ್ಟಾಗಿಲ್ಲ. 1938ರಿಂದ 1961ರ ವರೆಗೆ ಜನನ ಪ್ರಮಾಣ ಸಾಕಷ್ಟು ಇಳಿಯಿತು. ಆದರೆ ಸುಧಾರಿತ ವೈದ್ಯಕೀಯ ಸೌಲಭ್ಯದಿಂದಾಗಿ ನೈಸರ್ಗಿಕ ಮರಣಗಳ ಸಂಖ್ಯೆಯೂ ಇಳಿಯಿತು. ಹೀಗಾಗಿ ಒಟ್ಟಿನಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ತಕ್ಕಮಟ್ಟಿಗೆ ಇತ್ತು. ಇಲ್ಲಿನ ಜನ ಮೊದಲಿನಿಂದಲೂ ಅಧಿಕಸಂಖ್ಯೆಯಲ್ಲಿ ಹೊರಕ್ಕೆ ವಲಸೆ ಹೋಗುತ್ತಿದ್ದುದರಿಂದ ಜನಸಂಖ್ಯೆಯ ಏರಿಕೆ ಅತಿಯಾಗಿ ಪರಿಣಮಿಸಿಲ್ಲವೆನ್ನಬಹುದು. ಇಟಲಿಯ ಬಹುಸಂಖ್ಯಾತ ಪ್ರಜೆಗಳು ಅಮೆರಿಕಕ್ಕೂ ಯೂರೋಪಿನ ಇತರ ರಾಷ್ಟ್ರಗಳಿಗೂ ವಲಸೆ ಹೋಗುವುದು ಸಾಮಾನ್ಯವಾಗಿತ್ತು. ಈಗ ಈ ರೀತಿ ವಲಸೆ ಹೋಗುವವರ ಸಂಖ್ಯೆ ತಗ್ಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. 

ಇಟಲಿಯನ್ನು ರೋಮನ್ ಕೆಥೊಲಿಕ್ ರಾಷ್ಟ್ರವೆಂದೇ ಹೇಳಬಹುದು. ಇಲ್ಲಿಯ ಜನರಲ್ಲಿ 95%ಕ್ಕೂ ಹೆಚ್ಚು ಜನ ಕೆಥೊಲಿಕರು. ಪ್ರಾಟೆಸ್ಟಂಟರೂ ಜ್ಯೂಗಳೂ ಇತರ ಮತಾವಲಂಬಿಗಳೂ ಅಲ್ಪಸಂಖ್ಯೆಯಲ್ಲಿದ್ದಾರೆ. ಕೆಥೊಲಿಕ್ ಮತವನ್ನು ರಾಷ್ಟ್ರೀಯಮತವೆಂದು ಪರಿಗಣಿಸಲಾಗಿದೆ. ಆದರೆ ಇತರ ಮತಗಳನ್ನೂ ಇದಕ್ಕೆ ಸರಿಸಮನಾಗಿಯೇ ಕಾಣಲಾಗುತ್ತದೆ. 
ಇಲ್ಲಿನ ಶಾಖೆಗಳಲ್ಲಿ ಕೆಥೊಲಿಕ್ ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿದೆ. ಈ ಶಿಕ್ಷಣದ ಹೊಣೆಯನ್ನು ಚರ್ಚುಗಳು ನಿರ್ವಹಿಸುತ್ತವೆ. ಧರ್ಮಾಧಿಕಾರಿಗಳಿಗೆ ರಾಜ್ಯದ ಬೊಕ್ಕಸದಿಂದಲೇ ವೇತನ ಕೊಡಲಾಗುವುದು. ಧರ್ಮಾಧಿಕಾರಿಗಳನ್ನು (ಪ್ರೀಸ್ಟ, ಬಿಷಪ್, ಆರ್ಚ್‍ಬಿಷಪ್ ಮುಂತಾದವರು) ಪೋಪರೇ ನಿಯಮಿಸುತ್ತಾರೆ. ಆದರೆ ನೇಮಕದ ಮೊದಲು ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರದ ಅಂಗೀಕಾರಕ್ಕಾಗಿ ಕಳಿಸಲಾಗುವುದು. ಕೆಥೊಲಿಕ್ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಬರದ ಇನ್ನಾವುದೇ ಧರ್ಮದ ಧಾರ್ಮಿಕ ಕಾರ್ಯಗಳಿಗೆ ಇಲ್ಲಿ ಮಾನ್ಯತೆ ಇದೆ. 
ಮೊದಲು ದಕ್ಷಿಣದ ಕೆಲವೇ ನಗರಗಳಲ್ಲಿ ದಟ್ಟೈಸಿದ್ದ ಜನ ಈಗ ಉತ್ತರದ ಬಯಲುಗಳಲ್ಲಿ ಸ್ಥಾಪಿಸಲಾಗುತ್ತಿರುವ ಕೈಗಾರಿಕಾ ಕೇಂದ್ರಗಳಿಗೆ ಹೋಗುತ್ತಿದ್ದಾರೆ. ಉತ್ತರದ ಕೆಲವೇ ಕಡೆ ಹೆಚ್ಚಾಗಿದ್ದ ಜನಸಂಖ್ಯೆ ಈಗ ಎಲ್ಲ ಕಡೆಗೆ ಹರಡಿ ಒಂದು ರೀತಿಯ ಸಮತೋಲ ಏರ್ಪಟ್ಟಿದೆ. ರೋಮ್, ಮಿಲಾನ್, ನೇಪಲ್ಸ್, ಟ್ಯೂರಿನ್, ಜಿನೋವ, ಫ್ಯಾರೆನ್ಸ್, ವೆನಿಸ್ ಮುಂತಾದವು ಹೆಚ್ಚು ಜನಸಂಖ್ಯೆ ಇರುವ ಮುಖ್ಯ ನಗರಗಳು. (ವಿವರಗಳಿಗೆ ಆಯಾ ನಗರಗಳನ್ನು ಕುರಿತ ಶೀರ್ಷಿಕೆಗಳನ್ನು ನೋಡಿ). 

ಇಟಲಿಯ ಪ್ರಧಾನ ಮಂತ್ರಿಗೆ ಮಂತ್ರಿಮಂಡಲದ ಅಧ್ಯಕ್ಷನೆಂದು ಹೆಸರಿದೆ. ಆತನ ಸಲಹೆಯ ಮೇರೆಗೆ ಮಂತ್ರಿಮಂಡಲದ ಇತರ ಸದಸ್ಯರನ್ನು ನೇಮಿಸುವುದು ಅಧ್ಯಕ್ಷನ ಕರ್ತವ್ಯ. ಇಟಲಿಯ ಮಂಡಲ ಎರಡೂ ಶಾಸಕಾಂಗಗಳ ವಿಶ್ವಾಸ ಗಳಿಸಿರಬೇಕು. ಮಂತ್ರಿಮಂಡಲದ ಅಧ್ಯಕ್ಷ ಸಂವಿಧಾನಕ್ಕನುಗುಣವಾಗಿ ಸರ್ಕಾರದ ನೀತಿ ರೂಪಿಸುತ್ತಾನೆ. ಪ್ರತಿಯೊಬ್ಬ ಮಂತ್ರಿಗೂ ವೈಯಕ್ತಿಕ ಹೊಣೆಗಾರಿಕೆಯೊಂದಿಗೆ ಸಂಯುಕ್ತ ಹೊಣೆಗಾರಿಕೆಯೂ ಇರುತ್ತದೆ. 
ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಜನತೆಯ ಹೆಸರಿನಲ್ಲಿ ನ್ಯಾಯ ನೀಡಲಾಗುವುದು. ನ್ಯಾಯಾಧೀಶ ಕಾಯಿದೆಯ ಪರಿಮಿತಿಗೆ ಒಳಗಾಗಿರುತ್ತಾನೆ. ನ್ಯಾಯಾಲಯ ಕಾರ್ಯಾಂಗದಿಂದ ಸ್ವತಂತ್ರವಾಗಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂವಿಧಾನ ಸಂಬಂಧವಾದ ಬಿಕ್ಕಟ್ಟು ಉಂಟಾದಾಗ, ಅದನ್ನು 15 ಜನರ ಸಂವಿಧಾನ ನ್ಯಾಯಾಲಯ ಪರಿಹರಿಸುತ್ತದೆ. ಇದರಲ್ಲಿ ⅓ ಸದಸ್ಯರನ್ನು ಅಧ್ಯಕ್ಷ ನಾಮಕರಣ ಮಾಡಿರುತ್ತಾನೆ. ⅓ ಸದಸ್ಯರನ್ನು ಶಾಸಕಾಂಗದ ಎರಡು ಮನೆಗಳು ಆರಿಸುತ್ತವೆ. ಉಳಿದ ⅓ ಸದಸ್ಯರನ್ನು ಸರ್ವೋನ್ನತ ನ್ಯಾಯಾಂಗ ಸಮಿತಿ ಆರಿಸುತ್ತದೆ. ಈ ಸದಸ್ಯರ ಅಧಿಕಾರಾವಧಿ 12 ವರ್ಷ. ಅಧಿಕಾರಾವಧಿ ಮುಗಿದ ತಕ್ಷಣವೇ ಅವರನ್ನು ಪುನರ್ ನೇಮಕ ಮಾಡಲಾಗುವುದಿಲ್ಲ. 
ಅಧಿಕಾರದ ವಿಕೇಂದ್ರೀಕರಣಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ತಮ್ಮ ಕಕ್ಷೆಯಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಪ್ರಾದೇಶಿಕ ಸಮಿತಿಗಳಿಗೆ ಅವಕಾಶವಿದೆ. ಇಟಲಿಯನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಸಂವಿಧಾನದಲ್ಲಿ 19 ವಿಭಾಗಗಳಿಗೆ ಅವಕಾಶವಿದ್ದರೂ ಮಹಾಯುದ್ಧದ ಅನಂತರ ಇದು ಪ್ರತ್ಯೇಕತೆಗೆ ಅವಕಾಶ ನೀಡಬಹುದೆಂದು ಈ ವಿಂಗಡಣೆಯನ್ನು ಸೀಮಿತಗೊಳಿಸಲಾಗಿದೆ. ಕ್ರಿಶ್ಚಿಯನ್ ಡೆಮೊಕ್ರಾಟಿಕ್ ಪಕ್ಷ ಮೊದಲು ಸ್ವತಂತ್ರ ರಾಜ್ಯ ರಚನೆಗೆ ಸಲಹೆ ನೀಡಿತ್ತು. ಅನಂತರ ಅದೇ ಪಕ್ಷ ಇದನ್ನು ವಿರೋಧಿಸಿತು. ರಾಜ್ಯಗಳ ಅಧಿಕಾರ ಕಕ್ಷೆಯಲ್ಲಿ ಸ್ಥಳೀಯ ಆಡಳಿತ, ಪೊಲೀಸ್, ಮಾರುಕಟ್ಟೆ, ಸಾರ್ವಜನಿಕ ಕಲ್ಯಾಣ, ನಗರ, ಶಿಕ್ಷಣ, ಸಾರಿಗೆಸಂಪರ್ಕ, ವ್ಯವಸಾಯ, ಅರಣ್ಯ-ಇವು ಬರುತ್ತವೆ. ಆಡಳಿತದ ಕಾರ್ಯನಿರ್ವಹಣೆಗೆ ಕೆಲವೊಂದು ತೆರಿಗೆಯನ್ನು ವಿಧಿಸಬಹುದು. ಕೇಂದ್ರಕ್ಕೆ ಬರುವ ಕಂದಾಯದಲ್ಲಿ ಕೆಲವೊಂದು ಭಾಗಗಳನ್ನು ರಾಜ್ಯಗಳಿಗೆ ನೀಡಲಾಗುತ್ತದೆ. 
ಪ್ರತಿಯೊಂದು ಪ್ರದೇಶಕ್ಕೂ ಒಂದು ಪ್ರಾದೇಶಿಕ ಕೌನ್ಸಿಲ್ ಇದೆ. ಅದಕ್ಕೊಂದು ಕಾರ್ಯನಿರ್ವಾಹಕ ಸಮಿತಿ ಮತ್ತು ಅಧ್ಯಕ್ಷ ಇರುತ್ತಾನೆ. ಪ್ರಾದೇಶಿಕ ಕೌನ್ಸಿಲ್ ಚೇಂಬರಿಗೆ ಮಸೂದೆಗಳನ್ನು ಕಳಿಸಬಹುದು. ಕೇಂದ್ರದ ಅಧ್ಯಕ್ಷ ಪ್ರಾದೇಶಿಕ ಮಂಡಲಿಯನ್ನು ಯಾವಾಗ ಬೇಕಾದರೂ ವಿಸರ್ಜಿಸಬಹುದಾಗಿದೆ. ಪ್ರತಿಯೊಂದು ಪ್ರದೇಶಕ್ಕೂ ಒಬ್ಬ ಆಯುಕ್ತನನ್ನು (ಕಮೀಷನರ್) ನೇಮಿಸಿದೆ. ನ್ಯಾಯಾಂಗ, ಆಡಳಿತ ಮತ್ತು ಲೆಕ್ಕಪತ್ರ, ಮುಂಗಡಪತ್ರಗಳ ತಪಾಸಣೆ-ಇವಕ್ಕೆ ಒಂದೊಂದು ಸಮಿತಿಯಿದೆ. 
ಸುಗ್ರೀವಾಜ್ಞೆಗಳನ್ನು ಹೊರಡಿಸಿದಾಗ ತಕ್ಷಣ ಸಂಸತ್ತಿನ ಅನುಮತಿ ಪಡೆಯಬೇಕೆಂಬ ವಿಧಿಯಿದೆ. ಆಗ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲವಾದರೆ ಅದು ಐದು ದಿನಗಳಲ್ಲಿ ಸೇರುವಂತೆ ಏರ್ಪಾಡಾಗಬೇಕು. 60 ದಿನಗಳೊಳಗೆ ಸುಗ್ರೀವಾಜ್ಞೆ ಕಾಯಿದೆಯಾಗದಿದ್ದಲ್ಲಿ ಅದು ಜಾರಿಯಲ್ಲಿರುವುದಿಲ್ಲ. 
ಪ್ರಾಪ್ತವಯಸ್ಕರಿಗೆಲ್ಲ ಮತದಾನದ ಹಕ್ಕಿದೆ. ರಹಸ್ಯ ಮತದಾನ ಪದ್ಧತಿಯಿದೆ. ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೆಂದು ಪರಿಗಣಿಸಲಾಗಿದೆ. ಭಾಷೆ, ಧರ್ಮ, ರಾಜಕೀಯ, ಸಾಮಾಜಿಕ ಬೇಧಗಳಿಲ್ಲದೆ ಎಲ್ಲ ಪ್ರಜೆಗಳಿಗೂ ಸಮಾನ ಸಂಬಳ ನೀಡಬೇಕೆಂಬ ತತ್ತ್ವವೂ ಅಂಗೀಕೃತವಾಗಿದೆ. ಯಾರಿಗೂ ಶ್ರೀಮಂತಿಕೆಯ ಬಿರುದುಗಳನ್ನು ನೀಡಲಾಗುವುದಿಲ್ಲ. ಮಾನವನ ವ್ಯಕ್ತಿತ್ವದ ಬೆಳವಣಿಗೆಗೆ ಅಡ್ಡಿ ಆತಂಕಗಳನ್ನೊಡ್ಡುವ ಆರ್ಥಿಕ, ಸಾಮಾಜಿಕ ಅಸಮತೆಗಳನ್ನು ತೊಡೆದು ಹಾಕುವುದು ಕರ್ತವ್ಯವೆಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಜನತೆಗೆ ಉದ್ಯೋಗದ ಹಕ್ಕನ್ನು ಅಂಗೀಕರಿಸಲಾಗಿದೆ. ಸಮಾಜದ ನೈತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆಯಾದರೂ ರೋಮನ್ ಕೆಥೊಲಿಕ್ ಪಂಥವನ್ನು ದೇಶದ ಅಧಿಕೃತ ಧರ್ಮವೆಂದು ಪರಿಗಣಿಸಲಾಗಿದೆ. ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಉಂಟು. ಗುಪ್ತ ಸಂಘಗಳನ್ನೂ ಸೈನ್ಯ ಮಾದರಿಯ ಕೂಟಗಳನ್ನೂ ನಿಷೇಧಿಸಲಾಗಿದೆ. ಫ್ಯಾಸಿಸ್ಟ್ ಪಕ್ಷವನ್ನು ಪುನಃ ಸಂಘಟಿಸಲು ಅವಕಾಶವಿಲ್ಲ. ರಾಜಮನೆತನದವರು ದೇಶ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಪ್ರಜೆಗಳು ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಲ್ಲ. ಪಾಲಕರು ತಮ್ಮ ಮಕ್ಕಳ ಪಾಲನೆ ಪೋಷಣೆ ಮಾಡುವುದರೊಂದಿಗೆ ಅವರಿಗೆ ಶಿಕ್ಷಣ ನೀಡಬೇಕು. ಕಾರ್ಮಿಕ ಸಂಘಟನೆ ಮತ್ತು ಮುಷ್ಕರದ ಹಕ್ಕು ಅಂಗೀಕೃತ. ವೈಯಕ್ತಿಕ ಆಸ್ತಿ ಹೊಂದಲು ಅಭ್ಯಂತರವಿಲ್ಲ. ವ್ಯಕ್ತಿಯ ಶಕ್ತಿಗೆ ಅನುಸಾರವಾಗಿ ತೆರಿಗೆ ವಿಧಿಸಲಾಗುತ್ತದೆ. ಸಂವಿಧಾನದ ತಿದ್ದುಪಡಿಗೆ ಅವಕಾಶ ಕಲ್ಪಿಸಿದೆ. ಶಾಸಕಾಂಗದ ಎರಡು ಸಭೆಗಳೂ ಸಂಯುಕ್ತಾಧಿವೇಶನದಲ್ಲಿ ಸೇರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದು. ಎರಡನೆಯ ಬಾರಿ ಮತಕ್ಕೆ ಹಾಕಿದಾಗ ಎರಡೂ ಸಭೆಗಳು ಬಹುಮತದಿಂದ ಅದನ್ನು ಒಪ್ಪಬೇಕು. 
ಸಂವಿಧಾನ ನ್ಯಾಯಾಲಯವೊಂದರ ನಿರ್ಮಾಣಕ್ಕೂ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದೆ. ಶಾಸನಗಳ ಕ್ರಮಬದ್ಧತೆಯನ್ನು ಆ ನ್ಯಾಯಾಲಯ ಪರಿಶೀಲಿಸುತ್ತದೆ. ಆಡಳಿತಾನುಕೂಲಕ್ಕಾಗಿ ಜಿಲ್ಲಾ ನ್ಯಾಯಾಲಯಗಳೂ ಇವೆ. 

ಯುರೋಪಿಯನ್ ಇತಿಹಾಸ - ಬಿ.ಎಸ್.ಉಮಾಮಹೇಶ್ವರ 




#Article 229: ಆಸ್ಟ್ರಿಯ (1083 words)


ಆಸ್ಟ್ರಿಯ (ಜರ್ಮನ್:Österreich) ಅಧಿಕೃತವಾಗಿ ಆಸ್ಟ್ರಿಯ ಗಣರಾಜ್ಯ (ಜರ್ಮನ್:Republik Österreich) ಮಧ್ಯ ಯುರೋಪ್‍ನಲ್ಲಿರುವ ಒಂದು ನೆಲಾವೃತ ದೇಶ. ಇದರ ಉತ್ತರದಲ್ಲಿ ಜರ್ಮನಿ ಮತ್ತು ಚೆಕ್ ಗಣರಾಜ್ಯ; ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗರಿ; ದಕ್ಷಿಣದಲ್ಲಿ ಸ್ಲೊವೇನಿಯ ಮತ್ತು ಇಟಲಿ ಹಾಗು ಪಶ್ಚಿಮದಲ್ಲಿ ಸ್ವಿಟ್ಜರ್‍ಲ್ಯಾಂಡ್ ಮತ್ತು ಲೈಕ್ಟೆನ್‍ಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯೆನ್ನ ನಗರ.

ಈಗ ಇದು ಮಧ್ಯ ಯುರೋಪಿನ ಒಂದು ಸಣ್ಣ ರಾಜ್ಯವಾದರೂ ಹಿಂದೆ ಕೆಲಕಾಲ ದೊಡ್ಡ ಸಾಮ್ರಾಜ್ಯದ ಕೇಂದ್ರವಾಗಿತ್ತು. ಇದರ ಆಗುಹೋಗುಗಳು ಮಧ್ಯಯುರೋಪಿನ ಇತರ ರಾಜ್ಯಗಳ ಇತಿಹಾಸದೊಂದಿಗೆ ಹೆಣೆದುಕೊಂಡಿವೆ. ಪುರಾತನ ಶಿಲಾಯುಗದಿಂದಲೂ ಇಲ್ಲಿ ಜನರು ವಾಸಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಪ್ರ.ಶ.ಪು.14ರಲ್ಲಿ ರೋಮನ್ನರು ಡ್ಯಾನ್ಯೂಬ್ ನದಿಗೆ ದಕ್ಷಿಣಕ್ಕಿರುವ ಭಾಗವನ್ನೆಲ್ಲ ಸ್ವಾಧೀನಪಡಿಸಿಕೊಂಡು ನಾರಿಕಂ ಮತ್ತು ಪೆನೋನಿಯ ಎಂಬ ಎರಡು ಪ್ರಾಂತ್ಯಗಳನ್ನು ನಿರ್ಮಿಸಿದರು. ಪೆನೋನಿಯದಲ್ಲಿದ್ದ ವಿಂಡೊಬೋನ ಎಂಬ ನಗರವೇ ಇಂದಿನ ವಿಯನ್ನ. ಡ್ಯಾನ್ಯೂಬ್ ನದಿಗೆ ಉತ್ತರದಲ್ಲಿರುವ ಪ್ರಾಂತ್ಯವನ್ನು ಮಾರ್ಕೊಮ್ಯಾನಿ ಎಂಬ ಜನರು ಆಕ್ರಮಿಸಿದರು. ಮುಂದೆ ಐದಾರು ಶತಮಾನಗಳ ಅವಧಿಯಲ್ಲಿ ವ್ಯಾಂಡರು, ಗಾಥರು, ಹೂಣರು, ಲಂಬಾರ್ಡರು, ಆವಾರರು ಈ ದೇಶಕ್ಕೆ ನುಗ್ಗಿ ಬಂದು ಕೆಲಕಾಲ ಆಕ್ರಮಿಸಿ ನಿಂತರು. 8ನೆಯ ಶತಮಾನದ ಅಂತ್ಯಭಾಗದಲ್ಲಿ ಸಾಮ್ರಾಟ ಚಾರ್ಲ್ಸ್ ಮಹಾಶಯ ಆವಾರರನ್ನು ಸೋಲಿಸಿ ಈಸ್ಟ್ ಮಾರ್ಕ್ ಎಂಬ ಪ್ರಾಂತ್ಯವನ್ನು ನಿರ್ಮಿಸಿದ. ಆಸ್ಟ್ರಿಯ ಸಾಮ್ರಾಜ್ಯದ ಇತಿಹಾಸ ಇಲ್ಲಿಂದ ಪ್ರಾರಂಭವಾಗುತ್ತದೆಂದು ಅನೇಕರ ಅಭಿಪ್ರಾಯ. ಮುಂದೆ ಹಂಗರಿಯವರು ಇಲ್ಲಿಗೆ ನುಗ್ಗಿ ಭೀಕರ ಹಾವಳಿ ನಡೆಸಿದರು; ಆಸ್ಟ್ರಿಯ ಹೇಳ ಹೆಸರಿಲ್ಲದಾಗುತ್ತದೆಂಬ ಭಯ ತಲೆದೋರಿತು. ಆದರೆ 955ರಲ್ಲಿ ಆಟೊ ಮಹಾಶಯ ಅವರನ್ನು ಆಗ್ಸ್ ಬರ್ಗ್ ಕದನದಲ್ಲಿ ಸೋಲಿಸಿ ಈಸ್ಟ್ ಮಾರ್ಕ್ ಪ್ರಾಂತ್ಯವನ್ನು ಪುನರುಜ್ಜೀವನಗೊಳಿಸಿದ. 973ರಲ್ಲಿ, ಬೇಬನ್ಬರ್ಗ್ ವಂಶದ ಲಿಯೋಪಾಲ್ಡ್ ಎಂಬುವನಿಗೆ ಮಾರ್ಗ್ರೇವ್ ಅಥವಾ ಗಡಿನಾಡಿನ ಸೈನಿಕ ಮಂಡಲಾಧಿಪತಿ ಎಂಬ ಹೆಚ್ಚಿನ ಬಿರುದನ್ನು ಕೊಟ್ಟ. ಈ ಪ್ರಾಂತಾಧಿಪತಿಗಳ ಆಳ್ವಿಕೆಯಲ್ಲಿ ಈಸ್ಟ್ ಮಾರ್ಕ್ ವಿಸ್ತರಿಸಲ್ಪಟ್ಟಿತಲ್ಲದೆ ಆಂತರಿಕ ಭದ್ರತೆಯನ್ನೂ ಪಡೆಯಿತು. 12ನೆಯ ಶತಮಾನದಲ್ಲಿ ದಕ್ಷಿಣದ ಕೆಲವು ಪ್ರದೇಶಗಳನ್ನೂ ಸೇರಿಸಿ ಅದನ್ನು ಡ್ಯೂಕ್ಡಂ ಅಥವಾ ವಂಶಾನುಗತ ಶ್ರೀಮಂತಪದವಿ ಹೊಂದಿರುವವರ ರಾಜ್ಯವನ್ನಾಗಿ ಪರಿವರ್ತಿಸಲಾಯಿತು. ಹೆನ್ರಿ ಜ್ಯಾಸೊಮಿರ್ಗಾಟ್ ಎಂಬಾತ ಸಾಮಂತನಾದ. ಈ ಮನೆತನದ ಅಧಿಪತಿಗಳು ಸಮರ್ಥರಾಗಿದ್ದು, ರಾಜ್ಯವನ್ನು ವಿಸ್ತರಿಸಿದರು. ಇವರಲ್ಲಿ 6ನೆಯ ಲಿಯೊಪಾಲ್ಡ್ ಎಂಬುವನು ಮಾಗ್ಯಾರರ ಮತ್ತು ಮುಸ್ಲಿಮರ ಹಾವಳಿಯನ್ನು ತಡೆಗಟ್ಟಿದ. ಅವನ ತರುವಾಯ ಬಂದ ಫ್ರೆಡರಿಕ್ ಮಾಗ್ಯಾರರ ವಿರುದ್ಧ ನಡೆದ ಕದನದಲ್ಲಿ (1246) ಮಡಿದ. ಇಲ್ಲಿಗೆ ಬೇಬನ್ಬರ್ಗ್ ವಂಶದವರ ಆಳ್ವಿಕೆ ಕೊನೆಗಂಡಿತು.

ಕೊಂಚಕಾಲ ಆಸ್ಟ್ರಿಯದಲ್ಲಿ ಪ್ರಭುಗಳೇ ಇರಲಿಲ್ಲ. ಈ ಗೊಂದಲದಲ್ಲಿ, ಬೊಹಿಮಿಯದ ದೊರೆ ಒಟೇಕರ್ ರಾಜ್ಯವನ್ನು ಸ್ವಾಧೀನಪಡಿಸಿಕೊಂಡ. ಹ್ಯಾಬ್್ಸಬರ್ಗ್ ಚಕ್ರವರ್ತಿ 1ನೆಯ ರಡೋಲ್ಫನ ಸಾರ್ವಭೌಮತ್ವವನ್ನು ಆತ ಒಪ್ಪಲಿಲ್ಲವಾದ್ದರಿಂದ ಯುದ್ಧ ಪ್ರಾರಂಭವಾಯಿತು. ಮಾರ್ಚ್ಫೀಲ್್ಡ ಕದನದಲ್ಲಿ ಒಟೇಕರ್ ಮಡಿದ. ಆಸ್ಟ್ರಿಯ ಹ್ಯಾಬ್್ಸಬರ್ಗ್ ರಾಜಮನೆತನದ ಆಳ್ವಿಕೆಗೆ ಬಂತು. ರಡೋಲ್ಫನ ಮಗ ಆಲ್ಬರ್ಟ್ ಆಸ್ಟ್ರಿಯದ ಡ್ಯೂಕನಾದ. ಈ ಮನೆತನದವರ ಆಳ್ವಿಕೆಯಲ್ಲಿ ಆಸ್ಟ್ರಿಯದ ಇತಿಹಾಸ ಭವ್ಯವಾಗಿ 1282-1318ರವರೆಗೂ ಅವಿಚ್ಛಿನ್ನವಾಗಿ ಸಾಗಿತು. 1330ರಲ್ಲಿ ದೊರೆಯಾದ 2ನೆಯ ಆಲ್ಬರ್ಟನ ಕಾಲದಲ್ಲೇ ರಾಜ್ಯ ವಿಸ್ತರಣೆ ಪ್ರಾರಂಭವಾಯಿತು. ಕಾರಿಂಥಿಯ, ಟೈರಾಲ್ ಮುಂತಾದ ನೆರೆಯ ರಾಜ್ಯಗಳು ಆಸ್ಟ್ರಿಯಕ್ಕೆ ಸೇರಿದುವು. ಐದನೆಯ ಆಲ್ಬರ್ಟ್ ಸಿಜಸ್ಮಂಡ್ ಚಕ್ರವರ್ತಿಯ ಮಗಳನ್ನು ಮದುವೆಯಾಗಿ ಹಂಗರಿ ಬೊಹಿಮಿಯ ರಾಜ್ಯಗಳಿಗೂ ದೊರೆಯಾದ; ಎರಡನೆಯ ಆಲ್ಬರ್ಟ್ ಎಂಬ ಹೆಸರಿನಿಂದ ಪವಿತ್ರ ರೋಮನ್ ಸಾಮ್ರಾಜ್ಯದ ಚಕ್ರವರ್ತಿಯೂ ಆದ. ಮುಂದೆ, ಆಸ್ಟ್ರಿಯದ ಹ್ಯಾಬ್್ಸಬರ್ಗ್ ರಾಜರು (1740-45ರ ಅವಧಿಯಲ್ಲಿ ಹೊರತು) 1806ರವರೆಗೂ ಪವಿತ್ರ ರೋಮನ್ ಸಾಮ್ರಾಟರೂ ಆಗಿದ್ದರು. ಹೀಗೆ ಆಸ್ಟ್ರಿಯದ ಚರಿತ್ರೆ ಆ ಸಾಮ್ರಾಜ್ಯದ ಇತಿಹಾಸದೊಂದಿಗೆ ಹೆಣೆದುಕೊಂಡಿದೆ (ಪವಿತ್ರ-ರೋಮನ್-ಸಾಮ್ರಾಜ್ಯ).
ಈ ಕಾಲದಲ್ಲಿ ಆಸ್ಟ್ರಿಯದ ಐತಿಹಾಸಿಕ ಪ್ರಾಮುಖ್ಯ ಕಂಡುಬರುವುದು ಒಂದೇ ಸಮನಾಗಿ ನಡೆಯುತ್ತಿದ್ದ ಮುಸ್ಲಿಮರ ದಾಳಿಯನ್ನು ತಡೆಗಟ್ಟಿದ್ದರಲ್ಲಿ. ಇಡೀ ಯುರೋಪನ್ನೇ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಮುಸ್ಲಿಮರು ಮೇಲಿಂದ ಮೇಲೆ ಆಸ್ಟ್ರಿಯದ ಮೇಲೆ ನುಗ್ಗುತ್ತಿದ್ದರು. ಅವರ ಹಾವಳಿ ನಿಂತಿದ್ದು 1689ರಲ್ಲಿ, ಅವರು ವಿಯನ್ನ ನಗರಕ್ಕೆ ಮುತ್ತಿಗೆ ಹಾಕಿ ಪರಾಭವ ಹೊಂದಿದಮೇಲೆ. ಹೀಗೆ ಆಸ್ಟ್ರಿಯ ಆ ದಾಳಿಗೆ ತಡೆರಾಜ್ಯವಾಗಿ ನಿಂತಿದ್ದರಿಂದ ಮಧ್ಯ ಮತ್ತು ಪಶ್ಚಿಮ ಯುರೋಪಿನ ರಾಜ್ಯಗಳು ನಿರುಪಾಧಿಕವಾಗಿ ಬೆಳೆಯಲನುಕೂಲವಾಯಿತು. ಆದರೆ 17ನೆಯ ಶತಮಾನದಲ್ಲಿ ಆಸ್ಟ್ರಿಯ ಮತೀಯ ಮತ್ತು ರಾಜಕೀಯ ಗೊಂದಲಕ್ಕೆ ಸಿಕ್ಕಿ ತನ್ನ ಪ್ರಾಮುಖ್ಯ ಕಳೆದುಕೊಳ್ಳುತ್ತ ಬಂತು. 1618-48ರ ವರೆಗೆ ನಡೆದ 30 ವರ್ಷಗಳ ಯುದ್ಧದಲ್ಲಿ ಯುರೋಪಿನ ಪ್ರಮುಖ ರಾಷ್ಟ್ರಗಳೆಲ್ಲ ಭಾಗವಹಿಸಿದುವು. ಜರ್ಮನಿ ಜನಶೂನ್ಯವಾಗಿ ದಟ್ಟದಾರಿದ್ರ್ಯದ ದೇಶವಾಯಿತು; ಪವಿತ್ರ ರೋಮನ್ ಸಾಮ್ರಾಜ್ಯ ಹೆಸರಿಗೆ ಮಾತ್ರ ಸಾಮ್ರಾಜ್ಯವಾಗುಳಿಯಿತು; ಆಸ್ಟ್ರಿಯದ ಪ್ರಾಮುಖ್ಯ ಕುಂದತೊಡಗಿತು. ಈ ವಿಪ್ಲವದ ಲಾಭ ಪಡೆದು ಪ್ರಗತಿ ಹೊಂದಿದ ರಾಷ್ಟ್ರ ಫ್ರಾನ್ಸ್ ಒಂದೇ. ಇಂಗ್ಲೆಂಡ್, ಫ್ರಾನ್ಸ್ ಮುಂತಾದ ರಾಷ್ಟ್ರಗಳು ಬಲಗೊಂಡದ್ದರಿಂದ ಕಾಲಧರ್ಮಕ್ಕೆ ವಿರುದ್ಧವಾದ ಪವಿತ್ರ ರೋಮನ್ ಸಾಮ್ರಾಜ್ಯ ಉಳಿಯುವುದು ಸಾಧ್ಯವೇ ಇರಲಿಲ್ಲ.
ಆದರೂ 1701-14 ರವರೆಗೆ ಸ್ಪೇನ್ ವಾರಸಯುದ್ಧದ ಪರಿಣಾಮವಾಗಿ ಆಸ್ಟ್ರಿಯ, ನೆದರ್ಲೆಂಡ್ಸ್, ಮಿಲಾನ್, ನೇಪಲ್ಸ್ , ಮಾಂಟುಅ ಮತ್ತು ಸಿಸಿಲಿಗಳನ್ನು ಪಡೆಯಿತು. ರಾಷ್ಟ್ರೀಯತಾಭಾವನೆ ಬೆಳೆಯುತ್ತಿದ್ದ ಆ ಕಾಲದಲ್ಲಿ ಇದು ಉಳಿಯುವುದೂ ಸಾಧ್ಯವಿರಲಿಲ್ಲ. 18ನೆಯ ಶತಮಾನದ ಪ್ರಥಮಾರ್ಧದಲ್ಲಿ, 30 ವರ್ಷದ ಯುದ್ಧದ ಪರಿಣಾಮವಾಗಿ ಕುಂದಿದ್ದ ಜರ್ಮನಿಯಲ್ಲಿ ಪ್ರಷ್ಯರಾಜ್ಯ ತಲೆಯೆತ್ತಿ ಬಹುಬೇಗ ಬೆಳೆಯಿತು. ಈ ಮಧ್ಯೆ ಆಸ್ಟ್ರಿಯದಲ್ಲಿ ಪುತ್ರಸಂತಾನವಿಲ್ಲದೆ ದೊರೆ ಆರನೆಯ ಚಾರ್ಲ್ಸ್ ಕಾಲವಾದ (1740). ಇದಕ್ಕೆ ಮುಂಚೆ ಆತ ರಾಜ್ಯದ ಮೂಲಾಧಾರ ಶಾಸನದಲ್ಲಿ (ಪ್ರ್ಯಾಗ್ಮಾಟಿಕ್ ಸ್ಯಾಂಕ್ಷನ್) ತನ್ನ ಮಗಳು ಮೇರಿಯ ಥೆರೀಸಾ ಮುಂದಿನ ರಾಣಿಯಾಗುವುದಕ್ಕೆ ಪ್ರಮುಖ ರಾಷ್ಟ್ರಗಳ ಒಪ್ಪಿಗೆ ಪಡೆದಿದ್ದ. ಆದರೆ 6ನೆಯ ಚಾರ್ಲ್ಸ್ ಕಾಲವಾದ ಕೂಡಲೇ ಆ ಮೂಲಾಧಾರ ಶಾಸನವನ್ನು ಕಡೆಗಣಿಸಿ ಪ್ರಷ್ಯದ ದೊರೆ ಫ್ರೆಡರಿಕ್ ಆಸ್ಟ್ರಿಯಕ್ಕೆ ಸೇರಿದ ಸೈಲೀಷಿಯವನ್ನು ಆಕ್ರಮಿಸಿದ. ಯುರೋಪಿನ ಕೆಲವು ರಾಷ್ಟ್ರಗಳು ಫ್ರೆಡರಿಕ್ನ ಕಡೆ ಸೇರಿದುವು. ಆದರೂ ಎದೆಗುಂದದೆ ಮೇರಿ ಶತ್ರುಗಳನ್ನೆದುರಿಸಿದಳು. 1748ರಲ್ಲಿ ಯುದ್ಧ ನಿಂತಿತು; ಏ-ಲಾ-ಷ್ಯಾಪೆಲ್ ಒಪ್ಪಂದದ ಪ್ರಕಾರ ಸೈಲೀಷಿಯವನ್ನು ಫ್ರೆಡರಿಕ್ಗೆ ಬಿಟ್ಟುಕೊಡಬೇಕಾದರೂ ಮಿಕ್ಕ ಪ್ರಾಂತ್ಯಗಳು ಆಸ್ಟ್ರಿಯಕ್ಕೇ ಉಳಿದುವು.

ವಿಸ್ತೀರ್ಣ 83,872 ಚ.ಕಿಮೀ. ಜನಸಂಖ್ಯೆ 8,356,707 (2009). ಉತ್ತರಕ್ಕೆ 46º220-49º10 (293 ಕಿಮೀ) ಹಾಗೂ ಪೂರ್ವಕ್ಕೆ 9º220-17º 100 (576 ಕಿಮೀ.) ವಿಸ್ತಾರವಿದೆ. ದೇಶದ ಗಡಿ 2,635ಕಿಮೀ ಉದ್ದವಿದೆ. ಉತ್ತರಕ್ಕೆ ಜರ್ಮನಿ ಮತ್ತು ಜೆಕ್ ಗಣರಾಜ್ಯ, ವಾಯವ್ಯಕ್ಕೆ ಸ್ಲಾವೇಕಿಯ, ಆಗ್ನೇಯಕ್ಕೆ ಹಂಗರಿ, ದಕ್ಷಿಣಕ್ಕೆ ಇಟಲಿ ಹಾಗೂ ಸ್ಲೋವೇನಿಯ, ಪೂರ್ವ ಮತ್ತು ಪಶ್ಚಿಮಕ್ಕೆ ಸ್ವಿಟ್ಜರ್ಲೆಂಡ್‍ಗಳಿವೆ. ಪರ್ವತಮಯ ದೇಶ ಪೂರ್ವ ಆಲ್ಪ್ಸ್ ನ ಬಹು ಭಾಗ ಆಸ್ಟ್ರಿಯದಲ್ಲಿದೆ. 13º ಪೂರ್ವ ರೇಖಾಂಶದ ಪೂರ್ವಭಾಗದಲ್ಲಿ ಎತ್ತರ ಕಡಿಮೆಯಾಗುತ್ತ ಬಂದು ಡ್ಯಾನ್ಯೂಬ್ ಕಣಿವೆಯನ್ನು ಸೇರಿಕೊಳ್ಳುತ್ತದೆ. ಆಸ್ಟ್ರಿಯದ ಆಲ್ಪ್ಸ್ ಪರ್ವತಗಳನ್ನು ಉತ್ತರ ಆಲ್ಪ್ಸ್ ಮತ್ತು ಮಧ್ಯ ಆಲ್ಪ್ಸ್ ಎಂದು 3 ಭಾಗಗಳಾಗಿ ವಿಂಗಡಿಸಬಹುದು. ಆಲ್ಪ್ಸ್ ನಲ್ಲಿಯ ಗ್ರೊಸ್ಸಿಲಾಕ್ನರ ಶಿಖರ 3,797ಮೀ ಎತ್ತರವಿದೆ. ಮುಖ್ಯ ನದಿಯಾದ ಡ್ಯಾನ್ಯೂಬ್ನಲ್ಲಿ 350ಕಿಮೀ ಹಡಗಿನಲ್ಲಿ ಸಂಚರಿಸಬಹುದು. ಇನ್ನೆ, ಡ್ರಾವ ಮತ್ತು ಮೂರ್ ಇತರ ಮುಖ್ಯ ನದಿಗಳು. ಅಲ್ಲದೆ ಅನೇಕ ದೊಡ್ಡ ಸರೋವರಗಳೂ ಇವೆ. ಉತ್ತರ ಹಾಗೂ ಈಶಾನ್ಯದ ಕಡೆ ವಿಯನ್ನ ಮೈದಾನವನ್ನು ಸೇರುವುದು. ಪರ್ವತಗಳ ತಪ್ಪಲುಗಳು ಸಸ್ಯವರ್ಗದಿಂದ ಕೂಡಿವೆ. ಇವುಗಳಿಂದಾಗಿ ಪಶ್ಚಿಮ ಹಂಗರಿ ಭಾಗಗಳಲ್ಲಿ ಹಳ್ಳ ತಿಟ್ಟುಗಳು ವಿಪುಲ. ಅನೇಕ ಕಣಿವೆಗಳಿಂದ ಛಿದ್ರವಾಗಿರುವ ಎತ್ತರದ ಪ್ರದೇಶಗಳಲ್ಲಿ ಸುಣ್ಣಕಲ್ಲು ಹೇರಳವಾಗಿದೆ.

ಮೇಲ್ಮೈಲಕ್ಷಣದ ವೈವಿಧ್ಯ, ಸನ್ನಿವೇಶ ಇವು ಆಸ್ಟ್ರಿಯದಲ್ಲಿ ವಿವಿಧ ರೀತಿಯ ವಾಯುಗುಣಕ್ಕೆ ಕಾರಣವಾಗಿವೆ. ದಕ್ಷಿಣ ಭಾಗದಲ್ಲಿ ಮೆಡಿಟರೇನಿಯನ್ ವಾಯುಗುಣ, ಪೂರ್ವ ಭಾಗದಲ್ಲಿ ಖಂಡಾಂತರ ವಾಯುಗುಣ ಇವೆ. ಸರಾಸರಿ ಉಷ್ಣತೆ ಅತಿ ಕಡಿಮೆಯೆಂದರೆ ಜನವರಿಯಲ್ಲಿ 9º ಫ್ಯಾ. ಮತ್ತು ಅತಿ ಹೆಚ್ಚೆಂದರೆ ಜುಲೈನಲ್ಲಿ 68º ಫ್ಯಾ. ಇರುತ್ತದೆ. ಮಳೆಯ ಪ್ರಮಾಣ 75-175 ಸೆಂಮೀ. ಪಶ್ಚಿಮ ಆಸ್ಟ್ರಿಯ ವಾಯುಗುಣ ಸೌಮ್ಯ ಮತ್ತು ಹಿತಕರ. ದಕ್ಷಿಣದಿಂದ ಬೀಸುವ ಸ್ಥಳೀಯ ಫೋಹ್ನಗಾಳಿಗಳು ಹಿಮಕರಗಿಸುತ್ತವೆ.

ಆಸ್ಟ್ರಿಯದ ಪುರ್ವದ ಇಳಿಜಾರುಗಳಲ್ಲಿ ಅಗಲವಾದ ಎಲೆಯುಳ್ಳ ಮರಗಳು ಅತಿ ಎತ್ತರಕ್ಕೆ ಬೆಳೆಯುತ್ತವೆ. ಎತ್ತರ ಪ್ರದೇಶಗಳಲ್ಲಿ ಮೊನಚಾದ ಹಾಗೂ ಆಲ್ಪೈನ್ ಹುಲ್ಲುಗಾವಲಿನ ಸಸ್ಯವರ್ಗವಿದೆ. ಬೀಚ್, ಬರ್ಚ್ ಮತ್ತು ಓಕ್ ಮುಂತಾದ ಎಲೆ ಉದುರುವ ಮರಗಳು ಮತ್ತು ಇತರೆ ಶಂಕು ಮರಗಳು ಬೆಳೆಯುತ್ತವೆ. ಅನೇಕ ಬಗೆಯ ವನ್ಯಮೃಗಗಳಿವೆ. ಕಾಡುಜಿಂಕೆಗಳು ವಿರಳ. ಚಿಗರಿ, ಮೊಲ, ಗ್ರೌಸ್, ಕವಜುಗ ಮತ್ತು ಫೆಸೆಂಟ್ ಹಕ್ಕಿಗಳು ಹೇರಳವಾಗಿವೆ.

ದೇಶದ ಅರ್ಧ ಭಾಗದಷ್ಟು ಭೂಮಿ ವ್ಯವಸಾಯಕ್ಕೆ ಯೋಗ್ಯವಾಗಿದೆ. ಸು. 1/3 ಅರಣ್ಯ ಪ್ರದೇಶಗಳಿಂದ ತುಂಬಿದೆ. ಪಶುಪಾಲನೆ ಜನರ ಮುಖ್ಯ ಕಸಬು. ಆಲ್ಪ್ಸ್ ಹಾಗೂ ಡ್ಯಾನ್ಯೂಬ್ಗಳ ನಡುವಿನ ಫಲವತ್ತಾದ ಭೂಮಿಯಲ್ಲಿ ಮೆಕ್ಕೆಜೋಳ ಮತ್ತು ಇತರ ಗಡ್ಡೆ ಬೆಳೆಗಳನ್ನು ಬೆಳೆಯುತ್ತಾರೆ. ಶೇ. 30 ರಷ್ಟು ಜನ ಆಧುನಿಕ ಕೃಷಿಯಲ್ಲಿ ತೊಡಗಿದ್ದಾರೆ. ಮುಖ್ಯ ಬೆಳೆಗಳಾದ ಗೋದಿ, ರೈ, ಓಟ್ಸ್, ಬಾರ್ಲಿ, ಆಲೂಗೆಡ್ಡೆ, ಮೆಕ್ಕೆಜೋಳ, ಸಕ್ಕರೆ ಗೆಡ್ಡೆಗಳು ಮತ್ತು ಹೈನು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪಗಳನ್ನು ಹೆಚ್ಚಾಗಿ ಉತ್ಪಾದಿಸಿ ರಫ್ತು ಮಾಡುತ್ತಾರೆ.

ಆಸ್ಟ್ರಿಯದಲ್ಲಿ ಮುಖ್ಯವಾಗಿ ಡಿನಾರಿಕರು, ನಾರ್ಡಿಕರು, ಆಲ್ಪೈನರು ಮತ್ತು ಪುರ್ವಬಾಲ್ಟಿಕರು ಎಂಬ ನಾಲ್ಕು ಜನಾಂಗಗಳಿವೆ. ಡಿನಾರಿಕರು ಎತ್ತರವಾಗಿಯೂ ಕಪ್ಪಾಗಿಯೂ ನಾರ್ಡಿಕರು ತೆಳ್ಳಗೆ ಎತ್ತರವಾಗಿ ಸುಂದರವಾಗಿಯೂ ಆಲ್ಪೈನರು ಗಟ್ಟಿಮುಟ್ಟಾಗಿ ಕುಳ್ಳಾಗಿಯೂ ಪುರ್ವಬಾಲ್ಟಿಕರು ಮಧ್ಯಮ ಎತ್ತರದವರಾಗಿಯೂ ಇದ್ದಾರೆ. ಹಂಗರಿ ಗಡಿಯ ಬರ್ಗನ್ಲೆಂಡಿನಲ್ಲಿ ಕ್ರೋಚ್ ಮತ್ತು ಮಾಗ್ಯಾರರು, ಯುಗೊಸ್ಲಾವ್ ಗಡಿಯ ಸ್ಟೀರಿಯ ಮತ್ತು ಕಾರಿಂಥಿಯ ಪ್ರದೇಶಗಳಲ್ಲಿ ಸ್ಲೋವನ್ನರೂ ಇದ್ದಾರೆ. ಜೆಕೊಸ್ಲೊವಾಕ್ನಲ್ಲಿ ರುಥೇನಿಯನ್ನರು, ರೂಮೇನಿಯನ್ನರು, ಸರ್ಬಿಯನ್ನರು ಮತ್ತು ಇಟ್ಯಾಲಿಯನ್ನರು ಸ್ವಲ್ಪ ಪ್ರಮಾಣದಲ್ಲಿದ್ದಾರೆ.

ಚಿನ್ನ, ಬೆಳ್ಳಿ, ಕಬ್ಬಿಣ, ಸೀಸ, ಸತು ಹಾಗೂ ತಾಮ್ರ ಇಲ್ಲಿ ದೊರಕುವ ಮುಖ್ಯ ಖನಿಜಗಳು. ಕಲ್ಲಿದ್ದಲು ಅಲ್ಪ ಪ್ರಮಾಣದಲ್ಲಿ ದೊರಕುತ್ತದೆ. ಜಲವಿದ್ಯುಚ್ಛಕ್ತಿ ಹೇರಳವಾಗಿರುವುದರಿಂದ ಕಲ್ಲಿದ್ದಲಿನ ಕೊರತೆ ಕಾಣದು. ದೇಶದ ವಿದ್ಯುಚ್ಛಕ್ತಿಯಲ್ಲಿ ಶೇ.66 ಭಾಗ ಜಲವಿದ್ಯುತ್ನಿಂದ ಪುರೈಕೆಯಾಗುತ್ತದೆ.
ಮುಖ್ಯವಾದ ಕೈಗಾರಿಕೆಗಳೆಂದರೆ ಮರದ ಸಾಮಾನುಗಳನ್ನು ತಯಾರಿಸುವುದು. ಕಾಗದ, ಕಬ್ಬಿಣ ಹಾಗೂ ಉಕ್ಕಿನ ತಯಾರಿಕೆ, ಪೆಟ್ರೋಲಿಯಂ ಶುದ್ಧೀಕರಣ, ರಾಸಾಯನಿಕ ಉತ್ಪತ್ತಿ, ಗಿರಣಿಗಳು, ಚರ್ಮ ಹದಮಾಡುವುದು, ಸೆರಾಮಿಕ್ಸ್, ಗಾಜು, ವಿದ್ಯುದುಪಕರಣಗಳ ತಯಾರಿಕೆ, ರೈಲ್ವೆ ಎಂಜಿನ್ ತಯಾರಿಕೆ ಇತ್ಯಾದಿ.

ಆಸ್ಟ್ರಿಯ ಈಗ ಯುರೋಪಿನ ಮುಖ್ಯ ಪ್ಯಾಪಾರ ಕೇಂದ್ರವಾಗಿದೆ. ವಿಯೆನ್ನಾ ನಗರವು ಆಧುನಿಕ ವ್ಯವಹಾರಗಳಲ್ಲಿ ಮುಂಚೂಣಿಯಲ್ಲಿದೆ.
ಆಸ್ಟ್ರಿಯ ಕಚ್ಚಾ ಪದಾರ್ಥಗಳನ್ನು ಹೆಚ್ಚಾಗಿ ರವಾನಿಸುವುದು. ಆಮದು ವಸ್ತುಗಳಲ್ಲಿ ಆಹಾರ, ಪಾನೀಯ ಹಾಗೂ ಯಂತ್ರೋಪಕರಣಗಳು ಮುಖ್ಯ.

ರಾಜಧಾನಿ ವಿಯನ್ನ. ರೈಲು ಹಾಗೂ ಇತರ ಸಂಚಾರ ಮಾರ್ಗಗಳ ಕೇಂದ್ರ, ಜರ್ಮನ್ ಮುಖ್ಯ ಭಾಷೆ (99%), ಸ್ಲೋವೇನಿಯನ್, ಹಂಗೇರಿಯನ್ ಕ್ರೋಚಿಯನ್ ಮತ್ತು ಬವೇರಿಯನ್ಗಳನ್ನಾಡುವವರೂ ಇದ್ದಾರೆ. ಅವರ ಸಂಖ್ಯೆ ಅಲ್ಪ.
ರೋಮನ್ ಕೆಥೊಲಿಕರೇ ಹೆಚ್ಚು (90%); ಉಳಿದವರು ಪ್ರಾಟೆಸ್ಟೆಂಟರು, ಯೆಹೂದ್ಯರು, ಗ್ರೀಕರು ಮುಂತಾದವರು.

ರೈಲ್ವೆ ಕೇಂದ್ರ ಹಾಗೂ ಪ್ರಾಂತೀಯ ಹೆದ್ದಾರಿಗಳು ಸರ್ಕಾರದ ಆಡಳಿತಕ್ಕೆ ಒಳಪಟ್ಟಿವೆ. ವಿಯೆನ್ನ-ಸಾಲ್ಜ್ ಬರ್ಗ್ ಹೆದ್ದಾರಿ (347ಕಿಮೀ) ಪಶ್ಚಿಮ ಜರ್ಮನಿಗೆ ಸಂಪರ್ಕ ಒದಗಿಸುತ್ತದೆ. ಡ್ಯಾನ್ಯೂಬ್ ನದಿ ಜಲಸಾರಿಗೆಗೆ ಮುಖ್ಯವಾಗಿದೆ. ರಷ್ಯದೊಡನೆ ಮಾಡಿಕೊಂಡ 1956ರ ಒಪ್ಪಂದದ ಪ್ರಕಾರ ಆಸ್ಟ್ರಿಯದ ಹಡಗುಗಳು ಕಪ್ಪು ಸಮುದ್ರದವರೆಗೂ ಪ್ರವಾಸ ಮಾಡುತ್ತವೆ. ಗ್ರಾಜ್, ಇನ್ಸ್ ಬ್ರುಕ್, ಕ್ಲಾಗೆನ್ಫರ್ಟ್, ಲಿಂಜ್, ಸಾಲ್ಜ್ ಬರ್ಗ್ ಮತ್ತು ಸ್ಕ್ವೆಚಾದ್ಗಳಲ್ಲಿ (ವಿಯನ್ನದ ಹತ್ತಿರ) ವಿಮಾನ ನಿಲ್ದಾಣಗಳಿವೆ. ಆಸ್ಟ್ರಿಯ ದೇಶದ ಸಾರಿಗೆ ಹೆಚ್ಚಾಗಿ ಇಟಲಿಯ ಟ್ರೇಸ್ಟ್ ಬಂದರಿನ ಮುಖಾಂತರವೂ ಪಶ್ಚಿಮ ಜರ್ಮನಿಯ ಹ್ಯಾಂಬರ್ಗ್ ಮತ್ತು ಬ್ರೆಮನ್ ಬಂದರುಗಳ ಮುಖಾಂತರವೂ ನಡೆಯುವುದು.

ಆಸ್ಟ್ರಿಯದಲ್ಲಿ 9 ಪ್ರಾಂತ್ಯಗಳಿವೆ. ಬರ್ಗನ್ಲೆಂಡ್, ಕಾರಿಂಥಿಯ, ಕೆಳ ಆಸ್ಟ್ರಿಯ, ಸಾಲ್ಸ್ ಬರ್ಗ್, ಸ್ಟೀರಿಯ, ಟೈರೋಲ್, ಮೇಲಿನ ಆಸ್ಟ್ರಿಯ, ವಿಯನ್ನ ಮತ್ತು ವೊರಾರ್್ಲ ಬರ್ಗ್. ರಾಷ್ಟ್ರಾಧ್ಯಕ್ಷ ಜನರಿಂದ ಚುನಾಯಿಸಲ್ಪಡುತ್ತಾನೆ. ಆತನ ಅಧಿಕಾರಾವಧಿ 6 ವರ್ಷ. ಅಧ್ಯಕ್ಷ ಛಾನ್ಸಲರ್ನನ್ನು ನೇಮಿಸುತ್ತಾನೆ. ಛಾನ್ಸಲರನ ಅವಧಿ ಹೆಚ್ಚೆಂದರೆ 4 ವರ್ಷ. ಅಧ್ಯಕ್ಷನೇ ಮಂತ್ರಿಗಳನ್ನು ಆರಿಸುತ್ತಾನೆ. ಮಂತ್ರಿಮಂಡಲ ಸಂಸತ್ತಿಗೆ ವಿಧೇಯವಾಗಿರುತ್ತದೆ. ಕೇಂದ್ರಸಂಸತ್ತಿನ ಮಂಡಳ ಜನಸಂಖ್ಯೆಯ ಪ್ರಮಾಣದ ಮೇಲೆ ಪ್ರಾಂತೀಯ ಶಾಸನಸಭೆಗಳು ಚುನಾಯಿಸಿ ಕಳಿಸಿದ 63 ಸದಸ್ಯರನ್ನು ಹೊಂದಿದೆ. ಕೆಳಮನೆಯಾದ ರಾಷ್ಟ್ರೀಯ ಮಂಡಳಿ, ಜನರಿಂದ ಚುನಾಯಿಸಲ್ಪಟ್ಟ 183 ಸದಸ್ಯರನ್ನು ಹೊಂದಿದೆ.

ಪ್ರತಿ ಪ್ರಾಂತ್ಯ ಜನರಿಂದ ಚುನಾಯಿಸಲ್ಪಟ್ಟ ಒಮ್ಮನೆಯ ಶಾಸನ ಸಭೆಯನ್ನು ಪಡೆದಿದೆ. ಪ್ರಾಂತೀಯ ಸಭೆ ಚುನಾಯಿಸಿದ ಗವರ್ನರೇ ಪ್ರಾಂತ್ಯದ ಮುಖ್ಯಸ್ಥ. ನ್ಯಾಯಾಂಗ-232 ಕೋರ್ಟುಗಳನ್ನೂ 19 ಪ್ರಾಂತೀಯ ಮತ್ತು ಜಿಲ್ಲಾಕೋರ್ಟು ಗಳನ್ನೂ 4 ಉಚ್ಚ ಪ್ರಾಂತೀಯ ಕೋರ್ಟುಗಳನ್ನೂ ವಿಯನ್ನದಲ್ಲಿ ಪ್ರಧಾನ ಕೋರ್ಟನ್ನೂ ಪಡೆದಿದೆ.




#Article 230: ಮೀರ್ ಸುಲ್ತಾನ್ ಖಾನ್ (154 words)


ಮೀರ್ ಸುಲ್ತಾನ್ ಖಾನ್ (೧೯೦೫-೧೯೬೬) ಅವರ ಕಾಲದಲ್ಲಿ ಏಷ್ಯಾದ ಅತಿ ಪ್ರಸಿದ್ಧ ಚದುರ೦ಗ ಆಟಗಾರರು. ಈಗಿನ ಲೆಕ್ಕದ೦ತೆ ಅ೦ತಾರಾಷ್ಟ್ರೀಯ ಗ್ರ್ಯಾ೦ಡ್ ಮಾಸ್ಟರ್ ಮಟ್ಟದಲ್ಲಿ ಆಡಿದೆ ಮೊದಲ ಭಾರತೀಯರೂ ಹೌದು (ಇವರು ಆಡುತ್ತಿದ್ದ ಕಾಲದಲ್ಲಿ ಗ್ರ್ಯಾ೦ಡ್ ಮಾಸ್ಟರ್ ಎ೦ಬ ಪದವಿ ಕೊಡುವ ಅಭ್ಯಾಸ ಇನ್ನೂ ಪ್ರಾರ೦ಭವಾಗಿರಲಿಲ್ಲ). 

೧೯೦೫ರಲ್ಲಿ ಪಂಜಾಬ್ ನ ಮಿತ್ಥಾ ದಲ್ಲಿ ಜನಿಸಿದ ಸುಲ್ತಾನ್ ಖಾನ್ ಅನಕ್ಷರಸ್ಥರು. ಸರ್ ಉಮರ್ ಹಯಾತ್ ಖಾನ್ ಎ೦ಬ ನವಾಬರ ಮನೆಯಲ್ಲಿ ಕೆಲಸದಲ್ಲಿದ್ದ ಸುಲ್ತಾನ್ ಖಾನರ ಚೆಸ್ ಪ್ರತಿಭೆ ಗಮನಕ್ಕೆ ಬ೦ದ ಮೇಲೆ ಉಮರ್ ಹಯಾತ್ ಖಾನ್ ಇವರಿಗೆ ಆಧುನಿಕ ಚೆಸ್ ಅನ್ನು ಹೇಳಿಕೊಟ್ಟರು. ೧೯೨೮ರಲ್ಲಿ ಅಖಿಲ ಭಾರತೀಯ ಚಾ೦ಪಿಯನ್ ಆದ ಸುಲ್ತಾನ್ ಖಾನ್ ೧೯೨೯ರಲ್ಲಿ ಉಮರ್ ಹಯಾತ್ ಖಾನರೊ೦ದಿಗೆ ಇ೦ಗ್ಲೆ೦ಡಿಗೆ ಹೋದರು. ಅಲ್ಲಿ ಬ್ರಿಟಿಷ್ ಚೆಸ್ ಆಟಗಾರರಾದ ವಿಲಿಯಮ್ ವಿ೦ಟರ್ ಮತ್ತು ಫ್ರೆಡೆರಿಕ್ ಯೇಟ್ಸ್ ಅವರಿ೦ದ ಇನ್ನಷ್ಟು ತರಬೇತಿ ಪಡೆದ ಸುಲ್ತಾನ್ ಖಾನ್ ೧೯೩೦, ೩೧, ೩೩ ರ ಚೆಸ್ ಒಲಿ೦ಪಿಯಾಡ್ ನಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಪ್ರತಿನಿಧಿಸಿದರು. ೧೯೨೯, ೩೨ ಮತ್ತು ೩೩ ರಲ್ಲಿ ಬ್ರಿಟಿಷ್ ಚೆಸ್ ಚಾ೦ಪಿಯನ್ ಸಹ ಆದರು. 

ಅನಕ್ಷರಸ್ಥರಾಗಿ ಚೆಸ್ ನ ಆಳವಾದ ಅಧ್ಯಯನ ನಡೆಸದೆ ಇದ್ದರೂ ಅವರು ಆಡುತ್ತಿದ್ದ ಸಾಮರ್ಥ್ಯದಿ೦ದ ಅ೦ದಿನ ಚೆಸ್ ಪ್ರಪ೦ಚದಲ್ಲಿ ಬಹಳಷ್ಟು ಪ್ರಸಿದ್ದಿ ಪಡೆದರು. ಮೂರು ಜನ ವಿಶ್ವ ಚಾ೦ಪಿಯನ್ ರನ್ನು ಪ೦ದ್ಯಗಳಲ್ಲಿ ಸೋಲಿಸಿದ ಯಶಸ್ಸನ್ನೂ ಪಡೆದರು. ೧೯೩೩ರಲ್ಲಿ ಉಮರ್ ಹಯಾತ್ ಖಾನರೊ೦ದಿಗೆ ಭಾರತಕ್ಕೆ ಹಿ೦ದಿರುಗಿದ ಸುಲ್ತಾನ್ ಖಾನ್ ಮತ್ತೆ೦ದೂ ಅಧಿಕೃತವಾಗಿ ಚೆಸ್ ಆಡಲಿಲ್ಲ. ೧೯೬೬ರಲ್ಲಿ ಸರ್ಗೋಧಾ, ಪಾಕಿಸ್ತಾನದಲ್ಲಿ ನಿಧನ ಹೊ೦ದಿದರು. 




#Article 231: ಅಕಿರಾ ಕುರೋಸಾವಾ (207 words)


ಅಕಿರಾ ಕುರೋಸಾವಾ (黒澤 明 Kurosawa Akira, ಹಾಗೂ 黒沢 明) (ಮಾರ್ಚ್ ೨೩, ೧೯೧೦ – ಸೆಪ್ಟೆಂಬರ್ ೬, ೧೯೯೮)ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ.
ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. ೧೯೪೩ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ 'ಸಂಶಿರೋ ಸುಗಾತಾ' ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ 'ಮದದಾಯೋ' ೧೯೯೯ರಲ್ಲಿ (ಮರಣಾನಂತರ) ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ ದಿ ಸೆವೆನ್ ಸಮುರಾಯ್, ಸಂಜುರೋ, ಕಾಗೆಮುಶಾ ಕೆಲವು.

ಮಿಲಿಟರಿ ರಾಜ್ಯಭಾರದ ಜಪಾನ್‌ನಲ್ಲಿ ಬೆಳೆದ ಕುರೋಸಾವಾ, ವಿಶ್ವ ಮಹಾ ಯುದ್ಧ, ಕೆಂಟೋ ಭೂಕಂಪದಿಂದ ತತ್ತರಿಸಿದ ಜಪಾನ್ ನಲ್ಲಿ ತಮ್ಮ ವೃತ್ತಿಯ ಶಿಖರವನ್ನು ತಲುಪಿದವರು, ಕಷ್ಟಕರವಾದ ಕಾಲದಲ್ಲಿ ಛಲದಿಂದ ಮುಂದೆ ಬಂದವರು. ಓದು ಮುಗಿದ ನಂತರ ಹಲವು ದಿನಗಳ ಕಾಲ ಚಿತ್ರ ಕಲಾವಿದನಾಗಿ ದಿನ ಕಳೆದ ಕುರೋಸಾವಾ, ದೃಶ್ಯಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದುದು ಅವರ ಚಿತ್ರಗಳಲ್ಲಿ ಕಂಡುಬರುತ್ತದೆ. 

ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾ, ಸ್ಟೀವನ್ ಸ್ಪೀಲ್ಬರ್ಗ್ ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಪ್ರೇರಣೆಯಾಗಿದ್ದರು. ಇದನ್ನೇ ಸೂಚಿಸುವೆಂಬಂತೆ, ೧೯೮೦ರಲ್ಲಿ ಕುರೋಸಾವಾ ಹಲವು ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬಯಸಿದಾಗ ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾರವರು ಜೊತೆಯಾಗಿ ಮುಂದೆ ಬಂದು 'ಕಗೆಮುಶಾ' (ನೇಪಥ್ಯದ ಯೋಧ) ಚಿತ್ರಕ್ಕೆ ಹಣದ ನೆರವು ನೀಡಿದರಂತೆ.
ಇವರ ಚಿತ್ರ 'ಸೆವೆನ್ ಸಮುರಾಯ್' ಹಿಂದಿಯ 'ಶೋಲೆ', ಮತ್ತು ಇಂಗ್ಲೀಷಿನ 'ಮ್ಯಾಗ್ನಿಫಿಸಿಯೆಂಟ್ ಸೆವೆನ್' ಚಿತ್ರಗಳಿಗೆ ಸ್ಪೂರ್ತಿಯಾಗಿದೆ.

ಕುರೊಸಾವಾ, ಪಾಶ್ಚಿಮಾತ್ಯ ಸಾಹಿತ್ಯವನ್ನು ಬಹಳವಾಗಿ ಅಧ್ಯಯನ ಮಾಡಿದವರು. ವಿಲ್ಲಿಯಮ್ ಷೇಕ್‍ಸ್ಪಿಯರ್ ನ ಹಲವು ನಾಟಕಗಳ ಸೊಬಗು ಅಲ್ಲಲ್ಲಿ ಕುರೊಸಾವಾರವರ ಚಿತ್ರಗಳಲ್ಲೂ ಮೂಡಿ ಬರುತ್ತದೆ.

ಕುರೊಸಾವಾರವರಿಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇವರ ಚಿತ್ರ 'ಡೆರ್ಸು ಉಝಾಲಾ' (Dersu Uzala), ಉತ್ತಮ ವಿದೇಶೀ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೆ, ಇವರ ಸಾಧನೆಯನ್ನು ಗುರುತಿಸಲು ಆಸ್ಕರ್ ನ 'ಅಜೀವ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.




#Article 232: ದಕ್ಷಿಣ ಅಮೇರಿಕ (154 words)


ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.

ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು ಪೂರ್ವ ಇಂಡೀಸ್ ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ ಅಮೆರಿಕ ಎಂದು ಕರೆಯಲಾಗಿದೆ. 

ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ. 

ದಕ್ಷಿಣ ಅಮೆರಿಕಾದಲ್ಲಿ ಭೂಗೋಳದಲ್ಲೇ ಅತಿ ಎತ್ತರದ ಜಲಪಾತ (ಏಂಜೆಲ್ ಜಲಪಾತ), ನೀರಿನ ಪರಿಮಾಣದ ದೃಷ್ಟಿಯಿಂದ ಅತಿ ದೊಡ್ಡ ನದಿ (ಅಮೆಜಾನ್ ನದಿ), ಅತಿ ಉದ್ದದ ಪರ್ವತ ಶ್ರೇಣಿ (ಆಂಡೀಸ್ ಶ್ರೇಣಿ), ಅತಿ ಹೆಚ್ಚು ಆರ್ದ್ರವಾಗಿರುವ ಮರುಭೂಮಿ (ಅಟಕಾಮ), ಅತಿ ದೊಡ್ಡ ದಟ್ಟ ಕಾಡು (ಅಮೆಜಾನ್ ಕಾಡು), ಅತಿ ಎತ್ತರದ ರಾಜಧಾನಿ (ಲಾ ಪಾಜ್, ಬೊಲಿವಿಯಾದ ರಾಜಧಾನಿ), ವಾಣಿಜ್ಯ ಹಡಗುಗಳನ್ನು ಸಾಗಿಸಬಹುದಾದಂಥ ಅತಿ ಎತ್ತರದ ಸರೋವರ (ಟಿಟಿಕಾಕಾ ಸರೋವರ), ಮತ್ತು ಭೂಮಿಯಲ್ಲೇ ಅತಿ ದಕ್ಷಿಣದಲ್ಲಿರುವ ನಗರ (ಪ್ಯೂರ್ತೋ ತೋರೋ, ಚಿಲಿ ದೇಶದ ಗರ), ಇವುಗಳು ಕಂಡುಬರುತ್ತವೆ.

ಈ ಪಟ್ಟಿಯು ವಿಶ್ವಸಂಸ್ಥೆ ಉಪಯೋಗಿಸುವ ವ್ಯವಸ್ಥೆಯ ರೀತಿಯಲ್ಲಿ ವಿಂಗಡಿಸಲಾಗಿದೆ.

ಭೂಗೋಳ




#Article 233: ಅಮೆರಿಕ (2229 words)


ಅಮೆರಿಕಸ್ ಅಥವಾ ಅಮೆರಿಕ ವು, ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ. ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ). ಅಮೇರಿಕಾ ದೇಶವನ್ನು ಕೊಲಂಬಸ್  ಸಮುದ್ರದ ಮೂಲಕ ಅನ್ವೇಷಿಸಿದ್ದರು.

ಗೊಂಡ್ವಾನಾಲ್ಯಾಂಡ್ ಬೃಹತ್ ಖಂಡದಲ್ಲಿದ್ದ ದಕ್ಷಿಣ ಅಮೆರಿಕವು 135 ವಿಭಜನೆಯಾಗಿ, ಸ್ವತಂತ್ರ ಖಂಡವಾಗಿ ರೂಪುಗೊಂಡಿತು. 15 ಮಿಲಿಯನ್ ವರ್ಷಗಳ ಆರಂಭದಲ್ಲಿ, ವೆಸ್ಟ್ ಇಂಡೀಸ್ ದ್ವೀಪ ಮತ್ತು ಪೆಸಿಫಿಕ್ ಸಾಗರದ ನಡುವಿನ ಅಪ್ಪಳಿಕೆಯ ಪರಿಣಾಮವಾಗಿ ಈ ಭಾಗದ ಗಡಿಯುದ್ಧಕ್ಕೂ ಸರಣಿ ಜ್ವಾಲಾಮುಖಿಗಳು ಸಂಭವಿಸಿ, ಹಲವಾರು ದ್ವೀಪಪ್ರದೇಶಗಳು ಸೃಷ್ಟಿಯಾದವು. ಮಧ್ಯ ಅಮೆರಿಕದ ದ್ವೀಪ ಸಮುದಾಯದ ಕಣಿವೆಗಳಲ್ಲಿ ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಅಳಿದುಳಿದ ಭೂಭಾಗ ಆವೃತಗೊಂಡಿದೆ. ಜೊತೆಗೆ ನಿರಂತರ ಜ್ವಾಲಾಮುಖಿಯಿಂದ ಹೊಸ ಭೂಭಾಗ ಸೃಷ್ಟಿಯಾಗಿದೆ. 3 ಮಿಲಿಯನ್ ವರ್ಷಗಳಲ್ಲಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವನ್ನು ಪನಾಮಾ ಭೂಸಂಧಿಗೆ ಜೋಡಿಸಿದ ತರುವಾಯ, ಏಕೈಕ ಅಮೆರಿಕ ಭೂಪ್ರದೇಶವನ್ನು ರೂಪಿಸಲಾಯಿತು.

ಶಿಲಾಯುಗದ ಭಾರತೀಯರು ಅಮೆರಿಕ ಮತ್ತು ಅಲ್ಲಿನ ಎಲ್ಲಾ ಭಾಗಗಳಿಗೆ ವಲಸೆ ಹೋಗಿರುವ ನಿಖರ ದಿನಾಂಕ ಮತ್ತು ಸಂಚರಿಸಿರುವ ಮಾರ್ಗಗಳ ಕುರಿತು ಸಂಶೋಧನೆ ಮತ್ತು ಸಮಾಲೋಚನೆ ನಡೆಯುತ್ತಿದೆ. 17 ಸಾವಿರ ವರ್ಷಗಳ ಹಿಂದೆ, ಶಾಶ್ವತ ಹಿಮ ಪದರ ಆವೃತವಾದ ಪರಿಣಾಮವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ ಸೈಬೀರಿಯಾ ಮತ್ತು ಈಗಿನ ಅಲಸ್ಕಾ ನಡುವೆ ಇರುವ ಬೆರಿಂಜಿಯಾ ಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ. ಅಲ್ಲದೆ, ಇವರು ಲಾರೆಂಟೈಡ್ ಮತ್ತು ಕಾರ್ಡಿಲ್ಲೆರನ್ ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ಹಿಮಮುಕ್ತ ಮಾರ್ಗಗಳಲ್ಲಿ  ಸಂಚರಿಸಲು ಪ್ಲೆಸ್ಟೊಸಿನ್ ಮೆಗಾಫಾನ ಸಸ್ತನಿಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ.
ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ ಪ್ರಾಚೀನ ದೋಣಿಗಳನ್ನು ಬಳಸಿ, ಪೆಸಿಫಿಕ್ ವಾಯವ್ಯ ಕರಾವಳಿಯಿಂದ ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್‍ನಷ್ಟು ಏರಿಕೆಯಾದಸಮುದ್ರ ಮಟ್ಟದ ಆಧಾರದ ಮೇಲೆ ಒದಗಿಸಲಾಗಿದೆ. 
ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ (ಪೂರ್ವ ಅಲಸ್ಕಾ)ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನವಸ್ತು ಶಾಸ್ತ್ರಜ್ಞರ ತರ್ಕ. ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. ಮಧ್ಯ ಏಷ್ಯಾದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ.
ಎಸ್ಕಿಮೊ ಜನರು ಉತ್ತರ ಅಮೆರಿಕದ ಶೀತ ವಲಯ ಅಥವಾ ಆರ್ಕ್ಟಿಕ್ ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ. ಉತ್ತರ ಅಮೆರಿಕಕ್ಕೆ ಎಸ್ಕಿಮೊ ಜನರು ವಲಸೆ ಬಂದ ಸಮಯದಲ್ಲೇ, ಸ್ಕಾಂಡಿನೇವಿಯಾದ ವಸಾಹತುಗಾರರು(ವೈಕಿಂಗ್ ಸೆಟ್ಲರ್ಸ್) 982 ರಲ್ಲಿ ಗ್ರೀನ್ ಲ್ಯಾಂಡ್ ಮತ್ತು ವಿನ್ ಲ್ಯಾಂಡ್ಗೆ ಬರಲಾರಂಭಿಸಿದರು. ನಂತರ ಈ ವಸಾಹತುಗಾರರು ಕ್ರಿಸ್ತಶಕ 1500ರ ವೇಳೆಗೆ ವಿನ್ ಲ್ಯಾಂಡ್ ತೊರೆದು, ಗ್ರೀನ್ ಲ್ಯಾಂಡ್ ನಿಂದಲೂ ನಾಪತ್ತೆಯಾದರು.

ಅಮೆರಿಕ ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, ಅಮೆರಿಕ ಇತಿಹಾಸ ಮತ್ತು ಪೂರ್ವ ಇತಿಹಾಸದ ಎಲ್ಲಾಕಾಲಮಾನಗಳನ್ನು ಪೂರ್ವ ಕೊಲಂಬಿಯಾ ಯುಗ ಒಳಗೊಂಡಿತ್ತು. ಪೂರ್ವ ಆಧುನಿಕ ಕಾಲದಲ್ಲಿ ಪೂರ್ವ ಶಿಲಾಯುಗದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ ಮೂಲ ನೆಲೆಯನ್ನೂ ಇದು ಒಳಗೊಂಡಿದೆ. 
ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, ಮೆಸೊಅಮೆರಿಕ (ಮೆಸೋಅಮೇರಿಕಾ) ಅಂದರೆ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ ಓಲ್ಮ್ಯಾಕ್, ದ ಟಾಲ್ಟೆಕ್, ದ ಟಿಯೋಟಿಹುಅಕ್ಯಾನೊ, ದ ಝಾಪೊಟೆಕ್, ದ ಮಿಕ್ಸ್‌ಟೆಕ್, ದ ಆಝ್‌ಟೆಕ್, ಮತ್ತು ದ ಮಾಯಾ) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ ಆಂಡೆಸ್ (ಇಂಕಾ, ಮೊಚೆ, ಚಿಬ್‌ಚಾ, ಕೇನರೀಸ್).
ಪೂರ್ವ ಕೊಲಂಬಿಯಾದ ಬಹಳಷ್ಟು ನಾಗರಿಕತೆಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, ಕೃಷಿ, ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು ಪುರಾತನ ವಸ್ತು ಶಾಸ್ತ್ರದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ.
ಅಮೇರಿಕ ಮತ್ತು ಯೂರೋಪಿನ ಸ್ಥಳೀಯ ದಾಖಲೆಗಳು ಮತ್ತು ಲೆಕ್ಕಪತ್ರಗಳ ಪ್ರಕಾರ, ಯೂರೋಪ್ ಯುದ್ಧ ಅಥವಾ ಕದನದ ಸಂದರ್ಭದಲ್ಲಿನ ಅಮೆರಿಕ ನಾಗರಿಕತೆಯು ಹಲವು ಹೃದಯಸ್ಪರ್ಶಿ ಸಾಧನೆಯ ಸಿದ್ಧಿಗಳನ್ನು ಹೊಂದಿತ್ತು. ಉದಾಹರಣೆಗೆ, ಆಝ್ ಟೆಕ್ ( ಸೆಂಟ್ರಲ್ ಮೆಕ್ಸಿಕೊದಲ್ಲಿ ಆಝ್‌ಟೆಕ್ ಜನಾಂಗೀಯರು ಹೊಂದಿದ್ದ ನಾಗರೀಕತೆ) ಜನಾಂಗೀಯರು ಟೆನೊಕ್ ಟಿಟ್ಲನ್ ಹೆಸರಿನಲ್ಲಿ ಸುಂದರ ನಗರವನ್ನು ನಿರ್ಮಿಸಿದ್ದರು. ಅದೀಗ ಮೆಕ್ಸಿಕೊ ನಗರದಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಆಕರ್ಷಕ ಪುರಾತನ ತಾಣವಾಗಿ ಗಮನ ಸೆಳೆದಿದೆ. ಅಮೆರಿಕ ನಾಗರಿಕತೆಯು ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲೂ ತನ್ನದೇ ಆದ ವಿಶೇಷ ಛಾಪು ಹೊತ್ತಿದೆ.

ಈ ಭೂಭಾಗಕ್ಕೆ ಅಮೆರಿಕ ಹೆಸರಿನ ಮೊಟ್ಟಮೊದಲ ಬಳಕೆ ಆಗಿದ್ದು ೧೫೦೭ ಏಪ್ರಿಲ್ 25ರಂದು. ಹನ್ನೆರಡು ವಲಯಗಳನ್ನು ಒಳಗೊಂಡ ಅಮೆರಿಕ ನಕ್ಷೆಯು ಮೊದಲು ಸಣ್ಣ ಭೂಪಟದಲ್ಲಿ ಕಾಣಿಸಿಕೊಂಡಿತು. ನಂತರ, ಜರ್ಮನ್ ನಕ್ಷೆಗಾರ ಮಾರ್ಟಿನ್ ವಾಲ್ಡ್ ಸೀಮುಲ್ಲರ್, ಫ್ರಾನ್ಸ್ ನ ಸೈಂಟ್-ಡೆಸ್-ವೊಗಸ್ ನಲ್ಲಿ ಬೃಹತ್ ಗೋಡೆಯ ಮೇಲೆ ರಚಿಸಿದ ಭೂಪಟದಲ್ಲಿ ಅದು ವಿಜೃಂಭಿಸಿತು. ಇದಕ್ಕೆ ಪೂರಕವಾಗಿ Cosmographiae Introductio ಕೃತಿ ಉಲ್ಲೇಖಿಸಿರುವಂತೆ, ಬುದ್ಧಿವಂತ ಎಂದು ಗುರುತಿಸಿಕೊಂಡಿದ್ದ ’ಅಮೆರಿಕಸ್ ’ ಎಂಬ ವ್ಯಕ್ತಿ ಈ ಭೂಪ್ರದೇಶವನ್ನು ಕಂಡು ಹಿಡಿದ ನಂತರ, ಅಮೆರಿಜ್, ಲ್ಯಾಂಡ್ ಆಫ್ ಅಮೆರಿಕಸ್ ಅಥವಾ ಅಮೆರಿಕಾ ಬಗ್ಗೆ ಆಕ್ಷೇಪಿಸಲು ಯಾರಿಗೂ ಹಕ್ಕಿಲ್ಲ. ಯೂರೋಪ್ ಮತ್ತು ಏಷ್ಯಾ ಖಂಡಗಳೆರಡಕ್ಕೂ ಮಹಿಳೆಯಿಂದ ಹೆಸರು ಬಂದಿದೆ. ಫ್ಲೋರಂಟೈನ್ ಸಂಶೋಧಕ ಅಮೇರಿಗೋ ವೆಸ್‌ಪುಸಿಯ ಹೆಸರಿನ ಲ್ಯಾಟಿನ್ ರೂಪವೇ ಅಮೇರಿಕಸ್ ವೆಸ್ಪುಸಿಯಸ್ , ಮತ್ತು ಅಮೆರಿಕಸ್ ಪದದ ಸ್ತ್ರೀಲಿಂಗವೇ ಅಮೆರಿಕ . ಯುವರಾಜ ಅಮಲರಿಕ್ (*Amalareiks) ಎಂಬಾತನ ಹೆಸರಿನ ಇಟಲಿ ರೂಪವೇ ಅಮೆರಿಗೊ , ಇದರರ್ಥ ಅಮಾಲಿಯ ಆಡಳಿತಗಾರ ಎಂಬುದು.
ದಕ್ಷಿಣ ಅಮೆರಿಕದ ಕರಾವಳಿ ಭಾಗದಲ್ಲಿ ವೆಸ್ಪುಸ್ಸಿ ಸಮುದ್ರಯಾನ ನಡೆಸಿದ್ದ ಹಾಗೆಯೇ ಹೆಸರಿಡುವ ವಿಷಯದಲ್ಲಿ ಆತನ ಪಾತ್ರ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ನೂತನ ಭೂಭಾಗಕ್ಕೆ ಅವನ ಹೆಸರು ಇಡಲು ವ್ಯಾಪಕ ಸೂಚನೆಗಳು ಪ್ರಸ್ತಾಪವಾದ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ. ಕೆಲವರು ಸುಳ್ಳುಪತ್ರ ಎಂದು ಪ್ರತಿಪಾದಿಸಿದ್ದ ಸೊಡೆರಿನಿ ಪತ್ರದಿಂದ ವಾಲ್ಡ್ ಸೀ ಮುಲ್ಲರ್ ತಪ್ಪು ಅಭಿಪ್ರಾಯ ಹೊಂದಿದ್ದಿರಲೂಬಹುದು. ಇದರ ಪರಿಣಾಮವಾಗಿ, ಈ ಭೂಭಾಗವನ್ನು ಮೊಟ್ಟಮೊದಲು ಅಮೆರಿಗೊ ವೆಸ್ಪುಸ್ಸಿ ಕಂಡುಹಿಡಿದ. ಈ ಭೂಭಾಗದ ಅಸ್ತಿತ್ವ ಇರುವುದನ್ನು ಮೊಟ್ಟಮೊದಲ ಬಾರಿಗೆ ನವೋದಯ ಯುಗದ ಯಾತ್ರಿಕರ ಗಮನ ಸೆಳೆದ ಕ್ರಿಸ್ಟೋಫರ್ ಕೊಲಂಬಸ್, 1506 ರಲ್ಲಿ ಕೊನೆಯುಸಿರೆಳೆದ (ಕೊನೆಯಲ್ಲಿ ಆತ ತಾನು ಅಂದುಕೊಂಡು ಹೊರಟಂತೆ ಇಂಡೀಸ್ ಅನ್ನು ಕಂಡುಹಿಡಿದೆ ಮತ್ತು ಕಾಲನಿಯಾಗಿ ಮಾಡಿಕೊಂಡೆ ಎಂದು ನಂಬಿದ್ದ), ಮತ್ತು ಆತ ವಾಲ್ಡ್ ಸೀ ಮುಲ್ಲರ್ ತೀರ್ಮಾನಗಳನ್ನು ವಿರೋಧಿಸಲಿಲ್ಲ. ದಕ್ಷಿಣ ದಿಕ್ಕಿನ ತುದಿಯಲ್ಲಿ ದಕ್ಷಿಣ ಥುಲೆ ದ್ವೀಪ ಪ್ರದೇಶವಿದೆ, ಆದಾಗ್ಯೂ ಕೆಲವು ಸಮಯ ಅದನ್ನು ಅಂಟಾರ್ಕ್ಟಿಕಾದ ಭಾಗ ಎಂದು ಪರಿಗಣಿಸಲಾಗಿತ್ತು. ಪೂರ್ವ ದಿಕ್ಕಿನ ತುದಿಯಲ್ಲಿ ನಾರ್ಡೊಸ್ಟ್ರಂಡಿಜನ್ ಪ್ರಮುಖ ಭೂಭಾಗವಿದೆ. ಪಶ್ಚಿಮ ದಿಕ್ಕಿನ ತುದಿ ಭಾಗದಲ್ಲಿ ಅಟ್ಟು ದ್ವೀಪ ಪ್ರದೇಶವಿದೆ.
ಅಮೆರಿಕದ ಮುಖ್ಯ ಭೂಭಾಗವು ಉತ್ತರದಿಂದ ದಕ್ಷಿಣ ದಿಕ್ಕಿಗೆ ಉದ್ದವಾಗಿ ಚಾಚಿರುವ ಪೃಥ್ವಿಯ ವಿಶಾಲವಾದ ಭೂಪ್ರದೇಶವಾಗಿದೆ. ಅದು, ಉತ್ತರ ಕೆನಡಾದ ಬೂಥಿಯಾ ಪರ್ಯಾಯ ದ್ವೀಪದಿಂದ ಚಿಲಿ ಪೆಟೊಗೊನಿಯಾದ ಕೇಪ್ ಫ್ರೊವರ್ಡ್ ವರೆಗೆ ಸುಮಾರು 14 ಸಾವಿರ ಕಿಲೋಮೀಟರ್ (ಸುಮಾರು 8700 ಮೈಲುಗಳು) ವರೆಗೆ ವ್ಯಾಪಿಸಿದೆ. ಅಮೆರಿಕದ ಪಶ್ಚಿಮ ದಿಕ್ಕಿನ ಪ್ರಮುಖ ಭೂಪ್ರದೇಶವು ಅಲಸ್ಕಾಗೆ ಸೇರಿದ ಸಿವರ್ಡ್ ಪರ್ಯಾಯ ದ್ವೀಪ ಪ್ರದೇಶದ ಕೊನೆಯ ಭಾಗವನ್ನು ಹೊಂದಿದೆ. ಪೂರ್ವ ದಿಕ್ಕಿನ ತುತ್ತತುದಿಯಲ್ಲಿ ಈಶಾನ್ಯ ಬ್ರೆಜಿಲ್ ನ ಪೊಂಟಾ ಡೊ ಸಿಕ್ಸಾಸ್ ಭೂಪ್ರದೇಶ ಇದೆ.

ಅಮೆರಿಕದ ಭೌಗೋಳಿಕ ಹಿನ್ನೆಲೆ ಅಥವಾ ಮೇಲ್ಮೈಲಕ್ಷಣವು ಅಲ್ಲಿನ ಕರಾವಳಿಯಲ್ಲಿರುವ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳಿಂದ ಪ್ರಭಾವಿತವಾಗಿದೆ. ಆಂಡೆಸ್ (Andes) ಪರ್ವತ ಪ್ರದೇಶವು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿದೆ, ಅಲ್ಲದೆ, ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳು ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿ ಹರಡಿಕೊಡಿವೆ. 2300 ಕಿಲೋಮೀಟರ್ ಉದ್ದ(1429 ಮೈಲು)ದ ಅಪ್ಪಲಚಿಯಾನ್ ಪರ್ವತ ಶ್ರೇಣಿಯು ಉತ್ತರ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಅಲಬಾಮಾದಿಂದ ನ್ಯೂಫೌಂಡ್ ಲ್ಯಾಂಡ್ ವರೆಗೆ ಚಾಚಿಕೊಂಡಿದೆ. ಅಪ್ಪಲಚಿಯಾನ್ ಪರ್ವತ ಶ್ರೇಣಿಯ ಉತ್ತರ ದಿಕ್ಕಿನಲ್ಲಿ, ಆರ್ಕ್ಟಿಕ್ ಪರ್ವತ ಪ್ರದೇಶವು ಕೆನಡಾದ ಪೂರ್ವ ಕರಾವಳಿಯುದ್ದಕ್ಕೂ ವ್ಯಾಪಿಸಿದೆ.
ಕರಾವಳಿ ಪರ್ವತ ಶ್ರೇಣಿಯ ನಡುವೆಯೂ, ಉತ್ತರ ಅಮೆರಿಕ ಸಮತಟ್ಟಾದ ಭೂಪ್ರದೇಶವನ್ನು ಹೊಂದಿದೆ. ಆಂತರಿಕ ಭೂಪ್ರದೇಶ(ಭೌತಿಕ ಗುಣಲಕ್ಷಣ ಹೊಂದಿರುವ ಭೂಮಿಯ ಮೇಲ್ಮೈ)ವು ಉತ್ತರ ಅಮೆರಿಕ ಖಂಡದ ಬಹುಪಾಲು ಭಾಗವನ್ನು ಆವರಿಸಿದೆ. ಕೆನಾಡಾ ಪ್ರಸ್ಥಭೂಮಿಯು ಉತ್ತರ ಅಮೆರಿಕದ 5 ಮಿಲಿಯನ್ ಕಿ.ಮೀ ಸ್ಕ್ವೇರ್ (km²) ಭೂಭಾಗವನ್ನು ಆವರಿಸಿದೆ ಮತ್ತು ಅದು ಸಹಜವಾಗಿ ಸಮತಟ್ಟಾಗಿದೆ. ಅಂತೆಯೇ, ದಕ್ಷಿಣ ಅಮೆರಿಕದ ಈಶಾನ್ಯ ಭಾಗವು ಸಮತಟ್ಟಾದ ಅಮೆಜಾನ್ ನದಿಯನ್ನು ಆವರಿಸಿಕೊಂಡಿದೆ.
 ಪೂರ್ವ ಕರಾವಳಿಯಲ್ಲಿನ ಬ್ರೆಜಿಲ್ ಪ್ರಸ್ಥಭೂಮಿ ಚಪ್ಪಟ್ಟೆಯಾಗಿ ಕಂಡುಬಂದರೂ, ಭೂ ಮೇಲ್ಮೈ ಆಕಾರದಲ್ಲಿ ತುಸು ಬದಲಾವಣೆಗಳನ್ನು ತೋರುತ್ತದೆ. ದಕ್ಷಿಣ ಕರಾವಳಿಯ ಗ್ರನ್ ಚಕೊ ಮತ್ತು ಪಂಪಸ್ ಭಾಗಗಳು ವಿಶಾಲವಾದ ತಗ್ಗು ಭೂ ಪ್ರದೇಶಗಳನ್ನು ಹೊಂದಿವೆ.

ಕರಾವಳಿ ಪರ್ವತ ಶ್ರೇಣಿ ಮತ್ತು ಆಂತರಿಕ ಭೂಪ್ರದೇಶದ ಜೊತೆಗೆ, ಅಮೆರಿಕವು ಹಲವಾರು ನದಿ, ಜಲಾಶಯಗಳನ್ನು ಹೊಂದಿದೆ. ದಕ್ಷಿಣ ಅಮೆರಿಕದಲ್ಲಿ ಅಮೆಜಾನ್ ಅತಿದೊಡ್ಡ ನದಿ ಎಂದು ಹೆಸರುವಾಸಿಯಾಗಿದೆ. ಅತಿ ಹೆಚ್ಚು ನೀರು ಹರಿಸುವ ವಿಶ್ವದ ಏಕೈಕ ಅತಿದೊಡ್ಡ ನದಿ ಎಂಬ ಖ್ಯಾತಿಯೂ ಅದಕ್ಕಿದೆ. ಮಿಸ್ಸಿಸ್ಸಿಪ್ಪಿ ನದಿ ಉತ್ತರ ಅಮೆರಿಕದ ಅತಿದೊಡ್ಡ ನದಿ. ಇದು ವಿಶ್ವದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎಂಬ ಖ್ಯಾತಿ ಹೊಂದಿದೆ. ದಕ್ಶಿಣ ಅಮೆರಿಕದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎನಿಸಿರುವ ಪರಾನ ನದಿಯು 2.5 ಮಿಲಿಯನ್ ಚದುರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದೆ.

ಅಮೆರಿಕದ ಒಟ್ಟು ಜನಸಂಖ್ಯೆಯು ಸುಮಾರು 85 ಕೋಟಿ 90 ಲಕ್ಶದಷ್ಟಿದೆ. ಈ ಜನಸಂಖ್ಯೆಯನ್ನು ಕೆಳಗಿನಂತೆ ವಿಂಗಡಿಸಲಾಗಿದೆ.

ಇವನ್ನೂ ಗಮನಿಸಿ

ಅಮೆರಿಕದ ಅತ್ಯಂತ ಜನಪ್ರಿಯ ನಗರಗಳೆಂದರೆ ಮೆಕ್ಸಿಕೊ ರಾಜಧಾನಿ ಮೆಕ್ಸಿಕೊ ಸಿಟಿ, ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ವ ಕರಾವಳಿಯಲ್ಲಿ ನೆಲೆ ನಿಂತಿರುವ ನ್ಯೂಯಾರ್ಕ್ ನಗರ, ಬ್ರೆಜಿಲ್ ರಾಜಧಾನಿ ಸಾವ್ ಪಾಲೊ. ಈ ಮೇಲಿನ ಯಾವ ನಗರ ಕೇಂದ್ರ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದೆ ಎಂಬ ಪರಿಗಣನೆಯು, ಜನಸಂಖ್ಯೆ ಕಂಡು ಹಿಡಿಯಲು ಬಳಸುವ ಮಾನದಂಡವನ್ನು ಆಧರಿಸಿದೆ. 

ಅಮೆರಿಕದ ಜನಸಂಖ್ಯೆಯು ಅಲ್ಲಿನ ಏಳು ಬೃಹತ್ ಜನಾಂಗೀಯ ಗುಂಪುಗಳ ಸಂತತಿ ಮತ್ತು ಅವುಗಳ ಸಂಯೋಗದಿಂದ ಸೃಷ್ಟಿಯಾಗಿದೆ.

ಬಹುಸಂಖ್ಯಾತ ಜನರು ಲ್ಯಾಟಿನ್ ಅಮೆರಿಕದಲ್ಲಿ ನೆಲೆಸಿದ್ದಾರೆ, ಪ್ರಭಾವಶಾಲಿ ಸಂಸ್ಕೃತಿ ಹೊಂದಿರುವ ಲ್ಯಾಟಿನ್ ಅಮೆರಿಕದ ಮೂಲಬೇರು ಲ್ಯಾಟಿನ್ ಯೂರೋಪ್ ನಲ್ಲಿದೆ (ಎರಡು ಪ್ರಭಾವಶಾಲಿ ಸ್ಪಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳೂ ಸೇರಿವೆ. ಈ ಭಾಷೆಗಳಿಗೆ ನಿಯೋಲ್ಯಾಟಿನ್ ಎಂದೂ ಕರೆಯುತ್ತಾರೆ), ಇನ್ನೂ ನಿರ್ದಿಷ್ಟವಾಗಿ ಇಬೆರಿಯಾ ರಾಷ್ಟ್ರಗಳಾದ ಪೋರ್ಚುಗಲ್ ಮತ್ತು ಸ್ಪೇನ್ (ಇಬೆರೊ ಅಮೆರಿಕ ಎಂಬ ಸಮಾನಾರ್ಥಕ ಪದ ಬಳಕೆಯೂ ಇದೆ)ನಲ್ಲೂ ಈ ಮೂಲಬೇರು ನೆಲೆಸಿದೆ. ಲ್ಯಾಟಿನ್ ಅಮೆರಿಕವು ಆಂಗ್ಲೊ ಅಮೆರಿಕದೊಂದಿಗೆ ಗುಣಲಕ್ಷಣಗಳಲ್ಲಿ ಹಲವು ವೈರುಧ್ಯಗಳನ್ನು (ಜರ್ಮನ್ನರ ಭಾಷೆ ಇಂಗ್ಲಿಷ್, ಇಲ್ಲಿ ಹೆಚ್ಚು ಬಳಕೆಯಲ್ಲಿದೆ) ಹೊಂದಿದೆ. ಅದು ಕೆನಡಾ (ಫ್ರೆಂಚ್ ಭಾಷಿಕರನ್ನು ಹೊರತುಪಡಿಸಿದ ಕೆನಡಾದ ಮೂಲಬೇರು ಲ್ಯಾಟಿನ್ ಯೂರೋಪ್ (ಫ್ರಾನ್ಸ್)ನಲ್ಲಿದೆ : Québec and Acadia ನೋಡಿ) ಮತ್ತು ಸಂಯುಕ್ತ ಸಂಸ್ಥಾನಗಳನ್ನು ಒಳಗೊಂಡಿದೆ. ಇವೆರದೂ ಪ್ರದೇಶಗಳು ಉತ್ತರ ಅಮೆರಿಕದಲ್ಲಿ ನೆಲೆಗೊಂಡಿದ್ದು, ಅಲ್ಲಿ ಹೆಚ್ಚಾಗಿ ಆಂಗ್ಲೊ-ಸಕ್ಸನ್ ಮತ್ತು ಜರ್ಮನ್ ಬೇರುಗಳು ಇವೆ.

ಅಮೆರಿಕದಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಪ್ರಮುಖ ಧರ್ಮ ಮತ್ತು ನಂಬಿಕೆಗಳು ಕೆಳಕಂಡಂತಿವೆ:

ಅಮೆರಿಕದಲ್ಲಿರುವ ಇತರೆ ಧರ್ಮಗಳೆಂದರೆ, ಸಿಖ್, ಬುದ್ಧ, ಹಿಂದು, ಬಹಾಯ್, ಸ್ಥಳೀಯವಾಗಿ ರೂಪುಗೊಂಡಿರುವ ವೈವಿಧ್ಯಪೂರ್ಣವಾದ ಹಲವು ಧರ್ಮಗಳು, ಅವುಗಳಲ್ಲಿ ಬಹಳಷ್ಟು ಧರ್ಮಗಳನ್ನು ಸರ್ವ ಚೇತನ ವಾದ, ಮತ್ತೆ ಕೆಲವನ್ನು ಆಫ್ರಿಕಾ ಮತ್ತು ಆಫ್ರಿಕಾ ಮೂಲದಿಂದ ಪಡೆದ ಧರ್ಮಗಳೆಂದು ವರ್ಗೀಕರಿಸಲಾಗಿದೆ. ವಿವಿಧ ಮತ ಪಂಗಡಗಳ ನಂಬಿಕೆಗಳು ಖಂಡದುದ್ದಕ್ಕೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.

ಅಮೆರಿಕದಲ್ಲಿ ಹಲವು ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ಅವುಗಳಲ್ಲಿ ಕೆಲವು ಐರೋಪ್ಯ ಮೂಲದಿಂದ ಬಂದವಾದರೆ, ಮತ್ತೆ ಕೆಲವನ್ನು ಸ್ಥಳೀಯ ಜನರು ಮಾತನ್ನಾಡುತ್ತಾರೆ ಅಥವಾ ಹಲವು ನುಡಿಗಟ್ಟುಗಳ ಸಂಯೋಗದಿಂದ ಸೃಷ್ಟಿಯಾದ ಭಾಷೆ, ಉದಾಹರಣೆಗೆ ವಿವಿಧ ನೀಗ್ರೊ ಅಥವಾ ಕ್ರಿಯೋಲ ಸಂತತಿ ಉಪಯೋಗಿಸುವ ಭಾಷೆ ಇಲ್ಲಿ ಬಳಕೆಯಲ್ಲಿವೆ.
ಲ್ಯಾಟಿನ್ ಅಮೆರಿಕದ ಪ್ರಭಾವಿಶಾಲಿ ಭಾಷೆ ಎಂದರೆ ಸ್ಪಾನಿಷ್, ಆದಾಗ್ಯೂ, ಲ್ಯಾಟಿನ್ ಅಮೆರಿಕದ ಬೃಹತ್ ರಾಷ್ಟ್ರವೆನಿಸಿರುವ ಬ್ರೆಜಿಲ್ ನಲ್ಲಿ ಮಾತ್ರ ಪೋರ್ಚುಗೀಸನ್ನು ಹೆಚ್ಚಾಗಿ ಮಾತನ್ನಾಡುತ್ತಾರೆ. ಫ್ರೆಂಚ್ ಮತ್ತು ಇಂಗ್ಲಿಷ್ ಮಾತನಾಡುವ ಜನರಿಂದಲೇ ಸುತ್ತುವರಿದಿರುವ ಸಣ್ಣ ಪ್ರದೇಶಗಳು ಲ್ಯಾಟಿನ್ ಅಮೆರಿಕದಲ್ಲಿವೆ, ಅದರಲ್ಲೂ ಬಹುಮುಖ್ಯವಾದವು ಅಂದರೆ ಫ್ರೆಂಚ್ ಗಯಾನಾ ಮತ್ತು ಬೆಲಿಝೆ, ಮತ್ತು ಫ್ರೆಂಚ್ ಮೂಲದ ಹೈಟಿ ಕ್ರಿಯೋಲ ಭಾಷೆ ಅಥವಾ ನೀಗ್ರೊ ಭಾಷೆ ಹೈಟಿ ರಾಷ್ಟ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.
 ಆಂಗ್ಲೊ ಅಮೆರಿಕಗಿಂತ ಲ್ಯಾಟಿನ್ ಅಮೆರಿಕದಲ್ಲಿ ದೇಶಿಯ ಭಾಷೆಗಳು ಹೆಚ್ಚಿನ ಪ್ರಾಬಲ್ಯ ಹೊಂದಿವೆ, Nahuatl, Quechua, Aymara, ಮತ್ತು Guaraní ಭಾಷೆಗಳು ಅವುಗಳಲ್ಲಿ ಪ್ರಮುಖವಾದವು. ಇತರೆ ಹಲವು ದೇಶಿಯ ಭಾಷೆಗಳನ್ನು ಆಂಗ್ಲೊ-ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳೆರಡರ ಉದ್ದಗಲಕ್ಕೂ ಅಪರೂಪವಾಗಿ ಮಾತನ್ನಾಡುತ್ತಾರೆ ಹೈಟಿ ಕ್ರಿಯೋಲ ಹೊರತುಪಡಿಸಿದ ಸಾಮಾನ್ಯ ಕ್ರಿಯೋಲ ಭಾಷೆಯನ್ನು ಲ್ಯಾಟಿನ್ ಅಮೆರಿಕದ ವಿವಿಧ ಭಾಗಗಳಲ್ಲಿ ಮಾತನ್ನಾಡುತ್ತಾರೆ.
ಹೆಸರೇ ಸೂಚಿಸುವಂತೆ, ಆಂಗ್ಲೊ ಅಮೆರಿಕದ ಪ್ರಬಲ ಭಾಷೆ ಇಂಗ್ಲಿಷ್. ಕೆನಡಾದಲ್ಲಿ ಫ್ರೆಂಚ್ ಸಹ ಅಧಿಕೃತ ಭಾಷೆ, ಕ್ಯುಬೆಕ್ (Québec)ನಲ್ಲಿ ಪ್ರಬಲ ಭಾಷೆಯಾಗಿರುವ ಇದು, ನ್ಯೂ ಬ್ರನ್ ಸ್ವಿಕ್ (New Brunswick)ನಲ್ಲಿ ಇಂಗ್ಲಿಷ್ ಜೊತೆ ಅಧಿಕೃತ ಭಾಷೆಯಾಗಿದೆ. ಅಮೆರಿಕದ ರಾಜ್ಯ ಲೂಸಿಯಾನಾದಲ್ಲಿ ಇದು ಅತಿಮುಖ್ಯ ಭಾಷೆಯಾಗಿದೆ. ನೈಋತ್ಯ ಸಂಯುಕ್ತ ಸಂಸ್ಥಾನದಲ್ಲಿ ಸ್ಪಾನಿಷ್, ತನ್ನ ಅಸ್ತಿತ್ವವನ್ನು ಮುಂದುವರೆಸಿಕೊಂಡು ಬಂದಿದೆ. ಇದು ನ್ಯೂ ಸ್ಪೇನ್ ನ ಪ್ರಾಂತ್ಯದ (Viceroyalty) ಪ್ರತ್ಯೇಕ ಭಾಗದ ರಚನೆಗೆ ಕಾರಣವಾಗಿದೆ, ಅದರಲ್ಲೂ ವಿಶೇಷವಾಗಿ ಕ್ಯಾಲಿಫೋರ್ನಿಯಾ ಮತ್ತು ನ್ಯೂ ಮೆಕ್ಸಿಕೊದಲ್ಲಿ ಅದು ತನ್ನ ಅಸ್ತಿತ್ವ ಮುಂದುಬರೆಸಿಕೊಂಡು ಬಂದಿದೆ. 17 ನೇ ಶತಮಾನದ ತರುವಾಯ ಅಲ್ಲಿ ವಿಭಿನ್ನ ಸ್ಪಾನಿಷ್ ಭಾಷೆಯ ಬಳಕೆಯಾಗುತ್ತಾ ಬಂದಿದೆ. ಲ್ಯಾಟಿನ್ ಅಮೆರಿಕದಿಂದ ವಲಸೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನವರೆಗೆ ಸಂಯುಕ್ತ ಸಂಸ್ಥಾನದ ಉಳಿದ ಭಾಗಗಳಲ್ಲೂ ಸ್ಪಾನಿಷ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅತ್ಯದಿಕ ಪ್ರಮಾಣದ ವಲಸೆಯಿಂದಾಗಿ ಆಂಗ್ಲೊ ಅಮೆರಿಕದಲ್ಲಿ ಮಹತ್ವದ ಭಾಷಾ ವೈವಿಧ್ಯತೆ ಕಾಣಿಸಿಕೊಂಡಿದೆ, ಸಂಯುಕ್ತ ಸಂಸ್ಥಾನವೊಂದರಲ್ಲೇ 300 ಕ್ಕೂ ಅಧಿಕ ಭಾಷೆಗಳನ್ನು ಮಾತನ್ನಾಡುತ್ತಿರುವುದು ತಿಳಿದು ಬಂದಿದೆ, ಆದರೆ ಬಹುಪಾಲು ಭಾಷೆಗಳನ್ನು ಚಿಕ್ಕ ಪ್ರಾಂತ್ಯಗಳಲ್ಲಿ ಸಣ್ಣ ಸಣ್ಣ ವಲಸೆ ಗುಂಪುಗಳು ಮಾತ್ರ ಬಳಸುತ್ತಿವೆ.
ಗಯಾನಾ, ಸುರಿನಾಮೆ ಮತ್ತು ಬೆಲಿಝೆ ರಾಷ್ಟ್ರಗಳು ಆಂಗ್ಲೊ ಅಮೆರಿಕಕ್ಕಾಗಲಿ ಅಥವಾ ಲ್ಯಾಟಿನ್ ಅಮೆರಿಕಕ್ಕಾಗಲಿ ಒಳಪಟ್ಟಿಲ್ಲ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಏಕೆಂದರೆ, ಉಭಯ ರಾಷ್ಟ್ರಗಳ ನಡುವೆ ಮಹತ್ವದ ಭಾಷಾವಾರು ವ್ಯತ್ಯಾಸ, ಭೌಗೋಳಿಕ ಭಿನ್ನತೆ ಮತ್ತು ಸಂಸ್ಕೃತಿ ಹಾಗೂ ಚಾರಿತ್ರಿಕ ವ್ಯತ್ಯಾಸಗಳಿವೆ. ಗಯಾನಾ ಮತ್ತು ಬೆಲಿಝೆಯಲ್ಲಿ ಇಂಗ್ಲಿಷ್ ಪ್ರಾಥಮಿಕ ಭಾಷೆ, ಸುರಿನಾಮೆಯಲ್ಲಿ ಡಚ್ ಅಧಿಕೃತ ಮತ್ತು ಲಿಖಿತ ಭಾಷೆ.

ಸ್ಥಳೀಯವಲ್ಲದ ಬಹುಪಾಲು ಭಾಷೆಗಳು ವಿವಿಧ ಪದ ಬಳಕೆ ಮತ್ತು ಭಾಷಾ ಪ್ರಯೋಗಗಳನ್ನು ಹೊಂದಿರುತ್ತವೆ, ಮಾತೃ ರಾಷ್ಟ್ರಕ್ಕಿಂತ ವಿಭಿನ್ನ ಬಳಕೆಯ ಕ್ರಮ ಹೊಂದಿರುತ್ತವೆ, ಆದರೂ ಸಾಮಾನ್ಯವಾಗಿ ಅವುಗಳನ್ನು ಗ್ರಹಿಸಲು ಸಾಧ್ಯ. ಕೆಲವು ಭಾಷೆಗಳು ಸಂಯೋಜನೆಗೊಂಡು, ಅದರ ಪರಿಣಾಮವಾಗಿ ಪರಿಪೂರ್ಣ ಹೊಸ ಭಾಷೆಗಳೇ ಸೃಷ್ಟಿಯಾಗಿವೆ. ಅವುಗಳಲ್ಲಿ ಪಪಿಯಾಮೆಂಟು ಭಾಷೆ ಮುಖ್ಯವಾದುದು. ಇದು ಪೋರ್ಚುಗೀಸ್, ಸ್ಪಾನಿಷ್, ಡಚ್, ಅರವಕ್ ಸ್ಥಳೀಯ ಭಾಷೆ, ಹಲವಾರು ಆಫ್ರಿಕಾ ಭಾಷೆಗಳು ಮತ್ತು ಇತ್ತೀಚಿಗೆ ಇಂಗ್ಲಿಷ್ ಭಾಷೆಗಳ (ಈ ಪ್ರದೇಶಗಳ ವಸಾಹತುಗಾರರನ್ನು ಇದು ಪ್ರತಿನಿಧಿಸುತ್ತದೆ) ಸಂಯೋಜನೆಯಿಂದ ಈ ಭಾಷೆ ಸೃಷ್ಟಿಯಾಗಿದೆ. ವಲಸೆಯ ಏಕೈಕ ಕಾರಣದಿಂದಾಗಿ, ಹಲವಾರು ಸಮುದಾಯಗಳು ವಿಶ್ವದ ಎಲ್ಲಾ ಭಾಗಗಳಲ್ಲಿ ವಿವಿಧ ಭಾಷೆಗಳನ್ನು ಮಾತನ್ನಾಡುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಸಂಯುಕ್ತ ಸಂಸ್ಥಾನ, ಬ್ರೆಜಿಲ್, ಅರ್ಜೆಂಟೈನಾ ಮತ್ತಿ ಕೆನಡಾ ರಾಷ್ಟ್ರಗಳು ವಲಸೆಗಾರರ ಪ್ರಮುಖ ತಾಣಗಳಾಗಿವೆ.

ವಿಶ್ವದ ಹಲವು ಭಾಗಗಳಲ್ಲಿ, ಸಂಯುಕ್ತ ಸಂಸ್ಥಾನಕ್ಕೆ ಸಾಮಾನ್ಯವಾಗಿ ಅಮೆರಿಕ ಎಂಬ ಏಕವಾಚಕ ಪದವನ್ನು ಬಳಸುತ್ತಾರೆ, ಆದಾಗ್ಯೂ, ಅಮೆರಿಕಸ್ ಎಂಬ s ಜೊತೆಗಿನ ಬಹುವಾಚಕ ನಿರ್ದಿಷ್ಟ ಉಪಪದವನ್ನು ಪಶ್ಚಿಮ ಗೋಳಾರ್ಧದ ಭೂಪ್ರದೇಶ ಮತ್ತು ಪ್ರಾಂತ್ಯವನ್ನು ಉಲ್ಲೇಖಿಸಲು ಬಳಸುತ್ತಾರೆ. ಅಮೆರಿಕ ಹೆಸರನ್ನು ಒಟ್ಟಾರೆಯಾಗಿ ಮೇಲಿನಂತೆ ಬಳಸುವುದು ಸರ್ವೇಸಾಮಾನ್ಯ; ಉದಾಹರಣೆಗೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಐದು ಖಂಡಗಳಿಗೂ ಒಟ್ಟಾರೆಯಾಗಿ ಅಮೆರಿಕ ಹೆಸರನ್ನೇ ಪರಿಗಣಿಸಿದೆ, ಅಲ್ಲದೆ, ಒಲಿಂಪಿಕ್ ಚಿಹ್ನೆಯಲ್ಲೂ ಚಿತ್ರಿಸಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬೇರೆ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದೇಶಕ್ಕೆ ಅಮೆರಿಕ ಮತ್ತು ಪ್ರಜೆ ಅಥವಾ ನಾಗರಿಕರಿಗೆ ಅಮೆರಿಕನ್ನರು ಎಂದು ಉಲ್ಲೇಖಿಸುತ್ತಾರೆ, ಮೇಲಿನ ಸಂದರ್ಭಗಳಲ್ಲಿ ವಿವಿಧ ಜನರು ಉಪಯೋಗಿಸಿರುವ ಇಂತಹ ಪದಗಳ ದುರ್ಬಳಕೆಗೆ ಕೆನಡಾದಲ್ಲಿ, ಅಲ್ಲಿನ ದಕ್ಷಿಣ ಭಾಗದ ಜನರು ಅಪರೂಪವಾಗಿ ಅಮೆರಿಕ ಪದವನ್ನು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ , ಯು.ಎಸ್. , ಅಥವಾ (ಔಪಚಾರಿಕವಾಗಿ) ಸ್ಟೇಟ್ಸ್ ಪರ್ಯಾಯ ಪದಗಳಿಂದಲೂ ಉಲ್ಲೇಖಿಸುತ್ತಾರೆ.
ಇಂಗ್ಲಿಷ್ ಅರ್ಥಕೋಶ ಮತ್ತು ಗ್ರಂಥಗಳಲ್ಲಿ ಅಮೆರಿಕ ಪದ ಬಳಕೆ ಮತ್ತು ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿವೆ.

ಅಮೆರಿಕ ಅಥವಾ ಅಮೆರಿಕಸ್ ಪದಗಳಲ್ಲಿ ಯಾವ ಪದ ಬಳಕೆ ಆಗುತ್ತಿದೆ ಎಂಬದಕ್ಕಿಂತ ಅಮೆರಿಕದಲ್ಲಿ ವಾಸಿಸುತ್ತಿರುವ ಹಲವಾರು ಜನರನ್ನು ವ್ಯಕ್ತಿಗತವಾಗಿ ಗುರುತಿಸಲು ಅಮೆರಿಕನ್ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ.
ಆದಾಗ್ಯೂ, ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು, ನಿವಾಸಿಗಳು ಅಥವಾ ರಾಷ್ಟ್ರೀಯರನ್ನು ಪರಿಪೂರ್ಣವಾಗಿ ಉಲ್ಲೇಖಿಸಲು ಇಂಗ್ಲಿಷ್ ಮಾತನಾಡುವ ಬಹುಪಾಲು ಭಾಗಗಳಲ್ಲಿ ಅಮೆರಿಕನ್ ಪದ ಬಳಕೆ ಇದೆ.
ಇದರ ಜೊತೆಗೆ, ಅಮೆರಿಕನ್ನರು ಎಂದು ಕರೆಸಿಕೊಳ್ಳಲು ಹಲವು ಕೆನಡಿಯನ್ನರು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆನಡಿಯನ್ನರು ಯು.ಎಸ್. ನಾಗರಿಕರು ಎಂಬ ತಪ್ಪು ಗ್ರಹಿಕೆ ಇದಕ್ಕೆ ಕಾರಣ, ಹಾಗೂ ಕೆನಡಿಯನ್ ಇಂಗ್ಲಿಷ್ ಮತ್ತು ಅಮೆರಿಕನ್ ಇಂಗ್ಲಿಷ್ ಪದ ಪ್ರಯೋಗದ ವ್ಯತ್ಯಾಸ ಅರಿಯದ ಹೊರದೇಶದ ಜನರ ತಪ್ಪು ಗ್ರಹಿಕೆಯೂ ಹೌದು.

ಸ್ಪಾನಿಷ್ ನಲ್ಲಿ, ಅಮೆರಿಕ ಎಂದರೆ ಒಂದು ಖಂಡದ ಹೆಸರು. ಈ ಖಂಡವು ಸುಡಾಮೆರಿಕ ಮತ್ತು ನಾರ್ಟೆಅಮೆರಿಕ ಉಪಖಂಡಗಳಿಂದ ರೂಪುಗೊಂಡಿದ್ದು, ಸೆಂಟ್ರೊಅಮೆರಿಕ ಭೂಭಾಗ ಮತ್ತು ಆಂಟಿಲ್ಲಾಸ್ ದ್ವೀಪ ಪ್ರದೇಶವನ್ನೂ ಒಳಗೊಂಡಿದೆ. ಅಮೆರಿಕ ದ ವ್ಯಕ್ತಿಗೆ ಸ್ಪಾನಿಷ್ ನಲ್ಲಿ Americano/a  ಎಂಬ ಪದ ಬಳಕೆಯಲ್ಲಿದೆ. ಅಂತೆಯೇ, Europa ದೇಶದ ವ್ಯಕ್ಟಿಗೆ europeo or europea ಎಂಬ ಪದ ಬಳಸುತ್ತಾರೆ. sudamericano/a  , centroamericano/a  , antillano/a and norteamericano/a  ಪದಗಳನ್ನು ವಿಶೇಷವಾಗಿ ವ್ಯಕ್ತಿಯು ವಾಸಿಸುವ ಸ್ಥಳಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು americano ಅಥವಾ americana ಪದಕ್ಕೆ ಬದಲಾಗಿ ಸಾಮಾನ್ಯವಾಗಿ estadounidense ಪದವನ್ನು (ಅದರ ಅಕ್ಷರ ಅನುವಾದ ರೂಪ United-Staten ಎಂಬುದು) ಬಳಸುತ್ತಾರೆ, ಮತ್ತು ರಾಷ್ಟ್ರದ ಹೆಸರನ್ನು Estados Unidos de Norteamérica ಎಂದು ಅನುವಾದಿಸಲಾಗುತ್ತದೆ. ಜೊತೆಗೆ, norteamericano ಪದವನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಈ ಪದವನ್ನು ಮೂಲತ: ಸಂಯುಕ್ತ ಸಂಸ್ಥಾನದ ನಾಗರಿಕರಿಗೆ ಪ್ರಾಥಮಿಕವಾಗಿ, ಉತ್ತರ ಅಮೆರಿಕದ ಇತರೆ ರಾಷ್ಟ್ರಗಳಿಗೆ ಅಪರೂಪವಾಗಿ ಬಳಸಲಾಗುತ್ತಿದೆ.

ಪೋರ್ಚುಗೀಸ್ ನಲ್ಲಿ, ಅಖಂಡ ಅಮೆರಿಕ ವನ್ನು ಪ್ರಸ್ತಾಪಿಸುವಾಗ americano ಪದವನ್ನು ಬಳಸುತ್ತಾರೆ.
ಆದರೆ, ಬ್ರೆಜಿಲ್ ಮತ್ತು ಪೋರ್ಚುಗಲ್ ನಲ್ಲಿ, ಇದನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಉಪಯೋಗಿಸುತ್ತಾರೆ. ಅತ್ಯಲ್ಪ ವಿಭಿನ್ನಾರ್ಥ ನೀಡುವ ಪದ, estadunidense (ಬ್ರೆಜಿಲ್‌ನಲ್ಲಿ ಬಳಸುತ್ತಾರೆ), United Statian ನಂತಹ ಪದ ( ಅಥವಾ ಸ್ಪಾನಿಷ್ ಭಾಷೆಯಲ್ಲಿ estadounidense), ಮತ್ತು ianque - Yankee ಪದದ ಪೋರ್ಚುಗೀಸ್ ರೂಪ - ಈ ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.
ಆದಾಗ್ಯೂ, ದೇಶಕ್ಕೆ ಅಮೆರಿಕ ಪದವನ್ನು ಅಪರೂಪವಾಗಿ ಸಮಾನಾರ್ಥಕ ಪದವಾಗಿ ಬಳಸಲಾಗುತ್ತಿದೆ, ಆದರೆ ಮುದ್ರಣ ಸಂದರ್ಭಗಳನ್ನು ಹೊರತುಪಡಿಸಿದ ಔಪಚಾರಿಕ ಸಂದರ್ಭಗಳಲ್ಲಿ ಅಮೆರಿಕವನ್ನು Estados Unidos da América (ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂದರ್ಥ) ಅಥವಾ ಇನ್ನೂ ಸರಳವಾಗಿ, Estados Unidos (ಅಂದರೆ ಸಂಯುಕ್ತ ಸಂಸ್ಥಾನ) ಎಂದು ಕರೆಯುತ್ತಾರೆ.
ಪೋರ್ಚುಗಲ್ ಮತ್ತು ಬ್ರೆಜಿಲ್ ನಲ್ಲಿ ಈ ಪದಗಳ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ, ಪೋರ್ಚುಗೀಸರು ಅಮೆರಿಕ ಪದವನ್ನು ರಾಷ್ಟ್ರಕ್ಕೆ ಬಳಸಲು ಹೆಚ್ಚು ಒಲವು ಹೊಂದಿದ್ದಾರೆ. 

américain  ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಬಳಸಬೇಕೇ ಅಥವಾ ಅಮೆರಿಕನ್ ಖಂಡಗಳಿಗೆ ಬಳಸಬೇಕೇ ಎಂಬ ಗೊಂದಲ ಇಂಗ್ಲಿಷ್‍ನಲ್ಲಿ ಇರುವಂತೆ, ಫ್ರೆಂಚ್‍ನಲ್ಲೂ ಇದೆ.
Amérique ನಾಮಪದವನ್ನು ಕೆಲವು ವೇಳೆ ಒಂದು ಸಂಪೂರ್ಣ ಖಂಡಕ್ಕೆ ಉಲ್ಲೇಖಿಸಲಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಎರಡು ಖಂಡಗಳಿಗೆ, ದಕ್ಷಿಣ ಮತ್ತು ಉತ್ತರ; ಸಂಯುಕ್ತ ಸಂಸ್ಥಾನವನ್ನು ಸಾಮಾನ್ಯವಾಗಿ les États-Unis d'Amérique  , les États-Unis , ಅಥವಾ les USA ಎಂದು ಉಲ್ಲೇಖಿಸಲಾಗುತ್ತದೆ.
ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ಖಂಡಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಹುಪಾಲು ಸಂದರ್ಭಗಳಲ್ಲಿ américain ಗುಣವಾಚಕವನ್ನು ಬಳಸಲಾಗುತ್ತದೆ. 
ಸಂಯುಕ್ತ ಸಂಸ್ಥಾನದ ಅನೇಕ ಲೇಖಕರು ಹೊರತಂದಿರುವ ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಪದೇಪದೇ traduit de l'américain ಪದವನ್ನು ಬಳಸಿದ್ದಾರೆ.
ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಭಿನ್ನಾರ್ಥ ನೀಡದ états-unien , étasunien  , ಅಥವಾ étatsunien ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.

ಡಚ್ ನಲ್ಲಿ ಸಂಯುಕ್ತ ಸಂಸ್ಥಾನಕ್ಕೆ ನಿರ್ದಿಷ್ಟವಾಗಿ Amerika ಪದವನ್ನು ಬಳಸುತ್ತಾರೆ. ಸಂಯುಕ್ತ ಸಂಸ್ಥಾನಕ್ಕೆ ಸಮಾನಾರ್ಥ ನೀಡುವ de Verenigde Staten or de VS ಪದ ಬಳಕೆಯೂ ಇದೆ, Amerika ಪದವನ್ನು ಅಪರೂಪವಾಗಿ Americas ಎಂದು ಪ್ರಸ್ತಾಪಿಸುತ್ತಾರೆ. ಆದರೆ, ಅಮೆರಿಕಸ್ ಗೆ ಈ ಡಚ್ ಪದವೇ (Amerika) ಎಲ್ಲೆಡೆ ಸಾಮಾನ್ಯ ಬಳಕೆಯಲ್ಲಿದೆ. ಇದು ಆಗಾಗ ವಿಭಿನ್ನಾರ್ಥಕ್ಕೆ ಎಡೆಮಾಡುತ್ತದೆ ಮತ್ತು ಅಮೆರಿಕಸ್ ನ ಹಲವು ಆತಂಕಗಳಿಗೆ ಒತ್ತು ನೀಡಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಕ್ಕೆ ಡಚ್ಚರು Noord- en Zuid Amerika ಪದವನ್ನು ಬಳಸುತ್ತಾರೆ.ಲ್ಯಾಟಿನ್ ಅಮೆರಿಕವನ್ನು ಸಾಮಾನ್ಯವಾಗಿ Latijns Amerika ಎಂದು, ದಕ್ಷಿಣ ಅಮೆರಿಕವನ್ನು ಆಗಿಂದಾಗ್ಗೆ Zuid Amerika ಎಂದು ಉಲ್ಲೇಖಿಸುತ್ತಾರೆ. 
amerikaans ಗುಣವಾಚಕವನ್ನು ಸಂಯುಕ್ತ ಸಂಸ್ಥಾನದ ಜನರು ಮತ್ತು ವಿಷಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಅಥವಾ ಅಮೆರಿಕಸ್ ಗೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ಹೇಳಲು ಯಾವುದೇ ಪರ್ಯಾಯ ಪದಗಳಿಲ್ಲ. ಡಚ್ಚರು ಅಮೆರಿಕಸ್ ಗೆ ಪರ್ಯಾಯವಾದ ಸ್ಥಳೀಯ ಪದವನ್ನು ಬಳಸುತ್ತಾರೆ, ಉದಾಹರಣೆಗೆ Argentinian ಪದಕ್ಕೆ ಅವರು Argentijns ಪದವನ್ನು ಬಳಸುತ್ತಾರೆ.

ಅಮೇರಿಕದಲ್ಲಿ 35 ಸಾರ್ವಭೌಮ ರಾಜ್ಯಗಳಿದ್ದು, ಅದರಲ್ಲಿ 23 ಉತ್ತರ ಅಮೇರಿಕಾದಲ್ಲಿ ಮತ್ತು 12 ದಕ್ಷಿಣ ಅಮೇರಿಕಾದಲ್ಲಿ ಇವೆ:

ಈ ಮುಂದಿನ ಪಟ್ಟಿಯು ಅಮೇರಿಕದ ಸಾರ್ವಭೌಮ ರಾಜ್ಯಗಳ ಪಟ್ಟಿಯಲ್ಲಿ ಬರದ ಕಡಲಾಚೆಯ ಪ್ರದೇಶಗಳು, ಅದೀನ ಪ್ರದೇಶಗಳು ಮತ್ತು ಇತರ ರಾಜ್ಯಾಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ. ಅವುಗಳನ್ನು ನಿರ್ವಹಿಸುತ್ತಿರುವ ರಾಜ್ಯಗಳ ಹೆಸರಿನಲ್ಲಿ ಅವುಗಳನ್ನು ಗುಂಪುಗೊಳಿಸಲಾಗಿದೆ.

 




#Article 234: ಪಾಕಿಸ್ತಾನ (10522 words)


ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ .  ದಕ್ಷಿಣ ಏಷ್ಯದ ಒಂದು ದೇಶ. ಪಾಕಿಸ್ತಾನ್ ಇಸ್ಲಾಮಿಕ್ ಗಣರಾಜ್ಯವೆಂದು ಇದರ ಅಧಿಕೃತ ಹೆಸರು. ಪೂರ್ವ ಪಶ್ಚಿಮ ವಾಯವ್ಯ ಹಾಗೂ ಉತ್ತರದಲ್ಲಿ ಇರಾನ್ ಮತ್ತು ಆಫ್ಘಾನಿಸ್ತಾನ, ಈಶಾನ್ಯದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಜಮ್ಮು-ಕಾಶ್ಮೀರ ಪ್ರದೇಶ, ಪೂರ್ವ ಮತ್ತು ಆಗ್ನೇಯದಲ್ಲಿ ಭಾರತ, ದಕ್ಷಿಣದಲ್ಲಿ ಅರಬ್ಬಿ ಸಮುದ್ರ ಇವೆ. ಉ.ಅ.240 -370 ನಡುವೆ ಹಬ್ಬಿರುವ ಈ ದೇಶದ ವಿಸ್ತೀರ್ಣ 7,96,095 ಚ.ಕಿ.ಮೀ. ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿ ಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಭಾಗವನ್ನು ಇದರಲ್ಲಿ ಸೇರಿಸಿಲ್ಲ. ಪೂರ್ವ ಪಶ್ಚಿಮವಾಗಿ 1287ಕಿ,ಮೀ., ಉತ್ತರ ದಕ್ಷಿಣವಾಗಿ 1505 ಕಿ.ಮೀ. ಇದೆ. ಇದರ ಭೂವಿಸ್ತೀರ್ಣ 778,720 ಚ.ಕಿ.ಮೀ. ಇದ್ದು ಜಲಭಾಗದ ವಿಸ್ತೀರ್ಣ 25,220ಚ.ಕಿ.ಮೀ. ಒಟ್ಟು 803,940 ಚ.ಕಿ.ಮೀ. ಭೂವಿಸ್ತೀರ್ಣವಿರುವ ಇದಕ್ಕೆ 1046 ಚ.ಕಿ.ಮೀ. ಸಮುದ್ರ ತೀರವಿದೆ. ಜನಸಂಖ್ಯೆ 16,24,19,946 (ಜುಲೈ 2005) ರಾಜಧಾನಿ ಇಸ್ಲಾಮಾಬಾದ್. ಪಾಕಿಸ್ತಾನದಲ್ಲಿ ನಾಲ್ಕು ಪ್ರಾಂತ್ಯಗಳಿವೆ :

ಈ ಪ್ರಾಂತ್ಯಗಳಲ್ಲಿ ಒಟ್ಟು 13 ವಿಭಾಗಗಳು. 51 ಜಿಲ್ಲೆಗಳು ಮತ್ತು ಪಂಗಡ ಪ್ರದೇಶಗಳು ಇವೆ.

ಪಾಕಿಸ್ತಾನದ ವಿಸ್ತೀರ್ಣ 7,96,095 ಚದರ ಕಿಲೋಮೀಟರುಗಳು. ಇಲ್ಲಿ ಭೂವೈಜ್ಞಾನಿಕವಾಗಿ ಪ್ರಾಚೀನ ಜೀವಕಲ್ಪದ ಕೇಂಬ್ರಿಯನ್ ಯುಗದಿಂದ ತೊಡಗಿ ನವ ಜೀವಕಲ್ಪದ ನವೀನ ಯುಗದ ತನಕದ ಶಿಲಾಸಮುದಾಯವನ್ನು ಕಾಣಬಹುದು. ಆದರೆ ಪ್ರಾಚೀನ ಜೀವಕಲ್ಪದ ಆರ್ಡೋವಿಸಿಯನ್, ಸೈಲೂರಿಯನ್, ಡಿವೋನಿಯನ್ ಮತ್ತು ಕೆಳ ಕಾರ್ಬಾನಿಫೆರಸ್ ಯುಗಗಳ ಶಿಲಾಸಮೂಹ ಉತ್ತರ ಹಿಮಾಲಯವನ್ನುಳಿದರೆ ಭಾರತದಲ್ಲಾಗಲಿ ಪಾಕಿಸ್ತಾನದಲ್ಲಾಗಲಿ ರೂಪುಗೊಂಡಿಲ್ಲವೆಂದೇ ಹೇಳಬಹುದು. ಇದರಿಂದಾಗಿ ಪ್ರಾಚೀನ ಜೀವಕಲ್ಪದ ಸುಮಾರು ಮುಕ್ಕಾಲು ಭಾಗ ಭೂ ಚರಿತ್ರೆ ಈ ಎರಡೂ ದೇಶಗಳಲ್ಲಿ ಅಲಭ್ಯ.

ಪ್ರಾಚೀನ ಜೀವಕಲ್ಪದ ಮೊದಲ ಯುಗ ಕೇಂಬ್ರಿಯನ್. ಈ ಯುಗದ ಶಿಲಾ ಸಮುದಾಯ ಪಾಕಿಸ್ತಾನದ ಸಾಲ್ಟ್‍ರೇಂಜಿನಲ್ಲಿ ಅತ್ಯಂತ ಶ್ರೇಷ್ಠವಾಗಿ ರೂಪುಗೊಂಡಿದ್ದು ಭಾರತದ ಕೇಂಬ್ರಿಯನ್ ಯುಗಕ್ಕೆ ಇದು ಆದರ್ಶಪ್ರಾಯ ಪ್ರದೇಶವೆನ್ನಿಸಿದೆ. ರಚನಾ ಶಿಲಾಶಾಸ್ತ್ರ ಮತ್ತು ಭೌತ ಭೂವಿಜ್ಞಾನವನ್ನು ಈ ಪ್ರದೇಶದಲ್ಲಿ ಅತ್ಯಂತ ಸಮಂಜಸ ರೀತಿಯಲ್ಲಿ ಅಭ್ಯಸಿಸಬಹುದು. ಇಲ್ಲಿ ಪ್ರಾಚೀನ ಜೀವಿಗಳ ಅವಶೇಷಗಳು ಉತ್ಕ್ರಷ್ಟ ರೀತಿಯಲ್ಲಿ ಇರುವುದರ ಜೊತೆಗೆ ಈ ಪ್ರದೇಶದಲ್ಲಿ ಕಂಡುಬರುವ ಬರಡಾದ ಕೋಡುಗಲ್ಲುಗಳು ಮತ್ತು ಬತ್ತಿದ ತೊರೆಗಳು ಸ್ಥಳದ ಭೂಚಲನೆ ಮತ್ತು ವ್ಯತ್ಯಸ್ತಸ್ಥಿತಿಗಳನ್ನು ಸಾರುವ ಸಮರ್ಪಕ ಭೂದಾಖಲೆಗಳಾಗಿದ್ದು ಈ ಪ್ರದೇಶಕ್ಕೆ ಭೂವಿಜ್ಞಾನದ ಪ್ರದರ್ಶನಾಲಯ ಎಂಬ ಹೆಸರನ್ನು ಅರ್ಥಪೂರ್ಣವಾಗಿ ತಂದಿವೆ.

ಸಾಲ್ಟ್‍ರೇಂಜಿನಲ್ಲಿ ಮಟ್ಟಸ ಬೆಟ್ಟದ ಸಮೂಹವೇ ಉಂಟು. ಪೂರ್ವ ರೇಖಾಂಶ 710 ಮತ್ತು 740 ಯ ಮಧ್ಯದಲ್ಲಿ ಜೀಲಮ್ ಮತ್ತು ಸಿಂಧೂ ನದಿಯ ಮಧ್ಯದಲ್ಲಿ ಸರಪಳಿಯಂತೆ ಇದು ಹಾದಿದೆ. ಜೀಲಮ್ ನದಿಯ ಪಶ್ಚಿಮಕ್ಕೆ ಹೆಚ್ಚು ಕಡಿಮೆ ಪೂರ್ವ-ಪಶ್ಚಿಮವಾಗಿ ಓರಣವಾಗಿರುವ ಈ ಶ್ರೇಣಿ ಪಶ್ಚಿಮಕ್ಕೆ ಸಾಗಿದಂತೆ ವಯೋಮಾನದಲ್ಲಿ ಕಿರಿದಾಗುತ್ತ ಹೋಗುತ್ತದೆ. ಉತ್ತರದಲ್ಲಿ ಪಟವಾರ್ ಪ್ರಸ್ಥಭೂಮಿಯ ವರೆಗೆ ವ್ಯಾಪಿಸಿದ್ದು ಸಾಧಾರಣವಾಗಿ 675 ಮೀ ಎತ್ತರದವರೆಗೆ ಚಾಚಿದೆ.

ಸಾಲ್ಟ್‍ರೇಂಜಿನಲ್ಲಿ ಕೇಂಬ್ರಿಯನ್ ಶಿಲಾಸಮುದಾಯ ಲವಣ ಶಿಲಾಶ್ರೇಣಿಯಿಂದ ಪ್ರಾರಂಭವಾಗಿ ಊದಾಮರಳು ಶಿಲೆ, ನಿಯೊಬಲಸ್ ಪದರಗಳು, ಮೆಗ್ನೀಸಿಯಮ್ ಮರಳು ಶಿಲಾಸ್ತರಗಳನ್ನು ಹೊಂದಿ ಕೃತಕ ಲವಣ ಸ್ಫಟಿಕದ ಜೇಡುಶಿಲೆಯೊಂದಿಗೆ ಮುಕ್ತಾಯವಾಗುತ್ತದೆ. ಖೆವ್ರಬಳಿ ಜಿಪ್ಸಮ್ ಲವಣಗಳಿಗಾಗಿ ಈಗಾಗಲೇ ಗಣಿಗಾರಿಕೆಯನ್ನು ತೊಡಗಲಾಗುತ್ತಿದೆ. ಇಲ್ಲಿಯ ಲವಣಶಿಲೆಗಳು ನೂರು ಮೀಟರುಗಳಷ್ಟು ಮಂದವಾಗಿದ್ದು ವರ್ಷಂಪ್ರತಿ 150,000 ಟನ್ ಲವಣವನ್ನು ಪೂರೈಸುತ್ತಿವೆ. ನಿಯೊಬಲಸ್ ಪದರಗಳಲ್ಲಿ ಬ್ರೇಕಿಯೊಪೋಡ ಹಾಗೂ ಕೇಂಬ್ರಿಯನ್ ಯುಗದ ಸೂಚಿ ಜೀವಿಗಳಾದ ತ್ರಿಪಾಳಿಗಳ ಅವಶೇಷಗಳಿವೆ. ಇವು ಪ್ರಾಗ್ಜೀವ ವಿಜ್ಞಾನಿಗಳ ಗಮನ ಸೆಳೆದಿವೆ. ಸಾಲ್ಟ್‍ರೇಂಜಿನ ಅತ್ಯಂತ ಕೆಳಸ್ತರವಾದ ಲವಣ ಶಿಲೆಗಳ ಮೇಲೆ ಊದಾಬಣ್ಣದ ಮರಳು ಶಿಲೆ ಸಂಚಯಿಸಿದೆ. ಇವೆರಡರ ಸಂಬಂಧ ಸಾಮಾನ್ಯ ಸಂಚಯನ ಶಿಲಾ ಸಂಬಂಧದಂತಿರದೆ ವಿಭಿನ್ನವಾಗಿದ್ದು ಲವಣ ಶಿಲಾಶ್ರೇಣಿಯ ವಯೋಮಾನ ನಿರ್ಧಾರದಲ್ಲಿ ವ್ಯಾಪಕವಾದ ವಾದ ವಿವಾದಕ್ಕೆ ಎಡೆಗೊಟ್ಟಿದೆ. ಈ ಶ್ರೇಣಿಯನ್ನು ಕೇಂಬ್ರಿಯನ್ ಯುಗಕ್ಕೆ ಸೇರಿಸಬೇಕೆ ಇದು ಹೊಂದಿರುವ ಜೀವ್ಯವಶೇಷದ ಆಧಾರದ ಮೇಲೆ ನವ ಜೀವಕಲ್ಪದ ಇಯೊಸೀನ್ ಯುಗಕ್ಕೆ ಸೇರಿಸಬೇಕೆ ಎಂಬ ಜಿಜ್ಞಾಸೆ ಭೂವಿಜ್ಞಾನ ಚರಿತ್ರೆಯಲ್ಲೇ ಅಭೂತಪೂರ್ವ ಎನ್ನಬಹುದಾದ ವಾದಕ್ಕೆ ಎಡೆ ಮಾಡಿ ಪ್ರಪಂಚದ ಹೆಸರಾಂತ ಭೂವಿಜ್ಞಾನಿಗಳು ಇದರಲ್ಲಿ ಪಾಲ್ಗೊಳ್ಳುವಂತಾಯಿತು. ಲವಣಶಿಲೆ ಅತ್ಯಂತ ಮೃದುವಾಗಿದೆ. ಇದು ಗಟ್ಟಿಯಾದ ಊದಾಮರಳು ಶಿಲೆಯ ಅಡಿ ಒತ್ತರಿಸಲ್ಪಟ್ಟು ಈಗಿನ ಸ್ಥಾನ ಪಡೆದಿದೆ. ಹೀಗಾಗಿ ಇದರ ವಯಸ್ಸು ಕೇಂಬ್ರಿಯನ್ ಯುಗವಾಗಿರಲು ಸಾಧ್ಯವಾಗದು ಎಂಬುದು ಒಂದು ಮತ. ಈ ವಾದವನ್ನು ಪುಷ್ಟೀಕರಿಸಲು ಈ ಪ್ರದೇಶಕ್ಕೆ ಹತ್ತಿರವಿರುವ ಕೊಹಟ್ ಪ್ರದೇಶದ ಇಯೊಸೀನ್ ಯುಗದ ಲವಣ ಗುಂಪನ್ನು ಉದಾಹರಿಸುತ್ತಾರೆ. ಅಲ್ಲದೆ ಪ್ರಖ್ಯಾತ ಭೂಸಸ್ಯ ವಿಜ್ಞಾನಿ ಬೀರ್‍ಬಲ್ ಸಾಹನಿ ಈ ಪ್ರದೇಶದ ಮಾದರಿ ಶಿಲೆಯನ್ನು ಸಂಗ್ರಹಿಸಿ ಅಭ್ಯಸಿಸಿ ಇದರಲ್ಲಿರುವ ಸಸ್ಯಗಳ ಬೀಜ ಮುಂತಾದ ಅಂಶಗಳಿಂದಾಗಿ ಸಾಲ್ಟ್‍ರೇಂಜಿನ ಲವಣಶಿಲಾ ಶ್ರೇಣಿ ಇಯೋಸೀನ್ ಯುಗಕ್ಕೆ ಸೇರುತ್ತದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನ್ಯ ಶಿಲೆಗಳಲ್ಲಿ ಸಂಗ್ರಹಿಸಿದ್ದ ಈ ಅವಶೇಷಗಳು ಮೂಲತಃ ಲವಣ ಶಿಲಾ ಶ್ರೇಣಿಗೆ ಸೇರಿದ ಜೀವ್ಯವಶೇಷಗಳಲ್ಲಿ ಅಂತರ್ಜಲದಿಂದ ಸಾಗಿಸಲ್ಪಟ್ಟು ಲವಣ ಶಿಲೆಗಳಿಗೆ ಪ್ರವಹಿಸಿದಂಥವು. ಅಲ್ಲದೆ ಸಂಚಯನ ಶಿಲಾಸಂಬಂಧವಿರುವ ಲವಣಶ್ರೇಣಿಗಳು ಅನೇಕ ಭಾಗಗಳಲ್ಲಿ ವ್ಯಕ್ತಪಟ್ಟಿವೆಯಾದ್ದರಿಂದ ಲವಣ ಶಿಲಾಶ್ರೇಣಿಯ ವಯಸ್ಸು ಕೇಂಬ್ರಿಯನ್ ಎಂಬುದು ಮತ್ತೊಂದು ಗುಂಪಿನ ವಾದ. ಕೇಂಬ್ರಿಯನ್ ಹಾಗೂ ಇಯೊಸೀನ್ ಯುಗಗಳೆರಡಕ್ಕೂ ಸೇರಿದ ಲವಣ ಶಿಲೆಗಳು ಈಗ ಸಾಲ್ಟ್‍ರೇಂಜಿನಲ್ಲಿ ಬೆಳಕಿಗೆ ಬಂದಿವೆ.

ಸಿಂಧ್ ಕಣಿವೆಯ ಬಸ್‍ಮಾಯ್ ಅಪನತಿ (ಆ್ಯಂಟಿಕ್ಲೈನ್) ಮಡಿಕೆಯ ಕೇಂದ್ರ ಭಾಗದ ಭೂ ವೈಜ್ಞಾನಿಕ ಪರಿಶೋಧನೆ ಈ ಪ್ರಾಂತ್ಯದಲ್ಲಿರಬಹುದಾದ ಆರ್ಡೊವಿಸಿಯನ್ ಯುಗದ ಶಿಲಾಸಮೂಹವನ್ನು ಬೆಳಕಿಗೆ ತರುವ ನಿರೀಕ್ಷೆ ಇದೆ. ಇದರ ಹೊರತು ಆರ್ಡೊವಿಸಿಯನ್ ಯುಗದ ಶಿಲೆಗಳು, ಸೈಲೂರಿಯನ್ ಮತ್ತು ಡಿವೋನಿಯನ್ ಶಿಲಾ ಸಮುದಾಯ ಪಾಕಿಸ್ತಾನದ ಮತ್ತಾವ ಭಾಗದಲ್ಲೂ ಪ್ರಕಟವಾಗಿಲ್ಲ.

ಕಾರ್ಬಾನಿಫೆರಸ್ ಯುಗದ ಪ್ರಾರಂಭದಲ್ಲಿ ಭಾರತ ಉಪಖಂಡ ಮೊದಲಬಾರಿ ಹಿಮಯುಗವನ್ನು ಅನುಭವಿಸಿತು. ನೀರ್ಗಲ್ಲು ನದಿಗಳು ಹೊತ್ತುಸಾಗಿಸಿದ ಗುಂಡುಗಳು ರಾಜಾಸ್ಥಾನ, ಬಿಹಾರ ಮತ್ತು ಒರಿಸ್ಸ ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ. ಇಂಥ ಗುಂಡು ಶಿಲೆಗಳು ಪಾಕಿಸ್ತಾನದ ಸಾಲ್ಟ್‍ರೇಂಜಿನಲ್ಲಿ ಕೃತಕ ಲವಣ ಸ್ಫಟಿಕದ ಜೇಡು ಶಿಲಾ ನಿಕ್ಷೇಪಗಳ ಮೇಲೆ ಸಂಚಯಿಸಿವೆ. ಕಾರ್ಬಾನಿಫೆರಸ್ ಯುಗದ ಅಂತ್ಯದ ವೇಳೆಗೆ ಭೂ ಚಲನೆಯಿಂದಾಗಿ ಸಾಲ್ಟ್‍ರೇಂಜಿನ ಬೆಟ್ಟ ಶ್ರೇಣಿಗಳು ಸಂಚಯನದ ತಗ್ಗುಗಳಾಗಿ ಪರಿವರ್ತಿತವಾದುವು. ಈ ಯುಗದಿಂದ ಪ್ರಾರಂಭವಾಗಿ ನವಜೀವ ಕಲ್ಪದ ಇಯೋಸಿನ್ ಯುಗದ ಅಂತ್ಯದವರೆಗೆ ತಗ್ಗು ಅಸ್ತಿತ್ವದಲ್ಲಿದ್ದು ಈ ಅವಧಿಯ ಸಂಚಯನಗಳೆಲ್ಲವನ್ನೂ ಒಳಗೊಂಡಿರುವುದು ವ್ಯಕ್ತವಾಗುತ್ತದೆ. ಇವು ಸಾಲ್ಟ್‍ರೇಂಜಿನ ಪಶ್ಚಿಮಕ್ಕಷ್ಟೇ ಸೀಮಿತವಾಗಿವೆ. ಪೂರ್ವದಲ್ಲಿ ಪರ್ಮಾಕಾರ್ಬಾನಿಫೆರಸ್ ಯುಗದ ಶಿಲೆಗಳು ಕಣ್ಮರೆಯಾಗಿದ್ದು ಕೇಂಬ್ರಿಯನ್ ಯುಗದ ಶಿಲೆಗಳು ಇಯೋಸಿನ್ ಯುಗದ ಶಿಲೆಗಳೊಡನೆ ಸಂಪರ್ಕಿಸಿವೆ. ಇಲ್ಲಿ ಬೃಹತ್ ಸ್ತರಭಂಗದಿಂದಾಗಿ ಇಯೋಸಿನ್ ಯುಗದ ನಮ್ಯೂಲಿಟಿಕ್ ಸುಣ್ಣ ಶಿಲೆಗಳು ಒತ್ತರಿಸಲ್ಪಟ್ಟಿರುವುದೇ ವಿಭಿನ್ನ ಯುಗದ ಶಿಲೆಗಳ ನಡುವೆ ಇಂಥ ವೈಜ್ಞಾನಿಕ ಭೂವೈಜ್ಞಾನಿಕ ಸಂಬಂಧ ಕಂಡುಬರುವುದಕ್ಕೆ ಕಾರಣ.

ಉತ್ಕೃಷ್ಟ ಜೀವ್ಯವಶೇಷಗಳನ್ನು ಒಳಗೊಂಡಿರುವ ಸಾಲ್ಟ್‍ರೇಂಜಿನ ಪಶ್ಚಿಮ ಭಾಗವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಕೆಳಭಾಗ ಮರಳು ಶಿಲಾಸ್ತರದಿಂದ ಕೂಡಿದ್ದು ಇದರ ಮೇಲೆ ಸುಣ್ಣ ಶಿಲೆ ಸಂಚಯಿಸಿದೆ. ಇದರಲ್ಲಿ ಸಾಗರಜೀವಿ ಬ್ರೇಕಿಯೊಪೋಡದ ಪ್ರಭೇದವಾದ ಪ್ರಡಕ್ಟಸ್ ಜೀವ್ಯವಶೇಷಗಳು ಹೇರಳವಾಗಿವೆ ಎಂದೇ ಇದರ ಹೆಸರು ಪ್ರಡಕ್ಟಸ್ ಸುಣ್ಣಶಿಲೆ. ಪರ್ಮಿಯನ್ ಯುಗದ ಸಾಗರ ಜನಿತ ಶಿಲಾ ಸಮುದಾಯದ ಪೈಕಿ ಸಾಲ್ಟ್‍ರೇಂಜಿನ ಈ ಸುಣ್ಣ ಶಿಲಾನಿಕ್ಷೇಪಗಳು ಮಾದರಿ ನಿಕ್ಷೇಪಗಳೆಂದೇ ಪರಿಗಣಿಸಲ್ಪಟ್ಟಿವೆ.

ಸಾಲ್ಟ್‍ರೇಂಜ್ ಉಳಿದರೆ ಪರ್ಮಾಕಾರ್ಬಾನಿಫೆರಸ್ ಯುಗದ ಶಿಲಾ ಸಮುದಾಯವನ್ನು ಹಜಾರದಲ್ಲಿ ಕಾಣಬಹುದು. ಇಲ್ಲಿ ಅಟಾಕ್ ಮತ್ತು ಡೋಗ್ರಾ ಸ್ಲೇಟುಗಳ ಸಮಕಾಲೀನ ಶಿಲೆಗಳೆನ್ನಿಸಿರುವ ಪುರಾಣ ಯುಗದ ಬುಡಮೇಲಾದ ಸ್ಲೇಟುಗಳ ತುದಿಯನ್ನು ಗುಂಡುಪೆಂಟೆ ಶಿಲೆಗಳು ಆಕ್ರಮಿಸಿವೆ. ನೀರ್ಗಲ್ಲು ನದಿಗಳು ಉಜ್ಜಿರುವ ಗುರುತುಗಳು ಈ ಶಿಲೆಗಳಲ್ಲಿವೆ. ಹೀಗೆ ಇವು ಕಾರ್ಬಾನಿಫೆರಸ್ ಯುಗಕ್ಕೆ ಸೇರಿರುವ ಸ್ಪಷ್ಟ ನಿದರ್ಶನವನ್ನು ಪ್ರದರ್ಶಿಸುತ್ತವೆ.

ಮಧ್ಯ ಜೀವಕಲ್ಪದ ಪ್ರಥಮ ಯುಗವಾದ ಟ್ರಯಾಸಿಕ್ಕಿನ ಶಿಲಾ ಸಮುದಾಯ ಪ್ರಧಾನವಾಗಿ ಬಲೂಚಿಸ್ಥಾನ, ಹಜಾರ ಮತ್ತು ಸಾಲ್ಟ್‍ರೇಂಜ್‍ಗಳಲ್ಲಿ ಕಂಡುಬರುತ್ತದೆ. ಬಲೂಚಿಸ್ಥಾನದಲ್ಲಿ ಮೇಲಣ ಟ್ರಯಾಸಿಕ್ ಶಿಲಾ ಸಮುದಾಯ ಪ್ರಕಟವಾಗಿದೆ. ಆದರೆ ಸಾಲ್ಟ್‍ರೇಂಜ್‍ನಲ್ಲಿ ಕೆಳ ಟ್ರಯಾಸಿಕ್ ಮತ್ತು ಮಧ್ಯಟ್ರಯಾಸಿಕ್ ಯುಗದ ಕೆಳಭಾಗ ವಿವರಿಸಲ್ಪಟ್ಟಿದೆ.

ಬಲೂಚಿಸ್ಥಾನದ ಕ್ವೆಟ್ಟಾ ಮತ್ತು ಜೋಬ್ ಜಿಲ್ಲೆಗಳಲ್ಲಿ ಮೇಲಣ ಟ್ರಯಾಸಿಕ್ ಶಿಲಾಸಮುದಾಯ ಉಂಟು. ಇಲ್ಲಿ ಅದು ಹೊರಚಾಚುಗಳಾಗಿ ಪ್ರಕಟವಾಗಿದೆ. ಸಾವಿರಾರು ಮೀಟರುಗಳಷ್ಟು ಮಂದವಿರುವ ಜೇಡು, ಸ್ಲೇಟು ಮತ್ತು ಇವುಗಳೊಂದಿಗೆ ಬೆರೆತಿರುವ ಸುಣ್ಣ ಶಿಲೆಗಳಲ್ಲಿ ಶೀರ್ಷಾಪಾದಿಯಾದ ಅಮೊನೈಟ್ ಜೀವ್ಯವಶೇಷಗಳಿವೆ. ಇವು ಅನನುರೂಪವಾಗಿ ಸುಣ್ಣಶಿಲೆಯ ಮೇಲೆ ನಿಂತಿವೆ.

ಹಜಾರದ ಟ್ರಯಾಸಿಕ್ ಶಿಲಾ ಸಮುದಾಯ ದಕ್ಷಿಣ ಮತ್ತು ಆಗ್ನೇಯ ದಿಕ್ಕುಗಳಲ್ಲಿ ವ್ಯಾಪಕವಾಗಿ ರೂಪುಗೊಂಡಿದೆ. ಈ ಯುಗದ ಶಿಲೆಗಳು ನೇರವಾಗಿ ಪರ್ಮಾಕಾರ್ಬಾನಿಫೆರಸ್ ಯುಗದ ಸಂಚಿತ ಶಿಲೆಗಳ ಮೇಲೆ ಕೂತಿರುವುದನ್ನು ಕಾಣಬಹುದು. ಅದರಲ್ಲೂ ಹಜಾರದ ಸಿರಬಂದ್ ಪರ್ವತ (ಅಬ್ಬಾಸ್ ಪರ್ವತದ ದಕ್ಷಿಣಕ್ಕಿರುವ ಒಂಟಿ ಪರ್ವತ) ಪರ್ಮೊಕಾರ್ಬಾನಿಕ್ ಫೆರಸ್ ಯುಗದ ಶಿಲೆಗಳಿಂದ ಪ್ರಾರಂಭಿಸಿ ನಮ್ಯೂಲಿಟಿಕ್ ಸುಣ್ಣಶಿಲೆಗಳವರೆಗೆ ಸಂಚಿತ ಶಿಲೆಗಳನ್ನು ಪೇರಿಸಿಕೊಂಡಿರುವುದನ್ನು ಕಾಣಬಹುದು. ಇದರಂತೆ ಹಜಾರದ ದಕ್ಷಿಣ ಗಡಿಸೀಮೆ ಮತ್ತು ಅಟಾಕ್ ಜಿಲ್ಲೆಯ ಕಾಲಚಿತ್ತಾ ಬೆಟ್ಟ ಸಾಲಿನಲ್ಲಿ ಟ್ರಯಾಸಿಕ್ ಯುಗದ ಸುಣ್ಣ ಶಿಲೆಗಳು ನಗ್ನವಾಗಿರುವ ನಮ್ಯೂಲಿಟಿಕ್ ಸುಣ್ಣ ಶಿಲೆಗಳ ಏಕಾವನತ ಮಡಿಕೆಗಳ ಮೇಲೆ ಗುಡ್ಡದೋಪಾದಿಯಲ್ಲಿ ಸಂಚಯಿಸಿವೆ.

ಸಾಲ್ಟ್‍ರೇಂಜಿನಲ್ಲಿ ಟ್ರಯಾಸಿಕ್ ಶಿಲಾಸಮುದಾಯ ಚಿದೇರು ಬೆಟ್ಟಗಳಿಂದ ಆರಂಭವಾಗಿ ಪಶ್ಚಿಮದಲ್ಲಿ ಸಿಂಧೂ ನದಿಯಾಚೆಗೆ ಸಾಗಿದೆ. ಕೇವಲ ಕೆಳಟ್ರಯಾಸಿಕ್ ಮತ್ತು ಮಧ್ಯಟ್ರಯಾಸಿಕ್ಕಿನ ಕೆಳಭಾಗದ ಶಿಲೆಗಳನ್ನು ಮಾತ್ರ ಹೊಂದಿರುವ ಈ ಭಾಗದಲ್ಲಿ ಶೀರ್ಷಪಾದಿಗಳ ಜೀವ್ಯಾವಶೇಷಗಳು ಪರಿಪೂರ್ಣ ಬೆಳವಣಿಗೆಯನ್ನು ತೋರುತ್ತದೆ. ಆದರೆ ಸಿಂಧೂ ನದಿಗೆ ಅಡ್ಡಲಾಗಿ ಬೆಳೆದಿರುವ ಸಾಲ್ಟ್‍ರೇಂಜ್ ಭಾಗದಲ್ಲಿ ಟ್ರಯಾಸಿಕ್ ಶಿಲೆಗಳು ಪೂರ್ಣ ಪ್ರಮಾಣದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಅಮೊನೈಟ್ ಪ್ರಭೇದವಾದ ಸೆರಟೈಟ್ ಜೀವಿಗಳ ಅವಶೇಷ ಹೇರಳವಾಗಿರುವುದರಿಂದ ಈ ಸ್ತರಗಳನ್ನು ಸೆರಟೈಟ ಪದರಗಳೆಂದೇ ಗುರುತಿಸಲಾಗಿದೆ. ಇವುಗಳ ಮಂದ ಸುಮಾರು ಮೂವತ್ತು ಮೀ.ಗಳಷ್ಟು ಉಂಟು. ಈ ಸ್ತರಗಳನ್ನು ಮೂವತ್ತ ರಿಂದ ಅರವತ್ತು ಮೀ. ಮಂದದ ಮರಳು ಶಿಲೆ, ಕ್ರೈನಾಯಿಡ್ ಜೀವ್ಯಾವಶೇಷವಿರುವ ಸುಣ್ಣ ಶಿಲೆ ಹಾಗೂ ಶೀರ್ಷಪಾದಿಗಳಿಂದ ತುಂಬಿರುವ ಮಧ್ಯ ಟ್ರಯಾಸಿಕ್ ಯುಗದ ಡಾಲೋಮೈಟ್ ಶಿಲೆಗಳು ಮುಚ್ಚಿವೆ. ಸಾಲ್ಟ್‍ರೇಂಜ್ ಮಧ್ಯ ಟ್ರಯಾಸಿಕ್ ಯುಗದ ಅನಂತರ ಸಾಗರದ ಹಿಂಜರಿತವನ್ನು ಅನುಭವಿಸಿರುವ ಕುರುಹುಗಳನ್ನು ಈ ಪ್ರದೇಶದ ಭೂ ಚರಿತ್ರೆ ತಿಳಿಸುತ್ತದೆ. ಮೇಲಣ ಟ್ರಯಾಸಿಕ್ ಯುಗದ ಹಾಗೂ ಜುರಾಸಿಕ್ ಯುಗದ ಮೊದಲ ಭಾಗದ ತನಕ ಇದೇ ಪರಿಸ್ಥಿತಿ ಇದ್ದದ್ದು ವ್ಯಕ್ತವಾಗುತ್ತದೆ.

ಮಧ್ಯ ಜೀವಕಲ್ಪದ ಎರಡನೆಯ ಯುಗವಾದ ಜ್ಯುರಾಸಿಕ್ಕನ ಸಾಗರಜನಿತ ಸಂಚಯನಗಳು ಬಹುರಾಷ್ಟ್ರಗಳಲ್ಲಿ ವಿವರಿಸಲ್ಪಟ್ಟಿವೆ. ಭಾರತದಲ್ಲಿ ರಾಜಾಸ್ತಾನ ಹಾಗೂ ಕಚ್‍ನಲ್ಲಿ ಇಂಥ ಸಂಚಯನಗಳು ಕಂಡುಬರುತ್ತವೆ. ಪಾಕಿಸ್ತಾನದ ಸಾಲ್ಟ್‍ರೇಂಜ್ ಮತ್ತು ಬಲೂಚಿಸ್ಥಾನಗಳಲ್ಲಿ ಇಂಥವೇ ಸಂಚಯನಗಳು ಲಭ್ಯವಿವೆ. ಅವುಗಳಲ್ಲೂ ಬಲೂಚಿಸ್ಥಾನದಲ್ಲಿ ಈ ಯುಗದ ಸಂಚಯನಗಳು ಭೌಗೋಳಿಕವಾಗಿ ಹಾಗೂ ಭೂವೈಜ್ಞಾನಿಕವಾಗಿ ಹೆಚ್ಚು ವ್ಯಾಪ್ತಿಗಳಿಸಿವೆ. ಈ ಯುಗದಲ್ಲಿ ಸಮಸ್ತಭೂಮಿಯ ಸಸ್ಯಪ್ರಾಣಿಗಳ ಸಂತತಿಯಲ್ಲಾದ ಬದಲಾವಣೆಯನ್ನು ಈ ಶಿಲಾ ಸಂಚಯನಗಳು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಹಜಾರದ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಜ್ಯುರಾಸಿಕ್ ಶಿಲೆಗಳು ಕಂಡುಬರುತ್ತವೆ. ಆದರೆ ಇವೆರಡರ ನಡುವೆ ಜೀವ್ಯಾವಶೇಷ ಮತ್ತು ಶಿಲಾ ಸ್ವರೂಪಗಳಲ್ಲಿ ಅಪಾರ ವ್ಯತ್ಯಾಸಗಳಿವೆ. ಉತ್ತರ ಹಜಾರದಲ್ಲಿ ಮರಳುಪೂರಿತ ಶಿಲೆಗಳು ಪ್ರಧಾನವಾಗಿದೆ. ದಕ್ಷಿಣದಲ್ಲಿ ಈ ಯುಗದ ಶಿಲೆಗಳು ಅಟಾಕ್ ಜಿಲ್ಲೆಯ ಕಾಲಚಿತ್ತಾ ಬೆಟ್ಟಸಾಲಿನಲ್ಲಿ ಏಕಪ್ರಕಾರವಾಗಿ ಬಾಗಿರುವ ಮಡಿಕೆಗಳಲ್ಲಿ ಹೊರಚಾಚುಗಳಾಗಿ ವ್ಯಕ್ತಪಟ್ಟಿವೆ.

ಯೂರೋಪಿನ ಲಯಾಸ್ ಮತ್ತು ಲೂಲೈಟ್ ಕಾಲಕ್ಕೆ ಸಂಬಂಧಿಸಿದ ಜ್ಯುರಾಸಿಕ್ ಶಿಲೆಗಳು ಬೃಹತ್ ತಗ್ಗಿನಲ್ಲಿ ರೂಪುಗೊಂಡ ಸಂಚಯನಗಳಾಗಿ ಬಲೂಚಿಸ್ತಾನದಲ್ಲಿ ಕಂಡುಬರುತ್ತದೆ. ಸುಣ್ಣ ಜೀವ್ಯವಶೇಷಯುಕ್ತ ಜಿಗುಟು ಸುಣ್ಣ ಶಿಲೆ, ಜೇಡು ಈ ಪ್ರದೇಶದಲ್ಲಿ ಸುಮಾರು 910 ಮೀ. ಮಂದವಾಗಿದ್ದು ಲಯಾಸ್ ಕಾಲದ ಕೆಳಸ್ತರ ಯೂರೋಪಿನಲ್ಲಿ ಕಂಡುಬರುವಂತೆ ಪ್ರಧಾನವಾಗಿ ಶೀರ್ಷಪಾದಿಗಳ ಅವಶೇಷದಿಂದ ಕೂಡಿದೆ.

ಸಿಂಧ್ ಮುಂಚೂಣಿವಲಯವಿರುವ ಪೂರ್ವ ಬಲೂಚಿಸ್ತಾನ ಮಧ್ಯಜೀವಕಲ್ಪದ ಎಲ್ಲ ಯುಗಗಳ ಸಂಚಯನವನ್ನು ತಾಕ್ತ್-ಇ-ಸುಲೈಮಾನ್ ಪರ್ವತದಿಂದ ಮೆಕ್ರಾನ್‍ತೀರದವರೆಗೆ ಉನ್ನತ ಪ್ರದೇಶಗಳಲ್ಲಿ ವ್ಯಕ್ತಪಡಿಸುತ್ತದೆ. ಈಗಿನ ಹಿಮಾಲಯ ಪರ್ವತ ಭಾಗದಲ್ಲಿದ್ದ ಟೆಥಿಸ್ ಸಾಗರ ಬಲೂಚಿಸ್ತಾನಕ್ಕೂ ಚಾಚಿದ್ದುದರ ಫಲವಾಗಿ ಮಧ್ಯಜೀವಕಲ್ಪದ ಸಂಚಿತ ಶಿಲೆಗಳು ಹಿಮಾಲಯ ಪರ್ವತದಲ್ಲಿ ಕಂಡುಬರುವಂತೆಯೇ ಬಲೂಚಿಸ್ತಾನದಲ್ಲೂ ಕಂಡುಬರುತ್ತವೆ. ಇಲ್ಲಿನ ಈ ಸಂಚಯನ ಸಮಾಂತರವಾದ ಅಭಿನತಿ (ಸಿನ್ ಕ್ಲೈನ್) ಹಾಗೂ ಅಪನತಿ (ಆ್ಯಂಟಿಕ್ಲೈನ್) ಮಡಿಕೆಗಳಾಗಿ ಅದುಮಲ್ಪಟ್ಟಿದೆ.

ಸಾಲ್ಟ್‍ರೇಂಜ್‍ನಲ್ಲಿ ಪ್ರಮುಖವಾಗಿ ಮಧ್ಯ ಹಾಗೂ ಮೇಲಣ ಜ್ಯುರಾಸಿಕ್ ಶಿಲೆಗಳು ವಿವಿಧ ವರ್ಣಪಟ್ಟಿಗಳಿರುವ ಮರಳುಶಿಲೆ, ಹಳದಿ ಸುಣ್ಣ ಶಿಲೆಗಳಿಂದ ಕೂಡಿದ್ದು, ಇವನ್ನು ಕಚ್‍ನ ಚಿನ್ನದ ಲುಲೈಟ್ ನಿಕ್ಷೇಪಕ್ಕೆ ಹೋಲಿಸಬಹುದಾಗಿದೆ. ಈ ಯುಗದ ಅತ್ಯುತ್ತಮ ಸಂಚಯನ ಸಾಲ್ಟ್‍ರೇಂಜ್‍ನ ವಾಯವ್ಯಭಾಗದಲ್ಲಿ ನಮ್ಮಾಲ್ ಮತ್ತು ಕೈರಾಬಾದ್ ಪ್ರದೇಶಗಳಲ್ಲಿ ರೂಪುಗೊಂಡಿದೆ. ಈ ಭಾಗದಲ್ಲಿ ಸಂಚಯನ 350 ಮೀ.ಗಳಷ್ಟು, ಕಾಲಾಭಾಗ್ ಬಳಿ 460 ಮೀ.ಗಳಷ್ಟು, ಷೇಕ್‍ಬುಡೀಗ್ ಬೆಟ್ಟ ಮತ್ತು ಸುರ್ಗಾರ್ ಶ್ರೇಣಿ ಬಳಿ 600 ಮೀ.ಗಳಷ್ಟು ಮಂದವಿದೆ. ಸುರ್ಗಾರ್ ಬಳಿ ಐಸಾಖೇಲ್‍ನ ವಾಯವ್ಯ ಭಾಗ ಸಂಪೂರ್ಣವಾಗಿ ಜ್ಯುರಾಸಿಕ್ ಮತ್ತು ನವಜೀವ ಕಲ್ಪದ ಇಯೋಸಿನ್ ಯುಗದ ಶಿಲೆಗಳಿಂದ ಆವೃತವಾಗಿದೆ. ಈ ಸಮುದಾಯದ ಕೆಳಸ್ತರದಿಂದ ವರ್ಷಂಪ್ರತಿ ಒಂದು ಸಾವಿರ ಟನ್‍ಗಳಷ್ಟು ಲಿಗ್ನೈಟನ್ನು ಉತ್ಪಾದಿಸಲಾಗುತ್ತಿದೆ. ಇದರಲ್ಲಿ ದೊರೆಯುವ ಸಸ್ಯಜೀವ್ಯವಶೇಷಗಳು ಗೋಂಡ್ವಾನ ಕಾಲದ ಜಬ್ಬಲ್‍ಪುರ ಹಂತವನ್ನು ಪ್ರತಿನಿಧಿಸುತ್ತವೆ.

ಮಧ್ಯಜೀವಕಲ್ಪದ ಕೊನೆಯ ಯುಗವಾಗಿ ಕ್ರಿಟೇಷಿಯಸ್‍ನಲ್ಲಿ ಜಲಪ್ರಳಯವಾಗಿ ಭೂಮಿಯ ಬಹುಭಾಗ ಸಾಗರದ ಪಾಲಾದದ್ದು ಶಿಲೆ ಹಾಗೂ ಜೀವ್ಯವಶೇಷಗಳೆರಡರಿಂದಲೂ ವ್ಯಕ್ತವಾಗುತ್ತದೆ. ಭಾರತ ಪರ್ಯಾಯ ದ್ವೀಪದಲ್ಲಿ ತಮಿಳುನಾಡಿನಲ್ಲಿ ಉತ್ತತ್ತೂರು, ಅರಿಯಲೂರು, ನಿನ್ನೀಯೂರು ಮತ್ತು ತಿರುಚ್ಚಿರಾಪಳ್ಳಿ ಪ್ರದೇಶ ಸಾಗರದಿಂದ ಆವೃತವಾಗಿದ್ದ ಕುರುಹುಗಳು ಇಂದಿಗೂ ಲಭ್ಯವಿದೆ. ಇದೇ ಕಾಲದಲ್ಲಿ ಉತ್ತರ ಹಿಮಾಲಯ, ಹಜಾರ, ಸಿಂಧ್, ಬಲೂಚಿಸ್ತಾನ, ಸಾಲ್ಟ್‍ರೇಂಜ್, ಅಸ್ಸಾಂ, ಬರ್ಮಗಳ ಬಹುಭಾಗ ಟೆಥಿಸ್ ಸಾಗರದಿಂದ ಆಕ್ರಮಿಸಲ್ಪಟ್ಟು ಈ ಭಾಗಗಳಲ್ಲಿ ಕ್ರಿಟೇಷಿಯಸ್ ನಿಕ್ಷೇಪಗಳನ್ನು ಸಂಚಯಿಸಿದೆ. ವ್ಯಾಪ್ತಿಯಲ್ಲೂ ಈ ಸಂಚಯನಗಳು ಗಮನ ಸೆಳೆಯುತ್ತವೆ. ಹಜಾರದ ಕ್ರಿಟೇಷಿಯಸ್ ಸಂಚಯನ ಮಹಾತಗ್ಗಿನ ಪಶ್ಚಿಮ ಕೊನೆಯನ್ನು ಪ್ರತಿನಿಧಿಸುತ್ತದೆ. ಸಿಂಧ್‍ನ ಲಾಕಿಶ್ರೇಣಿ ಕ್ರಿಟೇಷಿಯಸ್ ಯುಗದ ಮಾದರಿ ಜೀವಿ ಅಥವಾ ಸೂಚ್ಯಜೀವಿ ಎನ್ನಿಸಿದ್ದ ಹಿಪ್ಯೂರೈಟೀಸಿನ ಜೀವ್ಯವಶೇಷವನ್ನು ಹೊಂದಿದ್ದು ಈ ಸಂಚಯನದ ಸಮಕಾಲೀನ ನಿಕ್ಷೇಪಗಳನ್ನು ಇರಾನ್ ಮತ್ತು ಏಷ್ಯ ಮೈನರಿನಲ್ಲಿ ಕಾಣಬಹುದು.

ಸಿಸ್-ಇಂಡಸ್-ಸಾಲ್ಟ್‍ರೇಂಜ್‍ನಲ್ಲಿ ಕ್ರಿಟೇಷಿಯಸ್ ಯುಗದ ಸಂಚಯನ ಅಲ್ಪ ಗಾತ್ರದಲ್ಲಿ ಪ್ರಕಟವಾಗಿದೆ. ಇಲ್ಲಿಯ ಜೀವ್ಯಾವಶೇಷ ಸಂಚಿತ ಶಿಲೆಗಳು ಸಿಂಧೂನದಿಯಾಚೆ ಚಿಚಾಲಿಗುಡ್ಡ, ಮಾಕೇರ್‍ವಾಲ್ ಮತ್ತು ಕಾಲಾಬಾಗಿನ ಸುತ್ತಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ.

ನವಜೀವಕಲ್ಪದ ಶಿಲಾ ಸಮುದಾಯ ಸಾಮಾನ್ಯವಾಗಿ ಪರ್ವತರೂಪದಲ್ಲಿ ಕಂಡುಬರುವುದೇ ಹೆಚ್ಚು. ಸಿಂಧ್ ಮತ್ತು ಬಲೂಚಿಸ್ಥಾನದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಭಾರತದ ಪಶ್ಚಿಮ ಮಂಚೂಣಿ ವಲಯಗಳ ಮೂಲಕ ಹಾದು ಟ್ರಾನ್ಸ್ ಇಂಡಸ್ ಶ್ರೇಣಿಗಳ ಮೂಲಕ ಹಜಾರ-ಕಾಶ್ಮೀರದ ಭಾಗವನ್ನು ಪ್ರವೇಶಿಸಿ ವಿಶಾಲವಾಗುತ್ತದೆ. ಇಲ್ಲಿಂದ ನವಜೀವಕಲ್ಪದ ಜಾಡು ಪಂಜಾಬ್, ಕುಮಾವನ್, ನೇಪಾಳಗಳ ಮೂಲಕ ಬ್ರಹ್ಮಪುತ್ರ ನದಿಯ ಕಂದರದಲ್ಲಿ ವಿಲೀನವಾಗುತ್ತದೆ. ಈ ಎಲ್ಲಾ ಭಾಗಗಳಲ್ಲೂ ನವಜೀವಕಲ್ಪದ ಶಿಲಾ ಸಮುದಾಯ ಇಯೊಸೀನ್ ಯುಗದಿಂದ ಪ್ರಾರಂಭಿಸಿ ಪ್ಲೀಸ್ಟೊಸೀನ್ ಯುಗದ ತನಕ ವ್ಯಾಪಿಸಿರುವುದು ಕಂಡುಬರುತ್ತದೆ. ಜೀವ್ಯಾವಶೇಷ ಹಾಗೂ ವ್ಯಾಪ್ತಿಯ ದೃಷ್ಟಿಯಿಂದ ನವಜೀವಕಲ್ಪ ಹೆಚ್ಚು ಮಹತ್ವ ಗಳಿಸಿದೆ.

ಉತ್ತರ ಇಂಡಿಯದ ನವಜೀವಕಲ್ಪದ ಭೂವಿಜ್ಞಾನವನ್ನು ಸಂಪೂರ್ಣವಾಗಿ ಪ್ರತಿನಿಧಿಸುವ ಪ್ರದೇಶವೆಂದರೆ ಪಟ್ವಾರ್ ಪ್ರಸ್ಥಭೂಮಿ. ಇದು ಸಿಂಧೂ ನದಿಯ ಪೂರ್ವಕ್ಕೆ ಸಾಲ್ಟ್‍ರೇಂಜ್‍ನಿಂದ ಹಜಾರ ಜಿಲ್ಲೆಯ ಬೆಟ್ಟಗಳ ಪಾದದವರೆಗೆ ಸುಮಾರು 5,000 ಕಿ.ಮೀ.ಗಳಷ್ಟು ಹಬ್ಬಿದೆ. ಸಮುದ್ರಮಟ್ಟದಿಂದ 365-580 ಮೀ. ಎತ್ತರದಲ್ಲಿದೆ. ಈ ಭಾಗದಲ್ಲಿ ನವಜೀವಕಲ್ಪದ ಆಲಿಗೊಸೀನ್ ಯುಗದ ಶಿಲೆಗಳ ಹೊರತು ಎಲ್ಲಾ ಯುಗಗಳ ಶಿಲೆಗಳು ರಾಣಿಕೋಟ್ (ಇಯೊಸೀನ್) ಹಂತದಿಂದ ಪ್ರಾರಂಭಿಸಿ ಪ್ಲೀಸ್ಟೊಸೀನ್ ಯುಗದ ತನಕ ವ್ಯಾಪಿಸಿದೆ. ಇವುಗಳ ಒಟ್ಟಾರೆ ಮಂದ 7,600 ಮೀ.ಗಳಷ್ಟು ಉಂಟು. ಇಲ್ಲಿಯ ಜೀವ್ಯಾವಶೇಷಗಳಿಂದ ನವಜೀವಕಲ್ಪದ ಜೀವಿಗಳ ಚರಿತ್ರೆ ಪೂರ್ತಿಯಾಗಿ ಬೆಳಕಿಗೆ ಬರುತ್ತದೆ. ಈ ಸಂಚಯನವಿಡೀ ಬೃಹತ್ ತಗ್ಗಿನಲ್ಲಾಗಿದೆ. ಇದರ ಉದ್ದ 240 ಕಿಮೀ, ಅಗಲ 110 ಕಿ.ಮೀ. ಎಂದು ಭೂ ವಿಜ್ಞಾನಿಗಳು ಅಂದಾಜುಮಾಡಿದ್ದಾರೆ. ಇದರ ತಳದಲ್ಲಿ ಮಧ್ಯ ಜೀವಕಲ್ಪದ ನಮ್ಯುಲಿಟಿಕ್ ಸುಣ್ಣ ಶಿಲೆ 300 ಮೀ.ಗಳಷ್ಟಿದೆ. ಮೇಲೆ 1800 ಮೀ.ಮಂದದ ಕೊಳಚೆನೀರಿನ ಸಂಚಯನಗಳು ತುಂಬಿವೆ. ಮರ್ರೀ ಸಂಚಯನಗಳೆಂದು ಇವುಗಳಿಗೆ ಹೆಸರುಂಟು. ನದಿನೀರು ಹೊತ್ತುತಂದ ಹಾಗೂ ಗಾಳಿಬೀಸಿ ತಂದ ನಿಕ್ಷೇಪಗಳು (ಸಿವಾಲಿಕ್ ಸಂಚಯನಗಳು) ಮರ್ರೀ ಶ್ರೇಣಿಯ ಮೇಲುಭಾಗವನ್ನು ಆಕ್ರಮಿಸಿವೆ. ಇವುಗಳ ಮಂದ ಸುಮಾರು 5,000 ಮೀ.ಸಿವಾಲಿಕ್ ಸಂಚಯನವನ್ನು ಪ್ಲಿಸ್ಟೊಸೀನ್ ಯುಗದ ಮರಳು ಆವರಿಸಿದೆ. ಪಟ್ವಾರ್ ಮಹಾತಗ್ಗು ಸಿಂಧೂ ಗಂಗಾನದಿಗಳ ಬೃಹತ್ ತಗ್ಗಿನ ಒಂದು ಭಾಗ ಮಾತ್ರ ಎಂಬುದು ಭೂವಿಜ್ಞಾನಿಗಳ ಅಭಿಮತ. ಇದರ ವಿಶಾಲವಾದ ದಕ್ಷಿಣ ಭಾಗವೇ ರಾಜಾಸ್ತಾನದ ತಗ್ಗು ಪ್ರದೇಶವೆಂದು ದೃಢೀಕರಿಸಲಾಗಿದೆ.

ಸಿಂಧ್ ಪ್ರಾಂತ್ಯ ಮತ್ತು ಬಲೂಚಿಸ್ತಾನವನ್ನು ಪ್ರತ್ಯೇಕಿಸುವ ಕಿರ್ತಾರ್, ಲಾಕಿ, ಬುಗ್ತಿ, ಸುಲೈಮಾನ್ ಬೆಟ್ಟಗಳಲ್ಲಿಯೂ ನವಜೀವಕಲ್ಪದ ಶಿಲಾಸಮೂಹ ಪ್ರಕಟವಾಗಿದೆ. ರಾಣಿಕೋಟ್ ಹಂತದಿಂದ ಪ್ರಾರಂಭವಾಗುವ ಈ ನಿಕ್ಷೇಪಗಳು ಪಟ್ವಾರ್ ಪ್ರಸ್ಥಭೂಮಿಯ ನಿಕ್ಷೇಪಗಳಂತೆ ಕೆಳ ಪ್ಲೀಸ್ಟೊಸೀನ್ ಯುಗದತನಕ ವ್ಯಾಪಿಸಿವೆ.

ಅಭಿವೃದ್ಧಿಯ ದೃಷ್ಟಿಯಿಂದ ಸ್ತನಿಗಳ ವಿಕಾಸ ಉಚ್ಛ್ರಾಯ ಸ್ಥಿತಿಯಲ್ಲಿದ್ದುದನ್ನು ಸಿವಾಲಿಕ್ ಬೆಟ್ಟಗಳ ಜೀವ್ಯಾವಶೇಷಗಳು ಸಾರುತ್ತವೆ. ಮಧ್ಯಮಿಯೊಸೀನ್ ಮತ್ತು ಕೆಳಪ್ಲೀಸ್ಟೋಸಿನ್ ಕಾಲದಲ್ಲಿ ಈ ಬೆಟ್ಟಗಳು ರೂಪುಗೊಂಡಿವೆ. ಸಿಂಧ್ ಮತ್ತು ಸಾಲ್ಟ್‍ರೇಂಜ್ ಪ್ರದೇಶದಲ್ಲಿ ಸಿವಾಲಿಕ್ ಬೆಟ್ಟಗಳ ಪರಿಪೂರ್ಣ ಬೆಳವಣಿಗೆಯನ್ನು ಕಾಣಬಹುದು. ಸಿಂಧೂ ನದಿಯ ಮೆಕ್ಕಲು ಪ್ರದೇಶ 200,000 ಚದರ ಕಿ.ಮೀ ವ್ಯಾಪ್ತಿಗಳಿಸಿದ್ದು, ಇದರಡಿಯಲ್ಲಿ ನವಜೀವಕಲ್ಪದ ಶಿಲಾಸ್ತರ ಇದೆಯೆಂದು ಜಿಯೋಡೆಟಿಕ್ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ.

ನವಜೀಕಲ್ಪದ ಮಿಯೊಸೀನ್ ಯುಗದಲ್ಲಿ ಉತ್ತುಂಗ ಪರ್ವತ ಹಿಮಾಲಯದ ಉತ್ಥಾನ ಪ್ರಾರಂಭವಾಯಿತು. ಆ ಕಾಲದಲ್ಲಿ ಇಡೀ ಈ ಪ್ರದೇಶ ಹಿಮಾಲಯದ ಮುನ್ತಗ್ಗು ಪ್ರದೇಶವಾಗಿದ್ದು ಅಂದಿನಿಂದಲೂ ಸಂಚಯನ ಪ್ರದೇಶವಾಗಿ ಮಾರ್ಪಟ್ಟಿದೆ. ಆದರೆ ಕೆಳ ಪ್ಲೀಸ್ಟೊಸೀನ್ ಯುಗದಲ್ಲಿ ಹಿಮಾಲಯ ತನ್ನ ಉತ್ಥಾನದ ಪರಮೋಚ್ಛಮಟ್ಟ ತಲುಪಿದಾಗ ಇದರಲ್ಲಿ ಹುಟ್ಟಿದ ನದಿಗಳು ಮುಂದಿನ ತಗ್ಗಿನಲ್ಲಿ ಮೆಕ್ಕಲನ್ನು ತುಂಬಲು ಪ್ರಾರಂಭಿಸಿದುವು. ಹಿಮಾಲಯದ ಮೇಲೇರಿಕೆಗೂ ಈ ಮುನ್ತಗ್ಗು ಪ್ರದೇಶಕ್ಕೂ ಭೂ ವೈಜ್ಞಾನಿಕವಾದ ಸಂಬಂಧವಿದೆ ಎಂಬುದು ಭೂ ವಿಜ್ಞಾನಿಗಳ ಅಭಿಮತ.

ಪಾಕಿಸ್ತಾನದ ಮೇಲ್ವೈ ಲಕ್ಷಣ ವೈವಿಧ್ಯಪೂರಿತವಾದ್ದು, ಪಾಕಿಸ್ತಾನದ ದಕ್ಷಿಣ ಸರಹದ್ದಿನಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತ ಹಾದುಹೋಗುತ್ತದೆ. ಈ ದೇಶದ ಉತ್ತರದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳು ಹಾಯ್ದಿವೆ. ದಕ್ಷಿಣದಲ್ಲಿ ಮರುಭೂಮಿಗಳು ಹಬ್ಬಿವೆ. ಉತ್ತರ ಮತ್ತು ಪಶ್ಚಿಮಭಾಗಗಳಲ್ಲಿ ಪರ್ವತಗಳಿಂದ ಕೂಡಿರುವ ಈ ದೇಶದಲ್ಲಿ 6,705 ಮೀ.ಗಳಿಗೂ ಎತ್ತರವಾದ 60 ಶಿಖರಗಳಿವೆ. ಪ್ರಪಂಚದ ಅತ್ಯಂತ ದೊಡ್ಡ ನದಿಗಳಲ್ಲೊಂದಾದ ಸಿಂಧೂ ಇಲ್ಲಿ ಹರಿಯುತ್ತದೆ. ಹೀಗೆ ವಿಭಿನ್ನ ಭೌತಲಕ್ಷಣಗಳಿಂದ ಕೂಡಿರುವ ಈ ದೇಶವನ್ನು 6 ನೈಸರ್ಗಿಕ ವಿಭಾಗಗಳಾಗಿ ವಿಂಗಡಿಸಬಹುದು: 1.ಉತ್ತರದ ಪರ್ವತಗಳು, 2.ಉಪಪರ್ವತ ಪ್ರಸ್ಥಭೂಮಿ, 3.ಸಿಂಧೂಬಯಲು, 4.ಬಲೂಚಿಸ್ತಾನ ಪ್ರಸ್ಥಭೂಮಿ, 5.ಪಶ್ಚಿಮದ ಸರಹದ್ದು ಪರ್ವತಗಳು, 6.ಮರುಭೂಮಿ ಪ್ರದೇಶಗಳು.

ಹಿಮಾಲಯ ಮತ್ತು ಹಿಮಾಲಾಯಾಂತರ ಪರ್ವತವಲಯ ಇಡೀ ಉತ್ತರ ಭಾಗವನ್ನು ವ್ಯಾಪಿಸಿವೆ. ವಾಯವ್ಯಕ್ಕೆ ಹಿಂದೂಕುಷ್ ಶ್ರೇಣಿಯ ಆಚೆಗೆ ಪ್ರಪಂಚದ ಛಾವಣಿ ಎನಿಸಿದ ಪಾಮಿರ್ ದಿಣ್ಣೆಯಿದೆ. ಇಲ್ಲಿ ಸೋವಿಯತ್ ಒಕ್ಕೂಟ ಮತ್ತು ಪಾಕಿಸ್ತಾನ ಭೂ ಪ್ರದೇಶಗಳು ಆಫ್ಘಾನಿಸ್ತಾನದ ಕಿರಿದಾದ ಭೂ ಪ್ರದೇಶದಿಂದ ಪ್ರತ್ಯೇಕಗೊಂಡಿದೆ. ಉತ್ತರ ಪರ್ವತವಲಯ ಕೆಲವೆಡೆಗಳಲ್ಲಿ 320 ಕಿಮೀಗಳಷ್ಟು ಅಗಲವಾಗಿವೆ. ಇಲ್ಲಿ 6,096 ಮೀ.ಗಳಿಗಿಂತ ಎತ್ತರವಾದ ಶಿಖರಗಳು ಅಲ್ಲಲ್ಲಿ ಎದ್ದು ನಿಂತಿವೆ.

ಈ ಪರ್ವತವಲಯ ಪಾಕಿಸ್ತಾನದ ವಾಯುಗುಣದ ಮೇಲೆ ಗಾಢ ಪ್ರಭಾವ ಬೀರಿದೆ. ಇದು ದಕ್ಷಿಣದಿಂದ ಬೀಸುವ ಮಳೆಯ ಮಾರುತಗಳನ್ನು ತಡೆದು ಇಲ್ಲಿ ಹೆಚ್ಚಿನ ಮಳೆ ಬೀಳಲು ಕಾರಣವಾಗಿದೆ. ಇದರ ಪೂರ್ವಭಾಗ ಮಂಜುಗಡ್ಡೆ ಮತ್ತು ನೀರ್ಗಲ್ಲ ನದಿಗಳಿಂದ ಕೂಡಿದೆ. ಇಲ್ಲಿಯ ಮಂಜುಗಡ್ಡೆಗಳು ಬೇಸಗೆಯಲ್ಲಿ ಕರಗುವುದರಿಂದ ಸಿಂಧೂ ನದಿ ಮತ್ತು ಅದರ ಉಪನದಿಗಳು ಸದಾ ತುಂಬಿ ಹರಿಯುತ್ತವೆ. ಈ ವಲಯದಲ್ಲಿ ಪರ್ವತಗಳ ವಿವಿಧ ಪಂಕ್ತಿಗಳು ಹಬ್ಬಿವೆ. ಉಪಪರ್ವತ ವಲಯ : ಪರ್ವತವಲಯ ಮತ್ತು ಸಿಂಧೂ ನದಿ ಬಯಲಿನ ನಡುವೆ ಇರುವ ಪ್ರದೇಶವನ್ನು 4 ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು: 1.ಸಿಂಧೂ ಆಚೆಗಿನ ಬಯಲು, 2.ಪೊಟ್ವಾರ್ ಪ್ರಸ್ತಭೂಮಿ, ಸಾಲ್ಟ್ ಶ್ರೇಣಿ ಮತ್ತು 4.ಸಿಯಾಲ್‍ಕೋಟ್ ಜಿಲ್ಲೆ.

ಕೋಹಾಟ್ ಬಯಲಿನ ದಕ್ಷಿಣಕ್ಕಿರುವ ಬನ್ನು ಬಯಲು ಹೆಚ್ಚಾಗಿ ಗುಡ್ಡ ಬೆಟ್ಟಗಳಿಂದ ಕೂಡಿದೆ. ಕೆಲವೆಡೆ ಗೋಡುಮಣ್ಣಿರುವುದನ್ನು ಬಿಟ್ಟರೆ ಉಳಿದಂತೆ ನೆಲ ಮರಳು ಅಥವಾ ಪುಡಿಗಲ್ಲಿನಿಂದ ಕೂಡಿದ್ದು, ವಾರ್ಷಿಕ ಮಳೆ ಸುಮಾರು 279 ಮಿ.ಮೀ ಮಾತ್ರ.

ಪಟ್ವಾರ್ ಪ್ರಸ್ಥಭೂಮಿಯ ಅಂಚಿನಿಂದ ದಕ್ಷಿಣಕ್ಕೆ ಅರಬ್ಬಿ ಸಮುದ್ರದವರೆಗೂ ಈ ಪ್ರದೇಶ ಹಬ್ಬಿದೆ. ಇದು ಫಲವತ್ತಾದ ಮೆಕ್ಕಲು ಮಣ್ಣಿನಿಂದ ಕೂಡಿದ್ದು, ಇದನ್ನು ಉತ್ತರ ವಲಯ ಮತ್ತು ದಕ್ಷಿಣ ವಲಯ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಉತ್ತರದಲ್ಲಿ ಸಿಂಧೂ ಮತ್ತು ಅದರ ಉಪನದಿಗಳು ಈ ಬಯಲನ್ನು ಸೀಳಿಕೊಂಡು ಹರಿಯುತ್ತವೆ. ನದಿಗಳ ನಡುವೆ ಭೂಮಿ ಎತ್ತರವಾಗಿದೆ. ಅಲ್ಲಲ್ಲಿ ಮರಳುದಿಣ್ಣೆಗಳಾಗಿವೆ. ಪಂಜಾಬ್ ಪ್ರದೇಶದಲ್ಲಿ ಹರಿಯುವ ಐದು ನದಿಗಳು ಒಂದಾಗಿ ಸೇರಿ ಮಿಥಾನ್‍ಕೋಟ್ ಬಳಿ ಸಿಂಧೂನದಿಯೊಡನೆ ಸಂಗಮಿಸುತ್ತವೆ. ಈ ನದಿಗಳಿಂದಾಗಿರುವ ದೋಆಬ್‍ಗಳ ಪೈಕಿ ಅತ್ಯಂತ ದೊಡ್ಡದು ಸಿಂಧ್ ಸಾಗರ್. ಅದು ಸಿಂಧೂ ಮತ್ತು ಚೀನಾಬ್ ನದಿಗಳ ನಡುವಿನ ಇತರ ಉಪನದಿಗಳ ನಡುವೆ ಇರುವ ದೋಆಬ್‍ಗಳು ಫಲವತ್ತಾಗಿವೆ. ಆಧುನಿಕ ನೀರಾವರಿ ವ್ಯವಸ್ಥೆಯಿಂದಾಗಿ ಈ ಬಯಲು ಪಾಕಿಸ್ತಾನದ ಅತ್ಯಂತ ಸಂಪದ್ಭರಿತ ವ್ಯವಸಾಯ ಕ್ಷೇತ್ರವಾಗಿದೆ.
ಸಿಂಧೂ ಬಯಲಿನ ದಕ್ಷಿಣ ವಲಯ ಸಿಂಧ್ ಪ್ರಾಂತ್ಯದಲ್ಲಿದೆ. ಪಶ್ಚಿಮಕ್ಕೆ ಕಿರ್ತಾರ್ ಮತ್ತು ಸುಲೇಮಾನ್ ಪರ್ವತಶ್ರೇಣಿಗಳು, ಪೂರ್ವಕ್ಕೆ ಭಾರತದ ಥಾರ್ ಮರುಭೂಮಿ ವಲಯ ಇವು ಇದರ ಮೇರೆಗಳು. ಇಲ್ಲಿ ಭೂಮಿ ಸಡಿಲವಾಗಿದೆ. ಸಿಂಧೂ ನದಿ ಇಲ್ಲಿ ಆಗಾಗ ಪಾತ್ರ ಬದಲಾಯಿಸುತ್ತದೆ. ಮರಳಿನಿಂದ ಕೂಡಿದ ಈ ವಿಸ್ತಾರವಾದ ಬಯಲಿನಲ್ಲಿ ಫಲವತ್ತಾದ ಮರಳು ಮತ್ತು ಜೇಡಿಮಣ್ಣು ಹೆಚ್ಚು. ಸಿಂಧೂನದಿ ಕಣಿವೆಯಲ್ಲಿ ಮೃದುವಾದ ಕೆಂಪು ಮಿಶ್ರಿತ ಹಾಗೂ ಜೇಡಿ ಮರಳು ಮಿಶ್ರಿತ ಮಣ್ಣಿದೆ. ಇಲ್ಲಿ ಎತ್ತರದ ಶಿಖರಗಳುಂಟು. ಪರ್ವತವಲಯ ಬರಡು ನೆಲ. ಪೂರ್ವದಲ್ಲಿರುವ ಮರುಭೂಮಿಗಳು ತಗ್ಗಾದ ಮರಳು ದಿಣ್ಣೆಗಳಿಂದಲೂ ಸಮತಟ್ಟು ಬಯಲುಗಳಿಂದಲೂ ಕೂಡಿವೆ. ಸಿಂಧೂ ನದಿಯ ಪಶ್ಚಿಮಕ್ಕಿರುವ ಮಾಂಛಾರ್ ಜೌಗು ಸರೋವರ ಸಂಪೂರ್ಣವಾಗಿ ನೀರಿನಿಂದ ತುಂಬಿದಾಗ 518 ಚ.ಕಿಮೀಗಳಷ್ಟು ವಿಸ್ತಾರವಾಗಿರುತ್ತದೆ. ದಕ್ಷಿಣ ಏಷ್ಯದಲ್ಲಿ ಇದು ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ. ಸಿಂಧೂ ನದಿಯ ಮುಖಜಭೂಮಿ ಅನೇಕ ಕಿಮೀ ಗಳಷ್ಟು ಅಗಲವಾಗಿದೆ. ಮುಖಜಭೂಮಿಯ ದಕ್ಷಿಣ ತೀರದಲ್ಲಿ ಸಮುದ್ರದ ಅಲೆಗಳು ಮತ್ತು ನದೀ ಪ್ರವಾಹಗಳಿಂದಾಗಿ ಕೆಲವೊಮ್ಮೆ ನದಿಯಲ್ಲಿ ಹಿನ್ನೀರು 32 ಕಿಮೀ ಗಳಷ್ಟು ದೂರ ಒಳಪ್ರದೇಶದ ಕಡೆ ಏರಿ ನಿಲ್ಲುತ್ತದೆ.

ಇದು ಸಿಂಧೂ ಬಯಲಿನಿಂದ ಪಶ್ಚಿಮಕ್ಕೆ ಕೋಡಿನಾಕಾರದಲ್ಲಿ ಮುಂಚಾಚಿ ಇರಾನಿನೊಂದಿಗೆ ಸಂಪರ್ಕಿಸುವ ವಿಸ್ತಾರ ಪ್ರದೇಶವನ್ನೊಳಗೊಂಡಿದೆ. ಈ ಪ್ರಸ್ಥಭೂಮಿಯನ್ನು ಪೂರ್ವದಲ್ಲಿ ಸುಲೇಮಾನ್ ಮತ್ತು ಕಿರ್ತಾರ್ ಶ್ರೇಣಿಗಳು ಸಿಂಧೂ ಬಯಲಿನಿಂದ ಬೇರ್ಪಡಿಸಿವೆ. ವಾಯವ್ಯಕ್ಕೆ ತೋಬಕಾಕರ್ ಮತ್ತು ಈಶಾನ್ಯಕ್ಕೆ ಗೋಮಲ್ ನದಿ ಇದರ ಪರಿಮಿತಿಗಳೆನ್ನಬಹುದು. ಪಶ್ಚಿಮಕ್ಕೆ ಇರಾನಿನ ಮಹಾಪ್ರಸ್ಥಭೂಮಿಯ ಭಾಗದಂತಿರುವ ಇದು ಪಾಕಿಸ್ತಾನದ ಗಡಿಯವರೆಗೂ ವ್ಯಾಪಿಸಿದೆ. ಪೂರ್ವದ ಕಿರ್ತಾರ್ ಮತ್ತು ಸುಲೇಮಾನ್ ಶ್ರೇಣಿಗಳು ಉತ್ತರ ದಕ್ಷಿಣವಾಗಿ ಹಬ್ಬಿದ್ದರೆ ದಕ್ಷಿಣ ತೀರಪ್ರದೇಶದ ಮಕ್ರಾನ್ ಬೆಟ್ಟಸಾಲು ಪೂರ್ವ-ಪಶ್ಚಿಮವಾಗಿ ಹಬ್ಬಿದೆ. ಕಾಕರ್ ಬೆಟ್ಟಸಾಲು ಈಶಾನ್ಯ-ನೈಋತ್ಯವಾಗಿ ವ್ಯಾಪಿಸಿದೆ. ಸುಲೇಮಾನ್ ಶ್ರೇಣಿಯಲ್ಲಿರುವ ತಖ್ತ್-ಇ-ಸುಲೇಮಾನ್ ಪರ್ವತದ ಎತ್ತರ 3.353 ಮೀ. ಉಳಿದೆಡೆ 1,829-2,134 ಮೀ. ಎತ್ತರದ ಶಿಖರಗಳು ಅಲ್ಲಲ್ಲಿವೆ. ಸುಲೇಮಾನ್ ಮತ್ತು ತೋಬಕಾಕರ್ ಶ್ರೇಣಿಗಳ ನಡುವೆ ಝೋಬ್ ಮತ್ತು ಬೆಜಿ ಉಪನದಿಗಳ ಜಲಾನಯನ ಪ್ರದೇಶಗಳಿವೆ. ಆಗ್ನೇಯದಲ್ಲಿರುವ ಕಿರ್ತಾರ್ ಶ್ರೇಣಿ ದಕ್ಷಿಣದಲ್ಲಿ 1,219 ಮೀಗಳಿಂದ ಹಿಡಿದು ಉತ್ತರದಲ್ಲಿ 2,438 ಮೀ. ವರೆಗೆ ಎತ್ತರವಾಗಿದೆ. ಕಿರ್ತಾರ್‍ನ ಉತ್ತರ ವಲಯದ ಅತ್ಯಂತ ಎತ್ತರದ ಭಾಗವಾದ ಮತ್ತು ಬಲೂಚಿಸ್ತಾನ ಪ್ರಸ್ಥಭೂಮಿಯ ಮಧ್ಯದಲ್ಲಿರುವ ಕಲಾತ್ ಪೀಠಭೂಮಿಯ ಎತ್ತರ 2,134,-2,438 ಮೀ. ಪಶ್ಚಿಮದ ಸೀಯಾಹಾನ್ ಶ್ರೇಣಿ ಮತ್ತು ವಾಯವ್ಯದ ಜಾಗೈ ಬೆಟ್ಟಗಳ ಕಡೆ ಭೂಮಿಯ ಎತ್ತರ ಕಡಿಮೆಯಾಗುತ್ತ ಹೋಗಿದೆ. ಇಲ್ಲಿ ಸಮತಟ್ಟಾದ ಮರುಭೂಮಿ ಬಯಲುಗಳಿವೆ. ಪಶ್ಚಿಮದ ಬೋಲಾನ್ ಮತ್ತು ಖೋಜಾಕ್ ಕಣಿವೆಗಳಿಂದಾಗಿ ಮೇಲಣ ಪ್ರಸ್ಥಭೂಮಿಯಿಂದ ಕೆಳಗಿನ ಪ್ರಸ್ಥಭೂಮಿ ಬೇರ್ಪಟ್ಟಿದೆ.

ಬಲೂಚಿಸ್ಥಾನ ಪ್ರಸ್ಥಭೂಮಿ ಅತ್ಯಂತ ಬರಡು ಪ್ರದೇಶ. ಇಲ್ಲಿ ಜನಸಾಂದ್ರತೆ ಬಲು ವಿರಳ. ಇದು ಇಡೀ ಪಾಕಿಸ್ತಾನದಲ್ಲೇ ತೀರ ಕಡಿಮೆ. ವ್ಯವಸಾಯಕ್ಕೆ ಅಷ್ಟು ಯೋಗ್ಯವಲ್ಲದ ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಸಾಕುವುದು ಮುಖ್ಯ ಕಸುಬು.

ಇವು ಬಲೂಚಿಸ್ತಾನ ಪ್ರಸ್ಥಭೂಮಿಯ ಉತ್ತರಕ್ಕಿರುವ ಗೋಮಲ್ ನದಿಯಿಂದ ಮುಂದೆ ಆಫ್ಘಾನಿಸ್ತಾನದ ಗಡಿಯ ಉದ್ದಕ್ಕೂ ಹಿಂದೂಕುಷ್ ಪರ್ವತಶ್ರೇಣಿಯ ಬುಡದವರೆಗೆ ವ್ಯಾಪಿಸಿದೆ. ಹಿಂದೂಕುಷ್‍ನ ಎತ್ತರ ಪರ್ವತ ವಲಯದ ದಕ್ಷಿಣಕ್ಕೆ ಕಾಬೂಲ್ ನದಿಯವರೆಗೂ ಈಶಾನ್ಯ-ನೈಋತ್ಯಾಭಿಮುಖವಾಗಿ ಪರ್ವತ ಸಾಲುಗಳು ಹಬ್ಬಿವೆ. ಕಾಬೂಲ್ ನದಿಯ ಉತ್ತರಕ್ಕೆ ಮತ್ತು ಸ್ವಾಟ್ ನದಿಯ ಪಶ್ಚಿಮಕ್ಕೆ 1,524-1,829 ಮೀ. ಎತ್ತರವಿರುವ ಮೊಹಮಂಡ್ ಬೆಟ್ಟಗಳಿವೆ. ಸ್ವಾಟ್ ನದಿಯ ಪೂರ್ವಕ್ಕಿರುವ ಮಾಲಕಂಡ್ ಶ್ರೇಣಿಸ್ವಾಟ್ ಕಣಿವೆಯನ್ನು ಪೆಷಾವರ್ ಕಣಿವೆಯಿಂದ ಬೇರ್ಪಡಿಸುತ್ತದೆ. ಕಾಬೂಲ್ ನದಿಯ ದಕ್ಷಿಣದಲ್ಲಿರುವ ಸಾಕರಮ್ ಆ ಪ್ರದೇಶದ ಅತ್ಯಂತ ಎತ್ತರವಾದ ಶಿಖರ (4,761 ಮೀ).

ಕಾಬೂಲ್ ನದಿಯತ್ತ ಹಬ್ಬಿರುವ ಕಿರಿಯ ಬೆಟ್ಟಸಾಲುಗಳ ದಕ್ಷಿಣದಲ್ಲಿ ಆಫ್ಘಾನಿಸ್ತಾನದ ಗಡಿಯ ಬಳಿ ಇತಿಹಾಸಪ್ರಸಿದ್ಧ ಖೈಬರ್ ಕಣಿವೆ ಇದೆ. ಕಾಬೂಲ್ ನದಿಯ ದಕ್ಷಿಣಕ್ಕೆ ಸಫೆದ್‍ಕೋ ಶ್ರೇಣಿ ಹಬ್ಬಿದೆ. ಸಫೆದ್‍ಕೋ ಶ್ರೇಣಿಯ ಗರಿಷ್ಠ ಎತ್ತರ 4,761 ಮೀ. ಈ ಶ್ರೇಣಿಯನ್ನು ಮೇಲಿನ ಕುರ್ರಮ್ ಕಣಿವೆಯಲ್ಲಿ ಹಬ್ಬಿರುವ, ನೈಋತ್ಯ ಬೆಟ್ಟಸಾಲುಗಳು ತುಂಡರಿಸುತ್ತವೆ. ಖೈಬರ್ ಮತ್ತು ಬೋಲಾನ್ ಕಣಿವೆಗಳ ಮಧ್ಯೆ ಗೋಮಲ್ ಕಣಿವೆ ಇದೆ. ಈ ವಲಯದಲ್ಲಿ ಗೋಮಲ್, ತೋಚಿ ಮತ್ತು ಕುರ್ರಂ ನದಿಗಳು ಹರಿಯುತ್ತವೆ.

ಒಟ್ಟಿನಲ್ಲಿ ಪಶ್ಚಿಮ ಸರಹದ್ದು ಪರ್ವತಗಳ ವಲಯ ಕಣಿವೆಗಳಿಂದಲೂ ಮತ್ತು ಪರ್ವತ ಸಾಲುಗಳಿಂದಲೂ ಕೂಡಿದೆ. ಮಾನ್‍ಸೂನ್ ವಲಯದ ಹೊರಗಿರುವ ಈ ಪ್ರದೇಶದಲ್ಲಿ ಮಳೆ ಕಡಿಮೆ. ಸರಾಸರಿ 304-635 ಮಿಮೀ. ಇಲ್ಲಿ ಸಸ್ಯ ಜೀವನ ಸಮೃದ್ಧವಾಗಿಲ್ಲ. ಕಣಿವೆಗಳಲ್ಲಿ ನದಿಗಳ ದಡಗಳಲ್ಲಿ ಇಳಿಜಾರು ತಟ್ಟುಗಳನ್ನು ಮಾಡಿರುವಲ್ಲಿ ಮತ್ತು ಬೆಟ್ಟಗಳ ತಪ್ಪಲಲ್ಲಿ ಮಾತ್ರ ವ್ಯವಸಾಯ ಸಾಧ್ಯ. ಪ್ರಾಣಿ ಸಾಕಣೆ ಮುಖ್ಯ ಕಸಬು. ಹೇಸರಗತ್ತೆ ಇಲ್ಲಿಯ ಮುಖ್ಯ ಹೇರು ಪ್ರಾಣಿ. ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಪೂರ್ವ-ಪಶ್ಚಿಮವಾಗಿ ಅಲ್ಲಲ್ಲಿ ಕಿರು ಮರುಭೂಮಿಗಳಿವೆ. ಅವುಗಳಲ್ಲಿ ಸಿಂಧ್ ಸಾಗರ್ ದೋಆಬ್ ಮುಖ್ಯವಾದ್ದು. ಅದರ ಮಧ್ಯದಲ್ಲಿರುವ ಥಾಲ್ ಶುದ್ಧ ಮರುಭೂಮಿಯ ಲಕ್ಷಣಗಳಿಂದ ಕೂಡಿದೆ. ಭಾವಲ್‍ಪುರದ ಚೊಲಿಸ್ತಾನ ಇನ್ನೊಂದು ದೊಡ್ಡ ಮರುಭೂಮಿ. ಇನ್ನೂ ದಕ್ಷಿಣಕ್ಕೆ ಸಿಂಧ್ ಪ್ರಾಂತ್ಯದಲ್ಲಿ ಥಾರ್ ಮರುಭೂಮಿ ಇದೆ. ಇದು ಪಶ್ಚಿಮ ಭಾರತದ ಥಾರ್ ಮರುಭೂಮಿಯ ವಿಸ್ತøತ ಪ್ರದೇಶ. ಬಲೂಚಿಸ್ಥಾನದ ಪಶ್ಚಿಮಭಾಗದಲ್ಲೂ ಮರುಭೂಮಿಗಳಿವೆ.

ಪಾಕಿಸ್ತಾನದ ಬಹುಭಾಗ ಮರಳು ಬಯಲು ಮತ್ತು ಬರಡು ಪ್ರದೇಶದಿಂದ ಕೂಡಿದ್ದರೂ ಪ್ರಪಂಚದಲ್ಲೇ ಅಸಾಧಾರಣವೆನ್ನುವಂತೆ ಇಲ್ಲಿ ಅನೇಕ ನದಿಗಳು ತುಂಬಿ ಹರಿಯುತ್ತವೆ. ಹಿಂದೂಕುಷ್ ಮತ್ತು ಹಿಮಾಲಯ ಪರ್ವತ ವಲಯಗಳು ಇಲ್ಲಿಯ ನದಿಗಳಿಗೆ ಸತತವಾಗಿ ಜಲವನ್ನೂಡಿಸುತ್ತವೆ. ಸಿಂಧೂ ಮತ್ತು ಅದರ ಉಪನದಿಗಳು ಬಹುಮಟ್ಟಿಗೆ ಪಾಕಿಸ್ತಾನದ ಸಮಗ್ರ ನದಿ ವ್ಯವಸ್ಥೆಯಾಗಿ ಪರಿಣಮಿಸಿವೆ.

ಸಿಂಧೂ ನದಿ ಟಿಬೆಟ್‍ನಲ್ಲಿ ಹುಟ್ಟಿ ವಾಯವ್ಯಾಭಿಮುಖವಾಗಿ ಕಾಶ್ಮೀರವನ್ನು ಹಾಯುತ್ತದೆ. ಅಲ್ಲಿಯ ಕಾರಕೋರಂ ಶ್ರೇಣಿಯಲ್ಲಿ ಬೃಹತ್ ನೀರ್ಗಲ್ಲ ಹೊಳೆಗಳನ್ನು ಕೂಡಿಕೊಂಡು ದಕ್ಷಿಣಾಭಿಮುಖವಾಗಿ ತಿರುಗಿ ಪಾಕಿಸ್ತಾನವನ್ನು ಈಶಾನ್ಯ ಭಾಗದಲ್ಲಿ ಪ್ರವೇಶಿಸುತ್ತದೆ. ಒಟ್ಟು 2,900 ಕಿಮೀಗಳ ಉದ್ದವಿರುವ ಈ ನದಿ ಬೆಟ್ಟ ಗುಡ್ಡಗಳ ಮಧ್ಯೆ ವೇಗವಾಗಿ ಹರಿದು ಮುಂದೆ ತರ್ಬೆಲ ಅಣೆಕಟ್ಟು ಪ್ರದೇಶವನ್ನು ದಾಟುತ್ತದೆ. ಅಟ್ಟಾತ್‍ಗೆ ಸ್ವಲ್ಪ ಮೇಲ್ಭಾಗದಲ್ಲಿ ಆಫ್ಘಾನಿಸ್ತಾನದಿಂದ ಹರಿದು ಬರುವ ಕಾಬೂಲ್ ನದಿ ಸಿಂಧೂ ನದಿಯನ್ನು ಕೂಡುತ್ತದೆ. ಇದು ಕಾಲಾಬಾಗ್ ಬಳಿ ಸಾಲ್ಟ್ ಶ್ರೇಣಿಯನ್ನು ಸೀಳಿಕೊಂಡು ಪಂಜಾಬಿನ ಬಯಲನ್ನು ಪ್ರವೇಶಿಸುತ್ತದೆ.

ಸಿಂಧೂ ನದಿ ಪಂಜಾಬಿನ ಬಯಲಿಗೆ ಬರುವಾಗ ಮಂದಗಮನದಿಂದ ದೊಡ್ಡ ಪಾತ್ರದಲ್ಲಿ ತುಂಬಿ ಹರಿಯುತ್ತದೆ. ಇಲ್ಲಿ ಅದಕ್ಕೆ ಪೂರ್ವದ ಕಡೆ ಝೀಲಂ, ಚೀನಾಬ್, ರಾವಿ, ಬೀಯಾಸ, ಸಟ್ಲೆಜ್ ಮೊದಲಾದ ಉಪನದಿಗಳು ಸೇರುತ್ತವೆ. ಇವು ಸೇರಿದ ಮೇಲೆ ಸಿಂಧೂ ಬೃಹತ್ ಸ್ವರೂಪ ತಳೆದು ಹರಿಯುತ್ತದೆ.

ಪಾಕಿಸ್ತಾನದ ಪಶ್ಚಿಮಭಾಗದಲ್ಲಿ ಹರಿಯುವ ಸ್ವಾಟ್ ನದಿ ಸಿಂಧುವಿನ ಉಪ ನದಿಯಾದ ಕಾಬೂಲ್ ನದಿಯನ್ನು ಸೇರುತ್ತದೆ. ಪೂರ್ವ ಆಫ್ಘಾನಿಸ್ತಾನದಿಂದ ಹರಿದು ಬರುವ ಗೋಮಲ್ ನದಿ ಡೇರ ಇಸ್ಮೇಲ್ ಖಾನ್ ಬಳಿ ಸಿಂಧೂ ನದಿಯನ್ನು ಸೇರುತ್ತದೆ. ಇದರ ಮುಖ್ಯ ಉಪನದಿ ಝೂಬ್, ವಾಯವ್ಯ ಗಡಿ ಪ್ರಾಂತ್ಯದಲ್ಲಿ ಹರಿಯುವ ತೋಚಿ ನದಿ ಕುರ್ರಂ ನದಿಯೊಡಗೂಡಿ ಬನ್ನು ಪ್ರದೇಶದಲ್ಲಿ ಸಿಂಧೂ ನದಿಯನ್ನು ಸೇರುತ್ತದೆ.

ಸಿಂಧ್ ಪ್ರಾಂತ್ಯದಲ್ಲಿ ಈ ನದಿ ತಗ್ಗಿನಲ್ಲಿ ನಿಧಾನವಾಗಿ ಹರಿಯುತ್ತದೆ. ಇದರಿಂದ ನದಿಯ ಪಾತ್ರದಲ್ಲಿ ಮೆಕ್ಕಲು ಮಣ್ಣು ಶೇಖರವಾಗಿ ಅದು ಮರಳು ಬಯಲಿಗಿಂತ ಎತ್ತರವಾಗಿದೆ. ನದಿ ಆಗಾಗ ಪಾತ್ರ ಬದಲಾಯಿಸುವುದರಿಂದ ಇಲ್ಲಿಯ ಬಯಲುಗಳ ಮೇಲ್ಮೈ ಸ್ವರೂಪದ ಮೇಲೆ ಪರಿಣಾಮವುಂಟಾಗುವುದಲ್ಲದೆ ಅಪಾರ ಹಾನಿ ತಟ್ಟುವುದುಂಟು. ಟಟ್ಟಾ ಬಳಿ ನದಿ ಕವಲೊಡೆದು ಕರಾಚಿಗೆ ದಕ್ಷಿಣದಲ್ಲಿ ಸಮುದ್ರ ಸೇರುತ್ತದೆ.

ಪಾಕಿಸ್ತಾನದ ಉದ್ದಕ್ಕೂ ಕಾಲುವೆ ತೋಡಿದಂತೆ ಹರಿಯುವ ಸಿಂಧೂ ಮತ್ತು ಅದರ ಉಪನದಿಗಳು ಅಲ್ಲಿಯ ಜನಜೀವನದ ಮೇಲೆ ಅಗಾಧ ಪರಿಣಾಮ ಬೀರಿವೆ. ಈ ವಲಯದ ಹೊರಗಿರುವ ಬಲೂಚಿಸ್ತಾನದ ಪಶ್ಚಿಮ ಮತ್ತು ದಕ್ಷಿಣ ಭಾಗದ ಕೆಲವು ಸಣ್ಣ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ. ಅವುಗಳ ಪೈಕಿ ಹಿಂಗೋಲ್ ಅಥವಾ ನಾಲ್ ಮತ್ತು ದಷ್ತ್ ಮುಖ್ಯವಾದವು. ಇನ್ನು ಕೆಲವು ತೊರೆಗಳು ಪಶ್ಚಿಮಕ್ಕೆ ಹರಿದು ದೊಡ್ಡ ನೀರುದಾಣಗಳನ್ನು ಅಥವಾ ಜೌಗುಸರೋವರಗಳನ್ನು ನಿರ್ಮಿಸಿವೆ.

ಪಾಕಿಸ್ತಾನದ ಮಣ್ಣಿನ ಬಹುಭಾಗ ಒಣ ಮಣ್ಣಿನ ವರ್ಗಕ್ಕೆ ಸೇರಿದೆ. ಅದರಲ್ಲಿ ಕಾರ್ಬೊನೇಟ್ ಅಂಶ ಹೆಚ್ಚಿದ್ದು, ಜೈವಿಕ ವಸ್ತು ಕಡಿಮೆ ಪ್ರಮಾಣದಲ್ಲಿದೆ. ಇದು ಕಡಿಮೆ ಮತ್ತು ಅನಿಶ್ಚಿತ ಮಳೆ ಬೀಳುವ ಭೂಮಿಯ ಲಕ್ಷಣ. ಎತ್ತರದ ಪರ್ವತ ವಲಯದಲ್ಲಿ ಹೆಚ್ಚಾಗಿ ಸುಣ್ಣದಕಲ್ಲು ಮತ್ತು ಮರಳಗಲ್ಲು ಮಿಶ್ರಿತಮಣ್ಣು ಕಂಡುಬರುತ್ತವೆ. ಬನ್ನು ಪ್ರದೇಶದಲ್ಲಿ ಮೃದು ಮರಳು ಹರಡಿದೆ. ಡೇರ ಇಸ್ಮೇಲ್ ಖಾನ್ ಭಾಗದಲ್ಲಿ ಪುಡಿಗಲ್ಲು ಮತ್ತು ಮೆಕ್ಕಲು ಮಣ್ಣಿದೆ. ಹಾಗೂ ಸುಣ್ಣದಕಲ್ಲು ವ್ಯಾಪಿಸಿದೆ. ಸಿಯಾಲ್‍ಕೋಟ್ ಜಿಲ್ಲೆಯಲ್ಲಿ ಫಲವತ್ತಾದ ಮಣ್ಣುಂಟು.

ಸಿಂಧೂ ಬಯಲಿನಲ್ಲಿ ಸಿಂಧೂ ನದಿ ಆಗಾಗ ಪಾತ್ರ ಬದಲಾಯಿಸುವುದರಿಂದ ಅಲ್ಲಿ ಕೆಲವು ಕಡೆ ಪ್ರವಾಹದ ಮೆಕ್ಕಲುಮಣ್ಣು ಹರಡಿದೆ. ಸಿಂಧ್‍ನ ಸಿಬಿ ಮತ್ತು ನಾರಾ ಪ್ರದೇಶಗಳಲ್ಲಿ ಸಸ್ಯಾಂಗವಿರುವ ಮತ್ತು ಗೊಬ್ಬರ ಮಣ್ಣಿರುವ ನೆಲವುಂಟು. ಥಾರ್ ಮರುಭೂಮಿ ಪ್ರದೇಶ ಮತ್ತು ಸಿಂಧ್ ಸಾಗರ್ ದೋಅಬ್‍ನ ಜೇಡು ಬೆರೆತ ಮರಳು ಮಣ್ಣಿನಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಅಂಶ ಗಣನೀಯವಾಗಿದೆ. ಸಿಂಧ್‍ನ ತೀರಪ್ರದೇಶದಲ್ಲಿ ಮತ್ತು ಜೌಗು ಹಾಗೂ ಸರೋವರಗಳ ದಡದಲ್ಲಿ ಲವಣಮಿಶ್ರಿತ ಮಣ್ಣುಂಟು.

ಮರುಭೂಮಿ ಪ್ರದೇಶಗಳಲ್ಲಿ ಮತ್ತು ಬಲೂಚಿಸ್ತಾನದ ಬಹುಭಾಗದಲ್ಲಿ ಗಾಳಿಯಿಂದ ತೂರಿಬಂದ ಪುಡಿಮಣ್ಣಿನ ಶೇಖರಣೆಗಳಿವೆ. ಅದು ಬಂಕೆ ಮಣ್ಣು ಅಥವಾ ಬಂಕೆ ಮಣ್ಣು ಮಿಶ್ರಿತ ಮೆಕ್ಕಲುಮಣ್ಣಿನಿಂದ ಕೂಡಿದೆ. ವಿಸ್ತಾರ ಪ್ರದೇಶಗಳಲ್ಲಿ ಶುದ್ಧ ಮರಳು ಇದೆ. ಪಾಕಿಸ್ತಾನದಲ್ಲಿ ನದಿ ಕಣಿವೆಗಳು ಮತ್ತು ಬೆಟ್ಟದ ತಪ್ಪಲುಗಳನ್ನು ಬಿಟ್ಟರೆ ಉಳಿದ ಎಡೆ ಇರುವ ಮಣ್ಣು ವ್ಯವಸಾಯಕ್ಕೆ ಅಷ್ಟು ಉತ್ಕøಷ್ಟವಾಗಿಲ್ಲ. ಹೊಸ ಮಣ್ಣಿನಲ್ಲಿ ನೀರಾವರಿ ಬೆಳೆ ಸಾಗುವಳಿ ಮಾಡಿದಾಗ ಉತ್ತೇಜನಕಾರಕ ಫಲ ದೊರೆತಿದೆ. ಮಣ್ಣು ಸಂರಕ್ಷಣೆ ಮತ್ತು ನೀರಾವರಿ ಯೋಜನೆಗಳು ಇಲ್ಲಿಯ ನೆಲದ ಉಪಯುಕ್ತತೆಯನ್ನು ಹೆಚ್ಚಿಸಿವೆ.

ಪಾಕಿಸ್ತಾನ ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರಕ್ಕೆ ಏಷ್ಯದ ಮುಖ್ಯ ಭೂ ಭಾಗದಲ್ಲಿ ಬರುವುದರಿಂದ ಇಲ್ಲಿಯದು ಖಂಡಾಂತರ ಲಕ್ಷಣದ ವಾಯುಗುಣ, ಇದರ ಗಣನೀಯಭಾಗ ಮಾನ್‍ಸೂನ್ ಮಾರುತವಲಯಕ್ಕೆ ಸೇರಿದ್ದರೂ ಉಪಖಂಡದ ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ಮಳೆ ತುಂಬ ಕಡಿಮೆ. ಹಿಮಾಲಯದ ದಕ್ಷಿಣದ ಇಳಿಜಾರು ಮತ್ತು ಉಪಪರ್ವತ ವಲಯದಲ್ಲಿ ಸರಾಸರಿ 750-900 ಮಿಮೀ. ಮಳೆಯಾಗುತ್ತದೆ. ಪಟ್ವಾರ್ ಪ್ರಸ್ಥಭೂಮಿಯಲ್ಲಿ 500 ಮಿಮೀ. ಮಳೆಯಾಗುತ್ತದೆ. ಅಲ್ಲಿಂದ ದಕ್ಷಿಣಕ್ಕೆ ಬಹು ಬರಡು ಪ್ರದೇಶವಿದೆ. ಗುಡ್ಡಗಾಡಿನಲ್ಲಿ 50.8 ರಿಂದ 406.4 ಮಿಮೀ ವರೆಗೆ ಮಳೆ ಬಿದ್ದರೆ, ತೀರ ಪ್ರದೇಶದಲ್ಲಿ 101.6 ರಿಂದ 279.4 ಮಿಮೀ ವರೆಗೆ ಮಳೆ ಬೀಳುತ್ತದೆ. ಸಿಂಧ್‍ನ ಪಶ್ಚಿಮಭಾಗದಲ್ಲಿ ಮತ್ತು ಜಾಕೋಬಾದ್‍ನಲ್ಲಿ 127 ಮಿಮೀ ಗಿಂತ ಕಡಿಮೆ ಮಳೆಯಾಗುತ್ತದೆ. ಪಾಕಿಸ್ತಾನದ ಬಹುಭಾಗ ಒಣಪ್ರದೇಶ.

ಪಾಕಿಸ್ತಾನದ ಶ್ರಾಯೀಣ ಮತ್ತು ದೈನಿಕ ಉಷ್ಣತೆಗಳಲ್ಲಿ ತೀವ್ರ ವ್ಯತ್ಯಾಸಗಳಾಗುತ್ತದೆ. ವಿಶೇಷವಾಗಿ ಸಿಂಧ್ ಪ್ರದೇಶದಲ್ಲಿ ಬೇಸಗೆಯಲ್ಲಿ ಉಷ್ಣತೆ ಗರಿಷ್ಠ ಮಟ್ಟ ಮುಟ್ಟುತ್ತದೆ. ಇಡೀ ಉಪಖಂಡದ ಗರಿಷ್ಠ ಉಷ್ಣತೆಯಾದ 52 ಡಿಗ್ರಿ ಸೆ. ಜಾಕೋಬಾದ್‍ನಲ್ಲಿ ದಾಖಲಾಗಿದೆ. ಬಲೂಚಿಸ್ತಾನ್ ಪ್ರಸ್ಥಭೂಮಿಯಲ್ಲಿ ಉಷ್ಣತೆ ಅಧಿಕ. ತೀರದ ಬಯಲುಗಳಲ್ಲಿ ಬೇಸಗೆಯಲ್ಲಿ ಆಗಾಗ ಉಷ್ಣತೆ 46 ಡಿಗ್ರಿ ಸೆ. ದಾಟುತ್ತದೆ. ದಿನದ ಉಷ್ಣತೆಯಲ್ಲಿ ತೀವ್ರ ವ್ಯತ್ಯಾಸಗಳು ಕಂಡುಬರುತ್ತವೆ. ಬೇಸಗೆಯಲ್ಲಿ ಹಗಲಿನಲ್ಲಿ ಬಯಲುಗಳ ಮೇಲೆ ಲೂ ಎಂಬ ಬಿಸಿಮಾರುತಗಳು ಬೀಸುತ್ತವೆ. ದೂಳಿನಿಂದ ಕೂಡಿದ ಬಿರುಗಾಳಿ ಬೀಸಿ ಸಿಡಿಲುಗುಡುಗು ಸಮೇತ ಮಳೆ ತರುವುದುಂಟು. ಇದರಿಂದ ತಾತ್ಕಾಲಿಕವಾಗಿ ಉಷ್ಣತೆ ಕಡಿಮೆಯಾಗುತ್ತದೆ. ಚಳಿಗಾಲ ತಂಪಾಗಿರುತ್ತದೆ. ಕಲಾಟೆ ಮತ್ತು ಕ್ವೆಟ್ಟಾಗಳಲ್ಲಿ ಸ್ವಲ್ಪ ಹಿಮ ಬೀಳುತ್ತದೆ.

ಕಿಸ್ತಾನದ ಉತ್ತರದ ಪರ್ವತಶ್ರೇಣಿಗಳನ್ನು ಬಿಟ್ಟರೆ ಉಳಿದೆಡೆ ಸಸ್ಯವರ್ಗ ಬಡವಾಗಿದೆ. ಎತ್ತರದ ಪರ್ವತದ ಇಳಿಜಾರುಗಳಲ್ಲಿ ಓಕ್ ಮತ್ತು ಪೈನ್ ಮರಗಳಿಂದ ಕೂಡಿದ ದಟ್ಟವಾದ ಕಾಡುಗಳಿವೆ. ಕುರುಚಲು ಕಾಡುಗಳಿರುವಲ್ಲಿ ಗಡುಸಾದ ನೀಳಹುಲ್ಲು ಮತ್ತು ಪೊದೆಗಳು ವ್ಯಾಪಿಸಿವೆ. ಪಂಜಾಬಿನ ಮರ್ರಿ ಬೆಟ್ಟಗಳಲ್ಲಿ ಉಪೋಷ್ಣ ವಲಯ ಮತ್ತು ಸಮಶೀತೋಷ್ಣ ವಲಯ ಕಾಡುಗಳಿವೆ. ಬಯಲುಗಳಲ್ಲಿ ದೊಡ್ಡ ಮರಗಳು ವಿರಳ. ಬಲೂಚಿಸ್ತಾನದಲ್ಲಿ ಮತ್ತು ಸಾಲ್ಟ್ ಶ್ರೇಣಿ ಹಾಗೂ ಪಶ್ಚಿಮ ಸರಹದ್ದಿನ ಪರ್ವತಗಳ ಸಸ್ಯವರ್ಗದಲ್ಲಿ ಬಹುಮಟ್ಟಿಗೆ ಜೀರೋಫೈಟಿಕ್ ಸಸ್ಯಗಳಿವೆ. ಇಲ್ಲಿ ಪಿಸ್ತಾ, ಆಲಿವ್, ಆಷ್, ವಿಲೋ ಮರಗಳಿವೆ. ಬೆಟ್ಟದ ಇಳಿಜಾರುಗಳಲ್ಲಿ ಜಾಲಿ ಜಾತಿಯ ಮರ ಮತ್ತು ಹುಲ್ಲು ಬೆಳೆದಿವೆ. ಸಿಂಧೂ ಕಣಿವೆಯಲ್ಲಿ ಜಾಲಿ ಜಾತಿ ಮರಗಳು ಮತ್ತು ಉಳಿದೆಡೆ ತಾಳೆ ಜಾತಿ ಮರಗಳು ಇವೆ.

ಮೀಸಲು ಕಾಡುಗಳಲ್ಲಿ ಪ್ಲಾಂಟೇಷನ್‍ಗಳಿವೆ. ಕೆಲವೆಡೆ ಹಣ್ಣಿನ ಮರಗಳ ತೋಪುಗಳುಂಟು. ಮಾವು, ದ್ರಾಕ್ಷಿ ಸಸ್ಯಗಳಿವೆ. ಇತ್ತೀಚೆಗೆ ತಂದು ಬೆಳೆಸಿದ ಬಾಳೆ, ಕಿತ್ತಳೆ ವಿಶಿಷ್ಟ ಹಣ್ಣಿನ ಸಸ್ಯಗಳಾಗಿವೆ. ಗುಡ್ಡಗಳಲ್ಲಿ ಗಿಡಮೂಲಿಕೆ, ಗೆಡ್ಡೆಗಳು ಹೇರಳವಾಗಿವೆ. ಬಲೂಚಿಸ್ತಾನದಲ್ಲಿ ಕ್ಷಾಮಕಾಲದಲ್ಲಿ ಹುಲ್ಲುಬೀಜಗಳನ್ನು ತಿನ್ನುತ್ತಿದ್ದರು. ಸಿಂಧೂ ಮತ್ತು ಅದರ ಉಪನದಿಗಳಿಂದ ವ್ಯಾಪಕವಾಗಿ ನೀರಾವರಿ ನಡೆದಿರುವುದರಿಂದ ಬೋಳು ಬಯಲುಗಳಲ್ಲಿ ಕಬ್ಬು, ಗೋಧಿ, ಹತ್ತಿ ಮತ್ತು ಬತ್ತದ ಬೆಳೆಗಳು ವ್ಯಾಪಕವಾಗಿವೆ.

ಎತ್ತರದ ಪರ್ವತಗಳಲ್ಲಿ ಕಾಡುಪ್ರಾಣಿಗಳು ಅಧಿಕ. ಕಂದು ಕರಡಿ, ಹಿಮಾಲಯದ ಕಪ್ಪು ಕರಡಿ, ಜಿಂಕೆ, ಹಿಮಸಾರಂಗ, ಸೈಬೀರಿಯನ್ ಕಾಡು ಮೇಕೆ ಮತ್ತು ವಿವಿಧ ತಳಿಗಳ ಕಾಡುಕುರಿಗಳು ಇವೆ. ಕೆಲವು ಕಾಡುಗಳಲ್ಲಿ ಜಿಂಕೆ, ಮುಳ್ಳುಹಂದಿ, ಕಾಡುಹಂದಿ, ತೋಳ, ನರಿ, ಕಾಡುಬೆಕ್ಕು ಮೊದಲಾದ ಪ್ರಾಣಿಗಳು ಮತ್ತು ಬಾವಲಿಗಳುಂಟು.

ಸಿಂಧ್‍ನಲ್ಲಿರುವ ಮ್ಯಾಂಚಾರ್ ಸರೋವರದಲ್ಲಿ ಅಪಾರ ಸಂಖ್ಯೆಯಲ್ಲಿ ನೀರುಹಕ್ಕಿಗಳಿವೆ. ಕಾಡುಬಾತು, ಹೆಬ್ಬಾತು, ಮರಬಾತು, ಕೊಕ್ಕರೆ ಮೊದಲಾದ ದೊಡ್ಡ ಪಕ್ಷಿಗಳುಂಟು. ವಿವಿಧ ದಂಶಕ ಪ್ರಾಣಿಗಳು ಮತ್ತು ಉರಗಗಳು ದೇಶಾದ್ಯಂತ ಇವೆ. ಮಲಗಿದಾಗ ತನ್ನ ಬಲಿಯ ಉಸಿರೆಳೆದು ಕೊಲ್ಲುತ್ತದೆಂದು ನಂಬಲಾದ ಮಂಡಲದ ಹಾವು ಇದೆ.

ಸಿಂಧೂ ನದಿಯ ಹಿನ್ನೀರಿನಲ್ಲಿ ಮತ್ತು ನಾರಾ ಕಾಲುವೆಯಲ್ಲಿ ಮೊಸಳೆಗಳುಂಟು. ಬಲೂಚಿಸ್ತಾನದ ಹಿಂಗಲ್ ನದಿಯ ಮೊಸಳೆಗಳಿವೆ. ನದಿಗಳಲ್ಲಿ ವಿಪುಲವಾಗಿ ಮೀನುಗಳುಂಟು. ಸಮುದ್ರದಲ್ಲಿ ತಿಮಿಂಗಿಲ, ಹಂದಿ ಮೀನು, ಷಾರ್ಕ್, ಸೋಲ್ ಸಾರ್ಡಿನ್ ಮೊದಲಾದ ಮೀನುಗಳಿವೆ.

ಪಾಕಿಸ್ತಾನದಲ್ಲಿ ಪ್ರಾಣಿಗಳನ್ನು ಸಾಕುವುದು ಮುಖ್ಯ ಕಸಬುಗಳಲ್ಲೊಂದು. ದನ, ಎಮ್ಮೆ, ಕುರಿ, ಒಂಟೆ, ಕತ್ತೆ, ಕುದುರೆ, ಹೇಸರಗತ್ತೆ ಮೊದಲಾದವನ್ನು ಸಾಕುತ್ತಾರೆ. ಹೇಸರಗತ್ತೆ ಮತ್ತು ಎತ್ತುಗಳನ್ನು ಸಾಗಣೆಗೆ ಬಳಸುತ್ತಾರೆ. ಒಂಟೆಗಳನ್ನು ಸಂಚಾರಕ್ಕೆ ಮತ್ತು ಸಾಂದರ್ಭಿಕವಾಗಿ ಉಳುವುದಕ್ಕೆ ಬಳಸುತ್ತಾರೆ.

ಪಾಕಿಸ್ತಾನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಕೃಷಿಯೇ ಇದರ ಬೆನ್ನೆಲುಬು. ಕೃಷಿ ಕ್ಷೇತ್ರದಲ್ಲಿ ಅಪಾರವಾದ ಸಮಸ್ಯೆಗಳನ್ನೆದುರಿಸುತ್ತಿರುವ ಮತ್ತು ಕೈಗಾರಿಕೆಯಲ್ಲಿ ಹಿಂದುಳಿದಿರುವ ರಾಷ್ಟ್ರ ಪಾಕಿಸ್ತಾನ.

ಪಾಕಿಸ್ತಾನದ ಜನಸಂಖ್ಯೆಯಲ್ಲಿ ಸೇ.25ರಷ್ಟು ಜನ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಉಳಿದ ಸೇ.75ರಷ್ಟು ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 20001ರ ಜನಗಣತಿಯ ಪ್ರಕಾರ, 1 ಲಕ್ಷ ಜನಸಂಖ್ಯೆಯನ್ನು ಮೀರಿದ 28 ಪಟ್ಟಣಗಳು ಪಾಕಿಸ್ತಾನದಲ್ಲಿದ್ದುವು. 1961ರಿಂದೀಚೆಗೆ ಪಟ್ಟಣಗಳಲ್ಲಿನ ಜನಸಂಖ್ಯೆ ವಿಪರೀತವಾಗಿ ಬೆಳೆಯುತ್ತ ಇದೆ. ಸರ್ಕಾರ ಕೈಗಾರಿಕೆಗೆ ನೀಡುತ್ತಿರುವ ಪ್ರೋತ್ಸಾಹ ಇದಕ್ಕೆ ಮುಖ್ಯ ಕಾರಣ.

ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಪಾಕಿಸ್ತಾನ ವಿಶ್ವದ ಅತ್ಯಂತ 20 ಬಡರಾಷ್ಟ್ರಗಳಲ್ಲಿ ಒಂದು. 1970ರಲ್ಲಿ ಈ ದೇಶದಲ್ಲಿಯ ಸರಾಸರಿ ತಲಾ ಆದಾಯ 140 ಡಾಲರ್‍ಗಳಷ್ಟಿತ್ತು. ಆರ್ಥಿಕತೆ ತೀವ್ರವಾಗಿ ಹಿಂದುಳಿದಿರುವ ಕೃಷಿ ಕ್ಷೇತ್ರವನ್ನು ಅವಲಂಬಿಸಬೇಕಾಗಿರುವುದರಿಂದ ಪಾಕಿಸ್ತಾನ ಬಡರಾಷ್ಟ್ರವಾಗಿಯೇ ಮುಂದುವರಿದಿದೆ. ಪಾಕಿಸ್ತಾನದ ಆರ್ಥಿಕ ಇತಿಹಾಸ ಆ ದೇಶದ ಕೃಷಿ ಕ್ಷೇತ್ರ ಹೇಗೆ ಸತತವಾಗಿ ಕಷ್ಟಗಳನ್ನೆದುರಿಸಬೇಕಾಯಿತು ಎಂಬುದನ್ನು ಪ್ರಕಟಿಸುತ್ತದೆ. ಮಳೆಯ ಅನಿಶ್ಚಯತೆ, ವಿಶ್ವಮಾರುಕಟ್ಟೆಯಲ್ಲಿ ಕೃಷಿ ವಸ್ತುಗಳ ಬೆಲೆ ಇಳಿತಾಯ ಇವು ಪಾಕಿಸ್ತಾನವನ್ನು ಕಷ್ಟಕ್ಕೆ ಸಿಲುಕಿಸಿದ ಮುಖ್ಯವಾದ ಅಂಶಗಳಾಗಿವೆ. ಕೃಷಿಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸಾರ್ವತ್ರಿಕವಾಗಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಕ್ಕಾಗಿ ಪಾಕಿಸ್ತಾನ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡು ಮುಗಿಸಿದೆ. ಆದರೆ ಈ ಯೋಜನೆಗಳೆಲ್ಲವೂ ಸಂಪೂರ್ಣವಾಗಿ ಯಶಸ್ಸನ್ನು ಸಾಧಿಸಿಲ್ಲ. ಹೀಗಾಗಿ ಪಾಕಿಸ್ತಾನದಲ್ಲೂ ಆರ್ಥಿಕ ಅಭಿವೃದ್ಧಿ ತುಂಬ ಮಂದಗತಿಯಿಂದ ಸಾಗಿದೆ.

ಪಾಕಿಸ್ತಾನದ ಆರ್ಥಿಕತೆಯಲ್ಲಿ ಕೃಷಿಯೇ ಅತ್ಯಂತ ಪ್ರಧಾನವಾದ ಕ್ಷೇತ್ರ 1971-72ರಲ್ಲಿ ಕೃಷಿ, ಅರಣ್ಯ ಮತ್ತು ಮತ್ಸ್ಯ ಕ್ಷೇತ್ರ ಉತ್ಪನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಸೇ.41ರಷ್ಟು ಇತ್ತು. ದೇಶದ ಸೇ.80ರಷ್ಟು ಜನ ಕೃಷಿಯನ್ನೇ ಆಧರಿಸಿದ್ದಾರೆ. ವ್ಯವಸಾಯಕ್ಕೆ ಲಭ್ಯವಿರುವ ಭೂಮಿಯನ್ನು ಕುರಿತ ವಿವರಗಳನ್ನು ಕೋಷ್ಟಕ 1 ರಲ್ಲಿ ಕೊಟ್ಟಿದೆ.

ಪಂಚವಾರ್ಷಿಕ ಯೋಜನೆಗಳ ಮೂಲಕ ಪಾಕಿಸ್ತಾನದ ಕೃಷಿಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತರಲು ಯತ್ನಿಸಲಾಗಿದೆ. ಕೃಷಿ ವಿಧಾನದಲ್ಲಿ ಬದಲಾವಣೆ, ಹೆಚ್ಚು ನೀರಾವರಿ ಸೌಲಭ್ಯವನ್ನು ಒದಗಿಸುವುದು ಇವು ಮುಖ್ಯವಾದ ಕ್ರಮಗಳು. ಪಾಕಿಸ್ತಾನದ ಕೃಷಿಕರು ಪ್ರಾಚೀನ ಕಾಲದ ಕೃಷಿವ್ಯವಸ್ಥೆಗೆ ಅಂಟಿಕೊಂಡಿರುವುದರಿಂದ ಕೃಷಿಕ್ಷೇತ್ರದಲ್ಲಿ ತೀವ್ರ ಬದಲಾವಣೆಗಳನ್ನುಂಟು ಮಾಡುವುದು ಕಷ್ಟವಾಗಿದೆ. ಆದರೂ ಕೃಷಿ ವಿಧಾನದಲ್ಲಿ ಬದಲಾವಣೆಗಳು ಕ್ರಮಕ್ರಮವಾಗಿ ಕಾಣಿಸಿಕೊಳ್ಳುತ್ತಿವೆ. ಈ ಬದಲಾವಣೆಗೆ ಸರ್ಕಾರದ ಪ್ರಯತ್ನ ಅತ್ಯಂತ ಮುಖ್ಯ ಕಾರಣ. ವೈಜ್ಞಾನಿಕ ಬೇಸಾಯ, ನೀರಾವರಿ ಸೌಲಭ್ಯದ ಹೆಚ್ಚಳ, ಕೃಷಿಗೆ ಯಂತ್ರದ ಅಳವಡಿಕೆ, ಉತ್ತಮ ಬೀಜಗಳ ಪ್ರಯೋಗ, ರಾಸಾಯನಿಕಗಳ ಬಳಕೆಯ ಪ್ರಯತ್ನಗಳು 1950-1975ರ ಅವಧಿಯಲ್ಲಿ ನಡೆದಿವೆ. ಸಾರ್ವತ್ರಿಕವಾಗಿ ಕೃಷಿ ಕ್ಷೇತ್ರದಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ಸ್ವಾವಲಂಬಿಯಾಗಿಲ್ಲದಿದ್ದರೂ ಕೆಲವು ಬೆಳೆಗಳ ವಿಷಯದಲ್ಲಿ ಅದು ಸ್ವಾವಲಂಬನೆ ಸಾಧಿಸಿದೆ. 1970ರ ವೇಳೆಗೆ ಪಾಕಿಸ್ತಾನ ಗೋಧಿಯ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆ ಸಾಧಿಸಿಕೊಂಡು, ಅದನ್ನು ರಫ್ತು ಮಾಡುವ ಸ್ಥಿತಿ ತಲುಪಿತ್ತು. ವಾಸ್ತವವಾಗಿ 1960-70ರ ದಶಕದಲ್ಲಿ ಪಾಕಿಸ್ತಾನದಲ್ಲಿ ಹಸಿರುಕ್ರಾಂತಿ ಆಯಿತೆಂದು ಹೇಳಲಾಗಿದೆ. ಈ ಅವಧಿಯಲ್ಲಿ ಅದರ ಅತ್ಯಂತ ಮುಖ್ಯ ಬೆಳೆಗಳಲ್ಲೊಂದಾದ ಗೋಧಿಯ ಉತ್ಪಾದನೆ 40 ಲಕ್ಷ ಟನ್‍ಗಳಿಂದ 64 ಲಕ್ಷ ಟನ್‍ಗಳಿಗೆ ಏರಿತು. ಹತ್ತಿ ಉತ್ಪಾದನೆ 20 ಲಕ್ಷ ಬೇಲ್‍ಗಳಿಂದ 40 ಲಕ್ಷ ಬೇಲ್‍ಗಳಿಗೆ ಏರಿತು. ಆದರೂ ಅಂತರರಾಷ್ಟ್ರೀಯ ಸರಾಸರಿ ಮಟ್ಟಗಳಿಗೆ ಹೋಲಿಸಿದರೆ ಪಾಕಿಸ್ತಾನದ ಈ ಬೆಳೆಗಳ ಉತ್ಪಾದನೆ ಗಣನೀಯವಾಗಿಲ್ಲ. 

ಕೃಷಿ ಕ್ಷೇತ್ರದಲ್ಲಿ ಇನ್ನೂ ಅಪಾರವಾದ ಬದಲಾವಣೆಗಳ ಅಗತ್ಯವಿದೆ. ಈ ಕ್ಷೇತ್ರದ ಸಮಸ್ಯೆಗಳು ತುಂಬ ಜಟಿಲವಾಗಿದ್ದು, ಅವನ್ನು ಕ್ರಮಕ್ರಮವಾಗಿ ಪರಿಹರಿಸಿಕೊಳ್ಳಬೇಕಾಗಿದೆ. ಪಾಕಿಸ್ತಾನದ ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ವಿನಿಯೋಜನೆಯನ್ನು ಹೆಚ್ಚು ಮಾಡಿ, ಅದರ ಸಮಸ್ಯೆಗಳನ್ನು ಬಗೆಹರಿಸಿ, ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿವೆ. ಗ್ರಾಮೀಣ ಅರ್ಥವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಾಣಿ ಸಾಕಣೆ ಪಾಕಿಸ್ತಾನದ ಅತ್ಯಂತ ಮುಖ್ಯ ಉದ್ಯಮಗಳಲ್ಲಿ ಒಂದು, 1971-72ರಲ್ಲಿ ಈ ಕ್ಷೇತ್ರದ ಉತ್ಪನ್ನ ಒಟ್ಟು ರಾಷ್ಟ್ರೀಯ ಉತ್ಪನ್ನದ ಸೇ 12ರಷ್ಟು ಇತ್ತು. ಉಣ್ಣೆ ಕೈಗಾರಿಕೆ ಮತ್ತು ಚರ್ಮದ ಕೈಗಾರಿಕೆಗೆ ಕಚ್ಚಾ ಸಾಮಗ್ರಿಯನ್ನು ಒದಗಿಸುವುದರಲ್ಲಿ ಈ ಕ್ಷೇತ್ರದ್ದು ಪ್ರಮುಖ ಪಾತ್ರ. ಮತ್ಸ್ಯ ಉತ್ಪಾದನೆಯೂ ಪಾಕಿಸ್ತಾನದಲ್ಲಿ ಒಂದು ಪ್ರಮುಖ ಉದ್ಯಮ. 1969ರ ಸುಮಾರು 18,000 ಟನ್‍ಗಳಷ್ಟು ಮೀನುಗಳನ್ನು ಹಿಡಿಯಲಾಯಿತು. ಅಲ್ಲಿಂದೀಚೆಗೆ ಈ ಉದ್ಯಮದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲಾಗುತ್ತಿದೆ. ಇಂದು ಪಾಕಿಸ್ತಾನದಲ್ಲಿ 180,000ಚ.ಕಿ.ಮೀ. (1998) ಬೇಸಾಯದ ಭೂಕ್ಷೇತ್ರವಿದೆ. ಒಟ್ಟು ಕೃಷಿ ಕ್ಷೇತ್ರದಲ್ಲಿ ಸೇ. 27.87 ಕೃಷಿ ಭೂಮಿಯೂ, ಸೇ. 0.87 ಪರಂಪರಾಗತ ಬೆಳೆಗಳನ್ನು ಸೇ 71.26 (2001) ರಷ್ಟು ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. 

ಕೃಷಿಯನ್ನು ಬಿಟ್ಟರೆ ಪಾಕಿಸ್ತಾನದ ಅರ್ಥವ್ಯವಸ್ಥೆಯನ್ನು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿರುವ ಕ್ಷೇತ್ರವೆಂದರೆ ಕೈಗಾರಿಕೆ. 1970ರಲ್ಲಿ ಕೈಗಾರಿಕೋದ್ಯಮದಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಸೇ. 17ರಷ್ಟು ಸಂದಿತು. ಆದರೆ ದೇಶದ ಒಟ್ಟು ಶ್ರಮದ ಕೇವಲ ಸೇ. 10ರಷ್ಟಕ್ಕೆ ಮಾತ್ರ ಕೈಗಾರಿಕೆಗಳು ಉದ್ಯೋಗ ಒದಗಿಸುತ್ತಿವೆ. ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡ ಕೈಗಾರಿಕೆಗಳು ಪ್ರಧಾನ ಪಾತ್ರ. ಕೈಗಾರಿಕೆಗಳ ಒಟ್ಟು ಉತ್ಪಾದನೆಯಲ್ಲಿ ಸೆ.65ರಷ್ಟು ಭಾಗ ದೊಡ್ಡ ಕೈಗಾರಿಕೆಗಳಿಂದಲೇ ಬರುತ್ತಿದೆ. ಪಾಕಿಸ್ತಾನದಲ್ಲಿ ಕೈಗಾರಿಕಾ ಪ್ರಗತಿ 1950ರಿಂದಲೂ ವೇಗವಾಗಿ ನಡೆಯುತ್ತ ಬಂದಿದೆ. ಪ್ರಾರಂಭದಲ್ಲಿ ಅನುಭೋಗ ಸರಕುಗಳ ಉತ್ಪಾದನೆಗೆ ಪ್ರಾಧಾನ್ಯ ನೀಡಿದ್ದರಿಂದ ಈ ಗುಂಪಿನ ಕೈಗಾರಿಕೆಗಳೇ ಪ್ರಮುಖವಾಗಿ ಅಭಿವೃದ್ಧಿಗೊಂಡವು. ಆದರೆ ಅನಂತರ ಈ ಪ್ರಾಧಾನ್ಯ ಬಂಡವಾಳ ಸರಕುಗಳ ಉತ್ಪಾದನೆಗೆ ದೊರೆಯಿತು. 1960ರ ಅನಂತರ ಹೆಚ್ಚಾಗಿ ಬಂಡವಾಳ ಸರಕುಗಳ ಕೈಗಾರಿಕೆಗಳು ಪ್ರಾರಂಭವಾಗಿ ಅಭಿವೃದ್ಧಿಹೊಂದಿವೆ. ಪಾಕಿಸ್ತಾನದ ಪ್ರಥಮ ಉಕ್ಕಿನ ಕೈಗಾರಿಕೆ 1980ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರಾಚಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕೈಗಾರಿಕೆಗೆ ಸೋವಿಯೆತ್ ದೇಶದ ನೆರವಿದೆ. ಇದು ಉತ್ಪಾದನೆ ಆರಂಭಿಸಿದಾಗ ವರ್ಷಕ್ಕೆ 10 ಲಕ್ಷ ಟನ್ ಉಕ್ಕನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಕ್ರಮೇಣ ಇದನ್ನು 20 ಲಕ್ಷ ಟನ್‍ಗಳಿಗೆ ಏರಿಸುವ ನಿರೀಕ್ಷೆಯಿದೆ. ಸದ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹತ್ತಿಗಿರಣಿಗಳದು ಅತ್ಯಂತ ಮುಖ್ಯವಾದ ಸ್ಥಾನ. ರಾಷ್ಟ್ರೀಯ ಉತ್ಪನ್ನದಲ್ಲಿ ಕೈಗಾರಿಕಾಕ್ಷೇತ್ರದ ಭಾಗದಲ್ಲಿ ಇವುಗಳ ಪಾಲು ಸೇ.33 ಹತ್ತಿ ಗಿರಣಿಗಳಿಂದ ಸುಮಾರು 15 ಲಕ್ಷ ಜನರಿಗೆ ಉದ್ಯೋಗ ದೊರಕಿದೆ. ಈ ದೃಷ್ಟಿಯಿಂದಲೂ ಇವಕ್ಕೆ ಪ್ರಥಮ ಸ್ಥಾನ. 1960-70ರಲ್ಲಿ ನೂಲು ಮತ್ತು ಬಟ್ಟೆಯ ಉತ್ಪಾದನೆ ಗಮನಾರ್ಹವಾಗಿ ಏರಿದೆ. 1960-61ರಲ್ಲಿ ನೂಲಿನ ಉತ್ಪಾದನೆ 16 ಕೋಟಿ ಕಿಲೋಗ್ರಾಂ ಆಗಿತ್ತು. 1970-71ರ ವೇಳೆಗೆ ಇದು 36ಕೋಟಿ ಕಿಲೋಗ್ರಾಂಗಳಿಗೆ ಏರಿತು. ಇದೇ ಅವಧಿಯಲ್ಲಿ ಬಟ್ಟೆಯ ಉತ್ಪಾದನೆ 56 ಕೋಟಿ ಮೀಟರ್‍ಗಳಿಂದ 72 ಕೋಟಿ ಮೀಟರ್‍ಗಳಿಗೆ ಹೆಚ್ಚಿತು. ಬಾಂಗ್ಲಾದೇಶದ ಪ್ರತ್ಯೇಕತೆಯಿಂದಾಗಿ ಪಾಕಿಸ್ತಾನದ ಸೆಣಬಿನ ಕೈಗಾರಿಕೆಗೆ ಭಾರೀ ಪೆಟ್ಟು ತಗಲಿದೆ. ಈ ಉದ್ಯಮದಲ್ಲಿ ಪಾಕಿಸ್ತಾನಕ್ಕೆ ಇದ್ದ ವಿಶ್ವ ಪ್ರಾಧಾನ್ಯ ಈಗ ಇಲ್ಲವಾಗಿದೆ. ಆದ್ದರಿಂದ ಹತ್ತಿ ಬಟ್ಟೆ ಉತ್ಪಾದನೆಯನ್ನು ಬಿಟ್ಟರೆ ಈಗ ಪಾಕಿಸ್ತಾನದ ಪ್ರಮುಖ ಕೈಗಾರಿಕೆಗಳೆಂದರೆ ಉಣ್ಣೆ, ಸಕ್ಕರೆ, ಕಾಗದ, ಹೊಗೆಸೊಪ್ಪು ಮತ್ತು ಚರ್ಮ ಕೈಗಾರಿಕೆಗಳು. ಇವು ಕೈಗಾರಿಕಾ ಕ್ಷೇತ್ರದ ಒಟ್ಟು ಉದ್ಯೋಗಸ್ಥರಲ್ಲಿ ಸೇ. 20ರಷ್ಟು ಮಂದಿಗೆ ಉದ್ಯೋಗವನ್ನು ಒದಗಿಸುತ್ತಿವೆ. 1950ರ ದಶಕದಲ್ಲಿ ವಿದೇಶೀ ವಿನಿಮಯದ ಕೊರತೆ ಪಾಕಿಸ್ತಾನಕ್ಕೆ ವಿಪರೀತವಾದುದರಿಂದ, ಅದು ಆಮದನ್ನು ಅನಿವಾರ್ಯವಾಗಿ ಕಡಿತ ಮಾಡಬೇಕಾಯಿತು. ಹೀಗಾಗಿ ಆಮದು ಬದಲಿ ವಸ್ತುಗಳ ಕೈಗಾರಿಕೆಗೆ ಪಾಕಿಸ್ತಾನ ಹೆಚ್ಚಿನ ಪ್ರಾಧಾನ್ಯ ನೀಡುವುದಕ್ಕೆ ಪ್ರಾರಂಭಿಸಿತು. ಆದರೂ ಪಾಕಿಸ್ತಾನ ಇಂದಿಗೂ ಬಂಡವಾಳ ಸರಕುಗಳನ್ನೂ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿಗಳನ್ನೂ ಹೆಚ್ಚಾಗಿ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಕೈಗಾರಿಕೆಗೆ ಅಗತ್ಯವಾದ ಸಂಪನ್ಮೂಲಗಳು ಹೆಚ್ಚಾಗಿ ಲಭ್ಯವಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. 
ಪಾಕಿಸ್ತಾನ ಕೈಗಾರಿಕಾ ಕ್ಷೇತ್ರದಲ್ಲಿ ಖಾಸಗಿ ಒಡೆತನವನ್ನು ಮಾನ್ಯ ಮಾಡಿದ್ದರೂ ಕ್ರಮಕ್ರಮವಾಗಿ ಸರ್ಕಾರಿ ವಲಯ ಉದ್ಯಮಗಳು ವಿಸ್ತರಿಸುತ್ತಿವೆ. ಭುಟ್ಟೋ ಆಡಳಿತದ ಅವಧಿಯಲ್ಲಂತೂ ಉದ್ಯಮಗಳ ರಾಷ್ಟ್ರೀಕರಣ ವ್ಯಾಪಕವಾಗಿಯೇ ನಡೆಯಿತು. ತನ್ನ ಪಂಚವಾರ್ಷಿಕ ಯೋಜನೆಗಳಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಿಕೊಂಡು ಆ ವಲಯದ ಕೈಗಾರಿಕೆಗಳನ್ನು ವಿಸ್ತರಿಸಿದೆ. 1974-75ರ ವೇಳೆಗೆ ಸರ್ಕಾರಿ ವಲಯದ ಕೈಗಾರಿಕೆಗಳ ಪಾತ್ರ ರಾಷ್ಟ್ರೀಯ ಆರ್ಥಿಕತೆಯಲ್ಲಿ ಗಣನೀಯವಾಗಿತ್ತು. ಸರ್ಕಾರಿ ವಲಯದ ಕೈಗಾರಿಕೆಗಳು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್‍ನ ಅಧೀನದಲ್ಲಿವೆ. 1973-74ಕ್ಕೆ ಹೋಲಿಸಿದಂತೆ 1974-75ರಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳ ಉತ್ಪಾದನೆ ಸೇ. 21.8ರಷ್ಟು ಹೆಚ್ಚಾಗಿತ್ತು. ಇದೇ ಅವಧಿಯಲ್ಲಿ ಈ ಕೈಗಾರಿಕೆಗಳ ಲಾಭ ರೂ. 17.48 ಕೋಟಿಯಿಂದ ರೂ. 25,45 ಕೋಟಿಗೆ ಏರಿತು. ಮುಂದಿನ ಕೆಲವು ವರ್ಷಗಳಲ್ಲಿ ಸರ್ಕಾರಿ ವಲಯದ ಕೈಗಾರಿಕೆಗಳು ಬಹಳ ವಿಸ್ತಾರವಾಗುವ ಸಾಧ್ಯತೆಯಿದೆ. ಈ ವಿಸ್ತರಣೆಯ ಅಂಗವಾಗಿ ಉಕ್ಕು, ಸಿಮೆಂಟ್, ಭಾರೀ ಇಂಜನಿಯರಿಂಗ್, ಪೆಟ್ರೋ-ರಸಾಯನ ಮತ್ತು ಆಟೊಮೊಬೈಲ್ ಉದ್ಯಮಗಳ ಮೇಲೆ ಮುಂದಿನ ಹಲವು ವರ್ಷಗಳಲ್ಲಿ ರೂ. 288 ಕೋಟಿ ಹೂಡಿಕೆಯ ಯೋಜನೆಯನ್ನು ಬೋರ್ಡ್ ಆಫ್ ಇಂಡಸ್ಟ್ರಿಯಲ್ ಮ್ಯಾನೇಜ್‍ಮೆಂಟ್ ರೂಪಿಸಿಕೊಂಡಿದೆ. 

ಖಾಸಗಿ ವಲಯದ ಕೈಗಾರಿಕೆಗಳು ಕೇವಲ ಕೆಲವರ ಸ್ವಾಮ್ಯದಲ್ಲಿರುವುದು ಪಾಕಿಸ್ತಾನದ ಕೈಗಾರಿಕಾ ಕ್ಷೇತ್ರದ ಮುಖ್ಯ ಲಕ್ಷಣಗಳಲ್ಲಿ ಒಂದು. ಏಕಸ್ವಾಮ್ಯ ಕೆಲವೇ ಕುಟುಂಬಗಳಲ್ಲಿ ಕೇಂದ್ರೀಕೃತವಾಗಿದೆ. ಈ ಹಿಡಿತವನ್ನು ತಡೆಗಟ್ಟಲು 1960ರಿಂದಲೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಇದು ಗಮನಾರ್ಹವಾಗಿಯೇ ಮುಂದುವರಿದು ಕೊಂಡು ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯನ್ನು ಕ್ಷಿಪ್ರಗೊಳಿಸಲು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮುಖ್ಯವಾಗಿ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಜರ್ಮನಿ ಮತ್ತು ಜಪಾನ್ ದೇಶಗಳು ಪಾಕಿಸ್ತಾನದ ನಾನಾ ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿದೆ. 2004ರ ಅಂಕಿ ಅಂಶದ ಗಣನೆಯ ಪ್ರಕಾರ ಕೈಗಾರಿಕೋತ್ಪನ್ನ ಸೇ. 13.1ರಷ್ಟು ಹೆಚ್ಚಳಗೊಂಡಿದೆ.

ಕಲ್ಲಿದ್ದಲು ಪಾಕಿಸ್ತಾನದ ಪ್ರಮುಖ ಖನಿಜ. ಆದರೆ ಗುಣಮಟ್ಟ ಅಷ್ಟು ಉತ್ತಮವಾದ್ದಲ್ಲ. ಅದಕ್ಕೆ ಬೇಡಿಕೆಯೂ ಕಡಿಮೆ. ಈ ಕಾರಣದಿಂದ ಕಲ್ಲಿದ್ದಲು ಗಣಿಗಳಲ್ಲಿ ಅತ್ಯಂತ ದಕ್ಷಮಟ್ಟದ ವರೆಗಿನ ಉತ್ಪಾದನೆ ನಡೆಯುತ್ತಿಲ್ಲ. ಪಾಕಿಸ್ತಾನದ ಕಬ್ಬಿಣದ ಅದುರು ಉತ್ತಮ ಗುಣಮಟ್ಟದ್ದಲ್ಲ. ವ್ಯಾಪಕವಾದ ಕಲ್ಲಿದ್ದಲು ಗಣಿಗಳು ಪಂಜಾಬಿನ ಕಾಲಾಬಾಗ್ ಪ್ರದೇಶದಲ್ಲಿವೆ. ಈ ಪ್ರದೇಶದಲ್ಲಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿಸುವ ಯೋಜನೆ ಇದೆ. ಉತ್ತಮವಾದ ಕಬ್ಬಿಣದ ಅದುರು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಲಭ್ಯವಿದೆಯೆಂದು ಗುರುತಿಸಲಾಗಿದೆ. ಆದರೆ ಈ ನಿಕ್ಷೇಪಗಳಿಂದ ಭಾರೀ ಪ್ರಮಾಣದ ಅದಿರು ಲಭ್ಯವಾಗುವ ಸಾಧ್ಯತೆ ಕಡಿಮೆಯೆಂದು ಭಾವಿಸಲಾಗಿದೆ.	ಅತ್ಯಂತ ಸುಲಭವಾಗಿ ಮತ್ತು ಹೇರಳವಾಗಿ ಸುಣ್ಣಕಲ್ಲು ಲಭ್ಯವಿದೆ. ಇದು ಮುಂದೆ ಬೆಳೆಯಬಹುದಾದ ಸಿಮೆಂಟ್ ಉದ್ಯಮಕ್ಕೆ ಅತ್ಯಂತ ಸಹಾಯಕವಾಗುವ ಸಾಧ್ಯತೆಯಿದೆ. ಪಾಕಿಸ್ತಾನದ ಇತರ ಮುಖ್ಯ ಖನಿಜಗಳು ಕ್ರೋಮೈಟ್, ಬಾಕ್ಸೈಟ್ ಸೆಲಿಸ್ಟೈಟ್, ಅಂಟಿಮೋನಿ, ಆರ್‍ಗೋನೈಟ್, ಜಿಪ್ಸಮ್, ಕಲ್ಲುಪ್ಪು ಮತ್ತು ಅಮೃತಶಿಲೆ, ಪಾಕಿಸ್ತಾನದ ತೈಲನಿಕ್ಷೇಪಗಳು ಅತ್ಯಲ್ಪ. ಆದರೆ, ಅನೇಕ ನಿಸರ್ಗ ಅನಿಲ ನಿಕ್ಷೇಪಗಳು ಅತ್ಯಂತ ಶ್ರೀಮಂತವಾದವಾಗಿವೆ. ಸೂಯ್ ಎಂಬಲ್ಲಿಯ ನಿಸರ್ಗ ಅನಿಲ ನಿಕ್ಷೇಪಗಳು ತುಂಬ ಶ್ರೀಮಂತವಾಗಿವೆ. 

ಜಲವಿದ್ಯುತ್ ಉತ್ಪಾದನೆಯಲ್ಲಿ ಪಾಕಿಸ್ತಾನ ಹೆಚ್ಚಿನ ಪ್ರಗತಿಯನ್ನೇನೂ ಸಾಧಿಸಿಲ್ಲವಾದ್ದರಿಂದ ಶಾಖ ವಿದ್ಯುತ್ ಉತ್ಪಾದನೆಯನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. 1970ರಲ್ಲಿ ಅತ್ಯಂತ ಹೆಚ್ಚಿನ ಜಲವಿದ್ಯುತ್ ಉತ್ಪಾದಿಸುತ್ತಿದ್ದ ಕೇಂದ್ರವೆಂದರೆ ಝೀಲಮ್ ನದಿಗೆ ಅಡ್ಡಲಾಗಿ ಕಟ್ಟಿರುವ ಮಂಗ್ಲಾ ಕಟ್ಟೆಯ ವಿದ್ಯುತ್ ಉತ್ಪಾದನ ಕೆಂದ್ರ. ಇದರ ಸಾಮಥ್ರ್ಯ 6.5 ಲಕ್ಷ ಕಿ.ವಾ. 1980ರ ವೇಳೆಗೆ ಇದರ ಉತ್ಪಾದನೆ 10 ಲಕ್ಷ ಕಿ.ವಾಗೆ ಏರುವ ನಿರೀಕ್ಷೆಯಿದೆ. 1968ರಲ್ಲಿ ಪ್ರಾರಂಭವಾದ ತಾರ್‍ಬೆಲಾ ಕಟ್ಟೆಯ ವಿದ್ಯುತ್ ಉತ್ಪಾದನಾ ಕೇಂದ್ರವೂ 21 ಲಕ್ಷ ಕಿ.ವಾ. ವಿದ್ಯುತ್ತನ್ನು ಉತ್ಪಾದಿಸುವ ಸಾಮಥ್ರ್ಯ ಹೊಂದಿದೆ. ಆದರೆ ಈ ಗಾತ್ರದ ಉತ್ಪಾದನೆಯಿಂದಲೂ ರಾಷ್ಟ್ರಕ್ಕೆ ಅಗತ್ಯವಾದ ವಿದ್ಯುತ್ತಿನ ಪೂರೈಕೆ ಸಂಪೂರ್ಣವಾಗಿ ಲಭಿಸದಿರುವುದರಿಂದ ಪಾಕಿಸ್ತಾನ ಅತ್ಯಂತ ಹೆಚ್ಚಾಗಿ ಶಾಖ ವಿದ್ಯುತ್ ಕೇಂದ್ರಗಳನ್ನೇ ಅವಲಂಬಿಸಬೇಕಾಗಿದೆ. ಜಲ ಹಾಗೂ ಶಾಖ ವಿದ್ಯುತ್ ಉತ್ಪಾದನ ಕೇಂದ್ರಗಳಲ್ಲದೆ, ಕರಾಚಿಯ ಹೊರ ಭಾಗದಲ್ಲಿ 1,37,000 ಕಿ.ವಾ. ಉತ್ಪಾದನಾ ಸಾಮಥ್ರ್ಯದ ಪರಮಾಣು ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಣು ವಿದ್ಯುತ್, ಶಾಖೋತ್ಪನ್ನ ಮತ್ತು ಜಲೋತ್ಪನ್ನ ಒಟ್ಟು ವಿದ್ಯುತ್ 75.27 ಬಿಲಿಯನ್ ಕಿವಾ. (2003) ಇದ್ದು, 52.66 ಬಿಲಿಯನ್ ಕಿವಾ ವಿದ್ಯುತ್‍ನ ಬೇಡಿಕೆ (2003) ರಲ್ಲಿ ಇದ್ದಿತು. ಹಣಕಾಸು: ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ಎಂಬುದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕು. 1972ರಲ್ಲಿ ಇದರ ನಿಯಂತ್ರಣಕ್ಕೆ 25 ಅನುಸೂಚಿತ ಬ್ಯಾಂಕುಗಳು ಒಳಪಟ್ಟಿದ್ದುವು. ಪಾಕಿಸ್ತಾನದಲ್ಲಿ ನಾಲ್ಕು ಹಣಕಾಸು ಸಂಸ್ಥೆಗಳು ಅಲ್ಪಾವಧಿ, ದೀರ್ಘಾವಧಿ ಮತ್ತು ಕಟ್ಟಡ ಕಾರ್ಯಗಳಿಗೆ ಅಗತ್ಯವಾದ ಬಂಡವಾಳವನ್ನು ಒದಗಿಸುತ್ತಿವೆ. ಅವು ಪಾಕಿಸ್ತಾನ ಕೈಗಾರಿಕಾ ಉದರಿ ಮತ್ತು ವಿನಿಯೋಜನ ನಿಗಮ(ಪಾಕಿಸ್ತಾನ್ ಇಂಡಸ್ಟ್ರಿಯಲ್ ಕ್ರೆಡಿಟ್ ಅಂಡ್ ಇನ್‍ವೆಸ್ಟ್ ಮೆಂಟ್ ಕಾರ್ಪೊರೇಷನ್), ಪಾಕಿಸ್ತಾನ ಕೈಗಾರಿಕಾಭಿವೃದ್ಧಿ ಬ್ಯಾಂಕ್ (ದಿ ಇಂಡಸ್ಟ್ರಿಯಲ್ ಡೆವೆಲಪ್‍ಮೆಂಟ್ ಬ್ಯಾಂಕ್ ಆಫ್ ಪಾಕಿಸ್ತಾನ್), ಪಾಕಿಸ್ತಾನ ಕೃಷಿ ಅಭಿವೃದ್ಧಿ ಬ್ಯಾಂಕ್ (ಅಗಿಕಲ್ಚರಲ್ ಡೆವೆಲಪ್‍ಮೆಂಟ್ ಬ್ಯಾಂಕ್ ಆಫ್ ಪಾಕಿಸ್ತಾನ್) ಗೃಹ ನಿರ್ಮಾಣ ಹಣಕಾಸು ನಿಗಮ (ಹೌಸ್‍ಬಿಲ್ಡಿಂಗ್ ಫೈನಾನ್ಸ್ ಕಾರ್ಪೊರೇಷನ್). ವಿದೇಶಿ ವ್ಯಾಪಾರ: ಪಾಕಿಸ್ತಾನದ ವಿದೇಶಿ ವ್ಯಾಪಾರ ಹೆಚ್ಚು ಬೆಳೆವಣಿಗೆ ಸಾಧಿಸಿಲ್ಲ. ಪ್ರಾರಂಭದಿಂದಲೂ ಪಾಕಿಸ್ತಾನ ಕೃಷಿಮೂಲ ವಸ್ತುಗಳನ್ನು ರಫ್ತು ಮಾಡುತ್ತ, ಕಚ್ಚಾ ಸಾಮಗ್ರಿ ಮತ್ತು ಬಂಡವಾಳ ಸರಕುಗಳನ್ನು ಆಮದು ಮಾಡಿಕೊಳ್ಳುತ್ತ ಬಂದಿದೆ. ರಫ್ತಿಗಿಂತ ಯಾವಾಗಲೂ ಆಮದು ಹೆಚ್ಚಾಗಿರುವುದರಿಂದ ಮೊದಲಿನಿಂದಲೂ ಪಾಕಿಸ್ತಾನ ವಿದೇಶಿ ವಿನಿಮಯದ ಕೊರತೆಯನ್ನು ಎದುರಿಸುತ್ತಲೇ ಬಂದಿದೆ. ಬಾಂಗ್ಲಾದೇಶ ಪ್ರತ್ಯೇಕವಾಗುವುದಕ್ಕೆ ಮುಂಚೆ ಪಾಕಿಸ್ತಾನದ ಅತ್ಯಂತ ಮುಖ್ಯವಾದ ರಫ್ತು ಸರಕುಗಳು ಸಣಬು, ಹತ್ತಿ, ಉಣ್ಣೆ, ಚರ್ಮ ಮತ್ತು ಚಹ ಆಗಿದ್ದುವು. ಒಟ್ಟು ರಫ್ತಿನ ಆದಾಯದ ಸೇ. 90ರಷ್ಟು ಇವುಗಳಿಂದ ಸಂಪಾದನೆಯಾಗುತ್ತಿತ್ತು. ಆದರೆ ಬಾಂಗ್ಲಾ ಪ್ರತ್ಯೇಕತೆಯಿಂದ ಪಾಕಿಸ್ತಾನ ಸಣಬು ಮತ್ತು ಚಹ ರಫ್ತನ್ನು ಕಳೆದುಕೊಳ್ಳಬೇಕಾಯಿತು. ಪಾಕಿಸ್ತಾನದ ಈಗಿನ ಮುಖ್ಯ ರಫ್ತು ವಸ್ತುಗಳು ಹತ್ತಿ ಮತ್ತು ಹತ್ತಿ ಬಟ್ಟೆ, ಅಕ್ಕಿ, ಚರ್ಮ, ಮೀನು ಮತ್ತು ಜಮಖಾನೆ, ಮುಖ್ಯ ಆಮದುಗಳು ಯಂತ್ರ ಸಲಕರಣೆ, ರಾಸಾಯನಿಕ, ರಸಗೊಬ್ಬರ, ಖಾದ್ಯ ತೈಲ, ಕಬ್ಬಿಣ, ಉಕ್ಕು ಹಾಗೂ ವಿದ್ಯುತ್ ಉಪಕರಣ. ವಿದೇಶಿ ವ್ಯಾಪಾರ ಹಾಗೂ ಆಮದು ರಫ್ತುಗಳು

ಪಾಕಿಸ್ತಾನ ಆರ್ಥಿಕ ಯೋಜನೆಯ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನಿಟ್ಟುಕೊಂಡಿದೆ. ಅದರ ಪ್ರಥಮ ಆರ್ಥಿಕ ಯೋಜನೆ 1955ರಲ್ಲಿ ಪ್ರಾರಂಭವಾಯಿತು. ಅದರ ವೆಚ್ಚ ರೂ. 971.1 ಕೋಟಿ. ರಾಷ್ಟ್ರೀಯ ವರಮಾನದಲ್ಲಿ ಸೇ.15ರಷ್ಟು ಏರಿಕೆ, ತಲಾ ವರಮಾನದಲ್ಲಿ ಸೇ.7 ರಷ್ಟು ಆಧಿಕ್ಯ. 20 ಲಕ್ಷ ಉದ್ಯೋಗಗಳ ಸೃಷ್ಟಿ, ವಿದೇಶಿ ವ್ಯಾಪಾರದಲ್ಲಿಯ ಕೊರತೆಯ ಸುಧಾರಣೆ-ಇವು ಆ ಯೋಜನೆಯ ಮುಖ್ಯ ಗುರಿಗಳು. ಮೊದಲನೆಯ ಯೋಜನೆಯ ಅವಧಿಯಲ್ಲಿ ಈ ಗುರಿಗಳನ್ನು ಸಾಧಿಸಲಾಗಲಿಲ್ಲ.

ಒಂದನೆಯ ಯೋಜನೆಯದಕ್ಕಿಂತ ಸೇ.50ರಷ್ಟು ಹೆಚ್ಚಿನ ವೆಚ್ಚದ ಎರಡನೆಯ ಯೋಜನೆ 1960 ರಲ್ಲಿ ಆರಂಭವಾಯಿತು. ಆ ಯೋಜನೆಯ ವೆಚ್ಚ ರೂ. 1,900 ಕೋಟಿ. ಅದರಲ್ಲಿ ರೂ.1,150 ಕೋಟಿ ಸರ್ಕಾರಿ ವಲಯದ ವೆಚ್ಚ ರೂ.751 ಕೋಟಿ ಖಾಸಗಿ ವಲಯದ್ದು, ಇದು ಒಂದನೆಯ ಯೋಜನೆಗಿಂತ ಹೆಚ್ಚಿನ ಯಶಸ್ಸನ್ನು ಸ್ಥಾಪಿಸಿತು. ರಾಷ್ಟ್ರೀಯ ಉತ್ಪನ್ನದ ಉದ್ದೇಶಿತ ವಾರ್ಷಿಕ ಬೆಳವಣಿಗೆಯ ದರವನ್ನೂ (ಸೇ.4.7) ಮೀರಿ ಸೇ.5.5ರ ವಾರ್ಷಿಕ ಬೆಳೆವಣಿಗೆ ದರ ಸಾಧಿಸಿತು. ಕೃಷಿ ಉತ್ಪನ್ನದಲ್ಲಿ ಸೇ.3.5 ಮತ್ತು ಕೈಗಾರಿಕಾ ಉತ್ಪನ್ನದಲ್ಲಿ ಸೇ.10ರ ವಾರ್ಷಿಕ ಬೆಳೆವಣಿಗೆ ಸಾಧ್ಯವಾಯಿತು.

ನಿಧಾನವಾದ ಆರ್ಥಿಕ ಬೆಳವಣಿಗೆ, ಅಸಮಾನ ವರಮಾನ ವಿತರಣೆ, ತೀವ್ರವಾದ ಬಡತನ, ವಿದೇಶಿ ವ್ಯಾಪಾರದಲ್ಲಿ ಪ್ರತಿಕೂಲ ಸಿಲ್ಕು, ಶೀಘ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮುಂತಾದ ಅನೇಕ ಸಮಸ್ಯೆಗಳನ್ನು ಇಂದು ಪಾಕಿಸ್ತಾನ ಎದುರಿಸುತ್ತಿದೆ. (ಸಿ.ಕೆ.ಆರ್.) ಜನಜೀವನ ಮತ್ತು ಸಮಾಜ

ಪಾಕಿಸ್ತಾನ ಭೂಭಾಗ ಮಧ್ಯಪ್ರಾಚ್ಯ. ಮಧ್ಯ ಏಷ್ಯ ಮತ್ತು ದಕ್ಷಿಣ ಏಷ್ಯಗಳು ಕೂಡುವ ಸ್ಥಳದಲ್ಲಿದೆ. ಪ್ರಾಚೀನ ಕಾಲದಿಂದಲೂ ವಿವಿಧ ಜನಾಂಗಗಳೂ ಪಂಗಡಗಳೂ ಈ ಪ್ರದೇಶದಲ್ಲಿ ನೆಲಸಿವೆ. ಕೆಲವು ತಮ್ಮ ಛಾಯೆಯನ್ನು ಬಿಟ್ಟುಹೋಗಿವೆ. ಸ್ಥೂಲವಾಗಿ ಇಲ್ಲಿಯ ಜನರನ್ನು ಐದು ಜನಾಂಗಗಳಾಗಿ ವಿಂಗಡಿಸಬಹುದು; ದ್ರಾವಿಡ, ಆಸ್ಟ್ರೊಲಾಯ್ಡ್, ಇಂಡೊ-ಆರ್ಯನ್, ಮಂಗೊಲಾಯ್ಡ್ ಮತ್ತು ಯೂರೋಪಾಯ್ಡ್.

ಇಲ್ಲಿಯ ಸಮಾಜವ್ಯವಸ್ಥೆ ಪಿತೃಪ್ರಧಾನವಾದ್ದು. ಹೆಚ್ಚು ಜನರು ದೊಡ್ಡ ಕುಟುಂಬಗಳಲ್ಲಿದ್ದಾರೆ. ಸ್ತ್ರೀಯರು ಉನ್ನತ ಉದ್ಯೋಗಗಳಲ್ಲಿದ್ದರೂ ಸಮಾಜದಲ್ಲಿ ಅವರ ಸ್ಥಾನ ಅಷ್ಟು ಉತ್ತಮವಾಗಿಲ್ಲ. ಶ್ರೀಮಂತ ರೈತರು ಮತ್ತು ಜಮೀದ್ಧಾರರಲ್ಲೂ ಪಟ್ಟಣಗಳ ಮಧ್ಯಮವರ್ಗಗಳಲ್ಲೂ ಪರದಾ ಪದ್ಧತಿ ಇದೆ. ಬಡವರು ಮತ್ತು ವಿದ್ಯಾವಂತ ಶ್ರೀಮಂತರಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಬಹುಪಾಲು ಜನರು ಮುಸ್ಲಿಮರು, ಇವರಲ್ಲಿ ನಿರ್ದಿಷ್ಟ ಸಮೂಹಗಳ ಜನರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರವೀಣರಾಗಿದ್ದಾರೆ.

ಪಾಕಿಸ್ತಾನದ ಸಿಂಧ್, ಪಂಜಾಬ್, ಬಲೂಚಿಸ್ತಾನ ಮತ್ತು ವಾಯವ್ಯ ಸರಹದ್ದು ಪ್ರಾಂತ್ಯಗಳು ಪ್ರತ್ಯೇಕ ಆಡಳಿತ ಘಟಕಗಳಾಗಿರುವಂತೆಯೇ ಐತಿಹಾಸಿಕವಾಗಿ, ಸಾಮಾಜಿಕವಾಗಿ ವಿಶಿಷ್ಟತೆ ಪಡೆದಿವೆ. ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ 1930ರ ದಶಕದಿಂದ ಈಚೆಗೆ ನೀರಾವರಿ ಸೌಲಭ್ಯ ಹೆಚ್ಚಿದಂತೆಲ್ಲ ಆರ್ಥಿಕ ಕ್ರಾಂತಿ ಸಂಭವಿಸಿ ಜೀವನ ಭದ್ರತೆ ನೆಲೆಯೂರಿದೆ. ತೀರಪ್ರದೇಶದಲ್ಲಿ ಮೀನುಗಾರಿಕೆ ಮುಂದುವರಿದಿದೆ. ಕರಾಚಿಯಂಥ ಬೃಹತ್ ನಗರದಿಂದಾಗಿ ಸಿಂಧ್ ಪ್ರಾಂತ್ಯದ ನಗರ ಜನಸಂಖ್ಯೆ 45% ರಷ್ಟಿದೆ (1970). ಪಂಜಾಬ್ ತೀವ್ರಗತಿಯಲ್ಲಿ ಮುನ್ನಡೆಯುತ್ತಿದೆ. ಸಿಂಧ್‍ನಲ್ಲಿ ಕುಸ್ತಿ ಸಮಾರಂಭಗಳು ಜನಪ್ರಿಯ ಮನೋರಂಜನೆಯ ಕಾರ್ಯ ಕ್ರಮಗಳು. ಎತ್ತಿನಗಾಡಿ ಪಂದ್ಯ ಮತ್ತು ಹುಂಜದ ಕಾಳಗಗಳೂ ಕೆಲವು ಪ್ರದೇಶಗಳಲ್ಲಿ ಜನಪ್ರಿಯವಾಗಿವೆ. ಇಲ್ಲಿಯ ಸಂಗೀತ ಪ್ರಾಚೀನ ಕಾಲದಿಂದಲೂ ಪ್ರಸಿದ್ಧ.

ಬಲೂಚಿಸ್ತಾನ ಬಹು ವಿರಳ ಜನವಸತಿ ಇರುವ ಪ್ರಾಂತ್ಯ. ಗ್ರಾಮಾಂತರ ಪ್ರದೇಶ ಬರಡು. ಇಲ್ಲಿಯ ಹೆಚ್ಚಿನ ಜನಸಂಖ್ಯೆ ಅಲೆಮಾರಿ ಸ್ವರೂಪದ್ದು. ಬಲೂಚಿಗಳು ಮತ್ತು ಪಠಾಣರು ಇಲ್ಲಿಯ ಮುಖ್ಯ ಪಂಗಡಗಳು. ಇವರಲ್ಲಿ ಪಂಗಡಜೀವನ ಇದೆ. ಗುಂಪಿನ ನಾಯಕರಾಗಿ ಸರ್ದಾರ್ ಅಥವಾ ಖಾನ್ ಇರುತ್ತಾನೆ. ಗುಂಪುಗಳಿಗೆ ಅವುಗಳದೇ ಸಾಮಾಜಿಕ ಸಂಹಿತೆ ಇರುತ್ತದೆ. ಕುದುರೆ ಜೂಜು, ಕುಸ್ತಿ, ಮೇಳಗಳು ಜನಪ್ರಿಯವಾಗಿವೆ. ಬಲೂಚಿಗಳಿಗೆ ಬಲೂಚಿ ದಫ್ತರ್ ಎನ್ನುವ ಪ್ರಾಚೀನ ಮಹಾಕಾವ್ಯವುಂಟು. ಅದನ್ನು ವೃತ್ತಿಗಾಯಕರು ಹಾಡುತ್ತಾರೆ. ಇತರ ಜನಪದ ವೀರಗಾಥಗಳಿವೆ. ವಾಯವ್ಯ ಸರಹದ್ದು ಪ್ರಾಂತ್ಯ ಹಿಂದುಳಿದಿದೆ. ಇಲ್ಲಿ ಪಠಾಣರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಲ್ಲಿಯ ಸರಹದ್ದು ಮತ್ತು ನೆಲಸು ಜಿಲ್ಲೆಗಳ ನಡುವೆ ಪಂಗಡ ಸ್ವಯಮಾಡಳಿತ ಪ್ರದೇಶಗಳಿವೆ. ಅಲ್ಲಿ ವಾಸಿಸುವವರಿಗೆ ಪಾಕಿಸ್ತಾನದ ಆಂತರಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಪಂಗಡದ ನ್ಯಾಯಪಾಲನೆ ಮತ್ತಿತರ ವ್ಯವಹಾರಗಳನ್ನು ಜಿರ್ಗಹ ಅಥವಾ ಹಿರಿಯರ ಮಂಡಳಿ ನೋಡಿಕೊಳ್ಳುತ್ತದೆ. ಇಲ್ಲಿ ವಿದ್ಯಾಪ್ರಗತಿ ನಿಧಾನ. ಸಾಮಾಜಿಕ ಬದಲಾವಣೆಗೆ ಪಂಗಡದ ಪ್ರತಿಭಟನೆ ಇದೆ. ಪಠಾಣರು ಧರ್ಮನಿಷ್ಠರೆಂದೂ ಸ್ವಾತಂತ್ರ್ಯ ಪ್ರಿಯರೆಂದೂ ಹೆಸರಾದವರು. ಪ್ರತಿ ಹಳ್ಳಿಗೂ ಒಂದಾದರೂ ಅತಿಥಿಗೃಹವಿದೆ. ನೃತ್ಯ ಜನಪ್ರಿಯ ಮನೋರಂಜನೆ. ಖವಾಲಿ ಭಕ್ತಿಗೀತೆಗಳು ಪಾಕಿಸ್ತಾನದಲ್ಲಿ ಜನಪ್ರಿಯವಾಗಿವೆ. ಕಾವ್ಯವಾಚನ ಇನ್ನೊಂದು ಜನಪ್ರಿಯ ಸಾಂಸ್ಕøತಿಕ ಚಟುವಟಿಕೆ. ಧರ್ಮ : ಪಾಕಿಸ್ತಾನ ಮುಖ್ಯವಾಗಿ ಮುಸ್ಲಿಮರ ದೇಶ. ಅಲ್ಲಿಯ ಜನಸಂಖ್ಯೆಯಲ್ಲಿ 88.1% ಮುಸ್ಲಿಮರು, 5.8% ಅನುಸೂಚಿತ ಹಿಂದೂ ವರ್ಗಗಳು 4.9% ಸವರ್ಣೀಯ ಹಿಂದೂಗಳು, 0.8% ಕ್ರೈಸ್ತರು ಮತ್ತು 0.4% ಬೌದ್ಧರು. ಮುಸ್ಲಿಮರಲ್ಲಿ ಸುನ್ನಿ ಪಂಥದವರು ಬಹುಸಂಖ್ಯಾತರು. ಅಲ್ಪಸಂಖ್ಯೆಯಲ್ಲಿರುವ ಕೆಲವು ಸಣ್ಣ ಪಂಥಗಳನ್ನು ಬಿಟ್ಟರೆ ಮುಸ್ಲಿಮ್‍ರಲ್ಲಿ ಬಹುಮಟ್ಟಿಗೆ ಪುರೋಹಿತ ವರ್ಗವಿಲ್ಲ. ಧರ್ಮಶ್ರದ್ಧೆಯುಳ್ಳ ಯಾವ ಮುಸ್ಲಿಮನಾದರೂ ಇಮಾಮ್ ಅಥವಾ ಮಸೀದಿಯ ಮುಖ್ಯನಾಗಬಹುದು. ಧರ್ಮಪಾರಂಗತರಾದವರಿಗೆ ಮುಲ್ಲಾ, ಮೌಲಾನ ಎಂಬ ಬಿರುದು ಕೊಡುತ್ತಾರೆ. ಸಮಾಜದಲ್ಲಿ ಗೌರವ ಪಡೆದ ಪೀರರ ಸಂಘಟನೆ ಮತ್ತು ಶಿಷ್ಯಪರಂಪರೆ ಇವೆ. ಪಾಕಿಸ್ತಾನ ಧರ್ಮಪ್ರಧಾನ ರಾಜ್ಯ. ಅದನ್ನು ಇಸ್ಲಾಮೀ ಗಣರಾಜ್ಯವೆಂದು ಸರ್ಕಾರ ಘೋಷಿಸಿದೆ. ಅನ್ಯಮತೀಯರಿಗೆ ಧಾರ್ಮಿಕ ಸ್ವಾತಂತ್ರ್ಯವಿದೆ. ಮುಖ್ಯ ಸ್ಥಳಗಳು : ಪಾಕಿಸ್ತಾನ ಪ್ರಾಗೈತಿಹಾಸಿಕ ಕಾಲದ ಸಂಪದ್ಭರಿತ ಅವಶೇಷಗಳಿಂದಲೂ ಅನೇಕ ಐತಿಹಾಸಿಕ ಸ್ಥಳಗಳಿಂದಲೂ ಕೂಡಿದೆ. ಸಿಂಧೂ ಕಣಿವೆ ನಾಗರಿಕತೆಯ ಕಾಲದ ನಗರ ನಿವೇಶನಗಳಾದ ಹರಪ್ಪ, ಮೊಹೆಂಜೊದಾರೋ ಮತ್ತು ಇತರ ಸ್ಥಳಗಳು ಜಗತ್ಪ್ರಸಿದ್ಧವಾಗಿವೆ. ಪಾಕಿಸ್ತಾನದ ಈಶಾನ್ಯ ಭಾಗದಲ್ಲಿ ಪ್ರಾಚೀನ ವಿದ್ಯಾಕೇಂದ್ರವಾದ ತಕ್ಷಶಿಲೆಯ ನಿವೇಶನವಿದೆ. ಮಾಣಿಕ್ಯಾಲಯ, ಪಾವರ್ ಮೊದಲಾದ ಸ್ಥಳಗಳಲ್ಲಿ ಬೌದ್ಧ ಸ್ಮಾರಕಗಳಿವೆ. ಅರೋರ್, ಮುಲ್ತಾನ್, ಜಲಾಲ್‍ಪುರ, ಮಾಲೊತ್, ಹೈದರಾಬಾದ್, ಖೈರ್‍ಪುರ, ಭಾವಲ್‍ಪುರ, ನಂದನ, ಖುಷಾಬ್ ಮೊದಲಾದ ಚಾರಿತ್ರಿಕ ಸ್ಥಳಗಳಿವೆ. ಶಿವಗಂಗಾ, ಹಸನ್ ಅಬ್ದುಲ್, ಕತಸ್ ಸೆಹ್ವಾನ್ ಮೊದಲಾದ ಧಾರ್ಮಿಕಸ್ಥಳಗಳಿವೆ. ಪಾಕಿಸ್ತಾನದ ಮುಖ್ಯ ನಗರಗಳ ಜನಸಂಖ್ಯೆ (2000) ಇಸ್ಲಾಮಾಬಾದ್ (ರಾಜಧಾನಿ) (2,04,364), ಕರಾಚಿ (52,08,170), ಲಾಹೋರ್ (29,52,689), ಹೈದರಾಬಾದ್ (7,51,529) ರಾವಲ್ಪಿಂಡಿ (7,94,843) ಮುಲ್ತಾನ್ (7,36,925), ಪೆಷಾವರ್ (5,06,896), ಸರ್ಗೋದ (2,91,362) ಸಕ್ಕೂರ್ (1,90,551) ಕ್ವೆಟ್ಟ (2,85,719), ಗುರ್ಜನ್‍ವಾಲಾ (6,37,591), ಸಿಯಾಲ್‍ಕೋಟ್ (3,02,009), ಬಹವಲ್‍ಪುರ (1,80,263) ಆರೋಗ್ಯ: ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. 13,400 ವೈದ್ಯರು ಮತ್ತು 4,700 ದಾದಿಯರಿದ್ದಾರೆ (1970), ಜನರಲ್ ಆಸ್ಪತ್ರೆಗಳು, ಡಿಸ್ಪೆನ್ಸರಿಗಳು ಮತ್ತು ಆರೋಗ್ಯಕೇಂದ್ರಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸಲಾಗಿದೆ. ಕ್ಷಯರೋಗ ಆಸ್ಪತ್ರೆಗಳು, ಕುಷ್ಠರೋಗ ಆಸ್ಪತ್ರೆಗಳಿವೆ. ದಾದಿಯರ ತರಬೇತಿ ಸಂಸ್ಥೆಗಳಿವೆ. ಕರಾಚಿಯಲ್ಲಿ ಆರೋಗ್ಯ ಶಿಕ್ಷಣ ಬ್ಯೂರೊ ಇದೆ. ಆದರೆ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನೂ ಆರೋಗ್ಯ ಸೌಲಭ್ಯಗಳ ಕೊರತೆಯುಂಟು. ಬಡವರಲ್ಲಿ, ಮಕ್ಕಳಲ್ಲಿ ಪೌಷ್ಟಿಕ ಅಂಶದ ಕೊರತೆ ಮತ್ತು ನೈರ್ಮಲ್ಯದ ಕೊರತೆ ಇವೆ.      

ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕರಿಸಲಾದ ಭಾರತ ಸ್ವಾತಂತ್ರ್ಯ ಅಧಿನಿಯಮದ ವಿಧಿಗಳಿಗೆ ಅನುಸಾರವಾಗಿ ಆಗಿನ ವಿಶಾಲ ಭಾರತವನ್ನು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜಿಸಿದಾಗ, 1947ರ ಆಗಸ್ಟ್ 14 ರಂದು, ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳನ್ನು ಒಳಗೊಂಡ ಪಾಕಿಸ್ತಾನ ಕಾಮನ್‍ವೆಲ್ತಿನ ಒಂದು ಸಾರ್ವಭೌಮ ರಾಷ್ಟ್ರವಾಗಿತ್ತು. 1956ರ ಮಾರ್ಚ್ 23ರಂದು ಜಾರಿಗೆ ಬಂದ ಸಂವಿಧಾನಕ್ಕೆ ಅನುಸಾರವಾಗಿ ಪಾಕಿಸ್ತಾನ ಇಸ್ಲಾಂ ಗಣರಾಜ್ಯವೆಂಬ ಹೆಸರಿನ ಸಂಯುಕ್ತ ಗಣರಾಜ್ಯವಾಯಿತು. 1958ರ ಅಕ್ಟೋಬರ್ 7 ರಂದು ಅಧ್ಯಕ್ಷ ಇಸ್ಕಂದರ್ ಮಿರ್ಜಾ ಪಾಕಿಸ್ತಾನದ ಸಂಸತ್ತನ್ನು ವಿಸರ್ಜಿಸಿ, ಸಂವಿಧಾನವನ್ನು ರದ್ದು ಮಾಡಿದರು. ಅವರು ಅಕ್ಟೋಬರ್ 27ರಂದು ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದರು. ಆಗ ಆ ಸ್ಥಾನಕ್ಕೆ ಜನರಲ್ ಮಹಮದ್ ಅಯೂಬ್ ಖಾನ್ ಬಂದರು. ಅದಕ್ಕೂ ಮೊದಲೇ ಅವರು ಲಷ್ಕರಿ ಶಾಸನದ ಮುಖ್ಯ ಆಡಳಿತಗಾರರೂ ಸೇನಾ ಮಹಾ ದಂಡನಾಯಕರೂ ಆಗಿದ್ದರು. ಅವರಿಗೆ ಸಹಾಯಕವಾಗಿ ಅಧ್ಯಕ್ಷೀಯ ಸಚಿವ ಸಂಪುಟವಿತ್ತು. 1960ರ ಫೆಬ್ರವರಿಯಲ್ಲಿ ಸ್ಥಳೀಯ ಸಮಿತಿಗಳ ಸುಮಾರು 80,000 ಸದಸ್ಯರು ಅಧ್ಯಕ್ಷ ಅಯೂಬರಲ್ಲಿ ವಿಶ್ವಾಸ ವ್ಯಕ್ತಪಡಿಸಿ, ಅವರು ಮುಂದಿನ 5 ವರ್ಷಗಳ ಕಾಲ ಅಧಿಕಾರದಲ್ಲಿರಲು ಮತ ನೀಡಿದರು. ಸಂವಿಧಾನ ಸಭೆ ಅಸ್ತಿತ್ವಕ್ಕೆ ಬಂತು. 1962ರ ಮಾರ್ಚ್ 1 ರಂದು ಅಧ್ಯಕ್ಷ ಅಯೂಬ್ ಹೊಸ ಸಂವಿಧಾನ ಘೋಷಿಸಿದರು. ಹೊಸ ಸಂವಿಧಾನ ಪ್ರಕಾರ ಪಾಕಿಸ್ತಾನದಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳೆಂಬ ಎರಡು ಪ್ರಾಂತ್ಯಗಳಿದ್ದುವು. ಉರ್ದು ಮತ್ತು ಬಂಗಾಲಿ ಆಡಳಿತ ಭಾಷೆಗಳಾಗಿದ್ದುವು. ಇಸ್ಲಾಮಾಬಾದ್ ರಾಜಧಾನಿ, ಢಾಕ್ಕಾ ಸಂಸದೀಯ ರಾಜಧಾನಿಯಾಗಿತ್ತು. ದೇಶಕ್ಕೆ ಪಾಕಿಸ್ತಾನ್ ಸಂಯುಕ್ತ ಗಣರಾಜ್ಯ (ಪಾಕಿಸ್ತಾನ್ ಇಸ್ಲಾಂ ಗಣರಾಜ್ಯವೆಂಬ ಹೆಸರಿಗೆ ಬದಲಾಗಿ) ಎಂಬ ಹೆಸರು ನೀಡಲಾಯಿತು. ಈ ಸಂವಿಧಾನದಲ್ಲಿ ಸೇನಾಪಡೆಗಳ ನಾಯಕತ್ವ, ಸಚಿವ ಸಂಪುಟದ ನೇಮಕ, ಪ್ರಾಂತೀಯ ರಾಜ್ಯಪಾಲರ ನೇಮಕ ಹೀಗೆ ಸ್ಥೂಲವಾದ ಕಾರ್ಯಾಂಗಾಧಿಕಾರಗಳನ್ನು ಅಧ್ಯಕ್ಷನಿಗೆ ನೀಡಲಾಗಿತ್ತು. ಅಧ್ಯಕ್ಷ ಪಶ್ಚಿಮ ಪಾಕಿಸ್ತಾನದವನಾದರೆ ರಾಷ್ಟ್ರೀಯ ಸಭಾಪತಿ ಪೂರ್ವ ಪಾಕಿಸ್ತಾನದವನಾಗಿರಬೇಕು. ಇಲ್ಲವೇ ವಿಲೋಮವಾಗಿರಬಹುದು. ಸಂವಿಧಾನ ತಿದ್ದುಪಡಿಗೆ ರಾಷ್ಟ್ರೀಯ ಸಭೆಯ 2/3ರಷ್ಟು ಬಹುಮತ ಅಗತ್ಯ. ತಿದ್ದುಪಡಿಯನ್ನು ನಿರಾಕರಿಸುವ ಅಧಿಕಾರವನ್ನು ಅಧ್ಯಕ್ಷ ಚಲಾಯಿಸಿದರೆ ಅಸೆಂಬ್ಲಿ (3/4 ರಷ್ಟು ಬಹುಮತದಿಂದ) ಅಧ್ಯಕ್ಷನ ನಿರಾಕರಣೆಯನ್ನು ತಳ್ಳಿ ಹಾಕಬಹುದು. ಇದನ್ನು ಅಧ್ಯಕ್ಷ ಪ್ರಜಾ ನಿರ್ಧಾರಕ್ಕೆ ಒಪ್ಪಿಸಬಹುದು ಅಥವಾ ಅಸೆಂಬ್ಲಿಯನ್ನು ವಿಸರ್ಜಿಸಬಹುದು. ಆತ ಅಸೆಂಬ್ಲಿಯನ್ನು ವಿಸರ್ಜಿಸಿದರೆ, 120 ದಿನಗಳೊಳಗಾಗಿ ತಾನಾಗಿಯೇ ಪುನರ್‍ಚುನಾವಣೆಯನ್ನು ಕೋರಬೇಕು. ಇವು ಈ ಸಂವಿಧಾನದ ಕೆಲವು ಮುಖ್ಯ ಅಂಶಗಳು. ಹೊಸ ಸಂವಿಧಾನಕ್ಕೆ ಅನುಸಾರವಾಗಿ ಅಧ್ಯಕ್ಷ ಅಯೂಬ್ ಘೋಷಿಸಿದಂತೆ 1965ರ ಮಾರ್ಚ್ 23ರ ರಾಷ್ಟ್ರೀಯ ಸಭೆಯ ಚುನಾವಣೆಗಳಲ್ಲಿ ಪಾಕಿಸ್ತಾನ ಮುಸ್ಲಿಂಲೀಗ್ ನಿಚ್ಚಳ ಬಹುಮತ ಗಳಿಸಿತು. 1970ರ ಮಾರ್ಚ್ 23ರಂದು ನಡೆಯಬೇಕಾದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಇಚ್ಛಿಸುವುದಿಲ್ಲವೆಂದು ಅಧ್ಯಕ್ಷ ಅಯೂಬ್ ಪ್ರಕಟಿಸಿದ್ದರು. ಜನರಲ್ ಎ.ಎಮ್.ಯಹ್ಯಾ ಖಾನರು ತತ್‍ಕ್ಷಣದಲ್ಲೇ ಇಡೀ ದೇಶದಲ್ಲಿ ಲಷ್ಕರಿ ಶಾಸನ ಘೋಷಿಸಿ ಅಧ್ಯಕ್ಷರಾದರಲ್ಲದೆ ಮುಖ್ಯ ಆಡಳಿತಗಾರರೂ ಆದರು. ಪಾಕಿಸ್ತಾನದ ರಾಜ್ಯ ವ್ಯವಸ್ಥಾ ಸಭೆಗೆ 1970ರ ಡಿಸೆಂಬರ್ 7 ರಂದು ಮಹಾ ಚುನಾವಣೆಗಳು ನಡೆದುವು. ಒಬ್ಬ ವ್ಯಕ್ತಿಗೆ ಒಂದು ಮತ ಹಾಗೂ ಸಾರ್ವತ್ರಿಕ ವಯಸ್ಕ ಮತದಾನ ತತ್ವಗಳನ್ನು ಆಧರಿಸಿದ ಗುಪ್ತ ಮತದಾನವದು. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು 16 ಮಂದಿ ಸ್ವತಂತ್ರರು ರಾಜ್ಯ ವ್ಯವಸ್ಥಾ ಸಭೆಯಲ್ಲಿ ಸ್ಥಾನ ಗಳಿಸಿದರು. ಷೇಖ್ ಮುಜೀಬುರ್ ರಹಮಾನರ ಧುರೀಣತ್ವದಲ್ಲಿ ಅವಾಮಿ ಲೀಗ್ 167 ಸ್ಥಾನ ಗಳಿಸಿತು. eóÉಡ್.ಎ.ಭುಟ್ಟೋರ ನಾಯಕತ್ವದಲ್ಲಿ ಪೀಪಲ್ಸ್ ಪಕ್ಷ 90 ಸ್ಥಾನ ಗಳಿಸಿತು. 1970ರ ಅಧಿನಿಯಮದ ಚೌಕಟ್ಟಿನಲ್ಲೆ ರಾಷ್ಟ್ರೀಯ ಸಭೆ 12 ದಿನಗಳೊಳಗಾಗಿ ಸಂವಿಧಾನ ರೂಪಿಸಬೇಕಾಗಿತ್ತು. ಸಭೆ 1971ರ ಮಾರ್ಚ್ 30ರಂದು ಸಮಾವೇಶಗೊಳ್ಳಬೇಕೆಂದು ಅಧ್ಯಕ್ಷರಿಂದ ನಿರ್ಧಾರವಾಗಿತ್ತು. ಸಂವಿಧಾನ ರೂಪಣೆಗೆ ಸಂಬಂಧಿಸಿದಂತೆ ಸಾಮಾನ್ಯ ಒಪ್ಪಂದಕ್ಕೆ ಬರುವ ದೃಷ್ಟಿಯಿಂದ ನಡುಗಾಲದಲ್ಲಿ(1970ರ ಡಿಸೆಂಬರ್-1971ರ ಫೆಬ್ರವರಿ) ರಾಜಕೀಯ ಸಂಧಾನ ಸಭೆನಡೆಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಲ್ಲಿ, ಮುಖ್ಯವಾಗಿ ಷೇಖ್ ಮುಜೀಬರ್ ರಹಮಾನ್ ಮತ್ತು ಭುಟ್ಟೋ ಇವರ ನಡುವೆ, ಮಾತುಕತೆ ನಡೆದರೂ ಪೂರ್ಣ ಬಿಕ್ಕಟ್ಟಿನ ಸ್ಥಿತಿ ಉಂಟಾಯಿತು. ಆದ್ದರಿಂದ ರಾಜಕೀಯ ನಾಯಕರು ಒಂದು ಒಪ್ಪಂದಕ್ಕೆ ಬರುವುದಕ್ಕಾಗಿ ಹೆಚ್ಚಿನ ಕಾಲಾವಕಾಶ ಮಾಡಿಕೊಡಲು 1971ರ ಮಾರ್ಚ್ 3ರಂದು ಸಮಾವೇಶಗೊಳ್ಳಬೇಕಾಗಿದ್ದ ರಾಷ್ಟ್ರೀಯ ಸಭೆಯ ಆರಂಭದ ಅಧಿವೇಶನವನ್ನು ಅಧ್ಯಕ್ಷರು ಮಾರ್ಚ್ 25ರ ವರೆಗೆ ಮುಂದೂಡಿದರು. ಇದಕ್ಕೆ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾದೇಶ) ಪ್ರಚಂಡ ಪ್ರತಿಭಟನೆ ವ್ಯಕ್ತವಾಯಿತು. ಆಗಿನ ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯಕ್ಕಾಗಿ ಚಳುವಳಿ ಬಿರುಸಾದಾಗ ಮಾರ್ಚ್25-26ರ ರಾತ್ರಿಯಲ್ಲಿ ಆ ಪ್ರದೇಶದ ಮೇಲೆ ಪಾಕಿಸ್ತಾನಿ ಸೇನೆ ಕ್ರಮ ತೆಗೆದುಕೊಂಡಿತು. ವಿಷಮ ಪರಿಸ್ಥಿತಿ ಉಂಟಾಗಬಹುದೆಂದು ಅಧ್ಯಕ್ಷ ಯಹ್ಯಾ ಖಾನರು ರಾಜಕೀಯವಾಗಿ ಅವಾಮಿ ಪಕ್ಷವನ್ನು ನಿಷೇಧಿಸಿದರಾದರೂ, ಮಹಾಚುನಾವಣೆಗಳನ್ನು ರದ್ದುಗೊಳಿಸಲಿಲ್ಲ. 1971ರ ಡಿಸೆಂಬರ್‍ನಲ್ಲಿ ಭಾರತ ಸೇನೆ ಪೂರ್ವಪಾಕಿಸ್ತಾನದಲ್ಲಿ ಬಾಂಗ್ಲಾ ವಿಮೋಚನಾ ಸೈನಿಕರ ನೆರವಿಗೆ ಹೋಯಿತು. 1971ರ ಡಿಸೆಂಬರ್ 17ರಂದು ಭಾರತ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿತು. ಪೂರ್ವಪಾಕಿಸ್ತಾನದ ಎಲ್ಲ ಪ್ರದೇಶವನ್ನೂ ಒಳಗೊಂಡಂತೆ ಸ್ವತಂತ್ರ ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂದಿತ್ತು. 1971ರ ಡಿಸೆಂಬರ್ 20ರಂದು ಅಧ್ಯಕ್ಷ ಎ.ಎಂ ಯಹ್ಯಾ ಖಾನ್ ರಾಜೀನಾಮೆ ನೀಡಿದರು. ಜುಲ್ಫಿಕರ್ ಅಲಿ ಭುಟ್ಟೋ ಅಧ್ಯಕ್ಷರಾದರು; ಹಾಗೂ ಅಂದಿನಿಂದಲೇ ಲಷ್ಕರಿ ಶಾಸನದ ಆಡಳಿತಗಾರರೂ ಆದರು. 1972ರ ಏಪ್ರಿಲ್ 21ರಂದು ಲಷ್ಕರಿ ಶಾಸನವನ್ನು ತೆಗೆದುಹಾಕಿ ಅಧ್ಯಕ್ಷ ಭುಟ್ಟೋ ತಾತ್ಕಾಲಿಕ ಸಂವಿಧಾನದಂತೆ, ಅಂದಿನಿಂದ ಪ್ರಥಮ ನಾಗರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದರು. ಅಧ್ಯಕ್ಷ ಭುಟ್ಟೋ ತತ್‍ಕ್ಷಣದಲ್ಲಿಯೇ ಕೇಂದ್ರ ಹಾಗೂ ಪ್ರಾಂತ್ಯಗಳ ಮಟ್ಟದಲ್ಲಿ ಕೆಲವು ಮುಖ್ಯ ನೇಮಕಗಳನ್ನು ಮಾಡಿ ಅನಂತರ ತಮ್ಮ ಸಚಿವ ಸಂಪುಟವನ್ನು ಹೆಸರಿಸಿದರು. ಅವರ ಸಚಿವ ಸಂಪುಟವನ್ನು ಕೆಲವು ಸಂದರ್ಭಗಳಲ್ಲಿ ವಿಸ್ತಾರಗೊಳಿಸಲು ಅವಕಾಶ ಮಾಡಲಾಯಿತು. ಭುಟ್ಟೋ ಅಧಿಕಾರ ವಹಿಸಿಕೊಂಡ ಅನಂತರ ರಾಷ್ಟ್ರೀಯ ನೀತಿ, ವಿದೇಶಾಂಗ ನೀತಿ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. 1973ರ ಮಾರ್ಚ್ 23ರ ಒಳಗೆ ಖಾಯಂ ಸಂವಿಧಾನ ಸಿದ್ಧವಾಗುವುದೆಂದು ಅವರು ಸೂಚನೆ ನೀಡಿದರು. 1972ರ ಜನವರಿ 30ರಂದು ಪಾಕಿಸ್ತಾನ ಕಾಮನ್‍ವೆಲ್ತಿನಿಂದ ಹೊರಬಂತು. ಅಧ್ಯಕ್ಷ ಭುಟ್ಟೋ ಅರ್ಥವತ್ತಾಗಿ ಪೂರ್ವ ಪಾಕಿಸ್ತಾನದ ಉಪಚುನಾವಣೆಗಳ ಫಲಿತಾಂಶಗಳನ್ನು ರದ್ದುಗೊಳಿಸಿದರು. ರಾಷ್ಟ್ರೀಯ ಅವಾಮಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕಿದರು ಮತ್ತು ಗೃಹ ಬಂಧನದಲ್ಲಿದ್ದ ಷೇಖ್ ಮುಜಿಬುರ್ ರಹಮಾನರನ್ನು ಬೇಷರತ್ತಾಗಿ ಬಿಡುಗಡೆ ಮಾಡಿದರು. 1973ರ ಏಪ್ರಿಲ್ 10ರಂದು ರಾಷ್ಟ್ರೀಯ ಸಭೆಯ ಅಂಗೀಕಾರ ಪಡೆದಿದ್ದ ಹೊಸ ಸಂವಿಧಾನವನ್ನು 1973ರ ಆಗಸ್ಟ್ 14ರಂದು ಜಾರಿಗೆ ತರಲಾಯಿತು. ಈ ಸಂವಿಧಾನದಂತೆ ಪ್ರಧಾನ ಮಂತ್ರಿಯಾಗುವ ಸಲುವಾಗಿ ಭುಟ್ಟೋ ಅಧ್ಯಕ್ಷತೆಯ ಅಧಿಕಾರ ತ್ಯಜಿಸಿದರು. ಫಜûಲ್ ಇಲಾಹಿ ಚೌಧರಿಯನ್ನು ಪಾಕಿಸ್ತಾನದ ಅಧ್ಯಕ್ಷರಾಗಿ ಚುನಾಯಿಸಲಾಯಿತು. 1977ರಲ್ಲಿ ಚುನಾವಣೇ ನಡೆದು ಭುಟ್ಟೋ ಅಧಿಕಾರದಲ್ಲಿ ಮುಂದುವರಿದರಾದರೂ ಚುನಾವಣೆಗಳನ್ನು ನ್ಯಾಯವಾಗಿ ನಡೆಸಲಿಲ್ಲವೆಂಬ ಕಾರಣದಿಂದ ಪಾಕಿಸ್ತಾನದಲ್ಲಿ ಪ್ರಚಂಡ ವಿರೋಧ ಉಂಟಾಯಿತು. ಕ್ಷಿಪ್ರಾಕ್ರಮಣ ಜಿûಯಾಉಲ್ ರಹಮಾನ್ ಅಧಿಕಾರ ವಹಿಸಿಕೊಂಡರು. ಭುಟ್ಟೋ ಪದಚ್ಯುತರಾದರು. ಕೊಲೆಯ ಸಂಚಿನ ಆಪಾದನೆಯ ವಿಚಾರಣೆಯಲ್ಲಿ ಭುಟ್ಟೋ ತಪ್ಪಿತಸ್ಥರೆಂದು ಅವರನ್ನು ಅನಂತರ ಮರಣದಂಡನೆಗೆ ಗುರಿಪಡಿಸಲಾಯಿತು. 

ಪಾಕಿಸ್ತಾನದ ಸಂಸತ್ತಿನಲ್ಲಿ ಸೆನೆಟ್ ಮತ್ತು ರಾಷ್ಟ್ರೀಯ ಸಭೆ ಎಂಬ ಎರಡು ಸದನಗಳಿವೆ. ಸೆನೆಟ್‍ನಲ್ಲಿ 63 ಸದಸ್ಯರಿರುತ್ತಾರೆ. ಪಾಕಿಸ್ತಾನದಲ್ಲಿ 4 ಪ್ರಾಂತ್ಯಗಳಿವೆ. ಪ್ರತಿಯೊಂದು ಪ್ರಾಂತೀಯ ಸಭೆಯೂ ಸೆನೆಟ್‍ಗೆ 14 ಸದಸ್ಯರನ್ನು ಚುನಾಯಿಸುತ್ತದೆ. ಕೇಂದ್ರಾಡಳಿತ ಬುಡಕಟ್ಟಿನ ಪ್ರದೇಶಗಳಿಂದ ಆಯ್ಕೆಯಾಗುವ ಸದಸ್ಯರು 5 ಮಂದಿ. ಕೇಂದ್ರ ರಾಜಧಾನಿ ಪ್ರದೇಶದಿಂದ 2 ಸದಸ್ಯರನ್ನು ಆರಿಸಲಾಗುತ್ತದೆ. ಈ ಸದನದ ಸದಸ್ಯರ ಅಧಿಕಾರಾವಧಿ 4 ವರ್ಷಗಳು. ಅವರಲ್ಲಿ ಅರ್ಧದಷ್ಟು ಸದಸ್ಯರು 2 ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ. ಆದರೆ ಕೇಂದ್ರಾಡಳಿತ ಬುಡಕಟ್ಟಿನ ಪ್ರದೇಶದಿಂದ ಸಭೆಗೆ ಚುನಾಯಿತರಾದ ಸದಸ್ಯರಲ್ಲಿ ಮೊದಲ 3 ಸದಸ್ಯರು 2 ವರ್ಷಗಳ ಅನಂತರ ನಿವೃತ್ತರಾಗುತ್ತಾರೆ.

ರಾಷ್ಟ್ರೀಯ ಸಭೆಯಲ್ಲಿ ವಯಸ್ಕ ಮತದಾನ ಪದ್ಧತಿಯಿಂದ ಚುನಾಯಿಸಲಾದ 200 ಸದಸ್ಯರಿರುತ್ತಾರೆ. 10 ಅಧಿಕ ಸ್ಥಾನಗಳನ್ನು ಸ್ತ್ರೀಯರಿಗೆ ಕಾದಿರಿಸಲಾಗಿದೆ. 10 ವರ್ಷಗಳವರೆಗೆ ಇಲ್ಲವೇ ಮುಂದಿನ ಮಹಾಚುನಾವಣೆಯ ವರೆಗೆ(ಯಾವುದು ಅನಂತರವೋ ಅಲ್ಲಿಯವರೆಗೆ) ಈ ಸ್ಥಾನಗಳಲ್ಲಿ ಇರಲು ಅವಕಾಶವಿದೆ. ಕಾದಿರಿಸಲಿರುವ ಎಲ್ಲ ಸ್ಥಾನಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಸ್ತ್ರೀಯರೂ ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿನ ಸ್ಥಾನಗಳನ್ನು ಪ್ರಾಂತ್ಯಗಳು, ಕೇಂದ್ರಾಡಳಿತ ಬುಡಕಟ್ಟು ಪ್ರದೇಶಗಳು ಮತ್ತು ಕೇಂದ್ರರಾಜಧಾನಿ ಇವುಗಳ ನಡುವೆ ಜನಸಂಖ್ಯೆಯ ಆಧಾರದ ಮೇಲೆ ಹಂಚಲಾಗುತ್ತದೆ. ರಾಷ್ಟ್ರೀಯ ಅಸೆಂಬ್ಲಿಯ ಅವಧಿ 5 ವರ್ಷಗಳು.

ಪಾಕಿಸ್ತಾನದ ನ್ಯಾಯಾಂತ ವ್ಯವಸ್ಥೆಗೆ ಬ್ರಿಟಿಷ್ ವ್ಯವಸ್ಥೆಯೇ ಮೂಲ. ಬ್ರಿಟಿಷ್ ಭಾರತದಲ್ಲಿ ಬಳಕೆಯಲ್ಲಿದ್ದ ವ್ಯವಸ್ಥೆಯಿಂದ ಅದು ನೇರವಾಗಿ ಆಚರಣೆಗೆ ಬಂದಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ಮೂಲ, ಮೇಲ್ಮನವಿ ಮತ್ತು ಸಲಹಾ ವ್ಯಾಪ್ತಿ ಇದೆ. ಈ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಧೀಶನಲ್ಲದೆ 6 ಕಿರಿಯ ನ್ಯಾಯಾಧೀಶರಿರುತ್ತಾರೆ. ರಾಷ್ಟ್ರದ ಅಧ್ಯಕ್ಷರು ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ. ಪಾಕಿಸ್ತಾನದಲ್ಲಿ 3 ಉಚ್ಚ ನ್ಯಾಯಾಲಯಗಳಿವೆ. ಅಧ್ಯಕ್ಷರ ಒಪ್ಪಿಗೆಯಿಂದ 2 ಪ್ರಾಂತ್ಯಗಳಿಗೆ ಒಂದೇ ಶ್ರೇಷ್ಠ ನ್ಯಾಯಾಲಯ ಇರಲು ಕೂಡ ಅವಕಾಶವಿದೆ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ಅಧ್ಯಕ್ಷರು ನೇಮಿಸುತ್ತಾರೆ.

ಉಚ್ಚ ನ್ಯಾಯಾಲಯಗಳ ಅಧೀನದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಿವೆ. ಇವುಗಳ ಅಧೀನದಲ್ಲಿ ಅಧೀನ ನ್ಯಾಯಾಲಯಗಳು, ನಾಗರಿಕ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮ ನ್ಯಾಯಾಲಯಗಳು ಮತ್ತು ಅಪರಾಧ ವಿಷಯಗಳಿಗೆ ಸಂಬಂಧಿಸಿದಂತೆ ದಂಡಾಧೀಶರು ಇರುತ್ತಾರೆ. ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತ ನ್ಯಾಯಾಂಗಕ್ಕೆ ಸಂವಿಧಾನ ಅವಕಾಶ ಮಾಡಿಕೊಟ್ಟಿರುವುದಲ್ಲದೆ, ಪ್ರಜೆಗಳಲ್ಲಿಯ ನಾಗರಿಕ ಮತ್ತು ಅಪರಾಧಕ್ಕೆ ಸಂಬಂಧಿಸಿದ ವಾದಗಳನ್ನು ಬಗೆಹರಿಸಲು ರಾಜಿನ್ಯಾಯ ಸ್ಥಾನಗಳನ್ನು ಸ್ಥಾಪಿಸಲು ಸರ್ಕಾರ 1961ರ ಫೆಬ್ರವರಿಯಲ್ಲಿ ನಿರ್ಧರಿಸಿತು.

ನ್ಯಾಯಾಧೀಶರ ನಡತೆಯನ್ನು ಪ್ರಶ್ನಿಸಲು ಶ್ರೇಷ್ಠ ನ್ಯಾಯಿಕ ಸಮಿತಿಗೆ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಈ ಸಮಿತಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ಅದೇ ನ್ಯಾಯಾಲಯದ ಜ್ಯೇಷ್ಠತಮರಾದ ಇಬ್ಬರು ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಇಬ್ಬರು ಜ್ಯೇಷ್ಠತಮ ನ್ಯಾಯಾಧೀಶರು ಇರುತ್ತಾರೆ. ಅಧ್ಯಕ್ಷರಿಂದ ನೇಮಕಗೊಂಡ ಒಬ್ಬ ಅಟಾರ್ನಿ ಜನರಲ್ ಇರುತ್ತಾನೆ. ಅವನು ಪಾಕಿಸ್ತಾನದ ಎಲ್ಲ ನ್ಯಾಯಾಲಯಗಳಲ್ಲೂ ಹಾಜರಿರುವ ಹಕ್ಕನ್ನು ಪಡೆದಿರುತ್ತಾನೆ.

ಪಾಕಿಸ್ತಾನದಲ್ಲಿ ಪಂಜಾಬ್, ವಾಯವ್ಯ ಸರಹದ್ದು ಪ್ರಾಂತ್ಯ, ಸಿಂಧ್ ಮತ್ತು ಬಲೂಚಿಸ್ತಾನಗಳೆಂಬ ನಾಲ್ಕು ಪ್ರಾಂತ್ಯಗಳಿವೆ. ಇವು 1970ರ ಜುಲೈಗೆ ಮುಂಚಿತವಾಗಿ ಒಂದೇ ಆಡಳಿತ ಘಟಕದಲ್ಲಿ ಸೇರಿದ್ದುವು. ಬಹಾವಲ್ ಪುರ, ಡೇರಾ, ಇಸ್‍ಮೇಲ್ ಖಾನ್, ಹೈದರಾಬಾದ್, ಕರಾಚಿ, ಕಲಾಟ್, ಖೈರ್‍ಪುರ್, ಲಾಹೋರ್, ಮಲಕಂದ್, ಮುಲ್ತಾನ್, ಪೆಷಾವರ್, ರಾವಲ್ಪಿಂಡಿ, ಸರ್‍ಗೋಧ, ಕ್ವೆಟ್ಟ ಇವು ವಿಭಾಗಗಳು. ಒಟ್ಟು 51 ಜಿಲ್ಲೆಗಳಿವೆ.

ನಾಲ್ಕು ಪ್ರಾಂತ್ಯಗಳಲ್ಲಿನ ಪ್ರತಿಯೊಂದು ಪ್ರಾಂತ್ಯದಲ್ಲಿ ಮುಖ್ಯಮಂತ್ರಿ ಆಡಳಿತ ನಡೆಸುತ್ತಾನೆ. ಆತನಿಗೆ ಸಚಿವ ಸಂಪುಟ ಮತ್ತು ಒಬ್ಬ ಕಾರ್ಯದರ್ಶಿಯ ನೇತೃತ್ವದಲ್ಲಿನ ಪ್ರಾಂತೀಯ ಸಚಿವಾಲಯ ಸಹಾಯ ನೀಡುತ್ತವೆ. ಪ್ರಾಂತೀಯ ರಾಜ್ಯಪಾಲರು ಅಧ್ಯಕ್ಷನಿಂದ ನೇಮಕಗೊಳ್ಳುತ್ತಾರೆ. ಆತನ ವಿಶ್ವಾಸ ಇರುವವರೆಗೆ ಅಧಿಕಾರದಲ್ಲಿ ಉಳಿಯುತ್ತಾರೆ.	ಅಧ್ಯಕ್ಷನಿಂದ ನೇಮಕಗೊಂಡ ಕಮಿಷನರ್‍ಗಳು ಸಂಬಂಧಿಸಿದ ವಿಭಾಗಗಳಲ್ಲಿ ಆಡಳಿತ ನಡೆಸುತ್ತಾರೆ. ಪ್ರಾಂತೀಯ ಸರ್ಕಾರಗಳಿಗೆ ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿ ಅಥವಾ ಕಲೆಕ್ಟರ್‍ಗಳ ಆಡಳಿತ ನಿಯಂತ್ರಣಕ್ಕೆ ಜಿಲ್ಲೆಗಳು ಒಳಪಡುತ್ತವೆ.

ಪಾಕಿಸ್ತಾನ ಒಂದು ಪ್ರತ್ಯೇಕ ರಾಷ್ಟ್ರವಾದ್ದು 1947ರಲ್ಲಾದರೂ ಈ ಪ್ರದೇಶದ ಇತಿಹಾಸ ಬಹಳ ಪ್ರಾಚೀನ ಕಾಲದಿಂದಲೂ ಗಮನಾರ್ಹವಾಗಿದೆ. ಆದರೂ ಇಲ್ಲಿ ವ್ಯವಸ್ಥಿತ ಪ್ರಾಕ್ತನ ಸಂಶೋಧನೆಗಳು ಹೆಚ್ಚಾಗಿ ನಡೆದಿಲ್ಲವಾದ್ದರಿಂದ ಇಲ್ಲಿ ಆದಿಮಾನವನ ಆಗಾಗಿನ ಚಟುವಟಿಕೆಗಳ ಸಮಗ್ರ ಚಿತ್ರ ದೊರೆಯದಾಗಿದೆ. ಭರತಖಂಡದ ಪ್ರಾಚೀನತಮ ಶಿಲಾಯುಗ ಸಂಸ್ಕøತಿಗಳ ಪಳೆಯುಳಿಕೆಗಳನ್ನು ಪಂಜಾಬಿನ ಸೋಹನ್ ನದಿ ಕಣಿವೆಯಲ್ಲಿ 1935ರ ವೇಳೆಗೆ ಡಾ.ಹೆಲ್ಮೆಟ್ ಡಿ ಟೆರ್ರಾ ನಾಯಕತ್ವದಲ್ಲಿ ಅಮೆರಿಕದಿಂದ ಬಂದ ಸಂಶೋಧನ ತಂಡ ಕಂಡುಹಿಡಿಯಿತು. ಅದರ ಪ್ರಕಾರ ಮಧ್ಯ ಹಿಮಯುಗದಲ್ಲಿ ಮಾನವ ಮೊದಲು ಇಲ್ಲಿ ನೆಲೆಸಿದ್ದ, ಅವನು ಬಹಳ ದೊಡ್ಡ ಒರಟಾದ ಚಕ್ಕೆಕಲ್ಲಿನ ಆಯುಧಗಳನ್ನು ಬಳಸುತ್ತಿದ್ದ. ಆದರೆ ಅವು ಮಾನವ ನಿರ್ಮಿತವಲ್ಲವೇನೋ ಎಂಬ ಸಂದೇಹವನ್ನು ವಿದ್ವಾಂಸರು ಈಚೆಗೆ ವ್ಯಕ್ತಪಡಿಸುತ್ತಾರೆ. ಅನಂತರಕಾಲದಲ್ಲಿ, ಸೋಹನ್ ಸಂಸ್ಕøತಿಯವೆಂದು ಹೇಳಲಾದ, ಉರಂಟು ಕಲ್ಲಿನಿಂದ ಏಕಮುಖವಾದ, ಚಕ್ಕೆಗಳನ್ನು ತೆಗೆದು ನಿರ್ಮಿಸಿದ. ಮಚ್ಚುಕತ್ತಿ ಮತ್ತು ತುಂಡುಕೊಡಲಿಗಳ ಬಗ್ಗೆ ಇಂಥ ಸಂದೇಹಕ್ಕೆ ಎಡೆಯಿಲ್ಲ. ವಿವಿಧ ಸಂಶೋಧಕ ಪಂಡಿತರ ಹೇಳಿಕೆಗಳಿಗೆ ಅನುಗುಣವಾಗಿ ಈ ಸಂಸ್ಕøತಿಗಳನ್ನು ಕ್ರಿ.ಪೂ1500000-200000 ಕಾಲಕ್ಕೆ ನಿರ್ದೇಶಿಸಬಹುದಾಗಿದೆ. ಈ ದೀರ್ಘಕಾಲದ ಉದ್ದಕ್ಕೂ ಆಯುಧ ತಯಾರಿಕೆಯಲ್ಲಿ ಸುಧಾರಣೆಗಳಾಗುತ್ತಿದ್ದುದರಿಂದ, ಈ ಸಂಸ್ಕøತಿಯ ಆಯುಧಗಳನ್ನು ಆದಿಕಾಲದ, ಅನಂತರ ಕಾಲದ ಮತ್ತು ಸುಧಾರಿತ ಸೋಹನ್ ಸಂಸ್ಕøತಿಗಳೆಂದು ಮೂರು ಗುಂಪುಗಳಾಗಿ ವಿಭಜಿಸಲಾಗಿದೆ. ಆದಿಕಾಲದಲ್ಲಿ ಉಂಡೆಕಲ್ಲುಗಳನ್ನು ಸೀಳಿ ಅವುಗಳ ಒಂದು ಪಾಶ್ರ್ವದಿಂದ ಚಕ್ಕೆಗಳನ್ನು ತೆಗೆದು ಆಯುಧಗಳನ್ನು ಮಾಡಲಾಗುತ್ತಿತ್ತು. ಅನಂತರದ ಕಾಲದಲ್ಲಿ ಸೀಳಿದ ಕಲ್ಲುಗಳ ಒಂದು ಅಥವಾ ಎರಡು ಮುಖಗಳಿಂದಲೂ ಚಕ್ಕೆಗಳನ್ನು ತೆಗೆದು ಉತ್ತಮ ಆಕೃತಿಯ ಮತ್ತು ಹೆಚ್ಚು ಉಪಯುಕ್ತವಾದ ಕೊಡಲಿಗಳನ್ನು ತಯಾರಿಸುತ್ತಿದ್ದುದಲ್ಲದೆ ಅವರು ಲೆವಾಲ್ವಾಷಿಯನ್ ವಿಧಾನದಲ್ಲಿ ಮಾಡಿದ ಚಕ್ಕೆಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದರು. ಅವರ ಆಯುಧಗಳಲ್ಲಿ ಅರ್ಧದಷ್ಟು ಇಂಥವು ಆಗಿದ್ದುವು. ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಜೌಂತ್ರ, ಅಡಿಯಾಲ್, ಬಲವಾಲ್ ಮತ್ತು ಘರಿಯಾಲ್ ಪ್ರದೇಶಗಳಲ್ಲಿ, ಆದಿ ಪೂರ್ವ ಶಿಲಾಯುಗಕ್ಕೆ ಸೇರಿದ, ಆದರೆ ಪರ್ಯಾಯ ದ್ವೀಪೀಯ ಭಾರತದಲ್ಲಿ ಪ್ರಬಲವಾಗಿರುವ, ಕೈಗೊಡಲಿ-ಕ್ಲೀವರ್ ಸಂಸ್ಕøತಿಯ ಕುರುಹುಗಳೂ ಕಂಡುಬಂದಿವೆ. ಸುಧಾರಿತ ಸೋಹನ್ ಸಂಸ್ಕøತಿಯಲ್ಲಿ ಉರುಟು ಕಲ್ಲಿನ ಆಯುಧಗಳು ಬಹಳ ಕಡಿಮೆಯಾದುವಲ್ಲದೆ ಸಣ್ಣವೂ ಉತ್ತಮವಾಗಿ ತಯಾರಿಸಿದವೂ ಆಗಿದ್ದುವು; ಆದರೆ ಚಕ್ಕೆ ಕಲ್ಲಿನ ಆಯುಧಗಳು ಅಧಿಕ ಸಂಖ್ಯೆಯಲ್ಲಿ ಕಂಡುಬಂದುವು. ಈ ಆಯುಧಗಳನ್ನು ಸಾಮಾನ್ಯವಾಗಿ ಮಧ್ಯ ಪೂರ್ವ ಶಿಲಾಯುಗ ಸಂಸ್ಕøತಿಗೆ (ಕ್ರಿ.ಪೂ 100000) ನಿರ್ದೇಶಿಸಲಾಗಿದೆ.

ಈಚಿನ ವರ್ಷಗಳಲ್ಲಿ ಎ.ಎಚ್.ದಾನಿಯವರು ಪೆಷಾವರ್ ಬಳಿಯ ಸಂಘಾವೊಗುಹೆಗಳಲ್ಲಿ ಮಧ್ಯ ಪೂರ್ವ ಶಿಲಾಯುಗ ಸಂಸ್ಕøತಿಯ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಗುಹೆಗಳಲ್ಲಿ ನಡೆದ ಉತ್ಖನನದಿಂದ ಶಿಲಾಯುಗಕ್ಕೆ ಸೇರುವ ಮೂರು ಹಂತಗಳ ಆಯುಧಗಳು ದೊರೆತಿವೆ. ಮೊದಲಿನ ಎರಡು ಮೇಲಿನ ಸಂಸ್ಕøತಿಗೂ ಮೂರನೆಯದು ಕ್ರಮೇಣ ಸೂಕ್ಷ್ಮಶಿಲಾಯುಗದತ್ತ ಹೊರಳುತ್ತಿದ್ದ ಸಂಸ್ಕøತಿಗೂ ಸೇರುತ್ತವೆ. ಇವು ಸುಧಾರಿತ ಸೋಹನ್ ಸಂಸ್ಕøತಿಯಿಂದ ಕೆಲವು ಅಂಶಗಳಲ್ಲಿ ಭಿನ್ನವಾಗಿವೆ. ಇವು ಆಫ್ಘಾನಿಸ್ತಾನ ಮತ್ತು ಇರಾನಿನ ಅದೇ ಸಂಸ್ಕøತಿಯ ಆಯುಧ ರೀತಿಗಳನ್ನು ಹೋಲುತ್ತವೆ. ಆಗಿನ ಜನ ಹೆಚ್ಚಾಗಿ ಗುಹೆಗಳಲ್ಲಿ ವಾಸಿಸುತ್ತ, ಆಹಾರ ಸಂಗ್ರಹಣೆಯಿಂದ ಜೀವನ ಸಾಗಿಸುತ್ತಿದ್ದರು. ಈ ಸಂಸ್ಕøತಿಗಳ ಕಾಲವನ್ನು ಕ್ರಿ,ಪೂ 50000-10000 ಎಂದು ಹೇಳಬಹುದಾಗಿದೆ.

ಈವರೆಗೆ ಪರಿಶೀಲಿಸಿದ ಸಂಸ್ಕøತಿಗಳ ಆಯುಧೋಪಕರಣಗಳಿಂದ ಮಾತ್ರ ಆಗಿನ ಜನಜೀವನದ ರೀತಿ ಪದ್ಧತಿಗಳನ್ನು ಊಹಿಸಬೇಕಾಗಿದೆ. ಆ ಸಂಸ್ಕøತಿಗಳ ಕರ್ತೃಗಳಾದ ಮಾನವರ ದೇಹಾವಶೇಷಗಳು ಈವರೆಗೂ ದೊರೆತಿಲ್ಲವಾದ್ದರಿಂದ ಅವರ ಸಮಗ್ರ ಚಿತ್ರ ತಿಳಿದಿಲ್ಲ. ಚೀನ, ಇಂಡೊನೇಷ್ಯ ಮತ್ತು ಮಲೇಷಿಯಗಳಲ್ಲಿ ಇದನ್ನು ಹೋಲುವ ಸಂಸ್ಕøತಿಗಳಿದ್ದುದರಿಂದ ಇಲ್ಲಿಯ ಜನರು ಅವರಂತೆ ಇದ್ದಿರಬಹುದು. ಮಧ್ಯ ಪೂರ್ವ ಶಿಲಾಯುಗ ಕಾಲದಲ್ಲಿ ಬಹುಶಃ ಬೇರೆ ಗುಂಪಿನ ಜನರು ಪಶ್ಚಿಮ ಏಷ್ಯ ಪ್ರದೇಶಗಳಿಂದ ತಮ್ಮ ಸಂಸ್ಕøತಿಯ ಜೀವನಕ್ರಮವನ್ನು ಈ ಪ್ರದೇಶಕ್ಕೆ ಹರಡಲಾರಂಭಿಸಿದರು. ಮತ್ತು ಈ ಜನರು ಮುಂದಿನ ಐತಿಹಾಸಿಕ ಯುಗದ ಜನತೆಯ ಮೂಲಪುರುಷರೆಂದು ಹೇಳಬಹುದಾಗಿದೆ.

ಕ್ರಿ.ಪೂ.5000 ದಿಂದ ಈಚೆಗೆ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಪ್ರಾಚೀನ ಅಸಂಸ್ಕøತ ಜನರು ನೆಲೆಸಿ ಆಹಾರೋತ್ಪಾದನೆಯತ್ತ ಮೊದಲ ಹೆಜ್ಜೆಯನ್ನಿಟ್ಟರು. ಕ್ವೆಟ್ಟ, ಝೂಬ್, ಅಮ-ನಾಲ್, ಎಡಿತ್‍ಷಾಹರ್ ಪ್ರದೇಶಗಳಲ್ಲಿ ಈ ಜನರು ನವಶಿಲಾಯುಗದ ಅನಂತರ ತಾಮ್ರಶಿಲಾಯುಗದ ಹಂತದ ಸಂಸ್ಕøತಿಗಳನ್ನು ರೂಢಿಸಿಕೊಂಡರು. ಪಶುಪಾಲನೆ, ವ್ಯವಸಾಯ, ಮಣ್ಣಿನ ಪಾತ್ರೆಗಳ ಉಪಯೋಗ, ಸಣ್ಣ ಗ್ರಾಮಗಳಲ್ಲಿ ಗುಡಿಸಲುಗಳಲ್ಲಿ, ಮಣ್ಣಿನ ಅಥವಾ ಹಸಿ ಇಟ್ಟಿಗೆಗಳಿಂದ ನಿರ್ಮಿಸಿದ ಮನೆಗಳಲ್ಲಿ ವಸತಿ-ಇವು ಮೊದಮೊದಲು ಇವರ ಜೀವನದ ಮುಖ್ಯ ಲಕ್ಷಣಗಳಾಗಿದ್ದುವು. ಕ್ರಮೇಣ ಅಕ್ಕಪಕ್ಕದ ದೇಶಗಳೊಂದಿಗೆ ತಾಮ್ರ, ತವರ, ಅಬ್ಸಿಡಿಯನ್ ಮುಂತಾದ ಕಚ್ಚಾ ಸಾಮಗ್ರಿಗಳಿಗಾಗಿ ವ್ಯಾಪಾರಸಂಪರ್ಕ ಬೆಳೆದಾಗ ಪರಸ್ಪರ ಸಾಂಸ್ಕøತಿಕ ಪ್ರಭಾವಗಳು ತಲೆದೋರಲಾರಂಭಿಸಿದುವು. ಜನಸಂಖ್ಯೆ ಹೆಚ್ಚಿದಂತೆ ಹೊಸ ಪ್ರದೇಶಗಳಿಗೆ ವಸತಿಯ ವಿಸ್ತರಣೆಯಾಯಿತು. ತಾಮ್ರದ ಮೊದಲ ಉಪಯೋಗ ಬಹುಶಃ ಇರಾನಿನ ಪ್ರಭಾವದಿಂದ ಪ್ರಾರಂಭವಾಯಿತು. ವ್ಯಾಪಾರ ಬೆಳೆದಂತೆ ಅದರ ಸೌಲಭ್ಯಕ್ಕಾಗಿ ಮುದ್ರೆಗಳು ಮತ್ತು ಅವುಗಳ ಮೇಲೆ ಕೊರೆದ ಸಂಕೇತ ಲಿಪಿ ಬಳಕೆಗೆ ಬಂದುವು. ಈ ಮಧ್ಯೆ ಗ್ರಾಮಜೀವನದಲ್ಲಿ ಸುಧಾರಣೆಯಾಗಿ ವೃತ್ತಿ ಕುಶಲತೆ ಮತ್ತು ವೈವಿಧ್ಯಗಳು ಹುಟ್ಟಿಕೊಂಡವು. ಕ್ರಮೇಣ ಗ್ರಾಮಗಳ ಗಾತ್ರ ಬೆಳೆದು ಸಣ್ಣ ನಗರಗಳು, ಅವುಗಳ ಸುತ್ತ ಕೋಟೆ ಕೊತ್ತಲಗಳು, ನಗರಗಳಲ್ಲಿ ಅರಮನೆ, ದೇವಾಲಯ ಮತ್ತಿತರ ಸಾಮೂಹಿಕ ಭವನಗಳು ಅಸ್ತಿತ್ವಕ್ಕೆ ಬಂದುವು. ಅದೇ ಸುಮಾರಿನಲ್ಲಿ ದಕ್ಷಿಣ ಬಲೂಚಿಸ್ತಾನದಲ್ಲಿ ಕೃತಕ ನೀರಾವರಿ ಕಾರ್ಯಗಳು ಕಾಣಬರುತ್ತವೆ. ಹೀಗೆ ಕ್ರಿ.ಪೂ 3ನೆಯ ಸಹಸ್ರಮಾನದ ಮಧ್ಯಭಾಗದಲ್ಲಿ ನಾಗರಿಕತೆಯ ಪ್ರಾರಂಭದ ಹಂತವನ್ನು ಕಾಣಬಹುದಾಗಿದೆ.

ತರುವಾಯ ಭಾರತ ಉಪಖಂಡದಲ್ಲೇ ಅನ್ಯಾದೃಶವಾದ, ಅತ್ಯಂತ ಪ್ರಗತಿಯುತವಾದ ಹರಪ್ಪ ನಾಗರಿಕತೆ ಪಾಕಿಸ್ತಾನದಲ್ಲಿ ತಲೆದೋರಿತು. ಪಂಜಾಬಿನಲ್ಲಿ ರಾವಿ ನದಿಯ ದಂಡೆಯಲ್ಲಿರುವ ಹರಪ್ಪ, ಸಿಂಧ್‍ನಲ್ಲಿ ಸಿಂಧೂ ನದಿಯ ದಂಡೆಯಲ್ಲಿರುವ ಮೊಹೆಂಜೊದಾರೊ, ಚಾನ್ಹುದಾರೊ, ಮಕ್ರಾನ್, ಕಡಲುತೀರದಲ್ಲಿರುವ ಸೋಟ್ ಕೋಜಂಡಾರ್, ಸೋಟ್‍ಕೋಖೋ, ಬಾಲಕೋಟ, ಮತ್ತು ಒಳನಾಡಿನಲ್ಲಿರುವ ದಾಬರಕೋಟ್, ಕೋಟ್‍ದೀಜಿ ಮುಂತಾದ ಹತ್ತಾರು ನೆಲೆಗಳಲ್ಲಿ ಆ ನಾಗರಿಕತೆಯ ಅವಶೇಷಗಳನ್ನು ಶೋಧಿಸಲಾಗಿದೆ. ಇವುಗಳಲ್ಲಿ ಹರಪ್ಪಾ, ಮೊಹೆಂಜೊದಾರೊ ಇವು ಆ ಚಕ್ರಾಧಿಪತ್ಯದ ಅವಳಿ ರಾಜಧಾನಿಗಳೆಂದೂ ಚಾನ್ಹುದಾರೊ ಕೈಗಾರಿಕಾ ನಗರವೆಂದೂ ಸೋಟ್‍ಕೋಜಂಡಾರ, ಸೊಟ್ಕೋಖೋ ಮತ್ತು ಬಾಲಕ್ಕೋಟ್ ರೇವುಪಟ್ಟಣಗಳೆಂದೂ ಪರಿಗಣಿತವಾಗಿವೆ. ಮೊದಲ ಎರಡು ನಗರಗಳಲ್ಲಿ ನಡೆದ ಭೂಶೋಧನೆಗಳಿಂದ ಸುವ್ಯವಸ್ಥಿತ ನಗರಯೋಜನೆಯ ರೂಪುರೇಷೆಗಳು ತಿಳಿದುಬಂದಿವೆ. ನಗರವನ್ನು ರಾಜ, ಶ್ರೀಮಂತ ಮತ್ತು ಅಧಿಕಾರ ವರ್ಗವಾಸವಾಗಿದ್ದ ಉನ್ನತ ದುರ್ಗ ಪ್ರದೇಶ, ಜನಸಾಮಾನ್ಯರು ವಾಸಿಸುತ್ತಿದ್ದ ಪಟ್ಟಣ ಪ್ರದೇಶ ಎಂದು ವಿಭಾಗಿಸಲಾಗಿತ್ತು. ಆಡಳಿತ ವರ್ಗದ ಕಾರ್ಯಾಲಯಗಳು, ನಗರ ಜೀವನಕ್ಕೆ ಸಾಧಕವಾದ ಸಾಮೂಹಿಕ ನಿರ್ಮಾಣಗಳು, ರಾಜ್ಯದ ಸಂಪತ್ತನ್ನು ಸಂಗ್ರಹಿಸುತ್ತಿದ್ದ ಕಣಜಗಳು ಮುಂತಾದವು ದುರ್ಗದೊಳಗಿದ್ದುವು. ಜನಸಾಮಾನ್ಯರು ಕೆಳಗಣ ಪಟ್ಟಣ ಭಾಗದಲ್ಲಿ ವಾಸಿಸುತ್ತಿದ್ದರು.	ಇಡೀ ನಗರಪ್ರದೇಶದಲ್ಲಿ ಅಗಲವೂ ನೇರವೂ ಆದ ರಸ್ತೆಗಳ ಇಕ್ಕೆಲಗಳಲ್ಲಿ ಸುಟ್ಟ ಇಟ್ಟಿಗೆಗಳಿಂದ ಕೆಲವು ವೇಳೆ ಎರಡಂತಸ್ತುಗಳ ವಾಸಗೃಹಗಳನ್ನು ಕಟ್ಟಲಾಗುತ್ತಿತ್ತು. ನೀರಿನ ಬಾವಿ, ಸ್ನಾನಗೃಹ, ಶೌಚಗೃಹ, ಪಾಕಶಾಲೆ, ಶಯ್ಯಾಗೃಹ ಮೊದಲಾದ ಕೋಣೆಗಳಿಂದ ಆವೃತವಾದ, ಮಧ್ಯದಲ್ಲಿ ಗಾಳಿ ಬೆಳಕುಗಳಿಗಾಗಿ ತೆರೆದ ಪ್ರಾಂಗಣವಿದ್ದ ಈ ಮನೆಗಳಿಗೆ ಸಾಮಾನ್ಯವಾಗಿ ಮುಖ್ಯ ರಸ್ತೆಗಳಿಂದ ಹೊರಟ ಅಡ್ಡರಸ್ತೆ ಅಥವಾ ಏಣಿಗಳಿಂದ ಪ್ರವೇಶವಿರುತ್ತಿತ್ತು. ಮಳೆಯ ಮತ್ತು ಮನೆಗಳಲ್ಲಿ ಬಳಸಿದ ನೀರನ್ನು ಹೊರಗೊಯ್ಯಲು ನೆಲದ ಅಡಿಯಲ್ಲಿ ಕೊಳವೆ ಮತ್ತು ಒಳಚರಂಡಿ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಸಾರ್ವಜನಿಕ ಸ್ನಾನಗೃಹ ಮತ್ತು ಈಜುಕೊಳಗಳನ್ನು ನಿರ್ಮಿಸಲಾಗಿತ್ತು. ವ್ಯಾಪಾರ ಸೌಲಭ್ಯಗಳಿಗೆ ಲಿಖಿತ-ಅಲಂಕೃತ ಮುದ್ರೆಗಳನ್ನು, ನಿರ್ದಿಷ್ಟ ತೂಕದ ಮತ್ತು ಅಳತೆಯ ಸಾಧನಗಳನ್ನು ಒದಗಿಸಲಾಗುತ್ತಿತ್ತು. ಜಲಮಾರ್ಗ ಮತ್ತು ರಸ್ತೆಸಾರಿಗೆ, ಭಾರ ಹೊರುವ ಪ್ರಾಣಿಗಳ ಸಂಪರ್ಕ ವ್ಯವಸ್ಥೆ ರೂಢಿಯಲ್ಲಿದ್ದುವು. ವಿವಿಧ ಬಗೆಯ ಚಿನ್ನ ತಾಮ್ರ, ಕಂಚು, ಶಂಕು, ಬೆಲೆಬಾಳುವ ಕಲ್ಲುಗಳು ಇವುಗಳ ಆಭರಣಗಳು ಬಳಕೆಯಲ್ಲಿದ್ದುವು. ದೂರ ಪ್ರದೇಶಗಳಿಗೆ ಸಮುದ್ರಸಂಚಾರ ನಡೆಯುತ್ತಿತ್ತು. ಅಲ್ಲಿ ವಸತಿಯಿತ್ತು. ಇವು ಸಂಪದಭಿವೃದ್ಧಿಗೆ ನೆರವಾಗಿದ್ದುವು. ಇನ್ನೂ ಹಲವು ಬಗೆಯ ಸೌಕರ್ಯ ಸಾಧನಗಳನ್ನು ಹೊಂದಿದ್ದ ಹರಪ್ಪ ನಾಗರಿಕತೆ ಇತರ ಸಮಕಾಲೀನ ನಾಗರಿಕತೆಗಳಿಗಿಂತ ಹೆಚ್ಚು ಪ್ರಗತಿಪರವಾದ್ದೆಂಬುದು ವಿದ್ವಾಂಸರ ಅಭಿಪ್ರಾಯ. ಈಚಿನ ಸಂಶೋಧನೆಗಳಿಂದ ಈ ನಾಗರಿಕತೆ ಇಡೀ ಉಪಖಂಡದ ಅರ್ಧದಷ್ಟು ಪ್ರದೇಶದಲ್ಲಿ ವಿಸ್ತರಿಸಿತ್ತೆಂದು ತಿಳಿದುಬಂದಿದೆ. ಅನಂತರಕಾಲದ ಭಾರತೀಯ (ಹಿಂದು) ಸಂಸ್ಕøತಿಗೆ ಇದು ಹಲವಾರು ಕೊಡುಗೆಗಳನ್ನು ನೀಡಿದೆ ಎಂಬುದು ಗಮನಾರ್ಹ. ಇದರ ಕಾಲ ಕ್ರಿ.ಪೂ 2500-1500. ಈ ಉನ್ನತ ಸಂಸ್ಕøತಿ ಕ್ರಮೇಣ ಆಂತರಿಕ ವಿರೋಧಾಭಾಸಗಳಿಂದ ಪ್ರವಾಹಗಳ ದಾಳಿಯಿಂದ, ಹವೆಯಿಂದ ಮತ್ತು ವರ್ಷಮಾರುತಗಳ ಪಥದ ಬದಲಾವಣೆಯಿಂದ ದುರ್ಬಲಗೊಳ್ಳುತ್ತಿತ್ತು. ಈ ದುರ್ದಶೆಯ ಕಾಲದಲ್ಲಿ ಹೊರಗಣ ಆಕ್ರಮಣ ಇದನ್ನು ಕೊನೆಗಾಣಿಸಿತೆಂದು ಕೆಲವು ವಿದ್ವಾಂಸರು ವಾದಿಸಿದ್ದಾರಾದರೂ ಈ ವಾದ ಚರ್ಚಾಸ್ಪದ.

ಹರಪ್ಪ ನಾಗರಿಕತೆ ಆಳಿದ ಸ್ವಲ್ಪ ಕಾಲದ ಮೇಲೆ, ಕ್ರಿ.ಪೂ 2ನೆಯ ಸಹಸ್ರಮಾನದ ಉತ್ತರಾರ್ಧದಲ್ಲಿ, ಪ್ರಾಯಶಃ ಕ್ರಿಪೂ 1200ರ ವೇಳೆಗೆ, ಈ ಪ್ರದೇಶದಲ್ಲಿ ಗ್ರಾಮಜೀವನದ ಹಂತದಲ್ಲಿದ್ದ ಪಶುಪಾಲನ ಆರ್ಯರು ಬಂದು ನೆಲೆಸಿದರು. ಈಚಿನವರೆಗೆ ಅವರನ್ನು ಕುರಿತ ಪಳಿಯುಳಿಕೆಗಳು ಹೆಚ್ಚಾಗಿ ದೊರೆತಿರಲಿಲ್ಲ. ಆದರೆ ಈಚಿನ ಸಂಶೋಧನೆಗಳಿಂದ ಮತ್ತು ವೈದಿಕ ಸಾಹಿತ್ಯದ ಆಧಾರಗಳ ಮೇಲೆ ಆರ್ಯರ ಸಂಗತಿಗಳನ್ನು ಸ್ಥೂಲವಾಗಿ ತಿಳಿಯಬಹುದಾಗಿದೆ. ಆರಂಭಿಕ ವ್ಯವಸಾಯಪದ್ಧತಿ, ಪಶು ಮತ್ತು ಕುರಿ ಮೇಕೆಗಳ ಸಂಗೋಪನೆ, ಗ್ರಾಮಜೀವನ ಇವನ್ನು ಅವರಿಗೆ ಆರೋಪಿಸಲಾಗಿದೆ. ಕುದುರೆ, ಎರಡು ಗಾಲಿಗಳಿದ್ದ ರಥ ಇವು-ಅವರ ಸಂಚಾರಸಾಧನಗಳು. ಬಿಲ್ಲುಬಾಣ ಕತ್ತಿ ಈಟಿಗಳು ಅವರ ಆಯುಧಗಳು. ಕ್ರಮೇಣ ಅವರಲ್ಲಿ ಸಣ್ಣಪುಟ್ಟ ರಾಜ್ಯ ಘಟಕಗಳು, ಗಣರಾಜ್ಯಗಳು ಅಸ್ತಿತ್ವಕ್ಕೆ ಬಂದಂತೆ ಕಾಣುತ್ತದೆ. ಅದೇ ಸಮಯದಲ್ಲಿ, ಅಥವಾ ಸ್ವಲ್ಪ ಮೊದಲು, ಪಶ್ಚಿಮ ಭಾಗದಲ್ಲಿ ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಬೇರೊಂದು ಪಂಗಡದವರು ನೆಲಸಿದಂತೆ ಕಾಣುತ್ತದೆ. ಸೊಹರ್‍ಡಾಂಬ್, ನಾಲ್, ರಾಣಾಗುಂಡೈ, ಷಾಹಿತುಂಪ್, ಚಾನ್ಹುದಾರೊ ಮೊದಲಾದ ನೆಲೆಗಳಲ್ಲಿ ಅವರ ಮಾಹಿತಿಗಳು ಕಾಣಸಿಗುತ್ತವೆ.	ಆ ಸುಮಾರಿನಲ್ಲಿ ಉತ್ತರ ಇರಾನ್ ಭಾಗದಿಂದ ಪ್ರಸರಿಸಿದ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಕುರುಹುಗಳು ಬಲೂಚಿಸ್ತಾನ ಮತ್ತು ಸಿಂಧ್ ಪ್ರದೇಶಗಳಲ್ಲಿ ಕಾಣುತ್ತವೆ. ಈ ಸಮಾಧಿಗಳನ್ನು ಅಗೆದು ಸಂಶೋಧನೆ ಮಾಡಿಲ್ಲವಾದರೂ ಇವು ಮೇಲೆ ಹೇಳಿದ ಕಬ್ಬಿಣ ಯುಗದ ಸಂಸ್ಕøತಿಯ ಅವಶೇಷಗಳೆಂಬುದರಲ್ಲಿ ಸಂದೇಹವಿಲ್ಲ. ಕಬ್ಬಿಣ ಯುಗದ ಸಂಸ್ಕøತಿಯ ಕಾಲವನ್ನು ಕ್ರಿ.ಪೂ ಒಂದನೆಯ ಸಹಸ್ರಮಾನದ ನಡುಗಾಲದವರೆಗೆ ನಿರ್ದೇಶಿಸಬಹುದು.

ಪಾಕಿಸ್ತಾನ ಪ್ರದೇಶದ ಪ್ರಾಚೀನ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರಕದಿದ್ದರೂ ಆ ಪ್ರದೇಶ ಮಹಾಕಾವ್ಯಗಳ ಕಾಲದಿಂದಲೂ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಮಹಾಭಾರತದ ಕೌರವರ ತಾಯಿ ಅ ಪ್ರದೇಶದ ಗಾಂಧಾರ ರಾಜ್ಯದ ರಾಜಕುಮಾರಿ, ಜನಮೇಜಯನ ಸರ್ಪಯಜ್ಞದ ಸಂಬಂಧದಲ್ಲಿ ತಕ್ಷಶಿಲೆಯ ಉಲ್ಲೇಖವಿದೆ. ಕ್ರಿ.ಪೂ 7-6ನೆಯ ಶತಮಾನಗಳಿಂದಲೂ ಅದು ಪ್ರಖ್ಯಾತ ವಿದ್ಯಾ ಕೇಂದ್ರವಾಗಿತ್ತು. ಕ್ರಿ.ಪೂ 5ನೆಯ ಶತಮಾನದಲ್ಲಿದ್ದ ಪಾಣಿನಿ ಆ ಪ್ರದೇಶದ ಸಾಲಾತುರದವನಾಗಿದ್ದು ತಕ್ಷಶಿಲೆಯಲ್ಲಿ ವಿದ್ಯಾಭ್ಯಾಸಪಡೆದ. ಅವನಿಗೂ ಮೊದಲಿನ ಶಾಕಾಟಾಯನ ಮತ್ತು ಶೌನಕರು ಅದೇ ಪ್ರಾಂತ್ಯದವರಾಗಿದ್ದರು. ಆ ಸುಮಾರಿನಲ್ಲಿ ತಕ್ಷಶಿಲೆ ಅಶ್ವಕ (ಅಸ್ಮಕ), ಗಾಂಧಾರ (ರಾಜಧಾನಿ; ಪುರುಷಪುರ-ಪೆಷಾವರ್) ಕಾಂಭೋಜ (ಹಜಾರಾ ಜಿಲ್ಲೆ) ಮುಂತಾದ ರಾಜ್ಯಗಳು, ಮತ್ತೆ ಕೆಲವು ಗಣರಾಜ್ಯಗಳು ಈ ಪ್ರದೇಶದಲ್ಲಿದ್ದುವೆಂದು ತಿಳಿದುಬರುತ್ತದೆ. ಆಗ ಪರ್ಷಿಯದ ಸಾರ್ವ ಭೌಮನಾದ, ಅಕೆಮಿನಿಡ್ ವಂಶದ ದರ್ಯಾವುಷ್ ಭಾರತದತ್ತ ಲಕ್ಷ್ಯಹರಿಸಿ ಗಾಂಧಾರ, ಮಕ್ರಾನ್ ಮತ್ತು ಸಿಂಧ್ ಪ್ರಾಂತ್ಯಗಳನ್ನು ವಶಪಡಿಸಿಕೊಂಡ ತರುವಾಯ ಕ್ರಿ.ಪೂ 330ರಲ್ಲಿ ಅಲೆಗ್ಸಾಂಡರನ ದಾಳಿಯವರೆಗೂ ಈ ಪ್ರದೇಶ ಪರ್ಷಿಯನರ ಅಧೀನವಾಗಿತ್ತೆಂದು ಕಾಣುತ್ತದೆ. ಅನಂತರ ಕ್ರಿ.ಪೂ 326ರಲ್ಲಿ ಅಲೆಗ್ಸಾಂಡರ್ ಆ ಪ್ರದೇಶದ ಮೇಲೆ ದಾಳಿ ಮಾಡಿದಾಗ ಅಂಭಿಯ ತಕ್ಷಶಿಲಾ ರಾಜ್ಯ, ಝೀಲಂ ಮತ್ತು ರಾವಿ ನದಿಗಳ ನಡುವೆ ಇದ್ದ ಪುರೂರವನ ರಾಜ್ಯ, ಹಿಂದೂಕುಷ್ ಪರ್ವತ ಭಾಗದಲ್ಲಿ ಶಶಿಗುಪ್ತನ ರಾಜ್ಯ, ಅಷ್ಟಕ ರಾಜನ ಪುಷ್ಕಲಾವತಿ ಇವುಗಳಲ್ಲದೆ ಅಶ್ವಕಾಯನ, ಮಸ್ಸಗ, ವಾರಣ, ಕಠ, ಮಲ್ಲ (ಮಾಳವ), ಕ್ಷುದ್ರಕ, ಸಿಬಿ, ಅರ್ಜುನಾಯು, ಅಂಬಷ್ಟ, ಕ್ಷತ್ರಿಯ, ಮೂಷಿಕ, ಮುಂತಾದ ಗಣರಾಜ್ಯಗಳಜನರು ಸ್ವತಂತ್ರವಾಗಿ ಆಳುತ್ತಿದ್ದು ಗ್ರೀಕರನ್ನು ಎದುರಿಸಿದುದಾಗಿ ತಿಳಿದುಬರುತ್ತದೆ. ಆದರೆ ಅಂಭಿ, ಶಶಿಗುಪ್ತ, ಮುಂತಾದವರ ವಿದ್ರೋಹದಿಂದ ಗ್ರೀಕ್ ಸೈನ್ಯ ವಾಯವ್ಯಭಾರತವನ್ನು ಆಕ್ರಮಿಸಿತು. ಆದರೆ ಅಲೆಗ್ಸಾಂಡರನ ಹಿಂದಿರುಗುವಿಕೆಯೊಂದಿಗೆ ಗ್ರೀಕರ ಅಧಿಕಾರ ಕುಸಿಯತೊಡಗಿತು. ಅಲೆಗ್ಸಾಂಡರನ ಪ್ರಾಂತ್ಯಾಧಿಕಾರಿಗಳಾದ ಫಿಲಿಪ್ಸ್ ಪಂಜಾಬ್ ಪ್ರಾಂತ್ಯದಲ್ಲೂ ಪಿಥೋನ್ ಸಿಂಧ್ ಪ್ರಾಂತ್ಯದಲ್ಲೂ ಹಿಂದೂ ರಾಜರಾದ ಅಂಭಿ ತಕ್ಷಶಿಲೆಯಲ್ಲೂ ಪುರೂರವ ಝೀಲಂ ಪ್ರದೇಶದಲ್ಲೂ ಆಳುತ್ತಿದ್ದರು. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಗ್ರೀಕ್ ರಾಜ್ಯಾಧಿಕಾರಿ ಸೆಲ್ಯೂಕಸ್ ನಿಕೇಟರನನ್ನು ಕ್ರಿ.ಪೂ 305ರಲ್ಲಿ ಸೋಲಿಸಿದಾಗ ಪಾಕಿಸ್ತಾನದ ಬಹುಭಾಗ ಮೌರ್ಯಸಾಮ್ರಾಜ್ಯದಲ್ಲಿ ಸೇರಿಹೋಯಿತು. ತಕ್ಷಶಿಲೆಯನ್ನು ಮುಖ್ಯ ನಗರವನ್ನಾಗಿ ಹೊಂದಿದ್ದ ಗಾಂಧಾರ ಪ್ರತ್ಯೇಕ ಆಡಳಿತ ಘಟಕವಾಗಿತ್ತು. ಬಿಂದುಸಾರನ ಕಾಲದಲ್ಲಿ ಇಲ್ಲುಂಟಾದ ದಂಗೆಯನ್ನು ಯುವರಾಜ ಅಶೋಕ ಅಡಗಿಸಿ ಪ್ರಾಂತ್ಯಾಧಿಕಾರಿಯಾಗಿದ್ದ. ಅಶೋಕನ ಕಾಲದಲ್ಲಿ ಈ ಪ್ರದೇಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಆದರೆ ಅವನ ಅಧಕ್ಷ ಉತ್ತರಾಧಿಕಾರಿಗಳ ಆಳ್ವಿಕೆಯಲ್ಲಿ ವಾಯವ್ಯ ಭಾರತ ಸ್ವತಂತ್ರವಾಗಿ, ಹಲವಾರು ಸಣ್ಣ ಪುಟ್ಟ ರಾಜ್ಯಗಳು ಹುಟ್ಟಿಕೊಂಡುವು.

ಪಾಟಲಿ ಪುತ್ರದಲ್ಲಿ ಪುಷ್ಯಮಿತ್ರ ಶುಂಗ ಆಳುತ್ತಿದ್ದಾಗ ಬ್ಯಾಕ್ಟ್ರಿಯದಲ್ಲಿ ಆಳುತ್ತಿದ್ದ ಗ್ರೀಕರು ವಾಯವ್ಯ ಭಾರತದ ಮೇಲೆ ದಾಳಿ ಮಾಡಿದರು. ಆಂಟಿಯೋಕಸನ ಅಳಿಯನಾದ ಡೆಮಿಟ್ರಿಯನ್ (ಕ್ರಿ.ಪೂ 190) ಪಂಜಾಬ್, ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳನ್ನು ಗೆದ್ದುಕೊಂಡಾಗ ಈ ಪ್ರದೇಶದಲ್ಲಿ ಬ್ಯಾಕ್ಟ್ರಿಯಾದ ಗ್ರೀಕರ ಆಡಳಿತ ಆರಂಭವಾಯಿತು. ಎರಡು ದಶಕಗಳ ಅನಂತರ ಮತ್ತೊಬ್ಬ ಗ್ರೀಕ್ ದಳಪತಿ ಯುಕ್ರಿಟೈಡಿಸ್ ಬ್ಯಾಕ್ಟ್ರಿಯ ಮತ್ತು ತಕ್ಷಶಿಲಾ ಪ್ರದೇಶಗಳನ್ನು ಆಕ್ರಮಿಸಿಕೊಂಡುದರಿಂದ ಪಾಕಿಸ್ತಾನ ಪ್ರದೇಶದಲ್ಲಿ ಎರಡು ಸ್ವತಂತ್ರ ಗ್ರೀಕ್ ಆಡಳಿತಗಳು ಅಸ್ತಿತ್ವಕ್ಕೆ ಬಂದುವು. ತಕ್ಷಶಿಲೆಯ ಅಪೋಲೊಡೋಟಸ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ ಆಂಟಿಯಾಲ್ಕಿಡಾಸ್ ಪ್ರಮುಖರು. ಕ್ರಿ.ಪೂ 80ರ ವೇಳೆಗೆ ಆರಕೋಸಿಯ ಪ್ರದೇಶದ ಶಕರು ತಕ್ಷಶಿಲೆಯನ್ನು ವಶಪಡಿಸಿಕೊಂಡರು. ಅವರಲ್ಲಿ ಪ್ರಮುಖರಾದ ಮಾವೆಸ್ ಮತ್ತು 1ನೆಯ ಅeóÉಸ್ ದೊರೆಗಳ ಅನಂತರ ಕ್ರಿ.ಶ.20-30ರಲ್ಲಿ ಪಾರ್ಥಿಯನರು ಗೊಂಡೋಫರೆಸ್‍ನ ನೇತೃತ್ವದಲ್ಲಿ ಶಕರನ್ನು ಸೋಲಿಸಿ ವಾಯವ್ಯ ಭಾರತವನ್ನು ವಶಪಡಿಸಿಕೊಂಡರು. ಪಾರ್ಥಿಯವರ ಆಳ್ವಿಕೆಯಲ್ಲಿ 44ರಲ್ಲಿ ತ್ಯಾನದ ಅಪೋಲಿನಿಯಸ್ ತಕ್ಷಶಿಲೆಗೆ ಭೇಟಿ ನೀಡಿದುದಾಗಿ ಹೇಳಲಾಗಿದೆ.

ಪಾರ್ಥಿಯನರ ತರುವಾಯ 60ರ ಸುಮಾರಿನಲ್ಲಿ ಕುಷಾಣರು ಪಾಕಿಸ್ತಾನ ಪ್ರದೇಶವನ್ನು ವಶಪಡಿಸಿಕೊಂಡರು. ಮೊದಲು ಕುಜುಲ ಕಡ್‍ಫೀಸಿಸನೂ ತರುವಾಯ ವಿಮ ಕಡ್‍ಫೀಸಿಸನೂ ಕುಷಾಣರ ಆಡಳಿತವನ್ನು ಬಲಗೊಳಿಸಿದರು. ಅನಂತರ ಬಹುಶಃ 78ರಲ್ಲಿ ಕುಷಾಣ ವಂಶದಲ್ಲಿ ಹೆಚ್ಚು ಪ್ರಸಿದ್ಧನಾದ 1ನೆಯ ಕುನಿಷ್ಕ ಸಿಂಹಾಸನಕ್ಕೆ ಬಂದಾಗ ಕುಷಾಣರಾಜ್ಯ ಇಡೀ ಪಾಕಿಸ್ತಾನ ಪ್ರದೇಶವನ್ನೂ ಈಗಿನ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಾಸ್ಥಾನ ಮತ್ತು ಗುಜರಾತಿನ ಕೆಲವು ಪ್ರದೇಶಗಳನ್ನೂ ಒಳಗೊಂಡಿತು. ಈ ಪ್ರದೇಶದ ಇತಿಹಾಸದಲ್ಲಿ ಕುಷಾಣ ಯುಗವನ್ನು ಸುವರ್ಣ ಯುಗವೆಂದು ಹೇಳಬಹುದು. ಕುಷಾಣರು ಹಿಂದೂ ಮತದ ಶೈವ ಸಂಪ್ರದಾಯವನ್ನೂ ಕನಿಷ್ಕನ ಕಾಲದಿಂದ ಬೌದ್ಧ ಮತವನ್ನೂ ಅನುಸರಿಸಿದರು. ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಬಹಳ ಪ್ರಗತಿ ಸಾಧಿಸಿದರು. ವಸುಬಂಧು, ಅಶ್ವಘೋಷ ಇವರು ಈ ಕಾಲದ ಪ್ರಖ್ಯಾತ ಬೌದ್ಧ ಸಾಹಿತಿಗಳು. ಈ ಕಾಲದಲ್ಲಿ ಗಾಂಧಾರ ಪ್ರದೇಶದಲ್ಲಿ ಗ್ರೀಕ್ ಮತ್ತು ಹಿಂದೂ ಪರಂಪರೆಗಳಿಂದ ಹುಟ್ಟಿದ ಗಾಂಧಾರ ಶಿಲ್ಪ ಕಲೆ ಭಾರತೀಯ ಕಲಾ ಸಂಪ್ರದಾಯದಲ್ಲಿ ಉನ್ನತವಾದ ಹೊಸ ಶೈಲಿಯನ್ನು ಬೆಳೆಸಿತು. ಮಹಾಯಾನ ಬೌದ್ಧಪಂಥ ಹುಟ್ಟಿಕೊಂಡು ಅದರ ಪ್ರಭಾವದಿಂದ ಬುದ್ಧನ ಮಾನವರೂಪದ ಶಿಲ್ಪಗಳು ಅಸ್ತಿತ್ವಕ್ಕೆ ಬಂದುವು. ಪುರುಷಪುರ (ಪೆಷಾವರ್) ಇವರ ರಾಜಧಾನಿ. ಅದರ ಸುತ್ತಮುತ್ತ ಅನೇಕ ಬೌದ್ಧಸ್ತೂಪಗಳೂ ವಿಹಾರಗಳೂ ನಿರ್ಮಿತವಾದುವು. ತಕ್ಷಶಿಲೆ, ಮಥುರಾ ಇವು ಧಾರ್ಮಿಕ ಮತ್ತು ರಾಜಕೀಯ ಕೇಂದ್ರಗಳಾಗಿದ್ದುವು. ಕನಿಷ್ಕನ ಉತ್ತರಾಧಿಕಾರಿಗಳಾಗಿದ್ದ ಹುವಿಷ್ಕ ಮತ್ತು ವಾಸುದೇವರ ಆಳ್ವಿಕೆಯಲ್ಲಿ ಉನ್ನತ ಸ್ಥಿತಿಯಲ್ಲಿದ್ದ ಕುಷಾಣ ರಾಜ್ಯ ಕ್ರಮೇಣ ಕುಸಿಯಲಾರಂಭಿಸಿತ್ತು. ವಾಸುದೇವನ ಮರಣದ ಅನಂತರ (225) ಕ್ರಮೇಣ ಕ್ಷೀಣಿಸಲಾರಂಭಿಸಿದ ಕುಷಾಣ ರಾಜ್ಯ 5ನೆಯ ಶತಮಾನದವರೆಗೂ ಉಳಿದು ಬಂತು. ಆ ವೇಳೆಗೆ 226ರಲ್ಲಿ ಪರ್ಷಿಯದಲ್ಲಿ ಸ್ಥಾಪಿತವಾದ ಸಸ್ಸೇನಿಯನ್ ಚಕ್ರಾಧಿಪತ್ಯ ಮತ್ತು ಮಗಧದಲ್ಲಿ ಸ್ಥಾಪಿತವಾದ ಗುಪ್ತ ಸಾಮ್ರಾಜ್ಯ ಬಹಳ ಪ್ರಬಲವಾಗಿದ್ದುವು. 400ರಲ್ಲಿ ತಕ್ಷಶಿಲೆಗೆ ಭೇಟಿಕೊಟ್ಟ ಚೀನಿ ಬೌದ್ಧಯಾತ್ರಿಕ ಫಾಹಿಯಾನ್ ಅದರ ಬಗ್ಗೆ ಕೆಲವು ಮಾಹಿತಿಗಳನ್ನೊದಗಿಸಿದ್ದಾನೆ.

ಚೀನದ ಗಡಿ ಪ್ರದೇಶದಿಂದ ಹೊರಟ ಹೂಣರು 450ರ ಸುಮಾರಿಗೆ ಪರ್ಷಿಯ ಮತ್ತು ಭಾರತದ ದಿಕ್ಕಿನಲ್ಲಿ ದಾಳಿಮಾಡಿದರು. ಪರ್ಷಿಯವನ್ನು ಗೆದ್ದು ಹಿಂದೂಕುಷ್ ಪರ್ವತಗಳನ್ನು ದಾಟಿ ಗಾಂಧಾರವನ್ನು ವಶಪಡಿಸಿಕೊಂಡರು. ಗುಪ್ತ ದೊರೆ ಸ್ಕಂದಗುಪ್ತ 460ರಲ್ಲಿ ಹೂಣರನ್ನು ಸೋಲಿಸಿ ಅವರು ಮುಂದುವರಿಯದಂತೆ ತಡೆದ. ಅವರ ನಾಯಕ ತೋರಮಾನ್ ಪಾಕಿಸ್ತಾನ ಪ್ರದೇಶವನ್ನೂ ಭಾರತದ ಹಲವು ಭಾಗಗಳನ್ನೂ ಆಕ್ರಮಿಸಿಕೊಂಡು ಪಂಜಾಬಿನಲ್ಲಿ ಚೀನಾಬ್ ದಂಡೆಯಲ್ಲಿದ್ದ ವೈಯಾದಿಂದ ಆಳುತ್ತಿದ್ದ. ಅವನ ಮಗ ಮಿಹಿರಕುಲ 515ರಲ್ಲಿ ಸಿಂಹಾಸನಕ್ಕೆ ಬಂದು ಸಿಯಾಲ್‍ಕೋಟ್‍ನಿಂದ ಆಳುತ್ತಿದ್ದ. ಅವನ ಪಂಗಡದ ಮತ್ತೊಂದು ಶಾಖೆ ಗಾಂಧಾರದಲ್ಲಿ ಆಳುತ್ತಿತ್ತು. ಈ ಮಧ್ಯೆ ತಕ್ಷಶಿಲೆಯ ಪ್ರಾಂತ್ಯದಿಂದ ಕಿದಾರ ಕುಷಾಣಶಾಹಿ ಮನೆತನದವರು ಆಳುತ್ತಿದ್ದರು. ಹೂಣ ರಾಜ್ಯ 563-67ರ ವೇಳೆಗೆ ಕಣ್ಮರೆಯಾಯಿತು. ಹರ್ಷನ ಕಾಲದಲ್ಲಿ ಸಿಂಧ್ ಪ್ರಾಂತ್ಯದಲ್ಲಿ ಒಂದು ಸ್ವತಂತ್ರ ರಾಜ್ಯವಿತ್ತು. ಹರ್ಷ ಅದನ್ನು ಎದುರಿಸಿದನೆಂದು ಬಾಣ ಮತ್ತು ಹ್ಯೂಯೆನ್‍ತ್ಸಾಂಗ್ ತಿಳಿಸಿದ್ದಾರೆ. ಆ ಸಮಯದಲ್ಲಿ ಹಿಂದೂಕುಷ್ ಪರ್ವತಗಳ ದಕ್ಷಿಣದಲ್ಲಿ ಕ್ಷತ್ರಿಯ ರಾಜನ ವಶದಲ್ಲಿದ್ದ ಕಾಪಿಶ ಮತ್ತು ಸ್ವಾತ್ ಕಣಿವೆಯಲ್ಲಿ ಉದ್ಯಾನ ರಾಜ್ಯಗಳಿದ್ದುವು. ಪಂಜಾಬಿನಲ್ಲಿ ಹಲವಾರು ಸಣ್ಣ ರಾಜ್ಯಗಳಿದ್ದುವು. 7ನೆಯ ಶತಮಾನದ ಪೂರ್ವಾರ್ಧದಲ್ಲಿ ಅಸ್ತಿತ್ವಕ್ಕೆ ಬಂದ ಸಿಂಧೂ ರಾಜ್ಯ ಮುಲ್ತಾನದ ದಕ್ಷಿಣಕ್ಕೆ ಇಡೀ ಸಿಂಧ್ ಪ್ರದೇಶವನ್ನೊಳಗೊಂಡಿತ್ತು. ಬಹುಶಃ ಇಡೀ ಪಾಕಿಸ್ತಾನ ಪ್ರದೇಶ ಅದರ ವಶದಲ್ಲಿತ್ತು. ಆ ಪ್ರದೇಶದಲ್ಲಿ ರಚಿತವಾದ ಚಾಚ್‍ನಾಮಾ ಅದರ ಇತಿಹಾಸವನ್ನು ತಿಳಿಸುತ್ತದೆ. ಅಲ್ಲಿ ಮತ್ತೆ ಕೆಲವು ಸಣ್ಣ ರಾಜ್ಯಗಳಿದ್ದುವು. ಸಿಂಧೂ ರಾಜ್ಯದ ಪ್ರಬಲ ದೊರೆ ಚಾಚ್ ಸತ್ತ ಅನಂತರ ಅವನ ಮಗ ದಾಹರನ ಕಾಲದಲ್ಲಿ (700-708) ಅರಬರು ಸಿಂಧ್ ಪ್ರಾಂತ್ಯವನ್ನು ಎದುರಿಸಿದರು.

ಅರಬರು ಪ್ರಪ್ರಥಮವಾಗಿ ಸಿಂಧ್ ವಿರುದ್ಧ 643ರಲ್ಲಿ ನೌಕಾದಾಳಿ ನಡೆಸಿ ವಿಫಲರಾದರು. ಮತ್ತೆ 663ರಲ್ಲಿ ಅವರ ಭೂ ಸೈನ್ಯ ಸೋತಿತು. ಮೂರನೆಯ ಸಲ ಅರಬರ ದಾಳಿ 708ರಲ್ಲಿ ಪ್ರಾರಂಭವಾಗಿ 712ರ ವೇಳೆಗೆ ಮಹಮ್ಮದ್-ಇಬ್ನ್-ಕಾಸಿಮನ ನೇತೃತ್ವದಲ್ಲಿ ಜಯ ಗಳಿಸಿತು. ಆದರೆ 750ರ ವೇಳೆಗೆ ಅವರು ಶಕ್ತಿಗುಂದಿದರು. ಸಿಂಧ್‍ನ ಕೆಲವು ಪ್ರದೇಶಗಳ ಮೇಲೆ ಮಾತ್ರ ಅವರು ಹತೋಟಿ ಉಳಿಸಿಕೊಂಡಿದ್ದರು. ಆದರೂ ಬಲಾತ್ಕಾರ ಮತಾಂತರಗಳಿಂದ ಕ್ರಮೇಣ ಇಸ್ಲಾಮ್ ಮತ ಇಲ್ಲಿ ಪ್ರಬಲಗೊಳ್ಳತೊಡಗಿತು. ಆಗ ಆಫ್ಘಾನಿಸ್ತಾನ ಮತ್ತು ಬಲೂಚಿಸ್ತಾನ ಪ್ರದೇಶದಲ್ಲಿ, ಕಾಬುಲ್, ಕಾಬುಲ್ ಮತ್ತು ಸಿಂಧ್ ರಾಜ್ಯಗಳಲ್ಲಿ ಅರಬರು ನೆಲೆಸಿದ್ದರು. ಬಾಗ್ದಾದ್‍ನಲ್ಲಿ ಅಬ್ಬಾಸಿದ್ ಕಲೀಫರು 749ರಿಂದ ಪ್ರಬಲರಾಗತೊಡಗಿದಾಗ ಮತ್ತೆ ಪಾಕಿಸ್ತಾನ ಪ್ರದೇಶದಲ್ಲಿ ಇವರು ಬಲಗೊಳ್ಳತೊಡಗಿದರು. ಕಾಬುಲ್ ಮತ್ತು ಕಾಬುಲ್ ಸ್ವತಂತ್ರವಾಗಿದ್ದರೂ ಆಗಾಗ್ಗೆ ಕಲೀಫರಿಗೆ ಕಪ್ಪ ನೀಡಬೇಕಾಗಿತ್ತು. 870ರಲ್ಲಿ eóÁಬುಲ್ ಆಕ್ರಮಣಕ್ಕೊಳಗಾಯಿತು. ಅಲ್ಲೂ ಮುಸ್ಲಿಂ ಮತ ನೆಲೆಗೊಂಡಿತು. ಕಾಬುಲ್ ರಾಜ್ಯ ಹಿಂದೂಶಾಹಿ ರಾಜ್ಯದಲ್ಲಿ ಸೇರಿತು. ಆದರೆ ಕ್ರಮೇಣ ಸಿಂಧ್‍ನಲ್ಲಿ ಅರಬರು ಪ್ರಾಬಲ್ಯ ಗಳಿಸಿದರು. ಅವರ ರಾಜಧಾನಿ ಮನ್ಸುರಾ (ಈಗಿನ ಪಾಕಿಸ್ತಾನಿ ಹೈದರಾಬಾದಿನಿಂದ ಆಗ್ನೇಯಕ್ಕೆ ಸುಮಾರು 69ಕಿಮೀ.ದೂರ) ಇವರು ಗುರ್ಜರ-ಪ್ರತೀಹಾರ ಮತ್ತು ಪಾಲ ವಂಶದವರೊಂದಿಗೆ ಆಗಾಗ್ಗೆ ಹೋರಾಡಬೇಕಾಗಿತ್ತು. ಅಬ್ಬಾಸಿದರ ಪತನದ ಅನಂತರ (ಸು.830) ಅಲ್ ಮಮೂನ್ ಕಲೀಫನಾದಾಗ ಸಿಂಧ್ ಅವನ ಅಧಿಕಾರಿಯಾದ ಮೂಸನ ವಶವಾಯಿತು. ಸಫರಿದ್ ಕಲೀಫರ ಕಾಲದಲ್ಲಿ (872-903) ಸಿಂಧ್ ಪ್ರಾಂತ್ಯವನ್ನು ಮನ್ಸುರಾ ಮತ್ತು ಮುಲ್ತಾನ್‍ಗಳಾಗಿ ಒಡೆಯಲಾಯಿತು. ಈ ಎರಡು ರಾಜ್ಯಗಳೂ ಹಿಂದೂ ರಾಜರ ಭಯದಲ್ಲಿ ಬಾಳುತ್ತಿದ್ದವು.

ಆಕ್ಸಸ್ ನದಿಯ ದಕ್ಷಿಣ ಭಾಗದಲ್ಲಿ 999ರಲ್ಲಿ ಘಜಿû್ನ ಮನೆತನ ಅಧಿಕಾರಕ್ಕೆ ಬರುವ ವೇಳೆಗೆ ಈ ರಾಜ್ಯಗಳು ಬಲಗುಂದಿದ್ದುವು. ಆದರೆ ಭಾರತದ ಮೇಲೆ ಮಹಮ್ಮದನ ದಾಳಿಗಳಿಂದ ಪರಿಸ್ಥಿತಿ ಪೂರ್ಣವಾಗಿ ಬದಲಾಯಿತು. ಮಹಮ್ಮದನ ಮೊದಲನೆಯ ದಾಳಿ 1000 ರಲ್ಲಿ ನಡೆಯಿತು. ಅವನ ನಿರಂತರ ದಾಳಿಗಳ ಫಲವಾಗಿ ಪಾಕಿಸ್ತಾನ ಪ್ರದೇಶ ಅವನಿಗೆ ತಲೆಬಾಗಬೇಕಾಯಿತು. ಅದು 1200ರ ವರೆಗೂ ಮುಸ್ಲಿಮರ 1200ರ ವರೆಗೂ ಮುಸ್ಲಿಮರ ವಶದಲ್ಲಿ ಉಳಿಯಿತು. ಘೋರಿ ಮನೆತನ ಅಧಿಕಾರಕ್ಕೆ ಬಂದ ಮೇಲೆ 1178ರಲ್ಲಿ ಘೋರಿ ಮಹಮೂದ ವಾಯವ್ಯ ಭಾರತದ ಮೇಲೆ ಆಕ್ರಮಣ ನಡೆಸಿ ಚಾಳುಕ್ಯ ಇಮ್ಮಡಿ ಮೂಲರಾಜನಿಂದ ಸೋತು ಹಿಂದಿರುಗಿದರೂ 1192ರಲ್ಲಿ ಉತ್ತರಭಾರತ ಅವನ ವಶವಾಯಿತು. ಪಾಕಿಸ್ತಾನ ಪ್ರದೇಶ ಅವನ ರಾಜ್ಯದಲ್ಲಿ ಸೇರಿಹೋಯಿತು. ಮಂಗೋಲರು 1229ರಿಂದ ಸಿಂಧ್ ಪ್ರಾಂತ್ಯದ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿದ್ದರು. 1247ರಿಂದ ಅದು ಅವರ ವಶವಾಯಿತು. ಅಲ್ಲಾವುದ್ದೀನ್ ಖಿಲ್ಜಿ ದೆಹಲಿಯ ಸುಲ್ತಾನನಾಗಿದ್ದಾಗ ಪಾಕಿಸ್ತಾನದ ಬಹುಭಾಗ ಖಿಲ್ಜಿ ರಾಜ್ಯದಲ್ಲಿ ಸೇರಿತ್ತು. 1303ರಲ್ಲಿ ಮಂಗೋಲರು ದೆಹಲಿಯ ಮೇಲೆ ದಾಳಿ ನಡೆಸಿದುದರ ಫಲವಾಗಿ ಜಾಗೃತನಾದ ಅಲ್ಲಾವುದ್ದೀನ್ ತನ್ನ ವಾಯವ್ಯಗಡಿ ಪ್ರದೇಶದತ್ತ ಗಮನಕೊಡಬೇಕಾಯಿತು. 1305ರಲ್ಲಿ ಮಂಗೋಲರು ಸಿಂಧ್ ಪ್ರಾಂತ್ಯದ ಮುಖಾಂತರ ಉತ್ತರ ಭಾರತದ ಕಡೆಗೆ ನುಗ್ಗಿದರು. ಆಗ ಪಂಜಾಬು ದೆಹಲಿ ಸುಲ್ತಾನರ ವಶದಲ್ಲಿತ್ತು. ಮಂಗೋಲರ ನಾಯಕರಾದ ಅಲಿ ಬೇಗ್ ಮತ್ತು ತರ್ತಾಖರನ್ನು ಸೆರೆಹಿಡಿದು ಕೊಲ್ಲಲಾಯಿತು. ಮರುವರ್ಷ ಮಂಗೋಲರ ಒಂದು ದಳ ಸಿಂಧ್ ಮುಲ್ತಾನ್ ಪ್ರದೇಶಗಳ ಮೂಲಕವೂ ಇನ್ನೊಂದು ದಳ ನಾಗೋರಿನ ಮೂಲಕವೂ ನುಗ್ಗಿದಾಗಲೂ ಅವರ ಪ್ರಯತ್ನ ವಿಫಲವಾಯಿತು. ಮತ್ತೆ 1327ರಲ್ಲಿ ತರ್ಮಾಷಿರೀನನ ನಾಯಕತ್ವದ ದಳ ಆ ಪ್ರದೇಶದ ಮೂಲಕ ದೆಹಲಿಯ ವರೆಗೂ ನುಗ್ಗಿ ತುಗಲಕ್ ಮಹಮ್ಮದನಿಂದ ವಿಪುಲೈಶ್ವರ್ಯವನ್ನು ಲೂಟಿ ಹೊಡೆದು ಹಿಂದಿರುಗಿತು. ಮಂಗೋಲರ ಉಪಟಳವನ್ನು ತಡೆಯುವ ಸಲುವಾಗಿ ತುಗಲಖ್ ಮುಹಮ್ಮದ್ ಅವರ ಪ್ರದೇಶದ ಮೇಲೆ 1337ರಲ್ಲಿ ದಾಳಿ ಮಾಡಿದರೂ ಪ್ರಯೋಜನವಾಗಲಿಲ್ಲ. ತರುವಾಯ ತೈಮೂರ 1398ರಲ್ಲಿ ಪಂಜಾಬ್, ಮುಲ್ತಾನ್ ಮುಖಾಂತರ ನುಗ್ಗಿ ದೆಹಲಿಯನ್ನು ಲೂಟಿ ಮಾಡಿದ. ಅನಂತರ ತುಗಲಕ್ ವಂಶ ಕೊನೆಗೊಂಡಿತು. ತೈಮೂರನ ಪ್ರತಿನಿಧಿ ಮಲ್ಲೂ ಸತ್ತ ಮೇಲೆ ಆಫ್ಘನ್ ಸರದಾರ ದೌಲತ್ ಖಾನ್ ಲೋದಿ ದೆಹಲಿಯಿಂದ ಆಳತೊಡಗಿದ. ಪಾಕಿಸ್ತಾನ ಪ್ರದೇಶ ಅವನ ವಶದಲ್ಲಿತ್ತು. ಖಜಿರ್‍ಖಾನ್ 1414ರಲ್ಲಿ ದೌಲತನನ್ನು ಸೆರೆಹಿಡಿದು ಸಯ್ಯಿದ್ ಮನೆತನದ ಆಳ್ವಿಕೆಯನ್ನು ಸ್ಥಾಪಿಸಿದ. ಪಾಕಿಸ್ತಾನ ಪ್ರದೇಶ ಅವನ ವಶವಾಯಿತು. ಆ ಮನೆತನದ ಕೊನೆಯ ಸುಲ್ತಾನನಾದ ಆಲಂ ಷಾನನ್ನು ಬಹಲೋಲ್ ಷಾ ಘಾಜಿ 1451ರಲ್ಲಿ ಸಿಂಹಾಸನದಿಂದ ತಳ್ಳಿದ. ಲೋದಿ ಮನೆತನ ಅಧಿಕಾರಕ್ಕೆ ಬಂತು. ಪಾಕಿಸ್ತಾನ ಪ್ರದೇಶ ಆ ಮನೆತನದ ವಶವಾಯಿತು.

ಹೀಗೆ ಸಾಮಾನ್ಯವಾಗಿ ಈ ಪ್ರದೇಶ ದೆಹಲಿ ಸುಲ್ತಾನರ ವಶದಲ್ಲಿದ್ದರೂ ಘಜ್ನಿಮಹಮ್ಮದನ ದಾಳಿಗಳ ತರುವಾಯ 1010ರ ಸುಮಾರಿಗೆ ಸಿಂಧ್ ಪ್ರಾಂತ್ಯದಲ್ಲಿ, ಸ್ವತಂತ್ರವಾದ, ಹಿಂದೂ ಮೂಲದವರಾದರೂ ಇಸ್ಲಾಮಿಗೆ ಮತಾಂತರಗೊಂಡಿದ್ದ, ಎರಡು ಮನೆತನಗಳು ಆಳುತ್ತಿದ್ದವು. ಇವುಗಳ ಪೈಕಿ ಮನ್ಸುರಾದಿಂದ ಆಳುತ್ತಿದ್ದದ್ದು ಸೂಮ್ರ ಮನೆತನ. ಈ ಮನೆತನದವರು ಮೊದಲು ಪರಮಾರ ರಜಪುತ ವಂಶದವರೆಂದು ಹೇಳಲಾಗಿದೆ. ಇವರು ಪ್ರಾಯಶಃ ಏರುಪೇರುಗಳನ್ನುಭವಿಸುತ್ತ 1335ರ ವರೆಗೂ ಆಳುತ್ತಿದ್ದರೆಂದು ಹೇಳಲಾಗಿದೆ. ತರುವಾಯ ಸಮ್ಮಾ ವಂಶದವರು ಅಧಿಕಾರಕ್ಕೆ ಬಂದರು. ಅವರು 1527ರ ವರೆಗೆ ಆಳಿದರು ಎಂದು ಹೇಳಲಾಗಿದೆ. ದೆಹಲಿಯ ಸುಲ್ತಾನರು ಮತ್ತು ಗುಜರಾತಿನ ನವಾಬರು ಇವರ ಮೇಲೆ ಅಧಿಕಾರ ಚಲಾಯಿಸುತ್ತಿದ್ದರು.	ಅದೇ ಸಮಯದಲ್ಲಿ ಮುಲ್ತಾನ್ ಪ್ರದೇಶದಲ್ಲಿ ಮತ್ತೊಂದು ಮುಸ್ಲಿಮ್ ರಾಜ್ಯ ಅಸ್ತಿತ್ವದಲ್ಲಿತ್ತು. ಘಜ್ನಿ ಮುಹಮ್ಮದ್ ಈ ಪ್ರದೇಶದ ಷೇಕ್ ಹಮೀದ್ ಲೋದಿಯ ಆಡಳಿತವನ್ನು ಒಪ್ಪಿಕೊಂಡಿದ್ದರೂ ಅವನ ತರುವಾಯ ಈ ಪ್ರದೇಶ ಸ್ವತಂತ್ರವಾಯಿತು. ಈ ಮೊದಲು ಹೇಳಿದಂತೆ ಮುಲ್ತಾನ್ ಅನೇಕ ಸಲ ಮಂಗೋಲರ ದಾಳಿಗಳನ್ನು ಎದುರಿಸಿತು. ಆ ಮನೆತನದವರ ಅದೃಷ್ಟ ಏರಿಳಿಯುತ್ತಿತ್ತು. ಅವರು 1525ರ ವರೆಗೆ ಆಳಿ ಮೊಗಲ್ ಸಾಮ್ರಾಜ್ಯ ಸ್ಥಾಪಕನಾದ ಬಾಬರನ ಆಕ್ರಮಣದ ಫಲವಾಗಿ ಕಣ್ಮರೆಯಾದರು.

ಮೊಗಲ್ ಸಾಮ್ರಾಜ್ಯಕಾಲದ ಉದ್ದಕ್ಕೂ ಪಾಕಿಸ್ತಾನ ಪ್ರದೇಶ ಹೆಚ್ಚು ಕಡಿಮೆ ಅವರ ಆಳ್ವಿಕೆಗೊಳಪಟ್ಟಿತ್ತು. ಸಮರಕಂಡದಲ್ಲಿ ಮೊದಲು ಆಳುತ್ತಿದ್ದ ಬಾಬರ್ ಮುಲ್ತಾನ್ ಮೂಲಕ ಭಾರತವನ್ನು ಪ್ರವೇಶಿಸಿದಾಗ ಆ ಪ್ರದೇಶ ಅವನ ವಶವಾಯಿತು. ಆದರೂ ಬಾಬರ್ ಮತ್ತು ಹುಮಾಯೂನರ ಆಳ್ವಿಕೆ ಪ್ರಕ್ಷುಬ್ಧಮಯವಾಗಿತ್ತು. ಸಿಂಧ್ ಮತ್ತು ಮುಲ್ತಾನ್ ಪ್ರದೇಶಗಳು ಆಗಾಗ ಮೊಗಲರ ಅಧಿಕಾರವನ್ನು ಧಿಕ್ಕರಿಸುತ್ತಿದ್ದುವು. ಹುಮಾಯೂನ್ ಸಿಂಹಾಸನಚ್ಯುತನಾದಾಗ, ಸಿಂಧ್ ಪ್ರಾಂತ್ಯದಲ್ಲಿ ತಟ್ಟವನ್ನು ರಾಜಧಾನಿಯಾಗಿ ಹೊಂದಿದ್ದ ಮುಸ್ಲಿಮ್ ರಾಜ್ಯ ಹೆಚ್ಚು ಕಡಿಮೆ ಸ್ವತಂತ್ರವಾಗಿತ್ತು. ಅದು ಅವನಿಗೆ ಹೆಚ್ಚು ನೆರವು ನೀಡದಿದ್ದರೂ ಪೂರ್ಣವಾಗಿ ಅವನ ಕೈ ಬಿಡಲಿಲ್ಲ. ಅವನ ಅಧಿಕಾರದ ಪುನರ್ಗಳಿಕೆಯ ಪ್ರಯತ್ನದಲ್ಲೂ ಸಿಂಧ್ ಪ್ರಾಂತ್ಯ ಪ್ರಮುಖ ಪಾತ್ರವಹಿಸಿತ್ತು. ಅಕ್ಬರನ ಸಿಂಹಾಸನಾರೋಹಣ ಕಾಲದಿಂದ (1556) 1707ರ ವರೆಗೂ ಪಾಕಿಸ್ತಾನ ಪ್ರದೇಶ ಮೊಗಲರ ವಶದಲ್ಲಿತ್ತಾದರೂ ವಾಯವ್ಯ ಸರಹದ್ದಿನ ಬೆಟ್ಟ ಪ್ರದೇಶದಲ್ಲಿ ಕೆಲವು ಸ್ವತಂತ್ರ ಪಠಾಣ ಪಂಗಡಗಳು ನೆಲೆಸಿದ್ದು ಸಾಮ್ರಾಜ್ಯಕ್ಕೆ ತೊಂದರೆ ಕೊಡುತ್ತಿದ್ದುವು. ಅನಂತರ ಬಹವಾಲ್ ಪುರದಲ್ಲಿ ಒಂದು ಸ್ವತಂತ್ರ ಮುಸ್ಲಿಮ್ ರಾಜ್ಯವೂ ಪಂಜಾಬಿನಲ್ಲಿ ಸ್ವತಂತ್ರ ಸಿಖ್ ರಾಜ್ಯವೂ ಹುಟ್ಟಿಕೊಂಡುವು. ಉಳಿದ ಪ್ರದೇಶಗಳ ಬಗ್ಗೆ ಹೆಚ್ಚಿನ ಮಾಹಿತಿಗಳೇನೂ ಸಿಕ್ಕುವುದಿಲ್ಲ.

ಪರಿಸ್ಥಿತಿ ಹೀಗೆ ಕ್ಲಿಷ್ಟವಾಗಿದ್ದಾಗ ವಾಯವ್ಯ ಭಾರತ ಮತ್ತೊಮ್ಮೆ ವಿದೇಶಿ ದಾಳಿಗೆ ತುತ್ತಾಯಿತು. ಪರ್ಷಿಯದಲ್ಲಿ ಆಳುತ್ತಿದ್ದ ನಾದಿರ್ ಷಾ ಪಂಜಾಬ್, ಮುಲ್ತಾನ್ ಪ್ರದೇಶಗಳನ್ನು ವಶಪಡಿಸಿಕೊಂಡು 1739ರ ಮಾರ್ಚ್‍ನಲ್ಲಿ ದೆಹಲಿಯವರೆಗೂ ನುಗ್ಗಿ ಬಂದ. ದೆಹಲಿ ಅವನ ವಶವಾಯಿತು. ಪಂಜಾಬ್ ಮತ್ತು ದೆಹಲಿ ಪ್ರದೇಶಗಳು ಕೊಳ್ಳೆಗೆ ಒಳಗಾದುವು. ನಾದಿರ್ ಷಾನ ಮರಣಾನಂತರ ಪರ್ಷಿಯಾದ ಅಧಿಕಾರವನ್ನು ಕಸಿದುಕೊಂಡ ಅಹ್ಮದ್ ಷಾ ಅಬ್ದಾಲಿ ಪೆಷಾವರ್ ಪ್ರದೇಶವನ್ನು ಆಕ್ರಮಿಸಿ ಲಾಹೋರ್‍ವರೆಗೂ ಮುನ್ನುಗ್ಗಿ 1747ರಿಂದ 1767ರ ವರೆಗೆ ಏಳು ಬಾರಿ ಲೂಟಿ ಮಾಡಿದ. ಅಬ್ದಾಲಿ 1752ರಲ್ಲಿ ಮೀರ್ ಮನ್ನು ಎಂಬವನನ್ನು ಪಂಜಾಬಿನ ಪ್ರಾಂತ್ಯಾಧಿಕಾರಿಯಾಗಿ ನೇಮಿಸಿದ. ಆ ದಾಳಿಗಳ ಫಲವಾಗಿ ವಾಯವ್ಯ ಭಾರತದಲ್ಲಿ ಮೊಗಲರ ಅಧಿಕಾರ ಬಲಗುಂದಿ ಸಿಖ್ ರಾಜ್ಯ ಬಲಗೊಳ್ಳಲು ಸಾಧ್ಯವಾಯಿತು. ಈ ಮಧ್ಯೆ 1785ರಲ್ಲಿ ವಾಯವ್ಯ ಭಾರತದಲ್ಲಿ ಪ್ರಬಲವಾಗುತ್ತಿದ್ದ ಸಿಕ್ಕರಿಗೂ ದೆಹಲಿಯ ವರೆಗೆ ಪ್ರಭಾವ ಬೀರಿದ್ದ ಮರಾಠರಿಗೂ ಒಂದು ಶಾಂತಿ ಒಪ್ಪಂದವಾಗಿತ್ತು. 1797ರೊಳಗೆ ಅವರು ಮತ್ತೆ ಕಚ್ಚಾಡತೊಡಗಿದ್ದರು. ಆದರೆ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರದೇಶಗಳು ಅತಂತ್ರವಾಗಿ ಅಡಿಗಡಿಗೂ ಬೇರೆಯವರ ದಾಸ್ಯಕ್ಕೊಳಗಾಗುತ್ತಿದ್ದುವು. ಆಫ್ಘಾನಿಸ್ತಾನದಲ್ಲಿ ಕಾಬೂಲ್ ರಾಜ್ಯ ಬಲಗೊಂಡಿದ್ದು, ವಾಯವ್ಯ ಗಡಿ ಪ್ರದೇಶ ಮತ್ತು ಬಲೂಚಿಸ್ತಾನ ಅದರ ವಶದಲ್ಲಿತ್ತು. ಈ ವೇಳೆಗೆ ಸಿಂಧ್ ಪ್ರಾಂತ್ಯ ಹೆಸರಿಗೆ ಕಾಬೂಲಿನ ವಶದಲ್ಲಿದ್ದರೂ ಹೆಚ್ಚುಕಡಿಮೆ ಸ್ವತಂತ್ರವಾಗಿತ್ತು. ಆ ಪ್ರದೇಶದಲ್ಲಿ ಮೊದಲು ನಾಲ್ಕು, ಅನಂತರ ಮೂರು ರಾಜ್ಯಗಳು ಅಸ್ತಿತ್ವದಲ್ಲಿದ್ದುವು. ಖೈರ್‍ಪುರ (ಉತ್ತರಸಿಂಧ್), ಹೈದರಾಬಾದ್ (ದಕ್ಷಿಣ ಸಿಂಧ್) ಮತ್ತು ಮೀರ್‍ಪುರ ಇವು ಅನುಕ್ರಮವಾಗಿ ಆ ರಾಜ್ಯಗಳ ರಾಜಧಾನಿಗಳಾಗಿದ್ದುವು. ಅವುಗಳ ಅಮೀನರು ಪೂರ್ವದಲ್ಲಿ ಬ್ರಿಟಿಷರ, ವಾಯವ್ಯ ಭಾಗದಲ್ಲಿ ಪರ್ಷಿಯನರ, ಉತ್ತರದಲ್ಲಿ ಆಫ್ಘನ್ನರ ಮತ್ತು ರಷ್ಯನರ ಸಾಮ್ರಾಜ್ಯದಾಹದ ಫಲವಾಗಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದರು. ಪಂಜಾಬಿನಲ್ಲಿ ಸಿಕ್ಖರ ದೊರೆ ರಣಜಿತ್ ಸಿಂಗ್ ಪ್ರಬಲನಾಗಿ ಸಿಂಧ್‍ನ ಮೇಲೆ ಕಣ್ಣು ಹಾಕಿದ್ದ. ಇಂಥ ಪರಿಸ್ಥಿತಿಯಲ್ಲಿ 1843ರಲ್ಲಿ ಬ್ರಿಟಿಷ್ ಗವರ್ನರ್-ಜನರಲ್ ಆಗಿದ್ದ ಎಲ್‍ನ್‍ಬರೋ ಮತ್ತು ದಳಪತಿ ಚಾಲ್ರ್ಸ್ ನೇಪಿಯರ್ ಇವರು ಸಿಂಧನ್ನು ಆಕ್ರಮಿಸಿಕೊಂಡರು. 1839ರಲ್ಲಿ ರಣಜಿತ್‍ಸಿಂಗ್ ಸತ್ತಮೇಲೆ ಗೊಂದಲಮಯ ಸ್ಥಿತಿಯಲ್ಲಿದ್ದ ಪಂಜಾಬ್ 1841ರಲ್ಲಿ ಬ್ರಿಟಿಷರ ವಶವಾಯಿತು. ಇಷ್ಟಾದರೂ ಬ್ರಿಟಿಷರ ಆಳ್ವಿಕೆಗೆ ಈ ಪ್ರದೇಶದಲ್ಲಿ ವಿರೋಧ ಮುಂದುವರಿಯಿತು. ವಾಯವ್ಯ ಸರಹದ್ದಿನಲ್ಲಿದ್ದ ಪಠಾಣ ಬುಡಕಟ್ಟಿನ ಜನರು ಆಗಾಗ್ಗೆ ದಂಗೆಯೆದ್ದು ಲೂಟಿ ನಡೆಸುತ್ತಿದ್ದರು. ಆಫ್ಘನರೊಂದಿಗೆ ಎರಡು ಬಾರಿ ಯುದ್ಧ ನಡೆಸಿದ ಅನಂತರ ಬ್ರಿಟಿಷರು ಅವರೊಂದಿಗೆ ಒಪ್ಪಂದ ಮಾಡಿಕೊಂಡು ಡ್ಯೂರಾಂಡ್ ರೇಖೆಯನ್ನು ಗಡಿಯೆಂದು ನಿರ್ಧರಿಸಿದರು. ಆದರೂ ಆ ಪ್ರದೇಶ ಬ್ರಿಟಿಷರ ಆಳ್ವಿಕೆಗೆ ಸುಲಭವಾಗಿ ಒಳಪಡಲಿಲ್ಲ. ಅನಂತರ ಸ್ವಲ್ಪ ಕಾಲ ಶಾಂತಿ ಮುಂದುವರಿದರೂ 1919, 1925, 1930-31, 1933 ಮತ್ತು 1936-37ರಲ್ಲಿ ಮತ್ತೆ ಮತ್ತೆ ದಂಗೆಗಳಾದುವು. 1915ರಲ್ಲಿ ಅಮೀರ್ ಹಬೀಬುಲ್ಲ ಮತ್ತು ಬ್ರಿಟಿಷರ ನಡುವೆ ವೈಮನಸ್ಯವುಂಟಾಯಿತು. ಅವನ ಮಗ ಅಮಾನುಲ್ಲಾನ ಕಾಲದಲ್ಲಿ 1919ರಲ್ಲಿ ಮೂರನೆಯ ಆಫ್ಘನ್ ಯುದ್ಧ ನಡೆದು ಅಮಾನುಲ್ಲಾ ಸೋತ. ತರುವಾಯ ಈ ಪ್ರದೇಶದಲ್ಲಿ ಹೆಚ್ಚಿನ ತೊಂದರೆ ಉಂಟಾಗಲಿಲ್ಲ.

ಈ ವೇಳೆಗೆ ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಬಿರುಸಿನಿಂದ ನಡೆದಿತ್ತು. ಮೊದಲು ಹಿಂದೂ ಮುಸ್ಲಿಮರು ಒಟ್ಟಾಗಿ ಹೋರಾಡಿದರೂ 1930ರ ಸುಮಾರಿನಿಂದ ಮಹಮ್ಮದ್ ಆಲಿ ಜಿನ್ನಾರ ನೇತೃತ್ವದಲ್ಲಿ ಮುಸ್ಲಿಮರು ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನಿಟ್ಟರು. ಬ್ರಿಟಿಷರ ಮತಭೇದ ನೀತಿಯ ಫಲವಾಗಿ ಪ್ರತ್ಯೇಕತಾವಾದಿಗಳ ಕೈಬಲಗೊಂಡಿತು. ಮೊದಲು ಭಾರತೀಯ ನಾಯಕರು ದೇಶದ ವಿಭಜನೆಯನ್ನು ವಿರೋಧಿಸಿದರಾದರೂ ಅಂತಿಮವಾಗಿ ಅಖಂಡ ಭಾರತದ ವಿಭಜನೆಯಾಗಿ, 1947ರಲ್ಲಿ ಪ್ರತ್ಯೇಕ ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು.

ಅನಂತರದ ಸುಮಾರು ಮೂರು ದಶಕಗಳ ಕಾಲದಲ್ಲಿ ಪಾಕಿಸ್ತಾನ ಬಹುಮಟ್ಟಿಗೆ ಮಿಲಿಟರಿ ಆಡಳಿತಕ್ಕೇ ಒಳಪಟ್ಟಿದೆ. 1971ರಲ್ಲಿ ಪೂರ್ವ ಪಾಕಿಸ್ತಾನ ಪ್ರತ್ಯೇಕಗೊಂಡು ಸ್ವತಂತ್ರ ಬಾಂಗ್ಲಾ ದೇಶವಾಯಿತು.

ಪಾಕಿಸ್ತಾನ ಪ್ರದೇಶದ ಕಲೆಯ ಇತಿಹಾಸ ಕ್ರಿ.ಪೂ 2500ರ ಸುಮಾರಿನಲ್ಲಿ ಇಲ್ಲಿ ನೆಲಸಿದ್ದ ಹರಪ್ಪ ನಾಗರಿಕತೆಯ ಕಾಲದಲ್ಲಿ ಆರಂಭವಾಯಿತು. ಪ್ರಮುಖ ನಗರಗಳಾದ ಹರಪ್ಪ ಮತ್ತು ಮೊಹೆಂಜೊದಾರೊ ನೆಲೆಗಳಲ್ಲಿ ನಡೆದ ಉತ್ಖನನಗಳು ಆಗಿನವರ ನಗರ ಯೋಜನೆಯ ಬಗ್ಗೆ ಸ್ಪಷ್ಟವಾದ ಮಾಹಿತಿಗಳನ್ನು ನೀಡಿವೆ. ಆಯಾಕಾರದ ನಗರದ ಸುತ್ತ ಸಂರಕ್ಷಕ ಕೋಟೆ ಗೋಡೆಗಳನ್ನೂ ಬತೇರಿಗಳನ್ನೂ ನಿರ್ಮಿಸಲಾಗಿತ್ತು. ನಗರದೊಳಗೆ ಅಗಲವಾದ ನೇರ ರಸ್ತೆಗಳು, ಅವನ್ನು ಸಂಧಿಸುವ ಅಡ್ಡರಸ್ತೆ. ಓಣಿಗಳು ಇವು ನಗರ ಪ್ರದೇಶವನ್ನು ಆಯಾಕಾರದ ವಠಾರಗಳಾಗಿ ವಿಭಜಿಸಿದ್ದುವು. ಸುಟ್ಟ ಇಟ್ಟಿಗೆಗಳಿಂದ ಕಟ್ಟಿದ ಒಂದೋ ಎರಡೋ ಅಂತಸ್ತುಗಳಿದ್ದ ಮನೆಗಳ ಮಧ್ಯ ಭಾಗದಲ್ಲಿದ್ದ ತೆರೆದ ವಿಶಾಲವಾದ ಅಂಗಣಗಳಿಂದ ನಿವಾಸಿಗಳಿಗೆ ಗಾಳಿ ಬೆಳಕುಗಳು ಒದಗುತ್ತಿದ್ದುವು. ಪ್ರತಿ ಮನೆಯಲ್ಲೂ ನೀರಿನ ಬಾವಿ, ಸ್ನಾನಗೃಹ, ಶೌಚಗೃಹ, ಅಡುಗೆಮನೆ, ಮೇಲಂತಸ್ತಿಗೆ ಹೋಗಲು ಸೋಪಾನ ಪಂಕ್ತಿಗಳು ಮನೆಯಲ್ಲಿ ಬಳಸಿದ ಮತ್ತು ಮಳೆಯ ನೀರನ್ನು ಹೊರಗೊಯ್ಯಲು ಕೊಳವೆ ಚರಂಡಿಗಳು, ರಸ್ತೆಗಳಲ್ಲಿ ಒಳ ಚರಂಡಿಗಳು ಇದ್ದುವು. ನಗರದ ರಸ್ತೆಗಳ ತಿರುವುಗಳಲ್ಲಿ ಕಾವಲುಗಾರರ ಕೊಠಡಿಗಳಿದ್ದುವು. ಚರಂಡಿಗಳನ್ನು ಆಗಾಗ ಸ್ವಚ್ಛಮಾಡಲು ಅಲ್ಲಲ್ಲಿ ದೊಡ್ಡ ಆಳುಗುಂಡಿಗಳನ್ನು ನಿರ್ಮಿಸಿದ್ದುದಲ್ಲದೆ ಅಲ್ಲಿ ಸಂಗ್ರಹವಾದ ಮತ್ತು ರಸ್ತೆಯ ಕಸವನ್ನು ಹೊರಸಾಗಿಸುವ ವ್ಯವಸ್ಥೆ ಇತ್ತು.

ರಾಜವಂಶದವರ, ಅಧಿಕಾರಿಗಳ ಮತ್ತು ಶ್ರೀಮಂತರ ವಸತಿಗಳಿಗಾಗಿ ಮತ್ತು ಆಡಳಿತ ಕಚೇರಿಗಳಿಗಾಗಿ ಪ್ರತ್ಯೇಕವಾದ ಒಳಕೋಟೆ ಆವರಣವನ್ನು ಎತ್ತರವಾದ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಅಲ್ಲಿ ಉನ್ನತ ವರ್ಗದವರ ನಿವಾಸಗಳಲ್ಲದೆ ಹಲವು ರೀತಿಯ ಸಾರ್ವಜನಿಕ ಭವನಗಳನ್ನು ಕಟ್ಟಲಾಗಿತ್ತು. ಅವುಗಳ ಪೈಕಿ ಅರಮನೆ, ಧಾರ್ಮಿಕ ನಾಯಕರ ವಿಹಾರಗೃಹ, ಸ್ನಾನದ ಕೊಳ, ಧಾನ್ಯಗಳ ಕಣಜ ಮೊದಲಾದವು ಗಮನಾರ್ಹ.

ಅವರು ಮೂರ್ತಿಶಿಲ್ಪಕಲೆಯಲ್ಲೂ ಪ್ರವೀಣರಾಗಿದ್ದರೂ ಹೆಚ್ಚು ಶಿಲ್ಪಗಳು ಉಳಿದು ಬಂದಿಲ್ಲದಿರುವುದು ದುರದೃಷ್ಟಕರ, ದೊರೆತಿರುವ ಕೆಲವು ಶಿಲಾಮೂರ್ತಿಗಳ ಪೈಕಿ ಗಡ್ಡಧಾರಿ ಪುರೋಹಿತ ಮೂರ್ತಿ, ಮತ್ತೊಬ್ಬ ಮಾನವನ ತಲೆ ಇವು ಉತ್ತಮ ಕೃತಿಗಳು, ಹರಪ್ಪದಲ್ಲಿ ಸಿಕ್ಕಿದ ರುಂಡವಿಲ್ಲದ ಶಿಲ್ಪಗಳು ಮಾನವದೇಹದ ನಿರೂಪಣೆಯಲ್ಲಿ ಅದ್ಭುತ ಕೃತಿಗಳು. ಕಂಚಿನ ನರ್ತಕಿಯ ಮೂರ್ತಿ ಅತ್ಯಂತ ಸಹಜ ನಿರೂಪಣೆ. ಜೇಡಿಮಣ್ಣಿನ ಮನುಷ್ಯ, ಪ್ರಾಣಿಗಳ ಮತ್ತು ಪಕ್ಷಿಗಳ ಗೊಂಬೆಗಳು ಉತ್ತಮ ಕಲಾವಂತಿಕೆಯನ್ನು ಬೀರುತ್ತವೆ. ಇವೆಲ್ಲಕ್ಕಿಂತಲೂ ಹೆಚ್ಚಿನ ಪ್ರತಿಭೆಯನ್ನು ಸೂಸುವ ಅವರ ಕಲಾ ನಿರ್ಮಾಣವನ್ನು ಅವರ ಮೇದಶ್ಶಿಲಾ ಮುದ್ರಿಕೆಗಳ ಮೇಲೆ ಕಾಣಬಹುದು. ಅವುಗಳ ಮೇಲಿನ ಪ್ರಾಣಿಗಳ ಚಿತ್ರಣ ಜೀವಂತ ಸತ್ವಪೂರ್ಣ ನಿರೂಪಣೆಯ ಉತ್ತಮ ನಿದರ್ಶನ.

ಕ್ರಿಸ್ತಶಕದ ಮೊದಲ ಶತಮಾನಗಳಲ್ಲಿ ಕುಷಾಣರ ಆಶ್ರಯದಲ್ಲಿ ಬೆಳೆದು ಬಂದ ಗಾಂಧಾರ ಶಿಲ್ಪದ ವರೆಗೂ ನಮಗೆ ಹೆಚ್ಚಿನ ಮಾಹಿತಿಗಳು ದೊರಕಿಲ್ಲ. ಕ್ರಿ.ಪೂ 5ನೆಯ ಶತಮಾನದ ಹೊತ್ತಿಗೆ ತಕ್ಷಶಿಲೆ ಪ್ರಮುಖ ರಾಜಕೀಯ ಮತ್ತು ಸಾಂಸ್ಕøತಿಕ ಕೇಂದ್ರವಾಗಿತ್ತು. ಪರ್ಷಿಯ ಸಾಮ್ರಾಜ್ಯದಲ್ಲಿ ಗಾಂಧಾರ ಪ್ರಾಂತ್ಯದ ಮುಖ್ಯ ನಗರವಾದ ತಕ್ಷಶಿಲೆಯ ನಗರ ಭಾಗವನ್ನು ಸಂಶೋಧಿಸಿದಾಗ ಕೆಲವು ವಿಶಾಲವಾದ ಸಾರ್ವಜನಿಕ ಕಟ್ಟಡಗಳೂ ಅರಮನೆ, ದೇವಾಲಯ, ಒಳಚರಂಡಿ ವ್ಯವಸ್ಥೆಗಳನ್ನೊಳಗೊಂಡ ಮತ್ತು ಕೋಟೆ ಕೊತ್ತಲ ಕಂದಕಗಳನ್ನು ಹೊಂದಿದ ನಗರ ವ್ಯವಸ್ಥೆ ಇವೂ ಕಂಡುಬಂದವು. ಆದರೆ ಕ್ರಿ.ಪೂ 2ನೆಯ ಶತಮಾನಕ್ಕೆ ಸೇರಿದ ಗ್ರೀಕ್ ನಗರದಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ಮಾಡಲಾಯಿತು. ಕೋಟೆಯ ಕಲ್ಲಿನ ಗೋಡೆ 6.4 ಮೀ ಅಗಲವಾಗಿದೆ. ಆದರೆ ಮಧ್ಯಂತರದಲ್ಲಿ ಅರ್ಧ ಆಯಾಕಾರದ ಕೊತ್ತಲಗಳನ್ನು ನಿರ್ಮಿಸಲಾಗಿತ್ತು. ಕೋಟೆಯ ಒಳಭಾಗವನ್ನು ಉದ್ದ ಅಡ್ಡದ ರಸ್ತೆಗಳಿಂದ ಆಯಾಕಾರದ ವಠಾರಗಳಾಗಿ ವಿಂಗಡಿಸಿ ಅವುಗಳಲ್ಲಿ ವಿಶಾಲಗೃಹಗಳನ್ನು ನಿರ್ಮಿಸಲಾಗಿತ್ತು. ಈ ನಗರ ಯೋಜನೆ ಹೆಚ್ಚು ಕಡಿಮೆ ಹರಪ್ಪ ನಾಗರಿಕತೆಯ ನಗರ ವ್ಯವಸ್ಥೆಯನ್ನು ಹೋಲುತ್ತಿತ್ತು. ತಕ್ಷಶಿಲೆಯ ಸುತ್ತಮುತ್ತಲಿನ ಬೆಟ್ಟಗುಡ್ಡಗಳ ತಪ್ಪಲುಗಳಲ್ಲಿ, ಕಣಿವೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬೌದ್ಧಸ್ತೂಪ, ಚೈತ್ಯ ಮತ್ತು ವಿಹಾರಗಳು ಕುಷಾಣರ ಆಳ್ವಿಕೆಯಲ್ಲಿ ನಿರ್ಮಾಣವಾದವು. ಈ ಶಾಂತ, ನಿಸರ್ಗ ಸುಂದರ ಪ್ರದೇಶ ಬೌದ್ಧ ಭಿಕ್ಷುಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸಿದುದರಲ್ಲಿ ಆಶ್ಚರ್ಯವಿಲ್ಲ. ಇಂಥ ಬೌದ್ಧ ನಿರ್ಮಾಣಗಳ ಪೈಕಿ ತಕ್ಷಶಿಲೆಯ ಬಳಿ ಇರುವ ಧರ್ಮರಾಜಿಕ ಸ್ತೂಪ ಮತ್ತು ವಿಹಾರಗಳು ಪ್ರಧಾನವಾದವು. ಅಶೋಕನಿಗಿಂತ ಮೊದಲು ನಿರ್ಮಿತವಾಯಿತೆಂದು ಹೇಳಲಾದ ಈ ಕಟ್ಟಡ ಸಮೂಹ ಕುಷಾಣರ ಕಾಲದಲ್ಲಿ ಬಹಳ ದೊಡ್ಡದಾಗಿ ಬೆಳೆಯಿತು. ಮಧ್ಯದ ಅಂಗಣದಲ್ಲಿ ಬೃಹತ್‍ಸ್ತೂಪ, ಸುತ್ತ ಸಣ್ಣ ಸ್ತೂಪಗಳ ಸಾಲುಗಳು ಚೈತ್ಯಗೃಹಗಳು ಮತ್ತು ಒಂದು ಭಾಗದಲ್ಲಿ ಬಹುಸಂಖ್ಯೆಯ ಕೋಣೆಗಳಿದ್ದ ವಿಹಾರ ಅಥವಾ ಭಿಕ್ಷು ವಸತಿಗಳು ಇದ್ದುವು. 5-6ನೆಯ ಶತಮಾನಗಳಲ್ಲಿ ಹೂಣರ ದಾಳಿಗೆ ಆಹುತಿಯಾಗುವವರೆಗೂ ಈ ಬೌದ್ಧ ಕಟ್ಟಡಗಳು ಧಾರ್ಮಿಕ ಮತ್ತು ವಿದ್ಯಾಕೇಂದ್ರಗಳಾಗಿ ಮುಂದುವರಿದುವು. ಈ ಬೌದ್ಧ ನಿರ್ಮಾಣಗಳು ಪಾಕಿಸ್ತಾನದ ಇತಿಹಾಸಕಾಲದ ಮೊದಲ ವಾಸ್ತು ನಿರ್ಮಾಣಗಳು.

ಇವಕ್ಕಿಂತಲೂ ಗಮನಾರ್ಹ ಕೊಡುಗೆಯೆಂದರೆ ಮೂರ್ತಿಶಿಲ್ಪ ರಂಗದಲ್ಲಿ ಆ ಕಾಲದಲ್ಲಿ ಅಸ್ತಿತ್ವಕ್ಕೆ ಬಂದ ಗಾಂಧಾರ ಶಿಲ್ಪಕಲೆ, ಕುಷಾಣ ದೊರೆಗಳ ಆಶ್ರಯದಲ್ಲಿ ಭಾರತೀಯ ವಸ್ತುಗಳಿಗೆ ಗ್ರೀಕ್ ಕಲಾ ನೈಪುಣ್ಯವನ್ನು ಅನ್ವಯಿಸಿ ಸೃಷ್ಟಿಸಿದ ನೂರಾರು ಬುದ್ಧ, ಬೋಧಿಸತ್ವ ಮತ್ತು ಇತರ ಬೌದ್ಧ ಶಿಲ್ಪಗಳು ಗಾಂಧಾರ ಶಿಲ್ಪ ಶೈಲಿಯವೆಂದು ಪರಿಗಣಿತವಾಗಿವೆ. ಇವುಗಳ ಪೈಕಿ ಚುನಾರಿನ, ಅಮೃತಶಿಲೆಯಲ್ಲಿ ಅಥವಾ ಮರಳುಗಲ್ಲಿನಲ್ಲಿ ಮಾಡಿದ ಮೂರ್ತಿಗಳು, ಗಚ್ಚಿನಲ್ಲಿ ನಿರ್ಮಿಸಿದ ವಿಗ್ರಹಗಳು ಮತ್ತು ಜೇಡಿಮಣ್ಣಿನ ಪ್ರತಿಮೆಗಳು ಅಧಿಕ ಸಂಖ್ಯೆಯಲ್ಲಿ ದೊರೆತಿವೆ. ಈ ಕಲೆ ಆಫ್ಘಾನಿಸ್ತಾನ ಪ್ರದೇಶದಲ್ಲಿ ಹರಡಿತ್ತು. ಪಾಕಿಸ್ತಾನದಲ್ಲಿ ತಕ್ಷಶಿಲೆಯ ಪ್ರದೇಶದಲ್ಲಿ ನಡೆಸಿದ ದೀರ್ಘಕಾಲದ ಉತ್ಖನನಗಳಲ್ಲಿ ಅಧಿಕಸಂಖ್ಯೆಯ ಶಿಲ್ಪಗಳು, ಮುಖ್ಯವಾಗಿ ಗಚ್ಚಿನಲ್ಲಿ ಮಾಡಿದ ಮೂರ್ತಿಗಳು, ದೊರೆತಿವೆ. ಕಲ್ಲಿನ ಮೂರ್ತಿಗಳಿಗಿಂತಲೂ ಗಚ್ಚಿನ ಮೂರ್ತಿಗಳು ಹೆಚ್ಚು ಅಂದವಾಗಿವೆ. ಗಚ್ಚಿನಲ್ಲಿ ಮತ್ತು ಜೇಡಿಮಣ್ಣಿನಲ್ಲಿ ಶಿಲ್ಪಗಳನ್ನು ಸುಲಭವಾಗಿ ರೂಪಿಸಬಹುದಾಗಿದ್ದುದರಿಂದ ಕ್ರಮೇಣ ಕಲ್ಲಿನ ಶಿಲ್ಪಗಳು ವಿರಳವಾದುವು. ಈ ಶಿಲ್ಪಕಲೆ ಮಹಾಯಾನ ಬೌದ್ಧಪಂಥದಿಂದ ಉತ್ತೇಜನ ಪಡೆದವಾದ್ದರಿಂದ ಇವನ್ನು 150-450ರ ಅವಧಿಗೆ ನಿರ್ದೇಶಿಸಬಹುದಾಗಿದೆ. ಇವುಗಳಲ್ಲಿ ಪೌರಸ್ತ್ಯ-ಪಾಶ್ಚಾತ್ಯ ಪರಂಪರೆಗಳ ಸಮ್ಮಿಲನವನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಆದರೆ ಸಿಂಧ್ ಪ್ರದೇಶದಲ್ಲಿ ಈ ಕಲೆ ಎಂಟನೆಯ ಶತಮಾನದವರೆಗೂ ಉಳಿದು ಬಂದ ವಿಷಯ ಮೀರಪುರ ಖಾಸ್ ಎಂಬಲ್ಲಿಯ ಇಟ್ಟಿಗೆ ಸ್ತೂಪದ ಮೂರ್ತಿಗಳಿಂದ ಖಚಿತವಾಗುತ್ತದೆ.

ಅನಂತರ ಕಾಲದ ಅವಶೇಷಗಳೆಂದರೆ ಉತ್ತರ ಸಿಂಧ್‍ನಲ್ಲಿರುವ ಹಿಂದೂ ವಾಸ್ತು ಶಿಲ್ಪಗಳು, ಇವುಗಳ ಕಾಲ ನಿರ್ಣಯ ಕಠಿಣವಾದರೂ ಇವುಗಳ ಇಸ್ಲಾಮೀ ವಾಸ್ತು ಶೈಲಿಯ ಲಕ್ಷಣಗಳಿಂದ ಇವನ್ನು ಸ್ಥೂಲವಾಗಿ 8-10ನೆಯ ಶತಮಾನಗಳಿಗೆ ನಿರ್ದೇಶಿಸಲಾಗಿದೆ. ದಕ್ಷಿಣ ಸಿಂಧ್‍ನಲ್ಲಿರುವ ಹಿಂದು ಕಟ್ಟಡಗಳ ಮತ್ತೊಂದು ಗುಂಪು 12-14ನೆಯ ಶತಮಾನಗಳಿಗೆ ಸೇರುತ್ತದೆ. ಉತ್ತರದ ಕಟ್ಟಡಗಳನ್ನು ಕಾಶ್ಮೀರ ವಾಸ್ತುಶಿಲ್ಪದ ಸಂಬಂಧವನ್ನು ಸೂಚಿಸುವ ಝೀಲಂ ದಂಡೆಯ ಪೂರ್ವದ ಗುಂಪು ಮತ್ತು ಸಿಂಧೂ ನದಿದಡದ ಪಶ್ಚಿಮದ ಗುಂಪು ಎಂದು ಎರಡು ಗುಂಪುಗಳಾಗಿ ಮಾಡಲಾಗಿದೆ. ಪೂರ್ವದ ಗುಂಪಿನ ಪ್ರಮುಖ ಕಟ್ಟಡ ಹ್ಯೂಯೆನ್‍ತ್ಸಾಂಗನ ಸಿಂಘಪುರ ಅಥವಾ ಈಗಿನ ಮಲ್ಲೋಟ್ ನಲ್ಲಿರುವ ಪಾಳುದೇವಾಲಯ. ಇಬ್ಬದಿಗಳಲ್ಲೂ ಹಿಂದೆ ಸರಿದ ಚಾಚುಭಾಗಗಳು, ಗಾಡಿಗಳಿಂದ ಅಲಂಕೃತವಾದ ಕಂಬಗಳು ಮತ್ತು ತ್ರಿಪತ್ರಕ ಕಮಾನು ಇರುವ ಕಾಶ್ಮೀರಿ ಶೈಲಿಯ ನಾಲ್ಕು ಚದುರಗಳ ಕಟ್ಟಡ ಇದು. ಇದರ ಮೆಟ್ಟಿಲುಮೆಟ್ಟಿಲಾದ ಮತ್ತು ಪಿರಿಮಿಡಾಕೃತಿಯ ಶಿಖರ ಬಿದ್ದುಹೋಗಿದೆ. ಇದು ಪಾಶ್ಚಾತ್ಯ ಗ್ರೀಕ್-ರೋಮನ್, ಬೌದ್ಧ ಮತ್ತು ಹಿಮಾಲಯ ಪ್ರದೇಶದ ಮರದ ಕಟ್ಟಡಗಳ-ಹೀಗೆ ತ್ರಿವಿಧ ಪ್ರಭಾವಗಳ-ಸಂಗಮವಾಗಿದೆ. ಕಾಶ್ಮೀರದ ಲಲಿತಾದಿತ್ಯ ಸಿಂಧ್ ಪ್ರಾಂತವನ್ನು ಆಕ್ರಮಿಸಿಕೊಂಡಾಗ ಬಹುಶಃ ಇದನ್ನು ಕಟ್ಟಲಾಯಿತು.

ಪಶ್ಚಿಮದ ಗುಂಪಿಗೆ ಅಟಕ್ ಜಿಲ್ಲೆಯ ಕಲ್ಲರ್ ದೇವಾಲಯ ಮತ್ತು ಡೇರಾ ಇಸ್ಮೈಲ್‍ಖಾನ್ ಜಿಲ್ಲೆಯ ಬಿಲಾಟ್‍ನಲ್ಲಿರುವ ದಕ್ಷಿಣ ಕಾಫಿರ ಕೋಟೆಯಲ್ಲಿರುವ ದೇವಾಲಯಗಳು ಸೇರುತ್ತವೆ. ಇವು ಮಧ್ಯ ಕಾಲೀನ ಉತ್ತರ ಭಾರತದ ನಾಗರ ಶೈಲಿಯ ದೇವಾಲಯಗಳನ್ನು ಹೋಲುತ್ತವೆ. ಇವುಗಳ ಜೇನುಗೂಡಿನಾಕಾರದ ಶಿಖರದ ಮೇಲೆ ಅನೇಕ ರೀತಿಯ ಸೂಕ್ಷ್ಮ ಅಲಂಕರಣಗಳನ್ನು ಮಾಡಲಾಗಿದೆ. ಪ್ರಾಚೀನ ಗುಪ್ತಶೈಲಿಯ ದೇವಾಲಯಗಳಲ್ಲಿರುವಂತೆ ಅರಗಂಬಗಳು, ಅವುಗಳ ಮೇಲೆ ಕುಂಭಕಾರ್ಯದ ಬೋದಿಗೆಗಳು, ಜೋತಾಡುವ ಲತಾಗುಲ್ಮಗಳು ಕಂಡುಬರುತ್ತವೆ ಸುತ್ತಲ ಪ್ರದೇಶದಲ್ಲಿ ಉತ್ತಮ ಮರಳ್ಗಲ್ಲು ಸಿಕ್ಕುತ್ತಿದ್ದರೂ ಸುಟ್ಟ ಇಟ್ಟಿಗೆ ಅಥವಾ ಮೃದುವಾದ ಕಂಜೂರ್ ಶಿಲೆಯಲ್ಲಿ ಆ ಕಟ್ಟಡಗಳನ್ನು ಕಟ್ಟಲಾಗಿದೆ. ಗಂಗಾ-ಯಮುನಾ ಬಯಲು ಪ್ರದೇಶದ ಕಟ್ಟಡ ಶೈಲಿ ಈ ವಾಯವ್ಯ ಪ್ರದೇಶಕ್ಕೆ ವಿಸ್ತರಿಸಿ ಸ್ವಲ್ಪ ಮಟ್ಟಿಗೆ ಈ ಪ್ರದೇಶದ ಬೌದ್ಧ ವಾಸ್ತುಶೈಲಿಯ ಪ್ರಭಾವಕ್ಕೊಳಗಾಗಿದೆಯೆಂದು ಹೇಳಲಡ್ಡಿಯಿಲ್ಲ. ದಕ್ಷಿಣ ಕಾಫಿರ ಕೋಟೆಯಲ್ಲಿ ಈ ಶೈಲಿಯ ಒಂಬತ್ತು, ಮತ್ತು 38 ಕಿಮೀ ದೂರದಲ್ಲಿ ಇರುವ ಉತ್ತರ ಕಾಫಿರ ಕೋಟೆಯಲ್ಲಿ ಐದು ದೇವಾಲಯಗಳಿವೆ. ಮೇಲಿನ ಶಿಖರದ ಭಾರವನ್ನು ಹೊರಲು ಚದರ ಗರ್ಭಗುಡಿಯ ಚಾವಣಿಯ ನಾಲ್ಕು ಮೂಲೆಗಳಲ್ಲಿ ಮರದ ದೊಡ್ಡ ದೊಡ್ಡ ಅಡ್ಡ ದಿಮ್ಮಿಗಳನ್ನು ಸೇರಿಸಿರುವುದರಿಂದ ಆ ಭಾಗಕ್ಕೆ ಅಷ್ಟ ಪಾಶ್ರ್ವಗಳಿರುವಂತೆ ಭಾಸವಾಗುತ್ತದೆ.

ದಕ್ಷಿಣ ಸಿಂಧ್ ಪ್ರದೇಶದ ದೇವಾಲಯಗಳ ಉತ್ತಮ ಮಾದರಿಯನ್ನು ವಿರಾವಾದದಿಂದ ವಾಯವ್ಯಕ್ಕೆ ಸುಮಾರು 22 ಕಿಮೀ. ದೂರದಲ್ಲಿರುವ ಗೋರಿ ಎಂಬಲ್ಲಿಯ ಜೈನ ದೇವಾಲಯದಲ್ಲಿ ಕಾಣಬಹುದು. ಆ ಪ್ರದೇಶದಲ್ಲಿ ದೊರಕುವ ಶಿಲೆಯಲ್ಲಿ ಕಟ್ಟಲಾದ ಈ ದೇವಾಲಯದ ಕಂಬಗಳಿಗೆ ಮತ್ತು ಅಲಂಕರಣ ಕೆತ್ತನೆಗಳಿಗೆ ರಾಜಸ್ಥಾನದ ಸ್ಫಟಿಕ ಶಿಲೆಯನ್ನು ಬಳಸಲಾಗಿದೆ. ಮಂದಿರಗಳಲ್ಲಿ ಸ್ಫಟಿಕ ಶಿಲೆಯನ್ನು ಬಳಸಲಾಗಿದೆ. ಈ ಮಂದಿರಗಳಲ್ಲಿ ಸ್ಫಟಿಕ ಶಿಲೆಯ ಕಂಬಗಳು ಮತ್ತು ಹೊರಚಾಚಿದಂತಿರುವ ಗುಮ್ಮಟಗಳಿರುವ ಹೊರ ಮಂಟಪ, ಸಣ್ಣ ಶಿಖರಗಳಿಂದ ಕೂಡಿದ ಭೂಮಿಜ ಶೈಲಿಯ ಶಿಖರಗಳು ಇವೆ. ಹೊರ ಮಂಟಪದಲ್ಲಿ ಗೋಡೆಗಳ ಮೇಲೆ, ಅಲ್ಲಿರುವ ಶಾಸನ ತಿಳಿಸುವಂತೆ, 1715ರಲ್ಲಿ ಜೀರ್ಣೋದ್ಧಾರ ಮಾಡಿದಾಗ ರೂಪಿಸಲಾದ ವರ್ಣಚಿತ್ರಗಳಿವೆ.

ಈ ದೇವಾಲಯಗಳಲ್ಲದೆ ಮೇಲೆ ಹೇಳಿದ ಎರಡು ಕಾಫಿರ ಕೋಟೆಗಳ ಸುತ್ತಲಿರುವ ರಕ್ಷಣಾ ಕೋಟೆಗಳು ಗಮನಾರ್ಹ. ಸುಭದ್ರವಾಗಿ ಕಟ್ಟಿರುವ ಈ ಕೋಟೆಗಳು ಬಹುಶಃ ಮುಸ್ಲಿಮ್ ಆಕ್ರಮಣ ಕಾಲಕ್ಕೂ ಹಿಂದಿನವೆಂದು ಹೇಳಬಹುದಾಗಿದೆ.

ಇಸ್ಲಾಮಿ ವಾಸ್ತು ಕಟ್ಟಡಗಳನ್ನು ಪರದೆಯಂತಿರುವ ಗೋಡೆಯಲ್ಲಿರುವ ಮಿಹ್ರಾಬ್ ಪ್ರಾರ್ಥನ ಹಜಾರ ಮತ್ತು ವಿಶಾಲಪ್ರಾಂಗಣಗಳಿರುವ ಮಸೀದಿ, ಜನರ ವಿಹಾರಕ್ಕೆ ಬಳಸುವ ಆವರಣ ಅಥವಾ ಮೃತರ ಸಮಾಧಿ ಎಂದು ವರ್ಗೀಕರಿಸಬಹುದು. 8ನೆಯ ಶತಮಾನದಲ್ಲಿ ಅರಬರು ಸಿಂಧ್‍ನಲ್ಲಿ ಮೊದಲಿಗೆ ಇಸ್ಲಾಮೀ ವಾಸ್ತುಶಿಲ್ಪವನ್ನು ತಂದರೆಂಬುದು ಚರ್ಚಾಸ್ಪದವಾದ ವಿಷಯ. ಆದರೆ 1000ದಿಂದ ಕ್ರಮೇಣ ಪರ್ಷಿಯದ ಪ್ರಭಾವದಿಂದ ಪಾಕಿಸ್ತಾನ ಪ್ರದೇಶದಲ್ಲಿ ಆ ಶೈಲಿಯ ಕಟ್ಟಡಗಳು ತಲೆದೋರಿದುವೆಂದು ಹೇಳಬಹುದಾದರೂ ಆ ಕಾಲದವು ಹೆಚ್ಚಾಗಿ ಉಳಿದುಬಂದಿಲ್ಲ. ಒಂದು ಗಮನಾರ್ಹ ಸಂಗತಿ ಎಂದರೆ, ಅರಬ್ಬಿ ಮರಳ್ಗಾಡಿನಲ್ಲಿ ಆ ಪರಿಸರಕ್ಕೆ ಸೂಕ್ತವಾದ ರೀತಿಯಲ್ಲಿ ಹುಟ್ಟಿದ ವಾಸ್ತುಶೈಲಿ ಇಲ್ಲಿಯ ಬೆಟ್ಟಗಾಡು ಪ್ರದೇಶದಲ್ಲಿ ಸಮಂಜಸ ಮಾರ್ಪಾಡುಗಳೊಂದಿಗೆ ಬೆಳೆದು ಬಂದಿರುವುದು. ಭಾರತ ಉಪಖಂಡದಲ್ಲಿ ಇದರ ಬೆಳೆವಣಿಗೆಯ ಪರಾಕಾಷ್ಠೆಯನ್ನು ಅಕ್ಬರನ ರಾಜಧಾನಿ ಫತೇಪುರ ಸಿಕ್ರಿಯಲ್ಲಿ(1570) ಕಾಣಬಹುದು.

ಮುಸ್ಲಿಂ ಪ್ರವೇಶಕಾಲದಿಂದ (1001) ಮೊಗಲರ ಪ್ರಾರಂಭಕಾಲದವರೆಗಿನ (1526) ಕಟ್ಟಡಗಳ ಅವಶೇಷಗಳು ಪಾಕಿಸ್ತಾನ ಪ್ರದೇಶದಲ್ಲಿ ಹೆಚ್ಚಾಗಿ ಉಳಿದು ಬಂದಿಲ್ಲ. ಆ ಕಾಲದವಾಗಿರಬಹುದಾದ ಕೆಲವು ಕಟ್ಟಡಗಳನ್ನು ಈಚಿನ ವರ್ಷಗಳಲ್ಲಿ ಜೀರ್ಣೋದ್ದಾರಗೊಳಿಸಿರುವುದರಿಂದ ಅವುಗಳ ಮೂಲರೂಪವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟಸಾಧ್ಯ. ಆದಾಗ್ಯೂ ಮುಲ್ತಾನಿನಲ್ಲಿ ಆಗಿನ ಕೆಲವು ಕಟ್ಟಡಗಳನ್ನು ಗುರ್ತಿಸಲಾಗಿದೆ. ಅವುಗಳಲ್ಲಿ ಪ್ರಾಚೀನತಮವಾದ ಷಾ ಯೂಸುಫ್ ಗರ್ದಿಜಿಯ ಸಮಾಧಿ (1152) ಆಯಾಕಾರದ ಇಟ್ಟಿಗೆ ಕಟ್ಟಡ. ಅದರ ಹೊರಭಾಗವನ್ನು ಜ್ಯಾಮಿರೀಯ ಚಿತ್ರಗಳಿದ್ದ ಗಾಜಿನ ಹೆಂಚುಗಳಿಂದ ಅಲಂಕರಿಸಲಾಗಿತ್ತು. ಅದರ ಒಂದು ತುದಿಯಲ್ಲಿ ಮಿಹ್ರಾಬ್ ಇತ್ತು. ಸುಮಾರು 1320-24ರ ನಡುವೆ ನಿರ್ಮಿತವಾದ ರುಕ್ನಿ ಅಲಮ್‍ನ ಸಮಾಧಿ ಘಿಯಾಸುದ್ದೀನನ ಆದೇಶದ ಮೇರೆ ನಿರ್ಮಿತವಾದ ಕಟ್ಟಡ. ಆಗಿನ ಕಾಲಕ್ಕೆ ಆ ಪ್ರದೇಶದಲ್ಲಿ ಅದು ಬಹಳ ಅಂದವಾದ ವಾಸ್ತುನಿರ್ಮಾಣವೆನಿಸಿತ್ತು. ಕೋಟೆಯ ದಿಬ್ಬದ ವಾಯವ್ಯ ಮೂಲೆಯಲ್ಲಿ 35 ಕಿಮೀ. ಎತ್ತರದ ಆ ಕಟ್ಟಡಭವ್ಯವಾಗಿತ್ತು. ಎಂಟು ಪಾಶ್ರ್ವಗಳ ಕಟ್ಟಡದ ಪ್ರತಿ ಮೂಲೆಯಲ್ಲೂ ಮಿನಾರತುಗಳಿದ್ದುವು. ಗಾಜಿನ ಹೆಂಚುಗಳು ಮತ್ತು ಕೆತ್ತಿದ ಮರದ ಭಾಗಗಳು ಅದನ್ನು ಅಂದಗೊಳಿಸಿದ್ದುವು. ಅನಂತರದ ಕಾಲದ ದೆಹಲಿಯ ಸಮಾಧಿಗಳ ಮುನ್ನೋಟವನ್ನು ಒದಗಿಸುವ ಈ ಭಾರತೀಯ ಇಸ್ಲಾಮಿ ನಿರ್ಮಾಣ ನಿಲುನೋಟದಲ್ಲಿ ಮೂರು ಹಂತಗಳನ್ನು ಒಳಗೊಂಡ ಗಮನಾರ್ಹ ಕಟ್ಟಡವಾಗಿತ್ತು. ಈ ಮಧ್ಯ ಯುಗ ಮತ್ತು ಮೊಗಲರ ಕಾಲದಲ್ಲಿ ಸಿಂಧ್‍ನಲ್ಲಿ ಇಸ್ಲಾಮಿ ಕಟ್ಟಡ ಕಲೆ ಪ್ರತ್ಯೇಕ ದಾರಿಯಲ್ಲಿ ಬೆಳೆದುಬಂತು. ಅವುಗಳಲ್ಲಿ ಅತ್ಯಂತ ಪ್ರಾಚೀನವಾದ್ದು ತಟ್ಟದಲ್ಲಿರುವ ಮಸೀದಿ (1588). ಪ್ರಾರ್ಥನಮಂದಿರ, ಪ್ರಾಂಗಣ, ಮಂದಿರದ ಮೇಲೆ ಗುಮ್ಮಟಗಳು ಇವುಗಳಿಂದ ಕೂಡಿದ ಈ ಇಟ್ಟಿಗೆಯ ಕಟ್ಟಡಗಳಲ್ಲಿ ಗಾಜಿನ ಹೆಂಚುಗಳ ಅಲಂಕಾರ ಮನೋಹರವಾಗಿತ್ತು. ಷಹಜಹಾನನ ಆದೇಶದ ಮೇರೆಗೆ 1644ರಲ್ಲಿ ಕಟ್ಟಿಸಿದ ಜಾಮಿ ಮಸೀದಿಯನ್ನು ಕಲ್ಲಿನ ತಳಪಾಯದ ಮೇಲೆ ಇಟ್ಟಿಗೆಯಲ್ಲಿ ನಿರ್ಮಿಸಲಾಗಿದೆ. ಪ್ರಾರ್ಥನಮಂದಿರದ ಮೇಲಿನ ಗುಮ್ಮಟ ಬಹಳ ದೊಡ್ಡದಾಗಿದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿರುವ ಗುಮ್ಮಟಗಳು ಸಣ್ಣವು. ಅದರ ಚಾವಣಿಯಲ್ಲಿ ಒಟ್ಟು 93 ಗುಮ್ಮಟಗಳಿವೆ. ಅದರ ಮುಂಭಾಗದಲ್ಲಿ ಗೋಡೆಗಳಿಗೆ ಹೆಂಚುಗಳನ್ನು ಹೊಂದಿಸಲಾಗಿದೆ. ಉಳಿದ ಗೋಡೆಗಳ ಹೊರ ಮತ್ತು ಒಳಭಾಗಗಳಲ್ಲಿ ಕೆಲವು ವರ್ಣಚಿತ್ರಗಳಿವೆ. ಇದು ಭಾರತ ಉಪಖಂಡದಲ್ಲಿ ಪರ್ಷಿಯನ್ ಕಲೆಯ ಅತ್ಯುತ್ತಮ ಪ್ರತೀಕವಾಗಿದೆ. ತಟ್ಟದ ವಾಯವ್ಯಕ್ಕೆ ಸುಮಾರು 5 ಕಿಮೀ. ದೂರದಲ್ಲಿರುವ ಸಮ್ಮಾ ನಗರದಲ್ಲಿ (ಸಾಮೂರ) 15ನೆಯ ಶತಮಾನದ ತಟ್ಟದ ರಜವಂಶೀಯರ ಮತ್ತು ಮುಸ್ಲಿಮ್ ಸಂತರ ಸಾವಿರಾರು ಸಮಾಧಿಗಳಿವೆ. ಕಲ್ಲಿನಲ್ಲಿ ಕಟ್ಟಿದ ಅಥವಾ ಇಟ್ಟಿಗೆ ಮತ್ತು ಗಾಜಿನ ಹೆಂಚುಗಳಿಂದ ನಿರ್ಮಿಸಿದ ಈ ಸಮಾಧಿಗಳನ್ನು 16-17ನೆಯ ಶತಮಾನಗಳ ಸುಮಾರಿಗೆ ನಿರ್ದೇಶಿಸಲಾಗಿದೆ. ಜಾಮ್ ನಿಜಾಮುದ್ದೀನನ ಸಮಾಧಿ(1508) ಇವುಗಳಲ್ಲೊಂದು. ಇದು ಚದರ ಕಟ್ಟಡ. ಇದನ್ನು ಮೊದಲಿನ ಹಿಂದೂ ದೇವಾಲಯಗಳ ಕಟ್ಟಡಗಳ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿಯ ಸಮಾಧಿಗಳ ಕಲ್ಲುಗೋಡೆಗಳ ಮೇಲೆ ಗಾಜಿನ ಹೆಂಚುಗಳ ಮೇಲಿನ ಅಲಂಕಾರದ ಅನುಕರಣೆಯಿದೆ. ಇಲ್ಲಿರುವ ಬಹಳ ದೊಡ್ಡ ಕಟ್ಟಡವೆಂದರೆ ಮಿರ್ಜಾ ಈಸಾ ಟರ್ಖಾನನ ಸಮಾಧಿ (1644). ಇದು ಅಷ್ಟು ಅಂದವಾದ ಕಟ್ಟಡವೇನಲ್ಲ. ಇಲ್ಲಿಯ ಸಮಾಧಿಗಳು ಪ್ರಾದೇಶಿಕ ವಾಸ್ತುಶೈಲಿಯ ಪ್ರತೀಕಗಳು. ಇರಾನಿನ ಪ್ರಭಾವಕ್ಕೊಳಗಾದ ಆ ಪ್ರದೇಶದ ಸಂಪ್ರದಾಯವನ್ನು ಇವು ಪ್ರತಿಬಿಂಬಿಸುತ್ತವೆ.

ಮೊಗಲರ ಕಾಲದ ಕಟ್ಟಡಗಳ ಪೈಕಿ ಲಾಹೋರಿನಲ್ಲಿರುವವು ಪ್ರಧಾನವಾಗಿದೆ. ಅಲ್ಲಿರುವ ಹಲವಾರು ಕಟ್ಟಡಗಳು ಮೊಗಲ್ ವಾಸ್ತುಶೈಲಿಯ ಉತ್ತಮ ಪ್ರತೀಕಗಳು. ಆ ಶೈಲಿಯ ಲಕ್ಷಣಗಳೆಂದರೆ ದುಂಡಾದ ಜೋಡು ಗುಮ್ಮಟಗಳು, ಹಿಂದು ಸಂಪ್ರದಾಯಕ್ಕೆ ಅನುಗುಣವಾಗಿ ಅನೇಕ ಪ್ರಾಂಗಣಗಳ ಬಳಕೆ, ಹಿಂದು ಸಂಪ್ರದಾಯದ ಚಾಚು ಕಿಟಕಿಗಳ ಬಳಕೆ, ಮತ್ತು ಮಥುರಾ ಪ್ರದೇಶದ ಕೆಂಪು ಮರಳ್ಗಲ್ಲಿನ ಬಳಕೆ. ಅದರ ಗೋಡೆಗಳ ಮೇಲೆ ಬಿಳಿ ಮತ್ತು ಕಪ್ಪು ಸ್ಫಟಿಕ ಶಿಲೆಯ ಅಲಂಕರಣವಿದೆ. ಪರ್ಷಿಯದ ಹಲವು ಬಣ್ಣದ ಗಾಜಿನ ಹೆಂಚುಗಳಿಂದ ಮಾಡುತ್ತಿದ್ದ ಅಲಂಕರಣವನ್ನು ಈ ಮೂಲಕ ಭಾರತ ಉಪಖಂಡದಲ್ಲಿ ಸಾಧಿಸಲಾಯಿತು. ಷಹಜಹಾನನ ಕಾಲದಲ್ಲಿ ಹಿಂದೂ ಸಂಪ್ರದಾಯದ ಪ್ರಾಬಲ್ಯವನ್ನು ಸ್ವಲ್ಪ ಮಟ್ಟಿಗೆ ನಿರೋಧಿಸಿ ಅಮೃತಶಿಲೆಯ ಹಗುರವಾದ ಕಟ್ಟಡಗಳನ್ನು ನಿರ್ಮಿಸಲಾಯಿತು. ಅನೇಕ ಕೋಡುಗಳಿರುವ ಕಮಾನುಗಳು, ಚಿತ್ರ ಕೊರೆತ ಕಲೆಯಿಂದ ನಿರ್ಮಿಸಿದ ಹೂಬಳ್ಳಿಗಳ ಮಾದರಿಗಳು ಮತ್ತು ಪರ್ಷಿಯನ್ ಮೂಲದ ಬಣ್ಣದ ಹೆಂಚುಗಳ ಅಲಂಕರಣ ಇವು ಅಂಥ ಕಟ್ಟಡಗಳಲ್ಲಿ ಪ್ರಧಾನವಾಗಿದ್ದುವು. ಆಗ್ರದ ತಾಜ್‍ಮಹಲ್ ಈ ಶೈಲಿಯ ಉತ್ತಮ ನಿದರ್ಶನ.

ಪಾಕಿಸ್ತಾನ ಪ್ರದೇಶದಲ್ಲಿ ಮೊಗಲರ ಪ್ರಾಚೀನತಮ ನಿರ್ಮಾಣ ರೋಹ್ತಾಸ್ ಕೋಟೆ(1539). ಅದರ ಸುತ್ತಳತೆ 3.2 ಕಿಮೀ ಗೋಡೆಗಳು ಬುಡದಲ್ಲಿ ಸುಮಾರು 3 ಮೀ ದಪ್ಪವಾಗಿವೆ. ಇವುಗಳಲ್ಲಿ ಬಂದೂಕು ಮತ್ತು ಫಿರಂಗಿಗಳಿಗಾಗಿ ಮತ್ತು ಕಾದ ಸೀಸವನ್ನು ಸುರಿಯಲು ರಂಧ್ರಗಳಿವೆ. ಕೋಟೆಯ ಉತ್ತರಭಾಗವನ್ನು ಗೋಡೆಯಿಂದ ವಿಭಾಗಿಸಿ ಪ್ರತ್ಯೇಕ ಒಳಕೋಟೆಯನ್ನು ನಿರ್ಮಿಸಲಾಗಿದೆ. ಅದರೊಳಗೆ ಒಂದು ದೊಡ್ಡ ಭವನ ಮತ್ತು ಸೋಪಾನಗಳಿಂದ ಕೂಡಿದ ಎರಡು ಬಾವಿಗಳಿವೆ.

ಲಾಹೋರಿನ ಕೋಟೆ ಮತ್ತೊಂದು ಗಮನಾರ್ಹ ಕಟ್ಟಡ. ಅಕ್ಬರನ ಪೂರ್ವಕಾಲದ ನಿರ್ಮಾಣಗಳು ಇಲ್ಲಿದ್ದಿರಬಹುದಾದರೂ ಅವುಗಳ ಮೇಲೆ ಅವನು ಕಟ್ಟಿಸಿದ ಕೋಟೆ ಗೋಡೆಗಳು ಈಗ ಕಾಣುತ್ತವೆ. ರಣಜಿತ್ ಸಿಂಗ್ ಅವನ್ನು 1812ರಲ್ಲಿ ನವೀಕರಿಸಿದನೆಂದು ಹೇಳಲಾಗಿದೆ. ಅದರ ವಿಸ್ತೀರ್ಣ ಪೂರ್ವ-ಪಶ್ಚಿಮವಾಗಿ 2 ಕಿಮೀ. ಮತ್ತು ಉತ್ತರ ದಕ್ಷಿಣವಾಗಿ 1.2 ಕಿಮೀ ಅದರಲ್ಲಿ 13 ಹೆಬ್ಬಾಗಿಲುಗಳಿವೆ. ಕೋಟೆಯೊಳಗೆ ವಾಯವ್ಯ ಮೂಲೆಯಲ್ಲಿ ಬಾದಶಾಹಿ ಮಸೀದಿ ಮತ್ತು ಒಳಕೋಟೆ, ಮತ್ತು ಎರಡು ಮಸೀದಿಗಳು, ಒಬ್ಬ ಶ್ರೀಮಂತನ ನಿವಾಸ- ಇವು ಮುಖ್ಯ ನಿರ್ಮಾಣಗಳು. ಮೊಗಲರ ಕಟ್ಟಡಗಳಲ್ಲಿ ಬಹುಭಾಗ ಅಕ್ಬರ್-ಜಹಾಂಗೀರರ ಮತ್ತು ಷಹಜಹಾನ್-ಔರಂಗ್eóÉೀಬರ ಕಾಲಕ್ಕೆ ಸೇರುತ್ತವೆ.

ಕೋಟೆಯ ಹೊರಭಾಗದಲ್ಲಿರುವ ಷೇಖ್ ಮುಸಾ ಅಹಂಗರನ ಸಮಾಧಿ(16ನೆಯ ಶತಮಾನ) 7.6 ಮೀ ಚದರದ ಇಟ್ಟಿಗೆ ಕಟ್ಟಡ. ಅದರ ಹೆಂಚಿನ ಅಲಂಕರಣ ಈ ಪ್ರದೇಶದಲ್ಲಿ ಬಹಳ ಹಳೆಯದು. ಒಳಕೋಟೆಯ ಪೂರ್ವಕ್ಕಿರುವ ಮರಿಯಂ ಜûಮಾನಿ ಮಸೀದಿ (1614) ಜಹಾಂಗೀರನ ಕಾಲದ ಸರಳ ಕಟ್ಟಡ. ಅದರ ನಾಲ್ಕು ಮೂಲೆಗಳಲ್ಲಿ ಅಷ್ಟಕೋನ ಗುಮ್ಮಟಗಳಿವೆ. ಅದರ ಒಳಗೋಡೆಗಳ ಮೇಲಿರುವ ವರ್ಣ ಚಿತ್ರಗಳು ಸೂಕ್ಷ್ಮ ಹಾಗೂ ನೈಜವಾಗಿ ಇವೆ.

ಲಾಹೋರಿನ ಆಗ್ನೇಯದಲ್ಲಿ 5.6 ಕಿಮೀ. ದೂರದಲ್ಲಿರುವ ಶಾಲಿಮಾರ್ ಉದ್ಯಾನವನ್ನು 1637ರಲ್ಲಿ ಷಹಜಹಾನ್ ನಿರ್ಮಿಸಿದನೆಂದು ಊಹಿಸಲಾಗಿದೆ. ಇದೊಂದು ಸುಂದರವಾದ ವಿಹಾರ ಸ್ಥಳವಾಗಿತ್ತು. ಈಗ ಇದು ಭಗ್ನಾವಸ್ಥೆಯಲ್ಲಿದೆ.

ಒಳಕೋಟೆಯ ಪಶ್ಚಿಮಕ್ಕಿರುವ ಬಾದ್‍ಶಾಹಿ ಮಸೀದಿ (1673-74) ಔರಂಗ್eóÉೀಬನ ಕಾಲದ ಪ್ರಧಾನ ಕಟ್ಟಡ. ಇದು ಅಂಥ ಗಮನಾರ್ಹ ಕಟ್ಟಡವಲ್ಲದಿದ್ದರೂ ಪ್ರಮಾಣಬದ್ಧವಾಗಿದೆ. ಇದು 161.5 ಮೀ ಚದರವಾಗಿದೆ. ಇದು ಎತ್ತರವಾದ ಜಗತಿಯ ಮೇಲೆ ನಿರ್ಮಿಸಲಾದ ಸುಂದರ ಅಲಂಕರಣಗಳಿಂದ ಕೂಡಿದ ಮಧ್ಯಮ ವರ್ಗದ ಪ್ರಾರ್ಥನ ಗೃಹವೆನಿಸಿಕೊಂಡಿದೆ. ಇನ್ನೂ ಹಲವು ಮಸೀದಿಗಳು, ಸಮಾದಿಗಳು, ಗೋಪುರ-ಮಿನಾರತುಗಳು ಲಾಹೋರಿನ ಸುತ್ತಮುತ್ತಲೂ ಮೊಗಲರ ವಾಸ್ತುಕಲೆಗೆ ಸಾಕ್ಷಿಗಳಾಗಿ ನಿಂತಿವೆ. 

ಪ್ರಾಥಮಿಕ ಶಿಕ್ಷಣದ ಆಡಳಿತವನ್ನು ನಾಲ್ಕು ಪ್ರಾಂತ್ಯಗಳೂ ಪ್ರತ್ಯೇಕವಾಗಿ ನಡೆಸುತ್ತವೆ. ಶಿಕ್ಷಣ ಶಾಖೆಯ ಅಧಿಕಾರಿಗಳೂ ತನಿಖಾಧಿಕಾರಿಗಳೂ ಪ್ರಾಥಮಿಕ ಶಿಕ್ಷಣದ ಆಡಳಿತವನ್ನು ನಡೆಸುತ್ತಾರೆ. ಸೆಕೆಂಡರಿ ಮತ್ತು ಇಂಟರ್ ಮೀಡಿಯೇಟ್ ಶಿಕ್ಷಣವನ್ನು ಜಿಲ್ಲಾ ಬೋರ್ಡಿನವರು ಅದಕ್ಕಾಗಿ ರಚಿಸಿರುವ ಸಮಿತಿಗಳ ಮೂಲಕ ನಡೆಸುತ್ತಾರೆ. ನಿರ್ದೇಶಕರುಗಳು ಸಾರ್ವಜನಿಕ ಶಿಕ್ಷಣಶಾಖೆಯ ನಿರ್ದೇಶಕರಿಗೆ ಹೊಣೆಗಾರರಾಗಿರುತ್ತಾರೆ. ಸರ್ಕಾರದ ಹಾಗೂ ಸರ್ಕಾರದ ಧನ ಸಹಾಯ ಪಡೆಯುವ ಖಾಸಗಿ ಸೆಕೆಂಡರಿ ಶಾಲೆಗಳ ಆಡಳಿತಕ್ಕಾಗಿ ಸಲಹಾ ಸಮಿತಿಗಳನ್ನು ಏರ್ಪಡಿಸಿದೆ.

ವಿಶ್ವವಿದ್ಯಾಲಯಗಳು ರಾಜ್ಯಶಾಸನಗಳಿಂದ ಸ್ಥಾಪನೆಯಾಗಿ ಅದಕ್ಕಾಗಿ ರೂಪಿಸಿರುವ ಕಾನೂನಿನಂತೆ ಕೆಲಸಮಾಡುತ್ತವೆ. ಅಯಾಪ್ರಾಂತ್ಯದ ಗವರ್ನರು ಕುಲಾಧಿಪತಿಯಾಗಿರುತ್ತಾನೆ. ಕುಲಪತಿಗಳನ್ನು ಆತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನಾಗಿ ನೇಮಿಸುತ್ತಾನೆ. ಅವರ ಸಹಾಯಕ್ಕಾಗಿ ಸಿಂಡಿಕೇಟ್ ಮತ್ತು ಅಕಾಡಮಿಕ್ ಕೌನ್ಸಿಲ್‍ಗಳು ಇವೆ. 1965ರಲ್ಲಿ ಸರ್ಕಾರ ವಿಶ್ವವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸಮನ್ವಯವನ್ನು ಸಾಧಿಸಲು ಮಂಡಲಿಯೊಂದನ್ನು ರಚಿಸಿತು. ಈಚೆಗೆ ಇಸ್ಲಾಮಾಬಾದ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣದ ವೆಚ್ಚವನ್ನು ಆಯಾ ಪ್ರಾಂತ್ಯವೇ ವಹಿಸುತ್ತಿದೆ. ಶಾಲೆಗಳು ಶುಲ್ಕವನ್ನು ವಿಧಿಸುತ್ತವೆ, ಖಾಸಗಿ ಶಾಲೆಗಳಲ್ಲಿ ಶುಲ್ಕ ಸರ್ಕಾರದ ಶಾಲೆಗಳಿಗಿಂತ ಹೆಚ್ಚಾಗಿರುತ್ತದೆ. ಸರ್ಕಾರದ ನಿಯಮಾವಳಿಯನ್ನು ಅವು ಅನುಸರಿಸಿದರೆ ಮಾತ್ರ ಸರ್ಕಾರದ ಅನುದಾನ ದೊರಕುತ್ತದೆ. ವಿಶ್ವವಿದ್ಯಾಲಯದ ಹಾಗೂ ಸರ್ಕಾರಿ ಕಾಲೇಜುಗಳ ವೆಚ್ಚವನ್ನು ಶುಲ್ಕದಿಂದಲೂ ಸರ್ಕಾರದ ಬೊಕ್ಕಸದಿಂದಲೂ ನಿರ್ವಹಿಸಲಾಗುತ್ತಿದೆ. ಇಡೀ ವೆಚ್ಚದಲ್ಲಿ ವಿದ್ಯಾರ್ಥಿಗಳು ಕೊಡುವ ಶುಲ್ಕ ಸುಮಾರು 7% ಆಗುತ್ತದೆ. ತಾಂತ್ರಿಕಶಾಲೆಗಳಲ್ಲೂ ಅಧ್ಯಾಪಕರ ಪ್ರಶಿಕ್ಷಣ ಸಂಸ್ಥೆಗಳಲ್ಲೂ ಶುಲ್ಕ ಕಡಿಮೆಯಿರುವುದಲ್ಲದೆ ವಿದ್ಯಾರ್ಥಿಗಳಿಗೆ ವೇತನವನ್ನೂ ನೀಡಲಾಗುತ್ತದೆ.

ಪಾಕಿಸ್ತಾನದ ರಾಷ್ಟ್ರೀಯ ಶಿಕ್ಷಣ ಆಯೋಗ 1960ರಲಿ ವಿದ್ಯಾವಂತ ಜನ ಓದು ಬರಹ, ಲೆಕ್ಕಾಚಾರಗಳನ್ನು ಕಲಿತಿರಬೇಕು; ತನ್ನ ಹೊರಪ್ರಪಂಚದ ಪರಿಜ್ಞಾನ ಪಡೆದಿರಬೇಕು; ತನ್ನ ನಿತ್ಯವ್ಯವಹಾರಗಳನ್ನು ನಡೆಸುತ್ತ ನಿತ್ಯದ ಸಮಸ್ಯೆಗಳನ್ನು ಜಾಣತನದಿಂದ ವಿವೇಚಿಸುವ ಶಕ್ತಿ ಪಡೆದಿರಬೇಕು; ತಮ್ಮ ದೈಹಿಕ ಮಾನಸಿಕ ಹಾಗೂ ನೈತಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರಬೇಕು; ಆರ್ಥಿಕ ಜೀವನಕ್ಕೆ ಅಗತ್ಯವಾದ ವೃತ್ತಿ ಕೌಶಲವನ್ನೂ ಜ್ಞಾನಾರ್ಜನೆಗೆ ಅಗತ್ಯವಾದ ಆಸಕ್ತಿ ಕುತೂಹಲಗಳನ್ನೂ ಪಡೆದಿರಬೇಕು ಎಂದೂ ಈ ಗೊತ್ತು ಗುರಿಗಳನ್ನು ಸಾಧಿಸಲು ನೆರವಾಗುವಂತೆ ಶಿಕ್ಷಣ ಪದ್ಧತಿ ವ್ಯವಸ್ಥೆಗೊಳ್ಳಬೇಕೆಂದೂ ಸೂಚಿಸಿದೆ.

ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಉರ್ದು ಶಿಕ್ಷಣಮಾಧ್ಯಮವಾಗಿದೆ. ಪೂರ್ವ ಪಾಕಿಸ್ತಾನ ಪ್ರತ್ಯೇಕವಾಗುವಮುಂಚೆ ಕೆಲವು ಮುಖ್ಯ ನಗರಗಳಲ್ಲಿ ಬಂಗಾಳಿ ಭಾಷೆಯ ಮಾಧ್ಯಮವೂ ಅಸ್ತಿತ್ವದಲ್ಲಿತ್ತು. ಈಚೆಗೆ ಅದು ಬಹುಮಟ್ಟಿಗೆ ಕೊನೆಗೊಂಡಿದೆ. ವಿಶ್ವವಿದ್ಯಾಲಯದ ಅಂತಸ್ತಿನಲ್ಲಿ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದೆ. ಆದರೆ ಉರ್ದುವನ್ನು ಶಿಕ್ಷಣಮಾಧ್ಯಮವನ್ನಾಗಿ ಮಾಡಬೇಕೆಂಬ ಬಯಕೆ ಎಲ್ಲೆಲ್ಲೂ ಇದ್ದರೂ ಅಗತ್ಯವೆನಿಸುವ ಪಠ್ಯಪುಸ್ತಕಾದಿ ಸಲಕರಣೆಗಳು ಇನ್ನೂ ಸಿದ್ಧವಾಗಿಲ್ಲ. ಕೆಲವು ಸೆಕೆಂಡರಿ ಶಾಲೆಗಳಲ್ಲೂ ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಿದೆ.

ಪ್ರಾಥಮಿಕ ಶಾಲೆಯ ಶಿಕ್ಷಣದ ಅನಂತರ ನಡೆಯುವ ಸಾರ್ವತ್ರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸೆಕೆಂಡರಿ ಶಾಲೆಗೆ ಸೇರಿಸಿಕೊಳ್ಳುವರು. ಕೆಲವು ಶಾಲೆಗಳು ತಾವೇ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ರ್ತಿರ್ಣರಾದವರನ್ನು ಸೇರಿಸಿಕೊಳ್ಳುವುದುಂಟು. ಹತ್ತನೆಯ ತರಗತಿಯ ಅನಂತರ ನಡೆಯುವ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸುಮಾರು 2/3ರಷ್ಟು ವಿದ್ಯಾರ್ಥಿಗಳು ಪ್ರಥಮ ಅಥವಾ ದ್ವಿತೀಯ ತರಗತಿಯಲ್ಲಿ ಉತ್ತೀರ್ಣರಾಗುವರು. ಅವರು ಮಾತ್ರ ಕಾಲೇಜಿಗೆ ಸೇರುವ ಅರ್ಹತೆ ಪಡೆಯುತ್ತಾರೆ. ಮಿಕ್ಕವರು ಉದ್ಯೋಗ ಅಥವಾ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಿಕೊಂಡು ಶಿಕ್ಷಣ ಪಡೆದು ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಧ್ಯಾಪಕರ ಪ್ರಶಿಕ್ಷಣಕ್ಕೆ ಬರತಕ್ಕವರೂ ಈ ವರ್ಗಕ್ಕೆ ಸೇರಿರುತ್ತಾರೆ.

ಪ್ರಾಥಮಿಕ ಶಾಲೆಯಲ್ಲಿ ಉರ್ದು, ಅಂಕಗಣಿತ, ಸಮಾಜಪಾಠ, ಸಾಮಾನ್ಯ ವಿಜ್ಞಾನ, ಇಂಗ್ಲಿಷ್ (4, 5 ನೆಯ ತರಗತಿಗಳಿಂದ), ಧಾರ್ಮಿಕ ಶಿಕ್ಷಣ, ಸಾಹಿತ್ಯ ಮತ್ತು ಕೈಕೆಲಸ ಮುಂತಾದವನ್ನು ಬೋಧಿಸುವರು.

ಸೆಕೆಂಡರಿ ಶಾಲೆಯಲ್ಲಿ ಉರ್ದು, ಇಂಗ್ಲಿಷ್, ಗಣಿತ, ಚರಿತ್ರೆ, ಭೂಗೋಳ ಪೌರ ನೀತಿ, ವಿಜ್ಞಾನ, ದೈಹಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ ಮುಂತಾದವುಗಳು ಜೊತೆಗೆ ಐಚ್ಛಿಕ ವಿಷಯಗಳನ್ನೂ ಬೋಧಿಸುವರು. 9,10ನೆಯ ತರಗತಿಗಳಲ್ಲಿ ಮಾನವಿಕಗಳು ವಿಜ್ಞಾನ, ವಾಣಿಜ್ಯ, ಗೃಹವಿಜ್ಞಾನ, ಔದ್ಯೋಗಿಕ ಕಲೆ, ಕೃಷಿ ಮುಂತಾದವನ್ನು ಐಚ್ಛಿಕವಿಷಯಗಳನ್ನಾಗಿ ಬೋಧಿಸಲಾಗುವುದು. ಈ ಕ್ಷೇತ್ರಗಳನ್ನು ಆಯ್ದುಕೊಂಡವರು ವ್ಯಾಸಂಗ ಮಾಡಬೇಕಾದ ವಿಷಯ ವಿಭಾಗಗಳನ್ನೂ ನಿಗದಿ ಮಾಡಿರುವರು. ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 10-12 ವಿಷಯಗಳಲ್ಲಿ ಉತ್ತರಿಸಬೇಕಾಗುತ್ತದೆ. ಕಾಲೇಜಿಗೆ ಸೇರಲು ಬಯಸುವವರು ವಿಜ್ಞಾನ, ಮಾನವಿಕ, ವಾಣಿಜ್ಯ ಮುಂತಾದ ಐಚ್ಛಿಕವನ್ನು ಆರಿಸಿಕೊಳ್ಳುವರು. ಈ ಹಂತದಲ್ಲಿ ಶಿಕ್ಷಣವನ್ನು ಉದ್ಯೋಗಮುಖವಾಗಿಸುವ ಯತ್ನ ನಡೆದಿದ್ದರೂ ಬಹುಮಟ್ಟಿಗೆ ಅದು ಗ್ರಾಂಥಿಕವಾಗಿಯೇ ಇದೆ. ಪರೀಕ್ಷೆಗೆ ಸಿದ್ಧವಾಗುವ ಹಿರಿಯ ಉದ್ದೇಶದಿಂದ ಇಲ್ಲಿನ ಶಿಕ್ಷಣ ಕೇವಲ ಉರುಹಚ್ಚುವ ಕಾರ್ಯವಾಗಿದೆಯೆಂದು ಟೀಕಿಸಲಾಗುತ್ತಿದೆ. 

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕಾಲೇಜುಗಳೂ ವಿಶ್ವವಿದ್ಯಾಲಯಗಳೂ ವಿವಿಧ ವಿಷಯ ವಿಭಾಗಗಳನ್ನು ಆರಂಭಿಸಿ ಪದವಿ ಮಟ್ಟದ ಕಾರ್ಯಕ್ರಮವನ್ನು ಅಳವಡಿಸಿಕೊಂಡಿವೆ. ಪ್ರವೇಶದ ಬೇಡಿಕೆ ಹೆಚ್ಚಿದಂತೆ ಪ್ರತಿ ಪ್ರಾಂತ್ಯದಲ್ಲೂ ಹೊಸದಾಗಿ ಕೃಷಿ, ಎಂಜಿನಿಯರಿಂಗ್ ಕಲೆ ಮತ್ತು ವಿಜ್ಞಾನ-ಈ ಕ್ಷೇತ್ರಗಳ ಶಿಕ್ಷಣಕ್ಕಾಗಿ ಒಂದೊಂದು ವಿಶ್ವವಿದ್ಯಾಲಯವನ್ನು ಆರಂಭಿಸಲಾಗಿದೆ. ವಿಜ್ಞಾನ, ಸಂಶೋಧನೆ, ಅರಣ್ಯ ವಿಜ್ಞಾನ, ಸಾರ್ವಜನಿಕ ಆಡಳಿತ, ವ್ಯವಹಾರೋದ್ಯಮ ಶಿಕ್ಷಣಶಾಸ್ತ್ರ ಈ ವಿಷಯಗಳ ಶಿಕ್ಷಣಕ್ಕೆ ನೂತನ ಕಾಲೇಜುಗಳನ್ನೂ ಅಧ್ಯಯನ ಸಂಸ್ಥೆಗಳನ್ನೂ ಆರಂಭಿಸಲಾಗಿದೆ. 

ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣಕ್ಕೆ 12 ನೆಯ ತರಗತಿಯ ಅನಂತರ ನಡೆಯುವ ಪರೀಕ್ಷೆಯಲ್ಲಿ ಪ್ರಥಮ ಮತ್ತು ದ್ವಿತೀಯ ತರಗತಿಯಲ್ಲಿ ಉತ್ತೀರ್ಣರಾದವರು ಸೇರಲು ಅರ್ಹತೆ ಪಡೆಯುತ್ತಾರೆ. ಎರಡು ವರ್ಷದ ಬ್ಯಾಚುಲರ್ ಪದವಿ ಶಿಕ್ಷಣವೂ ಅನಂತರ ಎರಡು ವರ್ಷದ ಮಾಸ್ಟರ್ ಪದವಿ ಶಿಕ್ಷಣವೂ ಅಸ್ತಿತ್ವದಲ್ಲಿವೆ. ಬ್ಯಾಚಲರ್ ಆನರ್ಸ್ ಪದವಿ ಮೂರು ವರ್ಷದ್ದು, ಅದರಲ್ಲಿ ಉತ್ತೀರ್ಣರಾದವರು ಎರಡನೆಯ ವರ್ಷದ ಮಾಸ್ಟರ್ ಪದವಿಗೆ ಸೇರಬಹುದು. ಪ್ರತಿಭಾವಂತ ವಿದ್ಯಾರ್ಥಿಗಳು ಪಿ.ಎಚ್.ಡಿ ತರಗತಿಗೆ ವ್ಯಾಸಂಗ ಮಾಡಬಹುದು.

ಉನ್ನತ ಶಿಕ್ಷಣ ಬಹುಮಟ್ಟಿಗೆ ಜ್ಞಾನ ಪ್ರಸರಣಕ್ಕೆ ಮಾತ್ರ ಮೀಸಲಾಗಿದೆ. ಸಂಶೋಧನೆಯ ಮೂಲಕ ಜ್ಞಾನದ ವಿಸ್ತರಣಕಾರ್ಯ ಅಷ್ಟಾಗಿ ನಡೆದಿಲ್ಲವೆಂದೇ ಹೇಳಬೇಕು. ಪರಮಾಣು ಶಕ್ತಿಯೇ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಪ್ರತ್ಯೇಕ ಸಂಸ್ಥೆಗಳೇನೋ ಅಸ್ತಿತ್ವದಲ್ಲಿವೆ. ಉನ್ನತ ಶಿಕ್ಷಣದಲ್ಲಿ ಮುಖ್ಯವಾಗಿ ಉರ್ದು, ಬಂಗಾಳಿ, ಇಂಗ್ಲಿಷ್, ಇತಿಹಾಸ, ಪರ್ಷಿಯನ್, ಅರ್ಯಾಬಿಕ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇಸ್ಲಾಂ ಧರ್ಮಶಾಸ್ತ್ರ, ಗಣಿತವಿಜ್ಞಾನ, ತತ್ವಶಾಸ್ತ್ರ, ಮನಶಾಸ್ತ್ರ, ವಾಣಿಜ್ಯಶಾಸ್ತ್ರ-ಇವು ಪ್ರಮುಖ ವ್ಯಾಸಂಗ ವಿಷಯಗಳು. ವೃತ್ತಿಶಿಕ್ಷಣ ಶಾಲೆಗಳಲ್ಲಿ ವೈದ್ಯಶಾಸ್ತ್ರ, ಔಷಧ ನಿರ್ಮಾಣಶಾಸ್ತ್ರ, ಉಪಚಾರಿಕೆ, ಎಂಜಿನಿಯರಿಂಗ್, ಕೃಷಿ, ವಾಸ್ತು, ಸಂಗೀತ ಮುಂತಾದವನ್ನು ಬೋಧಿಸಲಾಗುತ್ತಿದೆ.

ಉದ್ಯೋಗ ಕಸಬು ಕಲೆಗಳಲ್ಲಿ ಶಿಕ್ಷಣ ಪಡೆದು ವಿವಿಧ ಉದ್ಯೋಗಗಳಲ್ಲಿ ಕೆಲಸಕ್ಕೆ ಸೇರಿ ರಾಷ್ಟ್ರದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲೆಂಬ ಉದ್ದೇಶದಿಂದ ಈಚೆಗೆ ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣ ಪಡೆದವರಿಗಾಗಿ ತಾಂತ್ರಿಕ ಹಾಗೂ ಕೈಗಾರಿಕಾ ಶಾಲೆಗಳನ್ನು, ಪಾಲಿಟೆಕ್ನಿಕ್‍ಗಳನ್ನು ಅಧಿಕವಾಗಿ ಸ್ಥಾಪಿಸಲಾಗುತ್ತಿದೆ. ಅಲ್ಲಿ ವಿದ್ಯುದ್ವಾಹಕ ತಂತಿಗಳ ಅಳವಡಿಕೆಯ ಕೆಲಸ (ವೈರಿಂಗ್) ಮರಗೆಲಸ, ಕಬ್ಬಿಣದ ಕೆಲಸ, ಮೆಕ್ಯಾನಿಕ್ ಕೆಲಸ, ಬೆಸುಗೆಯ ಕೆಲಸ ಕಾರ್ಯಾಲಯದ ಕೆಲಸ ಮತ್ತು ಇತರ ಕೈಗಾರಿಕಾ ಕಸಬು ಕಲೆಗಳ ಶಿಕ್ಷಣಕ್ಕೆ ಏರ್ಪಾಟು ಮಾಡಲಾಗಿದೆ.

ಅಧ್ಯಾಪಕರ ಶಿಕ್ಷಣ ಮೂರು ಅಂತಸ್ತುಗಳಲ್ಲಿ ಏರ್ಪಟ್ಟಿದೆ ಮೊದಲನೆಯ ಹಂತದ ಒಂದು ವರ್ಷದ ಪ್ರಶಿಕ್ಷಣ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಗೆ ಮೀಸಲು. ಅಲ್ಲಿ ಬೋಧನ ಕ್ರಮ, ಶಿಕ್ಷಣ ತತ್ವ, ಮನಶ್ಯಾಸ್ತ್ರ ಮತ್ತು ಅಭ್ಯಾಸ ಪಾಠ ಮುಂತಾದವನ್ನು ಸೇರಿಸಿದೆ. ಎರಡನೆಯ ಹಂತದ ಶಿಕ್ಷಣ ಅಧ್ಯಾಪಕರ ಕಾಲೇಜಿನಲ್ಲಿ ಏರ್ಪಟ್ಟಿದೆ. ಅಲ್ಲಿ ಬೋಧನ ಕ್ರಮ. ಶಿಕ್ಷಣ, ತತ್ವಶಾಸ್ತ್ರ, ಮನಶ್ಯಾಸ್ತ್ರ, ಶಿಕ್ಷಣದ ಇತಿಹಾಸ, ಆರೋಗ್ಯಶಾಸ್ತ್ರ ಮತ್ತು ಅಭ್ಯಾಸ ಬೋಧನೆ ಇವನ್ನು ಅಳವಡಿಸಲಾಗಿದೆ. ಬಿ.ಎ, ಬಿ.ಎಸ್.ಸಿ., ಬಿ.ಕಾಮ್. ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಈ ಶಿಕ್ಷಣ ಪಡೆದು ಸೆಕೆಂಡರಿ ಶಾಲೆಗಳಲ್ಲಿ ಅಧ್ಯಾಪಕರಾಗಲು ಅರ್ಹತೆ ಪಡೆಯುವರು. ದೈಹಿಕ ಶಿಕ್ಷಣ, ಸಂಗೀತ ಶಿಕ್ಷಣ, ತಾಂತ್ರಿಕ ಶಿಕ್ಷಣ ಮುಂತಾದ ವಿಷಯಗಳನ್ನು ಬೋಧಿಸುವ ಅಧ್ಯಾಪಕರಿಗೆ ವಿಶೇಷ ರೀತಿಯ ತರಬೇತಿ ಸಂಸ್ಥೆಗಳು ಏರ್ಪಟ್ಟಿವೆ. ಮಾಸ್ಟರ್ಸ್ ಮತ್ತು ಡಾಕ್ಟರ್ಸ್ ಪದವಿ ಶಿಕ್ಷಣ ಈಚೆಗೆ ಆರಂಭವಾಗಿದೆ. ಅವು ಔದ್ಯೋಗಿಕ ಮಾರ್ಗದರ್ಶನ, ಪಠ್ಯವಸ್ತುವಿನ ನಿರ್ಮಾಣ, ವಿಜ್ಞಾನ ಶಿಕ್ಷಣ, ಸಂಶೋಧನೆ ಮುಂತಾದ ಕ್ಷೇತ್ರಗಳನ್ನೂ ತಜ್ಞರು ರೂಪಿಸುತ್ತಿದ್ದಾರೆ.

ಸಾಮಾನ್ಯ ಪಾಠಶಾಲೆಗಳಂತೆ ದೇಶಾದ್ಯಂತ ಇಸ್ಲಾಂ ಪಾಠಶಾಲೆಗಳೂ ಅಸ್ತಿತ್ವದಲ್ಲಿವೆ. ಸರ್ಕಾರ ಅವಕ್ಕೆ ಮನ್ನಣೆ ನೀಡಿದ್ದರೂ ಅಷ್ಟಾಗಿ ಧನ ಸಹಾಯ ನೀಡುತ್ತಿಲ್ಲ. ಪ್ರಾಥಮಿಕ ಮಟ್ಟದ ಆ ಶಾಲೆಗಳಲ್ಲಿ ಕುರಾನು ಪಠನ ಮುಖ್ಯ ಬೋಧನ ವಿಷಯ. ಇಂಥ ಶಾಲೆಗಳು ಮಸೀದಿಗಳಲ್ಲಿ ನಡೆಯುತ್ತವೆ. ಪ್ರಾಥಮಿಕ ಮಟ್ಟಕ್ಕಿಂತ ಮೇಲಿನ ಶಿಕ್ಷಣಕ್ಕಾಗಿ ಮಕ್ತಾಬ್, ಮದ್ರಸಾ ಮತ್ತು ದವುಲ್‍ಉಲೂಮ್ ಎಂಬ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಕೊನೆಯ ಎರಡು ಸಂಸ್ಥೆಗಳು ವಿಶ್ವವಿದ್ಯಾಲಯದ ಮಟ್ಟದವು. ಇವು ಇಸ್ಲಾಮಿಕ್ ನ್ಯಾಯಶಾಸ್ತ್ರ, ಅರಬ್ಬೀ ಭಾಷೆಯ ಕುರಾನ್ ಮುಂತಾದವನ್ನು ಪಠ್ಯಕ್ರಮದಲ್ಲಿ ಸೇರಿಸಿವೆ. ಆಧುನಿಕ ವಿಷಯಗಳಾವುವನ್ನೂ ಅಲ್ಲಿ ಬೋಧಿಸದಿದ್ದರೂ ಗ್ರಾಮಾಂತರ ಜನತೆಗೆ ಈ ಸಂಸ್ಥೆಗಳು ತುಂಬ ಪ್ರಿಯವೆನಿಸಿವೆ.

ಸಾರ್ವತ್ರಿಕ ಕಡ್ಡಾಯ ಶಿಕ್ಷಣ 1960ರಲ್ಲಿ ಸರ್ಕಾರ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ಯೋಜನೆಯನ್ನು ಆರಂಭಿಸಿ 1975ರ ವೇಳೆಗೆ ವರ್ಷದ ಕಡ್ಡಾಯ ಶಿಕ್ಷಣವನ್ನೂ 1980ರ ವೇಳೆಗೆ 8 ವರ್ಷದ ಕಡ್ಡಾಯ ಶಿಕ್ಷಣವನ್ನೂ ಆಚರಣೆಗೆ ತರಲು ನಿರ್ಧರಿಸಿತು. ಅದಕ್ಕಾಗಿ ಪ್ರಾಥಮಿಕ ಶಾಲೆಗಳನ್ನೂ ಸೆಕೆಂಡರಿ ಶಾಲೆಗಳ ಕಿರಿಯ ವಿಭಾಗಗಳನ್ನೂ ಹೊಸದಾಗಿ ಲಕ್ಷಗಟ್ಟಲೆ ಆರಂಭಿಸಬೇಕಾಯಿತು. ಹಣದ ಅಭಾವ, ಜನತೆಯ ಬಡತನ, ವಿದ್ಯಾರ್ಥಿಗಳ ನಿರಾಸಕ್ತಿ, ಅಧ್ಯಾಪಕರ ನಿರಾಕರ್ಷಕ ಬೋಧನ ವಿಧಾನ- ಇವೇ ಮುಂತಾದ ಕಾರಣಗಳಿಂದ ಈ ಯೋಜನೆ ಅಷ್ಟಾಗಿ ಯಶಸ್ಸು ಸಾಧಿಸಿಲ್ಲ. 8ನೆಯ ತರಗತಿ ಮುಗಿಸುವ ಮುನ್ನವೇ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಗಿಸುವುದರಿಂದ ಶಿಕ್ಷಣಕ್ಷೇತ್ರದಲ್ಲಿ ಅಗಾಧವಾದ ಶೈಕ್ಷಣಿಕ ಅಪಸರಣವೂ ವ್ಯರ್ಥವ್ಯಯವೂ ಸಂಭವಿಸುತ್ತಿವೆ.	ಶಿಕ್ಷಣ ಉದ್ದೇಶಪೂರ್ವಕವೂ ಪರಿಣಾಮಕಾರಿಯೂ ಆಗುವಂತೆ ಮಾಡಲು ಅಂದಿಗಂದಿಗೆ ಶಿಕ್ಷಣದ ಗೊತ್ತುಗುರಿಗಳನ್ನು ನವೀಕರಿಸುವ ಯತ್ನವೂ ಶಿಕ್ಷಣಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸಲು ಹಣ ಒದಗಿಸುವುದೂ ಕಂಡುಬರುತ್ತಿದೆ. ಶಾಲಾಜೀವನ ಆಕರ್ಷಕವಾಗುವಂತೆ ಮಾಡಲು ನೂತನ ರೀತಿ ಪಠ್ಯಕ್ರಮ, ಪಠ್ಯ ಪುಸ್ತಕ ಮುಂತಾದವನ್ನು ಸಿದ್ಧಪಡಿಸಲಾಗುತ್ತಿದೆ. ಪರೀಕ್ಷಾವಿಧಾನದಲ್ಲೂ ಸುಧಾರಣೆಗಳು ಆರಂಭವಾಗಿವೆ. 1966-1970ರ 3ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಎಲ್ಲ ಮಟ್ಟಗಳಲ್ಲಿ ಶಿಕ್ಷಣ ಸೌಲಭ್ಯಗಳನ್ನು ಹೆಚ್ಚಿಸಲೂ ತಕ್ಕಷ್ಟು ಹಣವನ್ನು ಒದಗಿಸಲಾಗಿತ್ತು. 1971-75ರ ವರೆಗೆ ವಿಸ್ತರಿಸಲೆಳಸಿದ್ದ 4ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಕೊನೆಗಾಣಿಸಲು ಆಲೋಚಿಸಲಾಗಿತ್ತು. ಜೊತೆಗೆ ವಯಸ್ಕರ ಶಿಕ್ಷಣವನ್ನು ಅನುಷ್ಠಾನಕ್ಕೆ ತರಲು ಯುವಜನ ಸೇನೆಯೊಂದನ್ನು ನಿರ್ಮಿಸುವ ಸಲಹೆಯೂ ಸರ್ಕಾರದ ಮುಂದಿತ್ತು. ಕ್ರೈಸ್ತಪಾದ್ರಿಗಳು ನಡೆಸುತ್ತಿರುವ ಶಾಲೆಗಳ ರಾಷ್ಟ್ರೀಕರಣ ಮಾಡುವ ಯೋಜನೆಯೂ ಸರ್ಕಾರದ ಮುಂದಿತ್ತು.

ರಾಷ್ಟ್ರದ ತಾಂತ್ರಿಕ ಸಿಬ್ಬಂದಿಯ ಸಂಖ್ಯಾಬಲವನ್ನು ಹೆಚ್ಚಿಸಲು ಮೂಲ ವಿಜ್ಞಾನಗಳ ಬೋಧನೆಗೆ ಇಸ್ಲಾಮಾಬಾದ್ ವಿಶ್ವವಿದ್ಯಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸುತ್ತಿವೆ. ಇವೆಲ್ಲ ಕಾರ್ಯಕ್ರಮಗಳಿಗೂ ನೆರವಾಗಲೆಂಬ ಉದ್ದೇಶದಿಂದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ವಿಜ್ಞಾನ ಬೋಧನೆಯ ಕಡೆ ವಿಶೇಷ ಗಮನ ಕೊಡಲಾಗುತ್ತಿದೆ. ಇಂದು ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಸೇ. 45.7 ಮಂದಿ ಓದುಬರಹ ಬಲ್ಲವರಾಗಿದ್ದಾರೆ. 2003ರ ಅಂಕಿ ಅಂಶಗಳ ಪ್ರಕಾರ ಸೇ. 59.8 ಮಂದಿ ಗಂಡಸರು, ಸೇ. 30.6 ರಷ್ಟು ಮಹಿಳೆಯರು ಶಿಕ್ಷಿತರಾಗಿದ್ದಾರೆ. 




#Article 235: ನೇಪಾಳ (444 words)


ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ. ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. ನೇಪಾಳದ ಉತ್ತರಕ್ಕೆ ಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ. ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ ೧೦ ಪರ್ವತ ಶಿಖರಗಳ ಪೈಕಿ ೮ ನೇಪಾಳದಲ್ಲಿಯೇ ಇವೆ. ನೇಪಾಳದ ವಿಸ್ತೀರ್ಣ ೧೪೧,೭೦೦ ಚ.ಕಿ.ಮೀ. ಜನಸಂಖ್ಯೆ ಸುಮಾರು ೨.೭ ಕೋಟಿ. ರಾಷ್ಟ್ರದ ರಾಜಧಾನಿ ಕಾಠ್ಮಂಡು.

ಕ್ರಿ.ಪೂ.೬ ಮತ್ತು ೫ನಯೆ ಶತಮಾನದಲ್ಲಿ ಈ ಪ್ರದೇಶವು ಶಾಕ್ಯ ಆಡಳಿತಕ್ಕೊಳಪಟ್ಟಿತ್ಥು. ಶಾಕ್ಯ ರಾಜಕುಮಾರರಲ್ಲೊಬ್ಬನಾದ ಸಿದ್ಧಾರ್ಥ ಗೌತಮನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಬುದ್ಧನೆನಿಸಿಕೊಂಡನು. ಸುಮಾರು ಕ್ರಿ.ಪೂ. ೨೫೦ರ ಸಮಯಕ್ಕೆ ಈ ಪ್ರದೇಶವು ಉತ್ತರಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು. ತರುವಾಯ ಗುಪ್ತ ಸಾಮ್ರಾಟರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು ಈ ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಈ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು. ೧೭೬೫ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು. ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡ , ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು ಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಸತ್ತೆಗಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. ೧೯೯೧ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆಗಳು ನಡೆದವು.

ನೇಪಾಳವು ಸುಮಾರು ೮೦೦ ಕಿ.ಮೀ. ಉದ್ದ ಹಾಗೂ ೨೦೦ ಕಿ.ಮೀ. ಅಗಲದ ಪಟ್ಟಿಯಂತೆ ಕಾಣುವುದು. ಭೌಗೋಳಿಕವಾಗಿ ದೇಶವನ್ನು ಉನ್ನತ ಪರ್ವತ ಪ್ರದೇಶ, ಬೆಟ್ಟಗುಡ್ಡಗಳ ಪ್ರದೇಶ ಹಾಗೂ ತರಾಯ್ ಪ್ರದೇಶಗಳೆಂದು ವಿಂಗಡಿಸಬಹುದು. ಭಾರತದ ಗಡಿಗೆ ಹೊಂದಿಕೊಂಡಿರುವ ಪ್ರದೇಶವು ಗಂಗಾ ಬಯಲಿನ ಒಂದು ಭಾಗವಾಗಿದೆ. ಈ ಭಾಗಕ್ಕೆ ಕೋಸಿ, ನಾರಾಯಣಿ (ಗಂಡಕಿ) ಮತ್ತು ಕರ್ನಾಲಿ ನದಿಗಳು ನೀರುಣಿಸುತ್ತವೆ. ಬೆಟ್ಟಗುಡ್ಡಗಳ ಪ್ರದೇಶವು ಕಾಠ್ಮಂಡು ಕಣಿವೆಯನ್ನು ಒಳಗೊಂಡಿದೆ. ದೇಶದ ಹೆಚ್ಚಿನ ಜನವಸತಿ ಇಲ್ಲಿಯೇ ಕಂಡುಬರುವುದು. ಈ ಪ್ರದೇಶದಲ್ಲಿ ಮಹಾಭಾರತ ಲೇಖ್ ಮತ್ತು ಶಿವಾಲಿಕ ಪರ್ವತಶ್ರೇಣಿಗಳು ಇವೆ. ಈ ಶ್ರೇಣಿಗಳು ಮಧ್ಯಮ ಮಟ್ಟದವಾಗಿದ್ದು ಸರಾಸರಿ ೧೦೦೦ದಿಂದ ೪೦೦೦ ಮೀ. ವರೆಗೆ ಎತ್ತರವುಳ್ಳವಾಗಿವೆ. ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ. ಎವರೆಸ್ಟ್ , ಕಾಂಚನ್ ಜುಂಗಾ, ಅನ್ನಪೂರ್ಣಾ , ಮಕಾಲು , ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ಈ ವಿಭಾಗದಲ್ಲಿ ಇವೆ. ಅರಣ್ಯನಾಶ ದೇಶದ ಎಲ್ಲಕಡೆ ಅವಿರತವಾಗಿ ಸಾಗಿದ್ದು ಇದು ಪ್ರಕೃತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ.

ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಬತ್ತ, ಗೋಧಿ, ಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ ರಸ್ತೆ ಹಾಗೂ ರೈಲುಮಾರ್ಗಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ. ಆಧುನಿಕ ತಂತ್ರಜ್ಞಾನವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು.

ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ, ಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ ಸರಾಸರಿ ಆಯುರ್ಮಾನ ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.

ಮಾವೋವಾದಿ ನಾಯಕ ಪ್ರಚಂಡ ಅವರು ಎರಡನೇ ಬಾರಿಗೆ  ನೇಪಾಳದ ಪ್ರಧಾನಿಯಾಗಿ ಬುಧವಾರ ಆಯ್ಕೆಯಾದರು. 595 ಸದಸ್ಯ ಬಲದ ನೇಪಾಳ ಸಂಸತ್‌ನಲ್ಲಿ ಪ್ರಚಂಡ ಅವರ ಪರ 363 ಸದಸ್ಯರು ಮತ್ತು ವಿರುದ್ಧವಾಗಿ 210 ಸದಸ್ಯರು ಮತ ಚಲಾಯಿಸಿದ್ದಾರೆ. 22 ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ




#Article 236: ಅರಬ್ಬೀ ಸಮುದ್ರ (180 words)


ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು.  ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಸುಡಾನ್ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು. 

ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ 'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿ, ಮಂಗಳೂರು, ಮುಂಬಯಿ, ಸೂರತ್, ಕರಾಚಿ ಏಡೆನ್

ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್‍ನಿಂದ ಮೇ ವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್‍ನಿಂದ ಸೆಪ್ಟೆಂಬರ್‍ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್‍ನಿಂದ ಸೆಪ್ಟೆಂಬರ್‍ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬೀ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಕೊಟ್ರಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು.

ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮೈ ನೀರಿನ ಉಷ್ಣಾಂಶ 240-250 ಸೆಂ. ಸಮುದ್ರ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ.




#Article 237: ಬಂಗಾಳ ಕೊಲ್ಲಿ (240 words)


ಬಂಗಾಳ ಕೊಲ್ಲಿಯು ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿರುವ ಕೊಲ್ಲಿ. ತ್ರಿಕೋನದ ಆಕಾರದಲ್ಲಿರುವ ಈ ಕೊಲ್ಲಿಯ ಉತ್ತರಕ್ಕೆ  ಭಾರತ, ಬಾಂಗ್ಲದೇಶ , ಪೂರ್ವಕ್ಕೆ ಮಲಯಾ ದ್ವೀಪಕಲ್ಪ (ಪೆನಿನ್ಸುಲ) ಮತ್ತು ಪಶ್ಚಿಮಕ್ಕೆ ಭಾರತದ ಪೂರ್ವ ಕರಾವಳಿಯಿದೆ.

ಸ್ಥೂಲವಾಗಿ ಉ.ಅ. 5°-22° ಮತ್ತು ಪೂ.ರೇ 80°-95° ನಡುವೆ ವ್ಯಾಪಿಸಿದೆ.  ಶ್ರೀಲಂಕಾದ ದಕ್ಷಿಣ ತುದಿಯಿಂದ ಸುಮಾತ್ರ ದ್ವೀಪದ ಉತ್ತರ ತುದಿಯವರೆಗೆ ಇದರ ದಕ್ಷಿಣ ಮೇರೆ ಹಬ್ಬಿದೆ. ವಿಸ್ತೀರ್ಣ 21,72,000 ಚ.ಕಿಮೀ. ಅಗಲ ಸುಮಾರು 1600 ಕಿಮೀ ಸರಾಸರಿ ಆಳ 790 ಮೀ ಗಳಿಗಿಂತ ಹೆಚ್ಚು. ಗರಿಷ್ಠ ಆಳ 4,500 ಮೀ.

ಕೊಲ್ಲಿಯಲ್ಲಿ ಇರುವ ದ್ವೀಪಸ್ತೋಮಗಳು ಅಂಡಮಾನ್ ಮತ್ತು ನಿಕೋಬಾರ್.

ಉತ್ತರ ಭಾಗದಲ್ಲಿ ಸುಮಾರು 160 ಕಿಮೀ ಅಗಲದ ಖಂಡೀಯ ಮರಳು ದಿಬ್ಬವಿದೆ. ದಕ್ಷಿಣಕ್ಕೆ ಸಾಗಿದಂತೆ ಇದು ಕಿರಿದಾಗುತ್ತದೆ. ತಳ ಸಾಮಾನ್ಯವಾಗಿ ದಕ್ಷಿಣಕ್ಕೆ ಇಳಜಾರಾಗಿದ್ದು ಮಟ್ಟಸವಾಗಿದೆಯೆಂದು ಈಚಿನವರೆಗೂ ನಂಬಲಾಗಿತ್ತು. ಹಿಂದೂ ಸಾಗರದ ಅಂತರರಾಷ್ಟ್ರೀಯ ಅನ್ವೇಷಣೆಯಿಂದ ಹೆಚ್ಚಿನ ವಾಸ್ತವ ಸಂಗತಿಗಳು ಹೊರಬಿದ್ದಿವೆ. ನೀರಿನ ಅಡಿಯಲ್ಲಿ ಅನೇಕ ಪರ್ವತ ಶ್ರೇಣಿ, ಅಳ ಕಮರಿ ಮತ್ತು ನಾಲೆ ಇರುವುದು ಗೊತ್ತಾಗಿದೆ. ನಿಕೋಬಾರ್-ಸುಮಾತ್ರ ಭಾಗದಲ್ಲಿ ಗರಿಷ್ಠ 4500 ಮೀ ಆಳದ ಒಂದು ಕೊಳ್ಳವಿದೆ. ಕೊಲ್ಲಿಯ ತಲೆಯ ಬಳಿ ಆರಂಭವಾಗುವ ಕಮರಿ ಖಂಡೀಯ ಮರಳು ದಿಬ್ಬಕ್ಕೆ ಅಡ್ಡವಾಗಿ ಅದನ್ನು ಕತ್ತರಿಸಿದಂತೆ 160 ಕಿಮೀ ದೂರ ಸಾಗುತ್ತದೆ. ಇದರ ಅಗಲ ಸುಮಾರು 13 ಕಿಮೀ, ಭಾರತ ತೀರದಿಂದಾಚೆಗೆ ಕಂಡುಬಂದಿರುವ ಕಮರಿಗಳ ಪೈಕಿ ಮಹಾನದಿ, ಕೃಷ್ಣಾ, ಸ್ವರ್ಣಮುಖಿ, ಪೆನ್ನಾರ್ ಮದ್ರಾಸ್, ನಾಗಾರ್ಜುನ, ಗೋದಾವರಿ ಮತ್ತು ಗೌತಮಿ ಕಮರಿಗಳು ಮುಖ್ಯವಾದವು. ಇವುಗಳ ಪೈಕಿ ಕೆಲವು ಪ್ಲೀಸ್ಟೊಸಿನ್ ಯುಗದಲ್ಲಿ (ಸುಮಾರು 10,000-25,00,000 ವರ್ಷಗಳ ಹಿಂದೆ) ರೂಪುತಳೆದವು.

ಈ ಕೊಲ್ಲಿಯ ಭೌತಗುಣಗಳು ವ್ಯತ್ಯಾಸಗೊಳ್ಳುತ್ತಿರುವುದು ಇದರ ಒಂದು ವೈಶಿಷ್ಟ್ಯ. ತೀರದಾಚೆಯ ಪ್ರದೇಶಗಳಲ್ಲಿ ಉಷ್ಣತೆ ಸಾಮಾನ್ಯವಾಗಿ ಎಲ್ಲ ಋತುಗಳಲ್ಲೂ ಏಕರೀತಿಯದಾಗಿರುತ್ತದೆ, ಉತ್ತರಕ್ಕೆ ಹೋದಂತೆ ಉಷ್ಣತೆ ಕಡಿಮೆಯಾಗುತ್ತದೆ. ಮೇಲ್ಭಾಗದ ಸಾಂದ್ರತೆ ವಸಂತ ಋತುವಿನಲ್ಲಿ ಅಧಿಕ, ಮೇಲಣ ನೀರಿನ ಚಲನೆಯ ದಿಕ್ಕು ಋತುವಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ಈಶಾನ್ಯ ಮಾನ್ಸೂನ್ ಕಾಲದಲ್ಲಿ ಇದು ಪ್ರದಕ್ಷಿಣವಾಗಿಯೂ ನೈಋತ್ಯ ಮಾನ್ಸೂನ್ ಕಾಲದಲ್ಲಿ ಅಪ್ರದಕ್ಷಿಣವಾಗಿಯೂ ಚಲಿಸುತ್ತದೆ. ಮಾನ್ಸೂನಿನ ಬದಲಾವಣೆಯ ಕಾಲದಲ್ಲಿ, ಮುಖ್ಯವಾಗಿ ಅಕ್ಟೋಬರಿನ್ನಲ್ಲಿ ತೀವ್ರ ಚಂಡಮಾರುತಗಳು ಸಂಭವಿಸುತ್ತದೆ. ಅಲೆ ಹಾಗೂ ಭರತದ ಪರಿಣಾಮವಾಗಿ ನೀರಿನ ಮಟ್ಟದಲ್ಲಾಗುವ ಬದಲಾವಣೆಗಳ ಜೊತೆಗೆ ವರ್ಷ ಪೂರ ಸಮುದ್ರದ ಮಟ್ಟ ವ್ಯತ್ಯಾಸವಾಗುತ್ತಲೇ ಇರುತ್ತದೆ. ವಂಶಧಾರಾ, ನಾಗಾವಳಿ, ವಶಿಷ್ಠ, ಗೋದಾವರಿ ನದೀ ಮುಖಗಳ ಬಳಿಯಲ್ಲಿ ಮ್ಯಾಂಗನೀಸ್‍ಯುಕ್ತ ಖನಿಜಕಣಗಳು ವಿಶೇಷವಾಗಿ ನಿಕ್ಷೇಪಗೊಂಡಿವೆ, ಕಾವೇರಿ, ಗೋದಾವರಿ ಮುಖಜ ಭೂಮಿಗಳ ಪ್ರದೇಶದಲ್ಲಿ ತೈಲ ನಿಕ್ಷೇಪಗಳ ಅನ್ವೇಷಣೆಯಾಗುತ್ತಿದೆ. 




#Article 238: ಸಾಮ್ರಾಟ್ ಅಶೋಕ (110 words)


ಅಶೋಕನು  ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ 273 ರಿಂದ ಕ್ರಿ.ಪೂ 232 ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. 1915 ರವರಿಗೆ ಪಿಯದಸಿ ರಾಜ ಯಾರೆಂದು ತಿಳಿಯದಾಗಿತ್ತು. ಆದರೆ 1915ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು.
ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.

ಕಳಿಂಗ ಯುದ್ಧ ಕ್ರಿ.ಪೂ.261 ರಲ್ಲಿ ಕಳಿಂಗ ರಾಜ್ಯದ (ಈಗಿನ ಒರಿಸ್ಸಾ) ಧೌಲಿ ಪ್ರದೇಶದ ಬಳಿ ದಯಾ ನದಿಯ ತೀರದಲ್ಲಿ ನಡೆಯಿತು ಆರಂಭಕ್ಕೆ ಕಾರಣ ಏನೆಂದು ನಿಶ್ಚಿತವಾಗಿ ತಿಳಿದಿಲ್ಲ . ಅಶೋಕನ ಸೊದರರಲ್ಲೊಬ್ಬ - ಬಹುಶಃ ಸುಶೀಮನ ಬೆಂಬಲಿಗನೂ - ಕಳಿಂಗಕ್ಕೆ ಓಡಿ ಹೋಗಿ ಆಶ್ರಯ ಪಡೆದಿರಬಹುದು ಅಥವಾ ಅಶೋಕನ ಹಿರಿಯರ ಕಾಲದಿಂದಲೂ ಸ್ವತಂತ್ರವಾಗಿಯೇ ಉಳಿದಿತ್ತು ಅದರ ರಾಜ ಶುದ್ಧಧರ್ಮ.

ಮುಖ್ಯ ಲೇಖನ : ಅಶೋಕನ ಶಾಸನಗಳು 

ಮುಖ್ಯ ಲೇಖನ : ಬೌದ್ಧ ಧರ್ಮದ ಇತಿಹಾಸ 




#Article 239: ಥಾರ್ ಮರುಭೂಮಿ (611 words)


ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. 
ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ ಮರುಭೂಮಿಯನ್ನು ಅಲ್ಲಿ ಚೋಲಿಸ್ತಾನ್ ಮರುಭೂಮಿ ಎಂದು ಕರೆಯುತ್ತಾರೆ. 

ಈಶಾನ್ಯಕ್ಕೆ ಸಟ್ಲೆಜ್ ನದಿ, ಪೂರ್ವಕ್ಕೆ ಅರಾವಳಿ ಶ್ರೇಣಿ ದಕ್ಷಿಣಕ್ಕೆ ಗುಜರಾತಿನ ಕಚ್ ಜೌಗುಪ್ರದೇಶ ಹಾಗು ಪಶ್ಚಿಮಕ್ಕೆ ಸಿಂಧೂ ನದಿಗಳಿಂದ ಈ ಮರುಭೂಮಿಯ ಸುತ್ತುವರಿಯಲ್ಪಟ್ಟಿದೆ. ಮರುಭೂಮಿಯ ಒಟ್ಟು ವಿಸ್ತೀರ್ಣ ಸುಮಾರು ೪,೪೬,೦೦೦ ಚ. ಕಿಮೀ. ಸುಮಾರು ೮೦೫ ಕಿಮೀ ಉದ್ದ ಮತ್ತು ಸುಮಾರು ೪೮೫ ಕಿಮೀ ಅಗಲವಿದೆ. ೧೦% ಮರಳು ದಿಣ್ಣೆಗಳಿಂದ ಕೂಡಿದ ಇದರ ೯೦% ಭಾಗ ಕಲ್ಲು ಮಣ್ಣಿನ ಶಾಶ್ವತ ದಿಣ್ಣೆಗಳು, ಬಂಡೆಗಳು ಮತ್ತು ಉಪ್ಪಿನ ಬೈಲುಗಳಿಂದ ಕೂಡಿದೆ. ಅಲ್ಲಲ್ಲಿ ಮುಳ್ಳಿನ ಕುರುಚಲು ಗಿಡಗಳು ಮತ್ತು ಹುಲ್ಲುಗಾವಲುಗಳಿದ್ದರೂ ಇದು ಭಾಗಶಃ ಒಣ ಭೂಮಿಯಾಗಿದೆ.

ಥಾರ್ ಮರುಭೂಮಿ - ಭಾರತದ ರಾಜಸ್ಥಾನ್ ರಾಜ್ಯದಲ್ಲಿ ಬಿಕಾನೇರ್, ಜೈಸಲ್ಮೇರ್, ಜೋಧ್‍ಪುರ, ಜಿಲ್ಲೆಗಳನ್ನೂ ಜಯಪುರ ಜಿಲ್ಲೆಯ ಕೆಲವು ಭಾಗಗಳನ್ನೂ ಪಾಕಿಸ್ತಾನದ ಬಹವಾಲ್‍ಪುರ ಮತ್ತು ಪೂರ್ವ ಸಿಂಧನ್ನೂ ಆವರಿಸಿರುವ ಮರುಭೂಮಿ. ಇದರ ಪಶ್ಚಿಮದಲ್ಲಿ ಸಿಂಧೂ ನದಿಯ ನೀರಾವರಿ ಬಯಲು, ದಕ್ಷಿಣದಲ್ಲಿ ಕಚ್ಛ್‍ನ ರಣ್, ಆಗ್ನೇಯದಲ್ಲಿ ಅರಾವಳಿ ಶ್ರೇಣಿ, ಉತ್ತರ ಮತ್ತು ಈಶಾನ್ಯದಲ್ಲಿ ಪಂಜಾಬಿನ ಬಯಲು ಇವೆ. 2,00,000 ಚಕಿಮೀ. (77,000 ಚಮೈ) ವಿಸ್ತಾರವಾಗಿರುವ ಈ ಮರುಭೂಮಿಗೆ ಭಾರತದ ಮಹಾ ಮರುಭೂಮಿ ಎಂದೂ ಹೆಸರಿದೆ. ಮರಳು ಗುಡ್ಡಗಳು ಎಂಬರ್ಥದ ಶಬ್ದದಿಂದ ಥಾರ್ ಎಂಬ ಹೆಸರು ಬಂದಿದೆ. ಇದರ ಮೇಲೆ ಬೀಸುವ ಮಾನ್ಸೂನ್ ಮಾರುತಗಳು ಸಾಕಷ್ಟು ಮಳೆ ತರುವುದಿಲ್ಲವಾದ್ದರಿಂದ ಮರುಭೂಮಿ ಸಂಭವಿಸಿದೆ. ಥಾರ್‍ನಲ್ಲಿ ಸು. 70,00,000 ವಾಸಿಸುತ್ತಾರೆ.

ಇಡೀ ಮರುಭೂಮಿ ಅಲೆಯಲೆಯಾಗಿದೆ. ಎತ್ತರದ ಮತ್ತು ತಗ್ಗಿನ ಮರಳು ದಿಬ್ಬಗಳ ನಡುವೆ ಮರಳು ಮೈದಾನಗಳಿವೆ. ಅಲ್ಲಿಲ್ಲ ತಗ್ಗಾದ ಬರಡು ಬೆಟ್ಟಗಳುಂಟು. ಮರಳು ದಿಬ್ಬಗಳು ಆಗಿಂದಾಗ್ಗೆ ಚಲಿಸುತ್ತ ವಿವಿಧ ಆಕಾರ ಹಾಗೂ ಗಾತ್ರ ತಳೆಯುತ್ತವೆ. ಹಳೆಯ ಗುಡ್ಡಗಳು ಹೆಚ್ಚು ಕಡಿಮೆ ಸ್ಥಿರವಾದಂಥವು. ಈ ಪ್ರದೇಶದಲ್ಲಿ ಅಲ್ಲಲ್ಲಿ ಉಪ್ಪುನೀರಿನ ಸರೋವರಗಳುಂಟು. 

ಪಶ್ಚಿಮದಲ್ಲಿರುವ ಸಿಂಧೂ ನದಿಯನ್ನೂ ಆಗ್ನೇಯದಲ್ಲಿರುವ ಲೂನಿ ನದಿಯನ್ನೂ ಬಿಟ್ಟರೆ ಮಿಕ್ಕಂತೆ ಇಲ್ಲಿಯ ಜಲೋತ್ಸಾರಣ ಒಳಮುಖವಾದ್ದು. ಮಳೆಗಾಲದಲ್ಲಿ ಇಲ್ಲಿಯ ಎತ್ತರದ ಸ್ಥಳಗಳಲ್ಲಿ ಶ್ರಾಯೀಣವಾಗಿ ಹೊಳೆಗಳು ಹುಟ್ಟಿ ಹರಿಯುತ್ತವೆ. ಆದರೆ ತುಸ ದೂರ ಸಾಗುವುದರಲ್ಲೇ ಮರಳಿನಲ್ಲಿ ಇಂಗಿ ಹೋಗುತ್ತದೆ. ಇಲ್ಲಿಯ ಮಣ್ಣುಗಳಲ್ಲಿ ಏಳು ಬಗೆ: ಮರುಭೂಮಿಯ ಮಣ್ಣು, ಮರಳು ಮಿಶ್ರಿತ ಮಣ್ಣು, ಕಪ್ಪುಕಂದು ಬೂದು ಮಣ್ಣು, ಅಡಿಬೆಟ್ಟಗಳ ಕೆಂಪು ಹಳದಿ ಮಣ್ಣು, ಅವನತ ಪ್ರದೇಶಗಳ ಉಪ್ಪು ಮಣ್ಣು, ಗಾಳಿಮಳೆಗಳಿಗೆ ಪಕ್ಕಾದ ತೆಳು ಮಣ್ಣು ಮತ್ತು ಬೆಟ್ಟಗಳ ಮೇಲಣ ಮೆದು ಮಣ್ಣು, ಇದೆಲ್ಲ ಸುಣ್ಣ ಮಿಶ್ರಿತ ನೆಲ; ಸಾಮಾನ್ಯವಾಗಿ ಫಲವತ್ತಾದ್ದಲ್ಲ. ಇದು ಗಾಳಿಯಿಂದ ಸವೆತಕ್ಕೆ ಒಳಗಾಗಿ ಮರಳಿನಿಂದ ಕೂಡಿದೆ.

ಮರುಭೂಮಿ ಪ್ರದೇಶದಲ್ಲಿ ವಾರ್ಷಿಕ ಮಳೆ, ಸಾಮಾನ್ಯವಾಗಿ ಬಹು ಅಲ್ಪ. ಪಶ್ಚಿಮದಲ್ಲಿ 4 ಇಂದ ಪೂರ್ವದಲ್ಲಿ 20 ವರೆಗೆ ಸ್ಥಳಾನುಗುಣವಾಗಿ ವ್ಯತ್ಯಾಸವಾಗುತ್ತದೆ. ಮಳೆ ಬಹಳ ಮಟ್ಟಿಗೆ ಅನಿಶ್ಚಿತ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ-ಮುಂಗಾರಿನಲ್ಲಿ-ಸೇ. 90 ರಷ್ಟು ಮಳೆ. ಉಳಿದ ಕಾಲದಲ್ಲಿ ಈಶಾನ್ಯದ ಕಡೆಯಿಂದ ಗಾಳಿ ಬೀಸುತ್ತದೆ. ಮೇ, ಜೂನ್, ತಿಂಗಳುಗಳಲ್ಲಿ ಉಷ್ಣತೆ ಅತ್ಯಧಿಕ; 500 ಅ. (122 ಈ.). ಜನವರಿ ಅತ್ಯಂತ ತಣ್ಣನೆಯ ತಿಂಗಳು. ಆಗ ಮಾಧ್ಯ ಕನಿಷ್ಠ ಉಷ್ಣತೆ 50 - 100 ಅ. (410 - 500ಈ) ಮೇ - ಜೂನ್ ತಿಂಗಳುಗಳಲ್ಲಿ 140 - 150 ಕಿಮೀ (87 - 93 ಮೈ) ವೇಗದಲ್ಲಿ ದೂಳಿನಿಂದ ತುಂಬಿದ ಗಾಳಿ ಬೀಸುತ್ತದೆ.ವಾರ್ಷಿಕ ಮಳೆ ಪ್ರಮಾಣ 150 ಮಿಲಿ ಮಳೆ ಅಗುತ್ತದೆ.ಇಲ್ಲಿ ಮೊದಲಿಗೆ ಸರಸ್ವತಿ ನದಿ ಹರಿಯುತ್ತಿತ್ತು ಎಂದು ಅಂದಾಜಿಸಲಾಗಿದೆ.

ಮರಭೂಮಿಯಲ್ಲಿ ಬೆಳೆಯುವ ಸಸ್ಯ ಬಹುತೇಕ ಮೂಲಿಕೆ ಜಾತಿಯದು; ಅಥವಾ ಮೋಟು ಕಂಟಿ. ಅಲ್ಲಲ್ಲಿ ಮರಗಳಿವೆ. ಬೆಟ್ಟಗಳ ಮೇಲೆ ಗೊಬ್ಬಳಿ, ಕಳ್ಳಿ ಬೆಳೆಯುತ್ತವೆ. ಎಲ್ಲೆಲ್ಲೂ ವುನ್ನೆ ಮರಗಳಿವೆ. ಎಲಚಿ ಮುಂತಾದ ಇತರ ಮರಗಳೂ ಪೊದೆಗಳೂ ಉಂಟು. ಗಟ್ಟಿಯಾದ ಮರಳುದಿಣ್ಣೆಯಲ್ಲಿ ಹುಲ್ಲು, ಪೊದೆ, ಮರ ಬೆಳೆಯುತ್ತವೆ. ಕಾಡು ಸೋರೆ ತುಂಬ ವ್ಯಾಪಕವಾಗಿದೆ. ಹುಲ್ಲು ಬೆಳೆಯುವಲ್ಲಿ ಹುಲ್ಲೆಕರ ಮತ್ತು ಚಿಂಕಾರಗಳೂ ಫ್ರಾಂಕೊಲಿನ್, ಲಾವುಗೆ ಮುಂತಾದ ಪಕ್ಷಿಗಳೂ ಇವೆ. ವಲಸೆಗಾರ ಹಕ್ಕಿಗಳು ಮರಳುವಕ್ಕಿ, ಬಾತು ಕೋಳಿ ಮುಂತಾದವು. ನಷ್ಟಜೀವಿಯಾಗುತ್ತಿರುವ ಗುನಾ ಹದ್ದಿಗೂ ಇದು ವಾಸಸ್ಥಳ. ಇಲ್ಲಿ ಐದು ಬಗೆಯ ದನಗಳನ್ನೂ ಕುರಿ ಒಂಟೆಗಳನ್ನೂ ಸಾಕುತ್ತಾರೆ.ಇಲ್ಲಿ ವಾರ್ಷಿಕ ಮಳೆ ಪ್ರಮಾಣ 150ಮಿ ಲೀ ಗಿಂತ ಕಡಿಮೆ ಮಳೆ ಆಗುತ್ತದೆ.ಪ್ರತಿ ವರ್ಷ ಮರುಭೂಮಿ 1/2ಕಿಮೀ ಹೆಚ್ಚಿಗೆ ಆಗುತ್ತದೆ.

ಇಲ್ಲಿಯ ಜನ ಬಹುತೇಕ ಗ್ರಾಮಸ್ಥರು. ಜನಸಾಂದ್ರತೆ ಚ.ಮೈ.ಗೆ 4ರಿಂದ 104ರವರೆಗೆ ವ್ಯತ್ಯಾಸವಾಗುತ್ತದೆ. ಹಿಂದೂಗಳೂ ಮುಸ್ಲಿಮರೂ ಇದ್ದಾರೆ. ಅಲೆಮಾರಿಗಳು ಸಾಮಾನ್ಯವಾಗಿ ದನಗಾಹಿಗಳು.

ಇಲ್ಲಿ ಬೆಳೆಯುವ ಹುಲ್ಲು ದನಗಳಿಗೆ ಮೇವು. ಇದನ್ನು ಔಷಧಿಗಳ ತಯಾರಿಕೆಗೂ ಉಪಯೋಗಿಸಲಾಗುತ್ತಿದೆ. ನೀರು ಬಲು ವಿರಳ. ಕೆರೆ ಕೊಳಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯಲು ಉಪಯೋಗಿಸುತ್ತಾರೆ. ನೆಲದಡಿಯ ನೀರು ಕ್ಷಾರಯುಕ್ತವಾದ್ದರಿಂದ ಅಷ್ಟು ಉಪಯುಕ್ತವಲ್ಲ. ಮರುಭೂಮಿಯ ಮಧ್ಯದಲ್ಲಿ ಬಂಡೆಗಳಲ್ಲಿ ಜಲಮೂಲಗಳು ಈಚೆಗೆ ಸಿಕ್ಕಿವೆ.

ಇಲ್ಲಿ ಹಲವು ಖನಿಜ ನಿಕ್ಷೇಪಗಳಿವೆ. ಬಿಕಾನೀರ್ ಬಳಿ ಪಲನಾದಲ್ಲಿ ಲಿಗ್ನೈಟ್ ತೆಗೆಯುತ್ತಾರೆ. ಜೈಸಲ್ಮೇರ್‍ಗೆ ವಾಯುವ್ಯದಲ್ಲಿ, ಕಮ್ಲಿ ತಾಲ್‍ನಲ್ಲಿ ನೈಸರ್ಗಿಕ ಅನಿಲವಿದೆ. ನಾಗೌರ್, ಜೈಸಲ್ಮೇರ್, ಬಿಕಾನೇರ್, ಬಾರ್ಮೇರ್ ಜಿಲ್ಲೆಗಳಲ್ಲಿ ಜಿಪ್ಸಮ್ ತೆಗೆಯಲಾಗುತ್ತದೆ. ಸುಣ್ಣಕಲ್ಲು, ಬೆಂಟೊನೈಟ್ (ಜ್ವಾಲಾಮುಖಿಯ ಬೂದಿಯ ವಿಘಟನೆಯಿಂದ ಪರಿಣಮಿಸಿದ ಒಂದು ಜೇಡುಮಣ್ಣು), ಗಾಜು ಮರಳು, ಸಿಂಗಾಣಿ ಮಣ್ಣು, ಉಪ್ಪು ನೀರಿನ ಸರೋವರಗಳಿಂದ ದೊರಕುವ ಉಪ್ಪು -ಇವು ಇತರ ಖನಿಜಗಳು.

ನೀರು ದೊರಕುವೆಡೆಯಲ್ಲಿ ಗೋದಿ, ಹತ್ತಿ, ಕಬ್ಬು, ಎಳ್ಳು, ಹರಳು, ಮೆಣಸಿನಕಾಯಿ ಮುಂತಾದವನ್ನು ಬೆಳೆಯುತ್ತಾರೆ. ಬಾವಿ, ಕೆರೆ, ನಾಲೆ ನೀರಾವರಿ ಅಲ್ಲಲ್ಲಿ ಉಂಟು. ಸಿಂಧೂ ನದಿಗೆ ಅಡ್ಡಲಾಗಿ ನಿರ್ಮಿಸಿದ ಸುಕ್ಕೂರ್ ಜಲಾಶಯದಿಂದ ಪಾಕಿಸ್ತಾನದ ದಕ್ಷಿಣ ಪ್ರದೇಶದಲ್ಲಿ ನೀರಾವರಿ ಏರ್ಪಟ್ಟಿದೆ. ಸಟ್ಲೆಜ್ ನದಿಯಿಂದ ನಿರ್ಮಿಸಲಾಗಿರುವ ಗಂಗಾ ಕಾಲುವೆಯಿಂದ ದಕ್ಷಿಣ ಭಾಗಕ್ಕೆ ನೀರಾವರಿ ಸೌಲಭ್ಯ ಉಂಟಾಗಿದೆ. ರಾಜಸ್ಥಾನ ಕಾಲುವೆ ನಿರ್ಮಾಣ ಮುಗಿದಾದ ಮುಖ್ಯವಾಗಿ ಬಿಕಾನೇರ್ ಮತ್ತು ಜೈಸಲ್ಮೇರ್ ಜಿಲ್ಲೆಗಳಲ್ಲೂ ನೆರೆಯ ಪ್ರದೇಶದಲ್ಲೂ ಸು. 24,70,000 ಎಕರೆ ನೀರಾವರಿಗೆ ಒಳಪಡುತ್ತದೆ. ಈ ಯೋಜನೆ ಪೂರೈಸಿದಾಗ 22,000 ಕಿಲೋವಾಟ್ ಜಲವಿದ್ಯುತ್ತು ಒದಗುವ ನಿರೀಕ್ಷೆಯಿದೆ. ಇವೆಲ್ಲ ಪೂರೈಸಿದಾಗ ಮರುಭೂಮಿಯ ಬಹುಭಾಗ ಸಂಪದ್ಯುಕ್ತವಾಗಿ ಪರಿಣಮಿಸುತ್ತದೆ.

ಈ ಪ್ರದೇಶದಲ್ಲಿ ರಸ್ತೆ ಹಾಗೂ ರೈಲ್ವೆ ವ್ಯವಸ್ಥೆ ಅಷ್ಟೇನೂ ಬೆಳೆದಿಲ್ಲ. ದಕ್ಷಿಣ ಭಾಗದಲ್ಲಿ ಭಾರತದ ಲೂನಿ ಜಂಕ್ಷನ್‍ನಿಂದ ಪಾಕ್ ಹೈದರಾಬಾದಿಗೂ ಮೆರ್ಟಾರೋಡ್‍ನಿಂದ ಸೂರತ್‍ಗಢಕ್ಕೂ ಜೋಧಪುರದಿಂದ ಜೈಸಲ್ಮೇರ್‍ಗೂ ಪಾಕಿಸ್ತಾನದ ಬಹುವಾಲ್‍ಪುರದಿಂದ ಹೈದರಾಬಾದಿಗೂ ರೈಲು ಮಾರ್ಗಗಳಿವೆ. ಕೆಲವು ರಸ್ತೆಗಳೂ ಉಂಟು.

ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ
ಇದು ೯ ನೇ ಅತೀ ದೊಡ್ಡ ಮರುಭೂಮಿ .




#Article 240: ಚಾಣಕ್ಯ (306 words)


ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು. ಕ್ರಿ.ಪೂ. ೩೫೦ - ೨೮೩), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು..ವಿಷ್ಣುಗುಪ್ತ ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.

ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ.
ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಈತನ ಪ್ರತಿಭೆಯನ್ನು ತೋರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ.
ದುರದೃಷ್ಟವೆಂದರೆ ಈತನ ವಿಷಯ ಖಚಿತವಾಗಿ ತಿಳಿದಿರುವುದು ಬಹು ಸ್ವಲ್ಪ. ಬೇರೆ ಬೇರೆ ಪುಸ್ತಕಗಳಲ್ಲಿ ದೊರೆಯುವ ಅಷ್ಟಿಷ್ಟು ಸಾಮಗ್ರಿಗಳನ್ನೆಲ್ಲ ಸೇರಿಸಿ ನಾವು, “ಪ್ರಾಯಶ: ಇದು ಇವನ ಜೀವನ ಚರಿತ್ರೆ” ಎಂದು ಹೇಳಬಹುದು.

ಚಾಣಕ್ಯನ ವಿದ್ಯಾಭ್ಯಾಸ ತಕ್ಷಶಿಲೆ ಎಂಬ ಊರಿನ ಪ್ರಸಿದ್ಧ ಶಾಲೆಯಲ್ಲಿ ಆಯಿತು. ತಕ್ಷಶಿಲೆಯ ಅಧ್ಯಾಪಕರು ಜಗತ್ಪ್ರಸಿದ್ಧ ವಿದ್ವಾಂಸರು. ಭಾರತದ ಎಲ್ಲಾ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ರಾಜರು ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು. ಇಲ್ಲಿ ಒಬ್ಬ ಉಪಾಧ್ಯಾಯನ ಬಳಿ ಒಂದು ನೂರು ಒಂದು ಮಂದಿ ವಿದ್ಯಾರ್ಥಿಗಳು ಇದ್ದರಂತೆ. ಅಷ್ಟು ಮಂದಿಯೂ ರಾಜಕುಮಾರರಂತೆ!  ಸಾಮಾನ್ಯವಾಗಿ ಹದಿನಾರನೆಯ ವರ್ಷಕ್ಕೆ ವಿದ್ಯಾರ್ಥಿ ಈ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದ.  ವೇದಗಳನ್ನೂ ಧನುರ್ವಿದ್ಯೆ, ಬೇಟೆ, ಆನೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುವುದನ್ನೂ ಹದಿನೆಂಟು ಕಲೆಗಳನ್ನೂ ಕಲಿಸುತ್ತಿದ್ದರು. ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಮರಶಾಸ್ತ್ರ, ಇವುಗಳಿಗಾಗಿ ಇಲ್ಲಿದ್ದ ವಿದ್ಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲ, ಆಚೆಯೂ ಸಹ ಪ್ರಖ್ಯಾತವಾಗಿದ್ದವು. ಇಂತಹ ಕೇಂದ್ರದಲ್ಲಿ ವಿದ್ಯಾಭ್ಯಾಸವಾಯಿತು.

ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಸಾರ(ಚಾಣಕ್ಯ ನೀತಿ ಶಾಸ್ತ್ರ)ಚಾಣಕ್ಯನ ಎರಡು ಮುಖ್ಯ ಪುಸ್ತಕಗಳಾಗಿವೆ.

೧) ಬೇರೆಯವರ ತಪ್ಪುಗಳಿಂದ ಕಲಿಯಿರಿ ಎಲ್ಲಾ ತಪ್ಪುಗಳನ್ನು ಮಾಡುವಷ್ಟು ಆಯಸ್ಸು ನಿಮಗಿಲ್ಲಾ

೨) ನೀವು ಹುಟ್ಟುವಾಗ ಏನು ಇರಲಿಲ್ಲ ಆದರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ ನಿಮ್ಮ ಹೆಸರು ಬರಿ ಅಕ್ಷರಗಳಿಂದ ಕೂಡಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.

೩)ಸತ್ಯವಿದ್ದರು ನಂಬಲಾರದ್ದನ್ನು ಹೇಳಬಾರದು

೪) ಶತ್ರುವನ್ನು ಅವನ ಮರ್ಮದಲ್ಲಿ ಹೊಡೆಯಬೇಕು

೫) ಬುದ್ಧಿವಂತನಿಗೆ ಜೀವನದ ಭಯವಿಲ್ಲ

೬)ಅತಿ ಪ್ರಾಮಾಣಿಕರಾಗಬೇಡಿ ಏಕೆಂದರೆ ನೇರವಾಗಿರುವ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರದ ಸರದಿ

೭) ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ ಅವೇ ನಿಮಗೆ ಮುಳುವಾಗುತ್ತವೆ.

೮) ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ ಸ್ವಾರ್ಥ ರಹಿತ ಸ್ನೇಹವೇ ಇಲ್ಲಾ ಇದೊಂದು ಕಹಿಸತ್ಯ

೯) ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ

೧೦) ದೇವರು ವಿಗ್ರಹದೊಳಗಿಲ್ಲಾ ನಿಮ್ಮ ಭಾವನೆಗಳೇ ದೇವರು ನಿಮ್ಮ ಆತ್ಮವೇ ದೇವಸ್ಥಾನ

೧೧) ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಒಂದು ಯುವ ಶಕ್ತಿ ಮತ್ತೊಂದು ಯುವತಿಯ ಸೌಂದರ್ಯ.




#Article 241: ವಿಶ್ವ ಪರಿಸರ ದಿನ (240 words)


ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಜೂನ್ 5 ರಂದು ಆಚರಿಸಲಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುವ ವಿಶ್ವಸಂಸ್ಥೆಯ ಪ್ರಮುಖ ವಾಹನವಾಗಿದೆ. 1974 ರಲ್ಲಿ ಮೊದಲ ಬಾರಿಗೆ ನಡೆದ ಇದು ಸಮುದ್ರ ಮಾಲಿನ್ಯ, ಮಾನವ ಜನಸಂಖ್ಯೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಹೊರಹೊಮ್ಮುವ ಪರಿಸರ ಸಮಸ್ಯೆಗಳ ಬಗ್ಗೆ ಸುಸ್ಥಿರ ಬಳಕೆ ಮತ್ತು ವನ್ಯಜೀವಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಅಭಿಯಾನವಾಗಿದೆ. ವಿಶ್ವ ಪರಿಸರ ದಿನವು ಸಾರ್ವಜನಿಕವಾಗಿ ತಲುಪಲು ಜಾಗತಿಕ ವೇದಿಕೆಯಾಗಿ ಬೆಳೆದಿದೆ, ವಾರ್ಷಿಕವಾಗಿ 143ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆ. ಪ್ರತಿ ವರ್ಷ, ವಿಶ್ವ ಪರಿಸರ ದಿನವು ಹೊಸ ವಿಷಯಗಳು ಒದಗಿಸಿದ್ದು, ಪ್ರಮುಖ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯಗಳು, ಸರ್ಕಾರಗಳು ಮತ್ತು ವಿಶ್ವಾದ್ಯಂತದ ಎಲ್ಲ ಪ್ರಸಿದ್ಧ ವ್ಯಕ್ತಿಗಳು ಪರಿಸರ ಕಾರಣಗಳನ್ನು ಪ್ರತಿಪಾದಿಸಲು ಅಳವಡಿಸಿಕೊಂಡಿದ್ದಾರೆ.

ಇತಿಹಾಸ

ಮಾನವ ಪರಿಸರ ಕುರಿತ ಸ್ಟಾಕ್‌ಹೋಮ್ ಸಮ್ಮೇಳನದ ಮೊದಲ ದಿನದಂದು ವಿಶ್ವಸಂಸ್ಥೆಯು 1972 ರಲ್ಲಿ ವಿಶ್ವ ಪರಿಸರ ದಿನವನ್ನು ಸ್ಥಾಪಿಸಿತು, ಇದರ ಪರಿಣಾಮವಾಗಿ ಮಾನವ ಸಂವಹನ ಮತ್ತು ಪರಿಸರದ ಏಕೀಕರಣ ಕುರಿತು ಚರ್ಚೆಗಳು ನಡೆದವು. ಎರಡು ವರ್ಷಗಳ ನಂತರ, 1974 ರಲ್ಲಿ ಮೊದಲ ವಿಶ್ವ ಪರಿಸರ ದಿನವನ್ನು ಕೇವಲ ಒಂದು ಭೂಮಿ ಎಂಬ ವಿಷಯದೊಂದಿಗೆ ನಡೆಸಲಾಯಿತು. 1974 ರಿಂದ ವಾರ್ಷಿಕವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ನಡೆಸಲಾಗಿದ್ದರೂ, 1987 ರಲ್ಲಿ ವಿವಿಧ ಆತಿಥೇಯ ರಾಷ್ಟ್ರಗಳನ್ನು ಆಯ್ಕೆ ಮಾಡುವ ಮೂಲಕ ಈ ಚಟುವಟಿಕೆಗಳ ಕೇಂದ್ರವನ್ನು ತಿರುಗಿಸುವ ಆಲೋಚನೆ ಪ್ರಾರಂಭವಾಯಿತು.

ಕೊಲಂಬಿಯಾ ವಿಶ್ವದ ಅತಿದೊಡ್ಡ ಮೆಗಾಡೈವರ್ಸ್ ದೇಶಗಳಲ್ಲಿ ಒಂದಾಗಿದೆ ಮತ್ತು ಗ್ರಹದ ಜೀವವೈವಿಧ್ಯತೆಯ 10% ನಷ್ಟು ಭಾಗವನ್ನು ಹೊಂದಿದೆ. ಇದು ವೀರಾಂಗನೆ ವರ್ಷಾರಣ್ಯ ಭಾಗವಾಗಿರುವುದರಿಂದ, ಕೊಲಂಬಿಯಾ ಪಕ್ಷಿ ಮತ್ತು ಸೀತಾಳಗೆಡ್ಡೆ ಜಾತಿಗಳ ವೈವಿಧ್ಯತೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಮತ್ತು ಸಸ್ಯಗಳು, ಚಿಟ್ಟೆಗಳು, ಶುದ್ಧ ನೀರಿನ ಮೀನುಗಳು ಮತ್ತು ಉಭಯಚರಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ಪುನರ್ಮಿಲನ ದ್ವೀಪ, ಮಿಸ್ ಅರ್ಥ್ 2018 ವಿಯೆಟ್ನಾಂನ ನ್ಗುಯೆನ್ ಫಾಂಗ್ ಖಾನ್ಹ್ ವಿಶ್ವ ಪರಿಸರ ದಿನಾಚರಣೆಯಲ್ಲಿ ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೇಗೆ ಹೋರಾಡಬೇಕು ಎಂಬ ವಿಷಯದೊಂದಿಗೆ ಭಾಷಣ ಮಾಡಿದರು.

 ಜನರು ಏಕ-ಬಳಕೆ ಅಥವಾ ಬಿಸಾಡಬಹುದಾದ ವಸ್ತುಗಳ ಮೇಲೆ ಹೆಚ್ಚು ಅವಲಂಬನೆಯಿಂದ ಮುಕ್ತರಾಗಿರಬೇಕು, ಏಕೆಂದರೆ ಅವು ತೀವ್ರವಾದ ಪರಿಸರ ಪರಿಣಾಮಗಳನ್ನು ಹೊಂದಿರುತ್ತವೆ. ನಾವು ನಮ್ಮ ನೈಸರ್ಗಿಕ ಸ್ಥಳಗಳನ್ನು, ನಮ್ಮ ವನ್ಯಜೀವಿಗಳನ್ನು ಮತ್ತು ನಮ್ಮ ಆರೋಗ್ಯವನ್ನು ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸಬೇಕು. ಭಾರತದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು 2022 ರ ವೇಳೆಗೆ ನಿರ್ಮೂಲನೆ ಮಾಡುವುದಾಗಿ ಭಾರತ ಸರ್ಕಾರ ವಾಗ್ದಾನ ಮಾಡಿತು.




#Article 242: ಇಸ್ಲಾಮಾಬಾದ್ (209 words)


ಇಸ್ಲಾಮಾಬಾದ್ ಪಾಕಿಸ್ತಾನ ದೇಶದ ರಾಜಧಾನಿಯಾಗಿದೆ . ಎರಡು ಮಿಲಿಯನ್ ಜನಸಂಖ್ಯೆಯೊಂದಿಗೆ, ಇದು ಪಾಕಿಸ್ತಾನದ 10 ನೆಯ ಅತಿ ದೊಡ್ಡ ನಗರವಾಗಿದ್ದು, ದೊಡ್ಡದಾದ ಇಸ್ಲಾಮಾಬಾದ್-ರಾವಲ್ಪಿಂಡಿ ಮೆಟ್ರೋಪಾಲಿಟನ್ ಪ್ರದೇಶವು ಪಾಕಿಸ್ತಾನದಲ್ಲಿ ಐದು ಮಿಲಿಯನ್ಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ನಗರವಾಗಿದೆ.  ನಗರವು ಪಾಕಿಸ್ತಾನದ ರಾಜಕೀಯ ಸ್ಥಾನವಾಗಿದ್ದು, ಕ್ಯಾಪಿಟಲ್ ಡೆವಲಪ್ಮೆಂಟ್ ಅಥಾರಿಟಿ (ಸಿಡಿಎ) ಯಿಂದ ಬೆಂಬಲಿತವಾಗಿರುವ ಇಸ್ಲಾಮಾಬಾದ್ ಮೆಟ್ರೋಪಾಲಿಟನ್ ಕಾರ್ಪೊರೇಷನ್ ಆಡಳಿತದಲ್ಲಿದೆ.

ಇಸ್ಲಾಮಾಬಾದ್ ದೇಶದ ಈಶಾನ್ಯ ಭಾಗದಲ್ಲಿರುವ ಪೊಥೋಹರ್ ಪ್ರಸ್ಥಭೂಮಿಯಲ್ಲಿ ರಾವಲ್ಪಿಂಡಿ ಜಿಲ್ಲೆ ಮತ್ತು ಉತ್ತರಕ್ಕೆ ಮಾರ್ಗಲ ಹಿಲ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಈ ಪ್ರದೇಶವು ಐತಿಹಾಸಿಕವಾಗಿ ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾಗಳ ಕರಾವಳಿಯ ಭಾಗವಾಗಿದ್ದು, ಮಾರ್ಗಾಲಾ ಪಾಸ್ ಎರಡು ಪ್ರದೇಶಗಳ ನಡುವಿನ ದ್ವಾರವಾಗಿದೆ.

ಪಾಕಿಸ್ತಾನದ ರಾಜಧಾನಿಯಾಗಿ ಕರಾಚಿಯನ್ನು ಬದಲಿಸಲು 1960 ರ ದಶಕದಲ್ಲಿ ಇಸ್ಲಾಮಾಬಾದ್ ನಿರ್ಮಿಸಲಾಯಿತು. ವಿಶ್ವದ ಎರಡನೇ ಅತ್ಯಂತ ಸುಂದರ ರಾಜಧಾನಿಯಾಗಿದೆ. ನಗರದ ಮಾಸ್ಟರ್-ಪ್ಲಾನ್ ನಗರವನ್ನು ಆಡಳಿತಾತ್ಮಕ, ರಾಯಭಾರಿ ಪರಾವೃತ ಪ್ರದೇಶ, ವಸತಿ ಪ್ರದೇಶಗಳು, ಶೈಕ್ಷಣಿಕ ವಲಯಗಳು, ಕೈಗಾರಿಕಾ ವಲಯಗಳು, ವಾಣಿಜ್ಯ ಪ್ರದೇಶಗಳು ಮತ್ತು ಗ್ರಾಮೀಣ ಮತ್ತು ಹಸಿರು ಪ್ರದೇಶಗಳನ್ನು ಒಳಗೊಂಡಂತೆ ಎಂಟು ವಲಯಗಳಾಗಿ ವಿಂಗಡಿಸುತ್ತದೆ. ನಗರವು ಅನೇಕ ಉದ್ಯಾನವನಗಳು ಮತ್ತು ಕಾಡುಗಳ ಉಪಸ್ಥಿತಿಗೆ ಹೆಸರುವಾಸಿಯಾಗಿದೆ, ಇದರಲ್ಲಿ ಮಾರ್ಗಲ್ಲಾ ಹಿಲ್ಸ್ ನ್ಯಾಶನಲ್ ಪಾರ್ಕ್ ಮತ್ತು ಶಕಾರ್ಪೇರಿಯನ್ ಪಾರ್ಕ್ ಸೇರಿವೆ.  ಈ ನಗರವು ಹಲವಾರು ಹೆಗ್ಗುರುತುಗಳ ನೆಲೆಯಾಗಿದೆ, ಇದರಲ್ಲಿ ಫೈಸಲ್ ಮಸೀದಿ, ದಕ್ಷಿಣ ಏಷ್ಯಾದಲ್ಲಿನ ದೊಡ್ಡ ಮಸೀದಿ  ಪ್ರಪಂಚದಲ್ಲಿ ನಾಲ್ಕನೇ ಅತಿ ದೊಡ್ಡದು. ಇತರ ಹೆಗ್ಗುರುತುಗಳು ಪಾಕಿಸ್ತಾನದ ರಾಷ್ಟ್ರೀಯ ಸ್ಮಾರಕ ಮತ್ತು ಪ್ರಜಾಪ್ರಭುತ್ವ ಚೌಕ.

ಇಸ್ಲಾಮಾಬಾದ್ ಎಂಬುದು ಬೀಟಾ-ವಿಶ್ವ ನಗರ; ಇದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತಿ ಹೆಚ್ಚು ಎಂದು ವರ್ಗೀಕರಿಸಲಾಗಿದೆ, ಇದು ದೇಶದಲ್ಲಿ ಅತಿ ಹೆಚ್ಚು. ನಗರವು ಪಾಕಿಸ್ತಾನದಲ್ಲಿ ವಾಸಿಸುವ ಅತಿ ಹೆಚ್ಚು ವೆಚ್ಚವನ್ನು ಹೊಂದಿದೆ, ಮತ್ತು ಅದರ ಜನಸಂಖ್ಯೆಯು ಮಧ್ಯಮ ಮತ್ತು ಮಧ್ಯಮ ವರ್ಗದ ನಾಗರಿಕರಿಂದ ಪ್ರಬಲವಾಗಿದೆ. ನಗರವು ಹದಿನಾರು ವಿಶ್ವವಿದ್ಯಾನಿಲಯಗಳ ನೆಲೆಯಾಗಿದೆ, ಕ್ವಾಯ್ಡ್ -ಇ-ಅಝಮ್ ವಿಶ್ವವಿದ್ಯಾಲಯ, COMSATS ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಮತ್ತು ನಸ್ಟ್. [16] ಈ ನಗರವು ಪಾಕಿಸ್ತಾನದಲ್ಲಿ ಸುರಕ್ಷಿತವಾಗಿದೆ ಮತ್ತು 1,900 ಸಿ.ಸಿ.ಟಿ.ವಿ ಛಾಯಾಗ್ರಾಹಿಗಳೊಂದಿಗೆ ವಿಸ್ತಾರವಾದ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದೆ.

.




#Article 243: ವಾಷಿಂಗ್ಟನ್, ಡಿ.ಸಿ. (417 words)


ವಾಷಿಂಗ್ಟನ್, ಡಿ.ಸಿ. (ಅಧಿಕೃತವಾಗಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ) ಜುಲೈ ೧೬, ೧೭೯೦ರಲ್ಲಿ ಸ್ಥಾಪನೆಗೊಂದ ಅಮೇರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ. ಮೆರಿಕದ ಈಶಾನ್ಯ ಭಾಗದಲ್ಲಿ ಅಟ್ಲಾಂಟಿಕ್ ಸಾಗರದ ಸಮೀಪ  ಪೊಟೊಮ್ಯಾಕ್ ನದಿಯ ಪೂರ್ವದಂಡೆಯಲ್ಲಿರುವ ಈ ಪಟ್ಟಣವನ್ನು ಮೇರಿಲ್ಯಾಂಡ್ ಮತ್ತು ವರ್ಜೀನಿಯ ರಾಜ್ಯಗಳು ಸುತ್ತುವರೆದಿವೆ.

ಇದರ ವಿಸ್ತೀರ್ಣ 24,807 ಚ.ಕಿಮೀಗಳು. ಜನಸಂಖ್ಯೆ 67,27,050. 

ಈ ನಗರ ಸಮುದ್ರಮಟ್ಟದಿಂದ 7.6 ಮೀ ಎತ್ತರದಲ್ಲಿದೆ. ಬೇಸಗೆಯಲ್ಲಿ ಗರಿಷ್ಠ ಉಷ್ಣಾಂಶ 260 ಸೆ. ಇದ್ದರೆ ಚಳಿಗಾಲದಲ್ಲಿ 30 ಸೆ. ಗೆ ಇಳಿಯುತ್ತದೆ. ಇಲ್ಲಿಯ ಸರಾಸರಿ ವಾರ್ಷಿಕ ಮಳೆ 127 ಸೆಂಮೀ. 

ಈ ನಗರ ಕೇಂದ್ರ ಸರ್ಕಾರ ಅಂದರೆ ಫೆಡರಲ್ ಸರ್ಕಾರದ ಅಧೀನದಲ್ಲಿದ್ದು ಅದರ ನಿರ್ವಹಣೆಗೆ ಮಹಾನಗರ ಸಭೆ ಇದೆ. ಮೇಯರ್ ಇದರ ಅಧ್ಯಕ್ಷರು.

ಈ ಶಹರದಲ್ಲಿ ವಾಸಿಸುವವರಲ್ಲಿ ಸೇ. 66 ರಷ್ಟು ಕರಿಯರಿದ್ದಾರೆ. ಇಲ್ಲಿ ಮಾನ್ಯತೆ ಪಡೆದ 16  ವಿಶ್ವವಿದ್ಯಾಲಯಗಳಿವೆ. ನದಿ ದಡದಲ್ಲಿರುವ ಈ ನಗರದ ಜನರಿಗೆ ದೋಣಿ ಸಂಚಾರ ಮುಖ್ಯ ಹವ್ಯಾಸಗಳಲ್ಲೊಂದಾ ಗಿದೆ. ಪ್ರಪಂಚದ ಅತ್ಯಂತ ಪ್ರಬಲ ರಾಷ್ಟ್ರದ ರಾಜಧಾನಿಯಾಗಿರುವ ಈ ನಗರ ಆಧುನಿಕ ಸೌಲಭ್ಯಗಳಿಂದ, ಉತ್ತಮ ಜೀವನಮಟ್ಟದಿಂದ, ಉನ್ನತ ಶಿಕ್ಷಣದಿಂದ ಕಂಗೊಳಿಸುತ್ತಿದೆ.

ರಾಜಧಾನಿಗಾಗಿಯೇ ಆಯ್ಕೆಯಾದ ಸ್ಥಳದಲ್ಲಿ ಹೊಸದಾಗಿ ಸ್ಥಾಪಿತವಾದ ಪ್ರಪಂಚದ ಕೆಲವೇ ರಾಜಧಾನಿಗಳಲ್ಲಿ ಇದೂ ಒಂದು. ಮೇರಿಲೆಂಡ್ ಮತ್ತು ವರ್ಜೀನಿಯ ರಾಜ್ಯಗಳ ಭಾಗಗಳಿಗೆ ಸೇರಿದ ಪ್ರದೇಶವನ್ನು ಈ ನಗರ ವ್ಯಾಪಿಸಿದೆ. ಈ ನಗರದ ರೂಪರೇಖೆಗಳು ಸಿದ್ಧವಾದ ಬಳಿಕ 1800 ರಲ್ಲಿ ಫಿಲಿಡೆಲ್ಫಿಯದಿಂದ ಇಲ್ಲಿಗೆ ರಾಜಧಾನಿಯನ್ನು ವರ್ಗಾಯಿಸಲಾಯಿತು. ಆಗ ಈ ರಾಜಧಾನಿಯ ಜನಸಂಖ್ಯೆ 8,000. ಅಂತರ್‍ಯುದ್ಧದ ಕಾಲದಲ್ಲಿ (1861-65) ಈ ನಗರ ತೀವ್ರ ಬೆಳೆವಣಿಗೆ ಕಂಡಿತು. ಆಗ 60,000ವಿದ್ದ ಜನಸಂಖ್ಯೆ 1,20,000 ಕ್ಕೆ ಏರಿತು. ವಿಮೋಚನೆ ಹೊಂದಿದ ಗುಲಾಮರು, ಭದ್ರತಾ ಕಾರ್ಯದಲ್ಲಿ ನಿರತರಾದ ಸೈನಿಕರು, ವರ್ತಕರು ಈ ನಗರದಲ್ಲಿ ನೆಲಸಿ ಅದಕ್ಕೆ ನಗರ ಸ್ವರೂಪ ತಂದುಕೊಟ್ಟರು. 1871ರಲ್ಲಿ ಈ ನಗರದ ಆಡಳಿತಕ್ಕೆ ಪ್ರತ್ಯೇಕ ಗವರ್ನರ್ ನೇಮಕವಾದುದಲ್ಲದೆ ಮೂವರು ಕಮಿಷನರುಗಳುಳ್ಳ ಸ್ಥಳೀಯ ಸರ್ಕಾರ ಸ್ಥಾಪಿತವಾಯಿತು. ಒಂದು ಚುನಾಯಿತ ನಗರಸಭೆಯೂ ಅಸ್ತಿತ್ವಕ್ಕೆ ಬಂದಿತು. 1930ರ ದಶಕದಲ್ಲಿ ನಗರದ ಜನಸಂಖ್ಯೆ ಏಳು ಲಕ್ಷಗಳಿಗೆ ಹೆಚ್ಚಿತು. ಕ್ರಮೇಣ ಈ ನಗರ ತೀವ್ರವಾಗಿ ಬೆಳೆವಣಿಗೆ ಕಂಡಿತು. ವಾಷಿಂಗ್‍ಟನ್ ಇಂದು ದೂರದ ಉಪನಗರಗಳಲ್ಲಿ ವಿಸ್ತರಿಸಿದೆ. 

ಸರ್ಕಾರಿ ಕಟ್ಟಡಗಳು, ಪ್ರಸಿದ್ಧ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲ ಯಗಳು, ಇತರ ಪ್ರವಾಸಿ ಆಕರ್ಷಣೀಯ ಕೇಂದ್ರಗಳು ನಗರದ ಪಶ್ಚಿಮ ಹಾಗೂ ಮಧ್ಯ ಭಾಗದಲ್ಲಿವೆ. ಈ ಪ್ರದೇಶ ಕ್ಯಾಪಿಟಾಲ್ ಹಿಲ್‍ನಿಂದ ಪೊತೊಮಿಕ್ ನದಿಯವರೆಗೂ ಇದೆ. ಈ ನಗರದ ವೈಟ್‍ಹೌಸ್ ಅಮೆರಿಕದ ಅಧ್ಯಕ್ಷರ ನಿವಾಸ ಮತ್ತು ಕಚೇರಿ. ಅಮೆರಿಕದ ಅಧ್ಯಕ್ಷರಿಗೆ ಇರುವ ಅಗಾಧ ಅಧಿಕಾರ ಮತ್ತು ಪ್ರಪಂಚದ ರಾಜಕೀಯದಲ್ಲಿ ಅಧ್ಯಕ್ಷರ ಪ್ರಭಾವಿ ಪಾತ್ರದಿಂದಾಗಿ ಇದು ಪ್ರಪಂಚದ ಮಹತ್ತ್ವದ ಅಧಿಕಾರ ಸ್ಥಾನಗಳಲ್ಲಿ ಮುಖ್ಯವಾದುದಾಗಿದೆ. ಅಂತಾರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಅಮೆರಿಕ ಕಾಂಗ್ರೆಸ್‍ನ ಸದಸ್ಯರು ಅಧಿವೇಶನ ನಡೆಸಿ ಉದ್ದೇಶಿತ ಶಾಸನಗಳಿಗೆ ಅನುಮೋದನೆ ನೀಡುವ ಭವನದ ಹೆಸರು ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಾಲ್. ಇದು ವಾಷಿಂಗ್‍ಟನ್‍ನ ಭವ್ಯ ಭವನಗಳಲ್ಲೊಂದೆನಿಸಿದೆ. ಕಾರ್ಯಾಂಗದ ಕಚೇರಿ ಕಟ್ಟಡ ವೈಟ್‍ಹೌಸ್‍ನ ಪೂರ್ವಕ್ಕಿದೆ. ಕಾಂಗ್ರೆಸ್ ಸದಸ್ಯರಿಗೆ ಕಚೇರಿಗಳನ್ನು ಒದಗಿಸಿರುವ ಕಟ್ಟಡ ಕಾಂಗ್ರೆಸ್‍ಹಾಲ್ ಆಫೀಸ್ ಬಿಲ್ಡಿಂಗ್ಸ್. ಸರ್ವೋಚ್ಚ ನ್ಯಾಯಾಲಯದ ಕಟ್ಟಡ ಇನ್ನೊಂದು ಗಮನಾರ್ಹ ಭವನ.

ಇಲ್ಲಿನ ಪ್ರಪಂಚದ ಅತ್ಯಂತ ಬೃಹತ್ ಗ್ರಂಥಾಲಯವೆಂದು ಭಾವಿಸ ಲಾಗಿರುವ ಲೈಬ್ರರಿ ಆಫ್ ಕಾಂಗ್ರೆಸ್ ಕಟ್ಟಡಸಮುಚ್ಚಯ ಇನ್ನೊಂದು ಆಕರ್ಷಕ ನಿರ್ಮಾಣ. ಇದಕ್ಕೆ ಹೊಂದಿಕೊಂಡಂತೆ ಪ್ರಪಂಚದ ಮುಖ್ಯ ಕೃತಿಗಳ ಸಂಗ್ರಹವಿರುವ ಗ್ರಂಥಾಲಯ ವಿಲಿಯಮ್ ಷೇಕ್ಸ್‍ಪಿಯರನ ಹೆಸರಿನಲ್ಲಿದೆ.

ವಾಷಿಂಗ್‍ಟನ್ ವಸ್ತುಸಂಗ್ರಹಾಲಯಗಳ ಕೇಂದ್ರವೆನಿಸಿದೆ. ಅಲ್ಲಿಯ ನ್ಯಾಷನಲ್ ಆರ್ಟ್ ಗ್ಯಾಲರಿ, ಸ್ಮಿತ್‍ಸೋನಿಯನ್ ಮ್ಯೂಸಿಯಮ್, ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಮ್, ಅಮೆರಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ರಾಷ್ಟ್ರೀಯ ಪತ್ರಾಗಾರ, ಪ್ರಾಕೃತಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಸ್ಮಿತ್‍ಸೋನಿಯನ್ ಆಟ್ರ್ಸ್ ಅಂಡ್ ಇಂಡಸ್ಟ್ರಿಯಲ್ ಬಿಲ್ಡಿಂಗ್, ಮಾಲ್‍ನಲ್ಲಿರುವ ಕಲಾ ಮ್ಯೂಸಿಯಮ್‍ಗಳು-ಇವೆಲ್ಲ ಈ ನಗರದ ಸಾಂಸ್ಕøತಿಕ ಮಹತ್ತವನ್ನು ಹೆಚ್ಚಿಸಿವೆ. ಅಮೆರಿಕದ ಅಧ್ಯಕ್ಷರುಗಳಾಗಿದ್ದ ಲಿಂಕನ್, ವಾಷಿಂಗ್‍ಟನ್, ಜಫರ್‍ಸನ್ ಮತ್ತು ರೂಸ್‍ವೆಲ್ಟರ ಸ್ಮಾರಕಗಳು ಪ್ರೇಕ್ಷಣೀಯವಾಗಿವೆ. ಲಿಂಕನ್ ಗುಂಡೇಟಿನಿಂದ ಸಾವಿಗೀಡಾದ ಫೋರ್ಡ್ ಥಿಯೇಟರ್‍ನಲ್ಲಿ ಆತನಿಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿದೆ. ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದಂತೆ ಜಾನ್ ಎಫ್.ಕೆನಡಿ ಕೇಂದ್ರವಿದೆ.

ವಾಷಿಂಗ್‍ಟನ್ ಇಂದು ಪ್ರಪಂಚಪ್ರಸಿದ್ಧ ನಗರ. ಇಲ್ಲಿ ಅಸಂಖ್ಯ ಪ್ರೇಕ್ಷಣೀಯ ಸ್ಥಳಗಳಿವೆ. ನ್ಯಾಷನಲ್ ಜû್ಯೂಆಲಾಜಿಕಲ್ ಪಾರ್ಕ್, ಪೆಂಟಗನ್ ಕಟ್ಟಡ, ಶರ್ಲಿಂಗ್‍ಟನ್ ನ್ಯಾಷನಲ್ ಸಿಮೆಟ್ರಿ, ಮೆರಿನ್ ಕಾಪ್ಸ್ ವಾರ್ ಮೆಮೊರಿಯಲ್, 200 ವರ್ಷಗಳ ಹಳೆಯ ಕಟ್ಟಡಗಳಿದ್ದು ಜಾರ್ಜ್ ಟೌನ್ ಮೊದಲಾದವು ಪ್ರವಾಸಿಗರನ್ನು ಸೆಳೆಯುತ್ತವೆ. 




#Article 244: ರಷ್ಯಾ (5409 words)


ರಷ್ಯಾ (), ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ ( - ರಷ್ಯಾದ ಒಕ್ಕೂಟ),  ಉತ್ತರ ಯುರೇಷಿಯಾ (ಯುರೋಪ್‌ ಹಾಗೂ ಏಷ್ಯಾ ಒಟ್ಟಿಗೆ)ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಪೋಲೆಂಡ್‌ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ಹಾಗೆಯೇ ಈ ದೇಶದ ಸಮುದ್ರ ತಡಿಯ ಗಡಿಗಳು ಜಪಾನ್‌ (ಓಖೋಟ್ಸ್ಕ್‌ ಸಮುದ್ರದಿಂದ ), ದಕ್ಷಿಣ ಕೊರಿಯಾ (ಜಪಾನ್‌ ಸಮುದ್ರದಿಂದ), ಸ್ವೀಡನ್‌ (ಬಾಲ್ಟಿಕ್ ಸಮುದ್ರದಿಂದ), ತುರ್ಕಿ (ಕಪ್ಪು ಸಮುದ್ರದಿಂದ), ಮತ್ತು ಯುನೈಟೆಡ್‌ ಸ್ಟೇಟ್ಸ್‌ (ಬೇರಿಂಗ್‌ ಜಲಸಂಧಿಯಿಂದ) ಗಳಿಂದ ಸುತ್ತುವರೆದಿದೆ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ. ಇದು ಯೂರೋಪ್‌ನ ೪೦% ಭಾಗವನ್ನು ಒಟ್ಟಾರೆಯಾಗಿ ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ನಿಕ್ಷೇಪಗಳಿವೆ, ಹಾಗಾಗಿ ಶಕ್ತಿ ಸಂಪನ್ಮೂಲದಲ್ಲಿ ಮಹಾ ಶಕ್ತಿ ಎಂದೂ ಹೆಸರಾಗಿದೆ.ಇದು ವಿಶ್ವದ ಅತಿ ದೊಡ್ಡ ಅರಣ್ಯ ನಿಕ್ಷೇಪವನ್ನು ಹೊಂದಿದ್ದು ಇಲ್ಲಿನ ಸರೋವರಗಳು ಸರಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ವಿಶ್ವದ ಘನೀಕೃತವಲ್ಲದ ಶುದ್ಧನೀರನ್ನು ಹೊಂದಿದೆ. 

೩ನೇ ಮತ್ತು ೮ನೇ ಶತಮಾನ ಗಳಲ್ಲಿ ಯೂರೋಪ್‌ನ ಒಂದು ಗಮನಾರ್ಹ ಸಮೂಹವಾಗಿ ಹೊರ ಹೊಮ್ಮಿದ ಪೂರ್ವ ಸ್ಲಾವ್ ಜನರು‌‌ಗಳಿಂದ ಈ ದೇಶದ ಇತಿಹಾಸವು ಆರಂಭವಾಗಿತ್ತು. ಒಂದು ಉದಾತ್ತ ವೈಕಿಂಗ್ ಯೋಧ ವರ್ಗ ಹಾಗೂ ಅವರ ವಂಶಸ್ಥರಿಂದ ಸ್ಥಾಪಿತ ಕಿವಾನ್‌ ರುಸ್‌ ಎಂಬ ಪ್ರಥಮ ಸ್ಲಾವ್‌ ರಾಜ್ಯವಾಗಿ 9ನೇ ಶತಮಾನದಲ್ಲಿ ಹೊರಹೊಮ್ಮಿ, ಬೈಜಾಂಟೈನ್‌ ಸಾಮ್ರಾಜ್ಯವನ್ನು ಅನುಸರಿಸಿ ೯೮೮ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿತು. ಇದರಿಂದಾಗಿ ಬೈಜಾಂಟೈನ್‌ ಮತ್ತು ಸ್ಲಾವ್‌ ಸಂಸ್ಕೃತಿಗಳ ಸಂಯೋಜನೆಯಾಗಿ ಮುಂದಿನ ಸಹಸ್ರಮಾನದ ರಷ್ಯಾದ ಸಂಸ್ಕೃತಿಯಾಗಿ ಹೊರಹೊಮ್ಮಿತು. ಅಂತಿಮವಾಗಿ ಕಿವಾನ್‌ ರುಸ್‌ ವಿಭಜನೆಯಾಗಿ ಬಹಳಷ್ಟು ಸಣ್ಣ ಬಿಡಿ ಸಂಸ್ಥಾನಗಳಾಗಿ ಒಡೆಯಿತು. ಕಿವಾನ್‌ ರುಸ್‌ನ ನಂತರ ಶಕ್ತಿಶಾಲಿ ರಾಜ್ಯ ಮಾಸ್ಕೋ ಆಗಿತ್ತು. ಇದು ರಷ್ಯಾದ ಒಗ್ಗೂಡುವಿಕೆ ಹಾಗೂ ಸುವರ್ಣ ತಂಡದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಶಕ್ತಿಯಾಗಿತ್ತು. ಮಾಸ್ಕೋ ಹಂತಹಂತವಾಗಿ ಅಕ್ಕಪಕ್ಕದ ರಷ್ಯಾದ ಸಂಸ್ಥಾನಗಳನ್ನು ಒಗ್ಗೂಡಿಸುತ್ತಾ ಕಿವಾನ್‌ ರುಸ್‌ನ ಸಾಂಸ್ಕೃತಿಕ ಹಾಗೂ ರಾಜಕೀಯ ಸಂಪ್ರದಾಯಗಳಲ್ಲಿ ಮೇಲುಗೈ ಸಾಧಿಸಿತು. ೧೮ನೇ ಶತಮಾನದ ವೇಳೆಗೆ, ಆಕ್ರಮಣ, ವಿಸ್ತರಣೆ ಹಾಗೂ ಭೂಶೋಧನೆಗಳಿಂದಾಗಿ ರಾಷ್ಟ್ರವು ಬಹಳ ವಿಸ್ತಾರವಾಗಿ, ಪೋಲೆಂಡ್‌ನಿಂದ ಪೂರ್ವದಿಕ್ಕಿನಲ್ಲಿ ಪೆಸಿಫಿಕ್‌ ಮಹಾಸಾಗರ ಹಾಗೂ ಅಲಾಸ್ಕಾಗಳನ್ನೆಲ್ಲಾ ಒಳಗೊಂಡು ಇತಿಹಾಸದಲ್ಲಿನ ೩ನೇ ಅತಿ ದೊಡ್ಡ ಚಕ್ರಾಧಿಪತ್ಯ ಎನಿಸಿ ರಷ್ಯಾದ ಚಕ್ರಾಧಿಪತ್ಯ ಎನಿಸಿಕೊಳ್ಳುವ ಮಟ್ಟಿಗೆ ಬೆಳೆಯಿತು. 

ರಷ್ಯಾವು ವಿಶ್ವದಾದ್ಯಂತ ಅಧಿಕಾರ ಮತ್ತು ಪ್ರಭಾವವನ್ನು ರಷ್ಯಾದ ಚಕ್ರಾಧಿಪತ್ಯದ ಕಾಲದಿಂದ ಹಿಡಿದು, ಸೋವಿಯೆತ್‌ ಒಕ್ಕೂಟದ ಅಗ್ರ ಸದಸ್ಯವಾಗಿ, ವಿಶ್ವದ ಪ್ರಪ್ರಥಮ ಹಾಗೂ ಅತಿ ದೊಡ್ಡ ಸಂವಿಧಾನಾತ್ಮಕ ಸಮಾಜವಾದಿ ಆಡಳಿತ ಮತ್ತು ಮನ್ನಣೆ ಪಡೆದ ಉತ್ಕೃಷ್ಠ ಶಕ್ತಿ ಎನಿಸಿತು. ಕಲೆ ಹಾಗೂ ವಿಜ್ಞಾನದ ಪ್ರತಿ ಮಗ್ಗಲುಗಳಲ್ಲಿ ರಷ್ಯಾ ಉತ್ಕೃಷ್ಠತೆಯ ಬಗ್ಗೆ ದೀರ್ಘ ಪರಂಪರೆಯ ಹೆಗ್ಗಳಿಕೆ ಹೊಂದಿದೆ. ರಷ್ಯನ್‌ ಒಕ್ಕೂಟವನ್ನು ೧೯೯೧ರಲ್ಲಿ ಸೋವಿಯತ್‌ ಒಕ್ಕೂಟದ ವಿಭಜನೆಯ ನಂತರ ಸ್ಥಾಪಿಸಲಾಯಿತು. ಆದರೂ ಇದನ್ನು ಸೋವಿಯತ್‌ ಒಕ್ಕೂಟದ ಅಧಿಕೃತ ಪ್ರತಿನಿಧಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಇದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಪ್ರಪಂಚದಲ್ಲಿ ಎಂಟನೇ ಸ್ಥಾನ, ಖರೀದಿ ಸಾಮಾರ್ಥ್ಯ ಸಮತೆಯಲ್ಲಿ ಆರನೇ ಸ್ಥಾನ ಹಾಗು ಸೇನಾ ಆಯವ್ಯಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಈ ದೇಶವು ಐದು ಗಣ್ಯ ಅಣ್ವಸ್ತ್ರ ಸಮರ್ಥ ದೇಶಗಳಲ್ಲಿ ಒಂದಾಗಿದೆ. ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ ಬೃಹತ್‌ ಸಂಗ್ರಹವನ್ನೇ ಹೊಂದಿದೆ. ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿದೆಯಲ್ಲದೇ, G8, APEC ಹಾಗೂ SCOಗಳ ಸದಸ್ಯತ್ವ ಹೊಂದಿದೆ. ಸ್ವತಂತ್ರ ರಾಷ್ಟ್ರಗಳ ಕಾಮನ್‌ವೆಲ್ತ್‌ನ ಅಗ್ರಗಣ್ಯ ಸದಸ್ಯನಾಗಿದೆ.

ಭೂಲಕ್ಷಣ, ಹವಾಗುಣ, ಆಹಾರ ವ್ಯವಸ್ಥೆ ಮತ್ತು ಮಣ್ಣಿನ ಲಕ್ಷಣಗಳು ಬಹಳ ದೂರ ವ್ಯಾಪಿಸಿವೆ. ಉತ್ತರದಿಂದ ದಕ್ಷಿಣದವರೆಗೂ ಪೂರ್ವ ಯೂರೋಪಿನ ಬಯಲುಗಳು ಟುಂಡ್ರಾ, ಕೋನಿಫೆರಸ್‌ ಅರಣ್ಯ (ಟೈಗಾ), ಮಿಶ್ರ ಮತ್ತು ವಿಶಾಲಪರ್ಣಿ ಕಾಡುಗಳು, ಹುಲ್ಲುಗಾವಲು (ಚಪ್ಪಟೆ ಮೈದಾನ), ಮತ್ತು ಅರೆ-ಮರಳುಗಾಡು (ಕ್ಯಾಸ್ಪಿಯನ್‌ ಸಮುದ್ರದ ಅಂಚುಗಳು)ಗಳಲ್ಲಿ ಅನುಕ್ರಮವಾಗಿ ಆವೃತವಾಗಿವೆ. ಇದು ಆಹಾರ ವ್ಯವಸ್ಥೆಯ ಬದಲಾವಣೆಗಳಿಗನುಗುಣವಾಗಿ, ಹವಾಗುಣದಲ್ಲಿ ಆಗುವ ಬದಲಾವಣೆಯನ್ನು ಸೂಚಿಸುತ್ತದೆ. ಸೈಬೀರಿಯಾವು ಸಹಾ ಇದೇ ಮಾದರಿಯ, ಆದರೆ ಕೇವಲ ಟೈಗಾದ ಅನುಕ್ರಮವನ್ನು ಹೊಂದಿದೆ. ಈ ರಾಷ್ಟ್ರವು 23 ವಿಶ್ವ ಪರಂಪರೆಯ ಸ್ಮಾರಕ ಕ್ಷೇತ್ರಗಳನ್ನು ಹಾಗೂ 40 UNESCO ಜೀವಮಂಡಲ ನಿಕ್ಷೇಪಗಳನ್ನೂ ಹೊಂದಿದೆ.

ರಷ್ಯಾದ ಎರಡು ವಿಶಾಲವಾದ ಮಿತಿಗಳು ಸುಮಾರು ಭೂಮಿತಿಯ ರೇಖೆಯುದ್ದಕ್ಕೂ 8,000 km (5,000 mi)ಯಷ್ಟು ಅಗಲವಾಗಿವೆ. ಈ ಮಿತಿಗಳು ಹೀಗಿವೆ : ಪೋಲೆಂಡ್‌ ಗಡಿಯಲ್ಲಿ ಗ್ಟಾನ್ಸ್‌ಕ್‌ ಕೊಲ್ಲಿಯಿಂದ ವಿಸ್ತುಲಾ ಖಾರಿಯನ್ನು ಪ್ರತ್ಯೇಕಿಸುವ 60 km ಉದ್ದದ (40-mi ಉದ್ದ) ದ್ವೀಪಕಲ್ಪದ ಚಾಚು; ಮತ್ತು ಕುರಿಲ್‌ ದ್ವೀಪಗಳ ಆಗ್ನೇಯಕ್ಕೆ ಅತಿ ದೂರದಲ್ಲಿ, ಜಪಾನ್‌ನ ಹೊಕ್ಕೈಡೊ ದ್ವೀಪದಿಂದ ಕೆಲ ಮೈಲುಗಳಷ್ಟು ದೂರ. ರೇಖಾಂಶದಲ್ಲಿ ಅತ್ಯಂತ ದೂರದ ಮಿತಿಗಳು ಸುಮಾರು 6,600 km (4,100 mi) ಭೂಮಿತಿ ರೇಖೆಯುದ್ದಕ್ಕೂ ಇವೆ. ಈ ಮಿತಿಗಳೆಂದರೆ ಪಶ್ಚಿಮದಲ್ಲಿ ಅದೇ ಚಾಚು; ಪೂರ್ವದಲ್ಲಿ ದೊಡ್ಡ ಡಯೋಮೀಡ್‌ ದ್ವೀಪ (ಓಸ್ಟ್ರಾವ್‌ ರಟ್ಮನೊವಾ).ರಷ್ಯನ್‌ ಒಕ್ಕೂಟವು 11 ಕಾಲಮಾನಗಳಷ್ಟು ವ್ಯಾಪಿಸಿದೆ.

ರಷ್ಯಾವು ವಿಶ್ವದ ಅತಿ ಹೆಚ್ಚಿನ ಅರಣ್ಯ ನಿಕ್ಷೇಪಗಳನ್ನು ಹೊಂದಿ ಯೂರೋಪ್‌ನ ಶ್ವಾಸಕೋಶ ಎಂಬ ಹೆಸರು ಪಡೆದಿದೆ. ಇಂಗಾಲದ ಡಯಾಕ್ಸೈಡ್‌ನ ಹೀರಿಕೆಯಲ್ಲಿ ಅಮೆಜಾನ್ ಮಳೆಕಾಡಿನ ನಂತರದ ಸ್ಥಾನ ಪಡೆದಿದೆ. ಇದು ಕೇವಲ ಯೂರೋಪ್‌ಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಗಾಧ ಪ್ರಮಾಣದ ಆಕ್ಸಿಜನ್‌ ಬಿಡುಗಡೆ ಮಾಡುತ್ತದೆ. ವಿಶ್ವದ 3 ಸಾಗರಗಳನ್ನು ಹೊಂದಿರುವ ಕಾರಣ — ಅಟ್ಲಾಂಟಿಕ್‌, ಆರ್ಕ್‌ಟಿಕ್‌ ಮತ್ತು ಪೆಸಿಫಿಕ್‌ — ರಷ್ಯಾದ ಮೀನುಗಾರರ ಪಡೆಯು ವಿಶ್ವದ ಮೀನು ಪೂರೈಕೆಗೆ ಪ್ರಧಾನ ಕೊಡುಗೆದಾರನಾಗಿದೆ. ವಿಶ್ವದಲ್ಲೇ ಉತ್ತಮವಾದ ಕ್ಯಾವಿಯರ್‌ಗಳಿಗೆ ಕ್ಯಾಸ್ಪಿಯನ್‌ ಮೂಲವಾಗಿದೆ. 

ರಷ್ಯಾವು ಅಧಿಕ ಪ್ರಮಾಣದ ಬಯಲನ್ನು ಹೊಂದಿದ್ದು, ಮುಖ್ಯವಾಗಿ ದಕ್ಷಿಣದಲ್ಲಿ ಚಪ್ಪಟೆ ಮೈದಾನ ಮತ್ತು ಉತ್ತರದಲ್ಲಿ ಅರಣ್ಯಗಳಿದ್ದು, ಉತ್ತರ ಕರಾವಳಿಯುದ್ದಕ್ಕೂ ಟುಂಡ್ರಾಗಳನ್ನು ಹೊಂದಿದೆ. ದಕ್ಷಿಣ ಅಂಚಿನ ಉದ್ದಕ್ಕೂ ಕಾಕಾಸಸ್‌ (ಎಲ್‌ಬ್ರಸ್‌ ಪರ್ವತ, ರಷ್ಯಾದ ಮತ್ತು ಯೂರೋಪ್‌ನ ಅತ್ಯುನ್ನತ ಬಿಂದುವಿರುವಗಳನ್ನೂ ಸೇರಿಸಿ) ಮತ್ತು ಅಲ್ಟೈ, ಮತ್ತು ಪೂರ್ವಭಾಗದಲ್ಲಿ, ವರ್ಕೋಯಾನ್ಸ್ಕ್‌ ಸಾಲು ಅಥವಾ ಕಂಚಟ್ಕಾದ ಅಗ್ನಿಪರ್ವತ ಪರ್ವತ ಶ್ರೇಣಿಗಳಿವೆ. ಉರಲ್‌ ಪರ್ವತಗಳು, ಖನಿಜ ನಿಕ್ಷೇಪಗಳಲ್ಲಿ ಶ್ರೀಮಂತವಾಗಿದ್ದು, ಯೂರೋಪ್‌ ಮತ್ತು ಏಷ್ಯಾಗಳನ್ನು ವಿಭಜಿಸುವ ಉತ್ತರ-ದಕ್ಷಿಣ ಪಟ್ಟಿಯಾಗಿದೆ. ರಷ್ಯಾವು ವಿಶ್ವದ 10% ಕೃಷಿಯೋಗ್ಯ ಭೂಮಿಯನ್ನು ಹೊಂದಿದೆ.

ರಷ್ಯಾವು ಆರ್ಕ್‌ಟಿಕ್‌ ಮತ್ತು ಪೆಸಿಫಿಕ್‌ ಮಹಾಸಾಗರಗಳು, ಹಾಗೂ ಬಾಲ್ಟಿಕ್‌ ಸಮುದ್ರ, ಅಜೋವ್‌ ಸಮುದ್ರ, ಕಪ್ಪು ಮತ್ತು ಕ್ಯಾಸ್ಪಿಯನ್‌ ಸಮುದ್ರಗಳೂ ಸೇರಿದಂತೆ 37,000 ಕಿಲೋಮೀಟರು(23,000 mi)ಗಳಿಗೂ ಹೆಚ್ಚಿನ ವಿಸ್ತಾರವಾದ ಕರಾವಳಿಯನ್ನು ಹೊಂದಿದೆ. ಬೇರೆಂಟ್ಸ್‌ ಸಮುದ್ರ, ಶ್ವೇತ ಸಮುದ್ರ, ಕಾರಾ ಸಮುದ್ರ, ಲ್ಯಾಪ್‌ಟೆವ್‌ ಸಮುದ್ರ, ಪೂರ್ವ ಸೈಬೀರಿಯನ್‌ ಸಮುದ್ರ, ಚುಕ್ಚಿ ಸಮುದ್ರ, ಬೇರಿಂಗ್‌ ಸಮುದ್ರ, ಓಕೋಟ್ಸ್ಕ್‌‌ ಸಮುದ್ರ ಮತ್ತು ಜಪಾನ್‌ ಸಮುದ್ರಗಳು ರಷ್ಯಾದೊಂದಿಗೆ ಸಂಪರ್ಕ ಹೊಂದಿವೆ. ಇಲ್ಲಿರುವ ಪ್ರಮುಖ ದ್ವೀಪಗಳು ಮತ್ತು ದ್ವೀಪ ಸಮೂಹಗಳೆಂದರೆ ನೊವಾಯಾ ಜೆಮ್ಲ್ಯಾ, ಫ್ರಾನ್ಜ್‌ ಜೋಸೆಫ್‌ ಲ್ಯಾಂಡ್‌, ಸೆವೆರ್ನಾಯಾ ಜೆಮ್ಲ್ಯಾ, ನವ ಸೈಬೀರಿಯನ್‌ ದ್ವೀಪಗಳು, ರ್ಯಾಂಗೆಲ್‌ ದ್ವೀಪ, ಕುರಿಲ್‌ ದ್ವೀಪಗಳು ಮತ್ತು ಸಖಾಲಿನ್‌. ಡಯೋಮೀಡ್‌ ದ್ವೀಪಗಳು (ರಷ್ಯಾದ ನಿಯಂತ್ರಣದಲ್ಲಿ ಒಂದು, ಇನ್ನೊಂದು ಯುನೇಟೆಡ್‌ ಸ್ಟೇಟ್ಸ್‌‌ ನಿಯಂತ್ರಣದಲ್ಲಿದೆ) ಕೇವಲ ಮೂರು ಕಿಲೋಮೀಟರ್‌ಗಳ(1.9 mi) ಅಂತರದಲ್ಲಿವೆ, ಮತ್ತು ಹೊಕ್ಕಾಯ್ಡೋನಿಂದ ಕುನಶಿರ್‌ ದ್ವೀಪವು ಸುಮಾರು ಇಪ್ಪತ್ತು ಕಿಲೋಮೀಟರ್‌(12 mi)ಗಳಷ್ಟು ದೂರದಲ್ಲಿದೆ.

ರಷ್ಯಾದಲ್ಲಿ ಸಾವಿರಾರು ನದಿಗಳು ಮತ್ತು ಒಳನಾಡಿನ ಕೆರೆಗಳಿರುವುದರಿಂದ, ವಿಶ್ವದ ಅತಿಹೆಚ್ಚಿನ ಪ್ರಮಾಣದ ಭೂಮಟ್ಟದ ಜಲಮೂಲಗಳನ್ನು ಹೊಂದಿರುವ ಹೆಗ್ಗಳಿಕೆ ಹೊಂದಿದೆ. ರಷ್ಯಾದ ಶುದ್ಧಜಲಮೂಲಗಳಲ್ಲಿ ಅತಿ ದೊಡ್ಡದು ಹಾಗೂ ಪ್ರಮುಖವಾದುದೆಂದರೆ ಬೈಕಲ್‌ ಸರೋವರ . ಇದು ವಿಶ್ವದ ಆಳದ, ನಿರ್ಮಲ, ಬಹಳಷ್ಟು ಪ್ರಾಚೀನ ಹಾಗೂ ಹೆಚ್ಚು ವಿಶಾಲವಾದ ಶುದ್ಧನೀರಿನ ಸರೋವರ. ಬೈಕಲ್‌ ಸರೋವರವೊಂದರ ಮೇಲ್ಮೈ ಶುದ್ಧನೀರಿನ ಪ್ರಮಾಣವೇ ಇಡೀ ವಿಶ್ವದ ಐದನೇ ಒಂದು ಭಾಗದಷ್ಟಿದೆ. ಉಳಿದ ಪ್ರಮುಖ ಸರೋವರಗಳೆಂದರೆ ಯೂರೋಪ್‌ನ ಅತಿ ದೊಡ್ಡ ಸರೋವರಗಳಾದ ಲಡೋಗಾ ಸರೋವರ ಮತ್ತು ಒನೇಗಾ ಸರೋವರ. ರಷ್ಯಾದ 100,000 ನದಿಗಳ ಪೈಕಿ,ವೋಲ್ಗಾ ಅತ್ಯಂತ ಪ್ರಸಿದ್ಧ.ವೋಲ್ಗಾ ಯುರೋಪ್‌ನ ಅತಿ ಉದ್ದನೆಯ ನದಿಯಾಗಿ ಹೆಸರುವಾಸಿಯಾಗಿರವುದಲ್ಲದೆ, ರಷ್ಯಾದ ಇತಿಹಾಸದಲ್ಲಿ ವಹಿಸಿದ ಪಾತ್ರವೂ ಇದಕ್ಕೆ ಪ್ರಮುಖ ಕಾರಣ.ರಷ್ಯಾವು ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಲ್ಲಿದ್ದಲು, ದೇವದಾರು ಮತ್ತು ಖನಿಜ ನಿಕ್ಷೇಪಗಳು ಸೇರಿದಂತೆ, ಇತರ ಯಾವುದೇ ರಾಷ್ಟ್ರವೂ ಹೊಂದಿರದಷ್ಟು ನೈಸರ್ಗಿಕ ಸಂಪನ್ಮೂಲಗಳ ವಿಶಾಲವಾದ ನೆಲೆಯನ್ನು ಹೊಂದಿದೆ. 

ರಷ್ಯನ್‌ ಒಕ್ಕೂಟದ ಹವಾಗುಣವು ಅನೇಕ ನಿರ್ಣಾಯಕ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ರಾಷ್ಟ್ರದ ಬೃಹತ್‌ ಗಾತ್ರದಿಂದಾಗಿ ಮತ್ತು ಸಮುದ್ರ ತೀರದಿಂದ ಬಹಳ ದೂರವಿರುವುದರಿಂದ ಪ್ರಧಾನವಾಗಿ ತೇವಾಂಶದಿಂದ ಕೂಡಿದ ಖಂಡಾಂತರ ಮತ್ತು ಶೀತವಲಯ‌ ಹವಾಗುಣಗಳನ್ನು ಹೊಂದಿದೆ. ಟುಂಡ್ರಾ ಮತ್ತು ಆಗ್ನೇಯ ದಿಕ್ಕಿನ ತುತ್ತ ತುದಿಯ ಭಾಗಗಳನ್ನು ಬಿಟ್ಟರೆ ಉಳಿದಂತೆ ಯೂರೋಪ್‌ಗೆ ಮತ್ತು ಏಷ್ಯಾಗೆ ಸೇರಿದ ರಷ್ಯಾದ ಎರಡೂ ವಿಭಾಗಗಳಲ್ಲಿ ಈ ಹವಾಗುಣ ಸಾಮಾನ್ಯವಾಗಿರುತ್ತದೆ. ಅತ್ತ ದಕ್ಷಿಣದಲ್ಲಿರುವ ಪರ್ವತಗಳು ಹಿಂದೂ ಮಹಾಸಾಗರದಿಂದ ಬರುವ ಬಿಸಿಗಾಳಿಯನ್ನು ತಡೆದರೆ, ಇತ್ತ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿರುವ ಬಯಲು ಪ್ರದೇಶಗಳು ದೇಶದ ಮೇಲೆ ಆರ್ಕ್‌ಟಿಕ್‌ ಮತ್ತು ಅಟ್ಲಾಂಟಿಕ್‌ ಪ್ರಭಾವ ಬೀರುನಂತೆ ಮಾಡಿವೆ.

ಇಡೀ ಭೂಪ್ರದೇಶದುದ್ದಕ್ಕೂ ಕೇವಲ ಎರಡು ಪ್ರತ್ಯೇಕ ಋತುಗಳಿವೆ - ಚಳಿಗಾಲ ಮತ್ತು ಬೇಸಿಗೆ; ವಸಂತ ಮತ್ತು ಶರತ್ಕಾಲಗಳು ಕೇವಲ ತೀವ್ರ ಚಳಿಗಾಲ ಮತ್ತು ತೀವ್ರ ಬೇಸಿಗೆ ಕಾಲದ ನಡುವಿನ ಬದಲಾವಣೆಯ ಅಲ್ಪಾವಧಿಯಲ್ಲಿ ತೋರುತ್ತವೆ. ತೀವ್ರ ಶೀತದ ತಿಂಗಳೆಂದರೆ ಜನವರಿ(ತೀರ ಪ್ರದೇಶಗಳಲ್ಲಿ - ಫೆಬ್ರವರಿ), ತೀವ್ರ ಬೇಸಿಗೆಯೆಂದರೆ ವಾಡಿಕೆಯಂತೆ ಜುಲೈನಲ್ಲಿರುತ್ತದೆ.ಉಷ್ಣತೆಯಲ್ಲಿನ ಬೃಹತ್‌ ಪ್ರಮಾಣದ ವ್ಯತ್ಯಾಸ ಸಹಜ. ಚಳಿಗಾಲದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ. ಬೇಸಿಗೆ ಕಾಲವು ಸಾಕಷ್ಟು ಉಷ್ಣತೆ ಮತ್ತು ತೇವಾಂಶವನ್ನು ಹೊಂದಿರುತ್ತದೆ. ಸೈಬೀರಿಯಕ್ಕೂ ಇದು ಅನ್ವಯಿಸುತ್ತದೆ. ಸೋಚಿಯ ಸುತ್ತಮುತ್ತಲಿನ ಕಪ್ಪು ಸಮುದ್ರದ ಕರಾವಳಿಯ ಚಿಕ್ಕ ಭಾಗವು ಸಮಶೀತೋಷ್ಣ ಹವಾಗುಣವನ್ನು ಹೊಂದಿದೆ. ಖಂಡಾಂತರ ಒಳನಾಡು ತೀವ್ರ ಒಣಪ್ರದೇಶವಾಗಿದೆ.

ಪ್ರಾಗೈತಿಹಾಸಿಕ ಕಾಲದಲ್ಲಿ ದಕ್ಷಿಣ ರಷ್ಯಾದ ವಿಸ್ತಾರವಾದ ಚಪ್ಪಟೆ ಮೈದಾನಗಳು ಅಸಂಘಟಿತ ಅಲೆಮಾರಿ ಕುರುಬರ ಬುಡಕಟ್ಟುಗಳ ವಾಸಸ್ಥಾನವಾಗಿತ್ತು . ಸಾಂಪ್ರದಾಯಿಕ ಪ್ರಾಚೀನತೆಯಲ್ಲಿ ಪಾಂಟಿಕ್‌ ಚಪ್ಪಟೆ ಮೈದಾನ ಸಿಥಿಯಾ ಎಂದು ಕರೆಸಿಕೊಳ್ಳುತ್ತಿತ್ತು. ಚಪ್ಪಟೆ ಮೈದಾನ ನಾಗರೀಕತೆಗಳ ಅವಶೇಷಗಳು 20ನೇ ಶತಮಾನದ ಕಾಲದಲ್ಲಿ ಪತ್ತೆಯಾದವು ಐಪಾಟೊವೊ, ಸಿಂತಾಷ್ಟಾ, ಅರ್ಕಾಯಿಂ, ಮತ್ತು ಪೆಜಿರಿಕ್‌. 8ನೇ ಶತಮಾನದಿಂದೀಚೆಗೆ BC, ಗ್ರೀಕ್‌ ವ್ಯಾಪಾರಿಗಳು ಸಾಂಪ್ರದಾಯಿಕ ನಾಗರೀಕತೆಯನ್ನು ಟನಾಯ್ಸ್‌ ಮತ್ತು ಫನಾಗೊರಿಯಾದ ಮಾರುಕಟ್ಟೆಗಳಿಗೆ ತಂದರು. ಮೂರು ಮತ್ತು ಆರನೇ ಶತಮಾನBC ಗಳ ನಡುವೆ, ಬೋಸ್ಫೋರನ್‌ ಸಾಮ್ರಾಜ್ಯವು, ಗ್ರೀಕ್‌ ವಸಾಹತುಗಳ ಉತ್ತರಾಧಿಕಾರಿಯಾದ ಹೆಲೆನಿಸ್ಟಿಕ್‌ ರಾಜ್ಯ ವ್ಯವಸ್ಥೆ ವು  ಹುನ್‌ಗಳು ಮತ್ತು ತುರ್ಕಿಯ ಆವರ್‌ಗಳು ಮುಂತಾದ ಸಮರೋತ್ಸಾಹಿ ಬುಡಕಟ್ಟುಗಳ ಅಲೆಮಾರಿ ಆಕ್ರಮಣಗಳಿಂದಾಗಿ ಕಂಗೆಟ್ಟಿತು. ಖಾಜರ್‌ಗಳು ಎಂದು ಹೆಸರಾದ ತುರ್ಕಿ ಜನರು, ಕ್ಯಾಸ್ಪಿಯನ್‌ ಮತ್ತು ಕಪ್ಪು ಸಮುದ್ರಗಳ ನಡುವಿರುವ ಕೆಳ ವೋಲ್ಗಾ ಜಲಾನಯನ ಪ್ರದೇಶದ ಚಪ್ಪಟೆ ಮೈದಾನ ಗಳನ್ನು 8ನೇ ಶತಮಾನದವರೆಗೆ ಆಳಿದರು.

ಸ್ಲಾವಿಕ್‌ ಬುಡಕಟ್ಟಿನವರು ಆಧುನಿಕ ರಷ್ಯನ್ನರ ಪೂರ್ವಜರು, ಕೆಲ ತಜ್ಞರ ಪ್ರಕಾರ ಗಿಡಮರಗಳಿಂದ ತುಂಬಿದ್ದ ಪಿನ್ಸ್ಕ್‌ ಮಾರ್ಷಸ್‌ ಇವರ ಮೂಲ ವಾಸಸ್ಥಾನವಾಗಿತ್ತು . ಜರ್ಮೇನಿಕ್‌ ಬುಡಕಟ್ಟಿನ ಜನರ ವಲಸೆಯಿಂದ ಖಾಲಿಯಾದ ಸ್ಥಳಕ್ಕೆ ಚಲಿಸಿದ ಪ್ರಾಚೀನ ಪೂರ್ವ ಸ್ಲಾವ್‌ಗಳು ಎರಡು ಪ್ರತ್ಯೇಕ ದಿಕ್ಕಿನಲ್ಲಿ ಕ್ರಮೇಣವಾಗಿ ಪಶ್ಚಿಮ ರಷ್ಯಾದಲ್ಲಿ ನೆಲೆಗೊಂಡರು: ಒಂದು ಗುಂಪು ಕಿಯೆವ್‌ನಿಂದ ಈಗಿನ ಸುಜ್‌ಡಲ್‌ ಮತ್ತು ಮುರೊಮ್‌ ಕಡೆಗೆ ಮತ್ತು ಇನ್ನೊಂದು ಪೊಲೊಟ್‌ಸ್ಕ್‌ನಿಂದ ನೊವ್‌ಗೊರೊಡ್‌ ಮತ್ತು ರೊಸ್ಟೊವ್‌ ಕಡೆಗೆ ಹೋದರು. 7ನೇ ಶತಮಾನದ ನಂತರ, ಪೂರ್ವ ಸ್ಲಾವ್‌ಗಳು ಪಶ್ಚಿಮ ರಷ್ಯಾದಲ್ಲಿ ಬಹುಸಂಖ್ಯಾತರಾದರು ಮತ್ತು ನಿಧಾನವಾಗಿ ಅಲ್ಲದೇ ಶಾಂತಿಯುತವಾಗಿ ಮೆರ್ಯಾಗಳು, ಮುರೋಮಿಯನ್‌ಗಳು, ಹಾಗೂ ಮೆಷ್‌ಚೆರಾಗಳೂ ಸೇರಿದಂತೆ ಸ್ಥಳೀಯ ಫಿನ್ನೊ-ಉಗ್ರಿಕ್‌ ಬುಡಕಟ್ಟಿನವರೊಂದಿಗೆ ಮಿಳಿತಗೊಂಡರು. 

ರಷ್ಯಾ, ಉಕ್ರೇನ್‌ ಮತ್ತು ಬೆಲಾರಸ್‌ಗಳ ಹಿಂದಿನ ಸಾಮ್ರಾಜ್ಯವಾಗಿ ಕಿವಾನ್‌ ರುಸ್‌ 9ನೇ ಶತಮಾನದಲ್ಲಿ ಸ್ಥಾಪನೆಯಾಯಿತು. ವೈಕಿಂಗ್‌ಗಳು ಎಂದು ಪಶ್ಚಿಮ ಮತ್ತು ವರಂಗಿಯೆನ್ಸ್‌ ಎಂದು ಪೂರ್ವ ಯೂರೋಪ್‌ನಲ್ಲಿ ಕರೆಸಿಕೊಂಡ ಸ್ಕಾಂಡಿನೇವಿಯಾದ ನಾರ್ಸ್‌ಮನ್‌ಗಳು ಉತ್ತರ ಯೂರೋಪ್‌ನ ಪರ್ಯಟನ ಸಮಯದಲ್ಲಿ ಜೊತೆಗೂಡಿ ಕಡಲ್ಗಳ್ಳತನ ಮತ್ತು ವ್ಯಾಪಾರಗಳೆರಡನ್ನು ಮಾಡಿದರು. 9ನೇ ಶತಮಾನದ ಮಧ್ಯಭಾಗದಲ್ಲಿ ಬಾಲ್ಟಿಕ್‌ ಸಮುದ್ರ ಪೂರ್ವಭಾಗದಿಂದ ಕಪ್ಪು ಮತ್ತು ಕ್ಯಾಸ್ಪಿಯನ್‌ ಸಮುದ್ರಗಳ ಜಲಮಾರ್ಗದುದ್ದಕ್ಕೂ ಯಾನ ಕೈಗೊಂಡರು. ರಷ್ಯಾದ ಪ್ರಾಚೀನ ಚರಿತ್ರೆಯ ಪ್ರಕಾರ, ರುರಿಕ್‌ ಎಂಬ ಹೆಸರಿನ ಓರ್ವ ವರಂಗಿಯನ್‌ (ಕೊನುಂಗ್‌ ಅಥವಾ ಕ್ನ್ಯಾಜ್‌ ) ನವ್‌ಗೋರೊಡ್‌ನ ರಾಜನಾಗಿ ಸುಮಾರು 860ನೇ ಇಸವಿಯಲ್ಲಿ ಆಯ್ಕೆಯಾದನು; ಆತನ ಉತ್ತರಾಧಿಕಾರಿಗಳು ದಕ್ಷಿಣಕ್ಕೆ ಸಂಚರಿಸಿ ಕಿಯೆವ್‌ವರೆಗೆ ತಮ್ಮ ಆಡಳಿತವನ್ನು ವಿಸ್ತರಿಸಿದರು. ಇಲ್ಲಿ ಈ ಹಿಂದೆ ಖಾಜರ್‌ಗಳು ಆಡಳಿತ ನಡೆಸಿದ್ದರು. 

ಕಿವಾನ್‌ ರುಸ್‌ನ ಉತ್ತಾರಾಧಿಯಾಗಿ ನಂತರ ಬಂದ ಶಕ್ತಿಶಾಲಿ ರಾಜ್ಯವೆಂದರೆ ಮಾಸ್ಕೋದ ಗ್ರಾಂಡ್‌ ಡ್ಯೂಕಿ. ತ್ವೆರ್‌ ಮತ್ತು ನವ್‌ಗೊರೊಡ್‌ಗಳಂತಹಾ ಎದುರಾಳಿಗಳನ್ನು ವಶಪಡಿಸಿಕೊಂಡು, ಅಂತಿಮವಾಗಿ ಆಧುನಿಕ ರಷ್ಯಾ ರಾಷ್ಟ್ರಕ್ಕೆ ತಳಹದಿಯಾಯಿತು. 1453ರಲ್ಲಿ ಕಾನ್‌ಸ್ಟಂಟಿನೋಪಲ್‌ ನ ಕುಸಿತದ ನಂತರ, ಮಾಸ್ಕೋ ತನ್ನನ್ನು ಪೂರ್ವ ರೋಮನ್‌ ಸಾಮ್ರಾಜ್ಯ ಪರಂಪರೆಯ ಉತ್ತರಾಧಿಕಾರಿಯೆಂದು ಘೋಷಿಸಿತು. 14ನೇ ಶತಮಾನದ ಆರಂಭದಲ್ಲಿ ಮಂಗೋಲರು-ಟಾಟರ್‌ಗಳುಗಳ ಆಳ್ವಿಕೆಯಲ್ಲಿಯೇ, ಅವರ ಮೌನ ಸಮ್ಮತಿಯೊಂದಿಗೆ, ಮಾಸ್ಕೋದ ಡ್ಯೂಕಿ(ಅಥವಾ ಮಸ್ಕೋವೈ)ಯು ಪಶ್ಚಿಮ ರಷ್ಯಾದ ಮೇಲೆ ತನ್ನ ಪ್ರಭಾವವನ್ನು ಸಾಧಿಸಿತು. ರಷ್ಯಾದ ಸಂಪ್ರದಾಯವಾದಿ ಚರ್ಚ್‌ ಮತ್ತು ಸಂತ ರಡೊನೆಜ್ಹ್‌ನ ಸರ್ಜಿಯಸ್‌ರ ಧರ್ಮಜಾಗೃತಿ ಪ್ರಯತ್ನಗಳ ಬೆಂಬಲದೊಂದಿಗೆ, ಕುಲಿಕೊವೊ ಕಾಳಗದಲ್ಲಿ (1380) ರಷ್ಯಾ ಮಂಗೋಲರು-ಟಾಟರ್‌ಗಳನ್ನು ಸೋಲಿಸಿತು. ಐವಾನ್‌ III (ಐವಾನ್‌ ಮಹಾಶಯ )ನು ಅಂತಿಮವಾಗಿ ಟಾಟರ್‌ ಆಕ್ರಮಣಕೋರರ ನಿಯಂತ್ರಣವನ್ನು ಕಿತ್ತೊಗೆದು, ಸುತ್ತಮುತ್ತಲಿನ ಪ್ರದೇಶಗಳನ್ನು ಮಾಸ್ಕೋದ ಆಡಳಿತಕ್ಕೆ ಸೇರಿಸಿಕೊಂಡನು. ರಷ್ಯಾಗಳ ಗ್ರಾಂಡ್‌ ಡ್ಯೂಕ್‌ ಎಂಬ ಬಿರುದು ಪಡೆದವರಲ್ಲಿ ಈತನೇ ಪ್ರಥಮ.

ಐವಾನ್‌ IV (ಐವಾನ್‌ ರಣಭಯಂಕರ ) 1547ರಲ್ಲಿ ಅಧಿಕೃತವಾಗಿ ರಷ್ಯಾದ ಪ್ರಥಮ ತ್ಸಾರ್‌ ಆಗಿ ಪಟ್ಟಾಭಿಷಿಕ್ತನಾದ. ತನ್ನ ದೀರ್ಘ ಆಳ್ವಿಕೆಯಲ್ಲಿ, ಐವಾನ್‌ IV ವೋಲ್ಗಾ ನದಿಯ ಬಳಿ ಇದ್ದ (ಖಾಜನ್‌, ಅಸ್ತ್ರಖಾನ್‌) ಟಾಟರ್‌ ಖಾನೇಟ್‌ಗಳನ್ನು ಸ್ವಾಧೀನಪಡಿಸಿಕೊಂಡು ರಷ್ಯಾವನ್ನು ಬಹು ಜನಾಂಗೀಯ ಮತ್ತು ಬಹುಮತಪಂಥಿಯ ರಾಷ್ಟ್ರವನ್ನಾಗಿ ಪರಿವರ್ತಿಸಿದ. ಐವಾನ್‌ IV ಕಾನೂನು ನಿಯಮಾವಳಿ(1550ರ ಸುಡೆನ್‌ಬಿಕ್‌)ಗಳನ್ನು ಪ್ರಚುರಪಡಿಸಿದ, ರಷ್ಯಾದ ಪ್ರಥಮ ಊಳಿಗಮಾನ್ಯ ಪ್ರತಿನಿಧಿ ಸಂಸ್ಥೆ (ಜೆಮ್ಸ್ಕಿ ಸೋಬರ್‌) ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸ್ವಯಮಾಡಳಿತವನ್ನು ಪರಿಚಯಿಸಿದ. ಆದರೆ ಪೋಲೆಂಡ್‌, ಲಿಥುವೇನಿಯಾ, ಮತ್ತು ಸ್ವೀಡನ್‌ಗಳ ಒಕ್ಕೂಟದ ವಿರುದ್ಧ ಬಾಲ್ಟಿಕ್‌ ತೀರಪ್ರದೇಶ ಮತ್ತು ಸಮುದ್ರ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಡೆಸಿದ ದೀರ್ಘಕಾಲೀನ ಹಾಗೂ ಲಿವೋನಿಯನ್‌ ಸಮರದ ಅಪಜಯದ ಕಪ್ಪುಚುಕ್ಕೆಯನ್ನು ಐವಾನ್‌ IVನ ಆಡಳಿತ ಹೊಂದಿದೆ. ಸೇನೆಯ ನಷ್ಟಗಳು, ಸಾಂಕ್ರಾಮಿಕ ರೋಗಗಳು ಮತ್ತು ಅಲ್ಪ ಫಸಲಿನಿಂದಾಗಿ ರಾಷ್ಟ್ರವು ದುರ್ಬಲಗೊಂಡಿತು, ಹಾಗೂ ಕ್ರಿಮೇನ್‌ ಟಾಟರ್‌ಗಳು ಮಾಸ್ಕೋವನ್ನು ಸುಟ್ಟು ಹಾಕುವಷ್ಟು ಶಕ್ತರಾದರು. ಅನೇಕ ಕ್ರಿಮೇನ್‌ ಸಮರಗಳು ಬಹುಪಾಲು ಗುಲಾಮರಿಂದಾದ ದಾಳಿಗಳಾಗಿದ್ದವು. ದಾಳಿಗಳ ಪಟ್ಟಿಯನ್ನು ರಷ್ಯಾ-ಕ್ರಿಮೇನ್‌ ಸಮರಗಳುನಲ್ಲಿ ನೋಡಿ. 1600ರ ಆದಿಯಲ್ಲಿ ಬಂದ ಕಷ್ಟ ಕಾಲದಲ್ಲಿ ಐವಾನ್‌ನ ಮಕ್ಕಳ ಮರಣ, 1601–1603ರ ಕ್ಷಾಮಗಳು ಒಟ್ಟು ಸೇರಿ ಅಂತಃಕಲಹ ಹಾಗೂ ಪರಕೀಯರ ಹಸ್ತಕ್ಷೇಪಗಳಿಗೆ ಎಡೆಮಾಡಿಕೊಟ್ಟವು. 17ನೇ ಶತಮಾನದ ಮಧ್ಯಭಾಗದಲ್ಲಿ, ಚುಕ್‌ಚಿ ದ್ವೀಪಕಲ್ಪದಲ್ಲಿ ಪೆಸಿಫಿಕ್‌ ಕರಾವಳಿ ಮತ್ತು ಅಮುರ್‌ ನದೀತೀರದುದ್ದಕ್ಕೂ ಪೂರ್ವ ಸೈಬೀರಿಯಾದಲ್ಲಿ ರಷ್ಯಾದ ವಸಾಹತುಗಳಿದ್ದವು. 1648ರಲ್ಲಿ ಏಷ್ಯಾ ಮತ್ತು ಉತ್ತರ ಅಮೇರಿಕಾ ನಡುವಿನ ಬೇರಿಂಗ್‌ ಜಲಸಂಧಿ ರಷ್ಯಾದ ಪರಿಶೋಧಕರ ಕಣ್ಣಿಗೆ ಬಿದ್ದಿತು.

ರೊಮಾನೋವ್‌ ರಾಜವಂಶದ ಪೀಟರ್‌ I (ಮಹಾನ್‌ ಪೀಟರ್‌ )ನ ಆಳ್ವಿಕೆಯಲ್ಲಿ, ರಷ್ಯನ್‌ ಸಾಮ್ರಾಜ್ಯ ವಿಶ್ವಶಕ್ತಿಯಾಯಿತು. 1682ರಿಂದ 1725ವರೆಗೆ ಆಳ್ವಿಕೆ ನಡೆಸಿದ ಪೀಟರ್‌ ಮಹಾನ್‌ ಉತ್ತರ ಸಮರದಲ್ಲಿ ಸ್ವೀಡನ್‌ದೇಶವನ್ನು ಸೋಲಿಸಿ, ಪಶ್ಚಿಮ ಕರೇಲಿಯಾ ಮತ್ತು ಇಂಗ್ರಿಯಾ (ಕಷ್ಟ ಕಾಲ ದಲ್ಲಿ ರಷ್ಯಾ ಕಳೆದುಕೊಂಡ ಎರಡು ಪ್ರದೇಶಗಳು ),ಎಸ್ಟ್‌ಲ್ಯಾಂಡ್‌, ಮತ್ತು ಲಿವ್‌ಲ್ಯಾಂಡ್‌ಗಳನ್ನು ಬಲಪೂರ್ವಕ ವಶಪಡಿಸಿಕೊಂಡು ಸಮುದ್ರ ಮತ್ತು ಸಮುದ್ರ ವ್ಯಾಪಾರಕ್ಕೆ ಸುರಕ್ಷಿತ ಮಾರ್ಗ ಕಂಡುಕೊಂಡನು. ಇಂಗ್ರಿಯಾದಲ್ಲಿಯೇ ಪೀಟರ್‌ ಸೇಂಟ್‌ ಪೀಟರ್ಸ್‌ಬರ್ಗ್‌ ಎಂಬ ರಾಜಧಾನಿ ಸ್ಥಾಪಿಸಿದನು. ಪೀಟರ್‌ನ ಸುಧಾರಣೆಗಳು ಗಮನಾರ್ಹವಾಗಿ ಪಾಶ್ಚಿಮಾತ್ಯ ಯೂರೋಪಿಯನ್‌‌ ಸಾಂಸ್ಕೃತಿಕ ಪ್ರಭಾವಗಳಿಗೆ ರಷ್ಯಾವನ್ನು ಒಡ್ಡಿದವು. 1762ರಿಂದ 1796ರವರೆಗೆ ಆಳ್ವಿಕೆ ನಡೆಸಿದ ಕ್ಯಾಥರೀನ್‌ II (ಮಹಾನ್‌ ಕ್ಯಾಥರೀನ್‌  )ಳು, ರಷ್ಯಾವನ್ನು ಯುರೋಪ್‌ನ ಪ್ರಧಾನ ಶಕ್ತಿಗಳಲ್ಲಿ ಒಂದಾಗಿ ಮಾಡುವ ಪ್ರಯತ್ನವನ್ನು ಮುಂದುವರೆಸಿಪಡೆು . ಪ್ರಷ್ಯಾ ಮತ್ತು ಆಸ್ಟ್ರಿಯಾಗಳೊಂದಿಗೆ, ಫ್ರಾನ್ಸ್‌ನ ನೆಪೋಲಿಯನ್‌ ವಿರುದ್ಧ ನಿಂತು ಎದುರಾಳಿ ಪೋಲೆಂಡ್‌-ಲಿಥುವೇನಿಯಾಗಳನ್ನು ವಿಭಜನೆಗಳ ಸರಣಿಯಲ್ಲಿ ಮಣಿಸಿ, ಪಶ್ಚಿಮದಲ್ಲಿ ದೊಡ್ಡ ವಸಾಹತುಗಳ ಮೇಲಿನ ನಿಯಂತ್ರಣವನ್ನು ಹೊಂದಿತು. ರಷ್ಯಾ- ತುರ್ಕಿ ಸಮರದಲ್ಲಿನ ವಿಜಯದಿಂದಾಗಿ, 19ನೇ ಶತಮಾನದ ಆರಂಭದಲ್ಲಿ ರಷ್ಯಾ ಗಮನಾರ್ಹ ಪ್ರಮಾಣದಲ್ಲಿ ವಸಾಹತುಗಳನ್ನು ಟ್ರಾನ್ಸ್‌ಕಾಕೇಷ್ಯಾ ಪ್ರದೇಶದಲ್ಲಿ ಹೊಂದಿತು. ನೆಪೋಲಿಯನ್‌ 1812ರಲ್ಲಿ ತನ್ನ ವೈಭವದ ಪರಮಾವಧಿಯಲ್ಲಿ ನಡೆಸಿದ ರಷ್ಯಾ ಆಕ್ರಮಣವು ಹೀನಾಯ ಸೋಲು ಕಂಡಿತು. ಪಟ್ಟುಬಿಡದ ವಿರೋಧ ಹಾಗೂ ರಷ್ಯನ್‌ ಚಳಿಗಾಲದ ವಿಪರೀತ ಶೀತಹವೆಯಿಂದಾಗಿ ಆತ ದಾರುಣವಾದ ಸೋಲು ಕಾಣಬೇಕಾಯಿತು. ಈ ಹೋರಾಟದಲ್ಲಿ 95%ಗೂ ಅಧಿಕ ಪ್ರಮಾಣದಲ್ಲಿ ಆತನ ಸೇನೆ ನಾಶ ಹೊಂದಿತು. 1825ರ ಡಿಸೆಂಬರಿಸ್ಟ್‌ ದಂಗೆಯಲ್ಲಿ, ನೆಪೋಲಿಯನ್‌ ಸಮರಗಳ ಸೈನ್ಯಾಧಿಕಾರಿಗಳು ಉದಾರಸಿದ್ಧಾಂತಗಳನ್ನು ರಷ್ಯಾನಲ್ಲಿ ಪುನರುಜ್ಜೀವನಗೊಳಿಸಿ ತ್ಸಾರ್‌ನ ಅಧಿಕಾರವನ್ನು ಮೊಟಕುಗೊಳಿಸಲು ವ್ಯರ್ಥ ಪ್ರಯತ್ನ ನಡೆಸಿದರು. ಇದಾದ ನಂತರ ಅನೇಕ ದಶಕಗಳ ಮಟ್ಟಿಗೆ ರಾಜಕೀಯ ದಮನನೀತಿಗಳು ಚಾಲ್ತಿಯಲ್ಲಿದ್ದವು.

ದಾಸ್ಯಪದ್ಧತಿಯ ಮುಂದುವರಿಕೆ ಮತ್ತು ಮೊದಲನೆಯ ನಿಕಾಲಸ್ ನ ಸಾಂಪ್ರದಾಯಿಕ ನೀತಿಗಳು ಹತ್ತೊಂಬತ್ತನೆಯ ಶತಮಾನದ ಮಧ್ಯದಲ್ಲಿ ರಷ್ಯಾದ ಅಭಿವೃದ್ದಿಗೆ ಅಡ್ಡಿಯೊಡ್ಡಿದವು. ನಿಕಾಲಸ್‌ನ ಉತ್ತರಾಧಿಕಾರಿಯಾದ ಎರಡನೆಯ ಅಲೆಕ್ಸಾಂಡರ್ (1855–1881) 1861ರಲ್ಲಿ ದಾಸ್ಯಪದ್ಧತಿಯ ರದ್ದತಿಯೂ ಸೇರಿದಂತೆ ಪ್ರಮುಖವಾದ ಸುಧಾರಣೆಗಳನ್ನು ಕೈಗೊಂಡನು; ಈ ಮಹತ್ಬದ ಸುಧಾರಣೆಗಳು ಔದ್ಯಮೀಕರಣಕ್ಕೆ ಪ್ರೇರಣೆ ನೀಡಿದವು. ಆದಾಗ್ಯೂ, ಮೂರನೆಯ ಅಲೆಕ್ಸಾಂಡರ್‌ ಹಾಗೂ ತನ್ನ ಪುತ್ರ ಎರಡನೆಯ ನಿಕಾಲಸ್‌ನ ರಾಜ್ಯಭಾರದ ಅವಧಿಯಲ್ಲಿ ಹಲವು ಸಾಮಾಜಿಕ-ಆರ್ಥಿಕ ಘರ್ಷಣೆಗಳು ಬಿಗಡಾಯಿಸಿದ್ದವು. ಕೈಗಾರಿಕಾ ಕಾರ್ಖಾನೆಗಳಲ್ಲಿನ ಕಠೋರ ವಾತಾವರಣವು ಕ್ರಾಂತಿಕಾರಿ ಸಮಾಜವಾದಿ ಚಳುವಳಿಗಾಗಿ ಜನಸ್ತೋಮದ ಬೆಂಬಲ ದೊರೆಯುವಂತೆ ಮಾಡಿತು. ಜನವರಿ 1905ರಲ್ಲಿ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮುಷ್ಕರ ಹೂಡುತ್ತಿದ್ದ ಕಾರ್ಮಿಕರು ಸುಧಾರಣೆಗಳಿಗಾಗಿ ಶಾಂತಿಯುತವಾಗಿ ಧರಣಿ ಹೂಡುತ್ತಿದ್ದರೂ ಸೇನಾಪಡೆಗಳಿಂದ ಗುಂಡು ಹಾರಿಸಲಾಗಿ ನೂರಾರು ಜನರು ಸತ್ತರು ಹಾಗೂ ಗಾಯಗೊಂಡಿದ್ದರು. ಶುರುವಿನಲ್ಲಿ ಜನರ ಬೆಂಬಲ ಹೊಂದಿದ್ದ ರಷ್ಯಾ-ಜಪಾನಿ ಸಮರದಲ್ಲಿನ ಸಿಜಾರನ ಸೇನೆಯ ಹೀನಾಯ ವೈಪಲ್ಯ ಮತ್ತು ರಕ್ತ ಸಿಕ್ತ ರವಿವಾರ ಎಂಬ ಘಟನೆಯು, 1905ರ ರಷ್ಯಾ ಚಳುವಳಿಯ ಕಿಡಿ ಹಚ್ಚಿತು. ಚಳುವಳಿಯನ್ನು ಸೇನೆಯು ಶೀಘ್ರದಲ್ಲಿ ಮೆಟ್ಟಿಹಾಕಿದಾಗ್ಯೂ ಮತ್ತು ಎರಡನೆಯ ನಿಕಾಲಸ್ ತನ್ನ ಹೆಚ್ಚಿನ ಅಧಿಕಾರವನ್ನು ಹಿಡಿದಿಟ್ಟುಕೊಂಡಿದ್ದರೂ ಕೂಡ, ಸಭೆಗಳಲ್ಲಿ ವಾಕ್ ಸ್ವಾತಂತ್ಯ, ರಾಜಕೀಯ ಪಕ್ಷಗಳ ಸಕ್ರಮ ಮತ್ತು ಚುನಾಯಿತ ಶಾಸಕರ ಸಭೆ ಡುಮಾ ಸೇರಿದಂತೆ ಪ್ರಮುಖ ಸುಧಾರಣೆಗಳಿಗೆ ತಾನು ಅನುಮತಿ ನೀಡಲೇಬೇಕಾಯಿತು; ಅದಾಗ್ಯೂ, ಕೈಗಾರಿಕಾ ಕಾರ್ಮಿಕರ ಜೀವನಗಳಲ್ಲಿ ಚೇತರಿಕೆ ಕಂಡುಕೊಳ್ಳುವ ಹಲವು ಆಸೆಗಳು ಈಡೇರದೆ ಉಳಿದವು. ರಷ್ಯಾದಲ್ಲಿ ಬರ-ಕ್ಷಾಮಗಳು ಆಗಾಗ್ಗೆ ಸಂಭವಿಸುತ್ತಿದ್ದವು; ಕ್ಷಾಮವು ಪ್ರತಿ 10-13 ವರ್ಷಗಳಲ್ಲಿ ಸಂಭವಿಸುತ್ತಿತ್ತು. 1891-92ರ ಕ್ಷಾಮವು ಸುಮಾರು ಅರ್ಧ ಮಿಲಿಯನ್‌ಗಳಷ್ಟು ಜನರನ್ನು ಬಲಿತೆಗೆದುಕೊಂಡಿತು. ಕಾಲರಾ ಸಾಂಕ್ರಾಮಿಕಗಳು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿತೆಗೆದುಕೊಂಡವು.

ರಷ್ಯಾ ತನ್ನ ಮಿತ್ರ ಸರ್ಬಿಯಾದ ಬೆಂಬಲಕ್ಕೆ ನಿಂತುಮೊದಲನೆಯ ವಿಶ್ವ ಸಮರ ಪ್ರವೇಶಿಸಿ, ತನ್ನ ಮೈತ್ರಿಗಳಿಂದ ಪ್ರತ್ಯೇಕಿತವಾಗಿದ್ದಾಗಲೂ, ಮೂರು ಕಡೆಯಿಂದಲೂ ಸಮರ ಮಾಡಿತು. ರಷ್ಯಾಗೆ ಸಮರ ಬೇಕಾಗಿರಲಿಲ್ಲ, ಆದರೂ ಯುರೋಪಿನಾದ್ಯಂತ ಜರ್ಮನಿಯ ಸಾಮ್ರಾಜ್ಯಕ್ಕೆ ಪರ್ಯಾಯವೊಂದು ಬೇಕಿತ್ತು. 1916ರಲ್ಲಿ ಸೇನೆಯು ಸೋಲುಂಡಾಗ್ಯೂ, ಹೆಚ್ಚುತ್ತಿರುವ ಸಮರದ ಖರ್ಚುಗಳು, ಸಮರದಲ್ಲಿಯ ಸಾವು ನೋವುಗಳು (ಪರಸ್ಪರ ಸಖ್ಯ ಹೊಂದಿದ್ದ ಪ್ರಬಲ ದೇಶಗಳಲ್ಲಿ ರಷ್ಯಾ ಅತಿ ಹೆಚ್ಚು ನಾಗರಿಕ ಮತ್ತು ಸೇನಾ ಸಾವು ನೋವು ಕಂಡಿತು) ಮತ್ತು ಉನ್ನತ ಹುದ್ದೆಗಳಲ್ಲಿದ್ದವರ ಭ್ರಷ್ಟಾಚಾರ ಮತ್ತು ವಿದ್ರೋಹದ ಕಥೆಗಳ ಕಾರಣ, ಸಾಮ್ರಾಜ್ಯದ ಬಗ್ಗೆ ಜನರಿಗೆ ಮೊದಲೇ ಇದ್ದ ಅಪನಂಬಿಕೆಯು ಇನ್ನಷ್ಟು ಹೆಚ್ಚಾಗಿ, 1917ರ ರಷ್ಯಾ ಚಳುವಳಿಯ ಕಿಡಿಯನ್ನು ಹಚ್ಚಿತು. ಕಾರ್ಮಿಕರು, ರೈತರು ಹಾಗೂ ರೈತರಾಗಿದ್ದ ರಷ್ಯಾದ ಸೇನಾ ಸಿಬ್ಬಂದಿಯವರಿಂದ ದೇಶಾದ್ಯಂತ ಹಲವಾರು ದಂಗೆಗಳ ಸರಣಿಗಳು ಆಯೋಜಿತವಾಗಿದ್ದವು. ಹಲವಾರು ದಂಗೆಗಳನ್ನು ಸೋವಿಯತ್ ಎಂಬ ಪ್ರಜಾ-ಚುನಾಯಿತ ಪರಿಷತ್ತುಗಳು ಆಯೋಜಿಸಿ ನಡೆಸಿದವು.ಫೆಬ್ರುವರಿ ಕ್ರಾಂತಿಯು ರಷ್ಯಾದ ರಾಜ್ಯಭಾರವನ್ನು ಹೊರಗಟ್ಟಿ, ಇದರ ಜಾಗದಲ್ಲಿ ಸ್ವಯಂಘೋಷಿತ ಹಂಗಾಮಿ ಸರ್ಕಾರವೆಂಬ ಹಲವು ರಾಜಕೀಯ ಪಕ್ಷಗಳ ಸಮ್ಮಿಶ್ರ ಕೂಟವು ಬಂದಿತು. ಈ ಪರಿತ್ಯಾಗದೊಂದಿಗೆ ರಷ್ಯಾದಲ್ಲಿ ಸಾಮ್ರಾಜ್ಯಶಾಹಿಯ ಅಂತ್ಯವಾಗಿ, ನಿಕಾಲಸ್ ಮತ್ತು ಅವನ ಪರಿವಾರದವರನ್ನು ಕಾರಾವಾಸದಲ್ಲಿರಿಸಿ ನಂತರ ನಾಗರಿಕ ಸಮರದ ವೇಳೆ ಮರಣದಂಡನೆ ನಡೆಸಲಾಯಿತು. ಶುರುವಿನಲ್ಲಿ ಸೋವಿಯತ್‌ರ ಬೆಂಬಲವನ್ನು ಪಡೆದರೂ ಸಹ, ಹಂಗಾಮಿ ಸರ್ಕಾರವು ಫೆಬ್ರುವರಿ ಕ್ರಾಂತಿಗೆ ಕಾರಣವಾದಂತಹ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಯಿತು. ವ್ಲಾಡಿಮಿರ್ ಲೆನಿನ್ ನಾಯಕತ್ವದಲ್ಲಿ ನಡೆದ ಅಕ್ಟೋಬರ್ ಕ್ರಾಂತಿ ಎಂಬ ಎರಡನೆಯ ಕ್ರಾಂತಿಯು, ಹಂಗಾಮಿ ಸರ್ಕಾರವನ್ನು ಹೊರಗಟ್ಟಿ ವಿಶ್ವದಲ್ಲೇ ಮೊದಲ ಸಮಾಜವಾದಿ ದೇಶವನ್ನು ಸ್ಥಾಪಿಸಿತು.

ಅಕ್ಟೋಬರ್ ಕ್ರಾಂತಿಯ ಬಳಿಕ, ಹೊಸ ಆಡಳಿತ ಹಾಗೂ ಸಮಾಜವಾದಿ ಕ್ರಾಂತಿಕಾರಿಗಳ, ಮೆನ್ಷೆವಿಕ್‌ಗಳ ಮತ್ತು ಶ್ವೇತ ಚಳುವಳಿಗಳ ನಡುವೆ ನಾಗರಿಕ ಸಮರ ನಡೆಯಿತು. ಬ್ರೆಸ್ಟ್-ಲಿಟೊವ್ಸ್ಕ್ ಒಡಂಬಡಿಕೆಯು ಮೊದಲನೆಯ ವಿಶ್ವ ಸಮರದಲ್ಲಿ ಕೇಂದ್ರೀಯ ಬಲಗಳೊಂದಿಗೆ ಕದನಗಳನ್ನು ಅಂತ್ಯಗೊಳಿಸಿತು. ಈ ಒಡಂಬಡಿಕೆಗೆ ಸಹಿ ಹಾಕಿದ ರಷ್ಯಾ ಉಕ್ರೇನ್, ಪೊಲಿಷ್, ಬಾಲ್ಟಿಕ್ ಪ್ರಾಂತ್ಯಗಳನ್ನು ಹಾಗೂ ಫಿನ್ಲೆಂಡ್‌ನ್ನು ಕಳೆದುಕೊಂಡಿತು. ಮಿತ್ರ ಪಡೆಯು ವಾಮಪಕ್ಷ ವಿರೋಧಿ ಶಕ್ತಿಗಳ ಬೆಂಬಲಕ್ಕಾಗಿ ಸೇನಾ ಹಸ್ತಾಕ್ಷೇಪವನ್ನು ನಡೆಸಿತು ಹಾಗೂ ಬಲ್ಷೆವಿಕ್ ಮತ್ತು ಶ್ವೇತ ಚಳುವಳಿಗಳೆರಡೂ ಪರಸ್ಪರ ದೇಶ ಬಹಿಷ್ಕಾರ ಹಾಗೂ ಮರಣದಂಡನಾ ಶಿಕ್ಷೆಗಳನ್ನು ನಡೆಸಿದವು; ಇದನ್ನು ಕ್ರಮವಾಗಿ ಕೆಂಪು ಆತಂಕವಾದ ಮತ್ತು ಶ್ವೇತ ಆತಂಕವಾದ ಎನ್ನಲಾಯಿತು.1921ರ ಕ್ಷಾಮವು ಸುಮಾರು ಐದು ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿತು. ರಷ್ಯಾ ನಾಗರಿಕ ಸಮರದ ಅಂತ್ಯದಲ್ಲಿ, ಸುಮಾರು 20 ಮಿಲಿಯನ್ ಜನರು ಸತ್ತು, ರಷ್ಯಾದ ಆರ್ಥಿಕತೆ ಮತ್ತು ಮೂಲಭೂತ ಸೌಕರ್ಯಗಳ ಸರ್ವನಾಶವಾಗಿತ್ತು. ನಾಗರಿಕ ಸಮರದಲ್ಲಿ ಗೆದ್ದ ನಂತರ, ರಷ್ಯಾದ SFSR ಮೂರು ಸೋವಿಯತ್ ದೇಶಗಳೊಂದಿಗೆ ಒಗ್ಗೂಡಿ ಡಿಸೆಂಬರ್ 1922, 30ರಂದು ಸೋವಿಯತ್‌ ಒಕ್ಕೂಟದ ರಚನೆ ಮಾಡಿಕೊಂಡಿತು. ಸೋವಿಯತ್‌ ಒಕ್ಕೂಟ ರಚಿಸಿದ 15 ದೇಶಗಳ ಪೈಕಿ, ಭೌಗೋಳಿಕವಾಗಿ ಮತ್ತು USSR ನ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನಂಶವನ್ನು ಹೊಂದಿರುವ ಅತಿದೊಡ್ಡ ಗಣರಾಜ್ಯ ರಷ್ಯಾದ ಸೋವಿಯತ್ ಸಂಯುಕ್ತ ಸಮಾಜವಾದಿ ಗಣರಾಜ್ಯ, ತನ್ನ 69-ವರ್ಷಗಳ ಇತಿಹಾಸದುದ್ದಕ್ಕೂ ಸೋವಿಯತ್‌ ಒಕ್ಕೂಟದ ಮೇಲೆ ತನ್ನ ಪ್ರಾಬಲ್ಯವನ್ನು ಮೆರೆಯಿತು; ಕೆಲವೊಮ್ಮೆ USSR ಅನ್ನು ತಪ್ಪಾಗಿ ರಷ್ಯಾ ಎನ್ನಲಾಗುತ್ತಿತ್ತು ಮತ್ತು ಅಲ್ಲಿನ ಜನತೆಯನ್ನು ರಷ್ಯನ್ನರು ಎನ್ನಲಾಗುತ್ತಿತ್ತು.

]

ಸ್ಟಾಲಿನ್ ಸಾವಿನ ನಂತರ, ಸ್ಟಾಲಿನ್‌ನನ್ನು ಟೀಕಿಸಿದ ರಷ್ಯಾದ ನಾಯಕ ನಿಕಿತಾ ಖ್ರುಷ್ಚೆವ್ ಸ್ಟಾಲಿನ್ ನ ಉಸಿರುಕಟ್ಟಿಸುವಂತಹ ನೀತಿಗಳನ್ನು ಸಡಿಲಗೊಳಿಸಿದನು. ಇವನು ಡಿ-ಸ್ಟಾಲಿನ್‌ವಾದವೆಂಬ ಸ್ಟಾಲಿನ್‌ವಾದಿ ರಾಜಕೀಯ ವ್ಯವಸ್ಥೆಯ ನಿರ್ಮೂಲನ ಪ್ರಕ್ರಿಯೆಯನ್ನು ಶುರುಗೊಳಿಸಿ ಗುಲಾಗ್ ಕಾರ್ಮಿಕ ಠಿಕಾಣಿಗಳನ್ನು ರದ್ದುಗೊಳಿಸಿ, ಮಿಲಿಯನ್‌ಗಟ್ಟಲೆ ಕೈದಿಗಳನ್ನು ಬಿಡುಗಡೆಗೊಳಿಸಿದನು.[153] ಸೋವಿಯತ್‌ ಒಕ್ಕೂಟ ಸ್ಪುಟ್ನಿಕ್ ಎಂಬ ವಿಶ್ವದಲ್ಲಿನ ಮೊದಲ ಕೃತಕ ಉಪಗ್ರಹವನ್ನು ಉಡ್ಡಯನಗೊಳಿಸಿತು ಹಾಗೂ ರಷ್ಯಾದ ಗಗನಯಾತ್ರಿ ಯುರಿ ಗಗರಿನ್ ವೊಸ್ಟಾಕ್ 1 ಎಂಬ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನದಲ್ಲಿ ಭೂಮಿಯ ಸುತ್ತ ಬಾಹ್ಯಾಕಾಶ ಪ್ರಯಾಣ ನಡೆಸಿದ ಮೊದಲ ಮಾನವನೆನೆಸಿಕೊಂಡನು.ತುರ್ಕಿಯಲ್ಲಿ ಅಮೆರಿಕಾದ ಜುಪಿಟರ್ ಕ್ಷಿಪಣಿಗಳು ಮತ್ತು ಕ್ಯೂಬಾದಲ್ಲಿ ಸೋವಿಯತ್ ಕ್ಷಿಪಣಿಗಳು ಸ್ಥಾಪಿಸಲಾದ ವಿಚಾರಕ್ಕೆ ಸಂಬಂಧಿಸಿ ಉಭಯ ರಾಷ್ಟ್ರಗಳ ನಡುವೆ ಜಗಳಗಳಾಗಿ, ಅಮೆರಿಕಾದೊಂದಿಗೆ ಉದ್ರಿಕ್ತತೆ ತೀವ್ರಗೊಂಡಿತು. ಖ್ರುಷ್ಚೆವ್ ವಜಾಗೊಂಡ ನಂತರ, ಸಾಮೂಹಿಕ ನಾಯಕತ್ವದ ಆಡಳಿತದ ಇನ್ನೊಂದು ಅವಧಿ ನಡೆಯಿತು, ನಂತರ 1970ರ ದಶಕದಲ್ಲಿ ಲಿಯೊನಿಡ್ ಬ್ರೆಜ್ನೆವ್ ಸೋವಿಯತ್ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಕಲ್ಪಿಸಿಕೊಂಡನು. ಬ್ರೆಜ್ನೆವ್ ಆಡಳಿತದ ಅವಧಿಯಲ್ಲಿ ಆರ್ಥಿಕತೆಯ ಸ್ಥಗಿತ ಮತ್ತು ಅಫ್ಘಾನಿಸ್ತಾನದಲ್ಲಿ ಸೋವಿಯತ್ ಸಮರ, ಆರ್ಥಿಕ ಮೂಲಗಳನ್ನು ಖರ್ಚುಮಾಡಿ ಯಾವುದೇ ಆರ್ಥಪೂರ್ಣ ಸೇನಾ ಮತ್ತು ರಾಜಕೀಯ ಫಲಿತಾಂಶಗಳನ್ನೀಯದೆ ಸುಮ್ಮನೆ ಎಳೆಯುತ್ತಿತ್ತು. ಕಡೆಗೆ, ವಿಶ್ವಾದ್ಯಂತ ವಿರೋಧ ಮತ್ತು ಸೋವಿಯತ್ ಜನತೆಯ ರಾಜಕೀಯ ಬೆಂಬಲದ ಕೊರತೆಯಿಂದಾಗಿ, 1989ರಲ್ಲಿ ಅಫ್ಘಾನಿಸ್ತಾನದಿಂದ ಸೋವಿಯತ್ ಸೇನೆಯನ್ನು ಹಿಂಪಡೆಯಲಾಯಿತು.ಅಮೆರಿಕಾದಲ್ಲಿ ಸೋವಿಯತ್‌-ವಿರೋಧಿ ವಾಗ್ಸಮರ, SDI ಪ್ರಸ್ತಾಪ ಮತ್ತು ಸೆಪ್ಟೆಂಬರ್ 1983ರಲ್ಲಿ ಸೋವಿಯತ್‌ರಿಂದ ಸಿಡಿಸಲಾದ ಕೊರಿಯನ್ ಏರ್ಲೈನ್ಸ್ ೦೦೭ ವಿಮಾನ - ಈ ವಿಚಾರಗಳನ್ನು ಕುರಿತು 1980ರ ಶುರುವಿನಲ್ಲಿ ಸೋವಿಯತ್ ಒಕ್ಕೂಟ ಹಾಗೂ ಅಮೆರಿಕಾದ ನಡುವೆ ಉದ್ರಿಕ್ತತೆಯು ಹಚ್ಚಾಯಿತು. 1985ರಿಂದ ಮುಂದಕ್ಕೆ, ಮಿಖಾಯಿಲ್ ಗೊರ್ಬಚೆವ್ ದೇಶವನ್ನು ಆಧುನೀಕರಣಗೊಳಿಸಲು ಗ್ಲಾಸ್ನೊಸ್ಟ್ (ಮುಕ್ತತೆ) ಮತ್ತು ಪೆರೆಸ್ಟ್ರೊಯಿಕಾ (ಪುನರ್ನಿಮಾಣ) ಎಂಬ ಎರಡು ನೀತಿಗಳನ್ನು ಜಾರಿಗೊಳಿಸಿದರು. USSRನ ಆರ್ಥಿಕತೆ ವಿಭಜನೆಯ ಮುಂಚೆ ವಿಶ್ವದಲ್ಲಿಯೇ ಎರಡನೇ ದೊಡ್ಡ ಆರ್ಥಿಕತೆಯಾಗಿತ್ತು. [155]. ತನ್ನ ಕೊನೆಯ ವರ್ಷಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಕಿರಾಣಿಗಳ ಆಭಾವ, ಭಾರೀ ಪ್ರಮಾಣದ ಕೊರತೆಯ ಬಜೆಟ್ ಮತ್ತು ಹಣ ಪೂರೈಕೆ ಹೆಚ್ಚಾಗಿ ಹಣದುಬ್ಬರ - ಈ ಕಾರಣಗಳಿಂದಾಗಿ ಆರ್ಥಿಕತೆಗೆ ಬಹಳ ತೊಂದರೆಯಾಯಿತು.[157] ಆಗಸ್ಟ್ 1991ರಲ್ಲಿ, ಸೋವಿಯತ್ ಒಕ್ಕೂಟವನ್ನು ಉಳಿಸುವ ಉದ್ದೇಶ ಹೊತ್ತಿದ, ಗೊರ್ಬಚೆವ್ ವಿರುದ್ಧ ನಡೆಸಿ ವಿಫಲವಾದ ಸೇನಾ ದಂಗೆ ಸೋವಿಯತ್‌ ಒಕ್ಕೂಟದ ಕುಸಿತಕ್ಕೆ ನಾಂದಿಯಾಯಿತು.ರಷ್ಯಾದಲ್ಲಿ ಬೊರಿಸ್ ಯೆಲ್ಟ್ಸಿನ್ ಅಧಿಕಾರಕ್ಕೆ ಬಂದು ಸಮಾಜವಾದಿ ಆಡಳಿತಕ್ಕೆ ಅಂತ್ಯ ಸೂಚಿಸಿದರು. USSR ಡಿಸೆಂಬರ್ 1991ರಲ್ಲಿ ಹದಿನೈದು ಸ್ವತಂತ್ರ ಗಣರಾಜ್ಯಗಳಾಗಿ ಭಾಗಗೊಂಡು ಅಧಿಕೃತವಾಗಿ ವಿಭಜನೆಗೊಂಡಿತು. ಜೂನ್ 1991ರಲ್ಲಿ ನಡೆದ ರಷ್ಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ನೇರವಾದ ರಾಷ್ಟ್ರಪತಿ ಚುನಾವಣೆಯಲ್ಲಿ, ಬೊರಿಸ್ ಯೆಲ್ಟ್ಸಿನ್ ರಷ್ಯಾದ ಅಧ್ಯಕ್ಷರಾಗಿ ಚುನಾಯಿತರಾದರು.

USSRನ ವಿಭಜನೆಯ ವೇಳೆ ಹಾಗೂ ಆನಂತರದ ಕಾಲದಲ್ಲಿ ಖಾಸಗೀಕರಣ, ಮಾರುಕಟ್ಟೆ ಮತ್ತು ವಹಿವಾಟು ಸುಧಾರೀಕರಣ ಕ್ರಮಗಳೂ ಸೇರಿದಂತೆ ವ್ಯಾಪಕ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ 
 ರಷ್ಯಾದ ಆರ್ಥಿಕತೆಯು ದೊಡ್ಡ ಬಿಕ್ಟಟ್ಟಿನ ಸ್ಥಿತಿಯಲ್ಲಿ ಸಾಗುತ್ತಿತ್ತು. ಈ ಅವಧಿಯಲ್ಲಿ ಉತ್ಪಾದನೆ ಸಂಕುಚಿತಗೊಂಡಿತ್ತು, 1990ರಿಂದ 1995ರ ಕೊನೆಯ ತನಕ GDP 50% ರಷ್ಟು ಇಳಿತ ಕಂಡಿದ್ದು ಕೈಗಾರಿಕಾ ಉತ್ಪಾದನೆಯ ಪ್ರಮಾಣವೂ ಸಹ 50% ರಷ್ಟು ಇಳಿತ ಕಂಡಿತ್ತು. [161][163] ರಷ್ಯಾ, ಅಮೆರಿಕಾ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಶಿಫಾರಸಿನ ಮೇಲೆ, ಷಾಕ್ ತೆರಪಿಯ ರೀತಿಯಲ್ಲಿ ಆಧಾರಭೂತವಾದ, ಮಾರುಕಟ್ಟೆ-ಆಧಾರಿತ ಸುಧಾರಣೆಯೊಂದಿಗೆ ಮುಂದುವರೆಯುವುದು ಎಂಬುದನ್ನು ಯೆಲ್ಟ್ಸಿನ್ ಅಕ್ಟೋಬರ್ 1991ರಲ್ಲಿ ಘೋಷಿಸಿದರು. [165][167] ಬೆಲೆ ನಿಯಂತ್ರಣಗಳನ್ನು ರದ್ದುಗೊಳಿಸಲಾಯಿತು ಮತ್ತು ಖಾಸಗೀಕರಣವನ್ನು ಶುರುಗೊಳಿಸಲಾಯಿತು. ಮಿಲಿಯನ್‌ನಷ್ಟು ಜನರು ಬಡತನಕ್ಕೊಳಗಾದರು. ವಿಶ್ವ ಬ್ಯಾಂಕಿನ ಪ್ರಕಾರ, ಕೊನೆಯ ಸೋವಿಯತ್ ಯುಗದಲ್ಲಿ 1.5% ರಷ್ಟು ಜನಸಂಖ್ಯೆಯು ಬಡತನದಲ್ಲಿ ಜೀವನ ನಡೆಸುತ್ತಿದ್ದರೆ, 1993ರ ಮಧ್ಯದಲ್ಲಿ 39% ರಿಂದ 49ರಷ್ಟು ಜನಸಂಖ್ಯೆಯು ಬಡತನದಲ್ಲಿ ಜೀವನ ನಡೆಸುತ್ತಿತ್ತು.[169] ವೇತನಗಳ ಪಾವತಿಯಲ್ಲಿ ವಿಳಂಬಗಳು ಒಂದು ಅಂತ್ಯ ಕಾಣದ ಸಮಸ್ಯೆಯಾಗಿ, ಮಿಲಿಯನ್‌ಗಳಷ್ಟು ಜನರು ತಿಂಗಳುಗಳ-ವರ್ಷಗಳ ನಂತರ ತಮ್ಮ ವೇತನಗಳನ್ನು ಪಡೆಯುವಷ್ಟು ವಿಳಂಬವಾಗುತ್ತಿತ್ತು.ವಿಭಜನಾ ಸಮಯದಲ್ಲಿ USSRನ ಜನಸಂಖ್ಯೆಯ ಅರ್ಧದಷ್ಟನ್ನು ಮಾತ್ರ ಹೊಂದಿದ್ದರೂ ಕೂಡ, ರಷ್ಯಾ USSRನ ಬಾಹ್ಯ ಋಣಗಳನ್ನು ತೀರಿಸುವ ಹೊಣೆಯನ್ನು ರಷ್ಯಾ ಕೈಗೆತ್ತಿಕೊಂಡಿತು. ಖಾಸಗೀಕರಣ ಪ್ರಕ್ರಿಯೆಯು ಹೆಚ್ಚಾಗಿ ಉದ್ದಿಮೆಗಳ ಸ್ವಾಮ್ಯತೆಯನ್ನು ರಾಜ್ಯದ ಅಂಗಗಳಿಂದ ಸರ್ಕಾರ ಮತ್ತು ಮಾಫಿಯಾದೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಗುಂಪಿಗೆ ಹಸ್ತಾಂತರಗೊಳಿಸಿತ್ತು. ಆಗಾಗ್ಗೆ, ಹಿಂಸಾತ್ಮಕ ಅಪರಾಧಿ ಗುಂಪುಗಳು ಹತ್ಯೆ-ಸುಲಿಗೆಗಳನ್ನು ಮಾಡಿ, ರಾಜ್ಯಸ್ವಾಮ್ಯದ ಉದ್ದಿಮೆಗಳನ್ನು ತಮ್ಮದಾಗಿಸಿಕೊಂಡವು. ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ದೈನಿಕ ಜೀವನ ನಿಯಮದಂತಾಯಿತು. ಬೃಹತ್ ಪ್ರಮಾಣದ ಬಂಡವಾಳ ಪಲಾಯನದಲ್ಲಿ ಹಲವಾರು ಹೊಸದಾಗಿ ಶ್ರೀಮಂತರಾದ ದೊಂಬಿಕೋರರು ಮತ್ತು ಉದ್ಯಮಿಗಳು ಬಿಲಿಯನ್‌ಗಟ್ಟಲೆ ನಗದು-ಆಸ್ತಿಪಾಸ್ತಿಯನ್ನು ದೇಶದ ಹೊರಗೆ ಒಯ್ದರು.[173] ದೀರ್ಘಕಾಲದ ವ್ಯಾಕುಲದೊಂದಿಗೆ ಸಾಮಾಜಿಕ ಅಧೋಗತಿಯೂ ಬೆರೆತುಕೊಂಡಿತ್ತು. ಸಾಮಾಜಿಕ ಸೇವಾ ವ್ಯವಸ್ಥೆಯು ಕುಸಿದು, ಜನ್ಮ ಪ್ರಮಾಣ ಕಡಿಮೆಯಾಗಿ ಮೃತ್ಯು ಪ್ರಮಾಣ ಹೆಚ್ಚಾಯಿತು. 1990ರ ದಶಕದ ಶುರುವಿನಲ್ಲಿ ಮತ್ತು ಮಧ್ಯದಲ್ಲಿ ತೀವ್ರ ಯದೃಚ್ಛೆ ತಾಂಡವ ನಾಟ್ಯವಾಡುತ್ತಿತ್ತು.ಅಪರಾಧಿ ಗುಂಪುಗಳು ಮತ್ತು ಸಂಘಟಿತ ಅಪರಾಧಗಳು ಎಲ್ಲೆಯಿಲ್ಲದೆ ನಡೆಯುತ್ತಿದ್ದು, ಕೊಲೆ ಮತ್ತು ಇತರೆ ಹಿಂಸಾಸ್ವರೂಪದ ಅಪರಾಧಗಳು ಕೈಮೀರಿ ಹೋಗುತ್ತಿದ್ದವು.

]

ಸಂಯುಕ್ತ ಸರ್ಕಾರವು ಮೂರು ಶಾಖೆಗಳನ್ನು ಹೊಂದಿದೆ:

ಸಂವಿಧಾನದ ಪ್ರಕಾರ, ನ್ಯಾಯಾಲಯದಲ್ಲಿ ಸಾಂವಿಧಾನಿಕ ನ್ಯಾಯವು ಎಲ್ಲಾ ಪ್ರಜೆಗಳ ಸಮಾನತೆಯನ್ನು ಅವಲಂಬಿಸಿದೆ,[199] ನ್ಯಾಯಾಧೀಶರು ಸ್ವತಂತ್ರವಾಗಿರುತ್ತಾರೆ ಮತ್ತು ಕೇವಲ ಕಾನೂನಿನಡಿ ಮಾತ್ರ ಆಧೀನರಾಗಿರುತ್ತಾರೆ,[201] ವಿಚಾರಣೆಗಳು ಮುಕ್ತವಾಗಿದ್ದು ಆರೋಪಿಗೆ ಒಬ್ಬ ವಕೀಲರನ್ನೂ ಒದಗಿಸಿಕೊಡಲಾಗುವುದು.[203] 1996ರಿಂದಲೂ, ರಷ್ಯಾ ರಷ್ಯಾದಲ್ಲಿ ಮರಣದಂಡನಾ ಶಿಕ್ಷೆಯ ಮೇಲೆ ತಾತ್ಕಾಲಿಕ ನಿಷೇಧವನ್ನು ಹೇರಿದೆ, ಆದಾಗ್ಯೂ ಈ ರೀತಿಯ ಶಿಕ್ಷೆಯನ್ನು ಕಾನೂನು ಬಹಿಷ್ಕರಿಸಿಲ್ಲ.

ಅಧ್ಯಕ್ಷರು ಜನಮತದ ಮೂಲಕ ಆರು ವರ್ಷಗಳ ಅವಧಿಗೆ ಚುನಾಯಿತರಾಗಿರುತ್ತಾರೆ (ಎರಡನೆಯ ಅವಧಿಗೆ ಅರ್ಹರಾಗಿದ್ದರೂ ಸಾಂವಿಧಾನಿಕವಾಗಿ ಸತತ ಮೂರನೆಯ ಅವಧಿಗೆ ಬರಲು ಅನರ್ಹರಾಗಿರುತ್ತಾರೆ); ಕಳೆದ 2 ಮಾರ್ಚ್ 2008ರಂದು ಚುನಾವಣೆಯು ನಡೆದಿತ್ತು. ಸರ್ಕಾರದಲ್ಲಿರುವ ಮಂತ್ರಾಲಯಗಳು ಪ್ರಧಾನಿ ಹಾಗೂ ಅವರ ನಿಯೋಗಿಗಳನ್ನು, ಮಂತ್ರಿಗಳನ್ನು ಹಾಗೂ ಆಯ್ಕೆಯಾದ ಕೆಲವು ವ್ಯಕ್ತಿಗಳನ್ನು ಹೊಂದಿರುತ್ತವೆ; ಇವರೆಲ್ಲರನ್ನೂ ಪ್ರಧಾನಿಯ ಶಿಫಾರಸಿನ ಮೇಲೆ ಅಧ್ಯಕ್ಷರು ನೇಮಿಸುವರು (ಪ್ರಧಾನಿಯ ನೇಮಕಾತಿಗೆ ರಾಜ್ಯ ಡುಮಾದ ಅನುಮೋದನೆಯ ಅಗತ್ಯವಿದೆ).
ಸಂಯುಕ್ತ ಸಭೆಯು ರಾಷ್ಟ್ರೀಯ ಶಾಸಕಾಂಗವಾಗಿರುತ್ತದೆ, ಇದರಲ್ಲಿ ಎರಡು ಕೊಠಡಿಗಳುಂಟು; 450-ಸದಸ್ಯರುಳ್ಳ ರಾಜ್ಯ ಡುಮಾ ಮತ್ತು 176-ಸದಸ್ಯರುಳ್ಳ ಸಂಯುಕ್ತ ಪರಿಷತ್ತು. ರಷ್ಯಾದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಯುನೈಟೆಡ್ ರಷ್ಯಾ, ಸಮುದಾಯ ಸ್ವಾಮ್ಯವಾದಿ (ಕಮ್ಯೂನಿಸ್ಟ್‌) ಪಕ್ಷ, ರಷ್ಯಾ ಉದಾರೀ ಗಣರಾಜ್ಯ (ಲಿಬೆರಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ರಷ್ಯಾ) ಮತ್ತು ಕಾನೂನು ರಷ್ಯಾ.

ರಷ್ಯನ್‌ ಒಕ್ಕೂಟ 83 ಸಂಯುಕ್ತ ಪ್ರಾಂತ್ಯಗಳನ್ನು ಹೊಂದಿದೆ. ಸಂಯುಕ್ತ ಪರಿಷತ್ತು ಈ ಪ್ರಾಂತ್ಯಗಳಿಗೆ ಸಮಾನ ಪ್ರಾತಿನಿಧ್ಯವುಂಟು —ಪ್ರತಿ ಪ್ರಾಂತ್ಯಕ್ಕೆ ಇಬ್ಬರು ಪ್ರತಿನಿಧಿಗಳುಂಟು. ಆದಾಗ್ಯೂ, ಅವುಗಳಿಗೆ ಲಭಿಸಿರುವ ಸ್ವಾಯತ್ತತೆಯ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ.

ಸಂಯುಕ್ತ ಪ್ರಾಂತ್ಯಗಳನ್ನು ಏಳು ಸಂಯುಕ್ತ ಜಿಲ್ಲೆಗಳಾಗಿ ವಿಂಗಡಿಸಲಾಗಿದ್ದು, ಪ್ರತಿಯೊಂದು ಜಿಲ್ಲೆಗೂ ರಷ್ಯಾದ ಅಧ್ಯಕ್ಷರಿಂದ ನೇಮಕವಾಗಿರುವ ಒಬ್ಬ ದೂತನ ಆಡಳಿತದಲ್ಲಿರುತ್ದದೆ. ಸಂಯುಕ್ತ ಪ್ರಾಂತ್ಯಗಳಿಗಿಂತಲೂ ಭಿನ್ನವಾಗಿ, ಸಂಯುಕ್ತ ಜಿಲ್ಲೆಗಳು ಸರ್ಕಾರದ ಉಪರಾಷ್ಟ್ರೀಯ ಮಟ್ಟದ್ದಲ್ಲ, ಬದಲಿಗೆ ಸಂಯುಕ್ತ ಸರ್ಕಾರದ ಆಡಳಿತ ಮಟ್ಟದ್ದಾಗಿದೆ. ಸಂಯುಕ್ತ ಜಿಲ್ಲೆಗಳ ದೂತರು ಸಂಯುಕ್ತ ಪ್ರಾಂತ್ಯಗಳು ಮತ್ತು ಸಂಯುಕ್ತ ಸರ್ಕಾರಗಳ ನಡುವೆ ಸಂಪರ್ಕಾಧಿಕಾರಿಗಳಾಗಿರುತ್ತಾರೆ ಮತ್ತು ಸಂಯುಕ್ತ ಪ್ರಾಂತ್ಯಗಳು ಸಂಯುಕ್ತ ಕಾನೂನು-ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿಯಾಗಿರುತ್ತದೆ.

ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ರಷ್ಯನ್ ಒಕ್ಕೂಟವು ಹಿಂದಿನ ಸೋವಿಯತ್ ಒಕ್ಕೂಟದ ಕಾನೂನುಬದ್ಧ ದಾಯಿತ್ವವನ್ನು ಹೊಂದಿರುವಂತೆ ಪರಿಗಣಿಸಲಾಗಿದೆ. ರಷ್ಯಾ USSRನ ಎಲ್ಲಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮುಂದುವರೆಸುತ್ತಿದೆ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿರುವ USSRನ ಖಾಯಂ ಸದಸ್ಯತ್ವವನ್ನು ತನ್ನದಾಗಿಸಿಕೊಂಡು, ಅನ್ಯ ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ USSRನ ಸದಸ್ಯತ್ವವನ್ನು, ಅಂತಾರಾಷ್ಟ್ರೀಯ ಒಡಂಬಡಿಕೆಗಳಡಿಯಿರುವ ಹಕ್ಕು-ಕಟ್ಟುಪಾಡುಗಳನ್ನು, ಆಸ್ತಿ-ಋಣಗಳನ್ನು ತನ್ನದಾಗಿಸಿಕೊಂಡಿದೆ.ರಷ್ಯಾ ಬಹುಮುಖಿ ವಿದೇಶ ನೀತಿಯನ್ನು ಹೊಂದಿದೆ. ಅದು 178 ದೇಶಗಳೊಂದಿಗೆ ರಾಜತಾಂತ್ರಿಕೆ ಸಂಬಂಧಗಳನ್ನು ಇಟ್ಟುಕೊಂಡಿದೆ[220] ಮತ್ತು 140 ದೂತಾವಾಸಗಳಿವೆ. ರಷ್ಯಾದ ವಿದೇಶಾಂಗ ನೀತಿಯನ್ನು ಅಧ್ಯಕ್ಷರು ನಿರ್ಧರಿಸಿ ವಿದೇಶಾಂಗ ಸಚಿವಾಲಯವು ಜಾರಿಗೊಳಿಸುತ್ತದೆ. 

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರಲ್ಲಿ ಒಂದಾಗಿರುವ ರಷ್ಯಾ, ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಳ ಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಅಂತಾರಾಷ್ಟ್ರೀಯ ಘರ್ಷಣೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಮಧ್ಯಪ್ರಾಚ್ಯದ ಚತುಷ್ಕ, ಉತ್ತರ ಕೊರಿಯಾದೊಂದಿಗೆ ಷಟ್ಪಕ್ಷೀಯ ಮಾತುಕತೆಗಳು ನಡೆಸಿ, ಕೊಸೊವೊ ಘರ್ಷಣೆಯ ಪರಿಹಾರವನ್ನು ಉತ್ತೇಜಿಸಿ ಮತ್ತು ಪರಮಾಣು ಶಸ್ತ್ರ ಪ್ರಸರಣ ಸಮಸ್ಯೆಯ ಬಗೆಹರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ಉದ್ಯಮಶೀಲ ರಾಷ್ಟ್ರಗಳ ಎಂಟರ ಗುಂಪು (G8) ರಷ್ಯಾ ಸಹ ಸದಸ್ಯವಾಗಿದೆ, ಜೊತೆಗೆ ಯೂರೋಪ್‌ ಪರಿಷತ್ತು, OSCE ಮತ್ತು APEC ಗುಂಪುಗಳ ಸದಸ್ಯವೂ ಆಗಿದೆ. CIS, EurAsEC, CSTO ಮತ್ತು SCO ಮುಂತಾದ ವಲಯವಾರು ಸಂಘಟನೆಗಳಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಿದೆ. ಮಾಜಿ ಅಧ್ಯಕ್ಷ (ಇಂದಿನ ಪ್ರಧಾನಿ) ವ್ಲಾಡಿಮಿರ್‌ ಪುಟಿನ್ ರಷ್ಯಾ ಮತ್ತು EU ನಡುವೆ ನಾಲ್ಕು ಸಾಮಾನ್ಯ ಅಂತರಗಳ ಸ್ಥಾಪನೆಯೂ ಸೇರಿದಂತೆ ರಾಜತಾಂತ್ರಿಕ ಸಹಯೋಗ, ಜೊತೆಗೆ ಹಲವಾರು ಪ್ರಮಾಣಗಳ ಏಕೀಕರಣದ ಪ್ರಸ್ತಾಪವನ್ನು ಸಮರ್ಥಿಸಿದ್ದರು. ಸೋವಿಯತ್‌ ಒಕ್ಕೂಟವು ಕುಸಿದಾಗಿನಿಂದಲೂ, ರಷ್ಯಾ NATOದೊಂದಿಗೆ ಸ್ನೇಹಮಯವಾದರೂ ಲವಲವಿಕೆಯ ಸಂಬಂಧಗಳು ಇಟ್ಟುಕೊಂಡು ಬಂದಿದೆ. 26 ಮಿತ್ರ ದೇಶಗಳೊಂದಿಗೆ ರಷ್ಯಾ ಒಗ್ಗೂಡಿ ಜಂಟಿ ಸಹಕಾರಕ್ಕಾಗಿ ಕಾರ್ಯ ನಿರ್ವಹಿಸಲು 2002ರಲ್ಲಿ NATO-ರಷ್ಯಾ ಪರಿಷತ್ತಿನ ರಚನೆಯಾಯಿತು.

ರಷ್ಯಾ ವಿದೇಶಗಳಲ್ಲಿರುವ ಸೋವಿಯತ್ ಆಸ್ತಿಗಳನ್ನು ತನ್ನದಾಗಿಸಿಕೊಂಡಿತು ಹಾಗೂ ಸೋವಿಯತ್‌ ಒಕ್ಕೂಟದ ಉತ್ಪಾದನಾ ಘಟಕಗಳು ಮತ್ತು ರಕ್ಷಣಾ ಕೈಗಾರಿಕೆಗಳು ರಷ್ಯಾದಲ್ಲಿವೆ. ರಷ್ಯಾದ ಸೇನೆಯು ಭೂ ಸೇನೆ, ನೌಕಾ ಪಡೆ ಮತ್ತು ವಾಯು ಪಡೆಗಳಾಗಿ ವಿಂಗಡಿಸಲಾಗಿದೆ. ಜೊತೆಗೆ ಸೇವೆಯ ಮೂರು ಸ್ವತಂತ್ರ ಅಂಗಗಳೂ ಸಹ ಇವೆ: ರಣನೈತಿಕ ರಾಕೆಟ್ ಪಡೆ, ಸೇನಾ ಬಾಹ್ಯಾಕಾಶ ಪಡೆ ಮತ್ತುವಾಯುಗಾಮಿ ಪಡೆ 2006ರಲ್ಲಿ, ಸೇನೆಯಲ್ಲಿ ಸಕ್ರಿಯ ಸೇವೆಯಲ್ಲಿ 1.037 ಮಿಲಿಯನ್ ನೌಕರರಿದ್ದರು.

ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪರಮಾಣು ಶಸ್ತ್ರಗಳ ದಾಸ್ತಾನುಗಳನ್ನು ಇಟ್ಟುಕೊಂಡಿದೆ. ಇದು ಎರಡನೆಯ ಅತಿಹೆಚ್ಚು ಪ್ರಕ್ಷೇಪಕ ಕ್ಷಿಪಣಿ ಜಲಾಂತರಗಾಮಿಗಳ ದಾಸ್ತಾನು ಹೊಂದಿದೆ ಮತ್ತು ಅಮೆರಿಕಾ ಹೊರತುಪಡಿಸಿ, ಆಧುನಿಕ ರಣನೈತಿಕ ಬಾಂಬರ್ ಪಡೆಯನ್ನು ಹೊಂದಿರುವ ದೇಶವಾಗಿದೆ. ಈ ದೇಶವು ಹೆಚ್ಚಿನ ಪ್ರಮಾಣದಲ್ಲಿ ಸಂಪೂರ್ಣವಾಗಿ ಸ್ಥಳೀಯ ಶಸ್ತ್ರಗಳ ಉದ್ಯಮವನ್ನು ಹೊಂದಿದ್ದು, ಅದರ ಸೇನಾ ಉಪಕರಣಗಳನ್ನು ತಾನೇ ಉತ್ಪಾದಿಸುತ್ತದೆ. ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಪ್ರಮಾಣದ ಶಸ್ತ್ಗಗಳ ಪೂರೈಕದಾರನಾಗಿದೆ, 2001ರಿಂದಲೂ ಈ ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದು, ವಿಶ್ವಾದ್ಯಂತ ಶಸ್ತ್ರಗಳ ಮಾರಾಟದಲ್ಲಿ ಸುಮಾರು % 30ರಷ್ಟು ಪಾಲು ರಷ್ಯಾದ್ದು, ಸುಮಾರು 80 ದೇಶಗಳಿಗೆ ಶಸ್ತ್ರಗಳನ್ನು ರಫ್ತು ಮಾಡಿದೆ. ಸೋವಿಯತ್ ನೀತಿಯ ಅನುಸಾರ, 2007ರ ಮುಂಚೆ, 18-27 ವಯಸ್ಸಿನ ಎಲ್ಲಾ ಪುರುಷ ನಾಗರಿಕರಿಗೆ ಎರಡು ವರ್ಷಗಳ ಕಾಲ ಕಡ್ಡಾಯ ಸೇನೆ ಸೇವೆಗಾಗಿ ಸೇರ್ಪಡೆಯಾಗಬೇಕಿತ್ತು.ಇದರೊಂದಿಗೆ ಹಲವಾರು ಸಮಸ್ಯೆಗಳಿದ್ದವು, ಉದಾಹರಣೆಗೆ ಡೆಡೊವಿಸ್ ಚಿನಾ (ಸಾಂಸ್ಥಿಕ ಭೌತಿಕ ಮತ್ತು ಮಾನಸಿಕ ಹೀಯಾಳಿಕೆ), ಈ ಕಾರಣಕ್ಕಾಗಿ ಸಶಸ್ತ್ರ ಪಡೆಗಳು ಸೈನಿಕ ಸೇವಾ ಅವಧಿಯನ್ನು 2007ರಲ್ಲಿ 18 ತಿಂಗಳುಗಳಿಗೆ ಆನಂತರ 2008ರಲ್ಲಿ 12 ತಿಂಗಳುಗಳಿಗೆ ಕಡಿಮೆಗೊಳಿಸಿದವು, ಜೊತೆಗೆ 2010ರೊಳಗೆ ಗುತ್ತಿಗೆ ಸೇವಾ ಸೈನಿಕರ ಪ್ರಮಾಣವನ್ನು ಸಶಸ್ತ್ ಪಡೆಗಳ ಸಿಬ್ಬಂದಿಯ ೭೦% ಕ್ಕೆ ಹಚ್ಚಿಸುವ ಯೋಜನೆಯಿದೆ. ಕೊನೆಯ ಆರು ವರ್ಷಗಳಲ್ಲಿ ರಷ್ಯಾದ ರಕ್ಷಣಾ ವೆಚ್ಚವು ನಾಲ್ಕು ಪಟ್ಟು ಹೆಚ್ಚಾಗಿದೆ. 2008ರಲ್ಲಿ ಅಧಿಕೃತ ಸರ್ಕಾರಿ ಸೇನಾ ಖರ್ಚು $40 ಬಿಲಿಯನ್ ಆಗಿ, ವಿಶ್ವದಲ್ಲೇ ಎಂಟನೆಯ ಅತಿಹೆಚ್ಚು ಖರ್ಚಾಗಿದೆ, ಅಮೆರಿಕಾದ ಗುಪ್ತಪಡೆಯೂ ಸೇರಿದಂತೆ ವಿವಿಧ ಮೂಲಗಳು ಮತ್ತು ಅಂತಾರಾಷ್ಟ್ರೀಯ ರಣತಂತ್ರ ಅಧ್ಯಯನಾ ಸಂಸ್ಥೆಯ ಪ್ರಕಾರ, ರಷ್ಯಾದ ಸೇನಾ ಖರ್ಚು ಇನ್ನಷ್ಟೂ ಹೆಚ್ಚಾಗಿರುವಂತೆ ಅಂದಾಜು ಮಾಡಿದೆ.
ಪ್ರಸ್ತುತ, ಸೇನೆಯು ಹಚ್ಚಿನ ಪ್ರಮಾಣದಲ್ಲಿ ಶಸ್ತ್ರಗಳ ಆಧುನೀಕರಣಕ್ಕೆ ಒಳಗಾಗುತ್ತಿದ್ದು, 2006ರಿಂದ 2015ರ ಅವಧಿಯಲ್ಲಿ ಸೇನಾ ಉಪಕರಣಗಳಿಗಾಗಿ ಸುಮಾರು $200 ಬಿಲಿಯನ್ ಖರ್ಚು ಮಾಡಲಿದೆ. 

ಹಾಲಿ ರಕ್ಷಣಾ ಮಂತ್ರಿ ಅನಾಟೊಲಿ ಸರ್ಡ್ಯುಕೊವ್ ನೇತೃತ್ವದಲ್ಲಿ ಸೇನೆಯ ಸಂಘಟನೆ ಮತ್ತು ದಕ್ಷತೆಯನ್ನು ಉನ್ನತೀಕರಿಸಲು ಹಚ್ಚು ಪ್ರಮಾಣದ ಸುಧಾರಣೆಗಳು ನಡೆಯುತ್ತಿವೆ. ಅವರ ಸುಧಾರಣಾ ಕಾರ್ಯಕ್ರಮದ ಹಿಂದಿನ ಉದ್ದೇಶ ಹೆಚ್ಚು ಪ್ರಮಾಣದಲ್ಲಿ ಜನತಾ ಸಂಘಟಿತ ಸೇನೆಯನ್ನು ಸಣ್ಣ ಪ್ರಮಾಣದ ಗುತ್ತಿಗೆ ಸೇನೆಯನ್ನಾಗಿ ಪರಿವರ್ತಿಸುವುದು. ಸರ್ಡ್ಯುಕೊವ್ ಕೇಂದ್ರೀಯ ಆಡಳಿತದಲ್ಲಿನ ಸಿಬ್ಬಂದಿಯ ಪ್ರಮಾಣವನ್ನು % 30ರಷ್ಟು ಕಡಿಮೆಗೊಳಿಸುವರು, ಇದರಿಂದ ಜನರಲ್‌ಗಳು ಮತ್ತು ಕರ್ನಲ್‌ಗಳು ಅಲಂಕರಿಸಿರುವ ಹೆಚ್ಚು ಹುದ್ದೆಗಳು ಮಾಯವಾಗುವ ಸಾಧ್ಯತೆಗಳಿವೆ. ರಷ್ಯಾದ ಅಧಿಕಾರಿ ಕಾರ್ಜ್‌ಗಳ ಸಂಖ್ಯೆಯಲ್ಲಿ ಕಡಿತ ಮಾಡಲು ಇಚ್ಛಿಸುತ್ತಾರೆ. ಪ್ರಸ್ತುತ ಪ್ರತಿ ಇಬ್ಬರು ಮನುಷ್ಯರಿಗೆ ಒಬ್ಬ ಅಧಿಕಾರಿಯಿದ್ದಾರೆ. ಸುಧಾರಣೆಯ ನಂತರ ಪ್ರತಿ 15 ಜನರಿಗೆ ಒಬ್ಬ ಅಧಿಕಾರಿಯಿರಬೇಕು, ಪಾಶ್ಚಿಮಾತ್ಯ ಸೇನೆಗಳಲ್ಲಿಯ ತರಹ. ಈ ಸುಧಾರಣೆಯ ಅರ್ಥ 200,000 ನೌಕರಿಗಳ ನಷ್ಟ ಮತ್ತು ಇದು ಹಳೆಯ ಹುಲಿಗಳಿಂದ ತೀವ್ರ ರಾಜಕೀಯ ವಿರೋಧವನ್ನು ಎದುರಿಸುತ್ತಿದೆ. ಈ ಒತ್ತಡದ ಕಾರಣ ಈ ಕಡಿತಗಳನ್ನು ಜಾರಿಗೊಳಿಸುವ ಇಸವಿಯನ್ನು 2012ರಿಂದ to 2016ಕ್ಕೆ ಮುಂದೂಡಲಾಗಿದೆ. ತೀವ್ರ ಹಾಗು ದೀರ್ಘಕಾಲದಿಂದ ಇರುವ ರಷ್ಯಾದ ಅಸಮರ್ಪಕ ರಕ್ಷಣಾ ಔದ್ಯಮಿಕ ಪ್ರಾಪ್ತಿ ನೀತಿ ಹಾಗೂ ಇತರೆ ಪ್ರಕರಣಗಳ ಬಗೆಹರಿಸುವಿಕೆಯು ಸರ್ಡ್ಯುಕೊವ್‌ರ ಪ್ರಮುಖ ಧ್ಯೇಯವಾಗಿದೆ.

ರಷ್ಯಾ ವಿಶ್ವದಲ್ಲೇ ಹೆಚ್ಚು ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪಗಳು, ಎರಡನೆಯ ಅತಿಹೆಚ್ಚು ಇದ್ದಿಲಿನ ನಿಕ್ಷೇಪಗಳು ಮತ್ತು ಎಂಟನೆಯ ಅತಿ ಹೆಚ್ಚು ತೈಲ ನಿಕ್ಷೇಪಗಳು ಹೊಂದಿದೆ. ಇದು ವಿಶ್ವದಲ್ಲಿ ಅತಿಹೆಚ್ಚು ನೈಸರ್ಗಿಕ ಅನಿಲದ ರಫ್ತುದಾರ ಹಾಗೂ ಎರಡನೆಯ ಅತಿಹೆಚ್ಚು ತೈಲ ರಫ್ತುದಾರನಾಗಿದೆ. ರಷ್ಯಾದ ರಫ್ತಿನ 80% ಕ್ಕೂ ಹೆಚ್ಚು ಅಂಶವು ತೈಲ, ನೈಸರ್ಗಿಕ ಅನಿಲ, ಲೋಹಗಳು ಮತ್ತು ಮರದ ಚೌಬೀನೆಗಳದ್ದಾಗಿದೆ. ಆದಾಗ್ಯೂ, 2003ರಿಂದ, ಆಂತರಿಕ ಮಾರುಕಟ್ಟೆಗಳು ಸದೃಢಗೊಳ್ಳುತ್ತಿದ್ದ ಕಾರಣ, ನೈಸರ್ಗಿಕ ಸಂಪನ್ಮೂಲಗಳ ರಫ್ತು ಇಳಿಮುಖ ಕಂಡಿತು. ಇಂಧನದ ಬೆಲೆಗಳು ಹೆಚ್ಚಾಗಿದ್ದಾಗ್ಯೂ, ತೈಲ ಮತ್ತು ಅನಿಲವು ರಷ್ಯಾದ GDPಯ ಕೇವಲ ಶೇಖಡಾ 5.7ರಷ್ಟು ಮಾತ್ರ ತುಂಬಿಸುತ್ತದೆ ಮತ್ತು 2011ರೊಳಗೆ ಇದು 3.7% ಕ್ಕೆ ಇಳಿಯಲಿದೆ ಎಂದು ಸರ್ಕಾರವು ಅಂದಾಜು ಮಾಡಿದೆ. ರಷ್ಯಾ ತನ್ನ ಆರ್ಥಿಕ ವೃದ್ಧಿಯಲ್ಲಿ ಇತರೆ ಹೆಚ್ಚು ಸಂಪನ್ಮೂಲಗಳುಳ್ಳ ದೇಶಗಳಿಗಿಂತಲೂ ಹೆಚ್ಚು ಮುನ್ನಡೆ ಸಾಧಿಸಿದೆ, ಇದರ ಕಾರಣ ದೀರ್ಘ ಸಂಪ್ರದಾಯದ ಶಿಕ್ಷಣ, ವಿಜ್ಞಾನ ಮತ್ತು ಉದ್ಯಮಗಳು. ದೇಶವು ಯೂರೋಪ್‌ನ ಇತರೆ ದೇಶಗಳಿಗಿಂತಲೂ ಹೆಚ್ಚು ಉನ್ನತ ಶಿಕ್ಷಣ ಪದವೀಧರರನ್ನು ಹೊಂದಿದೆ.

]
ದೇಶದ ಆರ್ಥಿಕ ಬೆಳವಣಿಗೆಯು ಭೌಗೋಳಿಕವಾಗಿ ಸಮಾನಾಗಿಲ್ಲ, ಮಾಸ್ಕೋ ಪ್ರಾಂತ್ಯ ದೇಶದ GDPಗೆ ಸೂಕ್ತವಲ್ಲದ, ಅತಿಹೆಚ್ಚು ಪ್ರಮಾಣದ ಕೊಡುಗೆಯನ್ನು ನೀಡುತ್ತಿದೆ. ರಷ್ಯಾದ ಹೆಚ್ಚುವರಿ ವಲಯಗಳು, ಅದೂ ಸೈಬೀರಿಯಾದಲ್ಲಿರುವಂತಹ ಗ್ರಾಮಾಂತರ ಮತ್ತು ದೇಶೀಯ ಸಮುದಾಯಗಳು, ಬಹಳ ಹಿಂದುಳಿದಿವೆ.ಆದಾಗ್ಯೂ, ಮಧ್ಯಮ ವರ್ಗದ ಜನಸಂಖ್ಯೆಯು 2000ರಲ್ಲಿ ಕೇವಲ ಎಂಟು ಮಿಲಿಯನ್ ಇದ್ದದ್ದು 2006ರಲ್ಲಿ 55 ಮಿಲಿಯನ್‌ಗೆ ಏರಿದೆ. ಅಮೆರಿಕಾದ ನಂತರ ರಷ್ಯಾ ಅತಿಹೆಚ್ಚು ಶತಕೋಟ್ಯಾಧೀಶರನ್ನು ಹೊಂದಿದೆ, 2007ರಲ್ಲಿ 50 ಶತಕೋಟ್ಯಾಧೀಶರು ಸೇರ್ಪಡೆಯಾಗಿ ಒಟ್ಟು 110 ಶತಕೋಟ್ಯಾಧೀಶರಾಗಿದ್ದರು.

ಕಳೆದ ಐದು ವರ್ಷಗಳಿಂದ, ನಿಶ್ಚಿತ ಬಂಡವಾಳ ಹೂಡಿಕೆಯು ಪ್ರತಿ ವರ್ಷಕ್ಕೆ 10 % ರಷ್ಟು ವಾಸ್ತವಿಕ ಲಾಭವನ್ನು ಹಾಗೂ ವೈಯಕ್ತಿಕ ಆದಾಯಗಳು 12% ರಷ್ಟು ವಾಸ್ತವಿಕ ಲಾಭವನ್ನು ಗಳಿಸಿವೆ.ಈ ಅವಧಿಯಲ್ಲಿ, ಬಡತನವು ಕಡಿಮೆಯಾಗುತ್ತ, ಮಧ್ಯಮ ವರ್ಗವು ಹೆಚ್ಚಾಗುತ್ತಿದೆ. ರಷ್ಯಾ 1998ರ ಹಣಕಾಸು ಬಿಕ್ಕಟ್ಟಿನ ನಂತರ ತನ್ನ ಅಂತಾರಾಷ್ಟ್ರೀಯ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಿದೆ. ರಷ್ಯಾದ ಬೆಳವಣಿಗೆಯ ಪ್ರಮುಖ ಕಾರಣ ಉತ್ಪಾದಕತೆಯಲ್ಲಿ ಸದೃಢ ಬೆಳವಣಿಗೆ, ವಾಸ್ತವಿಕ ವೇತನಗಳು ಮತ್ತು ಬಳಕೆ. ರಷ್ಯಾ 1999ರಿಂದಲೂ ದೃಢ ಆರ್ಥಿಕತೆಯನ್ನು ಹೊಂದಿದ್ದಾಗ್ಯೂ, ವಿಶ್ವ ಬ್ಯಾಂಕ್ ರಷ್ಯಾದ ಆರ್ಥಿಕತೆಯ ಮುಂದಿರುವ ಹಲವಾರು ಸವಾಲುಗಳನ್ನು ಪಟ್ಟಿ ಮಾಡಿದೆ: ಆರ್ಥಿಕತೆಯ ವೈವಿಧ್ಯತೆ, ಸಣ್ಣ ಮತ್ತು ಮಧ್ಯಮ-ಪ್ರಮಾಣದ ಉದ್ದಿಮೆಗಳಿಗೆ ಪ್ರೋತ್ಸಾಹ, ಮಾನವ ಸಂಪನ್ಮೂಲಗಳ ಸಂಪಾದನೆ ಮತ್ತು ಸಾಂಸ್ಥಿಕ ಆಡಳಿತವನ್ನು ಉತ್ತಮಗೊಳಿಸುವುದು. ಹಣದುಬ್ಬರವು 2006ರಲ್ಲಿ 9% ರಷ್ಟಿದ್ದದ್ದು 2007ರ ಅಂತ್ಯದಲ್ಲಿ 12% ಕ್ಕೆ ಉಬ್ಬಿತು. ಏರುತ್ತಿರುವ ಆಹಾರದ ಬೆಲೆಗಳೆಂಬ ಪ್ರಮುಖ ಕಾರಣದಿಂದ ಹಣದುಬ್ಬರದ ಪ್ರವೃತ್ತಿಯು 2008ರ ಮೊದಲ ತ್ರೈಮಾಸಿಕದಲ್ಲಿಯೂ ಮುಂದುವರೆಯಿತು. ಆರ್ಥಿಕ ಬೆಳವಣಿಗೆಗೆ ಪ್ರಮುಖ ವಿಘ್ನವಾಗಿರುವುದು ಬಹಳ ವರ್ಷಗಳಿಂದಲೂ ಕಡೆಗಾಣಿಸಲಾದ ವಿಚಾರವಾಗಿರುವ ಮೂಲಭೂತ ಸೌಕರ್ಯಗಳ ಸಮಸ್ಯೆ. 2020ರೊಳಗೆ $1 ಟ್ರಿಲಿಯನ್ ಮೊತ್ತವನ್ನು ಮೂಲಭೂತ ಸೌಕರ್ಯಕ್ಕಾಗಿ ಹೂಡಲಿದೆ ಎಂದು ಸರ್ಕಾರ ತಿಳಿಸಿದೆ.

]
ರಷ್ಯನ್‌ ಒಕ್ಕೂಟವು ವೈವಿಧ್ಯಮಯ, ಬಹು-ಜನಾಂಗೀಯ ಸಮಾಜವಾಗಿದ್ದು, ಸುಮಾರು 160 ವಿವಿಧ ಜನಾಂಗೀಯ ಗುಂಪುಗಳು ಮತ್ತು ದೇಶೀಯ ಗುಂಪುಗಳಿಗೆ ತಾಣವಾಗಿದೆ. ರಷ್ಯಾದ ಜನಸಂಖ್ಯೆಯು ಹೆಚ್ಚಾಗಿದ್ದರೂ ಸಹ, ದೇಶವು ಭಾರೀ ವಿಸ್ತೀರ್ಣವನ್ನು ಹೊಂದಿರುವ ಕಾರಣ ಅದರ ಸಾಂಧ್ರತೆ ಕಡಿಮೆ. ಯೂರೋಪೀಯ ರಷ್ಯಾದಲ್ಲಿ ಉರಾಳ್ ಪರ್ವತ ಶ್ರೇಣಿಯ ಬಳಿ ಹಾಗೂ ನೈಋತ್ಯ ಸೈಬೀರಿಯಾ ವಲಯಗಳಲ್ಲಿ ಜನಸಾಂದ್ರತೆಯು ಅತಿಹೆಚ್ಚಾಗಿರುತ್ತದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ರಷ್ಯನ್‌ ಒಕ್ಕೂಟ on 1 ಜನವರಿ 2009ರಂದು ರಷ್ಯಾ ಒಕ್ಕೂಟದ ನಿವಾಸಿಗಳ ಸಂಖ್ಯೆಯು 141,903,979ರಷ್ಟಿತ್ತು. 2008ರಲ್ಲಿ, ಜನಸಂಖ್ಯೆಯು 121,400 ಅಥವಾ 0.085% ರಷ್ಟು ಕಡಿಮೆಯಾಯಿತು.(2007ರಲ್ಲಿ - 212,000 ಅಥವಾ 0.15% ರಷ್ಟು ಮತ್ತು 2006ರಲ್ಲಿ - 532,600 ಅಥವಾ 0.37 %ರಷ್ಟು). 2008ರಲ್ಲಿ ವಲಸೆ ಪ್ರವೃತ್ತಿಯು 2.7% ರಷ್ಟು ಹೆಚ್ಚುತ್ತಲೇ ಇತ್ತು, 281,615 ವಲಸಿಗರು ರಷ್ಯನ್‌ ಒಕ್ಕೂಟಕ್ಕೆ ಆಗಮಿಸಿದರು, ಇದರಲ್ಲಿ % 95ರಷ್ಟು ಜನರು CIS ದೇಶಗಳಿಂದ ಬಂದರು, ಇವರಲ್ಲಿ ಬಹುಪಾಲು ರಷ್ಯನ್ನರು ಅಥವಾ ರಷ್ಯನ್ ಭಾಷಿಕರು. ರಷ್ಯನ್ ವಲಸಿಗರ ಸಂಖ್ಯೆಯು 16% ರಷ್ಟು ಕಡಿಮೆಯಾಗಿ, 39,508ಕ್ಕೆ ಇಳಿಯಿತು, ಇವುಗಳಲ್ಲಿ 66% ರಷ್ಟು ಜನರು ಅನ್ಯ CIS ದೇಶಗಳಿಗೆ ಹೋದರು. ರಷ್ಯಾದಲ್ಲಿನ ಹಿಂದಿನ ಸೋವಿಯತ್ ರಾಜ್ಯಗಳಿಂದ ಸುಮಾರು 10 ಮಿಲಿಯನ್ ಅಕ್ರಮ ವಲಸಿಗರು ಸಹ ಇದ್ದಾರೆ. ಸರಿಸುಮಾರು 116 ಮಿಲಿಯನ್ ಜನಾಂಗೀಯ ರಷ್ಯನ್ನರು ರಷ್ಯಾದಲ್ಲಿ ವಾಸಿಸುತ್ತಿದ್ದಾರೆ ಮತ್ತು ಸುಮಾರು 20 ಮಿಲಿಯನ್‌ಗೂ ಹೆಚ್ಚು ಜನರು ಅಂದಿನ ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಗಣರಾಜ್ಯದಲ್ಲಿ, ಬಹುಮಟ್ಟಿಗೆ ಉಕ್ರೇನ್ ಮತ್ತು ಕಜಖ್‌ಸ್ತಾನ್‌ದಲ್ಲಿ ವಾಸಿಸುತ್ತಿದ್ದಾರೆ. 

ಜನಸಂಖ್ಯೆಯ 73% ರಷ್ಟು ನಗರ ವಲಯಗಳಲ್ಲಿ ವಾಸಿಸುತ್ತದೆ. 2002 ಜನಗಣತಿಯ ಪ್ರಕಾರ, ರಷ್ಯಾದ ಅತಿ ದೊಡ್ಡ ನಗರಗಳು ಮಾಸ್ಕೋ (10,126,424 ನಿವಾಸಿಗಳು) ಮತ್ತು ಸೇಂಟ್ ಪೀಟರ್ಸ್‌ಬರ್ಗ್‌ (4,661,219 ನಿವಾಸಿಗಳು). ಹನ್ನೊಂದು ಇತರೆ ನಗರಗಳು ಒಂದರಿಂದ ಎರಡು ಮಿಲಿಯನ್ ನಿವಾಸಿಗಳನ್ನು ಹೊಂದಿವೆ: ಚೆಲ್ಯಾಬಿನಸ್ಕ್, ಕಜಾನ್, ನೊವೊಸಿಬಿರ್ಸ್ಕ್‌, ನಿಜ್ನಿ ನವ್‌ಗೊರೊಡ್‌, ಒಮಸ್ಕ್, ಪೆರ್ಮ್, ರಾಸ್ಟೊವ್-ಆನ್-ಡಾನ್, ಸಾಮರಾ, ಊಫಾ, ವೊಲ್ಗೊಗ್ರಾಡ್ ಮತ್ತು ಎಕಟೆರಿನ್‌ಬರ್ಗ್.

ರಷ್ಯಾದ ಜನಸಂಖ್ಯೆಯು ಅತಿ 1991ರಲ್ಲಿ ಅತಿ ಹೆಚ್ಚು ಅಂದರೆ 148,689,000ದಷ್ಟಿತ್ತು, ಆದರೆ 90ರ ದಶಕದ ಮಧ್ಯದಲ್ಲಿ ತೀವ್ರವಾಗಿ ಕಡಿಮೆಯಾಗುತ್ತಾ ಬಂದಿತು. ಈ ಇಳಿತವು ನಿಧಾನಿಸಿ ಕಳೆದ ಇತ್ತೀಚಿಗಿನ ವರ್ಷಗಳಲ್ಲಿ ಜಡವಾಗಿದೆ, ಕಾರಣ ಕಡಿಮೆಯಾದ ಮರಣ ಪ್ರಮಾಣ, ಹೆಚ್ಚಿದ ಜನನ ಪ್ರಮಾಣ ಮತ್ತು ಹೆಚ್ಚಿದ ವಲಸೆ. 2008ರಲ್ಲಿ ಮೃತ್ಯುಗಳ ಸಂಖ್ಯೆಯು ಜನನಗಳ ಸಂಖ್ಯೆಗಿಂತಲೂ 363,500ರಷ್ಟು ಹೆಚ್ಚಿತ್ತು.2007ರಲ್ಲಿ ಸಂಭವಿಸಿದ 477,700 ಮತ್ತು 2006ರಲ್ಲಿ 687,100 ಮೃತ್ಯುಗಳಿಗಿಂತಲೂ ಕಡಿಮೆಯಾಗಿದೆ. ರಷ್ಯಾದ ಸಂಯುಕ್ತ ರಾಜ್ಯ ಅಂಕಿ-ಅಂಶ ಸೇವಾ ಸಂಸ್ಥೆಯು ಪ್ರಕಟಿಸಿದ ಮಾಹಿತಿಯ ಪ್ರಕಾರ, 2007ರಲ್ಲಿ ಸಂಭವಿಸಿದ ಸಾವಿನ ಪ್ರಮಾಣವು 2006ಕ್ಕೆ ಹೋಲಿಸಿದಲ್ಲಿ 4% ರಷ್ಟು ಕಡಿಮೆಯಾಗಿತ್ತು, ಸುಮಾರು 2 ಮಿಲಿಯನ್ ಸಾವುಗಳು ಸಂಭವಿಸಿದ್ದು, ಜನ್ಮ ಪ್ರಮಾಣವು 8.3% ವರ್ಷ-ವರ್ಷಕ್ಕೆ ಹೆಚ್ಚಾಗಿ ಅಂದಾಜು 1.6 ಮಿಲಿಯನ್ ಜನನಗಳಾದವು.ಹೆಚ್ಚು ಮರಣ ಪ್ರಮಾಣ ಮತ್ತು ಕಡಿಮೆ ಜನನ ಪ್ರಮಾಣವೇ ರಷ್ಯಾದ ಜನಸಂಖ್ಯೆ ಇಳಿಕೆಗೆ ಪ್ರಮುಖ ಕಾರಣ.ರಷ್ಯಾದಲ್ಲಿಯ ಜನನ ಪ್ರಮಾಣವನ್ನು ಇತರೇ ಯುರೋಪಿನ ದೇಶಗಳಲ್ಲಿನ ಜನನ ಪ್ರಮಾಣಕ್ಕೆ ಹೋಲಿಸಬಹುದಾದರೂ (2008ರಲ್ಲಿ ಪ್ರತಿ 1000 ಜನರಿಗೆ 12.1) ಯುರೋಪ್ ಒಕ್ಕೂಟ ಸರಾಸರಿ ಪ್ರತಿ 1000ಕ್ಕೆ 9.90) ಇದರ ಜನಸಂಖ್ಯೆಯು ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ, ಕಾರಣ ಮರಣ ಪ್ರಮಾಣದ ಬಹಳ ಹೆಚ್ಚು ದರ. (2008ರಲ್ಲಿ, ) ಯೂರೋಪ್ ಒಕ್ಕೂಟದ ಸರಾಸರಿ ಪ್ರತಿ 1000ಕ್ಕೆ 10.28ಕ್ಕೆ ಹೋಲಿಸಿದರೆ ರಷ್ಯಾದದಲ್ಲಿ ಮೃತ್ಯು ದರವು ಪ್ರತಿ 1000 ಜನರಿಗೆ 14.7 % ರಷ್ಟಿತ್ತು). ಆದಾಗ್ಯೂ, ರಷ್ಯಾದ ಆರೋಗ್ಯ ಸಚಿವಾಲಯದ ಅಂದಾಜಿನ ಪ್ರಕಾರ 2011ರೊಳಗೆ ಮರಣ ಪ್ರಮಾಣ ಜನನ ಪ್ರಮಾಣವನ್ನು ಸಮತಟ್ಟುತ್ತದೆ, ಏಕೆಂದರೆ ಫಲವಂತಿಕೆಯ ಪ್ರಮಾಣದಲ್ಲಿ ಹೆಚ್ಚಳ ಮತ್ತು ಮರ್ತ್ಯತೆಯ ಇಳಿತ.

ರಷ್ಯಾದಲ್ಲಿ ಎಲ್ಲಾ ಸಂವಿಧಾನದತ್ತ ಪ್ರಜೆಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆಯಿದೆ, ಮತ್ತು ಸಾಕ್ಷರತೆ ಪ್ರಮಾಣ ೯೯.೪% ರಷ್ಟಿದೆ. ಉನ್ನತ ಶಿಕ್ಷಣದ ಪ್ರವೇಶ ಸ್ಪರ್ಧಾತ್ಮಕವಾಗಿದೆ. ಶಿಕ್ಷಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿರುವುದರಿಂದಾಗಿ; ವೈದ್ಯಕೀಯ, ಗಣಿತ, ವಿಜ್ಞಾನ ಮತ್ತು ಬಾಹ್ಯಾಕಾಶ ಮತ್ತು ವಾಯುಯಾನ ಸಂಶೋಧನೆಯಲ್ಲಿ ರಷ್ಯಾ ಇಂದು ಉನ್ನತ ಸ್ಥಾನದಲ್ಲಿದೆ. 

ಸ್ಪರ್ಧಾತ್ಮ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಉಚಿತವಾಗಿ ಉನ್ನತ ಶಿಕ್ಷಣ ಪಡೆಯುವ ಸಾರ್ವತ್ರಿಕ ಹಕ್ಕನ್ನು ರಷ್ಯಾ ಸಂವಿಧಾನ ನೀಡಿದೆ. ವಿದ್ಯಾರ್ಥಿಗಳ ಶಿಕ್ಷಣ ಶುಲ್ಕದಲ್ಲಿ ಒಂದು ನಿರ್ದಿಷ್ಟ ಭಾಗ ಅಥವಾ ಪ್ರತಿ ಸಂಸ್ಥೆಯ ಕೆಲವು ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ಈ ನೀತಿಯನ್ನು ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಈ ಹಿಂದೆ, ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಎಂಬ ಆರೋಪವಿತ್ತು. ಇದಕ್ಕೆ ಪೂರಕವಾಗಿ, ವಿದ್ಯಾರ್ಥಿಗಳಿಗೆ ಸಣ್ಣ ಪ್ರಮಾಣದ ಪ್ರೋತ್ಸಾಹ ಧನ ಮತ್ತು ಉಚಿತ ವಾಸ್ತವ್ಯ ವ್ಯವಸ್ಥೆ ನೀಡಲಾಗುತ್ತಿದೆ. ಸಂಯುಕ್ತ ಸರ್ಕಾರದ ಮತ್ತು ಪ್ರಾಂತೀಯ ಸಂಸ್ಥೆಗಳ ಮುಂಗಡ ಪತ್ರಗಲ್ಲಿ ಈ ಎಲ್ಲಾ ಸಂಸ್ಥೆಗಳಿಗೆ ಹಣಕಾಸು ಒದಗಿಸಲಾಗುತ್ತದೆ; ಶಿಕ್ಷಕರಿಗೆ ಸಮರ್ಪಕ ವೇತನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಂಸ್ಥೆಗಳಿಗೆ ಸಾಧ್ಯವಾಗದೇ ಇರುವುದು ಕಂಡು ಬಂದಿದೆ. ರಾಷ್ಟ್ರೀಯ ಮಟ್ಟದ ಕೆಲವು ಶಿಕ್ಷಣ ಸಂಸ್ಥೆಗಳು ಈ ಸಮಸ್ಯೆಯನ್ನು ಬಗೆಹರಿಸಲೆಂದು ವಾಣಿಜ್ಯದ ಹಾದಿಯನ್ನು ಹಿಡಿದಿವೆ, ಅಲ್ಲದೆ ಈ ಚಾಳಿ ಕ್ರಮೇಣವಾಗಿ ಬೆಳೆಯುತ್ತಿದೆ. ಹೈ ಟೆಕ್ ಮತ್ತು ಬೆಳೆಯುತ್ತಿರುವ ಕೈಗಾರಿಕೆಗಳು ಮತ್ತು ಆರ್ಥಿಕ ಕ್ಷೇತ್ರಗಳ ಅಗತ್ಯಗಳಿಗೆ ಸ್ಪಂದನ ಮತ್ತು ಪ್ರತಿಭಾವಂತ ಕೆಲಸಗಾರರನ್ನು ಪೂರೈಸುವುದಕ್ಕಾಗಿ ಹಲವು ಖಾಸಗೀ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿವೆ.

ರಷ್ಯಾದ ಸಂವಿಧಾನ ಎಲ್ಲಾ ಪ್ರಜೆಗಳಿಗೂ ಸಾರ್ವತ್ರಿಕ ಉಚಿತ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಿದೆ.ಆದರೆ ನೈಜ ಸಂಗತಿಯೆಂದರೆ, ಉಚಿತ ಆರೋಗ್ಯ ಸೌಲಭ್ಯಗಳನ್ನು ನಿರ್ಬಂಧಿಸಿದ ಸಂದರ್ಭಗಳೂ ಹಿಂದೆ ಇದ್ದವು, ಉದಾಹರಣೆಗೆ ಪ್ರೊಪಿಸ್ಕಾ ಆಳ್ವಿಕೆಯಲ್ಲಿ  
ಜಗತ್ತಿನ ಇತರಾವುದೇ ದೇಶಕ್ಕೆ ತಲಾ [368]ಹೋಲಿಸಿದರೆ ರಷ್ಯಾದಲ್ಲಿ ಹೆಚ್ಚು ವೈದ್ಯರಿದ್ದಾರೆ, ಆಸ್ಪತ್ರೆಗಳಿವೆ, ಅಂತೆಯೇ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಸಂಖ್ಯೆ ಕಡಿಮೆಯೇನಿಲ್ಲ. ಸೋವಿಯತ್ ಒಕ್ಕೂಟ ಪತನವಾದಾಗಿನಿಂದ ಸಾಮಾಜಿಕ, ಆರ್ಥಿಕ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳಾಗಿ ರಷ್ಯಾದ ಜನರ ಆರೋಗ್ಯ ಗಣನೀಯವಾಗಿ ಇಳಿದಿದೆ. 2007ರ ವೇಳೆಗೆ ರಷ್ಯಾದ ಪುರುಷರ ಮತ್ತು ಮಹಿಳೆಯರ ಸರಾಸರಿ ಆಯುರ್ನಿರೀಕ್ಷೆ 61.5 ಮತ್ತು 73.9 ವರ್ಷಗಳಿತ್ತು. ರಷ್ಯಾದಲ್ಲಿ ಜನನವಾದಾಗ ಸರಾಸರಿ ಆಯುರ್ ನಿರೀಕ್ಷೆ 67.7 ವರ್ಷ. ಇದು ಯುರೋಪ್ ಒಕ್ಕೂಟದ ಒಟ್ಟು ಆಯುರ್ನಿರೀಕ್ಷೆಗಿಂತ 10.8 ವರ್ಷ ಕಡಿಮೆ.. ಕೆಲಸದಲ್ಲಿ ತೊಡಗಿರುವ ಪುರುಷರು ಸಾಕಷ್ಟು ಮುನ್ನಚ್ಚರಿಕೆ (ಉದಾಹರಣೆಗೆ, ಕುಡಿತ, ಒತ್ತಡ, ಧೂಮಪಾನ, ಅನೈತಿಕ ಚಟುವಟಿಕೆಗಳು, ಹಿಂಸಾತ್ಮಕ ಅಪರಾಧ)ವಹಿಸದೆ ಪ್ರಾಣ ಹಾನಿ ಮಾಡಿಕೊಳ್ಳುತ್ತಿರುವುದು ಪುರುಷರಲ್ಲಿನ ಆಯುರ್ನಿರೀಕ್ಷೆಯ ಪ್ರಮಾಣ ಇಳಿಯಲು ಪ್ರಮುಖ ಕಾರಣ. ರಷ್ಯಾದ ಪುರುಷರಲ್ಲಿ 1991ರಿಂದ ಪ್ರಾಣಹಾನಿ 60% ಹೆಚ್ಚಿದೆ, ಇದು ಯುರೋಪ್ ಗಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚು. ಪುರುಷರು ಮತ್ತು ಮಹಿಳೆಯರ ನಡುವಣ ಆಯುರ್ನಿರೀಕ್ಷೆಯಲ್ಲಿ ಬಹಳಷ್ಟು ವ್ಯತ್ಯಾಸವಿರುವುದು ಮತ್ತು ಎರಡನೇ ಮಹಾ ಸಮರದ ಶಾಶ್ವತ ಪರಿಣಾಮ ಇದಕ್ಕೆ ಪ್ರಮುಖ ಕಾರಣ. ಎರಡನೇ ಮಹಾ ಸಮರದಲ್ಲಿ ರಷ್ಯಾ ಬೇರಾವುದೇ ದೇಶಕ್ಕಿಂತಲೂ ಹೆಚ್ಚಿನ ಜನರನ್ನು ಕಳೆದುಕೊಂಡದ್ದರಿಂದಾಗಿ ಲಿಂಗ ಅಸಮತೋಲನ ಇಂದಿಗೂ ಹಾಗೆಯೇ ಉಳಿದಿದೆ ಮತ್ತು ಪ್ರತಿ ಮಹಿಳೆಗೆ 0.859ರಷ್ಟೇ ಪುರುಷರಿದ್ದಾರೆ. 

ಹೃದಯ ಸಂಬಂಧಿ ರೋಗಗಳಿಂದ ಒಟ್ಟು 56.7 % ಮಂದಿ ಮೃತಪಟ್ಟಿದ್ದರೆ, ಕೆಲಸ ಮಾಡುವ ವಯಸ್ಸಿರುವ 30% ರಷ್ಟು ಜನ ಇದೇ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 16 ದಶಲಕ್ಷ ಜನ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು, ರಷ್ಯಾ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಷಯದಲ್ಲಿ, ಉಕ್ರೇನ್ ಮೊದಲ ಸ್ಥಾನದಲ್ಲಿದೆ. ನರಹತ್ಯೆ, ಆತ್ಮಹತ್ಯೆ ಮತ್ತು ಕ್ಯಾನ್ಸರ್ ನಿಂದ ಸಂಭವಿಸಿದ ಮರಣ ಪ್ರಮಾಣ ಕಡಿಮೆಯೇನಲ್ಲ.. 2007ರಲ್ಲಿ ರೊಮಿರ್ ಮಾನಿಟರಿಂಗ್ ಅವರು ನಡೆಸಿದ ಸಮೀಕ್ಷೆ ಪ್ರಕಾರ, 52% ಪುರುಷರು ಮತ್ತು 15% ಮಹಿಳೆಯರು ಧೂಮಪಾನ ಮಾಡುತ್ತಾರೆ. ತಂಬಾಕು ಸೇವನೆಯ ಪರಿಣಾಮ ಪ್ರತಿ ವರ್ಷ 2,60,000 ಜನರು ಸಾವನ್ನಪ್ಪುತ್ತಿದ್ದಾರೆ. ಸೋವಿಯತ್ ಯುಗದಲ್ಲಿ HIV/AIDS ಇರಲೇ ಇಲ್ಲ, ಆದರೆ ಸೋವಿಯತ್ ಪತನದ ನಂತರ ಮಾದಕ ವಸ್ತುಗಳ ಸೇವನೆ ಸ್ಫೋಟಕ ಪ್ರಮಾಣದಲ್ಲಿ ಏರಿ, ಏಡ್ಸ್ ಬಹು ವೇಗವಾಗಿ ಹಬ್ಬಿತು.ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಸ್ತುತ ರಷ್ಯಾದಲ್ಲಿ 3,64,000 HIV ಪೀಡಿತರಿದ್ದಾರೆ, ಆದರೆ ಸ್ವತಂತ್ರ ಸಮೀಕ್ಷೆಗಳ ಪ್ರಕಾರ ಈ ಸಂಖ್ಯೆ ಗಣನೀಯವಾಗಿ ಇನ್ನೂ ಹೆಚ್ಚಿದೆ.. ಈ ರೋಗದೊಂದಿಗೆ ಹೋರಾಡುವುದಕ್ಕಾಗಿ ಸರ್ಕಾರ ವೆಚ್ಚವನ್ನು ಏರಿಸಿದ್ದು, 2006ರಲ್ಲಿ HIV ನಿಯಂತ್ರಣಕ್ಕೆಂದೇ 20 ಪಟ್ಟಿನಷ್ಟು ಅನುದಾನ ಹೆಚ್ಚಿಸಿದೆ. ಸೋವಿಯತ್ ಪತನದ ನಂತರ ಕ್ಷಯದಿಂದಾಗಿಯೂ ಕೆಲವರು ಸಾವನ್ನಪ್ಪಿದರು, ಇವೆರಡೂ ನಾಟಕೀಯವಾಗಿ ಏರಿತು, ಅಲ್ಲದೆ ಇದು ಪ್ರಮುಖವಾಗಿ ಕೈದಿಗಳಲ್ಲಿ ವ್ಯಾಪಕವಾಗಿ ಹಬ್ಬಿತು.. 

ರಷ್ಯಾದ ಜನಸಂಖ್ಯಾ ಬಿಕ್ಕಟ್ಟನ್ನು ನಿವಾರಿಸಿ, ಜನನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಷ್ಯಾ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ, ಮತ್ತು ಸಮಸ್ಯೆಗಳನ್ನು ಬಗೆಹರಿಸಿ ವಲಸಿಗರನ್ನು ಆಕರ್ಷಿಸುವುದೂ ಇದರ ಉದ್ದೇಶ. ಜನಿಸುವ ಪ್ರತಿ ಮಗುವಿಗೆ ಬೆಂಬಲವಾಗಿ ಪ್ರತಿ ತಿಂಗಳು ನೀಡುತ್ತಿದ್ದ ಸಂಭಾವನೆಯನ್ನು 2007ರಲ್ಲಿ ಸರ್ಕಾರ ದ್ವಿಗುಣಗೊಳಿಸಿದೆ, ಮತ್ತು ಎರಡನೇ ಮಗುವಿಗೆ ಜನನ ನೀಡುವ ಪ್ರತಿ ಮಹಿಳೆಗೆ ಪಾರಿತೋಷಕವಾಗಿ 250,000 ರೂಬಲ್ಸ್ (ಅಂದಾಜು 10,000 ಅಮೆರಿಕನ್ $)ನೀಡುತ್ತಿದೆ. USSR ಪತನದ ನಂತರ, 2007ರಲ್ಲಿ ರಷ್ಯಾದಲ್ಲಿ ಅತಿ ಹೆಚ್ಚು ಜನನ ಪ್ರಮಾಣ ದಾಖಲಾಗಿದೆ. 2008-2009ರಲ್ಲಿ ಪ್ರಸವ ಪೂರ್ವ ಕೇಂದ್ರಗಳಲ್ಲಿ ಸರ್ಕಾರ 20 ಶತಲಕ್ಷ ರೂಬಲ್ಸ್ ಬಂಡಾವಳ ಹೂಡಲಿದೆ ಎಂದು ರಷ್ಯಾದ ಮೊದಲ ಉಪ ಪ್ರಧಾನಿ ಘೋಷಿಸಿದ್ದಾರೆ. ದೇಶದ ಜನಸಂಖ್ಯೆಯನ್ನು ಬಲಪಡಿಸುವುದಕ್ಕಾಗಿ ವಲಸೆ ಬರುವುದು ಅಗತ್ಯ ಎಂಬ ಅನಿಸಿಕೆ ಜನರಲ್ಲಿ ಹೆಚ್ಚಾಗುತ್ತಿದೆ. 

ರಷ್ಯಾದಲ್ಲಿರುವ 160 ಜನಾಂಗೀಯ ಗುಂಪುಗಳು ಸುಮಾರು 100 ಭಾಷೆಗಳನ್ನು ಮಾತನಾಡುತ್ತವೆ. 2002ರ ಸಮೀಕ್ಷೆ ಪ್ರಕಾರ, 142.6 ದಶಲಕ್ಷ ಜನರು ರಷ್ಯನ್ ಭಾಷೆ, 5.3 ದಶಲಕ್ಷ ಮಂದಿ ಟಾಟರ್ ಮತ್ತು 2.9 ದಶಲಕ್ಷ ಮಂದಿ ಜರ್ಮನ್ ಭಾಷೆ ಮಾತನಾಡುತ್ತಾರೆ.. ರಷ್ಯನ್ ದೇಶದ ಏಕಮಾತ್ರ ಅಧಿಕೃತ ಭಾಷೆ, ಆದರೂ ಎರಡನೇ ಭಾಷೆಯಾಗಿ ಮಾತೃಭಾಷೆಯನ್ನು ವೈಯಕ್ತಿಕವಾಗಿ ಬಳಸುವ ಹಕ್ಕನ್ನು ಪ್ರಜೆಗಳಿಗೆ ರಷ್ಯಾ ಸಂವಿಧಾನ ನೀಡಿದೆ.[405] ರಷ್ಯನ್ ಭಾಷೆ ವ್ಯಾಪಕವಾಗಿ ಚೆಲ್ಲಾಪಿಲ್ಲಿಯಾಗಿದ್ದರೂ, ರಷ್ಯಾದುದ್ದಕ್ಕೂ ಒಂದೇ ತೆರನಾಗಿದೆ. ರಷ್ಯಾದಲ್ಲಿ ಭೌಗೋಳಿಕವಾಗಿ ಯುರೇಷಿಯಾ ಭಾಷೆ ವ್ಯಾಪಕವಾಗಿ ಹಬ್ಬಿದೆ ಮತ್ತು ಆದರೆ ಜನರು ಹಳೇ ರಷ್ಯನ್ ಭಾಷೆ ಯಲ್ಲೇ ಹೆಚ್ಚಾಗಿ ಸಂಭಾಷಿಸುತ್ತಾರೆ. ರಷ್ಯನ್ ಭಾಷಿಕರು ಇಂಡೋ-ಯುರೋಪ್ ಭಾಷೆ ಕುಟುಂಬಕ್ಕೆ ಸೇರಿದವರಾಗಿದ್ದು, ಹಳೇ ರಷ್ಯಾ ಭಾಷೆಯ ಪ್ರತಿನಿಧಿಗಳೂ ಹೌದು; ಬೆಲಾರುಸಿಯನ್ ಮತ್ತು ಉಕ್ರೇನಿಯನ್ (ಮತ್ತು ರುಸಿನ್ ಕೂಡ ಇರಬಹುದು).10ನೇ ಶತಮಾನದ ನಂತರ ಹಳೇ ಪೂರ್ವ ರಷ್ಯಾದ ಹಳೇ ರಷ್ಯಾ ಲಿಖಿತ ಉದಾಹರಣೆಗಳನ್ನು ಸೇರಿಸಲಾಗಿದೆ. 

ಜಗತ್ತಿನ ವಿಜ್ಞಾನ ಸಾಹಿತ್ಯಗಳೂ ಕ್ರಮೇಣವಾಗಿ ರಷ್ಯನ್ ಭಾಷೆಯಲ್ಲೂ ಪ್ರಕಟಣೆ ಕಂಡಿವೆ. ಜಗತ್ತಿನ ಜ್ಢಾನ ಭಂಡಾರವನ್ನು ಸಂಕೇತಗಳ ಮೂಲಕ ಸಂಗ್ರಹಣೆ ಮಾಡುವುದರಲ್ಲಿ ರಷ್ಯಾ ಕೂಡ ತೊಡಗಿಸಿಕೊಂಡಿದೆ. ಜಗತ್ತಿನ 60% ರಿಂದ 70ರಷ್ಟು ಮಾಹಿತಿಗಳು ರಷ್ಯನ್ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಕಟವಾಗುತ್ತವೆ. ವಿಶ್ವ ಸಂಸ್ಥೆ ಅಂಗೀಕರಿಸಿದ ಆರು ಅಧಿಕೃತ ಭಾಷೆಗಳಲ್ಲಿ ರಷ್ಯನ್ ಭಾಷೆ ಕೂಡ ಒಂದು. 

ಕ್ರೈಸ್ತ ಮತ, ಇಸ್ಲಾಂ, ಬೌದ್ಧ ಧರ್ಮ ಮತ್ತು ಯಹೂದಿ ಆಚರಣೆಯಲ್ಲಿರುವ ಸಾಂಪ್ರದಾಯಿಕ ಪ್ರಮುಖ ಧರ್ಮಗಳೆಂದು ಎಂದು 1997ರಲ್ಲಿ ಜಾರಿಗೆ ತಂದ ರಷ್ಯಾ ಐತಿಹಾಸಿಕ ಪರಂಪರೆ ಕುರಿತ ಕಾನೂನಿನಲ್ಲಿ ಹೇಳಲಾಗಿದೆ. 
ನಂಬುವವರ ಅಂದಾಜು ಸಂಖ್ಯೆಗೂ ವಿವಿಧ ಮೂಲಗಳಿಗೂ ಸಾಮ್ಯತೆಯಿಲ್ಲ, ಮತ್ತು ರಷ್ಯಾ ಜನಸಂಖ್ಯೆಯಲ್ಲಿ ಅತಿ ಹೆಚ್ಚು 16-48% ರಷ್ಟು ಜನ ಯಾವುದೇ ಧರ್ಮವನ್ನು ನಂಬುವುದಿಲ್ಲ ಎಂದೂ ಕೆಲವು ವರದಿಗಳು ಹೇಳುತ್ತವೆ..ರಷ್ಯಾದ ಸಾಂಪ್ರದಾಯವೇ ರಷ್ಯಾದ ಪ್ರಮುಖ ಧರ್ಮ.  ದಾಖಲಾಗಿರುವ 95% ಮಂದಿ ಸಾಂಪ್ರದಾಯಿಕ ಪಾದ್ರಿಗಳು ರಷ್ಯನ್ ಸಾಂಪ್ರದಾಯವಾದಿ ಚರ್ಚ್ ಗಳಿಗೆ ಸೇರಿದವರು. ಕೆಲವು ಸಣ್ಣ ಸಾಂಪ್ರದಾಯದ ಚರ್ಚ್ ಗಳೂ ಇವೆ.  ಆದರೂ, ಸಾಂಪ್ರದಾಯಗಳನ್ನು ನಂಬುವ ಹೆಚ್ಚಿನ ಮಂದಿ ದಿನನಿತ್ಯ ಚರ್ಚ್ ಗಳಿಗೆ ಹೋಗುವುದಿಲ್ಲ. ಏನೇ ಇದ್ದರೂ, ನಂಬುವ ಮತ್ತು ನಂಬದೇ ಇರುವ ಎಲ್ಲಾ ಜನರು ಚರ್ಚ್ ಅನ್ನು ಗೌರವಿಸುತ್ತಾರೆ, ಅದು ರಷ್ಯಾದ ಸಂಸ್ಕೃತಿ ಮತ್ತು ಪರಂಪರೆಯ ದ್ಯೋತಕವೆಂದು ಅವರ ಅಂಬೋಣ.  ರೋಮನ್ ಕ್ಯಾಥೊಲಿಕರು, ಅರ್ಮೇನಿಯಂ ಗ್ರೆಗೊರಿಯನ್ನರು ಮತ್ತು ಪ್ರೊಟೆಸ್ಟೆಂಟ್ ಅನುಸರಿಸುವ ಕ್ರೈಸ್ತರು ಸಣ್ಣ ಸಂಖ್ಯೆಯಲ್ಲಿ ನೆಲೆಸಿದ್ದಾರೆ. 

ರಷ್ಯಾ ಪ್ರಜೆಗಳ ಪೂರ್ವಜರು 10ನೇ ಶತಮಾನದಲ್ಲಿ ಸಾಂಪ್ರದಾಯಿಕ ಕ್ರೈಸ್ತ ಧರ್ಮವನ್ನು ಆಚರಿಸುತ್ತಿದ್ದರು.. ರಷ್ಯಾದಲ್ಲಿರುವ ಸುಮಾರು 100 ದಶಲಕ್ಷ ಜನರು ತಾವು ಸಾಂಪ್ರದಾಯಿಕ ಕ್ರೈಸ್ತರೆಂದು ಹೇಳಿಕೊಂಡಿದ್ದಾರೆಂದು, 2007ರಲ್ಲಿ ಅಮೆರಿಕದ ವಿದೇಶಾಂಗ ಸಚವಾಲಯ ಪ್ರಕಟಿಸಿದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ ಹೇಳಿದೆ. ರಷ್ಯಾದ ಸಾರ್ವಜನಿಕ ಅಭಿಪ್ರಾಯ ಸಂಶೋಧನಾ ಕೇಂದ್ರ ನಡೆಸಿದ ಮತಗಣನೆ ಪ್ರಕಾರ, ಮತ ಹಾಕಿದ 63% ಮಂದಿ ತಾವು ರಷ್ಯಾ ಸಂಪ್ರದಾಯವಾದಿಗಳೆಂದು ಹೇಳಿಕೊಂಡಿದ್ದರೆ, 6% ರಷ್ಟು ಜನ ತಾವು ಮುಸ್ಲಿಮರೆಂದು ಹೇಳಿದ್ದಾರೆ, ಮತ್ತು 1% ಕ್ಕಿಂತಲೂ ಕಡಿಮೆ ಜನ ತಾವು ಬೌದ್ಧರು, ಕ್ಯಾಥೊಲಿಕರು, ಪ್ರೊಟೆಸ್ಟೆಂಟ್ ಅಥವಾ ಯಹೂದಿಗೆಳೆಂದು ಹೇಳಿಕೊಂಡಿದ್ದಾರೆ. 12% ರಷ್ಟು ಮಂದಿ ದೇವರನ್ನು ನಂಬುತ್ತೇವೆ ಎಂದಿದ್ದಾರೆ, ಆದರೆ ಅವರು ಯಾವುದೇ ಧರ್ಮವನ್ನು ಆಚರಿಸುತ್ತಿಲ್ಲ, ಮತ್ತು 16% ರಷ್ಟು ಮಂದಿ ದೇವರನ್ನು ನಂಬುವುದಿಲ್ಲ ಎಂದಿದ್ದಾರೆ. 

ಸುಮಾರು 15ರಿಂದ 20 ದಶಲಕ್ಷ ಮುಸ್ಲಿಮರಿಗೆ ರಷ್ಯಾ ತವರು ಮನೆ. ಆದರೆ ಸಮೀಕ್ಷೆ ಪ್ರಕಾರ ರಷ್ಯಾದಲ್ಲಿರುವ 7ರಿಂದ 9 ದಶಲಕ್ಷ ಮಂದಿ ಮುಸ್ಲಿಮರು ಮಾತ್ರ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ರಷ್ಯಾದಲ್ಲಿ ಹಿಂದಿನ ಸೋವಿಯತ್ ರಾಜ್ಯಗಳಿಂದ ವಲಸೆ ಬಂದ ಸುಮಾರು 3ರಿಂದ 4 ದಶಲಕ್ಷ ಮುಸ್ಲಿಮರಿದ್ದಾರೆ. ಹೆಚ್ಚಿನ ಮುಸ್ಲಿಮರು ವೋಲ್ಗಾ-ಊರಲ್ ಪ್ರಾಂತ್ಯ, ಉತ್ತರ ಕಾಕಸಸ್, ಮಾಸ್ಕೋ, ಸೇಂಟ್ ಪೀಟರ್ಸ್‌ಬರ್ಗ್‌ ಮತ್ತು ಪಶ್ಚಿಮ ಸೈಬೀರಿಯಾದಲ್ಲಿ ನೆಲೆಸಿದ್ದಾರೆ. ರಷ್ಯಾ ಒಕ್ಕೂಟದ: ಬುರ್ಯಾತಿಯಾ, ತುವಾ ಮತ್ತು ಕಲ್ಮಿಕಿಯಾ10}. 3 ಪ್ರಾಂತ್ಯಗಳಲ್ಲಿ ಬೌದ್ಧರ ಸಾಂಪ್ರದಾಯಗಳಿವೆ. ಸೈಬೀರಿಯಾ ಮತ್ತು ಈಶಾನ್ಯ ತುದಿಯ ಪ್ರಾಂತ್ಯಗಳಲ್ಲಿ, ಯಕುತಿಯಾ, ಛುಕೊತ್ಕ ಇತ್ಯಾದಿ ಕೆಲವು ನಿವಾಸಿಗಳು ಪ್ರಮುಖ ಧರ್ಮಗಳ ಜೊತೆಗೆ ಶ್ಯಾಮನ್ ಪಂಥ, ಸರ್ವದೇವತಾರಾಧನೆ ಮತ್ತು ನಿಸರ್ಗಾರಾಧನೆ ಕೂಡ ಮಾಡುತ್ತಾರೆ. ಜನಾಂಗೀಯತೆ ಯಾವುದೇ ಧರ್ಮಕ್ಕೆ ಸೇರಲು ಮೊದಲ ಮಾನದಂಡ.ಅಗಾಧ ಪ್ರಮಾಣದಲ್ಲಿರುವ ಜೀತದಾಳುಗಳು ಸಾಂಪ್ರದಾಯಿಕ ಕ್ರೈಸ್ತರು.ರಷ್ಯಾದಲ್ಲಿರುವ ಹಲವು ತುರ್ಕಿ ಗುಂಪುಗಳು ಮುಸ್ಲಿಂ ಹಿಂಬಾಲಕರಲ್ಲದಿದ್ದರೂ,ಹೆಚ್ಚಿನ ತುರ್ಕಿ ಭಾಷಿಕರು ಮುಸ್ಲಿಮರು.

ರಷ್ಯಾದಲ್ಲಿನ ದೊಡ್ಡ ಸಂಖ್ಯೆಯ ಜನಾಂಗೀಯ ಗುಂಪುಗಳ ಜನಪದ ಸಂಗೀತದಲ್ಲಿ ವಿಶಿಷ್ಟ ಸಂಪ್ರದಾಯಗಳಿವೆ. 19ನೇ ಶತಮಾನದಲ್ಲಿ ಶಾಸ್ತ್ರೀಯ ಸಂಗೀತಗಾರ ಮಿಖಾಯಿಲ್ ಗ್ಲಿಂಕಾ ಮತ್ತು ಆತನ ಹಿಂಬಾಲಕರ ಮಧ್ಯೆ ಉದ್ಭವಿಸಿದ ಭಿನ್ನಾಭಿಪ್ರಾಯಗಳು ಹೊಸ ಸಂಗೀತ ಪ್ರಕಾರಕ್ಕೆ ನಾಂದಿ ಹಾಡಿದವು. ರಷ್ಯಾ ದೇಶದ ಸೊಗಡು, ಧಾರ್ಮಿಕತೆ ಮತ್ತು ಜನಪದ ಅಂಶಗಳನ್ನು ಗ್ಲಿಂಕಾನ ಹಿಂಬಾಲಕರು ತಮ್ಮ ಸಂಗೀತದಲ್ಲಿ ಅಳವಡಿಸಿಕೊಂಡರು. ಆಂಟನ್ ಮತ್ತು ನಿಕೊಲಾಯ್ ರುಬಿನ್ ಸ್ಟೈನ್ ನೇತೃತ್ವದ ರಷ್ಯನ್ ಮ್ಯೂಸಿಕಲ್ ಸೊಸೈಟಿಯ ಸಾಂಪ್ರದಾಯಿಕ ಸಂಗೀತವೂ ಇದಕ್ಕೆ ಪೂರಕವಾಯಿತು. ಯುರೋಪಿಯನ್ ಶಾಸ್ಟ್ರೀಯ ಸಂಗೀತದ ಪ್ರಣಯ ಶೈಲಿಯಲ್ಲಿ ಪ್ರಾವೀಣ್ಯತೆ ಸಾಧಿಸಿದ್ದ ಸೆರ್ಗೇಯ್ ರಾಚ್ನಿಯೋಫ್ ಅವರು ಪ್ರಣಯ ಲೋಕದ ಮಹಾನ್ ಸಂಗೀತಕಾರ ತ್ಚಾಯ್ ಕೋವಿಸ್ಕಿ ಅವರ ಸಂಗೀತವನ್ನು 20ನೇ ಶತಮಾನಕ್ಕೂ ಕರೆತಂದರು. ಅದಾಗಲೇ ಪ್ರಸಿದ್ಧಿಯಾಗಿದ್ದ ಕೋವಿಸ್ಕಿ ಸಂಗೀತದಲ್ಲಿ ರಷ್ಯಾದ ಸೊಗಡು, ಸಾಮರಸ್ಯತೆಯ ಶ್ರೀಮಂತಿಕೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ಇಂಪಾದ ಗಾಯನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 

ಸ್ಕ್ರಿಯಾಬಿನ್, ಸ್ಟ್ರಾವಿನ್ ಸ್ಕಿ, ರಾಚ್ಮನಿನೋಫ್, ಪ್ರೊಕೊಫಿಯೇವ್ ಮತ್ತು ಶೋಸ್ತಕೋವಿಚ್ 20ನೇ ಶತಮಾನದ ಜಗತ್ಪ್ರಸಿದ್ಧ ಸಂಗೀತಕಾರರು. ಸೋವಿಯತ್ ಯುಗದ ಉದ್ದಕ್ಕೂ,ಸಂಗೀತವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿತ್ತು ಅಲ್ಲದೆ ಅದನ್ನು ಸಂಪ್ರದಾಯದ ಚೌಕಟ್ಟಿನೊಳಗೆ ಇಡಲಾಗಿತ್ತು, ಸ್ಟಾಲಿನ್ ನ ಸಮಾಜವಾದಿ ನಂಬಿಕೆಯ ನೆಲೆಗಟ್ಟಿನೊಂದಿಗೆ ಅವುಗಳನ್ನು ಹೋಲಿಸಿ ಸುಲಭವಾಗಿ ದೊರೆಯುವಂತೆಯೂ ಮಾಡಲಾಗಿತ್ತು.ಅಷ್ಟೊತ್ತಿಗೆ ಸೋವಿಯತ್ ಮತ್ತು ರಷ್ಯಾದ ಮನೆ ಆವರಣಗಳು ಜಗತ್ತಿನ ವಿಖ್ಯಾತ ಗಾಯಕರಿಗೆ ವೇದಿಕೆಯಾಗಿ ಪರಿವರ್ತನೆಯಾಗಿತ್ತು.ಪಿಟೀಲು ವಾದಕರಾದ ಡೇವಿಡ್ ಒಸ್ಟ್ರಾಕ್, ಗಿಡನ್ ಕ್ರೆಮೆರ್, ಚೆಲೋವಾದಕ ಮ್ಸ್ತಿಸ್ಲೇವ್ ರೊಶ್ಟ್ರೊವಿಚ್, ಪಿಯನ ವಾದಕರಾದ ವ್ಲಾಡಿಮಿರ್ ಹೊರೊವಿಟ್ಜ್, ಸ್ವೇಯಟೋಸ್ಲೇವ್ ರಿಕ್ಟರ್, ಮತ್ತು ಎಮಿಲ್ ಗಿಲೆಲ್ಸ್, ಹಾಗೂ ಹಾಡುಗಾರ ಗಲಿನಾ ವಿಷ್ಣೆವ್ ಸ್ಕಾಯ,ಇವರು ಈ ಪೈಕಿ ಪ್ರಸಿದ್ಧರು. 

]
ರಷ್ಯಾದ ಸಂಗೀತಕಾರ ಪ್ಯಾಟರ್ ಇಲಿಚ್ ತ್ಚಾಯ್ಕೊವಿಸ್ಕಿ ಅವರು ಜಗತ್ತಿನ ಪ್ರಸಿದ್ಧ ಬ್ಯಾಲೆಗಳಿಗೆ ಸಂಗೀತ ನೀಡಿದ್ದಾರೆ- ಸ್ವೇನ್ ಸರೋವರ, ದಿ ನಟ್ ಕ್ರೇಕರ್ ಮತ್ತು ಸ್ಲೀಪಿಂಗ್ ಬ್ಯೂಟಿ ಈ ಪೈಕಿ ಪ್ರಮುಖವಾದವುಗಳು. 20ನೇ ಶತಮಾನದ ಆದಿಯಲ್ಲಿ, ರಷ್ಯಾದ ನೃತ್ಯಗಾತಿಯರಾದ ಅನ್ನಾ ಪಾವ್ಲೋವಾ ಮತ್ತು ವಾಸ್ಲವ್ ನಿಜಿಂಸ್ಕಿ ಪ್ರಸಿದ್ಧಿಗೆ ಬಂದರು, ಮತ್ತು ಇಂಪ್ರೆಸಾರಿಯೊ ಸೆರ್ಗೆಯ್ ದಿಯಗಿಲೇವ್ ಮತ್ತು ಆತನ ಬ್ಯಾಲೆಟ್ಸ್ ರಸ್ಸೆಸ್ ನೃತ್ಯ ತಂಡ ವಿದೇಶದಲ್ಲೂ ಸಂಚರಿಸಿ ಜಗತ್ತಿನಾದ್ಯಂತ ನೃತ್ಯ ವಿಕಾಸನದ ಮೇಲೆ ಆಳವಾದ ಪ್ರಭಾವ ಬೀರಿತು.. ಸೋವಿಯತ್ ಬ್ಯಾಲೆ 19ನೇ ಶತಮಾನದ ಸಂಪ್ರದಾಯಿಕ ನೃತ್ಯಗಳನ್ನು ಸಂರಕ್ಷಿಸಿತಲ್ಲದೆ, ಸೋವಿಯತ್ ಒಕ್ಕೂಟದ ನೃತ್ಯ ಶಾಲೆಗಳು ಒಬ್ಬರ ಹಿಂದೆ ಒಬ್ಬರಂತೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ನೀಡಿತು. ಮಯಾ ಪ್ಲಿಸೆಟ್ಸಕಾಯ, ರುಡಾಲ್ಪ್ ನುರೆಯೇವ್ ಮತ್ತು ಮಿಖಾಯಿಲ್ ಬಾರಿಶ್ನಿಕೋವ್ ಈ ಪೈಕಿ ಪ್ರಮುಖರು. ಮಾಸ್ಕೊದಲ್ಲಿರುವ ಬೊಲ್ಶೋಯಿ ಬ್ಯಾಲೆಟ್ ಮತ್ತು ಸೈಂಟ್ ಪೀಟರ್ಸ್ಬರ್ಗ್ ನಲ್ಲಿರುವ ಕಿರೋವ್ ಜಗತ್ತಿನಾದ್ಯಂತ ಪ್ರಖ್ಯಾತಿ ಪಡೆದಿದೆ. 

ಜಗತ್ತಿನ ಸಾಹಿತ್ಯಕ್ಕೆ ಅಪಾರ ಕೊಡುಗೆ  ನೀಡಿರುವ ರಷ್ಯನ್ ಸಾಹಿತ್ಯವನ್ನು ಜಗತ್ತಿನ ಅತ್ಯಂತ ಪ್ರಭಾವಿ ಮತ್ತು ಅಭಿವೃದ್ಧಿ ಹೊಂದಿದ ಸಾಹಿತ್ಯಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ರಷ್ಯಾದ ಸಾಹಿತ್ಯ ಇತಿಹಾಸ 10ನೇ ಶತಮಾನದಷ್ಟು ಹಿಂದಕ್ಕೆ ಸರಿಯುತ್ತದೆ. 19ನೇ ಶತಮಾನದಲ್ಲಿ ದೇಶೀಯ ಸಂಪ್ರದಾಯ ಬೆಳಕಿಗೆ ಬಂದಿತ್ತು. ಅಲ್ಲದೆ ಅದು ಸರ್ವಕಾಲೀಕ ಪ್ರಸಿದ್ಧ ಲೇಖಕರನ್ನೂ ಸೃಷ್ಟಿಸಿತು.ಆಧುನಿಕ ರಷ್ಯನ್ ಸಾಹಿತ್ಯದ ಜನಕ ಮತ್ತು ರಷ್ಯನ್ ಶೇಕ್ಸ್ ಪೀಯರ್  ಎಂದೇ ಖ್ಯಾತರಾದ ಅಲೆಕ್ಸಾಂಡರ್ ಪುಶ್ಕಿನ್ ಅವರೊಂದಿಗೆ ರಷ್ಯನ್ ಕಾವ್ಯದ ಸುವರ್ಣ ಯುಗ ಆರಂಭವಾಯಿತು. 19ನೇ ಶತಮಾನದ ಆಂಟನ್ ಚೆಕೋವ್, ಮಿಖಾಯಿಲ್ ಲೆರ್ಮೆಂಟೋವ್, ಲಿಯೋ ಟಾಲ್ ಸ್ಟಾಯ್, ಅವರ ಕಾಲದಲ್ಲೂ ಮುಂದುವರಿಯಿತು. ಇವಾನ್ ಗೊಂಚರೋವ್, ಮಿಖಾಯಿಲ್ ಸಾಲ್ಟಿಕೋವ್, ಅಲೆಕ್ಸೇ ಪಿಸೆಂಸ್ಕಿ, ನಿಕೊಲಾಯ್ ಲೆಸ್ಕೋವ್ ಅವರು ರಷ್ಯನ್ ಗದ್ಯ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಲೇಖಕರ ಪೈಕಿ ಟಾಲ್ ಸ್ಟಾಯ್ ಮತ್ತು ದೊಸ್ಟೊಯ್ ವಿಸ್ಕಿ ಶಿಖರಪ್ರಾಯರು. ಸಾಹಿತ್ಯ ಜಗತ್ತು ಕಂಡ ಸರ್ವಕಾಲೀಕ ಕಾದಂಬರಕಾರರು ಎಂದು ವಿಮರ್ಶಕರು ಇವರನ್ನು ಬಣ್ಣಿಸಿದ್ದಾರೆ.

ಚಲನಚಿತ್ರಗಳು ಅಗ್ಗದ ಮನರಂಜನೆ ಮತ್ತು ಕಾರ್ಮಿಕರ ವಿರಾಮಕ್ಕೆಂದೇ ಇರುವುದೆಂದು ಪಶ್ಚಿಮದ ಕೈಗಾರಿಕೀಕರಣಗೊಂಡ ದೇಶಗಳು ಮೊದಲು ಒಪ್ಪಿಕೊಂಡಿದ್ದ ವೇಳೆ, ೧೯೧೭ರ ಕ್ರಾಂತಿಯ ಬೆನ್ನಿಗೇ ರಷ್ಯಾದ ಚಿತ್ರ ನಿರ್ಮಾಣ ಪ್ರಸಿದ್ಧಿಗೆ ಬಂತು. ಚಲನಚಿತ್ರಗಳಲ್ಲಿ ಅಭಿವ್ಯಕ್ತಿಯ ಪ್ರಕಟಣೆಗೆ ತಿದ್ದುವಿಕೆ ಪ್ರಕ್ರಿಯೆ ಮೊದಲ ಹೆಜ್ಜೆ ಎಂದು ರಷ್ಯಾ ತಿಳಿಸಿಕೊಟ್ಟಿದ್ದೂ ಇದಕ್ಕೆ ಪ್ರಮುಖ ಕಾರಣ.  ೧೯೧೭ರ ಕ್ರಾಂತಿಯ ಬೆನ್ನಲ್ಲೇ ರಷ್ಯಾ ಮತ್ತು ಬಳಿಕ ಸೋವಿಯತ್ ಚಲನಚಿತ್ರಗಳು ಅವಿಷ್ಕಾರಗಳ ತವರು ಮನೆಯಾದವು. ಇದರಿಂದಾಗಿ ವಿಶ್ವ ವಿಖ್ಯಾತಿ ಪಡೆದ ಬ್ಯಾಟಲ್ ಶಿಪ್ ಪೋಟ್ ಮ್ಕಿನ್  ಚಲನಚಿತ್ರ ಹೊರಬಂತು.  ಸೋವಿಯತ್-ಯುಗದ ಚಿತ್ರ ನಿರ್ಮಾಪಕರ ಪೈಕಿ ಪ್ರಮುಖವಾಗಿ ಸೆರ್ಗೆಯ್ ಐನ್ ಸ್ಟ್ಟೈನ್‌ಮತ್ತು ಆಂಡ್ರೇ ತಾರ್ಕೊವಿಸ್ಕಿ ಅವರು ಜಗತ್ತಿನ ಪ್ರಖ್ಯಾತ ಸೃಜನಶೀಲ ಮತ್ತು ಪ್ರಭಾವಿ ನಿರ್ದೇಶಕರಾಗಿ ಹೆಸರು ಪಡೆದರು. 

ಐನ್ ಸ್ಟೈನ್ ಕೂಡ ಚಿತ್ರ ನಿರ್ಮಾಪಕ ಹಾಗೂ ತಾತ್ವಿಕ ಸಿದ್ಧಾಂತಿ ಲೆವ್ ಕುಲೆಶೋವ್ ಅವರ ವಿದ್ಯಾರ್ಥಿ. ಮಾಸ್ಕೋದಲ್ಲಿರುವ ಜಗತ್ತಿನ ಮೊದಲ ಚಲನಚಿತ್ರ ಶಾಲೆ ರಷ್ಯಾ ಚಲನಚಿತ್ರ ಕಲೆ ಸಂಸ್ಥೆಯಲ್ಲಿ ತಿದ್ದುವಿಕೆ ಪ್ರಕ್ರಿಯೆಗೆ ಹೊಸ ಆಯಾಮವನ್ನೇ ನೀಡಿದ ಮಾಂಟೇಜ್ ಸೂತ್ರವನ್ನು ಪ್ರತಿಪಾದಿಸಿದ ಹೆಗ್ಗಳಿಕೆ ಕುಲೆಶೋವ್ ಅವರದ್ದು. ದ್ಜಿಗ ವೆರ್ಟೋವ್ ಅವರ ಕ್ಯಾಮೆರಾ ಕುರಿತ ಕಿನೊ-ಗ್ಲಾಸ್ (ಚಲನಚಿತ್ರ-ಕಣ್ಣು)ಸಿದ್ದಾಂತ, ಚಲನಚಿತ್ರದ ದಿಕ್ಕನ್ನೇ ಬದಲಿಸಿತು. ಈ ಕ್ಯಾಮೆರಾ ಬಳಸಿ ನೈಜ ಜೀವನ ಕುರಿತ ನಡೆಸಿದ ಪರಿಶೋಧನಗಳು ಸಾಕ್ಷ್ಯಾಧಾರಿತ ಚಿತ್ರಗಳ ಅಭಿವೃದ್ಧಿ ಮತ್ತು ಚಲನಚಿತ್ರದ ವಾಸ್ತವತೆಯ ಮೇಲೆ ಭಾರಿ ಪರಿಣಾಮ ಬೀರಿದವು. ೧೯೩೨ರಲ್ಲಿ, ಸ್ಟಾಲಿನ್ ಸಮಾಜವಾದಿ ನಂಬಿಕೆಯನ್ನು ದೇಶದ ನೀತಿಯನ್ನಾಗಿ ಜಾರಿಗೆ ತಂದರು; ಇದು ಕ್ರಿಯಾಶೀಲತೆಗೆ ಕಡಿವಾಣ ಹಾಕಿದರೂ, ಈ ಅವಧಿಯಲ್ಲಿ ತೆರೆಕಂಡ ಚಪ್ಪೇವ್ , ದಿ ಕ್ರೇನ್ಸ್ ಆರ್ ಫ್ಲೈಯಿಂಗ್  ಮತ್ತು ಬಾಲ್ಲದ್ ಆಫ್ ಎ ಸೋಲ್ಜಿಯರ್  ಇತ್ಯಾದಿ ಅನೇಕ ಸೋವಿಯತ್ ಚಲನಚಿತ್ರಗಳು ಕಲಾತ್ಮಕವಾಗಿ ಯಶಸ್ಸು ಕಂಡಿವೆ.  ಲಿಯೊನಿಡ್ ಗೈಡಾಯ್‌ಅವರ ಹಾಸ್ಯ ಚಿತ್ರಗಳು ೧೯೬೦ ಮತ್ತು ೧೯೭೦ರ ದಶಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದವು, ಅವುಗಳ ಕೆಲವು ಆಕರ್ಷಕ ಮಾತುಗಳನ್ನು ಇಂದೂ ಬಳಸಿಕೊಳ್ಳಲಾಗುತ್ತಿದೆ. ೧೯೬೯ರಲ್ಲಿ ವ್ಲಾಡಿಮಿರ್ ಮೊಟಿಲ್ ಅವರ ವೈಟ್ ಸನ್ ಆಫ್ ದಿ ಡೆಸರ್ಟ್  ಚಿತ್ರ ಬಿಡುಗಡೆಯಾಯಿತು, ಅಲ್ಲದೆ ಇದು ಒಸ್ಟರ್ನ್ ಎಂಬ ಹೊಸ ಪ್ರಕಾರಕ್ಕೆ ನಾಂದಿ ಹಾಡಿತು.ಗಗನಯಾತ್ರಿಗಳು ಕೂಡ ತಾವು ಬಾಹ್ಯಾಕಾಶಕ್ಕೆ ತೆರಳುವ ಮೊದಲು ಚಲನಚಿತ್ರ ವೀಕ್ಷಿಸುತ್ತಿದ್ದರು. 

೧೯೮೦ರಿಂದ ೧೯೯೦ರವರೆಗಿನ ಅವಧಿಯನ್ನು ರಷ್ಯನ್ ಚಲನಚಿತ್ರದ ಬಿಕ್ಕಟ್ಟಿನ ಕಾಲವೆನ್ನಬಹುದು. ರಷ್ಯಾದ ಚಿತ್ರ ನಿರ್ಮಾಪಕರಿಗೆ ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯವಿದ್ದರೂ, ಸರ್ಕಾರದ ಅನುದಾನಗಳು ಗಣನೀಯವಾಗಿ ಇಳಿದ ಪರಿಣಾಮ, ಚಿತ್ರ ನಿರ್ಮಿಸುವವರ ಸಂಖ್ಯೆ ಕೂಡ ಇಳಿಮುಖಗೊಂಡಿತು. ೨೧ನೇ ಶತಮಾನದ ಆದಿಯಲ್ಲಿನ ಆರ್ಥಿಕ ಸುಧಾರಣೆಗಳಿಂದಾಗಿ ಚಲನಚಿತ್ರ ನೋಡುಗರ ಸಂಖ್ಯೆ ಹೆಚ್ಚಿದ್ದಲ್ಲದೆ, ಚಲನಚಿತ್ರ ಕ್ಷೇತ್ರವೂ ಅಭಿವೃದ್ಧಿ ಕಂಡಿತು, ಮತ್ತು ಚಿತ್ರ ನಿರ್ಮಾಣದಲ್ಲಿ ಅದಾಗಲೇ ಬ್ರಿಟನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿತ್ತು. ೨೦೦೭ರಲ್ಲಿ ರಷ್ಯಾಕ್ಕೆ ಚಲನಚಿತ್ರ ಕ್ಷೇತ್ರದಿಂದ ಬಂದ ಒಟ್ಟು ಆದಾಯ ೫೬೫ ದಶಲಕ್ಷ $. ಇದು ಹಿಂದಿನ ವರ್ಷಕ್ಕಿಂತ[ ೪೭% ರಷ್ಟು ಹೆಚ್ಚು.(ತುಲನೆ ಮಾಡಿ ನೋಡುವುದಿದ್ದಲ್ಲಿ ೧೯೯೬ರಲ್ಲಿ ಬಂದ ಆದಾಯ ೬ ದಶಲಕ್ಷ ಡಾಲರ್). ರಷ್ಯಾ ಚಲನಚಿತ್ರಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಿಗುವುದು ಮುಂದುವರಿದಿದೆ. ರಷ್ಯನ್ ಆರ್ಕ್ (೨೦೦೨) ಒಂದೇ ಟೇಕ್ ನಲ್ಲಿ ತೆಗೆದ ರಷ್ಯಾದ ಮೊದಲ ಚಲನಚಿತ್ರ.

ರಷ್ಯಾದ ಚಿತ್ರಕಲೆ ಆರಂಭಿಕ ಹಂತದಲ್ಲಿ ವಿಗ್ರಹ ಕಲೆ ಮತ್ತು ಬೈಝಾಂಟಿಯಂನಿಂದ ಪಾರಂಪರಿಕವಾಗಿ ಬಂದ ರೋಮಾಂಚಕ ಹಸಿಚಿತ್ರಗಳಲ್ಲಿ ಕೇಂದ್ರೀಕೃತವಾಗಿತ್ತು.ಮಾಸ್ಕೊ ಅಧಿಕಾರಕ್ಕೆ ಬರುತ್ತಿದ್ದಂತೆ, ಗ್ರೀಕಿನ ಥಿಯೋಪಾನ್ಸ್ ಮತ್ತು ಆಂಡ್ರೇ ರುಬ್ಲೇವ್ ಅವರ ಹೆಸರುಗಳು ಆರಂಭದಲ್ಲಿ ರಷ್ಯಾದ ಚಿತ್ರಕಲೆಯೊಂದಿಗೆ ಕೇಳಿ ಬಂದವು. ರಷ್ಯಾದ ಕಲಾವಿದರಿಗೆ ಅಂತರರಾಷ್ಟ್ರೀಯ ಪಾತ್ರ ಮತ್ತು ಸ್ಥಾನಮಾನ ಕೊಡುವ ನಿಟ್ಟಿನಲ್ಲಿ 1757ರಲ್ಲಿ ರಷ್ಯಾ ಕಲಾ ಅಕಾಡೆಮಿ ಸ್ಥಾಪನೆಯಾಯಿತು.ಇವಾನ್ ಅರ್ಗುನೋವ್, 


#Article 245: ಪೋರ್ಟ್ ಬ್ಲೇರ್ (169 words)


ಪೋರ್ಟ್ ಬ್ಲೇರ್  ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ರಾಜಧಾನಿ. ಇದು ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೆಬ್ಬಾಗಿಲಿನಂತಿದೆ. ಇಲ್ಲಿ ಹಲವಾರು ವಸ್ತು ಸಂಗ್ರಹಾಲಗಳು, ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುತ್ತಿದ್ದ  ಬ್ರಿಟಿಷರ ಕಾಲದ ಸೆರೆಮನೆ ಇದೆ. ಇದು ಭಾರತೀಯ ನೌಕಾ ದಳದ  ಪ್ರಮುಖ ನೆಲೆಯಾಗಿದ್ದು, ವಾಯುದಳದ ನೆಲೆ ಕೂಡಾ ಇದೆ.

ಪೋರ್ಟ್ ಬ್ಲೇರ್ - ಭಾರತ ಗಣರಾಜ್ಯದ ಒಕ್ಕೂಟ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಕೇಂದ್ರ ಮತ್ತು ರೇವು ಪಟ್ಟಣ. ದಕ್ಷಿಣ ಅಂಡಮಾನ್ ದ್ವೀಪದ ಆಗ್ನೇಯ ತೀರದಲ್ಲಿ ಉ.ಅ. 11039' ಮತ್ತು ಪೂ.ರೇ. 92045' ಮೇಲೆ ಇದೆ.

ಪೋರ್ಟ್ ಬ್ಲೇರ್ ಏಷ್ಯದ ಅತ್ಯುತ್ತಮ ರೇವುಗಳಲ್ಲೊಂದು. ಇದು ಕೋಲ್ಕತ್ತಾದ ಆಗ್ನೇಯಕ್ಕೆ 1,296. ಕಿ.ಮೀ. ಮತ್ತು ಚೆನ್ನೈನ ನೈಋತ್ಯಕ್ಕೆ 1,344 ಕಿ.ಮೀ. ದೂರದಲ್ಲಿದೆ.

ಬ್ರಿಟಿಷ್ ಸೈನ್ಯದ ಅರ್ಚಿಬಾಲ್ಡ್ ಬ್ಲೇರ್ ಇದನ್ನು 1789 ರಲ್ಲಿ ವಶಪಡಿಸಿಕೊಂಡ. ಆಗ ಇದಕ್ಕೆ ಪೋರ್ಟ್ ಕಾರ್ನ್‍ವಾಲೀಸ್ ಎಂದು ಹೆಸರಿಡಲಾಗಿತ್ತು. 1796-1856 ರಲ್ಲಿ ಇದನ್ನು ತೊರೆಯಲಾಗಿತ್ತು. ಭಾರತದಲ್ಲಿ ಗಡಿಪಾರು ಶಿಕ್ಷೆಗೆ ಒಳಗಾದವರನ್ನು ಇಡಲು ಇದನ್ನು 1858 ರಲ್ಲಿ ಬ್ರಿಟಿಷ್ ಸರ್ಕಾರ ಬಳಸಿಕೊಳ್ಳತೊಡಗಿತು. ಆಗ ಇದಕ್ಕೆ ಪೋರ್ಟ್ ಬ್ಲೇರ್ ಎಂದು ನಾಮಕರಣ ಮಾಡಲಾಯಿತು. ಇದು ಕೈದಿಗಳ ನೆಲೆಯಾಗಿದ್ದುದನ್ನು 1940 ರಲ್ಲಿ ಕೊನೆಗೊಳಿಸಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೆಲವು ವರ್ಷಗಳ ಕಾಲ (1842-45) ಇದು ಜಪಾನೀಯರ ವಶದಲ್ಲಿತ್ತು. 1947 ರಲ್ಲಿ ಭಾರತ ಗಣರಾಜ್ಯಕ್ಕೆ ಸೇರಿದ ಮೇಲೆ ಇದು ಶೀಘ್ರವಾಗಿ ಬೆಳೆಯತೊಡಗಿತು. ಮೀನುಗಾರಿಕೆ, ಸಣ್ಣ ಉದ್ಯಮಗಳು, ವ್ಯಾಪಾರ ಇವು ಇಲ್ಲಿಯ ಮುಖ್ಯ ಆರ್ಥಿಕ ಚಟುವಟಿಕೆಗಳು. ಇಲ್ಲಿ ಪ್ರೌಢಶಾಲೆ, ಆಸ್ಪತ್ರೆ ಮುಂತಾದುವು ಇವೆ.

ಇದನ್ನು ಇತ್ತೀಚಿಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ದಿ ಪಡಿಸಲು ಯೋಜನೆ ರೂಪಿಸಲಾಗಿದೆ.




#Article 246: ಪಟ್ನಾ (236 words)


ಪಟ್ನಾ ಬಿಹಾರ ರಾಜ್ಯದ ರಾಜಧಾನಿ. ಆಧುನಿಕ ಪಟ್ನಾ ನಗರವು ಗಂಗಾ ನದಿಯ ದಕ್ಷಿಣ ದಡದಲ್ಲಿ ಸ್ಥಿತವಾಗಿದೆ. ನಗರವು ಕೋಸಿ, ಸೋನ್ ಮತ್ತು ಗಂಡಕ್ ನದಿಗಳ ದಡದಲ್ಲೂ ಇದೆ.
ಪಟ್ನಾ ವಿಭಾಗದ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಗಂಗಾ ನದಿಯ ಬಲದಂಡೆಯ ಮೇಲೆ ಕಲ್ಕತ್ತಕ್ಕೆ 464 ಕಿಮೀ. ದೂರದಲ್ಲಿದೆ. ಪ್ರಾಚೀನ ನಗರವಾದ ಪಾಟಲಿಪುತ್ರ ಹೆಚ್ಚು ಕಡಿಮೆ ಇದೇ ಸ್ಥಳದಲ್ಲಿತ್ತು. ಹಳೆಯ ನಗರ ಗಂಗಾ ನದಿಯ ದಂಡೆಯ ಮೇಲೆ ಸುಮಾರು 19 ಕಿ.ಮೀ. ಉದ್ದಕ್ಕೆ ಹಬ್ಬಿದೆ. ಇದರ ಪಶ್ಚಿಮಕ್ಕೆ ಹೊಸ ಬಂಕೀಪುರ ವಿಭಾಗವಿದೆ. ಇದರ ಪಶ್ಚಿಮಕ್ಕೂ ನೈಋತ್ಯಕ್ಕೂ ಆಧುನಿಕ ರಾಜಧಾನಿ ಬೆಳೆದಿದೆ. ಜನಸಂಖ್ಯೆ ೨೨,೩೧,೫೫೪(೨೦೧೧).

ಪಟ್ನಾ ಪ್ರಮುಖ ರೈಲ್ವೆ ಮತ್ತು ರಸ್ತೆ ಸಂಧಿಸ್ಥಳ. ಕಳೆದ ಐವತ್ತು ವರ್ಷಗಳಲ್ಲಿ ಪಟ್ನಾ ಬಹಳಮಟ್ಟಿಗೆ ಬೆಳೆದಿದೆ. 1916ರಲ್ಲಿ ಇಲ್ಲಿ ಉಚ್ಚ ನ್ಯಾಯಾಲಯ ಸ್ಥಾಪಿತವಾಯಿತು. ಪಟ್ನಾ ವಿಶ್ವವಿದ್ಯಾಲಯ 1917ರಷ್ಟು ಹಳೆಯದು. ಇಲ್ಲಿಯ ಆಧುನಿಕ ಕಟ್ಟಡಗಳಲ್ಲಿ ಮುಖ್ಯವಾದವರೆಂದರೆ ಸರ್ಕಾರಿ ಭವನ, ವಿಧಾನಸಭಾ ಭವನ, ಪ್ರಾಚ್ಯ ಗ್ರಂಥಾಲಯ, ವೈದ್ಯಕೀಯ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು, ಇಲ್ಲಿ ಬಂಗಾಲದ ಹುಸೇನ್ ಶಹನ ಮಸೀದಿಯೂ (1490) ಸಿಕ್ಖರ ಹತ್ತನೆಯ ಗುರುವಾದ ಗೋವಿಂದ ಸಿಂಗನ ಕಾಲದ ಮಂದಿರವೂ ಗೋಲ್‍ಘರ್ ಎಂಬ ಬಂಕೀಪುರದ ಕಣಜವೂ ಇದೆ.

ಕ್ರಿ.ಪೂ. 5ನೆಯ ಶತಮಾನದಲ್ಲಿ ಇಲ್ಲಿ ಸ್ಥಾಪಿತವಾದ ಪಾಟಲಿಪುತ್ರ ನಗರ ಕ್ರಿ.ಶ. 7ನೆಯ ಶತಮಾನದವರೆಗೂ ಪ್ರವರ್ಧಮಾನಸ್ಥಿತಿಯಲ್ಲಿತ್ತು. ಅನಂತರ 16ನೆಯ ಶತಮಾನದ ವರೆಗಿನ ಇದರ ಇತಿಹಾಸ ನಮಗೆ ತಿಳಿದುಬಂದಿಲ್ಲ. ಆಫ್‍ಘನ್ ದೊರೆ ಷೇರ್‍ಶಹ 1541ರಲ್ಲಿ ಮತ್ತೆ ಸ್ಥಾಪಿಸಿದ ನಗರಕ್ಕೆ ಪಟ್ನಾ ಎಂದು ಹೆಸರು ಇಟ್ಟ. ಮೊಗಲರ ಆಧಿಪತ್ಯದಲ್ಲಿ ಇದು ಮತ್ತೆ ಹಳೆ ಸ್ಥಾನಮಾನ ಪಡೆದು ಬಿಹಾರದ ಪ್ರಮುಖ ನಗರವಾಯಿತು. 1586ರಲ್ಲಿ ಇಲ್ಲಿಗೆ ಭೇಟಿ ನೀಡಿದ ರಾಲ್ಫ್ ಫಿಚ್ ಎಂಬ ಇಂಗ್ಲಿಷ್ ಇದನ್ನು ಬಲು ಉದ್ದನೆಯ ಮಹಾನಗರವೆಂದು ಬಣ್ಣಿಸಿದ. ಮೊಗಲ್ ಚಕ್ರವರ್ತಿ ಔರಂಗ್‍ಜೇóಬ್ (1659-1707) ತನ್ನ ಮೊವ್ಮ್ಮಗನಾದ ಅಜೀóಮನ ಹೆಸರಿನಲ್ಲಿ ಇದಕ್ಕೆ ಅಜೀóಮಾಬಾದ್ ಎಂದು ನಾಮಕರಣ ಮಾಡಿದ. ಈ ನಗರ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಶವಾದ್ದು 1765ರಲ್ಲಿ. ಕಂಪನಿಯ ಕಂದಾಯ ವಸೂಲಿಗಾಗಿ ಸ್ಥಾಪಿತವಾಗಿದ್ದ ಪ್ರಾಂತೀಯ ಮಂಡಲಿಯ ಮುಖ್ಯ ಕಛೇರಿ ಇಲ್ಲಿ ಸ್ಥಾಪಿತವಾಯಿತು. 1865ರಲ್ಲಿ ಬಿಹಾರದಲ್ಲಿ ಪಟ್ನಾ ಮತ್ತು ಗಯಾ ಜಿಲ್ಲೆಗಳು ರೂಪಿತವಾದವು. 1912ರಲ್ಲಿ ಬಂಗಾಲ ಆಧಿಪತ್ಯದಿಂದ ಬಿಹಾರ ಮತ್ತು ಒರಿಸ್ಸ ಪ್ರಾಂತ್ಯದ ರಚನೆಯಾದಾಗ ಪಟ್ನಾ ಆ ಪ್ರಾಂತ್ಯದ ರಾಜಧಾನಿಯಾಯಿತು. 1936ರಲ್ಲಿ ಒರಿಸ್ಸ ಪ್ರತ್ಯೇಕ ಪ್ರಾಂತ್ಯವಾಯಿತು. ಬಿಹಾರದ ರಾಜಧಾನಿಯಾಗಿ ಪಟ್ನಾ ಮುಂದುವರೆಯಿತು. ಸ್ವತಂತ್ರ ಭಾರತದಲ್ಲೂ ಇದು ಬಿಹಾರದ ರಾಜಧಾನಿಯಾಗಿ ಮುಂದುವರಿಯಿತು.




#Article 247: ಶಿಮ್ಲಾ (295 words)


ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ, 
ಹಸಿರು ವನರಾಜಿ, ಬೆಟ್ಟಗಳ ಸಾಲು ಸಾಲು, ತಣ್ಣಗೆ ಮೈಕೊರೆವ ಚಳಿ, ಇಬ್ಬನಿಯ ಭಾರಕ್ಕೆ ಬಾಗಿದ ಹಸಿರೆಲೆಗಳು, ಬಣ್ಣಬಣ್ಣದ ಹೂಗಳು, ಶಾಂತವಾಗಿ ಇವನ್ನೆಲ್ಲ ವೀಕ್ಷಿಸುತ್ತಿರುವ ಹಕ್ಕಿಗಳು, ಬೆಟ್ಟಗಳ ಮೇಲಿನ ತಿರುವು ಹಾದಿಗಳು. ಇವಾವುದರ ಪರಿವೆ ಇಲ್ಲದೆ ಹಳಿಯ ಮೇಲೆ ತೆವಳುತ್ತಾ ಸುರಂಗಗಳಲ್ಲಿ ನುಸುಳುತ್ತಾ ಸಾಗುವ ಮಂದಗತಿಯ ರೈಲುಗಾಡಿ. ಆಜುಬಾಜಿನಲ್ಲೆಲ್ಲ ಹೆಸರಿಲ್ಲದ ವಾಸನೆಯಿಲ್ಲದ ಸುಂದರ ಆರ್ಕಿಡ್ ಪುಷ್ಪಗಳು, ಹಸಿರು ಮೈಯ ಬೆಟ್ಟಗಳ ಮೇಲೆಲ್ಲ ಮೇಘರಾಜನ ಆಳ್ವಿಕೆ, ಸೂಜಿಯೆಲೆಗಳಿಂದ ತೊಟ್ಟಿಕ್ಕುವ ಇಬ್ಬನಿ ಇವೆಲ್ಲ ಶಿಮ್ಲಾ ಎಂಬ ದೃಶ್ಯಕಾವ್ಯದ ಮೊದಲ ಪುಟಗಳು.

ಎರಡೂವರೆ ಅಡಿ ಅಂತರದ ಹಳಿಗಳ ಮೇಲೆ ವಿರಾಜಮಾನವಾಗಿದ್ದ ಆರು ಬೋಗಿಗಳ ಪುಟಾಣಿ ನ್ಯಾರೋಗೇಜ್ ರೈಲು ಕಾಲ್ಕಾ ರೈಲುನಿಲ್ದಾಣದಿಂದ ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟು ಬೆಳಕು ಹರಿಯುವ ಮುನ್ನ ಅದು ಹಲವಾರು ಸುರಂಗಗಳನ್ನು ಹಾದು ತಿರುವುಗಳನ್ನು ಬಳಸಿ ಆರು ಗಂಟೆ ವೇಳೆಗೆ ಒಂದು ಬಾರೋಗ್ ಎಂಬ ಆ ನಿಲ್ದಾಣದಲ್ಲಿ ಬಂದು ನಿಂತಾಗ ಅಲ್ಲಿನ ಒಂದು ಫಲಕವು ೩೭೫೭ ಅಡಿಗಳ ಅತಿ ಉದ್ದನೆಯ ಸುರಂಗವನ್ನು ಹಾದು ಬಂದಿರುವುದನ್ನು ಸಾರುತ್ತದೆ.

ಅಡ್ಡಡ್ಡ ಮಲಗಿದರೆ ಕೈಕಾಲುಗಳಿಂದ ಎರಡೂ ಪಾರ್ಶ್ವಗಳನ್ನು ಸ್ಪರ್ಶಿಸಬಹುದಾದ ಕೇವಲ ಇಪ್ಪತ್ತು ಜನರಷ್ಟೇ ಕೂಡಬಹುದಾಗಿದ್ದ ಪುಟ್ಟ ಬೋಗಿಯೊಳಗೆ ಕುಳಿತು ೧೦೨ ಸುರಂಗಗಳು, ೮೪೫ ಸೇತುವೆಗಳು ಹಾಗೂ ೯೧೯ ತಿರುವುಗಳನ್ನು ಹಾದು ಬರುವ ಈ ರೈಲಿನಲ್ಲಿನ ಪ್ರಯಾಣ ಶಿಮ್ಲಾ ಪ್ರವಾಸದ ಅತಿ ಮುಖ್ಯಭಾಗ.

ಇಂಗ್ಲಿಷರ ಕಾಲದ ಇಂಡಿಯಾದ ಬೇಸಿಗೆ ರಾಜಧಾನಿ ಶಿಮ್ಲಾ. ಹಿಮಾಲಯದ ಅಂಚಿನಲ್ಲಿರುವ ಆದರೆ ಹಿಮಾಲಯದ ಗುಣಗಳನ್ನೇ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ಶ್ರೀಮಂತವಾಗಿರುವ ಶಿಮ್ಲಾ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಸೂಜಿಗಲ್ಲು.

ಶಿಮ್ಲಾದಲ್ಲಿ ಪ್ರವಾಸ ಎಂದರೆ ಬೆಟ್ಟವನ್ನು ಏರುತ್ತಾ ಏರುತ್ತಾ ಏರುತ್ತಾ ಹೋಗುವುದು.  ಹೇಳಿಕೇಳಿ ಇದು ಬಯಲು ಪ್ರದೇಶ ಅಲ್ಲವಲ್ಲ!  ಸಮುದ್ರ ಮಟ್ಟದಿಂದ ಸುಮಾರು ೭೫೦೦ ಅಡಿಗಳ ಮೇಲೆ ಇರುವ ಫಾಗು ಎಂಬ ಸ್ಥಳದಿಂದ ಹಿಮಾಲಯದ ಹಿಮಾಚ್ಛಾದಿತ ಶಿಖರಗಳನ್ನು ವೀಕ್ಷಿಸಬಹುದು. ಇನ್ನೂ ೫೦೦ ಅಡಿಗಳ ಮೇಲೆ ಹೋದಲ್ಲಿ ಕುಫ್ರಿ ಎಂಬ ಸ್ಥಳ ಸಿಗುತ್ತದೆ. ಇಲ್ಲಿ ಹಿಮಾಲಯದ ವನ್ಯಜೀವಿಗಳ ಅಭಯಧಾಮ, ಪ್ರವಾಸೋದ್ಯಮ ಇಲಾಖೆಯ ಉದ್ಯಾನವನ, ಚಾರಣಕ್ಕೆ ಹೇಳಿ ಮಾಡಿಸಿದ ಶಿಖರಗಳೂ ಕೊರಕಲುಗಳೂ ಇವೆ. ವಾಹನಗಳು ಚಲಿಸಲಾಗದ ಉರುಟು ಕಲ್ಲು ಕೊರಕಲುಗಳಿಂದ ಕೆಲವೊಮ್ಮೆ ಹಿಮದಿಂದ ತುಂಬಿದ ಹಾದಿಯಲ್ಲಿ ಕುದುರೆಯ ಮೇಲೆ ಕುಳಿತು ಏರುತ್ತಾ ಇಳಿಯುತ್ತಾ ಮುಗ್ಗರಿಸುತ್ತಾ ಅಳುಕಿನಿಂದ ಸಾಗುವುದೇ ಒಂದು ಸಾಹಸದ ಅನುಭವ. ಅದಕ್ಕೆಂದೇ ಅಲ್ಲಿ ಕುದುರೆಗಳು ಬಾಡಿಗೆಗೆ ಸಿಗುತ್ತವೆ.

ಸುಂದರವಾದತುಪ್ಪಳವುಳ್ಳ ಯಾಕ್ (ಹಿಮಾಲಯದ ಎಮ್ಮೆ) ಪ್ರಾಣಿಗಳು, ಹಿಮಾಲಯನ್ ಲಂಗೂರ್‍ ಎಂಬ ಕಪ್ಪು ಮುಖದ ಕೋತಿಗಳು, ಹಿಮಾಚಲದ ಸಾಂಪ್ರದಾಯಿಕ ಉಡುಗೆ ತೊಟ್ಟ ಗುಡ್ಡಗಾಡು ಜನರ ವೇಷಭೂಷಣಗಳು, ಪರಿಕರಗಳು ಮತ್ತು ಆಹ್ಲಾದಕರ ಪ್ರಕೃತಿ ದರ್ಶನದ ಅನಂತರ ಶಿಮ್ಲಾ ಪಟ್ಟಣಕ್ಕೆ ಬಂದರೆ ಅಲ್ಲಿ ಮಾಲ್ ಎಂಬ ನೋಡಲೇಬೇಕಾದ ಸ್ಥಳವೊಂದಿದೆ. ಇಂಗ್ಲಿಷರು ಕಟ್ಟಿದ ಸುಂದರವಾದ ಚರ್ಚ್ ಇಲ್ಲಿದೆ. ಇದರ ಆಜುಬಾಜೂ ಇರುವ ಸಂತೆಯಲ್ಲಿ ಹಿಮಾಚಲಪ್ರದೇಶದ ಎಲ್ಲ ವಿಶಿಷ್ಟ ವಸ್ತುಗಳ ಬಿಕರಿಯಾಗುತ್ತದೆ. ಮುಖ್ಯವಾದ ಸ್ಥಳದಲ್ಲಿ ಲಾಲಾ ಲಜಪತರಾಯ್‌ರವರ ಪ್ರತಿಮೆಯಿದೆ. 
ರಾತ್ರಿ ಹೊತ್ತಿನಲ್ಲಿ ಶಿಮ್ಲಾ ನಗರವನ್ನು ನೋಡುವುದೇ ಒಂದು ಚೆಂದ. ಬೆಟ್ಟಗುಡ್ಡಗಳೆಲ್ಲ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುವಾಗ ನೋಡಲು ಎರಡು ಕಣ್ಣು ಸಾಲವು. 




#Article 248: ಜಮ್ಮು (158 words)


ಜಮ್ಮು ಮತ್ತು ಕಶ್ಮೀರ ರಾಜ್ಯದ ಬೇಸಿಗೆಕಾಲದ ರಾಜಧಾನಿ
ಜಮ್ಮು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ; ಜಮ್ಮು ಜಿಲ್ಲೆಯ, ಜಮ್ಮು ವಿಭಾಗದ ಮುಖ್ಯ ಪಟ್ಟಣ. ಚೀನಾಬ್ ನದಿಯ ಉಪನದಿಯಾದ ಟಾವಿಯ ದಡದ ಮೇಲೆ, ಶ್ರೀನಗರದಿಂದ 95ಮೈ. ದಕ್ಷಿಣಕ್ಕೆ, ಉ.ಅ.32ಔ 47' ಮತ್ತು ಪೂ.ರೇ. 74ಔ 50' ಮೇಲೆ ಇದೆ. ಜನಸಂಖ್ಯೆ 5,350,811

ಜಮ್ಮು ವಿಭಾಗದಲ್ಲಿ ಜಮ್ಮು, ಕಾಟುವಾ , ಉದಮ್‍ಪುರ , ದೋದಾ  ಮತ್ತು ಪುಂಚ್  ಈ ಐದು ಜಿಲ್ಲೆಗಳಿವೆ. ಈ ವಿಭಾಗ ಹೆಚ್ಚಾಗಿ ಗುಡ್ಡಗಾಡು. ವಾರ್ಷಿಕ ಮಳೆ 41. ಕೆಲವೆಡೆ ಗೋದಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ.

ಜಮ್ಮು ನಗರದಲ್ಲಿ ಅನೇಕ ಪುರಾಣಪ್ರಸಿದ್ಧ ಅವಶೇಷಗಳನ್ನು ನೋಡಬಹುದು. ಇಲ್ಲಿಯ ರಘುನಾಥ ದೇವಾಲಯ ಪ್ರಸಿದ್ಧವಾದ್ದು. ಟಾವಿ ನದಿಯ ಎಡದಡದಲ್ಲಿ ರಾಜಮಹಲ್ ಇದೆ. ಭಾರತೀಯ ರೈಲ್ವೆ ಮಾರ್ಗದ ಅಂತಿಮ ನಿಲ್ದಾಣವಾದ ಪಠಾಣ್ ಕೋಟೆಯೊಡನೆ ಜಮ್ಮು ನಗರ ಸಂಪರ್ಕ ಹೊಂದಿದೆ. ಇಲ್ಲಿ ಅರಣ್ಯ ಇಲಾಖೆಯ ಕೇಂದ್ರವುಂಟು.

ಜಮ್ಮು ನಗರದ ಹತ್ತಿರ ಇರುವ ಜಂಗಲಗಲಿ ಮತ್ತು ಕಾಲಕೋಟ್ ಪ್ರದೇಶಗಳಲ್ಲಿ ಕಲ್ಲಿದ್ದಲನ್ನು ತೆಗೆಯುತ್ತಾರೆ. ಜಿಪ್ಸಮ್ ಗಣಿಯೂ ಉಂಟು. ಜಮ್ಮು ನಗರದಲ್ಲಿ ಶಾಲಾಕಾಲೇಜುಗಳೂ ಔದ್ಯೋಗಿಕ ಶಿಕ್ಷಣ ಸಂಸ್ಥೆಯೂ ಇವೆ. ಜಮ್ಮು ನಗರದ ಬಹುಸಂಖ್ಯಾತರು ಡೋಗ್ರಾ ಮತ್ತು ಸಿಕ್ಖರು. ವ್ಯಾಪಾರ ಮತ್ತು ವ್ಯವಸಾಯ ಜನರ ಮುಖ್ಯ ಉದ್ಯೋಗ.

ಜಮ್ಮು ಪ್ರದೇಶ ಮೊದಲು ರಜಪೂತರ ಆಳ್ವಿಕೆಯಲ್ಲಿತ್ತು. ಅವರನ್ನು ಸಿಕ್ಖರು ಜಯಿಸಿದ ಅನಂತರ ಜಮ್ಮು ನಗರ ಸಿಖ್ ಸಾಮ್ರಾಜ್ಯದ ಒಂದು ಭಾಗವಾಯಿತು. ಜಮ್ಮು ನಗರವನ್ನು ಸ್ವಲ್ಪ ಸಮಯ ರಣಜಿತ್ ಸಿಂಗನೂ ಅವನ ಮರಣಾನಂತರ ಗುಲಾಬ್ ಸಿಂಗನೂ ಆಳಿದರು. 1846ರಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿ ಒಂದು ಸಂಸ್ಥಾನವಾಯಿತು.




#Article 249: ಭೊಪಾಲ್ (556 words)


ಭೋಪಾಲ್ (ಹಿಂದಿ: भोपाल) ಮಧ್ಯ ಪ್ರದೇಶ ರಾಜ್ಯದ ಒಂದು ಜಿಲ್ಲೆ, ಮತ್ತು ಕೈಗಾರಿಕಾ ನಗರ ಹಾಗೂ   ರಾಜಧಾನಿ ಮತ್ತು ಭೋಪಾಲ್ ಜಿಲ್ಲೆಯ ಆಡಳಿತ ಕೇಂದ್ರ. ಭೋಪಾಲ್ ಮಧ್ಯ ಪ್ರದೇಶದ ಅತ್ಯಂತ ದೊಡ್ಡ ನಗರವಾಗಿದೆ. ಭೋಪಾಲ್ ನಗರವು ಅನೇಕ ಕೆರೆಗಳನ್ನು ಹೊಂದಿದ್ದು ಅದನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತದೆ.

ಈ ಜಿಲ್ಲೆಯನ್ನು ಪೂರ್ವದಲ್ಲಿ ವಿದಿಶಾ, ರಾಯ್‍ಸೆನ್ ಜಿಲ್ಲೆಗಳೂ ಪಶ್ಚಿಮದಲ್ಲಿ ರಾಜಘರ್ ಮತ್ತು ಸೆಹೊರೆ ಜಿಲ್ಲೆಗಳೂ ಉತ್ತರದಲ್ಲಿ ವಿದಿಶಾ, ಗುನ ಜಿಲ್ಲೆಗಳೂ ದಕ್ಷಿಣದಲ್ಲಿ ರಾಯ್‍ಸೆನ್ ಮತ್ತು ಸೆಹೊರೆ ಜಿಲ್ಲೆಗಳೂ ಸುತ್ತುವರಿದಿವೆ. ಜಿಲ್ಲಾ ವಿಸ್ತೀರ್ಣ 2763 ಚಕಿಮೀ, ಜನಸಂಖ್ಯೆ 8,94,739(1981).

ಭೂಪಾಲ್ ನಗರ ಸಮುದ್ರ ಮಟ್ಟದಿಂದ ಸುಮಾರು 540 ಮೀಟರ್ ಎತ್ತರದಲ್ಲಿದೆ. ಉ.ಅ.23º  16' ಪೂ.ರೇ. 77º  36'ನಲ್ಲಿದೆ. ರಾಜ್ಯದ ಆಡಳಿತ ಕೇಂದ್ರ. ಜನಸಂಖ್ಯೆ 6,71,018 (1981). ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಮ್ ರಾಜ್ಯವೊಂದರ (ರಿಯಾಸತ್) ಕೇಂದ್ರವಾಗಿತ್ತು. ಧಾರಾನಗರದ ಪರಮಾರ ದೊರೆ ಭೋಜಪಾಲ (1010-53) ಈ ನಗರವನ್ನು ಕಟ್ಟಿದುದರಿಂದ ಇದಕ್ಕೆ ಭೂಪಾಲವೆಂದು ಹೆಸರು ಬಂದಿತೆಂದು ಪ್ರತೀತಿ.

ಭೂಪಾಲ ಸರೋವರಗಳ ನಗರ. ಶ್ಯಾಮಲ ಮತ್ತು ಈದ್‍ಗಾ ಬೆಟ್ಟಗಳ ನಡುವೆ ಇರುವ ಇಲ್ಲಿಯ ಭೂಪಾಲ ಸರೋವರದ ಸುತ್ತಳತೆ 11 ಕಿಮೀಗೂ ಹೆಚ್ಚು. ನಗರಕ್ಕೆ ನೀರು ಸರಬರಾಜು ಆಗುವುದು ಈ ಸರೋವರದಿಂದಲೇ. ಇದಲ್ಲದೆ 1794ರಲ್ಲಿ ಛೋಟೆಖಾನ್ ಎಂಬ ಮಂತ್ರಿಯೊಬ್ಬ ಕಟ್ಟಿಸಿದ ಅಣೆಕಟ್ಟಿನಿಂದ ರೂಪುಗೊಂಡ ಎರಡು ಸರೋವರಗಳು ಪ್ರೇಕ್ಷಣೀಯವಾದವು. ಕುದ್‍ಸಿಯಾ ಬೇಗಮ್ ಎಂಬ ನವಾಬಳು ಕಟ್ಟಿಸಿದ ಜಾಮಾಮಸೀದಿ ವಿಶಾಲವಾದ, ಕೆಂಪು ಕಣಶಿಲೆಯ ಸೊಗಸಾದ ಕಟ್ಟಡ. ನಗರದ ಯಾವುದೇ ಮೂಲೆಯಿಂದ ನೋಡಿದರೂ ಈ ಮಸೀದಿ ಕಾಣುತ್ತದೆ.

ಭೂಪಾಲದ ಅರಮನೆಗಳು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ನವಾಬರಿಂದ ಸೇರ್ಪಡೆಯಾದ ಸಂಕೀರ್ಣ ಕಟ್ಟಡಗಳು. ಇವಕ್ಕೆ ನಿರ್ದಿಷ್ಟ ವಿನ್ಯಾಸವಿಲ್ಲ. ಬೇನಜೀರ್ ಅರಮನೆ, ತಾಜ್-ಉಲ್-ಮಸೀದಿ, ಮೋತಿ ಮಸೀದಿ ಹಾಗೂ ಸದರ್ ಮಂಜಿಲ್ ಇನ್ನಿತರ ಕೆಲವು ಪ್ರಮುಖ ಕಟ್ಟಡಗಳು. ಇಲ್ಲಿಯ ಫತೇಗಢ ಕೋಟೆಯನ್ನು 1728ರಲ್ಲಿ ದೋಸ್ತ್ ಮಹಮದ್ ಖಾನ್ ಕಟ್ಟಿಸಿದ. ಇಲ್ಲಿರುವ ಇತರ ಕಟ್ಟಡಗಳಲ್ಲಿ ಪರಮಾರ ಉದಯಾದಿತ್ಯನ (1059-80) ಪತ್ನಿ ಕಟ್ಟಿಸಿದೆನ್ನಲಾದ ಸಭಾಮಂಡಲ ಎನ್ನುವ ದೇಗುಲ ಬಹುಶಃ ಭೂಪಾಲದ ಪ್ರಾಚೀನತಮ ಕಟ್ಟಡ. ಈಚೆಗೆ ಬಿರ್ಲಾ ಕುಟುಂಬ ಕಟ್ಟಿಸಿದ ಲಕ್ಷ್ಮೀನಾರಾಯಣ ಮಂದಿರ ನೋಡುವಂಥದ್ದು.

ಹತ್ತಿ, ಗೋಧಿ, ಬೇಳೆ ಕಾಳುಗಳು, ಜೋಳ, ಕಬ್ಬು, ಎಳ್ಳು ಮುಂತಾದವು ಇಲ್ಲಿಯ ಮುಖ್ಯ ವ್ಯಾಪಾರಿ ಬೆಳೆಗೆಳು. ಮಗ್ಗದ ಬಟ್ಟೆಗಳು, ಯಂತ್ರಸಾಮಗ್ರಿ, ಪಾತ್ರೆ, ಕೈಚೀಲಗಳು, ಅಲಂಕರಣ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಭೂಪಾಲ ಕೈಗಾರಿಕಾರಂಗದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಇಲ್ಲಿಯ ಹೆವಿ ಎಲೆಕ್ಟ್ರಿಕಲ್ಸ್ (ಇಂಡಿಯಾ) ಲಿಮಿಟೆಡ್‍ನಲ್ಲಿ ಟರ್ಬೈನ್, ಸಿಚ್‍ಗಿಯರುಗಳನ್ನು ತಯಾರಿಸುತ್ತಾರೆ. 

ಈಚೆಗೆ (1984) ಇಲ್ಲಿಯ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಉಂಟಾದ ಅನಿಲ ಸೋರುವಿಕೆಯ ಪರಿಣಾಮವಾಗಿ ಸಾವಿರಾರು ಜನ ಮೃತರಾದರು ಮತ್ತು ಇತರ ಸಾವಿರಾರು ಜನ ರೋಗರುಜಿನಗಳಿಗೆ ತುತ್ತಾದರು. 

ಭೂಪಾಲ ನಗರ ರೈಲ್ವೆ ನಿಲ್ದಾಣ ಕೇಂದ್ರ. ವಿಮಾನ ನಿಲ್ದಾಣವೂ ಇದೆ. ರಾಷ್ಟ್ರೀಯ ಹೆದ್ದಾರಿ ಈ ನಗರದ ಮೂಲಕವೇ ಹಾಯ್ದು ಹೋಗಿದೆ. ಇಲ್ಲಿ ಭೂಪಾಲ ವಿಶ್ವವಿದ್ಯಾಲಯವಿದೆ. ಜೊತೆಗೆ ಆಧುನಿಕ ನಗರ ಸೌಕರ್ಯಗಳೆಲ್ಲ ಇವೆ. ಇದರ ಸುತ್ತಲ ಪ್ರೇಕ್ಷಣೀಯ ಸ್ಥಳಗಳಲ್ಲಿ ಸುಮಾರು 45 ಕಿಮೀ ದೂರದಲ್ಲಿ ಪ್ರಸಿದ್ಧ ಬೌದ್ಧ ಕೇಂದ್ರವಾಗಿದ್ದ ಸಾಂಚಿ ಇದೆ. ಶೈವಕ್ಷೇತ್ರ ಉಜ್ಜಯಿನಿಯೂ ಹತ್ತಿರದಲ್ಲಿದೆ. ಭೂಪಾಲದಿಂದ 6.4ಕಿಮೀ ದೂರದ ನಿಯೋರಿ ಎಂಬಲ್ಲಿ 11ನೆಯ ಶತಮಾನದ ಶಿವದೇವಾಲಯವಿದೆ. 11ಕಿಮೀ ದೂರದಲ್ಲಿರುವ ಇಸ್ಲಾಮ್‍ಪುರದಲ್ಲಿ ಹಳೆಯ ಅರಮನೆ, ತೋಟ ನೋಡಬಹುದಾದವು. ಸುಮಾರು 28ಕಿಮೀ ದೂರದಲ್ಲಿರುವ ಭೋಜಪುರ ಬೇತ್ವಾನದಿ ದಡದ ಮೇಲಿದೆ. ಇಲ್ಲಿಯ ಶಿಲ್ಪಗಳು ಹೆಸರಾದವು ಮತ್ತು ಇದನ್ನು ಉತ್ತರ ಭಾರತದ ಸೋಮನಾಥಪುರವೆಂದು ಕರೆಯುತ್ತಾರೆ.

ಇದನ್ನು ಭೋಜ ಮಹಾರಾಜ 11ನೆಯ ಶತಮಾನದಲ್ಲಿ ಕಟ್ಟಿದನೆಂದು ಹೇಳುವರು. 

ದೆಹಲಿಯಲ್ಲಿ ಬಹಾದ್ದುರ್ ಷಾ ಆಳುತ್ತಿದ್ದಾಗ ಉದ್ಯೋಗ ಅರಸಿ ಬಂದ ಪಠಾಣ ಯೋಧ ದೋಸ್ತ್ ಮಹಮದ್ ಖಾನ್ 1709ರಲ್ಲಿ ಬಿರ್ಸಿಯಾ ಪರಗಣದ ರಾಜ್ಯಪಾಲನಾಗಿ ನೇಮಿತನಾದ. ಕ್ರಮೇಣ ಸ್ವತಂತ್ರನಾದ ಈತ 1723ರಲ್ಲಿ ಭೂಪಾಲರಾಜ್ಯವನ್ನು ಸ್ಥಾಪಿಸಿದ. 1740ರಲ್ಲಿ ಈತನ ಮರಣಾನಂತರ ಅಧಿಕಾರಕ್ಕೆ ಬಂದ ಮಹಮ್ಮದ್‍ಖಾನ್ ಬಹುಕಾಲ ಬಾಳಲಿಲ್ಲ. ಹೀಗಾಗಿ ದೋಸ್ತ್ ಮಹಮದನ ಇನ್ನೊಬ್ಬ ಮಗ ಯಾರ್‍ಮಹಮದ್‍ಖಾನ್ ಆಡಳಿತ ಸೂತ್ರಗಳನ್ನು ವಹಿಸಿಕೊಂಡ. 1754ರಲ್ಲಿ ಯಾರ್‍ಮಹಮ್ಮದ್‍ಖಾನನ ಮರಣಾನಂತರ ಆತನ ಮಗ ಫೈಜ್ ಮಹಮದ್‍ಖಾನ್ ನವಾಬನಾದ. ಸುಮಾರು 210ಸೆಂಮೀ ಎತ್ತರದ, ದೃಢಕಾಯನಾದ ಈತ ಧರ್ಮ ಭೀರು, ಏಕಾಂತಪ್ರಿಯ, ರಾಜಪದವಿಗೆ ಅನರ್ಹನಾಗಿದ್ದ. ಈತನ ಕಾಲದಲ್ಲಿ, ರಾಜ್ಯದ ಅರ್ಧಭಾಗ ಪೇಷ್ವೆಗಳ ಅಧೀನವಾಯಿತು. 1777ರಲ್ಲಿ ಈತನ ಸೋದರ ಹಯಾತ್ ಮಹಮದಖಾನ್ ನವಾಬನಾದ. ಮೊದಲ ಮರಾಠ ಯುದ್ಧದಲ್ಲಿ ಈತ ಜನರಲ್ ಥಾಮಸ್ ಗೊಡಾರ್ಡ್‍ನಿಗೆ ಸಹಾಯ ನೀಡಿ ಬ್ರಿಟಿಷರ ಸ್ನೇಹ ವಿಶ್ವಾಸಗಳಿಗೆ ಪಾತ್ರನಾದ. 1798ರಿಂದ ಈತನ ರಾಜ್ಯ ಪಿಂಡಾರಿ ಹಾಗೂ ಮರಾಠರ ಸತತ ಧಾಳಿಗಳಿಗೆ ತುತ್ತಾಯಿತು. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ಈತನ ಸೋದರ ವಜೀರ್ ಮಹಮದ್‍ಖಾನ್ ಆಡಳಿತ ಸೂತ್ರಗಳನ್ನು ವಹಿಸಿಕೊಂಡ. ಪಿಂಡಾರಿಗಳ ಸರದಾರ ಕರೀಮಖಾನನಿಗೆ ನೌಕರಿ ನೀಡಿ ತನ್ನ ರಾಜ್ಯದ ಸ್ಥಿತಿಯನ್ನು ಸುಧಾರಿಸಿದ. 1807ರಲ್ಲಿ ಹಯಾತ್‍ಮಹಮದ್‍ಖಾನ್ ಮೃತನಾದ. ಅನಂತರ ನವಬ ಪದವಿ ವಜೀರ್‍ಮಹಮದ್‍ಖಾನನಿಗೆ ವಿದ್ಯುಕ್ತವಾಗಿ ಬಂತು. 1816ರಲ್ಲಿ ಈತನ ಮಗ ನಜೀರ್ ಮಹಮದ್‍ಖಾನ್ ನವಾಬನಾದ. ಈತ ಹಯಾತ್ ಮಹಮದ್ ಖಾನನ ಮಗ ಗೌಸ್‍ಮಹಮದ್‍ಖಾನನಿಗೆ ತನ್ನ ಮಗಳು ಕುದ್‍ಸಿಯಾ ಬೇಗಮಳನ್ನಿತ್ತು ಮದುವೆ ಮಾಡಿದ. ಈತ ಪಿಂಡಾರಿಗಳ ವಿರುದ್ಧ ಬ್ರಿಟಿಷರು ನಡೆಸುತ್ತಿದ್ದ ಹೋರಾಟಗಳಲ್ಲಿ, ಬ್ರಿಟಿಷರಿಗೆ ನೆರವು ನೀಡಿ ತನ್ನ ನವಾಬ ಪದವಿಯನ್ನು ಬಲಪಡಿಸಿಕೊಂಡ. ಹೀಗಾಗಿ 1818ರಲ್ಲಿ ಬ್ರಿಟಿಷರೊಡನೆ ಒಪ್ಪಂದ ಏರ್ಪಟ್ಟು ಅವರಿಂದಲೇ ಈತ ನವಾಬನೆಂದು ಘೋಷಿತನಾದ. ಈತ ಇಸ್ಲಾಮ್ ನಗರದ ಜೀರ್ಣೋದ್ಧಾರ ಮಾಡಿದ.

ಸಿಕಂದರ್ ಬೇಗಮ್ ಪ್ರಭಾವಶಾಲಿ ಹಾಗೂ ಸಮರ್ಥ ಆಡಳಿತಗಾರಳು. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಈಕೆ ಬ್ರಿಟಿಷರಿಗೆ ನೆರವು ನೀಡಿದುದರಿಂದ, ಈಕೆಯ ಆಡಳಿತಕ್ಕೆ ಇನ್ನಷ್ಟು ಪ್ರದೇಶ ಸೇರಿತು. 1868ರಲ್ಲಿ ಷಾಹಜಹಾನ್ ಬೇಗಮ್ ನವಾಬಳಾಗಿ ಸಮರ್ಥವಾಗಿ ಆಡಳಿತ ನಡೆಸಿದಳು. ಈ ಕಾಲದಲ್ಲಿ ಕಾನೂನುಗಳು ಕಾಲಕ್ಕೆ ತಕ್ಕಂತೆ ಪರಿಷ್ಕøತವಾದುವು. ಈಕೆ ಭೂಪಾಲದ ಇತಿಹಾಸವನ್ನು ಉರ್ದುವಿನಲ್ಲಿ ಬರೆಸಿದಳು. 1897ರ ದ್ವಿತೀಯ ಆಫ್‍ಘನ್ ಯುದ್ಧದಲ್ಲಿ ಈಕೆ ಬ್ರಿಟಿಷರಿಗೆ ನೆರವಿತ್ತಳು. ತಾಜ್-ಉಲ್-ಮಸೀದಿ, ಕೆಂಪುಕೋಟೆ, ಬಾರಾಮಹಲ್, ತಾಜ್‍ಮಹಲ್ ಈ ಕಾಲದಲ್ಲಿ ನಿರ್ಮಿತವಾದ ಕೆಲವು ಕಟ್ಟಡಗಳು.




#Article 250: ಮುಂಬೈ (2448 words)


ಮುಂಬಯಿನಗರ, ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ.

ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ.

ಮುಂಬಯಿ ಹೆಸರಿನ ಮೂಲ ಮುಂಬಾದೇವಿ ಎಂಬ ದೇವಿಯ ಹೆಸರು. ಮುಂಬಾದೇವಿ ದೇವಾಲಯ ಇಂದಿಗೂ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಪೋರ್ಚುಗೀಸರು ಈ ಪ್ರದೇಶವನ್ನು ಬೋಮ್ ಬಹಿಯಾ ಎಂದೂ, ಬ್ರಿಟಿಷರು ಮುಂಬಯಿ ಎಂದೂ ನಾಮಕರಣ ಮಾಡಿದ್ದರು. ಮುಂಬಯಿ ಎಂದೇ ಪ್ರತೀತಿಯಲ್ಲಿದ್ದ ಈ ನಗರವನ್ನು ವಿಧ್ಯುಕ್ತವಾಗಿ ಮುಂಬಯಿ ಎಂದು ೧೯೯೫ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಕನ್ನಡದಲ್ಲಿ ಮುಂಬಯಿ ,ಬಾಂಬೆ ಹಾಗೂ ಬೊಂಬಾಯಿ ಎಂದು ಕರೆಯುವುದು ರೂಢಿಯಲ್ಲಿದೆ.

ಇಂದಿನ ಮುಂಬಯಿ ಹಿಂದೆ ಏಳು ದ್ವೀಪಗಳ ಸಮೂಹವಾಗಿತ್ತು. ಶಿಲಾಯುಗದ ಕಾಲದಿಂದಲೂ ಈ ದ್ವೀಪಗಳಲ್ಲಿ ಜನವಸತಿಯಿದ್ದ ಪುರಾವೆಗಳಿವೆ. ಇವುಗಳಲ್ಲಿ ಅತ್ಯಂತ ಪುರಾತನ ದಾಖಲೆ ಕ್ರಿ.ಪೂ. ೨೫೦ರಷ್ಟು ಹಿಂದಿನದಾಗಿದ್ದು, ಗ್ರೀಕ್ ಮೂಲದ ಈ ದಾಖಲೆಯಲ್ಲಿ ಮುಂಬಯಿಯನ್ನು Heptanesia (ಅರ್ಥಾತ್ ಸಪ್ತದ್ವೀಪಸಮೂಹ)ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಕ್ರಿ.ಪೂ ೩ರಲ್ಲಿ ಈ ದ್ವೀಪಗಳು ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದವು. . ಈ ಪ್ರದೇಶವು ಮುಂದೆ ಕ್ರಿ.ಶ. ೧೩೪೩ರವರೆಗೂ ಶಿಲಾಹಾರರ ಸಾಮ್ರಾಜ್ಯದ ಅಂಗವಾಗಿ, ತದನಂತರ ಗುಜರಾತ್ ಸಾಮ್ರಾಜ್ಯದ ಅಧೀನವಾಯಿತು. ಎಲಿಫೆಂಟಾ ಗುಹೆಗಳು ಹಾಗೂ ವಾಳಕೇಶ್ವರ ದೇವಾಲಯಗಳು ಇದೇ ಕಾಲದಲ್ಲಿ ನಿರ್ಮಿಸಲ್ಪಟ್ಟವು. ೧೫೩೪ರಲ್ಲಿ ಬಹಾದ್ದೂರ ಷಾನಿಂದ ಮುಂಬಯಿಯನ್ನು ಪೋರ್ಚುಗೀಸರು ವಶಪಡಿಸಿಕೊಂಡು, ಅದಕ್ಕೆ ಮಾಮ್ ಬಹಿಯಾ ಎಂದು ಹೆಸರಿಟ್ಟರು. ೧೬೬೧ರ ಇಂಗ್ಲೆಂಡಿನ ರಾಜ ಎರಡನೆಯ ಚಾರ್ಲ್ಸ್ ಹಾಗೂ ಪೋರ್ಚುಗೀಸ್ ರಾಜಕನ್ಯೆ ಕ್ಯಾಥರೀನ್ ದ ಬ್ರಗಾಂಝ ಇವರ ವಿವಾಹದ ಸಂದರ್ಭದಲ್ಲಿ , ಮುಂಬಯಿ ಪ್ರದೇಶವನ್ನು ಪೋರ್ಚುಗೀಸರಿಂದ ಬಳುವಳಿಯಾಗಿ ಪಡೆದ ಬ್ರಿಟಿಷ್ ರಾಜಮನೆತನವು, ಮುಂದೆ ಈಸ್ಟ್ ಇಂಡಿಯಾ ಕಂಪನಿಗೆ ಬಾಡಿಗೆಯ ಮೇಲೆ ಮುಂಬಯಿಯನ್ನು ನೀಡಿತು. ತಮ್ಮ ವ್ಯಾಪಾರಕ್ಕಾಗಿ ಬಂದರು ನಿರ್ಮಿಸಲು ಮುಂಬಯಿ ಭೂ ಖಂಡವು ಪ್ರಶಸ್ತವಾದದ್ದು ಎಂದು ಈಸ್ಟ್ ಇಂಡಿಯಾ ಕಂಪನಿ ಭಾವಿಸಿತು. ೧೬೬೧ರಲ್ಲಿ ೧೦,೦೦೦ದಷ್ಟಿದ್ದ ಮುಂಬಯಿಯ ಜನಸಂಖ್ಯೆ ೧೬೮೭ರಲ್ಲಿ ೬೦,೦೦೦ಕ್ಕೇರಿತ್ತು. ೧೬೮೭ರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಕಾರ್ಯಾಲಯವನ್ನು ಸೂರತ್ತಿನಿಂದ ಮುಂಬಯಿಗೆ ಬದಲಾಯಿಸಿತು.ಕಾಲಾಂತರದಲ್ಲಿ ಇದು ಮುಂಬಯಿ ಪ್ರಾಂತದ (Bombay Province) ರಾಜಧಾನಿಯಾಯಿತು.

ಹಾರ್ನ್^ಬೀ ವೆಲ್ಲಾರ್ಡ್ (Hornby Vellard)ಎಂಬ ಯೋಜನೆಯಲ್ಲಿ ೧೮೧೭ರಿಂದ ೧೮೪೫ರ ವರೆಗೂ ಮುಂಬಯಿಯ ಏಳು ದ್ವೀಪಗಳನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಮುಂಬಯಿಯ ವಿಸ್ತೀರ್ಣ ೪೩೮ ಚದರ ಕಿ.ಮೀ ಗಳಿಗೇರಿತು. ಏಶಿಯಾದಲ್ಲಿಯೇ ಮೊಟ್ಟಮೊದಲ ರೈಲು ಮಾರ್ಗವನ್ನು ಮುಂಬಯಿಯಲ್ಲಿ ೧೮೫೩ರಲ್ಲಿ ನಿರ್ಮಿಸಲಾಯಿತು. ಅಮೆರಿಕಾದಲ್ಲಿ ಅಂತರ್ಯುದ್ಧ (Civil War)ದ ಕಾಲದಲ್ಲಿ , ಜಗತ್ತಿನ ಪ್ರಮುಖ ಅರಳೆಪೇಟೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡ ಮುಂಬಯಿ, ಭರದಿಂದ ಬೆಳೆಯತೊಡಗಿತು. ಸುಯೆಝ್ ಕಾಲುವೆಯ ನಿರ್ಮಾಣವಾದ ಮೇಲೆ ಮುಂಬಯಿ ಅರಬ್ಬೀ ಸಮುದ್ರದ ಪ್ರಮುಖ ಬಂದರಾಯಿತು.

ಮುಂಬಯಿ ಮುಂದಿನ ೩೦ ವರ್ಷಗಳಲ್ಲಿ ದಾಪುಗಾಲಿನಿಂದ ಪ್ರಗತಿ ಹೊಂದಿತು. ೧೯೦೬ರ ಸುಮಾರಿಗೆ ಮುಂಬಯಿಯ ಜನಸಂಖ್ಯೆ ೧೦ ಲಕ್ಷ ದಾಟಿ, ಕೋಲ್ಕತ್ತಾಬಿಟ್ಟರೆ ಭಾರತದ ಅತಿ ದೊಡ್ಡ ನಗರವಾಗಿ ಹೆಸರಾಯಿತು. ಮುಂಬಯಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಮುಖ ಸ್ಥಾನ ಹೊಂದಿತ್ತು. ೧೯೪೨ರಲ್ಲಿ ಮಹಾತ್ಮ ಗಾಂಧಿ ಸುಪ್ರಸಿದ್ಧ 'ಭಾರತ ಬಿಟ್ಟು ತೊಲಗಿ' (ಚಲೇಜಾವ್) ಚಳುವಳಿಗೆ ನಾಂದಿ ಹಾಡಿದ್ದು ಮುಂಬಯಿಯಲ್ಲಿಯೇ. ಸ್ವಾತಂತ್ರ್ಯಾನಂತರ ಮುಂಬಯಿ ಪ್ರಾಂತೀಯ ರಾಜಧಾನಿಯಾಯಿತು. ೧೯೫೦ರಲ್ಲಿ ಮುಂಬಯಿ ಸಾಲ್ಸೆಟ್ ದ್ವೀಪದವರೆಗೂ ಹಬ್ಬಿತ್ತು.

೧೯೫೫ರ ಸುಮಾರಿಗೆ ಮುಂಬಯಿ ಪ್ರಾಂತವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಎಂದು ವಿಭಜಿಸಬೇಕು ಎಂಬ ಕೂಗು ಹೆಚ್ಚಾಗತೊಡಗಿತು. ಮುಂಬಯಿ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯಬೇಕು ಎಂದೂ ಕೆಲವರ ಅಭಿಮತವಾಗಿತ್ತು. ಸಂಯುಕ್ತ ಮಹಾರಾಷ್ಟ್ರ ಚಳುವಳಿ ಇದನ್ನು ವಿರೋಧಿಸಿ , ಮುಂಬಯಿಯನ್ನು ಮಹಾರಾಷ್ಟ್ರದ ರಾಜಧಾನಿಯಾಗಿ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು.

ಎಪ್ಪತ್ತರ ದಶಕದಲ್ಲಿ ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಭರದಿಂದ ಪ್ರಗತಿಯಾಗಿ , ದೊಡ್ಡಪ್ರಮಾಣದಲ್ಲಿ ಪರಪ್ರಾಂತೀಯರ ವಲಸೆ ಮುಂಬಯಿಯತ್ತ ಹರಿದುಬಂದಿತು. ಇದೇ ಕಾಲದಲ್ಲಿ ಮುಂಬಯಿ ಕೋಲ್ಕತ್ತಾವನ್ನು ಹಿಂದೆ ಹಾಕಿ ಭಾರತದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಚ್ಚುತ್ತಿದ್ದ ಪರಪ್ರಾಂತೀಯರ ಸಂಖ್ಯೆಯಿಂದ ಸ್ಥಳೀಯರಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಇದರ ಪರಿಣಾಮವಾಗಿ, ಸ್ಥಳೀಯ ನಾಗರೀಕರ ಹಿತರಕ್ಷಣೆಯ ಧ್ಯೇಯಹೊತ್ತ ಶಿವಸೇನಾ ಎಂಬ ರಾಜಕೀಯ ಸಂಘಟನೆಯ ಉದಯವಾಯಿತು. ಬಾಳಾಸಾಹೇಬ ಠಾಕರೆಯವರ ನೇತೃತ್ವದ ಈ ಸಂಘಟನೆಗೆ ಸ್ಥಳೀಯರ ಪ್ರಚಂಡ ಬೆಂಬಲ ದೊರಕಿ, ಅದು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಹಾಯಕವಾಯಿತು.

ಭಾರತದ ಪಶ್ಚಿಮ ತೀರದ , ಕೊಂಕಣ ಪ್ರದೇಶದಲ್ಲಿರುವ ಉಲ್ಹಾಸ ನದಿಯ ಮುಖಜ ಪ್ರದೇಶವಾಗಿರುವ ಶಾಸ್ತಿ ದ್ವೀಪದ (ಸ್ಥಳೀಯ ಬಳಕೆಯಲ್ಲಿ ಸಾಲ್ಸೆಟ್) ಒಂದು ಭಾಗ ಮುಂಬಯಿ ನಗರ. ಇಲ್ಲಿಯ ಬಹುತೇಕ ಭಾಗ ಸಮುದ್ರ ಮಟ್ಟದಲ್ಲಿದ್ದು, ಸರಾಸರಿ ಎತ್ತರ (ಸಮುದ್ರ ಮಟ್ಟದಿಂದ) ೧೦ರಿಂದ ೧೫ ಮೀಟರಿನಷ್ಟಿದೆ. ಮುಂಬಯಿಯ ಉತ್ತರ ಭಾಗವು ಗುಡ್ಡಗಾಡಾಗಿದ್ದು , ೪೫೦ ಮೀಟರು ಅತಿ ಎತ್ತರದ ಭಾಗವಾಗಿದೆ. ಮುಂಬಯಿಯ ವಿಸ್ತೀರ್ಣ ೪೬೮ ಚದರ ಕಿ.ಮೀ. 
ನಗರದ ಸರಹದ್ದಿನಲ್ಲಿಯೇ ತುಳಸಿ, ವಿಹಾರ ಮತ್ತು ಪೊವಾಯಿ ಎಂಬ ಮೂರು ಕೆರೆಗಳಿವೆ. ಇದರಲ್ಲಿ ಮೊದಲ ಎರಡು ಬೋರಿವಲಿ ರಾಷ್ಟ್ರೀಯ ಉದ್ಯಾನವನದ ಒಳಗಿದ್ದು , ಮುಂಬಯಿಯ ಕುಡಿಯುವ ನೀರನ್ನು ಭಾಗಶಃ ಪೂರೈಸುತ್ತವೆ. ಇದೇ ಉದ್ಯಾನದಿಂದಲೇ ಉಗಮವಾಗುವ ಮೂರೂ ಸಣ್ಣ ನದಿಗಳೂ ಮುಂಬಯಿ ನಗರದಲ್ಲಿ ಹರಿಯುತ್ತವೆ.

ನಗರದ ಕಿನಾರೆಯಲ್ಲಿ ಅನೇಕ ಕೊಲ್ಲಿಗಳು (bays and creeks) ಕಂಡುಬರುತ್ತವೆ. ಸಾಲ್ಸೆಟ್ ದ್ವೀಪದ ಪೂರ್ವಭಾಗದಲ್ಲಿ ವಿಪುಲವಾದ ಜೀವವೈವಿಧ್ಯವಿರುವ mangrove swamps ಗಳಿವೆ. ಪಶ್ಚಿಮಭಾಗದಲ್ಲಿ ಜುಹು ಮತ್ತು ಚೌಪಾಟಿ ಎಂಬ ಎರಡು ಬೀಚುಗಳಿವೆ.

ಸಮುದ್ರಸಾಮೀಪ್ಯದ ಕಾರಣ ಇಲ್ಲಿ ಮಣ್ಣಿನ ಮೇಲ್ಪದರ ಮರಳುಮಿಶ್ರಿತವಾಗಿದೆ. ಉಪನಗರಗಳಲ್ಲಿ alluvial and loamy ಮಣ್ಣಿನ ಪದರ ಬಹುತೇಕವಾಗಿ ಕಾಣಬರುತ್ತದೆ. ಸಮೀಪದಲ್ಲಿರುವ ಮೂರು ಭೂಬಿರುಕುಗಳ (faults) ಕಾರಣ ಮುಂಬಯಿ ನಗರ ಸಕ್ರಿಯ ಭೂಕಂಪ ವಲಯದಲ್ಲಿದೆ. ಭೂಕಂಪ ಸಾಧ್ಯತೆಯಲ್ಲಿ ಮುಂಬಯಿಯನ್ನು ಮೂರನೆಯ ವಲಯವೆಂದು ನಮೂದಿಸಲಾಗಿದೆ, ಅಂದರೆ, ರಿಚ್ಟರ್ ಮಾಪಕದಲ್ಲಿ ೬.೫ ರ ಪರಿಮಾಣದ ಭೂಕಂಪವಾಗುವ ಸಾಧ್ಯತೆಗಳಿವೆ.

ಮುಂಬಯಿ ಮಹಾನಗರವನ್ನು ನಗರ ಮತ್ತು ಉಪನಗರ ಎಂದು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಇವೆರಡೂ ಮಹಾರಾಷ್ಟ್ರದ ಪ್ರತ್ಯೇಕ ಜಿಲ್ಲೆಗಳೂ ಆಗಿವೆ. ಇದರಲ್ಲಿ ನಗರ ಪ್ರದೇಶವನ್ನು ದ್ವೀಪ ನಗರ ( Island City) ಎಂದೂ ಕರೆಯಲಾಗುತ್ತದೆ.

ಉಷ್ಣವಲಯದಲ್ಲಿ ಹಾಗೂ ಸಮುದ್ರದದಂಡೆಯಲ್ಲಿರುವ ಮುಂಬಯಿಯಲ್ಲಿ ಎರಡು ಋತುಗಳು ಮುಖ್ಯವಾಗಿವೆ.

ಆರ್ದ್ರ ಹವಾಮಾನ ಮಾರ್ಚ್ ನಿಂದ ಆಕ್ಟೋಬರ್ ವರೆಗಿದ್ದು , ಈ ಕಾಲದಲ್ಲಿ ವಾತಾವರಣದಲ್ಲಿ ನೀರಿನಂಶ ಹೆಚ್ಚಿರುತ್ತದೆ. ದಿನದ ತಾಪಮಾನ ೩೦ ಡಿಗ್ರಿ ಸೆಂಟಿಗ್ರೇಡ್ ವರೆಗಿರುತ್ತದೆ. ಜೂನಿನಿಂದ ಸೆಪ್ಟೆಂಬರಿನವರೆಗೂ ಅನುಭವಕ್ಕೆ ಬರುವ ಮಳೆಗಾಲದಲ್ಲಿ ಜಡಿಮಳೆ ಸಾಮಾನ್ಯ. ಸರಾಸರಿ ವಾರ್ಷಿಕ ಮಳೆ ೨೨೦೦ ಮಿ.ಮೀ. ೧೯೫೪ರಲ್ಲಿ ಬಿದ್ದ ೩೪೫೨ ಮಿ.ಮೀ ಮಳೆ ವಾರ್ಷಿಕ ದಾಖಲೆಯಾದರೆ, ಜುಲೈ ೨೬, ೨೦೦೫ ರಂದು ಬಿದ್ದ ೯೪೪ ಮಿ.ಮೀ ಮಳೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ.

ನವೆಂಬರಿನಿಂದ ಫೆಬ್ರುವರಿಯವರೆಗೆ ಒಣ ಹವೆಯಿರುತ್ತದೆ. ವಾತಾವರಣವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಉತ್ತರದಿಂದ ಬೀಸುವ ತಂಗಾಳಿಯೇ ಈ ಬದಲಾವಣೆಗೆ ಕಾರಣ. ವಾರ್ಷಿಕ ತಾಪಮಾನ ಗರಿಷ್ಠ ೩೮ ಡಿಗ್ರಿ ಇದ್ದರೆ, ಕನಿಷ್ಠ ೧೧ ಡಿಗ್ರಿಯವರೆಗಿರುತ್ತದೆ. ೪೩ ಡಿಗ್ರಿ ಮತ್ತು ೭.೪ ಡಿಗ್ರಿ , ಕ್ರಮವಾಗಿ, ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಪಮಾನದ ದಾಖಲೆಗಳು.

ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ ೧೦% ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. ಭಾರತದ ಆದಾಯ ತೆರಿಗೆಯ ೪೦%, ಕೇಂದ್ರ ಅಬಕಾರಿಯ (Central excise) ೨೦%, ಕಸ್ಟಮ್ಸ್ ಸುಂಕದ ೬೦% , ರಫ್ತು ವ್ಯಾಪಾರದ ೪೦% , ಅಷ್ಟೇ ಅಲ್ಲ ೪೦ ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ (Professional Tax) ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು, ಮುಂಬಯಿ ಶೇರು ಬಜಾರು, ಭಾರತೀಯ ರಿಸರ್ವ್ ಬ್ಯಾಂಕ್ , ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಇವೇ ಅಲ್ಲದೇ ಟಾಟಾ, ಗೋದ್ರೇಜ್ ಮತ್ತು ರಿಲಯನ್ಸ್ ನಂಥಹಾ ಮಹಾ ಉದ್ಯೋಗಸಮೂಹಗಳ ಮುಖ್ಯ ಕಛೇರಿಗಳು ಮುಂಬಯಿಯಲ್ಲಿವೆ. ಅನೇಕ ವಿದೇಶೀ ಬ್ಯಾಂಕುಗಳೂ ತಮ್ಮ ಶಾಖೆಗಳನ್ನು ಮುಂಬಯಿಯಲ್ಲಿ ತೆರೆದಿವೆ.

ಸುಮಾರು ೧೯೮೦ರವರೆಗೂ ಮುಂಬಯಿಯ ಬಟ್ಟೆ ಗಿರಣಿಗಳು ಆರ್ಥಿಕ ವ್ಯವಸ್ಥೆಯ ಆಧಾರಸ್ಥಂಭಗಳಾಗಿದ್ದವು. ಆದರೆ ಈಗ ತಂತ್ರಜ್ಙಾನ, ಆಭರಣಗಳ ಪಾಲೀಶ್ ಮಾಡುವಿಕೆ, ಆರೋಗ್ಯ, ಮಾಹಿತಿ ತಂತ್ರಜ್ಙಾನ ಮೊದಲಾದ ಉದ್ಯಮಗಳು ಮಹತ್ವದ ಕೊಡುಗೆ ನೀಡುತ್ತಿವೆ.ಮುಂಬಯಿ ರಾಜಧಾನಿಯೂ ಆಗಿರುವ ಕಾರಣ, ರಾಜ್ಯ ಹಾಗೂ ಕೇಂದ್ರ ಸರಕಾರೀ ನೌಕರರು ಸಹಾ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಕೈಗಾಡಿಯ ಕಿರುವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಮೆಕ್ಯಾನಿಕ್ ಇತ್ಯಾದಿ ಉದ್ಯೋಗದಲ್ಲಿ ತೊಡಗಿಕೊಂಡಿರುವ ಕುಶಲ ಹಾಗೂ ಅ-ಕುಶಲ ಕಾರ್ಮಿಕರೂ ವಿಪುಲವಾಗಿದ್ದಾರೆ. ಮುಂಬಯಿ ಬಂದರೂ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದೆ.

ಮುಂಬಯಿಯ ಮನರಂಜನಾ ಉದ್ಯಮವಂತೂ ಅನೇಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಭಾರತದ ಪ್ರಮುಖ ಕಿರುತೆರೆ, ಉಪಗ್ರಹ ವಾಹಿನಿಗಳು, ಪುಸ್ತಕ ಪ್ರಕಾಶನ ಸಂಸ್ಥೆಗಳ ಕೇಂದ್ರ ಮುಂಬಯಿ. 'ಬಾಲಿವುಡ್ ' ಎಂದೇ ಹೆಸರಾಗಿರುವ ಹಿಂದಿ ಚಲನಚಿತ್ರೋದ್ಯಮದ ಕೆಂದ್ರವೂ ಮುಂಬಯಿಯೇ.ಮುಂಬಯಿಯ ಆರ್ಥಿಕ ಪ್ರಗತಿಗೆ ಗುಜರಾತಿ, ಮಾರವಾಡಿ ಮತ್ತು ಪಾರಸೀ ಜನಾಂಗದ ಗಣನೀಯ ಕೊಡುಗೆಯಿದೆ.

ಬೃಹನ್ಮುಂಬಯಿ ಮಹಾನಗರಪಾಲಿಕೆ ಈ ನಗರದ ಮೂಲಭೂತ ಅವಶ್ಯಕತೆಗಳಾದ ನೀರು ಸರಬರಾಜು, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಕಮೀಷನರ್ ಇದರ ಆಡಳಿತಾತ್ಮಕ ಮುಖ್ಯಾಧಿಕಾರಿಯಾಗಿದ್ದು, ಐ.ಏ.ಎಸ್ ಹುದ್ದೆಯ ಈ ಅಧಿಕಾರಿಯನ್ನು ಮಹಾರಾಷ್ಟ್ರ ಸರಕಾರ ನೇಮಿಸುತ್ತದೆ. ಆಡಳಿತಾನುಕೂಲಕ್ಕಾಗಿ ನಗರವನ್ನು ೧೪ ಉಪವಿಭಾಗಗಳಾಗಿ ವಿಭಾಗಿಸಿದ್ದು , ಪ್ರತಿಯೊಂದು ಉಪವಿಭಾಗವನ್ನೂ ಒಬ್ಬೊಬ್ಬ ಉಪ-ಕಮೀಷನರ್ ನೋಡಿಕೊಳ್ಳುತ್ತಾರೆ.

ಮಹಾಪಾಲಿಕೆಯಲ್ಲಿ ಜನರಿಂದ ಚುನಾಯಿತರಾದ ೨೨೭ ನಗರಸೇವಕರು (ಕಾರ್ಪೋರೇಟರುಗಳು), ೫ ನಾಮಕರಣ ಮಾಡಲ್ಪಟ್ಟ ನಗರಸೇವಕರು ಹಾಗೂ ಒಬ್ಬ ಮಹಾಪೌರ (ಮೇಯರ್ ) ಇರುತ್ತಾರೆ. ರಾಜ್ಯದ ಸಾಧಾರಣ ಎರ್ಲಲಾ ರಾಜಕೀಯ ಪಕ್ಷಗಳ ಉಮೇದುವಾರರನ್ನೂ ಈ ನಗರಪಾಲಿಕೆಯ ಚುನಾವಣೆಗಳಲ್ಲಿ ಕಾಣಬಹುದು.

ಮುಂಬಯಿ ಪೋಲೀಸ್ ರಾಜ್ಯದ ಗೃಹ ಖಾತೆಯ ಅಧೀನದಲ್ಲಿ ಕೆಲಸಮಾಡುತ್ತದೆ. ಐ.ಪಿ.ಎಸ್ ದರ್ಜೆಯ ,ಕಮೀಷನರ್ ಮುಂಬಯಿ ಪೋಲೀಸ್ ಪಡೆಯ ಮುಖ್ಯಾಧಿಕಾರಿ. ಮುಂಬಯಿ ನಗರವನ್ನು ಏಳು ಪೋಲೀಸ್ ವಲಯಗಳಾಗಿಯೂ, ಹದಿನೇಳು ವಾಹನ ಸಾರಿಗೆ (traffic) ಪೋಲೀಸ್ ವಲಯಗಳಾಗಿಯೂ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯಕ್ಕೂ ಒಬ್ಬ ಡೆಪ್ಯುಟಿ ಕಮೀಷನರ್ ನೇತೃತ್ವವಿದೆ. ವಾಹನ ಸಾರಿಗೆ ಪೋಲೀಸ್ ಮುಂಬಯಿ ಪೋಲಿಸಿಗೆ ಸೇರಿದೆ ಅರೆ-ಸ್ವಾಯತ್ತ ಪಡೆಯಾಗಿದೆ.

ಮುಂಬಯಿಯಲ್ಲಿರುವ ಉಚ್ಚ ನ್ಯಾಯಾಲಯದ ವ್ಯಾಪ್ತಿ , ಕೇವಲ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಅಲ್ಲದೇ ಗೋವಾ ರಾಜ್ಯ , ಕೇಂದ್ರಾಡಳಿತ ಪ್ರದೇಶಗಳಾದ ದಮನ್,ದಿಯು , ದಾದ್ರ ಮತ್ತು ನಗರಹವೇಲಿ ಗಳಿಗೂ ಹಬ್ಬಿದೆ. ಇದಲ್ಲದೆ , ಸಿವಿಲ್ ಪ್ರಕರಣಗಳಿಗಾಗಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ (Small Causes Court) ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ನ್ಯಾಯಾಲಯಗಳೂ ಇವೆ.

೬ ಜನ ಸಂಸತ್ತಿನಲ್ಲಿಯೂ, ೩೪ ಜನ ವಿಧಾನ ಮಂಡಲದಲ್ಲಿಯೂ ಮುಂಬಯಿಯನ್ನು ಪ್ರತಿನಿಧಿಸುತ್ತಾರೆ.
 
ಈಗ, ಶಿವಸೇನ ಪಕ್ಷ, ಬಹುಮತದಿಂದ ಗೆದ್ದು ಆಯ್ಕೆಯಾಗಿದೆ. ಬೃಹನ್ ಮುಂಬಯಿ ನಗರಪಾಲಿಕೆಯ ಅಧಿಕಾರವಹಿಸಿಕೊಂಡಿದೆ. ಇನ್ನು ನಾಲ್ಕು ವರೆ ವರ್ಷದ ಪ್ರಗತಿಕಾರ್ಯಗಳನ್ನೆಲ್ಲಾ, ಅದೇ ನಿರ್ವಹಿಸಬೇಕಾಗಿದೆ.

ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೂ ಈಚೀಚೆಗೆ, ಲೋಕಲ್ ರೈಲಿನಲ್ಲಿಯ ಸಹಿಸಲಸಾಧ್ಯ ಜನದಟ್ಟಣೆಯಿಂದ ಬೇಸತ್ತ ಜನ ಸ್ವಂತ ವಾಹನದ ಮೊರೆ ಹೋಗುವ ಪ್ರವೃತ್ತಿಯೂ ಕಾಣಬರುತ್ತಿದೆ. ಸುಮಾರು ೩೫ ಲಕ್ಷಜನ ಲೋಕಲ್ ರೈಲಿನಲ್ಲಿ ಪ್ರತಿದಿನ, ಪ್ರಯಾಣಮಾಡುತ್ತಾರೆಂಬ ದಾಖಲೆ ಇದೆ. ಲೋಕಲ್ ರೈಲುಗಳು ಮುಂಬಯಿ ಜನಜೀವನದ ಜೀವನಾಡಿ ಎಂದು ಹೇಳಲು ಅಡ್ಡಿಯಿಲ್ಲ. ಪಶ್ಚಿಮ ಮತ್ತು ಮಧ್ಯ ರೈಲ್ವೆಗಳ ಕೇಂದ್ರ ಕಛೇರಿಗಳು ಮುಂಬಯಿಯಲ್ಲವೆ.

ಮುಂಬಯಿ ಲೋಕಲ್ ರೈಲು ಮೂರು ಮುಖ್ಯ ಮಾರ್ಗಗಳಲ್ಲಿ ಸಂಚರಿಸುತ್ತದೆ. ಮುಂಬಯಿಯ ಪಶ್ಚಿಮ ರೈಲ್ವೆಯ ಸಂಚಾರವಿದ್ದರೆ, ಮುಂಬಯಿಯ ಮಧ್ಯಭಾಗ ಮತ್ತು ಈಶಾನ್ಯ ಭಾಗ ಮಧ್ಯರೈಲ್ವೆ ನಿಭಾಯಿಸುತ್ತದೆ. ಆಗ್ನೇಯ ಭಾಗದ ಪ್ರದೇಶಗಳಿಗೆ ಹಾರ್ಬರ್ ಲೈನ್ ಇದೆ. ಇದು ಮಧ್ಯರೈಲ್ವೆಯ ಒಂದು ಭಾಗ. ಇವೆರಡೂ ರೈಲುಗಳ ೧೨೪ ಕಿ. ಮೀ. ಉದ್ದದ ಹಾಗೂ ಹಾರ್ಬರ್ ಲೈನಿನ ಮತ್ತೊಂದು ೫೪ ಕಿ.,ಮೀ ಉದ್ದದ ರೈಲು ಹಳಿಗಳ ಜಾಲ ಮುಂಬಯಿಯಲ್ಲಿ ಹರಡಿಕೊಂಡಿವೆ. ಮುಂಬಯಿಯಿಂದ ಭಾರತದ ಎಲ್ಲಾ ದಿಕ್ಕುಗಳಿಗೂ ಚೆನ್ನಾಗಿ ರೈಲು ಸಂಪರ್ಕವಿದೆ.

ಮುಂಬಯಿಯ ರಸ್ತೆ ಸಾರಿಗೆಯಲ್ಲಿ ಬೆಸ್ಟ್ ( BEST - Bombay Electric Supply and Transport) ಮಹತ್ವದ ಸ್ಥಾನದಲ್ಲಿದೆ. ಈ, ಮುಂಬಯಿ ನಗರಪಾಲಿಕೆಯ ಅಧೀನದ, ಸ್ವಾಯತ್ತ ಸಂಸ್ಥೆ ನೋಡಿಕೊಳ್ಳುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ , ಕೇವಲ ಮುಂಬಯಿ ನಗರವಷ್ಟೇ ಅಲ್ಲದೇ, ಉಪನಗರಗಳು, ನವಿ ಮುಂಬಯಿ ಮತ್ತು ಠಾಣೆ ಯನ್ನೂ ಒಳಗೊಳ್ಳುತ್ತದೆ. ಬಸ್ಸುಗಳನ್ನು ಸಾಧಾರಣವಾಗಿ ಸಮೀಪದ ಅಥವಾ ಮಧ್ಯಮ ದೂರದ ಪ್ರಯಾಣಕ್ಕೆ ಉಪಯೋಗಿಸಿದರೆ, ಹೆಚ್ಚು ದೂರದ ಓಡಾಟಕ್ಕೆ ಲೋಕಲ್ ರೈಲು ಬಸ್ಸಿಗಿಂತ ಅಗ್ಗವಾಗುತ್ತದೆ. ಆದರೂ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ, ೩೨ ಲಕ್ಷಕ್ಕಿಂತ ಅಧಿಕವಂತೆ. ಸಾಧಾರಣ ಬಸ್ಸುಗಳೊಂದಿಗೆ, ಮಹಡಿಬಸ್ ಹಾಗೂ ವಾತಾನುಕೂಲಿತ ಬಸ್ಸುಗಳನ್ನೂ BEST ಓಡಿಸುತ್ತದೆ. ಖಾಸಗೀ ಸಂಚಾರಕ್ಕಾಗಿ ಹಳದಿ,ಕಪ್ಪು ಬಣ್ಣದ ಟ್ಯಾಕ್ಸಿಗಳು ನಗರಗಳಲ್ಲಿ ಲಭ್ಯವಿದೆ. ಆಟೋರಿಕ್ಷಾಗಳಿಗೆ ನಗರಪ್ರದೇಶದಲ್ಲಿ ಪ್ರವೇಶವಿಲ್ಲವಾದರೂ, ಉಪನಗರಗಳಲ್ಲಿ ಇವು, ಜನಸಾಮಾನ್ಯರ ಮುಖ್ಯ ಖಾಸಗೀ ಸಂಚಾರ ಮಾಧ್ಯಮಗಳಾಗಿವೆ.

ಮುಂಬಯಿಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ( ಹಳೆಯ ಹೆಸರು ಸಹಾರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ಭಾರತದ ಅತ್ಯಂತ ಕಿಕ್ಕಿರಿದ ವಿಮಾನ ನಿಲ್ದಾಣವಾಗಿದೆ. ಸಾಂತಾಕ್ರೂಝ್ ನಲ್ಲಿ ಭಾರತದೊಳಗಿನ ಸಂಚಾರಕ್ಕಾಗಿ ವಿಮಾಣ ನಿಲ್ದಾಣವಿದೆ.

ಮುಂಬಯಿ ತನ್ನ ವೈಶಿಷ್ಟ್ಯಪೂರ್ಣ ಭೌಗೋಳಿಕ ಸ್ವರೂಪದಿಂದ , ಜಗತ್ತಿನಲ್ಲಿಯೇ ಅತ್ಯುತ್ತಮ ಸ್ವಾಭಾವಿಕ ಬಂದರುಗಳಲ್ಲಿ ಒಂದಾಗಿದೆ. ಭಾರತದ ಸರಕು ಹಾಗೂ ಪ್ರಯಾಣಿಕರ ಸಾಗಣೆಯಲ್ಲಿ ಮುಂಬಯಿ ಬಂದರು ೫೦% ಪಾಲು ಪಡೆದಿದೆ. ಭಾರತೀಯ ನೌಕಾಪಡೆಯ ಮಹತ್ವದ ನೆಲೆಯೂ ಮುಂಬಯಿಯಲ್ಲಿದೆ.

ಮುಂಬಯಿ ನಗರದ ಕುಡಿಯುವ ನೀರಿನ ಸರಬರಾಜು ಮುಖ್ಯವಾಗಿ ತುಳಸಿ ಮತ್ತು ವಿಹಾರ್ ಕೆರೆಗಳಿಂದ , ಹಾಗೂ ಇನ್ನೂ ಉತ್ತರದ ಕೆಲವು ಕೆರೆಗಳಿಂದ ಆಗುತ್ತದೆ. ಭಾಂಡುಪ್ ನಲ್ಲಿರುವ ಏಶಿಯಾದಲ್ಲಿಯೇ ಅತಿ ದೊಡ್ಡದಾದ ಶೂದ್ಧೀಕರಣ ಕೇಂದ್ರದಲ್ಲಿ ಈ ನೀರನ್ನು ಶುದ್ಧೀಕರಿಸಲಾಗುತ್ತದೆ. ರಸ್ತೆಗಳ ಮೇಲುಸ್ತುವಾರಿ ಮತ್ತು ನಗರದ ಕಸವನ್ನು ಸಾಗಿಸುವುದು ಕೂಡಾ ನಗರಪಾಲಿಕೆಯ ಜವಾಬ್ದಾರಿಗಳಲ್ಲಿ ಸೇರುತ್ತದೆ. ಮುಂಬಯಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಸುಮಾರು ೭,೮೦೦ ಮೆಟ್ರಿಕ್ ಕಸವನ್ನು ನಗರದ ವಾಯವ್ಯ ಭಾಗದಲ್ಲಿರುವ ಗೋರೈ ಎಂಬಲ್ಲಿಗೆ ಸಾಗಿಸಿ ಅಲ್ಲಿ ಸುರಿಯಲಾಗುತ್ತದೆ. ಇದರಂತೆ, ಈಶಾನ್ಯದಲ್ಲಿ ಮುಲುಂದ್, ಪೂರ್ವದಲ್ಲಿ ದೇವನಾರ್ ಎಂಬ ಪ್ರದೇಶಗಳಲ್ಲಿಯೂ ಕಸ ಸುರಿಯುವ ಪ್ರದೇಶಗಳಿವೆ. ವರಳಿ ಮತ್ತು ಬಾಂದ್ರಾ ಗಳಲ್ಲಿ ಕೊಳಚೆ ನೀರನ್ನು ಪರಿಷ್ಕರಿಸುವ ಕೇಂದ್ರಗಳಿವೆ. 
BEST ಸಂಸ್ಥೆಯು ನಗರದ ವಿದ್ಯುತ್ ಸರಬರಾಜನ್ನೂ ನೋಡಿಕೊಳ್ಳುತ್ತದೆ. ಉಪನಗರಗಳ ವಿದ್ಯುತ್ ವಿತರಣೆ ರಿಲಯನ್ಸ್ ಎನರ್ಜಿ ಮತ್ತು ಮಹಾವಿತರಣ (ಮಹಾರಾಷ್ಟ್ರ ವಿದ್ಯುತ್ ವಿತರಣಾ ಮಂಡಳಿ) ಗಳ ನಿಯಂತ್ರಣದಲ್ಲಿವೆ. ಮಹಾನಗರದ ವಿದ್ಯುತ್ ಬೇಡಿಕೆಯನ್ನು ಖಾಸಗೀ ಒಡೆತನದ ಟಾಟಾ ಸಮೂಹದ ಟಾಟಾ ಪವರ್ ಕಂಪನಿಯು ಪೂರೈಸುತ್ತದೆ. ಉಪನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಕಡಿತವಾದರೂ , ನಗರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

ಮುಂಬಯಿಯ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷವಿದ್ದು ಪ್ರತಿ ಚದರ ಕಿ.ಮೀಗೆ ೨೯೦೦೦ ಜನರ ಸಾಂದ್ರತೆಯಿದೆ. ಪ್ರತಿ ಸಾವಿರ ಪುರುಷರಿಗೆ ೮೧೧ ಸ್ತ್ರೀ ಜನಸಂಖ್ಯೆಯಿದೆ. ಉದ್ಯೋಗವನ್ನರಸಿಕೊಂಡು ಪರಸ್ಥಳಗಳಿಂದ ಬರುವವರಲ್ಲಿ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ. ೮೩% ಜನ ಸಾಕ್ಷರರಾಗಿದ್ದಾರೆ. ಇಲ್ಲಿಯ ಜನಸಂಖ್ಯೆಯಲ್ಲಿ ೬೮% ಹಿಂದೂಗಳೂ, ೧೭% ಮುಸಲ್ಮಾನರೂ, ತಲಾ ೪% ಕ್ರಿಶ್ಚಿಯನ್ನ್ ಹಾಗೂ ಬೌದ್ಧರೂ ಇದ್ದಾರೆ. ಇನ್ನಿತರ ಧಾರ್ಮಿಕರೆಂದರೆ, ಪಾರ್ಸಿಗಳು, ಜೈನರು , ಯಹೂದ್ಯರು, ಮತ್ತು ಸೀಖರು.
ಮಹಾರಾಷ್ಟ್ರದ ನಾಡಭಾಷೆ ಮರಾಠಿ ಮುಂಬಯಿಯ ಮುಖ್ಯಭಾಷೆಯಾಗಿದ್ದರೂ, ಹಿಂದಿ, ಗುಜರಾತಿ, ಇಂಗ್ಲೀಷ್, ಕೊಂಕಣಿ ಈ ಭಾಷಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಭಾರತದ ಬಹುತೇಕ ಎಲ್ಲಾ ಭಾಷೆಗಳ ಜನರೂ ಮುಂಬಯಿಯಲ್ಲಿ ಕಾಣಸಿಗುತ್ತಾರೆ.

ಮುಂಬಯಿಯ ಜನಸಂಖ್ಯೆಗೆ ಹೋಲಿಸಿದರೆ, ಅಪರಾಧಗಳ ಸಂಖ್ಯೆ ತಕ್ಕಮಟ್ಟಿಗಿದೆ. ಇಲ್ಲಿಯ ಮುಖ್ಯ ಸೆರೆಮನೆ ಅರ್ಥರ್ ರೋಡ್ ಜೈಲು.

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ನಗರಗಳಂತೆ, ಮುಂಬಯಿಯಲ್ಲಿ ಕೂಡಾ ಅತಿನಗರೀಕರಣದ ಪರಿಣಾಮವಾದ ಎಲ್ಲೆಲ್ಲಿಯೂ ಕಂಡುಬರುವ ಬಡತನ, ನೈರ್ಮಲ್ಯದ ಕೊರತೆ, ನಿರುದ್ಯೋಗ, ಮೂಲಭೂತ ಸೌಲಭ್ಯಗಳ ಅಭಾವ, ಕೊಳೆಗೇರಿಗಳ ಅನಿರ್ಬಂಧಿತ ಹೆಚ್ಚಳ ಇತ್ಯಾದಿಗಳು ಕಂಡುಬರುತ್ತವೆ. ಮುಂಬಯಿಯ ಮೂರು ಕಡೆ ನೀರಿದ್ದು ನಗರದ ಬೆಳವಣಿಗೆ ಗೆ ಜಾಗ ಕೇವಲ ಒಂದೇ ದಿಕ್ಕಿನಲ್ಲಿ ಸಾಧ್ಯವಾದ ಕಾರಣ, ನಿವೇಶನದ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ನಾಗರೀಕರು ನಗರದ ಹೊರವಲಯದ ಉಪನಗರಗಳಲ್ಲಿ ನೆಲೆಸುತ್ತಿದ್ದಾರೆ. ಕೆಲಸದ ಜಾಗಕ್ಕೂ ಮನೆಗೂ ಇದರಿಂದ ಬಹಳಷ್ಟು ದೂರವಾಗುವುದರಿಂದ , ದೈನಂದಿನ ಜೀವನದಲ್ಲಿ ಗಣನೀಯ ವೇಳೆಯನ್ನು ಸಂಚಾರದಲ್ಲಿಯೇ ಕಳೆಯುವುದು ಮುಂಬಯಿ ಜೀವನದಲ್ಲಿ ಅನೇಕರಿಗೆ ಅನಿವಾರ್ಯವಾಗಿದೆ. ಇದು ಸಂಚಾರ ವ್ಯವಸ್ಥೆಯ ಮೇಲೂ ಅಸಾಧ್ಯ ಒತ್ತಡವನ್ನು ತರುತ್ತಿದೆ. ಮುಂಬಯಿಯ ಜನಸಂಖ್ಯೆಯ ಸುಮಾರು ೪೬-೪೮% ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆಂದು ಒಂದು ಅಂದಾಜಿದೆ.

ಮುಂಬಯಿಯಲ್ಲಿ ಇತರೆ ದಕ್ಷಿಣ ಭಾರತೀಯರಂತೆ, ಸುಮಾರು , 25 ಲಕ್ಷ ಕನ್ನಡಿಗರು ವಾಸ್ತವ್ಯಹೂಡಿದ್ದಾರೆ. ಭಾಷಾವಾರು ಪ್ರಾಂತಗಳ ರಚನೆಗೆ ಮುನ್ನ , ಕರ್ನಾಟಕದ ಉತ್ತರ ಭಾಗದ ಕೆಲ ಪ್ರದೇಶಗಳು, ಅಂದಿನ ಮುಂಬಯಿ ಪ್ರಾಂತದ ಅಂಗವಾಗಿದ್ದರಿಂದ , ಈ ಪ್ರದೇಶಗಳ ಕನ್ನಡಿಗರು ಉದ್ಯೋಗಾವಕಾಶಗಳಿಗಾಗಿ ಮುಂಬಯಿಗೆ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಹೋಗಿ, ಕೆಲ ತಲೆಮಾರುಗಳಿಂದ ಮುಂಬಯಿಯ ನಾಗರೀಕರಾಗಿದ್ದಾರೆ. ಕ್ರಮೇಣ ಇತರ ಭಾಗಗಳ ಕನ್ನಡಿಗರೂ ಮುಂಬಯಿಯಲ್ಲಿ ನೆಲೆಯೂರಿದ್ದಾರೆ. ಉಡುಪಿ ಹೋಟಲು ಎಂದೇ ಪ್ರಖ್ಯಾತವಾಗಿರುವ ಮುಂಬಯಿಯ ಮಧ್ಯಮವರ್ಗೀಯ ಹೋಟೆಲು ಉದ್ಯಮದಲ್ಲಿ ಕರಾವಳಿ ಜಿಲ್ಲೆಗಳ ಕನ್ನಡಿಗರ ಪ್ರಾಬಲ್ಯವಿದೆ. '

ಅನೇಕ ಕನ್ನಡಿಗರು ಈ ನಗರದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಸಿನಿಮಾ (ಖ್ಯಾತ ನಿರ್ದೇಶಕ ಗುರುದತ್, ನಟ/ನಟಿಯರಾದ ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ,ಐಶ್ವರ್ಯಾ ರೈ, 'ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ', ಛಾಯಾಗ್ರಾಹಕ, ವಿ.ಕೆ.ಮೂರ್ತಿ ಇತ್ಯಾದಿ), ಸಾಹಿತ್ಯ ಅಮರ ಚಿತ್ರ ಕಥೆಯನ್ನು ಪ್ರಾರಂಭಿಸಿದ ಅನಂತ ಪೈ, ಕನ್ನಡ ಸಾಹಿತ್ಯದಲ್ಲಿ ಹೆಸರಾದ ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಮಿತ್ರಾ ವೆಂಕಟ್ರಾಜ್ ಇತ್ಯಾದಿ), ನಾಟಕ ಗಿರೀಶ್ ಕಾರ್ನಾಡರು , ಅನಂತ ನಾಗ್,ಶಂಕರ ನಾಗ್ ಕೆಲಕಾಲ ಮುಂಬಯಿಯಲ್ಲಿದ್ದುದುಂಟು ), ಪತ್ರಿಕೋದ್ಯಮ ಎಂ. ವಿ. ಕಾಮತ್, ಫ್ರೀ ಪ್ರೆಸ್ ಜರ್ನಲ್ ನ ಸದಾನಂದ್, ಕರ್ನಾಟಕ ಮಲ್ಲ ಪತ್ರಿಕೆಯ,ಚಂದ್ರಶೇಖರ ಪಾಲೆತ್ತಾಡಿ ,ಮುಂತಾದವರು,ಮುಖ್ಯರು.

ಮುಂಬಯಿಯಲ್ಲಿ ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 'ಮೈಸೂರ್ ಅಸೋಸಿಯೇಷನ್, ಮುಂಬಯಿ, ಕರ್ನಾಟಕ ಸಂಘ, ಮುಂಬಯಿಕನ್ನಡ ಸಂಘ, ಡೊಂಬಿವಲಿ ಕನ್ನಡಸಂಘ, ಗೋರೆಗಾಂ,ಮಲಾಡ್ ಹಾಗೂ ಕೋಟೆ ಕನ್ನಡ ಸಂಘಗಳು ಸೇರಿವೆ. ಇವೆಲ್ಲವೂ ತಮ್ಮದೇ ಆದ ದೊಡ್ಡ / ಸಣ್ಣ ಹರವಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ. ಕನ್ನಡ ರಂಗ ಭೂಮಿಯಲ್ಲಿ ಹಲವಾರು ಕಲಾವಿದರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿರುತ್ತಾರೆ. ಅವರಲ್ಲಿ ಪ್ರಮುಖರು, ಆರ್.ಡಿ ಕಾಮತ್, ಶ್ರೀಪತಿ ಬಲ್ಲಾಳ್, ಕಿಶೋರಿ ಬಲ್ಲಾಳ್, ಸದಾನಂದ ಸುವರ್ಣ, ಡಾ.ಬಿ.ಆರ್.ಮಂಜುನಾಥ್, ಕೆ.ಮಂಜುನಾಥಯ್ಯ,, ಬಾಲಕೃಷ್ಣ ನಿಡ್ವಣ್ಣಾಯ ಹಾಗೂ ಸತ್ಯಭಾಮಾ ನಿಡ್ವಣ್ಣಾಯ ದಂಪತಿಗಳು, (ದಿವಂಗತ)ಎ. ಎಸ್. ಕೆ ರಾವ್, ಭರತ್ ಕುಮಾರ್ ಪೊಲಿಪು, ಅಹಲ್ಯ ಬಲ್ಲಾಳ್, ಸಾ ದಯಾ, ಶೈಲಿನಿ ರಾವ್, ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್, ಕುಸುಮ್ ಬಲ್ಲಾಳ್, ಮುಂತಾದವರು.

ಮುಂಬಯಿ ನಗರವಾಸಿಗಳನ್ನು ಮುಂಬಯಿಕರ್ ಎಂದು ಸಂಬೋಧಿಸುವುದುಂಟು. ಮುಂಬಯಿಯ ನಾಗರೀಕರು , ದೈನಂದಿನ ಜೀವನದಲ್ಲಿ ಲೋಕಲ್ ರೈಲಿನ ಪ್ರಯಾಣ ಅವಿಭಾಜ್ಯ ಅಂಗವಾಗಿರುವುದರಿಂದ, ಸ್ವಂತ ಮನೆ ಕೊಳ್ಳುವಾಗ , ಆದಷ್ಟೂ ಲೋಕಲ್ ಸ್ಟೇಷನ್ನುಗಳ ಹತ್ತಿರವೇ ಹುಡುಕುತ್ತಾರೆ. ದೈನಂದಿನ ಜೀವನದಲ್ಲಿ , ಓಡಾಟದಲ್ಲಿ, ಗಡಿಯಾರದ ಮುಳ್ಳಿನಂತೆ ಮಗ್ನರಾಗಿರುವ ಮುಂಬಯಿಕರರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಡಿಮೆ. ಆದರೂ ಧಾರ್ಮಿಕ / ಸಾಮಾಜಿಕ ಚಟುವಟಿಕೆಗಳಾದ ಗಣೇಶ ಚತುರ್ಥಿಯೇ ಮೊದಲಾದ ಹಬ್ಬ ಹರಿದಿನಗಳನ್ನು ವಿಜೃಂಭಣೆ ಯಿಂದ, ಸಡಗರದಿಂದ, ಸಾಮೂಹಿಕವಾಗಿ ಆಚರಿಸುತ್ತಾರೆ. 
 
ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆ ವಡಾಪಾವ್ ಎನ್ನಬಹುದು. ಪಾನೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿ ಯಲ್ಲಿ ಬಹಳ ಜನಪ್ರಿಯವಾಗಿವೆ. ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬಯಿ, ದಾದರ್ ಪಶ್ಚಿಮ ದಲ್ಲಿದೆ. ಇಲ್ಲಿ ಬಿಸಿ-ಬಿಸಿ, ಬಟಾಟಾವಡ ತಿಂದು, ಚಹ- ಸೇವನೆಮಾಡುವ ಮಜವನ್ನು ಅನುಭವಿಸಬೇಕು.

UNESCO ಮುಂಬಯಿಗೆ ಮೂರು ಹೆರಿಟೇಜ್ ಪ್ರಶಸ್ತಿಗಳನ್ನು ಕೊಡಮಾಡಿದೆ. 

ಭಾರತೀಯ ಚಿತ್ರರಂಗದ ಜನ್ಮಸ್ಥಾನವೇ ಮುಂಬಯಿ ಎನ್ನಬಹುದು. ದಾದಾಸಾಹೇಬ್ ಫಾಳಕೆ ಭಾರತದ ಮೊಟ್ಟಮೊದಲ ಚಲನಚಿತ್ರ ತಯಾರಿಸಿದ್ದು ಮುಂಬಯಿಯಲ್ಲಿ. ವಿಪುಲವಾಗಿದ್ದ ಚಿತ್ರಮಂದಿರಗಳು ಕಳೆದ ದಶಕಗಳಲ್ಲಿ , ಕಿರುತೆರೆಯ ದಾಳಿಯಿಂದ, ತಮ್ಮ ವರ್ಚಸ್ಸು ಕಳೆದುಕೊಂಡಿದ್ದರೂ,ಮಲ್ಟಿಪ್ಲೆಕ್ಸ್ ಗಳ ರೂಪದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ರಸಿಕರಿಗಾಗಿ ನಾಟ್ಯಮಂದಿರಗಳು, ಚಿತ್ರ-ಶಿಲ್ಪ-ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಸರಕಾರೀ ಹಾಗೂ ಖಾಸಗೀ ರಂಗದ ಆರ್ಟ್ ಗ್ಯಾಲರಿಗಳು ಇಲ್ಲಿವೆ. ಇವುಗಳಲ್ಲಿ ಕೆಲವು ಪ್ರಸಿದ್ಧ ತಾಣಗಳೆಂದರೆ ಜಹಾಂಗೀರ್ ಆರ್ಟ್ ಗ್ಯಾಲರಿ, ಏಶಿಯಾಟಿಕ್ ಸೊಸೈಟಿಯ ವಾಚನಾಲಯ ಮತ್ತು ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯ(ಹಳೆಯ ಹೆಸರು ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್).

ಬರ್ಲಿನ್, ಲಂಡನ್ , ಲಾಸ್ ಏಂಜಲೀಸ್, ಸೆಯಿಂಟ್ ಪೀಟರ್ಸ್ ಬರ್ಗ್,ಸ್ಟುಟ್ ಗರ್ಟ್,ಯೋಕೋಹಾಮ ಈ ನಗರಗಳನ್ನು ಮುಂಬಯಿಯ ಭಗಿನಿ ನಗರಗಳೆಂದು (sister cities) ಪರಿಗಣಿಸಲಾಗಿದೆ.

ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ,ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್, ಡಿ.ಎನ್.ಏ, ಹಿಂದೂಸ್ತಾನ್ ಟೈಮ್ಸ್ , ಮಿಡ್ ಡೇ ಇತ್ಯಾದಿ. ಮಹಾರಾಷ್ಟ್ರ ಟೈಮ್ಸ್ , ಸಕಾಳ, ಲೋಕಸತ್ತಾ , ಸಾಮನಾ ಮತ್ತು ನವಾಕಾಳ ಮುಖ್ಯ ಮರಾಠಿ ಪತ್ರಿಕೆಗಳು. ಇವಲ್ಲದೆ ಗುಜರಾತಿ, ಕನ್ನಡ, ತಮಿಳು ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. ಕರ್ನಾಟಕ ಮಲ್ಲ,ಉದಯವಾಣಿ  ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿವೆ. ಭಾರತದ ಅತಿ ಹಳೆಯ ದಿನಪತ್ರಿಕೆ ಎಂದು ಹೆಸರಾಗಿರುವ ಬಾಂಬೇ ಸಮಾಚಾರ್ ಎಂಬ ಪತ್ರಿಕೆ ಗುಜರಾತಿ ಮತ್ತು ಇಂಗ್ಲೀಷಿನಲ್ಲಿ ಮುಂಬಯಿಯಿಂದ ೧೮೨೨ರಿಂದಲೂ ಪ್ರಕಟವಾಗುತ್ತಿದೆ.

ಅನೇಕ ಕಿರುತೆರೆ ವಾಹಿನಿಗಳ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳು ಮುಂಬಯಿಯಲ್ಲಿವೆ. ದೂರದರ್ಶನದ ಎರಡು ಕಿರುತೆರೆ ವಾಹಿನಿಗಳೊಂದಿಗೆ, ಮೂರು ಮುಖ್ಯ ಕೇಬಲ್ ಟಿವಿ ಜಾಲಗಳು ಮುಂಬಯಿಯ ಬಹುತೇಕ ಮನೆಗಳನ್ನು ತಲುಪಿವೆ.ಉಪಗ್ರಹ ಟಿವಿ (DTH) ಈಗಿನ್ನೂ (೨೦೦೬ರಲ್ಲಿ) ಪ್ರವೇಶಮಾಡುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುವ ಸಂಭವವಿದೆ. ೨೦೦೬ರ ಕೊನೆಯಿಂದ ನಗರದ ಅನೇಕ ಕಡೆಗಳಲ್ಲಿ Conditional Access System (CAS) ಮೂಲಕವೇ ಟಿವಿ ವಾಹಿನಿಗಳ ಪ್ರಸಾರವನ್ನು ಕಡ್ಡಾಯ ಮಾಡಲಾಗಿದೆ. ಕೇಬಲ್ ಟಿವಿ ಜಾಲಗಳ ಮೇಲೆ DTH ಮತ್ತು CASಗಳ ಪರಿಣಾಮ ಏನೆಂದು ಈಗಲೇ ಊಹಿಸುವುದು ಅಸಾಧ್ಯವಾದರೂ, ಈ ಉದ್ಯಮ ಇನ್ನು ಕೆಲವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಹೊಂದುವುದರಲ್ಲಿ ಏನೂ ಸಂಶಯವಿಲ್ಲ.

ಮುಂಬಯಿಯಲ್ಲಿ ಒಂಭತ್ತು ರೇಡಿಯೋ ಸ್ಟೇಷನುಗಳಿದ್ದು , ಇದರಲ್ಲಿ ಆರು FM ತರಂಗಗಳಲ್ಲಿ ಪ್ರಸಾರಮಾಡಿದರೆ, ಬಾಕಿ ಮೂರು ಆಕಾಶವಾಣಿಯ AM ತರಂಗಗಳಲ್ಲಿ ಪ್ರಸಾರವಾಗುತ್ತಿದೆ. FM ಕೇಂದ್ರಗಳು ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭವಾಗಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ.

ಮುಂಬಯಿ ಮಹಾನಗರಪಾಲಿಕೆ “ಮುನಿಸಿಪಲ್ ಶಾಲೆ”ಗಳನ್ನು ನಡೆಸುತ್ತದೆಯಾದರೂ, ಉತ್ತಮ ಶೈಕ್ಷಣಿಕ ಮಟ್ಟ ಮತ್ತು ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ, ಜನಸಾಮಾನ್ಯರು ಅನೇಕ ಖಾಸಗೀ ಸಂಘ ಸಂಸ್ಥೆಗಳು ನಡೆಸುವ ಶಾಲಾಕಾಲೇಜುಗಳಿಗೆ ಪ್ರಾಧಾನ್ಯ ಕೊಡುತ್ತಾರೆ. ಇವುಗಳಲ್ಲಿ ಸರಕಾರೀ ಅನುದಾನ ಪಡೆಯುವ ಹಾಗೂ ಪಡೆಯದ ಶಾಲೆಗಳು ಸೇರಿವೆ. ಶಾಲೆಗಳು ಬಹುತೇಕ ರಾಜ್ಯ ಸರಕಾರದ ಎಸ್ ಎಸ್ ಸಿ ಬೋರ್ಡಿನ ಪಠ್ಯವನ್ನು ಅನುಸರಿಸುತ್ತವೆಯಾದರೂ, ಅಖಿಲ ಭಾರತ ಪಠ್ಯಕ್ರಮಗಳಾದ ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಪದ್ಧತಿಯನ್ನು ಅನುಸರಿಸುವ ಶಾಲೆಗಳೂ ಸಾಕಷ್ಟಿವೆ. ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಶಾಲೆಗಳಲ್ಲಿ ನೋಂದಣಿಗೆ ಹೆಚ್ಚು ಬೇಡಿಕೆಯಿದೆ. ಸರಕಾರೀ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಾವವಿದ್ದರೂ, ಖಾಸಗೀ ಶಾಲೆಗಳ ದುಬಾರಿ ಶುಲ್ಕದ ದೆಸೆಯಿಂದ ಬಡಜನತೆಗೆ ಸರಕಾರೀ ಶಾಲೆಗಳೇ ಅನಿವಾರ್ಯವಾಗಿವೆ. ಈಚೀಚೆಗೆ ಅಂತರರಾಷ್ಟ್ರೀಯ ಪಠ್ಯಕ್ರಮಗಳಾದ ಐ ಬಿ (International Baccalaureate) ಯನ್ನು ಅನುಸರಿಸುವ ಶಾಲೆಗಳೂ ಪ್ರಾರಂಭವಾಗಿದ್ದರೂ , ಇವುಗಳ ಅತಿ ದುಬಾರೀ ಶುಲ್ಕ, ಸಾಧಾರಣ ಮಧ್ಯಮವರ್ಗೀಯರಿಗೂ ಕೈಗೆಟುಕದಾಗಿದೆ. 
ಇಲ್ಲಿಯ ಶಿಕ್ಷಣ ಪದ್ಧತಿ ೧೦+೨+೩ ಯನ್ನು ಅನುಸರಿಸುತ್ತದೆ. ಅರ್ಥಾತ್ , ಹತ್ತು ವರ್ಷದ ಶಾಲೆಯ ನಂತರ ಎರಡು ವರ್ಷದ ಪದವಿಪೂರ್ವ ಶಿಕ್ಷಣವಿದೆ. ಇದಾದಮೇಲೆ ಮೂರು ವರ್ಷದ ಕಲಾ, ವಿಜ್ಞಾನ ಅಥವಾ ವಾಣಿಜ್ಯ ಪದವಿ ಶಿಕ್ಷಣ. ಇಂಜಿನಿಯರಿಂಗ್ ಪದವಿ ನಾಲ್ಕು ವರ್ಷದ್ದಾದರೆ, ವೈದ್ಯಕೀಯ ಶಿಕ್ಷಣ ಸುಮಾರು ಐದು-ಐದೂವರೆ ವರ್ಷ ಅವಧಿಯದಾಗಿದೆ. 
ಮುಂಬಯಿಯ ಬಹುತೇಕ ಕಾಲೇಜುಗಳ ಪಠ್ಯಕ್ರಮ, ಪರೀಕ್ಷೆ ಇತ್ಯಾದಿ ಮುಂಬಯಿ ವಿಶ್ವವಿದ್ಯಾನಿಲಯದ ಅಧೀನದಲ್ಲಿವೆ. ಪ್ರತಿವರ್ಷ ಹೊರಬರುವ ಪದವೀಧರ ಸಂಖ್ಯೆಯನ್ನು ಪರಿಗಣನೆಯಲ್ಲಿ , ಮುಂಬಯಿ ವಿಶ್ವವಿದ್ಯಾಲಯ ಪ್ರಪಂಚದಲ್ಲಿಯೇ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದು. ಇದಲ್ಲದೇ ಪ್ರಖ್ಯಾತ ಐ ಐ ಟಿ ( ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸಹಾ ಇಲ್ಲಿದೆ. ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ನರ್ಸೀ ಮೋನ್ಜೀ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ ಮುಂಬಯಿಯ ಇತರ ವಿಶ್ವವಿದ್ಯಾಲಯಗಳು.

ಮುಂಬಯಿ ಅತಿ ಜನಪ್ರಿಯ ಆಟ ಎಂದರೆ ಕ್ರಿಕೆಟ್. ನಗರದಲ್ಲಿರುವ ಅನೇಕ ಮೈದಾನಗಳಲ್ಲಿಯೇ ಏಕೆ, ಗಲ್ಲಿ ಕ್ರಿಕೆಟ್ ಎಂದೇ ಹೆಸರಾಗಿರುವ , ಸಣ್ಣ ಪುಟ್ಟ ಓಣಿಗಳಲ್ಲಿಯೂ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡುವುದನ್ನು ಕಾಣಬಹುದು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಮುಂಬಯಿಯ ಬ್ರಬೋರ್ನ್ ಮತ್ತು ವಾಂಖೇಡೆ ಕ್ರೀಡಾಂಗಣಗಳು ಅಂತರರಾಷ್ಟ್ರೀಯ ಮಟ್ಟದವುಗಳಾಗಿವೆ.

ಭಾರತದ ಕ್ರಿಕೆಟ್ಟಿನ ತವರು ಮನೆ ಎಂದೇ ಕರೆಯಬಹುದಾದ ಮುಂಬಯಿ, ಅನೇಕ ಪ್ರತಿಭಾವಂತ ಕ್ರಿಕೆಟರುಗಳನ್ನು ಭಾರತ ತಂಡಕ್ಕೆ ನೀಡಿದೆ. ಇಂದಿನ ಸಚಿನ್ ತೆಂಡೂಲ್ಕರ್, ಅಜಿತ್ ಅಗರಕರ್ ಹಿಂದಿನ ಅಜಿತ್ ವಾಡೇಕರ್ , ಸುನೀಲ್ ಗವಾಸ್ಕರ್, ಫಾರೂಖ್ ಇಂಜಿನಿಯರ್ , ವಿನೋದ್ ಕಾಂಬ್ಳಿ,ವಿಜಯ್ ಮಾಂಜ್ರೇಕರ್ ಇವರುಗಳು ಮುಂಬಯಿ ಖ್ಯಾತ ಕ್ರಿಕೆಟಿಗರಲ್ಲಿ ಕೆಲವೇ ಕೆಲವರು. ರಣಜೀ ಟ್ರೋಫಿಯನ್ನು ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಮೂವತ್ತಾರು ಬಾರಿ (೨೦೦೫-೦೬ರವರೆಗೆ) ಗೆದ್ದಿರುವ ಮುಂಬಯಿಯ ದಾಖಲೆಯನ್ನು ಮುರಿಯುವುದು ಸುಲಭ ಸಾಧ್ಯವಲ್ಲ. ಎಪ್ಪತ್ತರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಏಳು-ಎಂಟು ಆಟಗಾರರು ಮುಂಬಯಿಯವರೇ ಆಗಿರುತ್ತಿದ್ದುದುಂಟು. ಆದರೆ , ಈಚೀಚೆಗೆ, ಭಾರತದ ಇತರ ಪ್ರದೇಶಗಳು, ಕರ್ನಾಟಕವೂ ಸೇರಿದಂತೆ , ಕ್ರಿಕೆಟಿನಲ್ಲಿ ಮುಂಬಯಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದು ಮುಂಬಯಿ ತನ್ನ ಮೊದಲಿನ ಅತಿವಿಶಿಷ್ಟ ಸ್ಥಾನವನ್ನು ಕಳೆದುಕೊಂಡಿದೆ.

ಫುಟ್ ಬಾಲ್ ಸಹಾ ಮುಂಬಯಿಯ ಅತಿ ಜನಪ್ರಿಯ ಕ್ರೀಡೆ. ಮುಖ್ಯವಾಗಿ ಮಳೆಗಾಲದಲ್ಲಿ ಕಾಣಬರುವ ಈ ಕ್ರೀಡೆ, ಲೀಗ್ ಪಂದ್ಯಾವಳಿಗಳಿಂದ ಇನ್ನೂ ಜೀವಂತವಾಗಿದೆ. ಹಾಕಿ ಆಟವು ಮೊದಲಿನ ಘನತೆಯನ್ನು ಕಳೆದುಕೊಂಡಿದ್ದರೂ, ಮುಂಬಯಿಯ ಅನೇಕ ಹಾಕೀ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ.

ಮುಂಬಯಿಯ ಇತರ ಕ್ರೀಡೆಗಳೆಂದರೆ ಟೆನ್ನಿಸ್, ಸ್ಕ್ವಾಶ್, ಬಿಲಿಯರ್ಡ್ಸ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಗಾಲ್ಫ್. ರಗ್ಬೀ ಆಟ ಕಾಣಸಿಗುವ ಭಾರತದ ಕೆಲವೇ ಕೆಲವು ನಗರಗಳಲ್ಲಿ ಮುಂಬಯಿಯೂ ಒಂದು.ವಾಲಿಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ಕೂಡಾ ಶಾಲಾಕಾಲೇಜುಗಳಲ್ಲಿ ಜನಪ್ರಿಯವಾಗಿವೆ. ಕುದುರೆ ರೇಸಿನ ಪ್ರಿಯರಿಗಾಗಿ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ. ಪ್ರತಿ ಫೆಬ್ರುವರಿಯಲ್ಲಿ ನಡೆಯುವ ಡರ್ಬಿ , ಭಾರತದ ಪ್ರತಿಷ್ಠಿತ ರೇಸುಗಳಲ್ಲಿ ಒಂದು.




#Article 251: ಜೈಪುರ (949 words)


ಜೈಪುರ ಅಥವಾ ಜಯಪುರ ರಾಜಸ್ಥಾನ ರಾಜ್ಯದ ರಾಜಧಾನಿ.ಜೈಪುರವು ಭಾರತದ ಪಿಂಕ್ ಸಿಟಿ ಎಂದೇ ಪ್ರಸಿದ್ಧವಾಗಿದೆ. ರಾಜಸ್ಥಾನದ ರಾಜಧಾನಿಯಾಗಿರುವ ಜೈಪುರವು ಒಂದು ಪುಟ್ಟ ಮರುಭೂಮಿಯಾಗಿದೆ. ಈ ಸುಂದರವಾದ ನಗರವನ್ನು ಕಟ್ಟಿದ್ದು ಅಂಬಾರದ ಮಹಾರಾಜ ಎರಡನೇ ಸವಾಯಿ ಜೈ ಸಿಂಗ್‌. ಬಂಗಾಳದ ವಾಸ್ತುಶಿಲ್ಪ ತಜ್ಞ ವಿದ್ಯಾಧರ ಭಟ್ಟಾಚಾರ್ಯ ಎಂಬುವವರ ಸಹಾಯದಿಂದ ರಾಜ ಇದನ್ನು ನಿರ್ಮಿಸಿದನಂತೆ. ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದ ಭಾರತದ ಮೊದಲ ನಗರ ಇದು.ಈ ಪ್ರದೇಶವು ಹಿಂದೂ ವಾಸ್ತುಶಿಲ್ಪಕ್ಕೆ ಉತ್ತಮವಾದ ಉದಾಹರಣೆ. ಇದನ್ನು ಪೀಠಪಾದ ಅಥವಾ ಎಂಟು ಮಂಡಲದ ರೂಪದಲ್ಲಿ ನಿರ್ಮಿಸಲಾಗಿದೆ. ರಾಜ ಎರಡನೇ ಸವಾಯಿ ಜೈ ಸಿಂಗ್‌ಗೆ ಜ್ಯೋತಿಷ್ಯಶಾಸ್ತ್ರದ ಬಗ್ಗೆ ಉತ್ತಮ ತಿಳುವಳಿಕೆಯಿತ್ತು ಮತ್ತು ಈತ 9ನೇ ಸಂಖ್ಯೆ ಮತ್ತು ಅದರ ಗುಣಾಕಾರವನ್ನು ಹೆಚ್ಚು ಬಳಸಿದ್ದ. ಇದು ನಗರ ರಚನೆಯಲ್ಲೂ ಕಂಡುಬರುತ್ತದೆ. 9ನೇ ಸಂಖ್ಯೆಯು 9 ಗ್ರಹಗಳನ್ನು ಸೂಚಿಸುತ್ತದೆ.ಜೈಪುರವು ಕೋಟೆಗಳು, ಅರಮನೆಗಳು ಮತ್ತು ಹವೇಲಿಗಳಿಂದ ಆಕರ್ಷಣೆಯನ್ನು ಕಂಡುಕೊಂಡಿದೆ. ಜಗತ್ತಿನ ಎಲ್ಲಾ ಮೂಲೆಯಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ದೂರದ ಪ್ರದೇಶಗಳಿಂದ ಜನರು ಇಲ್ಲಿನ ಸಂಸ್ಕೃತಿ ಮತ್ತು ಸಾಂಸ್ಕೃತಿಕ ವೈಭವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಅಂಬರ್ ಕೋಟೆ, ನಹಾರಗಢ ಕೋಟೆ ಹವಾ ಮಹಲ್‌, ಶೀಶ ಮಹಲ್‌, ಗಣೇಶ್ ಪೋಲ್‌ ಮತ್ತು ಜಲ ಮಹಲ್‌ ಇಲ್ಲಿನ ಕೆಲವು ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳು.

ಸಮುದ್ರಮಟ್ಟದಿಂದ 1.414 ಎತ್ತರದಲ್ಲಿರುವ ಜಯಪುರ ಭಾರತದ ಸುಂದರ ನಗರಗಳಲ್ಲಿ ಒಂದು. ರೈಲುಮಾರ್ಗದಲ್ಲಿ ಮುಂಬಯಿಯಿಂದ 696 ಮೈ. ಈಶಾನ್ಯಕ್ಕೆ, ದೆಹಲಿಯಿಂದ 191 ಮೈ. ನೈಋತ್ಯಕ್ಕೆ, ಇದೆ. 

೨೦೧೧ರ ಜನಗಣತಿಯಂತೆ ಜೈಪುರದ ಜನಸಂಖ್ಯೆ 3,073,350.
ಸಾಕ್ಷರತೆ:೭೬.೪೪ ಲಿಂಗಾನುಪಾತ:೧೦೦೦ ಪುರುಷರಿಗೆ ೮೯೮ ಮಹಿಳೆಯರು.

ಇಲ್ಲಿಯ ಹಲವು ಕಟ್ಟಡಗಳ ಬಣ್ಣ ಪಾಟಲ. ಆದ್ದರಿಂದ ಇದು ಪಾಟಲ ನಗರವೆಂದು ಪ್ರಸಿದ್ಧವಾಗಿದೆ. 1727ರಲ್ಲಿ ಮಹಾರಾಜ ಸವಾಯಿ ಜಯಸಿಂಹನಿಂದ ಸ್ಥಾಪಿತವಾದ ಈ ನಗರದ ರಚನಾಕೌಶಲ ವಿಶಿಷ್ಟವಾದ್ದು. ನಗರವನ್ನು ಚತುರಸ್ರಾಕಾರದ ಆರು ವಿಭಾಗಗಳಾಗಿ ರಚಿಸಲಾಗಿದೆ. ಈ ವಿಭಾಗಗಳ ನಡುವೆ 111 ಅಗಲದ ರಸ್ತೆಗಳುಂಟು. ನಗರದ ಸುತ್ತ ಎಂಟು ದ್ವಾರಗಳಿಂದ 20 x 9ಗಳ ಕೋಟೆ ಇದೆ.

ಹಿಂದಿನ ಜಯಪುರ ಸಂಸ್ಥಾನದ ದೊರೆಗಳು ಕಟ್ಟಿಸಿದ ಹಲವಾರು ಕಟ್ಟಡಗಳು ಈ ನಗರದ ಸೌಂದರ್ಯದವನ್ನು ಹೆಚ್ಚಿಸಿವೆ. ಅವುಗಳಲ್ಲಿ ಜಯಪುರದ ಜಂತರ್ ಮಂತರ್ ಬಲು ಪ್ರಖ್ಯಾತವಾದ್ದು. ಇದು ಜಯಸಿಂಹ ಕಟ್ಟಿಸಿದ ಖಗೋಳ ವೀಕ್ಷಣಾಲಯಗಳಲ್ಲೊಂದು. 1718-1734ರಲ್ಲಿ ಇದನ್ನು ಕಟ್ಟಲಾಯಿತು. ಜಯಪುರದ ಅರಮನೆ ಏಳು ಮಹಡಿಗಳ ಮಹಾಸೌಧ. ಪ್ರಮಾಣಬದ್ಧವಾಗಿ ಕಟ್ಟಿರುವ ದಿವಾನ್-ಇ-ಖಾಸ್, ಪೀತಮ್ ನಿವಾಸ್, ರಂಗಮಂದಿರ, ಶೋಭಾನಿವಾಸ-ಇವು ಈ ಅರಮನೆಯ ಮುಖ್ಯ ವಿಭಾಗಗಳು. 1616ರಲ್ಲಿ ಮೊಗಲ್ ದೊರೆ ಜಹಾಂಗೀರನೊಡನೆ ಪ್ರತಿನಿಧಿ ಸರ್ ಥಾಮಸ್ ರೋ ನಡೆಸಿದ ಮಾತುಕತೆಯ ಚಿತ್ರವೂ ಅಬುಲ್ ಫಜûಲನಿಂದ ಅನುವಾದಗೊಂಡ ಮಹಾಭಾರತದ ನಾಲ್ಕು ಹಸ್ತಪ್ರತಿಗಳೂ ಉಳ್ಳ ಈ ಗ್ರಂಥಾಲಯ ಇಲ್ಲಿದೆ. ಇದು ಹಿಂದಿನ ರಜಪೂತ ದೊರೆಗಳ ಸಾಹಿತ್ಯ ಮತ್ತು ಕಲಾ ವಿಭಾಗದ ಪ್ರತೀಕ. ಹಸಿರುಹುಲ್ಲಿನ ಹಾಸಿಗೆಗಳು. ಅಲ್ಲಲ್ಲಿ ತಿಳಿಗೊಳಗಳು, ನೀರುಬೀಳುಗಳು ಇರುವಂಥ ಉದ್ಯಾನದಿಂದ ಅರಮನೆಯ ಸೌಂದರ್ಯ ವರ್ಧಿಸಿದೆ. 1803ರಲ್ಲಿ ಪಟ್ಟಕ್ಕೆ ಬಂದ ರಾಜಾ ಜುಗ್ಗಲ್‍ಸಿಂಗ ಅರಮನೆಯ ಕಿಲಕಿಲಾಟದಿಂದ ದೂರವಿರ ಬೇಕೆಂದು ಬಯಸಿ ಈ ಉದ್ಯಾನವನದ ಜಲಾಶಯಗಳ ಪ್ರಶಾಂತ ವಾತಾವರಣದಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದನೆಂದೂ, ಅಲ್ಲಿಂದಲೇ ಅಂತಃಪುರದ ಏಕಾಂತದಲ್ಲಿದ್ದ ತನ್ನ ರಾಣಿಯರೊಡನೆ ತನ್ನ ನೆಚ್ಚಿನ ನಾಯಿಯೊಂದರ ಮುಖಾಂತರ ಪತ್ರ ವ್ಯವಹಾರ ಮಾಡುತ್ತಿದ್ದನೆಂದೂ ಪ್ರತೀತಿಯುಂಟು. ಅದರ ಪ್ರತೀಕವಾಗಿ ಉದ್ಯಾನವನದಲ್ಲಿ ಶಿಲಾಶ್ವಾನವೊಂದನ್ನು ನಿಲ್ಲಿಸಲಾಗಿದೆ. ಜಯಪುರದ ಅರಮನೆಯಲ್ಲಿ ಪಾರಿವಾಳಗಳ ಪಾಲನೆ-ಪೋಷಣೆಗಾಗಿ ಮಾಡಿದ್ದ ವ್ಯವಸ್ಥೆ ಪಾಶ್ಚಾತ್ಯ ಪ್ರವಾಸಿಗಳಿಗೆ ವೆನಿಸ್ ನಗರದ ಸೇಂಟ್ ಮಾಕ್ರ್ಸ್ ಚೌಕದ ನೆನಪು ಕೊಡುತ್ತದೆಂದು ಹೇಳಲಾಗಿದೆ.

ಮೊಸಳೆಗಳನ್ನು ಸಾಕಲು ಕಟ್ಟಿಸಿದ ಮೊಸಳೆ ಕೊಳ ಇನ್ನೊಂದು ವೈಶಿಷ್ಟ್ಯ. 1876ರಲ್ಲಿ ಸ್ವಿಂಟನ್ ಜೇಕಬ್ ರಚಿಸಿದ ಆಲ್ಬರ್ಟ್ ಹಾಲ್ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿ ಹಿಂದೂ-ಮುಸ್ಲಿಂ ಶಿಲ್ಪಶೈಲಿಗಳು ಸಂಗಮಿಸಿವೆ. ರಜಪೂತ ದೊರೆಗಳು ಬಳಸುತ್ತಿದ್ದ ಆಯುಧಗಳು ಮತ್ತು ವೇಷಭೂಷಣಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ. ವೈರಿಗಳ ಆಗಮನವನ್ನು ದೂರದಿಂದಲೇ ಗೊತ್ತು ಮಾಡಿಕೊಳ್ಳುವ ಹಂಚಿಕೆಗಾಗಿ ಮಹಾರಾಜ ಇತಾರೀ ಸಿಂಗ್ ಕಟ್ಟಿಸಿದ ಸ್ವರ್ಗಶೂಲಿ ಜಯಪುರದ ಮತ್ತೊಂದು ಮುಖ್ಯ ಅಕರ್ಷಣೆ. ಅಮರ ಮಹಲ್, ನಹರ್‍ಗಡ್, ಸಂಗಾನೇರ ಜೈನಮಂದಿರ-ಇವು ಇತರ ಕೆಲವು ಕಟ್ಟಡಗಳು. ನಗರದೊಳಗಿನ ಪ್ರಮುಖ ಸ್ಥಳಗಳಲ್ಲಿ ರಜಪೂತ ದೊರೆಗಳ ಶಿಲಾಪ್ರತಿಮೆಗಳು ಎದ್ದು ಕಾಣುತ್ತವೆ. ಜಯಪುರದ ಹತ್ತಿರದಲ್ಲಿರುವ ಅಂಬರ್ ಬೆಟ್ಟದಲ್ಲಿ ಪ್ರಾಚೀನ ರಾಜಧಾನಿಯ ಅವಶೇಷಗಳಿವೆ. ಜಯಪುರದಿಂದ ಪಶ್ಚಿಮಕ್ಕೆ 65 ಕಿಮೀ. ದೂರದಲ್ಲಿರುವ ಸಾಂಭಾರ್ ಸರೋವರ ರಮ್ಯವಾದ್ದು. ಜಯಪುರದಲ್ಲಿ 1947ರಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.

ಅರಮನೆಗಳು ಮತ್ತು ಕೋಟೆಗಳ ಹೊರತಾಗಿ ಜೈಪುರದಲ್ಲಿನ ಹಬ್ಬಗಳು ಮತ್ತು ಮೇಳಗಳೂ ತುಂಬಾ ಜನಪ್ರಿಯವಾಗಿದೆ. ಇಲ್ಲಿನ ಮೇಳಗಳಲ್ಲಿ ಒಂದೆಂದರೆ ಜೈಪುರ ವಿಂಟೇಜ್ ಕಾರ್ ರ್ಯಾಲಿ. ಇದನ್ನು ಜನವರಿಯಲ್ಲಿ ನಡೆಸಲಾಗುತ್ತದೆ. ಇತ್ತೀಚೆಗೆ ಈ ಮೇಳವು ತುಂಬಾ ಜನಪ್ರಿಯವಾಗುತ್ತಿದೆ. ಕಾರು ಪ್ರಿಯರು ಮರ್ಸಿಡಿಸ್‌, ಆಸ್ಟಿನ್‌ ಮತ್ತು ಫಿಯೆಟ್‌ನ ವಿವಿಧ ಮಾದರಿಯ ಕಾರುಗಳನ್ನು ನೋಡಬಹುದು. ಇಲ್ಲಿನ ಕೆಲವು ಕಾರುಗಳು 1900ರದ್ದಾಗಿರುವುದು ಗಮನಾರ್ಹ.ಇನ್ನೊಂದು ಜನಪ್ರಿಯ ಮೇಳವೆಂದರೆ ಆನೆ ಉತ್ಸವ. ಹೋಳಿ ಸಂದರ್ಭದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಉತ್ಸವದಲ್ಲಿ ರಂಗುರಂಗಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಆನೆಯ ವಿವಿಧ ಆಟಗಳನ್ನೂ ನೋಡಬಹುದು. ಇದರ ಜೊತೆಗೆ, ಗಂಗಾರ್ ಹಬ್ಬ ಕೂಡಾ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ. ಗನ್‌ ಎಂದರೆ ಶೀವ, ಗೌರ್ ಎಂದರೆ ಶಿವನ ಪತ್ನಿ ಪಾರ್ವತಿ. ಈ ಹಬ್ಬವು ಮದುವೆಯ ಬಂಧದ ಬಗ್ಗೆ. ಇನ್ನೂ ಕೆಲವು ಜನಪ್ರಿಯ ಹಬ್ಬಗಳು ಮತ್ತು ಮೇಳಗಳೆಂದರೆ ಭಂಗಾಂಗ ಮೇಳ, ತೀಜ್‌, ಹೋಳಿ ಮತ್ತು ಚಕ್ಸು ಮೇಳ. ಅವಕಾಶಗಳುಸಾಹಸೀ ಪ್ರವೃತ್ತಿಯವರು ಒಂಟೆ ಸವಾರಿ, ಬಿಸಿ ಗಾಳಿ ಬಲೂನಿಂಗ್‌, ಪ್ಯಾರಾಗ್ಲೈಡಿಂಗ್‌ ಮತ್ತು ರಾಕ್‌ ಕ್ಲೈಂಬಿಂಗ್‌ನ್ನು ಮಾಡಬಹುದು. ಕರೌಲಿ ಮತ್ತು ರಣಥಂಬೋರ್ ನ್ಯಾಷನಲ್‌ ಪಾರ್ಕ್‌ಗೆ ಉತ್ಸಾಹಿಗಳು ಪ್ರವಾಸ ಕೈಗೊಳ್ಳಬಹುದು.ಪ್ರವಾಸಿಗರು ಜೈಪುರದಲ್ಲಿ ಶಾಪಿಂಗ್‌ ಮಾಡುವುದನ್ನು ಇಷ್ಟಪಡುತ್ತಾರೆ. ಇಲ್ಲಿ ಆಭರಣಗಳು, ಕಾರ್ಪೆಟ್‌ಗಳು, ಮಡಿಕೆಗಳು ಮತ್ತು ಹರಳುಗಳ ಮಾರುಕಟ್ಟೆ ಹೆಚ್ಚು ಪ್ರಚಲಿತವಾಗಿದೆ. ಪ್ರವಾಸಿಗರು ಕರಕುಶಲ ಸಾಮಗ್ರಿಗಳನ್ನು, ಕಲಾಕೃತಿಗಳನ್ನು, ಅಪ್ಯಾರೆಲ್‌ಗಳನ್ನು ಮತ್ತು ಬ್ರಾಂಡೆಡ್‌ ಬಟ್ಟೆಗಳನ್ನು ಎಮ್‌ಐ ರಸ್ತೆಯಲ್ಲಿ ಖರೀದಿಸಬಹುದು. ಜೈಪುರದ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಸಂದಭದಲ್ಲಿ ಬಾರ್ಗೇನ್‌ ಮಾಡುವುದು ಅತ್ಯಗತ್ಯ.
ಆಹಾರಗಳು

ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ರುಚಿರುಚಿಯಾದ, ಬಾಯಲ್ಲಿ ನೀರೂರಿಸುವ ತಿಂಡಿಗಳಿಗೆ ಈ ನಗರ ಜನಪ್ರಿಯವಾಗಿದೆ. ದಾಲ್‌ ಬಾತಿ-ಕೂರ್ಮಾ, ಪ್ಯಾಜ್‌ ಕಿ ಕಚೋರಿ, ಕಬಾಬ್‌, ಮುರ್ಗ್‌ ಕೋ ಖಾತೋ ಮತ್ತು ಅಚಾರಿ ಮುರ್ಗ್‌ ಮುಂತಾದವುಗಳು ಇಲ್ಲಿನ ಕೆಲವು ಪ್ರಸಿದ್ಧ ತಿನಿಸುಗಳು. ನೆಹ್ರು ಬಜಾರ್ ಮತ್ತು ಜೋಹಾರಿ ಬಜಾರಿನಲ್ಲಿ ಆಹಾರ ಪ್ರಿಯರು ಈ ತಿನಿಸಉಗಳನ್ನು ಸವಿಯಬಹುದು. ಇಲ್ಲಿನ ರಸ್ತೆಗಳು, ರಸ್ತೆಬದಿಯ ಆಹಾರಕ್ಕೆ ಹೆಚ್ಚು ಜನಪ್ರಿಯವಾಗಿದೆ. ಘೇವಾರ್, ಮಿಶ್ರಿ ಮಾವಾ ಮತ್ತು ಮವಾ ಕಚೋರಿಯಂತ ಸ್ಥಳೀಯ ಸಿಹಿ ತಿನಿಸುಗಳೂ ಕೂಡಾ ಭಾರತದಲ್ಲೇ ಪ್ರಸಿದ್ಧವಾದದ್ದು.
ಜೈಪುರಕ್ಕೆ ಹೋಗುವುದು

ರೈಲು, ವಿಮಾನ ಮತ್ತು ರಸ್ತೆಯ ಮೂಲಕ ಭಾರತದ ಬಹುತೇಕ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿ ಸಂಗಾನೇರ್ ವಿಮಾನ ನಿಲ್ದಾಣವಿದೆ. ಇದನ್ನು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಈ ವಿಮಾನ ನಿಲ್ದಾಣವು ಮುಂಬಯಿ ಚಂಡೀಗಢ, ದೆಹಲಿ ಮತ್ತು ಹೈದರಾಬಾದ್‌ಗೆ ನಿರಂತರ ವಿಮಾನಗಳಿಂದ ಸಂಪರ್ಕವನ್ನು ಹೊಂದಿದೆ. ಜೈಪುರ ರೈಲ್ವೇ ನಿಲ್ದಾಣವು ಭಾರತದ ಬಹುತೇಕ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಿಗೆ ಪ್ರವಾಸಿಗರು ರಾಜಸ್ಥಾನ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಷನ್‌ನಿಂದ ಬಸ್‌ಗಳನ್ನು ಪಡೆಯಬಹುದು. ನವದೆಹಲಿಯಿಂದ ನೇರವಾಗಿ ಜೈಪುರಕ್ಕೆ ಆರ್‌ಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ. ನಗರದಲ್ಲಿ ಪ್ರವಾಸಿಗರು ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್‌ ಲಿಮಿಟೆಡ್‌ನ ಸಾರಿಗೆ ಬಸ್‌ಗಳನ್ನು ಪ್ರಯಾಣಕ್ಕೆ ಅವಲಂಬಿಸಬಹುದು.

ವರ್ಷಂಪ್ರತಿ ಈ ಪ್ರದೇಶವು ಅತಿ ಉಷ್ಣ ವಾತಾವರಣವನ್ನು ಹೊಂದಿರುತ್ತದೆ. ಬೇಸಿಗೆಕಾಲದಲ್ಲಿ ಎಷ್ಟು ಉಷ್ಣತೆಯಿರುತ್ತದೆಯೋ ಅಷ್ಟೇ ತಂಪು ವಾತಾವರಣ ಚಳಿಗಾಲದಲ್ಲಿರುತ್ತದೆ. ಪ್ರವಾಸಿಗರು ಬೇಸಿಗೆಕಾಲದಲ್ಲಿ ಜೈಪುರಕ್ಕೆ ಭೇಟಿ ನೀಡುವುದಾದರೆ ಬಟ್ಟೆಗಳು, ಟೊಪ್ಪಿಗಳು ಮತ್ತು ಸನ್‌ಸ್ಕ್ರೀನ್‌ಗಳನ್ನು ತರಬೇಕಾಗಿರುವುದು ಅಗತ್ಯ. ಮಾರ್ಚ್‌ ನಿಂದ ಅಕ್ಟೋಬರಿನ ಅವಧಿಯು ಪಿಂಕ್‌ ಸಿಟಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ.

ಜಯಪುರದ ಗುಡಿಗಾರಿಕೆ ಮತ್ತು ಇತರ ಕೈಕಸಬುಗಳು ಪ್ರಸಿದ್ಧವಾಗಿವೆ. ಬಾಂಧನೀ ಸೀರೆಗಳ ತಯಾರಿಕೆ, ಬಟ್ಟೆಗಳ ಮೇಲೆ ಚಿನ್ನದ ಅಚ್ಚು ಹಾಕುವುದು. ಎನಾಮೆಲ್ ಕೆಲಸ, ಕುಂದಣಗೆಲಸ, ಹರಳುಗಳ ತಯಾರಿಕೆ, ಕಬ್ಬಿಣ ಉಕ್ಕು ಹಿತ್ತಾಳೆ ಮತ್ತು ತಾಮ್ರ ವಸ್ತುಗಳ ಮೇಲೆ ಚಿಕನ್, ಮರೋರಿ ಮತ್ತು ಬೀಚಿ ಚಿತ್ರ ಕೊರೆತ, ಕತ್ತಿ-ಕಠಾರಿಗಳ ತಯಾರಿಕೆ-ಇವು ಮುಖ್ಯ ಕೈಕಸಬುಗಳು. ರಜಪೂತ ಶೈಲಿಯ ಬಳೆಗಳು, ಪಾದರಕ್ಷೆಗಳು, ಮಡಕೆಗಳು, ದಂತದ ಮತ್ತು ಶ್ವೇತ ಶಿಲೆಯ ಆಟಿಗೆ ಮತ್ತು ಮೂರ್ತಿಗಳು ಜಯಪುರದ ಮನೆಮನೆಯಲ್ಲೂ ಕಾಣಸಿಗುತ್ತಿವೆ. ಇವಕ್ಕೆ ದೇಶದ ವಿವಿಧ ಭಾಗಗಳಲ್ಲಿ ಬೇಡಿಕೆಯುಂಟು. ರಾಜಸ್ಥಾನದ ಇತರ ಭಾಗಗಳಿಂದಲೂ ದಿಲ್ಲಿ-ವಾರಾಣಸಿಗಳಿಂದಲೂ ಕಸುಬುದಾರರು ಬಂದು ಜಯಪುರದಲ್ಲಿ ನೆಲೆಸಿದ್ದಾರೆ.

ಜಯಪುರ ಜಿಲ್ಲೆ ಉ.ಆ. 26023-27051 ಮತ್ತು ಪೂ.ರೇ. 74055-76050 ನಡುವೆ ಇದೆ. ಈ ಜಿಲ್ಲೆಯ ಉತ್ತರಕ್ಕೆ ರಾಜಸ್ಥಾನದ ಶಿಕಾರ್ ಜಿಲ್ಲೆ ಮತ್ತು ಹರಿಯಾಣ, ದಕ್ಷಿಣಕ್ಕೆ ರಾಜಸ್ಥಾನದ ಟೋಂಕ್ ಜಿಲ್ಲೆ, ಪೂರ್ವಕ್ಕೆ ಆಳ್ವಾರ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳು, ಪಶ್ಚಿಮಕ್ಕೆ ನಾಗೌರ್ ಮತ್ತು ಅಜ್ಮೀರ್ ಜಿಲ್ಲೆಗಳು ಇದರ ಮೇರೆಗಳು. ಇಡೀ ರಾಜ್ಯದ 4.1% ರಷ್ಟು ಕ್ಷೇತ್ರ ಆವರಿಸಿರುವ ಈ ಜಿಲ್ಲೆಯ ವಿಸ್ತೀರ್ಣ 5,393 ಚ.ಮೈ.; ಜನಸಂಖ್ಯೆ 24,82,385 (1971). ಜಿಲ್ಲೆಯ ನೆಲ ಕಂದು ಮತ್ತು ಬೂದಿಬಣ್ಣದ ಉಸುಕು ಮಣ್ಣಿನಿಂದ ಕೂಡಿ ಫಲವತ್ತಾಗಿದೆ. ಬಂಗಾಂಗಾ, ಧೂಂಡ್, ಮೊರೆಲ್, ಮಾಸಿ ಮುಂತಾದ ನದಿಗಳ ನೀರಿನ ಆಸರೆ ಉಂಟು. ವರ್ಷಕ್ಕೆ ಸರಾಸರಿ 25-50 ಸೆಂಮೀ. ಮಳೆ ಆಗುತ್ತದೆ. ಇಲ್ಲಿಯ ಕನಿಷ್ಠ ಸರಾಸರಿ ಉಷ್ಣತೆ 15.00-17.50 ಸೆಂ., ಗರಿಷ್ಠ ಸರಾಸರಿ ಉಷ್ಣತೆ 30.00-32.50 ಸೆಂ. ಅರಾವಲೀ ಬೆಟ್ಟದ ಕೆಲವು ಭಾಗಗಳು ಈ ಜಿಲ್ಲೆಯಲ್ಲಿ ಜಾಚಿವೆ. ಬೆಲೆಬಾಳುವ ಹರಳುಗಳು, ಸುಣ್ಣಕಲ್ಲು, ಕಬ್ಬಿಣ ಅದುರು, ಗಾಜು ತಯಾರಿಕೆಗೆ ಉಪಯುಕ್ತವಾದ ಮರಳು ಈ ಜಿಲ್ಲೆಯಲ್ಲಿ ವಿಪುಲವಾಗಿ ದೊರೆಯುತ್ತವೆ; ಬೆಟ್ಟಗಳನ್ನು ಆವರಿಸಿರುವ ಕಾಡಿನ ಮರಗಳು ಸೌದೆಗೆ ಮಾತ್ರ ಉಪಯುಕ್ತ. ಸಾಂಭಾರ್ ಸರೋವರದಲ್ಲಿ ಉಪ್ಪು ತಯಾರಾಗುತ್ತದೆ. ನಕ್ಕಿ ಬಟ್ಟೆ, ಬಾಂಧನೀ ಸೀರೆಗಳು, ದಂತದ ಆಟಿಗೆಗಳು, ಶ್ವೇತ ಶಿಲಾಮೂರ್ತಿಗಳು ಹಿತ್ತಾಳೆಯ ಪಾತ್ರೆಗಳು ಈ ಜಿಲ್ಲೆಯಲ್ಲಿ ಉತ್ಪಾದನೆಯಾಗುವ, ಇಲ್ಲಿಂದ ರಫ್ತಾಗುವ ಸರಕುಗಳು.

ಜಯಪುರವನ್ನು ಮೊದಲು ಕಛವಾ ವಂಶದ ರಜಪೂತ ದೊರೆಗಳು ಆಳುತ್ತಿದ್ದರು. 1857ರ ಬಂಡಾಯದ ಸಮಯದಲ್ಲಿ ಜಯಪುರ ಸಂಸ್ಥಾನದ ದೊರೆ ಬ್ರಿಟಿಷರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಅವನ ಸಂಸ್ಥಾನಕ್ಕೆ ಹೆಚ್ಚಿನ ಪ್ರದೇಶಗಳು ಸೇರಿದುವು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಜಯಪುರವನ್ನಾಳುತ್ತಿದ್ದವರು ಮಹಾರಾಜ ಸವಾಯ್ ಮಾನ್‍ಸಿಂಗ್. 1949ರ ಮಾರ್ಚ್ 30ರಂದು ಜಯಪುರ ಸಂಸ್ಥಾನ ರಾಜಸ್ಥಾನದಲ್ಲಿ ವಿಲೀನಗೊಂಡಿತು.




#Article 252: ಗ್ಯಾಂಗಟಕ್ (171 words)


ಸಿಕ್ಕಿಂ ರಾಜ್ಯದ ರಾಜಧಾನಿ ಗ್ಗ್ಯಾಂಗ್ಟಕ್, ಒಂದು ಪ್ರಮುಖ ವಾಣಿಜ್ಯ ನಗರಿ ಮತ್ತು ಸಿಕ್ಕಿಂನ ದೊಡ್ಡ ನಗರಿಯೂ ಹೌದು. ಕಾಂಚನಜುಂಗ  ಪರ್ವತದ ತಪ್ಪಲಿನಲ್ಲಿ ಇರುವ ನಗರ. ಇದೊಂದು ಪ್ರವಾಸಿ ನಗರಿ. ಬಹಳಷ್ಟು  ಪ್ರವಾಸಿ ಸ್ಥಳಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಸರಿಸುಮಾರು ೧ ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಿಲ್ದಾಣ. ಸಿಲಿಗುರಿಯಿಂದ ಬಸ್ಸುಗಳು ಮತ್ತು ಜೀಪುಗಳಲ್ಲಿ ಪ್ರಯಾಣಸಿ ಗ್ಗ್ಯಾಂಗ್ಟಕ್ ತಲುಪಬಹುದು. ಬಾಗ್ಡೋಗ್ರ, ಹತ್ತಿರವಿರುವ ವಿಮಾನ ನಿಲ್ದಾಣ.

ಗಂಗ್‍ಟೋಕ್ ಡಾರ್ಜಿಲಿಂಗಿನ ಈಶಾನ್ಯಕ್ಕೆ 28 ಮೈ. ದೂರದಲ್ಲಿ    ಭಾರತ-ಟಿಬೆಟ್ ನಡುವಣ ವ್ಯಾಪಾರ ಮಾರ್ಗದಲ್ಲಿ ಉ.ಅ. 27º 20' ಪೂ.ರೇ. 88º 38' ಮೇಲೆ ಇದೆ.

ಸಿಕ್ಕಿಂ ರಾಜ್ಯ ಬೆಟ್ಟಗಳಿಂದ ಅವೃತವಾದ್ದು. ಪರ್ವತಪ್ರದೇಶವಾಗಿರುವುದರಿಂದ ಇಲ್ಲಿ ಹೆಚ್ಚಿನ ಆಧುನಿಕ ವಾಹನ ಸೌಕರ್ಯಗಳಿಲ್ಲ. 1954 ರಲ್ಲಿ ಸಿಕ್ಕಿಮ್‍ನಲ್ಲಿ ಸಪ್ತವಾರ್ಷಿಕ ಯೋಜನೆ ಜಾರಿಗೆ ಬರುವ ಮುನ್ನ ಗಂಗ್‍ಟೊಕ್‍ಗೂ ಬಂಗಾಳ-ಸಿಕ್ಕಿಂ ಗಡಿಯ ಬಳಿಯಲ್ಲಿರುವ ರಂಗ್‍ಪೊಗೂ ನಡುವೆ 48 ಕಿಮೀ.ಗಳಷ್ಟು ದೂರದ ಮೋಟಾರ್ ಹೆದ್ದಾರಿ ಮಾತ್ರ ಇತ್ತು 1954ರ ಅನಂತರ ಗಂಗ್‍ಟೊಕ್‍ನಿಂದ ದಕ್ಷಿಣಕ್ಕೂ ಉತ್ತರದಲ್ಲಿರವ ಲಾಚೆನ್‍ಗೂ ಜೀಪ್ ದಾರಿಗಳೂ ಮೋಟಾರು ಹೆದ್ದಾರಿಗಳೂ ನಿರ್ಮಣವಾದುವು. ಇದರಿಂದಾಗಿ ಉತ್ತರ ಸಿಕ್ಕಿಮ್‍ನಿಂದ ರಾಜ್ಯದ ದಕ್ಷಿಣ ಭಾಗಗಳಿಗೆ ಅರಣ್ಯೋತ್ಪನ್ನ, ಸೇಬು, ಆಲೂಗಡ್ಡೆ ಮುಂತಾದವನ್ನು ಸಾಗಿಸುವ ಸೌಲಭ್ಯ ಏರ್ಪಟ್ಟಿತು. ರಿಷಿ, ಜೆಲೆಪ್ಲಗಳಿಂದ ಗಂಗ್‍ಟೊಕ್‍ಗೆ ಇದ್ದ ಕುದುರೆಮಾರ್ಗ ಜೀಪ್ ದಾರಿಯಾಗಿ ಪರಿವರ್ತನೆಗೊಂಡಿದೆ. ಗಂಗ್‍ಟೊಕ್‍ಗೂ ಸಿಕ್ಕಿಮ್‍ನ ಇತರ ಸ್ಥಳಗಳಿಗೂ ಈಗ ತಕ್ಕಮಟ್ಟಿನ ರಸ್ತೆ ಸಂಪರ್ಕ ಏರ್ಪಟ್ಟಿದೆ.

ಗಂಗ್‍ಟೊಕ್‍ನಲ್ಲಿ ಸಿಕ್ಕಿಂ ರಾಜನ ಅರಮನೆ, ಮಂತ್ರಿಮಂಡಲದ ಸದಸ್ಯರ ನಿವಾಸ ಸ್ಥಾನಗಳು ಮತ್ತು ಸರ್ಕಾರಿ ಸೌಧಗಳಲ್ಲದೆ ಶಾಲೆಕಾಲೇಜುಗಳು, ಜೈಲು, ಆಸ್ಪತ್ರೆಗಳು ಉಂಟು. ಇಲ್ಲಿಂದ ನೈಋತ್ಯಕ್ಕೆ ನಾಲ್ಕು ಮೈಲಿಗಳ ದೂರದಲ್ಲಿ ರೂಮ್‍ಟೆಮ್‍ನ ಬೌದ್ಧ ಮಠವಿದೆ. ಬೇಳೆ, ಮೆಕ್ಕೆಜೋಳ, ಅಕ್ಕಿ, ಕಿತ್ತಳೆಹಣ್ಣು-ಇವು ಇಲ್ಲಿ ವ್ಯಾಪಾರವಾಗುವ ಸರಕುಗಳು.




#Article 253: ಅಗರ್ತಲ (188 words)


ಅಗರ್ತಲ ತ್ರಿಪುರ ರಾಜ್ಯದ ರಾಜಧಾನಿ ಮತ್ತು ಈಶಾನ್ಯ ಭಾರತದ ಎರಡನೆಯ ದೊಡ್ಡ ಪಟ್ಟಣ.ಈ ಪಟ್ಟಣವು ಹೊರಾ ನದಿಯ ದಡದಲ್ಲಿದೆ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳೂ,ಅರಮನೆಗಳೂ ಇವೆ. ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೩,೯೯,೬೮೮. 
ಶಿಕ್ಷಣ, ವ್ಯಾಪಾರ ವಾಣಿಜ್ಯ - ಮುಂತಾದುವುಗಳ ದೃಷ್ಟಿಯಿಂದ ಹಿಂದುಳಿದಿರುವ ಒಂದು ಚಿಕ್ಕ ಪಟ್ಟಣ. ಇಲ್ಲಿ ಹೋರಾ ನದಿ ಹರಿಯುತ್ತದೆ. ಇದು ಬಂಗ್ಲಾದೇಶ ಮತ್ತು ಭಾರತಗಳ ಗಡಿಯಾಗಿದೆ. ಕೃಷಿಗೆ ಫಲವತ್ತಾದ ಮೈದಾನ.
ತ್ರಿಪುರ ಪ್ರಾಂತದಲ್ಲೇ ಪ್ರಮುಖ ರೈಲುನಿಲ್ದಾಣವುಳ್ಳ ಪಟ್ಟಣ. ಇಲ್ಲಿಂದ ಬ್ರಹ್ಮಪುತ್ರ ಪ್ರದೇಶದ ಕೆಲವು ಪಟ್ಟಣಗಳಿಗೆ ರೈಲು ಸಂಪರ್ಕವಿದೆ. ಭಾರತ ಮತ್ತು ಬಂಗ್ಲಾದೇಶ ಗಡಿಪ್ರದೇಶದಲ್ಲಿರುವ ಈ ಪಟ್ಟಣದಲ್ಲಿ ಸೇನಾಶಿಬಿರಗಳಿವೆ. ಈ ಪ್ರದೇಶದಲ್ಲಿ ಅಧಿಕವಾಗಿ ಮಳೆಯಾಗುವುದರಿಂದ ಹವಾಗುಣ ಅಷ್ಟು ಹಿತಕರವಾಗಿಲ್ಲ. ಪ್ರವಾಹಗಳಿಂದಾಗಿ ಜನ ಆಗಾಗ ತೊಂದರೆಗೊಳಗಾಗುತ್ತಾರೆ. ಇದೇ ಇಲ್ಲಿನ ಅಲ್ಪ ಜನಸಂಖ್ಯೆಗೆ ಕಾರಣ. ಗುಡ್ಡಗಾಡಿನ ಪ್ರದೇಶದಲ್ಲಿರುವ ಈ ಪಟ್ಟಣದ ನಿವಾಸಿಗಳಿಗೆ ಇತ್ತೀಚೆಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರದ ನೆರವು ಹೆಚ್ಚಾಗಿ ದೊರೆತಿದೆ.
ವಾಣಿಜ್ಯ ಕೇಂದ್ರ ಕೋಲ್ಕೊತ ವಿಶ್ವವಿದ್ಯಾಲಯಕ್ಕೆ ಸೇರಿದ 4 ಕಾಲೇಜುಗಳಿವೆ. ಮಹಾರಾಜರ ಅರಮನೆ ಹಾಗೂ ಒಂದು ದೇವಾಲಯವಿದೆ.		

ಅಗರ್ತಲ ಎಂಬ ಹೆಸರು ಅಗರ್ (ಎಂದರೆ ಒಂದು ಬಗೆಯ ಸುಗಂಧ ದ್ರವ್ಯ ) ಮತ್ತು ತಲ (ಎಂದರೆ ಸ್ಥಳ) ಎಂಬ ಎರಡು ಪದಗಳಿಂದ ಬಂದಿದ್ದು, ಸುಗಂಧದ್ರವ್ಯಗಳ ಸ್ಥಳ ಎಂದಾಗುತ್ತದೆ. ಈ ಸ್ಥಳದಲ್ಲಿ ಅಗರ್ ವೃಕ್ಷಗಳು ಹೇರಳವಾಗಿವೆ. ಈ ಪಟ್ಟಣವು ಮಾಣಿಕ್ಯ ವಂಶಜರಿಂದ ಆಳಲ್ಪಟ್ಟತ್ತು.ಬ್ರಿಟಿಷರ ಕಾಲದಲ್ಲಿ ಹಿಲ್ ತಿಪ್ಪರ (ಪರ್ವತ ತ್ರಿಪುರ) ದ ರಾಜಧಾನಿ ಎಂದು ಪರಿಗಣಿಸಲ್ಪಟ್ಟಿತ್ತು.ಇಲ್ಲಿಯ ಮಹಾರಾಜ ಬೀರ್ ಬಿಕ್ರಮ ಕಿಶೋರ್ ಮಾಣಿಕ್ಯ ಬಹಾದೂರ್ ರವರು ಆಧುನಿಕ ಅಗರ್ತಲದ ಸ್ಥಾಪಕರು ಎಂದು ಹೇಳಬಹುದು.

ಅಗರ್ತಲವು ಹೋರಾ ನದಿಯ ಕಣಿವೆಯಲ್ಲಿದ್ದರೂ ಅದರ ಉತ್ತರದ ಭಾಗವು ಕಡಿಮೆ ಎತ್ತರದ ಬೆಟ್ಟಗಳಲ್ಲಿ ಹರಡಿಕೊಂಡಿದೆ. ಮಾನ್ಸೂನ್ ಹವಾಮಾನ ಇಲ್ಲಿಯದು.ಎಪ್ರಿಲ್ ನಿಂದ ಅಕ್ಟೋಬರ್ ತನಕ ವಿಸ್ತರಿಸಿದ ಮಳೆಗಾಲ, ಸರಾಸರಿ ೨೮ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ, ನವಂಬರ್ ನಿಂದ ಮಾರ್ಚಿವರೆಗೆ ಸಾಧಾರಣ ಚಳಿ ಇಲ್ಲಿಯ ಹವಾಮಾನ ವೈಶಿಷ್ಟ್ಯ.




#Article 254: ನಿಸರ್ಗ (606 words)


ಪ್ರಕೃತಿ

ಇತರ ಬಳಕೆಗಳಿಗಾಗಿ, ನೇಚರ್ (ದ್ವಂದ್ವ ನಿವಾರಣೆ) ನೋಡಿ.

ಪ್ರಕೃತಿ, ವಿಶಾಲವಾದ ಅರ್ಥದಲ್ಲಿ, ನೈಸರ್ಗಿಕ, ಭೌತಿಕ ಅಥವಾ ವಸ್ತು ಪ್ರಪಂಚ ಅಥವಾ ವಿಶ್ವ. ನೇಚರ್ ಭೌತಿಕ ಪ್ರಪಂಚದ ವಿದ್ಯಮಾನಗಳನ್ನು ಮತ್ತು ಸಾಮಾನ್ಯ ಜೀವನಕ್ಕೆ ಕೂಡಾ ಉಲ್ಲೇಖಿಸಲ್ಪಡುತ್ತದೆ. ವಿಜ್ಞಾನದ ಒಂದು ಭಾಗ ಮಾತ್ರವಲ್ಲದೆ, ಪ್ರಕೃತಿಯ ಅಧ್ಯಯನವು ದೊಡ್ಡದಾಗಿದೆ. ಮಾನವರು ಸ್ವಭಾವದ ಭಾಗವಾಗಿದ್ದರೂ ಸಹ, ಮಾನವ ಚಟುವಟಿಕೆಯನ್ನು ಇತರ ನೈಸರ್ಗಿಕ ವಿದ್ಯಮಾನಗಳಿಂದ ಪ್ರತ್ಯೇಕ ವರ್ಗವೆಂದು ಸಾಮಾನ್ಯವಾಗಿ ಅರ್ಥೈಸಲಾಗುತ್ತದೆ.

ಪದದ ಸ್ವಭಾವವು ಲ್ಯಾಟಿನ್ ಪದ ನ್ಯಾಚುರಾ ಅಥವಾ ಅಗತ್ಯ ಗುಣಗಳು, ಸ್ವಭಾವದ ಸ್ವಭಾವ ದಿಂದ ಬಂದಿದೆ, ಮತ್ತು ಪ್ರಾಚೀನ ಕಾಲದಲ್ಲಿ ಅಕ್ಷರಶಃ ಜನ್ಮ ಎಂದರ್ಥ. [1] ನ್ಯಾಚುರಾ ಎಂಬುದು ಗ್ರೀಕ್ ಪದವಾದ ಫಿಸಿಸ್ (φύσις) ಎಂಬ ಲ್ಯಾಟಿನ್ ಪದವಾಗಿದೆ, ಇದು ಮೂಲತಃ ಸಸ್ಯಗಳು, ಪ್ರಾಣಿಗಳು, ಮತ್ತು ಪ್ರಪಂಚದ ಇತರ ಲಕ್ಷಣಗಳು ತಮ್ಮದೇ ಆದ ಒಡನಾಟವನ್ನು ಅಭಿವೃದ್ಧಿಪಡಿಸುವ ನೈಜ ಗುಣಲಕ್ಷಣಗಳಿಗೆ ಸಂಬಂಧಿಸಿದೆ. [2] [3] ಒಟ್ಟಾರೆಯಾಗಿ ಪ್ರಕೃತಿಯ ಪರಿಕಲ್ಪನೆ, ಭೌತಿಕ ವಿಶ್ವ, ಮೂಲ ಕಲ್ಪನೆಯ ಹಲವಾರು ವಿಸ್ತರಣೆಗಳಲ್ಲಿ ಒಂದಾಗಿದೆ; ಇದು ಪದದ ಕೆಲವು ಪ್ರಮುಖ ಅನ್ವಯಿಕೆಗಳೊಂದಿಗೆ φύσις ಆರಂಭವಾಯಿತು -ಸೋಕ್ರಟಿಕ್ ಪೂರ್ವದ ತತ್ವಜ್ಞಾನಿಗಳು, ಮತ್ತು ಇದುವರೆಗೂ ನಿರಂತರವಾಗಿ ಕರೆನ್ಸಿಯನ್ನು ಪಡೆಯಿತು. ಕಳೆದ ಹಲವಾರು ಶತಮಾನಗಳಲ್ಲಿ ಆಧುನಿಕ ವೈಜ್ಞಾನಿಕ ವಿಧಾನದ ಆಗಮನದ ಸಮಯದಲ್ಲಿ ಈ ಬಳಕೆಯು ಮುಂದುವರೆಯಿತು. [4] [5]

ಇಂದು ಪದದ ವಿವಿಧ ಉಪಯೋಗಗಳಲ್ಲಿ, ಪ್ರಕೃತಿ ಸಾಮಾನ್ಯವಾಗಿ ಭೂವಿಜ್ಞಾನ ಮತ್ತು ವನ್ಯಜೀವಿಗಳನ್ನು ಉಲ್ಲೇಖಿಸುತ್ತದೆ. ಪ್ರಕೃತಿ ಜೀವಂತ ಸಸ್ಯಗಳು ಮತ್ತು ಪ್ರಾಣಿಗಳ ಸಾಮಾನ್ಯ ಕ್ಷೇತ್ರವನ್ನು ಉಲ್ಲೇಖಿಸಬಹುದು, ಮತ್ತು ಕೆಲವು ಸಂದರ್ಭಗಳಲ್ಲಿ ಜೀವಿಗಳು ಮತ್ತು ಜೀವಿಜ್ಞಾನದಂತಹ ತಮ್ಮದೇ ಆದ ಒಡಂಬಡಿಕೆಯನ್ನು ಬದಲಾಯಿಸುವಂತಹ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ನಿರ್ಜೀವ ವಸ್ತುಗಳೊಂದಿಗಿನ ಪ್ರಕ್ರಿಯೆಗಳಿಗೆ ಸಂಬಂಧಿಸಿರುತ್ತವೆ. ನೈಸರ್ಗಿಕ ಪರಿಸರ ಅಥವಾ ಅರಣ್ಯ-ಕಾಡು ಪ್ರಾಣಿಗಳು, ಕಲ್ಲುಗಳು, ಅರಣ್ಯ, ಮತ್ತು ಸಾಮಾನ್ಯವಾಗಿ ಮಾನವ ಹಸ್ತಕ್ಷೇಪದ ಮೂಲಕ ಗಣನೀಯವಾಗಿ ಬದಲಾಗದೆ ಇರುವಂತಹ ಅಥವಾ ಮಾನವನ ಹಸ್ತಕ್ಷೇಪದ ಹೊರತಾಗಿಯೂ ಇದು ಉಳಿದುಕೊಂಡಿರುವ ವಿಷಯಗಳನ್ನು ಅರ್ಥೈಸಲು ಇದನ್ನು ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ, ತಯಾರಿಸಿದ ವಸ್ತುಗಳು ಮತ್ತು ಮಾನವ ಸಂವಹನವನ್ನು ಸಾಮಾನ್ಯವಾಗಿ ಸ್ವಭಾವದ ಭಾಗವೆಂದು ಪರಿಗಣಿಸಲಾಗುವುದಿಲ್ಲ, ಉದಾಹರಣೆಗೆ, ಮಾನವ ಸ್ವಭಾವ ಅಥವಾ ಸಂಪೂರ್ಣ ಪ್ರಕೃತಿ ಎಂದು ಅರ್ಹತೆ ನೀಡದಿದ್ದರೆ. ಇಂದು ಕಂಡುಬರುವ ನೈಸರ್ಗಿಕ ವಸ್ತುಗಳ ಬಗೆಗಿನ ಈ ಸಾಂಪ್ರದಾಯಿಕ ಪರಿಕಲ್ಪನೆಯು ನೈಸರ್ಗಿಕ ಮತ್ತು ಕೃತಕ ನಡುವಿನ ವ್ಯತ್ಯಾಸವನ್ನು ಸೂಚಿಸುತ್ತದೆ, ಮಾನವ ಪ್ರಜ್ಞೆ ಅಥವಾ ಮಾನವ ಮನಸ್ಸಿನಿಂದ ಉಂಟಾಗುವ ಕೃತಕ ಪದವನ್ನು ಅರ್ಥೈಸಿಕೊಳ್ಳಲಾಗಿದೆ. ನಿರ್ದಿಷ್ಟ ಸಂದರ್ಭವನ್ನು ಆಧರಿಸಿ, ನೈಸರ್ಗಿಕ ಎಂಬ ಪದವನ್ನು ಸಹ ಅಸ್ವಾಭಾವಿಕ ಅಥವಾ ಅಲೌಕಿಕತೆಯಿಂದ ಪ್ರತ್ಯೇಕಿಸಬಹುದು.
ಪರಿವಿಡಿ

ವಾತಾವರಣ, ಹವಾಮಾನ ಮತ್ತು ಹವಾಮಾನ

ಬಾಹ್ಯ ಕೊಂಡಿಗಳು

ಭೂಮಿ

ನೇಚರ್ ಟೈಮ್ಲೈನ್

ಪುನಸ್ಸಂಯೋಜನೆ

ಮ್ಯಾಟರ್ ಪ್ರಾಬಲ್ಯ

ಯುಗ

ವೇಗವರ್ಧಿತ ವಿಸ್ತರಣೆ

ನೀರು

ಒಂದೇ ಜೀವಕೋಶದ ಜೀವನ

ದ್ಯುತಿಸಂಶ್ಲೇಷಣೆ

ಬಹುಕೋಶೀಯ

ಜೀವನ

ಬೆನ್ನುಮೂಳೆಗಳು

ಡಾರ್ಕ್ ಯುಗಗಳು

ಎಲ್

ನಾನು

ಇ

(ವೀಕ್ಷಿಸಿ • ಚರ್ಚಿಸಿ) ಆಕ್ಸಿಸ್ ಸ್ಕೇಲ್: ಶತಕೋಟಿ ವರ್ಷಗಳು

ಮೇಲಿನ ಚಿತ್ರ ಕ್ಲಿಕ್ ಮಾಡಬಹುದಾದ ಲಿಂಕ್ಗಳನ್ನು ಹೊಂದಿದೆಇನ್ನೂ ನೋಡಿ: ಹ್ಯೂಮನ್ ಟೈಮ್ಲೈನ್ ​​ಮತ್ತು ಲೈಫ್ ಟೈಮ್ಲೈನ್

ಮುಖ್ಯ ಲೇಖನಗಳು: ಭೂಮಿ ಮತ್ತು ಭೂ ವಿಜ್ಞಾನ

ಜೀವವನ್ನು ಬೆಂಬಲಿಸಲು ತಿಳಿದಿರುವ ಏಕೈಕ ಗ್ರಹವು ಭೂಮಿಯಷ್ಟೇ, ಮತ್ತು ಅದರ ನೈಸರ್ಗಿಕ ಲಕ್ಷಣಗಳು ಹಲವು ಕ್ಷೇತ್ರಗಳ ವೈಜ್ಞಾನಿಕ ಸಂಶೋಧನೆಯ ವಿಷಯವಾಗಿದೆ. ಸೌರವ್ಯೂಹದಲ್ಲಿ, ಇದು ಸೂರ್ಯನಿಗೆ ಸಮೀಪದಲ್ಲಿ ಮೂರನೆಯದು; ಇದು ಅತಿ ದೊಡ್ಡ ಭೂಮಿಯ ಗ್ರಹ ಮತ್ತು ಒಟ್ಟಾರೆಯಾಗಿ ಐದನೇ ದೊಡ್ಡದಾಗಿದೆ. ಇದರ ಪ್ರಮುಖ ಹವಾಮಾನ ಲಕ್ಷಣಗಳು ಅದರ ಎರಡು ದೊಡ್ಡ ಧ್ರುವ ಪ್ರದೇಶಗಳು, ಎರಡು ತುಲನಾತ್ಮಕವಾಗಿ ಕಿರಿದಾದ ಸಮಶೀತೋಷ್ಣ ವಲಯಗಳು ಮತ್ತು ವಿಶಾಲ ಸಮಭಾಜಕ ಉಷ್ಣವಲಯದ ಉಪೋಷ್ಣವಲಯದ ಪ್ರದೇಶಕ್ಕೆ ಸೇರಿವೆ. [6] ಮಳೆಯು ವರ್ಷಕ್ಕೆ ಹಲವಾರು ಮೀಟರ್ಗಳಿಂದ ಮಿಲಿಮೀಟರ್ ಗಿಂತ ಕಡಿಮೆ ಇರುವ ಸ್ಥಳದೊಂದಿಗೆ ವ್ಯಾಪಕವಾಗಿ ಬದಲಾಗುತ್ತದೆ. ಭೂಮಿಯ ಮೇಲ್ಮೈಯ 71 ಪ್ರತಿಶತದಷ್ಟು ಉಪ್ಪಿನ ನೀರಿನ ಸಾಗರಗಳಿಂದ ಆವೃತವಾಗಿದೆ. ಉಳಿದವು ಖಂಡಗಳು ಮತ್ತು ದ್ವೀಪಗಳನ್ನು ಒಳಗೊಂಡಿದೆ, ಉತ್ತರ ಗೋಳಾರ್ಧದಲ್ಲಿ ವಾಸಯೋಗ್ಯ ಭೂಮಿ ಹೆಚ್ಚಿನವು.

ಭೂಮಿಯು ಭೌಗೋಳಿಕ ಮತ್ತು ಜೈವಿಕ ಪ್ರಕ್ರಿಯೆಗಳ ಮೂಲಕ ವಿಕಸನಗೊಂಡಿತು, ಅದು ಮೂಲ ಸ್ಥಿತಿಯ ಕುರುಹುಗಳನ್ನು ಬಿಟ್ಟುಬಿಟ್ಟಿದೆ. ಬಾಹ್ಯ ಮೇಲ್ಮೈ ಹಲವಾರು ಕ್ರಮೇಣ ಟೆಕ್ಟೋನಿಕ್ ಪ್ಲೇಟ್ಗಳನ್ನು ವಿಂಗಡಿಸುತ್ತದೆ. ಆಂತರಿಕವು ಪ್ಲಾಸ್ಟಿಕ್ ಮ್ಯಾಂಟಲ್ನ ದಪ್ಪ ಪದರ ಮತ್ತು ಒಂದು ಕಬ್ಬಿಣದ ತುಂಬಿದ ಕೋರ್ನೊಂದಿಗೆ ಆಯಸ್ಕಾಂತೀಯ ಕ್ಷೇತ್ರವನ್ನು ಉತ್ಪತ್ತಿ ಮಾಡುತ್ತದೆ. ಈ ಕಬ್ಬಿಣದ ಕೋರ್ ಒಂದು ಘನ ಆಂತರಿಕ ಹಂತ ಮತ್ತು ದ್ರವದ ಹೊರ ಹಂತದಿಂದ ಕೂಡಿದೆ. ಕೋರ್ನಲ್ಲಿ ಸಂವಹನ ಚಲನೆಯು ಡೈನಮೋ ಕ್ರಿಯೆಯ ಮೂಲಕ ವಿದ್ಯುತ್ ಪ್ರವಾಹವನ್ನು ಉತ್ಪತ್ತಿ ಮಾಡುತ್ತದೆ, ಮತ್ತು ಅವುಗಳು, ಭೂಕಾಂತೀಯ ಕ್ಷೇತ್ರವನ್ನು ಉತ್ಪತ್ತಿ ಮಾಡುತ್ತವೆ.

ಭೂವಿಜ್ಞಾನ

ಮುಖ್ಯ ಲೇಖನ: ಭೂವಿಜ್ಞಾನ

ಭೂವಿಜ್ಞಾನವು ಭೂಮಿಯಾಗಿರುವ ಘನ ಮತ್ತು ದ್ರವ ಪದಾರ್ಥದ ವಿಜ್ಞಾನ ಮತ್ತು ಅಧ್ಯಯನವಾಗಿದೆ. ಭೂವಿಜ್ಞಾನದ ಕ್ಷೇತ್ರವು ಸಂಯೋಜನೆ, ರಚನೆ, ಭೌತಿಕ ಗುಣಲಕ್ಷಣಗಳು, ಚಲನಶಾಸ್ತ್ರ, ಮತ್ತು ಭೂಮಿಯ ವಸ್ತುಗಳ ಇತಿಹಾಸ, ಮತ್ತು ಅವರು ರೂಪುಗೊಳ್ಳುವ ಪ್ರಕ್ರಿಯೆಗಳು, ಸರಿಸುಮಾರು ಮತ್ತು ಬದಲಾದ ಅಧ್ಯಯನಗಳನ್ನು ಒಳಗೊಳ್ಳುತ್ತದೆ. ಕ್ಷೇತ್ರವು ಪ್ರಮುಖ ಶೈಕ್ಷಣಿಕ ಶಿಸ್ತುಯಾಗಿದೆ, ಮತ್ತು ಖನಿಜ ಮತ್ತು ಹೈಡ್ರೋಕಾರ್ಬನ್ ಹೊರತೆಗೆಯುವಿಕೆ, ನೈಸರ್ಗಿಕ ಅಪಾಯಗಳ ಬಗ್ಗೆ ಜ್ಞಾನ ಮತ್ತು ತಗ್ಗಿಸುವಿಕೆ, ಕೆಲವು ಜಿಯೋಟೆಕ್ನಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳು, ಮತ್ತು ಹಿಂದಿನ ವಾತಾವರಣ ಮತ್ತು ಪರಿಸರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ಭೂವೈಜ್ಞಾನಿಕ ವಿಕಸನ

ಮೂರು ವಿಧದ ಭೂವೈಜ್ಞಾನಿಕ ಪ್ಲೇಟ್ ಟೆಕ್ಟೋನಿಕ್ ಗಡಿಗಳು.

ಪ್ರದೇಶದ ಭೂವಿಜ್ಞಾನವು ಸಮಯದ ಮೂಲಕ ವಿಕಸನಗೊಳ್ಳುತ್ತದೆ ಮತ್ತು ರಾಕ್ ಘಟಕಗಳು ಠೇವಣಿ ಮತ್ತು ಸೇರಿಸಲ್ಪಟ್ಟಾಗ ಮತ್ತು ವಿರೂಪಾತ್ಮಕ ಪ್ರಕ್ರಿಯೆಗಳು ತಮ್ಮ ಆಕಾರಗಳನ್ನು ಮತ್ತು ಸ್ಥಳಗಳನ್ನು ಬದಲಾಯಿಸುತ್ತವೆ.

ರಾಕ್ ಘಟಕಗಳನ್ನು ಮೊದಲಿಗೆ ಮೇಲ್ಮೈಯಲ್ಲಿ ಸಂಗ್ರಹಣೆಯ ಮೂಲಕ ಅಥವಾ ಮೇಲ್ಛಾವಣಿ ರಾಕ್ನಲ್ಲಿ ಪ್ರವೇಶಿಸಬಹುದು. ಸಂಚಯಗಳು ಭೂಮಿಯ ಮೇಲ್ಮೈಗೆ ಇಳಿದಾಗ ಮತ್ತು ನಂತರ ಸಂಚಯದ ಬಂಡೆಗೆ ಎಳ್ಳುವಾಗ, ಅಥವಾ ಜ್ವಾಲಾಮುಖಿಯ ಬೂದಿ ಅಥವಾ ಲಾವಾ ಹರಿವುಗಳಂತಹ ಜ್ವಾಲಾಮುಖಿಯ ವಸ್ತುವಾಗಿ, ಮೇಲ್ಮೈಯನ್ನು ಹೊದಿಕೆ ಮಾಡುವಾಗ ಠೇವಣಿ ಸಂಭವಿಸಬಹುದು. ಬಾನೊಲಿತ್ಗಳು, ಲ್ಯಾಕ್ಕೊಲಿತ್ಗಳು, ಡೈಕ್ಗಳು ​​ಮತ್ತು ಸಿಲ್ಸ್ ಮುಂತಾದ ಅಡಚಣೆಗಳಿವೆ, ಮೇಲ್ಮುಖವಾದ ಬಂಡೆಗೆ ಮೇಲ್ಮುಖವಾಗಿ ತಳ್ಳುತ್ತವೆ ಮತ್ತು ಸ್ಫಟಿಕೀಕರಣಗೊಳ್ಳುತ್ತವೆ.

ಬಂಡೆಗಳ ಆರಂಭಿಕ ಅನುಕ್ರಮವನ್ನು ಸಂಗ್ರಹಿಸಿದ ನಂತರ, ರಾಕ್ ಘಟಕಗಳನ್ನು ವಿರೂಪಗೊಳಿಸಬಹುದು ಮತ್ತು / ಅಥವಾ ರೂಪಾಂತರಗೊಳಿಸಬಹುದು. ವಿರೂಪಗೊಳಿಸುವಿಕೆಯು ಸಮತಲವಾದ ಸಂಕ್ಷಿಪ್ತ, ಸಮತಲ ವಿಸ್ತರಣೆ, ಅಥವಾ ಪಕ್ಕ-ಪಕ್ಕದ (ಸ್ಟ್ರೈಕ್-ಸ್ಲಿಪ್) ಚಲನೆಯ ಪರಿಣಾಮವಾಗಿ ಸಂಭವಿಸುತ್ತದೆ. ಈ ರಚನಾತ್ಮಕ ಪ್ರಭುತ್ವಗಳು ವ್ಯಾಪಕವಾಗಿ ಒಮ್ಮುಖದ ಗಡಿಗಳು, ವಿಭಿನ್ನ ಗಡಿಗಳು, ಮತ್ತು ಟೆಕ್ಟೋನಿಕ್ ಪ್ಲೇಟ್ಗಳ ನಡುವೆ ಅನುಕ್ರಮವಾಗಿ ಗಡಿಗಳನ್ನು ರೂಪಾಂತರಿಸುತ್ತವೆ.




#Article 255: ಡಿಸೆಂಬರ್ (107 words)


ಡಿಸೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಕೊನೆಯ (ಹನ್ನೆರಡನೆಯ) ತಿಂಗಳು.
ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.
ಡಿಸೆಂಬರ್ ಕ್ರಿಸ್ತವರ್ಷದ ಹನ್ನೆರಡನೆಯ ತಿಂಗಳು. ಇದರಲ್ಲಿ 31 ದಿವಸಗಳಿವೆ. ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗುವ ಪ್ರಾಚೀನ ರೋಮ್ ತಾರೀಕುಪಟ್ಟಿಯಲ್ಲಿ ಇದನ್ನು ಹತ್ತನೆಯ ತಿಂಗಳಾಗಿ ಕಾಣಿಸಲಾಗಿತ್ತು. ಪ್ರಾಚೀನ ರೋಮನರು ಶನಿಗ್ರಹ ಸಂಬಂಧವಾದ ಸ್ಯಾಟರ್‍ನೇಲೀಯ ಎಂಬ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸುತ್ತಿದ್ದರು. ಈ ಹಂಗಾಮಿನಲ್ಲಿ ಯೂಲ್ ಎಂಬ ನಡುಚಳಿಗಾಲದ ಹಬ್ಬ ಪ್ರಾಚೀನ ಟ್ಯೂಟೋನಿಕರಿಂದ ಆಚರಿಸಲ್ಪಡುತ್ತಿತ್ತು. ಸಾಮಾನ್ಯವಾಗಿ ಟರ್‍ಕ್ವಾಯ್ಸ್ ಎಂಬ ಒಂದು ಬಗೆಯ ವೈಡೂರ್ಯವನ್ನು ಜಿರ್ಕಾನ್ ಎಂಬ ಖನಿಜವನ್ನೂ ಡಿಸೆಂಬರ್ ತಿಂಗಳಿಗೆ ಅನ್ವಯಿಸುವುದುಂಟು. ಏಸುಕ್ರಿಸ್ತನ ಜನನ ದಿನವನ್ನು ಕುರಿತು ಇರುವ ಸಾಂಪ್ರದಾಯಿಕ ನಂಬಿಕೆಯಂತೆ ಡಿಸೆಂಬರ್ 25ನೆಯ ದಿವಸವನ್ನು ಪ್ರಪಂಚದಾದ್ಯಂತ ಇರುವ ಕ್ರೈಸ್ತರು ಕ್ರಿಸ್ಮಸ್ (ನೋಡಿ- ಕ್ರಿಸ್ಮಸ್) ಎಂದೇ ಆಚರಿಸುತ್ತಾರೆ. ಸಾಮಾನ್ಯವಾಗಿ ಈ ಹಬ್ಬದ ಆಚರಣೆ ಮುಂದಿನ ಹೊಸ ವರ್ಷದ ಮೊದಲ ದಿನದ ವರೆಗೂ ನಡೆದಿರುತ್ತದೆ. ಮಕರ ಸಂಕ್ರಮಣ (ವಿಟರ್ ಸಾಲ್ಸ್‍ಟೀಸ್) ಸಂಭವಿಸುವುದು ಈ ತಿಂಗಳಲ್ಲೇ. ಭಾರತೀಯ ಪಂಚಾಂಗದ ರೀತ್ಯ ವೃಶ್ಚಿಕ ಮತ್ತು ಧನುರ್ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ




#Article 256: ಕೆನಡಾ (718 words)


ಕೆನಡಾ -  ಉತ್ತರ ಅಮೇರಿಕ ಖಂಡದ ಒಂದು ದೇಶ. ಕಾಮನ್‍ವೆಲ್ತ್ ಒಕ್ಕೂಟಕ್ಕೆ ಸೇರಿದ ರಾಷ್ಟ್ರ. 

ಆಟ್ವಾ ಈ ದೇಶದ ರಾಜಧಾನಿ. ಟೊರಾಂಟೋ, ಮ್ಯಾಂಟ್ರಿಯಲ್, ವಾನ್ಕೂವರ್, ಕ್ಯಾಲ್ಗರಿಗಳು ಈ ದೇಶದ ಮುಖ್ಯ ನಗರಗಳು. ಈ ದೇಶದ ಹವಾಮಾನದ ಮುಖ್ಯ ಅಂಶ - ವರುಷದ ೮-೧೦ ತಿಂಗಳು ಕೊರೆಯುವ ಚಳಿ.

ಭಾರತದಿಂದ ಅನೇಕ ವಲಸೆಗಾರರು ಬಂದು ಇಲ್ಲಿ ನೆಲಸಿದ್ದಾರೆ. ಈ ದೇಶದಲ್ಲಿ, ಅನೇಕ ಭಾರತೀಯ ಸಂಜಾತರು ಸಮಾಜದ ಉನ್ನತ ಸ್ಥಾನಗಳಿಗೇರಿದ್ದಾರೆ.

ಕೆನಡದ ಚರಿತ್ರೆ 15ನೆಯ ಶತಮಾನದಿಂದ, ಅಂದರೆ ಐರೋಪ್ಯರ ನೌಕಾಯಾನ ಸಾಹಸದ ಸುವರ್ಣಯುಗದಿಂದ ಪ್ರಾರಂಭವಾಗುತ್ತದೆ. ಪೌರಸ್ತ್ಯ ದೇಶಗಳಿಗೆ ಸಮುದ್ರಮಾರ್ಗ ಕಂಡುಹಿಡಿಯಲು ಸ್ಪೇನ್, ಪೋರ್ಚುಗಲ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳು ಪ್ರಯತ್ನಿಸಿದುವು. ಈ ಪ್ರಯತ್ನದ ಫಲವಾಗಿ ಸ್ಪೇನ್ ದೇಶ ಕ್ಯಾರಿಬೀಯನ್ ಮತ್ತು ಮಧ್ಯ ಅಮೆರಿಕ ಪ್ರದೇಶಗಳಲ್ಲಿ ತನ್ನ ವಸಾಹತುಗಳನ್ನು ಸ್ಥಾಪಿಸಿ, ಸೈನ್ಯಬಲದಿಂದ ವಿದೇಶೀಯರ ಪ್ರವೇಶವನ್ನು ತಡೆಗಟ್ಟಿತು. ಇಂಗ್ಲೆಂಡಿನ ದೊರೆ 7ನೆಯ ಹೆನ್ರಿಯ ಕಾಲದಲ್ಲಿ (1497) ಜಾನ್ ಕ್ಯಾಬಟ್ ಬ್ರಿಸ್ಟಲ್‍ನಿಂದ ಪ್ರಯಾಣ ಮಾಡಿ ಕೆನಡದ ತೀರವನ್ನು ತಲುಪಿ, ಅಲ್ಲಿಯ ನ್ಯೂ ಫೌಂಡ್‍ಲೆಂಡ್ 7ನೆಯ ಹೆನ್ರಿಗೆ ಸೇರಿದ್ದೆಂದು ಘೋಷಿಸಿದ. 1534ರಲ್ಲಿ ಫ್ರಾನ್ಸಿನ ಅರಸ ಒಂದನೆಯ ಫ್ರಾನ್ಸಿಸ್ ಕಳುಹಿಸಿದ ನೌಕಾಯಾತ್ರೆ ಜಾಕ್ವಿಸ್ ಕಾಟ್ರ್ಯೇನ್ ನೇತೃತ್ವದಲ್ಲಿ ಸೇಂಟ್ ಲಾರೆನ್ಸ್ ಕೊಲ್ಲಿ ಪ್ರವೇಶಿಸಿತು. ಅನಂತರ ಗ್ಯಾಸ್ಟ್ ಪರ್ಯಾಯ ದ್ವೀಪ 1ನೆಯ ಫ್ರಾನ್ಸಿಸನಿಗೆ ಸೇರಿದ್ದೆಂದು ಘೋಷಿತವಾಯಿತು. ಮರುವರ್ಷ ಕಾಟ್ರ್ಯೆರ್ ಮಾಂಟ್ರಿಯಾಲ್ ವರೆಗೆ ನೌಕಾಯಾನ ಮಾಡಿದ.

ಅಮೆರಿಕ ಭೂಖಂಡದಲ್ಲಿ ಒಂದು ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸುವುದೇ ಫ್ರಾನ್ಸಿನ ಉದ್ದೇಶವಾಗಿತ್ತು. ಇದರಿಂದಾಗಿ ಇಂಗ್ಲೆಂಡಿನೊಡನೆ ಯುದ್ಧ ಅನಿವಾರ್ಯವಾಯಿತು. ಕೆನಡದ ರಾಜ್ಯಪಾಲ ಫ್ರಾಂಟ್ ನ್ಯಾಕ್ ನ್ಯೂ ಇಂಗ್ಲೆಡಿನ ಮೇಲೆ ಆಕ್ರಮಣ ನಡೆಸಲು ನಿರ್ಧರಿಸಿದ. ಆದರೆ 1690ರಲ್ಲಿ ಸರ್ ವಿಲಿಯಂ ಫಿಫ್ಸ್ ಬಾಸ್ಟನ್‍ನಿಂದ ನೌಕಾಪಡೆಯನ್ನು ಕೊಂಡೊಯ್ದು ನೋವ ಸ್ಕೋಷವನ್ನು ಗೆದ್ದುಕೊಂಡ. 1697ರಲ್ಲಿ ರೈಸ್‍ವಿಕ್ ಒಪ್ಪಂದವಾಗಿ ಫ್ರೆಂಚರು ಮತ್ತೆ ಆ ಪ್ರದೇಶವನ್ನು ಪಡೆದುಕೊಂಡರು. ಆದರೆ ಯುದ್ಧ ಮಾತ್ರ ನಿಲ್ಲಲಿಲ್ಲ. ಕೊನೆಯಲ್ಲಿ ಫ್ರಾನ್ಸ್ ಸೋತು 1713ರಲ್ಲಿ ಒಡಂಬಡಿಕೆ ಮಾಡಿಕೊಳ್ಳಬೇಕಾಯಿತು. ಅದರ ಪ್ರಕಾರ ಹಡ್ಸನ್ ಕೊಲ್ಲಿ, ನ್ಯೂ ಫೌಂಡ್‍ಲೆಂಡ್ ಮತ್ತು ನೋವ ಸ್ಕೋಷಗಳನ್ನು ಫ್ರಾನ್ಸ್ ಇಂಗ್ಲೆಂಡಿಗೆ ಬಿಟ್ಟುಕೊಡಬೇಕಾಯಿತು. ಅಲ್ಲಿ ಸ್ವಲ್ಪ ಕಾಲ ಶಾಂತಿ ನೆಲಸಿದ್ದರೂ 1740ರಲ್ಲಿ ಯೂರೋಪಿನಲ್ಲಿ ಆಸ್ಟ್ರಿಯದ ಸಿಂಹಾಸನಕ್ಕಾಗಿ ಯುದ್ಧ ಪ್ರಾರಂಭವಾಗಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳು ವಿರುದ್ಧ ಬಣಗಳಲ್ಲಿದ್ದುದರ ಫಲವಾಗಿ ಅಮೆರಿಕದಲ್ಲೂ ಯುದ್ಧ ಪ್ರಾರಂಭವಾಯಿತು. 1748ರಲ್ಲಿ ಎ-ಲಾ-ಚಾಪೆಲೇ ಒಪ್ಪಂದದಿಂದ ಯೂರೋಪಿನಲ್ಲಿ ಯುದ್ಧ ಕೊನೆಗೊಂಡಾಗ ಇಲ್ಲೂ ಶಾಂತಿ ಏರ್ಪಟ್ಟರೂ ಬ್ರಿಟನ್ ಭೂಶಿರದಲ್ಲಿರುವ ಲೂಯಿಬರ್ಗ್ ಫ್ರಾನ್ಸಿನ ಕೈಬಿಟ್ಟಿತು.

ಆಧುನಿಕ ಕೆನಡದ ಚರಿತ್ರೆ ಅಮೆರಿಕದ ಸ್ವಾತಂತ್ರ್ಯ ಯುದ್ಧದ ಅನಂತರ ನಿಖರವಾಗಿ ಪ್ರಾರಂಭವಾಯಿತು. ಅಮೆರಿಕನರ ಕ್ರಾಂತಿಯ ಪರಿಣಾಮವಾಗಿ ರಾಜಪ್ರಭುತ್ವವಾದಿ ಇಂಗ್ಲಿಷರು ಸಹಸ್ರಾರು ಸಂಖ್ಯೆಯಲ್ಲಿ ಕೆನಡದಲ್ಲಿ ಆಶ್ರಯ ಪಡೆದರು. ಇದರಿಂದಾಗಿ ಫ್ರೆಂಚರಂತೆ ಇಂಗ್ಲಿಷರೂ ಕೆನಡದ ನಿವಾಸಿಗಳಾದರು. ಪ್ಯಾರಿಸ್ ಒಪ್ಪಂದದ ಅನಂತರ 1774ರಲ್ಲಿ ಕ್ವಿಬೆಕ್ ಮಸೂದೆ ಜಾರಿಗೆ ಬರುವವರೆಗೆ ಕೆನಡ ಇಂಗ್ಲೆಂಡಿನ ರಾಜಪ್ರಭುತ್ವಕ್ಕೆ ಒಳಪಟ್ಟಿತ್ತು. 1775ರಲ್ಲಿ ಅಮೆರಿಕದ ಸ್ವಾತಂತ್ರ್ಯ ಯುದ್ಧ ಪ್ರಾರಂಭವಾಯಿತು. ಕೆನಡವನ್ನು ವಶಪಡಿಸಿಕೊಳ್ಳುವುದು ಅಮೆರಿಕನರ ಯೋಜನೆಗಳಲ್ಲಿ ಒಂದಾಗಿತ್ತು. ಆದರೆ ಅದು ವಿಫಲವಾಯಿತು.
ಕೆನಡ ಇಂಗ್ಲಿಷರ ವಶವಾದಮೇಲೆ ಅಲ್ಲಿ ಫ್ರೆಂಚ್ ಮಾದರಿಯ ಆಡಳಿತ ಪದ್ಧತಿ ಕ್ರಮೇಣ ಮಾಯವಾಯಿತು. 1791ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟು ಒಂದು ಸಂವಿಧಾನ ರಚಿಸಿ, ಆಟ್ಟವ ನದಿಯ ಆಧಾರದ ಮೇಲೆ ಕೆನಡವನ್ನು ಪ್ರತ್ಯೇಕ ಸರ್ಕಾರಗಳನ್ನು ಹೊಂದಿದ ಎರಡು ಭಾಗಗಳನ್ನಾಗಿ ವಿಭಾಗಿಸಿತು. ದಕ್ಷಿಣ ಕೆನಡದಲ್ಲಿ ಫ್ರೆಂಚ್ ಮಾದರಿಯ ಸರ್ಕಾರ ಉತ್ತರ ಕೆನಡದಲ್ಲಿ ಇಂಗ್ಲೆಂಡ್ ಮಾದರಿಯ ಸರ್ಕಾರ ಅಸ್ತಿತ್ವದಲ್ಲಿ ಬಂದುವು. ಕೆನಡದ ಎರಡು ಪ್ರದೇಶಗಳಿಗೂ ಸೇರಿದಂತೆ ಒಬ್ಬ ರಾಜ್ಯಪಾಲನನ್ನು ಮತ್ತು ಪ್ರತಿಯೊಂದಕ್ಕೂ ಒಬ್ಬ ಉಪರಾಜ್ಯಪಾಲರನ್ನು ನೇಮಕ ಮಾಡಲಾಯಿತು.
ಕೆನಡದ ವಸಾಹತುಗಳು ಪರಿಪೂರ್ಣತೆ ಪಡೆದಂತೆ ಅಲ್ಲಿ ಸ್ವಯಮಾಡಳಿತ ಪಡೆಯಬೇಕೆಂಬ ಉತ್ಕಟ ಅಪೇಕ್ಷೆ ಉಂಟಾಯಿತು. 19ನೆಯ ಶತಮಾನದಲ್ಲಿ ಇಂಗ್ಲೆಂಡ್, ಅಮೆರಿಕ ಮೊದಲಾದ ದೇಶಗಳಲ್ಲಿದ್ದ ಪ್ರಜಾಪ್ರಭುತ್ವ ಭಾವನೆಗಳು ಕೆನಡದ ವಸಾಹತುಗಳಲ್ಲೂ ಪ್ರತಿಧ್ವನಿತವಾದವು.

ಕೆನಡಿಯನರಲ್ಲಿ ಅತೃಪ್ತಿ ಕ್ರಮೇಣ ಬೆಳೆದು 1837ರಲ್ಲಿ ಉಗ್ರಸ್ವರೂಪದ ಚಳವಳಿ ಪ್ರಾರಂಭವಾಯಿತು. ಉತ್ತರ ಕೆನಡದಲ್ಲಿ ಲಿಯಾನ್ ಮೆಕೆನ್‍ಜಿóಯ ನೇತೃತ್ವದಲ್ಲಿ ಕ್ರಾಂತಿ ಪ್ರಾರಂಭವಾಯಿತು. ಆದರೆ ಅದನ್ನು ಸುಲಭವಾಗಿ ಅಡಗಿಸಲಾಯಿತು, ಮತ್ತು ಮೆಕೆನ್‍ಜಿóಗೆ ಗಡಿಪಾರು ಶಿಕ್ಷೆ ವಿಧಿಸಲಾಯಿತು. ದಕ್ಷಿಣ ಕೆನಡದಲ್ಲಿ ಲೂಯಿ ಜೋಸೆಫನ ನೇತೃತ್ವದಲ್ಲಿ ಪ್ರಾರಂಭವಾದ ಕ್ರಾಂತಿ ಬೆಂಬಲ ಸಿಗದೆ ವಿಫಲವಾಯಿತು.

ಕೆನಡದ ಎರಡೂ ಪ್ರಾಂತ್ಯಗಳ ಏಕೀಕರಣದಿಂದ ಅನುಕೂಲಕ್ಕಿಂತ ಹೆಚ್ಚಾಗಿ ಪ್ರತಿಕೂಲವುಂಟಾಯಿತು. ಪರಸ್ಪರ ವೈರಿಗಳಾದ ಇಂಗ್ಲಿಷರು ಮತ್ತು ಫ್ರೆಂಚರು ಅದಕ್ಕೆ ಕಾರಣರಾಗಿದ್ದರು. ಇದರಿಂದಾಗಿ ದೇಶದಲ್ಲಿ ಸುಭದ್ರ ಸಕಾರದ ರಚನೆಗೆ ತೊಡಕಾಯಿತು. ಕ್ಯಾಥೊಲಿಕರಾಗಿದ್ದ ಫ್ರೆಂಚರೂ ಪ್ರಾಟೆಸ್ಟಂಟರಾಗಿದ್ದ ಇಂಗ್ಲಿಷರೂ ಪಾರ್ಲಿಮೆಂಟಿನಲ್ಲಿ ಸಮಪ್ರಾತಿನಿಧ್ಯ ಹೊಂದಿದ್ದುದರಿಂದ ದೇಶದ ಯಾವ ಕೆಲಸವೂ ಸುಸೂತ್ರವಾಗಿ ನಡೆಯದೆ ರಾಜಕೀಯ ಬಿಕ್ಕಟ್ಟು ಅನಿವಾರ್ಯವಾಯಿತು. 1850-1860ರಲ್ಲಿ ಹಲವಾರು ಸಚಿವ ಸಂಪುಟಗಳ ಬದಲಾವಣೆಯಾಗಿ ದೇಶದ ಪ್ರಗತಿ ಕುಂಠಿತವಾಯಿತು. ಯಾವುದಾದರೊಂದು ರಾಜಕೀಯ ಪರಿಹಾರದ ಅವಶ್ಯಕತೆ ಇತ್ತು. ಇದೇ ಸಮಯದಲ್ಲಿ ನೋವ ಸ್ಕೋಷ, ನ್ಯೂ ಬ್ರನ್‍ಸ್óವಿಕ್ ಮತ್ತು ಪ್ರಿನ್ಸ್ ಎಡ್ವರ್ಡ್ ವಸಾಹತುಗಳಲ್ಲಿ ಕ್ರಾಂತಿ ಪ್ರಾರಂಭವಾಗಿ ಅವು ತಮ್ಮದೇ ಆದ ಒಂದು ಸ್ಥಾನಿಕ ಏಕೀಕರಣ ಮಾಡಿಕೊಳ್ಳಲು ಯೋಚಿಸಿದುವು. ಕೆನಡದ ಮುತ್ಸದ್ದಿಗಳಾದ ಮ್ಯಾಕ್ಟೊನಾಲ್ಡ್, ಕಾರ್ಟಿಯರ್, ನೋವ ಸ್ಕೋಷದ ಟಪ್ಪರ್, ನ್ಯೂ ಬ್ರನ್‍ಸ್óವಿಕ್‍ನ ಟಿಲ್ಲಿ ಮೊದಲಾದವರು ಐಕ್ಯ ಕೆನಡ ಒಕ್ಕೂತ ನಿರ್ಮಾಣಮಾಡಲು ಸಿದ್ಧರಾದರು. ಷಾರ್ಲಟ್‍ಟೌನ್ ಮತ್ತು ಕ್ವಿಬೆಕ್ ನಗರಗಳಲ್ಲಿ ಅನೇಕ ಸಭೆಗಳನ್ನು ನಡೆಸಿ ಅಂತಿಮ ತೀರ್ಮಾನಕ್ಕಾಗಿ ಲಂಡನಿಗೆ ಹೋದರು.
ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ 1867ರಲ್ಲಿ ಬ್ರಿಟಿಷ್ ಉತ್ತರ ಅಮೆರಿಕದ ಕಾಯಿದೆಗೆ ಒಪ್ಪಗೆ ದೊರಕಿತು. ನೋವ ಸ್ಕೋಷ ನ್ಯೂ ಬ್ರನ್‍ಸ್óವಿಕ್ ವಸಾಹತುಗಳು ಏಕೀಕರಣವನ್ನು ವಿರೋಧಿಸಿದರೂ ಆರ್ಥಿಕ ಸಹಾಯದ ಭರವಸೆಯ ಮೇಲೆ ಶಾಂತವಾದುವು. 1870ರಲ್ಲಿ ಮ್ಯಾನಿಟೋಬ, 1871ರಲ್ಲಿ ಬ್ರಿಟಿಷ್ ಕೊಲಂಬಿಯ, 1873ರಲ್ಲಿ ಪ್ರಿನ್ಸ್ ಎಡ್ವರ್ಡ್ ವಸಾಹತುಗಳು ಒಕ್ಕೂಟವನ್ನು ಸೇರಿಕೊಂಡುವು. ಕೆನಡ ದೇಶ ಅಟ್ಲಾಂಟಿಕ್‍ನಿಂದ ಪೆಸಿಫಿಕ್‍ವರೆಗೆ ವಿಸ್ತರಿಸಿತು. ಹೀಗೆ ಕೆನಡ ರಾಜ್ಯಕ್ಕೆ 1867ರ ಜುಲೈ ಒಂದರಿಂದ ಅಧಿರಾಜ್ಯದ ಸ್ಥಾನ ಲಭ್ಯವಾಯಿತು. (ನೋಡಿ-ಕೆನಡದ ಸಂವಿಧಾನ ಮತ್ತು ಆಡಳಿತ ವ್ಯವಸ್ಥೆ) ವಿದೇಶಾಂಗ ನೀತಿ: ಕೆನಡದ ವಿದೇಶಾಂಗ ನೀತಿಯ ವಿಕಾಸವನ್ನು 1867ರಿಂದ 1918ರ ವರೆಗೆ, 1919 ರಿಂದ 1939ರ ವರೆಗೆ ಹಾಗೂ 1939 ರಿಂದ ಇಂದಿನ ವರೆಗೆ ಎಂದು ವಿಭಾಗಿಸಬಹುದು.

ರಾಜತಾಂತ್ರಿಕ ವಿಷಯದಲ್ಲಿ ಸ್ವಾವಲಂಬಿಯಾಗಲು ವಲಸೆಗಾರರ ಸಮಸ್ಯೆ ಕೆನಡಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತ್ತು. ಬ್ರಿಟಿಷ್ ಕೊಲಂಬಿಯ ಪ್ರಾಂತ್ಯದಲ್ಲಿ ಚೀನಿಯರ ಮತ್ತು ಜಪಾನೀಯರ ವಲಸೆ ಹೆಚ್ಚಾಗಿ ಅನೇಕ ಕಡೆ ದೊಂಬಿಗೆ ಕಾರಣವಾಯಿತು. ಕೆನಡದ ಕಾರ್ಮಿಕ ಸಚಿವ ಟೋಕಿಯೋಗೆ ಹೋಗಿ ಅಲ್ಲಿದ್ದ ಇಂಗ್ಲೆಂಡಿನ ರಾಯಭಾರಿಯ ಸಹಾಯದಿಂದ ಜಪಾನಿನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಜಪಾನಿನ ವಲಸೆ ನಿಂತಿತು. ಚೀನದ ಆಂತರಿಕ ಸಮಸ್ಯೆಗಳಿಂದಾಗಿ ಆ ದೇಶದೊಡನೆ ಒಡಂಬಡಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. 1914ರಲ್ಲಿ ಇಂಗ್ಲೆಂಡ್ ಜರ್ಮನಿಯ ಮೇಲೆ ಯುದ್ಧ ಘೋಷಿಸಿದಾಗ ಕೆನಡ ಇಂಗ್ಲೆಂಡ್ ದೇಶವನ್ನನುಸರಿಸಿ ದೊಡ್ಡ ಸೈನ್ಯವನ್ನು ಕಳಿಸಿತು.

ಬ್ರಿಟನಿನೊಂದಿಗೆ ಅಧಿರಾಜ್ಯಗಳು ಪಾಲುದಾರ ರಾಷ್ಟ್ರಗಳೆಂದೂ ಅವು ಎಲ್ಲ ರೀತಿಯಲ್ಲೂ ಪರಸ್ಪರ ಸಮಾನವೆಂದೂ ದೊರೆತನಕ್ಕೆ ಇವೆಲ್ಲ ವಿಧೇಯವೆಂದೂ 1926ರಲ್ಲಿ ಸಮಾವೇಶಗೊಂಡಿದ್ದ ಸಾಮ್ರಾಜ್ಯ ಸಮ್ಮೇಳನದಲ್ಲಿ ಸಾರಲಾಯಿತು. ಈ ಘೋಷಣೆಯನ್ನು 1931ರಲ್ಲಿ ವೆಸ್ಟ್‍ಮಿನ್‍ಸ್ಟರ್ ಸ್ಟಾಚ್ಯೂಟಿನ ಮೂಲಕ ಕಾನೂನುಬದ್ಧವಾಗಿ ಮಾಡಲಾಯಿತು.

ಎರಡನೆಯ ಮಹಾಯುದ್ಧ ಮುಕ್ತಾಯವಾಗುವುದರೊಳಗೆ ಕೆನಡ ಮಿತ್ರರಾಷ್ಟ್ರಗಳ ಪೈಕಿ ನೌಕಾಪಡೆಯಲ್ಲಿ ಮೂರನೆಯ ಹಾಗೂ ವೈಮಾನಿಕ ಪಡೆಯಲ್ಲಿ ನಾಲ್ಕನೆಯ ರಾಷ್ಟ್ರವಾಗಿ ಪರಿಣಮಿಸಿತು. ಈ ಯುದ್ಧದಲ್ಲಿ ಮಿತ್ರರಾಷ್ಟ್ರಗಳು ಕೆನಡದಿಂದ ಕೋಟ್ಯಂತರ ಡಾಲರುಗಳ ಸಹಾಯ ಪಡೆದುವು. ಇಂಗ್ಲೆಂಡಿಗೂ ಕೆನಡ ಸಾಲ ನೀಡಿತು. ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರದಲ್ಲಿ, ಅಂತರ ರಾಷ್ಟ್ರೀಯ ಆಹಾರ ಮತ್ತು ವ್ಯವಸಾಯ ಸಂಸ್ಥೆಗೆ ಸಂಬಂಧಿಸಿದ ಅನೇಕ ಮಹತ್ತ್ವದ ಕಾರ್ಯಗಳಲ್ಲಿ ಕೆನಡದ ತಜ್ಞರು ಹೆಚ್ಚಿನ ಸೇವೆ ಸಲ್ಲಿಸಿದ್ದಾರೆ.
ಕಾಮನ್‍ವೆಲ್ತ್ ರಾಷ್ಟ್ರಸಮುದಾಯದಲ್ಲಿ ಕೆನಡದ ನೀತಿ ಎರಡನೆಯ ಮಹಾಯುದ್ಧದ ಕಾಲದಲ್ಲಾಗಲಿ ಅನಂತರವಾಗಲಿ ಯಾವ ಬದಲಾವಣೆಗೂ ಒಳಗಾಗಲಿಲ್ಲ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಘಾನ ಮತ್ತು ಮಲಯ ದೇಶಗಳು ಕಾಮನ್‍ವೆಲ್ತ್ ರಾಷ್ಟ್ರ ಸಮುದಾಯದಲ್ಲಿ ಪೂರ್ಣ ಸದಸ್ಯತ್ವ ಪಡೆದಾಗ ಕೆನಡ ಅದನ್ನು ಸ್ವಾಗತಿಸಿತು. ಭಾರತ ಗಣರಾಜ್ಯವಾದಾಗ ಅದು ಕಾಮನ್‍ವೆಲ್ತ್ ಸಮುದಾಯದಲ್ಲೇ ಉಳಿಯುವುದು ಸಾಧ್ಯವಾಗುವಂತೆ ಕಾಮನ್‍ವೆಲ್ತ್ ವ್ಯವಸ್ಥೆಯನ್ನು ಮಾರ್ಪಡಿಸಲು ಕೆನಡ ಸಹಾಯ ಮಾಡಿತು.




#Article 257: ಜಪಾನ್ (8923 words)


ಜಪಾನ್ ( ನಿಹೊನ್ ಅಥವಾ ನಿಪ್ಪೊನ್, ಅಧಿಕೃತವಾಗಿ  ) ಏಶ್ಯಾ ಖಂಡದ ಒಂದು ದ್ವೀಪ ದೇಶ. ಇದು ಪೆಸಿಫಿಕ್ ಮಹಾಸಾಗರದ ಸುಮಾರು ೩೦೦೦ ನಡುಗಡ್ಡೆಗಳ ಸಮೂಹ.  ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ ರಾಜಧಾನಿ ತೋಕ್ಯೊ(ಟೋಕ್ಯೊ) ಮಹಾನಗರ, ಹಾಗೂ ಇದರ ಇತರ ಪ್ರಮುಖ ನಗರಗಳು ಯೊಕೊಹಾಮಾ, ಓಸಾಕಾ, ಕ್ಯೋತೊ ಮತ್ತು ನಾಗೋಯಾ ಆಗಿವೆ. ಇದು ವಿಶ್ವದ ೨ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ. ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ಈ ದೇಶ ವಿಶ್ವದ ಪ್ರಮುಖ ದೇಶಗಳಲ್ಲೊಂದು.

ಜಪಾನ್

ಏಷ್ಯ ಖಂಡದ ಪೂರ್ವದಲ್ಲಿ ಉತ್ತರ ಪೆಸಿಫಿಕ್ ಸಾಗರದಲ್ಲಿರುವ ಒಂದು ದ್ವೀಪಸಮುದಾಯ. ಖಂಡದ ಮುಖ್ಯ ಭೂಮಿಯಿಂದ ಸುಮಾರು 160 ಕಿ.ಮೀ. ದೂರದಲ್ಲಿ ಬಿಲ್ಲಿನಂತೆ ತೋರುವ ಈ ದ್ವೀಪಸಮುದಾಯದಲ್ಲಿ ಹಲವಾರು ಚಿಕ್ಕ ದೊಡ್ಡ ದ್ವೀಪಗಳಿವೆ. ಇವು ಸಮುದ್ರದ ನೀರಿನ ಮೇಲೆ ತಲೆಯೆತ್ತಿ ನಿಂತಿರುವ ಬಂಡೆಕಲ್ಲುಗಳಂತೆ ಕಾಣುತ್ತವೆ. ನಿಪ್ಪನ್ ಎಂಬುದು ಇದರ ಜಪಾನೀ ನಾಮ.

ಜಪಾನನ್ನು ಏಷ್ಯದ ಗ್ರೇಟ್ ಬ್ರಿಟನ್ ಎಂದು ಕರೆಯುತ್ತಾರೆ. ಜಪಾನಿಗೂ ಬ್ರಿಟನ್ನಿಗೂ ಹಲವು ಸಾಮ್ಯಗಳಿರುವುದು ಇದಕ್ಕೆ ಕಾರಣ. ಎರಡೂ ದೇಶಗಳು ಮುಖ್ಯ ಭೂಖಂಡಗಳಿಂದ ಪ್ರತ್ಯೇಕಿಸಲ್ಪಟ್ಟ ದ್ವೀಪಗಳು. ಎರಡೂ ಸಮಶೀತೋಷ್ಣವಲಯದಲ್ಲಿವೆ. ಎರಡು ದೇಶಗಳಲ್ಲೂ ಸಂವಿಧಾನಬದ್ಧ ರಾಜತ್ವವಿದೆ. ಇವುಗಳ ತೀರಗಳು ಅಂಕುಡೊಂಕಾಗಿರುವುದರಿಂದ ಅನೇಕ ಸ್ವಾಭಾವಿಕ ಬಂದರುಗಳಿವೆ. ಎರಡು ದೇಶಗಳ ಜನರೂ ನಾವಿಕ ವೃತ್ತಿಯಲ್ಲಿ ನೈಪುಣ್ಯ ಪಡೆದಿದ್ದಾರೆ. ಈ ದೇಶಗಳ ಸುತ್ತ ಸಾಗರ ಪ್ರವಾಹಗಳು ಹರಿಯುವುದರಿಂದ ವಾಯುಗುಣ ಹಿತಕರ; ಜನರು ಚತುರರು, ಸಾಹಸಿಗಳು ಆಗಿದ್ದಾರೆ. ಜಪಾನಿನ ಸಮುದ್ರ ತೀರದಲ್ಲಿ 45 ದೊಡ್ಡ ಬಂದರುಗಳು ಹಡಗು ಸಂಚಾರಕ್ಕೆ ಅನುಕೂಲವಾಗಿವೆ. ಜಪಾನಿನಲ್ಲೂ ಬ್ರಿಟನ್ನಿನಲ್ಲಿರುವಂತೆಯೇ ನಾನಾ ಬಗೆಯ ಕೈಗಾರಿಕೆಗಳು ಬೆಳೆದಿವೆ. ಜಪಾನ್ ಸಮುದ್ರ ಮತ್ತು ಕೊರಿಯ ಜಲಸಂಧಿಯಿಂದಾಗಿ ಜಪಾನು ಏಷ್ಯ ಖಂಡದಿಂದ ಬೇರ್ಪಟ್ಟಿದೆ. ಹಾಗೆಯೇ ಉತ್ತರದಲ್ಲಿ ಸೋಯಾ ಜಲಸಂಧಿ ಸ್ಯಾಕಲೀನ್ ದ್ವೀಪವನ್ನು ಜಪಾನಿನಿಂದ ಬೇರ್ಪಡಿಸಿದೆ. ಜಪಾನ್ ದ್ವೀಪಸಮೂಹದಲ್ಲಿ ನಾಲ್ಕು ದ್ವೀಪಗಳಿವೆ. ಹಾನ್‍ಷ್ಯೂ ದ್ವೀಪದ ಉತ್ತರಕ್ಕೆ ಇರುವ ದ್ವೀಪ ಹಾಕೈಡೋ. ಹಾನ್‍ಷ್ಯೂ ದ್ವೀಪದ ವಿಸ್ತೀರ್ಣ 87,000 ಚ.ಮೈ. ಹಾಕೈಡೋ 36,000 ಚ.ಮೈ. ವಿಸ್ತಾರವಾಗಿವೆ. ಹಾಕೈಡೋ ಮತ್ತು ಹಾನ್‍ಷ್ಯೂ ದ್ವೀಪಗಳನ್ನು ತ್ಸುಗಾರೂ ಜಲಸಂಧಿ ಬೇರ್ಪಡಿಸುತ್ತದೆ. ಜಪಾನ್ ದ್ವೀಪಗಳು ಉ.ಅ. 30-46 ಮತ್ತು ಪೂ.ರೇ. 12-147 ನಡುವೆ ಇವೆ. ವಿಸ್ತೀರ್ಣ (ಜಪಾನಿಗೆ ಮರಳಿ ಬಂದ ರೀಯೂಕ್ಕ್ಯೂ ದ್ವೀಪಗಳೂ ಸೇರಿ) 3,77,829 ಚ.ಕಿಮೀ. ಉತ್ತರ ದಕ್ಷಿಣವಾಗಿ ಇರುವ ಸಮುದ್ರ ತೀರ 9426 ಕಿ.ಮೀ ಜನಸಂಖ್ಯೆ 126,472,000(2000) ಇದರಲ್ಲಿ ಸೇ. 78 ನಗರವಾಸಿಗಳು 22 ಗ್ರಾಮಸ್ಥರು ಟೋಕಿಯೋ ಜನಸಂಖ್ಯೆ 81,63,573(1990) ರಾಜಧಾನಿ ಟೋಕಿಯೋ.

ಫೆಸಿಫಿಕ್ ಸಾಗರದ ಪಶ್ಚಿಮಭಾಗದಲ್ಲಿ ದಕ್ಷಿಣೋತ್ತರವಾಗಿ ಸೈಬೀರಿಯದ ಕಮ್‍ಚಟಕಾ ಪರ್ಯಾಯದ್ವೀಪದ ದಕ್ಷಿಣ ತುದಿಯಿಂದ ಆಗ್ನೇಯ ಏಷ್ಯದವರೆಗೆ ಹರಡಿರುವ ಅನೇಕ ದ್ವೀಪವೃತ್ತಗಳಲ್ಲಿ ಜಪಾನ್ ದ್ವೀಪಸ್ತೋಮ ಬಹಳ ಮುಖ್ಯವಾದ್ದು. ಜಪಾನಿನ ಭೂನಕಾಶೆಯಲ್ಲಿ ವಿವಿಧ ಭೂಕಾಲಗಳಿಗೆ ಸೇರಿದ ಐದು ಪ್ರಮುಖ ಶಿಲಾಸಮುದಾಯಗಳನ್ನು ಗುರುತಿಸಬಹುದು:

(ಸೀನೋಜೋóಯಿಕ್)		ಅಗ್ನಿಶಿಲೆಗಳು		ಘನೀಕೃತ ಶಿಲಾರಸ-ಟುಫ್-ಬ್ರೆಕ್ಷಿಯಾ ಜಪಾನಿನ ನಾಲ್ಕನೆಯ

ಒಂದು ಭಾಗವನ್ನು ಆಕ್ರಮಿಸಿದೆ.

(ಸೀನೋಜೋóಯಿಕ್)		ಜಲಜಶಿಲೆಗಳು		ಮರಳುಕಲ್ಲು-ಜೇಡುಶಿಲೆಗಳು-(ಸಾಗರ ಹಾಗೂ ಸರೋವರ

ಗಳಲ್ಲಿ ಉಗಮವಾದವು. ಹಾನ್‍ಷ್ಯೂ ಹಾಗೂ ಹಾಕೈಡೋ 

ಸುತ್ತಮುತ್ತಲಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ.

ಯುಗ				(ಗ್ರಾನೈಟ್ ಶಿಲೆಗಳು)	ಗ್ರಾನೈಟ್ ಹಾಗೂ ಅದಕ್ಕೆ ಸಂಬಂಧಪಟ್ಟ ಶಿಲೆಗಳು, ಮಧ್ಯ

ಹಾಗೂ ಪಶ್ಚಿಮ ಹಾನ್‍ಷ್ಯೂ ಮತ್ತು ಉತ್ತರ ಕೀಯೂಷೂ 

ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೊರಹೊಮ್ಮಿದೆ.

(ಮೀಸೋಜೋóಯಿಕ್)		ರೂಪಾಂತರ  		 ಸರೋವರ ಜನಿತ ಮರಳುಗಲ್ಲು, ಸ್ಲೇಟು, ಚರ್ಟ್ 

ಹೊಂದಿಲ್ಲದ		ಬೆಣಚುಕಲ್ಲು

ಶಿಲೆಗಳು

ಜೀವಕಲ್ಪ			 ಹೊಂದಿಲ್ಲದ		ಹಾಗೂ ಸ್ಲೇಟು. ಈ ಶಿಲಾಸ್ತೋಮಗಳು ಜಪಾನಿನ ಬಹು

(ಪೇಲಿಯೋಜೆóೂೀಯಿಕ್)	ಶಿಲೆಗಳು				ಭಾಗವನ್ನು ಆವರಿಸಿದ್ದು ಬೃಹತ್ ಮಡಿಕೆಗಳಾಗಿ ಹಲವಾರು

ಸ್ತರಭಂಗಗಳಾಗಿವೆ.

(ಪ್ರೀಕೇಂಬ್ರಿಯನ್)		 ಶಿಲೆಗಳು		ಕೆಲವು ಭಾಗದಲ್ಲಿ ಮಾತ್ರ ಕಂಡುಬರುತ್ತವೆ.

ಭೂ ಚರಿತ್ರೆಯ ಪ್ರಕಾರ ಜಪಾನ್ ದ್ವೀಪಗಳು ಸಮುದ್ರದ ಮೇಲೆ ಹೊರ ಹೊಮ್ಮಿದವು. ಪ್ರಾಚೀನ ಜೀವಕಲ್ಪಯುಗದಲ್ಲಿ ಭೂಭಾಗದಿಂದ ಸಾಗರವನ್ನು ಸೇರಿದ ಅಗಾಧ ಪ್ರಮಾಣದ ಮೆಕ್ಕಲು ನಿಕ್ಷೇಪ ಕಾಲಾನುಕ್ರಮದಲ್ಲಿ ಅನೇಕ ರೀತಿಯ ಭೂಕ್ರಿಯೆಗಳಿಗೆ ಒಳಗಾಗಿ ಮೇಲಕ್ಕೆತ್ತಲ್ಪಟ್ಟುವು. ಈ ದ್ವೀಪಗಳಾಗಿ ಮಾರ್ಪಟ್ಟವು. ಮೆಕ್ಕಲು ನಿಕ್ಷೇಪದಲ್ಲಿ ದೊರಕುವ ಫಾಸಿಲುಗಳ ಆಧಾರದ ಮೇಲೆ ಸೈಲೂರಿಯನ್‍ನಿಂದ ಪರ್ಮಿಯನ್ ಕಾಲದ ವರೆಗಿನ (ಸು.440 ದ.ಲ. ವರ್ಷ ಪ್ರಾಚೀನದಿಂದ 280 ದ.ಲ. ವರ್ಷ ಪ್ರಾಚೀನದ ವರೆಗೆ) ವಿವಿಧ ಸ್ತರಗಳನ್ನು ಗುರುತಿಸಬಹುದು. ಈ ಸ್ತರಗಳೊಡನೆ ದೊರಕುವ ಅಗ್ನಿಶಿಲೆಗಳು ಆ ಕಾಲದ ಅಗ್ನಿಪರ್ವತಗಳ ಚಟುವಟಿಕೆಗಳನ್ನು ವ್ಯಕ್ತಪಡಿಸುತ್ತವೆ. ಇಂದಿನ ಜಪಾನಿನ ಬಹುಭಾಗ ಮಧ್ಯಮ ಹಾಗೂ ಅಂತ್ಯ ಟ್ರಯಾಸಿಕ್ ಕಾಲದ (ಸು.200 ದ.ಲ. ವ. ಪ್ರಾಚೀನ) ಅಕಿಯೋಸ್ಟಿಕ್ ಪರ್ವತೋದ್ಭವ ಕ್ರಿಯೆಯಿಂದ ಮೇಲಕ್ಕೆತ್ತಲ್ಪಟ್ಟ ಆ ಕಾಲದ ಶಿಲೆಗಳಿಂದ ಅವೃತವಾಗಿವೆ. ಹಾಗೆಯೇ ಜೂರಾಸಿಕ್ (190 ದ.ಲ.ವ. ಪ್ರಾಚೀನ) ಮತ್ತು ಆದಿ ಕ್ರಿಟೇಷಸ್ (135 ದ.ಲ. ವ. ಪ್ರಾಚೀನ) ಕಾಲದಲ್ಲಿ ಜಪಾನಿನ ಕೆಲಭಾಗಗಳು ಅಸಾಧಾರಣವಾದ ಭೂಕ್ರಿಯೆಗಳಿಂದ ಭಾಗಶಃ ಮುಳುಗಿಯೂ ಇವೆ. ಕ್ರಿಟೇಷಸ್ ಯುಗದಲ್ಲಿ (135 ದ.ಲ.ವ. ಪ್ರಾಚೀನದಿಂದ 65 ದ.ಲ. ವ. ಪ್ರಾಚೀನದ ವರೆಗೆ) ಅಗಾಧ ಪ್ರಮಾಣದ ಅಂತಸ್ಸರಣಗಳಾಗಿ ಅಗ್ನಿಶಿಲೆಗಳಿಗೆ ಎಡೆಕೊಟ್ಟಿವೆ. ನವಜೀವಕಲ್ಪದಲ್ಲಿ (ಟರ್ಷಿಯರಿ) ಅಗಾಧವಾದ ಪರ್ವತೋದ್ಭವ ಕ್ರಿಯೆಗಳಿಂದ ಬೃಹತ್ ಮಡಿಕೆಗಳುಂಟಾಗಿ ಬಹು ವ್ಯಾಪಕವಾದ ಬರ್ಹಿಸರಣ ಅಗ್ನಿಶಿಲೆಗಳು ರೂಪುಗೊಂಡವು. ಪ್ಲೀಸ್ಟೊಸೀನ್ ಕಾಲದಲ್ಲಿ ನಡೆದ ಭೂಚಲನವಲನಗಳು ಸಮುದ್ರದಂಚಿನಲ್ಲಿ ಅನೇಕ ಮಾರ್ಪಾಡುಗಳಿಗೆ ಕಾರಣವಾಗಿವೆ. ಹಾಗೆಯೇ ಭೂಕಾಲದ ಇತ್ತೀಚಿನ ದಿವಸಗಳಲ್ಲಿಯೂ ಕೂಡ ಉಂಟಾಗುತ್ತಿರುವ ಭೂಕಂಪನಗಳು, ಅಗ್ನಿಪರ್ವತಗಳ ಚಟುವಟಿಕೆಗಳು, ಸಣ್ಣಪುಟ್ಟ ಭೂಚಲನೆಗಳು ನಿರಂತರವಾಗಿ ಜಪಾನಿನ ಭೂವಿನ್ಯಾಸದ ವ್ಯತ್ಯಾಸಗಳಿಗೆ ಪೂರಕವಾಗಿವೆ.

ಕೈಗಾರಿಕೋದ್ಯಮದಲ್ಲಿ ಅಪಾರ ಪ್ರಗತಿಯನ್ನು ಜಪಾನ್ ಸಾಧಿಸಿದ್ದರೆ ಖನಿಜಕ್ಷೇತ್ರದಲ್ಲಿ, ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ಖನಿಜಗಳನ್ನು ಪಡೆದಿದೆ ಎಂದು ಹೇಳುವ ಹಾಗಿಲ್ಲ. ಅನೇಕ ಖನಿಜಗಳನ್ನು ಪರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕಬ್ಬಿಣದ ನಿಕ್ಷೇಪಗಳು ಅಲ್ಪ ಪ್ರಮಾಣದಲ್ಲಿವೆ. ಇವು ಬಹುತೇಕ ಹಾಕೈಡೋ ಹಾಗೂ ಉತ್ತರ ಹಾನ್‍ಷ್ಯೂ ಪ್ರದೇಶಕ್ಕೆ ಸೀಮಿತವಾಗಿವೆ. ಈ ಪ್ರದೇಶದ ಅದುರಿನಲ್ಲಿ 35ರಷ್ಟು ಕಬ್ಬಿಣಾಂಶ ಉಂಟು. ಹಾಕೈಡೋ ಮತ್ತು ಹಾನ್‍ಷ್ಯೂವಿನ ಸುತ್ತಮುತ್ತ ಸುಮಾರು 50 ಗಣಿಗಳು ಕಾರ್ಯನಿರತವಾಗಿವೆ. ಪೆಟ್ರೋಲಿಯಮ್ ದೊರಕುವ ಪ್ರದೇಶ ಪಶ್ಚಿಮ ಹಾಕೈಡೋನಿಂದ ದಕ್ಷಿಣ ಹಾನ್‍ಷ್ಯೂವಿನ ವರೆಗೂ ಹಬ್ಬಿದೆ. ಆದರೆ ಪೆಟ್ರೋಲಿಯಮಿನ ಉತ್ಪಾದನೆ ಅತ್ಯಲ್ಪ. ಹೀಗಾಗಿ ಜಪಾನ್ ಅಧಿಕ ಪ್ರಮಾಣದಲ್ಲಿ ಪೆಟ್ರೋಲನ್ನು ಆಮದು ಮಾಡಿಕೊಳ್ಳುತ್ತದೆ. ನೈಸರ್ಗಿಕ ಅನಿಲವನ್ನು ಅಧಿಕ ಪ್ರಮಾಣದಲ್ಲಿ ನೀಗಾಟ ಹಾಗೂ ದಕ್ಷಿಣ ಕಾಂಟೋ ಪ್ರದೇಶಗಳಲ್ಲಿ ಹೊರತೆಗೆಯಲಾಗುತ್ತದೆ. ಜಪಾನಿನ ಖನಿಜ ಸಂಪತ್ತಿನಲ್ಲಿ ಕಲ್ಲಿದ್ದಲು ಅತಿಮುಖ್ಯವಾದದ್ದು. ಒಟ್ಟು ಖನಿಜೋತ್ಪಾದನೆಯಲ್ಲಿ ಇದು 47ರಷ್ಟಾಗುತ್ತದೆ. ಈ ನಿಕ್ಷೇಪ ಸುಮಾರು 20.79 ಬಿಲಿಯನ್ ಟನ್‍ಗಳಷ್ಟು ಇದೆಯೆಂದು ಅಂದಾಜು ಮಾಡಲಾಗಿದೆ. ಉತ್ತರ ಕೀಯೂಷೂ, ಹಾಕೈಡೋ, ಪೂರ್ವ ಹಾನ್‍ಷ್ಯೂ ಮತ್ತು ಪಶ್ಚಿಮ ಹಾನ್‍ಷ್ಯೂ ಕಲ್ಲಿದ್ದಲು ದೊರೆಯುವ ನಾಲ್ಕು ಪ್ರಮುಖ ಪ್ರದೇಶಗಳು. ಲೋಹ ಸಂಬಂಧ ಖನಿಜಗಳಲ್ಲಿ ಕಬ್ಬಿಣವನ್ನು ಬಿಟ್ಟರೆ ತಾಮ್ರ ಅತಿಮುಖ್ಯವಾದ್ದು. ಸುಮಾರು 200 ತಾಮ್ರ ಗಣಿಗಳಿವೆ. ಅವುಗಳ ಪೈಕಿ 6 ದೊಡ್ಡ ಪ್ರಮಾಣದವು. ಬಹುತೇಕ ಗಣಿಗಳು ಈಶಾನ್ಯ ಹಾನ್‍ಷ್ಯೂ ಹಾಗೂ ಷಿಕೋಕ್ಯೂ ಪ್ರದೇಶದ ಸುತ್ತ ಮುತ್ತ ಪ್ರಸರಿಸಿವೆ. ಸೀಸ ಹಾಗೂ ಸತು ಹೆಚ್ಚಾಗಿ ತಾಮ್ರದ ಅದುರಿನಲ್ಲಿ ದೊರೆಯುತ್ತವೆ. ಅಲೋಹ ಖನಿಜಸಂಪತ್ತಿನಲ್ಲಿ ಗಂಧಕ ಅತಿಮುಖ್ಯವಾದ್ದು. ಪೈರೈಟ್ ಇದರ ಅತಿಮುಖ್ಯ ಖನಿಜ. ಜಪಾನ್ ಪ್ರಪಂಚದಲ್ಲಿ ಅತಿ ಹೆಚ್ಚು ಪೈರೈಟ್ ಉತ್ಪಾದಿಸುವ ರಾಷ್ಟ್ರ. ಇತರ ಲೋಹ ಹಾಗೂ ಅಲೋಹಗಳಾದ ಚಿನ್ನ, ಬೆಳ್ಳಿ, ನೈಟ್ರೇಟ್ ಮುಂತಾದವು ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತವೆ.

ದೇಶೀಯ ಬಳಕೆಯನ್ನು ಆಧಾರವಾಗಿಟ್ಟುಕೊಂಡು, ಜಪಾನಿನ ಖನಿಜ ಸಂಪತ್ತನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು : 1 ದೇಶೀಯ ಬಳಕೆಗೆ ಸಾಕಾಗುವಷ್ಟು ಅಥವಾ ಹೆಚ್ಚು ಕಡಿಮೆ ಸಾಕಾಗುವಷ್ಟು ದೊರೆಯುತ್ತಿರುವ ಖನಿಜಗಳು-ಕ್ರೋಮೈಟ್, ಕಲ್ಲಿದ್ದಲು, ಜಿಪ್‍ಸಮ್, ಸುಣ್ಣಕಲ್ಲು, ಮೆಗ್ನೀಸಿಯಮ್, ಪೈರೈಟ್, ಗಂಧಕ, ಸೀಸ, ಸತ್ತು, ತಾಮ್ರ, ಚಿನ್ನ ಮತ್ತು ಬೆಳ್ಳಿ, 2 ದೇಶೀಯ ಬಳಕೆಗೆ ಸಾಲದಷ್ಟು ಪ್ರಮಾಣದಲ್ಲಿ ದೊರೆಯುವ, ಆದ್ದದರಿಂದ ಭಾಗಶಃ ಆಮದು ಮಾಡಿಕೊಳ್ಳಬೇಕಾದ ಖನಿಜಗಳು-ಕಬ್ಬಿಣದ ಅದುರು, ಆಂಟಿಮನಿ, ಪಾದರಸ, ಮ್ಯಾಂಗನೀಸ್, ತವರ, 'ಟೈಟೇನೀಯಮ್, ಟಂಗ್‍ಸ್ಟನ್, ಕ್ರೋಮಿಯಮ್ ಹಾಗೂ ವೆನೆಡಿಯಮ್. 3 ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲೇಬೇಕಾದ ಖನಿಜಗಳು-ನಿಕ್ಕಲ್, ಕೋಬಾಲ್ಟ್, ಅಲ್ಯೂಮಿನಿಯಮ್, ನೈಟ್ರೇಟ್ ಹಾಗೂ ವಿರಳ ಖನಿಜಗಳು. 

ಜಪಾನಿನ ತೀರ 16,470 ಮೈಲಿಗಳಷ್ಟು ಉದ್ದವಿದೆ. ಸರಾಸರಿಯಲ್ಲಿ ಪ್ರತಿ ಚದರ ಮೈಲಿ ಪ್ರದೇಶಕ್ಕೂ 7 ಮೈ. ತೀರವುಂಟು. ಜಪಾನಿನ ಉದ್ದನೆಯ ತೀರ ಅದರ ಜನಜೀವನ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ತುಂಬ ಪರಿಣಾಮ ಬೀರಿದೆ. ಜಪಾನಿನ ಯಾವ ಪ್ರದೇಶವೂ ಸಮುದ್ರಕ್ಕೆ 75 ಮೈಲಿಗಳಿಗಿಂತ ಹೆಚ್ಚು ದೂರದಲ್ಲಿಲ್ಲ. ತೀರಪ್ರದೇಶದಲ್ಲಿ ಮರಳು ದಂಡೆಗಳು ಹಾಗೂ ತಗ್ಗಾದ ದಂಡೆಗಳಿಂದ ಬೇರ್ಪಟ್ಟ ಉಪ್ಪುನೀರಿನ ಹರವುಗಳುಂಟು. ಇಲ್ಲಿಯ ತೀರಪ್ರದೆಶ ಚಳಿಗಾಲದ ಚಂಡಮಾರುತಗಳಿಗೆ ಮತ್ತು ಅಲೆಗಳ ಪರಿಣಾಮಕ್ಕೆ ಒಳಗಾಗುತ್ತದೆ. ಪೆಸಿಫಿಕ್ ತೀರ ಪ್ರದೇಶದಲ್ಲಿ ಅನೇಕ ಒಳಚಾಚುಗಳುಂಟು. ಟೋಕಿಯೋ ಕೊಲ್ಲಿಯ ಬಳಿಯ ಪ್ರದೇಶ ಸಮತಟ್ಟಾದ ಮಣ್ಣಿನಿಂದ ಕೂಡಿದ ಮುಖಜ ಭೂಮಿ, ಸಗಾಮೀ ಕೊಲ್ಲಿಯ ಪೂರ್ವಭಾಗದಲ್ಲಿರುವ ವಿಸ್ತಾರ ಪ್ರದೇಶಗಳಲ್ಲಿ ಮರಳು ದಂಡೆಗಳು ಹಬ್ಬಿವೆ. ಅದರ ಪಶ್ವಿಮ ಭಾಗ ಕಡಿದು, ಬಂಡೆಗಳಿಂದ ಕೂಡಿದ್ದು. 

ಈಜೂ ಪರ್ಯಾಯದ್ವೀಪದಲ್ಲಿ ಆಳವಾಗಿ ಸವೆದಿರುವ ಅಗ್ನಿಪರ್ವತಗಳು ಸಮುದ್ರದವರೆಗೂ ಹಬ್ಬಿವೆ. ಬಯಲುಗಳ ಕರಾವಳಿಗಳು ಮರಳಿನಿಂದ ಕೂಡಿದವು. ಬೆಟ್ಟಗಳ ಇಳಿಜಾರುಗಳು ನೇರವಾಗಿ ಸಮುದ್ರಕ್ಕೆ ಇಳಿದಿರುವ ಕಡೆಗಳಲ್ಲಿ ತೀರಗಳು ಶಿಲಾವೃತ. ಕುಮಾನೋ ಸಮುದ್ರಕ್ಕೆ ಎದುರಾಗಿರುವ ಕೀ ಪರ್ಯಾಯ ದ್ವೀಪದಲ್ಲಿ ಮತ್ತು ಕೀಟಾಕಾಮೀ ಪ್ರದೇಶದ ಈಶಾನ್ಯ ಭಾಗದುದ್ದಕ್ಕೂ ಅಧಿಕ ಒಳಚಾಚುಗಳನ್ನು ಕಾಣಬಹುದು. ಕೆಲವು ಕಡೆ ಸಮುದ್ರದಲ್ಲಿರುವ ಇತ್ತರವಾದ ಬಂಡೆಗಳನ್ನು ಆಧರಿಸಿ ನಿಂತಿರುವ ತೀರಸಮತಟ್ಟುಗಳುಂಟು. ಬೋಸೋ ಮತ್ತು ಕೀ ಪರ್ಯಾಯದ್ವೀಪಗಳಲ್ಲಿ ಈ ಲಕ್ಷಣಗಳನ್ನು ಕಾಣಬಹುದು.

ಒಟ್ಟಿನಲ್ಲಿ ಜಪಾನಿನ ತೀರಪ್ರದೇಶ ಎರಡು ಬಗೆ. ಒಂದು ಮರಳಿನಿಂದ ಕೂಡಿದ್ದರೆ, ಇನ್ನೊಂದು ಶಿಲಾವೃತ. ಕರಾವಳಿ ಅಂಕುಡೊಂಕು. ಅದ್ದರಿಂದ ಇಲ್ಲಿ ಕೆಲವು ಸ್ವಾಭಾವಿಕ ಬಂದರುಗಳುಂಟು. ಇದರ ಉದ್ದನೆಯ ಕರಾವಳಿ ಸಮುದ್ರಯಾನಕ್ಕೆ ಅನುಕೂಲಕರ. ಆಂತರಿಕ ಸಾರಿಗೆ ಹಾಗೂ ಮೀನುಗಾರಿಕೆ ಉದ್ಯಮಕ್ಕೆ ಇದು ಸಹಾಯಕ.

ಜಪಾನಿನ ದ್ವೀಪಗಳು ಪರ್ವತಗಳಿಂದಲೂ ಅನೇಕ ಜ್ವಾಲಾಮುಖಿಗಳಿಂದಲೂ ಕೂಡಿದವು. ಇಲ್ಲಿ ಪದೇಪದೇ ಸಂಭವಿಸುತ್ತಿರುವ ಭೂಕಂಪಗಳನ್ನೂ ಜೀವಂತವಾಗಿರುವ ಜ್ವಾಲಾಮುಖಿಗಳನ್ನೂ ಗಮನಿಸಿದರೆ ಇಲ್ಲಿಯ ಪರ್ವತರಚನಾಕ್ರಿಯೆ ಇನ್ನೂ ಮುಂದುವರಿದಿದೆಯೆಂಬುದು ಕಂಡುಬರುತ್ತದೆ. ಇಲ್ಲಿಯ ಪರ್ವತಸ್ತೋಮಗಳನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು: 1 ಕ್ಯುರೀಲ್ ಅಥವಾ ಚೀಷೀಮಾ ದ್ವೀಪಗಳಿಗೆ ಕಾರಣವಾದ, ಹಾಕೈಡೋ ದ್ವೀಪದಲ್ಲಿ ಈಶಾನ್ಯದ ಕಡೆಯಿಂದ ಮುಂದುವರಿದಿರುವ ಪರ್ವತಶ್ರೇಣಿ, 2 ಹಾಕೈಡೋವನ್ನು ವಾಯುವ್ಯ ಮೂಲೆಯಿಂದ ಪ್ರವೇಶಿಸುವ ಸ್ಯಾಕಲೀನ್ ಅಥವಾ ಕಾರಫ್ಯೂಟೋ ಪರ್ವತಗಳು, 3 ಹಾನ್‍ಷ್ಯೂವಿನ ಉತ್ತರಾರ್ಧ ಭಾಗವನ್ನೂ ಹಾಕೈಡೋವಿನ ದಕ್ಷಿಣದ ಪರ್ಯಾಯದ್ವೀಪವನ್ನೂ ಆವರಿಸಿರುವ ಟೋಹೋಕೂ ಅಥವಾ ಈಶಾನ್ಯ ಶ್ರೇಣಿ, 4 ಮಧ್ಯ ಹಾನ್‍ಷ್ಯೂವಿನಿಂದ ನೈಋತ್ಯದ ಕಡೆ ಹಬ್ಬಿ ಚೂಗೋಕೂ ಪರ್ಯಾಯದ್ವೀಪದ ಬೆನ್ನೆಲುಬಾಗಿರುವ ಮತ್ತು ಷಿಕೋಕ್ಯೂ ಪರ್ವತಗಳಾಗಿ ಬಹು ದೂರ ಹಬ್ಬಿರುವ ಸೇನಾನ್ ಅಥವಾ ನೈಋತ್ಯ ಭಾಗದ ಪರ್ವತಶ್ರೇಣಿ, 5 ಪೆಸಿಫಿಕ್ ದ್ವೀಪಸ್ತೋಮದ ಮೂಲಕ ಮಧ್ಯ ಹಾನ್‍ಷ್ಯೂವನ್ನು ದಾಟಿ ಉತ್ತರಕ್ಕೆ ಹಬ್ಬಿರುವ ಷಿಚಿಟೋ-ಮರಿಯಾನ ಶ್ರೇಣಿ, 6 ಫಾರ್ಮೋಸದಿಂದ ಉತ್ತರದ ಕಡೆಬಾಗಿ ಕೀಯೂಷೂವನ್ನು ಛೇದಿಸುವ ರೀಯೂಕ್ಯೂ ಶ್ರೇಣಿ. ಪರ್ವತ ಶ್ರೇಣಿಗಳು ಕೂಡುವ ಎಡೆಯಲ್ಲಿ ಉನ್ನತ ಪರ್ವತಗ್ರಂಥಿಗಳೂ ವಿಸ್ತಾರ ಬಯಲುಗಳೂ ಜ್ವಾಲಾಮುಖಿ ಸ್ತೋಮಗಳೂ ರೂಪುಗೊಂಡಿವೆ.

ಹಾನ್‍ಷ್ಯೂವಿನ ಮಧ್ಯಭಾಗದಲ್ಲಿ ಸೇನಾನ್ ಮತ್ತು ಷಿಚಿಟೋ-ಮರಿಯಾನ ಪರ್ವತಶ್ರೇಣಿಗಳು ಸಂಧಿಸುತ್ತವೆ. ಜಪಾನಿನ ಜ್ವಾಲಾಮುಖೇತರ ಮೂಲದ ಅತ್ಯುನ್ನತ ಪರ್ವತಗಳು ಇರುವುದು ಅಲ್ಲೇ. ಫ್ಯೂಜೀ ಜ್ವಾಲಾಮುಖಿಸ್ತೋಮ ಇರುವುದೂ ಅಲ್ಲೇ. ಈ ಸ್ತೋಮದ ಫ್ಯೂಜೀ, ಆಕೈಷೀ, ಮತ್ತು ಹಿಡಾ ಶಿಖರಗಳ ಎತ್ತರ ಅನುಕ್ರಮವಾಗಿ 12,395', 10,456' ಮತ್ತು 10,444'. ಈ ಎರಡು ಮಹಾಶ್ರೇಣಿಗಳ ಸಂಧಿಸ್ಥಳದಲ್ಲೇ ಜಪಾನಿನ ಅತ್ಯಂತ ದೊಡ್ಡ ಮೈದಾನವಾದ ಕ್ಯಾಂಟೋ ಬಯಲು ಇದೆ.

ಟೋಹೋಕೂ, ಕ್ಯೂರೀಲ್ ಮತ್ತು ಸ್ಯಾಕಲೀನ್ ಪರ್ವತಶ್ರೇಣಿಗಳು ಹಾಕೈಡೋನಲ್ಲಿ ಕೂಡುತ್ತವೆ. ಬೃಹತ್ ಜ್ವಾಲಾಮುಖಿಗಳು ಹೆಣೆದುಕೊಂಡಿರುವ ಆ ಪ್ರದೇಶ ಹಾಕೈಡೋನ ಜಾವಣಿ. ಜ್ವಾಲಾಮುಖಿಸ್ತೋಮದಿಂದ ಕೂಡಿದ ಇನ್ನೊಂದು ಪರ್ವತಗ್ರಂಥಿ ಇರುವುದು ಕೀಯೂಷೂನಲ್ಲೊ. ಇಲ್ಲಿ ಸೇನಾನ್ ಮತ್ತು ರೀಯೂಕ್ಯೂ ಶ್ರೇಣಿಗಳು ಸಂಧಿಸುತ್ತವೆ. ಇಲ್ಲೂ ಉನ್ನತ ಪರ್ವತ ಗ್ರಂಥಿಗಳೂ ನೆರೆಯಲ್ಲೇ ದೊಡ್ಡ ಪ್ರಸ್ಥಭೂಮಿಗಳೂ ವಿಶಾಲ ಮೈದಾನಗಳೂ ಇವೆ. ಸ್ಯಾಕಲೀನ್ ಪರ್ವತಶ್ರೇಣಿ ಎರಡು ಕವಲವಾಗಿ ಒಡೆದು ಹಾಕೈಡೋನಿಂದ ಮುಂದೆ ಸಾಗುವಾಗ, ದ್ವೀಪದ ಪೂರ್ವದಲ್ಲಿ ಕೀಟಾಮೀ ಮತ್ತು ಹಿಡಾಕ ಶ್ರೇಣಿಗಳಾಗಿಯೂ ಪಶ್ವಿಮದಲ್ಲಿ ಟೆಷೀಯೋ ಮತ್ತು ಯೂಬರೀ ಪರ್ವತಗಳಾಗಿಯೂ ಪರಿಣಮಿಸುತ್ತದೆ. ಇವುಗಳ ನಡುವೆ ವಿಶಾಲ ಮೈದಾನಗಳುಂಟು.

ದಕ್ಷಿಣದಲ್ಲಿ ಹಾಕೈಡೋನಲ್ಲಿ ವಿಸ್ತರಿಸಿರುವ ಕ್ಯುರೀಲ್ ಶ್ರೇಣಿ ಹಲವು ಜ್ವಾಲಾ ಮುಖಿಗಳಾಗಿ ಪರಿಣಮಿಸಿದೆ. ಇವುಗಳಲ್ಲಿ ಅತ್ಯುನ್ನತವಾದ್ದು ಅಸಾಹೀ-ಡಾಕೇ (7,513'). ಇದು ಮಧ್ಯ ಹಾಕೈಡೋನಲ್ಲಿದೆ. ಜಪಾನಿನ ಎರಡನೆಯ ದೊಡ್ಡ ಮೈದಾನವಾದ ಟೋಕಾಚೀ ಇರುವುದು ಹಾಕೈಡೋನ ಪಶ್ವಿಮ ಭಾಗದಲ್ಲಿ-ಕ್ಯುರೀಲ್ ಮತ್ತು ಸಾಕಲೀನ್‍ಗಳು ಸಂಧಿಸುವೆಡೆಯಲ್ಲಿ.

ಹಾಕೈಡೋನ ನೈಋತ್ಯ ಪರ್ಯಾಯದ್ವೀಪ ಭಾಗವನ್ನಾವರಿಸಿರುವ ಟೋಹೋಕೂ ಪರ್ವತ ವ್ಯವಸ್ಥೆ ಹಾನ್‍ಷ್ಯೂವಿನ ಮಧ್ಯದ ಪ್ರದೇಶಕ್ಕೆ ಮುಂದುವರಿಯುತ್ತದೆ. ಇಲ್ಲಿ ಮೂರು ಪರ್ವತಶ್ರೇಣಿಗಳೂ ಇವುಗಳ ಅಂಚುಗಳಲ್ಲಿ ಮತ್ತು ನಡುವೆ ಇರುವ ಮೈದಾನಗಳೂ ಟೋಹೋಕೂ ಶ್ರೇಣಿಗೆ ಸಮಾಂತರಗಳಲ್ಲಿವೆ. ಮಧ್ಯದ ಶ್ರೇಣಿ ಅತ್ಯುನ್ನತ. ಇದು ಈ ಪ್ರದೇಶದ ಬೆನ್ನೆಲುಬಿನಂತಿದೆ. ಇದರ ನೆತ್ತಿಯಲ್ಲಿ ಅನೇಕ ಉನ್ನತ ಜ್ವಾಲಾಮುಖಿಗಳುಂಟು. ಪಶ್ಚಿಮದಲ್ಲಿರುವ ದೇವಾ ಶ್ರೇಣಿ ಇದಕ್ಕಿಂತ ಬಲು ತಗ್ಗು. ಇವೆರಡರ ನಡುವೆ ಹರಡಿರುವ ಶ್ರೇಣಿಗಳು ತುಂಡುತುಂಡಾಗಿವೆ. ಅವುಗಳ ನಡುವಣ ನೆಲ ಫಲವತ್ತಾದ್ದು.

ಜಪಾನಿನ ಮುಖ್ಯ ಶ್ರೇಣಿಗಳಲ್ಲಿ ಷಿಚಿಟೋ ಮರಿಯಾನ ಒಂದು. ಫೆಸಿಫಿಕಿನಿಂದ ಹರಿದುಬರುವ ಈ ಶ್ರೇಣಿ ಆರಂಭದಲ್ಲೇ ಏಳು ದ್ವೀಪಗಳನ್ನುಂಟು ಮಾಡಿದೆ. ಇವು ಜ್ವಾಲಾಮುಖಿ ದ್ವೀಪಗಳು. ಇವುಗಳ ಹೆಸರು ಈಜೂ ಷಿಚಿಟೊ. ಈ ಶ್ರೇಣಿಯ ಇಲ್ಲಿಂದ ಮುಂದಿನ ಭಾಗವೇ ಈಜೂ ಪರ್ಯಾಯದ್ವೀಪ. ಇದರ ಬಿಸಿನೀರ ಊಟೆಗಳೂ ಮರಳ ದಂಡೆಯೂ ಪ್ರಸಿದ್ಧವಾದವು. ಇಲ್ಲಿಂದ ಉತ್ತರಕ್ಕೆ ಇರುವ ಪ್ರದೇಶದಲ್ಲಿ ಹಾಕೋನೀ ಜ್ವಾಲಾಮುಖಿ ಇದೆ. ಆಷಿ ಸರೋವರ ಇರುವುದು ಇದರ ವಿಶಾಲ ಬೋಗುಣಿಯಲ್ಲೆ. ಜಪಾನಿನ ಅತ್ಯಂತ ಎತ್ತರವಾದ ಮತ್ತು ಅತ್ಯಂತ ಸುಂದರವಾದ ಫ್ಯೂಜೀಯಾಮ ಅಗ್ನಿಪರ್ವತ (12,395') ಇದರ ಬಳಿಯಲ್ಲಿದೆ. ಸೇನಾನ್ ಶ್ರೇಣಿ ಪೂರ್ವಪಶ್ಚಿಮವಾಗಿ ಹಬ್ಬಿದೆ. ಇದರ ಒಂದು ಭಾಗ ಚೂಗೋಕೂ ಪರ್ವತ. ಇದು ಚೂಗೋಕೂ ಪರ್ಯಾಯದ್ವೀಪದ ಬೆನ್ನೆಲುಬಿನಂತಿದೆ. ಬೀವಾ ಸರೋವರಕ್ಕೆ ಪಶ್ವಿಮದಲ್ಲಿ ಟಂಬ್ಲ ಪ್ರಸ್ಥಭೂಮಿ ಇದೆ. ಚೂಗೋಕೂ ಪರ್ವತದ ಮುಖ್ಯ ಶಿಖರ ಹೊಟಾಕಡಾಕೆ (10,138').

ಜಪಾನಿನ ಪರ್ವತರಚನೆಯಿಂದಾಗಿ ಜನವಸತಿಗೆ ಮತ್ತು ಸಂಪರ್ಕ ಸಾಧನಗಳ ವ್ಯವಸ್ಥೆಗೆ ಅಡಚಣೆಯಾಗಿದೆ. ಆದರೂ ಈ ಪರ್ವತಗಳಲ್ಲಿ ಅಪಾರ ಅರಣ್ಯ ಸಂಪತ್ತುಂಟು. ವಿಪುಲ ಜಲದ ನೆಲೆ ಈ ಪ್ರದೇಶಗಳಲ್ಲಿ ಇರುವುದರಿಂದ ಅನೇಕ ನದಿಗಳ ಉಗಮಕ್ಕೆ ಕಾರಣವಾಗಿದೆ. ಇವು ಸುಂದರ ದೃಶ್ಯಗಳ ಬೀಡುಗಳು.

ಜಪಾನಿನಲ್ಲಿ ಮುಖ್ಯ ಬಯಲುಗಳೆಲ್ಲ ಇರುವುದು ತೀರಪ್ರದೇಶಗಳಲ್ಲಿ. ಬಹುತೇಕ ಅವು ಪರ್ವತಗಳಿಂದ ಹೊತ್ತು ತಂದ ಮೆಕ್ಕಲು ಮತ್ತಿತರ ಗೋಡು ಮಣ್ಣುಗಳಿಂದ ಆದಂಥವು. ಪೆಸಿಫಿಕ್ ತೀರದ ಮಧ್ಯ ಹಾನ್‍ಷ್ಯೂವಿನಲ್ಲಿರುವ ಕ್ವಾನ್‍ಟೋ ಬಯಲಿನ ವಿಸ್ತೀರ್ಣ ಸುಮಾರು 5,000 ಚ.ಮೈ.

ಜಪಾನಿನಲ್ಲಿ 100ಕ್ಕೂ ಹೆಚ್ಚು ನದಿಗಳುಂಟು. ಅವುಗಳ ಪೈಕಿ ಮೂರು ಮಾತ್ರ 200 ಮೈ.ಗಿಂತ ಉದ್ದ. ಅವುಗಳ ಹೆಸರು ಷಿನಾನೋ (299 ಮೈ.), ಇಷಿಕಾರೀ (227 ಮೈ.) ಮತ್ತು ಟೋನೇ (200 ಮೈ.). ನದಿಗಳು ಬೆಟ್ಟದ ಇಳಿಜಾರಿನಲ್ಲಿ ರಭಸದಿಂದ ಹರಿಯುವಾಗ ಹೊತ್ತು ತಂದ ಮಣ್ಣಿನಿಂದ ಫಲವತ್ತಾದ ಮೈದಾನಗಳಾಗಿವೆ. ಪರ್ವತಪ್ರದೇಶದಿಂದ ಇಳಿದು ಮೈದಾನದಲ್ಲಿ ಹರಿಯುವಾಗ ಮೈದಾನಗಳಾಗಿವೆ. ಪರ್ವತಪ್ರದೇಶದಿಂದ ಇಳಿದು ಮೈದಾನದಲ್ಲಿ ಹರಿಯುವಾಗ ಈ ನದಿಗಳ ಮಣ್ಣು ತಳದಲ್ಲಿ ತಂಗಿ ಇವುಗಳ ಪಾತ್ರಗಳು ನೆರೆಯ ನಾಡಿಗಿಂತ ಸಾಮಾನ್ಯವಾಗಿ ಎತ್ತರವಾಗಿರುತ್ತವೆ.

ಜಪಾನಿನ ವ್ಯವಸಾಯಕ್ಕೆ ಬೇಕಾದ ನೀರಿನಲ್ಲಿ ಮೂರನೆಯ ಎರಡು ಭಾಗ ಒದಗುವುದು ನದಿಗಳಿಂದ. ಇವುಗಳಿಂದ ವಿದ್ಯುತ್ತಿನ ಉತ್ಪಾದನೆಯೂ ಆಗುತ್ತಿದೆ.

ದಕ್ಷಿಣೋತ್ತರವಾಗಿ ಜಪಾನಿನ ಹರವು 15 ಅಕ್ಷಾಂಶೀಯ ಡಿಗ್ರಿಗಳಷ್ಟು ಇರುವುದರಿಂದ ಇದರ ಉಷ್ಣತೆ ಮತ್ತು ಅವಪಾತಗಳಲ್ಲಿ ಪ್ರಾದೇಶಿಕ ಭಿನ್ನತೆಗಳು ಅಧಿಕ. ದಕ್ಷಿಣದ ಕೀಯೂಷೂ ಉಪೋಷ್ಣವಲಯದಲ್ಲಿದೆ. ಅಲ್ಲಿ ಮಳೆ ಹೆಚ್ಚು. ಉತ್ತರದ ಹಾಕೈಡೋದು ಖಂಡಾಂತರ ವಾಯುಗುಣ. ಸುತ್ತಣ ಸಮುದ್ರ ವಿಶೇಷ ಪ್ರಭಾವ ಬೀರಿದೆ. ಚಳಿಗಾಲದಲ್ಲಿ ಏಷ್ಯದ ಒಳನಾಡಿನ ತೀವ್ರ ಚಳಿಯಿಂದಾಗಿ ಪೂರ್ವ ಸೈಬೀರಿಯದಲ್ಲಿ ಹೆಚ್ಚು ಒತ್ತಡ ಪ್ರದೇಶ ಏರ್ಪಟ್ಟು, ಅಲ್ಲಿಯ ಚಳಿಗಾಳಿ ಫೆಸಿಫಿಕಿನತ್ತ ಹರಿಯುತ್ತದೆ. ಈ ಗಾಳಿ ಜಪಾನ್ ಸಮುದ್ರವನ್ನು ದಾಟುವಾಗ ತೇವವನ್ನು ಸಂಗ್ರಹಿಸಿ, ಜಪಾನಿನ ಮೇಲೆ ಮಳೆ ಹಿಮ ಸುರಿಸುತ್ತದೆ. ಬೇಸಗೆಯಲ್ಲಿ ಒತ್ತಡದ ಏರುತಗ್ಗು ತೀರುವುಮುರುವಾಗಿ, ಪೆಸಿಫಿಕಿನಿಂದ ಸೈಬೀರಿಯದತ್ತ ಬೀಸುವ ಮಾರುತದಿಂದ ಜಪಾನಿನಲ್ಲಿ ಮಳೆಯಾಗುತ್ತದೆ. ಮಾನ್ಸೂನಿನ ಪರಿಣಾಮದಿಂದಾಗಿ ಜಪಾನಿನಲ್ಲಿ ಅದರ ಅಕ್ಷಾಂಶಗಳಲ್ಲಿ ಇರಬೇಕಾದ್ದಕ್ಕಿಂತ ಚಳಿ ತೀವ್ರತರ; ಬೇಸಗೆಯೂ ತೇವಕರ, ಬೇಸಗೆಯಲ್ಲೂ ಅನಂತರದ ಎರಡು ತಿಂಗಳುಗಳಲ್ಲೂ ಜಪಾನು ಪದೇಪದೇ ಚಂಡಮಾರುತಕ್ಕೆ ಒಳಗಾಗುತ್ತದೆ. ದಕ್ಷಿಣ ಜಪಾನಿಗೆ ಇದರ ಬಾಧೆ ವಿಪರೀತ.

ಡಿಸೆಂಬರಿನಿಂದ ಫೆಬ್ರವರಿಯ ವರೆಗೆ ಜಪಾನಿನ ಹಲವು ಭಾಗಗಳಲ್ಲಿ ನೀರು ಗಡ್ಡೆ ಕಟ್ಟುವುದಕ್ಕಿಂತ ಕಡಿಮೆಯ ಉಷ್ಣತೆ ಇರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಬಂಧಂತೆ ಉಷ್ಣತೆ ಅಧಿಕ. ಹಾಕೈಡೋನ ಪಶ್ಚಿಮ ಮಧ್ಯದಲ್ಲಿರುವ ಆಸಾಹೀಗಾವ ನಗರದಲ್ಲಿ ಜನವರಿಯ ಮಧ್ಯ (ಮೀನ್) ಉಷ್ಣತೆ 14ಲಿ ಫ್ಯಾ. ; ಟೋಕಿಯೋದಲ್ಲಿ 37ಲಿ ಫ್ಯಾ. ನೈಋತ್ಯದಲ್ಲಿರುವ ಓಸಾಕದಲ್ಲಿ 30ಲಿ ಫ್ಯಾ. ಚಳಿಗಾಲದಲ್ಲಿ ಜಪಾನಿನಲ್ಲಿ ಅತ್ಯಧಿಕ ಉಷ್ಣತೆ ಇರುವ ಪ್ರದೇಶ ಕೀಯೂಷೂ. ಅಲ್ಲಿ ಜನವರಿಯ ಮಾಧ್ಯ ಉಷ್ಣತೆ 45ಲಿ ಫ್ಯಾ.

ಜಪಾನಿನ ಅಕ್ಷಾಂಶೀಯ ವ್ಯಾಪ್ತಿಯಿಂದ ಅದರ ಬೇಸಗೆ ಉಷ್ಣತೆಯ ಮೇಲೆ ಹೆಚ್ಚಿನ ಪರಿಣಾಮವಾಗಿಲ್ಲ. ಆದರೆ ಎತ್ತರಕ್ಕೆ ಅನುಗುಣವಾಗಿ ಅದು ವ್ಯತ್ಯಾಸವಾಗುತ್ತದೆ. ಹಾಕೈಡೋ ಹೆಚ್ಚು ತಂಪು. ಅತ್ಯುಷ್ಣ ತಿಂಗಳಾದ ಆಗಸ್ಟಿನಲ್ಲಿ ಮಾಧ್ಯ ಉಷ್ಣತೆ ಹೀಗಿರುತ್ತದೆ: ಕಾಗಷೀವ: 79ಲಿ ಫ್ಯಾ. ಓಸಾಕ 81ಲಿ ಫ್ಯಾ. ಟೋಕಿಯೋ 77ಲಿ ಫ್ಯಾ. ಸಪೋರೋ 69ಲಿ ಫ್ಯಾ. ಹಾಕೈಡೋದಲ್ಲಿ ವರ್ಷದಲ್ಲಿ 120 ದಿನಗಳು ಹಿಮಮುಕ್ತ. ಕೀಯೂಷೂವಿನಲ್ಲಿ ಇಂಥ ದಿನಗಳ ಸಂಖ್ಯೆ ಎರಡರಷ್ಟು.

ಹೆಚ್ಚು ಮಳೆ ಅಥವಾ ಹಿಮ ಬೀಳದ ಪ್ರದೇಶ ಜಪಾನಿನಲ್ಲಿ ಇಲ್ಲ. ಬೇಸಗೆಯ ಆರಂಭಕಾಲದಲ್ಲಿ ಗರಿಷ್ಠ ಮಳೆ. ಇದಕ್ಕೆ ಅಪವಾದವೆಂದರೆ ಜಪಾನ್ ಸಮುದ್ರದ ನೆರೆಯ ಪ್ರದೇಶ. ಅಲ್ಲಿ ಚಳಿಗಾಲದ ಹಿಮಪಾತ ಹೆಚ್ಚು. ಜಪಾನಿನ ಬಹು ಭಾಗದಲ್ಲಿ 40 ಗಿಂತ ಹೆಚ್ಚು ಮಳೆ ಅಥವಾ ಹಿಮ ಬೀಳುತ್ತದೆ. ಪಶ್ಚಿಮ ಹಾಕೈಡೋ, ಪೂರ್ವ ಹಾನ್‍ಷ್ಯೂ, ಒಳ ಸಮುದ್ರಪ್ರದೇಶದಲ್ಲಿ ವರ್ಷಕ್ಕೆ 40-60 ಅವಪಾತ.

ಜಪಾನಿನಲ್ಲಿ ಅನೇಕ ಸರೋವರಗಳುಂಟು. ಬಹುತೇಕ ಅವು ಸಣ್ಣವು. ಮಧ್ಯ ಹಾನ್‍ಷ್ಯೂವಿನ ಪಶ್ಚಿಮದಲ್ಲಿರುವ ಬೀವಾ ಸರೋವರ (260 ಚ.ಮೈ.) ಅತ್ಯಂತ ದೊಡ್ಡದು.

ಜಪಾನು ಪರ್ವತಪ್ರದೇಶಗಳಿಂದ ಕೂಡಿರುವುದರಿಂದಲೂ ಅಲ್ಲಿಯ ನದಿಗಳು ವರ್ಷದ ಬಹು ಕಾಲ ತುಂಬಿ ಹರಿಯುವುದರಿಂದಲೂ ವಿದ್ಯುತ್ತಿನ ಉತ್ಪಾದನೆಗೆ ವಿಪುಲ ಅವಕಾಶವಿದೆ. ಜಪಾನಿನ ಜಲವಿದ್ಯುತ್ ಕಾರ್ಯಗಾರಗಳಲ್ಲಿ ಶೇಕಡ 88ರಷ್ಟು ಕಾರ್ಯಾಗಾರಗಳು 10,000 ಕಿವಾ. ವಿದ್ಯುತ್ ಉತ್ಪಾದನೆಗೂ ಕಡಿಮೆ ಸಾಮಥ್ರ್ಯ ಉಳ್ಳವು. ಉಷ್ಣ ವಿದ್ಯುತ್ತೂ ಗಣನೀಯವಾಗಿ ಉತ್ಪಾದಿತವಾಗುತ್ತಿದೆ. ಜಪಾನಿನ ಇಂಧನ ಸಾಮಥ್ರ್ಯದ ಶÉೀ. 56ರಷ್ಟು ಕಲ್ಲಿದ್ದಲು ಮತ್ತು ಲಿಗ್ನೈಟ್ ಮೂಲವುಳ್ಳದ್ದು; ಶೇ. 33 ಜಲವಿದ್ಯುತ್ತು.

ಜಪಾನಿನ ಅರ್ಧಕ್ಕಿಂತ ಹೆಚ್ಚು ಪ್ರದೇಶ ಅರಣ್ಯಾವೃತ. ಒಟ್ಟು ವಿಸ್ತೀರ್ಣವಾದ 9-14 ಕೋಟಿ ಎಕರೆಗಳಲ್ಲಿ 5.5 ಕೋಟಿ ಎಕರೆ ಅರಣ್ಯ ಪ್ರದೇಶ. ಇದರ ಅರ್ಧ ಭಾಗದಲ್ಲಿ ಅಗಲ ಎಲೆಗಳ ಕಾಡೂ ಶೇಕಡ 29ರಷ್ಟು ಪ್ರದೇಶದಲ್ಲಿ ಶಂಕುಧಾರಿ ಕಾಡೂ ಇವೆ. ಶೇ. 5ಕ್ಕಿಂತ ಕಡಿಮೆ ಪ್ರದೇಶ ಬಿದಿರು ಕಾಡು. ಇದರ ಜೊತೆಗೆ 60 ಲಕ್ಷ ಎಕರೆ ಪ್ರದೇಶಗಳಲ್ಲಿ ಕುರುಚಲು ಕಾಡಿದೆ. ಜಪಾನ್ ಸಸ್ಯಸಂಪತ್ತಿನಲ್ಲಿ ಸಮೃದ್ಧವಾಗಿರುವುದಕ್ಕೆ ಅಲ್ಲಿ ವರ್ಷದ ಬಹುಭಾಗ ಮಳೆ ಬೀಳುವುದು ಮತ್ತು ಗುಡ್ಡಬೆಟ್ಟಗಳಿಂದ ತುಂಬಿರುವುದೇ ಮುಖ್ಯ ಕಾರಣ.

ಜಪಾನಿನ ಅರಣ್ಯ ಪ್ರದೇಶಗಳನ್ನು ಸ್ಥೂಲವಾಗಿ ಮೂರು ವಲಯಗಳಾಗಿ ವಿಂಗಡಿಸಬಹುದು: 1 ಉತ್ತರವಲಯ: ಹಾಕೈಡೋದ ಮಧ್ಯ ಮತ್ತು ಪೂರ್ವ ಭಾಗ, ಹಾನ್‍ಷ್ಯೂವಿನ ಎತ್ತರ ಪ್ರದೇಶ. ಇಲ್ಲಿ ಹೆಚ್ಚಾಗಿ ಭೂರ್ಜ, ಫರ್, ಲಾರ್ಜ್ ಮತ್ತು ಸ್ಪ್ರೂಸ್ ಮರಗಳಿವೆ. 2 ಸಮಶೀತೋಷ್ಣವಲಯ: ಮಧ್ಯ ಹಾನ್‍ಷ್ಯೂವಿನ 5,400'ಗಿಂತ ಕಡಿಮೆ ಎತ್ತರದ ಪ್ರದೇಶ. ಇಲ್ಲಿಯದು ಮಿಶ್ರ ಅರಣ್ಯ. ಈ ಪ್ರದೇಶದಲ್ಲಿ ಎಲೆ ಉದುರುವ, ಅಗಲ ಎಲೆಯ ವಂಶಕ್ಕೆ ಸೇರಿದ, ಬೀಚ್, ಆಷ್, ಚೆಸ್‍ನಟ್ ಮತ್ತು ಓಕ್ ಮರಗಳಿವೆ. ಶಂಕುಧಾರಿ ಜಾತಿಯ ಪೈನ್, ಫರ್ ಮತ್ತು ದೇವದಾರು ಮರಗಳೂ ಬೆಳೆಯುತ್ತವೆ. 3 ಉಪೋಷ್ಣವಲಯ: ಕೀಯೂಷೂ, ಷಿಕೋಕೂ, ಕ್ವಾಂಟೋ ಮೈದಾನದವರೆಗಿನ ಹಾನ್‍ಷ್ಯೂ ಪ್ರದೇಶ. ಅಗಲ ಎಲೆಗಳ ನಿತ್ಯಹಸುರಿನ ಮತ್ತು ಎಲೆ ಉದುರುವ ಮರಗಳಿವೆ. ಆಲ, ತಾಳೆ, ನೀಲಗಿರಿ ಮುಂತಾದ ವೃಕ್ಷಗಳು ದಕ್ಷಿಣ ಷಿಕೋಕೂ ಮತ್ತು ಕೀಯೂಷೂಗಳಲ್ಲಿವೆ.

ಜಪಾನಿನ ಸರ್ಕಾರಿ ಮತ್ತು ಶ್ರೀಮಂತರ ಕೆಲವು ಕಟ್ಟಡಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ಬಹುತೇಕ ಮರದಿಂದಲೇ ಕಟ್ಟಲಾಗಿದೆ. ಮರಗಳು ಹೇರಳವಾಗಿರುವುದು ಒಂದು ಕಾರಣ. ಇಲ್ಲಿ ಆಗಾಗ ಸಂಭವಿಸುವ ಭೂಕಂಪಗಳ ಭಯ ಇನ್ನೊಂದು ಕಾರಣ. ಲೋಹದ ಉಪಕರಣಗಳ ಬದಲಿಗೆ ಸಾಧ್ಯವಾದಲ್ಲೆಲ್ಲ ಮರದ ಪಾತ್ರೆಗಳನ್ನೇ ಬಳಸಲಾಗುತ್ತದೆ. ಕಾಗದ, ಕೃತಕ ರೇಷ್ಮೆ ಇವು ಅರಣ್ಯವನ್ನವಲಂಬಿಸಿದ ಎರಡು ಮುಖ್ಯ ಕೈಗಾರಿಕೆಗಳು. ಮರದ ಇದ್ದಿಲನ್ನು ಅಡುಗೆಗೂ ಅನಿಲ ಉತ್ಪಾದನೆಗೂ ಬಳಸಲಾಗುತ್ತದೆ.

ಜಪಾನ್ ಈಗ ಮರದ ನಾಟಾಗಳನ್ನು ವಿದೇಶಗಳಿಂದಲೂ ಆಮದು ಮಾಡಿಕೊಳ್ಳುತ್ತಿದೆ. ಆದರೆ ಇನ್ನೂ ದುರ್ಗಮವಾಗಿರುವ ಅದರ ಕಾಡುಗಳನ್ನು ಬಳಸಿಕೊಳ್ಳಬಹುದು ಮತ್ತು ಪುನರ್ನವೀಕರಣದಿಂದ ಅದರ ಬೇಡಿಕೆಯ ಗಣನೀಯ ಭಾಗವನ್ನು ತುಂಬಿಕೊಳ್ಳಬಹುದು.

ಜಪಾನ್ ಅಪಾರ ಪ್ರಾಣಿಸಂಪತ್ತಿರುವ ದೇಶ. ಅಲ್ಲಿಯ ವಾಯುಗುಣ ಮತ್ತು ಸಸ್ಯಸಂಪತ್ತಿನಂತೆ ಪ್ರಾಣಿಸಂಪತ್ತೂ ವೈವಿಧ್ಯ ಪೂರ್ಣ. ಅಕ್ಷಾಂಶ ಹಾಗೂ ನೆಲದ ಎತ್ತರಕ್ಕೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ. ಜಪಾನಿನ ನೆಲ ಪ್ರಾಣಿಗಳು ಬಹುತೇಕ ಸಮಶೀತೋಷ್ಣವಲಯ ಜಾತಿಗಳವು. ಹಾಕೈಡೋದಲ್ಲಿ ಉಪಶೀತವಲಯ ಪ್ರರೂಪಗಳೊಂದಿಗೂ ಇವು ಬೆರೆತುಕೊಂಡಿವೆ. ಚೀನ, ಕೊರಿಯ, ಸೈಬೀರಿಯ ಮತ್ತು ಆಗ್ನೇಯ ಏಷ್ಯದ ಪ್ರಾಣಿ ಜಾತಿಗಳಿಗೂ ಇವಕ್ಕೂ ಸಾದೃಶ್ಯಗಳಿರುವುದರಿಂದ ಇವು ಮೂಲತಃ ಖಂಡಪ್ರದೇಶದಿಂದ ಇಲ್ಲಿಗೆ ಬಂದಿರಬಹುದೆಂದು ಊಹಿಸಬಹುದು. ಸಾಗರಿಕ ಪ್ರಾಣಿಗಳನ್ನೂ ಉತ್ತರ, ಮಧ್ಯ ಮತ್ತು ಉಷ್ಣವಲಯವೆಂದು ವಿಂಗಡಿಸಬಹುದು. ಆದರೆ ಒಂದು ವ್ಯತ್ಯಾಸ: ಉಷ್ಣವಲಯದ ಜಾತಿಗಳು ಇವೇ ಜಾತಿಗಳ ನೆಲ ಪ್ರಾಣಿಗಳಿರುವುದಕ್ಕಿಂತಲೂ ಉತ್ತರದಲ್ಲಿ ಸಾಗರದಲ್ಲಿವೆ. ಜಪಾನ್ ಉಷ್ಣೋದಕ ಪ್ರವಾಹದಲ್ಲಿ ಟೋಕಿಯೋ ಕೊಲ್ಲಿಯ ಹೊರಗಿರುವ ಬೋಸೋ ಪರ್ಯಾಯ ದ್ವೀಪದ ವರೆಗೂ ಉಷ್ಣನೀರಿನ ಪ್ರಾಣಿಜಾತಿಗಳು ಪ್ರಸರಿಸಿವೆ.

ಜಪಾನ್ ಮತ್ತು ನೆರೆಯ ಕಡಲುಗಳಲ್ಲಿ ಸುಮಾರು 140 ಸಸ್ತನಿಗಳನ್ನು ಗುರುತಿಸಲಾಗಿದೆ. ದಂಶಕ, ತಿಮಿಂಗಿಲ, ಹಂದಿಮೀನು, ಕಡಲ ಹಂದಿ, ಸಣ್ಣಿಲಿ, ಮುಖಮಲ್ ಹೆಗ್ಗಣ, ಬಾವಲಿ, ಮಕಾತ್ ಎಂಬ ವಾನರ, ಕರಡಿ, ಬ್ಯಾಡ್ಜರ್, ನೀರುನಾಯಿ, ಅರ್ಮಿನ್, ಮಿಂಕ್, ಮಾರ್ಟೆನ್, ರಾಕೂನ್, ನರಿ, ತೋಳ, ಸೀಲ್, ವಾಲ್ರಸ್, ಕಾಡುಹಂದಿ, ಜಿಂಕೆ, ಸಾರಗ-ಇವು ಕೆಲವು ಪ್ರಾಣಿಗಳು. ಜಪಾನಿನ ಸುತ್ತಣ ಸಮುದ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ಬಗೆಯ ತಿಮಿವರ್ಗ ಪ್ರಾಣಿಗಳಿವೆ. ಜಪಾನಿನಲ್ಲಿ ಸುಮಾರು 450 ಜಾತಿಯ ಹಕ್ಕಿಗಳಿವೆ. ಇವುಗಳಲ್ಲಿ ಸುಮಾರು ನೂರೈವತ್ತು ನೀರುಹಕ್ಕಿಗಳ ಉರಗಗಳಲ್ಲಿ ಮೂವತ್ತು ಜಾತಿ.

ಜಪಾನಿನ ಸಾಕು ಪ್ರಾಣಿಗಳಲ್ಲಿ ದನ, ಕುದುರೆ, ಕುರಿ, ಕೋಳಿ, ಹಂದಿ ಮುಖ್ಯ. 1971ರಲ್ಲಿ 36,15,000 ದನಗಳೂ ಇಲ್ಲಿ ಸ್ವಾಭಾವಿಕ ಹುಲ್ಲುಗಾವಲುಗಳ ಕೊರತೆ ಇರುವುದರಿಂದ ದನಗಳ ಸಾಕಣೆ ವೆಚ್ಚ ದುಬಾರಿ. ಇಲ್ಲಿಯ ಬೆಟ್ಟದ ಹುಲ್ಲು ಒರಟು, ನಿಸ್ಸಾರ. ಆದ್ದರಿಂದ ದನಗಳ ಮೇವಿನ ಸಮಸ್ಯೆ ತೀವ್ರವಾದ್ದು. ದನಗಳನ್ನೂ ಕುದುರೆಗಳನ್ನೂ ವ್ಯವಸಾಯಕ್ಕೆ. ನೆಲ ಮಟ್ಟಮಾಡಲು ಮತ್ತು ಗೊಬ್ಬರಕ್ಕಾಗಿ ಸಾಕುತ್ತಾರೆ.

ಇಲ್ಲಿಯ ಜನ ಏಷ್ಯದ ಮುಖ್ಯ ಭೂಭಾಗದಿಂದ ಬಂದು ನೆಲೆಸಿದವರು. ಬಹು ಸಂಖ್ಯಾತರು ಮಾಂಗೋಲಾಯಿಡ್ ಬುಡಕಟ್ಟಿಗೆ ಸೇರಿದವರು. ಇವರಲ್ಲಿ ಇತರ ಮಾಂಗೋಲಾಯಿಡ್ ಜನರಿಂದ ಭಿನ್ನವೆನಿಸುವ ಲಕ್ಷಣಗಳು ಹಲವಿಲ್ಲ. ಉತ್ತರ ಜಪಾನಿನ ಮೂಲವಾಸಿ ಐನುಗಳ ಮತ್ತು ಆಗ್ನೇಯ ಏಷ್ಯ, ಕೊರಿಯ, ಯೂರೋಪ್ ಮುಂತಾದವರ ಮಿಶ್ರಣದ ಜನರೂ ಅಲ್ಪಸಂಖ್ಯೆಯಲ್ಲುಂಟು. ಜಪಾನಿನ ಬಹು ಸಂಖ್ಯಾತರು ಆನುವಂಶಿಕವಾಗಿ ಕೊರಿಯನರಿಗೆ, ಟುಂಗುಸ್ ಪಂಗಡಗಳಿಗೆ ಮತ್ತು ಉತ್ತರ ಚೀನೀಗುಂಪುಗಳಿಗೆ ಅತ್ಯಂತ ಸಮೀಪವೆಂದು ಹೇಳಲಾಗಿದೆ. ಇತರ ಮಾಂಗೋಲಾಯಿಡ್ ಗುಂಪುಗಳಿಗಿಂತ ಜಪಾನೀಯರಿಗೆ ಮೈ ಮತ್ತು ಮುಖಗಳ ಮೇಲೆ ಕೂದಲು ಹೆಚ್ಚು; ಮೈಬಣ್ಣ ಹಳದಿಗಿಂತ ಹೆಚ್ಚು ಕಂದು. ಮೈಕಟ್ಟು ಹೆಚ್ಚು ಗಟ್ಟಿಮುಟ್ಟು. ಜಪಾನೀಯರು ಕುಳ್ಳ ಜನಾಂಗವೆನಿಸಿದ್ದರೂ 1900 ರಿಂದೀಚೆಗೆ ಅವರಲ್ಲಿ ಅಸಾಧಾರಣ ದೈಹಿಕ ಬದಲಾವಣೆಗಳಾಗಿವೆ. ಅವರ ಸರಾಸರಿ ಎತ್ತರ 50 ವರ್ಷಗಳಲ್ಲಿ ಸುಮಾರು 3ಗಳಷ್ಟು ಅಧಿಕವಾಗಿದೆ (5' 4). ಇದು ಸುಧಾರಿತ ಆಹಾರ ಮತ್ತು ವೈದ್ಯ ಸೌಲಭ್ಯಗಳ ಫಲ ಎಂದು ಹೇಳಲಾಗಿದೆ. ಪಟ್ಟಣದ ಜನ ಹಳ್ಳಿಗರಿಗಿಂತ ಹೆಚ್ಚು ಎತ್ತರ. ಜಪಾನೀ ಕುಸ್ತಿಪಟುಗಳ ಮೈಕಟ್ಟು ಅಸಾಧಾರಣ.

ಅಲ್ಪಸಂಖ್ಯಾತ ಕುಲಗಳ ಪೈಕಿ ಐನುಗಳದು ಗಮನಾರ್ಹ, ದೈಹಿಕ ಲಕ್ಷಣ, ಸಂಸ್ಕøತಿ ಮತ್ತು ಭಾಷೆಯಲ್ಲಿ ಅವರು ವಿಶಿಷ್ಟರು. ಅವರ ಮೂಲ ಗೊತ್ತಿಲ್ಲ. ಅವರ ಲಕ್ಷಣಗಳಿಂದ ಅವರು ಕಾಕಸಾಯಿಡ್ ಸಂಬಂಧ ಇರಬಹುದೆಂದು ಊಹಿಸಬಹುದು. ಅವರ ಮೈಮೇಲೆ ಕೂದಲು ಅಧಿಕ.

ಜಪಾನಿನಲ್ಲಿ ಒಂದು ಪ್ರಮುಖ ಮತಧರ್ಮವಿಲ್ಲ. ಅಲ್ಲಿ ಅನೇಕ ಮತಗಳೂ ಅರೆ ಮತಗಳೂ ಜೊತೆಜೊತೆಯಾಗಿವೆ. ರಾಷ್ಟ್ರೀಯ ಮತ್ತು ಸಾಮಾಜಿಕ ಪದ್ಧತಿಗಳು ಷಿಂಟೋ ಮತಕ್ಕೆ ಅನುಗುಣವಾಗಿವೆ. ಸಾರ್ವಜನಿಕ ಹಾಗೂ ಖಾಸಗಿ ನೀತಿನಡವಳಿಕೆಗಳಿಗೆ ಕಾನ್ಫ್ಯೂಷನಿಸಂ ಆಧಾರ. ತಾತ್ತ್ವಿಕ ವಿಚಾರಗಳಲ್ಲಿ ಬೌದ್ಧಮತ ಪ್ರಧಾನ. ಈ ಎಲ್ಲ ಮತಧರ್ಮಗಳೂ ಪರಸ್ಪರ ಪ್ರಭಾವ ಬೀರಿವೆ. ಕ್ರೈಸ್ತ ಮತವೂ ವ್ಯಾಪಕವಾಗಿದೆ. 

ಜಪಾನಿನ ಒಟ್ಟು ಭೂಪ್ರದೇಶದಲ್ಲಿ ಶೆÉೀಕಡ 16ರಷ್ಟು ಮಾತ್ರ ಸಾಗುವಳಿಗೆ ಯೋಗ್ಯವಾದ್ದು. ಇರುವ ಜಮೀನಿನಲ್ಲೂ ಮಣ್ಣಿನಲ್ಲಿ ಆಮ್ಲದ ಲಾವ ಬೆರೆತಿರುವುದರಿಂದ ಅಷ್ಟು ಫಲವತ್ತಾಗಿಲ್ಲ. ಮಳೆಯ ಕಾರಣದಿಂದಾಗಿ ಆಗಾಗ ಮಣ್ಣು ತೊಳೆದುಹೋಗುವುದರಿಂದಲೂ ಅಧಿಕ ತೇವದಿಂದಾಗಿ ಮಣ್ಣಿನ ಸಾರ ಆಳಕ್ಕೆ ಇಳಿಯುವುದರಿಂದಲೂ ಜಮೀನಿನ ಫಲವಂತಿಕೆಯನ್ನು ಶ್ರಮ ಪೂರ್ವಕವಾಗಿ ಸಂರಕ್ಷಿಸಬೇಕು.

ಜಪಾನಿನ ವಾಯುಗುಣ ಆಹಾರಬೆಳೆಗೆ ಅನುಕೂಲಕರವಾದ್ದು. ಜಪಾನಿನ ಎಲ್ಲ ಭಾಗಗಳಲ್ಲೂ ಸಾಕಷ್ಟು ಮಳೆಯಾಗುತ್ತದೆ. ಇಲ್ಲಿಯ ಸಾಗುವಳಿ ಭೂಮಿಯ ಶೇಕಡ 30ರಲ್ಲಿ ಎರಡು ಬೆಳೆ ಬೆಳೆಯುತ್ತಾರೆ. ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಚಳಿಗಾಲದಲ್ಲಿ ಬೀಳುವ ಮಂಜು ಮತ್ತು ಅಧಿಕ ಹಿಮದಿಂದಾಗಿ ಎರಡನೆಯ ಬೆಳೆ ಸಾಧ್ಯವಿಲ್ಲ. ಎರಡು ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಬತ್ತ ಬೆಳೆದರೆ ಚಳಿಗಾಲದಲ್ಲಿ ಗೋಧಿ ಮತ್ತು ಖುಷ್ಕಿ ಬೆಳೆಗಳನ್ನು ಬೆಳೆಯುತ್ತಾರೆ.

ವ್ಯವಸಾಯಕ್ಕೆ ಕ್ಯಾಂಟೋ, ಇಷಿಕಾರೀ, ಈಚಿಗೋ, ನೋಬೀ ಮೊದಲಾದ ಬಯಲುಗಳು ಪ್ರಸಿದ್ಧವಾಗಿವೆ. ಇಲ್ಲಿಯ ನದಿಗಳು ಬೆಟ್ಟಗುಡ್ಡಗಳು ಮತ್ತು ಕಣಿವೆಗಳಲ್ಲಿ ಹರಿದು ಬಹು ಬೇಗ ಸಮುದ್ರವನ್ನು ಸೇರುವುದರಿಂದ ವಿಶಾಲ ಬಯಲುಗಳಲ್ಲಿ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿಯನ್ನು ಹೆಚ್ಚಿಸಲು ಕಷ್ಟಕರವಾಗಿದೆ. ಸಾಮಾನ್ಯವಾಗಿ ಈಗಿರುವ ವ್ಯವಸಾಯ ಕ್ಷೇತ್ರದ ಬಹುಭಾಗಕ್ಕೆ ನೀರಾವರಿಯ ಕೊರತೆಯಿಲ್ಲ.

ಮಹಾಯುದ್ಧದಲ್ಲಿ ಕೈಗಾರಿಕೆಗಳು ಮತ್ತು ಭಾರಿ ಉದ್ಯಮಗಳು ನಾಶಹೊಂದಿದಾಗ ಜಪಾನಿನ ಆರ್ಥಿಕ ಆಶ್ರಯವಾಗಿ ಉಳಿದುಕೊಂಡಿದ್ದು ವ್ಯವಸಾಯ ಒಂದೇ. 1860ರ ದಶಕದಲ್ಲಿ ಜಪಾನಿನ ಸುಮಾರು 80ರಷ್ಟು ಜನ ವ್ಯವಸಾಯವನ್ನು ಅವಲಂಬಿಸಿದರು. 1949ರ ಹೊತ್ತಿಗೆ ವ್ಯವಸಾಯವನ್ನು ಅವಲಂಬಿಸಿದ್ದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕೆ ಇಳಿದಿತ್ತು. ಯುದ್ಧೋತ್ತರ ಆರ್ಥಿಕ ಪುನರ್‍ರಚನೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ ಜಪಾನ್‍ನಲ್ಲಿ 1970ರ ವೇಳೆಗೆ ವ್ಯವಸಾಯದಲ್ಲಿ ನಿರತರಾದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ 15ಕ್ಕೂ ಕಡಿಮೆ.

ವ್ಯವಸಾಯ ಪ್ರದೇಶದ ಕೊರತೆಯಿಂದಾಗಿ ಅಲ್ಲಿ ಸಾಂದ್ರ ಬೇಸಾಯಕ್ಕೆ ಹೆಚ್ಚು ಗಮನ ಸಂದಿದೆ. ಬತ್ತದ ಗದ್ದೆಗಳು ಮೆಟ್ಟಿಲುಮೆಟ್ಟಿಲಾಗಿವೆ. ಪ್ರತಿ ಮೆಟ್ಟಿಲಿಗೂ ಮಧ್ಯೆ ಬದು ಹಾಕಲಾಗಿದೆ. ಅನೇಕ ಎತ್ತರದ ಪ್ರದೇಶಗಳನ್ನು ಸಮತಟ್ಟು ಮಾಡಿ ಗಟ್ಟಿ ಮಾಡಲಾಗಿದೆ. ಹಳೆಯ ವ್ಯವಸಾಯ ಪದ್ಧತಿಯನ್ನು ಬಿಟ್ಟು ಭೂಮಿಯ ಸಾರವನ್ನು ಕಾಯ್ದಿರಿಸಲೂ ಬಹು ಬೆಳೆಗಳನ್ನು ಬೆಳೆಯಲೂ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಪಾನಿನಲ್ಲಿ ಸಣ್ಣ ಹಿಡುವಳಿಗಳೇ ಹೆಚ್ಚು. ಆದರೂ ಅತ್ಯಾಧುನಿಕ ವಿಧಾನವನ್ನು ಅನ್ವಯಿಸುವುದರಲ್ಲಿ ಹಿಂದುಳಿದಿಲ್ಲ.

ಜಪಾನಿನಲ್ಲಿ ಯಾಂತ್ರೀಕರಣದ ಬೆಳೆವಣಿಗೆಯಾಗಿದ್ದರೂ ಪ್ರಾಣಿಗಳನ್ನು ಹೂಡಿ ಬೇಸಾಯ ಮಾಡುವುದು ಹೆಚ್ಚಾಗಿ ಬಳಕೆಯಲ್ಲಿತ್ತು. ಮಾನವಶಕ್ತಿ ಅಗಾಧವಾಗಿರುವುದರಿಂದ ಶ್ರಮ ಮಿಗಿಸುವ ಉಪಕರಣಗಳನ್ನು ಬಳಸುವಲ್ಲಿ ಜಪಾನೀಯರು ಅಷ್ಟು ಮುಂದಾಗಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ಕಾಲದಿಂದ ವ್ಯವಸಾಯಕ್ಕೆ ವ್ಯಾಪಕವಾಗಿ ತಾಂತ್ರಿಕ ಕ್ರಮ ಅನ್ವಯಿಸಲಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿದೆ. ಕ್ರಿಮಿನಾಶಕಗಳು ಮತ್ತು ಕಳೆನಾಶಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಫಲಸನ್ನು ಹದಮಾಡಲು ಮತ್ತು ಭೂಮಿಯನ್ನು ಉಳಲು ಸಣ್ಣ ಕೈಯಂತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಹಣ್ಣುಗಳು ಮತ್ತು ತರಕಾರಿಗಳ ಬೆಳೆಯನ್ನು ವಿಸ್ತರಿಸಲಾಗಿದೆ.

ಜಪಾನಿನ ವ್ಯವಸಾಯದಲ್ಲಿ ಆಹಾರಬೆಳೆಗಳಿಗೇ ಪ್ರಾಧಾನ್ಯ. ಕೃಷಿ ನೆಲದಲ್ಲಿ ಶೇ. 80ರಷ್ಟು ಇದಕ್ಕೆ ಮೀಸಲು. ಅದರಲ್ಲೂ ಬತ್ತಕ್ಕೆ ಅಗ್ರಸ್ಥಾನ. ಬತ್ತದ ಇಳುವರಿಯಲ್ಲಿ ಜಪಾನ್ ಏಷ್ಯದಲ್ಲೇ ಉನ್ನತ ಮಟ್ಟದಲ್ಲಿದೆ. ಶೇಕಡ 55 ನೆಲದಲ್ಲಿ ಬತ್ತವನ್ನೂ ಶೇಕಡ 40 ನೆಲದಲ್ಲಿ ಧಾನ್ಯಗಳನ್ನೂ ಬೆಳೆಯಲಾಗುತ್ತದೆ. ಗೋಧಿ, ಬಾರ್ಲಿ, ಗೆಣಸು, ಬಿಳಿ ಆಲೂಗೆಡ್ಡೆ, ಉಪ್ಪುನೇರಳೆ, ಚಹಾ, ಹೊಗೆಸೊಪ್ಪು ಮತ್ತು ಮಿಲೆಟ್ಸ್ ಇತರ ಮುಖ್ಯ ಬೆಳೆಗಳು. ದ್ವಿತೀಯ ಮಹಾಯುದ್ಧದ ಅನಂತರ ಚಹಾ ಮತ್ತು ಉಪ್ಪುನೇರಳೆ ಬೆಳೆಯುವ ಪ್ರದೇಶ ಇಳಿಮುಖವಾಗಿದೆ. ರೇಷ್ಮೆ ಉತ್ಪಾದನೆ 1930ರ ದಶಕದಲ್ಲಿ ಪ್ರಮುಖವಾಗಿತ್ತು.

ಜಪಾನಿನಲ್ಲಿ ಸಣ್ಣ ಹಿಡುವಳಿಗಳೇ ಅಧಿಕ. ಹಿಡುವಳಿಗಳ ಸರಾಸರಿ 2.5 ಎಕರೆ. 1/3 ಭಾಗ ಒಕ್ಕಲುಗಳು 1.2 ಎಕರೆಗಳಿಗಿಂತಲೂ ಕಡಿಮೆ ಹಿಡುವಳಿ ಹೊಂದಿವೆ. 5 ಎಕರೆಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಹಿಡುವಳಿಗಳು ಶೇ. 10 ಮಾತ್ರ.

ಜಪಾನ್ 19ನೆಯ ಶತಮಾನದ ಪೂರ್ವಾರ್ಧದ ವರೆಗೂ ವ್ಯವಸಾಯಪ್ರಧಾನ ರಾಷ್ಟ್ರವಾಗಿತ್ತು. ಅದು ಆ ಕಾಲದ ಏಷ್ಯದ ಇತರ ರಾಷ್ಟ್ರಗಳಂತೆ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರವಾಗಿತ್ತು. ಆದರೆ 1868ರಿಂದ ಅದು ಪಾಶ್ಚಾತ್ಯ ನಾಗರಿಕತೆಯ ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಿದ್ದರಿಂದ ಅದರ ಆರ್ಥಿಕ ರಂಗ ಹೊಸ ಶಕೆಗೆ ಕಾಲಿಟ್ಟಿತು. ಜಪಾನ್ ತನ್ನ ಏಕಾಂತತೆಯಿಂದ ಹೊರಬಂದು ವೈಜ್ಞಾನಿಕ ಪ್ರಗತಿಯ ಮಹತ್ತ್ವವನ್ನು ಬಹುಬೇಗ ಗ್ರಹಿಸಿತು. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಇಡೀ ಏಷ್ಯದಲ್ಲೇ ಇದು ಪ್ರಥಮ ಆಧುನಿಕ ರಾಷ್ಟ್ರವೆನಿಸಿತು.

ಜಪಾನಿನ ಕಾರ್ಖಾನೆಗಳು ಕಚ್ಚಾ ಸಾಮಗ್ರಿಗಳನ್ನು ಪರದೇಶದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ಳುತ್ತವೆ. ಆದರೆ ಜನಶಕ್ತಿ ಮತ್ತು ಕಾರ್ಖಾನೆ ನಡೆಸಲು ಬೇಕಾಗುವ ವಿದ್ಯುಚ್ಛಕ್ತಿ ಜಪಾನಿನಲ್ಲೇ ದೊರೆಯುತ್ತದೆ. ಕಾರ್ಖಾನೆಗಳಿಗೆ ಬೇಕಾಗುವ ಕಲ್ಲಿದ್ದಲಿನ 9/10 ಭಾಗ ಜಪಾನಿನಲ್ಲಿಯೇ ದೊರೆಯುತ್ತದೆ ಉಳಿದ 1/10 ಭಾಗ ಕಲ್ಲಿದ್ದಲನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುತ್ತಾರೆ. ಇಲ್ಲಿ ದೊರೆಯುವ ಪೆಟ್ರೋಲಿಯಂ ಅದರ ಅಗತ್ಯದ 1/10 ಭಾಗ ಮಾತ್ರ. ಉಳಿದದ್ದನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಜಪಾನಿನಲ್ಲಿ ವ್ಯವಸಾಯಯೋಗ್ಯ ಭೂಮಿ ಬಹಳ ಕಡಿಮೆ ಇರುವುದೂ ಅಲ್ಲಿ ಹಲವು ಒಳ್ಳೆಯ ಬಂದರುಗಳಿರುವುದೂ ಅದು ಕೈಗಾರಿಕೆಯಲ್ಲಿ ಮುಂದುವರಿಯಲು ಕಾರಣವಾದುವು. ಟೋಕಿಯೋದಿಂದ ನಾಗಸಾಕೀ ವರೆಗಿನ 600 ಮೈ. ಉದ್ದದ ಮಧ್ಯ ಪ್ರದೇಶದಲ್ಲಿ 100 ಕಾರ್ಖಾನೆಗಳಿವೆ. ಇವುಗಳ ಸ್ಥಾಪನೆಗೆ ಮುಖ್ಯವಾಗಿ ಅಲ್ಲಲ್ಲೇ ದೊರೆಯುವ ರೇಷ್ಮೆ ಮತ್ತು ಕಲ್ಲಿದ್ದಲೂ ಅಲ್ಲಿರುವ ಉತ್ತಮ ಬಂದರುಗಳೂ ಕಾರಣ. ಜಪಾನ್ ದೇಶದ ಕೈಗಾರಿಕಾ ಪ್ರದೇಶಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು: 1 ಓಸಾಕ, ಕೋಬೀ ಮತ್ತು ಕೀಯೋಟೋ ವಿಭಾಗ : ಇಲ್ಲಿ ಹತ್ತಿ ಗಿರಣಿಗಳು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಹಡಗು ಕಟ್ಟುವ ಉದ್ಯಮ ರೇಷ್ಮೆ, ಮಣ್ಣಿನ ಪಾತ್ರೆಗಳ ಕಾರ್ಖಾನೆಗಳಿವೆ. ಕೋಬೀ ಈ ವಿಭಾಗದ ಮುಖ್ಯ ಬಂದರು. 2 ಟೋಕೀಯೋ, ಯೋಕಹಾಮ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ ಜವಳಿ, ಸಣ್ಣ ಗಾತ್ರದ ಕೃಷಿ ಉಪಕರಣ, ವಿದ್ಯುದುಪಕರಣ ಮತ್ತು ಎಣ್ಣೆಶುದ್ಧೀಕರಣ ಕೈಗಾರಿಕೆಗಳಿವೆ. ಯೋಕಹಾಮ ಇಲ್ಲಿಯ ಮುಖ್ಯ ಬಂದರು. ಇಲ್ಲಿ ಹಡಗು ಕಟ್ಟುವ ಉದ್ಯಮವೂ ಇದೆ. 3 ನಾಗಾಯಿಯ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ, ಉಣ್ಣೆ, ವಿಮಾನ ಮತ್ತು ಕಬ್ಬಿಣ-ಉಕ್ಕು ಕೈಗಾರಿಕೆಗಳಿವೆ. ಮುಖ್ಯ ಬಂದರು ನಗಾಯಿಯ. 4 ಉತ್ತರ ಕೀಯೂಷೂ ವಿಭಾಗ: ಮುಖ್ಯ ಕೈಗಾರಿಕೆ ಕಬ್ಬಿಣ ಮತ್ತು ಉಕ್ಕು. ಜಪಾನಿನ ಗೃಹಕೈಗಾರಿಕೆಗಳು ವೈಶಿಷ್ಟ್ಯಪೂರ್ಣವಾದವು. ಪ್ರತಿ ವಸತಿಯೂ ಯಾವುದಾದರೊಂದು ದೊಡ್ಡ ಕೈಗಾರಿಕೆಗೆ ಅವಶ್ಯವಾದ ಭಾಗಗಳನ್ನು ತಯಾರಿಸುತ್ತದೆ. ಇವನ್ನು ಸಹಕಾರ ಸಂಘಗಳು ಶೇಖರಿಸಿ ಕಾರ್ಖಾನೆಗಳಿಗೆ ಒದಗಿಸುತ್ತವೆ. ದಿನಬಳಕೆಯ ಹಲವು ಸರಕುಗಳೂ ಇಲ್ಲಿ ತಯಾರಾಗುತ್ತವೆ. ರೇಷ್ಮೆ ನೂಲು, ನೇಯ್ಗೆ, ಟೇಪ್, ರಿಬ್ಬನ್, ಬೆಂಕಿಕಡ್ಡಿ, ಬೊಂಬೆ, ಕಾಗದ, ರಟ್ಟು, ಪೆನ್ಸಿಲ್, ಚಾಪೆ, ಮರದ ಚಪ್ಪಲಿ, ಪಿಂಗಾಣಿ ವಸ್ತುಗಳು, ಛತ್ರಿ, ಫ್ಯಾನ್, ಬೈಸಿಕಲ್, ವಿದ್ಯುದುಪಕರಣ ಮುಂತಾದವು ಮುಖ್ಯವಾದವು. ಜಪಾನಿನಲ್ಲಿ ತಯಾರಾಗದ ಪದಾರ್ಥಗಳೇ ಇಲ್ಲವೆನ್ನಬಹುದು. ಅಂದವಾದ ಅಗ್ಗವಾದ ಹಲವು ಪದಾರ್ಥಗಳು ತಯಾರಾಗುತ್ತವೆ.

ಜಪಾನಿನಲ್ಲಿ ಮೀನು ಅನೇಕರ ಮುಖ್ಯ ಆಹಾರ. ಆಹಾರಕ್ಕೆ ಆಗಿ ಉಳಿದ ಮೀನನ್ನು ಬೇರೆ ದೇಶಗಳಿಗೆ ಕಳುಹಿಸುತ್ತಾರೆ. ಜಪಾನಿನ ಸಮುದ್ರ ತೀರ ಅಂಕುಡೊಂಕಾಗಿ ಹೆಚ್ಚು ಆಳವಿಲ್ಲದೆ ಇರುವುದರಿಂದ ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮೀನುಗಳುಂಟು. ಅಲ್ಲಿ ಹರಿಯುವ ಉಷ್ಣೋದಕ ಮತ್ತು ಶೀತೋದಕ ಪ್ರವಾಹಗಳು ಮೀನುಗಳ ಬೆಳವಣಿಗೆಗೆ ಅನುಕೂಲಕರ. ಜಪಾನ್ ಸಮುದ್ರತೀರದಲ್ಲೆಲ್ಲ ಮೀನುಗಾರಿಕೆ ಒಂದು ಮುಖ್ಯ ಕಸಬು. ಜಪಾನ್ ಸರ್ಕಾರ ಮೀನುಗಾರರಿಗೆ ವಿಶೇಷ ಪ್ರೋತ್ಸಾಹ ನೀಡಿದೆ.

ಜಪಾನಿನ ಸಾರಿಗೆ ವ್ಯವಸ್ಥೆ ವಿಶಿಷ್ಟವಾದ್ದು. ಇದು ಪರ್ವತಮಯ ದೇಶವಾದ್ದರಿಂದ ರಸ್ತೆಗಳ ನಿರ್ಮಾಣದಲ್ಲಿ ಜಪಾನ್ ಮೊದಲಿನಿಂದಲೂ ಹೆಚ್ಚಿನ ಪ್ರಗತಿ ಸಾಧಿಸಲಾಗಲಿಲ್ಲ. ರೈಲುಮಾರ್ಗಗಳ ನಿರ್ಮಾಣವೂ ಈ ಸಮಸ್ಯೆಯನ್ನು ಎದುರಿಸುತ್ತದೆ. ಆದರೆ ಜಪಾನು ದ್ವೀಪಸಮೂಹಗಳ ದೇಶವಾಗಿರುವುದರಿಂದ ಅದರ ಅಂತರಿಕ ಸಾರಿಗೆಯ ಬಹುಭಾಗ ಸಮುದ್ರದ ಮೂಲಕವೇ ನಡೆಯುತ್ತದೆ. ಆದ್ದರಿಂದ ಅಲ್ಲಿ ನೌಕಾಸಂಚಾರ ತೀವ್ರ ಅಭಿವೃದ್ಧಿ ಸಾಧಿಸಿದೆ.

ರಸ್ತೆಗಳು: ಜಪಾನಿನ ರಸ್ತೆ ಸಾರಿಗೆ ಪುರಾತನವಾದದ್ದು. ಟೊಂಕಗಾವ ಕಾಲದಲ್ಲಿ ಐದು ಮುಖ್ಯ ಹೆದ್ದಾರಿಗಳನ್ನು ನಿರ್ಮಿಸಲಾಯಿತು. ಇವುಗಳ ಒಟ್ಟು ಉದ್ದ ಸುಮಾರು 1,320 ಮೈ. ಈ ಮಾರ್ಗಗಳು ಮುಂದೆ ಮೇಜಿ ಪುನಃ ಸ್ಥಾಪನೆಯ ಕಾಲದಲ್ಲಿ ಜಪಾನಿನ ಆಧುನಿಕ ರಸ್ತೆಸಾರಿಗೆ ವ್ಯವಸ್ಥೆಗೆ ಅಡಿಗಲ್ಲಾದುವು.

ನಗರಗಳೆಲ್ಲ ತೀರಪ್ರದೇಶದಲ್ಲಿದ್ದುದರಿಂದಲೂ ರಸ್ತೆ ನಿರ್ಮಾಣ ಕಾರ್ಯ ಕಷ್ಟವಾದ್ದರಿಂದಲೂ ರೈಲುಸಂಚಾರ ಹೆಚ್ಚಿದ್ದರಿಂದಲೂ ಹೆದ್ದಾರಿ ನಿರ್ಮಾಣ ಕಡೆಗಣಿಸಲ್ಪಟ್ಟಿತು. ಜಪಾನಿನ ರಸ್ತೆಗಳಲ್ಲಿ ನಾಲ್ಕು ವರ್ಗಗಳಿವೆ. ರಾಷ್ಟ್ರೀಯ ರಸ್ತೆಗಳು, ಪ್ರಿಫೆಕ್ಜರ್ (ಜಿಲ್ಲೆ) ರಸ್ತೆಗಳು, ಮುನಿಸಿಪಲ್ ರಸ್ತೆಗಳು ಮತ್ತು ಪಟ್ಟಣ ಹಾಗೂ ಹಳ್ಳಿ ರಸ್ತೆಗಳು. 1950ರಲ್ಲಿ ಒಟ್ಟು 5,15,000 ಮೈಲಿಗಳಷ್ಟು ಉದ್ದದ ರಸ್ತೆಗಳಿದ್ದುವು.

ಜಪಾನ್ ಮೊಟ್ಟಮೊದಲಿಗೆ 1872ರ ಸೆಪ್ಟೆಂಬರ್‍ನಲ್ಲಿ ಟೋಕಿಯೋದಿಂದ ಯೋಕಹಾಮದ ವರೆಗಿನ ಇಲ್ಲಿಯ ರೈಲುಮಾರ್ಗ ರಚಿಸಿತು. ಈ ಮಾರ್ಗರಚನೆಗಾಗಿ ಬ್ರಿಟನ್ನಿನ ಖಾಸಗಿ ವ್ಯಕ್ತಿ ಇಲ್ಲಿಯಯೊಬ್ಬನಿಂದ ಸಾಲ ಪಡೆದುದಲ್ಲದೆ ಬ್ರಿಟಿಷ್ ಎಂಜಿನಿಯರ್‍ಗಳು ಮತ್ತು ಆ ದೇಶದ ಉಪಕರಣಗಳು ನೆರವನ್ನು ಪಡೆಯಬೇಕಾಯಿತು. 1871ರ ಹೊತ್ತಿಗೆ ಕೋಬೀಯಿಂದ ಕೀಯೋಟೋ ವರೆಗೂ ಟೋಕಿಯೋದಿಂದ ಕೋಬೀ ವರೆಗೂ ಸುಮಾರು 400 ಮೈ. ರೈಲುಮಾರ್ಗ ನಿರ್ಮಾಣವಾಯಿತು. ಜಪಾನಿನ ಬಹುತೇಕ ರೈಲುಮಾರ್ಗಗಳು ತೀರಪ್ರದೇಶಗಳಲ್ಲಿವೆ. ಅದಕ್ಕೆ ತೀರ ಪ್ರದೇಶಗಳಲ್ಲಿರುವ ಮುಖ್ಯ ನಗರಗಳು ಕಾರಣ. ಪ್ರಾರಂಭದಲ್ಲಿ ಸರ್ಕಾರಿ, ಖಾಸಗಿ ಈ ಎರಡೂ ಕ್ಷೇತ್ರಗಳಿಂದಲೂ ರೈಲುಮಾರ್ಗಗಳ ನಿರ್ಮಾಣಕಾರ್ಯ ನಡೆಯಿತು. 1892ರಲ್ಲಿ ಅಲ್ಲಿಯ ಸಂಸತ್ತು ಒಂದು ರೈಲುಮಾರ್ಗ ನಿರ್ಮಾಣ ವಿಧೇಯಕವನ್ನು ಅಂಗೀಕರಿಸಿ ಬೃಹತ್ ಯೋಜನೆಯೊಂದನ್ನು ಜಾರಿಗೆ ತಂದಿತು. 1906ರ ಮಾರ್ಚ್ 31ರಂದು ರೈಲುಮಾರ್ಗ ರಾಷ್ಟ್ರೀಕರಣ ಕಾನೂನನ್ನು ಜಾರಿಗೆ ತರಲಾಯಿತು. 1907ರಲ್ಲಿ 36 ಖಾಸಗಿ ಮಾರ್ಗಗಳ ಪೈಕಿ 2,823 ಮೈ. ಉದ್ದದ 17 ಮುಖ್ಯ ಮಾರ್ಗಗಳ ರಾಷ್ಟ್ರೀಕರಣವಾಯಿತು. ಜಪಾನಿನ ಬಹುತೇಕ ರೈಲುಮಾರ್ಗಗಳು ನ್ಯಾರೊಗೇಜಿನವು. ಅಲ್ಲಿಯ ಪ್ರದೇಶ ಪರ್ವತಮಯವಾಗಿರುವುದು ಇದಕ್ಕೆ ಕಾರಣ. 1953ರ ಹೊತ್ತಿಗೆ ಮುಖ್ಯ ರೈಲುಮಾರ್ಗಗಳ ಉದ್ದ 17,000 ಮೈ. ಗಳಿಗೂ ಮೀರಿತ್ತು. ಅದರಲ್ಲಿ 12,400 ಮೈ.ಗಳ ಉದ್ದದ ಮಾರ್ಗ ಸರ್ಕಾರಿ ಆಡಳಿತಕ್ಕೊಳಪಟ್ಟಿತ್ತು.

ನೌಕಾಸಾರಿಗೆಯಲ್ಲಿ ಜಪಾನ್ ಬಹು ಮುಂದಿದೆ. ಇದಕ್ಕೆ ಕೆಲವಾರು ಕಾರಣಗಳಿವೆ. ಜಪಾನಿನಲ್ಲಿ ದೀರ್ಘ ತೀರ ಪ್ರದೇಶವುಂಟು. ದ್ವೀಪಗಳ ನಡುವಣ ಸಮುದ್ರಗಳು ನೌಕಾಸಂಚಾರಕ್ಕೆ ಅನುಕೂಲವಾಗಿವೆ. ಜಪಾನ್ ದ್ವೀಪಸಮೂಹವಾದ್ದರಿಂದ ಜಲ ಸಾರಿಗೆಯೇ ಆರ್ಥಿಕವಾಗಿ ಹೆಚ್ಚು ಅನುಕೂಲಕರ. ಅದರ ಕೈಗಾರಿಕಾ ನಗರಗಳು ತೀರ ಪ್ರದೇಶದಲ್ಲೇ ಹೆಚ್ಚಾಗಿವೆ.

ಜಪಾನ್ ಪ್ರಪಂಚದ ಮುಖ್ಯ ನೌಕಾ ನಿರ್ಮಾಣ ರಾಷ್ಟ್ರಗಳಲ್ಲಿ ಒಂದು. ಇಂದು ನೌಕಾನಿರ್ಮಾಣದಲ್ಲಿ ಅದು ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿದೆ. ಅದರ ನೌಕೆಗಳಿಗೆ ವಿದೇಶೀ ಬೇಡಿಕೆ ಗಮನಾರ್ಹ. 1971ರಲ್ಲಿ 8,851 ವ್ಯಾಪಾರಿ ಹಡಗುಗಳಿದ್ದುವು.

ಜಪಾನಿನಲ್ಲಿ ಮೊಟ್ಟಮೊದಲ ವಿಮಾನ ಹಾರಾಟ 1910ರಲ್ಲಿ ಪ್ರಾರಂಭವಾಯಿತು. ಜಪಾನಿನ ಮಿಲಿಟರಿ ವಿಮಾನಗಳು ಪ್ರಥಮ ಬಾರಿಗೆ 1914ರಲ್ಲಿ ಜರ್ಮನ್ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದವು. ಕ್ರಮಬದ್ಧ ನಾಗರಿಕ ವಿಮಾನ ಸಾರಿಗೆ ವ್ಯವಸ್ಥೆ 1922ರಲ್ಲಿ ಪ್ರಾರಂಭವಾಯಿತು. ಪ್ರಪ್ರಥಮ ವಿಮಾನ ಅಂಚೆ ಸೇವೆ ಪ್ರಾರಂಭವಾದದ್ದು 1925ರಲ್ಲಿ.

ಜಪಾನಿನ ಮುಖ್ಯ ನಗರಗಳನ್ನೂ ಅವುಗಳ ಜನಸಂಖ್ಯೆಗಳನ್ನೂ ಮುಂದೆಕೊಟ್ಟಿದೆ :

ಜಪಾನಿನ ನಾಣ್ಯ ಯೆನ್. ಒಂದು ಯೆನ್‍ಗೆ 100 ಸೆನ್, 1,000 ರಿನ್. ಮೆಟ್ರಿಕ್ ಅಳತೆ ತೂಕ ಪದ್ಧತಿ ಜಾರಿಯಲ್ಲಿದೆ. ಜೂಡೋ, ಸೂಮೋ (ಜಪಾನೀ ಕುಸ್ತಿ) ಮತ್ತು ಕೆಂಡೋ (ಕತ್ತಿವರಸೆ) ಪರಂಪರೆಯಿಂದ ಬಂದ ಕ್ರೀಡೆಗಳು. ಬೇಸ್ ಬಾಲ್, ಈಜು, ಸ್ಕೀಯಿಂಗ್, ಟೇಬಲ್-ಟೆನಿಸ್ ಇತರ ಪ್ರಮುಖ ಆಟಗಳು. ಗಾಲ್ಫ್ ಜನಪ್ರಿಯವಾಗುತ್ತಿದೆ. 1964ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. 1972ರಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡೆಗಳು ಸಪೋರೋದಲ್ಲಿ ನಡೆದುವು.

ಜಪಾನು ಕಚ್ಚಾ ಹತ್ತಿ. ಕಬ್ಬಿಣದ ಅದಿರು, ಉಣ್ಣೆ, ಬೀಡು ಕಬ್ಬಿಣ, ಪೆಟ್ರೋಲ್ ಮತ್ತು ರಾಸಾಯನಿಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಬಟ್ಟೆ, ರೇಷ್ಮೆ, ರೇಯಾನ್, ಸಿದ್ಧವಸ್ತುಗಳು, ಯಂತ್ರೋಪಕರಣಗಳು ಮತ್ತು ಹದ ಮಾಡಿದ ಮೀನು ರಫ್ತಾಗುತ್ತವೆ.

ಜಪಾನ್ ಪ್ರಾಚೀನಕಾಲದಿಂದಲೂ ರಾಜತ್ವವನ್ನು ಮನ್ನಿಸಿದ ದೇಶ. ರಾಜ ದೇವರ ಸಾಕ್ಷಾತ್ ಪ್ರತಿನಿಧಿಯೆಂದೇ ಜಪಾನೀಯರು ನಂಬಿದ್ದರು. ಅಲ್ಲಿ ಚಕ್ರವರ್ತಿಯ ನಿರಂಕುಶಾಧಿಕಾರವಿತ್ತು. ದೇಶದ ಒಳಗೆಲ್ಲ ಊಳಿಗಮಾನ್ಯ ವ್ಯವಸ್ಥೆಯ ಆಡಳಿತ ಸಾಮಾನ್ಯ ಲಕ್ಷಣವಾಗಿತ್ತು. ದೊಡ್ಡದೊಡ್ಡ ಭೂಮಾಲೀಕರು ಮತ್ತು ರಾಜಕೀಯ ನಾಯಕರು ಸ್ವತಃ ಸಾಮಂತ ಪ್ರಭುಗಳಂತೆ ಸ್ಥಳೀಯ ಜನತೆಯ ಮೇಲೆ ಅಧಿಕಾರ ನಡೆಸುತ್ತಿದ್ದರು. ಆದರೆ 19ನೆಯ ಶತಮಾನದಲ್ಲಿ ಅಲ್ಲೊಂದು ಹೊಸ ರಾಷ್ಟ್ರೀಯ ಭಾವನೆ ಬೆಳೆಯಿತು. ಇದರಿಂದಾಗಿ ತಮ್ಮ ರಾಷ್ಟ್ರೀಯ ಏಕತೆಯ ಸಂಕೇತವಾಗಿ ಮೇಜಿ ಚಕ್ರವರ್ತಿ 1868ರಲ್ಲಿ ಪುನಃಸ್ಥಾಪಿತನಾದ. ತರುವಾಯ ಪಾಶ್ಚಾತ್ಯ ಮಾದರಿಯ ಸಂವಿಧಾನಬದ್ಧ ಆಡಳಿತವ್ಯವಸ್ಥೆಯನ್ನು ರಚಿಸಲು ಜಪಾನೀಯರು ಮುಂದಾದರು. ಇದರ ಫಲವಾಗಿ ಆಡಳಿತದಲ್ಲಿ ಮಹತ್ತರ ಬದಲಾವಣೆಗಳಾದುವು.

ಎರಡು ಸದನಗಳ ಸಂಸತ್ತಿನಲ್ಲಿ ಮೇಲ್ಮನೆ ಪ್ರತಿಷ್ಠಿತರಿಂದ ಕೂಡಿದ್ದು ವಿಶೇಷ ಅಧಿಕಾರಗಳನ್ನು ಪಡೆಯಿತು. ಕೆಳಸದನಕ್ಕೆ ಕಾನೂನನ್ನು ಮಂಡಿಸುವ ಮತ್ತು ತೆರಿಗೆ ವಿಧಿಸುವ ವಿಧೇಯಕಗಳನ್ನು ಅಂಗೀಕರಿಸುವ ಅಧಿಕಾರವಿತ್ತು.

ಚಕ್ರವರ್ತಿ ಸೈನ್ಯದ ಮೇಲೆ ಸಂಪೂರ್ಣ ಅಧಿಕಾರ ಪಡೆದಿದ್ದ. ಯುದ್ಧ ಘೋಷಿಸಲು ಮತ್ತು ಶಾಂತಿ ಮಾಡಿಕೊಳ್ಳಲು ಅವನು ವಿಧಿಬದ್ಧ ಅಧಿಕಾರ ಪಡೆದಿದ್ದ. ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾದರೆ ಅಥವಾ ಯಾವುದೇ ಕಾನೂನು ಜಾರಿಗೆ ಬರಬೇಕಾದರೆ ಅದಕ್ಕೆ ಚಕ್ರವರ್ತಿಯ ಒಪ್ಪಿಗೆ ಅಗತ್ಯವಾಗಿತ್ತು. ಚುನಾವಣೆಯಲ್ಲಿ ಮತ ನೀಡುವವರು 15 ಯೆನ್ ತೆರಿಗೆ ಕೊಡುವಂಥ ಕನಿಷ್ಠ ಅರ್ಹತೆ ಪಡೆದಿರಬೇಕಾಗಿತ್ತು. ಕೆಲವರು ಅಭಿಪ್ರಾಯಪಡುವಂತೆ ಈ ಸಂವಿಧಾನದ ಅಳವಡಿಕೆಯ ಉದ್ದೇಶ ರಾಷ್ಟ್ರೀಯ ಏಕತೆಯನ್ನು ಸಾಧಿಸುವುದು ಮತ್ತು ಆಧುನಿಕ ಪಾಶ್ಚಾತ್ಯ ಮಾದರಿಯ ವೇಷದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸುವುದಾಗಿತ್ತೇ ವಿನಾ ನಿಜವಾದ ಪ್ರಜಾಪ್ರಭುತ್ವದ ಹಕ್ಕುಗಳನ್ನು ಜನತೆಗೆ ನೀಡುವುದಾಗಿರಲಿಲ್ಲ.

ಮೇಜಿ ಪುನಃಸ್ಥಾಪನೆಯ ಕಾಲದಲ್ಲಿ ರಾಷ್ಟ್ರದ ಹಿರಿಯ ನಾಯಕರಿಂದ ಕೂಡಿದ ಜೆóನ್ರೊ ಎಂಬ ಒಂದು ಮಂಡಲಿಯ ರಚನೆಯಾಯಿತು. ಅದು ಸರ್ಕಾರಕ್ಕೆ ರಾಜಕೀಯ ಸಲಹೆ ನೀಡುವುದಾಗಿತ್ತು. 1925ರಲ್ಲಿ ಸಾರ್ವತ್ರಿಕ ಮತದಾನ ಪದ್ಧತಿ ಜಾರಿಗೆ ಬಂತು. ಸರ್ಕಾರದ ರಚನೆಯಲ್ಲಿ ರಾಜಕೀಯ ಪಕ್ಷಗಳೂ ವಿಶೇಷ ಪಾತ್ರ ವಹಿಸುತ್ತಿದ್ದುವು. 1918ರಿಂದ 1931ರ ವರೆಗಿನ ಆಡಳಿತವನ್ನು ಜಪಾನಿನಲ್ಲಿ ಪಕ್ಷಗಳ ಸರ್ಕಾರದ ಕಾಲವೆಂದು ಕರೆಯಲಾಗಿದೆ. ಆದರೆ 1930ರ ದಶಕದಲ್ಲಿ ಯುದ್ಧಾಸಕ್ತ ವರ್ಗಗಳು ಪ್ರಬಲಿಸಿ ಸರ್ಕಾರದ ಮೇಲೆ ನಿಯಂತ್ರಣ ಪಡೆದುವು. ಇದರಿಂದ ಸಂವಿಧಾನಬದ್ಧ ಪ್ರಜಾಪ್ರಭುತ್ವ ನಶಿಸಿಹೋಯಿತು.

ಎರಡನೆಯ ಮಹಾಯುದ್ಧದಲ್ಲಿ ಜಪಾನನ್ನು ವಶಪಡಿಸಿಕೊಂಡ ಮೇಲೆ (1945) ಅದರ ಆಡಳಿತ ವಿಧಾನದಲ್ಲಿ ಅಪೂರ್ವ ಬದಲಾವಣೆಗಳಾದುವು. ಆಮೆರಿಕ ಜಪಾನಿನಲ್ಲಿ ಪ್ರಜಾಪ್ರಭುತ್ವ ಶಕ್ತಿ ಬೆಳೆಸುವ ಉದ್ದೇಶ ಹೊಂದಿತ್ತು. ಅ

ಅಮೆರಿಕನರು ಮತ್ತು ಜಪಾನೀಯರ ಸಂಯುಕ್ತ ಪ್ರಯತ್ನದಿಂದ 1947ರ ಮೇ 30ರಂದು ಒಂದು ಹೊಸ ಸಂವಿಧಾನ ಜಾರಿಗೆ ಬಂತು. ಇದನ್ನು 1889ರ ಸಂವಿಧಾನದ ಬದಲಿಗೆ ಅಳವಡಿಸಲಾಯಿತು.

ಈ ಹೊಸ ಸಂವಿಧಾನದಿಂದ ಚಕ್ರವರ್ತಿಯ ನಿರಂಕುಶ ಅಧಿಕಾರಗಳು ರದ್ದಾದುವು. ಅವನು ಸಾಂಕೇತಿಕವಾಗಿ ಸಂವಿಧಾನ ಮುಖ್ಯ. ಅಲ್ಲಿಯ ರಾಜತ್ವ ಬಹುತೇಕ ಇಂಗ್ಲೆಂಡಿನ ರಾಜತ್ವದ ಸ್ವರೂಪ ಪಡೆದುಕೊಂಡಿತು.

ಸರ್ವ ರಾಜಕೀಯ ಅಧಿಕಾರಗಳನ್ನೂ ಉಭಯ ಸದನಗಳುಳ್ಳ ಸಂಸತ್ತಿಗೆ ವಹಿಸಲಾಯಿತು. ಇದರ ಸದಸ್ಯರನ್ನು ಜನತೆ ಆರಿಸಬೇಕು. ಬಹುಮತ ಗಳಿಸಿದ ಪಕ್ಷ ಮಂತ್ರಿಮಂಡಲ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಸಂಸತ್ತಿಗೆ ಸಂವಿಧಾನದ ತಿದ್ದುಪಡೆಯ ಅಧಿಕಾರ ಇದೆ. ಇದಕ್ಕೆ 2/3 ಭಾಗ ಸದಸ್ಯರ ಬೆಂಬಲ ಅಗತ್ಯ.

ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಒಂದನ್ನು ಪ್ರತಿನಿಧಿ ಸಭೆಯೆಂದೂ ಇನ್ನೊಂದನ್ನು ಪರಿಷದ ಸಭೆಯೆಂದೂ ಕರೆಯಲಾಗಿದೆ. ಪ್ರತಿನಿಧಿ ಸಭೆಯಲ್ಲಿ ಸದಸ್ಯ ಸಂಖ್ಯೆ 486 (1971). ಪರಿಷದಸಭೆಯದು 250, ಪ್ರತಿನಿಧಿ ಸಭೆಯ ಸದಸ್ಯರನ್ನು ದೇಶಾದ್ಯಂತ ಇರುವ 118 ಚುನಾವಣಾ ಜಿಲ್ಲೆಗಳಿಂದ ಆರಿಸಲಾಗುತ್ತದೆ. ಇವರ ಅಧಿಕಾರಾವಧಿ ನಾಲ್ಕು ವರ್ಷ. ಪರಿಷತ್ತಿನ ಸದಸ್ಯರಲ್ಲಿ 100 ಜನ ಒಟ್ಟು ರಾಷ್ಟ್ರದಿಂದ ಆರಿಸಲ್ಪಟ್ಟಿರೆ ಇನ್ನು 150 ಜನ ಸದಸ್ಯರು ಪ್ರಿಪೆಕ್ಜರ್‍ಗಳಿಂದ (ಜಿಲ್ಲೆ) ಆರಿಸಲ್ಪಡುತ್ತಾರೆ. ಇದರ ಸದಸ್ಯರ ಅಧಿಕಾರಾವಧಿ 6 ವರ್ಷಗಳು. ಪ್ರತಿ ಮೂರು ವರ್ಷಗಳಿಗೊಮ್ಮೆ 1/3 ಭಾಗ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುವುದು. ಪ್ರತಿಯೊಬ್ಬ ಮತದಾರನಿಗೂ ಒಂದು ವರ್ಗದ ಸದಸ್ಯರನ್ನು ಆರಿಸಲು ಒಂದು ಮತದ ಹಕ್ಕಿರುತ್ತದೆ. ಕೆಳಸದನವನ್ನು ಮಂತ್ರಿ ಸಂಪುಟ ವಿಸರ್ಜಿಸಬಹುದು. ಆದರೆ 40 ದಿವಸಗಳೊಳಗಾಗಿ ಮರುಚುನಾವಣೆ ನಡೆಯಬೇಕಾಗುತ್ತದೆ. ಚುನಾವಣೆ ಆದ 30 ದಿನಗಳೊಳಗೆ ಸಂಸತ್ ಸಭೆ ಸೇರಬೇಕು.

ವ್ಯಕ್ತಿಗೌರವವನ್ನು ಹಕ್ಕುಗಳ ವಿಧೇಯಕದ ಮೂಲಕ ಎತ್ತಿ ಹಿಡಿಯಲಾಗಿದೆ. ಸಂವಿಧಾನದ ಯಾವುದೇ ತಿದ್ದುಪಡಿಯನ್ನು ಪರಿಶೀಲಿಸುವ ಅಧಿಕಾರ ಮತ್ತು ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರವನ್ನು ಜನತೆಗೆ ನೀಡಲಾಗಿದೆ. ಇಲ್ಲಿಯ ಪರಮೋಚ್ಚ ನ್ಯಾಯಾಲಯಕ್ಕೆ ಯಾವುದೇ ಕಾನೂನು ಸಂವಿಧಾನಬದ್ಧವಾಗಿದೆಯೆ ಇಲ್ಲವೆ ಎಂದು ನಿರ್ಣಯಿಸುವ ಅಧಿಕಾರ ಇದೆ. ಸಂವಿಧಾನದಲ್ಲಿ ನಾಗರಿಕರಿಗೆ ಪ್ರಜಾಪ್ರಭುತ್ವದಲ್ಲಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ನೀಡಲಾಗಿದೆ.

ನ್ಯಾಯಾಂಗ: 1947ಕ್ಕೆ ಹಿಂದೆ ನ್ಯಾಯಾಂಗ ಕಾರ್ಯಾಂಗಕ್ಕೆ ಅಧೀನವಾಗಿದ್ದಿತು. 1947ರ ಸಂವಿಧಾನದಲ್ಲಿ ನ್ಯಾಯಾಂಗವನ್ನು ಆಮೂಲಾಗ್ರವಾಗಿ ಬದಲಾಯಿಸಲಾಯಿತು. ಇದಕ್ಕನುಗುಣವಾಗಿ ನ್ಯಾಯಾಂಗ ಕಾರ್ಯಾಂಗದ ಹತೋಟಿಯಿಂದ ಮುಕ್ತಗೊಂಡಿತು. ಇದೊಂದು ಸ್ವತಂತ್ರ ಶಾಖೆಯಾಗಿ ರೂಪುಗೊಂಡಿತು.

ಪರಮೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಯಾವುದೇ ಕಾನೂನು ಅಥವಾ ನಿಬಂಧನೆ ಸಂವಿಧಾನಬದ್ಧವಾಗಿ ಇದೆಯೇ ಇಲ್ಲವೇ ಎಂದು ಅಂತಿಮವಾಗಿ ನಿರ್ಣಯಿಸುವ ಅಧಿಕಾರ ಇದಕ್ಕೆ ಇದೆ.

ಪರಮೋಚ್ಚ ನ್ಯಾಯಾಲಯದಲ್ಲಿ 15 ಜನ ನ್ಯಾಯಾಧೀಶರು ಇರುತ್ತಾರೆ. ಮುಖ್ಯ ನ್ಯಾಯಾಧೀಶನನ್ನು ಮಂತ್ರಿಮಂಡಲದ ಅನುಮೋದನೆಯ ಮೇರೆಗೆ ಚಕ್ರವರ್ತಿಯೇ ನೇಮಿಸಬೇಕು. ಉಳಿದ ನ್ಯಾಯಾಧೀಶರನ್ನು ಮಂತ್ರಿ ಮಂಡಲವೇ ನೇರವಾಗಿ ನೇಮಿಸುತ್ತದೆ. ಆದರೆ ಇಲ್ಲಿ ಅಳವಡಿಸಿದ ಹೊಸ ಸೂತ್ರವೆಂದರೆ, ಹೀಗೆ ನೇಮಿತರಾದ ನ್ಯಾಯಾಧೀಶರು ಮೊದಲ ಅವಧಿಗೆ ನೇಮಕವಾದ ಮೇಲೆ ಬರುವ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅವರ ನೇಮಕವನ್ನು ಅನುಮೋದಿಸಬೇಕು. ತರುವಾಯ ಪ್ರತಿ ಹತ್ತು ವರ್ಷಗಳಿಗೊಮ್ಮೆ ಈ ಅನುಮೋದನೆ ನಡೆಯಬೇಕು. ಮತದಾರರು ಅವರ ನೇಮಕವನ್ನು ತಿರಸ್ಕರಿಸಿದರೆ ಅಂಥವರು ತಮ್ಮ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ.

ಇತರ ನ್ಯಾಯಾಲಯಗಳಿಗೆ ಹತ್ತು ವರ್ಷಗಳ ಅವಧಿಗೆ ನ್ಯಾಯಾಧೀಶರನ್ನು ನೇಮಿಸಲಾಗುವುದು. ಸಂಸತ್ತಿನಿಂದ ಚುನಾಯಿತರಾದ 14 ಜನರ ಮಂಡಲಿಯೊಂದು ನ್ಯಾಯಾಧೀಶರುಗಳಲ್ಲಿ ಯಾರನ್ನೇ ಆದರೂ ಮಹಾಭಿಯೋಗಮಾಡಿ (ಇಂಪೀಚ್‍ಮೆಂಟ್) ಪದಚ್ಯುತಗೊಳಿಸಬಹುದು.

ಪರಮೊಚ್ಚ ನ್ಯಾಯಾಲಯದ ಕೆಳಗೆ 8 ಉನ್ನತ ನ್ಯಾಯಾಲಯಗಳೂ 49 ಜಿಲ್ಲಾ ನ್ಯಾಯಾಲಯಗಳೂ 570 ಸ್ಥಳೀಯ ನ್ಯಾಯಾಲಯಗಳೂ ಇವೆ. ಜಪಾನಿನಲ್ಲಿ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಲು ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆಯಿದೆ.

ಜಪಾನಿನಲ್ಲಿ ಏಷ್ಯದ ಇತರ ರಾಷ್ಟ್ರಗಳಿಗಿಂತ ಬಹು ಬೇಗ, 19ನೆಯ ಶತಮಾನದ ಉತ್ತರಾರ್ಧದಲ್ಲೇ, ರಾಜಕೀಯ ಪಕ್ಷಗಳು ಹುಟ್ಟಿಕೊಂಡುವು. ಸರ್ಕಾರದ ರಚನೆಯಲ್ಲಿ ಅವುಗಳ ಪಾತ್ರ ವಿಶೇಷವಾಗಿತ್ತು. 1918ರಿಂದ 1931ರ ವರೆಗಿನ ಆಡಳಿತದಲ್ಲಿ ರಾಜಕೀಯ ಪಕ್ಷಗಳು ಪರಿಣಾಮಕಾರಿ ಪಾತ್ರ ವಹಿಸಿದುವು. ಆದರೆ 1889ರ ಸಂವಿಧಾನದಲ್ಲಿ ಚಕ್ರವರ್ತಿಗೆ ಮತ್ತು ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರಗಳು ದತ್ತವಾಗಿದ್ದುದರಿಂದ ರಾಜಕೀಯ ಪಕ್ಷಗಳ ಅಧಿಕಾರವ್ಯಾಪ್ತಿ ಸೀಮಿತವಾಗಿತ್ತು. 1930ರ ದಶಕದಲ್ಲಿ ರಾಜ್ಯದ ಆಡಳಿತದಲ್ಲಿ ಯುದ್ಧಾಸಕ್ತ ವರ್ಗದ ಪ್ರಾಬಲ್ಯ ಹೆಚ್ಚಿದ್ದರಿಂದ ರಾಜಕೀಯ ಪಕ್ಷಗಳು ಗೌಣವಾದುವು. 1940ರಲ್ಲಿ ಎಲ್ಲ ಪಕ್ಷಗಳು ಸ್ವಇಚ್ಛೆಯಿಂದ ಸಾಮ್ರಾಜ್ಯ ಆಡಳಿತ ಸಹಾಯಕ ಸಂಘವೆಂಬ ಏಕೈಕ ಪಕ್ಷ ಸ್ಥಾಪಿತವಾಯಿತು.

ಲಿಬರಲ್ ಡೆಮೊಕ್ರಾಟಿಕ್ ಪಕ್ಷ ಈಗ ಆಡಳಿತ ನಡೆಸುತ್ತಿದೆ. ಸಮಾಜವಾದಿ ಮತ್ತು ಪ್ರಜಾಪ್ರಭುತ್ವ ಸಮಾಜವಾದಿ ಪಕ್ಷಗಳೂ ಜನಪ್ರಿಯವಾಗುತ್ತಿವೆ. ಶುದ್ಧ ಸರ್ಕಾರದ ಪಕ್ಷ 1964ರಲ್ಲಿ ಸ್ಥಾಪಿತವಾಯಿತು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ವರ್ಗದ ಹಿಡಿತದಿಂದ ಇಲ್ಲಿಯ ರಾಜಕೀಯ ಇನ್ನೂ ಪಾರಾಗಿಲ್ಲ.

ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಮೇಲ್ವಿಚಾರಣೆ ಗೃಹಖಾತೆಗೆ ಸೇರಿದ್ದು. ಟೋಕಿಯೋನಿನಂಥ ದೊಡ್ಡ ನಗರಗಳಿಗೆ ವಿಶೇಷ ಆಡಳಿತ ವ್ಯವಸ್ಥೆ ಇದೆ.

ಪ್ಲೀಸ್ಟೊಸೀನ್ ಯುಗದ ಅಂತ್ಯ ಭಾಗದಲ್ಲಿ ಜಪಾನಿನಲ್ಲಿ ಜನವಸತಿ ಇದ್ದ ಬಗ್ಗೆ ಹಲವು ಕುರುಹುಗಳು ಇತ್ತೀಚೆಗೆ ದೊರಕಿವೆ. ಹಾಕೈಡೋ ವಿಭಾಗದ ತಾರುಕೀಷಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ಪಟ್ಟೆಚಕ್ಕೆಯ ಶಿಲಾಯುಧ ಪ್ರಕಾರಗಳು ದೊರಕಿವೆ. ಅವು ಸುಮಾರು 13 ಅಥವಾ 12 ಸಾವಿರ ವರ್ಷಗಳಷ್ಟು ಹಳೆಯವೆಂದು ರೇಡಿಯೋ ಕಾರ್ಬನ್ ವಿಧಾನಗಳಿಂದ ತೀರ್ಮಾನಿಸಲಾಗಿದೆ. ಹಾಕೈಡೋ ವಿಭಾಗದ ಉತ್ತರದ ಪ್ರದೇಶಗಳಲ್ಲಿ, ಅದರಲ್ಲೂ ಯೂಬೆಟ್ಸು ನದೀ ಕಣಿವೆಯ ಷಿರತಾಕಿ ಮುಂತಾದ ನೆಲೆಗಳಲ್ಲಿ. ಈ ಶಿಲಾಯುಧ ಸಂಸ್ಕøತಿಯ ಸ್ತರಗಳು ಕಂಡುಬಂದಿವೆ. ಅವುಗಳ ಅತ್ಯಂತ ಪ್ರಾಚೀನ ಘಟ್ಟದಲ್ಲಿ ತುದಿಯಲ್ಲಿ ಸಣ್ಣ ಚಕ್ಕೆಗಳನ್ನು ಎತ್ತಿ ಪರಿಷ್ಕರಿಸಿದ ಉದ್ದನೆಯ ಹಾಗೂ ಚಿಕ್ಕ ಪಟ್ಟೆಚಕ್ಕೆ ಆಯುಧಗಳೂ ಉಪಯೋಗದಲ್ಲಿದ್ದುವೆಂದು ತಿಳಿಯುತ್ತದೆ. ಇನ್ನೂ ಮುಂದಿನ ಘಟ್ಟದಲ್ಲಿ ಕೊರೆಗ ಉಪಯೋಗದಲ್ಲಿದ್ದುವೆಂದು ತಿಳಿಯುತ್ತದೆ. ಇನ್ನೂ ಮುಂದಿನ ಘಟ್ಟದಲ್ಲಿ ಕೊರೆಗಗಳೂ. ಪಟ್ಟೆಚಕ್ಕೆಗಳನ್ನು ತೆಗೆಯಲು ಬಳಸಿದ ಮಾತೃಶಿಲೆಗಳೂ ಸಿಗುತ್ತವೆ. ಹಾಕೈಡೋದ ಕರಾವಳಿಯಲ್ಲಿ ಇದೇ ಸಂಸ್ಕøತಿ ಇನ್ನೊಂದು ರೂಪದಲ್ಲಿ ಕಾಣಸಿಗುತ್ತದೆ. ಇದರಲ್ಲಿ ಕೊರೆಗಗಳು, ಪಟ್ಟೆಚಕ್ಕೆಗಳು, ಉಜ್ಜಿ ನಯಗೊಳಿಸಿದ ಶಿಲಾಯುಧಗಳು, ಹಿಂದುಮುಂದಾಗಿ ಚಕ್ಕೆ ಎಬ್ಬಿಸಿ ಪರಿಷ್ಕರಿಸಿದ ಕಲ್ಲಿನ ಮೊನೆಗಳು ದೊರಕಿವೆ. ಇಲ್ಲಿಯ ಆಯುಧಗಳೆಲ್ಲ ಆಬ್ಸಿಡಿಯನ್ ಎಂಬ ನಯವಾದ ಗಾಜಿನಂಥ ಕಲ್ಲಿನಲ್ಲಿ ಮಾಡಿದವುಗಳು. ಹಾನ್ಷ್ಯೂ ವಿಭಾಗದಲ್ಲಿ ಎರೆಕಲ್ಲು ಬಳಕೆಯಲ್ಲಿತ್ತು. ಅಲ್ಲಿಯ ಸಂಸ್ಕøತಿಯಲ್ಲಿ ಕೊರೆಗಗಳೂ ಬರೆಯುವ ಸಾಧನಗಳೂ ಉಂಡೆಕಲ್ಲಿನಿಂದ ಮಾಡಿದ ಕೆಲವು ಆಯುಧಗಳೂ ಬೆಳಕಿಗೆ ಬಂದಿವೆ. ಕಾಂಟೋ ಬಯಲಿನ ಗೊಂಬೆನ್ಯಾಮದಲ್ಲಿ ಕೈಕೊಡಲಿಗಳು ಮತ್ತು ದೊಡ್ಡ ಚಕ್ಕೆಗಳು ಸಿಕ್ಕಿವೆ. ಇವು ಪ್ರಾಯಶಃ ಮೇಲಿನ ಸಂಸ್ಕøತಿಗಳಿಗಿಂತ ಹಿಂದಿನ ಕಾಲದವಿರಬಹುದೆಂದು ಊಹಿಸಲಾಗಿದೆ. ಇವೆಲ್ಲ ಬೇಟೆಗಾರ ಜನಾಂಗಗಳು ಉಪಯೋಗಿಸುತ್ತಿದ್ದ ಆಯುಧಗಳು. ಹೆಚ್ಚಿನ ನೆಲೆಗಳು ನದಿ ಅಥವಾ ಸರೋವರಗಳ ಪಕ್ಕಗಳಲ್ಲಿ, ಇಳಿಜಾರು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಈ ಶಿಲಾಯುಧ ಸಂಸ್ಕøತಿಗಳು ಚೀನ ಭೂಭಾಗದಿಂದ ಜಪಾನ್ ಪ್ರದೇಶಕ್ಕೆ ಬಂದಿರಬೇಕೆಂದು ಊಹೆ. ಪ್ಲೀಸ್ಟೊಸೀನ್ ಅಂತ್ಯದಲ್ಲಿ ಹಿಮಗಾಲದಲ್ಲಿ ಸಮುದ್ರಮಟ್ಟ ಕೆಳಕ್ಕೆ ಇಳಿದಿದ್ದುದರಿಂದ, ಅಂದು ಚೀನ ಮತ್ತು ಜಪಾನ್ ದ್ವೀಪಗಳು ಭೂಸೇತುವೆಗಳಿಂದ ಒಂದುಗೂಡಿದ್ದುದರಿಂದ, ಆ ಕಾಲದಲ್ಲೇ ಚೀನೀ ಭೂಭಾಗದಿಂದ ಜಪಾನಿಗೆ ಜನ ವಲಸೆ ಬಂದಿರಬೇಕೆಂದು ಅನೇಕ ವಿದ್ವಾಂಸರು ತರ್ಕಿಸಿದ್ದಾರೆ.

ಜಪಾನಿನಲ್ಲಿ ನೆಲೆ ಹೂಡಿದ್ದ ನವಶಿಲಾಯುಗ ಸಂಸ್ಕøತಿ ಕ್ರಿ.ಪೂ. 3-2ನೆಯ ಸಹಸ್ರಮಾನಗಳಲ್ಲಿ ಯಾವಾಗಲೋ ಪ್ರಾರಂಭವಾಯಿತು. ಈ ಸಂಸ್ಕøತಿಯ ಆದಿಘಟ್ಟವನ್ನು ಜೋಮೋನ್ ಎಂದು ಹೆಸರಿಸಲಾಗಿದೆ. ಈ ಘಟ್ಟದ ಕಾಲದ ವ್ಯಾಪ್ತಿ ಕ್ರಿ.ಪೂ. ಸು. 2500-250 ಇರಬಹುದು. ಈ ಘಟ್ಟದಲ್ಲಿ ವ್ಯವಸಾಯವಾಗಲಿ, ನಾಯಿಯ ವಿನಾ ಬೇರೆ ಪ್ರಾಣಿಗಳ ಸಾಕಣೆಯಾಗಲಿ ಇರಲಿಲ್ಲ. ಜನರು ಬೇಟೆಯಿಂದಲೂ ಮೀನು ಹಿಡಿದೂ ಜೀವನ ಸಾಗಿಸುತ್ತಿದ್ದರು. ನುಣುಪುಗೊಳಿಸಿದ ಆಯುಧಗಳು ಮತ್ತು ಮಡಕೆಗಳ ಉಪಯೋಗ ಪ್ರಾರಂಭವಾಗಿತ್ತು. ಮಡಕೆಗಳನ್ನು ಚಕ್ರದ ಉಪಯೋಗವಿಲ್ಲದೆ ಕೈಯಿಂದ ಮಾಡಿದ್ದರೂ ಹಗ್ಗದ ವಿನ್ಯಾಸದ ಉತ್ತಮ ಅಲಂಕರಣವನ್ನು ಅವುಗಳ ಮೇಲೆ ಮೂಡಿಸುವುದು ರೂಢಿಯಾಗಿತ್ತು. ಜನರು ಒಂದೇ ಕೋಣೆಯ ಮನೆಗಳಲ್ಲಿ ವಾಸಿಸುತ್ತಿದ್ದರು. ಇವು ನೆಲದಲ್ಲಿ ಅಗೆದು ಮಾಡಿದ ಗುಣಿಗಳು. ಗುಣಿಗಳ ಮಧ್ಯದಲ್ಲಿ ಒಂದು ಕಂಬ ನೆಟ್ಟು ಮೇಲೆ ಚಾವಣಿ ಹೊದಿಸುವ ಪದ್ಧತಿ ಇತ್ತು. ಈ ಸಂಸ್ಕøತಿಗೂ ಸಾಮ್ಯ ಇರುವುದರಿಂದ ಜಪಾನಿನ ಜೋಮೋನ್ ಸಂಸ್ಕøತಿ ಅತ್ತಣಿಂದ ಬಂದಿರಬಹುದೆಂದು ಊಹಿಸಲಾಗಿದೆ.

ಯಯೋಇ ಎಂಬುದು ಇಲ್ಲಿಯ ನವಶಿಲಾಯುಗ ಸಂಸ್ಕøತಿಯ ಮುಂದಿನ ಘಟ್ಟ. ಈ ಸಂಸ್ಕøತಿಗೂ ಏಷ್ಯದ ಮುಖ್ಯ ಭೂಭಾಗದ ಬತ್ತ ಬೆಳೆಯುವ ಪ್ರದೇಶಗಳಲ್ಲಿದ್ದ ಸಂಸ್ಕøತಿಗಳಿಗೂ ಬಹಳ ಸಂಬಂಧ ಇರುವುದರಿಂದ ಮೊದಲಾಗಿ ಈ ಸಂಸ್ಕøತಿಯನ್ನು ತಂದ ಜನ ರೀಯೂಕ್ಯೂ ದ್ವೀಪಗಳು ಮತ್ತು ಕೊರಿಯದ ಕಡೆಯಿಂದ ಜಪಾನಿನ ಕೀಯೂಷೂ ಪ್ರದೇಶದಲ್ಲಿ ಬಂದು ನೆಲಸಿ ಅಲ್ಲಿಂದ ಬೇರೆಡೆಗೆ ಪಸರಿಸಿರಬೇಕೆಂದು ತಿಳಿಯಲಾಗಿದೆ. ಯಯೋಇ ಸಂಸ್ಕøತಿಯ ಕಾಲದಲ್ಲಿ ಜನರು ಚಕ್ರದ ಮೇಲೆ ಮಾಡಿದ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ಬತ್ತದ ವ್ಯವಸಾಯದಿಂದ ಜನರ ಆರ್ಥಿಕ ಸ್ಥಿತಿ ಹಿಂದಿನ ಘಟ್ಟದ್ದಕ್ಕಿಂತ ಉತ್ತಮವಾಯಿತು. ಈ ಘಟ್ಟದ ಕೊನೆಯ ಭಾಗದಲ್ಲಿ ಏಷ್ಯದ ಉತ್ತರದ ನಾಡುಗಳಿಂದ ಕೊರಿಯದ ಮೂಲಕ ಹೊಸ ಜನರು ವಲಸೆ ಬಂದು ಈ ಸಂಸ್ಕøತಿಯಲ್ಲಿ ಹಲವು ಮಾರ್ಪಾಡುಗಳನ್ನು ಉಂಟು ಮಾಡಿದರು. ಅವರು ತಂದ ಹೊಸ ಅಂಶಗಳಲ್ಲಿ ಕಂಚಿನ ಉಪಯೋಗ ಮುಖ್ಯವಾದ್ದು. ಇದರ ಉಪಯೋಗ ಮೊದಲು ದಕ್ಷಿಣ ಜಪಾನಿನಲ್ಲಿ, ಅದರಲ್ಲೂ ಕೀಯೂಷೂ ಪ್ರದೇಶದಲ್ಲಿ ರೂಢಿಗೆ ಬಂದದ್ದರಿಂದ, ಅಲ್ಲಿಯವರು ಜಪಾನಿನ ಇತರೆಡೆಗಳಲ್ಲಿದ್ದ ಜನರಿಗಿಂತ ಹೆಚ್ಚು ಆರ್ಥಿಕ ಹಾಗೂ ಕ್ಷಾತ್ರಬಲ ಸಾಧಿಸಿಕೊಳ್ಳುವುದಕ್ಕೆ ಅವಕಾಶವಾಗಿ ಅಲ್ಲಿಯ ಸಂಸ್ಕøತಿ ಇತರ ಎಡೆಗಳಿಗೆ ಬೇಗ ಹರಡಲು ಕಾರಣವಾಯಿತು. ಜಪಾನಿನಲ್ಲಿ ಕಂಚಿನ ಯುಗ ಕ್ರಿ.ಪೂ. 2-3ನೆಯ ಶತಮಾನಗಳಲ್ಲಿ ಪ್ರಾರಂಭವಾಗಿ ಕ್ರಿ.ಶ. 2-3ನೆಯ ಶತಮಾನಗಳ ವರೆಗೂ ಮುಂದುವರಿಯಿತು.

ಕ್ರಿ.ಶ. 2ನೆಯ ಶತಮಾನದ ಹೊತ್ತಿಗೆ ಕಬ್ಬಿಣದ ಆಯುಧಗಳನ್ನು ಉಪಯೋಗಿಸುತ್ತಿದ್ದ ಚೀನೀ ಸಂಸ್ಕøತಿ ಕೊರಿಯದಲ್ಲಿ ಪ್ರಚಲಿತವಾಗಿತ್ತು. 3ನೆಯ ಶತಮಾನದ ಹೊತ್ತಿಗೆ ಅದು ಜಪಾನಿಗೂ ಹರಿಯಿತು. ಜಪಾನಿನಲ್ಲಿ ಕಬ್ಬಿಣದ ಯುಗ ಆರಂಭವಾದ ಮೇಲೆ ಲಭ್ಯವಾದ ಹೊಸ ತಂತ್ರಜ್ಞಾನದಿಂದ ಸಾಮಾಜಿಕ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳು ಆದುವು. 3ರಿಂದ 8ನೆಯ ಶತಮಾನದ ಅವಧಿಗೆ ಸೇರುವ ಹಲವಾರು ಬೃಹತ್ ಸಮಾಧಿಗಳು ಜಪಾನಿನ ಕರಾವಳಿ ಪ್ರದೇಶಗಳಲ್ಲಿ ಕಂಡುಬಂದಿವೆ. ಇವು ಆ ಕಾಲದ ಯೋಧಗಣಗಳ ಮುಖ್ಯರ ಸಮಾಧಿಗಳಿರಬೇಕೆಂದು ಊಹಿಸಲು ಆಧಾರಗಳಿವೆ. ಅಲ್ಲದೆ ಆ ಕಾಲದಲ್ಲಿ ಸಮಾಜ ಹಲವು ಅಂತಸ್ತುಗಳಾಗಿ ವಿಭಜಿತವಾಗಿತ್ತೆಂದೂ ತರ್ಕಿಸಬಹುದಾಗಿದೆ. ಆ ಕಾಲದ ಸಮಾಧಿಗಳು ಮಣ್ಣುಕಲ್ಲುಗಳಿಂದ ಮಾಡಿದವಾದರೂ ಕೆಲವು ಬಹು ದೊಡ್ಡವು. ನಿಂತೋಕು ರಾಜನದೆಂದು ಊಹಿಸಲಾಗಿರುವ ಒಂದು ಸಮಾಧಿ ಪ್ರಪಂಚದಲ್ಲೇ ಅತಿ ದೊಡ್ಡದು. ಇದನ್ನು ಕಟ್ಟಲು ಸುಮಾರು 5,000 ಜನ ಒಂದು ವರ್ಷ ಶ್ರಮಿಸಿರಬೇಕು. ಈ ಬೃಹತ್ ಸಮಾಧಿಗಳಲ್ಲಿ ಅನೇಕ ರೀತಿಯ ಆಯುಧಗಳು ಮತ್ತು ಆಭರಣಗಳನ್ನು ಮೃತನ ಜೊತೆಗೆ ಹೂಳಲಾಗುತ್ತಿತ್ತು. ಇಂಥ ವಸ್ತುಗಳ ಉಪಯೋಗ ಆ ಜನರ ಅನುಕೂಲ ಸ್ಥಿತಿಯನ್ನು ಸೂಚಿಸುತ್ತದೆ. ದುಡಿಮೆಯ ಬದಲು ಸುಲಭ ಆಕ್ರಮಣಗಳಿಂದ ಸಂಪತ್ತನ್ನು ಸಂಗ್ರಹಿಸುವವರು ಮಾತ್ರವೇ ಅದನ್ನು ಆ ರೀತಿ ವಿನಿಯೋಗ ಮಾಡಬಹುದು. ಈ ಕಾಲದ ಮಡಕೆಗಳು ಮತ್ತು ಆಯುಧಗಳು ಕೂಡ ಬಹಳ ಉತ್ತಮ ತಂತ್ರಗಳನ್ನು ಉಪಯೋಗಿಸಿ ತಯಾರಿಸಿದವು. ಮುಂದೆ ರಾಜಚಿಹ್ನೆಗಳಾಗಿ ಉಪಯೋಗಕ್ಕೆ ಬಂದ ಮಗತಮ ಎಂಬ ಬಾಗಿದ ಆಭರಣ, ಕತ್ತಿ ಹಾಗೂ ಕನ್ನಡಿಗಳು ಈ ಸಮಾಧಿಗಳಲ್ಲಿ ದೊರಕಿವೆ. ಅಲ್ಲದೆ ಒಳಭಾಗ ಟೊಳ್ಳಾಗಿರುವ ಹನೀವ ಎಂಬ ಮಣ್ಣಿನ ಬೊಂಬೆಗಳು ಈ ಸಮಾಧಿಗಳ ಜೊತೆಗೆ ಅಸಂಖ್ಯಾತವಾಗಿ ಸಿಗುತ್ತವೆ. ಈ ಹನೀವಗಳು ಯೋಧ, ಸ್ತ್ರೀ ಮತ್ತು ಕುದುರೆಗಳ, ಹಲವು ಬಾರಿ ಮನೆಗಳ, ಪ್ರತಿಕೃತಿಗಳು.

ಜಪಾನಿನ ಇತಿಹಾಸಕಾಲ ಯಾವಾಗ ಆರಂಭವಾಯಿತು ಎಂಬ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಕ್ರಿ.ಶ. 8ನೆಯ ಶತಮಾನದಿಂದೀಚಿನ ದೇಶೀಯ ಬರೆವಣಿಗೆಗಳ ಆಧಾರದ ಮೇಲೆ ಕೆಲವು ವಿಷಯಗಳು ತಿಳಿದುಬರುತ್ತವೆ. ಇಂಥ ಪ್ರಾಚೀನ ಗ್ರಂಥಗಳಲ್ಲಿ ಎರಡು ಬಹು ಮುಖ್ಯವಾದವು. ಒಂದು ಕ್ರಿ.ಶ. 712ರಲ್ಲಿ ರಚಿತವಾದ ಕೋಜಿಕಿ ಅಥವಾ ಪ್ರಾಚೀನ ವಿಚಾರಗಳ ದಫ್ತರ. 720ರಲ್ಲಿ ಬರೆಯಲಾದ ನಿಹೋನ್‍ಗಿ ಎಂಬುದು ಇನ್ನೊಂದು. ಈ ಗ್ರಂಥಗಳಲ್ಲಿ ಜಪಾನಿನಲ್ಲಿ ರಾಜಕೀಯ ಯುಗ ಹೇಗೆ ಪ್ರಾರಂಭವಾಯಿತೆಂಬುದನ್ನು ಕುರಿತ ಐತಿಹ್ಯಗಳು ಇವೆ. ಈ ಗ್ರಂಥಗಳ ಪ್ರಕಾರ ಕ್ರಿ.ಪೂ. 6ನೆಯ ಶತಮಾನಕ್ಕಿಂತ ಮೊದಲು ಅಮತ್ಯುರತೇರ ಕಾಮಿ ಎಂಬ ಸೂರ್ಯದೇವತೆ ಸ್ವರ್ಗಲೋಕದಿಂದ ಬಂದು ಜಪಾನ್ ದೇಶದಲ್ಲಿ ಮೊಟ್ಟಮೊದಲು ರಾಜ್ಯವೊಂದನ್ನು ಸ್ಥಾಪಿಸಿದಳೆಂದು ಗೊತ್ತಾಗುತ್ತದೆ. ಆಕೆಯ ಮೊಮ್ಮಗನಾದ ಜಿಮ್ಮು ಕ್ರಿ.ಪೂ. 660ರಲ್ಲಿ ರಾಜ್ಯ ಸೂತ್ರಗಳನ್ನು ಕೈಗೊಂಡು ಜಪಾನ್ ದೇಶದ ಮೊದಲನೆಯ ಚಕ್ರವರ್ತಿಯಾಗಿ ರಾಜ್ಯವಾಳಿದನೆಂದು ಈ ಗ್ರಂಥಗಳು ತಿಳಿಸುತ್ತವೆ. ಜಿಮ್ಮು ತನ್ನ ಅಜ್ಜಿಯಿಂದ ಒಂದು ಆಭರಣ, ಕತ್ತಿ ಮತ್ತು ಕನ್ನಡಿಯನ್ನು ತಂದ. ಈ ವಂಶಕ್ಕೆ ಸೇರಿದ ಚಕ್ರವರ್ತಿಗಳೇ ಅವ್ಯಾಹತವಾಗಿ ಜಪಾನನ್ನು ಆಳಿದರು. ಈ ಕಥೆಯ ಹಿಂದೆ ಐತಿಹಾಸಿಕ ಸತ್ಯವಿರಬಹುದೆಂದು ಊಹಿಸಿ ಆಧುನಿಕ ವಿದ್ವಾಂಸರು ಅದರ ಸಂಶೋಧನೆಗೆ ಶ್ರಮಿಸುತ್ತಿದ್ದಾರೆ. ಕ್ರಿ.ಶ. 8ನೆಯ ಶತಮಾನಕ್ಕೆ ಮುಂಚೆ ಈ ಐತಿಹ್ಯ ಈಗಿನ ರೂಪದಲ್ಲಿ ಬರೆಯಲ್ಪಟ್ಟಿರಲಿಲ್ಲ. ಚೀನೀಯರ ಸಂಪರ್ಕ ಪಡೆದ ಜಪಾನೀಯರು ತಮ್ಮ ರಾಜವಂಶವೂ ಚೀನದ ರಾಜವಂಶಕ್ಕೆ ಸಮಾನವಾದ್ದೆಂದು ಹೇಳಿಕೊಳ್ಳಲು ಈ ಮಾರ್ಗ ಹಿಡಿದಂತೆ ತೋರುತ್ತದೆ. ಈ ಐತಿಹ್ಯ ಈ ಶತಮಾನದ ಜಪಾನೀಯರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಅವರು ತಮ್ಮ ದೇಶದ ರಚನೆಯಲ್ಲಿ ದೈವಾಂಶದ ಪ್ರಭಾವವನ್ನು ದೃಢವಾಗಿ ನಂಬಿದ್ದಾರೆ. ಚಕ್ರವರ್ತಿ ಸೂರ್ಯದೇವತೆಯಿಂದ ನೇಮಕನಾದವನೂ ಆಕೆಯ ವಂಶಸ್ಥನೂ ಆದ್ದರಿಂದ ಆತ ದೈವಾಂಶ ಸಂಭೂತನೆಂದು ಸಮರ್ಥಿಸುತ್ತಾರೆ. ಮೊದಲನೆಯ ಚಕ್ರವರ್ತಿ ಜಿಮ್ಮುವಿಗೆ ತನ್ನ ಅಜ್ಜಿಯಿಂದ ದೊರಕಿತೆನ್ನಲಾದ ಆಭರಣವೂ ಖಡ್ಗವೂ ಕನ್ನಡಿಯೂ ಜಪಾನೀಯರ ರಾಜಚಿಹ್ನೆಗಳು.

ಕ್ರಿ.ಪೂ. 660ರಿಂದ ಕ್ರಿ.ಶ. 531ರ ವರೆಗಿನ ಕಾಲವನ್ನು ಸಾಂಪ್ರದಾಯಿಕ ಕಾಲವೆಂದು ಕರೆಯಬಹುದು. ಈ ಕಾಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಜಪಾನೀಯರ ಪ್ರಾಚೀನ ಗ್ರಂಥಗಳಾದ ಕೋಜಿಕಿ ಮತ್ತು ನಿಹೋನ್‍ಗಿ ಸಹಾಯಮಾಡುತ್ತವೆ. ತಾವು ಯಮಟೋ ಕುಲದವರೆಂದು ಜಪಾನೀಯರ ಹೆಮ್ಮೆ. ಯಮಟೋ ಜನಾಂಗ ದೇಶದಲ್ಲಿ ಶಾಂತವಾಗಿ ನೆಲಸಿದ ಮೇಲೆ ರಾಜಕೀಯ ವ್ಯವಸ್ಥೆ ಪ್ರಾರಂಭವಾಯಿತು. ಅರಸು ಮನೆತನಗಳು ಆದಿವಾಸಿ ಮನೆತನಗಳೆಂದೂ ಮಿಕ್ಕೆಲ್ಲ ಜನರ ಮನೆತನಗಳು ಅವುಗಳ ಕವಲುಗಳೆಂದೂ ಆಗಿನ ಜನರ ನಂಬಿಕೆಯಾಗಿತ್ತು. ಅದರಂತೆ ರಾಜನೇ ಸರ್ವಕ್ಕೂ ಒಡೆಯನೆಂದು ತಿಳಿದು, ಜನ ಅವನ ವಶಕ್ಕೆ ರಾಜ್ಯವನ್ನು ಒಪ್ಪಿಸಿ ತಾವು ಆತನ ಅಪ್ಪಣೆಯಂತೆ ನಡೆದುಕೊಳ್ಳುತ್ತಿದ್ದರು. ಇಚುಮೋ ಮತ್ತು ಯಮಟೋಗಳು ಜಪಾನೀಯರ ಸಾಂಸ್ಕøತಿಕ ಕೇಂದ್ರಗಳಾಗಿದ್ದುವು. ಭೌದ್ಧ ಧರ್ಮ ಜಪಾನಿನ ರಾಷ್ಟ್ರಧರ್ಮವೆಂದು ಅಧಿಕೃತವಾಗಿ ಘೋಷಿತವಾಯಿತು. 604ರಲ್ಲಿ ಜಪಾನಿನ ಇತಿಹಾಸದಲ್ಲೆ ಮೊದಲ ಬಾರಿಗೆ ಸಂವಿಧಾನದ ರಚನೆಯಾಯಿತು. 646ರಲ್ಲಿ ಚಕ್ರವರ್ತಿ ಕೊತುಕು ಚೀನದ ಟ್ಯಾಂಗ್ ಆಡಳಿತದಂತೆ ಹೊಸರೀತಿಯ ಆಡಳಿತವನ್ನು ವ್ಯವಸ್ಥೆಗೊಳಿಸಿದ.

ಎಂಟನೆಯ ಶತಮಾದಿಂದೀಚಿನ ಜಪಾನೀಯರ ಇತಿಹಾಸವನ್ನು ಈ ರೀತಿ ಸ್ಥೂಲವಾಗಿ ವಿಭಾಗಿಸಬಹುದು ; 1 ನಾರಾ ಕಾಲ (710-784), 2 ಹೀಯಾನ್ ಕಾಲ (484-1185), 3 ಕಾಮಾಕುರಾ ಕಾಲ (1185-1336), 4 ಆಷಿಕಾಗ ಕಾಲ (1336-1603), 5 ಟೋಕುಗಾವಾ ಕಾಲ (1603-1868), 6 ಆಧುನಿಕ ಕಾಲ (1868ರಿಂದ ಈಚೆಗೆ).

ನಾರಾ ಎಂಬುದನ್ನು ಖಾಯಂ ರಾಜಧಾನಿಯಾಗಿ ಮಾಡಿಕೊಂಡು ಆಳಿದ ಜಪಾನೀ ಚಕ್ರವರ್ತಿಗಳ ಕಾಲ ಇದು. ಎಂಟನೆಯ ಶತಮಾನಕ್ಕೆ ಹಿಂದೆ ಜಪಾನಿನಲ್ಲಿ ಒಂದು ಖಾಯಂ ರಾಜಧಾನಿ ಇರಲಿಲ್ಲ. ರಾಜನ ಆಸ್ಥಾನ ಊರಿಂದೂರಿಗೆ ಚಲಿಸುತ್ತಿತ್ತು. ಸರ್ಕಾರ ಸಂಕೀರ್ಣವಾದಾಗ ಒಂದುs ಸ್ಥಿರ ರಾಜಧಾನಿಯ ಅಗತ್ಯವಾಯಿತು. ಅದಕ್ಕಾಗಿ ಆಯ್ಕೆಯಾದ್ದು ನಾರಾ. ಆದ್ದರಿಂದ ಆಗಿನ ಕಾಲಕ್ಕೆ ನಾರಾ ಕಾಲವೆಂದೇ ಹೆಸರಾಗಿದೆ. ಜಪಾನಿನ ಇತಿಹಾಸದಲ್ಲಿ ಈ ಕಾಲ ಮಹತ್ತ್ವಪೂರ್ಣವಾದ್ದು. ಜಪಾನೀಯರ ಧರ್ಮ, ಕಲೆ, ಸಾಹಿತ್ಯ. ಜನಜೀವನಗಳು ಚೀನದ ಸಂಸ್ಕøತಿಯಿಂದ ಪ್ರಭಾವಗೊಂಡು ಬೆಳೆದುವು. ಈ ಕಾಲದಲ್ಲಿದ್ದ ಸೋಕೋಕು ಎಂಬ ಚಕ್ರವರ್ತಿ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ, ಅದು ದೇಶದಲ್ಲೆಲ್ಲ ಹರಡಲು ಕಾರಣವಾಗಿ, ಜಪಾನಿನ ಅಶೋಕ ಚಕ್ರವರ್ತಿ ಎಂಬ ಕೀರ್ತಿ ಪಡೆದ. ಅಶೋಕನಂತೆ ಇವನೂ ಬೌದ್ಧಧರ್ಮದ ಪ್ರಚಾರದ ಜೊತೆಗೆ ದೇಶದಲ್ಲೆಲ್ಲ ಪ್ರಜೆಗಳ ಸೌಕರ್ಯಕ್ಕಾಗಿ ಛತ್ರಗಳನ್ನೂ ಔಷಧಾಲಯಗಳನ್ನೂ ಕಟ್ಟಿಸಿದ. ಚೀನದಿಂದ ಶಿಲ್ಪಿಗಳನ್ನು ಕರೆಸಿಕೊಂಡು ಅನೇಕ ಬೌದ್ಧ ದೇವಾಲಯಗಳನ್ನು ನಿರ್ಮಿಸಿದ. ರಾಜಧಾನಿ ನಾರಾದಲ್ಲಿ ಇಂದಿಗೂ ಆ ಭವ್ಯ ವೈಭವವನ್ನು ಪ್ರತಿನಿಧಿಸುವ ಐತಿಹಾಸಿಕ ಸ್ಮಾರಕಗಳಿವೆ. ಜಪಾನಿನಲ್ಲಿ ಇಂದಿಗೂ ಪ್ರಸಿದ್ಧವಾಗಿರುವ ತೋದೈಜಿ, ಯಾಕುಕ್ಷೀಜೀ, ಹೊರ್ಯೂಜಿ ಮೊದಲಾದ ಬೌದ್ಧ ದೇವಾಲಯಗಳು ಆ ಕಾಲದಲ್ಲಿ ನಿರ್ಮಿತವಾದುವು. ಬೌದ್ಧಧರ್ಮ ರಾಷ್ಟ್ರದ ಸೊತ್ತೆಂದು ಘೋಷಿಸಲಾಯಿತು. ಆ ಧರ್ಮ ರಾಷ್ಟ್ರದ ಕಾನೂನಿನ ರಚನೆಯ ಮೇಲೆ ಪ್ರಭಾವ ಬೀರಿತು. ಪ್ರಖ್ಯಾತ ವ್ಯಕ್ತಿ ಸತ್ತಾಗ ಅವನ ಅನುಯಾಯಿಗಳು ಆತ್ಮಾರ್ಪಣೆ ಮಾಡಿಕೊಳ್ಳುವ ಪ್ರಾಚೀನ ಸಂಪ್ರದಾಯವನ್ನು ನಿಷೇಧಿಸಲಾಯಿತು. ಅಂತೆಯೇ ಅಪರಾಧಿಗಳಿಗೆ ಕೆಲವೊಂದು ಸಂದರ್ಭಗಳಲ್ಲಿ ವಿಶೇಷ ಕ್ಷಮೆ ನೀಡುವುದನ್ನು ಜಾರಿಗೆ ತರಲಾಯಿತು. ಇದಲ್ಲದೆ ವಿಶೇಷ ದಿವಸಗಳಲ್ಲಿ ಬೌದ್ಧಧರ್ಮದ ಮಠಾಧಿಪತಿಗಳು ರಾಜಕೀಯದಲ್ಲೂ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು.

ಆ ಕಾಲದಲ್ಲಿ ಸಾಹಿತ್ಯದ ನಿರ್ಮಾಣ ಆಯಿತು. ಪ್ರಾಚೀನ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿರುವ ಹಾಗೂ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುವ ಕೋಜಿಕಿ ಮತ್ತು ನಿಹೋನ್‍ಗಿಗಳು ರಚಿಸಲ್ಪಟ್ಟುವು. ಮಾನ್ಯೋಷೂ ಎಂಬುದು ಈ ಕಾಲದ ಪ್ರಮುಖ ಸಾಹಿತ್ಯ ಗ್ರಂಥ. ಜಪಾನೀಯರು ಕಾವ್ಯದಲ್ಲಿ ಪ್ರಣಯ ಮತ್ತು ಪ್ರಕೃತಿವರ್ಣನೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಿದಂತೆ ಕಾಣುತ್ತದೆ.

ಈ ಕಾಲದ ರಾಜಕೀಯ ಜೀವನದಲ್ಲಿ ಚಕ್ರವರ್ತಿಗಳಿಗಿಂತ ಪಾಳೆಯಗಾರರ ಪ್ರಭಾವವೇ ಹೆಚ್ಚಾಗಿತ್ತು. ನಾಲ್ಕು ಜನ ಚಕ್ರವರ್ತಿನಿಯರು ಆಳ್ವಿಕೆ ನಡೆಸಿದ್ದು ಈ ಕಾಲದ ಮತ್ತೊಂದು ವಿಶೇಷ. ಸೋಕೋಕು ವಂಶೀಯರ ಆಳ್ವಿಕೆಯ ಅನಂತರ ಕಮ್ಮು ಎಂಬವನು ಪಟ್ಟಕ್ಕೆ ಬಂದು 784ರಲ್ಲಿ ಹೊಸ ಯುಗವೊಂದನ್ನು ಪ್ರಾರಂಭಿಸಿದ.

ಈ ಅವಧಿಯಲ್ಲಿ ಜಪಾನಿನ ರಾಜಧಾನಿಯನ್ನು ನಾರಾ ಪಟ್ಟಣದಿಂದ ಹೊಸದಾಗಿ ನಿರ್ಮಿತವಾದ ಕೀಯೋಟೋಗೆ ವರ್ಗಾಯಿಸಲಾಯಿತು. ನಾರಾ ಪಟ್ಟಣದ ಬೌದ್ಧಧರ್ಮೀಯ ಮುಖಂಡರ ವಿಶೇಷ ರಾಜಕೀಯ ಪ್ರಭಾವಗಳಿಂದ ಬಿಡುಗಡೆ ಪಡೆಯುವುದೂ ಸಂಪರ್ಕದ ದೃಷ್ಟಿಯಿಂದ ಕೀಯೋಟೋ ಉತ್ತಮವಾಗಿದ್ದುದೂ ಈ ಬದಲಾವಣೆಗೆ ಕಾರಣಗಳು. ಚಕ್ರವರ್ತಿ ಕಮ್ಮು (781-806) ಈ ಪಟ್ಟಣದ ನಿರ್ಮಾಪಕ. ಚೀನೀಯರ ಪ್ರಭಾವ ಇಲ್ಲೂ ಎದ್ದುಕಾಣುತ್ತಿತ್ತು. 1867ರ ವರೆಗೆ ಈ ಪಟ್ಟಣ ಜಪಾನೀ ಚಕ್ರವರ್ತಿಗಳ ಕೇಂದ್ರವಾಗಿ ಮುಂದುವರಿಯಿತು. ಜಪಾನ್ ದೇಶದ ಪ್ರಾಚೀನ ಕಲಾಕೌಶಲಗಳಿಗೆ ತವರುಮನೆಯಾಗಿ ಕೀಯೋಟೋ ನಗರ ಇಂದಿಗೂ ಮೆರೆಯುತ್ತಿದೆ.

ಹೀಯಾನ್ ಕಾಲದಲ್ಲಿ ಕಾನಾ ವರ್ಣಮಾಲೆ ಪ್ರಚಾರಕ್ಕೆ ಬಂತು. ಇದರಿಂದ ಸಾಹಿತ್ಯದ ಬೆಳವಣಿಗೆಯಾಯಿತು. ಪುರುಷರು ಹೆಚ್ಚಾಗಿ ಯುದ್ಧಕಾರ್ಯಗಳಲ್ಲಿ ನಿರತರಾದ್ದರಿಂದಲೋ ಏನೋ, ಆ ಕಾಲದ ಸಾಹಿತ್ಯ ನಿರ್ಮಾಣ ಆಸ್ಥಾನದ ಪ್ರತಿಭಾವಂತ ಸ್ತ್ರೀಯರಿಗೆ ಸೀಮಿತವಾಯಿತು. ಆಗಿನ ಜಪಾನೀ ಸ್ತ್ರೀಯರು ರಚಿಸಿದ ಗದ್ಯಗ್ರಂಥಗಳು ಜಪಾನೀ ಭಾಷೆಯ ಪ್ರಾಚೀನ ಗದ್ಯಶೈಲಿಯ ಮಾದರಿಗಳಾಗಿವೆ. ಮುರಾಸಾಕಿ ಷಿಕಿಬು ಎಂಬವನು ರಚಿಸಿದ ಗೆಂಜಿ ಮನೊಗತಾರಿ ಅಥವಾ ಗೆಂಜಿಯ ಕತೆಗಳು ಎಂಬ ಗ್ರಂಥ ವಿಶ್ವಸಾಹಿತ್ಯದ ಅಗ್ರಕೃತಿಗಳ ಪಂಕ್ತಿಗೆ ಸೇರುತ್ತದೆ. ಮುರಾಸಾಕಿ ದಿನಚರಿಯೊಂದನ್ನೂ ಬರೆದ. ಸೆಯಿ ಷೊನಗನ್ ಎಂಬವಳು ಮಕೂರ-ನೋ-ಸೋಷಿ ಎಂಬ ದಿನಚರಿ ಬರೆದಿದ್ದಾಳೆ. ಕೊಂಕಿನ್‍ಷೂ ಎಂಬ ಪದ್ಯಸಂಕಲನವೂ ಈ ಕಾಲಕ್ಕೆ ಸೇರಿದ್ದು. ಈ ಗ್ರಂಥದಲ್ಲಿ ಪ್ರಣಯ ಮತ್ತು ಪ್ರಕೃತಿ ವರ್ಣನೆಗಳು ಹೆಚ್ಚಾಗಿ ಬಂದಿವೆ.

ರಾಷ್ಟ್ರದ ಆಡಳಿತದಲ್ಲಿ ಚಕ್ರವರ್ತಿಗಿಂತ ಪಾಳೆಯಗಾರರ ಮನೆತನಗಳು ಹೆಚ್ಚು ಪ್ರಭಾವಶಾಲಿಗಳಾಗಿದ್ದುವು. ಪ್ರಾಚೀನ ಕಾಲದಲ್ಲಿ ಸಾಮೂಹಿಕ ಅನುಭವದಲ್ಲಿದ್ದ ಜಮೀನುಗಳು ಈ ಕಾಲದಲ್ಲಿ ಖಾಸಗಿ ಜಮೀನುಗಳಾಗಿ ಪರಿವರ್ತನೆಗೊಂಡುವು. ಈ ಬದಲಾವಣೆಯನ್ನು ಚಕ್ರವರ್ತಿಗಳು ವಿರೋಧಿಸಿದರೂ ಪ್ರಯೋಜನವಾಗಲಿಲ್ಲ. ಕೆಲವು ವರ್ಷಗಳೊಳಗಾಗಿ ಹಲವು ಪ್ರಬಲ ಪಾಳೆಯಗಾರ ಮನೆತನಗಳು ತಲೆಯೆತ್ತಿದವು. ಹೆಚ್ಚು ಬಲಿಷ್ಠವಾದ ಫುಜಿವಾರ ಮನೆತನ ರಾಜ್ಯಸೂತ್ರಗಳನ್ನು ವಹಿಸಿಕೊಂಡು ಚಕ್ರವರ್ತಿಯನ್ನು ಉತ್ಸವಮೂರ್ತಿಯನ್ನಾಗಿ ಮಾಡಿತು. ಫುಜಿವಾರ ಮನೆತನ ಜಪಾನಿಗೆ ಶ್ರೇಷ್ಠ ಆಡಳಿತಗಾರರನ್ನೂ ಪಂಡಿತರನ್ನೂ ಕೊಟ್ಟಿತು. ಈ ಮನೆತನದವರು ಅಶಕ್ತರಾದ ತರುವಾಯ ಟಾಯಿರಾ (1160-85) ಮತ್ತು ಮಿನಾಮೊಮೊ (1185-1219) ಮನೆತನಗಳು ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದವು. 1185ರಲ್ಲಿ ಮಿನಾಮೊಟೊ ಮನೆತನದವರು ಟಾಯಿರಾ ಮನೆತನದವರನ್ನು ಹತ್ತಿಕ್ಕಿ ಪ್ರಾಬಲ್ಯಕ್ಕೆ ಬಂದು, ಕಾಮಾಕುರಾ ಪಟ್ಟಣದಲ್ಲಿ ಆಳ್ವಿಕೆ ಪ್ರಾರಂಭಿಸಿದರು.

ಇದನ್ನು ಸಾಮುರೈ ಕಾಲವೆಂದು ಕರೆಯುವುದುಂಟು. ಸಾಮುರೈ ಎಂದರೆ ಕ್ಷತ್ರಿಯರು, ಯುದ್ಧ ಶೌರ್ಯ ಸಾಹಸ ಪ್ರದರ್ಶನಗಳಲ್ಲೇ ನಿರತರಾದ-ಅದಕ್ಕಾಗಿ ಶಿಕ್ಷಣ ಪಡೆದ-ಪ್ರಾಣವನ್ನು ಮೀಸಲಾಗಿಟ್ಟ-ಜನರು. ಮಿನಾಮೊಟೊ ಮನೆತನದ ಯೊರಿಟೊಮೊ ಎಂಬ ಪಾಳೆಯಗಾರ ಇತರ ಸಣ್ಣಪುಟ್ಟ ಪಾಳೆಯಗಾರರನ್ನು ಜಯಿಸಿ, ಚಕ್ರವರ್ತಿಗಳ ರಾಜಧಾನಿಯಾದ ಕೀಯೋಟೋ ಪಟ್ಟಣಕ್ಕೆ 300 ಮೈ. ದೂರದಲ್ಲಿ ಕಾಮಾಕುರಾ ಪಟ್ಟಣವನ್ನು ಕಟ್ಟಿಕೊಂಡು ರಾಜ್ಯವಾಳತೊಡಗಿದ (1192-98). 1192ರಲ್ಲಿ ಜಪಾನಿನ ಚಕ್ರವರ್ತಿ ಈತನಿಗೆ ಸೆಯಿ ತೈಷೋಗುನ್ ಅಥವಾ ಮುಖ್ಯ ಸೇನಾಪತಿ ಎಂಬ ಬಿರುದನ್ನಿತ್ತ. ಈತನ ಕೈಯಲ್ಲೇ ರಾಜ್ಯದ ಆಡಳಿತ ಸೂತ್ರಗಳೆಲ್ಲ ಇದ್ದುವು. ಚಕ್ರವರ್ತಿ ಹೆಸರಿಗೆ ಮಾತ್ರ ಆಡಳಿತದ ಮುಖ್ಯಸ್ಥ. ಅವವನ್ನು ದೇವಾಂಶ ಸಂಭೂತನೆಂದು ಪೂಜಿಸುತ್ತಿದ್ದದ್ದುಂಟು. ಮಿನಾಮೊಟೊ ಮನೆತನದ ಈ ಪಾಳೆಯಗಾರ ಹೆಚ್ಚಿನಮಟ್ಟಿಗೆ ಸರಳ ಜೀವನ ನಡೆಸುತ್ತ ರಾಜ್ಯಕ್ಕೆ ಹೆಚ್ಚು ಸಹಾಯ ಮಾಡುತ್ತಿದ್ದ. ಇವನ ವಂಶೀಯರಿಗೂ ಇವನ ಗುಣಗಳೇ ಇದ್ದುವು.

ರಾಜ್ಯದ ಭದ್ರತೆಗಾಗಿ ಯೊರಿಟೊಮೊ ಸೈನಿಕರನ್ನೆಲ್ಲ ಒಟ್ಟುಗೂಡಿಸಿ, ಅವರಿಗೆ ಕ್ಷಾತ್ರಧರ್ಮವನ್ನು ಬೋಧಿಸಿದ. ಪ್ರತಿಯೊಬ್ಬ ಯೋಧನೂ ಪ್ರಮಾಣಿಕನಾಗಿರಬೇಕು; ಸರಳ ಜೀವನ ನಡೆಸಬೇಕು; ಅಬಲರಿಗೆ, ಅಶಕ್ತರಿಗೆ ನೆರವಾಗಬೇಕು. ಸಮಯ ಬಂದಾಗ ದೇಶಕ್ಕಾಗಿಯೂ, ಚಕ್ರವರ್ತಿಗಳಿಗಾಗಿಯೂ ಪ್ರಾಣವನ್ನು ಧಾರೆಯೆರೆಯಲು ಸಿದ್ಧನಿರಬೇಕು ಎಂದು ಉಪದೇಶಿಸಿದ. ಮೇಲ್ಕಂಡ ಸೂತ್ರಗಳನ್ನೊಳಗೊಂಡ ಬೂಷೀಡೋ ಸಂಪ್ರದಾಯ ಇತ್ತೀಚಿನವರೆಗೂ ಪ್ರಖ್ಯಾತವಾಗಿತ್ತು.

ಯೊರಿಟೊಮೊ ಮರಣಹೊಂದಿದ ಮೇಲೆ, ಷೋಗುನ್‍ಗೆ (ಸೇನಾಪತಿ, ಸರ್ವಾಧಿಕಾರಿ) ಅಧೀನರಾಗಿದ್ದ, ಸೇವಕರಾಗಿದ್ದ ಹೋಜೋಗಳ ಮನೆತನ ಪ್ರಾಬಲ್ಯಕ್ಕೆ ಬಂತು. ಚೀನೀ ಚಕ್ರವರ್ತಿಯಾಗಿದ್ದ ಕೂಬ್ಲೈಖಾನ್ ಜಪಾನು ತನಗೆ ಕಪ್ಪಕಾಣಿಕೆ ಕೊಟ್ಟು ಆಶ್ರಿತ ಸಂಸ್ಥಾನವಾಗಿರಬೇಕೆಂದೂ ಇಲ್ಲದಿದ್ದರೆ ಅದರ ಮೇಲೆ ದಂಡೆತ್ತಿ ಬರುವುದಾಗಿಯೂ ಜಪಾನಿನ ಪಾಳೆಯಗಾರನಿಗೆ ಪತ್ರ ಬರೆದ. ಜಪಾನೀಯರು ಇದಕ್ಕೆ ಒಪ್ಪಲಿಲ್ಲ. 1280-81ರಲ್ಲಿ ಅವನು ಜಪಾನಿನ ಮೇಲೆ ದಾಳಿಮಾಡಲು ನೌಕಾಪಡೆಯೊಂದನ್ನು ಕಳುಹಿಸಿಕೊಟ್ಟ. ಹೋಜೋಗಳು ವೀರಾವೇಶದಿಂದ ಹೋರಾಡಿ, ನೌಕಾಪಡೆಯನ್ನು ನಾಶಮಾಡಿ, ದೇಶವನ್ನು ದಾಳಿಯಿಂದ ರಕ್ಷಿಸಿದರು. ಈ ಘಟನೆ ನಡೆದ ಸ್ವಲ್ಪ ಕಾಲದಲ್ಲೇ ಹೋಜೋ ಮನೆತನ ಅವನತಿ ಹೊಂದಿತು. ಚಕ್ರವರ್ತಿ ಗೊ-ದೈಗೊ (ಇಮ್ಮಡಿ ದೈಗೊ) ಹೋಜೋಗಳ ವಿರುದ್ಧ ಸಂಚು ನಡೆಸಿ ವಿಫಲನಾಗಿ ಸಿಂಹಾಸನ ಕಳೆದುಕೊಂಡು ಸೆರೆ ಸಿಕ್ಕಿ ದೇಶಭ್ರಷ್ಟನಾದ (1333); ಮತ್ತೆ ಬಂದು ಆಡಳಿತ ನಡಸಿದ; ಮತ್ತೆ ಓಡಿಸಲ್ಪಟ್ಟ. ಆಷಿಕಾಗ ಸರ್ವಾಧಿಕಾರಿ ಮನೆತನ ಪ್ರಬಲವಾಯಿತು. ರಾಜಮನೆತನದ ಮತ್ತೊಂದು ಕುಡಿಯ ವ್ಯಕ್ತಿಯೊಬ್ಬನನ್ನು ಸಿಂಹಾಸನಕ್ಕೆ ತರಲಾಯಿತು.

ಕಾಮಾಕುರಾ ಕಾಲದಲ್ಲಿ ಬೌದ್ಧ ಭಿಕ್ಷುಗಳು ಹಳ್ಳಿಹಳ್ಳಿಗೂ ಹೋಗಿ ಧರ್ಮಪ್ರಸಾರ ಮಾಡಿದರು. ಜೆóನ್ ಬೌದ್ಧಪಂಥವೇ ಮೊದಲಾದವು ಈ ಕಾಲದಲ್ಲಿ ಉಗಮವಾದುವು. ಸ್ತ್ರೀಯರ ಶಿಕ್ಷಣದಲ್ಲಿ ಬಟ್ಟೆ ಹೊಲಿಯುವ, ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವ ವಿಷಯಗಳು ಸೇರಿದ್ದುವು. ಚೀನದ ಸೂಂಗ್ ಮತ್ತು ಟಾಂಗ್ ಅರಸರ ಕಾಲದ ಕಲೆ ಕಾಮಾಕುರಾ ಕಾಲದ ಕಲೆಯ ಮೇಲೆ ವಿಶಿಷ್ಟ ಪ್ರಭಾವ ಉಂಟುಮಾಡಿತು. ಸು. 1252ರಲ್ಲಿ ಕಾಮಾಕುರಾ ಪಟ್ಟಣದಲ್ಲಿ 35 ಎತ್ತರದ ಹಿತ್ತಾಳೆಯ ಬುದ್ಧವಿಗ್ರಹವನ್ನು ಎರಕ ಹೊಯ್ಯಲಾಯಿತು. ಈ ಮೂರ್ತಿ ಬಹು ಸುಂದರವಾಗಿದ್ದು, ಜಪಾನೀಯರ ಕಲೆಗೆ ಒಂದು ಉತ್ತಮ ಸಾಕ್ಷಿಯಾಗಿ ಇಂದಿಗೂ ಕಾಮಾಕುರಾದಲ್ಲಿ ನಿಂತಿದೆ.

ಕಾಮಾಕುರಾ ಕಾಲದಲ್ಲಿ ಚಿಕ್ಕಪುಟ್ಟ ಕೈಗಾರಿಕೆಗಳಲ್ಲಿ ದೇಶ ಪ್ರಸಿದ್ಧಿ ಪಡೆಯಿತು. ಬಟ್ಟೆ ನೇಯುವುದು, ಕುಂಭ ಕಲೆ, ಮರದ ಮತ್ತು ಕಾಗದ ತಯಾರಿಕೆ ಸುಧಾರಿಸಲ್ಪಟ್ಟುವು. ದೇಶದಲ್ಲಿ ರಸ್ತೆಗಳು ನಿರ್ಮಾಣವಾದುವು. ವ್ಯಾಪಾರ ವೃದ್ಧಿಯಾಯಿತು.

ಕಾಮಾಕುರಾ ಕಾಲ ಪ್ರಧಾನವಾಗಿ ವೀರಯುಗ. ಇದನ್ನೇ ಈ ಕಾಲದ ಸಾಹಿತ್ಯದಲ್ಲೂ ಹೆಚ್ಚಾಗಿ ನೋಡಬಹುದು. ಹೀಯಾನ್ ಕಾಲದ ಸಾಹಿತ್ಯದಲ್ಲಿ ಶೃಂಗಾರ, ಪ್ರಕೃತಿ ವರ್ಣನೆಗಳಿಗೆ ಪ್ರಾಧಾನ್ಯವಿದ್ದರೆ, ಈ ಕಾಲದ ಸಾಹಿತ್ಯದಲ್ಲಿ ರಣಕಾಳಗಗಳ ವರ್ಣನೆಗೆ ಹೆಚ್ಚಿನ ಸ್ಥಾನ ಕೊಟ್ಟಂತೆ ಕಾಣುತ್ತದೆ. ಹೀಗೆ ಮನೋಗತಾರಿ (ಟಾಯಿರಾ ವಂಶದ ಕಥೆ) ಎಂಬುದು ಈ ಕಾಲದ ಪ್ರಖ್ಯಾತ ಗ್ರಂಥ.

ಹದಿನಾಲ್ಕನೆಯ ಶತಮಾನದ ಮೊದಲ ಭಾಗದಲ್ಲಿ ಟಾಕಾವುಜಿ ಆಷಿಕಾಗನೆಂಬ ಪಾಳೆಯಗಾರ ಕಾಮಾಕುರಾದ ಪಾಳೆಯಗಾರನನ್ನು ಸೋಲಿಸಿ, ತನ್ನ ಆಡಳಿತವನ್ನು ಹಳೆಯ ರಾಜಧಾನಿಯಾದ ಕೀಯೋಟೋದಲ್ಲಿ ಸ್ಥಾಪಿಸಿದ. ಇವನ ಮನೆತನದ ಆಡಳಿತ ಆ ನಗರದ ಮುರೊಮಾಚಿ ಎಂಬ ಬೀದಿಯಲ್ಲಿದ್ದ ಕಚೇರಿಯಲ್ಲಿ ನಡೆಯುತ್ತಿದ್ದುದರಿಂದ, ಈ ಮನೆತನದ ಆಳ್ವಿಕೆಯ ಕಾಲವನ್ನು ಮುರೊಮಾಚಿ ಕಾಲವೆಂದೂ ಕರೆಯುವುದುಂಟು. ಟಾಕಾವುಜಿ ಆಷಿಕಾಗನ ಕಾಲದಲ್ಲಿ ಚೀನ ಮತ್ತು ಕೊರಿಯಗಳಿಗೆ ಜಪಾನಿನಿಂದ ರಾಯಭಾರಿಗಳನ್ನು ಕಳುಹಿಸಲಾಗಿತ್ತು. ಇದರಿಂದ ಆ ದೇಶಗಳೊಡನೆ ಜಪಾನಿನ ವ್ಯಾಪಾರ ಸಂಬಂಧ ಉತ್ತಮಗೊಂಡಿತು. ಇದರಿಂದ ಆ ದೇಶಗಳೊಡನೆ ಜಪಾನಿನ ವ್ಯಾಪಾರ ಸಂಬಂಧ ಉತ್ತಮಗೊಂಡಿತು. ಈ ಕಾಲದಲ್ಲಿ ಸಾಮುರೈ ವ್ಯವಸ್ಥೆ ವೃದ್ಧಿಗೊಂಡಿತು. ಆಷಿಕಾಗನ ಉತ್ತರಾಧಿಕಾರಿಗಳು ಕಲೆಗಳ ಬೆಳವಣಿಗೆಯಲ್ಲಿ ಆಸಕ್ತರಾಗಿದ್ದಾಗ ಅಧಿಕಾರಕ್ಕಾಗಿ ಜಪಾನಿನ ಪ್ರಬಲ ಪಾಳೆಯಗಾರ ಮನೆತನಗಳಲ್ಲಿ ಕಲಹಗಳು ಜರುಗುತ್ತಿದ್ದವು. ಒಂದು ಶತಮಾನದಷ್ಟು ಕಾಲ ದೇಶದಲ್ಲಿ ಅನಾಯಕತ್ವ ಉಂಟಾಯಿತು. ದೇಶದ ಏಕತೆಯನ್ನು ಸಾಧಿಸಲು ಟಾಯಿರಾ ಮನೆತನದ ಒಡಾ ನೊಬುನಾಗಾ ಎಂಬವನು ಪ್ರಯತ್ನಿಸಿದ. ಇತರ ಪಾಳೆಯಗಾರರನ್ನು ಅಡಗಿಸಿ, ಬೌದ್ಧರ ಪ್ರಭಾವವನ್ನು ತಗ್ಗಿಸಿದ. ಆದರೆ ಅತೃಪ್ತ ಸೇನಾಧಿಕಾರಿಯೊಬ್ಬನಿಂದ ಕೊಲೆಮಾಡಲ್ಪಟ್ಟ. ಅವನ ಸೇನಾನಿಯಾಗಿದ್ದ ಹಿದಯೋಷಿ ಎಂಬವನು ಟೋಕುಗಾವಾ ಆಯಯಾಸು ಎಂಬ ಮತ್ತೊಬ್ಬ ಸಾಮುರೈ ಸಹಾಯದಿಂದ 1590ರಲ್ಲಿ ದೇಶವನ್ನೆಲ್ಲ ಗೆದ್ದು ತನ್ನ ಹತೋಟಿಗೆ ತಂದುಕೊಂಡ. ಹಿದಯೋಷಿಯ ಮರಣಾನಂತರ ಟೋಕುಗಾವಾ ಆಯಯಾಸು ಅನೇಕ ಪಾಳೆಯಗಾರರನ್ನು ಸೋಲಿಸಿ ಇಡೀ ದೇಶದ ಸರ್ವಾಧಿಕಾರಿ (ಷೋಗುನ್) ಆದ. ಹಳೆಯ ರಾಜಧಾನಿಯಾದ ಕೀಯೋಟೋಗೆ 350 ಮೈ.ಗಳ ದೂರದಲ್ಲಿ ಯೇದೋ ಎಂಬ ಹೊಸ ಪಟ್ಟಣ ಕಟ್ಟಿ, 1603ರಿಂದ ಅಲ್ಲಿ ರಾಜ್ಯ ಆಳಲಾರಂಭಿಸಿದ. ಅವನ ಆಳ್ವಿಕೆಯಿಂದ ಟೋಕುಗಾವಾ ಕಾಲ ಪ್ರಾರಂಭವಾಯಿತು.

ಆಷಿಕಾಗ ಕಾಲದಲ್ಲಿ ಜಪಾನು ಪಾಶ್ಚಾತ್ಯ ದೇಶಗಳೊಡನೆ ಸಂಪರ್ಕ ಪಡೆಯಿತು. ಪೋರ್ಚುಗೀಸರು 1542ರಲ್ಲಿ ವ್ಯಾಪಾರದ ಸಲುವಾಗಿ ಜಪಾನಿಗೆ ಬಂದರು. ಅವರ ಅನಂತರ ಸ್ಪ್ಯಾನಿಷರು ಮತ್ತು ಡಚ್ಚರು ಬಂದರು. ಐರೋಪ್ಯರೊಡನೆ ಕ್ರೈಸ್ತ ಮತ ಜಪಾನಿನೊಳಗೆ ಕಾಲಿಟ್ಟಿತು. 1549ರಲ್ಲಿ ಕ್ರೈಸ್ತ ಪಾದ್ರಿ ಫ್ರಾನ್ಸಿಸ್ ಜೇóವಿಯರ್ ಜಪಾನಿಗೆ ಬಂದು ಆ ಧರ್ಮದ ಪ್ರಚಾರಕಾರ್ಯದಲ್ಲಿ ಉದ್ಯುಕ್ತನಾದ. ಈತ ಜಪಾನಿಗೆ ಬರುವ ಮುನ್ನ ಗೋವದಲ್ಲಿ ಭಾರತೀಯರನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸಿದ್ದ. ಕೇವಲ ಮೂವತ್ತು ವರ್ಷಗಳ ಪ್ರಚಾರದಿಂದ ದಕ್ಷಿಣ ಜಪಾನಿನಲ್ಲಿ 15 ಲಕ್ಷ ಜನ ಕ್ರೈಸ್ತಧರ್ಮಾವಲಂಬಿಗಳಾದರು. ನೂರಾರು ಚರ್ಚುಗಳು ನಿರ್ಮಾಣವಾದುವು.

ಟೋಕುಗಾವಾ ಆಡಳಿತ ಮನೆತನಕ್ಕೆ ಆಯಯಾಸು ಆದಿಪುರಷ. ಈತನ ರಾಜಧಾನಿ ಯೇದೋ. ಜಪಾನಿನಲ್ಲಿ ಸುಭದ್ರವಾದ ಆಡಳಿತಕ್ಕೆ ತಕ್ಕ ಬುನಾದಿಯನ್ನು ಹಾಕಿದ ಕೀರ್ತಿ ಇವನದು. ದೇಶದ ಸಾಗುವಳಿ ಭೂಮಿ ಇವನ ನಲವತ್ತು ಸ್ನೇಹಿತರ ಕೈಯಲ್ಲಿತ್ತು. ಆಯಯಾಸುವಿನ ಸರ್ವಾಧಿಕಾರದಲ್ಲಿ ವಿಶಿಷ್ಟ ಊಳಿಗಮಾನ್ಯ ಪಾಳೆಯಗಾರ ಆಡಳಿತ ಸ್ಥಾಪಿತವಾಯಿತು. ಇವನ ವಂಶದವರು ಸುಮಾರು 250 ವರ್ಷಗಳ ಕಾಲ ಆಡಳಿತ ನಡೆಸಿದರು. ಟೋಕುಗಾವಾ ವಂಶದವರು ಜಪಾನಿನ ಚಕ್ರವರ್ತಿಗಳನ್ನು ಗಣನೆಗೆ ತಾರದೆ, ತಮ್ಮಲ್ಲೆ ಅಧಿಕಾರವನ್ನೆಲ್ಲ ಕೇಂದ್ರೀಕರಿಸಿಕೊಂಡಿದ್ದರು. ಈ ಕಾಲದಲ್ಲಿ ಚಕ್ರವರ್ತಿಗಳು ಹಳೆಯ ರಾಜಧಾನಿ ಕೀಯೋಟೋದಲ್ಲಿ ನಿರ್ಬಂಧದ ಜೀವನ ನಡೆಸುತ್ತಿದ್ದರು. ಚಕ್ರವರ್ತಿಗಳು ದೇವಾಂಶಸಂಭೂತರೆಂದು ಪರಿಗಣಿಸಲ್ಪಟ್ಟಿದ್ದರೂ ಅವರಿಗೆ ಯಾವ ವಿಧವಾದ ಅಧಿಕಾರವೂ ಇರಲಿಲ್ಲ. ಟೋಕುಗಾವಾ ಸರ್ವಾಧಿಕಾರಿಗಳ ಆದಾಯ ಚಕ್ರವರ್ತಿಗಳ ಆದಾಯಕ್ಕಿಂತ 80ರಷ್ಟು ಹೆಚ್ಚಾಗಿತ್ತು. ಆಯಯಾಸು ತನ್ನ ವಂಶದವರ ಪ್ರಭುತ್ವದ ಭದ್ರತೆಗಾಗಿ ಹದಿಮೂರು ಸೂತ್ರಗಳನ್ನು ರಚಿಸಿದ. ಅವು ಕ್ಷತ್ರಿಯ ಶಾಸನ ಎಂಬುದಾಗಿ ಪ್ರಸಿದ್ಧವಾದುವು.

ಜನರನ್ನು ವ್ಯವಸ್ಥೆಯಲ್ಲಿಡುವುದಕ್ಕಾಗಿ ಸರ್ವಾಧಿಕಾರಿ ಆಯಯಾಸು ಅವರನ್ನು ಷಿ, ನೋ, ಕೊ, ಷೋ ಎಂಬ ನಾಲ್ಕು ಪಂಗಡಗಳಾಗಿ ವರ್ಗೀಕರಿಸಿದ. ಕ್ಷತ್ರಿಯ, ವ್ಯವಸಾಯಗಾರ, ಕೈಗಾರಿಕೋದ್ಯಮಿ ಮತ್ತು ವ್ಯಾಪಾರಿ ಎಂಬವೇ ಅವು. ರಾಜ್ಯವನ್ನು ರಕ್ಷಿಸುವ ಜನರಿಗೆ ಅವನ ದೃಷ್ಟಿಯಲ್ಲಿ ಪ್ರಥಮಸ್ಥಾನ. ವ್ಯವಸಾಯದ ಮೂಲಕ ದೇಶಕ್ಕೆ ಸಹಾಯಮಾಡುವ ರೈತರಿಗೆ ಎರಡನೆಯ ಸ್ಥಾನ. ಆಯುಧ ಮುಂತಾದ ಯುದ್ಧಸಲಕರಣೆಗಳನ್ನು ಒದಗಿಸಿ ಕೊಡುವ ಕೈಗಾರಿಕಾ ಕುಶಲಕರ್ಮಿಗಳಿಗೆ ಮೂರನೆಯ ಸ್ಥಾನ. ದೇಶಕ್ಕೆ ಈ ಬಗೆಯ ಯಾವ ಪ್ರಯೋಜನವೂ ಇಲ್ಲದೇ, ಕೇವಲ ತಮ್ಮ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಸ್ಥರದು ಸಮಾಜದಲ್ಲಿ ಕಡೆಯ ಸ್ಥಾನ.

ಟೋಕುಗಾವಾ ಸರ್ವಾಧಿಕಾರಿಗಳು ಐರೋಪ್ಯರ ವಿರುದ್ಧ ಕಠಿಣತರ ಕ್ರಮ ಕೈಗೊಂಡರು. ವ್ಯಾಪಾರಮಾಡಲು ಬಂದ ಪಾಶ್ಚಾತ್ಯರು ತಮ್ಮ ದೇಶವನ್ನೇ ವಶಮಾಡಿಕೊಳ್ಳುವರೆಂಬ ಭಯದಿಂದ ಸರ್ವಾಧಿಕಾರಿಗಳು 1624ರಲ್ಲಿ ಸ್ಪ್ಯಾನಿಷರನ್ನು ಮತ್ತು 1638ರಲ್ಲಿ ಪೋರ್ಚುಗೀಸರನ್ನು ಜಪಾನಿನಿಂದ ಓಡಿಸಿದರು. ಕ್ರೈಸ್ತ. ಧರ್ಮಾವಲಂಬಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಡಚ್ಚರು ಮಾತ್ರ ಈ ಕಠಿಣತರವಾದ ನಿಷೇಧಾಜ್ಞೆಗಳ ನಡುವೆಯೂ ಸ್ವಲ್ಪ ವ್ಯಾಪಾರ ನಡೆಸುತ್ತಿದ್ದರು. ಜಪಾನೀಯರು ದೇಶ ಬಿಟ್ಟು ಹೋಗದಂತೆ ಆಜ್ಞೆ ಹೊರಡಿಸಲಾಯಿತು. ಒಟ್ಟಿನಲ್ಲಿ 1954ರ ವರೆಗೆ ಜಪಾನ್ ಪರದೇಶಗಳ ಸಂಪರ್ಕದಿಂದ ಹೊರಗಿದ್ದು ತನ್ನದೇ ಆದ ರೀತಿಯಲ್ಲಿ ಮುಂದುವರಿಯುತ್ತಿತ್ತು.

ಟೋಕುಗಾವಾ ಮನೆತನದ ಆಡಳಿತದ ಕಾಲದ ಕೊನೆಯಲ್ಲಿ ರಾಜ್ಯದ ಬಿಗಿ ತಪ್ಪಿತು. ಎಷ್ಟೋ ಪಾಳೆಯಗಾರರು ಹೆಚ್ಚುಹೆಚ್ಚಿನ ಅಧಿಕಾರ ಪಡೆಯಲು ಹವಣಿಸತೊಡಗಿದರು. ಆರ್ಥಿಕ ದುಃಸ್ಥಿತಿಯಿಂದಾಗಿ ಕ್ಷತ್ರಿಯರು ಹಣದಾಸೆಗಾಗಿ ತಮ್ಮ ಮಾನವನ್ನು ಮಾರಿಕೊಳ್ಳಲು ಸಿದ್ಧರಾದರು. ಎರಡು ಕತ್ತಿಗಳನ್ನು ಸೊಂಟದಲ್ಲಿ ಧರಿಸುವುದು ಮೇಲಾದ ಮಾನವೆಂದೆನಿಸುತ್ತಿದ್ದುದರಿಂದ ರೈತರೂ ವ್ಯಾಪಾರಸ್ಥರೂ ಕ್ಷತ್ರಿಯರಿಗೆ ಬೇಕಾದಷ್ಟು ಹಣ ಕೊಟ್ಟು ಅವನ್ನು ಕೊಂಡು ಧರಿಸತೊಡಗಿದರು. ಕೆಲವು ಕ್ಷತ್ರಿಯರು ಧನದ ದಾಹದಿಂದ ವ್ಯಾಪಾರಸ್ಥರ ಕನ್ಯೆಯರನ್ನು ಮದುವೆಯಾಗತೊಡಗಿದರು. ಕ್ಷತ್ರಿಯರನ್ನು ಅಳಿಯಂದಿರನ್ನಾಗಿ ಮಾಡಿಕೊಳ್ಳುವುದರಿಂದ ಸಮಾಜದಲ್ಲಿ ತಾವು ಮೇಲಿನ ಮೆಟ್ಟಿಲನ್ನೇರುವೆವೆಂಬ ಭಾವನೆ ವ್ಯಾಪಾರಸ್ಥರಲ್ಲಿ ಬೆಳೆಯಲಾರಂಭಿಸಿತು. ಆದ್ದರಿಂದಲೇ ಬೇಡಿದಷ್ಟು ವರದಕ್ಷಿಣೆ ಕೊಡಲು ಅವರು ಸಿದ್ಧರಾದರು. ಪಾಳೆಯಗಾರರು ಕೂಡ ಸರ್ವಾಧಿಕಾರಿಯ ಕಿರುಕುಳಕ್ಕೆ ಸಿಕ್ಕಿಬಿದ್ದು, ತಕ್ಕಷ್ಟು ಹಣವನ್ನು ಗಳಿಸಿಕೊಳ್ಳದೆ ತಮ್ಮ ದರ್ಪವನ್ನುಳಿಸಿಕೊಳ್ಳುವುದು ಅಸಾಧ್ಯವೆಂದು ವ್ಯಾಪಾರಸ್ಥರಿಂದ ಸಾಲ ಪಡೆಯತೊಡಗಿದರು. ಸಾಲದ ಹಂಗಿನಿಂದಾಗಿ ಅವರು ವ್ಯಾಪಾರಸ್ಥರಿಗೆ ಹೆಚ್ಚಿನ ಮಾನ ಕೊಡಬೇಕಾಯಿತು. ಹೀಗಾಗಿ 1940ರ ವೇಳೆಗೆ ಕೆಲವು ವ್ಯಾಪಾರಸ್ಥರು ಹಣದ ಬಲದಿಂದ ಪಾಳೆಯಗಾರರ ದರ್ಪಕ್ಕೆ ಕುಂದು ತಂದರು ಮತ್ತು ಹಣದ ಆಸೆಗಾಗಿ ಎಷ್ಟೋ ಕ್ಷತ್ರಿಯರು ಸಾಹುಕಾರರ ಊಳಿಗದಲ್ಲಿ ಸೇರಿಕೊಂಡು ಅವರ ರಾಜಕೀಯ ಪ್ರಭಾವ ಹೆಚ್ಚಿಸಿದರು. ಈ ಬಗೆಯ ಬದಲಾವಣೆಗಳು ಸಮಾಜದಲ್ಲಿ ಭರದಿಂದ ಸಾಗಿಬರುತ್ತಿದ್ದರೂ ಅವನ್ನು ತಡೆಯದಷ್ಟು ಮಟ್ಟಿಗೆ ಸರ್ವಾಧಿಕಾರಿ ಬಲಹೀನನಾಗಿದ್ದ. ಈ ರೀತಿ ಸರ್ವಾಧಿಕಾರಿಯ ಹಿರಿಯರು ವಿರಚಿಸಿದ ಸಮಾಜದ ಕಟ್ಟು ಆರ್ಥಿಕ ದುಃಸ್ಥಿತಿಯಿಂದ ಕಳಚಿ ಸಡಿಲವಾಯಿತು.

ವ್ಯವಸಾಯಗಾರರು ಶಕ್ತಿಮೀರಿ ಕಂದಾಯ ಸಲ್ಲಿಸುತ್ತಿದ್ದರು. ಆದರೆ ಸರ್ವಾಧಿಕಾರಿಯ ದುಂದುಗಾರಿಕೆಯ ವೆಚ್ಚವನ್ನು ಇದೂ ಪೂರೈಸದಾಯಿತು. ಮಿತಿಮೀರಿದ ಕಂದಾಯ ತೆರಲಾರದೆ ಎಷ್ಟೋ ರೈತರು ಸರ್ಕಾರದ ವಿರುದ್ಧ ಬಂಡು ಹೂಡಿದರು.

ಇಂಥ ಅಶಾಂತ ವಾತಾವರಣದಲ್ಲಿ ಜಪಾನ್ ಮುಳುಗಿದ್ದಾಗ, ಪಾಶ್ಚಾತ್ಯರು ಜಪಾನಿನೊಡನೆ ಸಂಪರ್ಕ ಬೆಳೆಸಲು ಬಂದರು. ಇವರ ಆಗಮನದಿಂದ ದೇಶದಲ್ಲಿ ಒಂದು ರಾಜಕೀಯ ಆಂದೋಳನ ಸಂಭವಿಸಿತು. ಜಪಾನನ್ನು ಮೊದಲು ಪ್ರವೇಶಿಸಿದ ದೇಶ ಅಮೆರಿಕ. ಚೀನದೊಡನೆ ವ್ಯಾಪಾರ ಮಾಡುತ್ತಿದ್ದ ಅಮೆರಿಕಕ್ಕೆ ಜಪಾನಿನಲ್ಲಿ ತಂಗಲು ಹಾಗೂ ವ್ಯಾಪಾರ ಮಾಡಲು ಯೋಗ್ಯ ಬಂದರಿನ ಆವಶ್ಯಕತೆಯಿತ್ತು. 1853ರಲ್ಲಿ ಅಮೆರಿಕದ ನೌಕಾಧಿಕಾರಿ ಕಮೋಡೋ ಪೆರಿ ಎಂಬಾತ ಅಧ್ಯಕ್ಷ ಫಿಲ್ಮೋರನಿಂದ ಪತ್ರವೊಂದನ್ನು ತಂದು, ಟೋಕಿಯೋ ಬಳಿ ತನ್ನ ಬಲಪ್ರದರ್ಶನ ನಡೆಸಿ, ವ್ಯಾಪಾರಕ್ಕೆಂದು ದೇಶದ ಬಾಗಿಲುಗಳನ್ನು ತÉಗೆಯಬೇಕೆಂದು ಟೋಕುಗಾವಾ ಸರ್ವಾಧಿಕಾರಿಗೆ ಬೆದರಿಕೆ ಹಾಕಿದ. ಈ ಬಗ್ಗೆ ಯೋಚನೆ ಮಾಡಲು ಜಪಾನ್ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಕೊಟ್ಟು, ಮರುವರ್ಷ (1954) ಪೆರಿ ಹೆಚ್ಚಿನ ಬಲದೊಡನೆ ಜಪಾನಿಗೆ ಬಂದ. ಸರ್ವಾಧಿಕಾರಿ ಅವನೊಡನೆ ಒಪ್ಪಂದ ಮಾಡಿಕೊಂಡು, ಎರಡು ಬಂದರುಗಳನ್ನು ವ್ಯಾಪಾರಕ್ಕಾಗಿ ತೆರೆದಿಟ್ಟ. ಆ ದೇಶದ ಪ್ರತಿನಿಧಿ ಜಪಾನಿನಲ್ಲಿರಲು ಅನುಮತಿ ಕೊಟ್ಟ. ಅಮೆರಿಕದಂತೆ ಇಂಗ್ಲೆಂಡ್, ಫ್ರಾನ್ಸ್, ರಷ್ಯ ಮತ್ತು ಹಾಲೆಂಡ್ ದೇಶಗಳೂ ವ್ಯಾಪಾರ ಸೌಲಭ್ಯಗಳನ್ನು ಪಡೆದುಕೊಂಡುವು.

ಪರಕೀಯರೊಡನೆ ಮಾಡಿಕೊಂಡ ಈ ಒಪ್ಪಂದಿಂದ ಸರ್ವಾಧಿಕಾರಿ ತನ್ನ ಸ್ಥಾನಕ್ಕೆ ತಾನೇ ಚ್ಯುತಿ ತಂದುಕೊಂಡಂತಾಯಿತು. ಹೆಚ್ಚಿನ ಪಾಳೆಯಗಾರರು ಮತ್ತು ಅವರ ಅನುಯಾಯಿಗಳಾದ ಸಾಮುರೈಗಳು ವಿದೇಶೀಯರಿಗೆ ಜಪಾನಿನಲ್ಲಿ ಸೌಲಭ್ಯಗಳನ್ನು ಕೊಟ್ಟ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇದರ ಜೊತೆಗೆ ಚಕ್ರವರ್ತಿ ತನ್ನ ಅಸಮಾಧಾನ ತೋರಿಸಿದ. ಹೀಗಾಗಿ, ಸರ್ವಾಧಿಕಾರಿ ಉಭಯ ಸಂಕಟಕ್ಕೆ ಸಿಕ್ಕಿಬಿದ್ದ. ತಮ್ಮ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆತರುವ ಸರ್ವಾಧಿಕಾರಿಯ ಈ ಕ್ರಮದಿಂದ ಅಸಮಾಧಾನಗೊಂಡ ಕೆಲವು ಪಾಳೆಯಗಾರರು ಚಕ್ರವರ್ತಿಯತ್ತ ತಿರುಗಿ, ಅವನು ಸರ್ವಾಧಿಕಾರಿಯನ್ನು ವಿರೋಧಿಸುವಂತೆ ಮಾಡಿದರು. 1957-1863ರಲ್ಲಿ ಪರಕೀಯರ ಬಗ್ಗೆ ಸಾರ್ವಜನಿಕರ ದ್ವೇಷ ಹೆಚ್ಚಿತು. ಅನೇಕ ಕಡೆ ಪರಕೀಯರ ಮೇಲೆ ಹಲ್ಲೆಗಳು ನಡೆದುವು. ಮತ್ತೆ ಕೆಲವರು ಇಂಥ ಕೃತ್ಯಗಳು ಉಪಯೋಗವಿಲ್ಲವೆಂದೂ ವಿದೇಶೀಯರು ಪ್ರಬಲರಾಗಿರುವುದರಿಂದ ಅವರನ್ನು ಜಪಾನಿನಿಂದ ಓಡಿಸುವ ಬದಲು ಬೇರೆ ರೀತಿಯ ನೀತಿ ಅನುಸರಿಸುವುದು ಉತ್ತಮವೆಂದೂ ಚಕ್ರವರ್ತಿಗೆ ಸಲಹೆ ಮಾಡಿದರು. ಒಟ್ಟಿನಲ್ಲಿ ಈ ವಿಷಯದ ಬಗ್ಗೆ ದೇಶದಲ್ಲಿ ಎರಡು ಪಕ್ಷಗಳು ಏರ್ಪಟ್ಟುವು. ಅಶಕ್ತನಾದ ಷೋಗುನ್ ತನ್ನ ಅಧಿಕಾರವನ್ನೆಲ್ಲ ಚಕ್ರವರ್ತಿಗೇ ಬಿಟ್ಟುಕೊಟ್ಟ. 1868ರಲ್ಲಿ ಚಕ್ರವರ್ತಿಯ ಪುನರಾಗಮನವಾಯಿತು. ಅವನನ್ನು ಕೀಯೋಟೋ ನಗರದಿಂದ ಟೋಕಿಯೋಗೆ ಬರಮಾಡಿಕೊಂಡು ಅಧಿಕಾರದಲ್ಲಿ ಕುಳ್ಳಿರಿಸಲಾಯಿತು. ಹೀಗೆ 250 ವರ್ಷಗಳ ಕಾಲ ಆಡಳಿತ ನಡೆಸಿದ ಟೋಕುಗಾವಾ ಮನೆತನದ ಕಾಲ ಕೊನೆಗೊಂಡಿತು.

ಜಪಾನಿನ ಆಧುನಿಕ ಇತಿಹಾಸ ಮೇಜಿ ಕಾಲದಿಂದ ಪ್ರಾರಂಭವಾಗುತ್ತದೆ. ಮೇಜಿ ಎಂದರೆ ಪ್ರಗತಿಶೀಲ ಪ್ರಭುತ್ವ. 1868ರಲ್ಲಿ ಮುಟ್ಸುಹಿಟೊ ಎಂಬ ಹೆಸರಿನ 15 ವರ್ಷದ ಬಾಲಕ ಚಕ್ರವರ್ತಿಯಾಗಿ ಸಿಂಹಾಸನವನ್ನೇರಿದ. ಇವನ ರಾಜ್ಯಭಾರದ ಕಾಲವನ್ನು (1868-1912) ಮೇಜಿ ಆಳ್ವಿಕೆಯ ಕಾಲವೆಂದು ಕರೆಯಲಾಗಿದೆ. ಇದು ಬಹಳ ಮಹತ್ತ್ವಪೂರ್ಣವಾದ್ದು. ಈ ಕಾಲದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಸಂಭವಿಸಿದವು. ಪಾಶ್ಚಾತ್ಯ ಸಂಸ್ಕøತಿ ತನ್ನ ಪ್ರಭಾವವನ್ನು ಎಲ್ಲ ಕ್ಷೇತ್ರಗಳ ಮೇಲೂ ಬೀರಿತು. ಪ್ರಗತಿಪರ ಮಾರ್ಗದಲ್ಲಿ ಜಪಾನು ಸಾಗಿದ ಕಾಲವಿದು.

ಊಳಿಗಮಾನ್ಯ ಪದ್ಧತಿಯನ್ನು ಕೊನೆಗೊಳಿಸಿ, ಹೊಸ ರೀತಿಯಲ್ಲಿ ಕೇಂದ್ರಸರ್ಕಾರವನ್ನು ರಚಿಸಲಾಯಿತು. ಪಾಳೆಯಗಾರರು ತಮ್ಮ ತಮ್ಮ ಹಕ್ಕುಬಾಧ್ಯತೆಗಳು, ಅಂತಸ್ತು, ಐಶ್ಚರ್ಯಗಳನ್ನು ಚಕ್ರವರ್ತಿಗೆ ಒಪ್ಪಿಸಿದರು. ದೇಶದ ಎಲ್ಲ ಭೂಮಿ ಮತ್ತು ಜನಗಳಿಗೆ ಚಕ್ರವರ್ತಿಯೆ ಒಡೆಯನೆಂದು ಘೋಷಿಸಲಾಯಿತು. 1871ರಲ್ಲಿ ಅಧಿಕೃತವಾಗಿ ಊಳಿಗಮಾನ್ಯ ಪದ್ಧತಿ ಕೊನೆಗೊಂಡಿತು. ಪಾಳೆಯಗಾರರಿಗೂ ಅವರ ಅನುಯಾಯಿಗಳಾದ ಸಾಮುರೈಗಳಿಗೂ, ಭೂಮಿಯಿಂದ ಬರುವ ಬತ್ತವೇ ಮುಖ್ಯವಾದ ಆದಾಯವಾಗಿತ್ತು. ಆ ಆದಾಯವನ್ನು ಈಗ ಸರ್ಕಾರ ತನ್ನ ವಶಮಾಡಿಕೊಂಡು, ಅವರು ಗಳಿಸುತ್ತಿದ್ದ ಉತ್ಪತ್ತಿಗೆ ಅನುಗುಣವಾಗಿ ಅವರಿಗೆ ಸಾಲಪತ್ರಗಳನ್ನು ಪರಿಹಾರವಾಗಿ ಕೊಟ್ಟಿತು. ಯೂರೋಪಿನ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಪದ್ಧತಿಯನ್ನು ಅಭ್ಯಾಸಮಾಡಲು ಸರ್ಕಾರ ಅನೇಕ ನಿಯೋಗಗಳನ್ನು ಕಳುಹಿಸಿಕೊಟ್ಟಿತು. ಸೇನೆಯಲ್ಲೂ ನೌಕಾಬಲದಲ್ಲೂ ಸೇವೆ ಕಡ್ಡಾಯವೆಂದು ಘೋಷಿಸಲಾಯಿತು. ಭೂಮಿಯ ಬೆಲೆಗೆ ಅನುಗುಣವಾಗಿ ಕಂದಾಯ ನಿಷ್ಕರ್ಷೆ, ರಾಷ್ಟ್ರಕ್ಕೆ ಒಂದೇ ನಾಣ್ಯಪದ್ಧತಿ, ರಸ್ತೆ, ರೈಲು, ಅಂಚೆ, ತಂತಿ, ಸಾರ್ವಜನಿಕ ಸೌಕರ್ಯಗಳ ಏರ್ಪಾಟು, ಎಲ್ಲರಿಗೂ ಕಡ್ಡಾಯ ಶಿಕ್ಷಣ ಮೊದಲಾದವು ಜಾರಿಗೆ ಬಂದುವು. ದೇಶದ ಸೈನ್ಯಬಲ ಹಾಗೂ ನೌಕಾಬಲಗಳನ್ನು ಹೆಚ್ಚಿಸಲು ಅನುಕೂಲವಾಗುವ ಭಾರಿ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಇಂಥ ಕೈಗಾರಿಕೆಗಳಲ್ಲಿ ಕೆಲವನ್ನು ಸರ್ಕಾರವೂ ಸಹಾಯದ ಮೇಲೆ ಖಾಸಗಿ ಸಂಸ್ಥೆಗಳೂ ಸ್ಥಾಪಿಸಿದವು. ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳು ಕೆಲವರ ಕೈಯಲ್ಲಿದ್ದುವು. ಉದಾಹರಣೆಗೆ ದಂಡನಾಯಕ ರಾಜಕುಮಾರ ಆರಿತೊಮೊ ಯಾಮಾಗಾಟಾ ಮೊದಲು ಯುದ್ಧಮಂತ್ರಿಯಾಗಿದ್ದು ಸೇನೆಯನ್ನು ವ್ಯವಸ್ಥೆಗೊಳಿಸಿ, ಅನಂತರ ಆಂತರಿಕ ವ್ಯವಹಾರ ಸಚಿವ ಹಾಗೂ ಪ್ರಧಾನ ಮಂತ್ರಿ (1889-1891; 1898) ಆದ. ಹಾಗೆಯೇ ರಾಜಕುಮಾರ ಹಿರೊಬುಮಿ ಇಟೊ ಮೊದಲು ಹಣಕಾಸು ಮತ್ತು ಮರಾಮತ್ ಶಾಖೆಗಳಲ್ಲಿದ್ದು, ಅನಂತರ ಸಂವಿಧಾನದ ರಚನೆಯಲ್ಲಿ ಭಾಗವಹಿಸಿ, 1886-1901ರ ಅವಧಿಯಲ್ಲಿ ನಾಲ್ಕು ಬಾರಿ ಪ್ರಧಾನಮಂತ್ರಿಯಾಗಿದ್ದ.

ಮೇಜಿ ಕಾಲದಲ್ಲಿ ಹೊಸ ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ಸಂವಿಧಾನ ಜಪಾನಿಗೆ ಮಾದರಿಯಾಗಿತ್ತು. 1889ರ ಫೆಬ್ರುವರಿ 11ರಂದು ಈ ಸಂವಿಧಾನವನ್ನು ಜಾರಿಗೆ ತರಲಾಯಿತು. ಈ ಸಂವಿಧಾನ 1947ರ ವರೆಗೂ ಅಸ್ತಿತ್ವದಲ್ಲಿತ್ತು. ಇದರ ಪ್ರಕಾರ, ಚಕ್ರವರ್ತಿಯೇ ನಿಜವಾದ ಸರ್ಕಾರ. ಸೇನಾ ಮುಖಂಡರ ನೀತಿಗೆ ಮಂತ್ರಿಮಂಡಲದಿಂದ ವಿರೋಧ ಬಂದಾಗ ಅವರು ನೇರವಾಗಿ ಚಕ್ರವರ್ತಿಯ ಬಳಿ ಹೋಗಲು ಅವಕಾಶವಿತ್ತು. ಸಂಸತ್ತಿನ ಕೆಳಮನೆಯಲ್ಲಿ ಹೆಚ್ಚಿನ ಜನಬೆಂಬಲ ಪಡೆದ ಪಕ್ಷದಿಂದಲೇ ಪ್ರಧಾನಿಯನ್ನು ಆರಿಸಬೇಕೆಂದು ಕೇಳುವ ಹಕ್ಕು ರಾಜಕೀಯ ಪಕ್ಷಗಳಿಗೆ ಇರಲಿಲ್ಲ. ಏಕೆಂದರೆ ಸಂಸತ್ತಿಗೆ ಈ ಸಂವಿಧಾನದ ಪ್ರಕಾರ ಬಜೆಟ್ಟಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರವಿರಲಿಲ್ಲ. ವ್ಯಕ್ತಿಸ್ವಾತಂತ್ರ್ಯಕ್ಕೆ ಅನೇಕ ಪ್ರತಿಬಂಧಕಗಳಿದ್ದವು. ಹೀಗೆ ಮೇಲುನೋಟಕ್ಕೆ ಸಂಸದೀಯ ಸರ್ಕಾರ ರಚಿತವಾಗಿದ್ದರೂ, ಜಿನಾದ ಅಧಿಕಾರ ಕೆಲವೇ ಮಂದಿ ಪ್ರತಿಷ್ಠಿತರ ಹಾಗೂ ಸೇನಾಮುಖಂಡರ ಕೈಯಲ್ಲಿತ್ತು. ಆರ್ಥಿಕ ಕ್ಷೇತ್ರದಲ್ಲೂ ಕೆಲವೇ ಮಂದಿ ಪ್ರತಿಷ್ಠಿತರು ಪ್ರಭಾವಶಾಲಿಗಳಾಗಿದ್ದರು. ಜಪಾನಿನ ಹೆಚ್ಚು ಕಡಿಮೆ ಎಲ್ಲ ಕೈಗಾರಿಕೆಗಳೂ ಜೈಬಟ್ಸುಗಳೆಂಬ ಶ್ರೀಮಂತ ಕುಟುಂಬಗಳ ಸೊತ್ತುಗಳಾಗಿದ್ದವು.

ವಿಶ್ವದ ಪ್ರಬಲರಾಷ್ಟ್ರವಾಗಿ ಪ್ರಾಬಲ್ಯ : 1890-1900ರ ಅವಧಿಯಲ್ಲಿ ಜಪಾನ್ ಉಗ್ರರೀತಿಯ ಆಕ್ರಮಣಕಾರಿ ವಿದೇಶಾಂಗ ನೀತಿ ಅನುಸರಿಸಿತು. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳು ಹೇರಿದ್ದ, ಜಪಾನಿನ ಹಿತಾಸಕ್ತಿಗೆ ಧಕ್ಕೆ ತರುವ ಕೌಲುಗಳನ್ನು ಅದು ಕೊನೆಗೊಳಿಸಿ, ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಪಾಶ್ಚಾತ್ಯ ರಾಷ್ಟ್ರಗಳೊಡನೆ ಸಮಸಮವಾಗಿ ನಿಲ್ಲುವ ಆಸೆ ಜಪಾನಿಗೆ ಉಂಟಾಯಿತು. ಈ ಕೌಲುಗಳ ಪ್ರಕಾರ ಪಾಶ್ಚಾತ್ಯರಿಗೆ ಜಪಾನಿನಲ್ಲಿರುವ ಹಕ್ಕು ದೊರೆತಿದ್ದರೂ ಅವರು ಜಪಾನಿನ ಕಾನೂನುಗಳ ನಿಯಂತ್ರಣಕ್ಕೆ ಒಳಗಾಗಿರಲಿಲ್ಲ. ಜಪಾನ್ ಸರ್ಕಾರ 1880ರಲ್ಲಿ ದಂಡ ಸಂಹಿತೆಯನ್ನೂ (ಕ್ರಿಮಿನಲ್ ಕೋಡ್) 1890ರಲ್ಲಿ ದೀವಾನಿ ಸಂಹಿತೆಯನ್ನೂ (ಸಿವಿಲ್ ಕೋಡ್) ಜಾರಿಗೆ ತಂದಿತು. ವಿದೇಶೀಯರನ್ನು ಜಪಾನಿನ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡಿಸುವ ವ್ಯವಸ್ಥೆ ಏರ್ಪಟ್ಟಿತು.

ಚೀನ ಮತ್ತು ರಷ್ಯಗಳೊಡನೆ ಯುದ್ಧ ನಡೆಸಿ ಗೆದ್ದು ಜಪಾನ್ ಪ್ರಬಲ ರಾಷ್ಟ್ರಗಳ ಪಂಕ್ತಿಗೆ ಸೇರಿಕೊಂಡಿತು. ಜಪಾನ್ ಮತ್ತು ಚೀನಗಳು ಕೊರಿಯ ದೇಶದಲ್ಲಿ ಪ್ರತಿಸ್ಪರ್ಧಿಗಳಾಗಿದ್ದು ಆ ದೇಶದ ಮೇಲೆ ತಂತಮ್ಮ ಹತೋಟಿ ಸ್ಥಾಪಿಸಲು ಯತ್ನಿಸಿದುವು. 1894-1895ರಲ್ಲಿ ನಡೆದ ಚೀನ-ಜಪಾನ್ ಯುದ್ಧಕ್ಕೆ ಕಾರಣವಾದ್ದು ಈ ಸ್ಪರ್ಧೆಯೇ. ಜಪಾನೀಯರು ಈ ಯುದ್ಧದಲ್ಲಿ ಜಯಶೀಲರಾದರು. ಕೊರಿಯದ ಮೇಲಿನ ಹತೋಟಿಯನ್ನು ಜಪಾನಿಗೆ ಚೀನ ಬಿಟ್ಟುಕೊಟ್ಟಿತಲ್ಲದೆ, ಫಾರ್ಮೊಸ ದ್ವೀಪವನ್ನೂ ಜಪಾನಿಗೆ ಒಪ್ಪಿಸಿತು. ದಕ್ಷಿಣ ಮಂಚೂರಿಯದಲ್ಲಿ ಜಪಾನಿಗೆ ಅನೇಕ ಸೌಲಭ್ಯಗಳು ದೊರೆತುವು. ಆದರೆ ಜಪಾನ್ ಈ ಹಕ್ಕುಗಳನ್ನೂ ಸೌಲಭ್ಯಗಳನ್ನೂ ಚೀನಕ್ಕೆ ಮರಳಿ ಒಪ್ಪಿಸುವಂತೆ ಪಾಶ್ಚಾತ್ಯ ರಾಷ್ಟ್ರಗಳು ಒತ್ತಾಯ ತಂದುವು. 1902ರಲ್ಲಿ ಜಪಾನ್ ಇಂಗ್ಲೆಂಡಿನೊಡನೆ ಮೈತ್ರಿಯ ಕೌಲು ಮಾಡಿಕೊಂಡಿತು.

ಮಂಚೂರಿಯ ಮತ್ತು ಕೊರಿಯಗಳಲ್ಲಿ ತನ್ನ ಪ್ರಭಾವ ಮತ್ತು ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳಲು ಹವಣಿಸುತ್ತಿದ್ದ ರಷ್ಯವನ್ನು 1904ರಲ್ಲಿ ಕೆಣಕುವ ಮಟ್ಟಿಗೆ ಜಪಾನಿನ ಶಕ್ತಿ ಬೆಳೆದಿತ್ತು. 1904-1905ರಲ್ಲಿ ರಷ್ಯದೊಡನೆ ಯುದ್ಧಮಾಡಿ, ಆ ರಾಷ್ಟ್ರವನ್ನು ಜಪಾನ್ ಸೋಲಿಸಿತು. ಅಮೆರಿಕದ ಅಧ್ಯಕ್ಷ ತೀಯೊಡೋರ್ ರೂಸ್‍ವೆಲ್ಪನ ಮಧ್ಯಸ್ಥಿಕೆಯಿಂದ ಯುದ್ಧ ಕೊನೆಗೊಂಡಿತು. ರಷ್ಯದ ಮೇಲೆ ಗಳಿಸಿದ ಜಯದಿಂದ ಜಪಾನಿನ ಕೀರ್ತಿ ಹೆಚ್ಚಿತು. ಪೋರ್ಟ್‍ಸ್ಮತ್ ಕೌಲಿನ (1905) ಪ್ರಕಾರ ಕೊರಿಯದ ಮೇಲಿನ ತನ್ನ ಹಕ್ಕುಗಳನ್ನೆಲ್ಲ ರಷ್ಯ ಸಂಪೂರ್ಣವಾಗಿ ತ್ಯಜಿಸಿತು. ಅಲ್ಲದೆ ತನ್ನ ವಶದಲ್ಲಿದ್ದ ದಕ್ಷಿಣ ಮಂಚೂರಿಯ ರೈಲ್ವೆ ಹೆದ್ದಾರಿಯನ್ನು ಜಪಾನಿಗೆ ಕೊಟ್ಟಿತು. ಮಂಚೂರಿಯದ ಲೀಯಾವುಡಂಗ್ ಪರ್ಯಾಯದ್ವೀಪದ ಮೇಲಣ ಗುತ್ತಿಗೆ ಹಕ್ಕು ಮತ್ತು ಸಾಕಲೀನ್ ದ್ವೀಪದ ಭಾಗಗಳು ಜಪಾನಿನ ವಶವಾದುವು.

ಒಂದನೆಯ ಮಹಾಯುದ್ಧದ ಆರಂಭದಲ್ಲೇ ಜಪಾನ್ ಜರ್ಮನಿಯ ವಿರುದ್ಧ ಘೋಷಿಸಿತು. ಜಪಾನೀಯರು ಯೂರೋಪಿನಲ್ಲಿ ಯುದ್ಧ ಮಾಡಲಿಲ್ಲ. ಆದರೆ ಚೀನದಲ್ಲಿ ಜರ್ಮನಿಗೆ ಸೇರಿದ್ದ ಚಿಂಗ್-ಡಾವ್ ಪಟ್ಟಣವನ್ನೂ ಷಾಂಟಂಗ್ ಪ್ರಾಂತ್ಯದಲ್ಲಿದ್ದ ಆಸ್ತಿಪಾಸ್ತಿಗಳನ್ನೂ ಪೆಸಿಫಿಕ್ ಸಾಗರದ ಕೆಲವು ಜರ್ಮನ್ ದ್ವೀಪಗಳನ್ನೂ ಜಪಾನ್ ವಶಕೊಂಡಿತು. 1915ರಲ್ಲಿ ಯೂರೋಪಿನಲ್ಲಿ ನಡೆಯುತ್ತಿದ್ದ ಹೋರಾಟವನ್ನೇ ಒಂದು ಅವಕಾಶವೆಂದು ಎಣಿಸಿ ಜಪಾನ್ ಚೀನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹವಣಿಸಿ ಚೀನ ಸರ್ಕಾರಕ್ಕೆ ತನ್ನ 21 ಬೇಡಿಕೆಗಳನ್ನು ಸಲ್ಲಿಸಿತು. ಜಪಾನಿಗೆ ಚೀನದಲ್ಲಿ ಅನೇಕ ಆರ್ಥಿಕ ಸವಲತ್ತುಗಳು ದೊರೆತುವು. ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಪರವಾಗಿ ಮಾರ್ಷಲ್, ಕಾರೊಲೈನ್ ಮತ್ತು ಮ್ಯಾರೀಯಾನ ದ್ವೀಪಗಳಲ್ಲಿ ನಿಯೋಗಿಯಾಗಿ ಆಡಳಿತ ನಡೆಸುವ ಅಧಿಕಾರವನ್ನು ಜಪಾನಿಗೆ ನೀಡಲಾಯಿತು.

ಯುದ್ಧ ಮುಗಿದ ಮೇಲೆ ರಾಷ್ಟ್ರಗಳ ಕೂಟದ ಸದಸ್ಯರಾಷ್ಟ್ರವಾಗಿ ಜಪಾನ್ ಅನೇಕ ಶಾಂತಿಸಂಧಾನಗಳಿಗೆ ಬೆಂಬಲ ನೀಡಿತು. 1921-22ರಲ್ಲಿ ನಡೆದ ವಾಷಿಂಗ್‍ಟನ್ ಸಮ್ಮೇಳನದಲ್ಲಿ, ಅಮೆರಿಕ ಮತ್ತು ಬ್ರಿಟನ್‍ಗಳಿಗಿಂತ ಚಿಕ್ಕದಾದ ನೌಕಾಪಡೆ ಇಟ್ಟುಕೊಳ್ಳುವುದಾಗಿ ಒಪ್ಪಿಕೊಂಡಿತು. ಚೀನದ ಷಾಂಟಂಗ್ ಪ್ರಾಂತ್ಯದಿಂದ ನಿರ್ಗಮಿಸುವುದಾಗಿಯೂ ವಾಷಿಂಗ್‍ಟನ್ ಸಮ್ಮೇಳನದಲ್ಲಿ ಒಪ್ಪಿಕೊಂಡಿತು. ಒಂಬತ್ತು ರಾಷ್ಟ್ರಗಳ ಕೌಲಿಗೆ ಸಹಿ ಹಾಕಿತು. ಚೀನದ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ತಾನು ನಡೆದುಕೊಳ್ಳುವುದಾಗಿ ಭರವಸೆಕೊಟ್ಟಿತು. ಇದರ ಜೊತೆಗೆ 1928ರಲ್ಲಿ ಕೆಲ್ಲಾಗ್-ಬ್ರಿಯಾಂಡ್ ಒಪ್ಪಂದಕ್ಕೂ 1930ರಲ್ಲಿ ಲಂಡನ್ ನೌಕಾ ಒಪ್ಪಂದಕ್ಕೂ ಸಹಿ ಹಾಕಿತು.

ಜಪಾನಿನಿಂದ ಮಂಚೂರಿಯದಲ್ಲಿ ಗಣಿಗಳೂ ಕೈಗಾರಿಕೆಗಳೂ ಸ್ಥಾಪಿತವಾದುವು. ಮಂಚೂರಿಯದಲ್ಲಿ ಸುಲಭವಾಗಿ ಗಳಿಸಿದ ವಿಜಯದಿಂದ ಸೇನಾಮುಖಂಡರು ಉತ್ತೇಜನಗೊಂಡರು. ಸೇನೆಯ ಉಗ್ರಪಂಥಿಯರು ಪ್ರಧಾನಮಂತ್ರಿ ಕಿಇನುಕೈಯನ್ನು (1855-1932) 1932ರಲ್ಲಿ ಕೊಲೆಮಾಡಿದರು. 1936ರಲ್ಲಿ ನಡೆದ ದಂಗೆಯಲ್ಲಿ ಅನೇಕ ಉದಾರವಾದಿ ರಾಜಕೀಯ ಮುಖಂಡರುಗಳ ಕೊಲೆ ಆಯಿತು. ಅಲ್ಲಿಂದಾಚೆಗೆ ಜಪಾನಿನ ವಿದೇಶಾಂಗ ನೀತಿಯ ಮೇಲೆ ಉಗ್ರವಾದಿಗಳ ಹಿಡಿತ ಭದ್ರವಾಯಿತು.

ಮಂಚೂರಿಯದ ಆಕ್ರಮಣದ ಅನಂತರ ಜಪಾನ್ ಉತ್ತರ ಚೀನದ ಭಾಗಗಳಿಗೆ ತನ್ನ ಪ್ರಭಾವವನ್ನು ವಿಸ್ತರಿಸಿತು. 1937ರ ಜುಲೈ 7ರಂದು ಪೀಕಿಂಗ್ ನಗರದ ಬಳಿ ಮಾರ್ಕೊ ಪೋಲೊ ಸೇತುವೆಯ ಬಳಿ ನಡೆದ ಸಣ್ಣ ಘಟನೆಯನ್ನೇ ನೆವಮಾಡಿಕೊಂಡು ಜಪಾನ್ ಉತ್ತರ ಚೀನದ ಮೇಲೆ ಹತೋಟಿ ಸ್ಥಾಪಿಸಿತು. 1938ರ ವೇಳೆಗೆ ದಕ್ಷಿಣ ಚೀನದ ಮುಖ್ಯ ನಗರವಾದ ಕ್ಯಾಂಟನ್ ಜಪಾನಿನ ವಶವಾಯಿತು.

ನಾಟ್ಸಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಗಳೊಡನೆ ಜಪಾನ್ ಸ್ನೇಹ ಬೆಳೆಸಿತು. 1936ರಲ್ಲಿ ಜರ್ಮನಿ ಮತ್ತು ಇಟಲಿ ದೇಶಗಳೊಡನೆ ಜಪಾನು ಕಮ್ಯುನಿಸ್ಟ್-ವಿರೋಧಿ ಒಪ್ಪಂದವನ್ನು ಮಾಡಿಕೊಂಡಿತು. 1939ರ ಆಗಸ್ಟ್‍ನಲ್ಲಿ ಜರ್ಮನಿ-ರಷ್ಯಗಳು ಒಪ್ಪಂದ ಮಾಡಿಕೊಂಡಾಗ ಜಪಾನಿಗೆ ಆಶ್ಚರ್ಯವಾಯಿತು. 1940ರಲ್ಲಿ ಜಪಾನೂ ರಷ್ಯದೊಡನೆ ಒಂದು ಒಪ್ಪಂದ ಮಾಡಿಕೊಂಡಿತು.

ಆದರೆ 1944ರಲ್ಲಿ ಜಪಾನಿನ ಭಾಗ್ಯ ಬದಲಾಯಿತು. ಜಪಾನಿನ ದೌರ್ಬಲ್ಯ ಪ್ರಕಟವಾಗತೊಡಗಿತು. 1944ರ ಜುಲೈ 18ರಂದು ಟೋಜೋನ ಮಂತ್ರಿಮಂಡಲ ಉರುಳಿತು. ಅಮೆರಿಕ ಪೆಸಿಫಿಕಿನ ಎಲ್ಲ ದ್ವೀಪಗಳನ್ನೂ ವಶಪಡಿಸಿಕೊಂಡಿತು. ಯುದ್ಧ ಜಪಾನಿನ ಬಾಗಿಲಿಗೇ ಬಂತು. ಅಮೆರಿಕನರು ಜಪಾನಿನ ಕೈಗಾರಿಕಾ ಕೇಂದ್ರಗಳ ಮೇಲೆಲ್ಲ ಕ್ರಮವಾಗಿ ಬಾಂಬು ದಾಳಿ ಮಾಡತೊಡಗಿದರು. 1945ರಲ್ಲಿ ಅಮೆರಿಕನ್ ಸೈನಿಕರು ಜಪಾನಿನಲ್ಲಿ ಬಂದಿಳಿದರು. ಹಿರೋಷೀಮ ಮತ್ತು ನಾಗಸಾಕೀ ನಗರಗಳ ಮೇಲೆ ಅಮೆರಿಕ ಎರಡು ಪರಮಾಣು ಬಾಂಬುಗಳನ್ನು ಹಾಕಿದಾಗ ಸುಮಾರು ಎರಡು ಲಕ್ಷ ಜಪಾನೀಯರು ಪ್ರಾಣಬಿಟ್ಟರು. ಆ ನಗರಗಳು ನೆಲಸಮವಾದುವು.

ಯುದ್ಧದಲ್ಲಿ ಸೋಲುಂಟಾಗಿದೆಯೆಂಬ ಅಂಶ ಈ ವೇಳೆಗೆ ಜಪಾನೀ ನಾಯಕರಿಗೆ ಮನವರಿಕೆಯಾಗಿತ್ತು. ಚೀನ ಮತ್ತು ಪೆಸಿಫಿಕ್ ಸಾಗರ ದ್ವೀಪಗಳಲ್ಲಿ ಜಪಾನೀಯರ ದೊಡ್ಡ ಸೇನೆಯಿತ್ತು. ಆದರೆ ಅವುಗಳೊಂದಿಗೆ ಸಂಪರ್ಕ ತಪ್ಪಿಹೋಯಿತು. ಜಪಾನಿನ ಬಳಿ ಯುದ್ಧನೌಕೆಗಳಾಗಲಿ, ಸಾಮಗ್ರಿಗಳಾಗಲಿ ಇರಲಿಲ್ಲ. 1945ರ ಆಗಸ್ಟ್ 14ರಂದು ಜಪಾನ್ ಸಂಪೂರ್ಣವಾಗಿ ಶರಣಾಗತವಾಗಲು ಒಪ್ಪಿತು. ಮರುದಿನ ಮಧ್ಯಾಹ್ನ ಚಕ್ರವರ್ತಿ ಹಿರೊಹಿಟೋ ಜಪಾನಿನ ಜನತೆಯನ್ನು ಉದ್ದೇಶಿಸಿ ರೇಡಿಯೋ ಭಾಷಣ ಮಾಡಿದರು. ಜಪಾನ್ ಯುದ್ಧ ಕೊನೆಗೊಳಿಸಲು ಒಪ್ಪಿರುವ ವಿಷಯವನ್ನು ತಿಳಿಸಿದರು. ಸೆಪ್ಟಂಬರ್ 2ರಂದು, ಯುದ್ಧನೌಕೆ ಮಿಸ್ಸೋರಿಯ ಮೇಲೆ, 1853ರಲ್ಲಿ ಪೆರಿ ಬೀಡುಬಿಟ್ಟಿದ್ದ ಟೋಕಿಯೋ ಕೊಲ್ಲಿಯ ಬಳಿಯಲ್ಲೇ, ಜಪಾನ್ ಶರಣಾಗತಿ ಪತ್ರಕ್ಕೆ ಸಹಿ ಹಾಕಿತು. ಏಷ್ಯದಲ್ಲಿ ಗೆದ್ದಿದ್ದ ಪ್ರದೇಶಗಳನ್ನೂ ಪೆಸಿಫಿಕ್ ಸಾಗರದಲ್ಲಿ ಆಕ್ರಮಿಸಿಕೊಂಡಿದ್ದ ದ್ವೀಪಗಳನ್ನೂ ಜಪಾನ್ ಬಿಟ್ಟುಕೊಟ್ಟಿತು. ಫಾರ್ಮೋಸ, ಕ್ಯುರೈಲ್ಸ್ ಮತ್ತು ದಕ್ಷಿಣ ಸಾಖಲಿನ್ ದ್ವೀಪಗಳನ್ನು ಜಪಾನ್ ಕಳೆದುಕೊಂಡಿತು.

ಅಮೆರಿಕದ ನೇತೃತ್ವದಲ್ಲಿ ಮಿತ್ರ ರಾಷ್ಟ್ರಗಳು 1945ರಿಂದ 1952ರ ವರೆಗೆ ಅಲ್ಲಿ ಆಳ್ವಿಕೆ ನಡೆಸಿದುವು. ದಂಡನಾಯಕ ಮೆಕಾರ್ಥರ್ ಈ ಆಡಳಿತದ ಮುಖ್ಯಾಧಿಕಾರಿಯಾಗಿದ್ದ. ಯುದ್ಧಾಪರಾಧಗಳ ವಿಚಾರಣೆ ನಡೆದು 28 ಪ್ರಧಾನ ಯುದ್ಧಕೈದಿಗಳಿಗೆ ಗಲ್ಲಿನ ಶಿಕ್ಷೆಯಾಯಿತು. 1946ರಲ್ಲಿ ಜಪಾನಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದುವು. ಆ ವರ್ಷವೇ ಜಪಾನಿನ ಹೊಸ ಸಂವಿಧಾನದ ರಚನೆಯಾಗಿ 1947ರ ಮೇ 3ರಂದು ಅದು ಅಧಿಕೃತವಾಗಿ ಜಾರಿಗೆ ಬಂತು. ಚಕ್ರವರ್ತಿಯಲ್ಲಿ ಕೇಂದ್ರೀಕೃತವಾಗಿದ್ದ ಕಾರ್ಯಾಂಗದ ಅಧಿಕಾರಗಳನ್ನು ತೆಗೆದುಹಾಕಲಾಯಿತು. ಸ್ತ್ರೀಯರಿಗೂ ಮತದಾನದ ಹಕ್ಕು ಲಭ್ಯವಾಯಿತು. ಸೇನೆ ಮತ್ತು ನೌಕೆಯನ್ನು ರದ್ದು ಮಾಡಿದ ಸಂವಿಧಾನದಲ್ಲಿ, ಯುದ್ಧವನ್ನು ರಾಜಕೀಯ ಅಸ್ತ್ರದಂತೆ ಜಪಾನ್ ಎಂದೆಂದಿಗೂ ಬಳಸುವುದಿಲ್ಲವೆಂದು ಘೋಷಿಸಲಾಯಿತು. ಅಮೆರಿಕದ ನೆರವಿನಿಂದ ಜಪಾನಿನ ಆರ್ಥಿಕ ಸ್ಥಿತಿ ಸುಧಾರಿಸುತ್ತ ನಡೆಯಿತು. ಭೂ ಸುಧಾರಣೆಗಳಾದುವು. ಉಳುವವರು ಭೂಮಿಯ ಒಡೆಯರಾದರು. ಕೈಗಾರಿಕಾ ಕ್ಷೇತ್ರದಲ್ಲಿ ಜೈಬಟ್ಸುವಿನ ಪ್ರಭಾವ ತಗ್ಗಿಸುವ ಏರ್ಪಾಡುಗಳಾದುವು. 1950ರ ಕೊರಿಯ ಯುದ್ಧ ಮತ್ತು ಅನಂತರ ಜಪಾನಿನ ಕೈಗಾರಿಕೆ ಬಹು ಬೇಗ ಹಿಂದಿನ ಸ್ಥಿತಿಗೆ ಬಂತು. ಆ ಕಾಲದಲ್ಲಿ ಜಪಾನಿನ ಪ್ರಧಾನಿಯಾಗಿದ್ದ ಷಿಗೆಯ ಯೋಷಿದಾ ಅಮೆರಿಕದೊಡನೆ ಹೊಂದಾಣಿಕೆಯ ನೀತಿ ಅನುಸರಿಸಿದರು. ಜಪಾನ್ ಪ್ರಜಾಪ್ರಭುತ್ವದ ಹಾದಿ ಹಿಡಿಯಿತು.

ಆಧುನಿಕ ಕೈಗಾರಿಕಾ ಪದ್ಧತಿಯನ್ನು ಯಶಸ್ವಿಯಾಗಿ ಆಚರಣೆಗೆ ತಂದ ಪ್ರಥಮ ಏಷ್ಯನ್ ರಾಷ್ಟ್ರವಿದು. ಸುಮಾರು ಒಂದು ಶತಮಾನದ ಹಿಂದೆ ಹೊರ ಜಗತ್ತಿನ ಸಂಪರ್ಕ ಸಹ ಇಲ್ಲದೆ ಪ್ರತ್ಯೇಕ ರಾಷ್ಟ್ರವೆನಿಸಿಕೊಂಡಿದ್ದ ಈ ದೇಶ ಇಂದು ಪ್ರಪಂಚದ ಅತ್ಯಂತ ಅಭ್ಯುದಯ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ.

ಮಿತ ಭೂಪ್ರದೇಶ, ವಿರಳ ಪ್ರಕೃತಿಸಂಪತ್ತು, ಅಗಾಧ ಜನಸಂಖ್ಯೆ, ದ್ವಿತೀಯ ಮಹಾಯುದ್ಧದ ಆಘಾತ-ಇಷ್ಟೆಲ್ಲ ಪ್ರತಿಕೂಲಗಳನ್ನೆದುರಿಸಿಯೂ ಈ ಸಣ್ಣ ದೇಶ ಅಗಾಧ ಪ್ರಗತಿ ಸಾಧಿಸಿದೆ.

ಆಧುನಿಕ ಜಪಾನಿನ ಅಭಿವೃದ್ಧಿ 1868ರಲ್ಲಿ ಮೇಜಿ ಚಕ್ರವರ್ತಿ ಅಧಿಕಾರಕ್ಕೆ ಬಂದಂದಿನಿಂದ ಪ್ರಾರಂಭವಾಯಿತು. ಇದಕ್ಕೆ ಮುಂಚೆ 265 ವರ್ಷ ಟೋಕುಗಾವಾ ವಂಶದ ಷೋಗುನ್‍ಗಳು ಚಕ್ರವರ್ತಿಯನ್ನು ಬದಿಗೊತ್ತಿ ತಾವೇ ಆತನ ಹೆಸರಿನಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದರು.

ಷೋಗುನ್ನರ ಆಳ್ವಿಕೆಯಲ್ಲಿ ಊಳಿಗಮಾನ್ಯ ಪದ್ಧತಿ ಇತ್ತು. ದೇಶದ ಮುಕ್ಕಾಲು ಪಾಲು ಜಮೀನು ಷೋಗುನ್ನರ ಸ್ವಂತ ಉಪಯೋಗಕ್ಕೆ ಮೀಸಲಾಗಿತ್ತು. ಉಳಿದುದನ್ನು ಅವರು ತಮ್ಮ ಅಧೀನರಾದ ಜಮೀನ್ದಾರರಲ್ಲಿ ಹಂಚಿದ್ದರು. ಇವರಲ್ಲದೆ ಯೋಧವರ್ಗ, ರೈತವರ್ಗ, ಬಹಿಷ್ಕøತರಂತೆ ಜೀವಿಸುತ್ತಿದ್ದವರ ದಲಿತವರ್ಗ ಇವೂ ಇದ್ದುವು.

ಪಟ್ಟಣಗಳಲ್ಲಿ ಸಣ್ಣ ಕೈಗಾರಿಕೆಗಳು ವೃತ್ತಿ ಸಂಘಗಳ ಹತೋಟಿಯಲ್ಲಿ ಅಭಿವೃದ್ಧಿ ಹೊಂದಿದ್ದುವು. ವೃತ್ತಿಸಂಘಗಳು ಸರ್ಕಾರದ ಮಾನ್ಯತೆ ಪಡೆದು, ಅದಕ್ಕೆ ತೆರಿಗೆ ಕೊಡುತ್ತಿದ್ದುವು. 19ನೆಯ ಶತಮಾನದ ವೇಳೆಗೆ ಗೃಹಕೈಗಾರಿಕಾ ಪದ್ಧತಿ ಬೆಳೆಯಲಾರಂಭಿಸಿತ್ತು. ಸಣ್ಣ ಕಾರ್ಖಾನೆಗಳು ಅಗಲೇ ತಲೆಯೆತ್ತುತ್ತಿದ್ದುವು. ಷೋಗುನ್ನರ ಕಾಲದಲ್ಲಿ ವಿದೇಶೀ ಸಂಪರ್ಕ ನಿಷೇಧಿಸಲ್ಪಟ್ಟಿತ್ತು. ಇದರಿಂದ ಜಪಾನು ಪಾಶ್ಚಾತ್ಯ ರಾಷ್ಟ್ರಗಳಲ್ಲಾಗುತ್ತಿದ್ದ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯ ಪ್ರಯೋಜನ ಕಳೆದುಕೊಂಡಿತು. ವಿದೇಶೀ ವ್ಯಾಪಾರಕ್ಕೂ ಅವಕಾಶವಿರಲಿಲ್ಲ.

ಈ ಸುಧಾರಣೆಗಳಿಂದ ಆಧುನಿಕ ಜಪಾನಿನ ಅಭಿವೃದ್ಧಿಗೆ ಭದ್ರತಳಹದಿ ಹಾಕಿದಂತಾಯಿತು. ಇವುಗಳ ಯಶಸ್ಸಿಗೆ ಚಕ್ರವರ್ತಿಯ ಪ್ರಗತಿಪರನೀತಿ ಮಾತ್ರವಲ್ಲದೆ ಜಪಾನಿನ ಭೌಗೋಳಿಕ ಸನ್ನಿವೇಶ, ರಾಷ್ಟ್ರೀಯ ಏಕತೆ, ಭಾಷಾ ಏಕರೂಪತೆ, ಜಪಾನೀಯರ ಶಿಸ್ತು ಸಂಘಟನೆ, ಕರ್ತವ್ಯಪರತೆ, ರಾಷ್ಟ್ರಪೇಮ, ಚಕ್ರವರ್ತಿಯಲ್ಲಿ ಅವರಿಗಿದ್ದ ಅಪಾರಗೌರವ ಮುಂತಾದವೂ ಕಾರಣವಾದುವು. ಮೇಜಿ ಆಳ್ವಿಕೆಯಿಂದೀಚೆಗೆ ಜಪಾನು ಆರ್ಥಿಕವಾಗಿ ವಿಶೇಷ ಪ್ರಗತಿ ಸಾಧಿಸಿದೆ.

ಮೇಜಿ ಸರ್ಕಾರ ಕೃಷಿ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡಿತು. ಜಮೀನ್ದಾರರಿಂದ ಪಡೆದ ಜಮೀನುಗಳನ್ನು ಸಣ್ಣ ಹಿಡುವಳಿಗಳಾಗಿ ಮಾಡಿ, ಸಾಮಾನ್ಯ ರೈತರಿಗೆ ಹಂಚಿತು. ಋಣಪರಿಹಾರ ಮತ್ತು ಕೃಷಿಕಾರ್ಯಗಳಿಗೆ ಹಣ ಒದಗಿಸಲು ಸಹಕಾರ ಸಂಘಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿತು. ಗೇಣಿ ಶಾಸನಗಳ ಮೂಲಕ ಗೇಣಿದಾರರ ಹಿತರಕ್ಷಣೆ ಮಾಡಲು ಪ್ರಯತ್ನಿಸಿತು. ಜಮೀನು ಕೊಳ್ಳುವುದಕ್ಕೂ ಕೃಷಿ ಅಭಿವೃದ್ಧಿಪಡಿಸುವುದಕ್ಕೂ ಕೃಷಿ ಅಭಿವೃದ್ಧಿ ಬ್ಯಾಂಕುಗಳಿಂದಲೂ ನೇರವಾಗಿ ಸರ್ಕಾರದಿಂದಲೂ ದೀರ್ಘಾವಧಿ ಸಾಲಗಳು ದೊರಕುವಂತೆ ಮಾಡಿತು. ಮೇಜಿ ಸರ್ಕಾರದ ಈ ಕ್ರಮಗಳಿಂದ ರೈತರ ಸ್ಥಿತಿ ಉತ್ತಮಗೊಂಡಿತು.

ಆದರೆ ವಿಶ್ವ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ರೈತರು ಮತ್ತೆ ಕಷ್ಟಕ್ಕೊಳಗಾದರು. ಆಗ ಸರ್ಕಾರ ತೆರಿಗೆಗಳನ್ನಿಳಿಸಿ, ಪರಿಹಾರ ಕಾಮಗಾರಿಗಳನ್ನು ಕೈಗೊಂಡಿತು. ಸಹಕಾರ ಸಂಘಗಳಿಗೆ ರೈತರಿಂದ ಬಾಕಿ ಇದ್ದ ಸಾಲಗಳಿಗೆ ಸರ್ಕಾರ ಹೊಣೆಯಾಯಿತು. ಕೃತಕಗೊಬ್ಬರದ ಕಾರ್ಖಾನೆಗಳ ಸ್ಥಾಪನೆ ಆಯಿತು. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಪ್ರಾಯೋಗಿಕ ಕೃಷಿ ಕೇಂದ್ರಗಳು ಪ್ರಾರಂಭವಾದುವು. ದೇಶಾದ್ಯಂತ ಉಗ್ರಾಣಗಳನ್ನೂ ಮಳಿಗೆಗಳನ್ನೂ ಸ್ಥಾಪಿಸಿ ಬತ್ತದ ಬೆಲೆ ಸ್ಥಿರೀಕರಣ ನೀತಿಯನ್ನು ಆಚರಣೆಗೆ ತರಲಾಯಿತು. ಈ ಕಾರ್ಯಕ್ರಮಗಳಿಂದಲೂ ಯುದ್ಧಕಾಲದ ಬೆಲೆ ಏರಿಕೆಯಿಂದಲೂ ರೈತರ ಸ್ಥಿತಿ ಉತ್ತಮಗೊಂಡಿತು. ಆದರೂ ಗೇಣಿದಾರನ ಸ್ಥಿತಿ ಉತ್ತಮವಾಗಲಿಲ್ಲ.

ಎರಡನೆಯ ಮಹಾಯುದ್ಧದ ಅನಂತರ ಜಪಾನಿನಲ್ಲಿ ಏರ್ಪಟ್ಟ ಮಿತ್ರರಾಷ್ಟ್ರಗಳ ಆಡಳಿತ ಭೂಸುಧಾರಣಾ ಶಾಸನವನ್ನು ಜಾರಿಗೆ ತಂದು ಗೇಣಿಯ ಪ್ರಮಾಣವನ್ನು ನಿಗದಿಗೊಳಿಸಿತು. ಗೈರುಹಾಜರಿ ಜಮೀನ್ದಾರಿಯನ್ನು ರದ್ದುಗೊಳಿಸಿತು. ಸ್ಥಳೀಯ ಜಮೀನ್ದಾರರು 2.5 ಎಕರೆಗಳ ವರೆಗೆ ಗೇಣಿಗೆ ಕೊಟ್ಟು, ಮಿಕ್ಕ ಜಮೀನನ್ನು ಸರ್ಕಾರಕ್ಕೆ ಮಾರುವಂತೆ ಅಧಿನಿಯಮ ಜಾರಿಗೆ ಬಂತು. ಸ್ವಂತ ಬೇಸಾಯಗಾರರು ತಲಾ 7.5 ಎಕರೆಗಳಿಗೆ ಮೀರದಷ್ಟು ಜಮೀನನ್ನು ಇಟ್ಟುಕೊಳ್ಳಲು ಅನುಮತಿಯಿತ್ತು. ನೆಲವಿಲ್ಲದ ರೈತರು ಸರ್ಕಾರದಿಂದ ಜಮೀನನ್ನು ಕೊಂಡು 30 ವಾರ್ಷಿಕ ಕಂತುಗಳಲ್ಲಿ ತೀರಿಸುವ ಅವಕಾಶ ಪಡೆದರು.

ಈ ಸುಧಾರಣೆಗಳ ಫಲವಾಗಿ ಕೃಷಿ ಉತ್ಪಾದನೆ ಹೆಚ್ಚಿ, ಅದು ರಾಷ್ಟ್ರಾದಾಯದ ಶೇ. 16ರ ಮಟ್ಟಕ್ಕೆ ಬಂತು. ಅಲ್ಲಿಂದೀಚೆಗೆ ಜಪಾನಿನ ಬೇಸಾಯ ಮತ್ತಷ್ಟು ಪ್ರಗತಿ ಹೊಂದಿದ್ದರೂ ಆಹಾರ ಪದಾರ್ಥಗಳ ಆಮದು ನಿಂತಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಕೈಗಾರಿಕಾ ವಸ್ತುಗಳನ್ನು ರಫ್ತು ಮಾಡುವ ಸಾಮಥ್ರ್ಯವಿರುವುದರಿಂದ ಆಹಾರ ಪದಾರ್ಥಗಳ ಆಮದು ಅಷ್ಟಾಗಿ ಹೊರೆಯೆನಿಸಿಲ್ಲ. ಮುಂದಿನ ದಶಕಗಳಲ್ಲಿ ಆಹಾರ ಧಾನ್ಯಗಳನ್ನು ತನಗೆ ಅನುಕೂಲವಾದ ದರದಲ್ಲಿ ಆಮದು ಮಾಡಿಕೊಳ್ಳಲು ಇರುವ ಸಾಧ್ಯತೆಗಳನ್ನು ಜಪಾನು ಈಗ ಪರಿಶೀಲಿಸುತ್ತಿದೆ. ಈ ಪರಿಶೀಲನೆಯ ಆಧಾರದ ಮೇಲೆ ತನ್ನ ಭವಿಷ್ಯ ಕೃಷಿ ನೀತಿಯನ್ನು ನಿರ್ಧರಿಸಲಿದೆ.

ಪಾಶ್ಚಾತ್ಯ ಸಂಪರ್ಕ ಬೆಳೆದ ಅನಂತರ ಆಮದಾದ ಕೈಗಾರಿಕೆ ವಸ್ತುಗಳಿಂದ ಜಪಾನೀಯರು ಆಕರ್ಷಿತರಾದರು. ತಮ್ಮ ದೇಶವೂ ಆರ್ಥಿಕ ಮತ್ತು ರಕ್ಷಣಾದೃಷ್ಟಿಯಿಂದ ಬಲವಾಗಲು ಆಧುನಿಕ ಕೈಗಾರಿಕೆಗಳ ಸ್ಥಾಪನೆ ತಮ್ಮ ದೇಶದಲ್ಲೇ ಆಗಬೇಕೆಂದು ಅವರು ತೀರ್ಮಾನಿಸಿದರು. ಆದರೆ ದೇಶದಲ್ಲಿ ಆಗ ಖಾಸಗಿ ಬಂಡವಾಳ ಮತ್ತು ಉದ್ಯಮ ಸಾಹಸದ ಕೊರತೆಯಿತ್ತು ಆದ್ದರಿಂದ ಸರ್ಕಾರವೇ ಕೈಗಾರಿಕೆಗಳನ್ನು ಸ್ಥಾಪಿಸಿ, ಕ್ರಮೇಣ ಖಾಸಗಿಯವರು ಮುಂದೆ ಬಂದಾಗ ಅವರಿಗೆ ವರ್ಗಾವಣೆ ಮಾಡಲಾರಂಭಿಸಿತು. ವರ್ಗಾವಣೆಯ ಅನಂತರ ಆ ಕೈಗಾರಿಕೆಗಳಿಗೆ ಸರ್ಕಾರ ತನ್ನ ನೆರವನ್ನು ಮುಂದುವರಿಸಿತು. ರಾಷ್ಟ್ರಾಭಿವೃದ್ಧಿಗೆ ಅಗತ್ಯವೆನಿಸಿದ ಕೈಗಾರಿಕೆಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಧನವೂ ಸಂರಕ್ಷಣೆಯೂ ಒದಗಿವೆ. ಕೈಗಾರಿಕೆಗಳಿಗೆ ಬಂಡವಾಳ ಒದಗಿಸಲು ಕೈಗಾರಿಕಾ ಬ್ಯಾಂಕುಗಳನ್ನು ಸ್ಥಾಪಿಸಿ, ಅವಶ್ಯವೆನಿಸಿದ ವಿದೇಶಿ ಬಂಡವಾಳ ಮತ್ತು ತಾಂತ್ರಿಕ ಸೌಲಭ್ಯವನ್ನು ದೊರಕಿಸಲು ಸರ್ಕಾರ ನೆರವಾಗಿದೆ. ಕೈಗಾರಿಕಾ ಸಂಶೋಧನೆಗೆ ವಿಶೇಷ ಹಣ ವೆಚ್ಚ ಮಾಡಿದೆ.

ಚೀನ, ರಷ್ಯಗಳೊಡನೆ ನಡೆದ ಯುದ್ಧಗಳೂ ಒಂದನೆಯ ಮಹಾಯುದ್ಧವೂ ಜಪಾನಿನ ಕೈಗಾರಿಕಾಭಿವೃದ್ಧಿಗೆ ವಿಶೇಷ ಅವಕಾಶ ನೀಡಿದವು. ಆದರೆ ಯುದ್ಧಾನಂತರ ಪಾಶ್ಚಾತ್ಯ ರಾಷ್ಟ್ರಗಳ ಪೈಪೋಟಿಯಿಂದ ಜಪಾನಿನ ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಇಳಿಯಿತು. 1923ರ ಭೂಕಂಪದಿಂದ ಕೈಗಾರಿಕಾಗಳಿಗೆ ಅಪಾರ ನಷ್ಟವುಂಟಾಯಿತು. 1929ರ ಆರ್ಥಿಕ ಮುಗ್ಗಟ್ಟಿನಿಂದ ಕೈಗಾರಿಕೆಗಳು ಕಷ್ಟಕ್ಕೀಡಾದುವು. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿತು.

ಆಗ ಸರ್ಕಾರ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಕೈಗೊಂಡ ಕ್ರಮಗಳೆಂದರೆ ಬೃಹತ್ ಕೈಗಾರಿಕೆಗಳ ಉತ್ಪನ್ನದ ನಿಯಂತ್ರಣ ಮತ್ತು ಬೆಲೆಗಳ ನಿಗದಿ. ಕೈಗಾರಿಕೆಗಳ ಆಧುನೀಕರಣವನ್ನು ಪ್ರೋತ್ಸಾಹಿಸಿ, ರಫ್ತು ಕೈಗಾರಿಕೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ರೇಷ್ಮೆ ಕೈಗಾರಿಕೆಗೆ ಸಹಾಯಧನ ನೀಡಿತು. ಅಗ್ಗದ ನೀತಿಗೆ ಅನುಗುಣವಾಗಿ ಯೆನ್‍ನ ಮೌಲ್ಯಛೇದನ ಮಾಡಿತು.

ಈ ಕಾರ್ಯಕ್ರಮಗಳಿಂದ ಜಪಾನಿನಲ್ಲಿ ಇತರ ದೇಶಗಳಿಗಿಂತಲೂ ಮುಂಚೆಯೇ ಕೈಗಾರಿಕೆಗಳು ಚೇತರಿಸಿಕೊಂಡುವು. ವಿಶ್ವಮಾರುಕಟ್ಟೆಯಲ್ಲಿ ಜಪಾನಿನ ಪೈಪೋಟಿ ತೀವ್ರಗೊಂಡಿತು. ಇದರಿಂದ ತೊಂದರೆಗೊಳಗಾದ ಬ್ರಿಟನ್ ಮುಂತಾದ ದೇಶಗಳು ಜಪಾನನ್ನು ಕಾರ್ಮಿಕ ಶೋಷಣೆ ಮತ್ತು ಆಯುಕ್ತ ವ್ಯಾಪಾರ ನಡವಳಿಕೆಯ ದೇಶವೆಂದು ದೂಷಿಸಿದುವು. ಜಪಾನಿನ ಕೈಗಾರಿಕೆಗಳ ಉತ್ತಮ ವ್ಯವಸ್ಥೆ, ಕಾರ್ಮಿಕರ ನಿಷ್ಠಾವಂತ ಸೇವೆ ಮತ್ತು ದೇಶಪ್ರೇಮ, ಸರ್ಕಾರದ ಸತತ ಸಹಾಯ ಮತ್ತು ಪ್ರೋತ್ಸಾಹ ಹಾಗೂ ಕೆಲವು ಸ್ಥಳೀಯ ಸೌಲಭ್ಯಗಳು-ಇವೂ ಜಪಾನಿನ ಕೈಗಾರಿಕೆಗಳ ಚೇತರಿಕೆಗೆ ಕಾರಣ.

ಜಪಾನಿನ ಉದ್ಯಮಗಳು ಜೈಬಟ್ಸು ಎಂಬ ಉದ್ಯಮಿ ಕುಟುಂಬಗಳ ಒಡೆತನಕ್ಕೆ ಒಳಪಟ್ಟಿದ್ದುವು. ಮಿತ್ಸುಯಿ, ಮಿತ್ಸುಬಿಷಿ, ಸುಮಿಟೋಮೊ, ಯಾಸುಡೊ ಎಂಬವು ಇವುಗಳಲ್ಲಿ ಮುಖ್ಯವಾದವು. ಇವು ಕೈಗಾರಿಕೆ ಮಾತ್ರವಲ್ಲದೆ ವಾಣಿಜ್ಯ, ಬ್ಯಾಂಕಿಂಗ್, ನೌಕೋದ್ಯಮ ಮುಂತಾದ ಇತರೆ ಕ್ಷೇತ್ರಗಳನ್ನೂ ಕೇಂದ್ರೀಕರಿಸಿ, ಅವುಗಳ ಏಕಸ್ವಾಮ್ಯ ಪಡೆದಿದ್ದುವು. ಇವುಗಳ ಪೈಪೋಟಿಯನ್ನೆದುರಿಸುವುದು ಇತರ ಸಂಸ್ಥೆಗಳಿಗೆ ಬಹಳ ಕಷ್ಟವಾಗಿತ್ತು. ಜಪಾನನ್ನು ಎರಡನೆಯ ಮಹಾಯುದ್ಧಕ್ಕೆ ಎಳೆಯಲು ಇವು ಮುಖ್ಯ ಕಾರಣ.

ಜಪಾನಿನ ಕೈಗಾರಿಕಾ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಪ್ರಶಂಸನೀಯವಾದ್ದು. ಇವು ವಿದ್ಯುಚ್ಛಕ್ತಿ ಮತ್ತು ಸಣ್ಣ ಯಂತ್ರಗಳನ್ನು ಉಪಯೋಗಿಸಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿವೆ. ಸಣ್ಣ ಕೈಗಾರಿಕೆಗಳೂ ಬೃಹತ್ ಕೈಗಾರಿಕೆಗಳೂ ಪರಸ್ಪರ ಪೂರಕವಾಗಿ ಬೆಳೆಯಲು ಬೃಹತ್ ಕೈಗಾರಿಕೆಗಳಂತೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೂ ಸರ್ಕಾರ ಎಲ್ಲ ಬಗೆಯ ಸಹಾಯ ನೀಡಿದೆ.

ಹೀಗೆ ಹೆಮ್ಮೆ ಪಡಬಹುದಾದ ಜಪಾನಿನ ಕೈಗಾರಿಕಾ ಪ್ರಗತಿ ದುರಭಿಮಾನಕ್ಕೆ ಎಡೆ ಕೊಟ್ಟಿತು. ಬೆಳೆಯುತ್ತಿದ್ದ ಆರ್ಥಿಕ ವ್ಯವಸ್ಥೆ ರಾಜ್ಯವಿಸ್ತರಣಾಕಾಂಕ್ಷೆಗೆ ಎಡೆಕೊಟ್ಟಿತು. ಅದು ಆಕ್ರಮಣಶೀಲವಾಯಿತು. ಹಗುರವಾದ ಮತ್ತು ಗ್ರಾಹಕ ವಸ್ತುಗಳಿಗೆ ಪ್ರತಿಯಾಗಿ ಭಾರವಾದ ಉತ್ಪಾದಕ ವಸ್ತುಗಳ ಮತ್ತು ಯುದ್ಧ ಸಲಕರಣೆಗಳ ತಯಾರಿಕೆಗೆ ಪ್ರಾಮುಖ್ಯ ಏರ್ಪಟ್ಟಿತು. ಉಕ್ಕು, ವಿಮಾನಗಳು, ಟ್ರಕ್ಕುಗಳು, ಯುದ್ಧನೌಕೆಗಳು ಮುಂತಾದವುಗಳ ಉತ್ಪಾದನೆ ಅತ್ಯುನ್ನತ ಮಟ್ಟಕ್ಕೇರಿತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿನ ಕೈಗಾರಿಕೆಗಳು ಸರ್ಕಾರದ ಭದ್ರ ಹತೋಟಿಗೆ ಒಳಗಾದುವು. ಕಾರ್ಮಿಕರು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುವಂತೆ ಒತ್ತಾಯ ಮಾಡಲಾಯಿತು. ಯುದ್ಧ ಮುಂದುವರಿದಂತೆ ಆರ್ಥಿಕ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿತು. ಕೈಗಾರಿಕೆಗಳು ಬಾಂಬು ದಾಳಿಯಿಂದ ಬಹುಮಟ್ಟಿಗೆ ನಾಶವಾದುವು.

ಯುದ್ಧಾನಂತರ ಮಿತ್ರರಾಷ್ಟ್ರಗಳ ಆಡಳಿತ ಜೈಬಟ್ಸುಗಳನ್ನು ಒಡೆಯಲೇರ್ಪಡಿಸಿ, ಅವುಗಳ ಸಂಸ್ಥೆಗಳ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿಸಿತು. 10 ಭಾರಿ ಉದ್ಯಮಿ ಕುಟುಂಬಗಳು ಇನ್ನು 10 ವರ್ಷಗಳ ಕಾಲ ಕೈಗಾರಿಕಾ ಕ್ಷೇತ್ರಕ್ಕೆ ಪ್ರವೇಶಿಸಕೂಡದೆಂದು ನಿರ್ಬಂಧ ಹಾಕಿತು. ಅವುಗಳ ಮೇಲೆ ಅತ್ಯಧಿಕ ಮಟ್ಟದ ತೆರಿಗೆಗಳನ್ನು ಹಾಕಿತು. ಆರ್ಥಿಕ ವಿಕೇಂದ್ರೀಕರಣವೇ ಈ ನಿರ್ಬಂಧಗಳ ಉದ್ದೇಶವೆಂದು ಜನರಲ್ ಮೆಕಾರ್ಥರನ ಸರ್ಕಾರ ಹೇಳಿದರೂ, ಜಪಾನಿನ ಕೈಗಾರಿಕಾ ಪ್ರಾಬಲ್ಯವನ್ನಡಗಿಸಬೇಕೆಂಬುದೇ ಇದರ ಉದ್ದೇಶವೆಂದು ಜಪಾನೀಯರು ಭಾವಿಸಿದರು. ಈ ನಿರ್ಬಂಧಗಳಿಂದ ಉತ್ಪಾದನೆ ಇಳಿಯಿತು. ಇದರಿಂದ ಎಚ್ಚರಗೊಂಡ ಸರ್ಕಾರ, ಆಗ್ನೇಯ ಏಷ್ಯದಲ್ಲಿ ಕಮ್ಯೂನಿಸ್ಟ್ ಪ್ರಾಬಲ್ಯವನ್ನು ತಡೆಯಲು ಜಪಾನು ಬಲವಾದ ಕೈಗಾರಿಕಾ ರಾಷ್ಟ್ರವಾಗಿದ್ದರೆ ಒಳ್ಳೆಯದೆಂದು ಭಾವಿಸಿ, ಕೇವಲ 2 ವರ್ಷಗಳಲ್ಲೇ ತನ್ನ ಜೈಬಟ್ಸು ವಿರೋಧಿ ನೀತಿಯನ್ನು ಕೈಬಿಟ್ಟಿತು. ಅವುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿತು. ಜೈಬಟ್ಸು ಕಂಪೆನಿಗಳು ಶೀಘ್ರವೇ ಒಟ್ಟುಗೂಡಿ, ಮತ್ತೆ ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಿಕೊಂಡುವು.

ಕೊರಿಯ ಯುದ್ಧ ಜಪಾನಿನ ಕೈಗಾರಿಕಾ ವಿಸ್ತರಣೆಗೆ ಮತ್ತಷ್ಟು ಅವಕಾಶ ನೀಡಿತು. 1960ರ ವೇಳೆಗೆ ಪಶ್ಚಿಮ ಜರ್ಮನಿಯಂತೆ ಜಪಾನು ಕೂಡ ಮಹಾ ಕೈಗಾರಿಕಾ ರಾಷ್ಟ್ರವಾಗಿ ಪುನಃ ತಲೆಯೆತ್ತಿತು. ಜವಳಿ, ಕಾಗದ, ಉಕ್ಕು, ನೌಕೋದ್ಯಮ, ಮೋಟಾರು ತಯಾರಿಕೆ, ರೇಡಿಯೋ, ಟೆಲಿವಿಷನ್, ಪ್ಲಾಸ್ಟಿಕ್ಸ್, ಭಾರವಾದ ವಿದ್ಯುದ್ಯಂತ್ರಗಳು, ರಾಸಾಯನಿಕ ವಸ್ತುಗಳು, ಕೃತಕ ಗೊಬ್ಬರ ಮುಂತಾದ ಅನೇಕ ಕೈಗಾರಿಕೆಗಳು ಅದ್ಭುತ ಪ್ರಗತಿ ಸಾಧಿಸಿವೆ.

ಮುಂದಿನ ಕಾಲು ಶತಮಾನದ ಕೈಗಾರಿಕಾಭಿವೃದ್ಧಿಗೆ ಜಪಾನು ಈಗಾಗಲೇ ಸಜ್ಜಾಗುತ್ತಿದೆ. ವಿಶ್ವಾದ್ಯಂತ ಇಂಧನ ಮತ್ತು ಕಚ್ಚಾ ಪದಾರ್ಥಗಳ ಕೊರತೆ ಇರುವುದರಿಂದ, ಕಬ್ಬಿಣದ ಅದುರು ಮತ್ತು ಕಲ್ಲಿದ್ದಲಿನ ಆಮದಿಗಾಗಿ ಅನೇಕ ದೇಶಗಳೊಡನೆ ಅದು ದೀರ್ಘಾವಧಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕೆಲವು ಲೋಹಗಳು ಮತ್ತು ಖನಿಜಗಳನ್ನು ಪಡೆಯಲು ಕೆಲವು ವಿದೇಶೀ ಗಣಿ ಕಂಪನಿಗಳಲ್ಲಿ ಬಂಡವಾಳ ಹೂಡಿದೆ. ಇದೇ ಉದ್ದೇಶಕ್ಕಾಗಿಯೇ ಕೆಲವು ದೇಶಗಳಿಗೆ ಆರ್ಥಿಕ ನೆರವು ನೀಡಿದೆ. ಉತ್ಪಾದನ ಕ್ರಮಗಳನ್ನು ಉತ್ತಮಪಡಿಸಲು ಕೆಲವು ಐರೋಪ್ಯ ರಾಷ್ಟ್ರಗಳೊಡನೆ ತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಜಪಾನ್ ಈಗಾಗಲೆ ಪೂರ್ಣೋದ್ಯೋಗ ಮಟ್ಟವನ್ನು ಮೀರಿದೆ. ಕಾರ್ಮಿಕರ ಅಭಾವ ಮತ್ತು ಅಧಿಕ ವೇತನ ಮಟ್ಟ ಅಲ್ಲಿಯ ಕೈಗಾರಿಕೆಗಳಿಗೆ ದೊಡ್ಡ ಸಮಸ್ಯೆ. ಇದನ್ನು ಪರಿಹರಿಸಲು ದಕ್ಷ ಹಾಗೂ ಅಗ್ಗದ ಕಾರ್ಮಿಕ ಬಲ ಅಧಿಕ ಪ್ರಮಾಣದಲ್ಲಿರುವ ಭಾರತದಂಥ ದೇಶಗಳ ಸಹವರ್ತಿಯಾಗಿ, ತನ್ನ ಕೆಲವು ಕೈಗಾರಿಕೆಗಳನ್ನು ಅಲ್ಲಿಗೆ ಸ್ಥಳಾಂತರಿಸಲೂ ಹೊಸ ಉದ್ಯಮಗಳನ್ನು ಸಂಯುಕ್ತ ಉದ್ಯಮಗಳಾಗಿ ಅಲ್ಲಿ ಸ್ಥಾಪಿಸಲೂ ಪ್ರಯತ್ನಿಸುತ್ತಿದೆ. ಇನ್ನು ಮುಂದೆ ಈವರೆಗಿನ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಪ್ರತಿಯಾಗಿ ಕಂಪ್ಯೂಟರುಗಳು, ಸಂಪರ್ಕ ಸಾಧನಗಳು, ಪೆಟ್ರೊ ರಾಸಾಯನಿಕ ಕೈಗಾರಿಕೆಗಳು ಮುಂತಾದ ಬಂಡವಾಳ ಪ್ರಧಾನವಾದ ಅತ್ಯಾಧುನಿಕ ಕೈಗಾರಿಕೆಗಳಿಗೆ ಜಪಾನು ಹೆಚ್ಚು ಗಮನ ಕೊಡುವ ನಿರೀಕ್ಷೆಯುಂಟು. ಕೈಗಾರಿಕೆಗಳು ದಕ್ಷಿಣದ ಕೆಲವೇ ಪಟ್ಟಣಗಳಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸಲು, 1973-78ರ ಅವಧಿಯಲ್ಲಿ ಇನ್ನು ಕೆಲವು ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿಗೆ ಹೋಗುವ ಕೈಗಾರಿಕೆಗಳಿಗೆ ಹಣಕಾಸಿನ ಪ್ರೋತ್ಸಾಹ ನೀಡುವುದಲ್ಲದೆ, ಹಾಗೆ ಹೋಗಲು ಹಿಂದೆಗೆಯುವ ಕೈಗಾರಿಕೆಗಳ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಿದೆ. ಇದರಿಂದ ಕೈಗಾರಿಕಾ ವಿಕೇಂದ್ರೀಕರಣವಾಗುವುದೆಂದು ನಿರೀಕ್ಷೆ.

ಜಪಾನಿನಲ್ಲಿ ಕಾರ್ಮಿಕ ಸಂಘಟನೆ ಇತರ ಕೈಗಾರಿಕಾ ರಾಷ್ಟ್ರಗಳಷ್ಟು ಬಲಗೊಂಡಿಲ್ಲ. 1972ರಲ್ಲಿ ಜಪಾನಿನಲ್ಲಿ ಶÉೀ. 34ರಷ್ಟು ಕಾರ್ಮಿಕರು ಮಾತ್ರ ಸಂಘಟಿತರಾಗಿದ್ದರು. ಶೇ. 60ರಷ್ಟು ಕಾರ್ಮಿಕರು ಖಾಸಗಿ ಉದ್ಯಮಗಳಲ್ಲಿದ್ದರು. ಜಪಾನಿನಲ್ಲಿ ವೃತ್ತಿಗೊಂದು ಸಂಘ ಎಂಬ ನಿಯಮಕ್ಕೆ ಪ್ರತಿಯಾಗಿ ಸಂಸ್ಥೆಗೊಂದು ಸಂಘ ಎಂಬ ಪದ್ಧತಿ ಇದೆ. ನಾಲ್ಕು ರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳುಂಟು. ಸರ್ಕಾರಿ ಉದ್ಯಮಗಳಲ್ಲಿ ಮುಷ್ಕರಗಳು ಕಾನೂನುಬಾಹಿರ. ಜಪಾನೀ ಉದ್ಯಮಗಳಲ್ಲಿ ಈಗ ಇರುವ 42.3 ಗಂಟೆಯ ದುಡಿಮೆ ಅವಧಿಯನ್ನು ಮತ್ತಷ್ಟು ಇಳಿಸಿ, ವಾರಕ್ಕೆ 5 ದುಡಿಮೆಯ ದಿನಗಳು ಮಾತ್ರ ಇರುವಂತೆ ಮಾಡಲು ಒತ್ತಾಯ ಮಾಡಲಾಗುತ್ತಿದೆ. ವೇತನ ಮಟ್ಟ ಕಳೆದ 10 ವರ್ಷಗಳಲ್ಲಿ ಶೇ. 240ರಷ್ಟು ಹೆಚ್ಚಿದೆ. ಜೊತೆಗೆ ಉತ್ಪಾದನೆಯ ಮಟ್ಟವೂ ಹೆಚ್ಚಿರುವುದು ಗಮನಾರ್ಹ. ನಿರುದ್ಯೋಗ ಶೇ. 1.4ರಷ್ಟು ಮಾತ್ರ. ಕಾರ್ಮಿಕರ ನಿವೃತ್ತಿ ವಯೋಮಿತಿ 55 ವರ್ಷ. ಕಾರ್ಮಿಕರ ತೀವ್ರ ಅಭಾವವಿರುವುದರಿಂದ ಇದನ್ನು ಕ್ರಮಕ್ರಮವಾಗಿ 60 ವರ್ಷಗಳಿಗೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಜಪಾನೀ ಕಾರ್ಮಿಕನ ಸರಾಸರಿ ತಿಂಗಳ ವೇತನ (ಬೋನಸ್ಸೂ ಸೇರಿ) 99,000 ಯೆನ್ ಅಥವಾ ರೂ. 2,828. ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಈಗ ರಾಷ್ಟ್ರಾದಾಯದ ಶೇ. 5ರಷ್ಟನ್ನು ಉಪಯೋಗಿಸಲಾಗುತ್ತಿದೆ. 1978ರ ವೇಳೆಗೆ ಇದು ರಾಷ್ಟ್ರಾದಾಯದ ಶೇ. 7.3ರಷ್ಟಕ್ಕೆ ಹೆಚ್ಚುವ ನಿರೀಕ್ಷೆಯಿದೆ.

ವಿದೇಶೀ ಸಂಪರ್ಕ ಪ್ರಾರಂಭವಾದ ತರುಣದಲ್ಲಿ ಜಪಾನು ಕೃಷಿವಸ್ತುಗಳನ್ನು ರಫ್ತು ಮಾಡಿ, ಕೈಗಾರಿಕಾ ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಕಾಲಕ್ರಮದಲ್ಲಿ ಜಪಾನಿನಲ್ಲೇ ಕೈಗಾರಿಕೆಗಳು ಪ್ರಾರಂಭವಾದಾಗ ಅದು ಕಚ್ಚಾಸಾಮಗ್ರಿಯನ್ನೂ ಬಂಡವಾಳ ವಸ್ತುಗಳನ್ನೂ ಆಮದು ಮಾಡಿಕೊಳ್ಳಬೇಕಾಯಿತು. ಜನಸಂಖ್ಯೆ ಹೆಚ್ಚಿದಂತೆ, ಆಹಾರ ಪದಾರ್ಥಗಳ ಆಮದೂ ಅಗತ್ಯವಾಯಿತು. ಇದಕ್ಕೆ ಪ್ರತಿಯಾಗಿ ಅನುಭೋಗ ವಸ್ತುಗಳು, ಕರಕುಶಲ ವಸುಗಳು, ರೇಷ್ಮೆ, ಪಿಂಗಾಣಿ ಸಾಮಾನುಗಳು ಮುಂತಾದವನ್ನು ರಫ್ತುಮಾಡತೊಡಗಿತು. ವ್ಯಾಪಾರ ನಡೆಯುತ್ತಿದ್ದದ್ದು ಬಹಳಮಟ್ಟಿಗೆ ಏಷ್ಯ ಮತ್ತು ಅಮೆರಿಕಗಳೊಡನೆ.

ಒಂದನೆಯ ಮಹಾಯುದ್ಧದ ಸಮಯದಲ್ಲಿ ಪಾಶ್ಚಾತ್ಯ ಪೈಪೋಟಿ ಇಲ್ಲದಿದ್ದುದರಿಂದ ಜಪಾನಿನ ವ್ಯಾಪಾರ ವಿಸ್ತರಿಸಿತು. ಆದರೆ ಯುದ್ಧಾನಂತರ ಪೈಪೋಟಿ ಪ್ರಾರಂಭವಾಯಿತು. 1923ರ ಭೂಕಂಪ ಮತ್ತು 1929ರ ಆರ್ಥಿಕ ಮುಗ್ಗಟ್ಟು ಜಪಾನಿನ ವ್ಯಾಪಾರಕ್ಕೆ ಧಕ್ಕೆಯುಂಟುಮಾಡಿದುವು. ಆದರೆ ಸರ್ಕಾರ ಕೈಗಾರಿಕೆಗಳ ಆಧುನೀಕರಣ ಮತ್ತು ಸರಕುಗಳ ರಫ್ತಿಗೆ ಪ್ರೋತ್ಸಾಹ ನೀಡಿದ್ದರಿಂದ, ಇತರ ರಾಷ್ಟ್ರಗಳಿಗಿಂತ ಮುಂಚೆಯೇ ಜಪಾನಿನ ವಿದೇಶೀ ವ್ಯಾಪಾರ ಚೇತರಿಸಿಕೊಂಡಿತು. ಹತ್ತಿ ಜವಳಿ ವ್ಯಾಪಾರದಲ್ಲಿ ಜಪಾನು ಬ್ರಿಟನ್ನಿಗೆ ಪ್ರಬಲ ಪ್ರತಿಸ್ಪರ್ಧಿಯಾಯಿತು. ಯುದ್ಧಕಾಲದಲ್ಲಿ ವಿದೇಶೀ ವ್ಯಾಪಾರ ಸಂಪೂರ್ಣವಾಗಿ ಸರ್ಕಾರದ ಹತೋಟಿಗೆ ಒಳಗಾಯಿತು.

ಯುದ್ಧಾನಂತರ 2 ವರ್ಷ ವಿದೇಶೀ ವ್ಯಾಪಾರದ ಮೇಲೆ ಸರ್ಕಾರದ ನಿರ್ಬಂಧವಿತ್ತು. ಆ ಬಳಿಕ ನಿರ್ಬಂಧಗಳನ್ನು ತೆಗೆದು ಮೊದಲಿನಂತೆ ಖಾಸಗಿಯವರಿಗೇ ಬಿಡಲಾಯಿತು. ಅಮೆರಿಕ ಯುದ್ಧ ಪರಿಹಾರವನ್ನು ಕೇಳುವುದಕ್ಕೆ ಪ್ರತಿಯಾಗಿ ತಾನೇ 200 ಕೋಟಿ ಡಾಲರ್ ನೆರವನ್ನು ಬಹುಮಟ್ಟಿಗೆ ಧಾನ್ಯರೂಪದಲ್ಲಿ ನೀಡಿತು. ಕಚ್ಚಾಸಾಮಗ್ರಿಯ ಆಮದಿಗೂ ಅಧಿಕ ಪ್ರಮಾಣದಲ್ಲಿ ಧನಸಹಾಯ ಮಾಡಿತು. ಜಪಾನಿನಲ್ಲಿದ್ದ ಅಮೆರಿಕದ ಪಡೆಗಳಿಗೆ ಬೇಕಿದ್ದ ಸಾಮಗ್ರಿಗಳನ್ನು ಜಪಾನಿನಲ್ಲೇ ಕೊಳ್ಳಲಾಯಿತು. ಇದಕ್ಕಾಗಿ 1952ರಿಂದ 1956ರ ವರೆಗೆ ಜಪಾನಿಗೆ 340 ಕೋಟಿ ಡಾಲರ್ ಕೊಡಲಾಯಿತು.

ಈ ಸಹಾಯಕ ಕ್ರಮಗಳಿಂದ ಜಪಾನು ವಿದೇಶಿ ವ್ಯಾಪಾರದಲ್ಲಿ ತನ್ನ ಯುದ್ಧಪೂರ್ವದ ಸ್ಥಾನ ಗಳಿಸಿತು. ಯುದ್ಧಕಾಲದಲ್ಲಿ ತೆರವು ಮಾಡಿದ್ದ ಏಷ್ಯನ್ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ಪುನಃ ಯಶಸ್ವಿಯಾಗಿ ಪ್ರವೇಶಿಸಿತು. ಅಮೆರಿಕವನ್ನು ಅತಿಯಾಗಿ ಅವಲಂಬಿಸದೆ ಇತರ ದೇಶಗಳೊಡನೆಯೂ ವ್ಯಾಪಾರಸಂಬಂಧವನ್ನು ಕುದುರಿಸಿಕೊಳ್ಳಲು ಉಪಕ್ರಮಿಸಿತು. ಈ ಪ್ರಯತ್ನದ ಫಲವಾಗಿ ಜಪಾನಿನ ವಿದೇಶೀ ವ್ಯಾಪಾರ ಅಭಿವೃದ್ಧಿ ಹೊಂದಿತು. 1972ರಲ್ಲಿ ಅದರ ರಫ್ತು 2,475.8 ಕೋಟಿ ಡಾಲರ್, ಆಮದು 1,620.6 ಕೋಟಿ ಡಾಲರ್; ವ್ಯಾಪಾರ ಹೆಚ್ಚಳ 855,2 ಕೋಟಿ ಡಾಲರ್.

ಈ ಹೆಚ್ಚಳದ ಪ್ರವೃತ್ತಿ ಹಲವು ವರ್ಷಗಳಿಂದಲೂ ಮುಂದುವರಿಯುತ್ತಿದ್ದುದರಿಂದ ಜಪಾನಿನೊಡನೆ ವಿಶೇಷ ವ್ಯಾಪಾರಸಂಬಂಧ ಹೊಂದಿದ್ದ ಅಮೆರಿಕ ಬಿಕ್ಕಟ್ಟನ್ನೆದುರಿಸಬೇಕಾಯಿತು. ಈ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಪಾನು ಯೆನ್ ಮೌಲ್ಯವನ್ನು ಅಧಿಕಗೊಳಿಸಿ, ಆ ಮೂಲಕ ಆಮದನ್ನು ಹೆಚ್ಚಿಸಿ, ರಫ್ತನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಇಷ್ಟರಿಂದಲೇ ವ್ಯಾಪಾರ ಸಮಸ್ಯೆ ಬಗೆಹರಿಯದೆಂದರಿತು ಮುಂದಿನ 5 ವರ್ಷಗಳಲ್ಲಿ ರಫ್ತು ಪ್ರಚೋದನೆಗೆ ಬದಲು ಜಪಾನಿನ ಜನಜೀವನವನ್ನು ಉತ್ತಮಪಡಿಸುವ ಕಾರ್ಯಕ್ರಮಕ್ಕೆ ಹೆಚ್ಚು ಗಮನ ಕೊಡಲು ನಿರ್ಧರಿಸಿದೆ. ಈ ಅಭಿವೃದ್ಧಿ ಯೋಜನೆಗೆ ತನ್ನ ರಾಷ್ಟ್ರದಾಯದ ಶೇ. 12.6ರಷ್ಟನ್ನು ಉಪಯೋಗಿಸಲು ಉದ್ದೇಶಿಸಿದೆ. ವಿಶ್ವಬ್ಯಾಂಕು, ಅಂತರರಾಷ್ಟ್ರೀಯ ಹಣ ನಿಧಿ ಮತ್ತು ಏಷ್ಯದ ಅಭಿವೃದ್ಧಿ ಬ್ಯಾಂಕಿನ ಮೂಲಕ ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೂ ನೆರವಾಗುತ್ತಿದೆ. ಆದರೆ 1973ರಲ್ಲಿ ಸಂಭವಿಸಿದ ತೈಲ ಬಿಕ್ಕಟ್ಟಿನಿಂದಾಗಿ ಮತ್ತು ಅಂತರರಾಷ್ಟ್ರೀಯ ಹಣವ್ಯವಸ್ಥೆಯ ಅಸ್ಥಿರತೆಯಿಂದಾಗಿ ಜಪಾನಿನ ಆರ್ಥಿಕತೆಯ ಮೇಲೂ ತೀವ್ರ ಪರಿಣಾಮಗಳುಂಟಾಗಿವೆ.

ಮೇಜಿ ಅಧಿಕಾರ ಬರುವ ವೇಳೆಗೆ ರಕ್ಷಣೆಗೆ ಅಗತ್ಯವಾದ ಕೆಲವು ಹೆದ್ದಾರಿಗಳು ಮಾತ್ರ ಇದ್ದುವು. ಆದ್ದರಿಂದ ಮೇಜಿ ಆಳ್ವಿಕೆಯಲ್ಲಿ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ರಸ್ತೆಗಳು ಎಂದು ವಿಂಗಡಿಸಿ, ಹೆದ್ದಾರಿಗಳ ನಿರ್ಮಾಣಕ್ಕಾಗಿ ಸಾರ್ವಜನಿಕ ಸಾಲ ಎತ್ತಲಾಯಿತು. 1950ರ ವೇಳೆಗೆ 6 ಲಕ್ಷ ಮೈ. ರಸ್ತೆಗಳಿದ್ದರೂ ಅವುಗಳಲ್ಲಿ 15,000 ಮೈ. ಮಾತ್ರ ಹೆದ್ದಾರಿಗಳಾಗಿದ್ದುವು. ಸಮುದ್ರಸಾಮೀಪ್ಯವಿರುವುದರಿಂದ ಜಪಾನಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕ ಒತ್ತಾಯ ಅಷ್ಟಾಗಿ ಇಲ್ಲ. ಆದರೂ ಮೋಟಾರು ಕೈಗಾರಿಕೆ ಅದ್ಭುತ ಪ್ರಗತಿ ಸಾಧಿಸಿದೆ. ವಾಣಿಜ್ಯ ವಾಹನಗಳನ್ನು ತಯಾರಿಸುವ ದೇಶಗಳಲ್ಲಿ ಜಪಾನಿನದು ಪ್ರಥಮ ಸ್ಥಾನ. ಅವು ಬಹು ಮಟ್ಟಿಗೆ ರಫ್ತಾಗುತ್ತವೆ.

ಷೋಗನ್ನರ ಆಳ್ವಿಕೆಯ ಕೊನೆಯ ವೇಳೆಗೇ ದೊಡ್ಡ ಹಡಗುಗಳ ನಿರ್ಮಾಣ ಜಪಾನಿನಲ್ಲಿ ಪ್ರಾರಂಭವಾಗಿತ್ತು. ಆದರೆ ಅವು ಸಾಕಷ್ಟು ಸಂಖ್ಯೆಯಲ್ಲಿರಲಿಲ್ಲ. ಆದ್ದರಿಂದ ಮೇಜಿ ಸರ್ಕಾರ ಮೊದಲು ಹೊರ ದೇಶಗಳಿಂದ ಆಧುನಿಕ ಹಡಗುಗಳನ್ನು ಕೊಂಡು, ಬಳಿಕ ಅವುಗಳ ನಿರ್ಮಾಣಕ್ಕೆ ಗಮನ ಕೊಟ್ಟಿತು. ಕೊಂಡ ಹಡಗುಗಳನ್ನು ಕ್ರಮೇಣ ಖಾಸಗಿಯವರಿಗೆ ಮಾರಿತು. ಹಡಗು ಕಟ್ಟುವ ಕಂಪನಿಗಳಿಗೆ ಸರ್ಕಾರ ಧಾರಾಳವಾಗಿ ಧನಸಹಾಯ ಮಾಡಿತು. 1914ರ ವೇಳೆಗೆ ಜಪಾನಿನಲ್ಲಿ 300 ನೌಕಾನಿರ್ಮಾಣ ಕೇಂದ್ರಗಳಿದ್ದುವು. ನೌಕಾ ಕ್ಷೇತ್ರದಲ್ಲಿ ಜಪಾನು ಪ್ರಪಂಚದಲ್ಲಿ 3ನೆಯ ಸ್ಥಾನ ಪಡೆದಿತ್ತು.

ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಜಪಾನು ತನ್ನ ಹಳೆಯ ಹಡಗುಗಳನ್ನು ಒಡೆದು ಹೊಸವನ್ನು ನಿರ್ಮಿಸುವ ಬೃಹತ್ ಕಾರ್ಯಕ್ರಮ ಕೈಗೊಂಡಿತು. ಇದಕ್ಕಾಗಿ ಖಾಸಗಿ ಕಂಪನಿಗಳಿಗೆ ಸರ್ಕಾರ ಧನಸಹಾಯ ನೀಡಿತು. 1939ರ ವೇಳೆಗೆ ಜಪಾನಿನ ಹಡಗು ಬಲ 56 ಲಕ್ಷ ಟನ್.

ಆದರೆ ಯುದ್ಧದಲ್ಲಿ ಜಪಾನಿನ ಬಹುಪಾಲು ಹಡಗುಗಳೂ ಅನೇಕ ನೌಕಾ ನಿರ್ಮಾಣ ಕೇಂದ್ರಗಳೂ ನಾಶವಾದುವು. ಯುದ್ಧ ಮುಗಿದಾಗ ಜಪಾನಿನ ಹಡಗು ಬಲ 14 ಲಕ್ಷ ಟನ್. ಅವುಗಳಲ್ಲಿ ಹಲವು ಸಮುದ್ರಯಾನಕ್ಕೆ ಯೋಗ್ಯವಾಗಿರಲಿಲ್ಲ. ಆದರೆ ಯುದ್ಧಾನಂತರ ಹಡಗುಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಗಮನ ಕೊಟ್ಟದ್ದರಿಂದ 1969ರ ವೇಳೆಗೆ 86 ಲಕ್ಷ ಟನ್ ಹಡಗುಬಲವಿತ್ತು. ಪ್ರಪಂಚದ ಹೊಸ ಹಡಗು ನಿರ್ಮಾಣ ಕಾರ್ಯದ ಶೇ. 48ರಷ್ಟು ಜಪಾನಿನಲ್ಲಿ ನಡೆಯುತ್ತಿತ್ತು.

ಜಪಾನಿನಲ್ಲಿ ನಾಗರಿಕ ವಾಯುಯಾನಕ್ಕಾಗಿ 1929ರ ಅನಂತರ ಕೆಲವು ಖಾಸಗಿ ಕಂಪನಿಗಳು ತಲೆಯೆತ್ತಿದುವು. ಬಳಿಕ ಅವು ಒಟ್ಟುಗೂಡಿದುವು. ಜಪಾನ್ ಏರ್‍ವೇಸ್ ಕಂಪನಿ ಸ್ಥಾಪಿತವಾಯಿತು. ಯುದ್ಧಕಾಲದಲ್ಲಿ ನಾಗರಿಕ ವಾಯುಪಡೆಯೂ ಸೇನೆಯ ವಶದಲ್ಲಿತ್ತು. ಯುದ್ಧಾನಂತರವೂ 1951ರ ವರೆಗೆ ನಾಗರಿಕ ವಾಯುಯಾನವನ್ನು ನಿಲ್ಲಿಸಲಾಗಿತ್ತು. 1951ರಿಂದ ಅಂತರ್ದೇಶೀಯ ಮತ್ತು 1954ರಿಂದ ಅಂತರರಾಷ್ಟ್ರೀಯ ವಾಯುಯಾನ ಇದೆ.

ಜಪಾನಿನಲ್ಲಿ ಬ್ಯಾಂಕುಗಳನ್ನು ಅಮೆರಿಕ ಮತ್ತು ಐರೋಪ್ಯ ಮಾದರಿಯಲ್ಲಿ ಸ್ಥಾಪಿಸಿದ್ದರೂ ಅವನ್ನು ಸ್ಥಳೀಯ ಪರಿಸ್ಥಿತಿಗೆ ಹೊಂದಿಸಿಕೊಂಡಿದೆ. 1882ರಲ್ಲಿ ಬೆಲ್ಜಿಯಮ್‍ನ ಕೇಂದ್ರ ಬ್ಯಾಂಕಿನ ಮಾದರಿಯಲ್ಲಿ ಬ್ಯಾಂಕ್ ಆಫ್ ಜಪಾನ್ ಎಂಬ ಕೇಂದ್ರ ಬ್ಯಾಂಕನ್ನು ಸ್ಥಾಪಿಸಲಾಯಿತು. ಇದು ಸರ್ಕಾರ ಮತ್ತು ಖಾಸಗಿ ಬಂಡವಾಳ ಪಡೆದಿದ್ದ ಕೂಡು ಬಂಡವಾಳ ಸಂಸ್ಥೆಯಾಗಿತ್ತು. ಇದಕ್ಕೆ ಮುಂಚೆ ವಾಣಿಜ್ಯ ಬ್ಯಾಂಕುಗಳೇ ನೋಟು ಚಲಾವಣೆಯನ್ನೂ ಮಾಡುತ್ತಿದ್ದುವು. ಆದರೆ ಬ್ಯಾಂಕ್ ಆಫ್ ಜಪಾನ್ ಸ್ಥಾಪನೆಯಾದ ಅನಂತರ ಅದಕ್ಕೆ ನೋಟು ಚಲಾವಣೆಯ ಏಕಸ್ವಾಮ್ಯ ಮತ್ತು ಇತರ ಕೇಂದ್ರ ಬ್ಯಾಂಕಿಂಗ್ ಕಾರ್ಯಭಾರಗಳನ್ನು ವಹಿಸಲಾಯಿತು. 1885ರಲ್ಲಿ ಚಿನ್ನ ಮತ್ತು ನಿರ್ದಿಷ್ಟ ಪ್ರತಿಭೂತಿಗಳ ಆಧಾರವುಳ್ಳ ಪರಿವರ್ತನೀಯ ನೋಟು ಪದ್ಧತಿಯನ್ನು ಜಾರಿಗೆ ತರಲಾಯಿತು. ಕೆಲವು ಮಾರ್ಪಾಟುಗಳ ಅನಂತರ 1950ರಲ್ಲಿ ಒಟ್ಟು ನೋಟುಗಳ ಪರಿಮಾಣವನ್ನು ಸರ್ಕಾರ ಗೊತ್ತುಪಡಿಸಿತು. ಅದನ್ನು ಮೀರಿದಾಗ ಹೆಚ್ಚಿನ ನೋಟುಗಳ ಮೇಲೆ ತೆರಿಗೆ ವಿಧಿಸುವ ಪದ್ಧತಿಯನ್ನು ಆಚರಣೆಗೆ ತರಲಾಯಿತು. ಹಣದ ಉಬ್ಬರವನ್ನು ತಡೆಯುವುದು ಇದರ ಉದ್ದೇಶ. ಜಪಾನಿನ ವಾಣಿಜ್ಯ ಬ್ಯಾಂಕುಗಳು ಐರೋಪ್ಯ ಬ್ಯಾಂಕುಗಳಂತೆ ಮಿಶ್ರ ಬ್ಯಾಂಕಿಂಗ್ ಪದ್ಧತಿಯನ್ನನುಸರಿಸಿವೆ. ಇದರಿಂದ ನಾನಾ ಕ್ಷೇತ್ರಗಳ ಅಭಿವೃದ್ಧಿಗೆ ಬ್ಯಾಂಕುಗಳು ವಿಶೇಷ ಸಹಾಯಕವಾಗಿವೆ. 	(ಕೆ.ಎನ್.ಎಂ.)





#Total Article count: 256
#Total Word count: 193295